ದಿನಾಂಕ :22/06/2020 ರ ಅಪರಾಧ ಪ್ರಕರಣಗಳು

  1. ಬಾಗೇಪಲ್ಲಿ ಪೊಲೀಸ್ ಠಾಣೆ ಮೊ.ಸಂ.139/2020 ಕಲಂ. 15(ಎ) ಕೆ.ಇ. ಆಕ್ಟ್:-

          ದಿ: 21-06-2020 ರಂದು ಬೆಳಗ್ಗೆ ಪಿ.ಎಸ್.ಐ ಸಾಹೇಬರವರು ಮಾಲು, ಮಹಜರ್ ಮತ್ತು ಆರೋಪಿತರೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶ – ದಿನಾಂಕ; 21-06-2020 ಬೆಳಿಗ್ಗೆ 8-00 ಗಂಟೆಯ ಸಮಯದಲ್ಲಿ ನಾನು ಠಾಣೆಯಲ್ಲಿದ್ದಾಗ ಬಾಗೇಪಲ್ಲಿ ತಾಲ್ಲೂಕು, ಮಲ್ಲಸಂದ್ರ ಗ್ರಾಮದ ಕಡೆಗೆ ಹೋಗುವ ಆರ್ಚ್ ಪಕ್ಕದಲ್ಲಿರುವ ಸಾರ್ವಜನಿಕ ಸ್ಥಳದಲ್ಲಿ ಯಾರೋ ಕೆಲವರು ಕುಳಿತುಕೊಂಡು ಸಾರ್ವಜನಿಕ ಸ್ಥಳದಲ್ಲಿ ಕಾನೂನು ಬಾಹಿರವಾಗಿ ಮದ್ಯಪಾನ ಮಾಡುತ್ತಿರುವುದಾಗಿ ಬಂದ ಖಚಿತ ವರ್ತಮಾನದ ಮೇರೆಗೆ ನಾನು ಮತ್ತು ಸಿಬ್ಬಂದಿಯವರಾದ  ಶ್ರೀ ಮೋಹನ್ ಸಿಪಿಸಿ-387 ಹಾಗೂ ಜೀಪ್ ಚಾಲಕ ಎ.ಹೆಚ್.ಸಿ-34 ಅಲ್ತಾಪ್ ಪಾಷಾ ರವರೊಂದಿಗೆ ಸರ್ಕಾರಿ ಜೀಪ್ ಸಂಖ್ಯೆ; ಕೆಎ-40-ಜಿ-537 ವಾಹನದಲ್ಲಿ ಬಂದು ಬಾಗೇಪಲ್ಲಿ ಪುರದ ಗೂಳೂರು ವೃತ್ತದ್ದಲ್ಲಿದ್ದ ಪಂಚರನ್ನು ಕರೆದು ಮೇಲ್ಕಂಡ ವಿಚಾರವನ್ನು ತಿಳಿಸಿ ಮೇಲ್ಕಂಡ ಸ್ಥಳದಲ್ಲಿ ದಾಳಿ ಮಾಡಲು ಪಂಚರಾಗಿ ಬಂದು ಪಂಚನಾಮೆಗೆ ಸಹಕರಿಸಲು ಕೋರಿದ್ದರ ಮೇರೆಗೆ ಅವರುಗಳು ಒಪ್ಪಿಕೊಂಡಿದ್ದು, ಅದರಂತೆ ನಾವು ಮತ್ತು ಪಂಚರು ಮೇಲ್ಕಂಡ ಸ್ಥಳಕ್ಕೆ ಬೆಳಿಗ್ಗೆ 8-20 ಗಂಟೆಗೆ ಹೋಗಿ ನೋಡಲಾಗಿ ಯಾರೋ ಕೆಲವರು ಸಾರ್ವಜನಿಕ ಸ್ಥಳದಲ್ಲಿ ಇಬ್ಬರು ಆಸಾಮಿಗಳು ಕುಳಿತುಕೊಂಡು ಮದ್ಯಪಾನ ಮಾಡುತ್ತಿದ್ದು, ಅವರುಗಳನ್ನು ಓಡಿ ಹೋಗದಂತೆ ನಾವು ಪಂಚರ ಸಮಕ್ಷಮ ಸುತ್ತುವರೆದು ಹಿಡಿದುಕೊಂಡು ಹೆಸರು ವಿಳಾಸ ಕೇಳಲಾಗಿ 1) ಶಾಕೀರ್ ಬಿನ್ ಲೇಟ್ ಅಲ್ಲಾ, 36 ವರ್ಷ, ಮುಸ್ಲೀಂರು, ಬೆಲ್ದಾರ್ ಕೆಲಸ, ವಾಸ ಎರ್ರಗುಂಟ ಗ್ರಾಮ, ದರ್ಮಾವರಂ ಮಂಡಲಂ, ಅನಂತಪುರ ಜಿಲ್ಲೆ, ಆಂದ್ರಪ್ರದೇಶ ರಾಜ್ಯ 2) ಎಸ್.ವೆಂಕಟೇಶ್ ಬಿನ್ ನಾಗಭೂಷಣ್, 33 ವರ್ಷ, ನೇಯ್ಗೆ ಜನಾಂಗ, ವಾಸ ಸೊಮಂದೆಪಲ್ಲಿ ಗ್ರಾಮ ಮತ್ತು ಮಂಡಲಂ, ಪೆನುಗೊಂಡ ತಾಲ್ಲೂಕು, ಆಂದ್ರಪ್ರದೇಶ ರಾಜ್ಯ ಎಂತ ತಿಳಿಸಿದರು. ನಂತರ ಪಂಚರ ಸಮಕ್ಷಮದಲ್ಲಿ ನಾವುಗಳು ಸದರಿ ಸ್ಥಳದಲ್ಲಿ ಪರಿಶೀಲಿಸಲಾಗಿ ಸ್ಥಳದಲ್ಲಿ 180 ML ನ HAYWARDS CHEERS WHISKY ಯ 02 ಖಾಲಿ ಟೆಟ್ರಾ ಪಾಕೇಟ್ ಗಳು, 01 ಖಾಲಿ ವಾಟರ್ ಬಾಟಲ್, ಮದ್ಯಸೇವನೆ ಮಾಡಿರುವ 02 ಖಾಲಿ ಪ್ಲಾಸ್ಟಿಕ್ ಗ್ಲಾಸ್ ಗಳು, ಮದ್ಯ ತುಂಬಿರುವ 180 ಎಂ.ಎಲ್. HAYWARDS CHEERS WHISKY 10 ಟೆಟ್ರಾ ಪಾಕೇಟ್ ಇದ್ದು, ಒಟ್ಟು 1,800 ಎಂ.ಎಲ್. ಮದ್ಯವಿದ್ದು ಇವುಗಳ ಒಟ್ಟು ಬೆಲೆ 702/- ರೂ.ಗಳಾಗಿರುತ್ತೆ. ಸದರಿ ಆಸಾಮಿಗಳಿಗೆ ಕಾನೂನು ಬಾಹಿರವಾಗಿ ಮದ್ಯಪಾನ ಮಾಡಲು ಯಾವುದಾದರೂ ಪರವಾನಿಗೆ ಇದೆಯೇ ಎಂದು ಕೇಳಲಾಗಿ ಯಾವುದೇ ಪರವಾನಿಗೆ ಇಲ್ಲವೆಂದು ತಿಳಿಸಿದ್ದು, ಮೇಲ್ಕಂಡ ಮಾಲುಗಳನ್ನು ಪಂಚರ ಸಮಕ್ಷಮ ಪಂಚನಾಮೆಯ ಮೂಲಕ ಅಮಾನತ್ತು ಪಡಿಸಿಕೊಂಡು ಮಾಲು ಮತ್ತು ಆರೋಪಿಯೊಂದಿಗೆ ಬೆಳಿಗ್ಗೆ 9-20 ಗಂಟೆಗೆ ಠಾಣೆಗೆ ಹಾಜರಾಗಿ ಮುಂದಿನ ಕ್ರಮಕ್ಕಾಗಿ ಠಾಣಾಧಿಕಾರಿಗಳಿಗೆ ವರದಿಯನ್ನು ನೀಡಿರುತ್ತೇನೆ. ಎಂದು ನೀಡಿದ ದೂರನ್ನು ಬೆಳಗ್ಗೆ 9:30 ಗಂಟೆಗೆ ಪಡೆದುಕೊಂಡು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿರುತ್ತೆ.

