ದಿನಾಂಕ :21/10/2020 ರ ಅಪರಾಧ ಪ್ರಕರಣಗಳು

  1. ಬಟ್ಲಹಳ್ಳಿ ಪೊಲೀಸ್ ಠಾಣೆ ಮೊ.ಸಂ.102/2020 ಕಲಂ: 384  ಐ.ಪಿ.ಸಿ :-

     ದಿನಾಂಕ:20/10/2020 ರಂದು ಬೆಳಿಗ್ಗೆ 9-30 ಗಂಟೆ ಸಮಯದಲ್ಲಿ  ಪಿ ಎಸ್ ಐ ಬಟ್ಲಹಳ್ಳಿ ಪೊಲೀಸ್ ಠಾಣೆ ರವರು ಠಾಣೆಗೆ ಹಾಜರಾಗಿ ನೀಡಿದ ವರದಿಯ ಸಾರಾಂಶವೇನೆಂದರೆ,   ಈ ಮೂಲಕ ನಿಮಗೆ ತಿಳಿಯಪಡಿಸುವುದೇನೆಂದರೆ, ನಾನು ದಿನಾಂಕ:05/07/2019 ರಿಂದ ಬಟ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪಿ ಎಸ್ ಐ ಆಗಿ ಕರ್ತವ್ಯ ನಿರ್ವಹಿಸುತ್ತಿರುತ್ತೇನೆ. ನಾನು ಈ ಹಿಂದೆ 2015 ರಿಂದ 2016 ರವರೆಗೆ ಚಿಂತಾಮಣಿ ನಗರ ಪೊಲೀಸ್ ಠಾಣೆಯಲ್ಲಿ ಪಿ ಎಸ್ ಐ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಅವಧಿಯಲ್ಲಿ ಕನ್ನಡ ಪ್ರಭ ಪತ್ರಿಕೆಯ ವರದಿಗಾರನಾದ ಜಿ ಎಲ್ ಶಂಕರ್ ರವರು ನನಗೆ ಪರಿಚಯವಾಗಿರುತ್ತಾರೆ. ನಾನು ಬಟ್ಲಹಳ್ಳಿ ಪೊಲೀಸ್ ಠಾಣೆಗೆ ವರ್ಗಾವಣೆಯಾಗಿ ಬಂದ ನಂತರ ಜಿ ಎಲ್ ಶಂಕರ್ ಎಂಬುವರು 2-3 ಸಲ ಠಾಣೆಗೆ ಬಂದು ಬಿಲ್ಲಾಂಡ್ಲಹಳ್ಳಿ ಕಡೆ ಆಂದ್ರಪ್ರದೇಶ ಬಾರ್ಡರ್ ನಲ್ಲಿ ಇಸ್ಪೀಟ್ ಆಟ ಆಡಿಕೊಳ್ಳಲು ನನಗೆ ಪರಿಚವಿರುವ ವ್ಯಕ್ತಿಗಳು ಕೇಳಿರುತ್ತಾರೆ ಅದಕ್ಕೆ ನೀವು ಆಸ್ಪದ ಮಾಡಿಕೊಡಬೇಕೆಂತ ಹೇಳಿದ ಅದಕ್ಕೆ ನಾನು ನನ್ನ ಠಾಣಾ ವ್ಯಾಪ್ತಿಯಲ್ಲಿ ಯಾವುದೇ ರೀತಿಯ ಅಕ್ರಮ ಚಟುವಟಿಕೆಗಳಿಗೆ ಆಸ್ಪದ ನೀಡುವುದಿಲ್ಲ. ನೀವು ಈ ರೀತಿ ಅಕ್ರಮ ಚಟುವಟಿಕೆಗಳಿಗೆ ಬಗ್ಗೆ ನನ್ನ ಬಳಿ ಉತ್ತೇಜನ ನೀಡಬೆಡಿ ಎಂತ ಹೇಳಿ ಇನ್ನೊಮ್ಮೆ ನನ್ನೊಂದಿಗೆ ಪ್ರಸ್ತಾಪ ಮಾಡಬಾರದೆಂತ ಹೇಳಿ ಎಚ್ಚರಿಕೆ ನೀಡಿ ಕಳುಹಿಸಿದ್ದೆ ಸದರಿ ವಿಚಾರದ ಬಗ್ಗೆ ನನ್ನೊಂದಿಗೆ ಮನಸ್ತಾಪವನ್ನಿಟ್ಟುಕೊಂಡಿದ್ದನು.  ಇದಾದ ಬಳಿಕ ಒಂದು ದಿನ ಸಂಜೆ ಸುಮಯದಲ್ಲಿ ಜಿ ಎಲ್ ಶಂಕರ್ ರವರು ನನಗೆ ಪೊನ್ ಕರೆ ಮಾಡಿ ನಂದಿಗಾನಹಳ್ಳಿ ಡಾಬಾ ಬಳಿಗೆ ಬಂದಿರುತ್ತೇವೆ. ಡಾಬಾದ ಮಾಲೀಕರಿಗೆ ನಿಮ್ಮ ವಿಚಾರವನ್ನು ತಿಳಿಸಿದೆ ಆಗ ಡಾಬಾ ಮಾಲೀಕನು ಅವನು ಯಾರು ಪಾಪಣ್ಣ ಪಿ ಎಸ್ ಐ ನನಗೆ ಗೊತ್ತಿಲ್ಲ ಎಂತ ಹಗುರವಾಗಿ ಮಾತನಾಡುತ್ತಾನೆ. ಆತನು ತನ್ನ ಡಾಬಾದಲ್ಲಿ ವೈನ್ಸ್ ವ್ಯಾಪಾರ ಮಾಡಿಕೊಳ್ಳುವಂತೆ ನಾನೆ ಆತನಿಗೆ ಧೈರ್ಯ ಹೇಳಿರುತ್ತೇನೆ. ನನ್ನ ಪೋನ್ ಅವನಿಗೆ ಕೊಡುತ್ತೇನೆ ನೀವು ಒಂದು ಸಲ ಮಾತನಾಡಿ ಎಂತ ಹೇಳಿದ ಆಗ ನಾನು ಆತನು ಏನಾದರೂ ಮಾತನಾಡಿಕೊಳ್ಳಲಿ ಬಿಡಿ ಎಂತ ಹೇಳಿದಾಗ ನಂತರ ಡಾಬಾ ಮಾಲೀಕರಾದ ಮಂಜುನಾಥ ರವರು ಮಾತನಾಡಿದ್ದು, ವಿಚಾರ ಕೆಳಲಾಗಿ ಪೇಪರ್ನವರು  ಊಟಕ್ಕೆ ಬಂದಿರುತ್ತಾರೆಂತ ತಿಳಿಸಿದ. ಆ ದಿನ ಶಂಕರ್ ಮತ್ತು ಆತನೊಂದಿಗೆ ಹೋಗಿದ್ದವರು ಡಾಬಾದಲ್ಲಿ ಮದ್ಯಪಾನ ಸೇವಿಸಿ ಊಟ ಮಾಡಿ ನನ್ನ ಹೆಸರನ್ನು ದುರ್ಬಳಕೆ ಮಾಡಿಕೊಂಡು ಹೋಗಿರುತ್ತಾರೆ. ಎರಡನೇಯದಾಗಿ ನನಗೆ ಕನ್ನಡ ಪ್ರಭ ದಿನ ಪತ್ರಿಕೆಯ ವರದಿಗಾರರಾದ  ಶಂಕರ್ ರವರು ಒಂದು ದಿನ ರಾತ್ರಿ ಕರೆಮಾಡಿ ನನಗೆ ಮಾತನಾಡಿದ ಮಾತಿನ ಅವಧಿಯಲ್ಲಿ ನಾನು ಸೀರಿಯಸ್ ಆಗಿ ಹೇಳುತ್ತಿರುವುದು ನಾನು ಚಿಂತಾಮಣಿಯಲ್ಲಿ ಒಂದು ಮನೆಯನ್ನು ಕಟ್ಟಿಸುತ್ತಿರುತ್ತೇನೆ. ನನಗೆ ಎಂಸ್ಯಾಂಡ್, ಮತ್ತು ಜಲ್ಲಿ, ಹೊಡಿಸಿಕೊಡಬೇಕೆಂದು ಕೇಳಿದ. ಆಗ ನಾನು ಎಂಸ್ಯಾಂಡ್ ಮತ್ತು ಜಲ್ಲಿ ಹೊಡಿಸಲು ಆಗುವುದಿಲ್ಲವೆಂದು ಹೇಳಿದಾಗ ಆಯಿತು ಬಿಡಿ ನಿಮ್ಮನ್ನು ನೋಡಿಕೊಳ್ಳುತ್ತೆನೆಂದು ಹೇಳಿ  ಪೊನ್ ಕಟ್ ಮಾಡಿರುತ್ತಾನೆ. ದಿನಾಂಕ:17/09/2020 ರಂದು ರಾತ್ರಿ 7-30 ಗಂಟೆಯ ಸಮಯದಲ್ಲಿ ಜಿ ಎಲ್ ಶಂಕರ್ ರವರು ನನಗೆ ಪೊನ್ ಮಾಡಿ ನಮ್ಮ ಠಾಣಾ ವ್ಯಾಪ್ತಿಯಲ್ಲಿ ದಾಖಲಾಗಿರುವ ಗಾಂಜಾ ಪ್ರಕರಣಗಳ ಬಗ್ಗೆ ಮಾಹಿತಿ ಕೇಳುವ ನೆಪದಲ್ಲಿ ನನ್ನೊಂದಿಗೆ ಮಾತನಾಡುತ್ತಾ ನಮ್ಮದು ರಾಜ್ಯ ಪತ್ರಿಕೆಯಾಗಿರುತ್ತೆ. ಆದರೆ ನೀವು