ದಿನಾಂಕ :22/05/2020 ರ ಅಪರಾಧ ಪ್ರಕರಣಗಳು

 1. ಬಾಗೇಪಲ್ಲಿ ಪೊಲೀಸ್ ಠಾಣೆ ಮೊ.ಸಂ.102/2020 ಕಲಂ. 379 ಐ.ಪಿ.ಸಿ :-

          ದಿ: 21-05-2020 ರಂದು ಮದ್ಯಾಹ್ನ 3:00 ಗಂಟೆಗೆ ಪಿರ್ಯಾಧಿದಾರರಾದ ರಾಜಾರೆಡ್ಡಿ.ಎಸ್.ಆರ್ ಬಿನ್ ಲೇಟ್ ಎಸ್.ವಿ.ರಾಮಲಿಂಗಾರೆಡ್ಡಿ, 59 ವರ್ಷ,ಸಡ್ಲವಾರಪಲ್ಲಿ, ಮಲ್ಲಸಂದ್ರ ಅಂಚೆ, ಬಾಗೇಪಲ್ಲಿ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶ – ನನ್ನ ಸ್ವಂತ ದ್ವಿಚಕ್ರ ವಾಹನ ಸಿ.ಟಿ-100 REG NO:KA-40-W-9849 ಅನ್ನು ದಿ: 19-05-2020 ರಂದು ರಾತ್ರಿ ಸುಮಾರು ಹನ್ನೊಂದು ಮೂವತ್ತರ ಸಮಯದ ಮೇಲೆ ಕಳುವಾಗಿರುತ್ತದೆ.  ನಾನು ನನ್ನ ವಾಹನದ ಮೇಲೆ ಯಾವುದೇ ಸಾಲ ಮಾಡಿರುವುದಿಲ್ಲ.  ನನ್ನ ವಾಹನಕ್ಕೆ ವಿಮೆ ಮಾಡಿಸಿರುತ್ತೇನೆ ಮತ್ತು ನನ್ನ ವಾಹನದ ಬಗ್ಗೆ ಎಲ್ಲಾ ದಾಖಲಾತಿಗಳನ್ನು ಹೊಂದಿರುತ್ತೇನೆ.  ನನ್ನ ವಾಹನವನ್ನು ನನ್ನ ಸ್ವಂತ ಮನೆ ಮುಂದೆ ಮುಖದ್ವಾರದ ಪಕ್ಕದಲ್ಲಿ ನಿಲ್ಲಿಸಿದ್ದೆ ಮತ್ತು ವಾಹನಕ್ಕೆ ಇರುವ ಸೈಡ್ ಲಾಕ್ ಹಾಕಿದ್ದೆ.  ಜೊತೆಗೆ ಹಿಂಬದಿ ಚಕ್ರಕ್ಕೆ ಪ್ರತ್ಯೇಕ ಚೈನ್ ಹಾಕಿ ಬೀಗ ಹಾಕಿದ್ದೆ.  ಕಳ್ಳರು ಈ ಚೈನ್ ತೆಗೆದು ಅಲ್ಲೇ ಹಾಕಿ [ ಕಟ್ ಮಾಡಿ] ವಾಹನವನ್ನು ತೆಗೆದುಕೊಂಡು ಪರಾರಿಯಾಗಿರುತ್ತಾರೆ. ಆದ್ದರಿಂದ ಈ ಬಗ್ಗೆ ಕ್ರಮ ವಹಿಸಿ ಪ್ರಕರಣ ದಾಖಲಿಸಿಕೊಂಡು ನನ್ನ 26,000/- ರೂ ಬೆಲೆ ಬಾಳುವ ವಾಹನವನ್ನು ಹುಡುಕಿಕೊಡಬೇಕಾಗಿ ಕೋರುತ್ತೇನೆ, ಎಂದು ದೂರು.

 1. ಬಾಗೇಪಲ್ಲಿ ಪೊಲೀಸ್ ಠಾಣೆ ಮೊ.ಸಂ.103/2020 ಕಲಂ. 323,324,504 ರೆ/ವಿ 34 ಐ.ಪಿ.ಸಿ :-

          ದಿನಾಂಕ:22/05/2020 ರಂದು ಬೆಳಿಗ್ಗೆ 8:30 ಗಂಟೆಯಲ್ಲಿ ಎ.ಎಸ್.ಐ ಜಯರಾಂ ರವರು ಬಾಗೇಪಲ್ಲಿ ಸರ್ಕಾರಿ ಆಸ್ಪತ್ರೆಯಲ್ಲಿ ಗಾಯಾಳು ಶ್ರೀನಿವಾಸ ಬಿನ್ ವೆಂಕಟಸ್ವಾಮಿ, 45 ವರ್ಷ, ಭೋವಿ ಜನಾಂಗ, ಕೂಲಿ ಕೆಲಸ, ಚನ್ನರಾಯನಪಲ್ಲಿ ಗ್ರಾಮ, ಬಾಗೇಪಲ್ಲಿ ತಾಲ್ಲೂಕು ರವರು ನೀಡಿದ ಹೇಳಿಕೆ ದೂರನ್ನು ಪಡೆದುಕೊಂಡು ಬಂದು ಹಾಜರುಪಡಿಸಿದ್ದರ ಸಾರಾಂಶವೇನೆಂದರೆ,  ದಿನಾಂಕ:21/05/2020 ರಂದು ಮದ್ಯಾಹ್ನ 2:00 ಗಂಟೆಯಲ್ಲಿ ನೀರಿನ ವಿಚಾರವಾಗಿ ವಾಟರ್ ಮೆನ್ ಶ್ರೀನಿವಾಸ ಬಿನ್ ಲೇಟ್ ವೆಂಕಟೇಶಪ್ಪ ರವರೊಂದಿಗೆ ಜಗಳ ಮಾಡಿಕೊಂಡು ತಳ್ಳಾಡಿಕೊಂಡು ಬೈದುಕೊಂಡಿರುತ್ತೇವೆ. ಆ ಸಂದರ್ಭದಲ್ಲಿ ಗ್ರಾಮಸ್ಥರಾದ ವೆಂಕಟರವಣಪ್ಪ ಬಿನ್ ಲೇಟ್ ಚಿನ್ನಪ್ಪಯ್ಯ ಮತ್ತು ರಾಮಾಂಜಿ ಬಿನ್ ಬೋಡಪ್ಪ ರವರು ಜಗಳ ಬಿಡಿಸಿ ಮನೆಗೆ ಕಳುಹಿಸಿರುತ್ತಾರೆ.  ರಾತ್ರಿ 11:00 ಗಂಟೆ ಸಮಯದಲ್ಲಿ ಮದ್ಯಾಹ್ನ ಜಗಳ ಮಾಡಿದ್ದ ವಿಚಾರಕ್ಕೆ  ವಾಟರ್ ಮೆನ್ ಶ್ರೀನಿವಾಸ ರವರ ಮಗನಾದ ರವಿ ಎಂಬುವವರು ಹಿಡಿ ಗಾತ್ರದ ಕಟ್ಟಿಗೆ ತೆಗೆದುಕೊಂಡು ಬಂದು ನನ್ನ ಎಡಕೆನ್ನೆಗೆ ಹೊಡೆದು ರಕ್ತಗಾಯವನ್ನುಂಟು ಮಾಡಿರುತ್ತಾನೆ. ಹಾಗೂ ವಾಟರ್ ಮೆನ್ ಶ್ರೀನಿವಾಸ ಬಂದು ಕೈಗಳಿಂದ ಹೊಡೆದು,  ಕಾಲುಗಳಿಂದ ಒದ್ದು, ಅವಾಚ್ಯ ಶಬ್ದಗಳಿಂದ ಬೈಯ್ದಿರುತ್ತಾರೆ.  ಆಗ ನಮ್ಮ ಪಕ್ಕದ ಮನೆಯವರಾದ ಲಕ್ಷ್ಮೀನಾರಾಯಣ ಬಿನ್ ಉತ್ತಪ್ಪರವರು ಹಾಗೂ ನನ್ನ ತಮ್ಮನಾದ ಜಯರಾಮ ಯಾವುದೋ ಒಂದು ಆಟೋದಲ್ಲಿ ನನ್ನನ್ನು ಕರೆದುಕೊಂಡು ಬಂದು ಬಾಗೇಪಲ್ಲಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲು ಮಾಡಿರುತ್ತಾರೆ. ಶ್ರೀನಿವಾಸ ಮತ್ತು ಆತನ ಮಗ ರವಿ ರವರ ವಿರುದ್ದ ಕಾನೂನು ರೀತ್ಯ ಕ್ರಮ ಜರುಗಿಸಬೇಕಾಗಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲು ಮಾಡಿರುವುದಾಗಿರುತ್ತೆ.

