ದಿನಾಂಕ :19/10/2020 ರ ಅಪರಾಧ ಪ್ರಕರಣಗಳು

  1. ಬಾಗೇಪಲ್ಲಿ ಪೊಲೀಸ್ ಠಾಣೆ ಮೊ.ಸಂ.256/2020 ಕಲಂ: 279,337  ಐ.ಪಿ.ಸಿ :-

     ದಿ: 18-10-2020 ರಂದು ಸಂಜೆ 4:45 ಗಂಟೆಗೆ ಪಿರ್ಯಾದಿದಾರರಾದ ಶಿವಕುಮಾರ್ ರೆಡ್ಡಿ ಬಿನ್ ನರಸಿಂಹರೆಡ್ಡಿ, 31 ವರ್ಷ, ವಕ್ಕಲಿಗರು, ಇಂಜಿನಿಯರ್, ಶ್ರಾವ್ಯ ಪ್ಲೂಟ್ ಅಪಾರ್ಟ್ ಮೆಂಟ್, ಚಿನ್ನಪ್ಪನಹಳ್ಳಿ, ಬೆಂಗಳೂರು 560037, ಸ್ವಂತ ಸ್ಥಳ 3/37 ಎ, ಅಯ್ಯಗಾರಿ ಸ್ಟ್ರೀಟ್, ದೊಮ್ಮರ ನಂದ್ಯಾಲ, ಮೈಲಾವರಂ ಮಂಡಲಂ, ಕಡಪ ಜಿಲ್ಲೆ, ಆಂದ್ರಪ್ರದೇಶ ದಿನಾಂಕ:18/10/2020 ರಂದು ಬೆಳಿಗ್ಗೆ ನಾನು ನನ್ನ ಬಾಬತ್ತು ಕೆ.ಎ-03 ಎಂ.ವಿ-8744 ಹೊಂಡಾಸಿಟಿ ಕಾರಿನಲ್ಲಿ ಬೆಂಗಳೂರಿನಿಂದ ನಮ್ಮ ಸ್ವಂತ ಗ್ರಾಮವಾದ ದೊಮ್ಮರ ನಂದ್ಯಾಲ ಗ್ರಾಮಕ್ಕೆ ಹೋಗಲು ನಾನು ನನ್ನ ಹೆಂಡತಿಯಾದ  ಪ್ರಶಾಂತಿ ನಮ್ಮ 5 ತಿಂಗಳ ಮಗಳು ಹಾಗೂ ನನ್ನ ಹೆಂಡತಿಯ ಅಕ್ಕ ಶ್ರವಂತಿ ರವರೊಂದಿಗೆ  ಬಾಗೇಪಲ್ಲಿ ತಾಲ್ಲೂಕು ಟೋಲ್ ಪ್ಲಾಜಾ ನಂತರದ ಆದಿಗಾನಪಲ್ಲಿ ಗ್ರಾಮದ ಅರಣ್ಯ ಇಲಾಖಾ ತಪಾಸಣೆ ಕೇಂದ್ರಕ್ಕಿಂತ ಮುಂದೆ ನಾಮಪಲಕಗಳಿರುವ ಬಳಿ ಎನ್.ಹೆಚ್ 44 ರಸ್ತೆಯ ಎಡಭಾಗದಲ್ಲಿ ಹೋಗುತ್ತಿದ್ದಾಗ,  ಮದ್ಯಾಹ್ನ ಸುಮಾರು 12:15 ಗಂಟೆಯ ಸಮಯದಲ್ಲಿ  ಏಕಮುಖ ರಸ್ತೆಯಲ್ಲಿ ವಿರುದ್ದ ದಿಕ್ಕಿನಿಂದ  ಬಂದ ಕೆ.ಎ-05 ಹೆಚ್.ಎಂ-3169 ಡಿಸ್ಕವರಿ 150  ದ್ವಿಚಕ್ರ ವಾಹನದ ಸವಾರ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ನಾನು ಚಾಲನೆ ಮಾಡಿಕೊಂಡು ಹೋಗುತ್ತಿದ್ದ ಕಾರಿಗೆ ಮುಂಬದಿಯಿಂದ ಡಿಕ್ಕಿ ಹೊಡೆಸಿ ಅಪಘಾತವನ್ನುಂಟು ಮಾಡಿದ ಪರಿಣಾಮ, ನನ್ನ ಕೆ.ಎ-03 ಎಂ.ವಿ-8744 ಹೊಂಡಾ ಸಿಟಿ ಕಾರಿನ ಮುಂಬಾಗದ ಬಂಪರ್, ಎಡಬಾಗದ ಹೆಡ್ ಲೈಟ್, ಎಡಮುಂಬದಿಯ ಡೋರ್ ಜಖಂಗೊಂಡಿರುತ್ತೆ. ದ್ವಿಚಕ್ರ ವಾಹನದ ಸವಾರನಿಗೆ ಮೈಕೈಗೆ ರಕ್ತಗಾಯಗಳಾಗಿದ್ದು,   ದ್ವಿಚಕ್ರ ವಾಹನದ ಹಿಂಬದಿಯಲ್ಲಿ ಕುಳಿತಿದ್ದ ಒಬ್ಬ ಮಹಿಳೆಗೆ ಎರಡೂ ಕಾಲುಗಳಿಗೆ ಹಾಗೂ ಇತರೆಡೆ ರಕ್ತಗಾಯಗಳಾಗಿರುತ್ತವೆ. ಕಾರಿನಲ್ಲಿದ್ದ ನಮಗೆ ಯಾವುದೇ ಗಾಯಗಳಾಗಿರುವುದಿಲ್ಲ. ಗಾಯಾಳುಗಳನ್ನು ಆಂಬುಲೆನ್ಸಿನಲ್ಲಿ ಚಿಕಿತ್ಸೆಗಾಗಿ ಬಾಗೇಪಲ್ಲಿ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿರುತ್ತೇವೆ. ಏಕಮುಖ ರಸ್ತೆಯಲ್ಲಿ ವಿರುದ್ದ ದಿಕ್ಕಿನಿಂದ ಅತಿವೇಗ ಮತ್ತು ಅಜಾಗರೂಕತೆಯಿಂದ ದ್ವಿಚಕ್ರ ವಾಹನವನ್ನು ಚಾಲನೆ ಮಾಡಿಕೊಂಡು ಬಂದು ನನ್ನ ಬಾಬತ್ತು ಕೆ.ಎ-03 ಎಂ.ವಿ-8744 ಹೊಂಡಾ ಸಿಟಿ ಕಾರಿಗೆ ಡಿಕ್ಕಿ ಹೊಡೆಸಿ ಅಪಘಾತವನ್ನುಂಟು ಮಾಡಿದ ಕೆ.ಎ-05 ಹೆಚ್.ಎಂ 3169 ದ್ವಿಚಕ್ರ ವಾಹನದ ಸವಾರನ ಮೇಲೆ ಕಾನೂನು  ರೀತ್ಯಾ ಕ್ರಮ ಜರುಗಿಸಬೇಕಾಗಿ ಕೋರಿಕೊಳ್ಳುತ್ತೇನೆ, ಎಂದು ದೂರು.

