ದಿನಾಂಕ :21/06/2020 ರ ಅಪರಾಧ ಪ್ರಕರಣಗಳು

 1. ಬಾಗೇಪಲ್ಲಿ ಪೊಲೀಸ್ ಠಾಣೆ ಮೊ.ಸಂ.133/2020 ಕಲಂ. 87 ಕೆ.ಪಿ. ಆಕ್ಟ್:-

          ದಿನಾಂಕ; 19.06.2020 ರಂದು ಮದ್ಯಾಹ್ನ 12.40 ಗಂಟೆಗೆ ಶ್ರೀ ಸುನಿಲ್ ಕುಮಾರ್ ಜಿ.ಕೆ ಪಿ.ಎಸ್.ಐ. ಸಾಹೇಬರು ಠಾಣೆಗೆ ಹಾಜರಾಗಿ ಅಸಲು ಧಾಳಿ ಪಂಚನಾಮೆ, ಮಾಲು, ಆರೋಪಿಯೊಂದಿಗೆ ನೀಡಿದ ವರದಿ ಸಾರಾಂಶವೇನೆಂದರೆ ಈ ದಿನ  ದಿ:19.06.2020 ರಂದು  ಬೆಳಗ್ಗೆ 11.30  ಗಂಟೆ ಸಮಯದಲ್ಲಿ  ಬಾಗೇಪಲ್ಲಿ ಪುರದ ಹೊಸಹುಡ್ಯ ಗ್ರಾಮಕ್ಕೆ ಹೋಗುವ ರಸ್ತೆಯ ಪಕ್ಕದಲ್ಲಿರುವ ಕೆ.ಹೆಚ್.ಬಿ. ಕಾಲೋನಿಯ ರಸ್ತೆಯ ಪಕ್ಕದಲ್ಲಿ ಈ ಕೆಳಗೆ ಯಾರೋ  ಕೆಲವರು ಹಣವನ್ನು ಪಣವಾಗಿ ಇಟ್ಟು ಕಾನೂನು ಬಾಹಿರವಾಗಿ ಅಂದರ್ ಬಾಹರ್ ಇಸ್ಪೀಟ್ ಜೂಜಾಟವಾಡುತ್ತಿರುವುದಾಗಿ ಮಾಹಿತಿ ಬಂದಿದ್ದು, ನಾನು ಮತ್ತು ಸಿಬ್ಬಂದಿಯವರಾದ ಪಿಸಿ 18 ಅರುಣ್, ಪಿಸಿ 387 ಮೋಹನ್ ಕುಮಾರ್, ಪಿಸಿ 81 ಆನಂದ ಹಾಗೂ ಜೀಪ್ ಚಾಲಕ ಎ.ಹೆಚ್.ಸಿ. 34 ಅಲ್ತಾಪ್ ಪಾಷಾ ರವರೊಂದಿಗೆ ಸರ್ಕಾರಿ ಜೀಪ್ ಸಂಖ್ಯೆ; ಕೆಎ.40.ಜಿ.537 ವಾಹನದಲ್ಲಿ ಬಸ್ ನಿಲ್ದಾಣದಲ್ಲಿದ್ದ ಪಂಚರನ್ನು ಬರಮಾಡಿಕೊಂಡು ಮಾಹಿತಿ ಬಂದಂತೆ ಮೇಲ್ಕಂಡ ಸ್ಥಳಕ್ಕೆ ಬೆಳಗ್ಗೆ 11.40 ಗಂಟೆಗೆ ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಯಾರೋ  ಆಸಾಮಿಗಳು ಇದೇ ಹೊಸಹುಡ್ಯ ಗ್ರಾಮಕ್ಕೆ ಹೋಗುವ ರಸ್ತೆಯ ಪಕ್ಕದಲ್ಲಿರುವ ಕೆ.ಹೆಚ್.ಬಿ. ಕಾಲೋನಿಯ ರಸ್ತೆಯ ಪಕ್ಕದಲ್ಲಿ ಹಣವನ್ನು ಪಣವಾಗಿ ಇಟ್ಟು ಕಾನೂನು ಬಾಹಿರವಾಗಿ ಅಂದರ್ ಬಾಹರ್ ಇಸ್ಪೀಟ್ ಜೂಜಾಟವಾಡುತ್ತಿದ್ದುದನ್ನು ಖಚಿತಪಡಿಸಿಕೊಂಡು ನಾವುಗಳು ಅವರನ್ನು ಸುತ್ತುವರಿದು ಅವರನ್ನು    ಹಿಡಿದುಕೊಂಡು ಅವರ ಹೆಸರು ಮತ್ತು ವಿಳಾಸವನ್ನು ಕೇಳಲಾಗಿ 1) ಗಂಗರೆಡ್ಡಿ ಬಿನ್ ಲೇಟ್ ಅಶ್ವತ್ಥರೆಡ್ಡಿ, 48 ವರ್ಷ, ರೆಡ್ಡಿ ಜನಾಂಗ, ಜಿರಾಯ್ತಿ, ವಾಸ ಗಾಂಡ್ರಾಲಪಲ್ಲಿಗ್ರಾಮ, ಚಿಲಮತ್ತೂರು ಮಂಡಲಂ, ಹಿಂದೂಪುರ ತಾಲ್ಲೂಕು, ಆಂದ್ರಪ್ರದೇಶ, 2) ನಂಜರೆಡ್ಡಿ ಬಿನ್ ಲೇಟ್ ಚಿನ್ನಪ್ಪರೆಡ್ಡಿ, 55 ವರ್ಷ, ರೆಡ್ಡಿ ಜನಾಂಗ, ಕೂಲಿಕೆಲಸ, ವಾಸ ಗಾಂಡ್ರಾಲಪಲ್ಲಿ ಗ್ರಾಮ, ಚಿಲಮತ್ತೂರು, ಆಂದ್ರಪ್ರದೇಶ, 3) ಜಗದೀಶ ಬಿನ್ ನರಸಿಂಹರೆಡ್ಡಿ, 28 ವರ್ಷ, ರೆಡ್ಡಿ ಜನಾಂಗ, ಜಿರಾಯ್ತಿ, ವಾಸ ಗಾಂಡ್ರಾಲಪಲ್ಲಿ, ಚಿಲಮತ್ತೂರು ಮಂಡಲಂ, ಆಂದ್ರಪ್ರದೇಶ ಎಂದು ತಿಳಿಸಿದ್ದು, ಸದರಿಯವರಿಗೆ ಸಾರ್ವಜನಿಕ ಸ್ಥಳದಲ್ಲಿ ಕಾನೂನು ಬಾಹಿರವಾಗಿ ಅಂದರ್ ಬಾಹರ್ ಇಸ್ಪೀಟ್ ಜೂಜಾಟವಾಡಲು ನಿಮ್ಮ ಬಳಿ ಯಾವುದಾದರೂ ಪರವಾನಗಿ ಇದೆಯೇ?  ಎಂದು   ಕೇಳಲಾಗಿ ಇಲ್ಲವೆಂದು ತಿಳಿಸಿರುತ್ತಾರೆ.  ಆಸಾಮಿಗಳು ಜೂಜಾಟವಾಡಲು ಸ್ಥಳದಲ್ಲಿ ಪಣವಾಗಿಟ್ಟಿದ್ದ ಜೂಜಾಟದ ಒಟ್ಟು ಹಣ 2400/- ರೂ  ಹಣವನ್ನು ಮತ್ತು 52 ಇಸ್ಪೀಟ್ ಎಲೆಗಳನ್ನು ಪಂಚನಾಮೆ ಮೂಲಕ ಮುಂದಿನ ತನಿಖೆಯ ಬಗ್ಗೆ ಅಮಾನತ್ತುಪಡಿಸಿಕೊಂಡಿರುತ್ತೆ.  ಹಾಗೂ 3 ಜನ  ಆಸಾಮಿಗಳನ್ನು ವಶಕ್ಕೆ ಪಡೆದು ಠಾಣೆಗೆ ಮದ್ಯಾಹ್ನ 12.40 ಗಂಟೆಗೆ  ಹಾಜರಾಗಿ ಅಸಲು ಧಾಳಿ ಪಂಚನಾಮೆ, ಮಾಲು ಮತ್ತು ಆರೋಪಿಗಳನ್ನು ತಮ್ಮ ವಶಕ್ಕೆ ನೀಡಿ, ವರಧಿಯೊಂದಿಗೆ ಆಸಾಮಿಗಳ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಲು ಸೂಚಿಸಿ ಠಾಣಾಧಿಕಾರಿಗಳಿಗೆ ನೀಡಿದ ವರಧಿ, ಎಂದು ನೀಡಿದ ವರಧಿಯನ್ನು ಪಡೆದು ಠಾಣೆಯಲ್ಲಿ ಎನ್.ಸಿ.ಆರ್ ದಾಖಲಿಸಿಕೊಂಡಿರುತ್ತೆ. ಇದು ಅಸಂಜ್ಞೇಯ ಪ್ರಕರಣವಾಗಿದ್ದು, ಮೇಲ್ಕಂಡ ಆರೋಪಿತರ ವಿರುದ್ದ ಸಂಜ್ಞೇಯ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆಯನ್ನುಕೈಗೊಳ್ಳಲು ಅನುಮತಿಯನ್ನು ಕೋರಿ ಮಾನ್ಯ ಘನ ನ್ಯಾಯಾಲಯಕ್ಕೆ ವರಧಿಯನ್ನು ಸಲ್ಲಿಸಿಕೊಂಡಿರುತ್ತೆ. ದಿ: 20-06-2020 ರಂದು ಘನ ನ್ಯಾಯಾಲಯದ ಅನುಮತಿಯನ್ನು ಪಡೆದುಕೊಂಡು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿರುತ್ತೆ.

 1. ಬಾಗೇಪಲ್ಲಿ ಪೊಲೀಸ್ ಠಾಣೆ ಮೊ.ಸಂ.134/2020 ಕಲಂ. 15(ಎ) ಕೆ.ಇ ಆಕ್ಟ್:-

          ದಿನಾಂಕ:19.06.2020 ರಂದು ಮದ್ಯಾಹ್ನ 3.40 ಗಂಟೆಗೆ ಪಿ.ಎಸ್.ಐ ಸಾಹೇಬರು ಠಾಣೆಗೆ ಅಸಲು ಧಾಳಿ ಪಂಚನಾಮೆ, ಆರೋಪಿಗಳು, ಮಾಲುಗಳನ್ನು ತಂದು ಹಾಜರುಪಡಿಸಿ ನೀಡಿದ ವರಧಿಯ ಸಾರಾಂಶವೇನೆಂದರೆ ದಿನಾಂಕ; 19.06.2019 ರಂದು ಮದ್ಯಾಹ್ನ 2-30 ಗಂಟೆ ಸಮಯದಲ್ಲಿ ಠಾಣೆಯಲ್ಲಿದ್ದಾಗ ಬಾಗೇಪಲ್ಲಿ ಪುರದ ಹೊಸಹುಡ್ಯ ಗ್ರಾಮಕ್ಕೆ ಹೋಗುವ ರಸ್ತೆಯ ಪಕ್ಕದಲ್ಲಿರುವ ಕೆ.ಹೆಚ್.ಬಿ. ಕಾಲೋನಿಯ ರಸ್ತೆಯಲ್ಲಿ ಯಾರೋ ಕೆಲವರು ಕುಳಿತುಕೊಂಡು ಕಾನೂನು ಬಾಹಿರವಾಗಿ ಮದ್ಯಪಾನ ಮಾಡುತ್ತಿರುವುದಾಗಿ ಬಂದ ಖಚಿತ ವರ್ತಮಾನದ ಮೇರೆಗೆ ನಾನು, ಹೆಚ್.ಸಿ. 14 ಮುರಳಿ,  ಪಿಸಿ 278 ಶಬ್ಬೀರ್ ಉರಾನಮನಿ ಹಾಗೂ ಜೀಪ್ ಚಾಲಕ ಎ.ಹೆಚ್.ಸಿ. 34 ಅಲ್ತಾಪ್ ಪಾಷಾ ರವರೊಂದಿಗೆ ಸರ್ಕಾರಿ ಜೀಪ್ ಸಂಖ್ಯೆ; ಕೆಎ.40.ಜಿ.537 ವಾಹನದಲ್ಲಿ ಹೋಗಿ ಬಾಗೇಪಲ್ಲಿ ಪುರದ ಬಸ್ ನಿಲ್ದಾಣದ ಬಳಿ ಇದ್ದ ಪಂಚರನ್ನು ಕರೆದು ವಿಚಾರವನ್ನು ತಿಳಿಸಿ ಮೇಲ್ಕಂಡ ಸ್ಥಳದಲ್ಲಿ ದಾಳಿ ಮಾಡಲು ಪಂಚರಾಗಿ ಬಂದು ಪಂಚನಾಮೆಗೆ ಸಹಕರಿಸಲು ಕೋರಿದ್ದರ ಮೇರೆಗೆ ಅವರುಗಳು ಒಪ್ಪಿಕೊಂಡಿದ್ದು, ಅದರಂತೆ ನಾವುಗಳು ಮತ್ತು ಪಂಚರು ಸ್ಥಳಕ್ಕೆ ಮದ್ಯಾಹ್ನ 2-40 ಗಂಟೆಗೆ ಹೋಗಿ ನೋಡಲಾಗಿ ಯಾರೋ ಕೆಲವರು ಗುಂಪಾಗಿ ಕುಳಿತುಕೊಂಡು ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ ಮಾಡುತ್ತಿದ್ದು, ಅವರುಗಳ ಪೈಕಿ ಒಬ್ಬ ಆಸಾಮಿಗಳನ್ನು ನಾವುಗಳು ಸುತ್ತುವರೆದು ಹಿಡಿದುಕೊಂಡು ಹೆಸರು ವಿಳಾಸ ಕೇಳಲಾಗಿ 1) ಎ. ನರೇಂದ್ರ ಬಿನ್ ಸೂರ್ಯನಾರಾಯಣ, 23 ವರ್ಷ, ವಡ್ಡರ ಜನಾಂಗ, ವಾಸ ಕನಶೆಟ್ಟಿಪಲ್ಲಿ ಗ್ರಾಮ, ಚಿಲಮತ್ತೂರು ಮಂಡಲಂ, ಹಿಂದೂಪುರ ತಾಲ್ಲೂಕು ಆಂದ್ರಪ್ರದೇಶ, 2) ನರೇಶ್ ಬಿನ್ ಅಂಜಿನಪ್ಪ, 24 ವರ್ಷ, ಭೊವಿ ಜನಾಂಗ, ಜಿರಾಯ್ತಿ, ವಾಸ ಕೊಡೂರು ಗ್ರಾಮ, ಚಿಲಮತ್ತೂರು ಮಂಡಲಂ, ಹಿಂದೂಪುರ ತಾಲ್ಲೂಕು, ಆಂದ್ರಪ್ರದೇಶ, ಎಂದು ತಿಳಿಸಿರುತ್ತಾರೆ. ನಂತರ ಪಂಚರ ಸಮಕ್ಷಮ ನಾವುಗಳು ಸದರಿ ಸ್ಥಳದಲ್ಲಿ ಪರಿಶೀಲಿಸಲಾಗಿ 90 ML ನ  HAYWARDS CHEERS WHISKY 04 ಖಾಲಿ ಟೆಟ್ರಾ ಪಾಕೇಟ್, 01 ಖಾಲಿ ವಾಟರ್ ಬಾಟಲ್, ಮದ್ಯಸೇವನೆ ಮಾಡಿರುವ 04 ಖಾಲಿ ಪ್ಲಾಸ್ಟಿಕ್ ಗ್ಲಾಸ್ ಗಳು, ಮದ್ಯ ತುಂಬಿರುವ 90 ಎಂ.ಎಲ್.. HAYWARDS CHEERS WHISKY 02  ಟೆಟ್ರಾ ಪಾಕೇಟ್ ಇದ್ದು, ಒಟ್ಟು 0.180 ಎಂ.ಎಲ್.  ಮದ್ಯವಿದ್ದು ಇವುಗಳ ಒಟ್ಟು ಬೆಲೆ 60/- ರೂ.ಗಳಾಗಿರುತ್ತೆ. ಸದರಿ ಆಸಾಮಿಗಳನ್ನು ಕಾನೂನು ಬಾಹಿರವಾಗಿ ಮದ್ಯಪಾನ ಮಾಡಲು ಯಾವುದಾದರೂ ಪರವಾನಿಗೆ ಇದೆಯೇ ಎಂದು ಕೇಳಲಾಗಿ ಯಾವುದೇ ಪರವಾನಿಗೆ ಇಲ್ಲವೆಂದು ತಿಳಿಸಿದ್ದು, ಮೇಲ್ಕಂಡ ಮಾಲುಗಳನ್ನು ಪಂಚರ ಸಮಕ್ಷಮ ಪಂಚನಾಮೆಯ ಮೂಲಕ ಅಮಾನತ್ತು ಪಡಿಸಿಕೊಂಡು ಮಾಲು ಮತ್ತು ಆರೋಪಿಯೊಂದಿಗೆ ಮದ್ಯಾಹ್ನ 3-40 ಗಂಟೆಗೆ ಠಾಣೆಗೆ ಹಾಜರಾಗಿ ಮುಂದಿನ ಕ್ರಮಕ್ಕಾಗಿ ಠಾಣಾಧಿಕಾರಿಗಳಿಗೆ ನೀಡಿದ ವರಧಿ, ಎಂದು ನೀಡಿದ ವರಧಿಯನ್ನು ಪಡೆದು ಠಾಣೆಯಲ್ಲಿ ಎನ್.ಸಿ.ಆರ್ ದಾಖಲಿಸಿಕೊಂಡಿರುತ್ತೆ. ಇದು ಅಸಂಜ್ಞೇಯ ಪ್ರಕರಣವಾಗಿದ್ದು, ಮೇಲ್ಕಂಡ ಆರೋಪಿತರ ವಿರುದ್ದ ಸಂಜ್ಞೇಯ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆಯನ್ನುಕೈಗೊಳ್ಳಲು ಅನುಮತಿಯನ್ನು ಕೋರಿ ಮಾನ್ಯ ಘನ ನ್ಯಾಯಾಲಯಕ್ಕೆ ವರಧಿಯನ್ನು ಸಲ್ಲಿಸಿಕೊಂಡಿರುತ್ತೆ. ದಿ: 20-06-2020 ರಂದು ಘನ ನ್ಯಾಯಾಲಯದ ಅನುಮತಿಯನ್ನು ಪಡೆದುಕೊಂಡು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿರುತ್ತೆ.

