ದಿನಾಂಕ :20/01/2021 ರ ಅಪರಾಧ ಪ್ರಕರಣಗಳು

  1. ಬಾಗೇಪಲ್ಲಿ ಪೊಲೀಸ್ ಠಾಣೆ ಮೊ.ಸಂ.15/2021 ಕಲಂ. 429 ಐ.ಪಿ.ಸಿ :-

     ದಿನಾಂಕ:20.01.2021 ರಂದು ಪಿರ್ಯಾದಿದಾರರಾದ  ಶ್ರೀಮತಿ ರತ್ನಮ್ಮ ಕೊಂ ನಾರಾಯಣಪ್ಪ 46 ವರ್ಷ, ಹಂದಿ ಜೋಗಿ ಜನಾಂಗ, ವ್ಯಾಪಾರ ವಾಸ:ತೀಮಾಕಲಪಲ್ಲಿ ಗ್ರಾಮ ಕಸಬಾ ಹೋಬಳಿ, ಬಾಗೇಪಲ್ಲಿ ತಾಲ್ಲೂಕು ರವರು  ಠಾಣೆಗೆ ಹಾಜರಾಗಿ  ನೀಡಿದ  ದೂರಿನ  ಸಾರಾಂಶವೇನೆಂದರೆ ತಾನು ಬಾಗೇಪಲ್ಲಿ ತಾಲ್ಲೂಕು ಕಸಬಾ ಹೋಬಳಿ ತೀಮಾಕಲಪಲ್ಲಿ ಗ್ರಾಮದಲ್ಲಿ ವಾಸವಿದ್ದು,  ಹಂದಿಗಳನ್ನು ಸಾಕಿಕೊಂಡು ಮಾರಾಟ ಮಾಡಿಕೊಂಡು  ಜೀವನ ಮಾಡಿಕೊಂಡಿರುತ್ತೇನೆ. ದಿನಾಂಕ:19-01-2021 ರಂದು ರಾತ್ರಿ ನಾನು ಎಂದಿನಂತೆ ಹಂದಿಗಳನ್ನು ನಮ್ಮ ಮನೆಯ ಮುಂಭಾಗದಲ್ಲಿರುವ ಹಂದಿ ಗೂಡಿನಲ್ಲಿ ಕೂಡಿಹಾಕಿ ತಡಿಕೆಯನ್ನು ಹಾಕಿ ಮನೆಯಲ್ಲಿ ಮಲಗಿರುತ್ತೆನೆ. ಈ ದಿನ ದಿನಾಂಕ: 20-01-2021 ರಂದು ಬೆಳ್ಳಿಗೆ 6:00- ಗಂಟೆಗೆ ಎದ್ದು ತಡಿಕೆಯನ್ನು ತೆಗೆದು ಹಂದಿಗಳನ್ನು ನೋಡಲಾಗಿ, ಹಂದಿಗೂಡಿನಲ್ಲಿ 06 ಹಂದಿಗಳು ಒದ್ದಾಡುತ್ತಿದವು, ನೋಡು ನೋಡುತ್ತಿದ್ದಂತೆಯೇ 06- ಹಂದಿಗಳು ಮೃತಪಟ್ಟವು ಯಾರೂ ದುಷ್ಕರ್ಮಿಗಳು ರಾತ್ರಿ ಹಂದಿಗಳಿಗೆ ವಿಷ ಪ್ರಾಶನವನ್ನು ಮಾಡಿಸಿದ್ದು,  ಎಲ್ಲಾ 06 – ಹಂದಿಗಳಿಗೆ ಬಾಯಲ್ಲಿ ನೊರೆ ಬಂದು ಮೃತಪಟ್ಟಿರುತ್ತವೆ . ಹಂದಿಗಳು ಪ್ರತಿಯೊಂದು ಸುಮಾರು 25 ರಿಂದ 30 ಕೆ.ಜಿ ತೂಕ  ಇರುತ್ತದೆ. ಇದರ ಒಟ್ಟು ಬೆಲೆ ಸುಮಾರು 40,000/-ರೂಗಳು  ಬೆಲೆ ಬಾಳುತ್ತವೆ. ನನ್ನ ಹಂದಿಗಳಿಗೆ ವಿಷ ಹಾಕಿ ಸಾಯಿಸಿರುವ ದುಷ್ಕರ್ಮಿಗಳನ್ನು ಪತ್ತೆ ಮಾಡಿ ಕಾನೂನು ರೀತಿ ಕ್ರಮ ಜರುಗಿಸಬೇಕಾಗಿ  ಕೋರಿಕೊಟ್ಟ ದೂರು,

