ದಿನಾಂಕ :20/06/2020 ರ ಅಪರಾಧ ಪ್ರಕರಣಗಳು

 1. ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆ ಮೊ.ಸಂ.28/2020 ಕಲಂ. ಮನುಷ್ಯ ಕಾಣೆ:-

          ದಿನಾಂಕ: 19-06-2020 ರಂದು  ಪಿರ್ಯಾಧಿ ಠಾಣೆಗೆ ಹಾಜರಾಗಿ ಕೊಟ್ಟ  ದೂರಿನಂತೆ ತನ್ನ ಮಗನಾದ ಇಜಾಜ್ ಖಾನ್ ಎಂಬ 27 ವರ್ಷದ  ಮಗ  ದಿನಾಂಕ: 15-06-2020 ರಂದು  ವ್ಯಾಪಾರಕ್ಕೆ ಅಕ್ಕಿ ತರುತ್ತೇನೆ ಎಂದು ಹೇಳಿ ಬೆಳಗ್ಗೆ 10-00 ಗಂಟೆಗೆ ಮನೆಯಿಂದ ಹೋದವನು ಮತ್ತೆ ಮನೆಗೆ ವಾಪಸ್ಸು ಬಂದಿಲ್ಲವೆಂದು  ಅತನ ಪತ್ತೆಯ ಸಲುವಾಗಿ  ಅನೇಕ ಕಡೆಗಳಲ್ಲಿ  ನೆಂಟರು ಸ್ನೇಹಿತರ  ಬಳಿ ವಿಚಾರ ಮಾಡಲಾಗಿ ಪತ್ತೆಯಾಗದೆ ಇದ್ದರಿಂದ ಈ ದಿನ  ಪತ್ತೆ ಮಾಡುವ ಸಲುವಾಗಿ  ಕೊಟ್ಟ ದೂರಿನ ಮೇರೆಗೆ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಕೈಗೊಂಡಿರುತ್ತೆ.

 1. ಚಿಂತಾಮಣಿ ನಗರ ಪೊಲೀಸ್ ಠಾಣೆ ಮೊ.ಸಂ.73/2020 ಕಲಂ. 20B NARCOTIC DRUGS AND PSYCHOTROPIC SUBSTANCES ACT :-

          ಚಿಂತಾಮಣಿ ನಗರ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪಿ.ಎಸ್.ಐ (ಕಾ.ಸು-1) ನಾರಾಯಣಸ್ವಾಮಿ ಆದ ನಾನು ಚಿಂತಾಮಣಿ ನಗರ ಠಾಣೆಗೆ ಒದಗಿಸಿರುವ ಜೀಪ್ ಸಂಖ್ಯೆ: ಕೆಎ-07ಜಿ-188 ರಲ್ಲಿ ಜೀಪ್ ಚಾಲಕರಾಗಿ ಎ.ಪಿ.ಸಿ-64 ಚೌಡಪ್ಪ, ಪ್ರೋಬೆಷನರಿ ಪಿ.ಎಸ್.ಐ ಸತೀಶ್, ಪಿ.ಸಿ-426 ಸವರ್ೆಶ್ ಹಾಗು   ಚಿಕ್ಕಬಳ್ಳಾಪುರ ಜಿಲ್ಲಾ ಸಶಸ್ತ್ರ ಮೀಸಲು ಪಡೆ ಅಕ್ರಮ ಚುಟುವಟಿಕೆ ಮಾಹಿತಿ ಸಂಗ್ರಹಣೆ ಸಿಬ್ಬಂದಿಯವರಾದ ಎ.ಹೆಚ್.ಸಿ-62 ವಿರೇಂದ್ರ, ಎ.ಪಿ.ಸಿ-153 ದೀಲಿಪ್ ಕುಮಾರ್ ರವರೊಂದಿಗೆ ಈ ದಿನ ದಿನಾಂಕ:19/06/2020 ರಂದು ಮದ್ಯಾಹ್ನ 2-00 ಗಂಟೆಯಿಂದ ಚಿಂತಾಮಣಿ ನಗರದ ಎಂ.ಜಿ. ರಸ್ತೆ, ಗಜಾನನ ಸರ್ಕಲ್, ಬಾಗೇಪಲ್ಲಿ ಸರ್ಕಲ್ ಕಡೆ ಗಸ್ತು ಮಾಡಿಕೊಂಡು ಮದ್ಯಾಹ್ನ ಸುಮಾರು 3-00 ಗಂಟೆ ಸಮಯದಲ್ಲಿ ವೆಂಕಟಗಿರಿಕೋಟೆ ರಸ್ತೆಯಲ್ಲಿ ಗಸ್ತಿನಲ್ಲಿದ್ದಾಗ ಯಾರೋ ಒಬ್ಬ ಅಸಾಮಿ ಪೊಲೀಸ್ ಜೀಪ್ನ್ನು ನೋಡಿ ಓಡಲು ಪ್ರಾರಂಭಿಸಿದ, ಆಗ ನಾವು ಜೀಪಿನಲ್ಲಿ ಆತನನ್ನು ಹಿಂಬಾಲಿಸಿ ಹಿಡಿದುಕೊಂಡು ಪ್ರಶ್ನಿಸಿ ಆತನ ಹೆಸರು ವಿಳಾಸ ಕೇಳಲಾಗಿ ನಿಜಾಂಪಾಷ ಬಿನ್ ಬಾಬು, 30 ವರ್ಷ, ಮುಸ್ಲಿಂ, ಜನಾಂಗ, ಪೈಂಟರ್ ಕೆಲಸ, ವಾಸ ವೆಂಕಟಗಿರಿಕೋಟೆ, ಚಿಂತಾಮಣಿ ಟೌನ್ ಎಂದು ತಿಳಿಸಿದ್ದು, ನಂತರ ಏಕೆ ನಮ್ಮನ್ನು ನೋಡಿ ಓಡುತ್ತಿರುವುದು ಎಂದು ಕೇಳಿದ್ದಕ್ಕೆ ಸಮರ್ಪಕವಾದ ಉತ್ತರವನ್ನು ನೀಡಲಿಲ್ಲವಾದ್ದರಿಂದ ಅನುಮಾನ ಬಂದು ನಿಜಾಂಪಾಷ ರವರನ್ನು ಠಾಣೆಗೆ ಕರೆದುಕೊಂಡು ಬಂದು ವಿಚಾರ ಮಾಡಿ ಆತನನ್ನು ಪರಿಶೀಲಿಸಲಾಗಿ ಆತನ ಪ್ಯಾಂಟ್ ಜೇಬಿನಲ್ಲಿ ಮಾದಕ ವಸ್ತುವಾದ ಗಾಂಜಾ ಹದಿನೈದು (15) ಪ್ಯಾಕೆಟ್ಗಳಿದ್ದು, ಸದರಿ ಗಾಂಜಾವನ್ನು ಪ್ಲಾಸ್ಟಿಕ್ ಕವರ್ನಲ್ಲಿ ಹಾಕಿ ಪ್ಯಾಕ್ ಮಾಡಿದ್ದು, ಪ್ರತಿ ಪ್ಯಾಕೆಟ್ ನಲ್ಲಿ ಸುಮಾರು 10 ಗ್ರಾಂ ತೂಕದಷ್ಟು ಗಾಂಜಾ ಇರುತ್ತೆ. ನಿಜಾಂಪಾಷ ರವರನ್ನು ವಿಚಾರ ಮಾಡಲಾಗಿ ತಾನು ಬೆಂಗಳೂರು ವಾಸಿ ನನಗೆ ಪರಿಚಯವಿರುವ ರಿಯಾಜ್ ರವರಿಂದ ಗಾಂಜಾವನ್ನು ಖರೀದಿಸಿ ಹೆಚ್ಚಿನ ಬೆಲೆಗೆ ಚಿಂತಾಮಣಿಯಲ್ಲಿ ಮಾರಾಟ ಮಾಡಲು ತಂದಿರುವುದಾಗಿ ತಿಳಿಸಿದ್ದು, ಮೇಲ್ಕಂಡ ನಿಜಾಂಪಾಷ ಯಾವುದೇ ಪರವಾನಗಿ ಇಲ್ಲದೇ ಅಕ್ರಮವಾಗಿ ಮಾದಕ ವಸ್ತು ಗಾಂಜಾವನ್ನು ಬೇರೆ ಕಡೆಯಿಂದ ತಂದು ಹೆಚ್ಚಿನ ಬೆಲೆಗೆ ಮಾರಾಟ ಮಾಡಲು ಆತನ ಬಳಿ ಇಟ್ಟುಕೊಂಡಿದ್ದ ನಿಜಾಂಪಾಷ ರವರ ವಿರುದ್ದ ಇದೇ ದಿನ ಮದ್ಯಾಹ್ನ 3-15 ಗಂಟೆಗೆ ಠಾಣಾ ಮೊ.ಸಂ:73/2020 ಕಲಂ 20(ಬಿ) ಎನ್.ಡಿ.ಪಿ.ಎಸ್ ಆಕ್ಟ್ 1985 ರೀತ್ಯಾ ಸ್ವತಃ ಪ್ರಕರಣ ದಾಖಲಿಸಿಕೊಂಡಿರುತ್ತೆ.

 1. ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.148/2020 ಕಲಂ.379 ಐ.ಪಿ.ಸಿ:-

