ದಿನಾಂಕ : 21/01/2020 ರ ಅಪರಾಧ ಪ್ರಕರಣಗಳು

1. ಬಾಗೇಪಲ್ಲಿ ಪೊಲೀಸ್ ಠಾಣೆ ಮೊ.ಸಂ. 11/2020 ಕಲಂ. 15(ಎ) ಕರ್ನಾಟಕ ಅಬಕಾರಿ ಕಾಯ್ದೆ :-
ದಿನಾಂಕ:20.01.2020 ರಂದು ರಾತ್ರಿ 9.15 ಗಂಟೆಗೆ ಮಾನ್ಯ ಪಿಐ(ಡಿಸಿಬಿ) ಸಾಹೇಬರು ಠಾಣೆಯಲ್ಲಿ ನೀಡಿದ ವರಧಿ ಸಾರಾಂಶವೇನೆಂದರೆ, ಶ್ರೀ ಎನ್ ರಾಜಣ್ಣ ಪೊಲೀಸ್ ಇನ್ಸಪೆಕ್ಟರ್ ಡಿಸಿಬಿ/ಸಿಇಎನ್ ಪೊಲೀಸ್ ಠಾಣೆ, ಚಿಕ್ಕಬಳ್ಳಾಪುರ ಜಿಲ್ಲೆ, ಚಿಕ್ಕಬಳ್ಳಾಪುರ ಆದ ನಾನು ಈ ಮೂಲಕ ನೀಡುತ್ತಿರುವ ವರದಿಯೇನೆಂದರೆ ಈ ದಿನ ದಿ: 20-01-2020 ರಂದು ನಾನು ಮತ್ತು ನಮ್ಮ ಠಾಣೆಯ ಸಿಬ್ಬಂದಿಯವರು ಬಾಗೇಪಲ್ಲಿ ತಾಲ್ಲೂಕಿನಲ್ಲಿ ಅಕ್ರಮ ಚಟುವಟಿಕೆಗಳು ಮತ್ತು ಕಾನೂನು ಬಾಹಿರ ಕೃತ್ಯಗಳ ಬಗ್ಗೆ ಮಾಹಿತಿಯನ್ನು ಸಂಗ್ರಹಿಸುತ್ತಿದ್ದಾಗ ಸಂಜೆ 7:00 ಗಂಟೆಗೆ ಗೂಳೂರು ಗ್ರಾಮದಲ್ಲಿದ್ದಾಗ ನಮಗೆ ಬಾತ್ಮಿದಾರರಿಂದ ಬಂದ ಖಚಿತ ವರ್ತಮಾನ ಏನೆಂದರೆ ಹೊನ್ನಂಪಲ್ಲಿ ಗ್ರಾಮದಲ್ಲಿ ಚಲಪತಿ ಎಂಬುವರು ತನ್ನ ಅಂಗಡಿಯ ಮುಂದೆ ಅಕ್ರಮವಾಗಿ & ಕಾನೂನು ಬಾಹಿರವಾಗಿ ಮದ್ಯ ಸೇವನೆ ಮಾಡಲು ಸ್ಥಳಾವಕಾಶವನ್ನು ಮಾಡಿಕೊಟ್ಟಿರುವ ಮಾಹಿತಿಯ ಮೇರೆಗೆ ಪಂಚರೊಂದಿಗೆ ಸಂಜೆ-7.30 ಗಂಟೆಗೆ ಹೋದಾಗ ಚಲಪತಿ ಅಂಗಡಿಯ ಮುಂದೆ ಕುಳಿತು ಮದ್ಯವನ್ನು ಸೇವನೆ ಮಾಡುತ್ತಿದ್ದವರು ನಮ್ಮನ್ನು ನೋಡಿ ಓಡಿ ಹೋಗಿದ್ದು, ಸದರಿ ಅಂಗಡಿಯ ಮಾಲೀಕನ ಹೆಸರು ಮತ್ತು ವಿಳಾಸ ವನ್ನು ಕೇಳಲಾಗಿ ಚಲಪತಿ ಬಿನ್ ರಾಮಪ್ಪ,55 ವರ್ಷ, ಬೋವಿ ಜನಾಂಗ, ಚಿಲ್ಲರೆ ಅಂಗಡಿ ವ್ಯಾಪಾರ, ಅಂತ ಹೇಳಿದ್ದು, ಸದರಿಯವರಿಗೆ ಯಾವುದಾದರೂ ಪರವಾನಿಗೆ ಇದೆಯೇ ಎಂದು ಕೇಳಲಾಗಿ ಯಾವುದೆ ಪರವಾನಿಗೆ ಇರುವುದಿಲ್ಲವೆಂತ ತಿಳಿಸಿದ್ದು, ನಂತರ ಸದರಿ ವ್ಯಕ್ತಿಯನ್ನು ವಶಕ್ಕೆ ಪಡೆದುಕೊಂಡಿದ್ದು, ಸ್ಥಳದಲ್ಲಿದ್ದ ಮದ್ಯವನ್ನು ಪಂಚರ ಸಮಕ್ಷಮ ಅಮಾನತ್ತು ಪಡಿಸಿಕೊಂಡಿರುವ ಹೈವಾರ್ಡ್ಸ್ ಚೀಯರ್ಸ್ ವಿಸ್ಕಿ ಕಂಪನಿಯ 23 ಟೆಟ್ರಾ ಪಾಕೇಟ್ ಗಳು, ಎರಡು ಖಾಲಿ ಹೈವಾರ್ಡ್ಸ್ ಚೀಯರ್ಸ್ ಟೆಟ್ರಾ ಪಾಕೇಟ್ ಗಳು, ಒಂದು ಲೀಟರ್ ನೀರಿನ ಬಾಟಲ್ ಮತ್ತು ಎರಡು ಪ್ಲಾಸ್ಟಿಕ್ ಖಾಲಿ ಗ್ಲಾಸ್ ಗಳನ್ನು ಅಮಾನತ್ತು ಪಡಿಸಿದ್ದು, ಸದರಿ ಮದ್ಯವು 2 ಲೀಟರ್ 70 ಮಿಲಿ ಮದ್ಯ, ಇದರ ಬೆಲೆ 698/-00 ರೂಗಳಾಗಿರುತ್ತದೆ. ಸದರಿ ಆಪಾಧಿತನನ್ನು ಮತ್ತು ಮದ್ಯವನ್ನು ನಿಮ್ಮ ವಶಕ್ಕೆ ನೀಡುತ್ತಿದ್ದು ಸ್ವೀಕರಿಸಿ ಮುಂಧಿನ ಕಾನೂನು ಕ್ರಮ ಜರಗಿಸಲು ಕೋರಿದೆ.ಇದರೊಂದಿಗೆ ಅಸಲು ಪಂಚನಾಮೆಯನ್ನು ಲಗತ್ತಿಸಿಕೊಂಡಿರುತ್ತೆ, ನೀಡಿದ ವರಧಿಯನ್ನು ಪಡೆದು ದೂರನ್ನು ಪಡೆದು ಠಾಣಾ ಮೊ.ಸಂ 11/2020 ಕಲಂ 15(ಎ) ಕೆ.ಇ ಆಕ್ಟ್ ರೀತ್ಯಾ ಕೇಸು ದಾಖಲಿಸಿಕೊಂಡಿರುತ್ತೆ.
2. ಬಾಗೇಪಲ್ಲಿ ಪೊಲೀಸ್ ಠಾಣೆ ಮೊ.ಸಂ. 12/2020 ಕಲಂ. 279,304(ಎ) ಐಪಿಸಿ :-
ದಿನಾಂಕ:21.02.2020 ರಂದು ಬೆಳಗ್ಗೆ 8.15 ಗಂಟೆ ಸಮಯದಲ್ಲಿ ಪಿರ್ಯಾದಿದಾರರಾದ ಶ್ರೀ ನಾಗರಾಜ ಬಿನ್ ವೆಂಕಟರವಣಪ್ಪ, 45ವರ್ಷ, ನಾಯಕರು, ಜಿರಾಯ್ತಿ, ವಾಸ ಪಾತಪಾಳ್ಯ ಗ್ರಾಮ ಮತ್ತು ಹೋಬಳಿ, ಬಾಗೇಪಲ್ಲಿ ತಾಲ್ಲೂಕು, ರವರು ಠಾಣೆಗೆ ಹಾಜರಾಗಿ ನೀಡಿದ ಮುದ್ರಿತ ದೂರಿನ ಸಾರಾಂಶವೇನೆಂದರೆ, ದಿನಾಂಕ: 21-01-2020 ರಂದು ನನ್ನ ಮಗನಾದ ಪಿ.ಎನ್ ವೆಂಕಟೇಶ್ ರವರು ನನ್ನ ಮಗನ ಬಾಬತ್ತು ಹಿರೋ ಕಂಪನಿಯ ಸ್ಪ್ಲೇಂಡರ್ ಪ್ಲಸ್ ದ್ವಿಚಕ್ರ ವಾಹನ ಸಂಖ್ಯೆ: KA-40-Y-5845 ರಲ್ಲಿ ಕೆಲಸದ ಸಲುವಾಗಿ ಬಾಗೇಪಲ್ಲಿಗೆ ಹೋಗಿ ಬರುತ್ತೇನೆಂದು ಹೇಳಿ ಬೆಳಿಗ್ಗೆ ಸುಮಾರು 6-15 ಗಂಟೆ ಸಮಯದಲ್ಲಿ ಹೋದನು. ಇದೇ ದಿನ ಬೆಳಿಗ್ಗೆ ಸುಮಾರು 7-30 ಗಂಟೆ ಸಮಯದಲ್ಲಿ ನನ್ನ ಅಳಿಯನಾದ ಮಂಜು ರವರಿಗೆ ಆಚೇಪಲ್ಲಿ ಗ್ರಾಮದ ವಾಸಿಗಳು ಪೋನ್ ಮಾಡಿ ನನ್ನ ಮಗನಾದ ಪಿ.ಎನ್ ವೆಂಕಟೇಶ್ ರವರಿಗೆ ಬಾಗೇಪಲ್ಲಿ ತಾಲ್ಲೂಕು, ಆಚೇಪಲ್ಲಿ ಗ್ರಾಮದ ಕ್ರಾಸ್ ಬಳಿ ಅಪಘಾತವಾಗಿರುವುದಾಗಿ ವಿಚಾರ ತಿಳಿಸಿದರು. ಕೂಡಲೇ ನನ್ನ ಅಳಿಯನಾದ ಮಂಜುನಾಥ್ ರವರು ಅಪಘಾತ ನಡೆದ ಸ್ಥಳಕ್ಕೆ ಬಂದು ನೋಡಿದಾಗ ನನ್ನ ಮಗನಾದ ಪಿ.ಎನ್ ವೆಂಕಟೇಶ್ ರವರಿಗೆ ಅಪಘಾತವಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ. ನಂತರ ಈ ಬಗ್ಗೆ ವಿಚಾರ ತಿಳಿಯಲಾಗಿ ನನ್ನ ಮಗನಾದ ಪಿ.ಎನ್ ವೆಂಕಟೇಶ್ ರವರು ನಮ್ಮ ಬಾಬತ್ತು ಮೇಲ್ಕಂಡ ದ್ವಿಚಕ್ರ ವಾಹನದಲ್ಲಿ ಕೆಲಸದ ಸಲುವಾಗಿ ಬೆಳಿಗ್ಗೆ ಸುಮಾರು 7-15 ಗಂಟೆಯಲ್ಲಿ ಬಾಗೇಪಲ್ಲಿ ತಾಲ್ಲೂಕು, ಆಚೇಪಲ್ಲಿ ಗ್ರಾಮದ ಕ್ರಾಸ್ ಬಳಿ ರಸ್ತೆಯಲ್ಲಿ ಬಾಗೇಪಲ್ಲಿ ಕಡೆಗೆ ಹೋಗುತ್ತಿದ್ದಾಗ ಹಿಂದುಗಡೆಯಿಂದ ಬಂದ KA-40-F-741 ಕೆ.ಎಸ್.ಆರ್.ಟಿ.ಸಿ ಬಸ್ ಚಾಲಕ ಬಸ್ಸನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ನನ್ನ ಮಗ ಸವಾರಿ ಮಾಡಿಕೊಂಡು ಮುಂದೆ ಹೋಗುತ್ತಿದ್ದ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆಯಿಸಿದ ಪರಿಣಾಮ ನನ್ನ ಮಗ ದ್ವಿಚಕ್ರ ವಾಹನ ಸಮೇತ ರಸ್ತೆಯ ಮೇಲೆ ಬಿದ್ದಾಗ ಬಸ್ ನನ್ನ ಮಗನ ತಲೆಯ ಮೇಲೆ ಹರಿದು ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ. ಬಸ್ ದ್ವಿಚಕ್ರ ವಾಹನದ ಮೇಲೆ ಹರಿದಿದ್ದರಿಂದ ದ್ವಿಚಕ್ರ ವಾಹನವು ಸಹ ಜಖಂಗೊಂಡಿರುತ್ತೆ. ಬಸ್ ಚಾಲಕನು ಬಸ್ಸನ್ನು ಸ್ಥಳದಲ್ಲಿಯೇ ನಿಲ್ಲಿಸಿ ಹೊರಟು ಹೋಗಿರುತ್ತಾನೆ. ಚಾಲಕನ ಹೆಸರು ಮತ್ತು ವಿಳಾಸ ತಿಳಿದಿರುವುದಿಲ್ಲ. KA-40-F-741 ಕೆ.ಎಸ್.ಆರ್.ಟಿ.ಸಿ ಬಸ್ ಅನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ನನ್ನ ಮಗನಾದ ಪಿ.ಎನ್ ವೆಂಕಟೇಶ್ ರವರ ಸಾವಿಗೆ ಕಾರಣನಾದ ಬಸ್ ಚಾಲಕನ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿದ್ದರ ಮೇರೆಗೆ ಈ ಪ್ರ.ವ.ವರದಿ.
