ದಿನಾಂಕ :21/05/2020 ರ ಅಪರಾಧ ಪ್ರಕರಣಗಳು

  1. ಬಾಗೇಪಲ್ಲಿ ಪೊಲೀಸ್ ಠಾಣೆ ಮೊ.ಸಂ.101/2020 ಕಲಂ. 279,337 ಐ.ಪಿ.ಸಿ :-

          ದಿ: 20-05-2020 ರಂದು ಸಂಜೆ 7:00 ಗಂಟೆಗೆ ಪಿ.ಸಿ 527 ರವರು ಚಿಕ್ಕಬಳ್ಳಾಪುರ ಜಿಲ್ಲಾ ಆಸ್ಪತ್ರೆಯಿಂದ ಗಾಯಾಳು ಶ್ರೀ ಲಕ್ಷ್ಮೀನರಸಿಂಹಪ್ಪ.ಕೆ.ಎನ್ ಬಿನ್ ಲೇಟ್ ನರಸಿಂಹಪ್ಪ, 40 ವರ್ಷ, ಗೊಲ್ಲರು, ಜಿರಾಯ್ತಿ, ವಾಸ:ಎಮ್.ಕೊತ್ತಕೋಟ ಗ್ರಾಮ, ಕಾನಗಮಾಕಲಪಲ್ಲಿ ಪಂಚಾಯ್ತಿ, ಮಿಟ್ಟೇಮರಿ ಹೋಬಳಿ, ಬಾಗೇಪಲ್ಲಿ ತಾಲ್ಲೂಕು ರವರ ಹೇಳಿಕೆ ದೂರನ್ನು ಪಡೆದುಕೊಂಡಿದ್ದರ ಸಾರಾಂಶ – ಈಗ್ಗೆ ಸುಮಾರು 06 ತಿಂಗಳುಗಳಿಂದ ನಮ್ಮ ಗ್ರಾಮವಾದ ಎಮ್.ಕೊತ್ತಕೋಟ ಗ್ರಾಮದಲ್ಲಿ ಸರ್ಕಾರದ ವತಿಯಿಂದ ಶ್ರೀ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಕಟ್ಟಡ ಕಟ್ಟುತ್ತಿದ್ದು, ಸದರಿ ಕಟ್ಟಡಕ್ಕೆ ನಾನು ಈಗ್ಗೆ ಮೂರು ದಿನಗಳಿಂದ ದಿನಕೂಲಿಗಾಗಿ ನೀರನ್ನು ಹಾಕಲು ಹೋಗುತ್ತಿದ್ದೆನು.  ಹೀಗಿರುವಲ್ಲಿ ಇದೇ ದಿನ ಅಂದರೆ ದಿ: 20-05-2020 ರಂದು ಬೆಳಗ್ಗೆ 6:00 ಗಂಟೆಯಲ್ಲಿ ಎಂದಿನಂತೆ ಶಾಲೆಯ ಕಟ್ಟಡಕ್ಕೆ ನೀರನ್ನು ಹಾಕಿ ಬೆಳಗ್ಗೆ 9:00 ಗಂಟೆಯಲ್ಲಿ ಎಂದಿನಂತೆ ವಾಪಸ್ಸು ಮನೆಗೆ ಬಂದು ಪುನಃ ಶಾಲೆಯ ಬಳಿ ಹೋಗಲು ಇದೇ ದಿನ ಬೆಳಗ್ಗೆ ಸುಮಾರು 10:00 ಗಂಟೆಗೆ ಮನೆಯನ್ನು ಬಿಟ್ಟು ನಮ್ಮ ಗ್ರಾಮದಲ್ಲಿ ಬರುತ್ತಿದ್ದ ಯಾವುದೋ ಟ್ರಾಕ್ಟರಿನಲ್ಲಿ ಹತ್ತಿಕೊಂಡು ನಮ್ಮ ಗ್ರಾಮದ ಬಳಿಯಿರುವ ಕೆ.ಇ.ಬಿ ಪವರ್ ಹೌಸ್ ಬಳಿ ಇಳಿದುಕೊಂಡು ಮಿಟ್ಟೇಮರಿ-ಚಿಂತಾಮಣಿ ರಸ್ತೆಯಲ್ಲಿ ಎಡಭಾಗದಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ, ಬೆಳಗ್ಗೆ 10:15 ಗಂಟೆಗೆ ಹಿಂದುಗಡೆಯಿಂದ ಅಂದರೆ ಮಿಟ್ಟೇಮರಿ ಕಡೆಯಿಂದ ಕೆ.ಎ-40-ಎ-8017 ಹೊಂಡಾ ಶೈನ್ ದ್ವಿಚಕ್ರ ವಾಹನದ ಸವಾರ ಹಿಂಭಾಗದಲ್ಲಿ ಮತ್ತೊಬ್ಬರನ್ನು ಕೂರಿಸಿಕೊಂಡು ಸದರಿ ಸದರಿ ದ್ವಿಚಕ್ರ ವಾಹನವನ್ನು ಅತಿವೇಗ ಅಥವಾ ಅಜಾಗರೂಕತೆಯಿಂದ ಸವಾರಿ ಮಾಡಿಕೊಂಡು ಬಂದು ರಸ್ತೆಯ ಎಡಭಾಗದಲ್ಲಿ ನಡೆದುಕೊಂಡು ಹೋಗುತ್ತಿದ್ದ ನನಗೆ ಡಿಕ್ಕಿ ಹೊಡೆದು, ಇದರ ಪರಿಣಾಮ ನಾನು ರಸ್ತೆಯ ಮೇಲೆ ಬಿದ್ದು ಹೋದೆನು,  ದ್ವಿಚಕ್ರ ವಾಹನದ ಸವಾರ ಮತ್ತು ಹಿಂಬಧಿಯ ಸವಾರನು ಸಹ ರಸ್ತೆಯ ಮೇಲೆ ಬಿದ್ದು ಹೋದರು.  ಅಪಘಾತದಲ್ಲಿ ದ್ವಿಚಕ್ರ ವಾಹನ ಜಖಂಗೊಂಡಿರುತ್ತೆ.  ಅಪಘಾತದಲ್ಲಿ ನನ್ನ ಎಡಭಾಗದ ಮೊಣಕಾಲಿನ ಕೆಳಭಾಗದಲ್ಲಿ ಮೂಳೆ ಮುರಿತದ ರಕ್ತಗಾಯ, ಬಲಕೈನ ಮೊಣಕೈ, ಬಲಭಾಗದ ಭುಜದ ಮೇಲೆ ಅಂದರೆ ಬೆನ್ನಿನ ಬಳಿ ತರಚುಗಾಯಗಳಾಗಿರುತ್ತೆ.  ದ್ವಿಚಕ್ರ ವಾಹನದ ಹಿಂಭಾಗದಲ್ಲಿ ಕುಳಿತುಕೊಂಡಿದ್ದ ಹಿಂಬಧಿಯ ಸವಾರನಿಗೆ ತಲೆಗೆ ರಕ್ತಗಾಯವಾಗಿತ್ತು.  ದ್ವಿಚಕ್ರ ವಾಹನದ ಸವಾರನಿಗೆ ಸಣ್ಣಪುಟ್ಟ ಮೂಗೇಟುಗಳು ಆಗಿದ್ದವು.  ಗಾಯಗೊಂಡಿದ್ದ ನಮ್ಮಗಳನ್ನು ಸಾರ್ವಜನಿಕರು ಉಪಚರಿಸಿ ಯಾವುದೋ ಒಂದು ವಾಹನದಲ್ಲಿ ಚಿಕಿತ್ಸೆಗಾಗಿ ಬಾಗೇಪಲ್ಲಿ ಸರ್ಕಾರಿ ಆಸ್ಪತ್ರೆಗೆ ಕಳುಹಿಸಿದರು.  ನಂತರ ನಾನು ಬಾಗೇಪಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ವೈದ್ಯರ ಸಲಹೆ ಮೇರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಚಿಕ್ಕಬಳ್ಳಾಪುರ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿರುತ್ತೇನೆ.  ಅಪಘಾತ ಮಾಡಿದ ದ್ವಿಚಕ್ರ ವಾಹನ ಸವಾರನ ಹೆಸರು ತಿಳಿಯಲಿಲ್ಲ.  ದ್ವಿಚಕ್ರ ವಾಹನ ಸವಾರನದ್ದು ಕನ್ನಂಪಲ್ಲಿ ಗ್ರಾಮ ಎಂದು ತಿಳಿದಿರುತ್ತೆ.  ಕೆ.ಎ-40-ಎ-8017 ಹೊಂಡಾಶೈನ್ ದ್ವಿಚಕ್ರ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಸವಾರಿ ಮಾಡಿಕೊಂಡು ಅಪಘಾತ ಮಾಡಿದ ಸವಾರನ ವಿರುದ್ದ ಕಾನೂನು ರೀತ್ಯ ಕ್ರಮ ಜರುಗಿಸಲು ಕೋರುತ್ತೇನೆ.  ಕನ್ನಡ ಭಾಷೆಯಲ್ಲಿ ಬರೆದಿದ್ದನ್ನು ನನ್ನ ಭಾಷೆಯಲ್ಲಿ ತರ್ಜುಮೆ ಮಾಡಿ ಕೇಳಿದೆ ಸರಿಯಿದೆ, ಎಂದು ನೀಡಿದ ಹೇಳಿಕೆ ದೂರು.

