ದಿನಾಂಕ : 19/02/2020 ರ ಅಪರಾಧ ಪ್ರಕರಣಗಳು

1. ಬಾಗೇಪಲ್ಲಿ ಪೊಲೀಸ್ ಠಾಣೆ ಮೊ.ಸಂ.40/2020 ಕಲಂ. 279-337 ಐ.ಪಿ.ಸಿ:-
ದಿನಾಂಕ:18.02.2020 ರಂದು ಸಂಜೆ 4.15 ಗಂಟೆಗೆ ಪಿರ್ಯಾದಿದಾರರಾದ ಶ್ರೀಮತಿ ಅಕ್ಕುಲಮ್ಮ ಕೊಂ ಎ. ವೆಂಕಟರಾಮಪ್ಪ, 60 ವರ್ಷ, ನಾಯಕ ಜನಾಂಗ, ಗೃಹಿಣಿ, ವಾಸ ಯಲ್ಲಂಪಲ್ಲಿ ಗ್ರಾಮ, ಬಾಗೇಪಲ್ಲಿ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ ನಾನು ಈ ಮೇಲ್ಕಂಡ ವಿಳಾಸದಲ್ಲಿ ವಾಸವಾಗಿದ್ದು, ಕೂಲಿಯಿಂದ ಜೀವನ ಮಾಡಿಕೊಂಡಿರುತ್ತೇನೆ. ನನ್ನ ಮಗನಾದ ನರಸಿಂಹಮೂರ್ತಿ ಬಿನ್ ಎ. ವೆಂಕಟರಾಮಪ್ಪ ರವರು ಕೂಲಿ ಕೆಲಸಕ್ಕಾಗಿ ದಿನಾಂಕ:18.02.2020 ರಂದು ಬೆಳಗ್ಗೆ ಸುಮಾರು 8.30 ಗಂಟೆ ಸಮಯದಲ್ಲಿ ಯಲ್ಲಂಪಲ್ಲಿ ಗ್ರಾಮದಿಂದ ತಮ್ಮ ದ್ವಿಚಕ್ರ ವಾಹನವಾದ ಕೆಎ-40-ಇಸಿ-6153 ರ ವಾಹನದಲ್ಲಿ ಪಾತಪಾಳ್ಯ ಕಡೆಗೆ ಹೋಗುತ್ತಿದ್ದಾಗ, ಆಚೇಪಲ್ಲಿ ಕ್ರಾಸ್ ಸಮೀಪ ಎದುರುಗಡೆಯಿಂದ ಬಂದ ಕೆಎ-51-518 ರ ಶಾಂತಿನಿಕೇತನ ಶಾಲಾ ವಾಹನವು ಢಿಕ್ಕಿ ಹೊಡೆದಿರುತ್ತದೆ. ಇದರಿಂದಾಗಿ ನನ್ನ ಮಗನ ಕಾಳು ಮುರಿದು ಗಂಭೀರವಾಗಿ ಗಾಯಗೊಂಡಿರುತ್ತಾನೆ. ನಂತರ ಸ್ಥಳೀಯರು ಬಾಗೇಪಲ್ಲಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿರುತ್ತಾರೆ. ಆನಂತರ ನಾವು ಹೆಚ್ಚಿನ ಚಿಕಿತ್ಸೆಗಾಗಿ ದೇವನಹಳ್ಳಿ ಖಾಸಗೀ ಆಸ್ಪತ್ರೆಯಲ್ಲಿ ದಾಖಲು ಮಾಡಿರುತ್ತೇವೆ. ಆದ್ದರಿಂದ ಈ ಬಗ್ಗೆ ಸೂಕ್ತ ಕ್ರಮ ಕೈಗೊಂಡು ನಮಗೆ ನ್ಯಾಯ ದೊರಕಿಸಿಕೊಡಲು ಕೋರಿ ನೀಡಿದ ದೂರನ್ನು ಪಡೆದು ಠಾಣಾ ಮೊ.ಸಂ 40/2020 ಕಲಂ 279, 337 ಐಪಿಸಿ ರೀತ್ಯಾ ಪ್ರಕರಣ ದಾಖಲಿಸಿಕೊಂಡಿರುತ್ತದೆ.
2. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.22/2020 ಕಲಂ. 87 ಕೆ.ಪಿ ಆಕ್ಟ್:-
ದಿ:18.02.2020 ರಂದು ಪಿ ಎಸ್ ಐ ಸಾಹೇಬರು ನೀಡಿದ ವರದಿಯ ಸಾರಾಂಶವೇನೆಂದರೆ ದಿನಾಂಕ;18.02.2020 ರಂದು ತಾನು ಠಾಣಾ ಪ್ರಭಾರದಲ್ಲಿರುವಾಗ ಸಂಜೆ 4-00 ಘಂಟೆ ಸಮಯದಲ್ಲಿ ಗ್ರಾಮಾಂತರ ಠಾಣಾ ಸರಹದ್ದಿನ 17 ನೇ ಗ್ರಾಮ ಗಸ್ತಿಗೆ ಸೇರಿದ ಅಣಕನೂರು ಗ್ರಾಮದ ಕೆರೆಯ ಅಂಗಳದಲ್ಲಿರುವ ಜಾಲಿ ಮರದ ಕೆಳಗಡೆ ಯಾರೋ ಸುಮಾರು ಜನರು ಗುಂಪು ಕಟ್ಟಿಕೊಂಡು ಹಣವನ್ನು ಪಣವಾಗಿಟ್ಟು ಅಕ್ರಮವಾಗಿ ಅಂದರ್ ಬಾಹರ್ ಇಸ್ಪೀಟು ಜೂಜಾಟ ಆಡುತ್ತಿರುವುದಾಗಿ ಬಂದ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿ ಕ್ರಮ ಕೈಗೊಳ್ಳಲು ತಾನು ಸಿಬ್ಬಂದಿಯವರಾದ ಹೆಚ್.ಸಿ-38 ಸುರೇಶ್ , ಹೆಚ್ ಸಿ 33 ರಾಜೇಶ್ , ಹೆಚ್.ಸಿ -141 ರಮಣಾರೆಡ್ಡಿ, ಪಿ.ಸಿ-510 ಹರೀಶ್, ಪಿ.ಸಿ-446 ಕರಿಬಾಬು , ಪಿಸಿ 260 ಮುತ್ತಪ್ಪ ನಿಗರಿ , ಪಿಸಿ 264 ನರಸಿಂಹಮೂರ್ತಿ , ಪಿಸಿ 118 ಬಾಲಾಜಿ ಹಾಗೂ ಜೀಪ್ ಚಾಲಕ ಎಹೆಚ್ಸಿ-23 ಮಂಜುನಾಥ ರವರುಗಳನ್ನು ಕರೆದುಕೊಂಡು ಜೀಪ್ ಸಂಖ್ಯೆ ಕೆಎ,40-ಜಿ-567 ರಲ್ಲಿ ಸಂಜೆ 4-15 ಗಂಟೆಗೆ ಠಾಣೆಯಿಂದ ಹೊರಟು 4:30 ಘಂಟೆಗೆ ಅಣಕನೂರು ಗ್ರಾಮದ ಬಳಿ ಹೋಗಿ ಅಲ್ಲಿ 1. ಅಬ್ದುಲ್ ಕರೀಂ ಬಿನ್ ಅಬ್ದುಲ್ ರಹೀಂ , 38 ವರ್ಷ, ಮುಸ್ಲೀಂ ಜನಾಂಗ, ಗಾರೆ ಕೆಲಸ ವಾಸ ಪೂಜನಹಳ್ಳಿ ಗ್ರಾಮ ಚಿಕ್ಕಬಳ್ಳಾಪುರ ತಾಲ್ಲೂಕು , 2. ಅಶ್ವತ್ಥ ಬಿನ್ ನಾರಾಯಣಪ್ಪ , 38 ವರ್ಷ, ಪ.ಜಾತಿ ಬಸ್ ಮ್ಯಾನೇಜರ್ ಕೆಲಸ ವಾಸ ಪೂಜನಹಳ್ಳಿ ಗ್ರಾಮ ಚಿಕ್ಕಬಳ್ಳಾಪುರ ತಾಲ್ಲೂಕು . ರವರುಗಳಿಗೆ ದಾಳಿ ವಿಚಾರ ತಿಳಿಸಿ ಅವರನ್ನು ಪಂಚರನ್ನಾಗಿ ಜೀಪ್ ನಲ್ಲಿ ಕರೆದುಕೊಂಡು ಅಣಕನೂರು ಸಮೀಪ ಹೋಗಿ ಮರೆಯಲ್ಲಿ ಜೀಪ್ ನಿಲ್ಲಿಸಿ ಎಲ್ಲಾರು ಕೆಳಗೆ ಇಳಿದು ಮರೆಯಲ್ಲಿ ನಿಂತು ನೋಡಲಾಗಿ ಜಾಲಿ ಮರದ ಕೆಳಗಡೆ 03 ಜನ ಆಸಾಮಿಗಳು ಸುತ್ತುವರೆದು ಕುಳಿತು ಆ ಪೈಕಿ ಒಬ್ಬ ಅಸಾಮಿ ಕೈಯಲ್ಲಿ ಇಸ್ಪಿಟ್ ಎಲೆ ಇಡಿದು ಅಂದರ್ 100 ರೂ ಎಂತಲು ಮತ್ತೊಬ್ಬ ಅಸಾಮಿ ಬಾಹರ್ 100 ರೂ ಎಂದು ಕೂಗುತ್ತಾ ಅಂದರ್ ಬಾಹರ್ ಇಸ್ಪೀಟ್ ಜೂಜಾಟ ಆಡುತ್ತಿದ್ದುದನ್ನು ಖಾತರಿ ಪಡಿಸಿಕೊಂಡು ಪಂಚರ ಸಮಕ್ಷಮ ತಾನು ಮತ್ತು ಸಿಬ್ಬಂದಿಯವರು ಸಂಜೆ 4.45 ಗಂಟೆಗೆ ದಾಳಿ ಮಾಡಿ 03 ಜನ ಆಸಾಮಿಗಳನ್ನು ಹಿಡಿದು ಹೆಸರು ವಿಳಾಸ ಕೇಳಲಾಗಿ 1] ಇಸ್ಮಾಯಿಲ್ ಬಿನ್ ಖಾದರ್ ಬಾಷ , 34 ವರ್ಷ, ಕೂಲಿ ಕೆಲಸ ವಾಸ 7 ನೇ ವಾರ್ಡ್ , ಗಂಗನಮಿದ್ದೆ ಚಿಕ್ಕಬಳ್ಳಾಪುರ ಟೌನ್ , 2] ಸುಬ್ಬು ಬಿನ್ ಲೇಟ್ ನಾರಾಯಣಪ್ಪ , 30 ವರ್ಷ, ಪ.ಜಾತಿ ಕಾರ್ಪೆಂಟರ್ ಕೆಲಸ ವಾಸ ಪೂಜನಹಳ್ಳಿ ಗ್ರಾಮ ಚಿಕ್ಕಬಳ್ಳಾಪುರ ತಾಲ್ಲೂಕು , 3] ಶಿವಕುಮಾರ್ ಬಿನ್ ಲೇಟ್ ದಾಸಪ್ಪ 30 ವರ್ಷ, ಕುರುಬರು ಕೂಲಿ ಕೆಲಸ ವಾಸ ಮಂಚನಬಲೆ ಗ್ರಾಮ ಚಿಕ್ಕಬಳ್ಳಾಪುರ ತಾಲ್ಲೂಕು ಎಂತ ತಿಳಿಸಿದ್ದು, ಅವರುಗಳಿಗೆ ಹಣವನ್ನು ಪಣವಾಗಿಟ್ಟು ಅಂದರ್ ಬಾಹರ್ ಇಸ್ಪೀಟ್ ಜೂಜಾಟ ಆಡಲು ಪರವಾನಿಗೆ ಇದೆಯೆ ಎಂದು ಕೇಳಲಾಗಿ ಅವರು ತಮ್ಮ ಬಳಿ ಯಾವುದೇ ದಾಖಲೆ ಇಲ್ಲವೆಂದು ನುಡಿದಿದ್ದರ ಮೇರಿಗೆ ಅವರನ್ನು ವಶಕ್ಕೆ ಪಡೆದು ಅವರು ಜೂಜಾಟಕ್ಕೆ ಪಣವಾಗಿಟ್ಟಿದ್ದ ಒಟ್ಟು 790/- ರೂಗಳನ್ನು ಮತ್ತು ಅವರು ಜೂಜಾಟಕ್ಕೆ ಉಪಯೋಗಿಸಿದ 52 ಇಸ್ಪೀಟ್ ಎಲೆಗಳನ್ನು ಪಂಚನಾಮೆಯ ಮೂಲಕ ಅಮಾನತ್ತು ಪಡಿಸಿಕೊಂಡು ಆರೋಪಿಗಳು ಮತ್ತು ಮಾಲಿನ ಸಮೇತ ಠಾಣೆಗೆ ಸಂಜೆ 6-00 ಗಂಟೆಗೆ ವಾಪಸ್ಸಾಗಿ ಆರೋಪಿಗಳ ಸಮೇತ ಮಾಲನ್ನು ಮತ್ತು ಇಸ್ಪೀಟ್ ಎಲೆಗಳನ್ನು ಠಾಣಾಧಿಕಾರಿಗಳಿಗೆ ನೀಡಿ ಕಲಂ-87 ಕೆಪಿ ಆಕ್ಟ್ ರಂತೆ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಲು ಸೂಚಿಸಿ ನೀಡಿದ ವರದಿಯ ಮೇರೆಗೆ ಈ ಪ್ರ ವ ವರಧಿ .