 1. ಬಾಗೇಪಲ್ಲಿ ಪೊಲೀಸ್ ಠಾಣೆ ಮೊ.ಸಂ.135/2020 ಕಲಂ. 78(3) ಕೆ.ಪಿ ಆಕ್ಟ್:-

          ದಿನಾಂಕ:19/06/2020 ರಂದು ರಾತ್ರಿ 8:45 ಗಂಟೆಗೆ ಡಿ.ಸಿ.ಬಿ – ಸಿ.ಇ.ಎನ್ ಪೊಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ಶ್ರೀ. ಶರತ್ ಕುಮಾರ್ ರವರು ಅಸಲು ಪಂಚನಾಮೆ, ಮಾಲು, ಆಸಾಮಿಯನ್ನು ಠಾಣೆಯಲ್ಲಿ ಹಾಜರುಪಡಿಸಿ ನೀಡಿದ ವರದಿಯ ಸಾರಾಂಶವೇನೆಂದರೆ, ನಾನು ಈ ದಿನ ಬಾಗೇಪಲ್ಲಿ ತಾಲ್ಲೂಕಿನಲ್ಲಿ ಸಿಬ್ಬಂದಿಯೊಂದಿಗೆ ದ್ವಿಚಕ್ರವಾಹನಗಳಲ್ಲಿ ಕಾನೂನು ಬಾಹಿರ ಚಟುವಟಿಕೆಗಳ ಬಗ್ಗೆ ಬಾಗೇಪಲ್ಲಿ ನಗರದ ಎಸ್.ಬಿ.ಎಂ ವೃತ್ತದಲ್ಲಿ ರಾತ್ರಿ 7-30 ಗಂಟೆಯಲ್ಲಿ ಮಾಹಿತಿ ಸಂಗ್ರಹಣೆ ಕರ್ತವ್ಯದಲ್ಲಿದ್ದಾಗ ಭಾತ್ಮಿದಾರರಿಂದ ಬಂದ ಖಚಿತ ಭಾತ್ಮಿ ಮೇರೆಗೆ ಪಂಚರನ್ನು ಬರಮಾಡಿಕೊಂಡು ಪಂಚರೊಂದಿಗೆ ಮಾಹಿತಿ ಬಂದ ಸ್ಥಳವಾದ ಬಾಗೇಪಲ್ಲಿ ನಗರದ ಸಂತೇಮೈದಾನದ 16 ನೇ ವಾರ್ಡಿನಲ್ಲಿ ಒಂದು ಚಿಲ್ಲರೆ ಅಂಗಡಿಯ ಮುಂದೆ ಕಾನೂನು ಬಾಹಿರವಾಗಿ ಮಟ್ಕಾ ಅಂಕಿಗಳನ್ನು ಬರೆಯುತ್ತಿದ್ದ ಆಸಾಮಿಯನ್ನು ಪಂಚರ ಸಮಕ್ಷಮ ಹಿಡಿದು ಹೆಸರು ಮತ್ತು ವಿಳಾಸ ಕೇಳಲಾಗಿ ಬಿ.ಸೋಮಶೇಖರ ಬಿನ್ ಬೈರಾರೆಡ್ಡಿ, 48ವರ್ಷ, ಬಲಜಿಗರು, ಚಿಲ್ಲರೆಅಂಗಡಿ ವ್ಯಾಪಾರ ಮತ್ತು ಕಾರು ಚಾಲಕ, ವಾಸ ಸಂತೇಮೈದಾನ, 16 ನೇ ವಾರ್ಡ್, ಬಾಗೇಪಲ್ಲಿ ನಗರ. ಎಂತ ತಿಳಿಸಿರುತ್ತಾನೆ. ನಂತರ ಆಸಾಮಿಯ ಬಳಿ ಪರಿಶೀಲಿಸಲಾಗಿ 1] ವಿವಿಧ ಅಂಕಿಗಳಿಗೆ ವಿವಿಧ ಮೊತ್ತ ಬರೆದಿರುವ ಒಂದು ಮಟ್ಕಾ ಚೀಟಿ. 2] ಒಂದು ಬಾಲ್ ಪಾಯಿಂಟ್ ಪೆನ್ ಮತ್ತು ರೂ 2630/- ರೂಪಾಯಿಗಳಿದ್ದು ಪಂಚರ ಸಮಕ್ಷಮ ಸದರಿಯವುಗಳನ್ನು ಪಂಚನಾಮೆ ಮೂಲಕ ಅಮಾನತ್ತು ಪಡಿಸಿಕೊಂಡಿರುತ್ತೆ. ನಂತರ ಮಟ್ಕಾ ಬರೆಯುತ್ತಿದ್ದ ಆಸಾಮಿಯನ್ನು ಮುಂದಿನ ಕ್ರಮಕ್ಕಾಗಿ ಮೇಲ್ಕಂಡ ಮಾಲಿನೊಂದಿಗೆ ಠಾಣಾಧಿಕಾರಿಗಳಾದ ತಮ್ಮ ಮುಂದೆ ಹಾಜರುಪಡಿಸುತ್ತಿರುವುದಾಗಿ ನೀಡಿದ ವರದಿ, ಎಂದು ನೀಡಿದ ವರಧಿಯನ್ನು ಪಡೆದು ಠಾಣೆಯಲ್ಲಿ ಎನ್.ಸಿ.ಆರ್ ದಾಖಲಿಸಿಕೊಂಡಿರುತ್ತೆ. ಇದು ಅಸಂಜ್ಞೇಯ ಪ್ರಕರಣವಾಗಿದ್ದು, ಮೇಲ್ಕಂಡ ಆರೋಪಿತರ ವಿರುದ್ದ ಸಂಜ್ಞೇಯ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆಯನ್ನುಕೈಗೊಳ್ಳಲು ಅನುಮತಿಯನ್ನು ಕೋರಿ ಮಾನ್ಯ ಘನ ನ್ಯಾಯಾಲಯಕ್ಕೆ ವರಧಿಯನ್ನು ಸಲ್ಲಿಸಿಕೊಂಡಿರುತ್ತೆ.  ದಿ: 20-06-2020 ರಂದು ಘನ ನ್ಯಾಯಾಲಯದ ಅನುಮತಿಯನ್ನು ಪಡೆದುಕೊಂಡು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿರುತ್ತೆ.

 1. ಬಾಗೇಪಲ್ಲಿ ಪೊಲೀಸ್ ಠಾಣೆ ಮೊ.ಸಂ.136/2020 ಕಲಂ. 87 ಕೆ.ಪಿ ಆಕ್ಟ್:-

          ದಿನಾಂಕ:19/06/2020 ರಂದು ಸಂಜೆ 6:00  ಗಂಟೆಗೆ ಶ್ರೀ. ರವಿಶಂಕರ ಮಾನ್ಯ ಪೊಲೀಸ್ ಉಪಾಧೀಕ್ಷಕರು, ಚಿಕ್ಕಬಳ್ಳಾಪುರ ಉಪವಿಭಾಗ, ಚಿಕ್ಕಬಳ್ಳಾಪುರ ರವರು ಪಂಚನಾಮೆ, ಮಾಲು ಮತ್ತು 5 ಜನ ಆಸಾಮಿಗಳೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ವರದಿಯ ಸಾರಾಂಶವೇನೆಂದರೆ,  ದಿನಾಂಕ:19-06-2020 ರಂದು ನಾನು ಮತ್ತು ನನ್ನ ಕಛೇರಿಯಲ್ಲಿ ಕರ್ತವ್ಯ ನಿರ್ವಹಣೆ ಮಾಡುವ ಸಿಬ್ಬಂದಿ  ಶ್ರೀ ರಮೇಶ್- ಸಿ.ಹೆಚ್.ಸಿ-205, ಶ್ರೀನಾಥ.ವಿ, ಸಿ.ಹೆಚ್.ಸಿ-17, ಶ್ರೀ ಬಾಬು ಸಿ.ಹೆಚ್.ಸಿ-06 ರವರುಗಳು ಸಕರ್ಾರಿ ಜೀಪ್ ಸಂಖ್ಯೆ: ಕೆ.ಎ-40-ಜಿ-1555 ರಲ್ಲಿ ಬಾಗೇಪಲ್ಲಿ ಪಟ್ಟಣದಲ್ಲಿ ಗಸ್ತನ್ನು  ಮಾಡುತ್ತಿರುವಾಗ ಸಂಜೆ ಸುಮಾರು 16:00 ಗಂಟೆಗೆ ಬಂದ ಖಚಿತ ಭಾತ್ಮಿಯ ಮೇರೆಗೆ ಬಾಗೇಪಲ್ಲಿ ಪಟ್ಟಣದ ಟಿ.ಬಿ ಕ್ರಾಸ್ನ ಬಳಿ ಅಂದರ್ ಬಾಹರ್ ಇಸ್ಪೀಟು ಜೂಜಾಟದ ಮೇಲೆ ದಾಳಿ ಮಾಡಲು ಸಹಕರಿಸುವಂತೆ ಪಂಚರನ್ನು ಬರಮಾಡಿಕೊಂಡು ಬೆಂಗಳೂರು-ಹೈದರಬಾದ್  ಎನ್.ಹೆಚ್-07 ರಸ್ತೆಗೆ ಸುಮಾರು 16:30 ಗಂಟೆಗೆ ಬಾಗೇಪಲ್ಲಿ ಟೋಲ್ ಪ್ಲಾಜಾ ಬಳಿ ಇರುವ ಮಯೂರಿ ಫ್ಯಾಮಿಲಿ ರೆಸ್ಟೋರೆಂಟ್ನ ಶೌಚಾಲಯದ ಬಳಿ ಇರುವ ಪ್ಯಾಸೇಜ್ ಹೋಗಿ ನೋಟಲಾಗಿ  ಅಂದರ್ 200 ಬಾಹರ್ 200 ಎಂದು ಅಂದರ್ ಬಾಹರ್ ಇಸ್ಪೀಟು ಜೂಜಾಟ ಆಡುತ್ತಿದ್ದವರ ಮೇಲೆ ದಾಳಿ ಮಾಡಿ ಐದು ಜನರು ಇದ್ದು ನಾನು ಸ್ಥಳದಿಂದ ಯಾರೂ ಓಡಿ ಹೋಗದಂತೆ ಎಚ್ಚರಿಕೆಯನ್ನು ನೀಡಿ ನಾವುಗಳು ಸುತ್ತುವರಿದು ಅವರುಗಳ ಹೆಸರು ಮತ್ತು ವಿಳಾಸಗಳನ್ನು ಕೇಳಲಾಗಿ 1) ಪಟ್ಟಿಕುಂಡ ಶ್ರೀನಿವಾಸಬಾಬು ಬಿನ್ ರಾಮಯ್ಯ, 27 ವರ್ಷ, ರಜಕ ಜನಾಂಗ, ಸಿವಿಲ್ ಇಂಜಿನಿಯರ್, ವಾಸ 2-324/ಸಿ, ಪಾಶರ್ಲಪಾಡು ಗ್ರಾಮ, ರೆಂಟಚಿಂತಲ ಮಂಡಲಂ, ಗುಂಟೂರು ಜಿಲ್ಲೆ ಆಂದ್ರ ಪ್ರದೇಶ, ಮೊಬೈಲ್ ಸಂಖ್ಯೆ: 9000251838, 2) ಗೌರವ್ ಪಟೇಲ್ ಬಿನ್ ರಾಮ್ಗುದನ್ ಪಟೇಲ್, 27ವರ್ಷ, ಪಟೇಲ್ ಜನಾಂಗ, ಸಿವಿಲ್ ಇಂಜಿನಿಯರ್, ನಾರಾಯಣ್ಪುರ್, ಬೆಲ್ವ ಗುದರ್ಾ ಪೋಸ್ಟ್, ಮಹಾರಾಜ್ ಗನಿ ಜಿಲ್ಲೆ, ಉತ್ತರ ಪ್ರದೇಶ ಮೊ.ಸಂ.7985516533. 3) ಬೊಮ್ಮನ್ ಶ್ರೀನಿವಾಸ ಬಿನ್ ಬೊಮ್ಮನ ರಾಘುವುಲು, 30 ವರ್ಷ, ಗೌಡ ಜನಾಂಗ, ಚಾಲಕ ವೃತ್ತಿ, ನಂ 9-168, ಸೋಲಿಪುರ ಗ್ರಾಮ, ನರಮಿಟ್ಟಾ ಮಂಡಲ್, ವರಂಗಲ್ ಜಿಲ್ಲೆ, ಆಂದ್ರ ಪ್ರದೇಶ ಮೊ.ಸಂ. 9493140086 4) ಪಿ.ಪ್ರಭಾಕರರೆಡ್ಡಿ ಬಿನ್ ಮುನಿರೆಡ್ಡಿ, 22 ವರ್ಷ, ರೆಡ್ಡಿ ಜನಾಂಗ, ಸಿವಿಲ್ ಇಂಜಿನಿಯರ್, ವಾಸ ನಂ 9-17, ಅಟ್ಟಲೂರು ಗ್ರಾಮ ಮತ್ತು ಮಂಡಲಂ, ಸಿದ್ದವಟಂ ತಾಲ್ಲೂಕು, ಕಡಪಾ ಜಿಲ್ಲೆ, ಅಂದ್ರ ಪ್ರದೇಶ, ಮೊ.ಸಂ 8309797769 ಮತ್ತು 5) ವಡ್ಡಲಕೊಂಡ ಶ್ರೀಹರಿ ಬಿನ್ ಲೇಟ್ ನರಸಿಂಹ, 40 ವರ್ಷ, ಗೌಡ ಜನಾಂಗ, ಕ್ಲೀನರ್ ಕೆಲಸ, ನಂ 2-11, ಬಂಡೌತಪುರಂ ಗ್ರಾಮಂ, ವರದನ್ನಪೇಟ ಮಂಡಲಂ, ವರಂಗಲ್ ಜಿಲ್ಲೆ, ಆಂದ್ರ ಪ್ರದೇಶ ಮೊ.ಸಂ. 9959603284. ಎಂದು ತಿಳಿಸಿರುತ್ತಾರೆ. ಇವರುಗಳು ಅಂದರ್ ಬಾಹರ್ ಜೂಜಾಟವಾಡಲು ಪಣವಾಗಿಟ್ಟಿದ್ದ ಹಣವನ್ನು ಪರಿಶೀಲನೆ ಮಾಡಲಾಗಿ 5140/- ರೂ ಇರುತ್ತದೆ. ಮತ್ತು ಅವರು ಅಂದರ್ ಬಾಹರ್ ಜೂಜಾಟವಾಡಲು ಬಳಸಿದ್ದ 52 ಇಸ್ಪೀಟು ಎಲೆಗಳನ್ನು ಪಂಚರ ಸಮಕ್ಷಮ ಅಮಾನತ್ತು ಪಡಿಸಿಕೊಂಡಿರುತ್ತೆ. ಮೇಲ್ಕಂಡ 5 ಜನ ಆಸಾಮಿಗಳನ್ನು, ನಗದು ಹಣ 5140 ರೂಗಳ ನಗದು ಹಣ ಹಾಗೂ 52 ಇಸ್ಪೀಟು ಎಲೆಗಳನ್ನು ಮುಂದಿನ ಕ್ರಮಕ್ಕಾಗಿ ಪಂಚನಾಮೆಯೊಂದಿಗೆ ನಿಮ್ಮ ವಶಕ್ಕೆ ನೀಡುತ್ತಿದ್ದು ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿ ನೀಡಿದ ವರದಿ ಎಂದು ನೀಡಿದ ವರಧಿಯನ್ನು ಪಡೆದು ಠಾಣೆಯಲ್ಲಿ ಎನ್.ಸಿ.ಆರ್ ದಾಖಲಿಸಿಕೊಂಡಿರುತ್ತೆ. ಇದು ಅಸಂಜ್ಞೇಯ ಪ್ರಕರಣವಾಗಿದ್ದು, ಮೇಲ್ಕಂಡ ಆರೋಪಿತರ ವಿರುದ್ದ ಸಂಜ್ಞೇಯ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆಯನ್ನುಕೈಗೊಳ್ಳಲು ಅನುಮತಿಯನ್ನು ಕೋರಿ ಮಾನ್ಯ ಘನ ನ್ಯಾಯಾಲಯಕ್ಕೆ ವರಧಿಯನ್ನು ಸಲ್ಲಿಸಿಕೊಂಡಿರುತ್ತೆ.   ದಿ: 20-06-2020 ರಂದು ಘನ ನ್ಯಾಯಾಲಯದ ಅನುಮತಿಯನ್ನು ಪಡೆದುಕೊಂಡು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿರುತ್ತೆ.