3. ಚಿಕ್ಕಬಳ್ಳಾಪುರ ಸಂಚಾರಿ ಪೊಲೀಸ್ ಠಾಣೆ ಮೊ.ಸಂ. 06/2020 ಕಲಂ. 279,337 ಐಪಿಸಿ :-
ದಿನಾಂಕ:-20/01/2020 ರಂದು ಸಂಜೆ 16-00 ಗಂಟೆಗೆ ಪಿರ್ಯಾಧಿ ಶ್ರೀ. ಎಸ್. ಸಲೀಂ ಬಾಷಾ ಬಿನ್ ಲೇಟ್ ಅಬ್ದುಲ್ ರಜಾಕ್ 38 ವರ್ಷ, ಖಾಸಗೀ ವೃತ್ತಿ, ನಂ.2-169-4, ಕೊಂಡಾರೆಡ್ಡಿ ನಗರ, ಕರ್ನೂಲು ಟೌನ್ ಮತ್ತು ತಾಲ್ಲೂಕು, ಆಂದ್ರಪ್ರದೇಶ. ರವರು ನೀಡಿದ ಬೆರಳಚ್ಚು ದೂರಿನ ಸಾರಾಂಶವೇನೆಂದರೆ ದಿನಾಂಕ:-19/01/2020 ರಂದು ತನ್ನ ಬಾಬತ್ತು ಎಪಿ-21-ಸಿಜೆ-8000 ರ ಕಾರಿನಲ್ಲಿ ತಮ್ಮ ದೊಡ್ಡಪ್ಪನ ಮಗನಾದ ಅಲ್ಲಗುಂಡು ಮಹಮದ್ ಅಸ್ಲಂ ಬಿನ್ ಅಲ್ಲುಗುಂಡು ಮಹಮದ್ ಇದ್ರೂಸಾ 50 ವರ್ಷ ರವರನ್ನು ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಬಿಟ್ಟು ಬರುವಂತೆ ತಮ್ಮ ಕಾರಿನ ಚಾಲಕನಾದ ಮಹಮದ್ ಅಬ್ದುಲಾ ಎಸ್ ಬಿನ್ ಜಬ್ಬರ್ ಮಿಯಾ, ಎಸ್, 24 ವರ್ಷ, 16/39/ಸಿ1 ವಿದ್ಯಾನಗರ, ನಂದಿಕೋಟ್ಕೂರು ತಾಲ್ಲೂಕು, ಕರ್ನೂಲ್ ಜಿಲ್ಲೆ. ರವರೊಂದಿಗೆ ಕಳುಹಿಸಿಕೊಟ್ಟಿದ್ದು. ದಿನಾಂಕ;-20-01-2020 ರಂದು ಬೆಳಗಿನ ಜಾವ ಸುಮಾರು 03-00 ಗಂಟೆ ಸಮಯದಲ್ಲಿ ಚಿಕ್ಕಬಳ್ಳಾಪುರ – ಬೆಂಗಳೂರು ಎನ್.ಎಚ್-44 ಬೈಪಾಸ್ ರಸ್ತೆಯ ಅಗಲಗುರ್ಕಿ ಬ್ರಿಡ್ಜ್ ಬಳಿ ಹೋಗುತ್ತಿದ್ದಾಗ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿ ವಾಹನದ ನಿಯಂತ್ರಣ ತಪ್ಪಿ ಏಕಾ-ಏಕಿ ವಾಹನವನ್ನು ರಸ್ತೆಯ ಎಡಭಾಗಕ್ಕೆ ತಿರುಗಿಸಿ ರಸ್ತೆಯ ಎಡಭಾಗದಲ್ಲಿ ಇದ್ದ ತಡೆಗೋಡೆಗೆ ಡಿಕ್ಕಿ ಹೊಡೆಸಿದ ಪರಿಣಾಮ ಕಾರು ಜಕಂಗೊಂಡಿದ್ದು, ಕಾರಿನ ಚಾಲಕ ಮಹಮದ್ ಅಬ್ದುಲಾ ಎಸ್ ರವರಿಗೆ ಕುತ್ತಿಗೆಗೆ ರಕ್ತ ಗಾಯವಾಗಿದ್ದು ಹಾಗೂ ಕಾರಿನಲ್ಲಿದ್ದ ತಮ್ಮ ದೊಡ್ಡಪ್ಪನ ಮಗನಾದ ಅಲ್ಲಗುಂಡು ಮಹಮದ್ ಅಸ್ಲಂ ರವರಿಗೆ ಸೊಂಟಕ್ಕೆ ಗಾಯವಾಗಿದ್ದು, ತಕ್ಷಣ ಅಲ್ಲಿನ ಸ್ಥಳೀಯರು ಗಾಯಾಳುಗಳನ್ನು ಉಪಚರಿಸಿ ರಸ್ತೆಯಲ್ಲಿ ಬರುತ್ತಿದ್ದ ಯಾವುದೋ ಕಾರಿನಲ್ಲಿ ಅಲ್ಲಗುಂಡು ಮಹಮದ್ ಅಸ್ಲಂ ರವರನ್ನು ಚಿಕಿತ್ಸೆಗಾಗಿ ಬೆಂಗಳೂರಿಗೆ ಕಳುಹಿಸಿಕೊಟ್ಟಿದ್ದು ಹಾಗೂ ಮಹಮದ್ ಅಬ್ದುಲಾ ಎಸ್ ರವರಿಗೆ ಅಲ್ಲಿಗೆ ಬಂದ 108 ಆಂಬ್ಯೂಲೆನ್ಸ್ ವಾಹನದಲ್ಲಿ ಚಿಕಿತ್ಸೆಗಾಗಿ ಚಿಕ್ಕಬಳ್ಳಾಪುರ ಸರ್ಕಾರಿ ಆಸ್ಪತ್ರೆಗೆ ಸೇರಿಸಿ ನಂತರ ವೈಧ್ಯರ ಸಲಹೆ ಮೇರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಕೊಲಂಬಿಯಾ ಏಷಿಯಾ ಆಸ್ಪತ್ರೆಗೆ ಕಳುಸುತ್ತಿರುವುದಾಗಿ ದೂರವಾಣಿ ಮೂಲಕ ತನಗೆ ತಿಳಿಸಿದ್ದು, ತಾನು ಬೆಂಗಳೂರಿನ ಕೊಲಂಬಿಯಾ ಏಷಿಯಾ ಆಸ್ಪತ್ರೆಗೆ ಹೋಗಿ ನೋಡಲಾಗಿ ವಿಷಯ ನಿಜವಾಗಿದ್ದು, ಸದರಿ ಅಪಘಾತಕ್ಕೆ ಕಾರಣನಾದ ಕಾರಿನ ಚಾಲಕನಾದ ಮಹಮದ್ ಅಬ್ದುಲಾ ಎಸ್ ರವರ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ನೀಡಿದ ಬೆರಳಚ್ಚು ದೂರಿನ ಮೇರೆಗೆ ದಿನಾಂಕ:-20/01/2020 ರಂದು ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡಿರುತ್ತೆ.
4. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 45/2020 ಕಲಂ. 15(ಎ) ಕರ್ನಾಟಕ ಅಬಕಾರಿ ಕಾಯ್ದೆ :-
ಈ ಮೂಲಕ ಚಿಂತಾಮಣಿ ಗ್ರಾಮಾಂತರ ಠಾಣೆಯ ಸಿ.ಹೆಚ್.ಸಿ 03 ರಾಜಣ್ಣ, ಆದ ನಾನು ಘನ ನ್ಯಾಯಾಲಯದಲ್ಲಿ ನಿವೇದಿಸಿಕೊಳ್ಳುವುದೇನೆಂದರೆ, ಈ ದಿನ ದಿನಾಂಕ:20/01/2020 ರಂದು ಪಿ.ಎಸ್.ಐ ಸಾಹೇಬರ ನೇಮಕದಂತೆ ನಾನು ಮತ್ತು ಸಿ.ಪಿ.ಸಿ-504 ಸತೀಶ ರವರು ಠಾಣಾ ಸರಹದ್ದಿನ ಬುಕ್ಕನಹಳ್ಳಿ, ತಿಮ್ಮಸಂದ್ರ, ರಾಗುಟ್ಟಹಳ್ಳಿ, ಇತ್ಯಾದಿ ಕಡೆಗಳಲ್ಲಿ ಗಸ್ತು ಮಾಡಿಕೊಂಡು ಮದ್ಯಾಹ್ನ 3.00 ಗಂಟೆಯ ಸಮಯದಲ್ಲಿ ಎನ್.ಕೊತ್ತೂರು ಗ್ರಾಮಕ್ಕೆ ಹೋದಾಗ ಸದರಿ ಗ್ರಾಮದ ನಾಗರಾಜ ಬಿನ್ ನಾರಾಯಣಪ್ಪ ರವರು ತನ್ನ ಚಿಲ್ಲರೆ ಅಂಗಡಿಯ ಮುಂಭಾಗ ಸಾರ್ವಜನಿಕರಿಗೆ ಮದ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದಾಗಿ ಖಚಿತ ಮಾಹಿತಿ ದೊರೆತಿದ್ದು, ಸದರಿ ಅಂಗಡಿಯ ಮೇಲೆ ದಾಳಿ ಮಾಡುವ ಸಲುವಾಗಿ ಪಂಚರನ್ನು ಬರಮಾಡಿಕೊಂಡು ಅವರಿಗೆ ವಿಚಾರವನ್ನು ತಿಳಿಸಿ ನಾಗರಾಜ ಬಿನ್ ನಾರಾಯಣಪ್ಪ ರವರ ಚಿಲ್ಲರೆ ಅಂಗಡಿಯ ಬಳಿ ಹೋಗುವಷ್ಟರಲ್ಲಿ ಅಂಗಡಿಯ ಮುಂದೆ ಕುಳಿತಿದ್ದ ಇಬ್ಬರು ವ್ಯಕ್ತಿಗಳು ಮತ್ತು ಅಂಗಡಿಯಲ್ಲಿದ್ದ ಒಬ್ಬ ವ್ಯಕ್ತಿಯು ಓಡಿ ಹೋಗಿದ್ದು, ಅಂಗಡಿಯ ಮುಂಭಾಗದಲ್ಲಿ ನೋಡಲಾಗಿ 90 ಎಂ.ಎಲ್ ನ ಹೇವಾರ್ಡ್ಸ್ ಚೀರ್ಸ್ ವಿಸ್ಕಿ ಕಂಪನಿಯ 2 ಟೆಟ್ರಾ ಪಾಕೆಟ್ ಗಳು, ಎರಡು ಪ್ಲಾಸ್ಟಿಕ್ ಗ್ಲಾಸ್ ಗಳು ಮತ್ತು ಒಂದು ಲೀಟರ್ ನ ಎರಡು ನೀರಿನ ಬಾಟಲಿಗಳಿದ್ದು, ಅವುಗಳನ್ನು ಪರಿಶೀಲಿಸಲಾಗಿ, ಮದ್ಯದ ಟೆಟ್ರಾ ಪಾಕೆಟ್ ಗಳಲ್ಲಿ ಸ್ವಲ್ವ ಮದ್ಯವಿದ್ದು, ಪ್ಲಾಸ್ಟಿಕ್ ಗ್ಲಾಸ್ ಗಳಲ್ಲಿ ಸ್ವಲ್ವ ನೀರು ಮಿಶ್ರಿತ ಮದ್ಯವಿರುತ್ತೆ. ನೀರಿನ ಬಾಟಲಿಗಳನ್ನು ಪರಿಶೀಲಿಸಲಾಗಿ, ಸದರಿ ಬಾಟಲಿಗಳಲ್ಲಿ ಸುಮಾರು 1/4 ರಷ್ಟು ನೀರು ಇರುತ್ತೆ. ಅಲ್ಲಿದ್ದ ಸಾರ್ವಜನಿಕರನ್ನು ಅಂಗಡಿಯಲ್ಲಿದ್ದ ಆಸಾಮಿಯ ಹೆಸರು ವಿಳಾಸ ಕೇಳಲಾಗಿ ನಾಗರಾಜ @ ಪಿಲ್ಟರ್ ವಾಟರ್ ನಾಗರಾಜ ಬಿನ್ ನಾರಾಯಣಪ್ಪ , 45 ವರ್ಷ, ಕುರುಬರು, ಅಂಗಡಿ ವ್ಯಾಪಾರ, ಎನ್.ಕೊತ್ತೂರು ಗ್ರಾಮ, ಚಿಂತಾಮಣಿ ತಾಲ್ಲೂಕು ಎಂದು ತಿಳಿಸಿದ್ದು, ನಂತರ ಸ್ಥಳದಲ್ಲಿ ಪಂಚರ ಸಮಕ್ಷಮ ಮದ್ಯಾಹ್ನ 3-15 ಗಂಟೆಯಿಂದ 4-00 ಗಂಟೆಯವರೆಗೆ ಮಹಜರ್ ಕ್ರಮ ಕೈಗೊಂಡು ಮೇಲ್ಕಂಡ ವಸ್ತುಗಳನ್ನು ಅಮಾನತ್ತುಪಡಿಸಿಕೊಂಡು ಮಾಲು, ಪಂಚನಾಮೆಯೊಂದಿಗೆ ಠಾಣೆಗೆ ವಾಪಸ್ಸಾಗಿ ಅಕ್ರಮವಾಗಿ ಸಾರ್ವಜನಿಕರಿಗೆ ಮದ್ಯಪಾನ ಮಾಡಲು ತನ್ನ ಅಂಗಡಿ ಮುಂಭಾಗ ಸ್ಥಳಾವಕಾಶ ಮಾಡಿಕೊಟ್ಟಿರುವ ಆರೋಪಿ ನಾಗರಾಜ @ ಪಿಲ್ಟರ್ ವಾಟರ್ ನಾಗರಾಜ ರವರ ವಿರುದ್ಧ ಸಂಜೆ:4-30 ಗಂಟೆಗೆ ಠಾಣಾ ಮೊ.ಸಂ:45/2020 ಕಲಂ:15(ಎ) ಕೆಇ ಆಕ್ಟ್ ರೀತ್ಯ ಸ್ವತಃ ಪ್ರಕರಣ ದಾಖಲಿಸಿಕೊಂಡಿರುತ್ತೆ.
5. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 46/2020 ಕಲಂ. 15(ಎ) ಕರ್ನಾಟಕ ಅಬಕಾರಿ ಕಾಯ್ದೆ :-
ಈ ಮೂಲಕ ಚಿಂತಾಮಣಿ ಗ್ರಾಮಾಂತರ ಠಾಣೆಯ ಸಿ.ಹೆಚ್.ಸಿ 03 ರಾಜಣ್ಣ, ಆದ ನಾನು ಘನ ನ್ಯಾಯಾಲಯದಲ್ಲಿ ನಿವೇದಿಸಿಕೊಳ್ಳುವುದೇನೆಂದರೆ, ಈ ದಿನ ದಿನಾಂಕ:21/01/2020 ರಂದು ಪಿ.ಎಸ್.ಐ ಸಾಹೇಬರ ನೇಮಕದಂತೆ ನಾನು ಮತ್ತು ಸಿ.ಪಿ.ಸಿ-544 ವೆಂಕಟರವಣ ರವರು ಠಾಣಾ ಸರಹದ್ದಿನ ದೊಡ್ಡಬೊಮ್ಮನಹಳ್ಳಿ, ಚಿಕ್ಕಬೊಮ್ಮನಹಳ್ಳಿ, ವಿಶ್ವನಾಥಪುರ ಇತ್ಯಾದಿ ಕಡೆಗಳಲ್ಲಿ ಗಸ್ತು ಮಾಡಿಕೊಂಡು ಮದ್ಯಾಹ್ನ 3.00 ಗಂಟೆಯ ಸಮಯದಲ್ಲಿ ಸೀಕಲ್ಲು ಗ್ರಾಮಕ್ಕೆ ಹೋದಾಗ ಸದರಿ ಗ್ರಾಮದ ಸುಬ್ರಮಣಿ ಬಿನ್ ಲೇಟ್ ರಾಮಚಂದ್ರಪ್ಪ ರವರು ತನ್ನ ಚಿಲ್ಲರೆ ಅಂಗಡಿಯ ಮುಂಭಾಗ ಸಾರ್ವಜನಿಕರಿಗೆ ಮದ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದಾಗಿ ಖಚಿತ ಮಾಹಿತಿ ದೊರೆತಿದ್ದು, ಸದರಿ ಅಂಗಡಿಯ ಮೇಲೆ ದಾಳಿ ಮಾಡುವ ಸಲುವಾಗಿ ಪಂಚರನ್ನು ಬರಮಾಡಿಕೊಂಡು ಅವರಿಗೆ ವಿಚಾರವನ್ನು ತಿಳಿಸಿ ಸುಬ್ರಮಣಿ ಬಿನ್ ಲೇಟ್ ರಾಮಚಂದ್ರಪ್ಪ ರವರ ಚಿಲ್ಲರೆ ಅಂಗಡಿಯ ಬಳಿ ಹೋಗುವಷ್ಟರಲ್ಲಿ ಅಂಗಡಿಯ ಮುಂದೆ ಕುಳಿತಿದ್ದ ಇಬ್ಬರು ವ್ಯಕ್ತಿಗಳು ಮತ್ತು ಅಂಗಡಿಯಲ್ಲಿದ್ದ ಒಬ್ಬ ವ್ಯಕ್ತಿಯು ಓಡಿ ಹೋಗಿದ್ದು, ಅಂಗಡಿಯ ಮುಂಭಾಗದಲ್ಲಿ ನೋಡಲಾಗಿ 90 ಎಂ.ಎಲ್ ನ ಹೇವಾರ್ಡ್ಸ್ ಚೀರ್ಸ್ ವಿಸ್ಕಿ ಕಂಪನಿಯ 2 ಟೆಟ್ರಾ ಪಾಕೆಟ್ ಗಳು, ಎರಡು ಪ್ಲಾಸ್ಟಿಕ್ ಗ್ಲಾಸ್ ಗಳು ಮತ್ತು ಒಂದು ಲೀಟರ್ ನ ಎರಡು ನೀರಿನ ಬಾಟಲಿಗಳಿದ್ದು, ಅವುಗಳನ್ನು ಪರಿಶೀಲಿಸಲಾಗಿ, ಮದ್ಯದ ಟೆಟ್ರಾ ಪಾಕೆಟ್ ಗಳಲ್ಲಿ ಸ್ವಲ್ವ ಮದ್ಯವಿದ್ದು, ಪ್ಲಾಸ್ಟಿಕ್ ಗ್ಲಾಸ್ ಗಳಲ್ಲಿ ಸ್ವಲ್ವ ನೀರು ಮಿಶ್ರಿತ ಮದ್ಯವಿರುತ್ತೆ. ನೀರಿನ ಬಾಟಲಿಗಳನ್ನು ಪರಿಶೀಲಿಸಲಾಗಿ, ಸದರಿ ಬಾಟಲಿಗಳಲ್ಲಿ ಸುಮಾರು 1/4 ರಷ್ಟು ನೀರು ಇರುತ್ತೆ. ಅಲ್ಲಿದ್ದ ಸಾರ್ವಜನಿಕರನ್ನು ಅಂಗಡಿಯಲ್ಲಿದ್ದ ಆಸಾಮಿಯ ಹೆಸರು ವಿಳಾಸ ಕೇಳಲಾಗಿ ಸುಬ್ರಮಣಿ ಬಿನ್ ಲೇಟ್ ರಾಮಚಂದ್ರಪ್ಪ, 40 ವರ್ಷ, ಗಾಣಿಗ, ಸೀಕಲ್ಲು ಗ್ರಾಮ, ಚಿಂತಾಮಣಿ ತಾಲ್ಲೂಕು ಎಂದು ತಿಳಿಸಿದ್ದು, ನಂತರ ಸ್ಥಳದಲ್ಲಿ ಪಂಚರ ಸಮಕ್ಷಮ ಮದ್ಯಾಹ್ನ 3-15 ಗಂಟೆಯಿಂದ 4-00 ಗಂಟೆಯವರೆಗೆ ಮಹಜರ್ ಕ್ರಮ ಕೈಗೊಂಡು ಮೇಲ್ಕಂಡ ವಸ್ತುಗಳನ್ನು ಅಮಾನತ್ತುಪಡಿಸಿಕೊಂಡು ಮಾಲು, ಪಂಚನಾಮೆಯೊಂದಿಗೆ ಠಾಣೆಗೆ ವಾಪಸ್ಸಾಗಿ ಅಕ್ರಮವಾಗಿ ಸಾರ್ವಜನಿಕರಿಗೆ ಮದ್ಯಪಾನ ಮಾಡಲು ತನ್ನ ಅಂಗಡಿ ಮುಂಭಾಗ ಸ್ಥಳಾವಕಾಶ ಮಾಡಿಕೊಟ್ಟಿರುವ ಆರೋಪಿ ಸುಬ್ರಮಣಿ ಬಿನ್ ಲೇಟ್ ರಾಮಚಂದ್ರಪ್ಪ ರವರ ವಿರುದ್ಧ ಸಂಜೆ:4-30 ಗಂಟೆಗೆ ಠಾಣಾ ಮೊ.ಸಂ:46/2020 ಕಲಂ:15(ಎ) ಕೆಇ ಆಕ್ಟ್ ರೀತ್ಯ ಸ್ವತಃ ಪ್ರಕರಣ ದಾಖಲಿಸಿಕೊಂಡಿರುತ್ತೆ.
6. ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 18/2020 ಕಲಂ. 279,337 ಐಪಿಸಿ :-
ದಿನಾಂಕ 20/01/2020 ರಂದು ಪಿರ್ಯಾದಿದಾರರಾದ ಜಿ ಮಣಿಕಂಠ ಬಿನ್ ಗಂಗಾಧರ, 24 ವರ್ಷ, ಮುತ್ಯಾಲಮ್ಮನಹಳ್ಳಿ ಗ್ರಾಮ, ಕೊಡಿಗೇನಹಳ್ಳಿ ಹೋಬಳಿ, ಮಧುಗಿರಿ ತಾಲ್ಲೂಕು, ತುಮಕೂರು ಜಿಲ್ಲೆ. ರವರು ಠಾಣೆಗೆ ಹಾಜರಾಗಿ ನಿಡಿದ ಲಿಖಿತ ದುರಿನ ಸಾರಾಂಶವೇನೆಂದರೇ, ದಿನಾಂಕ 02/01/2019 ರಂದು ಬೆಳಗ್ಗೆ 8-30 ಗಂಟೆಯ ಸಮಯದಲ್ಲಿ ಮಧು ಬಿನ್ ಗಂಗಾಧರ ರವರು KA 50 W 9036 PULSER ದ್ವಿಚಕ್ರ ವಾಹನದಲ್ಲಿ ಕೊಡಿಗೇನಹಳ್ಳಿಯ ಕಡೆ ಹೋಗಲು ಶಂಬೂಕ ನಗರ ಮತ್ತು ಚಂದನದೂರು ಗ್ರಾಮದ ಕಡೆ ಹೋಗುತ್ತಿದ್ದಾಗ ಚಂದನದೂರು ಕಡೆಯಿಂದ ಬಂದ ಪ್ಯಾಷನ್ ಪ್ರೋ ದ್ವಿಚಕ್ರ ವಾಹನ ಸಂಖ್ಯೆ KA01 HS 7266 ರ ಚಾಲಕ ಅತಿವೇಗ ಮತ್ತು ಅಜಾಗರುಕತೆಯಿಂದ ಚಾಲನೆ ಮಾಡಿಕೊಂಡು ಬಂದು ನನ್ನ ತಮ್ಮ ಚಾಲನೆ ಮಾಡುತ್ತಿದ್ದ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ನನ್ನ ತಮ್ಮನಿಗೆ ಪ್ರಜ್ಞೆ ಹೋಗಿದ್ದು ನಂತರ ಬೆಂಗಳೂರಿನಲ್ಲಿ ಆಸ್ಪತ್ರೆಗೆ ದಾಖಲು ಮಾಡಿ ಡಿಕ್ಕಿ ಹೊಡೆದ ಪರಿಣಾಮ ನನ್ನ ತಮ್ಮನಿಗೆ ಬಲಭಾಗದ ಮುಖದ ಮೂಳೆ ಮುರಿದಿರುತ್ತದೆ. ಮತ್ತು ತಲೆಗೆ ಬಲವಾದ ಪೆಟ್ಟಾಗಿರುತ್ತದೆ. ಚಿಕಿತ್ಸೆಯನ್ನು ಕೊಡಿಸುತ್ತಿದ್ದರಿಂದ ದೂರುನ್ನು ನೀಡಲು ತಡವಾಗಿರುತ್ತದೆ. ಆದ್ದರಿಂದ ಮುಂದಿನ ಕ್ರಮ ಜರುಗಿಸಲು ಕೋರಿ.
7. ಗುಡಿಬಂಡೆ ಪೊಲೀಸ್ ಠಾಣೆ ಮೊ.ಸಂ. 12/2020 ಕಲಂ. 279,337,304(ಎ) ಐಪಿಸಿ :-
ದಿನಾಂಕ:20/01/2020 ರಂದು 16-00 ಘಂಟೆಗೆ ಪಿರ್ಯಾದಿದಾರರಾದ ದೊಡ್ಡನಾರಾಯಣಪ್ಪ ಬಿನ್ ಲೇಟ್ ಮುನಿಯಪ್ಪ 45 ವರ್ಷ ಆದಿದ್ರಾವಿಡ ಜನಾಂಗ ಕೂಲಿ ಕೆಲಸ ವಾಸ ಬಶೆಟ್ಟಿಹಳ್ಳಿ ಗ್ರಾಮ ಶಿಡ್ಲಘಟ್ಟ ತಾಲ್ಲೂಕು. ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಂಶವೇನೆಂದರೆ ತನ್ನ ಅಣ್ಣನ ಮಗ ಮೋಹನ್ .ಬಿ.ಎಂ. ಬಿನ್ ಮುನಿವೆಂಟಪ್ಪ 24 ವರ್ಷ ರವರು ಈಗ್ಗೆ ಸುಮಾರು 02 ವರ್ಷಗಳಿಂದ ಕ್ರೇಡಿಟ್ ಆಕ್ಸಿಸಿಸ್ ಗ್ರಾಮೀಣ ಲಿಮೀಟಡ್ ನಲ್ಲಿ ಕೇಂದ್ರ ಮ್ಯಾನಜರ್ ಆಗಿ ಕೆಲಸ ಮಾಡಿಕೊಂಡಿದ್ದು ಚಿಕ್ಕಬಳ್ಳಾಪುರದಲ್ಲಿ ಇರುತ್ತಿದ್ದು ವಾರಕ್ಕೆ ಒಂದು ಸಾರಿ ತಮ್ಮ ಊರಿಗೆ ಬರುತ್ತಿದ್ದು ಈ ದಿನ ದಿನಾಂಕ:20/01/2020 ರಂದು ತನ್ನ ಅಣ್ಣನ ಮಗ ಮೋಹನ ರವರು ಕೆಲಸ ಮಾಡುತ್ತಿದ್ದ ಕ್ರೇಡಿಟ್ ಆಕ್ಸಿಸಿಸ್ ಗ್ರಾಮೀಣ ಲಿಮೀಟಡ್ ಕಚೇರಿಯವರು ತಮ್ಮ ಗ್ರಾಮದವರಿಗೆ ಪೋನ್ ಮಾಡಿ ಮೋಹನ್ ಮತ್ತು ಆತನ ಜೋತೆಯಲ್ಲಿದ್ದ ನಂದೀಶ್ ರವರಿಗೆ ಚಿಕ್ಕಬಳ್ಳಾಪುರ ತಾಲ್ಲೂಕು ಮಂಡಿಕಲ್ ಗ್ರಾಮದ ಹತ್ತಿರ ದೊಡ್ಡಹಳ್ಳಿ ಕ್ರಾಸ್ ಹತ್ತಿರ ರಸ್ತೆ ಅಪಘಾತವಾಗಿ ಮೋಹನ್ ರವರು ಸ್ಥಳದಲ್ಲಿ ಮೃತಪಟ್ಟಿರುವುದಾಗಿ ನಂದೀಶ್ ಎಂಬುವರಿಗೆ ಗಾಯಗಳಾಗಿರವುದಾಗಿ ಪೋನ್ ಮಾಡಿ ತಿಳಿಸಿದ್ದು ತಾನು ಕೂಡಲೆ ಚಿಕ್ಕಬಳ್ಳಾಪುರ ಜಿಲ್ಲಾ ಆಸ್ಪತ್ರೆಗೆ ಬಂದು ನೋಡಲಾಗಿ ವಿಚಾರ ನಿಜವಾಗಿದ್ದು ನಂತರ ಅಪಘಾತದಲ್ಲಿ ಗಾಯಗೊಂಡು ಚಿಕ್ಕಬಳ್ಳಾಪುರ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕತ್ಸೆಯನ್ನು ಪಡೆಯುತ್ತಿದ್ದ ನಂದೀಶ್ ರವರಿಂದ ವಿಚಾರ ತಿಳಿಯಲಾಗಿ ಮೋಹನ್ ಮತ್ತು ನಂದೀಶ್ ರವರು ಈ ದಿನ ದಿನಾಂಕ:20/01/2020 ರಂದು ಬೆಳಗ್ಗೆ ತಮ್ಮ ಕಂಪನಿಯಿಂದ ಸಾಲವನ್ನು ಪಡೆದಿರುವ ಸದಸ್ಯರಿಂದ ಸಾಲವನ್ನು ಮರುಪಾವತಿಗಾಗಿ ಮಂಡಿಕಲ್ ಹೋಬಳಿ ದರಬೂರು ಗ್ರಾಮಕ್ಕೆ ಕೆ.ಎ-06 ಇ.ಟಿ-6527 ನೊಂದಣಿ ಸಂಖ್ಯೆಯ ಬಜಾಜ್ ಸಿ.ಟಿ-100 ದ್ವಿ ಚಕ್ರವಾಹನದಲ್ಲಿ ಹೋಗಿ ಕೆಲಸ ಮುಗಿಸಿಕೊಂಡು ವಾಪಸ್ಸು ಚಿಕ್ಕಬಳ್ಳಾಪುರಕ್ಕೆ ಮೇಲ್ಕಂಡ ದ್ವಿ ಚಕ್ರವಾಹನವನ್ನು ಮೋಹನ್ ರವರು ಚಾಲನೆ ಮಾಡಿಕೊಂಡು ಹಿಂದೆ ನಂದೀಶ್ ರವರು ಕುಳಿತುಕೊಂಡು ಬರುತ್ತಿದ್ದಾಗ ಮಂಡಿಕಲ್- ಚಿಕ್ಕಬಳ್ಳಾಪುರ ರಸ್ತೆಯಲ್ಲಿ ದೊಡ್ಡಹಳ್ಳಿ ಕ್ರಾಸ್ ಬಳಿ ಬೆಳಗ್ಗೆ ಸುಮಾರು 11-30 ಘಂಟೆಯಲ್ಲಿ ಎದುರು ಗಡೆಯಿಂದ ಬಂದ ಟಿ.ಎನ್-04 ಎಂ-8925 ನೊಂದಣಿ ಸಂಖ್ಯೆಯ ಸಿಮೇಂಟ್ ಬಲ್ಕರ್ ವಾಹನದ ಚಾಲಕ ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಮೋಹನ್ ಮತ್ತು ನಂದೀಶ್ ರವರು ಹೋಗುತ್ತಿದ್ದ ದ್ವಿ ಚಕ್ರವಾಹನಕ್ಕೆ ಡಿಕ್ಕಿ ಹೊಡೆಯಿಸಿ ಅಪಘಾತಪಡಿಸಿದ ಪರಿಣಾಮ ದ್ವಿ ಚಕ್ರವಾಹನ ಜಖಂಗೊಂಡು ಇಬ್ಬರಿಗೂ ತೀವ್ರವಾದ ರಕ್ತಗಾಯಗಳಾಗಿ ತೀವ್ರವಾಗಿ ರಕ್ತಗಾಯಗೊಂಡಿದ್ದ ಮೋಹನ ರವರು ಸ್ಥಳದಲ್ಲಿ ಮೃತಪಟ್ಟಿದ್ದು ಗಾಯಗೊಂಡಿದ್ದ ನಂದೀಶ್ ರವರನ್ನು ಅಂಬ್ಯೂಲೆನ್ಸ್ ವಾಹನದಲ್ಲಿ ಚಿಕ್ಕಬಳ್ಳಾಪುರ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿರವುದಾಗಿ ಮತ್ತು ಈ ಅಪಘಾತದಲ್ಲಿ ಮೃತಪಟ್ಟಿರುವ ಮೋಹನ್ ಮುನಿವೆಂಟಪ್ಪ 24 ವರ್ಷ ಆದಿದ್ರಾವಿಡ ಜನಾಂಗ ಪೈವೇಟ್ ನಲ್ಲಿ ಕೆಲಸ ವಾಸ ಬಶೆಟ್ಟಿಹಳ್ಳಿ ಗ್ರಾಮ ಶಿಡ್ಲಘಟ್ಟ ತಾಲ್ಲೂಕು. ರವರ ಮೃತದೇಹವನ್ನು ಚಿಕ್ಕಬಳ್ಳಾಪು ಜಿಲ್ಲಾ ಆಸ್ಪತ್ರೆಯ ಶವಗಾರಕ್ಕೆ ಸ್ಥಳಾಂತರಿಸಿರುವುದಾಗಿ ತಿಳಿದಿರುವುದಾಗಿ ಮೇಲ್ಕಂಡ ಅಪಘಾತಪಡಿಸಿದ ಟಿ.ಎನ್-04 ಎಂ-8925 ನೊಂದಣಿ ಸಂಖ್ಯೆಯ ಸಿಮೇಂಟ್ ಬಲ್ಕರ್ ವಾಹನದ ಚಾಲಕನ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ನೀಡಿದ ದೂರಿನ ಮೇರಿಗೆ ಪ್ರಕಣವನ್ನು ದಾಖಲಿಸಿಕೊಂಡಿರುತ್ತೆ.