  1. ಬಾಗೇಪಲ್ಲಿ ಪೊಲೀಸ್ ಠಾಣೆ ಮೊ.ಸಂ.140/2020 ಕಲಂ. 15(ಎ) ಕೆ.ಇ. ಆಕ್ಟ್:-

          ದಿ: 21-06-2020 ರಂದು ಬೆಳಗ್ಗೆ ಪಿ.ಎಸ್.ಐ ಸಾಹೇಬರವರು ಮಾಲು, ಮಹಜರ್ ಮತ್ತು ಆರೋಪಿತರೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶ – ಈ ದಿನ ಬೆಳಿಗ್ಗೆ 10-00 ಗಂಟೆಯ ಸಮಯದಲ್ಲಿ ನಾನು ಠಾಣೆಯಲ್ಲಿದ್ದಾಗ ಮೊಟಕಪಲ್ಲಿ ಗ್ರಾಮದ ಬಸ್ ನಿಲ್ದಾಣದ ಪಕ್ಕದಲ್ಲಿರುವ ಸಾರ್ವಜನಿಕ ಸ್ಥಳದಲ್ಲಿ ಯಾರೋ ಕೆಲವರು ಕುಳಿತುಕೊಂಡು ಸಾರ್ವಜನಿಕ ಸ್ಥಳದಲ್ಲಿ ಕಾನೂನು ಬಾಹಿರವಾಗಿ ಮದ್ಯಪಾನ ಮಾಡುತ್ತಿರುವುದಾಗಿ ಬಂದ ಖಚಿತ ವರ್ತಮಾನದ ಮೇರೆಗೆ ನಾನು ಮತ್ತು ಸಿಬ್ಬಂದಿಯವರಾದ  ಶ್ರೀಪತಿ, ಸಿ.ಹೆಚ್.ಸಿ-178, ಶ್ರೀ ಅರುಣ್, ಸಿಪಿಸಿ-18 ಹಾಗೂ ಜೀಪ್ ಚಾಲಕ ಎ.ಹೆಚ್.ಸಿ-34 ಅಲ್ತಾಪ್ ಪಾಷಾ ರವರೊಂದಿಗೆ ಸರ್ಕಾರಿ ಜೀಪ್ ಸಂಖ್ಯೆ; ಕೆಎ-40-ಜಿ-537 ವಾಹನದಲ್ಲಿ ಬಂದು ಬಾಗೇಪಲ್ಲಿ ಪುರದ ತಾಲ್ಲೂಕು ಕಛೇರಿಯ ಬಳಿ ಇದ್ದ ಪಂಚರನ್ನು ಕರೆದು ಮೇಲ್ಕಂಡ ವಿಚಾರವನ್ನು ತಿಳಿಸಿ ಮೇಲ್ಕಂಡ ಸ್ಥಳದಲ್ಲಿ ದಾಳಿ ಮಾಡಲು ಪಂಚರಾಗಿ ಬಂದು ಪಂಚನಾಮೆಗೆ ಸಹಕರಿಸಲು ಕೋರಿದ್ದರ ಮೇರೆಗೆ ಅವರುಗಳು ಒಪ್ಪಿಕೊಂಡಿದ್ದು, ಅದರಂತೆ ನಾವುಗಳು ಮತ್ತು ಪಂಚರು ಮೇಲ್ಕಂಡ ಸ್ಥಳಕ್ಕೆ ಬೆಳಿಗ್ಗೆ 10-30 ಗಂಟೆಗೆ ಹೋಗಿ ನೋಡಲಾಗಿ ಯಾರೋ ಮೂರು ಜನ ಆಸಾಮಿಗಳು ಸಾರ್ವಜನಿಕ ಸ್ಥಳದಲ್ಲಿ ಕುಳಿತುಕೊಂಡು ಮದ್ಯಪಾನ ಮಾಡುತ್ತಿದ್ದು, ಅವರುಗಳನ್ನು ಓಡಿ ಹೋಗದಂತೆ ನಾವುಗಳು ಸುತ್ತುವರೆದು ಹಿಡಿದುಕೊಂಡು ಹೆಸರು ವಿಳಾಸ ಕೇಳಲಾಗಿ 1) ರಫೀಕ್ @ ಮಹಮದ್ ರಫೀಕ್ ಬಿನ್ ಲೇಟ್ ಅಮೀರ್ ಸಾಬ್, 36 ವರ್ಷ, ಮುಸ್ಲೀಂರು, ಕಾರ್ಪೆಂಟರ್ ಕೆಲಸ,ವಾಸ ಚಿಲಮತ್ತೂರು, ಆಂದ್ರಪ್ರದೇಶ ರಾಜ್ಯ 2) ನರೇಶ್ ಬಿನ್ ನಂಜುಂಡಪ್ಪ, 36 ವರ್ಷ, ಭೋವಿ ಜನಾಂಗ, ಕಾರ್ಪೆಂಟರ್ ಕೆಲಸ, ಆದೇಪಲ್ಲಿ ಗ್ರಾಮ, ಬಾಗೇಪಲ್ಲಿ ತಾಲ್ಲೂಕು 3) ಗಿರಿಬಾಬು ಬಿನ್ ನಾಗಪ್ಪ, 32 ವರ್ಷ, ಭೋವಿ ಜನಾಂಗ, ಮಗ್ಗದ ಕೆಲಸ ವಾಸ ಸೊಮಂದೆಪಲ್ಲಿ ಗ್ರಾಮ ಮತ್ತು ಮಂಡಲಂ, ಪೆನುಗೊಂಡ ತಾಲ್ಲೂಕು, ಆಂದ್ರಪ್ರದೇಶ ರಾಜ್ಯ ಎಂತ ತಿಳಿಸಿದರು. ನಂತರ ಪಂಚರ ಸಮಕ್ಷಮ ಸದರಿ ಸ್ಥಳದಲ್ಲಿ ಪರಿಶೀಲಿಸಲಾಗಿ ಸ್ಥಳದಲ್ಲಿ 180 ML ನ HAYWARDS CHEERS WHISKY ಯ 03 ಖಾಲಿ ಟೆಟ್ರಾ ಪಾಕೇಟ್ ಗಳು, 02 ಖಾಲಿ ವಾಟರ್ ಬಾಟಲ್, ಮದ್ಯಸೇವನೆ ಮಾಡಿರುವ 03 ಖಾಲಿ ಪ್ಲಾಸ್ಟಿಕ್ ಗ್ಲಾಸ್ ಗಳು, ಮದ್ಯ ತುಂಬಿರುವ 180 ಎಂ.ಎಲ್ HAYWARDS CHEERS WHISKY 8 ಟೆಟ್ರಾ ಪಾಕೇಟ್ ಇದ್ದು, ಒಟ್ಟು 1,440 ಎಂ.ಎಲ್. ಮದ್ಯವಿದ್ದು ಇವುಗಳ ಒಟ್ಟು ಬೆಲೆ 562/- ರೂಗಳಾಗಿರುತ್ತೆ. ಸದರಿ ಆಸಾಮಿಗಳಿಗೆ ಕಾನೂನು ಬಾಹಿರವಾಗಿ ಮದ್ಯಪಾನ ಮಾಡಲು ಯಾವುದಾದರೂ ಪರವಾನಿಗೆ ಇದೆಯೇ ಎಂದು ಕೇಳಲಾಗಿ ಯಾವುದೇ ಪರವಾನಿಗೆ ಇಲ್ಲವೆಂದು ತಿಳಿಸಿದ್ದು, ಮೇಲ್ಕಂಡ ಮಾಲುಗಳನ್ನು ಪಂಚರ ಸಮಕ್ಷಮ ಪಂಚನಾಮೆಯ ಮೂಲಕ ಅಮಾನತ್ತು ಪಡಿಸಿಕೊಂಡು ಮಾಲು ಮತ್ತು ಆರೋಪಿಗಳೊಂದಿಗೆ ಬೆಳಿಗ್ಗೆ 11-30 ಗಂಟೆಗೆ ಠಾಣೆಗೆ ಹಾಜರಾಗಿ ಮುಂದಿನ ಕ್ರಮಕ್ಕಾಗಿ ಠಾಣಾಧಿಕಾರಿಗಳಿಗೆ ವರದಿಯನ್ನು ನೀಡಿರುತ್ತೇನೆ, ಎಂದು ನೀಡಿದ ದೂರನ್ನು ಬೆಳಗ್ಗೆ 11:45 ಗಂಟೆಗೆ ಪಡೆದುಕೊಂಡು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿರುತ್ತೆ.

