ದಿನಾಂಕ :22/01/2021 ರ ಅಪರಾಧ ಪ್ರಕರಣಗಳು

  1. ಚಿಕ್ಕಬಳ್ಳಾಪುರ ಸಂಚಾರಿ ಪೊಲೀಸ್ ಠಾಣೆ ಮೊ.ಸಂ. 04/2021 ಕಲಂ. 279,337 ಐಪಿಸಿ ಮತ್ತು ಸೆಕ್ಷನ್ 187 ಐಎಂವಿ ಆಕ್ಟ್ :-

ದಿನಾಂಕ:-22/01/2021 ರಂದು ಬೆಳಿಗ್ಗೆ 08-00 ಗಂಟೆಗೆ ಚಿಕ್ಕಬಳ್ಳಾಪುರ ಜಿಲ್ಲಾ ಸರ್ಕಾರಿ ಆಸ್ಪತ್ರೆಯಿಂದ ಬಂದ ಮೆಮೋ ಪಡೆದು ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳು ಶ್ರೀ.ಮುನಿರಾಜು ಬಿನ್ ಮುನಿಕೃಷ್ಣಪ್ಪ 22 ವರ್ಷ, ಲಾರಿ-ಕ್ಲೀನರ್ ಕೆಲಸ, ವಾರ್ಡ್ ನಂ-04, ಕುರುಬರಪೇಟೆ, ಶಿಡ್ಲಘಟ್ಟ ಟೌನ್ ಮತ್ತು ತಾಲ್ಲೂಕು, ಚಿಕ್ಕಬಳ್ಳಾಪುರ ಜಿಲ್ಲೆ ರವರಿಂದ ಪಡೆದ ಹೇಳಿಕೆಯ ದೂರಿನ ಸಾರಾಂಶವೇನೆಂದರೆ ತಾನು ದಿನಾಂಕ:-21/01/2021 ರಂದು ಕೆಲಸದ ನಿಮಿತ್ತ ಮನೆಯಿಂದ ಚಿಕ್ಕಬಳ್ಳಾಪುರಕ್ಕೆ ಬರಲು ಯಾವುದೋ ದ್ವಿಚಕ್ರವಾಹನದಲ್ಲಿ ಚಿಕ್ಕಬಳ್ಳಾಪುರದ ಡಿಸಿ ಕಛೇರಿವರೆಗೂ ಬಂದು ಅಲ್ಲಿಂದ ದ್ವಿಚಕ್ರವಾಹನವನ್ನು ಇಳಿದು ಡಿಸಿ ಕಛೇರಿಯಿಂದ ಚಿಕ್ಕಬಳ್ಳಾಪುರಕ್ಕೆ  ಕಾಲ್ನಡಿಗೆಯಲ್ಲಿ ಬರಲು ರಾತ್ರಿ ಸುಮಾರು 9-30 ಗಂಟೆಯ ಸಮಯದಲ್ಲಿ ಶಿಡ್ಲಘಟ್ಟ – ಚಿಕ್ಕಬಳ್ಳಾಪುರ ಎನ್.ಎಚ್-234 ರಸ್ತೆಯ ಸರ್.ಎಮ್.ವಿ ಶಾಲೆಯ ಮುಂಭಾಗದ ರಸ್ತೆಯ ಬಳಿ ಬರುತ್ತಿದ್ದಾಗ ಹಿಂದಿನಿಂದ ಶಿಡ್ಲಘಟ್ಟ ಕಡೆಯಿಂದ ಬಂದ ಯಾವುದೋ ದ್ವಿಚಕ್ರವಾಹನ ಸವಾರ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ನಡೆದುಕೊಂಡು ಬರುತ್ತಿದ್ದ ತನಗೆ ಡಿಕ್ಕಿ ಹೊಡೆಸಿದ ಪರಿಣಾಮ ತಾನು ಠಾರ್ ರಸ್ತೆಯಲ್ಲಿ ಬಿದ್ದಾಗ ತನಗೆ ತಲೆಯ ಹಿಂಭಾಗ, ಬಲ ಕೆನ್ನೆಗೆ, ಬಲ ಕಣ್ಣಿನ ಬಳಿ, ಎಡ ಮೊಣಕಾಲಿನ ಬಳಿ ರಕ್ತ ಗಾಯಗಳಾಗಿ ಹೊಟ್ಟೆಗೆ ತರಚಿದ ಗಾಯಗಳಾಗಿದ್ದು, ತಕ್ಷಣ ಅಲ್ಲಿನ ಸ್ಥಳೀಯರು ಉಪಚರಿಸಿ ರಸ್ತೆಯಲ್ಲಿ ಬರುತ್ತಿದ್ದ ಯಾವುದೋ ಆಟೋದಲ್ಲಿ ಚಿಕಿತ್ಸೆಗಾಗಿ ಚಿಕ್ಕಬಳ್ಳಾಪುರ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಸೇರಿಸಿದ್ದು, ಸದರಿ ಅಪಘಾತ ಪಡಿಸಿದ ದ್ವಿಚಕ್ರವಾಹನ ಸವಾರ ಅಪಘಾತ ಪಡಿಸಿದ ಸ್ಥಳದಿಂದ ವಾಹನ ಸಮೇತ ಪರಾರಿಯಾಗಿದ್ದು, ಅಪಘಾತ ಪಡಿಸಿ ಸ್ಥಳದಿಂದ ಹೊರಟು ಹೋದ ದ್ವಿಚಕ್ರವಾಹನ ಮತ್ತು ಸವಾರನನ್ನು ಪತ್ತೆಮಾಡಿ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ನೀಡಿದ ಹೇಳಿಕೆಯ ದೂರಿನ ಮೇರೆಗೆ ಚಿಕ್ಕಬಳ್ಳಾಪುರ ಜಿಲ್ಲಾ ಸರ್ಕಾರಿ ಆಸ್ಪತ್ರೆಯಿಂದ ಠಾಣೆಗೆ ಬಂದು ದಿನಾಂಕ:-22/01/2021 ರಂದು ಬೆಳಿಗ್ಗೆ 09-00 ಗಂಟೆಗೆ ಪ್ರಕರಣ ದಾಖಲಿಸಿಕೊಂಡಿರುತ್ತೆ.

  1. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 32/2021 ಕಲಂ. 419,420 ಐಪಿಸಿ ಮತ್ತು ಸೆಕ್ಷನ್ 66(C),66(D) (INFORMATION TECHNOLOGY ACT 2000 :-

ದಿನಾಂಕ 21-01-2021 ರಂದು ರಾತ್ರಿ 9-15 ಗಂಟೆಗೆ ಶ್ವೇತ ಕೆ.ವಿ ಕೊಂ ನರಸಿಂಹರೆಡ್ಡಿ, 32 ವರ್ಷ, ಗೃಹಣಿ, ವಕ್ಕಲಿಗರು, ನಂದಿನಿ ಲೇಔಟ್, ಸರಸ್ವತಿ ಪುರಂ, ಬೆಂಗಳೂರು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ  ತಾನು ಈ ಮೇಲ್ಕಂಡ ವಿಳಾಸದಲ್ಲಿ ವಾಸವಾಗಿದ್ದು ಗೃಹಣಿಯಾಗಿರುತ್ತೇನೆ. ತನಗೆ 2014 ರಲ್ಲಿ ಮದುವೆಯಾಗಿದ್ದು ತನ್ನ ತವರು ಮನೆ ಇದೇ ಚಿಂತಾಮಣಿ ತಾಲ್ಲೂಕು ಕೋನಪಲ್ಲಿ ಗ್ರಾಮ ವಾಗಿರುತ್ತೆ. ತಾನು ದಿನಾಂಕ 11-01-2021 ರಂದು ಕೋನಪಲ್ಲಿ ಗ್ರಾಮದ ತಮ್ಮ ಮನೆಯಲ್ಲಿ ರಾತ್ರಿ ಸುಮಾರು 