ದಿನಾಂಕ :21/01/2021 ರ ಅಪರಾಧ ಪ್ರಕರಣಗಳು

 1. ಬಾಗೇಪಲ್ಲಿ ಪೊಲೀಸ್ ಠಾಣೆ ಮೊ.ಸಂ.17/2021 ಕಲಂ. 78(3) ಕೆ.ಪಿ ಆಕ್ಟ್ :-

     ದಿನಾಂಕ; 20-01-2021 ರಂದು ಪಿಎಸ್ಐ ಸುನಿಲ್ ಕುಮಾರ್ ಜಿ.ಕೆ ರವರು ಠಾಣೆಗೆ ನೀಡಿದ ದೂರಿನ ಸಾರಾಂಶವೇನೆಂದರೆ: ಪಿಎಸ್ಐ ಸುನಿಲ್ ಕುಮಾರ್ ಜಿ.ಕೆ ಬಾಗೇಪಲ್ಲಿ ಪೊಲೀಸ್ ಠಾಣೆಯಾದ ನಾನು ದಿನಾಂಕ; 20-01-2021 ರಂದು ಮದ್ಯಾಹ್ನ 12;30 ಗಂಟೆ ಸಮಯದಲ್ಲಿ ಠಾಣೆಯಲ್ಲಿ ಇದ್ದಾಗ ಬಾಗೇಪಲ್ಲಿ ಟೌನ್ ಡಿ.ವಿಜಿ ರಸ್ತೆಯಲ್ಲಿರುವ ಪುರಸಭೆ ಪಕ್ಕದ ರಸ್ತೆಯಲ್ಲಿ ಪುರಸಭೆಗೆ ಸಂಬಂದಿಸಿದ ಬಹುಮಹಡಿಯ ಕಟ್ಟಡದ ಬಳಿ ಯಾರೂ ಇಬ್ಬರೂ ಆಸಾಮಿಗಳು ಸಾರ್ವಜನಿಕ ಸ್ಥಳದಲ್ಲಿ , ಕಾನೂನು ಬಾಹಿರವಾಗಿ  ಒಂದು ರೂಪಾಯಿಗೆ 70 ರೂಪಾಯಿ ಕೊಡುವುದಾಗಿ ಕೂಗುತ್ತಾ ಮಟ್ಕಾ ಚೀಟಿಗಳನ್ನು ಬರೆಯುತ್ತಿರುವುದಾಗಿ ಬಂದ ಖಚಿತ ಮಾಹಿತಿ ಮೇರೆಗೆ ನಾನು ಮತ್ತು ಬಾಗೇಪಲ್ಲಿ ಪೊಲೀಸ್ ಠಾಣೆಯ ಸಿಬ್ಬಂದಿ ಸಿಪಿಸಿ -280 ಮುರಳಿ , ಸಿಪಿಸಿ -214 ಅಶೋಕ್ ಮತ್ತು ಜೀಪ್ ಚಾಲಕ ಎ.ಹೆಚ್.ಸಿ 34  ಅಲ್ತಾಪ್ ಪಾಷಾ  ರವರೂಂದಿಗೆ ಸರ್ಕಾರಿ ಜೀಪ್ ಸಂಖ್ಯೆ ಕೆ.ಎ. 40-ಜಿ-537 ಜೀಪ್ ನಲ್ಲಿ ಮೇಲ್ಕಂಡ ಸ್ಥಳಕ್ಕೆ ಮದ್ಯಾಹ್ನ 12;40 ಗಂಟೆಗೆ ಹೋಗಿ ಪುರ ಸಭೆ ಮುಂಭಾಗದಲ್ಲಿದ್ದ ಪಂಚರನ್ನು ಸ್ಥಳಕ್ಕೆ ಬರಮಾಡಿಕೊಂಡು ವಿಚಾರವನ್ನು ತಿಳಿಸಿ ದಾಳಿ ಮಾಡಲು ಪಂಚರಾಗಿ ಬಂದು ಪಂಚನಾಮೆಗೆ ಸಹಕರಿಸಲು ಕೋರಿದ್ದರ ಮೇರೆಗೆ ಅವರುಗಳು ಒಪ್ಪಿಕೊಂಡರು , ಅದರಂತೆ ನಾವು ಮತ್ತು ಪಂಚರು ಮೆಲ್ಕಂಡ ಸ್ಥಳಕ್ಕೆ ಹೋಗಿ ನೋಡಲಾಗಿ ಯಾರೋ ಅಸಾಮಿಗಳು ಕಾನೂನು ಬಾಹಿರವಾಗಿ ಸಾರ್ವಜನಿಕರಿಗೆ ವಿವಿಧ ಅಂಕಿಗಳಿಗೆ ವಿವಿಧ ಮೊತ್ತ ಬರೆದುಕೊಡುದಾಗಿ ಮತ್ತು ಸಾರ್ವಜನಿಕರನ್ನು ಕೊಗಿ 1 ರೂಪಾಯಿಗೆ 70 ರೊಪಾಯಿ ಕೊಡುವುದಾಗಿ ಕೊಗುತ್ತಾ ಮಟ್ಕಾ ಚೀಟಿಗಳನ್ನು ಬರೆಯುತ್ತಿರುವದನ್ನು ನಾವುಗಳು ಖಚಿತಪಡಿಕೋಂಡು ಪಂಚರ ಸಮಕ್ಷಮ ದಾಳಿ ಮಾಡಿ ಇಬ್ಬರು ಅಸಾಮಿಗಳ ಹೆಸರು ಮತ್ತು ವಿಳಾಸವನ್ನು ಕೇಳಲಾಗಿ ಈಶ್ವರಪ್ಪ ಬಿನ್ ನರಸಿಂಹಪ್ಪ ,42 ವರ್ಷ , ಆದಿದ್ರಾವಿಡ ಜನಾಂಗ ,ಜಿರಾಯ್ತಿ ,ವಾಸ ಪುರಸಬೆಯ ಹಿಂಬಾಗ ,ಪ್ರಗತಿ ಗ್ರಾಮೀಣ ಬ್ಯಾಂಕ್ ಹತ್ತಿರ 21ನೇ ವಾರ್ಡ್ ,ಬಾಗೇಪಲ್ಲಿ ಪುರ . ಮತ್ತೋಬ್ಬ ಅಸಾಮಿಯ ಹೆಸರು ಕೇಳಲಾಗಿ ಪ್ರಕಾಶ್ ಬಿನ್ ಭದ್ರಪ್ಪ ,50 ವರ್ಷ ಬಲಜಿಗರು ,ಜಿರಾಯ್ತಿ ವಾಸ ಶಂಖಂವಾರಿಪಲ್ಲಿ ಗ್ರಾಮ ,ಕಸಬಾ ಹೋಬಳಿ ಬಾಗೇಪಲ್ಲಿ ತಾಲೂಕು ಎಂದು ತಿಳಿಸಿದ್ದು  ಇಬ್ಬರನ್ನು ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಚೀಟಿಗಳನ್ನು ಬರೆಯಲು ಯಾವುದಾದರೊ ಪರವಾನಗಿ ಇದೇಯೇ  ಎಂದು ಕೇಳಲಾಗಿ  ಅಸಾಮಿಗಳು ತಮ್ಮ ಬಳಿ ಯಾವುದೇ ಪರವಾನಗಿ ಇಲ್ಲವೇಂದು ತಿಳಿಸಿರುತ್ತಾರೆ .ಅಸಾಮಿಗಳ ಬಳಿ ಇದ್ದ ವಿವಿಧ ನಂಬರ್ ಗಳಿಗೆ ವಿವಿಧ ಮೊತ್ತ ಬರೆದಿರುವ ವಿವಿಧ  ಅಂಕಿಗಳ 1 ಮಟ್ಕಾ ಚೀಟಿ ಒಂದು ಬಾಲ್ ಪಾಯಿಂಟ್ ಪೆನ್ ಹಾಗೂ ಅವರ ಬಳಿ  ಇದ್ದ 215/- ರೂ. ಗಳನ್ನು ಪಂಚರ ಸಮಕ್ಷಮ ಮಾಲುಗಳನ್ನು ಅಮಾನತ್ತು ಪಡಿಸಿಕೊಂಡು ಅಸಾಮಿಗಳನ್ನು ವಶಕ್ಕೆ ಪಡೆದು ಅಸಲು ದಾಳಿ ಪಂಚನಾಮೆ, ಮಾಲು ,ಮತ್ತು  ಆರೋಪಿಗಳೊಂದಿಗೆ ಮದ್ಯಾಹ್ನ 1.40 ಗಂಟೆಗೆ ಠಾಣೆಗೆ ಹಾಜರಾಗಿ ಮುಂದಿನ ಕ್ರಮ ಜರುಗಿಸಲು ಸೂಚಿಸಿ ಠಾಣಾಧಿಕಾರಿಗಳಿಗೆ ವರದಿ ನೀಡಿದ ದೂರಿನ ಮೇರೆಗೆ ಠಾಣೆಯಲ್ಲಿ ಎನ್.ಸಿ.ಆರ್ 27/2021 ರಂತೆ ದಾಖಲಿಸಿಕೊಂಡಿರುತ್ತೆ.           ಇದು ಅಸಂಜ್ಞೇಯ ಪ್ರಕರಣವಾಗಿದ್ದು, ಮೇಲ್ಕಂಡ ಆಸಾಮಿಯ ವಿರುದ್ದ ಸಂಜ್ಞೇಯ ಪ್ರಕರಣವನ್ನು ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮಕೈಗೊಳ್ಳಲು ಅನುಮತಿಯನ್ನು ನೀಡಲು ಕೋರಿ ಘನ ನ್ಯಾಯಾಲಯಕ್ಕೆ ಮನವಿಯನ್ನು ಸಲ್ಲಿಸಿಕೊಂಡಿರುತ್ತೆ. ದಿ: 21-01-2021 ರಂದು ಬೆಳಗ್ಗೆ 10.45 ಗಂಟೆಗೆ ಘನ ನ್ಯಾಯಾಲಯದ ಪಿ.ಸಿ  125 ರವರು ನ್ಯಾಯಾಲಯದ ಅನುಮತಿಯನ್ನು ಪಡೆದುಕೊಂಡು  ಬಂದು  ಠಾಣೆಯಲ್ಲಿ  ಹಾಜರುಪಡಿಸಿದ್ದು,  ಪ್ರಕರಣವನ್ನು  ದಾಖಲಿಸಿಕೊಂಡಿರುತ್ತೆ.