3. ಚಿಕ್ಕಬಳ್ಳಾಪುರ ಸಂಚಾರಿ ಪೊಲೀಸ್ ಠಾಣೆ ಮೊ.ಸಂ.09/2020 ಕಲಂ. 279-337 ಐ.ಪಿ.ಸಿ:-
ದಿನಾಂಕ:-19/02/2020 ರಂದು ಬೆಳಿಗ್ಗೆ 11:00 ಗಂಟೆಗೆ ಪಿರ್ಯಾದಿ ಶ್ರೀ ಮುರಳಿ ಮೋಹನ್ ಜೆ ಬಿನ್ ನಾರಾಯಣಪ್ಪ ಜೆ 38 ವರ್ಷ, ಬಲಜಿಗರು, ಚಾಲಕ ವೃತ್ತಿ, ನಿಮ್ಮಲಕುಂಟೆ ಗ್ರಾಮ, ಪೋತಲನಾಗೇಪಲ್ಲಿ ಪೋಸ್ಟ್ , ಧರ್ಮವರಂ ಮಂಡಲಂ, ಅನಂತಪುರ ಜಿಲ್ಲೆ ರವರು ಠಾಣೆಗೆ ಹಾಜರಾಗಿ ನೀಡಿದ ಬೆರಳಚ್ಚು ದೂರಿನ ಸಾರಾಂಶವೇನೆಂದರೆ ದಿನಾಂಕ:-19/02/2020 ರಂದು ತಮ್ಮ ಅಣ್ಣನ ಬಾಬತ್ತು ಎಪಿ-39-ಎಕ್ಸ್-3149 ರ ಟೆಂಪೋ ವಾಹನದಲ್ಲಿ ಧರ್ಮವರಂ ನಿಂದ ತರಕಾರಿ ತುಂಬುಕೊಂಡು ಬೆಂಗಳೂರಿಗೆ ಹೋಗಲು ಚಿಕ್ಕಬಳ್ಳಾಪುರ-ಬೆಂಗಳೂರು ಎನ್.ಹೆಚ್-44 ಹೈವೇ ರಸ್ತೆಯ ಚಿಕ್ಕಬಳ್ಳಾಪುರ ಹೋನ್ನೇನಹಳ್ಳಿ ಗೇಟ್ ಬಳಿ ಬೆಳಿಗ್ಗೆ 12:30 ಗಂಟೆಯ ಸಮಯದಲ್ಲಿ ಹೋಗುತ್ತಿದ್ದಾಗ ವೈಷ್ಣವಿ ಹೋಟೆಲ್ ಕಡೆಯಿಂದ ಬಂದ ಎಪಿ-02-ಜೆಡ್-0568 ರ ಎ.ಪಿ.ಎಸ್.ಆರ್.ಟಿ.ಸಿ ಬಸ್ ಚಾಲಕ ವೇಗವಾಗಿ ಅಜಾಗರೂಕತೆಯಿಂದ ಬಾಗೇಪಲ್ಲಿ ರಸ್ತೆಯ ಕಡೆಗೆ ಹೋಗಲು ಯಾವುದೇ ಸೂಚನೆ ಇಲ್ಲದೇ ಏಕಾಏಕಿ ರಸ್ತೆಗೆ ಬಂದ ಪರಿಣಾಮ ನನ್ನ ಎಪಿ-39-ಎಕ್ಸ್-3149 ರ ಟೆಂಪೋ ವಾಹನಕ್ಕೆ ಎ.ಪಿ.ಎಸ್.ಆರ್.ಟಿ.ಸಿ ಬಸ್ ತಗುಲಿಸಿ ನನ್ನ ಟೆಂಪೋ ವಾಹನದ ಮುಂದಿನ ಭಾಗ ಪೂರ ಜಖಂಗೊಂಡಿದ್ದು, ಬಸ್ ಬಲಭಾಗದ ಮದ್ಯದಲ್ಲಿ ಜಖಂಗೊಂಡಿದ್ದು, ಟೆಂಪೊದಲ್ಲಿದ್ದ ನನಗೆ ತರಚಿದ ಗಾಯಗಳಾಗಿದ್ದು, ಜೊತೆಯಲ್ಲಿದ್ದ ಮದುಸೂದನ್ ನಾಯ್ಡು ಬಿನ್ ಶ್ರೀರಾಮುಲು 38 ವರ್ಷ, ಕಮ್ಮಜನಾಂಗ, ಜಿರಾಯ್ತಿ, ರಾಮಪುರಂ ಗ್ರಾಮ, ಭತ್ತಲಪಲ್ಲಿ ಮಂಡಲಂ, ಅನಂತಪುರ ಜಿಲ್ಲೆ ರವರಿಗೆ ಎಡಮೊಣಕಾಲಿಗೆ ಮತ್ತು ಕೈಗಳಿಗೆ ತರಚಿದ ಗಾಯಗಳಾಗಿದ್ದು, ಹಾಗೂ ಸೂರ್ಯನಾರಾಯಣ ಬಿನ್ ಚನ್ನರಾಯುಡು 54 ವರ್ಷ, ಕಮ್ಮಜನಾಂಗ, ಜಿರಾಯ್ತಿ, ಡಿಚೆರ್ಲಪಲ್ಲಿ ಗ್ರಾಮ, ಭತ್ತಲಪಲ್ಲಿ ಮಂಡಲಂ, ಅನಂತಪುರ ಜಿಲ್ಲೆ ರವರಿಗೆ ಎಡಕಾಲಿನ ಹಿಂಮ್ಮಡಿ ಮತ್ತು ಕೈಗಳಿಗೆ ತರಚಿದ ಗಾಯಗಳಾಗಿದ್ದು, ರಸ್ತೆಯಲ್ಲಿ ಬಂದ 108 ಅಂಬ್ಯೂಲೆನ್ಸ್ ವಾಹನದಲ್ಲಿ ಚಿಕಿತ್ಸೆಗಾಗಿ ಚಿಕ್ಕಬಳ್ಳಾಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದು, ಅಪಘಾತಕ್ಕೆ ಕಾರಣವಾದ ಎಪಿ-02-ಜೆಡ್-0568 ರ ಎ.ಪಿ.ಎಸ್.ಆರ್.ಟಿ.ಸಿ ಬಸ್ ಚಾಲಕನ ಹೆಸರು ಮತ್ತು ವಿಳಾಸ ಕೇಳಲಾಗಿ ನರಸಣ್ಣ ಪಿ ಬಿನ್ ಲೇಟ್ ನರಸಪ್ಪ 55 ವರ್ಷ, ಚಾಲಕಿ ವೃತ್ತಿ, ಬ್ಯಾಡ್ಜ್ ನಂ-406807, ಹಲವಾಲ ಗ್ರಾಮ, ಗೋನೇಗಂಡ್ಲ ಮಂಡಲಂ, ಕರ್ನೂಲ್ ಜಿಲ್ಲೆ ಪತ್ತಿ ಕೋಡ ಡಿಪೋ ಎಂತ ತಿಳಿಸಿದ್ದು, ಅಪಘಾತಕ್ಕೆ ಕಾರಣವಾದ ಎಪಿ-02-ಜೆಡ್-0568 ರ ಎ.ಪಿ.ಎಸ್.ಆರ್.ಟಿ.ಸಿ ಬಸ್ ಚಾಲಕನ ಮೇಲೆ ಕಾನೂನು ಕ್ರಮ ಜರುಗಿಸಲು ಕೋರಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುತೆ.
4. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.96/2020 ಕಲಂ. 87 ಕೆ.ಪಿ. ಆಕ್ಟ್:-
ದಿನಾಂಕ 18-02-2020 ರಂದು ರಾತ್ರಿ 8-15 ಗಂಟೆಗೆ ನ್ಯಾಯಾಲಯ ಕರ್ತವ್ಯದ ಸಿ.ಹೆಚ್.ಸಿ 136 ರವರು ನ್ಯಾಯಾಲಯದ ಅನುಮತಿಯನ್ನು ಪಡೆದುಕೊಂಡು ಬಂದು ಠಾಣೆಗೆ ಹಾಜರುಪಡಿಸಿದ ಅನುಮತಿ ಪತ್ರದ ಸಾರಾಂಶವೇನೆಂದರೆ ದಿನಾಂಕ 18-02-2020 ರಂದು ಸಂಜೆ 5-15 ಗಂಟೆಗೆ ಚಿಂತಾಮಣಿ ಗ್ರಾ. ಠಾಣೆಯ ಪಿ.ಎಸ್.ಐ ರವರಾದ ನರೇಶ ನಾಯ್ಕ ರವರು ಮಾಲು ಆರೋಪಿ ಮತ್ತು ಪಂಚನಾಮೆಯೊಂದಿಗೆ ಠಾಣೆಗೆ ಬಂದು ನೀಡಿದ ವರದಿಯ ಸಾರಾಂಶವೇಂದರೆ ಈ ದಿನ ದಿನಾಂಕ:18-02-2020 ರಂದು ಮಧ್ಯಾಹ್ನ 3-00 ಗಂಟೆಯಲ್ಲಿ ತಾನು ಠಾಣೆಯಲ್ಲಿದ್ದಾಗ, ಠಾಣಾ ಸರಹದ್ದಿಗೆ ಸೇರಿದ ಕತ್ರಿಗುಪ್ಪೆ ಗ್ರಾಮದ ಬಳಿಯಿರುವ ಸರ್ಕಾರಿ ಕಾಲುವೆಯಲ್ಲಿರುವ ಹೊಂಗೆಮರದ ಕೆಳಗೆ ಯಾರೋ ಕೆಲವರು ಗುಂಪು ಕಟ್ಟಿಕೊಂಡು ಕಾನೂನು ಬಾಹಿರವಾಗಿ ಅಂದರ್-ಬಾಹರ್ ಇಸ್ಪೀಟು ಜೂಜಾಟ ಆಡುತ್ತಿರುವುದಾಗಿ ಖಚಿತ ಮಾಹಿತಿ ದೊರೆತಿದ್ದು, ಸದರಿ ಜೂಜಾಟ ಆಡುತ್ತಿದ್ದವರ ಮೇಲೆ ದಾಳಿ ಮಾಡುವ ಸಲುವಾಗಿ ಠಾಣೆಗೆ ಪಂಚರನ್ನು ಬರಮಾಡಿಕೊಂಡು ಸಿಬ್ಬಂದಿಯವರಾದ ಹೆಚ್.ಸಿ-249 ಶ್ರೀ ಸಂದೀಪ್ ಕುಮಾರ್, ಸಿಪಿಸಿ-544 ಶ್ರೀ ವೆಂಕಟರವಣ, ಸಿಪಿಸಿ-196 ಶ್ರೀ ಅಂಬರೀಶ್, ಸಿಪಿಸಿ-430 ಶ್ರೀ ನರಸಿಂಹ, ಸಿಪಿಸಿ-534 ಶ್ರೀ ನಂದೀಶ್ ಕುಮಾರ್, ಸಿಪಿಸಿ-339 ಶ್ರೀ ಕರಿಯಪ್ಪ, ಸಿಪಿಸಿ-75 ಅಂಜನ್ ರೆಡ್ಡಿ ಹಾಗೂ ಚಾಲಕ ಮುಖೇಶ್ ಮತ್ತು ಪಂಚರೊಂದಿಗೆ KA-40-G-326 ನಂಬರಿನ ಠಾಣೆಯ ಸರ್ಕಾರಿ ಜೀಪಿನಲ್ಲಿ ಕತ್ರಿಗುಪ್ಪೆ ಗ್ರಾಮದ ಬಳಿಯಿರುವ ಸರ್ಕಾರಿ ಕಾಲುವೆಯಲ್ಲಿರುವ ಹೊಂಗೆಮರದ ಬಳಿ ಹೋಗಿ ಜೀಪನ್ನು ನಿಲ್ಲಿಸಿ ನೋಡಲಾಗಿ ಸರ್ಕಾರಿ ಕಾಲುವೆಯಲ್ಲಿರುವ ಹೊಂಗೆ ಮರದ ಕೆಳಗೆ ಕೆಲವರು ಗುಂಪು ಕಟ್ಟಿಕೊಂಡು 100 ರೂ ಅಂದರ್ ಎಂತಲೂ 100 ರೂ ಬಾಹರ್ ಎಂದು ಕೂಗುತ್ತಾ ಇಸ್ಪೀಟು ಜೂಜಾಟ ಆಡುತ್ತಿದ್ದು ಸದರಿಯವರನ್ನು ಸುತ್ತುವರಿದು ಓಡಿಹೋಗದಂತೆ ಎಚ್ಚರಿಕೆ ನೀಡಿದರೂ ಸಹ ಕೆಲವರು ಓಡಿ ಹೋಗಿದ್ದು, ಸಿಕ್ಕಿಬಿದ್ದವರ ಹೆಸರು ಮತ್ತು ವಿಳಾಸ ಕೇಳಲಾಗಿ 1) ದೇವಪ್ಪ ಬಿನ್ ದಾಸಪ್ಪ, 35ವರ್ಷ, ನಾಯಕರು, ಜಿರಾಯ್ತಿ, ಕತ್ರಿಗುಪ್ಪೆ ಗ್ರಾಮ, ಚಿಂತಾಮಣಿ ತಾಲ್ಲೂಕು 2)ಚೌಡರೆಡ್ಡಿ ಬಿನ್ ವೆಂಕಟೇಶಪ್ಪ, 40ವರ್ಷ, ವಕ್ಕಲಿಗರು, ಜಿರಾಯ್ತಿ, ಯಂಡಪಲ್ಲಿ ಗ್ರಾಮ, ಮುಂಗಾನಹಳ್ಳಿ ಹೋಬಳಿ, ಚಿಂತಾಮಣಿ ತಾಲ್ಲೂಕು, 3)ಮುನಿಕೃಷ್ಣಪ್ಪ ಬಿನ್ ನಾರಾಯಣಪ್ಪ, 48ವರ್ಷ, ವಕ್ಕಲಿಗರು, ಜಿರಾಯ್ತಿ, ಕತ್ರಿಗುಪ್ಪೆ ಗ್ರಾಮ, ಚಿಂತಾಮಣಿ ತಾಲ್ಲೂಕು, 4)ನರಸಿಂಹಮೂರ್ತಿ ಬಿನ್ ದೊಡ್ಡನರಸಿಂಹಯ್ಯ, 30ವರ್ಷ, ಬೂಡಗಜಂಗಮ, ಬಳೆ ವ್ಯಾಪಾರ, ವಾಸ:ಕತ್ರಿಗುಪ್ಪೆ ಗ್ರಾಮ, ಚಿಂತಾಮಣಿ ತಾಲ್ಲೂಕು, 5)ಮಣಿಕಂಠ ಬಿನ್ ಶಿವಪ್ಪ, 22ವರ್ಷ, ಬೂಡಗಜಂಗಮ, ಖಾಸಗಿ ಕಂಪನಿಯಲ್ಲಿ ಕೆಲಸ, ಕತ್ರಿಗುಪ್ಪೆ ಗ್ರಾಮ, ಚಿಂತಾಮಣಿ ತಾಲ್ಲೂಕು, 6) ವೆಂಕಟೇಶ ಬಿನ್ ರಾಮಾಂಜಿನಪ್ಪ, 31ವರ್ಷ, ನಾಯಕರು, ಕೂಲಿಕೆಲಸ, 2ನೇ ವಾರ್ಡ್, ಆಶ್ರಯ ಬಡಾವಣೆ, ಚಿಂತಾಮಣಿ ನಗರ ಎಂದು ತಿಳಿಸಿರುತ್ತಾರೆ. ಜೂಜಾಟವಾಡುತ್ತಿದ್ದ ಸ್ಥಳದಲ್ಲಿ ಪರಿಶೀಲಿಸಲಾಗಿ 52 ಇಸ್ಪೀಟು ಎಲೆಗಳು, ಪಣಕ್ಕಿಟ್ಟಿದ್ದ 6060/- ರೂ ನಗದು ಹಣ ಮತ್ತು ಒಂದು ಪ್ಲಾಸ್ಟಿಕ್ ಪೇಪರ್ ಇದ್ದು, ಸದರಿ ಮಾಲುಗಳನ್ನು ಮಧ್ಯಾಹ್ನ 3-45 ರಿಂದ ಸಂಜೆ 4-30 ಗಂಟೆಯವರೆಗೆ ಪಂಚರ ಸಮಕ್ಷಮ ಪಂಚನಾಮೆ ಮೂಲಕ ಅಮಾನತ್ತುಪಡಿಸಿಕೊಂಡು ಮಾಲು, ಪಂಚನಾಮೆ ಮತ್ತು ಆರೋಪಿತರೊಂದಿಗೆ ಠಾಣೆಗೆ ಹಾಜರಾಗಿದ್ದು, ಕಾನೂನು ಬಾಹಿರವಾಗಿ ಇಸ್ಪೀಟು ಜೂಜಾಟವಾಡುತ್ತಿದ್ದ ಮೇಲ್ಕಂಡ ಅಸಾಮಿಗಳ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಲು ಸೂಚಿಸಿರುತ್ತೆ .
5. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.97/2020 ಕಲಂ. 379 ಐ.ಪಿ.ಸಿ:-
ದಿನಾಂಕ 18-02-2020 ರಂದು ರಾತ್ರಿ 21-00 ಗಂಟೆಗೆ ಇಂತಿಯಾಜ್ ಪಾಷ ಬಿನ್ ಲೇಟ್ ಅಬ್ದುಲ್ ಬಶೀರ್ ಅಹಮದ್, 41 ವರ್ಷ, ಚಿಕನ್ ಅಂಗಡಿ ಕೆಲಸ, ಸೊಣ್ಣಶೆಟ್ಟಿಹಳ್ಳಿ ಚಿಂತಾಮಣಿ ನಗರ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ತಾನು ಈ ಮೇಲ್ಕಂಡ ವಿಳಾಸದಲ್ಲಿ ವಾಸವಾಗಿದ್ದು ಚಿಕನ್ ಅಂಗಡಿ ವ್ಯಾಪಾರದಿಂದ ಜೀವನ ಮಾಡಿಕೊಂಡಿರುತ್ತೇನೆ. ತಾನು ಈಗ್ಗೆ ಸುಮಾರು ಒಂದು ವರ್ಷದ ಹಿಂದೆ ಶಿಡ್ಲಘಟ್ಟ ತಾಲ್ಲೂಕು ಸೋಮನಹಳ್ಳಿ ಗ್ರಾಮದ ವಾಸಿ ಕೇಶವರೆಡ್ಡಿ ಬಿನ್ ಮುನಿಶಾಮಪ್ಪರವರ ಬಾಬತ್ತು ಕೆಎ 40 ಹೆಚ್ 3924 ನೊಂದಣಿ ಸಂಖ್ಯೆಯ ಟಿವಿಎಸ್ ವಿಕ್ಟರ್ ದ್ವಿಚಕ್ರ ವಾಹನವನ್ನು ಕೊಂಡುಕೊಂಡಿದ್ದು ಸದರಿ ವಾಹನವನ್ನು ತಾನು ಇನ್ನೂ ತನ್ನ ಹೆಸರಿಗೆ ತಾನು ಮಾಡಿಸಿಕೊಂಡಿರುವುದಿಲ್ಲ. ಸದರಿ ವಾಹನವನ್ನು ತಾನೇ ಓಡಿಸಿಕೊಂಡಿರುತ್ತೇನೆ. ಹೀಗಿರುವಾಗ ದಿನಾಂಕ:10-02-2020 ರಂದು ತಾನು ಮತ್ತು – ಸ್ನೇಹಿತನಾದ ಚೌಡರೆಡ್ಡಿಪಾಳ್ಯದ ವಾಸಿ ಚಾಂದ್ಪಾಷರವರು ಕೆಲಸದ ನಿಮಿತ್ತ ಮೇಲ್ಕಂಡ ದ್ವಿಚಕ್ರವಾಹನದಲ್ಲಿ ತಾನು ಮತ್ತು ಚಾಂದ್ಪಾಷರವರು ಚಿನ್ನಸಂದ್ರ ಗ್ರಾಮಕ್ಕೆ ಹೋಗಿ ಕೆಲಸ ಮುಗಿಸಿಕೊಂಡು ವಾಪಸ್ಸು ಬರುವಾಗ ಸಂಜೆ 7-30 ಗಂಟೆಗೆ ಚಿನ್ನಸಂದ್ರ ಗ್ರಾಮದ ಚಿನ್ನಸಂದ್ರ ಗ್ರಾಮದ ನೂರ್ ಟೀ ಹೋಟಲ್ ಅಂಗಡಿಯ ಮುಂದೆ ಮೇಲ್ಕಂಡ ದ್ವಿಚಕ್ರವಾಹನವನ್ನು ನಿಲ್ಲಿಸಿ ಲಾಕ್ ಮಾಡಿಕೊಂಡು ಅಂಗಡಿಯ ಒಳಗೆ ಹೋಗಿ ಟೀ ಕುಡಿದು 8-00 ಗಂಟೆಗೆ ತಾನು ದ್ವಿಚಕ್ರವಾಹನ ನಿಲ್ಲಿಸಿದ ಸ್ಥಳದಲ್ಲಿ ನೋಡಲಾಗಿ ಸದರಿ ದ್ವಿಚಕ್ರವಾಹನ ಸ್ಥಳದಲ್ಲಿ ಇರಲಿಲ್ಲಾ. ಸುತ್ತಮುತ್ತಲು ಹುಡುಕಾಡಿದರೂ ಸಿಕ್ಕಿರುವುದಿಲ್ಲ. ಸದರಿ ದ್ವಿಚಕ್ರ ವಾಹನದ ಬೆಲೆ ಸುಮಾರು 15,000/- ರೂಗಳಾಗಿದ್ದು ಸದರಿ ದ್ವಿಚಕ್ರವಾಹನವನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ತಾನು ಚಿಂತಾಮಣಿ ಸುತ್ತ ಮುತ್ತ ಮೇಲ್ಕಂಡ ಕಳುವಾದ ದ್ವಿಚಕ್ರ ವಾಹನವನ್ನು ಹುಡುಕುತ್ತಿದ್ದ ಕಾರಣ ಈ ದಿನ ತಡವಾಗಿ ಠಾಣೆಗೆ ಬಂದು ದೂರನ್ನು ನೀಡುತ್ತಿದ್ದು. ಕಳ್ಳತನವಾಗಿರುವ ಮೇಲ್ಕಂಡ ದ್ವಿಚಕ್ರವಾಹನವನ್ನು ಮತ್ತು ಕಳ್ಳರನ್ನು ಪತ್ತೆಮಾಡಿ ಅವರ ವಿರುದ್ದ ಸೂಕ್ತ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿರುತ್ತೆ.
