ದಿನಾಂಕ : 21/06/2019ರ ಅಪರಾಧ ಪ್ರಕರಣಗಳು

 1. ಚಿಕ್ಕಬಳ್ಳಾಫುರ ಗ್ರಾಮಾಂತರ ಪೊಲೀಸ್ ಠಾಣೆ. ಮೊ.ಸಂ: 141/2019 ಕಲಂ: 15(A), 32(3) ಕೆ.ಇ. ಆಕ್ಟ್:-

          ದಿನಾಂಕ 20/06/2019 ರಂದು ಸಂಜೆ 04.10 ಗಂಟೆಗೆ ಪಿಎಸ್ಐ ರವರು ನೀಡಿದ ವರದಿಯ ಸಾರಾಂಶವೇನೆಂದರೆ ದಿನಾಂಕ 19/06/2019 ರಂದು ಸಂಜೆ 04.00 ಗಂಟೆಯಲ್ಲಿ ತಾನು ಠಾಣಾ ಕರ್ತವ್ಯದಲ್ಲಿ ಇದ್ದಾಗ ಪೊಲೀಸ್ ಠಾಣಾ ಸರಹದ್ದಿನ ನಲ್ಲಕದಿರೇನಹಳ್ಳಿ ಗ್ರಾಮದಲ್ಲಿ ವಾಸವಾಗಿರುವ ಬಾಸ್ಕರ್ ಬಿನ್ ಹನುಮೇಗೌಡ, 35 ವರ್ಷ, ವಕ್ಕಲಿಗರು ನಲ್ಲಕದಿರೇನಹಳ್ಳಿ ಗ್ರಾಮ ರವರು ಅವರ ಚಿಲ್ಲರೆ ಅಂಗಡಿಯ ಬಳಿ ಅಕ್ರಮವಾಗಿ ಸಾರ್ವಜನಿಕರಿಗೆ ಮಧ್ಯಪಾನ ಸೇವನೆ ಮಾಡಲು ಅವಕಾಶ ಮಾಡಿಕೊಟ್ಟಿರುವುದಾಗಿ ಖಚಿತ ಮಾಹಿತಿ ಬಂದಿದ್ದು ಈ ಬಗ್ಗೆ ಬಾಸ್ಕರ್ ಬಿನ್ ಹನುಮೇಗೌಡ ರವರ ಮೇಲೆ ಕಲಂ 15 (ಎ), 32(3) ಕೆ ಇ ಆಕ್ಟ್ ರೀತ್ಯಾ ಆಸಾಮಿಯ ವಿರುದ್ದ ಪ್ರಕರಣ ದಾಖಲಿಸಿಕೊಳ್ಳಲು ಸೂಚಿಸಿದ ಮೇರೆಗೆ  ಈ ಪ್ರ ವ ವರದಿ.

 1. ಚಿಕ್ಕಬಳ್ಳಾಫುರ ಗ್ರಾಮಾಂತರ ಪೊಲೀಸ್ ಠಾಣೆ. ಮೊ.ಸಂ: 142/2019 ಕಲಂ: 15(A), 32(3) ಕೆ.ಇ. ಆಕ್ಟ್:-

          ದಿನಾಂಕ 20/06/2019 ರಂದು ಸಂಜೆ 06.10 ಗಂಟೆಗೆ ಪಿಎಸ್ಐ ರವರು ನೀಡಿದ ವರದಿಯ ಸಾರಾಂಶವೇನೆಂದರೆ ದಿನಾಂಕ 19/06/2019 ರಂದು ಸಂಜೆ 06.00 ಗಂಟೆಯಲ್ಲಿ ತಾನು ಠಾಣಾ ಕರ್ತವ್ಯದಲ್ಲಿ ಇದ್ದಾಗ ಪೊಲೀಸ್ ಠಾಣಾ ಸರಹದ್ದಿನ ತಿಪ್ಪೇನಹಳ್ಳಿ ಗ್ರಾಮದಲ್ಲಿ ವಾಸವಾಗಿರುವ ಮಂಜುನಾಥ ಬಿನ್ ಪಿಳ್ಳಪ್ಪ, 38ವರ್ಷ, ವಕ್ಕಲಿಗರು ತಿಪ್ಪೇನಹಳ್ಳಿ ಗ್ರಾಮ ರವರು ಅವರ ಚಿಲ್ಲರೆ ಅಂಗಡಿಯ ಬಳಿ ಅಕ್ರಮವಾಗಿ ಸಾರ್ವಜನಿಕರಿಗೆ ಮಧ್ಯಪಾನ ಸೇವನೆ ಮಾಡಲು ಅವಕಾಶ ಮಾಡಿಕೊಟ್ಟಿರುವುದಾಗಿ ಖಚಿತ ಮಾಹಿತಿ ಬಂದಿದ್ದು ಈ ಬಗ್ಗೆ ಮಂಜುನಾಥ ಬಿನ್ ಪಿಳ್ಳಪ್ಪ ರವರ ಮೇಲೆ ಕಲಂ 15 (ಎ), 32(3) ಕೆ ಇ ಆಕ್ಟ್ ರೀತ್ಯಾ ಆಸಾಮಿಯ ವಿರುದ್ದ ಪ್ರಕರಣ ದಾಖಲಿಸಿಕೊಳ್ಳಲು ಸೂಚಿಸಿದ ಮೇರೆಗೆ  ಈ ಪ್ರ ವ ವರದಿ.

 1. ಚಿಕ್ಕಬಳ್ಳಾಫುರ ಗ್ರಾಮಾಂತರ ಪೊಲೀಸ್ ಠಾಣೆ. ಮೊ.ಸಂ: 143/2019 ಕಲಂ: 15(A), 32(3) ಕೆ.ಇ. ಆಕ್ಟ್:-

          ದಿನಾಂಕ 20/06/2019 ರಂದು ರಾತ್ರಿ 08.10 ಗಂಟೆಗೆ ಪಿಎಸ್ಐ ರವರು ನೀಡಿದ ವರದಿಯ ಸಾರಾಂಶವೇನೆಂದರೆ ದಿನಾಂಕ 20/06/2019 ರಂದು ರಾತ್ರಿ 08.00 ಗಂಟೆಯಲ್ಲಿ ತಾನು ಠಾಣಾ ಕರ್ತವ್ಯದಲ್ಲಿ ಇದ್ದಾಗ ಪೊಲೀಸ್ ಠಾಣಾ ಸರಹದ್ದಿನ ಕವರನಹಳ್ಳಿ ಗ್ರಾಮದ ಲಕ್ಷ್ಮಯ್ಯ ಬಿನ್ ವೆಂಕಟಗಿರಿಯಪ್ಪ, 45ವರ್ಷ, ಬಲಜಿಗರು ಕವರನಹಳ್ಳಿ ಗ್ರಾಮ ರವರು ಅವರ ಚಿಲ್ಲರೆ ಅಂಗಡಿಯ ಬಳಿ ಅಕ್ರಮವಾಗಿ ಸಾರ್ವಜನಿಕರಿಗೆ ಮಧ್ಯಪಾನ ಸೇವನೆ ಮಾಡಲು ಅವಕಾಶ ಮಾಡಿಕೊಟ್ಟಿರುವುದಾಗಿ ಖಚಿತ ಮಾಹಿತಿ ಬಂದಿದ್ದು ಈ ಬಗ್ಗೆ ಲಕ್ಷ್ಮಯ್ಯ ಬಿನ್ ವೆಂಕಟಗಿರಿಯಪ್ಪ ರವರ ಮೇಲೆ ಕಲಂ 15 (ಎ), 32(3) ಕೆ ಇ ಆಕ್ಟ್ ರೀತ್ಯಾ ಆಸಾಮಿಯ ವಿರುದ್ದ ಪ್ರಕರಣ ದಾಖಲಿಸಿಕೊಳ್ಳಲು ಸೂಚಿಸಿದ ಮೇರೆಗೆ  ಈ ಪ್ರ ವ ವರದಿ.

