ದಿನಾಂಕ :20/10/2020 ರ ಅಪರಾಧ ಪ್ರಕರಣಗಳು

  1. ಬಾಗೇಪಲ್ಲಿ ಪೊಲೀಸ್ ಠಾಣೆ ಮೊ.ಸಂ.258/2020 ಕಲಂ: 406,417,418,504,506 ರೆ/ವಿ 34 ಐ.ಪಿ.ಸಿ :-

     ದಿನಾಂಕ: 19-10-2020 ರಂದು ಮದ್ಯಾಹ್ನ 14:30 ಗಂಟೆಗೆ ಪಿ.ಸಿ 235 ರವರು ಮಾನ್ಯ ಸಿ.ಜೆ & ಜೆ.ಎಮ್.ಎಫ್.ಸಿ ನ್ಯಾಯಾಲಯರವರ ಕಛೇರಿಯಿಂದ ತಂದು ಹಾಜರುಪಡಿಸಿದ ಪಿ.ಸಿ.ಆರ್ ಅನ್ನು ಸ್ವೀಕರಿಸಿದ್ದರ ಸಾರಾಂಶ – The complainant submits that the complainant is absolute and lawful owner person in peaceful possession and enjoyment of land bearing S.No 41 measuring 6-24 acre siturated at Kondareddypalli of Bagepalli taluk.  This property acquired by Manjunathareddy by virtue of registered sale deed dated 19-08-2006 for valuable consideration.  This property acquired by him out of his personal source of income and hard earned money, this property is no way concerned to accused No.1 to 3 At the time of purchasing of this property bearing S.No: 41 of Kondareddypall, these accused 1 to 3 Venu, Jaganmohanareddy and Venkatareddy, respectively were not in a prosition to maintain themselves of food, shelter and cloths they were econimically very poor, but the complainant struggled a lot for upliftment of accused 1 to 3 by providing financial aid to them.  Earlier, the complainant had executed Gereral Power of attorney in favour of 3rd accused A.Venkatareddy.  The said Accused No.3 instead of protecting interest of complainant, he has misused it and by colluding with accused 1 and 2, in order to knock off the valuable property played fraud on him and misrepresented the facts before this hohn’ble court in O.S 2/2014.  When complainant was not in India who is working in United States of America.  The accused No.1 Venu who is king pin and master minded hatched a plan with Jaganmohanreddy accused No.2, both have instigated the accused No.2 Venkatareddy with commonintention made criminal conspiracy.  The complainant actually had moulded the career of accused No.1 by accommodating his education and provided his day to daty luivelihood, Because of complainant the accused No.1 became and engineer but the accused No.1 and 2 have no gratitude towards complainant.  The accused No.1 is not rustic villager who is an Engineer capable in instigating his father in committing offences to knock off the property of Complainant.  Th accused No. 2 Jaganmohanareddy was earlier a taxi driver, cleaner and most unscruplulous who is always planning to knock off the other perons’s property.  Accordingly, the themselve had filed suit in O.S 2/2014 which is filed by accused No.2 Jaganmohan reddy against accused No.1 and 3 for the relief of partition and separate possesion without bringing it to the notice of this complainant.  All these facts and not been informed to said Manjunathareddy.  The accused No.2 Jaganmohanareddy and Accused No.1 were well aware of the fact that Manjunathareddy was residing in America even they were also aware of the contact number and address of Manjunathareddy who resides in America still they deliberately and intentionally managed in reciving the summons/notice of Manjunathareddy and colluded each other and managed to filed the memo without intimatiing to complainant, it also clearly mentioned in the GPA it is only for the purpose of Managing/looking of the properties but it is not mentioned to alienate clause.  This hon’ble court was pleased to issue summons to Manjunathareddy and accused No.1 to 3 in O.S./2014.  Accordingly, This case was filed on 02.01.2014.  The said summon was received by Accused No.2 and signed as if it was served to all of them.  The accused No.2 engaged Sri M.A.Advocate in the said suit and filed Venkalath including this Manjunathareddy but the proceedings of this suit was not within the knowledge of this Manjunathareddy. but the said advocate filed memo stating that property vill not be alienated till disposal of case.  Hence the said memo is not binding on the right of Manjunathareddy. The complainant further submits that when All the accused were about to compromise the matter themselve in O.S 2/2014 ignoring said Manjunathareddy this case was not within his knowledge, when the said illegal activites of accused No.1 to 3 came to llight of Manjunathareddy, immediately he came to India on 13.2.2014, he cancelled General Poer of Attorney executed by him in favour of his father Venkatareddy, the same is cancelled on 21-02-2014  He further executed Generela Poer of Attorney in foavour of his sister Smt. P.Lakshmi on 21-02-0214 and have engaged and Advocate Sri K.S.R. [Narasimhareddy] till then he never engaged andy other advocate.  But accused No.1 to 3 played fraud in order to cheat Manjunathareddy.  That on 10-02-2014, when Complainant [ Manjunathareddy] ie Defendant No.2 in O.S. 2/14 was in America, who had no engaged any Advocate has no locus-standi to file such memo, it clearly established the collusion between the accused No. 1 to 3.  It is pertinent to note that S.No 41 clearly belongs to this complainant ie the defendant No.2 Manjunathareddy in O.S. 2/2014 as it is hard earned property, which is not belohngs to alleged joint family property the Hon’ble Senior Civil Judge, Chickaballapur in O.S. 314/2014 passed Judgement and decree in favour of this complainant ie Manjunathareddy on 22.07.2017 the RTC, tax paid receipt, katha all these documents clearly establish that S.No 41 is the self acquired property of complainant ie Defendant No. 2 in OS 2/2014.  But the accused 1 to 3 have colluded and harassed the complainant all these years by including his self acquired property. The complainant submits that there are some disputes between them with regard to diviion of properties exepting S.No 41 which is self acquired property of Manjunathareddy.  As a result due to incompatibility in mutual adustments quarrels pavd the way gradulally the accused persons developed rivalry attitude against the complainant.  Thus the accused 1 to 3 cultivated the habit of giving trouble to the innocent complainant regularly from the past 4 years by way of inducing anti social elements in to the S.NO 41 raising quarrels without any cause, by canvassing badly against the complainant.  The high handed acts of the accused persons manifest the ill intention of causing hardship, mental torture and agony to the complainant.  In fact know the complainant leading a fearful life due to the life threat posed by the accused persons.  The accused No.1 is king pin and accused No.2 is maste and criminal minded have planned to knock off the property the accused are betrayal.  It is further submitted that wheneve the complainant usually visits Bagepalli for this case, the accused persons are restraining the complainant and abjectly abused him in filthy and scandalous language.  Thus the complainant has lodged a complainant before the Bagepalli Police Station, but the said Police become inaction to take penal action against the accused persons as they are politically and financially sound and having anti social elements in the locality.  Thus the above said two incidents makes it clear that, the accused persons with common intention are making serious attemps and plans with the intension of causing hardship, Thus, the acts of the accused.  persons are punishable offences under law. That on 29-08-2020 the complainant has lodged a complaint with Bagepalli Police, but they instead of loding FIR issued NCR, As the police did not take any action, this private complaint is lodged.  Th complainant is herewith producing copy of the complaint and other documents for the king perusal of this hon’ble court. The complainant further submits that, the accused 1 to 3 are trouble maker having the habit of raising quarrels among the innocents and ecploiting them for their selfish needs.  The accused persons commonly and intentionaly destroying the peace of complaint raising disputers.  The accused are adamant that never care the advice of the elders, well wishers ets in the locality.  They always give a sorts of pin pricks to the complainant. The cause of action arose when the accused unlawfully assembled with each other and with common intention given false information to this hon’ble court and when they have threatedned the complainant recently with dire consequence and subsequently and on 29-08-2020 at Bagepalli within the jurisdiction of this hon’ble court   The complainant has paid sufficient court fee on the complaint.  Wherefor, the complainant prays that this Hon’ble court be pleased to take cognizance of the offences committed by  the accused persons punishable under section 406, 417, 418, 504, 506 and read with section 34 of IPC by referring the case to Bagepalli Police Station, for investigation and deal the accused persons in accordance with law and pass such other orders as this hon’ble court deems fit to grant against the accused and punish him with maximum sentence under Law in order to meet the ends of Justice.ಎಂದು ಇದ್ದ ದೂರಿನ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿರುತ್ತೆ.

  1. ಬಾಗೇಪಲ್ಲಿ ಪೊಲೀಸ್ ಠಾಣೆ ಮೊ.ಸಂ.259/2020 ಕಲಂ: 78(3) ಕೆ.ಇ ಆಕ್ಟ್ & 66 INFORMATION TECHNOLOGY ACT 2000 :-

     ದಿ: 19-10-2020 ರಂದು ರಾತ್ರಿ 9:00 ಗಂಟೆಗೆ ಚಿಕ್ಕಬಳ್ಳಾಪುರ ಉಪವಿಭಾಗದ ಪೊಲೀಸ್ ಉಪಾಧೀಕ್ಷಕರು ಠಾಣೆಗೆ ಹಾಜರಾಗಿ  ಪಿರ್ಯಾಧಿ ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶ – ದಿನಾಂಕ 19/10/2020 ರಂದು ಚಿಕ್ಕಬಳ್ಳಾಪುರ ಉಪವಿಭಾಗದ ಪೊಲೀಸ್ ಉಪಾಧೀಕ್ಷಕರಾದ ಶ್ರೀ ಕೆ.ರವಿಶಂಕರ್ ಆದ ನಾನು ಇಲಾಖಾ ಜೀಪ್ ಸಂಖ್ಯೆ ಕೆ.ಎ-40-ಜಿ-0855 ರಲ್ಲಿ ನಮ್ಮ ಕಛೇರಿಯ ಸಿಬ್ಬಂಧಿಯಾದ ಹೆಚ್.ಸಿ 205 ರಮೇಶ್ ಮತ್ತು ಪಿ.ಸಿ 286 ಗೌತಮ್, ಜೀಪ್ ಚಾಲಕ ಎ.ಪಿ.ಸಿ 119 ಅಶೋಕ ರವರೊಂದಿಗೆ ಸಂಜೆ ಸುಮಾರು 6;00 ಗಂಟೆಯಲ್ಲಿ  ಬಾಗೇಪಲ್ಲಿ ಪೊಲೀಸ್ ಠಾಣೆಯ ಮೊ.ಸಂ 251/2020, ಕಲಂ 302,376 201 ಐಪಿಸಿ ಪ್ರಕರಣದಲ್ಲಿ ತನಿಖೆಯ ಮೇಲ್ವಿಚಾರಣೆಗಾಗಿ ಚಿಕ್ಕಬಳ್ಳಾಪುರದಿಂದ ಬಾಗೇಪಲ್ಲಿಗೆ ಟಿ.ಬಿ ಕ್ರಾಸ್ ನಲ್ಲಿ ಬರುತ್ತಿದ್ದಾಗ, ಬಾತ್ಮೀದಾರರಿಂದ ಬಾಗೇಪಲ್ಲಿ ಪಟ್ಟಣದ ಮಾರುತಿ ಡಾಬಾ ಮುಂಭಾಗ, ಡಿವಿಜಿ ರಸ್ತೆಯ ಬದಿಯಲ್ಲಿರುವ ನಟರಾಜ್ ಬಿನ್ ಓಬಳೇಶಪ್ಪ, 28 ವರ್ಷ, ನಾಯಕರು, ಪ್ರಾವಿಜನ್ ಸ್ಟೋರ್ ಮಾಲೀಕ, ಡಿವಿಜಿ ರೋಡ್, ಮಾರುತಿ ಬಾರ್ ಎದುರು, ಬಾಗೇಪಲ್ಲಿ ಪಟ್ಟಣ, ವಾಸ: ಕೆ.ಇ.ಬಿ ಎದುರು, ಆವುಲಮಂದಿರ ರಸ್ತೆ, 20 ನೇ ವಾರ್ಡ್, ಬಾಗೇಪಲ್ಲಿ ಪುರ ರವರ ಅಂಗಡಿಯಲ್ಲಿ ಮಾಲೀಕನಾದ ನಟರಾಜ್ ಮತ್ತು ಕೆಲವರು ಅಂಗಡಿಯಲ್ಲಿ ಸೇರಿಕೊಂಡು ಹಾಗೂ ಇತರರಿಗೆ ಸಂಪರ್ಕ ಇಟ್ಟುಕೊಂಡು ಫೋನ್ ಮುಖಾಂತರ, ವಾಯ್ಸ್ ರೆಕಾರ್ಡ್ ಮೂಲಕ ಹಣವನ್ನು ಪಣಕ್ಕೆ ಹಾಕಿ ಐ.ಪಿ.ಎಲ್ ಕ್ರಿಕೆಟ್ ಬೆಟ್ಟಿಂಗ್ ಜೂಜಾಟ ನಡೆಸುತ್ತಿರುವುದಾಗಿ ಬಂದ ಖಚಿತ ಮಾಹಿತಿ ಮೇರೆಗೆ ಬಾಗೇಪಲ್ಲಿ ಬಸ್ ನಿಲ್ದಾಣದಲ್ಲಿ ಪಂಚಾಯ್ತಿದಾರರನ್ನು ಬರಮಾಡಿಕೊಂಡು, ಪಂಚರ ಸಮಕ್ಷಮ ಅಸಾಮಿಗಳ ಮೇಲೆ ದಾಳಿ ಮಾಡಿ, ವಿವರವಾದ ಪಂಚನಾಮೆ ಕ್ರಮವನ್ನು ಜರುಗಿಸಿ, ಕೃತ್ಯಕ್ಕೆ ಉಪಯೋಗಿಸಿದ್ದ 1] ಎಮ್.ಐ ನೋಟ್ 07 ಪ್ರೋ ನ ಬ್ಲೂ ಕಲರ್ ನ ಟಚ್ ಸ್ಕ್ರೀನ್ ನ ಜಿಯೋ ಕಂಪೆನಿಯ 8660633821 ಸಿಮ್ ಒಳಗೊಂಡ ಮೊಬೈಲ್ 2] ಎಮ್.ಐ 5 ಪ್ರೋ  ನ ಏರ್ ಟೆಲ್ ಕಂಪೆನಿಯ 961172287 ಸಿಮ್ ಒಳಗೊಂಡ ಮೊಬೈಲ್ 3] ವಿವೋ ಎಸ್ 1 ಪ್ರೋ ನ ಜಿಯೋ ಕಂಪೆನಿಯ 9590393444 ಸಿಮ್ ಒಳಗೊಂಡ  ಮೊಬೈಲ್ ಗಳನ್ನು  ಹಾಗೂ ಪಣಕ್ಕೆ ಇಟ್ಟಿದ್ದ ಒಟ್ಟು 24,000/- ರೂಗಳನ್ನು ಅಮಾನತ್ತುಪಡಿಸಿಕೊಂಡು,  ಆರೋಪಿಗಳಾದ 1]ನಟರಾಜ್ ಬಿನ್ ಓಬಳೇಶಪ್ಪ, 28 ವರ್ಷ, ನಾಯಕರು, ಪ್ರಾವಿಜನ್ ಸ್ಟೋರ್ ಮಾಲೀಕ, ಡಿವಿಜಿ ರೋಡ್, ಮಾರುತಿ ಬಾರ್ ಎದುರು, ಬಾಗೇಪಲ್ಲಿ ಪಟ್ಟಣ, ವಾಸ: ಕೆ.ಇ.ಬಿ ಎದುರು, ಆವುಲಮಂದಿರ ರಸ್ತೆ, 20 ನೇ ವಾರ್ಡ್, ಬಾಗೇಪಲ್ಲಿ ಪುರ ಟೌನ್ ಮೊ.ನಂ 8660633821, 2] ವೆಂಕಟೇಶ.ಎ ಬಿನ್ ಲೇಟ್ ಆಂಜಿನಪ್ಪ, 41 ವರ್ಷ, ಬಲಜಿಗರು, ಬಾಗೇಪಲ್ಲಿ ಕೆ.ಇ.ಬಿ ನಲ್ಲಿ ಮೀಟರ್ ರೀಡರ್ ಕೆಲಸ, ವಾಸ:ಕೋರ್ಟ್ ಹಿಂಭಾಗ, ಆರಾಧ್ಯ ಕಾನ್ವೆಂಟ್ ಶಾಲೆಯ ಮುಂಭಾಗ, 21 ನೇ ವಾರ್ಡ್, ಬಾಗೇಪಲ್ಲಿ ಟೌನ್, ಫೋನ್:9611173387 3] ಮಂಜುನಾಥ ಬಿನ್ ಕೃಷ್ಣಪ್ಪ, 34 ವರ್ಷ, ನಾಯಕರು, ಜಿರಾಯ್ತಿ, ವಾಸ: ಶಂಕರಮಠ ಹಿಂಭಾಗ, 21 ನೇ ವಾರ್ಡ್, ಬಾಗೇಪಲ್ಲಿ ಪುರ, ಫೋಣ್: 9590393444 ರವರುಗಳನ್ನು ಮುಂದಿನ ಕಾನೂನು ಕ್ರಮಕ್ಕಾಗಿ ವಶಕ್ಕೆ ಪಡೆದು ಪಡೆದುಕೊಂಡಿರುತ್ತೆ. ಸದರಿ ಅಂಗಡಿಯ ಮಾಲೀಕನಾದ ನಟರಾಜ್ ರವರು 1000/- ರೂಪಾಯಿಗೆ 2000/- ರೂಪಾಯಗಳಂತೆ ಹೆಚ್ಚಿನ ಹಣ ಸುಲಭವಾಗಿ ಸಂಪಾದನೆ ಮಾಡಬಹುದೆಂದು ನಂಬಿಸಿ, ಆಸೆ ಹುಟ್ಟಿಸಿ ಕ್ರಿಕೆಟ್ ಬೆಟ್ಟಿಂಗ್ ಜೂಜಾಟವಾಡಿ ಜನರಿಂದ ಅಕ್ರಮ ಹಣ ಸಂಪಾದನೆ ಮಾಡುತ್ತಿರುವುದಾಗಿ ಕಂಡು ಬಂದಿರುತ್ತದೆ, ಹಾಗೂ ನಟರಾಜ್ ರವರಿಗೆ ಆತನ ಮೊಬೈಲ್ ನಲ್ಲಿ ದಿ: 11-10-2020 ರ ವಾಯ್ಸ್ ರೆಕಾರ್ಡ್ ಅನ್ನು ಪರಿಶೀಲಿಸಿ,  ಇದರ ಬಗ್ಗೆ ನಟರಾಜ್ ನಿಗೆ ಕೇಳಲಾಗಿ ಸದರಿ ಫೋನ್ ನಂಬರ್ ಬಾಗೇಪಲ್ಲಿ ತಾಲ್ಲೂಕು ನಾರೇಪಲ್ಲಿ ಗ್ರಾಮದ ವಾಸಿ ನರೇಶನದ್ದಾಗಿದ್ದು, ನಾವಿಬ್ಬರೂ ದಿ: 11-10-2020 ರಂದು ನಡೆದ ಕ್ರಿಕೆಟ್ ಮ್ಯಾಜ್ ಮುಂಬೈ ಇಂಡಿಯನ್ಸ್  x ಡೆಲ್ಲಿ ಕ್ಯಾಪಿಟಲ್ಸ್ ಪಂದ್ಯಾವಳಿದ್ದು, ನಾನು ಮುಂಬೈ ಇಂಡಿಯನ್ಸ್ ಗೆಲ್ಲುತ್ತದೆ 10,000/- ರೂಗಳನ್ನು ಪಂದ್ಯ ಕಟ್ಟಿದ್ದು, ನರೇಶ ಸೋಲುತ್ತದೆ ಎಂದು 10,000/- ರೂಗಳು ಎಂದು ವಾಯ್ಸ್ ರೆಕಾರ್ಡ್ ಮೂಲಕ ಬೆಟ್ಟಿಂಗ್ ಕಟ್ಟಿಕೊಂಡಿರುವುದಾಗಿ ತಿಳಿಸಿರುತ್ತಾನೆ. ಇದರ ಬಗ್ಗೆ ಇನ್ನೂ ಕೆಲವು ವ್ಯಕ್ತಿಗಳು ಕೃತ್ಯದಲ್ಲಿ ಭಾಗಿಯಾಗಿರುವ ಸಾಧ್ಯತೆ ಇರುವುದರಿಂದ ಹೆಚ್ಚಿನ ತನಿಖೆಯನ್ನು ನಡೆಸಿ, ಈ ಬಗ್ಗೆ ಮುಂದಿನ ಕಾನೂನು ಕ್ರಮ ಜರುಗಿಸಲು ತಿಳಿಸಿರುತ್ತೇನೆ. ಸದರಿ ಮೇಲ್ಕಂಡ ಮಾಲುಗಳನ್ನು ಮತ್ತು ಆರೋಪಿತರನ್ನು ನಿಮ್ಮ ವಶಕ್ಕೆ ನೀಡುತ್ತಿದ್ದು, ಮೇಲ್ಕಂಡ ಆಸಾಮಿಗಳ ಮೇಲೆ ಹಾಗೂ ಇತರರ ಮೇಲೆ ಕಾನೂನು ರೀತ್ಯ ಕ್ರಮ ಜರುಗಿಸಲು ತಿಳಿಸಿರುತ್ತೆ.  ಇದರೊಂದಿಗೆ ಅಸಲು ಪಂಚನಾಮೆಯನ್ನು ಲಗತ್ತಿಸಿಕೊಂಡಿರುತ್ತೆ ಎಂದು ನೀಡಿದ ದೂರು.

