ದಿನಾಂಕ : 22/02/2020 ರ ಅಪರಾಧ ಪ್ರಕರಣಗಳು

1. ಬಾಗೇಪಲ್ಲಿ ಪೊಲೀಸ್ ಠಾಣೆ ಮೊ.ಸಂ.42/2020 ಕಲಂ. 380-457 ಐ.ಪಿ.ಸಿ:-
ದಿ: 22-02-2020 ರಂದು ಬೆಳಗ್ಗೆ 11:00 ಗಂಟೆಗೆ ಪಿರ್ಯಾಧಿದಾರರಾದ ನಾಸೀರ್ ಬಿನ್ ಬಿ.ಕೆ.ಬಾಬು, 38 ವರ್ಷ, ಮಜರ್ ಟ್ರಾಕ್ಟರ್ & ಫಾರ್ಮ್ ಎಕ್ವಿಪ್ ಮೆಂಟ್ಸ್ ಮೇನೆಜರ್, ನ್ಯಾಷನಲ್ ಕಾಲೇಜ್ ಬಳಿ, ಬಾಗೇಪಲ್ಲಿ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶ – ದಿ: 21-02-2020 ರಂದು ಸುಮಾರು ಸಂಜೆ 5:30 ಗಂಟೆ ಸಾಯಂಕಾಲ ಶೋರೂಂ ಅನ್ನು ಕ್ಲೋಸ್ ಮಾಡಿ ಹೋಗಿರುತ್ತೇನೆ. ದಿ:22-02-2020 ರಂದು ಬೆಳಗ್ಗೆ ಸುಮಾರು 7:00 ಗಂಟೆಯಲ್ಲಿ ನಮ್ಮ ಕಟ್ಟಡದ ಮಾಲೀಕರಾದ ಪ್ರಸಾದ್ ರವರು ನನಗೆ ಫೋನ್ ಮಾಡಿ ಶೋರೂಮ್ ನ ಪೂರ್ವದ ಕಡೆ ಇರುವ ಶೆಟರ್ ಡೋರ್ ಅನ್ನು ಯಾರೋ ಕಳ್ಳರು ಯಾವುದೋ ಆಯುಧದಿಂದ ಶೆಟರ್ ಅನ್ನು ಎತ್ತಿ ಒಳಗಡೆ ಹೋಗಿ ಕಳ್ಳತನ ಮಾಡಿರುವಂತೆ ಕಾಣಿಸಿದೆ ಎಂದು ತಿಳಿಸಿದ್ದು, ನಾನು ತಕ್ಷಣ ಬಂದು ನೋಡಲಾಗಿ ವಿಚಾರ ನಿಜವಾಗಿದ್ದು, ದಿ: 21-02-2020 ರಂದು ರಾತ್ರಿ ವೇಳೆಯಲ್ಲಿ ಯಾರೋ ಕಳ್ಳರು ಶೆಟರ್ ಡೋರ್ ಅನ್ನು ಕಿತ್ತು ಒಳಗಡೆ ಪ್ರವೇಶಿಸಿ ಟ್ರಾಕ್ಟರ್ ಗಳಿಗೆ ಅಳವಡಿಸಿದ್ದ 2 ಹೊಸ ಬ್ಯಾಟರಿಗಳನ್ನು, 01 ಸ್ಟಾರ್ಟರ್ ಅನ್ನು ಹಾಗೂ ಚಿಕ್ಕ ಜನರೇಟರ್ ಅನ್ನು ಕಳ್ಳತನ ಮಾಡಿಕೊಂಡು ಕಛೇರಿಯಲ್ಲಿ ಇದ್ದ ಬೀರುವಿನ ಲಾಕ್ ಕಿತ್ತು ಅದರಲ್ಲಿ ಇದ್ದ ಚಿಲ್ಲರೆ ಹಣವನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು, ಸದರಿ ಕಳವಾಗಿರುವ ಮಾಲುಗಳ ಬೆಲೆ ಸುಮಾರು 24,000/-[ ಇಪ್ಪತ್ತಾನಾಲ್ಕು ಸಾವಿರ] ರೂಗಳಾಗಿದ್ದು, ಪತ್ತೆ ಮಾಡಿಕೊಡಲು ಕೋರಿದೆ, ಎಂದು ನೀಡಿದ ದೂರಿನ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿರುತ್ತೆ.
2. ಬಟ್ಲಹಳ್ಳಿ ಪೊಲೀಸ್ ಠಾಣೆ ಮೊ.ಸಂ.17/2020 ಕಲಂ. 279-304(ಎ) ಐ.ಪಿ.ಸಿ:-
ದಿನಾಂಕ:22/02/2020 ರಂದು 07-15 ಗಂಟೆಗೆ ಪಿರ್ಯಾದಿದಾರರಾದ ಎಂ, ರಫೀ ಬಿನ್ ಮದರ್ ಸಾಬ್,38ವರ್ಷ, ಮುಸ್ಲಿಮರು, ಐಸ್ ಕ್ರೀಂ ವ್ಯಾಪಾರ, ವಾಸ: ಆಸ್ಪತ್ರೆ ಹಿಂಭಾಗ, ಮುರಗಮಲ್ಲ ಗ್ರಾಮ, ಚಿಂತಾಮಣಿ ತಾಲ್ಲೂಕು.ಮೊ ನಂ:8861836571. ನಾನು ಈ ಮೇಲ್ಕಂಡ ವಿಳಾಸದಲ್ಲಿ ವಾಸವಾಗಿದ್ದು, ಐಸ್ ಕ್ರೀಂ ವ್ಯಾಪಾರದಿಂದ ಜೀವನ ಮಾಡಿಕೊಂಡಿರುತ್ತೇನೆ. ನನಗೆ ಮತ್ತು ನನ್ನ ಪತ್ನಿ ಪಾತೀಮಾ ರವರಿಗೆ ಒಟ್ಟು 4 ಜನ ಮಕ್ಕಳಿದ್ದು, 1ನೇ ಅಬ್ದುಲ್,20 ವರ್ಷ, 2ನೇ ಶಾಹೀನಾ, 17 ವರ್ಷ, 3ನೇ ಹಾತೀಫಾ, 13 ವರ್ಷ, 4ನೇ ಶಾಹೀದಾ 10 ವರ್ಷ ರವರಾಗಿರುತ್ತಾರೆ. ದಿನಾಂಕ:21/02/2020 ರಂದು ಚಿಂತಾಮಣಿ ತಾಲ್ಲೂಕು ದಿಗವಕೋಟೆ ಗ್ರಾಮದ ಜಾತ್ರೆಯಲ್ಲಿ ದೀಪೋತ್ಸವ ಇದ್ದ ಪ್ರಯುಕ್ತ ನಾನು ಜಾತ್ರೆಯಲ್ಲಿ ಐಸ್ ಕ್ರೀಂ ವ್ಯಾಪಾರ ಮಾಡಲು ಟಾಟಾ ಎಸಿಇ ವಾಹನದಲ್ಲಿ ಹೋಗುತ್ತಿದ್ದಾಗ, ನನ್ನ ಪತ್ನಿ ಮತ್ತು ನನ್ನ ಮಕ್ಕಳಾದ ಹಾತೀಫಾ, ಶಾಹೀದಾರವರು ನಾವು ಸಹ ಜಾತ್ರೆ ನೋಡಲು ನಿಮ್ಮೊಂದಿಗೆ ಬರುತ್ತೇವೆ, ಎಂದು ಕೇಳಿದ್ದು, ನಾನು ಮಕ್ಕಳಿಗೆ ಶಾಲೆ ರಜೆ ಇದ್ದುದರಿಂದ ನನ್ನೊಂದಿಗೆ ಜಾತ್ರೆಗೆ ದಿನಾಂಕ:21/02/2020ರಂದು ಮದ್ಯಾಹ್ನ 12-00 ಗಂಟೆಗೆ ಕರೆದುಕೊಂಡು ಹೋಗಿ ಐಸ್ ಕ್ರೀಂ ವ್ಯಾಪಾರ ಮಾಡಿಕೊಂಡು ನನ್ನ ಇಬ್ಬರು ಮಕ್ಕಳಿಗೆ ಜಾತ್ರೆಯನ್ನು ತೋರಿಸಿ ನಂತರ ರಾತ್ರಿ ಆಕರ್ೆಸ್ಟ್ರಾ ನೋಡಿಕೊಂಡು ಮನೆಗೆ ಹೋಗಲು ಈ ದಿನ ದಿನಾಂಕ:22/02/2020 ರಂದು ಮುಂಜಾನೆ ಸುಮಾರು 04-00 ಗಂಟೆಯ ಸಮಯದಲ್ಲಿ ನಾನು, ನನ್ನ ಪತ್ನಿ ಮತ್ತು ನನ್ನ ಮಕ್ಕಳು ದಿಗುವಕೋಟೆ ಗ್ರಾಮದ ಈಶ್ವರ ದೇವಸ್ಥಾನದ ಮೈದಾನದಿಂದ ದಿಗವಕೋಟೆಗೆ ಹೋಗುವ ಮಣ್ಣಿನ ರಸ್ತೆಯ ಬದಿಯಲ್ಲಿ ಮೈದಾನದಲ್ಲಿ ನಿಲ್ಲಿಸಿದ್ದ ನಮ್ಮ ಟಾಟಾ ಏಸಿಇ ವಾಹನದ ಬಳಿ ರಸ್ತೆಯ ಎಡಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಆಕರ್ೆಸ್ಟ್ರಾ ಸೌಂಡ್ ಸಿಸ್ಟಮ್ ಹಾಗೂ ಆಕರ್ೆಸ್ಟ್ರಾ ಉಪಕರಣಗಳನ್ನು ಹಾಕಿಕೊಂಡು ಬಂದಿದ್ದ ಕೆಎ-10 6501 ನೊಂದಣಿ ಸಂಖ್ಯೆಯ ಈಚರ್ ವಾಹನವನ್ನು ಅದರ ಚಾಲಕ ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ನನ್ನ ಮಗಳು ಶಾಹೀದಾರವರಿಗೆ ಹಿಂಬದಿಯಿಂದ ಡಿಕ್ಕಿ ಹೊಡೆಸಿ ಈಚರ್ ವಾಹನದ ಮುಂಭಾಗದ ಚಕ್ರವನ್ನು ನನ್ನ ಮಗಳ ತಲೆ ಮೇಲೆ ಹತ್ತಿಸಿದ ಪರಿಣಾಮ ನನ್ನ ಮಗಳು ಶಾಹೀದಾರವರ ತಲೆಗೆ ರಕ್ತ ಗಾಯವಾಗಿ ಸ್ಥಳದಲ್ಲಿ ಒದ್ದಾಡುತ್ತಿದ್ದಾಗ ನಾನು, ನನ್ನ ಹೆಂಡತಿ, ನಮ್ಮ ಗ್ರಾಮದ ಬಾಬಯ್ಯ ಬಿನ್ ಲೇಟ್ ವೆಂಕಟಸ್ವಾಮಿ, 42ವರ್ಷ, ಬೋವಿಜನಾಂಗ, ಐಸ್ ಕ್ರೀಂ ವ್ಯಾಪಾರ ಮತ್ತು ಬಾಬಾಜಾನ್ ಬಿನ್ ಲೇಟ್ ಅಮೀರ್ ಜಾನ್, 29ವರ್ಷ, ಮುಸ್ಲಿಂ ಜನಾಂಗ, ಐಸ್ ಕ್ರೀಂ ವ್ಯಾಪಾರರವರು ನೋಡಲಾಗಿ ಅಷ್ಟರಲ್ಲಿ ನನ್ನ ಮಗಳು ಮೃತಪಟ್ಟಿರುತ್ತಾಳೆ. ಸದರಿ ವಾಹನದ ಚಾಲಕನ ಹೆಸರು ವಿಳಾಸ ಗೊತ್ತಿರುವುದಿಲ್ಲ. ಆದ್ದರಿಂದ ಮೇಲ್ಕಂಡ ಕೆಎ-10 6501 ನೊಂದಣಿ ಸಂಖ್ಯೆಯ ಈಚರ್ ವಾಹನದ ಚಾಲಕನ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಬೇಕಾಗಿ ಕೊಟ್ಟ ದೂರಿನ ಸಾರಾಂಶವಾಗಿರುತ್ತೆ.
3. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.98/2020 ಕಲಂ. 15(ಎ) ಕೆ.ಇ ಆಕ್ಟ್:-
ದಿನಾಂಕ:21/02/2020 ರಂದು ಸಂಜೆ 7.30 ಗಂಟಗೆ DCB/CEN ಪೊಲೀಸ್ ಠಾಣೆಗೆ CHC-198 ಮಂಜುನಾಥ ರವರು ಮಾಲು ಮತ್ತು ಪಂಚನಾಮೆಯೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ವರದಿಯ ಸಾರಾಂಶವೇನೆಂದರೆ, ಈ ದಿನ ದಿನಾಂಕ:21/02/2020 ರಂದು ಚಿಕ್ಕಬಳ್ಳಾಪುರ DCB/CEN ಪೊಲೀಸ್ ಠಾಣೆಯ PI ಶ್ರೀ ರಾಜಣ್ಣ ರವರು ತನಗೆ ಹಾಗೂ CHC-239 ಮಲ್ಲಿಕಾರ್ಜುನ ರವರಿಗೆ ಚಿಂತಾಮಣಿ ತಾಲ್ಲೂಕಿನಲ್ಲಿ ಕಾನೂನು ಬಾಹಿರ ಚಟುವಟಿಕೆಗಳ ಪತ್ತೆ ಕಾರ್ಯಕ್ಕೆ ನೇಮಿಸಿದ್ದು ಅದರಂತೆ ತಾವು ಈ ದಿನ ಸಂಜೆ 6.00 ಗಂಟೆ ಸಮಯದಲ್ಲಿ ಚಿಂತಾಮಣಿ ತಾಲ್ಲೂಕಿನ ಬೂರಗಮಾಕಲಹಳ್ಳಿ ಗ್ರಾಮದಲ್ಲಿದ್ದಾಗ ಬೂರಗಮಾಕಲಹಳ್ಳಿ ಗ್ರಾಮದ ಪಾರ್ವತಮ್ಮ ಕೋಂ ಗುರುನಾಥ ರವರ ಚಿಲ್ಲರೇ ಅಂಗಡಿಯ ಮುಂಭಾಗ ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದಾಗಿ ಬಂದ ಖಚಿತ ಮಾಹಿತಿಯ ಮೇರೆಗೆ ಪಂಚಾಯ್ತಿದಾರರೊಂದಿಗೆ ಸದರಿ ಸ್ಥಳದಲ್ಲಿ ದಾಳಿ ಮಾಡಲಾಗಿ ಸ್ಥಳದಲ್ಲಿದ್ದವರು ಓಡಿ ಹೋಗಿದ್ದು, ಅಂಗಡಿಯ ಮುಂಭಾಗ ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವವರ ಬಗ್ಗೆ ಬಾತ್ಮಿದಾರರಲ್ಲಿ ವಿಚಾರಿಸಲಾಗಿ ಸದರಿಯವರ ಹೆಸರು ಶ್ರೀಮತಿ ಪಾರ್ವತಮ್ಮ ಕೋಂ ಗುರುನಾಥ, 45 ವರ್ಷ, ಬಲಜಿಗರು, ಚಿಲ್ಲರೆ ಅಂಗಡಿ ವ್ಯಾಪಾರ, ಬೂರಗಮಾಕಲಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು ಎಂದು ತಿಳಿಸಿರುತ್ತಾರೆ. ನಂತರ ಸ್ಥಳದಲ್ಲಿ ಪರಿಶೀಲಿಸಲಾಗಿ 1) HAYWARDS CHEERS WHISKY ಯ 90 ML ನ ಮದ್ಯ ತುಂಬಿದ 10 ಟೆಟ್ರಾ ಪಾಕೇಟ್ ಗಳು, 2) OLD TAVERN WHISKY ಯ 180 ML ನ ಮದ್ಯ ತುಂಬಿದ ಮೂರು ಟೆಟ್ರಾ ಪಾಕೇಟ್ ಗಳು, 3) ಎರಡು ಪ್ಲಾಸ್ಟಿಕ್ ಗ್ಲಾಸ್ ಗಳು, 4) ಒಂದು ಲೀಟರ್ ನ ಒಂದು ಖಾಲಿ ವಾಟರ್ ಬಾಟೆಲ್, 5) HAYWARDS CHEERS WHISKY ಯ 90 ML ಎರಡು ಖಾಲಿ ಟೆಟ್ರಾ ಪಾಕೇಟ್ ಗಳಿದ್ದು ಸದರಿಯವರುಗಳನ್ನು ಸಂಜೆ 6.15 ಗಂಟೆಯಿಂದ ಸಂಜೆ 7.00 ಗಂಟೆಯವರೆಗೆ ಪಂಚರ ಸಮಕ್ಷಮ ಪಂಚನಾಮೆಯ ಮೂಲಕ ಅಮಾನತ್ತು ಪಡಿಸಿಕೊಂಡು ಠಾಣೆಗೆ ಬಂದು ಕಾನೂನು ಬಾಹಿರವಾಗಿ ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವ ಶ್ರೀಮತಿ ಪಾರ್ವತಮ್ಮ ಕೋಂ ಗುರುನಾಥ ರವರ ವಿರುದ್ದ ಕಾನೂನು ರೀತ್ಯ ಕ್ರಮ ಜರುಗಿಸಲು ಕೋರಿ ನೀಡಿದ ವರದಿಯ ಸಾರಾಂಶವಾಗಿರುತ್ತೆ.
4. ಚಿಂತಾಮಣಿ ನಗರ ಪೊಲೀಸ್ ಠಾಣೆ ಮೊ.ಸಂ.33/2020 ಕಲಂ. 323-324-504-506 ಐ.ಪಿ.ಸಿ:-
ದಿನಾಂಕ: 21/02/2020 ರಂದು ಮದ್ಯಾಹ್ನ 2-30 ಗಂಟೆಗೆ ಪಿರ್ಯಾದಿದಾರರಾದ ಅಪ್ಸರ್ ಪಾಷ ಬಿನ್ ಲೇಟ್ ಅಬ್ದುಲ್ ಗಫಾರ್ ಸಾಬ್ ರವರು ನೀಡಿದ ಗಣಕೀಕೃತ ದೂರಿನ ಸಾರಾಂಶವೇನೆಂದರೆ ತಾನು ಗುಜರಿ ವ್ಯಾಪಾರ ಮಾಡಿಕೊಂಡು ಜೀವನ ಮಾಡಿಕೊಂಡಿರುತ್ತೇನೆ. ಹೀಗಿರುವಲ್ಲಿ ಈಗ್ಗೆ 6 ತಿಂಗಳ ಹಿಂದೆ ತಮ್ಮ ಮನೆಯಲ್ಲಿ ಗ್ಯಾಸ್ ಸ್ಟವ್ ರಿಪೇರಿ ಬಂದಿದ್ದು, ಸದರಿ ಗ್ಯಾಸ್ಸ್ಟವ್ನ್ನು ರಿಪೇರಿ ಮಾಡಿಸಲು ತನಗೆ ಪರಿಚಯವಿರುವ ಇದೇ ಚಿಂತಾಮಣಿ ನಗರದ ಚೌಡರೆಡ್ಡಿಪಾಳ್ಯದ 1 ನೇ ಕ್ರಾಸ್ ನ ವಾಸಿ ಜಮೀರ್ ಪಾಷ ಬಿನ್ ಅಬ್ದುಲ್ ಖಾದರ್ ರವರು ಸಹ ರಿಪೇರಿ ಅಂಗಡಿ ಇಟ್ಟುಕೊಂಡು ಬೀದಿ – ಬೀದಿ ತಿರುಗಾಡಿಕೊಂಡು ವ್ಯಾಪಾರ ಮಾಡುತ್ತಿತ್ತಾರೆ, ಅದೇ ವೇಳೆಗೆ ಚೌಡರೆಡ್ಡಿಪಾಳ್ಯದ ತಮ್ಮ ಮನೆಯ ಬಳಿ ಬಂದಾಗ ನಾನು ಗ್ಯಾಸ್ ಸ್ಟವ್ ನೀಡಿ ರಿಪೇರಿ ಮಾಡಿಕೊಡುವುದಾಗಿ ತಿಳಿಸಿದ್ದರ ಮೇರೆಗೆ ನಾನು 1000 ರೂ ಹಣವನ್ನು ನೀಡಿರುತ್ತೇನೆ. ನಂತರ ತಾನು ಕೆಲವು ದಿನಗಳು ಕಳೆದ ಮೇಲೆ ಜಮೀರ್ ಪಾಷ ರವರ ಬಳಿ ಹೋಗಿ ನನ್ನ ಗ್ಯಾಸ್ ಸ್ಟವ್ ರಿಪೇರಿ ಆಯಿತಾ ಎಂತ ಕೇಳಿದಾಗ ಇನ್ನೂ ಆಗಿಲ್ಲವೆಂತ ಸಬೂಬು ಹೇಳುತ್ತಾ ಇರುತ್ತಾನೆ. ಹೀಗಿರುವಲ್ಲಿ ಈ ದಿನ ದಿನಾಂಕ: 20/02/2020 ರಂದು ಸಂಜೆ ಸುಮಾರು 5-00 ಗಂಟೆಯಲ್ಲಿ ಸೊಣ್ಣಶೆಟ್ಟಿಹಳ್ಳಿಯ ಆಟೋ ನಿಲ್ದಾಣದ ಬಳಿ ಇರುವ ನಜಾಮ್ ರವರ ಗುಜರಿ ಅಂಗಡಿಯ ಬಳಿ ನಡೆದುಕೊಂಡು ಹೋಗುತ್ತಿರುವಾಗ ಸದರಿ ಜಮೀರ್ ಪಾಷ ರವರು ಕಾಣಿಸಿದ್ದು, ಆಗ ತಾನು ತನ್ನ ಗ್ಯಾಸ್ ಸ್ಟವ್ ಯಾವಾಗ ಕೊಡುತ್ತೀಯಾ ಇಲ್ಲವೇ ತನ್ನ ಹಣವನ್ನು ವಾಪಸ್ಸು ಕೊಟ್ಟುಬಿಡು ಎಂದು ಕೇಳಿದಾಗ ಇದ್ದಕಿದಂತೆ ಜಮೀರ್ ಪಾಷ ರವರು ತನ್ನ ಮೇಲೆ ಏಕಾಏಕಿ ಏ ನಿನಗೆ ನಾನು ಯಾವ ಹಣವನ್ನು ಮತ್ತು ಹೊಸ ಗ್ಯಾಸ್ ಸ್ಟವ್ ಸಹ ಕೊಡುವುದಿಲ್ಲ ನಿನ್ನ ಕೈಯಲ್ಲಿ ಏನಾಗುತ್ತೋ ಮಾಡಿಕೋ ಎಂದು ಅವಾಚ್ಯ ಶಬ್ದಗಳಿಂದ ಬೈದಾಗ , ನಂತರ ತಾನು ಸುಮ್ಮನೆ ಮನೆಗೆ ಹೋಗುತ್ತಿರುವಾಗ ಹಿಂದಗಡೆಯಿಂದ ಜಮೀರ್ ಪಾಷ ರವರು ಬಂದು ಕಾಲುಗಳಿಂದ ಒದ್ದು ,ಅಲ್ಲಿಯೇ ಇದ್ದ ಒಂದು ಕಬ್ಬಿಣದ ನಲ್ಲಿ ಕಂಬಿಯಿಂದ ತನ್ನ ಎರಡು ಕಾಲುಗಳ ಹಿಂಬದಿಯ ಬಳಿ ಹೊಡೆದಾಗ ತಾನು ಕೆಳಗಡೆ ಬಿದ್ದಾಗ ನನ್ನ ತಲೆಯ ಎಡಭಾಗದ ಬಳಿ ಸಹ ಕಬ್ಬಿಣದ ಕಂಬಿಯಿಂದ ಹೊಡೆದು ರಕ್ತಗಾಯಪಡಿಸಿರುತ್ತಾನೆ. ನಂತರ ಇನ್ನೊಮ್ಮೆ ನನಗೆ ಹಣ ಕೇಳಿದರೆ ನಿಮ್ಮನ್ನು ಪ್ರಾಣ ಸಹಿತ ಉಳಿಸುವುದಿಲ್ಲವೆಂತ ಪ್ರಾಣ ಬೆದರಿಕೆ ಹಾಕಿ ಹೊರಟು ಹೋಗಿರುತ್ತಾನೆ. ನಂತರ ತನ್ನನ್ನು ನನ್ನ ಸ್ನೇಹಿತ ಅಕ್ರಂ ಪಾಷ ರವರು ಬಂದು ನನ್ನನ್ನು ಉಪಚರಿಸಿ ನನಗೆ ಆದ ಗಾಯಗಳಿಗೆ ಚಿಕಿತ್ಸೆಗಾಗಿ ಯಾವುದೋ ವಾಹನದಲ್ಲಿ ಚಿಂತಾಮಣಿಯ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲು ಮಾಡಿರುತ್ತಾರೆ. ತಾನು ಆಸ್ಪತ್ರೆಯಲ್ಲಿ ಹೇಳಿಕೆ ಕೊಡುವ ಸ್ಥಿತಿಯಲ್ಲಿ ಇಲ್ಲದ ಕಾರಣ ಈ ದಿನ ಠಾಣೆಗೆ ಹಾಜರಾಗಿ ದೂರುನ್ನು ನೀಡುತ್ತಿರುತ್ತೇನೆ. ಆದ್ದರಿಂದ ತನಗೆ ಅವಾಚ್ಯ ಶಬ್ದಗಳಿಂದ ಬೈದು ಕಾಲುಗಳಿಂದ ಮೈಮೇಲೆ ಒದ್ದು ಹೊಡೆದು ಮೂಗೇಟುಗಳನ್ನುಂಟು ಮಾಡಿ ಕಬ್ಬಿಣದ ಕಂಬಿಯಿಂದ ತಲೆ ಹಾಗೂ ಕಾಲುಗಳ ಹಿಂಬದಿಯ ಬಳಿ ಹೊಡೆದು ರಕ್ತಗಾಯಪಡಿಸಿ, ಪ್ರಾಣ ಬೆದರಿಕೆ ಹಾಕಿದ ಈ ಮೇಲ್ಕಂಡವರ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಿ ನನಗೆ ನ್ಯಾಯ ದೊರಕಿಸಿಕೊಡಬೇಕಾಗಿ ತಮ್ಮಲ್ಲಿ ಕೋರಿದ್ದರ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುತ್ತೆ.