 1. ಚಿಂತಾಮಣಿ ಗ್ರಾಮಾಂತರ ಲೀಸ್ ಠಾಣೆ. ಮೊ.ಸಂ: 215/2019 ಕಲಂ: 279, 337, 338 ಐ.ಪಿ.ಸಿ:-

          ದಿನಾಂಕ 20-06-2019 ರಂದು ಸಂಜೆ 6-15 ಗಂಟೆಗೆ ಸಿಫ್ ಗತ್ತುಲ್ಲಾ ಖಾನ್ ಬಿನ್ ರಶೀದ್ ಖಾನ್, 30 ವರ್ಷ, ಬೈಲನರಸಾಪುರ ಗ್ರಾಮ ಹೊಸಕೊಟೆ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ  ತಾನು ಈ ಮೇಲ್ಕಂಡ ವಿಳಾಸದಲ್ಲಿ ವಾಸವಾಗಿದ್ದು, ಕಾರ್ಪೆಂಟರ್ ಕೆಲಸದಿಂದ ಜೀವನ ಮಾಡಿಕೊಂಡಿರುತ್ತೇನೆ. ದಿನಾಂಕ:16-06-2019 ರಂದು ಬೆಳಿಗ್ಗೆ ತಮ್ಮ ಅಣ್ಣನಾದ ಇಸ್ರಾರ್ ಖಾನ್ ಬಿನ್ ರಶೀದ್ ಖಾನ್, ತಮ್ಮ ಅತ್ತಿಗೆ ಸಮೀರಾ, ಅವರ ಮಗಳಾದ 8 ವರ್ಷದ ಇಫ್ರಾರವರು ತಮ್ಮ ಬಾಬತ್ತು ಕೆಎ-44 ಇ-4391 ನೋಂದಣಿ ಸಂಖ್ಯೆಯ ಪ್ಯಾಶನ್ ಪ್ಲಸ್ ದ್ವಿಚಕ್ರವಾಹನದಲ್ಲಿ ಚಿಂತಾಮಣಿಗೆ ಆಸ್ಪತ್ರೆಗೆ ಬರುವ ಸಲುವಾಗಿ ಬೆಂಗಳೂರು-ಕಡಪ ರಸ್ತೆಯಲ್ಲಿ ಬರುತ್ತಿದ್ದಾಗ ಬೆಳಿಗ್ಗೆ 09-00 ಗಂಟೆಯ ಸಮಯದಲ್ಲಿ ಟಿ.ಹೊಸೂರು ಮತ್ತು ತಳಗವಾರ ಮದ್ಯದಲ್ಲಿ ಹಿಂದುಗಡೆಯಿಂದ ಬಂದ ಕೆಎ-40 ಟಿಎ-737/ಕೆಎ-40 ಟಿಎ-738 ನೋಂದಣಿ ಸಂಖ್ಯೆಯ ಟ್ರಾಕ್ಟರ್ ಚಾಲಕ ಟ್ರಾಕ್ಟರ್ನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ತಮ್ಮ ಅಣ್ಣನ ದ್ವಿಚಕ್ರವಾಹನಕ್ಕೆ ಹಿಂಬದಿಯಿಂದ ಡಿಕ್ಕಿ ಹೊಡೆಸಿ ಅಪಘಾತವನ್ನುಂಟು ಮಾಡಿದ್ದು, ಅದರ ಪರಿಣಾಮ ದ್ವಿಚಕ್ರವಾಹನವನ್ನು ಚಾಲನೆ ಮಾಡುತ್ತಿದ್ದ ತಮ್ಮ ಅಣ್ಣ ಇಸ್ರಾರ್ ಖಾನ್ ಮತ್ತು ಹಿಂಬದಿಯಲ್ಲಿ ಕುಳಿತಿದ್ದ ತಮ್ಮ ಅತ್ತಿಗೆ ಸಮೀರಾ, ಅವರ ಮಗಳಾದ ಇಫ್ರಾರವರು ದ್ವಿಚಕ್ರವಾಹನದ ಸಮೇತ ಕೆಳಗೆ ಬಿದ್ದು ಹೋಗಿ ತಮ್ಮ ಅಣ್ಣ ಮತ್ತು ಅವರ ಮಗಳಿಗೆ ಮೇಮೇಲೆ ಸಣ್ಣಪುಟ್ಟ ಗಾಯಗಳಾಗಿರುತ್ತೆ. ತಮ್ಮ ಅತ್ತಿಗೆಯ ಎರಡೂ ಕಾಲುಗಳಿಗೆ ರಕ್ತಗಾಯ ಮತ್ತು ಬಲಗಾಲಿನ ಮೇಲೆ ಟ್ರಾಕ್ಟರ್ ಚಕ್ರ ಹರಿದು ಮೂಳೆ ಮುರಿತದ ರಕ್ತಗಾಯವಾಗಿರುತ್ತದೆ. ನಂತರ ಗಾಯಗೊಂಡಿದ್ದ ತಮ್ಮ ಅತ್ತಿಗೆಯನ್ನು ಮತ್ತು ಅವರ ಮಗಳಾದ ಇಫ್ರಾರವರನ್ನು ತಮ್ಮ ಅಣ್ಣನವರು ಯಾವುದೋ ವಾಹನದಲ್ಲಿ ಚಿಂತಾಮಣಿ ಸಕರ್ಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ದಾಖಲಿಸಿ ಸದರಿ ಅಪಘಾತದ ವಿಚಾರವನ್ನು ತಮ್ಮ ಅಣ್ಣ ತಮಗೆ ಫೋನ್ ಮಾಡಿ ತಿಳಿಸಿದ್ದು, ನಂತರ ತಾನು, ತಮ್ಮ ಮತ್ತೊಬ್ಬ ಅಣ್ಣ ಹಿದಾಯತ್ರವರು ತಮ್ಮ ಅತ್ತಿಗೆ ಮತ್ತು ಅವರ ಮಗಳನ್ನು ಆಂಬುಲೆನ್ಸ್ನಲ್ಲಿ ಹೊಸಕೋಟೆಯ ಎಂವಿಜೆ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿದ್ದು, ಅವರು ಚಿಕಿತ್ಸೆಯನ್ನು ಪಡೆದುಕೊಳ್ಳುತ್ತಿರುತ್ತಾರೆ. ತಾವು ಗಾಯಗೊಂಡಿದ್ದವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಕೊಡಿಸುತ್ತಿದ್ದರಿಂದ ಈ ದಿನ ತಡವಾಗಿ ಠಾಣೆಗೆ ಬಂದು ದೂರನ್ನು ನೀಡುತ್ತಿದ್ದು, ಅಪಘಾತಪಡಿಸಿದ ಮೇಲ್ಕಂಡ ಕೆಎ-40 ಟಿಎ-737/ಕೆಎ-40 ಟಿಎ-738 ನೋಂದಣಿ ಸಂಖ್ಯೆಯ ಟ್ರಾಕ್ಟರ್ ಚಾಲಕನ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲು ಕೋರುತ್ತೇನೆ.

