ದಿನಾಂಕ : 22/06/2019ರ ಅಪರಾಧ ಪ್ರಕರಣಗಳು

 1. ಬಾಗೇಪಲ್ಲಿ ಪೊಲೀಸ್ ಠಾಣೆ. ಮೊ.ಸಂ: 144/2019 ಕಲಂ: 15(ಎ),32(3) ಕೆ.ಇ. ಆಕ್ಟ್:-

          ದಿನಾಂಕ:21-06-2019 ರಂದು ಮದ್ಯಾಹ್ನ 1:15 ಗಂಟೆಗೆ ಮಾನ್ಯ ಸಿ.ಪಿ.ಐ ಸಾಹೇಬರವರು ಠಾಣೆಗೆ ಹಾಜರಾಗಿ ನೀಡಿದ ವರಧಿಯ ಸಾರಾಂಶ –  ಈ ದಿನ ಬೆಳಿಗ್ಗೆ ಸುಮಾರು 11-30 ಗಂಟೆಗೆ ಬಂದ ಖಚಿತ ಮಾಹಿತಿ ಮೇರಗೆ ಗುಂಟಿಗಾನಪಲ್ಲಿ ಗ್ರಾಮದ  ಕೃಷ್ಣಾರೆಡ್ಡಿ ಬಿನ್ ನಂಜಿರೆಡ್ಡಿ  ರವರ ಚಿಲ್ಲರೆ ಅಂಗಡಿಯ ಮುಂಭಾಗ ಖಾಲಿ  ಜಾಗದಲ್ಲಿ ಯಾರೋ ಕೆಲವರು ಕುಳಿತುಕೊಂಡು ಕಾನೂನು ಬಾಹಿರವಾಗಿ ಮದ್ಯಸೇವನೆ ಮಾಡುತ್ತಿರುವುದಾಗಿ ಬಂದ ಮಾಹಿತಿ ಮೇರಗೆ ಮೇಲ್ಕಂಡ ಸ್ಥಳಕ್ಕೆ ಹೋದಾಗ ಯಾರೂ ಸುಮಾರು 3-4 ಜನರು ಅಂಗಡಿ ಮುಂಭಾಗ ಖಾಲಿ ಜಾಗದಲ್ಲಿ ಕುಳಿತು ಮದ್ಯ ಸೇವನೆ ಮಾಡುತ್ತಿದ್ದವರು ಸಮವಸ್ತ್ರದಲ್ಲಿದ್ದ ನಮ್ಮನ್ನು  ನೋಡಿ  ಓಡಿ ಹೋದರು. ನಂತರ ಸ್ಥಳದಲ್ಲಿ ಪರಿಶೀಲಸಲಾಗಿ 4 ಮದ್ಯ ಸೇವನೆ ಮಾಡಿರುವ ನಿಶಾನೆಗಳಿರುವ ಪ್ಲಾಸ್ಟೀಕ್ ಗ್ಲಾಸ್ಗಳು ಮತ್ತು ಒಂದು ಲೀಟರ್ ಸಾಮಥ್ಯ ಹೊಂದಿರುವ 2 ನೀರಿನ ಖಾಲಿ ಬಾಟಲ್ಗಳು ಹಾಗೂ ಖಾಲಿಯಾಗಿರುವ 90 ಎಂ.ಎಲ್ ನ ಹೈವಾಡ್ಸ್ ವೀಸ್ಕೀ ಯ 3 ಟೇಟ್ರಾ ಪ್ಯಾಕೇಟ್ ಗಳು ಮತ್ತು  180 ಎಂ.ಎಲ್ ನ ಓಲ್ಡ್ ಟವರೀನ್ 02 ಟೇಟ್ರಾ ಪ್ಯಾಕೇಟ್ ಗಳು  ಇರುತ್ತವೆ. ನಂತರ  ಮದ್ಯವಿರುವ ಒಲ್ಡ್ ಟವರೀನ್ 180 ಎಂಎಲ್ ನ 02 ಟೇಟ್ರಾ ಪ್ಯಾಕೇಟ್ಗಳು ಮತ್ತು 90 ಎಂ.ಎಲ್ ನ 21 ಹೈವಾಟ್ಸ್ ವೀಸ್ಕಿ ಟೇಟ್ರಾ ಪ್ಯಾಕೇಟ್ ಗಳು ಒಟ್ಟು 2 ಲೀಟರ್ 250 ಎಂ.ಎಲ್ ಮದ್ಯ ವಿದ್ದು ಬೆಲೆ ಸುಮಾರು 1200/-ರೂಪಾಯಿಗಳಿರುತ್ತದೆ ಸದರಿ ಚಿಲ್ಲರೆ ಅಂಗಡಿಯ ಮಾಲೀಕನಾದ ಕೃಷ್ಣಾರೆಡ್ಡಿ ಬಿನ್  ನಂಜಿರೆಡ್ಡಿ ,45ವರ್ಷ, ವಕ್ಕಲಿಗರು ಚಿಲ್ಲರೆ ಅಂಗಡಿ ವ್ಯಾಪಾರ ವಾಸ: ಗುಂಟಿಗಾನಪಲ್ಲಿ ಗ್ರಾಮ ಬಾಗೇಪಲ್ಲಿ ತಾಲ್ಲೂಕು ರವರು ಓಡಿ ಹೋಗಿರುತ್ತಾರೆ. ಮದ್ಯ ಕುಡಿಯಲು ಸ್ಥಳಾವಕಾಶ ನೀಡಿರುವುದಕ್ಕೆ ಯಾವುದೇ ಪರವಾನಿಗೆ ಇರುವುದಿಲ್ಲ ಸ್ಥಳದಲ್ಲಿದ್ದಂತಹ ಖಾಲಿಯಾಗಿರುವ 5 ಟೇಟ್ರಾ ಪ್ಯಾಕೇಟ್ ಗಳು ಮದ್ಯ ಸೇವನೆ  ಮಾಡಿರುವ 4ಪ್ಲಾಸ್ಟೀಕ್ ಗ್ಕ್ಲಾಸ್ ಗಳನ್ನು 2 ನೀರಿನ ಪ್ಲಾಸ್ಟೀಕ್ ಖಾಲಿ ಬಾಟ್ಲ್ ಗಳನ್ನು ಮದ್ಯವಿರುವ 90 ಎಂ.ಎಲ್ ನ 21 ಹೈವಾಡ್ಸ್ ವೀಸ್ಕೀ ಟೇಟ್ರಾ ಪ್ಯಾಕೇಟ್ ಗಳನ್ನು ಮತ್ತು 02 ಓಲ್ಡ್ ಟವರೀನ್ ವೀಸ್ಕೀ ಟೇಟ್ರಾ ಪ್ಯಾಕೇಟ್ ಗಳನ್ನು ಪಂಚನಾಮೆಯ ಮೂಲಕ ಅಮಾನತ್ತು ಪಡಿಸಿಕೊಂಡು ಠಾಣೆಗೆ ತಂದಿದ್ದು ಕಾನೂನು ಬಾಹಿರವಾಗಿ ಮಧ್ಯವನ್ನು ಮಾರಾಟ ಮಾಡಲು ಇಟ್ಟುಕೊಂಡು ಕುಡಿಯುವುದಕ್ಕೆ ಸ್ಥಳಾವಕಾಶ ಮಾಡಿಕೊಡುತ್ತಿದ್ದ ಮೇಲ್ಕಂಡ ಕೃಷ್ಣಾರೆಡ್ಡ್ಡಿ ರವರ ವಿರುದ್ದ ಕಾನೂನು ರೀತಿಯ  ಕ್ರಮ ಜರಿಗಿಸಲು  ವರದಿಯನ್ನು ನೀಡಿರುತ್ತೇನೆ, ಎಂದು ಇದ್ದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿರುತ್ತೆ.

 1. ಬಾಗೇಪಲ್ಲಿ ಪೊಲೀಸ್ ಠಾಣೆ. ಮೊ.ಸಂ: 145/2019 ಕಲಂ: 15(ಎ),32(3) ಕೆ.ಇ. ಆಕ್ಟ್:-

          ದಿ: 21-06-2019 ರಂದು ಮದ್ಯಾಹ್ನ 2:45 ಗಂಟೆಗೆ ಮಾನ್ಯ ಸಿ.ಪಿ.ಐ ಸಾಹೇಬರವರು ಠಾಣೆಗೆ ಹಾಜರಾಗಿ ನೀಡಿದ ವರಧಿಯ ಸಾರಾಂಶ –   ಈ ದಿನ ಮದ್ಯಾಹ್ನ ಸುಮಾರು 1:00 ಗಂಟೆಗೆ ಬಂದ ಖಚಿತ ಮಾಹಿತಿ ಮೇರೆಗೆ ಕೋಡಿಪಲ್ಲಿ ಗ್ರಾಮದ ಲಕ್ಷ್ಮೀದೇವಮ್ಮ ಕೋಂ ವೆಂಕಟರವಣಪ್ಪ ರವರ ಚಿಲ್ಲರೆ ಅಂಗಡಿಯ ಮುಂಭಾಗ ಖಾಲಿ  ಜಾಗದಲ್ಲಿ ಯಾರೋ ಕೆಲವರು ಕುಳಿತುಕೊಂಡು ಕಾನೂನು ಬಾಹಿರವಾಗಿ ಮದ್ಯಸೇವನೆ ಮಾಡುತ್ತಿರುವುದಾಗಿ ಬಂದ ಮಾಹಿತಿ ಮೇರಗೆ ಮೇಲ್ಕಂಡ ಸ್ಥಳಕ್ಕೆ ಹೋದಾಗ ಯಾರೋ ಸುಮಾರು 3-4 ಜನರು ಅಂಗಡಿ ಮುಂಭಾಗ ಖಾಲಿ ಜಾಗದಲ್ಲಿ ಕುಳಿತು ಮದ್ಯ ಸೇವನೆ ಮಾಡುತ್ತಿದ್ದವರು ಸಮವಸ್ತ್ರದಲ್ಲಿದ್ದ ಪೋಲಿಸ್ರನ್ನು  ನೋಡಿ  ಓಡಿ ಹೋದರು. ನಂತರ ಸ್ಥಳದಲ್ಲಿ ಪರಿಶೀಲಸಲಾಗಿ 5 ಮದ್ಯ ಸೇವನೆ ಮಾಡಿರುವ ನಿಶಾನೆಗಳಿರುವ ಪ್ಲಾಸ್ಟೀಕ್ ಗ್ಲಾಸ್ಗಳು ಮತ್ತು ಒಂದು ಲೀಟರ್ ಸಾಮಥ್ಯ ಹೊಂದಿರುವ 3 ನೀರಿನ ಖಾಲಿ ಬಾಟಲ್ಗಳು ಹಾಗೂ ಖಾಲಿಯಾಗಿರುವ 90 ಎಂ.ಎಲ್ ನ ಹೈವಾಡ್ಸ್ ವೀಸ್ಕೀ ಯ 4 ಟೇಟ್ರಾ ಪ್ಯಾಕೇಟ್ ಗಳು ಮತ್ತು  180 ಎಂ.ಎಲ್ ನ ಓಲ್ಡ್ ಟವರೀನ್ 03 ಟೇಟ್ರಾ ಪ್ಯಾಕೇಟ್ ಗಳು  ಇರುತ್ತವೆ. ನಂತರ  ಮದ್ಯವಿರುವ ಒಲ್ಡ್ ಟವರೀನ್ 180 ಎಂಎಲ್ ನ 10 ಟೇಟ್ರಾ ಪ್ಯಾಕೇಟ್ಗಳು ಮತ್ತು 90 ಎಂ.ಎಲ್ ನ 06 ಹೈವಾಟ್ಸ್ ವೀಸ್ಕಿ ಟೇಟ್ರಾ ಪ್ಯಾಕೇಟ್ ಗಳು ಒಟ್ಟು 2 ಲೀಟರ್ 340 ಎಂ.ಎಲ್ ಮದ್ಯ ವಿದ್ದು ಬೆಲೆ ಸುಮಾರು 1300/-ರೂಪಾಯಿಗಳಿರುತ್ತದೆ ಸದರಿ ಚಿಲ್ಲರೆ ಅಂಗಡಿಯ ಮಾಲೀಕರಾದ ಲಕ್ಷ್ಮೀದೇವಮ್ಮ ಕೋಂ ವೆಂಕಟರವಣಪ್ಪ ,50ವರ್ಷ, ಬಲಜಿಗರು, ಚಿಲ್ಲರೆ ಅಂಗಡಿ ವ್ಯಾಪಾರ ವಾಸ: ಕೋಡಿಪಲ್ಲಿ ಗ್ರಾಮ ಬಾಗೇಪಲ್ಲಿ ತಾಲ್ಲೂಕು ರವರು ಓಡಿ ಹೋಗಿರುತ್ತಾರೆ. ಮದ್ಯ ಕುಡಿಯಲು ಸ್ಥಳಾವಕಾಶ ನೀಡಿರುವುದಕ್ಕೆ ಯಾವುದೇ ಪರವಾನಿಗೆ ಇರುವುದಿಲ್ಲ ಸ್ಥಳದಲ್ಲಿದ್ದಂತಹ ಖಾಲಿಯಾಗಿರುವ 7 ಟೇಟ್ರಾ ಪ್ಯಾಕೇಟ್ ಗಳು ಮದ್ಯ ಸೇವನೆ  ಮಾಡಿರುವ 5 ಪ್ಲಾಸ್ಟೀಕ್ ಗ್ಕ್ಲಾಸ್ ಗಳನ್ನು 3 ನೀರಿನ ಪ್ಲಾಸ್ಟೀಕ್ ಖಾಲಿ ಬಾಟ್ಲ್ ಗಳನ್ನು  ಮದ್ಯವಿರುವ 90 ಎಂ.ಎಲ್ ನ 06 ಹೈವಾಡ್ಸ್ ವೀಸ್ಕೀ ಟೇಟ್ರಾ ಪ್ಯಾಕೇಟ್ ಗಳನ್ನು  ಮತ್ತು 180 ಎಂ.ಎಲ್ ನ  10 ಓಲ್ಡ್ ಟವರೀನ್ ವೀಸ್ಕೀ ಟೇಟ್ರಾ ಪ್ಯಾಕೇಟ್ ಗಳನ್ನು ಪಂಚನಾಮೆಯ ಮೂಲಕ ಅಮಾನತ್ತುಪಡಿಸಿಕೊಂಡು ಠಾಣೆಗೆ ತಂದಿದ್ದು, ಕಾನೂನು ಬಾಗಹಿರವಾಗಿ ಮದ್ಯವನ್ನು ಮಾರಾಟ ಮಾಡಲು ಇಟ್ಟುಕೊಂಡು ಕುಡಿಯುವುದಕ್ಕೆ ಸ್ಥಳಾವಕಾಶ ಮಾಡಿಕೊಟ್ಟಿದ್ದ ಮೇಲ್ಕಂಡ ಲಕ್ಷ್ಮೀದೇವಮ್ಮ ರವರ ವಿರುದ್ದ ಕಾನೂನು ರೀತಿಯ ಕ್ರಮ ಜರುಗಿಸಲು ವರಧಿಯನ್ನು ನೀಡಿರುತ್ತೇನೆ, ಎಂದು ಇದ್ದ ದೂರಿನ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿರುತ್ತೆ.

