ದಿನಾಂಕ :19/05/2020 ರ ಅಪರಾಧ ಪ್ರಕರಣಗಳು

  1. ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆ ಮೊ.ಸಂ. 26/2020 ಕಲಂ. 323,324,504,506 ರೆ/ವಿ 34 ಐ.ಪಿ.ಸಿ:-

          ದಿನಾಂಕ:18-05-2020 ರಂದು ಸಂಜೆ 4-30 ಗಂಟೆಯಲ್ಲಿ  ಕೇಸಿನ ಪಿರ್ಯಾಧಿ ಮಹಮದ್ ಸಾದೀಕ್ ಪಾಷಾ ರವರು ಠಾಣೆಗೆ ಹಾಜರಾಗಿ ಕೊಟ್ಟ ದೂರಿನ ಸಾರಾಂಶವೇನೆಂದರೆ, ಈ ದಿನ ತಾನು ಮತ್ತು ತನ್ನ ಹೆಂಡತಿ ವಾರ್ಡ-3 ರ  ನಗರ ಸಭೆ ಸದಸ್ಯೆಯಾದ ಶ್ರೀಮತಿ ಶಕೀಲಾಬಾನುರವರೊಂದಿಗೆ ಕೋವಿದ್-19 ಹಾಗೂ ರಂಜಾನ್ ಹಬ್ಬದ ಪ್ರಯುಕ್ತ ಬಡವರಿಗೆ ಉಚಿತ ಆಹಾರ ಕಿಟ್ ಗಳನ್ನು ವಿತರಣೆ ಮಾಡಲು ಹೋಗಿ  ಕಿಟ್ ಗಳನ್ನು ವಿತರಣೆ ಮಾಡಿಕೊಂಡು ದರ್ಗಾಮೊಹಲ್ಲಾದ  ಮಸೀದಿ ಪಕ್ಕದ ಸಂಧಿಯ ಜಬೀನಾ ರವರ ಮನೆಯ ಬಳಿ ಬಂದಾಗ ಜಬೀನಾ ರವರು ಪಿರ್ಯಾಧಿಯನ್ನು  ನಮ್ಮ ಮನೆಯಲ್ಲಿ  ಎಷ್ಟು ಜನ ಇದ್ದಾರೆ ಗೊತ್ತಾ ನಮಗೂ ಒಂದೇ ಕಿಟ್ ಕೊಟ್ಟಿದ್ದೀಯಲ್ಲಾ ಎಂದು ಕೇಳಿದ್ದು ಅದಕ್ಕೆ ಎಲ್ಲಾ ಮನೆಗಳಿಗೂ ಒಂದೊಂದೆ ಕಿಟ್ ಗಳನ್ನು ಕೊಡುವುದು ಎಂದು ಹೇಳಿದ್ದಕ್ಕೆ ಮಾತಿಗೆ ಮಾತು ಬೆಳೆದು  ಅರೋಪಿಗಳಾದ  ಜಬೀನಾ, ಸಿಗ್ಬತ್, ಜಾವೀದ್ ಪಾಷಾ, ಜಾಫರ್ ಹಾಗೂ ಅರ್ಷೀಯಾ ರವರು ಸೇರಿ ಅವ್ಯಾಚ್ಯಶಬ್ದಗಳಿಂದ ಬೈದು ಕೈಗಳಿಂದ ಗುದ್ದಿ ಸಿಗ್ಬತ್ ಎಂಬುವವನು ಚಾಕುವಿನಿಂದ ಹಲ್ಲೆ ಮಾಡಿ  ಚಾಕು,ಲಾಂಗ್ ಹಾಗೂ ಅಡಿಗೆಯ ದೊಡ್ಡ ಜಾಲರವನ್ನು ತೋರಿಸಿ ಪ್ರಾಣಬೆದರಿಕೆ ಹಾಕಿರುತ್ತಾರೆಂದು ಕೊಟ್ಟ ದೂರಿನ ಸಾರಾಂಶವಾಗಿರುತ್ತದೆ.