  1. ಚೇಳೂರು ಪೊಲೀಸ್ ಠಾಣೆ ಮೊ.ಸಂ.24/2020 ಕಲಂ. 87 ಕೆ.ಪಿ ಆಕ್ಟ್ :-

          ದಿನಾಂಕ:20/05/2020 ರಂದು ಸಂಜೆ 19-00 ಗಂಟೆಗೆ ನ್ಯಾಯಾಲಯ ಕರ್ತವ್ಯದ ಸಿಬ್ಬಂದಿಯಾದ ಸಿ.ಪಿ.ಸಿ 445 ರಮೇಶ್ ರವರ ಘನ ನ್ಯಾಯಾಲಯದಿಂದ ಪ್ರಕರಣ ದಾಖಲಿಸಲು ಅನುಮತಿಯನ್ನು ಪಡೆದು ಸದರಿ ಆದೇಶ ಪತ್ರಿಯನ್ನು ತಂದು ಠಾಣೆಯಲ್ಲಿ ಹಾಜರು ಪಡಿಸಿದ್ದರ ಸಾರಾಂಶವೆನೇಂದರೆ, ದಿನಾಂಕ:20/05/2020 ರಂದು ಬೆಳಗ್ಗೆ 11-30 ಗಂಟೆಗೆ  ಪಿ.ಎಸ್.ಐ ರವರು ,ಮಾಲು ಮತ್ತು ಪಂಚನಾಮೆ ಹಾಗೂ ಆರೋಪಿಗಳೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ವರದಿಯ ಸಾರಾಂಶವೇನೇಂದರೆ, ದಿನಾಂಕ:20/05/2020 ರಂದು ಬೆಳಗ್ಗೆ 9-30 ಗಂಟೆಯ  ಸಮಯದಲ್ಲಿ  ಠಾಣೆಯಲ್ಲಿದ್ದಾಗ ಬಾಗೇಪಲ್ಲಿ ತಾಲ್ಲೂಕು ಚೇಳೂರು ಹೋಬಳಿಯ ಪಾಳ್ಯಕೆರೆ ಗ್ರಾಮದ ಬಳಿ ಸರ್ಕಾರಿ ಶಾಲೆಯ ಹಿಂಭಾಗದ ಅರಳಿ ಕಟ್ಟೆಯ ಮೇಲೆ  ಸಾರ್ವಜನಿಕ ಸ್ಥಳದಲ್ಲಿ ಯಾರೋ ಕೆಲವರು ಅಂದರ್-ಬಾಹರ್ ಇಸ್ಪೀಟ್ ಜೂಜಾಟವಾಡುತ್ತಿರುವುದಾಗಿ ಬಂದ ಖಚಿತ ಮಾಹಿತಿಯ ಮೇರೆಗೆ ನಾನು ಮತ್ತು ಠಾಣೆಯ ಸಿಬ್ಬಂದಿಯವರಾದ ಸಿ.ಹೆಚ್.ಸಿ 149 ಇನಾಯಿತ್ ವುಲ್ಲಾ, ಸಿ.ಹೆಚ್.ಸಿ 141 ರಮಣಾರೆಡ್ಡಿ ಟಿ.ಎನ್,  ಸಿ.ಪಿ.ಸಿ-519 ಚಂದ್ರ ಶೇಖರ್, ಸಿ.ಪಿ.ಸಿ 07 ವಿಧ್ಯಾದರ್, ಸಿ.ಪಿ.ಸಿ 113 ಲಿಂಗರಾಜು , ಸಿ.ಪಿ.ಸಿ 09 ನಾರಾಯಣಸ್ವಾಮಿ ರವರೊಂದಿಗೆ  ಪಾಳ್ಯಕೆರೆ ಗ್ರಾಮದ ಬಳಿ ಹೋಗಿ ಸದರಿ ಗ್ರಾಮದ ಮುಖ್ಯ ರಸ್ತೆಯಲ್ಲಿ ಪಂಚರನ್ನು ಸರ್ಕಾರಿ ಜೀಪ್ ಸಂಖ್ಯೆ ಕೆಎ 42 ಜಿ-61 ವಾಹನದ ಬಳಿ ಬರಮಾಡಿಕೊಂಡು  ಪಂಚರಿಗೆ ಇದೇ ಗ್ರಾಮದ ಸರ್ಕಾರಿ ಶಾಲೆಯ ಹಿಂಭಾಗದಲ್ಲಿನ ಅರಳಿ ಕಟ್ಟೆಯ ಮೇಲೆ  ಸಾರ್ವಜನಿಕ ಸ್ಥಳದಲ್ಲಿ ಯಾರೋ ಕೆಲವರು ಗುಂಪಾಗಿ ಕುಳಿತುಕೊಂಡು ಅಂದರ್ ಬಾಹರ್ ಜೂಜಾಟ ವಾಡುತ್ತಿರುವುದಾಗಿ ಖಚಿತ ಮಾಹಿತಿ ಬಂದಿದ್ದು ದಾಳಿ ಮಾಡಲು ಪಂಚರಾಗಿ ಬರಬೇಕೆಂದು ಕೋರಿದರ ಮೇರೆಗೆ ಸದರಿಯವರುಗಳು ಒಪ್ಪಿಕೊಂಡಿದ್ದು ನಂತರ  ಪೊಲೀಸರು  &  ಪಂಚರು ನಡೆದುಕೊಂಡು ಸರ್ಕಾರಿ ಶಾಲೆಯ ಹಿಂಭಾಗ ಕಟ್ಟಡದ ಬಳಿ ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಯಾರೋ ಕೆಲವರು ಅರಳಿ ಕಟ್ಟೆಯ ಮೇಲೆ ಗುಂಪಾಗಿ ಕುಳಿತುಕೊಂಡು ಪ್ಲಾಸ್ಟಿಕ್ ಪೇಪರ್ ಮೇಲೆ ಇಸ್ಫೇಟ್ ಎಲೆಗಳನ್ನು ಹಾಕಿಕೊಂಡು ಅಂದರ್ 100 ಬಾಹರ್ 100 ಎಂದು ಕೂಗುತ್ತಾ ಇಸ್ಪೀಟ್ ಜೂಜಾಟವಾಡುತ್ತಿದ್ದು ಸದರಿಯವರನ್ನು ಪೊಲೀಸರು ಸುತ್ತುವರೆದು ಹಿಡಿದು ಕೊಂಡು ವಶಕ್ಕೆ ಪಡೆದು ಹೆಸರು ಮತ್ತು ವಿಳಾಸವನ್ನು ಕೇಳಲಾಗಿ  01) ಗಟ್ಟು ನರಸಿಂಹಪ್ಪ ಬಿನ್ ಲೇಟ್ ವೆಂಕಟಪ್ಪ, 68 ವರ್ಷ, ಆದಿ ದ್ರಾವಿಡ ಜನಾಂಗ, ಜಿರಾಯ್ತಿ, ವಾಸ: ಪಾಳ್ಯಕೆರೆ ಗ್ರಾಮ, ಬಾಗೇಪಲ್ಲಿ ತಾಲ್ಲೂಕು ರವರ ಮುಂದೆ 1200 ರೂ ಇದ್ದು ಆತನ ಪಕ್ಕದಲ್ಲಿದ್ದ  02) ಮೆಹಬೂಬ ಸಾಬ್ ಬಿನ್ ಲೇಟ್ ಫಕೀರ್ ಸಾಬ್,70 ವರ್ಷ, ಜಿರಾಯ್ತಿ, ಮುಸ್ಲಿಂ ಜನಾಂಗ, ವಾಸ: ಪಾಳ್ಯಕೆರೆ  ಗ್ರಾಮ,  ಬಾಗೇಪಲ್ಲಿ ತಾಲ್ಲೂಕು ಆತನ ಮುಂದೆ 900 ರೂ ಇದ್ದು ನಂತರ ಆತನ ಪಕ್ಕದಲ್ಲಿ ಕುಳಿತ್ತಿದ್ದ ವ್ಯೆಕ್ತಿಯ ಹೆಸರು ವಿಳಾಸ ಕೇಳಲಾಗಿ 3) ನಾಗರಾಜ್ ಬಿನ್ ಶಿವಪ್ಪ ,28 ವರ್ಷ, ಜಿರಾಯ್ತಿ, ನಾಯಕರು, ವಾಸ: ಪಾಳ್ಯಕೆರೆ  ಗ್ರಾಮ, ಬಾಗೇಪಲ್ಲಿ ತಾಲ್ಲೂಕು ಆತನ ಮುಂದೆ 1000 ರೂ ಇದ್ದು ನಂತರ ಆತನ ಮುಂಭಾಗದಲ್ಲಿದ್ದ ವ್ಯೆಕ್ತಿಯ ಹೆಸರು ವಿಳಾಸ ಕೇಳಲಾಗಿ 04) ಸುಬಾನ್ ಸಾಬ್ ಬಿನ್ ಲೇಟ್ ಷೇಕ್ ಫಕೃದ್ದೀನ್ ಸಾಬ್ , 45 ವರ್ಷ, ಪೈಂಟರ್ ಕೆಲಸ, ಮುಸ್ಲಿಂ ಜನಾಂಗ, ವಾಸ: ಪಾಳ್ಯಕೆರೆ  ಗ್ರಾಮ, ಬಾಗೇಪಲ್ಲಿ ತಾಲ್ಲೂಕು ಆತನ ಮುಂದೆ 1100  ರೂ ಇದ್ದು 05) ಹರೀಶ್ ಬಿನ್ ನರಸಿಂಹಪ್ಪ,40 ವರ್ಷ, ಗ್ಯಾಂಗ್ ಮೆನ್ ಕೆಲಸ, ನಾಯಕರು, ವಾಸ: ಪಾಳ್ಯಕೆರೆ  ಗ್ರಾಮ ಬಾಗೇಪಲ್ಲಿ ತಾಲ್ಲೂಕು ರವರ ಮುಂದೆ1000 ರೂ ಇದ್ದು ನಂತರ ರವರ ಪಕ್ಕದಲ್ಲಿ ವ್ಯೆಕ್ತಿಯ ಹೆಸರು ವಿಳಾಸ ಕೇಳಲಾಗಿ  06) ಮಹೇಶ್ ಬಿನ್ ನಾರಾಯಣಪ್ಪ, 30 ವರ್ಷ, ನಾಯಕರು, ಜಿರಾಯ್ತಿ, ವಾಸ: ಪಾಳ್ಯಕೆರೆ , ಬಾಗೇಪಲ್ಲಿ ತಾಲ್ಲೂಕು ಆತನ ಮುಂದೆ 1050 ರೂ  ಇರುತ್ತೆ.  ಸದರಿಯವರ ಬಳಿ ಜೂಜಾಟಕ್ಕೆ ಪಣವಾಗಿ ಇಟ್ಟಿದ್ದ ಒಟ್ಟು ನಗದು ಹಣ 6250/-(ಆರು ಸಾವಿರದ ಇನ್ನೂರ ಐವತ್ತು ರೂಗಳು ಮಾತ್ರ) ಮತ್ತು ಒಂದು ಹಳೆಯ ಪ್ಲಾಸ್ಟಿಕ್ ಪೇಪರ್ ಮತ್ತು  52 ಇಸ್ಪೀಟ್ ಎಲೆಗಳಿದ್ದು  ಸದರಿ ಮಾಲನ್ನು ಪಂಚರ ಸಮಕ್ಷಮ ಪಂಚನಾಮೆಯ ಮುಖಾಂತರ ಅಮಾನತ್ತು ಪಡಿಸಿಕೊಂಡು ನಂತರ  ಮಾಲು & ಪಂಚನಾಮೆ ಹಾಗೂ ಆರೋಪಿತರೊಂದಿಗೆ 11-30 ಗಂಟೆ ಠಾಣೆಗೆ ಹಾಜರಾಗಿ ಠಾಣೆಯಲ್ಲಿಮುಂದಿನ ಕ್ರಮಕ್ಕಾಗಿ ವರದಿಯನ್ನು  ಪಡೆದುಕೊಂಡು ಠಾಣಾ ಎನ್.ಸಿ.ಆರ್ ನಂಬರ್ :27/2020ರಂತೆ ದಾಖಲಿಸಿಕೊಂಡು ತನಿಖೆಯನ್ನು ಕೈಗೊಂಡಿದ್ದು, ಸದರಿ ಆಸಾಮಿಗಳ ವಿರುದ್ದ ಕಲಂ: 87 ಕೆ.ಪಿ ಆಕ್ಟ್ ರೀತ್ಯಾ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಗೊಳ್ಳಲು ಘನ ನ್ಯಾಯಾಲಯ ಅನುಮತಿ ನೀಡಲು ಕೋರಿ ಮನವಿಯನ್ನು ಸಲ್ಲಿಸಿ ಕೊಂಡಿದ್ದು ಈ ದಿನ ಘನ ನ್ಯಾಯಾಲಯ  ಆಸಾಮಿಗಳ ವಿರುದ್ದ ಪ್ರಕರಣವನ್ನು ದಾಖಲಿಸಲು ಅನುಮತಿಯನ್ನು ನೀಡಿದ್ದರ ಮೇರೆಗೆ ಠಾಣಾ ಮೊ.ಸಂಖ್ಯೆ:24/2020 ಕಲಂ:87 ಕೆ.ಪಿ.ಆಕ್ಟ್ ರೀತ್ಯಾ ಪ್ರಕರಣ ದಾಖಲಿಸಿರುತ್ತೆ.

  1. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.205/2020 ಕಲಂ. 323,324,504,506 ಐ.ಪಿ.ಸಿ:-

          ದಿನಾಂಕ: 20/05/2020 ರಂದು ರಾತ್ರಿ 8.05 ಗಂಟೆಗೆ ಚಿಂತಾಮಣಿ ಸರ್ಕಾರಿ ಆಸ್ಪತ್ರೆಯಿಂದ ಬಂದ ಮೆಮೋವನ್ನು ಪಡೆದು ಆಸ್ಪತ್ರಗೆ ಬೇಟಿ ನೀಡಿ ಗಾಯಾಳು ನಾಗೇಶ್ ಬಿನ್ ನಾರಾಯಣಸ್ವಾಮಿ, 35 ವರ್ಷ, ನಾಯಕರು, ಕೂಲಿಕೆಲಸ, ಟಿ.ಹೊಸೂರು ಗ್ರಾಮ, ಚಿಂತಾಮಣಿ ತಾಲ್ಲೂಕು ರವರ ಹೇಳಿಕೆಯನ್ನು ಪಡೆದುಕೊಂಡು ರಾತ್ರಿ 9.15 ಗಂಟೆಗೆ ಠಾಣೆಗೆ ವಾಪಸ್ಸಾಗಿ ದಾಖಲಿಸಿಕೊಂಡ ಗಾಯಾಳುವಿನ ಹೇಳಿಕೆಯ ಸಾರಾಂಶವೇನೆಂದರೆ, ಈ ದಿನ ದಿನಾಂಕ: 20/05/2020 ರಂದು ತಾನು ಮತ್ತು ತನ್ನ ಸ್ನೇಹಿತನಾದ ತಮ್ಮ ಗ್ರಾಮದ ಶ್ರೀನಿವಾಸ ಬಿನ್ ವೆಂಕಟರವಣಪ್ಪ ರವರು ಚಿಂತಾಮಣಿ ನಗರದ ಟೊಮೆಟೋ ಮಾರುಕಟ್ಟೆಯಲ್ಲಿ ಕೂಲಿಕೆಲಸ ಮುಗಿಸಿಕೊಂಡು ತಮ್ಮ ಗ್ರಾಮಕ್ಕೆ ಹೋಗಲು ಶ್ರೀನಿವಾಸರವರ ಬಾಭತ್ತು ದ್ವಿಚಕ್ರ ವಾಹನದಲ್ಲಿ  ಹೋಗಿದ್ದು, ತನ್ನ ಮತ್ತೊಬ್ಬ ಸ್ನೇಹಿತ ಬರುವುದಾಗಿ ತಿಳಿಸಿದ್ದರಿಂದ ಕನ್ನಂಪಲ್ಲಿ ಗ್ರಾಮದ ಡೈರಿ ಮುಂದೆ ಇರುವ ನಿಹಾಲ್ ಬಾರ್ ಹಿಂಭಾಗದಲ್ಲಿ ಇರುವ ಹುಣಸೇಮರದ ಕೆಳಗೆ ಕಾಯುತ್ತಿದ್ದಾಗ ತಮ್ಮ ಸಂಬಂಧಿಯಾದ ಇದೇ ಚಿಂತಾಮಣಿ ತಾಲ್ಲೂಕು, ಗೌಡನಹಳ್ಳಿ ಗ್ರಾಮದ ಲಕ್ಷ್ಮಣ ಬಿನ್ ಚಿಕ್ಕನಾರೆಪ್ಪ ರವರು ಸಂಜೆ 5.30 ಗಂಟೆ ಸಮಯದಲ್ಲಿ ತಮ್ಮ ಬಳಿ ಬಂದು ಹಳೇ ವೈಷಮ್ಯದ ಹಿನ್ನಲೆಯಲ್ಲಿ ತನ್ನ ಮೇಲೆ ಜಗಳ ತೆಗೆದು ಅವಾಚ್ಯಶಬ್ದಗಳಿಂದ ಬೈದು, ಕೈಗಳಿಂದ ಮೈ ಮೇಲೆ ಹೊಡೆದು ನೋವನ್ನುಂಟು ಮಾಡಿರುತ್ತಾನೆ. ನಂತರ ಅಲ್ಲಿಯೇ ಬಿದ್ದಿದ್ದ ಬೀರ್ ಬಾಟೆಲ್ ನಿಂದ ತನ್ನ ಹಣೆಗೆ ಹೊಡೆದು ರಕ್ತಗಾಯವನ್ನುಂಟು ಮಾಡಿ, ಅದೇ ಬಾಟೆಲ್ ನಿಂದ ತನ್ನ ಎಡ ಮುಂಗೈಗೆ, ಹಸ್ತಕ್ಕೆ ಹಾಕಿ ರಕ್ತಗಾಯವನ್ನುಂಟು ಮಾಡಿರುತ್ತಾನೆ. ಅಷ್ಟರಲ್ಲಿ ತನ್ನ ಸ್ನೇಹಿತನಾದ ಶ್ರೀನಿವಾಸ್ ಮತ್ತು ಇತರರು ಬಂದು ಜಗಳ ಬಿಡಿಸಿದ್ದು, ಮೇಲ್ಕಂಡ ಆಸಾಮಿಯು ಸ್ಥಳದಿಂದ ಹೋಗುವಾಗ ನಿನ್ನನ್ನು ಸಾಯಿಸುವವರೆಗೂ ಬಿಡುವುದಿಲ್ಲವೆಂದು ಪ್ರಾಣಬೆದರಿಕೆಯನ್ನು ಹಾಕಿರುತ್ತಾನೆ. ಆದ್ದರಿಂದ ಮೇಲ್ಕಂಡ ಲಕ್ಷ್ಮಣ ರವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಕೋರಿ ನೀಡಿದ ಹೇಳಿಕೆಯ ದೂರಾಗಿರುತ್ತೆ.

  1. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.206/2020 ಕಲಂ. 323,324,504,506 ಐ.ಪಿ.ಸಿ:-