 1. ಬಾಗೇಪಲ್ಲಿ ಪೊಲೀಸ್ ಠಾಣೆ. ಮೊ.ಸಂ: 146/2019 ಕಲಂ: 418-419-420-467-468 ರೆ/ವಿ 34 ಐ.ಪಿ.ಸಿ:-

          ದಿ: 21-06-2019 ರಂದು ಸಂಜೆ 4:30 ಗಂಟೆಯಲ್ಲಿ ಪಿರ್ಯಾಧಿದಾರರಾದ ಪ್ರಭಾವತಮ್ಮ ಕೋಂ ಸೂರ್ಯನಾರಾಯಣರೆಡ್ಡಿ, 48 ವರ್ಷ, ವಕ್ಕಲಿಗರು, ಗೃಹಿಣಿ, ನರಸಾಪುರ ಗ್ರಾಮ, ಯಲ್ಲೋಡು ಪಂಚಾಯ್ತಿ, ಗುಡಿಬಂಡೆ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶ -ನನ್ನ ತವರು ಮನೆ ಬಾಗೇಪಲ್ಲಿ ತಾಲ್ಲೂಕು ಕಸಬಾ ಹೊಸಹುಡ್ಯ ಗ್ರಾಮವಾಗಿರುತ್ತದೆ.  ನಮ್ಮ ತಂದೆ ನರಸಿಂಹರೆಡ್ಡಿ ರವರಿಗೆ 1] ಮುದ್ದಮ್ಮ   2] ಕಲಾವತಿ ಎಂಬ  ಇಬ್ಬರು  ಹೆಂಡತಿಯರು ಇರುತ್ತಾರೆ.  ಮುದ್ದಮ್ಮ ರವರಿಗೆ 1ನೇ ನಾಗರತ್ನಮ್ಮ, 2ನೇ ಪ್ರಭಾವತಮ್ಮ ಆದ ನಾನು, 3ನೇ ಗಂಗಿರೆಡ್ಡಿ ಎಂಬ ಮೂರು ಮಕ್ಕಳು ಇದ್ದು,  ನನ್ನ ತಮ್ಮ ಗಂಗಿರೆಡ್ಡಿ ತೀರಿಕೊಂಡಿರುತ್ತಾನೆ.ನನಗೆ ಈಗ್ಗೆ 30 ವರ್ಷಗಳ ಹಿಂದೆ ನರಸಾಪುರ ಗ್ರಾಮದ ಸೂರ್ಯನಾರಾಯಣರೆಡ್ಡಿ ಎಂಬುವವರೊಂದಿಗೆ ಮದುವೆಯಾಗಿರುತ್ತದೆ. ನಮ್ಮ ತಾಯಿಯ ಅಕ್ಕ ಹಾಗೂ ನಮ್ಮ ದೊಡ್ಡಮ್ಮಳಾದ ಗಂಗಮ್ಮ ರವರ ಸ್ವಯಾಜರ್ಜಿತ ಆಸ್ತಿ ಹೊಸಹುಡ್ಯ ಗ್ರಾಮದ ಸವರ್ೆ ನಂಬರ್ 75/2 ರಲ್ಲಿ 16 ಗುಂಟೆ, ಹಾಗೂ 1 ಗುಂಟೆ ಖರಾಬ್  ಸರ್ವೆ ನಂಬರ್ 75/3 ರಲ್ಲಿ 26 ಗುಂಟೆ, ಹಾಗೂ 2 ಗುಂಟೆ ಖರಾಬ್,  ಸರ್ವೆ ನಂಬರ್ 75/4 ರಲ್ಲಿ 36 ಗುಂಟೆ, ಸರ್ವೆ ನಂಬರ್ 75/5 ರಲ್ಲಿ 17 ಗುಂಟೆ ಜಮೀನು ಇರುತ್ತದೆ.  ಗಂಗಮ್ಮ ರವರಿಗೆ ಮಕ್ಕಳು ಇರುವುದಿಲ್ಲ. ಆದ್ದರಿಂದ ಇವರು ನನ್ನನ್ನು ಸಾಕಿಕೊಂಡಿರುತ್ತಾರೆ.  ನನಗೆ ಮದುವೆಯಾದ ನಂತರ ಇವರು ನಮ್ಮ ನರಸಾಪುರ ಗ್ರಾಮಕ್ಕೆ ಬಂದು ಸುಮಾರು 10 ವರ್ಷಗಳ ಕಾಲ ನನ್ನೊಂದಿಗೆ ಇದ್ದರು, ಈ ಸಮಯದಲ್ಲಿ ಇವರು ಮೇಲ್ಕಂಡ ಸರ್ವೆ ನಂಬರುಗಳಲ್ಲಿನ ಒಟ್ಟು 2 ಎಕರೆ 18 ಗುಂಟೆ ಜಮೀನನ್ನು  ನನ್ನ ಹೆಸರಿಗೆ ದಾನಪತ್ರ ನಂ:851/11-12 ರೀತ್ಯ ಮಾಡಿಕೊಟ್ಟಿರುತ್ತಾರೆ.  ಹೀಗಿರುವಲ್ಲಿ ನಮ್ಮ ತಂದೆಯಾದ ನರಸಿಂಹರೆಡ್ಡಿ ರವರು ತನ್ನ ಎರಡನೇ ಹೆಂಡತಿಯಾದ ಕಲಾವತಿ ರವರನ್ನು ರಿಜಿಸ್ಟಾರ್ ಆಫೀಸ್ ಗೆ ಕರೆದುಕೊಂಡು ಹೋಗಿದ್ದು, ಈಕೆ ನನ್ನ ಮಗಳು ಪ್ರಭಾವತಿ ಎಂದು ಹೇಳಿ,  ದಿನಾಂಕ:24/01/2013 ರಂದು  ಹೊಸಹುಡ್ಯ ಗ್ರಾಮದ ಸರ್ವೆ ನಂ.75/2 ರಲ್ಲಿ 16 ಗುಂಟೆ, ಸರ್ವೆ ನಂಬರ್ 75/3 ರಲ್ಲಿ 26 ಗುಂಟೆ, ಸರ್ವೆ ನಂಬರ್ 75/5 ರಲ್ಲಿ 17 ಗುಂಟೆ ಜಮೀನು ಒಟ್ಟು 1-19 ಗುಂಟೆ ಜಮೀನನ್ನು ತನ್ನ ಹೆಸರಿಗೆ ಕ್ರಯ ಮಾಡಿಕೊಂಡಿರುತ್ತಾರೆ. ಈ ಕ್ರಯ ಪತ್ರದ ಸಂಖ್ಯೆ:4629/2012-2013 ಆಗಿರುತ್ತದೆ. ಈ ಸಮಯದಲ್ಲಿ ಪ್ರಭಾವತಮ್ಮ ರವರ ಸಹಿಯನ್ನು ಕಲಾವತಿ ರವರು ತಾನೇ ಪ್ರಭಾವತಮ್ಮ ಎಂದು ಪ್ರಬಾತಮ್ಮ ಎಂದು ಸಹಿ ಮಾಡಿರುತ್ತಾರೆ.  ಸದರಿ ಕ್ರಯ ಪತ್ರದಲ್ಲಿ ಪ್ರಭಾವತಮ್ಮ ರವರ ಪೋಟೋ ಬದಲಾಗಿ ಕಲಾವತಿ ರವರ ಫೋಟೋ ಇರುತ್ತದೆ.  ಈ ಕ್ರಯ ಪತ್ರದಲ್ಲಿ ಸಾಕ್ಷೀದಾರರಾಗಿ ಸೂರ್ಯನಾರಾಯಣರೆಡ್ಡಿ ಬಿನ್ ವೆಂಕಟಪ್ಪ, ಗೂಡಪಲ್ಲಿ ಎಂಬುವವರ ನಕಲು ಹೆಬ್ಬೆಟ್ಟನ್ನು ಹಾಕಿ ಫೋರ್ಜರಿ ಮಾಡಿರುತ್ತಾರೆ. ಮತ್ತು ಲಕ್ಷ್ಮೀನಾರಾಯಣ ಬಿನ್ ವೆಂಕಟರೆಡ್ಡಿ, ಬಾಗೇಪಲ್ಲಿ ರವರು ಸಹಿಗಳನ್ನು ಮಾಡಿರುತ್ತಾರೆ. ಗುರುತಿಸುವವರು ವೆಂಕಟಪ್ಪ ಬಿನ್ ನಾರಾಯಣಪ್ಪ, ಬಾಗೇಪಲ್ಲಿ  ಶ್ರೀನಿವಾಸ ಬಿನ್ ರಾಮಪ್ಪ, ಬಾಗೇಪಲ್ಲಿ ರವರು ಸಹಿ ಮಾಡಿರುತ್ತಾರೆ. DIST.DEED WRITER ಜೆ.ಎನ್ ಪ್ರಕಾಶ್ ಬಾಗೇಪಲ್ಲಿ ಆಗಿರುತ್ತಾರೆ. ಸರ್ವೆ ನಂಬರ್ 75/4 ರಲ್ಲಿನ 36 ಗುಂಟೆ ಜಮೀನಿಗೆ ಸಂಬಂಧಿಸಿದಂತೆ ಗಂಗಮ್ಮ ನ ಹೆಸರಿನಿಂದ ನನ್ನ ಹೆಸರಿಗೆ ಕ್ರಯ ಆಗಿದ್ದು, ಖಾತೆ ಬದಲಾವಣೆ ಮಾಡಿಕೊಂಡಿರಲಿಲ್ಲ. ದಿನಾಂಕ:02/02/2013 ರಂದು ನಮ್ಮ ತಂದೆ ನರಸಿಂಹರೆಡ್ಡಿ ರವರು ತನ್ನ ಎರಡನೇ ಹೆಂಡತಿ ಕಲಾವತಿ ರವರನ್ನು ರಿಜಿಸ್ಟರ್ ಆಫೀಸಿಗೆ ಕರೆದುಕೊಂಡು ಹೋಗಿ ಗಂಗಮ್ಮ ರವರ ಹೆಸರಿನಲ್ಲಿರುವ ಜಮೀನನನ್ನು ತಾನೇ ಗಂಗಮ್ಮ ಎಂದು  ಕಲಾವತಿ ರವರೇ ಗಂಗಮ್ಮ ಎಂದು ಸಹಿ ಮಾಡಿಕೊಟ್ಟಂತೆ ಜಮೀನನ್ನು ಕ್ರಯ ಮಾಡಿಸಿಕೊಂಡಿರುತ್ತಾರೆ. ಈ ಕ್ರಯಪತ್ರದ ಸಂಖ್ಯೆ:4765/2012-13 ಆಗಿರುತ್ತದೆ.  ಈ ಕ್ರಯ ಪತ್ರಕ್ಕೆ ಕಲಾವತಿ ರವರು ಗಂಗಮ್ಮ ರವರ ನಕಲು ಸಹಿಯನ್ನು ಹಾಕಿರುತ್ತಾರೆ.  ಸದರಿ ಕ್ರಯ ಪತ್ರದಲ್ಲಿ ಗಂಗಮ್ಮ ರವರ ಫೋಟೋ ಬದಲಾಗಿ ಕಲಾವತಿ ರವರ ಫೋಟೋ ಇರುತ್ತದೆ. ಸಾಕ್ಷೀಗಳಾಗಿ ಆದಿನಾರಾಯಣ ಬಿನ್ ರಾಮಪ್ಪ, ಬಾಗೇಪಲ್ಲಿ, ಲಷ್ಮೀಪತಿ ಬಿನ್ ನಾರಾಯಣಸ್ವಾಮಿ, ಬಾಗೇಪಲ್ಲಿ ರವರುಗಳು ಸಹಿಯನ್ನು ಮಾಡಿರುತ್ತಾರೆ. ಗುರುತಿಸುವವರು ರಾಮಪ್ಪ ಬಿನ್ ನಂಜುಂಡಪ್ಪ, ಬಾಗೇಪಲ್ಲಿ ಮತ್ತು ಮಂಜುನಾಥ ಬಿನ್ ವೆಂಕಟರಾಯಪ್ಪ, ಬಾಗೇಪಲ್ಲಿ ರವರು ಗಳು ಸಹಿ ಮಾಡಿರುತ್ತಾರೆ. ಇದಕ್ಕೆ ಜಿಲ್ಲಾ ಪತ್ರ ಬರಹಗಾರರು ಪಿ.ನಾಗಪ್ಪ ರವರು ಆಗಿರುತ್ತಾರೆ.  ಮೇಲ್ಕಂಡ  ಜಮೀನುಗಳಲ್ಲಿ ನಾನು ಉಳುಮೆ ಮಾಡಲು ಹೋದಲ್ಲಿ ನಮ್ಮ ತಂದೆ ನರಸಿಂಹರೆಡ್ಡಿ ಮತ್ತು ಕಲಾವತಿ ರವರು ಬಂದು ದೌರ್ಜನ್ಯದಿಂದ ಅಡ್ಡಿಪಡಿಸುತ್ತಿರುತ್ತಾರೆ. ಆದ್ದರಿಂದ ಗಂಗಮ್ಮ ರವರು ನನ್ನ ಹೆಸರಿಗೆ ಕ್ರಯ ಮಾಡಿಕೊಟ್ಟಿದ್ದ ಮೇಲ್ಕಂಡ ಸರ್ವೆ ನಂಬರುಗಳಲ್ಲಿನ ಜಮೀನುಗಳನ್ನು ನನಗೆ ಮೋಸ ಮಾಡುವ ಉದ್ದೇಶದಿಂದ ನಕಲಿ ದಾಖಲೆಗಳನ್ನು ಸೃಷ್ಠಿಸಿ,  ನಮ್ಮ ತಂದೆ ನರಸಿಂಹರೆಡ್ಡಿ, ಇವರ ಎರಡನೇ ಹೆಂಡತಿ ಕಲಾವತಿ, ಜಿಲ್ಲಾ ಪತ್ರ ಬರಹಗಾರರಾದ  ಪ್ರಕಾಶ್ [ L.NO: 37/2009-10] ಬಾಗೇಪಲ್ಲಿ, ಪಿ.ನಾಗಪ್ಪ, ಚೊಕ್ಕಂಪಲ್ಲಿ ಬಾಗೇಪಲ್ಲಿ ತಾಲ್ಲೂಕು, ಸಾಕ್ಷಿಗಳಾದ ಲಕ್ಷ್ಮೀನಾರಾಯಣ ಬಿನ್ ವೆಂಕಟರೆಡ್ಡಿ, ಬಾಗೇಪಲ್ಲಿ, ಆದಿನಾರಾಯಣ ಬಿನ್ ರಾಮಪ್ಪ, ಬಾಗೇಪಲ್ಲಿ. ಲಕ್ಷ್ಮೀಪತಿ ಬಿನ್ ನಾರಾಯಣಸ್ವಾಮಿ, ಬಾಗೇಪಲ್ಲಿ. ಗುರುತಿಸಿರುವ ವೆಂಕಟಪ್ಪ ಬಿನ್ ನಾರಾಯಣಪ್ಪ, ಬಾಗೇಪಲ್ಲಿ  ಶ್ರೀನಿವಾಸ ಬಿನ್ ರಾಮಪ್ಪ, ಬಾಗೇಪಲ್ಲಿ, ಹಾಗೂ ರಾಮಪ್ಪ ಬಿನ್ ನಂಜುಂಡಪ್ಪ, ಬಾಗೇಪಲ್ಲಿ ಮತ್ತು ಮಂಜುನಾಥ ಬಿನ್ ವೆಂಕಟರಾಯಪ್ಪ, ಬಾಗೇಪಲ್ಲಿ ರವರುಗಳು ಮೋಸದಿಂದ, ನನಗೆ ವಂಚನೆ ಮಾಡುವ ಉದ್ದೇಶದಿಂದ ಎಲ್ಲರೂ ಸೇರಿ  ನಕಲಿ ಸಹಿಗಳನ್ನು, ನಕಲಿ ಸಾಕ್ಷೀಗಳನ್ನು ಸೃಷ್ಟಿಸಿ ನನ್ನ ಜಮೀನನನ್ನು ಮೋಸದಿಂದ ನಮ್ಮ ತಂದೆಯವರಾದ ನರಸಿಂಹರೆಡ್ಡಿ ರವರು ತಮ್ಮ ಹೆಸರಿಗೆ ಕ್ರಯ ಮಾಡಿಕೊಂಡಿರುತ್ತಾರೆ.  ಇವರುಗಳ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ಕೋರುತ್ತೇನೆ, ಎಂದು ನೀಡಿದ ದೂರಿನ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿರುತ್ತೆ.