6. ಚಿಂತಾಮಣಿ ನಗರ ಪೊಲೀಸ್ ಠಾಣೆ ಮೊ.ಸಂ.24/2020 ಕಲಂ. 420-506 ರೆ/ವಿ 34 ಐ.ಪಿ.ಸಿ:-
ದಿನಾಂಕ:18/02/2020 ರಂದು ಸಂಜೆ 04-00 ಗಂಟೆಗೆ ಘನ ಸಿ.ಜೆ ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಲಯದ ಪೇದೆ ಶ್ರೀ.ಚಂದ್ರಪ್ಪ ಸಿಪಿಸಿ-509 ರವರು ಘನ ನ್ಯಾಯಾಲಯದಿಂದ ಸಾದರಾಗಿ ಬಂದ ದೂರನ್ನು ಹಾಜರುಪಡಿಸಿದ್ದು ದೂರಿನ ಸಾರಾಂಶವೇನೆಂದರೆ ಶ್ರೀ.ವಾಜೀದ್ ಬೇಗ್ ಸಿ. ಬಿನ್ ಲೇಟ್ ಹುಸ್ಸೇನಿ ಬೇಗ್ ಸಿ. ವಾಸ ವಾರ್ಡ್ ನಂ.12, ಎ.ಟಿ.ಎಸ್. ಹೌಸ್ ಹತ್ತಿರ, ಕೆ.ಆರ್.ಬಡಾವಣೆ ಚಿಂತಾಮಣಿ ನಗರ ರವರು ಬೆಂಗಳೂರು ನಗರದ ಹೆಚ್.ಬಿ.ಆರ್. ಲೇಔಟ್ ನಲ್ಲಿರುವ ಮದೀನಾ ಮುನಾವರ್ ಇಂಟರ್ ನ್ಯಾಷನಲ್ ಟೂರ್ಸ್ ಆಂಡ್ ಟ್ರಾವೆಲ್ಸ್ ಕಂಪನಿಯ ಮಾಲೀಕರಾದ ಈ ಕೇಸಿನ ಆರೋಪಿಗಳಾದ ಸೈಯದ್ ಸಫೀರ್ ಅಹಮ್ಮದ್ ಬಿನ್ ಸೈಯದ್ ಸಯೀದ್ ಅಹಮ್ಮದ್, ಹೆಚ್.ಬಿ.ಆರ್. ಲೇಔಟ್, ಬೆಂಗಳೂರು, ಮೊಹಮ್ಮದ್ ಇಬ್ರಾಹಿಂ ಬಿನ್ ಮೊಹಮ್ಮದ್ ಅಮೀರ್ ವಾಸ ಕುಶಾಲ್ ನಗರ ಕೆ.ಜಿ.ಹಳ್ಳಿ ಬೆಂಳೂರು, ಸೈಯದ್ ಸಮೀರ್ ಅಹಮ್ಮದ್ ಬಿನ್ ಸೈಯದ್ ಸಯೀದ್ ಹೆ.ಚ್.ಬಿ.ಆರ್ ಲೇಔಟ್ ಬೆಂಗಳೂರು ರವರ ಮಾಲೀಕತ್ವದ ಮದೀ ರವರನ್ನು ಮೆಕ್ಕಾ ಮದೀನಾ ಯಾತ್ರೆಯ ಸಲುವಾಗಿ 2018ನೇ ಜುಲೈ ಮಾಹೆಯಲ್ಲಿ ಭೇಟಿಯಾಗಿದ್ದು, ಆರೋಪಿಗಳು ಮೆಕ್ಕಾ ಮದೀನಾ (ಉಮ್ರಾ) ಯಾತ್ರೆಗೆ ಡಿಸೆಂಬರ್-2019ನೇ ಮಾಹೆಯಲ್ಲಿ ಉಮ್ರಾ ಪ್ಯಾಕೇಜ್ ಇದ್ದು ಇದಕ್ಕೆ ಹೋಗಿ ಬರಲು ಒಬ್ಬ ಯಾತ್ರಾತ್ರಿಗೆ ಒಟ್ಟು 34,949-00 ರೂ.ಗಳಂತೆ ಇದ್ದು ಹಣವನ್ನು ದಿನಾಂಕ:30/01/2019 ರೊಳಗೆ ಕಟ್ಟಬೇಕಾಗಿರುತ್ತದೆಂದು ತಿಳಿಸಿ ಸದರಿ ಪ್ಯಾಕೇಜ್ ನ ಹೋಗುವ ಮುಂಚಿತವಾಗಿ 11 ತಿಂಗಳು ಇರುತ್ತದೆಂದು ತಿಳಿಸಿ ಸದರಿ ಆರೋಪಿಗಳು ತಮ್ಮ ಪರವಾಗಿ ಕೆಲಸ ಮಾಡಿದರೆ ಪಿರ್ಯಾಧಿದಾರರಿಗೆ ಒಬ್ಬ ಯಾತ್ರಿಗೆ 2000 ರೂ. ಗಳಂತೆ ಕೊಡುವುದಾಗಿ ಹೇಳಿ ನಂಬಿಸಿ ಅದರಂತೆ ಪಿರ್ಯಾಧೀದಾರರು ಚಿಂತಾಮಣಿಯ ಎಂ.ಜಿ. ರಸ್ತೆ, ಗಜಾನನ ವೃತ್ತದಲ್ಲಿರುವ ಎ.ವಿ.ಎಂ.ಕಾಂಪ್ಲೆಕ್ಸ್ ನಲ್ಲಿ ನಗರಸಭೆಯಿಂದ ಲೈಸೆನ್ಸ್ ನ್ನು ಪಡೆದುಕೊಂಡು ಕಛೇರಿ ತೆರೆದು ಪಿರ್ಯಾಧಿದಾರರ ಮೂಲಕ 50 ಜನರು ಉಮ್ರಾ ಯಾತ್ರೆಗೆ ಹೋಗುವ ಸಲುವಾಗಿ ಪ್ರತಿಯೊಬ್ಬರಿಂದ 34,999-00 ರೂ.ಗಳನ್ನು ಸಂಗ್ರಹಿಸಿದ್ದು ಸದರಿ ಹಣದ ದಿನಾಂಕ:15/03/2019 ರಂದು ಆರೋಪಿಗಳು ಚಿಂತಾಮಣಿಗೆ ಬಂದು ತೆಗೆದುಕೊಂಡು ಹೋಗಿದ್ದು ಹಣ ಪಡೆದ ಕಾಲಕ್ಕೆ ತನ್ನ ಮಗನಾದ ಮನ್ಸೂರ್ ರವರ ಹೆಸರಿನಲ್ಲಿ 13,86,100-00 ರೂ.ಗಳನ್ನು ನೀಡಿದ್ದು (ರಶೀದಿ ಸಂಖ್ಯೆ 1217) ಉಳಿದ ಹಣ ರೂ.3,63,850-00 ರೂ.ಗಳನ್ನು ಪಿರ್ಯಾಧಿದಾರರು ದಿನಾಂಕ:10/04/2019 ರಂದು ಪತ್ರದಲ್ಲಿ ಬರೆದುಕೊಂಡು ಈ ಬಗ್ಗೆ ರಶೀದಿ ಬಿಲ್ ನ್ನು 2-3 ದಿನಗಳೊಳಗೆ ಕೊಡುವುದಾಗಿ ಹೇಳಿ ಒಟ್ಟು 17,49,950-00 ರೂ.ಗಳನ್ನು ಪಡೆದುಕೊಂಡಿರುವುದಾಗಿ, ಆರೋಪಿಗಳು ಹಣವನ್ನು ಪಡೆದುಕೊಂಡ ನಂತರ ಪಿರ್ಯಾಧಿದಾರರಿಗೆ ಉಮ್ರಾ ಯಾತ್ರೆಗೆ ಹಣ ಕಟ್ಟಿರುವ 50 ಜನ ಯಾತ್ರಾತ್ರಿಗಳನ್ನು ನವೆಂಬರ್ ಮಾಹೆಯಲ್ಲಿ ಮೂಲ ಪಾಸ್ ಪೋರ್ಟ್ ನ್ನು ತೆಗೆದುಕೊಂಡು ಕಛೇರಿಗೆ ಬರುವಂತೆ ತಿಳಿಸಿದ್ದು, ಅದರಂತೆ ಪರ್ಯಾಧೀದರರು ನವೆಂಬರ್ ಮಾಹೆಯಲ್ಲಿ ಸದರಿ 50 ಜನ ಮೂಲ ಪಾಸ್ ಪೋರ್ಟ ಗಳನ್ನು ತೆಗೆದುಕೊಂಡು ಆರೋಪಿಗಳಿಗೆ ಕೊಡಲು ಹೋದಾಗ ಆರೋಪಿಗಳು ಈ ಮೇಲ್ಕಂಡ ಟೂರ್ಸ್ ಆಂಡ್ ಟ್ರಾವೆಲ್ಸ್ ಕಂಪನಿಯ ಕಛೇರಿಗೆ ಬೀಗ ಹಾಕಿದ್ದು ಯಾರೂ ಸಿಗಲಿಲ್ಲವೆಂದು, ನಂತರ ಹಲವಾರು ಬಾರಿ ಕಛೇರಿಯ ಬಳಿ ಹೋದಾಗ ಬಾಗಿಲು ಹಾಕಿದ್ದು, ಅವರಿಗೆ ಕರೆ ಮಾಡಿದರೆ ಕರೆಯನ್ನು ಸ್ವೀಕರಿಸಿರುವುದಿಲ್ಲವೆಂದು, ಸದರಿ ಉಮ್ರಾ ಯಾತ್ರೆಗೆ ಹೋಗಲು 50 ಜನ ಯಾತ್ರಾತ್ರಿಗಳು ಪಿರ್ಯಾಧಿದಾರರ ಮೂಲಕ ಹಣವನ್ನು ಆರೋಪಿಗಳಿಗೆ ಕೊಟ್ಟಿದ್ದು, ಆದರೆ ಆರೋಪಿಗಳು ಯಾತ್ರಾತ್ರಿಗಳಿಗೆ ಹಾಗೂ ತನಗೆ ಮೋಸ ಮಾಡುವ ಉದ್ದೇಶದಿಂದ ಹಣವನ್ನು ಕಟ್ಟಿಸಿಕೊಂಡು ಉಮ್ರಾ ಯಾತ್ರೆಗೆ ಕರೆದುಕೊಂಡು ಹೋಗದೇ ನಮ್ಮಿಂದ ಹಣ ಪಡೆದುಕೊಂಡು ಕಛೇರಿಗೆ ಬೀಗ ಹಾಕಿ ತಲೆಮರೆಸಿಕೊಂಡಿರುತ್ತಾರೆಂದು, ಈ ಬಗ್ಗೆ ಚಿಂತಾಮಣಿಯ ನಗರ ಪೊಲೀಸ್ ಠಾಣೆಯಲ್ಲಿ ದಿನಾಂಕ:04/02/2020 ರಂದು ದೂರು ನೀಡಲು ಬಂದಾಗ ಪೊಲೀಸರು ದೂರನ್ನು ಸ್ವೀಕರಿಸಲಿಲ್ಲವೆಂದು ಆದ್ದರಿಂದ ನನ್ನ ಮೂಲಕ 50 ಜನರ ಉಮ್ರಾ ಮತ್ತು ಹಜ್ ಯಾತ್ರೆಗೆ ಹೋಗುವ ಯಾತ್ರಾತ್ರಿಗಳಿಂದ ಹಣವನ್ನು ಪಡೆದುಕೊಂಡು ಉಮ್ರಾ ಹಾತ್ರೆಗೆ ಕಳುಹಿಸದೇ ನಮ್ಮ ಹಣವನ್ನು ವಾಪಸ್ಸು ಕೊಡದೇ ಮೋಸ ಮಾಡಿರುತ್ತಾರೆಂದು ನೀಡಿದ ದೂರು.