ನನಗೆ ಯಾಕೆ ಮಾಹಿತಿ ಕೊಡುವುದಿಲ್ಲ ನಾನೇನು ಯೂಟೂಬ್ ಚಾನಲ್ನವನಲ್ಲ. ನೀವು ಮಾಹಿತಿ ನೀಡಿದರೆ ನಿಮ್ಮ ಬಗ್ಗೆ ಒಳ್ಳೆ ನ್ಯೂಸ್ ಮಾಡುತ್ತಿದ್ದೆ. ನೀವು ನನಗೆ ನ್ಯೂಸೇ ಕೊಡುವುದಿಲ್ಲ ಯಾಕೇ ಎಂತ ಪ್ರಶ್ನೆಗಳನ್ನು ಮಾಡಿರುತ್ತಾನೆ. ನಾನು ಯಾವುದೇ ಘಟನೆ ನಡೆದ ಕೂಡಲೇ ನಮ್ಮ ಹಿರಿಯ ಅಧಿಕಾರಿಗಳಿಗೆ ವರದಿ ಮಾಡುವ ಕೆಲಸದಲ್ಲಿದ್ದು, ಘಟನೆಗಳ ಸಂಕ್ಷಿಪ್ತ ಮಾಹಿತಿಯನ್ನು ಸಂಗ್ರಹಿಸುವ ಬಗ್ಗೆ ಬ್ಯುಸಿಯಾಗಿರುತ್ತೇನೆ. ಇದಕ್ಕೆ ನಮ್ಮ ಠಾಣೆಯ ಗುಪ್ತ ಮಾಹಿತಿ ಪೊಲೀಸರಿಂದ ಮಾಹಿತಿ ಪಡೆದುಕೊಳ್ಳಿ ಎಂದು ಹೇಳಿದ್ದೆ. ಅದಕ್ಕೆ  ಕನ್ನಡ ಪ್ರಭ ಪತ್ರಿಕೆಯ ವರದಿಗಾರನು ನನಗೆ ಸಂಭಾಷಣೆಯ ಸಮಯದಲ್ಲಿ ನಿಮ್ಮ ಬಗ್ಗೆ ಪತ್ರಿಕೆಯಲ್ಲಿ ಬೇರೆ ಏನೋ ಬರೆಯುವುದು ಬೇಡವೆಂದು ಸುಮ್ಮನಿದ್ದೇನೆಂದು ನನಗೆ ಹಿಂಜರಿಕೆಯಾಗುವಂತೆ ಹಾಗೂ ಬೆದರಿಸುವಂತೆ ಮಾತನಾಡಿರುತ್ತಾನೆ. ಹೀಗಿರುವಲ್ಲಿ ದಿನಾಂಕ:29/09/2020 ರಂದು ಕನ್ನಡ ಪ್ರಭ ದಿನ ಪತ್ರಿಕೆಯ ಚಿಂತಾಮಣಿ ತಾಲ್ಲೂಕು ವರದಿಗಾರರಾದ ಜಿ ಎಲ್ ಶಂಕರ್ ಎಂಬುವರು ಚಿಂತಾಮಣಿ ತಾಲ್ಲೂಕು ಎಂ ಗೊಲ್ಲಹಳ್ಳಿ ಗ್ರಾಮದ ಶಿಕ್ಷಕ ರಾಮಚಂದ್ರಪ್ಪ ಮಗ ಎಂ ಆರ್ ನರೇಂದ್ರ ಇತರೆಯವರ ವಿರುದ್ದ ಪ್ರಕರಣ ದಾಖಲಾಗಿದ್ದ ಬಗ್ಗೆ ಶಿಕ್ಷಕ ರಾಮಚಂದ್ರಪ್ಪ ರವರಿಂದ 2 ಲಕ್ಷ ಹಣ ನೀಡುವಂತೆಯೂ ಇಲ್ಲವಾದರೆ ಸ್ಮಗಲಿಂಗ್ ಕೇಸಿನಲ್ಲಿ ಸಿಕ್ಕಿಸಿ ಎನ್ ಕೌಂಟರ್ ಮಾಡುತ್ತೇನೆಂದು ಸ್ಥಳೀಯ ಪಿ ಎಸ್ ಐ ಪಾಪಣ್ಣ ರವರು ಬೆದರಿಸಿರುತ್ತಾನೆಂದು ದಿನ ಪತ್ರಿಕೆಯಲ್ಲಿ ಪ್ರಕಟಣೆ ಮಾಡಿಸಿರುತ್ತಾರೆ. ದಿನಾಂಕ:30/09/2020 ರಂದು ನಾನು ಚಿಂತಾಮಣಿ ನಗರದಲ್ಲಿ ಈ ಹಿಂದೆ ನಡೆದಿದ್ದ ಗಲಾಟೆಗಳ ಹಿನ್ನೆಲೆಯಲ್ಲಿ ಬಂದೋ ಬಸ್ಥ ಕರ್ತವ್ಯಕ್ಕೆ ಚಿಂತಾಮಣಿ ನಗರದ ಎಸ್ ಡಿ ಪಿ ಓ ಕಛೇರಿಯ ಬಳಿ ಹೋದಾಗ ಕನ್ನಡ ಪ್ರಭ ವರದಿಗಾರ ಜಿ ಎಲ್ ಶಂಕರ್ ರವರು ನನಗೆ ಮುಖಾಮುಖಿ ಸಿಕ್ಕಿದ್ದು, ಆಗ ಶಂಕರ್ ರವರು ನೀವು ನನಗೆ ಎಂಸ್ಯಾಂಡ್ ಮತ್ತು ಜಲ್ಲಿ ಹೊಡಿಸಿಕೊಡಲಿಲ್ಲ. ನನಗೆ ತಿಂಗಳಿಗೊಮ್ಮೆ ದುಡ್ಡು ಕೊಡಬೇಕೆಂತಲೂ ನೀವು ನನ್ನನ್ನು ಸರಿಯಾಗಿ ನೋಡಿಕೊಳ್ಳದಿದ್ದರೆ, ನಿಮ್ಮ ಬಗ್ಗೆ ಇಲ್ಲ ಸಲ್ಲದ ವರದಿಗಳನ್ನು ಮತ್ತೊಮ್ಮೆ ಮಾಡಿ ಮೇಲಾಧಿಕಾರಿಗಳಿಗೆ ಕಳುಹಿಸಿಕೊಡುತ್ತೇನೆಂತಲೂ ಹಾಗೂ ಈ ಬಗ್ಗೆ ಪತ್ರಿಕೆಯಲ್ಲಿ ಪ್ರಚಾರ ಮಾಡುತ್ತೇನೆಂತ ಬೆದರಿಕೆ ಒಡ್ಡಿರುತ್ತಾನೆ.   ನಾನು ಜಿ ಎಲ್ ಶಂಕರ್ ರವರು ಆತನು ಹೇಳುವ  ಬೇಡಿಕೆಗಳನ್ನು ಈಡೇರಿಸದ ಕಾರಣ ತನ್ನ ಕೈಯಲ್ಲಿ ಪತ್ರಿಕೆ ಇದೆ ಅದರಲ್ಲಿ ನನ್ನ ಬಗ್ಗೆ ಇಲ್ಲ ಸಲ್ಲದ ವಿನಾಕಾರಣ ಆಪಾದನೆಗಳನ್ನು ಮಾಡುತ್ತಾ ನಿಮ್ಮ ಬಗ್ಗೆ ಮೇಲಾಧಿಕಾರಿಗಳಿಗೆ ಮಾಹಿತಿಗಳನ್ನು ರವಾನಿಸುತ್ತೆನೆಂದು, ಆತನ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು  ನನಗೆ ಮಾನಸಿಕವಾಗಿ ಅಪಾಯದ ಭಯ ಬೀತಿ ಪಡಿಸುವ ಉದ್ದೇಶದಿಂದ ಬೆದರಿಕೆಗಳನ್ನು ಹಾಕಿ ತನ್ನ ಬೇಡಿಕೆಗಳನ್ನು ಕಾರ್ಯಗತಗೊಳಿಸಿಕೊಳ್ಳಲು ಮತ್ತು ಆತನು ನನ್ನಿಂದ ಲಾಭ ಪಡೆಯುವ ಕೃತ್ಯಗಳನ್ನು ಮಾಡುವಂತೆ  ಪ್ರಯತ್ನಿಸಿರುತ್ತಾನೆ. ಆದರೆ ನಾನು ಆತನ ಬೇಡಿಕೆಗಳಿಗೆ ಸ್ಪಂದಿಸಿದ ಕಾರಣ ನನ್ನ ಘನತೆ ಮತ್ತು ಕ್ಯಾತಿಗೆ ಕ್ಷತಿವುಂಟು ಮಾಡುವ, ಬೆದರಿಕೆ ಹಾಕುವ, ಅಪರಾಧಿಕ ಭಯೋತ್ಪಾದನೆಯನ್ನು ಮಾಡಿರುತ್ತಾನೆ.  ಆದ್ದರಿಂದ ಸದರಿ ಜಿ ಎಲ್ ಶಂಕರ್ ವಿರುದ್ದ ಕಾನೂನು ರೀತಿಯ ಕ್ರಮ ಜರುಗಿಸಲು ಸೂಚಿಸಿದೆ. ಸದರಿ ಜಿ ಎಲ್ ಶಂಕರ್ ರವರು ನನ್ನೊಂದಿಗೆ ಪೊನ್ ನಲ್ಲಿ ಮಾತನಾಡಿರುವ ಬಗ್ಗೆ ಸಂಭಾಷಣೆಗಳಿರುತ್ತವೆ. ಇದರೊಂದಿಗೆ  ಸದರಿ ಜಿ ಎಲ್ ಶಂಕರ್ ರವರು ನನ್ನೊಂದಿಗೆ ಪೊನ್ ನಲ್ಲಿ ಮಾತನಾಡಿರುವ ಸಂಭಾಷಣೆಗಳ ಸಿಡಿಯನ್ನು ಲಗತ್ತಿಸಿರುತ್ತೆನೆಂದು ಕೊಟ್ಟ ವರದಿಯ ದೂರಿನ ಸಾರಾಂಶವಾಗಿರುತ್ತೆ.