 1. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.60/2020 ಕಲಂ. 279,304(A) ಐ.ಪಿ.ಸಿ :-

          ದಿನಾಂಕ 22/05/2020 ರಂದು ಬೆಳಗ್ಗೆ 08-15 ಗಂಟೆ ಸಮಯದಲ್ಲಿ ಪಿರ್ಯಾದಿದಾರರು ಠಾಣೆಗೆ ಹಾಜರಾಗಿ ನೀಡಿದ ಮುದ್ರಿತ ದೂರಿನ ಸಾರಾಂಶವೇನೆಂದರೆ, ತನಗೆ ಈಗ್ಗೆ 26 ವರ್ಷಗಳ ಹಿಂದೆ ರಾಮಚಂದ್ರ ಹೊಸೂರು ಗ್ರಾಮದ ವಾಸಿ ಆರ್ ಎನ್ ರಾಮಾಂಜಿನಪ್ಪರವರೊಂದಿಗೆ ಮದುವೆಯಾಗಿದ್ದು, ತಮಗೆ ಒಂದು ಗಂಡು ಮತ್ತು ಇಬ್ಬರು ಹೆಣ್ಣು ಮಕ್ಕಳಿದ್ದು, 1 ನೇ ಮನೋಹರ್ , 2 ನೇ ರಜನಿ  ಮತ್ತು 3 ನೇ ಅಕ್ಷಿತಾ ಆಗಿದ್ದು, ತಮ್ಮ ಯಜಮಾನರಾದ ರಾಮಾಂಜಿನಪ್ಪ ಆರ್ ಎನ್ ಬಿನ್ ಲೇಟ್ ನಾರಾಯಣಪ್ಪ 50 ವರ್ಷ ರವರು ಮತ್ತು ತಮ್ಮ ಯಜಮಾನರಿಗೆ ಪರಿಚಯವಿರುವ ಮಂಜುನಾಥ ಟಿ ಎಂ  ಬಿನ್ ಪಿ ಮಲ್ಲಪ್ಪ ತಲದುಮ್ಮನಹಳ್ಳಿ ದೇವರಮಳ್ಳೂರು ಪೋಸ್ಟ್ ಶಿಡ್ಲಘಟ್ಟ ತಾಲ್ಲೂಕು ರವರು ದಿ:21.05.2020 ರಂದು ಕೆಲಸದ ನಿಮಿತ್ತ ತಮ್ಮ ಬಾಬತ್ತು ಕೆಎ 40 ಜೆ 7314 ನೊಂದಣಿ ಸಂಖ್ಯೆಯ ಬಜಾಜ್ ಪ್ಲಾಟಿನ ದ್ವಿ ಚಕ್ರ ವಾಹನದಲ್ಲಿ ಚಿಕ್ಕಬಳ್ಳಾಪುರಕ್ಕೆ ಬಂದಿದ್ದು, ಕೆಲಸ ಮುಗಿಸಿಕೊಂಡು ತಮ್ಮ ಗ್ರಾಮಕ್ಕೆ ವಾಪಸ್ಸು ಬರಲು ರಾತ್ರಿ 7-30 ಗಂಟೆ ಸಮಯದಲ್ಲಿ ಚಿಕ್ಕಬಳ್ಳಾಪುರ – ಶಿಡ್ಲಘಟ್ಟ ರಸ್ತೆಯ ವರದಹಳ್ಳಿ ಗೇಟ್ ಸಮೀಪ ಬರುತ್ತಿದ್ದಾಗ ದ್ವಿ ಚಕ್ರ ವಾಹನವನ್ನು ಮಂಜುನಾಥ ಟಿ ಎಂ ರವರು ಚಾಲನೆ ಮಾಡುತ್ತಿದ್ದು, ಇದ್ದಕ್ಕಿದ್ದಂತೆ ನಾಯಿ ಅಡ್ಡ ಬಂದಿದ್ದು, ಅದನ್ನು ತಪ್ಪಿಸಲು ಹೋಗಿ ಮಂಜುನಾಥರವರು ಎಡಕ್ಕೆ ತಿರುಗಿಸಿದ್ದು ನಿಯಂತ್ರಣ ತಪ್ಪಿ ರಸ್ತೆಯ ಪಕ್ಕದಲ್ಲಿದ್ದ ಕಲ್ಲಿಗೆ ಡಿಕ್ಕಿ ಹೊಡೆಸಿದ್ದು, ಹಿಂದೆ ಕುಳಿತಿದ್ದ ತಮ್ಮ ಯಜಮಾನರು ದ್ವಿ ಚಕ್ರ ವಾಹನದಿಂದ ಕೆಳಗೆ ಬಿದ್ದು ಹೋಗಿದ್ದು, ತಮ್ಮ ಯಜಮಾನರ ತಲೆಗೆ ತೀವ್ರ ಸ್ವರೂಪದ ರಕ್ತ ಗಾಯವಾಗಿರುತ್ತೆಂದು ಮಂಜುನಾಥರವರು ಅಂಬುಲೆನ್ಸ್ ನಲ್ಲಿ ಚಿಕ್ಕಬಳ್ಳಾಪುರಕ್ಕೆ ಕರೆದುಕೊಂಡು ಬರುತ್ತಾ ತಮ್ಮ ಸಂಬಂಧಿಕರಾದ ರವಿಕುಮಾರ್ ಬಿನ್ ಲೇಟ್ ಮುನಿನಾರಾಯಣರೆಡ್ಡಿ ತಲದುಮ್ಮನಹಳ್ಳಿ ಗ್ರಾಮ ರವರಿಗೆ ಫೋನ್ ಮಾಡಿ ತಿಳಿಸಿದ್ದು, ಅವರು ತನಗೆ ತಿಳಿಸಿದ್ದು, ತಾವು ಬರುವಷ್ಟರಲ್ಲಿ ಬೆಂಗಳೂರಿಗೆ ಕರೆದುಕೊಂಡು ಹೋಗುತ್ತಿರುವುದಾಗಿ ತಿಳಿಸಿದರು. ನಂತರ ತಾವೂ ಸಹ ಬೆಂಗಳೂರಿಗೆ ಹೋಗಿದ್ದು, ತಮ್ಮ ಯಜಮಾನರನ್ನು ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿದ್ದು, ವೈದ್ಯರು ಚಿಕಿತ್ಸೆ ನೀಡುತ್ತಿದ್ದಾಗ ಚಿಕಿತ್ಸೆ ಫಲಕಾರಿಯಾಗದೇ ರಾತ್ರಿ ಸುಮಾರು 9-30 ಗಂಟೆ ಸಮಯದಲ್ಲಿ ಮೃತಪಟ್ಟಿರುತ್ತಾರೆ. ತಮ್ಮ ಯಜಮಾನರ ಮೃತದೇಹವು ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಯ ಶವಾಗಾರದಲ್ಲಿದ್ದು, ಈ ಅಪಘಾತಕ್ಕೆ ಕಾರಣನಾದ ಕೆಎ 40 ಜೆ 7314 ನೊಂದಣಿ ಸಂಖ್ಯೆಯ ಬಜಾಜ್ ಪ್ಲಾಟಿನ ದ್ವಿ ಚಕ್ರ ವಾಹನ ಸವಾರ ಮಂಜುನಾಥ ಟಿ ಎಂ ರವರ ವಿರುದ್ದ ಕಾನೂನು ರೀತಿಯ ಕ್ರಮ ಜರುಗಿಸಲು ಕೋರಿ ನೀಡಿದ ದೂರಿನ ಮೇರೆಗೆ ಈ ಪ್ರ,ವ,ವರದಿ.

 1. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.209/2020 ಕಲಂ. 279 ಐ.ಪಿ.ಸಿ & 185 ಐ.ಎಂ.ವಿ ಆಕ್ಟ್ :-

          ದಿನಾಂಕ: 21/05/2020 ರಂದು ಸಂಜೆ 4.15 ಗಂಟೆಗೆ ಠಾಣೆಯ ಎ.ಎಸ್.ಐ ಅಕ್ಬರ್.ಬಿ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ಈ ದಿನ ದಿನಾಂಕ 21/05/2020 ರಂದು ಪಿ.ಎಸ್.ಐ ರವರು ಎ.ಎಸ್.ಐ ಬಿ.ಅಕ್ಬರ್ ಆದ ತನಗೆ ಮತ್ತು ಠಾಣೆಯ ಹೆಚ್.ಸಿ.152 ಎಂ.ನಾಗರಾಜು ರವರಿಗೆ ಶ್ರೀನಿವಾಸಪುರ ರಸ್ತೆಯ ಕೊಡದವಾಡಿ ಚೆಕ್ ಪೋಸ್ಟ್ ನಲ್ಲಿ ಕರ್ತವ್ಯಕ್ಕೆ ನೇಮಕ ಮಾಡಿದ್ದು, ಅದರಂತೆ ತಾವು ಮದ್ಯಾಹ್ನ 3.30 ಗಂಟೆ ಸಮಯದಲ್ಲಿ ಚೆಕ್ ಪೋಸ್ಟ್ ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ, ಚಿಂತಾಮಣಿ ಕಡೆಯಿಂದ ಬರುತ್ತಿದ್ದ ಸಿಎವೈ-2169 ನೋಂದಣಿ ಸಂಖ್ಯೆಯ ಮಾರುತಿ 800 ಕಾರನ್ನು ಅದರ ಚಾಲಕ ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬರುತ್ತಿದ್ದು ತಾವು ವಾಹನವನ್ನು ನಿಲ್ಲಿಸುವಂತೆ ಚಾಲಕನಿಗೆ ಸೂಚಿಸಿದ್ದರೂ ಸಹ ಆತನು ವಾಹನವನ್ನು ನಿಲ್ಲಿಸದೆ ಹೋಗುತ್ತಿದ್ದು, ತಾವು ಆತನನ್ನು ಹಿಂಬಾಲಿಸಿಕೊಂಡು ಹೋಗಿ ಕಾರನ್ನು ನಿಲ್ಲಿಸಿ ನೋಡಲಾಗಿ ಕಾರಿನ ಚಾಲಕ ಮದ್ಯಪಾನ ಮಾಡಿರುವ ವಾಸನೆ ಬರುತ್ತಿದ್ದು, ಕುಡಿದ ಅಮಲಿನಲ್ಲಿರುತ್ತಾನೆ. ಆತನ ಹೆಸರು ಮತ್ತು ವಿಳಾಸ ವಿಚಾರ ಮಾಡಲಾಗಿ, ಶ್ರೀನಿವಾಸ ಬಿನ್ ಮುನಿಯಪ್ಪ, 42 ವರ್ಷ, ಆದಿ ಕರ್ನಾಟಕ ಜನಾಂಗ, ಕಾರು ಚಾಲಕ, ದೇವಸಂದ್ರ, ಕೆ.ಆರ್.ಪುರಂ, ಬೆಂಗಳೂರು ನಗರ ಎಂದು ತಿಳಿಸಿರುತ್ತಾನೆ. ಸದರಿ ಚಾಲಕನು ಮದ್ಯಪಾನ ಮಾಡಿಕೊಂಡು ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬರುತ್ತಿದ್ದು ಆತನ ವಿರುಧ್ದ ಕಾನೂನು ರೀತ್ಯಾ ಕ್ರಮ ಜರುಗಿಸಲು ಸೂಚಿಸಿರುವುದಾಗಿರುತ್ತೆ.