 1. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.17/2021 ಕಲಂ. 279 ಐ.ಪಿ.ಸಿ :-

     ದಿನಾಂಕ:21.01.2021 ರಂದು ಪಿರ್ಯಾದಿದಾರರಾದ ಶ್ರೀ ಮುಜೀರ್ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ:16.01.2021 ರಂದು ಸಂಜೆ 6-40 ಗಂಟೆ ಸಮಯದಲ್ಲಿ ನಾನು ತನ್ನ ಬಾಬತ್ತು ಕೆಎ 40 ಎ 3096 ನೊಂದಣಿ ಸಂಖ್ಯೆಯ ಅಪೆ ಲಗೇಜ್ ಆಟೋದಲ್ಲಿ ಬಾಳೆ ಹಣ್ಣು ವ್ಯಾಪಾರ ಮಾಡಲು ಹಾರೋಬಂಡೆ ಕಡೆ ಹೋಗಲು ಎನ್ ಹೆಚ್ 44 ಬೆಂಗಳೂರು-ಹೈದರಾಬಾದ್ ರಸ್ತೆಯ ಚಿತ್ರಾವತಿ ಸಮೀಪವಿರುವ ಬಸ್ ಶೆಲ್ಟರ್ ಬಳಿ ಹೋಗುತ್ತಿದ್ದಾಗ ತಮ್ಮ ಆಟೋ ಹಿಂಭಾಗ ಬರುತ್ತಿದ್ದ ಕೆಎ 40 ಎನ್ 2543 ನೊಂದಣಿ ಸಂಖ್ಯೆಯ ಹೋಂಡಾ ವೆನ್ಯೂ ಕಾರಿನ ಚಾಲಕ ಚಂದ್ರಶೇಖರ್ ಬಿನ್ ನರಸಪ್ಪ , 30 ವರ್ಷ, ಬಲಿಜಿಗ ಚಾಲಕ ವೃತ್ತಿ ವಾಸ ಗೌಡನಹಳ್ಳಿ ಗ್ರಾಮ ಚಿಕ್ಕಬಳ್ಳಾಪುರ ತಾಲ್ಲೂಕುರವರು ತಮ್ಮ ಕಾರನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ತಮ್ಮ ಅಪೆ ಆಟೋಗೆ ಡಿಕ್ಕಿ ಹೊಡೆಸಿದ್ದರ ಪರಿಣಾಮ ಎರಡೂ ವಾಹನಗಳು ಜಖಂಗೊಂಡಿದ್ದು, ಯಾರಿಗೂ ಯಾವುದೇ ಗಾಯಗಳಾಗಿರುವುದಿಲ್ಲ. ತನಗೆ ಸ್ವಂತ ಕೆಲಸ ಇದ್ದುದರಿಂದ ಈ ದಿನ ತಡವಾಗಿ ಠಾಣೆಗೆ ಬಂದು ದೂರನ್ನು ನೀಡುತ್ತಿದ್ದು, ಈ ಅಪಘಾತಕ್ಕೆ ಕಾರಣನಾದ ಕೆಎ 40 ಎನ್ 2543 ನೊಂದಣಿ ಸಂಖ್ಯೆಯ ಕಾರಿನ ಚಾಲಕ ಚಂದ್ರಶೇಖರ್ ರವರ ವಿರುದ್ದ ಕಾನೂನು ರೀತಿಯ ಕ್ರಮ ಜರುಗಿಸಲು ಕೋರಿ ನೀಡಿದ ದೂರಿನ ಮೇರೆಗೆ ಈ ಪ್ರ ವ ವರಧಿ.

 1. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.31/2021  ಕಲಂ. 279,337  ಐ.ಪಿ.ಸಿ :-

     ದಿನಾಂಕ: 20/01/2021 ರಂದು ಚಿಂತಾಮಣಿ ಸರ್ಕಾರಿ ಆಸ್ಪತ್ರೆಯಲ್ಲಿ ಗಾಯಾಳು ಗಂಗಪ್ಪ ಬಿನ್ ಲೇಟ್ ವೆಂಕಟಪ್ಪ, 44 ವರ್ಷ, ಭೋವಿ ಜನಾಂಗ, ಕೂಲಿಕೆಲಸ, ರಾಂಪುರ ಗ್ರಾಮ, ಚಿಂತಾಮಣಿ ತಾಲ್ಲೂಕು ರವರ ಹೇಳಿಕೆಯನ್ನು ಪಡೆದುಕೊಂಡು ಬೆಳಿಗ್ಗೆ 11.30 ಗಂಟೆಗೆ ಠಾಣೆಗೆ ವಾಪಸ್ಸಾಗಿ ದಾಖಲಿಸಿಕೊಂಡು ಗಾಯಾಳುವಿನ ಹೇಳಿಕೆಯ ದೂರಿನ ಸಾರಾಂಶವೇನೆಂದರೆ, ತಾನು ಮತ್ತು ತಮ್ಮ ಸಂಬಂಧಿ ವೆಂಕಟೇಶಪ್ಪ ಬಿನ್ ಲೇಟ್ ವೆಂಕಟರಾಯಪ್ಪ ರವರು ಪ್ರತಿ ನಿತ್ಯ ಜೊತೆಯಲ್ಲಿ ದ್ವಿಚಕ್ರ ವಾಹನದಲ್ಲಿ ಕೂಲಿಕೆಲಸಕ್ಕೆ ಹೋಗಿ ಬರುತ್ತಿದ್ದು, ಅದರಂತೆ ನಿನ್ನೆ ದಿನ ದಿನಾಂಕ: 19/01/2021 ರಂದು ಬೆಳಿಗ್ಗೆ ತಾವಿಬ್ಬರೂ ಎಂದಿನಂತೆ ಕೂಲಿ ಕೆಲಸಕ್ಕೆಂದು ನಂ KA-02 EE-3223 ಹೀರೋ ಹೊಂಡಾ ಸ್ಲೆಂಡರ್ ದ್ವಿಚಕ್ರ ವಾಹನದಲ್ಲಿ ಕೈವಾರ ಕ್ರಾಸ್ ಬಳಿ ಹೋಗಿದ್ದು ಅಲ್ಲಿ ಕೂಲಿ ಕೆಲಸ ಮುಗಿಸಿಕೊಂಡು ಅದೇ ದಿನ ರಾತ್ರಿ ಸುಮಾರು 8.00 ಗಂಟೆ ಸಮಯದಲ್ಲಿ ತಮ್ಮ ಗ್ರಾಮಕ್ಕೆ ವಾಪಸ್ ಬರಲೆಂದು ಬೆಂಗಳೂರು-ಕಡಪ ಮಾರ್ಗದ ಮುಖ್ಯ ರಸ್ತೆಯಲ್ಲಿ ಕುರುಟಹಳ್ಳಿ ಕ್ರಾಸ್ ನಲ್ಲಿ ಶ್ರೀನಿವಾಸ ವೈನ್ಸ್ ಅಂಗಡಿಯ ಮುಂಭಾಗದಲ್ಲಿ ರಸ್ತೆಯ ಬದಿಯಲ್ಲಿ ಬರುತ್ತಿದ್ದಾಗ ಅದೇ ಸಮಯಕ್ಕೆ ತಮ್ಮ ಹಿಂಬದಿಯಿಂದ ಅಂದರೆ ಬೆಂಗಳೂರು ಕಡೆಯಿಂದ ಬಂದ ಕಾರ್ ನ ಚಾಲಕ ತನ್ನ ಕಾರನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ತಮ್ಮ ದ್ವಿ ಚಕ್ರ ವಾಹನಕ್ಕೆ ಹಿಂಬದಿಯಿಂದ ಡಿಕ್ಕಿ ಹೊಡೆದು ಅಪಘಾತಪಡಿಸಿದ ಪರಿಣಾಮ ದ್ವಿಚಕ್ರ ವಾಹನವನ್ನು ಚಾಲನೆ ಮಾಡುತ್ತಿದ್ದ ತಾನು ಮತ್ತು ತನ್ನ ಹಿಂಬದಿಯಲ್ಲಿ ಕುಳಿತಿದ್ದ ವೆಂಕಟೇಶಪ್ಪ ರವರು  ದ್ವಿ ಚಕ್ರ ವಾಹನ ಸಮೇತ ಕೆಳಗೆ ಬಿದ್ದು ಹೋಗಿದ್ದು, ತನಗೆ  ತಲೆಗೆ, ಬಲಕಾಲಿಗೆ ರಕ್ತಗಾಯವಾಗಿದ್ದು, ವೆಂಕಟೇಶಪ್ಪ  ರವರಿಗೆ ಬಲಕಾಲಿಗೆ, ಸೊಂಟದ ಭಾಗಕ್ಕೆ  ರಕ್ತಗಾಯವಾಗಿರುತ್ತೆ. ತಮ್ಮ ದ್ವಿ ಚಕ್ರ ವಾಹನ ಜಖಂ ಆಗಿರುತ್ತೆ. ತಮಗೆ ಅಪಘಾತ ಪಡಿಸಿದ ಕಾರನ್ನು ನೋಡಲಾಗಿ ನೊಂದಣಿ ಸಂಖ್ಯೆ ಕೆಎ 04 ಎಂಎಫ್ 8581 ಇಂಡಿಕಾ ಕಾರು ಆಗಿದ್ದು ಸದರಿ ಕಾರಿನ ಮುಂಭಾಗ ಸಹ ಜಖಂ ಆಗಿರುತ್ತೆ.  ಅದೇ ಸಮಯಕ್ಕೆ ಅಲ್ಲಿದ್ದ ತಮ್ಮ ಗ್ರಾಮದ ವಾಸಿ ರಾಮಾಂಜಿ ಬಿನ್ ಲೇಟ್ ಶ್ರೀನಿವಾಸ, ವೆಂಕಟೇಶಪ್ಪ ಬಿನ್ ಗಂಗುಲಪ್ಪ ರವರು ಗಾಯಗಳಾಗಿದ್ದ ತಮ್ಮನ್ನು ಉಪಚರಿಸಿ ಯಾವುದೋ ಒಂದು ವಾಹನದಲ್ಲಿ ಕರೆದುಕೊಂಡು ಚಿಕಿತ್ಸೆಗೆ ದಾಖಲಿಸಿರುತ್ತಾರೆ. ಆದ್ದರಿಂದ ಮೇಲ್ಕಂಡ ನೊಂದಣಿ ಸಂಖ್ಯೆ ಕೆಎ 04 ಎಂಎಫ್ 8581 ಇಂಡಿಕಾ ಕಾರ್ ಚಾಲಕನ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿರುತ್ತೆ.