  1. ಬಟ್ಲಹಳ್ಳಿ ಪೊಲೀಸ್ ಠಾಣೆ ಮೊ.ಸಂ.101/2020 ಕಲಂ: 302 ಐ.ಪಿ.ಸಿ:-

     ದಿನಾಂಕ:19/10/2020 ರಂದು ರಾತ್ರಿ 22-30 ಗಂಟೆಗೆ ಪಿರ್ಯಾದಿದಾರರಾದ ಶ್ರೀರಾಮಪ್ಪ ಬಿನ್ ಲೇಟ್ ಪಾಪಣ್ಣ,50 ವರ್ಷ, ವಕ್ಕಲಿಗರು, ವ್ಯವಸಾಯ,ವಾಸ: ಅಂಕಾಲಮಡಗು ಗ್ರಾಮ, ಚಿಂತಾಮಣಿ ತಾಲ್ಲೂಕು.ಮೊ ನಂ:8105279339.ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ನಾನು ಈ ಮೇಲ್ಕಂಡ ವಿಳಾಸದಲ್ಲಿ ವಾಸವಾಗಿರುತ್ತೇನೆ. ನಾನು  ಯಗವದೇವಪಲ್ಲಿ ಗ್ರಾಮದ ವಾಸಿಯಾದ ಕಾರೆಂಗಿ ಬೈರೆಡ್ಡಿ ರವರ ಮಗಳಾದ ಪಾರ್ವತಮ್ಮ ರವರನ್ನು ಮದುವೆಯಾಗಿದ್ದು, ನಮಗೆ ಒಟ್ಟು 3 ಜನ ಮಕ್ಕಳಿದ್ದು, 1 ನೇ ಶೋಭ, 2 ನೇ ಈಶ್ವರರೆಡ್ಡಿ, 3 ನೇ ಸರಿತಾರವರಾಗಿರುತ್ತಾರೆ. ಈಗ್ಗೆ 18 ವರ್ಷಗಳ ಹಿಂದೆ ನನ್ನ ಮೊದಲನೇ ಪತ್ನಿ ಪಾರ್ವತಮ್ಮ ರವರು ಕ್ಯಾನ್ಸರ್ ಖಾಯಿಲೆಯಿಂದ ಮೃತಪಟ್ಟಿದ್ದು, ನಂತರ  ನಾನು ಚಿಂತಾಮಣಿ ತಾಲ್ಲೂಕು ಕೋನಾಪುರ ಗ್ರಾಮದ ವಾಸಿ ನಾಗರಾಜ ರವರ ಮಗಳಾದ ರತ್ನಮ್ಮ ರವರನ್ನು 2 ನೇ ಮದುವೆ ಮಾಡಿಕೊಂಡಿರುತ್ತೇನೆ. ರತ್ನಮ್ಮರವರಿಗೆ ಮಕ್ಕಳು ಇರುವುದಿಲ್ಲ. ನನ್ನ 1 ನೇ ಮಗಳು ಶೋಭ, 32 ವರ್ಷ ರವರನ್ನು 15 ವರ್ಷಗಳ ಹಿಂದೆ ನನ್ನ 2 ನೇ ಪತ್ನಿ ರತ್ನಮ್ಮ ರವರ ತಮ್ಮ ನರೇಶ್ ಬಿನ್ ನಾಗರಾಜ ರವರಿಗೆ ಕೊಟ್ಟು ಮದುವೆ ಮಾಡಿದ್ದು ಅವರಿಗೆ 1 ನೇ ಮಹನತೇಜ್, 14 ವರ್ಷ,  2 ನೇ ಮೇಘಳ 12 ವರ್ಷ, ಎಂಬ ಇಬ್ಬರು ಮಕ್ಕಳಿರುತ್ತಾರೆ. ಈಗ್ಗೆ 6 ವರ್ಷಗಳ ಹಿಂದೆ ನರೇಶ್ ನನ್ನ 2 ನೇ ಮಗಳು ಸರಿತ ರವರನ್ನು ಪ್ರೀತಿಸಿ ಮದುವೆಮಾಡಿಕೊಂಡಿರುತ್ತಾನೆ. ಇವರಿಗೆ ಅಖಿಲಾರೆಡ್ಡಿ ಎಂಬ 5 ವರ್ಷ ವಯಸ್ಸಿನ ಮಗಳಿರುತ್ತಾಳೆ. ಇವರು ಅನ್ಯೋನ್ಯವಾಗಿ ಸಂಸಾರ ಮಾಡಿಕೊಂಡಿದ್ದರು. ಹೀಗಿರುವಲ್ಲಿ ಈ ದಿನ ದಿನಾಂಕ:19/10/2020 ರಂದು ಸಂಜೆ ಸುಮಾರು 6-55 ಗಂಟೆಯ ಸಮಯದಲ್ಲಿ ನನ್ನ ಅಳಿಯ ನರೇಶ್ ನನಗೆ ಪೊನ್ ಮಾಡಿ ಶೋಭರವರನ್ನು ಕೋನಾಪುರದ ಬಳಿಯಿರುವ ನಮ್ಮ  ಹೊಲದಲ್ಲಿ ಯಾರೋ ಕುತ್ತಿಗೆಗೆ ಬಟ್ಟೆಯಿಂದ ಬಿಗಿದು ಕೊಲೆ ಮಾಡಿರುತ್ತಾರೆ. ಕೂಡಲೇ ಬನ್ನಿ ಎಂದು ಗಾಬರಿಯಿಂದ ತಿಳಿಸಿದ್ದು ನಾನು ಮತ್ತು ನನ್ನ ಪತ್ನಿ ರತ್ನಮ್ಮ ರವರು ನನ್ನ ಅಳಿಯ ನರೇಶ್ ರವರ ಕಡಲೆಕಾಯಿ ಮತ್ತು ತೊಗರಿ ಬೆಳೆಯನ್ನು ಬೆಳೆದಿದ್ದ ಕೋನಾಪುರದ ಹೊಲದ ಬಳಿಗೆ  ಬಂದು ನೋಡಲಾಗಿ ನನ್ನ ಮಗಳು ಶೋಭಾ ರವರ ಮೃತ ದೇಹವು ತೊಗರಿ ಗಿಡಗಳ ಪಕ್ಕದಲ್ಲಿ  ಅಂಗಾತವಾಗಿದ್ದು, ಶೋಭಾರವರ ಕುತ್ತಿಗೆಗೆ ಬಟ್ಟೆಯಿಂದ ಗಟ್ಟಿಯಾಗಿ ಬಿಗಿದಿದ್ದು, ಕುತ್ತಿಗೆಯ ಸುತ್ತಲೂ ಕೆಂಪಗೆ ಕಂದಿರುವ ಗಾಯಗಳಾಗಿರುತ್ತೆ. ಮೂಗಿನ ಬಳಿ ರಕ್ತ ಹೊರ ಬಂದಿರುತ್ತೆ.  ಹಾಗೂ  ನನ್ನ ಮಗಳ ಬಲ ಕೆನ್ನೆಯ ಮೇಲೆ ಹಲ್ಲುಗಳಿಂದ ಕಚ್ಚಿರುವ ಗಾಯದ ಗುರುತು ಇದ್ದು, ನನ್ನ ಮಗಳು  ಶೋಭ ರವರು ಮೃತಪಟ್ಟಿದ್ದಳು. ನಂತರ ನನ್ನ ಮಗಳು ಸರಿತ ರವರ ಬಳಿ ವಿಚಾರ ತಿಳಿಯಲಾಗಿ ಈ ದಿನ ದಿನಾಂಕ:19/10/2020 ರಂದು ಮದ್ಯಾಹ್ನ ಸುಮಾರು 3-00 ಗಂಟೆಯಲ್ಲಿ ಶೋಭರವರು ಮನೆಯಿಂದ ಹೊಲದ ಬಳಿಗೆ ಕಡಲೆಕಾಯಿ ಬಿಡಿಸಲು ಹೋದವಳು ಸಂಜೆಯಾದರೂ ಮನೆಗೆ ವಾಪಸ್ಸು ಬಾರದೆ ಇದ್ದಾಗ, ನಾನು ಶೋಭಾರವರನ್ನು ಹುಡುಕಾಡಿಕೊಂಡು  ಹೊಲದ ಬಳಿಗೆ ಸಂಜೆ ಸುಮಾರು 6-00 ಗಂಟೆಗೆ ಹೋಗಿ ಹೊಲದಲ್ಲಿ ಕೂಗಿ ಹುಡುಕಾಡುತ್ತಿದ್ದಾಗ  ನನ್ನ ಅಕ್ಕ ಶೋಭಾ ರವರ ಮೃತ ದೇಹವು ತೊಗರಿಗಿಡಗಳ ಪಕ್ಕದಲ್ಲಿ ಬಿದ್ದಿದ್ದು, ಶೋಭ ರವರು ಮೃತಪಟ್ಟಿದ್ದರು. ಯಾರೋ ದುರಾತ್ಮರು ಯಾವುದೋ ಕಾರಣಕ್ಕೆ ಶೋಭ ರವರ ಕುತ್ತಿಗೆಗೆ ಬಟ್ಟೆಯಿಂದ ಬಿಗಿದು ಕೊಲೆ ಮಾಡಿ ಹೋಗಿರುತ್ತಾರೆಂದು ತಿಳಿಸಿದಳು.  ಈ ದಿನ ಮದ್ಯಾಹ್ನ 3-00 ಗಂಟೆಯಿಂದ ಸಂಜೆ 6-00 ಗಂಟೆಯ ಮದ್ಯೆ ಯಾರೊ ದುರಾತ್ಮರು ಯಾವುದೋ ಕಾರಣಕ್ಕೆ ನನ್ನ ಅಳಿಯ ನರೇಶ್ ರವರ ಹೊಲದಲ್ಲಿ ಕಡಲೆಕಾಯಿ ಬಿಡಿಸಲು ಹೋಗಿದ್ದ ನನ್ನ ಮಗಳು ಶೋಬಾರವರ ಕುತ್ತಿಗೆಗೆ ಬಟ್ಟೆಯಿಂದ ಬಿಗಿದು ಉಸಿರುಗಟ್ಟಿಸಿ ಕೊಲೆ ಮಾಡಿ ಹೋಗಿರುತ್ತಾರೆ. ನನ್ನ ಮಗಳು ಶೋಬಾರವರನ್ನು ಯಾವುದೋ ಕಾರಣಕ್ಕೆ ಕೊಲೆ ಮಾಡಿರುವ ಆಸಾಮಿಗಳನ್ನು ಪತ್ತೇ ಮಾಡಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಕೊಟ್ಟ ದೂರಿನ ಸಾರಾಂಶವಾಗಿರುತ್ತೆ.