  1. ಬಾಗೇಪಲ್ಲಿ ಪೊಲೀಸ್ ಠಾಣೆ ಮೊ.ಸಂ.257/2020 ಕಲಂ: 279,304(A) ಐ.ಪಿ.ಸಿ :-

     ದಿ: 19-10-2020 ರಂದು ಬೆಳಗ್ಗೆ 09:30 ಗಂಟೆಗೆ ಪಿರ್ಯಾಧಿದಾರರಾದ ಮಹಮ್ಮದ್ ಸಾಕೀಬ್ ಬಿನ್ ವಲಿ ಜಾನ್, 23 ವರ್ಷ, ಮುಸ್ಲಿಂ ಜನಾಂಗ, ಟೆಕ್ನಿಷಿಯನ್, ವಾಸ ಡೋರ್ ನಂ 228, ಇಸ್ಲಾಂಪುರ, ಚಿಕ್ಕಬಳ್ಳಾಪುರ ಟೌನ್ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶ – ನನ್ನ ಮಾವನ ಮಗನಾದ ಶೇಖ್ ಫೈಜ್ ಬಿನ್ ಶೇಖ್ ಫಜುಲುರ್ ರಹೇಮಾನ್, 25 ವರ್ಷ ರವರು ಎಲ್ .ಜಿ. ಕಂಪೆನಿಯಲ್ಲಿ ಎ.ಸಿ. ಟೆಕ್ನೆನಿಷಿಯನ್ ಆಗಿ ಕೆಲಸ ಮಾಡಿಕೊಂಡಿರುತ್ತಾರೆ. ಇವರಿಗೆ ಈಗ್ಗೆ 10 ತಿಂಗಳ ಹಿಂದೆ  ಮದುವೆಯಾಗಿರುತ್ತೆ. ದಿನಾಂಕ 12/10/2020 ರಂದು ಬಾಗೇಪಲ್ಲಿಗೆ ಕೆಲಸಕ್ಕೆ ಹೋಗುವುದಾಗಿ ಮನೆಯಲ್ಲಿ ತಿಳಿಸಿ ತನ್ನ ಬಾಬತ್ತು ಕೆ.ಎ-05-ಜೆ.ಝಡ್-6193 ಸುಜುಕಿ ಆಕ್ಸಿಸ್ ದ್ವಿ ಚಕ್ರ ವಾಹನದಲ್ಲಿ  ಹೋಗಿರುತ್ತಾರೆ. ನಂತರ ದಿನಾಂಕ; 12/10/2020 ರಂದು ಸಂಜೆ ಸುಮಾರು 7-00 ಗಂಟೆಯಲ್ಲಿ ಶೇಖ್ ಫೈಜ್ ರವರ ಸ್ನೇಹಿತರಾದ ಅನ್ವರ್ ಬಿನ್ ಲೇಟ್ ಸದರ್ಾರ್ ಸಾಬ್ ರವರು ನನಗೆ ಪೋನ್ ಮಾಡಿ ನಿಮ್ಮ ಸಂಬಂದಿಯಾದ  ಶೇಖ್ ಪೈಜ್ ರವರಿಗೆ ಗೂಳೂರು ಗ್ರಾಮದ ಬಳಿ ಇರುವ ಮಲಕಚೆರವುಪಲ್ಲಿ ಬಳಿ ಅಪಘಾತವಾಗಿ ಬಾಗೇಪಲ್ಲಿ ಸಕರ್ಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಹೋಗಲು ಕರೆದುಕೊಂಡು ಬರುತ್ತಿರುವುದಾಗಿ ತಿಳಿಸಿದರು. ನಂತರ ಚಿಕ್ಕಬಳ್ಳಾಪುರದಿಂದ ನಾನು ಸಹ ಆಂಬ್ಯೂಲೆನ್ಸ ನಲ್ಲಿ ಹೋಗಿದ್ದು, ಗಾಯಾಳುವನ್ನು ಬೆಂಗಳೂರಿನ ಸೆಂಟ್ ಜಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲು ಮಾಡಿರುತ್ತೇನೆ. ನಂತರ ವಿಚಾರ ಮಾಡಿ ತಿಳಿಯಲಾಗಿ ದಿನಾಂಕ 12/10/2020 ರಂದು ಬೆಳಿಗ್ಗೆ ನನ್ನ ಮಾವನ ಮಗನಾದ ಶೇಖ್ ಫೈಜ್ ರವರು ಕೆಲಸಕ್ಕಾಗಿ ಬಾಗೇಪಲ್ಲಿಗೆ ಹೋಗಿ ಕೆಲಸ ಮಾಡಿಕೊಂಡು ನಂತರ  ಗೂಳೂರಿಗೆ ಹೋಗಿ ಕೆಲಸ ಮುಗಿಸಿಕೊಂಡು ವಾಪಸ್ ಬಾಗೇಪಲ್ಲಿಗೆ ಬರಲು ತನ್ನ ಬಾಬತ್ತು ಕೆ.ಎ-05-ಜೆ.ಝಡ್-6193 ಸುಜುಕಿ ಆಕ್ಸಿಸ್ ದ್ವಿ ಚಕ್ರ ವಾಹನದಲ್ಲಿ  ಗೂಳೂರು-ಮೊಟಕಪಲ್ಲಿ  ರಸ್ತೆಯಲ್ಲಿ ಸಂಜೆ 6-30 ಗಂಟೆಯಲ್ಲಿ ಮಲಕಚೆರವುಪಲ್ಲಿ ಕ್ರಾಸ್ ಬಳಿ ಬರುವಾಗ ಎದುರುಗಡೆಯಿಂದ ಬಂದಂತಹ ಎ.ಪಿ-02-ಎ.ಡಿ.-3472 ಹೀರೋ ಹೋಂಡಾ ಸ್ಪ್ಲೇಂಡರ್ ದ್ವಿ ಚಕ್ರ ವಾಹನದ ಸವಾರ ತನ್ನ ದ್ವಿ ಚಕ್ರ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಶೇಖ್ ಫೈಜ್ ರವರು ಚಾಲನೆ ಮಾಡಿಕೊಂಡು ಬರುತ್ತಿದ್ದ ದ್ವಿ ಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಮುಖಕ್ಕೆ, ಕಾಲಿಗೆ ರಕ್ತ ಗಾಯಗಳಾಗಿರುತ್ತದೆ. ವಿಷಯ ತಿಳಿದ ಆತನ ಸ್ನೇಹಿತನಾದ ಈಶ್ವರ ಬಿನ್ ಲೇಟ್ ವೆಂಕಟರವಣಪ್ಪ ಮತ್ತು  ಶ್ರೀನಿವಾಸ ರವರು ಗಾಯವಾಗಿದ್ದ ಶೇಖ್ ಫೈಜ್ ರವರಿಗೆ ಯಾವುದೋ ವಾಹನದಲ್ಲಿ ಬಾಗೇಪಲ್ಲಿ ಸಕರ್ಾರಿ ಆಸ್ಪತ್ರೆಗೆ ಕರೆದುಕೊಂಡು ಚಿಕಿತ್ಸೆಗಾಗಿ ದಾಖಲಿಸಿರುತ್ತಾರೆ. ಬೆಂಗಳೂರಿನ ಸೆಂಟ್ ಜಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ನನ್ನ ಮಾವನ ಮಗನಾದ ಶೇಖ್ ಪೈಜ್ ರವರು ಅಪಘಾತದಲ್ಲಿ ಉಂಟಾದ ಗಾಯಗಳ ದೆಸೆಯಿಂದ ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ 18/10/2020 ರಂದು ರಾತ್ರಿ 11-30 ಗಂಟೆಯಲ್ಲಿ ಮೃತಪಟ್ಟಿರುತ್ತಾರೆ.  ಆದ್ದರಿಂದ ನನ್ನ ಮಾವನ ಮಗನಾದ ಶೇಖ್ ಫೈಜ್ ರವರಿಗೆ ಅಪಘಾತವನ್ನುಂಟು ಮಾಡಿ ಮೃತನಾಗಲು ಕಾರಣನಾದ ಎ.ಪಿ-02-ಎ.ಡಿ-3472 ದ್ವಿ ಚಕ್ರ ವಾಹನದ ಸವಾರನ ಮೇಲೆ ಕಾನೂನು ಕ್ರಮ ಜರುಗಿಸಬೇಕಾಗಿ ಕೋರುತ್ತೇನೆ.  ನಾನು ಗಾಯಾಳುವಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುತ್ತಿದ್ದರಿಂದ ಈ ದಿನ ತಡವಾಗಿ ಬಂದು ದೂರನ್ನು ನೀಡಿರುತ್ತೇನೆ ಎಂದು ದೂರು.