 1. ದಿಬ್ಬೂರಹಳ್ಳಿ ಪೊಲೀಸ್ ಠಾಣೆ ಮೊ.ಸಂ.08/2021 ಕಲಂ. 279,337  ಐ.ಪಿ.ಸಿ :-

     ದಿನಾಂಕ:20-01-2021 ರಂದು ಮಧ್ಯಾಹ್ನ 001-00 ಗಂಟೆಗೆ ಪಿರ್ಯಾಧಿಯಾದ ಆನಂದಪ್ಪ ಬಿನ್ ಲೇಟ್ ಅಶ್ವತ್ಥನಾರಾಯಣಸ್ವಾಮಿ, 45 ವರ್ಷ, ವಕ್ಕಲಿಗರು, ಜಿರಾಯ್ತಿ , ಶ್ರೀನಿವಾಸಪುರ ಗ್ರಾಮ, ಬಾಗೇಪಲ್ಲಿ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ತಾನು ಮೇಲ್ಕಂಡ ವಿಳಾಸದಾರನಾಗಿದ್ದು ಜಿರಾಯ್ತಿ ಮಾಡಿಕೊಂಡಿರುತ್ತೇನೆ. ತನ್ನ ಎರಡನೇ ಮಗನಾದ ಎ.ಅಜಯ್ ಕುಮಾರ್ 24 ವರ್ಷ ರವರು ಕೆಎ-40-ಎ-7479 ನಂಬರಿನ 407 ಟೆಂಪೋ ವಾಹವನ್ನು ತೆಗೆದುಕೊಂಡು ಆತನೇ ಬಾಡಿಗೆಗೆ ಚಾಲನೆ ಮಾಡಿಕೊಂಡಿರುತ್ತಾನೆ. ಅದರಂತೆ ದಿನಾಂಕ: 17/01/2021 ರಂದು ಬೆಳಿಗ್ಗೆ ಚಿಂತಾಮಣಿಗೆ ಬಾಡಿಗೆ ಇದೆ ಎಂತ ಹೇಳಿ ಟೆಂಪೋವನ್ನು ಮನೆಯಿಂದ ತೆಗೆದುಕೊಂಡು ಹೋಗಿರುತ್ತಾನೆ. ನಂತರ ಇದೇ ದಿನ ಸುಮಾರು 2.10 ಗಂಟೆ ಸಮಯದಲ್ಲಿ ನನ್ನ ಮಗನ ಜೊತೆ ಟೆಂಪೋ ವಾಹನದಲ್ಲಿ ಜೊತೆಯಲ್ಲಿ ಹೋಗಿದ್ದ ತಮ್ಮ ಗ್ರಾಮದ ವಾಸಿಯಾದ ಗಣೇಶ್ ಬಿನ್ ಕೊಂಡಪ್ಪರವರು ತನಗೆ ದೂರವಾಣಿ ಮುಖಾಂತರ ಕರೆ ಮಾಡಿ ಚಿಂತಾಮಣಿಯಿಂದ ಟೆಂಪೋದಲ್ಲಿ ಬಾಗೇಪಲ್ಲಿ ರಸ್ತೆಯಲ್ಲಿ ಸಾದಲಿ ಮತ್ತು ಕೋಟಗಲ್ ಕ್ರಾಸ್ ಮದ್ಯೆ ಬರುತ್ತಿದ್ದಾಗ ಟೆಂಪೋ ಅಫಘಾತವಾಗಿ ಬಿದ್ದು ಹೋಗಿದ್ದು ಟೆಂಪೋ ಚಾಲನೆ ಮಾಡುತ್ತಿದ್ದ ಅಜಯ್ ಕುಮಾರ್ ರವರ ಕೈಗೆ ಗಾಯವಾಗಿದೆ ಎಂತ ತಿಳಿಸಿದ್ದು ಕೂಡಲೇ ತಾನು ಮತ್ತು ತಮ್ಮ ಗ್ರಾಮದ ವಾಸಿ ಮಂಜುನಾಥ ಬಿನ್ ಅಶ್ವತ್ಥಪ್ಪರವರು ಅಫಘಾತವಾದ ಸ್ಥಳಕ್ಕೆ ಹೋಗಿ ನೋಡಲಾಗಿ ಟೆಂಪೋ ರಸ್ತೆಯ ಬಲಭಾಗಕ್ಕೆ ಬಿದ್ದು ಜಖಂಗೊಂಡು ತನ್ನ ಮಗನಿಗೆ ಎಡ ಕೈಗೆ ರಕ್ತ ಗಾಯ, ಬೆನ್ನಿನ ಮೇಲೆ ಹಾಗು ಇತರೇ ಕಡೆ ತರಚಿದ ಗಾಯಗಳಾಗಿರುತ್ತೆ. ಗಣೇಶರವರಿಗೆ ಯಾವುದೇ ಗಾಯಗಳಾಗಿರುವುದಿಲ್ಲ. ಸ್ಥಳದಲ್ಲಿದ್ದ ಗಣೇಶರವರನ್ನು  ವಿಚಾರ ಮಾಡಲಾಗಿ ಚಿಂತಾಮಣಿ ನಗರಕ್ಕೆ ಕಡಳೇಕಾಯಿ ಬಾಡಿಗೆಗೆ ಹೋಗಿ ಖಾಲಿ ಟೆಂಪೋವಿನಲ್ಲಿ ಮಧ್ಯಾಹ್ನ ಸುಮಾರು 2.00 ಗಂಟೆ ಸಮಯದಲ್ಲಿ ವಾಪಸ್ಸು ಬರುತ್ತಿದ್ದಾಗ ಟೆಂಪೋವನ್ನು ಅಜಯ್ ಕುಮಾರ್ ಬಾಗೇಪಲ್ಲಿ ರಸ್ತೆಯಲ್ಲಿ ಸಾದಲಿ ಮತ್ತು ಕೋಟಗಲ್ ಕ್ರಾಸ್ ಮದ್ಯೆ ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬರುತ್ತಿದ್ದು ಈ ಸಮಯದಲ್ಲಿ ಟೆಂಪೋವನ್ನು ಎದರುಗಡೆಯಿಂದ ಬಂದ ವಾಹನಕ್ಕೆ ತಪ್ಪಿಸಲು ಹೋದಾಗ ಟೆಂಪೋ  ರಸ್ತೆಯ ಬದಿಗೆ ಹೋಗಿ ಆಯತಪ್ಪಿ ಬಿದ್ದು ಹೋಗಿ ಟೆಂಪೋವನ್ನು ಚಾಲನೆ ಮಾಡುತ್ತಿದ್ದ ಅಜಯ್ ಕುಮಾರ್ ರವರಿಗೆ ಗಾಯಗಳಾಗಿದ್ದು ತನಗೆ ಯಾವುದೇ ಗಾಯಗಳಾಗಿರುವುದಿಲ್ಲವೆಂತ ತಿಳಿಸಿರುತ್ತಾನೆ. ನಂತರ ಸ್ಥಳಕ್ಕೆ ಬಂದ 108 ಅಂಬ್ಯಲೆನ್ ಮೂಲಕ ತನ್ನ ಮಗನನ್ನು ಬಾಗೇಪಲ್ಲಿ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆದುಕೊಂಡು ಹೋಗಿ ಅಲ್ಲಿ ಚಿಕಿತ್ಸೆ ಪಡಿಸಿ ವೈದ್ಯರ ಸಲಹೆಯ ಮೇರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ರಾಜಮಹಲ್ ವಿಲಾಸ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆಗೆ ದಾಖಲುಪಡಿಸಿರುತ್ತೇವೆ. ಗಾಯಗೊಂಡಿದ್ದ್ದ ತನ್ನ ಮಗನಿಗೆ ಚಿಕಿತ್ಸೆ ಕೊಡಿಸುತ್ತಿದ್ದರಿಂದ ಈ ದಿನ ತಡವಾಗಿ ಬಂದು ದೂರನ್ನು ನೀಡುತ್ತಿದ್ದು ಈ ಬಗ್ಗೆ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿರುವುದಾಗಿರುತ್ತೆ.

 1. ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.15/2021 ಕಲಂ. 457,380  ಐ.ಪಿ.ಸಿ :-