  1. ಬಟ್ಲಹಳ್ಳಿ ಪೊಲೀಸ್ ಠಾಣೆ ಮೊ.ಸಂ.102/2020 ಕಲಂ: 384 ರೆ/ವಿ 34 ಐ.ಪಿ.ಸಿ:-

     ದಿನಾಂಕ:20/10/2020 ರಂದು ಬೆಳಿಗ್ಗೆ 9-30 ಗಂಟೆ ಸಮಯದಲ್ಲಿ  ಪಿ ಎಸ್ ಐ ಬಟ್ಲಹಳ್ಳಿ ಪೊಲೀಸ್ ಠಾಣೆ ರವರು ಠಾಣೆಗೆ ಹಾಜರಾಗಿ ನೀಡಿದ ವರದಿಯ ಸಾರಾಂಶವೇನೆಂದರೆ,     ಈ ಮೂಲಕ ನಿಮಗೆ ತಿಳಿಯಪಡಿಸುವುದೇನೆಂದರೆ, ನಾನು ದಿನಾಂಕ:05/07/2019 ರಿಂದ ಬಟ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪಿ ಎಸ್ ಐ ಆಗಿ ಕರ್ತವ್ಯ ನಿರ್ವಹಿಸುತ್ತಿರುತ್ತೇನೆ. ನಾನು ಈ ಹಿಂದೆ 2015 ರಿಂದ 2016 ರವರೆಗೆ ಚಿಂತಾಮಣಿ ನಗರ ಪೊಲೀಸ್ ಠಾಣೆಯಲ್ಲಿ ಪಿ ಎಸ್ ಐ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಅವಧಿಯಲ್ಲಿ ಕನ್ನಡ ಪ್ರಭ ಪತ್ರಿಕೆಯ ವರದಿಗಾರನಾದ ಜಿ ಎಲ್ ಶಂಕರ್ ರವರು ನನಗೆ ಪರಿಚಯವಾಗಿರುತ್ತಾರೆ. ನಾನು ಬಟ್ಲಹಳ್ಳಿ ಪೊಲೀಸ್ ಠಾಣೆಗೆ ವರ್ಗಾವಣೆಯಾಗಿ ಬಂದ ನಂತರ ಜಿ ಎಲ್ ಶಂಕರ್ ಎಂಬುವರು 2-3 ಸಲ ಠಾಣೆಗೆ ಬಂದು ಬಿಲ್ಲಾಂಡ್ಲಹಳ್ಳಿ ಕಡೆ ಆಂದ್ರಪ್ರದೇಶ ಬಾರ್ಡರ್ ನಲ್ಲಿ ಇಸ್ಪೀಟ್ ಆಟ ಆಡಿಕೊಳ್ಳಲು ನನಗೆ ಪರಿಚವಿರುವ ವ್ಯಕ್ತಿಗಳು ಕೇಳಿರುತ್ತಾರೆ ಅದಕ್ಕೆ ನೀವು ಆಸ್ಪದ ಮಾಡಿಕೊಡಬೇಕೆಂತ ಹೇಳಿದ ಅದಕ್ಕೆ ನಾನು ನನ್ನ ಠಾಣಾ ವ್ಯಾಪ್ತಿಯಲ್ಲಿ ಯಾವುದೇ ರೀತಿಯ ಅಕ್ರಮ ಚಟುವಟಿಕೆಗಳಿಗೆ ಆಸ್ಪದ ನೀಡುವುದಿಲ್ಲ. ನೀವು ಈ ರೀತಿ ಅಕ್ರಮ ಚಟುವಟಿಕೆಗಳಿಗೆ ಬಗ್ಗೆ ನನ್ನ ಬಳಿ ಉತ್ತೇಜನ ನೀಡಬೆಡಿ ಎಂತ ಹೇಳಿ ಇನ್ನೊಮ್ಮೆ ನನ್ನೊಂದಿಗೆ ಪ್ರಸ್ತಾಪ ಮಾಡಬಾರದೆಂತ ಹೇಳಿ ಎಚ್ಚರಿಕೆ ನೀಡಿ ಕಳುಹಿಸಿದ್ದೆ ಸದರಿ ವಿಚಾರದ ಬಗ್ಗೆ ನನ್ನೊಂದಿಗೆ ಮನಸ್ತಾಪವನ್ನಿಟ್ಟುಕೊಂಡಿದ್ದನು. ಇದಾದ ಬಳಿಕ ಒಂದು ದಿನ ಸಂಜೆ ಸುಮಯದಲ್ಲಿ ಜಿ ಎಲ್ ಶಂಕರ್ ರವರು ನನಗೆ ಪೊನ್ ಕರೆ ಮಾಡಿ ನಂದಿಗಾನಹಳ್ಳಿ ಡಾಬಾ ಬಳಿಗೆ ಬಂದಿರುತ್ತೇವೆ. ಡಾಬಾದ ಮಾಲೀಕರಿಗೆ ನಿಮ್ಮ ವಿಚಾರವನ್ನು ತಿಳಿಸಿದೆ ಆಗ ಡಾಬಾ ಮಾಲೀಕನು ಅವನು ಯಾರು ಪಾಪಣ್ಣ ಪಿ ಎಸ್ ಐ ನನಗೆ ಗೊತ್ತಿಲ್ಲ ಎಂತ ಹಗುರವಾಗಿ ಮಾತನಾಡುತ್ತಾನೆ. ಆತನು ತನ್ನ ಡಾಬಾದಲ್ಲಿ ವೈನ್ಸ್ ವ್ಯಾಪಾರ ಮಾಡಿಕೊಳ್ಳುವಂತೆ ನಾನೆ ಆತನಿಗೆ ಧೈರ್ಯ ಹೇಳಿರುತ್ತೇನೆ. ನನ್ನ ಪೋನ್ ಅವನಿಗೆ ಕೊಡುತ್ತೇನೆ ನೀವು ಒಂದು ಸಲ ಮಾತನಾಡಿ ಎಂತ ಹೇಳಿದ ಆಗ ನಾನು ಆತನು ಏನಾದರೂ ಮಾತನಾಡಿಕೊಳ್ಳಲಿ ಬಿಡಿ ಎಂತ ಹೇಳಿದಾಗ ನಂತರ ಡಾಬಾ ಮಾಲೀಕರಾದ ಮಂಜುನಾಥ ರವರು ಮಾತನಾಡಿದ್ದು, ವಿಚಾರ ಕೆಳಲಾಗಿ ಪೇಪರ್ನವರು  ಊಟಕ್ಕೆ ಬಂದಿರುತ್ತಾರೆಂತ ತಿಳಿಸಿದ. ಆ ದಿನ ಶಂಕರ್ ಮತ್ತು ಆತನೊಂದಿಗೆ ಹೋಗಿದ್ದವರು ಡಾಬಾದಲ್ಲಿ ಮದ್ಯಪಾನ ಸೇವಿಸಿ ಊಟ ಮಾಡಿ ನನ್ನ ಹೆಸರನ್ನು ದುರ್ಬಳಕೆ ಮಾಡಿಕೊಂಡು ಹೋಗಿರುತ್ತಾರೆ. ಎರಡನೇಯದಾಗಿ ನನಗೆ ಕನ್ನಡ ಪ್ರಭ ದಿನ ಪತ್ರಿಕೆಯ ವರದಿಗಾರರಾದ  ಶಂಕರ್ ರವರು ಒಂದು ದಿನ ರಾತ್ರಿ ಕರೆಮಾಡಿ ನನಗೆ ಮಾತನಾಡಿದ ಮಾತಿನ ಅವಧಿಯಲ್ಲಿ ನಾನು ಸೀರಿಯಸ್ ಆಗಿ ಹೇಳುತ್ತಿರುವುದು ನಾನು ಚಿಂತಾಮಣಿಯಲ್ಲಿ ಒಂದು ಮನೆಯನ್ನು ಕಟ್ಟಿಸುತ್ತಿರುತ್ತೇನೆ. ನನಗೆ ಎಂಸ್ಯಾಂಡ್, ಮತ್ತು ಜಲ್ಲಿ, ಹೊಡಿಸಿಕೊಡಬೇಕೆಂದು ಕೇಳಿದ. ಆಗ ನಾನು ಎಂಸ್ಯಾಂಡ್ ಮತ್ತು ಜಲ್ಲಿ ಹೊಡಿಸಲು ಆಗುವುದಿಲ್ಲವೆಂದು ಹೇಳಿದಾಗ ಆಯಿತು ಬಿಡಿ ಎಂದು ಪೊನ್ ಕಟ್ ಮಾಡಿರುತ್ತಾನೆ. ದಿನಾಂಕ:17/09/2020 ರಂದು ರಾತ್ರಿ 7-30 ಗಂಟೆಯ ಸಮಯದಲ್ಲಿ ಜಿ ಎಲ್ ಶಂಕರ್ ರವರು ನನಗೆ ಪೊನ್ ಮಾಡಿ ನಮ್ಮ ಠಾಣಾ ವ್ಯಾಪ್ತಿಯಲ್ಲಿ ದಾಖಲಾಗಿರುವ ಗಾಂಜಾ ಪ್ರಕರಣಗಳ ಬಗ್ಗೆ ಮಾಹಿತಿ ಕೇಳುವ ನೆಪದಲ್ಲಿ ನನ್ನೊಂದಿಗೆ ಮಾತನಾಡುತ್ತಾ ನಮ್ಮದು ರಾಜ್ಯ ಪತ್ರಿಕೆಯಾಗಿರುತ್ತೆ. ಆದರೆ ನೀವು ನನಗೆ ಯಾಕೆ ಮಾಹಿತಿ ಕೊಡುವುದಿಲ್ಲ ನಾನೇನು ಯೂಟೂಬ್ ಚಾನಲ್ನವನಲ್ಲ. ನೀವು ಮಾಹಿತಿ ನೀಡಿದರೆ ನಿಮ್ಮ ಬಗ್ಗೆ ಒಳ್ಳೆ ನ್ಯೂಸ್ ಮಾಡುತ್ತಿದ್ದೆ. ನೀವು ನನಗೆ ನ್ಯೂಸೇ ಕೊಡುವುದಿಲ್ಲ ಯಾಕೇ ಎಂತ ಪ್ರಶ್ನೆಗಳನ್ನು ಮಾಡಿರುತ್ತಾನೆ. ನಾನು ಯಾವುದೇ ಘಟನೆ ನಡೆದ ಕೂಡಲೇ ನಮ್ಮ ಹಿರಿಯ ಅಧಿಕಾರಿಗಳಿಗೆ ವರದಿ ಮಾಡುವ ಕೆಲಸದಲ್ಲಿದ್ದು, ಘಟನೆಗಳ ಸಂಕ್ಷಿಪ್ತ ಮಾಹಿತಿಯನ್ನು ಸಂಗ್ರಹಿಸುವ ಬಗ್ಗೆ ಬ್ಯುಸಿಯಾಗಿರುತ್ತೇನೆ. ಇದಕ್ಕೆ ನಮ್ಮ ಠಾಣೆಯ ಗುಪ್ತ ಮಾಹಿತಿ ಪೊಲೀಸರಿಂದ ಮಾಹಿತಿ ಪಡೆದುಕೊಳ್ಳಿ ಎಂದು ಹೇಳಿದ್ದೆ. ಅದಕ್ಕೆ  ಕನ್ನಡ ಪ್ರಭ ಪತ್ರಿಕೆಯ ವರದಿಗಾರನು ನನಗೆ ಸಂಭಾಷಣೆಯ ಸಮಯದಲ್ಲಿ ನಿಮ್ಮ ಬಗ್ಗೆ ಪತ್ರಿಕೆಯಲ್ಲಿ ಬೇರೆ ಏನೋ ಬರೆಯುವುದು ಬೇಡವೆಂದು ಸುಮ್ಮನಿದ್ದೇನೆಂದು ನನಗೆ ಹಿಂಜರಿಕೆಯಾಗುವಂತೆ ಹಾಗೂ ಬೆದರಿಸುವಂತೆ ಮಾತನಾಡಿರುತ್ತಾನೆ.ಹೀಗಿರುವಲ್ಲಿ ದಿನಾಂಕ:29/09/2020 ರಂದು ಕನ್ನಡ ಪ್ರಭ ದಿನ ಪತ್ರಿಕೆಯ ಚಿಂತಾಮಣಿ ತಾಲ್ಲೂಕು ವರದಿಗಾರರಾದ ಜಿ ಎಲ್ ಶಂಕರ್ ಎಂಬುವರು ಚಿಂತಾಮಣಿ ತಾಲ್ಲೂಕು ಎಂ ಗೊಲ್ಲಹಳ್ಳಿ ಗ್ರಾಮದ ಶಿಕ್ಷಕ ರಾಮಚಂದ್ರಪ್ಪ ಮಗ ಎಂ ಆರ್ ನರೇಂದ್ರ ಇತರೆಯವರ ವಿರುದ್ದ ಪ್ರಕರಣ ದಾಖಲಾಗಿದ್ದ ಬಗ್ಗೆ ಶಿಕ್ಷಕ ರಾಮಚಂದ್ರಪ್ಪ ರವರಿಂದ 2 ಲಕ್ಷ ಹಣ ನೀಡುವಂತೆಯೂ ಇಲ್ಲವಾದರೆ ಸ್ಮಗಲಿಂಗ್ ಕೇಸಿನಲ್ಲಿ ಸಿಕ್ಕಿಸಿ ಎನ್ ಕೌಂಟರ್ ಮಾಡುತ್ತೇನೆಂದು ಸ್ಥಳೀಯ ಪಿ ಎಸ್ ಐ ಪಾಪಣ್ಣ ರವರು ಬೆದರಿಸಿರುತ್ತಾನೆಂದು ದಿನ ಪತ್ರಿಕೆಯಲ್ಲಿ ಪ್ರಕಟಣೆ ಮಾಡಿಸಿರುತ್ತಾರೆ. ದಿನಾಂಕ:30/09/2020 ರಂದು ನಾನು ಚಿಂತಾಮಣಿ ನಗರದಲ್ಲಿ ಈ ಹಿಂದೆ ನಡೆದಿದ್ದ ಗಲಾಟೆಗಳ ಹಿನ್ನೆಲೆಯಲ್ಲಿ ಬಂದೋ ಬಸ್ಥ ಕರ್ತವ್ಯಕ್ಕೆ ಚಿಂತಾಮಣಿ ನಗರದ ಎಸ್ ಡಿ ಪಿ ಓ ಕಛೇರಿಯ ಬಳಿ ಹೋದಾಗ ಕನ್ನಡ ಪ್ರಭ ವರದಿಗಾರ ಜಿ ಎಲ್ ಶಂಕರ್ ರವರು ನನಗೆ ಮುಖಾಮುಖಿ ಸಿಕ್ಕಿದ್ದು, ಆಗ ಶಂಕರ್ ರವರು ನೀವು ನನಗೆ ಎಂಸ್ಯಾಂಡ್ ಮತ್ತು ಜಲ್ಲಿ ಹೊಡಿಸಿಕೊಡಲಿಲ್ಲ. ನನಗೆ ತಿಂಗಳಿಗೊಮ್ಮೆ ದುಡ್ಡು ಕೊಡಬೇಕೆಂತಲೂ ನೀವು ನನ್ನನ್ನು ಸರಿಯಾಗಿ ನೋಡಿಕೊಳ್ಳದಿದ್ದರೆ, ನಿಮ್ಮ ಬಗ್ಗೆ ಇಲ್ಲ ಸಲ್ಲದ ವರದಿಗಳನ್ನು ಮತ್ತೊಮ್ಮೆ ಮಾಡಿ ಮೇಲಾಧಿಕಾರಿಗಳಿಗೆ ಕಳುಹಿಸಿಕೊಡುತ್ತೇನೆಂತಲೂ ಹಾಗೂ ಈ ಬಗ್ಗೆ ಪತ್ರಿಕೆಯಲ್ಲಿ ಪ್ರಚಾರ ಮಾಡುತ್ತೇನೆಂತ ಬೆದರಿಕೆ ಒಡ್ಡಿರುತ್ತಾನೆ. ದಿನಾಂಕ:20/10/2020 ರಂದು ಸುಲಿಗೆ ಮಾಡುತ್ತಿರುವ ಬಟ್ಲಹಳ್ಳಿ ಪೊಲೀಸರು ಎಂದು ವಿಶ್ವ ವಾಣಿ ದಿನಪತ್ರಿಕೆಯಲ್ಲಿ ಸುದ್ದಿ ಪ್ರಕಟವಾಗಿದ್ದು, ಪರಿಶೀಲಿಸಲಾಗಿ ಬಟ್ಲಹಳ್ಳಿ ಪೊಲೀಸ್ ಠಾಣೆಯ ವ್ಯಾಪ್ತಿಯ ವಂಗಿಮಾಳ ಗ್ರಾಮದಲ್ಲಿ ಇತ್ತೀಚಿಗೆ ಜೂಜಾಡುತ್ತಿದ್ದ ಹಲವು ಯುವಕರ ಬೈಕ್ ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಆರೋಪಿಗಳ ವಿರುದ್ದ ಯಾವುದೇ ಪ್ರಕರಣ ದಾಖಲಿಸದೇ ಪ್ರತಿ ಬೈಕಿಗೆ 10.000/- ರೂಗಳಂತೆ 7 ಬೈಕ್ ಗಳಿಂದ 70.000/- ರೂಗಳು  ವಸೂಲಿ ಮಾಡಲಾಗಿದೆ. ಎಂಬ ಮೊಬೈಲ್ ಸಂಬಾಷಣೆ ಸಾಮಾಜಿಕ ಜಾಲ ತಾಣದಲ್ಲಿ ತೀವ್ರ ವೈರಲ್ ಆಗಿದೆ ಎಂತಲೂ ಮತ್ತು ಎಂ ಗೊಲ್ಲಹಳ್ಳಿ ಗ್ರಾಮದಲ್ಲಿ ಚೌಕಾ ಬಾರ ಆಡುತ್ತಿದ್ದ ಶಾಲಾ ಕಾಲೇಜುಗಳ ವಿದ್ಯಾಥರ್ಿಗಳನ್ನು ವಿನಾ ಕಾರಣ ವಶಕ್ಕೆ ಪಡೆದಿರುವ ಪೊಲೀಸರು ಹಣ ನೀಡುವಂತೆ ಕಿರುಕುಳ ನೀಡಿರುವ ಮತ್ತೊಂದು ಆರೋಪವು ಕೇಳಿ ಬಂದಿದೆ. ಅಲ್ಲದೇ ಹಣ ನೀಡಲಿಲ್ಲವೆಂಬ ಕಾರಣಕ್ಕೆ ವಿದ್ಯಾಥರ್ಿಯೊಬ್ಬನ ವಿರುದ್ದ ವಿನಾ ಕಾರಣ ಪ್ರಕರಣ ದಾಖಲಿಸುವ ಜೊತೆಗೆ ಎನ್ಕೌಂಟರ್ ಮಾಡುವ ಬೆದರಿಕೆಯನ್ನು ಸಬ್ ಇನ್ಸ್ ಪೆಕ್ಟರ್ ನೀಡಿರುವ ಬಗ್ಗೆ ವೀಡಿಯೋ ಒಂದು ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿದೆಯಂತ ಅಶ್ವಥನಾರಾಯಣ ಎಲ್ ವಿಶ್ವ ವಾಣಿ ಪತ್ರಿಕಾ ವರದಿಗಾರ ಎಂಬುವರು ತಮ್ಮ ಪತ್ರಿಕೆಯಲ್ಲಿ ಸುದ್ದಿಯನ್ನು ಪ್ರಕಟಣೆ ಮಾಡಿರುತ್ತಾರೆ. ನಾನು ಜಿ ಎಲ್ ಶಂಕರ್ ರವರು ಆತನು ಹೇಳುವ  ಬೇಡಿಕೆಗಳನ್ನು ಈಡೇರಿಸದ ಕಾರಣ ತನ್ನ ಕೈಯಲ್ಲಿ ಪತ್ರಿಕೆ ಇದೆ ಅದರಲ್ಲಿ ನನ್ನ ಬಗ್ಗೆ ಇಲ್ಲ ಸಲ್ಲದ ವಿನಾಕಾರಣ ಆಪಾದನೆೆಗಳನ್ನು ಮಾಡುತ್ತಾ ನಿಮ್ಮ ಬಗ್ಗೆ ಮೇಲಾಧಿಕಾರಿಗಳಿಗೆ ಮಾಹಿತಿಗಳನ್ನು ರವಾನಿಸುತ್ತೆನೆಂದು, ಆತನ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು  ನನಗೆ ಮಾನಸಿಕವಾಗಿ ಅಪಾಯದ ಭಯ ಬೀತಿ ಪಡಿಸುವ ಉದ್ದೇಶದಿಂದ ಬೆದರಿಕೆಗಳನ್ನು ಹಾಕಿ ತನ್ನ ಬೇಡಿಕೆಗಳನ್ನು ಕಾರ್ಯಗತಗೊಳಿಸಿಕೊಳ್ಳಲು ಮತ್ತು ಆತನು ನನ್ನಿಂದ ಲಾಭ ಪಡೆಯುವ ಕೃತ್ಯಗಳನ್ನು ಮಾಡುವಂತೆ  ಪ್ರಯತ್ನಿಸಿರುತ್ತಾನೆ. ಆದರೆ ನಾನು ಆತನ ಬೇಡಿಕೆಗಳಿಗೆ ಸ್ಪಂದಿಸಿದ ಕಾರಣ ನನ್ನ ಘನತೆ ಮತ್ತು ಕ್ಯಾತಿಗೆ ಕ್ಷತಿವುಂಟು ಮಾಡುವ, ಬೆದರಿಕೆ ಹಾಕುವ, ಅಪರಾಧಿಕ ಭಯೋತ್ಪಾದನೆಯನ್ನು ಮಾಡಿರುತ್ತಾನೆ. ಜಿ ಎಲ್ ಶಂಕರ್ ರವರು ವಿಶ್ವವಾಣಿ ಪತ್ರಿಕೆಯ ವರದಿಗಾರರಾದ ಬಾಗೇಪಲ್ಲಿ ತಾಲ್ಲೂಕಿನ ಎಲ್ ಅಶ್ವಥನಾರಾಯಣ ರವರಿಗೆ ಕುಮ್ಮಕ್ಕು ನೀಡಿ ವಿಶ್ವವಾಣಿ ಪತ್ರಿಕೆಯಲ್ಲಿ ಪ್ರಕಟಣೆಯನ್ನು ಮಾಡಿಸಿರುತ್ತಾರೆ. ಆದ್ದರಿಂದ ಸದರಿ ಜಿ ಎಲ್ ಶಂಕರ್ ಮತ್ತು ಎಲ್ ಅಶ್ವಥನಾರಾಯಣ ರವರ ವಿರುದ್ದ ಕಾನೂನು ರೀತಿಯ ಕ್ರಮ ಜರುಗಿಸಲು ಸೂಚಿಸಿದೆ. ಸದರಿ ಜಿ ಎಲ್ ಶಂಕರ್ ರವರು ನನ್ನೊಂದಿಗೆ ಪೊನ್ ನಲ್ಲಿ ಮಾತನಾಡಿರುವ ಬಗ್ಗೆ ಸಂಭಾಷಣೆಗಳಿರುತ್ತವೆ. ಇದರೊಂದಿಗೆ  ಸದರಿ ಜಿ ಎಲ್ ಶಂಕರ್ ರವರು ನನ್ನೊಂದಿಗೆ ಪೊನ್ ನಲ್ಲಿ ಮಾತನಾಡಿರುವ ಸಂಭಾಷಣೆಗಳ ಸಿಡಿಯನ್ನು ಲಗತ್ತಿಸಿರುತ್ತೇನೆಂದು ಹೇಳಿ ಕೊಟ್ಟ ವರದಿಯ ದೂರಿನ ಸಾರಾಂಶವಾಗಿರುತ್ತೆ.

