ದಿನಾಂಕ : 22/01/2020 ರ ಅಪರಾಧ ಪ್ರಕರಣಗಳು

1. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 06/2020 ಕಲಂ. 324 ರೆ/ವಿ 34 ಐ.ಪಿ.ಸಿ :-
ದಿನಾಂಕ 22/01/2020 ರಂದು ಬೆಳಿಗ್ಗೆ 11.30 ಗಂಟೆಗೆ ಪಿರ್ಯಾದಿದಾರರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ನನಗೆ ಮೂರು ಜನ ಮಕ್ಕಳಿದ್ದು, 1] ನೇ ಜಿ.ಸಂತೋಷ್ ರೆಡ್ಡಿ, 2] ನೇ ಜಿ.ಸಂದೀಪ್ ಮತ್ತು 3] ನೇ ಜಿ. ಸುಚಿತ್ರಾ ರವರುಗಳಾಗಿದ್ದು, ಎಲ್ಲರಿಗೂ ಮದುವೆಗಳಾಗಿರುತ್ತೆ. ನಾವು ನಮ್ಮ ಗಂಡು ಮಕ್ಕಳೊಂದಿಗೆ ಗುಣಿಬೀಳು ಗ್ರಾಮದಲ್ಲಿ ವಾಸವಾಗಿರುತ್ತೇವೆ. ಮೊದಲನೇ ಮಗ ಜಿ.ಸಂತೋಷ್ ರೆಡ್ಡಿರವರು ಗ್ರಾಮದಲ್ಲಿಯೇ ವ್ಯವಸಾಯ ಮಾಡಿಕೊಂಡಿರುತ್ತಾರೆ. ದಿನಾಂಕ: 07/01/2020 ರಂದು ಸಂಜೆ 6-30 ಗಂಟೆ ಸಮಯದಲ್ಲಿ ನನ್ನ ಮಗ ಕೂಲಿಯವರಿಗೆ ಹಣ ನೀಡಿ ಗೊಬ್ಬರವನ್ನು ತೆಗೆದುಕೊಂಡು ಬರುವುದಾಗಿ ಹೇಳಿ 40,000/- ರೂ.ಗಳನ್ನು ತೆಗೆದುಕೊಂಡು ಆತನ ಬಾಬತ್ತು ನೊಂದಣಿ ಸಂಖ್ಯೆ ಇಲ್ಲದ ಹೊಸ TVS NTORQ-125 ಕೆಂಪು ಬಣ್ಣದ ದ್ವಿಚಕ್ರ ವಾಹನದಲ್ಲಿ ಮನೆಯಿಂದ ಹೋದನು. ರಾತ್ರಿ ಸುಮಾರು 9-30 ಗಂಟೆ ಸಮಯದಲ್ಲಿ ನನ್ನ ಸೊಸೆ ಶ್ರೀಮತಿ ರಾಧರವರು ನನ್ನ ಮಗನಿಗೆ ಪೋನ್ ಮಾಡಿ ಮನೆಗೆ ಬರುವಂತೆ ಕೇಳಿದಾಗ ತಾನು ತನ್ನ ಸ್ನೇಹಿತ ಗೊಲ್ಲಹಳ್ಳಿ ಗ್ರಾಮದ ರವಿಯವರೊಂದಿಗೆ ಮಂಚೇನಹಳ್ಳಿಯಲ್ಲಿದ್ದೇನೆ ಬರುತ್ತೇನೆ ಎಂದು ತಿಳಿಸಿರುತ್ತಾನೆ. ನಂತರ ಸುಮಾರು 10-50 ಗಂಟೆ ಸಮಯದಲ್ಲಿ ನನ್ನ ಮಗ ಸಂತೋಷ್ ರವರ ಮೊಬೈಲ್ ನಿಂದ ನನ್ನ ಮತ್ತೊಬ್ಬ ಮಗ ಸಂದೀಪ್ ರವರ ಮೊಬೈಲ್ ಗೆ ಗೊಲ್ಲಹಳ್ಳಿ ಗ್ರಾಮದ ರವಿರವರು ಪೋನ್ ಮಾಡಿ ನಿಮ್ಮ ಅಣ್ಣ ಬೊಮ್ಮೇನಹಳ್ಳಿ ಗೇಟ್ ಬಳಿ ಬಿದ್ದು ಹೋಗಿದ್ದಾರೆ ಬೇಗ ಬಾ ಸಿಕ್ಕಾಬಟ್ಟೆ ರಕ್ತ ಬರುತ್ತಿದ್ದೆ ಎಂದು ಹೇಳಿದರು. ಆಗ ಸಂದೀಪ್ ನಮ್ಮ ಕಾರನ್ನು ತೆಗೆದುಕೊಂಡು ಹೋದರು. ಸಂದೀಪ್ ಬೊಮ್ಮೇನಹಳ್ಳಿ ಗೇಟ್ ಬಳಿಹೋದಾಗ ಗೊಲ್ಲಹಳ್ಳಿ ಗ್ರಾಮದ ರವಿ, ವಿಜಿ ಮತ್ತು ಬಾಲರೆಡ್ಡಿಹಳ್ಳಿ ಗ್ರಾಮದ ಬಾಲು ರವರು ಸ್ಥಳದಲ್ಲಿದ್ದು, ನಮ್ಮ ಅಣ್ಣ ಸಂತೋಷ್ ರವರ ದೇಹ ರಸ್ತೆಯ ಮೇಲೆ ಕಾಲುಗಳು ಪುತ್ ಪಾತ್ ಮೇಲೆ ಬಿದ್ದಿತ್ತು. ತಲೆಯಲ್ಲಿ, ಬಾಯಲ್ಲಿ, ಮೂಗಲ್ಲಿ ರಕ್ತ ಬರುತ್ತಿದ್ದು, ಪ್ರಜ್ಞೆ ಇರಲಿಲ್ಲ. ತಕ್ಷಣ ನಾನು ನಮ್ಮ ಅಣ್ಣನನ್ನು ರವಿಯ ಸಹಾಯದಿಂದ ನಮ್ಮ ಕಾರಿಗೆ ಹತ್ತಿಸಿಕೊಂಡು ರವಿಯನ್ನೂ ಸಹಾ ಜೊತೆಯಲ್ಲಿ ಕೂರಿಸಿಕೊಂಡು ಬರುವಾಗ ಕಾರಿನಲ್ಲಿ ರವಿಯನ್ನು ಏನಾಯಿತೆಂದು ಕೇಳಿದಾಗ ರವಿ ನಿಮ್ಮ ಅಣ್ಣ ಸಂತೋಷ್ ಗಾಡಿಯಲ್ಲಿ ಬರುವಾಗ ರಸ್ತೆಯಲ್ಲಿ ಬಿದ್ದು ಹೋಗಿದ್ದರು. ನಾನು ನಮ್ಮ ಗ್ರಾಮಕ್ಕೆ ಹೋಗುವಾಗ ಇಲ್ಲಿ ಜನ ಸೇರಿದ್ದರು. ನಾನು ಗಾಡಿ ನೋಡಿ ಸಂತೋಷ್ ದ್ದೆಂದು ಗುರ್ತಿಸಿ ನಿಮಗೆ ಪೋನ್ ಮಾಡಿದ್ದೆಂದು ಹೇಳಿರುತ್ತಾನೆ. ನಂತರ ನನ್ನ ಮಗನನ್ನು ಚಿಕ್ಕಬಳ್ಳಾಪುರ ಅನನ್ಯ ಆಸ್ಪತ್ರೆಗೆ ಕರೆದುಕೊಂಡು ಬಂದು ದಾಖಲಿಸಿದಾಗ ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರು ಆಸ್ಪತ್ರೆಗೆ ಕರೆದುಕೊಂಡು ಹೋಗಲು ತಿಳಿಸಿದರು. ನಾವು ನನ್ನ ಮಗನನ್ನು ದೇವನಹಳ್ಳಿಯ ಮಾನಸ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸೇರಿಸಿದೆವು. ಅಲ್ಲಿ ಈ ಕೂಡಲೇ ತಲೆಯ ಶಸ್ತ್ರ ಚಿಕಿತ್ಸೆ ಮಾಡಬೇಕು ಬೆಂಗಳೂರು ಆಸ್ಟರ್ ಸಿ.ಎಂ.ಐ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ತಿಳಿಸಿದ್ದರಿಂದ ನಾವು ನನ್ನ ಮಗನನ್ನು ಬೆಂಗಳೂರು ಆಸ್ಟರ್ ಸಿ.ಎಂ.ಐ ಆಸ್ಪತ್ರೆಗೆ ದಾಖಲಿಸಿರುತ್ತೇವೆ. ಅಲ್ಲಿ ನನ್ನ ಮಗನ ತಲೆಗೆ ಶಸ್ತ್ರ ಚಿಕಿತ್ಸೆ ಸಹಾ ಮಾಡಿದ್ದು, ಚಿಕಿತ್ಸೆ ನೀಡುತ್ತಿರುತ್ತಾರೆ. ಈವರೆಗೆ ಇನ್ನೂ ಪ್ರಜ್ಞೆ ಬಂದಿರುವುದಿಲ್ಲ. ಮಗ ಸಂತೋಷ್ ರೆಡ್ಡಿರವರ ಸ್ನೇಹಿತರುಗಳಾದ ಗೊಲ್ಲಹಳ್ಳಿ ಗ್ರಾಮದ ರವಿ, ವಿಜಿ ಮತ್ತು ಬಾಲರೆಡ್ಡಿಹಳ್ಳಿ ಗ್ರಾಮದ ಬಾಲು ರವರುಗಳು ನನ್ನ ಮಗನ ಜೊತೆಯಲ್ಲಿದ್ದು ಕೊಂಡು ನಮ್ಮ ಗ್ರಾಮಕ್ಕೆ ಬರುತ್ತಿದ್ದವನನ್ನು ಬೊಮ್ಮೇನಹಳ್ಳಿ ಗೇಟ್ ಬಳಿ ಕರೆದುಕೊಂಡು ಹೋಗಿ ಯಾವುದೋ ಆಯುಧದಿಂದ ಹೊಡೆದು ಹಲ್ಲೆ ಮಾಡಿರುವುದಾಗಿ ಹಾಗೂ ಆತ ಮನೆಯಿಂದ ತೆಗೆದುಕೊಂಡು ಹೋಗಿದ್ದ 40,000/- ರೂ. ಹಣ ನಾಪತ್ತೆಯಾಗಿದ್ದು, ಈ ಎಲ್ಲದರ ಬಗ್ಗೆ ನಮಗೆ ಅನುಮಾನವಿರುವುದರಿಂದ ಈ ದಿನ ತಡವಾಗಿ ಕೃತ್ಯ ನಡೆದ ದಿನ ನನ್ನ ಮಗನೊಂದಿಗಿದ್ದ ಗೊಲ್ಲಹಳ್ಳಿ ಗ್ರಾಮದ ರವಿ, ವಿಜಿ ಮತ್ತು ಬಾಲರೆಡ್ಡಿಹಳ್ಳಿ ಗ್ರಾಮದ ಬಾಲುರವರ ಮೇಲೆ ಕಾನೂನು ರೀತ್ಯಾ ಕ್ರಮ ಕೈಗೊಳ್ಳಬೇಕೆಂದು ಕೋರಿದ ಮೇರೆಗೆ ಈ ಪ್ರ ವ ವರದಿ.
2. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 47/2020 ಕಲಂ. 15(ಎ) ಕೆ.ಇ ಆಕ್ಟ್ :-
ಈ ಮೂಲಕ ಚಿಂತಾಮಣಿ ಗ್ರಾಮಾಂತರ ಠಾಣೆಯ ಸಿ.ಹೆಚ್.ಸಿ 03 ರಾಜಣ್ಣ, ಆದ ನಾನು ಘನ ನ್ಯಾಯಾಲಯದಲ್ಲಿ ನಿವೇದಿಸಿಕೊಳ್ಳುವುದೇನೆಂದರೆ, ಈ ದಿನ ದಿನಾಂಕ:21/01/2020 ರಂದು ಪಿ.ಎಸ್.ಐ ಸಾಹೇಬರ ನೇಮಕದಂತೆ ನಾನು ಮತ್ತು ಸಿ.ಪಿ.ಸಿ- 436 ಸರ್ವೇಶ್ ರವರು ಠಾಣಾ ಸರಹದ್ದಿನ ಮುನಗನಹಳ್ಳಿ, ಆಲಂಬಗಿರಿ, ಬೀಡಗಾನಹಳ್ಳಿ ಇತ್ಯಾದಿ ಕಡೆಗಳಲ್ಲಿ ಗಸ್ತು ಮಾಡಿಕೊಂಡು ಸಂಜೆ 5.00 ಗಂಟೆಯ ಸಮಯದಲ್ಲಿ ಎ.ಹೊಸಹಳ್ಳಿ ಗ್ರಾಮಕ್ಕೆ ಹೋದಾಗ ಸದರಿ ಗ್ರಾಮದ ಮುನಿವೆಂಕಟರವಣಪ್ಪ ಬಿನ್ ಮುನಿವೆಂಕಟಪ್ಪ ರವರು ತನ್ನ ಚಿಲ್ಲರೆ ಅಂಗಡಿಯ ಮುಂಭಾಗ ಸಾರ್ವಜನಿಕರಿಗೆ ಮದ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದಾಗಿ ಖಚಿತ ಮಾಹಿತಿ ದೊರೆತಿದ್ದು, ಸದರಿ ಅಂಗಡಿಯ ಮೇಲೆ ದಾಳಿ ಮಾಡುವ ಸಲುವಾಗಿ ಪಂಚರನ್ನು ಬರಮಾಡಿಕೊಂಡು ಅವರಿಗೆ ವಿಚಾರವನ್ನು ತಿಳಿಸಿ ಮುನಿವೆಂಕಟರವಣಪ್ಪ ಬಿನ್ ಮುನಿವೆಂಕಟಪ್ಪ ರವರ ಚಿಲ್ಲರೆ ಅಂಗಡಿಯ ಬಳಿ ಹೋಗುವಷ್ಟರಲ್ಲಿ ಅಂಗಡಿಯ ಮುಂದೆ ಕುಳಿತಿದ್ದ ಇಬ್ಬರು ವ್ಯಕ್ತಿಗಳು ಮತ್ತು ಅಂಗಡಿಯಲ್ಲಿದ್ದ ಒಬ್ಬ ವ್ಯಕ್ತಿಯು ಓಡಿ ಹೋಗಿದ್ದು, ಅಂಗಡಿಯ ಮುಂಭಾಗದಲ್ಲಿ ನೋಡಲಾಗಿ 90 ಎಂ.ಎಲ್ ನ ಹೇವಾರ್ಡ್ಸ್ ಚೀರ್ಸ್ ವಿಸ್ಕಿ ಕಂಪನಿಯ 2 ಟೆಟ್ರಾ ಪಾಕೆಟ್ ಗಳು, ಎರಡು ಪ್ಲಾಸ್ಟಿಕ್ ಗ್ಲಾಸ್ ಗಳು ಮತ್ತು ಒಂದು ಲೀಟರ್ ನ ಎರಡು ನೀರಿನ ಬಾಟಲಿಗಳಿದ್ದು, ಅವುಗಳನ್ನು ಪರಿಶೀಲಿಸಲಾಗಿ, ಮದ್ಯದ ಟೆಟ್ರಾ ಪಾಕೆಟ್ ಗಳಲ್ಲಿ ಸ್ವಲ್ವ ಮದ್ಯವಿದ್ದು, ಪ್ಲಾಸ್ಟಿಕ್ ಗ್ಲಾಸ್ ಗಳಲ್ಲಿ ಸ್ವಲ್ವ ನೀರು ಮಿಶ್ರಿತ ಮದ್ಯವಿರುತ್ತೆ. ನೀರಿನ ಬಾಟಲಿಗಳನ್ನು ಪರಿಶೀಲಿಸಲಾಗಿ, ಸದರಿ ಬಾಟಲಿಗಳಲ್ಲಿ ಸುಮಾರು 1/4 ರಷ್ಟು ನೀರು ಇರುತ್ತೆ. ಅಲ್ಲಿದ್ದ ಸಾರ್ವಜನಿಕರನ್ನು ಅಂಗಡಿಯಲ್ಲಿದ್ದ ಆಸಾಮಿಯ ಹೆಸರು ವಿಳಾಸ ಕೇಳಲಾಗಿ ಮುನಿವೆಂಕಟರವಣಪ್ಪ ಬಿನ್ ಮುನಿವೆಂಕಟಪ್ಪ, 60 ವರ್ಷ, ಗೊಲ್ಲರು, ಚಿಲ್ಲರೆ ಅಂಗಡಿ ಕೆಲಸ, ಎ.ಹೊಸಹಳ್ಳಿ, ಚಿಂತಾಮಣಿ ತಾಲ್ಲೂಕು ಎಂದು ತಿಳಿಸಿದ್ದು, ನಂತರ ಸ್ಥಳದಲ್ಲಿ ಪಂಚರ ಸಮಕ್ಷಮ ಸಂಜೆ 5-15 ಗಂಟೆಯಿಂದ 6-00 ಗಂಟೆಯವರೆಗೆ ಮಹಜರ್ ಕ್ರಮ ಕೈಗೊಂಡು ಮೇಲ್ಕಂಡ ವಸ್ತುಗಳನ್ನು ಅಮಾನತ್ತುಪಡಿಸಿಕೊಂಡು ಮಾಲು, ಪಂಚನಾಮೆಯೊಂದಿಗೆ ಠಾಣೆಗೆ ವಾಪಸ್ಸಾಗಿ ಅಕ್ರಮವಾಗಿ ಸಾರ್ವಜನಿಕರಿಗೆ ಮದ್ಯಪಾನ ಮಾಡಲು ತನ್ನ ಅಂಗಡಿ ಮುಂಭಾಗ ಸ್ಥಳಾವಕಾಶ ಮಾಡಿಕೊಟ್ಟಿರುವ ಆರೋಪಿ ಮುನಿವೆಂಕಟರವಣಪ್ಪ ಬಿನ್ ಮುನಿವೆಂಕಟಪ್ಪ ರವರ ವಿರುದ್ಧ ಸಂಜೆ:6-30 ಗಂಟೆಗೆ ಠಾಣಾ ಮೊ.ಸಂ:47/2020 ಕಲಂ:15(ಎ) ಕೆಇ ಆಕ್ಟ್ ರೀತ್ಯ ಸ್ವತಃ ಪ್ರಕರಣ ದಾಖಲಿಸಿಕೊಂಡಿರುತ್ತೆ.
3. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 48/2020 ಕಲಂ. 15(ಎ) ಕೆ.ಇ ಆಕ್ಟ್ :-
ದಿನಾಂಕ 21-01-2020 ರಂದು ಸಂಜೆ 7-00 ಘಂಟೆಗೆ ಚಿಂತಾಮಣಿ ಗ್ರಾಮಾಂತರ ಠಾಣೆಯ ಸಂದೀಪ್ ಕುಮಾರ್ ಸಿ.ಹೆಚ್.ಸಿ 249 ರವರು ಮಾಲು ಮತ್ತು ಪಂಚನಾಮೆಯೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ವರದಿಯ ಸಾರಾಂಶವೇನೆಂದರೆ ಈ ದಿನ ದಿನಾಂಕ:21/01/2020 ರಂದು ಪಿ.ಎಸ್.ಐ ಸಾಹೇಬರ ನೇಮಕದಂತೆ ನಾನು ಮತ್ತು ಸಿ.ಪಿ.ಸಿ-197 ಅಂಬರೀಶ ರವರು ಠಾಣಾ ಸರಹದ್ದಿನ ತಳಗವಾರ, ಡಿ.ಹೊಸಹಳ್ಳಿ ಹೀರೆಪಾಳ್ಯ ಇತ್ಯಾದಿ ಕಡೆಗಳಲ್ಲಿ ಗಸ್ತು ಮಾಡಿಕೊಂಡು ಸಂಜೆ 5.00 ಗಂಟೆಯ ಸಮಯದಲ್ಲಿ ಪೆರಮಾಚನಹಳ್ಳಿ ಗ್ರಾಮದ ಬಳಿ ಗಸ್ತು ಮಾಡುತ್ತಿದ್ದಾಗ, ಸದರಿ ಗ್ರಾಮದ ನಾರಾಯಣಸ್ವಾಮಿ ಬಿನ್ ಲೇಟ್ ಚಿಕ್ಕವೆಂಕಟರಾಯಪ್ಪರವರು ತನ್ನ ಅಂಗಡಿಯ ಬಳಿ ಸಾರ್ವಜನಿಕರಿಗೆ ಮದ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದಾಗಿ ಖಚಿತ ಮಾಹಿತಿ ದೊರೆತಿದ್ದು, ಅದರಂತೆ ಪೆರಮಾಚನಹಳ್ಳಿ ಗ್ರಾಮದಲ್ಲಿದ್ದ ಪಂಚರನ್ನು ಬರಮಾಡಿಕೊಂಡು ಅವರಿಗೆ ವಿಚಾರವನ್ನು ತಿಳಿಸಿ ಅವರೊಂದಿಗೆ ಸ್ಥಳಕ್ಕೆ ಹೋದಾಗ ಸಮವಸ್ತ್ರದಲ್ಲಿದ್ದ ನಮ್ಮನ್ನು ಕಂಡು ಮಧ್ಯಪಾನ ಮಾಡುತ್ತಿದ್ದ ಇಬ್ಬರು ವ್ಯಕ್ತಿಗಳು ಮತ್ತು ಮಧ್ಯಪಾನ ಸೇವನೆ ಮಾಡಲು ಅನುವು ಮಾಡಿಕೊಟ್ಟಿದ್ದ ಆಸಾಮಿಯು ಓಡಿ ಹೋಗಿದ್ದು, ಸದರಿ ಮನೆಯ ಮುಂದೆ ನೋಡಲಾಗಿ 90 ಎಂ.ಎಲ್ ನ ಹೇವಾರ್ಡ್ಸ್ ಚೀರ್ಸ್ ವಿಸ್ಕಿ ಕಂಪನಿಯ 2 ಟೆಟ್ರಾ ಪಾಕೆಟ್ ಗಳು, ಎರಡು ಪ್ಲಾಸ್ಟಿಕ್ ಗ್ಲಾಸ್ ಗಳು ಮತ್ತು ಒಂದು ಲೀಟರ್ ನ ಎರಡು ನೀರಿನ ಬಾಟಲಿಗಳಿದ್ದು, ಅವುಗಳನ್ನು ಪರಿಶೀಲಿಸಲಾಗಿ, ಮದ್ಯದ ಟೆಟ್ರಾ ಪಾಕೆಟ್ ಗಳಲ್ಲಿ ಸ್ವಲ್ವ ಮದ್ಯವಿದ್ದು, ಪ್ಲಾಸ್ಟಿಕ್ ಗ್ಲಾಸ್ ಗಳಲ್ಲಿ ಸ್ವಲ್ವ ನೀರು ಮಿಶ್ರಿತ ಮದ್ಯವಿರುತ್ತೆ. ನೀರಿನ ಬಾಟಲಿಗಳನ್ನು ಪರಿಶೀಲಿಸಲಾಗಿ, ಸದರಿ ಬಾಟಲಿಗಳಲ್ಲಿ ಸುಮಾರು 1/4 ರಷ್ಟು ನೀರು ಇರುತ್ತೆ. ಅಲ್ಲಿದ್ದ ಸಾರ್ವಜನಿಕರನ್ನು ಮಧ್ಯಪಾನ ಸೇವನೆ ಮಾಡಲು ಅನುವು ಮಾಡಿಕೊಟ್ಟಿದ್ದ ಆಸಾಮಿಯ ಹೆಸರು ವಿಳಾಸ ಕೇಳಲಾಗಿ ನಾರಾಯಣಸ್ವಾಮಿ ಬಿನ್ ಲೇಟ್ ಚಿಕ್ಕವೆಂಕಟರಾಯಪ್ಪ, 60ವರ್ಷ, ವಕ್ಕಲಿಗರು, ಅಂಗಡಿ ವ್ಯಾಪಾರ, ವಾಸ:ಪೆರಮಾಚನಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು ಎಂದು ತಿಳಿಸಿರುತ್ತಾರೆ. ನಂತರ ಸ್ಥಳದಲ್ಲಿ ಪಂಚರ ಸಮಕ್ಷಮ ಸಂಜೆ 5-30 ರಿಂದ 6-30 ಗಂಟೆಯವರೆಗೆ ಮಹಜರ್ ಕ್ರಮ ಕೈಗೊಂಡು ಮೇಲ್ಕಂಡ ವಸ್ತುಗಳನ್ನು ಅಮಾನತ್ತುಪಡಿಸಿಕೊಂಡು ಮಾಲು, ಪಂಚನಾಮೆಯೊಂದಿಗೆ ಠಾಣೆಗೆ ವಾಪಸ್ಸಾಗಿ ದೂರನ್ನು ನೀಡುತ್ತಿದ್ದು, ಅಕ್ರಮವಾಗಿ ಸಾರ್ವಜನಿಕರಿಗೆ ಮದ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವ ಆರೋಪಿ ನಾರಾಯಣಸ್ವಾಮಿ ಬಿನ್ ಲೇಟ್ ಚಿಕ್ಕವೆಂಕಟರಾಯಪ್ಪರವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲು ಕೋರಿರುತ್ತೆ.
4. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 49/2020 ಕಲಂ. 15(ಎ) ಕೆ.ಇ ಆಕ್ಟ್ :-
ದಿನಾಂಕ 21-01-2020 ರಂದು ರಾತ್ರಿ 7-30 ಗಂಟೆಗೆ ಎ.ಎಸ್.ಐ ಗಂಗಾಧರ ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ರವರು ಮಾಲು ಮತ್ತು ಪಂಚನಾಮೆಯೊಂದಿಗೆ ಠಾಣೆಗೆ ಬಂದು ನೀಡಿದ ದೂರಿನ ಸಾರಾಂಶವೇನೆಂದರೆ ಈ ದಿನ ದಿನಾಂಕ:21/01/2020 ರಂದು ಪಿ.ಎಸ್.ಐ ಸಾಹೇಬರ ಆದೇಶದಂತೆ ಸಿಬ್ಬಂದಿಯವರಾದ ಪಿ.ಸಿ.185 ಶ್ರೀನಿವಾಸ ಮೂರ್ತಿ ರವರೊಂದಿಗೆ ನಾರಾಯಣಹಳ್ಳಿ, ಕೆಂದನಹಳ್ಳಿ, ಗೂಬಲಹಳ್ಳಿ ಕಡೆ ಗಸ್ತು ಮಾಡಿಕೊಂಡು ಸಂಜೆ 5-00 ಗಂಟೆಗೆ ಮೈಲಾಪುರ ಗ್ರಾಮಕ್ಕೆ ಹೋದಾಗ ಮೈಲಾಪುರ ಗ್ರಾಮದ ವಾಸಿ ಲಕ್ಷ್ಮೀದೇವಮ್ಮ ಕೋಂ ವೆಂಕಟೇಶಪ್ಪ ಎಂಬುವವರು ಅವರ ಚಿಲ್ಲರೆ ಅಂಗಡಿಯಲ್ಲಿ ಸಾರ್ವಜನಿಕರಿಗೆ ಮದ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದಾಗಿ ಖಚಿತ ಮಾಹಿತಿ ದೊರೆತಿದ್ದು, ದಾಳಿಮಾಡುವ ಸಲುವಾಗಿ ಪಂಚರನ್ನು ಬರಮಾಡಿಕೊಂಡು ಸದರಿ ಸ್ಥಳಕ್ಕೆ ಹೋದಾಗ ಅಂಗಡಿಯಲ್ಲಿ ಮಧ್ಯಪಾನ ಸೇವನೆ ಮಾಡಲು ಅನುವು ಮಾಡಿಕೊಟ್ಟಿದ್ದ ಆಸಾಮಿ ಓಡಿ ಹೋಗಿದ್ದು, ಮತ್ತು ಅಂಗಡಿಯಲ್ಲಿ ಕುಳಿತು ಮಧ್ಯಪಾನ ಸೇವನೆ ಮಾಡುತ್ತಿದ್ದ ಇಬ್ಬರು ವ್ಯಕ್ತಿಗಳು ಓಡಿ ಹೋಗಿದ್ದು, ಅಂಗಡಿಯ ಬಳಿ ನೋಡಲಾಗಿ 90 ಎಂ.ಎಲ್ ನ ಓಲ್ಡ್ ಟವೆರನ್ ವಿಸ್ಕೀ ಕಂಪನಿಯ 6 ಟೆಟ್ರಾ ಪಾಕೆಟ್ ಗಳಿದ್ದು, ಅವುಗಳಲ್ಲಿ ಭರ್ತಿ ಮಧ್ಯವಿರುತ್ತೆ. ಒಂದರ ಬೆಲೆ 45.10 ರೂ ಆಗಿದ್ದು, ಒಟ್ಟು 270.6 ರೂ ಆಗಿರುತ್ತೆ. ಪಕ್ಕದಲ್ಲಿ 180 ಎಂ.ಎಲ್ ನ ಓಲ್ಡ್ ಟವೆರನ್ ವಿಸ್ಕೀ ಕಂಪನಿಯ 2 ಖಾಲಿ ಟೆಟ್ರಾ ಪಾಕೆಟ್ ಗಳಿದ್ದು, ಮೂರು ಪ್ಲಾಸ್ಟಿಕ್ ಗ್ಲಾಸ್ ಗಳು ಮತ್ತು ಒಂದು ಲೀಟರ್ ನ ಮೂರು ನೀರಿನ ಬಾಟಲಿಗಳಿದ್ದು, ಅವುಗಳನ್ನು ಪರಿಶೀಲಿಸಲಾಗಿ, ಪ್ಲಾಸ್ಟಿಕ್ ಗ್ಲಾಸ್ ಗಳಲ್ಲಿ ಸ್ವಲ್ವ ನೀರು ಮಿಶ್ರಿತ ಮದ್ಯವಿರುತ್ತೆ. ನೀರಿನ ಬಾಟಲಿಗಳನ್ನು ಪರಿಶೀಲಿಸಲಾಗಿ, ಸದರಿ ಬಾಟಲಿಗಳಲ್ಲಿ ಸುಮಾರು 1/4 ರಷ್ಟು ನೀರು ಇರುತ್ತೆ. ಅಲ್ಲಿದ್ದ ಸಾರ್ವಜನಿಕರನ್ನು ಸಾರ್ವಜನಿಕರಿಗೆ ಮಧ್ಯಪಾನ ಮಾಡಲು ಅನುವು ಮಾಡುತ್ತಿದ್ದು, ಓಡಿ ಹೋದವರ ಹೆಸರು ವಿಳಾಸ ಕೇಳಲಾಗಿ ಲಕ್ಷ್ಮೀದೇವಮ್ಮ ಕೋಂ ವೆಂಕಟೇಶಪ್ಪ 35 ವರ್ಷ, ಎಸ್.ಸಿ ಜನಾಂಗ (ಎ.ಕೆ) ಕೂಲಿ ಕೆಲಸ ವಾಸ ಮೈಲಾಪುರ ಗ್ರಾಮ ಚಿಂತಾಮಣಿ ತಾಲ್ಲೂಕು ಎಂದು ತಿಳಿಸಿದ್ದು, ಸದರಿ ಆಸಾಮಿ ಯಾವುದೇ ಪರವಾನಗಿ ಪಡೆಯದೆ ಸಾರ್ವಜನಿಕರಿಗೆ ಮದ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದಾಗಿ ಕಂಡು ಬಂದಿದ್ದರಿಂದ ಮಾಲನ್ನು ಪಂಚರ ಸಮಕ್ಷಮ ಸಂಜೆ 5-15 ಗಂಟೆಯಿಂದ ಸಂಜೆ 6-00 ಗಂಟೆಯವರೆಗೆ ಮಹಜರ್ ಕ್ರಮ ಕೈಗೊಂಡು ಮೇಲ್ಕಂಡ ವಸ್ತುಗಳನ್ನು ಅಮಾನತ್ತುಪಡಿಸಿಕೊಂಡು ಮಾಲು, ಪಂಚನಾಮೆಯೊಂದಿಗೆ ಠಾಣೆಗೆ ವಾಪಸ್ಸಾಗಿ ದೂರನ್ನು ನೀಡುತ್ತಿದ್ದು, ಅಕ್ರಮವಾಗಿ ಸಾರ್ವಜನಿಕರಿಗೆ ಮದ್ಯಪಾನ ಮಾಡಲು ಮನೆಯ ಮುಂಭಾಗ ಸ್ಥಳಾವಕಾಶ ಮಾಡಿಕೊಟ್ಟಿರುವ ಆರೋಪಿ ಲಕ್ಷ್ಮೀದೇವಮ್ಮ ಕೋಂ ವೆಂಕಟೇಶಪ್ಪ ರವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲು ಸೂಚಿಸಿರುತ್ತೆ.
5. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 50/2020 ಕಲಂ. 15(ಎ) ಕೆ.ಇ ಆಕ್ಟ್ :-
ದಿನಾಂಕ 21-01-2020 ರಂದು ರಾತ್ರಿ 8-00 ಗಂಟೆಗೆ ಎ.ಎಸ್.ಐ ಗಂಗಾಧರ ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ರವರು ಮಾಲು ಮತ್ತು ಪಂಚನಾಮೆಯೊಂದಿಗೆ ಠಾಣೆಗೆ ಬಂದು ನೀಡಿದ ದೂರಿನ ಸಾರಾಂಶವೇನೆಂದರೆ ಈ ದಿನ ದಿನಾಂಕ:21/01/2020 ರಂದು ಪಿ.ಎಸ್.ಐ ಸಾಹೇಬರ ಆದೇಶದಂತೆ ಸಿಬ್ಬಂದಿಯವರಾದ ಪಿ.ಸಿ.185 ಶ್ರೀನಿವಾಸ ಮೂರ್ತಿ ರವರೊಂದಿಗೆ ನಾರಾಯಣಹಳ್ಳಿ, ಕೆಂದನಹಳ್ಳಿ, ಗೂಬಲಹಳ್ಳಿ ಕಡೆ ಗಸ್ತು ಮಾಡಿಕೊಂಡು ಸಂಜೆ 5-00 ಗಂಟೆಗೆ ಮೈಲಾಪುರ ಗ್ರಾಮಕ್ಕೆ ಹೋದಾಗ ಮೈಲಾಪುರ ಗ್ರಾಮದ ವಾಸಿ ಲಕ್ಷ್ಮೀದೇವಮ್ಮ ಕೋಂ ವೆಂಕಟೇಶಪ್ಪ ಎಂಬುವವರು ಅವರ ಚಿಲ್ಲರೆ ಅಂಗಡಿಯಲ್ಲಿ ಸಾರ್ವಜನಿಕರಿಗೆ ಮದ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದಾಗಿ ಖಚಿತ ಮಾಹಿತಿ ದೊರೆತಿದ್ದು, ಪಂಚರನ್ನು ಬರಮಾಡಿಕೊಂಡು ಸದರಿ ಸ್ಥಳಕ್ಕೆ ಹೋಗಿ ದಾಳಿ ಮಾಡುವ ಸಮಯದಲ್ಲಿ ಮೈಲಾಪುರ ಗ್ರಾಮದ ವಾಸಿ ನಾರಾಯಣಸ್ವಾಮಿ ಬಿನ್ ಸಿದ್ದಪ್ಪ ಎಂಬುವವರು ಅವರ ವಾಸದ ಮನೆಯ ಮುಂದೆ ಸಾರ್ವಜನಿಕರಿಗೆ ಮದ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದಾಗಿ ಖಚಿತ ಮಾಹಿತಿ ದೊರೆತಿದ್ದು, ದಾಳಿ ಮಾಡುವ ಸಲುವಾಗಿ ಪಂಚರನ್ನು ಬರಮಾಡಿಕೊಂಡು ಸದರಿ ಸ್ಥಳಕ್ಕೆ ಹೋದಾಗ ಮನೆಯ ಮುಂಭಾಗ ಮಧ್ಯಪಾನ ಸೇವನೆ ಮಾಡಲು ಅನುವು ಮಾಡಿಕೊಟ್ಟಿದ್ದ ಆಸಾಮಿ ಓಡಿ ಹೋಗಿದ್ದು, ಮತ್ತು ನೆಲದ ಮೇಲೆ ಕುಳಿತುಕೊಂಡು ಮಧ್ಯಪಾನ ಮಾಡುತ್ತಿದ್ದ ಇಬ್ಬರು ವ್ಯಕ್ತಿಗಳು ಓಡಿ ಹೋಗಿದ್ದು, ಮನೆಯ ಮುಂಭಾಗ ನೋಡಲಾಗಿ 90 ಎಂ.ಎಲ್ ನ ಓಲ್ಡ್ ಟವೆರನ್ ವಿಸ್ಕೀ ಕಂಪನಿಯ 4 ಟೆಟ್ರಾ ಪಾಕೆಟ್ ಗಳಿದ್ದು, ಅವುಗಳಲ್ಲಿ ಭರ್ತಿ ಮಧ್ಯವಿರುತ್ತೆ. ಒಂದರ ಬೆಲೆ 45.10 ರೂ ಆಗಿದ್ದು, ಒಟ್ಟು 180.4 ರೂ ಆಗಿರುತ್ತೆ. ಪಕ್ಕದಲ್ಲಿ 180 ಎಂ.ಎಲ್ ನ ಓಲ್ಡ್ ಟವೆರನ್ ವಿಸ್ಕೀ ಕಂಪನಿಯ 2 ಖಾಲಿ ಟೆಟ್ರಾ ಪಾಕೆಟ್ ಗಳಿದ್ದು, ಮೂರು ಪ್ಲಾಸ್ಟಿಕ್ ಗ್ಲಾಸ್ ಗಳು ಮತ್ತು ಒಂದು ಲೀಟರ್ ನ ಮೂರು ನೀರಿನ ಬಾಟಲಿಗಳಿದ್ದು, ಅವುಗಳನ್ನು ಪರಿಶೀಲಿಸಲಾಗಿ, ಪ್ಲಾಸ್ಟಿಕ್ ಗ್ಲಾಸ್ ಗಳಲ್ಲಿ ಸ್ವಲ್ವ ನೀರು ಮಿಶ್ರಿತ ಮದ್ಯವಿರುತ್ತೆ. ನೀರಿನ ಬಾಟಲಿಗಳನ್ನು ಪರಿಶೀಲಿಸಲಾಗಿ, ಸದರಿ ಬಾಟಲಿಗಳಲ್ಲಿ ಸುಮಾರು 1/4 ರಷ್ಟು ನೀರು ಇರುತ್ತೆ. ಅಲ್ಲಿದ್ದ ಸಾರ್ವಜನಿಕರನ್ನು ಸಾರ್ವಜನಿಕರಿಗೆ ಮಧ್ಯಪಾನ ಮಾಡಲು ಅನುವು ಮಾಡುತ್ತಿದ್ದು, ಓಡಿ ಹೋದ ಮನೆಯ ಮಾಲಿಕರ ಹೆಸರು ವಿಳಾಸ ಕೇಳಲಾಗಿ ನಾರಾಯಣಸ್ವಾಮಿ ಬಿನ್ ಸಿದ್ದಪ್ಪ, 35 ವರ್ಷ, ಎಸ್.ಸಿ (ಆದಿ ಕರ್ನಾಟಕ), ಕೂಲಿ ಕೆಲಸ ವಾಸ ಮೈಲಾಪುರ ಗ್ರಾಮ ಚಿಂತಾಮಣಿ ತಾಲ್ಲೂಕು ಎಂದು ತಿಳಿಸಿದ್ದು, ಸದರಿ ಆಸಾಮಿ ಯಾವುದೇ ಪರವಾನಗಿ ಪಡೆಯದೆ ಸಾರ್ವಜನಿಕರಿಗೆ ಮದ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದಾಗಿ ಕಂಡು ಬಂದಿದ್ದರಿಂದ ಮಾಲನ್ನು ಪಂಚರ ಸಮಕ್ಷಮ ಸಂಜೆ 6-15 ಗಂಟೆಯಿಂದ ರಾತ್ರಿ 7-00 ಗಂಟೆಯವರೆಗೆ ಮಹಜರ್ ಕ್ರಮ ಕೈಗೊಂಡು ಮೇಲ್ಕಂಡ ವಸ್ತುಗಳನ್ನು ಅಮಾನತ್ತುಪಡಿಸಿಕೊಂಡು ಮಾಲು, ಪಂಚನಾಮೆಯೊಂದಿಗೆ ಠಾಣೆಗೆ ವಾಪಸ್ಸಾಗಿ ದೂರನ್ನು ನೀಡುತ್ತಿದ್ದು, ಅಕ್ರಮವಾಗಿ ಸಾರ್ವಜನಿಕರಿಗೆ ಮದ್ಯಪಾನ ಮಾಡಲು ಮನೆಯ ಮುಂಭಾಗ ಸ್ಥಳಾವಕಾಶ ಮಾಡಿಕೊಟ್ಟಿರುವ ಆರೋಪಿ ನಾರಾಯಣಸ್ವಾಮಿ ಬಿನ್ ಸಿದ್ದಪ್ಪ ರವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲು ಸೂಚಿಸಿರುತ್ತೆ.