5. ದಿಬ್ಬೂರಹಳ್ಳಿ ಪೊಲೀಸ್ ಠಾಣೆ ಮೊ.ಸಂ.16/2020 ಕಲಂ. 279-379 ಐ.ಪಿ.ಸಿ:-
ದಿನಾಂಕ 20/02/2020 ರಂದು ರಾತ್ರಿ 10-30 ಗಂಟೆಗೆ ಶಿಡ್ಲಘಟ್ಟ ವೃತ್ತ ನಿರೀಕ್ಷಕರಾದ ಶ್ರೀ.ಸುರೇಶ್ ಕೆ ರವರು ಒಂದು ಮರಳು ತುಂಬಿದ ಟ್ರ್ಯಾಕ್ಟರ್ ನನ್ನು ಹಾಗೂ ಇಬ್ಬರು ಆರೋಪಿಗಳನ್ನು ಕರೆತಂದು ಠಾಣೆಯ ಬಳಿ ಹಾಜರುಪಡಿಸಿ ನೀಡಿದ ದೂರಿನ ಸಾರಂಶವೇನೆಂದರೆ ದಿನಾಂಕ 20/02/2020 ರಂದು ತಾವು ರಾತ್ರಿ ಸರಹದ್ದು ಗಸ್ತಿಗೆ ಮಾನ್ಯ ಎಸ್.ಪಿ ಸಾಹೇಬರಿಂದ ನೇಮಕವಾಗಿದ್ದು ಅದರಂತ್ತೆ ರಾತ್ರಿ 9-00 ಗಂಟೆಗೆ ಶಿಡ್ಲಘಟ್ಟ ಟೌನ್ ನಿಂದ ರಾತ್ರಿ ಗಸ್ತು ಪ್ರಾರಂಭಿಸಿ ದ್ಯಾವಪ್ಪನ ಗುಡಿ ಮಾರ್ಗವಾಗಿ ದಿಬ್ಬೂರಹಳ್ಳಿ ಸರ್ಕಲ್ ಕಡೆ ಗಸ್ತುಮಾಡಿಕೊಂಡು ಚಿಂತಾಮಣಿ ರಸ್ತೆಯ ಕಡೆಗೆ ಹೋಗುತ್ತಿದ್ದಾಗ ಎದುರುಗಡೆಯಿಂದ ಕುದುಪಕುಂಟೆ ಗೇಟ್ ಬಳಿ ಒಂದು ವಾಹನ ಬರುತ್ತಿದ್ದು ಅನುಮಾನಗೊಂಡು ತಮ್ಮ ವಾಹನವನ್ನು ನಿಲ್ಲಿಸಿ ಆ ವಾಹನವನ್ನು ನಿಲ್ಲಿಸಲು ಟಾರ್ಚ್ ಸಹಾಯದಿಂದ ಸೂಚನೆ ನೀಡಿದ್ದು ಆ ಟ್ರ್ಯಾಕ್ಟರ್ ನ ಚಾಲಕ ಸದರಿ ವಾಹನದಲ್ಲಿ ಮರಳು ತುಂಬಿಕೊಂಡಿದ್ದು ವಾಹನವನ್ನು ನಿಲ್ಲಿಸದೆ ಅತಿವೇಗ ಮತ್ತು ಅಜಾಗರೂಕತೆಯಿಂದ ವಾಹನವನ್ನು ಚಾಲನೆಮಾಡಿಕೊಂಡು ದಿಬ್ಬೂರಹಳ್ಳಿ ಸರ್ಕಲ್ ವರೆಗೂ ಬಂದಿದ್ದು ಆತನನ್ನು ತಾನು ತನ್ನ ಸರ್ಕಾರಿ ಜೀಪ್ ನಲ್ಲಿ ಎ.ಹೆಚ್.ಸಿ 03 ನಾಗೇಶ್ ಜೀಪ್ ಚಾಲಕನ ಸಹಾಯದಿಂದ ಆ ವಾಹನವನ್ನು ಬೆನ್ನಟ್ಟಿಸಿಕೊಂಡು ಬಂದು ವಾಹನವನ್ನು ದಿಬ್ಬೂರಹಳ್ಳಿ ಸರ್ಕಲ್ ನಲ್ಲಿ ಹಿಡಿದುಕೊಂಡಿದ್ದು ವಾಹನದ ಚಾಲಕನನ್ನು ವಾಹನದಲ್ಲಿ ಇರುವ ಮರಳಿನ ಬಗ್ಗೆ ವಿಚಾರಮಾಡಲಾಗಿ ಆನೇಮಡಗು ಕೆರೆಯಲ್ಲಿ ಯಾವುದೇ ಪರವಾನಿಗೆ ಇಲ್ಲದೆ ಮರಳನ್ನು ಕಳವುಮಾಡಿಕೊಂಡು ಬಂದು ಹೆಚ್ಚಿನ ಬೆಲೆಗೆ ಮಾರಾಟಮಾಡುವ ಸಲುವಾಗಿ ದಿಬ್ಬೂರಹಳ್ಳಿಗೆ ತರುತ್ತಿರುವುದಾಗಿ ತಿಳಿಸಿರುತ್ತಾರೆ. ಸದರಿ ವಾಹನದ ಸಂಖ್ಯೆ ಎಪಿ 07 ಎಜಿ 1891 ನಂಬರಿನ ಇಂಜಿನ್ ಹಾಗೂ ನಂಬರ್ ಇಲ್ಲದ ಟ್ರ್ಯಾಲಿ ಆಗಿದ್ದು ಪರ್ಗೂಷನ್ ಕಂಪನಿಯ ಇಂಜಿನ್ ಆಗಿರುತ್ತೆ. ವಾಹನದಲ್ಲಿ ಇದ್ದವರ ಬಗ್ಗೆ ವಿಚಾರಿಸಲಾಗಿ ಟ್ರ್ಯಾಕ್ಟರ್ ನ ಚಾಲಕ 1)ಪ್ರಶಾಂತ್ ಬಿನ್ ರಾಮಲಿಂಗಪ್ಪ, 25ವರ್ಷ, ಆದಿ ಕರ್ನಾಟಕ ಜನಾಂಗ, ಡ್ರೈವರ್ ಕೆಲಸ, ಆನೇಮಡಗು ಹಾಗೂ ಮರಳನ್ನು ತುಂಬಲು ಹೋಗಿದ್ದವನ ಹೆಸರು ಗಿರೀಶ್ @ ಚಿನ್ನಿ ಬಿನ್ ದ್ಯಾವಪ್ಪ, 22ವರ್ಷ, ಪರಿಶಿಷ್ಟ ಜಾತಿ ಜನಾಂಗ, ಆನೇಮಡಗು ಎಂದು ತಿಳಿಸಿದ್ದು ಚಾಲಕ ಪ್ರಶಾಂತ್ ಮುಂದುವರೆದು ಯಲಗಲಹಳ್ಳಿ ಲೋಕೇಶ್ ಎಂಬುವರು ಮರಳನ್ನು ತಂದೆರೆ ಮಾರಾಟಮಾಡಿಕೊಡುವುದಾಗಿ ತಿಳಿಸಿರುವುದಾಗಿ ತಿಳಿಸಿರುತ್ತಾರೆ ಮೇಲ್ಕಂಡ ವಾಹನದಲ್ಲಿ ಇರುವ ಮರಳನ್ನು ಆರೋಪಿಗಳಾದ ಪ್ರಶಾಂತ್ ಮತ್ತು ಗಿರೀಶ್ ರವರನ್ನು ನಿಮ್ಮ ವಶಕ್ಕೆ ನೀಡುತ್ತಿದ್ದು ಕಾನೂನು ಕ್ರಮ ಕೈಗೊಳ್ಳು ಸೂಚಿಸಿ ದೂರನ್ನು ನೀಡಿರುತ್ತಾರೆ. ಸದರಿ ದೂರು ಮರಳಿಗೆ ಸಂಬಂಧಿಸಿದ ದೂರಾಗಿರುವುದರಿಂದ ಆರೋಪಿತರನ್ನು ವಿಚಾರಣೆಮಾಡಿ ಕಲಂ 169 ಸಿಆರ್ ಪಿಸಿ ರೀತ್ಯ ಮುಚ್ಚಳಿಕೆಯನ್ನು ಪಡೆದುಕೊಂಡು ಬಿಡುಗಡೆಮಾಡಿರುತ್ತೇನೆ. ಸದರಿ ವಿಚಾರದಲ್ಲಿ ಕಲಂ 200 ಸಿಆರ್ ಪಿಸಿ ರೀತ್ಯ ಘನ ನ್ಯಾಯಾಲಯಕ್ಕೆ ಖಾಸಗಿ ದೂರನ್ನು ಸಲ್ಲಿಸಬೇಕಗಿರುತ್ತೆ ಹಾಗೂ ಕಲಂ 279 ಐ.ಪಿ.ಸಿ ಅಸಂಜ್ಞಯ ಅಪರಾಧವಾಗಿರುತ್ತೆ. ಆದ್ದರಿಂದ ಮೇಲ್ಕಂಡ ಉಲ್ಲೇಖಿತ ದೂರಿಗೆ ಸಂಬಂಧಿಸಿದಂತ್ತೆ ಕಲಂ 279, 379 ಐ.ಪಿ.ಸಿ ರೀತ್ಯ ಕೇಸನ್ನು ದಾಖಲಿಸಿಕೊಂಡು ತನಿಖೆಯನ್ನು ಕೈಗಳ್ಳಲು ಘನ ನ್ಯಾಯಾಲಯದಿಂದ ಅನುಮತಿಯನ್ನು ಪಡೆದುಕೊಂಡು ಕೇಸನ್ನು ದಾಖಲಿಸಿರುವುದಾಗಿರುತ್ತೆ.