7. ಚಿಂತಾಮಣಿ ನಗರ ಪೊಲೀಸ್ ಠಾಣೆ ಮೊ.ಸಂ.25/2020 ಕಲಂ. 403-415-420-421-464-468 ಐ.ಪಿ.ಸಿ:-
ದಿನಾಂಕ:18/02/2020 ರಂದು ಸಂಜೆ 04-00 ಗಂಟೆಗೆ ಘನ ಸಿ.ಜೆ ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಲಯದ ಪೇದೆ ಶ್ರೀ.ಚಂದ್ರಪ್ಪ ಸಿಪಿಸಿ-509 ರವರು ಘನ ನ್ಯಾಯಾಲಯದಿಂದ ಸಾದರಾಗಿ ಬಂದ ಎಫ್.ಪಿ.ಸಿ.ಆರ್.ನಂ.44/2020 ರೀತ್ಯಾ ದೂರನ್ನು ಹಾಜರುಪಡಿಸಿದ್ದು ಸದರಿ ದೂರಿನ ಸಾರಾಂಶವೇನೆಂದರೆ, ಈ ಕೇಸಿನ ಪಿರ್ಯಾಧಿದಾರರಾದ ಚಿಂತಾಮಣಿ ನಗರದ ಗಜಾನನ ವೃತ್ತದ ಬಳಿಯಿರುವ ಇಂಡಸ್ ಇಂಡ್ ಬ್ಯಾಂಕ್ ನ ಅಧೀಕೃತ ಅಧಿಕಾರಿಯಾದ ಶ್ರೀ.ರಾಧಾಕೃಷ್ಣ ನಾಯಕ್ ರವರು ದೂರಿನಲ್ಲಿ ಸದರಿ ಇಂಡಸ್ ಇಂಡ್ ಬ್ಯಾಂಕ್ ಲಿ. ಕಂಪನಿಯು ನೋಂದಾಯಿತ ಬ್ಯಾಂಕಿಂಗ್ ಕಂಪನಿಯಾಗಿದ್ದು ಸದರಿ ಬ್ಯಾಂಕ್ ವಾಹನಗಳ ಹಾಗೂ ಕಟ್ಟಡಗಳ ನಿರ್ಮಾಣಗಳಿಗೆ ಆಧಾರವಾಗಿಟ್ಟುಕೊಂಡು ಸಾಲಗಳನ್ನು ನೀಡುವ ಕಂಪನಿಯಾಗಿರುವುದಾಗಿ ಅದರಂತೆ ಆರೋಪಿ-1 ಶ್ರೀನಿವಾಸ ಡಿ ಬಿನ್ ಡಿ.ದೇವಪ್ಪ, ವಾಸ ದೇವಪ್ಪಹಳ್ಳಿ ಗ್ರಾಮ, ಬಶೇಟ್ಟಿಹಳ್ಳಿ ಅಂಚೆ, ಶಿಢ್ಲಘಟ್ಟ ತಾಲ್ಲೂಕು, ಚಿಕ್ಕಬಳ್ಳಾಪುರ ಜಿಲ್ಲೆ ರವರು ದಿನಾಂಕ:13/10/2017 ರಂದು ಬ್ಯಾಂಕ್ ಗೆ ಬಂದು ತಾನು 10 ಚಕ್ರಗಳ ಗೂಡ್ಸ್ ಲಾರಿ ಅಶೋಕ್ ಲೇಲ್ಯಾಂಡ್ ವಾಹನವನ್ನು ಖರೀದಿ ಮಾಡಲು ಬ್ಯಾಂಕ್ ನಿಂದ ಕೆ.ಬಿ.ಸಿ.00528ಡಿ ರೀತ್ಯಾ 12,00,000/- ರೂ.ಗಳ ಸಾಲ ಸೇರಿದಂತೆ ಒಟ್ಟು ಅಗ್ರಿಮೆಂಟ್ ಬೆಲೆ 12,26,900-00 ರೂ.ಗಳ ಸಾಲವನ್ನು ಪಡೆದುಕೊಂಡಿದ್ದು, ಒಟ್ಟು 42 ಕಂತುಗಳಂತೆ ಪ್ರತಿ ತಿಂಗಳಿಗೆ ಕಂತು 40,000-00 ರೂ.ಗಳಂತೆ ಕಟ್ಟುವುದಾಗಿ ಒಪ್ಪಿಕೊಂಡಿದ್ದು, ಇದಕ್ಕೆ ಜಾಮೀನುದಾರರಾಗಿ ಆರೋಪಿ-2 ಅನಿಲ್ ಕುಮಾರ್ ಬಿನ್ ಆಂಜೀನಪ್ಪ ವಾರ್ಡ್ ನಂ.07, ಬಿ.ಎಂ.ರಸ್ತೆ, ನಿಮ್ಮಾಕುಲಕುಂಟೆ ಚಿಕ್ಕಬಳ್ಳಾಪುರ ರವರು ಜಾಮೀನು ನೀಡಿರುತ್ತಾರೆಂದು ಅದರಂತೆ ಇವರಿಗೆ ಸಾಲ ಮಂಜೂರಾಗಿದ್ದು ವಾಹನವು ಬ್ಯಾಂಕ್ ಗೆ ಆಧಾರವಾಗಿರುತ್ತದೆಂದು, ಆದರೆ ಆರೋಪಿ-1 ರವರು ಸಾಲದ ಕಂತನ್ನು ಕರಾರಿನಂತೆ ಕಟ್ಟದೇ ಇದ್ದಾಗ ಈ ಬಗ್ಗೆ ಇವರಿಗೆ ಲೀಗಲ್ ನೋಟೀಸ್ ಜಾರಿ ಮಾಡಿದ್ದು, ಸದರಿ ಆಧಾರವಾಗಿರುವ ಅಶೋಕ ಲೇಲ್ಯಾಂಡ್ ಕಂಪನಿಯ ಲಾರಿ ಸಂಖ್ಯೆ ಕೆಎ-01 ಎಹೆಚ್ 2449 ವಾಹನವನ್ನು ಪರೀಶೀಲನೆ ಮಾಡಿದ್ದು, ಆದರೆ ಸದರಿ ವಾಹನವು ಆರೋಪಿ-1 ರವರು ನೀಡಿದ ವಿಳಾಸದಲ್ಲಿ ಇರುವುದಿಲ್ಲವೆಂದು, ಈ ಬಗ್ಗೆ ಬ್ಯಾಂಕ್ ನ ಅಧಿಕಾರಿಗಳು ಪರಿಶೀಲಿಸಲಾಗಿ ಆರೋಪಿಗಳು ಬ್ಯಾಂಕ್ ಗೆ ಮೋಸ ಮತ್ತು ವಂಚನೆ ಮಾಡುವ ಸಲುವಾಗಿ ನಕಲಿ ದಾಖಲೆಗಳನ್ನು ಸೃಷ್ಟಿಸಿಕೊಂಡು ಬೇರೆಯವರಿಗೆ ಮಾರಾಟ ಮಾಡಿರುತ್ತಾರೆಂದು ತಿಳಿದು ಬಂದಿರುತ್ತದೆಂದು, ಆದ್ದರಿಂದ ಸದರಿ ಆರೋಪಿಗಳು ಬ್ಯಾಂಕ್ ನಿಂದ ಗೂಡ್ಸ್ ಲಾರಿ ವಾಹನವನ್ನು ಖರೀದಿಸಲು ಸಾಲವನ್ನು ಪಡೆದುಕೊಂಡಿದ್ದು ಆದರೆ ಕರಾರು ಪತ್ರದಂತೆ ಸಾಲದ ಮೊತ್ತಕ್ಕೆ ಕಂತುಗಳ ರೀತ್ಯಾ ಹಣ ಕಟ್ಟದೇ ಬ್ಯಾಂಕ್ ಗೆ ಮೋಸ ಮಾಡಿ ನಕಲಿ ದಾಖಲೆಗಳನ್ನು ಸೃಷ್ಟಿಸಿಕೊಂಡು ಆಧಾರವಾಗಿಟ್ಟಿರುವ ಬ್ಯಾಂಕ್ ಗೆ ವಿಷಯ ತಿಳಿಸದೇ ಮೋಸ ಮಾಡಿ ಸದರಿ ವಾಹನವನ್ನು ಬೇರೆಯವರಿಗೆ ಮಾರಾಟ ಮಾಡಿರುತ್ತಾನೆಂದು ಇತ್ಯಾದಿ ನಮೂದಿಸಿ ನೀಡಿದ ದೂರು.
8. ಗೌರಿಬಿದನೂರು ಪುರ ಪೊಲೀಸ್ ಠಾಣೆ ಮೊ.ಸಂ.31/2020 ಕಲಂ. 427-504-506 ಐ.ಪಿ.ಸಿ:-
ದಿನಾಂಕ 18/02/2020 ರಂದು ಪಿರ್ಯಾಧಿದಾರರಾದ ಶ್ರೀ ಎನ್. ಜಗದೀಶ್ವರ ವಾರ್ಡ್ ನಂ 31 ಹಿರೇಬಿದನೂರು ಗೌರಿಬಿದನೂರು ನಗರ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ. ದಿನಾಂಕ 17/02/2020 ರಂದು ಸಂಜೆ ನಾನು ನಮ್ಮ ಮನೆಯಲ್ಲಿದ್ದಾಗ ನಮ್ಮ ಗ್ರಾಮದ ವಾಸಿ ಶ್ರೀಮತಿ ಗೌರಮ್ಮ ಕೋಂ ಲೇಟ್ ತಿಪ್ಪೇರುದ್ರಪ್ಪ ರವರು ನಮ್ಮ ಮನೆಗೆ ಅಕ್ರಮ ಪ್ರವೇಶ ಮಾಡಿ ನಮ್ಮ ಬಚ್ಚಲು ಮನೆಯ ಪೈಪು ಹಾಗೂ ಕುಡಿಯುವ ನೀರಿನ ಪೈಪನ್ನು ಕಬ್ಬಿಣದ ಚಲಕೆಯಿಂದ ಹೊಡೆದು ಹಾಕಿ ನಿನ್ನಮ್ಮನ್ ಕ್ಯಾಯಾ ಎಂದು ಅವಾಚ್ಯ ಶಬ್ಧಗಳಿಂದ ಬೈದು ಯಾರು ಬರ್ತಾರೊ ಬರಲಿ ಎಂದು ದಮುಕಿ ಹಾಕಿ ನನ್ನ ಮೇಲೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದರೆ ನಿನ್ನ ಮೇಲೆ ಅತ್ಯಾಚಾರ ಪ್ರಕರಣ ಕೇಸು ಹಾಕಿಸಿ ಜೈಲಿಗೆ ಕಳುಹಿಸುತ್ತೇನೆಂದು ಅವಾಚ್ಯ ಶಬ್ಧಗಳಿಂದ ಬೈದು ಪ್ರಾಣ ಬೆದರಿಕೆ ಹಾಕಿರುವ ಬಗ್ಗೆ ನೀಡಿದ ದೂರಿನ ಮೇರೆಗೆ ಪ್ರಕರಣವನ್ನು ದಾಖಲಿಸಿರುತ್ತೇನೆ.
