ದಿನಾಂಕ :20/05/2020 ರ ಅಪರಾಧ ಪ್ರಕರಣಗಳು

  1. ಬಾಗೇಪಲ್ಲಿ ಪೊಲೀಸ್ ಠಾಣೆ ಮೊ.ಸಂ. 100/2020 ಕಲಂ. 279,337 ಐ.ಪಿ.ಸಿ & 187 ಐ.ಎಂ.ವಿ ಆಕ್ಟ್:-

          ದಿನಾಂಕ:20/05/2020 ರುಂದು ಪಿರ್ಯಾದಿದಾರರಾದ ಅಂಜಿನಪ್ಪ ಬಿನ್ ತಿಮ್ಮಣ್ಣ, 27 ವರ್ಷ, ಭೋವಿ ಜನಾಂಗ, ಜಿರಾಯ್ತಿ, ವಾಸ: ತಟ್ಟನ್ನಗಾರಿಪಲ್ಲಿ ಗ್ರಾಮ ಗೂಳೂರು ಹೋಬಳಿ ಬಾಗೇಪಲ್ಲಿ ತಾಲ್ಲೂಕುರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ: 16/05/2020 ರಂದು ಸಂಜೆ ಸುಮಾರು 06:00 ಗಂಟೆ ಸಮಯದಲ್ಲಿ ಪಿರ್ಯಾದಿ ಮಗನಾದ ಪ್ರಭು ಬಿನ್ ಅಂಜಿನಪ್ಪ, 5 ವರ್ಷ ರವರು ತಮ್ಮ ಗ್ರಾಮದ ಹುಣಸೇಮರದ ಕೆಳಗೆ ಆಟವಾಡುತ್ತಿದ್ದಾಗ ನಮ್ಮ ಗ್ರಾಮದ ವಾಸಿ ಜಿ.ರಂಗಾರೆಡ್ಡಿ ಬಿನ್ ಗೋವಿಂದರೆಡ್ಡಿ, 30 ವರ್ಷ, ವಕ್ಕಲಿಗರವರು  ಕೆಎ-51-ಇಎಫ್-2469 ಯಮಹಾ ಕ್ರಕ್ಸ್ ದ್ವಿ ಚಕ್ರವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ನನ್ನ ಮಗನಾದ  ಪ್ರಭುರವರಿಗೆ ಡಿಕ್ಕಿಹೊಡೆಸಿ ರಕ್ತಗಾಯಗೊಳಿಸಿ ಪರಾರಿಯಾಗಿರುತ್ತಾನೆ.  ಗಾಯಗೊಂಡ ನನ್ನ ಮಗನನ್ನು ಚಿಕಿತ್ಸೆಗಾಗಿ ಚಿಕ್ಕಬಳ್ಳಾಪುರದ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ಚಿಕಿತ್ಸೆಕೊಡೆಸಿ ವೈದ್ಯರ ಸಲಹೆ ಮೇರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಇಂದಿರಾ ಗಾಂದಿ ಆಸ್ಪತ್ರೆಗೆ ದಾಖಲು ಮಾಡಿರುತ್ತೇನೆ. ನನ್ನ ಮಗನಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಕೊಡಿಸಿ ಈ ದಿನ ತಡವಾಗಿ ಠಾಣೆಗೆ ಹಾಜರಾಗಿ ದೂರನ್ನು ನೀಡುತ್ತಿದ್ದು, ಅಪಘಾತವನ್ನುಂಟು ಮಾಡಿರುವ ಜಿ.ರಂಗಾರೆಡ್ಡಿ ಬಿನ್ ಗೋವಿಂದರೆಡ್ಡಿ ರವರ ಮೇಲೆ ಕಾನೂನು ರೀತ್ಯ ಕ್ರಮ ಜರುಗಿಸಬೇಕಾಗಿ ನೀಡಿದ ದೂರಾಗಿರುತ್ತೆ.

  1. ದಿಬ್ಬೂರಹಳ್ಳಿ ಪೊಲೀಸ್ ಠಾಣೆ ಮೊ.ಸಂ. 50/2020 ಕಲಂ. 143,147,302,504,506 ರೆ/ವಿ 149 ಐ.ಪಿ.ಸಿ & 3(1)(r),3(1)(s),3(2)(va) The SC & ST (Prevention of Atrocities) Amendment Act:-