 1. ಬಾಗೇಪಲ್ಲಿ ಪೊಲೀಸ್ ಠಾಣೆ. ಮೊ.ಸಂ: 148/2019 ಕಲಂ:279 ಐ.ಪಿ.ಸಿ:-

          ದಿನಾಂಖ: 22-06-2019 ರಂದು ಮದ್ಯಾಹ್ನ 12:00 ಗಂಟೆಗೆ ಪಿರ್ಯಾಧಿದಾರರಾದ ಕುಟಾಲ ಉತ್ತಮ್ ರೆಡ್ಡಿ ಬಿನ್  ರಾಮಮೋಹನ್ ರೆಡ್ಡಿ, 30 ವರ್ಷ, ಒಕ್ಕಲಿಗರು, ಜಿರಾಯ್ತಿ ,ವಾಸ:ಗಂಗಮ್ಮಪಲ್ಲಿ ಗ್ರಾಮ ಗೋರಂಟ್ಲ ಮಂಡಲಂ, ಹಿಂದೂಪುರ ತಾಲ್ಲೂಕು, ಅನಂತಪುರ ಜಿಲ್ಲೆ ಆಂಧ್ರಪ್ರದೇಶ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶ –  ದಿನಾಂಕ:22.06.2019 ರಂದು ಬೆಳಿಗ್ಗೆ  5-30 ಗಂಟೆ ಸಮಯದಲ್ಲಿ ನಮ್ಮ ಗ್ರಾಮಕ್ಕೆ  ಹೋಗಲು  ಬೆಂಗಳೂರಿನ ಸೆಂಟ್ ಜಾನ್ಸ್ ಆಸ್ಪತ್ರೆ ಬಳಿಯಿಂದ ಕೆಎ-51ಎಎ-4275 ನೊಂದಣಿ ಸಂಖ್ಯೆಯ  ಟಾಟಾ ಇಂಡಿಗೋ ಕಾರನ್ನು ಬಾಡಿಗೆಗೆ ಮಾತನಾಡಿಕೊಂಡು ಬಂದಿದ್ದು, ಬೆಳಿಗ್ಗೆ 8-30 ಗಂಟೆ ಸಮಯದಲ್ಲಿ ಬಾಗೇಪಲ್ಲಿ  ತಾಲ್ಲೂಕು ಗೂಳೂರು  ಗ್ರಾಮದ ಬಳಿ ಹೋಗುತ್ತಿದ್ದಾಗ ಕಾರಿನ ಚಾಲಕ ತನ್ನ ಕಾರನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಹೋಗುತ್ತಿದ್ದು ಕಾರಿಗೆ ಯಾವುದೋ ನಾಯಿ ಅಡ್ಡ ಬಂದಿದ್ದು, ಅದನ್ನು ತಪ್ಪಿಸಲು ಚಾಲಕ ತನ್ನ ಕಾರನ್ನು ರಸ್ತೆಯ ಎಡಬದಿಗೆ ತಿರುಗಿಸಿದ್ದು, ಕಾರು ಚಾಲಕನ ನಿಯಂತ್ರಣ ತಪ್ಪಿ ಉರುಳಿ ಬಿದ್ದ ಪರಿಣಾಮ ಕಾರಿನ ಎಡಭಾಗ ಮತ್ತು ಮೇಲ್ಭಾಗ ಟಾಪ್ ಮತ್ತು  ಮುಂಭಾಗ ಗ್ಲಾಸ್ ಮತ್ತು ಹಿಂಭಾಗ ಗ್ಲಾಸ್ ಸಹ ಜಖಂಗಂಡಿರುತ್ತದೆ ಕಾರಿನಲ್ಲಿದ್ದ ನನಗೆ ಮತ್ತು ಕಾರಿನ ಚಾಲಕನಿಗೆ ಯಾವುದೇ ರೀತಿಯ ಗಾಯಗಳಾಗಿರುವುದಿಲ್ಲ ಅದ್ದರಿಂದ ಈ ಅಪಘಾತಕ್ಕೆ ಕಾರಣನಾದ ಕೆಎ-51 ಎಎ-4275 ನೊಂದಣಿ ಸಂಖ್ಯೆಯ  ಟಾಟಾ ಇಂಡಿಗೋ ಕಾರಿನ ಚಾಲಕನ ವಿರುದ್ದ ಕಾನೂನು ರೀತಿಯ ಕ್ರಮ ಜರುಗಿಸಬೇಕಾಗಿ ಕೋರುತ್ತೇನೆ, ಎಂದು ಇದ್ದ ದೂರಿನ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿರುತ್ತೆ.

 1. ಬಟ್ಲಹಳ್ಳಿ ಪೊಲೀಸ್ ಠಾಣೆ. ಮೊ.ಸಂ: 57/2019 ಕಲಂ: 279-337 ಐ.ಪಿ.ಸಿ:-

          ದಿನಾಂಕ:22/06/2019 ರಂದು  11-30 ಗಂಟೆಗೆ ಪಿರ್ಯಾದಿದಾರರಾದ ವಿನಯ್ ಎಂ, ಕೆ, ಬಿನ್ ಕಿಟ್ಟಣ್ಣ,    23 ವರ್ಷ, ನಾಯಕ ಜನಾಂಗ, ವ್ಯವಸಾಯ,ವಾಸ: ನಾಗರಾಜ ಹೊಸಹಳ್ಳಿ ಗ್ರಾಮ ಚಿಂತಾಮಣಿ  ತಾಲ್ಲೂಕು.ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ,ನಾನು ಮೇಲ್ಕಂಡ ವಿಳಾಸದಲ್ಲಿ ವಾಸವಾಗಿರುತ್ತೇನೆ. ದಿನಾಂಕ:21/06/2019 ರಂದು ಸಂಜೆ ಸುಮಾರು 06-45 ಗಂಟೆ ಸಮಯದಲ್ಲಿ ನಾನು, ಮತ್ತು ನಮ್ಮ ಗ್ರಾಮದ ವಾಸಿ ಮೂತರ್ಿ ಬಿನ್ ಲೇಟ್ ಕದಿರಪ್ಪ  ರವರು ನಮ್ಮ ತಾತನ ಬಾಬತ್ತು ದ್ವಿಚಕ್ರವಾಹನದಲ್ಲಿ ಹಾಗೂ  ನನ್ನ ತಮ್ಮ ಎನ್ ಕೆ ವಿಕ್ರಮ್ , ಮತ್ತು ನಮ್ಮ ಗ್ರಾಮದ ನವೀನ್ ಎನ್,ಆರ್ ರವರುಗಳು ನನ್ನ ತಮ್ಮ ಬಾಬತ್ತು  ತಾತ್ಕಾಲಿಕ ನೊಂದಣಿ ಸಂಖ್ಯೆ: ಕೆ ಎ – 40 ಟಿಸಿ -0010 ಹೊಂಡಾ ಹಾರ್ ನೆಟ್ ಕಂಪನಿಯ ದ್ವಿಚಕ್ರವಾಹನದಲ್ಲಿ ನವೀನ್ ರವರನ್ನು ದ್ವಿಚಕ್ರವಾಹನದ ಹಿಂಬದಿಯಲ್ಲಿ ಕುಳ್ಳರಿಸಿಕೊಂಡು ನಮ್ಮ ಮನೆಗೆ ಸರಕುಗಳನ್ನು ತರಲು ದ್ವಿಚಕ್ರವಾಹನವನ್ನು ಚಾಲನೆ ಮಾಡಿಕೊಂಡು  ದಿಗೂರು ಗ್ರಾಮ ಬಿಟ್ಟು ಸ್ವಲ್ಪ ಮುಂದೆ ಥಾರ್ ರಸ್ತೆಯಲ್ಲಿ ಎಡ ಬದಿಯಲ್ಲಿ ಚಾಲನೆ ಮಾಡಿಕೊಂಡು ಬರುತ್ತಿದ್ದಾಗ  ನನ್ನ ತಮ್ಮನ ದ್ವಿಚಕ್ರವಾಹನದ ಹಿಂಬದಿಯಲ್ಲಿ ಬಟ್ಲಹಳ್ಳಿ ಕಡೆಗೆ ಬರುತ್ತಿದ್ದ ಕೆಎ-08 ಟಿ 4021 ಮೆಸ್ಸಿ ಪರಗೂಷನ್ ಟ್ರಾಕ್ಟರ್ ಚಾಲಕ ಟ್ರಾಕ್ಟರ್ ನ್ನು ಅತಿ ವೇಗ ಮತ್ತು ಅಜಾಗರುಕತೆಯಿಂದ ಚಾಲನೆ ಮಾಡಿಕೊಂಡು ಬಂದು ನನ್ನ ತಮ್ಮ ಬಾಬತ್ತು ದ್ವಿಚಕ್ರವಾಹನಕ್ಕೆ ಅಪಘಾತ ಪಡಿಸಿದ ಪರಿಣಾಮ ವಿಕ್ರಮ್ ಮತ್ತು ನವೀನ್ ರವರುಗಳು ರಸ್ತೆಯಲ್ಲಿ  ಬಿದ್ದುಹೋಗಿದ್ದು, ವಿಕ್ರಮ್ ರವರ ಹೊಟ್ಟೆಯ ಮೇಲೆ ಟ್ರಾಕ್ಟರ್ ನ ಮುಂಭಾಗದ ಇಂಜಿನ್ ಚಕ್ರ ಹತ್ತಿ ಹೋಗಿ ಹೊಟ್ಟೆಯ ಮೇಲೆ ಹಾಗೂ ಬಲ ಕೈಗೆ ತರಚಿದ ಗಾಯಗಳಾಗಿರುತ್ತೆ. ನವೀನ್ ರವರಿಗೆ ಬೆನ್ನಿನ ಮೇಲೆ ತರಚಿದ ಗಾಯಗಳಾಗಿರುತ್ತೆ. ಈ ಅಪಘಾತದಿಂದ ದ್ವಿಚಕ್ರವಾಹನ  ಹಿಂಬದಿಯು ಸಂಪೂರ್ಣ ಜಖಂ ಗೊಂಡು ಎಡ ಬದಿಯ ಮಾಸ್ಕ್, ಸೇಪ್ಟಿ ಗಾರ್ಡ ಜಖಂಆಗಿರುತ್ತೆ. ರಸ್ತೆಯಲ್ಲಿ ಹಿಂಬದಿಯಲ್ಲಿ ಬರುತ್ತಿದ್ದ ನಾನು ಮತ್ತು ಮೂತರ್ಿ ರವರು ಕೂಡಲೇ ಅವರಿಬ್ಬರನ್ನು ಉಪಚರಿಸಿ ಯಾವುದೋ ಆಟೋದಲ್ಲಿ ಚಿಕಿತ್ಸೆಗಾಗಿ ಬಟ್ಲಹಳ್ಳಿ ಸಕರ್ಾರಿ ಆಸ್ಪತ್ರೆಗೆ ದಾಖಲಿಸಿದ್ದು, ನಂತರ ಹೆಚ್ಚಿನ ಚಿಕಿತ್ಸೆಗಾಗಿ 108 ಅಂಬುಲೆನ್ಸ್ ವಾಹನದಲ್ಲಿ ಚಿಂತಾಮಣಿ ಸಕರ್ಾರಿ ಆಸ್ಪತ್ರೆಗೆ ದಾಖಲಿಸಿ ನಂತರ ಹೆಚ್ಚಿನ ಚಿಕಿತ್ಸೆ ಬೆಂಗಳೂರು ನಗರದ ಸಂಜಯ್ ಗಾಂದಿ ಆಸ್ಪತ್ರೆಗೆ ದಾಖಲಿಸಿದ್ದು, ಅಪಘಾತ ಪಡಿಸಿದ ಕೆಎ-08 ಟಿ 4021 ಮೆಸ್ಸಿ ಪರಗೂಷನ್ ಟ್ರಾಕ್ಟರ್ ಚಾಲಕ ನ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಬೇಕಾಗಿ ಕೋರುತ್ತೇನೆ. ನನ್ನ ತಮ್ಮ ವಿಕ್ರಮ್ ಹಾಗೂ ನವೀನ್ ರವರುಗಳನ್ನು ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಿ ಈ ದಿನ ತಡವಾಗಿ ಠಾಣೆೆಗೆ ಬಂದು ನೀಡಿದ ದೂರಿನ ಸಾರಾಂಶವಾಗಿರುತೆ.

 1. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ. ಮೊ.ಸಂ: 144/2019 ಕಲಂ: 15(ಎ),32(3) ಕೆ.ಇ. ಆಕ್ಟ್:-

          ದಿನಾಂಕ 21/06/2019 ರಂದು ಸಂಜೆ 04.10 ಗಂಟೆಗೆ ಪಿಎಸ್ಐ ರವರು ನೀಡಿದ ವರದಿಯ ಸಾರಾಂಶವೇನೆಂದರೆ ದಿನಾಂಕ 21/06/2019 ರಂದು ಸಂಜೆ 04.00 ಗಂಟೆಯಲ್ಲಿ ತಾನು ಠಾಣಾ ಕರ್ತವ್ಯದಲ್ಲಿ ಇದ್ದಾಗ ಪೊಲೀಸ್ ಠಾಣಾ ಸರಹದ್ದಿನ ನ್ಯಾಸ್ತಿಮ್ಮನಹಳ್ಳಿ ಗ್ರಾಮದ ರಾಜಪ್ಪ ಬಿನ್ ಗಂಗಪ್ಪ, 40 ವರ್ಷ, ದೊಂಬರು ನ್ಯಾಸ್ತಿಮ್ಮನಹಳ್ಳಿ ಗ್ರಾಮ ರವರು ಅವರು ತನ್ನ ಮನೆಯ ಮುಂದೆ ಯಾವುದೇ ಪರವಾನಗಿ ಇಲ್ಲದೆ ಅಕ್ರಮವಾಗಿ ಸಾರ್ವಜನಿಕರಿಗೆ ಮಧ್ಯಪಾನ ಸೇವನೆ ಮಾಡಲು ಅವಕಾಶ ಮಾಡಿಕೊಟ್ಟಿರುವುದಾಗಿ ಖಚಿತ ಮಾಹಿತಿ ಬಂದಿದ್ದು ಈ ಬಗ್ಗೆ ರಾಜಪ್ಪ ಬಿನ್ ಗಂಗಪ್ಪ ರವರ ಮೇಲೆ ಕಲಂ 15 (ಎ), 32(3) ಕೆ ಇ ಆಕ್ಟ್ ರೀತ್ಯಾ ಆಸಾಮಿಯ ವಿರುದ್ದ ಪ್ರಕರಣ ದಾಖಲಿಸಿಕೊಳ್ಳಲು ಸೂಚಿಸಿದ ಮೇರೆಗೆ  ಈ ಪ್ರ ವ ವರದಿ.