  1. ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.275/2020 ಕಲಂ: 143,147,148,323,324,307,149 ಐ.ಪಿ.ಸಿ :-

     ದಿನಾಂಕ:20/10/2020 ರಂದು ರಾತ್ರಿ 7-15 ಗಂಟೆಯಲ್ಲಿ ಗೌರೀಬಿದನೂರು ತಾಲ್ಲೂಕು, ಹೊಸೂರು ಹೋಬಳಿ, ಹಕ್ಕಿಪಿಕ್ಕಿ ಕಾಲೋನಿ ವಾಸಿಯಾದ ಶ್ರೀಮತಿ ಅಂಬಿಕಾ ಕೋಂ ರಮೇಶ  ವಯಸ್ಸು 31 ವರ್ಷ, ಹಕ್ಕಿಪಿಕ್ಕಿ ಜನಾಂಗ,  ಟೈಲರ್ ಕೆಲಸ ಇವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ  ಸಾರಾಂಶವೇನೆಂದರೆ,  ಈ ಹಿಂದೆ ತನ್ನ ಅಳಿಯನಾದ  ರವಿಕುಮಾರ್ ಬಿನ್ ನರೇಶ ರವರಿಗೂ ಮತ್ತು ಇದೇ ಗ್ರಾಮದ  ಈಶ್ವರರೆಡ್ಡಿ ಬಿನ್ ಜಯಣ್ಣ, ಸುಭಾಷ್ ಬಿನ್ ಪರಮೇಶ, ಜೇಮ್ಸ್ ಬಿನ್ ಜಯಶಾಂಬರ್,  ಶಾಲೋನ್ ಬಿನ್ ಜಯಣ್ಣ, ಜಾನ್ ರಾಜ್ ಬಿನ್ ಜಯಶಾಂಬಾರ್  ಇವರಿಗೆ ಕ್ರಿಕೆಟ್ ವಿಚಾರದಲ್ಲಿ ಗಲಾಟೆಗಳು ಆಗಿದ್ದು, ಈ ವಿಚಾರದಲ್ಲಿ ನನ್ನ ಅಳಿಯ ರವಿಕುಮಾರ್ ಹಾಗು ನನ್ನ ಗಂಡ ರಮೇಶ ರವರ ಮೇಲೆ ದ್ವೇಷ ಇಟ್ಟು ಕೊಂಡಿದ್ದು,  ಈ ದಿನ ದಿನಾಂಖ: 20/10/2020 ರಂದು ಮಧ್ಯಾಹ್ನ 2-00 ಗಂಟೆಯಲ್ಲಿ ನಮ್ಮ ಮನೆಯಿಂದ ಸ್ವಲ್ಪ ದೂರದಲ್ಲಿ ಇರುವ ಶಾಲೆ ಮೈಧಾನದಲ್ಲಿ  ನನ್ನ ಗಂಡ ರಮೇಶ,  ಅವರ ತಮ್ಮ  ಪ್ರಭುರಾಜ್,  ನನ್ನ ಅಳಿಯ ರವಿಕುಮಾರ್  ಕ್ರಿಕೆಟ್ ಆಡಲು  ಹೋದಾಗ,  1) ಈಶ್ವರರೆಡ್ಡಿ  2), ಸುಭಾಷ್ 3) ಜೇಮ್ಸ್  4)  ಶಾಲೋನ್  5) , ಜಾನ್ ರಾಜ್  ಹಾಗು ಇತರರು  ನನ್ನ ಗಂಡ ರಮೇಶ, ಹಾಗು ರವಿಕುಮಾರ್ ಮತ್ತು ಪ್ರಭುರಾಜ್ ರವರ ಮೇಲೆ ಜಗಳ ತೆಗೆದು, ಕೊಲೆ ಮಾಡುವ ಉದ್ದೇಶದಿಂದ ಈಶ್ವರರೆಡ್ಡಿ ನನ್ನ ಗಂಡ ರಮೇಶರವರಿಗೆ ರಾಡ್ ನಿಂದ ತಲೆಗೆ ಹೊಡದು ರಕ್ತಗಾಯ ಮಾಡಿದ್ದು, ಬಿಡಿಸಿಕೊಳ್ಳಲು ಹೋದ ನನಗೆ ಜೇಮ್ಸ್  ದೊಣ್ಣೆಯಿಂದ  ಬಲ ಮುಂಗೈಗೆ  ಹೊಡೆದು, ಮೂಗೇಟು  ಮಾಡಿದ್ದು, ಉಳಿದವರು  ಕೈಗಳಿಂದ ಹೊಡದು, ಕಾಲುಗಳಿಂದ ದ್ದು, ಮೂಗೇಟು ಉಂಟು ಮಾಡಿ ನಮ್ಮನ್ನು ಕೊಲೆ ಮಾಡಲು ಪ್ರಯತ್ನಿಸಿದರು.  ಈ ಗಲಾಟೆಯನ್ನು  ನೋಡಿ, ನಮ್ಮ ಚಿಕ್ಕಪ್ಪನಾದ ರಾಜ ಬಿನ್ ರಾಯಪುರಂ, ಚಂದು ಬಿನ್ ಡ್ರೈವರ್ ಸಿಂಗ್  ಮಹೇಶ  ಬಿನ್ ಕರಿಯಪ್ಪ ರವರು ಬಂದು ನಮ್ಮನ್ನು  ಮೇಲ್ಕಂಡವರಿಂದ  ಬಿಡಿಸಿದ್ದು, ಆಟೋಗಳಲ್ಲಿ ಗೌರಿಬಿದನೂರು  ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿರುತ್ತೇವೆ. ಈ ಗಲಾಟೆಯಲ್ಲಿ,  ಬಿಡಿಸಲು ಬಂದ ಜ್ಯೋತಿ, ರವಿಕುಮಾರ್, ಜ್ಞಾನೇಶ್ವರಿ ರವರಿಗೂ ಸಹ ಗಾಯಗಳಾಗಿದ್ದು,  ಕೊಲೆ ಮಾಡುವ ಉದ್ದೇಶದಿಂದ  ಹೊಡೆದಿರುವ ಮೇಲ್ಕಂಡವರ ಮೇಲೆ ಕಾನೂನು ಕ್ರಮ ಜರುಗಿಸುವಂತೆ  ನೀಡಿದ ದೂರಿನ ಸಾರಾಂಶವಾಗಿರುತ್ತೆ.