  1. ಬಾಗೇಪಲ್ಲಿ ಪೊಲೀಸ್ ಠಾಣೆ ಮೊ.ಸಂ.141/2020 ಕಲಂ. 78(3) ಕೆ.ಪಿ. ಆಕ್ಟ್:-

          ದಿ: 20-06-2020 ರಂದು ಸಂಜೆ 5:00 ಗಂಟೆಗೆ ಪಿ.ಎಸ್.ಐ ಸಾಹೇಬರವರು ಮಾಲು, ಮಹಜರ್, ಆರೋಪಿಯೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶ – ಈ ದಿನ  ದಿ: 20-06-2020 ರಂದು ಮದ್ಯಾಹ್ನ 3:00 ಗಂಟೆಯ ಸಮಯದಲ್ಲಿ ನಾನು ಠಾಣೆಯಲ್ಲಿದ್ದಾಗ ಬಾಗೇಪಲ್ಲಿ ತಾಲ್ಲೂಕು ಗೂಳೂರು  ಬಸ್ ನಿಲ್ದಾಣದಲ್ಲಿ  ಯಾರೋ ಒಬ್ಬ ಆಸಾಮಿ ಮಟ್ಕಾ ಅಂಕಿಗಳನ್ನು ಬರೆಯುತ್ತಿರುವುದಾಗಿ ಬಂದ ಮಾಹಿತಿ ಮೇರೆಗೆ  ಸಿಬ್ಬಂದಿಗಳಾದ ಹೆಚ್.ಸಿ-103 ಶಂಕರರೆಡ್ಡಿ, ಹೆಚ್.ಸಿ 242 ಜಿ.ಎನ್ ಸುಬ್ರಮಣ್ಯ,  ಪಿ.ಸಿ 76 ಸುರೇಶ, ಪಿ.ಸಿ 83 ಮಂಜುನಾಥ  ಹಾಗೂ ಜೀಫ್ ಚಾಲಕ ಎ.ಹೆಚ್.ಸಿ-34 ಅಲ್ತಾಫ್ ಪಾಷಾ ರವರೊಂದಿಗೆ ಬಾಗೇಪಲ್ಲಿ ತಾಲ್ಲೂಕು ಕಛೇರಿ ಬಳಿ ಪಂಚಾಯ್ತಿದಾರರನ್ನು ಬರಮಾಡಿಕೊಂಡು ಸರ್ಕಾರಿ ಜೀಫ್ ಸಂಖ್ಯೆ ಕೆಎ-40 ಜಿ-537 ವಾಹನದಲ್ಲಿ  ಮೇಲ್ಕಂಡ ಸ್ಥಳಕ್ಕೆ  ಮದ್ಯಾಹ್ನ 3:30 ಗಂಟೆಗೆ ಹೋಗಿ, ಬಸ್ ನಿಲ್ದಾಣದಿಂದ ಸ್ವಲ್ಪ  ದೂರದಲ್ಲಿ  ಮರೆಯಲ್ಲಿ ಜೀಫ್ ನ್ನು ನಿಲ್ಲಿಸಿ ಸದರಿ ಸ್ಥಳಕ್ಕೆ  ಪಂಚರೊಂದಿಗೆ  ನಡೆದುಕೊಂಡು  ಹೋಗಿ ಮರೆಯಲ್ಲಿ ನಿಂತು ನೋಡಲಾಗಿ  ಯಾರೋ ಒಬ್ಬ ಆಸಾಮಿ  ರಸ್ತೆಯಲ್ಲಿ ಬನ್ನಿ ಬನ್ನಿ ಮಟ್ಕಾ ಅಂಕಿಗಳನ್ನು  ಬರೆಸಿ ಒಂದು ರೂಪಾಯಿಗೆ 70 ರೂಪಾಯಿ ಕೊಡುತ್ತೇನೆ ಎಂದು ಕೂಗುತ್ತಾ, ಸಾರ್ವಜನಿಕರಿಂದ ಹಣ ಪಡೆದು ಮಟ್ಕಾ ಚೀಟಿಗಳನ್ನು ಬರೆದುಕೊಡುತ್ತಾ ಮಟ್ಕಾ ಜೂಜಾಟವಾಡುತ್ತಿರುವುದನ್ನು ಖಚಿತಪಡಿಸಿಕೊಂಡು ಆತನನ್ನು ಸುತ್ತುವರೆದು ಹಿಡಿದು ಆತನ ಬಳಿ ಪರಿಶೀಲಿಸಲಾಗಿ  ವಿವಿಧ ಅಂಕಿಗಳು ಬರೆದಿರುವ ಒಂದು  ಮಟ್ಕಾ ಚೀಟಿ  ಒಂದು ಬಾಲ್ ಪಾಯಿಂಟ್ ಪೆನ್ನು ಹಾಗೂ 500/-  ರೂ.ಹಣ ಇದ್ದು, ಹಣದ ಬಗ್ಗೆ ವಿಚಾರ ಮಾಡಲಾಗಿ ಮಟ್ಕಾ ಜೂಜಾಟದಿಂದ ಬಂದ ಹಣವೆಂದು ತಿಳಿಸಿದ್ದು,  ಆತನ  ಹೆಸರು ಮತ್ತು ವಿಳಾಸವನ್ನು  ಕೇಳಲಾಗಿ ಕೃಷ್ಣಪ್ಪ ಬಿನ್ ಲೇಟ್ ಸುಬ್ಬಣ್ಣ, 75 ವರ್ಷ, ನಾಯಕರು, ಚಿಲ್ಲರೆ ಅಂಗಡಿ ವ್ಯಾಪಾರ, ವಾಸ ಆಂಜನೇಯಸ್ವಾಮಿ ಬೀದಿ, ಗೂಳೂರು, ಬಾಗೇಪಲ್ಲಿ ತಾಲ್ಲೂಕು   ಎಂತ ತಿಳಿಸಿದ್ದು  ಸದರಿ ಆಸಾಮಿಗೆ  ಮಟ್ಕಾ ಜೂಜಾಟವಾಡಲು ಯಾವುದಾದರು ಪರವಾನಿಗೆ ಇದೆಯೇ ಎಂದು  ಕೇಳಲಾಗಿ ಆತನು  ಯಾವುದೇ ಪರವಾನಿಗೆ ಇಲ್ಲವೆಂದು  ತಿಳಿಸಿ ತನ್ನ ತಪ್ಪನ್ನು ಒಪ್ಪಿಕೊಂಡಿರುತ್ತಾನೆ. ಮದ್ಯಾಹ್ನ 3:30 ಗಂಟೆಯಿಂದ ಸಂಜೆ 4:30 ಗಂಟೆಯವರೆಗೆ ಪಂಚನಾಮೆಯನ್ನು ಜರುಗಿಸಿ, ಪಂಚನಾಮೆ,  ಮಾಲು ಮತ್ತು ಆಸಾಮಿಯನ್ನು ಸಂಜೆ 5:00 ಗಂಟೆಗೆ ಠಾಣೆಯಲ್ಲಿ ತಮ್ಮ ವಶಕ್ಕೆ ನೀಡುತ್ತಿದ್ದು, ಆಸಾಮಿಯ ವಿರುದ್ದ ಮುಂದಿನ ಕ್ರಮ ಜರುಗಿಸಲು ಸೂಚಿಸಿದೆ.    ಇದು ಅಸಂಜ್ಞೇಯ ಪ್ರಕರಣವಾಗಿದ್ದು, ಮೇಲ್ಕಂಡ ಆರೋಪಿತರ ವಿರುದ್ದ ಸಂಜ್ಞೇಯ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಳ್ಳುವ ಸಲುವಾಗಿ ಘನ ನ್ಯಾಯಾಲಯದ ಅನುಮತಿ ನೀಡಲು ಕೋರಿದೆ, ಎಂದು ನೀಡಿದ ದೂರಿನ ಮೇರೆಗೆ ಠಾಣೆಯಲ್ಲಿ ಎನ್.ಸಿ.ಆರ್ ಉಲ್ಲೇಖ ಸಂಖ್ಯೆ :386/2020ದಾಖಲಿಸಿಕೊಂಡಿರುತ್ತೆ. ಇದು ಅಸಂಜ್ಞೇಯ ಪ್ರಕರಣವಾಗಿದ್ದು, ಮೇಲ್ಕಂಡ ಆರೋಪಿತರ ವಿರುದ್ದ ಸಂಜ್ಞೇಯ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಳ್ಳುವ ಸಲುವಾಗಿ ಘನ ನ್ಯಾಯಾಲಯದ ಅನುಮತಿ ನೀಡಲು ಕೋರಿ ಮನವಿಯನ್ನು ಸಲ್ಲಿಸಿಕೊಂಡಿರುತ್ತೆ. ದಿ: 21-06-2020 ರಂದು ಘನ ನ್ಯಾಯಾಲಯದ ಅನುಮತಿಯನ್ನು ಪಡೆದುಕೊಂಡು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿರುತ್ತೆ.

  1. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.79/2020 ಕಲಂ. 87 ಕೆ.ಪಿ. ಆಕ್ಟ್:-