8. ಗುಡಿಬಂಡೆ ಪೊಲೀಸ್ ಠಾಣೆ ಮೊ.ಸಂ. 13/2020 ಕಲಂ. 15(A),32(3) ಕರ್ನಾಟಕ ಅಬಕಾರಿ ಕಾಯ್ದೆ :-
ದಿನಾಂಕ:20/01/2020 ರಂದು ರಾತ್ರಿ 8.30ಗಂಟೆಗೆ ಪಿರ್ಯಾಧಿದಾರರಾದ ಡಿಸಿಬಿ/ಸಿಇಎನ್ ಪೊಲೀಸ್ ಠಾಣೆಯ ಸಿಬಂಧಿಯಾದ ಹೆಚ್ ಸಿ 205 ರಮೇಶ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಶವೇನೆಂದರೆ ತಮ್ಮ ಠಾಣೆಯ ಪೊಲೀಸ್ ಇನ್ಸ್ ಪೆಕ್ಟರ್ ಶ್ರೀ ಎನ್ ರಾಜಣ್ಣರವರು ತನಗೆ ಮತ್ತು ತಮ್ಮ ಠಾಣೆಯ ಸಿಬ್ಬಂಧಿಯಾದ ಹೆಚ್ ಸಿ-71 ಸುಬ್ರಮಣಿರವರಿಗೆ ಚಿಕ್ಕಬಳ್ಳಾಪುರ ತಾಲ್ಲೂಕು ಪೆರೇಸಂದ್ರ ಕಡೆಗೆ ಅಕ್ರಮ ಚಟುವಟಿಕೆಗಳ ಬಗ್ಗೆ ಮಾಹಿತಿಗಾಗಿ ನೇಮಿಸಿ ಕಳುಹಿಸಿದ್ದು ಅದರಂತೆ ತಾವು ಸಂಜೆ 5.00ಗಂಟೆ ಸಮಯದಲ್ಲಿ ಗುಡಿಬಂಡೆ ಪೊಲೀಸ್ ಠಾಣೆಯ ಸರಹದ್ದು ಕಸವಗುಟ್ಟಹಳ್ಳಿ ಗ್ರಾಮ ಬಳಿ ಗಸ್ತಿನಲ್ಲಿದ್ದಾಗ ತಮ್ಮಗೆ ಬಂದ ಮಾಹಿತಿಯ ಮೇರೆಗೆ ಯಲಗಲಹಳ್ಳಿ ಗ್ರಾಮದಲ್ಲಿ ಶ್ರೀಮತಿ ಸುವರ್ಣಮ್ಮ ಕೋಂ ರಾಮಕೃಷ್ಣಪ್ಪ 40ವರ್ಷ ಪರಿಷಿಷ್ಟ ಜಾತಿ ಯಲಗಲಹಳ್ಳಿ ಗ್ರಾಮ ರವರು ತಮ್ಮ ಅಂಗಡಿಯ ಮುಂಭಾಗ ಸಾರ್ವಜನಿಕರಿಗೆ ಮದ್ಯಪಾನ ಸೇವನೆ ಮಾಡಲು ಸ್ಥಳಾವಕಾಶ ಕೋಟ್ಟಿರುವುದಾಗಿ ಬಂದ ಮಾಹಿರತಿಯ ಮೇರೆಗೆ ಸ್ಥಳದಲ್ಲಿಯೇ ಇದ್ದ ಪಂಚಾಯ್ತಿಧಾರರನ್ನು ಬರಮಾಡಿಕೊಂಡು ವಿಚಾರವನ್ನು ತಿಳಿಸಿ ದಾಳಿ ಮಾಡಲು ಪಂಚರಾಗಿ ಸಹಕರಿಸಲು ಕೋರಿದ್ದು ಅದಕ್ಕೆ ಅವರು ಒಪ್ಪಿ ಪಂಚಾಯ್ತಿದಾರರೊಂದಿಗೆ ಸ್ಥಳಕ್ಕೆ ಹೋಗಿ ನೋಡಲಾಗಿ ಸ್ಥಳದಲ್ಲಿ ಮದ್ಯಪಾನ ಮಾಡುತ್ತಿದ್ದವರು ತಮ್ಮನ್ನು ನೋಡಿ ಓಡಿ ಹೋಗಿದ್ದು, ಸ್ಥಳದಲ್ಲಿ ಪಂಚರ ಸಮಕ್ಷಮ ಅಂಗಡಿಯ ಮುಂಭಾಗ ಕೆಳಗಡೆ ಬಿದ್ದಿದ್ದ 1) 90 ಎಮ್ ಎಲ್ ಅಳತೆಯ ಎರಡು ಖಾಲಿ ಹೈವರ್ಡಸ್ ಚೀರ್ಸ್ ವಿಸ್ಕಿ ಪಾಕೇಟ್ಗಳು .2) ಮದ್ಯ ಸೇವನೆ ಮಾಡಿ ಬೀಸಾಕಿರುವ ಎರಡು ಪ್ಲಾಸ್ಟಿಕ್ ಗ್ಲಾಸ್ ಗಳು.3) ಒಂದು ಲೀಟರ್ ಅಳತೆಯ ಒಂದು ಖಾಲಿ ನೀರಿನ ಬಾಟೇಲ್.4)ಮದ್ಯ ಇರುವ 90 ಎಮ್ ಎಲ್ ಅಳತೆಯ 12 ಹೈವರ್ಡಸ್ ಚೀರ್ಸ್ ವಿಸ್ಕಿ ಪಾಕೇಟ್ಗಳು ಇದ್ದು, ಒಟ್ಟಾರೆ 1.080 ಎಮ್ಎಲ್ ಸಾಮರ್ಥ್ಯ ಆಗಿದ್ದು ಒಟ್ಟು ಮೌಲ್ಯ ಸುಮಾರು-360 ರೂಗಳು ಬಾಳುವುದಾಗಿದ್ದು, ಇವುಗಳನ್ನು ಪಂಚರ ಸಮಕ್ಷಮ ಮೂದಿನ ಕ್ರಮದ ಬಗ್ಗೆ ಅಮಾನತ್ತು ಪಡೆಸಿಕೊಂಡು ನಂತರ ಅಂಗಡಿಯಲ್ಲಿದ್ದ ಮಾಲೀಕರಾದ ಶ್ರೀಮತಿ ಸುವರ್ಣಮ್ಮ ಕೋಂ ರಾಮಕೃಷ್ಣಪ್ಪ ರವರನ್ನು ಈ ರೀತಿ ಮಾಡಲು ಯಾವುದಾದರೂ ಪರವಾನಗಿ ಇದೆಯಾ ಎಂತ ಕೇಳಲಾಗಿ ಏನು ಇಲ್ಲವೆಂದು ತಿಳಿಸಿದ್ದು ಇವರು ಮಹಿಳೆಯಾದ್ದರಿಂದ ತಮ್ಮಲ್ಲಿ ಮಹಿಳೆ ಸಿಬ್ಬಂಧಿ ಇಲ್ಲದ ಕಾರಣ ಸುವರ್ಣಮ್ಮರನ್ನು ಸ್ಥಳದಲ್ಲಿಯೇ ಬಿಟ್ಟಿರುತ್ತೆ. ಅಮಾನತ್ತು ಪಡಿಸಿಕೊಂಡಿರುವ ಮಾಲನ್ನು ಠಾಣೆಗೆ ತಂದು ಹಾಜರು ಪಡಿಸಿರುತ್ತೆ.
9. ಮಂಚೇನಹಳ್ಳಿ ಪೊಲೀಸ್ ಠಾಣೆ ಮೊ.ಸಂ. 24/2020 ಕಲಂ. 323,324,448,504 ರೆ/ವಿ 34 ಐಪಿಸಿ :-
ದಿನಾಂಕ: 20/01/2020 ರಂದು ಮದ್ಯಾಹ್ನ 12-30 ಗಂಟೆಗೆ ಪಿರ್ಯಾದಿದಾರರಾದ ಶ್ರೀಮತಿ ಮಂಜುಳಮ್ಮ ಕೋಂ ಆನಂದ್ ಕುಮಾರ್ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆನೆಂದರೆ, ದಿನಾಂಕ: 19/01/2020 ರ ಸಂಜೆ 6-00 ಗಂಟೆ ಸಮಯದಲ್ಲಿ ಇದೇ ಗ್ರಾಮದ ಒಕ್ಕಲಿಗ ಜನಾಂಗದ ಲೇಟ್ ಹನುಮಂತಪ್ಪನ ಮಗ ಹೆಚ್ ಕೃಷ್ಣಪ್ಪ ನಮ್ಮ ಮಾವನಾದ ಶ್ರೀನಿವಾಸಪ್ಪರನ್ನು ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದ ಈ ವಿಷಯಕ್ಕಾಗಿ ನಾನು ಕೇಳಿದಕ್ಕೆ ನನಗೆ ಒಡೆದಿದ್ದು ಇದೇ ವಿಷಯಕ್ಕಾಗಿ ರಾತ್ರಿ 9-30 ಗಂಟೆಗೆ ಅವರ ಮಗನಾದ ಅನಿಲ್ ಕುಮಾರ್ ರವರು ಈ ವಿಷಯಕ್ಕಾಗಿ ಕಲ್ಲು ರಾಡ್ ನಿಂದ ಹೊಡೆದು ಗಲಾಟೆ ಮಾಡಿದ್ದಾನೆ ಇದಕ್ಕಾಗಿ ಹೆಚ್. ಕೃಷ್ಣಪ್ಪ ಈತನ ಪತ್ನಿ ಸುಮಾರು 40 ವರ್ಷದ ಭಾಗ್ಯಮ್ಮ ಇವರ ಸೊಸೆ ಕವಿತಾ ಮತ್ತು ಕೃಷ್ಣಪ್ಪ ರವರುಗಳು ದೊಣ್ಣೆ, ರಾಡ್, ಕಲ್ಲುಗಳನ್ನು ಹಿಡಿದು ಗುಂಪುಕಟ್ಟಿ ಮನೆ ಮುಂದೆ ನಿಂತು ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದು ನಾನು ಭಯಪಟ್ಟು ಬಾಗಿಲು ಹಾಕಿಕೊಂಡೆ ಆದರೆ ಬಾಗಿಲಿಗೆ ಕಲ್ಲುಗಳಿಂದ ದೊಣ್ಣೆಯಿಂದ ಹೊಡೆದು ಒಳಗೆ ನುಗ್ಗಿ ನನಗೂ ಮತ್ತು ನನ್ನ ಮೈದನಾದ 36 ವರ್ಷದ ಮುನಿರಾಜು ಮತ್ತು ನನ್ನ ನಾದಿನಿ ವರಲಕ್ಷ್ಮೀ ಕೋಂ ಮುನಿರಾಜು ರವರುಗಳಿಗೆ ಕೈಗಳಿಂದ ದೊಣ್ಣೆಗಳಿಂದ ರಾಡ್ ಗಳಿಂದ ಹೊಡೆದು ನಂತರ ಅನಿಲ್ ಕುಮಾರ್ ಎಂಬುವರನು ತನ್ನ ಮೈದನಾದ ಮುನಿರಾಜು ರವರಿಗೆ ಬಲ ಭುಜಕ್ಕೆ ರಾಡ್ ನಿಂದ ಬಲವಾಗಿ ಹೊಡೆದಿರುತ್ತಾರೆ ಇದರಿಂದ ಅವನ ಭುಜದ ಮೂಳೆ ಮುರಿದು ಹೋಗಿದ್ದು ಅವನು ಗೌರಿಬಿದನೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಸದರಿ ಮೇಲ್ಕಂಡವರ ವಿರುದ್ದ ಕಾನೂನು ರೀತ್ಯ ಕ್ರಮ ಜರುಗಿಸಬೇಕೆಂದು ಕೋರಿ ಪ್ರ.ವ.ವರದಿ.