 1. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.210/2020 ಕಲಂ. 114,143,147,148,323,324,341,504,506 ರೆ/ವಿ 149 ಐ.ಪಿ.ಸಿ :-

          ದಿನಾಂಕ: 21/05/2020 ರಂದು ರಾತ್ರಿ 10.40 ಗಂಟೆಗೆ ಚಿಂತಾಮಣಿ ಸರ್ಕಾರಿ ಆಸ್ಪತ್ರೆಯಿಂದ ಬಂದ ಮೆಮೋವನ್ನು ಪಡೆದು ಆಸ್ಪತ್ರೆಗೆ ಬೇಟಿ ನೀಡಿ ಗಾಯಾಳು ಮಹಮ್ಮದ್ ಇಮ್ರಾನ್ ಬಿನ್ ಮಹಮ್ಮದ್ ಇಬ್ರಾಹೀಂ, 33 ವರ್ಷ, ಮುಸ್ಲೀಂ ಜನಾಂಗ, ಕೂಲಿಕೆಲಸ, ಚಿನ್ನಸಂದ್ರ ಗ್ರಾಮ, ಚಿಂತಾಮಣಿ ತಾಲ್ಲೂಕು ರವರ ಹೇಳಿಕೆಯನ್ನು ಪಡೆದುಕೊಂಡು ರಾತ್ರಿ 11.30 ಗಂಟೆಗೆ ಠಾಣೆಗೆ ವಾಪಸ್ಸಾಗಿ ದಾಖಲಿಸಿಕೊಂಡ ಗಾಯಾಳುವಿನ ಹೇಳಿಕೆಯ ಸಾರಾಂಶವೇನೆಂದರೆ, ಈಗ್ಗೆ ಸುಮಾರು 6 ದಿಗಳ ಹಿಂದೆ ತಮ್ಮ ಮನೆಯ ಬಳಿ ಇರುವ ಹೀನಾ ಕೌಸರ್ ಬಿನ್ ಆಸಿಫ್ ಖಾನ್ ರವರು ಟಿಕ್ ಟಾಕ್ ಮಾಡಿರುವ ವಿಚಾರದಲ್ಲಿ ತಮ್ಮ ಗ್ರಾಮದ ನಾಸೀರ್ ಮತ್ತು ಅವರ ಕಡೆಯವರು ಗಲಾಟೆ ಮಾಡಿರುತ್ತಾರೆ, ಹೀಗಿರುವಲ್ಲಿ ಈ ದಿನ ದಿನಾಂಕ: 21/05/2020 ರಂದು ರಾತ್ರಿ ಸುಮಾರು 9.00 ಗಂಟೆ ಸಮಯದಲ್ಲಿ ತಾನು ಮತ್ತು ತಮ್ಮ ಗ್ರಾಮದ ಇಮ್ರಾನ್ ಪಾಷಾ ಬಿನ್ ಖಾದರ್ ರವರು ಗ್ರಾಮದ ಗ್ರಾಮ ಪಂಚಾಯ್ತಿ ಕಛೇರಿ ಮುಂದೆ ನಡೆದುಕೊಂಡು ಹೋಗುತ್ತಿದ್ದಾಗ ತಮ್ಮ ಗ್ರಾಮದ ಮೇಲ್ಕಂಡ ನಾಸೀರ್ ಬಿನ್ ಪೀರ್ ಪಾಷಾ ಅವರ ಕಡೆಯವರಾದ ಮನ್ಸೂರ್ ಬಿನ್ ಅಸ್ಲಾಂ, ತೌಸಿಫ್ @ ನಟ್ಕಾ ಬಿನ್ ಅಯೂಬ್ ಮತ್ತು ಲಡ್ಡು ಬಿನ್ ಸಮೀ ರವರು ತನ್ನನ್ನು ರಸ್ತೆಯಲ್ಲಿ ಅಡ್ಡಗಟ್ಟಿ ತನ್ನ ಮೇಲೆ ಜಗಳ ತೆಗೆದು ತಮ್ಮ ಗ್ರಾಮದಲ್ಲಿ ಟಿಕ್ ಟಾಕ್ ವಿಡಿಯೋಗಳನ್ನು ಮಾಡುತ್ತಿರುವ ಹೀನಾ ಕೌಸರ್ ಬಿನ್ ಆಸಿಫ್ ಖಾನ್ ರವರಿಗೆ ನೀನು ತುಂಬಾ ಸಪೋರ್ಟ್ ಮಾಡುತ್ತಿದ್ದೀಯಾ ಎಂದು ತನ್ನನ್ನು ಅವಾಚ್ಯಶಬ್ದಗಳಿಂದ ಬೈದು, ಆ ಪೈಕಿ ನಾಸೀರ್ ರವರು ತನ್ನ ಕೈಯಲ್ಲಿದ್ದ ಚಾಕುವಿನಿಂದ ತನ್ನ ಎಡಕೈಗೆ ಹೊಡೆದು ರಕ್ತಗಾಯವನ್ನುಂಟು ಮಾಡಿರುತ್ತಾನೆ. ಮನ್ಸೂರ್, ತೌಸಿಫ್ ಮತ್ತು ಲಡ್ಡು ರವರು ತನ್ನನ್ನು ಕೈಗಳಿಂದ ಎಳೆದಾಡಿ ಮೈ ಮೇಲೆ ಹೊಡೆದು ಮೈ ಕೈ ನೋವನ್ನುಂಟು ಮಾಡಿ, ತನ್ನನ್ನು ಕೆಳಕ್ಕೆ ತಳ್ಳಿ ಕಾಲುಗಳಿಂದ ಒದ್ದು ಮೈ ಕೈ ನೋವನ್ನುಂಟು ಮಾಡಿರುತ್ತಾರೆ. ಅಷ್ಟರಲ್ಲಿ ತಮ್ಮ ಗ್ರಾಮದ ಆಸಿಫ್ ಹಾಗೂ ರಿಜ್ವಾನ್ ಖಾನ್ ರವರು ಜಗಳ ಬಿಡಿಸಿದಾಗ ಮೇಲ್ಕಂಡವರು ಸ್ಥಳದಿಂದ ಹೋಗುವಾಗ ನಮ್ಮ ತಂಟೆಗೆ ಬಂದರೆ ನಿನ್ನನ್ನು ಸಾಯಿಸಿ ಬಿಡುವುದಾಗಿ ಪ್ರಾಣಬೆದರಿಕೆಯನ್ನು ಹಾಕಿರುತ್ತಾರೆ. ಮೇಲ್ಕಂಡ ನಾಲ್ಕು ಜನರಿಗೆ ದುಷ್ಪ್ರೇರಣೆ ನೀಡಿ, ತಮ್ಮ ಮೇಲೆ ಗಲಾಟೆ ಮಾಡಲು ತಮ್ಮ ಗ್ರಾಮದ ಸುಲ್ತಾನ್ ಬಿನ್ ಅಪ್ಸರ್ ಪಾಷಾ ಕಳುಹಿಸಿಕೊಟ್ಟು ಗಲಾಟೆ ಮಾಡಿರುತ್ತಾರೆ. ಆದ್ದರಿಂದ ಮೇಲ್ಕಂಡ ಅಕ್ರಮ ಕೂಟದವರ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಬೇಕಂದು ಕೋರಿ ನೀಡಿದ ಹೇಳಿಕೆಯ ದೂರಾಗಿರುತ್ತೆ.

 1. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.211/2020 ಕಲಂ. 114,143,147,148,323,324,341,504,506 ರೆ/ವಿ 149 ಐ.ಪಿ.ಸಿ :-

