ದಿನಾಂಕ : 18/02/2020 ರ ಅಪರಾಧ ಪ್ರಕರಣಗಳು

1. ಬಾಗೇಪಲ್ಲಿ ಪೊಲೀಸ್ ಠಾಣೆ ಮೊ.ಸಂ.38/2020 ಕಲಂ. 15(ಎ) ಕೆ.ಇ ಆಕ್ಟ್:-
ದಿ:15-02-2020 ರಂದು ರಾತ್ರಿ 10:45 ಗಂಟೆಯಲ್ಲಿ ಡಿ.ಸಿ.ಬಿ/ಸಿ.ಇ.ಎನ್ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ ಪೆಕ್ಟರ್ ರವರು ಠಾಣೆಗೆ ಮಾಲು ಮತ್ತು ಮಹಜರ್ ನೊಂದಿಗೆ ಹಾಜರಾಗಿ ನೀಡಿದ ವರಧಿಯನ್ನು ಪಡೆದುಕೊಂಡಿದ್ದರ ಸಾರಾಂಶ – ದಿ: 15-02-2020 ರಂದು ಡಿ.ಸಿ.ಬಿ ಸಿ.ಇ.ಎನ್ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ ಪೆಕ್ಟರ್ ಆದ ನಾನು ಮತ್ತು ನಮ್ಮ ಠಾಣೆಯ ಸಿಬ್ಬಂದಿಯವರು ಬಾಗೇಪಲ್ಲಿ ತಾಲ್ಲೂಕಿನಲ್ಲಿ ಅಕ್ರಮ ಚಟುವಟಿಕೆಗಳು ಮತ್ತು ಕಾನೂನು ಬಾಹಿರ ಕೃತ್ಯಗಳ ಬಗ್ಗೆ ಮಾಹಿತಿಯನ್ನು ಸಂಗ್ರಹಿಸುತ್ತಿದ್ದಾಗ ಗೂಳೂರು ಗ್ರಾಮಕ್ಕೆ ಸಂಜೆ 07-30 ಗಂಟೆಗೆ ಹೋದಾಗ ನಮಗೆ ಬಾತ್ಮಿದಾರರಿಂದ ಬಂದ ಖಚಿತ ವರ್ತಾಮಾನ ಏನೆಂದರೆ ಭೋಯಿಪಲ್ಲಿ ಗ್ರಾಮದಲ್ಲಿ ವೆಂಕಟರವಣಮ್ಮ ಕೋಂ ರಾಮಚಂದ್ರರೆಡ್ಡಿ, ಎಂಬುವರ ಅಂಗಡಿಯ ಮುಂದೆ ಅಕ್ರಮವಾಗಿ & ಕಾನೂನು ಬಾಹಿರವಾಗಿ ಮದ್ಯ ಸೇವನೆ ಮಾಡಲು ಸ್ಥಳಾವಕಾಶವನ್ನು ಮಾಡಿಕೊಟ್ಟಿರುವ ಮಾಹಿತಿಯ ಮೇರೆಗೆ ಪಂಚರೊಂದಿಗೆ ರಾತ್ರಿ 08-15 ಗಂಟೆಗೆ ಹೋದಾಗ ವೆಂಕಟರವಣಮ್ಮನವರ ಅಂಗಡಿಯ ಮುಂದೆ ಕುಳಿತು ಮದ್ಯವನ್ನು ಸೇವನೆ ಮಾಡುತ್ತಿದ್ದವರು ನಮ್ಮನ್ನು ನೋಡಿ ಓಡಿ ಹೋಗಿದ್ದು, ಸದರಿ ಅಂಗಡಿಯ ಮಾಲೀಕಳ ಹೆಸರು ಮತ್ತು ವಿಳಾಸ ವನ್ನು ಕೇಳಲಾಗಿ ವೆಂಕಟರವಣಮ್ಮ ಕೋಂ ರಾಮಚಂದ್ರರೆಡ್ಡಿ, 60 ವರ್ಷ, ಒಕ್ಕಲಿಗರು, ಜಿರಾಯ್ತಿ, ಭೊಯಿಪಲ್ಲಿ ಗ್ರಾಮ ಅಂತ ಹೇಳಿದ್ದು, ಸದರಿಯವರಿಗೆ ಯಾವುದಾದರೂ ಪರವಾನಿಗೆ ಇದಿಯೆ ಎಂದು ಕೇಳಲಾಗಿ ಯಾವುದೆ ಪರವಾನಿಗೆ ಇರುವುದಿಲ್ಲವೆಂತ ತಿಳಿಸಿದ್ದು, ನಂತರ ಮಹಿಳಾ ಸಿಬ್ಬಂದಿಯವರು ಇಲ್ಲದ ಕಾರಣ ಆರೋಪಿಯನ್ನು ಸ್ಥಳದಲ್ಲಿಯೆ ಬಿಟ್ಟಿರುತ್ತೆ. ಸ್ಥಳದಲ್ಲಿದ್ದ ಮದ್ಯವನ್ನು ಪಂಚರ ಸಮಕ್ಷಮ ಅಮಾನತ್ತು ಪಡಿಸಿಕೊಂಡಿರುವ ಬೆಂಗಳೂರು ವಿಸ್ಕಿ 90 ಮಿಲಿ ಲೀಟರ್ ನ 24 ಟೆಟ್ರಾ ಪಾಕೇಟ್ಗಳು, 02 ಖಾಲಿ ಬೆಂಗಳೂರು ವಿಸ್ಕಿ ಟೆಟ್ರಾ ಪಾಕೇಟ್ಗಳು, ಒಂದು ನೀರಿನ ಬಾಟಲ್ ಮತ್ತು ಎರಡು ಪ್ಲಾಸ್ಟಿಕ್ ಗ್ಲಾಸ್ ಗಳನ್ನು ಅಮಾನತ್ತು ಪಡಿಸಿದ್ದು, ಸದರಿ ಮದ್ಯವು 2. ಲೀಟರ್ 160 ಮಿಲಿ ಮದ್ಯ, ಇದರ ಬೆಲೆ 588/-00 ರೂಗಳಾಗಿರುತ್ತದೆ. ಸದರಿ ಮದ್ಯವನ್ನು ಸ್ವೀಕರಿಸಿ, ಮಹಿಳ ಸಿಬ್ಬಂದಿ ಇಲ್ಲದ ಕಾರಣ ಸ್ಥಳದಲ್ಲಿಯೆ ಬಿಟ್ಟಿರುವ ಆಪಾಧಿತಳ ವಿರುದ್ದ ಮುಂಧಿನ ಕಾನೂನು ಕ್ರಮ ಜರಗಿಸಲು ಕೋರಿದೆ. ಇದರೊಂದಿಗೆ ಅಸಲು ಪಂಚನಾಮೆಯನ್ನು ಲಗತ್ತಿಸಿಕೊಂಡಿರುತ್ತೆ, ಎಂದು ನೀಡಿದ ವರಧಿಯನ್ನು ಪಡೆದುಕೊಂಡು ಠಾಣೆಯಲ್ಲಿ ಎನ್.ಸಿ.ಆರ್:117/2020 ರೀತ್ಯ ದಾಖಲಿಸಿಕೊಂಡಿರುತ್ತೆ. ಇದು ಅಸಂಜ್ಞೇಯ ಪ್ರಕರಣವಾಗಿದ್ದು, ಮೇಲ್ಕಂಡ ಆಸಾಮಿಯ ವಿರುದ್ದ ಸಂಜ್ಞೇಯ ಪ್ರಕರಣವನ್ನು ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮಕೈಗೊಳ್ಳಲು ಅನುಮತಿಯನ್ನು ನೀಡಲು ಕೋರಿ ಘನ ನ್ಯಾಯಾಲಯಕ್ಕೆ ಮನವಿಯನ್ನು ಸಲ್ಲಿಸಿಕೊಂಡಿರುತ್ತೆ. ದಿ: 17-02-2020 ರಂದು ಮದ್ಯಾಹ್ನ 2:30 ಗಂಟೆಗೆ ಘನ ನ್ಯಾಯಾಲಯದ ಪಿ.ಸಿ 235 ರವರು ನ್ಯಾಯಾಲಯದ ಅನುಮತಿ ಪಡೆದುಕೊಂಡು ಬಂದು ಠಾಣೆಯಲ್ಲಿ ಹಾಜರುಪಡಿಸಿದ್ದನ್ನು ಪಡೆದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿರುತ್ತೆ.