  1. ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆ ಮೊ.ಸಂ. 27/2020 ಕಲಂ. 143,147,323,324,504,506(B) ರೆ/ವಿ 149 ಐ.ಪಿ.ಸಿ:-

          ದಿನಾಂಕ:18-05-2020 ರಂದು ಸಂಜೆ 4-30 ಗಂಟೆಯಲ್ಲಿ  ಕೇಸಿನ ಪಿರ್ಯಾಧಿ ಮಹಮದ್ ಸಾದೀಕ್ ಪಾಷಾ ರವರು ಠಾಣೆಗೆ ಹಾಜರಾಗಿ ಕೊಟ್ಟ ದೂರಿನ ಸಾರಾಂಶವೇನೆಂದರೆ, ಈ ದಿನ ತಾನು ಮತ್ತು ತನ್ನ ಹೆಂಡತಿ ವಾರ್ಡ-3 ರ  ನಗರ ಸಭೆ ಸದಸ್ಯೆಯಾದ ಶ್ರೀಮತಿ ಶಕೀಲಾಬಾನುರವರೊಂದಿಗೆ ಕೋವಿದ್-19 ಹಾಗೂ ರಂಜಾನ್ ಹಬ್ಬದ ಪ್ರಯುಕ್ತ ಬಡವರಿಗೆ ಉಚಿತ ಆಹಾರ ಕಿಟ್ ಗಳನ್ನು ವಿತರಣೆ ಮಾಡಲು ಹೋಗಿ  ಕಿಟ್ ಗಳನ್ನು ವಿತರಣೆ ಮಾಡಿಕೊಂಡು ದರ್ಗಾಮೊಹಲ್ಲಾದ  ಮಸೀದಿ ಪಕ್ಕದ ಸಂಧಿಯ ಜಬೀನಾ ರವರ ಮನೆಯ ಬಳಿ ಬಂದಾಗ ಜಬೀನಾ ರವರು ಪಿರ್ಯಾಧಿಯನ್ನು  ನಮ್ಮ ಮನೆಯಲ್ಲಿ  ಎಷ್ಟು ಜನ ಇದ್ದಾರೆ ಗೊತ್ತಾ ನಮಗೂ ಒಂದೇ ಕಿಟ್ ಕೊಟ್ಟಿದ್ದೀಯಲ್ಲಾ ಎಂದು ಕೇಳಿದ್ದು ಅದಕ್ಕೆ ಎಲ್ಲಾ ಮನೆಗಳಿಗೂ ಒಂದೊಂದೆ ಕಿಟ್ ಗಳನ್ನು ಕೊಡುವುದು ಎಂದು ಹೇಳಿದ್ದಕ್ಕೆ ಮಾತಿಗೆ ಮಾತು ಬೆಳೆದು  ಅರೋಪಿಗಳಾದ  ಜಬೀನಾ, ಸಿಗ್ಬತ್, ಜಾವೀದ್ ಪಾಷಾ, ಜಾಫರ್ ಹಾಗೂ ಅರ್ಷೀಯಾ ರವರು ಸೇರಿ ಅವ್ಯಾಚ್ಯಶಬ್ದಗಳಿಂದ ಬೈದು ಕೈಗಳಿಂದ ಗುದ್ದಿ ಸಿಗ್ಬತ್ ಎಂಬುವವನು ಚಾಕುವಿನಿಂದ ಹಲ್ಲೆ ಮಾಡಿ  ಚಾಕು,ಲಾಂಗ್ ಹಾಗೂ ಅಡಿಗೆಯ ದೊಡ್ಡ ಜಾಲರವನ್ನು ತೋರಿಸಿ ಪ್ರಾಣಬೆದರಿಕೆ ಹಾಕಿರುತ್ತಾರೆಂದು ಕೊಟ್ಟ ದೂರಿನ ಸಾರಾಂಶವಾಗಿರುತ್ತದೆ.