  1. ಗೌರಿಬಿದನೂರು ಪುರ ಪೊಲೀಸ್ ಠಾಣೆ ಮೊ.ಸಂ.168/2020 ಕಲಂ: 279,337 ಐ.ಪಿ.ಸಿ :-

     ದಿನಾಂಕ20/10/2020 ರಂದು ಸಂಜೆ 4-30 ಗಂಟೆಗೆ ಪಿರ್ಯಾದಿದಾರರಾದ ನಜೀರ್ ಬಿನ್ ಹೆಚ್ ಬಾಬಾಸಾಬ್  ಗಂಗಸಂದ್ರ ಗ್ರಾಮ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಂಶವೇನೆಂದರೆ ದಿನಾಂಕ18/10/2020 ರಂದು ಸಂಜೆ ಸುಮಾರು 5-00 ಗಂಟೆಯಲ್ಲಿ ತನ್ನ ಸ್ನೇಹಿತನ ಬಾಬ್ತು ಕೆ.ಎ 06-ಇ.ಸಿ-4306 ಟಿವಿ.ಎಸ್ ಹೆವಿ ಡ್ಯೂಟಿ ದ್ವಿಚಕ್ರ ವಾಹನದಲ್ಲಿ ಅಜಮ್ ರವರನ್ನು ಹಿಂದುಗಡೆ ಕುಳ್ಳರಿಸಿಕೊಂಡು ನಾನು ನಾಗಿರೆಡ್ಡಿ ಬಡಾವಣೆಗೆ ಹೋಗಲು ಗೌರಿಬಿದನೂರು ಕಡೆಯಿಂದ ನಾಗಿರೆಡ್ಡಿ ಬಡಾವಣೆಗೆ ಹೋಗುತ್ತಿದ್ದಾಗ ಪದ್ಮಾವತಿ ಕಲ್ಯಾಣ ಮಂಟಪದ ಹತ್ತಿರ ಎದುರು ಕಡೆಯಿಂದ ಅಂದರೆ ನಾಗಸಂದ್ರ ಕಡೆಯಿಂದ ದ್ವಿಚಕ್ರ ವಾಹನದ ಚಾಲಕ ಅದರ ವಾಹನವನ್ನು ಅತೀವೇಗ ಮತ್ತು ಅಜಾಗರೂಕತಿಯಿಂದ ಚಾಲನೆ ಮಾಡಿಕೊಂಡು ಬಂದು ತಾನು ಚಾಲನೆ ಮಾಡುತ್ತಿದ್ದ  ಕೆ.ಎ 06-ಇ.ಸಿ-4306 ಟೆವಿ.ಎಸ್ ಹೆವಿ ಡ್ಯೂಟಿ  ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆಸಿದ ಪರಿಣಾಮ ತಾನು ಮತ್ತು ಅಜಮ್ ರವರು ದ್ವಿಚಕ್ರ ವಾಹನದಿಂದ ಕೆಳಗೆ ಬಿದ್ದು ರಕ್ತಗಾಯಗಳಾಗಿದ್ದು ದ್ವಿಚಕ್ರ ವಾಹನವು ಸಹ ಜಖಂಗೊಂಡಿರುತ್ತದೆ. ನಂತರ ತಮಗೆ ಅಪಘಾತ ಉಂಟುಮಾಡಿದ ದ್ವಿಚಕ್ರ ವಾಹನವನ್ನು ನೋಡಲಾಗಿ ಕೆ.ಎ 40 ಇ.ಸಿ 4697 ಸ್ಕೂಟಿ ದ್ವಿಚಕ್ರ ವಾಹನವಾಗಿರುತ್ತೆ. ಅಲ್ಲಿದ್ದ ಸಾರ್ವಜನಿಕರು ತಮ್ಮನ್ನು ಉಪಚರಿಸಿ ಯಾವುದೋ ಆಟೋವಿನಲ್ಲಿ ಚಿಕಿತ್ಸೆಗಾಗಿ ಗೌರಿಬಿದನೂರು ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು  ಹೋಗಿ ಚಿಕಿತ್ಸೆಗೆ ದಾಖಲುಮಾಡಿದರು. ನಂತರ ನಾಗರೆಡ್ಡಿ ಬಡಾವಣೆ ಹಿರಿಯರು ರಾಜಿ ಮಾಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುವ ಬಗ್ಗೆ ಮಾತನಾಡೋಣವೆಂತ ತಿಳಿಸಿದ್ದು ಈವರೆವಿಗೂ ಯಾರೂ ರಾಜಿ ಪಂಚಾಯ್ತಿಗೆ ಬಾರದ ಕಾರಣ ಈ ದಿನ ಠಾಣೆಗೆ ಬಂದು ತಡವಾಗಿ ದೂರನ್ನು ನೀಡಿರುತ್ತೇನೆ. ಆದ್ದರಿಂದ ತನಗೆ ಮತ್ತು ಅಜಮ್ ಬಿನ್ ಮಹಮದ್ ಇಲಿಯಾಜ್ ರವರಿಗೆ ಅಪಘಾತಪಡಿಸಿದ ಚಾಲಕನ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಲು ನೀಡಿದ ದೂರನ್ನು ಪಡೆದು ಪ್ರಕರಣ ದಾಖಲಿಸಿರುತ್ತೆ.

  1. ಗೌರಿಬಿದನೂರು ಪುರ ಪೊಲೀಸ್ ಠಾಣೆ ಮೊ.ಸಂ.169/2020 ಕಲಂ: ಮನುಷ್ಯ ಕಾಣೆ :-

     ದಿನಾಂಕ20/10/2020 ರಂದು ಸಂಜೆ 6-15 ಗಂಟೆಗೆ ಪಿರ್ಯಾದಿದಾರರಾದ ಶ್ರೀನಿವಾಸ ಬನಿ ಹನುಮಂತಪ್ಪ 56ವರ್ಷ, ಬಲಜಿಗರು ಮುದ್ದಣ್ಣ ಗಲ್ಲಿ ಗೌರಿಬಿದನೂರು ಟೌನ್ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಂಶವೇನೆಂದರೆ ತಾನು ಹೂವಿನ ವ್ಯಾಪಾರ ಮಾಡಿಕೊಂಡು ವಾಸವಾಗಿರುತ್ತೇನೆ. ತನಗೆ ಮೂರು ಜನ ಮಕ್ಕಳಿರುತ್ತಾರೆ. 1ನೇ ಶಶಿಕುಮಾರ್, 2ನೇ ಮಂಜುನಾಥ, 3ನೇ ಅನಿಲ್ ಕುಮಾರ್ ಆಗಿರುತ್ತಾರೆ. ದಿನಾಂಕ 20/10/2020 ರಂದು ಬೆಳಿಗ್ಗೆ 10 ಗಂಟೆಯಲ್ಲಿ ತನ್ನ 2ನೇ ಮಗನಾದ ಮಂಜುನಾಥ ರವರು ಮನೆಯಿಂದ ಹೊರಗೆ ಹೋಗಿರುತ್ತಾನೆ. ನಂತರ ಮನೆಗೆ ವಾಪಸ್ಸು ಬಾರದ ಕಾರಣ ತನ್ನ ಮಗನ ಕೊಠಡಿಯಲ್ಲಿ ಹೋಗಿ ನೋಡಲಾಗಿ ತನ್ನ ಮಗನು ಕಾಣಿಸಲಿಲ್ಲ. ನಂತರ ಎಲ್ಲಾ ಕಡೆಗಳಲ್ಲಿ ಹಾಗೂ ಸ್ನೇಹಿತರ ಮನೆಗಳಲ್ಲಿ ವಿಚಾರಿಸಲಾಗಿ ಯಾವುದೇ ಮಾಹಿತಿ ದೊರೆತಿರುವುದಿಲ್ಲ. ಆದ್ದರಿಂದ ಕಾಣೆಯಾಗಿರುವ ತನ್ನ ಮಗ ಮಂಜುನಾಥ ರವರನ್ನು ಪತ್ತೆ ಮಾಡಿಕೊಡಬೇಕಾಗಿ  ನೀಡಿದ ದೂರನ್ನು ಪಡೆದು ಪ್ರಕರಣ ದಾಖಲಿಸಿರುತ್ತೆ.

  1. ಗೌರಿಬಿದನೂರು ಪುರ ಪೊಲೀಸ್ ಠಾಣೆ ಮೊ.ಸಂ.170/2020 ಕಲಂ: 420 ಐ.ಪಿ.ಸಿ & 66 INFORMATION TECHNOLOGY ACT 2008 & 78(3) KARNATAKA POLICE ACT :-