10. ಮಂಚೇನಹಳ್ಳಿ ಪೊಲೀಸ್ ಠಾಣೆ ಮೊ.ಸಂ. 25/2020 ಕಲಂ. 323,324,504,506 ರೆ/ವಿ 34 ಐಪಿಸಿ :-
ದಿನಾಂಕ: 20/01/2020 ರಂದು 15-30 ಗಂಟೆಗೆ ಪಿರ್ಯಾದಿದಾರರಾದ ಬಾಲಪ್ಪ ಬಿನ್ ದೊಡ್ಡನರಸಿಂಹಪ್ಪ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆನೆಂದರೆ, ತಾನು ದಿನಾಂಕ: 15/01/2020 ರಂದು ರಾತ್ರಿ 7-30 ರ ಸಮಯದಲ್ಲಿ ತಮ್ಮ ಗ್ರಾಮದ ತಮ್ಮ ಮನೆಯ ಬಳಿ ಮಗುವನ್ನು ಎತ್ತಿಕೊಂಡು ಮನೆಯ ಬಳಿ ನಿಂತಿದ್ದಾಗ ತಮ್ಮ ಮನೆಯ ಮುಂದೆ ಇರುವ ರಸ್ತೆಯಲ್ಲಿ ತಮ್ಮ ಗ್ರಾಮದ ವಾಸಿಯಾದ ಅಭಿಷೇಕ್ ಅಲಿಯಾಸ್ ಅಭಿಷೇಕ್ ಡಾನ್ ಬಿನ್ ಗಂಗಣ್ಣ ಅಲಿಯಾಸ್ ಬಂಗಾರಪ್ಪ, 20 ವರ್ಷ ರವರು ಕಂಠ ಪೂರ್ತಿ ಕುಡಿದು ತಮ್ಮ ಮನೆಯ ಮುಂದೆ ಇರುವ ರಸ್ತೆಯಲ್ಲಿ ಬೈಕ್ ವೀಲಿಂಗ್ ಮಾಡುವ ಮುಖಾಂತರ ಜೋರಾಗಿ ಓಡಿಸಿಕೊಂಡು ಬಂದನು ನಾನು ರಸ್ತೆಯಲ್ಲಿ ಗಾಡಿಯನ್ನು ನಿಧಾನವಾಗಿ ಚಲಾಯಿಸಿ ಮಕ್ಕಳು ಮರಿ ಇರುತ್ತಾರೆ ಎಂದು ಬುದ್ದಿವಾದ ಹೇಳಿದಕ್ಕೆ ಮೇಲ್ಕಂಡ ಅಸಾಮಿಯು ಕಾನೂನು ಬಾಹಿರವಾಗಿ ತಮ್ಮ ಮನೆಯ ಬಳಿ ಅತಿಕ್ರಮ ಪ್ರವೇಶ ಮಾಡಿ ಲೋಫರ್ ನನ್ಮಗನೆ, ಬೋಳಿ ನನ್ಮಗನೇ ಈ ರಸ್ತೆ ನಿಮ್ಮ ತಾತನದೋ ಎಂದು ಅವಾಚ್ಯ ಶಬ್ದಗಳಿಂದ ಬೈದು ತನ್ನ ಕತ್ತುಪಟ್ಟಿಯನ್ನು ಹಿಡಿದು ಎಳೆದಾಡಿದನು ತಾನು ಜೋರಾಗಿ ಕಿರುಚಿಕೊಂಡಾಗ ಅವರ ಮನೆಯವರಾದ ಗಂಗಣ್ಣ @ ಬಂಗಾರಪ್ಪ ಬಿನ್ ಲೇಟ್ ಗೌರಾಯಪ್ಪ , 45 ವರ್ಷ, ಮಂಜುನಾಥ್ ಬಿನ್ ಸುಬ್ಬರಾಯಪ್ಪ, 40 ವರ್ಷ, ಕುಮಾರ್ ಬಿನ್ ಲೇಟ್ ವೀರಗೊಂಡಪ್ಪ, 25 ವರ್ಷ ಎಲ್ಲರೂ ಬಿ ಬೊಮ್ಮಸಂದ್ರ ಗ್ರಾಮ, ಗೌರಿಬಿದನೂರು ತಾಲ್ಲೂಕು ರವರು ಕೈಗಳಲ್ಲಿ ದೊಣ್ಣೆ, ಕಬ್ಬಿಣದ ರಾಡ್ ಮತ್ತು ಮಧ್ಯಪಾನದ ಬಾಟೆಲ್ ನ್ನು ಹಿಡಿದುಕೊಂಡು ಏಕಾಏಕಿ ಅಭಿಷೇಕ್ @ ಅಭಿಷೇಕ್ ಡಾನ್ ರವರು ತನ್ನ ಕೈಯಲ್ಲಿದ್ದ ಬಾಟಲಿಯಿಂದ ತನ್ನ ತಲೆಯ ಹಿಂಭಾಗಕ್ಕೆ ಬಲವಾಗಿ ಹೊಡೆದಿದ್ದರಿಂದ ತನಗೆ ತೀವ್ರ ಸ್ವರೂಪದ ಗಾಯವಾಗಿರುತ್ತದೆ ಮಂಜುನಾಥ್ ರವರು ತಾನು ತಂದಿದ್ದ ದೊಣ್ಣೆಯಿಂದ ತನ್ನ ಎದೆಗೆ ಬಲವಾಗಿ ಹೊಡೆದು ಮೂಗೇಟು ಉಂಟು ಮಾಡಿರುತ್ತಾರೆ ಗಂಗಣ್ಣ ರವರು ತನ್ನ ಕುತ್ತಿಗೆ ಎಡಭಾಗಕ್ಕೆ ಬಲವಾಗಿ ಹೊಡೆದು ಮೂಗೇಟು ಮಾಡಿರುತ್ತಾನೆ ಕುಮಾರ್ ಮತ್ತು ಮಂಜುನಾಥ್ ರವರು ಕೈಗಳಿಂದ ಮತ್ತು ಕಾಲುಗಳಿಂದ ತನ್ನ ಹೊಟ್ಟೆಗೆ ಮತ್ತು ಬೆನ್ನಿಗೆ ಬಲವಾಗಿ ಒದ್ದು ನೋವುಂಟು ಮಾಡಿರುತ್ತಾರೆ ತನ್ನ ತಲೆಗೆ ಆದ ಗಾಯದಿಂದ ತೀವ್ರ ರಕ್ತ ಸ್ರಾವವಾಗಿ ತಾನು ಕಿರುಚಿಕೊಂಡಾಗ ತಮ್ಮ ಗ್ರಾಮದ ವಾಸಿಗಳಾದ ಅಲ್ಲಿಯೇ ಇದ್ದ ಶಂಕರ್ ಬಿನ್ ಗಂಗಪ್ಪ, 40 ವರ್ಷಮ ಮೂರ್ತಿ ಬಿನ್ ನರಸಿಂಹಪ್ಪ , 32 ವರ್ಷ ರವರು ಬಂದು ಆರೋಪಿಗಳ ಕೈಯಲ್ಲಿದ್ದ ಕಟ್ಟಿಗೆ ಮತ್ತು ರಾಡ್ ನ್ನು ಕಿತ್ತುಕೊಂಡು ಮೇಲ್ಕಂಡ ಅಸಾಮಿಗಳಿಗೆ ಬುದ್ದಿ ಹೇಳಿ ಜಗಳ ಬಿಡಿಸಿರುತ್ತಾರೆ ಮೇಲ್ಕಂಡ ಎಲ್ಲಾ ಅಸಾಮಿಗಳು ತಾವು ತಂದಿದ್ದ ದೊಣ್ಣೆ ಮತ್ತು ರಾಡ್ ನ್ನು ತೋರಿಸಿ ನಿನ್ನನ್ನು ಜೀವ ಸಹಿತ ಬಿಡುವುದಿಲ್ಲ ಎಂದು ಕೊಲೆ ಬೆದರಿಕೆ ಹಾಕಿ ಹೋಗಿರುತ್ತಾರೆ ನಂತರ ತಾನು ಕೆಳಗೆ ಬಿದ್ದಿರುವುದನ್ನು ನೋಡಿ ಮೇಲಕ್ಕೆ ಎಎತ್ತಿ ನೋಡಿ ತನಗೆ ತೀವ್ರ ರಕ್ತ ಸ್ರಾವ ಆಗಿದ್ದರಿಂದ ಯಾವುದೋ ಆಟೋದಲ್ಲಿ ಗೌರಿಬಿದನೂರು ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿರುತ್ತಾರೆ ಆದ್ದರಿಂದ ಮೇಲ್ಕಂಡ ಅಸಾಮಿಗಳ ವಿರುದ್ದ ಕಾನೂನು ರೀತ್ಯ ಕ್ರಮ ಜರುಗಿಸಬೇಕೆಂದು ಕೋರಿ ಪ್ರ.ವ.ವರದಿ.
11. ಮಂಚೇನಹಳ್ಳಿ ಪೊಲೀಸ್ ಠಾಣೆ ಮೊ.ಸಂ. 26/2020 ಕಲಂ. 323,324,504,506 ರೆ/ವಿ 34 ಐಪಿಸಿ :-
ದಿನಾಂಕ: 20/01/2020 ರಂದು 17-45 ಗಂಟೆಗೆ ಎ.ಎಸ್.ಐ ವಿಠ್ಠಲ್ ರಾವ್ ರವರು ಗೌರಿಬಿದನೂರು ಸರ್ಕಾರಿ ಆಸ್ಪತ್ರೆಯಿಂದ ಗಾಯಾಳು ರೀಜಾ ಕೆ ಎನ್ ಬಿನ್ ಸೈಯದ್ ಖಾಜೀಂ ರಜಾ ರವರು ಹೇಳಿಕೆಯನ್ನು ಪಡೆದುಕೊಂಡು ಹಾಜರುಪಡಿಸಿದ್ದರ ಸಾರಾಂಶವೆನೆಂದರೆ, ತನಗೂ ಹಾಗೂ ತಮ್ಮ ಗ್ರಾಮದ ಸಿಕ್ ಪತ್ ಹಸಿನ್ ಬಿನ್ ಇಬ್ಬನೇ ಹಸನ್ ರವರಿಗೂ ದುಡ್ಡಿನ ವಿಚಾರದಲ್ಲಿ ಕೊಟ್ಟು ತೆಗೆದುಕೊಳ್ಳುವ ವ್ಯವಹಾರ ಇಟ್ಟುಕೊಂಡಿದ್ದು ಈಗ್ಗೆ ಒಂದು ವರ್ದ ಹಿಂದೆ ಸಿಕ್ ಪತ್ ಹಸಿನ್ ರವರಿಗೆ ಕೈ ಬದಲಾಗಿ 7 ಲಕ್ಷ ರೂಗಳನ್ನು ಸಾಲವಾಗಿ ನೀಡಿದ್ದು ಸಾಕಷ್ಟು ಬಾರಿ ಕೇಳುತ್ತರಿದ್ದರು ಸಬೂಬು ಹೇಳುತ್ತಿದ್ದು ಈ ದಿನ ದಿನಾಂಕ: 20/01/2020 ರಂದು ಮದ್ಯಾಹ್ನ ಸುಮಾರು 12-00 ಗಂಟೆಯ ಸಮಯದಲ್ಲಿ ಸಿಕ್ ಪತ್ ಸಹಿನ್ ರವರು ತಮ್ಮ ಮೊಬೈಲ್ ನಂ: 8880820505 ನಂಬರಿನಿಂದ ತನ್ನ ಮೊಬೈಲ್ 8105801589 ಗೆ ಎಲ್ಲಿದ್ದೀಯಾ ಎಂತ ಮೇಸೆಜ್ ನ್ನು ಕಳುಹಿಸಿದ್ದು ಹಣ ಕೊಡಲು ಬರುತ್ತಿರುವುದಾಗಿ ತಿಳಿದು ತಾನು ಅಂಗಡಿಯನ್ನು ವ್ಯಾಪಾರ ಮಾಡಿಕೊಂಡಿರುವುದಾಗಿ ನಂತರ ತಾನು ಮೆಸೆಜ್ ನ್ನು ಕಳುಹಿಸಿದೆ ತಾನು ಮೇಸೆಜ್ ಕಳುಹಿಸಿದ 5 ನಿಮಿಷದಲ್ಲಿ ಸಿಕ್ ಪತ್ ಸಹಿನ್ ರವರ ಬಾಬತ್ತು ಚಾವರ್ ಲೇಟ್ ಕಾರಿನಲ್ಲಿ ತಮ್ಮ ಅಂಗಡಿ ಬಳಿ ಬಂದು ಕಾರನ್ನು ನಿಲ್ಲಿಸಿ ಅದರಿಂದ ಸಿಕ್ ಪತ್ ಹಸನ್ ಬಿನ್ ಇಬ್ಬನೇ ಹಸನ್ ಹಾಗೂ ತುರಬತ್ ರಜಾ ಬಿನ್ ಮಹಮ್ಮದ್ ಹಸೀ, 28 ವರ್ಷ ರವರು ಕಾರಿನಿಂದ ಇಳಿದು ತಮ್ಮ ಅಂಗಡಿಯ ಬಳಿ ಬಂದಿದ್ದು ತಾನು ಅಂಗಡಿಯ ಬಳಿ ಬಂದಾಗ ಏಕಾಏಕಿ ಸಿಕ್ ಪತ್ ಹಸಿನ್ ರವರು ತನ್ನ ಕೈಯಲ್ಲಿದ್ದ ಪಿಸ್ತೂಲ್ ನಿಂದ ಎಡ ಭುಜದ ಮೇಲೆ ಹೊಡೆದು ಮೂಗೇಟುಗಳನ್ನುಂಟು ಮಾಡಿದರು ನಂತರ ಅವರ ಜೋತೆಯಲ್ಲಿ ಬಂದಿದ್ದ ಉಜ್ಜತ್ ಹಸನ್ ಮತ್ತು ತುರಬತ್ ರಜಾ ರವರು ರಾಡ್ ಗಳಿಂದ ತನ್ನ ಎಡಮೊಣ ಕಾಲು ಹಾಗೂ ಹಾಗೂ ಬಲ ಮೊಣಕಾಲು ಹಾಗೂ ಮೂಗಿನ ಮೇಲೆ ಎಡ ಪಾದದ ಮೇಲೆ ಹೊಡೆದು ರಕ್ತಗಾಯಗಳನ್ನುಂಟು ಪಡಿಸಿದರು ಅಷ್ಟರಲ್ಲಿ ನಾನು ಕಿರುಚಿಕೊಂಡಾಗ ಅಲ್ಲೇ ಇದ್ದ ತಮ್ಮ ತಂದೆ ಖಾಜೀಂ ರಜಾ ಬಿನ್ ಲೇಟ್ ರೆಹಮಾನ್ ಅಲೀ ಹಾಗೂ ದಲೀತ್ ರಜಾ ಬಿನ್ ವಜೀರ್ ಹುಸೇನ್ ಹಾಗೂ ಎಸ್.ಎಂ ಪಾಜೀಲ್ ಬಿನ್ ಲೇಟ್ ಸಾಲರ್ ಹಿಸೇನ್ ಹಾಗೂ ಅಜಗರ್ ಬಿನ್ ಗುಲಾಂ ಹಸೇನ್ ರವರು ಅಲ್ಲಿಗೆ ಬಂದಾಗ ಅಲ್ಲಿಂದ ಮೇಲ್ಕಂಡ ಮೂರು ಜನರು ಅಲ್ಲಿಂದ ಕಾರಿನಲ್ಲಿ ಹೊರಟು ಹೋದರು ನಂತರ ಗಾಯಗೊಂಡ ತನ್ನನ್ನು ತಮ್ಮ ಗ್ರಾಮದ ಬಷೀರ್ ಹೈದರ್ ಬಿನ್ ಅದೀಲ್ ರಜಾ ರವರು ಯಾವುದೋ ಕಾರಿನಲ್ಲಿ ಗೌರಿಬಿದನೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದು ಮೇಲ್ಕಂಡವರ ವಿರುದ್ದ ಕಾನೂನು ರೀತ್ಯ ಕ್ರಮ ಜರುಗಿಸಬೇಕೆಂದು ಕೋರಿ ಪ್ರ.ವ.ವ.ವರದಿ.
12. ಮಂಚೇನಹಳ್ಳಿ ಪೊಲೀಸ್ ಠಾಣೆ ಮೊ.ಸಂ. 27/2020 ಕಲಂ. 279,304(ಎ) ಐಪಿಸಿ :-
ದಿನಾಂಕ:21/01/2020 ರಂದು ಪಿರ್ಯಾದಿದಾರರಾದ ಶ್ರೀ ದೇವರಾಜ ಬಿನ್ ನರಸಿಂಹಮೂರ್ತಿ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ನಮ್ಮ ಗ್ರಾಮದ ನಮ್ಮ ಮಾವ ಗಂಗಾಧರಪ್ಪ ಬಿನ್ ಲೇಟ್ ವೆಂಕಟರವಣಪ್ಪ, ಸುಮಾರು 52 ವರ್ಷ ರವರು ಈ ದಿನ ದಿನಾಂಕ: 21/01/2020 ರಂದು ಕೆಲಸದ ನಿಮಿತ್ತ ಗೌರಿಬಿದನೂರು ತಾಲ್ಲೂಕು ಬೇವಿನಹಳ್ಳಿ ಗ್ರಾಮಕ್ಕೆ ಬಂದಿದ್ದು ನಮ್ಮ ಮಾವ ಗಂಗಾಧರಪ್ಪ ರವರು ಸದರಿ ದಿನದಂದು ಬೆಳಿಗ್ಗೆ ಸುಮಾರು 7-30 ಗಂಟೆ ಸಮಯದಲ್ಲಿ ಬೇವಿನಹಳ್ಳಿ ಗ್ರಾಮದ ಬಳಿ ಅಲ್ಲೀಪುರ ತೊಂಡೆಬಾವಿ ರಸ್ತೆಯಲ್ಲಿ ರಸ್ತೆಯ ಎಡ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಹಿಂಬಂದಿಯಿಂದ ಅಂದರೆ ತೊಂಡೆಬಾವಿ ಕಡೆಯಿಂದ ಕೆಎ-40-ಎಂಕ್ಯೂ-543 ಓಮಿನಿ ವಾಹನದ ಚಾಲಕ ತನ್ನ ವಾಹನವನ್ನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ನಡೆದುಕೊಂಡು ಹೋಗುತ್ತಿದ್ದ ನಮ್ಮ ಮಾವ ಗಂಗಾಧರಪ್ಪ ರವರಿಗೆ ಡಿಕ್ಕಿ ಹೊಡೆಯಿಸಿ ಅಪಘಾತಪಡಿಸಿದ್ದರ ಪರಿಣಾಮ ನಮ್ಮ ಮಾವನವರಿಗೆ ಎರಡು ಕಾಲುಗಳು ಮುರಿದು ನುಜ್ಜಾಗಿದ್ದು, ತಲೆಗೆ ರಕ್ತಗಾಯ, ಮೈಮೇಲೆ ತರಚಿದ ರಕ್ತಗಾಯಗಳಾಗಿ ಸ್ಥಳದಲ್ಲಿಯೇ ಮೃತಪಟ್ಟಿರುವುದಾಗಿ ವಿಚಾರ ತಿಳಿದು ನಾನು ಮತ್ತು ನಮ್ಮ ಗ್ರಾಮದ ರಾಜು ರವರು ಸ್ಥಳಕ್ಕೆ ಬಂದು ನೋಡಲಾಗಿ ವಿಚಾರ ನಿಜವಾಗಿದ್ದು ನಮ್ಮ ಮಾವ ಸ್ಥಳದಲ್ಲಿಯೇ ಮೃತಪಟ್ಟಿದ್ದರು. ಆದುದರಿಂದ ಮೇಲ್ಕಂಡ ಕೆಎ-40-ಎಂಕ್ಯೂ-543 ಓಮಿನಿ ವಾಹನದ ಚಾಲಕನ ವಿರುದ್ದ ಕಾನೂನು ರೀತ್ಯ ಕ್ರಮ ಜರುಗಿಸಲು ಕೋರಿ ಕೊಟ್ಟ ದೂರು.