 1. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ. ಮೊ.ಸಂ: 145/2019 ಕಲಂ: 15(ಎ),32(3) ಕೆ.ಇ. ಆಕ್ಟ್:-

          ದಿನಾಂಕ 21/06/2019 ರಂದು ಸಂಜೆ 06.10 ಗಂಟೆಗೆ ಪಿಎಸ್ಐ ರವರು ನೀಡಿದ ವರದಿಯ ಸಾರಾಂಶವೇನೆಂದರೆ ದಿನಾಂಕ 21/06/2019 ರಂದು ಸಂಜೆ 06.00 ಗಂಟೆಯಲ್ಲಿ ತನಗೆ ಬಂದ ಖಚಿತ ಮಾಹಿತಿ ಏನೆಂದರೆ ಗುಂಡ್ಲಗುರ್ಕಿ ಗ್ರಾಮದ ಕೃಷ್ಣಪ್ಪ ಬಿನ್ ಕುವಪ್ಪ, 38 ವರ್ಷ, ವಕ್ಕಲಿಗರು ವ್ಯಾಪಾರ ಗುಂಡ್ಲಗುರ್ಕಿ ಗ್ರಾಮ ರವರು ಅವರು ಚಿಲ್ಲರೆ ಅಂಗಡಿಯ ಬಳಿ  ಯಾವುದೇ ಪರವಾನಗಿ ಇಲ್ಲದೆ ಅಕ್ರಮವಾಗಿ ಸಾರ್ವಜನಿಕರಿಗೆ ಮಧ್ಯಪಾನ ಸೇವನೆ ಮಾಡಲು ಅವಕಾಶ ಮಾಡಿಕೊಟ್ಟಿರುವುದಾಗಿ ಖಚಿತ ಮಾಹಿತಿ ಬಂದಿದ್ದು ಈ ಬಗ್ಗೆ ಕೃಷ್ಣಪ್ಪ ಬಿನ್ ಕುವಪ್ಪ ರವರ ಮೇಲೆ ಕಲಂ 15 (ಎ), 32(3) ಕೆ ಇ ಆಕ್ಟ್ ರೀತ್ಯಾ ಆಸಾಮಿಯ ವಿರುದ್ದ ಪ್ರಕರಣ ದಾಖಲಿಸಿಕೊಳ್ಳಲು ಸೂಚಿಸಿದ ಮೇರೆಗೆ  ಈ ಪ್ರ ವ ವರದಿ.

 1. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ. ಮೊ.ಸಂ: 146/2019 ಕಲಂ: 15(ಎ),32(3) ಕೆ.ಇ. ಆಕ್ಟ್:-

          ದಿನಾಂಕ 21/06/2019 ರಂದು ಸಂಜೆ 08.10 ಗಂಟೆಗೆ ಪಿಎಸ್ಐ ರವರು ನೀಡಿದ ವರದಿಯ ಸಾರಾಂಶವೇನೆಂದರೆ ದಿನಾಂಕ 21/06/2019 ರಂದು ಸಂಜೆ 08.00 ಗಂಟೆಯಲ್ಲಿ ಠಾಣೆಯಲ್ಲಿದ್ದಾಗ ತನಗೆ ಬಂದ ಖಚಿತ ಮಾಹಿತಿ ಏನೆಂದರೆ ದಿಬ್ಬೂರು ಗ್ರಾಮದ ವಿಜೇಂದ್ರ ಆರ್ ಎಸ್ ಬಿನ್ ಸಿದ್ದರಾಜು, 20 ವರ್ಷ, ವಕ್ಕಲಿಗರು ದಿಬ್ಬೂರು ಗ್ರಾಮ ರವರು ಅವರ ಚಿಲ್ಲರೆ ಅಂಗಡಿಯ ಬಳಿ  ಯಾವುದೇ ಪರವಾನಗಿ ಇಲ್ಲದೆ ಅಕ್ರಮವಾಗಿ ಸಾರ್ವಜನಿಕರಿಗೆ ಮಧ್ಯಪಾನ ಸೇವನೆ ಮಾಡಲು ಅವಕಾಶ ಮಾಡಿಕೊಟ್ಟಿರುವುದಾಗಿ ಖಚಿತ ಮಾಹಿತಿ ಬಂದಿದ್ದು ಈ ಬಗ್ಗೆ ವಿಜೇಂದ್ರ ಆರ್ ಎಸ್ ಬಿನ್ ಸಿದ್ದರಾಜು ರವರ ಮೇಲೆ ಕಲಂ 15 (ಎ), 32(3) ಕೆ ಇ ಆಕ್ಟ್ ರೀತ್ಯಾ ಆಸಾಮಿಯ ವಿರುದ್ದ ಪ್ರಕರಣ ದಾಖಲಿಸಿಕೊಳ್ಳಲು ಸೂಚಿಸಿದ ಮೇರೆಗೆ  ಈ ಪ್ರ ವ ವರದಿ.

 1. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ. ಮೊ.ಸಂ: 147/2019 ಕಲಂ: 15(ಎ),32(3) ಕೆ.ಇ. ಆಕ್ಟ್:-

          ದಿನಾಂಕ 22/06/2019 ರಂದು ಬೆಳಿಗ್ಗೆ 11.10 ಗಂಟೆ ಸಮಯದಲ್ಲಿ ಸಿ ಪಿ ಐ  ಸಾಹೇಬರು ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ 22/06/2019 ರಂದು ಬೆಳಿಗ್ಗೆ 11.00 ಗಂಟೆಯಲ್ಲಿ ತಾನು ಕಛೇರಿಯಲ್ಲಿರುವಾಗ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ಸರಹದ್ದಿನ ನುಗಿತಹಳ್ಳಿ ಗ್ರಾಮದ ಮುನಿಯಪ್ಪ ಬಿನ್ ಲೇಟ್ ಮುನಿಶಾಮಪ್ಪ , 68 ವರ್ಷ, ಆದಿ ಕರ್ನಾಟಕ ಜನಾಂಗ ರವರು ತನ್ನ ಮನೆಯ ಬಳಿ ಯಾವುದೇ ಪರವಾನಗೆ ಇಲ್ಲದೆ ಸಾರ್ವಜನಿಕರು ಮಧ್ಯ ಸೇವನೆ ಮಾಡಲು ಅವಕಾಶ ಮಾಡಿಕೊಡುತ್ತಿರುವುದಾಗಿ ತನಗೆ ಖಚಿತ ಮಾಹಿತಿ ಬಂದಿರುತ್ತೆ ಈ ಬಗ್ಗೆ ಆಸಾಮಿಯ ವಿರುದ್ದ ಕಲಂ 15(ಎ) 32(3) ಅಬಕಾರಿ ಕಾಯ್ದೆಯಡಿ ಪ್ರಕರಣ ದಾಖಲು ಮಾಡಲು ಸೂಚಿಸಿದ ಮೇರೆಗೆ ಈ ಪ್ರ ವ ವರದಿ.

 1. ಚಿಕ್ಕಬಳ್ಳಾಪುರ ಸಂಚಾರಿ ಪೊಲೀಸ್ ಠಾಣೆ. ಮೊ.ಸಂ: 43/2019 ಕಲಂ: 279-337 ಐ.ಪಿ.ಸಿ & 187 ಐ.ಎಂ.ವಿ ಆಕ್ಟ್:-

          ದಿನಾಂಕ:-22/06/2019 ರಂದು ಚಿಕ್ಕಬಳ್ಳಾಪುರ ಜೀವನ್ ಆಸ್ಪತ್ರೆಯಲ್ಲಿ ಮಧ್ಯಾಹ್ನ 2-30 ಗಂಟೆಯಲ್ಲಿ ಗಾಯಾಳು ಶ್ರೀ ಡಿ.ಎಸ್.ವಿಜಯ್ ಕುಮಾರ್ ಬಿನ್ ಲೇಟ್ ಡಿ ಸೂರ್ಯನಾರಾಯಣ ಶಾಸ್ತ್ರಿ, 52 ವರ್ಷ, ಬ್ರಾಹ್ಮಣರು, ನಾಗಾರ್ಜುನ ಕಾಲೇಜಿನಲ್ಲಿ ಪ್ರಥಮ ದರ್ಜೆ ಸಹಾಯಕರು, ವಾರ್ಡ ನಂ-05 ಚಿಕ್ಕಬಳ್ಳಾಪುರ ಟೌನ್ ಮತ್ತು ತಾಲ್ಲೂಕು ರವರು ನೀಡಿದ ಹೇಳಿಕೆಯ ದೂರಿನ ಸಾರಾಂಶವೇನೆಂದರೆ ದಿನಾಂಕ-22/06/2019 ರಂದು ಬೆಳಿಗ್ಗೆ 08-35 ಗಂಟೆಯ ಸಮಯದಲ್ಲಿ ಕೆಲಸದ ನಿಮಿತ್ತ ತನ್ನ ಅಣ್ಣನ ಬಾಬತ್ತು ಕೆಎ-05-ಯೂ-9103 ರ ದ್ವಿಚಕ್ರವಾಹನದಲ್ಲಿ ನಾಗರ್ಜುನ ಕಾಲೇಜಿಗೆ ಹೋಗಲು ಚಿಕ್ಕಬಳ್ಳಾಪುರ – ಬೆಂಗಳೂರು ಎನ್.ಎಚ್-44 ಬಿ.ಬಿ ರಸ್ತೆಯ ಕೊತ್ತನೂರು ಗೇಟ್ ಗೇಟ್ ಬಳಿಯ ರಸ್ತೆಯಲ್ಲಿ ಹೋಗುತ್ತಿದ್ದಾಗ ಕೊತ್ತನೂರು ಗ್ರಾಮದ ಕಡೆಯಿಂದ ಬಂದ ಕೆಎ-40-ಎನ್-1193 ರ ಕಾರಿನ ಚಾಲಕ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆಮಾಡಿಕೊಂಡು ಬಂದು ತಾನು ಚಾಲನೆ ಮಾಡಿಕೊಂಡು ಹೋಗುತ್ತಿದ್ದ ದ್ವಿಚಕ್ರವಾಹನಕ್ಕೆ ಡಿಕ್ಕಿ ಹೊಡೆಯಿಸಿದ ಪರಿಣಾಮ ರಸ್ತೆಯಲ್ಲಿ ವಾಹನಸಮೇತ ಕೆಳಗೆ ಬಿದ್ದಿದ್ದು ತನಗೆ ಬಲ ತೊಡಗೆ, ಎರಡೂ ಕೈಗಳಿಗೆ ಹಾಗೂ ಕೆನ್ನೆಗೆ ಗಾಯಗಳಾಗಿದ್ದು ಸದರಿ ಅಪಘಾತ ಪಡಿಸಿದ ಕಾರಿನ ಚಾಲಕ ಸ್ಥಳದಿಂದ ವಾಹನ ಸಮೇತ ಹೊರಟು ಹೋಗಿದ್ದು ತಕ್ಷಣ ಅಲ್ಲಿನ ಸ್ಥಳೀಯರು ತನ್ನನ್ನು ಉಪಚರಿಸಿ ಅಲ್ಲಿಗೆ ಬಂದ ಶ್ರೀ ಶಶಿಕಿರಣ್ ಬಿನ್ ಶಿವಪ್ರಸಾದ್ 32 ವರ್ಷ, ನಾಗರ್ಜುನ ಕಾಲೇಜಿನ ಅಸಿಸ್ಟಂಟ್ ಪ್ರೋಫೆಸರ್ ರವರು ರಸ್ತೆಯಲ್ಲಿ ಬರುತ್ತಿದ್ದ ಯಾವುದೋ ಕಾರಿನಲ್ಲಿ ಚಿಕಿತ್ಸೆಗಾಗಿ ಚಿಕ್ಕಬಳ್ಳಾಪುರ ಜೀವನ್ ಆಸ್ಪತ್ರೆಗೆ ಸೇರಿಸಿದ್ದು ಸದರಿ ಅಪಘಾತ ಪಡಿಸಿ ಸ್ಥಳದಿಂದ ಹೊರಟು ಹೋದ ಕೆಎ-40-ಎನ್-1193 ರ ಕಾರಿನ ಚಾಲಕನ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಲು ನೀಡಿದ ಹೇಳಿಕೆಯ ದೂರಿನ ಮೇರೆಗೆ ದಿನಾಂಕ-22/06/2019 ರಂದು ಮಧ್ಯಾಹ್ನ 2-30 ಗಂಟೆಗೆ ಪ್ರಕರಣ ದಾಖಲಿಸಿರುತ್ತೆ.

 1. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ. ಮೊ.ಸಂ: 217/2019 ಕಲಂ:379 ಐ.ಪಿ.ಸಿ:-

          ದಿನಾಂಕ 21-06-2019 ರಂದು ಸಂಜೆ 18-30 ಗಂಟೆಗೆ ಮುನಿನಾರಾಯಣಪ್ಪ ಬಿನ್ ಲೇಟ್ ಆಂಜಪ್ಪ, 60 ವರ್ಷ, ಗಾಣಿಗರು, ವ್ಯವಸಾಯ ವಾಸ ಮುನಗನಹಳ್ಳಿ ಗ್ರಾಮ ಚಿಂತಾಮಣಿ ತಾಲ್ಲೂಕು  ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ನಾನು ಈ ಮೇಲ್ಕಂಡ ವಿಳಾಸದಲ್ಲಿ ವಾಸವಾಗಿದ್ದು, ವ್ಯವಸಾಯದಿಂದ ಜೀವನ ಮಾಡಿಕೊಂಡಿರುತ್ತೇನೆ. ನಮ್ಮ ಮನೆಯಲ್ಲಿ ಮೂರು ಸೀಮೆ ಹಸುಗಳನ್ನು ಸಾಕಿಕೊಂಡಿದ್ದು, ಅವುಗಳಿಂದ ಪ್ರತಿದಿನ ಹಾಲು ಕರೆದು, ಹಾಲನ್ನು ಹಾಲು ಡೈರಿಯಲ್ಲಿ ಹಾಕಿ ಜೀವನ ಮಾಡುತ್ತಿರುತ್ತೇವೆ. ದಿನಾಂಕ:20.06.2019 ರಂದು ನಾನು ಮತ್ತು ಹೆಂಡತಿ ಶ್ರೀಮತಿ ಗೌರಮ್ಮ ರವರು ಸಂಜೆ 4-00 ಗಂಟೆಯಲ್ಲಿ ನಮ್ಮ ವಾಸದ ಮನೆಯ ಮುಂದೆ ಖಾಲಿಜಾಗದಲ್ಲಿ ಮೂರು ಸೀಮೆ ಹಸುಗಳನ್ನು ಕಟ್ಟಿಹಾಕಿ ನಮ್ಮ ತೋಟದ ಬಳಿ ಹೋಗಿ ಹಾಲು ಕರೆಯಲು ಅದೇ ದಿನ ಸಂಜೆ 5-30 ಗಂಟೆಗೆ ತೋಟದಿಂದ ಮನೆಗೆ ವಾಪಸ್ಸು ಬಂದು ಮನೆಯ ಮುಂದೆ ನೋಡಿದಾಗ ನಾವು ಕಟ್ಟಿಹಾಕಿದ್ದ ಮೂರು ಹಸುಗಳ ಪೈಕಿ ಒಂದು ಹಸು ಇರಲಿಲ್ಲ. ಈ ಬಗ್ಗೆ ನಾವು ಇದುವರೆಗೂ ಹುಡುಕಾಡಿದರೂ ಪತ್ತೆಯಾಗಲಿಲ್ಲ. ಆದ್ದರಿಂದ ಈ ದಿನ ತಡವಾಗಿ ಬಂದು ದೂರು ನೀಡುತ್ತಿದ್ದು,   ದಿನಾಂಕ:20.06.2019 ರಂದು ಸಂಜೆ 4-00 ಗಂಟೆಯಿಂದ  ಸಂಜೆ 5-30 ಗಂಟೆಗೆಯ ಮಧ್ಯದಲ್ಲಿ ಯಾರೋ ಕಳ್ಳರು ನಮ್ಮ ಮನೆಯ ಮುಂದೆ ಖಾಲಿಜಾಗದಲ್ಲಿ ನಮ್ಮ ಸೀಮೆ ಹಸುವನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಕಳುವಾಗಿರುವ ಸೀಮೆ ಹಸುವಿನ ಬೆಲೆ ಸುಮಾರು 45,000 ರೂ ಆಗಿರುತ್ತೆ. ಆದ್ದರಿಂದ ನಮ್ಮ ಸೀಮೆ ಹಸುವನ್ನು ಕಳ್ಳತನ ಮಾಡಿಕೊಂಡು ಹೋಗಿರುವ ಕಳ್ಳನನ್ನು ಪತ್ತೆಮಾಡಿ ಕಾನೂನು ರೀತಿಯ ಕ್ರಮ ಜರುಗಿಸಬೇಕೆಂದು ತಮ್ಮಲ್ಲಿ ಕೋರುತ್ತೇನೆ.

