ದಿನಾಂಕ : 19/10/2019ರ ಅಪರಾಧ ಪ್ರಕರಣಗಳು

 1. ಬಾಗೇಪಲ್ಲಿ ಪೊಲೀಸ್ ಠಾಣೆ ಮೊ.ಸಂ. 340/2019 ಕಲಂ. 15(ಎ), 32(3) ಕೆ.ಇ ಆಕ್ಟ್:-

          ದಿ: 18-10-2019 ರಂದು ಸಂಜೆ 4:15 ಗಂಟೆಗೆ ಪಿ.ಎಸ್.ಐ ಸಾಹೇಬರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶ – ದಿನಾಂಕ:18.10.2019 ರಂದು  3:00 ಗಂಟೆಯಲ್ಲಿ ನಾನು  ಠಾಣೆಯಲ್ಲಿರುವಾಗ್ಗೆ  ಬಾಗೇಪಲ್ಲಿ  ತಾಲ್ಲೂಕು ಕಸಬಾ ಹೋಬಳಿ ಕದಿರನ್ನಗಾರಿಪಲ್ಲಿ  ಗ್ರಾಮದ ಅಂಜಿನಪ್ಪ ಬಿನ್ ಲೇಟ್ ವೆಂಕಟರಾಮಪ್ಪ ರವರ ಬಾಬತ್ತು ಚಿಲ್ಲರೆ ಅಂಗಡಿಯ ಮುಂಭಾಗದಲ್ಲಿ ಯಾರೋ ಆಸಾಮಿಯು ಸಾರ್ವಜನಿಕರಿಗೆ ಮಧ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಡುತ್ತಿರುವುದಾಗಿ  ಬಂದ ಮಾಹಿತಿಯ ಮೇರೆಗೆ  ಸಿಬ್ಬಂದಿಗಳಾದ ಪಿ.ಸಿ 76 ಸುರೇಶ್, ಪಿಸಿ 33 ಕೃಷ್ಣಪ್ಪ ಮತ್ತು  ಜೀಪ್ ಚಾಲಕ ಅಲ್ತಾಫ್ ಪಾಷ ರವರೊಂದಿಗೆ ಸರ್ಕಾರಿ ಜೀಫ್ ಸಂಖ್ಯೆ-ಕೆಎ-40,ಜಿ-537 ವಾಹನದಲ್ಲಿ ಗೂಳೂರು ವೃತ್ತದಲ್ಲಿ ಪಂಚರನ್ನು ಬರಮಾಡಿಕೊಂಡು ಪಂಚರೊಂದಿಗೆ ಸ್ಥಳಕ್ಕೆ 3.15  ಗಂಟೆಗೆ ಹೋಗಿ ನೋಡಲಾಗಿ ಯಾರೋ ಒಬ್ಬ ಆಸಾಮಿಯು ಸಾರ್ವಜನಿಕರಿಗೆ ಮಧ್ಯವನ್ನು ಮಧ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಡುತ್ತಿದ್ದರು. ಸದರಿ ಸ್ಥಳದಲ್ಲಿ  ಪರಿಶೀಲಿಸಲಾಗಿ  90 ಎಂ.ಎಲ್. ನ HAYWARDS CHEERS  Whisky  ಯ 02  ಖಾಲಿ ಟೆಟ್ರಾ ಪ್ಯಾಕೇಟ್ ಗಳು ಮತ್ತು  ಒಂದು ಲೀಟರ್ ನ 1 ಖಾಲಿ ವಾಟರ್ ಬಾಟಲ್ ಗಳು ಮತ್ತು ಮದ್ಯಸೇವನೆ ಮಾಡಿರುವ  02 ಖಾಲಿ  ಪ್ಲಾಸ್ಟಿಕ್ ಗ್ಲಾಸ್ ಗಳು, ಮದ್ಯ ತುಂಬಿರುವ 90 ಎಂ.ಎಲ್. ನ HAYWARDS CHEERS WHISKY 08 ಟೆಟ್ರಾ ಪ್ಯಾಕೇಟ್ ಗಳು ಇದ್ದು, ಒಟ್ಟು 0.720 ಲೀಟರ್ ಮದ್ಯವಿದ್ದು ಸದರಿ ಮದ್ಯದ ಅಂದಾಜು ಮೌಲ್ಯ 242/- ರೂಪಾಯಿಗಳಾಗಿರುತ್ತದೆ. ಆಸಾಮಿಯ ಹೆಸರು ವಿಳಾಸವನ್ನು ಕೇಳಲಾಗಿ ತನ್ನ ಹೆಸರು ಅಂಜಿನಪ್ಪ ಬಿನ್ ಲೇಟ್ ವೆಂಕಟರಾಮಪ್ಪ, 75 ವರ್ಷ, ಭೋವಿ ಜನಾಂಗ, ಚಿಲ್ಲರೆ ಅಂಗಡಿ ವ್ಯಾಪಾರ, ಕದಿರನ್ನಗಾರಿಪಲ್ಲಿ ಗ್ರಾಮ, ಕಸಬಾ ಹೋಬಳಿ, ಬಾಗೇಪಲ್ಲಿ ತಾಲ್ಲೂಕು ಎಂದು ತಿಳಿಸಿದ್ದು, ನಿನ್ನ ಬಳಿ ಮಧ್ಯವನ್ನು ಸಾರ್ವಜನಿಕರಿಗೆ ಮದ್ಯಪಾನ್ ಮಾಡಲು ಸ್ಥಳಾವಕಾಶ ನೀಡಲು  ಯಾವುದೇ ಪರವಾನಗಿ ಇದೆಯೇ ಎಂದು ಕೇಳಲಾಗಿ ಇರುವುದಿಲ್ಲವೆಂದು ತಿಳಿಸಿ  ತನ್ನ ತಪ್ಪನ್ನು ಒಪ್ಪಿಕೊಂಡಿರುತ್ತಾನೆ.. ಸ್ಥಳದಲ್ಲಿದ್ದ 90 ಎಂ.ಎಲ್. ನ HAYWARDS CHEERS  Whisky  ಯ 02  ಖಾಲಿ ಟೆಟ್ರಾ ಪ್ಯಾಕೇಟ್ ಗಳು ಮತ್ತು  ಒಂದು ಲೀಟರ್ ನ 1 ಖಾಲಿ ವಾಟರ್ ಬಾಟಲ್ ಗಳು ಮತ್ತು ಮದ್ಯಸೇವನೆ ಮಾಡಿರುವ  02 ಖಾಲಿ  ಪ್ಲಾಸ್ಟಿಕ್ ಗ್ಲಾಸ್ ಗಳು, ಮದ್ಯ ತುಂಬಿರುವ 90 ಎಂ.ಎಲ್. ನ HAYWARDS CHEERS WHISKY 08 ಟೆಟ್ರಾ ಪ್ಯಾಕೇಟ್ ಗಳು ಗಳನ್ನು  ಅಮಾನತ್ತು ಪಡಿಸಿಕೊಂಡಿದ್ದು, ಪಂಚನಾಮೆ,  ಮಾಲು ಮತ್ತು ಆರೋಪಿಯನ್ನು ವರದಿಯೊಂದಿಗೆ 4.15 ಗಂಟೆಗೆ ಹಾಜರುಪಡಿಸುತ್ತಿದ್ದು, ಮುಂದಿನ ಕ್ರಮ ಜರುಗಿಸಲು ಸೂಚಿಸಿದೆ, ಎಂದು ನೀಡಿದ ದೂರಿನ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿರುತ್ತೆ.

 1. ಬಾಗೇಪಲ್ಲಿ ಪೊಲೀಸ್ ಠಾಣೆ ಮೊ.ಸಂ. 341/2019 ಕಲಂ. 87 ಕೆ.ಪಿ ಆಕ್ಟ್:-

     ದಿನಾಂಕ:18/10/2019 ರಂದು ಸಂಜೆ 6:15 ಗಂಟೆಯಲ್ಲಿ ಪಿ.ಎಸ್.ಐ ಶ್ರೀ.ನವೀನ್ ಪಿ. ಎಂ ರವರು ಮಾಲು ಮತ್ತು ಆಸಾಮಿಗಳೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ವರದಿಯ ಸಾರಾಂಶವೇನೆಂದರೆ, ಈ ದಿನ ದಿನಾಂಕ: 18.10.2019 ರಂದು ಸಂಜೆ 4-15 ಗಂಟೆಯಲ್ಲಿ ಠಾಣೆಯಲ್ಲಿದ್ದಾಗ ಮಾಹಿತಿದಾರರಿಂದ ಬಾಗೇಪಲ್ಲಿ ತಾಲ್ಲೂಕು ಮರವಪಲ್ಲಿ ತಾಂಡ ಗ್ರಾಮದ ಕೆರೆ ಅಂಗಳದಲ್ಲಿ ಜಾಲಿಮರದ  ಕೆಳಗೆ  ಖಾಲಿ ಜಾಗದಲ್ಲಿ ಅಕ್ರಮವಾಗಿ ಕೋಳಿ ಪಂದ್ಯ ಜೂಜಾಟವಾಡುತ್ತಿರುವುದಾಗಿ ಬಂದ ಖಚಿತ ಮಾಹಿತಿಯ ಮೇರೆಗೆ ತಮ್ಮ ಪೊಲೀಸ್ ಠಾಣೆಯ ಸಿಬ್ಬಂದಿಯವರಾದ ಎ.ಎಸ್.ಐ ಶ್ರೀ ಜಯರಾಮ್.ಪಿಸಿ-81 ಆನಂದ, ಪಿಸಿ-76 ಸುರೇಶ, ಪಿಸಿ-01 ನರಸಿಂಹಪ್ಪ  ಹಾಗೂ ಜೀಫ್ ಚಾಲಕ  ಎ.ಹೆಚ್.ಸಿ-34 ಅಲ್ತಾಫ್ ಪಾಷಾ ರವರೊಂದಿಗೆ ಕೆಎ-40-ಜಿ-537 ಸರ್ಕಾರಿ ಜೀಪ್ ನಲ್ಲಿ  ಬಂದಿದ್ದು, ಬಾಗೇಪಲ್ಲಿ ಪುರದ ಗೂಳೂರು ವೃತ್ತದ ಬಳಿ ಇದ್ದ ಪಂಚರನ್ನು ಬರಮಾಡಿಕೊಂಡು ದಾಳಿ ಮಾಡಲು ಪಂಚಾಯ್ತಿದಾರರಾಗಿ  ಬಂದು ಸಹಕರಿಸಲು ಕೋರಿದ್ದು ಅದಕ್ಕೆ ಅವರುಗಳು ಒಪ್ಪಿಕೊಂಡಿದ್ದು ನಾವುಗಳು ಪಂಚರು ಮೇಲ್ಕಂಡ ಸ್ಥಳಕ್ಕೆ  ಸಂಜೆ 4-45  ಗಂಟೆ ಸಮಯಕ್ಕೆ ಹೋಗಿ ಕೋಳಿ ಪಂದ್ಯ ಜೂಜಾಟವಾಡುತ್ತಿದ್ದ ಸ್ಥಳದಿಂದ 100 ಮೀಟರ್ ದೂರದಲ್ಲಿ ಮರೆಯಲ್ಲಿ ನಿಂತು ನೋಡಲಾಗಿ ಆಸಾಮಿಗಳು ಅಕ್ರಮವಾಗಿ ಗುಂಪು ಕಟ್ಟಿಕೊಂಡು ಕೋಳಿ ಪಂದ್ಯ ಜೂಜಾಟವಾಡುತ್ತಿದ್ದನ್ನು ಖಚಿತಪಡಿಸಿಕೊಂಡು ದಾಳಿಮಾಡಿದ್ದು ಆಸಾಮಿಗಳು ಸ್ಥಳದಿಂದ ಪರಾರಿಯಾಗಲು ಪ್ರಯತ್ನಿಸಿದ್ದು ಆ ಪೈಕಿ ಒಬ್ಬ ಆಸಾಮಿಯು ಸ್ಥಳದಿಂದ ಪರಾರಿಯಾಗಿದ್ದು, ನಾವುಗಳು ಮೂರು ಜನ ಅಸಾಮಿಗಳನ್ನು ಸುತ್ತುವರೆದು ವಶಕ್ಕೆ ಪಡೆದು ಹೆಸರು ವಿಳಾಸ ಕೇಳಲಾಗಿ 1) ನಾಗರಾಜ ಬಿನ್ ಶಿವಪ್ಪ, 36 ವರ್ಷ,ಈಡಿಗರು,  ಕಾರ್ಪೆಂಟರ್ ಕೆಲಸ, ವಾಸ:ಮಿಟ್ಟೇಮರಿ ಗ್ರಾಮ, ಬಾಗೇಪಲ್ಲಿ ತಾಲ್ಲೂಕು. 2) ಶಂಕರ್ ನಾಯ್ಕ್ ಬಿನ್ ವೆಂಕಟೇನಾಯ್ಕ್, 33 ವರ್ಷ, ಲಂಬಾಣಿ ಜನಾಂಗ, ಜಿರಾಯ್ತಿ, ವಾಸ:ಮಾಕಿರೆಡ್ಡಿಪಲ್ಲಿ ತಾಂಡ ಗ್ರಾಮ ಬಾಗೇಪಲ್ಲಿ ತಾಲ್ಲೂಕು. ಮತ್ತು 3) ಮಣಿ ಬಿನ್ ಲೇಟ್ ಓಬಣ್ಣ,47 ವರ್ಷ, ಹೊಟೇಲ್ ವ್ಯಾಪಾರ, ವಾಸ:ಮಿಟ್ಟೇಮರಿ ಗ್ರಾಮ, ಬಾಗೇಪಲ್ಲಿ ತಾಲ್ಲೂಕು ತಿಳಿಸಿದ್ದು ಸ್ಥಳದಿಂದ ಪರಾರಿಯಾದ ಆಸಾಮಿಯ ಹೆಸರು ವಿಳಾಸವನ್ನು ವಶಕ್ಕೆ ಪಡೆದವರಿಂದ ತಿಳಿಯಲಾಗಿ 4) ನರೇಂದ್ರ ಗ್ರಾಮ ಸಹಾಯಕರು, ಯಲ್ಲಂಪಲ್ಲಿ ಗ್ರಾಮ, ಬಾಗೇಪಲ್ಲಿ ತಾಲ್ಲೂಕು, ಎಂದು ತಿಳಿಸಿದ್ದು, ಕೋಳಿ ಪಂದ್ಯ ಜೂಜಾಟವಾಡುತ್ತಿದ್ದ ಮೂರು ಜನರನ್ನು ವಶಕ್ಕೆ ಪಡೆದು ಆರೋಪಿಗಳು ಜೂಜಾಟಕ್ಕೆ ತಂದಿದ್ದ 2 ಜೀವಂತ ಕೋಳಿಗಳನ್ನು ಮತ್ತು ಪಣಕ್ಕಾಗಿ ಇಟ್ಟಿದ್ದ 790-00 ರೂ ನಗದು ಹಣವನ್ನು ಪಂಚಾಯ್ತಿದಾರರ ಸಮಕ್ಷಮ ಸಂಜೆ 5-00 ಗಂಟೆಯಿಂದ 5-45 ಗಂಟೆಯವರೆಗೆ ಮಹಜರ್ ಮೂಲಕ ಮುಂದಿನ ಕ್ರಮಕ್ಕಾಗಿ ಅಮಾನತ್ತು ಪಡಿಸಿಕೊಂಡು, ಮೂರು ಜನ ಆರೋಪಿಗಳನ್ನು ವಶಕ್ಕೆ ಪಡೆದು ಮಾಲು ಮತ್ತು ಆರೋಪಿಗಳೊಂದಿಗೆ ಸಂಜೆ 6-15 ಗಂಟೆಗೆ ಠಾಣೆಗೆ ವಾಪಸ್  ಬಂದು ಮುಂದಿನ ಕ್ರಮ ಜರುಗಿಸಲು ಸೂಚಿಸಿದ ಮೇರೆಗೆ ಎನ್.ಸಿ.ಆರ್ 300/2019 ರಂತೆ ಎನ್.ಸಿ.ಆರ್ ಅನ್ನು ದಾಖಲಿಸಿರುತ್ತೆ. ನಂತರ ಘನ ನ್ಯಾಯಾಲಯದ ಅನುಮತಿಯನ್ನು ಪಡೆದು ದಿನಾಂಕ:19/10/2019 ರಂದು ಮದ್ಯಾಹ್ನ 1:30 ಗಂಟೆಗೆ ಪ್ರಕರಣವನ್ನು ದಾಖಲು ಮಾಡಿರುವುದಾಗಿರುತ್ತೆ.