  1. ಬಾಗೇಪಲ್ಲಿ ಪೊಲೀಸ್ ಠಾಣೆ ಮೊ.ಸಂ.16/2021 ಕಲಂ. 279 ಐ.ಪಿ.ಸಿ :-

     ದಿನಾಂಕ:20.01.2021 ರಂದು ಪಿರ್ಯಾದಿದಾರರಾದ ಶ್ರೀ ಗಿರೀಶ ಬಿನ್ ಮಂಜುನಾಥ,30 ವರ್ಷ, ಭಜಂತ್ರಿ ಜನಾಂಗ, ಚಾಲಕ ವೃತ್ತಿ, ವಾಸ:18ನೇ ವಾರ್ಡ್ ಬಾಗೇಪಲ್ಲಿ  ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ  ದಿನಾಂಕ. 20/01/2021 ರಂದು ಬೆಳಿಗ್ಗೆ ಸುಮಾರು 9-00 ಗಂಟೆಯಲ್ಲಿ ನಾನು ನನ್ನ ಬಾಬತ್ತು ಕೆ.ಎ-02-ಎಂ.ಎಫ್-7728 ಈಟಿಯಸ್ ಕಾರಿನಲ್ಲಿ ನಮ್ಮ ತಾತ ಮುನೇಂದ್ರ ಮೂರ್ತಿ ಮತ್ತು ಅಜ್ಜಿ  ಸರಸ್ವತಮ್ಮ ರವರನ್ನು  ಆಸ್ಪತ್ರೆಗೆ ಕರೆದುಕೊಂಡು ಹೋಗಲು, ಬಾಗೇಪಲ್ಲಿ ಟೌನ್ ನಿಂದ ಹೊರಟು ಬೆಂಗಳೂರಿಗೆ ಹೋಗಲು ಹೈದರಾಬಾದ್ – ಬೆಂಗಳೂರು ಎನ್.ಹೆಚ್-44 ರಸ್ತೆಯಲ್ಲಿ  ಬೆಳಿಗ್ಗೆ ಸುಮಾರು 9-30 ಗಂಟೆಯಲ್ಲಿ ಕರ್ನಾಟಕ  ಡಾಬಾದ ಮುಂಭಾಗದಲ್ಲಿ ಹೋಗುತ್ತಿರುವಾಗ ಹಿಂಬದಿಯಿಂದ  ಬಂದತಂಹ ಹೆಚ್.ಆರ್-47-ಬಿ-4249 ಕಂಟೈಂನರ್ ಲಾರಿಯ ಚಾಲಕ ತನ್ನ ಲಾರಿಯನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ನಾನು ಚಾಲನೆ ಮಾಡಿಕೊಂಡು ಹೋಗುತ್ತಿದ್ದ ಕಾರಿನ ಎಡಬದಿಗೆ ಡಿಕ್ಕಿ ಹೊಡೆದ ಪರಿಣಾಮ ಕಾರಿನ ಎಡಬದಿಯ ಎರಡು ಡೋರ್ ಗಳು ಜಖಂಗೊಂಡಿರುತ್ತವೆ. ಕಾರಿನಲ್ಲಿದ್ದವರಿಗೆ ಯಾವುದೇ ಗಾಯಗಳು ಆಗಿರುವುದಿಲ್ಲ. ಆದ್ದರಿಂದ ಹೆಚ್.ಆರ್-47-ಬಿ-4249 ಕಂಟೈಂನರ್ ಲಾರಿಯ ಚಾಲಕನ ವಿರುದ್ದ ಕಾನೂನು ಕ್ರಮ ಕೈಗೊಳ್ಳಲು ಕೋರುತ್ತೇನೆ.

  1. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.28/2021 ಕಲಂ. 279,337 ಐ.ಪಿ.ಸಿ :-

