ದಿನಾಂಕ : 20/06/2019ರ ಅಪರಾಧ ಪ್ರಕರಣಗಳು

 1. ಬಾಗೇಪಲ್ಲಿ ಪೊಲೀಸ್ ಠಾಣೆ. ಮೊ.ಸಂ: 141/2019 ಕಲಂ: 15(A), 32(3) ಕೆ.ಇ. ಆಕ್ಟ್:-

          ದಿನಾಂಕ: 20-06-2019 ರಂದು ಬೆಳಗ್ಗೆ 10:15 ಗಂಟೆಗೆ ಪಿ.ಎಸ್.ಐ ಸಾಹೇಬರವರು ಠಾಣೆಗೆ ಹಾಜರಾಗಿ ನೀಡಿದ ವರಧಿಯ ಸಾರಾಂಶ -ಈ ದಿನ ದಿನಾಂಕ: 20.06.2019 ರಂದು ಬೆಳಿಗ್ಗೆ 7-30 ಗಂಟೆ ಸಮಯದಲ್ಲಿ  ಠಾಣೆಯಲ್ಲಿದ್ದಾಗ ಬಾಗೇಪಲ್ಲಿ ತಾಲ್ಲೂಕು ಮಿಟ್ಟೇಮರಿ ಹೋಬಳಿ  ಕನ್ನಂಪಲ್ಲಿ ಗ್ರಾಮದ ವಾಸಿ  ಪೋಲಕೃಷ್ಣಪ್ಪ ಬಿನ್ ಲೇಟ್ ನಾಗಪ್ಪ, ರವರ ಚಿಲ್ಲರೆ ಅಂಗಡಿಯ ಮುಂಭಾಗ  ಯಾರೋ ಕೆಲವರು ಕುಳಿತುಕೊಂಡು ಆಕ್ರಮವಾಗಿ ಮದ್ಯಪಾನ ಮಾಡುತ್ತಿರುವುದಾಗಿ ಬಂದು ಖಚಿತ ವರ್ತಮಾನದ ಮೇರೆಗೆ ನಾನು ಮತ್ತು ಸಿಬ್ಬಂದಿಗಳಾದ ಹೆಚ್.ಸಿ-14 ಶ್ರೀ  ಮುರಳಿ  ಪಿಸಿ-176 ಶ್ರೀ ಶಶಿಕುಮಾರ್  ರವರು ಹಾಗೂ ಜೀಫ್ ಚಾಲಕ ಎ.ಹೆಚ್.ಸಿ-34 ಅಲ್ತಾಫ್ ಪಾಷಾ ರವರೊಂದಿಗೆ ಸರ್ಕಾರಿ ಜೀಫ್ ಸಂಖ್ಯೆ ಕೆಎ-40, ಜಿ-537 ವಾಹನದಲ್ಲಿ ಹೋಗಿ ಗೂಳೂರು ವೃತ್ತದ ಬಳಿ ಇದ್ದ ಪಂಚರನ್ನು  ಕರೆದು ವಿಚಾರವನ್ನು ತಿಳಿಸಿ  ಮೇಲ್ಕಂಡ ಸ್ಥಳದಲ್ಲಿ ದಾಳಿ ಮಾಡಲು ಪಂಚರಾಗಿ  ಬಂದು ಪಂಚನಾಮೆಗೆ ಸಹಕರಿಸಲು ಕೋರಿದ್ದರ ಮೇರೆಗೆ ಅವರುಗಳು ಒಪ್ಪಿಕೊಂಡರು ಅದರಂತೆ  ನಾವು ಮತ್ತು ಪಂಚರು ಬೆಳಿಗ್ಗೆ 8-00 ಗಂಟೆಗೆ ಸ್ಥಳಕ್ಕೆ ಹೋಗಿ ನೋಡಲಾಗಿ ಯಾರೋ ಕೆಲವರು ಆಕ್ರಮವಾಗಿ  ಕುಳಿತುಕೊಂಡು ಮದ್ಯಪಾನ ಮಾಡುತ್ತಿದ್ದವರು ಸಮವಸ್ತ್ರದಲ್ಲಿದ್ದ ನಮ್ಮನ್ನು ನೋಡಿ ಓಡಿಹೋದರು.  ನಂತರ ಸ್ಥಳದಲ್ಲಿ ಪಂಚರ ಸಮಕ್ಷಮ ಪರಿಶೀಲಿಸಲಾಗಿ 90 ಎಂ.ಎಲ್. ನ Haywards Cheers Whisky 05  ಖಾಲಿಯಾಗಿರುವ  ಟೆಟ್ರಾ ಪ್ಯಾಕೇಟ್ ಗಳು ಮತ್ತು 1 ಲೀಟರ್ ಸಾಮರ್ಥ್ಯದ 2 ಖಾಲಿ ವಾಟರ್ ಬಾಟಲ್ ಮತ್ತು ಮದ್ಯ ಸೇವನೆ ಮಾಡಿರುವ ನಿಶಾನೆಗಳಿರುವ 08 ಪ್ಲಾಸ್ಟಿಕ್ ಗ್ಲಾಸ್ ಗಳು ಮತ್ತು ಮದ್ಯ ತುಂಬಿರುವ   90 ಎಂ.ಎಲ್. ನ Haywards Cheers Whisky ಯ 15 ಟೆಟ್ರಾ ಪ್ಯಾಕೇಟ್ ಗಳು ಇದ್ದು ಒಟ್ಟು 1.350 ಲೀಟರ್ ಮದ್ಯವಿದ್ದು ಒಟ್ಟು  ಅಂದಾಜು ಮೊತ್ತ  525/- ರೂಪಾಗಳಾಗಿರುತ್ತದೆ. ಸದರಿ ಸ್ಥಳದ  ಮಾಲೀಕರಾದ  ಪೂಲ ಕೃಷ್ಣಪ್ಪ ಬಿನ್ ಲೇಟ್ ನರಸಪ್ಪ, 80 ವರ್ಷ, ತೊಗಟ ಜನಾಂಗ, ಚಿಲ್ಲರೆ ಅಂಗಡಿ ವ್ಯಾಪಾರ  ಕನ್ನಂಪಲ್ಲಿ ಗ್ರಾಮ ಮಿಟ್ಟೇಮರಿ ಹೋಬಳಿ ಬಾಗೇಪಲ್ಲಿ ತಾಲ್ಲೂಕು  ರವರಿಗೆ ಆಕ್ರಮವಾಗಿ  ಮದ್ಯಪಾನ ಮಾಡಲು ಸ್ಥಳಾವಕಾಶ ನೀಡಿರುವುದಕ್ಕೆ ಯಾವುದಾದರು ಪರವಾನಿಗೆ ಇದೆಯೇ ಎಂದು ಕೇಳಲಾಗಿ ಯಾವುದೇ ಪರವಾನಿಗೆ ಇಲ್ಲವೆಂದು ತಿಳಿಸಿದ್ದು, ಸ್ಥಳದಲ್ಲಿದ್ದ ಮೇಲ್ಕಂಡ  ಮಾಲುಗಳನ್ನು  ಪಂಚಾಯ್ತಿದಾರರ ಸಮಕ್ಷಮ  ಪಂಚನಾಮೆ ಮೂಲಕ ಅಮಾನತ್ತು ಪಡಿಸಿಕೊಂಡು ಮಾಲು ಮತ್ತು  ಆರೋಪಿತನೊಂದಿಗೆ ಬೆಳಿಗ್ಗೆ 10-15 ಗಂಟೆಗೆ ಠಾಣೆಗೆ ಹಾಜರಾಗಿ ಆಕ್ರಮವಾಗಿ ಮದ್ಯಪಾನ ಮಾಡಲು ಸ್ಥಳಾವಕಾಶ ನೀಡಿದ್ದ  ಮೇಲ್ಕಂಡವನ ವಿರುದ್ದ ಕಾನೂನು ರೀತ್ಯ ಕ್ರಮ ಜರುಗಿಸಲು ಕೋರಿ ಠಾಣಾಧಿಕಾರಿಗಳಿಗೆ ವರದಿಯನ್ನು ನೀಡಿರುತ್ತೇನೆ, ಎಂದು ನೀಡಿದ ವರಧಿಯ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿರುತ್ತೆ.

