ದಿನಾಂಕ :18/10/2020 ರ ಅಪರಾಧ ಪ್ರಕರಣಗಳು

  1. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.384/2020 ಕಲಂ: 379 ಐ.ಪಿ.ಸಿ :-

     ದಿನಾಂಕ:17/10/2020 ರಂದು ಸಂಜೆ 4.00 ಗಂಟೆಗೆ ಠಾಣೆಯ ಪಿ.ಎಸ್.ಐ ನಾರಾಯಣಸ್ವಾಮಿ ರವರು ಆರೋಪಿ ಮತ್ತು ಮಾಲಿನೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ಈ ದಿನ ದಿನಾಂಕ:17/10/2020 ರಂದು ತಾನು ಠಾಣೆಯ ಸಿಬ್ಬಂದಿಯವರಾದ ಸಿ.ಹೆಚ್.ಸಿ-41 ಶ್ರೀ ಜಗದೀಶ, ಸಿ.ಪಿ.ಸಿ-239  ಶ್ರೀ ಮಣಿಕಂಠ, ಸಿ.ಪಿ.ಸಿ-544 ವೆಂಕಟರವಣ, ಸಿ.ಪಿ.ಸಿ-458 ಶ್ರೀ ರಾಜೇಶ್ ಮತ್ತು ಚಾಲಕ ಎ.ಹೆಚ್.ಸಿ-08 ಶ್ರೀ ಮುಖೇಶ್ ರವರೊಂದಿಗೆ ಠಾಣಾ ಸರಹದ್ದಿಗೆ ಸೇರಿದ ವೈಜಕೂರು ಗ್ರಾಮದ ಬಳಿ ಕೆಎ-40 ಜಿ-326 ನೋಂದಣಿ ಸಂಖ್ಯೆಯ ಸರ್ಕಾರಿ ಜೀಪನ್ನು ನಿಲ್ಲಿಸಿಕೊಂಡು ವಾಹನಗಳ ತಪಾಸಣೆಯಲ್ಲಿ ತೊಡಗಿದ್ದಾಗ ಮದ್ಯಾಹ್ನ 3-30 ಗಂಟೆ ಸಮಯದಲ್ಲಿ ಹೆಚ್,ಕ್ರಾಸ್ ಕಡೆಯಿಂದ ಕೆಎ-01 ಇಎಕ್ಸ್-4467 ನೋಂದಣಿ ಸಂಖ್ಯೆಯ ಟಿ.ವಿ.ಎಸ್ ಎಕ್ಸ್ಎಲ್ ಹೆವಿ ಡ್ಯೂಟಿ ದ್ವಿಚಕ್ರವಾಹನದಲ್ಲಿ ಒಬ್ಬ ಆಸಾಮಿ ಬರುತ್ತಿದ್ದು ತಾವು ಸದರಿ ದ್ವಿಚಕ್ರವಾಹನವನ್ನು ನಿಲ್ಲಿಸುವಂತೆ ಆತನಿಗೆ ಸೂಚಿಸಿದಾಗ ಆತನು ಪೊಲೀಸ್ ಜೀಪ್ ಮತ್ತು ಸಮವಸ್ತ್ರದಲ್ಲಿದ್ದ ತಮ್ಮನ್ನು ಕಂಡು ಗಾಬರಿಯಿಂದ ದ್ವಿಚಕ್ರವಾಹನವನ್ನು ತಿರುಗಿಸಿಕೊಂಡು ವೇಗವಾಗಿ ಹೆಚ್.ಕ್ರಾಸ್ ಕಡೆಗೆ ಹೋಗುತ್ತಿದ್ದಾಗ, ತಾನು ಮತ್ತು ಮೇಲ್ಕಂಡ ಸಿಬ್ಬಂದಿಯವರು ಜೀಪ್ ನಲ್ಲಿ ಆತನನ್ನು ಬೆನ್ನಟ್ಟಿ ಹಿಡಿದು ಆತನ ಹೆಸರು ವಿಳಾಸ ಕೇಳಲಾಗಿ ಆತನು ಗಾಬರಿಯಿಂದ ಒಂದು ಸಲ ತನ್ನ ಹೆಸರು ಪಾಷಾ ಎಂದು, ಮತ್ತೊಂದು