     ದಿನಾಂಕ;20/10/2020 ರಂದು ರಾತ್ರಿ 23-30 ಗಂಟೆಗೆ ಪೊಲೀಸ್ ನೀರಿಕ್ಷಕರು DCB-CEN ಪೊಲೀಸ್ ಠಾಣೆ ಚಿಕ್ಕಬಳ್ಳಾಪುರ ರವರು ನೀಡಿದ ವರದಿಯ ಸಾರಾಂಶವೇನೆಂಧರೆ ತಾನು ಸಿಬ್ಬಂದಿಯೊಂದಿಗೆ ಸರ್ಕಾರಿ ಜೀಪು ಸಂಖ್ಯೆ KA-40-G-270 ರಲ್ಲಿ ಕಾನೂನು ಬಾಹಿರ ಚಟುವಟಿಕೆಗಳ ಮಾಹಿತಿ ಸಂಗ್ರಹಣೆಗಾಗಿ ಗೌರಿಬಿದನೂರು ತಾಲ್ಲೂಕಿನ ಮಂಚೇನಹಳ್ಳಿ ,ಪುರ,ಬಿಸಲಹಳ್ಳಿ,ಹಿರೇಬಿದನೂರು ,ಬೈಪಾಸ್,ರಸ್ತೆ ಕಡೆಗಳಲ್ಲಿ ಗಸ್ತು ಮಾಡಿಕೊಂಡು ನಾಗಪ್ಪ ಬ್ಲಾಕ್ ಬಳಿ ಬಂದಾಗ ರಾತ್ರಿ ಸುಮಾರು 8-30 ಗಂಟೆಯ ಸಮಯದಲ್ಲಿ ಬಾತ್ಮೀದಾರರಿಂದ ಬಂದ ಮಾಹಿತಿ ಏನೆಂಧರೆ ಗೌರಿಬಿದನೂರು ನಗರದ ಗಿರೀಶ್  ಎಂಬುವರು ಬೆಂಗಳೂರು-ಹಿಂದೂಪುರ ರಸ್ತೆಯ ಪಕ್ಕದಲ್ಲಿರುವ ರೆಡ್ಡಿ ಪ್ರಾವಿಜನ್ ಸ್ಟೋರ್ ಬಳಿ ಕಾನೂನು ಬಾಹಿರವಾಗಿ ಯಾರೋ ಒಬ್ಬ ಅಸಾಮಿ ಮೊಬೈಲ್ ಅನ್ನು ನೋಡುತ್ತಿದ್ದನ್ನು ಕೂಡಲೇ ನಾವು ಪಂಚರೊಂದಿಗೆ ಸದರಿ ಅಸಾಮಿಯನ್ನು ಸುತ್ತುವರೆದಾಗ ತಮನ್ನು ಕಂಡು ಸದರಿ ಆಸಾಮಿ ಓಡಿ ಹೋಗಲು ಪ್ರಯತ್ನಿಸಿದ ಆಸಾಮಿಯನ್ನು ಹಿಡಿದುಕೊಂಡು ಆತನ ಬಳಿ ಇದ್ದ APPL l-Phone 11 ಅನ್ನು ಪಡೆದು ಆತನಿಗೆ ಸದರಿ ಮೊಬೈಲಿನ ಪಾಸ್ ವರ್ಡ್ ಹೇಳುವಂತೆ ಕೇಳಲಾಗಿ ಸದರಿ ಆಸಾಮಿಯು ತನ್ನ ಮೊಬೈಲಿನ ಪಾಸ್ ವರ್ಡ್ 8989 ಎಂದು ತಿಳಿಸಿದನು ನಂತರ ಸದರಿ ಮೊಬೈಲ್ ಅನ್ನು ಪರಿಶೀಲಿಸಲಾಗಿ ಮೊಬೈಲಿನಲ್ಲಿ appleexch.us ಎಂಬ ವೆಬ್ ಸೈಟ್ ಇದ್ದು ಸದರಿ ವೆಬ್ ಸೈಟಿನ ಯೂಸರ್ ನೇಮ್ ಮತ್ತು ಪಾಸ್ ವರ್ಡ್ ನ್ನು ಕೇಳಲಾಗಿ girish99 ಎಂತ ತಿಳಿಸಿದನು ಸದರಿ ಮೊಬೈಲಿನಲ್ಲಿರುವ appleexch.us ಆಪಿನಲ್ಲಿ ಕ್ರಿಕೆಟ್ ಬೆಟ್ಟಿಂಗ್ ಆಡಿರುವುದು ಕಂಡುಬಂದಿರುತ್ತೆ ,ಸದರಿ ವೆಬ್ ಸೈಟ್ ನಲ್ಲಿ ಪರಿಶೀಲನೆ ಮಾಡಲಾಗಿ ಈ ದಿನ ದಿನಾಂಕ;20-10-2020 ರಂದು 5000 ರೂಗಳನ್ನು ಬೆಟ್ಡಿಂಗ್ ಗೆ ಹಾಕಿದ್ದು ಇತರರೊಂದಿಗೆ ಐಪಿಲ್ ಕ್ರಿಕೆಟ್ ಬೆಟ್ಟಿಂಗ್ ಆಡಿರುವುದು ಕಂಡುಬಂದಿರುತ್ತದೆ ಸದರಿ appleexch.us ವೆಬ್ ಸೈಟಿನಲ್ಲಿ 58.868 ರೂ 20 ಪೈಸೆ ಉಳಿಕೆ ಹಣ ಇದ್ದು ಮೇನ್ ಬ್ಯಾಲನ್ಸ್ 32.818 ರೂಪಾಯಿ 20 ಪೈಸೆ ಎಂತಿರುತ್ತೆ ನಂತರ ಅಸಾಮಿಯ ಹೆಸರು ಮತ್ತು ವಿಳಾಸವನ್ನು ಕೇಳಲಾಗಿ ತನ್ನ ಹೆಸರು ಗಿರೀಶ್ ಎಸ್,ಎಲ್, ಬಿ ಲಕ್ಷ್ಮಯ್ಯ,26ವರ್ಷ,ಬಲಜಿಗರು,ವ್ಯಾಪಾರ,ವಾಸ#5.ವಿನಾಯಕ ನಗರ,ಗೌರಿಬಿದನೂರು ನಗರ ಎಂತ ತಿಳಿಸಿ ತಾನು ಮೊಬೈಲಿನಲ್ಲಿ ಬೆಟ್ಟಿಂಗ್ ಆಡುತ್ತಿರುವುದಾಗಿ ಒಪ್ಪಿಕೊಂಡು  ಜನರಿಗೆ ಮೋಸ ಮಾಡಿ ಹಣ ಸಂಪಾದನೆ ಮಾಡುವ ಉದ್ದೇಶದಿಂದ ಸದರಿ ವೆಬ್ ಸೈಟ್ನನ್ನು ದೇವನಹಳ್ಳಿಯ ವಾಸಿ ಅಜಯ್ ಎಂಬುವರು ಹಾಕಿಸಿಕೊಂಡಿರುವುದಾಗಿ ತಿಳಿಸಿದನು ನಂತರ ಆತನನ್ನು ಪಂಚರ ಸಮಕ್ಷಮ ಪರಿಶೀಲನೆ ಮಾಡಲಾಗಿ ಆತನ ಜೇಬಿನಲ್ಲಿ 49.600 ನಗದು ಹಣ ದ್ದು ಸದರಿ ಹಣದ ಬಗ್ಗೆ ಕೇಳಲಾಗಿ ಕ್ರಿಕೆಟ್ ಬೆಟ್ಟಿಂಗ್ ಜೂಜಾಟವಾಡಲು ಇಟ್ಟುಕೊಂಡಿರುವುದಾಗಿ ತಿಳಿಸಿದನು ಆತನ ಬಳಿ ಇದ್ದ  Apple I phone 11 ಗೆ ಏರಟಲ್ ಕಂಪನಿಯ 9663622512 ಸಂಖ್ಯೆ ಸಿಮ್ ಅನ್ನು ಅಳವಡಿಸಿದ್ದು ಸದರಿ ಮೊಬೈಲ್ ಕ್ರಿಕೆಟ್ ಬೆಟ್ಟಿಂಗ ಜೂಜಾಟವಾಡಲು ಇಟ್ಟುಇ ಕೊಂಡಿದ್ದ 49.600 ರೂನಗದು ಹಣವನ್ನು ಕೇಸಿನ ಮುಂದಿನ ಕ್ರಮಕ್ಕಾಗಿ ಮಹಜರ್ ಮೂಲಕ ಅಮಾನತ್ತು ಪಡಿಸಿಕೊಂಡು ಸದರಿ ಆಸಮಿಯನ್ನು ವಶಕ್ಕೆ ಪಡೆದುಕೊಂಡಿರುತ್ತೆ ಕಾನೂನು ಬಾಹಿರವಾಗಿ ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ಜೂಜಾಟ ವಾಡುತ್ತಿದ್ದ ಆಸಾಮಿ ಮಾಲು ,ಸದರಿ ಆಸಾಮಿಯ Apple I phone 11 ಮೊಬೈಲನಲ್ಲಿ ತೆಗೆದುಕೊಂಡಿರುವ ಸ್ಕ್ರೀನ್ ಶಾಟ್ ಗಳನ್ನು ಮತ್ತು ಅಸಲು ಪಂಚನಾಮೆಯೊಂದಿಗೆ ವರಧಿಯೊಂದಿಗೆ ನೀಡುತ್ತಿದ್ದು ಮುಂದೊನ ಕಾನೂನು ಕ್ರಮ ಕೋರಿ ನೀಡಿದ ವರದಿಯನ್ನು ಪಡೆದು ಪ್ರಕರಣ ದಾಖಲಿಸಿಸಿರುತ್ತೆ.