 1. ಬಾಗೇಪಲ್ಲಿ ಪೊಲೀಸ್ ಠಾಣೆ. ಮೊ.ಸಂ: 142/2019 ಕಲಂ: 15(A), 32(3) ಕೆ.ಇ. ಆಕ್ಟ್:-

          ದಿನಾಂಕ: 20-06-2019 ರಂದು ಬೆಳಗ್ಗೆ 10:30 ಗಂಟೆಗೆ ಪಿ.ಎಸ್.ಐ ಸಾಹೇಬರವರು ಠಾಣೆಗೆ ಹಾಜರಾಗಿ ನೀಡಿದ ವರಧಿಯ ಸಾರಾಂಶ – ದಿನಾಂಕ: 20.06.2019 ರಂದು ಬೆಳಿಗ್ಗೆ 7-30 ಗಂಟೆ ಸಮಯದಲ್ಲಿ  ಠಾಣೆಯಲ್ಲಿದ್ದಾಗ ಬಾಗೇಪಲ್ಲಿ ತಾಲ್ಲೂಕು ಮಿಟ್ಟೇಮರಿ ಹೋಬಳಿ  ಕನ್ನಂಪಲ್ಲಿ ಗ್ರಾಮದ ವಾಸಿ  ವೆಂಕಟರವಣಪ್ಪ ಬಿನ್ ಯರ್ರ ವೆಂಕಟಪ್ಪ ರವರ ಚಿಲ್ಲರೆ ಅಂಗಡಿಯ ಮುಂಭಾಗ  ಯಾರೋ ಕೆಲವರು ಕುಳಿತುಕೊಂಡು ಆಕ್ರಮವಾಗಿ ಮದ್ಯಪಾನ ಮಾಡುತ್ತಿರುವುದಾಗಿ ಬಂದು ಖಚಿತ ವರ್ತಮಾನದ ಮೇರೆಗೆ ನಾನು ಮತ್ತು ಸಿಬ್ಬಂದಿಗಳಾದ ಹೆಚ್.ಸಿ-14 ಶ್ರೀ  ಮುರಳಿ  ಪಿಸಿ-176 ಶ್ರೀ ಶಶಿಕುಮಾರ್  ರವರು ಹಾಗೂ ಜೀಫ್ ಚಾಲಕ ಎ.ಹೆಚ್.ಸಿ-34 ಅಲ್ತಾಫ್ ಪಾಷಾ ರವರೊಂದಿಗೆ ಸರ್ಕಾರಿ ಜೀಫ್ ಸಂಖ್ಯೆ ಕೆಎ-40, ಜಿ-537 ವಾಹನದಲ್ಲಿ ಹೋಗಿ ಗೂಳೂರು ವೃತ್ತದ ಬಳಿ ಇದ್ದ ಪಂಚರನ್ನು  ಕರೆದು ವಿಚಾರವನ್ನು ತಿಳಿಸಿ  ಮೇಲ್ಕಂಡ ಸ್ಥಳದಲ್ಲಿ ದಾಳಿ ಮಾಡಲು ಪಂಚರಾಗಿ  ಬಂದು ಪಂಚನಾಮೆಗೆ ಸಹಕರಿಸಲು ಕೋರಿದ್ದರ ಮೇರೆಗೆ ಅವರುಗಳು ಒಪ್ಪಿಕೊಂಡರು ಅದರಂತೆ  ನಾವು  ಮತ್ತು  ಪಂಚರು  ಬೆಳಿಗ್ಗೆ 8-00 ಗಂಟೆಗೆ ಸ್ಥಳಕ್ಕೆ ಹೋಗಿ ನೋಡಲಾಗಿ ಯಾರೋ ಕೆಲವರು ಆಕ್ರಮವಾಗಿ  ಕುಳಿತುಕೊಂಡು ಮದ್ಯಪಾನ ಮಾಡುತ್ತಿದ್ದವರು ಸಮವಸ್ತ್ರದಲ್ಲಿದ್ದ ನಮ್ಮನ್ನು ನೋಡಿ ಓಡಿಹೋದರು.  ನಂತರ ಸ್ಥಳದಲ್ಲಿ ಪಂಚರ ಸಮಕ್ಷಮ ಪರಿಶೀಲಿಸಲಾಗಿ 90 ಎಂ.ಎಲ್. ನ Haywards Cheers Whisky 06  ಖಾಲಿಯಾಗಿರುವ  ಟೆಟ್ರಾ ಪ್ಯಾಕೇಟ್ ಗಳು ಮತ್ತು 1 ಲೀಟರ್ ಸಾಮರ್ಥ್ಯದ 2 ಖಾಲಿ ವಾಟರ್ ಬಾಟಲ್ ಮತ್ತು ಮದ್ಯ ಸೇವನೆ ಮಾಡಿರುವ ನಿಶಾನೆಗಳಿರುವ 06 ಪ್ಲಾಸ್ಟಿಕ್ ಗ್ಲಾಸ್ ಗಳು ಮತ್ತು ಮದ್ಯ ತುಂಬಿರುವ   90 ಎಂ.ಎಲ್. ನ Haywards Cheers Whisky ಯ 18 ಟೆಟ್ರಾ ಪ್ಯಾಕೇಟ್ ಗಳು ಇದ್ದು ಒಟ್ಟು 1.620 ಲೀಟರ್ ಮದ್ಯವಿದ್ದು ಒಟ್ಟು  ಅಂದಾಜು ಮೊತ್ತ  630/- ರೂಪಾಗಳಾಗಿರುತ್ತದೆ. ಸದರಿ ಸ್ಥಳದ  ಮಾಲೀಕರಾದ  ವೆಂಕಟರವಣಪ್ಪ ಬಿನ್ ಯರ್ರ ವೆಂಕಟಪ್ಪ, 42 ವರ್ಷ, ಆದಿ ಕರ್ನಾಟಕ ಜನಾಂಗ, ಚಿಲ್ಲರೆ ಅಂಗಡಿ ವ್ಯಾಪಾರ  ಕನ್ನಂಪಲ್ಲಿ ಗ್ರಾಮ ಮಿಟ್ಟೇಮರಿ ಹೋಬಳಿ ಬಾಗೇಪಲ್ಲಿ ತಾಲ್ಲೂಕು  ರವರಿಗೆ ಆಕ್ರಮವಾಗಿ  ಮದ್ಯಪಾನ ಮಾಡಲು ಸ್ಥಳಾವಕಾಶ ನೀಡಿರುವುದಕ್ಕೆ ಯಾವುದಾದರು ಪರವಾನಿಗೆ ಇದೆಯೇ ಎಂದು ಕೇಳಲಾಗಿ ಯಾವುದೇ ಪರವಾನಿಗೆ ಇಲ್ಲವೆಂದು ತಿಳಿಸಿದ್ದು, ಸ್ಥಳದಲ್ಲಿದ್ದ ಮೇಲ್ಕಂಡ  ಮಾಲುಗಳನ್ನು  ಪಂಚಾಯ್ತಿದಾರರ ಸಮಕ್ಷಮ  ಪಂಚನಾಮೆ ಮೂಲಕ ಅಮಾನತ್ತು ಪಡಿಸಿಕೊಂಡು ಮಾಲು ಮತ್ತು  ಆರೋಪಿತನೊಂದಿಗೆ ಬೆಳಿಗ್ಗೆ 10:30 ಗಂಟೆಗೆ ಠಾಣೆಗೆ ಹಾಜರಾಗಿ ಆಕ್ರಮವಾಗಿ ಮದ್ಯಪಾನ ಮಾಡಲು ಸ್ಥಳಾವಕಾಶ ನೀಡಿದ್ದ  ಮೇಲ್ಕಂಡವನ ವಿರುದ್ದ ಕಾನೂನು ರೀತ್ಯ ಕ್ರಮ ಜರುಗಿಸಲು ಕೋರಿ ಠಾಣಾಧಿಕಾರಿಗಳಿಗೆ ವರದಿಯನ್ನು ನೀಡಿರುತ್ತೇನೆ, ಎಂದು ನೀಡಿದ ವರಧಿಯ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿರುತ್ತೆ.

 1. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ. ಮೊ.ಸಂ: 139/2019 ಕಲಂ: 15(A), 32(3) ಕೆ.ಇ. ಆಕ್ಟ್:-

ದಿನಾಂಕ 19/06/2019 ರಂದು ಸಂಜೆ 04.10 ಗಂಟೆಗೆ ಪಿಎಸ್ಐ ರವರು ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ 19/06/2019 ರಂದು ಸಂಜೆ 04.00 ಗಂಟೆಯಲ್ಲಿ ತಾನು ಠಾಣಾ ಕರ್ತವ್ಯದಲ್ಲಿ ಇದ್ದಾಗ ಪೊಲೀಸ್ ಠಾಣಾ ಸರಹದ್ದಿನ ಮೊಟ್ಲೂರು ಗ್ರಾಮದಲ್ಲಿ ವಾಸವಾಗಿರುವ ಆನಂದ ಬಾಬು ಬಿನ್ ಲೇಟ್ ಮಲ್ಲಪ್ಪ, 49 ವರ್ಷ, ಗೊಲ್ಲರು ರವರು ಅವರ ಚಿಲ್ಲರೆ ಅಂಗಡಿಯ ಬಳಿ ಅಕ್ರಮವಾಗಿ ಸಾರ್ವಜನಿಕರಿಗೆ ಮಧ್ಯಪಾನ ಮಾಡಲು ಅವಕಾಶ ಮಾಡಿಕೊಟ್ಟಿರುವುದಾಗಿ ಖಚಿತ ಮಾಹಿತಿ ಬಂದಿದ್ದು ಈ ಬಗ್ಗೆ ಆನಂದ ಬಾಬು ರವರ ಮೇಲೆ ಕಲಂ 15 (ಎ), 32(3) ಕೆ ಇ ಆಕ್ಟ್ ರೀತ್ಯಾ ಆಸಾಮಿಯ ವಿರುದ್ದ ಪ್ರಕರಣ ದಾಖಲಿಸಿಕೊಳ್ಳಲು ಸೂಚಿಸಿದ ಮೇರೆಗೆ  ಈ ಪ್ರ ವ ವರದಿ.

 1. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ. ಮೊ.ಸಂ: 140/2019 ಕಲಂ: 15(A), 32(3) ಕೆ.ಇ. ಆಕ್ಟ್:-

          ದಿನಾಂಕ 19/06/2019 ರಂದು ಸಂಜೆ 06.10 ಗಂಟೆಗೆ ಪಿಎಸ್ಐ ರವರು ನೀಡಿದ ವರದಿಯ ಸಾರಾಂಶವೇನೆಂದರೆ ದಿನಾಂಕ 19/06/2019 ರಂದು ಸಂಜೆ 06.00 ಗಂಟೆಯಲ್ಲಿ ತಾನು ಠಾಣಾ ಕರ್ತವ್ಯದಲ್ಲಿ ಇದ್ದಾಗ ಪೊಲೀಸ್ ಠಾಣಾ ಸರಹದ್ದಿನ ಮೊಟ್ಲೂರು ಗ್ರಾಮದಲ್ಲಿ ವಾಸವಾಗಿರುವ ವೆಂಕಟೇಶ್ ಮೂರ್ತಿ ಬಿನ್ ಲೇಟ್ ಸಿಂಗಾಲಪ್ಪ, 48 ವರ್ಷ, ಕೊರಚ ಜನಾಂಗ ರವರು ಅವರ ಚಿಲ್ಲರೆ ಅಂಗಡಿಯ ಬಳಿ ಅಕ್ರಮವಾಗಿ ಸಾರ್ವಜನಿಕರಿಗೆ ಮಧ್ಯಪಾನ ಮಾಡಲು ಅವಕಾಶ ಮಾಡಿಕೊಟ್ಟಿರುವುದಾಗಿ ಖಚಿತ ಮಾಹಿತಿ ಬಂದಿದ್ದು ಈ ಬಗ್ಗೆ ವೆಂಕಟೇಶ್ ಮೂರ್ತಿ ರವರ ಮೇಲೆ ಕಲಂ 15 (ಎ), 32(3) ಕೆ ಇ ಆಕ್ಟ್ ರೀತ್ಯಾ ಆಸಾಮಿಯ ವಿರುದ್ದ ಪ್ರಕರಣ ದಾಖಲಿಸಿಕೊಳ್ಳಲು ಸೂಚಿಸಿದ ಮೇರೆಗೆ  ಈ ಪ್ರ ವ ವರದಿ.

 1. ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆ. ಮೊ.ಸಂ: 121/2019 ಕಲಂ: 379 ಐ.ಪಿ.ಸಿ:-

          ದಿನಾಂಕ/19-06-2019 ರಂದು ಸಂಜೆ 05:00 ಗಂಟೆಗೆ ಪಿರ್ಯಾದಿದಾರರಾದ ಶ್ರೀ ರಾಜೇಶ್,ವಿ ರವರು ಠಾಣೆಗೆ ಹಾಜರಾಗಿ ಕೊಟ್ಟ ಗಣಕೀಕೃತ ದೂರಿನ ಸಾರಾಂಶವೇನೆಂದರೆ ದಿನಾಂಕ:16/06/2019 ರಂದು ಬಾನುವಾರದಂದು ನಮ್ಮ ಮನೆಯ ಬಳಿ ನನ್ನ ಕೆ,ಎ-43, ಯು-8033 ಬಜಾಜ್ ಪಲ್ಸರ್ 220, ಕಪ್ಪು ಬಣ್ಣದ ದ್ವಿಚಕ್ರ ವಾಹನವನ್ನು ನಮ್ಮ ಮನೆಯ ಮುಂದೆ ರಾತ್ರಿ 10:00 ಗಂಟೆಗೆ ನಿಲ್ಲಿಸಿದ್ದು ಬೆಳಿಗ್ಗೆ 05-30 ಗಂಟೆಗೆ ನೋಡಲಾಗಿ ನನ್ನ ಪಲ್ಸರ್ ದ್ವಿಚಕ್ರವಾಹನ ನಿಲ್ಲಿಸಿದ್ದ ಸ್ಥಳದಲ್ಲಿ ಯಾರೋ ಕಳ್ಳರು ಕಳುವು ಮಾಡಿಕೊಂಡು ಹೋಗಿರುತ್ತಾರೆ. ಸದರಿ ದ್ವಿಚಕ್ರ ವಾಹನದ ಅಂದಾಜು ಬೆಲೆ ಸುಮಾರು 40,000/- ರೂಗಳಾಗಿರುತ್ತದೆ. ನನ್ನ ದ್ವಿಚಕ್ರ ವಾಹನವನ್ನು ಪತ್ತೆಮಾಡಿ ಆರೋಪಿಗಳ ವಿರುದ್ದ ಕಾನೂನು ಕ್ರಮ ಕೈಗೋಳ್ಳಲು ಹಾಗೂ ನನ್ನ ದ್ವಿಚಕ್ರ ವಾಹನವನ್ನು ನನ್ನ ಸ್ನೇಯಿತರು ಮತ್ತು ಸಂಬಂದಿಕರ ಮನೆಗಳಲ್ಲಿ ಹುಡುಕಾಡಿದರೂ ದ್ವಿ ಚಕ್ರವಾಹನ ಸಿಗದೇ ಇದ್ದುದ್ದರಿಂದ ಈ ದಿನ ತಡವಾಗಿ ದೂರನ್ನು ನೀಡುತಿರುವುದಾಗಿ ಕೊಟ್ಟ ದೂರನ ಮೇರೆಗೆ ಪ್ರಕರಣವನ್ನು ಧಾಖಲಿಸಿಕೊಂಡು ತನಿಖೆಯನ್ನು ಕೈಗೊಂಡಿರುತ್ತೆ.

 1. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ. ಮೊ.ಸಂ: 214/2019 ಕಲಂ: 279, 337 ಐ.ಪಿ.ಸಿ:-

          ದಿನಾಂಕ 20-06-2016 ರಂದು ಬೆಳಗ್ಗೆ 11-00 ಗಂಟೆಗೆ  ಮಲ್ಲೇಶ ಬಿನ್ ಚಿಕ್ಕಮಲ್ಲೇಗೌಡ, 25 ವರ್ಷ, ಕಾರ್ ಚಾಲಕ, ಕುರುಬರು. ಹೊನ್ನಹಳ್ಳಿ ಗ್ರಾಮ, ನಾಗಮಂಗಲ ತಾ ಮಂಡ್ಯ ಜಿಲ್ಲೆ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ನಾನು ಈ ಮೇಲ್ಕಂಡ ವಿಳಾಸದಲ್ಲಿ ವಾಸವಾಗಿದ್ದು ಇತ್ತೀಚ್ಚಿಗೆ ಬೆಂಗಳೂರಿನಲ್ಲಿ ಕಾರ್ ಚಾಲನೆ ಮಾಡಿಕೊಂಡು ಜೀವನ ನಡೆಸುತ್ತಿರುತ್ತೇನೆ. ಹೀಗಿರುವಾಗ ನನ್ನ ಸ್ನೇಹಿತನಾದ ಸುದಾಕರ್ ಬಿನ್ ಸೂರ್ಯ ನಾರಾಯಣ ( 25 ವರ್ಷ )  ರವರು ಅವರ ಸ್ವಂತ ಊರಾದ ಚಿನ್ನಾಯಪಲ್ಲಿ ಗ್ರಾಮ ಬದ್ವೇಲು ತಾಲ್ಲೂಕು ಕಡಪಜಿಲ್ಲೆ ಗೆ ಹೋಗಿ ಬರಲು ನನ್ನನ್ನು ಕರೆದಿದ್ದು ಅದರಂತೆ ಸದರಿ ಸುದಾಕರ್ ರವರ ಸಂಬಂದಿ ವೆಂಕಟೇಶ ಬಿನ್ ಮರಿಗೌಡ  ರವರ  ಬಾಬತ್ತು  ನೊಂದಣಿ ಸಂಖ್ಯೆ ಕೆಎ 05 ಎಜಿ 2695 ಮಾರುತಿ ಸುಜುಕಿ ನ್ಯೂ ಸಿಯಾಜ್ ಸಿವ್ಸ್ ವಿಡಿಐ ಕಾರ್ ನಲ್ಲಿ  ಮೇಲ್ಕಂಡ ಸುದಾಕರ್ ರವರು ಚಾಲಕನಾಗಿ ಹಾಗು ನಾನು ಮತ್ತು ಸುದಾಕರ್ ರವರ ತಾಯಿ ಲಕ್ಷ್ಮಿನರಸಮ್ಮ ಕೊಂ ಸೂರ್ಯ ನಾರಾಯಣ ( 40 ವರ್ಷ ) ರವರು ದಿನಾಂಕ 15-06-2019 ರಂದು ರಾತ್ರಿ 10-00 ಗಂಟೆಗೆ  ಬೆಂಗಳೂರು ಬಿಟ್ಟು ಕಡಪಗೆ ಹೋಗಿರುತ್ತೇವೆ. ನಂತರ ಅಲ್ಲಿ ಕೆಲಸ ಮುಗಿಸಿಕೊಂಡು ವಾಪಸ್ ಬೆಂಗಳೂರಿಗೆ ಬರಲು ದಿನಾಂಕ 16-06-2019 ರಂದು ರಾತ್ರಿ ಕಡಪ ಬಿಟ್ಟು 17-06-2019 ರಂದು ಬೆಳಗಿನ ಜಾವ  ಸುಮಾರು 06-00 ಗಂಟೆ ಸಮಯದಲ್ಲಿ  ಇದೇ ಚಿಂತಾಮಣಿ ತಾಲ್ಲೂಕು ಬೆಂಗಳೂರು-ಕಡಪ ಮುಖ್ಯರಸ್ತೆಯ ಐಮರೆಡ್ಡಿಹಳ್ಳಿ ಕ್ರಾಸ್ ಬಳಿ ಬಂದಿದ್ದು ಆ ಸಮಯ ಕಾರ್ ಚಾಲಕ ಸುದಾಕರ್ ರವರು ಕಾರ್ ಅನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿದ ಪರಿಣಾಮ ವಾಹನ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ಎಡಬದಿಯಲ್ಲಿದ್ದ ಮರಕ್ಕೆ ಡಿಕ್ಕಿ ಹೊಡೆದಿದ್ದು ಕಾರ್ ನ ಮುಂಬಾಗ ಸಂಪೂರ್ಣ ಜಖಂ ಆಗಿರುತ್ತೆ. ಆಗ ಕಾರಿನಲ್ಲಿದ್ದ ಸುದಾಕರ್ ರವರ ತಾಯಿ ಲಕ್ಷ್ಮಿನರಸಮ್ಮ ರವರಿಗೆ ಹಣೆಗೆ, ಮೂಗಿನ ಬಳಿ, ತುಟಿಗಳಿಗೆ ರಕ್ತಗಾಯಗಳಾಗಿರುತ್ತೆ. ನನಗೆ ಹಾಗೂ ಕಾರ್ ಚಾಲಕ ಸುದಾಕರ್ ರವರಿಗೆ ಯಾವುದೇ ಗಾಯಗಳಾಗಿರುವುದಿಲ್ಲ. ನಂತರ ನಾನು ಮತ್ತು ಸುದಾಕರ್ ರವರು ಲಕ್ಷ್ಮಿನರಸಮ್ಮ ರವರನ್ನು ಅಂಬುಲೆನ್ಸ್ ನಲ್ಲಿ ಚಿಂತಾಮಣಿ ಸರ್ಕಾರಿ ಆಸ್ವತ್ರೆಗೆ ದಾಖಲಿಸಿ ನಂತರ ಅಲ್ಲಿನ ವೈದ್ಯರ ಸಲಹೆ ಮೇರೆಗೆ ಕೋಲಾರದ ಆರ್ ಎಲ್ ಜಾಲಪ್ಪ ಆಸ್ವತ್ರೆಗೆ ದಾಖಲಿಸಿರುತ್ತೆವೆ. ಸದರಿ ಲಕ್ಷ್ಮಿನರಸಮ್ಮ ರವರು ಇನ್ನೂ ಒಳರೋಗಿಯಾಗಿ ಚಿಕಿತ್ಸ್ಪಡೆದುಕೊಳ್ಳುತ್ತಿದ್ದು ನಾನು ಇದುವರೆಗೂ ಅವರ ಆರೈಕೆಯಲ್ಲಿದ್ದ ಕಾರಣ ಈ ದಿನ ತಡವಾಗಿ ಬಂದು ದೂರನ್ನು ನೀಡುತ್ತಿದ್ದು ಮೇಲ್ಕಂಡ ಅಪಘಾತಕ್ಕೆ ಕಾರಣನಾದ ಸುದಾಕರ್ ರವರ ವಿರುದ್ದ ಕಾನೂನು ಕ್ರಮ ಜರುಗಿಸಲು ಕೋರುತ್ತೇನೆ.