          ದಿನಾಂಕ 19-06-2020 ರಂದು  ರಾತ್ರಿ 08-00 ಗಂಟೆಗೆ ಪಿರ್ಯಾದಿದಾರರಾದ ಶ್ರೀ ಮೋಹನ್ .ಎನ್. ಪಿ.ಎಸ್.ಐ. ಗೌರಿಬಿದನೂರು ಗ್ರಾಮಾಂತರ ಠಾಣೆ ರವರು ಠಾಣೆಗೆ ಹಾಜರಾಗಿ ಮಾಲು ಮತ್ತು ಪಂಚನಾಮೆಯನ್ನು ಹಾಜರುಪಡಿಸಿದ್ದರ ಸಾರಾಂಶವೇನೆಂಧರೆ ದಿನಾಂಕ: 19/06/2020 ರಂದು ಸಂಜೆ 05-30 ಗಂಟೆಯಲ್ಲಿ ನಾನು ಸಿಬ್ಬಂದಿಯವರಾದ ಪಿ.ಸಿ. 381 ಜಗದೀಶ, ಪಿ.ಸಿ. 518 ಆನಂದ ಮತ್ತು ಎ.ಹೆಚ್.ಸಿ. 32 ಗಂಗುಲಪ್ಪರವರೊಂದಿಗೆ ವಿದುರಾಶ್ವಥ ಹೊರಠಾಣೆಯ ಕಡೆ ಗಸ್ತಿನಲ್ಲಿದ್ದಾಗ, ಗೌರಿಬಿದನೂರು ತಾಲ್ಲೂಕು ಇಡಗೂರು ಗ್ರಾಮದಲ್ಲಿ ಸರ್ಕಾರಿ ಕೆರೆಯಲ್ಲಿ  ಯಾರೋ ಯಾವುದೇ ಪರವಾನಗಿ ಇಲ್ಲದೇ ಅಕ್ರಮವಾಗಿ ಕಾಳಸಂತೆಯಲ್ಲಿ ಹೆಚ್ಚಿನ ಬೆಲೆಗೆ ಮರಳು ಮಾರಾಟ ಮಾಡುವ ಉದ್ದೇಶದಿಂದ ಮರಳನ್ನು ಕಳುವು ಮಾಡುತ್ತಿದ್ದಾರೆಂದು ಬಂದ ಖಚಿತ ಮಾಹಿತಿ ಮೇರೆಗೆ ಪಂಚರೊಂದಿಗೆ ಸರ್ಕಾರಿ ವಾಹನ ಕೆ.ಎ-40 ಜಿ-281 ವಾಹನದಲ್ಲಿ ಇಡಗೂರು ಗ್ರಾಮಕ್ಕೆ ಹೋಗಿ ಕೆರೆಯ ಬಳಿ  ಸ್ವಲ್ಪ ದೂರದಲ್ಲಿ ವಾಹನವನ್ನು ನಿಲ್ಲಿಸಿ ಮರೆಯಲ್ಲಿ ನಿಂತು ನೋಡಲಾಗಿ, ಕೆರೆಯಲ್ಲಿ ಒಂದು ಕೆಂಪು ಬಣ್ಣದ ಟಿಲ್ಲರ್ ಮತ್ತು ಟ್ರ್ಯಾಲಿ  ನಿಂತಿದ್ದು, ಅದಕ್ಕೆ ಮರಳನ್ನು ತುಂಬಿಸುತ್ತಿದ್ದು  ಪೊಲೀಸರನ್ನು ಕಂಡು ಅಲ್ಲಿದ್ದವರು ಟಿಲ್ಲರ್ ಮತ್ತು  ಟ್ರ್ಯಾಲಿಯನ್ನು ಬಿಟ್ಟು ಓಡಿಹೋದರು. ನಂತರ ಟಿಲ್ಲರ್  ಮತ್ತು ಟ್ರ್ಯಾಲಿಯನ್ನು ಪರಿಶೀಲಿಸಲಾಗಿ ಎಸ್.ವಿ.ಟಿ. ಶಕ್ತಿ ಕಂಪನಿಯ ಟಿಲ್ಲರ್ ಆಗಿದ್ದು, ಅದಕ್ಕೆ ಯಾವುದೇ ನೊಂದಣಿ ಸಂಖ್ಯೆ ಇರುವುದಿಲ್ಲ. ಟ್ರ್ಯಾಲಿಗೆ ನಂಬರ್ ಇರುವುದಿಲ್ಲ. ಮರಳು ಸಾಗಾಣಿಕೆ ಮಾಡಲು ಪರವಾನಗಿ ಇಲ್ಲದೇ ಇದ್ದು, ಸರ್ಕಾರದಿಂದ ಮರಳು ಸಾಗಾಣಿಕೆಯನ್ನು ನಿಷೇದ ಮಾಡಿದ್ದರೂ ಸಹ ಅಕ್ರಮವಾಗಿ ಕಾಳ ಸಂತೆಯಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ಉದ್ದೇಶದಿಂದ ಟಿಲ್ಲರ್ ನ ಚಾಲಕ ಮತ್ತು ಮಾಲೀಕ ಅಕ್ರಮವಾಗಿ ಗೌರಿಬಿದನೂರು ತಾಲ್ಲೂಕು ಇಡಗೂರು ಸರ್ಕಾರಿ ಕೆರೆಯಲ್ಲಿ ನೈಸರ್ಗಿಕ ಖನಿಜ ಸಂಪತ್ತಾದ ಮರಳನ್ನು ಕಳ್ಳತನ ಮಾಡುತ್ತಿದ್ದ ಸ್ಥಳದಲ್ಲಿ ಮರಳು ತುಂಬಿಕೊಳ್ಳುತ್ತಿದ್ದ ಟಿಲ್ಲರ್ ಮತ್ತು ಟ್ರ್ಯಾಲಿಯನ್ನು ಪಂಚರ ಸಮಕ್ಷಮದಲ್ಲಿ ಸಂಜೆ 06-30 ಗಂಟೆಯಿಂದ ಸಂಜೆ 07-30 ಗಂಟೆಯವರೆವಿಗೂ ಪಂಚನಾಮೆ ಮೂಲಕ ಅಮಾನತ್ತುಪಡಿಸಿಕೊಂಡಿರುತ್ತೆ. ಟಿಲ್ಲರ್ ಮತ್ತು ಟ್ರ್ಯಾಲಿಯೊಂದಿಗೆ ರಾತ್ರಿ 08-00 ಗಂಟೆಗೆ ಠಾಣೆಗೆ ವಾಪಸ್ಸು ಬಂದು ಟಿಲ್ಲರ್ & ಟ್ರ್ಯಾಲಿ ಮಾಲೀಕ ಮತ್ತು ಚಾಲಕನ ವಿರುದ್ದ ಕಾನೂನು ಕ್ರಮ ಜರುಗಿಸಲು  ಸೂಚಿಸಿದ್ದರ  ಮೇರೆಗೆ ಪ್ರಕರಣ ದಾಖಲಿಸಿರುವುದು.

 1. ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.149/2020 ಕಲಂ. 15(A),32(3) ಕೆ.ಇ ಆಕ್ಟ್:-

          ದಿನಾಂಕ 18-06-2020 ರಂದು 17-30 ಗಂಟೆಗೆ ಮಾನ್ಯ ಸಿ.ಪಿ.ಐ. ಗೌರಿಬಿದನೂರು ವೃತ್ತದ ಆರಕ್ಷಕ ವೃತ್ತ ನಿರೀಕ್ಷಕರಾದ ಶ್ರೀ ರವಿ .ಎಸ್. ರವರು ಠಾಣೆಗೆ ಹಾಜರಾಗಿ ಮಾಲುಗಳನ್ನು ಮತ್ತು ಪಂಚನಾಮೆಯನ್ನು ಹಾಜರುಪಡಿಸಿ ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ 18-06-2020 ರಂದು ಸಂಜೆ 04-00 ಗಂಟೆಯಲ್ಲಿ ಗೌರಿಬಿದನೂರು ತಾಲ್ಲೂಕು ಹೊಸೂರು ಹೋಬಳಿ ದಿಮ್ಮಘಟ್ಟನಹಳ್ಳಿ ಗ್ರಾಮದಲ್ಲಿ ಯಾರೋ ಆಸಾಮಿಯು ತನ್ನ ಮನೆಯಲ್ಲಿರುವ ಅಂಗಡಿಯ ಮುಂಭಾಗ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಮದ್ಯಪಾನವನ್ನು ಮಾಡಲು ಸ್ಥಳಾವಕಾಶವನ್ನು ಮಾಡಿಕೊಟ್ಟಿರುತ್ತಾನೆಂದು ಬಂದ ಖಚಿತವಾದ ಮಾಹಿತಿಯ ಮೇರೆಗೆ ತಾನು, ಸಿಬ್ಬಂದಿಯವರಾದ ಪಿ.ಸಿ. 105 ನವೀನ್ ಕುಮಾರ್ ಮತ್ತು ಪಂಚಾಯ್ತಿದಾರರೊಂದಿಗೆ ಸರ್ಕಾರಿ ವಾಹನ ಸಂಖ್ಯೆ ಕೆ.ಎ.40-ಜಿ-1222 ರಲ್ಲಿ ಶೀಗಲಹಳ್ಳಿ ಗ್ರಾಮಕ್ಕೆ ಹೋಗಿ ಸ್ವಲ್ಪ ದೂರದಲ್ಲಿ ವಾಹನವನ್ನು ನಿಲ್ಲಿಸಿ ಎಲ್ಲರೂ ಜೀಪಿನಿಂದ ಕೆಳಗೆ ಇಳಿದು ಮಾಹಿತಿ ಇದ್ದ ಸ್ಥಳಕ್ಕೆ ನಡೆದುಕೊಂಡು ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಯಾರೋ ಒಬ್ಬ ವ್ಯಕ್ತಿ ಅಂಗಡಿಯ ಮುಂದೆ ಪ್ಲಾಸ್ಟೀಕ್ ಬ್ಯಾಗ್ ಅನ್ನು ಹಿಡಿದುಕೊಂಡು ನಿಂತಿದ್ದು ಅಂಗಡಿಯ ಮುಂದೆ ಇತರೇ ಇಬ್ಬರು ಕುಳಿತಿದ್ದು ಅವರಿಗೆ ಪ್ಲಾಸ್ಟೀಕ್ ಬ್ಯಾಗ್ ಅನ್ನು ಹಿಡಿದುಕೊಂಡಿದ್ದವನು ಮದ್ಯದ ಪಾಕೇಟ್ ಗಳನ್ನು ತೆಗೆದುಕೊಡುತ್ತಿದ್ದು ಇಬ್ಬರು ವ್ಯಕ್ತಿಗಳು ಪ್ಲಾಸ್ಟೀಕ್ ಗ್ಲಾಸ್ ಗಳಲ್ಲಿ ಮದ್ಯಪಾನವನ್ನು ಮಾಡುತ್ತಿದ್ದು ಖಚಿತ ಪಡಿಸಿಕೊಂಡು ಅವರ ಬಳಿಗೆ ಹೋಗುವಷ್ಟರಲ್ಲಿ ಮದ್ಯಪಾನ ಮಾಡುತ್ತಿದ್ದ ಇಬ್ಬರು ವ್ಯಕ್ತಿಗಳು ಅಲ್ಲಿಂದ ಓಡಿಹೋಗಿದ್ದು , ಮದ್ಯವನ್ನು ಕೊಡುತ್ತಿದ್ದ ವ್ಯಕ್ತಿಯು ಸಹಾ ಪ್ಲಾಸ್ಟೀಕ್ ಬ್ಯಾಗ್ ಅನ್ನು ಬಿಸಾಡಿ ಅಲ್ಲಿಂದ ಓಡಿಹೋಗಿರುತ್ತಾನೆ. ಬಿಸಾಡಿದ್ದ ಪ್ಲಾಸ್ಟೀಕ್ ಬ್ಯಾಗ್ ಅನ್ನು ಪರಿಶೀಲಿಸಲಾಗಿ ಅದರಲ್ಲಿ 1) 90 ಎಂ.ಎಲ್. HAYWARDSCHEERS WHISKY ಯ 20 ಟೆಟ್ರಾ ಪಾಕೇಟ್ ಗಳು ಇದ್ದು ಒಟ್ಟು 1 ಲೀ.800 ಎಂ.ಎಲ್. ಆಗಿದ್ದು ಇದರ ಬೆಲೆ 702.60/- ರೂಗಳಾಗಿರುತ್ತೆ, ಮದ್ಯವನ್ನು ಮಾರಾಟವನ್ನು ಮಾಡುತ್ತಿದ್ದ ವ್ಯಕ್ತಿಯ ಹೆಸರು ವಿಳಾಸ ತಿಳಿಯಲಾಗಿ ಲೋಕೇಶ್ ಬಿನ್ ಲೇಟ್ ಮಲ್ಲಪ್ಪ, 38 ವರ್ಷ, ಗೊಲ್ಲರು, ವಾಸ ಶೀಗಲಹಳ್ಳಿ ಗ್ರಾಮ, ಗೌರಿಬಿದನೂರು ತಾಲ್ಲೂಕು ಎಂದು ತಿಳಿಯಿತು. ಅಂಗಡಿಯೂ ಸಹಾ ಅವನದೇ ಎಂದು ತಿಳಿಯಿತು. ಸ್ಥಳದಲ್ಲಿ 2) 02 ಖಾಲಿ HAYWARDSCHEERS WHISKY ಯ ಟೆಟ್ರಾ ಪಾಕೇಟ್ ಗಳು, 3) 02 ಖಾಲಿ ಪ್ಲಾಸ್ಟೀಕ್ ಗ್ಲಾಸ್ ಗಳು, 4) ಒಂದು ಪ್ಲಾಸ್ಟೀಕ್ ಬ್ಯಾಗ್ ಗಳನ್ನು ಪಂಚರ ಸಮಕ್ಷಮ ಪಂಚನಾಮೆಯನ್ನು ಸಂಜೆ 04-15 ಗಂಟೆಯಿಂದ 05-15 ಗಂಟೆಯವರೆಗೆ ಜರುಗಿಸಿ ಅಮಾನತ್ತುಪಡಿಸಿಕೊಂಡಿರುತ್ತೆ. ಆಸಾಮಿಗೆ ಸ್ಥಳದಲ್ಲಿ ಮದ್ಯವನ್ನು ಕುಡಿಯಲು, ಮಾರಾಟವನ್ನು ಮಾರಾಟವನ್ನು ಮಾಡಲು ಯಾವುದೇ ಪರವಾನಗಿಯಿಲ್ಲದೇ ಇದ್ದು ಆಸಾಮಿಯ ವಿರುದ್ದ ಸಂಜೆ 05-30 ಗಂಟೆಗೆ ವಾಪಸ್ಸು ಬಂದು ಮುಂದಿನ ಕ್ರಮಕ್ಕಾಗಿ ಮೇಮೋ ನೊಂದಿಗೆ ದೂರು ನೀಡಿರುವುದಾಗಿರುತ್ತೆ.