          ದಿನಾಂಕ: 21/05/2020 ರಂದು ರಾತ್ರಿ 10.40 ಗಂಟೆಗೆ ಚಿಂತಾಮಣಿ ಸರ್ಕಾರಿ ಆಸ್ಪತ್ರೆಯಿಂದ ಬಂದ ಮೆಮೋವನ್ನು ಪಡೆದು ಆಸ್ಪತ್ರೆಗೆ ಬೇಟಿ ನೀಡಿ ಗಾಯಾಳು ಮನ್ಸೂರ್ ಬಿನ್ ಅಸ್ಲಾಂ, 25 ವರ್ಷ, ಮುಸ್ಲೀಂ ಜನಾಂಗ, ಕೂಲಿಕೆಲಸ, ಚಿನ್ನಸಂದ್ರ ಗ್ರಾಮ, ಚಿಂತಾಮಣಿ ತಾಲ್ಲೂಕು ರವರ ಹೇಳಿಕೆಯನ್ನು ಪಡೆದುಕೊಂಡು ರಾತ್ರಿ 11.55 ಗಂಟೆಗೆ ಠಾಣೆಗೆ ವಾಪಸ್ಸಾಗಿ ದಾಖಲಿಸಿಕೊಂಡ ಗಾಯಾಳುವಿನ ಹೇಳಿಕೆಯ ಸಾರಾಂಶವೇನೆಂದರೆ, ಈಗ್ಗೆ ಸುಮಾರು 5-6 ದಿಗಳ ಹಿಂದೆ ತಮ್ಮ ಗ್ರಾಮದ ಹೀನಾ ಕೌಸರ್ ರವರು ಟಿಕ್ ಟಾಕ್ ಮಾಡುತ್ತಿದ್ದ ವಿಚಾರದಲ್ಲಿ ತಮ್ಮ ಗ್ರಾಮಸ್ಥರು ಆಕೆಗೆ ಬುದ್ದಿವಾದ ಹೇಳಿರುತ್ತಾರೆ. ಹೀಗಿರುವಲ್ಲಿ ಈ ದಿನ ದಿನಾಂಕ: 21/05/2020 ರಂದು ರಾತ್ರಿ ಸುಮಾರು 9.30 ಗಂಟೆ ಸಮಯದಲ್ಲಿ ತಮ್ಮ ಗ್ರಾಮದ ಗ್ರಾಮ ಪಂಚಾಯ್ತಿ ಕಛೇರಿಯ ಬಳಿ ತಾನು, ತನ್ನ ಸ್ನೇಹಿತ ನಾಸೀರ್ ರವರು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ತಮ್ಮ ಗ್ರಾಮದ ಇಮ್ರಾನ್ ಪಾಷಾ ಬಿನ್ ರಹೀಂ ಸಾಬ್ ಮತ್ತು ಏಜಾಜ್ ಪಾಷಾ ಬಿನ್ ರಹೀಂ ಸಾಬ್ ರವರು ರಸ್ತೆಯಲ್ಲಿ ತನ್ನನ್ನು ಅಡ್ಡಗಟ್ಟಿ ಹೀನಾ ಕೌಸರ್ ರವರು ಟಿಕ್ ಟಾಕ್ ಮಾಡಿದರೆ ನಿಮಗೇನೋ ಲೋಫರ್ ನನ್ನ ಮಕ್ಕಳೇ ಎಂದು ಅವಾಚ್ಯಶಬ್ದಗಳಿಂದ ಬೈದು, ಆ ಪೈಕಿ ಇಮ್ರಾನ್ ರವರು ತನ್ನ ಕೈಯಲ್ಲಿದ್ದ ಚಾಕುವಿನಿಂದ ತನ್ನ ಎಡಕೈಗೆ ಹಾಕಿ ರಕ್ತಗಾಯವನ್ನುಂಟು ಮಾಡಿರುತ್ತಾನೆ. ಏಜಾಜ್ ಪಾಷಾ ರವರು ಕೈಗಳಿಂದ ತನ್ನನ್ನು ಹಿಡಿದು ಎಳೆದಾಡಿ, ಕೈಗಳಿಂದ ಮೈ ಮೇಲೆ ಹೊಡೆದು ಮೈ ಕೈ ನೋವನ್ನುಂಟು ಮಾಡಿರುತ್ತಾನೆ. ತನ್ನ ಜೊತೆಯಲ್ಲಿದ್ದ ನಾಸೀರ್ ರವರಿಗೆ ಇಮ್ರಾನ್ ರವರ ತಮ್ಮನಾದ ಇರ್ಷಾದ್ ರವರು ದೊಣ್ಣೆಯಿಂದ ಮುಖಕ್ಕೆ ಮತ್ತು ಮೈ ಕೈ ಮೇಲೆ ಹೊಡೆದು ರಕ್ತಗಾಯವನ್ನುಂಟು ಮಾಡಿರುತ್ತಾನೆ. ಗಲಾಟೆ ಬಿಡಿಸಲು ಬಂದ ಆಸೀಫ್ ರವರಿಗೆ ಮೇಲ್ಕಂಡ ಮೂರು ಜನ ಕೈಗಳಿಂದ ಮೈ ಮೇಲೆ ಹೊಡೆದು, ದೊಣ್ಣೆಯಿಂದ ಹಾಗೂ ಚಾಕುವಿನಿಂದ ಹಲ್ಲೆ ಮಾಡಿರುತ್ತಾರೆ. ಅಷ್ಟರಲ್ಲಿ ತಮ್ಮ ಗ್ರಾಮದವರು ಬಂದು ಜಗಳ ಬಿಡಿಸಿದಾಗ ಮೇಲ್ಕಂಡ ಇಮ್ರಾನ್, ಏಜಾಜ್ ಮತ್ತು ಇರ್ಷಾದ್ ಕಡೆಯವರು ಸ್ಥಳಕ್ಕೆ ಬಂದಿದ್ದು, ಎಲ್ಲರೂ ಸೇರಿಕೊಂಡು ಈ ನನ್ನ ಮಕ್ಕಳನ್ನು ಸಾಯಿಸಿ ಬಿಡಬೇಕೆಂದು ಪ್ರಾಣಬೆದರಿಕೆಯನ್ನು ಹಾಕಿರುತ್ತಾರೆ. ಆದ್ದರಿಂದ ಮೇಲ್ಕಂಡ ಅಕ್ರಮ ಕೂಟದವರ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಬೇಕಂದು ಕೋರಿ ನೀಡಿದ ಹೇಳಿಕೆಯ ದೂರಾಗಿರುತ್ತೆ.

 1. ಚಿಂತಾಮಣಿ ನಗರ ಪೊಲೀಸ್ ಠಾಣೆ ಮೊ.ಸಂ.61/2020 ಕಲಂ. 160  ಐ.ಪಿ.ಸಿ :-

          ದಿನಾಂಕ: 22/05/2020 ರಂದು ಬೆಳಿಗ್ಗೆ 6-15 ಗಂಟೆಗೆ ಚಿಂತಾಮಣಿ ನಗರ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಜಗದೀಶ.ಎಸ್ ಸಿಪಿಸಿ -384  ರವರು ಠಾಣೆಗೆ ಹಾಜರಾಗಿ ನೀಡಿದ ವರದಿಯ ಸಾರಾಂಶವೇನೆಂದರೆ ತನಗೆ  ದಿನಾಂಕ: 21.05.2020 ರಂದು ರಾತ್ರಿ ಹಾಜರಾತಿಯಲ್ಲಿ ಠಾಣಾಧಿಕಾರಿಗಳು  ಚಿಂತಾಮಣಿ ನಗರದಲ್ಲಿ ಸರ್ಕಾರಿ ಆಸ್ಪತ್ರೆ ಬಳಿ ರಾತ್ರಿ ಕರ್ತವ್ಯಕ್ಕೆ ನೇಮಿಸಿದ್ದು ಅದರಂತೆ ತಾನು ಸರ್ಕಾರಿ ಆಸ್ಪತ್ರೆ ಬಳಿ ಕರ್ತವ್ಯ ನಿರ್ವಹಿಸುತ್ತಿರುವಾಗ ರಾತ್ರಿ ಸುಮಾರು 10.30 ಗಂಟೆ ಸಮಯದಲ್ಲಿ ಸಾರ್ವಜನಿಕ ಸ್ಥಳವಾದ ಆಸ್ಪತ್ರೆಯ ಮುಂಭಾಗದಲ್ಲಿ  ಜೋರಾಗಿ ಕೂಗಾಡಿಕೊಳ್ಳುತ್ತಿರುವ ಶಬ್ದ ಕೇಳಿಸಿದ್ದು ನಂತರ ತಾನು  ಹೋಗಿ ನೋಡಲಾಗಿ ಎರಡು ಗುಂಪುಗಳು ಜೋರಾಗಿ ಕಿರುಚಾಡುತ್ತಾ ಕೈಗಳಿಂದ ಒಬ್ಬರಿಗೆ ಒಬ್ಬರು ಹೊಡೆದಾಡಿಕೊಳ್ಳುತ್ತಿದ್ದರು ನಂತರ ಸಮವಸ್ತ್ರದಲ್ಲಿದ್ದ ತಾನು ಮತ್ತು  2 ನೇ ಬೀಟ್ ನ ಸಿಬ್ಬಂದಿಯಾದ ಪಿ.ಸಿ 276 ಮತ್ತು ಹೆಚ್ .ಜಿ 198 ರವರು  ಹೋಗಿ ಎರಡೂ ಗುಂಪುಗಳನ್ನು ಚದುರಿಸಿ ಅವರುಗಳ ಹೆಸರು – ವಿಳಾಸ ಕೇಳಲಾಗಿ ಒಂದು ಗುಂಪು 1) ಇಮ್ರಾನ್ ಪಾಷ ಬಿನ್ ರಹೀಂ ಸಾಬ್, ಮುಸ್ಲಿಂ ಜನಾಂಗ, ವ್ಯಾಪಾರ, ಚಿನ್ನಸಂದ್ರ ಗ್ರಾಮ, ಚಿಂತಾಮಣಿ ತಾಲ್ಲೂಕು. 2) ಏಜಾಜ್ ಪಾಷ ಬಿನ್ ರಹೀಂ ಸಾಬ್, ಮುಸ್ಲಿಂ ಜನಾಂಗ, ವ್ಯಾಪಾರ, ಚಿನ್ನಸಂದ್ರ ಗ್ರಾಮ, ಚಿಂತಾಮಣಿ ತಾಲ್ಲೂಕು. 3) ಅನ್ಸರ್ ಷರೀಪ್ ಬಿನ್ ಗೌಸ್ ಷರೀಪ್, 40 ವರ್ಷ, ಮುಸ್ಲಿಂ ಜನಾಂಗ, ವ್ಯಾಪಾರ, ಚಿನ್ನಸಂದ್ರ ಗ್ರಾಮ, ಚಿಂತಾಮಣಿ ತಾಲ್ಲೂಕು. 4) ಆಸೀಪ್ ಷರೀಪ್ @ ಸುಹೇಲ್ ಷರೀಪ್ ಬಿನ್ ಗೌಸ್ ಷರೀಪ್, 38 ವರ್ಷ, ಮುಸ್ಲಿಂ ಜನಾಂಗ, ವ್ಯಾಪಾರ, ಚಿನ್ನಸಂದ್ರ ಗ್ರಾಮ, ಚಿಂತಾಮಣಿ ತಾಲ್ಲೂಕು. 5) ಮುಷೀರ್ ಬಿನ್ ಅಬ್ದುಲ್ ಮಜೀದ್, 38 ವರ್ಷ, ಮುಸ್ಲಿಂ ಜನಾಂಗ, ವ್ಯಾಪಾರ, ಚಿನ್ನಸಂದ್ರ ಗ್ರಾಮ, ಚಿಂತಾಮಣಿ ತಾಲ್ಲೂಕು ,  ಹಾಗೂ  ಮತ್ತೊಂದು ಗುಂಪಿನವರ ಹೆಸರು – ವಿಳಾಸ ಕೇಳಲಾಗಿ 1) ನಾಸೀರ್ ಬಿನ್ ಪೀರ್ ಭಾಷ, ಮುಸ್ಲಿಂ ಜನಾಂಗ, ವ್ಯಾಪಾರ, ಚಿನ್ನಸಂದ್ರ ಗ್ರಾಮ, ಚಿಂತಾಮಣಿ ತಾಲ್ಲೂಕು. 2) ಮನ್ಸೂರ್ ಖಾನ್ ಬಿನ್ ಅಸ್ಲಾಂ, ಮುಸ್ಲಿಂ ಜನಾಂಗ, ವ್ಯಾಪಾರ, ಚಿನ್ನಸಂದ್ರ, ಗ್ರಾಮ,ಚಿಂತಾಮಣಿ ತಾಲ್ಲೂಕು. 3) ತೌಸಿಪ್ @ ನಕ್ಕಾ ಬಿನ್ ಅಯಾಜ್, 33 ವರ್ಷ, ಮುಸ್ಲಿಂ ಜನಾಂಗ, ವ್ಯಾಪಾರ, ಚಿನ್ನಸಂದ್ರ ಗ್ರಾಮ, ಚಿಂತಾಮಣಿ ತಾಲ್ಲೂಕು. 4) ಲಡ್ಡು ಬಿನ್ ಸಮಿ, ಮುಸ್ಲಿಂ ಜನಾಂಗ, ವ್ಯಾಪಾರ, ಚಿನ್ನಸಂದ್ರ ಗ್ರಾಮ , ಚಿಂತಾಮಣಿ ತಾಲ್ಲೂಕು ಹಾಗೂ ಇನ್ನೂ ಇತರರು ಸ್ಥಳದಲ್ಲಿದ್ದು, ಮೇಲ್ಕಂಡ ಎರಡೂ ಗುಂಪುನವರಿಗೆ ನಾವು ಇಲ್ಲಿ ಸಾರ್ವಜನಿಕ ಸ್ಥಳ ಗಲಾಟೆ ಮಾಡಬಾರದೆಂದು ಹೇಳಿದರೂ ಪದೇ ಪದೇ ನಮ್ಮ ಮಾತನ್ನು ಲೆಕ್ಕಿಸದೆ ಎರಡು ಗುಂಪುಗಳು ಚಿನ್ನಸಂದ್ರ ಗ್ರಾಮಕ್ಕೆ ಸೇರಿದ ಹುಡುಗಿ ಟಿಕ್ ಟಾಕ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಆಪ್ ಲೋಡ್ ಮಾಡಿರುವ  ವಿಚಾರದಲ್ಲಿ  ಸಾರ್ವಜನಿಕ ಸ್ಥಳವಾಗಿರುವ ಚಿಂತಾಮಣಿ ನಗರದ ಸರ್ಕಾರಿ ಆಸ್ಪತ್ರೆಯ ಆವರಣದಲ್ಲಿ ಎರಡು ಗುಂಪುಗಳು ಜೋರಾಗಿ ಕಿರುಚಾಡುತ್ತಾ ಕೈಗಳಿಂದ ಹೊಡೆದಾಡಿಕೊಂಡು ಸಾರ್ವಜನಿಕ ಶಾಂತಿ ಮತ್ತು ನೆಮ್ಮದಿಗೆ ಭಂಗವನ್ನುಂಟು ಮಾಡಿರುತ್ತಾರೆ. ಆದ್ದರಿಂದ ಮೇಲ್ಕಂಡ ಅಸಾಮಿಗಳ ವಿರುದ್ದ ಮುಂದಿನ ಕ್ರಮ ಜರುಗಿಸಬೇಕೆಂದು ಕೋರಿ ನೀಡಿದ ವರದಿಯನ್ನು ಪಡೆದು ಠಾಣಾ ಮೊ.ಸಂ 61/2020 ಕಲಂ 160 ಐಪಿಸಿ ರೀತ್ಯಾ ಪ್ರಕರಣ ದಾಖಲಿಸಿಕೊಂಡಿರುತ್ತೆ.

 1. ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.116/2020 ಕಲಂ. 323,324,307,504,506 ಐ.ಪಿ.ಸಿ :-

          ದಿನಾಂಕ 22/05/2020 ರಂದು ಪಿರ್ಯಾಧಿದಾರರಾದ ಶ್ರೀಮತಿ ಅನಿತಾ ಕೊಂ ಸಜ್ಜಪ್ಪ ,22 ವರ್ಷ, ಉಪ್ಪಾರರು ಗೃಹಿಣಿ,  ವಾಸ ಕುರಗೋಡು ತಮ್ಮನಹಳ್ಳಿ   ಗ್ರಾಮ, ಗೌರಿಬಿದನೂರು ತಾಲ್ಲೂಕು. ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ- ತನ್ನ ಗಂಡ ಸಜ್ಜಪ್ಪ ರವರು ಜಿರಾಯ್ತಿ ಮಾಡಿಕೊಂಡಿರುತ್ತಾರೆ.  ದಿನಾಂಕ 20/05/2020 ರಂದು ಸಂಜೆ ಸುಮಾರು 04-00 ಗಂಟೆ ಸಮಯದಲ್ಲಿ  ತಮ್ಮ ಗ್ರಾಮದ ಅನಂತ ಬಿನ್ ಅಶ್ವತ್ಥಪ್ಪ  ರವರು ತಮ್ಮ ಮನೆಯ ಬಳಿ ಬಂದು ಸಜ್ಜಪ್ಪ ರವರನ್ನು ಶಾಲೆಯ ಆವರಣದ ಬಳಿ ತಮ್ಮ ಗ್ರಾಮದ ವಾಸಿ ಹರೀಶ ಬಿನ್ ಅಶ್ವತ್ಥಪ್ಪ, 24 ವರ್ಷ, ವಕ್ಕಲಿಗರು,  ಎಂಬುವವರು ಗಲಾಟೆ ಮಾಡಿ ಹೊಡೆಯುತ್ತಿರುವುದಾಗಿ ಹೇಳಿದ್ದು, ತಾನು ತಕ್ಷಣ ಹೋಗಿ ನೋಡಲಾಗಿ ತನ್ನ ಗಂಡ ಸಜ್ಜಪ್ಪ ರವರಿಗೆ  ಎಡಗಡೆ ಎದೆಯ ಭಾಗಕ್ಕೆ ಹರೀಶ ಬಿನ್ ಅಶ್ವತ್ಥಪ್ಪ ಎಂಬುವವರು ತನ್ನ ಕೈಯಲಿದ್ದ ಚಾಕುವಿನಿಂದ ತಿವಿದು ರಕ್ತಗಾಯ ಪಡಿಸಿ,  ಕೈಗಳಿಂದ ಬೆನ್ನಿಗೆ ಗುದ್ದಿ, ಕಾಲುಗಳಿಂದ ಒದ್ದಿದನು. ಆಗ ತಾನು ಗಲಾಟೆ ಬಿಡಿಸಲು ಹೋದಾಗ ತನ್ನನ್ನು ಸಹಾ “ಲೋಫರ್ ಮುಂಡೆ ನಿನ್ನ ಗಂಡನನ್ನು ಮುಗಿಸದೇ ಬಿಡುವುದಿಲ್ಲ” ಎಂದು ಪ್ರಾಣ ಬೆದರಿಕೆಯನ್ನು ಹಾಕಿರುತ್ತಾರೆ. ಆಗ ತಾನು ಮತ್ತು ಅಲ್ಲೇ ಇದ್ದ ತಮ್ಮ ಗ್ರಾಮದ ರಾಮು ಬಿನ್ ಲಿಂಗಪ್ಪ ರವರು ಗಲಾಟೆ ಬಿಡಿಸಿ ತನ್ನ ಗಂಡ ಸಜ್ಜಪ್ಪ ರವರನ್ನು ಯಾವುದೋ ಒಂದು ವಾಹನದಲ್ಲಿ ಚಿಕಿತ್ಸೆಗಾಗಿ ಗೌರಿಬಿದನೂರು ಸರ್ಕಾರಿ  ಆಸ್ಪತ್ರೆಗೆ ದಾಖಲಿಸಿರುತ್ತೇವೆ.  ತನ್ನ ಗಂಡನಿಗೂ ಮತ್ತು ಹರೀಶ ಬಿನ್ ಅಶ್ವತ್ಥಪ್ಪ ಎಂಬುವವರಿಗೆ ಈ ಮೊದಲು ಹಣಕಾಸಿನ ವಿಚಾರದಲ್ಲಿ ಮನಸ್ಥಾಪಗಳಿದ್ದು, ಇದನ್ನೆ ಮನಸ್ಸಿನಲ್ಲಿ ಇಟ್ಟುಕೊಂಡು ತನ್ನ ಗಂಡನನ್ನು ಸಾಯಿಸುವ ಉದ್ದೇಶದಿಂದ ತೀವ್ರ ಗಾಯವನ್ನುಂಟು ಮಾಡಿರುವ  ಹರೀಶ ಬಿನ್ ಅಶ್ವತ್ಥಪ್ಪ ರವರ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಬೇಕೆಂದು ಕೋರುತ್ತೇನೆ. ತಮ್ಮ ಗ್ರಾಮದ ಹಿರಿಯರು ರಾಜಿ ಮಾಡೋಣವೆಂದು ತಿಳಿಸಿದ್ದು ಹರೀಶ ಬಿನ್ ಅಶ್ವತ್ಥಪ್ಪ ರವರು ರಾಜಿಗೆ ಒಪ್ಪದ ಕಾರಣ ದೂರು ನೀಡಲು ತಡವಾಗಿರುತ್ತೇಂದು ದೂರು.