 1. ಬಟ್ಲಹಳ್ಳಿ ಪೊಲೀಸ್ ಠಾಣೆ ಮೊ.ಸಂ. 124/2019 ಕಲಂ. 15(ಎ), 32(3) ಕೆ.ಇ ಆಕ್ಟ್:-

     ದಿನಾಂಕ:18/10/2019 ರಂದು  ರಾತ್ರಿ 18-00 ಗಂಟೆಯಲ್ಲಿ  ಚಿಕ್ಕಬಳ್ಳಾಪುರ  ಜಿಲ್ಲೆಯ ಡಿಸಿಬಿ/ಸಿ ಇ ಎನ್ ಪೊಲೀಸ್ ಠಾಣೆಯ ಸಿಬ್ಬಂದಿ ಸಿ ಹೆಚ್ ಸಿ 198 ಮಂಜುನಾಥ ರವರು ಒಬ್ಬ ಆಸಾಮಿ ಮತ್ತು ಮಾಲಿನೊಂದಿಗೆ ಠಾಣೆಗೆ ಹಾಜರಾಗಿ ನಿಡಿದ ವರದಿ ಸಾರಾಂಶೇನೆಂದರೆ,  ಡಿಸಿ ಬಿ ಸಿ ಇ ಎನ್ ಪೊಲೀಸ್ ಠಾಣೆಯ ಪಿ.ಎಸ್.ಐ ರಾಜಣ್ಣ ಸಾಹೇಬರವರ ದೇಶದಂತೆ ನಾನು  ಮತ್ತು ಮಲ್ಲಿಕಾರ್ಜುನ ಸಿ ಹೆಚ್ ಸಿ 239 ರವರು ಕರ್ತವ್ಯದಲ್ಲಿದ್ದಾಗ ಸಂಜೆ 04-20 ಗಂಟೆಯ ಸಮಯದಲ್ಲಿ ಈ ದಿನ ಚಿಂತಾಮಣಿ ತಾಲ್ಲೂಕು ಮುಂಗಾನಹಳ್ಳಿ  ಗ್ರಾಮದಲ್ಲಿ ಓಬನ್ನ ಬಿನ್ ಲೇಟ್ ಪೆದ್ದನ್ನ ರವರ ಚಿಲ್ಲರೆ ಅಂಗಡಿಯ ಮುಂಬಾಗದ ಸಾರ್ವಜನಿಕ ಸ್ಥಳದಲ್ಲಿ  ಗ್ರಾಹಕರಿಗೆ  ಮದ್ಯಪಾನ ಸೇವನೆ ಮಾಡಲು   ಸ್ಥಳಾವಕಾಶ ಮಾಡಿಕೊಟ್ಟಿರುವುದಾಗಿ ಬಾತ್ಮಿದಾರಿರಿಂದ ಬಂದ ಖಚಿತ ಮಾಹಿತಿಯಂತೆ  ಪಂಚರೊಂದಿಗೆ ಮೇಲ್ಕಂಡ ಸ್ಥಳದಲ್ಲಿ ದಾಳಿ ಮಾಡಿ ಸ್ಥಳದಲ್ಲಿದ್ದ  1) 90  ML  HAYWARDES CHEERS WHISKY 10 POKETS 2) 180  ML  OLD TAVERN WHISKY 3 POKETS 3) 2 PLASTIC GLASESS 4) 1 LITER EMPTY WATER BOTTEL 5) 90  ML  HAYWARDES CHEERS WHISKY EMPTY 2  POKETS ಗಳಿದ್ದು, ಒಟ್ಟು 1440 ಎಂ ಎಲ್ ನ   525 ರೂಗಳ ಬೆಲೆ ಬಾಳುವ ಮದ್ಯವನ್ನು  ಪಂಚರ ಸಮಕ್ಷಮ ಅಮಾನತ್ತು ಪಡಿಸಿಕೊಂಡಿರುತ್ತೆ. ಸ್ಥಳದಲ್ಲಿದ್ದ ಓಬನ್ನ ಬಿನ್ ಲೇಟ್  ಪೆದ್ದನ್ನ, 60 ವರ್ಷ, ಎಸ್ ಸಿ ಜನಾಂಗ, ಚಿಲ್ಲರೆ ಅಂಗಡಿ ವ್ಯಾಪಾರ, ವಾಸ; ಮುಂಗಾನಹಳ್ಳಿ ಗ್ರಾಮ ಚಿಂತಾಮಣಿ ತಾಲ್ಲೂಕು ರವರನ್ನು ವಶಕ್ಕೆ ಪಡೆದು ಮುಂದಿನ ಕ್ರಮಕ್ಕಾಗಿ ಠಾಣೆಗೆ ಕರೆದುಕೊಂಡು ಬಂದು ಹಾಜರುಪಡಿಸಿ ನೀಡಿದ ವರದಿಯ ಸಾರಾಂಶವಾಗಿರುತ್ತೆ.

 1. ಬಟ್ಲಹಳ್ಳಿ ಪೊಲೀಸ್ ಠಾಣೆ ಮೊ.ಸಂ. 125/2019 ಕಲಂ. 427-447-504-506 ಐ.ಪಿ.ಸಿ:-

     ದಿನಾಂಕ: 19/10/2019 ರಂದು 11-30 ಗಂಟೆಗೆ ಪಿರ್ಯಾದಿದಾರರಾದಡಿ.ನಾರಾಯಣಸ್ವಾಮಿ ಬಿನ್ ಲೇಟ್ ದೊಡ್ಡಪ್ಪ 80 ವರ್ಷ,    ವಕ್ಕಲಿಗರು, ಜಿರಾಯ್ತಿ, ವಾಸ:ಮುದ್ದಲಹಳ್ಳಿ ಗ್ರಾಮ ರವರು  ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ   ಚಿಂತಾಮಣಿ ತಾ;  ನನ್ನ ಹೆಸರಿನ  ಖಾತೆಯಲ್ಲಿರುವ ಜಮೀನು  ಇದೇ ಚಿಂತಾಮಣಿ ತಾಲ್ಲೂಕು ಮುರಗಮಲ್ಲ ಹೋಬಳಿ ಮುದ್ದಲಹಳ್ಳಿ ಗ್ರಾಮಕ್ಕೆ  ಸೇರಿದ ಸರ್ವೆ ನಂ: 192/3 ರಲ್ಲಿ 3.35 ಗುಂಟೆ ಜಮೀನಿರುತ್ತೆ. ಸದರಿ ಜಮೀನು ನಮ್ಮ ಗ್ರಾಮದಿಂದ ಸುಮಾರು 1 ಕೀ.ಮೀ ದೂರದಲ್ಲಿದ್ದು  ಆ ಜಮೀನಿನಲ್ಲಿ  ಮಾವಿನ ಮರಗಳನ್ನು  ತೋಟವಿರುತ್ತದೆ. ಈ  ಜಮೀನಿನ ಎಲ್ಲಾ ದಾಖಲೆಗಳು  ನನ್ನ ಹೆಸರಿಗೆ ಇದ್ದು ಮತ್ತು ನನ್ನ ಸ್ವಾದೀನಾನುಭವದಲ್ಲಿರುತ್ತೆ. ಮಾವಿನ ತೋಟದಿಂದ ಬರುವ ಫಸಲನ್ನು ಮಾರಿ ಅದರಿಂದ ಬರುವ ಹಣದಿಂದ ನಾನು ಮತ್ತು ನನ್ನ ಕುಟುಂಬದವರು  ಜೀವನ ಮಾಡುತ್ತಿರುತ್ತೇವೆ. ಹೀಗಿರುವಲ್ಲಿ ನಮ್ಮ ಗ್ರಾಮದ ವಾಸಿಯಾದ  ಎಂ.ಎಸ್ ರವೀಂದ್ರನಾಥ್ ಬಿನ್ ಲೇಟ್ ಶ್ರೀರಾಮಪ್ಪ ಡಿ  ರವರು ದಿನಾಂಕ: 07/09/2019 ರಂದು  ಮೇಲ್ಕಂಡ ನನ್ನ ಮಾವಿನ ತೋಟದ 40 ಮರಗಳನ್ನುಅಕ್ರವಮವಾಗಿ ಕಟಾವು ಮಾಡಿರುತ್ತಾನೆ.  ನಂತರ ದಿನಾಂಕ: 15/10/2019 ರಂದು ಬೆಳಿಗ್ಗೆ 8-00 ಗಂಟೆ ಸಮಯದಲ್ಲಿ ನಾನು ಮೇಲ್ಕಂಡ ನನ್ನ ಜಮೀನಿನ ಬಳಿ ಹೋಗಿದ್ದಾಗ ಎಂ.ಎಸ್ ರವೀಂದ್ರನಾಥ್ ರವರು ನನ್ನ ಜಮೀನಿನೊಳಗೆ ಅಕ್ರಮ ಪ್ರವೇಶ ಮಾಡಿ ಈ ಹಿಂದೆ ಕಟಾವು ಮಾಡಿದ್ದ ಮಾವಿನ ಮರಗಳ ಬುಡಗಳನ್ನು ಶೆಟ್ಟಿಯಳ್ಳಿ ಗ್ರಾಮದವರ ಕೆಎ-67-ಎಂ-0187 ಜೆ.ಸಿ.ಬಿ ಯಂತ್ರದಿಂದ ನಾನು ಬೆಳೆದಿರುವ ಹುರಳಿ ಬೆಳೆಯನ್ನು ತುಳಿದು ಹಾಳು ಮಾಡಿ ಮಾವಿನ ಮರದ ಬುಡಗಳನ್ನು ಕೀಳುತ್ತಿರುತ್ತಾನೆ. ಇದರಿಂದ ನನಗೆ 20,000/- ರೂಗಳು ನಷ್ಟವಾಗಿದ್ದು. ಇದನ್ನು ನಾನು ಪ್ರಶ್ನಿಸಿದ್ದಕ್ಕೆ ಇದು ನಿನ್ನ ಜಮೀನು ಅಲ್ಲ  ನನ್ನ  ಜಮೀನು ನಾನು  ಏನು ಬೇಕಾದರು  ಮಾಡಿಕೊಳ್ಳುತ್ತೇನೆ ನೀನು ನನ್ನನ್ನು ಪ್ರಶ್ನಿಸುವಂತಿಲ್ಲ ಎಂದು ದೌರ್ಜನ್ಯವಾಗಿ ಮಾತನಾಡಿ ಅವಾಚ್ಯ ಶಬ್ದಗಳಿಂದ ಬೈದು ಹೊಡಯಲು ಮುಂದಾಗಿ ಈ ಜಮೀನಿನ ತಂಟೆಗೆ ಬಂದರೆ  ನಿನ್ನನ್ನು ಮತ್ತು ನಿನ್ನ ಕುಟುಂಬದವರನ್ನು ಸಾಯಸಿಬಿಡುತ್ತೇನೆಂದು ಪ್ರಾಣಬೆದರಿಕೆ ಹಾಕಿರುತ್ತಾನೆ. ಆಗ ಅಲ್ಲಿದ್ದ ನಮ್ಮ ಗ್ರಾಮದವರಾದ ನಾಗಭೂಷಣ ಬಿನ್ ಹನುಮಪ್ಪ, ಲಕ್ಷ್ಮೀನಾರಾಯಣರೆಡ್ಡಿ @ ಪೆದ್ದಪ್ಪಯ್ಯ ರವರುಗಳು ಈ ಕೃತ್ಯವನ್ನು ಕಂಡು ಗಲಾಟೆಯನ್ನು ಬಿಡಿಸಿರುತ್ತಾರೆ.  ಆದ್ದರಿಂದ ಮೇಲ್ಕಂಡ ನನ್ನ ಜಮೀನಿನಲ್ಲಿ ಅಕ್ರಮ ಪ್ರವೇಶ ಮಾಡಿ  ಮಾವಿನ ಮರಗಳನ್ನು ಕಟಾವು ಮಾಡಿ  ಹುರಳಿ ಬೆಳೆಯನ್ನು ತುಳಿದು ನಾಶಮಾಡಿ ಜೆ.ಸಿ.ಬಿಯಿಂದ ಮಾವಿನ ಮರದ ಬುಡಗಳನ್ನು ಕಿತ್ತು ಸಾಗಿಸಿದ್ದು, ಇದರಿಂದ ನನಗೆ 20,000/- ರೂಗಳು ನಷ್ಟವಾಗಿರುತ್ತೆ., ಅದನ್ನು ಕೇಳಿದಕ್ಕೆ  ನನನ್ನ್ನು ಕೆಟ್ಟು ಮಾತುಗಳಿಂದ ಬೈದು  ಪ್ರಾಣಬೆದರಿಕೆ ಹಾಕಿರುವ ಮೇಲ್ಕಂಡ ಎಂ.ಎಸ್ ರವೀಂದ್ರನಾಥ್ ರವರ ವಿರುದ್ದ ಕಾನೂನು ರೀತ್ಯ ಕ್ರಮ ಜರುಗಿಸಬೇಕೆಂದು ಕೋರುತ್ತೇನೆ. ಗ್ರಾಮದ ಹಿರಿಯರು ಈ ಬಗ್ಗೆ ನ್ಯಾಯ ಪಂಚಾಯ್ತಿ ಮಾಡೋಣವೆಂತ ತಿಳಿಸಿದ್ದರಿಂದ ನಾನು ದೂರು ನೀಡಿರಲಿಲ್ಲ ಆದರೆ ಯಾವುದೇ ನ್ಯಾಯ ಪಂಚಾಯ್ತಿ ಮಾಡಲಿಲ್ಲವಾದ್ದರಿಂದ  ಈ ದಿನ ತಡವಾಗಿ ಬಂದು ನೀಡಿದ ದೂರಾಗಿರುತ್ತೆ.

