ದಿನಾಂಕ :22/10/2020 ರ ಅಪರಾಧ ಪ್ರಕರಣಗಳು

 1. ಬಟ್ಲಹಳ್ಳಿ ಪೊಲೀಸ್ ಠಾಣೆ ಮೊ.ಸಂ.103/2020 ಕಲಂ: 427,447 ಐ.ಪಿ.ಸಿ :-

     ದಿನಾಂಕ 21/10/2020ರಂದು ಮದ್ಯಾಹ್ನ 15-30 ಗಂಟೆಗೆ ಪಿರ್ಯಾದಿದಾರರಾದ ಶ್ರೀ.ಜಿ.ಎನ್.ಶ್ರೀರಾಮರೆಡ್ಡಿ ಬಿನ್ ಲೇಟ್ ಜಿ.ನಾರಾಯಣರೆಡ್ಡಿ, 68ವರ್ಷ, ವಕ್ಕಲಿಗರು, ಜಿರಾಯ್ತಿ, ಪೆದ್ದೂರು ಗ್ರಾಮ, ಚಿಂತಾಮಣಿ ತಾಲ್ಲೂಕು, ಚಿಂತಾಮಣಿ, 9972626596 ರವರು ಠಾಣೆಗೆ ಹಾಜರಾಗಿ ನಿಡಿದ ದೂರಿನ ಸಾರಾಂಶವೇನೆಂದರೆ, ನಾನು ಮೇಲ್ಕಂಡ ವಿಳಾಸದಾರನಾಗಿದ್ದು ನಮ್ಮ ಪಿತ್ರಾರ್ಜಿತ ಜಮೀನಿನಲ್ಲಿ ಜಿರಾಯ್ತಿ ಮಾಡಿಕೊಂಡು ಜೀವನ ಮಾಡಿಕೊಂಡಿರುತ್ತೇನೆ. ನಮ್ಮ ಗ್ರಾಮದ ಸವರ್ೇ ನಂ 171 ರಲ್ಲಿನ 6 ಎಕರೆ 14 ಗುಂಟೆ ಹಾಗೂ 1.36 ಎಕರೆ ಕರಾಬು ಒಟ್ಟು 8.10 ಎಕರೆ ಜಮೀನು ನಮ್ಮ ಪಿತ್ರಾಜರ್ಿತ ಆಸ್ತಿಯಾಗಿದ್ದು ಸದರಿ ಜಮೀನಿಗೆ ನಾನು ನಮ್ಮ ಅಣ್ಣನ ಬಾಬತ್ತು ಜಮೀನಿನಲ್ಲಿ ಇರುವ ಬೋರ್ ವೆಲ್ ನಿಂದ ನೀರನ್ನು ಬಿಡಿಸಿಕೊಂಡು ಬೆಳೆಗಳನ್ನು ಇಡುತ್ತಿರುತ್ತೇನೆ. ಹೀಗಿರುವಲ್ಲಿ ನಾನು ಈಗ್ಗೆ ಸುಮಾರು ಒಂದೂವರೆ ತಿಂಗಳ ಹಿಂದೆ ನಮ್ಮ ಬಾಬತ್ತು ಮೇಲ್ಕಂಡ ಜಮೀನಿನಲ್ಲಿ ಮೆಣಸಿನಕಾಯಿ ಬೆಳೆಯನ್ನು ಇಟ್ಟಿರುತ್ತೇನೆ. ಮೆಣಸಿನ ಕಾಯಿ ಗಿಡಗಳು ಹೂವು ಕಾಯಿ ಬಿಟ್ಟಿದ್ದು ಹೀಗಿರುವಲ್ಲಿ ಈ ದಿನ ದಿನಾಂಕ 21/10/2020 ರಂದು ಬೆಳಿಗ್ಗೆ 11-00 ಗಂಟೆ ಸಮಯದಲ್ಲಿ ನಮ್ಮ ನಾದಿನಿ ಸುಶೀಲಮ್ಮ ರವರು ನಮ್ಮ ಬಾಬತ್ತು ಜಮೀನಿನ ಬಳಿ ಕೆಲಸಮಾಡುತ್ತಿದ್ದಾಗ ನಮ್ಮ ಗ್ರಾಮದ ವಾಸಿಗಳಾದ ಎಸ್.ಕೃಷ್ಣಾರೆಡ್ಡಿ ಬಿನ್ ಲೇಟ್ ಪಟೇಲ್ ಶ್ರೀರಾಮರೆಡ್ಡಿ, ಕೆ.ವೇಣು ಬಿನ್ ಎಸ್.ಕೃಷ್ಣಾರೆಡ್ಡಿ, ವೆನ್ನಲ ಕೋಂ ವೇಣು, ವಿಮಲಮ್ಮ ಕೋಂ ಎಸ್.ಕೃಷ್ಣಾರೆಡ್ಡಿ ರವರುಗಳು ನಮ್ಮ ಬಾಬತ್ತು ಮೇಲ್ಕಂಡ ಸರ್ವೇ ನಂ 171 ರ ಜಮೀನಿನ ಒಳಕ್ಕೆ ಅಕ್ರಮ ಪ್ರವೇಶಮಾಡಿ ಜಮೀನಿನಲ್ಲಿ ನೆಟ್ಟಿದ್ದ ಮೆಣಸಿನ ಕಾಯಿ ಗಿಡಗಳನ್ನು ಕೀಳುತ್ತಿದ್ದನ್ನು ನನ್ನ ನಾದಿನಿ ನೋಡಿ ಪಕ್ಕದ ಜಮೀನಿನಲ್ಲಿ ಕೆಲಸಮಾಡುತ್ತಿದ್ದ ತುಮ್ಮಲಹಳ್ಳಿ ಗ್ರಾಮದ ದೇವರಾಜ್ ಬಿನ್ ಶ್ರೀರಾಮರೆಡ್ಡಿ, ನಾರಾಯಣಸ್ವಾಮಿ ಬಿನ್ ಚೊಕ್ಕಪ್ಪ ರವರನ್ನು ಜಮೀನಿನ ಬಳಿಗೆ ಕರೆಯಿಸಿ ಎಸ್.ಕೃಷ್ಣಾರೆಡ್ಡಿ ರವರಿಗೆ ಮೆಣಸಿನ ಕಾಯಿಗಳನ್ನು ಕೀಳದಿರುವಂತ್ತೆ ತಿಳಿಸಿದರೂ ಸಹ ಅವರು ನಮ್ಮ ಬಾಬತ್ತು ಜಮೀನಿನಲ್ಲಿ ಇದ್ದ ಮೆಣಸಿನ ಗಿಡಗಳನ್ನು ಮತ್ತು ಅವುಗಳಿಗೆ ಸಹಾಯಕವಾಗಿ ನೆಟ್ಟಿದ್ದ ಕಡ್ಡಿಗಳನ್ನು ಕಿತ್ತುಹಾಕಿ ಬೆಳೆಯನ್ನು ನಾಶಪಡಿಸಿದ್ದು ಈ ವಿಚಾರವನ್ನು ನಮ್ಮ ನಾದಿನಿ ಪಕ್ಕದ ಜಮೀನಿನವರಾದ ಆರ್.ರಘುನಾಥ ರವರ ಮುಖಾಂತರ ನನ್ನ ತಮ್ಮನಾದ ನಾಗರಾಜರೆಡ್ಡಿ ರವರಿಗೆ ಪೋನ್ ಮಾಡಿಸಿ ವಿಚಾರವನ್ನು ತಿಳಿಸಿದ್ದು ಸದರಿ ವಿಚಾರವನ್ನು ನನ್ನ ತಮ್ಮ ನನಗೆ ತಿಳಿಸಿ ನಮ್ಮ ತೋಟದ ಬಳಿಗೆ ಹೋಗುವಷ್ಟರಲ್ಲಿ ಕೃಷ್ಣಾರೆಡ್ಡಿ ಮತ್ತು ಅವರ ಕಡೆಯುವರು ಜಮೀನಿನ ಬಳಿಯಿಂದ ಹೊರಟು ಹೋಗಿದ್ದು. ಮೇಲ್ಕಂಡ ಕೃಷ್ಣಾರೆಡ್ಡಿ ಮತ್ತು ಅವರ ಕುಟುಂಬದವರು ನಮ್ಮ ಬಾಬತ್ತು ಜಮೀನಿನ ಒಳಕ್ಕೆ ಅಕ್ರಮ ಪ್ರವೇಶಮಾಡಿ ಜಮೀನಿನಲ್ಲಿ ಬೆಳೆಸಿದ್ದ ಮೆಣಸಿನ ಕಾಯಿ ಗಿಡಗಳನ್ನು ಮತ್ತು ಅದಕ್ಕೆ ಸಹಾಯಕವಾಗಿ ನೆಟ್ಟಿದ್ದ ಕಡ್ಡಿಗಳನ್ನು ಕಿತ್ತುಹಾಕಿ ನಮಗೆ ಸುಮಾರು 1 ಲಕ್ಷ ರೂಗಳಷ್ಟು ನಷ್ಟವನ್ನು ಉಂಟುಮಾಡಿದ್ದು ಮೇಲ್ಕಂಡವರ ಮೇಲೆ ಕಾನೂನು ರೀತ್ಯ ಕ್ರಮವನ್ನು ಕೈಗೊಳ್ಳಲು ಕೊರಿ ಕೊಟ್ಟ ದೂರಿನ ಸಾರಾಂಶವಾಗಿರುತ್ತೆ.

