ದಿನಾಂಕ : 19/06/2019ರ ಅಪರಾಧ ಪ್ರಕರಣಗಳು

 1. ಬಾಗೇಪಲ್ಲಿ ಪೊಲೀಸ್ ಠಾಣೆ. ಮೊ.ಸಂ: 138/2019 ಕಲಂ: 15(A), 32(3) ಕೆ.ಇ. ಆಕ್ಟ್:-

         ದಿನಾಂಕ:18-06-2019 ರಂದು ಮದ್ಯಾಹ್ನ 13.30 ಗಂಟೆಗೆ ಮಾನ್ಯ ಸಿಪಿಐ ಸಾಹೇಬರು ಠಾಣೆಗೆ ಹಾಜರಾಗಿ ನೀಡಿದ ವರಧಿಯ ಸಾರಾಂಶವೇನೆಂದರೆ ದಿನಾಂಕ:18-06-2019 ರಂದು ಮದ್ಯಾಹ್ನ 12.00 ಗಂಟೆ ಸಮಯದಲ್ಲಿ ನಾನು ಕಛೇರಿಯಲ್ಲಿದ್ದಾಗ ಬಂದ ಖಚಿತ ಮಾಹಿತಿ ಮೇರೆಗೆ ಕೊಂಡಂವಾರಿಪಲ್ಲಿ ಗ್ರಾಮದ ಜಯಪ್ಪ ಬಿನ್ ಕೃಷ್ಣಪ್ಪರವರ ಚಿಲ್ಲರೆ ಅಂಗಡಿಯ ಮುಂಭಾಗ ಖಾಲಿ ಜಾಗದಲ್ಲಿ ಯಾರೋ ಕೆಲವರು ಕುಳಿತುಕೊಂಡು ಕಾನೂನು ಬಾಹಿರವಾಗಿ  ಮದ್ಯಪಾನ ಮಾಡುತ್ತಿರುವುದಾಗಿ ಬಂದ ಮಾಹಿತಿ ಮೇರೆಗೆ ಮೇಲ್ಕಂಡ ಸ್ಥಳಕ್ಕೆ ಹೋದಾಗ ಸುಮಾರು 3-4 ಜನರು ಅಂಗಡಿಯ ಮುಂಭಾಗ ಖಾಲಿ ಜಾಗದಲ್ಲಿ ಕುಳಿತು ಮದ್ಯ ಸೇವನೆ ಮಾಡುತ್ತಿದ್ದವರು ಸಮವಸ್ತ್ರದಲ್ಲಿದ್ದ ನಮ್ಮನ್ನು ನೋಡಿ ಓಡಿ ಹೋದರು. ನಂತರ ಸ್ಥಳದಲ್ಲಿ ಪರಿಶೀಲಿಸಲಾಗಿ 4 ಮದ್ಯ ಸೇವನೆ  ಮಾಡಿರುವ ನಿಶಾನೆಗಳಿರುವ ಪ್ಲಾಸ್ಟಿಕ್ ಗ್ಲಾಸ್ ಗಳು ಮತ್ತು 1 ಲೀಟರ್ ಸಾಮರ್ಥ್ಯ ಹೊಂದಿರುವ 2 ನೀರಿನ ಖಾಲಿ ಬಾಟಲ್ ಗಳು, ಹಾಗೂ ಖಾಲಿಯಾಗಿರುವ 90 ಎಂ.ಎಲ್ ನ ಹೈವಾಡ್ಸ್ ವಿಸ್ಕಿಯ 4 ಟೆಟ್ರಾ ಪ್ಯಾಕೆಟ್ ಗಳು, ಮತ್ತು 180 ಎಂ. ಎಲ್ ನ ಓಲ್ಡ್ ಟವರಿನ್ 06 ಟೆಟ್ರಾ ಪ್ಯಾಕೆಟ್ ಗಳು ಇರುತ್ತವೆ. ನಂತರ ಮದ್ಯವಿರುವ  180 ಎಂ. ಎಲ್ ನ ಓಲ್ಡ್ ಟವರಿನ್ 06 ಟೆಟ್ರಾ ಪ್ಯಾಕೆಟ್ ಗಳು ಮತ್ತು 90 ಎಂ.ಎಲ್ ನ ಹೈವಾಡ್ಸ್ ವಿಸ್ಕಿಯ 4 ಟೆಟ್ರಾ ಪ್ಯಾಕೆಟ್ ಗಳು ಒಟ್ಟು 2.160 ಲೀಟರ್ ಮದ್ಯವಿದ್ದು, ಬೆಲೆ ಸುಮಾರು 1000 ರೂಪಾಯಿಗಳಾಗಿರುತ್ತವೆ. ಸದರಿ ಚಿಲ್ಲರೆ ಅಂಗಡಿಯ ಮಾಲೀಕನಾದ ಜಯಪ್ಪ ಬಿನ್ ಕೃಷ್ಣಪ್ಪ, 55 ವರ್ಷ, ಬಲಜಿಗರು, ಚಿಲ್ಲರೆ ಅಂಗಡಿ ವ್ಯಾಪಾರ, ವಾಸ ಕೊಂಡಂವಾರಿಪಲ್ಲಿ ಗ್ರಾಮ, ಬಾಗೇಪಲ್ಲಿ ತಾಲ್ಲೂಕು ರವರು ಸ್ಥಳದಿಂದ ಓಡಿಹೋಗಿರುತ್ತಾರೆ. ಮದ್ಯ ಸೇವನೆ ಮಾಡಲು ಸ್ಥಳಾವಕಾಶ ನೀಡಿರುವುದಕ್ಕೆ ಯಾವುದೇ ಪರವಾನಗಿ ಇರುವುದಿಲ್ಲ. ಸ್ಥಳದಲ್ಲಿದ್ದ 4 ಮದ್ಯ ಸೇವನೆ  ಮಾಡಿರುವ ನಿಶಾನೆಗಳಿರುವ ಪ್ಲಾಸ್ಟಿಕ್ ಗ್ಲಾಸ್ ಗಳು ಮತ್ತು 1 ಲೀಟರ್ ಸಾಮರ್ಥ್ಯ ಹೊಂದಿರುವ 2 ನೀರಿನ ಖಾಲಿ ಬಾಟಲ್ ಗಳು, ಹಾಗೂ ಖಾಲಿಯಾಗಿರುವ 90 ಎಂ.ಎಲ್ ನ ಹೈವಾಡ್ಸ್ ವಿಸ್ಕಿಯ 4 ಟೆಟ್ರಾ ಪ್ಯಾಕೆಟ್ ಗಳು, ಮತ್ತು 180 ಎಂ. ಎಲ್ ನ ಓಲ್ಡ್ ಟವರಿನ್ 06 ಟೆಟ್ರಾ ಪ್ಯಾಕೆಟ್ ಗಳನ್ನು ಫಚನಾಮೆ ಮೂಲಕ ಅಮಾನತ್ತುಪಡಿಸಿಕೊಂಡು ಠಾಣೆಗೆ ಹಾಜರಾಗಿ ಕಾನೂನು ಬಾಹಿರವಾಗಿ ಮದ್ಯ ಸೇವನೆ ಮಾಡಲು ಸ್ಥಳಾವಕಾಶ ನೀಡಿದ ಮೇಲ್ಕಂಡ ಜಯಪ್ಪ ಬಿನ್ ಕೃಷ್ಣಪ್ಪರವರ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ವರದಿಯನ್ನು ನೀಡಿರುತ್ತೇನೆ ಎಂದು ಇದ್ದ ದೂರಿನ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿರುತ್ತೆ.

 1. ಬಾಗೇಪಲ್ಲಿ ಪೊಲೀಸ್ ಠಾಣೆ. ಮೊ.ಸಂ: 139/2019 ಕಲಂ: 15(A), 32(3) ಕೆ.ಇ. ಆಕ್ಟ್:-

         ದಿನಾಂಕ:18-06-2019 ರಂದು ಮದ್ಯಾಹ್ನ 15.15 ಗಂಟೆಗೆ ಮಾನ್ಯ ಸಿಪಿಐ ಸಾಹೇಬರು ಠಾಣೆಗೆ ಹಾಜರಾಗಿ ನೀಡಿದ ವರಧಿಯ ಸಾರಾಂಶವೇನೆಂದರೆ ದಿನಾಂಕ:18-06-2019 ರಂದು ಮದ್ಯಾಹ್ನ 13.30 ಗಂಟೆ ಸಮಯದಲ್ಲಿ ನಾನು ಕಛೇರಿಯಲ್ಲಿದ್ದಾಗ ಬಂದ ಖಚಿತ ಮಾಹಿತಿ ಮೇರೆಗೆ ದೇವರಗುಡಿಪಲ್ಲಿ ಗ್ರಾಮದ ಗಂಗಾಧರಪ್ಪ ಬಿನ್ ಲಕ್ಷ್ಮಮಪ್ಪರವರ ಚಿಲ್ಲರೆ ಅಂಗಡಿಯ ಮುಂಭಾಗ ಖಾಲಿ ಜಾಗದಲ್ಲಿ ಯಾರೋ ಕೆಲವರು ಕುಳಿತುಕೊಂಡು ಕಾನೂನು ಬಾಹಿರವಾಗಿ  ಮದ್ಯಪಾನ ಮಾಡುತ್ತಿರುವುದಾಗಿ ಬಂದ ಮಾಹಿತಿ  ಮೇರೆಗೆ  ಮೇಲ್ಕಂಡ ಸ್ಥಳಕ್ಕೆ ಹೋದಾಗ ಸುಮಾರು 3-4 ಜನರು ಅಂಗಡಿಯ ಮುಂಭಾಗ ಖಾಲಿ ಜಾಗದಲ್ಲಿ ಕುಳಿತು ಮದ್ಯ ಸೇವನೆ ಮಾಡುತ್ತಿದ್ದವರು ಸಮವಸ್ತ್ರದಲ್ಲಿದ್ದ ನಮ್ಮನ್ನು ನೋಡಿ ಓಡಿ ಹೋದರು. ನಂತರ ಸ್ಥಳದಲ್ಲಿ ಪರಿಶೀಲಿಸಲಾಗಿ 6 ಮದ್ಯ ಸೇವನೆ  ಮಾಡಿರುವ ನಿಶಾನೆಗಳಿರುವ ಪ್ಲಾಸ್ಟಿಕ್ ಗ್ಲಾಸ್ ಗಳು ಮತ್ತು 1 ಲೀಟರ್ ಸಾಮರ್ಥ್ಯ ಹೊಂದಿರುವ 3 ನೀರಿನ ಖಾಲಿ ಬಾಟಲ್ ಗಳು, ಹಾಗೂ ಖಾಲಿಯಾಗಿರುವ 90 ಎಂ.ಎಲ್ ನ ಹೈವಾಡ್ಸ್ ವಿಸ್ಕಿಯ 3 ಟೆಟ್ರಾ ಪ್ಯಾಕೆಟ್ ಗಳು, ಮತ್ತು 180 ಎಂ. ಎಲ್ ನ ಓಲ್ಡ್ ಟವರಿನ್ 02 ಟೆಟ್ರಾ ಪ್ಯಾಕೆಟ್ ಗಳು ಇರುತ್ತವೆ. ನಂತರ ಮದ್ಯವಿರುವ  180 ಎಂ. ಎಲ್ ನ ಓಲ್ಡ್ ಟವರಿನ್ 08 ಟೆಟ್ರಾ ಪ್ಯಾಕೆಟ್ ಗಳು ಮತ್ತು 90 ಎಂ.ಎಲ್ ನ ಹೈವಾಡ್ಸ್ ವಿಸ್ಕಿಯ 10 ಟೆಟ್ರಾ ಪ್ಯಾಕೆಟ್ ಗಳು ಒಟ್ಟು 2.340 ಎಂ.ಎಲ್ ಮದ್ಯವಿದ್ದು, ಬೆಲೆ ಸುಮಾರು 1100 ರೂಪಾಯಿಗಳಾಗಿರುತ್ತವೆ. ಸದರಿ ಚಿಲ್ಲರೆ ಅಂಗಡಿಯ ಮಾಲೀಕನಾದ ಗಂಗಾಧರಪ್ಪ ಬಿನ್ ಲಕ್ಷ್ಮಮಪ್ಪ, 38 ವರ್ಷ, ಬಲಜಿಗರು, ಚಿಲ್ಲರೆ ಅಂಗಡಿ ವ್ಯಾಪಾರ, ವಾಸ ದೇವರಗುಡಿಪಲ್ಲಿ ಗ್ರಾಮ, ಬಾಗೇಪಲ್ಲಿ ತಾಲ್ಲೂಕು ರವರು ಸ್ಥಳದಿಂದ ಓಡಿಹೋಗಿರುತ್ತಾರೆ. ಮದ್ಯ ಸೇವನೆ ಮಾಡಲು ಸ್ಥಳಾವಕಾಶ ನೀಡಿರುವುದಕ್ಕೆ ಯಾವುದೇ ಪರವಾನಗಿ ಇರುವುದಿಲ್ಲ. ಸ್ಥಳದಲ್ಲಿದ್ದಂತಹ  ಖಾಲಿಯಾಗಿರುವ 5 ಟೆಟ್ರಾ ಪ್ಯಾಕೆಟ್ ಗಳು,  ಮದ್ಯ ಸೇವನೆ  ಮಾಡಿರುವ ನಿಶಾನೆಗಳಿರುವ 6 ಪ್ಲಾಸ್ಟಿಕ್ ಗ್ಲಾಸ್ ಗಳು ಮತ್ತು 1 ಲೀಟರ್ ಸಾಮರ್ಥ್ಯ ಹೊಂದಿರುವ 3 ನೀರಿನ ಖಾಲಿ ಬಾಟಲ್ ಗಳು, ಹಾಗೂ ಮದ್ಯವಿರುವ  90 ಎಂ.ಎಲ್ ನ 10 ಹೈವಾಡ್ಸ್ ವಿಸ್ಕಿಯ ಟೆಟ್ರಾ ಪ್ಯಾಕೆಟ್ ಗಳು, ಮತ್ತು ಓಲ್ಡ್ ಟವರಿನ್ 08 ವಿಸ್ಕಿ ಟೆಟ್ರಾ ಪ್ಯಾಕೆಟ್ ಗಳನ್ನು ಪಂಚನಾಮೆ ಮೂಲಕ ಅಮಾನತ್ತುಪಡಿಸಿಕೊಂಡು ಠಾಣೆಗೆ ಹಾಜರಾಗಿ ಕಾನೂನು ಬಾಹಿರವಾಗಿ ಮದ್ಯ ಸೇವನೆ ಮಾಡಲು ಸ್ಥಳಾವಕಾಶ ನೀಡಿದ ಮೇಲ್ಕಂಡ ಗಂಗಾಧರಪ್ಪ ಬಿನ್ ಲಕ್ಷ್ಮಮಪ್ಪರವರ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ವರದಿಯನ್ನು ನೀಡಿರುತ್ತೇನೆ, ಎಂದು ಇದ್ದ ದೂರಿನ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿರುತ್ತೆ.