 1. ಚಿಕ್ಕಬಳ್ಳಾಪುರ ಸಂಚಾರಿ ಪೊಲೀಸ್ ಠಾಣೆ ಮೊ.ಸಂ. 63/2019 ಕಲಂ. 279-336 ಐ.ಪಿ.ಸಿ & 185 ಐ.ಎಂ.ವಿ ಆಕ್ಟ್:-

     ದಿನಾಂಕ:-18/10/2019 ರಂದು  ಸಂಜೆ 4-45 ಗಂಟೆಗೆ ಪಿರ್ಯಾಧಿ ಶ್ರೀ.ಮುದ್ದುನಾಗಪ್ಪ ಬಿನ್ ನರಸಿಂಹಪ್ಪ 52 ವರ್ಷ, ಚಿಕ್ಕಬಳ್ಳಾಪುರ ಕೃಷಿ ಇಲಾಖೆಯಲ್ಲಿ ಚಾಲಕ ವೃತ್ತಿ, ಕೃಷ್ಣರಾಜಪುರ ಗ್ರಾಮ, ನಗರಗೆರೆ ಹೋಬಳಿ, ಗೌರಿಬಿದನೂರು ತಾಲ್ಲೂಕು ರವರು ನೀಡಿದ ಬೆರಳಚ್ಚು ದೂರಿನ ಸಾರಾಂಶವೇನೆಂದರೆ  ತಾನು ಚಿಕ್ಕಬಳ್ಳಾಪುರ ಕೃಷಿ ಇಲಾಖೆಯಲ್ಲಿ ಸುಮಾರು 2 ವರ್ಷಗಳಿಂದ ಇಲಾಖೆಯ ಕೆಎ-40-ಜಿ-0369 ರ ಟಾಟಾ ಸುಮೋ ವಿಟ್ಟಾ ವಾಹನಕ್ಕೆ ಚಾಲಕನಾಗಿ ಕರ್ತವ್ಯವನ್ನು ನಿರ್ವಹಿಸುತ್ತಿದ್ದು ದಿನಾಂಕ:-18/10/2019 ರಂದು ಶ್ರೀಮತಿ ಸುಮನ್ ಕುಮಾರಿ ಸಹಾಯಕ ಕೃಷಿ ನಿರ್ದೇಶಕರು ರವರೊಂದಿಗೆ ಕೆಎ-40-ಜಿ-0369 ರ ಟಾಟಾ ಸುಮೋ ವಿಟ್ಟಾ ವಾಹನ ಜೀಪಿನಲ್ಲಿ ತಮ್ಮ ಕಛೇರಿಯಿಂದ ಕೃಷಿ ಮಾರುಕಟ್ಟೆಯ ಕಡೆಗೆ ಹೋಗಲು ಸಂಜೆ ಸುಮಾರು 4-00 ಗಂಟೆಯ ಸಮಯದಲ್ಲಿ ಕೋರ್ಟ ವೃತ್ತದ ಬಳಿ ಇರುವ ಡಿ.ವೈ.ಎಸ್.ಪಿ ಕಛೇರಿಯ ಮುಂಭಾಗದ ರಸ್ತೆಯ ಬಳಿ ಹೋಗುತ್ತಿದ್ದಾಗ ಎದುರಿಗೆ ಪೊಲೀಸ್ ವೃತ್ತದ ಕಡೆಯಿಂದ ಬಂದ ಕೆಎ-04-ಎಂ.ಎಂ-8083 ರ ಕಾರಿನ ಚಾಲಕ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ತಾನು ಚಾಲನೆ ಮಾಡಿಕೊಂಡು ಹೋಗುತ್ತಿದ್ದ ಜೀಪಿಗೆ ಡಿಕ್ಕಿ ಹೊಡೆಯಿಸಿದ ಪರಿಣಾಮ ಎರಡೂ ವಾಹನಗಳು ಜಕಂಗೊಂಡಿದ್ದು, ಯಾರಿಗೂ ಸಹಾ ಗಾಯಗಳಾಗದೇ ಇದ್ದು, ಸದರಿ ಅಪಘಾತ ಪಡಿಸಿದ ಕಾರಿನ ಚಾಲಕನನ್ನು ನೋಡಲಾಗಿ ಸದರಿ ಚಾಲಕ ಪಾನಮತ್ತನಾಗಿರುವಂತೆ ಕಂಡುಬಂದಿದ್ದು, ತಕ್ಷಣ ದೂರವಾಣಿ ಮೂಲಕ ಪೋಲಿಸರಿಗೆ ತಿಳಿಸಲಾಗಿ ಪೊಲೀಸರು ಅಪಘಾತ ನಡೆದ ಸ್ಥಳಕ್ಕೆ ಬಂದು ಕಾರಿನ ಚಾಲಕನನ್ನು ಪಾನಮತ್ತನಾಗಿರುವ ಬಗ್ಗೆ ಪರಿಕ್ಷೀಸಿದ್ದು, ಸದರಿ ಚಾಲಕ ಪಾನಮತ್ತನಾಗಿರುವುದು ನಿಜವಾಗಿದ್ದು ಚಾಲಕನ ಹೆಸರು ಮತ್ತು ವಿಳಾಸ ತಿಳಿಯಲಾಗಿ ನವೀನ್ ಕುಮಾರ್ ಬಿನ್ ಕೆ.ಎನ್ ನರಸಿಂಹಪ್ಪ 26 ವರ್ಷ, ಬಲಜಿಗರು, ಟಿ.ಬಿ ಕ್ರಾಸ್, ಬಾಗೇಪಲ್ಲಿ ತಾಲ್ಲೂಕು ಎಂತ ತಿಳಿಸಿದ್ದು, ಸದರಿ ಅಪಘಾತ ಪಡಿಸಿದ ಕೆಎ-04-ಎಂ.ಎಂ-8083 ರ ಕಾರಿನ ಚಾಲಕನ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುತ್ತೆ.

 1. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 385/2019 ಕಲಂ. 279-337 ಐ.ಪಿ.ಸಿ & 134(ಎ,ಬಿ) ಐ.ಎಂ.ವಿ ಆಕ್ಟ್:-

     ದಿನಾಂಕ:18/10/2019 ರಂದು ಚಿಂತಾಮಣಿ ಸರ್ಕಾರಿ ಆಸ್ಪತ್ರೆಯಿಂದ ಬಂದ ಮೆಮೋವನ್ನು ಪಡೆದು ಆಸ್ಪತ್ರೆಗೆ ಹೋಗಿ ಗಾಯಾಳು ನರಸಿಂಹಪ್ಪ ಬಿನ್ ಲೇಟ್ ದೊಡ್ಡನರಸಪ್ಪ, 48 ವರ್ಷ, ನಾಯಕರು, ಕೂಲಿಕೆಲಸ, ಧನಮಿಟ್ಟೇನಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು ರವರ ಹೇಳಿಕೆಯನ್ನು ಪಡೆದುಕೊಂಡು ರಾತ್ರಿ 8.15 ಗಂಟೆಗೆ ಠಾಣೆಗೆ ವಾಪಸ್ಸಾಗಿ ದಾಖಲಿಸಿಕೊಂಡ ಗಾಯಾಳುವಿನ ಹೇಳಿಕೆಯ ದೂರಿನ ಸಾರಾಂಶವೇನೆಂದರೆ, ಈ ದಿನ ದಿನಾಂಕ: 18/10/2019 ರಂದು ತನಗೆ ಚಿಂತಾಮಣಿ ನಗರದಲ್ಲಿ ಕೆಲಸವಿದ್ದ ಕಾರಣ ತಾನು ತನ್ನ ಬಾಭತ್ತು KA-53 J-2708, TVS XL HEAVY DUTY ದ್ವಿಚಕ್ರ ವಾಹನದಲ್ಲಿ ಚಿಂತಾಮಣಿಗೆ ಹೋಗಲು ಮನೆಯಿಂದ ಬಂದಾಗ ತಮ್ಮ ಗ್ರಾಮದ ಗೇಟ್ ಬಳಿ ತಮ್ಮ ಗ್ರಾಮದ ರಾಮಕ್ಕ ರವರು ತನ್ನ ದ್ವಿಚಕ್ರ ವಾಹನವನ್ನು ನಿಲ್ಲಿಸಿ ತನಗೂ ಚಿಂತಾಮಣಿ ನಗರದಲ್ಲಿ ಕೆಲಸವಿದ್ದು ತಾನು ನಿಮ್ಮ ದ್ವಿಚಕ್ರ ವಾಹನದಲ್ಲಿ ಬರುತ್ತೇನೆಂದು ಕೇಳಿದ್ದು ಅದಕ್ಕೆ ತಾನು ಆಕೆಯನ್ನು ತನ್ನ ದ್ವಿಚಕ್ರ ವಾಹನದ ಹಿಂಭಾಗದಲ್ಲಿ ಕೂರಿಸಿಕೊಂಡು ಚಿಂತಾಮಣಿಗೆ ಬರಲು ಮದ್ಯಾಹ್ನ ಸುಮಾರು 12.00 ಗಂಟೆ ಸಮಯದಲ್ಲಿ ಚಿಂತಾಮಣಿ-ಬಾಗೇಪಲ್ಲಿ ಮುಖ್ಯ ರಸ್ತೆಯ ಚೊಕ್ಕಹಳ್ಳಿ ಗ್ರಾಮದ ಗೇಟ್ ಬಳಿ ಬರುತ್ತಿರುವಾಗ ಮುಂಭಾಗದಿಂದ ಯಾವುದೋ ಒಂದು ಟ್ರ್ಯಾಕ್ಟರ್ ನ್ನು ಅದರ ಚಾಲಕ ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ತನ್ನ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆಸಿ, ಟ್ರ್ಯಾಕ್ಟರ್ ನ್ನು ಸ್ಥಳದಲ್ಲಿ ನಿಲ್ಲಿಸದೇ ಹೊರಟು ಹೋದ ಪರಿಣಾಮ ತಾನು ಹಾಗೂ ರಾಮಕ್ಕ ರವರು ದ್ವಿಚಕ್ರ ವಾಹನ ಸಮೇತ ಕೆಳಕ್ಕೆ ಬಿದ್ದು ಹೋಗಿ ತನಗೆ ರಕ್ತ ಗಾಯಗಳಾಗಿದ್ದು, ಹಿಂಬದಿಯಲ್ಲಿ ಕುಳಿತಿದ್ದ ರಾಮಕ್ಕರವರಿಗೆ ತರಚಿದ ಗಾಯಗಳಾಗಿರುತ್ತೆ ಹಾಗೂ ದ್ವಿಚಕ್ರ ವಾಹನ ಜಖಂ ಆಗಿರುತ್ತೆ. ನಂತರ ಸಾರ್ವಜನಿಕರು ತಮ್ಮನ್ನು ಚಿಕಿತ್ಸೆಗಾಗಿ ಚಿಂತಾಮಣಿ ಸರ್ಕಾರಿ ಆಸ್ಪತ್ರೆಗೆ ತಂದು ದಾಖಲು ಮಾಡಿದ್ದು ನಂತರ ವಿಚಾರ ತಿಳಿಯಲಾಗಿ ಅಪಘಾತವನ್ನುಂಟು ಮಾಡಿದ ಟ್ರ್ಯಾಕ್ಟರ್ ನ ಮಾಲಿಕರು ತಿಮ್ಮಸಂದ್ರ ಗ್ರಾಮದ ವೆಂಕಟರವಣ ಬಿನ್ ಕೃಷ್ಣಪ್ಪ ಎಂಬುರಾಗಿರುತ್ತೆಂದು ತಿಳಿದುಬಂದಿರುತ್ತೆ. ಆದ್ದರಿಂದ ಮೇಲ್ಕಂಡಂತೆ ಅಪಘಾತವನ್ನುಂಟು ಮಾಡಿದ ಟ್ರ್ಯಾಕ್ಟರ್ ಚಾಲಕ ಹಾಗೂ ಟ್ರ್ಯಾಕ್ಟರ್ ನ್ನು ಪತ್ತೆ ಮಾಡಿ ಕಾನೂನು ಕ್ರಮ ಕೈಗೊಳ್ಳಲು ಕೋರಿ ನೀಡಿದ ಹೇಳಿಕೆಯ ದೂರಾಗಿರುತ್ತೆ.

 1. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 386/2019 ಕಲಂ. 279-337 ಐ.ಪಿ.ಸಿ :-

     ದಿನಾಂಕ:18/10/2019 ರಂದು ಸಂಜೆ 7.15 ಗಂಟೆಗೆ ಚಿಂತಾಮಣಿ ಸರ್ಕಾರಿ ಆಸ್ಪತ್ರೆಯಿಂದ ಬಂದ ಮೆಮೋವನ್ನು ಪಡೆದು ಆಸ್ಪತ್ರೆಗೆ ಹೋಗಿ ಗಾಯಾಳು ರಾಖಿಕೃಷ್ಣ ಬಿನ್ ಶಿವಣ್ಣ, 20 ವರ್ಷ, ವಕ್ಕಲಿಗರು, ವಿದ್ಯಾರ್ಥಿ, ರಾಯಪ್ಪನಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು ರವರ ಹೇಳಿಕೆಯನ್ನು ಪಡೆದುಕೊಂಡು ರಾತ್ರಿ 8.45 ಗಂಟೆಗೆ ಠಾಣೆಗೆ ವಾಪಸ್ಸಾಗಿ ದಾಖಲಿಸಿಕೊಂಡ ಗಾಯಾಳುವಿನ ಹೇಳಿಕೆಯ ದೂರಿನ ಸಾರಾಂಶವೇನೆಂದರೆ, ತಾನು ಚಿಂತಾಮಣಿ-ಕೋಲಾರ ಮುಖ್ಯ ರಸ್ತೆಯಲ್ಲಿರುವ ಅರುಣೋದಯ ಐ.ಟಿ.ಐ ಕಾಲೇಜಿನಲ್ಲಿ ಪ್ರಥಮ ಐ.ಟಿ.ಐ ವ್ಯಾಸಂಗ ಮಾಡುತ್ತಿದ್ದು, ಪ್ರತಿ ದಿನ ತಮ್ಮ ಗ್ರಾಮದಿಂದ ಕಾಲೇಜಿಗೆ ಬಂದು ಕಾಲೇಜು ಮುಗಿದ ನಂತರ ವಾಪಸ್ ತನ್ನ ಗ್ರಾಮಕ್ಕೆ ಹೋಗುತ್ತಿರುತ್ತಾರೆ. ಎಂದಿನಂತೆ ಈ ದಿನ ದಿನಾಂಕ: 18/10/2019 ರಂದು ತಮ್ಮ ಗ್ರಾಮದಿಂದ ಕಾಲೇಜಿಗೆ ಬಂದು ಕಾಲೇಜು ಮುಗಿದ ನಂತರ ವಾಪಸ್ ತನ್ನ ಗ್ರಾಮಕ್ಕೆ ಹೋಗಲು ಕಾಲೇಜಿನಿಂದ ಹೊರಗಡೆ ಬಂದು ಕಾಲೇಜಿನ ಮುಂದೆ ಸಂಜೆ 4.45 ಗಂಟೆಗೆ ಸಮಯದಲ್ಲಿ ರಸ್ತೆಯ ಪಕ್ಕದ ಪುಟ್ ಪಾತ್ ನಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಚಿಂತಾಮಣಿ ಕಡೆಯಿಂದ ನಂಬರ್ KA-03 MK-1147  HYUNDAI i10 ಕಾರನ್ನು ಅದರ ಚಾಲಕ ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ತಮಗೆ ಡಿಕ್ಕಿ ಹೊಡೆಸಿದ ಪರಿಣಾಮ ತನಗೆ ರಕ್ತ ಗಾಯಗಳಾಗಿದ್ದು ನಂತರ ತನ್ನ ಸ್ನೇಹಿತರು ಅಪಘಾತವನ್ನುಂಟು ಮಾಡಿದ ಕಾರಿನಲ್ಲಿಯೇ ತನ್ನನ್ನು ಚಿಕಿತ್ಸೆಗಾಗಿ ಚಿಂತಾಮಣಿ ಸರ್ಕಾರಿ ಆಸ್ಪತ್ರೆಗೆ ತಂದು ದಾಖಲು ಮಾಡಿರುತ್ತಾರೆ. ಆದ್ದರಿಂದ ಮೇಲ್ಕಂಡಂತೆ ಅಪಘಾತವನ್ನುಂಟು ಮಾಡಿದ ನಂಬರ್ KA-03 MK-1147  HYUNDAI i10 ಕಾರಿನ ಚಾಲಕ ವಿರುದ್ದ ಕಾನೂನು ಕ್ರಮ ಕೈಗೊಳ್ಳಲು ಕೋರಿ ನೀಡಿದ ಹೇಳಿಕೆಯ ದೂರಾಗಿರುತ್ತೆ.

