ದಿನಾಂಕ :18/01/2021 ರ ಅಪರಾಧ ಪ್ರಕರಣಗಳು

 1. ಬಾಗೇಪಲ್ಲಿ ಪೊಲೀಸ್ ಠಾಣೆ ಮೊ.ಸಂ.14/2021 ಕಲಂ. 379 ಐ.ಪಿ.ಸಿ :-

     ದಿನಾಂಕ:18.01.2021 ರಂದು  ಮದ್ಯಾಹ್ನ 1-40 ಗಂಟೆಗೆ ಪಿರ್ಯಾದಿದಾರರಾದ ಶ್ರೀ .ಜಿ. ಪ್ರಭಾಕರ ನಾಯ್ಡು ಬಿನ್ ಶ್ರೀನಿವಾಸಲು ನಾಯ್ಡು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ನಾನು  ಬಾಗೇಪಲ್ಲಿ ಟೌನ್ ಕೊತ್ತಪಲ್ಲಿ ರಸ್ತೆಯಲ್ಲಿರುವ 7ನೇ ವಾರ್ಡನಲ್ಲಿ ವಾಸವಾಗಿರುತ್ತೆನೆ. ನಾನು ಕೆ.ಎ-40-ಎಕ್ಸ್-4371 ನೊಂದಣಿ ಸಂಖ್ಯೆಯ ಹೋಂಡಾ ಆಕ್ಟಿವಾ ದ್ವಿ ಚಕ್ರ ವಾಹನವನ್ನು ಹೊಂದಿರುತ್ತೇನೆ. ದಿನಾಂಕ.13/01/20201 ರಂದು ರಾತ್ರಿ ಎಂದಿನಂತೆ ನಾನು ಅಂಗಡಿಯಿಂದ ಮನೆಗೆ ಬಂದು ಮನೆ ಕಾಂಪೌಂಡ್ ಪಕ್ಕದಲ್ಲಿ ನನ್ನ ಬಾಬತ್ತು ಕೆ.ಎ-40-ಎಕ್ಸ್-4371 ಹೋಂಡಾ ಆಕ್ಟಿವಾ ದ್ವಿ ಚಕ್ರ ವಾಹನವನ್ನು ನಿಲ್ಲಿಸಿ, ಮನೆಯೊಳಗೆ ಹೋಗಿರುತ್ತೇನೆ. ನಂತರ ದಿನಾಂಕ 14/01/2021 ರಂದು ಬೆಳಗ್ಗೆ 6-00 ಗಂಟೆಗೆ ಬಂದು ನೋಡಲಾಗಿ ನನ್ನ ಬಾಬತ್ತು ದ್ವಿ ಚಕ್ರವಾಹನ ಸ್ಥಳದಲ್ಲಿ ಇರಲಿಲ್ಲ. ನಂತರ ನಾನು ಎಲ್ಲಾ ಕಡೆ ಹುಡುಕಾಡಿದರೂ ಸಿಕ್ಕಿರುವುದಿಲ್ಲ. ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ .ಆದ್ದರಿಂದ ನಮ್ಮ ಮನೆಯ ಕಾಂಪೌಂಡ್ ಪಕ್ಕದಲ್ಲಿ ನಿಲ್ಲಿಸಿದ್ದ ನನ್ನ ಬಾಬತ್ತು ಕೆ.ಎ-40-ಎಕ್ಸ್-4371 ನೊಂದಣಿ ಸಂಖ್ಯೆಯ ಹೋಂಡಾ ಆಕ್ಟಿವಾ ದ್ವಿ ಚಕ್ರ ವಾಹನವನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು ನನ್ನ ದ್ವಿ ಚಕ್ರ ವಾಹನವನ್ನು ಪತ್ತೆ ಮಾಡಿಕೊಡಬೇಕಾಗಿ ಹಾಗೂ ಕಳ್ಳರನ್ನು ಪತ್ತೆ ಮಾಡಿ ಕಾನೂನು ಕ್ರಮ ಕೈಗೊಳ್ಳ ಬೇಕೆಂದು ಕೋರಿ ಈ ದಿನ ತಡವಾಗಿ ಬಂದು ದೂರನ್ನು ನೀಡಿರುತ್ತೇನೆ.  ಇದರ ಬೆಲೆ ಸುಮಾರು 10,000/- ರೂ ಆಗಿರುತ್ತೆ.