  1. ಬಟ್ಲಹಳ್ಳಿ ಪೊಲೀಸ್ ಠಾಣೆ ಮೊ.ಸಂ.100/2020 ಕಲಂ: 15(A),32(3) ಕೆ.ಇ ಆಕ್ಟ್:-

     ದಿನಾಂಕ:18/10/2020 ರಂದು ಮದ್ಯಾಹ್ನ 14-30 ಗಂಟೆ ಸಮಯದಲ್ಲಿ ಬಟ್ಲಹಳ್ಳಿ ಪೊಲೀಸ್ ಠಾಣೆಯ ಪಿ,ಎಸ್,ಐ ಶ್ರೀ ಟಿ,ಎನ್.ಪಾಪಣ್ಣ, ಆದ ನಾನು ಠಾಣೆಯ ಸಿಬ್ಬಂದಿ  ಹೆಚ್ .ಸಿ – 36 ವಿಜಯಕುಮಾರ್  ರವರನ್ನು ಜೊತೆಯಲ್ಲಿ ಕರೆದುಕೊಂಡು ಠಾಣೆಯ ಸರಹದ್ದಿನಲ್ಲಿರುವ ಗ್ರಾಮಗಳಾದ  ಬಟ್ಲಹಳ್ಳಿ ಕೋನಕುಂಟ್ಲು   ಗ್ರಾಮಗಳಲ್ಲಿ ಗಸ್ತು ಮಾಡಿಕೊಂಡು ಮದ್ಯಾಹ್ನ 15-00 ಗಂಟೆಯ ಸಮಯದಲ್ಲಿ ಚೆನ್ನರಾಯನಹಳ್ಳಿ  ಗ್ರಾಮದಲ್ಲಿ ಗಸ್ತು ಕರ್ತವ್ಯದಲ್ಲಿದ್ದಾಗ ಚೆನ್ನರಾಯನಹಳ್ಳಿ ಗ್ರಾಮದ ವಾಸಿ  ಸಿ ವಿ ಚಂದ್ರಪ್ಪ @ ಕಟ್ಯೋಡು ಬಿನ್ ಚಿಕ್ಕವೆಂಕಟರಾಯಪ್ಪ, ರವರು ಆತನ ಮನೆಯ ಮುಂಭಾಗ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಮದ್ಯಪಾನ ಸೇವನೆ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದಾಗಿ ಖಚಿತ ಮಾಹಿತಿ ಬಂದಿದ್ದರ ಮೇರೆಗೆ ಚೆನ್ನರಾಯನಹಳ್ಳಿ ಗ್ರಾಮದಲ್ಲಿ ಪಂಚರನ್ನು ಕರೆದುಕೊಂಡು 15-15 ಗಂಟೆಗೆ ಸಿ ವಿ ಚಂದ್ರಪ್ಪನ ಮನೆಯ ಬಳಿಗೆ ಹೋಗಿ ನೋಡಲಾಗಿ ಮನೆಯ  ಮುಂಭಾಗ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಮದ್ಯಪಾನ ಸೇವನೆ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದು ಕಂಡು ಬಂದಿದ್ದು, ಸ್ಥಳದಲ್ಲಿದ್ದ ಗ್ರಾಹಕರು ಸಮವಸ್ತ್ರದಲ್ಲಿದ್ದ ನಮ್ಮನ್ನು ನೋಡಿ ಓಡಿ ಹೋಗಿದ್ದು, ಸ್ಥಳದಲ್ಲಿ ಪರಿಶೀಲನೆ ಮಾಡಲಾಗಿ ಮದ್ಯದ ಪ್ಯಾಕೇಟ್ಗಳು ಮತ್ತು ಮದ್ಯದ ಖಾಲಿ ಪ್ಯಾಕೇಟ್ಗಳು, ನೀರಿನ ಖಾಲಿ ಬಾಟೆಲ್ ಹಾಗೂ ಪ್ಲಾಸ್ಟಿಕ್ ಲೋಟಗಳು  ಸ್ಥಳದಲ್ಲಿ ಬಿದ್ದಿರುವುದು ಕಂಡು ಬಂದಿರುತ್ತೆ. ಮನೆಯ ಬಳಿ ಇದ್ದ ಆಸಾಮಿಯ ಹೆಸರು ಮತ್ತು ವಿಳಾಸ ಕೇಳಲಾಗಿ ಸಿ ವಿ ಚಂದ್ರಪ್ಪ @ ಕಟ್ಯೋಡು ಬಿನ್ ಚಿಕ್ಕವೆಂಕಟರಾಯಪ್ಪ, 48 ವರ್ಷ, ಬೋವಿ ಜನಾಂಗ, ವಾಸ: ಚೆನ್ನರಾಯನಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು. ಮೊ ನಂ:9900322097. ಎಂದು ತಿಳಿಸಿದ್ದು, ಈತನು  ಮದ್ಯದ ಪ್ಯಾಕೇಟ್ ಗಳನ್ನು ಸಾರ್ವಜನಿಕ ಸ್ಥಳದಲ್ಲಿ ಗ್ರಾಹಕರಿಗೆ ಕುಡಿಯಲು ಸ್ಥಳಾವಕಾಶ ಮಾಡಿಕೊಟ್ಟಿರುವುದಕ್ಕೆ ಪರವಾನಗಿಯನ್ನು ಹೊಂದಿದ್ದಾನೇಯೇ ಎಂಬುದರ  ಬಗ್ಗೆ ವಿಚಾರಿಸಲಾಗಿ  ಯಾವುದೇ ಪರವಾನಗಿ ಹೊಂದಿರುವುದಿಲ್ಲವೆಂದು  ತಿಳಿಸಿರುತ್ತಾನೆ.  ನಂತರ ಪಂಚರ ಸಮಕ್ಷಮ ಮದ್ಯಾಹ್ನ 15-15  ಗಂಟೆಯಿಂದ 16-00 ಗಂಟೆಯವರೆಗೆ ಪಂಚನಾಮೆ ಕ್ರಮ ಕೈಗೊಂಡು ಪಂಚನಾಮೆಯ ಕಾಲದಲ್ಲಿ ಸ್ಥಳದಲ್ಲಿದ್ದ  ಒಟ್ಟು 1 ಲೀಟರ್ 800 ಎಂ.ಎಲ್ ನ 702 ರೂಗಳ ಬೆಲೆ ಬಾಳುವ ಹೈವಾರ್ಡ್ಸ್ ವಿ`ಸ್ಕಿ 90 ಎಂ.ಎಲ್ ನ 20 ಟೆಟ್ರಾ ಪ್ಯಾಕೇಟ್ಗಳು,( 1 ಪಾಕೆಟ್ ಬೆಲೆ 35.13 ರೂಗಳು) ಮತ್ತು ಹೈವಾರ್ಡ್ಸ್ ವಿಸ್ಕಿ 90 ಎಂ.ಎಲ್ ನ 5 ಖಾಲಿ ಟೆಟ್ರಾ ಪ್ಯಾಕೇಟ್ ಗಳು ಹಾಗೂ 2 ಪ್ಲಾಸ್ಟೀಕ್ ಲೋಟಗಳು ಹಾಗೂ 1 ಖಾಲಿ ವಾಟರ್ ಬಾಟೆಲ್ ನ್ನು ಅಮಾನತ್ತುಪಡಿಸಿಕೊಂಡು ಆಸಾಮಿಯನ್ನು ವಶಕ್ಕೆ ಪಡೆದುಕೋಂಡು ಠಾಣೆಗೆ ಸಂಜೆ  16-30 ಗಂಟೆಗೆ ವಾಪಸ್ಸು ಬಂದು ಠಾಣೆಯ ಮೊ,ಸಂಖ್ಯೆ:100/2020 ಕಲಂ:15(A) 32(3) KE ACT ರೀತ್ಯಾ ಸ್ವತಃ ಪ್ರಕರಣ ದಾಖಲಿಸಿಕೊಂಡಿರುತ್ತೇನೆ.