 1. ದಿಬ್ಬೂರಹಳ್ಳಿ ಪೊಲೀಸ್ ಠಾಣೆ. ಮೊ.ಸಂ: 79/2019 ಕಲಂ: 15(A), 32(3) ಕೆ.ಇ. ಆಕ್ಟ್:-

          ಈ ದಿನ ದಿನಾಂಕ 20/06/2019 ರಂದು ಬೆಳಗ್ಗೆ 10-00 ಗಂಟೆಗೆ ಪಿ.ಎಸ್.ಐ ಸಾಹೇಬರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಂಶವೇನೆಂದರೆ ದಿಬ್ಬೂರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಆಮೂರುತಿಮ್ಮನಹಳ್ಳಿ ಗ್ರಾಮದ ಆಂಜಿನಪ್ಪ ಬಿನ್ ವೆಂಕಟಪ್ಪ ರವರು ಅವರ ಪೆಟ್ಟಿಗೆ ಅಂಗಡಿಯ ಬಳಿ ಅಕ್ರಮವಾಗಿ ಮದ್ಯಮಾರಾಟಮಾಡಲು ಸಾರ್ವಜನಿಕರಿಗೆ ಸ್ಥಳಾವಕಾಶವನ್ನು ಮಾಡಿಕೊಟ್ಟಿರುವುದಾಗಿ ಮಾಹಿತಿ ಬಂದಿದ್ದರ ಮೇರೆಗೆ ನಮ್ಮ ಠಾಣೆಯ ಹೆಚ್.ಸಿ 36 ಶ್ರೀನಿವಾಸ್ , ಸಿ.ಪಿ.ಸಿ 200 ಚಂದ್ರಶೇಕರ್ ಮತ್ತು ಪಂಚಾಯ್ತಿದಾರರೊಂದಿಗೆ ದಾಳಿಮಾಡಿ ಸ್ಥಳದಲ್ಲಿ ಇದ್ದ 90 ಎಂ.ಎಲ್ ನ 17 ಒರಿಜಿನಲ್ ಚಾಯ್ಸ್ ವಿಸ್ಕಿಯ ಮದ್ಯದ ಟೆಟ್ರಾ ಪಾಕೇಟ್ ಗಳನ್ನು, ಓಪನ್ ಮಾಡಿರುವ 3 ಒರಿಜಿನಲ್ ಚಾಯ್ಸ್ ವಿಸ್ಕಿಯ ಮದ್ಯದ ಟೆಟ್ರಾ ಪಾಕೇಟ್ ಗಳನ್ನು  ಹಾಗೂ 3 ಪ್ಲಾಸ್ಟಿಕ್ ಲೋಟಗಳನ್ನು ಪಂಚನಾಮೆಯ ಮೂಲಕ ಅಮಾನತ್ತು ಪಡಿಸಿಕೊಂಡು  ಠಾಣೆಗೆ ಬಂದು ಮುಂದಿನ ಕ್ರಮ ಕೈಗೊಳ್ಳಲು ನೀಡಿರುವ ಮೆಮೋ ಆಗಿರುತ್ತೆ.

 1. ದಿಬ್ಬೂರಹಳ್ಳಿ ಪೊಲೀಸ್ ಠಾಣೆ. ಮೊ.ಸಂ: 80/2019 ಕಲಂ: 15(A), 32(3) ಕೆ.ಇ. ಆಕ್ಟ್:-

          ಈ ದಿನ ದಿನಾಂಕ 20/06/2019 ರಂದು ಬೆಳಗ್ಗೆ 12-00 ಗಂಟೆಗೆ ಪಿ.ಎಸ್.ಐ ಸಾಹೇಬರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಂಶವೇನೆಂದರೆ ತಮ್ಮ ಪೊಲೀಸ್ ಠಾಣಾ ವ್ಯಾಪ್ತಿಯ ಆಮೂರುತಿಮ್ಮನಹಳ್ಳಿ ಗ್ರಾಮದ  ರಾಮಕೃಷ್ಣಾರೆಡ್ಡಿ ಬಿನ್ ನಾರಾಯಣರೆಡ್ಡಿ ರವರು ಅವರ ಪೆಟ್ಟಿಗೆ ಅಂಗಡಿಯ ಬಳಿ ಅಕ್ರಮವಾಗಿ ಮದ್ಯಮಾರಾಟಮಾಡಲು ಸಾರ್ವಜನಿಕರಿಗೆ ಸ್ಥಳಾವಕಾಶವನ್ನು ಮಾಡಿಕೊಟ್ಟಿರುವುದಾಗಿ ಮಾಹಿತಿ ಬಂದಿದ್ದರ ಮೇರೆಗೆ ನಮ್ಮ ಠಾಣೆಯ ಹೆಚ್.ಸಿ 36 ಶ್ರೀನಿವಾಸ್ , ಸಿ.ಪಿ.ಸಿ 200 ಚಂದ್ರಶೇಕರ್ ಮತ್ತು ಪಂಚಾಯ್ತಿದಾರರೊಂದಿಗೆ ದಾಳಿಮಾಡಿ ಸ್ಥಳದಲ್ಲಿ ಇದ್ದ 90 ಎಂ.ಎಲ್ ನ 20 ಒರಿಜಿನಲ್ ಚಾಯ್ಸ್ ವಿಸ್ಕಿಯ ಮದ್ಯದ ಟೆಟ್ರಾ ಪಾಕೇಟ್ ಗಳನ್ನು, ಓಪನ್ ಮಾಡಿರುವ 2 ಒರಿಜಿನಲ್ ಚಾಯ್ಸ್ ವಿಸ್ಕಿಯ ಮದ್ಯದ ಟೆಟ್ರಾ ಪಾಕೇಟ್ ಗಳನ್ನು  ಹಾಗೂ 2 ಪ್ಲಾಸ್ಟಿಕ್ ಲೋಟಗಳನ್ನು ಪಂಚನಾಮೆಯ ಮೂಲಕ ಅಮಾನತ್ತು ಪಡಿಸಿಕೊಂಡು  ಠಾಣೆಗೆ ಬಂದು ಮುಂದಿನ ಕ್ರಮ ಕೈಗೊಳ್ಳಲು ನೀಡಿರುವ ಮೆಮೋ ಆಗಿರುತ್ತೆ.

 1. ಗೌರಿಬಿದನೂರು ಪುರ ಪೊಲೀಸ್ ಠಾಣೆ. ಮೊ.ಸಂ: 98/2019 ಕಲಂ: 66(C), 66(D) INFORMATION TECHNOLOGY ACT-2000 ಮತ್ತು ಕಲಂ: 420 ಐ.ಪಿ.ಸಿ:-

          ದಿನಾಂಕ 20/06/2019 ರಂದು ಪಿರ್ಯಾದಿ ಶಮೀಮ್ ಕೋಂ, ಶಮೀವುಲ್ಲಾ, 37 ವರ್ಷ, ಮನೆಕೆಲಸ, ಮುಸ್ಲಿಂ ಜನಾಂಗ, ಮಾದನಹಳ್ಳಿ, ಗೌರಿಬಿದನೂರು ಟೌನ್ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ನಾನು 8 ವರ್ಷಗಳಿಂದ ಗೌರಿಬಿದನೂರು ಮಾದನಹಳ್ಳಿ ವಾಸ ಮಾಡುತ್ತಿರುತ್ತೇನೆ.  ನನಗೆ ಇಬ್ಬರು ಹೆಣ್ಣುಮಕ್ಕಳಿರುತ್ತಾರೆ.  ನಾನು  ಮನೆಕಲಸ ಮಾಡಿಕೊಂಡು ಜೀವನ ಮಾಡುತ್ತಿರುತ್ತೇನೆ.  ದಿನಾಂಕ: 11/06/2019 ರಂದು ಬೆಳಿಗ್ಗೆ 8-00 ಗಂಟೆಗೆ 00923015672233 ನಂಬರಿನಿಂದ ನನ್ನ ಗಂಡನಾದ ಶಮೀನ್ ವುಲ್ಲಾ ರವರ ಮೊಬೈಲ್ ನಂ 9353526785 ಗೆ  00923015672233 ನಂಬರಿನಿಂದ ಕಾಲ್  ಮಾಡಿ ನಾನು ಹರೀಶ್ ಕುಮಾರ್ ಕಲ್ಕತ್ತಾ,  ಜಿಯೋ ಕಂಪನಿಯವರು ನಿಮಗೆ 25 ಲಕ್ಷ ಲಕ್ಕಿ ಡ್ರಾ ಬಂದಿದೆ  ನಿಮ್ಮ ವಾಟ್ಸ್ ಫ್ ನಂಬರ್ ಕೊಡಿ ಎಂದು ಕೇಳಿರುತ್ತಾರೆ.  ನನ್ನ ಮಗಳ ನಂಬರ್ 9606533790 ನಂಬರ್  ನೀಡಿದ್ದು, .ನಂತರ ನಿಮ್ಮ ಅಕೌಂಟ್ ನಂಬರ್ ಕಳಿಸಿ ನಾವು ಹಣ ಹಾಕುತ್ತೇವೆಂದು ತಿಳಿಸಿದರು.  ಹಾಗೂ 25 ಲಕ್ಷಗೆ ತೆರಿಗೆ 6100 ರೂಗಳು ಕಟ್ಟಿ ಎಂದು ಅಕೌಂಟ್ ನಂಬರ್ 31954858555 ತಿಳಿಸಿದರು.  ಅದರಂತೆ ನಾನು ನನ್ನ ಗಂಡ ಎಸ್.ಬಿ.ಐ ಬ್ಯಾಂಕ್ ಗೆ ಹೋಗಿ 31954858555  ಅಕೌಂಟ್ ನಂಬರಿಗೆ 6100 ರೂಪಾಯಿಗಳನ್ನು ಕಟ್ಟಿರುತ್ತೇವೆ.  ಆ ದಿನವೇ ಕಾಲ್ ಮಾಡಿ ನಿಮ್ಮ ಅಕೌಂಟ್ ಹೋಲ್ಡ್ ಆಗಿದೆ 18,200 ರೂಗಳು ಕಟ್ಟಿ ಎಂದು36310737659 ನಂಬರ್ ಗೆ ಹಾಕಿ ಎಂದು ತಿಳಿಸಿದರು.  ಅದೇ ರೀತಿ ಹಣ ಕಟ್ಟಿರುತ್ತೇವೆ.  ದಿನಾಂಕ: 12/06/2019 ರಂದು ಜಿಯೋ ಕಂಪನಿಯವರು ಪೋನ್ ಮಾಡಿ 32,000 ತೆರಿಗೆ ಕಟ್ಟಬೇಕೆಂದು ಅಕೌಂಟ್ ನಂ. 37212788236 ನೀಡಿದರು.  ಅದೇ ರೀತಿ ಹಣವನ್ನು ಕಟ್ಟಿರುತ್ತೇವೆ.  ದಿನಾಂಕ: 13/06/2019 ರಂದು ಜಿಯೋ ಕಂಪನಿಯು ಕಾಲ್ ಮಾಡಿ ಜೆ.ಎಸ್.ಸಿ. 42.000 ರೂ ಅಕೌಂಟ್ ನಂ. 37212788236 ಹಣವನ್ನು ಕಟ್ಟಬೇಕು ಎಂದು ತಿಳಿಸಿದರು.  ಅದರಂತೆ ಹಣವನ್ನು ಬ್ಯಾಂಕಿನಲ್ಲಿ ಕಟ್ಟಿರುತ್ತೇವೆ.  ದಿನಾಂಕ:14/06/2019 ರಂದು ಇನ್ಸುರೇನ್ಸ್ ಪಾಲಿಸಿ 28,000 ರೂ : 20248622793 ಅಕೌಂಟ್ ನಂಬರಿಗೆ ಹಣ ಕಟ್ಟಬೇಕೆಂದು ತಿಳಿಸಿದರು.  ಅದರಂತೆ ಹಣ ಕಟ್ಟಿರುತ್ತೇವೆ.  ನಂತರ ಆ ದಿನವೇ ಅನ್ ಲೇನ್ ಟ್ರಾನ್ಸ್ ಫರ್ 54,300  ಅಕೌಂಟ್ ನಂ 35022535261 ನಂಬರಿಗೆ ಹಣ ಕಟ್ಟಿ ಎಂದರು ಅದರಂತೆ ಹಣ ಕಟ್ಟಿರುತ್ತೇವೆ.  ದಿನಾಂಕ: 15/06/2019 ರಂದು  ಹರೀಶ್ ರವರು ಕಾಲ್ ಮಾಡಿ ತೆರಿಗೆ ಕಟ್ಟಬೇಕು 68,200 ಅಕೌಂಟ್ ನಂ 37212788236 ಹಣ ಕಟ್ಟಿಎಂದು ನಾನು ಮತ್ತು ನನ್ನ ಗಂಡ ಏಕೆ ಎಂದು ಕೇಳಿದಾಗ ನಿಮ್ಮ  ಝಿರೋ ಅಕೌಂಟ್ ಇದೆ ಅದ್ದರಿಂದ ಹಣ ಕಟ್ಟಿ ಎಂದು ಹೇಳಿದರು.  ಅದೇ ರೀತಿ ಹಣ ಕಟ್ಟಿರುತ್ತೇವೆ.  ದಿನಾಂಕ: 16/06/2019 ರಂದು ಹರೀಶ್ ರವರು ಕಾಲ್ ಮಾಡಿ ನಿಮ್ಮ ಪ್ರೋಸಸ್ ಮುಗಿದಿದೆ ಇನಿವಿಟೇಷನ್ ಗಾಗಿ 15,000 ರೂಗಳು ಅಕೌಂಟ್ ನಂಬರ್ 37212788236 ಹಣ ಕಟ್ಟಬೇಕೆಂದು ತಿಳಿಸಿರುತ್ತಾರೆ.  ಅದರಂತೆ ಹಣವನ್ನು ಕಟ್ಟಿರುತ್ತೇವೆ.  ದಿನಾಂಕ; 19/06/2019 ರಂದು ಹರೀಶ್ ರವರು ಕಾಲ್ ಮಾಡಿ ಪಾಸ್ ಬುಕ್ ಮಾಡಿಸಲು 68,000 ರೂ ಹಣ ಕಟ್ಟಿ ಎಂದು ಹೇಳಿರುತ್ತಾರೆ.  ನನಗೆ ಅನುಮಾನ ಬಂದು ಹಣವನ್ನು ಕಟ್ಟಿರುವುದಿಲ್ಲ. ಇದುವರೆವಿಗೂ 3 ಲಕ್ಷ ರೂ ಹಣವನ್ನು ಕಟ್ಟಿರುತ್ತೇವೆ. ನಮಗೆ 25 ಲಕ್ಷ ಹಣ ಕೊಡುತ್ತೇವೆಂದು ನಂಬಿಸಿ ಮೋಸ ಮಾಡಿರುವ ಜಿಯೋ ಕಂಪನಿಯ ಹರೀಶ್ ಕುಮಾರ್ ರವರ ಮೇಲೆ ಕಾನೂನು ರೀತ್ಯ ಕ್ರಮ ಜರುಗಿಸಿಬೇಕೆಂದು ನೀಡಿದ್ದರ ದೂರಿನ ಮೇರೆಗೆ ಪ್ರಕರಣವನ್ನು ದಾಖಲಿಸಿರುತ್ತೇನೆ.