2. ಬಾಗೇಪಲ್ಲಿ ಪೊಲೀಸ್ ಠಾಣೆ ಮೊ.ಸಂ.39/2020 ಕಲಂ. 15(ಎ) ಕೆ.ಇ ಆಕ್ಟ್:-
ದಿನಾಂಕ: 16-02-2020 ರಂದು ಮದ್ಯಾಹ್ನ 14-15 ಗಂಟೆ ಸಮಯದಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ ಡಿಸಿಬಿ-ಸಿಇಎನ್ ಪೊಲೀಸ್ ಠಾಣೆಯ ಶ್ರೀ ನರಸಿಂಹಪ್ಪ, ಸಿ.ಹೆಚ್.ಸಿ-85 ರವರು ಠಾಣೆಗೆ ಮಾಲು ಮತ್ತು ಮಹಜರ್ ನೊಂದಿಗೆ ಹಾಜರಾಗಿ ನೀಡಿದ ವರದಿಯನ್ನು ಪಡೆದುಕೊಂಡಿದ್ದರ ಸಾರಾಂಶವೇನೆಂದರೆ, ದಿನಾಂಕ: 16-02-2020 ರಂದು ಪೊಲೀಸ್ ಇನ್ಸ್ ಪೆಕ್ಟರ್ ರವರಾದ ಶ್ರೀ ರಾಜಣ್ಣ. ಎನ್ ರವರು ನನಗೆ, ಡಿಸಿಬಿ-ಸಿಇಎನ್ ಪೊಲೀಸ್ ಠಾಣೆಯ ಶ್ರೀ ಸುಬ್ರಮಣಿ ಸಿ.ಹೆಚ್.ಸಿ-71, ಮತ್ತು ಶ್ರೀ ಗೀರೀಶ್ ಸಿ.ಹೆಚ್.ಸಿ-208 ರವರೊಂದಿಗೆ ಬಾಗೇಪಲ್ಲಿ ತಾಲ್ಲೂಕಿನಲ್ಲಿ ಕಾನೂನು ಬಾಹಿರ ಚಟುವಟಿಕೆಗಳ ಬಗ್ಗೆ ಗಸ್ತು ಮಾಡಿ ಮಾಹಿತಿ ಸಂಗ್ರಹಿಸಲು ದಾಳಿ ಮಾಡಲು ನೇಮಿಸಿದ್ದು, ಅದರಂತೆ ನಾವುಗಳು ಬಾಗೇಪಲ್ಲಿ ತಾಲ್ಲೂಕಿನಲ್ಲಿ ಮಾಹಿತಿ ಸಂಗ್ರಹಣೆ ಕರ್ತವ್ಯದಲ್ಲಿದ್ದಾಗ ಮದ್ಯಾಹ್ನ 12-15 ಗಂಟೆಯಲ್ಲಿ ಗೊರ್ತಪಲ್ಲಿ ಕ್ರಾಸ್ ಕಡೆ ಗಸ್ತಿನಲ್ಲಿದ್ದಾಗ ಬಾತ್ಮಿದಾರರಿಂದ ಬಂದ ಖಚಿತ ಮಾಹಿತಿ ಮೇರೆಗೆ ತಾಲ್ಲೂಕಿನ ಬೋಯಿಪಲ್ಲಿ ಗ್ರಾಮಕ್ಕೆ ಹೋಗಿ ಪಂಚರನ್ನು ಬರಮಾಡಿಕೊಂಡು ಗ್ರಾಮದ ವಾಸಿ ಶ್ರೀಮತಿ ಶಿವಮ್ಮ ಕೋಂ ವೆಂಕಟೇಶಪ್ಪ, 60ವರ್ಷ,ಕೊರಚ ಜನಾಂಗ, ಚಿಲ್ಲರೆ ಅಂಗಡಿ ವ್ಯಾಪಾರ, ವಾಸ ಬೋಯಿಪಲ್ಲಿ ಗ್ರಾಮ, ಬಾಗೇಪಲ್ಲಿ ತಾಲ್ಲೂಕು ರವರು ತನ್ನ ಮನೆಯ ಮುಂಭಾಗದ ಸ್ಥಳದಲ್ಲಿ ಸಾರ್ವಜನಿಕರಿಗೆ ಕಾನೂನು ಬಾಹಿರವಾಗಿ ಮದ್ಯಸೇವನೆ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿದ್ದರ ಮೇಲೆ ಸ್ಥಳದಲ್ಲಿದ್ದ 1) 90 ಎಂ.ಎಲ್ ನ 23 ಬೆಂಗಳೂರು ವಿಸ್ಕಿ ಕಂಪನಿಯ ಮದ್ಯ ಇರುವ ಟೆಟ್ರಾ ಪಾಕೆಟ್ ಗಳು 2) 90 ಎಂ.ಎಲ್ ನ ಬೆಂಗಳೂರು ವಿಸ್ಕಿ ಕಂಪನಿಯ 02 ಖಾಲಿ ಮದ್ಯದ ಟೆಟ್ರಾ ಪಾಕೆಟ್ ಗಳು 3) ಮದ್ಯಸೇವನೆ ಮಾಡಿರುವ 2 ಪ್ಲಾಸ್ಟಿಕ್ ಗ್ಲಾಸುಗಳು 4) ಒಂದು ಲೀಟರಿನ ಒಂದು ಖಾಲಿ ಪ್ಲಾಸ್ಟಿಕ್ ನೀರಿನ ಬಾಟೆಲ್ ಅನ್ನು ಈ ಕೇಸಿನ ಮುಂದಿನ ಕ್ರಮಕ್ಕಾಗಿ ಪಂಚರ ಸಮಕ್ಷಮ ಪಂಚನಾಮೆ ಮೂಲಕ ಅಮಾನತ್ತುಪಡಿಸಿಕೊಂಡಿರುತ್ತೆ. ಅಮಾನತ್ತುಪಡಿಸಿಕೊಂಡಿರುವ ಮದ್ಯವು 2 ಲೀಟರ್ 70 ಎಂ.ಎಲ್ ಇದ್ದು, ಇದರ ಬೆಲೆ 563/- ರೂಗಳಾಗಿರುತ್ತದೆ. ಸದರಿ ಮದ್ಯವನ್ನು ಸ್ವೀಕರಿಸಿ, ಮಹಿಳೆ ಸಿಬ್ಬಂದಿ ಇಲ್ಲದ ಕಾರಣ ಸ್ಥಳದಲ್ಲಿಯೇ ಬಿಟ್ಟಿರುವ ಆಪಾದಿತಳ ವಿರುದ್ದ ಕಾನೂನು ರೀತ್ಯಾ ಕ್ರಮಜರುಗಿಸಲು ಕೋರಿದೆ. ಇದರೊಂದಿಗೆ ಅಸಲು ಪಂಚನಾಮೆಯನ್ನು ಲಗತ್ತಿಸಿಕೊಂಡಿರುತ್ತೆ. ಎಂದು ನೀಡಿದ ವರದಿಯನ್ನು ಪಡೆದುಕೊಂಡು ಠಾಣೆಯಲ್ಲಿ ಎನ್.ಸಿ.ಆರ್ ದಾಖಲಿಸಿಕೊಂಡಿರುತ್ತೆ. ಇದು ಅಸಂಜ್ಞೇಯ ಪ್ರಕರಣವಾಗಿದ್ದು, ಮೇಲ್ಕಂಡ ಆಸಾಮಿಯ ವಿರುದ್ದ ಸಂಜ್ಞೇಯ ಪ್ರಕರಣವನ್ನು ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮಕೈಗೊಳ್ಳಲು ಅನುಮತಿಯನ್ನು ನೀಡಲು ಕೋರಿ ಘನ ನ್ಯಾಯಾಲಯಕ್ಕೆ ಮನವಿಯನ್ನು ಸಲ್ಲಿಸಿಕೊಂಡಿರುತ್ತೆ. ದಿ: 17-02-2020 ರಂದು ಮದ್ಯಾಹ್ನ 3:15 ಗಂಟೆಗೆ ಘನ ನ್ಯಾಯಾಲಯದ ಪಿ.ಸಿ 235 ರವರು ನ್ಯಾಯಾಲಯದ ಅನುಮತಿ ಪಡೆದುಕೊಂಡು ಬಂದು ಠಾಣೆಯಲ್ಲಿ ಹಾಜರುಪಡಿಸಿದ್ದನ್ನು ಪಡೆದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿರುತ್ತೆ.
3. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.20/2020 ಕಲಂ. 87 ಕೆ.ಪಿ ಆಕ್ಟ್:-
ದಿ:17.02.2020 ರಂದು ಸಂಜೆ 6-45 ಗಂಟೆಗೆ ಪಿ ಎಸ್ ಐ ಸಾಹೇಬರು ನಿಡಿದ ವರದಿಯ ಸಾರಾಂಶವೇನೆಂದರೆ ದಿನಾಂಕ;17.02.2020 ರಂದು ತಾನು ಠಾಣಾ ಪ್ರಭಾರದಲ್ಲಿರುವಾಗ 6-00 ಘಂಟೆ ಸಮಯದಲ್ಲಿ ಗ್ರಾಮಾಂತರ ಠಾಣಾ ಸರಹದ್ದಿನ 04 ನೇ ಗ್ರಾಮ ಗಸ್ತಿಗೆ ಸೇರಿದ ಅಂಕಣಗೊಂಡಿ ಗ್ರಾಮದ ಬಳಿ ಇರುವ ರಾಜಕಾಲುವೆಯಲ್ಲಿ ಯಾರೋ ಸುಮಾರು ಜನರು ಗುಂಪು ಕಟ್ಟಿಕೊಂಡು ಹಣವನ್ನು ಪಣವಾಗಿಟ್ಟು ಅಕ್ರಮವಾಗಿ ಅಂದರ್ ಬಾಹರ್ ಇಸ್ಪೀಟು ಜೂಜಾಟ ಆಡುತ್ತಿರುವುದಾಗಿ ಬಂದ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿ ಕ್ರಮ ಕೈಗೊಳ್ಳಲು ತಾನು & ಸಿಬ್ಬಂದಿಯವರಾದ ಹೆಚ್.ಸಿ-92 ಮಂಜುನಾಥ , ಹೆಚ್.ಸಿ -141 ರಮಣಾರೆಡ್ಡಿ, ಪಿ.ಸಿ-510 ಹರೀಶ್, ಪಿ.ಸಿ-180 ಬಾಲಚಂದ್ರ , ಪಿಸಿ 97 ರವಿಕುಮಾರ್ , ಪಿಸಿ 264 ನರಸಿಂಹಮೂರ್ತಿ ಹಾಗೂ ಜೀಪ್ ಚಾಲಕ ಎಹೆಚ್ಸಿ-23 ಮಂಜುನಾಥ ರವರುಗಳನ್ನು ಕರೆದುಕೊಂಡು ಜೀಪ್ ಸಂಖ್ಯೆ ಕೆಎ,40-ಜಿ-567 ರಲ್ಲಿ ಸಂಜೆ 6-15 ಗಂಟೆಗೆ ಠಾಣೆಯಿಂದ ಹೊರಟು 6:30 ಘಂಟೆಗೆ ಅಂಕಣಗೊಂದಿ ಬಳಿ ಹೋಗಿ ಅಲ್ಲಿ 1. ಮುರಳಿ ಎನ್ ಬಿನ್ ವಿ ನಾರಾಯಣಪ್ಪ , 42 ವರ್ಷ, ಕುರುಬರು , 8 ನೇ ವಾರ್ಡ್ ಟಿ.ಜಿ ಟ್ಯಾಂಕ್ ರೋಡ್ ಚಿಕ್ಕಬಳ್ಳಾಪುರ ಟೌನ್ , 2. ರಾಬರ್ಟ್ ಬಿನ್ ಬಾಬು 40 ವರ್ಷ, ಕ್ರಿಶ್ಚಿಯನ್ ಜನಾಂಗ, ಆಟೋ ಚಾಲಕ ವೃತ್ತಿ ವಾಸ 12 ನೇ ವಾರ್ಡ್ ಎ.ಡಿ ಕಾಲೋನಿ ಚಿಕ್ಕಬಳ್ಳಾಪುರ ಟೌನ್ ರವರುಗಳಿಗೆ ದಾಳಿ ವಿಚಾರ ತಿಳಿಸಿ ಅವರನ್ನು ಪಂಚರನ್ನಾಗಿ ಜೀಪ್ ನಲ್ಲಿ ಕರೆದುಕೊಂಡು ಅಂಕಣಗೊಂದಿ ಗ್ರಾಮದ ಸಮೀಪ ಹೋಗಿ ಮರೆಯಲ್ಲಿ ಜೀಪ್ ನಿಲ್ಲಿಸಿ ಎಲ್ಲಾರು ಕೆಳಗೆ ಇಳಿದು ಮರೆಯಲ್ಲಿ ನಿಂತು ನೋಡಲಾಗಿ ರಾಜಕಾಲುವೆಯಲ್ಲಿ 09 ಜನ ಆಸಾಮಿಗಳು ಸುತ್ತುವರೆದು ಕುಳಿತು ಆ ಪೈಕಿ ಒಬ್ಬ ಅಸಾಮಿ ಕೈಯಲ್ಲಿ ಇಸ್ಪಿಟ್ ಎಲೆ ಇಡಿದು ಅಂದರ್ 100 ರೂ ಎಂತಲು ಮತ್ತೊಬ್ಬ ಅಸಾಮಿ ಬಾಹರ್ 100ರೂ ಎಂದು ಕೂಗುತ್ತಾ ಅಂದರ್ ಬಾಹರ್ ಇಸ್ಪೀಟ್ ಜೂಜಾಟ ಆಡುತ್ತಿದ್ದುದನ್ನು ಖಾತರಿ ಪಡಿಸಿಕೊಂಡು ಪಂಚರ ಸಮಕ್ಷಮ ತಾನು ಮತ್ತು ಸಿಬ್ಬಂದಿಯವರು ಸಂಜೆ 6.45 ಗಂಟೆಗೆ ದಾಳಿ ಮಾಡಿ 04 ಜನ ಆಸಾಮಿಗಳನ್ನು ಹಿಡಿದು ಹೆಸರು ವಿಳಾಸ ಕೇಳಲಾಗಿ 1] ರಾಜೇಶ್ ಸಿ ಬಿನ್ ಚಿಕ್ಕನರಸಿಂಹಪ್ಪ 30 ವರ್ಷ ಆದಿ ದ್ರಾವಿಡ ಜನಾಂಗ, ಆಟೋ ಚಾಲಕ 12 ನೇ ವಾರ್ಡ್ ಚಿಕ್ಕಬಳ್ಳಾಪುರ ಟೌನ್ , 2] ರಹಿಮಾನ್ ಬಿನ್ ಅಲ್ಲಾಬಕಾಷ್ 48 ವರ್ಷ ಮುಸ್ಲೀಂ ಜನಾಂಗ, ಆಟೋ ಚಾಲಕ 6 ನೇ ವಾರ್ಡ್ ಪ್ರಶಾಂತನಗರ ಚಿಕ್ಕಬಳ್ಳಾಪುರ ಟೌನ್ , 3] ನಾರಾಯಣಸ್ವಾಮಿ ಬಿನ್ ಲೇಟ್ ನರಸಪ್ಪ , 30 ವರ್ಷ , ಆದಿ ದ್ರಾವಿಡ ಜನಾಂಗ, ಆಟೋ ಚಾಲಕ ವಾಸ 12 ನೇ ವಾರ್ಡ್ ಚಿಕ್ಕಬಳ್ಳಾಪುರ ಟೌನ್ , 4] ಪ್ರಸಾದ್ ಬಾಬು @ ಬಾಲು ಬಿನ್ ಚಿಕ್ಕಣ್ಣ , 31 ವರ್ಷ , ಕ್ರಿಶ್ಚಿಯನ್ , ಕಾರ್ಪೆಂಟರ್ ಕೆಲಸ ವಾಸ 12 ನೇ ವಾರ್ಡ್ , ಚಿಕ್ಕಬಳ್ಳಾಪುರ ಟೌನ್ ಎಂತ ತಿಳಿಸಿದ್ದು, ಓಡಿ ಹೋದವರ ಹೆಸರು ವಿಳಾಸ ಕೇಳಲಾಗಿ 5] ಗುರುಪ್ರಸಾದ್ ಬಿನ್ ನಂಜುಂಡಪ್ಪ 23 ವರ್ಷ , ಲಿಂಗಾಯಿತರು, ಕೂಲಿ ಕೆಲಸ ಭಗತ್ ಸಿಂಗ್ ನಗರ , 4 ನೇ ವಾರ್ಡ್ , ಚಿಕ್ಕಬಳ್ಳಾಪುರ ಟೌನ್ , 6] ಮಧುಕುಮಾರ್ ಬಿನ್ ರೆಡ್ಡಿ 35 ವರ್ಷ , ಆಟೋ ಚಾಲಕ ವೃತ್ತಿ ವಾಸ 12 ನೇ ವಾರ್ಡ್ ಚಿಕ್ಕಬಳ್ಳಾಪುರ ಟೌನ್ , 7] ರಾಜು ಬಿನ್ ಪಾಪಣ್ಣ 42 ವರ್ಷ, ಕಾರ್ಪೆಂಟರ್ ಕೆಲಸ ವಾಸ 12 ನೇ ವಾರ್ಡ್ ಚಿಕ್ಕಬಳ್ಳಾಪುರ ಟೌನ್ , 8] ಬಾಬು , 40 ವರ್ಷ , ನಾಯಕರು ಆಟೋ ಚಾಲಕ ವೃತ್ತಿ ವಾಸ 12 ನೇ ವಾರ್ಡ್ ಚಿಕ್ಕಬಳ್ಳಾಪುರ ಟೌನ್ , 9] ಹೈದರಾಲಿ 30 ವರ್ಷ, ಮುಸ್ಲೀಂ ಜನಾಂಗ, ಪೈಂಟಿಂಗ್ ಕೆಲಸ ವಾಸ 12 ನೇ ವಾರ್ಡ್ , ಚಿಕ್ಕಬಳ್ಳಾಪುರ ಟೌನ್ ಎಂತ ತಿಳಿಸಿದ್ದು, ಅವರುಗಳಿಗೆ ಹಣವನ್ನು ಪಣವಾಗಿಟ್ಟು ಅಂದರ್ ಬಾಹರ್ ಇಸ್ಪೀಟ್ ಜೂಜಾಟ ಆಡಲು ಪರವಾನಿಗೆ ಇದೆಯೆ ಎಂದು ಕೇಳಲಾಗಿ ಅವರು ತಮ್ಮ ಬಳಿ ಯಾವುದೇ ದಾಖಲೆ ಇಲ್ಲವೆಂದು ನುಡಿದಿದ್ದರ ಮೇರಿಗೆ ಅವರನ್ನು ವಶಕ್ಕೆ ಪಡೆದು ಅವರು ಜೂಜಾಟಕ್ಕೆ ಪಣವಾಗಿಟ್ಟಿದ್ದ ಒಟ್ಟು 1630/- ರೂಗಳನ್ನು ಮತ್ತು ಅವರು ಜೂಜಾಟಕ್ಕೆ ಉಪಯೋಗಿಸಿದ 52 ಇಸ್ಪೀಟ್ ಎಲೆಗಳನ್ನು ಪಂಚನಾಮೆಯ ಮೂಲಕ ಅಮಾನತ್ತು ಪಡಿಸಿಕೊಂಡು ಆರೋಪಿಗಳು ಮತ್ತು ಮಾಲಿನ ಸಮೇತ ಠಾಣೆಗೆ ರಾತ್ರಿ 7-45 ಗಂಟೆಗೆ ವಾಪಸ್ಸಾಗಿ ಆರೋಪಿಗಳ ಸಮೇತ ಮಾಲನ್ನು ಮತ್ತು ಇಸ್ಪೀಟ್ ಎಲೆಗಳನ್ನು ನೀಡಿ ಕಲಂ-87 ಕೆಪಿ ಆಕ್ಟ್ ರಂತೆ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಲು ಸೂಚಿಸಿ ನೀಡಿದ ವರದಿಯ ಮೇರೆಗೆ ಈ ಪ್ರ ವ ವರಧಿ.
4. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.21/2020 ಕಲಂ. 279 ಐ.ಪಿ.ಸಿ:-
ದಿನಾಂಕ: 18/02/2020 ರಂದು ಬೆಳಿಗ್ಗೆ 11-00 ಗಂಟೆ ಸಮಯದಲ್ಲಿ ಪಿರ್ಯಾದುಧಾರರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ನೆನ್ನೆ ದಿನ ದಿನಾಂಕ: 17/02/2020 ರಂದು ಮದ್ಯಾಹ್ನ ನಾನು, ನಮ್ಮ ವಿದ್ಯಾಪೀಠದಲ್ಲಿ ಕೆಲಸ ಮಾಡುವ ಜೆ.ಸಂತೋಷ್ ಬಿನ್ ಮೋಹನ್, ಪಿ.ಶ್ರೇಯಸ್ ಬಿನ್ ವಾದಿರಾಜ್ ಮತ್ತು ಬಿ.ಎಸ್.ಸಂತೋಷ್ ಬಿನ್ ಬಿ.ವಿ.ಶ್ರೀಧರ್ ಎಲ್ಲರೂ ನಮ್ಮ ವಿದ್ಯಾಪೀಠದಲ್ಲಿ ಕೆಲಸ ಮಾಡುವ ಪ್ರಕಾಶ್ ಭಟ್ ಬಿನ್ ಹರಿಭಟ್ ರವರ ಬಾಬತ್ತು KA-05, MS-8408 ಮಾರುತಿ ಆಲ್ಟೋ-800 ಕಾರಿನಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆ ಗುಡಿಬಂಡೆ ತಾಲ್ಲೂಕು ಚಂಡೂರು ಗ್ರಾಮದಲ್ಲಿರುವ ಶ್ರೀ ವೆಂಕಟೇಶ್ವರ ದೇವಸ್ಥಾನಕ್ಕೆ ಹೋಗಿದ್ದೆವು. ಚೆಂಡೂರು ಗ್ರಾಮದಲ್ಲಿ ದೇವರ ದರ್ಶನ ಮಾಡಿಕೊಂಡು ಪುನಃ ವಾಪಸ್ಸು ಬೆಂಗಳೂರಿಗೆ ಹೋಗಲು ಎಲ್ಲರೂ ಕಾರಿನಲ್ಲಿ ಕುಳಿತುಕೊಂಡಿದ್ದು, ಕಾರನ್ನು ಬಿ.ಎಸ್.ಸಂತೋಷ್ ಬಿನ್ ಬಿ.ವಿ.ಶ್ರೀಧರ್ ರವರು ಚಲಾಯಿಸುತ್ತಿದ್ದರು. ನಾವು ಸಂಜೆ ಸುಮಾರು 5-15 ಗಂಟೆ ಸಮಯದಲ್ಲಿ ಚಿಕ್ಕಬಳ್ಳಾಪುರ ತಾಲ್ಲೂಕು ರಾಮದೇವರ ಗುಡಿ ಬಳಿ ಎನ್.ಹೆಚ್-44 ಟಾರು ರಸ್ತೆಯಲ್ಲಿ ಬರುತ್ತಿದ್ದಾಗ ನಮ್ಮ ಕಾರನ್ನು ಚಲಾಯಿಸುತ್ತಿದ್ದ ಬಿ.ಎಸ್.ಸಂತೋಷ್ ರವರು ಕಾರನ್ನು ಅತಿವೇಗ ಮತ್ತು ಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಮುಂದೆ ಹೋಗುತ್ತಿದ್ದ ಲಾರಿಯನ್ನು ಓವರ್ ಟೇಕ್ ಮಾಡಲು ಹೋಗಿ ಕಾರನ್ನು ಮಣ್ಣಿನ ರಸ್ತೆಯ ಮೇಲೆ ಚಲಾಯಿಸಿದ್ದರಿಂದ ಕಾರಿನ ಎಡ ಹಿಂಭಾಗದ ಟೈರ್ ಬಸ್ಟ್ ಆಗಿ ಕಾರು ಪಲ್ಟಿ ಹೊಡೆದ ಪರಿಣಾಮ ಕಾರಿನ ಮುಂಭಾಗ ಮತ್ತು ಹಿಂಭಾಗ ಸಂಪೂರ್ಣ ಜಖಂಗೊಂಡಿರುತ್ತೆ. ಕಾರಿನಲ್ಲಿದ್ದ ನಮಗೆ ಯಾರಿಗೂ ಯಾವುದೇ ಗಾಯಗಳಾಗಿರುವುದಿಲ್ಲ. ನಮಗೆ ಬೆಂಗಳೂರಿನಲ್ಲಿ ತುರ್ತು ಕೆಲಸವಿದ್ದುದರಿಂದ ಬೆಂಗಳೂರಿಗೆ ಹೋಗಿದ್ದು, ಈ ದಿನ ಠಾಣೆಗೆ ಹಾಜರಾಗಿ ನಮ್ಮ ಕಾರಿಗೆ ಅಪಘಾತವನ್ನುಂಟು ಮಾಡಿರುವ ಬಿ.ಎಸ್.ಸಂತೋಷ್ ರವರ ಮೇಲೆ ಕಾನೂನು ರೀತಿ ಕ್ರಮ ಜರುಗಿಸಬೇಕೆಂದು ಕೋರಿದ ದೂರಾಗಿರುತ್ತೆ.
5. ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆ ಮೊ.ಸಂ.16/2020 ಕಲಂ. 380-457 ಐ.ಪಿ.ಸಿ:-
ದಿನಾಂಕ-18/02/2020 ರಂದು ಬೆಳಿಗ್ಗೆ 11:30 ಗಂಟೆಗೆ ಪಿರ್ಯಾದಿದಾರರಾದ ಶ್ರೀ ನರಸಿಂಹಮೂರ್ತಿ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆನೆಂದರೆ ಚಿಕ್ಕಬಳ್ಳಾಪುರ ನಗರದ ಬಿ,ಬಿ ರಸ್ತೆಯಲ್ಲಿ ಪ್ರೀತಿ ಡಿಜಿಟಲ್ ಸ್ಟೂಡಿಯೋ ವನ್ನು ಸುಮಾರು 12 ವರ್ಷಗಳಿಂದ ನಡೆಸುತ್ತಿದ್ದು ದಿನಾಂಕ-18/02/2020 ರಂದು ರಾತ್ರಿ 08:00 ಗಂಟೆಗೆ ಅಂಗಡಿ ಬಾಗಿಲು ಹಾಕಿಕೊಂಡು ನಂತರ ಬೆಳಿಗ್ಗೆ 07:0 ಗಂಟೆಗೆ ಅಂಗಡಿ ಬಳಿ ಬಂದು ನೋಡಲಾಗಿ ಅಂಗಡಿಯ ಬಾಗಿಲಿನ ಚಿಲಕ ಮತ್ತು ಡೋರ್ ಲಾಕ್ ಗಳನ್ನು ಯಾವುದೋ ವಸ್ತುವಿನಿಂದ ಮುರಿದು ಒಳಗೆ ಹೋಗಿ ಸ್ಟೂಡಿಯೋದಲ್ಲಿದ್ದ ವಸ್ತುಗಳನ್ನು ಚೆಲ್ಲಾಪಿಲ್ಲಿ ಮಾಡಿ ಬೆಲೆ ಬಾಳುವ ವಸ್ತುಗಳಾದ ನಿಕಾನ್ ಕಂಪನಿಯ 04 ಫೊಟೋ ಕ್ಯಾಮಾರಗಳು,ಪ್ಯಾನಾಸಾನಿಕ್ ಕಂನಿಯ 03 ವೀಡಿಯೋ ಕ್ಯಾಮಾರಗಳು ಹಾಗೂ ಕಂಪ್ಯೂಟರ್ ನ 04 ಹಾರ್ಡ್ ಡಿಸ್ಕ್ ಮತ್ತು ಮೆಮೋರಿ ಕಾರ್ಡ್ಗಳಾಗಿದ್ದು ಇದರ ಬೆಲೆ ಸುಮಾರು 5.00000/- ರೂ ಗಳಾಗಿರುತ್ತೆ.ನಂತರ ಪ್ರತಿ ದಿನ ಅಂಗಡಿ ಬಳಿ ಒಬ್ಬ ತಾತನನ್ನು ರಾತ್ರಿ ಸಮಯದಲ್ಲಿ ಮಲಗಲು ಹೇಳಿದ್ದು ಸದರಿ ದಿನದಂದು ರಾತ್ರಿ 01:30 ಗಂಟೆಯಲ್ಲಿ ಮೂರು ಜನ ವ್ಯಕ್ತಿಗಳು ಬಂದು ತಾತನನ್ನು ಬೆದರಿಸಿ ಹೊರಗಡೆ ಕಳುಹಿಸಿರುತ್ತಾರೆ ಎಂತ ತಿಳಿಸಿರುತ್ತಾರೆ. ಸದರಿ ವಸ್ತುಗಳನ್ನು ಯಾರೋ ಕಳ್ಳರು ರಾತ್ರಿ ಸಮಯದಲ್ಲಿ ಕಳವು ಮಾಡಿಕೊಂಡು ಹೋಗಿದ್ದು ಸದರಿ ಆರೋಪಿತರನ್ನು ಮತ್ತು ಮಾಲನ್ನು ಪತ್ತೇ ಮಾಡಿ ಎಂದು ದೂರು ನೀಡಿದರ ಮೇರೆಗೆ ಪ್ರ.ವ.ವರದಿ.