 1. ಬಾಗೇಪಲ್ಲಿ ಪೊಲೀಸ್ ಠಾಣೆ ಮೊ.ಸಂ.137/2020 ಕಲಂ. 78(3) ಕೆ.ಪಿ ಆಕ್ಟ್:-

          ದಿನಾಂಕ:19.06.2020 ರಂದು ರಾತ್ರಿ 8-10 ಗಂಟೆಗೆ ಪಿ.ಎಸ್.ಐ ಸಾಹೇಬರು ಠಾಣೆಗೆ ಹಾಜರಾಗಿ ನೀಡಿದ ಜ್ಞಾಪನಾದ ಸಾರಾಂಶವೇನೆಂದರೆ ದಿನಾಂಕ: 19.06.2020 ರಂದು ಸಂಜೆ 6-30 ಗಂಟೆ ಸಮಯದಲ್ಲಿ ನಾನು ಠಾಣೆಯಲ್ಲಿದ್ದಾಗ ಬಾಗೇಪಲ್ಲಿ ತಾಲ್ಲೂಕು ಗೂಳೂರು ಹೋಬಳಿ, ಗೂಳೂರು ಗ್ರಾಮ ಪಂಚಾಯ್ತಿ ಕಛೇರಿಯ ಬಳಿ ಯಾರೋ ಒಬ್ಬ ಆಸಾಮಿ ಸಾರ್ವಜನಿಕ ಸ್ಥಳದಲ್ಲಿ, ಕಾನೂನು ಬಾಹಿರವಾಗಿ 1 ರೂಪಾಯಿಗೆ 70 ರೂಪಾಯಿ ಕೊಡುವುದಾಗಿ ಕೂಗುತ ಮಟ್ಕಾ ಚೀಟಿಗಳನ್ನು ಬರೆಯುತ್ತಿರುವುದಾಗಿ ಬಂದ ಖಚಿತ ಮಾಹಿತಿ ಮೇರೆಗೆ ನಾನು ಮತ್ತು ಬಾಗೇಪಲ್ಲಿ ಪೊಲೀಸ್ ಠಾಣೆಯ ಸಿಬ್ಬಂದಿ ಸಿಹೆಚ್ ಸಿ-103 ಶಂಕರರೆಡ್ಡಿ, ಸಿ.ಹೆಚ್.ಸಿ-212 ಶ್ರೀನಾಥ್,  ಸಿಪಿಸಿ 76 ಸುರೇಶ ಮತ್ತು ಜೀಫ್ ಚಾಲಕ ಎ.ಹೆಚ್.ಸಿ-34  ಅಲ್ತಾಫ್ ಪಾಷಾ ರವರೊಂದಿಗೆ  ಸರ್ಕಾರಿ ಜೀಫ್ ಸಂಖ್ಯೆ ಕೆಎ-40,ಜಿ-537 ಜೀಫ್ ನಲ್ಲಿ ಹೋಗಿ ಗೂಳೂರು ಗ್ರಾಮದ ಬಸ್ ನಿಲ್ದಾಣದ ಬಳಿ ಇದ್ದ ಪಂಚರನ್ನು ಸ್ಥಳಕ್ಕೆ ಬರಮಾಡಿಕೊಂಡು  ವಿಚಾರವನ್ನು  ತಿಳಿಸಿ ದಾಳಿ ಮಾಡಲು ಪಂಚರಾಗಿ ಬಂದು ಪಂಚನಾಮೆಗೆ ಸಹಕರಿಸಲು ಕೋರಿದ್ದರ ಮೇರೆಗೆ ಅವರುಗಳು ಒಪ್ಪಿಕೊಂಡರು, ಅದರಂತೆ ನಾವು ಮತ್ತು ಪಂಚರು ಸಂಜೆ 6-50 ಗಂಟೆಗೆ ಮೇಲ್ಕಂಡ ಸ್ಥಳಕ್ಕೆ ಹೋಗಿ ನೋಡಲಾಗಿ ಯಾರೋ ಒಬ್ಬ ಆಸಾಮಿಯು, ಕಾನೂನು ಬಾಹಿರವಾಗಿ  ಸಾರ್ವಜನಿಕರಿಗೆ  ವಿವಿಧ ಅಂಕಿಗಳಿಗೆ  ವಿವಿಧ ಮೊತ್ತ ಬರೆದುಕೊಡುವುದು ಮತ್ತು ಸಾರ್ವಜನಿಕರನ್ನು ಕೂಗಿ 1 ರೂ ಗೆ 70 ರೂ ಕೊಡುವುದಾಗಿ ಕೂಗುತ್ತ ಮಟ್ಕಾ ಚೀಟಿಗಳನ್ನು ಬರೆಯುತ್ತಿರುವುದನ್ನು ನಾವುಗಳು ಖಚಿತಪಡಿಸಿಕೊಂಡು ಪಂಚರ ಸಮಕ್ಷಮ ದಾಳಿ ಮಾಡಿ  ವಶಕ್ಕೆ ಪಡೆದು ಆತನ ಬಳಿ ಇದ್ದ  ವಿವಿಧ ನಂಬರ್ ಗಳಿಗೆ ವಿವಿಧ ಮೊತ್ತ ಬರೆದಿರುವ  ವಿವಿಧ ಅಂಕಿಗಳ 1 ಮಟ್ಕಾ ಚೀಟಿ  ಒಂದು ಬಾಲ್ ಪೆನ್ ಹಾಗೂ ಆತನ ಬಳಿ ಇದ್ದ  780/- ರೂ. ಗಳನ್ನು  ವಶಕ್ಕೆ ಪಡೆದು ಆತನ ಹೆಸರು ಮತ್ತು  ವಿಳಾಸವನ್ನು ಕೇಳಲಾಗಿ  ಮಂಜುನಾಥ ಬಿನ್ ಲೇಟ್ ಚನ್ನರಾಯಪ್ಪ, 53 ವರ್ಷ, ಆದಿ ಕರ್ನಾಟಕ ಜನಾಂಗ, ಕೂಲಿಕೆಲಸ, ವಾಸ: ಗೂಳೂರು ಗ್ರಾಮ, ಗೂಳೂರು ಹೋಬಳಿ. ಬಾಗೇಪಲ್ಲಿ ತಾಲ್ಲೂಕು ಎಂದು ತಿಳಿಸಿದ್ದು,  ಸದರಿ ಆಸಾಮಿಗೆ ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಚೀಟಿಗಳನ್ನು ಬರೆಯಲು ಯಾವುದಾದರೂ ಪರವಾನಗಿ ಇದೆಯೇ ಎಂದು ಕೇಳಲಾಗಿ ಆಸಾಮಿಯು ತನ್ನ ಬಳಿ ಯಾವುದೇ ಪರವಾನಗಿ ಇಲ್ಲವೆಂದು ತಿಳಿಸಿರುತ್ತಾನೆ. ಸ್ಥಳದಲ್ಲಿ ಪಂಚರ ಸಮಕ್ಷಮ ಪಂಚನಾಮೆ ಮೂಲಕ ಮೇಲ್ಕಂಡ ಮಾಲುಗಳನ್ನು ಮತ್ತು ಆಸಾಮಿಯನ್ನು ವಶಕ್ಕೆ ಪಡೆದು, ಅಸಲು ಧಾಳಿ ಪಂಚನಾಮೆ,  ಮಾಲು ಮತ್ತು ಆರೋಪಿಯೊಂದಿಗೆ ಮತ್ತು 8-10 ಗಂಟೆಗೆ  ಠಾಣೆಗೆ ಹಾಜರಾಗಿ ಮುಂದಿನ ಕ್ರಮದ ಜರುಗಿಸಲು ಸೂಚಿಸಿ ಠಾಣಾಧಿಕಾರಿಗಳಿಗೆ ನೀಡಿದ ವರದಿ, ಎಂದು ನೀಡಿದ ವರಧಿಯನ್ನು ಪಡೆದು ಠಾಣೆಯಲ್ಲಿ ಎನ್.ಸಿ.ಆರ್ ದಾಖಲಿಸಿಕೊಂಡಿರುತ್ತೆ.  ಇದು ಅಸಂಜ್ಞೇಯ ಪ್ರಕರಣವಾಗಿದ್ದು, ಮೇಲ್ಕಂಡ ಆರೋಪಿತರ ವಿರುದ್ದ ಸಂಜ್ಞೇಯ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆಯನ್ನುಕೈಗೊಳ್ಳಲು ಅನುಮತಿಯನ್ನು ಕೋರಿ ಮಾನ್ಯ ಘನ ನ್ಯಾಯಾಲಯಕ್ಕೆ ವರಧಿಯನ್ನು ಸಲ್ಲಿಸಿಕೊಂಡಿರುತ್ತೆ.  ದಿ: 20-06-2020 ರಂದು ಘನ ನ್ಯಾಯಾಲಯದ ಅನುಮತಿಯನ್ನು ಪಡೆದುಕೊಂಡು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿರುತ್ತೆ.

