ದಿನಾಂಕ :19/01/2021 ರ ಅಪರಾಧ ಪ್ರಕರಣಗಳು
- ಸಿ.ಇ.ಎನ್ ಪೊಲೀಸ್ ಠಾಣೆ ಮೊ.ಸಂ.06/2021 ಕಲಂ. 419,420 ಐ.ಪಿ.ಸಿ & 66(D) INFORMATION TECHNOLOGY ACT 2000 :-
ದಿನಾಂಕ;18-01-2021 ರಂದು ಪಿರ್ಯಾಧಿದಾರರಾದ ಶ್ರೀಮತಿ ವಿಜಿಯಮ್ಮ ಎಸ್, ಕೋಂ ದರ್ಮೇಂದ್ರ, 36 ವರ್ಷ, ವಕ್ಕಲಿಗರು, ವಾಸ ಡೆಕನ್ ಆಸ್ಪತ್ರ ರಸ್ತೆ, ಚಿಂತಾಮಣಿ, ಮೊಬೈಲ್ ನಂಬರ್-8105242944 ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ನನಗೆ ಪ್ರದೀಪ್ ರೆಡ್ಡಿ @ ಅಬ್ದುಲ್ ಸಲಾಂ ಮೊಬೈಲ್ ಸಂಖ್ಯೆ 9885754821,8074080259 ಎಂಬುವವರು 2019 ರ ಸೆಪ್ಟಂಬರ್ ತಿಂಗಳಲ್ಲಿ ಪೆಸ್ ಬುಕ್ ನಲ್ಲಿ ಪ್ರೆಂಡ್ ಆಗಿ ಮೆಸೇಂಜರ್ ನಲ್ಲಿ ವಿಧ ವಿಧವಾದ ಬಟ್ಟೆಗಳನ್ನು ನನಗೆ ಹಾಕಿ ಬೆಂಗಳೂರು ಮತ್ತು ಕರ್ನೂಲ್ ನಲ್ಲಿ ನನಗೆ ಬಟ್ಟೆ ಅಂಗಡಿ ಇರುವುದಾಗಿ ತಿಳಿಸಿ, ನಿವೂ ಸಹ ಬಟ್ಟೆ ಅಂಗಡಿ ಇಟ್ಟಿರುವುದಾಗಿ ತಿಳಿಯಿತು ನಿಮಗೆ ಕಡಿಮೆ ಬೆಲೆಯಲ್ಲಿ ಒಳ್ಳೆ ಬಟ್ಟೆಗಳನ್ನು ಕಳುಹಿಸುವುದಾಗಿ ನಂಬಿಸಿ ಮೊದಲು 30,000/-ರೂಗಳು ನನ್ನ ಖಾತೆಗೆ ಹಾಕಬೇಕೆಂತ ತಿಳಿಸಿದ್ದು, ನಂತರ ಅವರು ಕಳುಹಿಸಿದ್ದ ಎಸ್,ಬಿ,ಐ ಬ್ಯಾಂಕ್ ಖಾತೆ ಸಂಖ್ಯೆ35078547103, ಐಎಫ್ಎಸ್.ಸಿ ನಂಬರ್-SBIN0001023 ಗೆ ಮೊದಲು 30,000/-ರೂಗಳನ್ನು ಹಾಕಿರುತ್ತೇನೆ, ನಂತರ ನೀವು ಹಾಕಿರುವ ಹಣ ಸಾಲದು ಎಂತ ಹೇಳಿ ನನ್ನಿಂದ ವಿವಿಧ ದಿನಾಂಕಗಳಂದು ಒಟ್ಟು 4,50000/-ರೂಗಳನ್ನು ಮೇಲ್ಕಂಡ ಖಾತೆಗೆ ಹಣ ಹಾಕಿಸಿಕೊಂಡಿರುತ್ತಾನೆ, ನಂತರ ನೀವು ಸರಿಯಾದ ಸಮಯಕ್ಕೆ ಬಟ್ಟೆ ಕೊಟ್ಟಿಲ್ಲದ ಕಾರಣ ನೀವು ನಮ್ಮ ಹಣ ನನಗೆ ವಾಪಸ್ಸು ಕೊಡಿ ಎಂತ ಕೇಳಿದಕ್ಕೆ ನಿಮಗೆ ಬಡ್ಡಿ ಸಮೇತ ಒಂದು ತಿಂಗಳ ಒಳಗಾಗಿ ಕೊಡುತ್ತೇನೆಂತ ಹೇಳಿ ನನ್ನ ನಂಬರನ್ನು ಬ್ಲಾಕ್ ಲೀಸ್ಟ್ ಗೆ ಹಾಕಿ ಕೊಂಡಿರುತ್ತಾನೆ, ಆದುದರಿಂದ ತಾವುಗಳು ನನಗೆ ಬಟ್ಟೆ ಕಳುಹಿಸಿಕೊಡುವುದಾಗಿ ನಂಬಿಸಿ ನನ್ನಿಂದ ಒಟ್ಟು 4,50000/-ರೂಗಳನ್ನು ಮೇಲ್ಕಂಡ ಖಾತೆಗೆ ಹಾಕಿಸಿಕೊಂಡು ವಂಚಿಸಿರುವ ಆರೋಪಿಯನ್ನು ಪತ್ತೆ ಮಾಡಿ ಕಾನೂನು ರೀತಿ ಕ್ರಮ ಕೈಗೊಂಡು ನನ್ನ ಹಣ ನನಗೆ ವಾಪಸ್ಸುಕೊಡಿಸಬೇಕಾಗಿ ಕೋರಿ ನೀಡಿರುವ ದೂರಾಗಿರುತ್ತದೆ.
- ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.25/2021 ಕಲಂ. 279,337 ಐ.ಪಿ.ಸಿ:-
ದಿನಾಂಕ: 18/01/2021 ರಂದು ಮದ್ಯಾಹ್ನ ಚಿಂತಾಮಣಿ ಸರ್ಕಾರಿ ಆಸ್ಪತ್ರೆಯಲ್ಲಿ ಗಾಯಾಳು ಎನ್.ಶಿವಣ್ಣ ಬಿನ್ ಲೇಟ್ ನಡಿಪನ್ನ, 50 ವರ್ಷ, ಭೋವಿ ಜನಾಂಗ, KSRTC ನಲ್ಲಿ ಟ್ರಾಫಿಕ್ ಕಂಟ್ರೋಲರ್ ಕೆಲಸ, ಚಿಕ್ಕಬಳ್ಳಾಪುರ ವಿಭಾಗ, ಸ್ವಂತ ಸ್ಥಳ: 23 ನೇ ವಾರ್ಡ್, ನ್ಯೂ ಹಾರಿಜನ್ ಶಾಲೆ ಬಳಿ, ಬಾಗೇಪಲ್ಲಿ ನಗರ ರವರ ಹೇಳಿಕೆಯನ್ನು ಪಡೆದುಕೊಂಡು ಮದ್ಯಾಹ್ನ 13.30 ಗಂಟೆಗೆ ಠಾಣೆಗೆ ವಾಪಸ್ಸಾಗಿ ದಾಖಲಿಸಿಕೊಂಡು ಗಾಯಾಳುವಿನ ಹೇಳಿಕೆಯ ಸಾರಾಂಶವೇನೆಂದರೆ, ಈ ದಿನ ದಿನಾಂಕ: 18/01/2021 ರಂದು ಬೆಳಿಗ್ಗೆ ತಮ್ಮ ಇಲಾಖೆಯ ವಿಭಾಗಾಧೀಕಾರಿಗಳು ತನಗೆ ಹಾಗೂ ಟ್ರಾಫಿಕ್ ಇನ್ಸ್ ಪೆಕ್ಟರ್ ಶ್ರೀ ಮಾಸಪ್ಪ, 43 ವರ್ಷ ರವರಿಗೆ ಚಿಂತಾಮಣಿ-ಶಿಡ್ಲಘಟ್ಟ ಮಾರ್ಗದಲ್ಲಿ ಸಂಚರಿಸುವ KSRTC ಬಸ್ಸುಗಳ ತನಿಖಾ ಕರ್ತವ್ಯಕ್ಕೆ ನೇಮಿಸಿ ಕಳುಹಿಸಿದ್ದು, ಅದರಂತೆ ತಾವು ಈ ದಿನ ಬೆಳಿಗ್ಗೆ 11.30 ಗಂಟೆ ಸಮಯದಲ್ಲಿ ಚಿಂತಾಮಣಿ ತಾಲ್ಲೂಕು, ಅಮಿಟಗಾನಹಳ್ಳಿ ಬ್ರಿಡ್ಜ್ ಬಳಿ ಶಿಡ್ಲಘಟ್ಟ ಕಡೆಯಿಂದ ಬಂದ KSRTC ಬಸ್ ಒಂದನ್ನು ಚೆಕ್ ಮಾಡಿ ಬಸ್ಸಿನಿಂದ ಇಳಿದು ರಸ್ತೆಯ ಬದಿಯಲ್ಲಿ ನಿಲ್ಲಿಸಿದ್ದ ತಮ್ಮ ಇಲಾಖೆಯ ಜೀಪನ್ನು ಹತ್ತಲು ಹೋಗುತ್ತಿದ್ದಾಗ ಚಿಂತಾಮಣಿ ಕಡೆಯಿಂದ ಬಂದ ನೊಂದಣಿ ಸಂಖ್ಯೆ: KA-67 E-6139 ಬಜಾಬ್ CT-100 ದ್ವಿಚಕ್ರ ವಾಹನದ ಸವಾರ ಆತನ ದ್ವಿಚಕ್ರ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ತನಗೆ ಹಾಗೂ ತನ್ನೊಂದಿಗೆ ಇದ್ದ ತಮ್ಮ ಟ್ರಾಫಿಕ್ ಇನ್ಸ್ ಪೆಕ್ಟರ್ ಮಾಸಪ್ಪ ರವರಿಗೆ ಡಿಕ್ಕಿ ಹೊಡೆದು ಅಪಘಾತಪಡಿಸಿದ ಪರಿಣಾಮ ತನಗೆ ಎಡಮೊಣಕೈ ಬಳಿ, ಬಲಕಾಲಿನ ಮೊಣಕಾಲಿನ ಕೆಳಗೆ ಹಾಗೂ ತಲೆಗೆ ಗಾಯಗಳಾಗಿದ್ದು, ತಮ್ಮ ಟ್ರಾಫಿಕ್ ಇನ್ಸ್ ಪೆಕ್ಟರ್ ರವರಿಗೆ ಎರಡೂ ಮೊಣಕಾಲುಗಳಿಗೆ ತರಚಿದ ಗಾಯಗಳಾಗಿರುತ್ತೆ. ದ್ವಿಚಕ್ರ ವಾಹನ ಸವಾರ ಸಹ ದ್ವಿಚಕ್ರ ವಾಹನದ ಸಮೇತ ಕೆಳಗೆ ಬಿದ್ದಿರುತ್ತಾನೆ. ಅಷ್ಠರಲ್ಲಿ ತಮ್ಮ ಇಲಾಖಾ ಜೀಫ್ ನಂ.KA-57 F-2603 ರ ಚಾಲಕನಾದ ಸುನೀಲ್ ಕುಮಾರ್ ರವರು ತಮ್ಮನ್ನು ಉಪಚರಿಸಿ ಇಲಾಖೆಯ ಜೀಪ್ ನಲ್ಲಿಯೇ ಚಿಂತಾಮಣಿ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ಚಿಕಿತ್ಸೆಗಾಗಿ ದಾಖಲು ಮಾಡಿದ್ದು, ಮೇಲ್ಕಂಡಂತೆ ಅಪಘಾತವನ್ನುಂಟು ಮಾಡಿರುವ ನಂ. KA-67 E-6139 ಬಜಾಬ್ CT-100 ದ್ವಿಚಕ್ರ ವಾಹನದ ಸವಾರನ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ನೀಡಿದ ಹೇಳಿಕೆಯ ದೂರಾಗಿರುತ್ತೆ.
- ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.14/2021 ಕಲಂ. 32,34 ಕೆ.ಇ ಆಕ್ಟ್:-
ದಿನಾಂಕ 18/01/2021 ರಂದು ಸಂಜೆ 6-30 ಗಂಟೆಗೆ ಶ್ರೀ ಎನ್. ಮೋಹನ್ , ಪಿ.ಎಸ್.ಐ. ಗೌರಿಬಿದನೂರು ಗ್ರಾಮಾಂತರ ಠಾಣೆ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂಧರೆ ದಿನಾಂಕ: 18/01/2021 ರಂದು ಸಂಜೆ 4-30 ಗಂಟೆಯಲ್ಲಿ ತಾನು ಮತ್ತು ಹೆಚ್.ಸಿ-01 ಚಂದ್ರಶೇಖರ , ಪಿ.ಸಿ.179 ಶಿವಶೇಖರ ಮತ್ತು ಪಿ.ಸಿ-512 ರಾಜಶೇಖರ ರವರೊಂದಿಗೆ ವಿದುರಾಶ್ವಥ ಹೊರಠಾಣಾ ವ್ಯಾಪ್ತಿಯಲ್ಲಿ ಗಸ್ತಿನಲ್ಲಿದ್ದಾಗ ಗೌರಿಬಿದನೂರು ತಾಲ್ಲೂಕು ಕಸಬಾ ಹೋಬಳಿ ದೊಡ್ಡಕುರಗೋಡು ಗ್ರಾಮದ ಬಳಿ ಉತ್ತರಪಿನಾಕಿನಿ ನದಿ ಅಂಗಳದಲ್ಲಿನ ರಸ್ತೆಯಲ್ಲಿ ಯಾರೋ ಆಸಾಮಿಯು ಸಾರ್ವಜನಿಕ ರಸ್ತೆಯಲ್ಲಿ ಅಕ್ರಮವಾಗಿ ಯಾವುದೇ ಪರವಾನಗಿಯಿಲ್ಲದೇ ಹೆಂಡ(ಸಾರಾಯಿಯನ್ನು)ವನ್ನು ಸಾಗಾಣಿಕೆಯನ್ನು ಮಾಡುತ್ತಿದ್ದಾನೆಂದು ಬಂದ ಖಚಿತ ವರ್ತಮಾನದ ಮೇರೆಗೆ ತಾನು ಸಿಬ್ಬಂದಿಯವರಾದ ಹೆಚ್.ಸಿ-01 ಚಂದ್ರಶೇಖರ , ಪಿ.ಸಿ.179 ಶಿವಶೇಖರ ಮತ್ತು ಪಿ.ಸಿ-512 ರಾಜಶೇಖರ ಹಾಗೂ ಪಂಚರೊಂದಿಗೆ ಸರ್ಕಾರಿ ಜೀಪ್ ಸಂಖ್ಯೆ: ಕೆ.ಎ-40, ಜಿ-538 ರಲ್ಲಿ ದೊಡ್ಡಕುರಗೋಡು ಗ್ರಾಮದ ಬಳಿ ಉತ್ತರಪಿನಾಕಿನಿ ನದಿ ಅಂಗಳದ ಬಳಿಗೆ ಹೋಗಿ, ನೋಡಲಾಗಿ ಯಾರೋ ಒಬ್ಬ ಆಸಾಮಿಯು ಕೆ.ಎ-40-ಯು-1253 ನೊಂದಣಿ ಸಂಖ್ಯೆಯ ದ್ವಿಚಕ್ರ ವಾಹನದಲ್ಲಿ ಎರಡು ಪ್ಲಾಸ್ಟೀಕ್ ಬ್ಯಾಗುಗಳಲ್ಲಿ ಹೆಂಡ (ನೀರಾ) ವನ್ನು ಸಾಗಿಸಿಕೊಂಡು ಬರುತ್ತಿದ್ದು , ಸಮವಸ್ತ್ರದಲ್ಲಿದ್ದ ನಮ್ಮನ್ನು ಮತ್ತು ಪೊಲೀಸ್ ವಾಹನವನ್ನು ಕಂಡು ದ್ವಿಚಕ್ರ ವಾಹನ ಮತ್ತು ಎರಡು ಪ್ಲಾಸ್ಟೀಕ್ ಬ್ಯಾಗುಗಳನ್ನು ಸ್ಥಳದಲ್ಲಿ ಬಿಟ್ಟು ಅಲ್ಲಿಂದ ಓಡಿ ಹೋಗಲು ಪ್ರಯತ್ನಿಸಿದ್ದು ಸಿಬ್ಬಂದಿಯವರು ಆತನನ್ನು ಬೆನ್ನಟ್ಟಿ ಹಿಡಿದುಕೊಂಡು ಹೆಸರು ಮತ್ತು ವಿಳಾಸ ಕೇಳಿ ತಿಳಿಲಾಗಿ ಗಂಗಾಧರ ಬಿನ್ ಬಾಲಪ್ಪ, 24 ವರ್ಷ, ಆದಿ ಕರ್ನಾಟಕ, ವ್ಯಾಪಾರ, ವಾಸ ದೊಡ್ಡಗಂಗಸಂದ್ರ ಗ್ರಾಮ, ಕಸಬಾ ಹೋಬಳಿ, ಗೌರಿಬಿದನೂರು ತಾಲ್ಲೂಕು ಎಂದು ತಿಳಿಸಿರುತ್ತಾನೆ. ನಂತರ ಪಂಚರ ಸಮಕ್ಷಮದಲ್ಲಿ ಎರಡು ಪ್ಲಾಸ್ಟೀಕ್ ಬ್ಯಾಗುಗಳನ್ನು ಪರಿಶೀಲಿಸಲಾಗಿ, ಅದರಲ್ಲಿ 01 ಲೀಟರ್ ಸಾಮರ್ಥ್ಯದ ಕುಡಿಯುವ ನೀರಿನ 30 ಪ್ಲಾಸ್ಟಿಕ್ ಬಾಟಲ್ ಗಳು ಇದ್ದು ಅದರಲ್ಲಿ ಹೆಂಡ (ನೀರಾ) ಇರುತ್ತೆ. ಸದರಿ ಹೆಂಡ ಸುಮಾರು 30 ಲೀಟರ್ ಇರುತ್ತೆ. ಇವುಗಳ ಪೈಕಿ ಪರೀಕ್ಷೆಗೆ ಕಳುಹಿಸುವ ಸಲುವಾಗಿ ಎರಡು ಬ್ಯಾಗುಗಳಲ್ಲಿ ಒಂದು ಲೀಟರ್ ಸಾಮರ್ಥ್ಯದ ಇರುವ 02 ಪ್ಲಾಸ್ಟಿಕ್ ಬಾಟಲ್ ನಲ್ಲಿ ಇರುವ ಹೆಂಡ(ಸಾರಾಯಿ) ಅನ್ನು ಪ್ರತ್ಯೇಕವಾಗಿ ತೆಗೆದು ಬಿಳಿಬಟ್ಟೆಯಿಂದ ‘’K’’ ಎಂಬ ಅಕ್ಷರದಿಂದ ಸುತ್ತಿ ಸೀಲು ಮಾಡಿರುತ್ತೆ. ಸದರಿ ಆಸಾಮಿಯು ಸಾರ್ವಜನಿಕ ರಸ್ತೆಯಲ್ಲಿ ಅಕ್ರಮವಾಗಿ ಯಾವುದೇ ಪರವಾನಗಿಯಿಲ್ಲದೇ ಹೆಂಡ(ಸಾರಾಯಿಯನ್ನು)ವನ್ನು ಸಾಗಾಣಿಕೆಯನ್ನು ಮಾಡುತ್ತಿದ್ದಾನೆ. ನಂತರ ಸ್ಥಳದಲ್ಲಿ ಸಂಜೆ 5-00 ಗಂಟೆಯಿಂದ 6-00 ಗಂಟೆಯವರೆಗೆ ಪಂಚರ ಸಮಕ್ಷಮದಲ್ಲಿ ಪಂಚನಾಮೆ ಕ್ರಮ ಜರುಗಿಸಿ, ಸ್ಥಳದಲ್ಲಿ ದೊರೆತ 1) 30 ಪ್ಲಾಸ್ಟಿಕ್ ಬಾಟಲ್ ಗಳಲ್ಲಿನ 30 ಲೀಟರ್ ನೀರಾ(ಹೆಂಡ), 2) ಎರಡು ಪ್ಲಾಸ್ಟಿಕ್ ಬ್ಯಾಗುಗಳು, 3) ಕೆ.ಎ-40-ಯು-1253 ನೊಂದಣಿ ಸಂಖ್ಯೆಯ ದ್ವಿಚಕ್ರ ವಾಹನ ಮತ್ತು 4) ಆರೋಪಿ ಬಳಿ ಇದ್ದ 1100 ರೂ ನಗದು ಹಣ ವನ್ನು ವಶಪಡಿಸಿಕೊಂಡು, ಠಾಣೆಗೆ ಸಂಜೆ 6-30 ಗಂಟೆಗೆ ವಾಪಸ್ಸು ಬಂದಿದ್ದು, ಪಂಚನಾಮೆ ಮತ್ತು ಮಾಲನ್ನು ಸಹ ನೀಡುತ್ತಿದ್ದು, ಆರೋಪಿಯ ವಿರುದ್ಧ ಕಲಂ: 32, 34 ಕೆ.ಇ.ಆಕ್ಟ್ – 1965 ರೀತ್ಯಾ ಪ್ರಕರಣವನ್ನು ದಾಖಲು ಮಾಡಲು ಸೂಚಿಸಿದ ಮೇರೆಗೆ ಪ್ರಕರಣ ದಾಖಲಿಸಿರುತ್ತೆ.
- ಗೌರಿಬಿದನೂರು ನಗರ ಪೊಲೀಸ್ ಠಾಣೆ ಮೊ.ಸಂ.10/2021 ಕಲಂ. 394 ಐ.ಪಿ.ಸಿ:-
ದಿನಾಂಕ 18/01/2021 ರಂದು ರಾತ್ರಿ 20:00 ಗಂಟೆಯಲ್ಲಿ ಪಿರ್ಯಾದಿ ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ಈ ದಿನ ಸಂಜೆ ಸುಮಾರು 5:30 ಗಂಟೆ ಸಮಯದಲ್ಲಿ ಗೌರಿಬಿದನೂರು ನಗರದ ಬೈಪಾಸ್ ರಸ್ತೆಯ ಗೊಟಕನಾಪುರ ಕ್ರಾಸ್ ಸಮೀಪ ವಾಕಿಂಗ್ ಮಾಡುತ್ತಿದ್ದಾಗ ಯಾರೋ ಒಬ್ಬ ಅಪರಿಚಿತ ವ್ಯಕ್ತಿಯು Pulsor ದ್ವಿಚಕ್ರ ವಾಹನದಲ್ಲಿ ಹೆಲ್ಮೆಟ್ ಹಾಕಿಕೊಂಡು ತನ್ನ ಪಕ್ಕದಲ್ಲಿ ನಿಲ್ಲಸಿ ಅಜ್ಜಿ ಈ ಟೌನ್ ನಲ್ಲಿ ಬಾಬಾ ದೇವಾಲಯ ಎಲ್ಲಿದೆ ಎಂದು ಕೇಳಿದನು. ತಾನು ಸೆರಗು ಜಾರದಂತೆ ಬಲಗೈಯಿಂದ ದಿಕ್ಕನ್ನು ತೋರಿಸಿದಾಗ ಪುನಃ ಆತನು ಯಾವ ದಿಕ್ಕಿನಲ್ಲಿ ಎಂದು ಕೇಳಿದಾಗ ತಾನು ಕೈಯನ್ನು ತೋರಿಸುವ ಸಮಯದಲ್ಲಿ ತನ್ನ ಕತ್ತಿನಲ್ಲಿದ್ದ ಸೆರಗು ಪಕ್ಕಕ್ಕೆ ಹೋದ ಸಮಯದಲ್ಲಿ ಕತ್ತಿನಲ್ಲಿದ್ದ ಬಂಗಾರದ ಚೈನಿಗೆ ಕೈಹಾಕಿ ಕಿತ್ತುಕೊಳ್ಳಲು ಪ್ರಯತ್ನಿಸಿದನು. ಆಗ ತಾನು ಗಟ್ಟಿಯಾಗಿ ಹಿಡಿದುಕೊಂಡಿದ್ದು ದ್ವಿಚಕ್ರ ವಾಹನವನ್ನು ಓಡಿಸಿಕೊಂಡು ಹೋದಾಗ ತಾನು ಕೆಳಗೆ ಬಿದ್ದಿದ್ದು ಆತನು ಚೈನನ್ನು ಕಿತ್ತುಕೊಂಡು ಹೋಗಿದ್ದರಿಂದ ತನ್ನ ಎಡ ಮೊಣಕೈಗೆ ಮತ್ತು ಎರಡೂ ಮೊಣಕಾಲುಗಳಿಗೆ ರಕ್ತಗಾಯವಾಗಿ ಎಡ ಕಿರು ಬೆರಳು ಮುರಿದುಹೋಗಿರುತ್ತದೆ. ಆತನು ಹೆಲ್ಮೆಟ್ ಹಾಕಿದ್ದರಿಂದ ಗುರುತು ಹಿಡಿಯಲು ಆಗಿರುವುದಿಲ್ಲ. ತನ್ನ ಬಂಗಾದರದ ಚೈನು 30 ಗ್ರಾಂ ಇದ್ದು ಅದರ ಬೆಲೆ 1,50,000 ರೂಪಾಯಿಗಳಾಗಿರುತ್ತವೆ ಎಂದು ನೀಡಿದ ದೂರನ್ನು ಪಡೆದು ಪ್ರಕರಣ ದಾಖಲಿಸಿರುತ್ತೇನೆ.
- ನಂದಿಗಿರಿಧಾಮ ಪೊಲೀಸ್ ಠಾಣೆ ಮೊ.ಸಂ.09/2021 ಕಲಂ. 379 ಐ.ಪಿ.ಸಿ:-
ದಿನಾಂಕ:18/01/2021 ರಂದು ಸಂಜೆ 5:00 ಗಂಟೆಯಲ್ಲಿ ಪಿರ್ಯಾದಿ ಪ್ರದ್ಯಮ್ನ ಗೋವಿಂದಸ್ವಾಮಿ ಬಿನ್ ಮೋಹನ್, 39 ವರ್ಷ, ನಾಯ್ಡು ಜನಾಂಗ, ತ್ರೈವ್-360 ಈಸ್ಟ್ ರಿಯಾಲಿಟಿ ವೆಂಚರ್ಸ್ನಲ್ಲಿ ಮ್ಯಾನೇಜಿಂಗ್ ಪಾರ್ಟನರ್, ವಾಸ: ನಂ.26, ಕನ್ನಿಂಗ್ ರೋಡ್, ಬೆಂಗಳೂರು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ತಾನು ತ್ರೈವ್-360 ಈಸ್ಟ್ ರಿಯಾಲಿಟಿ ವೆಂಚರ್ಸ್ನಲ್ಲಿ ಮ್ಯಾನೇಜಿಂಗ್ ಪಾರ್ಟನರ್ ಆಗಿ ಕೆಲಸ ಮಾಡಿಕೊಂಡಿರುತ್ತೇನೆ. ತಾವು ತಮ್ಮ ಕಂಪನಿಯಿಂದ ಲೇಔಟ್ ನಿರ್ಮಿಸಲು ಚಿಕ್ಕಬಳ್ಳಾಪುರ ತಾಲ್ಲೂಕು, ತೌಡನಹಳ್ಳಿ ಗ್ರಾಮದ ಸರ್ವೆ ನಂ:57/3 ಮತ್ತು 58/1 ರಲ್ಲಿರುವ ಡಿಸಿ ಕನ್ವರ್ಷನ್ ಆಗಿರುವ ಒಟ್ಟು 9.5 ಎಕರೆ ಜಮೀನನ್ನು 2015 ನೇ ಸಾಲಿನಲ್ಲಿ ಚಿಕ್ಕಬಳ್ಳಾಪುರ ನಗರದ ವಾಸಿ ಡಾ// ರಾಮಚಂದ್ರ ಎಂಬುವರಿಂದ ಖರೀದಿ ಮಾಡಿರುತ್ತೇವೆ. ಜಮೀನಿಗೆ ಸಂಬಂದಪಟ್ಟ ಎಲ್ಲಾ ದಾಖಲೆಗಳು ತಮ್ಮ ಕಂಪನಿಯ ಹೆಸರಿಗೆ ಇರುತ್ತವೆ. ಸದರಿ ಲೇಔಟ್ನಲ್ಲಿ ಅಂಡರ್ಗ್ರೌಂಡ್ ಎಲೆಕ್ಟ್ರಿಕಲ್ ಕೇಬಲ್ ಆಳವಡಿಸಲು ಮೈನ್ಲೈನ್ ಎಲೆಕ್ಟ್ರಿಕ್ ರೋಲನ್ನು ಮತ್ತು ಸಬ್ಲೈನ್ ಎಲೆಕ್ಟ್ರಿಕಲ್ ರೋಲನ್ನು ನಮ್ಮ ಲೇಔಟ್ನಲ್ಲಿಯೇ ಇಟ್ಟಿದ್ದು ಸಬ್ಲೈನ್ ಎಲೆಕ್ಟ್ರಿಕ್ ರೋಲನ್ನು ನಮ್ಮ ಲೇಔಟ್ನಲ್ಲಿ ಕೂಲಿಯವರಿಂದ ಕೆಲಸ ಮಾಡಿಸುತ್ತಿರುತ್ತೇವೆ. ದಿನಾಂಕ:14/01/2021 ರಂದು ಸಂಕ್ರಾಂತಿ ಹಬ್ಬದ ಪ್ರಯುಕ್ತ ಸೆಕ್ಯೂರಿಟಿ ಮತ್ತು ಲೇಬರ್ಸ್ಗೆ ರಜೆ ನೀಡಿದ್ದು ಲೇಔಟ್ನಲ್ಲಿ ಯಾರು ಇರುವುದಿಲ್ಲ. ದಿನಾಂಕ:15/01/2021 ರಂದು ಬೆಳಿಗ್ಗೆ ಸುಮಾರು 10:00 ಗಂಟೆಗೆ ಪಕ್ಕದ ಜಮೀನಿನ ಸೀನಪ್ಪ ಎಂಬುವರು ಮೋಬೈಲ್ ಮೂಲಕ ತನಗೆ ಕರೆ ಮಾಡಿ ನಿಮ್ಮ ಲೇಔಟ್ನಲ್ಲಿದ್ದ ಎಲೆಕ್ಟ್ರಿಕ್ ಕೇಬಲ್ ರೋಲಗೆ ರಾತ್ರಿ ಬೆಂಕಿ ಹಚ್ಚಿರುವ ವಿಚಾರವನ್ನು ತಿಳಿಸಿದರು. ಕೂಡಲೆ ತಾನು ಲೇಔಟ್ಗೆ ಬಂದು ನೋಡಲಾಗಿ ದಿನಾಂಕ:14/01/2021 ರಂದು ರಾತ್ರಿ ತಮ್ಮ ಲೇಔಟ್ನಲ್ಲಿ ಯಾರು ಇಲ್ಲದ ಸಮಯವನ್ನು ನೋಡಿಕೊಂಡು ಯಾರೋ ದುಷ್ಕರ್ಮಿಗಳು ಸಬ್ಲೈನ್ ಎಲೆಕ್ಟ್ರಿಕ್ ರೋಲನ್ನು ಮರದ ರೋಲ್ಗೆ ಬೆಂಕಿ ಹಚ್ಚಿ ಅದರಲ್ಲಿದ್ದ ಕೇಬಲ್ ವೈರನ್ನು ಕಳ್ಳತನ ಮಾಡಿಕೊಂಡು ಹೋಗಿರುವುದು ಕಂಡು ಬಂದಿರುತ್ತೆ. ತಮ್ಮ ಲೇಔಟ್ನ ಪಕ್ಕದಲ್ಲಿರುವ ತೌಡನಹಳ್ಳಿ ಗ್ರಾಮದ ಉಮೇಶ ರವರು ತಮ್ಮ ಲೇಔಟ್ನ ಕಾಂಪೌಂಡ್ ಕಟ್ಟಲು ತೊಂದರೆ ಮಾಡುತ್ತಿದ್ದು ಅವರೇ ಈ ಮೇಲ್ಕಂಡ ಕೃತ್ಯ ಮಾಡಿರಬಹುದೆಂಬ ಅನುಮಾನವಿರುತ್ತೆ. ನಂತರ ಈ ದಿನ ದಿನಾಂಕ:18/01/2021 ರಂದು ತಡವಾಗಿ ಠಾಣೆಗೆ ಬಂದು ದೂರು ನೀಡುತ್ತಿದ್ದು ಈ ಬಗ್ಗೆ ತನಿಖೆ ಮಾಡಿ ಕೇಬಲ್ ವೈರನ್ನು ಕಳ್ಳತನ ಮಾಡಿರುವ ಆರೋಪಿತರನ್ನು ಪತ್ತೆ ಮಾಡಿ ಕ್ರಮ ಕೈಗೊಳ್ಳಲು ಕೊಟ್ಟ ದೂರು.
- ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.12/2021 ಕಲಂ. 323,324,326,448,504,506 ಐ.ಪಿ.ಸಿ:-
ದಿನಾಂಕ: 18-01-2021 ರಂದು ಸಂಜೆ 5.30 ಗಂಟೆಯಲ್ಲಿ ನ್ಯಾಯಾಲಯದ ಕರ್ತವ್ಯಕ್ಕೆ ನೇಮಕವಾಗಿದ್ದ ಸಿಪಿಸಿ-90 ರಾಜಕುಮಾರ ರವರು ಘನ ನ್ಯಾಯಾಲಯದಿಂದ ಸಾದರಾದ ಪಿಸಿಆರ್ ನಂ. 43/2020 ರ ದೂರನ್ನು ಪಡೆದುಕೊಂಡು ಹಾಜರುಪಡಿಸಿದ್ದರ ಸಾರಾಂಶವೇನೆಂದರೆ, ಫಿರ್ಯಾದಿದಾರರಾದ ಶ್ರೀ ಕೆಂಪಣ್ಣ ಬಿನ್ ಲೇಟ್ ಲಘುಮಪ್ಪ, 45 ವರ್ಷ, ಕೊತ್ತನೂರು ಗ್ರಾಮ, ಶಿಡ್ಲಘಟ್ಟ ತಾಲ್ಲೂಕು ರವರ ಸಹೋದರಿ ಉಷಾರಾಣಿ ರವರ ಹೆಸರಿನಲ್ಲಿರುವ 24X34 ಅಡಿಗಳ ಸೈಟ್ ನಲ್ಲಿ ಫಿರ್ಯಾದಿದಾರರೆ ಅನುಭವದಲ್ಲಿರುತ್ತಾರೆ, ಸದರಿ ಸೈಟ್ಗೆ ಮತ್ತು ಆರೋಪಿಗಳಿಗೆ ಯಾವುದೇ ಸಂಬಂಧ ಇಲ್ಲದೆ ಇದ್ದರೂ ಸಹ ದಿನಾಂಕ: 17-05-2020 ರಂದು ಮದ್ಯಾಹ್ನ 12.30 ಗಂಟೆಯಲ್ಲಿ ಆರೋಪಿಗಳು ಸದರಿ ಸೈಟ್ ನೊಳಗೆ ಅಕ್ರಮ ಪ್ರವೇಶ ಮಾಡಿ ಕಲ್ಲುಗಳನ್ನು ಊಳುತ್ತಿದ್ದು ಆ ಸಮಯದಲ್ಲಿ ಫಿರ್ಯಾದಿದಾರರು