 1. ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.150/2020 ಕಲಂ. 15(A),32(3) ಕೆ.ಇ ಆಕ್ಟ್:-

          ದಿನಾಂಕ 18-06-2020 ರಂದು 19-15 ಗಂಟೆಗೆ ಮಾನ್ಯ ಸಿ.ಪಿ.ಐ. ಗೌರಿಬಿದನೂರು ವೃತ್ತದ ಆರಕ್ಷಕ ವೃತ್ತ ನಿರೀಕ್ಷಕರಾದ ಶ್ರೀ ರವಿ .ಎಸ್. ರವರು ಠಾಣೆಗೆ ಹಾಜರಾಗಿ ಮಾಲುಗಳನ್ನು ಮತ್ತು ಪಂಚನಾಮೆಯನ್ನು ಹಾಜರುಪಡಿಸಿ ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ 18-06-2020 ರಂದು ಸಂಜೆ 06-00 ಗಂಟೆಯಲ್ಲಿ ಗೌರಿಬಿದನೂರು ತಾಲ್ಲೂಕು ಹೊಸೂರು ಹೋಬಳಿ ದಿಮ್ಮಘಟ್ಟನಹಳ್ಳಿ ಗ್ರಾಮದಲ್ಲಿ ಯಾರೋ ಆಸಾಮಿಯು ತನ್ನ ಮನೆಯಲ್ಲಿರುವ ಅಂಗಡಿಯ ಮುಂಭಾಗ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಮದ್ಯಪಾನವನ್ನು ಮಾಡಲು ಸ್ಥಳಾವಕಾಶವನ್ನು ಮಾಡಿಕೊಟ್ಟಿರುತ್ತಾನೆಂದು ಬಂದ ಖಚಿತವಾದ ಮಾಹಿತಿಯ ಮೇರೆಗೆ ತಾನು, ಸಿಬ್ಬಂದಿಯವರಾದ ಪಿ.ಸಿ. 105 ನವೀನ್ ಕುಮಾರ್ ಮತ್ತು ಪಂಚಾಯ್ತಿದಾರರೊಂದಿಗೆ ಸರ್ಕಾರಿ ವಾಹನ ಸಂಖ್ಯೆ ಕೆ.ಎ.40-ಜಿ-1222 ರಲ್ಲಿ ಶೀಗಲಹಳ್ಳಿ ಗ್ರಾಮಕ್ಕೆ ಹೋಗಿ ಸ್ವಲ್ಪ ದೂರದಲ್ಲಿ ವಾಹನವನ್ನು ನಿಲ್ಲಿಸಿ ಎಲ್ಲರೂ ಜೀಪಿನಿಂದ ಕೆಳಗೆ ಇಳಿದು ಮಾಹಿತಿ ಇದ್ದ ಸ್ಥಳಕ್ಕೆ ನಡೆದುಕೊಂಡು ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಯಾರೋ ಒಬ್ಬ ವ್ಯಕ್ತಿ ಅಂಗಡಿಯ ಮುಂದೆ ಪ್ಲಾಸ್ಟೀಕ್ ಬ್ಯಾಗ್ ಅನ್ನು ಹಿಡಿದುಕೊಂಡು ನಿಂತಿದ್ದು ಅಂಗಡಿಯ ಮುಂದೆ ಇತರೇ ಇಬ್ಬರು ಕುಳಿತಿದ್ದು ಅವರಿಗೆ ಪ್ಲಾಸ್ಟೀಕ್ ಬ್ಯಾಗ್ ಅನ್ನು ಹಿಡಿದುಕೊಂಡಿದ್ದವನು ಮದ್ಯದ ಪಾಕೇಟ್ ಗಳನ್ನು ತೆಗೆದುಕೊಡುತ್ತಿದ್ದು ಇಬ್ಬರು ವ್ಯಕ್ತಿಗಳು ಪ್ಲಾಸ್ಟೀಕ್ ಗಗ್ಲಾಸ್ ಗಳಲ್ಲಿ ಮದ್ಯಪಾನವನ್ನು ಮಾಡುತ್ತಿದ್ದು ಖಚಿತ ಪಡಿಸಿಕೊಂಡು ಅವರ ಬಳಿಗೆ ಹೋಗುವಷ್ಟರಲ್ಲಿ ಮದ್ಯಪಾನ ಮಾಡುತ್ತಿದ್ದ ಇಬ್ಬರು ವ್ಯಕ್ತಿಗಳು ಅಲ್ಲಿಂದ ಓಡಿಹೋಗಿದ್ದು , ಮದ್ಯವನ್ನು ಕೊಡುತ್ತಿದ್ದ ವ್ಯಕ್ತಿಯು ಸಹಾ ಪ್ಲಾಸ್ಟೀಕ್ ಬ್ಯಾಗ್ ಅನ್ನು ಬಿಸಾಡಿ ಅಲ್ಲಿಂದ ಓಡಿಹೋಗಿರುತ್ತಾನೆ. ಬಿಸಾಡಿದ್ದ ಪ್ಲಾಸ್ಟೀಕ್ ಬ್ಯಾಗ್ ಅನ್ನು ಪರಿಶೀಲಿಸಲಾಗಿ ಅದರಲ್ಲಿ 1) 90 ಎಂ.ಎಲ್. HAYWARDSCHEERS WHISKY ಯ 21 ಟೆಟ್ರಾ ಪಾಕೇಟ್ ಗಳು ಇದ್ದು ಒಟ್ಟು 1 ಲೀ.890 ಎಂ.ಎಲ್. ಆಗಿದ್ದು ಇದರ ಬೆಲೆ 737.73/- ರೂಗಳಾಗಿರುತ್ತೆ, ಮದ್ಯವನ್ನು ಮಾರಾಟವನ್ನು ಮಾಡುತ್ತಿದ್ದ ವ್ಯಕ್ತಿಯ ಹೆಸರು ವಿಳಾಸ ತಿಳಿಯಲಾಗಿ ರಾಮಕೃಷ್ಣ ಬಿನ್ ಆಳ್ಳಪ್ಪ, 32 ವರ್ಷ, ಕುರುಬರು, ವಾಸ ಮೇಲಿನ ದಿಮ್ಮಘಟ್ಟನಹಳ್ಳಿ ಗ್ರಾಮ, ಗೌರಿಬಿದನೂರು ತಾಲ್ಲೂಕು ಎಂದು ತಿಳಿಯಿತು. ಅಂಗಡಿಯೂ ಸಹಾ ಅವನದೇ ಎಂದು ತಿಳಿಯಿತು. ಸ್ಥಳದಲ್ಲಿ 2) 02 ಖಾಲಿ HAYWARDSCHEERS WHISKY ಯ ಟೆಟ್ರಾ ಪಾಕೇಟ್ ಗಳು, 3) 02 ಖಾಲಿ ಪ್ಲಾಸ್ಟೀಕ್ ಗ್ಲಾಸ್ ಗಳು, 4) ಒಂದು ಪ್ಲಾಸ್ಟೀಕ್ ಬ್ಯಾಗ್ ಗಳನ್ನು ಪಂಚರ ಸಮಕ್ಷಮ ಪಂಚನಾಮೆಯನ್ನು ಸಂಜೆ 06-15 ಗಂಟೆಯಿಂದ 07-00 ಗಂಟೆಯವರೆಗೆ ಜರುಗಿಸಿ ಅಮಾನತ್ತುಪಡಿಸಿಕೊಂಡಿರುತ್ತೆ. ಆಸಾಮಿಗೆ ಸ್ಥಳದಲ್ಲಿ ಮದ್ಯವನ್ನು ಕುಡಿಯಲು, ಮಾರಾಟವನ್ನು ಮಾರಾಟವನ್ನು ಮಾಡಲು ಯಾವುದೇ ಪರವಾನಗಿಯಿಲ್ಲದೇ ಇದ್ದು ಆಸಾಮಿಯ ವಿರುದ್ದ ಸಂಜೆ 07-15 ಗಂಟೆಗೆ ವಾಪಸ್ಸು ಬಂದು ಮುಂದಿನ ಕ್ರಮಕ್ಕಾಗಿ ಮೇಮೋ ನೊಂದಿಗೆ ದೂರು ನೀಡಿರುವುದಾಗಿರುತ್ತೆ.