  1. ಮಂಚೇನಹಳ್ಳಿ ಪೊಲೀಸ್ ಠಾಣೆ ಮೊ.ಸಂ.236/2020 ಕಲಂ: 188,269,271 ಐ.ಪಿ.ಸಿ:-

     ದಿನಾಂಕ:20/10/2020 ರಂದು ಪಿರ್ಯಾದಿದಾರರಾದ ಶ್ರೀ ಗೋವಿಂದಪ್ಪ ಪಿ.ಡಿ.ಓ ಬಿ ಬೊಮ್ಮಸಂದ್ರ ಗ್ರಾಮ ಪಂಚಾಯ್ತಿ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ನಾನು ಬಿ.ಬೊಮ್ಮಸಂದ್ರ ಗ್ರಾಮ ಪಂಚಾಯ್ತಿಯಲ್ಲಿ ಪಂಚಾಯ್ತಿ ಅಭಿವೃದ್ದಿ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಈ ದಿನ ದಿನಾಂಕ:20/10/2020 ರಂದು ಬೆಳಿಗ್ಗೆ 11-00 ಗಂಟೆಯ ಸಮಯದಲ್ಲಿ ನಾನು ಕಛೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ವೆಂಕಟಾಪುರ ಗ್ರಾಮದ ರಾಘವೇಂದ್ರಚಾರಿ ಬಿನ್ ಭ್ರಹ್ಮಚಾರಿ, 26 ವರ್ಷ, ಸರೋಜಮ್ಮ ಕೊಂ ಭ್ರಹ್ಮಚಾರಿ, 52 ವರ್ಷ, ಪಾರ್ವತಿ ಕೊಂ ರಾಘವೇಂದ್ರ ಚಾರಿ, 20 ವರ್ಷ ರವರಿಗೆ ಕೋವಿಡ್-19 ಪಾಸಿಟೀವ್ ಬಂದಿರುವುದಾಗಿ ಮಾಹಿತಿ ಬಂದಿದ್ದು, ಸದರಿಯವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕಳುಹಿಸಲು ಗ್ರಾಮ ಪಂಚಾಯ್ತಿ ಆಡಳಿತಾಧಿಕಾರಿಯಾದ ಜಗದೀಶ್. ಸಹಾಯಕ ಕಾರ್ಯಪಾಲಕ ಅಭಿಯಂತರರು, ಪಿ.ಆರ್.ಇ.ಡಿ ಗೌರಿಬಿದನೂರು ತಾಲ್ಲೂಕು ರವರಿಗೆ ಮಾಹಿತಿ ನೀಡಿ ನಾನು ಹಾಗೂ ಡಿ.ಪಾಳ್ಯ ಪ್ರಾಥಮಿಕ ಆರೋಗ್ಯಧಿಕಾರಿಗಳಾದ ಸತೀಶ್ ರವರು, ವೆಂಕಟಾಪುರ ಗ್ರಾಮ ಆಶಾ ಕಾರ್ಯಕರ್ತೆ ವೀಣಾ ರವರು ಮತ್ತು ಅಂಗನವಾಡಿ ಕಾರ್ಯಕರ್ತೆ ಪ್ರಮೀಳಮ್ಮ, ಗ್ರಾಮಲೆಕ್ಕಾಧಿಕಾರಿ ಕರಿಬಸಪ್ಪ ರವರು ಸದರಿಯವರ ಮನೆಯ ಬಳಿ ಹೋಗಿ ಕೊರೋನ ಸಾಂಕ್ರಾಮಿಕ ಕಾಯಿಲೆಯು ತೀವ್ರವಾಗಿ ಹರಡುತ್ತಿದ್ದು, ಸರ್ಕಾರವು ಕೊರೋನ ಸಾಂಕ್ರಾಮಿಕ ಕಾಯಿಲೆಯು ಹರಡುವುದನ್ನು ತಪ್ಪಿಸಲು ಉಚಿತವಾಗಿ ಕೋವಿಡ್-19 ಆಸ್ಪತ್ರೆಯನ್ನು ತೆರೆದಿದ್ದು, ತಾವು ಆಸ್ಪತ್ರೆಗೆ ಹೋಗಿ ದಾಖಲಾಗುವಂತೆ ತಿಳಿ ಹೇಳಿದರೂ ಸಹ ಸದರಿಯವರು ನಾನು ಈಗ ಆಸ್ಪತ್ರೆಗೆ ಹೋಗುವುದಿಲ್ಲ ಏನು ಮಾಡಿಕೊಳ್ಳುತ್ತೀರ ಮಾಡಿಕೊಳ್ಳಿ ಎಂದು ಬೇಜವಬ್ದಾರಿಯಿಂದ ವರ್ತಿಸಿದ್ದು ಹಾಗೂ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಳ್ಳಲು ನಿರಾಕರಿಸಿ ಗ್ರಾಮದಲ್ಲಿ ಓಡಾಡಿಕೊಂಡಿರುತ್ತಾರೆ. ಇತ್ತೀಚಿನ ದಿನಗಳಲ್ಲಿ ದೇಶದಾಧ್ಯಂತ ಕೊರೋನ ಸಾಂಕ್ರಾಮಿಕ ಕಾಯಿಲೆಯು ತೀವ್ರವಾಗಿ ಹರಡುತ್ತಿದ್ದು, ಸರ್ಕಾರವು ಕೊರೋನ ಸಾಂಕ್ರಾಮಿಕ ಕಾಯಿಲೆಯು ಹರಡುವುದನ್ನು ತಪ್ಪಿಸಲು ಅನೇಕ ಕೋವಿಡ್-19 ಆಸ್ಪತ್ರೆಗಳನ್ನು ಉಚಿತವಾಗಿ ತೆರೆದಿದ್ದರೂ ಸಹ ಮೇಲ್ಕಂಡವರು ಸರ್ಕಾರದ ಆದೇಶವನ್ನು ಉಲ್ಲಂಘನೆ ಮಾಡಿ ಕೋವಿಡ್-19 ಪಾಸಿಟೀವ್ ಬಂದಿದ್ದರೂ ಸಹ ಆಸ್ವತ್ರೆಗೆ ದಾಖಲಾಗಿ ಚಿಕಿತ್ಸೆಯನ್ನು ಪಡೆಯದೇ ನಿರ್ಲಕ್ಷ್ಯತೆಯಿಂದ ತಮ್ಮ ಸ್ವಂತ ಗ್ರಾಮವಾದ ವೆಂಕಟಾಪುರ ಗ್ರಾಮದಲ್ಲಿಯೇ ಉಳಿದಿದ್ದು ಅದ್ದರಿಂದ ಸದರಿ ಮೇಲ್ಕಂಡವರ ಮೇಲೆ ಕಾನೂನು ಕ್ರಮ ಜರುಗಿಸಲು ಕೋರಿ ಕೊಟ್ಟ ದೂರು.

  1. ಮಂಚೇನಹಳ್ಳಿ ಪೊಲೀಸ್ ಠಾಣೆ ಮೊ.ಸಂ.237/2020 ಕಲಂ: 323,324,341,504,506 ರೆ/ವಿ 34 ಐ.ಪಿ.ಸಿ:-