 1. ನಂದಿಗಿರಿಧಾಮ ಪೊಲೀಸ್ ಠಾಣೆ ಮೊ.ಸಂ.33/2020 ಕಲಂ. 380,457 ಐ.ಪಿ.ಸಿ :-

          ದಿನಾಂಕ:21/05/2020 ರಂದು ಸಂಜೆ 6:45 ಗಂಟೆ ಸಮಯದಲ್ಲಿ ಪಿರ್ಯಾದಿದಾರರಾದ ಶ್ರೀ. ರಾಮಚಂದ್ರರೆಡ್ಡಿ ಬಿನ್ ನಾರಾಯಣಪ್ಪ, 58 ವರ್ಷ, ಒಕ್ಕಲಿಗರು, ವಿಷ್ಣುಪ್ರಿಯಾ ಕಾಲೇಜಿನ ಅಧ್ಯಕ್ಷರು, ವಾಸ: 4 ನೇ ವಾರ್ಡ, ಪ್ರಶಾಂತ್ ನಗರ, ಚಿಕ್ಕಬಳ್ಳಾಪುರ ನಗರ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ಚಿಕ್ಕಬಳ್ಳಾಪುರ ತಾಲ್ಲೂಕು, ಜಡಲತಿಮ್ಮನಹಳ್ಳಿ ಗ್ರಾಮದ ಸಮೀಪ ವಿಷ್ಣುಪ್ರಿಯಾ ಕಾಲೇಜಿಗೆ ತಾನು ಅಧ್ಯಕ್ಷನಾಗಿರುತ್ತೇನೆ. ಕೋವಿಡ್-19 ಗೆ ಸಂಬಂದಿಸಿದಂತೆ ಸಕರ್ಾರದ ಆದೇಶದ ಮೇರೆಗೆ ಕಾಲೇಜನ್ನು ನಡೆಸುತ್ತಿರುವುದಿಲ್ಲ. ತಾನು ಆಗಾಗ್ಗೆ ಕಾಲೇಜಿನ ಬಳಿಗೆ ಹೋಗಿ ಉಸ್ತುವಾರಿ ನೋಡಿಕೊಂಡು ಹೋಗುತ್ತಿದ್ದೆ. ದಿನಾಂಕ:17/05/2020 ರಂದು ತಾನು ಕಾಲೇಜಿನ ಬಳಿ ಹೋಗಿ ನೋಡಲಾಗಿ ಬಾಗಿಲಿಗೆ ಹಾಕಿದ್ದ ಕಬ್ಬಿಣದ ಬಾಗಿಲಿನ ಬೀಗ ಇರಲಿಲ್ಲ ತಾನು ಒಳಹೋಗಿ ನೋಡಲಾಗಿ ಕಾಲೇಜಿನ ಒಳಗಡೆ ಬ್ಯಾಟರಿ ಮತ್ತು ಯು.ಪಿ.ಎಸ್ ಇಟ್ಟಿದ್ದ ರೂಂನ ಬಾಗಿಲು ಬೀಗ ಇರಲಿಲ್ಲ ಸದರಿ ರೂಮಿನಲ್ಲಿದ್ದ 2 ಬ್ಯಾಟರಿಗಳು ಮತ್ತು ಒಂದು ಯು.ಪಿ.ಎಸ್ ಕಾಣಿಸಲಿಲ್ಲ, ಕಾಲೇಜಿನ ಪ್ಯಾಸೇಜ್ನಲ್ಲಿ ಉತ್ತರದ ಕಡೆ ಕಿಟಕಿ ಕಂಬಿಗಳನ್ನು ಕತ್ತಿರಿಸಿ ರಂಧ್ರ ಮಾಡಿದ್ದರು. ದಿನಾಂಕ:16/05/2020 ರಂದು ರಾತ್ರಿ ವೇಳೆ ಯಾರೋ ಕಳ್ಳರು ಕಾಲೇಜಿನ ಮುಂಭಾಗದ ಕಬ್ಬಿಣದ ಬಾಗಿಲಿಗೆ ಹಾಕಿದ್ದ ಬೀಗ ಹೊಡೆದು ಒಳಪ್ರವೇಶಿಸಿ ಬ್ಯಾಟರಿ ಮತ್ತು ಯುಪಿಎಸ್ ಇಟ್ಟಿದ್ದ ರೂಮಿನ ಬಾಗಿಲಿಗೆ ಹಾಕಿದ್ದ ಬೀಗ ಹೊಡೆದು ರೂಮಿನಲ್ಲಿದ್ದ 2 ಬ್ಯಾಟರಿಗಳು ಮತ್ತು ಒಂದು ಯು.ಪಿ.ಎಸ್ ಕಳವು ಮಾಡಿಕೊಂಡು ಹೋಗಿರುತ್ತಾರೆ. ಕಳುವಾದ ಮಾಲಿನ ಬೆಲೆ ಸುಮಾರು 24,500 ರೂಗಳಾಗಬಹುದು, ಕಳುವಾದ ಮಾಲನ್ನು ಪತ್ತೆ ಮಾಡಿ ಕಳವು ಮಾಡಿರುವ ಕಳ್ಳರನ್ನು ಪತ್ತೆ ಮಾಡಿ ಕಾನೂನು ರೀತ್ಯ ಕ್ರಮ ಜರುಗಿಸಲು ಕೋರುತ್ತೇನೆ. ಕಾಲೇಜಿನ ಕಾರ್ಯದರ್ಶಿ ಮತ್ತು ಪ್ರಾಂಶುಪಾಲರಿಗೆ ವಿಚಾರ ತಿಳಿಸಿ ಈ ದಿನ ತಾನು ಠಾಣೆಗೆ ತಡವಾಗಿ ಬಂದು ನೀಡಿದ ದೂರಾಗಿರುತ್ತೆ.

 1. ನಂದಿಗಿರಿಧಾಮ ಪೊಲೀಸ್ ಠಾಣೆ ಮೊ.ಸಂ.34/2020 ಕಲಂ. 379 ಐ.ಪಿ.ಸಿ & 41(D),102 ಸಿ.ಆರ್.ಪಿ.ಸಿ:-

