ದಿನಾಂಕ : 21/02/2020 ರ ಅಪರಾಧ ಪ್ರಕರಣಗಳು

1. ಚಿಕ್ಕಬಳ್ಳಾಪುರ ಸಂಚಾರಿ ಪೊಲೀಸ್ ಠಾಣೆ ಮೊ.ಸಂ.10/2020 ಕಲಂ. 279-337 ಐ.ಪಿ.ಸಿ:-
ದಿನಾಂಕ:-21/02/2020 ರಂದು ಮಧ್ಯಾಹ್ನ 13:00 ಗಂಟೆಗೆ ಪಿರ್ಯಾದಿ ಶ್ರೀ ಮನುಗೌಡ ಬಿನ್ ಕೆ ಆರ್ ಬೋಜರಾಜ 20 ವರ್ಷ, ಕಳ್ಳಂಬೆಳ್ಳ ಗ್ರಾಮ ಮತ್ತು ಹೋಬಳಿ, ಸಿರಾ ತಾಲ್ಲೂಕು, ತುಮಕೂರು ಜಿಲ್ಲೆ ಹಾಲೀ ವಾಸ:- ನಂ-258, 7 ನೇ ಮುಖ್ಯ, 3 ನೇ ಕ್ರಾಸ್ ಭುವನೇಶ್ವರಿ ನಗರ, ಟಿ ದಾಸರಹಳ್ಳಿ, ಬೆಂಗಳೂರು ನಗರ ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ ದಿನಾಂಕ:-20/02/2020 ರಂದು ತಾನು ಮತ್ತು ತನ್ನ ಸ್ನೇಹಿತರಾದ ವರುಣ್ ಕೆ. ಜಿ ಬಿನ್ ಗುರುಬಸವರಾಜ 21 ವರ್ಷ, ಲಿಂಗಾಯಿತರು, ವಿದ್ಯಾರ್ಥಿ, ನಂ-06, ನಂಜುಂಡಯ್ಯ ಬಿಲ್ಡಿಂಗ್, ಶಿವಗಂಗಾ ಲೇಔಟ್, ದೊಡ್ಡಬಿದಿರೆ ಕಲ್ಲು, ನಾಗಸಂದ್ರ ಅಂಚೆ, ಬೆಂಗಳೂರು-73, ದಿಲೀಪ್ ಬಿನ್ ಮಂಜುನಾಥ 21 ವರ್ಷ, ವಿಶ್ವಕರ್ಮ ಜನಾಂಗ, ವಿದ್ಯಾರ್ಥಿ, ನಂ-30, ಶಂಕರಪ್ಪ ಲೇಔಟ್, ಮಾರುತಿ ನಗರ, ಯಲಹಂಕ, ಬೆಂಗಳೂರು ಹಾಗೂ ಮುರುಳಿ ಬಿನ್ ರಘುನಾಥ ರೆಡ್ಡಿ 21 ವರ್ಷ, ರೆಡ್ಡಿ ಜನಾಂಗ, ವಿದ್ಯಾರ್ಥಿ, ಗುಡಿಪಲ್ಲಿ ಗ್ರಾಮ, ಬೀರಂಗಿ ಕೊತ್ತಕೋಟ ಮಂಡಲಂ, ಚಿತ್ತೂರು ಜಿಲ್ಲೆ, ಆಂದ್ರಪ್ರದೇಶ ರವರೊಂದಿಗೆ ಚಿಕ್ಕಬಳ್ಳಾಪುರ ಬಳಿ ಇರುವ ಆವಲಬೆಟ್ಟಕ್ಕೆ ಪ್ರವಾಸದ ನಿಮಿತ್ತ ಡ್ರೈವಸಿ ಕಂಪನಿಯ ಬಾಡಿಗೆ ಕಾರು ನೊಂದಣಿ ಸಂಖ್ಯೆ KA03AG2213 ರ ಸ್ವಿಫ್ಟ್ ಕಾರಿನಲ್ಲಿ ಬಂದು ವಾಪಸ್ಸು ಬೆಂಗಳೂರಿಗೆ ಹೋಗಲು ದಿನಾಂಕ:-20/02/2020 ರಂದು ಮಧ್ಯಾಹ್ನ 3-30 ಗಂಟೆಯ ಸಮಯದಲ್ಲಿ ಚಿಕ್ಕಬಳ್ಳಾಪುರ – ಬೆಂಗಳೂರು ಎನ್.ಎಚ್-44 ಬೈಪಾಸ್ ರಸ್ತೆಯ ಅಗಲಗುರ್ಕಿ ಫ್ಲೈ ಓವರ್ ಬಳಿ ಹೋಗುತ್ತಿದ್ದಾಗ ಕಾರನ್ನು ಚಾಲನೆ ಮಾಡುತ್ತಿದ್ದ ವರುಣ್ ಕೆ. ಜಿ ರವರು ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿ ರಸ್ತೆಯ ಎಡಭಾಗದಲ್ಲಿದ್ದ ತಡೆಗೋಡೆಗೆ ಡಿಕ್ಕಿ ಹೊಡೆಸಿ ನಂತರ ವಾಹನದ ನಿಯಂತ್ರಣ ತಪ್ಪಿ ವಾಹನ ವಿರುದ್ದ ದಿಕ್ಕಿನಲ್ಲಿ ತಿರುಗಿ ಪುನಃ ರಸ್ತೆಯ ತಡೆಗೋಡೆಗೆ ತಗುಲಿದ್ದರ ಪರಿಣಾಮ ಕಾರನ್ನು ಚಾಲನೆ ಮಾಡುತ್ತಿದ್ದ ವರುಣ್ ಕೆ. ಜಿ ರವರಿಗೆ ತಲೆಗೆ, ಕೈ-ಕಾಲುಗಳಿಗೆ ರಕ್ತ ಗಾಯಗಳಾಗಿದ್ದು, ಕಾರಿನಲ್ಲಿದ್ದ ಇನ್ನೂಳಿದ ಸಹ ಪ್ರಯಾಣಿಕರಿಗೆ ಯಾವುದೇ ಗಾಯಗಳಾಗಿರುವುದಿಲ್ಲ ತಕ್ಷಣ ತಾವುಗಳು ಅಲ್ಲಿನ ಸ್ಥಳಿಯರ ಸಹಾಯದಿಂದ ಗಾಯಾಳುವನ್ನು ಉಪಚರಿಸಿ ರಸ್ತೆಯಲ್ಲಿ ಬರುತ್ತಿದ್ದ ಯಾವುದೋ ಕಾರಿನಲ್ಲಿ ಚಿಕಿತ್ಸೆಗಾಗಿ ಚಿಕ್ಕಬಳ್ಳಾಪುರ ಜೀವನ್ ಆಸ್ಪತ್ರೆಗೆ ಸೇರಿಸಿದ್ದು, ನಂತರ ವೈಧ್ಯರ ಸಲಹೆ ಮೇರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಆಂಬ್ಯೂಲೆನ್ಸ್ ವಾಹನದಲ್ಲಿ ಬೆಂಗಳೂರಿನ ಮೆಡ್ ಸ್ಟಾರ್ ಆಸ್ಪತ್ರೆಗೆ ಸೇರಿಸಿ ವರುಣ್ ಕೆ ಜಿ ರವರಿಗೆ ಚಿಕಿತ್ಸೆಯನ್ನು ಕೊಡಿಸಿ ಈ ದಿನ ದಿನಾಂಕ:-21/02/2020 ರಂದು ತಡವಾಗಿ ಸದರಿ ಅಪಘಾತಕ್ಕೆ ಕಾರಣನಾದ ಕಾರಿನ ಚಾಲಕನ ಮೇಲೆ ಕಾನೂನು ಕ್ರಮ ಜರುಗಿಸಲು ಕೋರಿ ನೀಡಿದ ಲಿಖಿತ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುತ್ತೆ.
2. ಚಿಂತಾಮಣಿ ನಗರ ಪೊಲೀಸ್ ಠಾಣೆ ಮೊ.ಸಂ.32/2020 ಕಲಂ. 323-324-504-506 ರೆ/ವಿ 34 ಐ.ಪಿ.ಸಿ:-
ದಿನಾಂಕ 20/02/2020 ರಂದು ಮದ್ಯಾಹ್ನ 1-45 ಗಂಟೆಗೆ ಪಿರ್ಯಾದುದಾರರಾದ ತಾಮೀರ್ ಪಾಷ ಬಿನ್ ಲೇಟ್ ಪೈರೋಜ್ ಅಹಮದ್, 35 ವರ್ಷ, ಮುಸ್ಲಿಂ ಜನಾಂಗ, ಶಾಂತಿ ನಗರ, ಚಿಂತಾಮಣಿ ನಗರ ರವರು ನೀಡಿದ ದೂರಿನ ಸಾರಾಂಶವೇನೆಂದರೆ, ದಿನಾಂಕ 18/02/2020 ರಂದು ನನ್ನ ತಮ್ಮನಾದ ಮನ್ಸೂರ್ ಪಾಷ ಮತ್ತು ಅವರ ಸ್ನೇಹಿತ ಅಜಾಂ ಪಾಷ ರವರ ಮಗನಾದ ತೌಸಿಪ್ ರವರಿಗೆ ಹಣಕಾಸಿನ ವಿಚಾರದಲ್ಲಿ ಜಗಳವಾಗಿದ್ದು ಈ ವಿಚಾರದಲ್ಲಿ ಇವರಿಗೆ ಬುದ್ದಿ ಹೇಳಿ ಕಳುಹಿಸಿರುತ್ತೇವೆ. ದಿನಾಂಕ 18/02/2020 ರಂದು ಸಂಜೆ 5-00 ಗಂಟೆಗೆ ನಾನು ಮತ್ತು ನಮ್ಮ ಅಣ್ಣ ತನ್ವೀರ್ ಪಾಷ ರವರು ನಮ್ಮ ಮನೆಯ ಬಳಿ ಇದ್ದಾಗ ಮೆಹಬೂಬ್ ನಗರದ ವಾಸಿ ಜಬೀನಾ ತಾಜ್ ರವರ ಮಗನಾದ ರೆಹಮಾನ್ ರವರು ನನ್ನನ್ನು ಕರೆದು ನಿನ್ನ ಬಳಿ ಏನೋ ಮಾತಾನಾಡಬೇಕು ಎಂದು ಹೇಳಿದಾಗ ನಾನು ಹಾಗೂ ನನ್ನ ಅಣ್ಣನಾದ ತನ್ವೀರ್ ಪಾಷ ರವರು ಎನ್.