          ದಿನಾಂಕ:20/05/2020 ರಂದು ಚಿಂತಾಮಣಿ ಸರ್ಕಾರಿ ಆಸ್ವತ್ರೆಯಲ್ಲಿ ಗಾಯಾಳು ಲಕ್ಷ್ಮಣ್  ಬಿನ್ ಚಿಕ್ಕ ನಾರೆಪ್ಪ, 29 ವರ್ಷ, ಖಾಸಗಿ ಕಂಪನಿಯಲ್ಲಿ ಕೆಲಸ, ನಾಯಕ ಜನಾಂಗ, ಗೌಡನಹಳ್ಳಿ ಗ್ರಾಮ ಚಿಂತಾಮಣಿ ತಾಲ್ಲೂಕು ರವರು ನೀಡದ ಹೇಳಿಕೆಯನ್ನು ಪಡೆದುಕೊಂಡು ರಾತ್ರಿ 9.45 ಗಂಟೆಗೆ ಠಾಣೆಗೆ ವಾಪಸ್ಸು ಬಂದಿದ್ದು ಸದರಿ ಹೇಳಿಕೆಯ ಸಾರಾಂಶವೇನೆಂದರೆ, ಈ ದಿನ ದಿನಾಂಕ 20/05/2020 ರಂದು  ಸಂಜೆ 4.30 ಗಂಟೆ ಸಮಯದಲ್ಲಿ ತಾನು ತನ್ನ ಬಾಬತ್ತು ದ್ವಿಚಕ್ರ ವಾಹನಕ್ಕೆ ಪೆಟ್ರೋಲ್ ಹಾಕಿಸಿಕೊಳ್ಳಲು ಕನ್ನಂಪಲ್ಲಿ ಯಲ್ಲಿರುವ ಪೆಟ್ರೋಲ್ ಬಂಕ್ ಗೆ ಹೋಗಿದ್ದು ಆ ಸಮಯದಲ್ಲಿ ಎಂ.ಹೊಸೂರು ಗ್ರಾಮದ ತನ್ನ ಸ್ನೇಹಿತನಾದ ಶ್ರೀನಿವಾಸ್ ಬಿನ್ ವೆಂಕಟರವಣಪ್ಪ ರವರು ತನ್ನನ್ನು ನೋಡಿ ತನ್ನ ಬಳಿ ಬರುವಂತೆ ಹೇಳಿದ್ದು ತಾನು ಅಲ್ಲಿಯೇ ಹುಣಸೇಮರದ ಕೆಳಗೆ ಕುಳಿತ್ತಿದ್ದ ಶ್ರೀನಿವಾಸ್ ರವರ ಬಳಿ ಹೋಗಿದ್ದು ಶ್ರೀನಿವಾಸ್ ರವರ ಜೊತೆ ಎಂ.ಹೊಸೂರು ಗ್ರಾಮದ ತನ್ನ ದೂರದ ಸಂಬಂದಿಯಾದ ನಾಗೇಶ್ ಎಂಬುವವರು ಸಹ ಕುಳಿತುಕೊಂಡಿದ್ದರು. ಸದರಿ ನಾಗೇಶ್ ತನ್ನನ್ನು ಕುರಿತು ಏನೋ ಬೋಳಿ ಮಗನೇ ನನ್ನನ್ನು ನೋಡಿಯೂ ತನ್ನ ಬಳಿ ಬಾರದೇ ಹೋಗುತ್ತಿದ್ದಯಾ ಎಂದು  ಅವಾಶ್ಚ ಶಬ್ದಗಳಿಂದ ಬೈದು, ತನಗೆ ಕೈಗಳಿಂದ ಮೈ ಮೆಲೆ ಹೊಡೆದನು. ತಾನು ಏಕೆ ವಿನಾಕಾರಣ ಗಲಾಟೆ ಮಾಡುತ್ತಿದ್ದಿಯಾ ಎಂದು ಕೇಳುತ್ತಿದ್ದಂತೆ ಅಲ್ಲಿಯೇ ಬಿದ್ದಿದ್ದ ಯಾವುದೋ ಮದ್ಯದ ಬಾಟಲಿಯಿಂದ ತನ್ನ ತಲೆ ಮೇಲೆ ಹೊಡೆದು ರಕ್ತಗಾಯ ಪಡಿಸಿದನು. ಅಷ್ಟರಲ್ಲಿ ಶ್ರೀನಿವಾಸ್ ಮತ್ತು ಯಾರೋ ಸಾರ್ವಜನಿಕರು ಅಡ್ಡ ಬಂದು ಜಗಳ ಬಿಡಿಸಿದರು. ನಾಗೇಶ್ ತನ್ನನ್ನು ಕುರಿತು ಮಗನೇ ಈ ದಿನ ಬದುಕಿಕೊಂಡಿದ್ದಿಯಾ ನಿನ್ನನ್ನು ಪ್ರಾಣ ಸಹಿತ ಬಿಡುವುದಿಲ್ಲ ಎಂದು ಪ್ರಾಣ ಬೆದರಿಕೆ ಹಾಕಿದನು. ನಂತರ ಅಲ್ಲಿಗೆ ಬಂದ ಸುಧಾಕರ್ ಮತ್ತು ಜಗದೀಶ್ ಎಂಬುವವರು ತನ್ನನ್ನು ಆಸ್ವತ್ರೆಗೆ ಕರೆದುಕೊಂಡು ಬಂದರು. ಆದ್ದರಿಂದ ಮೇಲ್ಕಂಡ ನಾಗೇಶ್ ರವರ ವಿರುದ್ದ  ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ನೀಡಿದ ಹೇಳಿಕೆಯ ದೂರಾಗಿರುತ್ತೆ.

  1. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.207/2020 ಕಲಂ. ಮನುಷ್ಯ ಕಾಣೆ :-

          ದಿನಾಂಕ: 21/05/2020 ರಂದು ಬೆಳಿಗ್ಗೆ 11.30 ಗಂಟೆಗೆ ಶ್ರೀಮತಿ ಜಿ.ಎನ್. ಮಮತಶ್ರೀ ಕೊಂ ಮಂಜುನಾಥ.ಕೆ.ಸಿ, 24 ವರ್ಷ, ಆದಿ ಕರ್ನಾಟಕ ಜನಾಂಗ, ಖಾಸಗಿ ಶಾಲೆಯಲ್ಲಿ ಶಿಕ್ಷಕಿ, ದೊಡ್ಡಗಂಜೂರು ಗ್ರಾಮ, ಚಿಂತಾಮಣಿ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ತನಗೆ ಈಗ್ಗೆ ಸುಮಾರು 7 ವರ್ಷಗಳ ಹಿಂದೆ ಇದೇ ಚಿಂತಾಮಣಿ ತಾಲ್ಲೂಕು, ದೊಡ್ಡಗಂಜೂರು ಗ್ರಾಮದ ವಾಸಿಯಾದ ಕೆ.ಸಿ.ಮಂಜುನಾಥ ರವರೊಂದಿಗೆ ಮದುವೆಯಾಗಿರುತ್ತೆ. ತನ್ನ ಗಂಡ ದೊಡ್ಡಗಂಜೂರು ಗ್ರಾಮದ ಸಾರ್ವಜನಿಕ ಗ್ರಂಥಾಲಯದಲ್ಲಿ ಮೇಲ್ವಿಚಾರಕರಾಗಿ ಕಾರ್ಯನಿರ್ವಹಿಸುತ್ತಿರುತ್ತಾರೆ. ತನ್ನ ಗಂಡನಿಗೆ ಈಗ್ಗೆ ಸುಮಾರು ಮೂರು ವರ್ಷಗಳಿಂದ ಮಾನಸಿಕ ಕಾಯಿಲೆ ಇದ್ದು, ಈ ಬಗ್ಗೆ ತಾವುಗಳು ಚಿಂತಾಮಣಿ ಹಾಗೂ ಬೆಂಗಳೂರಿನ ನಿಮಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಕೊಡಿಸುತ್ತಿದ್ದರೂ ಸಹ ಗುಣಮುಖರಾಗದೆ ಮಾನಸಿಕ ಅಸ್ಪಸ್ಥರಂತೆ ಇರುತ್ತಿರುತ್ತಾರೆ. ಹೀಗಿರುವಾಗ ದಿನಾಂಕ: 08/02/2020 ರಂದು ಬೆಳಿಗ್ಗೆ 10.00 ಗಂಟೆ ಸಮಯದಲ್ಲಿ ತನ್ನ ಗಂಡ ಚಿಂತಾಮಣಿಗೆ ಹೋಗಿ ಬರುತ್ತೇನೆಂದು ತನಗೆ ಹೇಳಿ ಚಿಂತಾಮಣಿಗೆ ಹೋದವರು ರಾತ್ರಿಯಾದರೂ ಸಹ ಮನೆಗೆ ವಾಪಸ್ ಬಂದಿರುವುದಿಲ್ಲ. ನಂತರ ತಾವುಗಳು ಚಿಂತಾಮಣಿ ನಗರ, ನಮ್ಮ ಸಂಬಂದಿಕರ ಮನೆಗಳಲ್ಲಿ, ತನ್ನ ಗಂಡನ ಸ್ನೇಹಿತರ ಮನೆಗಳಲ್ಲಿ ಹುಡುಕಾಡಲಾಗಿ ಎಲ್ಲಿಯೂ ಪತ್ತೆಯಾಗಿರುವುದಿಲ್ಲ. ತನ್ನ ಗಂಡ ಮಾನಸಿಕ ಅಸ್ವಸ್ಥನಾಗಿರುವುದರಿಂದ ಎಲ್ಲಿಗೂ ಹೊರಟು ಹೋಗಿದ್ದು, ಪುನಃ ಮನೆಗೆ ವಾಪಸ್ ಬರುತ್ತಾನೆಂದು ತಾವುಗಳು ಠಾಣೆಯಲ್ಲಿ ದೂರನ್ನು ನೀಡಿರುವುದಿಲ್ಲ. ಹೀಗಿರುವಾಗ ದಿನಾಂಕ: 07/05/2020 ರಂದು ಬೆಂಗಳೂರಿನಿಂದ ಯಾರೋ ತನಗೆ ಕರೆ ಮಾಡಿ ನಿನ್ನ ಗಂಡ ಬಿಡದಿಯ ಬಳಿ ಇರುವುದಾಗಿ ತಿಳಿಸಿದ್ದು, ಅದರಂತೆ ತಾವುಗಳು ಸದರಿ ಸ್ಥಳಕ್ಕೆ ಹೋಗಿ ನೋಡಲಾಗಿ ಅಲ್ಲಿಯೂ ಸಹ ಇರದೆ ಎಲ್ಲಿಯೋ ಹೊರಟು ಹೋಗಿರುತ್ತಾರೆ. ಕಾಣೆಯಾಗಿದ್ದ ತನ್ನ ಗಂಡನಾದ ಕೆ.ಸಿ.ಮಂಜುನಾಥ ರವರು ಮಾನಸಿಕ ಅಸ್ವಸ್ಥನಾಗಿರುವುದರಿಂದ ಎಲ್ಲಿಗೂ ಹೊರಟು ಹೋಗಿದ್ದು, ಪುನಃ ಮನೆಗೆ ವಾಪಸ್ ಬರುತ್ತಾನೆಂದು ತಿಳಿದು ಠಾಣೆಯಲ್ಲಿ ದೂರನ್ನು ನೀಡದೆ ಇದ್ದು, ಇಲ್ಲಿಯವರೆಗೂ ತನ್ನ ಗಂಡ ಪತ್ತೆಯಾಗದ ಕಾರಣ ಈ ದಿನ ತಡವಾಗಿ ದೂರನ್ನು ನೀಡುತ್ತಿದ್ದು ಕಾಣೆಯಾಗಿರುವ ತನ್ನ ಗಂಡನನ್ನು ಪತ್ತೆ ಮಾಡಿಕೊಡಬೇಕೆಂದು ಕೋರಿ ನೀಡಿದ ದೂರಾಗಿರುತ್ತೆ.