6. ದಿಬ್ಬೂರಹಳ್ಳಿ ಪೊಲೀಸ್ ಠಾಣೆ ಮೊ.ಸಂ.17/2020 ಕಲಂ. 279-379 ಐ.ಪಿ.ಸಿ:-
ದಿನಾಂಕ 21/02/2020 ರಂದು ಬೆಳಗಿನ ಜಾವ 00-30 ಗಂಟೆಗೆ ಶಿಡ್ಲಘಟ್ಟ ವೃತ್ತ ನಿರೀಕ್ಷಕರಾದ ಶ್ರೀ.ಸುರೇಶ್ ಕೆ ರವರು ಒಂದು ಮರಳು ತುಂಬಿದ ಟ್ರ್ಯಾಕ್ಟರ್ ನನ್ನು ಹಾಗೂ ಇಬ್ಬರು ಆರೋಪಿಗಳನ್ನು ಕರೆತಂದು ಠಾಣೆಯ ಬಳಿ ಹಾಜರುಪಡಿಸಿ ನೀಡಿದ ದೂರಿನ ಸಾರಂಶವೇನೆಂದರೆ ದಿನಾಂಕ 20/02/2020 ರಂದು ರಾತ್ರಿ 11-00 ಗಂಟೆ ಸಮಯದಲ್ಲಿ ತಾನು ಕರ್ತವ್ಯ ನಿಮಿತ ದಿಬ್ಬೂರಹಳ್ಳಿ ಪೊಲೀಸ್ ಠಾಣೆಗೆ ಬೇಟಿ ನೀಡಿ ನಂತರ ಗಸ್ತು ಮುಂದುವರೆಸಿದ್ದು ಅಂದರೆ ಈ ದಿನ ರಾತ್ರಿ ಸರಹದ್ದು ಗಸ್ತು ಇದ್ದು ಆ ಗಸ್ತು ಮುಂದುವರೆಸಿ ದಿಬ್ಬೂರಹಳ್ಳಿ ಸರ್ಕಲ್ ನಿಂದ ಶಿಡ್ಲಘಟ್ಟ ಕಡೆಗೆ ಹೋಗುತ್ತಿದ್ದಾಗ ಬಶೆಟ್ಟಿಹಳ್ಳಿ ಗೇಟ್ ಸಮೀಪ ಆನೇಮಡಗು ಕಡೆಯಿಂದ ಒಂದು ಮರಳು ತುಂಬಿದ ಟ್ರ್ಯಾಕ್ಟರ್ ಬಂದಿದ್ದು ಸದರಿ ವಾಹನವನ್ನು ನಿಲ್ಲಿಸಲು ಸೂಚನೆ ನೀಡಿದ್ದು ಅದರ ಚಾಲಕ ವಾಹನವನ್ನು ನಿಲ್ಲಿಸದೆ ಅತಿವೇಗ ಮತ್ತು ಅಜಾಗರೂಕತೆಯಿಂದ ಶಿಡ್ಲಘಟ್ಟ ಕಡೆಗೆ ವಾಹವನ್ನು ಜೋರಾಗಿ ಓಡಿಸಿಕೊಂಡು ಹೋದವನನ್ನು ಜೀಪ್ ಚಾಲಕ ಎಹೆಚ್ ಸಿ 03 ನಾಗೇಶ್ ರವರ ಸಹಾಯದಿಂದ ಸರ್ಕಾರಿ ಜೀಪ್ ನಲ್ಲಿ ಬೆನ್ನಟಿಕೊಂಡು ಹೋಗಿ ಹಿಡಿದು ರಾತ್ರಿ 11-30 ಗಂಟೆ ಸಮಯದಲ್ಲಿ ಚಾಲಕನನ್ನು ಹಿಡಿದು ವಿಚಾರಿಸಲಾಗಿ ಸದರಿ ವಾಹನದ ಸಂಖ್ಯೆ , ಇಂಜಿನ್ ಸಂಖ್ಯೆ ಕೆಇಟಿಎಲ್ -52-1ಡಬ್ಲ್ಯೂ ಕೆ00ಸಿ ಆಗಿದ್ದು ರಿಜಿಸ್ಟ್ರೇಷನ್ ಸಂಖ್ಯೆ ನಮೂದಿಸಿರುವುದಿಲ್ಲ ಹಾಗೂ ಟ್ರ್ಯಾಲಿ ನಂಬರ್ ಎಪಿ 26 ಎಎ 3948 ಎಂದು ನಮೂದಿಸಿರುತ್ತೆ ಸದರಿ ವಾಹನದ ಮಾಲೀಕ ಯಲಗಲಹಳ್ಳಿ ಗ್ರಾಮದ ವಾಸಿ ಲೋಕೇಶ್ ಎಂಬುವರು ಆಗಿದ್ದು ಅವರ ಆದೇಶದ ವಾಹನದ ಚಾಲಕ 1)ತಿರುಮಲೇಶ್ ಬಿನ್ ತಿಮ್ಮರಾಯಪ್ಪ, 23ವರ್ಷ, ಆದಿಕರ್ನಾಟಕ ಯಲಗಲಹಳ್ಳಿ, 2)ನವೀನ್ ಬಿನ್ ಆಂಜಿನಪ್ಪ, 21ವರ್ಷ, ಆದಿ ಕರ್ನಾಟಕ ಜನಾಂಗ, ಕೂಲಿ ಕೆಲಸ, ಯಲಗಲಹಳ್ಳಿ ಎಂಬುವರು ಯಾವುದೇ ಪರವಾನಿಗೆ ಇಲ್ಲದೆ ಕಳ್ಳತನವಾಗಿ ಸರ್ಕಾರಕ್ಕೆ ಸೇರಿದ ಮೌಲ್ಯಯುತ ಮರಳನ್ನು ಅಕ್ರಮವಾಗಿ ಆನೇಮಡಗು ಕೆರೆಯಿಂದ ಕಳವುಮಾಡಿ ಹೆಚ್ಚಿನ ಬೆಲೆಗೆ ಮಾರಾಟಮಾಡಿ ಅಕ್ರಮವಾಗಿ ಹಣ ಸಂಪಾದಿಸಲು ಶಿಡ್ಲಘಟ್ಟ ಟೌನ್ ಗೆ ತೆಗೆದುಕೊಂಡು ಹೋಗುತ್ತಿರುವುದಾಗಿ ತಿಳಿದು ಬಂದಿರುತ್ತೆ. ಮೇಲ್ಕಂಡ ಮರಳು ತುಂಬಿದ ವಾಹನವನ್ನು, ಅದರ ಚಾಲಕ 1)ತಿರಮಲೇಶ್, 2)ಕೂಲಿ ಕೆಲಸಗಾರ ನವೀನ್ ಎಂಬುವರನ್ನು ನಿಮ್ಮ ವಶಕ್ಕೆ ನೀಡುತ್ತಿದ್ದು ಈ ಬಗ್ಗೆ ಕಾನೂನು ರೀತ್ಯ ಕ್ರಮ ಕೈಗೊಳ್ಳು ಸೂಚಿಸಿ ದೂರನ್ನು ನೀಡಿರುತ್ತಾರೆ. ಸದರಿ ದೂರು ಮರಳಿಗೆ ಸಂಬಂದಿಸಿದ ದೂರಾಗಿರುವುದರಿಂದ ಆರೋಪಿತರನ್ನು ವಿಚಾರಣೆಮಾಡಿ ಕಲಂ 169 ಸಿಆರ್ ಪಿಸಿ ರೀತ್ಯ ಮುಚ್ಚಳಿಕೆಯನ್ನು ಪಡೆದುಕೊಂಡು ಬಿಡುಗಡೆಮಾಡಿರುತ್ತೇನೆ. ಸದರಿ ವಿಚಾರದಲ್ಲಿ ಕಲಂ 200 ಸಿಆರ್ ಪಿಸಿ ರೀತ್ಯ ಘನ ನ್ಯಾಯಾಲಯಕ್ಕೆ ಖಾಸಗಿ ದೂರನ್ನು ಸಲ್ಲಿಸಬೇಕಗಿರುತ್ತೆ ಹಾಗೂ ಕಲಂ 279 ಐ.ಪಿ.ಸಿ ಅಸಂಜ್ಞಯ ಅಪರಾಧವಾಗಿರುತ್ತೆ. ಆದ್ದರಿಂದ ಮೇಲ್ಕಂಡ ಉಲ್ಲೇಖಿತ ದೂರಿಗೆ ಸಂಬಂಧಿಸಿದಂತ್ತೆ ಕಲಂ 279, 379 ಐ.ಪಿ.ಸಿ ರೀತ್ಯ ಕೇಸನ್ನು ದಾಖಲಿಸಿಕೊಂಡು ತನಿಖೆಯನ್ನು ಕೈಗಳ್ಳಲು ಘನ ನ್ಯಾಯಾಲಯದಿಂದ ಅನುಮತಿಯನ್ನು ಪಡೆದುಕೊಂಡು ಕೇಸನ್ನು ದಾಖಲಿಸಿರುವುದಾಗಿರುತ್ತೆ.
7. ಗೌರಿಬಿದನೂರು ಪುರ ಪೊಲೀಸ್ ಠಾಣೆ ಮೊ.ಸಂ.34/2020 ಕಲಂ. 78(3) ಕೆ.ಪಿ ಆಕ್ಟ್:-
ದಿನಾಂಕ 22/02/2020 ರಂದು ಬೆಳಗ್ಗೆ 9:00ಗಂಟೆಗೆ ನ್ಯಾಯಾಲಯದ ಪಿಸಿ 318 ದೇವರಾಜು ನ್ಯಾಯಾಲಯದ ಅನುಮತಿ ಪತ್ರವನ್ನು ತಂದು ಹಾಜರು ಪಡಿಸಿದ ವರಧಿಯ ಸಾರಾಂಶವೇನೆಂದರೆ.ವಿ. ಅವಿನಾಶ್ ಪಿ.ಎಸ್.ಐ ಗೌರಿಬಿದನೂರು ನಗರ ಪೊಲೀಸ್ ಠಾಣೆ ಆದ ನನಗೆ ದಿನಾಂಕ: 21-02-2020 ರಂದು ಮದ್ಯಾಹ್ನ 3:30 ಗಂಟೆಯಲ್ಲಿ ಠಾಣೆಯಲ್ಲಿದ್ದಾಗ ಬಂದ ಖಚಿತ ಮಾಹಿತಿಯಂತೆ ಗೌರಿಬಿದನೂರು ನಗರದ ಬೆಂಗಳೂರು ವೃತ್ತದ ಸರ್ಕಾರಿ ಆಸ್ಪತ್ರೆಯ ಮುಂಭಾಗ ಸಾರ್ವಜನಿಕರು ಓಡಾಡುವ ಮುಖ್ಯ ರಸ್ತೆಯಲ್ಲಿ ಮಟ್ಕಾ ಜೂಜಾಟವಾಡುತ್ತಿರುವುದಾಗಿ ಮಾಹಿತಿ ಬಂದಿದ್ದರ ಮೇರೆಗೆ, ಕೂಡಲೇ ನಾನು ಠಾಣೆಗೆ ಪಂಚರನ್ನು ಕರೆಸಿಕೊಂಡು ಅವರಿಗೆ ವಿಚಾರವನ್ನು ತಿಳಿಸಿ ಪಂಚ ಸಾಕ್ಷಿಗಳಾಗಿ ಬರಬೇಕೆಂದು ತಿಳಿಸಿದ್ದರಿಂದ ಅವರು ಒಪ್ಪಿಕೊಂಡ ನಂತರ ನಾನು ಪಂಚರು ಹಾಗೂ ಠಾಣಾ ಸಿಬ್ಬಂದಿಯವರಾದ ಪಿ.ಸಿ 17 ಲಕ್ಷ್ಮೀನಾರಾಯಣ, ಪಿಸಿ 399 ಶ್ರೀಪತಿ ರವರೊಂದಿಗೆ ಇಲಾಖೆಯು ಒದಗಿಸಿರುವ ಸರ್ಕಾರಿ ವಾಹನದಲ್ಲಿ ಬೆಂಗಳೂರು ವೃತ್ತದ ಬಳಿ ಮರೆಯಲ್ಲಿ ನಿಂತು ನೋಡಿದಾಗ ಯಾರೊ ಒಬ್ಬ ವ್ಯಕ್ತಿಯು 1/- ರೂಪಾಯಿಗೆ 70/- ರೂಪಾಯಿಗಳನ್ನು ಕೊಡುವುದಾಗಿ ಸಾರ್ವಜನಿಕ ಸ್ಥಳದಲ್ಲಿ ಕೂಗಾಡುತ್ತಿರುವುದು ಕಂಡುಬಂದಿತು.ನಾನು ಪಂಚರ ಸಮ್ಮುಖದಲ್ಲಿ ಸುತ್ತುವರಿದು ಸಿಬ್ಬಂದಿಯ ಸಹಾಯದಿಂದ ಹಿಡಿದುಕೊಂಡು, ಅವನ ಹೆಸರು ಮತ್ತು ವಿಳಾಸವನ್ನು ಕೇಳಲಾಗಿ ಮಂಜುನಾಥ ಬಿನ್ ಅಶ್ವತ್ಥರೆಡ್ಡಿ, 33ವರ್ಷ, ವಕ್ಕಲಿಗರು, ಟೀ ಅಂಗಡಿ ವ್ಯಾಪಾರ ಹಿರೇಬಿದನೂರು ಗೌರಿಬಿದನೂರು ನಗರ. ಫೋ:8123977415 ಎಂದು ತಿಳಿಸಿದ್ದು, ಅವನಿಗೆ ಮಟ್ಕಾ ಜೂಜಾಟವಾಡುವುದಕ್ಕೆ ಯಾವುದಾದರೂ ಪರವಾನಗಿ ಇದೆಯೇ ಎಂದು ಕೇಳಿದಾಗ ಅತನು ನನ್ನ ಬಳಿ ಯಾವುದೆ ಪರವಾನಗಿ ಇಲ್ಲವೆಂದು ತಿಳಿಸಿದನು ಆ ಸಮಯದಲ್ಲಿ ಆ ವ್ಯಕ್ತಿಯ ಅಂಗಶೋಧನೆ ಮಾಡಲಾಗಿ ಒಂದು ಮಟ್ಕಾಚೀಟಿ ಬರೆಯುವ ಪುಸ್ತಕ, ಒಂದು ಬಾಲ್ ಪಾಯಿಂಟ್ ಪೆನ್ನು ಮತ್ತು ನಗದು ಹಣ 1230/- ರೂಪಾಯಿಗಳು ಇದ್ದು, ಹಣದ ಬಗ್ಗೆ ವಿಚಾರ ಮಾಡಲಾಗಿ ಮಟ್ಕಾ ಜೂಜಾಟದಿಂದ ಬಂದ ಹಣ ಎಂದು ತಿಳಿಸಿದನು ನಂತರ ಆರೋಪಿಯನ್ನು ವಶಕ್ಕೆ ಪಡೆದು ಮದ್ಯಾಹ್ನ 3:45 ಗಂಟೆಯಿಂದ 4:30 ಗಂಟೆಯವರಗೆ ಸ್ಥಳದಲ್ಲಿಯೆ ಠಾಣೆಗೆ ಒದಗಿಸಿರುವ ಲ್ಯಾಪ್ ಟ್ಯಾಪ್ ನಲ್ಲಿ ಪಂಚನಾಮೆಯನ್ನು ಟೈಪ್ ಮಾಡಿ ಆರೋಪಿ ಹಾಗೂ ಮಾಲಿನೊಂದಿಗೆ ಸಂಜೆ 4:45 ಗಂಟೆಗೆ ಠಾಣೆಗೆ ವಾಪಸ್ಸು ಬಂದು ಮುಂದಿನ ಕ್ರಮ ಕೈಗೊಳ್ಳುವುದಕ್ಕಾಗಿ ನೀಡಿದ ವರಧಿಯನ್ನು ಪಡೆದು CR 34/2020 ಕಲಂ 78 ಕ್ಲಾಸ್ 3 ಕೆ ಪಿ ಆಕ್ಟ್ ರೀತ್ಯಾ ಪ್ರಕರಣ ದಾಖಲಿಸಿರುತ್ತೆ.