ಎನ್,ಟಿ ವೃತ್ತದ ಬಳಿ ಹೋದಾಗ ಅಲ್ಲಿಗೆ ಅಜಾಂ ಪಾಷ @ ಸೌಂಡ್ ಸಿಸ್ಟಂ ಅಜಾಂ, ಅವರ ಮಗನಾದ ತೌಸಿಪ್, ಜಬೀನಾ ತಾಜ್ ಮತ್ತು ಆಕೆಯ ಮಗನಾದ ರೆಹಮಾನ್ ರವರು ಎಲ್ಲರೂ ನಮ್ಮನ್ನು ಕುರಿತು ನೀವು ಯಾರು ನಮ್ಮ ಬಳಿ ಹಣ ಕೇಳುವುದಕ್ಕೆ ಎಂತ ಏಕಾ ಏಕಿ ಜಗಳ ತೆಗೆದು ಅವಾಚ್ಯವಾಗಿ ಬೈದು ಕೈಗಳಿಂದ ನನ್ನ ಮೈ ಮೇಲೆ ಹೊಡೆದು ಕೆಳಕ್ಕೆ ತಳ್ಳಿ ಕಾಲುಗಳಿಂದ ಒದ್ದು ಆ ಪೈಕಿ ತೌಸಿಪ್ ರವರು ಕಬ್ಬಿಣದ ಕಂಬಿಯಿಂದ ನನ್ನ ಹಿಂಭಾಗದ ಬೆನ್ನಿಗೆ ಚುಚ್ಚಿ ರಕ್ತಗಾಯ ಮಾಡಿರುತ್ತಾನೆ. ಅಷ್ಟರಲ್ಲಿ ನನ್ನ ಅಣ್ಣನಾದ ತನ್ವೀರ್ ಪಾಷ ರವರು ನನ್ನನ್ನು ಹೊಡೆಯದಂತೆ ಅಡ್ಡ ಬಂದಾಗ ರೆಹಮಾನ್ ರವರು ಅಲ್ಲಿಯೇ ಇದ್ದ ಇಟ್ಟಿಗೆಯಿಂದ ಎಡಭಾಗದ ಕಣ್ಣಿನ ಕೆಳಬಾಗದಲ್ಲಿ ಹಾಕಿ ಊತ ಗಾಯ ಹಾಗೂ ಮೂಗೇಟುಂಟು ಮಾಡಿರುತ್ತಾನೆ. ಅಜಂ ರವರು ನನ್ನನ್ನು ಕೈಗಳಿಂದ ಹೊಡೆದು ಮೂಗೇಟುಂಟು ಮಾಡಿರುತ್ತಾನೆ. ಎಲ್ಲರೂ ಇನ್ನೋಂದು ಸಾರಿ ನಮಗೆ ಹಣ ಕೊಡುವಂತೆ ಕೇಳಿದರೆ ನಿಮ್ಮನ್ನು ಪ್ರಾಣ ಸಹಿತ ಉಳಿಸುವುದಿಲ್ಲವೆಂದು ಬೆದರಿಕೆ ಹಾಕಿರುತ್ತಾರೆ. ಆದ್ದರಿಂದ ಮೇಲ್ಕಂಡವರ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ದೂರು.
3. ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.52/2020 ಕಲಂ. 379 ಐ.ಪಿ.ಸಿ:-
ದಿನಾಂಕ 20/02/2020 ರಂದು ಬೆಳಿಗ್ಗೆ 10-30 ಗಂಟೆಯಲ್ಲಿ ಪಿರ್ಯಾಧಿದಾರರಾದ ಗಂಗರಾಜು, ಹೆಚ್ ಸಿ 220 , ಗೌರಿಬಿದನೂರು ವೃತ್ತ ನಿರೀಕ್ಷಕರ ಕಛೇರಿ, ಗೌರಿಬಿದನೂರು ತಾಲ್ಲೂಕು ರವರ ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ- ಗಂಗರಾಜು ಆರ್ ಹೆಚ್ ಸಿ 220 ಆದ ನಾನು ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣಾಧಿಕಾರಿಗಳಲ್ಲಿ ವರದಿ ಮಾಡುವುದೇನೆಂದರೆ,ದಿನಾಂಕ :22/10/2019 ರಿಂದ ನಾನು ಗೌರಿಬಿದನೂರು ವೃತ್ತ ಕಚೇರಿಯಲ್ಲಿ ಅಪರಾಧ ಪತ್ತೆ ಕಾರ್ಯ ನಿರ್ವಹಿಸಿಕೊಂಡಿರುತ್ತೇನೆ.