 1. ಸಿ.ಇ.ಎನ್ ಪೊಲೀಸ್ ಠಾಣೆ ಮೊ.ಸಂ.22/2020 ಕಲಂ:66(ಡಿ) INFORMATION TECHNOLOGY ACT 2000 &  419,420 ಐ.ಪಿ.ಸಿ :-

     ದಿನಾಂಕ;22/10/2020 ರಂದು ಪಿರ್ಯಾಧಿ ಸಿಗ್ಬತ್ತುಲ್ಲಾ ಬಿನ್ ಸಾದತ್ ಉಲ್ಲಾಖಾನ್, 29 ವರ್ಷ, ಮುಸ್ಲಿಂ ನಾಂಗ,ಸಾಪ್ಟ್ ವೇರ್ ಇಂಜಿನಿಯರ್ ಕೆಲಸ, ವಾಸ ಹೊಸೂರು ಗ್ರಾಮ, ಗೌರೀಬಿದನೂರು  ತಾಲ್ಲೂಕು, ಮೊಬೈಲ್9008537176 ರವರು ಠಾಣೆಗೆ ಹಾಜರಾಗಿ  ನೀಡಿದ ದೂರು ಏನೆಂದರೆ ತಾನು ಮೇಲ್ಕಂಡ ವಿಳಾಸದಲ್ಲಿ ತಂದೆ ತಾಯಿಯೊಂದಿಗೆ ವಾಸ ಮಾಡಿಕೊಂಡಿರುತ್ತೇನೆ ಮತ್ತು ನಾನು ಕಂಪ್ಯೋಟರ್ ಇಂಜಿನಿಯರ್ ಪಧವಿಯನ್ನು  ಪಡೆದಿದ್ದು ಹಾಲಿ ಬೆಂಗಳೂರಿನ ಅವಿನ್ಯೋ ರಸ್ತೆಯಲ್ಲಿ ಇರುವ ಸ್ವಪ್ನ ಬುಕ್ ಹೌಸ್ ಗೆ ಟೈಯಪ್ ಮಾಡಿಕೊಂಡು ಕೆಲವು ಸಾಪ್ಟ್ವೇರ್ ಗಳನ್ನು ಮತ್ತು ಪ್ರಾಜೆಕ್ಟ್ ಗಳನ್ನು ತಯಾರಿಸಿ ಕೊಡುವ ಕೆಲಸವನ್ನುನಿರ್ವಹಿಸುತ್ತಿದ್ದೇನೆ, ನಾನು ನಮ್ಮ ಗ್ರಾಮದ ಕೆನರಾ  ಬ್ಯಾಂಕಿನಲ್ಲಿ 0772101020849 ಸಂಖ್ಯೆಯ ಉಳಿತಾಯ ಖಾತೆಯನ್ನು ಹಾಗೂ ನನ್ನ ವ್ಯವಹಾರಕ್ಕೋಸ್ಕರ ಬೆಂಗಳೂರಿನಲ್ಲಿ ಫೆಡರಲ್ ಬ್ಯಾಂಕ್ ನಲ್ಲಿ 11890200060771 ರಂತೆ ಖಾತೆಗಳನ್ನು ಹೊಂದಿರುತ್ತೇನೆ. ಈಗಿರುವಲ್ಲಿ ದಿನಾಂಕ:-18-08-2020 ರಂದು    PMEGP ಕಂಪನಿಯಿಂದ ನಿಂದ  9144425475, 9144423380 & 8695274564 ಸಂಖ್ಯೆಗಳಿಂದ ಅನಾಮದ್ಯೇಯ ವ್ಯಕ್ತಿಗಳು ಕಾಲ್ ಮಾಡಿ ನಿಮಗೆ  PMEGP ಕಂಪನಿಯಿಂದ 10 ಲಕ್ಷಗಳ ವರಿಗೆ ಸಾಲವನ್ನು ಯಾವುದೆ ಶೂರಿಟಿ ಇಲ್ಲದೆ ಕೊಡುವುದಾಗಿ ತಿಳಿಸಿ ತಿಂಗಳಿಗೆ 5,500/-ರೂ ಇ ಎಂ ಐ ನಂತೆ ಕೊಡುವುದಾಗಿ  ತಿಳಿಸಿದರು. ನನಗೆ  ಹಣದ ಆವಶ್ಯಕತೆ ಇತ್ತು. ಅದಕ್ಕಾಗಿ ಲೋನ್ ಪಡೆಯಲು ನಾವು ಏನು ಮಾಡಬೇಕು ಅಂತ ಕೇಳಿದೆ. ನಿವು 6 ತಿಂಗಳ ಬ್ಯಾಂಕ್ ಸ್ಟೇಟ್ ಮೆಂಟ್, ಫಾನ್ ಕಾರ್ಡ ಮತ್ತು ಆದಾರ್ ಕಾರ್ಡ ಪ್ರತಿಗಳನ್ನು ಕಳುಹಿಸುವಂತೆ ತಿಳಿಸಿದ, ನಾನು ಇದನ್ನು ನಂಬಿ ನನ್ನ ಆಧಾರ್ ಕಾರ್ಡ ಪ್ರತಿ, ಪಾನ್ ಕಾರ್ಡ ಪ್ರತಿ ಮತ್ತು ಬ್ಯಾಂಕ್ ಸ್ಟೇಟ್ ಮೆಂಟ್ ಗಳನ್ನು ವ್ಯಾಟ್ಸಾಪ್ ಮೂಲಕ ಅವರಿಗೆ  ಕಳುಹಿಸಿದೆ. ನಂತರ ಲೋನ್ ಅಪ್ಲಿಕೇಷನ್ ಫಾರಂ ನ್ನು ಕಳುಹಿಸಿ ಅದನ್ನು ಭರ್ತಿ ಮಾಡಿ ಕಳುಹಿಸಲು ತಿಳಿಸಿದರು. ನಾನು  ಸದರಿ ಫಾರಂನ್ನು ಭರ್ತಿ ಮಾಡಿ ಕಳುಹಿಸಿದೆ.  ನಂತರ ಪುನಃ  ಅವರು ಕರೆ ಮಾಡಿ ಸದರಿ ಲೋನ್ ಪಡೆಯಲು ಒಂದು ಪ್ರಾಜೆಕ್ಟ್ ರಿಪೋರ್ಟನ್ನು ಸಿದ್ದಪಡಿಸಿ ಸಲ್ಲಿಸಿಕೊಲ್ಳಬೇಕು ಅದಕ್ಕೆ ನೀವು 5000/- ರೂಗಳನ್ನು ಜಮೆ ಮಾಡಬೇಕಾಗುತ್ತಿದೆ ಎಂತ ತಿಳಿಸಿ ESAF SMALL FINANCE BANK A/C NO:50200003570958 IFSC CODE: ESMF0001179 ನ್ನು ಕಳುಹಿಸಿದರು. ನಾನು  ನನ್ನ ಮೇಲ್ಕಂಡ ಫೆಡರಲ್ ಬ್ಯಾಂಕ್ ಖಾತೆಯಿಂದ 5000/- ರೂಗಳನ್ನು ಸದರಿ ಖಾತೆಗೆ ವರ್ಗಾಯಿಸಿರುತ್ತೇನೆ. ನಂತರ ದಿನಾಂಕ:21/8/2020 ರಂದು ಸದರಿ ಲೊನ್ ಸೆಕ್ಯೋರಿಟಿ ಡಿಪಾಸಿಟ್ 30,000/- ರೂಗಳನ್ನು ಕಳುಹಿಸಲು ತಿಳಿಸಿ, BANK OF BARODA ಖಾತೆ ನಂ:27440100016145 IFSC CODE: BARB0SHADEL ನ್ನು ಕಳುಹಿಸಿದರು. ನಾನು ನನ್ನ ಮೇಲ್ಕಂಡ ಕೆನರಾ ಬ್ಯಾಂಕ್ ಖಾತೆಯಿಂದ 30,000/- ರೂಗಳನ್ನು ಕಳುಹಿಸಿದೆ. ನಂತರ ದಿನಾಂಕ:25/8/2020 ರಂದು ಪುನಃ ಅನಾಮದ್ಯೇಯ ವ್ಯಕ್ತಿ ಮೇಲ್ಕಂಡ ನಂಬರ್ ನಿಂದ ಕರೆ ಮಾಡಿ   ಸದರಿ ಲೋನ್ ಗೆ ಜಿ ಎಸ್ ಟಿ ಕಟ್ಟಬೇಕು ಅಂತ ತಿಳಿಸಿ 31,500/- ರೂಗಳನ್ನು ಕಳುಹಿಸುವಂತೆ ತಿಳಿಸಿ BANK OF BARODA ಖಾತೆಗೆ ಜಮೇ ಮಾಡಲು ತಿಳಿಸಿದರು. ನಾನು ನಿಜ ಇರಬಹುದೆಂತ ನಂಬಿ ಮೇಲ್ಕಂಡ ನನ್ನ ಫೆಡರಲ್ ಬ್ಯಾಂಕ್ ಖಾತೆಯಿಂದ ವರ್ಗಾವಣೆ ಮಾಡಿರುತ್ತೇನೆ. ನಂತರ ದಿನಾಂಕ;28/8/2020 ರಂದು ಪುನಃ ಅವರು ಕರೆ ಮಾಡಿ ಇನ್ಸೂರೆನ್ಸ್ ಗೆ 37500/- ರೂಗಳನ್ನು ಕಳುಹಿಸಲು ತಿಳಿಸಿ, ಮೇಲ್ಕಂಡ  BANK OF BARODA ಖಾತೆಗೆ ಜಮೇ ಮಾಡಲು ತಿಳಿಸಿದರು, ಅದರಂತೆ ನಾನು  ಮೇಲ್ಕಂಡ ಕೆನರಾ ಬ್ಯಾಂಕ್ ಖಾತೆಯಿಂದ ಹಣ ವರ್ಗಾವಣ ಮಾಡಿರುತ್ತೇನೆ. ದಿನಾಂಕ;01/9/2020 ರಂದು ಅವರು ಪುನಃ ಕರೆ ಮಾಡಿ ನಿಮ್ಮ ಲೋನ್ ಮಂಜೂರಾಗಿರುತ್ತದೆ.  ನಿಮ್ಮ ಲೋನ್ ಮೊತ್ತಕ್ಕೆ ಜಿ ಎಸ್ ಟಿ 45,000/- ರೂಗಳನ್ನು ಕಟ್ಟ ಬೇಕು ಅಂತ ತಿಳಿಸಿ BANK OF BARODA ಖಾತೆಗೆ ಜಮೇ ಮಾಡಲು ತಿಳಿಸಿದರು, ನಂತರ ನಾನು ನನ್ನ ಮೇಲ್ಕಂಡ ಕೆನರಾ ಬ್ಯಾಂಕ್ ಖಾತೆಯಿಂದ ಹಣ ವರ್ಗಾವಣೆ ಮಾಡಿರುತ್ತೇನೆ.ನಂತರ ದಿನಾಂಕ:7/9/2020 ರಮದು ಕರೆ ಮಾಡಿದ  ಅವರು 6 ತಿಂಗಳ ಇ ಎಂ ಐ ಮೊತ್ತ 70,000/- ರೂಗಳನ್ನು ತುಂಬ ಬೇಕು  ಅಂತ ತಿಳಿಸಿ. ಇದನ್ನು ಮೇಲ್ಕಂಡ  ESAF SMALL FINANCE BANK ಬ್ಯಾಂಕ್ ಖಾತೆಗೆ ಜಮೇ ಮಾಡಲು ತಿಳಿಸಿದರು. ನಂತರ ನಾನು ನನ್ನ ಮೇಲ್ಕಂಡ ಫೆಡರಲ್ ಬ್ಯಾಂಕ್ ಖಾತೆಯಿಂದ ವರ್ಗಾಯಿಸಿರುತ್ತೇನೆ. ದಿನಾಂಕ:21/9/2020 ರಂದು ಪುನಃ ಅವರು ಕರೆ ಮಾಡಿ ನಿಮಗೆ ಈ ಮೊತ್ತ ರೀಫಂಡ್ ಆಗುವುದಾಗಿ ತಿಳಿಸಿ 1,10,000/- ರೂಗಳನ್ನು  ಮೇಲ್ಕಂಡ  ESAF SMALL FINANCE BANK ಬ್ಯಾಂಕ್ ಖಾತೆಗೆ ಜಮೇ ಮಾಡಲು ತಿಳಿಸಿದರು . ನಂತರ ನಾನು ಅವರಿಗೆ ನನ್ನ ಬಳಿ ಹಣ ಇಲ್ಲ ನನಗೆ ಬರುವ ಲೋನ್ ಮೊತ್ತದಲ್ಲಿ ಹಿಡಿದುಕೊಂಡು ಕೊಡುವಂತೆ ತಿಳಿಸಿದೆ ಆದರೆ ಇಲ್ಲ ನಿಮ್ಮ ಲೋನ್ ಪ್ರೋಸಿಂಗ್ ನಲ್ಲಿ ಇದೆ. ಅದರಿಂದ ನೀವು ಈ ಮೊತ್ತವನ್ನು ತುಂಬಿದರೆ ನಿಮಗೆ 15 ನಿಮಿಷದಲ್ಲಿ ನಿಮ್ಮ ಖಾತೆಗೆ ಹಣ ಜಮೆ ಆಗುತ್ತದೆಂತ ತಿಳಿಸಿದ ನಾನು ನನ್ನ ಬಳಿ ಹಣ ಇಲ್ಲದ ಕಾರಣ ನಮ್ಮ ಮಾವನಿಂದ ಹಣವನ್ನು ಪಡೆದು ನನ್ನ   ಫೆಡರಲ್ ಬ್ಯಾಂಕ್ ಖಾತೆಯಿಂದ ಸದರಿ ಮೊತ್ತವನ್ನು ವರ್ಗಾವಣೆ ಮಾಡಿರುತ್ತೇನೆ. ನಂತರ ದಿನಾಂಕ:25/9/2020 ರಂದು ಪುನಃ ಕರೆ ಮಾಡಿ ನಿಮ್ಮ ದಾಖಲೆಗಳು ಮತ್ತೊಂದು ಸಿಬ್ಬಂದಿಯವರ ಬಳಿ ಇದೆ ಅದಕ್ಕೆ ನೀವು 40,000/- ರೂಗಳನ್ನು ಕಟ್ಟ ಬೇಕು ಅಂತ ಕೆನರಾ ಬ್ಯಾಂಕ್ ಖಾತೆ ನಂ: 1565901274132 IFSC CODE: CNRB0001565 ನ್ನು ಕಳುಹಸಿದರು. ನಾನು ನನ್ನ ಮೇಲ್ಕಂಡ ಫೆಡರಲ್ ಬ್ಯಾಂಕ್ ಖಾತೆಯಿಂದ ಸದರಿ ಮೊತ್ತವನ್ನು ವರ್ಗಾವಣೆ ಮಾಡಿರುತ್ತೇನೆ. ನಂತರ ದಿನಾಂಕ;26/9/2020 ರಂದು ಪುನಃ ಕರೆ ಮಾಡಿದ ಅವರು ಸ್ವಲ್ಪ ಟ್ಯಾಕ್ಸ್ ಹಣ ಕಟ್ಟ ಬೇಕು ಅದನ್ನು ಕಟ್ಟಿದರೆ ನಿಮಗೆ ಲೋನ್ ಈ ದಿನ ನಿಮ್ಮ ಖಾತೆಗೆ ಜಮೆ ಆಗುತ್ತದೆಂತ  ತಿಳಿಸಿ ಮೇಲ್ಕಂಡ ಕೆನರಾ ಬ್ಯಾಂಕ್ ಖಾತೆಗೆ ಜಮೆ ಮಾಡಲು ತಿಳಿಸಿದ. ನಾನು ಕೂಡಲೆ ನನ್ನ ಫೆಡರಲ್ ಬ್ಯಾಂಕ್ ಖಾತೆಯಿಂದ ಸದರಿ ಮೊತ್ತವನ್ನು ವರ್ಗಾವಣೆ ಮಾಡಿರುತ್ತೇನೆ. ಆದರೆ ನನಗೆ ಯಾವುದೆ ಲೋನ್ ಮೊತ್ತ ನನ್ನ ಖಾತೆಗೆ ಬರಲಿಲ್ಲ ಪುನಃ ಮೇಲ್ಕಂಡ ಅವರ ಸಂಕ್ಯೆಗಳಿಗೆ ಕರೆ ಮಾಡಲಾಗಿ ಪೋನ್ ಸ್ವಚ್ ಆಪ್. ನಂಬರ್ ಬಿಸ್ಸೀ ಅಮತ ಬರುತ್ತಿದೆ. ನನಗೆ ಅನುಮಾನ ಬಂದು ಈ ದಿನ ಠಾಣೆಗೆ ಹಾಜರಾಗಿ ದೂರನ್ನು ನೀಡುತ್ತಿದ್ದು, ಸದರಿ ಮೇಲ್ಕಂಡ ಲೋನ್ ಕೊಡುವುದಾಗಿ ನಂಬಿಸಿ ನನ್ನಿಂದ ಒಟ್ಟು 3,82,000/- ರೂಗಳನ್ನು ಪಡೆದು ವಂಚಿಸಿರುವ ವ್ಯಕ್ತಿಗಳನ್ನು ಪತ್ತೆ ಮಾಡಿ ಕಾನೂನು ಕ್ರಮವನ್ನು ಜರಗಿಸಿ ನನ್ನ ಹಣವನ್ನು ವಾಪಸ್ಸು ಕೊಡಿಸಲು ಕೋರಿ ನೀಡಿದ ದೂರು.