          ದಿನಾಂಕ:19-05-2020 ರಂದು ಮದ್ಯಾಹ್ನ14-30 ಗಂಟೆಗೆ ಪಿರ್ಯಾಧಿಯಾದ ಶ್ರೀಮತಿ ಸುಧಾ ಕೋಂ ನಾಗರಾಜು, ಬೋವಿ ಜನಾಂಗ, ಕಲ್ಲು ಬಂಡೆ ಕೆಲಸ, ಕಂಬಾಲಹಳ್ಳಿ ಗ್ರಾಮ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ತಾವು ಬಂಡೆ ಕೆಲಸ ಮಾಡಿಕೊಂಡು ಜೀವನ ಮಾಡಿಕೊಂಡಿರುತ್ತೇವೆ. 3 ತಿಂಗಳಿಂದ ಸಂಸಾರವನ್ನು ನಡೆಸಲು ಕಷ್ಠವಾಗಿರುವುದರಿಂದ ತಮ್ಮ ಗ್ರಾಮದ ಮುನಿಯಪ್ಪ(ನಾಯಕ) ಅವರ ಬಳಿ 20,000/- ರೂಗಳಷ್ಟು ಹಣವನ್ನು 10 ರೂ ಬಡ್ಡಿಯಂತೆ ತೆಗೆದುಕೊಂಡಿರುತ್ತೆವೆ. 2 ತಿಂಗಳಿಂದ ಬಡ್ಡಿ ಕಟ್ಟದ ಕಾರಣ ತನ್ನ ಮನೆಯ ಹತ್ತಿರ ಬಂದು ಪತ್ರಿ ದಿನ ಗಲಾಟೆ ಮಾಡಿ ಮಾಡುತಿದ್ದನು. ತಾವು ಸಮಾದಾನ ಮಾಡಿ ಕಳುಹಿಸುತ್ತಿದ್ದೇವು . ದಿನಾಂಕ:18-05-2020 ರಂದು ಮುನಿಯಪ್ಪ ನವರು ಮಧ್ಯಾಹ್ನ 2-00ಗಂಟೆ ಯಲ್ಲಿ ಹಣ ಕೊಡುವವರಿಗೆ ನಿನ್ನ ಗಾಡಿಯನ್ನು ಕೊಡುವುದಿಲ್ಲವೆಂದು ಹೇಳಿದ್ದನು. ಆದ್ದರಿಂದ ತಾನು ಗಾಡಿಯನ್ನು ಕೊಡುವುದಿಲ್ಲವೆಂದು ಹೇಳಿದೆ. ಮುನಿಯಪ್ಪ ನವರು ತನ್ನ ಗಂಡನಾದ ನಾಗರಾಜ ಬಿನ್ ಮುನಿಯಪ್ಪ, 40 ವರ್ಷ, ರವರನ್ನು ಅವಾಚ್ಯ ಶಬ್ದಗಳಲ್ಲಿ ಬೈಯ್ದು ಗಂಡನನ್ನು ಇದೇ ರೀತಿ ಏನಾದರೂ ಮಾಡಿದರೆ ಸಾಯಿಸುತ್ತೇನೆಂದು ಹೇಳಿದನು. ತಾನು ತನ್ನ ಗಂಡನಿಗೆ ಏನಾದರೂ ಆದರೆ ನಾನು ನಿಮ್ಮನ್ನು ಸುಮ್ಮನೆ ಬಿಡುವುದಿಲ್ಲ ಹೇಳಿದ್ದೇನೆ. ಆದ್ದರಿಂದ ತನ್ನ ಗಂಡನನ್ನು ಸಮಾದಾನ ಮಾಡಿ ಕರೆದುಕೊಂಡು ಹೋಗಿ ತನ್ನ ಗಾಡಿಯನ್ನು ಮರು ನೀಡುತ್ತೇನೆಂದು ಹೇಳಿದ್ದನು. ಸಂಜೆ 05-00 ಗಂಟೆಗೆ ಕರೆದುಕೊಂಡು ಹೋಗಿ ಸಾಯಿಸುಬಿಟ್ಟರು. ತಾವು ಹೋಗಿ ನೋಡಿದಾಗ ನನ್ನ ಗಂಡನು ಕೆಳಗಡೆ ಪ್ರಾಣ ಹೋಗಿ ಮಲಗಿಸಿದ್ದರು. ಇದಕ್ಕೆ ಕಾರಣ ಮುನಿಯಪ್ಪ ಬಿನ್ ತಿಮ್ಮಯ್ಯ (ನಾಯಕ), ಮಾರಪ್ಪ ಬಿನ್ ಚಿಕ್ಕ ಹಿಟ್ಟಪ್ಪ(ಕುರುಬ), ರಾಮಪ್ಪ (ನಾಯಕ), ಗಂಗಾಧರ ಬಿನ್ ನಂಜಪ್ಪ(ಕುರುಬ),ವೆಂಕಟೇಶ ಬಿನ್ ಚಿಕ್ಕ ಹಿಟ್ಟಪ್ಪ(ಕುರುಬ), ದ್ಯಾವಪ್ಪ ಬಿನ್ ಪೊಂದಲಪ್ಪ(ಬಲಜಿಗ) ಇವರು 5 ಜನ ಸೇರಿ ನಿಮ್ಮ ವಡ್ಡರ ಜನಾಂಗವನ್ನು ನಮ್ಮ ಗ್ರಾಮದಲ್ಲಿ ಸರ್ವನಾಶ ಮಾಡುತ್ತೇವೆ. ಎಂದು ಹೇಳಿ ಪ್ರಾಣ ಬೆದರಿಕೆ ಹಾಕಿ ಸಾಯಿಸಿಬಿಟ್ಟರು. ಆದ್ದರಿಂದ ಸಂಜೆ 05-30 ರಿಂದ 06-00 ಗಂಟೆಗೆ ತನ್ನ ಗಂಡ ನಾಗರಾಜು ಪ್ರಾಣ ಹೋಗಿರುತ್ತೆ. ತಾನು 06-00 ಗಂಟೆಗೆ ಸಂಜೆ ತನ್ನ ಗಂಡನನ್ನು ಹುಡುಕಿಕೊಂಡು ಮುನಿಯಪ್ಪ ರವರ ಮನೆ ಹತ್ತಿರ ಹೋಗಿರುತ್ತೇನೆ ಅಲ್ಲಿ ಇರುವುದಿಲ್ಲ. ಮತ್ತೆ ಊರಿನ ಜನರನ್ನು ತನ್ನ ಗಂಡನನ್ನು ಎಲ್ಲಾದರೂ ನೋಡಿದರಾ ಎಂತ ಕೇಳಿದೆ. ಅವರು ನನಗೆ ಗೊತ್ತಿಲ್ಲ ಅಂತ ಹೇಳಿದರು. ತನ್ನ ತಮ್ಮನ ಮನೆಯ ಹತ್ತಿರ ಹೋಗಿ ನೋಡಿದಾಗ ಜನರೆಲ್ಲಾ ಆಚೆ ನಿಂತಿಕೊಂಡು ನೋಡುತ್ತಿರುವಾಗ ಸಾಯಿಸಿಬಿಟ್ಟು ಕೆಳಗಡೆ ಮಲಗಿಸಿದ್ದರು. ತಾನು ದಿಬ್ಬೂರಹ್ಳಿ ಪೊಲೀಸ್ ಠಾಣೆಗೆ ದೂರು ನೀಡಿದರೆ ನಿನ್ನ ಮೇಲೆ ನನ್ನ ಮಕ್ಕಳ ಮೇಲೆ ಪ್ರಾಣ ಬೆದರಿಕೆ ಹಾಕಿಸಿ ಅಂತ ಹೇಳಿದರು.  