 1. ಗುಡಿಬಂಡೆ ಪೊಲೀಸ್ ಠಾಣೆ. ಮೊ.ಸಂ: 148/2019 ಕಲಂ: 15(A), 32(3) ಕೆ.ಇ. ಆಕ್ಟ್:-

          ದಿನಾಂಕ 19/06/2019 ರಂದು ಮದ್ಯಾಹ್ನ 1-45 ಗಂಟೆಗೆ ಪಿರ್ಯಾಧಿ ಗುಡಿಬಂಡೆ ಠಾಣೆಯ ಮಾನ್ಯ ಪಿ.ಐ. ಸುನೀಲ್ ಕುಮಾರ್ ರವರು ಠಾಣೆಯಲ್ಲಿ ಆರೋಪಿತನೊಂದಿಗೆ ಹಾಜರಾಗಿ ಮಹಜರ್, ಮಾಲಿನೊಂದಿಗೆ ನೀಡಿದ ದೂರಿನ ಸಾರಾಂಶವೇನೆಂದರೆ, ಈ ದಿನ ದಿನಾಂಕ:19-06-2019 ರಂದು ಮಧ್ಯಾಹ್ನ 12-30 ಗಂಟೆಯಲ್ಲಿ ಸಾರ್ವಜನಿಕರು ನನಗೆ ಪೋನ್ ಮಾಡಿ, ಚಿಕ್ಕಬಳ್ಳಾಪುರ ತಾಲೂಕಿನ ರಾಮಪಟ್ನ ಗ್ರಾಮದಲ್ಲಿ ಪಿಳ್ಳಯ್ಯ ಬಿನ್ ಸಂಜೀವಪ್ಪ ಆದಿ ಕರ್ನಾಟಕ ಜನಾಂಗ ರವರ ಮನೆಯ ಬಳಿ ಸಾರ್ವಜನಿಕ ರಸ್ತೆಯಲ್ಲಿ ಸಾರ್ವಜನಿಕರಿಗೆ ಮಧ್ಯವನ್ನು ಕುಡಿಯಲು ಸ್ಥಳಾವಕಾಶ ಮಾಡಿರುತ್ತಾರೆಂದು ನೀಡಿದ ಮಾಹಿತಿ ಮೇರೆಗೆ ನಾನು ಸರ್ಕಾರಿ ಜೀಪು ಸಂಖ್ಯೆ-ಕೆ,ಎ-40 ಜಿ-1888 ರಲ್ಲಿ ಚಾಲಕ ಎಚ್,ಸಿ-41 ವೆಂಕಟಚಲಪತಿ ರವರೊಂದಿಗೆ ಸಿಬ್ಬಂದಿಯಾದ ಸಿ,ಪಿ,ಸಿ-88 ರಮೇಶ ರವರನ್ನು ಕರೆದುಕೊಂಡು ರಾಮಪಟ್ನ ಗ್ರಾಮಕ್ಕೆ ಹೋಗಿ ಪಂಚರನ್ನು ಬರಮಾಡಿಕೊಂಡು ಸ್ಥಳಕ್ಕೆ 12-20 ಗಂಟೆಯಲ್ಲಿ ಹೋಗಿ ಮರೆಯಲ್ಲಿ ಜೀಪನ್ನು ನಿಲ್ಲಿಸಿ ಪಂಚರೊಂದಿಗೆ ನಾವು ಮೆಲ್ಕಂಡ ಪಿಳ್ಳಯ್ಯ ರವರ ಮನೆಯ ಬಳಿ ರಸ್ತೆಯನ್ನು ಮರೆಯಲ್ಲಿ ನೋಡಲಾಗಿ, ಸಾರ್ವಜನಿಕ ರಸ್ತೆಯಲ್ಲಿ ಅಕ್ರಮವಾಗಿ ಒಬ್ಬ ಆಸಾಮಿಯು ಸಾರ್ವಜನಿಕರಿಗೆ ಮದ್ಯವನ್ನು ಲೋಟದಲ್ಲಿ ಹಾಕುತ್ತಾ, ಸಾರ್ವಜನಿಕರಿಗೆ ಮಧ್ಯವನ್ನು ಕುಡಿಯಲು ಅನುಮತಿ ನೀಡಿರುವುದು ಮತ್ತು ಕುಡಿಯಲು ಸ್ಥಳಾವಕಾಶ ಮಾಡಿಕೊಟ್ಟಿರುವುದು ಕಂಡು ಬಂದಿರುತ್ತೆ. ಪಂಚರೊಂದಿಗೆ ನಾವುಗಳು ಸದರಿಯವರ ಮೇಲೆ ಧಾಳಿ ಮಾಡಿದಾಗ, ಸಮವಸ್ತ್ರದಲ್ಲಿದ್ದ ನಮ್ಮನ್ನು ಕಂಡು ಮದ್ಯವನ್ನು ಕುಡಿಯುತ್ತಿದ್ದವರು ಓಡಿ ಹೋದರು, ಆ ಪೈಕಿ ಒಬ್ಬನನ್ನು ವಶಕ್ಕೆ ಪಡೆದುಕೊಂಡು ಹೆಸರು & ವಿಳಾಸ ಕೇಳಲಾಗಿ ಪಿಳ್ಳಯ್ಯ ಬಿನ್ ಲೇಟ್ ಸಂಜೀವಪ್ಪ 60 ವರ್ಷ, ಆದಿ ಕರ್ನಾಟಕ, ಕೂಲಿ ಕೆಲಸ, ವಾಸ -ರಾಮಪಟ್ನ ಗ್ರಾಮ, ಚಿಕ್ಕಬಳ್ಳಾಪುರ ತಾಲೂಕು ಎಂದು ತಿಳಿಸಿದ್ದು. ಸದರಿ ಆಸಾಮಿಯನ್ನು ಸಾರ್ವಜನಿಕ ಸ್ಥಳದಲ್ಲಿ ಮಧ್ಯ ಸೇವನೆ ಮಾಡಲು ಇರುವಂತಹ ಲೈಸನ್ಸ್ ತೋರಿಸಲು ಕೇಳಲಾಗಿ, ಸದರಿ ಆಸಾಮಿಯು ಯಾವುದು ಇಲ್ಲವೆಂದು ತಿಳಿಸಿದನು, ನಂತರ ಸ್ಥಳವನ್ನು ಪರಿಶೀಲನೆ ಮಾಡಲಾಗಿ ಸದರಿ ಸ್ಥಳದಲ್ಲಿ 1) ಹೈ ವಾರ್ಡ್ಸ ಕಂಪನಿಯ 90 ಎಮ್, ಎಲ್ ಅಳತೆಯ ಓಪನ್ ಮಾಡದೇ ಇರುವಂತಹವು 21 ಟೆಟ್ರಾ ಪಾಕೆಟ್ಗಳು ಇದ್ದು, 2) ಓಪನ್ ಮಾಡಿರುವಂತ ಹೈ ವಾರ್ಡ್ಸ ಕಂಪನಿಯ 90 ಎಮ್, ಎಲ್ ಅಳತೆಯ ಒಟ್ಟು 4 ಖಾಲಿ ಪಾಕೆಟ್ ಗಳಿದ್ದವು. 3) ಮದ್ಯವನ್ನು ಕುಡಿದು ಬಿಸಾಕಿದಂತಹ 4 ಖಾಲಿ ಪ್ಲಾಸ್ಟಿಕ್ ಗ್ಲಾಸುಗಳು ಇದ್ದವು. ಮಧ್ಯವಿರುವ ಟೆಟ್ರಾ ಪಾಕೆಟ್ಗಳ ದ್ರವ ಪ್ರಮಾಣ ಲೆಕ್ಕ ಮಾಡಲಾಗಿ ಒಟ್ಟು 1,890 ಎಮ್,ಎಲ್ ಆಗಿದ್ದು, ಆ ಪಾಕೆಟ್ಗಳ ಮೇಲಿನ ದರವನ್ನು ಲೆಕ್ಕ ಮಾಡಲಾಗಿ ಒಟ್ಟು 32*1=672 ರೂ ಆಗಿರುತ್ತದೆ, ಸದರಿ ಮಾಲನ್ನು ಪಂಚಾಯ್ತಿದಾರರ ಸಮಕ್ಷಮದಲ್ಲಿ ಮದ್ಯಾಹ್ನ 12-30 ಗಂಟೆಯಿಂದ 1-15 ಗಂಟೆಯವರೆಗೆ ಪಂಚನಾಮೆ ಮೂಲಕ ಅಮಾನತ್ತುಪಡಿಸಿಕೊಂಡಿರುತ್ತದೆ. ಮೇಲ್ಕಂಡ ಆರೋಪಿ  & ಮಾಲನ್ನು ಅಸಲು ಪಂಚನಾಮೆಯೊಂದಿಗೆ ಮಧ್ಯಾಹ್ನ 1-45 ಗಂಟೆಯಲ್ಲಿ ಠಾಣೆಯಲ್ಲಿ ಹಾಜರುಪಡಿಸಿ ಸದರಿ ಆರೋಪಿ & ಮಾಲಿನ ವಿರುದ್ದ ಮುಂದಿನ ಕಾನೂನು ಕ್ರಮ ಜರುಗಿಸಲು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುತ್ತೆ.