ಸಲ ಸದ್ದಾಂ ಎಂದು ತಿಳಿಸಿದ್ದು, ಆತನನ್ನು ಕೂಲಂಕುಷವಾಗಿ ವಿಚಾರಿಸಲಾಗಿ ತನ್ನ ಹೆಸರು ಸೈಯದ್ ಪಾಷಾ @ ಸದ್ದಾಂ ಬಿನ್ ಮುಸ್ತಾಪ ಸಾಬ್ 42 ವರ್ಷ, ಮುಸ್ಲಿಂಜನಾಂಗ, ಚಾಲಕ ಕೆಲಸ, ತಳಗವಾರ ಗ್ರಾಮ, ಚಿಂತಾಮಣಿ ತಾಲ್ಲೂಕು, ಹಾಲಿ ವಾಸ ಲಕ್ಷ್ಮೀನರಸಿಂಹಪ್ಪ ರವರ ಮನೆ, ದೊಮ್ಮಸಂದ್ರ ಸರ್ಕಲ್, ವರ್ತೂರು ಸರ್ಜಾಪುರ ರಸ್ತೆ, ಬೆಂಗಳೂರು ಎಂದು ತಿಳಿಸಿರುತ್ತಾನೆ. ನಂತರ ಆತನನ್ನು ಕುರಿತು ನೀನು ಚಲಾಯಿಸುತ್ತಿರುವ ದ್ವಿಚಕ್ರವಾಹನದ ದಾಖಲಾತಿಗಳ ಬಗ್ಗೆ ಕೇಳಲಾಗಿ ತನ್ನ ಬಳಿ ಯಾವುದೇ ದಾಖಲಾತಿಗಳು ಇಲ್ಲವೆಂದು ತಿಳಿಸಿರುತ್ತಾನೆ. ಸದರಿ ಆಸಾಮಿಯು ಸದರಿ ದ್ವಿಚಕ್ರವಾಹನವನ್ನು ಎಲ್ಲಿಂದಲೋ ಕಳ್ಳತನ ಮಾಡಿಕೊಂಡು ಬಂದಿರುವುದಾಗಿ ಅತೀಯವಾಗಿ ಸಂಶಯವಾಗಿದ್ದು, ನಂತರ ದ್ವಿಚಕ್ರವಾಹನದ ಸಮೇತ ಆತನನ್ನು ವಶಕ್ಕೆ ಪಡೆದು ಠಾಣೆಗೆ ಸಂಜೆ 4.00 ಗಂಟೆಗೆ ಕರೆತಂದು ಹಾಜರು ಪಡಿಸಿ ಸದರಿ ಆಸಾಮಿಯ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲು ಸೂಚಿಸಿರುವುದಾಗಿರುತ್ತೆ.

  1. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.385/2020 ಕಲಂ: 143,147,148,323,324,504,506 ರೆ/ವಿ 149 ಐ.ಪಿ.ಸಿ :-

     ದಿನಾಂಕ: 17/10/2020 ರಂದು ಚಿಂತಾಮಣಿ ಸರ್ಕಾರಿ ಆಸ್ಪತ್ರೆಯಲ್ಲಿ ಗಾಯಾಳು ಕೆ.ವಿ.ಶ್ರೀನಿವಾಸರೆಡ್ಡಿ ಬಿನ್ ಲೇಟ್ ವೆಂಕಟರಾಮಪ್ಪ, 54 ವರ್ಷ, ವಕ್ಕಲಿಗರು, ಜಿರಾಯ್ತಿ, ಕೋನಪಲ್ಲಿ ಗ್ರಾಮ, ಚಿಂತಾಮಣಿ ತಾಲ್ಲೂಕು ರವರು ಹೇಳಿಕೆಯನ್ನು ಪಡೆದುಕೊಂಡು ಸಂಜೆ 4.30 ಗಂಟೆಗೆ ಠಾಣೆಗೆ ವಾಪಸ್ಸಾಗಿದ್ದು, ಸದರಿ ಹೇಳಿಕೆಯ ಸಾರಾಂಶವೇನೆಂದರೆ, ತಮ್ಮ ಗ್ರಾಮದ ಸರ್ವೇ ನಂ.129 ರಲ್ಲಿ ಸುಮಾರು 25 ಎಕರೆ ಸರ್ಕಾರಿ ಜಮೀನಿದ್ದು, ಈ ಜಮೀನಿನಲ್ಲಿ ಸರ್ವೇ ಮಾಡಿಸಿ ಜಮೀನು ರಹಿತ ಸಾರ್ವಜನಿಕರಿಗೆ (ಫಲಾನಿಭವಿಗಳಿಗೆ) ನೀಡುವ ಉದ್ದೇಶದಿಂದ ಈಗ್ಗೆ 15 ದಿನಗಳ ಹಿಂದೆ ಸರ್ವೇ ಮಾಡುವಂತೆ ತಾಲ್ಲೂಕು ದಂಢಾಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಿರುತ್ತೇನೆ. ಅದರಂತೆ ಸರ್ವೇ ಇಲಾಖೆಯವರು ಈ ದಿನ ಸರ್ವೇ ಮಾಡಲು ದಿನಾಂಕವನ್ನು ನಿಗದಿ ಮಾಡಿದ್ದು, ಅದರಂತೆ ಈ ದಿನ ದಿನಾಂಕ: 17/10/2020 ರಂದು ಬೆಳಿಗ್ಗೆ 11.30 ಗಂಟೆಗೆ RI ಮತ್ತು ಸರ್ವೇ ಇಲಾಖೆಯವರು ಬರುತ್ತಿರುವುದಾಗಿ ತಿಳಿಸಿದ್ದರಿಂದ ತಾನು ಮತ್ತು ತನ್ನ ತಮ್ಮನ ಮಗ ಗೋವರ್ಧನ್ ರವರು ಮೇಲ್ಕಂಡ ಸರ್ವೇ ನಂಬರಿನ ಜಮೀನಿನ ಬಳಿ ಹೋಗುವಷ್ಠರಲ್ಲಿ ತಮ್ಮ ಗ್ರಾಮದ ಅಶೋಕರೆಡ್ಡಿ ಬಿನ್ ಲೇಟ್ ಅಶ್ವಥರೆಡ್ಡಿ, ಕಲ್ಯಾಣ್ ಬಿನ್ ಸುಬ್ಬಿರೆಡ್ಡಿ, ರಮೇಶ್ ಬಿನ್ ಕೃಷ್ಣಾರೆಡ್ಡಿ, ಕೂತುಪಲ್ಲಿ ಮಂಜುನಾಥರೆಡ್ಡಿ, ಮುರಳಿ ಬಿನ್ ಲೇಟ್ ವೆಂಕಟರೆಡ್ಡಿ, ನರೇಂದ್ರಬಾಬುರೆಡ್ಡಿ ಬಿನ್ ಲೇಟ್ ಸುಬ್ಬಿರೆಡ್ಡಿ, ನಾಗೇಶ್ ಬಿನ್ ನಾರಾಯಣಸ್ವಾಮಿ ಮತ್ತಿತರರು ಮಾರಕಾಸ್ತ್ರಗಳನ್ನು ಹಿಡಿದು ಗುಂಪು ಸೇರಿದ್ದು, ತಮ್ಮನ್ನು ಕುರಿತು “ಯಾಕೆ ನಮ್ಮ ಜಮೀನಿನನ್ನು ಸರ್ವೆ ಮಾಡಲು ಅರ್ಜಿ ಕೊಟ್ಟಿದ್ದು, ಇದು ನಿಮ್ಮ ಅಪ್ಪನ ಜಮೀನಾ” ಎಂದು ತಮ್ಮ ಮೇಲೆ ಜಗಳ ತೆಗೆದು, ಅವಾಚ್ಯಶಬ್ದಗಳಿಂದ ಬೈದು, ಮೇಲ್ಕಂಡವರು ಕೈಗಳಿಂದ ತನ್ನ ಮೈ ಮೇಲೆ ಹೊಡೆದು ನೋವನ್ನುಂಟು ಮಾಡಿರುತ್ತಾರೆ. ಆಗ ಬಿಡಿಸಲು ಬಂದ ಗೋವರ್ಧನ್ ರವರಿಗೆ ಅಶೋಕ ರವರು ಅಲ್ಲಿಯೇ ಬಿದ್ದಿದ್ದ ಕಬ್ಬಿಣದ ರಾಡ್ ನಿಂದ “ನೀನೇನು ಅಡ್ಡ ಬರುವುದು” ಎಂದು ಆತನ ಬಲಕುತ್ತಿಗೆ ಬಳಿ ಹೊಡೆದು ಊತದ ಗಾಯವನ್ನುಂಡು ಮಾಡಿರುತ್ತಾನೆ. ಉಳಿದವರು ಆತನ ಮೈ ಕೈ ಮೇಲೆ ಹೊಡೆದು ಮೂಗೇಟುಗಳನ್ನುಂಟು ಮಾಡಿರುತ್ತಾರೆ. ನಂತರ ಮೇಲ್ಕಂಡವರೆಲ್ಲರೂ “ಇಲ್ಲಿಂದ ಹೋಗದೆ ಇದ್ದರೆ, ಇನ್ನೊಂದು ಸಾರಿ ಜಮೀನಿನ ತಂಟೆಗೆ ಬಂದರೆ ನಿಮ್ಮನ್ನು ಸಾಯಿಸದೆ ಬಿಡುವುದಿಲ್ಲ” ಎಂದು ಪ್ರಾಣ ಬೆದರಿಕೆಯನ್ನು ಹಾಕಿರುತ್ತಾರೆ. ಆದ್ದರಿಂದ ಮೇಲ್ಕಂಡವರ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ನೀಡಿದ ಹೇಳಿಕೆಯ ದೂರಾಗಿರುತ್ತೆ.

  1. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.386/2020 ಕಲಂ: 323,324,504,506 ರೆ/ವಿ 34 ಐ.ಪಿ.ಸಿ :-

     ದಿನಾಂಕ: 18/10/2020 ರಂದು ಮದ್ಯಾಹ್ನ 12.00 ಗಂಟೆಗೆ ಕೆ.ಎಂ.ಮುನಿರೆಡ್ಡಿ ಬಿನ್ ಲೇಟ್ ಮುನಿಯಪ್ಪ, 44 ವರ್ಷ, ವಕ್ಕಲಿಗರು, ಕೂಲಿಕೆಲಸ, ಕೋನಪಲ್ಲಿ ಗ್ರಾಮ, ಚಿಂತಾಮಣಿ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ದಿನಾಂಕ: 17/10/2020 ರಂದು ಮದ್ಯಾಹ್ನ 12.30 ಗಂಟೆ ಸಮಯದಲ್ಲಿ ತಾನು ತನ್ನ ಮಗಳ ಆದಾಯಪ್ರಮಾಣ ಪತ್ರವನ್ನು ಪಡೆಯಲು ತಮ್ಮ ಗ್ರಾಮದಿಂದ ಉಪ್ಪಾರಪೇಟೆ ನಾಡ ಕಛೇರಿಗೆ ತೆರಳುವ ಸಮಯದಲ್ಲಿ ನಿರ್ಮಾಣ ಹಂತದಲ್ಲಿರುವ ವಾಲ್ಮಿಕಿ ಭವನದ ಹತ್ತಿರ ಜನ ಸೇರಿರುವುದು ನೋಡಿ ತಾನು ಅಲ್ಲಿಗೆ ಹೋದಾಗ ತಮ್ಮ ಗ್ರಾಮದ ಕೆ.ವಿ.ಶ್ರೀನಿವಾಸರೆಡ್ಡಿ ಬಿನ್ ಲೇಟ್ ವೆಂಕಟರಾಮಣ್ಣ ಮತ್ತು ಗೋವರ್ಧನ್ ರೆಡ್ಡಿ ಬಿನ್ ಶಿವಾರೆಡ್ಡಿ ರವರು ಅಲ್ಲಿದ್ದು, ಅವರು ತನ್ನನ್ನು ಕುರಿತು “ನೀನೇಕೆ ಇಲ್ಲಗೆ ಬಂದೆ” ಎಂದು ಅವಾಚ್ಯಶಬ್ದಗಳಿಂದ ಬೈದು, ತನ್ನ ಮೇಲೆ ಏಕಾಏಕೀ ಹಲ್ಲೆ ಮಾಡಿ, ತನ್ನ ಬಲ ಭಾಗದ ಎದೆಗೆ ಕಲ್ಲಿನಿಂದ ಹೊಡೆದು, ನೋವನ್ನುಂಟು ಮಾಡಿ, ನಿನ್ನನ್ನು ಸಾಯಿಸಿ ಬಿಡುವುದಾಗಿ ಪ್ರಾಣಬೆದರಿಕೆ ಹಾಕಿರುತ್ತಾರೆ. ನಂತರ ತಾನು ಚಿಂತಾಮಣಿ ಸರ್ಕಾರಿ ಆಸ್ಪತ್ರೆಗೆ ಹೋಗಿ ಚಿಕಿತ್ಸೆಯನ್ನು ಪಡೆದುಕೊಂಡಿರುತ್ತೇನೆ. ಸದರಿ ಗಲಾಟೆಯ ಬಗ್ಗೆ ತಮ್ಮ ಗ್ರಾಮದ ಹಿರಿಯರು ನ್ಯಾಯ ಪಂಚಾಯ್ತಿ ಮಾಡುವುದಾಗಿ ತಿಳಿಸಿದ್ದು, ಇದುವರೆಗೂ ನ್ಯಾಯ ಪಂಚಾಯ್ತಿ ಮಾಡದ ಕಾರಣ ಈ ದಿನ ತಡವಾಗಿ ಠಾಣೆಗೆ ಬಂದು ಮೇಲ್ಕಂಡ ಕೆ.ವಿ.ಶ್ರೀನಿವಾಸರೆಡ್ಡಿ ಮತ್ತು ಗೋವರ್ಧನ್ ರವರ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ನೀಡಿದ ದೂರಾಗಿರುತ್ತೆ.

  1. ಗೌರಿಬಿದನೂರು ಪುರ ಪೊಲೀಸ್ ಠಾಣೆ ಮೊ.ಸಂ.167/2020 ಕಲಂ: 420 ಐ.ಪಿ.ಸಿ :-

     ದಿನಾಂಕ;17/10/2020 ರಂದು ರಾತ್ರಿ 8-00 ಗಂಟೆಗೆ ಪಿರ್ಯಾದಿದಾರರಾದ ಅರುಂದತಿ ಕೋಂ ಡಾ .ರಾಜೇಶ್  ರವರು   ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ;06/10/2020 ರಂದು ಸರಿಯಾಗಿ 4-50 ಗಂಟೆಯಲ್ಲಿ ಎಸ್ ಬಿ ಐ ಬ್ಯಾಂಕ್ ಬಳಿ ಇರುವ ಎ,ಟಿ,ಎಮ್, ನಲ್ಲಿ A/C ನಂ 54040058407. IFSC No -SBIN0040086  ಖಾತೆಯಲ್ಲಿ ಹಣವನ್ನು ತೆಗೆಯಲು ಹೋದಾಗ ಯಾರೋ ಅಪರಿಚಿತ ವ್ಯಕ್ತಿ ತನಗೆ ಸಹಾಯ ಮಾಡಲು ಬಂದು ತನ್ನ ATM ಕಾರ್ಡ್ ಅನ್ನು ಬದಲಾಯಿಸಿ ತನ್ನ ಖಾತೆಯಲ್ಲಿರುವ ಒಂದು ಲಕ್ಷದ ಇಪ್ಪತ್ತು ಸಾವಿರ ರೂಗಳನ್ನು ಡ್ರಾ ಮಾಡಿರುತ್ತಾನೆ ಆದ್ದರಿಂದ ತನಗೆ ಮೋಸ ಮಾಡಿ ಅಪರಿಚಿತ ವ್ಯಕ್ತಿಯ ಮೇಲೆ ಕಾನೂನು ರೀತಿಯಾ ಕ್ರಮ ಜರುಗಿಸಲು ಕೋರಿ ನೀಡಿದ ದೂರನ್ನು ಪಡೆದು ಪ್ರಕರಣ ದಾಖಲಿಸಿರುತ್ತೆ.