     ದಿನಾಂಕ 20/01/2021 ರಂದು ಮದ್ಯಾಹ್ನ 12-30 ಗಂಟೆ ಸಮಯದಲ್ಲಿ ಪಿರ್ಯಾದಿ ಶ್ರೀನಿವಾಸ ಬಿನ್ ಗೋವಿಂದಪ್ಪ,33 ವರ್ಷ, ವಕ್ಕಲಿಗ ಜನಾಂಗ, ಖಾಸಗಿ ಕೆಲಸ, ಮುಧುಗೆರೆ ಗ್ರಾಮ, ಗೌರಿಬಿದನೂರು ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆನೇಂದರೆ ತಾನು ತುಮಕೂರು ಜಿಲ್ಲೆ, ದಾಬಸ್ ಪೇಟೆಯಲ್ಲಿ ಎಲ್.ಎಂ. ವಿಂಡ್ ಪವರ್ ಖಾಸಗಿ ಕಂಪನಿಯಲ್ಲಿ ಎಂಪ್ಲಾಯಿ ಆಫೀಸರ್ ಆಗಿ ಕೆಲಸ ಮಾಡಿಕೊಂಡು, ತುಮಕೂರು ಟೌನ್. ಗೋಕುಲ ಬಡಾವಣೆಯಲ್ಲಿ ವಾಸವಾಗಿರುತ್ತೇನೆ. ತನ್ನ ಸ್ವಂತ ಊರು ಗೌರೀಬಿದನೂರು ತಾಲ್ಲೂಕು, ಮುಧುಗೆರೆ ಗ್ರಾಮವಾಗಿರುತ್ತೆ.   ಮುಧುಗೆರೆ ಗ್ರಾಮದಲ್ಲಿರುವ ತಮ್ಮ ಮನೆಯಲ್ಲಿ ತಮ್ಮ ತಂದೆ ಗೋವಿಂದಪ್ಪ ಹಾಗು ಶಾರದಮ್ಮ ಮಾತ್ರ ವಾಸವಾಗಿರುತ್ತಾರೆ. ದಿನಾಂಕ:19/01/2021 ರಂದು ತಮ್ಮ ತಂದೆ ತಾಯಿ ಗೋಕರ್ಣಕ್ಕೆ ಪ್ರವಾಸ  ಹೋಗಲು ಮನೆಗೆ ಬೀಗ ಹಾಕಿಕೊಂಡು  ರಾತ್ರಿ ಸುಮಾರು 11-00 ಗಂಟೆಯಲ್ಲಿ ಪ್ರವಾಸಕ್ಕೆ  ಹೋಗಿರುತ್ತಾರೆ.   ಈ ದಿನ ದಿನಾಂಕ: 20/01/2021 ರಂದು ಬೆಳಿಗ್ಗೆ 7-00 ಗಂಟೆ ಸುಮಾರಿಗೆ ಮುಧುಗೆರೆ ಗ್ರಾಮದಲ್ಲಿ ತಮ್ಮ ಮನೆಯ ಪಕ್ಕದಲ್ಲಿರುವ ತಮ್ಮ ಚಿಕ್ಕಮ್ಮನಾದ ನಾಗರಾತ್ನಮ್ಮ ಕೋಂ ಚಲಪತಿ ಎಂಬುವವರು ತನಗೆ ಮೊಬೈಲ್ ಮೂಲಕ ಫೋನ್ ಮಾಡಿ,  ‘’ ಈ ದಿನ ಬೆಳಿಗ್ಗೆ 6-30 ಗಂಟೆ ಸುಮಾರಿಗೆ  ನಿಮ್ಮ ಮನೆಯ ಬಾಗಿಲು ತೆಗೆದಿರುವುದನ್ನು ನೋಡಿ, ಒಳಗೆ ಹೋಗಿ ನೋಡಿದಾಗ, ಬೀರುವಿನ ಬಾಗಿಲುಗಳನ್ನು ಕಿತ್ತು ಬಟ್ಟೆಗಳೆಲ್ಲಾ ಚೆಲ್ಲಾ ಪಿಲ್ಲಿಯಾಗಿ ಬಿದ್ದಿರುತ್ತವೆ.   ಬಹುಶಃ ಯಾರೋ ಕಳ್ಳರು ಬಂದು ಈ ಕೃತ್ಯ ಮಾಡಿರಬಹುದೆಂದು ತಿಳಿಸಿದರು.  ಕೂಡಲೇ ತಾನು ತುಮಕೂರಿನಿಂದ ಈ ದಿನ ಬೆಳಿಗ್ಗೆ ಸುಮಾರು 8-30 ಗಂಟೆಗೆ ಬಂದು ನೊಡಲಾಗಿ, ತಮ್ಮ ಮನೆಯ ಬಾಗಿಲಿನ ಬೀಗವನ್ನು  ಕಿತ್ತು ಹಾಕಿ,  ಮನೆಯೊಳಗೆ ಪ್ರವೇಶಿಸಿ, ಮನೆಯಲ್ಲಿದ್ದ ಬೀರುವಿನ ಬಾಗಿಲನ್ನು ಬಲವಂತವಾಗಿ ತೆಗೆದು, ಬೀರುವಿನ ಸೇಫ್ಟಿ ಲಾಕರನ್ನು ಕಿತ್ತುಹಾಕಿದ್ದರು. ತಮ್ಮ ತಂದೆ ತಾಯಿಗೆ ಫೋನ್ ಮಾಡಿ, ವಿಚಾರ ತಿಳಿಸಿದಾಗ,  ಅವರು ತಿಳಿಸಿದಂತೆ ಬೀರುವಿನಲ್ಲಿಟ್ಟಿದ್ದ  1) ಚಿನ್ನದ ಟೀಕಾ ಚೈನ್   2) ಒಂದು ಜೊತೆ ಬಿಳೀ ಕಲ್ಲಿನ ಚಿನ್ನದ ಓಲೆ, 3) ಮೂರು ಬಿಳಿ ಕಲ್ಲಿನ ಹೆಂಗಸರ ಚಿನ್ನದ ಉಂಗುರ  4) ಕಿವಿ ಚೈನು   ಹಾಗು ನಗದು ಸುಮಾರು 50,000/-ರೂ ಕಳುವಾಗಿರುತ್ತೆ  ಟೀಕಾ ಚೈನು ಹಳೆಯದಾಗಿರುತ್ತೆ. ಇವುಗಳ ತೂಕ ನಮ್ಮ ತಾಯಿಯಿಂದ  ತಿಳಿಯಬೇಕಾಗಿರುತ್ತೆ. ಕಳುವಾಗಿರುವ ಒಡೆವೆಗಳ  ಹಾಗು ನಗದಿನ ಒಟ್ಟು ಬೆಲೆ ಸುಮಾರು  ಬೆಲೆ ಸುಮಾರು 1,35,000/ರೂಗಳಾಗಿರುತ್ತೆ. ದಿನಾಂಕ:19/01/2021 ರಂದು ರಾತ್ರಿಯಲ್ಲಿ ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ.  ಆದುದರಿಂದ ಕಳುವಾಗಿರುವ ಒಡವೆ ಹಾಗು ನಗದನ್ನು ಕಳವು ಮಾಡಿರುವವರನ್ನು ಪತ್ತೆ ಮಾಡಿ, ಕಳುವಾಗಿರುವ ಒಡವೆ ಹಾಗು ನಗದನ್ನು ಪತ್ತೆ ಮಾಡಿಕೊಡಬೇಕಾಗಿ ಕೋರಿದೆ.

 1. ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.16/2021 ಕಲಂ. 15(A),32(3) ಕೆ.ಇ ಆಕ್ಟ್:-

     ದಿನಾಂಕ: 04/12/2020 ರಂದು ಸಂಜೆ 6-00 ಗಂಟೆಯಲ್ಲಿ ಠಾಣೆಯಲ್ಲಿದ್ದಾಗ ಕುರೂಡಿ ಗ್ರಾಮದಲ್ಲಿ ಯಾರೋ ತನ್ನ ಅಂಗಡಿ ಮುಂದೆ ಸಾರ್ವಜನಿಕರಿಗೆ ಮಧ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದಾಗಿ ಮಾಹಿತಿ ಬಂದ ಮೇರೆಗೆ, ಹೆಚ್.ಸಿ-171, ಬಾಬು.ಸಿ, ಪಿ.ಸಿ-80 ಶ್ರೀನಾಥ ರವರೊಂದಿಗೆ ಸರ್ಕಾರಿ ಜೀಪ್ ಸಂಖ್ಯೆ: ಕೆ.ಎ-40, ಜಿ-538 ರಲ್ಲಿ ಕುರೂಡಿ ಗ್ರಾಮಕ್ಕೆ ಸಂಜೆ 6-30 ಗಂಟೆಗೆ ಹೋಗಿ ಅಲ್ಲಿ, ಪಂಚಾಯ್ತಿದಾರರನ್ನು ಕರೆದುಕೊಂಡು ಮಾಹಿತಿ ಇದ್ದ ಸ್ಥಳಕ್ಕೆ ನಡೆದುಕೊಂಡು ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಯಾರೋ ಒಬ್ಬ ವ್ಯಕ್ತಿ ಮಂಜಮ್ಮ ರವರ ಮನೆಯ ಮುಂದೆ ಸಾರ್ವಜನಿಕ ರಸ್ತೆಯಲ್ಲಿ ಪ್ಲಾಸ್ಟಿಕ್ ಚೀಲವನ್ನು ಹಿಡಿದುಕೊಂಡು, ಅದರಲ್ಲಿದ್ದ ಮದ್ಯದ ಪಾಕೆಟ್ ಗಳನ್ನು ಇಬ್ಬರು ವ್ಯಕ್ತಿಗಳಿಗೆ ತೆಗೆದುಕೊಡುತ್ತಿದ್ದು, ಆ ಇಬ್ಬರು ವ್ಯಕ್ತಿಗಳು ಪ್ಲಾಸ್ಟಿಕ್ ಗ್ಲಾಸ್ ಗಳಲ್ಲಿ ಮಧ್ಯಪಾನ ಮಾಡುತ್ತಿದ್ದುದನ್ನು ಖಚಿತಪಡಿಸಿಕೊಂಡು ನಾವು ಅವರ ಬಳಿ ಹೋಗುವಷ್ಟರಲ್ಲಿ ಸಮವಸ್ತ್ರದಲ್ಲಿದ್ದ ನಮ್ಮನ್ನು ಕಂಡು ಮಧ್ಯಪಾನ ಮಾಡುತ್ತಿದ್ದವರು ಓಡಿಹೋಗಿರುತ್ತಾರೆ. ಮಧ್ಯದ ಪಾಕೆಟ್ ಗಳನ್ನು ಕೊಡುತ್ತಿದ್ದ ವ್ಯಕ್ತಿಯನ್ನು ಹಿಡಿದುಕೊಂಡು ಆಸಾಮಿಯ ಹೆಸರು ವಿಳಾಸ ಕೇಳಲಾಗಿ, ತನ್ನ ಹೆಸರು ರಾಜಕುಮಾರ್ @ ರಾಜ ಬಿನ್ ಲೇಟ್ ರಾಮಣ್ಣ, 27 ವರ್ಷ, ಗೊಲ್ಲರು, ಕೂಲಿ ಕೆಲಸ ವಾಸ ಕುರೂಡಿ ಗ್ರಾಮ ಗೌರೀಬಿದನೂರು ತಾಲ್ಲೂಕು ಎಂದು ತಿಳಿಸಿದ್ದು, ಸ್ಥಳದಲ್ಲಿ ಬಿಸಾಡಿದ್ದ ಪ್ಲಾಸ್ಟಿಕ್ ಚೀಲವನ್ನು ಪರಿಶೀಲಿಸಲಾಗಿ, ಅದರಲ್ಲಿ 90 ಎಂ.ಎಲ್.ಸಾಮರ್ಥ್ಯದ HAY WARDS CHEERS WHISKY ಯ 21 ಟೆಟ್ರಾ ಪಾಕೆಟ್ ಗಳು ಇದ್ದು, ಇವುಗಳ ಒಟ್ಟು ಸಾಮರ್ಥ್ಯ 1 ಲೀಟರ್ 890 ಎಂ.ಎಲ್. ಆಗಿರುತ್ತೆ. ಇವುಗಳ ಒಟ್ಟು ಬೆಲೆ 737.73/- ರೂ.ಗಳಾಗಿರುತ್ತೆ. ಸ್ಥಳದಲ್ಲಿ 4 ಖಾಲಿ ಪ್ಲಾಸ್ಟಿಕ್ ಗ್ಲಾಸ್ ಗಳು, 90 ಎಂ.ಎಲ್ ಸಾಮರ್ಥ್ಯದ HAY WARDS CHEERS WHISKY ಯ 04 ಖಾಲಿ ಟೆಟ್ರಾ ಪಾಕೆಟ್ ಗಳು ಬಿದ್ದಿದ್ದವು. ಸದರಿ ವ್ಯಕ್ತಿಗೆ ಇದನ್ನು ಮಾರಲು ಹಾಗು ಮಧ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಡಲು ಯಾವುದೇ ಪರವಾನಗಿ ಇದೆಯೇ ಎಂದು ಕೇಳಿದಾಗ ಯಾವುದೇ ಪರವಾನಗಿ ಇಲ್ಲವೆಂದು ತಿಳಿದು ಬಂದಿರುತ್ತದೆ. ಆದ್ದರಿಂದ ಸ್ಥಳದಲ್ಲಿ ಸಂಜೆ 6-45 ಗಂಟೆಯಿಂದ 7-45 ಗಂಟೆಯವರೆಗೆ ಟಾರ್ಚ್ ಬೆಳಕಿನಲ್ಲಿ ಪಂಚರ ಸಮಕ್ಷಮದಲ್ಲಿ ಪಂಚನಾಮೆ ಕ್ರಮ ಜರುಗಿಸಿ ಸ್ಥಳದಲ್ಲಿ ದೊರೆತ 90 ಎಂ.ಎಲ್ ಸಾಮರ್ಥ್ಯದ HAYWARDS CHEERS WHISKY ಯ 21 ಟೆಟ್ರಾ ಪಾಕೆಟ್ ಗಳು, ಒಂದು ಪ್ಲಾಸ್ಟಿಕ್ ಚೀಲ, ಸ್ಥಳದಲ್ಲಿ ಬಿದ್ದಿದ್ದ 04 ಖಾಲಿ ಪ್ಲಾಸ್ಟಿಕ್ ಗ್ಲಾಸ್ ಗಳು, HAY WARDS CHEERS WHISKY ಯ 4 ಖಾಲಿ ಟೆಟ್ರಾ ಪಾಕೆಟ್ ಗಳನ್ನು ಮುಂದಿನ ಕ್ರಮಕ್ಕಾಗಿ ವಶಪಡಿಸಿಕೊಂಡು, ರಾತ್ರಿ 8-15 ಗಂಟೆಗೆ ಠಾಣೆಗೆ ವಾಪಸ್ಸು ಬಂದಿದ್ದು, ಈ ಮೆಮೋನೊಂದಿಗೆ ಮಾಲನ್ನು ಸಹ ನೀಡುತ್ತಿದ್ದು, ಆರೋಪಿಯ ವಿರುದ್ಧ ಕಲಂ: 15[ಎ], 32 ಕ್ಲಾಸ್ [3] ಕೆ.ಇ.ಆಕ್ಟ್ –1965 ರೀತ್ಯಾ ಪ್ರಕರಣವನ್ನು ದಾಖಲು ಮಾಡಿ ಕ್ರಮ ಕೈಗೊಳ್ಳಲು ಸೂಚಿಸಿರುತ್ತೆ.ದಿನಾಂಕ 21/01/2021 ರಂದು ಬೆಳಿಗ್ಗೆ 9-00 ಗಂಟೆಗೆ  ಘನ ನ್ಯಾಯಾಲಯದಿಂದ ಅನುಮತಿಯನ್ನು ಪಡೆದು ಠಾಣೆಯಲ್ಲಿ ಪ್ರಕರಣ ದಾಖಲಿಸಿರುತ್ತೆ.