 1. ಗುಡಿಬಂಡೆ ಪೊಲೀಸ್ ಠಾಣೆ. ಮೊ.ಸಂ: 149/2019 ಕಲಂ: 15(A), 32(3) ಕೆ.ಇ. ಆಕ್ಟ್:-

          ದಿನಾಂಕ 19/06/2019 ರಂದು ಮದ್ಯಾಹ್ನ 3-15 ಗಂಟೆಗೆ ಪಿರ್ಯಾಧಿ ಗುಡಿಬಂಡೆ ಠಾಣೆಯ ಮಾನ್ಯ ಪಿ.ಐ. ಸುನೀಲ್ ಕುಮಾರ್ ರವರು ಠಾಣೆಯಲ್ಲಿ ಆರೋಪಿತನೊಂದಿಗೆ ಹಾಜರಾಗಿ ಮಹಜರ್, ಮಾಲಿನೊಂದಿಗೆ ನೀಡಿದ ದೂರಿನ ಸಾರಾಂಶವೇನೆಂದರೆ, ಈ ದಿನ ದಿನಾಂಕ:19-06-2019 ರಂದು ಮಧ್ಯಾಹ್ನ 2-00 ಗಂಟೆಯಲ್ಲಿ ಸಾರ್ವಜನಿಕರು ನನಗೆ ಪೋನ್ ಮಾಡಿ, ಗುಡಿಬಂಡೆ ಪಟ್ಟಣದ ಏಳು ಅಕ್ಕಯಮ್ಮನ ದೇವಾಲಯದ ಬಳಿ ಸಾರ್ವಜನಿಕ ಸ್ಥಳದಲ್ಲಿ ಯಾರೋ ಒಬ್ಬ ಆಸಾಮಿಯು ಸಾರ್ವಜನಿಕರಿಗೆ ಮಧ್ಯವನ್ನು ಕುಡಿಯಲು ಸ್ಥಳಾವಕಾಶ ಮಾಡಿರುತ್ತಾರೆಂದು ನೀಡಿದ ಮಾಹಿತಿ ಮೇರೆಗೆ ನಾನು ಸರ್ಕಾರಿ ಜೀಪು ಸಂಖ್ಯೆ-ಕೆ,ಎ-40 ಜಿ-1888 ರಲ್ಲಿ ಚಾಲಕ ಎಚ್,ಸಿ-41 ವೆಂಕಟಚಲಪತಿ ರವರೊಂದಿಗೆ ಸಿಬ್ಬಂದಿಯಾದ ಸಿ,ಪಿ,ಸಿ-88 ರಮೇಶ & ಸಿ,ಪಿ,ಸಿ-378 ಶ್ರೀನಿವಾಸ ರವರನ್ನು ಕರೆದುಕೊಂಡು ಸ್ಥಳಕ್ಕೆ ಪಂಚರನ್ನು ಕರೆದುಕೊಂಡು 2-10 ಗಂಟೆಯಲ್ಲಿ ಹೋಗಿ ಜೀಪನ್ನು ಮರೆಯಲ್ಲಿ ನಿಲ್ಲಿಸಿ ಪಂಚರೊಂದಿಗೆ ನಾವು ಮೆಲ್ಕಂಡ ದೆವಾಲಯದ ಬಳಿ ಮರೆಯಲ್ಲಿ ನೋಡಲಾಗಿ, ಸಾರ್ವಜನಿಕ ರಸ್ತೆಯಲ್ಲಿ ಅಕ್ರಮವಾಗಿ ಒಬ್ಬ ಆಸಾಮಿಯು ಸಾರ್ವಜನಿಕರಿಗೆ ಮದ್ಯವನ್ನು ಲೋಟದಲ್ಲಿ ಹಾಕುತ್ತಾ, ಸಾರ್ವಜನಿಕರಿಗೆ ಮಧ್ಯವನ್ನು ಕುಡಿಯಲು ಅನುಮತಿ ನೀಡಿರುವುದು ಮತ್ತು ಕುಡಿಯಲು ಸ್ಥಳಾವಕಾಶ ಮಾಡಿಕೊಟ್ಟಿರುವುದು ಕಂಡು ಬಂದಿರುತ್ತೆ. ಪಂಚರೊಂದಿಗೆ ನಾವುಗಳು ಸದರಿಯವರ ಮೇಲೆ ಧಾಳಿ ಮಾಡಿದಾಗ, ಸಮವಸ್ತ್ರದಲ್ಲಿದ್ದ ನಮ್ಮನ್ನು ಕಂಡು ಮದ್ಯವನ್ನು ಕುಡಿಯುತ್ತಿದ್ದವರು ಓಡಿ ಹೋದರು, ಆ ಪೈಕಿ ಒಬ್ಬನನ್ನು ವಶಕ್ಕೆ ಪಡೆದುಕೊಂಡು ಹೆಸರು & ವಿಳಾಸ ಕೇಳಲಾಗಿ ನಾರಾಯಣಪ್ಪ @ ಮೂಗಪ್ಪ ಬಿನ್ ನಾಗಿರೆಡ್ಡಿ 48 ವರ್ಷ, ವಕ್ಕಲಿಗರು, ಕೂಲಿ ಕೆಲಸ, ವಾಸ -ಚೋಳಶೆಟ್ಟಿಹಳ್ಳಿ ಗ್ರಾಮ, ಗೌರಿಬಿದನೂರು ತಾಲೂಕು ಎಂದು ತಿಳಿಸಿದ್ದು. ಸದರಿ ಆಸಾಮಿಯನ್ನು ಸಾರ್ವಜನಿಕ ಸ್ಥಳದಲ್ಲಿ ಮಧ್ಯ ಸೇವನೆ ಮಾಡಲು ಇರುವಂತಹ ಲೈಸನ್ಸ್ ತೋರಿಸಲು ಕೇಳಲಾಗಿ, ಸದರಿ ಆಸಾಮಿಯು ಯಾವುದು ಇಲ್ಲವೆಂದು ಅರ್ಧ ಅರ್ಧ ಅರ್ಥ ಆಗುವಂತೆ ತೊದಲುತ್ತಾ ತಿಳಿಸಿದನು, ನಂತರ ಸ್ಥಳವನ್ನು ಪರಿಶೀಲನೆ ಮಾಡಲಾಗಿ ಸದರಿ ಸ್ಥಳದಲ್ಲಿ 1) ಹೈ ವಾರ್ಡ್ಸ ಕಂಪನಿಯ 90 ಎಮ್, ಎಲ್ ಅಳತೆಯ ಓಪನ್ ಮಾಡದೇ ಇರುವಂತಹವು 16 ಟೆಟ್ರಾ ಪಾಕೆಟ್ಗಳು ಇದ್ದು, 2) ಓಪನ್ ಮಾಡಿರುವಂತ ಹೈ ವಾರ್ಡ್ಸ ಕಂಪನಿಯ 90 ಎಮ್, ಎಲ್ ಅಳತೆಯ ಒಟ್ಟು 2 ಖಾಲಿ ಪಾಕೆಟ್ ಗಳಿದ್ದವು. 3) ಮದ್ಯವನ್ನು ಕುಡಿದು ಬಿಸಾಕಿದಂತಹ 4 ಖಾಲಿ ಪ್ಲಾಸ್ಟಿಕ್ ಗ್ಲಾಸುಗಳು ಇದ್ದವು. 4) ಒಂದು ಒಂದು ಲೀಟರ್ ಸಾಮಥ್ರ್ಯದ ಖಾಲಿ ವಾಟರ್ ಬಾಟೆಲ್ ಇದ್ದು, ಮಧ್ಯವಿರುವ ಟೆಟ್ರಾ ಪಾಕೆಟ್ಗಳ ದ್ರವ ಪ್ರಮಾಣ ಲೆಕ್ಕ ಮಾಡಲಾಗಿ ಒಟ್ಟು 1,440 ಎಮ್,ಎಲ್ ಆಗಿದ್ದು, ಆ ಪಾಕೆಟ್ಗಳ ಮೇಲಿನ ದರವನ್ನು ಲೆಕ್ಕ ಮಾಡಲಾಗಿ ಒಟ್ಟು 32*16=512 ರೂ ಆಗಿರುತ್ತದೆ. ಸದರಿ ಮಾಲನ್ನು ಪಂಚಾಯ್ತಿದಾರರ ಸಮಕ್ಷಮದಲ್ಲಿ ಮದ್ಯಾಹ್ನ 2-20 ಗಂಟೆಯಿಂದ 3-00 ಗಂಟೆಯವರೆಗೆ ಪಂಚನಾಮೆ ಮೂಲಕ ಅಮಾನತ್ತುಪಡಿಸಿಕೊಂಡಿರುತ್ತದೆ, ಮೇಲ್ಕಂಡ ಆರೋಪಿ  & ಮಾಲನ್ನು ಅಸಲು ಪಂಚನಾಮೆಯೊಂದಿಗೆ ಮಧ್ಯಾಹ್ನ 3-15 ಗಂಟೆಯಲ್ಲಿ ಠಾಣೆಯಲ್ಲಿ ಹಾಜರುಪಡಿಸಿ ಸದರಿ ಆರೋಪಿ & ಮಾಲಿನ ವಿರುದ್ದ ಮುಂದಿನ ಕಾನೂನು ಕ್ರಮ ಜರುಗಿಸಲು ಸೂಚಿಸಿದ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುತ್ತೆ.