 1. ಬಟ್ಲಹಳ್ಳಿ ಪೊಲೀಸ್ ಠಾಣೆ. ಮೊ.ಸಂ: 55/2019 ಕಲಂ: 323, 324, 504, 506 ಐ.ಪಿ.ಸಿ:-

         ದಿನಾಂಕ: 18/06/2019 ರಂದು ಚಿಂತಾಮಣಿ ಸರ್ಕಾರಿ ಆಸ್ಪತ್ರೆಯಿಂದ ಬಂದ ಮೆಮೋವನ್ನು ಪಡೆದು ಗಾಯಾಳು ಕೆ ಎನ್  ಹರೀಶ್ ಬಾಬು ಬಿನ್ ನರಸಿಂಹಪ್ಪ 28 ವರ್ಷ, ನಾಯಕ ಜನಾಂಗ, ಕಾಚನಹಳ್ಳಿ ಗ್ರಾಮ ಏನಿಗದೆಲೆ   ಪಂಚಾಯ್ತಿ  ಚಿಂತಾಮಣಿ ತಾ:  ರವರ ಹೇಳಿಕೆ ಪಡೆದಿದ್ದರ ಸಾರಾಂಶವೇನೆಂದರೆ, ತಾನು  ಕೋಟಗಲ್ ಗ್ರಾಮ ಮತ್ತು ಸುತ್ತಮುತ್ತಲ  ನೇರಳೆ ಹಣ್ಣು ಗಿಡಗಳನ್ನು ಖರೀದಿ ಮಾಡಿದ್ದು ಅವುಗಳನ್ನು ಸಾಗಿಸಲು ಇರಗಂಪಲ್ಲಿ ಗ್ರಾಮದ  ಚಾಂದ್ ಪಾಷ ರವರ ಟೆಂಪೋ ವಾಹನಕ್ಕೆ  ಬಾಡಿಗೆಗೆ ಮಾತಾಡಿಕೊಂಡು ಬರೋಣವೆಂತ ದಿನಾಂಕ: 17/06/2019 ರಂದು ರಾತ್ರಿ  ಸುಮಾರು 8-30 ಕ್ಕೆ ಹೋಗಿ ಚಾಂದ್ ಪಾಷ ರವನ್ನು ಮಾತಾಡಿಕೊಂಡು ಇರಗಂಪಲ್ಲಿ  ಬಸ್ ನಿಲ್ದಾಣಕ್ಕೆ  ರಾತ್ರಿ 9-00  ಗಂಟೆಗೆ ಬಂದೆ  ಬಸ್ ನಿಲ್ದಾಣದಲ್ಲಿ  ನಾನು ಕುಳಿತು ಕೊಂಡಿದ್ದಾಗ ಯಾರೋ  ಒಬ್ಬ ಆಸಾಮಿ ಬಂದು ಏ ಲೋಪರ್  ನನ್ನ ಮಗನೇ ಯಾಕೆ ಇಲ್ಲಿ  ಕುಳಿತುಕೊಂಡಿದ್ದೀಯ ಯಾವ ಊರು ನೀನು  ನಮ್ಮ ಊರಿಗೆ ಏಕೆ ಬಂದೆಯಂತ ಬೈದನು  ಆಗ ನಾನು ಚಾಂದಪಾಷ ರವರನ್ನು ಮಾತನಾಡಲು ಬಂದಿರುತ್ತೇನೆ ನೀನು ಯಾಕೆ ಬೈಯುತ್ತಿರುವುದುಯಂತ ಕೇಳಿದೆ, ಆಗ ಸದರಿ ಆಸಾಮಿ  ಕೈಗಳಿಂದ  ನನ್ನ ಕೆನ್ನೆಗೆ ಹೊಡೆದು ಕಾಲುಗಳಿಂದ  ಒದ್ದು ಮೈ ಕೈಗೆ ಮೂಗೇಟು ಉಂಟು ಮಾಡಿದರು,  ನಂತರ ಕೆಳಗೆ ಬಿದ್ದಿದ್ದ  ಒಂದು ಕಲ್ಲನ್ನು ತೆಗೆದುಕೊಂಡು ನನ್ನ ಎದೆ ಬೆನ್ನು ಭುಜಕ್ಕೆ  ಹೊಡೆದು ಮೂಗೇಟುಂಟುಮಾಡಿ  ನಿನ್ನಮ್ಮನ್ನೆ ಕೇಯ ನಿನ್ನನ್ನು ಸಾಯಿಸಿ ಬಿಡುತ್ತೇನೆಯಂತ ಕಲ್ಲಿನಿಂದ ಹಲ್ಲೆ ಮಾಡಿದನು ನಾನು ಕೂಗಿಕೊಂಡಾಗ ನೇರಳೆ ಹಣ್ಣು ಸಾಗಾಟ ವಿಚಾರವಾಗಿ ಇರಗಂಪಲ್ಲಿ  ಚಾಂದ್ ಪಾಷ ರವರ  ಮನೆಗೆ ಬಳಿಗೆ ಬಂದಿದ್ದ  ಎಂ ಗೊಲ್ಲಹಳ್ಳಿ ಗ್ರಾಮದ ನಾಗಾರ್ಜುನ ಬಿನ್ ಬಿ ರಾಮಯ್ಯ, ಬಾಬು ಬಿನ್ ಕಿಟ್ಟನ್ನ ಬಾಲರೆಡ್ಡಿಹಳ್ಳಿ ಗ್ರಾಮ ರವರು ಓಡಿ ಬಂದು ನನ್ನನ್ನು ಮೇಲ್ಕಂಡ  ಆರೋಪಿಯಿಂದ  ಬಿಡಿಸಿದರು, ನಂತರ   ಸದರಿಯವರು  ಬೈದಾಡಿಕೊಮಡು ಹೊರಟು ಹೋದನು ನಂತರ ಚಾಂದ್ ಪಾಷ ರವರು ಸಹ ಅಲ್ಲಿಗೆ ಬಂದಿದ್ದು,  ನನ್ನ ಮೇಲೆ ಹಲ್ಲೆ ಮಾಡಿದವನ ಹೆಸರು ವಿಳಾಸ ಕೇಳಲಾಗಿ ವೆಂಕಟರವಣಪ್ಪ ಬಿನ್ ವೆಂಕಟರಾಯಪ್ಪ  35 ವರ್ಷ, . ಪ.ಜಾತಿ ಜನಾಂಗ, ಚಿಂತಾಮಣಿ ಪೆಟ್ರೋಲ್ ಬಂಕ್ ನಲ್ಲಿ  ಕೆಲಸ ವಾಸ ಇರಗಂಪಲ್ಲಿ  ಎಂದು  ತಿಳಿಯಿತು  ನಂತರ ನನಗೆ ಸುಸ್ತಾಗಿದ್ದ ಕಾರಣ ಬಾಬು ಬಿನ್ ಕಿಟ್ಟನ್ನ ರವರು ಅವರ ದ್ವಿಚಕ್ರವಾಹನದಲ್ಲಿ ನಮ್ಮ ಗ್ರಾಮಕ್ಕೆ ಕರೆದುಕೊಂಡು ಹೋಗಿರುತ್ತಾರೆ ನಂತರ ಬೆಳಿಗ್ಗೆ ನನಗೆ ಮೈಕೈನೋವು ಜಾಸ್ತಿಯಾಗಿದ್ದರಿಂದ ಚಿಂತಾಮಣಿ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಾಗಿರುತ್ತೇನೆ. ಮೇಲ್ಕಂಡ ಆಸಾಮಿಯನ್ನು ನೋಡಿದ್ದು ಮತ್ತೆ ನೋಡಿದರೆ ಗುರ್ತಿಸುತ್ತೇನೆ. ಮೇಲ್ಕಂಡ ಆಸಾಮಿಯ ವಿರುದ್ದ ಕಾನೂನು ರೀತ್ಯ ಕ್ರಮ ಜರುಗಿಸಬೇಕೆಂದು ಕೋರಿ ನೀಡಿದ ದೂರನ್ನು ಪಡೆದು  ಪ್ರಕರಣ ದಾಖಲಿಸಿರುತ್ತೆ.

 1. ಚೇಳೂರು ಪೊಲೀಸ್ ಠಾಣೆ. ಮೊ.ಸಂ: 36/2019 ಕಲಂ: 15(A), 32(3) ಕೆ.ಇ. ಆಕ್ಟ್:-

         ದಿನಾಂಕ-18-06-2019 ರಂದು ಸಂಜೆ 18.00 ಗಂಟೆಗೆ ಎ.ಎಸ್.ಐ ಮಹಮದ್ ಶಫಿ ರವರು ಠಾಣೆಗೆ ಮಾಲು ಆಸಾಮಿ, ಮತ್ತು ಪಂಚನಾಮೆ ಯೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ವರದಿಯ ಸಾರಾಂಶ ವೇನೆಂದರೆ. ದಿನಾಂಕ:- 18-06-2019 ರಂದು 16.30 ಗಂಟೆಗೆ ಎ.ಎಸ್.ಐ ಮಹಮದ್ ಶಫಿ ಆದ ನಾನು ಮತ್ತು ಠಾಣೆಯ ಹೆಚ್.ಸಿ 129 ರವಣಪ್ಪ, ರವರೊಂದಿಗೆ ಠಾಣಾ ಸರಹದ್ದು ಇದ್ದಿಲವಾರಿಪಲ್ಲಿ. ಪುಲಿಗಲ್ ಗ್ರಾಮಗಳ ಕಡೆ  ದ್ವಿಚಕ್ರ ವಾಹನದಲ್ಲಿ ಗಸ್ತು ಮಾಡುತ್ತಿದ್ದಾಗ  ವೆಂಕಟಾಪುರ ಗ್ರಾಮದ ವಾಸಿ ನಾಗರಾಜು ಎಂಬುವರು ತನ್ನ ಬಾಬತ್ತು ಚಿಲ್ಲರೆ ಅಂಗಡಿ ಮುಂಭಾಗದಲ್ಲಿ ಯಾವುದೇ  ಪರವಾನಿಗೆ ಇಲ್ಲದೆ ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಮದ್ಯದ ಸೇವನೆಗೆ ಅವಕಾಶ ಮಾಡಿಕೊಟ್ಟಿರುವುದಾಗಿ ಮಾಹಿತಿ ಬಂದಿದ್ದು ಅದರಂತೆ ನಾವು  ವೆಂಕಟಾಪುರ ಗೇಟ್ ಬಳಿ ಪಂಚರನ್ನು ಬರಮಾಡಿಕೊಂಡು ಮೇಲ್ಕಂಡ ಸ್ಥಳಕ್ಕೆ ಹೋಗಿ ನೋಡಲಾಗಿ ಸ್ಥಳದಲ್ಲಿ ಮದ್ಯಸೇವನೆ ಮಾಡುತ್ತಿದ್ದವರು, ಸಮವಸ್ತ್ರದಲ್ಲಿದ್ದ  ನಮ್ಮನ್ನು ಕಂಡು ತಮ್ಮ ಕೈಯಲ್ಲಿದ್ದ ಪ್ಲಾಸ್ಟಿಕ್ ಲೋಟಗಳನ್ನು ಬಿಸಾಡಿ  ಓಡಿ ಹೋದರು ನಂತರ ಸ್ಥಳದಲ್ಲಿದ್ದ ಅಂಗಡಿ ಮಾಲಿಕನಾದ ನಾಗರಾಜುರವರನ್ನು ನಿನ್ನ ಅಂಗಡಿ ಮುಂಭಾಗ  ಸಾರ್ವಜನಿಕರಿಗೆ ಮದ್ಯಸೇವನೆಗೆ ಅವಕಾಶ ನೀಡಲು ಯಾವುದಾದು ಪರವಾನಿಗೆ ಇದೆಯೇ ಎಂದು ಕೇಳಲಾಗಿ ಸದರಿ ಯವರು ಯಾವುದೇ ಪರವಾನಿಗೆ ಇರುವುದಿಲ್ಲವೆಂದು ತಿಳಿಸಿರದ್ದು  ನಂತರ ಸ್ಥಳದಲ್ಲಿಯೇ ಕುಡಿದು  ಬಿಸಾಡಿದ್ದ  4  ಪ್ಲಾಸ್ಟಿಕ್  ಲೋಟಗಳು, 90 ಎಂ.ಎಲ್ ಮೂರು  ಖಾಲಿ HAYWARDS CHEERS WHISKY ಟೆಟ್ರಾ ಪ್ಯಾಕೇಟ್  ಹಾಗೂ ಅಲ್ಲಿಯೇ ಬಿಸಾಡಿದ್ದ ಪ್ಲಾಸ್ಟಿಕ್ ಚೀಲವನ್ನು ಪರಶೀಲಿಸಲಾಗಿ   90 ಎಂ.ಎಲ್ ಏಳು ಪೂರ್ತಿತುಂಬಿದ  HAYWARDS CHEERS WHISKY ಟೆಟ್ರಾ ಪ್ಯಾಕೇಟ್ ಗಳಿದ್ದು  ಒಟ್ಟು 0.63 ltr ಆಗಿರುತ್ತೆ ,ಪ್ರತಿ ಪ್ಯಾಕೇಟ್ ನ ಬೆಲೆ 30.32 ರೂ ಆಗಿದ್ದುಇವುಗಳ ಒಟ್ಟು ಬೆಲೆ  212.24 ರೂ ಗಳನ್ನು ಬೆಲೆ ಬಾಳುವ ಇವುಗಳನ್ನು ಸಂಜೆ 4-30 ಗಂಟೆಯಿಂದ 5-30 ಗಂಟೆಯ ವರೆಗೆ ಪಂಚನಾಮೆಯ ಮೂಲಕ ಮಾಲನ್ನು ಅಮಾನತ್ತು ಪಡಿಸಿಕೊಂಡು ಆಸಾಮಿಯೊಂದಿಗೆ ಠಾಣೆಗೆ ಹಾಜರಾಗಿ ಮುಂದಿನ ಕ್ರಮಕ್ಕಾಗಿ ವರದಿಯ ಮೇರೆಗೆ ಠಾಣಾ ಮೊ.ಸಂ:36/2019 ಕಲಂ-15(A),32(3) KE ACT ರೀತ್ಯ ಪ್ರಕರಣ ಧಾಖಲಿಸಿರುತ್ತೆ

 1. ಸಿ.ಇ.ಎನ್ ಪೊಲೀಸ್ ಠಾಣೆ, ಚಿಕ್ಕಬಳ್ಳಾಪುರ. ಮೊ.ಸಂ: 11/2019 ಕಲಂ: 66(D) INFORMATION TECHNOLOGY ACT-2000, 420 ಐ.ಪಿ.ಸಿ:-

         ದಿನಾಂಕ:18/6/2019 ರಂದು ಪಿರ್ಯಾಧಿ ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ ತಾನು ಶೈನ್ ಡಾಟ್ ಕಾಮ್ ಎಂಬ ವೆಬ್ ಸೈಟ್ ನಲ್ಲಿ ಉದ್ಯೋಗಕ್ಕಾಗಿ ಈಗ್ಗೆ ಒಂದು ವರ್ಷದ ಹಿಂದೆ ಹೆಸರನ್ನು ನೊಂದಾಯಿಸಿ ಕೊಂಡಿದ್ದ.  ದಿನಾಂಕ:21/5/2019 ರಂದು ತಾನು ಮನೆಯಲ್ಲಿ ಇದ್ದಾಗ ಮೊ ಸಂ:9720812536 ಸಂಖ್ಯೆಯಿಂದ ತನ್ನ ಮೊ ಸಂ:9844974491 ಸಂಖ್ಯೆಗೆ ಕರೆ ಮಾಡಿ ಎಎಐನಿಂದ ಮಾತಾಡುತ್ತಿರುವುದಾಗಿ ಪರಿಚಯ ಮಾಡಿಕೊಂಡು ನಮ್ಮ ಕಂಪನಿಯಲ್ಲಿ ಅಕೌಂಟೆಟ್ ಹುದ್ದೆ ಖಾಲಿ ಇರುತ್ತದೆ ಅದನ್ನು ಭರ್ತಿ ಮಾಡಲು ನೀವು ಆನ್ ಲೈನ್ ಪರೀಕ್ಷೆಯನ್ನು ತೆಗದುಕೊಳ್ಳಬೇಕು ಅಂತ ಹೇಳಿ ಸದರಿ ಪರೀಕ್ಷೆಯನ್ನು ತೆಗೆದುಕೊಳ್ಳಲು ನೀವು 1750/- ರೂಗಳನ್ನು ಪೀಸ್ ಆಗಿ ಕಟ್ಟಬೇಕು ಅಂತ ಹೆಚ್ ಡಿ ಎಪ್ ಸಿ ಬ್ಯಾಂಕ್ ಖಾತೆ ನಂ:50100248964776 ನ್ನು ಕಳುಹಿಸಿ ಈ ಖಾತೆಗೆ  ಜಮೆ ಮಾಡುವಂತೆ ತಿಳಿಸಿದ, ನಂತರ ನಾನು ನಿಜ ಇರಬಹುದೆಂತ ನಂಬಿ ದಿನಾಂಕ:24/5/2019 ರಂದು 1750/- ರೂಗಳನ್ನು ಮೇಲ್ಕಂಡ ಖಾತೆಗೆ ಚಲನ್ ಮೂಲಕ ಚಿಂತಾಮಣಿ ಹೆಚ್ ಡಿ ಎಪ್ ಸಿ ಬ್ಯಾಂಕ್ ನಿಂದ ಜಮೆ ಮಾಡಿರುತ್ತೇನೆ.ನಂತರ ದಿನಾಂಕ:24/5/2019 ರಂದೇ ಆನ್ ಲೈನ್ ಪರೀಕ್ಷಯನ್ನು ನೀಡಿದ್ದು, ಪರೀಕ್ಷಯನ್ನು ತಾನು ತೆಗೆದುಕೊಂಡಿದ್ದು, ಅದರಲ್ಲಿ ನೀನು ಆಯ್ಕೆ ಆಗಿದ್ದೀಯ ಎಂತ ತಿಳಿಸಿ, ನೀವು ಆಯ್ಕೇ ಆಗಿರುವುದರಿಂದ ಟ್ರೈನಿಂಗ್ ಪೀಸ್ 8900/- ರೂಗಳನ್ನು,  ಮೇಲ್ಕಂಡ ಖಾತೆಗೆ  ಜಮೇ ಮಾಡುವಂತೆ ತಿಳಿಸಿದ. ಅದೇ ರೀತಿ ತಾನು ದಿನಾಂಕ;25/5/2019 ರಂದು  ತನ್ನ ದೊಡ್ಡಮ್ಮಳಾದ ಶ್ರೀಮತಿ ಉಷಾರಾಣಿ ಕೆ ಎಸ್ ರವರ ಕರ್ನಾಟಕ ಬ್ಯಾಂಕ್  ಖಾತೆ ನಂ”1422500102127801 ರಿಂದ ಪೋನ್ ಫೇ ಅಕೌಂಟ್ ನಂ: 9964994969 ರಿಂದ ಮೇಲ್ಕಂಡ ಖಾತೆಗೆ ಜಮೇ ಮಾಡಿರುತ್ತೇನೆ.ಅದೇ ರೀತಿ ಡ್ರಸ್ ಪೀಜ್, ಐಡಿ ಕಾರ್ಡ ಪೀಜ್, ಇಂಟರ್ ನ್ಯಾಷನಲ್ ಟ್ರೈನಿಂಗ್ ಪೀಜ್, ರೀಫಂಡ್ ಅಮೌಂಟ್ ಅಂತ ವಿವಿಧ ಪ್ರಕ್ರಿಯೆಗಳಿಗೆ ಅಂತ 13900/-,15900/-,15900/-,10900/-,15900-,25900/- ರೂಗಳನ್ನು ಒಟ್ಟು 08 ಕಂತುಗಳಲ್ಲಿ ಮೇಲ್ಕಂಡ ಖಾತೆಗೆ ಒಟ್ಟು 109050-00 ರೂಗಳನ್ನು  ಜಮೇ ಮಾಡಿದ್ದು, ಪುನಃ 25000/- ರೂಗಳನ್ನು ಕಳುಹಿಸಿದರೆ ನಿಮಗೆ ಉದ್ಯೋಗದ ಆದೇಶ ಬರುತ್ತದೆ. ಹಾಗೂ ನೀವು ಕಟ್ಟಿರುವ ಹಣವು ನಿಮಗೆ ರೀಫಂಡ್ ಆಗುತ್ತೆಂತ ತಿಳಿಸಿದ   ಆಗ ನನಗೆ ಅನುಮಾನ ಬಂದು ಈ ದಿನ ಠಾಣೆಗೆ ಬಂದು ದೂರನ್ನು ನೀಡುತ್ತಿರುವುದಾಗಿ ಸದರಿ ತನಗೆ ಕೆಲಸ ಕೊಡಿಸುವುದಾಗಿ ನಂಬಿಸಿ ವಿವಿಧ ಪ್ರಕ್ರಿಯೆಗಳಿಗೆ ಒಟ್ಟು 109050/- ರೂಗಳನ್ನು ಮೇಲ್ಕಂಡ ಖಾತೆಗೆ ಜಮೇ ಮಾಡಿಸಿಕೊಂಡು ಉದ್ಯೋಗ ಕೊಡದೆ ಮೋಸ ಮಾಡಿರುವ ವ್ಯಕ್ತಿಯನ್ನು ಪತ್ತೆ ಮಾಡಿ ಕಾನೂನು ಕ್ರಮ ಜರಗಿಸಲು ಕೋರಿ ನೀಡಿದ ದೂರಿನ ಮೇರೆಗೆ ಈ ಪ್ರ ವ ವರದಿ.