  1. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.148/2020 ಕಲಂ: 457,380 ಐ.ಪಿ.ಸಿ:-

     ದಿನಾಂಕ 20/10/2020 ರಂದು ಬೆಳಗ್ಗೆ 10-30 ಗಂಟೆಗೆ ಪಿರ್ಯಾದಿದಾರರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ತಾನು 1.1/2 ವರ್ಷದಿಂದ ಚಿಕ್ಕಬಳ್ಳಾಪುರ ಟೌನ್ ನಲ್ಲಿ ನಿರ್ಮಾಣವಾಗುತ್ತಿರುವ ಸಾಹಿಲ್ ಮೋಟಾರ್ಸ್ ನಲ್ಲಿ ಮ್ಯಾನೇಜರ್ ಆಗಿ ಕರ್ತವ್ಯ ನಿರ್ವಹಿಸುತ್ತಿರುತ್ತೇನೆ, ಸದರಿ ಕಟ್ಟಡವು ಹೊಸದಾಗಿ ನಿರ್ಮಾಣವಾಗುತ್ತಿದ್ದು ಕಟ್ಟಡ ನಿರ್ಮಾಣಕ್ಕೆ ಬೇಕಾದ ಸಾಮಗ್ರಿಗಳಾದ ಕೇಬಲ್ ವೈರ್ ಗಳು, ಎಲೆಕ್ಟ್ರಿಕಲ್ ವೈರ್ ಗಳು, ಮತ್ತು ಕಿಟಕಿಯ ವಸ್ತುಗಳನ್ನು ಇಟ್ಟಿದ್ದು ಕರೋನಾ ಕಾರಣದಿಂದ ಕೆಲಸ ಸ್ಥಗಿತಗೊಂಡಿದ್ದು, ತಾನು ಪ್ರತಿ ದಿನ ಕಟ್ಟಡದ ಬಳಿ ಇದ್ದು ರಾತ್ರಿ ಮನೆಗೆ ಹೋಗುತ್ತಿದ್ದು,  ದಿನಾಂಕ 18/10/2020 ರಂದು ಕಟ್ಟಡದ ಬಳಿ ಬಂದು ಮಧ್ಯಾಹ್ನ ವಾಪಸ್ಸು ಹೋಗಿದ್ದು, ದಿನಾಂಕ 19/10/2020 ರಂದು ಬೆಳಗ್ಗೆ 09-30 ಗಂಟೆಗೆ ಕಟ್ಟಡದ ಬಳಿ ಬಂದಾಗ ಕಟ್ಟಡದಲ್ಲಿದ್ದ ಕೇಬಲ್ ವೈರ್ ಗಳು, ಎಲೆಕ್ಟ್ರಿಕಲ್ ವೈರ್ ಗಳು, ಮತ್ತು ನಿರ್ಮಾಣ ಕೆಲಸಕ್ಕೆ ಬೇಕಾದ ಕಿಟಕಿಯ ವಸ್ತುಗಳು ಕಳುವಾಗಿದ್ದುವು ದಿನಾಂಕ 18/10/2020 ರಂದು ರಾತ್ರಿ ವೇಳೆಯಲ್ಲಿ 20 ಸಾವಿರ ರೂ ಬೆಲೆಯ ಕೇಬಲ್ ವೈರ್ ಗಳು, ಎಲೆಕ್ಟ್ರಿಕಲ್ ವೈರ್ ಗಳು, ಹಾಗೂ ಕಿಟಕಿ ವಸ್ತುಗಳು,  22 ಸಾವಿರ ರೂ ಬೆಲೆಯ ನಿರ್ಮಾಣ ವಸ್ತುಗಳನ್ನು ಯಾರೋ ಕಳ್ಳರು ಕಟ್ಟಡದ ಓಳಗೆ ಪ್ರವೇಶ ಮಾಡಿ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆಂದು ಸದರಿ ಕಳ್ಳರ ಮೇಲೆ ಕಾನೂನ ರೀತಿ ಕ್ರಮ ಜರುಗಿಸಬೇಕೆಂದು ಕೋರಿ ಪ್ರ,ವ,ವರದಿ.