  1. ಚಿಕ್ಕಬಳ್ಳಾಪುರ ಸಂಚಾರಿ ಪೊಲೀಸ್ ಠಾಣೆ ಮೊ.ಸಂ. 21/2020 ಕಲಂ. 279,337 ಐ.ಪಿ.ಸಿ:-

          ದಿನಾಂಕ:-19/05/2020 ರಂದು ಚಿಕ್ಕಬಳ್ಳಾಪುರ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಗಾಯಾಳು ಶ್ರೀ ರವಿಕುಮಾರ್ ಬಿನ್ ಲೇಟ್ ಬಿ ನಾರಾಯಣಪ್ಪ 38 ವರ್ಷ, ವಕ್ಕಲಿಗರು, ಜಿರಾಯ್ತಿ, ಆವಲಗುರ್ಕಿ ಗ್ರಾಮ, ಕಸಭಾ ಹೋಬಳಿ, ಚಿಕ್ಕಬಳ್ಳಾಪುರ ತಾಲ್ಲೂಕು ಮತ್ತು ಜಿಲ್ಲೆ ರವರಿಂದ ಪಡೆದ ಹೇಳಿಕೆಯ ಸಾರಾಂಶವೆನೇಂದರೆ ದಿನಾಂಕ:-19/05/2020 ರಂದು ತನ್ನ ಬಾಬತ್ತು ಕೆಎ-40-ಎಕ್ಸ್-0512 ರ ಫ್ಯಾಷನ್ ಪ್ರೋ ದ್ವಿಚಕ್ರವಾಹನದಲ್ಲಿ ತಾನು ಮತ್ತು ತನ್ನ ನಾದಿನಿ ಶ್ರೀಮತಿ ಮಂಜುಳ ಕೋಂ ಆನಂದ 32 ವರ್ಷ, ವಕ್ಕಲಿಗರು, ಗೃಹಿಣಿ, ಬ್ಯಾಡರಹಳ್ಳಿ ಗ್ರಾಮ, ದೊಡ್ಡಬಳ್ಳಾಪುರ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ ರವರೊಂದಿಗೆ ತಮ್ಮ ಆವಲಗುರ್ಕಿ ಗ್ರಾಮದಿಂದ ಶಿಡ್ಲಘಟ್ಟಕ್ಕೆ ಹೋಗಲು ಬೆಳಿಗ್ಗೆ 10-45 ಗಂಟೆಯ ಸಮಯದಲ್ಲಿ ಬಾಗೇಪಲ್ಲಿ – ಬೆಂಗಳೂರು ಎನ್.ಎಚ್-44 ಹೈವೇ ರಸ್ತೆಯ ಮಂಚನಬಲೆ ಬ್ರಿಡ್ಜ್ ಬಳಿ ಹೋಗುತ್ತಿದ್ದಾಗ ಹಿಂದಿನಿಂದ ಬಾಗೇಪಲ್ಲಿ ಕಡೆಯಿಂದ ಬಂದ ಕೆಎ-40-ಯೂ-9170 ರ ದ್ವಿಚಕ್ರವಾಹನ ಸವಾರ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ತಮ್ಮ ದ್ವಿಚಕ್ರವಾಹನದ ಹಿಂಭಾಗಕ್ಕೆ ಡಿಕ್ಕಿ ಹೊಡೆಸಿದ ಪರಿಣಾಮ ವಾಹನ ಸಮೇತ ಠಾರ್ ರಸ್ತೆಯಲ್ಲಿ ಬಿದ್ದಾಗ ತನಗೆ ಕೈ-ಕಾಲುಗಳಿಗೆ ಹಾಗೂ ಹಿಂದೆ ಕುಳಿತಿದ್ದ ತನ್ನ ನಾದಿನಿ ಮಂಜುಳ ರವರಿಗೆ ಎಡಕೈ-ಎಡಕಾಲಿಗೆ ಗಾಯಗಳಾಗಿದ್ದು ಹಾಗೂ ಅಪಘಾತ ಪಡಿಸಿದ ದ್ವಿಚಕ್ರವಾಹನ ಸವಾರನಿಗೂ ಸಹಾ ಗಾಯಗಳಾಗಿದ್ದು,  ತನ್ನ ಹಿಂದೆಯೇ ಬರುತ್ತಿದ್ದ ತನ್ನ ಸಂಬಂದಿ ಶ್ರೀಚಂದ್ರಶೇಖರ್ ಎಂ. ಆರ್ ಬಿನ್ ರಾಮರೆಡ್ಡಿ 28 