9. ಗೌರಿಬಿದನೂರು ಪುರ ಪೊಲೀಸ್ ಠಾಣೆ ಮೊ.ಸಂ.32/2020 ಕಲಂ. 279-337-338 ಐ.ಪಿ.ಸಿ:-
ದಿನಾಂಕ 19/02/2020 ರಂದು ಮದ್ಯಾಹ್ನ 13:00 ಗಂಟೆಗೆ ಪಿರ್ಯಾದಿ ಮಂಜುನಾಥ ಬಿ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ. ದಿನಾಂಕ 18/02/2020 ರಂದು ಬೆಳಗ್ಗೆ 11:30 ಗಂಟೆ ಸಮಯದಲ್ಲಿ ನಮ್ಮ ಚಿಕ್ಕಮ್ಮ ಪುಟ್ಟನರಸಮ್ಮ ರವರ ಮಗನಾದ ರವಿ .ಎ ಬಿನ್ ಲೇಟ್ ಆವುಲಪ್ಪ ಎಂಬುವರು ಗೌರಿಬಿದನೂರಿನಿಂದ ನಮ್ಮ ಗ್ರಾಮವಾದ ಕದಿರೇನಹಳ್ಲಿಗೆ ಬರಲು ಎ.ಪಿ 02 ಹೆಚ್ 5693 ಹೀರೋ ಹೊಂಡಾ ಸಿಡಿ ಡಾನ್ ದ್ವಿಚಕ್ರ ವಾಹನದಲ್ಲಿ ಕಲ್ಲೂಡಿ ಬಳಿ ಇರುವ ಹಳೇ ಆರ್.ಟಿ.ಓ ಆಪೀಸ್ ಸಮೀಪ ಗೌರಿಬಿದನೂರು-ಹಿಂದೂಪುರ ರಸ್ತೆಯಲ್ಲಿ ಹೋಗುತ್ತಿದ್ದಾಗ ಎದುರುಗಡೆಯಿಂದ ಅಂದರೆ ಹಿಂದೂಪುರ ಕಡೆಯಿಂದ ಕೆ.ಎ 53 ಡಿ 2538 ರ ಲಾರಿಯನ್ನು ಅದರ ಚಾಲಕ ಅತಿ ವೇಗ ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ನನ್ನ ತಮ್ಮ ಚಾಲನೆ ಮಾಡುತ್ತಿದ್ದ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆಸಿದ ಪರಿಣಾಮ ನನ್ನ ತಮ್ಮ ಚಾಲನೆ ಮಾಡುತ್ತಿದ್ದ ದ್ವಿಚಕ್ರ ವಾಹನ ಜಖಂಗೊಂಡು ನನ್ನ ತಮ್ಮ ರವಿಗೆ ಬಲ ಮುಂಗೈ, ಬಲ ಭುಜದ ಬೋನ್ ಮುರಿದುಹೋಗಿದ್ದು, ತಲೆಯ ಎಡ ಬದಿಯಲ್ಲಿ ಊತದ ಗಾಯವಾಗಿ ಎಡ ಕಣ್ಣಿನ ಮೇಲೆ ರಕ್ತ ಗಾಯವಾಗಿದ್ದು ಗಾಯಾಳು ರವಿಯನ್ನು ನಮ್ಮ ಗ್ರಾಮದ ದೀಪು ರವರು ಆಸ್ಪತ್ರೆಗೆ ದಾಖಲಿಸಿದ್ದು, ವೈದ್ಯರು ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿಗೆ ಕರೆದುಕೊಂಡು ಹೋಗುವಂತೆ ತಿಳಿಸಿದ್ದರಿಂದ ಬೆಂಗಳೂರಿಗೆ ಕರೆದುಕೊಂಡು ಹೋಗಿ ಸ್ಪರ್ಶ ಸ್ಪತ್ರೆಗೆ ದಾಖಲಿಸಿದ್ದು ಅಪಘಾತಕ್ಕೆ ಕಾರಣವಾದ ಕೆ.ಎ 53 ಡಿ 2538 ರ ಲಾರಿಯ ಚಾಲಕನ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿದ್ದರ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುತ್ತೆ.
10. ಗುಡಿಬಂಡೆ ಪೊಲೀಸ್ ಠಾಣೆ ಮೊ.ಸಂ.27/2020 ಕಲಂ. 279-337 ಐ.ಪಿ.ಸಿ:-
ದಿನಾಂಕ:18/02/2020 ರಂದು ಗುಡಿಬಂಡೆ ಸರ್ಕಾರಿ ಆಸ್ಪತ್ರೆಯಿಂದ ಗಾಯಾಳು ಶಿವಕುಮಾರ್ ಬಿನ್ ಲೇಟ್ ನಾಗರಾಜಪ್ಪ, 28 ವರ್ಷ, ನಾಯಕರು ಜನಾಂಗ, ಬೆಸ್ಕಾಂ ನಲ್ಲಿ ಕೆಲಸ, ವಾಸ: ದಪರ್ತಿ ಗ್ರಾಮ, ಗುಡಿಬಂಡೆ ತಾಲ್ಲೂಕು ರವರು ನೀಡಿದ ಹೇಳಿಕೆಯ ಸಾರಾಂಶವೆನೆಂದರೆ ದಿನಾಂಕ: 18/02/2020 ರಂದು ತಾನು ಗುಡಿಬಂಡೆಯಿಂದ ಕೆಲಸವನ್ನು ಮುಗಿಸಿಕೊಂಡು ತಮ್ಮ ಗ್ರಾಮವಾದ ದಪರ್ತಿಗೆ ಹೋಗಿ ಅಲ್ಲಿಂದ ತೋಟಕ್ಕೆ ಹೋಗಲು ತಾನು ಹಾಗೂ ತನ್ನ ಬಾವನಾದ ಮುನಿರಾಜು ಬಿನ್ ಕೃಷ್ಣಪ್ಪ, ರವರೊಂದಿಗೆ ತನ್ನ ಬಾಬತ್ತು ದ್ವಿ ಚಕ್ರ ವಾಹನದ ಸಂಖ್ಯೆ ಕೆ.ಎ.-40 ಇಇ-2362 ಪಲ್ಸರ್ ಗಾಡಿಯಲ್ಲಿ ತೋಟಕ್ಕೆ ಹೋಗಲು ಹೋಗುತ್ತಿದ್ದಾಗ ಸುಮರು 5-30 ಘಂಟೆಯಲ್ಲಿ ದಪರ್ತಿ ಕ್ರಾಸಿನಿಂದ ತಮ್ಮ ಗ್ರಾಮಕ್ಕೆ ಖಾಸಗಿ ಡೈರಿಯಿಂದ ದಿನಾಲು ಹಾಲನ್ನು ತೆಗೆದುಕೊಂಡು ಹೋಗುತ್ತಿದ್ದ ನಾಲ್ಕು ಚಕ್ರದ ಟೆಂಪೋ ತರಹ ಇರುವ ಬಾಹನದ ಸಂಖ್ಯೆ ಕೆ.ಎ-40 ಎ-3606 ರ ಚಾಲಕನು ತನ್ನ ವಾಹನವನ್ನು ಅತೀವೇಗ ಮತ್ತು ಅಜಾರುಕತೆಯಿಂದ ಚಾಲನೆ ಮಾಡಿಕೊಂಡು ಬಂದು ಎದರುಗೆ ತನ್ನ ದ್ವಿ ಚಕ್ರ ವಾಹನಕ್ಕೆ ಬಂದು ಡಿಕ್ಕಿ ಹೊಡೆಯಿಸಿದ ಪರಿಣಾಮ ತನಗೆ ಎಡಕಾಳು ಪಾದಕ್ಕೆ ರಕ್ತಗಾಯವಾಗಿದ್ದು ಬಲಕೈ ಅಂಗೈಗೆ ತರಚಿದ ಗಾಯವಾಗಿದ್ದು, ಬಲ ಕಾಲಿನ ತೊಡೆಗೆ ತರಚಿದ ಗಾಯ ಮತ್ತು ತನ್ನ ವೃಷಣಗಳಿಗೆ ಮೂಗೇಟು ಉಂಟಾಗಿರುವುದಾಗಿ, ತನ್ನ ಗಾಡಿಯ ಹಿಂಬದಿಯಲ್ಲಿ ಕುಳಿತಿದ್ದು ತನ್ನ ಬಾವನಾದ ಮುನಿರಾಜು ರವರಿಗೆ ಸಹಾ ಕೈಗಳಿಗೆ ಹಾಗೂ ಬಲಕಾಲಗಳಿಗೆ ಮೂಗೇಟು ಉಂಟಾಗಿದ್ದು ಅತನಿಗೂ ಸಹಾ ವೃಷಣಗಳಿಗೆ ಮೂಗೇಟು ಉಂಟಾಗಿದ್ದು, ತಮಗೆ ಡಿಕ್ಕಿ ಹೋಡೆಸಿದ ಚಾಲಕನು ತನ್ನ ವಾಹನವನ್ನು ಬಿಟ್ಟು ಓಡಿ ಹೋಗಿರುತ್ತಾನೆ, ನಂತರ ತೋಟದಲ್ಲಿ ಕೆಲಸವನ್ನು ಮಾಡುತ್ತಿದ್ದ ಜನರು ತಮ್ಮನ್ನು 108 ಅಂಬ್ಯುಲೇನ್ಸ್ ವಾಹನದಲ್ಲಿ ಗುಡಿಬಂಡೆ ಸರ್ಕಾರಿ ಆಸ್ಪತ್ರೆಗೆ ತಮ್ಮನ್ನು ದಾಖಲಿಸಿರುತ್ತಾರೆ, ಟೆಂಪೋ ಹಾಗೂ ದ್ವಿ ಚಕ್ರ ವಾಹನ ದಪರ್ತಿ ಕ್ರಾಸಿನಿಂದ ತಮ್ಮ ಗ್ರಾಮದ ರಸ್ತೆಯ ಅಪಗಾತ ಸ್ಥಳದಲ್ಲಿ ಇರುತ್ತವೆ, ತನಗೆ ಮತ್ತು ತನ್ನ ಬಾವನವರಿಗೆ ಅಪಘಾತವನ್ನುಂಟು ಮಾಡಿದೆ ಕೆ.ಎ-40 ಎ-3606 ವಾಹನದ ಚಾಲಕನ ಮೇಲೆ ಕಾನೂನು ರಿತ್ಯಾ ಕ್ರಮ ಜರುಗಿಸಿಬೇಕೆಂದು ತಾನು ತನ್ನ ಹೇಳಿಕೆಯನ್ನು ನೀಡದ್ದನ್ನು ಪಡೆದು ಠಾಣಾ ಮೊಸಂ27/2020ಕಲಂ279,337 ಐಪಿಸಿ ದಾಖಲಿಸಿರುತ್ತೆ.