 1. ಚಿಂತಾಮಣಿ ನಗರ ಪೊಲೀಸ್ ಠಾಣೆ ಮೊ.ಸಂ. 290/2019 ಕಲಂ. 78(3) ಕೆ.ಪಿ. ಆಕ್ಟ್ :-

     ದಿನಾಂಕ:17/10/2019 ರಂದು ಸಂಜೆ 5-00 ಗಂಟೆಯಲ್ಲಿ ನಾರಾಯಣಸ್ವಾಮಿ ಜಿ.ಸಿ ಪೊಲೀಸ್ ಇನ್ಸ್ ಪೆಕ್ಟರ್ ಆದ ನಾನು ಮತ್ತು ಸಿಬ್ಬಂದಿಯವರಾದ ಕೃಷ್ಣಪ್ಪ ಟಿ.ವಿ ಸಿಪಿಸಿ 524 , ವೇಣು ಸಿಪಿಸಿ 190  ರವರೊಂದಿಗೆ ಸರ್ಕಾರಿ ಜೀಪು ಸಂಖ್ಯೆ : ಕೆ.ಎ 40 ಜಿ 356  ವಾಹನದಲ್ಲಿ  ಬೆಂಗಳೂರು ವೃತ್ತ, ಚೇಳೂರು ವೃತ್ತ , ಕಡೆಗಳಲ್ಲಿ ನಗರ ಗಸ್ತಿನಲ್ಲಿದ್ದಾಗ, ನಗರದ ಸೊಣ್ಣಶೆಟ್ಟಿಹಳ್ಳಿ  ಬಳಿ ಸಾರ್ವಜನಿಕ ರಸ್ತೆಯ ಬದಿಯಲ್ಲಿ ಮಟ್ಕಾ ಜೂಜಾಟ ನಡೆಯುತ್ತಿರುವುದಾಗಿ ಖಚಿತ ಮಾಹಿತಿ ಬಂದಿದ್ದು, ನಾವು ಸೊಣ್ಣಶೆಟ್ಟಿಹಳ್ಳಿ ಬಳಿ  ಹೋಗಿ ಅಲ್ಲಿ ಪಂಚರನ್ನು ಬರಮಾಡಿಕೊಂಡು ಅವರಿಗೆ ವಿಚಾರ ತಿಳಿಸಿ, ಅವರನ್ನು ಜೀಪಿನಲ್ಲಿ ಕರೆದುಕೊಂಡು ಕೋಲಾರ ಕ್ರಾಸ್ ಬಳಿಗೆ ಹೋಗಿ ಮರೆಯಲ್ಲಿ ಜೀಪನ್ನು ನಿಲ್ಲಿಸಿ, ಪಂಚರನ್ನು ಮತ್ತು ಸಿಬ್ಬಂದಿಯವರನ್ನು  ಕಾಲ್ನಡಿಗೆಯಲ್ಲಿ ಕರೆದುಕೊಂಡು ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಸೊಣ್ಣಶೆಟ್ಟಿಹಳ್ಳಿ ಬಳಿಯ ಸಾರ್ವಜನಿಕ ರಸ್ತೆಯಲ್ಲಿ ಯಾರೋ ಒಬ್ಬ ವ್ಯಕ್ತಿಯು ರಸ್ತೆಯ ಬದಿಯಲ್ಲಿ ನಿಂತುಕೊಂಡು ಜನರನ್ನು ಗುಂಪು ಸೇರಿಸಿಕೊಂಡು 1 ರೂಗೆ 80 ರೂ ಎಂದು ಕೂಗುತ್ತಾ ಸಾರ್ವಜನಿಕರಿಗೆ ಹಣ ಕಟ್ಟುವಂತೆ ಪ್ರೇರೆಪಿಸುತ್ತಾ, ಮಟ್ಕಾ ಚೀಟಿ ಬರೆಯುತ್ತಿದ್ದನು. ನಾವು ಪಂಚರೊಂದಿಗೆ ಸುತ್ತುವರೆದು, ದಾಳಿ ಮಾಡುವಷ್ಟರಲ್ಲಿ ಅಲ್ಲಿದ್ದ ಜನರೆಲ್ಲಾ ಓಡಿ ಹೋಗಿದ್ದು, ಮಟ್ಕಾ ಚೀಟಿ ಬರೆಯುತ್ತಿದ್ದ  ವ್ಯಕ್ತಿಯನ್ನು ಹಿಡಿದುಕೊಂಡು ಆತನ ಹೆಸರು  ವಿಳಾಸ ಕೇಳಲಾಗಿ  ಶಬ್ಬೀರ್ ಬಿನ್ ಲೇಟ್ ಚೋಟಾ ಸಾಬ್ , 28 ವರ್ಷ, ಪೈಂಟರ್ ಕೆಲಸ, ಮುಸ್ಲಿಂ ಜನಾಂಗ, ಎನ್ ಎನ್ ಟಿ ರಸ್ತೆ,  ಚಿಂತಾಮಣಿ ಟೌನ್ ಎಂದು ತಿಳಿಸಿದ್ದು, ಆತನನ್ನು ಅಂಗ ಶೋಧನೆ ಮಾಡಲಾಗಿ  410 ರೂ ನಗದು ಹಣ ಇದ್ದು ಸದರಿ ಹಣದ ಬಗ್ಗೆ ಕೇಳಲಾಗಿ ಇದು ಸಾರ್ವಜನಿಕರಿಂದ ಮಟ್ಕಾ ಆಡಿ ಸಂಪಾದಿಸಿರುವ ಹಣವೆಂತ ತಿಳಿಸಿದ್ದು, ಪಂಚಾಯ್ತಿದಾರರ ಸಮಕ್ಷಮದಲ್ಲಿ ಪಂಚನಾಮೆಯ ಮೂಲಕ ಹಣ, ಒಂದು ಪೆನ್ನು, ಮಟ್ಕಾ ಚೀಟಿಯನ್ನು ಅಮಾನತ್ತು ಪಡಿಸಿಕೊಂಡು, ಮಾಲು, ಆಸಾಮಿ, ಪಂಚನಾಮೆಯೊಂದಿಗೆ    ಸಂಜೆ 6-00 ಗಂಟೆಗೆ ಠಾಣೆಗೆ ವಾಪಸ್ಸಾಗಿ ಮುಂದಿನ ಕ್ರಮಕ್ಕಾಗಿ ನೀಡಿದ ವರದಿಯ ಮೇರೆಗೆ ಇದು ಅಸಂಜ್ಞೇಯ ಅಪರಾಧವಾಗಿರುವುದರಿಂದ ಘನ ನ್ಯಾಯಾಲಯದ ಅನುಮತಿಯನ್ನು ಪಡೆಯಲು ಠಾಣಾ ಎನ್,ಸಿ,ಆರ್ 240/2019 ರೀತ್ಯಾ ದಾಖಲಿಸಿ ವರದಿಯನ್ನು ನೀವೇದಿಸಿಕೊಂಡಿರುತ್ತೆ ಘನ ನ್ಯಾಯಾಲಯದಿಂದ ಅನಮತಿಯನ್ನು ಪಡೆದ ನಂತರ ಪ್ರ ವ ವರದಿಯನ್ನು ದಾಖಲಿಸಿರುತ್ತೆ.

 1. ಚಿಂತಾಮಣಿ ನಗರ ಪೊಲೀಸ್ ಠಾಣೆ ಮೊ.ಸಂ. 291/2019 ಕಲಂ. 323-324-504-506 ಐ.ಪಿ.ಸಿ :-

     ದಿನಾಂಕ: 19/10/2019 ರಂದು  ಮದ್ಯಾಹ್ನ 12:45 ಗಂಟೆಗೆ ಪಿರ್ಯಾದಿದಾರರಾದ ಆರ್ ಪಂಕಜ್ ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ ತಾನು ಮೇಲ್ಕಂಡ ವಿಳಾಸದಲ್ಲಿ ವಾಸವಾಗಿದ್ದು, ಸಾಯಿ ತಿರುಮಲ ಜೂವೆಲ್ಲರ್ಸ್ ರಾಜಾ ಮಾರ್ಕಟ್  ಬೆಂಗಳೂರು ಎಂಬುವರು ನಕಲಿ ಬಿಲ್ ಗಳನ್ನು ಮಾಡಿಕೊಡುತ್ತಾರೆಂದು ಬೆಂಗಳೂರಿನ ಸಿ ಸಿ ಬಿ ಪೊಲೀಸ್ ವಿಭಾಗಕ್ಕೆ ತಾನು ಈಗ್ಗೆ ಒಂದುವರೆ ತಿಂಗಳ ಹಿಂದೆ ಸದರಿ ಅಂಗಡಿಯ ಮಾಲಿಕರ ಮೇಲೆ ದೂರನ್ನು ಸಲ್ಲಿಸಿದ್ದು, ಒಂದು ತಿಂಗಳ ಹಿಂದೆ ಅಂಗಡಿಯ ಮಾಲೀಕರಾದ ಪ್ರಕಾಶ್ ರವರಿಗೆ ಹಣ ಕೊಟ್ಟು ನಕಲಿ ಬಿಲ್ ಗಳನ್ನು ತಾನು ಪಡೆಯುವಾಗ ಬೆಂಗಳೂರಿನ ಸಿ ಸಿ ಬಿ ಪೊಲೀಸರು ದಾಳಿ ಮಾಡಿ ಸದರಿ ಅಂಗಡಿ ಮಾಲಿಕರಾದ ಪ್ರಕಾಶ್ ರವರನ್ನು ನಕಲಿ ಬಿಲ್ ಗಳ  ಸಮೇತ ಆತನನ್ನು ಅವರೊಂದಿಗೆ ಕರೆದುಕೊಂಡು ಹೋದರು. ಆನಂತರ ದಿನಾಂಕ 12/10/2019 ರಂದು ಸಂಜೆ 4.45 ಗಂಟೆ ಸಮಯದಲ್ಲಿ ತಾನು ಚಿಂತಾಂಣಿ ನಗರದ ರೈಲ್ವೇ ಸ್ಟೇಷನ್ ಬಳಿ ವಾಕಿಂಗ್ ಹೋಗುತ್ತಿದ್ದಾಗ ಯಾರೋ ಒಬ್ಬ ಅಪರಿಚಿತ ವ್ಯಕ್ತಿ ನನ್ನ ಹಿಂದಗಡೆಯಿಂದ ಬಂದು ಏಕಾಏಕಿ ಚಾಕುವಿನಿಂದ ನನ್ನ ಕುತ್ತಿಗೆಗೆ ಹಾಕಲು ಬಂದಾಗ ತಾನು ತನ್ನ ಎಡ ಕೈಯನ್ನು ಅಡ್ಡ ಇಟ್ಟೆ. ಆಗ ಚಾಕುವಿನ ತುದಿಬಾಗ ತನ್ನ ಎಡಭಾಗದ ಹೆಬ್ಬೆರಳಿನ ಪಕ್ಕದ ಬೆರಳಿಗೆ ತಗುಲಿ ರಕ್ತಗಾಯವಾಗಿರುತ್ತೆ. ತಾನು  ಬಲಕೈಯಿಂದ ಬಲವಾಗಿ ಆತನಿಗೆ ತಳ್ಳಿದೆ. ಆತನ ಎಡಕೈ ತನ್ನ ಎಡಬದಿಯ ಭುಜಕ್ಕೆ ಒತ್ತಿಕೊಂಡು ಬಲವಾದ ಊತಗಾಯವಾಗಿರುತ್ತೆ. ಆತನ ಬಳಿ ಚಾಕು ಇದ್ದರಿಂದ ಪ್ರಾಣಭಯವಾಗಿ ಅಲ್ಲಿಂದ ಓಡಲು ಹೋದಾಗ  ಸದರಿ ಅಪರಿಚಿತ ವ್ಯಕ್ತಿಯು ತನ್ನನ್ನು ಕುರಿತು ನೀನು ಬಂಗಾರದ ಅಂಗಡಿಯವರ ಮೇಲೆ ಕಂಪ್ಲೆಂಟ್ ಕೊಡುತ್ತಿಯಾ ನಿನ್ನನ್ನು ಉಳಿಸುವುದಿಲ್ಲ ಸಾಯಿಸಿಬಿಡುತ್ತೇನೆಂತ ಪ್ರಾಣಬೆದರಿಕೆ ಹಾಕಿ ಅಲ್ಲಿಂದ ಹೊರಟು ಹೋಗಿರುತ್ತಾನೆ.  ಸದರಿ ಅಸಾಮಿಯನ್ನು ಹೆಸರು ವಿಳಾಸ ನನಗೆ ತಿಳಿದಿರುವಿದಿಲ್ಲ. ತನಗೆ ಹೊಡೆದ ಅಪರಿಚಿತ ಅಸಾಮಿಯನ್ನು ಪತ್ತೆ ಮಾಡಿ ಹಾಗೂ ಸಾಯಿ ತಿರುಮಲ ಜೂವೆಲ್ಲರ್ಸ್ ಅಂಗಡಿಯ ಮಾಲಿಕ ಪ್ರಕಾಶ್ ವಿರುದ್ದ ಕಾನೂನು ಕ್ರಮ ಜರುಗಿಸಬೇಕಾಗಿ ಕೋರಿದ್ದರ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುತ್ತೆ.

 1. ದಿಬ್ಬೂರಹಳ್ಳಿ ಪೊಲೀಸ್ ಠಾಣೆ ಮೊ.ಸಂ. 181/2019 ಕಲಂ. 15(ಎ), 32(3) ಕೆ.ಇ ಆಕ್ಟ್ :-

     ದಿನಾಂಕ:18/10/2019 ರಂದು 04-00 ಗಂಟೆಗೆ ಪಿ.ಎಸ್.ಐ ರವರ.ಎಸ್. ಅಮಾನತ್ತು ಪಂಚನಾಮೆ ಹಾಗೂ ಅಮಾನತ್ತು ಪಡಿಸಿಕೊಂಡ ಮಾಲಿನೊಂದಿಗೆ ನೀಡಿದ ಮೆಮೋನ ಸಾರಾಂಶವೇನೆಂದರೆ ಈ ದಿನ ದಿನಾಂಕ 18/10/2019 ರಂದು ತಾನು ಠಾಣೆಯಲ್ಲಿದ್ದಾಗ ಠಾಣಾ ವ್ಯಾಪ್ತಿಯ ಈ ತಿಮ್ಮಸಂದ್ರ ಗ್ರಾಮ ವಾಸಿಯಾದ ನಾರಾಯಣಪ್ಪ ಬಿನ್ ಕದಿರಪ್ಪ ರವರು ಅವರ ಬಾಬತ್ತು ಅಂಗಡಿಯ ಬಳಿ ಸಾರ್ವಜನಿಕರಿಗೆ ಅಕ್ರಮವಾಗಿ ಮದ್ಯಪಾನಮಾಡಲು ಸ್ಥಳಾವಕಾಶವನ್ನು ಮಾಡಿಕೊಟ್ಟಿರುವುದಾಗಿ ಮಾಹಿತಿ ಬಂದಿದ್ದರ ಮೇರೆಗೆ ತಾನು ಮತ್ತು ಠಾಣೆಯ ಪಿ.ಸಿ-451 ರಾಮಾಂಜನೇಯ ಹಾಗೂ ಜೀಫ್ ಚಾಲಕ ಎ.ಪಿ.ಸಿ-94 ಬೈರಪ್ಪ ಹಾಗೂ ಪಂಚಾಯ್ತಿದಾರರೊಂದಿಗೆ ದಾಳಿಮಾಡಿ ಸ್ಥಳದಲ್ಲಿ ಇದ್ದ 90 ಎಂ.ಎಲ್ ನ   8 ಹೈವಾರ್ಡ್ಸ್ ಚೇರ್ಸ್ ವಿಸ್ಕಿಯ ಮದ್ಯದ ಟೆಟ್ರಾ ಪಾಕೇಟ್ ಗಳನ್ನು, ಖಾಲಿಯ ಮಾಡಿರುವ 2 ಹೈವಾರ್ಡ್ಸ್ ಚೇರ್ಸ್ ವಿಸ್ಕಿಯ ಮದ್ಯದ ಟೆಟ್ರಾ ಪ್ಯಾಕೇಟ್ ಗಳನ್ನು ಹಾಗೂ 2 ಪ್ಲಾಸ್ಟಿಕ್ ಲೋಟಗಳನ್ನು ಪಂಚನಾಮೆಯ ಮೂಲಕ ಅಮಾನತ್ತು ಪಡಿಸಿಕೊಂಡು  ಠಾಣೆಗೆ ಬಂದು ಮುಂದಿನ ಕ್ರಮ ಕೈಗೊಳ್ಳಲು ನೀಡಿರುವ ಮೆಮೋ ಆಗಿರುತ್ತೆ.