 1. ಬಾಗೇಪಲ್ಲಿ ಪೊಲೀಸ್ ಠಾಣೆ ಮೊ.ಸಂ.138/2020 ಕಲಂ. 78(3) ಕೆ.ಪಿ ಆಕ್ಟ್:-

          ದಿ: 20-06-2020 ರಂದು ಪಿ.ಎಸ್.ಐ ಸಾಹೆಬರವರು ಮದ್ಯಾಹ್ನ 2:30  ಗಂಟೆಗೆ ಮಾಲು, ಮಹಜರ್ ಮತ್ತು ಆರೋಪಿತರೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶ – ದಿ: 20-06-2020 ರಂದು ಮದ್ಯಾಹ್ನ 12:00 ಗಂಟೆಯ ಸಮಯದಲ್ಲಿ ಠಾಣೆಯಲ್ಲಿದ್ದಾಗ, ಬಾಗೇಪಲ್ಲಿ ಪುರದ ಮಟನ್ ಮಾರ್ಕೆಟ್ ರಸ್ತೆಯ ಬಳಿ ಯಾರೋ ಆಸಾಮಿಯು ಸಾರ್ವಜನಿಕ ಸ್ಥಳದಲ್ಲಿ ಕಾನೂನು ಬಾಹಿರವಾಗಿ 1 ರೂಪಾಯಿಗೆ 70 ರೂಪಾಯಿ ಕೊಡುವುದಾಗಿ ಕೂಗುತ್ತಾ ಮಟ್ಕಾ ಚೀಟಿಗಳನ್ನು ಬರೆಯುತ್ತಿರುವುದಾಗಿ ಬಂದ ಖಚಿತ ಮಾಹಿತಿ ಬಂದಿದ್ದು, ಸದರಿ ಮಾಹಿತಿ ಮೇರೆಗೆ ನಾನು ಮತ್ತು ಬಾಗೇಪಲ್ಲಿ ಪೊಲೀಸ್ ಠಾಣೆಯ ಸಿಬ್ಬಂಧಿ ಅರುಣ್ ಸಿ.ಪಿ.ಸಿ 18, ವಿನಯ್ ಕುಮಾರ್ ಯಾದವ್, ಸಿ.ಪಿ.ಸಿ 237 ರವರೊಂದಿಗೆ ಸರ್ಕಾರಿ ಜೀಪ್ ಕೆ.ಎ-40-ಜಿ-537 ರಲ್ಲಿ ಚಾಲಕ ಎ.ಪಿ.ಸಿ 34 ಅಲ್ತಾಪ್ ಪಾಷಾ ರೊಂದಿಗೆ ಬಾಗೇಪಲ್ಲಿ ಪುರದ ತಾಲ್ಲೂಕು ಕಛೇರಿಯ ಬಳಿ ಹೋಗಿ ಪಂಚಾಯ್ತಿದಾರರನ್ನು ಬರಮಾಡಿಕೊಂಡು ಅವರಿಗೆ ಮಾಹಿತಿ ತಿಳಿಸಿ ದಾಳಿ ಮಾಡಲು ಪಂಚಾರಾಗಿ ಬಂದು ಪಂಚನಾಮೆಗೆ ಸಹಕರಿಸಲು ಕೋರಿದ್ದರ ಮೇರೆಗೆ ಅವರುಗಳು ಒಪ್ಪಿಕೊಂಡಿದ್ದು, ಅದರಂತೆ ನಾವು ಮತ್ತು ಪಂಚಾಯ್ತಿದಾರರು ಮದ್ಯಾಹ್ನ 12:15 ಗಂಟೆಗೆ ಮೇಲ್ಕಂಡ ಸ್ಥಳಕ್ಕೆ ಹೋಗಿ ಸ್ವಲ್ಪ ದೂರದಲ್ಲಿ ಜೀಪನ್ನು ನಿಲ್ಲಿಸಿ ಮರೆಯಲ್ಲಿ ನಿಂತು ನೋಡಲಾಗಿ ಯಾರೋ ಆಸಾಮಿಯು ಸಾರ್ವಜನಿಕ ಸ್ಥಳದಲ್ಲಿ ಕಾನೂನು ಬಾಹಿರವಾಗಿ ಸಾರ್ವಜನಿಕರಿಗೆ ವಿವಿಧ ಅಂಕಿಗಳಿಗೆ ವಿವಿಧ ಮೊತ್ತ ಬರೆದುಕೊಡುವುದು ಮತ್ತು ಸಾರ್ವಜನಿಕರನ್ನು ಕೂಗಿ 1 ರೂಗೆ 70 ರೂ ಕೊಡುವುದಾಗಿ ಕೂಗುತ್ತಾ ಮಟ್ಕಾ ಚೀಟಿಗಳನ್ನು ಬರೆಯುತ್ತಿರುವುದನ್ನು ಖಚಿತಪಡಿಸಿಕೊಂಡು, ಪಂಚರ ಸಮಕ್ಷಮ ದಾಳಿ ಮಾಡಿ ಆಸಾಮಿಯನ್ನು ವಶಕ್ಕೆ ಪಡೆದು ಅವರ ಬಳಿ ಇದ್ದ ವಿವಿಧ ನಂಬರ್ ಗಳಿಗೆ ವಿವಿಧ ಮೊತ್ತ ಬರೆದಿರುವ  ವಿವಿಧ ಅಂಕಿಗಳ 1 ಮಟ್ಕಾ ಚೀಟಿ, ಒಂದು ಬಾಲ್ ಪೆನ್ ಹಾಗೂ ಅವರ ಬಳಿ ಇದ್ದ 650/- ರೂಗಳನ್ನು ವಶಕ್ಕೆ ಪಡೆದು, ಅವರ ಹೆಸರು ಮತ್ತು ವಿಳಾಸವನ್ನು ಕೇಳಲಾಗಿ ಷಫೀವುಲ್ಲಾ ಖಾನ್ ಬಿನ್ ಲೇಟ್ ದಸ್ತಗಿರಿ ಖಾನ್, 32 ವರ್ಷ, ಮುಸ್ಲಿಂ ಜನಾಂಗ, ವ್ಯಾಪಾರ, 20 ನೇ ವಾರ್ಡ್, ಬಾಗೇಪಲ್ಲಿ ಪುರ ಎಂದು ತಿಳಿಸಿದ್ದು, ಸದರಿ ಆಸಾಮಿಗೆ ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಚೀಟಿಗಳನ್ನು ಬರೆಯಲು ಯಾವುದಾದರೂ ಪರವಾನಗಿ ಇದೆಯೇ ಎಂದು ಕೇಳಲಾಗಿ ಆಸಾಮಿಯು ತಮ್ಮ ಬಳಿ ಯಾವುದೇ ಪರವಾನಗಿ ಇಲ್ಲವೆಂದು ತಿಳಿಸಿ ತನ್ನ ತಪ್ಪನ್ನು ಒಪ್ಪಿಕೊಂಡಿರುತ್ತಾನೆ. ಸ್ಥಳದಲ್ಲಿ ಪಂಚರ ಸಮಕ್ಷಮ ಪಂಚನಾಮೆ ಮೂಲಕ ಮೇಲ್ಕಂಡ ಮಾಲುಗಳನ್ನು, ಆಸಾಮಿಯನ್ನು ವಶಕ್ಕೆ ಪಡೆದು, ಅಸಲು ದಾಳಿ ಪಂಚನಾಮೆ ಮಾಲು ಮತ್ತು ಆರೋಪಿಯೊಂದಿಗೆ ಮದ್ಯಾಹ್ನ 1:30 ಗಂಟೆಗೆ ಠಾಣೆಗೆ ಹಾಜರಾಗಿ ಮುಂದಿನ ಕ್ರಮ ಜರುಗಿಸಲು ಸೂಚಿಸಿ, ಠಾಣಾಧಿಕಾರಿಗಳಿಗೆ ವರಧಿ ನೀಡಿರುತ್ತೇನೆ, ಎಂದು ನೀಡಿದ ವರಧಿಗೆ ಮೇರೆಗೆ ಠಾಣೆಯಲ್ಲಿ ಎನ್.ಸಿ.ಆರ್ ದಾಖಲಿಸಿಕೊಂಡಿರುತ್ತೆ. ಘನ ನ್ಯಾಯಾಲಯದಿಂದ ಅನುಮತಿಯನ್ನು ಪಡೆದುಕೊಂಡು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿರುತ್ತೆ  ಇದು ಅಸಂಜ್ಞೇಯ ಪ್ರಕರಣವಾಗಿದ್ದು, ಮೇಲ್ಕಂಡ ಆರೋಪಿತರ ವಿರುದ್ದ ಸಂಜ್ಞೇಯ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಳ್ಳುವ ಸಲುವಾಗಿ ಘನ ನ್ಯಾಯಾಲಯದ ಅನುಮತಿ ನೀಡಲು ಕೋರಿದೆ.

 1. ಚೇಳೂರು ಪೊಲೀಸ್ ಠಾಣೆ ಮೊ.ಸಂ.33/2020 ಕಲಂ. 15(A),32(3) ಕೆ.ಇ ಆಕ್ಟ್:-

          ದಿನಾಂಕ:20/06/2020 ರಂದು ಸಂಜೆ 18-30 ಗಂಟೆಗೆ ಘನ ನ್ಯಾಯಾಲಯ ಕರ್ತವ್ಯದ ಪೇದ ಸಿ.ಪಿ.ಸಿ 445 ರಮೇಶ್ ರವರು  ಠಾಣೆಗೆ ಹಾಜರಾಗಿ ಘನ ನ್ಯಾಯಾಲಯದಿಂದ ಪ್ರಕರಣ ದಾಖಲಿಸಲು ಅನುಮತಿಯನ್ನು ಪಡೆದು ಸದರಿ ಆದೇಶದ ಪ್ರತಿಯನ್ನು  ತಂದು  ಠಾಣೆಯಲ್ಲಿ ಹಾಜರು ಪಡಿಸಿದರ ಸಾರಾಂಶವೇನೆಂದರೆ,  ದಿನಾಂಕ:19/06/2020 ರಂದು ಸಂಜೆ 19-45 ಗಂಟೆಗೆ ಪಿ.ಎಸ್.ಐ  ರವರಾದ ಶ್ರೀಮತಿ ಚಂದ್ರಕಲಾ ಎನ್ ರವರು ಠಾಣೆಗೆ ಹಾಜರಾಗಿ ನೀಡಿದ ವರದಿಯ ಸಾರಾಂಶವೇನೆಂದರೆ,  ದಿನಾಂಕ:19/06/2020 ರಂದು ಮಧ್ಯಾಹ್ನ 14:00 ಗಂಟೆಯಲ್ಲಿ ಚೇಳೂರು ಪೊಲೀಸ್ ಠಾಣೆಯ ಪಿ.ಎಸ್.ಐ ಚಂದ್ರಕಲಾ.ಎನ್  ಆದ ನಾನು ಸರ್ಕಾರಿ ಜೀಪ್ ಸಂಖ್ಯೆ ಕೆಎ 42 ಜಿ 61 ನಲ್ಲಿ  ಠಾಣೆಯ ಸಿಬ್ಬಂದಿಯವರಾದ ಸಿ.ಹೆಚ್.ಸಿ 129 ರವಣಪ್ಪ, ಸಿ.ಪಿ.ಸಿ 519 ಚಂದ್ರಶೇಖರ್ ಹಾಗೂ  ಸಿ.ಪಿ.ಸಿ 09 ನಾರಾಯಣಸ್ವಾಮಿ ರವರೊಂದಿಗೆ ಠಾಣಾ ಸರಹದ್ದು ನಾರಾಯಣಪಲ್ಲಿ ಗ್ರಾಮದ ಕಡೆ ಗಸ್ತು ಮಾಡುತ್ತಿದ್ದಾಗ  ಅದೇ  ಗ್ರಾಮದಲ್ಲಿ ವೆಂಕಟೇಶ್  ಎಂಬುವರು ತನ್ನ ಮನೆಯ ಮುಂಭಾಗ ಅಕ್ರಮವಾಗಿ ಮಧ್ಯದ ಪ್ಯಾಕೇಟ್ ಗಳನ್ನು ಇಟ್ಟುಕೊಂಡು ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕ ಶಾಂತಿ ಮತ್ತು ನೆಮ್ಮದಿಗೆ ಭಂಗವುಂಟು ಮಾಡುವ ರೀತಿಯಲ್ಲಿ ಮಧ್ಯಪಾನ ಮಾಡಲು ಸ್ಥಳಾವಕಾಶವನ್ನು ನೀಡಿರುವುದಾಗಿ ಮಾಹಿತಿ ಬಂದಿದ್ದು ಅದರಂತೆ ಅದೇ ಗ್ರಾಮದಲ್ಲಿ ಪಂಚರನ್ನು ಬರಮಾಡಿಕೊಂಡು ವೆಂಕಟೇಶ್ ರವರ  ಮನೆಯ  ಮುಂಭಾಗ ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಯಾರೋ ಇಬ್ಬರು  ಆಸಾಮಿಗಳು ಮಧ್ಯಪಾನವನ್ನು ಮಾಡುತ್ತಿದ್ದು ಸಮವಸ್ತ್ರದಲ್ಲಿದ್ದ ಪೊಲೀಸರನ್ನು ನೋಡಿ ಅಲ್ಲಿಂದ ಓಡಿ ಹೋಗಿರುತ್ತಾರೆ.  ಸದರಿ ಸ್ಥಳದಲ್ಲಿದ್ದ  ಮಧ್ಯದ ಪ್ಯಾಕೇಟ್ ಗಳಿದ್ದು ಅಲ್ಲಿಯೇ ಇದ್ದ ವೆಂಕಟೇಶ್ ರವರನ್ನು ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ  ಮಧ್ಯದ ಪ್ಯಾಕೇಟ್ ಗಳನ್ನು ಇಟ್ಟಿಕೊಳ್ಳಲು  ಮತ್ತು ಸಾರ್ವಜನಿಕ ಶಾಂತಿಗೆ ಭಂಗವುಂಟು ಮಾಡುವ ರೀತಿಯಲ್ಲಿ ಮಧ್ಯಪಾನ  ಮಾಡಲು ಸ್ಥಳಾವಕಾಶ ಮಾಡಿಕೊಡಲು ನಿಮ್ಮ ಬಳಿ ಯಾವುದಾರೂ ಪರವಾನಿಗೆ ಇದೆಯೇ ಎಂದು ಕೇಳಲಾಗಿ ಸದರಿಯವರು  ನನ್ನ ಬಳಿ ಯಾವುದೇ ಪರವಾನಿಗೆ ಇಲ್ಲಾ ಎಂದು ಹೇಳಿದ್ದು ಸದರಿ  ಆಸಾಮಿಯ ಹೆಸರು & ವಿಳಾಸ ಕೇಳಲಾಗಿ ತನ್ನ ಹೆಸರು ವೆಂಕಟೇಶ್ ಬಿನ್ ಶ್ರೀರಾಮಪ್ಪ,49 ವರ್ಷ, ಬಲಜಿಗರು, ಕೂಲಿ ಕೆಲಸ ವಾಸ: ನಾರಾಯಣಪಲ್ಲಿ ಗ್ರಾಮ, ಬಾಗೇಪಲ್ಲಿ ತಾಲ್ಲೂಕು ಎಂದು ತಿಳಿಸಿದ್ದು, ಸದರಿ ಸ್ಥಳದಲ್ಲಿದ್ದ ಮಧ್ಯದ ಪ್ಯಾಕೇಟ್ ಗಳನ್ನು  ಪರಿಶೀಲಿಸಲಾಗಿ 90 ಎಂ.ಎಲ್ ನ  HAYWARRDS PUNCH FINE WHISKY ಕಂಪನಿಯ 15 ಟೆಟ್ರಾ ಪ್ಯಾಕೇಟ್ ಗಳಿದ್ದು ಇವುಗಳು ಒಟ್ಟು 1350 ಎಂ.ಎಲ್ ಇದ್ದು ಪ್ರತಿ ಪ್ಯಾಕೇಟ್ ನ ಮೇಲೆ ಅದರ ಬೆಲೆ 35.13 ಎಂದು ನಮೂದಿಸಿದ್ದು ಇವುಗಳು ಒಟ್ಟು 526.95 ರೂಗಳಾಗಿರುತ್ತೆ ಹಾಗೂ ಮಧ್ಯಫಾನ ಮಾಡಿರುವ ನಿಶಾನೆಗಳಿರುವ 2 ಪ್ಲಾಸ್ಟಿಕ್ ಗ್ಲಾಸ್ ಗಳನ್ನು  ಮಧ್ಯಾಹ್ನ 14-30 ಗಂಟೆಯಿಂದ 15-30 ಗಂಟೆಯ ವರೆಗೆ ದಾಳಿ ಪಂಚನಾಮೆಯ ಮೂಲಕ ಅಮಾನತ್ತು ಪಡಿಸಿಕೊಂಡು ನಂತರ ಆಸಾಮಿಯೊಂದಿಗೆ ಠಾಣೆಗೆ ಹಾಜರಾಗಿ ಮುಂದಿನ ಕ್ರಮಕ್ಕಾಗಿ ಠಾಣೆಯಲ್ಲಿ ವರದಿಯನ್ನು ಪಡೆದು ಠಾಣಾ ಎನ್.ಸಿ.ಆರ್:38/2020 ರೀತ್ಯ ಪ್ರಕರಣ ದಾಖಲಿಸಿ ಸದರಿ ಆಸಾಮಿಯ ಮೇಲೆ ಪ್ರಕರಣವನ್ನು ದಾಖಲಿಸಲು ಘನ ನ್ಯಾಯಾಲಯ ಅನುಮತಿಯನ್ನು ನೀಡಲು ಕೋರಿ ಮನವಿಯನ್ನು ಸಲ್ಲಿಸಿಕೊಂಡಿದ್ದು ಈ ದಿನ ಘನ ನ್ಯಾಯಾಲಯ ಅನುಮತಿಯನ್ನು ನೀಡಿದ್ದರ ಮೇರೆಗೆ ಠಾಣಾ ಮೊ.ಸಂಖ್ಯೆ:33/2020 ಕಲಂ:15(A),32(3) K,E ACT  ರೀತ್ಯಾ ಪ್ರಕರಣ ದಾಖಲಿಸಿರುತ್ತೆ.