 1. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.149/2020 ಕಲಂ: 427,506,34,504,447,323,324 ಐ.ಪಿ.ಸಿ :-

     ದಿನಾಂಕ:-22/10/2020 ರಂದು ಬೆಳಿಗ್ಗೆ11-30 ಗಂಟೆಗೆ ನ್ಯಾಯಾಲಯದ ಸಿಬ್ಬಂದಿ ಪಿಸಿ-97 ರವಿಕುಮಾರ್ ರವರು ನ್ಯಾಯಾಲಯದಿಂದ ಸಾದರಾದ ದೂರುನ್ನು ಪಡೆದು ಠಾಣೆಯಲ್ಲಿ ಹಾಜರು ಪಡಿಸಿದ ದೂರಿನ ಸಾರಾಂಶವೇನೆಂದರೆ ಪಿರ್ಯಾಧೀದಾರರು ಚಿಕ್ಕಬಳ್ಳಾಪುರ ತಾಲ್ಲೂಕು ಗೊಲ್ಲಹಳ್ಳಿ ಗ್ರಾಮದ ಸರ್ವೆ ನಂ:-14/ಪಿ2 ರಲ್ಲಿ 3 ಎಕರೆ 14/ಪಿ9 ರಲ್ಲಿ1 ಎಕರೆ ಜಮೀನನ್ನು ದಿನಾಂಕ;-26/11/2014 ರಲ್ಲಿ 13,50,000/- ಮತ್ತು 4.50.000?-ರೂ ಗಳಿಗೆ ಶ್ರೀಮತಿ ರೆಹಮತ್ ಉನಿಸಾರವರು ಕ್ರಯದ ಕರಾರು ಮಾಡಿಕೊಂಡು 10.00.000/- ರೂಗಳನ್ನು ಮುಂಗಡ ನೀಡಿದ್ದು ಪಿರ್ಯಾಧಿದಾರರಿಗೆ ಪುನಃ ಜಿ.ಪಿ.ಎ ಮಾಡಿಕೊಂಡಿದ್ದರು,ಸದರಿ ಜಮೀನಿನಲ್ಲಿ ಪಿರ್ಯಾಧಿದಾರರು ಬೆಳೆ ಬೆಳೆದುಕೊಳ್ಳತ್ತಿದ್ದು ರೆಹಮತ್ ನಿಸಾರವರಿಗೆ ಓ ಎಸ್ ನಂ;-112/2016 ರೀತ್ಯಾ ಚಿಕ್ಕಬಳ್ಳಾಫುರ ಘನ ನ್ಯಾಯಾಲಯದಲ್ಲಿ ದಾವೆ ಹೂಡಿದ್ದು ವಿಚಾರಣೆ ನಡೆದು ದಿನಾಂಕ;-06/10/2017 ರಂದು ರೆಹಮತ್ ಉನಿಸಾ ಪರ ಡಿಕ್ರಿಯಾಗಿದ್ದು,ಈ ಡಿಕ್ರಿ ಆದೇಶದ ಮೇಲೆ ರೆಹಮತ್ ಉನಿಸಾರವರು ಜಮೀನನ್ನು ಸ್ವಾಧೀನಕ್ಕೆ ಪಡೆದುಕೊಳ್ಳಲು ಇ.ಎಕ್ಸ್ ನಂ:-4/2018 ರೀತ್ಯಾ ದಾವೆ ಹೂಡಿದ್ದು ಬಾಕಿ ಇರುತ್ತೆ.ಹೀಗಿರುವಲ್ಲಿ ಆರೋಪಿಗಳು ರೆಹಮತ್ ಉನಿಸಾ ಮತ್ತು ಅವರು ಕಡೆಯುವರೊಂದಿಗೆ ಸೇರಿಕೊಂಡು ಜಮೀನಿಗೆ ನಕಲಿ ದಾಖಲಾತಿಗಳನ್ನು ಸೃಷ್ಟಿಸಿಕೊಂಡು ಜಮೀನನ್ನು ಸ್ವಾಧಿನಕ್ಕೆ ಪಡೆಯಲು ಪ್ರಯತ್ನಸಿದ್ದರಿಂದ ಪಿರ್ಯಾಧಿದಾರರು ಘನ ನ್ಯಾಯಾಲಯಕ್ಕೆ ಓ.ಎಸ್ ನಂ:-225/2017 ರೀತ್ಯಾ ದಾವೆ ಹೂಡಿದ್ದು ವಿಚಾರಣೆ ನಡೆದು ದಿನಾಂಕ;-01/08/2018 ರಂದು ಪಿರ್ಯಾಧೀದಾರರ ಪರವಾಗಿ ಸದರಿ ಜಮೀನಿನಲ್ಲಿ ಯಾರೂ ಪ್ರವೇಶ ಮಾಡಬಾರದೆದ್ದು ಆದೇಶ ಮಾಡಿದ್ದರು ಸಹ ಆರೋಪಿಗಳು ಪಿರ್ಯಾಧಿದಾರರ ಜಮೀನಿಗೆ ಪ್ರವೇಶ ಮಾಡಿ ಬೆಳೆದ ಬೆಳೆ ನಾಶ ಮಾಡಿದ್ದು,ಕೇಳಲು ಹೋದ ಪಿರ್ಯಾಧಿದಾರರಿಗೆ ಅವಾಚ್ಯ ಶಬ್ಬಗಳಿಂದ ಬೈದು ಕೈಗಳಿಂದ ಹೊಡೆದು,ಪ್ರಾಣ ಬೆದರಿಕೆ ಹಾಕಿರುವುದಾಗಿ ದೂರಿನಲ್ಲಿಕಂಡ ಕಲಂಗಳ ರೀತ್ಯಾ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ನೀಡಿದ ದೂರಿನ ಮೇರೆಗೆ ಈ ಪ್ರ.ವ.ವರದಿ.