11. ನಂದಿಗಿರಿಧಾಮ ಪೊಲೀಸ್ ಠಾಣೆ ಮೊ.ಸಂ.09/2020 ಕಲಂ. 420 ಐ.ಪಿ.ಸಿ:-
ದಿನಾಂಕ 18-02-2020 ರಂದು ಸಂಜೆ 16-30 ಗಂಟೆಗೆ ಇಧೇ ಚಿಕ್ಕಬಳ್ಳಾಪುರ ತಾಲ್ಲೂಕು ಕೈಗಾರಿಕ ಪ್ರದೇಶದ ಬಾರತ್ ಬೆಂಜ್ ಟ್ರೈಡೆಂಟ್ ಟ್ರಕ್ಕಿಂಗ್ ಆಟೋ ಮೊಬೈಲ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ವ್ಯವಸ್ಥಾಪಕರಾದ ಶ್ರೀ ರಮೇಶ್ ರವರು ಠಾಣೆಗೆ ಹಾಜರಾಗಿ ಕೊಟ್ಟ ದೂರಿನ ಸಾರಾಂಶವೇನೆಂದರೆ ಭಾರತ್ ಬೆಂಜ್ ಆಟೋ ಮೊಬೈಲ್ ಖಾಸಗಿ ಸಂಸ್ಥೆಯ ಶಾಖೆಯು ಚಿಕ್ಕಬಳ್ಳಾಪುರ ಕೈಗಾರಿಕಾ ಪ್ರದೇಶದಲ್ಲಿ ಸ್ಥಾಪನೆಯಾಗಿದ್ದು ಅದರಲ್ಲಿ ದಿನಾಂಕ 05-11-2018 ರಿಂದ ಗೌರಿಬಿದನೂರು ತಾಲ್ಲೂಕು ಸಾರಗೊಂಡ್ಲು ಗ್ರಾಮದ ವೀರೆಂದ್ರಬಾಬು ಬಿನ್ ಲಕ್ಷ್ಮೀನಾರಾಯಣಗೌಡ ಎಂಬುವನು ಸದರಿ ಕಛೇರಿಯಲ್ಲಿ ಅಕೌಂಟ್ ಎಕ್ಸ್ಯೂಕ್ಯೂಟಿವ್ ಕ್ಯಾಷಿಯರ್ ಆಗಿ ಕೆಲಸ ಮಾಡುತ್ತಿದ್ದನು, ಸದರಿ ವೀರೆಂದ್ರ ಬಾಬು ದಿನಾಂಕ 06-01-2020 ರಿಂದ ಕೆಲಸಕ್ಕೆ ಬಾರದೆ ಅನಧಿಕೃತವಾಗಿ ಗೈರಾಗಿದ್ದನು, ಕ್ಯಾಷಿಯರ್ ಕೆಲಸಕ್ಕೆ ನಮ್ಮ ಸಂಸ್ಥೆಯ ಪುರುಷೋತ್ತಮ ಎಂಬುವರನ್ನು ನೇಮಕ ಮಾಡಿದ್ದೆವು, ಪರಿಶೀಲನೆ ಮಾಡಿದಾಗ ಸದರಿ ವೀರೇಂದ್ರ ಬಾಬು ಸಂಸ್ಥೆಯ ಹಣದಲ್ಲಿ ಸುಮಾರು 6 ಲಕ್ಷ ಹಣವನ್ನು ಮೋಸ ಮಾಡಿ ದುರುಪಯೋಗ ಪಡಿಸಿಕೊಂಡಿದ್ದನು, ಅವನ ಕುಟುಂಬದವರು ಎರಡು ದಿನಗಳ ನಂತರ ಸಂಸ್ಥೆಯ ಬಳಿ ಹುಡುಕಿಕೊಂಡು ಬಂದು ವಿಚಾರ ತಿಳಿದುಕೊಂಡು ಮಂಚೇನಹಳ್ಳಿ ಪೊಲೀಸ್ ಠಾಣೆಯಲ್ಲಿ ವೀರೇಂದ್ರ ಬಾಬು ಕಾಣೆಯಾಗಿರುವ ಬಗ್ಗೆ ದೂರನ್ನು ಕೊಟ್ಟಿದ್ದರು. ನಂತರ ವೀರೇಂದ್ರ ಬಾಬು ಪತ್ತೆಯಾಗಿ ಪ್ರಕರಣ ಮುಕ್ತಾಯ ಮಾಡಿಕೊಂಡು ಹೋಗಿದ್ದು ಅವರ ಮನೆಯವರು ಸಂಸ್ಥೆಗೆ ದುರುಪಯೋಗ ಮಾಡಿದ ಹಣವನ್ನು ವಾಪಸ್ಸು ಕಟ್ಟುವುದಾಗಿ ಹೇಳಿ ಹೋದವರು ಹಣವನ್ನು ಮರು ಪಾವತಿ ಮಾಡಲೇ ಇಲ್ಲಾ, ನಂತರ ಕುಲಂಕುಷವಾಗಿ ಕಂಪನಿಯ ದಾಖಲೆಗಳನ್ನು ಆಡಿಟ್ ರವರಿಂದ ಆಟಿಡ್ ಮಾಡಿಸಿದ್ದು ಸದರಿ ಕ್ಯಾಷಿಯರ್ ವೀರೇಂದ್ರ ಬಾಬು ತನ್ನ ಕರ್ತವ್ಯದ ಅವದಿಯಲ್ಲಿ ಒಟ್ಟು 24.95.382 ರುಪಾಯಿ ( ಇಪ್ಪತ್ತನಾಲ್ಕು ಲಕ್ಷ ತೊಂಭತ್ತೈದು ಸಾವಿರದ ಮೂರು ನೂರ ಎಂಭತ್ತೆರಡು ರುಪಾಯಿ) ಗಳನ್ನು ವಂಚಿಸಿ ದುರುಪಯೋಗ ಪಡಿಸಿಕೊಂಡಿದ್ದನು, ವೀರೇಂದ್ರ ಬಾಬು ರವರ ಮನೆಯವರು ಹಣವನ್ನು ಕಟ್ಟುವುದಾಗಿ ತಿಳಿಸಿ ಹಣವನ್ನು ಕಟ್ಟದೆ ಇದ್ದುದರಿಂದ ದೂರು ಕೊಡಲು ತಡವಾಗಿರುತ್ತದೆ. ನಮ್ಮ ಸಂಸ್ಥೆಯಲ್ಲಿ ಕೆಲಸ ಮಾಡಿಕೊಂಡಿದ್ದು ಸಂಸ್ಥೆಗೆ ಸೇರಿದ ಹಣವನ್ನು ವಂಚಿಸಿರುವ ವೀರೇಂದ್ರ ಬಾಬು ರವರ ವಿರುದ್ದ ಕಾನೂನು ಕ್ರಮ ಜರುಗಿಸಲು ಕೋರಿ ನೀಡಿದ ದೂರಿನ ಮೇರೆಗೆ ಈ ಪ್ರವವರದಿ.
12. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.34/2020 ಕಲಂ. 415-419-420 ಐ.ಪಿ.ಸಿ:-
ದಿನಾಂಕ 18/02/2020 ರಂದು ಮದ್ಯಾಹ್ನ 3-30 ಗಂಟೆಗೆ ಪಿರ್ಯಾದಿದಾರರಾದ ಶ್ರೀ ಹೆಚ್.ಡಿ ಮದನ್ ಬಿನ್ ದೇವರಾಜುಲು, 47 ವರ್ಷ, ಲಿಂಗಾಯಿತರು, ವ್ಯಾಪಾರ, ವಾಸ-ನಂಬರ್ 47, ರತ್ನ ರೆಸಿಡೆನ್ಸಿ, 2 ನೇ ಕ್ರಾಸ್, 3 ನೇ ಮೈನ್, ಬನಗಿರಿ ನಗರ, ಬನಶಂಕರಿ 3 ನೇ ಸ್ಟೇಜ್, ಬೆಂಗಳೂರು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ತಾನು 2009 ನೇ ಸಾಲಿನಲ್ಲಿ ಇದೇ ಶಿಡ್ಲಘಟ್ಟ ತಾಲ್ಲೂಕು ಜಂಗಮಕೋಟೆ ಹೋಬಳಿ, ಕೆ.ಜಿ ಚಿಕ್ಕಬಲ್ಲ ಗ್ರಾಮದ ವಾಸಿಯಾದ ಜೆ.ಎನ್ ನಾಗರಾಜ ಬಿನ್ ಜೆ.ಟಿ ನಾರಾಯಣಸ್ವಾಮಿ, ಅವರ ಬಾಬತ್ತು ಕೆ.ಜಿ ಚಿಕ್ಕಬಲ್ಲ ಗ್ರಾಮದ ಸರ್ವೇ ನಂಬರ್ 56 ರಲ್ಲಿ 2 ಎಕರೆ 1 ಗುಂಟೆ ಜಮೀನು, ಸರ್ವೇ ನಂಬರ್ 57/2 ರಲ್ಲಿ 1 ಎಕರೆ, ಸರ್ವೇ ನಂಬರ್ 56/2 ರಲ್ಲಿ 1 ಎಕರೆ ಜಮೀನನ್ನು ಒಟ್ಟು 4 ಎಕರೆ 1 ಗುಂಟೆ ಜಮೀನು ಇರುತ್ತದೆ. ಈ ಜಮೀನನ್ನು ಸದರಿಯವರು ಸರ್ವೇ ನಂಬರ್ 56 ರಲ್ಲಿ 2 ಎಕರೆ 1 ಗುಂಟೆ ಜಮೀನನ್ನು ತನಗೆ ಮಾರಾಟ ಮಾಡಿ ಸೇಲ್ ಅಗ್ರಿಮೆಂಟ್ ಅನ್ನು ದಿನಾಂಕ 18/02/2009 ರಲ್ಲಿ ಮಾಡಿಕೊಟ್ಟಿರುತ್ತಾರೆ. ನಂತರ ಸರ್ವೇ ನಂಬರ್ 57/2 ರಲ್ಲಿ 1 ಎಕರೆ ಹಾಗು ಸರ್ವೇ ನಂಬರ್ 56/2 ರಲ್ಲಿ 1 ಎಕರೆ ಜಮೀನನ್ನು ತನಗೆ ಮಾರಾಟ ಮಾಡಿ ಸೇಲ್ ಅಗ್ರಿಮೆಂಟ್ ಅನ್ನು ದಿನಾಂಕ 22/07/2010 ರಲ್ಲಿ ಮಾಡಿಕೊಟ್ಟಿರುತ್ತಾರೆ. ಇದರ ಜೊತೆಗೆ ಮೇಲ್ಕಂಡ ಜಮೀನನ್ನು ಅಲಾಯಿದೆಯಾಗಿ ಅವರ ಕಡೆಯಿಂದ ಜಿ.ಪಿ.