     ದಿನಾಂಕ: 19/01/2021 ರಂದು ಸಂಜೆ 4.30 ಗಂಟೆಗೆ ಎಂ.ಚಂದ್ರಶೇಖರ್ ಬಿನ್ ಲೇಟ್ ಮುನಿನಾರಾಯಣಪ್ಪ, 42 ವರ್ಷ, ಕುರುಬ ಜನಾಂಗ, ಕಡಲೆಪುರಿ ವ್ಯಾಪಾರ, ಹಾಲಿ ವಾಸ ವಾರ್ಡ್ನಂ-30, ರೈಲ್ವೇ ಸ್ಟೇಷನ್ ಬಳಿ, ಅಗ್ರಹಾರ, ಚಿಂತಾಮಣಿ ನಗರ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ,  ತನ್ನ ಅಣ್ಣನಾದ ಎಂ.ಮುನಿರಾಜು ರವರಿಗೆ 11 ವರ್ಷ ವಯಸ್ಸಿನ ಗಾನವಿ ಮತ್ತು 8 ವರ್ಷ ವಯಸ್ಸಿನ ಸುಹಾಸ್ ಎಂಬ ಹೆಸರಿನ ಇಬ್ಬರು ಮಕ್ಕಳಿರುತ್ತಾರೆ. ತನ್ನ ಅಣ್ಣ ಅವರ ಪತ್ನಿ, ಮಕ್ಕಳೊಂದಿಗೆ ವಾರ್ಡ್ ನಂ-31 ತಿಮ್ಮಸಂದ್ರದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿರುತ್ತಾರೆ. ತನ್ನ ಅಣ್ಣನ ಇಬ್ಬರು ಮಕ್ಕಳು ಚಿಂತಾಮಣಿ ನಗರದ ಬಾಗೇಪಲ್ಲಿ ಸರ್ಕಲ್ ನಲ್ಲಿರುವ ಎಸ್.ಎಫ್.ಎಸ್ ಶಾಲೆಯಲ್ಲಿ ಕ್ರಮವಾಗಿ 5-ನೇ ತರಗತಿ ಮತ್ತು 3-ನೇ ತರಗತಿಯಲ್ಲಿ ಓದುತ್ತಿರುತ್ತಾರೆ. ಹೀಗಿರುವಾಗ ಈ ದಿನ ದಿನಾಂಕ:19/01/2021 ರಂದು ಮದ್ಯಾಹ್ನ 1-30 ಗಂಟೆಯ ಸಮಯದಲ್ಲಿ ತಾನು ತಮ್ಮ ಅಂಗಡಿಯ ಬಳಿ ಇದ್ದಾಗ ತನ್ನ ಅಣ್ಣನಾದ ಎಂ.ಮುನಿರಾಜು ರವರು ತನ್ನ ಮೊಬೈಲ್ ನಂಬರಿಗೆ ಪೋನ್ ಮಾಡಿ ಸುಹಾಸ್ ನಿಗೆ ಶಿಡ್ಲಘಟ್ಟ ರಸ್ತೆಯಲ್ಲಿರುವ ಬಿ.ವಿ.ಎಂ ಕನ್ವನ್ಷನ್ ಹಾಲ್ ಬಳಿ ಲಾರಿಯೊಂದು ಅಪಘಾತಪಡಿಸಿದ್ದು, ಆತನಿಗೆ ಬಲಗಾಲಿಗೆ, ತಲೆಗೆ ರಕ್ತಗಾಯಗಳಾಗಿವೆ, ಸುಹಾಸ್ ನನ್ನು ಚಿಕಿತ್ಸೆಗಾಗಿ ಚಿಂತಾಮಣಿ ಸರ್ಕಾರಿ ಆಸ್ಪತ್ರೆಗೆ ಹಾಕಿಕೊಂಡು ಬಂದಿರುತ್ತೇವೆ ಬೇಗ ಬಾ ಎಂದು ಎಂದು ಹೇಳಿದರು. ಕೂಡಲೇ ತಾನು ಚಿಂತಾಮಣಿ ಸರ್ಕಾರಿ ಆಸ್ಪತ್ರೆಗೆ ಹೋಗಿ ನೋಡಲಾಗಿ ಸಂಗತಿ ನಿಜವಾಗಿದ್ದು, ಗಾಯಾಳು ಸುಹಾಸ್ ನನ್ನು ಆಸ್ಪತ್ರೆಯಲ್ಲಿ ಬೆಡ್ ಮೇಲೆ ಮಲಗಿಸಿದ್ದರು. ನಂತರ ತಾನು ನಡೆದ ಘಟನೆಯ ಬಗ್ಗೆ ಆಸ್ಪತ್ರೆಯಲ್ಲಿದ್ದ ತನ್ನ ಅಣ್ಣನನ್ನು ವಿಚಾರ ಮಾಡಲಾಗಿ ಈ ದಿನ ಬೆಳಿಗ್ಗೆ ಗಾನವಿ ಎಂದಿನಂತೆ ಶಾಲೆಗೆ ಹೋಗಿದ್ದು, ನಂತರ ಇದೇ ದಿನ ಮದ್ಯಾಹ್ನ ಸುಮಾರು 12-45 ಗಂಟೆಯ ಸಮಯದಲ್ಲಿ ಶಾಲೆಗೆ ಹೋಗಿದ್ದ ಗಾನವಿಯನ್ನು ಮನೆಗೆ ಕರೆದುಕೊಂಡು ಬರಲು ಸುಹಾಸ್ ಎಸ್.ಎಫ್.ಎಸ್ ಶಾಲೆಯ ಬಳಿಗೆ ಹೋಗಲೆಂದು ಮನೆಯಿಂದ ಹೊರಗೆ ಹೋಗಿರುತ್ತಾನೆ. ನಂತರ ಇದೇ ದಿನ ಮದ್ಯಾಹ್ನ ಸುಮಾರು 1-00 ಗಂಟೆಯ ಸಮಯದಲ್ಲಿ ತಮ್ಮ ಗ್ರಾಮದ ವಾಸಿ ಭರತ್ ಎಂಬುವರು ತನಗೆ ಪೋನ್ ಮಾಡಿ ಶಿಡ್ಲಘಟ್ಟ ರಸ್ತೆಯಲ್ಲಿರುವ ಬಿ.ವಿ.ಎಂ ಕನ್ವೆನ್ಷನ್ ಹಾಲ್ ಬಳಿ ವರಮಹಾಲಕ್ಷ್ಮಿ ಸಿಲ್ಕ್ ಅಂಡ್ ಸ್ಯಾರೀಸ್ ಅಂಗಡಿಯ ಮುಂಭಾಗದಲ್ಲಿ ರಸ್ತೆಯ ಬದಿಯಲ್ಲಿ ಸುಹಾಸ್ ನಡೆದುಕೊಂಡು ಹೋಗುತ್ತಿದ್ದಾಗ, ಅದೇ ಸಮಯಕ್ಕೆ ಚಿಂತಾಮಣಿ ನಗರದ ಕಡೆಯಿಂದ ಬಂದ ನೋಂದಣಿ ಸಂಖ್ಯೆ:ಕೆಎ-40 ಎ-3669 ಅಶೋಕ್ ಲೇಲ್ಯಾಂಡ್ ಲಾರಿಯ ಚಾಲಕ ಲಾರಿಯನ್ನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ರಸ್ತೆಯ ಬದಿಯಲ್ಲಿ ನಡೆದುಕೊಂಡು ಬರುತ್ತಿದ್ದ ಸುಹಾಸ್ ನಿಗೆ ಡಿಕ್ಕಿಹೊಡೆದು ಅಪಘಾತಪಡಿಸಿದ್ದು, ಇದರಿಂದ ಸುಹಾಸ್ ನಿಗೆ ತಲೆಗೆ ಮತ್ತು ಬಲಗಾಲಿಗೆ ರಕ್ತಗಾಯಗಳಾಗಿವೆ ಬೇಗ ಬನ್ನಿ ಎಂದು ತನಗೆ ತಿಳಿಸಿದ್ದು, ತಾನು ಸ್ಥಳಕ್ಕೆ ಹೋಗಿ ನೋಡಲಾಗಿ ಸಂಗತಿ ನಿಜವಾಗಿದ್ದು, ತನ್ನ ಮಗ ಸುಹಾಸ್ ನಿಗೆ ಅಪಘಾತಪಡಿಸಿದ ಲಾರಿಯು ರಸ್ತೆಯ ಬದಿಯಲ್ಲಿದ್ದು, ನೋಡಲಾಗಿ ನೋಂದಣಿ ಸಂಖ್ಯೆ:ಕೆಎ-40 ಎ-3669 ಅಶೋಕ್ ಲೇಲ್ಯಾಂಡ್ ಲಾರಿ ಆಗಿದ್ದು, ತಾನು ಗಾಯಾಳು ಸುಹಾಸ್ ನನ್ನು ಅಲ್ಲಿಂದ ಚಿಕಿತ್ಸೆಗಾಗಿ ಚಿಂತಾಮಣಿ ಸರ್ಕಾರಿ ಆಸ್ಪತ್ರೆಗೆ ಹಾಕಿಕೊಂಡು ಬಂದಿರುತ್ತೇನೆಂತ ವಿಚಾರ ತಿಳಿಸಿದರು. ನಂತರ ಗಾಯಾಳು ಸುಹಾಸ್ ನಿಗೆ ಚಿಕಿತ್ಸೆ ನೀಡಿದ ಚಿಂತಾಮಣಿ ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿಗಳು ಆತನನ್ನು ಹೆಚ್ಚಿನ ಚಿಕಿತ್ಸೆಗಾಗಿ ಕೋಲಾರಕ್ಕೆ ಕರೆದುಕೊಂಡು ಹೋಗುವಂತೆ ತಿಳಿಸಿದ್ದರಿಂದ ತನ್ನ ಅಣ್ಣ ಗಾಯಾಳುವನ್ನು ಆಸ್ಪತ್ರೆಯ ಆಂಬ್ಯೂಲೆನ್ಸ್ ವಾಹನದಲ್ಲಿ ಹಾಕಿಕೊಂಡು ಕೋಲಾರಕ್ಕೆ ಹೋಗಿ ಎಸ್.ಎನ್.ಆರ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲು ಮಾಡಿರುತ್ತಾರೆ.  ಪ್ರಸ್ತುತ ಗಾಯಾಳು ಸುಹಾಸ್ ಕೋಲಾರದ ಎಸ್.ಎನ್.ಆರ್ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆಯನ್ನು ಪಡೆಯುತ್ತಿದ್ದು, ಗಾಯಾಳು ತಂದೆ ತನ್ನ ಅಣ್ಣ ಮುನಿರಾಜು ರವರು ಆಸ್ಪತ್ರೆಯಲ್ಲಿ ಗಾಯಾಳುವಿನ ಆರೈಕೆಯನ್ನು ನೋಡಿಕೊಳ್ಳುತ್ತಿರುವುದರಿಂದ ತಾನು ಠಾಣೆಗೆ ದೂರನ್ನು ನೀಡಿರುತ್ತೇನೆ. ಮೇಲ್ಕಂಡ ಅಪಘಾತಪಡಿಸಿದ ಲಾರಿಗೆ ರಾಮಕೃಷ್ಣ.ಸಿ ಬಿನ್ ಚಿಕ್ಕಕ್ಕುಲಪ್ಪ, ಮಸಲಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು ಎಂಬುವರು ಚಾಲಕರಾಗಿರುತ್ತಾರೆಂತ ತಿಳಿದುಬಂದಿರುತ್ತೆ. ಆದ್ದರಿಂದ ಈ ಅಪಘಾತಕ್ಕೆ ಕಾರಣನಾದ ಲಾರಿ ಚಾಲಕನ ವಿರುದ್ದ ಕಾನೂನು ರೀತ್ಯಾ ಸೂಕ್ತ ಕ್ರಮ ಕೈಗೊಳ್ಳಬೇಕಾಗಿ ಕೋರಿರುವುದಾಗಿರುತ್ತೆ.