 1. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.150/2020 ಕಲಂ. 420,422,415,417,418, 419,423, 425,426, 464,468,506,120B ರೆ/ವಿ 34 ಐ.ಪಿ.ಸಿ:-

     ದಿನಾಂಕ;-22/10/2020 ರಂದು ಬೆಳಿಗ್ಗೆ 12-00 ಗಂಟೆಗೆ ಠಾಣೆಯ ನ್ಯಾಯಾಲಯದ ಸಿಪಿಸಿ-97 ರವರಾದ ಶ್ರೀ ರವಿಕುಮಾರ್  ಮಾನ್ಯ ಘನ ನ್ಯಾಯಾಲಯದಿಂದ ಸದರಾದ ದೂರನ್ನು ಹಾಜರುಪಡಿಸಿದ್ದುರ ಸಾರಾಂಶವೇನೆಂದರೆ ಪಿರ್ಯಾಧಿದಾರರಾದ ಶೀಮತಿ ಗಾಯತ್ರಿರವರ ಬಾಬತ್ತು ಹೊನ್ನೇನಹಳ್ಳಿ ಗ್ರಾಮದ ಸರ್ವೇ ನಂ:-27/1,ಹೊಸ ಸರ್ವೇ ನಂ:-27/3 ರಲ್ಲಿರುವ 10 ಗುಂಟೆ ಜಮೀನು ಮತ್ತು ಹೌಸ್ ಲಿಸ್ಟ್ ನಂ:-163/3166*55 ಅಡಿ ವಿಸ್ತೀರ್ಣವುಳ್ಳ ಮನೆಯನ್ನು ಅಗಲಗುರ್ಕಿ ಗ್ರಾಮದಲ್ಲಿ ಹೊಂದಿದ್ದು,ಸದರಿ ಸತ್ತು ಪಿರ್ತಾಜೀತವಾಗಿ ಭಾಗವಾಗಿ ಬಂದಿದ್ದು,ಅರ್ಜಿದಾರರು ಗಂಡ 30/12/2017 ರಂದು ಮೃತ ಹೋಂದಿದ್ದು,ನಂತರ ಪಿರ್ಯಾಧಿದಾರರಿಗೆ ಪಾವತಿ ವರಸು ಬಂದಿದ್ದು,ಸದರಿ ಸ್ವತ್ತುಗಳು ರವಿ,ಚಂದ್ರಕುಮಾರ್ ಎಂಬುವವರುಗೆ ದಿನಾಂಕ:-03/06/2020 ರಂದು ಕ್ರಯದ ಕರಾರು ಪತ್ರ ಬರೆದುಕೊಟ್ಟಿರುತ್ತಾರೆ,ಆದರೆ ಆರೋಪಿತರಾದ ತನ್ನ ಮೃತ ಗಂಡನಾದ ಶ್ರೀ ಸೂರ್ಯನಾರಾಯಣರೆಡ್ಡಿ ತಮ್ಮಗೆ ದಿನಾಂಕ;-14/12/2012 ರಂದೆ ಸದರಿ ಸ್ವತ್ತುಗಳನ್ನು ನಮಗೆ ಕ್ರಯ ಮಾಡಿಕೊಟ್ಟಿರುವುದಾಗಿ ದಾಖಲಾತಿಗಳನ್ನು ಗ್ರಾಮಾಂತರ ಠಾಣೆಯಲ್ಲಿ ದೂರು ನೀಡಿದಾಗ ಹಾಜರುಪಡಿಸಿರುವುದಾಗಿ ಇದರಿಂದ ತನಗೆ ತಿಳಿಯದೇ ಆರೋಪಿತರು ಸದರಿ ಸ್ವತ್ತುಗಳಿಗೆ ನಕಲು ದಾಖಲಾತಿಗಳನ್ನು ಸೃಷ್ಟಸಿಕೊಂಡು ಮೋಸ ಮಾಡುವ ಉದ್ದೇಶದಿಂದ ಗ್ರಾಯತ್ರಿರವರಿಗೆ  ಮತ್ತು ತನ್ನ ಮಕ್ಕಳಿಗೆ ಮನೆಯ ಬಳಿ ಜನರನ್ನು ಕರೆದುಕೊಂಡು ಬಂದು ಬೆದರಿಕೆಯನ್ನು ಹಾಕಿ ಅವಾಚ್ಯ ಶಬ್ಬಗಳಿಂದ ಬೈದು ಅರ್ಜಿಯಲ್ಲಿ ನಮೂದಿಸಿರುವ ಕಲಂಗಳ ಅನ್ವಯ ಆರೋಪ ಎಸಗಿರುವುದಾಗಿ ಸದರಿ ಆರೋಪಿತರ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ಹಾಜರುಪಡಿಸಿದ ಸದರಿ ದೂರಿನ ಮೇರೆಗೆ ಈ ಪ್ರ.ವ.ವರದಿ.

 1. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.151/2020 ಕಲಂ. 506,120B,149,420,416,417 ಐ.ಪಿ.ಸಿ:-

     ದಿನಾಂಕ:-22/10/2020 ರಂದು ಬೆಳಿಗ್ಗೆ 12-30 ಗಂಟೆಗೆ ನ್ಯಾಯಾಲಯದ ಸಿಬ್ಬಂದಿಯಾದ ಪಿಸಿ-97 ಶ್ರೀ ರವಿಕುಮಾರ್ ರವರು ನ್ಯಾಯಾಲಯದಿಂದ ಸಾದರಾದ ದೂರಿನ ಸಾರಾಂಶವೇನೆಂದರೆ ಚಿಕ್ಕಬಳ್ಳಾಫುರ ತಾಲ್ಲೂಕು ಬನ್ನಿಕುಪ್ಪೆ ಗ್ರಾಮದ ಸರ್ವೆ ನಂ:-14 ರಲ್ಲಿನ 1 ಎಕರೆ 16 ಗುಂಟೆ ಜಮೀನು ಹಾಗೂ ಸರ್ವೆ ನಂ:-14 ರಲ್ಲಿರುವ 19 ಗುಂಟೆ ಜಮೀನಿನ ದಾಖಲಾತಿಗಳನ್ನು ಆರೋಪಿಗಳು ಜಮೀನಿನ ಮೂಲ ಮಾಲೀಕರಾದ ಲಕ್ಷ್ಮಮ್ಮರವರೊಂದಿಗೆ ಸೇರಿಕೊಂಡು ಮೋಸ ಮಾಡುವ ಉದ್ದೇಶದಿಂದ ಒಳ ಸಂಚು ಮಾಡಿ ನಕಲಿ ದಾಖಲೆಗಳನ್ನು ಸೃಷ್ಟಿಸಿಕೊಂಡು ಜಮೀನಿನ ಮುಟೇಷೇನನ್ನು ತಮ್ಮ ಹೆಸರಿಗೆ ಮಾಡಿಕೊಂಡಿದ್ದು ಕೇಳಲು ಹೋದ ಪಿರ್ಯಾಧಿದಾರರಿಗೆ ಅವಾಚ್ಯ ಶಬ್ಬಗಳಿಂದ ಬೈದು,ನೀವುಗಳು ಈ ಜಮೀನಿನ ತಂಟೆಗೆ ಬಂದರೆ ನಿಮ್ಮಗಳನ್ನು ಬಿಡುವುದಿಲ್ಲ,ನಿಮ್ಮ ಪ್ರಾಣವನ್ನು ತೆಗೆಯುತ್ತೇನೆ ಎಂತ ಪ್ರಾಣ ಬೆದರಿಕೆಯನ್ನು ಹಾಕಿರುತ್ತಾರೆ ಎಂತ ನೀಡಿರುವ ದೂರಿನ ಮೇರೆಗೆ ಈ ಪ್ರ.ವ.ವರದಿ.

 1. ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.276/2020 ಕಲಂ. 279,283,304(A) ಐ.ಪಿ.ಸಿ:-