          ದಿನಾಂಕ 21/06/2020 ರಂದು 05.00 ಗಂಟೆಗೆ ಘನ ನ್ಯಾಯಾಲಯದ ಅನುಮತಿಯನ್ನು ಪಡೆದು  ಈ ದಿನ ದಿನಾಂಕ: 21.06.2020 ರಂದು ಮದ್ಯಾಹ್ನ 3-00 ಗಂಟೆ ಸಮಯದಲ್ಲಿ ಚಿಕ್ಕಬಳ್ಳಾಪುರ ತಾಲ್ಲೂಕು ಬಿ.ಬಿ ರಸ್ತೆಯ ನಿಸರ್ಗ ಬಾರ್ & ರೆಸ್ಟೋರೆಂಟ್ ಹಿಂಭಾಗ ಜಾಲಿ ಮರದ ಕೆಳಗಡೆ ಯಾರೋ ಹಣವನ್ನು ಪಣವಾಗಿಟ್ಟುಕೊಂಡು ಅಂದರ್ ಬಾಹರ್ ಇಸ್ಪೀಟಿನ ಜೂಜಾಟವಾಡುತ್ತಿರುವುದಾಗಿ ಬಂದ ಬಾತ್ಮಿ ಮೇರೆಗೆ ನಾನು, ಸಿಬ್ಬಂದಿಯವರಾದ ಪಿ.ಸಿ-264 ನರಸಿಂಹಮೂರ್ತಿ, ಪಿ.ಸಿ-203 ಮಂಜುನಾಯ್ಕರವರೊಂದಿಗೆ ಪೊಲೀಸ್ ಜೀಪು ಸಂಖ್ಯೆ ಕೆ.ಎ-40, ಜಿ-567 ರಲ್ಲಿ ಪಂಚಾಯ್ತಿದಾರರನ್ನು ಕರೆದುಕೊಂಡು ಬಿ.ಬಿ ರಸ್ತೆಯ ನಿಸರ್ಗ ಬಾರ್ & ರೆಸ್ಟೋರೆಂಟ್ ಬಳಿ ಹೋಗಿ ಮರೆಯಲ್ಲಿ ಜೀಪನ್ನು ನಿಲ್ಲಿಸಿ ಜೀಪಿನಿಂದ ಇಳಿದು ಪಂಚರು ಮತ್ತು ಸಿಬ್ಬಂದಿಯೊಂದಿಗೆ ನನಗೆ ಮಾಹಿತಿ ಬಂದ ಸ್ಥಳವಾದ ನಿಸರ್ಗ ಬಾರ್ ಹಿಂಭಾಗಕ್ಕೆ ನಡೆದುಕೊಂಡು ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಜನರು ಗುಂಪು ಸೇರಿದ್ದು, ಗುಂಪಿನಲ್ಲಿದ್ದವರು ಅಂದರ್ 200/- ರೂ. ಬಾಹರ್ 200/- ಎಂದು ಕೂಗುತ್ತಾ ಹಣವನ್ನು ಪಣವಾಗಿಟ್ಟು ಇಸ್ಪೀಟ್ ಎಲೆಗಳಿಂದ ಅಂದರ್ ಬಾಹರ್ ಜೂಜಾಟವಾಡುತ್ತಿರುವುದನ್ನು ಖಚಿತ ಪಡಿಸಿಕೊಂಡು ನಾನು ಮತ್ತು ಸಿಬ್ಬಂದಿಯವರು ಅವರನ್ನು ಸುತ್ತುವರೆದು ಓಡಿ ಹೋಗದಂತೆ ಎಚ್ಚರಿಕೆ ನೀಡಿ ಜೂಜಾಟವಾಡುತ್ತಿದ್ದವರನ್ನು ಹಿಡಿದು ಕೊಂಡು ಸದರಿ ಆಸಾಮಿಗಳ ಹೆಸರು ವಿಳಾಸ ಕೇಳಲಾಗಿ 1] ಲಕ್ಷ್ಮಣ್ ಬಿನ್ ಲೇಟ್ ಹನುಮಂತರಾಯಪ್ಪ , 53 ವರ್ಷ ಪ.ಜಾತಿ ಕೂಲಿ ಕೆಲಸ ಜೈ ಬೀಮ್ ನಗರ ಚಿಕ್ಕಬಳ್ಳಾಪುರ ಟೌನ್ , 2] ಜಯರಾಮ್ ಬಿನ್ ಮುನಿಯಪ್ಪ , 47 ವರ್ಷ ಬಲಿಜಿಗ , ಚಾಲಕ ವೃತ್ತಿ 26 ನೇ ವಾರ್ಡ್ ಚಿಕ್ಕಬಳ್ಳಾಪುರ ಟೌನ್, 3] ಮಹಮದ್ ಷರೀಫ್ ಬಿನ್ ಲೇಟ್ ಮಸ್ತಾನ್ ಸಾಬ್ 49 ವರ್ಷ ಮುಸ್ಲೀಂ ಜನಾಂಗ, ಎಲ್.ಐ.ಸಿ ಕಛೇರಿ ಹಿಂಭಾಗ , ಚಿಕ್ಕಬಳ್ಳಾಪುರ ಟೌನ್, 4] ಸುಬ್ರಮಣಿ ಬಿನ್ ನಾರಾಯಣಪ್ಪ 45 ವರ್ಷ , ಆಚಾರರು , ಚಾಲಕ ವೃತ್ತಿ ವಾಸ ಪೊಲೀಸ್ ಕ್ವಾಟ್ರಸ್ ಹಿಂಭಾಗ ಚಿಕ್ಕಬಳ್ಳಾಪುರ ಟೌನ್ , 5] ನರಸಿಂಹರಾಜು ಬಿನ್ ಲೇಟ್ ಮುನಿವೀರಪ್ಪ 52 ವರ್ಷ , ಅಣಕನೂರು ಗ್ರಾಮ ಚಿಕ್ಕಬಳ್ಳಾಪುರ ತಾಲ್ಲೂಕು, 6] ಪಿ.ಕೆ ಮೋಹನ್ ಬಿನ್ ಲೇಟ್ ಕೃಷ್ಣಪ್ಪ, 42 ವರ್ಷ, ಕೂಲಿ ಕೆಲಸ ವಕ್ಕಲಿಗರು, ಪಟ್ರೇನಹಳ್ಳಿ ಗ್ರಾಮ ಚಿಕ್ಕಬಳ್ಳಾಪುರ ಟೌನ್ ಎಂತ ತಿಳಿಸಿದರು. ಜೂಜಾಟವಾಡುತ್ತಿದ್ದ ಸ್ಥಳದಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ 52 ಇಸ್ಪೀಟ್ ಎಲೆಗಳನ್ನು ಮತ್ತು ಜೂಜಾಟಕ್ಕೆ ಪಣವಾಗಿಟ್ಟಿದ್ದ ನಗದು ಹಣ ಇದ್ದು, ಎಣಿಸಲಾಗಿ 2690/-ರೂ. ನಗದು ಹಣವಿದ್ದು, ಮೇಲ್ಕಂಡ 6 ಜನ ಆಸಾಮಿಗಳು, 52 ಇಸ್ಪೀಟ್ ಎಲೆಗಳು, ಮತ್ತು ಪಂದ್ಯಕ್ಕೆ ಪಣವಾಗಿಟ್ಟಿದ್ದ 2690/- ರೂಪಾಯಿಗಳು ನಗದು ಹಣವನ್ನು ಮದ್ಯಾಹ್ನ 3-15 ಗಂಟೆಯಿಂದ ಸಾಯಂಕಾಲ 4-00 ಗಂಟೆಯವರೆಗೆ ವಿವರವಾದ ಪಂಚನಾಮೆ ಕೈಗೊಂಡು ವಶಕ್ಕೆ ಪಡೆದುಕೊಂಡಿರುತ್ತೆ. ಮೇಲ್ಕಂಡ ಆರೋಪಿಗಳ ವಿರುದ್ಧ ಕಲಂ:87 ಐಪಿಸಿ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಳ್ಳಲು ಸೂಚಿಸಿದ ಮೇರೆಗೆ ಈ ಪ್ರ ವ ವರದಿ.

  1. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.241/2020 ಕಲಂ. 15(ಎ)  ಕೆ.ಇ. ಆಕ್ಟ್:-

          ದಿನಾಂಕ: 21/06/2020 ರಂದು ಸಂಜೆ 5.20 ಗಂಟೆಗೆ ಪಿ.ಎಸ್.ಐ ನರೇಶ್ ನಾಯ್ಕ್ ರವರು ಮಾಲು, ಮತ್ತು ಅಮಾನತ್ತು ಪಂಚನಾಮೆಯೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ಈ ದಿನ ದಿನಾಂಕ:21/06/2020 ರಂದು ತಾನು ಠಾಣಾ ಸಿಬ್ಬಂದಿಯಾದ ಸಿ.ಪಿ.ಸಿ-436 ಶ್ರೀ ಸರ್ವೇಶ, ಸಿ.ಪಿ.ಸಿ-24 ನರೇಶ್ ಮತ್ತು ಚಾಲಕ ಎ.ಹೆಚ್.ಸಿ-08 ಶ್ರೀ ಮುಖೇಶ್ ರವರೊಂದಿಗೆ ಸರ್ಕಾರಿ ಜೀಪ್ ಸಂಖ್ಯೆ ಕೆಎ-40 ಜಿ-326 ರಲ್ಲಿ ಠಾಣಾ ಸರಹದ್ದಿನಲ್ಲಿ ಗಸ್ತು ಮಾಡಿಕೊಂಡು ಸಂಜೆ 4.00 ಗಂಟೆ ಸಮಯದಲ್ಲಿ ಮುನಗನಹಳ್ಳಿ ಗ್ರಾಮಕ್ಕೆ ಹೋದಾಗ ಸದರಿ ಗ್ರಾಮದ ನಾರಾಯಣಸ್ವಾಮಿ ಬಿನ್ ಲೇಟ್ ನಾರಾಯಣಪ್ಪರವರು ತನ್ನ ಮನೆಯ ಮುಂಭಾಗ ಸಾರ್ವಜನಿಕರಿಗೆ ಮದ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದಾಗಿ ಖಚಿತ ಮಾಹಿತಿ ದೊರೆತಿದ್ದು, ಸದರಿ ಮನೆಯ ಬಳಿ ದಾಳಿ ಮಾಡುವ ಸಲುವಾಗಿ ಪಂಚರನ್ನು ಬರಮಾಡಿಕೊಂಡು ಅವರಿಗೆ ವಿಚಾರವನ್ನು ತಿಳಿಸಿ ನಾರಾಯಣಸ್ವಾಮಿ ಬಿನ್ ಲೇಟ್ ನಾರಾಯಣಪ್ಪರವರ ಮನೆಯ ಬಳಿ ಹೋಗಿ ಜೀಪನ್ನು ನಿಲ್ಲಿಸುವಷ್ಟರಲ್ಲಿ ಮನೆಯ ಮುಂದೆ ಕುಳಿತಿದ್ದ ಇಬ್ಬರು ವ್ಯಕ್ತಿಗಳು ಮತ್ತು ಮನೆಯಲ್ಲಿದ್ದ ನಾರಾಯಣಸ್ವಾಮಿ ಬಿನ್ ಲೇಟ್ ನಾರಾಯಣಪ್ಪರವರೂ ಸಹ ಓಡಿ ಹೋಗಿದ್ದು, ನಂತರ ಮನೆಯ ಮುಂಭಾಗದಲ್ಲಿ ಪರಿಶೀಲಿಸಲಾಗಿ 90 ಎಂ.ಎಲ್ ನ ಹೇವಾರ್ಡ್ಸ್ ಚೀರ್ಸ್ ವಿಸ್ಕಿ ಕಂಪನಿಯ ಮದ್ಯ ತುಂಬಿರುವ 2 ಟೆಟ್ರಾ ಪಾಕೆಟ್ ಗಳು, ಎರಡು ಪ್ಲಾಸ್ಟಿಕ್ ಗ್ಲಾಸ್ ಗಳು ಮತ್ತು ಒಂದು ಲೀಟರ್ ನ ಒಂದು ನೀರಿನ ಬಾಟಲ್ ಗಳಿದ್ದು, ಅವುಗಳನ್ನು ಪರಿಶೀಲಿಸಲಾಗಿ, 2 ಓಪನ್ ಮಾಡಿರುವ ಮದ್ಯದ ಟೆಟ್ರಾ ಪಾಕೆಟ್ ಗಳಲ್ಲಿ ಸ್ವಲ್ವ ಮದ್ಯವಿದ್ದು, ಪ್ಲಾಸ್ಟಿಕ್ ಗ್ಲಾಸ್ ಗಳಲ್ಲಿ ಸ್ವಲ್ವ ನೀರು ಮಿಶ್ರಿತ ಮದ್ಯವಿರುತ್ತೆ. ನೀರಿನ ಬಾಟಲಿಗಳನ್ನು ಪರಿಶೀಲಿಸಲಾಗಿ, ಬಾಟಲಿನಲ್ಲಿ ಸುಮಾರು 1/4 ರಷ್ಟು ನೀರು ಇರುತ್ತೆ. ಅಲ್ಲಿದ್ದ ಸಾರ್ವಜನಿಕರನ್ನು ಮನೆಯಲ್ಲಿದ್ದ ಆಸಾಮಿಯ ಹೆಸರು ವಿಳಾಸ ಕೇಳಲಾಗಿ ನಾರಾಯಣಸ್ವಾಮಿ ಬಿನ್ ಲೇಟ್ ನಾರಾಯಣಪ್ಪ, 50ವರ್ಷ, ಕೊರಚರು, ಕೂಲಿಕೆಲಸ, ಮುನಗನಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು ಎಂದು ತಿಳಿಸಿದ್ದು, ನಂತರ ಸ್ಥಳದಲ್ಲಿ ಪಂಚರ ಸಮಕ್ಷಮ ಸಂಜೆ 4-15 ಗಂಟೆಯಿಂದ ಸಂಜೆ 5-00  ಗಂಟೆಯವರೆಗೆ ಮಹಜರ್ ಕ್ರಮ ಕೈಗೊಂಡು ಮೇಲ್ಕಂಡ ವಸ್ತುಗಳನ್ನು ಅಮಾನತ್ತುಪಡಿಸಿಕೊಂಡು ಮಾಲು, ಪಂಚನಾಮೆಯೊಂದಿಗೆ ಠಾಣೆಗೆ ವಾಪಸ್ಸಾಗಿ ಅಕ್ರಮವಾಗಿ ಸಾರ್ವಜನಿಕರಿಗೆ ಮದ್ಯಪಾನ ಮಾಡಲು ತನ್ನ ಮನೆಯ ಮುಂಭಾಗ ಸ್ಥಳಾವಕಾಶ ಮಾಡಿಕೊಟ್ಟಿರುವ ಆರೋಪಿ ನಾರಾಯಣಸ್ವಾಮಿ ಬಿನ್ ನಾರಾಯಣಪ್ಪರವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲು ಸೂಚಿಸಿರುವುದಾಗಿರುತ್ತೆ.