  1. ನಂದಿಗಿರಿಧಾಮ ಪೊಲೀಸ್ ಠಾಣೆ ಮೊ.ಸಂ.32/2020 ಕಲಂ. 279,337 ಐ.ಪಿ.ಸಿ:-

          ದಿನಾಂಕ 21-05-2020 ರಂದು ಗಾಯಾಳು ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಯಲು ಜಿಲ್ಲಾಸ್ಪತ್ರಗೆ ಬೇಟಿ ನೀಡಿ ವೈದ್ಯರ ಸಮಕ್ಷಮ ಗಾಯಾಳು ಹೇಳಿಕೆಯನ್ನು ಪಡೆದುಕೊಂಡಿದ್ದರ ಸಾರಾಂಶವೇನೆಂದರೆ  ತಾನು ನೇಪಾಳ ರಾಜ್ಯದವನಾಗಿದ್ದು ಈಗ್ಗೆ 10 ವರ್ಷಗಳಿಂದ ನಾನು ದೇವನಹಳ್ಳಿ ತಾಲ್ಲೂಕಿನ ಇರಿಗೇನಹಳ್ಳಿ ಗ್ರಾಮದ ಬಳಿಯಿರುವ ವೈಎಸ್ ಆರ್ ಲೇಔಟ್ ನಲ್ಲಿ ವಾಚ್ ಮೆನ್ ಆಗಿ ಕೆಲಸ ಮಾಡಿಕೊಂಡಿದ್ದು  ದಿನಾಂಕ 04-05-2020 ರಂದು ತಾನು ಚಿಕ್ಕಬಳ್ಳಾಪುರಕ್ಕೆ ಬರಲು ರಾತ್ರಿ 7-00 ಗಂಟೆಯ ಸಮಯದಲ್ಲಿ ನಡೆದುಕೊಂಡು  ಚದಲಪುರ ಸಮೀಪದ ರೇಷ್ಮೆ ಇಲಾಖೆಯ ಕಛೇರಿಯ ಮುಂದೆ ಎನ್ ಎಚ್-7 ರಸ್ತೆಯ ಎಡಬದಿಯಲ್ಲಿ ನಡೆದುಕೊಂಡು ಬರುತ್ತಿದ್ದಾಗ ತನ್ನ ಹಿಂದಿನಿಂದ ಕೆಎ-43-ಆರ್-6443 ನೊಂದಣಿಯ ದ್ವಿಚಕ್ರ ವಾಹನ ಸವಾರ ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ನನಗೆ ಅಪಘಾತ ಪಡಿಸಿದ ಪರಿಣಾಮ ತಾನು ರಸ್ತೆಯ ಮೇಲೆ ಬಿದ್ದು ಹೋಗಿ ಎಡಗೈ ತೋಳು ಊದಿದ ಗಾಯ ಬಲಬಾಗದ ಸೊಂಟಕ್ಕೆ ಮೂಗೇಟುಆಯಿತು ಆಗ ತನ್ನ ಜೊತೆಯಲ್ಲಿ ಕೆಲಸ ಮಾಡುತ್ತಿದ್ದ ವೆಂಕಟೇಶ್ ರವರಿಗೆ ದೂರವಾಣಿ ಕರೆ ಮಾಡಿ ವಿಚಾರ ತಿಳಿಸಿ ಅವನನ್ನು ಸ್ಥಳಕ್ಕೆ ಕರೆಯಿಸಿಕೊಂಡಿದ್ದು ಅಷ್ಟರಲ್ಲಿ ಸ್ಥಳಕ್ಕೆ ಬಂದ 108 ಆಂಬ್ಯುಲೆನ್ಸ್ ನಲ್ಲಿ ಚಿಕ್ಕಬಳ್ಳಾಪುರ ಸರ್ಕಾರಿ ಆಸ್ಪತ್ರಗೆ ಹೋಗಿದ್ದು ಅಪಘಾತದ ಬಗ್ಗೆ ಇರಿಗೇನಹಳ್ಳಿ ಗ್ರಾಮದ ನಾಗರಾಜು ರವರು ಮಾತನಾಡುವುದಾಗಿ ತಿಳಿಸಿದ್ದರ ಕಾರಣ ತಾನು ಆ ದಿನ ಹೇಳಿಕೆಯನ್ನು ಕೊಡದೆ ಇದ್ದು ವೈದ್ಯರ ಸಲಹೆಯ ಮೇರೆಗೆ ತಾನು ದಿನಾಂಕ 12-05-2020 ರಂದು ಪುನಃ ಆಸ್ಪತ್ರಗೆ ಚಿಕಿತ್ಸೆಗಾಗಿ ದಾಖಲಾಗಿದ್ದು ಅಲ್ಲಿ ವೈದ್ಯರು ತನಗೆ ದಿನಾಂಕ 20-05-2020 ರಂದು ಎಡಗೈ ಶಸ್ತ್ರ ಚಿಕಿತ್ಸೆಯನ್ನು ಮಾಡಿರುತ್ತಾರೆ,ಇದುವರೆವಿಗೂ ತನಗೆ ಅಪಘಾತಪಡಿಸಿದ ಸವಾರ  ತನ್ನ ಯೋಗ ಕ್ಷೇಮ ವಿಚಾರಿಸದ ಕಾರಣ ತಡವಾಗಿ ತಾನು ದೂರನ್ನು ಕೊಡುತ್ತಿದ್ದು ದಿನಾಂಕ 04-05-2020 ರಂದು ತನಗೆ ಅಪಘಾತಪಡಿಸಿದ ಕೆಎ-43-ಆರ್-6443 ನೊಂದಣಿಯ ದ್ವಿಚಕ್ರ  ವಾಹನ ಸವಾರ ನ ಮೇಲೆ ಕಾನೂನು ರೀತ್ಯಾ ಕ್ರಮವನ್ನು ಜರುಗಿಸಬೇಕೆಂದು ಹಿಂದಿಯಲ್ಲಿ ಹೇಳಿದ್ದನ್ನು ನನ್ನ ಗೆಳೆಯ ಕೇಶವ ರವರು ಕನ್ನಡದಲ್ಲಿ ತಿಳಿಸಿ ಹೇಳಿಕೆ ನೀಡಿದನ್ನು ಪಡೆದುಕೊಂಡು ಮದ್ಯಾಹ್ನ 12-30 ಗಂಟೆಗೆ ಠಾಣೆಗೆ ಹಾಜರಾಗಿ ಪ್ರಕರಣ ದಾಖಲಿಸಿಕೊಂಡಿರುತ್ತೇನೆ,