ಗೌರಿಬಿದನೂರು ವೃತ್ತದ ಪೊಲೀಸ್ ವೃತ್ತ ನಿರೀಕ್ಷಕರಾದ ಶ್ರೀ ರವಿ ಎಸ್ ರವರು ದಿನಾಂಕ:19/02/2019 ರಂದು ಹೊಸೂರು ಹೊರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರಾತ್ರಿ ಗಸ್ತು ನಿರ್ವಹಿಸುವಂತೆ ನನಗೆ ಮತ್ತು ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ನವೀನ್ ಕುಮಾರ್ ಪಿ ಸಿ 105 ರವರಿಗೆ ನೇಮಕ ಮಾಡಿದ್ದು ,ಅದರಂತೆ ನಾವುಗಳು ನನ್ನ ಸ್ವಂತ ದ್ವಿ ಚಕ್ರ ವಾಹನದಲ್ಲಿ ರಾತ್ರಿ 8.30 ಗಂಟೆಗೆ ರಾತ್ರಿ ಗಸ್ತನ್ನು ದಿಮ್ಮಘಟ್ಟನಹಳ್ಳಿ, ಕೆಂಕರೆ , ಗೆದರೆ, ಗೊಡ್ಡಾವಲಹಳ್ಳಿ ,ಕಾಮಗಾನಹಳ್ಳಿ, ಸೋಮಶೆಟ್ಟಹಳ್ಳಿ ಗ್ರಾಮಗಳ ಕಡೆಗೆ ಗಸ್ತು ಮಾಡಿಕೊಂಡು ಬೆಳಗಿನ ಜಾವ. 5-15 ಗಂಟೆಯಲ್ಲಿ ಕೊಂಡಾಪುರ ಗ್ರಾಮದ ಬಳಿ ಗಸ್ತು ಮಾಡಿಕೊಂಡು ಹೋಗುತ್ತಿದ್ದಾಗ ನಮ್ಮ ಎದುರು ಗಡೆ ಒಂದು ಟ್ರಾಕ್ಟರ್ ಬರುತ್ತಿದ್ದು, ನಾವುಗಳು ಪೊಲೀಸ್ ಸಮವಸ್ತ್ರದಲ್ಲಿರುವುದನ್ನು ಟ್ರಾಕರ್ ಚಾಲಕ ನೋಡಿ ಕೊಂಡಾಪುರದ ಗ್ರಾಮದ ರಸ್ತೆಯಲ್ಲಿಯೇ ಟ್ರಾಕ್ಟರ್ ನ್ನು ನಿಲ್ಲಿಸಿ ಗ್ರಾಮದೊಳಕ್ಕೆ ಚಾಲಕ ಓಡಿ ಹೋದನು ,ನಾವುಗಳು ಟ್ರಾಕ್ಟರ್ ಚಾಲಕನನ್ನು ಬೆನ್ನಟ್ಟಿದರು ನಮಗೆ ಸಿಗದೆ ಪರಾರಿಯಾದನು. ನಂತರ ಕೂಡಲೆ ನಾವುಗಳು ಟ್ರಾಕ್ಟರ್ ಬಳಿ ಹೋಗಿ ಪರಿಶೀಲಿಸಿದಾಗ ಕೆ ಎ 40- 3495 ನೊಂದಣಿ ಸಂಖ್ಯೆಯ ಟ್ರಾಕ್ಟರ್ ಆಗಿದ್ದು, ಇದರ ಸಿರೀಯಲ್ ನಂಬರ್ RGC -00306-L8 ಆಗಿದ್ದು ಮಹೀಂದ್ರಾ ಕಂಪನಿಯದ್ದಾಗಿರುತ್ತೆ.ಟ್ರಾಲಿಗೆ ಯಾವುದೇ ರೀತಿಯ ನೊಂದಣಿ ಸಂಖ್ಯೆ ಇರುವುದಿಲ್ಲ.ಟ್ರಾಲಿಯ ಬಾಡಿ ತುಂಬಾ ಮರಳು ತುಂಬಿಸಿರುತ್ತೆ, ಮರಳು ತುಂಬಿಸಿರುವ ಟ್ರಾಕ್ಟರ್ ಟ್ರಾಲಿಯನ್ನು ಬೆಳಗ್ಗೆ 8-15 ಗಂಟೆಗೆ ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣಾ ಆವರಣಕ್ಕೆ ತಂದು ನಿಲ್ಲಿಸಿರುತ್ತೆ. ಚಿಕ್ಕಬಳ್ಳಾಪುರ ಜಿಲ್ಲೆಯಾದ್ಯಂತ ಮರಳು ತುಂಬಿಸಿ ಸಾಗಾಣಿಕೆ ಮಾಡುವುದು ನಿಷೇಧವಿದ್ದರು ಸಹ ಕೆ ಎ 40- 3495 ನೊಂದಣಿ ಸಂಖ್ಯೆಯ ಟ್ರಾಕ್ಟರ್ ಟ್ರಾಲಿಯಲ್ಲಿ ಅಕ್ರಮವಾಗಿ ಕಳ್ಳತನದಿಂದ ಮರಳು ತುಂಬಿಸಿ ಮಾರಾಟ ಮಾಡಲು ಸಾಗಾಣಿಕೆ ಮಾಡುತ್ತಿದ್ದ ಕೆ ಎ 40- 3495 ನೊಂದಣಿ ಸಂಖ್ಯೆಯ ಟ್ರಾಕ್ಟರ್ನ ಚಾಲಕ ಮತ್ತು ಮಾಲೀಕನ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಲು ತಮ್ಮಲ್ಲಿ ಕೋರುತ್ತೇನೆ.
4. ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.53/2020 ಕಲಂ. 379 ಐ.ಪಿ.ಸಿ:-
ದಿನಾಂಕ:21/02/2020 ರಂದು ಬೆಳಿಗ್ಗೆ 08-30 ಗಂಟೆಗೆ ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆಯ ಪಿಎಸ್ಐ, ಮೋಹನ್.ಎನ್. ರವರ ಠಾಣೆಯಲ್ಲಿ ನೀಡಿದ ದೂರಿನ ಸಾರಾಂಶವೇನೆಂದರೆ, ದಿನಾಂಕ:21/02/2020 ರಂದು ಬೆಳಿಗ್ಗೆ 6-00 ಗಂಟೆಯಲ್ಲಿ ನನಗೆ ಗೌರೀಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ಸರಹದ್ದು, ಕೆಂಕರೆ ಗ್ರಾಮದ ಕೆರೆಯಲ್ಲಿ ಯಾರೋ ಟ್ರ್ತಾಕ್ಟರ್ ಗೆ ಅಕ್ರಮವಾಗಿ ಮರಳು ತುಂಬುತ್ತಿರುವುದಾಗಿ ಮಾಹಿತಿ ಬಂದ ಮೇರೆಗೆ ನಾನು ಮತ್ತು ಪಿ.ಸಿ.179 ಶಿವಶೇಖರ್ ಹಾಗು ಪಂಚಾಯ್ತಿದಾರರೊಂದಿಗೆ, ಸರ್ಕಾರಿ ಜೀಪಿನಲ್ಲಿ ಬೆಳಿಗ್ಗೆ 06-30 ಗಂಟೆ ಸಮಯಕ್ಕೆ ಕೆಂಕರೆ ಗ್ರಾಮದ ಕೆರೆಯ ಅಂಗಳಕ್ಕೆ ಹೋದಾಗ, ಯಾರೋ ಟ್ರ್ಯಾಕ್ಟರ್ ಗೆ ಮರಳನ್ನು ತುಂಬಿಸುತ್ತಿದ್ದು, ಮರಳು ತುಂಬಿಸುತ್ತಿದ್ದವರು ದೂರದಿಂದಲೇ ಪೊಲೀಸ್ ಜೀಪನ್ನು ಗಮನಿಸಿ ಟ್ರ್ಯಾಕ್ಟರ್ ನ್ನು ಸ್ಥಳದಲ್ಲಿಯೇ ಬಿಟ್ಟು ಪರಾರಿಯಾಗಿರುತ್ತಾರೆ. ನಂತರ ನಾವು ಟ್ರ್ಯಾಕ್ಟರ್ ಬಳಿ ಹೋಗಿ ಪರಿಶೀಲಿಸಲಾಗಿ, ಟ್ರ್ಯಾಕ್ಟರ್ ನ ಇಂಜಿನ್ ನೊಂದಣಿ ಸಂಖ್ಯೆ KA-13-T-4813 ಆಗಿದ್ದು, ಇದು SWARAJ-735 FE ಕಂಪನಿಯದಾಗಿರುತ್ತೆ. ಇದರ ಟ್ರ್ಯಾಲಿಗೆ ನೊಂದಣಿ ಸಂಖ್ಯೆ ಇರುವುದಿಲ್ಲ. ಟ್ರ್ಯಾಲಿಯ ಬಾಡಿ ಲೆವೆಲ್ ಗೆ ಮರಳು ತುಂಬಿಸಲಾಗಿರುತ್ತೆ. ಸದರಿ ಆಸಾಮಿಗಳು ಯಾವುದೇ ಪರವಾನಗಿ ಇಲ್ಲದೇ ಟ್ರ್ಯಾಕ್ಟರ್ ಗೆ ಮರಳನ್ನು ತುಂಬಿ ಕಳವು ಮಾಡುತ್ತಿದ್ದರಿಂದ ಮರಳು ತುಂಬಿರುವ KA-13-T-4813 SWARAJ-735 FE ಕಂಪನಿಯ ಟ್ರ್ಯಾಕ್ಟರ್ ಟ್ರ್ಯಾಲಿಯನ್ನು ಈ ದಿನ ಬೆಳಿಗ್ಗೆ 6-30 ರಿಂದ 7-30 ಗಂಟೆಯವರೆಗೆ ಪಂಚರ ಸಮಕ್ಷಮದಲ್ಲಿ ಪಂಚನಾಮೆ ಕ್ರಮ ಜರುಗಿಸಿ, ವಶಕ್ಕೆ ತೆಗೆದುಕೊಂಡು, ಬೆಳಿಗ್ಗೆ 08-30 ಗಂಟೆಗೆ ಠಾಣೆಗೆ ಬಂದು ಮರಳು ತುಂಬಿರುವ ಟ್ರ್ಯಾಕ್ಟರ್ ಟ್ರ್ಯಾಲಿಯನ್ನು ನಿಮ್ಮ ವಶಕ್ಕೆ ನೀಡುತ್ತಿದ್ದು, ಯಾವುದೇ ಪರವಾನಗಿ ಇಲ್ಲದೇ ಅಕ್ರಮವಾಗಿ ಟ್ರ್ಯಾಕ್ಟರ್ ಟ್ರ್ಯಾಲಿಗೆ ಮರಳು ತುಂಬಿ ಕಳವು ಮಾಡುತ್ತಿದ್ದ KA-13-T-4813 SWARAJ-735 FE ಕಂಪನಿಯಟ್ರ್ಯಾಕ್ಟರ್ ಹಾಗು ಟ್ರ್ಯಾಲಿಯ ಚಾಲಕ ಹಾಗು ಮಾಲೀಕನ ವಿರುದ್ಧ ಕಲಂ:379 ಐಪಿಸಿ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿ, ಕಾನೂನು ಕ್ರಮ ಜರುಗಿಸಲು ಸೂಚಿಸಿರುವುದಾಗಿರುತ್ತೆ.