 1. ದಿಬ್ಬೂರಹಳ್ಳಿ ಪೊಲೀಸ್ ಠಾಣೆ. ಮೊ.ಸಂ: 81/2019 ಕಲಂ: 323, 324, 504, 506 ರೆ/ವಿ 34 ಐ.ಪಿ.ಸಿ:-

          ದಿನಾಂಕ 20/06/2019 ರಂದು ಸಂಜೆ 4-00 ಗಂಟೆಗೆ ಪಿರ್ಯಾದಿದಾರರು ಠಾಣೆಗೆ ಹಾಜರಾಗಿ ನೀಡಿದ ಸಾರಾಂಶವೇನೆಂದರೆ, ತಾನು ಮೇಲ್ಕಂಡ ವಿಳಾಸದಾರನಾಗಿದ್ದು ಜಿರಾಯ್ತಿಮಾಡಿಕೊಂಡು ಜೀವನ ಮಾಡಿಕೊಂಡಿರುತ್ತೇನೆ. ಹೀಗಿರುವಲ್ಲಿ ದಿನಾಂಕ 18/06/2019 ರಂದು ಮಧ್ಯಾಹ್ನ ಸುಮಾರು 3-30 ಗಂಟೆ ಸಮಯದಲ್ಲಿ ತಮ್ಮ ಗ್ರಾಮದ ಸಾರ್ವಜನಿಕ ನೀರಿನ ಸಿಸ್ಟನ್ ಬಳಿ ತನ್ನ ಹೆಂಡತಿ ನಾಗಮಣಿ ನೀರನ್ನು ಹಿಡಿಯಲು ಹೋದಾಗ ತಮ್ಮ ಗ್ರಾಮದ ವಾಸಿಯಾದ ದ್ಯಾವಪ್ಪ ಬಿನ್ ತಿಮ್ಮಪ್ಪ ಎಂಬುವರು ವಿನಾಕಾರಣ ತನ್ನ ಹೆಂಡತಿಯ ಮೇಲೆ ಗಲಾಟೆಮಾಡಿ ತನ್ನ ಹೆಂಡತಿಯನ್ನು ಅಶ್ಲಿಲವಾಗಿ ಬೈದು ತನ್ನ ಹೆಂಡತಿಯ ಕೆನ್ನೆಗೆ ಕೈಗಳಿಂದ ಹೊಡೆದನು ಆಗ ತಾನು ಜಗಳ ಬಿಡಿಸಲು ಅಡ್ಡಹೋಗಿದ್ದಕ್ಕೆ ದ್ಯಾವಪ್ಪ ತನ್ನನ್ನು ಕುರಿತು ಏ ಲೋಪರ್ ನನ್ನ್ ಮಗನೆ ನಿನ್ನನ್ನು ಮತ್ತು ನಿನ್ನ ಹೆಂಡತಿಯನ್ನು ಸಾಯಿಸಿಬಿಡುತ್ತೇನೆ ಎಂದು ಪ್ರಾಣ ಬೆದರಿಕೆಯನ್ನು ಹಾಕಿ ಅಲ್ಲಿಯೇ ಬಿದ್ದಿದ್ದ ಒಂದು ಕೋಲನ್ನು ತೆಗೆದುಕೊಂಡು ತನ್ನ ಎಡ ಮುಂಗೈಮೇಲೆ ಹೊಡೆದು ನಂತರ ತನ್ನ ಎಡ ಮುಂಗೈ ಮೇಲೆ ಬಾಯಿಂದ ಕಚ್ಚಿ ರಕ್ತಗಾಯವನ್ನು ಉಂಟುಮಾಡಿದನು ನಂತರ ಗಲಾಟೆಯ ಶಬ್ದವನ್ನು ಕೇಳಿಸಿಕೊಂಡು ದ್ಯಾವಪ್ಪನ ಹೆಂಡತಿ ಆಂಜನಮ್ಮ ರವರು ಅಲ್ಲಿಗೆ ಬಂದು ತನ್ನನ್ನು ಮತ್ತು ತನ್ನ ಹೆಂಡತಿಯನ್ನು ಅವಾಚ್ಯವಾಗಿ ಬೈದು ಕೈಗಳಿಂದ ಹೊಡೆದು ಕಾಲುಗಳಿಂದ ಒದ್ದಳು ನಂತರ ಗಾಯಗೊಂಡಿದ್ದ ತಾನು ಮತ್ತು ತನ್ನ ಹೆಂಡತಿ ದ್ವಿಚಕ್ರ ವಾಹನದಲ್ಲಿ ಶಿಡ್ಲಘಟ್ಟ ಸರ್ಕಾರಿ ಆಸ್ಪತ್ರೆಗೆ ಹೋಗಿ ಚಿಕಿತ್ಸೆಗೆ ದಾಖಲಾಗಿದ್ದು,  ಈ ವಿಚಾರದಲ್ಲಿ ತಮ್ಮ ಗ್ರಾಮದ ಹಿರಿಯರು ಪಂಚಾಯ್ತಿಮಾಡಿ ಇತ್ಯರ್ಥ ಮಾಡೋಣ ಎಂದು ಹೇಳಿದ್ದರಿಂದ ತಾನು ಯಾವುದೇ ದೂರನ್ನು ನೀಡಿರುವುದಿಲ್ಲ. ದ್ಯಾವಪ್ಪ ರವರು ಪಂಚಾಯ್ತಿಗೆ ಬಾರದೆ ಇದ್ದುದ್ದರಿಂದ ತಾನು ಈ ದಿನ ತಡವಾಗಿ ಬಂದು ದೂರನ್ನು ನೀಡುತ್ತಿದ್ದು ಮೇಲ್ಕಂಡಂತೆ ತಮ್ಮ ಮೇಲೆ ಗಲಾಟೆಮಾಡಿದ ದ್ಯಾವಪ್ಪ ಮತ್ತು ದ್ಯಾವಪ್ಪನ ಹೆಂಡತಿ ಆಂಜಿನಮ್ಮ ರವರ ಮೇಲೆ ಕಾನೂನು ರೀತ್ಯ ಕ್ರಮ ಕೈಗೊಳ್ಳಲು ಕೋರಿ ನೀಡಿದ ದೂರು.

 1. ದಿಬ್ಬೂರಹಳ್ಳಿ ಪೊಲೀಸ್ ಠಾಣೆ. ಮೊ.ಸಂ: 82/2019 ಕಲಂ: 323, 324, 504, 506 ರೆ/ವಿ 34 ಐ.ಪಿ.ಸಿ:-