 1. ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.17/2021 ಕಲಂ. 78(I),78(3) ಕೆ.ಪಿ ಆಕ್ಟ್:-

     ದಿನಾಂಕ 27/11/2020 ರಮದು ಚಿಕ್ಕಬಳ್ಳಾಪುರ ಜಿಲ್ಲೆ ಡಿಸಿಬಿ- ಸಿಇಎನ್ ಪೊಲೀಸ್ ಠಾಣೆಯ ಪಿಐ ಶ್ರೀ ಎನ್ ರಾಜಣ್ಣ ರವರು ಹೆಚ್ ಸಿ 80 , ಕೃಷ್ಣಪ್ಪ ಎಸ್ ಆದ ನನಗೆ ಮತ್ತು ಪಿಸಿ 142 ಅಶೋಕ , ಪಿಸಿ 152 ಜಯಣ್ಣ ರವರುಗಳಿಗೆ ಗೌರಿಬಿದನೂರು ತಾಲ್ಲೂಕಿನಲ್ಲಿ ಕಾನೂನ ಬಾಹಿರ ಚಟುವಟಿಕೆಗಳ ಬಗ್ಗೆ ಮಾಹಿತಿ ಸಂಗ್ರಹಿಸಿ ದಾಳಿ ವರದಿ ಮಾಡುವಂತೆ ನೇಮಿಸಿ ಕಳುಹಿಸಿಕೊಟ್ಟಿದ್ದು, ಅದರಂತೆ ನಾವುಗಳು ಗೌರಿಬಿನೂರು ತಾಲ್ಲೂಕಿನ ಚನ್ನಬೈರೇನಹಳ್ಳಿ ಚಿಕ್ಕಕುರುಗೋಡು, ದೊಡ್ಡಕುರುಗೋಡು ಗ್ರಾಮಗಳಲ್ಲಿ ಗಸ್ತು ಮಾಡಿಕೊಮಡು ವಿದುರಾಶ್ವತ್ಥ ಕ್ರಾಸ್ ನಲ್ಲಿರುವಾಗ 7-00 ಗಂಟೆಯಲ್ಲಿ ಬಾತ್ಮಿದಾರರಿಂದ ಬಂದ ಮಾಹಿತಿ ಬಂದ ಮೇರೆಗೆ ಕದಿರೇನಹಳ್ಳಿ ಬಸ್ ನಿಲ್ದಾಣದಲ್ಲಿ ಯಾರೋ ಒಬ್ಬ ಆಸಾಮಿ 1 ರೂಗೆ 70 ರು ಕೊಡುತ್ತೇನೆಂದು ನಿಮ್ಮಅದೃಷ್ಠ ಪರೀಕ್ಷಿಸಿಕೊಳ್ಳಿ ಎಂದು ಕೂಗುತ್ತಿದ್ದು, ನಂತರ ನಾವು ಪಂಚರ ಸಮಕ್ಷಮದಲ್ಲಿ ಸದರಿ ಆಸಾಮಿಯನ್ನು ಸುತ್ತುವರೆದು ಸಾರ್ವಜನಿಕ ರಸ್ತೆಯಲ್ಲಿ ಮಟಕಾ ಅಂಕಿಗಳನ್ನು ಬರೆದುಕೊಡುತ್ತಿದ್ದ ಆಸಾಮಿಯನ್ನು ಹಿಡಿದುಕೊಂಡು ಹೆಸರು ವಿಳಾಸ ಕೇಳಲಾಗಿ ಬಸವರಾಜು ಬಿನ್ ನಂಜುಂಡಪ್ಪ , 62 ವರ್ಷ, ಲಿಂಗಾಯಿತರು , ಕದಿರೇನಹಳ್ಳಿ ಗ್ರಾಮ, ಕಸಬಾ ಹೋಬಳಿ , ಗೌರಿಬಿದನೂರು ತಾಲ್ಲೂಕು ಎಂದು ತಿಳಿಸಿರುತ್ತಾನೆ, ಸದರಿ ಆಸಾಮಿಯ ಬಳಿ ಪರಿಶೀಲಿಸಲಾಗಿ ವಿವಿಧ ಅಂಕಿಗಳಿಗೆ ವಿವಿಧ ಅಂಕಿಗಳಿಗೆ ವಿವಿಧ ಮೊತ್ತದ ಹಣ ಬರೆದಿರುವ ದು ಮಟಕಾ ಚೀಟಿ, ಮಟಕಾ ಅಂಕಿಗಳನ್ನು ಬರೆಯಲು ಉಪಯೋಗಿಸುವ ಒಂದು ಬಾಲ್ ಪಾಯಿಂಟ್ ಪನ್ ,2030-00 ರೂ ನಗದು ಹಣವನ್ನು ಅಂಚರ ಸಮಕ್ಷಮದಲ್ಲಿ ಪಂಚನಾಮೆ ಮೂಲಕ ಅಮಾನತ್ತು ಪಡಿಸಿಕೊಂಡು , ಮಟಕಾ ಅಂಕಿಗಳನ್ನು ಬರೆಯುತ್ತಿದ್ದ ಆಸಾಮಿಯನ್ನು ವಶಕ್ಕೆ ಪಡೆದುಕೊಂಡು ಮುಂದಿನ ಕಾನೂನು ಕ್ರಮಕ್ಕಾಗಿ ಮೇಲ್ಕಂಡ ಆಸಾಮಿ ಮತ್ತು ಮಾಲುಗಳನ್ನು ಠಾಣಾಧಿಕಾರಿಗಳ ಮುಂದೆ ಹಾಜರುಪಡಿಸಿರುತ್ತೆ. ದಿನಾಂಕ 21/01/2021 ರಂದು ಬೆಳಿಗ್ಗೆ 9-30 ಗಂಟೆಯಲ್ಲಿ ನ್ಯಾಯಾಲಯದ ಆದೇಶ ಪ್ರತಿಯನ್ನು ಪಡೆದುಕೊಂಡು ಠಾಣೆಯಲ್ಲಿ ಕಲಂ 78(1) (3) ಕೆ ಪಿ ಆಕ್ಟ್ ರೀತ್ಯಾ ಪ್ರಕರಣ ದಾಖಲಿಸಿರುತ್ತೆ.