8. ಗೌರಿಬಿದನೂರು ಪುರ ಪೊಲೀಸ್ ಠಾಣೆ ಮೊ.ಸಂ.35/2020 ಕಲಂ. 78(3) ಕೆ.ಪಿ ಆಕ್ಟ್:-
ದಿನಾಂಕ 22/02/2020 ರಂದು ಬೆಳಿಗ್ಗೆ 09:30 ಗಂಟೆಯಲ್ಲಿ ನ್ಯಾಯಾಲಯದ ಸಿಬ್ಬಂದಿ ಹಾಜರುಪಡಿಸಿದ ಅನುಮತಿ ಪತ್ರದ ಸಾರಾಂಶವೇನೆಂದರೆ, ವಿ. ಅವಿನಾಶ್ ಪಿ.ಎಸ್.ಐ ಗೌರಿಬಿದನೂರು ನಗರ ಪೊಲೀಸ್ ಠಾಣೆ ಆದ ನನಗೆ ದಿನಾಂಕ: 21-02-2020 ರಂದು ಸಂಜೆ 5:00 ಗಂಟೆಯಲ್ಲಿ ಠಾಣೆಯಲ್ಲಿದ್ದಾಗ ಬಂದ ಖಚಿತ ಮಾಹಿತಿಯಂತೆ ಗೌರಿಬಿದನೂರು ನಗರದ ಬಜಾರ್ ರಸ್ತೆಯ ಮಾರಮ್ಮ ದೇವಾಲಯದ ಬಳಿ ಸಾರ್ವಜನಿಕರು ಓಡಾಡುವ ಮುಖ್ಯ ರಸ್ತೆಯಲ್ಲಿ ಮಟ್ಕಾ ಜೂಜಾಟವಾಡುತ್ತಿರುವುದಾಗಿ ಮಾಹಿತಿ ಬಂದಿದ್ದರ ಮೇರೆಗೆ, ಕೂಡಲೇ ನಾನು ಠಾಣೆಗೆ ಪಂಚರನ್ನು ಕರೆಸಿಕೊಂಡು ಅವರಿಗೆ ವಿಚಾರವನ್ನು ತಿಳಿಸಿ ಪಂಚ ಸಾಕ್ಷಿಗಳಾಗಿ ಬರಬೇಕೆಂದು ತಿಳಿಸಿದ್ದರಿಂದ ಅವರು ಒಪ್ಪಿಕೊಂಡ ನಂತರ ನಾನು ಪಂಚರು ಹಾಗೂ ಠಾಣಾ ಸಿಬ್ಬಂದಿಯವರಾದ ಹೆಚ್ ಸಿ 244 ಗೋಪಾಲ, ಪಿಸಿ 282 ರಮೇಶ ರವರೊಂದಿಗೆ ಇಲಾಖೆಯು ಒದಗಿಸಿರುವ ಸರ್ಕಾರಿ ವಾಹನದಲ್ಲಿ ಬಜಾರ್ ರಸ್ತೆಯಲ್ಲಿ ಹೋಗಿ ಮಾರಮ್ಮ ದೇವಾಲಯದ ಸ್ವಲ್ಪ ದೂರದಲ್ಲಿ ಜೀಪ್ ನಿಲ್ಲಿಸಿ ಮರೆಯಲ್ಲಿ ನಿಂತು ನೋಡಿದಾಗ ಯಾರೊ ಒಬ್ಬ ವ್ಯಕ್ತಿಯು 1/- ರೂಪಾಯಿಗೆ 70/-ರೂಪಾಯಿಗಳನ್ನು ಕೊಡುವುದಾಗಿ ಸಾರ್ವಜನಿಕ ಸ್ಥಳದಲ್ಲಿ ಕೂಗುತ್ತಿರುವುದು ಕಂಡುಬಂದಿತು.ನಾನು ಪಂಚರ ಸಮ್ಮುಖದಲ್ಲಿ ಸುತ್ತುವರಿದು ಸಿಬ್ಬಂದಿಯ ಸಹಾಯದಿಂದ ಹಿಡಿದುಕೊಂಡು, ಅವನ ಹೆಸರು ಮತ್ತು ವಿಳಾಸವನ್ನು ಕೇಳಲಾಗಿ ರಿಯಾಜ್ ಬಿನ್ ಹಮೀರ್ ಜಾನ್, 40ವರ್ಷ, ಮುಸ್ಲಿಂ ಜನಾಂಗ, ಗಾರೆ ಕೆಲಸ, ರಜಾಕ್ ಸಾಬ್ ಗಲ್ಲಿ, ಗೌರಿಬಿದನೂರು ನಗರ. ಫೋ: 9663441733ಎಂದು ತಿಳಿಸಿದ್ದು, ಅವನಿಗೆ ಮಟ್ಕಾ ಜೂಜಾಟವಾಡುವುದಕ್ಕೆ ಯಾವುದಾದರೂ ಪರವಾನಗಿ ಇದೆಯೇ ಎಂದು ಕೇಳಿದಾಗ ಅತನು ನನ್ನ ಬಳಿ ಯಾವುದೆ ಪರವಾನಗಿ ಇಲ್ಲವೆಂದು ತಿಳಿಸಿದನು ಆ ಸಮಯದಲ್ಲಿ ಆ ವ್ಯಕ್ತಿಯ ಅಂಗಶೋಧನೆ ಮಾಡಲಾಗಿ ಒಂದು ಮಟ್ಕಾಚೀಟಿ ಬರೆಯುವ ಪುಸ್ತಕ, ಒಂದು ಬಾಲ್ ಪಾಯಿಂಟ್ ಪೆನ್ನು ಮತ್ತು ನಗದು ಹಣ 1055/- ರೂಪಾಯಿಗಳು ಇದ್ದು, ಹಣದ ಬಗ್ಗೆ ವಿಚಾರ ಮಾಡಲಾಗಿ ಮಟ್ಕಾ ಜೂಜಾಟದಿಂದ ಬಂದ ಹಣ ಎಂದು ತಿಳಿಸಿದನು ನಂತರ ಆರೋಪಿಯನ್ನು ವಶಕ್ಕೆ ಪಡೆದು ಸಂಜೆ 5:15 ಗಂಟೆಯಿಂದ 6:00 ಗಂಟೆಯವರಗೆ ಸ್ಥಳದಲ್ಲಿಯೆ ಠಾಣೆಗೆ ಒದಗಿಸಿರುವ ಲ್ಯಾಪ್ ಟ್ಯಾಪ್ ನಲ್ಲಿ ಪಂಚನಾಮೆಯನ್ನು ಟೈಪ್ ಮಾಡಿ ಆರೋಪಿ ಹಾಗೂ ಮಾಲಿನೊಂದಿಗೆ ಸಂಜೆ 6:15 ಗಂಟೆಗೆ ಠಾಣೆಗೆ ವಾಪಸ್ಸು ಬಂದು ಮುಂದಿನ ಕ್ರಮ ಕೈಗೊಳ್ಳುವುದಕ್ಕಾಗಿ ನೀಡಿದ ವರದಿಯನ್ನು ಪಡೆದು ಎನ್.ಸಿ ಆರ್ ದಾಖಲಿಸಿ ನಂತರ ನ್ಯಾಯಾಲಯದ ಅನುಮತಿಯನ್ನು ಪಡೆದು ಪ್ರಕರಣವನ್ನು ದಾಖಲಿಸಿರುತ್ತೇನೆ.
9. ಕೆಂಚಾರ್ಲಹಳ್ಳಿ ಪೊಲೀಸ್ ಠಾಣೆ ಮೊ.ಸಂ.20/2020 ಕಲಂ. 324-504-506 ರೆ/ವಿ 34 ಐ.ಪಿ.ಸಿ:-
ದಿನಾಂಕ 22-02-2020 ರಂದು ಪಿ.ಸಿ-484 ಶಿವಣ್ಣ ರವರು ಚಿಂತಾಮಣಿ ಸರ್ಕಾರಿ ಆಸ್ವತ್ರೆಯಲ್ಲಿ ಗಾಯಾಳು ಚೌಡರೆಡ್ಡಿ ಬಿನ್ ಲೇಟ್ ಎಂ.ಬುಡ್ಡಾರೆಡ್ಡಿ, 50 ವರ್ಷ, ವಕ್ಕಲಿಗರು, ಜಿರಾಯ್ತಿ, ಚಿಲಕಲನೇರ್ಪು ಗ್ರಾಮ, ಚಿಂತಾಮಣಿ ತಾಲ್ಲೂಕು ರವರ ಹೇಳಿಕೆ ಪಡೆದು ಮದ್ಯಾಹ್ನ 03.00 ಗಂಟೆಗೆ ಠಾಣೆಯಲ್ಲಿ ಹಾಜರುಪಡಿಸಿದ್ದ ಸಾರಾಂಶವೇನೆಂದರೆ. ದಿನಾಂಕ 22-02-2020 ರಂದು ಬೆಳಗ್ಗೆ 9.30 ಗಂಟೆ ಸಮಯದಲ್ಲಿ ತನ್ನ ತಮ್ಮನಾದ ಸುಬ್ಬಿರೆಡ್ಡಿ ರವರಿಗೆ ಬಾವಿ ನೀರು ಉಪಯೋಗಿಸುವ ವಿಚಾರದಲ್ಲಿ ಬುದ್ದಿವಾದ ಹೇಳಿದಾಗ ಸುಬ್ಬಿರೆಡ್ಡಿ ಏಕಾಏಕಿ ತನ್ನನ್ನು ಲೋಪರ್ ನನ್ನ ಮಗನೇ ನೀನು ಯಾರು ನನಗೆ ಹೇಳುವುದಕ್ಕೆ ಎಂದು ಅವಾಚ್ಯವಾಗಿ ಬೈದು, ಅಲ್ಲೇ ಇದ್ದ ಬಿದಿರಿನ ದೊಣ್ಣೆಯಿಂದ ತನ್ನ ತಲೆಗೆ ಹೊಡೆದು ರಕ್ತಗಾಯ ಪಡಿಸಿದನು. ತನ್ನ ಮಗ ನವೀನ ಅಡ್ಡ ಬರಲಾಗಿ ಆತನಿಗೂ ಅದೇ ದೊಣ್ಣೆಯಿಂದ ತಲೆಗೆ ಹೊಡೆದು ರಕ್ತಗಾಯ ಪಡಿಸಿದನು. ಆತನ ಮಗನಾದ ಗಗನ್ ರವರು ತನ್ನ ಮಗನ ಕತ್ತನ್ನು ಬಲವಾಗಿ ಹಿಡಿದು ನಿನ್ನನ್ನು ಸಾಯಿಸದೇ ಬಿಡುವುದಿಲ್ಲ ಎಂದು ಪ್ರಾಣ ಬೆದರಿಕೆ ಹಾಕಿರುತ್ತಾನೆ. ಸ್ಥಳಕ್ಕೆ ಬಂದ ತಮ್ಮ ಗ್ರಾಮದ ಶಂಕರಪ್ಪ ಬಿನ್ ಚೌಡಪ್ಪ ರವರು ಬಂದು ಜಗಳ ಬಿಡಿಸಿದರು. ಗಾಯಗೊಂಡ ನಾವು ಯಾವುದೋ ವಾಹನದಲ್ಲಿ ಚಿಂತಾಮಣಿ ಸರ್ಕಾರಿ ಆಸ್ವತ್ರೆಗೆ ಬಂದು ಚಿಕಿತ್ಸೆಗಾಗಿ ದಾಖಲಾಗಿರುತ್ತೇವೆ. ತಮ್ಮ ಮೇಲೆ ಹಲ್ಲೆ ಮಾಡಿದ ಮೇಲ್ಕಂಡವರ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ನೀಡಿದ ದೂರಿನ ಹೇಳಿಕೆ ಸಾರಾಂಶವಾಗಿರುತ್ತೆ.
10. ಕೆಂಚಾರ್ಲಹಳ್ಳಿ ಪೊಲೀಸ್ ಠಾಣೆ ಮೊ.ಸಂ.21/2020 ಕಲಂ. 324-504-506 ರೆ/ವಿ 34 ಐ.ಪಿ.ಸಿ:-
ದಿನಾಂಕ 22-02-2020 ರಂದು ಪಿ.ಸಿ-484 ಶಿವಣ್ಣ ರವರು ಚಿಂತಾಮಣಿ ಸರ್ಕಾರಿ ಆಸ್ವತ್ರೆಯಲ್ಲಿ ಗಾಯಾಳು ಸುಬ್ಬಿರೆಡ್ಡಿ ಬಿನ್ ಲೇಟ್ ಎಂ.ಬುಡ್ಡಾರೆಡ್ಡಿ, 46 ವರ್ಷ, ವಕ್ಕಲಿಗರು, ಜಿರಾಯ್ತಿ, ಚಿಲಕಲನೇರ್ಪು ಗ್ರಾಮ, ಚಿಂತಾಮಣಿ ತಾಲ್ಲೂಕು ರವರ ಹೇಳಿಕೆ ಪಡೆದು ಮದ್ಯಾಹ್ನ 03.30 ಗಂಟೆಗೆ ಠಾಣೆಯಲ್ಲಿ ಹಾಜರುಪಡಿಸಿದ್ದ ಸಾರಾಂಶವೇನೆಂದರೆ. ತಮ್ಮ ಅಣ್ಣತಮ್ಮಂದಿರ ನಡುವೆ ಆಸ್ತಿ ವಿಚಾರವಾಗಿ ತಕರಾರುಗಳಿದ್ದು, ಹೀಗಿರುವಲ್ಲಿ ತಾನು ದಿನಾಂಕ 22-02-2020 ರಂದು ಬೆಳಗ್ಗೆ 9.30 ಗಂಟೆ ಸಮಯದಲ್ಲಿ ತನ್ನ ಜಮೀನಿನಲ್ಲಿ ಬೆಳೆ ಬೆಳೆಯಲು ಕೆಲಸ ಮಾಡುತ್ತಿದ್ದಾಗ ಏಕಾಏಕಿ ತನ್ನ ನಾಲ್ಕನೇ ಅಣ್ಣನಾದ ಚೌಡರೆಡ್ಡಿ ಮತ್ತು ಆತನ ಮಗ ನವೀನ ರವರು ಬಂದು ಜಗಳ ತೆಗೆದು ಲೋಫರ್ ನನ್ನ ಮಗನೇ ನಿನೊಬ್ಬನೇ ಬೆಳೆ ಇಡುತ್ತೀಯಾ ಎಂದು ಅವಾಚ್ಯವಾಗಿ ಬೈದು, ಚೌಡರೆಡ್ಡಿ ರವರು ದೊಣ್ಣೆಯಿಂದ ತನಗೆ ತಲೆಯ ಮುಂಭಾಗ ಮತ್ತು ಎಡಗೈಗೆ ಹೊಡೆದು ರಕ್ತಗಾಯಪಡಿಸಿದ್ದು, ನವೀನ ಕಲ್ಲಿನಿಂದ ತಲೆಯ ಹಿಂಭಾಗಕ್ಕೆ ಹೊಡೆದು ರಕ್ತಗಾಯಪಡಿಸಿದನು. ಆಗ ತಮ್ಮ ಗ್ರಾಮದ ಅಂಜನೇಯ ಬಿನ್ ವೆಂಕಟರವಣಪ್ಪ ಮತ್ತು ಚೌಡರೆಡ್ಡಿ ಬಿನ್ ವೆಂಕಟರವಣಪ್ಪ ರವರು ಬಂದು ಜಗಳ ಬಿಡಿಸಿ ಗಾಯಗೊಂಡಿದ್ದ ತನ್ನನ್ನು ಉಪಚರಿಸಿದರು. ನಂತರ 108 ಅಂಬ್ಯೂಲೆನ್ಸ್ ವಾಹನದಲ್ಲಿ ಚಿಕಿತ್ಸೆಗೆ ಚಿಂತಾಮಣಿ ಸರ್ಕಾರಿ ಆಸ್ವತ್ರೆಗೆ ದಾಖಲಾಗಿರುತ್ತೇನೆ. ತನನ್ನ ತನ್ನ ಮೇಲೆ ಹಲ್ಲೆ ಮಾಡಿದ ಮೇಲ್ಕಂಡವರ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ನೀಡಿದ ದೂರಿನ ಹೇಳಿಕೆ ಸಾರಾಂಶವಾಗಿರುತ್ತೆ.