 1. ಗೌರಿಬಿದನೂರು ಪುರ ಪೊಲೀಸ್ ಠಾಣೆ ಮೊ.ಸಂ.77/2020 ಕಲಂ. 78(3) ಕೆ.ಪಿ  ಆಕ್ಟ್:-

          ದಿನಾಂಕ 19/06/2020 ರಂದು ಸಂಜೆ 5:00 ಗಂಟೆಯಲ್ಲಿ ನ್ಯಾಯಾಲಯದ ಪಿ.ಸಿ 520 ರಂಗನಾಥ ರವರು ನೀಡಿದ ನ್ಯಾಯಾಲಯದ ಅನುಮತಿ ಪತ್ರದ ಸಾರಾಂಶವೇನೆಂದರೆ, ಲೋಕೇಶ್, ಸಿ.ಹೆಚ್.ಸಿ.214 ರವರು ದಿನಾಂಕ: 18-06-2020 ರಂದು  ಸಂಜೆ 6.00 ಗಂಟೆಯಲ್ಲಿ ನಗರದ ಲಕ್ಷ್ಮಿ ಲಾಡ್ಜ್ ಪಕ್ಕದಲ್ಲಿ ಯಾರೋ ಒಬ್ಬ ಆಸಾಮಿ ಮಟ್ಕಾ ಜೂಜಾಟವಾಡುತ್ತಿರುವುದಾಗಿ ಮಾಹಿತಿ ಬಂದಿದ್ದು ಕೂಡಲೇ ತಾನು ಪಿ.ಎಸ್.ಐ ರವರಿಗೆ ಮಾಹಿತಿ ನೀಡಿ ಅನುಮತಿಯನ್ನು ಪಡೆದು ಸಿ,ಹೆಚ್.ಸಿ.244 ಗೋಪಾಲ ಮತ್ತು ಸಿ.ಹೆಚ್.ಸಿ.12 ಶಿವಶಂಕರಪ್ಪ ರವರ ಜೊತೆ ಲಕ್ಷ್ಮಿ ಲಾಡ್ಜ್ ಬಳಿ ಹೋಗಿ ಅಲ್ಲಿ ಪಂಚಾಯ್ತಿದಾರರನ್ನು ಕರೆದುಕೊಂಡು ಸ್ವಲ್ಪ ದೂರ ನಡೆದುಕೊಂಡು ಹೋಗಿ ನೋಡಲಾಗಿ ಯಾರೋ ಆಸಾಮಿ ಸಾರ್ವಜನಿಕರು ಓಡಾಡುವ ಸ್ಥಳದಲ್ಲಿ  1/- ರೂಪಾಯಿಗೆ 70/- ರೂಪಾಯಿಗಳನ್ನು ಕೊಡುವುದಾಗಿ ಕೂಗಾಡುತ್ತಿರುವುದು ಕಂಡುಬಂದಿತು. ತಾನು ಮತ್ತು ಸಿ,ಹೆಚ್.ಸಿ.244 ಗೋಪಾಲ ರವರು ಪಂಚರ ಸಮ್ಮುಖದಲ್ಲಿ ಸುತ್ತುವರಿದು ಹಿಡಿದುಕೊಂಡು, ಅವನ ಹೆಸರು ಮತ್ತು ವಿಳಾಸವನ್ನು ಕೇಳಲಾಗಿ ಶಬ್ಬೀರ್ ಬಿನ್ ಬುಡೇನ್ ಸಾಬ್, 46 ವರ್ಷ, ಮುಸ್ಲಿಂರು, ಕಾರ್ ಪೆಂಟರ್ ಕೆಲಸ, ಆಜಾದ್ ನಗರ, ಗೌರಿಬಿದನೂರು ನಗರ ಫೋನ್.ನಂ.7760683701 ಎಂದು ತಿಳಿಸಿದ್ದು, ಅವನಿಗೆ ಮಟ್ಕಾ ಜೂಜಾಟವಾಡುವುದಕ್ಕೆ ಯಾವುದಾದರೂ ಪರವಾನಗಿ ಇದೆಯೇ ಎಂದು ಕೇಳಿದಾಗ ಅವನ ಬಳಿ ಯಾವುದೆ ಪರವಾನಗಿ ಇಲ್ಲವೆಂದು ತಿಳಿಸಿದನು ಆ ಸಮಯದಲ್ಲಿ ಆ ವ್ಯಕ್ತಿಯ ಅಂಗಶೋಧನೆ ಮಾಡಲಾಗಿ  ಒಂದು ಮಟ್ಕಾಚೀಟಿ ಬರೆಯುವ ಪುಸ್ತಕ, ಒಂದು ಬಾಲ್ ಪಾಯಿಂಟ್ ಪೆನ್ನು ಮತ್ತು ನಗದು ಹಣ 410/- ರೂಪಾಯಿಗಳು  ಇದ್ದು, ಹಣದ ಬಗ್ಗೆ ವಿಚಾರ ಮಾಡಲಾಗಿ ಮಟ್ಕಾ ಜೂಜಾಟದಿಂದ ಬಂದ ಹಣ ಎಂದು ತಿಳಿಸಿದನು ನಂತರ ಆರೋಪಿಯನ್ನು ವಶಕ್ಕೆ ಪಡೆದು ಮಾಲು ಮತ್ತು ಆರೋಪಿಯೊಂದಿಗೆ ಠಾಣೆಗೆ ಹಾಜರಾಗಿ ಮುಂದಿನ ಕ್ರಮದ ಬಗ್ಗೆ ವರದಿಯ ಮೇರೆಗೆ ಎನ್.ಸಿ ಆರ್ ದಾಖಲಿಸಿರುತ್ತೆ. ನಂತರ ಇ ದಿನ ದಿನಾಂಕ 19/06/2020 ರಂದು ನ್ಯಾಯಾಲಯದ ಅನುಮತಿಯನ್ನು ಪಡೆದು ಪ್ರಕರಣ ದಾಖಲಿಸಿರುತ್ತೆ.

 1. ಗುಡಿಬಂಡೆ ಪೊಲೀಸ್ ಠಾಣೆ ಮೊ.ಸಂ.96/2020 ಕಲಂ. 32,34 ಕೆ.ಇ  ಆಕ್ಟ್:-

          ದಿನಾಂಕ 19/06/2020 ರಂದು ರಾತ್ರಿ 7-45 ಗಂಟೆಗೆ ಪಿರ್ಯಾಧಿದಾರರು ಗುಡಿಬಂಡೆ ಪೊಲೀಸ್ ಠಾಣೆ ಪಿ.ಐ. ಸಾಹೇಬರು ಠಾಣೆಗೆ ಹಾಜರಾಗಿ ಮಾಲು ಮತ್ತು ಅಸಲು ಮಹಜರ್ ನೊಂದಿಗೆ ನೀಡಿದ ದೂರಿನ ಸಾರಾಂಶವೇನೆಂದರೆ, ತಾನು ಈ ದಿನ ದಿನಾಂಕ:19/06/2020 ರಂದು ಸಂಜೆ 5-00 ಗಂಟೆಯ ಸಮಯದಲ್ಲಿ ಗುಡಿಬಂಡೆ ತಾಲ್ಲೂಕು ಸೋಮೇನಹಳ್ಳಿ ಗ್ರಾಮದ ಬಳಿ ಸಿಬ್ಬಂದಿಗಳೊಂದಿಗೆ ಕೆಎ40-ಜಿ-1888 ರ ಸರ್ಕಾರಿ ಪೊಲೀಸ್ ಜೀಪಿನಲ್ಲಿ ಸಂಜೆ ಗಸ್ತಿನಲ್ಲಿದ್ದಲ್ಲಿದ್ದಾಗ ಸೋಮೇನಹಳ್ಳಿ ಗ್ರಾಮದ ರಾಮಕೃಷ್ಣಪ್ಪ ಎಂಬುವನು ಅವರ ಚಿಲ್ಲರೆ ಅಂಗಡಿಯ ಬಳಿ ಅಕ್ರಮವಾಗಿ ಮದ್ಯವನ್ನು ಇಟ್ಟುಕೊಂಡು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿರುತ್ತಾನೆಂದು ಖಚಿತವಾದ ಮಾಹಿತಿ ಬಂದ ಮೇರೆಗೆ ಜೊತೆಯಲ್ಲಿದ್ದ ಸಿಬ್ಬಂದಿಗಳಾದ ಹೆಚ್.ಸಿ. 29 ಶ್ರೀನಿವಾಸ ಪಿಸಿ 188 ಪರಸಪ್ಪ ರಾಥೋಡ ರವರಿಗೆ ಮಾಹಿತಿ ತಿಳಿಸಿ ಸಂಜೆ 5-15 ಗಂಟೆಗೆ ಸೋಮೇನಹಳ್ಳಿ ಬಸ್ಸು ನಿಲ್ದಾಣದ ಬಳಿ ಹೋಗಿ ಅಲ್ಲಿ ಪಂಚರನ್ನು ಬರ ಮಾಡಿಕೊಂಡು ಪಂಚರೋಂದಿಗೆ ಜೀಪಿನಲ್ಲಿ ಸಂಜೆ 5-25 ಗಂಟೆಗೆ ರಾಮಕೃಷ್ಣಪ್ಪ ರವರ ಚಿಲ್ಲರೆ ಅಂಗಡಿಯ ಬಳಿ  ಹೋಗುವಷ್ಟರಲ್ಲಿ ಮಾಹಿತಿಯಂತೆ ಅಲ್ಲಿದ್ದ ರಾಮಕೃಷ್ಣಪ್ಪ ಸ್ವಲ್ಪದೂರದಿಂದಲೇ ಪೊಲೀಸ್ ಜೀಪನ್ನು ಕಂಡು ಸ್ಥಳದಲ್ಲಿ ಮಾಲನ್ನು ಬಿಟ್ಟು  ಓಡಿ ಹೋಗಿದ್ದು, ಸ್ಥಳದಲ್ಲಿದ್ದ ಚೀಲವನ್ನು ಪಂಚರೊಂದಿಗೆ ಪರಿಶೀಲನೆ ಮಾಡಲಾಗಿ, ಅದರಲ್ಲಿ ಮದ್ಯವುಳ್ಳ 1) HAYWARDS CHEERS WHISKY ಯ -90 ML ಸಾಮರ್ಥ್ಯದ 35.13 ರೂ ಮುಖ ಬೆಲೆಯ ಒಟ್ಟು 1370/- ರೂ ಬೆಲೆ ಬಾಳುವ 39 ಟೆಟ್ರಾ ಪಾಕೆಟ್ ಗಳು, 2)  HAYWARDS CHEERS WHISKY ಯ -180 ML ಸಾಮರ್ಥ್ಯದ 60.64 ರೂ ಮುಖ ಬೆಲೆಯ ಒಟ್ಟು 485/- ರೂ ಬೆಲೆ ಬಾಳುವ 8 ಟೆಟ್ರಾ ಪಾಕೆಟ್ ಗಳು, 3) Mc Dowell”s DELUXE RUM ನ -90 ML ಸಾಮರ್ಥ್ಯದ 45.10 ರೂ ಮುಖ ಬೆಲೆಯ ಒಟ್ಟು 902/- ರೂ ಬೆಲೆ ಬಾಳುವ 20 ಟೆಟ್ರಾ ಪಾಕೆಟ್ ಗಳು, 4) KINGFISHER STRONG ಬೀರ್ ನ -330 ML ಸಾಮರ್ಥ್ಯದ 85 ರೂ ಮುಖ ಬೆಲೆಯ ಒಟ್ಟು 595/- ರೂ ಬೆಲೆ ಬಾಳುವ 7 ಟಿನ್ ಗಳು,  5) KINGFISHER STRONG ಬೀರ್ ನ -650 ML ಸಾಮರ್ಥ್ಯದ 150 ರೂ ಮುಖ ಬೆಲೆಯ ಒಟ್ಟು 900/- ರೂ ಬೆಲೆ ಬಾಳುವ 6 ಬಾಟಲ್ ಗಳಿದ್ದವು, ಗ್ರಾಮದಲ್ಲಿ ಸದರಿ ಆಸಾಮಿಯ  ಹೆಸರು ಮತ್ತು ವಿಳಾಸ ರಾಮಕೃಷ್ಣಪ್ಪ ಬಿನ್ ಲೇಟ್ ಹನುಮಂತಪ್ಪ 45 ವರ್ಷ ಬಲಜಿಗ ಜನಾಂಗ, ಚಿಲ್ಲರೆ ಅಂಗಡಿ ವ್ಯಾಪಾರ, ವಾಸ ಸೋಮೇನಹಳ್ಳಿ ಗ್ರಾಮ, ಗುಡಿಬಂಡೆ ತಾಲೂಕು ಎಂದು ತಿಳಿಯಿತು. ನಂತರ ಸದರಿ ಆಸಾಮಿ ಇಷ್ಟು ಪ್ರಮಾಣದ ಮದ್ಯವನ್ನು ಅಕ್ರಮವಾಗಿ ಇಟ್ಟುಕೊಂಡು ಕಾನೂನು ಬಾಹಿರವಾಗಿ ಸಾರ್ವಜನಿಕರಿಗೆ ಮಾರಾಟ ಮಾಡುವುದು ಕಂಡು ಬಂದಿರುತ್ತೆ. ನಂತರ ಪಂಚರ ಸಮಕ್ಷಮ ಸ್ಥಳದಲ್ಲಿ ಮೇಲ್ಕಂಡ ಐಟಂನಲ್ಲಿ ಒಂದೊಂದನ್ನು ಅಲಾಯಿದಾಗಿ ಬಿಳಿ ಬಟ್ಟ ಚೀಲದಲ್ಲಿಟ್ಟು ಅರಗು ಮಾಡಿ “P” ಎಂಬ ಅಕ್ಷರದಿಂದ ಸೀಲು ಮಾಡಿ ಎಫ್.ಎಸ್.ಎಲ್. ಗೆ ಕಳುಹಿಸಿ ಕೊಡಲು ಶೇಖರಿಸಿರುತ್ತೆ. ಸದರಿ ಮಾಲನ್ನು ಚೀಲ ಸಮೇತ ಸಂಜೆ 5-45 ಗಂಟೆಯಿಂದ ಸಂಜೆ 6-45 ಗಂಟೆವರೆಗೂ ಪಂಚರ ಸಮಕ್ಷಮ ಜರುಗಿಸಿದ ಪಂಚನಾಮೆ ಕಾಲದಲ್ಲಿ ಅಮಾನತ್ತುಪಡಿಸಿಕೊಂಡು ಸದರಿ ಮಾಲನ್ನು ಅಸಲು ಪಂಚನಾಮೆಯೊಂದಿಗೆ ರಾತ್ರಿ 7-15 ಗಂಟೆಗೆ ಠಾಣೆಗೆ ಬಂದು ವರದಿಯನ್ನು ಸಿದ್ದಪಡಿಸಿ ರಾತ್ರಿ 7-45 ಗಂಟೆಗೆ ಹಾಜರುಪಡಿಸಿ ಸದರಿ ಓಡಿ ಹೋದ ಆರೋಪಿತ ರಾಮಕೃಷ್ಣಪ್ಪ  ವಿರುದ್ದ ಮುಂದಿನ ಕಾನೂನು ಕ್ರಮ ಕೈಗೊಳ್ಳಲು ಕೋರಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುತ್ತೆ.