 1. ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.18/2021 ಕಲಂ. 78(I),78(3) ಕೆ.ಪಿ ಆಕ್ಟ್:-

     ದಿನಾಂಕ:07/12/2020 ರಂದು ಸಂಜೆ 4-15 ಗಂಟೆಗೆ ಪಿರ್ಯಾದಿದಾರರಾದ ರಾಜಗೋಪಾಲ ಸಿ.ಹೆಚ್.ಸಿ-192, ಚಿಕ್ಕಬಳ್ಳಾಪುರ ಜಿಲ್ಲೆ ಡಿಸಿಬಿ/ಸಿಇಎನ್ ಪೊಲೀಸ್ ಠಾಣೆ ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ, ಪಿರ್ಯಾದಿದಾರರು ಮತ್ತು ಜಯಣ್ಣ, ಸಿಪಿಸಿ-152 ರವರು ಈ ದಿನ ತಮ್ಮಠಾಣೆಯ ಪಿ.ಐ. ಸಾಹೇಬರಾದ ಶ್ರೀ. ರಾಜಣ್ಣ.ಎನ್. ರವರ ಆದೇಶದಂತೆ ಕಾನೂನು ಬಾಹಿರ ಚಟುವಟಿಕೆಗಳ ಮಾಹಿತಿ ಸಂಗ್ರಹಣೆಗಾಗಿ ಗೌರಿಬಿದನೂರು ತಾಲ್ಲೂಕಿನ ವಿವಿಧ ಕಡೆ ಗಸ್ತು ಮಾಡಿಕೊಂಡು ಮದ್ಯಾಹ್ನ2-00 ಗಂಟೆಗೆ ಗೌರಿಬಿದನೂರು ನಗರಕ್ಕೆ ಬಂದಾಗ ಭಾತ್ಮಿದಾರರಿಂದ ಇದೇ ತಾಲ್ಲೂಕಿನ ಗಂಗಸಂದ್ರ ಗ್ರಾಮದ ಶ್ರೀರಾಮರೆಡ್ಡಿ ಎಂಬುವವರು ಕಾನೂನು ಬಾಹಿರವಾಗಿ ಮಟ್ಕಾ ಅಂಕಿಗಳನ್ನು ಬರೆಯುತ್ತಿರುವುದಾಗಿ ಖಚಿತ ಮಾಹಿತಿ ಬಂದಿದ್ದು ಅದರಂತೆ ತಾವು ಗಂಗಸಂದ್ರ ಗ್ರಾಮಕ್ಕೆ ಹೋಗಿ ಪಂಚರನ್ನು ಬರಮಾಡಿಕೊಂಡು ಪಂಚರಿಗೆ ಮಾಹಿತಿ ತಿಳಿಸಿ ಪಂಚರೊಂದಿಗೆ ಹೋಗಿ ಕಾನೂನು ಬಾಹಿರವಾಗಿ ಗಂಗಸಂದ್ರ ಗ್ರಾಮದ ಚಿಲ್ಲರೆ ಅಂಗಡಿಯ ಮುಂದೆ ಮಟ್ಕಾ ಅಂಕಿಗಳನ್ನು ಬರೆಯುತ್ತಿದ್ದ ಆಸಾಮಿಯನ್ನ ಹಿಡಿದುಕೊಂಡು ಹೆಸರು ಮತ್ತು ವಿಳಾಸ ಕೇಳಲಾಗಿ ಶ್ರೀರಾಮರೆಡ್ಡಿ ಬಿನ್ ಲೇಟ್ ಬೈಯಣ್ಣ,60ವರ್ಷ,ವಕ್ಕಲಿಗರು,ಚಿಲ್ಲರೆ ಅಂಗಡಿ ವ್ಯಾಪಾರ, ವಾಸ ಗಂಗಸಂದ್ರ ಗ್ರಾಮ, ಗೌರಿಬಿದನೂರು ತಾಲ್ಲೂಕು ಎಂತ ತಿಳಿಸಿರುತ್ತಾರೆ. ನಂತರ ಆತನ ಬಳಿ ಪರಿಶೀಲಿಸಲಾಗಿ 1] ಒಂದು ಬಾಲ್ ಪಾಯಿಂಟ್ ಪೆನ್ನು 2] ವಿವಿಧ ಅಂಕಿಗಳಿಗೆ ವಿವಿಧ ಮೊತ್ತ ಬರೆದಿರುವ ಒಂದು ಮಟ್ಕಾ ಚೀಟಿ ಮತ್ತು ರೂ 3] 1230/- ರೂಪಾಯಿಗಳಿದ್ದು ನಗದು ಹಣದ ಬಗ್ಗೆ ವಿಚಾರಿಸಲಾಗಿ ಮಟ್ಕಾ ಬರೆದಿದ್ದರಿಂದ ಬಂದ ಹಣವೆಂತ ತಿಳಿಸಿದ್ದು ನಂತರ ಪಂಚರ ಸಮಕ್ಷಮ ಮೇಲ್ಕಂಡ ಮಾಲುಗಳನ್ನು ಮುಂದಿನ ಕ್ರಮಕ್ಕಾಗಿ ಅಮಾನತ್ತು ಪಡಿಸಿಕೊಂಡು ಆಸಾಮಿಯನ್ನು ವಶಕ್ಕೆ ಪಡೆದು ಸದರಿ ಆಸಾಮಿ ಮತ್ತು ಮಾಲಿನೊಂದಿಗೆ ಮುಂದಿನ ಕಾನೂನು ಕ್ರಮ ಕೈಗೊಳ್ಳಲು ಕೋರಿ ನೀಡಿದ ದೂರಾಗಿರುತ್ತದೆ.ದಿನಾಂಕ 21/01/2021 ರಂದು ಬೆಳಿಗ್ಗೆ 10-30 ಗಂಟೆಗೆ ಘನ ನ್ಯಾಯಾಲಯದ ಅನುಮತಿಯ ಆದೇಶವನ್ನು ಪಡೆದು ಕಲಂ 78(1)(3) ಕೆಪಿ ಆಕ್ಟ್ ರೀತ್ಯಾ ಪ್ರಕರಣ ದಾಖಲಿಸಿರುತ್ತೆ.

 1. ಗೌರಿಬಿದನೂರು ಪುರ ಪೊಲೀಸ್ ಠಾಣೆ ಮೊ.ಸಂ.12/2021 ಕಲಂ. 78(3) ಕೆ.ಪಿ ಆಕ್ಟ್:-

     ದಿನಾಂಕ;20/01/2020 ರಂದು ಸಂಜೆ 7-30 ಗಂಟೆಗೆ ಘನ ನ್ಯಾಯಾಲಯದ ಪಿಸಿ 318 ರವರು ಠಾಣಾ ಎನ್ ಸಿ ಆರ್; 09/2021 ರಲ್ಲಿ ಕ್ರಿಮಿನಲ್  ಪ್ರಕರಣ ದಾಖಲಿಸಲು ನ್ಯಾಯಾಲುದ ಅನುಮತಿಯನ್ನು ಪಡೆದು ತಂದು ಹಾಜರುಪಡಿಸಿದ ಅನುಮತಿಯ ಪತ್ರದ ಸಾರಾಂಶವೇನೆಂದರೆ  ದಿನಾಂಕ 16/01/2021 ರಂದು ಮದ್ಯಾಹ್ನ 1:30 ಗಂಟೆ ಸಮಯದಲ್ಲಿ ಮಾನ್ಯ ಉಪಾಧೀಕ್ಷಕರು ಚಿಕ್ಕಬಳ್ಳಾಪುರ ಉಪವಿಭಾಗ ಶ್ರೀ ರವಿಶಂಕರ್ ರವರು ಠಾಣೆಗೆ HC-50 ಶ್ರೀನಿವಾಸ್ ರವರ ಮೂಲಕ ಠಾಣೆಗೆ ಕಳುಹಿಸಿಕೊಟ್ಟ ವರದಿಯ ಸಾರಾಂಶವೇನೆಂದರೆ, ದಿನಾಂಕ 16/01/2021 ರಂದು ಮದ್ಯಾಹ್ನ ಗೌರಿಬಿದನೂರು ನಗರದ ಕಡೆ ಕೋವಿಡ್-19 ಲಸಿಕೆ ನೀಡುತ್ತಿರುವ ವಿಚಾರದಲ್ಲಿ ಗಸ್ತಿನಲ್ಲಿರುವಾಗ ಮದ್ಯಾಹ್ನ 12:00 ಗಂಟೆ ಸಮಯದಲ್ಲಿ ಬಂದ ಖಚಿತ ಮಾಹಿತಿ ಮೇರೆಗೆ ಪಂಚರನ್ನು ಕರೆದುಕೊಂಡು ಬಸ್ ನಿಲ್ದಾಣದ ಸಮೀಪ ನಂದಿನಿ ಹಾಲಿನ ಕೇಂದ್ರದ ಮುಂಭಾಗ ಮಟ್ಕಾ ಅಂಕಿಗಳನ್ನು ಬರೆದುಕೊಡುತ್ತಿದ್ದ ಆಸಾಮಿಯಾದ ಅಲ್ಲಬಕಾಶ್ ಬಿನ್ ಲೇಟ್ ರುಸ್ತುಂ ಸಾಬ್, 55 ವರ್ಷ, ಮುಸ್ಲಿಂ ಜನಾಂಗ, ವಾಸ: ನಾಗಿರೆಡ್ಡಿ ಬಡಾವಣೆ ಗೌರಿಬಿದನೂರು ನಗರ ರವರನ್ನು ಮತ್ತು ಆತನ ಬಳಿ ಇದ್ದ 1) ಬಾಲ್ ಪಾಯಿಂಟ್ ಪೆನ್ನು, 2) ವಿವಿಧ ಅಂಕಿಗಳಿಗೆ ಬರೆದಿರುವ ಒಂದು ಮಟ್ಕಾ ಚೀಟಿ ಹಾಗೂ 3) ನಗದು ಹಣ 1480 ರೂಪಾಯಿಗಳು 4) K-09 ಕಂಪನಿಯ ಕೀಪ್ಯಾಡ್ ಮೊಬೈಲ್ ನ್ನು ವಶಕ್ಕೆ ಪಡೆದುಕೊಂಡು ಆತನನ್ನು ವಿಚಾರಿಸಲಾಗಿ ಶ್ರೀಧರ ರವರಿಗೆ ಮಟ್ಕಾ ಅಂಕಿಗಳನ್ನು ಬರೆದುಕೊಟ್ಟು ಅವನಿಂದ ಕಮೀಷನ್ ಪಡೆಯುವುದಾಗಿ ತಿಳಿಸಿದನೆಂದು ನೀಡಿದ ವರದಿಯನ್ನು ಪಡೆದು ಎನ್.ಸಿ.ಆರ್ ಪ್ರಕರಣ ದಾಖಲಿಸಿಕೊಂಡು ನಂತರ  ಈ ದಿನ ಅನುಮತಿಯನ್ನು ಪಡೆದು ಪ್ರಕರಣ ದಾಖಲಿಸಿರುತ್ತೆ  ದಾಖಲಸಿರುತ್ತೇನೆ.