  1. ಗೌರಿಬಿದನೂರು ಪುರ ಪೊಲೀಸ್ ಠಾಣೆ ಮೊ.ಸಂ.11/2021 ಕಲಂ. 279,337 ಐ.ಪಿ.ಸಿ :-

          ದಿನಾಂಕ19/01/2021 ರಂದು ಸಂಜೆ 5-20 ಗಂಟೆಗೆ ಗೌರಿಬಿದನೂರು ಸರ್ಕಾರಿ ಆಸ್ಪತ್ರೆಯಿಂದ ಬಂದ ಮೆಮೊ ಪಡೆದು 5-30 ಗಂಟೆಗೆ ಆಸ್ಪತ್ರೆಗೆ ಭೇಟಿ ನೀಡಿ 5-50 ಗಂಟೆಯ ವರೆಗೆ ಗಾಯಾಳು ಸೈಯದ್ ಜಾಫರ್ ಬಿನ್ ಸೈಯದ್ ಹುಸೇನ್ ಸಾಬ್ 65ವರ್ಷ, ಮುಸ್ಲಿಂ ಜನಾಂಗ, ಪೆಟ್ರೋಲ್ ಬಂಕ್ ನಲ್ಲಿ ಕೆಲಸ, ವಾಸ ಸಂತೇಮೈದಾನ ಗೌರಿಬಿದನೂರು ಟೌನ್ ರವರಿಂದ ಪಡೆದ ಹೇಳಿಕೆಯ ಸಾರಂಶವೇನೆಂದರೆ ತಾನು ಹಿಂದೂಸ್ತಾನ್ ಪೆಟ್ರೋಲ್ ಬಂಕ್ ನಲ್ಲಿ ಪೆಟ್ರೊಲ್ ಹಾಕುವ ಕೆಲಸ ಮಾಡಿಕೊಂಡಿರುತ್ತೇನೆ. ತಾನು ದಿನಾಲು ತನ್ನ ಬಾಬ್ತು ಕೆ.ಎ 40 ಕ್ಯೂ 2877 ಟಿ.ವಿ.ಎಸ್ ಹೇವಿ ಡ್ಯೂಟಿ  ವಾಹನದಲ್ಲಿ ಕೆಲಸಕ್ಕೆ ಹೋಗಿ ಬರುತ್ತಿರುತ್ತೇನೆ. ಈ ದಿನ ದಿನಾಂಕ19/01/2021 ರಂದು ಸಂಜೆ 4-30 ಗಂಟೆ ಸಮಯದಲ್ಲಿ ಬೆಂಗಳೂರು ಹಿಂದೂಪುರ ರಸ್ತೆ ಕೃಷ್ಣ ಗ್ರ್ಯಾಂಡ್ ಹೋಟೇಲ್ ಬಳಿ ಪೆಟ್ರೋಲ್ ಬಂಕ್ ಗೆ ಹೋಗಲು  ಹೋಗುತ್ತಿದ್ದಾಗ ಇದೇ ರಸ್ತೆಯಲ್ಲಿ ಬಂದ ಕ್ಯಾಂಟರ್ ಲಾರಿ ಯನ್ನು ಅದರ ಚಾಲಕ ಅತೀವೇಗ ಮತ್ತು ಅಜಾಗರೂಕತಿಯಿಂದ ಚಾಲನೆ ಮಾಡಿಕೊಂಡು ಬಂದು ತನ್ನ ದ್ವಿಚಕ್ರ ವಾಹನಕ್ಕೆ ಹಿಂದಿನಿಂದ ಡಿಕ್ಕಿ ಹೊಡೆಸಿದ ಪರಿಣಾಮ ತನಗೆ ತಲೆಯ ಹಿಂಭಾಗ , ಬಲ ಕಾಲಿಗೆ ಮತ್ತು ಎಡ ಕಾಲಿಗೆ ಸಣ್ಣಪುಟ್ಟ ಗಾಯಾಗಳಾಗಿರುತ್ತೆ. ಕೋಡಲೇ ಅಲ್ಲಿದ್ದ ಕೆಲವರು ನನ್ನನ್ನು ಯಾವುದೋ ಆಟೋದಲ್ಲಿ ಗೌರಿಬಿದನೂರ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲು ಮಾಡಿರುತ್ತಾರೆ. ಮೇಲ್ಕಂಡ ಅಪಘಾತ ಉಂಟು ಮಾಡಿದ ಕ್ಯಾಂಟರ್ ಲಾರಿ ನಂ ಕೆ.ಎ 40-1104 ರ ಚಾಲಕನ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಲು ನೀಡಿದ ಹೇಳಿಕೆಯನ್ನು ಪಡೆದುಕೊಂಡು ಬಂದು ಸಂಜೆ 6-00 ಗಂಟೆಗೆ ಪ್ರಕರಣ  ದಾಖಲಿಸಿರುತ್ತೆ.