 1. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ. ಮೊ.ಸಂ: 213/2019 ಕಲಂ: 32, 34 ಕೆ.ಇ. ಆಕ್ಟ್:-

         ದಿನಾಂಕ:18-06-2019 ರಂದು ನಾನು ಠಾಣೆಯ ಸಿಬ್ಬಂದಿಯಾದ ಹೆಚ್.ಸಿ-41 ಶ್ರೀ ಜಗದೀಶ್ ಮತ್ತು ಹೆಚ್.ಸಿ-249 ಶ್ರೀ ಸಂದೀಪ್ ಕುಮಾರ್ ಹಾಗೂ ಚಾಲಕ ಎ.ಹೆಚ್.ಸಿ-08 ಮುಖೇಶರವರೊಂದಿಗೆ ಕೆಎ-40 ಜಿ-326 ಸರ್ಕಾರಿ ಜೀಪಿನಲ್ಲಿ ಗಸ್ತು ಕರ್ತವ್ಯಕ್ಕೆ ಹೋಗಿ ಠಾಣಾ ಸರಹದ್ದಿನ ಗ್ರಾಮಗಳಲ್ಲಿ ಗಸ್ತು ಮಾಡಿಕೊಂಡು ಸಂಜೆ 5-45 ಗಂಟೆಯಲ್ಲಿ ನಾರಾಯಣಹಳ್ಳಿ ಗ್ರಾಮಕ್ಕೆ ಹೋದಾಗ ಅದೇ ಗ್ರಾಮದ ಆಂಜಪ್ಪ ಬಿನ್ ಮುನಿರಾಮಪ್ಪರವರು ತನ್ನ ಅಂಗಡಿಯಲ್ಲಿ ಅಕ್ರಮವಾಗಿ ಮದ್ಯವನ್ನು ದಾಸ್ತಾನು ಮಾಡಿ ಸಾರ್ವಜನಿಕರಿಗೆ ಮಾರಾಟ ಮಾಡುತ್ತಿರುವುದಾಗಿ ಖಚಿತ ಮಾಹಿತಿ ದೊರೆತಿದ್ದು, ಅದರಂತೆ ಅದೇ ಗ್ರಾಮದಲ್ಲಿ ಪಂಚರನ್ನು ಬರಮಾಡಿಕೊಂಡು ಅಂಗಡಿಯ ಬಳಿ ಹೋಗಿ ಜೀಪನ್ನು ನಿಲ್ಲಿಸುವಷ್ಟರಲ್ಲಿ ಪೊಲೀಸ್ ಜೀಪನ್ನು ಕಂಡು ಅಂಗಡಿಯಲ್ಲಿದ್ದ ಒಬ್ಬ ಆಸಾಮಿ ಓಡಿ ಹೋಗಿದ್ದು, ಓಡಿ ಹೋದ ಆಸಾಮಿಯ ಬಗ್ಗೆ ಸಾರ್ವಜನಿಕರನ್ನು ಕೇಳಲಾಗಿ ಆಂಜಪ್ಪ ಬಿನ್ ಮುನಿರಾಮಪ್ಪ, 32ವರ್ಷ, ಬೋವಿಜನಾಂಗ, ಚಿಲ್ಲರೆ ಅಂಗಡಿ ವ್ಯಾಪಾರ, ವಾಸ: ನಾರಾಯಣಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು ಎಂದು ತಿಳಿಸಿದ್ದು, ಪಂಚರ ಸಮಕ್ಷಮ ಅಂಗಡಿಯಲ್ಲಿ ಪರಿಶೀಲಿಸಲಾಗಿ ಒಂದು ಪ್ಲಾಸ್ಟಿಕ್ ಚೀಲದಲ್ಲಿ ಮದ್ಯದ ಟೆಟ್ರಾ ಪಾಕೆಟ್ ಗಳು ಕಂಡುಬಂದಿದ್ದು, ಅವುಗಳನ್ನು ಪರಿಶೀಲಿಸಲಾಗಿ 1)ಹೇವಾರ್ಡ್ಸ್ ಚೀರ್ಸ್ ವಿಸ್ಕಿ ಕಂಪನಿಯ 90 ಎಂ.ಎಲ್ ನ 43 ಮದ್ಯದ ಟೆಟ್ರಾ ಪಾಕೆಟ್ ಗಳಿದ್ದು, ಪ್ರತಿ ಪಾಕೆಟ್ ನ ಮೇಲೆ 30.32 ಎಂದು ಬೆಲೆ ನಮೂದಿಸಿರುತ್ತೆ. ಇವುಗಳ ಬೆಲೆ 1,303.76/- ರೂಗಳಾಗಿರುತ್ತೆ. 2)180 ಎಂ.ಎಲ್ ನ ಓಲ್ಡ್ ಟವೆರಿನ್ ವಿಸ್ಕಿ 7 ಟೆಟ್ರಾ ಪಾಕೆಟ್ ಗಳಿದ್ದು ಪ್ರತಿಯೊಂದು ಪಾಕೆಟ್ ನ ಮೇಲೆ 74.13 ಎಂದು ಬೆಲೆ ನಮೂದಾಗಿದ್ದು ಸದರಿಯವುಗಳ  ಬೆಲೆ 518.91/- ರೂಗಳಾಗಿದ್ದು ಮೇಲ್ಕಂಡ ಮದ್ಯದ ವಸ್ತುಗಳ ಒಟ್ಟು ಬೆಲೆ 1822.67/- ರೂಗಳಾಗಿರುತ್ತೆ. ನಂತರ ಸಂಜೆ 6-00 ರಿಂದ 7-00 ಗಂಟೆಯವರೆಗೆ ಮಹಜರ್ ಮುಖಾಂತರ ಸದರಿ ಮದ್ಯದ ಟೆಟ್ರಾ ಪಾಕೆಟ್ ಗಳನ್ನು ಪಂಚನಾಮೆಯ ಮೂಲಕ ಅಮಾನತ್ತುಪಡಿಸಿಕೊಂಡು ಮಾಲಿನೊಂದಿಗೆ ಸಂಜೆ 7-30 ಗಂಟೆಗೆ ಠಾಣೆಗೆ ವಾಪಸ್ಸು ಬಂದು ಠಾಣಾ ಮೊ.ಸಂ-213/2019 ಕಲಂ:32-34 ಕೆ.ಇ.ಆಕ್ಟ್ ರೀತ್ಯಾ ಸ್ವತಃ ಪ್ರಕರಣ ದಾಖಲಿಸಿಕೊಂಡಿರುತ್ತೆ.

 1. ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ. ಮೊ.ಸಂ: 224/2019 ಕಲಂ: 15(A), 32(3) ಕೆ.ಇ. ಆಕ್ಟ್:-

         ದಿನಾಂಕ 18/06/2018 ರಂದು ಶ್ರೀ ವೈ.ಅಮರನಾರಾಯಣ್, ಸಿಪಿಐ, ಗೌರೀಬಿದನೂರು ವೃತ್ತವ ರವರು ಠಾಣೆಗೆ ಹಾಜರಾಗಿ ಲಿಖಿತ ವರದಿಯನ್ನು  ನೀಡಿ ಸೂಚಿಸಿದ್ದೇನೆಂದರೇ,  ಈ ದಿನ  ದಿನಾಂಕ: 18/06/2019 ರಂದು  ಮಧ್ಯಾಹ್ನ 2-30  ಗಂಟೆಯಲ್ಲಿ  ಗೌರಿಬಿದನೂರು ತಾಲ್ಲೂಕು  ಕಸಬಾ ಹೋಬಳಿ ಕುಡುಮಲಕುಂಟೆ  ಕ್ರಾಸ್ ಬಳಿ ಯಾರೋ ತನ್ನ ಅಂಗಡಿ ಮುಂದೆ ಸಾರ್ವಜನಿಕರಿಗೆ ಮಧ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದಾಗಿ ಮಾಹಿತಿ ಬಂದ ಮೇರೆಗೆ ಹೆಚ್.ಸಿ.01 ಚಂದ್ರಶೇಖರ್ ರವರೊಂದಿಗೆ  ಸರ್ಕಾರಿ ಜೀಪ್ ಸಂಖ್ಯೆ: ಕೆ.ಎ-40, ಜಿ-1222 ರಲ್ಲಿ ಕುಡುಮಲಕುಂಟೆ ಕ್ರಾಸ್ ಬಳಿಗೆ  ಹೋಗಿ ಅಲ್ಲಿ,  ಪಂಚಾಯ್ತಿದಾರರನ್ನು ಕರೆದುಕೊಂಡು  ಮಾಹಿತಿ ಇದ್ದ  ಸ್ಥಳಕ್ಕೆ  ನಡೆದುಕೊಂಡು  ಹೋಗಿ   ಮರೆಯಲ್ಲಿ ನಿಂತು ನೋಡಲಾಗಿ ಯಾರೋ ಒಬ್ಬ ವ್ಯಕ್ತಿ  ತನ್ನ ಅಂಗಡಿಯ ಮುಂದೆ  ಪ್ಲಾಸ್ಟಿಕ್  ಚೀಲವನ್ನು  ಹಿಡಿದುಕೊಂಡು , ಅದರಲ್ಲಿದ್ದ ಮದ್ಯದ ಪಾಕೆಟ್ ಗಳನ್ನು ಅಂಗಡಿ ಮುಂದೆ  ಕುಳಿತಿದ್ದ  ಇಬ್ಬರು ವ್ಯಕ್ತಿಗಳಿಗೆ  ತೆಗೆದುಕೊಡುತ್ತಿದ್ದು, ಆ ಇಬ್ಬರು ವ್ಯಕ್ತಿಗಳು ಪ್ಲಾಸ್ಟಿಕ್  ‍ಗ್ಲಾಸ್ ಗಳಲ್ಲಿ ಮಧ್ಯಪಾನ ಮಾಡುತ್ತಿದ್ದುದನ್ನು ಖಚಿತಪಡಿಸಿಕೊಂಡು ನಾವು ಅವರ ಬಳಿ ಹೋಗುವಷ್ಟರಲ್ಲಿ ಸಮವಸ್ತ್ರದಲ್ಲಿದ್ದ ನಮ್ಮನ್ನು ಕಂಡು ಮಧ್ಯಪಾನ ಮಾಡುತ್ತಿದ್ದವರು ಓಡಿಹೋಗಿರುತ್ತಾರೆ. ಮಧ್ಯದ ಪಾಕೆಟ್ ಗಳನ್ನು ಕೊಡುತ್ತಿದ್ದ  ವ್ಯಕ್ತಿಯು ಓಡಿ ಹೋಗಲು ಪ್ರಯತ್ನಿಸಿದಾಗ, ಹೆಚ್.ಸಿ. ಚಂದ್ರಶೇಖರ್  ರವರು ಹಿಂಬಾಲಿಸಿ ಹಿಡಿದುಕೊಂಡಿರುತ್ತಾರೆ.  ಸದರಿ ಆಸಾಮಿಯ ಹೆಸರು ವಿಳಾಸ ಕೇಳಲಾಗಿ,  ತನ್ನ ಹೆಸರು ರಾಮಾಂಜಿನಪ್ಪ ಬಿನ್ ಲೇಟ್ ಕದಿರಪ್ಪ, 30 ವರ್ಷ,  ಪರಿಶಿಷ್ಟಜಾತಿ, ಕುಡುಮಲಕುಂಟೆ ಗ್ರಾಮ ಗೌರೀಬಿದನೂರು ತಾಲ್ಲೂಕು  ಎಂದು ತಿಳಿಸಿದ್ದು,  ಈತನ ಕೈಯಲ್ಲಿದ್ದ ಪ್ಲಾಸ್ಟಿಕ್ ಚೀಲವನ್ನು ಪರಿಶೀಲಿಸಲಾಗಿ, ಅದರಲ್ಲಿ 90 ಎಂ.ಎಲ್.ಸಾಮರ್ಥ್ಯದHAY WARDS CHEERS  WHISKY ಯ 16  ಟೆಟ್ರಾ ಪಾಕೆಟ್ ಗಳು ಇದ್ದು,   ಇವುಗಳ ಒಟ್ಟು ಸಾಮರ್ಥ್ಯ 1 ಲೀಟರ್  440 ಎಂ.ಎಲ್. ಆಗಿರುತ್ತೆ. ಇವುಗಳ ಒಟ್ಟು ಬೆಲೆ 485/- ರೂ.ಗಳಾಗಿರುತ್ತೆ.  ಸ್ಥಳದಲ್ಲಿ  2 ಖಾಲಿ ಪ್ಲಾಸ್ಟಿಕ್ ಗ್ಲಾಸ್ ಗಳು, 90 ಎಂ.ಎಲ್ ಸಾಮರ್ಥ್ಯದ HAY WARDS CHEERS  WHISKY ಯ 04 ಖಾಲಿ ಟೆಟ್ರಾ ಪಾಕೆಟ್ ಗಳು ಬಿದ್ದಿದ್ದವು. ಸದರಿ ವ್ಯಕ್ತಿಗೆ ಇದನ್ನು ಮಾರಲು ಹಾಗು ಮಧ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಡಲು ಯಾವುದೇ ಪರವಾನಗಿ ಇದೆಯೇ ಎಂದು ಕೇಳಲಾಗಿ ತನ್ನ ಬಳಿ ಯಾವುದೇ ಪರವಾನಗಿ ಇಲ್ಲವೆಂದು ತಿಳಿಸಿರುತ್ತಾನೆ. ಆದ್ದರಿಂದ ಸ್ಥಳದಲ್ಲಿ ಮಧ್ಯಾಹ್ನ 3-30 ರಿಂದ 4-00 ಗಂಟೆಯವರೆಗೆ ಪಂಚರ ಸಮಕ್ಷಮದಲ್ಲಿ ಪಂಚನಾಮೆ   ಕ್ರಮ ಜರುಗಿಸಿ  ಸ್ಥಳದಲ್ಲಿ ದೊರೆತ 90 ಎಂ.ಎಲ್ ಸಾಮರ್ಥ್ಯದ HAYWARDS CHEERS  WHISKY ಯ 16  ಟೆಟ್ರಾ ಪಾಕೆಟ್ ಗಳು, ಒಂದು ಪ್ಲಾಸ್ಟಿಕ್ ಚೀಲ, ಸ್ಥಳದಲ್ಲಿ ಬಿದ್ದಿದ್ದ 02 ಖಾಲಿ ಪ್ಲಾಸ್ಟಿಕ್ ಗ್ಲಾಸ್ ಗಳು, HAY WARDS CHEERS  WHISKY ಯ  4 ಖಾಲಿ  ಟೆಟ್ರಾ ಪಾಕೆಟ್ ಗಳನ್ನು ಮುಂದಿನ ಕ್ರಮಕ್ಕಾಗಿ ವಶಪಡಿಸಿಕೊಂಡು, ಸಂಜೆ 4-30 ಗಂಟೆಗೆ ಠಾಣೆಗೆ ವಾಪಸ್ಸು ಬಂದಿದ್ದು, ಈ ಮೆಮೋನೊಂದಿಗೆ ಮಾಲನ್ನು ಸಹ ನೀಡುತ್ತಿದ್ದು, ಆರೋಪಿಯ ವಿರುದ್ಧ  ಕಲಂ: 15[ಎ], 32 ಕ್ಲಾಸ್ [3] ಕೆ.ಇ.ಆಕ್ಟ್ –1965 ರೀತ್ಯಾ ಪ್ರಕರಣವನ್ನು ದಾಖಲು ಮಾಡಿ ಕ್ರಮ ಕೈಗೊಳ್ಳಲು ಸೂಚಿಸಿದ್ದರ ಮೇರೆಗೆ ಕಾನೂನು ಕ್ರಮ ಜರುಗಿಸಿರುತ್ತೆ.