 1. ಗುಡಿಬಂಡೆ ಪೊಲೀಸ್ ಠಾಣೆ ಮೊ.ಸಂ. 346/2019 ಕಲಂ. 380-457 ಐ.ಪಿ.ಸಿ :-

     ದಿನಾಂಕ 18/10/2019 ರಂದು ರಾತ್ರಿ 8-00 ಗಂಟೆಗೆ ಪಿರ್ಯಾಧಿ ಗುಡಿಬಂಡೆ ಟೌನ್ ವಾಸಿ ಶ್ರೀನಿವಾಸ ರವರು ಠಾಣೆಗೆ  ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ತಾನು ಬೇಲ್ದಾರ್ ಕೆಲಸಗಾರನಾಗಿದ್ದು, ಸೆಂಟ್ರಿಂಗ್ ಗೋಸ್ಕರ ಸೆಂಟ್ರಿಂಗ್ ಶೀಟ್ ಗಳನ್ನು ತೆಗೆದುಕೊಂಡು ತಾನು ಹೊಸದಾಗಿ ಮನೆಯನ್ನು ಗುಡಿಬಂಡೆ ಟೌನ್ ನ 11ನೇ ವಾರ್ಡ್ ನಲ್ಲಿ ಕಟ್ಟುತ್ತಿದ್ದು, ಈ ಮನೆಯ ಗೋಡನ್ನಲ್ಲಿ ಸೆಂಟ್ರಿಂಗ್ ಶೀಟ್ ಗಳನ್ನು ಇಟ್ಟಿದ್ದು, ದಿನಾಂಕ 15/10/2019 ರಂದು ರಾತ್ರಿ ಸುಮಾರು 8-00 ಗಂಟೆಯ ಸಮಯದಲ್ಲಿ ತಮ್ಮ ಮನೆಯ ಗೋಡನ್ನಲ್ಲಿ ಸೆಂಟ್ರಿಂಗ್ ಶೀಟ್ ಗಳನ್ನು ನೋಡಿಕೊಂಡು ಮನೆಗೆ ಹೋಗಿದ್ದು, ಸದರಿ ಗೋಡನ್ ಗೆ ಬಾಗಿಲು ಇರುವುದಿಲ್ಲ. ದಿನಾಂಕ 16/10/2019 ರಂದು ಬೆಳಿಗ್ಗೆ 7-30 ಗಂಟೆಗೆ ತಮ್ಮ ಮನೆಯ ಹತ್ತಿರ ಬಂದು ಗೋಡನ್ ಒಳಗೆ ಹೋಗಿ ನೋಡಿದಾಗ 22ಸೆಂಟ್ರಿಂಗ್ ಶೀಟ್ ಗಳು ಇರಲಿಲ್ಲ, ಇದರ ಬೆಲೆ ಸುಮಾರು 18000/- ರೂಗಳು ಆಗಿರುತ್ತೆ. ಆ ದಿನ ದಿಂದ ತಾನು ತಮ್ಮ ಗ್ರಾಮದಲ್ಲಿ ವಿಚಾರಣೆ ಮಾಡಲಾಗಿ ಈ ದಿನ ದಿನಾಂಕ 18/10/2019 ರಂದು ಸೆಂಟ್ರಿಂಗ್ ಶೀಟ್ ಗಳನ್ನು ಗುಡಿಬಂಡೆ ಟೌನ್ ವಾಸಿಗಳಾದ ಉಮೇಶ ಮತ್ತು ವೆಂಕಟೇಶ ಎಂಬುವರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆಂತ ವಿಷಯ ತಿಳಿಯಿತು. ಆದ್ದರಿಂದ ತನ್ನ ಬಾಬತ್ತು ಸೆಂಟ್ರಿಂಗ್ ಶೀಟ್ ಗಳನ್ನು ಕಳ್ಳತನ ಮಾಡಿಕೊಂಡು ಹೋದ ಉಮೇಶ ಮತ್ತು ವೆಂಕಟೇಶ ಎಂಬುವರ ಮೇಲೆ ಕಾನೂನಿನ ರೀತ್ಯಾ ಕ್ರಮ ಕೈಗೊಂಡು ತನ್ನ ಬಾಬತ್ತು ಸೆಂಟ್ರಿಂಗ್ ಶೀಟ್ ಗಳನ್ನು ಪತ್ತೆ ಮಾಡಿ ಕೊಡ ಬೇಕೆಂದು ಕೋರಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುತ್ತೆ.

 1. ಕೆಂಚಾರ್ಲಹಳ್ಳಿ ಪೊಲೀಸ್ ಠಾಣೆ ಮೊ.ಸಂ. 137/2019 ಕಲಂ. 15(ಎ), 32(3) ಕೆ.ಇ ಆಕ್ಟ್ :-

     ದಿನಾಂಕ 19/10/2019 ರಂದು  ಮದ್ಯಾಹ್ನ 12-45 ಗಂಟೆಗೆ ಪಿ,.ಎಸ್.ಐ ಸಾಹೇಬರು ನೀಡಿದ ವರದಿಯ ಸಾರಾಂಶವೇನೆಂದರೆ, ದಿನಾಂಕ:-19/10/2019 ರಂದು ಬೆಳಿಗ್ಗೆ 11-00 ಗಂಟೆಗೆ ನಾನು ಠಾಣೆಯಲ್ಲಿದ್ದಾಗ ಠಾಣಾ ಸರಹದ್ದು ತುಳುವನೂರು ಗ್ರಾಮದ ನಾರಾಯಣಸ್ವಾಮಿ ರವರು ತನ್ನ ಚಿಲ್ಲರೆ ಅಂಗಡಿ ಮುಂಭಾಗದ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಮದ್ಯಪಾನ ಮಾಡಲು ಅವಕಾಶ ಮಾಡಿಕೊಟ್ಟು ತೊಂದರೆ ಉಂಟು ಮಾಡುತ್ತಿರುವುದಾಗಿ ಪಿಸಿ 499 ರಾಮಕೃಷ್ಣ ರವರಿಗೆ ಬಂದ ಮಾಹಿತಿ ಮೇರೆಗೆ ದಾಳಿ ಮಾಡಲು  ಠಾಣೆಯ ಬಳಿ ಪಂಚಾಯ್ತಿದಾರರನ್ನು ಬರಮಾಡಿಕೊಂಡು ವಿಚಾರ ತಿಳಿಸಿ ಸರ್ಕಾರಿ ವಾಹನ ಸಂಖ್ಯೆ ಕೆಎ 40 ಜಿ 140 ಜೀಪ್ ನಲ್ಲಿ ಸಿಬ್ಬಂದಿಯಾದ ಹೆಚ್.ಸಿ 161 ಕೃಷ್ಣಪ್ಪ ಹಾಗೂ ಪಂಚರೊಂದಿಗೆ ತುಳುವನೂರು ಗ್ರಾಮದ ಬಳಿ ಹೋಗಿ ತುಳುವನೂರು ಗ್ರಾಮದ ನಾರಾಯಣಸ್ವಾಮಿ ರವರ ಚಿಲ್ಲರೆ ಅಂಗಡಿಯ ಬಳಿ ದಾಳಿ ಮಾಡಲಾಗಿ ನಾರಾಯಣಸ್ವಾಮಿ ರವರು ತಮ್ಮ ಮನೆಯ ಮುಂಭಾಗದಲ್ಲಿ  ಸಾರ್ವಜನಿಕರು ಓಡಾಡುವ ಸ್ಥಳದಲ್ಲಿ ಮದ್ಯವನ್ನು ಸೇವನೆ ಮಾಡಲು ಅವಕಾಶ ಮಾಡಿಕೊಟ್ಟಿದ್ದು, ಪಂಚರೊಂದಿಗೆ  ನಾನು ಹಾಗೂ ಹೆಚ್.ಸಿ 161 ರವರು ಅಂಗಡಿಯ ಬಳಿ ಸುತ್ತುವರಿದಾಗ ಪೊಲೀಸರನ್ನು  ಕಂಡ ಕೂಡಲೇ ಮದ್ಯ ಸೇವನೆ ಮಾಡುತ್ತಿರುವವರು ಓಡಿಹೋಗಿದ್ದು,  ಮದ್ಯಪಾನ ಸೇವನೆ ಮಾಡಲು ಅನುವು ಮಾಡಿಕೊಟ್ಟ  ಅಸಾಮಿಯನ್ನು ಹಿಡಿದು ಹೆಸರು ಮತ್ತು ವಿಳಾಸ ಕೇಳಲಾಗಿ ನಾರಾಯಣಸ್ವಾಮಿ ಬಿನ್ ಲೇಟ್ ವೆಂಕಟಪ್ಪ,  48 ವರ್ಷ, ನಾಯಕರು, ಚಿಲ್ಲರೆ ಅಂಗಡಿ ವ್ಯಾಪಾರ, ವಾಸ ತುಳುವನೂರು ಗ್ರಾಮ, ಚಿಂತಾಮಣಿ ತಾಲ್ಲೂಕು ಎಂದು ತಿಳಿಸಿದನು. ಸ್ಥಳದಲ್ಲಿ ಪರಿಶೀಲಿಸಲಾಗಿ ಒಂದು ಪ್ಲಾಸ್ಟಿಕ್ ಕವರ್ ನಲ್ಲಿ  ಮದ್ಯದ ಟೆಟ್ರಾ ಪ್ಯಾಕೆಟ್ ಗಳು ಇದ್ದು ಪರಿಶೀಲಿಸಲಾಗಿ 90  ಎಂ.ಎಲ್ HAYWARDS CHEERS WHISKEY ಮಧ್ಯದ 6 ಟೆಟ್ರಾ ಪ್ಯಾಕೆಟ್ ಗಳು ಇದ್ದು ಒಂದರ ಬೆಲೆೆ 30.32/- ರೂ  ಆಗಿದ್ದು 6 ಟೆಟ್ರಾ ಪ್ಯಾಕೆಟ್ ಗಳ ಒಟ್ಟು ಬೆಲೆ 181.92 ರೂ (ಒಂದು ನೂರ ಎಂಬತ್ತೊಂದು ತೊಂಬತ್ತೇರಡು ಪೈಸೆ)  ಆಗಿರುತ್ತೆ. ಮದ್ಯ ಒಟ್ಟು 540 ಮೀಲಿ ಆಗಿರುತ್ತೆ. ಮಧ್ಯವನ್ನು ಕುಡಿಯಲು ಸಾರ್ವಜನಿಕರಿಗೆ ಅವಕಾಶ ಮಾಡಿಕೊಟ್ಟಿರುವ ಬಗ್ಗೆ ಯಾವುದಾದರೂ ಪರವಾನಿಗೆ ಇದೆಯೇ ಎಂದು ನಾರಾಯಣಸ್ವಾಮಿ ರವರನ್ನು ಕೇಳಲಾಗಿ ಯಾವುದೇ ಪರವಾನಿಗೆ ಇಲ್ಲವೆಂದು ತಿಳಿಸಿರುತ್ತಾರೆ.  ನಂತರ HAYWARDS CHEERS WHISKEY 90 ಎಂ.ಎಲ್ ಮಧ್ಯದ 6 ಟೆಟ್ರಾ ಪ್ಯಾಕೆಟ್ ಗಳನ್ನು ಹಾಗೂ ಅಕ್ರಮ ಮಧ್ಯ ಸೇವನೆ ಮಾಡಲು ಬಳಸಿದ್ದ 2 ಪೇಪರ್ ಗ್ಲಾಸ್ ಗಳನ್ನು ಬೆಳಿಗ್ಗೆ 11-30 ರಿಂದ ಮದ್ಯಾಹ್ನ 12-15 ಗಂಟೆಯವರೆಗೆ ಮಹಜರ್ ಮೂಲಕ ಅಮಾನತ್ತುಪಡಿಸಿಕೊಂಡಿರುತ್ತೆ. ಸದರಿ ಮಾಲನ್ನು ಮತ್ತು ಆರೋಪಿ ನಾರಾಯಣಸ್ವಾಮಿ ರವರನ್ನು ನಿಮ್ಮ ಮುಂದೆ ಈ ನನ್ನ ದೂರಿನೊಂದಿಗೆ ಹಾಜರುಪಡಿಸುತ್ತಿದ್ದು ಈ ಬಗ್ಗೆ ಅಕ್ರಮ ಮದ್ಯ ಕುಡಿಯಲು ಅವಕಾಶ ಮಾಡಿಕೊಟ್ಟ ನಾರಾಯಣಸ್ವಾಮಿ ರವರ ವಿರುದ್ದ ಕಾನೂನು ಕ್ರಮ ಜರುಗಿಸಲು ಕೋರಿದೆ.

 1. ಮಂಚೇನಹಳ್ಳಿ ಪೊಲೀಸ್ ಠಾಣೆ ಮೊ.ಸಂ. 288/2019 ಕಲಂ. 323-504-506 ಐ.ಪಿ.ಸಿ :-

     ದಿನಾಂಕ: 18-10-2019  ರಂದು  ಮದ್ಯಾಹ್ನ 14-30  ಗಂಟೆಯಲ್ಲಿ ಪಿರ್ಯಾದಿದಾರರಾದ  ಬಿ.ಎಲ್. ತಿಮ್ಮಯ್ಯ ಬಿನ್ ಲೇಟ್ ಲಕ್ಷ್ಮಯ್ಯ 50 ವರ್ಷ ದೇವಾಂಗ ಜನಾಂಗ ಜಿರಾಯ್ತಿ ಬಿಸಲಹಳ್ಳಿ ಗ್ರಾಮ ಮಂಚೇನಹಳ್ಳಿ ಹೋಬಳಿ ಗೌರೀಬಿದನೂರು ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೆನೆಂದರೆ, ತಾನು ದಿನಾಂಕ 05-10-2019 ರಂದು ಮದ್ಯಾಹ್ನ ತಮ್ಮ ಗ್ರಾಮದ ಶನಿಮಹಾತ್ಮಾ ದೇವಸ್ಥಾನದ ಮುಂದೆ ಕುಳಿತ್ತಿದ್ದಾಗ ತಮ್ಮ ಗ್ರಾಮದ ಶಿಶಿಕುಮಾರ್ ಬಿನ್ ನರಸಿಂಹಮೂರ್ತಿ 25 ವರ್ಷ ಚಾಲಕ ವೃತ್ತಿ  ರವರು ನನ್ನನ್ನು ಲೋಪರ್ ನನ್ನ ಮಗನೆ. ನನ್ನ ಮೇಲೆ ಕೇಸು ಹಾಕಿ ನನ್ನನ್ನು ಕೋರ್ಟ ಗೆ ಅಲಿಯುವಂತೆ ಮಾಡುತ್ತೀಯ ಎಂತ ವಿನಾಕಾರಣ ಜಗಳವನ್ನು ತೆಗೆದು ಕಾಲಿನಿಂದ ಬದ್ದು.ಕೈಗಳಿಂದ ಹೊಡೆದು ನೂಕಿದ್ದು. ನಂತರ ಎದೆಯ ಮೇಲೆ ಕಾಲುಗಳಿಂದ ಮತ್ತು ಕೈಗಳಿಂದ  ಮುಷ್ಠಿಯಿಂದ ಗುದ್ದಿರುತ್ತಾರೆ,ನಂತರ ಬಿಡಿಸಲು ಬಂದ ತನ್ನ ಹೆಂಡತಿ ಏಕೆ ಹೊಡೆಯುತ್ತಿಯ ಎಂತತ ಕೆಳಿದ್ದಕ್ಕೆ ತನ್ನ ಹೆಂಡತಿಗೂ ಸಹ ಕೈ ಮೇಲೆ ಮತ್ತು ಮೈ ಮೇಲೆ ಹೊಡೆದು ತಳ್ಳಾಡಿರುತ್ತಾನೆ, ನಂತರ ನನ್ನ ಹೆಂಡತಿ ನನ್ನನ್ನು ಗೌರೀಬಿದನೂರು ಸರ್ಕಾರಿ ಆಸ್ವತ್ರೆಗೆ ಚಿಕಿತ್ಸೆಗಾಗಿ ದಾಖಲಿಸಿದ್ದು, ನಂತರ  ಶಶಿಕುಮಾರ್ ಕುಡಗೋಲನ್ನು ತೋರಿಸಿ ಸಾಯಿಸುವುದಾಗಿ ಪ್ರಾಣ ಬೆದರಿಕೆಯನ್ನು ಹಾಕಿದ್ದು. ಗ್ರಾಮದಲ್ಲಿ ಪಂಚಾಯ್ತಿ ಮಾಡುವುದಾಗಿ ತಿಳಿಸಿದ್ದರಿಂದ  ದಿನ ದಿನಾಂಕ: 18-10-2019 ತಡವಾಗಿ ದೂರು ನೀಡಿದ್ದು  ತನ್ನ ಮತ್ತು ತನ್ನ ಹೆಂಡತಿ ಮೇಲೆ ಹಲ್ಲೆ  ಮಾಡಿರುವ  ಶಶಿಕುಮಾರ್ ರವರ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ದೂರಿನ ಮೇರೆಗೆ ಈ ಪ್ರ.ವ.ವರದಿ