6. ಗೌರಿಬಿದನೂರು ಪುರ ಪೊಲೀಸ್ ಠಾಣೆ ಮೊ.ಸಂ. 10/2020 ಕಲಂ. 279-337 ಐ.ಪಿ.ಸಿ & 187 ಐ.ಎಂ.ವಿ ಆಕ್ಟ್ :-
ದಿನಾಂಕ 22-01-2020 ರಂದು 13:00 ಗಂಟೆಯಲ್ಲಿ ಪಿರ್ಯಾದಿ ರೂಪ ಜಿ ಕೋಂ ಆನಂದಕುಮಾರ್ ಕೆ 30 ವರ್ಷ, ನಾಯಕ ಜನಾಂಗ ಹನುಮಂತನಗರ ಗೌರಿಬಿದನೂರು ನಗರ ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ, ತಾನು ಹನುಮಂತನಗರದಲ್ಲಿರುವ ತಮ್ಮ ತಂದೆ ಮನೆಯಲ್ಲಿ ವಾಸವಾಗಿರುತ್ತೇನೆ ದಿನಾಂಕ 19/01/2020 ರಂದು ಸಂಜೆ ಸುಮಾರು 4:30 ಗಂಟೆ ಸಮಯದಲ್ಲಿ ತಮ್ಮ ತಂದೆ ಗಂಗಾಧರಪ್ಪ ಕೆ ರವರು ತಮ್ಮ ಬಾಬತ್ತು KA 40 EA 9603 Zest ದ್ವಿಚಕ್ರ ವಾಹನದಲ್ಲಿ ಮನೆಗೆ ಬರುತ್ತಿರುವಾಗ ಗೌರಿಬಿದನೂರು ನಗರದ BH ರಸ್ತೆಯ ಪ್ರವಾಸಿ ಮಂದಿರದ ಮುಂಭಾಗದಲ್ಲಿ ತಮ್ಮ ಮನೆ ಕಡೆಗೆ ವಾಹನವನ್ನು ತಿರುಗಿಸಿಕೊಳ್ಳುತ್ತಿದ್ದಾಗ ಬೆಂಗಳೂರು ಕಡೆಯಿಂದ ಬಂದ ಯಾವುದೋ ಒಂದು Scorpio ವಾಹನವನ್ನು ಅದರ ಚಾಲಕನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ತಮ್ಮ ತಂದೆಯ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆಸಿದ ಪರಿಣಾಮ ದ್ವಿಚಕ್ರ ವಾಹನವು ಜಖಂಗೊಂಡಿರುವುದಲ್ಲದೆ ತಮ್ಮ ತಂದೆ ತಲೆಗೆ ಬೆನ್ನು ಮತ್ತು ಕಾಲುಗಳಿಗೆ ಗಾಯಗಳಾಗಿ ಪ್ರಙ್ಞೆ ತಪ್ಪಿದ್ದು ಗಾಯಾಳು ತಮ್ಮ ತಂದೆಗೆ ಗೌರಿಬಿದನೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ವೈದ್ಯರ ಸಲಹೆ ಮೇರೆಗೆ ಬೆಂಗಳೂರಿನ ಎಂ.ಎಸ್ ರಾಮಯ್ಯ ಮೆಮೊರಿಯಲ್ ಆಸ್ಪತ್ರೆಯಲ್ಲಿ ದಾಖಲಿಸಿದ್ದು.ಅವರಿಗೆ ಹೇಳಿಕೆ ಕೊಡಲು ಸಾದ್ಯವಾಗದ ಕಾರಣ ತಾನು ಅವರ ಯೋಗಕ್ಷೇಮವನ್ನು ನೋಡಿಕೊಂಡಿದ್ದು ಈ ದಿನ ತಡವಾಗಿ ದೂರನ್ನು ನೀಡುತ್ತಿದ್ದು ಅಪಘಾತಪಡಿಸಿ ಕಾರಿನ ಚಾಲಕ ಕಾರನ್ನು ನಿಲ್ಲಿಸದೇ ಹೊರಟುಹೋಗಿರುವುದರಿಂದ ತಮ್ಮ ತಂದೆಗೆ ಅಪಘಾತವನ್ನುಂಟು ಮಾಡಿದ Scorpio ವಾಹನದ ಚಾಲಕನ ಮೇಲೆ ಕಾನೂನು ರೀತ್ಯಾ ಕ್ರಮ ಕೈಗೊಳ್ಳಬೇಕೆಂದು ನೀಡಿದ ದೂರನ್ನು ಪಡೆದು ಪ್ರಕರಣ ದಾಖಲಿಸಿರುತ್ತೇನೆ.
7. ಗುಡಿಬಂಡೆ ಪೊಲೀಸ್ ಠಾಣೆ ಮೊ.ಸಂ. 14/2020 ಕಲಂ. 20 NARCOTIC DRUGS & PSYCHOTROPIC SUBSTANCES ACT :-
ದಿನಾಂಕ:21-01-2020 ರಂದು ರಾತ್ರಿ:8-30 ಗಂಟೆಗೆ ಪಿರ್ಯಾದಿದಾರರಾದ ಶ್ರೀ ಕೆ.ರವಿಶಂಕರ್ ಪೋಲೀಸ್ ಉಪಾದೀಕ್ಷಕರು ಚಿಕ್ಕಬಳ್ಳಾಪುರ ಉಪ-ವಿಭಾಗ ಚಿಕ್ಕಬಳ್ಳಾಪುರ ರವರು ಠಾಣೆಗೆ ಹಾಜರಾಗಿ ನೀಡಿದ ಜ್ಞಾಪನದ ಸಾರಂಶವೇನೆಂದರೆ: ದಿನಾಂಕ:21/01/2020 ರಂದು ಭಾತ್ಮಿದಾರರಿಂದ ತಮಗೆ ಬಂದ ಖಚಿತ ಮಾಹಿತಿಯಂತೆ ಚಿಕ್ಕಬಳ್ಳಾಪುರ ಜಿಲ್ಲೆ ಗುಡಿಬಂಡೆ ತಾಲ್ಲೂಕು ಬೆಣ್ಣಿಪರ್ತಿ ಗ್ರಾಮದಲ್ಲಿ ಮಾದಕ ವಸ್ತುವಾದ ಗಾಂಜಾ ಗಿಡಗಳನ್ನು ತಂದು ತಮ್ಮ ಮನೆಯಲ್ಲಿ ಇಟ್ಟುಕೊಂಡು ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ನವೀನ್ ಕುಮಾರ ಬಿನ್ ಲೇಟ್ ಶಿವಗಂಗಪ್ಪ 26 ವರ್ಷ ಭೋವಿ ಜನಾಂಗ ಗಾರೆ ಕೆಲಸ ವಾಸ ಬೆಣ್ಣೆಪರ್ತಿ ಗ್ರಾಮ ಗುಡಿಬಂಡೆ ತಾಲ್ಲೂಕು ರವರ ಮನೆಯ ಮೇಲೆ ಪಂಚರ ಸಮಕ್ಷಮ ದಾಳಿ ಮಾಡಿ ಸಂಜೆ:6-00 ಗಂಟೆಯಿಂದ ರಾತ್ರಿ:8-00 ಗಂಟೆಯವರಿಗೆ ಪಂಚನಾಮೆ ಕ್ರಮ ಜರುಗಿಸಿ ಪಂಚನಾಮೆ ಮೂಲಕ ಆರೋಪಿ ಬಳಿ ಇದ್ದ ಸುಮಾರು 1 ಕೆ.ಜಿ 500 ಗ್ರಾಂ ಗಾಂಜಾ ಸೊಪ್ಪು ಸಮೇತ ಗಾಂಜಾ ಗಿಡಗಳು ಮತ್ತು ಆರೋಪಿ ಬಳಿ ಇದ್ದ 400 ರೂಪಾಯಿ ಹಣವನ್ನು ಅಮಾನತ್ತುಪಡಿಸಿಕೊಂಡು ಮೇಲ್ಕಂಡ ಆರೋಪಿಯನ್ನು ವಶಕ್ಕೆ ಪಡೆದುಕೊಂಡು ಅಸಲು ಪಂಚನಾಮೆ ಮತ್ತು ಮೇಲ್ಕಂಡ ಮಾಲುಗಳನ್ನು ಹಾಗೂ ಆರೋಪಿಯನ್ನು ನೀಡಿ ಮುಂದಿನ ಕಾನೂನು ಕ್ರಮ ಕೈಗೊಂಡು ವರದಿಯನ್ನು ನೀಡಲು ಸೂಚಿಸಿದ್ದರ ಮೇರಿಗೆ ಪ್ರಕರಣವನ್ನು ದಾಖಲಿಸಿಕೊಂಡಿರುತ್ತೆ.