ಆದರಿಂದ ತನ್ನ ಸಂಬಂದಪಟ್ಟವರಿಗೆ ಹೇಳಿದಾಗ ದಿಬ್ಬೂರಹಳ್ಳಿ ಪೊಲೀಸ್ ಠಾಣೆಗೆ ಬಂದು ನಾಗರಾಜು ಅವರ ಅಣ್ಣ ಬಂದು ಪೊಲೀಸ್ ಠಾನೆಗೆ ದೂರು ನೀಡಿದಾಗ ಬೆಳಗ್ಗೆ ಬಂದು ದೂರು ನೀಡುತ್ತೇವೆ. ಎಂದು ಮತ್ತೆ ಬೆಳಗ್ಗೆ ಬಂದು ತಮ್ಮ ಸಂಬಂಧಿಕರು ಬಂದು ಪೊಲೀಸ್ ಠಾಣೆಗೆ ಮುಖಾಂತರ ಬಂದು ನ್ಯಾಯ ನೀಡಬೇಕೆಂದು ಕೇಳಿರುತ್ತೇವೆ. ಆದ್ದರಿಂದ ಕಂಬಾಲಹಳ್ಳಿ ಗ್ರಾಮದಲ್ಲಿ ತಾವು ವಾಸವಾಗಿರುವುದಕ್ಕೆ ತಮಗೆ ಭಯ ಆಗುತ್ತದೆ. ಅವರ ಮೇಲೆ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲು ನೀಡಿರುವ ದೂರಾಗಿರುತ್ತೆ.

  1. ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 114/2020 ಕಲಂ. 323,324,307,504 ರೆ/ವಿ 34 ಐ.ಪಿ.ಸಿ    :-

          ದಿನಾಂಕ 19-05-2020  ರಂಧು ರಾತ್ರಿ 10-30 ಗಂಟೆಗೆ ಗೌರಿಬಿದನೂರು ಸರ್ಕಾರಿ ಆಸ್ಪತ್ರೆಯಿಂದ ಬಂದ ಮೇಮೋ ಪಡೆದು  10-45 ಗಂಟೆಗೆ ಆಸ್ಪತ್ರೆಗೆ ಭೇಟಿ ನೀಡಿ  ಗಾಯಾಳು  ಗಂಗಾಧರಪ್ಪ ಬಿನ್  ಗಂಗಪ್ಪ, 52 ವರ್ಷ, ಕುರುಬರು ಜಿರಾಯ್ತಿ ಬಾದಮರಳೂರು ಗ್ರಾಮ , ಗೌರಿಬಿದನೂರು ತಾಲ್ಲೂಕುರವರ ಹೇಳಿಕೆಯನ್ನು ದಾಖಲಿಸಿಕೊಂಡಿದ್ದರ  ಸಾರಾಂಶವೇನೆಂಧರೆ  ತಾನು ಬಾದಮರಳೂರು ಗ್ರಾಮದ ಜಾಲಪ್ಪರವರ ಜಮೀನನ್ನು 5 ವರ್ಷಗಳಿಂದ ಪಾಲಿಗೆ ಪಡೆದುಕೊಂಡು  ಬೆಳೆಯನ್ನು ಇಟ್ಟು ವ್ಯವಸಾಯವನ್ನು ಮಾಡಿಕೊಂಡಿರುತ್ತೇನೆ. ನಮ್ಮ ಜಮೀನಿನ ಪಕ್ಕದಲ್ಲಿ ಹನುಮಂತಪ್ಪ ಬಿನ್ ಗಂಗಪ್ಪರವರ ಜಮೀನು ಇರುತ್ತೆ.  ದಿನಾಂಕ 19-05-2020 ರಂದು  ರಾತ್ರಿ 08-30 ಗಂಟೆಯಲ್ಲಿ  ನಾನು  ಪಾಲಿಗೆ ಮಾಡುತ್ತಿರುವ  ಜಮೀನಿನಲ್ಲಿ ಹನುಮಂತಪ್ಪ ಬಿನ್ ಗಂಗಪ್ಪರವರು ಟ್ರ್ಯಾಕ್ಟರ್ ನಿಂದ  ಉಳುಮೆ ಮಾಡಿ ಮುಸುಕಿನ ಜೋಳದ ಪೈರುಗಳನ್ನು ನಾಶಪಡಿಸಿದ್ದು, ತಾನು ಹನುಮಂತಪ್ಪನನ್ನು ಯಾಕೆ ನಮ್ಮ ಜಮೀನಿನಲ್ಲಿ ಉಳುಮೆ ಮಾಡುತ್ತಿದ್ದೀಯಾ ಎಂದು ಕೇಳಿದಾಗ ನನ್ನ ಮೇಲೆ ಹನುಮಂತಪ್ಪ ಜಗಳ ತೆಗೆದು ಏಕಾಏಕಿ ನನ್ನ ಮಗನೇ, ಇದು ಯಾರದೋ ಜಮೀನು, ನೀನು ಸುಮ್ಮನೆ ಪಾಲಿಗೆ ಮಾಡುತ್ತಿದ್ದೀಯಾ, ಎಂತ ಅವಾಚ್ಯ ಶಬ್ದಗಳಿಂದ  ಬೈದು