  1. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.242/2020 ಕಲಂ. 15(ಎ)  ಕೆ.ಇ. ಆಕ್ಟ್:-

          ದಿನಾಂಕ:21/06/2020 ರಂದು ರಾತ್ರಿ 8.15 ಗಂಟಗೆ DCB/CEN ಪೊಲೀಸ್ ಠಾಣೆಗೆ CHC-198 ಮಂಜುನಾಥ.ವಿ ರವರು ಮಾಲು ಮತ್ತು ಪಂಚನಾಮೆಯೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ಈ ದಿನ ದಿನಾಂಕ:21/06/2020 ರಂದು ಚಿಕ್ಕಬಳ್ಳಾಪುರ DCB/CEN ಪೊಲೀಸ್ ಠಾಣೆಯ PI  ಶ್ರೀ ರಾಜಣ್ಣ ರವರು ತನಗೆ ಹಾಗೂ CHC-38 ಮಂಜುನಾಥ.ಎಂ.ಕೆ ರವರಿಗೆ ಚಿಂತಾಮಣಿ ತಾಲ್ಲೂಕಿನಲ್ಲಿ ಕಾನೂನು ಬಾಹಿರ ಚಟುವಟಿಕೆಗಳ ಪತ್ತೆ ಕಾರ್ಯಕ್ಕೆ ನೇಮಿಸಿದ್ದು ಅದರಂತೆ ತಾವು ಈ ದಿನ ಸಂಜೆ 6.00 ಗಂಟೆ ಸಮಯದಲ್ಲಿ ಚಿಂತಾಮಣಿ ತಾಲ್ಲೂಕಿನ ಚೆನ್ನಕೇಶವಪುರ ಗ್ರಾಮದಲ್ಲಿದ್ದಾಗ ಗ್ರಾಮದ ವೆಂಕಟೇಶ್ ಬಿನ್ ಕೃಷ್ಣಪ್ಪ ರವರ ಅಂಗಡಿಯ ಮುಂಭಾಗ ಸಾರ್ವಜನಿಕರಿಗೆ ಮದ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದಾಗಿ ಬಂದ ಖಚಿತ ಮಾಹಿತಿಯ ಮೇರೆಗೆ ಪಂಚಾಯ್ತಿದಾರರೊಂದಿಗೆ ಸದರಿ ಸ್ಥಳದಲ್ಲಿ ದಾಳಿ ಮಾಡಲಾಗಿ ಸ್ಥಳದಲ್ಲಿದ್ದವರು ಓಡಿ ಹೋಗಿದ್ದು, ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವವರ ಬಗ್ಗೆ ಬಾತ್ಮಿದಾರರಲ್ಲಿ ವಿಚಾರಿಸಲಾಗಿ ಸದರಿಯವರ ಹೆಸರು ವೆಂಕಟೇಶ್ ಬಿನ್ ಕೃಷ್ಣಪ್ಪ, 40 ವರ್ಷ, ಕುರುಬರು, ಕೂಲಿಕೆಲಸ, ಚೆನ್ನಕೇಶವಪುರ ಗ್ರಾಮ, ಚಿಂತಾಮಣಿ ತಾಲ್ಲೂಕು ಎಂದು ತಿಳಿದು ಬಂದಿರುತ್ತೆ. ನಂತರ ಸ್ಥಳದಲ್ಲಿ ಪರಿಶೀಲಿಸಲಾಗಿ 1) BAGPIPER DELUXE WHISKY ಯ 180 ML ನ ಮದ್ಯ ತುಂಬಿದ 03 ಟೆಟ್ರಾ ಪಾಕೇಟ್ ಗಳು, 2) HAYWARDS CHEERS WHISKY ಯ 90 ML ನ ಮದ್ಯ ತುಂಬಿದ 12 ಟೆಟ್ರಾ ಪಾಕೇಟ್ ಗಳು, 3) ಎರಡು ಪ್ಲಾಸ್ಟಿಕ್ ಗ್ಲಾಸ್ ಗಳು, 4) ಒಂದು ಲೀಟರ್ ನ ಒಂದು ಖಾಲಿ ವಾಟರ್ ಬಾಟೆಲ್, 5) HAYWARDS CHEERS WHISKY ಯ 90 ML ನ ಎರಡು ಖಾಲಿ ಟೆಟ್ರಾ ಪಾಕೇಟ್ ಗಳಿದ್ದು ಸದರಿಯವುಗಳನ್ನು ಸಂಜೆ 6.15 ಗಂಟೆಯಿಂದ ಸಂಜೆ 7.15 ಗಂಟೆಯವರೆಗೆ ಪಂಚರ ಸಮಕ್ಷಮ ಪಂಚನಾಮೆಯ ಮೂಲಕ ಅಮಾನತ್ತು ಪಡಿಸಿಕೊಂಡು ಠಾಣೆಗೆ ಬಂದು ಕಾನೂನು ಬಾಹಿರವಾಗಿ ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವ ವೆಂಕಟೇಶ್ ಬಿನ್ ಕೃಷ್ಣಪ್ಪ ರವರ ವಿರುದ್ದ ಕಾನೂನು ರೀತ್ಯ ಕ್ರಮ ಜರುಗಿಸಲು ಕೋರಿ ನೀಡಿದ ವರದಿಯ ಸಾರಾಂಶವಾಗಿರುತ್ತೆ.

