ದಿನಾಂಕ :18/05/2020 ರ ಅಪರಾಧ ಪ್ರಕರಣಗಳು

  1. ಪಾತಪಾಳ್ಯ ಪೊಲೀಸ್ ಠಾಣೆ ಮೊ.ಸಂ.30/2020 ಕಲಂ. 323,324,504,506 ರೆ/ವಿ 34 ಐ.ಪಿ.ಸಿ :-

          ದಿನಾಂಕ:18/05/2020 ರಂದು ಪಾತಪಾಳ್ಯ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗಾಯಾಳು ಸುಧಾಕರ ಬಿನ್ ಲೇಟ್ ನಾಗರಾಜ ರವರ ಹೇಳಿಕೆಯನ್ನು ಪಡೆದುಕೊಂಡಿದ್ದರ ಸಾರಾಂಶವೇನೆಂದರೆ ನಾನು ಮೇಲ್ಕಂಡ ವಿಳಾಸದಲ್ಲಿ ವಾಸವಾಗಿದ್ದು ಗಾರೆ ಕೆಲಸ ಮಾಡಿಕೊಂಡು ಜೀವನ ಮಾಡಿಕೊಂಡಿರುತ್ತೇನೆ, ನಾವು ಸ್ವಂತಕ್ಕಾಗಿ ಒಂದು ಮನೆಯನ್ನು ನಿರ್ಮಾಣ ಮಾಡುತ್ತಿದ್ದು ಮನೆಯ ಮುಂಬಾಗದ ರಸ್ತೆಯ ಬದಿಯಲ್ಲಿ ನಮ್ಮ ಆಟೋವನ್ನು ನಿಲ್ಲಿಸಿದ್ದು ನಮ್ಮ ಮನೆಯ ಪಕ್ಕದ ವಾಸಿಯಾದ ಆಸಿಪ್ ಬಾಷಾರವರು ದ್ವಿ ಚಕ್ರ ವಾಹನದಲ್ಲಿ ಸೌದೆಯನ್ನು ಹಾಕಿಕೊಂಡು ಮನೆಗೆ ಹೋಗುವಾಗ ನಾವು ನಿಲ್ಲಿಸಿದ್ದ ಆಟೋ ಅಡ್ಡ ಎಂದು ಈ ಬಗ್ಗೆ ದಿನಾಂಕ:17/05/2020 ರಂದು ಬಾಯಿ ಮಾತಿನಲ್ಲಿ ಬೈದಾಡಿಕೊಂಡಿರುತ್ತೇವೆ, ಇದೇ ವಿಚಾರದಲ್ಲಿ ದಿನಾಂಕ:18/05/2020 ರಂದು ಬೆಳಗ್ಗೆ ಸುಮಾರು 10-30 ಗಂಟೆ ಸಮಯದಲ್ಲಿ ನಮ್ಮ ಗ್ರಾಮದ ಗ್ರಾಮ ಪಂಚಾಯ್ತಿ ಮುಂದೆ ನಾವುಗಳು ಇದ್ದಾಗ ನಮ್ಮ ಗ್ರಾಮದ ವಾಸಿಗಳಾದ ಯೂಸೂಪ್ ಬಾಷಾ, ಆಸಿಪ್ ಬಾಷಾ, ಮತ್ತು ಮಾಬೂಸಾಬ್ ರವರು ಅಲ್ಲಿಗೆ ಬಂದು ಆಟೋ ಅಡ್ಡ ನಿಲ್ಲಿಸಿದ್ದ ವಿಚಾರವಾಗಿ ಜಗಳವಾಗಿ ಏಕಾಏಕಿಯಾಗಿ ಆಸಿಪ್ ಬಾಷಾ ರವರು ಅಲ್ಲಿಯೇ ಇದ್ದ ಇಟ್ಟಿಗೆ ಚೂರಿನಿಂದ ನನ್ನ ತಲೆಯ ಹಿಂಬಾಗಕ್ಕೆ ಹೊಡೆದು ರಕ್ತಗಾಯಪಡಿಸಿರುತ್ತಾನೆ, ಮತ್ತು ಯೂಸೂಪ್ ಬಾಷಾರವರು ನನ್ನನ್ನು ಕೂದಲು ಹಿಡಿದುಕೊಂಡು ಎಳೆದಾಡುತ್ತಿದ್ದಾಗ ನಮ್ಮ ತಾಯಿಯು ಅಡ್ಡ ಬಂದಾಗ ನಮ್ಮ ತಾಯಿಯ ತಲೆಯ ಬಲ ಭಾಗಕ್ಕೆ ಇಟ್ಟಿಗೆ ಚೂರಿನಿಂದ ಹೊಡೆದು ರಕ್ತಗಾಯಪಡಿಸಿರುತ್ತಾನೆ, ಹಾಗೂ ಅಲ್ಲಿಯೇ ಇದ್ದ ನನ್ನ ತಮ್ಮ ಸೂರ್ಯ ನಾರಾಯಣನಿಗೆ ಮಾಭೂಸಾಬ್ ರವರು ಕೂದಲು ಹಿಡಿದುಕೊಂಡು ಎಳೆದಾಡಿ ಕಾಲಿನಿಂದ ಸೊಂಟಕ್ಕೆ ಒದ್ದು ನೋವುಂಟು ಮಾಡಿರುತ್ತಾನೆ, ಮಾಭುಸಾಬ್ ರವರ ಹೆಂಡತಿ ರಹಮತ್ ಬೀ ರವರು ನಮ್ಮ ತಾಯಿ ನಾಗಮ್ಮ ರವರಿಗೆ ಕೂದಲು ಹಿಡಿದುಕೊಂಡು ಎಳೆದಾಡಿ ಸಣ್ಣ ಕಲ್ಲಿನಿಂದ ಬಲ ಕಾಲಿನ ಮೊಣ ಕಾಲಿಗೆ ಹಾಕಿ ಸಣ್ಣ ರಕ್ತ ಗಾಯ ಪಡಿಸಿರುತ್ತಾಳೆ, ಹಾಗೂ ಇವರೆಲ್ಲರೂ ನಮ್ಮನ್ನು ಲೋಪರ್ ನನ್ನ ಮಕ್ಕಳ ನಿಮ್ಮನ್ನು ಸಾಯಿಸುವವರೆಗೂ ಬಿಡುವುದಿಲ್ಲವೆಂತಾ ಪ್ರಾಣ ಬೆದರಿಕೆ ಹಾಕಿರುತ್ತಾರೆ, ಗಾಯಗೊಂಡಿದ್ದ ನಮ್ಮಗಳನ್ನು ಮೂಗೇಟುಗಳಾಗಿದ್ದ ನನ್ನ ತಮ್ಮ ಸೂರ್ಯನಾರಾಯಣರವರು ಯಾವುದೋ ಒಂದು ಆಟೋದಲ್ಲಿ ನಮ್ಮನ್ನು ಕರೆದುಕೊಂಡು ಪಾತಪಾಳ್ಯ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಿರುತ್ತಾನೆ, ಘಟನೆಯಾದ ಸಮಯದಲ್ಲಿ ನಮ್ಮ ಗ್ರಾಮದ ಕುಮಾರ ಹಾಗೂ ಶ್ರಿನಿವಾಸರವರು ನೋಡಿ ಜಗಳವನ್ನು ಬಿಡಿಸಿರುತ್ತಾರೆ, ಆದ್ದರಿಂದ ನಮ್ಮನ್ನು ಹೊಡೆದು ಗಲಾಟೆ ಮಾಡಿರುವ ಮೇಲ್ಕಂಡ ಆಸಾಮಿಗರ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ನೀಡಿದ ಹೇಳಿಕೆಯನ್ನು ಪಡೆದು ಮದ್ಯಾಹ್ನ 12-30 ಗಂಟೆಗೆ ಠಾಣೆಗೆ ವಾಪ್ಪಸ್ಸಾಗಿ  ಠಾಣಾ ಮೊ,ಸಂ 30/2020 ಕಲಂ,323,324,504,506,34 ಐ,ಪಿ,ಸಿ ರೀತ್ಯಾ ಪ್ರಕರಣ ದಾಖಲಿಸಿಕೊಂಡಿರುತ್ತೆ,

  1. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.122/2020 ಕಲಂ. ಮನುಷ್ಯ ಕಾಣೆ :-