ತನ್ನ ಕೈಯಲ್ಲಿದ್ದ ಮಚ್ಚಿನಿಂದ ತಲೆಗೆ ಹೊಡೆದು ರಕ್ತಗಾಯವನ್ನು ಮಾಡಿದನು. ಅಲ್ಲೇ ಇದ್ದ ಹನುಮಂತಪ್ಪನ  ಹೆಂಡತಿ ರಾಮಾಂಜಿನಮ್ಮರವರು ದೊಣ್ಣೆಯಿಂದ ಭುಜಕ್ಕೆ ಹೊಡೆದು ಮೂಗೇಟು ಮಾಡಿದ್ದು,  ಹನುಮಂತಪ್ಪನ ಅಳಿಯ ಶಿವಶಂಕರ ಮತ್ತು ಮಗಳು ಉಮಾ ಕೈಗಳಿಂದ  ಮೇಮೇಲೆ ಹೊಡೆದು ನೋವಿಂಟು ಮಾಡಿರುತ್ತಾರೆ. ಅಲ್ಲೇ ಇದ್ದ ಪಿರ್ಯಾದಿ ಮಗ ರೆಡ್ಡಪ್ಪ ಬಿಡಿಸಲು ಬಂದಾಗ ಶಿವಶಂಕರ್ ಇನ್ನೋಂದು ಮಚ್ಚಿನಿಂದ ತಲೆಯ ಹಿಂಭಾಗಕ್ಕೆ ಹೊಡೆದು ರಕ್ತಗಾಯವನ್ನು ಮಾಡಿರುತ್ತಾರೆ. ಮೇಲ್ಕಂಡವರು ನಮ್ಮನ್ನು ಸಾಯಿಸುವ ಉದ್ದೇಶದಿಂದ ಮಾರಣಾಂತಿ ಹಲ್ಲೆಯನ್ನು ಮಾಡಿರುತ್ತಾರೆ ಮುಂದಿನ ಕ್ರಮವನ್ನು ಜರುಗಿಸಲು ಕೋರಿ ನೀಡಿದ ಹೇಳಿಕೆಯನ್ನು ಪಡೆದುಕೊಂಡು ಠಾಣೆಗೆ 23-00 ಗಂಟೆಗೆ ಠಾಣೆಗೆ ವಾಪಸ್ಸಾಗಿ ಪ್ರಕರಣ ದಾಖಲಿಸಿರುವುದು.

  1. ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 115/2020 ಕಲಂ. 323,324,504 ರೆ/ವಿ 34 ಐ.ಪಿ.ಸಿ:-

          ದಿನಾಂಕ 19-05-2020  ರಂಧು ರಾತ್ರಿ 10-30 ಗಂಟೆಗೆ ಗೌರಿಬಿದನೂರು ಸರ್ಕಾರಿ ಆಸ್ಪತ್ರೆಯಿಂದ ಬಂದ ಮೇಮೋ ಪಡೆದು  10-45 ಗಂಟೆಗೆ ಆಸ್ಪತ್ರೆಗೆ ಭೇಟಿ ನೀಡಿ  ಗಾಯಾಳು  ಹನುಮಂತಪ್ಪ ಬಿನ್ ಗಂಗಪ್ಪ, 35 ವರ್ಷ, ಉಪ್ಪಾರರು, ಜಿರಾಯ್ತಿ, ವಾಸ ಬಾದಮರಳೂರು ಗ್ರಾಮ ಗೌರಿಬಿದನೂರು ತಾಲ್ಲೂಕುರವರ ಹೇಳಿಕೆಯನ್ನು ದಾಖಲಿಸಿಕೊಂಡಿದ್ದರ ಸಾರಾಂಶವೇನೆಂದರೆ ನಮ್ಮ ಜಮೀನಿನ ಪಕ್ಕದಲ್ಲಿ  ನಮ್ಮ ಗ್ರಾಮದ ಜಾಲಪ್ಪರವರ ಜಮೀನು ಇದ್ದು ಸದರಿ ಜಮೀನಿನಲ್ಲಿ  ನಮ್ಮ ಗ್ರಾಮದ ವಾಸಿ ಗಂಗಾಧರಪ್ಪ ಬಿನ್ ಗಂಗಪ್ಪ ಎಂಬುವರು ಕೋರಿಕೆ ಮಾಡುತ್ತಿರುತ್ತಾರೆ. ದಿನಾಮಕ 19-05-2020 ರಂದು ರಾತ್ರಿ 08-30 ಗಂಟೆಯಲ್ಲಿ ನಾನು ನಮ್ಮ ಜಮೀನಿನಲ್ಲಿ  ಟ್ರ್ಯಾಕ್ಟರ್ ನಿಂದ ಉಳುಮೆ ಮಾಡುತ್ತಿದ್ದಾಗ  ನನ್ನ ಟ್ರ್ಯಾಕ್ಟರ್  ಸ್ವಲ್ಪ ಗಂಗಾಧರಪ್ಪರವರ ಜಮೀನಿನಲ್ಲಿ ಹೋಗಿದ್ದು  ಅಲ್ಲಿಗೆ ಗಂಗಾಧರಪ್ಪ ಬಂದವನೇ  ನನ್ನನ್ನು ಕುರಿತು ನಮ್ಮ ಜಮೀನಿನ ಮುಸುಕಿನ ಜೋಳದ ಬೆಳೆಯನ್ನು ನಾಶಪಡಿಸಿದ್ದೀಯಾ, ಎಂದು ಹೇಳಿ ಏಕಾಏಕಿ ಜಗಳ ಮಾಡಿ ಬೋಳಿ ಮಗನೇ  ಎಂದು ಅವಾಚ್ಯಶಬ್ದಗಳಿಂದ  ಬೈದು  ಗಂಗಾಧರಪ್ಪ ಮತ್ತು ಆತನ ಮಗ ರೆಡ್ಡಪ್ಪ, ಹೆಂಡತಿ ಸರೋಜಮ್ಮ ನಮ್ಮ ಮೇಲೆ ಜಗಳ ಮಾಡಿ ಗಂಗಾಧರಪ್ಪ ನನಗೆ ಕಟ್ಟಿಗೆಯಿಂದ ತಲೆಗೆ ಹೊಡೆದು ಮೂಗೇಟು ಮಾಡಿದ್ದು, ಆತನ ಮಗ ರೆಡ್ಡಪ್ಪ ಕೈಗಳಿಂದ ಹೊಡೆದು ಎದೆಯ ಮೇಲೆ ಕಚ್ಚಿ ಗಾಯಮಾಡಿದನು, ರಾಮಾಂಜಿನಮ್ಮರವರನ್ನು ಗಂಗಾಧರಪ್ಪನ ಹೆಂಡತಿ ಸರೋಜಮ್ಮರವರು ಕೈಗಳಿಂದ ಹೊಡೆದು ಜುಟ್ಟನ್ನು ಹಿಡಿದು ಎಳೆದಾಡಿರುತ್ತಾರೆ. ನಮ್ಮ ಮೇಲೆ ಹೊಡೆದು ಜಗಳ ಮಾಡಿದ ಮೇಲ್ಕಂಡವರ ವಿರುದ್ದ ಕಾನೂನು ಕ್ರಮವನ್ನು ಜರುಗಿಸಬೇಕೆಂದು  ಕೋರಿ ನೀಡಿದ ಹೇಳಿಕೆಯನ್ನು ಪಡೆದುಕೊಂಡು ರಾತ್ರಿ 23-45 ಗಂಟೆಗೆ  ಪ್ರಕರಣವನ್ನು ದಾಖಲಿಸಿರುವುದು.

  1. ಗೌರಿಬಿದನೂರು ಪುರ ಪೊಲೀಸ್ ಠಾಣೆ ಮೊ.ಸಂ. 62/2020 ಕಲಂ. 188,269 ಐ.ಪಿ.ಸಿ:-

          ದಿನಾಂಕ 19/05/2020 ರಂದು ಗೌರಿಬಿದನೂರು ನಗರದ 16 ನೇ ವಾರ್ಡ್ ನೋಡಲ್ ಅಧಿಕಾರಿ ಚಿಕ್ಕಣ್ಣ ಬಿನ್ ಈರಣ್ಣ, 45 ವರ್ಷ, ಮೀನುಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಗೌರಿಬಿದನೂರು ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ತಾನು ಗೌರಿಬಿದನೂರು ತಾಲ್ಲೂಕಿನ ಮೀನುಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಇತ್ತೀಚೆಗೆ ಕೊರೊನೋ(ಅಔಗಿಆ-19) ಸಂಬಂಧವಾಗಿ 2 ತಿಂಗಳಿಂದ ಗೌರಿಬಿದನೂರು ನಗರದ 16 ನೇ ವಾರ್ಡ್ ನೋಡಲ್ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಲು ಗೌರಿಬಿದನೂರು ತಾಲ್ಲೂಕು ದಂಡಾಧಿಕಾರಿಗಳು ನೇಮಕ ಮಾಡಿದ್ದು, ಅದರಂತೆ ತಾನು ಕೆಲಸ ನಿರ್ವಹಿಸುತ್ತಿದ್ದೇನೆ. ದಿನಾಂಕ:18/05/2020 ರಂದು ತನ್ನ ವ್ಯಾಪ್ತಿಯಲ್ಲಿರುವ ಮರಿಗಮ್ಮ ದೇವಸ್ಥಾನದ ವಾರ್ಡ್ ಬಕಾರಿ ಸಾಬ್ ಗಲ್ಲಿಯ ಜಬೀವುಲ್ಲಾ ರವರ ಮನೆಯಲ್ಲಿ ಯಾರೋ ಮೂರು ಜನರು ಕೇರಳದ ಕಾಸರಗೋಡಿನಿಂದ ಬಂದು ಮನೆಯಲ್ಲಿರುವುದಾಗಿ ಬಂದ ಮಾಹಿತಿ ಮೇರೆಗೆ ತಾನು ಮತ್ತು ಆರೋಗ್ಯ ಸಿಬ್ಬಂದಿ ಹಾಗೂ ಪೊಲೀಸ್ ಸಿಬ್ಬಂದಿಯೊಂದಿಗೆ ನಗರದ ಮರಿಗಮ್ಮ ದೇವಸ್ಥಾನ ವಾರ್ಡ್ ಬಕಾರಿಸಾಬ್ ಗಲ್ಲಿಯ ಜಬೀವುಲ್ಲಾ ರವರ ಮನೆಯ ಬಳಿಗೆ ಹೋಗಿ ಮನೆಯಲ್ಲಿದ್ದ ಬಕಾರಿಸಾಬ್ ರವರ ಪತ್ನಿಯಾದ ಸಲ್ಮಾಭಾನು ರವರನ್ನು ವಿಚಾರಿಸಲಾಗಿ  ಅವರು ತನ್ನ ತಮ್ಮನಾದ ಕೊರಟೆಗೆರೆ ತಾಲ್ಲೂಕಿನ ಸೋಂಪುರ ವಾಸಿ ಸಾದಿಕ್ ಎಂಬುವನು ತಮಕೂರಿನ ನಜ್ಮಾಭಾನು ಮತ್ತು ಅಪ್ಸಾನಾಬಾನು ಎಂಬುವರನ್ನು ಕೇರಳದ ಕಾಸರಗೋಡಿಗೆ ಹೋಗಿದ್ದವರನ್ನು ಕರೆದುಕೊಂಡು ಬಂದಿದ್ದು ಇವರು ದಿನಾಂಕ:18.05.2020 ರಂದು ಬೆಳಗಿನ ಜಾವ 4.00 ಗಂಟೆಗೆ ತಮ್ಮ ಮನೆಗೆ ಬಂದಿರುತ್ತಾರೆಂದು ತಿಳಿಸಿದರು. ನಂತರ ಮನೆಯಲ್ಲಿದ್ದ ವ್ಯಕ್ತಿಗಳನ್ನು ವಿಚಾರ ಮಾಡಲಾಗಿ 1) ಸಾದಿಕ್ ಬಿನ್ ರಬ್ಬಾನಿ, 28 ವರ್ಷ, ಮೆಕಾನಿಕ್ ಕೆಲಸ, ಸೋಂಪುರ ಗ್ರಾಮ, ಕೊರಟೆಗೆರೆ ತಾಲ್ಲೂಕು, ತುಮಕೂರು ಜಿಲ್ಲೆ ಎಂದು ತಿಳಿಸಿದರು. ಆತನ ಜೊತೆಯಲ್ಲಿ ಬಂದಿದ್ದ ಮತ್ತಿಬ್ಬರು ಹುಡುಗಿಯರನ್ನು ವಿಚಾರ ಮಾಡಲಾಗಿ  2) ನಜ್ಮಾಭಾನು ಬಿನ್ ಶಬ್ಭೀರ್ ಸಾಬ್, 19 ವರ್ಷ, ಸಿರಾ ಗೇಟ್, ಯಲ್ಲಾಪುರ, ಗೋವಿಪಾಳ್ಯ, ತುಮಕೂರು ಜಿಲ್ಲೆ 3) ಅಪ್ಸಾನಾಭಾನು ಬಿನ್ ಶಬ್ಭೀರ್ ಸಾಬ್, 19 ವರ್ಷ, ಸಿರಾ ಗೇಟ್, ಯಲ್ಲಾಪುರ, ಗೋವಿಪಾಳ್ಯ, ತುಮಕೂರು ಜಿಲ್ಲೆ ಎಂದು ತಿಳಿಸಿದ್ದು ನಾವು ಕೇರಳದ ಕಾಸರಗೋಡಿನಲ್ಲಿ ವಾಸವಿದ್ದು ಅಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾದ ಕಾರಣ ಯಾವುದೇ ಅನುಮತಿ ಇಲ್ಲದೇ ದಿನಾಂಕ:14.05.2020 ರಂದು ರಾತ್ರಿ ಕಾಸರಗೂಡನ್ನು ಬಿಟ್ಟು ರಾತ್ರಿ ವೇಳೆಯಲ್ಲಿ ಪ್ರಯಾಣಿಸುತ್ತಾ ಬೇರೆಕಡೆಗಳಲ್ಲಿ ಸುತ್ತಾಡಿಕೊಂಡು ದಿನಾಂಕ;18.05.2020 ರಂದು ಬೆಳಗಿನ ಜಾವ 4.00 ಗಂಟೆಗೆ ಸಲ್ಮಾಭಾನು ರವರ ಮನೆಗೆ ಬಂದು ಇರುವುದಾಗಿ ತಿಳಿಸಿದರು. ಮನೆಯ ಮಾಲೀಕರ ವಿಳಾಸವನ್ನು ಕೇಳಲಾಗಿ ಜಬೀವುಲ್ಲಾ ಬಿನ್ ಅಮೀರ್ ಖಾನ್, 45 ವರ್ಷ, ಬಕಾರಿಸಾಬ್ ಗಲ್ಲಿ, ಗೌರಿಬಿದನೂರು ಮತ್ತು ಇವರ ಪತ್ನಿಯ ಹೆಸರು ಸಲ್ಮಾಭಾನು ಕೋಂ ಜಬೀವುಲ್ಲಾ, 36 ವರ್ಷ, ಬಕಾರಿಸಾಬ್ ಗಲ್ಲಿ, ಗೌರಿಬಿದನೂರು ನಗರ ಎಂದು ವಿಚಾರಣೆಯಲ್ಲಿ ತಿಳಿದು ಬಂದಿರುತ್ತೆ. ದಿನಾಂಕ:-14/05/2020 ರಂದು ರಾತ್ರಿ ಯಾವುದೋ ಕಾರಿನಲ್ಲಿ ಕಾಸರಗೋಡನ್ನು ಬಿಟ್ಟು ದಿನಾಂಕ:18.05.2020 ರಂದು ಬೆಳಗಿನ ಜಾವ 4:00 ಗಂಟೆಗೆ ಗೌರಿಬಿದನೂರು ನಗರಕ್ಕೆ ಬಂದಿರುವುದಾಗಿ ಸಾದಿಕ್ ರವರು ತಿಳಿಸಿರುತ್ತಾರೆ. ಕೋವಿಡ್-19 ಕೊರೊನಾ ವೈರಾಣುನಿಂದ ಹರಡುವ ಸಾಂಕ್ರಾಮಿಕ ರೋಗವನ್ನು ತಡೆಯಲು ಮುನ್ನೆಚ್ಛರಿಕೆ ಕ್ರಮವಾಗಿ ಸರ್ಕಾರವು ಲಾಕ್ ಡೌನ್ ಅನ್ನು ಆದೇಶವಿರವುದಲ್ಲದೇ, ರಾತ್ರಿ ವೇಳೆಯಲ್ಲಿ ಕರ್ಫೂವನ್ನು ವಿಧಿಸಿರುತ್ತದೆ. ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಸಂಚರಿಸಿದರೆ ಕೋವಿಡ್-19 ಸಾಂಕ್ರಾಮಿಕ ರೋಗವು ಹರಡುತ್ತದೆಂದು ಗೊತ್ತಿದ್ದರೂ ಸಹ ಸಾದಿಕ್ ರವರು ಕೇರಳದ ಕಾಸರಗೋಡಿನಿಂದ ನಜ್ಮಾಭಾನು ಮತ್ತು ಅಪ್ಸಾನಾ ಭಾನು ರವರನ್ನು ಕರೆದುಕೊಂಡು ಗೌರಿಬಿದನೂರಿಗೆ ಬಂದಿರುತ್ತಾರೆ.  