  1. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.126/2020 ಕಲಂ. 279,304(ಎ) ಐ.ಪಿ.ಸಿ:-

          ದಿನಾಂಕ:21-05-2020 ರಂದು ಬೆಳಿಗ್ಗೆ  12-00 ಗಂಟೆಯಲ್ಲಿ ಪಿರ್ಯಾದಿದಾರರಾದ ಎಸ್.ಎನ್ ವಿರುಪಾಕ್ಷ ಬಿನ ಲೇಟ್ ನಂಜುಂಡಪ್ಪ,63 ವರ್ಷ, ವಕ್ಕಲಿಗರು, ಜಿರಾಯ್ತಿ, ಯಲುವಳ್ಳಿ ಗ್ರಾಮ ದೇವನಹಳ್ಳಿ ತಾಲ್ಲೂಕು  ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ  ತಮ್ಮ ಸಂಬಂದಿಕರಾದ ಶಿಡ್ಲಘಟ್ಟ ತಾಲ್ಲೂಕು ಮಿತ್ತನಹಳ್ಳಿ ಗ್ರಾಮದ ಮಧುಕುಮಾರ್ ಬಿನ್ ಸಿ.ಎಂ ಕೃಷ್ಣಪ್ಪ ರವರು ಜಿರಾಯ್ತಿ ಮಾಡಿಕೊಂಡು ಗ್ರಾಮದಲ್ಲಿ ವಾಸವಾಗಿದ್ದು, ಮಧುಕುಮಾರ್ ರವರು ದಿನಾಂಕ:20.05.2020 ರಂದು ಸಂಜೆ 5.00 ಗಂಟೆ ಸಮಯದಲ್ಲಿ ಕಟಿಂಗ್ ಮಾಡಿಸಿಕೊಂಡು ಬರಲು ತನ್ನ ಬಾಬತ್ತು ಕೆಎ.03.ಇಎಸ್.1633 ಹಿರೋಹೊಂಡಾ ಸ್ಲೆಂಡರ್ ಪ್ಲೆಸ್ ದ್ವಿ ಚಕ್ರ ವಾಹನದಲ್ಲಿ ವಿಜಯಪುರಕ್ಕೆ ಹೋಗಿ ಬರುವುದಾಗಿ ಹೇಳಿ ತನ್ನ ಬಾಬತ್ತು ದ್ವಿಚಕ್ರ ವಾಹನದಲ್ಲಿ ವಿಜಯಪುರಕ್ಕೆ ಹೋಗಿ ಕಟಿಂಗ್ ಮಾಡಿಸಿಕೊಂಡು ವಾಪಸ್ಸು ಮಿತ್ತನಹಳ್ಳಿ ಗ್ರಾಮಕ್ಕೆ ಬರಲು ರಾತ್ರಿ10.00 ಗಂಟೆ ಸಮಯದಲ್ಲಿ ಯಲುವಳ್ಳಿ-ಮಿತ್ತಲಹಳ್ಳಿ ರಸ್ತೆಯಲ್ಲಿ ಕೆಎ.03.ಇಎಸ್.1633 ಹಿರೋಹೊಂಡಾ ಸ್ಲೆಂಡರ್ ಪ್ಲೆಸ್ ದ್ವಿಚಕ್ರವಾಹನವನ್ನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ವಿಜಯಪುರದ ವಾಸಿ ಹಲೆಗಪ್ಪ ರವರ ನಾಗರಾಜಪ್ಪ ರವರ ಜಮೀನಿನ ಬಳಿ ರಸ್ತೆಯ ಪಕ್ಕದಲ್ಲಿ ಇದ್ದ ಮಣ್ಣಿನ ದಿಬ್ಬಕ್ಕೆ ತನ್ನಷ್ಟೆಕ್ಕೆ ತಾನೆ ಡಿಕ್ಕಿಪಡಿಸಿ ದ್ವಿಚಕ್ರವಾಹನ ಸಮೇತ ರಸ್ತೆಯಲ್ಲಿ ಬಿದ್ದು ಹೋಗಿ ತೆಲೆಗೆ ತೀವ್ರತರವಾದ ಗಾಯವಾಗಿರುವುದಾಗಿರುವುದಾಗಿ ಮಿತ್ತಲಹಳ್ಳಿ ಗ್ರಾಮದ ಹರೀಶ್ ರವರು ತನಗೆ ಪೋನ್ ಮಾಡಿ ತಿಳಿಸಿದ್ದು ನಂತರ ತಾನು ಮತ್ತು ಹರೀಶ್ ರವರು ಕೂಡಲೇ ಸ್ಥಳಕ್ಕೆ ಹೋಗಿ ನೋಡಲಾಗಿ ವಿಷಯ ನಿಜವಾಗಿದ್ದು  ತಾವುಗಳೂ ಕೂಡಲೇ ಯಾವುದೋ ಒಂದು ವಾಹನದಲ್ಲಿ ಮಧುಕುಮಾರ್ ರವರನ್ನು ಚಿಕಿತ್ಸೆಗಾಗಿ ವಿಜಯಪುರ ಸರ್ಕಾರಿ ಪ್ರಾಥಮಿಕ ಅಸ್ಪತ್ರೆಗೆ ದಾಖಲಿಸಿದ್ದು, ಅಲ್ಲಿನ ವೈದ್ಯರ ಸಲಹೆ ಮೇರೆಗೆ ಚಿಕ್ಕಬಳ್ಳಾಪುರ ಜಿಲ್ಲಾ ಅಸ್ಪತ್ರೆಗೆ ದಾಖಲಿಸಿ ನಂತರ ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ನಿಮ್ಹಾನ್ಸ್ ಅಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುತ್ತಿದ್ದು ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ:21.05.2020 ರಂದು ಬೆಳಿಗ್ಗೆ 9.00 ಗಂಟೆ ಸಮಯದಲ್ಲಿ ಮೃತಪಟ್ಟಿರುತ್ತಾನೆ. ತಾನು ಮಧುಕುಮಾರ್ ರವರಿಗೆ ಉಪಚರಿಸಿಕೊಂಡಿದ್ದ ಕಾರಣ ಈ ದಿನ ತಡವಾಗಿ ಬಂದು ದೂರು ನೀಡುತಿದ್ದು ಕೆಎ.03.ಇಎಸ್.1633 ಹಿರೋಹೊಂಡಾ ಸ್ಲೆಂಡರ್ ಪ್ಲಸ್ ದ್ವಿಚಕ್ರವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿ ತನ್ನಷ್ಟಕ್ಕೆ ತಾನೇ ಅಪಘಾತವನ್ನುಂಟು ಮಾಡಿದ ಮಧುಕುಮಾರ್ ರವರ ವಿರುದ್ದ ಕಾನೂನು ರೀತಿಯ ಕ್ರಮಕೈಗೊಳ್ಳಲು ಕೋರಿ ನೀಡಿದ ದೂರಿನ ಮೇರಗೆ ಠಾಣಾ ಮೊ.ಸಂ 126/2020 ಕಲಂ 279 304(ಎ) ಐ.ಪಿ.ಸಿ ರೀತ್ಯಾ ಪ್ರಕರಣ ದಾಖಲಿಸಿಕೊಂಡಿರುತ್ತೆ.