 1. ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ. ಮೊ.ಸಂ: 226/2019 ಕಲಂ: 302 ಐ.ಪಿ.ಸಿ:-

          ದಿನಾಂಕ 22/06/2019 ರಂದು ಬೆಳಿಗ್ಗೆ 8.30 ಗಂಟೆಗೆ ಪಿರ್ಯಾಧಿದಾರರಾದ ಭರತ್ ಬಿನ್ ಅಶ್ವತ್ಥಪ್ಪ 21 ವರ್ಷ ಬಲಜಿಗರು ಬಿ ಇ ವಿಧ್ಯಾರ್ಥಿ ವಾಸ ಗೊಟ್ಲಕುಂಟೆ ಗ್ರಾಮ ನಗರಗೆರೆ ಹೋಬಳಿ ಗೌರೀಬಿದನೂರು ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆನೇಂದರೆ ತಾನು ಚಿಕ್ಕಬಳ್ಳಾಪುರ ಬಿ.ಜಿ.ಎಸ್ ಇಂಜಿನೀಯರಿಂಗ್ ಕಾಲೇಜಿನಲ್ಲಿ  2 ನೇ ವರ್ಷದ  ಮೆಕ್ಯಾನಿಕಲ್ ಇಂಜಿನೀಯರಿಂಗ್ ಡಿಪ್ಲೋಮಾ ಕೋರ್ಸ್ ವ್ಯಾಸಂಗ ಮಾಡುತ್ತಿರುತ್ತೇನೆ.  ತಮ್ಮ ತಂದೆ ಅಶ್ವತ್ಥಪ್ಪ ತಾಯಿ ಶ್ರೀಮತಿ ರಾಧಮ್ಮ  ತಮ್ಮ ತಾಯಿಗೆ  ಸುಮಾರು 42 ವರ್ಷ ವಯಸ್ಸು ಆಗಿರುತ್ತೆ.  ಅವರಿಗೆ ನಾನೋಬ್ಬನೇ ಮಗನಾಗಿರುತ್ತೇನೆ. ತಮ್ಮ ತಂದೆಯ ಸ್ವಂತ ಊರು  ವಾಟದಹೊಸಹಳ್ಳಿ ಗ್ರಾಮವಾಗಿದ್ದು, ತಾಯಿ ಮನೆ ಬೆಂಗಳೂರು  ಗ್ರಾಮಾಂತರ ಜಿಲ್ಲೆ, ಆನೇಕಲ್ ತಾಲ್ಲೂಕು, ಹಿನ್ನಕ್ಕಿ ಗ್ರಾಮವಾಗಿರುತ್ತದೆ. ತಮ್ಮ ತಂದೆ ತಾಯಿ ಮಧುವೆ ಆದಾಗಿನಿಂದಲೂ ಹಿನ್ನಕ್ಕಿ ಗ್ರಾಮದಲ್ಲೇ ವಾಸವಿದ್ದು,  ತಂದೆ ಖಾಸಗಿಯಾಗಿ ಕೆಲಸ ಮಾಡಿಕೊಂಡಿದ್ದರು. ತಾಯಿ ಮನೆಯಲ್ಲೇ ಇರುತ್ತಿದ್ದರು. ತಮ್ಮ ತಂದೆ 2008 ನೇ ಇಸವಿಯಲ್ಲಿ  ಗೊಟ್ಲಕುಂಟೆ  ಗ್ರಾಮದ ನಾಗರಾಜ ರವರ ಬಾಬತ್ತು ಸರ್ವೆ ನಂ.7/2(ಎ), 7/2(ಬಿ)ರಲ್ಲಿರುವ 2 ಎಕರೆ 8 ಗುಂಟೆ ಜಮೀನನ್ನು ಖರೀದಿ ಮಾಡಿದ್ದರು.  ತಮ್ಮ ತಂದೆ  ಆಗಾಗ್ಗೆ ಊರಿಗೆ ಬಂದು ಹೋಗುತ್ತಿದ್ದರು.  ಈಗ್ಗೆ ಸುಮಾರು 2 ವರ್ಷಗಳ ಹಿಂದೆ  ತಮ್ಮ ತಾಯಿಯ ಅಣ್ಣನಿಗೂ ನಮಗೂ ಯಾವುದೋ ವಿಚಾರದಲ್ಲಿ  ಜಗಳವಾಗಿ  ನಾವು ಹಿನ್ನಕ್ಕಿ ಗ್ರಾಮದಿಂದ ವಾಪಸ್ಸು ವಾಟದಹೊಸಹಳ್ಳಿಗೆ ಬಂದೆವು. ತಮ್ಮ ಮೇಲ್ಕಂಡ ಜಮೀನಿನಲ್ಲಿ  ಈಗ್ಗೆ ಸುಮಾರು ಒಂದು ವರ್ಷದಲ್ಲಿ ಸಿಮೆಂಟ್ ಇಟ್ಟಿಗೆ  ಫ್ಯಾಕ್ಟರಿ ಮಾಡಿ,  ಪಕ್ಕದಲ್ಲಿ  ಸಿಮೆಂಟ್ ಶೀಟ್ ಗಳನ್ನು ನಿರ್ಮಿಸಿ ಅದೇ ಶೆಡ್ ನಲ್ಲಿ  ನಾವುಗಳು ವಾಸವಾಗಿದ್ದೆವು.  ಈಗ ಪಕ್ಕದಲ್ಲಿಯೇ  ಒಂದು ಮನೆ ನಿರ್ಮಾಣ ಮಾಡುತ್ತಿದ್ದು, ಪೂರ್ಣಗೊಂಡಿರುವುದಿಲ್ಲ. ತಮ್ಮ ತಂದೆಗೆ ಮಧುಮೇಹ, ರಕ್ತದೊತ್ತಡ ಖಾಯಿಲೆ ಇದ್ದು, ಆಗಾಗ್ಗೆ ಆಸ್ಪತ್ರೆಗಳಿಗೆ ಹೋಗಿ ಬರುತ್ತಿದ್ದರು.   ಈಗ್ಗೆ ಸುಮಾರು  6 ತಿಂಗಳಿಂದ ರಾತ್ರಿ ವೇಳೆ ಆಗಾಗ್ಗೆ ನಮ್ಮ ತಂದೆ ತಾಯಿ ಜಗಳ ಮಾಡಿಕೊಳ್ಳುತ್ತಿದ್ದರು.  ತಾನು ಪಕ್ಕದ ಶೆಡ್ ನಲ್ಲಿ  ಮಲಗುತ್ತಿದ್ದೆ.  ನಮ್ಮ ತಂದೆ ತಾಯಿ ಮತ್ತೊಂದು ಶೆಡ್ ನಲ್ಲಿ ಮಲಗುತ್ತಿದ್ದರು.  ಕೆಲವು ಬಾರಿ ಅವರ ಕೂಗಾಟದ ಶಬ್ದ ಕೇಳಿ ನಾನು ಸಹ  ಅವರಿಗೆ ಜಗಳ ಮಾಡಿಕೊಳ್ಳದಂತೆ ಬುದ್ದಿ ಹೇಳಿದ್ದೆನು.  ಒಂದು ಬಾರಿ  ತಮ್ಮ ತಾಯಿಯನ್ನು ವಿಚಾರಿಸಿದಾಗ,  ನಮ್ಮ ತಾಯಿ ಹೇಳಿದ್ಧೇನೆಂದರೆ  ನಿಮ್ಮ ತಂದೆ ಈಗ್ಗೆ ಸುಮಾರು 6 ತಿಂಗಳಿಂದ ನನ್ನ ಜೊತೆ ಸರಿಯಾಗಿ ಮಾತನಾಡುವುದಿಲ್ಲ.  ನನ್ನ ಪಕ್ಕದಲ್ಲಿ ಮಲಗಿದ್ದರೂ  ನನ್ನನ್ನು ಮುಟ್ಟುವುದಿಲ್ಲ.  ಕೇಳಿದರೆ ಜಗಳ ಮಾಡುತ್ತಾರೆ.  ಬೇರೆ ಯಾರೊಂದಿಗೋ  ಅಕ್ರಮ ಸಂಬಂಧಿವಿರಬಹುದು  ಈ ಹಿಂದೆ  ಈ ರೀತಿ ಇರಲಿಲ್ಲ.  ಎಂದು ಹೇಳಿದ್ದರು. ಆಗ ನಾನು ಸಮಾಧಾನದಿಂದ ಹೊಂದಿಕೊಂಡು ಹೋಗಿ ಎಂದು ಹೇಳಿದ್ದೆನು.  ಆದರೂ ಸಹ ಆಗಾಗ್ಗೆ ರಾತ್ರಿ ವೇಳೆ ಜಗಳ ಮಾಡಿಕೊಳ್ಳುವುದು ಸಾಮಾನ್ಯವಾಗಿತ್ತು. ದಿನಾಂಕ:21/06/2019 ರಂದು ರಾತ್ರಿ ಸುಮಾರು9-00 ಗಂಟೆಯಲ್ಲಿ ಊಟ ಮಾಡಿ ನಾನು ಪಕ್ಕದ ಶೆಡ್ ನಲ್ಲಿ ಮಲಗಿದ್ದೆನು.  ದಿನಾಂಕ: 22/06/2019 ರಂದು ಬೆಳಿಗ್ಗೆ ಸುಮಾರು 5-00 ಗಂಟೆ ಸಮಯದಲ್ಲಿ ನನ್ನ ತಂದೆ-ತಾಯಿ ಮಲಗಿದ್ದ ಕೊಠಡಿಯಲ್ಲಿ ತಮ್ಮ ತಾಯಿ ಜೋರಾಗಿ ಕಿರುಚಿಕೊಳ್ಳುತ್ತಿದ್ದರು. ಕೂಡಲೇ ನಾನು ಹೊರಗೆ ಬಂದು  ಬಾಗಿಲು ತಳ್ಳಲಾಗಿ  ಒಳಗಡೆ ಲಾಕ್ ಆಗಿತ್ತು. ಕಿಟಕಿ ತೆರೆದಿದ್ದು, ಕಿಟಕಿ ಮೂಲಕ ನೋಡಲಾಗಿ, ನಮ್ಮ ತಂದೆ  ನಮ್ಮ ತಾಯಿಯ ಎದೆಯ ಮೇಲೆ ಕುಳಿತು ನಿನ್ನನ್ನು ಈ ದಿನ ಸಾಯಿಸದೇ ಬಿಡುವುದಿಲ್ಲ ಎಂದು ಮೊಚ್ಚಿನಿಂದ  ನಮ್ಮ ತಾಯಿಯ ಕತ್ತನ್ನು ಕೊಯ್ಯುತ್ತಿದ್ದನು.  ನಾನು ಎಷ್ಟು ಹೇಳಿದರೂ ಕೇಳಲಿಲ್ಲ.  ನಾನು ಗಾಬರಿಯಿಂದ  ಬಾಗಿಲ ಬಳಿ ಬಂದಾಗ, ನಮ್ಮ ತಂದೆ  ಕೃತ್ಯಕ್ಕೆ  ಉಪಯೋಗಿಸಿದ್ದ ಮೊಚ್ಚಿನ ಸಮೇತ ಬಾಗಿಲು ತೆಗೆದು ಪೊಲೀಸ್ ಸ್ಟೇಷನ್ ಗೆ ಹೋಗುತ್ತೇನೆ  ಎಂದು ಅಲ್ಲಿಂದ ಹೊರಟು ಹೋದರು.  ಓಳಗೆ ಬಂದು ನೋಡಲಾಗಿ, ನಮ್ಮ ತಾಯಿ ಮೃತಪಟ್ಟಿದ್ದು, ರಕ್ತದ ಮಡುವಿನಲ್ಲಿ ಬಿದ್ದಿದ್ದಳು. ಸ್ವಲ್ಪ ಸಮಯ ಸುಧಾರಿಸಿಕೊಂಡು ವಿಚಾರವನ್ನು ನಮ್ಮ ಗ್ರಾಮದವರಿಗೆ ಹಾಗೂ ಸಂಬಂಧಿಕರಿಗೆ  ವಿಚಾರ ತಿಳಿಸಿದೆನು. ನಮ್ಮ ತಂದೆ-ತಾಯಿ ಸಂಸಾರದಲ್ಲಿ ಅನ್ಯೋನ್ಯತೆಯಿಂದ ಇರದ ಕಾರಣ ನಮ್ಮ ತಂದೆ  ನಮ್ಮ ತಾಯಿಯನ್ನು ಸಾಯಿಸುವ ಉದ್ದೇಶದಿಂದ  ಮೊಚ್ಚಿನಿಂದ ಹೊಡೆದು, ಕತ್ತು ಕೋಯ್ದು ಕೊಲೆ ಮಾಡಿರುತ್ತಾನೆ.  ಆದ್ದರಿಂದ ಆತನ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ನೀಡಿದ ದೂರಿನ ಮೇರೆಗೆ ಈ ಪ್ರಕರಣ ದಾಖಲಿಸಿರುತ್ತೆ .