 1. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.76/2020 ಕಲಂ. 15(A),32(3) ಕೆ.ಇ ಆಕ್ಟ್:-

          ದಿನಾಂಕ 20/06/2020 ರಂದು ಸಾಯಂಕಾಲ 04-15 ಗಂಟೆ ಸಮಯದಲ್ಲಿ ಪಿರ್ಯಾದಿದಾರರು ಠಾಣೆಗೆ ಹಾಜರಾಗಿ ನೀಡಿದ ವರದಿಯ ಸಾರಾಂಶವೇನೆಂದರೆ ಇದೇ ದಿನ ಸಾಯಾಂಕಾಲ 04-00 ಗಂಟೆಯಲ್ಲಿ ತಾನು ಠಾಣೆಯಲ್ಲಿದ್ದಾಗ ತನಗೆ ಬಂದ ಖಚಿತವಾದ ಮಾಹಿತಿ ಏನೆಂದರೆ, ತಿಪ್ಪೇನಹಳ್ಳಿ ಗ್ರಾಮದ ವಾಸಿ ರಮೇಶ ಬಿನ್ ಗೆಟ್ಟಪ್ಪ ರವರು ತನ್ನ ಮನೆಯ ಬಳಿ ಯಾವುದೇ ಪರವಾನಿಗೆ ಇಲ್ಲದೆ ಮಧ್ಯ ಸೇವನೆ ಮಾಡಲು ಅವಕಾಶಮಾಡಿಕೊಡುತ್ತಿರುವುದಾಗಿ ಬಂದ ಖಚಿತವಾದ ಮಾಹಿತಿಯ ಮೇರೆಗೆ ನೀಡಿದ ವರದಿಯನ್ನು ಪಡೆದುಕೊಂಡು ಪ್ರ,ವ,ವರದಿಯನ್ನು ದಾಖಲಿಸಿಕೊಂಡಿರುತ್ತೇನೆ.

 1. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.77/2020 ಕಲಂ. 87 ಕೆ.ಪಿ ಆಕ್ಟ್:-

          ದಿನಾಂಕ: 20.06.2020 ರಂದು ಮದ್ಯಾಹ್ನ 2-45 ಗಂಟೆ ಸಮಯದಲ್ಲಿ ಚಿಕ್ಕಬಳ್ಳಾಪುರ ತಾಲ್ಲೂಕು ಲಿಂಗಶೆಟ್ಟಿಪುರ ಗ್ರಾಮದ ಸರ್ಕಾರಿ ಶಾಲೆಯ ಕಾಂಪೌಂಡಿನೊಳಗೆ ಯಾರೋ ಹಣವನ್ನು ಪಣವಾಗಿಟ್ಟುಕೊಂಡು ಹುಣಸೇಬೀಜಗಳಿಂದ ಜೂಜಾಟವಾಡುತ್ತಿರುವುದಾಗಿ ಬಂದ ಬಾತ್ಮಿ ಮೇರೆಗೆ ನಾನು, ಸಿಬ್ಬಂದಿಯವರಾದ ಹೆಚ್.ಸಿ-38 ಸುರೇಶ್, ಪಿ.ಸಿ-264 ನರಸಿಂಹಮೂರ್ತಿ, ಪಿ.ಸಿ-231 ನವೀನ್ ಬಾಬು ಪಿಸಿ 189 ಲಕ್ಷ್ಮೀಪತಿ, ಪಿಸಿ 118 ಬಾಲಾಜಿ , ಪಿಸಿ 244 ಶಶಿಕುಮಾರ್ ರವರೊಂದಿಗೆ ಪೊಲೀಸ್ ಜೀಪು ಸಂಖ್ಯೆ ಕೆ.ಎ-40, ಜಿ-567 ರಲ್ಲಿ ಪಂಚಾಯ್ತಿದಾರರನ್ನು ಕರೆದುಕೊಂಡು ಲಿಂಗಶೆಟ್ಟಿಪುರ ಗ್ರಾಮದ ಸರ್ಕಾರಿ ಶಾಲೆಯ ಕಾಂಪೌಂಡಿನೊಳಗೆ ಹೋಗಿ ಮರೆಯಲ್ಲಿ ಜೀಪನ್ನು ನಿಲ್ಲಿಸಿ ಜೀಪಿನಿಂದ ಇಳಿದು ಪಂಚರು ಮತ್ತು ಸಿಬ್ಬಂದಿಯೊಂದಿಗೆ ನನಗೆ ಮಾಹಿತಿ ಬಂದ ಸ್ಥಳವಾದ ಸರ್ಕಾರಿ ಶಾಲೆಯ ಕಾಂಪೌಂಡಿನೊಳಗೆ ನಡೆದುಕೊಂಡು ಹೋಗಿ ಮರೆಯಲ್ಲಿ ನಿಂತು ನೋಡಲಾಗಿ 3-4 ಜನರು ಗುಂಪು ಸೇರಿದ್ದು, ಗುಂಪಿನಲ್ಲಿದ್ದವರು ಒಂಟಿ [ಬೆಸ ಸಂಖ್ಯೆ] ಬಿದ್ದರೆ 200/- ರೂ. ಜೋಡಿ  [ಸಮ ಸಂಖ್ಯೆ] ಬಿದ್ದರೆ 200/-ಗಳೆಂದು ಕೂಗುತ್ತಾ ಹಣವನ್ನು ಪಣವಾಗಿಟ್ಟು ಹುಣಸೇಬೀಜಗಳಿಂದ ಜೂಜಾಟ ವಾಡುತ್ತಿರುವುದನ್ನು ಖಚಿತ ಪಡಿಸಿಕೊಂಡು ನಾನು ಮತ್ತು ಸಿಬ್ಬಂದಿಯವರು ಅವರನ್ನು ಸುತ್ತುವರೆದು ಓಡಿ ಹೋಗದಂತೆ ಎಚ್ಚರಿಕೆ ನೀಡಿದರೂ ಸಹ ಒಬ್ಬ ಆಸಾಮಿ ಓಡಿ ಹೋಗಿದ್ದು, ಉಳಿದಜೂಜಾಟವಾಡುತ್ತಿದ್ದವರನ್ನು ಹಿಡಿದು ಕೊಂಡು ಸದರಿ ಆಸಾಮಿಗಳ ಹೆಸರು ವಿಳಾಸ ಕೇಳಲಾಗಿ 1] ಮಂಜುನಾಥ ಬಿನ್ ಅಶ್ವತ್ಥಪ್ಪ , 45 ವರ್ಷ ಭೋವಿ ಜನಾಂಗ, ಬಂಡೆ ಕೆಲಸ ಲಿಂಗಶೆಟ್ಟಿಪುರ ಗ್ರಾಮ  ಚಿಕ್ಕಬಳ್ಳಾಪುರ ತಾಲ್ಲೂಕು, 2] ವೆಂಕಟೇಶ ಬಿನ್ ಮುನಿವೆಂಕಟಪ್ಪ, 43 ವರ್ಷ ಬಲಿಜಿಗರು , ಬಂಡೆ ಕೆಲಸ ವಾಸ ಲಿಂಗಶೆಟ್ಟಿಪುರ ಗ್ರಾಮ, ಚಿಕ್ಕಬಳ್ಳಾಪುರ ತಾಲ್ಲೂಕು, 3] ವೆಂಕಟಾಚಲಪತಿ ಬಿನ್ ವೆಂಕಟಲಕ್ಷ್ಮಮ್ಮ 26 ವರ್ಷ, ಬಲಿಜಿಗರು  ಜಿರಾಯ್ತಿ ಲಿಂಗಶೆಟ್ಟಿಪುರ ಗ್ರಾಮ, ಚಿಕ್ಕಬಳ್ಳಾಪುರ ತಾಲ್ಲೂಕು ಎಂತ ತಿಳಿಸಿದ್ದು, ಓಡಿ ಹೋದವನ ಹೆಸರು ವಿಳಾಸ ಕೇಳಲಾಗಿ 4] ನಾರಾಯಣಸ್ವಾಮಿ ಬಿನ್ ಮುನಿವೆಂಕಟಪ್ಪ , 45 ವರ್ಷ ಬಲಿಜಿಗರು, ಜಿರಾಯ್ತಿ ಲಿಂಗಶೆಟ್ಟಿಪುರ ಗ್ರಾಮ ಚಿಕ್ಕಬಳ್ಳಾಪುರ ತಾಲ್ಲೂಕು , ಎಂದು ತಿಳಿಸಿದರು. ಜೂಜಾಟವಾಡುತ್ತಿದ್ದ ಸ್ಥಳದಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ 4 ಹುಣಸೇಬೀಜಗಳನ್ನು ಮತ್ತು ಜೂಜಾಟಕ್ಕೆ ಪಣವಾಗಿಟ್ಟಿದ್ದ ನಗದು ಹಣವಿದ್ದು, ಎಣಿಸಲಾಗಿ 1800/-ರೂ. ನಗದು ಹಣವಿದ್ದು, ಮೇಲ್ಕಂಡ 3 ಜನ ಆಸಾಮಿಗಳು, 4 ಹುಣಸೇಬೀಜಗಳು, ಮತ್ತು ಪಂದ್ಯಕ್ಕೆ ಪಣವಾಗಿಟ್ಟಿದ್ದ 1800/-ರೂ. ನಗದು ಹಣವನ್ನು ಮದ್ಯಾಹ್ನ 3-00 ಗಂಟೆಯಿಂದ ಸಾಯಂಕಾಲ 3-45 ಗಂಟೆಯವರೆಗೆ ವಿವರವಾದ ಪಂಚನಾಮೆ ಕೈಗೊಂಡು ವಶಕ್ಕೆ ಪಡೆದುಕೊಂಡಿರುತ್ತೆ.  ಮೇಲ್ಕಂಡ ಆರೋಪಿಗಳ ವಿರುದ್ಧ ಕಲಂ:87 ಐಪಿಸಿ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಳ್ಳಲು ಸೂಚಿಸಿದ್ದನ್ನು ಪಡೆದುಕೊಂಡು ಠಾಣಾ ಎನ್ ಸಿ ಆರ್ ನಂ 119/2020 ರಂತೆ ದಾಖಲಿಸಿ ಘನ ನ್ಯಾಯಾಲಯದ ಅನುಮತಿಯನ್ನು ಪಡೆದುಕೊಂಡು ಕಲಂ 87 ಕೆ ಪಿ ಆಕ್ಟ್ ರೀತ್ಯಾ ಪ್ರಕರಣ ದಾಖಲಿಸಿಕೊಂಡಿರುತ್ತೇನೆ.

 1. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.78/2020 ಕಲಂ. 15(A),32(3) ಕೆ.ಇ ಆಕ್ಟ್:-

          ದಿನಾಂಕ 20/06/2020 ರಂದು ಸಂಜೆ 18.40 ಗಂಟೆಗೆ ಪಿ ಎಸ್ ಐ ಸಾಹೇಬರು ನೀಡಿದ ವರದಿಯ ಸಾರಾಂಶವೇನೆಂದರೆ ದಿನಾಂಕ 20/06/2020 ರಂದು ಸಂಜೆ 18.30 ಗಂಟೆಯಲ್ಲಿ ನಾನು ಠಾಣೆಯಲ್ಲಿದ್ದಾಗ ನನಗೆ ಬಂದ ಖಚಿತ ಮಾಹಿತಿಯಂತೆ ಚಿಕ್ಕಬಳ್ಳಾಪುರ ಗ್ರಾಮಾಂತರ ಠಾಣಾ ಸರಹದ್ದಿನ ಗುಂಡ್ಲಗುರ್ಕಿ ಗ್ರಾಮದ ಕೃಷ್ಣಪ್ಪ ಬಿನ್ ಕುವಪ್ಪ, 38 ವರ್ಷ, ವಕ್ಕಲಿಗರು, ಗುಂಡ್ಲಗುರಕಿ ಗ್ರಾಮ, ಚಿಕ್ಕಬಳ್ಳಾಪುರ ತಾಲ್ಲೂಕು ರವರು ಅವರ ಚಿಲ್ಲರೆ ಅಂಗಡಿ ವ್ಯಾಪಾರ ಬಳಿ ಯಾವುದೇ ಪರವಾನಗಿ ಇಲ್ಲದೆ ಮಧ್ಯಪಾನ ಸೇವನೆ ಮಾಡಲು ಅವಕಾಶ ಮಾಡಿ ಕೊಡುತ್ತಿರುವುದಾಗಿ ನನಗೆ ಖಚಿತ ಮಾಹಿತಿ ಬಂದಿದ್ದು ಈ ಬಗ್ಗೆ ಮೇಲ್ಕಂಡ ಆಸಾಮಿಯ ವಿರುದ್ದ ಕಲಂ 15(ಎ), 32(3) ಕೆ ಇ ಆಕ್ಟ್ ರೀತ್ಯ ಪ್ರಕರಣ ದಾಖಲಿಸಲು ಸೂಚಿಸಿದ ಮೇರೆಗೆ ಈ ಪ್ರ ವ ವರದಿ.