  1. ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.153/2020 ಕಲಂ. 32,34   ಕೆ.ಇ. ಆಕ್ಟ್:-

          ದಿನಾಂಕ 21.6.2020 ರಂದು ಬೆಳಿಗ್ಗೆ 11-45  ಗಂಟೆಗೆ ಪಿ.ಎಸ್.ಐ ಶ್ರೀ. ಮೋಹನ್.ಎನ್. ರವರು ಠಾಣೆಗೆ ಹಾಜರಾಗಿ ಮಾಲು ಮತ್ತು ಪಂಚನಾಮೆಯನ್ನು ಹಾಝರುಪಡಿಸಿ ನೀಡಿದ ದೂರಿನ ಸಾರಾಂಶವೇನೆಂದರೆ  ದಿನಾಂಕ: 21-06-2020 ರಂದು ಬೆಳಿಗ್ಗೆ 10-00  ಗಂಟೆಯಲ್ಲಿ ತಾನು ಮತ್ತು  ಹೆಚ್.ಸಿ-166 ಸಂಪಂಗಿ , ಪಿ.ಸಿ. 518 ಆನಂದ, ಪಿ.ಸಿ. 80 ಶ್ರೀನಾಥ , ಪಿ.ಸಿ-512 ರಾಜಶೇಖರ,  ಚಾಲಕ  ಎ.ಹೆಚ್.ಸಿ.32 ಗಂಗುಲಪ್ಪ ರವರೊಂದಿಗೆ ನಗರಗೆರೆ ಹೊರ ಠಾಣೆ ವ್ಯಾಪ್ತಿಯಲ್ಲಿ ಗಸ್ತಿನಲ್ಲಿದ್ದಾಗ ಗೌರಿಬಿದನೂರು ತಾಲ್ಲೂಕು ನಗರಗೆರೆ ಹೋಬಳಿ ಗುಂಡ್ಲಕೊತ್ತೂರು ಗ್ರಾಮಕ್ಕೆ  ಯಾರೋ ಆಸಾಮಿಗಳು ಅಕ್ರಮವಾಗಿ ಯಾವುದೆ ಪರವಾನಿಗಿಯಿಲ್ಲದೇ ಮದ್ಯವನ್ನು ಸಾಗಾಣಿಕೆಯನ್ನು ಮಾಡುತ್ತಿದ್ದಾರೆಂದು ಬಂದ ಮಾಹಿತಿ ಮೇರೆಗೆ  ತಾನು ಮತ್ತು  ಸಿಬ್ಬಂದಿಯವರಾದ ಹೆಚ್.ಸಿ-166 ಸಂಪಂಗಿ ಪಿ.ಸಿ. 518 ಆನಂದ, ಪಿ.ಸಿ. 80 ಶ್ರೀನಾಥ ಪಿ.ಸಿ-512 ರಾಜಶೇಖರ,  , ಚಾಲಕ  ಎ.ಹೆಚ್.ಸಿ.32 ಗಂಗುಲಪ್ಪ, ಹಾಗೂ ಪಂಚರೊಂದಿಗೆ ಸರ್ಕಾರಿ ಜೀಪ್ ಸಂಖ್ಯೆ: ಕೆ.ಎ-40, ಜಿ-281 ರಲ್ಲಿ  ನಗರಗೆರೆಯಿಂದ  ವಾಟದಹೊಸಹಳ್ಳಿ ಕಡೆಗೆ ಬೆಳ್ಳಾವಲಹಳ್ಳಿ ಗೇಟ್  ಬಳಿ  ಬರುತ್ತಿದ್ದಾಗ ಬೆಳ್ಳಾವಲಹಳ್ಳಿ ಗೇಟಿನಲ್ಲಿ  ಪ್ಲಾಸ್ಟಿಕ್ ಚೀಲವನ್ನು  ಇಟ್ಟುಕೊಂಡು ನಿಂತಿದ್ದ  ಆಸಾಮಿಯು ಪೊಲೀಸ್ ವಾಹನ ಮತ್ತು ಪೊಲೀಸರನ್ನು ಕಂಡು  ಚೀಲವನ್ನು ಬಿಟ್ಟು ಅಲ್ಲಿಂದ ಓಡಿಹೋಗಿದ್ದು  ಸಿಬ್ಬಂದಿಯವರು  ಬೆನ್ನಟ್ಟಿದರೂ  ಸಹಾ ಪರಾರಿಯಾಗಿರುತ್ತಾನೆ. ನಂತರ ಪಂಚರ ಸಮಕ್ಷಮದಲ್ಲಿ  ಸ್ಥಳದಲ್ಲಿ ಬಿದ್ದಿದ್ದ   ಪ್ಲಾಸ್ಟಿಕ್ ಚೀಲವನ್ನು ಪರಿಶೀಲಿಸಲಾಗಿ,  ಅದರಲ್ಲಿ   90 ಎಂ.ಎಲ್ ಸಾಮರ್ಥ್ಯದ HAY WARDS CHEERS  WHISKY ಯ 160 ಟೆಟ್ರಾ ಪಾಕೆಟ್ ಗಳು ಇದ್ದು, ಇವುಗಳ ಒಟ್ಟು ಸಾಮರ್ಥ್ಯ 14 ಲೀಟರ್ 400  ಎಂ.ಎಲ್. ಆಗಿರುತ್ತೆ. ಇವುಗಳ ಒಟ್ಟು ಬೆಲೆ 5620.80/- ರೂ.ಗಳಾಗಿರುತ್ತೆ.  ಸದರಿ ಮದ್ಯವನ್ನು ಸಾಗಾಣಿಕೆಯನ್ನು  ಮಾಡುತ್ತಿದ್ದ ಆಸಾಮಿಯ ಹೆಸರು ವಿಳಾಸವನ್ನು ತಿಳಿಯಲಾಗಿ  ಆದೆಪ್ಪ ಬಿನ್ ಚಿಕ್ಕಾದೆಪ್ಪ, 50 ವರ್ಷ,  ಆದಿ ಕರ್ನಾಟಕ, ಪೆಟ್ಟಿಗೆ ಅಂಗಡಿ ವ್ಯಾಪಾರ, ವಾಸ ಕಾಲೋನಿ , ಗುಂಡ್ಲಕೊತ್ತೂರು ಗ್ರಾಮ, ನಗರಗೆರೆ ಹೋಬಳಿ ,ಗೌರಿಬಿದನೂರು ತಾಲ್ಲೂಕು  ಎಂದು ತಿಳಿಯಿತು. ಸದರಿ ಆಸಾಮಿಯು ಯಾವುದೇ ದಾಖಲೆಯನ್ನು ಹೊಂದಿಲ್ಲದೇ ಅಕ್ರಮವಾಗಿ   ಮದ್ಯವನ್ನು ಮಾರಾಟವನ್ನು ಮಾಡಲು  ಸಾಗಾಣಿಕೆಯನ್ನು ಮಾಡುತ್ತಿರುತ್ತಾನೆ.  ನಂತರ   ಸ್ಥಳದಲ್ಲಿ  ಬೆಳೀಗ್ಗೆ 10-30 ಗಂಟೆಯಿಂದ 11-15  ಗಂಟೆಯವರೆಗೆ ಪಂಚರ ಸಮಕ್ಷಮದಲ್ಲಿ ಪಂಚನಾಮೆ ಕ್ರಮ ಜರುಗಿಸಿ,  ಸ್ಥಳದಲ್ಲಿ ದೊರೆತ  1) HAY WARDS CHEERS  WHISKY ಯ 278  ಟೆಟ್ರಾ ಪಾಕೆಟ್ ಗಳು, 2) ಒಂದು ಪ್ಲಾಸ್ಟಿಕ್ ಚೀಲ,3) 10  ಟೆಟ್ರಾ ಪಾಕೆಟ್ ಗಳನ್ನು  ಸ್ಯಾಂಪಲ್ ಗಾಗಿ  ತೆಗೆದು  ಬಿಳಿ ಬಟ್ಟೆಯಿಂದ  ಸುತ್ತಿ ಅರಗಿನಿಂದ  ಕೆ. ಎಂಬ ಅಕ್ಷರಗಳಿಂದ ಸೀಲು ಮಾಡಿ ವಶಪಡಿಸಿಕೊಂಡು, ಠಾಣೆಗೆ 11-45  ಗಂಟೆಗೆ  ವಾಪಸ್ಸು ಬಂದಿದ್ದು,  ಪಂಚನಾಮೆ ಮತ್ತು  ಮಾಲನ್ನು ಸಹ ನೀಡುತ್ತಿದ್ದು, ಆರೋಪಿಯ ವಿರುದ್ಧ  ಕಲಂ: 32, 34  ಕೆ.ಇ.ಆಕ್ಟ್ – 1965 ರೀತ್ಯಾ ಪ್ರಕರಣವನ್ನು ದಾಖಲು ಮಾಡಲು ಸೂಚಿಸಿದ ಮೇರೆಗೆ ಪ್ರಕರಣವನ್ನು ದಾಖಲಿಸಿರುತ್ತೆ.