ಕೇಳಿದ್ದಕ್ಕೆ ಆರೋಪಿ ರವಿಕುಮಾರ್ ರವರು ಫಿರ್ಯಾದಿದಾರರ ತಲೆ ಮತ್ತು ಕೈಗಳಿಗೆ ರಾಡು ಮತ್ತು ಕೋಲುಳಿಂದ ಹೊಡೆದು ಕೆಳಕ್ಕೆ ತಳ್ಳಿ ಕಲ್ಲಿನ ಮೇಲೆ ಮತ್ತು ಹೊಟ್ಟೆಯ ಮೇಲೆ ಹೊಡೆದು ಗಾಯಗೊಳಿಸಿ ಅವಾಚ್ಯ ಶಬ್ದಗಳಿಂದ ಬೈದು ಬೆದರಿಕೆ ಹಾಕಿದ್ದು, ಅದೇ ಸಮಯಕ್ಕೆ ಉಳಿದ ಆರೋಪಿಗಳಾದ ನಾರೆಮ್ಮ ಮತ್ತು ಶೋಭ ರವರು ಸಹ ಸದರಿ ಜಾಗದೊಳಗೆ ಅಕ್ರಮ ಪ್ರವೇಶ ಮಾಡಿ ಫಿರ್ಯಾದಿದಾರರನ್ನು ಅವಾಚ್ಯ ಶಬ್ದಗಳಿಂದ ಬೈದು ಎಲ್ಲರೂ ಸೇರಿಕೊಂಡು ಫಿರ್ಯಾದಿದಾರರನ್ನು ಹೊಡೆದು ಗಾಯಗೊಳಿಸಿ ಬಟ್ಟೆಗಳನ್ನು ಹರಿದು ಹಾಕಿದ್ದು, ಆ ಸಮಯದಲ್ಲಿ ಶ್ರೀನಿವಾಸ ಬಿನ್ ನಾನೆಪ್ಪ ಮತ್ತು ರವಿಕುಮಾರ್ ಬಿನ್ ಮುನಿಯಲ್ಲಪ್ಪ ರವರುಗಳು ಗಲಾಟೆಯನ್ನು ನೋಡಿ ಜಗಳ ಬಿಡಿಸಿದ್ದು, ನಂತರ ತಾನು ಶಿಡ್ಲಘಟ್ಟ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿರುತ್ತೇನೆಂದು ಇತ್ಯಾದಿಯಾಗಿ ನೀಡಿದ ದೂರು.
- ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.13/2021 ಕಲಂ. 279,304(A) ಐ.ಪಿ.ಸಿ:-
ದಿನಾಂಕ:-19/01/2021 ರಂದು ಬೆಳಿಗ್ಗೆ 10-15 ಗಂಟೆಗೆ ಪಿರ್ಯಾದಿದಾರರಾದ ಶ್ರೀ ನರಸಿಂಹಮೂರ್ತಿ ಬಿನ್ ಗುರ್ರಪ್ಪ, 47 ವರ್ಷ, ಎ.ಕೆ ಜನಾಂಗ, ಕೂಲಿ ಕೆಲಸ, ವಾಸ-ಬಸವಾಪಟ್ಟಣ ಗ್ರಾಮ, ಶಿಡ್ಲಘಟ್ಟ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ತಾನು ಮತ್ತು ತನ್ನ ತಮ್ಮನಾದ ಆಂಜಿನಪ್ಪ ರವರು ಒಟ್ಟು ಕುಟುಂಬದಲ್ಲಿ ವಾಸವಾಗಿದ್ದು, ತನ್ನ ತಮ್ಮನಾದ ಆಂಜಿನಪ್ಪ ರವರಿಗೆ 3 ಜನ ಮಕ್ಕಳಿದ್ದು 1 ನೇ ಚೇತನ್, 2 ನೇ ಚಂದನಾ, 3 ನೇ ಚಿರಂತ್ ರವರಾಗಿದ್ದು, ತನ್ನ ತಮ್ಮನ ಮಗನಾದ ಚೇತನ್ (13 ವರ್ಷ) ರವರು ಇದೇ ಶಿಡ್ಲಘಟ್ಟ ನಗರದ ಡಾಲ್ಪೀನ್ ಶಾಲೆಯಲ್ಲಿ 7 ನೇ ತರಗತಿಯಲ್ಲಿ ವ್ಯಾಸಂಗ ಮಾಡಿಕೊಂಡಿದ್ದು, ಪ್ರತಿ ದಿನ ತಮ್ಮ ಗ್ರಾಮದಿಂದ ತಾದೂರ್ ಗೇಟ್ ವರೆಗೆ ನಡೆದುಕೊಂಡು ಹೋಗಿ ಅಲ್ಲಿಂದ ಜಂಗಮಕೋಟೆ ಕಡೆಯಿಂದ ಬರುವ ಶಾಲಾ ವಾಹನದಲ್ಲಿ ಶಾಲೆಗೆ ಹೋಗಿ ಬರುತ್ತಿರುತ್ತಾನೆ. ಹೀಗಿರುವಾಗ ಈ ದಿನ ದಿನಾಂಕ 19/01/2021 ರಂದು ಬೆಳಿಗ್ಗೆ ಸುಮಾರು 8-00 ಗಂಟೆ ಸಮಯದಲ್ಲಿ ತನ್ನ ತಮ್ಮನ ಮಗನಾದ ಚೇತನ್ ರವರು ಎಂದಿನಂತೆ ಶಾಲೆಗೆ ಹೋಗಿ ಬರುವುದಾಗಿ ಹೇಳಿ ಮನೆಯಿಂದ ಹೊರಟಿದ್ದು, ಇದೇ ದಿನ ಬೆಳಿಗ್ಗೆ ಸುಮಾರು 8-20 ಗಂಟೆ ಸಮಯದಲ್ಲಿ ತಾದೂರ್ ಗೇಟ್ ನಲ್ಲಿ ಶೇವಿಂಗ್ ಶಾಪ್ ಇಟ್ಟುಕೊಂಡಿರುವ ಶಶಿಕುಮಾರ್ ಬಿನ್ ಲೇಟ್ ಲಕ್ಷ್ಮಣ ಎಂಬುವರು ತನಗೆ ಪೋನ್ ಮಾಡಿ ತನ್ನ ತಮ್ಮನ ಮಗನಿಗೆ ಹಾಲಿನ ವಾಹನವೊಂದು ಅಪಘಾತವನ್ನುಂಟು ಮಾಡಿ ಸ್ಥಳದಲ್ಲಿಯೇ ಸತ್ತು ಹೋಗಿರುವುದಾಗಿ ವಿಚಾರ ತಿಳಿಸಿದ್ದು, ಕೂಡಲೇ ತಾನು ಮತ್ತು ತನ್ನ ತಮ್ಮನಾದ ಆಂಜಿನಪ್ಪ ರವರು ಸ್ಥಳಕ್ಕೆ ಹೋಗಿ ನೋಡಲಾಗಿ ವಿಷಯ ನಿಜವಾಗಿದ್ದು, ಚೇತನ್ ರವರ ತಲೆಗೆ ತೀವ್ರ ಸ್ವರೂಪದ ರಕ್ತಗಾಯವಾಗಿ ಸ್ಥಳದಲ್ಲಿಯೇ ಮೃತ ಪಟ್ಟು ರಸ್ತೆಯಲ್ಲಿ ಬಿದ್ದಿದ್ದನು. ಆ ಸ್ಥಳದಲ್ಲಿಯೇ ಅಪಘಾತವನ್ನುಂಟು ಮಾಡಿದ ಕೆಎ-53-4513 ನೊಂದಣಿ ಸಂಖ್ಯೆಯ ಟಾಟಾ ಎಸಿಇ ಹಾಲಿನ ವಾಹನ ಇದ್ದು, ಇದರ ಮುಂಭಾಗದ ಗಾಜು ಹಾಗು ಮುಂಬದಿಯ ನಂಬರ್ ಪ್ಲೇಟ್ ಮೇಲ್ಭಾಗದಲ್ಲಿ ಜಖಂ ಆಗಿರುವುದು ಕಂಡು ಬಂದಿರುತ್ತದೆ. ನಂತರ ತಾನು ಶಶಿಕುಮಾರ್ ರವರನ್ನು ವಿಚಾರ ಮಾಡಲಾಗಿ ಈ ದಿನ ಬೆಳಿಗ್ಗೆ ಸುಮಾರು 8-15 ಗಂಟೆ ಸಮಯದಲ್ಲಿ ತನ್ನ ತಮ್ಮನ ಮಗನಾದ ಚೇತನ್ ರವರು ತಾದೂರ್ ಗ್ರಾಮದಿಂದ ನಡೆದುಕೊಂಡು ರಸ್ತೆಯನ್ನು ದಾಟಲು ರಸ್ತೆಯ ಅಂಚಿನಲ್ಲಿ ನಿಂತಿದ್ದಾಗ ಆ ಸಮಯದಲ್ಲಿ ಶಿಡ್ಲಘಟ್ಟ ಕಡೆಯಿಂದ ಬಂದ ಕೆಎ-53-4513 ನೊಂದಣಿ ಸಂಖ್ಯೆಯ ಟಾಟಾ ಎಸಿಇ ಹಾಲಿನ ವಾಹನವನ್ನು ಅದರ ಚಾಲಕನು ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ರಸ್ತೆಯ ಬದಿಯಲ್ಲಿ ನಿಂತಿದ್ದ ಚೇತನ್ ರವರಿಗೆ ಡಿಕ್ಕಿ ಹೊಡೆಸಿ ಅಪಘಾತವನ್ನುಂಟು ಮಾಡಿ ಚೇತನ್ ರವರನ್ನು ಸುಮಾರು 50 ಮೀಟರ್ ವರೆಗೆ ಎಳೆದುಕೊಂಡು ಹೋದ ಪರಿಣಾಮ ಚೇತನ್ ರವರಿಗೆ ತಲೆಗೆ ತೀವ್ರ ಸ್ವರೂಪದ ರಕ್ತಗಾಯವಾಗಿ ಮೈ ಮೇಲೆ ತರಚಿದ ಗಾಯಗಳಾಗಿದ್ದು ತಾವು ಸ್ಥಳಕ್ಕೆ ಹೋಗುವಷ್ಟರಲ್ಲಿ ಚೇತನ್ ರವರು ಸತ್ತು ಹೋಗಿರುವುದಾಗಿ ವಿಷಯ ತಿಳಿಸಿರುತ್ತಾನೆ. ನಂತರ ತಾವು ಬೇರೆ ಯಾವುದೋ ವಾಹನದಲ್ಲಿ ಚೇತನ್ ರವರ ಶವವನ್ನು ಸಾಗಿಸಿಕೊಂಡು ಬಂದು ಶಿಡ್ಲಘಟ್ಟ ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿಟ್ಟಿರುತ್ತೇವೆ. ಆದ ಕಾರಣ ಸದರಿ ಅಪಘಾತಕ್ಕೆ ಕಾರಣನಾದ ಮೇಲ್ಕಂಡ ಕೆಎ-53-4513 ನೊಂದಣಿ ಸಂಖ್ಯೆಯ ಟಾಟಾ ಎಸಿಇ ಹಾಲಿನ ವಾಹನದ ವಿರುದ್ದ ಮುಂದಿನ ಕಾನೂನು ಕ್ರಮ ಜರುಗಿಸ ಬೇಕಾಗಿ ಕೊಟ್ಟ ದೂರು.