6. ಕೆಂಚಾರ್ಲಹಳ್ಳಿ ಪೊಲೀಸ್ ಠಾಣೆ ಮೊ.ಸಂ.15/2020 ಕಲಂ. 379-447 ರೆ/ವಿ 34 ಐ.ಪಿ.ಸಿ:-
ದಿನಾಂಕ 17/02/2020 ರಂದುಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆಯ ಹೆಚ್ ಸಿ-124 ನರಸಿಂಹಮೂರ್ತಿ ರವರು ಕೃತ್ಯ ನಡೆದ ಸ್ಥಳದ ಆಧಾರದ ಮೇಲೆ ಘನ ನ್ಯಾಯಾಲಯದ ಅನುಮತಿ ಪಡೆದ ಕಡತವನ್ನು ಹಾಜರುಪಡಿಸಿ ಪೊಲೀಸ್ ಐಟಿ ತಂತ್ರಾಶದ ಮೂಲಕ ವರ್ಗಾಯಿಸಿ ಪ್ರಕರಣವನ್ನು ಮಧ್ಯಾಹ್ನ 13-30 ಗಂಟೆಗೆ ಪಡೆದುಕೊಂಡು ದಾಖಲಿಸಿದ ಪ್ರಕರಣದ ಸಾರಾಂಶವೇನೆಂದರೆ: ದಿನಾಂಕ 11-02-2020 ರಂದು ಮದ್ಯಾಹ್ನ 12-00 ಗಂಟೆಗೆ ನ್ಯಾಯಾಲಯ ಕರ್ತವ್ಯದ ಹೆಚ್ ಸಿ 136 ರವರು ನ್ಯಾಯಲಯದ ಪಿಸಿಆರ್ ನಂ 253/2014 ರನ್ನುಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಹಾಜರುಪಡಿಸಿದ್ದು, ಪಿಸಿಆರ್ ನಂ ಸಾರಾಂಶವೇನೆಂದರೆ ಕೃಷ್ಣಾರೆಡ್ಡಿ ಬಿನ್ ವೀರಭದ್ರಪ್ಪ, 46 ವರ್ಷ, ಹೆಬ್ರಿ ಗ್ರಾಮ ಚಿಂತಾಮಣಿ ತಾಲ್ಲೂಕು ರವರಿಗೆ ಗಂಡ್ರಗಾನಹಳ್ಳಿ ಗ್ರಾಮದ ವಾಸಿಯಾದ ಆಂಜನೇಯರೆಡ್ಡಿ ಬಿನ್ ಕೋಟೆ ಲಕ್ಷ್ಮಯ್ಯ ರವರು ಸ್ನೇಹಿತರಾಗಿದ್ದು ಅವರು ಅವರ ಗ್ರಾಮದಲ್ಲಿ ಅವರ ಬಾಬತ್ತು ಗಂಡ್ರಗಾನಹಳ್ಳಿ ಗ್ರಾಮದ ಸರ್ವೆ ನಂ 33 ರಲ್ಲಿ ನೀರಿನ ಕೋಳವೆ ಬಾವಿ ಇದ್ದು ಸದರಿ ನೀರಿನ ಮೋಟರ್ ಮತ್ತು ಸಬ್ ಮರ್ಶಿಬಲ್ ಪಂಪ್ ಮತ್ತು ಕೇಬಲ್ ಅನ್ನು ರಿಪೇರಿ ಮಾಡಲು ದಿನಾಂಕ 03-11-2014 ರಂದು ಹೊರಗೆ ತೆಗೆದಿರುತ್ತಾರೆ. ನಂತರ ಮರುದಿನ ದಿನಾಂಕ 04-11-2014 ರಂದು ಬೆಳಗ್ಗೆ 06-00 ಗಂಟೆಗೆ ಪಿರ್ಯಾದಿ ಮತ್ತು ಆಂಜನೇಯರೆಡ್ಡಿ ರವರು ಸದರಿ ಬೋರ್ ವೆಲ್ ಬಳಿ ಹೋದಾಗ ನಾರಾಯಣಸ್ವಾಮಿ ಬಿನ್ ಲೇಟ್ ವೆಂಕಟೇಶಪ್ಪ, 27 ವರ್ಷ, ಕೃಷ್ಣರಾಜಪುರ ಗ್ರಾಮ ಚಿಂತಾಮಣಿ ತಾಲ್ಲೂಕು ಮತ್ತು ಮಂಜುನಾಥ ಬಿನ್ ಮುನಿವೆಂಕಟನಾಯಕ, 40 ವರ್ಷ, ದೊಡ್ಡಪುರ ಗ್ರಾಮ ಚಿಂತಾಮಣಿ ತಾಲ್ಲೂಕು ರವರು ಸದರಿ ಮೋಟರ್ ಮತ್ತು 20 ಮೀಟರ್ ಉದ್ದದ ಕೇಬಲ್ ವೈರ್ ಅನ್ನು ಕಳ್ಳತನ ಮಾಡಿಕೊಂಡು ಹೋಗುತ್ತಿದ್ದು ಸದರಿಯವರು ಕಿರಚಿಕೊಂಡಾಗ ಅವರು ಮೋಟರ್ ಅನ್ನು ಅಲ್ಲಿಯೇ ಬಿಟ್ಟು 20 ಮೀಟರ್ ಉದ್ದದ ಕೇಬಲ್ ವೈರ್ ಅನ್ನು ತೆಗೆದುಕೊಂಡು ಓಡಿ ಹೋಗಿರುತ್ತಾರೆ. ಸದರಿ ಕೇಬಲ್ ಬೆಲೆ ಸುಮಾರು 3000ರೂ ಆಗಿರುತ್ತೆ, ಆದ್ದರಿಂದ ಆಂಜನೇಯರೆಡ್ಡಿ ರವರ ಜಮೀನಿನಲ್ಲಿ ಅಕ್ರಮ ಪ್ರವೇಶ ಮಾಡಿ ಕಳ್ಳತನ ಮಾಡಿರುವ ಮೇಲ್ಕಂಡ ಆರೋಪಿಗಳ ಮೇಲೆ ಕಾನೂನು ಕ್ರಮ ಜರುಗಿಸಲು ಕೋರಿದ್ದರ ಮೇರೆಗೆ ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣಾ ಮೊ.ಸಂ 85/2020 ಕಲಂ 447.379. ರೆ/ವಿ 34 ಐ.ಪಿ.ಸಿ ರೀತ್ಯಾ ಪ್ರಕರಣ ದಾಖಲಿಸಿಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡು ಕೃತ್ಯ ನಡೆದ ಸ್ಥಳದ ಪಂಚನಾಮೆ ಕ್ರಮ ಜರುಗಿಸಿ ಸ್ಥಳದ ಪಹಣಿ ಪಡೆದು ಕೃತ್ಯ ನಡೆದ ಸ್ಥಳದ ಆಧಾರದ ಮೇಲೆ ಘನ ನ್ಯಾಯಾಲಯದ ಅನುಮತಿ ಪಡೆದು ಕೆಂಚಾರ್ಲಹಳ್ಳಿ ಪೊಲಿಸ್ ಠಾಣೆಗೆ ವರ್ಗಾವಣೆ ನೀಡಿದ್ದರ ಮೇರೆಗೆ ಠಾಣಾ ಮೊ.ಸಂ. 15/2020 ಕಲಂ 447.379. ರೆ/ವಿ 34 ಐ.ಪಿ.ಸಿ ರೀತ್ಯಾ ಪ್ರಕರಣ ದಾಖಲಿಸಿಕೊಂಡಿರುತ್ತೆ.