  1. ಗೌರಿಬಿದನೂರು ಪುರ ಪೊಲೀಸ್ ಠಾಣೆ ಮೊ.ಸಂ.79/2020 ಕಲಂ. 15(A),32(3) ಕೆ.ಇ. ಆಕ್ಟ್:-

          ದಿನಾಂಕ 21/06/2020 ರಂದು ಸಂಜೆ 6:30 ಗಂಟೆ ಸಮಯದಲ್ಲಿ ಹೆಚ್.ಸಿ 214 ಲೋಕೇಶ್ ರವರು ಠಾಣೆಗೆ ಮಾಲು ಮತ್ತು ಆರೋಪಿಯೊಂದಿಗೆ ಹಾಜರಾಗಿ ನೀಡಿದ ವರದಿಯ ಸಾರಾಂಶವೇನೆಂದರೆ, ದಿನಾಂಕ:21/06/2020 ರಂದು ಸಂಜೆ 5:00 ಗಂಟೆಯಲ್ಲಿ  ಗಸ್ತು ನಿರ್ವಹಿಸುತ್ತಿರುವಾಗ ಗೌರಿಬಿದನೂರು ನಗರದ ವೀರಾಂಡಹಳ್ಳಿ ಬಳಿ  ಸಾರ್ವಜನಿಕ ಸ್ಥಳದಲ್ಲಿ ಯಾರೋ ಒಬ್ಬ ಮದ್ಯದ ಟೆಟ್ರಾ ಪಾಕೆಟ್ ಗಳನ್ನು ಇಟ್ಟುಕೊಂಡು ಸಾರ್ವಜನಿಕರಿಗೆ ಮದ್ಯಪಾನ ಮಾಡುವುದಕ್ಕಾಗಿ ಸ್ಥಳಾವಕಾಶ ಮಾಡಿಕೊಟ್ಟು ಮದ್ಯವನ್ನು ಮಾರಾಟ ಮಾಡುತ್ತಿರುತ್ತಾರೆಂದು ಮಾಹಿತಿ ಬಂದಿದ್ದು, ಕೂಡಲೇ ನಾನು ಠಾಣೆಗೆ ಪಂಚಾಯ್ತಿದಾರರನ್ನು ಕರೆಯಿಸಿಕೊಂಡು ಅವರಿಗೆ ಮಾಹಿತಿಯನ್ನು ತಿಳಿಸಿ ತಮ್ಮ ಠಾಣಾ ಸಿಬ್ಬಂದಿಯವರಾದ ಪಿಸಿ-17 ಲಕ್ಷಿನಾರಾಯಣ ರವರನ್ನು ಕರೆದುಕೊಂಡು ಮಾಹಿತಿಯಂತೆ ವೀರಾಂಡಹಳ್ಳಿ ಬಳಿ  ಹೋಗಿ ನೋಡಲಾಗಿ ಯಾರೋ ಒಬ್ಬ ಸಾರ್ವಜನಿಕ ಸ್ಥಳದಲ್ಲಿ ಮದ್ಯದ ಟೆಟ್ರಾ ಪಾಕೆಟ್ ಗಳನ್ನು  ಮಾರಾಟ ಮಾಡಿಕೊಂಡು ಸಾರ್ವಜನಿಕರಿಗೆ ಮದ್ಯಪಾನ ಮಾಡುವುದಕ್ಕೆ ಸ್ಥಳಾವಕಾಶ ಮಾಡಿಕೊಟ್ಟಿರುವುದು ಕಂಡು ಬಂದಿರುತ್ತದೆ. ಅಲ್ಲಿಗೆ ಹೋಗಿ ಆತನಿಗೆ ಮದ್ಯವನ್ನು ಮಾರಾಟ ಮಾಡುವುದಕ್ಕೆ ನಿನ್ನಲ್ಲಿ ಪರವಾನಗಿ ಇದೇಯೇ ಎಂದು ಕೇಳಿದಾಗ ಆತನು ತನ್ನ ಬಳಿ ಪರವಾನಗಿ ಇಲ್ಲವೆಂದು ತಿಳಿಸಿದ್ದು, ಅವನನ್ನು ಸಿಬ್ಬಂದಿಯವರ ಮುಖಾಂತರ ವಶಕ್ಕೆ ತೆಗೆದುಕೊಂಡು ಆತನ ಹೆಸರು ಮತ್ತು ವಿಳಾಸವನ್ನು ಕೇಳಿದಾಗ ಆತನು ತನ್ನ ಹೆಸರು ರಾಘವೇಂದ್ರ ಬಿನ್ ಗೋಪಾಲ ಶೆಟ್ಟಿ, 30 ವರ್ಷ, ವೈಷ್ಯ ಜನಾಂಗ, ವೀರಾಂಡಹಳ್ಳಿ ಗೌರಿಬಿದನೂರು ನಗರ ಫೋ: 90362339399 ಎಂದು ವಿಳಾಸವನ್ನು ತಿಳಿಸಿರುತ್ತಾನೆ.  ಸ್ಥಳದಲ್ಲಿ 1)HAYWARDS CHEERS WHISKY ಎಂದು ನಮೂಧಿಸಿರುವ 90 ಎಂ.ಎಲ್. ನ 15 ಟೆಟ್ರಾ ಪಾಕೆಟ್ ಗಳು ಇದ್ದು, ಅವುಗಳಲ್ಲಿ 04 ಖಾಲಿಯಾಗಿದ್ದು, ಸ್ಥಳದಲ್ಲಿ 4 ಪೇಪರ್ ಲೋಟಗಳು ಇದ್ದವು. ಒಂದೊಂದು ಟೆಟ್ರಾ ಪಾಕೆಟ್ ನ ಬೆಲೆ 35.13/- ರೂಪಾಯಿಗಳು ಆಗಿದ್ದು, ಮೇಲ್ಕಂಡ ಟೆಟ್ರಾ ಪಾಕೆಟ್ ಗಳ ಒಟ್ಟು ಬೆಲೆ 386.43/- ರೂಪಾಯಿಗಳು ಆಗಿರುತ್ತವೆ. ಅವುಗಳೆಲ್ಲವನ್ನು ಪಂಚರ ಸಮ್ಮುಖದಲ್ಲಿ ಪಂಚನಾಮೆಯ ಮೂಲಕ ವಶಕ್ಕೆ ತೆಗೆದುಕೊಂಡು ಆರೋಪಿ ಹಾಗೂ ಮಾಲಿನೊಂದಿಗೆ ಠಾಣೆಗೆ ಸಂಜೆ 6-15 ಗಂಟೆಗೆ  ವಾಪಸ್ಸಾಗಿದ್ದು, ಮುಂದಿನ ಕ್ರಮ ಕೈಗೊಳ್ಳಬೇಕಾಗಿ ನೀಡಿದ ವರದಿಯನ್ನು ಪಡೆದು ಪ್ರಕರಣ ದಾಖಲಿಸಿರುತ್ತೇನೆ.

  1. ಶಿಡ್ಲಘಟ್ಟ ಪುರ ಪೊಲೀಸ್ ಠಾಣೆ ಮೊ.ಸಂ.70/2020 ಕಲಂ. 323,324,504 ರೆ/ವಿ 34    ಐ.ಪಿ.ಸಿ:-

          ದಿನಾಂಕ.21.06.2020 ರಂದು ರಾತ್ರಿ 8.00 ಗಂಟೆಗೆ ಪಿರ್ಯಾದಿ ಮದನ್ ಬಿನ್ ಪ್ರಕಾಶ್, ಕದಿರಿಪಾಳ್ಯ, ಶಿಡ್ಲಘಟ್ಟ ಟೌನ್ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನಂದರೆ, ದಿನಾಂಕ.21.06.2020 ರಂದು ಮದ್ಯಾಹ್ನ ಸುಮಾರು 1.30 ಗಂಟೆಯಲ್ಲಿ ಗ್ರಹಣ ಇದ್ದ ಪ್ರಯುಕ್ತ ಎಡೆಯನ್ನು ಬಿಡಲು ಕೆರೆ ಹತ್ತಿರ ಹೋಗುತ್ತಿದ್ದಾಗ ಇದ್ಲೂಡು ಕರೆಯ ಕಟ್ಟೆಯ ಬಳಿ ನಮ್ಮ ಊರಿನರೇ ಆದ ತೇಜು ಬಿನ್ ನಾಗರಾಜ ಎಂಬುವನು ನನ್ನನ್ನು ಮತ್ತು ನ್ನ ಸ್ನೇಹಿತನನ್ನು “ ನಿನ್ ಅಮ್ಮನ್ ಏನೋ ನೀಂದು “ ಎಂದು ಕೆಟ್ಟ ಬೈಗಳುಗಳಿಂದ ಬೈದನು. ನಂತರ ನಾನು ನನ್ನ ಸ್ನೇಹಿತ ಸಂಜೆ ಸುಮಾರು 6.30 ಗಂಟೆಯಲ್ಲಿ ಮನೆಗೆ ವಾಪಸ್ಸು ಬರಲು ಅಶ್ವಥಕಟ್ಟೆಯ ಬಳಿ ಬರುತ್ತಿದ್ದಾಗ ತೇಜು ಮತ್ತು ಅವರ ಅಣ್ಣ ಹಿಂಬಾಲಿಸಿಕೊಂಡು ಬಂದು ಇದೇ ದಿನ ಸಂಜೆ ಸುಮಾರು 6.30 ಗಂಟೆಯಲ್ಲಿ ಅವರ ಬಳಿ ಇದ್ದ ಚಾಕು ಬ್ಲೇಡು ಮುಂತಾದ ಅಯುಧಗಳಿಂದ ಏಕಾ ಏಕಿ ನಮ್ಮ ಮೇಲೆ ದಾಳಿ ಮಾಡಲು ಮುಂದಾಗಿದ್ದು, ಅಷ್ಠರಲ್ಲಿ  ಅಷ್ಠರಲ್ಲಿ ಅಲ್ಲಿಯೇ ಇದ್ದ ಇನ್ನೊಬ್ಬ ಸ್ನೇಹಿತ ಭಾನು ಬಿನ್ ಪ್ರಸಾದ್ ಎಂಬುವನು ಬಿಡಿಸಲು ಬಂದಾಗ ವಿನಯ್ ಕುಮಾರ್ ಎಂಬುವನು ಚಾಕುವಿನಿಂದ ನನ್ನ ಕುತ್ತಿಗೆಗೆ ಚುಚ್ಚಿರುತ್ತಾನೆ. ಹಾಗೂ ನನ್ನ ಕುತ್ತಿಗೆಗೂ ಬ್ಲೇಡ್ ಮತ್ತು ಚಾಕುವಿನಿಂದ ಹಲ್ಲೆ ಮಾಡಿರುತ್ತಾನೆ. ಈ ಗಲಾಟೆ ಸಮಯದಲ್ಲಿ ವಂಶಿ ಬಿನ್ ರಾಮಕೃಷ್ಣಪ್ಪ ಮತ್ತು ಮದನ್ ಬಿನ್ ರಾಮಾಂಜಿನಪ್ಪ ರವರು ಜಗಳ ಬಿಡಿಸಿರುತ್ತಾರೆ. ಆದ್ದರಿಂದ ನಮ್ಮ ಮೇಲೆ ಮರಣಾಂತಿಕ ಹಲ್ಲೆ ಮಾಡಿರುವ ಮೇಲ್ಕಂಡವರ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೊಟ್ಟ ದೂರಿನ ಮೇರೆಗೆ ಈ ಪ್ರಕರಣ ದಾಖಲಿಸಿರುತ್ತೆ.