  1. ಚಿಕ್ಕಬಳ್ಳಾಪುರ ಸಂಚಾರಿ ಪೊಲೀಸ್ ಠಾಣೆ ಮೊ.ಸಂ.48/2020 ಕಲಂ: 279,337 ಐ.ಪಿ.ಸಿ:-

     ದಿನಾಂಕ:-19/10/2020 ರಂದು ಬೆಂಗಳೂರಿನ ಸೆಂಟ್ ಜಾನ್ಸ್ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಗಾಯಾಳು ಶ್ರೀ ಸ್ಟೀಫನ್ ಆರ್ ಬಿನ್ ಲೇಟ್ ರಾಜ್ ಕುಮಾರ್ 46 ವರ್ಷ, ಕ್ರಿಶ್ಚಿಯನ್ ಜನಾಂಗ, ಕೂಲಿ ಕೆಲಸ, ನಂ-34, ಪಾರ್ವತಿ ನಗರ, ತೆನಿ ಮಲೈ, ತಿರುಣಮಲೈ ತಾಲ್ಲೂಕು ಮತ್ತು ಜಿಲ್ಲೆ, ತಮಿಳುನಾಡು ರಾಜ್ಯ ರವರು ನೀಡಿದ ಹೇಳಿಕೆಯ ದೂರಿನ ಸಾರಾಂಶವೇನೆಂದರೆ ದಿನಾಂಕ:-15/10/2020 ರಂದು ತನಗೆ ಪರಿಚಯವಿರುವ ಲಾರಿ ಮಾಲೀಕ ಮತ್ತು ಚಾಲಕನಾದ ರಮೇಶ್ ಎಂ ಬಿನ್ ಮಣಿ, ವಟ್ಟಿ ಗುಡಿಸಲ್, ಹೈಯೂಮ್ಪಾಳ್ಯ ಅಂಚೆ, ತಿರುಣಮಲೈ ತಾಲ್ಲೂಕು ಮತ್ತು ಜಿಲ್ಲೆ, ತಮಿಳುನಾಡು ರಾಜ್ಯ ರವರೊಂದಿಗೆ KA-01-AA-3125 ರ ಲಾರಿಯಲ್ಲಿ ತಮ್ಮ ಊರಿನಿಂದ ಬೆಂಗಳೂರು – ಬಾಗೇಪಲ್ಲಿ ಎನ್.ಎಚ್-44 ಹೈವೇ ರಸ್ತೆಯಲ್ಲಿ ಬಾಗೇಪಲ್ಲಿಗೆ ಕಳ್ಳೇಕಾಯಿ ಲೋಡ್ ಮಾಡಿಕೊಂಡು ಬರಲು ಹೋಗುತ್ತಿದ್ದು ದಿನಾಂಕ:-16/10/2020 ರಂದು ಬೆಳಿಗ್ಗೆ ಸುಮಾರು 04-30 ಗಂಟೆಯ ಸಮಯದಲ್ಲಿ ಚದಲಪುರ ಕ್ರಾಸ್ ಹೈವೇ ರಸ್ತೆಯಲ್ಲಿ ಹೋಗುತ್ತಿದ್ದಾಗ ಸದರಿ ಲಾರಿ ಚಾಲಕ ರಮೇಶ್ ಎಂ ರವರು ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿ ರಸ್ತೆಯಲ್ಲಿನ ಹಂಸ್ ಅನ್ನು ಎಗರಿಸಿದ್ದರಿಂದ ಚಾಲಕನ ಪಕ್ಕದ ಸೀಟಿನಲ್ಲಿ ಕುಳಿತಿದ್ದ ತಾನು ಲಾರಿಯ ಮುಂಭಾಗದ ಗ್ಲಾಸ್ ಸಮೇತ ಠಾರ್ ರಸ್ತೆಯಲ್ಲಿ ಬಿದ್ದುದ್ದರಿಂದ ತನಗೆ ಎಡ ತಲೆಯ ಹಿಂಭಾಗ, ಬೆನ್ನಿಗೆ, ಎಡ ಮೊಣ ಕೈಗೆ ರಕ್ತ ಗಾಯಗಳಾಗಿದ್ದು ಸದರಿ ಲಾರಿ ಚಾಲಕ ತನ್ನನ್ನು ಉಪಚರಿಸಿ ಆಂಬ್ಯೂಲೆನ್ಸ್ ಗೆ ಕರೆ ಮಾಡಿ ಅಲ್ಲಿಗೆ ಬಂದ ಆಂಬ್ಯೂಲೆನ್ಸ್ ನಲ್ಲಿ ಚಿಕಿತ್ಸೆಗಾಗಿ ಚಿಕ್ಕಬಳ್ಳಾಪುರ ಆಸ್ಪತ್ರೆಗೆ ಸೇರಿಸಿ ನಂತರ ಅಲ್ಲಿನ ವೈಧ್ಯರ ಸಲಹೆ ಮೇರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಬ್ಯಾಪ್ಟಿಸ್ಟ್ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆಯನ್ನು ಕೊಡಿಸಿ ನಂತರ ಬೆಂಗಳೂರಿನ ಸೆಂಟ್ ಜಾನ್ಸ್ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆಯನ್ನು ಪಡೆಯುತ್ತಿದ್ದು ಸದರಿ ತನ್ನ ಗಾಯಗಳಿಗೆ ಕಾರಣನಾದ KA-01-AA-3125 ರ ಲಾರಿ ಚಾಲಕ ರಮೇಶ್ ಎಂ ರವರ ಮೇಲೆ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದರಿಂದ ಈ ದಿನ ತಡವಾಗಿ ದಿನಾಂಕ:-19/10/2020 ರಂದು ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ನೀಡಿದ ಹೇಳಿಕೆ ದೂರಿನ ಮೇರೆಗೆ ಸಂಜೆ 7-00 ಗಂಟೆಗೆ ಪ್ರಕರಣವನ್ನು ದಾಖಲಿಸಿಕೊಂಡಿರುತ್ತೆ.

  1. ದಿಬ್ಬೂರಹಳ್ಳಿ ಪೊಲೀಸ್ ಠಾಣೆ ಮೊ.ಸಂ.113/2020 ಕಲಂ: 279,337  ಐ.ಪಿ.ಸಿ & 4,181 INDIAN MOTOR VEHICLES ACT:-

     ದಿನಾಂಕ: 20/10/2020 ರಂದು ಡಾ// ಫರ್ಹಾ ಯಾಸ್ಮೀನ್ ಬಿನ್ ಸುಲೇಮಾನ್ ಸಾಹೇಬ್, 27 ವರ್ಷ, ಪಶುವೈದ್ಯಾಧಿಕಾರಿಗಳು, ಅರಸೀಕೆರೆ ಹಾಸನ ಜಿಲ್ಲೆ ರವರು ಚಿಕ್ಕಬಳ್ಳಾಪುರದ ಜೀವನ್ ಆಸ್ಪತ್ರೆಯಲ್ಲಿ ನೀಡಿದ ಹೇಲಿಕೆಯ ಸಾರಾಂಶವೇನೆಂದರೆ, ತಾನು ದಿಬ್ಬೂರಹಳ್ಳಿ ಗ್ರಾಮದಲ್ಲಿ ಪಶು ವೈಧ್ಯಾಧಿಕಾರಿಗಳಾಗಿ ಕರ್ತವ್ಯ ನಿರ್ವಹಿಸುತ್ತಿರುತ್ತೇನೆ. ದಿನಾಂಕ: 19/10/2020 ರಂದು ಬೆಳಿಗ್ಗೆ 8.00 ಗಂಟೆಯಿಂದ 8.15 ಗಂಟೆ ಸಮಯದಲ್ಲಿ ದಿಬ್ಬೂರಹಳ್ಳಿ ಗ್ರಾಮಕ್ಕೆ ಬರಲು ಗೌಡನಹಳ್ಳಿ ಕ್ರಾಸ್ ಮುಂದೆ ತನ್ನ ದ್ವಿಚಕ್ರವಾಹನ ಸಂಕ್ಯೆ ಕೆಎ-13-ಇಎಂ-0554 ವಾಹನದಲ್ಲಿ ತಾನೇ ಚಾಲನೆ ಮಾಡಿಕೊಂಡು ಹೋಗುತ್ತಿದ್ದಾಗ ಎದರು ಗಡೆಯಿಂದ ಬಂದ ಸುಮಾರು 15 ರಿಂದ 16 ವರ್ಷದ ಬಾಲಕ ತಾನು ಚಾಲನೆ ಮಾಡಿಕೊಂಡು ಬರುತ್ತಿದ್ದ ದ್ವಿ ಚಕ್ರವಾಹನವನ್ನು ಅಡ್ಡಾ ದಿಡ್ಡಿಯಾಗಿ ಚಾಲನೆ ಮಾಡಿಕೊಂಡು ಬಂದು ತನ್ನ ದ್ವಿಚಕ್ರವಾಹನಕ್ಕೆ ಡಿಕ್ಕಿ ಹೊಡೆಸಿದ್ದು ತಾನು ದ್ವಿಚಕ್ರವಾಹನದಿಂದ ಕೆಳಕ್ಕೆ ಬಿದ್ದು ಹೋಗಿದ್ದು ಬಲಮೊಣಕೈ ಕೆಳಭಾಗ  ಬಲಕಾಲಿನ ಮೊಣಕಾಲು ಮೂಳೆ ಮುರಿತದ ಅನುಭವವಾಗಿರುತ್ತೆ. ಬಲಗೈನ ಬೆರಳುಗಳು ಬಲಕಾಲಿನ ಪಾದದ ಮೇಲ್ಬಾಗದಲ್ಲಿ ರಕ್ತಗಾಯಗಳಾಗಿರುತ್ತೆ. ತನಗೆ ಡಿಕ್ಕಿ ಹೊಡೆಸಿದ ಬಾಲಕನೂ ಕೆಳಕ್ಕೆ ಬಿದ್ದಿದ್ದು ಇಬ್ಬರನ್ನೂ ಅಲ್ಲಿದ್ದವರು ಉಪಚರಿಸಿ ನಂತರ ಅಶ್ವತ್ಥನಾರಾಯಣಾಚಾರಿ ಮತ್ತು ಡಾ// ಹರ್ಷ ರವರು ಬಂದು ಗಾಯಗೊಂಡಿದ್ದ ಇಬ್ಬರನ್ನೂ ಶಿಡ್ಲಘಟ್ಟ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಪ್ರಥಮ ಚಿಕಿತ್ಸೆ ಪಡಿಸಿ ಅಲ್ಲಿಂದ ಇಬ್ಬರನ್ನೂ ಚಿಕ್ಕಬಳ್ಳಾಪುರದ ಜೀವನ್ ಆಸ್ಪತ್ರೆಗೆ ಕರೆದುಕೊಂಡು ಬಂದು ದಾಖಲಿಸಿರುತ್ತಾರೆ. ತನಗೆ ಅಫಘಾತಪಡಿಸಿದ ಬಾಲಕನ ಹೆಸರು ವೆಂಕಟೇಶ ಬಿನ್  ನರಸಿಂಹಪ್ಪ, ಪಲಿಚೆರ್ಲು ಗ್ರಾಮ, ಮತ್ತು ದ್ವಿಚಕ್ರವಾಹನ ಸಂಕ್ಯೆ ಕೆಎ-07-ವಿ-3398 ಎಂತ ತಿಳಿದು ಬಂದಿರುತ್ತೆ. ಹಾಗು ತನ್ನ ದ್ವಿಚಕ್ರ ವಾಹನ ಜಖಂ ಗೊಂಡಿರುತ್ತೆ. ಆದ್ದರಿಂದ ತನಗೆ ಅಫಘಾತಪಡಿಸಿ ಗಾಯಪಡಿಸಿದ ಬಾಲಕನ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿರುವುದಾಗಿರುತ್ತೆ.