11. ನಂದಿಗಿರಿಧಾಮ ಪೊಲೀಸ್ ಠಾಣೆ ಮೊ.ಸಂ.10/2020 ಕಲಂ. 87 ಕೆ.ಪಿ ಆಕ್ಟ್:-
ದಿನಾಂಕ 22-02-2020 ರದು ಬೆಳಗ್ಗೆ 8-50 ಗಂಟೆಗೆ ಪಿಎಸ್ಐ ಸಾಹೇಬರು ದಾಳಿಯಿಂದ ಠಾಣೆಗೆ ವಾಪಸ್ಸು ಬಂದು ಪಂಚನಾಮೆ, ಇಬ್ಬರು ಆರೋಪಿಗಳು ಮತ್ತು ವಶಪಡಿಸಿಕೊಂಡ ಮಾಲಿನೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ಜ್ಞಾಪನದ ಸಾರಾಂಶವೇನೆಂದರೆ ಸಾಹೇಬರು ಇದೇ ದಿನ ಬೆಳಗ್ಗೆ 7:00 ಗಂಟೆ ಸಮಯದಲ್ಲಿ ನಂದಿ ಜಾತ್ರೆಯ ಬಂದೋಬಸ್ತಿನಲ್ಲಿದ್ದಾಗ ಯಾರೋ ಆಸಾಮಿಗಳು ಚಿಕ್ಕಬಳ್ಳಾಪುರ ತಾಲ್ಲೂಕು ನಂದಿ ಹೋಬಳಿಯ ಜಡಲತಿಮ್ಮನಹಳ್ಳಿ ಗ್ರಾಮದ ಮುನೇಶ್ವರ ದೇವಾಲಯದ ಮುಂಬಾಗ ಅಂದರ್-ಬಾಹರ್ ಇಸ್ಪೀಟ್ ಜೂಜಾಟವಾಡುತ್ತಿರುವುದಾಗಿ ಅವರಿಗೆ ಬಂದ ಬಾತ್ಮಿ ಮೇರೆಗೆ ಜೊತೆಯಲ್ಲಿದ್ದ ಸಿಬ್ಬಂದಿಯಾದ ಹೆಚ್.ಸಿ-32 ಕೇಶವ ಪಿಸಿ 177 ಉಮೇಶ ಪಿಸಿ 269 ನಾಗಪ್ಪ ರವರೊಂದಿಗೆ ಸರ್ಕಾರಿ ಜೀಪಾದ ಕೆಎ-40-ಜಿ-296 ರಲ್ಲಿ ಚಾಲಕ ಪಾರೂಖ್ ನೊಂದಿಗೆ ತಿರ್ನಹಳ್ಳಿ ಕ್ರಾಸಿಗೆ ಹೋಗಿ ಅಲ್ಲಿ ಪಂಚರನ್ನು ಬರಮಾಡಿಕೊಂಡು ಅವರ ಜೊತೆಯಲ್ಲಿ ಬೆಳಗ್ಗೆ 7-20 ಗಂಟೆಗೆ ಜಡಲತಿಮ್ಮನಹಳ್ಳಿ ಗ್ರಾಮದ ಮುನೇಶ್ವರ ದೇವಾಲಯಕ್ಕಿಂತಾ ಸ್ವಲ್ಪ ಹಿಂದೆಯೇ ಜೀಪನ್ನು ನಿಲ್ಲಿಸಿ ಮರೆಯಲ್ಲಿ ನಿಂತು ನೊಡಲಾಗಿ ಜನರು ಗುಂಪಾಗಿ ದೇವಾಲಯದ ಮುಂದೆ ಕುಳಿತುಕೊಂಡು ಮದ್ಯದಲ್ಲಿ ಒಂದು ಪ್ಲಾಸ್ಟಿಕ್ ಚೀಲವನ್ನು ಹಾಸಿಕೊಂಡು ಅಂದರ್ಗೆ 500/-ರೂ ಗಳೆಂದು, ಬಾಹರ್ 500/- ರೂ ಗಳೆಂದು ಜೋರಾಗಿ ಕೂಗುತ್ತ ಹಣವನ್ನು ಪಣವಾಗಿಟ್ಟು ಅಂದರ್-ಬಾಹರ್ ಇಸ್ಪೀಟ್ ಜೂಜಾಟವಾಡುತಿದ್ದು ಕಂಡು ಬಂದಿದ್ದು ಅವರ ಮೇಲೆ ದಾಳಿ ಮಾಡಿದಾಗ ಸ್ಥಳದಲ್ಲಿ ಹಣ, ಮತ್ತು ಇಸ್ಪೀಟ್ ಎಲೆಗಳನ್ನು ಬಿಟ್ಟು ಜೂಜಾಟವಾಡುತ್ತಿದ್ದ ಜನರು ಓಡಿ ಹೋದರು, ಜೊತೆಯಲ್ಲಿದ್ದ ಸಿಬ್ಬಂದಿ ಬೆನ್ನಟ್ಟಿ ಇಬ್ಬರು ಅಸಾಮಿಗಳನ್ನು ಹಿಡಿದುಕೊಂಡು ಬಂದು ನನ್ನ ಮುಂದೆ ಹಾಜರ್ಪಡಿಸಿದರು. ಅವರ ಹೆಸರು ವಿಳಾಸ ಕೇಳಲಾಗಿ 1) ಗೋವರ್ದನ್ ಬಿನ್ ಈಶ್ವರಪ್ಪ 30 ವರ್ಷ, ದೇವಾಂಗ ಜನಾಂಗ ಗೋಲ್ಡನ್ ಬಾರ್ನಲ್ಲಿ ಸಪ್ಲೈಯರ್ ಕೆಲಸ ಕಂದವಾರ ಗ್ರಾಮ ಚಿಕ್ಕಬಳ್ಳಾಪುರ ತಾಲ್ಲೂಕು ಎಂತ ತಿಳಿಸಿದ ಮತ್ತೊಬ್ಬನ ಹೆಸರು ವಿಳಾಸವನ್ನು ಕೇಳಲಾಗಿ 2) ನಾಗೇಶ್ ಬಿನ್ ನರಸಿಂಹಪ್ಪ 35 ವರ್ಷ ಬಲಜಿಗರು ಚಿಕನ್ ಅಂಗಡಿಯಲ್ಲಿ ಕೆಲಸ ವಾಸ ಕಂದವಾರ ಚಿಕ್ಕಬಳ್ಳಾಪುರ ತಾಲ್ಲುಕು ಮತ್ತು ಜಿಲ್ಲೆ ಎಂಬುದಾಗಿ ತಿಳಿಸಿದರು, ಸದರಿಯವರನ್ನು ಕುರಿತು ಓಡಿಹೋದವರ ಹೆಸರು ವಿಳಾಸವನ್ನು ಕೇಳಲಾಗಿ 3) ನವೀನ್ ಬಿನ್ ಶ್ರೀನಿವಾಸಪ್ಪ 35 ವರ್ಷ ಬಲಜಿಗರು ಪ್ಲೋರ್ ಮಿಲ್ಲಿನಲ್ಲಿ ಕೆಲಸ ಕಂದವಾರ ಚಿಕ್ಕಬಳ್ಳಾಪುರ ತಾಲ್ಲೂಕು4)ಕುಶಾಲ್ ಬಿನ್ ಲೇಟ್ ಶ್ರೀನಿವಾಸಪ್ಪ 27 ವರ್ಷ ಬಲಜಿಗರು ಏರೆ ಪೋರ್ಟಿನಲ್ಲಿ ಕೆಲಸ ವಾಪಸಂದ್ರ ಚಿಕ್ಕಬಳ್ಳಾಪುರ ತಾಲ್ಲೂಕು 5) ಮಹದೇವಚಾರಿ ಬಿನ್ ವೆಂಕಟರೋಣಾ ಚಾರಿ 45 ವರ್ಷ ಆಚಾರರು ಜಡಲತಿಮ್ಮನಹಳ್ಳಿ ಗ್ರಾಮ ಚಿಕ್ಕಬಳ್ಳಾಪುರ ತಾಲ್ಲೂಕು 6) ರಾಜಾ ಬಿನ್ ವೆಂಕಟೇಶಪ್ಪ 37 ವಷ ದೇವಾಂಗ ಜನಾಂಗ ಜಡಲತಿಮ್ಮನಹಳ್ಳಿ ಗ್ರಾಮ ರವರುಗಳು ಸಹ ಅಂದರ್- ಬಾಹರ್ ಇಸ್ಪೀಟ್ ಜೂಜಾಟವಾಡಲು ಬಂದಿದ್ದು ದಾಳಿ ಮಾಡುವ ಸಮಯದಲ್ಲಿ ಅಂದರ್-ಬಾಹರ್ ಜೂಜಾಟದ ಸ್ಥಳದಿಂದ ಓಡಿ ಹೋಗಿರುತ್ತಾರೆಂದು ತಿಳಿಸಿದರು ಸ್ಥಳದಲ್ಲಿ ಪ್ಲಾಸ್ಟಿಕ್ ಚೀಲದ ಮೇಲೆ ಬಿದ್ದಿದ್ದ ಹಣವನ್ನು ಮತ್ತು ಇಸ್ಪೀಟ್ ಎಲೆಗಳನ್ನು ಎಣಿಕೆ ಮಾಡಲಾಗಿ 500/- ರೂ ಮುಖ ಬೆಲೆಯ 12/- ನೋಟುಗಳು ಇದ್ದು ಒಟ್ಟು 6000/- ರುಪಾಯಿ ಹಣ ಇತ್ತು. ಹಾಗೂ ಚೆಲ್ಲಾ ಪಿಲ್ಲಿಯಾಗಿ ಪ್ಲಾಸ್ಟಿಕ್ ಚೀಲದ ಮೇಲೆ ಬಿದ್ದಿದ್ದ ಇಸ್ಪೀಟ್ ಎಲೆಗಳನ್ನು ಎಣಿಕೆ ಮಾಡಲಾಗಿ 52 ಇಸ್ಪೀಟ್ ಎಲೆಗಳಿದ್ದವು, ಇವುಗಳನ್ನು ಪಂಚರ ಸಮಕ್ಷಮ ಬೆಳಗ್ಗೆ 7-30 ಗಂಟೆಯಿಂದ 8-30 ಗಂಟೆಯವರೆಗೆ ಪಂಚನಾಮೆಯ ಮೂಲಕ ಅಮಾನತ್ತು ಪಡಿಸಿಕೊಂಡು ಆರೋಪಿಗಳನ್ನು ಮತ್ತು ಸ್ವತ್ತುಗಳನ್ನು ವಶಕ್ಕೆ ಪಡೆದು ಮುಂದಿನ ಕ್ರಮಕ್ಕಾಗಿ ಬೆಳಗ್ಗೆ 8-50 ಗಂಟೆಗೆ ಠಾಣೆಗೆ ವಾಪಸ್ಸು ಬಂದು ವರದಿಯನ್ನು ನೀಡುತ್ತಿದ್ದು ಈ ಬಗ್ಗೆ ಮುಂದಿನ ಕಾನೂನು ಕ್ರಮ ಜರುಗಿಸಲು ನೀಡಿದ ಜ್ಞಾಪನದ ಮೇರೆಗೆ ಈ ಪ್ರವವರದಿ,
12. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.37/2020 ಕಲಂ. 87 ಕೆ.ಪಿ ಆಕ್ಟ್:-
ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆಯ ಪಿ.ಎಸ್.ಐ ಆಗಿ ಕರ್ತವ್ಯ ನಿರ್ವಹಿಸ ಹರೀಶ್ ವಿ ಆದ ನಾನು ಘನ ನ್ಯಾಯಾಲಯದಲ್ಲಿ ಮನವಿ ಮಾಡಿಕೊಳ್ಳುವುದೇನೆಂದರೆ, ಈ ದಿನ ದಿನಾಂಕ: 21.02.2020 ರಂದು ಮದ್ಯಾಹ್ನ 12-00 ಗಂಟೆಯಲ್ಲಿ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತಿದ್ದಾಗ ಯಾರೋ ಸಾರ್ವಜನಿಕರು ಶಿಡ್ಲಘಟ್ಟ ತಾಲ್ಲೂಕು ಅನೂರು ಗ್ರಾಮದ ಕೆರೆ ಅಂಗಳದಲ್ಲಿನ ಜಾಲಿ ಮರಗಳ ಕೆಳಗಡೆ ಅಕ್ರಮವಾಗಿ ಅಂದರ್ ಬಾಹರ್ ಇಸ್ಪೀಟು ಜೂಜಾಟವಾಡುತ್ತಿರುವುದಾಗಿ ಬಂದ ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿಯವರಾದ ಹೆಚ್.ಸಿ 89 ಹರೀಶ, ಹೆಚ್.ಸಿ 123 ಶಿವಪ್ಪ, ಪಿ.ಸಿ. 14 ಗೋವಿಂದಪ್ಪ, ಪಿ.ಸಿ. 393 ನಂದಕುಮಾರ್ ಪಿ.ಸಿ. 548 ಕೃಷ್ಣಪ್ಪ, ಪಿಸಿ 434 ಬಾಬಾಜಾನ್, ಪಿಸಿ 529 ಸಿದ್ದೇಶ ರವರುಗಳೊಂದಿಗೆ ಜೀಪು ಚಾಲಕ ಎ.ಹೆಚ್.ಸಿ.15 ಗೌರಿಶಂಕರ ಹಾಗೂ ಠಾಣೆಯ ಬಳಿ ಇದ್ದ ಪಂಚಾಯ್ತಿದಾರರಿಗೆ ವಿಷಯವನ್ನು ತಿಳಿಸಿ ಕೆಎ.40.ಜಿ.357 ನಂಬರಿನ ಠಾಣಾ ಜೀಪಿನಲ್ಲಿ ಹಾಗೂ ದ್ವಿ ಚಕ್ರ ವಾಹನಗಳಲ್ಲಿ ಅನೂರು ಗ್ರಾಮದ ಕೆರೆಯ ಬಳಿ ಹೋಗಿ ಅನೂರು ಗ್ರಾಮದ ಕೆರೆಯ ಅಂಗಳದ ಬಳಿ ಮರಗಳ ಮರೆಯಲ್ಲಿ ಜೀಪು ನಿಲ್ಲಿಸಿ ವಾಚ್ ಮಾಡಲಾಗಿ 6 ಜನ ಅಸಾಮಿಗಳು 500 ರೂ ಅಂದರ್, 200 ರೂ ಬಾಹರ್ ಎಂದು ಅಕ್ರಮವಾಗಿ ಇಸ್ಪೀಟು ಜೂಜಾಟವಾಡುತ್ತಿದ್ದು, ಅಕ್ರಮವಾಗಿ ಇಸ್ಪೀಟು ಜೂಜಾಟ ಆಡುತ್ತಿದ್ದವರವನ್ನು ಸುತ್ತುವರೆದು ಹೆಸರು ವಿಳಾಸ ಕೇಳಲಾಗಿ 1) ರಾಘವೇಂದ್ರ ಬಿನ್ ನಾಗರಾಜ್, 22 ವರ್ಷ, ರೇಷ್ಮೆ ಕೆಲಸ, ನಾಯಕ, ಜೌಗುಪೇಟೆ ಶಿಡ್ಲಘಟ್ಟ ನಗರಇತನ ಬಳಿ 820 ರೂ ಹಣ ಇರುತ್ತೆ 2) ಗಜೇಂದ್ರ ಬಿನ್ ಕೇಶವಮೂರ್ತಿ, 34 ವರ್ಷ, ವ್ಯಾಪಾರ, ಹರಳೇಪೇಟೆ ಶಿಡ್ಲಘಟ್ಟ ನಗರ. ಇತನ ಬಳಿ 1100 ರೂ ಹಣ ಇರುತ್ತೆ, 3) ಶ್ರೀನಿವಾಸ ಬಿನ್ ಲೇಟ್ ಕೇಶವಪ್ಪ, 29 ವರ್ಷ, ರೇಷ್ಮೆ ಕೆಲಸ, ಬಲಜಿಗರು, ಕಾಮಾಟಿಗರ ಪೇಟೆ, ಶಿಡ್ಲಘಟ್ಟ ನಗರ ಇತನ ಬಳಿ 1800 ರೂ ಹಣ ಇರುತ್ತೆ. 4) ವಿಜಯ್ ಕುಮಾರ್ ಬಿನ್ ಕೃಷ್ಣಚಾರಿ, 27 ವರ್ಷ, ಕಾರ್ಪೆಂಟರ್ ಕೆಲಸ, ಮಯೂರ ವೃತ್ತ, ಶಿಡ್ಲಘಟ್ಟ ನಗರ ಇತನ ಬಳಿ 1600 ರೂ ಹಣ ಇರುತ್ತೆ. 5) ರಾಮಾಂಜಿ ಬಿನ್ ನಾಗರಾಜ, 30 ವರ್ಷ, ನಾಯಕ, ಜನಾಂಗ, ರೇಷ್ಮೆ ಕೆಲಸ, ಜೌಗುಪೇಟೆ ಶಿಡ್ಲಘಟ್ಟ ನಗರ ಇತನ ಬಳಿ 1100 ರೂ ಹಣ ಇರುತ್ತೆ. 6) ರವಿಶಂಕರ್ ಬಿನ್ ನಾಗರಾಜ, 31 ವರ್ಷ, ವಕ್ಕಲಿರು, ಅಟೋ ಚಾಲಕ, ಜೌಗುಪೇಟೆ ಶಿಡ್ಲಘಟ್ಟ ನಗರ ಇತನ ಬಳಿ 600 ರೂ ಹಣ ಇರುತ್ತೆ. ಸದರಿ 6 ಜನ ಅಸಾಮಿಗಳನ್ನು ಅಂದರ್ ಬಾಹರ್ ಜೂಜಾಟವಾಡಲು ಯಾವುದಾದರೂ ಪರವಾನಿಗೆ ಇದೆಯೇ ಎಂದು ಕೇಳಲಾಗಿ ಯಾವುದೇ ಪರವಾನಿಗೆ ಇಲ್ಲವೆಂದು ತಿಳಿಸಿರುತ್ತಾರೆ. ಅಂದರ್ ಬಾಹರ್ ಜೂಜಾಟವಾಡುತ್ತಿದ್ದ ಸ್ಥಳದಲ್ಲಿದ್ದ ಪ್ಲಾಸ್ಟಿಕ್ ಟಾರ್ಪಲ್ ಪೇಪರ್ ಮೇಲೆ ಚೆಲ್ಲಾ ಪಿಲ್ಲಿಯಾಗಿ ಬಿದ್ದಿದ್ದ ಇಸ್ಪೀಟು ಎಲೆಗಳನ್ನು ಲೆಕ್ಕ ಮಾಡಲಾಗಿ 52 ಇಸ್ಪೀಟ್ ಎಲೆಗಳಿರುತ್ತೆ. ಅಂದರ್ ಬಾಹರ್ ಇಸ್ಪೀಟು ಜೂಜಾಟಕ್ಕೆ ಅಸಾಮಿಗಳು ಪಣವಾಗಿ ಇಟ್ಟಿದ್ದ ಹಣ 7020 ರೂ ಇರುತ್ತೆ. 52 ಇಸ್ಪೀಟು ಎಲೆಗಳನ್ನು, ಆಸಾಮಿಗಳು ಪಣಕ್ಕಾಗಿ ಇಟ್ಟಿದ್ದ 7020 ರೂ ನಗದು ಹಣ, ಪ್ಲಾಸ್ಟಿಕ್ ಟರ್ಪಲ್ ಪೇಪರ್ ಅನ್ನು ಪಂಚಾಯ್ತಿದಾರರ ಸಮಕ್ಷಮ ಮದ್ಯಾಹ್ನ 12.30 ಗಂಟೆಯಿಂದ 1.30 ಗಂಟೆಯವರೆಗೆ ಮಹಜರ್ ಮೂಲಕ ಮುಂದಿನ ಕ್ರಮಕ್ಕಾಗಿ ಅಮಾನತ್ತು ಪಡಿಸಿಕೊಂಡು ವಶಕ್ಕೆ ಪಡೆದುಕೊಂಡಿರುವ 6 ಜನ ಆರೋಪಿಗಳೊಂದಿಗೆ ಮದ್ಯಾಹ್ನ 2.00 ಗಂಟೆಗೆ ಠಾಣೆಗೆ ವಾಪಸ್ ಬಂದು ಠಾಣಾ ಮೊ.ಸಂ. 37/2019 ಕಲಂ 87 ಕೆ.ಪಿ ಆಕ್ಟ್ ರೀತ್ಯಾ ಕೇಸು ದಾಖಲಿಸಿರುತ್ತೇನೆ.
13. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.38/2020 ಕಲಂ. 87 ಕೆ.ಪಿ ಆಕ್ಟ್:-
ದಿನಾಂಕ 21/02/2020 ರಂದು ರಾತ್ರಿ 10-00 ಗಂಟೆ ಸಮಯದಲ್ಲಿ ನಾನು ಠಾಣೆಯಲ್ಲಿ ಕರ್ತವ್ಯದಲ್ಲಿದ್ದಾಗ ಯಾರೋ ಸಾರ್ವಜನಿಕರಿಂದ ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣಾ ಸರಹದ್ದಿನ ಚೌಡಸಂದ್ರ ಗ್ರಾಮದ ಬಚ್ಚೇಗೌಡ ರವರ ವಾಸದ ಮನೆಯ ಪಕ್ಕದಲ್ಲಿರುವ ಬೀದಿ ದೀಪದ ಕೆಳಗೆ ಯಾರೋ ಆಸಾಮಿಗಳು ಅಕ್ರಮವಾಗಿ ಹಣವನ್ನು ಕಟ್ಟಿ ಅಂದರ್-ಬಾಹರ್ ಇಸ್ಪೀಟ್ ಜೂಜಾಟವಾಡುತ್ತಿರುವುದಾಗಿ ಬಾತ್ಮೀದಾರರಿಂದ ಖಚಿತ ಮಾಹಿತಿ ಬಂದಿದ್ದು, ಅದರಂತೆ ನಾನು ಠಾಣೆಯ ಸಿಬ್ಬಂಧಿಯವರಾದ ಪಿಸಿ-14 ಗೋವಿಂದಪ್ಪ, ಪಿಸಿ-27 ಸರ್ವೇಶ, ಪಿಸಿ-90 ರಾಜಕುಮಾರ್ ರವರೊಂದಿಗೆ ಠಾಣೆಗೆ ಒದಗಿಸಿರುವ ಜೀಪ್ ನಂಬರ್ ಕೆಎ-40-ಜಿ-357 ರಲ್ಲಿ ಚೌಡಸಂದ್ರ ಗ್ರಾಮಕ್ಕೆ ಹೋಗಿ ಪಿಸಿ-14 ಗೋವಿಂದಪ್ಪ ರವರಿಗೆ ಇಬ್ಬರು ಪಂಚರನ್ನು ಹಾಜರುಪಡಿಸುವಂತೆ ಸೂಚಿಸಿದ್ದು, ಅದರಂತೆ ಪಿಸಿ-14 ರವರು ಇಬ್ಬರು ಪಂಚರನ್ನು ಹಾಜರು ಪಡಿಸಿದ್ದು ನಂತರ ನಾನು ಪಂಚರಿಗೆ ದಾಳಿಯ ಬಗ್ಗೆ ಮಾಹಿತಿ ತಿಳಿಸಿ ಪಂಚರನ್ನು ಹಾಗು ಠಾಣೆಯ ಸಿಬ್ಬಂಧಿಯೊಂದಿಗೆ ರಾತ್ರಿ 10-30 ಗಂಟೆಗೆ ಚೌಡಸಂದ್ರ ಗ್ರಾಮದ ವಾಸಿ ಬಚ್ಚೇಗೌಡ ರವರ ಅಂಗಡಿಯ ಸಮೀಪ ಹೋಗಿ ಜೀಪ್ ಅನ್ನು ಮರೆಯಲ್ಲಿ ನಿಲ್ಲಿಸಿ, ನಂತರ ನಾವು ಜೀಪ್ ನಿಂದ ಇಳಿದು ನಡೆದುಕೊಂಡು ಬಚ್ಚೇಗೌಡ ರವರ ಮನೆಯ ಮರೆಯಲ್ಲಿ ನಿಂತು ವಾಚ್ ಮಾಡಲಾಗಿ ರಸ್ತೆಯ ಪಕ್ಕಲ್ಲಿರುವ ಬೀದಿ ದೀಪದ ಕೆಳಗೆ ಯಾರೋ 12 ಜನ ಆಸಾಮಿಗಳು ನೆಲಕ್ಕೆ ಟಾರ್ಪಲ್ ಅನ್ನು ಹಾಸಿ ಅದರ ಮೇಲೆ ವೃತ್ತಾಕಾರವಾಗಿ ಕುಳಿತು ಒಬ್ಬ ಆಸಾಮಿಯು ಇಸ್ಪೀಟ್ ಎಲೆಗಳನ್ನು ಹಾಕುತ್ತಿದ್ದು ಆ ಪೈಕಿ ಒಬ್ಬ ಆಸಾಮಿಯು ಅಂದರ್ 200 ರೂ ಎಂತಲೂ, ಮತ್ತೋಬ್ಬ ಆಸಾಮಿಯು ಬಾಹರ್ 300 ರೂ ಎಂತಲೂ ಉಳಿದ ಆಸಾಮಿಗಳು ಸಹ ಅಂದರ್ ಬಾಹರ್ ಎಂದು ಹಣವನ್ನು ಪಣವಾಗಿ ಕಟ್ಟಿ ಇಸ್ಪೀಟ್ ಜೂಜಾಟವಾಡುತ್ತಿರುವುದು