  1. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.147/2020 ಕಲಂ: 504,324 ರೆ/ವಿ 34 ಐ.ಪಿ.ಸಿ:-

     ದಿನಾಂಕ: 18/10/2020 ರಂದು ರಾತ್ರಿ ಜಿಲ್ಲಾಸ್ಪತ್ರೆಯಿಂದ ಬಂದ ಮೆಮೋ ಪಡೆದು ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳು ನವೀನ್ ಕುಮಾರ್ ಬಿನ್ ವೆಂಕಟೇಶಪ್ಪ, 19 ವರ್ಷ, ಲಿಂಗಶೆಟ್ಟಿಪುರ ಗ್ರಾಮ, ಚಿಕ್ಕಬಳ್ಳಾಪುರ ತಾಲ್ಲೂಕು ರವರ ಹೇಳಿಕೆಯನ್ನು ಪಡೆದುಕೊಂಡು ರಾತ್ರಿ 10-30 ಗಂಟೆಗೆ ಠಾಣೆಗೆ ಬಂದು ದೂರು ಹೇಳಿಕೆಯ ಸಾರಾಂಶವೇನಂದರೆ ಈ ದಿನ ದಿನಾಂಕ: 18/10/2020 ರಂದು ರಾತ್ರಿ 7-30 ಗಂಟೆ ಸಮಯದಲ್ಲಿ ತನ್ನ ಮಾವ ಶಾಮಣ್ಣರವರ ಮನೆಯ ಮುಂದೆ ಬಚ್ಚಲುಗುಂಡಿಯನ್ನು ಅಗೆದಿರುವ ವಿಚಾರವಾಗಿ ಪಕ್ಕದ ಮನೆಯವರಾದ ಕುಮಾರಪ್ಪ, ಅವರ ಮಕ್ಕಳಾದ ರಾಜೇಶ್, ಗಿರೀಶ್ ಮತ್ತು ಹೆಂಡತಿ ಶ್ರೀಮತಿ ರಾಜಮ್ಮರವರುಗಳು ತನ್ನ ಮಾವ ಶಾಮಣ್ಣ, ಅವರ ಅಣ್ಣ ಮಂಜುನಾಥ ರವರನ್ನು “ಸೂಳೆ ಮಕ್ಕಳಾ ನಿಮ್ಮಮ್ಮಾನಾ ಕ್ಯಾಯಾ” ಎಂದು ಅವಾಚ್ಯ ಶಬ್ಧಗಳಿಂದ ಬೈಯ್ದುಕೊಂಡು ಕುಮಾರಪ್ಪ ಗುಂಡುಕಲ್ಲನ್ನು ಹಿಡಿದುಕೊಂಡು, ರಾಜೇಶ್ ಮಚ್ಚನ್ನು ಹಿಡಿದುಕೊಂಡು, ಗಿರೀಶ ದೊಣ್ಣೆಯನ್ನು ಹಿಡಿದುಕೊಂಡು ಶಾಮಣ್ಣ ಮತ್ತು ಮಂಜುನಾಥರವರಿಗೆ ಹೊಡೆದಿದ್ದು, ಅವರು ಕೂಗಾಡುತ್ತಿದ್ದಾಗ ಬಿಡುಸಲು ಅಡ್ಡ ಹೋದ ತನಗೆ ರಾಜೇಶ ಮಚ್ಚಿನಿಂದ ತಲೆಗೆ, ಎಡಕೈಗೆ ಹೊಡೆದು ರಕ್ತಗಾಯಮಾಡಿದ್ದು, ಗಿರೀಶ ದೊಣ್ಣೆಯಿಂದ ನನ್ನ ಮೈಮೇಲೆ ಹೊಡೆದಿದ್ದು, ಮೂರು ಜನರೂ ಸೇರಿಕೊಂಡು ಕಲ್ಲು, ಮಚ್ಚು ಮತ್ತು ದೊಣ್ಣೆಯಿಂದ ತನ್ನ ಮಾವಂದಿರಿಗೆ ಹೊಡೆದು ಗಾಯಪಡಿಸಿದ್ದು, ಆಗ ತನ್ನ ಗ್ರಾಮದ ವಾಸಿಗಳಾದ ಪ್ರವೀಣ್ ಬಿನ್ ಪ್ರಕಾಶ್ ಮತ್ತು ಹರೀಶ್ ಬಿನ್ ನಂದೀಶಪ್ಪರವರುಗಳು ಬಂದು ನಮ್ಮನ್ನು ಬಿಡಿಸಿ ಹರೀಶ್ ರವರ ಕಾರಿನಲ್ಲಿ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಗೆ ಕಳುಹಿಸಿಕೊಟ್ಟಿದ್ದು, ನಮಗೆ ಅವಾಚ್ಯ ಶಬ್ದಗಳಿಂದ ಬೈಯ್ದು, ಕಲ್ಲು, ಮಚ್ಚು, ದೊಣ್ಣೆಯಿಂದ ಹೊಡೆದ ಮೇಲ್ಕಂಡವರ ವಿರುದ್ದ ಕಾನೂನು ಕ್ರಮ ಜರುಗಿಸಲು ಕೋರಿ ನೀಡಿದ ದೂರಾಗಿರುತ್ತೆ.