 1. ಗುಡಿಬಂಡೆ ಪೊಲೀಸ್ ಠಾಣೆ. ಮೊ.ಸಂ: 145/2019 ಕಲಂ: 15(A), 32(3) ಕೆ.ಇ. ಆಕ್ಟ್:-

         ದಿನಾಂಕ:18-06-2019 ರಂದು ಪಿರ್ಯಾಧಿದಾರರಾದ ಶ್ರೀ ಚಿನ್ನಪ್ಪ ಪೊಲೀಸ್ ಇನ್ಸ್ ಪೆಕ್ಟರ್ ಸಿ,ಇ,ಎನ್ ಚಿಕ್ಕಬಳ್ಳಾಪುರ ರವರು ಠಾಣೆಗೆ ಹಾಜರಾಗಿ ನೀಡಿದ ವರದಿಯ ದೂರಿನ ಸಾರಾಂಶವೆನೆಂದರೆ, ಸಂಜೆ 4-30 ಗಂಟೆಯಲ್ಲಿ ಬಂದ ಖಚಿತ ಮಾಹಿತಿ ಮೇರೆಗೆ ಅರೂರು ಗೇಟಿನಲ್ಲಿ ಕೃಷ್ಣಪ್ಪ ಬಿನ್ ನಡಿಪಿ ಬೈರಪ್ಪ 45 ವರ್ಷ, ವಕ್ಕಲಿಗರು, ಚಿಲ್ಲರೆ ಅಂಗಡಿ ವ್ಯಾಪಾರ ವಾಸ ಅರೂರು ಗ್ರಾಮ, ಚಿಕ್ಕಬಳ್ಳಾಪುರ ತಾಲೂಕು ಬಾಬತ್ತು ಅಂಗಡಿಯ ಬಳಿ ಮರೆಯಲ್ಲಿ ನೋಡಲಾಗಿ, ಸಾರ್ವಜನಿಕರಿಗೆ ಅಕ್ರಮವಾಗಿ ಮಧ್ಯವನ್ನು ಕುಡಿಯಲು ಅವಕಾಶ ಮಾಡಿಕೊಟ್ಟಿರುವದನ್ನು ಖಚಿತಪಡಿಸಿಕೊಂಡು ಪಂಚರ ಸಮಕ್ಷಮ ಧಾಳಿ ಮಾಡಿ ಸ್ಥಳದಲ್ಲಿದ್ದ ಆರೋಪಿ ಮೇಲ್ಕಂಡ ಕೃಷ್ಣಪ್ಪ ರವರನ್ನು ವಶಕ್ಕೆ ಪಡೆದುಕೊಂಡು ಸಾರ್ವಜನಿಕರಿಗೆ ಮಧ್ಯವನ್ನು ಸೆವಿಸಲು ಸ್ಥಳಾವಕಾಶ ಮಾಡಿರುವ ಬಗ್ಗೆ ಪರವಾನಿಗೆ ತೋರಿಸಲು ಕೇಳಲಾಗಿ ಯಾವುದು ಇಲ್ಲವೆಂದು ತಿಳಿಸಿದ್ದು, ನಂತರ ಸ್ಥಳದಲ್ಲಿದ್ದ 1) Hercules deluxe rum 180 ml ನ 8 ಮಧ್ಯದ ಪಾಕೆಟ್ ಅದರ ಮೇಲೆ 162 ರೂ ಇದ್ದು, 162*8=1296 ರೂ ಆಗಿದ್ದು, 2)180 Ml Bag piper Delux whisky 4 Pockets ಒಂದು ಪಾಕೆಟ್ ಮೇಲೆ 90 ರೂ ಇದ್ದು, 90*4=360 ರೂ ಆಗಿರುತ್ತದೆಂದು, ಮತ್ತು 3) Hercules deluxe rum 180 ml ನ 2 ಖಾಲಿ ಪಾಕೆಟ್, 4)180 Ml Bag piper Delux whisky 1 ಖಾಲಿ Pocket & 4 ಖಾಲಿ ಪ್ಲಾಸ್ಟಿಕ್ ಗ್ಲಾಸುಗಳಿದ್ದವನ್ನು ಪಂಚರ ಸಮಕ್ಷಮ ಕೇಸಿನ ಮುಂದಿನ ಕ್ರಮಕ್ಕಾಗಿ ಅಮಾನತ್ತುಪಡಿಸಿಕೊಂಡಿದ್ದು, ಯಾವುದೇ ಪರವಾನಿಗೆ ಇಲ್ಲದೇ ಒಟ್ಟು ಮದ್ಯ-2 ಲೀಟರ್ 160 ಮಿ,ಲಿ ಅದರ ಮೌಲ್ಯ-1656 ರೂ ಆಗಿದ್ದು, ಯಾವುದೇ ಪರವಾನಿಗೆ ಪಡೆಯದೇ ಮಧ್ಯವನ್ನು ಸಾರ್ವಜನಿಕರಿಗೆ ಕುಡಿಯಲು ಅವಕಾಶ ಮಾಡಿಕೊಟ್ಟಿದ್ದು, ಸದರಿ ಆರೋಪಿಯಯ ವಿರುದ್ದ ಕಾನೂನು ಕ್ರಮ ಕೈಗೊಳ್ಳಲು ನೀಡಿದ ದೂರು ಆಗಿರುತ್ತೆ.

 1. ಗುಡಿಬಂಡೆ ಪೊಲೀಸ್ ಠಾಣೆ. ಮೊ.ಸಂ: 146/2019 ಕಲಂ: 15(A), 32(3) ಕೆ.ಇ. ಆಕ್ಟ್:-

         ದಿನಾಂಕ:18-06-2019 ರಂದು ಪಿರ್ಯಾಧಿದಾರರಾದ ಶ್ರೀ ವಿ, ಚಿನ್ನಪ್ಪ ಪೊಲೀಸ್ ಇನ್ಸ ಪೆಕ್ಟರ್ ಚಿಕ್ಕಬಳ್ಳಾಪುರ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ಸರ್ಕಾರಿ ಜೀಪಿನಲ್ಲಿ ಕೆ,ಎ-40 ಜಿ-270 ವಾಹನದಲ್ಲಿ ಸಿಬ್ಬಂದಿಯೊಂದಿಗೆ ಗುಡಿಬಂಡೆ ಕಡೆ ಗಸ್ತಿನಲ್ಲಿದ್ದಾಗ, ಸಂಜೆ 7-00 ಗಂಟೆಯಲ್ಲಿ ವರ್ಲಕೊಂಡ ಗ್ರಾಮದಲ್ಲಿ ಗಸ್ತಿನಲ್ಲಿದ್ದಾಗ, ಭಾತ್ಮಿದಾರರು ನಿಡಿದ ಖಚಿತ ಮಾಹಿತಿ ಮೇರೆಗೆ ಗುಡಿಬಂಡೆ ತಾಲೂಕಿನ ಪೋಲಂಪಲ್ಲಿ ಗ್ರಾಮದಲ್ಲಿ ಜಯರಾಮರೆಡ್ಡಿ ರವರ ವಾಸದ ಮನೆಯ ಮುಂಭಾಗ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಮದ್ಯಪಾನ ಮಾಡಲು ಸ್ಥಳವಾಕಾಶ ನೀಡಿದ್ದು, ಪಂಚಾಯ್ತಿದಾರರ ಸಮಕ್ಷಮ ಧಾಳಿ ಮಾಡಿ ಸ್ಥಳದಲ್ಲಿದ್ದ ಮಾಲುಗಲಾದ ಹೈವಾರ್ಡ್ಸ್ ಚೀರ್ಸ್ 90 ಎಮ,ಎಲ್-25 ಟೆಟ್ರಾ ಪಾಕೆಟ್ 2)90 ಎಮ್,ಎಲ್ ಖಾಲಿ ಮದ್ಯದ 1 ಟೆಟ್ರಾ ಪಾಕೆಟ್ 3)ಎರಡು ಪ್ಲಾಸ್ಟಿಕ್ ಗ್ಲಾಸುಗಳು 4)ಒಂದು 1 ಲೀಟರ್ ಖಾಲಿ ನೀರಿನ ಬಾಟಲ್ ಅನ್ನು ಅಮಾನತ್ತುಪಡಿಸಿಕೊಂಡು ಸ್ಥಳದಲ್ಲಿ ಯಾವುದೇ ಪರವಾನಿಗೆ ಇಲ್ಲದೇ ಸಾರ್ವಜನಿಕರಿಗೆ ಮದ್ಯವನ್ನು ಕುಡಿಯಲು ಸ್ಥಳಾವಕಾಶ ಮಾಡಿರುವ ಆರೋಪಿಯನ್ನು ವಶಕ್ಕೆ ಪಡೆದುಕೊಂಡು ಮಾಲಿನೊಂದಿಗೆ ಹಾಜರುಪಡಿಸಿ ಮುಂದಿನ ಕಾನೂನು ಕ್ರಮ ಜರುಗಿಸಲು ನೀಡಿದ ದೂರು ಆಗಿರುತ್ತೆ.