 1. ಗುಡಿಬಂಡೆ ಪೊಲೀಸ್ ಠಾಣೆ. ಮೊ.ಸಂ: 150/2019 ಕಲಂ: 15(A), 32(3) ಕೆ.ಇ. ಆಕ್ಟ್:-

          ದಿನಾಂಕ 19/06/2019 ರಂದು ಸಂಜೆ 05-30 ಗಂಟೆಗೆ ಪಿರ್ಯಾಧಿ ಗುಡಿಬಂಡೆ ಠಾಣೆಯ ಮಾನ್ಯ ಪಿ.ಐ. ಸುನೀಲ್ ಕುಮಾರ್ ರವರು ಠಾಣೆಯಲ್ಲಿ ಆರೋಪಿತನೊಂದಿಗೆ ಹಾಜರಾಗಿ ಮಹಜರ್, ಮಾಲಿನೊಂದಿಗೆ ನೀಡಿದ ದೂರಿನ ಸಾರಾಂಶವೇನೆಂದರೆ ಈ ದಿನ ದಿನಾಂಕ:19-06-2019 ರಂದು ಮಧ್ಯಾಹ್ನ 3-30 ಗಂಟೆಯಲ್ಲಿ ಸಾರ್ವಜನಿಕರು ನನಗೆ ಪೋನ್ ಮಾಡಿ, ಗುಡಿಬಂಡೆ ತಾಲೂಕಿನ ಯರ್ರಹಳ್ಳಿ ಗ್ರಾಮದಲ್ಲಿ ನಾಗರಾಜ ಬಿನ್ ರಂಗಪ್ಪ ರವರ ಚಿಲ್ಲರೆ ಅಂಗಡಿಯ ಬಳಿ ಸಾರ್ವಜನಿಕ ರಸ್ತೆಯಲ್ಲಿ ಸಾರ್ವಜನಿಕರಿಗೆ ಮಧ್ಯವನ್ನು ಕುಡಿಯಲು ಸ್ಥಳಾವಕಾಶ ಮಾಡಿರುತ್ತಾರೆಂದು ನೀಡಿದ ಮಾಹಿತಿ ಮೇರೆಗೆ ನಾನು ಸಕರ್ಾರಿ ಜೀಪು ಸಂಖ್ಯೆ-ಕೆ,ಎ-40 ಜಿ-1888 ರಲ್ಲಿ ಚಾಲಕ ಎಚ್,ಸಿ-41 ವೆಂಕಟಚಲಪತಿ ರವರೊಂದಿಗೆ ಸಿಬ್ಬಂದಿಯಾದ ಸಿ,ಪಿ,ಸಿ-88 ರಮೇಶ ರವರನ್ನು ಕರೆದುಕೊಂಡು ಯರ್ರಹಳ್ಳಿ ಗ್ರಾಮಕ್ಕೆ ಹೋಗಿ ಪಂಚರನ್ನು ಬರಮಾಡಿಕೊಂಡು ಸ್ಥಳಕ್ಕೆ 4-00 ಗಂಟೆಯಲ್ಲಿ ಹೋಗಿ ಮರೆಯಲ್ಲಿ ಜೀಪನ್ನು ನಿಲ್ಲಿಸಿ ಪಂಚರೊಂದಿಗೆ ಮರೆಯಲ್ಲಿ ನಾವು ಮೆಲ್ಕಂಡ ನಾಗರಾಜ ರವರ ಅಂಗಡಿ ಬಳಿ ನೋಡಲಾಗಿ, ಸಾರ್ವಜನಿಕ ರಸ್ತೆಯಲ್ಲಿ ಅಕ್ರಮವಾಗಿ ಒಬ್ಬ ಆಸಾಮಿಯು ಸಾರ್ವಜನಿಕರಿಗೆ ಮದ್ಯವನ್ನು ಲೋಟದಲ್ಲಿ ಹಾಕುತ್ತಾ, ಸಾರ್ವಜನಿಕರಿಗೆ ಮಧ್ಯವನ್ನು ಕುಡಿಯಲು ಅನುಮತಿ ನೀಡಿರುವುದು ಮತ್ತು ಕುಡಿಯಲು ಸ್ಥಳಾವಕಾಶ ಮಾಡಿಕೊಟ್ಟಿರುವುದು ಕಂಡು ಬಂದಿರುತ್ತೆ. ಪಂಚರೊಂದಿಗೆ ನಾವುಗಳು ಸದರಿಯವರ ಮೇಲೆ ಧಾಳಿ ಮಾಡಿದಾಗ, ಸಮವಸ್ತ್ರದಲ್ಲಿದ್ದ ನಮ್ಮನ್ನು ಕಂಡು ಮದ್ಯವನ್ನು ಕುಡಿಯುತ್ತಿದ್ದವರು ಓಡಿ ಹೋದರು, ಆ ಪೈಕಿ ಒಬ್ಬನನ್ನು ವಶಕ್ಕೆ ಪಡೆದುಕೊಂಡು ಹೆಸರು & ವಿಳಾಸ ಕೇಳಲಾಗಿ ನಾಗರಾಜ ಬಿನ್ ರಂಗಪ್ಪ 38 ವರ್ಷ, ಗಾಣಿಗ, ಚಿಲ್ಲರೆ ಅಂಗಡಿ, ವಾಸ-ಯರ್ರಹಳ್ಳಿ ಗ್ರಾಮ, ಗುಡಿಬಂಡೆ ತಾಲೂಕು ಎಂದು ತಿಳಿಸಿದ್ದು. ಸದರಿ ಆಸಾಮಿಯನ್ನು ಸಾರ್ವಜನಿಕ ಸ್ಥಳದಲ್ಲಿ ಮಧ್ಯ ಸೇವನೆ ಮಾಡಲು ಇರುವಂತಹ ಲೈಸನ್ಸ್ ತೋರಿಸಲು ಕೇಳಲಾಗಿ, ಸದರಿ ಆಸಾಮಿಯು ಯಾವುದು ಇಲ್ಲವೆಂದು ತಿಳಿಸಿದನು, ನಂತರ ಸ್ಥಳವನ್ನು ಪರಿಶೀಲನೆ ಮಾಡಲಾಗಿ ಸದರಿ ಸ್ಥಳದಲ್ಲಿ 1) ಹೈ ವಾರ್ಡ್ಸ ಕಂಪನಿಯ 90 ಎಮ್, ಎಲ್ ಅಳತೆಯ ಓಪನ್ ಮಾಡದೇ ಇರುವಂತಹವು 23 ಟೆಟ್ರಾ ಪಾಕೆಟ್ಗಳು ಇದ್ದು, 2) ಓಪನ್ ಮಾಡಿರುವಂತ ಹೈ ವಾರ್ಡ್ಸ ಕಂಪನಿಯ 90 ಎಮ್, ಎಲ್ ಅಳತೆಯ ಒಟ್ಟು 6 ಖಾಲಿ ಪಾಕೆಟ್ ಗಳಿದ್ದವು. 3) ಮದ್ಯವನ್ನು ಕುಡಿದು ಬಿಸಾಕಿದಂತಹ 4) 8 ಖಾಲಿ ಪ್ಲಾಸ್ಟಿಕ್ ಗ್ಲಾಸುಗಳು 5) ಒಂದು ಲೀಟರ್ ಒಂದು ಖಾಲಿ ವಾಟರ್ ಬಾಟಲ್ ಇದ್ದವು. ಮಧ್ಯವಿರುವ ಟೆಟ್ರಾ ಪಾಕೆಟ್ಗಳ ದ್ರವ ಪ್ರಮಾಣ ಲೆಕ್ಕ ಮಾಡಲಾಗಿ ಒಟ್ಟು 2,070 ಎಮ್,ಎಲ್ ಆಗಿದ್ದು, ಆ ಪಾಕೆಟ್ಗಳ ಮೇಲಿನ ದರವನ್ನು ಲೆಕ್ಕ ಮಾಡಲಾಗಿ ಒಟ್ಟು 23*32=736 ರೂ ಆಗಿರುತ್ತದೆ, ಸದರಿ ಮಾಲನ್ನು ಪಂಚಾಯ್ತಿದಾರರ ಸಮಕ್ಷಮದಲ್ಲಿ ಮದ್ಯಾಹ್ನ 4-15 ಗಂಟೆಯಿಂದ 5-00 ಗಂಟೆಯವರೆಗೆ ಪಂಚನಾಮೆ ಮೂಲಕ ಅಮಾನತ್ತುಪಡಿಸಿಕೊಂಡಿರುತ್ತದೆ, ಮೇಲ್ಕಂಡ ಆರೋಪಿ  & ಮಾಲನ್ನು ಅಸಲು ಪಂಚನಾಮೆಯೊಂದಿಗೆ ಮಧ್ಯಾಹ್ನ 5-30 ಗಂಟೆಯಲ್ಲಿ ಠಾಣೆಯಲ್ಲಿ ಹಾಜರುಪಡಿಸಿ ಸದರಿ ಆರೋಪಿ & ಮಾಲಿನ ವಿರುದ್ದ ಮುಂದಿನ ಕಾನೂನು ಕ್ರಮ ಜರುಗಿಸಲು ಸೂಚಿಸಿ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುತ್ತೆ.