 1. ಗೌರಿಬಿದನೂರು ಪುರ ಪೊಲೀಸ್ ಠಾಣೆ. ಮೊ.ಸಂ: 101/2019 ಕಲಂ:

          ದಿನಾಂಕ 21/06/2019 ರಂದು ಸಂಜೆ 5:00 ಗಂಟೆಗೆ ಗೌರಿಬಿದನೂರು ವೃತ್ತ ನಿರೀಕ್ಷಕರು ಠಾಣೆಗೆ ಹಾಜರಾಗಿ ನೀಡಿದ ವರದಿಯ ಸಾರಾಂಶವೇನೆಂದರೆ, ದಿನಾಂಕ 21/06/2019 ರಂದು ಸಂಜೆ 4:00 ಗಂಟೆ ಸಮಯದಲ್ಲಿ ಗೌರಿಬಿದನೂರು ಪುರದ ಎಂ.ಜಿ ವೃತ್ತದ ಬಳಿ ಗಸ್ತು ಮಾಡುತ್ತಿರುವಾಗ, ಗೌರಿಬಿದನೂರು ಪುರದ ಬೆಂಗಳೂರು ವೃತ್ತದ ಬಳಿ ಸಾರ್ವಜನಿಕ ಸ್ಥಳದಲ್ಲಿ ಯಾರೋ ಒಬ್ಬ ಮದ್ಯದ ಟೆಟ್ರಾ ಪಾಕೆಟ್ ಗಳನ್ನು ಇಟ್ಟುಕೊಂಡು ಸಾರ್ವಜನಿಕರಿಗೆ ಮದ್ಯಪಾನ ಮಾಡುವುದಕ್ಕಾಗಿ ಸ್ಥಳಾವಕಾಶ ಮಾಡಿಕೊಟ್ಟು ಮದ್ಯವನ್ನು ಮಾರಾಟ ಮಾಡುತ್ತಿರುವುದಾಗಿ ಮಾಹಿತಿ ಬಂದಿದ್ದು, ಕೂಡಲೇ ನಾನು ಎಂ.ಜಿ ವೃತ್ತದಲ್ಲಿ ಕರ್ತವ್ಯದಲ್ಲಿದ್ದ ಗೌರಿಬಿದನೂರು ಪುರ ಠಾಣೆಯ ಎ.ಎಸ್.ಐ ರವರಾದ ನಜೀರ್ ಅಹಮದ್ ಹಾಗೂ ಸಿಬ್ಬಂದಿಯಾದ ಲೋಕೇಶ್ ಹೆಚ್.ಸಿ 214 ರವರನ್ನು ಹಾಗೂ ಸ್ಥಳದಲ್ಲಿ ಹಾಜರಿದ್ದ ಪಂಚಾಯ್ತಿದಾರರನ್ನು ಕರೆದುಕೊಂಡು ಮಾಹಿತಿಯಂತೆ ಸರ್ಕಾರಿ ಜೀಪಿನಲ್ಲಿ ಬೆಂಗಳೂರು ವೃತ್ತದ ಬಳಿ  ಹೋಗಿ ಮರೆಯಲ್ಲಿ ಜೀಪನ್ನು ನಿಲ್ಲಿಸಿ ನೋಡಲಾಗಿ ಯಾರೋ ಓಬ್ಬ ಆಸಾಮಿ ಸಾರ್ವಜನಿಕ ಸ್ಥಳದಲ್ಲಿ ಮದ್ಯದ ಟೆಟ್ರಾ ಪಾಕೆಟ್ ಗಳನ್ನು ಮಾರಾಟ ಮಾಡಿಕೊಂಡು ಸಾರ್ವಜನಿಕರಿಗೆ ಮದ್ಯಪಾನ ಮಾಡುವುದಕ್ಕಾಗಿ ಸ್ಥಳಾವಕಾಶಮಾಡಿಕೊಟ್ಟಿರುವುದು ಕಂಡು ಬಂದಿದ್ದು. ಅಲ್ಲಿಗೆ ಹೋಗಿ ಆತನಿಗೆ ಮದ್ಯವನ್ನು ಮಾರಾಟ ಮಾಡುವುದಕ್ಕೆ ನಿನ್ನಲ್ಲಿ ಪರವಾನಗಿ ಇದೇಯೇ ಎಂದು ಕೇಳಿದಾಗ ತನ್ನ ಬಳಿ ಯಾವುದೇ ಪರವಾನಗಿ ಇಲ್ಲವೆಂದು ತಿಳಿಸಿದ್ದು ,ಆತನನ್ನು ಸಿಬ್ಬಂದಿಯ ಮುಖಾಂತರ ವಶಕ್ಕೆ ತೆಗೆದುಕೊಂಡು ಆತನ ಹೆಸರು ವಿಳಾಸ ಕೇಳಲಾಗಿ ಆತನು ತನ್ನ ಹೆಸರು ಅಂಜಿನಪ್ಪ ಬಿನ್ ಲೇಟ್ ನರಸಿಂಹಯ್ಯ 63 ವರ್ಷ,ಈಡಿಗರು ಕೂಲಿ ಕೆಲಸ ವಾಸ ಆನೂಡಿ ಗ್ರಾಮ ಗೌರಿಬಿದನೂರು ತಾಲ್ಲೂಕು ಎಂತ ತಿಳಿಸಿರುತ್ತಾನೆ.ಸ್ಥಳದಲ್ಲಿ 1)HAYWARDS CHEERS WHISKY ಎಂದು ನಮೂದಿಸಿರುವ 90 ಎಂ.ಎಲ್ ನ 15 ಟೆಟ್ರಾ ಪಾಕೆಟ್ ಗಳು ಇದ್ದು, ಅವುಗಳಲ್ಲಿ 04 ಖಾಲಿಯಾಗಿದ್ದು, ಸ್ಥಳದಲ್ಲಿ 4 ಪೇಪರ್ ಲೋಟಗಳು ಇದ್ದವು.ಒಂದೊಂದು ಟೆಟ್ರಾ ಪಾಕೆಟ್ ನ ಬೆಲೆ 30.32/-ರೂಪಾಯಿಗಳು ಆಗಿದ್ದು, ಮೇಲ್ಕಂಡ ಟೆಟ್ರಾ ಪಾಕೆಟ್ ಗಳ ಒಟ್ಟು ಬೆಲೆ 333.50/- ರೂಪಾಯಿಗಳು ಆಗಿರುತ್ತೆ.ಅವುಗಳೆಲ್ಲವನ್ನು ಪಂಚರ ಸಮಕ್ಷಮ ಸಂಜೆ 4:15 ಗಂಟೆಯಿಂದ 5:00 ಗಂಟೆಯವರೆಗೆ ಲ್ಯಾಪ್ ಟಾಪ್ ನಲ್ಲಿ ಟೈಪ್ ಮಾಡಿದ ಪಂಚನಾಮೆಯನ್ನು ಸಿಬ್ಬಂದಿಯ ಮುಖಾಂತರ ಠಾಣೆಗೆ ಕಳುಹಿಸಿ ಪ್ರಿಂಟ್ ತೆಗೆಸಿ ಸ್ಥಳಕ್ಕೆ ತರಿಸಿ ಪಂಚನಾಮೆ ಪೂರ್ಣಗೊಳಿಸಿ ಆರೋಪಿ ಹಾಗೂ ಮಾಲಿನೊಂದಿಗೆ ಗೌರಿಬಿದನೂರು ಪುರ ಠಾಣೆಗೆ ಸಂಜೆ 5:15 ಗಂಟೆಗೆ ವಾಪಸ್ಸಾಗಿದ್ದು, ಮುಂದಿನ ಕ್ರಮ ಕೈಗೊಳ್ಳಬೇಕಾಗಿ ಠಾಣಾಧಿಕಾರಿಗಳಿಗೆ ಸೂಚಿಸಿದ ಮೇರೆಗೆ ಪ್ರಕರಣವನ್ನು ದಾಖಲಿಸಿರುತ್ತೇನೆ.

 1. ಗೌರಿಬಿದನೂರು ಪುರ ಪೊಲೀಸ್ ಠಾಣೆ. ಮೊ.ಸಂ: 102/2019 ಕಲಂ:ಮನುಷ್ಯ ಕಾಣೆ:-

          ದಿನಾಂಕ 22/06/2019 ರಂದು ಬೆಳಿಗ್ಗೆ 1000 ಗಂಟೆಗೆ ಪಿರ್ಯಾದಿ ಲಕ್ಕಣ್ಣ ಬಿನ್ ಲೇಟ್ ದಾಸಪ್ಪ ಸುಮಾರು 69 ವರ್ಷ ಜಿರಾಯ್ತಿ ಕುರುಬರು, ಕುರುಬರ ಪಾಳ್ಯ ಹೊಸೂರು ಹೋಬಳಿ ಗೌರಿಬಿದನೂರು ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ನನ್ನ ಮಗನಾದ ಗೋವಿಂದರಾಜು 38 ವರ್ಷ ರವರಿಗೆ ಅನಿತ ಡಿ.ಜಿ ಎಂಬುವರೊಂದಿಗೆ ಮದುವೆಯಾಗಿದ್ದು ಇವರಿಗೆ ಸುಮಾರು 3 ವರ್ಷದ ಮಗನಿದ್ದು ದೊಡ್ಡಬಳ್ಳಾಪುರದಲ್ಲಿ ವಾಸವಿದ್ದು, ನನ್ನ ಮಗನು ನಿರುದ್ಯೊಗಿಯಾಗಿದ್ದು, ನನ್ನ ಸೊಸೆಯಾದ ಅನಿತರವರು ಗಾರ್ಮೆಂಟ್ಸ್ ನಲ್ಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿರುತ್ತಾರೆ. ದಿನಾಂಕ 14/06/2019 ರಂದು ರಾತ್ರಿ ಸುಮಾರು 9:30 ಗಂಟೆಗೆ ನನ್ನ ಮಗ ಗೋವಿಂದರಾಜು ಮತ್ತು ಸೊಸೆ ಅನಿತ ರವರು ಮಾದನಹಳ್ಳಿಯಲ್ಲಿ ವಾಸವಾಗಿರುವ ನನ್ನ ಹಿರಿಯ ಮಗನಾದ ವೆಂಕಟರಮಣನ ಮನೆಗೆ ಬಂದಿರುತ್ತಾರೆ, ದಿನಾಂಕ 15/06/2019 ರಂದು ಅನಿತರವರ ತಾಯಿ ಮಾದನಹಳ್ಳಿಗೆ ಬಾಡಿಗೆ ಮನೆ ನೋಡಲು ಬಂದಿದ್ದು ನನ್ನ ಹಿರಿಯ ಮಗನ ಮನೆಯಲ್ಲಿಯೇ ತಂಗಿದ್ದರು, ದಿನಾಂಕ 16/06/2019 ರಂದು ಬೆಳಿಗ್ಗೆ 7:00 ಗಂಟೆಗೆ ನನ್ನ ಮಗನಾದ ಗೋವಿಂದರಾಜು ರವರು ಮಾದನಹಳ್ಳಿಯಿಂದ ಹೊರಗೆ ಹೋದವನು ಮನೆಗೆ ವಾಪಸ್ಸು ಬಂದಿರುವುದಿಲ್ಲ, ಎಲ್ಲಾ ಕಡೆ ಹುಡುಕಾಡಲಾಗಿ ಮಾಹಿತಿ ಸಿಕ್ಕಿರುವುದಿಲ್ಲ, ಆದ್ದರಿಂದ ಈ ದಿನ ನಾನು ಠಾಣೆಗೆ ಹಾಜರಾಗಿ ಕಾಣೆಯಾಗಿರುವ ನನ್ನ ಮಗನನ್ನು ಹುಡುಕಿಕೊಡಬೇಕೆಂದು ನೀಡಿದ ದೂರಿನ ಮೇರೆಗೆ ಪ್ರಕರಣವನ್ನು ದಾಖಲಿಸಿರುತ್ತೇನೆ.

 1. ಗುಡಿಬಂಡೆ ಪೊಲೀಸ್ ಠಾಣೆ ಮೊ.ಸಂ.153-2019 ಕಲಂ:78(1),78(3) ಕೆ.ಪಿ.ಆಕ್ಟ್:-

          ದಿನಾಂಕ:21-06-2019 ರಂದು ಸಂಜೆ 4-00 ಘಂಟೆಯಲ್ಲಿ ಠಾಣಾ NCR NO.182/2019 ರಲ್ಲಿ ಘನ ನ್ಯಾಯಾಲಯದ ಅನುಮತಿ ಪಡೆದುಕೊಂಡು ದಾಖಲಿಸಿದ  ಪ್ರಕರಣದ ಸಾರಾಂಶವೇನೆಂದರೆ, ದಿನಾಂಕ:21-06-2019 ರಂದು ಬೆಳಿಗ್ಗೆ 9-45 ಗಂಟೆಯಲ್ಲಿ ಪಿರ್ಯಾಧಿ ಠಾಣೆಯಲ್ಲಿದ್ದಾಗ ಗುಡಿಬಂಡೆ ತಾಲ್ಲೂಕಿನ ಹಂಪಸಂದ್ರ ಗ್ರಾಮದ ಗ್ರಾಮ ಪಂಚಾಯ್ತಿ ಕಚೇರಿ ಮುಂಭಾಗ ಸಾರ್ವಜನಿಕ ರಸ್ತೆಯಲ್ಲಿ ಯಾರೋ ಒಬ್ಬ ವ್ಯಕ್ತಿಯು ಮಟ್ಕಾ ಜೂಜಾಟವಾಡುತ್ತಿರುವುದಾಗಿ ಖಚಿತ ಮಾಹಿತಿ ಬಂದಿದ್ದು, ಸದರಿ ಮಾಹಿತಿಯಂತೆ ನಾನು ಸಿಬ್ಬಂದಿಯವರಾದ ಪಿ.ಸಿ 378 ಶ್ರೀನಿವಾಸ, ಪಿ.ಸಿ-188 ಎಪಿ.ರಾಥೋಡ್ ರವರೊಂದಿಗೆ ಕೆಎ-40-ಜಿ-58 ಸರ್ಕಾರಿ ಜೀಪಿನಲ್ಲಿ ಗುಡಿಬಂಡೆ ತಾಲ್ಲೂಕು ಕಚೇರಿಯ ಬಳಿ ಪಂಚಾಯ್ತಿದಾರರನ್ನು ಬರಮಾಡಿಕೊಂಡು ಪಂಚರು & ಸಿಬ್ಬಂದಿಯೊಂದಿಗೆ ಹಂಪಸಂದ್ರ ಗ್ರಾಮದ ಗ್ರಾಮ ಪಂಚಾಯ್ತಿ ಕಚೇರಿಯ ಸಾರ್ವಜನಿಕ ರಸ್ತೆಯಿಂದ ಸ್ವಲ್ಪ ದೂರದಲ್ಲಿ ಜೀಪನ್ನು ನಿಲ್ಲಿಸಿ ಮರೆಯಲ್ಲಿ ನಿಂತು ನೋಡಲಾಗಿ ಸಾರ್ವಜನಿಕ ರಸ್ತೆಯಲ್ಲಿ ಯಾರೋ ಒಬ್ಬ ಆಸಾಮಿಯು 1/- ರೂ 70/- ರೂಗಳನ್ನು ನೀಡುವುದಾಗಿ ಮಟ್ಕಾ ಚೀಟಿ ಬರೆಯುತ್ತಾ ಹಣವನ್ನು ಪಣವನ್ನಾಗಿ ಇಡಲು ಸಾರ್ವಜನಿಕರಿಗೆ ಪ್ರೇರೇಪಿಸುತ್ತಾ ಸಾರ್ವಜನಿಕರಿಂದ ಹಣವನ್ನು ಪಡೆಯುತ್ತಿದ್ದುದ್ದನ್ನು ಖಚಿತ ಪಡಿಸಿಕೊಂಡು ಸದರಿ ಆಸಾಮಿಯನ್ನು ಸುತ್ತುವರೆದು ಆತನನ್ನು ವಶಕ್ಕೆ ಪಡೆದು ಹೆಸರು ಮತ್ತು ವಿಳಾಸ ತಿಳಿಯಲಾಗಿ, ಚಲಪತಿ ಬಿನ್ ಲೇಟ್ ರಂಗಪ್ಪ, 55 ವರ್ಷ, ಬೋವಿ ಜನಾಂಗ, ಜಿರಾಯ್ತಿ, ವಾಸ: ಬೆಣ್ಣೆಪರ್ತಿ, ಗ್ರಾಮ, ಗುಡಿಬಂಡೆ ತಾಲ್ಲೂಕು ಎಂದು ತಿಳಿಸಿದ್ದು, ಸದರಿ ಆಸಾಮಿಯ ಅಂಗಶೋಧನೆ ಮಾಡಿ ನೋಡಲಾಗಿ ಒಂದು ಮಟ್ಕಾ ಚೀಟಿ, ಒಂದು ಬಾಲ್ ಪೆನ್, ಕಾರ್ಬಬನ್ ಕಂಪನಿಯ ಕೀಪ್ಯಾಡ್ ಮೊಬೈಲ್, 1210/- ರೂಗಳು ನಗದು ಹಣ ಇತ್ತು. ಸದರಿ ಸ್ಥಳದಲ್ಲಿ ಪಂಚಾಯ್ತಿದಾರರ ಸಮಕ್ಷಮದಲ್ಲಿ ಬೆಳಿಗ್ಗೆ 10-30 ಘಂಟೆಯಿಂದ ಬೆಳಿಗ್ಗೆ 11-30 ಘಂಟೆಯವರೆಗೆ ಪಂಚನಾಮೆ ಮೂಲಕ ಅಮಾನತ್ತುಪಡಿಸಿಕೊಂಡು, ಆರೋಪಿಯನ್ನು ವಶಕ್ಕೆ ಪಡೆದು ಅಸಲು ಪಂಚನಾಮೆ, ಮಾಲುಗಳು ಹಾಗೂ ಆರೋಪಿಯೊಂದಿಗೆ ಠಾಣೆಗೆ ಬಂದು ಮದ್ಯಾಹ್ನ 12-00 ಘಂಟೆಗೆ ಠಾಣೆಯಲ್ಲಿ ಹಾಜರಾಗಿ ಆರೋಪಿತನ ಮೇಲೆ ಕಾನೂನು ಕ್ರಮ ಜರುಗಿಸಲು ಸೂಚಿಸಿದ ದೂರು ಆಗಿರುತ್ತೆ.