 1. ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.151/2020 ಕಲಂ. 32,34 ಕೆ.ಇ ಆಕ್ಟ್:-

          ದಿನಾಂಕ 20/06/2020 ರಂದು ಸಂಜೆ 16-15 ಗಮಟೆಗೆ ಪಿರ್ಯಾಧಿದಾರರಾದ ಪಿ.ಎಸ್.ಐ ಮೋಹನ್ ಎನ್ , ಸಾಹೇಬರು ಮಾಲು, ಪಂಚನಾಮೆ ಮತ್ತು ಆರೋಪಿಯನ್ನು ಹಾಜರು ಪಡಿಸಿ  ನೀಡಿದ ದೂರಿನ ಸಾರಾಂಶವೇನೆಂದರೆ- ಈ ದಿನ  ಮಧ್ಯಾಹ್ನ 02-00 ಗಂಟೆಯಲ್ಲಿ ನಾನು ಮತ್ತು  ಪಿ.ಸಿ. 281 ಗುರುಸ್ವಾಮಿ , ಪಿ.ಸಿ. 438 ನರಸಿಂಹ ಮೂರ್ತಿ ಮತ್ತು  ಚಾಲಕ  ಎ.ಹೆಚ್.ಸಿ.32 ಗಂಗುಲಪ್ಪ ರವರೊಂದಿಗೆ ವಿದುರಾಶ್ವಥ ಹೊರಠಾಣೇ ವ್ಯಾಪ್ತಿಯಲ್ಲಿ ಗಸ್ತಿನಲ್ಲಿದ್ದಾಗ ಗೌರಿಬಿದನೂರು ತಾಲ್ಲೂಕು ಕಸಬಾ ಹೋಬಳಿ ರಾಮಚಂದ್ರಪುರ  ಗ್ರಾಮಕ್ಕೆ  ಯಾರೋ ಆಸಾಮಿಯು ಅಕ್ರಮವಾಗಿ ಯಾವುದೆ ಪರವಾನಿಗಿಯಿಲ್ಲದೇ ಮದ್ಯವನ್ನು  ಮಾರಾಟವನ್ನು ಮಾಡಲು ಸಾಗಾಣಿಕೆಯನ್ನು ಮಾಡುತ್ತಿದ್ದಾರೆಂದು ಬಂದ ಮಾಹಿತಿ ಮೇರೆಗೆ  ನಾನು ಮತ್ತು  ಸಿಬ್ಬಂದಿಯವರಾದ ಪಿ.ಸಿ. 281 ಗುರುಸ್ವಾಮಿ, ಪಿ.ಸಿ. 438 ನರಸಿಂಹ ಮೂರ್ತಿ  , ಚಾಲಕ  ಎ.ಹೆಚ್.ಸಿ.32 ಗಂಗುಲಪ್ಪ ಹಾಗೂ ಪಂಚರೊಂದಿಗೆ ಸರ್ಕಾರಿ ಜೀಪ್ ಸಂಖ್ಯೆ: ಕೆ.ಎ-40, ಜಿ-281 ರಲ್ಲಿ ವಿದುರಾಶ್ವಥದಿಂದ ರಾಮಚಂದ್ರಪುರ ಗ್ರಾಮದ ಕಡೆಗೆ  ಹೋಗುತ್ತಿದ್ದಾಗ  ಆಸಾಮಿಯು ಚಿಕ್ಕಕುರುಗೋಡು ಗ್ರಾಮದಲ್ಲಿ  ಕೈಯಲ್ಲಿ ಪ್ಲಾಸ್ಟೀಕ್ ಚೀಲವನ್ನು ತೆಗೆದುಕೊಂಡು ನಡೆದುಕೊಂಡು ಹೋಗುತ್ತಿದ್ದು ಹೋಗುತ್ತಿದ್ದು  ಪೊಲೀಸ್ ವಾಹನ ಮತ್ತು ಪೊಲೀಸರನ್ನು ಕಂಡು  ರಸ್ತೆಯ ಪಕ್ಕದಲ್ಲಿ ಚೀಲವನ್ನು ಬಿಟ್ಟು ಅಲ್ಲಿಂದ ೋಡಿ ಹೋಗಲು ಪ್ರಯತ್ನಿಸಿದವನನ್ನು   ಸಿಬ್ಬಂದಿಯವರು  ಬೆನ್ನಟ್ಟಿ ಹಿಡಿದುಕೊಂಡಿದ್ದು   ನಂತರ  ಆಸಾಮಿಯ  ಹೆಸರು ವಿಳಾಸ ಕೇಳಲಾಗಿ  ಬಾಲಪ್ಪ ಬಿನ್ ಲೇಟ್ ಆಂಜಿನಲಪ್ಪ. 48 ವರ್ಷ,  ಆದಿಕರ್ನಾಟಕ, ವ್ಯಾಪಾರ, ವಾಸ  ರಾಮಚಂದ್ರಪುರ ಗ್ರಾಮ, ಗೌರಿಬಿದನೂರು ತಾಲ್ಲೂಕು ಎಂದು ತಿಳಿಸಿದನು. ಆತನ ಕೈಯಲ್ಲಿದ್ದ ಪ್ಲಾಸ್ಟೀಕ್ ಚೀಲವನ್ನು   ಪಂಚರ ಸಮಕ್ಷಮದಲ್ಲಿ  ಪರಿಶೀಲಿಸಲಾಗಿ,  ಅದರಲ್ಲಿ   90 ಎಂ.ಎಲ್ ಸಾಮರ್ಥ್ಯದ HAY WARDS CHEERS  WHISKY ಯ 96 ಟೆಟ್ರಾ ಪಾಕೆಟ್ ಗಳು ಇದ್ದು, ಇವುಗಳ ಒಟ್ಟು ಸಾಮರ್ಥ್ಯ 8.ಲೀಟರ್ 640  ಎಂ.ಎಲ್. ಆಗಿರುತ್ತೆ. ಇವುಗಳ ಒಟ್ಟು ಬೆಲೆ 3182/- ರೂ.ಗಳಾಗಿರುತ್ತೆ.  ಸದರಿ ಆಸಾಮಿಯು ಯಾವುದೇ ದಾಖಲೆಯನ್ನು ಹೊಂದಿಲ್ಲದೇ ಅಕ್ರಮವಾಗಿ   ಮದ್ಯವನ್ನು ಕಾಳ ಸಂತೆಯಲ್ಲಿ ಮಾರಾಟವನ್ನು ಮಾಡಲು  ಸಾಗಾಣಿಕೆಯನ್ನು ಮಾಡುತ್ತಿರುತ್ತಾನೆ.  ನಂತರ   ಸ್ಥಳದಲ್ಲಿ  ಮಧ್ಯಾಹ್ನ 02-30 ಗಂಟೆಯಿಂದ 03-30  ಗಂಟೆಯವರೆಗೆ ಪಂಚರ ಸಮಕ್ಷಮದಲ್ಲಿ ಪಂಚನಾಮೆ ಕ್ರಮ ಜರುಗಿಸಿ,  ಸ್ಥಳದಲ್ಲಿ ದೊರೆತ  1) HAY WARDS CHEERS  WHISKY ಯ 86  ಟೆಟ್ರಾ ಪಾಕೆಟ್ ಗಳು, 2) ಒಂದು ಪ್ಲಾಸ್ಟಿಕ್ ಚೀಲ,3) 10  ಟೆಟ್ರಾ ಪಾಕೆಟ್ ಗಳನ್ನು  ಸ್ಯಾಂಪಲ್ ಗಾಗಿ  ತೆಗೆದು  ಬಿಳಿ ಬಟ್ಟೆಯಿಂದ  ಸುತ್ತಿ ಅರಗಿನಿಂದ  ಕೆ. ಎಂಬ ಅಕ್ಷರಗಳಿಂದ ಸೀಲು ಮಾಡಿ ವಶಪಡಿಸಿಕೊಂಡು, ಠಾಣೆಗೆ 04-15  ಗಂಟೆಗೆ  ವಾಪಸ್ಸು ಬಂದಿದ್ದು,  ಪಂಚನಾಮೆ ಮತ್ತು  ಮಾಲನ್ನು ಸಹ ನೀಡುತ್ತಿದ್ದು, ಆರೋಪಿಯ ವಿರುದ್ಧ  ಕಲಂ: 32, 34  ಕೆ.ಇ.ಆಕ್ಟ್ – 1965 ರೀತ್ಯಾ ಪ್ರಕರಣವನ್ನು ದಾಖಲು ಮಾಡಲು ಸೂಚಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಿಸಿರುತ್ತೆ.

 1. ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.152/2020 ಕಲಂ. 32,34,36 (1) (B) ಕೆ.ಇ ಆಕ್ಟ್:-

          ದಿನಾಂಕ 20.6.2020 ರಂದು  ರಾತ್ರಿ 8-15 ಗಂಟೆಗೆ ಚಿಕ್ಕಬಳ್ಳಾಪುರ ಜಿಲ್ಲೆಯ ಡಿಸಿಬಿ-ಸಿಇಎನ್ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ರಾಜಣ್ಣ.ಎನ್  ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ತಾನು  ಮತ್ತು ಸಿಬ್ಬಂದಿಯೊಂದಿಗೆ ಸರ್ಕಾರಿ  ಜೀಪ್ ಸಂಖ್ಯೆ ಕೆಎ-40 ಜಿ-270 ರಲ್ಲಿ  ಗೌರಿಬಿದನೂರು ತಾಲ್ಲೂಕಿನಲ್ಲಿ ಕಾನೂನು ಬಾಹಿರ ಚಟುವಟಿಕೆಗಳ ಬಗ್ಗೆ ಮಾಹಿತಿ ಸಂಗ್ರಹಣೆಗಾಗಿ ಸಂಜೆ 6-00 ಗಂಟೆಯ ಸಮಯದಲ್ಲಿ ಕುಡುಮಲಕುಂಟೆ ಕೈಗಾರಿಕಾ ಪ್ರದೇಶದಲ್ಲಿ ಗಸ್ತಿನಲ್ಲಿದ್ದಾಗ ಭಾತ್ಮಿದಾರರಿಂದ ಇದೇ ಕುಡುಮಲಕುಂಟೆ ಗ್ರಾಮದ ವಾಸಿ ನರಸಮ್ಮ ಕೋಂ ಲೇಟ್ ನಂಜುಂಡಪ್ಪ ರವರ ಮನೆಯಲ್ಲಿ ಪ್ರೇಮ್ರಾಜ್ ಎಂಬುವವರು ಕಾನೂನು ಬಾಹಿರವಾಗಿ ಮದ್ಯವನ್ನು ಮನೆಯಲ್ಲಿಟ್ಟುಕೊಂಡು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿರುತ್ತಾರೆಂತ ಬಂದ ಖಚಿತ ಮಾಹಿತಿ ಮೇರೆಗೆ ಕುಡಮಲಕುಂಟೆ ಗ್ರಾಮಕ್ಕೆ ಹೋಗಿ ಪಂಚರನ್ನು ಬರಮಾಡಿಕೊಂಡು ಪಂಚರಿಗೆ ಮಾಹಿತಿ ತಿಳಿಸಿ ನಂತರ ಮಾಹಿತಿ ಬಂದ ಸ್ಥಳಕ್ಕೆ ಪಂಚರೊಂದಿಗೆ ಸಂಜೆ 6-15 ಗಂಟೆಗೆ ಹೋಗಿ ಸದರಿ ನರಸಮ್ಮ ಕೋಂ ಲೇಟ್ ನಂಜುಂಡಪ್ಪ ರವರ ಮನೆಯ ಬಳಿ ಹೋದಾಗ ಗ್ರಾಹಕರಂತೆ ಕಂಡು ಬರುವ ಇಬ್ಬರು ಆಸಾಮಿಗಳನ್ನು ಸಮವಸ್ತ್ರದಲ್ಲಿದ್ದ ತಮ್ಮಗಳನ್ನು ನೋಡಿ ಓಡಿ ಹೋದರು. ನಂತರ ಪಂಚರೊಂದಿಗೆ ಮನೆಯೊಳಗೆ ಪ್ರವೇಶ ಮಾಡಿ ನೋಡಲಾಗಿ ಮನೆಯಲ್ಲಿ ಒಬ್ಬ ಯುವಕನಿದ್ದು ಮನೆಯ ನೈರುತ್ಯದ ಕಡೆ ರೂಂ ನಲ್ಲಿ ಒಂದು ಪ್ಲಾಸ್ಟಿಕ್ ಚೀಲದಲ್ಲಿ ಪರಿಶೀಲಿಸಲಾಗಿ 1] 90 ಎಂ.ಎಲ್ ನ ಹೈವಾರ್ಡ್ಸ್ ಕಂಪನಿಯ ಮದ್ಯ ತುಂಬಿದ 190 ಟೆಟ್ರಾಪಾಕೆಟ್ ಗಳಿದ್ದು 2] 180 ಎಂ.ಎಲ್.ನ ಓಲ್ಡ್ ತಾವರಿನ್ ಕಂಪನಿಯ 46 ಟೆಟ್ರಾ ಪಾಕೆಟ್ ಗಳಿರುತ್ತವೆ. ಅಲ್ಲೇ ಇದ್ದ ಆಸಾಮಿಯ ಹೆಸರು ಮತ್ತು ವಿಳಾಸ ಕೇಳಲಾಗಿ ಪ್ರೇಮರಾಜ್ ಬಿನ್ ರಾಮಾಂಜಿನಪ್ಪ ಲೇಟ್, 20ವರ್ಷ, ಪ.ಜಾತಿ, ಕೂಲಿಕೆಲಸ, ವಾಸ ಕುಡುಮಲಕುಂಟೆ ಗ್ರಾಮ, ಗೌರಿಬಿದನೂರು ತಾಲ್ಲೂಕು ಎಂತ ತಿಳಿಸಿದನು. ನಂತರ ಆತನನ್ನು ವಿಸ್ಕಿ ಪಾಕೆಟ್ ಗಳನ್ನು ಅಕ್ರಮವಾಗಿ ದಾಸ್ತಾನು ಮಾಡಿ ಮಾರಾಟ ಮಾಡಲು ಯಾವುದಾದರೂ ಪರವಾನಗಿ ಇತರೆ ವಗೈರೆ ಇದೆಯೇ ಎಂದು ಕೇಳಲಾಗಿ ಯಾವುದೇ ಪರವಾನಗಿ ಇಲ್ಲವೆಂತ ತಿಳಿಸಿರುತ್ತಾನೆ. ನಂತರ ಇಷ್ಟು ಹೆಚ್ಚಿನ ಪ್ರಮಾಣದ ವಿಸ್ಕಿ ಪಾಕೆಟ್ ಗಳನ್ನು ಎಲ್ಲಿಂದ ತೆಗೆದುಕೊಂಡು ಬಂದಿದ್ದು ಎಂದು ಕೇಳಲಾಗಿ ಆತನು ವಿಧುರಾಶ್ವತ್ಥದಲ್ಲಿರುವ ಶ್ರೀದೇವಿ ಬಾರ್ ಅಂಡ್ ರೆಸ್ಟೋರೆಂಟ್ ನಿಂದ ಕ್ಯಾಷಿಯರ್ ಗಂಗಾಧರ ಬಿನ್ ಗಂಗಪ್ಪ, 38 ವರ್ಷ, ಪ.ಜಾತಿ, ಹೆಚ್. ನಾಗಸಂದ್ರ ರವರಿಂದ ಪ್ರತಿ ದಿನ ತಂದು ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿರುವುದಾಗಿ ತಿಳಿಸಿರುತ್ತಾನೆ. ನಂತರ ಪಂಚರ ಸಮಕ್ಷಮ ಪಂಚನಾಮೆ ಜರುಗಿಸಿ ಮಾಲು ಮತ್ತು ಆರೋಪಿಯೊಂದಿಗೆ ಠಾಣೆಗೆ ಬಂದಿರುತ್ತೇನೆ. ಅಕ್ರಮವಾಗಿ ವಿಸ್ಕಿ ಮದ್ಯದ ಪಾಕೆಟ್ ಗಳನ್ನು ದಾಸ್ತಾನು ಮಾಡಿ ಮಾರಾಟ ಮಾಡುತ್ತಿದ್ದ ಪ್ರೇಮರಾಜ್ ಮತ್ತು ಶ್ರೀದೇವಿ ಬಾರ್ ಅಂಡ್ ರೆಸ್ಟೋರೆಂಟ್ ಕ್ಯಾಷಿಯರ್ ಗಂಗಾಧರ ಈತನು ಪರವಾನಗಿ ನಿಯಮಗಳನ್ನು ಉಲ್ಲಂಘಿಸಿ ಅಳತೆ ಪರಿಮಿತಿಯನ್ನು ಮೀರಿ ಅನಧೀಕೃತವಾಗಿ ಸಾಗಾಟ ಮಾಡಲು ಮತ್ತು ಅಕ್ರಮವಾಗಿ ದಾಸ್ತಾನು ಮಾಡಿ ಮಾರಾಟ ಮಾಡಲು ಮದ್ಯ ತುಂಬಿದ ವಿಸ್ಕಿಯ ಪಾಕೆಟ್ ಗಳನ್ನು ಮಾರಾಟ ಮಾಡಿ ಷರತ್ತುಗಳನ್ನು ಉಲ್ಲಂಘಿಸಿ ನೀಡಿರುತ್ತಾನೆ. ಆದ್ದರಿಂದ ಮೇಲ್ಕಂಡ ಇಬ್ಬರು ಆರೋಪಿಗಳ ಮೇಲೆ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಲು ಕೋರಿದೆ. ಇದರೊಂದಿಗೆ ಅಸಲು ಪಂಚನಾಮೆ. ಆರೋಪಿ ಪ್ರೇಮರಾಜ್ ಮತ್ತು ಮಾಲನ್ನು ಮುಂದಿನ ಕ್ರಮಕ್ಕಾಗಿ ಹಾಜರುಪಡಿಸಿರುತ್ತೆಂದು ದೂರು.