          ದಿನಾಂಕ:18.05.2020 ರಂದು ಮದ್ಯಾಹ್ನ 12.15 ಗಂಟೆಗೆ ಪಿರ್ಯಾದಿ ಜಯಲಕ್ಷ್ಮೀ ಯಾನೆ ಕುಸುಮ ಕೋಂ ಅಮೃತ್ ರಾಜ್ ಮೇಲೂರು ಗ್ರಾಮ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆನೆಂದರೆ, ನನ್ನನ್ನು ದಿನಾಂಕ:05.03.2020 ರಂದು ಮೇಲೂರು ಗ್ರಾಮದ ರಾಜಣ್ಣ ರವರ ಮಗನಾದ ಅಮೃತ್ ರಾಜ್ ರವರಿಗೆ ಕೊಟ್ಟು ಮದುವೆ ಮಾಡಿಕೊಟ್ಟಿದ್ದು ನಮ್ಮ ಮದುವೆ ಹಿರಿಯರ ಸಮ್ಮುಖದಲ್ಲಿ ನಮ್ಮ ಸಂಪ್ರದಾಯದಂತೆ ಧರ್ವಸ್ಥಳದ ಶ್ರೀ ಮಂಜುನಾಥ ಸ್ವಾಮಿಯ ದೇವಾಲಯದಲ್ಲಿ ನಡೆದಿದ್ದು ಅಂದಿನಿಂದ ನಾವುಗಳು ಸಂಸಾರ ಸಮೇತ ಮೇಲೂರು ಗ್ರಾಮದಲ್ಲಿ ವಾಸವಾಗಿರುತ್ತೇವೆ. ಈಗಿರುವಲ್ಲಿ ದಿನಾಂಕ:16.05.2020 ರಂದು ಬೆಳಿಗ್ಗೆ 11.30 ಗಂಟೆ ಸಮಯದಲ್ಲಿ ನನ್ನ ಗಂಡನಾದ ಅಮೃತ್ ರಾಜ್ ರವರು ನನಗೆ ಕೆಲಸ ಇರುವುದಾಗಿ ಹೇಳೆ ಹೊರಗಡೆ ಹೋಗಿ ಬರುತ್ತೇನೆ ಎಂದು ಹೇಳಿ ನಮ್ಮ ಬಾಬತ್ತು ಕೆಎ.04.ಎನ್.940 ನೊಂದಣಿ ಸಂಖ್ಯೆಯ ಮಾರುತಿ 800 ಕಾರಿನಲ್ಲಿ ಹೋಗಿದ್ದು ಸಂಜೆಯಾದರೂ ಸಹ ಮನೆಗೆ ವಾಪಸ್ಸು ಬಂದಿರುವುದಿಲ್ಲ. ನಂತರ ನಾವುಗಳು ಹಲವಾರು ಕಡೆ ಹುಡುಕಾಡಿದರೂ ಸಹ ಪತ್ತೆಯಾಗಿರುವುದಿಲ್ಲ. ನನ್ನ ಗಂಡ ಅಮೃತ್ ರಾಜ್ ರವರು ಕಾಣೆಯಾಗಿರುವ ಬಗ್ಗೆ ಶಿಡ್ಲಘಟ್ಟ ನಗರದ ಸಿದ್ದಾರ್ಥ ನಗರದ ವಾಸಿ ವರಲಕ್ಷ್ಮೀ ಬಿನ್ ಲೇಟ್ ದ್ಯಾವಪ್ಪ ರವರ ಜೋತೆ ಹೋಗಿರುವುದಾಗಿ ಅನುಮಾನವಿರುತ್ತೆ. ನನ್ನ ಗಂಡ ಅಮೃತ್ ರಾಜ್ ರವರು ಉಪಯೋಗಿಸುತ್ತಿದ್ದ 9591604211 ಮೊಬೈಲ್ ನಂಬರ್ ಸ್ವಿಚ್ ಆಫ್ ಆಗಿರುತ್ತೆ. ನನ್ನ ಗಂಡ ಅಮೃತ್ ರಾಜ್ ರವರನ್ನು ನಮ್ಮ ಗ್ರಾಮ ಮತ್ತು ನೆಂಟರಿಸ್ಟರ ಮನೆಗಳಲ್ಲಿ ಹುಡುಕಾಡಿಕೊಂಡು ಪತ್ತೆಯಾಗದ ಕಾರಣ ಈ ದಿನ ತಡವಾಗಿ ಬಂದು ದೂರು ನೀಡುತ್ತಿದ್ದು ಕಾಣೆಯಾಗಿರುವ ಅಮೃತ್ ರಾಜ್ ರವರನ್ನು ಪತ್ತೆಮಾಡಿಕೊಡಬೇಕಾಗಿ ನೀಡಿದ ದೂರನ್ನು ಪಡೆದು ಪ್ರಕರಣ ದಾಖಲಿಸಿರುತ್ತೆ.