 1. ಮಂಚೇನಹಳ್ಳಿ ಪೊಲೀಸ್ ಠಾಣೆ ಮೊ.ಸಂ. 289/2019 ಕಲಂ. 15(ಎ), 32(3) ಕೆ.ಇ ಆಕ್ಟ್ :-

     ದಿನಾಂಕ:18/10/2019 ರಂದು ಠಾಣಾ ಪಿಸಿ 211 ಶ್ರೀ ಶೇಖರಪ್ಪ ರವರು ಮಾಲು ಮತ್ತು ಆರೋಪಿಯೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ  ದಿನಾಂಕ:18/10/2019 ರಂದು ಮದ್ಯಾಹ್ನ 1-00 ಗಂಟೆಯ ಸಮಯದಲ್ಲಿ ನಾನು ಗಸ್ತು ಮಾಡುತ್ತಿದ್ದಾಗ, ನನಗೆ ಬಂದ ಮಾಹಿತಿ ಏನೇಂದರೆ  ಬಂದಾರ್ಲಹಳ್ಳಿ ಗ್ರಾಮದ ಹನುಮಂತರಾಯಪ್ಪ ಬಿನ್ ಲೇಟ್ ಹನುಮಂತಪ್ಪ ರವರು ಅವರ ಚಿಲ್ಲರೆ ಅಂಗಡಿಯ ಮುಂಭಾಗ ಯಾವುದೇ ರೀತಿಯ ಅನುಮತಿಯನ್ನು ಮತ್ತು ಪರ್ಮಿಟ್ ಪಡೆಯದೇ ಅಕ್ರಮವಾಗಿ ಸಾರ್ವಜನಿಕರಿಗೆ ಮದ್ಯವನ್ನು ಸೇವನೆ ಮಾಡಲು ಅವಕಾಶ ಮಾಡಿಕೊಟ್ಟಿರುವುದಾಗಿ ಮಾಹಿತಿ ಬಂದ್ದಿದ್ದು ದಾಳಿ ಮಾಡುವ ಸಲುವಾಗಿ ಪಂಚರೊಂದಿಗೆ  ಮದ್ಯಾಹ್ನ 1-30  ಗಂಟೆಯ ಸಮಯಕ್ಕೆ ಬಂದಾರ್ಲಹಳ್ಳಿ ಗ್ರಾಮದ ಹನುಮಂತರಾಯಪ್ಪ ಬಿನ್ ಲೇಟ್ ಹನುಮಂತಪ್ಪ ರವರ ಚಿಲ್ಲರೆ ಅಂಗಡಿಯ ಬಳಿ ಹೋಗುವಷ್ಟರಲ್ಲಿ ಅಲ್ಲಿ ಮದ್ಯವನ್ನು ಸೇವನೆ ಮಾಡುತ್ತಿದ್ದವರು ಸಮವಸ್ತ್ರದಲ್ಲಿದ್ದ ನಮ್ಮನ್ನು ನೋಡಿ ಸ್ಥಳದಿಂದ ಓಡಿಹೋದರು ಮಾಹಿತಿಯಂತೆ ಅಲ್ಲಿದ್ದವನನ್ನು ಹಿಡಿದುಕೊಂಡು ಅವನ ಹೆಸರು ಮತ್ತು ವಿಳಾಸ ಕೇಳಲಾಗಿ ಹನುಮಂತರಾಯಪ್ಪ ಬಿನ್ ಲೇಟ್ ಹನುಮಂತಪ್ಪ 55ವರ್ಷ, ಗೊಲ್ಲರು, ಚಿಲ್ಲರೆ ಅಂಗಡಿ ವ್ಯಾಪಾರ, ವಾಸ ಬಂದಾರ್ಲಹಳ್ಳಿ ಗ್ರಾಮ,  ಗೌರಿಬಿದನೂರು ತಾಲ್ಲೂಕು ಎಂತ ತಿಳಿಸಿದ್ದು, ಅವನ ಬಳಿ ಒಂದು ಪ್ಲಾಸ್ಟಿಕ್ ಚೀಲವಿದ್ದು ಅದನ್ನು ತೆಗೆದು ಪರಿಶೀಲಿಸಲಾಗಿ ಅದರೊಳಗಡೆ 90 ಎಂ.ಎಲ್.ಸಾಮರ್ಥ್ಯದ ಮಧ್ಯ ತುಂಬಿರುವ ಹೈವಾಡ್ಸ್ ಚಿಯರ್ಸ್ ವಿಸ್ಕಿಯ 10  ಟೆಟ್ರಾ ಪ್ಯಾಕೆಟ್ ಗಳು ದೊರೆತಿದ್ದು, ಮದ್ಯವನ್ನು ಇಟ್ಟುಕೊಂಡಿರುವ  ಬಗ್ಗೆ ಮತ್ತು ಸಾರ್ವಜನಿಕರಿಗೆ ಮದ್ಯವನ್ನು ಸೇವನೆ ಮಾಡಲು ಅನುವು ಮಾಡಿಕೊಟ್ಟ ಬಗ್ಗೆ ಅನುಮತಿಯನ್ನು ಕೇಳಲಾಗಿ ತನ್ನ ಬಳಿ ಯಾವುದೇ ರೀತಿಯ ಅನುಮತಿ ಪತ್ರ ಇಲ್ಲವೆಂದು ತಿಳಿಸಿದ್ದರ ಮೇರೆಗೆ  ಮತ್ತು ಅಲ್ಲಿಯೇ ಸುತ್ತಲೂ 02 ಖಾಲಿ ಬಿದ್ದಿದ್ದ 90 ಎಂ.ಎಲ್ ನ ಹೈವಾಡ್ಸ್ ಚಿಯರ್ಸ್ ವಿಸ್ಕಿಯ ಟೆಟ್ರಾ ಪ್ಯಾಕೆಟ್ ಗಳು 2 ಪ್ಲಾಸ್ಟಿಕ್  ಕಪ್ ಗಳನ್ನು ಮತ್ತು ಒಂದು ಪ್ಲಾಸ್ಟಿಕ್ ಬ್ಯಾಗನ್ನು  ಪಂಚನಾಮೆಯ ಮೂಲಕ  ಮದ್ಯಾಹ್ನ 1-45 ಗಂಟೆಯಿಂದ 2-45 ಗಂಟೆಯ ಸಮಯದವರೆಗೆ ಅವುಗಳನ್ನು ಪಂಚನಾಮೆಯ ಮೂಲಕ ಅಮಾನತ್ತು ಪಡಿಸಿಕೊಂಡಿರುತ್ತೆ ಸ್ಥಳದಲ್ಲಿ ದೊರೆತ ಮದ್ಯದ ಬೆಲೆ ಸುಮಾರು 303/-ರೂಪಾಯಿಗಳು ಬೆಲೆಬಾಳದ್ದಾಗಿರುತ್ತೆ. ದೊರೆತ ಮಾಲನ್ನು ಹಾಗೂ ಸಾರ್ವಜನಿಕರಿಗೆ ಕುಡಿಯಲು ಅನುವು ಮಾಡಿಕೊಟ್ಟಿದ್ದ ಹನುಮಂತರಾಯಪ್ಪ ಬಿನ್ ಲೇಟ್ ಹನುಮಂತಪ್ಪ ರವರನ್ನು ವಶಕ್ಕೆ ಪಡೆದುಕೊಂಡು ಹಾಜರುಪಡಿಸುತ್ತಿದ್ದು, ಇವನ ಮೇಲೆ ಕಾನೂನಿನ ರೀತ್ಯಾ ಕ್ರಮ ಜರುಗಿಸಬೇಕೆಂದು ಕೋರಿ ಕೊಟ್ಟ ದೂರು.

 1. ಮಂಚೇನಹಳ್ಳಿ ಪೊಲೀಸ್ ಠಾಣೆ ಮೊ.ಸಂ. 290/2019 ಕಲಂ. 379 ಐ.ಪಿ.ಸಿ :-

     ದಿನಾಂಕ:19/10/2019 ರಂದು ಪಿರ್ಯಾದಿದಾರರಾದ ಶ್ರೀ ನಮೀತ್ ಕುಮಾರ್ ಜೈನ್ ಎ ಬಿನ್ ಡಿ ಅಜಿತ್ ಕುಮಾರ್ ಜೈನ್ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ನಾವು ಮಂಚೇನಹಳ್ಳಿ ಗ್ರಾಮದ ಬ್ರೈಟ್ ಶಾಲೆಯ ಬಳಿ ವಾಸವಾಗಿದ್ದು, ದಿನಾಂಕ:31/08/2019 ರಂದು ನನ್ನ ಬಾಬತ್ತು ದ್ವಿಚಕ್ರ ವಾಹನ ನೋಂದಣಿ ಸಂಖ್ಯೆ KA-40 EB-9885 ಬಜಾಜ್ ಪ್ಲಾಟಿನವನ್ನು ರಾತ್ರಿ 9-00 ಗಂಟೆಯ ಸಮಯದಲ್ಲಿ ಮನೆಯ ಮುಂಭಾಗ ಕಾಂಪೌಂಡ್ ನಲ್ಲಿ ನಿಲ್ಲಿಸಿ ಮಲಗಿಕೊಂಡಿದ್ದು, ನಂತರ ದಿನಾಂಕ:01/09/2019 ರಂದು ಬೆಳಿಗ್ಗೆ 6-00 ಗಂಟೆಗೆ ಎದ್ದು ನೋಡಲಾಗಿ ತಮ್ಮ ದ್ವಿಚಕ್ರ ವಾಹನ ಇಲ್ಲದೆ ಇದ್ದು, ನಂತರ ಯಾರಾದರೂ ತೆಗೆದುಕೊಂಡು ಹೋಗಿರಬಹುದೆಂದು ನೋಡಿದರು ಯಾರೂ ತಂದು ಬಿಟ್ಟಿರುವುದಿಲ್ಲ ಸದರಿ ದ್ವಿಚಕ್ರ ವಾಹನವನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು, ಎಲ್ಲಾ ಕಡೆಗಳಲ್ಲಿ ಹುಡುಕಾಡಲಾಗಿ ಎಲ್ಲಿಯೂ ಸಿಗದೆ ಇದ್ದ ಕಾರಣ ಈ ದಿನ ತಡವಾಗಿ ಬಂದು ದೂರು ನೀಡುತ್ತಿದ್ದು, ತನ್ನ ದ್ವಿಚಕ್ರ ವಾಹನ ಮತ್ತು ಕಳ್ಳರನ್ನು ಪತ್ತೆ ಮಾಡಿ ಮುಂದಿನ ಕಾನೂನು ಕ್ರಮ ಜರುಗಿಸಲು ಕೋರಿ ಕೊಟ್ಟ ದೂರು.

 1. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 356/2019 ಕಲಂ. 15(ಎ), 32(3) ಕೆ.ಇ ಆಕ್ಟ್ :-

     ದಿನಾಂಕ: 18-10-2019 ರಂದು ಮದ್ಯಾಹ್ನ 3-00 ಗಂಟೆಯಲ್ಲಿ ಪೊಲೀಸ್ ಠಾಣೆಯಲ್ಲಿ ಕರ್ತವ್ಯದಲ್ಲಿದ್ದಾಗ ಅಬ್ಲೂಡು ಗ್ರಾಮದಲ್ಲಿ ಒಬ್ಬ ವ್ಯಕ್ತಿ ಶಿಡ್ಲಘಟ್ಟ ದಿಬ್ಬೂರಹಳ್ಳಿ ರಸ್ತೆ ಪಕ್ಕದ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಮದ್ಯವನ್ನು ಕುಡಿಯಲು ಸ್ಥಳಾವಕಾಶವನ್ನು ಮಾಡಿ ಕೊಟ್ಟಿರುವುದಾಗಿ ಮಾಹಿತಿದಾರರಿಂದ ಬಂದ ಖಚಿತ ಮಾಹಿತಿ ಮೇರೆಗೆ ಕೂಡಲೇ ಸಿಬ್ಬಂದಿಯವರಾದ ಸಿಪಿಸಿ-444 ನಾರಾಯಣಸ್ವಾಮಿ ಮತ್ತು ಸಿಪಿಸಿ-548 ಕೃಷ್ಣಪ್ಪ ಮತ್ತು ರವರೊಂದಿಗೆ ಸರ್ಕಾರಿ ಕೆಎ-40-ಜಿ-357 ಜೀಪಿನಲ್ಲಿ ಅಬ್ಲೂಡು ಗ್ರಾಮಕ್ಕೆ ಮದ್ಯಾಹ್ನ 3-15 ಗಂಟೆಗೆ ಬೇಟಿ ನೀಡಿ ಸಿಪಿಸಿ-444 ರವರಿಗೆ ಇಬ್ಬರು ಪಂಚರನ್ನು ಬರಮಾಡಿಕೊಂಡು ಅವರಿಗೆ ದಾಳಿಯ ಬಗ್ಗೆ ಮಾಹಿತಿ ನೀಡಿ ಪಂಚಾಯ್ತಿದಾರರೊಂದಿಗೆ ಮತ್ತು ಸಿಬ್ಬಂಧಿಯೊಂದಿಗೆ ಶಿಡ್ಲಘಟ್ಟ ದಿಬ್ಬೂರಹಳ್ಳಿ ರಸ್ತೆಯ ಕೆಂಪನಹಳ್ಳಿ ಗೇಟ್ ಬಳಿ ಹೋಗುವಷ್ಟರಲ್ಲಿ ಮದ್ಯಪಾನ ಮಾಡುತ್ತಿದ್ದ ಆಸಾಮಿಗಳು ಸಮವಸ್ತ್ರದಲ್ಲಿದ್ದ ನಮ್ಮನ್ನು ನೋಡಿ ಓಡಿ ಹೋಗಿದ್ದು ಆ ಪೈಕಿ ಮದ್ಯ ಮಾರಾಟ ಮಾಡುತ್ತಿದ್ದ ಆಸಾಮಿಯನ್ನು ಹಿಡಿದು ಹೆಸರು ವಿಳಾಸ ಕೇಳಲಾಗಿ ಮಧು ಬಿನ್ ನರಸಪ್ಪ, ಸುಮಾರು 25 ವರ್ಷ,ಪ.ಜಾತಿ[ಎಕೆ] ಪಾಲಿಹೌಸ್ ನಿರ್ಮಿಸುವ ಕೂಲಿ ಕೆಲಸ,ಸ್ವಂತ ಸ್ಥಳ ನೇರಳಘಟ್ಟ ಗ್ರಾಮ,ಕಸಬಾಹೋಬಳಿ, ದೊಡ್ಡಬಳ್ಳಾಪುರ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ ಎಂತ ತಿಳಿಸಿದ್ದು ಸದರಿ ಆಸಾಮಿಯ ಬಳಿ ಒಂದು ಕಪ್ಪು ಬಣ್ಣದ ಪ್ಲಾಸ್ಟಿಕ್ ಕವರ್ ಇದ್ದು ಪರಿಶೀಲಿಸಲಾಗಿ ಸದರಿ ಕವರ್ ನಲ್ಲಿ Original Choice Whisky ಟೆಟ್ರಾ ಪ್ಯಾಕೇಟ್ ಗಳಿದ್ದು ಸದರಿ ಟೆಟ್ರಾ ಪ್ಯಾಕೇಟ್ ಗಳು 90 Ml ನ Original Choice Whisky 16 ಟೆಟ್ರಾ ಪ್ಯಾಕೆಟ್ ಗಳಿದ್ದು ಪ್ರತಿಯೊಂದರ ಬೆಲೆ Rs. 30.32 ರೂಗಳಾಗಿದ್ದು ಒಟ್ಟು Rs. 485-00ರೂಗಳಾಗಿರುತ್ತೆ (ನಾಲ್ಕು ನೂರ  ಎಂಬತ್ತೈದು ರೂ ) ಹಾಗೂ ಸ್ಥಳದಲ್ಲಿ ಪರಿಶೀಲಿಸಲಾಗಿ ಒಂದು ಖಾಲಿ ಪ್ಲಾಸ್ಟಿಕ್ ಲೋಟ, ಒಂದು ಲೀಟರ್ ನ ಬಿಸ್ಲರಿ ನೀರಿನ ಖಾಲಿ ಬಾಟಲ್ ಹಾಗೂ Original Choice Whisky  90 Ml ನ 1 ಖಾಲಿ ಟೆಟ್ರಾ ಪ್ಯಾಕೇಟ್ ಗಳಿದ್ದು ಮದ್ಯಾಹ್ನ 3-30 ಗಂಟೆಯಿಂದ ಸಂಜೆ 4-15 ಗಂಟೆಯವರೆಗೆ ಮಹಜರ್ ಮೂಲಕ ಅಮಾನತ್ತು ಪಡಿಸಿಕೊಂಡು ಮಾಲು ಮತ್ತು ಆರೋಪಿಯೊಂದಿಗೆ ಸಂಜೆ 4-30 ಗಂಟೆಗೆ ಠಾಣೆಗೆ ವಾಪಸ್ಸು ಬಂದು ಆರೋಪಿಯ ವಿರುದ್ದ ಠಾಣಾ ಮೊ.ಸಂ 356/2019 ಕಲಂ 15(ಎ), 32(3) ಕೆ.ಇ. ಆಕ್ಟ್ ರೀತ್ಯಾ ಸ್ವತಃ ಪ್ರಕರಣವನ್ನು ದಾಖಲಿಸಿಕೊಂಡಿರುತ್ತೆ.