5. ಕೆಂಚಾರ್ಲಹಳ್ಳಿ ಪೊಲೀಸ್ ಠಾಣೆ ಮೊ.ಸಂ.19/2020 ಕಲಂ. 279-337 ಐ.ಪಿ.ಸಿ:-
ದಿನಾಂಕ 20-02-2020 ರಂದು ಹೆಚ್.ಸಿ-200 ರವರು ಬೆಂಗಳೂರಿನ ಬೋರಿಂಗ್ ಆಸ್ವತ್ರೆಯಲ್ಲಿ ಗಾಯಾಳು ಶಿವಣ್ಣ ಬಿನ್ ಲೇಟ್ ಪಾಪಣ್ಣ, 45 ವರ್ಷ, ಭೋವಿ ಜನಾಂಗ, ಜಿರಾಯ್ತಿ, ಅಪ್ಪಸಾನಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು ರವರ ಹೇಳಿಕೆ ಪಡೆದು ಮಧ್ಯಾಹ್ನ 15-00 ಗಂಟೆಗೆ ಠಾಣೆಯಲ್ಲಿ ಹಾಜರುಪಡಿಸಿದ್ದು, ಸಾರಾಂಶವೇನೆಂದರೆ, ದಿನಾಂಕ 19-02-2020 ರಂದು ಸಂಜೆ 4.30 ಗಂಟೆ ಸಮಯದಲ್ಲಿ ಗಾಯಾಳು ತನ್ನ ಬಾಬತ್ತು KA-40 R-7192 ದ್ವಿಚಕ್ರ ವಾಹನದಲ್ಲಿ ತನ್ನ ಎರಡು ವರ್ಷದ ಮೊಮ್ಮಗಳಾದ ಲಾಶ ಮತ್ತು ತಮ್ಮ ಗ್ರಾಮದ ನಾರಾಯಣಸ್ವಾಮಿ ರವರೊಂದಿಗೆ ತಮ್ಮ ಗ್ರಾಮಕ್ಕೆ ಹೋಗಲು ಚಿಂತಾಮಣಿ-ಚೇಳೂರು ಮುಖ್ಯರಸ್ತೆಯ ಗುಡಿಸಲಹಳ್ಳಿ-ನಲ್ಲರಾಳ್ಳಹಳ್ಳಿ ಗ್ರಾಮಗಳ ಮದ್ಯೆ ಥಾರ್ ರಸ್ತೆಯಲ್ಲಿ ದ್ವಿಚಕ್ರವಾಹನವನ್ನು ಚಲಾಯಿಸಿಕೊಂಡು ಹೋಗುತ್ತಿದ್ದಾಗ ಎದರುಗಡೆಯಿಂದ KA-53 D-2032 ಬೊಲೇರೋ ವಾಹನದ ಚಾಲಕ ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದು ಅಪಘಾತ ಪಡಿಸಿದ ಪರಿಣಾಮ ತನ್ನ ಮೊಮ್ಮಗಳಿಗೆ ಎಡಭಾಗದ ತಲೆ, ಮುಖದಲ್ಲಿ ರಕ್ತಗಾಯ, ಮೈಮೇಲೆ ತರಚಿದ ಗಾಯವಾಗಿದ್ದು, ಹಿಂಬದಿ ಸವಾರನಾದ ನಾರಾಯಣಸ್ವಾಮಿ ರವರಿಗೆ ಬಲಭಾಗದ ತಲೆ ಬಳಿ ತರಚಿದ ಗಾಯ ಬಲಗೈ ಬಳಿ ರಕ್ತಗಾಯ, ಬಲಮೊಣಕಾಲು ಕೆಳಗೆ ರಕ್ತಗಾಯವಾಗಿದ್ದು, ತನಗೆ ಬಲಗೈ ಬೆರಳುಗಳ ಬಳಿ ರಕ್ತಗಾಯ, ಎಡಗೈ ಬೆರಳುಗಳ ಬಳಿ ತರಚಿದ ಗಾಯ, ಬಲಮೊಣಕಾಲು ಕೆಳಗೆ ಮುರಿದಿರುವ ಬಾರಿ ರಕ್ತಗಾಯವಾಗಿದ್ದು, ಅಪಘಾತಪಡಿಸಿದ KA-53 D-2032 ಬೊಲೇರೋ ವಾಹನದ ಚಾಲಕನ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ಹೇಳಿಕೆ ದೂರು.
6. ಮಂಚೇನಹಳ್ಳಿ ಪೊಲೀಸ್ ಠಾಣೆ ಮೊ.ಸಂ.51/2020 ಕಲಂ. 379 ಐ.ಪಿ.ಸಿ:-
ದಿನಾಂಕ: 20/02/2020 ರಂದು ಮಾನ್ಯ ಡಿವೈಎಸ್ ಪಿ ಸಾಹೇಬರ ಕಛೇರಿ ಚಿಕ್ಕಬಳ್ಳಾಪುರ ಉಪ ವಿಭಾಗ, ಚಿಕ್ಕಬಳ್ಳಾಪುರದಿಂದ ಹೆಚ್.