7. ಕೆಂಚಾರ್ಲಹಳ್ಳಿ ಪೊಲೀಸ್ ಠಾಣೆ ಮೊ.ಸಂ.16/2020 ಕಲಂ. 15(ಎ), 32(3) ಕೆ.ಇ ಆಕ್ಟ್:-
ದಿನಾಂಕ 17/02/2020 ರಂದು ಸಂಜೆ 5-30 ಗಂಟೆಗೆ ಚಿಕ್ಕಬಳ್ಳಾಪುರ ಜಿಲ್ಲೆಯ ಡಿ.ಸಿ.ಬಿ /ಸಿ.ಇ.ಎನ್ ಪೊಲೀಸ್ ಠಾಣೆಯ ಸಿ.ಹೆಚ್.ಸಿ 239 ಮಲ್ಲಿಕಾರ್ಜುನ . ರವರು ನೀಡಿದ ವರದಿ ದೂರಿನ ಸಾರಾಂಶವೇನೆಂದರೆ: ಚಿಕ್ಕಬಳ್ಳಾಪುರ ಜಿಲ್ಲೆಯ ಡಿ.ಸಿ.ಬಿ /ಸಿ.ಇ.ಎನ್ ಪೊಲೀಸ್ ಠಾಣೆಯ ಪಿ.ಐ. ಶ್ರೀ.ರಾಜಣ್ಣ ಎನ್ .ರವರ ಆದೇಶದಂತೆ ಸಿ.ಹೆಚ್.ಸಿ 239 ಮಲ್ಲಿಕಾರ್ಜುನ .ಆದ ತನಗೂ ಹಾಗೂ ಸಿ.ಹೆಚ್.ಸಿ 198 ಮಂಜುನಾಥ ರವರುಗಳಿಗೆ ಚಿಂತಾಮಣಿ ತಾಲ್ಲೂಕಿನಲ್ಲಿ ಕಾನೂನು ಬಾಹಿರ ಚಟುವಟಿಕೆಗಳ ಪತ್ತೆ ಕರ್ತವ್ಯಕ್ಕೆ ನೇಮಕ ಮಾಡಿದ್ದು ಅದರಂತೆ ನಾವುಗಳು ಚಿಂತಾಮಣಿ ತಾಲ್ಲೂಕಿನ ಗೌಡನಹಳ್ಳಿ ಗ್ರಾಮದಲ್ಲಿ ಮದ್ಯಾಹ್ನ ಸುಮಾರು 3-15 ಗಂಟೆ ಸಮಯದಲ್ಲಿ ಗಸ್ತು ಮಾಡುತ್ತಿದ್ದಾಗ ಬಾತ್ಮಿದಾರರಿಂದ ಬಂದಂತಹ ಖಚಿತ ಮಾಹಿತಿಯ ಮೇರೆಗೆ ಪಂಚರೊಂದಿಗೆ ಗೌಡನಹಳ್ಳಿ ಗ್ರಾಮದ ನರಸಿಂಹಪ್ಪ ಬಿನ್ ಲೇಟ್ ಚೌಡಪ್ಪ ರವರ ಪೆಟ್ಟಿಗೆಯ ಚಿಲ್ಲರೆ ಅಂಗಡಿಯ ಮುಂಭಾಗ ದಾಳಿ ಮಾಡಿ ಸ್ಥಳದಲ್ಲಿದ್ದ 1.OLD TAVERN WHISKEY ಮದ್ಯ ತುಂಬಿದ 180 ಎಮ್.ಎಲ್.ನ 10 ಟೆಟ್ರಾ ಪಾಕೆಟ್ ಗಳು 2. ಎರಡು ಪ್ಲಾಸ್ಟಿಕ್ ಗ್ಲಾಸ್ ಗಳು 3. ಒಂದು ಲೀಟರ್ ನೀರಿನ ಖಾಲಿ ವಾಟರ್ ಬಾಟಲ್ , 4. BANGALORE WHISKEY ಯ 90 ಎಮ್.ಎಲ್.ನ ಎರಡು ಖಾಲಿ ಟೆಟ್ರಾ ಪಾಕೇಟ್ ಗಳನ್ನು ಪಂಚರ ಸಮಕ್ಷಮ ಅಮಾನತ್ತು ಪಡಿಸಿಕೊಂಡಿದ್ದು, ಮದ್ಯಪಾನ ಮಾಡಲು ಅವಕಾಶ ಮಾಡಿಕೊಟ್ಟ ಆಸಾಮಿಯಾದ ನರಸಿಂಹಪ್ಪ ಬಿನ್ ಲೇಟ್ ಚೌಡಪ್ಪ,54 ವರ್ಷ,ವಕ್ಕಲಿಗರು, ಜಿರಾಯ್ತಿ. ಚಿಲ್ಲರೆ ಅಂಗಡಿ ವ್ಯಾಪಾರ, ಗೌಡನಹಳ್ಳಿ ಗ್ರಾಮ ಚಿಂತಾಮಣಿ ತಾಲ್ಲೂಕು ರವರು ಓಡಿ ಹೋಗಿದ್ದು, ಮೇಲ್ಕಂಡ ಸ್ಥಳದಲ್ಲಿ ವಶಪಡಿಸಿಕೊಂಡ ಮದ್ಯವು ಒಟ್ಟು 1800 ಎಮ್.ಎಲ್. ಇದ್ದು ಇದರ ಬೆಲೆ ಒಟ್ಟು 741 /- ರೂಗಳಾಗಿರುತ್ತೆ ಮಾಲನ್ನು ನಿಮ್ಮ ವಶಕ್ಕೆ ಪಡೆದು ಯಾವುದೇ ಪರವಾನಿಗೆ ಪಡೆಯದೇ ತನ್ನ ಪೆಟ್ಟಿಗೆ ಚಿಲ್ಲರೆ ಅಂಗಡಿಯ ಮುಂಭಾಗ ಕಾನೂನು ಬಾಹಿರವಾಗಿ ಸಾರ್ವಜನಿಕರಿಗೆ ಮದ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟ ನರಸಿಂಹಪ್ಪ ಬಿನ್ ಲೇಟ್ ಚೌಡಪ್ಪ ರವರ ಮೇಲೆ ಮುಂದಿನ ಕಾನೂನು ಕ್ರಮ ಜರುಗಿಸಲು ನೀಡಿದ ವರದಿ ದೂರಿನ ಸಾರಾಂಶವಾಗಿರುತ್ತೆ.
8. ಮಂಚೇನಹಳ್ಳಿ ಪೊಲೀಸ್ ಠಾಣೆ ಮೊ.ಸಂ.48/2020 ಕಲಂ. 323-324-504-506 ರೆ/ವಿ 34 ಐ.ಪಿ.ಸಿ :-
ದಿನಾಂಕ: 17/02/2020 ರಂದು ಎ.ಎಸ್.ಐ ವಿಠ್ಠಲ್ ರಾವ್ ರವರು ಗೌರಿಬಿದನೂರು ಸರ್ಕಾರಿ ಆಸ್ಪತ್ರೆಯಿಂದ ಗಾಯಾಳು ಜೂಲಪ್ಪ ರವರ ಹೇಳಿಕೆಯನ್ನು ಪಡೆದುಕೊಂಡು ಠಾಣೆಯಲ್ಲಿ ಹಾಜರುಪಡಿಸಿದ್ದರ ಸಾರಾಂಶವೆನೆಂದರೆ, ನಮಗೂ ಹಾಗೂ ನಮ್ಮ ಗ್ರಾಮದ ನಮ್ಮ ಮನೆಯ ಪಕ್ಕದಲ್ಲಿರುವ ಆವುಲಪ್ಪ ರವರಿಗೂ ನಮಗೂ ಮನೆಯ ಪಕ್ಕದಲ್ಲಿರುವ ಪಂಚಾಯ್ತಿ ದಾರಿ ಇದ್ದು ಈ ದಾರಿಯಲ್ಲಿ ನಾವಿಬ್ಬರೂ ಸಹಾ ಓಡಾಡಿಕೊಂಡು ಇದ್ದೆವು ಇತ್ತೀಚೆಗೆ ಆವುಲಪ್ಪ ರವರು ನಮ್ಮ ಬಾಬತ್ತು ಕುರಿಗಳನ್ನು ದಾರಿಯಲ್ಲಿ ಕಟ್ಟುತ್ತಿದ್ದು ನಾವು ಹೋಗಲಿ ಬಿಡು ಎಂತ ಸುಮ್ಮನಿದ್ದೆವು ನಂತರ ದಿ: 16/02/2020 ರಂದು ಬೆಳಿಗ್ಗೆ 7-00 ಗಂಟೆಯಲ್ಲಿ ಕುರಿಗಳನ್ನು ಇಲ್ಲಿ ಕಟ್ಟಬೇಡಿ ಓಡಾಡಲು ತೊಂದರೆಯಾಗುತ್ತೆ ಎಂತ ಮಂಜುಳಾ ರವರಿಗೆ ತಿಳಿಸಿದೆ ಆಗ ಅವರು ಹಾಗೂ ಅವರ ಗಂಡ ಕೃಷ್ಣಪ್ಪ ರವರು ಅಲ್ಲಿಂದ ಕುರಿಗಳನ್ನು ಹೊಡೆದುಕೊಂಡು ಹೋದರು ನಂತರ ಕೃಷ್ಣಪ್ಪ ರವರು ಮಂಜುಳಾ ರವರನ್ನು ಯಾಕೆ ನಾವು ಸರ್ಕಾರಿ ಜಾಗವನ್ನು ಸುಮಾರು ವರ್ಷಗಳಿಂದ ಇದ್ದೆವೆ ಈಗ ಏಕೆ ಖಾಲಿ ಮಾಡೋದು ಎಂತ ಹೆಂಡತಿ ಗಂಡ ಒಬ್ಬರಿಗೊಬ್ಬರು ಮಾತುಗಳನ್ನು ಬೆಳೆಸಿಕೊಂಡು ಕೃಷ್ಣಪ್ಪ ರವರು ಅವರ ಹೆಂಡತಿ ಮಂಜುಳಾ ರವರು ತಳ್ಳಿದರು ನಂತರ ಸೊಂಟಕ್ಕೆ ನೋವು ಎಂತ ಕಿರುಚಿಕೊಂಡಾಗ ಗ್ರಾಮಸ್ಥರು ಹಾಗೂ ಕೃಷ್ಣಪ್ಪ ರವರು ಯಾವುದೋ ದುರುದ್ದೇಶದಿಂದ ಗೌರಿಬಿದನೂರು ಆಸ್ಪತ್ರೆಗೆ ಕರೆದುಕೊಂಡು ಹೋದರು ಹೀಗಿರುವಾಗ ಲೋಪರ್ ನನ್ನ ಮಕ್ಕಳಾ ನೋಡು ಏನ್ಮಾಡುತ್ತೀಯಾ ಎಂತ ಬೆದರಿಕೆ ಹಾಕಿ ಹೊರಟು ಹೋದರು ಅಲ್ಲಿಂದ ಗ್ರಾಮಸ್ಥರು ಮಾತನಾಡೋಣ ಹೋಗಿ ಎಂತ ತಿಳಿಸಿದ್ದು ನಾವು ಮನೆಗೆ ಹೊರಟು ಹೋದೆವು ನಂತರ ದಿ: 17/02/2020 ರಂದು ಬೆಳಿಗ್ಗೆ 7-00 ಗಂಟೆಗೆ ಆವುಲಪ್ಪ ಬಿನ್ ಪೆಟ್ರಿಗಂಗಪ್ಪ, ಗಂಗರಾಜು ಬಿನ್ ಕೃಷ್ಣಪ್ಪ ರವರು ಮನೆಯ ಬಳಿ ಬಂದು ಅವಾಚ್ಯ ಶಬ್ದಗಳಿಂದ ಬೈಯುತ್ತಿದ್ದು ಆಗ ನಾನು ನನ್ನ ಮಗ ರಘು ರವರು ಮತ್ತು ನನ್ನ ಮಗಳಾದ ಅನಿತಾ ಬಿನ್ ಆಂಜಿನಪ್ಪ ರವರು ಯಾಕೇ ಈ ರೀತಿ ಗಲಾಟೆ ಮಾಡುತ್ತೀಯಾ ಎಂತ ಕೇಳುತ್ತಿದ್ದಂತೆ ಮನೆಯಲ್ಲಿದ್ದ ಆವುಲಪ್ಪ ರವರು ಕುಡಗೋಲನ್ನು ತೆಗೆದುಕೊಂಡು ಸಾಯಿಸುವುದಾಗಿ ಪ್ರಾಣ ಬೆದರಿಕೆ ಹಾಕಿದರು ನಂತರ ಅಲ್ಲೆ ಇದ್ದ ನನ್ನ ಮಗ ರಘು ಹಾಗೂ ಅನಿತಾ ರವರಿಗೆ ಆವುಲಪ್ಪ ರವರು ಗಂಗರಾಜು ರವರು ಇಟ್ಟಿಗೆಗಳಿಂದ ನನ್ನ ಮೈಮೇಲೆ ಹೊಡೆದು ಮೂಗೇಟುಗಳನ್ನುಂಟು ಮಾಡಿ ಗಂಗರಾಜು ರವರು ತನ್ನ ಕೈ ಬೆರಳು ಉಗುರುಗಳಿಂದ ನನ್ನ ಕುತ್ತಿಗೆಯ ಹಿಂಭಾಗ ಹಾಗೂ ಎಡಕೈ ಮೊಣಕೈ ಮೇಲೆ ಪರಚಿಗಾಯಪಡಿಸಿದ ನಂತರ ಅಲ್ಲೆ ಇದ್ದ ನಮ್ಮ ಗ್ರಾಮದ ಮುದ್ದಪ್ಪ ಬಿನ್ ಲೇಟ್ ದೊಡ್ಡಗಂಗಪ್ಪ, ಸುರೇಶ್ ಬಿನ್ ರಾಮಾಂಜಿನಪ್ಪ ರವರು ಮೇಲ್ಕಂಡವರಿಂದ ಬಿಡಿಸಿದರು ನಮಗೆ ಕೈ ಮತ್ತು ಮೈನೋವು ಜಾಸ್ತಿಯಾದ್ದರಿಂದ ಮುದ್ದಪ್ಪ ಬಿನ್ ದೊಡ್ಡಗಂಗಪ್ಪ ರವರು ಯಾವುದೋ ಒಂದು ಆಟೋದಲ್ಲಿ ಕರೆದುಕೊಂಡು ಬಂದು ಗೌರಿಬಿದನೂರು ಸರ್ಕಾರಿ ಆಸ್ಪತ್ರೆಗೆ ತಂದು ದಾಖಲುಮಾಡಿದರು ಸದರಿ ಮೇಲ್ಕಂಡ ಆವುಲಪ್ಪ ಮತ್ತು ಗಂಗರಾಜು ರವರು ವಿನಾಕಾರಣ ಗಲಾಟೆ ಮಾಡಿ ಹೊಡೆದು ಅವಾಚ್ಯ ಶಬ್ದಗಳಿಂದ ಬೈದು ಪ್ರಾಣಬೆದರಿಕೆ ಹಾಕಿರುವವರ ವಿರುದ್ದ ಕ್ರಮ ಜರುಗಿಸಬೇಕಾಗಿ ಕೋರಿ ಪ್ರ.ವ.ವರದಿ.
9. ಮಂಚೇನಹಳ್ಳಿ ಪೊಲೀಸ್ ಠಾಣೆ ಮೊ.ಸಂ.49/2020 ಕಲಂ. 279-337 ಐ.ಪಿ.ಸಿ & 187 ಐ.ಪಿ.ಸಿ :-
ದಿನಾಂಕ 17/02/2019 ರಂದು ಸಂಜೆ 18-30 ಗಂಟೆಗೆ ಪಿರ್ಯಾದಿದಾರರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ.ನನ್ನ ಅಣ್ಣನ ಮಗನಾದ ಕೆ.ಜಿ.ಕಮಲ್ ಕುಮಾರ್ ಬಿನ್ ಲೇಟ್ ಗಂಗಾಧರ ಸುಮಾರು 24 ವರ್ಷ ರವರು ತನ್ನ ಅಣ್ಣನ ಬಾಬತ್ತು ಕೆಎ 40 ವೈ 5599 ದ್ವಿ ಚಕ್ರ ವಾಹನದಲ್ಲಿ ದಿನಾಂಕ 11/02/2020 ರಂದು ರಾತ್ರಿ ಸುಮಾರು 9-15 ರ ಸಮಯದಲ್ಲಿ ಕೆಲಸದ ನಿಮಿತ್ತ ಚಿಕ್ಕಬಳ್ಳಾಪುರದಿಂದ ಹಿಂದೂಪುರಕ್ಕೆ ಹೋಗುವ ದಾರಿ ಮಧ್ಯದಲ್ಲಿ ಕನಗಾನಕೊಪ್ಪದ ನ್ಯೂ ನಿತ್ಯ ರುಚಿ ಹೋಟೆಲ್ ನ ಮುಂಭಾಗದಲ್ಲಿ ಚರಂಡಿ ಕಾಮಗಾರಿ ನಡೆಯುತ್ತಿದ್ದು ಅದನ್ನು ಗಮನಿಸಿ ತನ್ನ ವಾಹನವನ್ನು ನಿಧಾನ ಮಾಡಿದ್ದಾನೆ.ಅದೇ ಸಮಯಕ್ಕೆ ಹಿಂದಿನಿಂದ ಬರುತ್ತಿದ್ದ ಅಪರಿಚಿತ ವಾಹನವು ಡಿಕ್ಕಿ ಹೊಡೆದ ಕಾರಣದಿಂದ ಈತ ರಭಸವಾಗಿ ಹೋಗಿ ರಸ್ತೆಯ ವಿಭಜಕದ ಬೋರ್ಡಿಗೆ ಬಿದ್ದು ತಲೆಗೆ ಪೆಟ್ಟು ಬಿದ್ದು ಪ್ರಜ್ಞಾಹೀನನಾಗಿ ಬಿದ್ದಿರುತ್ತಾನೆ. ಆಗ ಸ್ಥಳಿಯರು 108 ರ ವಾಹನದಲ್ಲಿ ಚಿಕ್ಕಬಳ್ಳಾಪುರ ಜಿಲ್ಲಾ ಆಸ್ಪತ್ರೆಗೆ ಸೇರಿಸಿರುತ್ತಾರೆ.ವೈದ್ಯರ ಸಲಹೆಯಂತೆ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿಗೆ ಕರೆದುಕೊಂಡು ಹೋಗಿ ಎಮ್.ಎಸ್.ರಾಮಯ್ಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುತ್ತಿದ್ದಾಗ ದಿನಾಂಕ 16/02/2020 ರಂದು ಪ್ರಜ್ಞೆ ಬಂದಿದ್ದು ಆತನನ್ನು ವಿಚಾರಿಸಲಾಗಿ ಆತನು ಚಲಾಯಿಸುತ್ತಿದ್ದ ದ್ವಿಚಕ್ರ ವಾಹನಕ್ಕೆ ರಾತ್ರಿ ಸುಮಾರು 9-15 ಗಂಟೆಯಲ್ಲಿ ಹಿಂಬಾಗದಿಂದ ಒಂದು ಕಾರು ಡಿಕ್ಕಿ ಹೊಡೆದ ಕಾರಣ ತಾನು ಬಿದ್ದು ಹೋಗಿರುವುದಾಗಿ ಹಾಗೂ ಕಾರಿನ ನಂಬರನ್ನು ನೋಡಲಾಗಿ KA 01 Z 5182 ಆಗಿರುತ್ತದೆ. ಸದರಿ ಕಾರಿನ ಚಾಲಕನು ಅಪಘಾತ ಪಡಿಸಿ ಸ್ಥಳದಲ್ಲಿ ವಾಹನ ನಿಲ್ಲಿಸದೇ ಹೊರಟು ಹೋಗಿರುವುದಾಗಿ ತಿಳಿಸಿರುತ್ತಾನೆ. ನಾನು ಆಸ್ಪತ್ರೆಯ ಬಳಿ ಇದ್ದುದ್ದರಿಂದ ಈ ದಿನ 17/02/2020 ರಂದು ತಡವಾಗಿ ದೂರನ್ನು ನೀಡುತ್ತಿದ್ದು, ಅಪಘಾತ ಪಡಿಸಿದ ಕಾರಿನ ಚಾಲಕನ ವಿರುದ್ದ ಕಾನೂನಿನ ರೀತ್ಯ ಕ್ರಮ ಜರುಗಿಸಲು ಕೋರಿ ಕೊಟ್ಟ ದೂರು.