  1. ಗುಡಿಬಂಡೆ ಪೊಲೀಸ್ ಠಾಣೆ ಮೊ.ಸಂ.14/2021 ಕಲಂ. 279,337 ಐ.ಪಿ.ಸಿ & 187 ಐ.ಎಂ.ವಿ ಆಕ್ಟ್ :-

     ದಿನಾಂಕ:19/01/2021 ರಂದು ಸಂಜೆ 4-30 ಗಂಟೆಯಲ್ಲಿ ಪಿರ್ಯಾದಿದಾರರಾದ ವೆಂಕಟರೆಡ್ಡಿ ಬಿನ್ ರಾಮಯ್ಯ, 43 ವರ್ಷ, ವಕ್ಕಲಿಗರು, ವ್ಯಾಪಾರ, ವಾಸ: ಪೆರೇಸಂದ್ರ ಗ್ರಾಮ, ಚಿಕ್ಕಬಳ್ಳಾಪುರ ತಾಲ್ಲೂಕು ತನಗೆ ಮಂಜುಳ ರವರೊಂದಿಗೆ ಮದುವೆಯಾಗಿದ್ದು, ತನ್ನ ಹೆಂಡತಿ ಮಂಜುಳ ರವರಿಗೆ ಮೂರು ಜನ ತಮ್ಮಂದಿರು ಮತ್ತು ಒಬ್ಬ ಅಣ್ಣನಿರುತ್ತಾರೆ. ತನ್ನ ಹೆಂಡತಿಯ 1 ನೇ ತಮ್ಮ ರಂಗನಾಥ. ಬಿ.ವಿ.@ ರಾಜೇಶರೆಡ್ಡಿ, 2 ನೇ ತಮ್ಮ ನಾಗಾನಂದ, ಮತ್ತು 3 ನೇ ಚಂದ್ರ ಶೇಖರ್ ರವರುಗಳು ಇದ್ದು, ನನ್ನ ಬಾಮೈದ ರಂಗನಾಥ.ಬಿ.ವಿ  @ ರಾಜೇಶ್ ರೆಡ್ಡಿ ರವರು ಪೇರೆಸಂದ್ರ ಕ್ರಾಸ್ನಲ್ಲಿ ಸಿಮೇಂಟ್ ಅಂಗಡಿಯನ್ನು ಹಾಕಿಕೊಂಡು ವ್ಯಾಪಾರದಿಂದ ಜೀವನ ಮಾಡಿಕೊಂಡು ಪೆರೇಸಂದ್ರ ಗ್ರಾಮದಲ್ಲಿ ವಾಸವಾಗಿರುತ್ತಾನೆ. ದಿನಾಂಕ:13/01/2021 ರಂದು ರಾತ್ರಿ ಸುಮಾರು 8-00 ಗಂಟೆಯಲ್ಲಿ R.ವಿಜಯ್ ಕುಮಾರ್ ಬಿನ್ D V ರಾಮಕೃಷ್ಣಪ್ಪ, 40 ವರ್ಷ, ಬಲಜಿಗರು, ವಾಸ: ಅದೇನ್ನಗಾರಹಳ್ಳಿ ಗ್ರಾಮ, ಚಿಕ್ಕಬಳ್ಳಾಪುರ ತಾಲ್ಲೂಕು ರವರು ತನಗೆ ಪೊನ್ ಮಾಡಿ ನಿಮ್ಮ ಬಾಮೈದ ರಂಗನಾಥ ರವರು ತಮ್ಮ ಮನೆಯ ಬಳಿ ಬಂದು ವಾಪಸ್ಸು ತನ್ನ ಮನೆಗೆ ಬರಲು ಪೆರೇಸಂದ್ರ ಕ್ರಾಸ್ನಿಂದ ಬಾಗೇಪಲ್ಲಿ ಕಡೆಗೆ ಹೋಗುವ ಸರ್ವೀಸ್ ರಸ್ತೆಯಲ್ಲಿ ಪೆಟ್ರೋಲ್ ಬಂಕ್ ಹತ್ತಿರ ಇರುವ ಶಾಂತ ವಿದ್ಯಾನಿಕೇತನ ಶಾಲೆಯ ಮುಂಭಾಗದ ರಸ್ತೆಯಲ್ಲಿ ಬರುತ್ತೀರುವಾಗ ತಾನು ಚಾಲನೆ ಮಾಡಿಕೊಂಡು ಬರುತ್ತಿದ್ದ K.A-40 W-7776 ದ್ವಿಚಕ್ರ ವಾಹನಕ್ಕೆ ತನ್ನ ಎದುರುಗಡೆಯಿಂದ ಬಂದ K A-40 A-5709 ರ ಟಿಪ್ಪರ್ ಲಾರಿಯ ಚಾಲಕ ತನ್ನ ಟಿಪ್ಪರ್ ಲಾರಿಯನ್ನು ಅತೀವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ತನ್ನ ದ್ವಿ ಚಕ್ರ ವಾಹನಕ್ಕೆ ಡಿಕ್ಕಿ ಪಡಿಸಿದ ಪರಿಣಾಮ ರಂಗನಾಥ ರವರು ದ್ವಿ ಚಕ್ರ ವಾಹನ ಸಮೇತ ಕೆಳಗೆ ಬಿದ್ದು ತನಗೆ ಬಲ ಕಾಲಿನ ಮೊಣಕಾಲಿಗೆ ಮತ್ತು ಬಲ ಮೊಣಕೈಗೆ ರಕ್ತಗಾಯಗಳಾಗಿರುವುದಾಗಿ ಮತ್ತು ದ್ವಿ ಚಕ್ರ ವಾಹನದ ಬಲಭಾಗ ಜಕಂಗೊಂಡಿರುವುದಾಗಿ ಮತ್ತು ತನ್ನ ಟಿಪ್ಪರ್ ಲಾರಿಯನ್ನು ಸ್ಥಳದಲ್ಲಿ ನಿಲ್ಲಿಸದೇ ಹೋರಟು ಹೋಗಿರುವುದಾಗಿ ತಿಳಿಸಿದ್ದು ತಾನು ಕೂಡಲೇ ಮೇಲ್ಕಂಡ ಸ್ಥಳಕ್ಕೆ ಬಂದು ನೋಡಲಾಗಿ ವಿಚಾರವು ನಿಜವಾಗಿದ್ದು ತಾನು ಅಂಬುಲೇನ್ಸ್ಗೆ ಕರೆಯನ್ನು ಮಾಡಿ ಅಂಬುಲೇನ್ಸ್ನಲ್ಲಿ ತನ್ನ ಬಾಮೈದ ರಂಗನಾಥ ರವರನ್ನು ಕರೆದುಕೊಂಡು ಬೆಂಗಳೂರಿನಲ್ಲಿರುವ CMI ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲು ಮಾಡಿ ಚಿಕಿತ್ಸೆಯನ್ನು ಕೊಡಿಸಿ ಈ ದಿನ ತಡವಾಗಿ ಠಾಣೆಗೆ ಹಾಜರಾಗಿ ದೂರನ್ನು ನೀಡುತ್ತೀರುತ್ತೇನೆ.   ಆದ್ದರಿಂದ ತನ್ನ ಬಾಮೈದ ರಂಗನಾಥ.ಬಿ.ವಿ @ ರಾಜೇಶ್ ರೆಡ್ಡಿ ರವರಿಗೆ ಅಪಘಾತ ಪಡಿಸಿದ KA-40 A-5709 ರ ಟಿಪ್ಪರ್ ಲಾರಿ ಮತ್ತು ಚಾಲಕನ ವಿರುದ್ದ ಕಾನೂನು ಕ್ರಮವನ್ನು ಜರುಗಿಸಬೇಕಾಗಿ ಕೋರಿ ನೀಡಿದ ದೂರನ್ನು ಪಡೆದು ಕೊಂಡು ಪ್ರಕರಣವನ್ನು ದಾಖಲು ಮಾಡಿರುತ್ತೆ.

  1. ಗುಡಿಬಂಡೆ ಪೊಲೀಸ್ ಠಾಣೆ ಮೊ.ಸಂ.15/2021 ಕಲಂ. 379 ಐ.ಪಿ.ಸಿ & 102,41(D)  ಸಿ.ಆರ್.ಪಿ.ಸಿ:-

     ದಿನಾಂಕ 19/01/2021 ರಂದು ರಾತ್ರಿ 11-30 ಗಂಟೆಗೆ ಪಿರ್ಯಾಧಿ ಹೆಚ್.ಸಿ. 29 ಶ್ರೀನಿವಾಸ  ರವರು ಠಣೆಯಲ್ಲಿ ಹಾಜರಾಗಿ ಆರೋಪಿತರು ಮತ್ತು ಮಾಲಿನೊಂದಗೆ ನೀಡಿದ ದೂರಿನ ಸಾರಾಂಶವೇನೆಂದರೆ, ತನಗೂ ಮತ್ತು ಸಿಹೆಚ್ಸಿ-28 ಶ್ರೀ ದಕ್ಷಿಣಾ ಮೂರ್ತಿ ರವರಿಗೆ ಈ ದಿನ ದಿನಾಂಕ 19/01/2021 ರಂದು ರಾತ್ರಿ 9-00 ಗಂಟೆಯಿಂದ ರಾತ್ರಿ ವಿಷೇಶ ಗಸ್ತಿನ ಕರ್ತವ್ಯಕ್ಕೆ ನೇಮಿಸಿದ್ದು ಅದರಂತೆ ನಾವು ಗುಡಿಬಂಡೆ ಮುಖ್ಯ ರಸ್ತೆಯಿಂದ ಗಸ್ತು ಮಾಡಿಕೊಂಡು ಸಂಪಗಿ ಸರ್ಕಲ್ ಬಳಿ ಗಸ್ತು ಮಾಡುತ್ತಿದ್ದಾಗ ಅಲ್ಲಿಯೇ ಕೆಎಸ್.ಆರ್.ಟಿ.ಸಿ ಬಸ್ಸು ನಿಲ್ದಾಣದ ಮುಂಭಾಗ ರಸ್ತೆಯಲ್ಲಿ ಇದೇ ದಿನ ದಿನಾಂಕ 19/01/2021 ರಂದು ರಾತ್ರಿ ಸುಮಾರು 10-30 ಗಂಟೆಯ ಸಮಯದಲ್ಲಿ ಮೂವರು ಆಸಾಮಿಗಳು ಬರುತ್ತಿದ್ದರು ಸಮವಸ್ತ್ರದಲ್ಲಿದ್ದ ನಮ್ಮನ್ನು ನೋಡಿ ತಪ್ಪಿಸಿಕೊಳ್ಳಲು  ಬಸ್ಸು ನಿಲ್ದಾಣದ ಕಡೆ ಹೋಗಲು ಪ್ರಯತ್ನಿಸಿದ್ದು, ಆಗ ನಾವು ಸದರಿ ಆಸಾಮಿಗಳನ್ನು ಹಿಡಿದು ವಶಕ್ಕೆ ಪಡೆದುಕೊಂಡು ಹೆಸರು ಮತ್ತು ವಿಳಾಸ ಕೇಳಲಾಗಿ ವೀರೇಶ@ವರದಾ ಬಿನ್ ಲೇಟ್ ಸೋಮಶೇಖರ್, 20 ವರ್ಷ, ಕುರುಬ ಲಿಂಗಾಯ್ತ ಜನಾಂಗ, ಕೂಲಿ ಕೆಲಸ 2ನೇ ಬ್ಲಾಕ್, 2ನೇ ಮುಖ್ಯ ರಸ್ತೆ, ಜಾಲಿ ನಗರ, ದಾವಣೆಗೆರೆ ಟೌನ್. 2) ಶ್ರೀಧರ್ ಬಿನ್ ರಾಮಕೃಷ್ಣಪ್ಪ 21 ವರ್ಷ, ಬೋವಿಜನಾಂಗ, ಜಿರಾಯ್ತಿ ಕೆಲಸ, ಚಿಕ್ಕನಾರೆಪ್ಪನಹಳ್ಳಿ ಗ್ರಾಮ ಚಿಕ್ಕಬಳ್ಳಾಪುರ ತಾಲ್ಲೂಕು, 3) ರಘುರಾಮ್ ಬಿನ್ ಮುನಿರಾಜ್ 20 ವರ್ಷ, ಬೋವಿಜನಾಂಗ, ಜಿರಾಯ್ತಿ ಕೆಲಸ, ಚಿಕ್ಕನಾರೆಪ್ಪನಹಳ್ಳಿ ಗ್ರಾಮ ಚಿಕ್ಕಬಳ್ಳಾಪುರ ತಾಲ್ಲೂಕು, ಎಂತ ತಿಳಿಸಿದರು, ಸದರಿ ಆಸಾಮಿಗಳ ಅಂಗಶೋಧನೆ ಮಾಡಲಾಗಿ ಸದರಿ ವೀರೇಶ್ ಬಳಿ ವಿವೋ ಸ್ಕ್ರೀನ್ ಟಚ್ ಮೊಬೈಲ್ ಪೋನ್, ಇದು ಸುಮಾರು 13000/- ಬೆಲೆ ಬಾಳುವಂತದ್ದು ಶ್ರೀಧರ ರವರ ಬಳಿ 1) ಸ್ಯಾಂಸಾಗ್ ಸ್ಕ್ರೀನ್ ಟಚ್ ಮೊಬೈಲ್ ಪೋನ್ ಇದು ಸುಮಾರು 14000/- ಬೆಲೆ ಬಾಳುವಂತದ್ದು, ಮತ್ತು 2) ಒಂದು ಕೀಪ್ಯಾಡ್ ಮೊಬೈಲ್ ಪೋನ್ ಇದ್ದು, ಇದು ಸುಮಾರು 1200/- ಬೆಲೆ ಬಾಳುವಂತದ್ದು ಆಗಿರುತ್ತೆ. ರಘುರಾಮ್ ರವರ ಬಳಿ ವಿವೋ ಸ್ಕ್ರೀನ್ ಟಚ್ ಮೊಬೈಲ್ ಪೋನ್, ಇದು ಸುಮಾರು 12500/- ಬೆಲೆ ಬಾಳುವಂತದ್ದು ಆಗಿರುತ್ತೆ. ಸದರಿ ಮೊಬೈಲ್ ಪೋನ್ಗಳ ಬಗ್ಗೆ ವಿಚಾರಣೆ ಮಾಡಲಾಗಿ ಸಮಂಜಸವಾದ ಉತ್ತರ ನೀಡಲಿಲ್ಲ. ಮೇಲ್ಕಂಡ ಆಸಾಮಿಗಳು ಮೇಲ್ಕಂಡ ಮೊಬೈಲ್ ಪೋನ್ಗಳನ್ನು ಎಲ್ಲಿಯೋ ಕಳ್ಳತನ ಮಾಡಿಕೊಂಡು ಬಂದಿರುವುದಾಗಿ ಕಂಡು ಬಂದಿದ್ದರಿಂದ ಸದರಿ ಆಸಾಮಿಗಳಗಳನ್ನು ಮೊಬೈಲ್ ಪೋನ್ ಗಳ ಸಮೇತ ವಶಕ್ಕೆ ಪಡೆದುಕೊಂಡು ರಾತ್ರಿ 11:00 ಗಂಟೆಗೆ ಠಾಣೆಗೆ ವಾಪಸ್ಸಾಗಿ ಮುಂದಿನ ಕ್ರಮಕ್ಕಾಗಿ ವರಧಿಯೊಂದಿಗೆ 11-30 ಗಂಟೆಗೆ ಮೇಲ್ಕಂಡ ಆಸಾಮಿಗಳನ್ನು ಮತ್ತು ಮಾಲನ್ನು ಹಾಜರುಪಡಿಸುತ್ತಿದ್ದು, ಮೇಲ್ಕಂಡ ಆಸಾಮಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಲು ಕೋರಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುತ್ತೆ.