     ದಿನಾಂಕ 22/10/2020 ರಂದು ಮದ್ಯಾಹ್ನ 12-30 ಗಂಟೆಗೆ ಪಿರ್ಯಾದಿ ಮುಸ್ತಾಕ್ ಬಿನ್ ಅಲ್ಲಾ ಬಕಾಷ್, 29 ವರ್ಷ, ವಾಟರ್ ಮ್ಯಾನ್ ಕೆಲಸ, ಮುಸ್ಲಿಂ ಜನಾಂಗ, ಜಾದ್ ನಗರ ಹಿಂದೂಪುರ ಟೌನ್ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆನೇಂದರೆ ತಮ್ಮ ಅಣ್ಣನಾದ ಮುಸಾದಿಕ್ ಬಿನ್ ಅಲ್ಲಾ ಬಕಾಷ್ , 32 ವರ್ಷ,  ಆಂಬುಲೆನ್ಸ್ ಚಾಲಕ , ಆಜಾದ್ ಪೇಟ್, ಆರ್.ಟಿ.ಸಿ. ಬಸ್ ನಿಲ್ದಾಣದ ಬಳಿ,  ಹಿಂದೂಪುರ ಟೌನ್.  ರವರು ದಿನಾಂಕ: 21/10/2020 ರಂದು ರಾತ್ರಿ ಗೌರೀಬಿದನೂರು ಟೌನ್ ನಲ್ಲಿರುವ ತಮ್ಮ ಚಿಕ್ಕಪ್ಪನಾದ ಮಹಮದ್ ಜಲೀಲ್  ಬಿನ್ ಮಹಮದ್ ಅಬ್ದುಲ್ ರಷೀಧ್ ರವರ ಮನೆಗೆ ಬಂದಿದ್ದು, ರಾತ್ರಿ ಅಲ್ಲೇ ಉಳಿದು ಕೊಂಡಿದ್ದರು. ಈ ದಿನ ದಿನಾಂಕ:22/10/2020 ರಂದು ಬೆಳಿಗ್ಗೆ 10-30 ಗಂಟೆಯಲ್ಲಿ ನಾನು ಹಿಂದೂಪುರದಲ್ಲಿದ್ದಾಗ, ತಮ್ಮ ಅಣ್ಣನ ಮೊಬೈಲ್ ನಂ. 7207678544 ನಂಬರಿನಿಂದ ತನ್ನ ಮೊಬೈಲ್ ನಂ. 9652404164 ನಂಬರಿಗೆ ಕರೆ ಮಾಡಿ, ಈ ಫೋನ್  ಯಾರದು ಎಂದು ಕೇಳಿದರು . ಆಗ ತಾನು ಇದು ನಮ್ಮ ಅಣ್ಣ ಮುಸಾದಿಕ್ ರವರು ಎಂದು ಹೇಳಿದೆ. ಅದಕ್ಕೆ ಅವರು ನಿಮ್ಮ ಅಣ್ಣನಿಗೆ  ಗೌರೀಬಿದೆನೂರು ತಾಲ್ಲೂಕು, ಕುಡುಮಲಕುಂಟೆ ಕೈಗಾರಿಕಾ ಪ್ರದೇಶದ ಬಳಿ ಇರುವ ಪೆಟ್ರೋಲ್ ಬಂಕ್ ಸಮೀಪ ಮುಸಾಧಿಕ್ ಗೆ ಅಪಘಾತವಾಗಿ ಗಾಯಗೊಂಡು ಮೃತಪಟ್ಟಿದ್ದು ಮೃತದೇಹವನ್ನು  ಗೌರೀಬಿದನೂರು ಸರ್ಕಾರಿ ಆಸ್ಪತ್ರೆಗೆ ಸಾಗಿಸುತ್ತಿರುವುದಾಗಿ ಕೂಡಲೇ ಗೌರೀಬಿದನೂರು ಸರ್ಕಾರಿ ಆಸ್ಪತ್ರೆ ಬಳಿಗೆ ಬರಲು ತಿಳಿಸಿದರು.  ಕೂಡಲೇ ನಾನು ಗೌರೀಬಿದನೂರು ಸರ್ಕಾರಿ ಆಸ್ಪತ್ರೆ ಬಳಿಗೆ ಬಂದು ನೋಡಲಾಗಿ, ನಮ್ಮ ಅಣ್ಣನಿಗೆ ಎಡಕಣ್ಣಿನ ಹಣೆಯ ಮೇಲೆ ರಕ್ತಗಾಯವಾಗಿ, ಎಡಕೈಗೆ ರಕ್ತ ಗಾಯವಾಗಿ ಮೃತಪಟ್ಟಿದ್ದನು. ಅಪಘಾತ ಹೇಗಾಯತೆಂದು ವಿಚಾರಿಸಿದಾಗ,  ಈ ದಿನ ದಿನಾಂಕ: 22/10/2020 ರಂದು ಬೆಳಿಗ್ಗೆ ನಮ್ಮ ಮಾವನಾದ ಮಹಮದ್ ಜಲೀಲ್ ರವರ ಮನೆಯಿಂದ  ತನ್ನ ಬಾಬತ್ತು AP02-BF-6425 ಹೀರೋ ಗ್ಲಾಮರ್ ದ್ವಿಚಕ್ರ ವಾಹನದಲ್ಲಿ  ಹಿಂದೂಪುರಕ್ಕೆ ಬರಲು ಬರುತ್ತಿದ್ದಾಗ, ಬೆಳಿಗೆ ಸುಮಾರು 10-00 ಗಂಟೆಯಲ್ಲಿ ಗೌರೀಬಿದೆನೂರು ತಾಲ್ಲೂಕು, ಕುಡುಮಲಕುಂಟೆ ಕೈಗಾರಿಕಾ ಪ್ರದೇಶದ ಬಳಿ ಇರುವ ಪೆಟ್ರೋಲ್ ಬಂಕ್ ಸಮೀಪ ರಸ್ತೆಯ ಎಡ ಬದಿಯಲ್ಲಿ  KA.02-AF.0500  EICHER  ವಾಹನದ ಚಾಲಕನು  ಈಚರ್ ವಾಹನವನ್ನು ಫುಟ್  ಪಾತ್ ಮೇಲೆ ರಸ್ತೆಗೆ  ಹೊಂದಿಕೊಂಡಂತೆ ಅಪಘಾತಗಳನ್ನು ತಪ್ಪಿಸಲು  ಯಾವುದೇ ಸೂಚನೆಗಳನ್ನು ಹಾಕದೇ, ರಸ್ತೆಯಲ್ಲಿ ಓಡಾಡುವ ವಾಹನನಗಳಿಗೆ ಅಡ್ಡಿಯಾಗುವಂತೆ  ತನ್ನ  KA.02-AF.0500  EICHER  ವಾಹನವನ್ನು ನಿಲ್ಲಿಸಿದ್ದ ಪರಿಣಾಮ, AP02-BF-6425 ಹೀರೋ   ದ್ವಿಚಕ್ರವಾಹನದಲ್ಲಿ ಎಸ್.ಹೆಚ್-9 ರಸ್ತೆಯಲ್ಲಿ  ವೇಗವಾಗಿ ಚಾಲನೆಕೊಂಡು ಬರುತ್ತಿದ್ದ, ನಮ್ಮ ಅಣ್ಣನಿಗೆ ದ್ವಿಚಕ್ರ ವಾಹನ ನಿಯಂತ್ರಣಕ್ಕೆ ಸಿಗದೇ , ರಸ್ತೆಯ ಬದಿಯಲ್ಲಿ ಸಂಚಾರಕ್ಕೆ ಅಡ್ಡಿಯಾಗಿ ಅಪಾಯವಾಗುವ ರೀತಿಯಲ್ಲಿ ನಿಲ್ಲಿಸಿದ್ದ  ಈಚರ್ ವಾಹನಕ್ಕೆ ಡಿಕ್ಕಿಹೊಡೆದ ಪರಿಣಾಮ, ಮುಸಾಧಿಕ್ ಗೆ ಹಣೆಗೆ , ಕೈಗೆ ತೀವ್ರವಾದ ಗಾಯಗಳಾತಿ ಸ್ಥಳದಲ್ಲೇ ಮೃತಪಟ್ಟಿರುವುದಾಗಿ, ಸಾರ್ವಜನಿಕರು ಮೃತದೇಹವನ್ನು ಗೌರೀಬಿದನೂರು ಸರ್ಕಾರಿ ಆಸ್ಪತ್ರೆಗೆ ಕಳುಹಿಸಿಕೊಟ್ಟಿರುತ್ತಾರೆಂದು ತಿಳಿಯಿತು.  ಈ ಅಪಘಾತಕ್ಕೆ ಕಾರಣವಾದ  KA.02-AF.0500  EICHER  ವಾಹನದ ಚಾಲಕನ ಹೆಸರು ವಿಳಾಸ ಗೊತ್ತಿರುವುದಿಲ್ಲ.   KA.02-AF.0500  EICHER  ವಾಹನದ ಚಾಲಕನ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ದೂರಿನ ಸಾರಾಂಶವಾಗಿರುತ್ತೆ.

 1. ಗೌರಿಬಿದನೂರು ಪುರ ಪೊಲೀಸ್ ಠಾಣೆ ಮೊ.ಸಂ.171/2020 ಕಲಂ. 279 ಐ.ಪಿ.ಸಿ:-

     ದಿನಾಂಕ;21/10/2020 ರಂದು ಪಿರ್ಯಾದಿದಾರಾದ ಪಿ.ಚಂದ್ರಶೇಖರ್ ಬಿನ್ ಲೇಟ್ ಪೊನ್ನುಸ್ವಾಮಿ,ರವರು ಠಾಣೆಗೆ ಸಂಜೆ 6-00 ಗಂಟೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂಧರೆ ತಾನು ಸುಮಾರು 10 ವರ್ಷದಿಂದ,ಸೈಗರ್(ಶೇಖರ್) ಲಾಜಿಸ್ಟಿಕ್ ಪ್ರವೇಟ್ ಲಿಮಿಟೆಡ್ ಕಂಪನಿಯಲ್ಲಿ ಲೈಸನ್ ಎಕ್ಸ್ಗುಟಿವ್ ಆಗಿ ಕೆಲಸ ಮಾಡುತ್ತಿದ್ದು. ದಿನಾಂಕ;16/10/2020 ರಂದು ಸಂಜೆ 7-00 ಗಂಟೆಗೆ  ಕೆಎ-01-  ಎಜಿ-0528   ಲಾರಿಯನ್ನು  ಬೆಂಗಳೂರಿನ ಟಾಟ ಸ್ಟೀಲ್ಕಂಪನಿಯಿಂದ ಹೆಚ್ ಆರ್ ಕಾಯಿಲ್ ಅನ್ನು ಲೋಡ್ ಮಾಡಿ ಹಿಂದೂಪುರದ ಸೂರ್ಯ ರಶ್ಮೀ ಪ್ಯಾಕ್ಟರಿ ಗೆ ಕಳುಹಿಸಿಕೊಟ್ಟಿರುತ್ತೇನೆ. ನಂತರ  ದಿನಾಂಕ;17/10/2020 ರಂದು ಮದ್ಯಾಹ್ನ 10-00 ಗಂಟೆಗೆ ತಾನು ಸೈಗರ್(ಶೇಖರ್)  ಲಾಜಿಸ್ಟಿಕ್ ಪ್ರವೇಟ್ ಲಿಮಿಟೆಡ್ ಕಂಪನಿಯಲ್ಲಿ ಇದ್ದಾಗ ಕೆಎ-01- ಎಜಿ-0528 ಲಾರಿಯ ಚಾಲಕ ಸದಾನಂದ ರವರು ತನಗೆ ಕರೆಮಾಡಿ  ದಿನಾಂಕ: 17/10/2020 ರಂದು ಬೆಳಿಗ್ಗೆ 7-00 ಗಂಟೆಗೆ ಗೌರಿಬಿದನೂರು ಬಳಿಯ ಕಲ್ಲೂಡಿಯ ಬ್ರಡ್ಜ್ ಬಳಿ ಇರುವ  ರಸ್ತೆ ಉಬ್ಬಿನ ಬಳಿ ನಿಯಂತ್ರಣ ತಪ್ಪಿ ಅಪಘಾತವಾಗಿರುವುದಾಗಿ ತಿಳಿಸಿದನು. ನಂತರ ತಾನು ಸ್ಥಳಕ್ಕೆ  ಬಂದು ನೋಡಲಾಗಿ ವಿಚಾರ ನಿಜವಾಗಿತ್ತು. ನಂತರ ವಿಚಾರ ತಿಳಿಯಲಾಗಿ ಕೆಎ-01- ಎಜಿ-0528 ಲಾರಿಯ ಚಾಲಕ ದಿನಾಂಕ;17/10/2020 ರಂದು ಬೆಳಿಗ್ಗೆ ಗೌರಿಬಿದನೂರಿನ ಕಲ್ಲೂಡಿ ಯ ಬ್ರಿಡ್ಜ್ ಬಳಿಯ ರಸ್ತೆಯ ಉಬ್ಬಿನ ಬಳಿ ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲನೆ  ಮಾಡಿದ್ದರಿಂದ ಲಾರಿಯು ತನ್ನ ನಿಯಂತ್ರಣ ತಪ್ಪಿ ರಸ್ತೆಯಲ್ಲಿ ಬಿದ್ದು ಅಪಘಾತವಾಗಿ ಲಾರಿಯ ಮುಂಬಾಗ ಕ್ಯಾಬಿನ್ ಪೂರ್ಣ  ಜಖಂ  ಗೊಂಡಿರಿತ್ತೆ. ಈ ಲಾರಿಯಲ್ಲಿ ಇದ್ದ ಚಾಲಕನಿಗೆ ಯಾವುದೇ ರೀತಿಯಾದ ಗಾಯಗಳು ಆಗಿರುವುದಿಲ್ಲ. ತಾನು ತಮ್ಮ ಕಂಪನಿಯಲ್ಲಿ ವಿಚಾರಿಸಿ ಈ ದಿನ ತಡವಾಗಿ ಬಂದು ದೂರನ್ನು ನೀಡುತ್ತಿದ್ದು ಕೆಎ-01- ಎಜಿ-0528 ಲಾರಿಯನ್ನು ಅತೀವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿ ಅಪಘಾತ ಪಡಿಸಿದ ಚಾಲನ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ನೀಡಿದ ದೂರನ್ನು ಪಡೆದು ಪ್ರಕರಣ ದಾಖಲಿಸರುತ್ತೆ.

 1. ಗೌರಿಬಿದನೂರು ಪುರ ಪೊಲೀಸ್ ಠಾಣೆ ಮೊ.ಸಂ.172/2020 ಕಲಂ. 279,337 ಐ.ಪಿ.ಸಿ & 32,34 KARNATAKA EXCISE ACT:-

     ದಿನಾಂಕ;21/10/2020 ರಂದು ಸಂಜೆ 7-00 ಗಂಟೆಗೆ ಠಾಣಾ ಹೆಚ್ ಸಿ-244 ರವರು ಠಾಣೆಗೆ ಹಾಜರಾಗಿ ನೀಡಿದ ವರದಿಯ ಸಾರಾಂಶವೇನೆಂದರೆ  ಹೆಚ್. ಸಿ .244 ಗೋಪಾಲ್  ಆದ ತಾನು ಗೌರಿಬಿದನೂರು ನಗರ ಪೊಲೀಸ್ ಠಾಣೆಯಲ್ಲಿ ಅಪರಾದ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿರುತ್ತೇನೆ. ದಿನಾಂಕ:21/10/2020 ರಂದು ಸಂಜೆ 04:00 ಗಂಟೆಯಲ್ಲಿ ತಾನು ಗೌರಿಬಿದನೂರು ನಗರದ ಕಲ್ಲೂಡಿ ಗ್ರಾಮದ ಕಡೆ ಹಳೇ ಆರ್ ಟಿ ಒ ಚೆಕ್ ಪೋಸ್ಟ್ ಬಳಿ ಕರ್ತವ್ಯ ನಿಮಿತ್ತ ಮಾಹಿತಿ ಸಂಗ್ರಹಣೆಯಲ್ಲಿ ಇದ್ದಾಗ  ಹಿಂದೂಪುರ ಕಡೆಯಿಂದ ಬಂದ  ಕೆಎ-01-ಇ.ಹೆಚ್-6951 ದ್ವಿಚಕ್ರವಾಹನ ಸವಾರನು ತನ್ನ ದ್ವಿಚಕ್ರ ವಾಹನವನು ಚಾಲನೆ ಮಾಡಿಕೊಂಡು ಹಿಂದಗಡೆ ಒಬ್ಬ ಯಾರೋ ಒಬ್ಬ ವ್ಯಕ್ತಿಯನ್ನು ಕುಂಡರಿಸಿಕೊಂಡು  ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿ   ಕಲ್ಲೂಡಿಯ ಹಳೇ ಆರ್.ಟಿ.ಒ ಬಳಿಯಿರುವ ರಸ್ತೆಯ ಉಬ್ಬಿನ ಬಳಿ ಅಪಘಾತವಾದ ಪರಿಣಾಮ ಚಾಲನೆ ಮಾಡುತ್ತಿದ್ದ ವ್ಯಕ್ತಿಗೆ  ಮತ್ತು ದ್ವಿಚಕ್ರ ವಾಹನದ ಹಿಂದೆ ಕುಳಿತ್ತಿದ್ದ ಇಬ್ಬರು ಆಸಾಮಿಗಳಿಗೆ ತಲೆಗೆ ಮತ್ತು ಕೈ ಕಾಲುಗಳಿಗೆ ರಕ್ತಗಾಯಗಳಾಗಿರುತ್ತವೆ ಸಾರ್ವಜರ್ನಿಕರ ಸಹಾಯದಿಂದ ಅಸ್ಪತ್ರೆಗೆ ಕಳುಹಿಸಿಕೊಟ್ಟು ಸದರಿ ಆಸಾಮಿಗಳ ಹೆಸರು ಮತ್ತು ವಿಳಾಸ  ವಿಚಾರಿಸಲಾಗಿ   ದ್ವಿಚಕ್ರವಾಹನ ಚಾಲನೆ ಮಾಡುತ್ತಿದ್ದ  ವ್ಯಕ್ತಿಯ ಹೆಸರು ಮತ್ತು ವಿಳಾಸ ತಿಳಿಯಲಾಗಿ ವೆಂಕಟೇಶ್ ಬಿನ್ ವೆಂಕಟರಣಪ್ಪ32 ವರ್ಷ,ಆದಿ ಕರ್ನಾಟಕ ಜನಾಂಗ ಗಾರೆ ಕೆಲಸ ಅರೆಹಳ್ಳಿ ಗುಡ್ಡದಹಳ್ಳಿ ಬಾಶೆಟ್ಟಿಹಳ್ಳಿ ಪೋಸ್ಟ್ ದೊಡ್ಡಬಳ್ಳಾಪುರ ತಾಲ್ಲೂಕು ಎಂದು ತಿಳಿಸಿರುತ್ತಾರೆ ಮತ್ತು ಈತನ ಸ್ನೇಹಿತ ದೇರಾಜು ಎಂದು ತಿಳಿದುಬಂದಿರುತ್ತೆ,ನಂತರ ಸ್ಥಳದಲ್ಲಿದ್ದ ದ್ವಿಚಕ್ರವಾಹನವನ್ನು ಪರಿಶೀಲಿಸಲಾಗಿ ಕೆಎ-01-ಇ.ಹೆಚ್-6951 ಹೊಂಡಾಕಂಪನಿಯ ಅವತಾರ್ ಸ್ಕೂಟಿ ದ್ವಿಚಕ್ರ ವಾಹನವಾಗಿರುತ್ತೆ ಮತ್ತು ದ್ವಿಚಕ್ರವಾಹನದ ಬಿಳಿ ಚೀಲವನ್ನು ನೋಡಲಾಗಿ ಅದರಲ್ಲಿ ಒಂದು ಲೀಟರ್ ಸಾರ್ಮಥ್ಯದ 15 ಪ್ಲಾಸ್ಟಿಕ್  ಬಾಟಲ್ ಗಳಲ್ಲಿ ಎಂಡವಿರುತ್ತೆ ನಂತರ ಇದರ ಬಗ್ಗೆ ಅವರ ಬಳಿ ಯಾವುದೇ ದಾಖಲಾತಿಗಳು ಇರುವುದಿಲ್ಲವೆಂದು ತಿಳಿಸಿರುತ್ತಾರೆ  ನಂತರ ಇದೇ ದಿನ   ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿ ಅಪಘಾತ ಪಡಿಸಿದ ಮತ್ತು ಅಕ್ರಮವಾಗಿ ಯಾವುದೇ ಪರವಾನಿಗೆ ಇಲ್ಲದೇ ಎಂಡವನ್ನು  ಸಾಗಿಸುತ್ತಿದ್ದ ಮೇಲ್ಕಂಡ ಆಸಾಮಿಗಳ ವಿರುದ್ದ ಕಾನೂನು ರಿತ್ಯಾ ಕ್ರಮ ಜರುಗಸಲು ಕೋರಿ ಈ ದಿನ ಈದಿನ ದಿನಾಂಕ;21/10/2020 ರಂದು ಸಂಜೆ 7-00 ಘಂಟೆಗೆ  ಠಾಣೆಗೆ ಹಾಜರಾಗಿ ಠಾಣಾಧಿಕಾರಿಗಳಿಗೆ ವರಿದಿಯನ್ನು ಪಡೆದು ಪ್ರಕರಣ ದಾಖಲಿಸರುತ್ತೆ.