 1. ಗುಡಿಬಂಡೆ ಪೊಲೀಸ್ ಠಾಣೆ ಮೊ.ಸಂ.97/2020 ಕಲಂ. 504,506,114,307 ರೆ/ವಿ 34 ಐ.ಪಿ.ಸಿ :-

          ದಿನಾಂಕ 20/06/2020 ರಂದು ಬೆಳಿಗ್ಗೆ 10-30 ಗಂಟೆಗೆ ಪಿರ್ಯಾಧಿ ಚಿಕ್ಕಬಳ್ಳಾಪುರ ತಾಲ್ಲೂಕು ಬಂಡಹಳ್ಳಿ ಗ್ರಾಮದ  ಲಕ್ಷ್ಮೀಪತಿ ಬಿನ್ ವೆಂಕಟೇಶಪ್ಪ ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ,   ತಮ್ಮ ತಂದೆಯ ಅಣ್ಣ ತಮ್ಮಂದಿರು ಒಟ್ಟು ನಾಲ್ಕು ಜನರು ಈ ಪೈಕಿ 1ನೇ ತನ್ನ ತಂದೆ ವೆಂಕಟೇಶಪ್ಪ 2ನೇ ಶ್ರೀನಿವಾಸ, 3ನೇ ಕೃಷ್ಣಪ್ಪ, 4ನೇ ಮಂಜುನಾಥ ಆಗಿರುತ್ತಾರೆ. ತಮ್ಮ ತಂದೆಯ ಅಣ್ಣ ತಮ್ಮಂದಿರು ಎಲ್ಲರು ಬೇರೆ ಬೇರೆಯಾಗಿ ಸಂಸಾರ ಮಾಡುತ್ತಿರುತ್ತಾರೆ. ತಮಗೂ ಮತ್ತು ತನ್ನ ಚಿಕ್ಕಪ್ಪಂದಿರಾದ ಶ್ರೀನಿವಾಸ ಬಿನ್ ಪಿಳ್ಳವೆಂಕಟಪ್ಪ ಮತ್ತು ಮಂಜುನಾಥ ಬಿನ್ ಪಿಳ್ಳವೆಂಕಟಪ್ಪ ರವರಿಗೆ ಮನೆಯ ವಿಭಾಗ ವಿಚಾರದಲ್ಲಿ ತಕರಾರುಗಳಿದ್ದು, ಆಗಾಗ ತನ್ನ ಚಿಕ್ಕಪ್ಪಂದಿರಾದ ಶ್ರೀನಿವಾಸ ಬಿನ್ ಪಿಳ್ಳವೆಂಕಟಪ್ಪ ಮತ್ತು ಮಂಜುನಾಥ ಬಿನ್ ಪಿಳ್ಳವೆಂಕಟಪ್ಪ ರವರುಗಳು ತಮ್ಮ ಮೇಲೆ ಜಗಳ ಮಾಡುತ್ತಿದ್ದರು, ಹೀಗಿರುವಲ್ಲಿ ದಿನಾಂಕ 15/06/2020 ರಂದು ರಾತ್ರಿ ಸುಮಾರು 8-30 ಗಂಟೆಯ ಸಮಯದಲ್ಲಿ ತನ್ನ ಚಿಕ್ಕಪ್ಪಂದಿರಾದ ಶ್ರೀನಿವಾಸ ಬಿನ್ ಪಿಳ್ಳವೆಂಕಟಪ್ಪ ಮತ್ತು ಮಂಜುನಾಥ ಬಿನ್ ಪಿಳ್ಳವೆಂಕಟಪ್ಪ ರವರುಗಳು ತಮ್ಮ ಮನೆಯ ಹತ್ತಿರ ಬಂದು ತನ್ನ ತಾಯಿ ಪ್ರಮೀಳಮ್ಮ ಕೊಂ ವೆಂಕಟೇಶಪ್ಪ 40 ವರ್ಷ ರವರಿಗೆ ಕುಡಿಯಲು ಹಣ ಕೇಳಿದರು, ಆಗ ತನ್ನ ತಾಯಿ ತನ್ನ ಹತ್ತಿರ ಯಾವುದೇ ಹಣ ಇಲ್ಲ ಊಟ ಮಾಡಿಕೊಂಡು ಹೋಗಿ ಎಂದು ಹೇಳಿದರು. ಅದಕ್ಕೆ ಅವರುಗಳು ತಮಗೆ ಹಣ ಕೊಡದಿಲ್ವಾ ನಿನಗೆ ಒಂದು ಗತಿ ಕಾಣಿಸುತ್ತೇವೆಂದು ಹೇಳಿ ಅಲ್ಲಿಂದ ಹೊರಟು ಹೋದರು. ತಮ್ಮ ಮನೆಯಲ್ಲಿ ರಾತ್ರಿ ತಾನು ಮತ್ತು ತನ್ನ ಅಣ್ಣ ರಮೇಶ ರವರು ನಮ್ಮ ಮನೆಯಲ್ಲಿ ಮಲಗಿಕೊಂಡೆವು,ತನ್ನ ತಾಯಿ ಮತ್ತು ತನ್ನ ತಂದೆ ತಮ್ಮ ನೆಯ ಮುಂದೆ ಬಾಗಿಲು ಬಳಿ ಮಲಗಿಕೊಂಡಿದ್ದು, ರಾತ್ರಿ ತನ್ನ ತಂದೆ 12-30 ಗಂಟೆಯ ಸಮಯದಲ್ಲಿ ಜಮೀನಿಗೆ ನೀರು ಹಾಯಿಸಲು ಹೋಗಿದ್ದು,  ತನ್ನ ತಾಯಿ ಮನೆಯ ಮುಂದೆ ಮಲಗಿಕೊಂಡಿದ್ದರಿಂದ ತಾವು ಮನೆಯ ಬಾಗಿಲು ಹಾಕದೇ ಇದ್ದು, ಹೀಗಿರುವಲ್ಲಿ ಅಂದೇ ರಾತ್ರಿ ಅಂದರೆ ದಿನಾಂಕ 16/06/2020 ರಂದು ಬೆಳಗಿನ ಜಾವ ಸುಮಾರು 1-30 ಗಂಟೆಯ ಸಮಯದಲ್ಲಿ ತನ್ನ ಚಿಕ್ಕಪ್ಪ ಮಂಜುನಾಥ ಬಿನ್ ಪಿಳ್ಳವೆಂಕಟಪ್ಪ ರವರು ತಮ್ಮ ಮನೆಗೆ ಬಂದು ತನ್ನ ತಾಯಿ ಪ್ರಮೀಳಮ್ಮನನ್ನು ಕುರಿತು ಏನೇ ಬೇವರ್ಷಿ ಮುಂಡೆ ಹಣ ಕೇಳಿದರೆ ಇಲ್ಲ ಅಂತಿಯಾ ನಿನ್ನನ್ನು ಸಾಯಿಸದೇ ಬಿಡುವುದಿಲ್ಲ ಎಂತ ಹೇಳಿ ತಾನು ತಂದಿದ್ದ ದೊಣ್ಣೆಯಿಂದ ಕೊಲೆ ಮಾಡುವ ಉದ್ದೇಶದಿಂದ ತಾವು ಮೇಲೆ ಏಳೋದರಲ್ಲಿ ತನ್ನ ತಾಯಿಯ ತಲೆಯ ಎಡಭಾಗಕ್ಕೆ ಮತ್ತು ತಲೆಯ ಹಿಂಭಾಗಕ್ಕೆ ಹೊಡೆದು ರಕ್ತಗಾಯ ಉಂಟುಪಡಿಸಿದ್ದು, ಆಗ ಆಗ ತಾನು, ತನ್ನ ಅಣ್ಣ ರಮೇಶ ಮಂಜುನಾಥನ್ನು ಹಿಡಿದಿಕೊಳ್ಳಲು ಹೋದಾಗ ನಿಮ್ಮನ್ನು ಬಿಡುವುದಿಲ್ಲ ನಿಮಗೆ ಒಂದು ಗತಿ ಕಾಣಿಸುತ್ತೇನೆಂದು ಹೇಳಿ ಪ್ರಾಣ ಬೆದರಿಕೆ ಹಾಕಿ ದೊಣ್ಣೆಯನ್ನು ಸ್ಥಳದಲ್ಲಿ ಬಿಸಾಡಿ ಹೋಗಿದ್ದು, ತನ್ನ ತಾಯಿಗೆ ಹೊಡೆಯ ಶ್ರೀನಿವಾಸ ಕುಮ್ಮಕ್ಕು ನೀಡಿದ್ದು, ಕಾನೂನು ರೀತ್ಯಾ ಕ್ರಮ ಜರುಗಿಸಬೇಕೆಂದು ಕೋರಿ ನೀಡಿದ ದೂರಿನ ಮೇರಗೆ ಪ್ರಕರಣ ದಾಖಲಿಸಿಕೊಂಡಿರುತ್ತೆ.

 1. ಗುಡಿಬಂಡೆ ಪೊಲೀಸ್ ಠಾಣೆ ಮೊ.ಸಂ.98/2020 ಕಲಂ. 15(A),32(3) ಕೆ.ಇ ಆಕ್ಟ್:-

          ದಿನಾಂಕ;20/06/2020 ರಂದು ಬೆಳಿಗ್ಗೆ 11-30 ಗಂಟೆಗೆ ನ್ಯಾಯಾಲಯದ ಪಿಸಿ-89 ಮಂಜುನಾಥ ರವರು ಕ್ರಿಮಿನಲ್ ಪ್ರಕರಣ ದಾಖಲಿಸಲು ಘನ ನ್ಯಾಯಾಲಯದ ಅನುಮತಿಯನ್ನು ಪಡೆದು ತಂದು ಹಾಜರುಪಡಿಸಿದರ ಸಾರಾಂಶವೇನೆಂದರೆ.ದಿನಾಂಕ;:19-06-2020 ರಂದು ಮದ್ಯಾಹ್ನ 12-15 ಗಂಟೆಯಲ್ಲಿ ನಾನು ಸಕರ್ಾರಿ ಜೀಪು ಸಂಖ್ಯೆ-ಕೆ,ಎ-40 ಜಿ-144  ರಲ್ಲಿ ಚಾಲಕ ಎಚ್,ಸಿ-60 ಸಿರಾಜುಲ್ಲಾ ರವರೊಂದಿಗೆ ಸಿಬ್ಬಂದಿಯಾದ ಸಿ,ಪಿ,ಸಿ-89 ಮಂಜುನಾಥ ರವರರೊಂದಿಗೆ ಸೋಮೇನಹಳ್ಳಿ ಗ್ರಾಮದಲ್ಲಿ ಗಸ್ತಿನಲ್ಲಿದ್ದಾಗ ಸೋಮೇನಹಳ್ಳ್ಳಿ ಗ್ರಾಮದಲ್ಲಿ ನರಸಿಂಹಪ್ಪ ಬಿನ್ ಮುನಿಯಪ್ಪ ರವರ ಚಿಕನ್ ಅಂಗಡಿ ಬಳಿ ಸಾರ್ವಜನಿಕ ಸ್ಥಳದಲ್ಲಿ ಇದ್ದ ಸಾರ್ವಜನಿಕರು ಪೋಲೀಸ್ ಜೀಪನ್ನು ಕಂಡು ಅಲ್ಲಿದ್ದ ಸಾರ್ವಜನಿಕರು ಓಡಿ ಹೋಗಿದ್ದು, ಆಗ ಸ್ಥಳಕ್ಕೆ ಹೋಗಿ ನೋಡಲಾಗಿ ಮದ್ಯ ಮತ್ತು ಮದ್ಯವನ್ನು ಕುಡಿದ ಖಾಲಿ ಗ್ಲಾಸ್ ಮತ್ತು ಖಾಲಿ ವಾಟರ್ ಬಾಟಲ್ ಇತ್ತು. ಕಾನೂನು ಬಾಹಿರವಾಗಿ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಮದ್ಯವನ್ನು ಕುಡಿಯಲು ಅನುಮತಿ ನೀಡಿರುವುದು ಮತ್ತು ಸಾರ್ವಜನಿಕರಿಗೆ ಮಧ್ಯವನ್ನು ಕುಡಿಯಲು ಸ್ಥಳಾವಕಾಶ ಮಾಡಿಕೊಟ್ಟಿರುವುದು ಕಂಡು ಬಂದಿರುತ್ತೆ. ಆಗ ಮದ್ಯಾಹ್ನ 12-45 ಗಂಟೆಗೆ ಸ್ಥಳಕ್ಕೆ ಪಂಚರನ್ನು ಬರಮಾಡಿಕೊಂಡು ಪಂಚರ ಸಮಕ್ಷಮ ಸ್ಥಳದಲ್ಲಿದ್ದ ಮದ್ಯವನ್ನು ಸರಬರಾಜು ಮಾಡುವ ಆಸಾಮಿಯನ್ನು ವಶಕ್ಕೆ ಪಡೆದುಕೊಂಡು ಹೆಸರು ಮತ್ತು ವಿಳಾಸ ಕೇಳಲಾಗಿ ನರಸಿಂಹಪ್ಪ ಬಿನ್ ಮುನಿಯಪ್ಪ ನಾಯಕ ಜನಾಂಗ, ಚಿಕನ್  ಅಂಗಡಿ, ವಾಸ-ವೀರಾಹುತನಹಳ್ಳಿ  ಗ್ರಾಮ ಗುಡಿಬಂಡೆ ತಾಲೂಕು ಎಂದು ತಿಳಿಸಿದ್ದು. ಸದರಿ ಆಸಾಮಿಯನ್ನು ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಮದ್ಯ ಸೇವನೆ ಮಾಡಲು ಸ್ಥಳಾವಕಾಶ ನೀಡಿರುವ ಬಗ್ಗೆ ಇರುವಂತಹ ಲೈಸನ್ಸ್ ತೋರಿಸಲು ಕೇಳಲಾಗಿ, ಸದರಿ ಆಸಾಮಿಯು ಯಾವುದೇ ಪರವಾನಗಿ ಇಲ್ಲವೆಂದು ತಿಳಿಸಿದನು, ನಂತರ ಸ್ಥಳವನ್ನು ಪರಿಶೀಲನೆ ಮಾಡಲಾಗಿ 1) ಒಲ್ಡ್ ಟವರನ್ ವಿಸ್ಕಿ ಕಂಪನಿಯ 180 ಎಮ್.ಎಲ್ ನ 8 ಟೆಟ್ರಾ ಪಾಕೆಟ್ ಗಳು 2)ಬ್ಯಾಗ್ ಕ್ ಪೆಪ್ಪರ್ ಕಂಪನಿಯ ವಿಸ್ಕಿಯ 180 ಎಮ್,ಎಲ್ ನ 4 ಟೆಟ್ರಾ ಪಾಕೆಟ್ 3) ಓಪನ್ ಮಾಡಿರುವಂತ ಹೈ ವಾರ್ಡ್ಸ ಕಂಪನಿಯ ಚೀರ್ಸ್ ವಿಸ್ಕಿ 90 ಒಐ, ಅಳತೆಯ 4 ಖಾಲಿ ಟೆಟ್ರಾ ಪಾಕೆಟ್ಗಳು 3) ಮದ್ಯವನ್ನು ಕುಡಿದು ಬಿಸಾಕಿದಂತಹ 3 ಖಾಲಿ ಪ್ಲಾಸ್ಟಿಕ್ ಗ್ಲಾಸುಗಳು 4) ಒಂದು ಒಂದು ಲೀಟರ್ ಸಾಮಥ್ರ್ಯದ 1 ಖಾಲಿ ವಾಟರ್ ಬಾಟೆಲ್ ಇದ್ದು, ಮದ್ಯವಿರುವ ಟೆಟ್ರಾ ಪಾಕೆಟ್ಗಳ ದ್ರವ ಪ್ರಮಾಣ ಲೆಕ್ಕ ಮಾಡಲಾಗಿ ಒಟ್ಟು- 2 ಲೀಟರ್ 160 ಎಮ್,ಎಲ್ ಆಗಿದ್ದು, ಆ ಪಾಕೆಟ್ಗಳ ಮೇಲಿನ ದರವನ್ನು ಲೆಕ್ಕ ಮಾಡಲಾಗಿ ಒಲ್ಡ್ ಟವರನ್ ವಿಸ್ಕಿ 8*86=424.94ಮತ್ತು ಬ್ಯಾಗ್ ಪೆಪ್ಪರ್ ವಿಸ್ಕಿ ಕಂಪನಿಯ 4*106.23= 694 ರೂ ಒಟ್ಟು 1118.92 (ಒಂದು ಸಾವಿರದ ನೂರ ಹದಿನೆಂಟು ರೂಪಾಯಿ ತ್ತೋಂಭತ್ತು ಎರಡು ಪೈಸೆ) ಆಗಿರುತ್ತದೆ. ಸದರಿ ಮಾಲನ್ನು ಪಂಚಾಯ್ತಿದಾರರ ಸಮಕ್ಷಮದಲ್ಲಿ ಸಂಜೆ 1-00 ಗಂಟೆಯಿಂದ 1-45 ಗಂಟೆಯವರೆಗೆ ಪಂಚನಾಮೆ ಮೂಲಕ ಅಮಾನತ್ತುಪಡಿಸಿಕೊಂಡಿರುತ್ತದೆ, ಮೇಲ್ಕಂಡ ಆರೋಪಿ & ಮಾಲನ್ನು ಅಸಲು ಪಂಚನಾಮೆಯೊಂದಿಗೆ ಸಂಜೆ 2-15 ಗಂಟೆಯಲ್ಲಿ ಠಾಣೆಗೆ ಬಂದು ವರಧಿ ಸಿದ್ದಪಡಿಸಿ ಸದರಿ ಆರೋಪಿ & ಮಾಲಿನ ವಿರುದ್ದ ಮುಂದಿನ ಕಾನೂನು ಕ್ರಮ ಜರುಗಿಸಲು ಕೋರಿ ನೀಡಿದ ದೂರಾಗಿರುತ್ತೆ.