          ಈ ದಿನ ದಿನಾಂಕ 21/06/2019 ರಂದು ಮದ್ಯಾಹ್ನ 1-00 ಗಂಟೆಗೆ ಫಿರ್ಯಾದಿದಾರರಾದ ದ್ಯಾವಪ್ಪ ಬಿನ್ ಲೇಟ್ ತಿಮ್ಮಪ್ಪ, 45 ವರ್ಷ, ನಾಯಕರು, ಜಿರಾಯ್ತಿ, ಹಳೇ ಗಂಜಿಗುಂಟೆ ಗ್ರಾಮ, ಶಿಡ್ಲಘಟ್ಟ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ತಾನು ದಿನಾಂಕ 18/06/2019 ರಂದು  ತಮ್ಮ ಮನೆಯ ಬಳಿ ಇದ್ದಾಗ ತಮ್ಮ ಗ್ರಾಮದ ವಾಟರ್ ಮೆನ್ ಈರಪ್ಪನ ಚಿಕ್ಕಮ್ಮಗಳಾದ ನರಸಮ್ಮ ರವರು ಗೇಟ್ ವಾಲ್ ತಿರುಗಿಸಲು ಬಂದಾಗ ತಾನು ಇನ್ನೂ ನೀರು ಹಿಡಿದಿಲ್ಲ ಇನ್ನೂ ಸ್ವಲ್ಪ ಹೊತ್ತು ಗೇಟ್ ವಾಲ್ ತಿರುಗಿಸಬೇಡ ಎಂದು ಹೇಳುತ್ತಿದ್ದಂತೆ ತಮ್ಮ ಗ್ರಾಮದ ಆಂಜಿನಪ್ಪ ರವರ ಹೆಂಡತಿ ನಾಗಮಣಿ ಎಂಬುವವರು ಇದ್ದಕ್ಕಿದ್ದ ಹಾಗೆ ತನ್ನನ್ನು ಅವಾಚ್ಯ ಶಬ್ದಗಳಿಂದ ಬೈದು ನೀನು ಹೇಳಿದಂತೆ ನಡೆಯುವುದಿಲ್ಲ ಎಂದು ತನ್ನ ಮೇಲೆ ಗಲಾಟೆ ಮಾಡಿದಾಗ ಊರಿನ ಹಿರಿಯರು ಬುದ್ದಿವಾದ ಹೇಳಿ ಕಳುಹಿಸಿದ್ದು, ಇದೇ ದಿನ ಸಂಜೆ 4-00 ಗಂಟೆ ಸಮಯದಲ್ಲಿ ನಾಗಮಣಿ ರವರು ಆಕೆಯ ಗಂಡನಿಗೆ ಹೇಳಿ ನಾಗಮಣಿ ಕೋಂ ಆಂಜಿನಪ್ಪ, ಆಂಜಿನಪ್ಪ ಬಿನ್ ಚಿಕ್ಕ ತಿಮ್ಮಯ್ಯ, ಅಶ್ವಥ ಬಿನ್ ಚಿಕ್ಕತಿಮ್ಮಯ್ಯ, ನಾಗರತ್ನಮ್ಮ ಕೋಂ ತಿಮ್ಮಯ್ಯ  ನಾಲ್ಕು ಜನ ಬಂದು ತನ್ನ ಮೇಲೆ ಏಕಾಏಕಿ ಗಲಾಟೆ ಮಾಡಿ ಕಲ್ಲುಗಳಿಂದ, ದೊಣ್ಣೆಗಳಿಂದ  ಹೊಡೆದು ಬಟ್ಟೆಗಳನ್ನು ಹರಿದುಹಾಕಿದ್ದು, ಎಡಗಾಲು ಮತ್ತು ಭುಜದ ಮೆಲೆ ಕಲ್ಲುಗಳಿಂದ ಹೊಡೆದಿದ್ದು,  ನಾಗಮಣಿ ಯವರು ಕಲ್ಲುಗಳಿಂದ ಭುಜದ ಮೇಲೆ ಹೊಡೆದು ಕಾಲುಗಳಿಂದ ಒದ್ದು ಗಾಯಗಳನ್ನು ಉಂಟುಮಾಡಿ ಪ್ರಾಣ ಬೆದರಿಕೆಯನ್ನು ಹಾಕಿದ್ದು ನಂತರ  ಗಾಯಗೊಂಡಿದ್ದ ತನ್ನನ್ನು ತಮ್ಮ ಗ್ರಾಮದವರು ಚಿಂತಾಮಣಿ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಲಿಸಿದ್ದು ಈ ವಿಚಾರದಲ್ಲಿ ತಮ್ಮ ಗ್ರಾಮದ ಹಿರಿಯರು ಪಂಚಾಯ್ತಿಮಾಡಿ ಇತ್ಯರ್ಥ ಮಾಡೋಣ ಎಂದು ಹೇಳಿದ್ದರಿಂದ ತಾನು ಯಾವುದೇ ದೂರನ್ನು ನೀಡಿರುವುದಿಲ್ಲ. ಆಂಜಿನಪ್ಪ ಮತ್ತು ಅವರ ಕುಟುಂಬದವರು ಪಂಚಾಯ್ತಿಗೆ ಬಾರದೆ ಇದ್ದುದ್ದರಿಂದ ತಾನು ಈ ದಿನ ತಡವಾಗಿ ಬಂದು ದೂರನ್ನು ನೀಡುತ್ತಿದ್ದು ಮೇಲ್ಕಂಡಂತೆ ತಮ್ಮ ಮೇಲೆ ಗಲಾಟೆಮಾಡಿದ ಆಂಜಿನಪ್ಪ ಮತ್ತು ಅವರ ಕುಟುಂಬದವರ  ಮೇಲೆ ಕಾನೂನು ರೀತ್ಯ ಕ್ರಮ ಕೈಗೊಳ್ಳಲು ಕೋರಿ ನೀಡಿದ ದೂರು.

 1. ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ. ಮೊ.ಸಂ: 225/2019 ಕಲಂ: 279, 337, 304(ಎ) ಐ.ಪಿ.ಸಿ:-

          ದಿನಾಂಕ 21/06/2019 ರಂದು ಬೆಳಿಗ್ಗೆ 9-00 ಗಂಟೆಯಲ್ಲಿ ಪಿರ್ಯಾಧಿದಾರರಾದ ಯೋಗಾನಂದ ಬಿನ್ ನರಸಿಂಹಯ್ಯ ,45ವರ್ಷ, ಪರಿಶಿಷ್ಟಜಾತಿ, ಗಂಗಸಂದ್ರ ಗ್ರಾಮ, ಗೌರಿಬಿದನೂರು ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ- ನಮ್ಮ ಚಿಕ್ಕಪ್ಪನಾದ ನಾರಾಯಣಪ್ಪ ಬಿನ್ ಲೇಟ್ ಚಿನ್ನಪ್ಪ ಅಲಿಯಾಸ್ ವಕಾಲಪ್ಪ ಸುಮಾರು 70 ವರ್ಷ, ಕಡಬೂರು ಗ್ರಾಮ ವಾಸಿ ಇವರು ದಿನಾಂಕ 20/06/2019 ರಂದು ಗಂಗಸಂದ್ರ ಗ್ರಾಮಕ್ಕೆ ನಮ್ಮ ಮನೆಗೆ ಬಂದಿದ್ದರು ಮಧ್ಯಾಹ್ನ ಸುಮಾರು 03 ಗಂಟೆ ಸಮಯದಲ್ಲಿ ವಾಪಸ್ ಕಡಬೂರಿಗೆ ಹೋಗಲು ನಮ್ಮ ಗ್ರಾಮದಿಂದ ನಾಮಗೊಂಡ್ಲು ರಸ್ತೆಯಲ್ಲಿ ಸಾಗಾನಹಳ್ಳಿ ಸಮೀಪ ಜೈನರ ನಾಗರಾಜಪ್ಪ ರವರ ಜಮೀನಿನ ಬಳಿ ನಡೆದುಕೊಂಡು ಹೋಗುತ್ತಿದ್ದಾಗ ಎದುರಾಗಿ ನಾಮಗೊಂಡ್ಲು ಗ್ರಾಮದ ಕಡೆಯಿಂದ ಬಂದ  KA-40- J-2225 TVS VICTOR GL ದ್ವಿಚಕ್ರ ವಾಹನದ ಸವಾರ ತನ್ನ ದ್ವಿಚಕ್ರ ವಾಹನವನ್ನು ಅತಿವೇಗ ಹಾಗೂ ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ನಮ್ಮ ಚಿಕ್ಕಪ್ಪ ನಾರಾಯಣಪ್ಪನಿಗೆ ತಲೆಗೆ ಹಾಗೂ ಮೈಮೇಲೆ ತೀವ್ರ ಸ್ವರೂಪದ ಗಾಯಗಳಾಗಿ ತೀವ್ರವಾಗಿ ಅಸ್ವತ್ಥಗೊಂಡಿದ್ದು ಕೂಡಲೇ ಇವರ ಅಣ್ಣನಾದ ಸಂಜೀವಪ್ಪ ರವರು ಯಾವುದೋ ಆಟೋದಲ್ಲಿ ಗೌರಿಬಿದನೂರು ಸರ್ಕಾರಿ ಆಸ್ವತ್ರೆಗೆ ಕರೆದುಕೊಂಡು ಬಂದು ಚಿಕಿತ್ಸೆಗಾಗಿ ಬೆಂಗಳೂರು ನಿಮಾನ್ಸ್ ಆಸ್ವತ್ರೆಗೆ ಕರೆದುಕೊಂಡು ಹೋಗಿ ತೋರಿಸಿದ್ದು ಅಲ್ಲಿನ ವೈಧ್ಯರು ವಾಪಸ್ ಗೌರಿಬಿದನೂರು ಸರ್ಕಾರಿ ಆಸ್ವತ್ರೆಗೆ ಕಳುಹಿಸಿಕೊಟ್ಟಿದ್ದು ನಂತರ ಗೌರಿಬಿದನೂರು ಸರ್ಕಾರಿ ಆಸ್ವತ್ರೆಗೆ ವಾಪಸ್ಸು ಬಂದು ಚಿಕಿತ್ಸೆ ಪಡೆಯುತ್ತಿದ್ದಾಗ  ಇದರಿಂದ ಗುಣಮುಖರಾಗದೆ ದಿನಾಂಕ 21/06/2019 ರಂದು ಬೆಳಗಿ ಜಾವ 1-30ಗಂಟೆ ಸುಮಾರಿಗೆ ಮೃತ ಪಟ್ಟಿರುತ್ತಾರೆ.ಮೃತದೇಹವು ಗೌರಿಬಿದನೂರು ಸರ್ಕಾರಿ ಆಸ್ವತ್ರೆಯ ಶವಾಗಾರದಲ್ಲಿ ಇರುತ್ತೆ .ಅಪಘಾತ ಮಾಡಿದ KA 40 J 2225 ರ ದ್ವಿಚಕ್ರವಾಹನದ ಸವಾರನ ಹೆಸರು ಮೂರ್ತಿ ಬಿನ್ ನರಸಿಂಹಪ್ಪಎಂದು ತಿಳಿದು ಬಂದಿದ್ದು ಈ ಅಪಘಾತಕ್ಕೆ ಕಾರಣನಾದ ಮೂರ್ತಿ ರವರ ಮೇಲೆ ಕಾನೂನು ಕ್ರಮ ಜರುಗಿಸಲು ಕೋರಿ ದೂರು.