8. ಮಂಚೇನಹಳ್ಳಿ ಪೊಲೀಸ್ ಠಾಣೆ ಮೊ.ಸಂ. 29/2020 ಕಲಂ. 279-337 ಐ.ಪಿ.ಸಿ :-
ದಿನಾಂಕ:21/01/2020 ರಂದು ಪಿರ್ಯಾದಿದಾರರಾದ ಫರಾಧ ಬೆಗಂ ಕೊಂ ಇಕ್ಬಾಲ್ ಅಹಮದ್ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ನನ್ನ ಗಂಡ ಇಕ್ಬಾಲ್ ಅಹ್ಮದ್ ಬಿನ್ ಅಬ್ದುಲ್ ಹಸನ್, 49 ವರ್ಷ ರವರು ಗೌರಿಬಿದನೂರು ತಾಲ್ಲೂಕು ತೊಂಡೆಬಾವಿ ಎಸಿಸಿ ಪ್ಯಾಕ್ಟರಿಯಲ್ಲಿ ಸೆಕ್ಯೂರಿಟಿ ಸೂಪರ್ ವೈಸರ್ ಕೆಲಸ ಮಾಡಿಕೊಂಡು ಎಸಿಸಿ ಪ್ಯಾಕ್ಟರಿ ಕಾಲೋನಿಯಲ್ಲಿಯೇ ವಾಸವಾಗಿದ್ದು ಆಗಾಗ್ಗ ಗುಲ್ಬರ್ಗಕ್ಕೆ ಬಂದು ಹೋಗುತ್ತಿದ್ದರು. ಹೀಗಿರುವಲ್ಲಿ ದಿನಾಂಕ: 19/01/2020 ರಂದು ಮದ್ಯಾಹ್ನ ನನ್ನ ಗಂಡ ಇಕ್ಬಾಲ್ ಅಹ್ಮದ್ ರವರು ತೊಂಡೆಬಾವಿ ಹೋಗಿ ಬರಬೇಕೆಂದು ಎಸಿಸಿ ಪ್ಯಾಕ್ಟರಿಯಲ್ಲಿ ಸೆಕ್ಯೂರಿಟಿ ಕೆಲಸ ಮಾಡಿಕೊಂಡಿರುವ ಪಿಂಜಾರ್ಲಹಳ್ಳಿ ಗ್ರಾಮದ ಲಕ್ಷ್ಮೀನಾರಾಯಣ ಬಿನ್ ಲೇಟ್ ಈಶ್ವರಪ್ಪ ರವರ ಬಾಬತ್ತು KA-40- EB-2770 ನೊಂದಣಿ ಸಂಖ್ಯೆಯ ಸೂಪರ್ ಎಕ್ಸ್ಎಲ್ ದ್ವಿ ಚಕ್ರ ವಾಹನವನ್ನು ತೆಗೆದುಕೊಂಡು ಹೋಗಿದ್ದು ದ್ವಿ ಚಕ್ರ ವಾಹನದಲ್ಲಿ ತೊಂಡೆಬಾವಿಗೆ ಹೋಗಿ ಕೆಲಸ ಮುಗಿಸಿಕೊಂಡು ವಾಪಸ್ ಎಸಿಸಿ ಪ್ಯಾಕ್ಟರಿಗೆ ಬರಲು ಮೇಲ್ಕಂಡ ದ್ವಿ ಚಕ್ರ ವಾಹನವನ್ನು ಚಾಲನೆ ಮಾಡಿಕೊಂಡು ಗೌರಿಬಿದನೂರು ಬೆಂಗಳೂರು ಎಸ್.ಎಚ್ 9 ರಸ್ತೆಯಲ್ಲಿ ಬರುತ್ತಿರುವಾಗ ಸಂಜೆ 6-15 ಗಂಟೆಗೆ ಅಲ್ಲೀಪುರ ಕ್ರಾಸ್ ಬಳಿ ಎದುರುಗಡೆಯಿಂದ ಅಂದರೆ ಗೌರಿಬಿದನೂರು ಕಡೆಯಿಂದ KA-52-L-5767 ಅಪ್ಪಾಚ್ಚಿ ದ್ವಿ ಚಕ್ರ ವಾಹನದ ಸವಾರ ತನ್ನ ವಾಹನವನ್ನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ನನ್ನ ಗಂಡ ಚಾಲನೆ ಮಾಡಿಕೊಂಡು ಬರುತ್ತಿದ್ದ ದ್ವಿ ಚಕ್ರ ವಾಹನಕ್ಕೆ ಡಿಕ್ಕಿ ಹೊಡೆಯಿಸಿ ಅಪಘಾತಪಡಿಸಿದ್ದರ ಪರಿಣಾಮ ದ್ವಿ ಚಕ್ರ ವಾಹನಗಳು ಜಖಂಗೊಂಡು ದ್ವಿ ಚಕ್ರ ವಾಹನವನ್ನು ಚಾಲನೆ ಮಾಡುತ್ತಿದ್ದ ನನ್ನ ಗಂಡನಿಗೆ ಬಲಕಾಲಿಗೆ ರಕ್ತಗಾಯ ಮತ್ತು ಮೈಮೇಲೆ ಮೂಗೇಟುಗಳಾಗಿದ್ದು ಅಪಘಾತಪಡಿಸಿದ ದ್ವಿ ಚಕ್ರ ವಾಹನದ ಸವಾರನಿಗೂ ಸಹ ರಕ್ತಗಾಯಗಳಾಗಿದ್ದು ನನ್ನ ಗಂಡನನ್ನು ಚಿಕಿತ್ಸೆಗಾಗಿ ಅಲ್ಲಿದ್ದ ಸಾರ್ವಜನಿಕರು ಉಪಚರಿಸಿ ಚಿಕಿತ್ಸೆಗಾಗಿ ಸೋಮೇಶ್ವರ ಆಸ್ಪತ್ರೆಗೆ ದಾಖಲಿಸಿರುವುದಾಗಿ ವಿಚಾರ ತಿಳಿದು ನಾನು ಸಹ ಸೋಮೇಶ್ವರ ಆಸ್ಪತ್ರೆಗೆ ಬಂದು ನನ್ನ ಗಂಡನಿಗೆ ಚಿಕಿತ್ಸೆಕೊಡಿಸಿ ಈ ದಿನ ತಡವಾಗಿ ದೂರು ನೀಡುತ್ತಿದ್ದು ಈ ಅಪಘಾತಕ್ಕೆ ಕಾರಣವಾದ KA–52- L-5767 ಅಪ್ಪಾಚ್ಚಿ ದ್ವಿ ಚಕ್ರ ವಾಹನದ ಸವಾರನ ವಿರುದ್ದ ಕಾನೂನು ರೀತ್ಯ ಕ್ರಮ ಜರುಗಿಸಬೇಕೆಂದು ಕೋರಿ ಕೊಟ್ಟ ದೂರು.
9. ಮಂಚೇನಹಳ್ಳಿ ಪೊಲೀಸ್ ಠಾಣೆ ಮೊ.ಸಂ. 30/2020 ಕಲಂ. 279-337 ಐ.ಪಿ.ಸಿ :-
ದಿನಾಂಕ:22/01/2020 ರಂದು ಪಿರ್ಯಾದಿದಾರರಾದ ಶ್ರೀ ಮುನಿರಾಜು ಬಿನ್ ಚಿಕ್ಕಲಕ್ಕಪ್ಪ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ:29/12/2019 ರಂದು ಸಂಜೆ ಸುಮಾರು 3-00 ಗಂಟೆಯ ಸಮಯದಲ್ಲಿ ನನಗೆ ಯಾರೋ ಗೌರಿಬಿದನೂರು ಸರ್ಕಾರಿ ಆಸ್ಪತ್ರೆಯಿಂದ ಕರೆ ಮಾಡಿ ನಿಮ್ಮ ಅಣ್ಣನಿಗೆ ಅಪಘಾತವಾಗಿ ಆಸ್ಪತ್ರೆಗೆ ಹಾಕಿಕೊಂಡು ಬಂದಿರುವುದಾಗಿ ತಿಳಿಸಿದ್ದು, ನಾನು ಬಂದು ನೋಡಲಾಗಿ ವಿಚಾರ ನಿಜವಾಗಿದ್ದು, ವಿಚಾರ ತಿಳಿಯಲಾಗಿ ದಿನಾಂಕ:29/12/2019 ರಂದು ನಮ್ಮ ಅಣ್ಣ ರವಿ ಮತ್ತು ಎನ್. ಆದೇಪ್ಪ ರವರು ಯಾವುದೋ ತುರ್ತು ಕೆಲಸದ ನಿಮಿತ್ತ ಗೌರಿಬಿದನೂರಿಗೆ ನಮ್ಮ ಬಾಬತ್ತು ಕೆ.ಎ-40, ಆರ್.4864 ದ್ವಿಚಕ್ರ ವಾಹನದಲ್ಲಿ ಹೋಗಿ ನಂತರ ತೊಂಡೇಬಾವಿಗೆ ಬಂದು ನಮ್ಮ ಗ್ರಾಮಕ್ಕೆ ವಾಪಾಸ್ ಬರಲು ತೊಂಡೇಬಾವಿ ಮಂಚೇನಹಳ್ಳಿ ರಸ್ತೆಯಲ್ಲಿ ಬರುತ್ತಿರುವಾಗ ಮದ್ಯಾಹ್ನ 2-00 ಗಂಟೆಯ ಸಮಯದಲ್ಲಿ ಹುಸೇನ್ ಪುರ ಗೇಟ್ ಬಳಿ ಆದೇಪ್ಪ ರವರು ವಾಹನವನ್ನು ಅತಿವೇಗ ಮತ್ತು ಅಜಾಗರುಕತೆಯಿಂದ ಚಾಲನೆ ಮಾಡಿದ್ದು, ರಸ್ತೆಯಲ್ಲಿ ನಾಯಿ ಅಡ್ಡ ಬಂದಿದ್ದರಿಂದ ಪಕ್ಕಕ್ಕೆ ತಿರುಗಿಸಿದಾಗ ಹಿಂಭಾಗದಲ್ಲಿ ಕುಳಿತಿದ್ದ ರವಿಯವರು ಕೆಳಗೆ ಬಿದ್ದು, ತಲೆಗೆ ಮತ್ತು ಮೈಕೈಗೆ ರಕ್ತಗಾಯಗಳಾಗಿದ್ದು, ಚಾಲನೆ ಮಾಡುತ್ತಿದ್ದ ಆದೇಪ್ಪ ರವರಿಗೆ ಮೂಗೇಟುಗಳಾಗಿದ್ದು, ಆಗ ತಕ್ಷಣ ಅಲ್ಲಿದ್ದ ಸಾರ್ವಜನಿಕರು ಉಪಚರಿಸಿ ನಮ್ಮ ಅಣ್ಣನನ್ನು ಯಾವುದೋ ಒಂದು ಆಟೋದಲ್ಲಿ ಗೌರಿಬಿದನೂರು ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಿದ್ದು, ನಂತರ ಅಲ್ಲಿನ ವೈದ್ಯರ ಸಲಹೆಯ ಮೇರೆಗೆ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ಯಲಹಂಕದ ಬಳಿ ಇರುವ ಕೆಕೆ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿ ಚಿಕಿತ್ಸೆ ಕೊಡಿಸಿ ನಮ್ಮ ಅಣ್ಣನನ್ನು ನೋಡಿಕೊಳ್ಳುವವರು ಯಾರು ಇಲ್ಲದೆ ಇದ್ದ ಕಾರಣ ಚಿಕಿತ್ಸೆ ಕೊಡಿಸಿ ಈ ದಿನ ತಡವಾಗಿ ಬಂದು ದೂರು ನೀಡುತ್ತಿದ್ದ ಅಪಘಾತ ಪಡಿಸಿದ ಆದೇಪ್ಪ ರವರ ಮೇಲೆ ಕಾನೂನು ರೀತ್ಯ ಕ್ರಮ ಜರುಗಿಸಲು ಕೋರಿ ಕೊಟ್ಟ ದೂರು.