  1. ನಂದಿಗಿರಿಧಾಮ ಪೊಲೀಸ್ ಠಾಣೆ ಮೊ.ಸಂ.68/2020 ಕಲಂ: 406,419,420,468,471 ರೆ/ವಿ 34 ಐ.ಪಿ.ಸಿ :-

     ದಿನಾಂಕ:20/10/2020 ರಂದು ನ್ಯಾಯಾಲಯದ ಹೆಚ್.ಸಿ-195 ಮುರಳಿಧರ್ ರವರು ಘನ ನ್ಯಾಯಾಲಯದಿಂದ ಬಂದು ಸಾದರಾದ ಪಿ.ಸಿ.ಆರ್ ನಂ:400/2019 ದೂರನ್ನು ತಂದು ಹಾಜರ್ಪಡಿಸಿದ್ದರ ಸಾರಾಂಶವೇನೆಂದರೆ ಪಿರ್ಯಾದಿ ಕೆ. ಪ್ರಸನ್ನ ಕುಮಾರ್ ಬಿನ್ ಕೃಷ್ಣಪ್ಪ, 49 ವರ್ಷ, ಬಲಜಿಗರು, ಖಾಸಗಿ ಕಂಪನಿಯಲ್ಲಿ ಕೆಲಸ ವಾಸ: 22/5, ಪಿಎಸ್ಆರ್ ಕೆಂಪ್ಸ್ ಅಪಾರ್ಟಮೆಂಟ್, 3 ನೇ ಕ್ರಾಸ್, ಪೊಲೀಸ್ ಸ್ಟೇಷನ್ ರಸ್ತೆ, ಹೆಬ್ಬಾಳ, ಬೆಂಗಳೂರು ರವರಿಂದ ಆರೋಪಿ ಎಲ್,ಎಫ್ ಪಾಟೀಲ್ ಬಿನ್ ಲೇಟ್ ಪಕೀರ್ ಗೌಡ ಪಾಟೀಲ್ ರವರು ದಿನಾಂಕ:26/06/2014 ಸಾಲವಾಗಿ 11 ಲಕ್ಷ ರೂಗಳನ್ನು ಪಡೆದುಕೊಂಡಿದ್ದು ಹಣಕ್ಕೆ ಆಧಾರವಾಗಿ ಆರೋಪಿ ಎಲ್.ಎಫ್ ಪಾಟೀಲ್ ರವರು ತನ್ನ ಹೆಸರಿನಲ್ಲಿದ್ದ ಚಿಕ್ಕಬಳ್ಳಾಪುರ ತಾಲ್ಲೂಕು, ನಂದಿ ಹೋಬಳಿಯ ಶ್ರೀರಾಮ್ಪುರ ಗ್ರಾಮದ ಸರ್ವೆ ನಂ:94/3 ರಲ್ಲಿ 18 ಗುಂಟೆ ಜಮೀನು, ಅದೇ ಗ್ರಾಮದ ಸರ್ವೆ ನಂಬರ್:94/4 ರಲ್ಲಿ 0-7.04 ಗುಂಟೆ ಜಮೀನನ್ನು ಕರಾರು ಪತ್ರ ಮಾಡಿಕೊಟ್ಟು ಜಿ.ಪಿ.ಎ ಸಹ ಮಾಡಿಕೊಟ್ಟಿರುತ್ತಾನೆ. ಹಣ ವಾಪಸ್ಸು ನೀಡಿದ್ದಲ್ಲಿ ಜಿ.ಪಿ.ಎ ರದ್ದು ಪಡಿಸಲಾಗುವುದೆಂದು ನಮೂದಿಸಿರುತ್ತಾರೆ. ಹಣ ವಾಪಸ್ಸು ನೀಡದಿದ್ದಲ್ಲಿ ಸ್ವತ್ತಿನ ಮೇಲೆ ವಸೂಲಿ ಮಾಡಿಕೊಳ್ಳುವ ಹಕ್ಕು ನಿಮಗೆ ಇರುತ್ತೆಂದು ನಮೂದಿಸಿರುತ್ತೆ.

 ಆರೋಪಿ ಪಾಟೀಲ್ ರವರು ಪಿರ್ಯಾದಿ ಪ್ರಸನ್ನ ಕುಮಾರ್ ರವರಿಂದ ಪಡೆದುಕೊಂಡ ಹಣ ವಾಪಸ್ಸು ನೀಡದೇ ಜಿ.ಪಿ.ಎ ಕ್ಯಾನ್ಸಲ್ ಮಾಡದೇ ಆಂಜನೇಯರೆಡ್ಡಿ.ಎಂ ಎಂಬುವರಿಗೆ ಶ್ರೀರಾಮ್ಪುರ ಗ್ರಾಮದ ಸರ್ವೆ ನಂ:94/3 ರಲ್ಲಿ 18 ಗುಂಟೆ ಜಮೀನನ್ನು ಶುದ್ದಕ್ರಯಕ್ಕೆ ಮಾರಾಟ ಮಾಡಿಕೊಟ್ಟಿರುತ್ತಾರೆ. ಈ  ವಿಚಾರ ತಿಳಿದ ಪಿರ್ಯಾದಿ ದಿನಾಂಕ:08/07/2015 ರಂದು ಉಳಿಕೆ ಇದ್ದ ಶ್ರೀರಾಮ್ಪುರ ಗ್ರಾಮದ ಸರ್ವೆ ನಂಬರ್:94/4 ರಲ್ಲಿ 0-7.04 ಗುಂಟೆ ಜಮೀನನ್ನು ಜಿ.ಪಿ.ಎ ಆಧಾರದ ಮೇರೆಗೆ ರಿಜಿಸ್ಟರ್  ಮಾಡಿಕೊಂಡಿರುತ್ತಾರೆ. ನಂತರ ಆರೋಪಿ ಪಾಟೀಲ್ ರವರು ಪಿರ್ಯಾದಿ ರಿಜಿಸ್ಟರ್ ಮಾಡಿಕೊಂಡ ಜಮೀನಿಗೆ ಖಾತೆ ಮಾಡಬಾರದು ಇನ್ನು ಹಣದ ವ್ಯವಹಾರ ಬಗೆಹರಿದಿರುವುದಿಲ್ಲವೆಂದು ತಕರಾರು ಅರ್ಜಿ ಸಲ್ಲಿಸಿಕೊಂಡಿದ್ದು ನಂತರ ಆರೋಪಿ ಪಾಟೀಲ್ ರವರು ಹಣದ ವ್ಯವಹಾರ ಬರೆಹರಿದಿದೆ ಎಂದು ಪತ್ರ ಬರೆದುಕೊಟ್ಟಿರುತ್ತಾರೆ. ಆದಾದ ನಂತರ ನಂದಿ ನಾಢ ಕಛೇರಿಯಲ್ಲಿ ಖಾತೆ ಪಿರ್ಯಾದಿದಾರರ ಹೆಸರಿಗೆ ಬದಲಾಗಿರುತ್ತೆ. ಅಂದಿನಿಂದ ಪಹಣಿ, ಶೋಧನ ಪತ್ರದಲ್ಲಿ ಪಿರ್ಯಾದಿ ಹೆಸರಿಗೆ ಬದಲಾಗಿರುತ್ತೆ.   ಈಗಿದ್ದಾಗ ಪಿರ್ಯಾದಿ ಹೆಸರಿನಲ್ಲಿರುವ ಶ್ರೀರಾಮ್ಪುರ ಗ್ರಾಮದ ಸ ಸರ್ವೆ ನಂಬರ್:94/4 ರಲ್ಲಿ 0-7.04 ಗುಂಟೆ ಜಮೀನನ್ನು ಮತ್ತು ಆಂಜಿನೇಯರೆಡ್ಡಿ ರವರ ಹೆಸರಿನಲ್ಲಿರುವ ಶ್ರೀರಾಂಪುರ  ಗ್ರಾಮದ ಸರ್ವೆ ನಂ:94/3 ರಲ್ಲಿ 18 ಗುಂಟೆ ಜಮೀನು, ಅದೇ ಗ್ರಾಮದ ಸರ್ವೆ ನಂಬರ್:94/4  ರಲ್ಲಿ 0-7.04 ಗುಂಟೆ ಜಮೀನು ಓಟ್ಟು 00-25.04 ಗುಂಟೆ ಜಮೀನನ್ನು ದಿನಾಂಕ:05/12/2017 ರಂದು ಭೂ ಪರಿವರ್ತನೆಯಾಗಿರುವ ಸ್ವತ್ತಿಗೆ ಪರಿತ್ಯಾಜನಾ ಪ್ರಮಾಣ ಪತ್ರದ ಮುಖಾಂತರ ಆಯುಕ್ತರು, ಚಿಕ್ಕಬಳ್ಳಾಪುರ ನಗರಾಭಿವೃದ್ದಿ ಪ್ರಾಧಿಕಾರ ಚಿಕ್ಕಬಳ್ಳಾಪುರ ರವರಿಗೆ ಬರೆದುಕೊಟ್ಟಿರುತ್ತಾನೆ. ಇದಾದ ನಂತರ ದಿನಾಂಕ:07/04/2018 ರಂದು ಆಂಜಿನೇಯರೆಡ್ಡಿ ರವರ ಹೆಸರಿನಲ್ಲಿರುವ ಶ್ರೀರಾಮ್ಪುರ ಗ್ರಾಮದ ಸರ್ವೆ ನಂ:94/3 ರಲ್ಲಿ 18 ಗುಂಟೆ ಜಮೀನನ್ನು ಪಾಟೀಲ್ ರವರು ತನ್ನ ಹೆಸರಿಗೆ ಶುದ್ದ ಕ್ರಯಕ್ಕೆ ಪಡೆದಿರುತ್ತಾನೆ. ಆರೋಪಿ ಎಲ್.ಎಫ್ ಪಾಟೀಲ್ ರವರು ಪಿರ್ಯಾದಿದಾರರಿಗೆ ಮಾಡಿಕೊಟ್ಟಿರುವ ಜಿ.ಪಿ.ಎ ಪತ್ರ ಕ್ಯಾನ್ಸಲ್ ಮಾಡದೇ ಹಾಗೂ ಹಣ ಸಹ ವಾಪಸ್ಸು ನೀಡದೇ ಆಂಜನೇಯರೆಡ್ಡಿ ರವರಿಗೆ ಸರ್ವೆ ನಂ:94/3 ರಲ್ಲಿ 18 ಗುಂಟೆ ಜಮೀನನ್ನು ಶುದ್ದ ಕ್ರಯಕ್ಕೆ ಮಾಡಿಕೊಟ್ಟು, ಸದರಿ ಜಮೀನನ್ನು ಮತ್ತು ಪಿರ್ಯಾದಿದಾರರ ಹೆಸರಿನಲ್ಲಿದ್ದ ಸರ್ವೆ ನಂ:94/4 ರಲ್ಲಿ 00-7.04 ಗುಂಟೆ ಜಮೀನನ್ನು ಪರಿತ್ಯಾಜನಾ ಪ್ರಮಾಣ ಪತ್ರದ ಮುಖಾಂತರ ಆಯುಕ್ತರು, ಚಿಕ್ಕಬಳ್ಳಾಪುರ ನಗರಾಭಿವೃದ್ದಿ ಪ್ರಾಧಿಕಾರ ಚಿಕ್ಕಬಳ್ಳಾಪುರ ರವರಿಗೆ ಬರೆದುಕೊಟ್ಟು ಮೋಸ ಮಾಡಿರುತ್ತಾನೆ. ಇದನ್ನು ಪರಿಶೀಲಿಸದೇ ನಗರಾಭಿವೃದ್ದಿ ಪ್ರಾಧಿಕಾರಿ ಅಧಿಕಾರಿಯು ಕೃತ್ಯ ವೆಸಗಿರುತ್ತಾರೆ. ಪಿರ್ಯಾದಿದಾರರ ಹೆಸರಿನಲ್ಲಿ ಸರ್ವೆ ನಂ:94/4 ರಲ್ಲಿ 00-7.04 ಗುಂಟೆ ಜಮೀನು ಆರ್.ಟಿ.ಸಿ ಇದ್ದರು ಸಹ ಹಾಗೂ ಸರ್ವೆ ನಂ:94/3 ರಲ್ಲಿ 18 ಗುಂಟೆ ಜಮೀನು ಜಿ.ಪಿ.ಎ ಪಿರ್ಯಾದಿದಾರರ ಹೆಸರಿನಲ್ಲಿದ್ದರು ಸಹ ಉಪನೊಂದಣಾಧಿಕಾರಿಗಳು ಪರಿಶೀಲನೆ ಮಾಡದೇ ಆಂಜನೇಯರೆಡ್ಡಿ ರವರಿಗೆ ಹಾಗೂ ನಾಗರಾಭಿವೃದ್ದಿ ಪ್ರಾಧಿಕಾರಕ್ಕೆ ರಿಜಿಸ್ಟರ್ ಮಾಡಿಕೊಟ್ಟು ಪಿರ್ಯಾದಿದಾರರಿಗೆ ವಂಚಿಸುವ ಉದ್ದೇಶದಿಂದ ಮೋಸ ಮಾಡಿರುತ್ತಾರೆ. ಆದ್ದರಿಂದ ಮೇಲ್ಕಂಡವರ ವಿರುದ್ದ ತನಿಖೆ ನಡೆಸಿ ವರದಿ ನೀಡುವಂತೆ ಘನ ನ್ಯಾಯಾಲಯದ ಆದೇಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುತ್ತೆ.