 1. ಗುಡಿಬಂಡೆ ಪೊಲೀಸ್ ಠಾಣೆ. ಮೊ.ಸಂ: 147/2019 ಕಲಂ: 143, 147, 323, 324, 504, 506 ರೆ/ವಿ 149 ಐ.ಪಿ.ಸಿ:-

         ದಿನಾಂಕ:18-06-2019 ರಂದು ಗಾಯಾಳು ಶ್ರೀ ಮುರಳಿ ಬಿನ್ ಮದ್ದಯ್ಯ 23 ವರ್ಷ, ವಾಸ-ಮೇಡಿಮಾಕಲಹಳ್ಳಿ ಗ್ರಾಮ, ಚಿಕ್ಕಬಳ್ಳಾಪುರ ತಾಲೂಕು ರವರು ಗುಡಿಬಂಡೆ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರ ಸಮಕ್ಷಮ ನೀಡಿದ ಹೇಳಿಕೆಯ ದೂರಿನ ಸಾರಾಂಶವೇನೆಂದರೆ, ಈ ದಿನ ಸಂಜೆ 7-00 ಗಂಟೆಯಲ್ಲಿ ತಾನು & ತಮ್ಮ ಮಾವ ಪೆರೇಸಂದ್ರದ ರೆಡ್ಡಿ ಬಾರ್ ನಲ್ಲಿ ಮದ್ಯವನ್ನು ಕುಡಿದಿದ್ದು, ಆಗಾಗ ತನ್ನಮಾವನು ತನ್ನನ್ನು ನೀವು ಗೋಪಿಗೆ ಮೋಸ ಮಾಡಿದ್ದೀರಾ ಎಂದು ಬೈಯುತ್ತಿದ್ದು, ಈ ದಿನ ಸಂಜೆ 7-00 ಗಂಟೆಯಲ್ಲಿಯೂ ತನ್ನ ಮಾವನು ತನ್ನ ಮೇಲೆ ಗಲಾಟೆ ಮಾಡಿ ನಿನ್ನಮ್ಮನ್ ಮೋಸ ಮಾಡಿದಿರಿ ನಮಗೆ ಎಂದು ಬೈದು ಇರು ಮಾಡುತಿನಿ ಎಂದು ಯಾರೋ ನಾಲ್ಕು ಜನರನ್ನು ಕರೆಯಿಸಿ ಅವರಿಗೆ ಏ ಮುರಳಿಯನ್ನು ಹೊಡಿಯಿರಿ ಎಂದಾಗ, ಸದರಿ ನಾಲ್ಕು ಜನರು & ಕೃಷ್ಣಮೂರ್ತಿ ಹಾಗೂ ಗೊಪಿ ಕಷವಗುಟ್ಟಹಳ್ಳಿ ಗ್ರಾಮ ರವರು ಕೈಗಳಿಂದ ತನ್ನ ತಲೆಗೆ ಹೊಡೆದಿದ್ದು, ಕೆಲವರು ಒದ್ದಿದ್ದು, ಆ ಪೈಕಿ ತನ್ನ ಮಾವ ಬೀರ್ ಬಾಟಲಿಂದ ತನ್ನ ತಲೆಗೆ ಹೊಡೆದು ಗಾಯಗೊಳಿಸಿ ಸಾಯಿಸುವುದಾಘಿ ಪ್ರಾಣ ಬೆದರಿಕೆ ಹಾಕಿದ್ದು ಮೆಲ್ಕಂಡಂತೆ ತನ್ನ ಮೇಲೆ ಹಲ್ಲೆ ಮಾಡಿದವರ ವಿರುದ್ದ ಕಾನೂನು ಕ್ರಮ ಕೈಗೊಳ್ಳಲು ನೀಡಿದ ಹೇಳಿಕೆಯ ದೂರು ಆಗಿರುತ್ತೆ.

 1. ನಂದಿಗಿರಿಧಾಮ ಪೊಲೀಸ್ ಠಾಣೆ. ಮೊ.ಸಂ: 76/2019 ಕಲಂ: 323, 324, 504, 506 ರೆ/ವಿ 34 ಐ.ಪಿ.ಸಿ:-

         ದಿನಾಂಕ:18-06-2019 ರಂದು ಪಿರ್ಯಾದಿಯಾದ  ಮಂಜುಳಮ್ಮ ಕೋಂ ನಾರಾಯಣಸ್ವಾಮಿ, 48 ವರ್ಷ, ಗೊಲ್ಲ, ವ್ಯವಸಾಯ, ವಾಸ ಕಡಶೀಗೇನಹಳ್ಳಿ ಗ್ರಾಮ, ಚಿಕ್ಕಬಳ್ಳಾಪುರ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ  ತಮಗೂ ಮತ್ತು ತಮ್ಮ ದಾಯಾದಿಗಳಾದ ನಮ್ಮೂರಿನ  ದ್ಯಾವಪ್ಪ ಬಿನ್ ಲೇಟ್ ದೊಡ್ಡ ಬೈಯಣ್ಣ ನವರ ಮದ್ಯ ಜಮೀನು ಉಳುಮೆ ಮಾಡುವ ವಿಚಾರದಲ್ಲಿ ಮನಃಸ್ತಾಪವಿದ್ದು ದಿನಾಂಕ:17-06-2019 ರಂದು ಬೆಳಿಗ್ಗೆ 8-00 ಗಂಟೆಯಲ್ಲಿ ತನ್ನ ಗಂಡ ನಾರಾಯಣಸ್ವಾಮಿ ಬಿನ್ ಲೇಟ್ ನಾರಾಯಣಪ್ಪ ರವರು ತಮ್ಮ ಬಾಬತ್ತು  ಸರ್ವೆ ನಂ 30/7 ರಲ್ಲಿ ಎತ್ತುಗಳನ್ನು ಬಳಸಿ ನೇಗಿಲು ಕಟ್ಟಿ ಉಳುಮೆ ಮಾಡುತ್ತಿದ್ದಾಗ  ನಮ್ಮೂರಿನ ದ್ಯಾವಪ್ಪ ಮತ್ತು ಅವರ ಪತ್ನಿ ಭಾರತಿ ಅವರಿಬ್ಬರು ತನ್ನ ಗಂಡನನ್ನು ಹೊಡೆಯುವ ಉದ್ದೇಶದಿಂದ ಜಮೀನಿನ ಬಳಿ ಹೋಗಿ  “ನಮ್ಮ ಜಮೀನನ್ನು ಏಕೆ ಒತ್ತುವರಿ ಮಾಡಿ ಉಳುಮೆ ಮಾಡುತ್ತೀದ್ದೀಯಾ ಲೋಫರ್ ನನ್ನ ಮಗನೇ ?”  ಅಂತ ಅವಾಚ್ಯ ಶಬ್ದಗಳಿಂದ ಬೈದು ಏಕಾಏಕಿ ದ್ಯಾವಪ್ಪನು ಕೈಯಲ್ಲಿದ್ದ ಕೋಲಿನಿಂದ ತನ್ನ ಗಂಡನ ತಲೆಗೆ ಹೊಡೆದು ರಕ್ತಗಾಯ ಮಾಡಿ ಬೀಳಿಸಿದ್ದ ಭಾರತಮ್ಮಳು ಕೆಳಗೆ ಬಿದ್ದ ತನ್ನ ಗಂಡನನ್ನು ಮೈಮೇಲೆ ಕಾಲಿನಿಂದ ಒದ್ದು,  ಇಬ್ಬರು ಹಲ್ಲೆ ಮಾಡುತ್ತಿದ್ದಾಗ ಪಕ್ಕದ ಜಮೀನಿನಲ್ಲಿ ಉಳುಮೆ ಮಾಡುತ್ತಿದ್ದ ನಮ್ಮೂರಿನ ಬಾಬು ಬಿನ್ ಪಿಳ್ಳಪ್ಪ, ಗೋಪಾಲ ಬಿನ್ ಶ್ರೀರಾಮಪ್ಪ ಓಡಿ ಹೋಗಿ ಜಗಳ ಬಿಡಿಸಿದ್ದು “ ನಿನ್ನ ಟೈಮ್ ಚೆನ್ನಾಗಿದೆ ಇವರು ಬಂದು ನಿನ್ನನ್ನು ಬದುಕಿಸಿದರು ಇಲ್ಲ ಅಂದಿದ್ದರೆ ನಿನ್ನನ್ನು ಇಲ್ಲೆ ಕೊಲೆ ಮಾಡುತ್ತಿದೆವು ಎಂದು ಪ್ರಾಣ ಬೆದರಿಕೆ ಹಾಕಿ ಹೋಗಿರುತ್ತಾರೆ. ತನ್ನ ಗಂಡನು ತಾನೇ ಗಾಡಿಯಲ್ಲಿ ಚಿಕ್ಕಬಳ್ಳಾಪುರ ಸರ್ಕಾರಿ ಆಸ್ಪತ್ರೆಗೆ ಹೋಗಿ ಚಿಕಿತ್ಸೆಗೆ ದಾಖಲಾಗಿದ್ದು, ನಮ್ಮೂರಿನಲ್ಲಿ ಹಿರಿಯರು ಪಂಚಾಯ್ತಿ ಮಾಡಿ ರಾಜಿ ಮಾಡುವುದಾಗಿ ಹೇಳಿದ್ದರಿಂದ ದೂರು ಕೊಡಲಿಲ್ಲ ಆದರೆ ಪಂಚಾಯ್ತಿದಾರರು ಪಂಚಾಯ್ತಿ ಮಾಡದೇ ಇದ್ದ ಕಾರಣ ದೂರನ್ನು ಈ ದಿನ ತಡವಾಗಿ ಕೊಡುತ್ತಿದ್ದು ತನ್ನ ಗಂಡನ ಮೇಲೆ ವಿನಾಕಾರಣ ಜಗಳ ಮಾಡಿ ಹೊಡೆದು 7 ಹೊಲಿಗೆಗಳನ್ನು ಬೀಳುವಷ್ಟು ಗಾಯ ಮಾಡಿದ ತಮ್ಮೂರಿನ ದ್ಯಾವಪ್ಪ ಮತ್ತು ಅವನ ಹೆಂಡತಿ ಭಾರತಿ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೊಟ್ಟ ದೂರಿನ ಸಾರಾಂಶದ ಮೇರೆಗೆ ಈ ಪ್ರ.ವ.ವರದಿ.