 1. ಮಂಚೇನಹಳ್ಳಿ ಪೊಲೀಸ್ ಠಾಣೆ. ಮೊ.ಸಂ: 134/2019 ಕಲಂ:379 ಐ.ಪಿ.ಸಿ:-

          ದಿನಾಂಕ: 21/06/2019 ರಂದು ಬೆಳಿಗ್ಗೆ 7-45 ಗಂಟೆಗೆ ಪಿರ್ಯಾದಿದಾರರು ಮಾಲು ಮತ್ತು ಮಹಜರ್ ನೊಂದಿಗೆ ನೀಡಿದ ದೂರಿನ ಸಾರಾಂಶವೆನೆಂದರೆ, ದಿನಾಂಕ 20/06/2019 ರಂದು ತನಗೆ ಮತ್ತು ಪಿಸಿ-173, ಸತೀಶ ರವರಿಗೆ  ಪಿ.ಎಸ್.ಐ ಸಾಹೇಬರು ರಾತ್ರಿ ಗಸ್ತಿಗೆ ನೇಮಕಮಾಡಿದ್ದು ಅದರಂತೆ ತಾನು ಮತ್ತು ಪಿಸಿ-173, ದ್ವಿ ಚಕ್ರವಾಹನಗಳಲ್ಲಿ ಮಂಚೇನಹಳ್ಳಿ, ಬುದ್ದಿವಂತನಹಳ್ಳಿ, ಕಂಬತ್ತಹಳ್ಳಿ ದಂಡಿಗಾನಹಳ್ಳಿ, ಬ್ರಹ್ಮದೇವರಗುಡಿ, ಪಿಡಚಲಹಳ್ಳಿ, ಕಡೆ ಗಸ್ತು ಮಾಡಿಕೊಂಡು ವಾಪಸ್ ಬರುವಾಗ ಈ ದಿನ ದಿ: 21/06/2019 ರಂದು ಮುಂಜಾನೆ 5-00 ಗಂಟೆಯಲ್ಲಿ ತನಗೆ ಬಾತ್ಮಿದಾರರಿಂದ ರಾಯನಕಲ್ಲು ಗ್ರಾಮದ ಸರ್ಕಾರಿ ಕೆರೆಯ ಅಂಗಳದಲ್ಲಿ ಯಾರೋ ಆಸಾಮಿಗಳು ಟ್ರಾಕ್ಟರನ್ನು ನಿಲ್ಲಿಸಿಕೊಂಡು  ಕೆರೆಯ ಅಂಗಳವನ್ನು ಅಗೆದು ವಿರೂಪಗೊಳಿಸಿ ಸರ್ಕಾರಿ ಖನಿಜ ಸಂಪತ್ತಾದ ಮರಳನ್ನು ಕಳ್ಳತನ ಮಾಡಿ ಟ್ರಾಕ್ಟರಿನ ಟ್ರಾಲಿಗೆ ತುಂಬಿಸುತ್ತಿರುವುದಾಗಿ ಬಾತ್ಮಿದಾರರಿಂದ ಮಾಹಿತಿಯು ಬಂದಿದ್ದು. ಕೂಡಲೇ ತಾನು ಮತ್ತು ತನ್ನ ಜೋತೆ ಗಸ್ತಿನಲ್ಲಿದ್ದ ಪಿಸಿ-173, ಸತೀಶ  ರವರೊಂದಿಗೆ  ಪಂಚರನ್ನು ಕರೆದುಕೊಂಡು ಮುಂಜಾನೆ 5-45 ಘಂಟೆಗೆ ರಾಯನಕಲ್ಲು ಕೆರೆಯ ಬಳಿ ಹೋಗುವಷ್ಟರಲ್ಲಿ. ನಾವು ಸಮವಸ್ತ್ರದಲ್ಲಿದ್ದುದನ್ನು ಅಲ್ಲಿದ್ದವರು ದೂರದಿಂದಲೇ ಗಮನಿಸಿದ ಟ್ರಾಕ್ಟರ್ ಚಾಲಕ ಮತ್ತು ಮಾಲೀಕ ಹಾಗೂ ಕೂಲಿಯವರೊಂದಿಗೆ ಮರಳು ತುಂಬುತ್ತಿದ್ದ ಟ್ರಾಕ್ಟರ್ ಮತ್ತು ಟ್ರಾಲಿಯನ್ನು ಕೆರೆಯ ಅಂಗಳದಲ್ಲೇ ಬಿಟ್ಟು ಮರಳು ತುಂಬಲು ತಂದಿದ್ದ ಚನಿಕೆ, ಬುಟ್ಟಿಗಳನ್ನು ಎತ್ತಿಕೊಂಡು ಓಡಿ ಪರಾರಿಯಾದರು. ನಾವು ಪಂಚರು ಸ್ಥಳಕ್ಕೆ ಹೋಗಿ ಪರಿಶಿಲಿಸಿದ್ದು ಇದು ಅಕ್ರಮ ಮರಳು ಕಳ್ಳಸಾಗಣೆ ಎಂದು ಪಂಚರು ಅಭಿಪ್ರಾಯ ಪಟ್ಟರು. ಟ್ರಾಕ್ಟರ್ ಮತ್ತು ಟ್ರಾಲಿಯನ್ನು ಪರಿಶೀಲಿಸಲಾಗಿ ಕೆಂಪು ಬಣ್ಣದ MASSEY FEARGUSON 35 ಟ್ರ್ಯಾಕ್ಟರ್ ಇಂಜಿನ್ ಆಗಿದ್ದು KA-40-T-701 ಎಂತ ನೊಂದಣಿ ಸಂಖ್ಯೆ ಇರುತ್ತದೆ. ಇದರ ಟ್ರಾಲೀಯನ್ನು ಪರಿಶೀಲಿಸಲಾಗಿ ಹಸಿರು ಬಣ್ಣದ ಟ್ರಾಲೀಯಾಗಿದ್ದು ಇದರ ಮೇಲೆ KA-40-T-702 ಎಂತ ನೊಂದಣಿ ಸಂಖ್ಯೆ ಇರುತ್ತದೆ ಸದರಿ ಟ್ರಾಕ್ಟರಿನ ಟ್ರಾಲಿಯಲ್ಲಿ ಮರಳನ್ನು ಕಳವು ಮಾಡಿ ಟ್ರಾಲಿ ತುಂಬ ಮರಳು ತುಂಬಿಸಿರುತ್ತದೆ. ಸದರಿ ಸ್ಥಳದಲ್ಲಿಯೇ ಪಂಚರ ಸಮಕ್ಷಮದಲ್ಲಿ ಬೆಳಗ್ಗೆ 06-00 ರಿಂದ 07-00 ರವರೆಗೆ ಮಹಜರು ಮಾಡಿ ಮರಳು ತುಂಬಿದ್ದ ಮೇಲ್ಕಂಡ ಟ್ರಾಕ್ಟರ್ ಮತ್ತು ಟ್ರಾಲಿಯನ್ನು ಮುಂದಿನ ಕ್ರಮಕ್ಕಾಗಿ ಅಮಾನತ್ತು ಪಡಿಸಿಕೊಂಡು ಠಾಣೆಯ ಬಳಿ ತಂದು ನಿಲ್ಲಿಸಿದ್ದು ಆದ್ದರಿಂದ ಸದರಿ ಟ್ರಾಕ್ಟರ್ ಮತ್ತು ಟ್ರಾಲಿಯ ಚಾಲಕ ಮತ್ತು ಮಾಲೀಕನ ವಿರುದ್ದ ಕಾನೂನು ರೀತಿ ಕ್ರಮ ಜರುಗಿಸಬೇಕೆಂದು ಕೋರಿ ನೀಡಿದ ದೂರಿನ ಮೇರೆಗೆ ಪ್ರಕರಣವನ್ನು ದಾಖಲಿಸಿಕೊಂಡಿರುತ್ತದೆ.

 1. ಮಂಚೇನಹಳ್ಳಿ ಪೊಲೀಸ್ ಠಾಣೆ. ಮೊ.ಸಂ: 135/2019 ಕಲಂ: 15(ಎ),32(3) ಕೆ.ಇ. ಆಕ್ಟ್:-

          ದಿನಾಂಕ: 21/06/2019 ರಂದು ಸಂಜೆ 5-30 ಗಂಟೆಗೆ ಪಿರ್ಯಾದಿದಾರರು ಮಾಲು, ಮಹಜರ್ ಹಾಗೂ ಆರೋಪಿಯೊಂದಿಗೆ ನೀಡಿದ ದೂರಿನ ಸಾರಾಂಶವೆನೆಂದರೆ, ದಿನಾಂಕ 21/06/2019 ರಂದು ಮದ್ಯಾಹ್ನ 3-00 ಗಂಟೆಯ ಸಮಯದಲ್ಲಿ  ತಾನು ಮತ್ತು ಪಿಸಿ-336, ಉಮೇಶ ಬಿ ಶೀರಶ್ಯಾಡ ರವರು ರವರು ಬುದ್ದಿವಂತನಹಳ್ಳಿ ಗ್ರಾಮದ ಕಡೆ ಗಸ್ತು ಮಾಡುತ್ತಿದ್ದಾಗ ತನಗೆ ಬಂದ ಮಾಹಿತಿ ಎನೇಂದರೆ ಭೂಮೇನಹಳ್ಳಿ ಗ್ರಾಮದ ಗೋವಿಂದರಾಜು ಬಿನ್ ವೆಂಕಟೇಗೌಡ ಎಂಬುವರು ಭೂಮೇನಹಳ್ಳಿ ಗ್ರಾಮದ ಅವರ ಚಿಲ್ಲರೆ ಅಂಗಡಿಯ ಮುಂಭಾಗ ಯಾವುದೇ ರೀತಿಯ ಅನುಮತಿಯನ್ನು ಮತ್ತು ಪರ್ಮಿಟ್ ಪಡೆಯದೇ ಅಕ್ರಮವಾಗಿ ಸಾರ್ವಜನಿಕರಿಗೆ ಮದ್ಯವನ್ನು ಸೇವನೆ ಮಾಡಲು ಅವಕಾಶ ಮಾಡಿಕೊಟ್ಟಿರುವುದಾಗಿ ಮಾಹಿತಿ ಬಂದ್ದಿದ್ದು ದಾಳಿ ಮಾಡುವ ಸಲುವಾಗಿ ಜೋತೆಯಲ್ಲಿದ್ದ ಪಿಸಿ-336, ಉಮೇಶ ಬಿ ಶೀರಶ್ಯಾಡ ಹಾಗೂ ಪಂಚರೊಂದಿಗೆ ದ್ವಿ ಚಕ್ರ ವಾಹನಗಳಲ್ಲಿ ಮದ್ಯಾಹ್ನ 3-30 ಗಂಟೆಯ ಸಮಯಕ್ಕೆ ಭೂಮೇನಹಳ್ಳಿ ಗ್ರಾಮದ ಗೋವಿಂದರಾಜು ರವರ ಚಿಲ್ಲರೆ ಅಂಗಡಿಯ ಬಳಿ ಹೋಗುವಷ್ಟರಲ್ಲಿ ಅಲ್ಲಿ ಮದ್ಯವನ್ನು ಸೇವನೆ ಮಾಡುತ್ತಿದ್ದವರು ಸಮವಸ್ತ್ರದಲ್ಲಿದ್ದ ನಮ್ಮನ್ನು ನೋಡಿ ಸ್ಥಳದಿಂದ ಓಡಿಹೋದರು ಮಾಹಿತಿಯಂತೆ ಅಲ್ಲಿದ್ದವನನ್ನು ಹಿಡಿದು ಕೊಂಡು ಅವನ ಹೆಸರು ಮತ್ತು ವಿಳಾಸ ಕೇಳಲಾಗಿ ಗೋವಿಂದರಾಜು ಬಿನ್ ವೆಂಕಟೇಗೌಡ, 30 ವರ್ಷ, ಸಾದರಗೌಡರು, ಚಿಲ್ಲರೆ ಅಂಗಡಿ ವ್ಯಾಪಾರ, ವಾಸ ಭೂಮೇನಹಳ್ಳಿ ಗ್ರಾಮ, ಮಂಚೇನಹಳ್ಳಿ ಹೋಬಳಿ, ಗೌರಿಬಿದನೂರು ತಾಲ್ಲೂಕು ಎಂತ ತಿಳಿಸಿದ್ದು, ಅವನ ಬಳಿ ಒಂದು ಪ್ಲಾಸ್ಟಿಕ್ ಚೀಲವಿದ್ದು ಅದನ್ನು ತೆಗೆದು ಪರಿಶೀಲಿಸಲಾಗಿ ಅದರೊಳಗಡೆ 90 ಎಂ.ಎಲ್. ಸಾಮರ್ಥ್ಯದ HYAWARDS CHEERS WISKY ಯ 15 ಮದ್ಯದ ಟೆಟ್ರಾ ಪ್ಯಾಕೇಟ್ ಗಳು ದೊರೆತಿದ್ದು, ಮದ್ಯವನ್ನು ಇಟ್ಟುಕೊಂಡಿರುವ  ಬಗ್ಗೆ ಮತ್ತು ಸಾರ್ವಜನಿಕರಿಗೆ ಮದ್ಯವನ್ನು ಸೇವನೆ ಮಾಡಲು ಅನುವು ಮಾಡಿಕೊಟ್ಟ ಬಗ್ಗೆ ಅನುಮತಿಯನ್ನು ಕೇಳಲಾಗಿ ತನ್ನ ಬಳಿ ಯಾವುದೇ ರೀತಿಯ  ಅನುಮತಿ ಪತ್ರ ಇಲ್ಲವೆಂದು ತಿಳಿಸಿದ್ದರ ಮೇರೆಗೆ  ಮತ್ತು ಅಲ್ಲಿಯೇ ಸುತ್ತಲೂ ಖಾಲಿ ಬಿದ್ದಿದ್ದ 90 ಎಂ.ಎಲ್. ಸಾಮರ್ಥ್ಯದ HYAWARDS CHEERS WISKY ಯ 3 ಟೆಟ್ರಾ ಪ್ಯಾಕೇಟ್ ಗಳು ಮತ್ತು 4 ಪ್ಲಾಸ್ಟಿಕ್  ಕಪ್ ಗಳನ್ನು ಪಂಚನಾಮೆಯ ಮೂಲಕ ಮದ್ಯಾಹ್ನ 3-45 ಗಂಟೆಯಿಂದ ಸಂಜೆ 4-45 ಗಂಟೆಯ ಸಮಯದವರೆಗೆ ಅವುಗಳನ್ನು ಪಂಚನಾಮೆಯ ಮೂಲಕ ಅಮಾನತ್ತುಪಡಿಸಿಕೊಂಡಿರುತ್ತೆ ಸ್ಥಳದಲ್ಲಿ ದೊರೆತ ಮದ್ಯದ ಬೆಲೆ ಸುಮಾರು 454/- ರೂಪಾಯಿಗಳು ಬೆಲೆಬಾಳದ್ದಾಗಿರುತ್ತೆ. ದೊರೆತ ಮಾಲನ್ನು ಹಾಗೂ ಸಾರ್ವಜನಿಕರಿಗೆ ಕುಡಿಯಲು ಅನುವು ಮಾಡಿಕೊಟ್ಟಿದ್ದ ಗೋವಿಂದರಾಜು ವರನ್ನು ವಶಕ್ಕೆ ಪಡೆದುಕೊಂಡು ಹಾಜರುಪಡಿಸುತ್ತಿದ್ದು, ಇವನ ಮೇಲೆ ಕಾನೂನಿನ ರೀತ್ಯಾ ಕ್ರಮ ಜರುಗಿಸಬೇಕೆಂದು ಕೋರಿ ನೀಡಿದ ದೂರಿನ ಮೇರೆಗೆ ಪ್ರಕರಣವನ್ನು ದಾಖಲಿಸಿಕೊಂಡಿರುತ್ತದೆ.