ಸಿ 83, ನಟರಾಜಚಾರಿ ರವರು ಹಾಜರುಪಡಿಸಿದ ದೂರಿನ ಸಾರಾಂಶವೆನೆಂದರೆ, ದಿನಾಂಕ: 19/02/2020 ರಂದು ರಾತ್ರಿ ಸುಮಾರು 9-00 ಗಂಟೆ ಸಮಯದಲ್ಲಿ ನಾನು ಕಛೇರಿಯಲ್ಲಿದ್ದಾಗ ಗೌರಿಬಿದನೂರು ತಾಲ್ಲೂಕಿನ ಮಂಚೇನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಅಲ್ಲೀಪುರ ಗ್ರಾಮದ ಸರ್ಕಾರಿ ಕೆರೆಯಲ್ಲಿ ಯಾರೋ ಕೆಲವು ವ್ಯಕ್ತಿಗಳು ಲಾರಿಗೆ ಕಳ್ಳತನವಾಗಿ ಮರಳು ತುಂಬಿಕೊಂಡು ಸಾಗಾಣಿಕೆ ಮಾಡುತ್ತಿರುವುದಾಗಿ ಹಾಲಿ ಲಾರಿಗೆ ಮರಳು ತುಂಬುತ್ತಿರುವುದಾಗಿ ನನಗೆ ಮಾಹಿತಿಯನ್ನು ನೀಡಿದರು, ಕೂಡಲೇ ನಾನು ನನ್ನಕಛೇರಿಯ ಸಿಬ್ಬಂದಿಯವರಾದ ಪಿಸಿ-403, ಬಾಬು ಬಿ ಆರ್ ಮತ್ತು ಜೀಪ್ ಚಾಲಕ ಎಪಿಸಿ-119 ಅಶೋಕ ರವರುಗಳೊಂದಿಗೆ ಸರ್ಕಾರಿ ಜೀಪ್ ನಲ್ಲಿ ಹೊರಟು ರಾತ್ರಿ ಸುಮಾರು 9-45 ಗಂಟೆಗೆ ಗೌರಿಬಿದನೂರು ತಾಲ್ಲೂಕಿನ ಅಲ್ಲೀಪುರ ಗ್ರಾಮದ ಕೆರೆಯ ಬಳಿ ಹೋಗುವಷ್ಟರಲ್ಲಿ ಯಾರೋ ಒಬ್ಬ ವ್ಯಕ್ತಿ ಸರ್ಕಾರಿ ಕೆರೆಯಲ್ಲಿ ಲಾರಿಯನ್ನು ನಿಲ್ಲಿಸಿಕೊಂಡು ಲಾರಿಗೆ ಮರಳು ತುಂಬುತ್ತಿದ್ದರು ಅದನ್ನು ಕಂಡ ನಾವುಗಳು ಕೂಡಲೇ ಸ್ಥಳಕ್ಕೆ ಹೋಗುವಷ್ಟರಲ್ಲಿ ಯಾರೋ ಒಬ್ಬ ವ್ಯಕ್ತಿ ಸರ್ಕಾರಿ ಕೆರೆಯಲ್ಲಿ ಲಾರಿಯನ್ನು ನಿಲ್ಲಿಸಿಕೊಂಡು ಲಾರಿಗೆ ಮರಳು ತುಂಬಿಸುತ್ತಿದ್ದರು ಅದನ್ನು ಕಂಡ ನಾವುಗಳು ಕೂಡಲೇ ಸ್ಥಳಕ್ಕೆ ಹೋಗುವಷ್ಟರಲ್ಲಿ ನಮ್ಮಗಳ ಕಂಡ ಲಾರಿಯ ಚಾಲಕ ಮತ್ತು ಮರಳು ತುಂಬುತ್ತಿದ್ದ ಕೂಲಿಯಾಳುಗಳು ಅಲ್ಲಿಂದ ಕತ್ತಲಲ್ಲಿ ಪರಾರಿಯಾಗಿರುತ್ತಾರೆ. ನಾವುಗಳು ಸದರಿ ಲಾರಿಯ ನಂಬರ್ ನ್ನು ಪರಿಶೀಲನೆ ಮಾಡಲಾಗಿ KA-04-B-1414 ಟಾಟಾ ಲಾರಿಯಾಗಿದ್ದು ಮುಂಭಾಗದಲ್ಲಿ ಶ್ರೀ ಲಕ್ಷ್ಮೀ ವೆಂಕಟೇಶ್ವರ ಎಂಬ ಬೋರ್ಡ್ ನ್ನು ಅಳವಡಿಸಲಾಗಿರುತ್ತೆ, ನಂತರ ಸ್ಥಳಕ್ಕೆ ಬಂದ ಗ್ರಾಮಸ್ಥರಿಂದ ಲಾರಿಯ ಚಾಲಕನ ಹೆಸರು ಮತ್ತು ವಿಳಾಸವನ್ನು ತಿಳಿಯಲಾಗಿ ಚಾಲಕ ಮಲ್ಲೇಶ ಬಿನ್ ಬಸಪ್ಪ, ಗೊಲ್ಲ ಜನಾಂಗ, ಪೂಜಾರ್ಲಹಳ್ಳಿ ಎಂಬುದಾಗಿ ಲಾರಿಯ ಮಾಲೀಕರ ಹೆಸರು ಗಂಗರಾಜು ಬಿನ್ ನಾಗರಾಜಪ್ಪ, ಪೂಜಾರ್ಲಹಳ್ಳಿ ಗ್ರಾಮ, ಗೌರಿಬಿದನೂರು ತಾಲ್ಲೂಕು ಎಂಬುದಾಗಿ ತಿಳಿಯಿತು, ಸದರಿ ಲಾರಿಯ ಚಾಲಕ ಮತ್ತು ಮಾಲೀಕನು ಯಾವುದೇ ಪರವಾನಗಿ ಇಲ್ಲದೇ ಅನಧಿಕೃತವಾಗಿ ಸರ್ಕಾರಕ್ಕೆ ಸಂಬಂಧಿಸಿದ ಕೆರೆಯಲ್ಲಿ ಮರಳನ್ನು ಕಳ್ಳತನ ಮಾಡಿ ಸಾಗಾಣಿಕೆ ಮಾಡುತ್ತಿರುವುದು ಕಂಡು ಬಂದಿರುತ್ತದೆ, ಲಾರಿ ಮತ್ತು ಮರಳನ್ನು ನಿಮ್ಮ ವಶಕ್ಕೆ ನೀಡುತ್ತಿದ್ದುಆದ್ದರಿಂದ ಸದರಿ ಲಾರಿಯ ಚಾಲಕ ಮತ್ತು ಮಾಲೀಕನ ವಿರುದ್ದ ಕಾನೂನು ರೀತ್ಯ ಕ್ರಮ ಕೈಗೊಳ್ಳಲು ನೀಡಿದ ಪ್ರ.ವ.ವರದಿ.