  1. ಶಿಡ್ಲಘಟ್ಟ ಪುರ ಪೊಲೀಸ್ ಠಾಣೆ ಮೊ.ಸಂ.126/2020 ಕಲಂ. 323,504,506 ರೆ/ವಿ 34 ಐ.ಪಿ.ಸಿ:-

          ದಿನಾಂಕ.20.05.2020 ರಂದು ಬೆಳಿಗ್ಗೆ 10.30 ಗಂಟೆಗೆ ಪಿರ್ಯಾದಿ ಅತಾವುಲ್ಲಾ ಬಿನ್ ಅಮೀರ್ ಜಾನ್, 2ನೇ ಕಾರ್ಮಿಕನಗರ ಶಿಡ್ಲಘಟ್ಟ ಟೌನ್ ರವರು ಠಾಣೆಗೆ ಹಾಜರಾಗಿ ನೀಡಿದ ಹೇಳಿಕೆ ಸಾರಾಂಶವೇನಂದರೆ, ದಿನಾಂಕ.19.05.2020 ರಂದು ರಾತ್ರಿ ಸುಮಾರು 8.30 ಗಂಟೆಯಲ್ಲಿ ತಾನು ಮಗುವಿಗೆ ಅಂಗಡಿಯಲ್ಲಿ ಹಾಲು ತೆಗೆದುಕೊಂಡು ಬರಲು ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದಾಗ ನಾಸೀರ್ ಮಟನ್ ಅಂಗಡಿ ಮುಂದೆ ರಸ್ತೆಯಲ್ಲಿ 2ನೇ ಕಾರ್ಮಿಕನಗರ ವಾಸಿ ಶಬ್ಬೀರ್ ಬಿನ್ ಅಸ್ಲಾಂ ಎಂಬುವರು ಅವರ ಮನೆಯಲ್ಲಿ ಮಗು ಹುಟ್ಟಿದೆ ಎಂದು ರಸ್ತೆಯಲ್ಲಿ ಪಟಾಕಿ ಹೊಡೆಯುತ್ತಿದ್ದು, ನಾನು ಗಾಡಿಯನ್ನು ನಿಲ್ಲಿಸಿಕೊಂಡು ನೋಡುತ್ತಿದ್ದಾಗ ಶಬ್ಬೀರ್ ಏಕೆ ನನ್ನನ್ನು ಗುರಾಯಿಸಿ ನೋಡುತ್ತಿದ್ದೀಯಾ ನನ್ನ ಮಗನೇ ಎಂದು ಕೆಟ್ಟ ಮಾತುಗಳಿಂದ ಬೈದು ಕಾಲುನಿಂದ ಒದ್ದು ಕೆಳಗೆ ಬೀಳಿಸಿದನು. ಆಗ ಅವರ ಜೊತೆಯಲ್ಲಿದ್ದ ಆತನ ಸ್ನೇಹಿತರಾದ ಜಬೀ ಮತ್ತು ಸುರುಮ ಎಂಬುವರು ಕೈಗಳಿಂದ ಗುದ್ದಿ ನಮ್ಮನ್ನು ಏಕೆ ಗುರಾಯಿಸಿ ನೋಡುತ್ತಿರುವುದು ನಿನ್ನನ್ನು ಇಲ್ಲಿಯೇ ಸಾಯಿಸುತ್ತೇವೆಂದು ಪ್ರಾಣ ಬೆದರಿಕೆ ಹಾಕಿ ಎಳೆದಾಡಿ ಕೈಗಳಿಂದ ಹೊಡೆಯುತ್ತಿದ್ದಾಗ ಅಲ್ಲಿಗೆ ಬಂದ ಅಬೂಬಕರ್ ಪಿಲೇಚರ್ ಕ್ವಾಟ್ರಸ್ ಇತರರು ಜಗಳ ಬಿಡಿಸಿ ಗಾಯಗೊಂಡಿದ್ದ ತನ್ನನ್ನು ಚಿಕಿತ್ಸೆ ಬಗ್ಗೆ ಶಿಡ್ಲಘಟ್ಟ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದು, ನಾನು ಚಿಕಿತ್ಸೆ ಪಡೆದು ಮನೆಗೆ ಹೋಗಿದ್ದು, ಆದ್ದರಿಂದ ವಿನಾಕಾರಣ ಗಲಾಟೆ ಮಾಡಿ ಹೊಡೆದಿರುವ ಮೇಲ್ಕಂಡವರ ಮೇಲೆ ಕಾನೂನು ಕ್ರಮ ಜರುಗಿಸಲು ಕೊಟ್ಟ ಹೇಳಿಕೆ ಸಾರಾಂಶದ ಮೇರೆಗೆ ಠಾಣಾ ಎನ್.ಸಿ.ಆರ್.89/2020 ರಂತೆ ನೊಂದಾಯಿಸಿರುತ್ತೆ.  ದಿನಾಂಕ.21.05.20202 ರಂದು ಈ ಪ್ರಕರಣದಲ್ಲಿ ಪಿರ್ಯಾದಿ ಅತಾವುಲ್ಲಾ ತನ್ನ ಹೇಳಿಕೆಯಲ್ಲಿ ನೀಡಿರುವ ಅಂಶಗಳು ಆಸಂಜ್ಞೆಯ ಅಪರಾದಗಳಾಗಿದ್ದು, ಕಲಂ.323.504.506 ರೆ/ವಿ 34 ಐಪಿಸಿ ರೀತ್ಯಾ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲು ಅನುಮತಿ ನೀಡಲು ಘನ ನ್ಯಾಯಾಲಯದಲ್ಲಿ ನಿವೇದಿಸಿಕೊಂಡಿದ್ದು, ಈ ದಿನ ಘನ ನ್ಯಾಯಾಲಯದಿಂದ ಅನುಮತಿ ಪಡೆದು ಬೆಳಿಗ್ಗೆ 10.15 ಗಂಟೆಗೆ ಠಾಣಾ ಮೊ.ಸಂ.58/2020 ಕಲಂ.323,504,506 ರೆ/ವಿ 34 ಐಪಿಸಿ ರೀತ್ಯಾ ಪ್ರಕರಣ ದಾಖಲಿಸಿರುತ್ತೆ.