 1. ಗೌರಿಬಿದನೂರು ಪುರ ಪೊಲೀಸ್ ಠಾಣೆ. ಮೊ.ಸಂ: 98/2019 ಕಲಂ: 66(C), 66(D) INFORMATION TECHNOLOGY ACT-2000 ಮತ್ತು ಕಲಂ: 420 ಐ.ಪಿ.ಸಿ:-

          ದಿನಾಂಕ 20/06/2019 ರಂದು ಪಿರ್ಯಾದಿ ಶಮೀಮ್ ಕೋಂ, ಶಮೀವುಲ್ಲಾ, 37 ವರ್ಷ, ಮನೆಕೆಲಸ, ಮುಸ್ಲಿಂ ಜನಾಂಗ, ಮಾದನಹಳ್ಳಿ, ಗೌರಿಬಿದನೂರು ಟೌನ್ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ನಾನು 8 ವರ್ಷಗಳಿಂದ ಗೌರಿಬಿದನೂರು ಮಾದನಹಳ್ಳಿ ವಾಸ ಮಾಡುತ್ತಿರುತ್ತೇನೆ.  ನನಗೆ ಇಬ್ಬರು ಹೆಣ್ಣುಮಕ್ಕಳಿರುತ್ತಾರೆ.  ನಾನು  ಮನೆಕಲಸ ಮಾಡಿಕೊಂಡು ಜೀವನ ಮಾಡುತ್ತಿರುತ್ತೇನೆ.  ದಿನಾಂಕ: 11/06/2019 ರಂದು ಬೆಳಿಗ್ಗೆ 8-00 ಗಂಟೆಗೆ 00923015672233 ನಂಬರಿನಿಂದ ನನ್ನ ಗಂಡನಾದ ಶಮೀನ್ ವುಲ್ಲಾ ರವರ ಮೊಬೈಲ್ ನಂ 9353526785 ಗೆ  00923015672233 ನಂಬರಿನಿಂದ ಕಾಲ್  ಮಾಡಿ ನಾನು ಹರೀಶ್ ಕುಮಾರ್ ಕಲ್ಕತ್ತಾ,  ಜಿಯೋ ಕಂಪನಿಯವರು ನಿಮಗೆ 25 ಲಕ್ಷ ಲಕ್ಕಿ ಡ್ರಾ ಬಂದಿದೆ  ನಿಮ್ಮ ವಾಟ್ಸ್ ಫ್ ನಂಬರ್ ಕೊಡಿ ಎಂದು ಕೇಳಿರುತ್ತಾರೆ.  ನನ್ನ ಮಗಳ ನಂಬರ್ 9606533790 ನಂಬರ್  ನೀಡಿದ್ದು, .ನಂತರ ನಿಮ್ಮ ಅಕೌಂಟ್ ನಂಬರ್ ಕಳಿಸಿ ನಾವು ಹಣ ಹಾಕುತ್ತೇವೆಂದು ತಿಳಿಸಿದರು.  ಹಾಗೂ 25 ಲಕ್ಷಗೆ ತೆರಿಗೆ 6100 ರೂಗಳು ಕಟ್ಟಿ ಎಂದು ಅಕೌಂಟ್ ನಂಬರ್ 31954858555 ತಿಳಿಸಿದರು.  ಅದರಂತೆ ನಾನು ನನ್ನ ಗಂಡ ಎಸ್.ಬಿ.ಐ ಬ್ಯಾಂಕ್ ಗೆ ಹೋಗಿ 31954858555  ಅಕೌಂಟ್ ನಂಬರಿಗೆ 6100 ರೂಪಾಯಿಗಳನ್ನು ಕಟ್ಟಿರುತ್ತೇವೆ.  ಆ ದಿನವೇ ಕಾಲ್ ಮಾಡಿ ನಿಮ್ಮ ಅಕೌಂಟ್ ಹೋಲ್ಡ್ ಆಗಿದೆ 18,200 ರೂಗಳು ಕಟ್ಟಿ ಎಂದು 36310737659 ನಂಬರ್ ಗೆ ಹಾಕಿ ಎಂದು ತಿಳಿಸಿದರು.  ಅದೇ ರೀತಿ ಹಣ ಕಟ್ಟಿರುತ್ತೇವೆ.  ದಿನಾಂಕ: 12/06/2019 ರಂದು ಜಿಯೋ ಕಂಪನಿಯವರು ಪೋನ್ ಮಾಡಿ 32,000 ತೆರಿಗೆ ಕಟ್ಟಬೇಕೆಂದು ಅಕೌಂಟ್ ನಂ. 37212788236 ನೀಡಿದರು.  ಅದೇ ರೀತಿ ಹಣವನ್ನು ಕಟ್ಟಿರುತ್ತೇವೆ.  ದಿನಾಂಕ: 13/06/2019 ರಂದು ಜಿಯೋ ಕಂಪನಿಯು ಕಾಲ್ ಮಾಡಿ ಜೆ.ಎಸ್.ಸಿ. 42.000 ರೂ ಅಕೌಂಟ್ ನಂ. 37212788236 ಹಣವನ್ನು ಕಟ್ಟಬೇಕು ಎಂದು ತಿಳಿಸಿದರು.  ಅದರಂತೆ ಹಣವನ್ನು ಬ್ಯಾಂಕಿನಲ್ಲಿ ಕಟ್ಟಿರುತ್ತೇವೆ.  ದಿನಾಂಕ:14/06/2019 ರಂದು ಇನ್ಸುರೇನ್ಸ್ ಪಾಲಿಸಿ 28,000 ರೂ : 20248622793 ಅಕೌಂಟ್ ನಂಬರಿಗೆ ಹಣ ಕಟ್ಟಬೇಕೆಂದು ತಿಳಿಸಿದರು.  ಅದರಂತೆ ಹಣ ಕಟ್ಟಿರುತ್ತೇವೆ.  ನಂತರ ಆ ದಿನವೇ ಅನ್ ಲೇನ್ ಟ್ರಾನ್ಸ್ ಫರ್ 54,300  ಅಕೌಂಟ್ ನಂ 35022535261 ನಂಬರಿಗೆ ಹಣ ಕಟ್ಟಿ ಎಂದರು ಅದರಂತೆ ಹಣ ಕಟ್ಟಿರುತ್ತೇವೆ.  ದಿನಾಂಕ: 15/06/2019 ರಂದು  ಹರೀಶ್ ರವರು ಕಾಲ್ ಮಾಡಿ ತೆರಿಗೆ ಕಟ್ಟಬೇಕು 68,200 ಅಕೌಂಟ್ ನಂ 37212788236 ಹಣ ಕಟ್ಟಿಎಂದು ನಾನು ಮತ್ತು ನನ್ನ ಗಂಡ ಏಕೆ ಎಂದು ಕೇಳಿದಾಗ ನಿಮ್ಮ  ಝಿರೋ ಅಕೌಂಟ್ ಇದೆ ಅದ್ದರಿಂದ ಹಣ ಕಟ್ಟಿ ಎಂದು ಹೇಳಿದರು.  ಅದೇ ರೀತಿ ಹಣ ಕಟ್ಟಿರುತ್ತೇವೆ.  ದಿನಾಂಕ: 16/06/2019 ರಂದು ಹರೀಶ್ ರವರು ಕಾಲ್ ಮಾಡಿ ನಿಮ್ಮ ಪ್ರೋಸಸ್ ಮುಗಿದಿದೆ ಇನಿವಿಟೇಷನ್ ಗಾಗಿ 15,000 ರೂಗಳು ಅಕೌಂಟ್ ನಂಬರ್ 37212788236 ಹಣ ಕಟ್ಟಬೇಕೆಂದು ತಿಳಿಸಿರುತ್ತಾರೆ.  ಅದರಂತೆ ಹಣವನ್ನು ಕಟ್ಟಿರುತ್ತೇವೆ.  ದಿನಾಂಕ; 19/06/2019 ರಂದು ಹರೀಶ್ ರವರು ಕಾಲ್ ಮಾಡಿ ಪಾಸ್ ಬುಕ್ ಮಾಡಿಸಲು 68,000 ರೂ ಹಣ ಕಟ್ಟಿ ಎಂದು ಹೇಳಿರುತ್ತಾರೆ.  ನನಗೆ ಅನುಮಾನ ಬಂದು ಹಣವನ್ನು ಕಟ್ಟಿರುವುದಿಲ್ಲ.  ಇದುವರೆವಿಗೂ 3 ಲಕ್ಷ ರೂ ಹಣವನ್ನು ಕಟ್ಟಿರುತ್ತೇವೆ. ನಮಗೆ 25 ಲಕ್ಷ ಹಣ ಕೊಡುತ್ತೇವೆಂದು ನಂಬಿಸಿ ಮೋಸ ಮಾಡಿರುವ ಜಿಯೋ ಕಂಪನಿಯ ಹರೀಶ್ ಕುಮಾರ್ ರವರ ಮೇಲೆ ಕಾನೂನು ರೀತ್ಯ ಕ್ರಮ ಜರುಗಿಸಿಬೇಕೆಂದು ನೀಡಿದ್ದರ ದೂರಿನ ಮೇರೆಗೆ ಪ್ರಕರಣವನ್ನು ದಾಖಲಿಸಿರುತ್ತೇನೆ.