ಸರ್ಕಾರದ ಆದೇಶಗಳನ್ನು ಉಲ್ಲಂಘನೆ ಮಾಡಿ ಸೋಕು ಹರಡುವ ಸಮಯದಲ್ಲಿ ಕೇರಳದಿಂದ ಬಂದಿರುವ ಮೂರು ಜನ ವ್ಯಕ್ತಿಗಳಿಗೆ ಗೌರಿಬಿದನೂರಿನ ಬಕಾರಿಸಾಬ್ ಗಲ್ಲಿಯ ಜಬೀವುಲ್ಲಾ ಮತ್ತು ಸಲ್ಮಾಖಾನ್ ರವರು ಆಶ್ರಯ ನೀಡಿ ಸರ್ಕಾರದ ಆದೇಶಗಳನ್ನು ಉಲ್ಲಂಗನೆ ಮಾಡಿರುವುದರಿಂದ ಇವರ ವಿರುದ್ದ ಕಾನೂನು ಕ್ರಮ ಕೈಗೊಳ್ಳಬೇಕಾದ ಅವಶ್ಯಕತೆ ಇರುತ್ತದೆ. ನಂತರ ದಿನಾಂಕ:-18/05/2020 ರಂದು ರಾತ್ರಿ 10-00 ಗಂಟೆಗೆ ನಜ್ಮಾಭಾನು ಮತ್ತು ಅಪ್ಸಾನಾಭಾನು ರವರನ್ನು ವಶಕ್ಕೆ ಪಡೆದು ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಿಸಿರುತ್ತೆ. ಹಾಗೂ ಸಲ್ಮಾಭಾನು ರವರನ್ನು ಅವರ ಮನೆಯಲ್ಲಿ ಬಿಟ್ಟಿದ್ದು ಉಳಿದವರು ತಪ್ಪಿಸಿಕೊಂಡಿರುತ್ತಾರೆ. ಆದ್ದರಿಂದ ಸರ್ಕಾರದ ಲಾಕ್ ಡೌನ್ ಆದೇಶ ಮತ್ತು ಕರ್ಫೂ ಆದೇಶಗಳನ್ನು ಉಲ್ಲಂಘನೆ ಮಾಡಿ ಕೇರಳದ ಕಾಸರಗೂಡಿನಿಂದ ಕರ್ನಾಟಕದ ಗೌರಿಬಿದನೂರಿಗೆ ರಾತ್ರಿ ವೇಳೆಯಲ್ಲಿ ಬಂದಿರುವ ಸಾದಿಕ್, ನಜ್ಮಾಭಾನು ಮತ್ತು ಅಪ್ಸಾನಾಭಾನು ರವರ ಮೇಲೆ ಹಾಗೂ ಇವರಿಗೆ ಆಶ್ರಯ ನೀಡಿರುವ ಬಕಾರಿಸಾಬ್ ಗಲ್ಲಿಯ ಜಬೀವುಲ್ಲಾ ಮತ್ತು ಸಲ್ಮಾಭಾನು ರವರ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಕೋರುತ್ತೇನೆಂದು ನೀಡಿದ ದೂರನ್ನು ಪಡೆದು ಪ್ರಕರಣ ದಾಖಲಿಸಿರುತ್ತೇನೆ.

  1. ಗೌರಿಬಿದನೂರು ಪುರ ಪೊಲೀಸ್ ಠಾಣೆ ಮೊ.ಸಂ. 63/2020 ಕಲಂ. 279, 338 ಐ.ಪಿ.ಸಿ:-

          ದಿನಾಂಕ 19-05-2020 ರಂದು ರಾತ್ರಿ 10-30 ರಿಂದ 11-00 ರವರೆಗೆ  ಗೌರಿಬಿದನೂರು ಸರ್ಕಾರಿ ಆಸ್ಪತ್ರೆಯಲ್ಲಿ ಗಾಯಾಳು ಶ್ರೀ ಗೋವಿಂದಪ್ಪ ಬಿನ್ ಚಿಕ್ಕನರಸಿಂಹಯ್ಯ 50 ವರ್ಷ ಪರಿಶಿಷ್ಠ ಜಾತಿ ಗಾರೆ ಕೆಲಸ ನಾಮಗೊಂಡ್ಲು ಗ್ರಾಮ, ಗೌರಿಬಿದನೂರು ತಾಲ್ಲೂಕು ರವರಿಂದ ಪಡೆದ ಹೇಳಿಕೆಯ ಸಾರಾಂಶವೇನೆಂದರೆ, ತಾನು ದಿನಾಂಕ 19-05-2020 ರಂದು ರಾತ್ರಿ ತಡವಾಗಿ ಕೆಲಸವನ್ನು ಮುಗಿಸಿಕೊಂಡು ತಡ ರಾತ್ರಿಯಲ್ಲಿ ಯಾವುದೇ ವಾಹನಗಳ ಸೌಲಭ್ಯವಿಲ್ಲದ ಕಾರಣ ಗೌರಿಬಿದನೂರು ನಗರದ ಗುಂಡಾಪುರದ ತನ್ನ ಪರಿಚಯಸ್ಥರ ಮನೆಗೆ ಹೋಗಲು ರಾತ್ರಿ 8-00 ಗಂಟೆ ಸಮಯದಲ್ಲಿ ಮಧುಗಿರಿ ರಸ್ತೆಯ SLV ಮಿಲ್ ಹತ್ತಿರ ನಡೆದುಕೊಂಡು ಹೋಗುತ್ತಿದ್ದಾಗ ಎದುರುಕಡೆಯಿಂದ ಒಂದು ದ್ವಿಚಕ್ರ ವಾಹನವನ್ನು ಅದರ ಸವಾರನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಡಿಕ್ಕಿ ಹೊಡೆಸಿದ ಕಾರಣ ತನ್ನ ಎಡಕಾಲಿಗೆ ಗಾಯವಾಗಿ ಮೂಳೆ ಮುರಿದು ಕಾಲು ತಿರುಚಿಕೊಂಡಿರುತ್ತೆ. ನಂತರ ತನ್ನ ಸ್ನೇಹಿತನಾದ ಗಂಗಾಧರಪ್ಪ ರವರು ತನ್ನನ್ನು ಮಾನಸ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿ ನಂತರ ಗೌರಿಬಿದನೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿರುತ್ತಾರೆ. ಅಫಘಾತವುಂಟುಮಾಡಿದ ದ್ವಿಚಕ್ರ ವಾಹನದ ನೊಂದಣಿ ಸಂಖ್ಯೆ KA 40 Y 9562 Hero Honda Dream Yuga ಆಗಿದ್ದು ಅದರ ಚಾಲಕ ಲೈನ್ ಮೆನ್ ಗಂಗಾಧರಪ್ಪ ಆಗಿರುತ್ತಾರೆ. ಆದ್ದರಿಂದ ದ್ವಿಚಕ್ರ ವಾಹನ ನಂ KA 40 Y 9562 ರ ಚಾಲಕ ಲೈನ್ ಮೆನ್ ಗಂಗಾಧರಪ್ಪ ರವರ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೊಟ್ಟ ಹೇಳಿಕೆಯನ್ನು ಪಡೆದು ಠಾಣೆಗೆ ವಾಪಸ್ಸು ಪಡೆದು ರಾತ್ರಿ 11-15 ಗಂಟೆಗೆ ಪ್ರಕರಣವನ್ನು ದಾಖಲಿಸಿರುತ್ತೇನೆ.

  1. ಗುಡಿಬಂಡೆ ಪೊಲೀಸ್ ಠಾಣೆ ಮೊ.ಸಂ. 75/2020 ಕಲಂ. ಮನುಷ್ಯ ಕಾಣೆ:-

          ದಿನಾಂಕ;20-05-2020 ರಂದು ಮದ್ಯಾಹ್ನ 2-30 ಗಂಟೆಗೆ ಪಿರ್ಯಾದಿದಾರಳಾದ ಅಶ್ವಿನಿ ಕೋಂ ರಾಮಚಂದ್ರ ಎಸ್, ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂಧರೆ ತನಗೆ ಹೀಗೆ ಸುಮಾರು 9 ವರ್ಷಗಳ ಹಿಂದೆ ಸೋಮೇನಹಳ್ಳಿ ಗ್ರಾಮದ ವಾಸಿಯಾದ ರಾಮಚಂದ್ರಪ್ಪ ಬಿನ್ ಶ್ರೀನಿವಾಸ ರವರೊಂದಿಗೆ ಮದುವೆಯಾಗಿದ್ದು ತಮಗೆ ಒಂದು ಗಂಡು ಮತ್ತು ಒಂದು ಹೆಣ್ಣು ಮಕ್ಕಳಿರುತ್ತಾರೆ ತಾವು ಸಂಸಾರದಲ್ಲಿ ಅನ್ಯೊನ್ಯವಾಗಿದ್ದು ಪ್ರತಿ ದಿನ ತನ್ನ ಗಂಡ ಆಟೋಚಾಲನೆ ಮಾಡಿಕೊಂಡು ಜೀವನ ಮಾಡುತ್ತಿದ್ದೆವು ಪ್ರತಿ ದಿನ ದಂತೆ ದಿನಾಂಕ;19-05-2020 ರಮದು ಬೆಳಿಗ್ಗೆ ಸುಮಾರು 7-30 ಗಂಟೆಯಲ್ಲಿ ಆಟೋ ಚಾಲನೆ ಮಾಡಿಕೊಂಡು ಹೋಗುತ್ತಿದ್ದೇನೆಂದು ಹೋದವರು ರಾತ್ರಿ 10 ಗಂಟೆಯಾದರೂ ಮನೆಗೆ ಬರಲಿಲ್ಲ ಆದ ಕಾರಣ ತಾನು ಗಾಬರಿಗೊಂಡು ಅಕ್ಕಪಕ್ಕದ ಮನೆಯವರಿಗೆ ವಿಚಾರಿಸಿಕೊಂಡು ತಮ್ಮ ಗ್ರಾಮದಲ್ಲಿ ಮತ್ತು ಸಂಬಂದಿಕರ ಮನೆಗಳಲ್ಲಿ ಹುಡಕಾಡಲಾಗಿ ತನ್ನ ಗಂಡ ಪತ್ತೆಯಾಗಿರುವುದಿಲ್ಲಾ ಆದ್ದರಿಂದ ಕಾಣೆಯಾದ ತನ್ನ ಗಂಢನನ್ನು ಪತ್ತೆ ಮಾಡಿಕೊಡಬೇಕೆಂದು ಈ ದಿನ ತಡವಾಗಿ ಠಾಣೆಗೆ ಹಾಜರಾಗಿ ನೀಡಿದ ದೂರನ್ನು ಪಡೆದು ಠಾಣಾ ಮೊ.ಸಂ;75/2020 ಕಲಂ ಮನುಷ್ಯ ಕಾಣೆ ರಿತ್ಯಾ ಪ್ರಕರಣವನ್ನು ದಾಖಲಿಸಿರುತ್ತೆ.