ವರ್ಷ, ಮುಗುಳುಕುಪ್ಪೆ ಗ್ರಾಮ, ಕಸಭಾ ಹೋಬಳಿ, ಚಿಕ್ಕಬಳ್ಳಾಪುರ ತಾಲ್ಲೂಕು ರವರು ತಮ್ಮಗಳನ್ನು ಉಪಚರಿಸಿ ರಸ್ತೆಯಲ್ಲಿ ಬರುತ್ತಿದ್ದ ಯಾವುದೋ ಜೀಪಿನಲ್ಲಿ ಚಿಕಿತ್ಸೆಗಾಗಿ ಚಿಕ್ಕಬಳ್ಳಾಪುರ ಸರ್ಕಾರಿ ಆಸ್ಪತ್ರೆಗೆ ಸೇರಿಸಿದ್ದು, ಸದರಿ ಅಪಘಾತ ಪಡಿಸಿದ ದ್ವಿಚಕ್ರಸವಾರನ ಬಗ್ಗೆ ವಿಚಾರಿಸಲಾಗಿ ಎಂ.ಜಿ ಶ್ರೀನಿವಾಸ ಬಿನ್ ಲೇಟ್ ಎಂ.ಹೆಚ್.ಗಂಗೆರೆಡ್ಡಿ 55 ವರ್ಷ, ಲಕ್ಕಲಹಳ್ಳಿ ಗ್ರಾಮ, ಗೌರಿಬಿದನೂರು ತಾಲ್ಲೂಕು ಎಂತ ತಿಳಿಸಿದ್ದು ಸದರಿ ಅಪಘಾತಕ್ಕೆ ಕಾರಣನಾದ ಕೆಎ-40-ಯೂ-9170 ರ ದ್ವಿಚಕ್ರವಾಹನ ಸವಾರನ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ನೀಡಿದ ಹೇಳಿಕೆಯ ದೂರಿನ ಮೇರೆಗೆ ಠಾಣೆಯಲ್ಲಿ ದಿನಾಂಕ:-19/05/2020 ರಂದು ಮಧ್ಯಾಹ್ನ 13:30 ಗಂಟೆಗೆ ಪ್ರಕರಣವನ್ನು ದಾಖಲಿಸಿಕೊಂಡಿರುತ್ತೆ.

  1. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 124/2020 ಕಲಂ. 302  ಐ.ಪಿ.ಸಿ:-

          ದಿನಾಂಕ:-18/05/2020 ರಂದು ರಾತ್ರಿ 8-30 ಗಂಟೆಗೆ ಪಿರ್ಯಾದಿದಾರರಾದ ಶ್ರೀಮತಿ ರುಕ್ಮಿಣಿಯಮ್ಮ ಕೋಂ ಮಧುಸೂಧನ್, 35 ವರ್ಷ, ವಕ್ಕಲಿಗರು, ಗೃಹಿಣಿ, ವಾಸ-ವಾರ್ಡ್  ನಂಬರ್-5, ಜಾತವಾರಬೀದಿ, ಕೆ.ಕೆ ಪೇಟೆ, ಶಿಡ್ಲಘಟ್ಟ ಟೌನ್ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ತನ್ನ ಗಂಡನಾದ ಮಧುಸೂಧನ್ ರವರು ಈಗ್ಗೆ ಒಂದು ವಾರದಿಂದ ಅನೂರು ಗ್ರಾಮದ ಬಳಿ ಇರುವ ಶಿಡ್ಲಘಟ್ಟ ನಗರದ ಗಂಗಮ್ಮನಗುಡಿ ಬಳಿ ವಾಸವಾಗಿರುವ ಹರಿಶಿನಕುಂಟೆ ರಾಮಣ್ಣ ರವರ ಬಾಬತ್ತು ಜಮೀನಿನಲ್ಲಿರುವ ರೇಷ್ಮೇ ಹುಳು ಸಾಕಾಣಿಕಾ ಶೆಡ್ ನಲ್ಲಿ ರೇಷ್ಮೇ ಹುಳು ಸಾಕಾಣಿಕೆ ಮಾಡಲು ಕೂಲಿ ಕೆಲಸಕ್ಕೆ ಹೋಗುತ್ತಿದ್ದರು. ತನ್ನ ಗಂಡ ಮಧುಸೂಧನ್ ರವರು ಪ್ರತಿ ದಿನ ಬೆಳಿಗ್ಗೆ ರಾಮಣ್ಣ ರವರ ಜಮೀನಿನ ಬಳಿ ಹೋಗಿ ರೇಷ್ಮೇ ಹುಳುಗಳಿಗೆ ಸೊಪ್ಪನ್ನು ಹಾಕಿ ಕೆಲಸಗಳನ್ನು ನೋಡಿಕೊಂಡು ರಾತ್ರಿ ವಾಪಸ್ಸು ಮನೆಗೆ ಬರುತ್ತಿದ್ದರು. ಹೀಗಿರುವಾಗ ಈ ದಿನ ದಿನಾಂಕ 18/05/2020 ರಂದು ಬೆಳಿಗ್ಗೆ 6-00 ಗಂಟೆ ಸಮಯದಲ್ಲಿ ತನ್ನ ಗಂಡ ಎಂದಿನಂತೆ ಕೆಲಸಕ್ಕೆ ಹೋಗಿ ಬೆಳಿಗ್ಗೆ ಸುಮಾರು 8-00 ಗಂಟೆಗೆ ಮನೆಗೆ ವಾಪಸ್ಸು ಬಂದು ಪುನಃ ಇದೇ ದಿನ ಮದ್ಯಾಹ್ನ ಸುಮಾರು 3-00 ಗಂಟೆ ಸಮಯದಲ್ಲಿ ರೇಷ್ಮೇ ಹುಳುಗಳಿಗೆ ಸೊಪ್ಪನ್ನು ಹಾಕ ಬೇಕು ಎಂದು ಮನೆಯಿಂದ ಹೋಗಿರುತ್ತಾರೆ. ಇದೇ ದಿನ ಸಂಜೆ ಸುಮಾರು 4-30 ಗಂಟೆ ಸಮಯದಲ್ಲಿ ರಾಮಣ್ಣ ರವರು ತನಗೆ ಪೋನ್ ಮಾಡಿ ತನ್ನ ಗಂಡ ತಮ್ಮ ಜಮೀನಿನಲ್ಲಿರುವ ರೇಷ್ಮೇ ಹುಳುಗಳ ಶೆಡ್ ಬಳಿ ಬಿದ್ದು ಹೋಗಿ ಉಸಿರು ಆಡುತ್ತಿಲ್ಲಾ, ಎಂದು ಹೇಳಿದ್ದು, ಆಗ ತಾನು ತನ್ನ ಗಂಡನಿಗೆ ಆಸ್ಪತ್ರೆಗೆ ಸಾಗಿಸಿಕೊಂಡು ಬರುವಂತೆ ಹೇಳಿದಾಗ ರಾಮಣ್ಣ ರವರು ತನ್ನ ಗಂಡನ ಕೈ ಕಾಲುಗಳು ತಣ್ಣಗಾಗಿ ಹೋಗಿದೆ ಎಂದು ಹೇಳಿರುತ್ತಾರೆ. ನಂತರ ರಾಮಣ್ಣ ರವರು ತಮ್ಮ ಮನೆಯ ಬಳಿ ತಮ್ಮ ದ್ವಿ ಚಕ್ರ ವಾಹನದಲ್ಲಿ ಬಂದು ತನ್ನನ್ನು ಅವರ ಜಮೀನಿನ ಬಳಿ ಕರೆದುಕೊಂಡು ಹೋಗಿದ್ದು, ನೋಡಲಾಗಿ ತನ್ನ ಗಂಡ ಜಮೀನಿನ ಶೆಡ್ ಬಳಿ ಸತ್ತು ಬಿದ್ದಿದ್ದು, ತನ್ನ ಗಂಡನ ಬಲ ಭಾಗದ ಕಿವಿಯ ಕೆಳಭಾಗ ಕತ್ತಿನ ಬಳಿ ಸುಮಾರು 2 ಇಂಚು ಅಗಲದ ತಿವಿದ ರೀತಿಯಲ್ಲಿ ರಕ್ತಗಾಯವಾಗಿರುವುದು ಕಂಡು ಬಂದಿರುತ್ತದೆ. ತನ್ನ ಗಂಡನನ್ನು ಹರಶಿನಕುಂಟೆ ರಾಮಣ್ಣ ನವರಾಗಲೀ ಅಥವಾ ಬೇರೆ ವ್ಯಕ್ತಿಗಳಾಗಲೀ ತನ್ನ ಗಂಡನನ್ನು ಯಾವುದೋ ವಿಷಯದಲ್ಲಿ ಯಾವುದೋ ಆಯುಧದಿಂದ ಕತ್ತಿನ ಬಳಿ ತಿವಿದು ಕೊಲೆ ಮಾಡಿರುವುದಾಗಿ ತನಗೆ ಅನುಮಾನ ಇರುತ್ತದೆ. ತನ್ನ ಗಂಡನ ಶವವು ರಾಮಣ್ಣ ರವರ ಜಮೀನಿನಲ್ಲಿ ಇದ್ದು ತಾವು ಸ್ಥಳಕ್ಕೆ ಬೇಟಿಯನ್ನು ನೀಡಿ, ಪರಿಶೀಲಿಸಿ ಮುಂದಿನ ಕಾನೂನು ಕ್ರಮ ಜರುಗಿಸ ಬೇಕಾಗಿ ಕೊಟ್ಟ ದೂರು.