  1. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.387/2020 ಕಲಂ: 379,427,511 ಐ.ಪಿ.ಸಿ:-

     ದಿನಾಂಕ: 19/10/2020 ರಂದು ಬೆಳಿಗ್ಗೆ 10.30 ಗಂಟೆಗೆ ಮುನಿಶೇಖರ್ ಬಿನ್ ವೆಂಕಟರಮಣ, 43 ವರ್ಷ, ತೊಗಟ ಜನಾಂಗ, ವ್ಯಾಪಾರ, ಹಾಲಿ ವಾಸ-ತಿಮ್ಮ ಸಂದ್ರ ಗ್ರಾಮ ಚಿಂತಾಮಣಿ ತಾಲ್ಲೂಕು, ಸ್ವಂತ ಸ್ಥಳ- ಸಾಯಿರಾಮ್ ಸ್ಟ್ರೀಟ್, ನೀರಗುಟ್ಟವಾರಿಪಲ್ಲಿ ಗ್ರಾಮ, ಮದನಪಲ್ಲಿ ತಾಲ್ಲೂಕು, ಚಿತ್ತೂರು ಜಿಲ್ಲೆ, ಎ.ಪಿ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ತಾನು ಈಗ್ಗೆ 02 ತಿಂಗಳ ಹಿಂದೆ ಇಧೇ ಚಿಂತಾಮಣಿ ತಾಲ್ಲೂಕು ತಿಮ್ಮಸಂದ್ರ ಗ್ರಾಮದಲ್ಲಿ ಬಿ.ವಿ.ಎಂ ಪಂಕ್ಷನ್ ಹಾಲ್ ನ ಎದುಗಡೆ  ವರಮಹಾಲಕ್ಷ್ಮೀ ಸಿಲ್ಕ್ ಅಂಡ್ ಸ್ಯಾರೀಸ್ ಹೆಸರಿನ ರೇಷ್ಮೆ ಬಟ್ಟೆ ಅಂಗಡಿ ಇಟ್ಟುಕೊಂಡಿರುತ್ತೇನೆ.  ಸದರಿ ಅಂಗಡಿಯ ಮೇಲೆ ರೂಂ ಇದ್ದು ತಾನು ಸದರಿ ರೂಂ ನಲ್ಲಿಯೇ ವಾಸವಾಗಿರುತ್ತೇನೆ. ತಮ್ಮ ಅಂಗಡಿಯಲ್ಲಿ ತಿಮ್ಮಸಂದ್ರ ಗ್ರಾಮದ ಶಂಕರ, ಚಿಂತಾಮಣಿ ನಗರದ ತಪಥೇಶ್ವರ ಕಾಲೋನಿಯ ಎನ್.ಹರೀಶ್, ವೆಂಕಟಗಿರಿಕೋಟೆಯ ಸುಮ ಮತ್ತು ನಂದಿನಿ ರವರು ಕೆಲಸಕ್ಕೆ ಇರುತ್ತಾರೆ. ಹೀಗಿರುವಾಗ ದಿನಾಂಕ 18/10/2020 ರಂದು ಸಂಜೆ 7.30 ಗಂಟೆ ಸಮಯದಲ್ಲಿ ಎಂದಿನಂತೆ ತಾನು ತಮ್ಮ ಅಂಗಡಿಗೆ ಬೀಗಗಳನ್ನು ಹಾಕಿಕೊಂಡು ತನಗೆ ಮದನಪಲ್ಲಿಯಲ್ಲಿ ಕೆಲಸವಿದ್ದರಿಂದ ತಾನು ಮದನಪಲ್ಲಿಗೆ ಹೋಗಿರುತ್ತೇನೆ. ನಂತರ ಈ ದಿನ ದಿನಾಂಕ 19/10/2020 ರಂದು ಬೆಳಗಿನ ಜಾವ 4.00 ಗಂಟೆ ಸಮಯದಲ್ಲಿ ತಮ್ಮ ಅಂಗಡಿಯ ಪಕ್ಕದಲ್ಲಿರುವ ವೆಂಕಟೇಶ್ವರ ಸಿಲ್ಕ್ ಅಂಡ್ ಸ್ಯಾರೀಸ್ ಅಂಗಡಿಯ ಮಾಲೀಕರಾದ ಶಿವಾರೆಡ್ಡಿ ರವರು ತನಗೆ ಕರೆ ಮಾಡಿ ಯಾರೋ ಕಳ್ಳರು ನಿಮ್ಮ ಅಂಗಡಿಯ ಶೆಟರ್ ಅನ್ನು ಮುರಿದ್ದು ಕಳುವು ಮಾಡಲು ಪ್ರಯತ್ನಿಸಿದ್ದಾರೆ ಎಂದು ಹೇಳಿದ್ದು, ತಾನು ಕೂಡಲೇ ಮದನಪಲ್ಲಿಯಿಂದ ಬೆಳಗ್ಗೆ 6.30 ಗಂಟೆಗೆ ತಮ್ಮ ಅಂಗಡಿಗೆ ಬಂದು  ನೋಡಲಾಗಿ ಯಾರೂ ಕಳ್ಳರು ತಮ್ಮ ಅಂಗಡಿಯ ಶೆಟರ್ ನ ಹೊರಗಡೆಯ ಒಂದು ಬೀಗವನ್ನು ಹೊಡೆದು ಹಾಕಿರುತ್ತಾರೆ. ಹಾಗೂ ಶೆಟರ್ ಅನ್ನು ಯಾವುದೋ ಆಯುಧದಿಂದ ಬಲವಾಗಿ ತೆಗೆಯಲು ಪ್ರಯತ್ನಿಸಿದ್ದು ಶೆಟರ್ ಬೆಂಡ್ ಆಗಿರುತ್ತೆ. ಆದರೆ ಶೆಟರ್ ಓಪನ್ ಆಗಿರುವುದಿಲ್ಲ. ಅಂಗಡಿಯ ಮುಂದೆ 02 ಸಿ ಸಿ ಕ್ಯಾಮೆರ ಇದ್ದು ಆ ಪೈಕಿ ಒಂದು ಸಿ.ಸಿ ಕ್ಯಾಮೆರ ವನ್ನು ಒಡೆದು ಹಾಕಿರುತ್ತಾರೆ. ಆದ್ದರಿಂದ ತಮ್ಮ ಅಂಡಿಯನ್ನು ಕಳವು ಮಾಡಲು ಪ್ರಯ್ನಿಸಿರುವ ಕಳ್ಳರನ್ನು ಪತ್ತೆ ಮಾಡಿ ಕಾನೂನು ಕ್ರಮ ಜರುಗಿಸಲು ಕೋರಿರುವುದಾಗಿರುತ್ತೆ.