 1. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 357/2019 ಕಲಂ. 15(ಎ), 32(3) ಕೆ.ಇ ಆಕ್ಟ್ :-

     ದಿನಾಂಕ.18.10.2019 ರಂದು ಸಂಜೆ 5.00 ಗಂಟೆ ಸಮಯದಲ್ಲಿ ನಾನು ಠಾಣೆಯಲ್ಲಿ ಕರ್ತವ್ಯದಲ್ಲಿದ್ದಾಗ ಶಿಡ್ಲಘಟ್ಟ ತಾಲ್ಲೂಕು ಹನುಮಂತಪುರ ಗ್ರಾಮದಲ್ಲಿ ಕೇಶವ ಎಂ ಬಿನ್ ಮುನಿಶಾಮಪ್ಪ, ರವರು ಹನುಮಂತಪುರ ಗ್ರಾಮದ ಅವರ ಅಂಗಡಿಯ ಮುಂಭಾಗದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಕಲ್ಲು ಜಗುಲಿಯ ಮೇಲೆ ಅಕ್ರಮವಾಗಿ ಮಧ್ಯದ ಪಾಕೇಟುಗಳನ್ನಿಟ್ಟುಕೊಂಡು ಮಾರಾಟ ಮಾಡುತ್ತಾ ಸಾರ್ವಜನಿಕರಿಗೆ ಕುಡಿಯಲು ಸ್ಥಳಾವಕಾಶ ಮಾಡುತ್ತಿರುವುದಾಗಿ ಬಂದ ಮಾಹಿತಿ ಮೇರೆಗೆ ಕೂಡಲೇ ಸಿಬ್ಬಂದಿಯವರಾದ ಪಿಸಿ 548 ಕೃಷ್ಣಪ್ಪ, ಸಿಪಿಸಿ 379 ಮಂಜುನಾಥ, ರವರೊಂದಿಗೆ ಠಾಣಾ ಜೀಪು ಸಂಖ್ಯೆ ಕೆಎ.40.ಜಿ.357 ಜೀಪಿನಲ್ಲಿ ಹನುಮಂತಪುರ ಗ್ರಾಮಕ್ಕೆ ಹೋಗಿ ಪಿಸಿ 548 ರವರಿಗೆ ಇಬ್ಬರು ಪಂಚಾಯ್ತಿದಾರರನ್ನು ನನ್ನ ಮುಂದೆ ಹಾಜರುಪಡಿಸುವಂತೆ ತಿಳಿಸಿದ್ದು ಅದರಂತೆ ಪಿಸಿ 548 ಕೃಷ್ಣಪ್ಪ ರವರು ಇಬ್ಬರು ಪಂಚಾಯ್ತಿದಾರರನ್ನು ಹಾಜರುಪಡಿಸಿದ್ದು ಅವರಿಗೆ ದಾಳಿಯ ಬಗ್ಗೆ ಮಾಹಿತಿಯನ್ನು ತಿಳಿಸಿ ಪಂಚರು ಮತ್ತು ಸಿಬ್ಬಂದಿಯೊಂದಿಗೆ ಸರ್ಕಾರಿ ಜೀಪಿನಲ್ಲಿ ಮದ್ಯಾಹ್ನ  5.15 ಗಂಟೆಗೆ ಕೇಶವ ಎಂ ಬಿನ್ ಮುನಿಶಾಮಪ್ಪ ರವರ ಅಂಗಡಿಯ ಬಳಿ ಸ್ವಲ್ಪ ದೂರದಲ್ಲಿ ಜೀಪು ನಿಲ್ಲಿಸಿ ಮರೆಯಲ್ಲಿ ವಾಚ್ ಮಾಡಲಾಗಿ ಒಬ್ಬ ಅಸಾಮಿ ಮನೆಯ ಮುಂಭಾಗದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಕಲ್ಲು ಜಗುಲಿಯ ಮೇಲೆ ಅಕ್ರಮವಾಗಿ ಮಧ್ಯದ ಪಾಕೇಟುಗಳನ್ನು ಇಟ್ಟುಕೊಂಡು ಕೂತುಕೊಂಡಿದ್ದು, ಇಬ್ಬರು ಸಾರ್ವಜನಿಕರು ಮಧ್ಯವನ್ನು ಕುಡಿಯುತ್ತಿದ್ದರು. ಖಾತ್ರಿ ಪಡಿಸಿಕೊಂಡು ದಾಳಿಮಾಡಲಾಗಿ ಮಧ್ಯವನ್ನು ಕುಡಿಯುತ್ತಿದ್ದ ಸಾರ್ವಜನಿಕರು ಓಡಿ ಹೋಗಿದ್ದು, ಮಧ್ಯವನ್ನು ಹಿಡಿದು ಕುಳಿತುಕೊಂಡಿದ್ದ ಅಸಾಮಿಯನ್ನು ಸುತ್ತುವರೆದು ಹಿಡಿದು ಹೆಸರು ಮತ್ತು ವಿಳಾಸ ಕೇಳಲಾಗಿ, ಕೇಶವ ಎಂ ಬಿನ್ ಮುನಿಶಾಮಪ್ಪ, 45 ವರ್ಷ, ವಕ್ಕಲಿಗರು, ಅಂಗಡಿ ವ್ಯಾಪಾರ, ಹನುಮಂತಪುರ ಗ್ರಾಮ ಶಿಡ್ಲಘಟ್ಟ ತಾಲ್ಲೂಕು ಎಂತ ತಿಳಿಸಿದ್ದು ಅಲ್ಲಿಯೇ ಒಂದು ಬ್ಯಾಗಿನಲ್ಲಿ ನೋಡಲಾಗಿ ಮಧ್ಯದ ಪಾಕೇಟುಗಳಿದ್ದು, ಪರಿಶೀಲಿಸಲಾಗಿ HAYWARDS CHEERS WHISKY 90 ಎಂ.ಎಲ್. ನ 10 ಪಾಕೇಟುಗಳಿದ್ದು, ಒಂದರ ಬೆಲೆ 30.32 ರೂ.ಗಳಾಗಿದ್ದು, ಒಟ್ಟು ಬೆಲೆ 303.2 ರೂ.ಗಳಾಗಿರುತ್ತೆ. ಪಕ್ಕದಲ್ಲಿ HAYWARDS CHEERS WHISKY 90 ಎಂ.ಎಲ್. ನ 4 ಖಾಲಿ ಪಾಕೇಟುಗಳು, 3 ಪ್ಲಾಸ್ಟಿಕ್ ಗ್ಲಾಸುಗಳು, 4 ಖಾಲಿ ನೀರಿನ ಪಾಕೇಟುಗಳು ಇರುತ್ತೆ. ಸದರಿ ಎಂ ಕೇಶವ ಬಿನ್ ಮುನಿಶಾಮಪ್ಪ ರವರು ಯಾವುದೇ ಪರವಾನಗಿ ಪಡೆಯದೆ ಅಕ್ರಮವಾಗಿ ಮದ್ಯವನ್ನು ಮಾರಾಟ ಹಾಗೂ ಕುಡಿಯಲು ಸಾರ್ವಜನಿಕರಿಗೆ ಸ್ಥಳಾವಕಾಶ ಮಾಡಿಕೊಟ್ಟಿರುವುದು ಕಂಡು ಬಂದಿದ್ದರಿಂದ ಸಂಜೆ 5.30 ಗಂಟೆಯಿಂದ 6.15 ಗಂಟೆಯವರೆಗೆ ಅಮಾನತ್ತು ಪಡಿಸಿಕೊಂಡು ಮಾಲಿನೊಂದಿಗೆ ಮುಂದಿನ ಕ್ರಮಕ್ಕಾಗಿ ಸಂಜೆ 6.30 ಗಂಟೆಗೆ ಠಾಣೆಗೆ ಬಂದು ಠಾಣಾ ಮೊ.ಸಂ. 357/2019 ಕಲಂ 15(ಎ)32(3) ಕೆಇ ಆಕ್ಟ್ ರೀತ್ಯಾ ಸ್ವತಃ ಕೇಸು ದಾಖಲಿಸಿರುತ್ತೇನೆ.

 1. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 358/2019 ಕಲಂ. 15(ಎ), 32(3) ಕೆ.ಇ ಆಕ್ಟ್ :-

     ದಿನಾಂಕ.18.10.2019 ರಂದು ಸಂಜೆ 7.00 ಗಂಟೆ ಸಮಯದಲ್ಲಿ ನಾನು ಠಾಣೆಯಲ್ಲಿ ಕರ್ತವ್ಯದಲ್ಲಿದ್ದಾಗ ಶಿಡ್ಲಘಟ್ಟ ತಾಲ್ಲೂಕು ಜಂಗಮಕೋಟೆ ವೃತ್ತದಲ್ಲಿ ಮುನಿರಾಜು ಬಿನ್ ಪಿಳ್ಳಪ್ಪ, ರವರು ಜಂಗಮಕೋಟೆ ವೃತ್ತದ ಅವರ ಮಿಲ್ಟ್ರೀ ಹೊಟೇಲ್ ಮುಂಭಾಗದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಕಲ್ಲು ಜಗುಲಿಯ ಮೇಲೆ ಅಕ್ರಮವಾಗಿ ಮಧ್ಯದ ಪಾಕೇಟುಗಳನ್ನಿಟ್ಟುಕೊಂಡು ಮಾರಾಟ ಮಾಡುತ್ತಾ ಸಾರ್ವಜನಿಕರಿಗೆ ಕುಡಿಯಲು ಸ್ಥಳಾವಕಾಶ ಮಾಡುತ್ತಿರುವುದಾಗಿ ಬಂದ ಮಾಹಿತಿ ಮೇರೆಗೆ ಕೂಡಲೇ ಸಿಬ್ಬಂದಿಯವರಾದ, ಪಿಸಿ 195 ಪೃಥ್ವಿರಾಜ, ಸಿಪಿಸಿ 379 ಮಂಜುನಾಥ, ರವರೊಂದಿಗೆ ಠಾಣಾ ಜೀಪು ಸಂಖ್ಯೆ ಕೆಎ.40.ಜಿ.357 ಜೀಪಿನಲ್ಲಿ ಜಂಗಮಕೋಟೆ ವೃತ್ತಕ್ಕೆ ಹೋಗಿ ಪಿಸಿ 195 ಪೃಥ್ವಿರಜ ರವರಿಗೆ ಇಬ್ಬರು ಪಂಚಾಯ್ತಿದಾರರನ್ನು ನನ್ನ ಮುಂದೆ ಹಾಜರುಪಡಿಸುವಂತೆ ತಿಳಿಸಿದ್ದು ಅದರಂತೆ ಪಿಸಿ 195 ಪೃಥ್ವಿರಾಜ ರವರು ಇಬ್ಬರು ಪಂಚಾಯ್ತಿದಾರರನ್ನು ಹಾಜರುಪಡಿಸಿದ್ದು ಅವರಿಗೆ ದಾಳಿಯ ಬಗ್ಗೆ ಮಾಹಿತಿಯನ್ನು ತಿಳಿಸಿ ಪಂಚರು ಮತ್ತು ಸಿಬ್ಬಂದಿಯೊಂದಿಗೆ ಸಕರ್ಾರಿ ಜೀಪಿನಲಿ ಮುನಿರಾಜು ಬಿನ್ ಪಿಳ್ಳಪ್ಪ ರವರ ಮಿಲ್ಟ್ರೀ ಹೊಟೇಲ್ ಬಳಿ ಸ್ವಲ್ಪ ದೂರದಲ್ಲಿ ಜೀಪು ನಿಲ್ಲಿಸಿ ಮರೆಯಲ್ಲಿ ವಾಚ್ ಮಾಡಲಾಗಿ ಒಬ್ಬ ಅಸಾಮಿ ಮಿಲ್ಟ್ರೀ ಹೊಟೇಲ್ ಮುಂಭಾಗದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಕಲ್ಲು ಜಗುಲಿಯ ಮೇಲೆ ಅಕ್ರಮವಾಗಿ ಮಧ್ಯದ ಪಾಕೇಟುಗಳನ್ನು ಇಟ್ಟುಕೊಂಡು ಕೂತುಕೊಂಡಿದ್ದು, ಇಬ್ಬರು ಸಾರ್ವಜನಿಕರು ಮಧ್ಯವನ್ನು ಕುಡಿಯುತ್ತಿದ್ದರು. ಖಾತ್ರಿ ಪಡಿಸಿಕೊಂಡು ದಾಳಿಮಾಡಲಾಗಿ ಮಧ್ಯವನ್ನು ಕುಡಿಯುತ್ತಿದ್ದ ಸಾರ್ವಜನಿಕರು ಓಡಿ ಹೋಗಿದ್ದು, ಮಧ್ಯವನ್ನು ಹಿಡಿದು ಕುಳಿತುಕೊಂಡಿದ್ದ ಅಸಾಮಿಯನ್ನು ಸುತ್ತುವರೆದು ಹಿಡಿದು ಹೆಸರು ಮತ್ತು ವಿಳಾಸ ಕೇಳಲಾಗಿ, ಮುನಿರಾಜು ಬಿನ್ ಪಿಳ್ಳಪ್ಪ, 58 ವರ್ಷ, ಗೊಲ್ಲರು, ಮಿಟ್ರೀ ಹೊಟೇಲ್ ವ್ಯಾಪಾರ, ಅನುಪಳ್ಳಿ ಗ್ರಾಮ ಹೊಸಕೀಟೆ ತಾಲ್ಲೂಕು ಬೆಂಗಳೂರು ಗ್ರಾಮಾಂತರ ಜಿಲ್ಲೆ ಎಂತ ತಿಳಿಸಿದ್ದು ಅಲ್ಲಿಯೇ ಒಂದು ಬ್ಯಾಗಿನಲ್ಲಿ ನೋಡಲಾಗಿ ಮಧ್ಯದ ಪಾಕೇಟುಗಳಿದ್ದು, ಪರಿಶೀಲಿಸಲಾಗಿ HAYWARDS CHEERS WHISKY 90 ಎಂ.ಎಲ್. 8 ಪಾಕೇಟುಗಳಿದ್ದು, ಒಂದರ ಬೆಲೆ 30.32 ರೂ.ಗಳಾಗಿದ್ದು, ಒಟ್ಟು ಬೆಲೆ 242.56 ರೂ.ಗಳಾಗಿರುತ್ತೆ. ಪಕ್ಕದಲ್ಲಿ HAYWARDS CHEERS WHISKY 90 ಎಂ.ಎಲ್. ನ 3 ಖಾಲಿ ಪಾಕೇಟುಗಳು, 4 ಪ್ಲಾಸ್ಟಿಕ್ ಗ್ಲಾಸುಗಳು, 4 ಖಾಲಿ ನೀರಿನ ಪಾಕೇಟುಗಳು ಇರುತ್ತೆ. ಸದರಿ ಮುನಿರಾಜು ಬಿನ್ ಪಿಳ್ಳಪ್ಪ ರವರು ಯಾವುದೇ ಪರವಾನಗಿ ಪಡೆಯದೆ ಅಕ್ರಮವಾಗಿ ಮದ್ಯವನ್ನು ಮಾರಾಟ ಹಾಗೂ  ಕುಡಿಯಲು ಸಾರ್ವಜನಿಕರಿಗೆ ಸ್ಥಳಾವಕಾಶ ಮಾಡಿಕೊಟ್ಟಿರುವುದು ಕಂಡು ಬಂದಿದ್ದರಿಂದ ರಾತ್ರಿ 7.30 ಗಂಟೆಯಿಂದ 8.15 ಗಂಟೆಯವರೆಗೆ ಅಮಾನತ್ತು ಪಡಿಸಿಕೊಂಡು ಮಾಲಿನೊಂದಿಗೆ ಮುಂದಿನ ಕ್ರಮಕ್ಕಾಗಿ ರಾತ್ರಿ 10.00 ಗಂಟೆಗೆ ಠಾಣೆಗೆ ಬಂದು ಠಾಣಾ ಮೊ.ಸಂ. 358/2019 ಕಲಂ 15(ಎ)32(3) ಕೆಇ ಆಕ್ಟ್ ರೀತ್ಯಾ ಸ್ವತಃ ಕೇಸು ದಾಖಲಿಸಿರುತ್ತೇನೆ.