  1. ಶಿಡ್ಲಘಟ್ಟ ಪುರ ಪೊಲೀಸ್ ಠಾಣೆ ಮೊ.ಸಂ.71/2020 ಕಲಂ. 143,147,148,448,323,324,504,506 ರೆ/ವಿ 149 ಐ.ಪಿ.ಸಿ:-

          ದಿನಾಂಕ.21.06.2020 ರಂದು ರಾತ್ರಿ 9.00 ಗಂಟೆಗೆ ಪಿರ್ಯಾದಿ ಲಕ್ಷ್ಮಮ್ಮ ಕೊಂ ನಾಗರಾಜ, ಮಾರುತಿನಗರ, ಶಿಡ್ಲಘಟ್ಟ ಟೌನ್ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನಂದರ, ನಾನು ಮೇಲ್ಕಂಡ ವಿಳಾಸದಲ್ಲಿ ಗಂಡ ಮಕ್ಕಳೊಂದಿಗೆ ರೇಷ್ಮೆ ಕೆಲಸ ಮಾಡಿಕೊಂಡು ಜೀವನ ಮಾಡಿಕೊಂಡಿರುತ್ತೇನೆ. ದಿನಾಂಕ.21.06.2020 ರಂದು ಮದ್ಯಾಹ್ನ ಸುಮಾರು 1.30 ಗಂಟೆಯಲ್ಲಿ ನನ್ನ ಮಗನಾದ ತೇಜಸ್ ಎಂಬುವರು ಸೂರ್ಯ ಗ್ರಹಣ ಪ್ರಯುಕ್ತ ನಮ್ಮ ಮನೆಯಿಂದ ಎಡೆಯನ್ನು ತೆಗೆದುಕೊಂಡು ಇದ್ಲೂಡು ಕರೆಯ ನೀರಿನಲ್ಲಿ ಬಿಟ್ಟು ಬರಲು ಹೋಗಿದ್ದಾಗ ದಾರಿ ಮದ್ಯೆ ಕದಿರಿಪಾಳ್ಯದ ಮದನ್ ಬಿನ್ ಪ್ರಕಾಶ್ ಎಂಬುವರು ಗಾಡಿಯನ್ನು ಅಡ್ಡ ಇಟ್ಟಿದ್ದು ಆಗ ನನ್ನ ಮಗ ಮದುನ್ ರವರನ್ನು ಗಾಡಿ ಪಕ್ಕಕ್ಕೆ ತೆಗೆಯರಿ ಎಂದು ಕೇಳಿದ್ದಕ್ಕೆ ನನ್ನ ಮಗನನ್ನು ನನ್ನ ಮಗನೇ ನೀನೇ ಪಕ್ಕಕ್ಕೆ ಹೋಗೋ ಎಂದು ಕೆಟ್ಟ ಮಾತುಗಳಿಂದ ಬೈದು ಕಳುಹಿಸಿರುತ್ತಾನೆ. ಈ ವಿಚಾರ ನನ್ನ ಮಗ ವಾಪಸ್ಸು ಬಂದು ತಿಳಿಸಿದಾಗ ನಾನು ಅಯಿತು ಮಾತನಾಡೊಣ ಎಂದು ಸಮಾಧಾನ ಮಾಡಿದ್ದೆ. ಇದೇ ದಿನ ಸಂಜೆ ಸುಮಾರು 6.00 ಗಂಟೆಯಲ್ಲಿ ನನ್ನ ಮಕ್ಕಳಾದ ತೇಜಸ್ ಮತ್ತು ಹಿರಿಯ ಮಗ ವಿನಯ್ ಕುಮಾರ್ ರವರು ಅವರ ದೊಡ್ಡಪ್ಪನ ಮಗ ನವೀನ್ ರವರ ಮನೆಯತ್ತಿರ ಹೋಗುತ್ತಿದ್ದಾಗ ಕದಿರಿಪಾಳ್ಯ ಅಶ್ವಥಕಟ್ಟೆ ಹತ್ತಿರ ಕದಿರಿಪಾಳ್ಯ ವಾಸಿಗಳಾದ ಮದನ್ ಬಿನ್ ಪ್ರಕಾಶ್, ಭಾನು ಮತ್ತು ವಂಶಿ ಬಿನ್ ರಾಮಕೃಷ್ಣ ಎಂಬುವರು ನನ್ನ ಮಕ್ಕಳನ್ನು ಅಡ್ಡಗಟ್ಟಿ ಕರೆದು ಹಳೆಯ ದ್ವೇಷದಿಂದ ಗಲಾಟೆ ಮಾಡಿ ಕೈಗಳಿಂದ ಹೊಡೆದು ಮದನ್ ಎಂಬುವರು ನನ್ನ ಮಕ್ಕಳೇ ಈ ಕಡೆ ಬಂದರೆ ಸಾಯಿಸುತ್ತೇವೆಂದು ಬೆದರಿಕೆ ಹಾಕಿರುತ್ತಾನೆ. ನನ್ನ ಮಗ ವಿನಯ್ ಕುಮಾರ್ ಭಯ ಬಿದ್ದು ಎಲ್ಲಿಯೋ ಓಡಿ ಹೋಗಿರುತ್ತಾನೆ. ನನ್ನ ಚಿಕ್ಕ ಮಗ ತೇಜಸ್ ರವರ ಮನೆಗೆ ಬಂದು ನನಗೆ ವಿಚಾರ ತಿಳಿಸುತ್ತಿದ್ದಾಗ ಸಂಜೆ ಸುಮಾರು 7.00 ಗಂಟೆಯಲ್ಲಿ ಪುನಃ ಮದನ್ ರವರ ಕಡೆಯವರಾದ ಹರ್ಷ, ಮಂಜುನಾಥ, ಮದನ್ ಬಿನ್ ರಾಮಾಂಜಿ, ಪವನ್ ಬಿನ್ ಬಿಜೆಪಿ ಸೀನಪ್ಪ, ಅರುಣ್ ಬಿನ್ ಬಿಜೆ.ಪಿ ಸೀನಪ್ಪ, ದೋನಿ, ಅಪ್ಪಿ ಇತರರು ಅಕ್ರಮ ಗುಂಪು ಕಟ್ಟಿಕೊಂಡು ನಮ್ಮ ಮನೆಯ ಹತ್ತಿರ ಬಂದು ಎಲ್ಲಿ ನಿನ್ನ ಮಗ ವಿನಯ್ ಕುಮಾರ್ ಆ ನನ್ನ ಮಗನನ್ನು ಈ ದಿನ ಬಿಡುವುದಿಲ್ಲ ಎಂದು ನಮ್ಮ ಮನೆಗೆ ನುಗ್ಗಿ ಪವನ್ ಎಂಬುವರು ನನ್ನನ್ನು ಕೋಲುನಿಂದ ನನ್ನ ಬಲಕೈ ಹೊಡೆದಿರುತ್ತಾನೆ. ದೋನಿ ಎಂಬುವರು ನನ್ನನ್ನು ಹಿಡಿದು ಎಳೆದಾಡಿ ಜಾಕೀಟ್ ಹರಿದು ಹಾಕಿರುತ್ತಾನೆ. ನನ್ನ ಬಿಡಿಸಲು ಅಡ್ಡ ಬಂದ ನನ್ನ ಮಗ ತೇಜಸ್ ರವರನ್ನು ಸಹ ಕೈಗಳಿಂದ ಮುಖಕ್ಕೆ ಗುದ್ದಿ ಷರಟು ಹರಿದು ಹಾಕಿರುತ್ತಾರೆ. ಎಲ್ಲರೂ ನಿನ್ನ ಮಗ ಸಿಗದೆಯಿದ್ದರೆ ಪ್ರತಿ ದಿನ ಬಂದು ನಿಮಗೆ ಇದೇ ಗತಿ ಕಾಣಿಸುತ್ತೇವೆಂದು ಪ್ರಾಣಬೆದರಿಕೆ ಹಾಕಿರುತ್ತಾರೆ. ಆಗ ಪಕ್ಕದ ಮನೆಯ ಸೀನಪ್ಪ ಮತ್ತು ಅಮರು ಎಂಬುವರು ಬಂದು ಜಗಳ ಬಿಡಿಸಿರುತ್ತಾರೆ. ಆದ್ದರಿಂದ ನನ್ನ ಮಕಳು ಮತ್ತು ನನ್ನ ಮೇಲೆ ಹಳೆಯ ದ್ವೇಷದಿಂದ ವಿನಾಕಾರಣ ಗಲಾಟೆ ಮಾಡಿರುವ ಮೇಲ್ಕಂಡವರ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೊಟ್ಟ ದೂರಿನ ಮೇರೆಗೆ ಈ ಪ್ರಕರಣ ದಾಖಲಿಸಿರುತ್ತೆ.