 1. ಗುಡಿಬಂಡೆ ಪೊಲೀಸ್ ಠಾಣೆ ಮೊ.ಸಂ.177/2020 ಕಲಂ. 379 ಐ.ಪಿ.ಸಿ & 41(D) CODE OF CRIMINAL PROCEDURE:-

     ದಿನಾಂಕ:21/10/2020 ರಂದು ರಾತ್ರಿ 9-30 ಗಂಟೆಯಲ್ಲಿ ಪಿರ್ಯಾದಿದಾರರಾದ ಸಿಎಚ್ ಸಿ-28 ದಕ್ಷಿಣಾಮೂರ್ತಿ ಹಾಜರಾಗಿ ನೀಡಿದ ದುರಿನ ವರದಿಯ ಸಾರಾಂಶವೆನೆಂದರೆ ತಾನು ತಮ್ಮಲ್ಲಿ ಮನವಿ ಕೊಳ್ಳುವುದೇನೆಂದರೆ, ಗುಡಿಬಂಡೆ ಪೊಲೀಸ್ ಠಾಣೆಯ ಮೊ.ಸಂ:51/2020 ರಲ್ಲಿ ಆರೋಪಿಗಳ ಪತ್ತೆಗಾಗಿ ತನಗೆ ಮತ್ತು ಸಿಪಿಸಿ-507 ಹನುಮಂತರಾಯಪ್ಪ ರವರಿಗೆ ನೇಮಿಸಿದ್ದು ಅದರಂತೆ ತಾವು ಗರುಡಚಾರ್ಲಹಳ್ಳಿ, ಪಸುಪಲೋಡು, ಲಕ್ಕೇನಹಳ್ಳಿ, ಗ್ರಾಮಗಳಲ್ಲಿ ಆರೋಪಿತರ ಬಗ್ಗೆ ವಿಚಾರ ಮಾಡಿ ಮಾಹಿತಿಯನ್ನು ಸಂಗ್ರಹಿಸಿಕೊಂಡು  ಹಂಪಸಂದ್ರ ಗ್ರಾಮಕ್ಕೆ ಬಂದು ಗ್ರಾಮಪಂಚಾಯ್ತಿ ಕಾರ್ಯಾಲಯದ ಮುಂಭಾಗ ಈ ದಿನ ದಿನಾಂಕ 21/10/2020 ರಂದು ರಾತ್ರಿ ಸುಮಾರು 8-30 ಗಂಟೆಯ ಸಮಯದಲ್ಲಿ ಮಾಹಿತಿಯನ್ನು ಸಂಗ್ರಹಿಸುತ್ತಿದ್ದಾಗ ಬಾಗೇಪಲ್ಲಿ ಕಡೆಯಿಂದ ದ್ವಿಚಕ್ರವಾಹನದಲ್ಲಿ ಬಂದ ಆಸಾಮಿ ಸಮವಸ್ತ್ರದಲ್ಲಿದ್ದ ತಮ್ಮನ್ನು ನೋಡಿ ದ್ವಿಚಕ್ರವಾಹನವನ್ನು ವಾಪಸ್ಸು ತಿರುಗಿಸಿಕೊಂಡು ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದು, ಆಗ ತಾವು ಸದರಿ ಆಸಾಮಿಯನ್ನು ಹಿಡಿದು ವಶಕ್ಕೆ ಪಡೆದುಕೊಂಡು ಹೆಸರು ಮತ್ತು ವಿಳಾಸ ಕೇಳಲಾಗಿ ಮುಬಾರಕ್ ಪಾಷ ಬಿನ್ ಖೈಸರ್ ಪಾಷ, 20 ವರ್ಷ, ಮುಸ್ಲಿಂ ಜನಾಂಗ, ಬಡಗಿ ಕೆಲಸ, ಮಸೀದ ಹತ್ತಿರ, ಮಂಡಿಕಲ್ಲು ಗ್ರಾಮ, ಚಿಕ್ಕಬಳ್ಳಾಪುರ ತಾಲ್ಲೂಕು ಎಂತ ತಿಳಿಸಿದನು, ದ್ವಿಚಕ್ರವಾಹನದ ಬಗ್ಗೆ ವಿಚಾರಣೆ ಮಾಡಲಾಗಿ ಸಮಂಜಸವಾದ ಉತ್ತರ ನೀಡಲಿಲ್ಲ, ಸದರಿ ದ್ವಿಚಕ್ರವಾಹನವನ್ನು ಪರಿಶೀಲಿಸಲಾಗಿ ಕೆ.ಎ-05 ಹೆಚ್.ಕ್ಯೂ-2164 ರ ನೊಂದಣಿ ಸಂಖ್ಯೆಯ ಹೋಂಡಾ ಕಂಪನಿಯ ಆಕ್ಟಿವಾ ದ್ವಿಚಕ್ರವಾಹನವಾಗಿರುತ್ತೆ. ಇದು ಸುಮಾರು 50,000/-ರೂಗಳು ಬೆಲೆ ಬಾಳುವಂತದ್ದಾಗಿರುತ್ತೆ. ಮೇಲ್ಕಂಡ ಆಸಾಮಿಯು ಕೆ.ಎ-05 ಹೆಚ್.ಕ್ಯೂ-2164 ರ ನೊಂದಣಿ ಸಂಖ್ಯೆಯ ಹೋಂಡಾ ಕಂಪನಿಯ ಆಕ್ಟಿವಾ ದ್ವಿಚಕ್ರವಾಹನವನ್ನು ಎಲ್ಲಿಯೋ ಕಳ್ಳತನ ಮಾಡಿಕೊಂಡು ಬಂದಿರುವುದಾಗಿ ಕಂಡು ಬಂದಿದ್ದರಿಂದ ಸದರಿ ಆಸಾಮಿಯನ್ನು ದ್ವಿಚಕ್ರವಾಹನದ ಸಮೇತ ವಶಕ್ಕೆ ಪಡೆದುಕೊಂಡು ರಾತ್ರಿ 09:00 ಗಂಟೆಗೆ ಠಾಣೆಗೆ ವಾಪಸ್ಸಾಗಿ ಮುಂದಿನ ಕ್ರಮಕ್ಕಾಗಿ ವರಧಿಯೊಂದಿಗೆ 9-30 ಗಂಟೆಗೆ ಮೇಲ್ಕಂಡ ಆಸಾಮಿ ಮತ್ತು ಮಾಲನ್ನು ಹಾಜರುಪಡಿಸುತ್ತಿದ್ದು, ಮೇಲ್ಕಂಡ ಆಸಾಮಿಯ ವಿರುದ್ಧ ಕಾನೂನು ಕ್ರಮ ಜರುಗಿಸಲು ಕೋರಿ ನೀಡಿದ ವರದಿಯನ್ನು ಪಡೆದುಕೊಂಡು ಪ್ರಕರಣವನ್ನು ದಾಖಲಿಸಿರುತ್ತೆ.

 1. ಗುಡಿಬಂಡೆ ಪೊಲೀಸ್ ಠಾಣೆ ಮೊ.ಸಂ.178/2020 ಕಲಂ. 143,147,148,447,323,324,504,506 ರೆ/ವಿ 149 ಐ.ಪಿ.ಸಿ:-

     ದಿನಾಂಕ:22/10/2020 ರಂದು ಬೆಳಿಗ್ಗೆ 9-30 ಘಂಟೆಯಲ್ಲಿ ಗುಡಿಬಂಡೆ ಸರ್ಕಾರಿ ಆಸ್ಪತ್ರೆಯಲ್ಲಿ ಗಾಯಾಳು ಗಂಗರೆಡ್ಡಿ ಬಿನ್ ವೆಂಕಟರವಣಪ್ಪ, 48 ವರ್ಷ, ವಕ್ಕಲಿಗರು ಜಿರಾಯ್ತಿ ವಾಸ: ಮಾಚಹಳ್ಳಿ ಗ್ರಾಮ ಗುಡಿಬಂಡೆ ತಾಲ್ಲೂಕು ರವರು ನೀಡಿದ ಹೇಳಿಕೆ ದೂರಿನ ಸಾರಾಂವೇನೆಂದರೆ, ದಿನಾಂಕ:21/10/2020 ರಂದು ಸಂಜೆ ಸುಮಾರು 6-00 ಗಂಟೆ ಸಮಯದಲ್ಲಿ ನಮ್ಮ ಬಾಬತ್ತು ಕೊಂಡರೆಡ್ಡಿಹಳ್ಳಿ ಗ್ರಾಮ ಸರ್ವೆ ನಂಬರ್ 50/4 ರ ಜಮೀನಿನಲ್ಲಿ ಕೊಂಡರೆಡ್ಡಿಹಳ್ಳಿ ಗ್ರಾಮದ ವಾಸಿಗಳಾದ ಸೀನಪ್ಪ, ಹಾಗೂ ಇವರ ಮಕ್ಕಳಾದ ಮಂಜುನಾಥ, ರಾಮಚಂದ್ರ ರವರು ಉದ್ದೇಶ ಪೂರ್ವಕವಾಗಿ ಟ್ರಾಕ್ಟರ್ ನಲ್ಲಿ  ಓಡಾಡಿಸಿದ್ದು ತಾನು ತನ್ನ ಹೆಂಡತಿ ಕೃಷ್ಣಮ್ಮ, ತನ್ನ ಮಗ ರವಿ ರವರು ಹೋಗಿ ಕೆಳಗೆ ದಾರಿ ಇದೇ ಅಲ್ಲವೇ ಯಾಕೇ ನಮ್ಮ ಜಮೀನಿನಲ್ಲಿ ಟ್ರಾಕ್ಟರ್ ಓಡಾಡಿಸಿದ್ದೀರಾ ಎಂದು ಕೇಳಿದಕ್ಕೆ ಸೀನಪ್ಪ ರವರು ನೀನು ಯಾವುನೋ ನಿನ್ನ ಅಮ್ಮನ್ ಕೇಳುವುದಕ್ಕೆ ಲೋಫರ್ ನನ್ನ ಮಗನೇ ಎಂದು ಅವಾಚ್ಯ ಶಬ್ದಗಳಿಂದ ಬೈದನು ಮಂಜುನಾಥನು ನಿಮ್ಮನ್ನು ಸಾಯಿಸದೇ ಬಿಡುವುದಿಲ್ಲ ಎಂದು ಪ್ರಾಣ ಬೆದರಿಕೆ ಹಾಕಿ ಏಕಾಏಕಿ ಸ್ಥಳದಲ್ಲಿದ್ದ ದೊಣ್ಣೆ ತೆಗೆದುಕೊಂಡು ಬಂದು ತನ್ನ ಹೆಂಡತಿಯ ತಲೆಗೆ ಹೊಡೆದು ರಕ್ತಗಾಯ ಮಾಡಿದನು ಅಡ್ಡ ಹೋದ ತನ್ನನ್ನು ಸೀನಪ್ಪ ಮತ್ತು ರಾಮಚಂದ್ರ ರವರು ಬಿಗಿಯಾಗಿ ಹಿಡಿದುಕೊಂಡಿದ್ದು ಮಂಜುನಾಥನು ಅದೇ ದೊಣ್ಣೆಯಿಂದ ತನ್ನ ತಲೆಗೆ ಹೊಡೆದು ರಕ್ತಗಾಯ ಮಾಡಿ ಮೂತಿಗೆ ಹೊಡೆದು ಕೆಳಗಿನ ಹಲ್ಲು ಮುರಿದು ಹೋಗಿದ್ದು ನಂತರ ರಾಮಚಂದ್ರ ರವರು ಕಲ್ಲಿನಿಂದ ನನ್ನ ಭುಜಕ್ಕೆ ಸೊಂಟಕ್ಕೆ ಹೊಡೆದು ಊತಗಾಯ ಮಾಡಿದನು, ಸೀನಪ್ಪ ರವರು ಕೆಳಗೆ ಬೀಳಿಸಿ ಕಾಲಿನಿಂದ ತನ್ನ ಬೆನ್ನಿಗೆ ಒದ್ದನು ಬಿಡಿಸಲು ಅಡ್ಡ ಬಂದ ನನ್ನ ಮಗ ರವಿ ರವರಿಗೆ ಸೀನಪ್ಪ ರವರ ಹೆಂಡತಿ ಮದ್ದಮ್ಮ ರವರು ಹಾಗೂ ರಾಮಚಂದ್ರ ರವರ ಹೆಂಡತಿ ಅರ್ಚನ ರವರು ಬಂದು ಕೈಗಳಿಂದ ಮುಖಕ್ಕೆ ಹೊಡೆದು ರಕ್ತಗಾಯ ಪಡಿಸಿದನು ತಾವು ಕಿರಿಚಿಕೊಂಡಾಗಲ್ಲಿಗೆ ಕೊಂಡರೆಡ್ಡಿಹಳ್ಳಿ ಗ್ರಾಮದ ಚೌಡರೆಡ್ಡಿ ಹಾಗೀ ಇತನ ಮಗ ಹರೀಶ್ ರವರು ಬಂದು ಜಗಳ ಬಿಡಿಸಿ ತಮ್ಮನ್ನು ಉಪಚರಿಸಿದ್ದು ನಂತರ ತಮ್ಮ ಅಣ್ಣನ ಮಗನಾದ ಸಂದೀಪ್ ರವರು ಬಂದು ತಮ್ಮಗಳನ್ನು ಯಾವುದೋ ಆಟೋದಲ್ಲಿ ಚಿಕಿತ್ಸೆಗಾಗಿ ಗುಡಿಬಂಡೆ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ದಾಖಲಿಸಿದನು ಆದ್ದರಿಂದ ಮೇಲ್ಕಂಡಂತೆ ಹಲ್ಲೆ ಮಾಡಿದವರ ವಿರುದ್ದ ಸೂಕ್ತ ಕಾನೂನಿನ ಕ್ರಮ ಜರುಗಿಸಲು ಕೋರಿರುತ್ತೆ.