10. ನಂದಿಗಿರಿಧಾಮ ಪೊಲೀಸ್ ಠಾಣೆ ಮೊ.ಸಂ. 04/2020 ಕಲಂ. 279-337-304(ಎ) ಐ.ಪಿ.ಸಿ :-
ದಿನಾಂಕ:21/01/2020 ರಂದು ರಾತ್ರಿ 10:35 ಗಂಟೆಗೆ ಚಿಕ್ಕಬಳ್ಳಾಪುರ ಸರ್ಕಾರಿ ಆಸ್ಪತ್ರೆಯಿಂದ ಬಂದಂತಹ ಪೋನ್ ಕರೆ ಮೇರೆಗೆ ಆಸ್ಪತ್ರೆಯ ಬಳಿ ಬೇಟಿ ನೀಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗಾಯಾಳು ಚೇತನ್ ರವರ ಹೇಳಿಕೆಯನ್ನು ವೈದ್ಯರ ಸಮಕ್ಷಮ ಪಡೆದು ಠಾಣೆಗೆ ರಾತ್ರಿ 11:55 ಗಂಟೆಗೆ ವಾಪಸ್ಸು ಬಂದು ದಾಖಲಿಸಿಕೊಂಡ ಪ್ರಕರಣದ ಸಾರಾಂಶವೇನೆಂದರೆ ತಮ್ಮ ಗ್ರಾಮದ ಗಂಗರಾಜು ಬಿನ್ ಶಂಕರಪ್ಪ ರವರ ಮನೆಗೆ ಹಿಂದುಪುರ ತಾಲ್ಲೂಕು ಚೇಳೂರು ಗ್ರಾಮದ ವಾಸಿಯಾದ ವಸಂತ ರವರು ಬಂದು ಹೋಗುತ್ತಿದ್ದರು. ಅವನು ಒಂದು ತಿಂಗಳುನಿಂದ ಪರಿಚಯನಾಗಿದ್ದನು. ಆತನು ಎಸ್.ಎಲ್.ವಿ ಬಸ್ಸಿನಲ್ಲಿ ಕಂಡೆಕ್ಟರ್ ಕೆಲಸ ಮಾಡುತ್ತಿದ್ದನು. ಆಗಾಗ ಗಂಗರಾಜನ ಮನೆಗೆ ಬರುತ್ತಿದ್ದಂತೆ ಈ ದಿನ ಕಣಿವೆನಾರಾಯಣಪುರ ಗ್ರಾಮಕ್ಕೆ ಬಂದಿದ್ದನು. ತಾನು ಸಂಜೆ 5:30 ಗಂಟೆ ಸಮಯದಲ್ಲಿ ಹಾಲನ್ನು ಕರೆದು ಡೈರಿಗೆ ಹಾಕಿ ಬಂದಾಗ ವಂಸತನು ತನಗೆ ದೊಡ್ಡಬಳ್ಳಾಪುರದಲ್ಲಿ ಹಣ ಬರಬೇಕಾಗಿದ್ದು ಅಲ್ಲಿಗೆ ಹೋಗಿ ಬರೊಣವೆಂದು ಹೇಳಿ ಗಂಗರಾಜನ ಬಾಬತ್ತು ದ್ವಿಚಕ್ರ ವಾಹನ ಸಂ KA-40 X-0753 ರಲ್ಲಿ ಕೊಡಿಸಿಕೊಂಡು ಬಂದನು. ತಾನು ವಸಂತನ ಹಿಂದೆ ಕುಳಿತುಕೊಂಡು ದೊಡ್ಡಬಳ್ಳಾಪುರಕ್ಕೆ ಹೋಗಲು ಮೆಳೇಕೊಟೆ ಕ್ರಾಸಿಗೆ ಬಂದು ವಸಂತನು ಹಣವನ್ನು ಕೊಡಬೇಕಾಗಿದ್ದ ವ್ಯಕ್ತಿಗೆ ಪೋನ್ ಮಾಡಿದಾಗ ತಾನು ಚಿಕ್ಕಬಳ್ಳಾಪುರದಲ್ಲಿದ್ದು ಅಲ್ಲಿಗೆ ಬನ್ನಿ ಎಂದು ಹೇಳಿದ್ದು ಅವರ ಮಾತಿನಂತೆ ಚಿಕ್ಕಬಳ್ಳಾಪುರಕ್ಕೆ ಬರಲು ಸಂಜೆ ಸುಮಾರು 8:30 ಗಂಟೆ ಸಮಯದಲ್ಲಿ ನಂದಿ ಗ್ರಾಮದ ಮುನಿಶಾಮಿ ರವರ ಮನೆಯ ಬಳಿ ಬರುತ್ತಿದ್ದಾಗ ನಂದಿ ಗ್ರಾಮದ ಕಡೆಯಿಂದ ಬಂದಂತಹ KA-01 EW-8362 ನೊಂದಣಿ ಸಂಖ್ಯೆಯ ಸ್ಕೂಟಿ ವಾಹನಕ್ಕೆ ತಗುಲಿಸಿದ್ದು ನಾವಿಬ್ಬರು ರಸ್ತೆಯ ಮೇಲೆ ಉರುಳಿ ಬಿದ್ದಾಗ ಸುಲ್ತಾನಪೇಟೆ ಗ್ರಾಮದ ಕಡೆಯಿಂದ ಬಂದಂತಹ KA-51 AD-1209 ನೊಂದಣಿ ಸಂಖ್ಯೆಯ ಲಾರಿಯ ಚಾಲಕ ಲಾರಿಯನ್ನು ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ರಸ್ತೆಯಲ್ಲಿ ಬಿದ್ದಿದ್ದ ವಸಂತನ ತಲೆಯ ಮೇಲೆ ಹರಿದು ತಲೆಯು ನುಜ್ಜಗುಜ್ಜಾಯಿತು. ಸ್ಥಳದಲ್ಲಿಯೇ ವಸಂತನು ಮೃತಪಟ್ಟನು. ರಸ್ತೆಯ ಮೇಲೆ ಬಿದ್ದಂತಹ ತನಗೆ ಬಲಗೈಗೆ ತರಚಿದ ಗಾಯ, ಬಲಮೊಣಕಾಲಿಗೆ, ಬಲಕಾಲಿಗೆ ತರಚಿದ ಗಾಯ ಹಾಗೂ ತುಟಿಗೆ ರಕ್ತಗಾಯವಾಯಿತು ಅಷ್ಟರಲ್ಲಿ ಸಾರ್ವಜನಿಕರು 108 ಆಂಬ್ಯಲೇನ್ಸ್ನ್ನು ಕರೆಯಿಸಿ ತನ್ನನ್ನು ಮತ್ತು ಸ್ಕೂಟಿಯಲ್ಲಿದ್ದ ಇಬ್ಬರಿಗೂ ಸಣ್ಣಪುಟ್ಟ ಗಾಯಗಳಾಗಿದ್ದ ಅವರನ್ನು ಸಹ ಆಬ್ಯುಲೇನ್ಸ್ನಲ್ಲಿ ಆಸ್ಪತ್ರೆಗೆ ಕರೆತಂದರು. ತಾನು ಆಸ್ಪತ್ರೆಯಲ್ಲಿ ಪೊಲೀಸರಿಗೆ ಹೇಳಿಕೆಯನ್ನು ನೀಡಿರುತ್ತೇನೆ. ವಸಂತನ ಸಾವಿಗೆ ಕಾರಣನಾದ KA-51 AD-1209 ಲಾರಿಯ ಚಾಲಕನ ಮೇಲೆ ಕಾನೂನು ರೀತ್ಯ ಕ್ರಮ ಜರುಗಿಸಲು ಕೊಟ್ಟ ದೂರಿನ ಮೇರೆಗೆ ಈ ಪ್ರ.ವ.ವರದಿ.