 1. ಗುಡಿಬಂಡೆ ಪೊಲೀಸ್ ಠಾಣೆ ಮೊ.ಸಂ.99/2020 ಕಲಂ. 15(A),32(3) ಕೆ.ಇ ಆಕ್ಟ್:-

          ದಿನಾಂಕ;20/06/2020 ರಂದು 12;00 ಗಂಟೆಗೆ ನ್ಯಾಯಾಲಯದ ಪಿಸಿ-89 ಮಂಜುನಾಥ ರವರು ಠಾಣಾ ಎನ್,ಸಿ,ಆರ್,ಸಂಖ್ಯೆ;221/2020 ರಲ್ಲಿ ಕ್ರಿಮಿನಲ್ ಪ್ರಕರಣವನ್ನು ದಾಖಲಿಸಲು ಘನ ನ್ಯಾಯಾಲಯದ ಅನುಮತಿಯನ್ನು ಪಡೆದು ತಂದು ಹಾಜರುಪಡಿಸಿದ್ದರ ಸಾರಾಂಶವೇನೆಂದರೆ  ದಿನಾಂಕ:19-06-2020 ರಂದು ಮದ್ಯಾಹ್ನ 3-00 ಗಂಟೆಯಲ್ಲಿ ಠಾಣೆಯಲ್ಲಿದ್ದಾಗ, 23 ನೇ ಬೀಟ್ ಸಿಬ್ಬಂದಿ ಪಿ.ಸಿ-89 ಮಂಜುನಾಥ ರವರು ಗಸ್ತಿನಲ್ಲಿದ್ದಾಗ ಗುಡಿಬಂಡೆ ತಾಲೂಕು ನಲ್ಲಮದ್ದಿರೆಡ್ಡಿಹಳ್ಳಿ  ಗ್ರಾಮದಲ್ಲಿ ಗಸ್ತಿನಲ್ಲಿದ್ದಾಗ  ಮುನಿಸ್ವಾಮಿ ಬಿನ್ ಕೃಷ್ಣಪ್ಪ ರವರ ಚಿಲ್ಲರೆ ಅಂಗಡಿ ಬಳಿ ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಸಾರ್ವಜನಿಕರಿಗೆ ಮಧ್ಯವನ್ನು ಕುಡಿಯಲು ಸ್ಥಳಾವಕಾಶ ನೀಡಿರುತ್ತಾರೆಂದು ನನಗೆ ಪೋನ್ ಮಾಡಿ ನೀಡಿದ  ಮಾಹಿತಿ ಮೇರೆಗೆ ನಾನು ಸಕರ್ಾರಿ ಜೀಪು ಸಂಖ್ಯೆ-ಕೆ,ಎ-40 ಜಿ-144 ರಲ್ಲಿ ಚಾಲಕ ಎಚ್,ಸಿ-60 ಸಿರಾಜುಲ್ಲಾ ರವರೊಂದಿಗೆ ಸಿಬ್ಬಂದಿಯಾದ ಸಿ,ಪಿ,ಸಿ-92 ರವಿ ರವರನ್ನು ಕರೆದುಕೊಂಡು ಸದರಿ ಗ್ರಾಮಕ್ಕೆ ಸಂಜೆ 3-30 ಗಂಟೆಯಲ್ಲಿ ಸ್ಥಳಕ್ಕೆ ಹೋಗಿ ಗ್ರಾಮದಲ್ಲಿದ್ದ ಪಂಚರನ್ನು ಬರಮಾಡಿಕೊಂಡು ಪಂಚರೊಂದಿಗೆ ನಾವು ಮರೆಯಲ್ಲಿ ನೋಡಲಾಗಿ, ಕಾನೂನು ಬಾಹಿರವಾಗಿ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಮದ್ಯವನ್ನು ಕುಡಿಯಲು ಅನುಮತಿ ನೀಡಿರುವುದು ಮತ್ತು ಸಾರ್ವಜನಿಕರಿಗೆ ಮಧ್ಯವನ್ನು ಕುಡಿಯಲು ಸ್ಥಳಾವಕಾಶ ಮಾಡಿಕೊಟ್ಟಿರುವುದು ಕಂಡು ಬಂದಿರುತ್ತೆ. ಪಂಚರೊಂದಿಗೆ ನಾವುಗಳು ಸದರಿ ಮಧ್ಯಪಾನ ಮಾಡುತ್ತಿದ್ದವರ ಮೇಲೆ ಧಾಳಿ ಮಾಡಿದಾಗ, ಸಮವಸ್ತ್ರದಲ್ಲಿದ್ದ ನಮ್ಮನ್ನು ಕಂಡು ಮದ್ಯವನ್ನು ಕುಡಿಯುತ್ತಿದ್ದವರು ಓಡಿ ಹೋದರು, ಆ ಪೈಕಿ ಮದ್ಯವನ್ನು ಸರಬರಾಜು ಮಾಡುವ ಆಸಾಮಿಯನ್ನು ವಶಕ್ಕೆ ಪಡೆದುಕೊಂಡು ಹೆಸರು & ವಿಳಾಸ ಕೇಳಲಾಗಿ, ಮುನಿಸ್ವಾಮಿ ಬಿನ್ ಕೃಷ್ಣಪ್ಪ  50 ವರ್ಷ, ಬೋವಿ ಜನಾಂಗ, ಚಿಲ್ಲರೆ ಅಂಗಡಿ, ವಾಸ- ನಲ್ಲಮದ್ದಿರೆಡ್ಡಿಹಳ್ಳಿ ಗ್ರಾಮ ಗುಡಿಬಂಡೆ ತಾಲೂಕು ಎಂದು ತಿಳಿಸಿದ್ದು. ಸದರಿ ಆಸಾಮಿಯನ್ನು ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಮಧ್ಯ ಸೇವನೆ ಮಾಡಲು ಸ್ಥಳಾವಕಾಶ ನೀಡಿರುವ ಬಗ್ಗೆ ಇರುವಂತಹ ಲೈಸನ್ಸ್ ತೋರಿಸಲು ಕೇಳಲಾಗಿ, ಸದರಿ ಆಸಾಮಿಯು ಯಾವುದೇ ಪರವಾನಗಿ ಇಲ್ಲವೆಂದು ತಿಳಿಸಿದನು, ನಂತರ ಸ್ಥಳವನ್ನು ಪರಿಶೀಲನೆ ಮಾಡಲಾಗಿ 1) ಹೈ ವಾರ್ಡ್ಸ ಕಂಪನಿಯ ಚೀರ್ಸ್ ವಿಸ್ಕಿ 90 ಎಮ್, ಎಲ್ ಅಳತೆಯ ಮಧ್ಯವಿರುವಂತಹ 13 ಟೆಟ್ರಾ ಪಾಕೆಟ್ಗಳು ಇದ್ದು, 2) ಓಪನ್ ಮಾಡಿರುವಂತ ಹೈ ವಾರ್ಡ್ಸ ಕಂಪನಿಯ ಚೀರ್ಸ್ ವಿಸ್ಕಿ 90 ಒಐ, ಅಳತೆಯ 4 ಖಾಲಿ ಟೆಟ್ರಾ ಪಾಕೆಟ್ಗಳು 3) ಮದ್ಯವನ್ನು ಕುಡಿದು ಬಿಸಾಕಿದಂತಹ 3 ಖಾಲಿ ಪ್ಲಾಸ್ಟಿಕ್ ಗ್ಲಾಸುಗಳು 4) ಒಂದು ಒಂದು ಲೀಟರ್ ಸಾಮಥ್ರ್ಯದ 1 ಖಾಲಿ ವಾಟರ್ ಬಾಟೆಲ್ ಇದ್ದು, ಮಧ್ಯವಿರುವ ಟೆಟ್ರಾ ಪಾಕೆಟ್ಗಳ ದ್ರವ ಪ್ರಮಾಣ ಲೆಕ್ಕ ಮಾಡಲಾಗಿ ಒಟ್ಟು- 1 ಲೀಟರ್ 170 ಎಮ್,ಎಲ್ ಆಗಿದ್ದು, ಆ ಪಾಕೆಟ್ಗಳ ಮೇಲಿನ ದರವನ್ನು ಲೆಕ್ಕ ಮಾಡಲಾಗಿ ಒಟ್ಟು 32*13=416 ರೂ ಆಗಿರುತ್ತದೆ. ಸದರಿ ಮಾಲನ್ನು ಪಂಚಾಯ್ತಿದಾರರ ಸಮಕ್ಷಮದಲ್ಲಿ ಸಂಜೆ 3-45 ಗಂಟೆಯಿಂದ 4-30 ಗಂಟೆಯವರೆಗೆ ಪಂಚನಾಮೆ ಮೂಲಕ ಅಮಾನತ್ತುಪಡಿಸಿಕೊಂಡಿರುತ್ತದೆ, ಮೇಲ್ಕಂಡ ಆರೋಪಿ & ಮಾಲನ್ನು ಅಸಲು ಪಂಚನಾಮೆಯೊಂದಿಗೆ ಸಂಜೆ 5-00 ಗಂಟೆಯಲ್ಲಿ ಠಾಣೆಯಲ್ಲಿ ಹಾಜರುಪಡಿಸಿ ಸದರಿ ಆರೋಪಿ & ಮಾಲಿನ ವಿರುದ್ದ ಮುಂದಿನ ಕಾನೂನು ಕ್ರಮ ಜರುಗಿಸಲು ಕೋರಿ ನೀಡಿದ ದೂರಾಗಿರುತ್ತೆ.