9-00 ಗಂಟೆ ಸಮಯದಲ್ಲಿ ತಾನು ತನ್ನ ಬಾಬತ್ತು ಸಾಮ್ ಸಂಗ್ ಮೋಬೈಲ್ ನಲ್ಲಿ    APVIAAL APP  ನಲ್ಲಿ ಸೀರೆಯನ್ನು 269 ರೂ ಗಳಿಗೆ ಬುಕ್ ಮಾಡಿದ್ದು ತನ್ನ ಮೋಬೈಲ್ ನಲ್ಲಿದ್ದ ಪೋನ್ ಪೇ ನಂ 9886743214 ನಿಂದ 269 ರೂ ಹಣವನ್ನು ಸಹ ಪಾವತಿಸಿರುತ್ತೇನೆ. ನಂತರ ಸದರಿ ಆಪ್ ನಿಂದ ಯಾವುದೇ ಮಾಹಿತಿ ಬಂದಿರುವುದಿಲ್ಲ. ಹೀಗಿರುವಾಗ ಈ ದಿನ ದಿನಾಂಕ 21-01-2021 ರಂದು ಸಂಜೆ 4-47 ಗಂಟೆ ಸಮಯದಲ್ಲಿ 9832423927 ನಂಬರ್ ನಿಂದ ಯಾರೋ ಅಪರಿಚಿತ ಹೆಂಗಸು ವ್ಯಕ್ತಿ ಕರೆ ಮಾಡಿ ಇಂಗ್ಲೀಷ್ ಬಾಷೆಯಲ್ಲಿ ಮಾತನಾಡಿ ನೀವು APVIAAL APP  ನಲ್ಲಿ ಬುಕ್ ಮಾಡಿದ್ದ ಸೀರೆ ಆರ್ಡರ್ ರದ್ದಾಗಿದೆ ನೀವು ಪಾವತಿಸಿರುವ ಹಣವನ್ನು ರಿಪಂಡ್ ಮಾಡುತ್ತೇವೆ, ನಾವು ಒಂದು ಲಿಂಕ್ ಕಳುಸುತ್ತೇವೆ ಆ ಲಿಂಕ್ ನಲ್ಲಿ ನಿಮ್ಮ ಮಾಹಿತಿಯನ್ನು ತುಂಬಿ ಎಂದು ಹೇಳಿ ಲಿಂಕ್ ಕಳುಹಿಸಿರುತ್ತಾರೆ. ನಂತರ ತನ್ನ ಮೋಬೈಲ್ ಗೆ ಲಿಂಕ್ ಬಮದಿದ್ದು ತಾನು ಸದರಿ ಲಿಂಕ್ ಓಪನ್ ಮಾಡಿ ತನ್ನ ಕೆನರಾ ಬ್ಯಾಂಕ್ ಎಟಿಎಂ ಕಾರ್ಡ್ ನಂಬರ್ ಮತ್ತು ಸಿವಿವಿ ನಂಬರ್ ಅನ್ನು ನಮೂದಿಸಿರುತ್ತೇನೆ. ಆಗ ಓಟಿಪಿ ನಂಬರ್ ಬಂದ್ದಿದ್ದು ತಾನು ಓಟಿಪಿ ನಂಬರ್ ನಮೂದಿಸಿದ ಕೂಡಲೇ ತನ್ನ ಕೆನರಾ ಬ್ಯಾಂಕ್ ಖಾತೆಯಲ್ಲಿದ್ದ 15295 ರೂ ಕಡಿತವಾಗಿರುತ್ತೆ. ನಂತರ ಸುಮಾರು 7000 ರೂ ಕಡಿತವಾಗಿರುತ್ತೆ. ನಂತರ ತಾನು ತನಗೆ ಕರೆ ಮಾಡಿದ 9832423927 ನಂಬರ್ ಗೆ ಕರೆ ಮಾಡಿದರೆ ತನ್ನ ಕರೆಯನ್ನು ಸ್ವೀಕರಿಸಿರುವುದಿಲ್ಲ. ಆದ್ದರಿಂದ ತನಗೆ ಮೇಲ್ಕಂಡಂತೆ ಮೋಸ ಮಾಡಿದ ಸದರಿ  9832423927 ನಂಬರ್ ನ ಅಪರಿಚಿತ ವ್ಯಕ್ತಿಯ ಮೇಲೆ ಕಾನೂನು ಕ್ರಮ ಜರುಗಿಸಲು ಕೋರುತ್ತೇನೆ.