 1. ಮಂಚೇನಹಳ್ಳಿ ಪೊಲೀಸ್ ಠಾಣೆ. ಮೊ.ಸಂ: 136/2019 ಕಲಂ: 15(ಎ),32(3) ಕೆ.ಇ. ಆಕ್ಟ್:-

          ದಿನಾಂಕ: 21/06/2019 ರಂದು ಸಂಜೆ 6-15 ಗಂಟೆಗೆ ಪಿರ್ಯಾದಿದಾರರು ಮಾಲು, ಮಹಜರ್ ಹಾಗೂ ಆರೋಪಿಯೊಂದಿಗೆ ನೀಡಿದ ದೂರಿನ ಸಾರಾಂಶವೆನೆಂದರೆ, ದಿನಾಂಕ 21/06/2019 ರಂದು ಮದ್ಯಾಹ್ನ 3-45 ಗಂಟೆಯ ಸಮಯದಲ್ಲಿ  ನಾನು ಮತ್ತು ಪಿಸಿ-211, ಶೇಖರಪ್ಪ ರವರು ರವರು ಕಾಟನಾಗೇನಹಳ್ಳಿ ಗ್ರಾಮದ ಕಡೆ ಗಸ್ತು ಮಾಡುತ್ತಿದ್ದಾಗ ನನಗೆ ಬಂದ ಮಾಹಿತಿ ಎನೇಂದರೆ ಬೆಳ್ತೂರು ಗ್ರಾಮದ ನಾಗೇಶ್ ರಾವ್ ಬಿನ್ ಲೇಟ್ ಚಿನ್ನೋಜಿರಾವ್ ಎಂಬುವರು ಬೆಳ್ತೂರು ಗ್ರಾಮದ ಅವರ ಚಿಲ್ಲರೆ ಅಂಗಡಿಯ ಮುಂಭಾಗ ಯಾವುದೇ ರೀತಿಯ ಅನುಮತಿಯನ್ನು ಮತ್ತು ಪರ್ಮಿಟ್ ಪಡೆಯದೇ ಅಕ್ರಮವಾಗಿ ಸಾರ್ವಜನಿಕರಿಗೆ ಮದ್ಯವನ್ನು ಸೇವನೆ ಮಾಡಲು ಅವಕಾಶ ಮಾಡಿಕೊಟ್ಟಿರುವುದಾಗಿ ಮಾಹಿತಿ ಬಂದ್ದಿದ್ದು ದಾಳಿ ಮಾಡುವ ಸಲುವಾಗಿ ಜೋತೆಯಲ್ಲಿದ್ದ ಪಿಸಿ-211, ಶೇಖರಪ್ಪ ಹಾಗೂ ಪಂಚರೊಂದಿಗೆ ದ್ವಿ ಚಕ್ರ ವಾಹನಗಳಲ್ಲಿ ಮದ್ಯಾಹ್ನ 4-15 ಗಂಟೆಯ ಸಮಯಕ್ಕೆ ಬೆಳ್ತೂರು ಗ್ರಾಮದ ನಾಗೇಶ್ ರಾವ್ ರವರ ಚಿಲ್ಲರೆ ಅಂಗಡಿಯ ಬಳಿ ಹೋಗುವಷ್ಟರಲ್ಲಿ ಅಲ್ಲಿ ಮದ್ಯವನ್ನು ಸೇವನೆ ಮಾಡುತ್ತಿದ್ದವರು ಸಮವಸ್ತ್ರದಲ್ಲಿದ್ದ ನಮ್ಮನ್ನು ನೋಡಿ ಸ್ಥಳದಿಂದ ಓಡಿಹೋದರು ಮಾಹಿತಿಯಂತೆ ಅಲ್ಲಿದ್ದವನನ್ನು ಹಿಡಿದು ಕೊಂಡು ಅವನ ಹೆಸರು ಮತ್ತು ವಿಳಾಸ ಕೇಳಲಾಗಿ ನಾಗೇಶ್ ರಾವ್ ಬಿನ್ ಲೇಟ್ ಚಿನ್ನೋಜಿರಾವ್, 59 ವರ್ಷ, ಮರಾಠಿ ಜನಾಂಗ, ಚಿಲ್ಲರೆ ಅಂಗಡಿ ವ್ಯಾಪಾರ, ವಾಸ ಬೆಳ್ತೂರು ಗ್ರಾಮ, ತೊಂಡೆಬಾವಿ ಹೋಬಳಿ, ಗೌರಿಬಿದನೂರು ತಾಲ್ಲೂಕು ಎಂತ ತಿಳಿಸಿದ್ದು, ಅವನ ಬಳಿ ಒಂದು ಪ್ಲಾಸ್ಟಿಕ್ ಚೀಲವಿದ್ದು ಅದನ್ನು ತೆಗೆದು ಪರಿಶೀಲಿಸಲಾಗಿ ಅದರೊಳಗಡೆ 90 ಎಂ.ಎಲ್. ಸಾಮರ್ಥ್ಯದ HYAWARDS CHEERS WISKY ಯ 14 ಮದ್ಯದ ಟೆಟ್ರಾ ಪ್ಯಾಕೇಟ್ ಗಳು ದೊರೆತಿದ್ದು, ಮದ್ಯವನ್ನು ಇಟ್ಟುಕೊಂಡಿರುವ  ಬಗ್ಗೆ ಮತ್ತು ಸಾರ್ವಜನಿಕರಿಗೆ ಮದ್ಯವನ್ನು ಸೇವನೆ ಮಾಡಲು ಅನುವು ಮಾಡಿಕೊಟ್ಟ ಬಗ್ಗೆ ಅನುಮತಿಯನ್ನು ಕೇಳಲಾಗಿ ತನ್ನ ಬಳಿ ಯಾವುದೇ ರೀತಿಯ  ಅನುಮತಿ ಪತ್ರ ಇಲ್ಲವೆಂದು ತಿಳಿಸಿದ್ದರ ಮೇರೆಗೆ  ಮತ್ತು ಅಲ್ಲಿಯೇ ಸುತ್ತಲೂ ಖಾಲಿ ಬಿದ್ದಿದ್ದ 90 ಎಂ.ಎಲ್. ಸಾಮರ್ಥ್ಯದ HYAWARDS CHEERS WISKY ಯ 2 ಟೆಟ್ರಾ ಪ್ಯಾಕೇಟ್ ಗಳು ಮತ್ತು 3 ಪ್ಲಾಸ್ಟಿಕ್  ಕಪ್ ಗಳನ್ನು ಪಂಚನಾಮೆಯ ಮೂಲಕ  ಸಂಜೆ 4-30  ಗಂಟೆಯಿಂದ ಸಂಜೆ 5-30 ಗಂಟೆಯ ಸಮಯದವರೆಗೆ ಅವುಗಳನ್ನು ಪಂಚನಾಮೆಯ ಮೂಲಕ ಅಮಾನತ್ತುಪಡಿಸಿಕೊಂಡಿರುತ್ತೆ ಸ್ಥಳದಲ್ಲಿ ದೊರೆತ ಮದ್ಯದ ಬೆಲೆ ಸುಮಾರು 424/- ರೂಪಾಯಿಗಳು ಬೆಲೆಬಾಳದ್ದಾಗಿರುತ್ತೆ. ದೊರೆತ ಮಾಲನ್ನು ಹಾಗೂ ಸಾರ್ವಜನಿಕರಿಗೆ ಕುಡಿಯಲು ಅನುವು ಮಾಡಿಕೊಟ್ಟಿದ್ದ ನಾಗೇಶ್ ರಾವ್ ವರನ್ನು ವಶಕ್ಕೆ ಪಡೆದುಕೊಂಡು ಹಾಜರುಪಡಿಸುತ್ತಿದ್ದು, ಇವನ ಮೇಲೆ ಕಾನೂನಿನ ರೀತ್ಯಾ ಕ್ರಮ ಜರುಗಿಸಬೇಕೆಂದು ಕೋರಿ ನೀಡಿದ ದೂರಿನ ಮೇರೆಗೆ ಪ್ರಕರಣವನ್ನು ದಾಖಲಿಸಿಕೊಂಡಿರುತ್ತದೆ.

 1. ಶಿಡ್ಲಘಟ್ಟ ಪುರ ಪೊಲೀಸ್ ಠಾಣೆ. ಮೊ.ಸಂ: 81/2019 ಕಲಂ:87 ಕೆ.ಪಿ ಆಕ್ಟ್:-

          ಶಿಡ್ಲಘಟ್ಟ ನಗರ ಪೊಲೀಸ್ ಠಾಣೆಯ ಶ್ರೀ. ಲಿಯಾಕತ್ ಉಲ್ಲಾ ಪಿ.ಎಸ್.ಐ (ಕಾ& ಸು) ರವರಿಗೆ ದಿನಾಂಕ-21/06/2019 ರಂದು ಸಂಜೆ 4-15 ಗಂಟೆಯಲ್ಲಿ ಠಾಣೆಯಲ್ಲಿ ಕರ್ತವ್ಯದಲ್ಲಿದ್ದಾಗ ಯಾರೋ ಸಾರ್ವಜನಿಕರಿಂದ ಶಿಡ್ಲಘಟ್ಟ ಟೌನ್ ಗಾಂಧೀನಗರ ಸಮೀಪ ಬಿಲಾಲ್ ಮಸೀದಿ ಹಿಂಬಾಗದಲ್ಲಿ ಬೈರಪ್ಪ ರವರ ಬೀಡು ಜಮೀನಿನಲ್ಲಿ ಮರದ ಕೆಳಗೆ ಯಾರೋ ಜನರು ಗುಂಪು ಸೇರಿ ಹಣವನ್ನು ಪಣಕ್ಕೆ ಕಟ್ಟಿ ಅಕ್ರಮವಾಗಿ ಅಂದರ್ ಬಾಹರ್ ಇಸ್ಟೇಟ್ ಜೂಜಾಟ ಆಡುತ್ತಿದ್ದಾರೆಂತ ಮಾಹಿತಿ ಬಂದಿದ್ದು, ಸದರಿಯವರ ಮೇಲೆ ದಾಳಿ ಮಾಡಲು ಪಂಚಾಯ್ತಿದಾರರು ಹಾಗೂ ಸಿಬ್ಬಂದಿಯವರನ್ನು ದ್ವಿಚಕ್ರ ವಾಹನಗಳಲ್ಲಿ ಕರೆದುಕೊಂಡು ಎಲ್ಲರೂ ಮೇಲ್ಕಂಡ ಸ್ಥಳಕ್ಕೆ ಸಂಜೆ 4-50 ಗಂಟೆಗೆ ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಯಾರೋ ಆಸಾಮಿಗಳು ಮೈದಾನದಲ್ಲಿ ಕುಳಿತುಕೊಂಡು ಹಣವನ್ನು ಪಣವಾಗಿಟ್ಟುಕೊಂಡು ಒಬ್ಬ ಆಸಾಮಿ 100/-ರೂ ಅಂದರ್ ಎಂತಲೂ ಮತ್ತೊಬ್ಬ ಆಸಾಮಿ ಬಾಹರ್ 100/-ರೂ ಎಂತಲೂ ಕೂಗಿಕೊಂಡು ಅಕ್ರಮವಾಗಿ ಅಂದರ್ ಬಾಹರ್ ಇಸ್ಪೀಟ್ಜೂಜಾಟ ಆಡುತ್ತಿದ್ದವರುಗಳ ಮೇಲೆ ದಾಳಿ ಮಾಡಿದಾಗ ನಮ್ಮನ್ನು ಕಂಡು ಓಡಿ ಹೋಗುತ್ತಿದ್ದವರನ್ನು ಹಿಂಬಾಲಿಸಿ 05 ಜನರನ್ನು ಹಿಡಿದುಕೊಂಡು ಅವರಹೆಸರು ವಿಳಾಸ ಕೇಳಲಾಗಿ 1] ಜುಮೈದ್ ಬಿನ್ ಅಲ್ಲಬಕಾಷ್, ಗಾಂದೀನಗರ,  ಶಿಡ್ಲಘಟ್ಟ ನಗರ. 2] ಉಸ್ಮಾನ್ ಬಿನ್ ಮಹಮದ್ ಷರೀಪ್,  ಅಮೀರ್ ಬಾಬಾ ದಗರ್ಗಾ ಬೀದಿ, ಶಿಡ್ಲಘಟ್ಟ ಟೌನ್ 3] ಅಬ್ದುಲ್ ಬಿನ್ ಹೈದರ್ ಸಾಬ್, ತೈಬಾ ನಗರ, ಶಿಡ್ಲಘಟ್ಟ ಟೌನ್ 4] ನವಾಜ್ ಬಿನ್ ಮುನೀರ್ ಅಹಮದ್, ರಹಮತ್ ನಗರ, ಶಿಡ್ಲಘಟ್ಟ ಟೌನ್ 5] ಅಹಮದ್ ಬಿನ್ ಪ್ಯಾರೇಜಾನ್, 2ನೇ ಕಾರ್ಮಿಕನಗರ, ಶಿಡ್ಲಘಟ್ಟ ಟೌನ್ ಎಂದು ತಿಳಿಸಿದ್ದು ಇವರುಗಳು ಜೂಜಾಟಕ್ಕೆ ಆಡುತ್ತಿದ್ದ ಸ್ಥಳದಲ್ಲಿ ಪಂದ್ಯಕ್ಕೆ ಕಟ್ಟಿದ್ದ ಹಣವನ್ನು ತೆಗೆದು ಎಣಿಕೆ ಮಾಡಲಾಗಿ ಒಟ್ಟು 3600/-ರೂ ನಗದು ಹಣ ಇದ್ದು, ಸದರಿ ಹಣವನ್ನು ಜೂಜಾಟಕ್ಕೆ ಬಳಸಿ ಸ್ಥಳದಲ್ಲಿ ಚೆಲ್ಲಾಪಿಲ್ಲಿಯಾಗಿ ಬಿಸಾಡಿದ್ದ 52 ಇಸ್ಟೀಟ್ ಎಲೆಗಳನ್ನು ಸಂಜೆ 5-00 ಗಂಟೆಯಿಂದ ಸಂಜೆ 6-00 ಗಂಟೆಯವರೆಗೆ ಅಮಾನತ್ತು ಪಡಿಸಿಕೊಂಡು 05 ಜನ ಆಸಾಮಿಗಳು ಮತ್ತು ಮಾಲು ಸಮೇತ ಸಂಜೆ 6-30 ಗಂಟೆಗೆ ಠಾಣೆಗೆ ವಾಪಸ್ಸು ಬಂದು ಮುಂದಿನ ಕ್ರಮಕ್ಕಾಗಿ ನೀಡಿದ ದೂರಿನ ಮೇರೆಗೆ ಠಾಣಾ ಮೊ.ಸಂ.81/2019 ಕಲಂ.87 ಕೆ.ಪಿ. ಆಕ್ಟ್ ರೀತ್ಯ ಕೇಸು ದಾಖಲಿಸಿರುತ್ತೆ.