 1. ಗೌರಿಬಿದನೂರು ಪುರ ಪೊಲೀಸ್ ಠಾಣೆ ಮೊ.ಸಂ.78/2020 ಕಲಂ. 15(A),32(3) ಕೆ.ಇ ಆಕ್ಟ್:-

          ದಿನಾಂಕ 20/06/2020 ರಂದು DCB-CEN ಠಾಣೆಯ ಹೆಚ್.ಸಿ 71 ಸುಬ್ರಮಣಿ ರವರು ಮಾಲು ಮತ್ತು ಆರೋಪಿಯೊಮದಿಗೆ ಹಾಜರಾಗಿ ನೀಡಿದ ವರದಿಯ ಸಾರಾಂಶವೇನೆಂದರೆ, ಈ ದಿನ ಸಂಜೆ 06:00 ಗಂಟೆ ಸಮಯದಲ್ಲಿ ಗೌರಿಬಿದನೂರು ನಗರದಲ್ಲಿ ಗಸ್ತಿನಲ್ಲಿದ್ದಾಗ ಗುಂಟಾಪುರದ ಬಸ್ ನಿಲ್ದಾಣದಲ್ಲಿ ರಾಮಾಂಜಿನಪ್ಪ ಎಂಬುವರು ಅವರ ಚಿಲ್ಲರೆ ಅಂಗಡಿಯ ಮುಂಬಾದ ಸಾರ್ವಜನಿಕರಿಗೆ ಮದ್ಯಪಾನ ಸೇವನೆ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದಾಗಿ ಮಾಹಿತಿ ಬಂದಿದ್ದು ಪಂಚಾಯ್ತಿದಾರರನ್ನು ಕರೆದುಕೊಂಡು ಹೋಗಿ ದಾಳಿ ಮಾಡಿ ಸ್ಥಳದಲ್ಲಿದ್ದ 1) 90 ಎಂ.ಎಲ್ ನ 23 Haywards Cheers Whiskey Tetra Pockets, 2) 2 Empty 90 ML Haywards Tetra Pocket, 3) ಎರಡು ಪ್ಲಾಸ್ಟಿಕ್ ಗ್ಲಾಸ್ ಗಳು ಹಾಗೂ 4) ಒಂದು ಲೀಟರ್ ನ ಪ್ಲಾಸ್ಟಿಕ್ ವಾಟರ್ ಬಾಟಲ್ ನ್ನು ಪಂಚನಾಮೆಯ ಮೂಲಕ ಅಮಾನತ್ತುಪಡಿದಿದ್ದು ನಂತರ ಆರೋಪಿಯನ್ನು ವಶಕ್ಕೆ ಪಡೆದುಕೊಂಡು ಠಾಣೆಗೆ ಹಾಜರಾಗಿ ನೀಡಿದ ವರದಿಯ ಮೇರೆಗೆ ಪ್ರಕರಣ ದಾಖಲಾಗಿರುತ್ತೆ.

 1. ಕೆಂಚಾರ್ಲಹಳ್ಳಿ ಪೊಲೀಸ್ ಠಾಣೆ ಮೊ.ಸಂ.61/2020 ಕಲಂ. 143,147,148,323,504,506 ರೆ/ವಿ 149 ಐ.ಪಿ.ಸಿ:-

          ದಿನಾಂಕ 21-06-2020 ರಂದು ಪಿರ್ಯಾಧಿದಾರರಾದ ಶ್ರೀಮತಿ ತಾಜುನ್ನಾ ಕೋಂ ಲೇಟ್ ಹುಸೇನ್ ಸಾಭಿ, 40 ವರ್ಷ, ಮುಸ್ಲೀಂ ಜನಾಂಗ, ಗೃಹಿಣಿ, ವಾಸ ಪಾಪತಿಮ್ಮನಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ಮುದ್ರಿತ ದೂರಿನ ಸಾರಾಂಶವೇನೆಂದರೆ, ತಮ್ಮ ಗ್ರಾಮದ ವಾಸಿ ಹುಸೇನಮ್ಮ ಕೋಂ ಲೇಟ್ ಅಹಮದ್ ಜಾನ್ ರವರ ಕುಟುಂಬಕ್ಕೂ ಮತ್ತು ತಮಗೂ ಸುಮಾರು ವರ್ಷಗಳಿಂದ ರಾಜಕೀಯವಾಗಿ ಹಳೇಯ ವೈಷ್ಯಮ್ಯಗಳಿರುತ್ತದೆ. ಸದರಿ ಹುಸೇನಮ್ಮ ಮೊಮ್ಮಗಳಾದ ಪರವೀನ್  ಎಂಬಾಕೆಯನ್ನು ಚಿಂತಾಮಣಿ ನಗರದ ಟಿಪ್ಪುನಗರದ ವಾಸಿ ನವಾಜ್ ಅಲಿಯಾಸ್ ಅಬ್ಬಾಸ್ ಎಂಬುವವರಿಗೆ ಕೊಟ್ಟು ಮದುವೆ ಮಾಡಿರುತ್ತಾರೆ. ಈಗೀರುವಾಗ ದಿನಾಂಕ 15-06-2020 ರಂದು ರಾತ್ರಿ ಸುಮಾರು 08.00 ಗಂಟೆ ಸಮಯದಲ್ಲಿ ಚಿಂತಾಮಣಿ ನಗರದ ವಾಸಿ ನವಾಜ್ ಅಲಿಯಾಸ್ ಅಬ್ಬಾಸ್ , ಪಾಪತಿಮ್ಮನಹಳ್ಳಿ ಗ್ರಾಮದ ಖಾಮುಷ್ ವಲ್ಲಿ, ಹುಸೇನಮ್ಮ ಕೋಂ ಅಹಮದ್ ಜಾನ್, ಷರೀಪಾ ಕೋಂ ಖಾಮುಷ್ ವಲ್ಲಿ ಮತ್ತು ಪರವೀನ್ ಕೋಂ ನವಾಜ್ ಅಲಿಯಾಸ್ ಅಬ್ಬಾಸ್ ಚಿಂತಾಮಣಿ ನಗರ ರವರು ಅಕ್ರಮ ಕೂಟವನ್ನು ಕಟ್ಟಿಕೊಂಡು ಮಾರಕಾಯುಧಗಳಿಂದ ಗುಂಪು ಕಟ್ಟಿಕೊಂಡು ತಮ್ಮ ಮನೆ ಹತ್ತಿರ ಬಂದು ಉದ್ದೇಶ ಪೂರಕವಾಗಿ ರಾಜಕೀಯ ಕೈವಾಡದಿಂದ ಹಾಗೂ ಹಳೇಯ ವೈಷ್ಯಮ್ಯದಿಂದ ಸಾರ್ವಜನಿಕವಾಗಿ ಲೋಫರ್ ನನ್ನ ಮಕ್ಕಳೇ, ಸೂಳೆ ನನ್ನ ಮಕ್ಕಳೇ ಎಂದು ಅಶ್ಲೀಲಕರವಾಗಿ ಬೈದು ಆ ಪೈಕಿ ನವಾಜ್ ರವರು ತನ್ನ ಕೂದಲನ್ನು ಹಿಡಿದುಕೊಂಡು ಕೆಳಗೆ ಹಾಕಿ ಕೈಗಳಿಂದ ಹಲ್ಲೆ ಮಾಡಿದ್ದು, ಉಳಿದವರು ಕೈಗಳಿಂದ ಹೊಡೆದು ಕಾಲುಗಳಿಂದ ಒದ್ದರು. ನಂತರ ನಿನ್ನ ಮಗನಾದ ಬಾಬಾಜಾನ್ ಎಲ್ಲಿ ಅನನ್ನ ಮಗನನ್ನು ಸಾಯಿಸುವವರೆಗೂ ಬಿಡುವುದಿಲ್ಲ ಎಂದು ಪ್ರಾಣಬೆದರಿಕೆಯನ್ನು ಹಾಕಿದ್ದು, ಆಗ ತಾನು ಜೋರಾಗಿ ಕಿರುಚಿಕೊಂಡಾಗ ತಮ್ಮ ಗ್ರಾಮದ ವಾಸಿಗಳಾದ ಅಲ್ಲಾಭಕಾಷ್ ಬಿನ್ ಬುಡ್ಡುಸಾಭಿ, ಫಕೃದ್ಧೀನ್ ಸಾಭಿ ಬಿನ್ ಮದರ್ ಸಾಭಿ ಮತ್ತು ಇತರರು ಬಂದು ಅವರಿಂದ ತನ್ನನ್ನು ಬಿಡಿಸಿ ಉಪಚರಿಸಿದರು. ತನಗೆ ಮೂಗೇಟುಗಳಾಗಿದ್ದರಿಂದ ಆಸ್ವತ್ರೆಯಲ್ಲಿ ಚಿಕಿತ್ಸೆ ಪಡಿಸಿಕೊಂಡಿರುವುದಿಲ್ಲ. ನಂತರ ಗ್ರಾಮದ ಹಿರಿಯರು ಸದರಿ ಎರಡು ಕಡೆಯವರನ್ನು ಸೇರಿಸಿ ಖಾಜಿ ನ್ಯಾಯ ಪಂಚಾಯ್ತಿ ಮೂಲಕ ಬಗೆಹರಿಸುವುದಾಗಿ ತಿಳಿಸಿದ್ದು ಖಾಜಿ ನ್ಯಾಯ ಪಂಚಾಯ್ತಿಗೆ ಅವರು ಬರದಿದ್ದ ಕಾರಣ  ಈ ದಿನ ತಡವಾಗಿ ಠಾಣೆಗೆ ಹಾಜರಾಗಿ ದೂರನ್ನು ನೀಡುತ್ತಿದ್ದು ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ನೀಡಿದ ಮುದ್ರಿತ ದೂರಿನ ಸಾರಾಂಶವಾಗಿರುತ್ತೆ.

 1. ಪಾತಪಾಳ್ಯ ಪೊಲೀಸ್ ಠಾಣೆ ಮೊ.ಸಂ.40/2020 ಕಲಂ. 279,337,304(A) ಐ.ಪಿ.ಸಿ:-

          ದಿನಾಂಕ:20-06-2020 ರಂದು ಮದ್ಯಾಹ್ನ 3-30 ಗಂಟೆ ಸಮಯದಲ್ಲಿ ಪಿರ್ಯಾಧಿದಾರರಾದ ಚಿನ್ನವೆಂಕಟರಾಯಪ್ಪ ಬಿನ್ ಲೇಟ್ ಪೆದ್ದವೆಂಕಟರಾಯಪ್ಪ ,60 ವರ್ಷ, ಆದಿ ಕರ್ನಾಟಕ ಜನಾಂಗ, ಜಿರಾಯ್ತಿ  ದೇಶಂವಾರಿಪಲ್ಲಿ  ಗ್ರಾಮ  ಚಿಲಕಲನೇರ್ಪು ಹೋಬಳಿ ಚಿಂತಾಮಣಿ ತಾಲ್ಲೂಕು ರವರು  ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ  ನಮ್ಮ ಸಂಬಂದಿಯಾದ ಕೃಷ್ಣಪ್ಪ  ರವರ ಮಗಳಿಗೆ ಹುಡುಗನ್ನು ನೋಡಲು ಬೆಳಿಗ್ಗೆ 9-00 ಗಂಟೆಗೆ ನಮ್ಮ ಗ್ರಾಮವನ್ನು ಬಿಟ್ಟು ಮಿಟ್ಟೇಮರಿ ಬಳಿ ಇರುವ ಚೊಕ್ಕಂಪಲ್ಲಿ ಗ್ರಾಮಕ್ಕೆ ನಾನು ಮತ್ತು ನಮ್ಮ ಸಂಬಂದಿಕರು ಆಟೋದಲ್ಲಿ ನನ್ನ ತಮ್ಮ ನರಸಿಂಹಪ್ಪ ಮತ್ತು ಆತನ ಹೆಂಡತಿ  ಸರೋಜಮ್ಮ ರವರು ಅವರ ಬಾಬತ್ತು ಕೆ.ಎ-03  ಜೆಯು-9823  ಡೀಸ್ಕವರಿ ಬೈಕಿನಲ್ಲಿ  ಬಂದು  ಹುಡುಗನನ್ನು ನೋಡಿ  ಮದ್ಯಾಹ್ನ 1-00 ಗಂಟೆಗೆ ಚೊಕ್ಕಂಪಲ್ಲಿ ಬಿಟ್ಟು ಊರಿಗೆ ಹೋಗಲು ವಾಪಸ್ಸು  ಮಿಟ್ಟೇಮರಿ ಜೂಲ್ ಪಾಳ್ಯ  ಗ್ರಾಮದ ರಸ್ತೆಯ ಮದ್ಯದಲ್ಲಿ  ಬಂಡಂಕಿಂದಲ್ಲಿ  ಗ್ರಾಮದ  ಈಶ್ವರಪ್ಪ ರವರ ಜಮೀನಿನ ಬಳಿ ಇರುವ  ಮೋರಿಗರ ಮದ್ಯಾಹ್ನ ಸುಮಾರು 2-00 ಗಂಟೆ ಸಮಯದಲ್ಲಿ ನನ್ನ ತಮ್ಮ ನರಸಿಂಹಪ್ಪ ತನ್ನ ದ್ವಿಚಕ್ರ ವಾಹನವನ್ನು ಅತೀವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಹೋಗಿ  ಮೊರಿಗೆ  ಡಿಕ್ಕಿ ಹೋಡೆಯಿಸಿದ ಪರಿಣಾಮ  ನನ್ನ ತಮ್ಮ  ಮತ್ತು ಆತನ ಹೆಂಡತಿ ಸರೋಜಮ್ಮ  ರವರು  ದ್ವಿಚಕ್ರ ವಾಹನದಿಂದ  ಕೆಳಗೆ ಬಿದ್ದು  ನನ್ನ ತಮ್ಮನಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಸರೋಜಮ್ಮ  ರವರ  ತಲೆಯು  ಕಲ್ಲಿನ ಮೇಲೆ ಬಿದ್ದು ತಲೆಗೆ ಪೆಟ್ಟಾಗಿ  ರಕ್ತ ಗಾಯವಾಗಿ ಸ್ಥಳದಲ್ಲಿಯೆ ಮೃತ ಪಟ್ಟಿರುತ್ತಾಳೆ. ಹಿಂಬದಿಯಲ್ಲಿ ಬರುತ್ತಿದ್ದ ನಾನು 108 ಆಂಬುಲೇನ್ಸ್ ಗೆ ಕರೆ ಮಾಡಿ ನನ್ನ ತಮ್ಮ ನನ್ನು ಬಾಗೇಪಲ್ಲಿ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆ ಬಗ್ಗೆ ಕಳುಹಿಸಿಕೊಟ್ಟಿರುತ್ತೇನೆ ಮೃತಳಾದ ಸರೋಜಮ್ಮ ರವರನ್ನು  ಯಾವುದೂ  ಒಂದು ವಾಹನದಲ್ಲಿ   ಬಾಗೇಪಲ್ಲಿ ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಇಟ್ಟಿದ್ದು  ತಾವುಗಳು ಸ್ಥಳಕ್ಕೆ ಬಂದು  ಮುಂದಿನ ಕ್ರಮ ಜರುಗಿಸಲು ಕೋರಿ ಮನವಿ 0 ಠಾಣೆಯ ಮೊ.ಸಂ:40/2020 ಕಲಂ:279.337.304 (ಎ) ಐ.ಪಿ.ಸಿ ರೀತ್ಯಾ ಪ್ರಕರಣ ದಾಖಲಿಸಿಕೊಂಡಿರುತ್ತದೆ.

