ದಿನಾಂಕ : 20/01/2020 ರ ಅಪರಾಧ ಪ್ರಕರಣಗಳು

1. ಮಂಚೇನಹಳ್ಳಿ ಪೊಲೀಸ್ ಠಾಣೆ ಮೊ.ಸಂ. 23/2020 ಕಲಂ. 143,147,148,323,324,504,506 ರೆ/ವಿ 149 ಐಪಿಸಿ :-
ದಿನಾಂಕ: 20/01/2020 ರಂದು ಬೆಳಿಗ್ಗೆ 10-30 ಗಂಟೆಗೆ ಹೆಚ್.ಸಿ 76 ರವರು ಚಿಕ್ಕಬಳ್ಳಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ಗಾಯಾಳು ಶ್ರೀಮತಿ ಭಾಗ್ಯಮ್ಮ ರವರ ಹೇಳಿಕೆಯನ್ನು ತಂದು ಹಾಜರುಪಡಿಸಿದ್ದರ ಸಾರಾಂಶವೆನೆಂದರೆ, ದಿನಾಂಕ: 19/01/2020 ರಂದು ಸಂಜೆ 6-00 ಗಂಟೆ ಸಮಯದಲ್ಲಿ ತನ್ನ ಸೊಸೆ ಕವಿತಾ ಕೋಂ ಅನಿಲ್ ಕುಮಾರ್ 23 ವರ್ಷ ರವರು ತನ್ನ ಮನೆಯ ಮುಂದೆಯ ಹೂವಿನ ಗಿಡಗಳನ್ನು ಪಕ್ಕದ ಮನೆಯ ನಮ್ಮ ಸಂಬಂಧಿಕರ ಹಸುಗಳು ಬಂದು ಮೇಯುತ್ತಿದ್ದಾಗ ಈ ಬಗ್ಗೆ ತನ್ನ ಸೊಸೆ ಕೇಳಿದಕ್ಕೆ ಮಂಜುಳ ಕೋಂ ಆನಂದ್ ಕುಮಾರ್ 35 ವರ್ಷ, ವರಲಕ್ಷ್ಮೀ ಕೋಂ ಮುನಿರಾಜು 30 ವರ್ಷ, ಐಶ್ವರ್ಯ ಕೋಂ ಆನಂದ್ ಕುಮಾರ್ ರವರು ಬಂದು ಇದು ತಮ್ಮ ಜಮೀನು ನೀನು ಯಾರು ಕೇಳುವುದಕ್ಕೆ ಎಂತ ಗರ್ಭಿಣಿ ಹೆಂಗಸು ಎಂದು ನೋಡದೆ ಬೈದು ಕೈಗಳಿಂದ ಹೊಡೆದು ವರಲಕ್ಷ್ಮೀ ರವರು ಬಂದು ಕಲ್ಲಿನಿಂದ ಎಡಕಾಲಿನ ಮೇಲೆ ಹೊಡೆದು ಗಾಯಪಡಿಸಿದ್ದು ಈ ವಿಚಾರದ ಬಗ್ಗೆ ತಾನು ಮತ್ತು ತನ್ನ ಗಂಡ ಹೆಚ್ ಕೃಷ್ಣಪ್ಪ ಬಿನ್ ಹನುಮಂತಪ್ಪ 49 ವರ್ಷ ರವರುಗಳು ಸಂಜೆ 6-30 ಗಂಟೆ ಸಮಯದಲ್ಲಿ ಕೇಳಲು ಹೋದಾಗ ನೀವು ಯಾರು ತಮ್ಮನ್ನು ಕೇಳಲು ತಮ್ಮ ಜಾಗ ನೀವು ಕೇಳಲು ಬಂದಿದ್ದೀಯಾ ಎಂದು ಮಂಜುಳಾ ರವರು ಬಂದು ತನ್ನ ಗಂಡನ ಗಲ್ಲಾಪಟ್ಟಿಯನ್ನು ಹಿಡಿದು ಎಳೆದಾಡಿ ಕೈಗಳಿಂದ ಹೊಡೆದು ತನ್ನ ಗಂಡನ ಬಲ ಕೈಗೆ ತೋಳಿಗೆ ಬಾಯಿಯಿಂದ ಕಚ್ಚಿದಾಗ ತಾನು ಹೋಗಿ ಬಿಡಿಸಲು ಹೋದಾಗ ತನಗೆ ಮಂಜುಳ, ವರಲಕ್ಷ್ಮೀ ಮತ್ತು ಐಶ್ವರ್ಯ ರವರು ಸೇರಿಕೊಂಡು ಕೈಗಳಿಂದ ಹೊಡೆದು ಒಂದು ದೊಣ್ಣೆಯನ್ನು ತೆಗೆದುಕೊಂಡು ಬಂದು ತನ್ನ ತಲೆಯ ಮೇಲೆ ಹೊಡೆದು ಗಾಯಪಡಿಸಿ ನಂತರ ಕಾಲುಗಳಿಂದ ತುಳಿದು ಗಾಯಪಡಿಸಿದ್ದು ನಾವುಗಳು ಗೌರಿಬಿದನೂರು ಸರ್ಕಾರಿ ಆಸ್ಪತ್ರೆಗೆ ಹೋಗಿ ದಾಖಲಾಗಿ ಚಿಕಿತ್ಸೆಯನ್ನು ಪಡೆದುಕೊಂಡು ನಮ್ಮ ಮನೆಗೆ ಹೋಗಿದ್ದು ನಂತರ ತಾವು ಮನೆಯಲ್ಲಿ ಇದ್ದಾಗ ತಮ್ಮಗಳ ಮೇಲೆ ಕೇಸು ಕೊಡುತ್ತೀರಾ ಎಂದು ಏಕಾಏಕಿ ರಾತ್ರಿ 10-00 ಗಂಟೆಗೆ ಬಂದು ಅದರಲ್ಲಿ ಆನಂದಕುಮಾರ್ ಬಿನ್ ಶ್ರೀನಿವಾಸಯ್ಯ, 38 ವರ್ಷ, ಮುನಿರಾಜು ಬಿನ್ ಶ್ರೀನಿವಾಸಯ್ಯ ಹಾಗೂ ಆನಂದಕುಮಾರ್ ರವರ ಮಗ ಅಭಿಷೇಕ್ ರವರು ಹಾಗೂ ಮಂಜುಳ. ವರಲಕ್ಷ್ಮೀ ಮತ್ತು ಐಶ್ವರ್ಯ ರವರು ಸೇರಿಕೊಂಡು ಬಂದು ಕೇಸು ಕೊಡಲು ನಾವು ಯಾರು ಎಂದು ಪ್ರಾಣ ಬೆದರಿಕೆಯನ್ನು ಹಾಕಿ ಮಂಜುಳ ರವರು ಮಚ್ಚಿನಿಂದ ತನ್ನ ಗಂಡ ಕೃಷ್ಣಪ್ಪ ರವರ ತಲೆಗೆ ಹೊಡೆದು ಗಾಯಪಡಿಸಿದಳು ನಂತರ ತನಗೆ ಮುನಿರಾಜು ದೊಣ್ಣೆಯಿಂದ ತಲೆಗೆ ಹೊಡೆದು ಗಾಯಪಡಿಸಿದ ವರಲಕ್ಷ್ಮೀ ರವರು ಕಲ್ಲಿನಿಂದ ತನಗೆ ಮತ್ತು ತನ್ನ ಗಂಡನಿಗೆ ಎದೆಗೆ ಹೊಡೆದು ಗಾಯಪಡಿಸಿ ಉಳಿದವರೆಲ್ಲಾ ಮತ್ತೆ ಕೈಗಳಿಂದ ಹೊಡೆದು ಗಾಯಪಡಿಸಿದ್ದು ತಮ್ಮ ಗಲಾಟೆಯನ್ನು ನೋಡಿ ತಮ್ಮ ಗ್ರಾಮದ ನಾರಾಯಣಪ್ಪ ಬಿನ್ ಹನುಮಂತಪ್ಪ ಮತ್ತು ಸತೀಶ ಬಿನ್ ಹನುಮಪ್ಪ ರವರು ಗಲಾಟೆಯನ್ನು ಬಿಡಿಸಿ ಮಂಚೇನಹಳ್ಳಿಗೆ ಬಂದು ಮಂಚೇನಹಳ್ಳಿಯಿಂದ 108 ಅಂಬುಲೆನ್ಸ್ ವಾಹನದಲ್ಲಿ ಚಿಕ್ಕಬಳ್ಳಾಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದರು. ನಮ್ಮಗಳನ್ನು ಹೊಡೆದು ಗಾಯಪಡಿಸಿದವರ ಮೇಲೆ ಕಾನೂನು ರೀತ್ಯ ಕ್ರಮ ಜರುಗಿಸಲು ಕೋರಿ ಪ್ರ.ವ.ವ.ವರದಿ.