ಖಚಿತವಾದ ಮೇಲೆ ದಾಳಿ ಮಾಡಿ ಇಸ್ಪೀಟ್ ಜೂಜಾಟವಾಡುತ್ತಿದ್ದ ಆಸಾಮಿಗಳನ್ನು ಸುತ್ತುವರೆದು ಸದರಿ ಆಸಾಮಿಗಳನ್ನು ಯಾರು ಓಡಬಾರದೆಂದು ಸೂಚಿಸಿದರೂ ಸಹ 9 ಜನ ಆಸಾಮಿಗಳು ಕತ್ತಲಲ್ಲಿ ಓಡಿ ಹೋಗಿದ್ದು, ಸ್ಥಳದಲ್ಲಿ 3 ಜನ ಆಸಾಮಿಗಳು ಸಿಕ್ಕಿ ಬಿದ್ದಿದ್ದು ಅವರನ್ನು ವಶಕ್ಕೆ ಪಡೆದು ಅವರ ಹೆಸರು ವಿಳಾಸ ಕೇಳಲಾಗಿ 1) ಹರೀಶ ಬಿನ್ ಆಂಜಿನಪ್ಪ, 33 ವರ್ಷ, ನಾಯಕರು, ಚಾಲಕ, ವಾಸ-ಚೌಡಸಂದ್ರ ಗ್ರಾಮ, ಶಿಡ್ಲಘಟ್ಟ ತಾಲ್ಲೂಕು, 2) ರಾಜೇಶ ಬಿನ್ ರಾಮಾಂಜಿನಪ್ಪ, 32 ವರ್ಷ, ವಕ್ಕಲಿಗರು, ಚಾಲಕ, ವಾಸ-ಚೌಡಸಂದ್ರ ಗ್ರಾಮ, ಶಿಡ್ಲಘಟ್ಟ ತಾಲ್ಲೂಕು, 3) ಮುನಿನಾರಾಯಣಪ್ಪ ಬಿನ್ ಲೇಟ್ ಮುನಿಶಾಮಪ್ಪ, 58 ವರ್ಷ, ಪ ಜಾತಿ, ಚಾಲಕ, ವಾಸ-ಚೌಡಸಂದ್ರ ಗ್ರಾಮ, ಶಿಡ್ಲಘಟ್ಟ ತಾಲ್ಲೂಕು ಎಂದು ತಿಳಿಸಿದ್ದು, ನಂತರ ಓಡಿ ಹೋದ ಆಸಾಮಿಗಳ ಹೆಸರು ವಿಳಾಸ ಕೇಳಲಾಗಿ 1) ನವೀನ್ ಬಿನ್ ನಾರಾಯಣಸ್ವಾಮಿ, 45 ವರ್ಷ, ವಕ್ಕಲಿಗರು, ಜೆ.ಸಿ,ಬಿ ಕಂಟ್ರಾಕ್ಟರ್, ವಾಸ-ಚೌಡಸಂದ್ರ ಗ್ರಾಮ, ಶಿಡ್ಲಘಟ್ಟ ತಾಲ್ಲೂಕು, 2) ಮುರಳೀಧರ ಬಿನ್ ಚನ್ನಪ್ಪ, 38 ವರ್ಷ, ವಕ್ಕಲಿಗರು, ಜಿರಾಯ್ತಿ, ವಾಸ-ಚೌಡಸಂದ್ರ ಗ್ರಾಮ, 3) ಕಾಂತರಾಜು ಬಿನ್ ರಾಮಪ್ಪ, 35 ವರ್ಷ, ವಕ್ಕಲಿಗರು, ಜಿರಾಯ್ತಿ, ವಾಸ-ಚೌಡಸಂದ್ರ ಗ್ರಾಮ, 4) ದೇವರಾಜು ಬಿನ್ ರಾಮಚಂದ್ರ, 32 ವರ್ಷ, ವಕ್ಕಲಿಗರು, ಜಿರಾಯ್ತಿ, ವಾಸ-ಚೌಡಸಂದ್ರ ಗ್ರಾಮ, 5) ಶಿವಣ್ಣ ಬಿನ್ ಸೊಣ್ಣಪ್ಪ, 55 ವರ್ಷ, ವಕ್ಕಲಿಗರು, ಜಿರಾಯ್ತಿ, ವಾಸ-ಚೌಡಸಂದ್ರ ಗ್ರಾಮ, 6) ಮಾರೇಗೌಡ ಬಿನ್ ಕೆಂಪಣ್ಣ, 50 ವರ್ಷ, ವಕ್ಕಲಿಗರು, ಜಿರಾಯ್ತಿ, ವಾಸ-ಚೌಡಸಂದ್ರ ಗ್ರಾಮ, 7) ಗಣೇಶ ಬಿನ್ ಕೃಷ್ಣಪ್ಪ, 45 ವರ್ಷ, ವಕ್ಕಲಿಗರು, ಜಿರಾಯ್ತಿ, ವಾಸ-ಚೌಡಸಂದ್ರ ಗ್ರಾಮ, 8) ಮುರಳೀಧರ ಬಿನ್ ಸೊಣ್ಣೇಗೌಡ, 37 ವರ್ಷ, ವಕ್ಕಲಿಗರು, ಜಿರಾಯ್ತಿ, ವಾಸ-ಚೌಡಸಂದ್ರ ಗ್ರಾಮ, 9) ಮುರಳಿ ಬಿನ್ ಮುನಿಯಪ್ಪ, 40 ವರ್ಷ, ವಕ್ಕಲಿಗರು, ಜಿರಾಯ್ತಿ, ವಾಸ-ಚೌಡಸಂದ್ರ ಗ್ರಾಮ ಎಂದು ತಿಳಿಸಿದ್ದು, ನಂತರ ಇಸ್ಪೀಟ್ ಜೂಜಾಟದ ಸ್ಥಳದಲ್ಲಿ ಟಾರ್ಪಲ್ ಮೇಲೆ ಚೆಲ್ಲಾ ಪಿಲ್ಲಿಯಾಗಿ ಬಿದ್ದಿದ್ದ ಹಣ ಮತ್ತು ಇಸ್ಪೀಟ್ ಎಲೆಗಳನ್ನು ತೆಗೆದು ಎಣಿಕೆ ಮಾಡಲಾಗಿ 52 ಇಸ್ಪೀಟ್ ಎಲೆಗಳು ಹಾಗು ಹಣ 4700-00 ರೂ ಇದ್ದು, ಮೇಲ್ಕಂಡ ಹಣವನ್ನು, ಇಸ್ಪೀಟ್ ಎಲೆಗಳನ್ನು ಹಾಗು ಟಾರ್ಪಲ್ ಅನ್ನು ರಾತ್ರಿ 10-30 ಗಂಟೆಯಿಂದ 11-30 ಗಂಟೆಯವರೆಗೆ ಅಮಾನತ್ತು ಪಡಿಸಿಕೊಂಡು ರಾತ್ರಿ 11-45 ಗಂಟೆಗೆ ಆರೋಪಿಗಳೊಂದಿಗೆ ವಾಪಸ್ಸಾಗಿ ಆರೋಪಿಗಳ ವಿರುದ್ದ ಠಾಣಾ ಮೊಸಂ-38/2020 ಕಲಂ 87 ಕೆ.ಪಿ ಆಕ್ಟ್ ರೀತ್ಯಾ ಸ್ವತಃ ಪ್ರಕರಣವನ್ನು ದಾಖಲಿಸಿಕೊಂಡಿರುತ್ತೇ.
14. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.39/2020 ಕಲಂ. 279-337 ಐ.ಪಿ.ಸಿ:-
ದಿನಾಂಕ:-22/02/2020 ರಂದು ಬೆಳಿಗ್ಗೆ 10-30 ಗಂಟೆಗೆ ಪಿರ್ಯಾದಿದಾರರಾದ ಶ್ರೀ ಚೇತನ್ ಬಿನ್ ಅಶ್ವತ್ಥಪ್ಪ, 25 ವರ್ಷ, ವಕ್ಕಲಿಗರು, ಜಿರಾಯ್ತಿ, ವಾಸ-ತೊಟ್ಲಿಗಾನಹಳ್ಳಿ ಗ್ರಾಮ, ಶಿಡ್ಲಘಟ್ಟ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ತನ್ನ ತಂದೆಯವರಾದ ಅಶ್ವತ್ಥಪ್ಪ ಬಿನ್ ಗೆಟ್ಟಪ್ಪ (60 ವರ್ಷ) ರವರು ಪ್ರತಿ ದಿನ ಬೆಳಗಿನ ಜಾವ ವಾಕಿಂಗ್ ಹೋಗುವ ಅಭ್ಯಾಸ ಇದ್ದು, ಅದರಂತೆ ಈ ದಿನ ದಿನಾಂಕ 22/02/2020 ರಂದು ಬೆಳಿಗ್ಗೆ ವಾಕಿಂಗ್ ಗೆ ಹೋಗುವ ಸಲುವಾಗಿ ಮನೆಯಿಂದ ಹೊರಟಿದ್ದು, ಬೆಳಿಗ್ಗೆ ಸುಮಾರು 6-30 ಗಂಟೆ ಸಮಯದಲ್ಲಿ ತನ್ನ ತಂದೆಯವರು ತಮ್ಮ ಗ್ರಾಮದ ನಾಗಮಂಗಲ ಗ್ರಾಮದ ಗೇಟ್ ಸಮೀಪ ರಸ್ತೆಯ ಎಡಬದಿಯಲ್ಲಿ ವಾಕಿಂಗ್ ಮಾಡಿಕೊಂಡು ಹೋಗುತ್ತಿದ್ದಾಗ ಈ ಸಮಯದಲ್ಲಿ ಶಿಡ್ಲಘಟ್ಟ ಕಡೆಯಿಂದ ಬಂದ ಕೆಎ-01-ಜೆಬಿ-6488 ನೊಂದಣಿ ಸಂಖ್ಯೆಯ ಪಲ್ಸರ್ ದ್ವಿ ಚಕ್ರ ವಾಹನವನ್ನು ಅದರ ಸವಾರನು ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಹಿಂಬದಿಯಿಂದ ತನ್ನ ತಂದೆಯವರಿಗೆ ಡಿಕ್ಕಿ ಹೊಡೆಸಿ ಅಪಘಾತವನ್ನುಂಟು ಮಾಡಿದ ಪರಿಣಾಮ ತನ್ನ ತಂದೆಯವರ ಎಡ ಕಾಲಿನ ಪಾದದ ಮೇಲ್ಭಾಗದಲ್ಲಿ ರಕ್ತಗಾಯವಾಗಿದ್ದು, ಈ ಸಮಯದಲ್ಲಿ ರಸ್ತೆಯಲ್ಲಿ ಬರುತ್ತಿದ್ದ ಯಾರೋ ಸಾರ್ವಜನಿಕರು ಮತ್ತು ಅಪಘಾತವನ್ನುಂಟು ಮಾಡಿದ ದ್ವಿ ಚಕ್ರ ವಾಹನದ ಸವಾರನು ತನ್ನ ತಂದೆಯವರನ್ನು ಉಪಚರಿಸಿ ಯಾವುದೋ ಕಾರಿನಲ್ಲಿ ತಮ್ಮ ಮನೆಯ ಬಳಿ ಕರೆದುಕೊಂಡು ಬಂದಿರುತ್ತಾರೆ. ನಂತರ ತಾನು ತನ್ನ ತಂದೆಯವರನ್ನು ವಿಚಾರ ಮಾಡಲಾಗಿ ನಡೆದ ವಿಷಯವನ್ನು ತಿಳಿಸಿದ್ದು, ಗಾಯಾಳುವಾಗಿದ್ದ ತನ್ನ ತಂದೆಯವರನ್ನು ತನ್ನ ಮಾವನಾದ ಲೋಕೇಶ್ ರವರು ಚಿಕಿತ್ಸೆಗಾಗಿ ಬೆಂಗಳೂರಿನ ಆರ್.ಎಂ.ವಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿರುತ್ತಾರೆ. ಆದ ಕಾರಣ ತನ್ನ ತಂದೆಯವರಿಗೆ ಅಪಘಾತವನ್ನುಂಟು ಮಾಡಿದ ಕೆಎ-01-ಜೆಬಿ-6488 ನೊಂದಣಿ ಸಂಖ್ಯೆಯ ಪಲ್ಸರ್ ದ್ವಿ ಚಕ್ರ ವಾಹನದ ಸವಾರನ ವಿರುದ್ದ ಮುಂದಿನ ಕಾನೂನು ರೀತ್ಯಾ ಕ್ರಮ ಜರುಗಿಸ ಬೇಕಾಗಿ ಕೊಟ್ಟ ದೂರು.