 1. ಶಿಡ್ಲಘಟ್ಟ ಪುರ ಪೊಲೀಸ್ ಠಾಣೆ ಮೊ.ಸಂ.112/2020 ಕಲಂ. 416,417,420 ಐ.ಪಿ.ಸಿ:-

     ದಿನಾಂಕ-21.10.2020 ರಂದು ಸಂಜೆ 5.30 ಗಂಟೆಗೆ ನ್ಯಾಯಾಲಯದ ಪಿ.ಸಿ 20 ರವರ ಮೂಲಕ ಘನ ನ್ಯಾಯಾಲಯದ ಪಿ.ಸಿ.ಆರ್ ನಂ. 67/2020 ರ ದೂರನ್ನು ಪಡೆದಿದ್ದರ ಸಾರಾಂಶವೇನೆಂದರೆ ಈ ಕೇಸಿನ ಪಿರ್ಯಾದಿ ಶ್ರೀಮತಿ ಚೌಡಮ್ಮ ಕೋಂ ಮುನಿರಾಜು ಎನ್, ಮಾರುತಿ ನಗರ, ಕಾಮಾಕ್ಷಿ ಪಾಳ್ಯ, ಬೆಂಗಳೂರು ರವರ ತಂದೆ ಕೆ.ಸಿ ಮುನಿನಾರಾಯಣಪ್ಪ ಆಗಿದ್ದು, ಕೆ.ಸಿ.ಮುನಿನಾರಾಯಣಪ್ಪ ನವರಿಗೆ 05 ಜನ ಮಕ್ಕಳಾಗಿದ್ದು 1ನೇ ಕೆ.ಎಂ.ಕೃಷ್ಣಪ್ಪ, 2ನೇ ಕೆ,ಎಂ.ಚೌಡಮ್ಮ, 3ನೇ ಕೆ.ಎಂ.ನಾರಾಯಣಸ್ವಾಮಿ, 4ನೇ ಕೆ.ಎಂ. ಚಂಧ್ರಕಲಾ, 5ನೇ ಕೆ.ಎಂ.ರೂಪ ಆಗಿರುತ್ತಾರೆ. ಇವರ ತಂದೆ ಮೃತಪಟ್ಟ ನಂತರ ಕುಟುಂಬದ ಜವಾಬ್ದಾರಿಯನ್ನು ಕೆ.ಎಂ.ಕೃಷ್ಣಪ್ಪ ವಹಿಸಿಕೊಂಡಿರುತ್ತಾರೆ. ಹೀಗಿರುವಾಗ ಕೆ.ಸಿ.ಮುನಿನಾರಾಯಣಪ್ಪ ರವರ ಹೆಸರಿನಲ್ಲಿ ಜಂಗಮಕೋಟೆ ಹೋಬಳಿ ಜೆ.ವೆಂಕಟಾಪುರ ಗ್ರಾಮಕ್ಕೆ ಸೇರಿದ ಹಳೆ ಸರ್ವೇ ನಂಬರ್ 19 ಹೊಸ ಸರ್ವೇ ನಂಬರ್ 19/1 ರಲ್ಲಿ 2 ಎಕರೆ 04 ಗುಂಟೆ ಜಮೀನು ಸ.ನಂಬರ್ 19/2 ರಲ್ಲಿ 0.20 ಗುಂಟೆ ಜಮೀನು ಹೊಂದಿದ್ದು ಇದರಲ್ಲಿ ಕುಟುಂಬದ ಎಲ್ಲಾ ಸದಸ್ಯರು ಬೆಳೆಗಳನ್ನು ಇಟ್ಟು ಅನುಬವದಲ್ಲಿರುತ್ತಾರೆ. ದಿನಾಂಕ-17.06.2009 ರಂದು ಕೆ.ಸಿ ಮುನಿನಾರಾಯಣಪ್ಪ ರವರು ಮೃತಪಟ್ಟಿದ್ದು, ನಂತರ ಇವರ ಹೆಂಡತಿ ನರಸಮ್ಮ ರವರು ಮರಣ ಹೋಂದಿರುತ್ತಾರೆ. ಕೆ.ಸಿ.ಮುನಿನಾರಾಯಣಪ್ಪ ರವರ ಹೆಸರಿನಲ್ಲಿರುವ ಮೇಲ್ಕಂಡ ಜಮೀನನ್ನು ಹಿರಿಯ ಮಗನಾದ ಕೆ.ಎಂ.ಕೃಷ್ಣಪ್ಪ ಮತ್ತು ಕೆ.ಎಂ.ನಾರಾಯಣಸ್ವಾಮಿ ರವರ ಹೆಸರಿಗೆ MR NO-12/2009-10 ರಂತೆ ಜಂಟಿ ಖಾತೆಯಾಗಿರುತ್ತೆ. ದಿನಾಂಕ-22/07/2015 ರಂದು 1ನೇ ಕೆ.ಎಂ.ಕೃಷ್ಣಪ್ಪ ಮತ್ತು ಇವರ ತಮ್ಮ 4ನೇ ನಾರಾಯಣಸ್ವಾಮಿ ರವರು ಸದರಿ ಜಮೀನುಗಳು 2ನೇ ಆರೋಪಿಗೆ ಸೇಲ್ ಡೀಡ್ ಮಾಡಿದ್ದು, ನಂತರ ಆರೋಪಿ-1 ರವರ ಹೆಸರಿಗೆ ಪಿರ್ಯಾದಿ ಚೌಡಮ್ಮ ಮತ್ತು ಚೈತ್ರಾ ರವರು ಮೇಲ್ಕಂಡ ಜಮೀನು ದಿನಾಂಕ.15.10.2018 ರಂದು ಜಿ.ಪಿ.ಎ ಮಾಡಿಕೊಡುವ ಸಮಯದಲ್ಲಿ ಚೌಡಮ್ಮನ ಬದಲಿಗೆ 5ನೇ ಆರೋಪಿ ಲಲಿತಮ್ಮ ರವರನ್ನು ಬಳಿಸಿಕೊಂಡು ಅವರಿಂದ ಸಹಿ ಪಡೆದು ಮೋಸ ಮಾಡಿರುತ್ತಾರೆ. ಇದಾದ ನಂತರ ಕೇಸಿನ ಪಿರ್ಯಾದಿ ಶ್ರೀಮತಿ ಚೌಡಮ್ಮ ರವರು ಮೇಲ್ಕಂಡ ಜಮೀನುಗಳಲ್ಲಿ ಭಾಗ ಬರಬೇಕೆಂದು ಶಿಡ್ಲಘಟ್ಟ ಸಿವಿಲ್ ನ್ಯಾಯಾಲಯದಲ್ಲಿ ಓ.ಎಸ್ ನಂ.96/2019 ರಂತೆ ದಾವೆಯನ್ನು ಹೂಡಿದ್ದು ವಿಚಾರಣೆಯಲ್ಲಿರುತ್ತೆ. ಆದರೆ ಆರೋಪಿ 1 ಮತ್ತು 4 ರವರು ಸೇರಿಕೊಂಡು ದಿನಾಂಕ-16/10/2018 ರಂದು ಪಿರ್ಯಾದಿದಾರರ ಬದಲಿಗೆ ಆರೋಪಿ-5 ರವರನ್ನು ಬಳಿಸಿಕೊಂಡು ಅವರ ಸಹಿ ಪಡೆದು ಆರೋಪಿ-2 ರವರಿಗೆ ಕ್ರಯದ ಕರಾರು ಮಾಡಿಕೊಟ್ಟು ಪಿರ್ಯಾದಿದಾರರಿಗೆ ಕೇಸಿನ ಆರೋಪಿಗಳೆಲ್ಲರೂ ಸೇರಿ ಮೋಸ ಮಾಡಿರುತ್ತಾರೆಂತ ಸದರಿಯವರ ಮೇಲೆ ಕಾನೂನು ಕ್ರಮ ಜರುಗಿಸುವಂತೆ ಘನ ನ್ಯಾಯಾಲಯದ ಮೂಲಕ ಸಲ್ಲಿಸಿಕೊಂಡಿರುವ ದೂರಿನ ಮೇರೆಗೆ ಈ ಪ್ರಕರಣ ದಾಖಲಿಸಿರುತ್ತೆ.