10. ಪಾತಪಾಳ್ಯ ಪೊಲೀಸ್ ಠಾಣೆ ಮೊ.ಸಂ.11/2020 ಕಲಂ. 87 ಕೆ.ಪಿ ಆಕ್ಟ್ :-
ದಿನಾಂಕ:17-02-2020 ರಂದು ಸಂಜೆ 04-00 ಗಂಟೆ ಸಮಯದಲ್ಲಿ ನ್ಯಾಯಾಲಯದ ಪಿಸಿ 174 ರವರು ನ್ಯಾಯಾಲಯದ ಅನುಮತಿಯನ್ನು ಪಡೆದು ತಂದು ಹಾಜರುಪಡಿಸಿದರ ಸಾರಾಂಶವೆನೇಂದರೆ. ದಿನಾಂಕ 15/02/2020 ರಂದು ಸಂಜೆ 5-00 ಗಂಟೆಗೆ ಪಿಎಸ್ಐ ಪಾತಪಾಳ್ಯ ಪೊಲೀಸ್ ಠಾಣೆರವರು ಠಾಣೆಗೆ ಬಂದು ನೀಡಿದ ವರದಿಯ ಸಾರಾಂಶವೇನೆಂದರೆ ದಿನಾಂಕ:15/02/2020 ರಂದು ಮದ್ಯಾಹ್ನ 03-00 ಗಂಟೆಗೆ ಪಾತಪಾಳ್ಯ ಪೊಲೀಸ್ ಠಾಣಾ ಸರಹದ್ದು ಜೂಲಪಾಳ್ಯ ಗ್ರಾಮದ ಬಳಿ ಇರುವ ಸರ್ಕಾರಿ ಕೆರೆಯಲ್ಲಿ ಯಾರೋ ಆಸಾಮಿಗಳು ಹಣವನ್ನು ಪಣವನ್ನಾಗಿಟ್ಟುಕೊಂಡು ಆಕ್ರಮವಾಗಿ ಅಂದರ್ ಬಾಹರ್ ಇಸ್ಪೀಟ್ ಜೂಜಾಟ ಆಡುತ್ತಿರುವುದಾಗಿ ಬಂದ ಖಚಿತ ವರ್ತಮಾನದ ಮೇರೆಗೆ ಸಿಬ್ಬಂದಿಯವರು ಹಾಗೂ ಪಂಚರೊಂದಿಗೆ ದ್ವಿ ಚಕ್ರ ವಾಹನಗಳಲ್ಲಿ ಜೂಲಪಾಳ್ಯ ಗ್ರಾಮದ ಬಳಿ ಇರುವ ಸರ್ಕಾರಿ ಕೆರೆಯ ಪಕ್ಕದಲ್ಲಿ ದ್ವಿ ಚಕ್ರ ವಾಹನಗಳನ್ನು ನಿಲ್ಲಿಸಿ ಮರೆಯಲ್ಲಿ ನಿಂತು ನೋಡಲಾಗಿ ಯಾರೋ ಆಸಾಮಿಗಳು 100 ರೂ ಅಂದರ್, 100 ರೂ ಬಾಹರ್ ಎಂದು ಕೂಗಿಕೊಂಡು ಆಕ್ರಮವಾಗಿ ಅಂದರ್ ಬಾಹರ್ ಇಸ್ಪೀಟ್ ಜೂಜಾಟ ಆಡುತ್ತಿದ್ದವರ ಮೇಲೆ ನಾವು ದಾಳಿ ಮಾಡಲು ಸುತ್ತುವರೆದು ಜೂಜಾಟ ಆಡುತ್ತಿದ್ದವರನ್ನು ಎಲ್ಲಿಯೂ ಕದಲಬೇಡಿ ಎಂದು ಎಚ್ಚರಿಕೆ ನೀಡಿ ಅವರನ್ನು ಹಿಡಿದುಕೊಂಡು ಆಸಾಮಿಗಳ ಹೆಸರು ಮತ್ತು ವಿಳಾಸ ಕೇಳಲಾಗಿ 1) ನರಸಿಂಹಪ್ಪ ಬಿನ್ ಸಿದ್ದಪ್ಪ, 40 ವರ್ಷ, ನಾಯಕ ಜನಾಂಗ ಜಿರಾಯ್ತೀ, ಬಳೆ ಹೊಸಹಳ್ಳಿ ಗ್ರಾಮ ಬಾಗೇಪಲ್ಲಿ ತಾಲ್ಲೂಕು 2) ಕದಿರಪ್ಪ ಬಿನ್ ವೆಂಕಟರಾಯಪ್ಪ, 51 ವರ್ಷ, ಆದಿ ಕರ್ನಾಟಕ, ಜಿರಾಯ್ತಿ, ಜೂಲಪಾಳ್ಯ ಗ್ರಾಮ, ಬಾಗೇಪಲ್ಲಿ ತಾಲ್ಲೂಕು 3) ಗಂಗಿರೆಡ್ಡಿ ಬಿನ್ ನಲಪರೆಡ್ಡಿ, 68 ವರ್ಷ, ವಕ್ಕಲಿಗ ಜನಾಂಗ, ಜಿರಾಯ್ತಿ, ನಡುಂಪಲ್ಲಿ ಗ್ರಾಮ, ಬಾಗೇಪಲ್ಲಿ ತಾಲ್ಲೂಕು 4) ಸುರೆಶ ಬಿನ್ ಮುನಿ ವೆಂಕಟರೆಡ್ಡಿ 45 ವರ್ಷ ವಕ್ಕಲಿಗ ಜನಾಂಗ ಜಿರಾಯ್ತಿ ಆಚಗಾನಪಲ್ಲಿ ಗ್ರಾಮ ಬಾಗೇಪಲ್ಲಿ ತಾಲ್ಲೂಕು ಎಂದು ತಿಳಿಯಿತು. ನಂತರ ಸ್ಥಳದಲ್ಲಿದ್ದ ಮೇಲ್ಕಂಡ 01 ರಿಂದ 04 ರವರೆಗಿನ ಆಸಾಮಿಗಳನ್ನು ವಶಕ್ಕೆ ಪಡೆದು ಪಣಕ್ಕಿಟ್ಟಿದ್ದ 1420/- ರೂ ನಗದು ಹಣವನ್ನು ಒಂದು ಹಳೆಯ ಪ್ಲಾಸ್ಟಿಕ್ ಚೀಲ, ಮತ್ತು 52 ಇಸ್ಪೀಟ್ ಎಲೆಗಳನ್ನು ಪಂಚರ ಸಮಕ್ಷಮ ಪಂಚನಾಮೆಯ ಮೂಲಕ ಆಮಾನತ್ತು ಪಡಿಸಿಕೊಂಡು ಆರೋಪಿಗಳು ಮತ್ತು ಅಮಾನತ್ತು ಪಡಿಸಿದ ಮಾಲುಗಳೊಂದಿಗೆ ಠಾಣೆಗೆ ವಾಪ್ಪಸ್ಸಾಗಿ ಮೇಲ್ಕಂಡವರ ವಿರುದ್ದ ಮುಂದಿನ ಕ್ರಮ ಜರುಗಿಸಲು ನೀಡಿದ ವರದಿ ಮೇರೆಗೆ ಠಾಣಾ ಎನ್.ಸಿ.ಆರ್ 16/2020 ರೀತ್ಯಾ ದಾಖಲಿಸಿಕೊಂಡಿರುತ್ತೆ. ಇದು ಅಸಂಜ್ಞೆಯ ಪ್ರಕರಣವಾಗಿದ್ದರಿಂದ ಘನ ನ್ಯಾಯಾಲಯದಿಂದ ಸಂಜ್ಞೆಯ ಪ್ರಕರಣವಾಗಿ ದಾಖಲಿಸಲು ಅನುಮತಿಯನ್ನು ಪಡೆದು ಠಾಣಾ ಮೊ. ಸಂ. 11/2020 ಕಲಂ 87 ಕೆ.ಪಿ.ಆಕ್ಟ್ ರೀತ್ಯಾ ಪ್ರಕರಣ ದಾಖಲಿಸಿಕೊಂಡಿರುತ್ತೆ.