  1. ಚಿಂತಾಮಣಿ ನಗರ ಪೊಲೀಸ್ ಠಾಣೆ ಮೊ.ಸಂ.142/2020 ಕಲಂ: 380,457  ಐ.ಪಿ.ಸಿ:-

     ದಿನಾಂಕ 19/10/2020 ರಂದು ಪಿರ್ಯಾದಿದಾರರಾದ ಎಸ್.ಬಾಲಕೃಷ್ಣ ಬಿನ್ ಲೇಟ್ ಸುಬ್ಬರಾಯಪ್ಪ, 49 ವಷ್ತ, ಕುರುಬ, ಶ್ರೀರಾಂ ಮೋಟಾರ್ಸ್ ಮಾಲೀಕರು, ವಾಸ: ವೆಂಕಟಗಿರಿಕೋಟೆ, ಚಿಂತಾಮಣಿ ನಗರ ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೆನೆಂದರೆ ಬಾಗೇಪಲ್ಲಿ ವೃತ್ತದಲ್ಲಿ ಶ್ರೀರಾಂ ಮೋಟಾರ್ಸ್ ದ್ವಿಚಕ್ರ ವಾಹನ ಮಾರಾಟ ಮಳಿಗೆ ನಡೆಸುತ್ತಿದ್ದು ಎಂದಿನಂತೆ ರಾತ್ರಿ ಸುಮಾರು 8.00 ಗಂಟೆಗೆ ಮಳಿಗೆಯ ಎಲ್ಲಾ ಬಾಗಿಲುಗಳನ್ನು ಬೀಗ ಹಾಕಿಕೊಂಡು ಹೋಗಿದ್ದು ದಿನಾಂಕ: 19.10.2020 ರ ಬೆಳಿಗ್ಗೆ ಸುಮಾರು 6.00 ಗಂಟೆಗೆ ಪಕ್ಕದ ಟೀ ಅಂಗಡಿಯವರು ಪೋನ್ ಮಾಡಿ ನಿಮ್ಮ ಅಂಗಡಿಯ ಎಸ್ ಆರ್ ಇ ಟಿ ರಸ್ತೆಯ ಷೆಲ್ಟರ್ ಬಾಗಿಲು ಎತ್ತಿರುವುದಾಗಿ ತಿಳಿಸಿದ್ದು ನಾನು ಬಂದು ನೋಡಲಾಗಿ ಷೇಟರ್ ಬೀಗ ಹೊಡೆದು ಸುಮಾರು 02 ರಿಂದ 2.1/2 ಅಡಿಗಳಷ್ಟು ಮೇಲಕ್ಕೆತ್ತಿದ್ದು ಒಳಗೆ ಬಂದು ನೋಡಲಾಗಿ ಷೋರೂಂನ ಉತ್ತರದ ಕಡೆ ಗಾದ್ರೇಜ್ ಬೀರುವಿದ್ದು ಅದರಲ್ಲಿನ ದಾಖಲೆಗಳು ಚೆಲ್ಲಾಪಿಲ್ಲಿಯಾಗಿರುವುದು ಕಂಡಿದ್ದು ಡ್ರಾನಲ್ಲಿರುವ ಸುಮಾರು 2500 ರಿಂದ 3000 ರೂಗಳನ್ನು ಕಳುವು ಮಾಡಿಕೊಂಡು ಹೋಗಿರುತ್ತಾರೆ ರಾತ್ರಿ ಸುಮಾರು 2 ರಿಂದ 3 ಗಂಟೆಯೊಳಗೆ ಈ ಕೃತ್ಯವನ್ನು ಎಸಗಿರಬಹುದೆಂದು ತಿಳಿದು ಬಂದಿದೆ ಕೃತ್ಯವೆಸಗಿದ ಆರೋಪಿಗಳನ್ನು ಪತ್ತೆ ಮಾಡಿ ಕಾನೂನು ಕ್ರಮ ಜರುಗಿಸಬೇಕೆಂದು ಕೋರಿ ನೀಡಿದ ದೂರನ್ನು ಪಡೆದು ಪ್ರಕರಣ ದಾಖಲಿಸಿರುತ್ತೆ.

  1. ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.274/2020 ಕಲಂ: 324,307,504 ಐ.ಪಿ.ಸಿ:-

     ದಿನಾಂಕ 19-10-2020 ರಂದು 12-15 ಗಂಟೆಗೆ  ಪಿರ್ಯಾದಿದಾರರಾದ  ಗಂಗಾಧರಪ್ಪ ಬಿನ್ ಲೇಟ್ ನಾರಾಯಣಪ್ಪ, 49 ವರ್ಷ, ಆದಿಕರ್ನಾಟಕ, ಕೂಲಿ ಕೆಲಸ, ವಾಸ ನಗರಗೆರೆ  ಗ್ರಾಮ, ಗೌರಿಬಿದನೂರು ತಾಲ್ಲೂಕುರವರು ಠಾಣೆಗೆ ಹಾಝರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂಧರೆ   ದಿನಾಂಕ 18-10-2020 ರಂಧು  ಸಂಜೆ ಸುಮಾರು 06-30 ಗಂಟೆಯಲ್ಲಿ  ನಮ್ಮ ಗ್ರಾಮದ  ನಮ್ಮ ಜನಾಂಗದವರಾದ ಗೌತಮ್ ಬಿನ್  ಅಶ್ವಥಪ್ಪ, ಹಣದ ವಿಚಾರದಲ್ಲಿ  ಗಲಾಟೆಯನ್ನು ಮಾಡಿಕೊಳ್ಳುತ್ತಿದ್ದಾಗ  ತಾನು ಗಲಾಟೆಯನ್ನು ಬಿಡಿಸಿ  ಇಬ್ಬರಿಗೂ ಬುದ್ದಿವಾದವನ್ನು ಹೇಳಿ ಕಳುಹಿಸಿದೆನು.  ಅದೇ ದಿನ  ರಾತ್ರಿ  ಸುಮಾರು  08-45 ಗಂಟೆಯಲ್ಲಿ  ತಾನು ತನ್ನ ಮನೆಯ ಬಳಿ ನಮ್ಮ ಗ್ರಾಮದ ಚಿಕ್ಕನಾರಾಯಣಪ್ಪ , ಲಕ್ಷ್ಮಿನರಸಿಂಹಪ್ಪರವರೊಂದಿಗೆ ಮಾತನಾಡಿಕೊಂಡು ಕುಳಿತಿದ್ದಾಗ  ಗೌತಮ್ ರವರು ಮನೆಯ ಬಳಿಗೆ ಬಂದವನೇ ತನ್ನನ್ನು  ಏಕಾಎಕಿ ಅವಾಚ್ಯ ಶಬ್ದಗಳಿಂಧ  ಯಾರು ಲೋಫರ್ ನನ್ನ ಮಗ ಅಂತಾ  ಬುದ್ದಿ ಹೇಳುವುದಕ್ಕೆ ಎಂದು ಬೈದು ತನ್ನನ್ನು ಸಾಯಿಸದೇ ಬಿಡುವುದಿಲ್ಲ ೆಂತ ತನ್ನ ಕೈಯಲ್ಲಿದ್ದ  ಚಾಕುವಿನಿಂದ  ನನ್ನ ಕುತ್ತಿಗೆ ಕೊಯ್ದಿರುತ್ತಾನೆ.  ನನ್ನ ಜೊತೆಯಲ್ಲಿದ್ದವರು ತನ್ನನ್ನು ಚಿಕಿತ್ಸೆಗಾಗಿ ಗೌರಿಬಿದನೂರು ಸರ್ಕಾರಿ ಆಸ್ಪತ್ರೆಗೆ  ಸೇರಿಸಿ ಚಿಕಿತ್ಸೆ ಕೊಡಿಸಿರುತ್ತಾರೆ.  ತಾನು ರಾತ್ರಿ ಮನೆಗೆ ಹೋಗಿ  ನಮ್ಮ ಸಂಬಂಧಿಕರ ಬಳಿ ಮಾತಾಡಿ ಈ ದಿನ ತಡವಾಗಿ ಬಂದು ತನ್ನನ್ನು ಅವಾಚ್ಯ ಶಬ್ದಗಳಿಂದ ಬೈದು  ಚಾಕುವಿನಿಂದ ತಿವಿದು ಕೊಲೆ ಮಾಡಲು ಪ್ರಯತ್ನಪಟ್ಟಿರುವ  ಮೇಲ್ಕಂಡವನ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ದೂರು ನೀಡಿರುವುದಾಗಿರುತ್ತೆ.