 1. ಗೌರಿಬಿದನೂರು ಪುರ ಪೊಲೀಸ್ ಠಾಣೆ. ಮೊ.ಸಂ: 99/2019 ಕಲಂ: 379 ಐ.ಪಿ.ಸಿ:-

          ದಿನಾಂಕ 21-06-2019 ರಂದು 11:00 ಗಂಟೆ ಸಮಯದಲ್ಲಿ ಪಿರ್ಯಾದಿ ಶ್ರೀನಿವಾಸರೆಡ್ಡಿ ಬಿನ್ ದೊಡ್ಡಪ್ಪಯ್ಯ 46 ವರ್ಷ ಒಕ್ಕಲಿಗ ವ್ಯವಸಾಯ ಕೇರ್ ಆಫ್ ಅನುಜ ಕೋಂ ನರಸಿಂಹರೆಡ್ಡಿ ನದಿಗಡ್ಡೆ ಗೌರಿಬಿದನೂರು ಪುರ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ನಾನು ಗೌರಿಬಿದನೂರು ನಗರ ವ್ಯಾಪ್ತಿಯ ನದಿಗಡ್ಡೆಯಲ್ಲಿ ಮೇಲ್ಕಂಡ ವಿಳಾಸದಲ್ಲಿ ಬಾಡಿಗೆದಾರನಾಗಿ ವಾಸವಿದ್ದು ದಿನಾಂಕ 17/06/2019 ರಂದು ನನ್ನ ಅಣ್ಣನಾದ ಶ್ರೀವೆಂಕಟರೆಡ್ಡಿ ಬಿನ್ ದೊಡ್ಡಪ್ಪಯ್ಯ ನವರ ಬಾಬತ್ತು ಕೆ.ಎ 05 ಇಟಿ 9697 ಸಂಖ್ಯೆಯ ಹೀರೊಹೊಂಡಾ ದ್ವಿಚಕ್ರ ವಾಹನವನ್ನು ಮನೆಯ ಮುಂದೆ ನಿಲ್ಲಿಸಿದ್ದು ದಿನಾಂಕ 18/06/2019 ರಂದು ಬೆಳಿಗ್ಗೆ ನೋಡಲಾಗಿ  ವಾಹನವು ಇಲ್ಲದೆ ಇದ್ದು ಎಲ್ಲಾ ಕಡೆ ವಿಚಾರಿಸಲಾಗಿ ಪತ್ತೆಯಾಗಿರುವುದಿಲ್ಲ ಈ ದಿನ ಠಾಣೆಗೆ ಬಂದು ಕಳ್ಳತನವಾಗಿರುವ ನನ್ನ ಅಣ್ಣನ ವಾಹನವನ್ನು ಪತ್ತೆಮಾಡಿಕೊಡಬೇಕೆಂದು ದೂರನ್ನು ನೀಡಿದ್ದರ ಮೇರೆಗೆ ಪ್ರಕರಣವನ್ನು ದಾಖಲಿಸಿರುತ್ತೇನೆ.