 1. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.164/2020 ಕಲಂ. 32,34 ಕೆ.ಇ ಆಕ್ಟ್:-

          ದಿನಾಂಕ 20/06/2020 ರಂದು 8.10 ಗಂಟೆಗೆ ಡಿಸಿಬಿ/ಸಿಇಎನ್ ಪೊಲೀಸ್ ಠಾಣೆಯ ಪಿ ಎಸ್ ಐ ಶ್ರೀಮತಿ ಸರಸ್ವತಮ್ಮ ರವರು ಆರೋಪಿ, ಮಾಲು ಮತ್ತು ಪಂಚನಾಮೆಯೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ವರದಿಯ ಸಾರಾಂಶವೇನೆಂದರೆ, ತಾನು ಮತ್ತು ತಮ್ಮ ಸಿಬ್ಬಂದಿಯವರಾದ ಎ.ಎಸ್.ಐ ಟಿ ನಾರಾಯಣರೆಡ್ಡಿ, ಹೆಚ್ ಸಿ-38 ಮಂಜುನಾಥ್ ಮತ್ತು ಹೆಚ್ ಸಿ 208 ಗಿರೀಶ್ ರವರುಗಳು ಪಿ.ಐ ಶ್ರೀ ಎನ್. ರಾಜಣ್ಣ ರವರ ಆದೇಶದ ಮೇರೆಗೆ ಈ ದಿನ ದಿನಾಂಕ:20/6/2020 ರಂದು ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಅಕ್ರಮ ಮತ್ತು ಕಾನೂನು ಬಾಹಿರ ಚಟುವಟಿಕೆಗಳ ಬಗ್ಗೆ ಮಾಹಿತಿ ಸಂಗ್ರಹಿಸಲು ಗಸ್ತು ಮಾಡುತ್ತಿದ್ದಾಗ ಶಿಡ್ಲಘಟ್ಟ ತಾಲ್ಲೂಕು ಆನೂರು ಕ್ರಾಸ್ ಬಳಿ ಸಂಜೆ ಸುಮಾರು 05-00 ಗಂಟೆಯ ಸಮಯದಲ್ಲಿ ಗಸ್ತಿನಲ್ಲಿ ಇದ್ದಾಗ ತಮಗೆ ಬಾತ್ಮಿದಾರರಿಂದ ಬಂದ ಖಚಿತ ಮಾಹಿತಿ ಏನೆಂದರೆ ತುಮ್ಮನಹಳ್ಳಿ ಗ್ರಾಮದಲ್ಲಿ ಪ್ರಭಾಕರ್ ಬಿನ್  ಕೃಷ್ಣಪ್ಪ,  ರವರ ಚಿಲ್ಲರೆ ಅಂಗಡಿಯಲ್ಲಿ ಅಕ್ರಮವಾಗಿ ಮದ್ಯವನ್ನು ಸಂಗ್ರಹಿಸಿ ಕಾನೂನು ಬಾಹಿರವಾಗಿ ಮತ್ತು ಅಕ್ರಮವಾಗಿ ಮಾರಾಟ ಮಾಡಲಾಗುತ್ತಿದೆ ಎಂಬ ಮಾಹಿತಿ ಆಧರಿಸಿ ತಾವು ಪಂಚರನ್ನು ಬರಮಾಡಿಕೊಂಡು ತುಮ್ಮನಹಳ್ಳಿ ಗ್ರಾಮಕ್ಕೆ ಹೋಗಿ ತಮ್ಮ ಸಿಬ್ಬಂದಿ ಪಂಚರೊಂದಿಗೆ ಅಂಗಡಿಯ ಮೇಲೆ ದಾಳಿಯನ್ನು ಮಾಡಿ ಅಂಗಡಿಯಲ್ಲಿ ಮಾರಾಟಕ್ಕೆ ಇಟ್ಟಿದ್ದ ಬೆಂಗಳೂರು ವಿಸ್ಕಿ 90 ಎಂ ಎಲ್ ನ 30-ಟೆಟ್ರಾ ಪಾಕೇಟ್ ಗಳು ಮತ್ತು ಹೈವಡ್ಸ್ ಚಿಯರ್ ವಿಸ್ಕಿಯ 90 ಎಂ.ಎಲ್ ನ 30 ಟೆಟ್ರಾ ಪಾಕೇಟ್ ಗಳನ್ನು ಪಂಚರ ಸಮಕ್ಷಮ ಪಂಚನಾಮೆಯ ಮೂಲಕ ಅಮಾನತ್ತು ಪಡಿಸಿಕೊಂಡು ಅವುಗಳ ಪೈಕಿ ಬೆಂಗಳೂರು ವಿಸ್ಕಿ 90 ಎಂ ಎಲ್ ನ 15-ಟೆಟ್ರಾ ಪಾಕೆಟ್ ಗಳು ಮತ್ತು ಹೈವಡ್ಸ್ ಚೀರ್ ವಿಸ್ಕಿಯ 90 ಎಂ.ಎಲ್ ನ 15 ಟೆಟ್ರಾ ಪಾಕೆಟ್ ಗಳನ್ನು ತಜ್ಞರ ಪರೀಕ್ಷೆಗೆ ಎಫ್.ಎಸ್.ಎಲ್ ಗೆ ಕಳುಹಿಸುವ ಸಲುವಾಗಿ ಪ್ರತಿ ಪಾಕೇಟ್ ಅನ್ನು ಪ್ರತ್ಯೇಕವಾಗಿ ಒಂದು ಬಿಳಿ ಚೀಲದಲ್ಲಿ ಹಾಕಿ ಎಫ್ ಎಂಬ ಆಂಗ್ಲ ಅಕ್ಷರದಿಂದ ಅರಗಿನ ಸಹಾಯದಿಂದ ಪಂಚರ ಸಮಕ್ಷಮ ಸೀಲು ಮಾಡಿರುತ್ತೆ.  ಸ್ಥಳದಲ್ಲಿ ಇದ್ದ ಅಂಗಡಿಯ ಮಾಲೀಕನ ಹೆಸರು ಮತ್ತು ವಿಳಾಸವನ್ನು ಕೇಳಲಾಗಿ ಪ್ರಭಾಕರ್ ಬಿನ್ ಕೃಷ್ಣಪ್ಪ, 40 ವರ್ಷ, ಬಲಜಿಗರು. ಚಿಲ್ಲರೆ ಅಂಗಡಿ ವ್ಯಾಪಾರ, ವಾಸ ತುಮ್ಮನಹಳ್ಳಿ ಗ್ರಾಮ ಎಂತ ಹೇಳಿದ್ದು ಸದರಿ ಆರೋಪಿಯನ್ನು ವಶಕ್ಕೆ ಪಡೆದಿರುತ್ತೆ. ವಶಪಡಿಸಿಕೊಂಡಿರುವ ಒಟ್ಟು ಮದ್ಯವು 5 ಲೀಟರ್ 400 ಎಂ.ಎಲ್ ಸಾಮರ್ಥ್ಯ ಇದ್ದು ಇದರ ಒಟ್ಟು ಬೆಲೆ 1804-00 ರೂಗಳಾಗಿರುತ್ತದೆ. ಸದರಿ ಆರೋಪಿ ಮತ್ತು ಮಾಲನ್ನು ನಿಮ್ಮ ವಶಕ್ಕೆ ನೀಡುತ್ತಿದ್ದು ಮುಂದಿನ ಕಾನೂನು ಕ್ರಮ ಜರಗಿಸಲು ಕೊಟ್ಟ ದೂರು.

 1. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.165/2020 ಕಲಂ. 279,337,304(A) ಐ.ಪಿ.ಸಿ:-

          ದಿನಾಂಕ:21.06.2020 ರಂದು ಬೆಳಿಗ್ಗೆ 10.30 ಗಂಟೆಗೆ ಪರ್ಯಾದಿದಾರರಾದ ಸುಬ್ರಮಣಿ ಬಿನ್ ಮುನಿತಿಮ್ಮಪ್ಪ, 40 ವರ್ಷ, ಪ.ಜಾತಿ, ಜಿರಾಯ್ತಿ, ನಾಗಮಂಗಲ ಗ್ರಾಮ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆನೆಂದರೆ, ತನ್ನ ದೊಡ್ಡಮ್ಮಳ ಮಗನಾದ ರಾಮಕೃಷ್ಣಪ್ಪ ಬಿನ್ ಚಿಕ್ಕ ಗಲ್ಲಪ್ಪ (45 ವರ್ಷ) ರವರು ಕೋಲಾರ ತಾಲ್ಲೂಕು ಕ್ಯಾಲನೂರು ಹೋಬಳಿಯ ಚನ್ನಸಂದ್ರ ಗ್ರಾಮದಲ್ಲಿ ವಾಸವಾಗಿದ್ದು, ರಾಮಕೃಷ್ಣಪ್ಪ ರವರಿಗೆ ಈಗ್ಗೆ ಸುಮಾರು 20 ವರ್ಷಗಳ ಹಿಂದೆ ತಮ್ಮ ಗ್ರಾಮದ ವಾಸಿ ರಾಧಮ್ಮ (38 ವರ್ಷ) ರವರೊಂದಿಗೆ ಮದುವೆಯಾಗಿದ್ದು, ಇವರು ಚನ್ನಸಂದ್ರ ಗ್ರಾಮದಲ್ಲಿಯೇ ತಮ್ಮ ಸಂಸಾರದ ಸಮೇತವಾಗಿ ವಾಸವಾಗಿದ್ದು, ಈ ದಿನ ದಿನಾಂಕ 21/06/2020 ರಂದು ಬೆಳಿಗ್ಗೆ ರಾಮಕೃಷ್ಣಪ್ಪ ರವರು ತನ್ನ ಹೆಂಡತಿಯಾದ ರಾಧಮ್ಮ ರವರನ್ನು ತನ್ನ ತವರು ಮನೆಯಾದ ಶಿಡ್ಲಘಟ್ಟ ತಾಲ್ಲೂಕು ನಾಗಮಂಗಲ ಗ್ರಾಮಕ್ಕೆ ಕರೆದುಕೊಂಡು ಬರಲು ತಮ್ಮ ಬಾಬತ್ತು ಕೆಎ-07-ಕ್ಯೂ-2925 ನೊಂದಣಿ ಸಂಖ್ಯೆಯ ಹಿರೋ ಹೊಂಡಾ ಸ್ಪೆಂಡರ್ ಪ್ಲಸ್ ದ್ವಿ ಚಕ್ರ ವಾಹನದ ಹಿಂಬದಿಯಲ್ಲಿ ರಾಧಮ್ಮ ರವರನ್ನು ಕೂರಿಸಿಕೊಂಡು ರಾಮಕೃಷ್ಣಪ್ಪ ರವರೇ ದ್ವಿ ಚಕ್ರ ವಾಹನವನ್ನು ಚಾಲನೆ ಮಾಡಿಕೊಂಡು ಬಂದಿದ್ದು, ಇದೇ ದಿನ ಬೆಳಿಗ್ಗೆ ಸುಮಾರು 7-30 ಗಂಟೆ ಸಮಯದಲ್ಲಿ ಗಂಭೀರನಹಳ್ಳಿ ಗ್ರಾಮದ ಗೇಟ್ ಸಮೀಪ ರಾಮಕೃಷ್ಣಪ್ಪ ರವರು ತಮ್ಮ ದ್ವಿ ಚಕ್ರ ವಾಹನವನ್ನು ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬರುತ್ತಿದ್ದಾಗ ದ್ವಿ ಚಕ್ರ ವಾಹನವು ನಿಯಂತ್ರಣ ತಪ್ಪಿ ಇಬ್ಬರು ದ್ವಿ ಚಕ್ರ ವಾಹನದ ಸಮೇತವಾಗಿ ಬಿದ್ದು ಹೋದ ಪರಿಣಾಮ ರಾಮಕೃಷ್ಣಪ್ಪ ರವರ ಕೈ-ಕಾಲುಗಳಿಗೆ ತರಚಿದ ಗಾಯಗಳಾಗಿದ್ದು, ರಾಧಮ್ಮ ರವರ ತಲೆಗೆ ರಕ್ತಗಾಯವಾಗಿ, ಕೈ ಕಾಲುಗಳಿಗೆ ತರಚಿದ ಗಾಯಗಳಾಗಿರುತ್ತವೆ. ಆ ಸಮಯದಲ್ಲಿ ರಸ್ತೆಯಲ್ಲಿ ಬರುತ್ತಿದ್ದ ಸಾರ್ವಜನಿಕರು ಗಾಯಾಳುಗಳನ್ನು ಉಪಚರಿಸಿ ಆಂಬುಲನ್ಸ್ ನಲ್ಲಿ ಹೊಸಕೋಟೆಯ ಎಂ.ವಿ.ಜೆ ಆಸ್ಪತ್ರೆಗೆ ಚಿಕಿತ್ಸೆಗೆ ಕಳುಹಿಸಿಕೊಟ್ಟಿರುವುದಾಗಿ ವಿಷಯ ತಿಳಿದು ತಾವು ಅಲ್ಲಿಗೆ ಹೋಗಿ ನೋಡಲಾಗಿ ವಿಷಯ ನಿಜವಾಗಿರುತ್ತದೆ. ಹೊಸಕೋಟೆಯ ಎಂ.ವಿ.ಜೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ತನ್ನ ಅತ್ತಿಗೆ ರಾಧಮ್ಮ ರವರಿಗೆ ಅಪಘಾತದಲ್ಲಿ ಆದ ಗಾಯಗಳ ದೆಸೆಯಿಂದ ಚಿಕಿತ್ಸೆಯು ಫಲಕಾರಿಯಾಗದೇ ಇದೇ ದಿನ ಬೆಳಿಗ್ಗೆ ಸುಮಾರು 8-30 ಗಂಟೆ ಸಮಯದಲ್ಲಿ ಮೃತ ಪಟ್ಟಿರುತ್ತಾರೆ. ರಾಧಮ್ಮ ರವರ ಸಂಬಂಧಿಕರು ಆಸ್ಪತ್ರೆಯ ಬಳಿ ಇದ್ದು ತನಗೆ ದೂರು ನೀಡಲು ತಿಳಿಸಿದ ಕಾರಣ ತಾನು ಠಾಣೆಗೆ ಬಂದು ದೂರನ್ನು ನೀಡುತ್ತಿದ್ದು, ತನ್ನ ಅತ್ತಿಗೆ ರಾಧಮ್ಮ ರವರ ಶವವು ಹೊಸಕೋಟೆಯ ಎಂ.ವಿ.ಜೆ ಆಸ್ಪತ್ರೆಯ ಶವಾಗಾರದಲ್ಲಿದ್ದು ತಾವು ಬಗ್ಗೆ ಮುಂದಿನ ಕಾನೂನು ಕ್ರಮ ಜರುಗಿಸ ಬೇಕಾಗಿ ನೀಡಿದ ದೂರನ್ನು ಪಡೆದು ಪ್ರಕರಣ ದಾಖಲಿಸಿರುತ್ತೆ.