 1. ಕೆಂಚಾರ್ಲಹಳ್ಳಿ ಪೊಲೀಸ್ ಠಾಣೆ ಮೊ.ಸಂ.06/2021 ಕಲಂ. 279,337 ಐ.ಪಿ.ಸಿ:-

     ದಿನಾಂಕ 20/01/2021 ರಂದು ಮಧ್ಯಾಹ್ನ 3-00 ಗಂಟೆಗೆ ಹೆಚ್.ಸಿ-116 ಉಮಾಶಂಕರ್ ರವರು ಕೋಲಾರದ ಎಸ್.ಎನ್.ಆರ್ ಆಸ್ಪತ್ರೆಯಿಂದ ಗಾಯಾಳು ಅಂಬರೀಶ್ ರವರ ಹೇಳಿಕೆ ಪಡೆದುಕೊಂಡು ಠಾಣೆಯಲ್ಲಿ ಹಾಜರುಪಡಿಸಿದ್ದರ ಸಾರಾಂಶವೇನೆಂದರೆ: ದಿನಾಂಕ 18/01/2021 ರಂದು ಮುದ್ದಲಹಳ್ಳಿ ಗ್ರಾಮದ ಅಂಬರೀಶ ಆದ ತಾನು ತಮ್ಮ ಸ್ನೇಹಿತನಾದ ಲಕ್ಷ್ಮೀಕಾಂತ್ ಎಂಬುವವರಿಗೆ ಚಿಂತಾಮಣಿಯಲ್ಲಿ ನಾಟಿ ವೈದ್ಯಕೀಯ ಮಾಡಿಸಿಕೊಂಡು ಇಬ್ಬರೂ ಕೆಎ-07-ವೈ-5391 ನೋಂದಣಿ ಸಂಖ್ಯೆಯ ಫ್ಯಾಷನ್ ಪ್ರೋ ದ್ವಿಚಕ್ರವಾಹನದಲ್ಲಿ ದೊಡ್ಡಕರಕಮಾಕಲಹಳ್ಳಿ ಗ್ರಾಮದ ಬಳಿಯ ಲೇಔಟ್ ತಿರುವಿನ ಮುರಗಮಲ್ಲಾ-ನಿಮ್ಮಕಾಯಲಹಳ್ಳಿ ಟಾರ್ ರಸ್ತೆಯಲ್ಲಿ ಹೋಗುತ್ತಿದ್ದಾಗ ಎದುರುಗಡೆಯಿಂದ ಯಾವುದೋ ದ್ವಿಚಕ್ರವಾಹನ ಸವಾರ ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಡಿಕ್ಕಿ ಹೊಡೆಸಿ ಅಪಘಾತಪಡಿಸಿದ ಪರಿಣಾಮ ವಾಹನದಲ್ಲಿದ್ದ ಇಬ್ಬರೂ ಕೆಳಗೆ ಬಿದ್ದು, ತನಗೆ ಬಲಭಾಗದ ಹಣೆಯ ಮೇಲೆ ಬಾಯಿಗೆ, ಮುಖದ ಮೇಲೆ ಬಲ ಮತ್ತು ಎಡಕಾಲುಗಳಿಗೆ ಮತ್ತು ಎರಡು ಕೈಗಳಿಗೆ ರಕ್ತಗಾಯಗಳಾಗಿದ್ದು, ಲಕ್ಷ್ಮೀಕಾಂತ್ ಗೆ ಬಲಕೈ, ಬಲಕಾಲು, ಹೆಬ್ಬರಳಿಗೆ ರಕ್ತಗಾಯವಾಗಿರುತ್ತದೆ. ಲಕ್ಷ್ಮೀಕಾಂತ್ ಚಿಂತಾಮಣಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ತಾನು ಕೋಲಾರದ ಎಸ್.ಎನ್.ಆರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುತ್ತೇನೆ. ಅಪಘಾತಪಡಿಸಿದ ದ್ವಿಚಕ್ರವಾಹನ ಕೆಎ-40-ಇಎ-7192 ನೋಂದಣಿ ಸಂಖ್ಯೆಯ ಆಕ್ಟೀವ್ ಹೊಂಡಾ  ಎಂದು ತಿಳಿದು ಬಂದಿದ್ದು, ಸದರಿ ದ್ವಿಚಕ್ರವಾಹನ ಸವಾರನ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ನೀಡಿದ ಹೇಳಿಕೆ ದೂರು.

 1. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.15/2021 ಕಲಂ. 447,323,427,504,506,34 ಐ.ಪಿ.ಸಿ:-

     ದಿನಾಂಕ:-20/01/2021 ರಂದು ಮದ್ಯಾಹ್ನ 2-15 ಗಂಟೆಗೆ ಪಿರ್ಯಾದಿದಾರರಾದ ವಿ.ತಿಮ್ಮರಾಯಪ್ಪ ಬಿನ್ ವೆಂಕಟಪ್ಪ, 55 ವರ್ಷ, ಪ ಜಾತಿ, ಜಿರಾಯ್ತಿ, ವಾಸ-ಭಕ್ತರಹಳ್ಳಿ ಗ್ರಾಮ, ಶಿಡ್ಲಘಟ್ಟ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ತಮ್ಮ ಗ್ರಾಮದ ಸರ್ವೇ ನಂಬರ್ 209 ರಲ್ಲಿ 7 ಗುಂಟೆ ಜಮೀನು ಸರ್ಕಾರದಿಂದ ತನ್ನ ತಂದೆಯವರ ಮೂಲಕ ತನ್ನ ಹೆಸರಿಗೆ ಮಂಜೂರಾಗಿ ಖಾತೆ ಪಹಣಿ ಆಗಿ 40 ವರ್ಷಗಳಿಂದ ಸ್ವಾಧೀನ ಅನುಭೋಗದಲ್ಲಿ ಇರುತ್ತೇನೆ. ಈ ಜಮೀನಿನಲ್ಲಿ ತಮ್ಮ ಹಸುಗಳಿಗೆ ಮೇವಿನ ಸಲುವಾಗಿ ಈಗ್ಗೆ 4 ತಿಂಗಳ ಹಿಂದೆ ಮುಸುಕಿನ ಜೋಳವನ್ನು ಹಾಕಿರುತ್ತೇನೆ. ಹೀಗಿರುವಾಗ ಈ ದಿನ ದಿನಾಂಕ 20/01/2021 ರಂದು ಬೆಳಿಗ್ಗೆ ಸುಮಾರು 6-30 ಗಂಟೆ ಸಮಯದಲ್ಲಿ ತಾನು ತಮ್ಮ ಜಮೀನಿನಲ್ಲಿ ಮೇವನ್ನು ಕೊಯ್ಯುತ್ತಿದ್ದಾಗ ತಮ್ಮ ಗ್ರಾಮದ ವಾಸಿಗಳು ಹಾಗು ತಮ್ಮ ಜನಾಂಗದವರೇ ಆದ ರಾಮಚಂದ್ರಪ್ಪ ಹಾಗು ಈತನ ಮಕ್ಕಳಾದ ಉದಯ್, ನಂದೀಶ್, ಚಂದನ್ ರವರು ಕೆಎ-02-ಇಸಿ-9047 ನೊಂದಣಿ ಸಂಖ್ಯೆಯ ದ್ವಿ ಚಕ್ರ ವಾಹನ ಮತ್ತು ಇತರೆ 2 ದ್ವಿ ಚಕ್ರ ವಾಹನಗಳಲ್ಲಿ ತಮ್ಮ ಜಮೀನಿನ ಬಳಿ ಬಂದು ಏಕಾಏಕಿ ತಮ್ಮ ಜಮೀನಿನಲ್ಲಿ ಅಕ್ರಮ ಪ್ರವೇಶ ಮಾಡಿ ತನ್ನನ್ನು ಕುರಿತು ಏ ಬೋಳಿ ನನ್ನ ಮಗನೇ, ನಿನ್ನ ಅಮ್ಮನ್ ಕ್ಯಾಯಾ, ಲೋಫರ್ ನನ್ನ ಮಗನೇ ಎಂದು ಕೆಟ್ಟ ಮಾತುಗಳಿಂದ ಬೈದು, ಇನ್ನು ಜಮೀನು ನಮಗೆ ಸೇರ ಬೇಕು ಇನ್ನು 5 ನಿಮಿಷದಲ್ಲಿ ನೀನು ಈ ಇಲ್ಲಿಂದ ಜಾಗ ಖಾಲಿ ಮಾಡದಿದ್ದರೆ ನಿನ್ನನ್ನು ಸಾಯಿಸಿ ಇದೇ ಜಮೀನಿನಲ್ಲಿ ಹೂತಿ ಬಿಡುತ್ತೇವೆಂದು ಪ್ರಾಣ ಬೆದರಿಕೆಯನ್ನು ಹಾಕಿ ಮೇಲ್ಕಂಡವರೆಲ್ಲರೂ ಸೇರಿ ಕೈಗಳಿಂದ ತನ್ನ ಕೆನ್ನೆಗೆ, ಹೊಟ್ಟೆಗೆ, ಮೈ ಮೇಲೆ ಹೊಡೆದು ನೋವುಂಟು ಮಾಡಿದಾಗ ತಾನು ಕೆಳಗೆ ಬಿದ್ದು ಹೋಗಿದ್ದು ಆಗ ನಂದೀಶ್ ಹಾಗು ರಾಮಚಂದ್ರಪ್ಪ ರವರು ಕಾಲುಗಳಿಂದ ತನ್ನ ಹೊಟ್ಟೆಗೆ ಒದ್ದು ನೋವುಂಟು ಮಾಡಿರುತ್ತಾರೆ. ನಂತರ ಮೇಲ್ಕಂಡವರು ಸುಮಾರು 300 ಕೆ.ಜಿ ಯಷ್ಟು ಹಸಿ ಮೇವನ್ನು ಕಟಾವು ಮಾಡಿ ತನಗೆ ಸುಮಾರು 3.000 ರೂಗಳಷ್ಟು ನಷ್ಟವನ್ನುಂಟು ಮಾಡಿರುತ್ತಾನೆ. ಆಗ ತಮ್ಮ ಗ್ರಾಮದ ವಾಸಿಗಳಾದ ಪ್ರತೀಶ್ ಬಿನ್ ಆಂಜಿನಪ್ಪ, ರಾಮಕೃಷ್ಣಪ್ಪ ಬಿನ್ ವೆಂಕಟಪ್ಪ ರವರು ಸ್ಥಳಕ್ಕೆ ಬಂದು ಮೇಲ್ಕಂಡವರಿಗೆ ಬುದ್ದಿವಾದ ಹೇಳಿ ಕಳುಹಿಸಿರುತ್ತಾರೆ. ಆದ ಕಾರಣ ಮೇಲ್ಕಂಡ ಆಸಾಮಿಗಳ ವಿರುದ್ದ ಮುಂದಿನ ಕಾನೂನು ರೀತ್ಯಾ ಕ್ರಮ ಜರುಗಿಸ ಬೇಕಾಗಿ ಕೊಟ್ಟ ದೂರು.