 1. ಗುಡಿಬಂಡೆ ಪೊಲೀಸ್ ಠಾಣೆ. ಮೊ.ಸಂ: 151/2019 ಕಲಂ: 15(A), 32(3) ಕೆ.ಇ. ಆಕ್ಟ್:-

          ಗುಡಿಬಂಡೆ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸ್ ಸಬ್ ಇನ್ಸ್ಪೆಕ್ಟರ್ ರಾಮಕೃಷ್ಣಯ್ಯ ರವರು  ನೀಡಿದ ವರದಿಯ ದೂರಿನ ಸಾರಾಂಶವೇನೆಂದೆರೆ, ದಿನಾಂಕ:20-06-2019 ರಂದು ಬೆಳಿಗ್ಗೆ 10-00 ಗಂಟೆಯಲ್ಲಿ ಸಾರ್ವಜನಿಕರು ತಮಗೆ ಪೋನ್ ಮಾಡಿ, ಗುಡಿಬಂಡೆ ತಾಲೂಕಿನ ಗವಿಕುಂಟಹಳ್ಳಿ ಗ್ರಾಮದಲ್ಲಿ ಶಾಂತಮ್ಮ ರವರ ಮನೆಯ ಬಳಿ ಸಾರ್ವಜನಿಕ ರಸ್ತೆಯಲ್ಲಿ ಸಾರ್ವಜನಿಕರಿಗೆ ಮಧ್ಯವನ್ನು ಕುಡಿಯಲು ಸ್ಥಳಾವಕಾಶ ಮಾಡಿರುತ್ತಾರೆಂದು ಸಾರ್ವಜನಿಕರು ಮಧ್ಯವನ್ನು ಕುಡಿದು ಓಡಾಡುತ್ತಿದ್ದಾರೆಂದು ನೀಡಿದ ಮಾಹಿತಿ ಮೇರೆಗೆ ತಾನು ಸರ್ಕಾರಿ ಜೀಪು ಸಂಖ್ಯೆ-ಕೆ,ಎ-40 ಜಿ-58 ರಲ್ಲಿ ಚಾಲಕ ಸಿ,ಪಿ,ಸಿ-378 ಶ್ರೀನಿವಾಸ ರವರೊಂದಿಗೆ ಸಿಬ್ಬಂದಿಯಾದ ಸಿ,ಪಿ,ಸಿ-88 ರಮೇಶ ರವರನ್ನು ಕರೆದುಕೊಂಡು ಗವಿಕುಂಟಹಳ್ಳಿ ಗ್ರಾಮಕ್ಕೆ ಹೋಗಿ ಪಂಚರನ್ನು ಬರಮಾಡಿಕೊಂಡು ಸ್ಥಳಕ್ಕೆ 10-30 ಗಂಟೆಯಲ್ಲಿ ಹೋಗಿ ಮರೆಯಲ್ಲಿ ಜೀಪನ್ನು ನಿಲ್ಲಿಸಿ ಪಂಚರೊಂದಿಗೆ ಮರೆಯಲ್ಲಿ ತಾವು ಮೆಲ್ಕಂಡ ಶಾಂತಮ್ಮ ರವರ ಮನೆಯ ಬಳಿ ನೋಡಲಾಗಿ, ಸಾರ್ವಜನಿಕ ರಸ್ತೆಯಲ್ಲಿ ಅಕ್ರಮವಾಗಿ ಯಾರೋ ಹೆಂಗಸು ಸಾರ್ವಜನಿಕರಿಗೆ ಮದ್ಯವನ್ನು ಲೋಟದಲ್ಲಿ ಹಾಕುತ್ತಾ, ಸಾರ್ವಜನಿಕರಿಗೆ ಮಧ್ಯವನ್ನು ಕುಡಿಯಲು ಅನುಮತಿ ನೀಡಿರುವುದು ಮತ್ತು ಕುಡಿಯಲು ಸ್ಥಳಾವಕಾಶ ಮಾಡಿಕೊಟ್ಟಿರುವುದು ಕಂಡು ಬಂದಿದ್ದು. ಪಂಚರೊಂದಿಗೆ ತಾವುಗಳು ಸದರಿಯವರ ಮೇಲೆ ಧಾಳಿ ಮಾಡಿದಾಗ, ಸಮವಸ್ತ್ರದಲ್ಲಿದ್ದ ತಮ್ಮನ್ನು ಕಂಡು ಮದ್ಯವನ್ನು ಕುಡಿಯುತ್ತಿದ್ದವರು ಓಡಿ ಹೋಗಿದ್ದು, ಆ ಪೈಕಿ ಮಧ್ಯವನ್ನು ಸರಬರಾಜು ಮಾಡುತ್ತಿರುವ ಹೆಂಗಸನ್ನು ವಶಕ್ಕೆ ಪಡೆದುಕೊಂಡು ಹೆಸರು & ವಿಳಾಸ ಕೇಳಲಾಗಿ, ಶಾಂತಮ್ಮ ಕೋಂ ಲೇಟ್ ಮುನಿಶಾಮಿ 55 ವರ್ಷ, ವಕ್ಕಲಿಗರು, ಕೂಲಿ ಕೆಲಸ, ವಾಸ-ಗವಿಕುಂಟಹಳ್ಳಿ ಗ್ರಾಮ, ಗುಡಿಬಂಡೆ ತಾಲೂಕು ಎಂದು ತಿಳಿಸಿದ್ದು. ಸದರಿ ಮಹಿಳಾ ಆಸಾಮಿಯನ್ನು ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಮಧ್ಯ ಸೇವನೆ ಮಾಡಲು ಸ್ಥಳಾವಕಾಶ ನೀಡಿರುವ ಬಗ್ಗೆ ಇರುವಂತಹ ಲೈಸನ್ಸ್ ತೋರಿಸಲು ಕೇಳಲಾಗಿ, ಸದರಿ ಆಸಾಮಿಯು ಯಾವುದು ಇಲ್ಲವೆಂದು ತಿಳಿಸಿದ್ದು, ನಂತರ ಸ್ಥಳವನ್ನು ಪರಿಶೀಲನೆ ಮಾಡಲಾಗಿ ಸದರಿ ಸ್ಥಳದಲ್ಲಿ 1) ಹೈ ವಾರ್ಡ್ಸ ಕಂಪನಿಯ 90 ಎಮ್, ಎಲ್ ಅಳತೆಯ ಓಪನ್ ಮಾಡದೇ ಇರುವಂತಹವು 8 ಟೆಟ್ರಾ ಪಾಕೆಟ್ಗಳು ಇದ್ದು, 2) ಓಪನ್ ಮಾಡಿರುವಂತ ಹೈ ವಾರ್ಡ್ಸ ಕಂಪನಿಯ 90 ಎಮ್, ಎಲ್ ಅಳತೆಯ ಒಟ್ಟು 6 ಖಾಲಿ ಪಾಕೆಟ್ ಗಳಿದ್ದವು. 3) ಮದ್ಯವನ್ನು ಕುಡಿದು ಬಿಸಾಕಿದಂತಹ 4 ಖಾಲಿ ಪ್ಲಾಸ್ಟಿಕ್ ಗ್ಲಾಸುಗಳು 5) ಒಂದು ಲೀಟರ್ ಒಂದು ಖಾಲಿ ವಾಟರ್ ಬಾಟಲ್ ಇದ್ದವು ಸದರಿ ಮಾಲುಗಳನ್ನು ಕೇಸಿನ ಮುಂದಿನ ಕ್ರಮಕ್ಕಾಗಿ ಅಮಾನತ್ತುಪಡಿಸಿಕೊಂಡಿರುತ್ತೆ. ಮಧ್ಯವಿರುವ ಟೆಟ್ರಾ ಪಾಕೆಟ್ಗಳ ದ್ರವ ಪ್ರಮಾಣ ಲೆಕ್ಕ ಮಾಡಲಾಗಿ ಒಟ್ಟು=256 ಎಮ್,ಎಲ್ ಆಗಿದ್ದು, ಆ ಪಾಕೆಟ್ಗಳ ಮೇಲಿನ ದರವನ್ನು ಲೆಕ್ಕ ಮಾಡಲಾಗಿ ಒಟ್ಟು 8*32=256 ರೂ ಆಗಿರುತ್ತದೆ, ಸದರಿ ಮಾಲನ್ನು ಪಂಚಾಯ್ತಿದಾರರ ಸಮಕ್ಷಮದಲ್ಲಿ ಬೆಳಿಗ್ಗೆ 10-45 ಗಂಟೆಯಿಂದ 11-15 ಗಂಟೆಯವರೆಗೆ ಪಂಚನಾಮೆ ಮೂಲಕ ಅಮಾನತ್ತುಪಡಿಸಿಕೊಂಡು, ಮೇಲ್ಕಂಡ ಆರೋಪಿ & ಮಾಲನ್ನು, ಅಸಲು ಪಂಚನಾಮೆಯೊಂದಿಗೆ ಬೆಳಿಗ್ಗೆ 11-45 ಗಂಟೆಯಲ್ಲಿ ಠಾಣೆಯಲ್ಲಿ ಹಾಜರುಪಡಿಸಿ ಸದರಿ ಆರೋಪಿತೆ & ಮಾಲಿನ ವಿರುದ್ದ ಮುಂದಿನ ಕಾನೂನು ಕ್ರಮ ಜರುಗಿಸಲು ಸೂಚಿಸಿ ನೀಡಿದ ವರದಿಯ ದೂರು ಆಗಿರುತ್ತೆ.