  1. ಪಾತಪಾಳ್ಯ ಪೊಲೀಸ್ ಠಾಣೆ ಮೊ.ಸಂ.75/2020 ಕಲಂ: 323,324,504 ರೆ/ವಿ 34 ಐ.ಪಿ.ಸಿ :-

     ದಿನಾಂಕ:18/10/2020 ರಂದು ಬಾಗೇಪಲ್ಲಿ  ಸರ್ಕಾರಿ ಆಸ್ಪತ್ರೆಯಲ್ಲಿ ಗಾಯಾಳು ರಾಧ ಕೊಂ ರಾಜು,  21 ವರ್ಷ, ಆದಿಕರ್ನಾಟಕ ಜನಾಂಗ, ಗೃಹಿಣಿ, ವಾಸ: ರಾಮನಪಾಡಿ  ಗ್ರಾಮ, ಬಾಗೆಪಲ್ಲಿ ತಾಲ್ಲೂಕು ರವರ ನೀಡಿದ ಹೇಳಿಕೆ ಸಾರಾಂಶವೇನೇಂದರೆ,  ದಿನಾಂಕ 18/10/2020 ರಂದು ಸಂಜೆ 4.00 ಗಂಟೆ ಸಮಯದಲ್ಲಿ ನಾನು ಒಬ್ಬಳೆ ಮನೆಯಲ್ಲಿ ನನ್ನ ಮಗುವಿಗೆ ಹಾಲಕುಡಿಸುತ್ತದೆ. ಆಗ ನನ್ನ ತಂದೆ ಆಂಜಿನಪ್ಪ ಕುರಿಗಳನ್ನು ಮೇಯಿಸಿಕೊಂಡು ಮನೆಯ ಹತ್ತರ ಬಂದ ನಮ್ಮ ಪಕ್ಕದ ಮನೆಯವರಾದ ಕದಿರಪ್ಪರವರು ಕುರಿಗಳು ನಮ್ಮ ಕೊಟ್ಟಿಗೆ ಬರುವ ಜಾಗದಲ್ಲಿ ಅಡ್ಡಲಾಗಿ ವೈರ್ ನೆಟ್ ಹಾಕಿ ಅಡ್ಡ ಪಡಿಸಿದ, ನಮ್ಮ ತಂದೆ ಯಾಕೋ ಆಡ್ಡ ಮಾಡ್ತಿಯಾ ಹೆಂಗೆ ಕುರಿಗಳು ಹೋಗುವುದು ಬರುವುದು ಎಂದು  ಕೇಳಿದಕ್ಕೆ ನನ್ನ ಜಾಗ ನಾನು ಬಿಡುವುದಿಲ್ಲ ನಾನು ಅಡ್ಡ ಮಾಡುವುದೇ ಏನು ಈಗ  ಅಂಥಾ ಎಕಾಎಕಿ ನಮ್ಮ ತಂದೆಯನ್ನು ಹೊಡೆಯಲು ಆರಂಭಿಸಿದ ನಾನು ಓಡಿ ಹೋಗಿ ಬಿಡಿಸಲು ಹೋದಾಗ ಕದಿರಪ್ಪ, ಮತ್ತು ಕದಿರಪ್ಪ ರವರ ಮಗ ಹರೀಶ, ಹರೀಶನ ದೊಡ್ಡಪ್ಪ ನರಸಿಂಹಪ್ಪ, ರಮಾದೇಮಿ ಎಲ್ಲರೂ ನನ್ನ ತಂದೆಯನ್ನು ಬೈದು ಒಡೆದರು ಕದಿರಪ್ಪನು ಬಂದು ಹಿಡಿಗಾತ್ರದ ಕಲ್ಲನ್ನು ತೆಗೆದುಕೊಂಡು  ನನ್ನ  ಬಲ ಕುತ್ತಿಗೆಭಾಗಕ್ಕೆ ಮತ್ತು  ಕಿವಿ ಭಾಗಕ್ಕೆ ಹಾಕಿ ಗಾಯಗೊಳಿಸದ ನಂತರ ಹೊರಟು ಹೋದರು. ನಾನು ನನ್ನ ಗಂಡನಾದ ರಾಜು ರವರ ಜೊತೆಯಲ್ಲಿ ಸರ್ಕಾರಿ ಆಸ್ಪತ್ರೆ ಬಾಗೇಪಲ್ಲಿಯಲ್ಲಿ ಚಿಕಿತ್ಸೆಗಾಗಿ ದಾಖಲಾದೆ, ನನಗೆ ಮತ್ತು ನನ್ನ ತಂದೆಯ ಮೇಲೆ ಗಲಾಟೆ ಮಾಡಿದ  ಮೇಲ್ಕಂಡವರನ್ನು ವಿರುದ್ದ ಸೂಕ್ತ ಕ್ರಮ ಕೈಗೊಳ್ಳಲು ಕೋರಿ ನೀಡಿದ ಹೇಳಿಕೆ ಮೇರೆಗೆ  ಠಾಣೆ ಮೊ.ಸಂಖ್ಯೆ:75/2020 ಕಲಂ:323,324,504ರೆ-ವಿ34 ಐ.ಪಿ.ಸಿ ಪ್ರಕರಣ ದಾಖಲಿಸಿರುತ್ತೆ.

  1. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.287/2020 ಕಲಂ: 504,506 ಐ.ಪಿ.ಸಿ :-

     ದಿನಾಂಕ:-13/10/2020 ರಂದು ಪಿರ್ಯಾದಿದಾರರಾದ ಶ್ರೀಮತಿ ಸುಜಾತ ಕೋಂ ಗೋಪಾಲ್ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ದಿನಾಂಕ 18/03/2020 ರಂದು ಬೆಳಿಗ್ಗೆ ಸುಮಾರು 9-30 ಗಂಟೆ ಸಮಯದಲ್ಲಿ ತಾನು ತಿಪ್ಪೆಗೆ ಕಸ ಹಾಕಲು ಮನೆಯಿಂದ ತಿಪ್ಪೆಯ ಬಳಿ ಕಸವನ್ನು ಎತ್ತಿಕೊಂಡು ಹೋಗಿದ್ದು, ತಮ್ಮ ತಿಪ್ಪೆಯ ಬಳಿ ಇರುವ ಖಾಲಿ ಮೈದಾನದಲ್ಲಿ ತನ್ನ ಮಗನಾದ ಅಭಿಲಾಷ್ ಹಾಗು ಇತರೆ ಹುಡುಗರು ಗೋಲಿ ಆಟವಾಡಿಕೊಂಡಿದ್ದಾಗ ತಾನು ತನ್ನ ಮಗನಿಗೆ ಹಾಗು ಇತರೆ ಹುಡುಗರಿಗೆ ಪರೀಕ್ಷೆ ಸಮಯದಲ್ಲಿ ಓದಿಕೊಳ್ಳುವುದು ಬಿಟ್ಟು ಆಟವಾಡಿಕೊಂಡಿದ್ದೀರಾ ಎಂದು ಬೈಯ್ಯುತ್ತಿದ್ದಾಗ ಆ ಸಮಯದಲ್ಲಿ ರಸ್ತೆಯಲ್ಲಿ ನಡೆದುಕೊಂಡು ಬರುತ್ತಿದ್ದ ತಮ್ಮ ಗ್ರಾಮದ ವಾಸಿ ತಮ್ಮ ಜನಾಂಗಕ್ಕೆ ಸೇರಿದ ಕೃಷ್ಣಮೂರ್ತಿ ಬಿನ್ ಮುನಿಯಪ್ಪ ಎಂಬಾತನು ತನಗೆ ಕೆಟ್ಟ ಮಾತುಗಳಿಂದ ಬೈದು, ತನ್ನ ಮೇಲೆ ಹಲ್ಲೆ ಮಾಡಿದ್ದು ಆ ಸಮಯದಲ್ಲಿ ತಾನು ಠಾಣೆಯಲ್ಲಿ ನೀಡಿದ ದೂರಿನ ಮೇರೆಗೆ ಠಾಣೆಯಲ್ಲಿ ಕೇಸು ದಾಖಲಾಗಿ, ಪೊಲೀಸರು ಈ ಕೇಸಿನಲ್ಲಿ ದೋಷಾರೋಪಣಾ ಪತ್ರವನ್ನು ಘನ ನ್ಯಾಯಾಲಯಕ್ಕೆ ಸಲ್ಲಿಸಿಕೊಂಡಿದ್ದು, ಸದರಿ ಕೇಸು ನ್ಯಾಯಾಲಯದಲ್ಲಿ ವಿಚಾರಣಾ ಹಂತದಲ್ಲಿ ಇರುತ್ತದೆ. ಹೀಗಿರುವಾಗ ಇತ್ತಿಚೆಗೆ 2-3 ದಿನಗಳಿಂದ ಕೃಷ್ಣಮೂರ್ತಿ ರವರು ತನ್ನನ್ನು ನೋಡಿದಾಗಲೆಲ್ಲಾ ಕೆಟ್ಟ ಮಾತುಗಳಿಂದ ಬೈದಾಡುವುದು ಮಾಡುತ್ತಿದ್ದು, ಈ ಬಗ್ಗೆ ತಾನು ಕೇಳಿದ್ದಕ್ಕೆ ತನಗೆ ಪ್ರಾಣ ಬೆದರಿಕೆಯನ್ನು ಹಾಕಿರುತ್ತಾನೆ. ಆದ ಕಾರಣ ಕೃಷ್ಣಮೂರ್ತಿ ರವರ ವಿರುದ್ದ ನಿಯಮಾನುಸಾರ ಕಾನೂನು ಕ್ರಮ ಕೈಗೊಳ್ಳ ಬೇಕಾಗಿ ಕೊಟ್ಟ ದೂರಿನ ಮೇರೆಗೆ ಠಾಣೆಯ ಎನ್.ಸಿ.ಆರ್ ನಂಬರ್-425/2020 ರಂತೆ ಪ್ರಕರಣವನ್ನು ದಾಖಲಿಸಿಕೊಂಡಿದ್ದು, ಸದರಿ ಪ್ರಕರಣವು ಅಸಂಜ್ಞೆಯ ಪ್ರಕರಣವಾಗಿರುವ ಕಾರಣ ಸದರಿ ಎನ್.ಸಿ.ಆರ್ ಪ್ರಕರಣದಲ್ಲಿ ಪ್ರ ವ ವರದಿಯನ್ನು ದಾಖಲಿಸಿಕೊಂಡು ತನಿಖೆಯನ್ನು ಕೈಗೊಳ್ಳಲು ಅನುಮತಿಗಾಗಿ ಕೋರಿ ಘನ ನ್ಯಾಯಾಲಯಕ್ಕೆ ಪಿಸಿ-90 ರಾಜಕುಮಾರ್ ರವರ ಮುಖಾಂಯತರ ಮನವಿಯನ್ನು ಸಲ್ಲಿಸಿಕೊಂಡಿದ್ದು, ಸದರಿಯವರು ಘನ ನ್ಯಾಯಾಲಯದಿಂದ ಅನುಮತಿಯನ್ನು ಪಡೆದುಕೊಂಡು ಮದ್ಯಾಹ್ನ 3-45 ಗಂಟೆಗೆ ಠಾಣೆಗೆ ವಾಪಸ್ಸಾಗಿ ಹಾಜರು ಪಡಿಸಿದ ಅನುಮತಿ ಆದೇಶದ ಪ್ರತಿಯನ್ನು ಪಡೆದುಕೊಂಡು ಠಾಣಾ ಮೊಸಂ-287/2020 ಕಲಂ 504.506 ಐಪಿಸಿ ರೀತ್ಯಾ ಕೇಸನ್ನು ದಾಖಲಿಸಿಕೊಂಡಿರುತ್ತದೆ.