 1. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆ. ಮೊ.ಸಂ: 145/2019 ಕಲಂ: 279, 337 ಐ.ಪಿ.ಸಿ:-

         ದಿನಾಂಕ:18.06.2019 ರಂದು ಮದ್ಯಾಹ್ನ 3.30 ಗಂಟೆಗೆ ಶಿಡ್ಲಘಟ್ಟ ಸರ್ಕಾರಿ ಅಸ್ಪತ್ರೆಯಿಂದ ಬಂದ ಮೆಮೊವನ್ನು ಪಡೆದು ಅಸ್ಪತ್ರೆಗೆ ಹೋಗಿ ಗಾಯಾಳು ವೆಂಕಟೇಶ ಬಿನ್ ರಾಜಣ್ಣ,26 ವರ್ಷ, ಗಾಣಿಗ ಚಾಲಕ ವೃತ್ತಿ, ಚಿಕ್ಕೊಂಡಹಳ್ಳಿ ಗ್ರಾಮ ಹೊಸಕೋಟೆ ತಾಲ್ಲೂ ರವರ ಹೇಳಿಕೆ ಪಡೆದುಕೊಂಡಿದ್ದರ ಸಾರಾಂಶವೆನೆಂದರೆ, ದಿನಾಂಕ:17/06/2019 ರಂದು ರಾತ್ರಿ 9.30 ಗಂಟೆ ಸಮಯದಲ್ಲಿ ಗಂಬೀರನಹಳ್ಳಿ ಗ್ರಾಮದಲ್ಲಿ ನನ್ನ ಸ್ನೇಹಿತನನ್ನು ನೋಡಿಕೊಂಡು ಬರುಲು ನನ್ನ ಸ್ನೇಹಿತನ ಬಾಬತ್ತು KA.53.M.6572 SANTRO ZING  ಕಾರಿನಲ್ಲಿ ಹೋಗಿ ನಂತರ ನಮ್ಮ ಗ್ರಾಮಕ್ಕೆ ವಾಪಸ್ಸು ಬರಲು ರಾತ್ರಿ 10.45 ಗಂಟೆ ಸಮಯದಲ್ಲಿ ಶಿಡ್ಲಘಟ್ಟ ತಾಲ್ಲೂಕು ಅಂಬಿಗಾನಹಳ್ಳಿ ಗೇಟ್ ನಲ್ಲಿ ಹೋಗುತ್ತಿದ್ದಾಗ ನಾನು ಚಾಲನೆ ಮಾಡುತಿದ್ದ ಕಾರಿನ ಮುಂಭಾಗ KA.40.A.7056 ನೊಂದಣಿ ಸಂಖ್ಯೆ ಲಾರಿಯ ಚಾಲಕನು ತನ್ನ ಲಾರಿಯನ್ನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿ ಲಾರಿ ಚಾಲಕನು ಯಾವುದೇ ಮುನ್ಸೂಚನೆ ನೀಡದೇ ಏಕಾ ಏಕಿ ಬ್ರೇಕ್ ಹಾಕಿ ಲಾರಿ ನಿಲ್ಲಿಸಿದ್ದರ ಪರಿಣಾಮ KA.53.M.6572 SANTRO ZING ಕಾರನ್ನು ಡಿಕ್ಕಿಪಡಿಸಿದ ಪರಿಣಾಮ ಕಾರು ಜಖಂಗೊಂಡು, ಕಾರಿನ ಸ್ಟೇರಿಂಗ್ ನನ್ನ ಎದೆಗೆ ಹೊತ್ತಿಕೊಂಡು, ಎಡಮೊಣಕಾಲಿನಗೆ ತರುಚಿದ ಗಾಯವಾಗಿರುತ್ತೆ. ಈ ದಿನ ವೈದ್ಯರು ಮುಷ್ಕರವಿದ್ದ ಕಾರಣ ನಾನು ಚಿಕಿತ್ಸೆಗೆ ಅಸ್ಪತ್ರೆಗೆ ಹೋಗಿರುವುದಿಲ್ಲ. ನನಗೆ ಎದೆ ನೋವು ಹೆಚ್ಚಾದ ಕಾರಣ ದಿನಾಂಕ:18.06.2019 ರಂದು ಚಿಕಿತ್ಸೆಗೆ ಶಿಡ್ಲಘಟ್ಟ ಸರ್ಕಾರಿ ಅಸ್ಪತ್ರೆಗೆ ದಾಖಲಾಗಿರುತ್ತೇನೆ. ಆದ್ದರಿಂದ ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿ ಯಾವುದೇ ಮುನ್ಸೂಚನೆ ನೀಡದೇ ಏಕಾಏಕಿ ಬ್ರೇಕ್ ಆಕಿ ಲಾರಿ ನಿಲ್ಲಿಸಿದ ಚಾಲಕನ ವಿರುದ್ದ ಕಾನೂನು ರೀತಿಯ ಕ್ರಮಕೈಗೊಳ್ಳಲು ನೀಡಿದ ದೂರಿನ ಮೇರೆಗೆ ಠಾಣಾ ಮೊ.ಸಂ 145/2019 ಕಲಂ 279 337 ಐಪಿಸಿ ರೀತ್ಯಾ ಪ್ರಕರಣ ದಾಖಲಿಸಿರುತ್ತೆ.

 1. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆ. ಮೊ.ಸಂ: 146/2019 ಕಲಂ: 420 ಐ.ಪಿ.ಸಿ:-

         ದಿನಾಂಕ 18/06/2019 ರಂದು ರಾತ್ರಿ 8-30 ಗಂಟೆಗೆ ಪಿರ್ಯಾದಿದಾರರಾದ ಶ್ರೀಮತಿ ರತ್ನಮ್ಮ ಕೋಂ ಬಸವರಾಜ್, 40 ವರ್ಷ, ವಕ್ಕಲಿಗರು, ಜಿರಾಯ್ತಿ, ವಾಸ-ನಾಗಮಂಗಲ ಗ್ರಾಮ, ಜಂಗಮಕೋಟೆ ಹೋಬಳಿ, ಶಿಡ್ಲಘಟ್ಟ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ಈ ದಿನ ದಿನಾಂಕ 18/06/2019 ರಂದು ಸಂಜೆ ಸುಮಾರು 4-30 ಗಂಟೆ ಸಮಯದಲ್ಲಿ ಯಾರೋ ಇಬ್ಬರು ಆಸಾಮಿಗಳು ತಮ್ಮ ಭುಜಗಳಿಗೆ ಬ್ಯಾಗ್ ಗಳನ್ನು ಹಾಕಿಕೊಂಡು ತಮ್ಮ ಮನೆಯ ಬಳಿ ಬಂದು ತಾವು ತಾಮ್ರ, ಚಿನ್ನ, ಬೆಳ್ಳಿಯ ವಡವೆಗಳನ್ನು ಮತ್ತು ಸಾಮಾನುಗಳನ್ನು ಪಾಲಿಶ್ ಮಾಡಿಕೊಡುತ್ತೇವೆ ನಿಮ್ಮ ಬಳಿ ಪಾಲಿಶ್ ಮಾಡುವ ಯಾವುದಾದರೂ ವಸ್ತುಗಳಿದ್ದರೆ ಕೊಡಿ ಎಂದು ಕೇಳಿದಾಗ ತನ್ನ ಕೈಯಲ್ಲಿದ್ದ ಹಿತ್ತಾಳೆ ಬಳೆ ಮಾಸಿ ಹೋಗಿದ್ದ ಕಾರಣ ಅದನ್ನು ಪಾಲಿಶ್ ಮಾಡಿ ಕೊಡಿ ಎಂದು ಅವರ ಕೈಗೆ ತೆಗೆದು ಕೊಟ್ಟಾಗ ಅದರಲ್ಲಿನ ಒಬ್ಬ ವ್ಯಕ್ತಿಯು ತನ್ನ ಬ್ಯಾಗ್ ನಿಂದ ಒಂದು ಬಿಳಿ ಬಣ್ಣದ ಅರ್ಧ ಕ್ಯಾನ್ ಅನ್ನು ತೆಗೆದು ಅದರಲ್ಲಿ ನೀರನ್ನು ಮತ್ತು ಯಾವುದೋ ಪೌಡರ್ ಅನ್ನು ಹಾಕಿ ಹಿತ್ತಾಳೆ ಬಳೆಯನ್ನು ಅದರಲ್ಲಿ ಹಾಕಿ ಸ್ವಲ್ಪ ಸಮಯ ಬಿಟ್ಟು ನಂತರ ಬ್ರಷ್ ನಿಂದ ಬಳೆಯನ್ನು ಉಚ್ಚಲಾಗಿ ತನ್ನ ಬಳೆಯು ಹೊಸ ಬಳೆಯಂತೆ ಕಂಡು ಬಂದಿರುತ್ತದೆ. ನಂತರ ಅದೇ ಆಸಾಮಿಯು ತನ್ನ ಕತ್ತಿನಲ್ಲಿದ್ದ ಬಂಗಾರದ ಸರವನ್ನು ಕಂಡು ಅದು ಹಳೇಯ ರೀತಿಯಲ್ಲಿ ಕಾಣುತ್ತಿದೆ ಅದನ್ನು ತೆಗೆದು ಕೊಡಿ ನಾವು ಪಾಲಿಶ್ ಮಾಡಿಕೊಡುತ್ತೇವೆಂದು ಕೇಳಿದಾಗ ತಾನು ಈ ದಿನ ಮಂಗಳವಾರ ನನಗೆ ಯಾವುದೇ ಪಾಲಿಶ್ ಬೇಡವೆಂದು ಬಳೆ ಪಾಲಿಶ್ ಮಾಡಿಕೊಟ್ಟಿದ್ದಕ್ಕಾಗಿ 20 ರೂ ಹಣವನ್ನು ಕೊಟ್ಟು ಹೋಗುವಂತೆ ತಿಳಿಸಿದಾಗ ತನ್ನ ಗಂಡ ಬಸವರಾಜ್ ರವರು ಮಾಂಗಲ್ಯ ಸರವನ್ನು ಪಾಲಿಶ್ ಮಾಡಿಸಿಕೋ ಅದು ಸಹ ಹೊಸ ಸರ ಇದ್ದ ಹಾಗೇ ಕಾಣಿಸುತ್ತದೆ ಎಂದು ತಿಳಿಸಿದಾಗ ತಾನು ತನ್ನ ಕತ್ತಿನಲ್ಲಿದ್ದ ಮಾಂಗಲ್ಯ ಸರವನ್ನು ಬಿಚ್ಚಿ ಸದರಿ ಆಸಾಮಿಯ ಕೈಗೆ ಕೊಟ್ಟಾಗ ಆತನು ಬಳೆ ಪಾಲಿಶ್ ಮಾಡಿದ ನೀರಿನಲ್ಲಿಯೇ ಮಾಂಗಲ್ಯ ಸರವನ್ನು ಇಟ್ಟಾಗ ಪಕ್ಕದಲ್ಲಿದ್ದ ಮತ್ತೊಬ್ಬ ಆಸಾಮಿಯು ತನ್ನ ಬ್ಯಾಗಿನಿಂದ ಒಂದು ಬಾಟೆಲ್ ಅನ್ನು ತೆಗೆದು ಅದರಲ್ಲಿದ್ದ ಆಸಿಡ್ ರೀತಿಯ ದ್ರವವನ್ನು ಅದರಲ್ಲಿ ಹಾಕಿ ಇದು ಬಂಗಾರದ ವಸ್ತುಗಳನ್ನು ಪಾಲಿಶ್ ಮಾಡುವ ಆಸಿಡ್ ಎಂದು ತಮಗೆ ತಿಳಿಸಿರುತ್ತಾನೆ. ಸ್ವಲ್ಪ ಸಮಯ ತನ್ನ ಮಾಂಗಲ್ಯ ಸರವನ್ನು ಅದರಲ್ಲಿಯೇ ಬಿಟ್ಟು ನಂತರ ಅದನ್ನು ಹೊರಗೆ ತೆಗೆದಾಗ ಅದು ತುಂಡು ತುಂಡಾಗಿ ಸ್ವಲ್ಪ ಕಪ್ಪು ಬಣ್ಣಕ್ಕೆ ತಿರುಗಿ ಸ್ವಲ್ಪ ಕರಗಿದಂತೆ ಕಂಡು ಬಂದಿರುತ್ತದೆ. ಆಗ ತನ್ನ ಗಂಡನಿಗೆ ಸದರಿ ಆಸಾಮಿಗಳ ಮೇಲೆ ಅನುಮಾನ ಬಂದು ಒಬ್ಬನನ್ನು ಹಿಡಿದುಕೊಂಡಾಗ ಮತ್ತೊಬ್ಬ ಆಸಾಮಿಯು ಓಡಿ ಹೋಗಿದ್ದು ಆಗ ತಾನು ಕಿರುಚಿಕೊಂಡಾಗ ತಮ್ಮ ಮನೆಯ ಪಕ್ಕ ರೇಷ್ಮೇ ಗೂಡು ಬಿಡಿಸುತ್ತಿದ್ದ ಚೆನ್ನಕೇಶವ, ನಾರಾಯಣಸ್ವಾಮಿ, ರಮೇಶ್ ರವರು ಅವನನ್ನು ಹಿಂಬಾಲಿಸಿಕೊಂಡು ಹೋದಾಗ ಆತನು ಸ್ವಲ್ಪ ದೂರ ಓಡಿ ಹೋಗಿ ಬಿದ್ದು ಆತನ ತಲೆಗೆ ಗಾಯವಾಗಿರುತ್ತದೆ. ಸದರಿ ವ್ಯಕ್ತಿಗಳನ್ನು ಹಿಡಿದುಕೊಂಡು ಬಂದು ಅವರ ಹೆಸರು ವಿಳಾಸ ಕೇಳಲಾಗಿ ವಿಜಯ್ ಕುಮಾರ್ ಬಿನ್ ಲಕ್ಷ್ಮಣ್ ಮಂಡಲ್, 26 ವರ್ಷ, ಬೆಸ್ತರು, ವಾಸ-ವಾರ್ಡ್ ನಂಬರ್ 9, ಜದಿಯಾ ಅನಂತಪುರ್ ಚೌಕ್, ತಿರುಮನಗಟ್ಟಿ ತಾಲ್ಲೂಕು, ಸುಪುರ್ ಜಿಲ್ಲೆ, ಬಿಹಾರ ಎಂದು ಓಡಿ ಹೋಗಲು ಯತ್ನಿಸಿದ ಆಸಾಮಿಯು ತನ್ನ ಹೆಸರು ವಿಳಾಸ ಲಲನ್ ಕುಮಾರ್ ಬಿನ್ ಅಜರ್ುನ್ ಸಾಹ, 25 ವರ್ಷ, ತಾಟರಿ ಜನಾಂಗ, ವಾಸ-ವಾರ್ಡ್ ನಂಬರ್ 16, ಭವಾನಿ ಪುರ್ ದಕ್ಷಿಣ್, ಪ್ರತಾಪ್ ಗಡ್, ಸುಪುರ್ ಜಿಲ್ಲೆ, ಬಿಹಾರ ರಾಜ್ಯ ಎಂದು ತಿಳಿಸಿರುತ್ತಾನೆ. ಲಲನ್ ಕುಮಾರ್ ಎಂಬಾತನು ಓಡಿ ಹೋಗುವ ಸಮಯದಲ್ಲಿ ಆತನ ಕಾಲು ತಾಗಿ ಟಬ್ ನಲ್ಲಿ ಮಾಂಗಲ್ಯ ಸರ ಪಾಲಿಶ್ ಮಾಡಲು ಹಾಕಿದ್ದ ಆಸಿಡ್ ಹಾಕಿದ್ದ ನೀರು ಚೆಲ್ಲಿ ಹೋಗಿರುತ್ತದೆ. ಮೇಲ್ಕಂಡ ಆಸಾಮಿಗಳು ತನ್ನ ಮಾಂಗಲ್ಯ ಸರವನ್ನು ಪಾಲಿಶ್ ಮಾಡುವ ನೆಪದಲ್ಲಿ ತಮ್ಮ ಬಳಿ ಇದ್ದ ಯಾವುದೋ ಆಸಿಡ್ ತರಹದ ದ್ರಾವಣದಲ್ಲಿ ಹಾಕಿ ಬಂಗಾರ ಅದರಲ್ಲಿ ಕರಗುವಂತೆ ಮಾಡಿ ತನಗೆ ಮೋಸ ಮಾಡಿರುತ್ತಾರೆ. ಸದರಿ ಆಸಾಮಿಗಳ ಬಳಿ ಇದ್ದ ಬ್ಯಾಗ್ ಗಳನ್ನು ಮತ್ತು ಆರೋಪಿಗಳನ್ನು ಠಾಣೆಗೆ ಕರೆದುಕೊಂಡು ಬಂದು ತಮ್ಮ ಮುಂದೆ ಹಾಜರು ಪಡಿಸುತ್ತಿದ್ದು ಸದರಿ ಆಸಾಮಿಗಳ ವಿರುದ್ದ ಮುಂದಿನ ಕಾನೂನು ರೀತ್ಯಾ ಕ್ರಮ ಜರುಗಿಸ ಬೇಕಾಗಿ ಕೊಟ್ಟ ದೂರು.