     ದಿನಾಂಕ: 21/10/2020 ರಂದು ಮದ್ಯಾಹ್ನ 12-30 ಗಂಟೆಗೆ ಪಿರ್ಯಾದಿದಾರರಾದ ಶಾರದ ಕೋಂ ಗಂಗಾಧರಪ್ಪ, 48 ವರ್ಷ, ಆದಿ ದ್ರಾವಿಡ ಜನಾಂಗ, ಗೃಹಿಣಿ, ವಾಸ ನಾಗರೆಡ್ಡಿ ಬಡವಾಣೆ, ಗೌರಿಬಿದನೂರು ಟೌನ್ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆನೆಂದರೆ, ನನ್ನ ಮಗಳು ಅರ್ಚನಾ ರವರನ್ನು ಪೊತೇನಹಳ್ಳಿ ಗ್ರಾಮದ ಅರುಣ್ ಕುಮಾರ್ ಬಿನ್ ಲೇಟ್ ಗಂಗಾಧರಪ್ಪ ರವರಿಗೆ ಕೊಟ್ಟು ಮಧುವೆ ಮಾಡಿಕೊಟ್ಟಿದ್ದು, ಈ ದಿನ ದಿನಾಂಕ: 21/10/2020 ರಂದು ಬೆಳಿಗ್ಗೆ 7-00 ಗಂಟೆಯಲ್ಲಿ ನನ್ನ ಅಳಿಯ ಅರುಣ್ ಕುಮಾರ್ ರವರು ತನ್ನ ಬಾಬತ್ತು ಕೆಎ-06-ಸಿ-2157 ಆಟೋದಲ್ಲಿ ಕೆಲಸಕ್ಕೆ ಹೋಗುತ್ತಿರುವಾಗ ಮನೆಯ ಬಳಿ  ನನ್ನ ಅಳಿಯನನ್ನು ಅವರ ಸಂಬಂಧಿಕರಾದ ನರಸಿಂಹಪ್ಪ ಮತ್ತು ಅವರ ಹೆಂಡತಿ ಮುದ್ದುಗಂಗಮ್ಮ ಕೋಂ ನರಸಿಂಹಪ್ಪ ರವರು ಅಡ್ಡ ಹಾಕಿ ನಿನ್ನ ಹೆಂಡತಿ ಅರ್ಚನಾ ರವರು ನಮ್ಮ ಮೇಲೆ ಪಲ್ಲವಿ ರವರಿಗೆ ನಮ್ಮನ್ನು ಮನೆ ಬಿಟ್ಟು ಓಡಿಸುವುದಾಗಿ ಹೇಳಿದ್ದಿರ ಎಂದು ವಿನಾಕಾರಣ ಜಗಳ ತೆಗೆದು ನನ್ನ ಅಳಿಯನಿಗೆ ಅವಾಚ್ಯ ಶಬ್ದಗಳಿಂದ ಬೈದಿದ್ದು ಆಗ ನನ್ನ ಮಗಳು ಅರ್ಚನಾ ಕೇಳಲು ಬಂದಾಗ ಅರ್ಚನಾ ರವರಿಗೂ ಸಹ ನರಸಿಂಹಪ್ಪ ಮತ್ತು ಮುದ್ದುಗಂಗಮ್ಮ ಅವಾಚ್ಯ ಶಬ್ದಗಳಿಂದ ಬೈದು ಮುದ್ದುಗಂಗಮ್ಮ ರವರು ನನ್ನ ಮಗಳು ಅರ್ಚನಾ ರವರಿಗೆ  ಹಿಡಿದು ಎಳೆದಾಡಿದ್ದು ವಿಚಾರವನ್ನು ನನ್ನ ಅಳಿಯ ಅರುಣ್ ಕುಮಾರ್ ರವರು ನನಗೆ ಕರೆಮಾಡಿ ತಿಳಿಸಿದ್ದು,  ಈ ಬಗ್ಗೆ ಕೇಳಲು ನಾನು ನನ್ನ ಗಂಡ ಗಂಗಾಧರಪ್ಪ ಮತ್ತು ನನ್ನ ಮಗ ಮಧುಸೂಧನ್ ರವರು ಪೊತೇನಹಳ್ಳಿಗೆ ಬಂದು ಬೆಳಿಗ್ಗೆ 9-00 ಗಂಟೆಯಲ್ಲಿ ಮುದ್ದುಗಂಗಮ್ಮ ರವರ ಮನೆಯ ಬಳಿ ನಾನು ನನ್ನ ಗಂಡ , ನನ್ನ ಮಗ ಹಾಗೂ ನನ್ನ ಮಗಳು ಅರ್ಚನಾ ಮತ್ತು ನನ್ನ ಅಳಿಯ ಅರುಣ್ ಕುಮಾರ್ ರವರು ಮುದ್ದುಗಂಗಮ್ಮ ಮತ್ತು ನರಸಿಂಹಪ್ಪ ರವರನ್ನು ಏಕೆ ಗರ್ಭೀಣಿಯಾಗಿರುವ ನನ್ನ ಮಗಳ ಮೇಲೆ ವಿನಾಕಾರಣ ಜಗಳ ಮಾಡಿದ್ದು ಎಂದು ಕೇಳಿದಕ್ಕೆ ಮುದ್ದುಗಂಗಮ್ಮ ಹಾಗೂ ನರಸಿಂಹಪ್ಪ ರವರು ನಮ್ಮನ್ನು ಅವಾಚ್ಯ ಶಬ್ದಗಳಿಂದ ಬೈದು ನಮಗೆ ಕೈಗಳಿಂದ ಹೊಡೆದು ಮೂಗೇಟುಗಳನ್ನುಂಟು ಮಾಡಿದ್ದು ಆಗ ಅಲ್ಲಿಗೆ ಬಂದ ನರಸಿಂಹಪ್ಪ ರವರ ಅಣ್ಣನ ಮಗಳು ಸರೋಜಮ್ಮ ಹಾಗೂ ಅಶೋಕ ರವರು ಏಕಾಏಕಿ ಬಂದು ಸರೋಜಮ್ಮ ರವರು ಕೈಗಳಿಂದ ನಮಗೆ ಮೈಮೇಲೆ ಹೊಡೆದು ಅಶೋಕ ರವರು ತನ್ನ ಕೈಯಲ್ಲಿದ್ದ ಕುಡುಗೋಲಿನಿಂದ ನನ್ನ ತಲೆಗೆ ಹೊಡೆದು ರಕ್ತಗಾಯಪಡಿಸಿದ್ದು, ನರಸಿಂಹಪ್ಪ ಮತ್ತು ಮುದ್ದುಗಂಗಮ್ಮ ರವರು ದೊಣ್ಣೆಗಳಿಂದ ನನ್ನ ಮಗ ಮಧುಸೂಧನ್ ರವರ ತಲೆಗೆ ಹೊಡೆದು ರಕ್ತಗಾಯಪಡಿಸಿ ಎಲ್ಲರೂ ನಮಗೆ ನಿಮ್ಮನ್ನು ಪ್ರಾಣ ಸಹಿತ ಬಿಡುವುದಿಲ್ಲವೆಂದು ಪ್ರಾಣ ಬೆದರಿಕೆ ಹಾಕಿರುತ್ತಾರೆ. ನಂತರ ಗಾಯಗೊಂಡಿದ್ದ ನಾನು ಮತ್ತು ನನ್ನ ಮಗ ಮಧುಸೂಧನ್ ರವರು ನನ್ನ ಅಳಿಯನ ಆಟೋದಲ್ಲಿ ಗೌರಿಬಿದನೂರು ಸರ್ಕಾರಿ ಆಸ್ಪತ್ರೆಗೆ ದಾಖಲಾಗಿರುತ್ತೇವೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡು ಠಾಣೆಗೆ ಬಂದು ದೂರು ನೀಡುತ್ತಿದ್ದ ಮೇಲ್ಕಂಡ ನರಸಿಂಹಪ್ಪ, ಮುದ್ದುಗಂಗಮ್ಮ ಹಾಗೂ ಸರೋಜಮ್ಮ ಮತ್ತು ಅಶೋಕ ರವರ ಮೇಲೆ ಕಾನೂನು ರೀತ್ಯ ಕ್ರಮ ಜರುಗಿಸಬೇಕಾಗಿ ಕೋರಿ ನೀಡಿದ ಪ್ರ.ವ.ವರದಿ.

  1. ಶಿಡ್ಲಘಟ್ಟ ಪುರ ಪೊಲೀಸ್ ಠಾಣೆ ಮೊ.ಸಂ.111/2020 ಕಲಂ: 420 ಐ.ಪಿ.ಸಿ & 78(3),87 KARNATAKA POLICE ACT & 66 INFORMATION TECHNOLOGY  ACT:-