 1. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 359/2019 ಕಲಂ. 15(ಎ), 32(3) ಕೆ.ಇ ಆಕ್ಟ್ :-

     ದಿನಾಂಕ.18.10.2019 ರಂದು ರಾತ್ರಿ 8.15 ಗಂಟೆ ಸಮಯದಲ್ಲಿ ನಾನು ಜಂಗಮಕೋಟೆ ವೃತ್ತದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಅಕ್ರಮ ಮದ್ಯಮಾರಾಟ ಮತ್ತು ಮದ್ಯಪಾನ ಮಾಡಲು ಸ್ಥಳವಕಾಶ ಮಾಡಿಕೊಟ್ಟಿರುವ ಬಗ್ಗೆ ದಾಳಿ ಕರ್ತವ್ಯದಲ್ಲಿದ್ದಾಗ ಶಿಡ್ಲಘಟ್ಟ ತಾಲ್ಲೂಕು ತೊಟ್ಲಿಗಾನಹಳ್ಳಿ ಗ್ರಾಮದ ಕೃಷ್ಣಪ್ಪ ಬಿನ್ ದೊಡ್ಡಪೆದ್ದಣ್ಣ, ರವರು ತೊಟ್ಲಿಗಾನಹಳ್ಳಿ ಗ್ರಾಮದಲ್ಲಿ ಅವರ ಮನೆಯ ಮುಂಬಾಗದ ಸಾರ್ವಜನಿಕ ಸ್ಥಳದಲ್ಲಿ ಕಲ್ಲು ಜಗುಲಿಯ ಮೇಲೆ ಅಕ್ರಮವಾಗಿ ಮಧ್ಯದ ಪಾಕೇಟುಗಳನ್ನಿಟ್ಟುಕೊಂಡು ಮಾರಾಟ ಮಾಡುತ್ತಾ ಸಾರ್ವಜನಿಕರಿಗೆ ಕುಡಿಯಲು ಸ್ಥಳಾವಕಾಶ ಮಾಡುತ್ತಿರುವುದಾಗಿ ಬಂದ ಮಾಹಿತಿ ಮೇರೆಗೆ ಕೂಡಲೇ ಸಿಬ್ಬಂದಿಯವರಾದ, ಪಿಸಿ 195 ಪೃಥ್ವಿರಾಜ, ಸಿಪಿಸಿ 379 ಮಂಜುನಾಥ, ಹಾಗೂ ಈಗಾಗಲೇ ಜಂಗಮಕೋಟೆ ವೃತ್ತದಲ್ಲಿ ದಾಳಿ ಸಮಯದಲ್ಲಿ ಹಾಜರಿದ್ದ ಪಂಚರೊಂದಿಗೆ ಠಾಣಾ ಜೀಪು ಸಂಖ್ಯೆ ಕೆಎ.40.ಜಿ.357 ಜೀಪಿನಲ್ಲಿ ಕೃಷ್ಣಪ್ಪ ಬಿನ್ ದೊಡ್ಡಪೆದ್ದಣ್ಣ ರವರ ಮನೆಯ ಬಳಿ ಸ್ವಲ್ಪ ದೂರದಲ್ಲಿ ಜೀಪು ನಿಲ್ಲಿಸಿ ಮರೆಯಲ್ಲಿ ವಾಚ್ ಮಾಡಲಾಗಿ ಒಬ್ಬ ಅಸಾಮಿ ಮನೆಯ ಮುಂಭಾಗದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಕಲ್ಲು ಜಗುಲಿಯ ಮೇಲೆ ಅಕ್ರಮವಾಗಿ ಮಧ್ಯದ ಪಾಕೇಟುಗಳನ್ನು ಇಟ್ಟುಕೊಂಡು ಕೂತುಕೊಂಡಿದ್ದು, ಇಬ್ಬರು ಸಾರ್ವಜನಿಕರು ಮಧ್ಯವನ್ನು ಕುಡಿಯುತ್ತಿದ್ದರು. ಖಾತ್ರಿ ಪಡಿಸಿಕೊಂಡು ದಾಳಿಮಾಡಲಾಗಿ ಮಧ್ಯವನ್ನು ಕುಡಿಯುತ್ತಿದ್ದ ಸಾರ್ವಜನಿಕರು ಓಡಿ ಹೋಗಿದ್ದು, ಮಧ್ಯವನ್ನು ಹಿಡಿದು ಕುಳಿತುಕೊಂಡಿದ್ದ ಅಸಾಮಿಯನ್ನು ಸುತ್ತುವರೆದು ಹಿಡಿದು ಹೆಸರು ಮತ್ತು ವಿಳಾಸ ಕೇಳಲಾಗಿ, ಕೃಷ್ಣಪ್ಪ ಬಿನ್ ದೊಡ್ಡಪೆದ್ದಣ್ಣ, 55 ವರ್ಷ, ನಾಯಕ, ಕೂಲಿ ಕೆಲಸ, ತೊಟ್ಲಿಗಾನಹಳ್ಳಿ ಗ್ರಾಮ ಶಿಡ್ಲಘಟ್ಟ ತಾಲ್ಲೂಕು ಚಿಕ್ಕಬಳ್ಳಾಪುರ ಜಿಲ್ಲೆ ಎಂತ ತಿಳಿಸಿದ್ದು ಅಲ್ಲಿಯೇ ಒಂದು ಬ್ಯಾಗಿನಲ್ಲಿ ನೋಡಲಾಗಿ ಮಧ್ಯದ ಪಾಕೇಟುಗಳಿದ್ದು, ಪರಿಶೀಲಿಸಲಾಗಿ ORIGINAL CHOICE DELUXE WHISKY 90 ಎಂ.ಎಲ್. 8 ಪಾಕೇಟುಗಳಿದ್ದು, ಒಂದರ ಬೆಲೆ 30.32 ರೂ.ಗಳಾಗಿದ್ದು, ಒಟ್ಟು ಬೆಲೆ 242.56 ರೂ.ಗಳಾಗಿರುತ್ತೆ. ಪಕ್ಕದಲ್ಲಿ ORIGINAL CHOICE DELUXE WHISKY 90 ಎಂ.ಎಲ್. ನ 3 ಖಾಲಿ ಪಾಕೇಟುಗಳು, 4 ಪ್ಲಾಸ್ಟಿಕ್ ಗ್ಲಾಸುಗಳು, 4 ಖಾಲಿ ನೀರಿನ ಪಾಕೇಟುಗಳು ಇರುತ್ತೆ. ಸದರಿ ಕೃಷ್ಣಪ್ಪ ಬಿನ್ ದೊಡ್ಡಪೆದ್ದಣ್ಣ ರವರು ಯಾವುದೇ ಪರವಾನಗಿ ಪಡೆಯದೆ ಅಕ್ರಮವಾಗಿ ಮದ್ಯವನ್ನು ಮಾರಾಟ ಹಾಗೂ  ಕುಡಿಯಲು ಸಾರ್ವಜನಿಕರಿಗೆ ಸ್ಥಳಾವಕಾಶ ಮಾಡಿಕೊಟ್ಟಿರುವುದು ಕಂಡು ಬಂದಿದ್ದರಿಂದ ರಾತ್ರಿ 8.45 ಗಂಟೆಯಿಂದ 9.30 ಗಂಟೆಯವರೆಗೆ ಅಮಾನತ್ತು ಪಡಿಸಿಕೊಂಡು ಮಾಲಿನೊಂದಿಗೆ ಮುಂದಿನ ಕ್ರಮಕ್ಕಾಗಿ ರಾತ್ರಿ 10.15 ಗಂಟೆಗೆ ಠಾಣೆಗೆ ಬಂದು ಠಾಣಾ ಮೊ.ಸಂ. 359/2019 ಕಲಂ 15(ಎ)32(3) ಕೆಇ ಆಕ್ಟ್ ರೀತ್ಯಾ ಸ್ವತಃ ಕೇಸು ದಾಖಲಿಸಿರುತ್ತೇನೆ.

 1. ಶಿಡ್ಲಘಟ್ಟ ಪುರ ಪೊಲೀಸ್ ಠಾಣೆ ಮೊ.ಸಂ. 149/2019 ಕಲಂ. 323-324-427-504-506 ರೆ/ವಿ 34 ಐ.ಪಿ.ಸಿ :-

     ದಿನಾಂಕ.18.10.2019 ರಂದು ರಾತ್ರಿ 8.00 ಗಂಟೆಗೆ ಪಿರ್ಯಾದಿ ಶ್ರೀಮತಿ. ನಸೀಬಾ ರವರು ಠಾಣೆಗೆ ಹಾಜರಾಗಿ ತಾನು ನನ್ನ ಗಂಡ ಮತ್ತು ಮಕ್ಕಳೊಂದಿಗೆ ರೇಷ್ಮೇ ಕೆಲಸದಿಂದ ಜೀವನ ಮಾಡಿಕೊಂಡಿರುತ್ತೇನೆ. ದಿನಾಂಕ.16.10.2019 ರಂದು ಸಂಜೆ ಸುಮಾರು 6.30 ಗಂಟೆಯಲ್ಲಿ ತಾನು ನನ್ನ ಗಂಡ ಮಹಮದ್ ಹಫೀಸ್ ರವರು ನಮ್ಮ ಮನೆಯ ಮುಂದೆ ಇದ್ದಾಗ ಇದೇ ಶಿಡ್ಲಘಟ್ಟ ಟೌನ್ ಪಕ್ಕದ ಬೀದಿಯ 1ನೇ ಟಿ.ಎಂ.ಸಿ ಲೇಔಟ್ ವಾಸಿಗಳಾದ 1) ಮಹಮದ್ ಮಜರ್ ಬಿನ್ ಎಂ.ರಪೀಕ್ ಇವರ ತಂದೆ 2) ಎಂ.ರಪೀಕ್ ಬಿನ್ ಮುಸ್ತಾಫ 3] ತಸವರ್ ಬಿನ್ ಎಂ.ರಪೀಕ್ ಮತ್ತು 4) ಇಬ್ರತ್ ಬಿನ್ ಮುಬಾರಕ್ ಪಾಷ ರವರು ಕೈಗಳಲ್ಲಿ ದೊಣ್ಣೆ ಮತ್ತು ಕಲ್ಲುಗಳನ್ನು ಹಿಡಿದುಕೊಂಡು ನಮ್ಮ ಮನೆಯ ಬಳಿ ಬಂದು ಆ ಪೈಕಿ ಮಹಮದ್ ಮಜರ್ ಮತ್ತು ಎಂ.ರಪೀಕ್ ರವರು ಎಲ್ಲಿ ನಿಮ್ಮ ಮಗ ಸುಹೇಬ್ ಎಂದು ಕೇಳಿದರು. ಆಗ ತಾನು ನಮ್ಮ ಮಗ ಮನೆಯಲ್ಲಿ ಇಲ್ಲ ಹೊರಗಡೆ ಹೋಗಿದ್ದಾನೆ ಎಂದು ತಿಳಿಸಿದೆ. ಅದಕ್ಕೆ ಮಹಮದ್ ಮಜರ್ ಆ ನಿನ್ನ ಮಗನನ್ನು ಈ ದಿನ ಬಿಡುವುದಿಲ್ಲ ನನ್ನನ್ನು ಕಟ್ಟಿಂಗ್ ಶಾಪ್ ನಲ್ಲಿ ಹೊಡೆದು ಬಂದಿದ್ದಾನೆ ನಿನ್ನಮ್ಮನ ಕ್ಯಾಯಾ ಎಂದು ಬಾಯಿಗೆ ಬಂದಂತೆ ಕೆಟ್ಟ ಮಾತುಗಳಿಂದ ಬೈದು ಮಹಮದ್ ಮಜರ್ ಕೈಯಲ್ಲಿದ್ದ ದೊಣ್ಣೆಯಿಂದ ತವಸರ್ ಮತ್ತು ಇಬ್ರತ್ ಕಲ್ಲುಗಳಿಂದ ನಮ್ಮ ಮನೆಯ ಮುಂದೆ ನಿಲ್ಲಿಸಿರುವ KA.40.A.0058 ನಂಬರಿನ ಟಿ.ವಿ.ಎಸ್. ಸ್ಟಾರ್ ದ್ವಿಚಕ್ರ ವಾಹನಕ್ಕೆ ಹೊಡೆದು ಡ್ಯೂಂ ಲೈಟ್ ಇತರ ಭಾಗಗಳನ್ನು ಜಖಂಗೊಳಿಸಿರುತ್ತಾರೆ. ತಾನು ಗಂಡ ಅಡ್ಡ ಹೋದಾಗ ನೀವು ಅಡ್ಡ ಬಂದರೆ ನಿಮ್ಮನ್ನು ಹೊಡೆಯುತ್ತೇವೆಂದು ರಪೀಕ್, ತಸವರ್ ತನ್ನ ಗಂಡನ್ನು ಕೈಗಳಿಂದ ಹೊಡೆದಿರುತ್ತಾರೆ. ಮಹಮದ್ ಮಜರ್ ನನ್ನನ್ನು ದೊಣ್ಣೆಯಿಂದ ಮೈ ಮೇಲೆ ಹೊಡೆದು ನೋವುಂಟು ಮಾಡಿರುತ್ತಾನೆ. ಆಗ ನನ್ನ ಗಂಡ ಮತ್ತು ಪಕ್ಕದ ಮನೆಯ ಗೌಸ್ ಪಾಷ ಮತ್ತು ನದೀಮ್ ಪಾಷ ರವರು ಬಂದು ಜಗಳ ಬಿಡಿಸಿರುತ್ತಾರೆ. ಆಗ ಮಹಮದ್ ಮಜರ್ ಆ ನನ್ನ ಮಗ ಸುಹೇಬ್ ನಮಗೆ ಸಿಕ್ಕದರೆ ಸಾಯಿಸುತ್ತೇವೆಂದು ಪ್ರಾಣ ಬೆದರಿಕೆ ಹಾಕಿ ದೊಣ್ಣೆ ಅಲ್ಲಿಯೇ ಬಿಸಾಡಿ ಅಲ್ಲಿಂದ ಹೊರಟು ಹೋಗಿರುತ್ತಾರೆ. ಗಾಯಗೊಂಡಿದ್ದ ನಾನು ಅದೇ ದಿನ ಶಿಡ್ಲಘಟ್ಟ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದು ಈ ಗಲಾಟೆ ಬಗ್ಗೆ ಮೇಲ್ಕಂಡರನ್ನು ಕರೆಸಿ ಪಂಚಾಯ್ತಿ ಮಾಡಿ ಬಗೆಹರಿಸುವುದಾಗಿ ತಿಳಿಸಿದ್ದರು, ಆದರೆ ಮೇಲ್ಕಂಡವರು ಇದುವರೆಗೂ ಪಂಚಾಯ್ತಿಗೆ ಬಂದಿರುವುದಿಲ್ಲ. ಆದ್ದರಿಂದ ಮೇಲ್ಕಂಡವರ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಲು ಈ ದಿನ ತಡವಾಗಿ ಕೊಟ್ಟ ದೂರಿನ  ಮೇರೆಗೆ  ಠಾಣಾ ಮೊ.ಸಂ: 149/2019 ಕಲಂ: 323,324,504,506,427 ರೆ/ವಿ 34 ಐಪಿಸಿ ರೀತ್ಯ ಪ್ರಕರಣ ದಾಖಲಿಸಿರುತ್ತೆ.