  1. ಗುಡಿಬಂಡೆ ಪೊಲೀಸ್ ಠಾಣೆ ಮೊ.ಸಂ.176/2020 ಕಲಂ: 323,341,504 ರೆ/ವಿ 34  ಐ.ಪಿ.ಸಿ :-

     ದಿನಾಂಕ 17/10/2020 ರಂದು ಮದ್ಯಾಹ್ನ 2-15 ಗಂಟೆಯ ಸಮಯದಲ್ಲಿ ಪಿರ್ಯಾಧಿ ಅರೂರು ಗ್ರಾಮದ ನಾಗರತ್ನ ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ, ದಿನಾಂಕ 15/10/2020 ರಂದು ಸಂಜೆ 7-30 ಗಂಟೆಯ ಸಮಯದಲ್ಲಿ ತಾನು ಮತ್ತು ತನ್ನ ಗಂಡ ಹಾಗೂ ಮಕ್ಕಳೊಂದಿಗೆ ಮಳೆ ಹನಿ ಬರುತ್ತಿದ್ದಕಾರಣ ತೋಟದಿಂದ ರಸ್ತೆಗೆ ಬರಲು ಆರೋಪಿತರ ಜಮೀನಿನಲ್ಲಿ ಬರುತ್ತಿದ್ದಾಗ ಆರೋಪಿತರು ಯಾಕೋ ಬೋಳಿ ಮಗನೆ ನಮ್ಮ ಜಮೀನಿನಲ್ಲಿ ಬರೋದು ಎಂದಾಗ ನೀವು ಬೇರೆಯಾರ ಜಮೀನಿನಲ್ಲಿ ಹೋಗದಿಲ್ಲವೇ ನಾವು ತೋಟಕ್ಕೆ ಇನ್ನು ಯಾವ ರೀತಿ ಓಡಾಡ ಬೇಕೆಂದು ಕೇಳಿದ ಸಲುವಾಗಿ ನಿನ್ನ ಹೆಂಡತಿನ ಎಂಬ ಕೆಟ್ಟ ಮಾತುಗಳಿಂದ  ನಿಂದಿಸಿದ್ದು, ಹಿಡಿತದಲ್ಲಿಟ್ಟುಕೊಂಡು ಮಾತನಾಡು ನೀನು ದೊಡ್ಡ ಮನುಷ್ಯನಾಗಿರುವೇ ಈಗಲ್ಲ ಮಾತನಾಡುವುದು ಸರಿಯಲ್ಲ ಎಂದು ಅನ್ನುವಾಗ ದಾರಿಗೆ ಅಡ್ಡ ಬಂದು ಪಕ್ಕಕ್ಕೆ ತಳ್ಳಿ ತನ್ನ ಮಗಳನ್ನು ಕಾಲಿನಿಂದ ಒದ್ದಿರುತ್ತಾನೆ ಕಾನೂನು ರೀತ್ಯಾ ಕ್ರಮ ಜರುಗಿಸಬೇಕೆಂದು ಕೋರಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುತ್ತೆ.