 1. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆ. ಮೊ.ಸಂ: 147/2019 ಕಲಂ: 15(A), 32(3) ಕೆ.ಇ. ಆಕ್ಟ್:-

         ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆಯ ಹರೀಶ ವಿ ಪಿ.ಎಸ್.ಐ ಆದ ನನಗೆ ದಿನಾಂಕ.19.06.2019 ರಂದು 11.00 ಗಂಟೆ ಸಮಯದಲ್ಲಿ ನಾನು ಠಾಣೆಯಲ್ಲಿ ಕರ್ತವ್ಯದಲ್ಲಿದ್ದಾಗ ಶಿಡ್ಲಘಟ್ಟ ತಾಲ್ಲೂಕು ಬೆಳ್ಳಟ್ಟಿ ಗ್ರಾಮದಲ್ಲಿ ವೆಂಕಟೇಶ ಬಿನ್ ಹನುಂತಪ್ಪ ರವರ ಅಂಗಡಿಯ ಮುಂದೆ ಕಲ್ಲು ಜಗುಲಿಯ ಮೇಲೆ ಅಕ್ರಮವಾಗಿ ಮಧ್ಯದ ಪಾಕೇಟುಗಳನ್ನಿಟ್ಟುಕೊಂಡು ಮಾರಾಟ ಮಾಡುತ್ತಾ ಸಾರ್ವಜನಿಕರಿಗೆ ಕುಡಿಯಲು ಸ್ಥಳಾವಕಾಶ ಮಾಡುತ್ತಿರುವುದಾಗಿ ಬಂದ ಮಾಹಿತಿ ಮೇರೆಗೆ ಕೂಡಲೇ ಸಿಬ್ಬಂದಿಯವರಾದ ಸಿಪಿಸಿ 434 ಬಬಾಜಾನ್, ಪಿಸಿ 138 ನಾರಾಯಣಸ್ವಾಮಿ ರವರೊಂದಿಗೆ ಠಾಣಾ ಜೀಪು ಸಂಖ್ಯೆ ಕೆಎ.40.ಜಿ.357 ಜೀಪಿನಲ್ಲಿ ಬೆಳಿಗ್ಗೆ 11.30 ಗಂಟೆಗೆ ಬೆಳ್ಳುಟ್ಟಿ ಗ್ರಾಮಕ್ಕೆ ಹೋಗಿ ಸಿಪಿಸಿ 434 ಬಾಬಾಜಾನ್ ರವರಿಗೆ ಇಬ್ಬರು ಪಂಚಾಯ್ತಿದಾರರನ್ನು ನನ್ನ ಮುಂದೆ ಹಾಜರುಪಡಿಸುವಂತೆ ತಿಳಿಸಿದ್ದು ಅದರಂತೆ ಸಿಪಿಸಿ 434 ಬಾಬಾಜಾನ್ ರವರು ಇಬ್ಬರು ಪಂಚಾಯ್ತಿದಾರರನ್ನು ಹಾಜರುಪಡಿಸಿದ್ದು ಅವರಿಗೆ ದಾಳಿಯ ಬಗ್ಗೆ ಮಾಹಿತಿಯನ್ನು ತಿಳಿಸಿ ಪಂಚರು ಮತ್ತು ಸಿಬ್ಬಂದಿಯೊಂದಿಗೆ ಸಕರ್ಾರಿ ಜೀಪಿನಲ್ಲಿ 11.40 ಗಂಟೆಗೆ ಬೆಳ್ಳುಟ್ಟಿ ಗ್ರಾಮದ ವೆಂಕಟೇಶ ಬಿನ್ ಹನುಮಂತಪ್ಪ ರವರ ಅಂಗಡಿಯ ಸ್ವಲ್ಪ ದೂರದಲ್ಲಿ ಜೀಪು ನಿಲ್ಲಿಸಿ ಮರೆಯಲ್ಲಿ ವಾಚ್ ಮಾಡಲಾಗಿ ಒಬ್ಬ ಆಸಾಮಿ ಅಂಗಡಿಯ ಮುಂಭಾಗದ ಕಲ್ಲು ಜುಗುಲಿಯ ಮೇಲೆ ಅಕ್ರಮವಾಗಿ ಮಧ್ಯದ ಪಾಕೇಟುಗಳನ್ನು ಇಟ್ಟುಕೊಂಡು ಕೂತುಕೊಂಡಿದ್ದು, ಮೂರು ಜನ ಸಾರ್ವಜನಿಕರು ಮಧ್ಯವನ್ನು ಕುಡಿಯುತ್ತಿದ್ದರು. ಖಾತ್ರಿ ಪಡಿಸಿಕೊಂಡು ದಾಳಿಮಾಡಲಾಗಿ ಮಧ್ಯವನ್ನು ಕುಡಿಯುತ್ತಿದ್ದ ಸಾರ್ವಜನಿಕರು ಓಡಿ ಹೋಗಿದ್ದು, ಮಧ್ಯವನ್ನು ಹಿಡಿದು ಕುಳಿತುಕೊಂಡಿದ್ದವನನ್ನು ಸುತ್ತುವರೆದು ಹಿಡಿಯುವಷ್ಠರಲ್ಲಿ ಆತನು ಹಿಡಿದು ಹೆಸರು ಮತ್ತು ವಿಳಾಸ ಕೇಳಲಾಗಿ, ವೆಂಕಟೇಶ ಬಿನ್ ಹನುಮಂತಪ್ಪ, 43 ವರ್ಷ, ವಕ್ಕಲಿಗರು, ಅಂಗಡಿ ವ್ಯಾಪಾರ, ಬೆಳ್ಳುಟ್ಟಿ ಗ್ರಾಮ ಶಿಡ್ಲಘಟ್ಟ ತಾಲ್ಲೂಕು ಎಂತ ತಿಳಿಸಿದ್ದು ಅಲ್ಲಿಯೇ ಒಂದು ಬ್ಯಾಗಿನಲ್ಲಿ ನೋಡಲಾಗಿ  ಮಧ್ಯದ ಪಾಕೇಟುಗಳಿದ್ದು, ಪರಿಶೀಲಿಸಲಾಗಿ  ಓರಿಜನಲ್ ಚಾಯ್ಸ್ ಡಿಲೆಕ್ಸ್ ವಿಸ್ಕಿ 90 ಎಂ.ಎಲ್. ನ 9 ಪಾಕೇಟುಗಳಿದ್ದು, ಒಂದರ ಬೆಲೆ 30.32  ರೂ.ಗಳಾಗಿದ್ದು, ಒಟ್ಟು ಬೆಲೆ 272.88 ರೂ.ಗಳಾಗಿರುತ್ತೆ. ಪಕ್ಕದಲ್ಲಿ ಓರಿಜನಲ್ ಚಾಯ್ಸ್ ಡಿಲೆಕ್ಸ್ ವಿಸ್ಕಿ 90 ಎಂ.ಎಲ್. ನ 3 ಖಾಲಿ  ಪಾಕೇಟುಗಳು, 3 ಪ್ಲಾಸ್ಟಿಕ್ ಗ್ಲಾಸುಗಳು, ಒಂದು ಅರ್ದ ನೀರು ತುಂಬಿದ ಒಂದು ಲೀಟರ್ ನೀರಿನ ಬಾಟಲ್ ಇರುತ್ತೆ. ಸದರಿ ವೆಂಕಟೇಶ ಬಿನ್ ಹನುಮಂತಪ್ಪ  ರವರು ಯಾವುದೇ ಪರವಾನಗಿ ಪಡೆಯದೆ ಅಕ್ರಮವಾಗಿ ಮದ್ಯವನ್ನು ಮಾರಾಟ ಹಾಗೂ  ಕುಡಿಯಲು ಸಾರ್ವಜನಿಕರಿಗೆ ಸ್ಥಳಾವಕಾಶ ಮಾಡಿಕೊಟ್ಟಿರುವುದು ಕಂಡು ಬಂದಿದರಿಂದ ಮದ್ಯದ ಪಾಕೇಟ್ ಗಳನ್ನು, ವಾಟರ್ ಬಾಟಲ್, ಗ್ಲಾಸುಗಳನ್ನು ಮದ್ಯಾಹ್ನ 12.00 ಗಂಟೆಯಿಂದ 1.00 ಗಂಟೆಯವರೆಗೆ ಅಮಾನತ್ತು ಪಡಿಸಿಕೊಂಡು ಮಾಲಿನೊಂದಿಗೆ ಮುಂದಿನ ಕ್ರಮಕ್ಕಾಗಿ ಮದ್ಯಾಹ್ನ 1.30 ಗಂಟೆಗೆ ಠಾಣೆಗೆ ಬಂದು ಠಾಣಾ ಮೊ.ಸಂ. 147/2019 ಕಲಂ 15(ಎ)32(3) ಕೆಇ ಆಕ್ಟ್ ರೀತ್ಯಾ ಸ್ವತಃ ಕೇಸು ದಾಖಲಿಸಿರುತ್ತೇನೆ.