13. ಮಂಚೇನಹಳ್ಳಿ ಪೊಲೀಸ್ ಠಾಣೆ ಮೊ.ಸಂ. 28/2020 ಕಲಂ. 279,337 ಐಪಿಸಿ :-
ದಿನಾಂಕ:22/01/2020 ರಂದು ಮದ್ಯಾಹ್ನ 12.00 ಗಂಟೆಗೆ ಪಿರ್ಯಾದಿದಾರರಾದ ಕೃಷ್ಣಮೂರ್ತಿ ಬಿನ್ ವೆಂಕಟಸ್ವಾಮಿ , 29 ವರ್ಷ, ನಾಯಕ ಜನಾಂಗ, ಕೂಲಿ ಕೆಲಸ, ಮಿಣಕನಗುರ್ಕಿ ಗ್ರಾಮ, ಮಂಚೇನಹಳ್ಳಿ ಹೋಬಳಿ, ಗೌರೀಬಿದನೂರು ತಾಲ್ಲೂಕುರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೆನೆಂದರೆ, ದಿನಾಂಕ:21/01/2020 ರಂದು ಬೆಳಗ್ಗೆ 9.30ಗಂಟೆ ಸಮಯದಲ್ಲಿ ತನ್ನ ತಂದೆ ವೆಂಕಟಸ್ವಾಮಿ ಬಿನ್ ಆವುಲಪ್ಪ, 65 ವರ್ಷ, ಮತ್ತು ತಮ್ಮ ತಾಯಿ ಚಿನ್ನಕ್ಕ ಕೋಂ ವೆಂಕಟಸ್ವಾಮಿ ರವರುಗಳು ನಮ್ಮ KA 06 J 1616 ರ ಹಿರೋ ಹೊಂಡಾ ದ್ವಿ ಚಕ್ರ ವಾಹನದಲ್ಲಿ ನನ್ನ ಅಣ್ಣ ಆವುಲಮೂರ್ತಿ ಬೀಚಗಾನಹಳ್ಳಿ ಗ್ರಾಮಕ್ಕೆ ಹೋಗಿ ಬರುವುದಾಗಿ ಹೇಳಿ ಹೋಗಿದ್ದು ನಂತರ ನಮ್ಮ ತಂದೆಗೆ ಎ.ಕೆ. ಗೊಲ್ಲಹಳ್ಳಿ ಶಾಲೆಯ ರಸ್ತೆಯ ಬಳಿಯ ತಿರುವಿನಲ್ಲಿ ನಮ್ಮ ತಂದೆ ಹೋಗುತ್ತಿದ್ದ ದ್ವಿ ಚಕ್ರ ವಾಹನಕ್ಕೆ ಹಿಂದಿನಂದ ಬಂದ KA 01 MD 4248 ರ ಸ್ಕಾರ್ಪಿಯೋ ವಾಹನದ ಚಾಲಕ ರಾಜಶೇಖರ್ ಬಿನ್ ಗೋವಿಂದ ರೆಡ್ಡಿ, 55 ವರ್ಷ, ಗುಂಡ್ಲಹಳ್ಳಿ ಗ್ರಾಮ, ಡಿ. ಪಾಳ್ಯ ಹೋಬಳಿ, ಗೌರೀಬಿದನೂರು ತಾಲ್ಲೂಕು ರವರು ವಾಹನವನ್ನು ಅತಿವೇಗ ಮತ್ತು ಅಜಾಗರುಕತೆಯಿಂದ ಚಾಲನೆ ಮಾಡಿಕೊಂಡು ಬಂದು ಬೆಳಗ್ಗೆ 10.45 ಗಂಟೆಯ ಸಮಯದಲ್ಲಿ ಅಪಘಾತವನ್ನುಂಟು ಮಾಡಿದ್ದು ಅಪಘಾತದಲ್ಲಿ ಪಿರ್ಯಾದಿಯ ತಂದೆ ಮತ್ತು ತಾಯಿಗೆ ತಲೆಗೆ ಮತ್ತು ಕೈಕಾಲುಗಳಿಗೆ ಗಾಯಗಳಾಗಿದ್ದು ಗಾಯಾಳುಗಳನ್ನು ಮಂಚೇನಹಳ್ಳಿ ಆಸ್ಪತ್ರೆಗೆ ಸೇರಿಸಿ ನಂತರ ಗೌರೀಬಿದನೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ನಂತರ ಪಿರ್ಯಾದಿಯ ತಾಯಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರು ನಿಮಾನ್ಸ್ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದು ಅಪಘಾತ ಪಡಿಸಿದ KA 01 MD 4248 ರ ಸ್ಕಾರ್ಪಿಯೋ ವಾಹನ ಚಾಲಕನ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ನೀಡಿದ ದೂರು.
14. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 09/2020 ಕಲಂ. 279,338 ಐಪಿಸಿ :-
ದಿನಾಂಕ:-21/01/2020 ರಂದು ಮದ್ಯಾಹ್ನ 1-30 ಗಂಟೆಗೆ ಪಿರ್ಯಾದಿದಾರರಾದ ಶ್ರೀ ರಾಮಚಂದ್ರಪ್ಪ ಬಿನ್ ಸೊಣ್ಣಪ್ಪ, 65 ವರ್ಷ, ವಕ್ಕಲಿಗರು, ಜಿರಾಯ್ತಿ, ವಾಸ-ಸೊಣ್ಣೇನಹಳ್ಳಿ ಗ್ರಾಮ, ಶಿಡ್ಲಘಟ್ಟ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ದಿನಾಂಕ 20/01/2020 ರಂದು ಮದ್ಯಾಹ್ನ ತನ್ನ ಮಗನಾದ ನಾಗೇಶ್ ರವರು ತನ್ನ ಹೆಂಡತಿಯಾದ ಭಾಗ್ಯಮ್ಮ ರವರನ್ನು ತಮ್ಮ ಬಾಬತ್ತು ಕೆಎ-40-ಕ್ಯೂ-1967 ಹಿರೋ ಹೊಂಡಾ ಸ್ಲೆಂಡರ್ ಪ್ಲಸ್ ದ್ವಿ ಚಕ್ರ ವಾಹನದ ಹಿಂಬದಿಯಲ್ಲಿ ಕೂರಿಸಿಕೊಂಡು ಚಿಂತಾಮಣಿ ತಾಲ್ಲೂಕು ಕೋಟಗಲ್ ಗ್ರಾಮದಲ್ಲಿರುವ ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿ ದೇವಾಲಯಕ್ಕೆ ಹೋಗಲು ತಮ್ಮ ಗ್ರಾಮದಿಂದ ಬಂದಿದ್ದು, ಅದೇ ದಿನ ಮದ್ಯಾಹ್ನ ಸುಮಾರು 12-30 ಗಂಟೆ ಸಮಯದಲ್ಲಿ ತನ್ನ ಮಗನಾದ ನಾಗೇಶ್ ರವರು ಶಿಡ್ಲಘಟ್ಟ ತಾಲ್ಲೂಕು ಬಚ್ಚಹಳ್ಳಿ ಗ್ರಾಮದ ಗೇಟ್ ಬಳಿ ದ್ವಿ ಚಕ್ರ ವಾಹನವನ್ನು ಚಾಲನೆ ಮಾಡಿಕೊಂಡು ಚಿಂತಾಮಣಿ ಕಡೆಗೆ ಹೋಗುತ್ತಿದ್ದಾಗ ಈ ಸಮಯದಲ್ಲಿ ಚಿಂತಾಮಣಿ ಕಡೆಯಿಂದ ಬಂದ ಕೆಎ-03-ಎಇ-1209 ನೊಂದಣಿ ಸಂಖ್ಯೆಯ ಕಾರನ್ನು ಅದರ ಚಾಲಕನು ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಬಚ್ಚಹಳ್ಳಿ ಗೇಟ್ ನಲ್ಲಿ ರಸ್ತೆಯನ್ನು ದಾಟುತ್ತಿದ್ದ ಬಚ್ಚಹಳ್ಳಿ ಗ್ರಾಮದ ವಾಸಿ ಮುನಿಯಪ್ಪ ಬಿನ್ ಗಂಗಪ್ಪ ರವರಿಗೆ ಡಿಕ್ಕಿ ಹೊಡೆಸಿ ನಂತರ ರಸ್ತೆಯ ಎಡಬದಿಯಲ್ಲಿ ದ್ವಿ ಚಕ್ರ ವಾಹನವನ್ನು ಚಾಲನೆ ಮಾಡಿಕೊಂಡು ಹೋಗುತ್ತಿದ್ದ ತನ್ನ ಮಗನ ದ್ವಿ ಚಕ್ರ ವಾಹನಕ್ಕೆ ಡಿಕ್ಕಿ ಹೊಡೆಸಿ ಅಪಘಾತವನ್ನುಂಟು ಮಾಡಿದ ಪರಿಣಾಮ ತನ್ನ ಮಗ ನಾಗೇಶ್ ರವರ ಎಡ ಕಾಲಿನ ತೊಡೆಯ ಬಳಿ, ಎಡ ಮೊಣ ಕಾಲಿನ ಬಳಿ, ಎಡ ಕೈ ಭುಜದ ಬಳಿ, ತಲೆಗೆ ಮತ್ತು ಮುಖದ ಮೇಲೆ ರಕ್ತಗಾಯಗಳಾಗಿದ್ದು, ನನ್ನ ಹೆಂಡತಿ ಭಾಗ್ಯಮ್ಮ ರವರ ತಲೆಗೆ ಮತ್ತು ಎಡ ಕಾಲಿಗೆ ತೀವ್ರ ಸ್ವರೂಪದ ರಕ್ತಗಾಯಗಳಾಗಿದ್ದು, ಮುನಿಯಪ್ಪ ರವರಿಗೆ ಸಣ್ಣ-ಪುಟ್ಟ ತರಚಿದ ಗಾಯಗಳಾಗಿದ್ದು, ಈ ಸಮಯದಲ್ಲಿ ಸ್ಥಳದಲ್ಲಿದ್ದ ನಾಗರಾಜ್ ಹಾಗು ಇತರರು ಗಾಯಾಳುಗಳನ್ನು ಉಪಚರಿಸಿ ಯಾವುದೋ ವಾಹನದಲ್ಲಿ ಚಿಕಿತ್ಸೆಗೆ ಶಿಡ್ಲಘಟ್ಟ ಸರ್ಕಾರಿ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದು, ನಂತರ ತನಗೆ ವಿಚಾರ ತಿಳಿದು ತಾನು ಶಿಡ್ಲಘಟ್ಟ ಸರ್ಕಾರಿ ಆಸ್ಪತ್ರೆಗೆ ಹೋಗಿ ನೋಡಲಾಗಿ ವಿಷಯ ನಿಜವಾಗಿದ್ದು, ನಂತರ ಇಲ್ಲಿನ ವೈದ್ಯರ ಸಲಹೆಯ ಮೇರೆಗೆ ತನ್ನ ಮಗ ಮತ್ತು ತನ್ನ ಹೆಂಡತಿಯನ್ನು ಇನ್ನು ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ಎಂ.ಎಸ್ ರಾಮಯ್ಯ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆಗೆ ದಾಖಲಾಗಿದ್ದು, ನನ್ನ ಮಗ ಮತ್ತು ನನ್ನ ಹೆಂಡತಿ ಐಸಿಯು ನಲ್ಲಿ ಚಿಕಿತ್ಸೆಯನ್ನು ಪಡೆದುಕೊಂಡಿದ್ದು, ತನ್ನ ಹೆಂಡತಿಯ ಸ್ಥಿತಿಯು ಚಿಂತಾಜನಕ ವಾಗಿರುತ್ತದೆ. ನಾನು ನನ್ನ ಮಗ ಮತ್ತು ನನ್ನ ಹೆಂಡತಿಯ ಆರೈಕೆಯಲ್ಲಿದ್ದ ಕಾರಣ ಈ ದಿನ ತಡವಾಗಿ ಠಾಣೆಗೆ ಬಂದು ದೂರನ್ನು ನೀಡುತ್ತಿದ್ದು, ಸದರಿ ಅಪಘಾತಕ್ಕೆ ಕಾರಣನಾದ ಮೇಲ್ಕಂಡ ಕೆಎ-03-ಎಇ-1209 ನೊಂದಣಿ ಸಂಖ್ಯೆಯ ಕಾರಿನ ಚಾಲಕನ ವಿರುದ್ದ ಮುಂದಿನ ಕಾನೂನು ಕ್ರಮ ಜರುಗಿಸ ಬೇಕಾಗಿ ಕೊಟ್ಟ ದೂರು.