  1. ಪಾತಪಾಳ್ಯ ಪೊಲೀಸ್ ಠಾಣೆ ಮೊ.ಸಂ.73/2020 ಕಲಂ: 15(A),32(3) ಕೆ.ಇ ಆಕ್ಟ್:-

     ದಿನಾಂಕ:18/10/2020 ರಂದು ಸಂಜೆ 7-00 ಗಂಟೆಗೆ ರತ್ನಯ್ಯ ಪಿ,ಎಸ್,ಐ ಪಾತಪಾಳ್ಯ ಪೊಲೀಸ್ ಠಾಣೆ ರವರು ಠಾಣೆಗೆ ಹಾಜರಾಗಿ ನೀಡಿದ ವರದಿಯ ಸಾರಾಂಶವೇನೆಂದರೆ.  ದಿನಾಂಕ:18/10/2020 ರಂದು  ಸಂಜೆ ಸುಮಾರು 05-00 ಗಂಟೆಗೆ ಪಾತಪಾಳ್ಯ ಪೊಲೀಸ್ ಠಾಣಾ ಸರಹದ್ದು ಸೋಮನಾಥಪುರ  ಗ್ರಾಮದ ಬಳಿ ಗಸ್ತಿನಲ್ಲಿದ್ದಾಗ ದೇವಾರ್ಲಪಲ್ಲಿ  ಗ್ರಾಮದಲ್ಲಿ ಮನೆಯ ಮುಂಬಾಗದ ಖಾಲಿ ಜಾಗದಲ್ಲಿ ಯಾರೋ ಆಸಾಮಿ ಅಕ್ರಮವಾಗಿ ಮದ್ಯ ಸೇವನೆ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದಾಗಿ ಬಂದ ಖಚಿತ ವರ್ತಮಾನದ ಮೇರೆಗೆ ಸಿಬ್ಬಂದಿಯವರು ಹಾಗೂ ಪಂಚರೊಂದಿಗೆ ಸರ್ಕಾರಿ ಜೀಪಿನ ಸಂಖ್ಯೆ ಕೆ,ಎ-40 ಜಿ-59 ರಲ್ಲಿ ದೇವಾರ್ಲಪಲ್ಲಿ ಗ್ರಾಮದ ಮನೆಯ ಮುಂಭಾಗದ ಖಾಲಿ ಜಾಗದ ಬಳಿಗೆ ಹೋಗಲಾಗಿ ನಾವು ಹೋಗಿದ್ದ  ಜೀಪನ್ನು ನೋಡಿ ಮನೆಯ ಮುಂಭಾಗದ ಬಳಿ ಖಾಲಿ ಜಾಗದಲ್ಲಿದ್ದ  ಯಾರೋ ಒಬ್ಬ ಆಸಾಮಿ  ಓಡಿ ಹೋಗಿದ್ದು  ಮನೆಯ  ಬಳಿ ಖಾಲಿ ಜಾಗದಲ್ಲಿ ಒಬ್ಬ ಆಸಾಮಿ ಇದ್ದು  ಹೆಸರು ವಿಳಾಸ ಕೇಳಲಾಗಿ  ಆಂಜನೇಪ್ಪ ಬಿನ್ ಲೇಟ್ ರಾಮಪ್ಪ 40 ವರ್ಷ, ನಾಯಕ ಜನಾಂಗ, ಕೂಲಿ ಕೆಲಸ, ದೇವಾರ್ಲಪಲ್ಲಿ ಗ್ರಾಮ, ಬಾಗೇಪಲ್ಲಿ ತಾಲ್ಲೂಕು ಎಂದು ತಿಳಿಸಿದ್ದು.  ಸದರಿ ಸ್ಥಳದಲ್ಲಿ ನಾವು ಪರಿಶೀಲಿಸಲಾಗಿ  90 ಮಿ,ಲೀಟರ್ ನ  15  ಹೈ ವಾರ್ಡ್ಸ್  ವಿಸ್ಕಿ ಮದ್ಯದ ಟೆಟ್ರಾ ಪಾಕಟೆ ಗಳು (ಸುಮಾರು  527/- ರೂ ಬೆಲೆ ಬಾಳುವುದಾಗಿರುತ್ತೆ,) ಮತ್ತು 01 ಲೀಟರ್ ನ 01 ನೀರಿನ ಖಾಲಿ ಬಾಟಲ್ ಮತ್ತು 01 ಪ್ಲಾಸ್ಟಿಕ್ ಖಾಲಿ ಗ್ಲಾಸ್ ಮತ್ತು ಉಪಯೋಗಿಸಿರುವ ಖಾಲಿ 90 ಮಿ,ಲೀಟರ್ ನ  01  ಹೈ ವಾರ್ಡ್ಸ್ ವಿಸ್ಕಿ ಟೆಟ್ರಾ ಪಾಕೆಟ್  ಇದ್ದು ಸ್ಥಳದಲ್ಲಿದ್ದ ಮೇಲ್ಕಂಡ ಆಸಾಮಿಯನ್ನು ಮದ್ಯ ಸೇವನೆ ಮಾಡಲು ಸ್ಥಳಾವಕಾಶ ಮಾಡಿಕೊಡಲು ಪರವಾನಗಿಯನ್ನು ಪಡೆದಿರುವ ಬಗ್ಗೆ ಕೇಳಲಾಗಿ ಯಾವುದೇ ಪರವಾನಗಿಯನ್ನು ಪಡೆದಿಲ್ಲವೆಂದು ತಿಳಿಸಿರುತ್ತಾನೆ,  ನಂತರ ಸದರಿ ಆಸಾಮಿಯನ್ನು ವಶಕ್ಕೆ ಪಡೆದುಕೊಂಡು ಮೇಲ್ಕಂಡ ವಸ್ತುಗಳನ್ನು ಪಂಚರ ಸಮಕ್ಷಮ ಪಂಚನಾಮೆಯ ಮೂಲಕ ಅಮಾನತ್ತು ಪಡಿಸಿಕೊಂಡು ಆರೋಪಿಯನ್ನು ಮತ್ತು ಅಮಾನತ್ತು ಪಡಿಸಿದ ಮಾಲುಗಳೊಂದಿಗೆ ಠಾಣೆಗೆ ವಾಪಸ್ಸಾಗಿ ಮೇಲ್ಕಂಡ ಆಸಾಮಿಯ ವಿರುದ್ದ ಮುಂದಿನ ಕ್ರಮ ಜರುಗಿಸಲು ಕೋರಿ ಪಿ.ಎಸ್.ಐ ರವರು ನೀಡಿದ ವರದಿಯ ಮೇರೆಗೆ ಠಾಣಾ ಮೊ.ಸಂಖ್ಯೆ:73/2020 ಕಲಂ:15(A), 32(3) K.E  ACT ರೀತ್ಯಾ ಪ್ರಕರಣ ದಾಖಲಿಸಿರುತ್ತೆ.