  1. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.14/2021 ಕಲಂ. 87 ಕೆ.ಪಿ ಆಕ್ಟ್:-

     ದಿನಾಂಕ 19/01/2021 ರಂದು ಸಂಜೆ 4-30 ಗಂಟೆ ಸಮಯದಲ್ಲಿ ನಾನು ಠಾಣೆಯಲ್ಲಿ ಕರ್ತವ್ಯದಲ್ಲಿದ್ದಾಗ ಯಾರೋ ಬಾತ್ಮೀದಾರರಿಂದ ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣಾ ಸರಹದ್ದಿನ ವಾರಹುಣಸೇನಹಳ್ಳಿ ಗ್ರಾಮದಲ್ಲಿರುವ ಗಂಟ್ಲ ನಾರಾಯಣಪ್ಪ ರವರ ಜಮೀನಿನಲ್ಲಿ ಯಾರೋ ಆಸಾಮಿಗಳು ಗುಂಪು ಕಟ್ಟಿಕೊಂಡು ಅಕ್ರಮವಾಗಿ ಹಣವನ್ನು ಪಣವಾಗಿ ಕಟ್ಟಿ ಕೋಳಿ ಪಂದ್ಯವನ್ನಾಡುತ್ತಿರುವುದಾಗಿ ಬಾತ್ಮೀ ಬಂದಿದ್ದು, ಸದರಿ ಆಸಾಮಿಗಳ ವಿರುದ್ದ ಪ್ರ ವ ವರದಿಯನ್ನು ದಾಖಲಿಸಿಕೊಂಡು, ಸದರಿ ಸ್ಥಳದ ಮೇಲೆ ದಾಳಿ ಕೈಗೊಳ್ಳಲು ಅನುಮತಿ ನೀಡ ಬೇಕಾಗಿ ಘನ ನ್ಯಾಯಾಲಯದಲ್ಲಿ ಪ್ರಾರ್ಥಿಸಿ ಸಿಪಿಸಿ-90 ರಾಜಕುಮಾರ್ ರವರ ಮೂಲಕ ಮನವಿಯನ್ನು ಸಲ್ಲಿಸಿಕೊಂಡಿದ್ದು, ಸಿಪಿಸಿ-90 ರವರು ಘನ ನ್ಯಾಯಾಲಯದಿಂದ ಅನುಮತಿಯನ್ನು ಪಡೆದುಕೊಂಡು ಸಂಜೆ 5-15 ಗಂಟೆಗೆ ಠಾಣೆಗೆ ಹಾಜರಾಗಿ ಹಾಜರು ಪಡಿಸಿದ ಅನುಮತಿ ಆದೇಶದ ಪ್ರತಿಯನ್ನು ಪಡೆದುಕೊಂಡು ಠಾಣಾ ಮೊಸಂ-14/2021 ಕಲಂ 87 ಕೆಪಿ ಆಕ್ಟ್ ರೀತ್ಯಾ ಸ್ವತಃ ಪ್ರಕರಣವನ್ನು ದಾಖಲಿಸಿಕೊಂಡಿರುತ್ತೆ.