  1. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.284/2020 ಕಲಂ: 279,337 ಐ.ಪಿ.ಸಿ :-

     ದಿನಾಂಕ:17.10.2020 ರಂದು ರಾತ್ರಿ 9.00 ಗಂಟೆಯಲ್ಲಿ ಪಿರ್ಯಾದಿದಾರರಾದ ಎಸ್.ಎನ್ ನರೇಂದ್ರಬಾಬು ಬಿನ್ ನಾರಾಯಣಸ್ವಾಮಿ, 29 ವರ್ಷ, ಆದಿ ದ್ರಾವಿಡ ಕಾರುಚಾಲಕ, ಬಂಡಹಳ್ಳಿ ಗ್ರಾಮ ಶ್ರೀನಿವಾಸಪುರ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆನೆಂದರೆ, ತಾನು ಈಗ್ಗೆ ಸುಮಾರು 4 ವರ್ಷಗಳ ಹಿಂದೆ ಕೆಎ.07.ಎ.7238 ಸ್ವಿಪ್ಟ್ ಡಿಜೈರ್ ಕಾರನ್ನು ತೆಗೆದುಕೊಂಡಿದ್ದು ತಾನು ಪ್ರತಿ ದಿನ ಬಾಡಿಗೆಗೆ ಹಲುವಾರು ಕಡೆಗಳಲ್ಲಿಗೆ ಹೋಗುತ್ತಿರುತ್ತೇನೆ. ಹೀಗಿರುವಲ್ಲಿ ದಿನಾಂಕ:17.10.2020 ರಂದು ಚಿಂತಾಮಣಿ ಯಿಂದ ಚಿಕ್ಕಬಳ್ಳಾಪುರಕ್ಕೆ ಬಾಡಿಗೆ ಇದ್ದು ಕೃಷ್ಣಪ್ಪ ರವರೊಂದಿಗೆ ಕೆಎ.07.ಎ.7238 ಸ್ವಿಪ್ಟ್ ಡಿಜೈರ್ ಕಾರಿನಲ್ಲಿ ಚಿಕ್ಕಬಳ್ಳಾಪುರಕ್ಕೆ ಹೋಗಲು ಬೆಳಿಗ್ಗೆ 9.45 ಗಂಟೆಯಲ್ಲಿ ಶಿಡ್ಲಘಟ್ಟ-ಚಿಕ್ಕಬಳ್ಳಾಪುರ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಶಿಡ್ಲಘಟ್ಟ ತಾಲ್ಲೂಕು ಲಕ್ಕಹಳ್ಳಿ ಗ್ರಾಮದ ಗೇಟ್ ಬಳಿ ಇರುವ ಬಿಡದಿ ತಟ್ಟೆ ಇಡ್ಲಿ ಹೋಟೆಲ್ ಬಳಿ ರಸ್ತೆಯಲ್ಲಿ ಹೋಗುತ್ತಿದ್ದಾಗ ಚಿಕ್ಕಬಳ್ಳಾಪುರ ಕಡೆಯಿಂದ ಬಂದ ಟಿಲ್ಲರ್ ವಾಹನವನ್ನು ಅದರ ಚಾಲಕ ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ನಾವುಗಳು ಹೋಗುತಿದ್ದ ಕೆಎ.07.ಎ.7238 ಸ್ವಿಪ್ಟ್ ಡಿಜೈರ್ ಕಾರಿಗೆ ಡಿಕ್ಕಿಪಡಿಸಿದ ಪರಿಣಾಮ ಕಾರು ಜಖಂಗೊಂಡು ಕಾರಿನಲ್ಲಿದ್ದ ಕೃಷ್ಣಪ್ಪ ರವರಿಗೆ ಎಡಕೈಗೆ ಗಾಯವಾಗಿದ್ದು, ಟಿಲ್ಲರ್ ವಾಹನದ ಚಾಲಕನಿಗೂ ಸಹ ಗಾಯಗಳಾಗಿರುತ್ತೆ, ನಂತರ ನಾನು ಕೃಷ್ಣಪ್ಪ ರವರರನ್ನು ಉಪರಚರಿಸಿ ಯಾವುದೋ ಒಂದು ವಾಹನದಲ್ಲಿ ಚಿಕಿತ್ಸೆಗಾಗಿ ಚಿಕ್ಕಬಳ್ಳಾಪುರ ಅಸ್ಪತ್ರೆಗೆ ಕಳುಹಿಸಿಕೊಟ್ಟಿರುತ್ತೇನೆ. ಆದ್ದರಿಂದ ಅಜಾಗೂರುಕತೆಯಿಂದ ಚಾಲನೆ ಮಾಡಿಕೊಂಡು ಬಂದು ಕೆಎ.07.ಎ.7238 ಸ್ವಿಪ್ಟ್ ಡಿಜೈರ್ ಕಾರಿಗೆ ಡಿಕ್ಕಿ ಪಡಿಸಿದ ಟಿಲ್ಲರ್ ವಾಹನದ ಚಾಲಕನ ಮೇಲೆ ಕಾನೂನು ರೀತಿಯ ಕ್ರಮಕೈಗೊಳ್ಳಬೇಕಾಗಿ ನೀಡಿದ ದೂರನ್ನು ಪಡೆದು ಪ್ರಕರಣ ದಾಖಲಿಸಿರುತ್ತೆ.