 1. ನಂದಿಗಿರಿಧಾಮ ಪೊಲೀಸ್ ಠಾಣೆ. ಮೊ.ಸಂ: 78/2019 ಕಲಂ: 15(A), 32(3) ಕೆ.ಇ. ಆಕ್ಟ್:-

          ದಿನಾಂಕ:21/06/2019 ರಂದು ಮದ್ಯಾಹ್ನ 13:45 ಗಂಟೆ ಸಮಯಲ್ಲಿ ಪಿ.ಎಸ್.ಐ ಕ್ರೈಂ ನಾರಾಯಣಸ್ವಾಮಿ ರವರು ಮಾಲು ಮತ್ತು ಆರೋಪಿಯನ್ನು ಹಾಜರ್ಪಡಿಸಿ ದಾಳಿ ಪಂಚನಾಮೆಯೊಂದಿಗೆ ಮುಂದಿನ ಕ್ರಮ ಜರುಗಿಸಲು ಕೊಟ್ಟ ಜ್ಞಾಪನದ ಸಾರಾಂಶವೇನೆಂದರೆ ದಿನಾಂಕ:21-06-2019 ರಂದು ಬೆಳಿಗ್ಗೆ11:45 ಗಂಟೆ ಸಮಯದಲ್ಲಿ ನಾನು ಮತ್ತು ಠಾಣೆಯ ಸಿಬ್ಬಂದಿಯಾದ ಹೆಚ್.ಸಿ-19 ಬಸಪ್ಪ ಲಮಾಣಿ, ಪಿಸಿ-240 ಮಧುಸೂಧನ್ ರವರೊಂಧಿಗೆ ಕೊಂಡೇನಹಳ್ಳಿ ಗ್ರಾಮದ ಕಡೆ ಗಸ್ತಿನಲ್ಲಿದ್ದಾಗ ಬಾತ್ಮೀದಾರರಿಂದ ಬಂದ ಖಚಿತ ಮಾಹಿತಿ ಎನೆಂದರೆ ಕಡಶೀಗೇನಹಳ್ಳಿ ಗ್ರಾಮದ ಅಂಬರೀಶ ಬಿನ್ ಮುನಿವೆಂಕಟರಾಯಪ್ಪ ರವರು ಚಿಲ್ಲರೆ ಅಂಗಡಿಯಲ್ಲಿ ಮದ್ಯೆ ಸೇವಿಸಲು ಸ್ಥಳವಕಾಶ ಮಾಡಿಕೊಟ್ಟಿರುವನೆಂದೂ ಬಂದ ಮಾಹಿತಿಯ ಮೇರೆಗೆ ತಕ್ಷಣ ಕಾರ್ಯಪ್ರವೃತ್ತರಾಗಿ ಸಿಬ್ಬಂದಿಯೊಂದಿಗೆ ಸರ್ಕಾರಿ ಜೀಪ್ ಸಂಖ್ಯೆ ಕೆ,ಎ-40 ಜಿ-296 ವಾಹನದಲ್ಲಿ ಕಡಸೀಗೇನಹಳ್ಳಿ ಗ್ರಾಮದ ಬಸ್ ನಿಲ್ದಾಣದ ಬಳಿ ಹೋಗಿ ಅಲ್ಲಿ ಪಂಚರನ್ನು ಕರೆದುಕೊಂಡು ಅವರ ಜೊತೆಯಲ್ಲಿ ಮದ್ಯಾಹ್ನ 12:00 ಗಂಟೆ ಸಮಯಕ್ಕೆ ಮೇಲ್ಕಂಡ ಚಿಲ್ಲರೆ ಅಂಗಡಿಯ ಬಳಿ ಹೋಗುವಷ್ಟರಲ್ಲಿ ಸಮವಸ್ತ್ರದಲ್ಲಿದ್ದ ನಮ್ಮನ್ನು ಕಂಡು ಮದ್ಯಪಾನ ಸೇವನೆ ಮಾಡುತ್ತಿದ್ದ ಗಿರಾಕಿಗಳು ಓಡಿ ಹೋಗಿದ್ದು ನಂತರ ಮದ್ಯೆ ಸೇವನೆ ಮಾಡುತ್ತಿದ್ದ ಅಂಗಡಿಯ ಬಳಿ ಹೋಗಿ ಪರಿಶೀಲಿಸಿದಾಗ ಅಂಗಡಿಯ ಮುಂಭಾಗದಲ್ಲಿ ಖಾಲಿ ಟೆಟ್ರಾ ಪಾಕೆಟುಗಳು, ಖಾಲಿ ಲೋಟಗಳು ಇರುವುದು ಕಂಡು ಬಂದಿದ್ದು, ಅಂಗಡಿಯ ಮುಂಭಾಗದ ಜಗಲಿ ಕಲ್ಲಿನ ಕೆಳಭಾಗದಲ್ಲಿ ಖಾಲಿ ಕವರಿನಲ್ಲಿ ಮದ್ಯದ ಟೆಟ್ರಾ ಪಾಕೆಟುಗಳು ಇರುವುದು ಕಂಡು ಬಂದಿರುತ್ತೆ ಅಂಗಡಿಯಲ್ಲಿದ್ದ ಅಸಾಮಿಯ ಹೆಸರು ಮತ್ತು ವಿಳಾಸ ಕೇಳಲಾಗಿ ಅಂಬರೀಶ ಬಿನ್ ಮುನಿವೆಂಕಟರಾಯಪ್ಪ, 32 ವರ್ಷ, ಗೊಲ್ಲರು, ವಾಸ: ಕಡಶೀಗೇನಹಳ್ಳಿ ಗ್ರಾಮ, ಚಿಕ್ಕಬಳ್ಳಾಪುರ ತಾಲ್ಲೂಕು ಎಂದು ತಿಳಿಸಿದ, ನಂತರ ಅಂಗಡಿಯ ಅಂಬರೀಶ ರವರನ್ನು ಗಿರಾಕಿಗಳಿಗೆ, ಮದ್ಯವನ್ನು  ಪೂರೈಸಲು ಮತ್ತು ಮದ್ಯೆ ಸೇವಿಸಲು ಸ್ಥಳವಕಾಶ ಮಾಡಿಕೊಡಲು ನಿನ್ನ ಬಳಿ ಪರವಾನಿಗೆ, ಲೈಸನ್ಸ್ ದಾಖಲೆಗಳು ಇದೆಯೇ? ಇದ್ದರೆ ಹಾಜರುಪಡಿಸಲು ಕೋರಿದಾಗ  ಸದರಿ ಅಸಾಮಿ ತನ್ನ ಬಳಿ ಯಾವುದೂ ಇಲ್ಲವೆಂದು ಹೇಳಿದ. ಸದರಿ ಅಸಾಮಿ ತಾನೇ ಅಕ್ರಮವಾಗಿ ಮದ್ಯ ಸೇವಿಸಲು ಸ್ಥಳವಕಾಶ ಮಾಡಿಕೊಟ್ಟಿರುವುದಾಗಿ ತಪ್ಪೊಪ್ಪಿಕೊಂಡನು. ನಂತರ ಸದರಿ ಮದ್ಯದ ಟೆಟ್ರಾ ಪಾಕೆಟುಗಳನ್ನು ಮತ್ತು ಖಾಲಿ ಟೆಟ್ರಾ ಪಾಕೇಟುಗಳನ್ನು ಹಾಗೂ ಪ್ಲಾಸ್ಟಿಕ್ ಲೋಟಗಳನ್ನು ಪರಿಶೀಲಿಸಿದಾಗ 1) 90 ML ನ BANGALORE MALT  WHISKY  ಯ 21 ಟೆಟ್ರಾ ಪ್ಯಾಕೇಟುಗಳು, ಪ್ರತಿ ಟೆಟ್ರಾ ಪಾಕೇಟಿನ ಬೆಲೆ 24.47 ಪೈಸೆ, ಓಟ್ಟು ಬೆಲೆ 513.87 ಪೈಸೆಯಾಗಿರುತ್ತೆ. ಓಟ್ಟು ಸಾಮಾರ್ಥ್ಯ 1 ಲೀಟರ್, 890 ಮಿಲಿ ಆಗಿರುತ್ತೆ. 2) 90 ML ನ BANGALORE MALT  WHISKY  ಯ 5 ಖಾಲಿ ಟೆಟ್ರಾ ಪ್ಯಾಕೇಟುಗಳು, 3) 5 ಪ್ಲಾಸ್ಟಿಕ್ ಲೋಟಗಳನ್ನು ಮುಂದಿನ ಕ್ರಮಕ್ಕಾಗಿ ಪಂಚರ ಸಮಕ್ಷಮದಲ್ಲಿ ಮದ್ಯಾಹ್ನ 12:10 ಗಂಟೆಯಿಂದ ಮದ್ಯಾಹ್ನ 13:00 ಗಂಟೆ ವರೆಗೆ ಪಂಚನಾಮೆಯ ಮೂಲಕ ಅಮಾನತ್ತು ಪಡಿಸಿಕೊಂಡು ಅಂಗಡಿಯ ಮಾಲಿಕ ಅಂಬರೀಶ ರವರನ್ನು ನಮ್ಮ ವಶಕ್ಕೆ ಪಡೆದುಕೊಂಡು ಠಾಣೆಗೆ ವಾಪಸ್ಸು ಬಂದು ಆರೋಪಿಯ ವಿರುದ್ದ ಮುಂದಿನ ಕ್ರಮ ಕೈಗೊಳ್ಳಲು ಸೂಚಿಸಿದ್ದರ ಮೇರೆಗೆ ಈ ಪ್ರ.ವ,ವರದಿ.