          ನಂದಿ ಗಿರಿಧಾಮ ಪೊಲೀಸ್ ಠಾಣೆಯ ಪಿ.ಎಸ್.ಐ ಕ್ರೈಂ ಆದ ಎಂ. ನಾರಾಯಣಸ್ವಾಮಿ ಆದ ನಾನು ಘನ ನ್ಯಾಯಾಲಯದಲ್ಲಿ ನಿವೇದಿಸಿಕೊಳ್ಳುವುದೇನೆಂದರೆ ದಿನಾಂಕ:21/05/2020 ರಂದು ರಾತ್ರಿ ಗಸ್ತಿಗಾಗಿ ಹೋಗಲು ಠಾಣೆಗೆ ಒದಗಿಸಿರುವ ಕೆ.ಎ-40 ಜಿ-58 ಪೋಲೀಸ್ ಜೀಪಿನಲ್ಲಿ ನಾನು ಅಪರಾದ ಕರ್ತವ್ಯದ ಸಿಬ್ಬಂದಿಯಾದ ಶ್ರೀ ಮಧುಸೂದನ್ ಪಿ.ಸಿ.240 ಮತ್ತು ಶ್ರೀ ಗಂಗರಾಜು ಹೆಚ್.ಸಿ.11 ರವರುಗಳನ್ನು ಕುಳ್ಳರಿಸಿಕೊಂಡು ರಾತ್ರಿ 11.00 ಗಂಟೆಗೆ ಠಾಣೆಯ ಬಳಿಯಿಂದ ಹೊರಟು ಮುದ್ದೇನಹಳ್ಳಿ, ತಿರ್ನಹಳ್ಳಿ, ನಂದಿ, ಕುಪ್ಪಹಳ್ಳಿ, ನಂದಿ ಕ್ರಾಸ್, ಚದಲಪುರ ಕ್ರಾಸ್ ಕಡೆಗಳಲ್ಲಿ ಗಸ್ತು ಮಾಡಿಕೊಂಡು ದಿನಾಂಕ:22/05/2020 ರಂದು ಮುಂಜಾನೆ 05:00 ಸಮಯದಲ್ಲಿ ಚೊಕ್ಕಹಳ್ಳಿ ಕಡೆಗೆ ಹೋಗಲು ಎನ್.ಹೆಚ್-7 ರಸ್ತೆಯ ಕೊತ್ತನೂರು ಗೇಟಿನ ಸಮೀಪ ಹೋಗುತ್ತಿದ್ದಾಗ ರಸ್ತೆಯ ಎಡ ಬದಿಯಲ್ಲಿ ಒಂದು ಟಾಟಾ ಎಸಿ ವಾಹನ ನಿಲ್ಲಿಸಿದ್ದು ಅದರಲ್ಲಿ ಮೂರು ಸೀಮೇ ಹಸುಗಳಿದ್ದು ವಾಹನ ನೊಂದಣಿ ಸಂಖ್ಯೆ ಕೆ.ಎ-67 0387 ಟಾಟಾ ಎಸಿ ಆಗಿರುತ್ತೆ. ನಮಗೆ ಅನುಮಾನ ಬಂದು ಟಾಟಾ ಎಸಿ ವಾಹನದ ಬಳಿ ಹೋಗುತ್ತಿದ್ದಂತೆ ವಾಹನದ ಚಾಲಕ ಮತ್ತು ಚಾಲಕ ಪಕ್ಕದಲ್ಲಿ ಕುಳಿತಿದ್ದ ಅಸಾಮಿ ಪೊಲೀಸ್ ಜೀಪನ್ನು ಕಂಡು ಕೆಳಕ್ಕೆ ಇಳಿದು ಓಡಿ ಹೋದರು, ವಾಹನದಲ್ಲಿ ಮೂರು ಸೀಮೆ ಹಸುಗಳಿದ್ದು ಅವುಗಳ ಮುಂದೆ ಒಬ್ಬ ಅಸಾಮಿ ನಿಂತಿದ್ದು ನಮ್ಮನ್ನು ಕಂಡು ಕೂಡಲೆ ಮುಖ ಮರೆಮಾಚಿಕೊಂಡ ಸದರಿ ಹಸುಗಳನ್ನು ಮೂರು ಜನ ಅಸಾಮಿಗಳು ಯಾವುದೋ ಜಾಗದಲ್ಲಿ ಕಳವು ಮಾಡಿಕೊಂಡು ಬಂದಿರಬಹುದು ಎಂಬ ಅನುಮಾನದ ಮೇರೆಗೆ ಸದರಿ ಅಸಾಮಿಯ ಮೂಗಿನ ಮೇಲೆ ರಕ್ತಗಾಯವಾಗಿದ್ದು ಆತನ ಹೆಸರು ವಿಳಾಸ ಕೇಳಲಾಗಿ  ಚೋಟು @ ಚೋಟು ಬೇಗ್ ಬಿನ್ ಸಿರಾಜ್ ಬೇಗ್, 22 ವರ್ಷ, ಮುಸ್ಲಿಂರು, ರೇಷ್ಮೆ ಕೆಲಸ, ವಾಸ: 12 ನೇ ವಾರ್ಡ, ಅನ್ಸಾರಿ ಮಸೀದಿಯ ಬಳಿ (ವಂಕೆ), ಶಿಡ್ಲಘಟ್ಟ ನಗರ ಎಂದು ಹೇಳಿದ. ಓಡಿ ಹೋದ ಅಸಾಮಿಗಳ ಹೆಸರು ವಿಳಾಸ ಕೇಳಲಾಗಿ  ಶಿಡ್ಲಘಟ್ಟ ನಗರದ ರೆಹಮತ್ ನಗರದ ವಾಸಿ ಶೈನ್ ಷಾ, ಸುಮಾರು 26 ವರ್ಷ, ಮತ್ತು ನಿಜಾಂ ಬಿನ್ ಚಾಂದಿನಿ ಎಂದು ತಿಳಿಸಿದ ವಾಹನದಲ್ಲಿದ್ದ ಸೀಮೆ ಹಸುಗಳ ಬಗ್ಗೆ ಮತ್ತು ಮೂಗಿನ ಬಳಿ ಆಗಿರುವ ಗಾಯದ ಬಗ್ಗೆ ವಿಚಾರ ಮಾಡಲಾಗಿ ತಾನು ತನ್ನ ಸ್ನೇಹಿತರಾದ ಶೈನ್ ಷಾ ಮತ್ತು ನಿಜಾಂ ಎಂಬವರೊಂದಿಗೆ ಸೇರಿ ಮೂರು ಜನರು ಮಾತನಾಡಿಕೊಂಡು ಕೆ.ಎ-67 0387 ಟಾಟಾ ಎಸಿ ವಾಹನದಲ್ಲಿ ಶಿಡ್ಲಘಟ್ಟ ನಗರದಲ್ಲಿ ಕುಳಿತು, ಶೈನ್ ಷಾ ರವರು ವಾಹನವನ್ನು ಚಾಲನೆ ಮಾಡಿಕೊಂಡು ಚಿಕ್ಕಬ್ಳಾಪುರ ತಾಲ್ಲೂಕು, ಮೊಡುಕುಹೊಸಹಳ್ಳಿ ಗ್ರಾಮಕ್ಕೆ ಹೋಗಿ ಅಲ್ಲಿ ಒಂದು ಸೀಮೆ ಹಸುವನ್ನು ಕಳವು ಮಾಡಿ ಸದರಿ ವಾಹನದಲ್ಲಿ ಹತ್ತಿಸಿದೇವು ಮತ್ತೊಂದು ಸೀಮೆ ಹಸು ಇದೇ ಎಂದು ನಿಜಾಂ ಮತ್ತು ಶೈನ್ ಷಾ ರವರು ಹೋಗಿ ಅದನ್ನು ಎಲ್ಲಿಂದಲೋ ಕಳವು ಮಾಡಿಕೊಂಡು ಬಂದು ಸದರಿ ವಾಹನಕ್ಕೆ ಹತ್ತಿಸಿಕೊಂಡು ಅಲ್ಲಿಂದ ನಂದಿ ಗ್ರಾಮಕ್ಕೆ ಬಂದು ರಸ್ತೆಯ ಬದಿ ವರಾಂಡದಲ್ಲಿದ್ದ ಒಂದು ಸೀಮೆ ಹಸುವನ್ನು ನಾವು 3 ಜನ ಸೇರಿ ಕಳುವು ಮಾಡಿ ಅದನ್ನು ಸದರಿ ವಾಹನದಲ್ಲಿ ಹತ್ತಿಸಿಕೊಂಡು ತಾನು ಹಸುಗಳ ಮುಂಭಾಗ ನಿಂತಿದ್ದು ಹಸು ತನ್ನ ಮುಖಕ್ಕೆ ಗುದ್ದಿದಾಗ ತನ್ನ ಮುಖದ ಮೇಲೆ ಅಂದರೆ ಮೂಗಿನ ಬಳಿ ರಕ್ತಗಾಯವಾಗಿದ್ದು 3 ಹಸುಗಳನ್ನು ಚಿಂತಾಮಣಿಗೆ ಸಾಗಿಸಿ ಮಾರಾಟ ಮಾಡುವ ಸಲುವಾಗಿ ನಂದಿ ಕ್ರಾಸ್ ಮೂಲಕ ಎನ್.ಹೆಚ್.7 ರಸೆಯಲ್ಲಿ ಹೋಗುವಾಗ ಮೂತ್ರ ವಿಸರ್ಜನೆ ಮಾಡಲು ರಸ್ತೆಯ ಬದಿ ವಾಹನವನ್ನು ನಿಲ್ಲಿಸಿದ್ದೆವೆಂದು ಹೇಳಿದ ಸದರಿ 3 ಜನ ಆಸಾಮಿಗಳು 3 ಸೀಮೆ ಹಸುಗಳನ್ನು ಕಳುವು ಮಾಡಿ ಸಾಗಾಣಿಕೆ ಮಾಡುತ್ತಿದ್ದರಿಂದ ಅವುಗಳ ಮಾಲೀಕರು ಯಾರೆಂಬುದು ಪತ್ತೆ ಮಾಡಬೇಕಾಗರುವುದರಿಂದ ಸದರಿ 3 ಸೀಮೆ ಹಸುಗಳನ್ನು ಮತ್ತು ಅವುಗಳನ್ನು ಸಾಗಾಣಿಕೆ ಮಾಡಲು ಉಪಯೋಗಿಸಿದ ಸದರಿ ಟಾಟಾ ಎಸ್ ವಾಹನವನ್ನು ಬೆಳಗ್ಗೆ 05.30 ಗಂಟೆಯಿಂದ ಬೆಳಿಗ್ಗೆ 06.30 ಗಂಟೆಯವರೆವಿಗೂ ಪಂಚರ ಸಮಕ್ಷಮ ಪಂಚನಾಮೆಯ ಮೂಲಕ ಅಮಾನತ್ತುಪಡಿಸಿಕೊಂಡು ಸದರಿ ಸಿಕ್ಕಿಬಿದ್ದ ಚೋಟು @ ಚೋಟುಬೇಗ್ ರವರನ್ನು ವಶಕ್ಕೆ ಪಡೆದುಕೊಂಡಿರುತ್ತೆ. ಹಸುಗಳ ಅಂದಾಜು ಬೆಲೆ 1,30,000 ರೂಗಳಾಗುತ್ತೆ. ಬೆಳಿಗ್ಗೆ 06.45 ಗಂಟೆಗೆ ಠಾಣೆಗೆ ವಾಪಸ್ಸಾಗಿ ಠಾಣೆಯ ಮೊ.ಸಂ:34/2020 ಕಲಂ:41 ಕ್ಲಾಸ್ (ಡಿ) 102 ಸಿ.ಆರ್.ಪಿಸಿ ರೆ/ವಿ 379 ಐ.ಪಿ.ರಿ ರೀತ್ಯಾ ಸ್ವತಃ ಪ್ರಕರಣ ದಾಖಲಿಸಿಕೊಂಡಿರುತ್ತೇನೆ.

 1. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.127/2020 ಕಲಂ. 87 ಕೆ.ಪಿ ಆಕ್ಟ್:-

          ದಿನಾಂಕ 21/05/2020  ಸಂಜೆ 16.20 ಗಂಟೆಗೆ ಎನ್ ರಾಜಣ್ಣ ಪೊಲೀಸ್ ಇನ್ಸ್ ಪೆಕ್ಟರ್ ಡಿಸಿಬಿ/ಸಿಇಎನ್ ಪೊಲೀಸ್ ಠಾಣೆರವರು ಠಾಣೆಗೆ ಹಾಜರಾಗಿ ಹಾಜರು ಪಡಿಸಿದ ವರದಿಯ ಸಾರಾಂಶವೆನೆಂದರೆ, ದಿನಾಂಕ:21.05.2020 ರಂದು  ಸಂಜೆ 4.00 ಗಂಟೆ ಸಮಯದಲ್ಲಿ ನಾನು ಮತ್ತು ಸಿಬ್ಬಂದಿ ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣಾ ಸರಹದ್ದಿನ ಹಂಡಿಗನಾಳ ಗ್ರಾಮದ ಕಡೆ ಗಸ್ತು ಕರ್ತವ್ಯದಲ್ಲಿದ್ದಾಗ  ಯಾರೋ ಬಾತ್ಮಿದಾರರಿಂದ ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣಾ ಸರಹದ್ದಿನ  ಅಪ್ಪೇಗೌಡನಹಳ್ಳಿ ಗ್ರಾಮದ ಸಾರ್ವಜನಿಕ ಸ್ಥಳದಲ್ಲಿ ಯಾರೋ ಅಸಾಮಿಗಳು ಗುಂಪು ಕಟ್ಟಿಕೊಂಡು ಅಕ್ರಮವಾಗಿ ಹಣವನ್ನು ಪಣವಾಗಿ ಕಟ್ಟಿ ಅಂದರ್ ಬಾಹರ್ ಇಸ್ಟೀಟು ಜೂಜಾಟವಾಡುತ್ತಿರುವುದಾಗಿ ಬಾತ್ಮಿ ಬಂದಿದ್ದು ಸದರಿ ಅಸಾಮಿಗಳ ವಿರುದ್ದ ಪ್ರ.ವ.ವರದಿಯನ್ನು ದಾಖಲಿಸಿಕೊಂಡು ಸದರಿ ಸ್ಥಳದ ಮೇಲೆ ದಾಳಿ ಕೈಗೊಳ್ಳಲು ಅನುಮತಿ ನೀಡಬೇಕಾಗಿ ಘನ ನ್ಯಾಯಾಲಯದಲ್ಲಿ ಪ್ರಾರ್ಥಿಸಿ  ಘನ ನ್ಯಾಯಾಲಯದಿಂದ ಅನುಮತಿಯನ್ನು ಪಡೆದು ಠಾಣೆಯಲ್ಲಿ ಹಾಜರು ಪಡಿಸಿದನ್ನು ಪಡೆದು ಪ್ರ ವ ವರದಿಯನ್ನು ದಾಖಲಿಸಿಕೊಂಡಿರುತ್ತೆ.

 1. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.129/2020 ಕಲಂ. 279 ಐ.ಪಿ.ಸಿ:-

          ದಿನಾಂಕ:22/05/2020 ರಂದು ಬೆಳಿಗ್ಗೆ 11-30 ಗಂಟೆಯಲ್ಲಿ ಪಿರ್ಯಾದಿದಾರರಾದ ಶ್ರೀ.ಬಸವರಾಜ ಬಿನ್ ಆಂಜಿನಪ್ಪ, 38 ವರ್ಷ, ನಾಯಕರು, ವಾಸ ಗಾಂಡ್ಲಹೊಸಹಳ್ಳಿ ಗ್ರಾಮ ಚಿಕ್ಕಬಳ್ಳಾಪುರ ತಾಲ್ಲೂಕು ರವರು ಠಾಣೆಗೆ ಬಂದು ನೀಡಿದ ದೂರಿನ ಸಾರಾಂಶವೇನೆಂದರೆ, ತಾನು ಹೀಗ್ಗೆ ಸುಮಾರು 6 ತಿಂಗಳ ಹಿಂದೆ ಸರಕು ಸಾಗಾಣಿ ಸಾಗಿಸಲು ಕೆಎ-40-ಬಿ-0081  ನಂಬರಿನ ಮಹೇಂದ್ರ ಬೊಲೆರೋ ಮಿನಿ ಟೆಂಪೋ ವಾಹನವನ್ನು ಖರೀದಿ ಮಾಡಿದ್ದು, ಸದರಿ ವಾಹನಕ್ಕೆ ತಮ್ಮ ಗ್ರಾಮದ ರಾಮಾಂಜಿ ಬಿನ್ ಮುನಿನಾರಾಯಣಪ್ಪ ಎಂಬುವರನ್ನು ಚಾಲಕನಾಗಿ ನೇಮಿಸಿಕೊಂಡಿದ್ದು, ಆತನು ತರಕಾರಿಗಳನ್ನು ಮಾರುಕಟ್ಟೆಗೆ ಸಾಗಿಸಲು ತಮ್ಮ ವಾಹನವನ್ನು ಬಾಡಿಗೆಗೆ ತೆಗೆದುಕೊಂಡು ಹೋಗಿ ಬಾಡಿಗೆ ತಂದು ಕೊಡುತ್ತಿದ್ದನು. ಹೀಗಿರುವಾಗ ದಿನಾಂಕ:20/05/2020 ರಂದು ರಾತ್ರಿ ಸುಮಾರು 8-30 ಗಂಟೆಯಲ್ಲಿ ತಾನು ಮತ್ತು ತಮ್ಮ ಚಾಲಕ ರಾಮಾಂಜಿ ಕೆಎ-40-ಬಿ-0081  ನಂಬರಿನ ಮಹೇಂದ್ರ ಬೊಲೆರೋ ವಾಹನದಲ್ಲಿ ತಮ್ಮ ಚಾಲಕ ರಾಮಾಂಜಿ ಚಾಲನೆ ಮಾಡುತ್ತಾ ತಮ್ಮ ಗ್ರಾಮದಿಂದ ಕೋಲಾರಕ್ಕೆ ಹೋಗಲು ಶಿಡ್ಲಘಟ್ಟ ತಾಲ್ಲೂಕು ಆನೂರು ಗೇಟ್ ಬಿಟ್ಟು ಸುಮಾರು ಅರ್ಧ ಕಿ.ಮೀ ಮುಂದೆ ಹೆಚ್.ಕ್ರಾಸ್ ರಸ್ತೆಯಲ್ಲಿ ಹೋಗುತ್ತಿದ್ದಾಗ ಎದುರುಗಡೆಯಿಂದ ಅಂದರೆ ಹೆಚ್.ಕ್ರಾಸ್ ಕಡೆಯಿಂದ ಬಂದ ಕೆಎ-50-ಎನ್-7390 ನಂಬರಿನ ಮಾರುತಿ ಸುಜಿಕಿ ಸ್ವಿಪ್ಟ್ ಕಾರನ್ನು ಅದರ ಚಾಲಕ ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ತಮ್ಮ  ಕೆಎ-40-ಬಿ-0081  ನಂಬರಿನ ಮಹೇಂದ್ರ ಬೊಲೆರೋ ವಾಹನಕ್ಕೆ ಡಿಕ್ಕಿ ಹೊಡೆದು ಅಪಘಾತಪಡಿಸಿದ ಪರಿಣಾಮ ಎರಡೂ ವಾಹನಗಳು ಜಖಂ ಆಗಿರುತ್ತವೆ. ಅಪಘಾತಪಡಿಸಿದ ಕೆಎ-50-ಎನ್-7390 ನಂಬರಿನ ಮಾರುತಿ ಸುಜಿಕಿ ಸ್ವಿಪ್ಟ್ ಕಾರಿನ ಚಾಲಕನ ಹೆಸರು ಮತ್ತು ವಿಳಾಸ ತಿಳಿಯಲಾಗಿ ಶ್ರೀನಿವಾಸ ಬಿನ್ ಲೇಟ್ ಬಿ.ಎಂ.ನಾರಾಯಣಪ್ಪ, ದೊಡ್ಡದಾಸರಹಳ್ಳಿ ಗ್ರಾಮ, ಶಿಡ್ಲಘಟ್ಟ ತಾಲ್ಲೂಕು ಎಂದು ತಿಳಿಯಿತು. ಅಪಘಾತದಲ್ಲಿ ತನಗಾಗಲೀ, ತಮ್ಮ ಚಾಲಕ ರಾಮಾಂಜಿ ರವರಿಗಾಗಲೀ, ಅಪಘಾತಪಡಿಸಿದ ಕೆಎ-50-ಎನ್-7390 ನಂಬರಿನ ಮಾರುತಿ ಸುಜಿಕಿ ಸ್ವಿಪ್ಟ್ ಕಾರಿನ ಚಾಲಕ ಶ್ರೀನಿವಾಸ ರವರಿಗಾಗಲಿ ಯಾವುದೇ ಗಾಯಗಳಾಗಿರುವುದಿಲ್ಲ. ಈ ಬಗ್ಗೆ ತಾನು ತಮ್ಮ ಕುಟುಂಬಸ್ಥರಿಗೆ ತಿಳಿಸಿ ಈ ದಿನ ತಡವಾಗಿ ಬಂದು ದೂರು ನೀಡುತ್ತಿದ್ದು,  ಅಪಘಾತಪಡಿಸಿದ ಕೆಎ-50-ಎನ್-7390 ನಂಬರಿನ ಮಾರುತಿ ಸುಜಿಕಿ ಸ್ವಿಪ್ಟ್ ಕಾರಿನ ಚಾಲಕ ಶ್ರೀನಿವಾಸ ಬಿನ್ ಲೇಟ್ ಬಿ.ಎಂ.ನಾರಾಯಣಪ್ಪ ರವರ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ನೀಡಿದ ದೂರಿನ ಮೇರೆಗೆ ಠಾಣಾ ಮೊ.ಸಂ.129/2020 ಕಲಂ 279 ಐ.ಪಿ.ಸಿ ರೀತ್ಯಾ ಕೇಸು ದಾಖಲಿಸಿರುತ್ತೆ.