ಎ ಮಾಡಿಸಿಕೊಂಡು ಶಿಡ್ಲಘಟ್ಟ ಉಪನೊಂದಣಾಧಿಕಾರಿಗಳ ಕಚೇರಿಯಲ್ಲಿ ನಿಬಂಧನೆಗಳಿಗೆ ಒಳಪಟ್ಟು ನಂಬರ್ 56 ರಲ್ಲಿ 2 ಎಕರೆ 1 ಗುಂಟೆ, ಸರ್ವೇ ನಂಬರ್ 57/2 ರಲ್ಲಿ 1 ಎಕರೆ ಜಮೀನನ್ನು ದಿನಾಂಕ 22/07/2010 ರಂದು ಹಾಗು ಸರ್ವೇ ನಂಬರ್ 56/2 ರಲ್ಲಿ 1 ಎಕರೆ ಜಮೀನನ್ನು ದಿನಾಂಕ 04/12/2013 ರಂದು ಜಿಪಿಎ ರಿಜಿಸ್ಟ್ರೇಷನ್ ಮಾಡಿಸಿಕೊಟ್ಟಿದ್ದು, ಅಂದಿನಿಂದ ತಾನೇ ಅನುಭವದಲ್ಲಿರುತ್ತೇನೆ. ಈ ಜಮೀನಿಗೆ ಹೊಂದಿಕೊಂಡಂತೆ ನಾಗರಾಜ ರವರ ಬಾಬತ್ತು ಕೆ.ಜಿ ಚಿಕ್ಕಬಲ್ಲ ಗ್ರಾಮದ ಸರ್ವೇ ನಂಬರ್ 63/2 ರಲ್ಲಿ 23 ಗುಂಟೆ ಜಮೀನು ಇದ್ದು ಸದರಿ ಜಮೀನು ತಾವು ಖರೀದಿ ಮಾಡಿದ್ದ ಜಮೀನಿಗೆ ಹೋಗಬೇಕಾದರೆ ಅಥವಾ ಓಡಾಟ ಮಾಡ ಬೇಕಾದರೆ ಅದೇ ಜಮೀನಿನಲ್ಲಿ ಹೋಗ ಬೇಕಾಗಿರುತ್ತದೆ. ತಾನು ಖರೀದಿ ಮಾಡಿದ್ದ ಮೇಲ್ಕಂಡ ಜಮೀನಿಗೆ ಪೆನ್ಸಿಂಗ್ ಅನ್ನು ಅಳವಡಿಸಿಕೊಂಡು ತಾನೇ ಅನುಭವದಲ್ಲಿರುತ್ತೇನೆ ಹಾಗು ಸದರಿ ಜಮೀನನ್ನು ಡಿಸಿ ಕಚೇರಿಯಿಂದ ಕನ್ ವರ್ಷನ್ ಮಾಡಿಸಲು ಪ್ರಯತ್ನಿಸಿದರೂ ಕಾರಣಾಂತರಗಳಿಂದ ಸಾಧ್ಯವಾಗಿರುವುದಿಲ್ಲ. ನಂತರ 2018 ರಲ್ಲಿ ಮೇಲ್ಕಂಡ ನಾಗರಾಜ ರವರು ಐರಿಸ್ ಡೆವಲಪರ್ಸ್ ಪಾರ್ಟರ್ ಆದ ರಾಜನ್ ಚೆರಿಯನ್ ಬಿನ್ ಎಂ.ವಿ ಚೆರಿಯನ್ನ ನಂಬರ್-19, ಲೇ ಪಾಕ್ಷಿ ಲೇಔಟ್, ಕಲ್ಕೆರೆ, ಬೆಂಗಳೂರು-43 ಎಂಬುವರನ್ನು ಆತನೇ ಕರೆದುಕೊಂಡು ಬಂದು ತಾನು ಈಗಾಗಲೇ ನಿಮಗೆ ಮಾರಾಟ ಮಾಡಿರುವ ಜಮೀನು ಹಾಗು ಉಳಿದಿರುವ 23 ಗುಂಟೆ ಜಮೀನಿನ ಪಹಣಿ ದಾಖಲೆಗಳು ಇನ್ನು ತನ್ನ ಹೆಸರಿಗೆ ಇರುವುದರಿಂದ ತಮ್ಮ ಎಲ್ಲಾ ಜಮೀನನ್ನು ಸೇರಿಸಿಕೊಂಡು ಚಾಯಿಂದ ಡೆವೆಲಂಪ್ ಮೆಂಟ್ ಮಾಡುವುದಾಗಿ ಹೇಳಿದ್ದು, ಅದಕ್ಕೆ ನಾವು ಒಪ್ಪಿಕೊಂಡೆವು. ಈ ಬಗ್ಗೆ ತನಗೆ ಹಾಗು ಐರಿಸ್ ಡೆವಲಪರ್ಸ್ ಪಾರ್ಟರ್ ಮತ್ತು ಕೇವಲ 23 ಗುಂಟೆ ಜಮೀನು ಹೊಂದಿದ್ದ ನಾಗರಾಜ್ ರವರ ಹೆಸರಿನಲ್ಲಿ ಜಮೀನಿನ ಪಹಣಿ ಇದ್ದ ಕಾರಣ ಅವರನ್ನು ಸೇರಿಕೊಂಡು ಜಾಯಿಂಟ್ ಡೆವೆಲಪ್ ಮೆಂಟ್ ಅಗ್ರಿಮೆಂಟ್ ಮಾಡಿಕೊಂಡೆವು. ಈ ಸಂಬಂಧ ತನಗೆ ಮಾಹಿತಿ ಕೊಡದೇ ಐರಿಸ್ ಡೆವಲಪರ್ಸ್ ಪಾರ್ಟರ್ ರವರ ಕಡೆಯಿಂದ ನಾಗರಾಜು ರವರು 40 ಲಕ್ಷ ರೂಗಳನ್ನು ಸದ್ಭಾವನೆಯ ಮುಂಗಡ ಹಣವನ್ನು ಪಡೆದುಕೊಂಡಿರುವುದು ನಂತರ ತಿಳಿಯಿತು. ನಂತರ ಮೇಲ್ಕಂಡ ಐರಿಸ್ ಡೆವಲಪರ್ಸ್ ಪಾರ್ಟರ್ ರವರು ಕೆಲಸವನ್ನು ಪ್ರಾರಂಭಿಸಿ ನಡೆಸಿಕೊಂಡು ಹೋಗುತ್ತಿದ್ದು ಸದರಿ ಜಮೀನನ್ನು ಡೆವಲೆಪ್ ಮೆಂಟ್ ಮಾಡುತ್ತಿದ್ದು ತಾನು ಜೆ.ಎನ್ ನಾಗರಾಜ ಹಾಗು ಐರಿಸ್ ಡೆವಲಪರ್ಸ್ ಪಾರ್ಟರ್ ರವರಾದ ರಾಜನ್ ಚೆರಿಯನ್ ರವರಿಗೆ ಖಾತಾ ಬಗ್ಗೆ ಕೇಳಿದಲ್ಲಾಗಲೆಲ್ಲಾ ಇನ್ನು ಖಾತಿಯಾಗಿರುವುದಿಲ್ಲವೆಂದು ಸುಳ್ಳು ಮಾಹಿತಿ ನೀಡಿ ಈ ಸಮಯದಲ್ಲಿ ತಾನು ಜೆ.ಎನ್ ನಾಗರಾಜು ರವರಿಂದ ಖರೀದಿ ಮಾಡಿದ್ದ ಮೇಲ್ಕಂಡ ಜಮೀನಿಗೆ ಸಂಬಂಧಿಸಿದ ಮೂಲ ಪತ್ರಗಳನ್ನು ಐರಿಸ್ ಡೆವಲಪರ್ಸ್ ಪಾರ್ಟರ್ ರಾಜನ್ ಚೆರಿಯನ್ ರವರು ಎಲ್.ಐ.ಸಿ ಹೌಸಿಂಗ್ ಪೈನಾನ್ಸ್ ಸಂಬಂಧ ಬೇಕಾಗಿರುತ್ತೆಂತ ತನ್ನಿಂದ ತೆಗೆದುಕೊಂಡಿರುತ್ತಾರೆ. ದಿನಾಂಕ 27/09/2019 ರಂದು ಜೆ.ಎನ್ ನಾಗರಾಜು ಹಾಗು ಐರಿಸ್ ಡೆವಲಪರ್ಸ್ ಪಾರ್ಟರ್ ರವರು ಸೇರಿಕೊಂಡು ನಾಗರಾಜು ರವರು ತನಗೆ ಜಿಪಿಎ ಮಾಡಿ ಸೇಲ್ ಅಗ್ರಿಮೆಂಟ್ ಮಾಡಿದ್ದ ಸರ್ವೇ ನಂಬರ್ 56/1 ರ ಜಮೀನಿಗೆ ಸೇರಿದ ಸೈಟ್ ನಂಬರ್ 36 & 37 ಅನ್ನು ತನ್ನ ಗಮನಕ್ಕೆ ಬಾರದೇ ಮೋಸದಿಂದ ಯೋಗೇಶ್ ಸುಜೀತ್ ಬಿನ್ ಸುಜೀತ್ ಸಿ.ವಿ ಹೆಚ್.ಬಿ.ಆರ್ ಲೇ ಔಟ್ ಬೆಂಗಳೂರು ರವರಿಗೆ ವಂಚಿಸಿ ನನಗೆ ವಂಚಿಸಿರುತ್ತಾರೆ ಹಾಗು ದಿನಾಂಕ 03/10/2019 ರಂದು ಜಂಗಮಕೋಟೆ ಗ್ರಾಮ ಪಂಚಾಯ್ತಿ ಕಾರ್ಯಾಲಯದಿಂದ ನಾಗರಾಜು ರವರ ಬಾಬತ್ತು ಸರ್ವೇ ನಂಬರ್ 63/2 ರಲ್ಲಿ ಕೇವಲ 8 ಸೈಟ್ ಗಳು ಮಾತ್ರ ಡೆವಲಪ್ ಮೆಂಟ್ ಆಗಿರುತ್ತದೆ. ಆದರೆ ನಾಗರಾಜು ರವರ ತನಗೆ ಜಿಪಿಎ ಮಾಡಿ ಸೇಲ್ ಅಗ್ರಿಮೆಂಟ್ ಮಾಡಿದ್ದ ಜಮೀನಿನಲ್ಲಿ ಅವರ ಸರ್ವೇ ನಂಬರ್ 63/2 ಅನ್ನು ಸೇರಿಸಿಕೊಂಡು ತನ್ನ ಬಾಬತ್ತು ಸರ್ವೇ ನಂಬರ್ 56/1, 56/2, 57 ಒಟ್ಟು 4 ಎಕರೆ 1 ಗುಂಟೆ ಜಮೀನಿಗೆ ಸೇರಿದಂತೆ ಒಟ್ಟು 42 ಸೈಟ್ ಗಳಿಗೆ ಖಾತಾಗಳನ್ನು ತನಗೆ ಗೊತ್ತಿಲ್ಲದೆ ತನಗೆ ಯಾವುದೇ ಮಾಹಿತಿ ನೀಡದೇ ಜೆ.ಎನ್ ನಾಗರಾಜು ಹಾಗು ಐರಿಸ್ ಡೆವಲಪರ್ಸ್ ರವರ ಹೆಸರಿಗೆ ಮಾಡಿಸಿಕೊಂಡು ತನಗೆ ಮೋಸ ಮಾಡಿರುತ್ತಾರೆ. ಆದ್ದರಿಂದ ತನಗೆ ಸೇರಿದ ಜಮೀನಿನಲ್ಲಿ ಸೈಟ್ ಗಳನ್ನು ಮೋಸ ಹಾಗು ವಂಚನೆಯಿಂದ ಬೇರೆಯವರಿಗೆ ಮಾರಾಟ ಮಾಡಿ ಹಾಗು ಖಾತಾಗಳನ್ನು ಅವರ ಹೆಸರಿಗೆ ಮಾಡಿಸಿಕೊಂಡಿರುವ ಜೆ.ಎನ್ ನಾಗರಾಜು, ಕೆಜಿ ಚಿಕ್ಕಬಲ್ಲ ಗ್ರಾಮ, ಶಿಡ್ಲಘಟ್ಟ ತಾಲ್ಲೂಕು ಐರಿಸ್ ಡೆವಲಪರ್ಸ್ ಪಾರ್ಟರ್ ರಾಜನ್ ಚೆರಿಯನ್ ಬಿನ್ ಎಂ.ವಿ ಚೆರಿಯನ್, ಕಲ್ಕೆರೆ, ಬೆಂಗಳೂರು ನಗರ ರವರ ವಿರುದ್ದ ಮುಂದಿನ ಕಾನೂನು ರೀತಿ ಕ್ರಮ ಕೈಗೊಳ್ಳಲು ಕೊಟ್ಟ ದೂರು.