 1. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.16/2021 ಕಲಂ. 87 ಕೆ.ಪಿ ಆಕ್ಟ್:-

     ದಿನಾಂಕ 20/01/2021 ರಂದು ಮದ್ಯಾಹ್ನ 2-00 ಗಂಟೆ ಸಮಯದಲ್ಲಿ ನಾನು ಕರ್ತವ್ಯದಲ್ಲಿದ್ದಾಗ ಯಾರೋ ಬಾತ್ಮೀದಾರರಿಂದ ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣಾ ಸರಹದ್ದಿನ ಪಲ್ಲಿಚೆರ್ಲು ಗ್ರಾಮದ ಸರ್ಕಾರಿ ಕೆರೆಯ ಅಂಗಳದ ಪಕ್ಕ ಮರಗಳ ಕೆಳಗೆ ಯಾರೋ ಆಸಾಮಿಗಳು ಗುಂಪು ಕಟ್ಟಿಕೊಂಡು ಅಕ್ರಮವಾಗಿ ಹಣವನ್ನು ಪಣವಾಗಿ ಕಟ್ಟಿ ಅಂದರ್ ಬಾಹರ್ ಇಸ್ಪೀಟ್ ಜೂಜಾಟವಾಡುತ್ತಿರುವುದಾಗಿ ಬಾತ್ಮೀ ಬಂದಿದ್ದು, ಸದರಿ ಆಸಾಮಿಗಳ ವಿರುದ್ದ ಪ್ರ ವ ವರದಿಯನ್ನು ದಾಖಲಿಸಿಕೊಂಡು, ಸದರಿ ಸ್ಥಳದ ಮೇಲೆ ದಾಳಿ ಕೈಗೊಳ್ಳಲು ಅನುಮತಿ ನೀಡ ಬೇಕಾಗಿ ಘನ ನ್ಯಾಯಾಲಯದಲ್ಲಿ ಪ್ರಾರ್ಥಿಸಿ ಸಿಪಿಸಿ-90 ರಾಜಕುಮಾರ್ ರವರ ಮೂಲಕ ಮನವಿಯನ್ನು ಸಲ್ಲಿಸಿಕೊಂಡಿದ್ದು, ಸಿಪಿಸಿ-90 ರವರು ಘನ ನ್ಯಾಯಾಲಯದಿಂದ ಅನುಮತಿಯನ್ನು ಪಡೆದುಕೊಂಡು ಮದ್ಯಾಹ್ನ 3-10 ಗಂಟೆಗೆ ಠಾಣೆಗೆ ಹಾಜರಾಗಿ ಹಾಜರು ಪಡಿಸಿದ ಅನುಮತಿ ಆದೇಶದ ಪ್ರತಿಯನ್ನು ಪಡೆದುಕೊಂಡು ಠಾಣಾ ಮೊಸಂ-16/2021 ಕಲಂ 87 ಕೆಪಿ ಆಕ್ಟ್ ರೀತ್ಯಾ ಸ್ವತಃ ಪ್ರಕರಣವನ್ನು ದಾಖಲಿಸಿಕೊಂಡಿರುತ್ತೆ.

 1. ಶಿಡ್ಲಘಟ್ಟ ಪುರ ಪೊಲೀಸ್ ಠಾಣೆ ಮೊ.ಸಂ.04/2021 ಕಲಂ. 87 ಕೆ.ಪಿ ಆಕ್ಟ್:-

     ದಿನಾಂಕ.20.1.2021 ರಂದು ಸಂಜೆ 5.30 ಗಂಟೆಗೆ ಕೆ.ಸತೀಶ್ ಪಿ.ಎಸ್.ಐ ರವರು ಆರೋಪಿ ಮತ್ತು ಅಮಾನತ್ತು ಪಡಿಸಿದ ಮಾಲುಗಳು ಪಂಚನಾಮೆಯೊಂದಿಗೆ ಠಾಣೆಗೆ ಹಾಜರುಪಡಿಸಿ ನೀಡಿದ ದೂರಿನ ಸಾರಾಂಶವೇನಂದರೆ, ದಿನಾಂಕ.20-01-2021 ರಂದು ಸಂಜೆ ಸುಮಾರು 4-00 ಗಂಟೆಯಲ್ಲಿ ಶಿಡ್ಲಘಟ್ಟ ನಗರ ಪೊಲೀಸ್ ಠಾಣೆಯ ಪಿ.ಎಸ್.ಐ (ಕಾ.ಸು) ಕೆ.ಸತೀಶ್ ರವರು ಠಾಣೆಯ ಕರ್ತವ್ಯದಲ್ಲಿದ್ದಾಗ ಯಾರೋ ಸಾರ್ವಜನಿಕರಿಂದ ಶಿಡ್ಲಘಟ್ಟ ಟೌನ್ 2ನೇ ಟಿ.ಎಂ.ಸಿ ಲೇ ಔಟ್ ಬಳಿ ಇರುವ ಹಾಳು ಬಿದ್ದಿರುವ ಇಟ್ಟಿಗೆ ಪ್ಯಾಕ್ಟರಿ ಬಳಿ ಯಾರೋ ಜನರು ಗುಂಪು ಸೇರಿ ಹಣವನ್ನು ಪಣಕ್ಕೆ ಕಟ್ಟಿ ಅಕ್ರಮವಾಗಿ ಅಂದರ್-ಬಾಹರ್ ಇಸ್ಟೇಟ್ ಜೂಜಾಟ ಆಡುತ್ತಿದ್ದಾರೆಂತ ಮಾಹಿತಿ ಬಂದಿದ್ದು, ಸದರಿಯವರ ಮೇಲೆ ದಾಳಿ ಮಾಡಲು ಘನ ನ್ಯಾಯಾಲಯದ ಅನುಮತಿಯನ್ನು ಪಡೆದು ಪಂಚಾಯ್ತಿದಾರರು ಮತ್ತು ಶಿಡ್ಲಘಟ್ಟ ನಗರ ಠಾಣೆಯ ಸಿಬ್ಬಂದಿಯವರನ್ನು ಕರೆದುಕೊಂಡು ಎಲ್ಲರೂ ಮೇಲ್ಕಂಡ ಸ್ಥಳಕ್ಕೆ ಸಂಜೆ 4-15 ಗಂಟೆಗೆ ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಯಾರೋ ಆಸಾಮಿಗಳು ಗುಂಪಾಗಿ ಕುಳಿತುಕೊಂಡು ಹಣವನ್ನು ಪಣವಾಗಿಟ್ಟುಕೊಂಡು ಒಬ್ಬ ಆಸಾಮಿ 150/-ರೂ ಅಂದರ್ ಎಂತಲೂ ಮತ್ತೊಬ್ಬ ಆಸಾಮಿ ಬಾಹರ್ 150/-ರೂ ಎಂತಲೂ ಕೂಗಿಕೊಂಡು ಅಕ್ರಮವಾಗಿ ಅಂದರ್ ಬಾಹರ್ ಇಸ್ಪೀಟ್ಜೂಜಾಟ ಆಡುತ್ತಿದ್ದವರುಗಳ ಮೇಲೆ ದಾಳಿ ಮಾಡಿದಾಗ ನಮ್ಮನ್ನು ಕಂಡು ಓಡಿ ಹೋಗುತ್ತಿದ್ದವರನ್ನು ಹಿಂಬಾಲಿಸಿ  ಹಿಡಿದುಕೊಂಡು ಅವರ ಹೆಸರು ವಿಳಾಸ ಕೇಳಲಾಗಿ 1] ನವಾಜ್ ಬಾಷಾ ಬಿನ್ ಚಾಂದ್ಪಾಷ, 21 ವರ್ಷ, ರೇಷ್ಮೆ ಕೆಲಸ, ಮುಸ್ಲಿಂ ಜನಾಂಗ, ಸಂತೋಷನಗರ, ಶಿಡ್ಲಘಟ್ಟ ಟೌನ್. 2]ನಿಸಾರ್ ಪಾಷ ಬಿನ್ ಲೇಟ್ ಅಬ್ದುಲ್ ಬಷೀರ್, 58 ವರ್ಷ, ಮುಸ್ಲಿಂ ಜನಾಂಗ, ರಾಜೀವ್ಗಾಂಧೀ ಲೇ ಔಟ್, ಶಿಡ್ಲಘಟ್ಟ ಟೌನ್. 3] ಉಸ್ಮಾನ್ ಬಾಷ ಬಿನ್ ಲೇಟ್ ರಜಾಕ್ ಸಾಬಿ, 70 ವರ್ಷ, ರೇಷ್ಮೆ ಕೆಲಸ, ಮುಸ್ಲಿಂ ಜನಾಂಗ, ಕುಂಬಾರಪೇಟೆ,ಶಿಡ್ಲಘಟ್ಟ ಟೌನ್. ಉಳಿದ ಓಡಿಹೋದ 03 ಜನರ ಹೆಸರುಗಳನ್ನು ತಿಳಿಯಲಾಗಿ 1] ನವಾಜ್ 2] ಆಯಾಜ್ ಮತ್ತು 3] ನಯಾಜ್ ಆಗಿರುತ್ತಾರೆ. ಇವರುಗಳು ಜೂಜಾಟ ಆಡುತ್ತಿದ್ದ ಸ್ಥಳದಲ್ಲಿ ಪಂದ್ಯಕ್ಕೆ ಕಟ್ಟಿದ್ದ ಹಣವನ್ನು ತೆಗೆದು ಎಣಿಕೆ ಮಾಡಲಾಗಿ ಒಟ್ಟು 650/-ರೂ ನಗದು ಹಣ ಮತ್ತು 52 ಇಸ್ಪೀಟ್ ಎಲೆಗಳು ಸಿಕ್ಕಿದ್ದು ಇವುಗಳನ್ನು ಸಂಜೆ 4-30 ರಿಂದ 5-15  ಗಂಟೆಯವರೆಗೆ ಅಮಾನತ್ತು ಪಡಿಸಿಕೊಂಡಿರುತ್ತೆ. ಸ್ಥಳದಲ್ಲಿ ಸಿಕ್ಕಿದ ಮೇಲ್ಕಂಡ 03 ಜನರು ಮತ್ತು ಅಮಾನತ್ತು ಪಡಿಸಿದ ಮಾಲು, ಮಹಜರ್ ನೊಂದಿಗೆ ಹಾಜರಾಗಿ ಕಾನೂನು ಬಾಹಿರವಾಗಿ ಅಂದರ್ ಬಾಹರ್ ಇಸ್ಪೀಟ್ ಜೂಜಾಟ ಆಡುತ್ತಿದ್ದವರ ಮೇಲೆ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಲು ಸೂಚಿಸಿದ್ದರ ಮೇರೆಗೆ  ಠಾಣಾ ಮೊ.ಸಂ.04-2021 ಕಲಂ.87 ಕೆ.ಪಿ.ಆಕ್ಟ್ ರೀತ್ಯಾ ಪ್ರಕರಣ ದಾಖಲಿಸಿರುತ್ತೆ.