 1. ಮಂಚೇನಹಳ್ಳಿ ಪೊಲೀಸ್ ಠಾಣೆ ಮೊ.ಸಂ.138/2020 ಕಲಂ. 87  ಕೆ.ಪಿ ಆಕ್ಟ್:-

          ದಿನಾಂಕ:20/06/2020 ರಂದು ಠಾಣಾ ಹೆಚ್.ಸಿ.137 ರವರು ಘನ ನ್ಯಾಯಾಲಯದಿಂಧ ಅನುಮತಿಯನ್ನು ಪಡೆದು ತಂದು ಹಾಜರುಪಡಿಸಿದ ವರದಿ ಏನೆಂದರೆ ದಿನಾಂಕ: 16/06/2020 ರಂದು ಸಂಜೆ 6-30 ಗಂಟೆಗೆ ಪಿರ್ಯಾದಿದಾರರಾದ ಚಿಕ್ಕಬಳ್ಳಾಪುರ ಡಿಸಿಬಿ/ಸಿಇಎನ್ ಪೊಲೀಸ್ ಠಾಣೆಯ ಪಿಐ ರಾಜಣ್ಣ ವಿ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆನೆಂದರೆ, ನಾನು ನಮ್ಮ ಠಾಣೆಯ ಸಿಬ್ಬಂದಿ ಹಾಗೂ 2 ಜನ ಡಿಎಆರ್ ಸಿಬ್ಬಂದಿಗಳು ಠಾಣಾ ಜೀಪ್ ಸಂಖ್ಯೆ ಕೆಎ40-ಜಿ-270 ರಲ್ಲಿ ಗೌರಿಬಿದನೂರು ತಾಲ್ಲೂಕಿನಲ್ಲಿ ಅಕ್ರಮ ಚಟುವಟಿಕೆಗಳ ಬಗ್ಗೆ ಡಿ ಪಾಳ್ಯ ಗ್ರಾಮದಲ್ಲಿ ಮಾಹಿತಿ ಸಂಗ್ರಹಣೆಯಲ್ಲಿದ್ದಾಗ ಸಂಜೆ 4-00 ಗಂಟೆಗೆ ನನಗೆ ಬಾತ್ಮಿದಾರರಿಂದ ಸಾರಗೊಂಡ್ಲು ಗ್ರಾಮದ ಸರ್ಕಾರಿ ಕೆರೆಯ ಅಂಗಳದಲ್ಲಿ ಒಂದು ಜಾಲಿ ಮರದ ಕೆಳಗೆ ಯಾರೋ ಕೆಲವರು ಸಾರ್ವಜನಿಕ ಸ್ಥಳದಲ್ಲಿ ಅಂದರ್-ಬಾಹರ್ ಇಸ್ಪೀಟ್ ಎಲೆಗಳ ಜೂಜಾಟವಾಡುತ್ತಿರುವುದಾಗಿ ಬಂದ ಖಚಿತ ಮಾಹಿತಿ ಮೇರೆಗೆ ನಾಮಗೊಂಡ್ಲು ಗ್ರಾಮದಲ್ಲಿ ಪಂಚರನ್ನು ಕರೆದುಕೊಂಡು ಕೆರೆಯ ಅಂಗಳದ ಬಳಿ ಹೋಗಿ ಜೀಪ್ ನ್ನು ನಿಲ್ಲಿಸಿ ಕಾಲ್ನಡಿಗೆಯಲ್ಲಿ ಕೆರೆಯ ಅಂಗಳಕ್ಕೆ ಹೋಗಿ ನೋಡಲಾಗಿ ಯಾರೋ ಕೆಲವರು ಒಂದು ಜಾಲಿ ಮರದ ಕೆಳಗೆ ಅಂದರ್ ಗೆ 200/- ರೂ. ಬಾಹರ್ ಗೆ 200/- ರೂ.ಗಳು ಎಂದು ಜೋರಾಗಿ ಕೂಗುತ್ತಾ ಇಸ್ಪೀಟ್ ಜೂಜಾಟವಾಡುತ್ತಿದ್ದುದ್ದನ್ನು ಖಚಿತ ಪಡಿಸಿಕೊಂಡು ಪಂಚರೊಂದಿಗೆ ನಾವು ಸದರಿಯವರ ಮೇಲೆ ದಾಳಿ ಮಾಡಿ ಜೂಜಾಟವಾಡುತ್ತಿದ್ದವರನ್ನು ಹಿಡಿದುಕೊಂಡು ಹೆಸರು ಮತ್ತು ವಿಳಾಸ ಕೇಳಲಾಗಿ 1) ಮಧು ಬಿನ್ ವೆಂಕಟೇಶ್, ನಾಯಕರು, 27 ವರ್ಷ, ಜಿರಾಯ್ತಿ, ಸಾರಗೊಂಡ್ಲು ಗ್ರಾಮ, ಡಿಪಾಳ್ಯ ಹೋಬಳಿ, ಗೌರಿಬಿದನೂರು ತಾಲ್ಲೂಕು 2) ಆನಂದ ಬಿನ್ ರಾಮಕೃಷ್ಣ, 30 ವರ್ಷ, ಬಲಜಿಗರು, ಕೂಲಿ ಕೆಲಸ, ಸಾರಗೊಂಡ್ಲು ಗ್ರಾಮ, ಡಿಪಾಳ್ಯ ಹೋಬಳಿ, ಗೌರಿಬಿದನೂರು ತಾಲ್ಲೂಕು 3) ನಾರಾಯಣಸ್ವಾಮಿ ಬಿನ್ ಮಲ್ಲಪ್ಪ, 40 ವರ್ಷ, ಕುಂಬಾರ ಜನಾಂಗ, ಜಿರಾಯ್ತಿ, ಸಾರಗೊಂಡ್ಲು ಗ್ರಾಮ, ಡಿಪಾಳ್ಯ ಹೋಬಳಿ, ಗೌರಿಬಿದನೂರು ತಾಲ್ಲೂಕು 4) ಗಂಗಯ್ಯ ಬಿನ್ ಗಂಗಪ್ಪ, 45 ವರ್ಷ, ಪ.ಜಾತಿ, ಕೂಲಿ ಕೆಲಸ, ಸಾರಗೊಂಡ್ಲು ಗ್ರಾಮ, ಡಿಪಾಳ್ಯ ಹೋಬಳಿ, ಗೌರಿಬಿದನೂರು ತಾಲ್ಲೂಕು ಎಂದು  ತಿಳಿಸಿದ್ದು, ಸ್ಥಳದಲ್ಲಿ ಜೂಜಾಟಕ್ಕೆ ಬಳಸಿದ್ದ 52 ಇಸ್ಪೀಟ್ ಎಲೆಗಳು, ನಗದು ಹಣ ರೂ. 3300/- ( ಮೂರು ಸಾವಿರದ ಮೂನ್ನೂರು ಮಾತ್ರ.), ಒಂದು ಪ್ಲಾಸ್ಟಿಕ್ ಚೀಲವನ್ನು ಪಂಚನಾಮೆ ಮೂಲಕ ಪಂಚರ ಸಮಕ್ಷಮ ಅಮಾನತ್ತು ಪಡೆಸಿಕೊಂಡಿರುತ್ತೆ. ಅಮಾನತ್ತು ಪಡಿಸಿಕೊಂಡ ಮೇಲ್ಕಂಡ ಮಾಲನ್ನು ಆರೋಪಿಗಳನ್ನು ನಿಮ್ಮ ವಶಕ್ಕೆ ನೀಡುತ್ತಿದ್ದು ಮುಂದಿನ ಕಾನೂನಿನ ರೀತ್ಯಾ ಕ್ರಮ ಜರುಗಿಸಬೇಕೆಂದು ಕೋರಿದೆ. ಇದರೊಂದಿಗೆ ಅಸಲು ಪಂಚನಾಮೆಯನ್ನು ಲಗ್ಗತ್ತಿಸಿಕೊಂಡಿರುವುದಾಗಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲು ಘನ ನ್ಯಾಯಾಲಯದ ಅನುಮತಿಯನ್ನು ಪಡೆದುಕೊಳ್ಳಲು ಠಾಣಾ ಎನ್.ಸಿ.ಆರ್ 284/2020 ರೀತ್ಯ ದಾಖಲಿಸಿ ನ್ಯಾಯಾಲಯದ ಅನುಮತಿಯನ್ನು ಪಡೆದು ಮೇಲ್ಕಂಡ ಕಲಂ ರೀತ್ಯ ಪ್ರಕರಣ ದಾಖಲಿಸಿರುತ್ತದೆ.

 1. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.163/2020 ಕಲಂ. 279,337 ಐ.ಪಿ.ಸಿ & 187 ಐ.ಎಂ.ವಿ ಆಕ್ಟ್:-

          ದಿನಾಂಕ:-19/06/2020 ರಂದು ಸಂಜೆ 6-30 ಗಂಟೆಗೆ ಪಿರ್ಯಾದಿದಾರರಾದ ಆರ್ ನಾಗರಾಜ್ ಬಿನ್ ಕೆ.ಆರ್ ರಾಮರಾವ್, 55 ವರ್ಷ, ಬ್ರಾಹ್ಮಣರು, ಪ್ಲಮ್ಮಿಂಗ್ ಕೆಲಸ, ವಾಸ-ನಂಬರ್ 156, ವಾರ್ಡ್ ನಂಬರ್-1, ಸಿಆರ್ ಲೇ ಔಟ್, ಶಿಡ್ಲಘಟ್ಟ ಟೌನ್ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ತಾನು ಪ್ರತಿ ದಿನ ಬೆಳಿಗ್ಗೆ ಹಂಡಿಗನಾಳ ಗ್ರಾಮದ ರಸ್ತೆಯ ಕಡೆ ವಾಕಿಂಗ್ ಹೋಗುತ್ತಿದ್ದು, ದಿನಾಂಕ 20/03/2020 ರಂದು ಬೆಳಿಗ್ಗೆ ಸಹ ವಾಕಿಂಗ್ ಸಹ ಹೋಗಿದ್ದು, ಅದೇ ದಿನ ಬೆಳಿಗ್ಗೆ ಸುಮಾರು 6-00 ಗಂಟೆ ಸಮಯದಲ್ಲಿ ತಾನು ಲಕ್ಕಹಳ್ಳಿ ಗೇಟ್ ಬಳಿ ವಾಕಿಂಗ್ ಮಾಡಿಕೊಂಡು ರಸ್ತೆಯ ಎಡಬದಿಯಲ್ಲಿ ಹೋಗುತ್ತಿದ್ದು ಈ ಸಮಯದಲ್ಲಿ ಹಿಂಬದಿಯಿಂದ ಬಂದ ಕೆಎ-06-1476 ನೊಂದಣಿ ಸಂಖ್ಯೆಯ ಬಜಾಜ್ ಬಾಕ್ಸರ್ ದ್ವಿ ಚಕ್ರ ವಾಹನವನ್ನು ಅದರ ಸವಾರನು ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ತನಗೆ ಡಿಕ್ಕಿ ಹೊಡೆಸಿ ಅಪಘಾತವನ್ನುಂಟು ಮಾಡಿ ತನ್ನ ದ್ವಿ ಚಕ್ರ ವಾಹನವನ್ನು ಸ್ಥಳದಲ್ಲಿ ನಿಲ್ಲಿಸದೇ ಪರಾರಿಯಾದ ಕಾರಣ ನನ್ನ ಎಡ ಕಾಲು, ಎಡ ಕಣ್ಣಿನ ಉಬ್ಬಿನ ಮೇಲೆ, ಕೈಗಳಿಗೆ ತರಚಿದ ಗಾಯಗಳಾಗಿರುತ್ತವೆ. ನಂತರ ಯಾರೋ ಸಾರ್ವಜನಿಕರು ತನ್ನನ್ನು ಉಪಚರಿಸಿ ಶಿಡ್ಲಘಟ್ಟ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಿದ್ದು, ನಂತರ ತಾನು ಬೆಂಗಳೂರಿನ ವರಲಕ್ಷ್ಮೀ ನರ್ಸಿಂಗ್ ಹೋಂ ನಲ್ಲಿ ಚಿಕಿತ್ಸೆ ಪಡೆದುಕೊಂಡಿರುತ್ತೇನೆ. ನಂತರ ತಾನು ತನಗೆ ಅಪಘಾತವನ್ನುಂಟು ಮಾಡಿದ ದ್ವಿ ಚಕ್ರ ವಾಹನದ ಸವಾರನ ಹೆಸರು ವಿಳಾಸ ತಿಳಿಯಲಾಗಿ ಅಭಿಷೇಕ್ ಚಾರಿ ಬಿನ್ ಡಂಕಣಚಾರಿ, ವಾಸ-ದೊಡ್ಡದಾಸೇನಹಳ್ಳಿ ಗ್ರಾಮ, ಎಂದು ತಿಳಿದು ಬಂದಿರುತ್ತದೆ. ತಾನು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಸಿಕೊಂಡಿದ್ದ ಕಾರಣ ಈ ದಿನ ತಡವಾಗಿ ಠಾಣೆಗೆ ಬಂದು ದೂರನ್ನು ನೀಡುತ್ತಿದ್ದು, ತನಗೆ ಅಪಘಾತ ಪಡಿಸಿದ ಮೇಲ್ಕಂಡ ಕೆಎ-06-1476 ನೊಂದಣಿ ಸಂಖ್ಯೆಯ ಬಜಾಜ್ ಬಾಕ್ಸರ್ ದ್ವಿ ಚಕ್ರ ವಾಹನದ ಸವಾರನನ್ನು ಪತ್ತೆ ಮಾಡಿ ಮುಂದಿನ ಕಾನೂನು ಕ್ರಮ ಜರುಗಿಸ ಬೇಕಾಗಿ ಕೊಟ್ಟ ದೂರು.