  1. ಪಾತಪಾಳ್ಯ ಪೊಲೀಸ್ ಠಾಣೆ ಮೊ.ಸಂ.74/2020 ಕಲಂ: 323,324,504 ಐ.ಪಿ.ಸಿ :-

     ದಿನಾಂಕ 18-10-2020 ರಂದು ರಾತ್ರಿ 07.30 ಗಂಟೆಯ ಸಮಯದಲ್ಲಿ ಬಾಗೇಪಲ್ಲಿ ಸರ್ಕಾರಿ ಅಸ್ಪತ್ರೆಯಲ್ಲಿ ಗಾಯಾಳು ನಾರಾಯಣಮ್ಮ ಕೋಂ ಲೇಟ್ ವೆಂಕಟರವಣಪ್ಪ, 50 ವರ್ಷ, ಆದಿದ್ರಾವಿಡ ಜನಾಂಗ, ಕೂಲಿಕೆಲಸ, ವಾಸ ಜೂಲಪಾಳ್ಯ ಗ್ರಾಮ, ಬಾಗೇಪಲ್ಲಿ ತಾಲ್ಲೂಕು ರವರ ಹೇಳಿಕೆಯ ದೂರಿನ ಸಾರಾಂಶವೆನೆಂದರೆ ನಮ್ಮ ಗ್ರಾಮದ ಅಂಜಿನಪ್ಪ ಬಿನ್ ಲೇಟ್ ಪಿಲ್ಲನ್ನ ಎಂಬುವರು ಆಗಾಗ ನನ್ನೊಂದಿಗೆ ಜಗಳ ತೆಗೆಯುವುದು, ಅವಾಚ್ಯ ಶಬ್ದಗಳಿಂದ ಬೈಯುವುದು ಮಾಡುತ್ತಿದ್ದು, ಈ ವಿಚಾರವಾಗಿ ಗ್ರಾಮಸ್ಥರು ಬುದ್ದಿವಾದ ಹೇಳಿರುತ್ತಾರೆ. ಈಗಿರುವಲ್ಲಿ ದಿನಾಂಕ; 17.10.2020 ಸಂಜೆ 6-45 ಗಂಟೆಯ ಸಮಯದಲ್ಲಿ ನಾನು ನಮ್ಮ ಬಳಿಯಿದ್ದಾಗ ಅಂಜಿನಪ್ಪ ಕುಡಿದು ಬಂದು ನನ್ನೊಂದಿಗೆ ಜಗಳ ತೆಗೆದು, ಅವಾಚ್ಯ ಶಬ್ದಗಳಿಂದ ಬೈದು, ನನ್ನನ್ನು ತಳ್ಳಾಡಿ ಅಲ್ಲಿಯೇ ಬಿದ್ದಿದ್ದ ಕೋಲನ್ನು ತೆಗೆದುಕೊಂಡು ಎಡಭಾಗದ ತೊಡೆಗೆ, ಬೆನ್ನಿಗೆ ಹೊಡೆದು ಮೂಗೇಟು ಉಂಟು ಮಾಡಿರುತ್ತಾನೆ. ನಂತರ ನಮ್ಮ ಗ್ರಾಮದ ಚಲಪತಿ ಬಿನ್ ನರಸಿಂಹಪ್ಪ ರವರು ಬಂದು ಸ್ಥಳದಲ್ಲಿ ನನ್ನನ್ನು ಉಪಚರಿಸಿ ಚಿಕಿತ್ಸೆಗಾಗಿ ಯಾವುದೋ ವಾಹನದಲ್ಲಿ ಚಿಕಿತ್ಸೆಗಾಗಿ ಬಾಗೇಪಲ್ಲಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿರುತ್ತಾರೆ. ವಿನಾ ಕಾರಣ ನನ್ನ ಮೇಲೆ ಜಗಳ ಮಾಡಿ, ಅವಾಚ್ಯ ಶಬ್ದಗಳಿಂದ ಬೈದು, ಕೋಲಿನಿಂದ ಹೊಡೆದು ಮೂಗೇಟು ಉಂಟು ಮಾಡಿರುವ ಅಂಜಿನಪ್ಪ ಬಿನ್ ಲೇಟ್ ಪಿಲ್ಲನ್ನ ರವರ ವಿರುದ್ದ ಕಾನೂನಿನ ರಿತ್ಯಾ ಕ್ರಮ ಜರುಗಿಸಲು ಕೋರಿ ದೂರು.

  1. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.285/2020 ಕಲಂ: 457,380 ಐ.ಪಿ.ಸಿ :-

     ದಿನಾಂಕ:18.10.2020 ರಂದು ಸಂಜೆ 7.45 ಗಂಟೆಗೆ ಪಿರ್ಯಾದಿದಾರರಾದ ಎಂ ರಾಮಚಂದ್ರ ಬಿನ್ ಎ ಮುನಿರಾಮಯ್ಯ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆನೆಂದರೆ, ನಾನು ಮೇಲ್ಕಂಡ ವಿಳಾಸದಲ್ಲಿ ವಾಸವಾಗಿರುತ್ತೇನೆ. ತಾನು ಶಿಡ್ಲಘಟ್ಟ ತಾಲ್ಲೂಕು ಜಂಗಮಕೋಟೆ ಹೋಬಳಿ ಹೆಚ್.ಕ್ರಾಸ್-ವಿಜಯಪುರ ರಸ್ತೆಯಲ್ಲಿರುವ ಚನ್ನಮ್ಮ ದೇವೇಗೌಡ ಕಲ್ಯಾಣ ಮಂಟಪದ ರಸ್ತೆಯ ಪಕ್ಕದಲ್ಲಿರುವ ಶ್ರೀವೀರಣ್ಣ ಸ್ವಾಮಿ ಟ್ರೇಡರ್ಸ್ (ರಸಗೊಬ್ಬರ, ಕ್ರಿಮಿನಾಶಕ ಔಷದಿ, ಬಿತ್ತನೆ ಬೀಜ) ಅಂಗಡಿಯನ್ನು ಸುಮಾರು 25 ವರ್ಷಗಳಿಂದ ವ್ಯಾಪಾರ ವಹಿವಾಟು ನಡೆಸಿಕೊಂಡು ಬರುತಿದ್ದು, ದಿನಾಂಕ:17.10.2020 ರಂದು ಸಂಜೆ ಎಂದಿನಂತೆ 6.00 ಗಂಟೆಗೆ ಅಂಗಡಿ ಬಾಗಿಲು ಹಾಕಿಕೊಂಡು ಮನೆಗೆ ಹೋಗಿರುತ್ತೇನೆ. ನಂತರ ದಿನಾಂಕ:18.10.2020 ರಂದು ಬೆಳಿಗ್ಗೆ 9.00 ಗಂಟೆಯಲ್ಲಿ ಅಂಗಡಿ ಬಾಗಿಲು ತೆಗೆಯಲು ಬಂದಾಗ ತಮ್ಮ ಅಂಗಡಿಯ ರೋಲಿಂಗ್ ಶೇಟರ್ ಹೊಡೆದು ಹಾಕಿ ಬೀಗ ಮುರಿದು ಯಾರೋ ಕಳ್ಳರು ಅಂಗಡಿಯ ಒಳಗೆ ಪ್ರವೇಶ ಮಾಡಿ ತಮ್ಮ ಅಂಗಡಿಯ ಕ್ಯಾಸ್ ಬಾಕ್ಸ್ ನಲ್ಲಿ ಇಟ್ಟಿದಂತಹ 70,000 ರೂ ನಗದನ್ನು ಕಳ್ಳತನ ಮಾಡಿಕೊಂಡು ತಮ್ಮ ಅಂಗಡಿಯ ಹೊರಭಾಗದಲ್ಲಿ ಅಳವಡಿಸಿದ್ದ ಸಿಸಿ ಕ್ಯಾಮಾರಗಳನ್ನು ಮತ್ತು ಲೈಟುಗಳನ್ನು ಹೊಡೆದು ಹಾಕಿ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಆದ್ದರಿಂದ ತಾವು ದಯವಿಟ್ಟು ಕಳ್ಳರನ್ನು ಪತ್ತೆ ಮಾಡಿ ಕಾನೂನು ರೀತ್ಯಾ ಕ್ರಮ ಜರುಗಿಸಬೇಕೆಂದು ನೀಡಿದ ದೂರನ್ನು ಪೆಡೆದು ಪ್ರಕರಣ ದಾಖಲಿಸಿರುತ್ತೆ.