  1. ಶಿಡ್ಲಘಟ್ಟ ಪುರ ಪೊಲೀಸ್ ಠಾಣೆ ಮೊ.ಸಂ.03/2021 ಕಲಂ. 96(B) ಕೆ.ಪಿ ಆಕ್ಟ್:-

     ಶಿಡ್ಲಘಟ್ಟ ಘನ ಹಿರಿಯ ಸಿ.ಜೆ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯದಲ್ಲಿ ಸನ್ನಿದಾನದಲ್ಲಿ ನಿವೇದಿಸಿಕೊಳ್ಳುವುದೇನಂದರೆ, ಶಿಡ್ಲಘಟ್ಟ ನಗರ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪದ್ಮಾವತಮ್ಮ ಪಿ.ಎಸ್.ಐ ಅಪರಾದ ವಿಭಾಗ ಆದ ನಾನು ಮತ್ತು ಪಿ.ಸಿ.209 ಶಶಿಕುಮಾರ್ ಆದ ನಾವು ಮಾನ್ಯ ಸಿ.ಪಿ.ಐ ಸಾಹೇಬರವರ ಅದೇಶದಂತೆ ಕಳ್ಳತನ ಮತ್ತು ಅಪರಾದಗಳನ್ನು ತಡೆಗಟ್ಟುವ ಸಲುವಾಗಿ ಗುಡ್ ಮಾರ್ನಿಂಗ್ ಬೀಟ್ ಮಾಡಲು ದಿನಾಂಕ.20.01.2021 ರಂದು ಬೆಳಗಿನ ಜಾವ 5-00 ಗಂಟೆಗೆ ಠಾಣೆಯಿಂದ ಹೊರಟು ಶಿಡ್ಲಘಟ್ಟ ನಗರದ ಟಿ.ಬಿ ರಸ್ತೆ, ಕೋಟೆ ವೃತ್ತ, ಅಶೋಕ ರಸ್ತೆ, ವಾಸವಿ ರಸ್ತೆಯಿಂದ ಸಂತೇ ಬೀದಿಯಲ್ಲಿ ಹೋಗುವ ಬೆಳಗಿನ ಜಾವ 5.30 ಗಂಟೆಯಲ್ಲಿ ಸಂತೇ ಬೀದಿಯ ಮುನೇಶ್ವರ ದೇವಾಲಯದ ಬಳಿ ಗಸ್ತು ಮಾಡುತ್ತಿದ್ದಾಗ ಯಾರೋ ಒಬ್ಬ ಆಸಾಮಿ ದೇವಾಲಯದ ಪಕ್ಕದಲ್ಲಿ ಮರೆಯಲ್ಲಿ ಕುಳಿತಿದ್ದು ಸಮವಸ್ತ್ರದಲ್ಲಿದ್ದ ನಮ್ಮನ್ನು ಕಂಡು ಕತ್ತಲಲ್ಲಿ ಮುಖ ಮರೆಮಾಚಿಕೊಂಡು ಯಾವುದೋ ಕೃತ್ಯ ವೆಸಗಲು ಹೊಂಚು ಹಾಕುತ್ತಿದ್ದವನು ಅಲ್ಲಿಂದ ಓಡಿ ಹೋಗಲು ಪ್ರಯತ್ನಿಸಿದವನನ್ನು ನಾವುಗಳು ಹಿಂಬಾಲಿಸಿ ಹಿಡಿದುಕೊಂಡಾಗ ಗಾಬರಿಯಿಂದ ಇದ್ದು ಆತನ ಹೆಸರು ವಿಳಾಸ ಕೇಳಲಾಗಿ ಇನಾಯತ್ @ ಇನಾಯತ್ ಪಾಷ ಬಿನ್ ಚಾಂದಪಾಷ, 24 ವರ್ಷ, ಮುಸ್ಲೀಂ, ಕೂಲಿ ಕೆಲಸ, ವಾಸ-ಕಂದವಾರಬಾಗಿಲು, 2ನೇ ಬೀದಿ ಚಿಕ್ಕಬಳ್ಳಾಪುರ ಟೌನ್ ಎಂತಲೂ ತೊದಲುತ್ತಾ ತಿಳಿಸಿದ್ದು. ಆತನ ಬಳಿ ತಪಾಸಣೆ ಮಾಡಿದಾಗ ಕೈಯಲ್ಲಿ ಕಬ್ಬಿಣದ ರಾಡು ಇಟ್ಟುಕೊಂಡಿದ್ದು, ಆ ವೇಳೆ ಸಮಯದಲ್ಲಿ ಸ್ಥಳದಲ್ಲಿ ಇರುವಿಕೆಯ ಬಗ್ಗೆ ಹಾಗೂ ಕಬ್ಬಿಣದ ರಾಡು ಇಟ್ಟುಕೊಂಡಿರುವ ಬಗ್ಗೆ ಕೇಳಲಾಗಿ ಸಮಂಜಸವಾದ ಉತ್ತರ ನೀಡಿರುವುದಿಲ್ಲ. ಸದರಿ ಆಸಾಮಿ ಯಾವುದೋ ಸಂಜ್ಞೆಯ ಅಪರಾದ ಮಾಡಲು ಹೊಂಚು ಹಾಕುತ್ತಿದ್ದನೆಂಬ ಸಂಶಚಿು ವ್ಯಕ್ತವಾಗಿರುತ್ತೆ. ಹಾಗೂ ಈ ಹಿಂದೆ ಯಾವುದಾದರೂ ಕಳ್ಳತನ ಇತರ ಪ್ರಕರಣದಲ್ಲಿ ಬಾಗಿರುವ ಬಗ್ಗೆ ಅನುಮಾನ ಕಂಡು ಬಂದಿದ್ದು, ಸದರಿ ಆಸಾಮಿಯನ್ನು ಮಾಲು ಸಮೇತ ವಶಕ್ಕೆ ಪಡೆದು ನಂತರ ಸ್ಥಳಕ್ಕೆ ಪಂಚಾಯ್ತಿದಾರರನ್ನು ಬರಮಾಡಿಕೊಂಡು ಆರೋಪಿ ವಶದಲ್ಲಿರುವ ಕಬ್ಬಿಣದ ರಾಡನ್ನು  ಅಮಾನತ್ತುಪಡಿಸಿಕೊಂಡು ಮಾಲು ಮತ್ತು ಆರೋಪಿಯೊಂದಿಗೆ ಬೆಳಿಗ್ಗೆ 06-30 ಗಂಟೆಗೆ ಠಾಣೆಗೆ ಕರೆತಂದು ಮುಂದಿನ ಕ್ರಮದ ಬಗ್ಗೆ ಠಾಣಾ ಮೊ.ಸಂ.03/2021 ಕಲಂ.96(ಬಿ) ಕೆ.ಪಿ.ಆಕ್ಟ್ ರೀತ್ಯಾ ಸ್ವತಃ ಪ್ರಕರಣ ದಾಖಲಿಸಿರುತ್ತೆ.