7. ಮಂಚೇನಹಳ್ಳಿ ಪೊಲೀಸ್ ಠಾಣೆ ಮೊ.ಸಂ.52/2020 ಕಲಂ. 15(ಎ), 32(3) ಕೆ.ಇ ಆಕ್ಟ್:-
ದಿನಾಂಕ:20/02/2020 ರಂದು ಪಿರ್ಯಾದಿದಾರರಾದ ಶ್ರೀ ಟಿ,ನಾರಾಯಣರೆಡ್ಡಿ ಹೆಚ್.ಸಿ.181 ರವರು ಮಾಲು ಮತ್ತು ಮಹಜರ್ ನೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ:20/02/2020 ರಂದು ನನಗೆ ಮತ್ತು ನಮ್ಮ ಠಾಣೆಯ ಹೆಚ್,ಸಿ.71 ಸುಬ್ರಮಣಿ ಹೆಚ್.ಸಿ.208 ಗಿರೀಶ್ ಹಾಗೂ ಪಿ.ಎಸ್.535 ಶ್ರೀನಿವಾಸ್ ರವರಿಗೆ ನಮ್ಮ ಠಾಣೆಯ ಇನ್ಸ್ಪೆಕ್ಟರ್ ರವರು ಗೌರಿಬಿದನೂರು ತಾಲ್ಲೂಕಿನಲ್ಲಿ ಕಾನೂನು ಬಾಹಿರ ಚಟುವಟಿಕೆಗಳ ಬಗ್ಗೆ ಮಾಹಿತಿ ಸಂಗ್ರಹಿಸಿ ದಾಳಿ ಮಾಡಲು ನೇಮಿಸಿ ಕಳುಹಿಸಿದ್ದು, ಅದರಂತೆ ನಾವುಗಳು ಸಂಜೆ ಸುಮಾರು 6-00 ಗಂಟೆಯ ಸಮಯದಲ್ಲಿ ತೊಂಡೇಬಾವಿ ಗ್ರಾಮದಲ್ಲಿ ಗಸ್ತಿನಲ್ಲಿದ್ದಾಗ ಬಾತ್ಮಿದಾರರಿಂದ ಬಂದ ಖಚಿತ ಮಾಹಿತಿಯ ಮೇರೆಗೆ ಗೌರಿಬಿದನೂರು ತಾಲ್ಲೂಕುಕಿನ ಅಲಕಾಪುರ ಗ್ರಾಮಕ್ಕೆ ಬಂದು ಪಂಚರನ್ನು ಬರಮಾಡಿಕೊಂಡು ಗ್ರಾಮದ ಹರಿಜನ ಕಾಲೋನಿಯ ವಾಸಿ ಗೌರಮ್ಮ ಕೊಂ ಗಂಗಪ್ಪ, 40 ವರ್ಷ, ಪ.ಜಾತಿ ಕೂಲಿ ಕೆಲಸ, ರವರು ಯಾವುದೇ ಪರವಾನಿಗೆಯನ್ನು ಪಡೆಯದೇ ತಮ್ಮ ಮನೆಯ ಮುಂಭಾಗದಲ್ಲಿ ಸಾರ್ವಜನಿಕರಿಗೆ ಮಧ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿದ್ದು, ಈ ಸಂಬಂಧ ದಾಳಿ ಮಾಡಿ ಸ್ಥಳದಲ್ಲಿದ್ದ 1) ಹೈವಾರ್ಡ್ಸ್ ಚೀಯರ್ಸ್ ವಿಸ್ಕಿಯ 90 ಎಂ.ಎಲ್.ನ ಮದ್ಯ ತುಂಬಿರುವ 23 ಟೆಟ್ರಾ ಪಾಕೇಟ್ ಗಳು, 2) ಹೈವಾರ್ಡ್ಸ್ ಚೀಯರ್ಸ್ ವಿಸ್ಕಿಯ 90 ಎಂ.ಎಲ್.ನ 02 ಖಾಲಿ ಟೆಟ್ರಾ ಪಾಕೇಟ್ ಗಳು, 3) ಎರಡು ಖಾಲಿ ಪ್ಲಾಸ್ಟಿಕ್ ಗ್ಲಾಸ್ ಗಳು, 4) ಒಂದು ಲೀಟರ್ ನ ಒಂದು ಖಾಲಿ ಪ್ಲಾಸ್ಟಿಕ್ ನೀರಿನ ಬಾಟಲ್ ಅನ್ನು ಈ ಕೇಸಿನ ಮುಂದಿನ ತನಿಖೆಯ ಬಗ್ಗೆ ಪಂಚರ ಸಮಕ್ಷಮ ಅಮಾನತ್ತು ಪಡಿಸಿಕೊಂಡಿರುತ್ತದೆ. ಅಮಾನತ್ತು ಪಡಿಸಿಕೊಂಡಿರುವ ಮಧ್ಯ ಒಟ್ಟು 02 ಲೀಟರ್ 0.70 ಎಂ.ಎಲ್. ಇದ್ದು ಇದರ ಬೆಲೆ 698 ರೂಗಳಾಗಿರುತ್ತದೆ. ಆರೋಪಿ ಗೌರಮ್ಮ ಮಹಿಳೆಯಾದ್ದರಿಂದ ಸ್ಥಳದಲ್ಲಿ ಮಹಿಳಾ ಸಿಬ್ಬಂದಿ ಇಲ್ಲದ ಕಾರಣ ಆರೋಪಿಯನ್ನು ಸ್ಥಳದಲ್ಲಿಯೇ ಬಿಟ್ಟಿದ್ದು, ಸದರಿಯವರ ಮೇಲೆ ಕಾನೂನು ಕ್ರಮ ಜರುಗಿಸಲು ಕೋರಿ ಕೊಟ್ಟ ದೂರು.