 1. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆ. ಮೊ.ಸಂ: 148/2019 ಕಲಂ: 15(A), 32(3) ಕೆ.ಇ. ಆಕ್ಟ್:-

          ದಿನಾಂಕ.19.06.2019 ರಂದು ಮದ್ಯಾಹ್ನ 3.00 ಗಂಟೆ ಸಮಯದಲ್ಲಿ   ನಾನು ಠಾಣೆಯಲ್ಲಿ ಕರ್ತವ್ಯದಲ್ಲಿದ್ದಾಗ ಶಿಡ್ಲಘಟ್ಟ ತಾಲ್ಲೂಕು ಚಿಕ್ಕದಾಸರಹಳ್ಳಿ ಗ್ರಾಮದಲ್ಲಿ ಆಂಜಿನಪ್ಪ ಬಿನ್    ಮುನಿಕೃಷ್ಣಪ್ಪ ರವರ ತಮ್ಮ ಮನೆಯ ಮುಂದೆ ಕಲ್ಲು ಜಗುಲಿಯ ಮೇಲೆ ಅಕ್ರಮವಾಗಿ ಮಧ್ಯದ    ಪಾಕೇಟುಗಳನ್ನಿಟ್ಟುಕೊಂಡು ಮಾರಾಟ ಮಾಡುತ್ತಾ ಸಾರ್ವಜನಿಕರಿಗೆ ಕುಡಿಯಲು ಸ್ಥಳಾವಕಾಶ ಮಾಡುತ್ತಿರುವುದಾಗಿ ಬಂದ ಮಾಹಿತಿ ಮೇರೆಗೆ ಕೂಡಲೇ ಸಿಬ್ಬಂದಿಯವರಾದ ಸಿಪಿಸಿ 434 ಬಬಾಜಾನ್, ಪಿಸಿ 14 ಗೋವಿಂದಪ್ಪ ರವರೊಂದಿಗೆ ಠಾಣಾ ಜೀಪು ಸಂಖ್ಯೆ ಕೆಎ.40.ಜಿ.357 ಜೀಪಿನಲ್ಲಿ ಬೆಳಿಗ್ಗೆ 3.30 ಗಂಟೆಗೆ ಚಿಕ್ಕದಾಸರಹಳ್ಳಿ ಗ್ರಾಮಕ್ಕೆ ಹೋಗಿ ಸಿಪಿಸಿ 14 ಗೋವಿಂದಪ್ಪ ರವರಿಗೆ ಇಬ್ಬರು ಪಂಚಾಯ್ತಿದಾರರನ್ನು ನನ್ನ ಮುಂದೆ ಹಾಜರುಪಡಿಸುವಂತೆ ತಿಳಿಸಿದ್ದು ಅದರಂತೆ ಪಿಸಿ 14 ಗೋವಿಂದಪ್ಪ ರವರು ಇಬ್ಬರು ಪಂಚಾಯ್ತಿ ದಾರರನ್ನು ಹಾಜರುಪಡಿಸಿದ್ದು ಅವರಿಗೆ ದಾಳಿಯ ಬಗ್ಗೆ ಮಾಹಿತಿಯನ್ನು ತಿಳಿಸಿ ಪಂಚರು ಮತ್ತು ಸಿಬ್ಬಂದಿಯೊಂದಿಗೆ ಸಕರ್ಾರಿ ಜೀಪಿನಲ್ಲಿ 3.40 ಗಂಟೆಗೆ ಚಿಕ್ಕದಾಸರಹಳ್ಳಿ ಗ್ರಾಮದ ಆಂಜಿನಪ್ಪ ಬಿನ್ ಮುನಿಕೃಷ್ಣಪ್ಪ ರವರ ಮನೆಯ ಸ್ವಲ್ಪ ದೂರದಲ್ಲಿ ಜೀಪು ನಿಲ್ಲಿಸಿ ಮರೆಯಲ್ಲಿ ವಾಚ್ ಮಾಡಲಾಗಿ ಒಬ್ಬ ಆಸಾಮಿ ಮನೆಯ ಮುಂಭಾಗದ ಕಲ್ಲು ಜುಗುಲಿಯ ಮೇಲೆ ಅಕ್ರಮವಾಗಿ ಮಧ್ಯದ ಪಾಕೇಟುಗಳನ್ನು ಇಟ್ಟುಕೊಂಡು ಕೂತುಕೊಂಡಿದು ನಾಲ್ಕು ಜನ ಸಾರ್ವಜನಿಕರು ಮಧ್ಯವನ್ನು ಕುಡಿಯುತ್ತಿದ್ದರು. ಖಾತ್ರಿ ಪಡಿಸಿಕೊಂಡು ದಾಳಿಮಾಡಲಾಗಿ ಮಧ್ಯವನ್ನು ಕುಡಿಯುತ್ತಿದ್ದ ಸಾರ್ವಜನಿಕರು ಓಡಿ ಹೋಗಿದ್ದು, ಮಧ್ಯವನ್ನು ಹಿಡಿದು ಕುಳಿತುಕೊಂಡಿದ್ದವನನ್ನು ಸುತ್ತುವರೆದು ಆತನು ಹಿಡಿದು ಹೆಸರು ಮತ್ತು ವಿಳಾಸ ಕೇಳಲಾಗಿ, ಆಂಜಿನಪ್ಪ ಬಿನ್ ಮುನಿಕೃಷ್ಣಪ್ಪ, 32 ವರ್ಷ, ಆದಿಕನರ್ಾಟಕ, ಕೂಲಿ ಕೆಲಸ, ಚಿಕ್ಕದಾಸರಹಳ್ಳಿ ಗ್ರಾಮ ಶಿಡ್ಲಘಟ್ಟ ತಾಲ್ಲೂಕು ಎಂತ ತಿಳಿಸಿದ್ದು ಅಲ್ಲಿಯೇ ಒಂದು ಬ್ಯಾಗಿನಲ್ಲಿ ನೋಡಲಾಗಿ ಮಧ್ಯದ ಪಾಕೇಟುಗಳಿದ್ದು, ಪರಿಶೀಲಿಸಲಾಗಿ ರಾಜ ವಿಸ್ಕಿ 90 ಎಂ.ಎಲ್. ನ 8 ಪಾಕೇಟುಗಳಿದ್ದು, ಒಂದರ ಬೆಲೆ 30.32 ರೂ.ಗಳಾಗಿದ್ದು, ಒಟ್ಟು ಬೆಲೆ 242.56 ರೂ.ಗಳಾಗಿರುತ್ತೆ. ಪಕ್ಕದಲ್ಲಿ ರಾಜ ವಿಸ್ಕಿ 90 ಎಂ.ಎಲ್. ನ 2 ಖಾಲಿ ಪಾಕೇಟುಗಳು, 3 ಪ್ಲಾಸ್ಟಿಕ್ ಗ್ಲಾಸುಗಳು, ಒಂದು ಅರ್ದ ನೀರು ತುಂಬಿದ ಒಂದು ಲೀಟರ್ ನೀರಿನ ಬಾಟಲ್ ಇರುತ್ತೆ. ಸದರಿ ಆಂಜಿನಪ್ಪ ಬಿನ್ ಮುನಿಕೃಷ್ಣಪ್ಪ ರವರು ಯಾವುದೇ ಪರವಾನಗಿ ಪಡೆಯದೆ ಅಕ್ರಮವಾಗಿ ಮದ್ಯವನ್ನು ಮಾರಾಟ ಹಾಗೂ ಕುಡಿಯಲು ಸಾರ್ವಜನಿಕರಿಗೆ ಸ್ಥಳಾವಕಾಶ ಮಾಡಿಕೊಟ್ಟಿರುವುದು ಕಂಡು ಬಂದಿದರಿಂದ ಮದ್ಯದ ಪಾಕೇಟ್ ಗಳನ್ನು, ವಾಟರ್ ಬಾಟಲ್, ಗ್ಲಾಸುಗಳನ್ನು ಸಂಜೆ 4.00 ಗಂಟೆಯಿಂದ 5.00 ಗಂಟೆಯವರೆಗೆ ಅಮಾನತ್ತು ಪಡಿಸಿಕೊಂಡು ಮಾಲಿನೊಂದಿಗೆ ಮುಂದಿನ ಕ್ರಮಕ್ಕಾಗಿ ಸಂಜೆ 5.30 ಗಂಟೆಗೆ ಠಾಣೆಗೆ ಬಂದು ಠಾಣಾ ಮೊ.ಸಂ. 148/2019 ಕಲಂ 15(ಎ)32(3) ಕೆಇ ಆಕ್ಟ್ ರೀತ್ಯಾ ಸ್ವತಃ ಕೇಸು ದಾಖಲಿಸಿರುತ್ತೇನೆ.

 1. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆ. ಮೊ.ಸಂ: 149/2019 ಕಲಂ: 87 ಕೆ.ಪಿ. ಆಕ್ಟ್:-

          ದಿನಾಂಕ 19/06/2019 ರಂದು ಸಂಜೆ 6-00 ಗಂಟೆಗೆ ಚಿಕ್ಕಬಳ್ಳಾಪುರ ಡಿಸಿಬಿ-ಸೆನ್ ವಿಶೇಷ ಪೊಲೀಸ್ ಠಾಣೆಯ ಪಿ.ಐ ರವರಾದ ಚಿನ್ನಪ್ಪ ರವರು ಆರೋಪಿಗಳು, ಮಾಲು ಮತ್ತು ಪಂಚನಾಮೆಯೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ವರದಿಯ ಸಾರಾಂಶವೇನೆಂದರೆ, ಈ ದಿನ ದಿನಾಂಕ 19/06/2019 ರಂದು ತಾನು ಸಿಬ್ಬಂಧಿಯೊಂದಿಗೆ ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಕಾನೂನು ಬಾಹಿರ ಚಟುವಟಿಕೆಗಳ ಬಗ್ಗೆ ಮಾಹಿತಿ ಸಂಗ್ರಹಣೆ ಕರ್ತವ್ಯದಲ್ಲಿದ್ದಾಗ ಮದ್ಯಾಹ್ನ 3-00 ಗಂಟೆಗೆ ಬಂದ ಖಚಿತ ಮಾಹಿತಿ ಮೇರೆಗೆ ಶಿಡ್ಲಘಟ್ಟ ತಾಲ್ಲೂಕಿನ ಅಬ್ಲೂಡು ಗ್ರಾಮಕ್ಕೆ ಪಶ್ಚಿಮಕ್ಕೆ ಇರುವ ಚೌಡಪ್ಪ ರವರ ಜಮೀನಿನಲ್ಲಿರುವ ಒಂದು ಹುಣಸೇ ಮರದ ಕೆಳಗೆ ಕಾನೂನು ಬಾಹಿರವಾಗಿ ಅಂದರ್ ಬಾಹರ್ ಇಸ್ಪೀಟು ಜೂಜಾಟ ಆಡುತ್ತಿದ್ದರ ಮೇಲೆ ಪಂಚರ ಸಮಕ್ಷಮ ಸಿಬ್ಬಂಧಿಯೊಂದಿಗೆ ದಾಳಿ ಮಾಡಿದ್ದು ದಾಳಿಯಲ್ಲಿ 4 ಜನ ಆರೋಪಿತರು ಸಿಕ್ಕಿ ಬಿದ್ದಿದ್ದು ಇಬ್ಬರು ಸ್ಥಳದಿಂದ ಓಡಿ ಹೋಗಿರುತ್ತಾರೆ. ಸ್ಥಳದಲ್ಲಿದ್ದ 52 ಇಸ್ಪೀಟ್ ಎಲೆಗಳು, ಒಂದು ಹಳೇ ನ್ಯೂಸ್ ಪೇಪರ್ ಹಾಗು ಪಣಕ್ಕೆ ಇಟ್ಟಿದ್ದ 5260-00 ರೂ ಗಳನ್ನು ಕೇಸಿನ ಮುಂದಿನ ಕ್ರಮಕ್ಕಾಗಿ ಪಂಚರ ಸಮಕ್ಷಮ ಅಮಾನತ್ತು ಪಡಿಸಿಕೊಂಡಿರುವುದಾಗಿ ಕೊಟ್ಟ ದೂರು.