  1. ಚಿಂತಾಮಣಿ ನಗರ ಪೊಲೀಸ್ ಠಾಣೆ ಮೊ.ಸಂ. 06/2021 ಕಲಂ. 143,147,323,324,504,506 ರೆ/ವಿ 149 ಐಪಿಸಿ :-

ದಿನಾಂಕ: 22/01/2021 ರಂದು ಬೆಳಿಗ್ಗೆ 11:30 ಗಂಟೆಗೆ ಪಿರ್ಯಾದಿದಾರರಾದ ರಘುನಂದನ್ ಬಿನ್ ಕೃಷ್ಣಪ್ಪ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ತಮ್ಮ ತಾತನಾದ ನರಸಿಂಹಯ್ಯ ರವರಿಗೆ 5 ಜನ ಮಕ್ಕಳಿದ್ದು, ಅದರಲ್ಲಿ 2 ಗಂಡು , 3 ಜನ ಹೆಣ್ಣು ಮಕ್ಕಳಿರುತ್ತಾರೆ. ನಮ್ಮ ತಂದೆಯಾದ ಕೃಷ್ಣಪ್ಪ ರವರು ಹಿರಿಯ ಮಗನಾಗಿದ್ದು ಉಳಿದ ಮೂರು ಜನ ಹೆಣ್ಣು ಮಕ್ಕಳಿಗೆ ಮದುವೆಯಾಗಿ ಅವರವರ ಗಂಡನ ಮನೆಯಲ್ಲಿ ವಾಸವಿರುತ್ತಾರೆ , ಕೊನೆಯ ಮಗ ವೆಂಕಟರವಣ ಆಗಿರುತ್ತಾರೆ. ತಮ್ಮ ತಾತನ ಹೆಸರಿನಲ್ಲಿ ಇದೇ ಚಿಂತಾಮಣಿ ನಗರದ ಸರ್ವೆ ನಂ 18 ರಲ್ಲಿ 2.33 ಗುಂಟೆ ಜಮೀನು ನೆಕ್ಕುಂದಿಪೇಟೆಯಲ್ಲಿ ಇರುತ್ತದೆ. ಸದರಿ ಜಮೀನಿನಲ್ಲಿ ನಾವು ಜಿರಾಯ್ತಿ ಮಾಡಿಕೊಂಡು ಜೀವನ ಮಾಡಿಕೊಂಡಿರುತ್ತೇವೆ. ತಮ್ಮ ತಾತನ ಕಾಲದಿಂದಲೂ ತಾವೇ ಜಮೀನಿನಲ್ಲಿ ಬೆಳೆಯನ್ನು ಇಟ್ಟುಕೊಂಡಿರುತ್ತೇವೆ. ಈಗ್ಗೆ ತಮ್ಮ ತಾತನಾದ ನರಸಿಂಹಯ್ಯ ರವರು ಮರಣ ಹೊಂದಿದ್ದು ಸದರಿ ಜಮೀನುನ್ನು ತನ್ನ  ಮಕ್ಕಳಿಗೆ ಯಾವುದೇ ಭಾಗ ಮಾಡಿರುವುದಿಲ್ಲ, ಈ ವಿಚಾರದಲ್ಲಿ ತಮ್ಮ ಚಿಕ್ಕಪ್ಪನಾದ ವೆಂಕಟರವಣ ರವರಿಗೆ  ಗಲಾಟೆಗಳಾಗಿ ಹಾಲಿ ನ್ಯಾಯಾಲಯದಲ್ಲಿ ಕೇಸು ನಡೆಯುತ್ತಿರುತ್ತದೆ. ಹೀಗಿರುವಾಗ  ದಿ: 17/01/2021 ರಂದು ಬೆಳಿಗ್ಗೆ 11:00  ಗಂಟೆಯಲ್ಲಿ ತಾನು ಜಮೀನಿನ ಬಳಿ ಇರುವ ಮನೆಯಲ್ಲಿರುವಾಗ ತಮ್ಮ ಚಿಕ್ಕಪ್ಪನಾದ ವೆಂಕಟರವಣ ರವರು ಯಾರೋ ವ್ಯಕ್ತಿಗಳನ್ನು ಜಮೀನಿನ ಬಳಿ ಕರೆದುಕೊಂಡು ಬಂದು ತೋರಿಸುತ್ತಿದ್ದು, ತಾನು ಮನೆಯಿಂದ ಹೊರಗಡೆ ಬಂದು ಯಾರು ಇವರು ಜಮೀನಿನ ಬಳಿ ಬಂದಿದ್ದಾರೆ ಎಂತ ನೋಡಿ ಹೋಗಿ ಮಾತನಾಡುತ್ತಿದ್ದಾಗ  ಅಲ್ಲಿಗೆ ಬಂದಿದ್ದ ತಮ್ಮ ಚಿಕ್ಕಪ್ಪನಾದ ವೆಂಕಟರವಣ  ಮತ್ತು ಆತನ ಮಗ ಪವನ್ ಹಾಗೂ  ಚಿಕ್ಕಮ್ಮ ರವರಾದ ಲಕ್ಷ್ಮೀದೇವಿ, ಶಾಂತಮ್ಮ, ವರಲಕ್ಸ್ಮೀ ವೆಂಕಟರವಣ ರವರ ಹೆಂಡತಿ ಸರಿತಾ ಮತ್ತು ಲಘುಮಕ್ಕ ರವರು ಒಂದೇ ಉದ್ದೇಶವಿಟ್ಟುಕೊಂಡು ಬಂದು ಈ ಜಮೀನು ನಮ್ಮಗೂ ಸೇರಿದೆ ಇದರಲ್ಲಿ ನಮ್ಮಗೂ ಹಕ್ಕು ಇದೆ ಎಂತ ಕೆಟ್ಟ ಕೆಟ್ಟ ಮಾತುಗಳಿಂದ  ತಮ್ಮನ್ನು ಬೈದು ಆ ಪೈಕಿ ವೆಂಕಟರವಣ ರವರು ತನ್ನ  ಮೇಲೆ ಕೋಲಿನಿಂದ ಮುಖದ ಮೇಲೆ ಕೈಗಳಿಂದ ಗುದ್ದಿ ಗಾಯಪಡಿಸಿರುತ್ತಾರೆ, ಈ ವೇಳೆಯಲ್ಲಿ ನಮ್ಮ ತಾಯಿ ವೆಂಕಟರತ್ನಮ್ಮ , ತಂಗಿಯರಾದ ತುಳಸಿ, ಯಾಮಶ್ರೀ ರವರು ಅಡ್ಡಬಂದು ಜಗಳ ಬಿಡಿಸುತ್ತಿದ್ದಾಗ ತಮ್ಮ ತಾಯಿಯವರಿಗೆ ತಮ್ಮ ಅತ್ತೆಯಾದ ಲಕ್ಷ್ಮೀದೇವಿ, ಶಾಂತಮ್ಮ, ವರಲಕ್ಷ್ಮೀ ಮತ್ತು ಸರಿತಾ ರವರು ಸೇರಿ ಕೈಗಳಿಂದ ಹೊಡೆದು ಬಲಗೈ ಮೇಲೆ ತರಚಿದ ಗಾಯವುಂಟು ಮಾಡಿ ನಂತರ ವೆಂಕಟರವಣ ಮತ್ತು ಆತನ ಮಗ ಪವನ್ ರವರು ನಿಮ್ಮ ಮನೆಯನ್ನು ಜೆಸಿಬಿ ಯಿಂದ ನೆಲಸಮ ಮಾಡುವುದಾಗಿ ನಮ್ಮನ್ನು ಪ್ರಾಣಸಹಿತ ಬಿಡುವುದಿಲ್ಲವೆಂತ ಬೆದರಿಕೆ ಹಾಕಿರುತ್ತಾರೆ. ಗಲಾಟೆ ಸಮಯದಲ್ಲಿ ಅಲ್ಲಿಯೇ ಇದ್ದ ಕೃಷ್ಣಯಾದವ್ ರವರು ಬಂದು ತಮ್ಮನ್ನು  ಉಪಚರಿಸಿ ಯಾವುದೋ ಒಂದು ವಾಹನದಲ್ಲಿ ಚಿಂತಾಮಣಿ ಸರ್ಕಾರಿ ಆಸ್ಪತ್ರೆಗೆ  ಕರೆದುಕೊಂಡು ಬಂದು ಚಿಕಿತ್ಸೆ ಕೊಡಿಸಿರುತ್ತಾರೆ. ಆದರೆ ಸದರಿ ವಿಷಯದಲ್ಲಿ ನಮ್ಮ ಹಿರಿಯರು ಸೇರಿ ಪಂಚಾಯ್ತಿ ಮಾಡುವುದಾಗಿ ಹೇಳಿದ್ದರ ಮೇರೆಗೆ ಆದರೆ ಈವರೆಗೂ ಯಾವುದೇ ಪಂಚಾಯ್ತಿಗೆ ಬಾರದ ಕಾರಣ ಈ ದಿನ ತಡವಾಗಿ ಬಂದು ದೂರುನ್ನು ನೀಡುತ್ತಿದ್ದು, ಸದರಿ ಮೇಲ್ಕಂಡರವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ಕೋರಿದ್ದರ ಮೇರೆಗೆ ಪ್ರಕರಣ ದಾಖಲಿಕೊಂಡಿರುತ್ತೆ.