     ದಿನಾಂಕ.20.10.2020 ರಂದು ರಾತ್ರಿ 9.15 ಗಂಟೆಗೆ ಮಾನ್ಯ ಕೆ.ಸುರೇಶ್ ಸಿಪಿಐ. ಶಿಡ್ಲಘಟ್ಟ ವೃತ್ತ ರವರು ಇಬ್ಬರು ಆರೋಪಿಗಳು ಮತ್ತು ಮಾಲು ಸಮೇತ ಪಂಚನಾಮೆಯನ್ನು ಹಾಜರುಪಡಿಸಿ ನೀಡಿದ ದೂರಿನ ಸಾರಾಂಶವೇನಂದರೆ, ಈ ದಿನ ದಿನಾಂಕ:20/10/2020 ರಂದು ಸಂಜೆ 7-00 ಗಂಟೆಯಲ್ಲಿ ನಾನು ಮತ್ತು ಪಿ.ಎಸ್.ಐ ಕೆ.ಸತೀಶ್ ಶಿಡ್ಲಘಟ್ಟ ನಗರ ಠಾಣೆ ರವರು ನಗರ ಗಸ್ತಿನಲ್ಲಿದ್ದಾಗ ನನಗೆ ಯಾರೋ ಬಾತ್ಮಿದಾರರಿಂದ ಬಂದ ಮಾಹಿತಿ ಏನೆಂದರೆ, ಶಿಡ್ಲಘಟ್ಟ ನಗರದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣ ಬಳಿ ಇರುವ ಸಲ್ಲಾಪುರಮ್ಮ ದೇವಾಲಯ ಪಕ್ಕದ ಸುನೀಲ್ ರವರ ಹೂವಿನ ಅಂಗಡಿಯಲ್ಲಿ ಐ.ಪಿ.ಎಲ್ ಸರಣಿಯ ಕಿಂಗ್ಸ್-11 ಪಂಜಾಬ್ ಮತ್ತು ಡೆಲ್ಲಿ ಡೇರ್ ಡೆವಿಲ್ ತಂಡಗಳ ಮದ್ಯೆ ನಡೆಯುತ್ತಿರುವ ಕ್ರಿಕೆಟ್ ಪಂದಕ್ಕೆ ಹಣವನ್ನು ಪಣವಾಗಿ ಬೆಟ್ಟಿಂಗ್ ಕಟ್ಟಿಸಿಕೊಂಡು ಸಾರ್ವಜನಿಕರಿಗೆ ಮೋಸ ಮಾಡುತ್ತಿದ್ದಾರೆಂದು ಬಂದ ಖಚಿತ ಮಾಹಿತಿ ಮೇರೆಗೆ ಪಂಚಾಯ್ತಿದಾರರನ್ನು ಕರೆಸಿ ಅವರಿಗೆ ಪೊಲೀಸ್ ನೋಟೀಸ್ ಜಾರಿ ಮಾಡಿ ಪಂಚಾಯ್ತಿದಾರರು ಪೊಲೀಸ್ ಸಿಬ್ಬಂದಿಯವರಾದ ಹೆಚ್.ಸಿ.204 ಅಮರನಾಥ, ಹೆಚ್.ಸಿ.115 ಆರ್.ವೆಂಕಟರವಣಪ್ಪ ಮತ್ತು ಜೀಪು ಚಾಲಕ ನಾಗೇಶ್ ಎ.ಹೆಚ್.ಸಿ.03 ರವರೊಂದಿಗೆ ಸರ್ಕಾರಿ ಜೀಪು ಸಂಖ್ಯೆ. ಕೆಎ.40.ಜಿ.1666 ರಲ್ಲಿ ರಾತ್ರಿ 7.30 ಗಂಟೆಗೆ ಸಲ್ಲಾಪುರಮ್ಮ ದೇವಾಲಯದ ಬಳಿ ಹೋಗಿ ಜೀಪನ್ನು ಮರೆಯಾಗಿ ನಿಲ್ಲಿಸಿ ಅಂಗಡಿಯ ಬಳಿ ಹೋದಾಗ ಇಬ್ಬರು ಆಸಾಮಿಗಳು ಅವರ ಮೊಬೈಲ್ ಗಳಲ್ಲಿ ಐಪಿಎಲ್ ಪಂದ್ಯ ನೋಡಿಕೊಂಡು 500/-ರೂಗಳಿಗೆ 1000/-ರೂಗಳನ್ನು ಹಣವನ್ನು ಕೊಡುವುದಾಗಿ ಹೇಳಿ ಪಣವಾಗಿ ಕಟ್ಟಿ ಎಂದು ಸಾರ್ವಜನಿಕರಿಗೆ ಪುಸಲಾಯಿಸಿ ಅವರಿಗೆ ಮೋಸ ಮಾಡುವ ಉದ್ದೇಶದಿಂದ ಬೆಟ್ಟಿಂಗ್ ಕಟ್ಟಿ ಎಂದು ಸಾರ್ವಜನಿಕರ ಸ್ಥಳದಲ್ಲಿ ಸಾರ್ವಜನಿಕರಿಂದ ಬೆಟ್ಟಿಂಗ್ ಕಟ್ಟಿಸಿಕೊಳ್ಳುತ್ತಿದ್ದನ್ನು ಪಂಚರು ಮತ್ತು ನಾವು ಖಚಿತ ಪಡಿಸಿಕೊಂಡು ಕ್ರಿಕೆಟ್ ಬೆಟ್ಟಿಂಗ್ ಮೇಲೆ ದಾಳಿ ಮಾಡಿದ್ದು, ಆಸಾಮಿಗಳು ಓಡಿ ಹೋಗಲು ಪ್ರಯತ್ನಿಸಿದಾಗ ನಮ್ಮ ಸಿಬ್ಬಂದಿಯವರು ಹಿಡಿದುಕೊಂಡು ಬಂದು ತನ್ನ ಮುಂದೆ ಹಾಜರುಪಡಿಸಿದ್ದು, ಆಸಾಮಿಗಳು ಹೆಸರು ವಿಳಾಸ ಕೇಳಲಾಗಿ ಸುನೀಲ್ ಬಿನ್ ಚಂದ್ರಪ್ಪ, 22 ವರ್ಷ, ತಿಗಳರು, ಹೂ ವ್ಯಾಪಾರ, ಬಸ್ ನಿಲ್ದಾಣ ಬಳಿ, ವಾಸ ಸಿ.ಆರ್.ಲೇಔಟ್, ಶಿಡ್ಲಘಟ್ಟ ಟೌನ್, ಮತ್ತೊಬ್ಬ ಎಜಾಜ್ ಅಹಮದ್ ಬಿನ್ ಪೈಯಾಜ್ ಖಾನ್, 28 ವರ್ಷ, ಮುಸ್ಲಿಂ, ರೇಷ್ಮೇ ಗೂಡು ಮಾಕರ್ೇಟ್ ನಲ್ಲಿ ಕೆಲಸ, ಕೌನ್ಸಲರ್ ಲಕ್ಷ್ಮಣ್ ಮನೆ ಸಮೀಪ, ಕೆ.ಕೆ.ಪೇಟೆ, ಶಿಡ್ಲಘಟ್ಟ ಟೌನ್ ಎಂದು ತಿಳಿಸಿರುತ್ತಾರೆ. ಓಡಿ ಹೋದ ಆಸಾಮಿಗಳನ್ನು ಕೇಳಲಾಗಿ ಪುನೀತ್, ಶಿಡ್ಲಘಟ್ಟ, ಕುಮಾರ್ ಬೋವಿ ಕಾಲೋನಿ, ವಿಜಯರೆಡ್ಡಿ ಶಿಡ್ಲಘಟ್ಟ ನಗರ ಎಂದು ತಿಳಿಸಿರುತ್ತಾರೆ. ಸದರಿ ಆಸಾಮಿಗಳು ಐ.ಪಿ.ಎಲ್ ಕ್ರಿಕೆಟ್ ಬೆಟ್ಟಿಂಗ್ ಆಡುತ್ತಿದ್ದು, ತಮ್ಮ ಸ್ನೇಹಿತರಾದ ಷರೀಫ್ ಕೆ.ಜಿ.ಎಪ್. ತೇಜಸ್, ಚಿಂತಾಮಣಿ, ನಿತೀನ್ ಯಾದವ್, ಹರೀಶ್ ಚಿಕ್ಕಬಳ್ಳಾಪುರ ರವರೊಂದಿಗೆ ತಮ್ಮ ಬಾಬತ್ತು ಮೊಬೈಲ್ ಪೋನ್ ಮೂಲಕ ಸಂಭಾಷಣೆ ಮಾಡುತ್ತಾ ಅವರೊಂದಿಗೆ ಕ್ರಿಕೆಟ್ ಬೆಟ್ಟಿಂಗ್ ಆಟ ಆಡುತ್ತಿರುವುದಾಗಿ ತಿಳಿಸಿರುತ್ತಾರೆ. ಇವರು ಸ್ಥಳದಲ್ಲಿ ಪಣಕ್ಕೆ ಕಟ್ಟಿದ್ದ ಹಣವನ್ನು ತೆಗೆದು ಎಣಿಕೆ ಮಾಡಲಾಗಿ ಒಟ್ಟು 26,050/-ರೂ ಇರುತ್ತೆ. ಇವರುಗಳ ಬಳಿ ಇದ್ದ ಪೋನ್ ಗಳನ್ನು ಪರಿಶೀಲಿಸಲಾಗಿ ಸುನೀಲ್ ರವರ ಬಳಿ ಇದ್ದ ಮೊಬೈಲ್ ಪೋನ್ ಅನ್ನು ಪರಿಶೀಲಿಸಲಾಗಿ ರೆಡ್ಮೀ ಕಂಪನಿಯ ಸ್ಕ್ರೀನ್ ಟಚ್ ಮೊಬೈಲ್ ಪೋನ್ ಆಗಿದ್ದು ಇದರ ಐ.ಎಂ.ಇ.ಐ ನಂ. 860228041261435 ಮತ್ತು 860228041261443 ಆಗಿರುತ್ತೆ. ಇದರಲ್ಲಿ 7892858851 ಸಿಮ್ ಇರುತ್ತದೆ. ಎಜಾಜ್ ಬಳಿ ರೆಡ್ ಮೀ ಕಂಪನಿಯ ಮೊಬೈಲ್ ಪೋನ್ ಆಗಿದ್ದು, ಇದರ ಐ.ಎಂ.ಇ.ಐ ನಂ. 865230048457540 ಮತ್ತು  865230048457557 ಆಗಿರುತ್ತೆ. ಇದರಲ್ಲಿ 8147236048 ಸಿಮ್ ಇರುತ್ತದೆ. ಪಣಕ್ಕೆ ಕಟ್ಟಿದ್ದ ಹಣ ಮತ್ತು 2 ಮೊಬೈಲ್ ಪೋನ್ ಗಳನ್ನು ಪಂಚರ ಸಮಕ್ಷಮದಲ್ಲಿ ರಾತ್ರಿ 7.45 ರಿಂದ 8.30 ಗಂಟೆಯವರೆಗೆ ಅಮಾನತ್ತು ಪಡಿಸಿಕೊಂಡಿರುತ್ತೆ. ಮಾಲುಗಳನ್ನು ಹಾಗೂ ಆಸಾಮಿಗಳನ್ನು ಈ ಜ್ಞಾಪನದೊಂದಿಗೆ ಒಪ್ಪಿಸುತ್ತಿದ್ದು, ಆರೋಪಿಗಳ ವಿರುದ್ದ ಪ್ರಕರಣ ದಾಖಲಿಸಿ ಕಾನೂನು ಕ್ರಮ ಜರುಗಿಸಲು ಸೂಚಿಸಿದ್ದರ ಮೇರೆಗೆ ಈ ಪ್ರಕರಣ ದಾಖಲಿಸಿರುತ್ತೆ.