 1. ಸಿ.ಇ.ಎನ್ ಪೊಲೀಸ್ ಠಾಣೆ ಮೊ.ಸಂ.05/2021 ಕಲಂ. 419,420 ಐ.ಪಿ.ಸಿ & 66(C),66(D) INFORMATION TECHNOLOGY  ACT 2000 :-

     ದಿನಾಂಕ:19-01-2021 ರಂದು ಪಿರ್ಯಾದಿದಾರರಾದ ಕುಮಾರಿ ತನ್ಸೀರಾ ಫಿರ್ದೋಸ್ ಬಿನ್ ಸೈಯದ್ ಇನಾಯತುಲ್ಲಾ. 23 ವರ್ಷ, ಎಮ್.ಬಿ.ಎ ವಿಧ್ಯಾರ್ಥಿ. ಟೀಚರ್ಸ್ ಕಾಲೋನಿ. ಎಚ್,ಎಸ್ ಗಾರ್ಡನ್, ಚಿಕ್ಕಬಳ್ಳಾಪುರ. ಮೊಬೈಲ್ ನಂಬರ್- 7022848458ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ನಾನು ಚಿಕ್ಕಬಳ್ಳಾಪುರ ನಗರದಲ್ಲಿರುವ ಯೂನಿಯನ್ ಬ್ಯಾಂಕಿನಲ್ಲಿ 170810100053434 ಸಂಖ್ಯೆಯ ಉಳಿತಾಯ ಖಾತೆಯನ್ನು ಹೊಂದಿದ್ದು, ನನಗೆ ಎಟಿಎಮ್  ಕಾರ್ಡ್ ಅವಶ್ಯಕತೆ ಇದ್ದುದರಿಂದ 6079101708010417 ಸಂಖ್ಯೆಯ  ಎಟಿಎಮ್ ಕಾರ್ಡ್ ನ್ನು ಪಡೆದಿರುತ್ತೇನೆ. ಹಾಗೂ ಚಿಕ್ಕಬಳ್ಳಾಪುರ ನಗರದಲ್ಲಿರುವ ಕೆನರಾ ಬ್ಯಾಂಕಿನಲ್ಲಿ 0487101211614 ಸಂಖ್ಯೆಯ ಉಳಿತಾಯ ಖಾತೆಯನ್ನು ಹಾಗೂ 4601330487017424 ಸಂಖ್ಯೆಯ  ಎಟಿಎಮ್ ಕಾರ್ಡ್ ನ್ನು ಪಡೆದಿರುತ್ತೇನೆ. ನಾನು ಎಮ್.ಬಿ.ಎ ಪದವಿ ಮುಗಿಸಿದ್ದು ಕೆಲಸಕ್ಕಾಗಿ ಶೈನ್.ಕಾಮ್ ನಲ್ಲಿ ಆನ್ ಲೈನ್ ನಲ್ಲಿ ಅರ್ಜಿಯನ್ನು ಸಲ್ಲಿಸಿಕೊಂಡಿರುತ್ತೇನೆ, ಈಗಿರುವಲ್ಲಿ ದಿನಾಂಕ:16-01-2021 ರಂದು 8826827654 ಹಾಗೂ 9654935878 ಸಂಖ್ಯೆಯ ಮೊಬೈಲ್ ನಿಂದ ನನಗೆ ಪೋನ್ ಮಾಡಿ ನಿಮಗೆ ಟಿಸಿಎಸ್ ಕಂಪನಿಯಲ್ಲಿ ಕೆಲಸ ಕನ್ಫರ್ಮ್ ಆಗಿದೆ ಎಂತ ತಿಳಿಸಿ ನೀವು ಮೊದಲು ಮೊಬಿವಿಕ್  ಆಫ್ ನಲ್ಲಿ 20 ರೂ ಹಾಕಿ ರಿಜಿಸ್ಟರ್ ಮಾಡಿಸಿಕೊಳ್ಳಿ ಎಂತ ತಿಳಿಸಿದ್ದು ಅದರಂತೆ ನಾನು ಪ್ರಯತ್ನ ಪಡಲಾಗಿ 20 ರೂಗಳನ್ನು ಸದರಿ ಆಪ್ ನಲ್ಲಿ ಹಾಕಲು ಆಗಿರುವುದಿಲ್ಲ, ನಂತರ ವಿಚಾರವನ್ನು ಅವರಿಗೆ ತಿಳಿಸಲಾಗಿ ಅವರು ಆಯ್ತು ನಿಮ್ಮ ಎಟಿಎಮ್ ಕಾರ್ಡಿನ ನಂಬರ್ ನ್ನು  ತಿಳಿಸಲು ಕೇಳಿದ್ದು, ಅದರಂತೆ ನಾನು ಮೇಲ್ಕಂಡ ನನ್ನ ಕೆನರಾ ಬ್ಯಾಂಕಿನ ಎಟೆಮ್ ನಂಬರನ್ನು ಅವರಿಗೆ ನೀಡಿರುತ್ತೇನೆ, ನಂತರ ನನ್ನ ಮೊಬೈಲ್ ಗೆ ಬಂದಿರುವ ಒಟಿಪಿ ನಂಬರನ್ನೂ ಸಹ ಅವರು ಪಡೆದು ಮೊದಲಿಗೆ ನನ್ನ ಕೆನರಾ ಬ್ಯಾಂಕಿನ ಖಾತೆಯಲ್ಲಿ 2,714/-ರೂಗಳನ್ನು ವರ್ಗಾವಣೆ ಮಾಡಿಕೊಂಡಿರುತ್ತಾರೆ, ಇದೇ ರೀತಿ ನನ್ನ ಯೂನಿಯನ್ ಬ್ಯಾಂಕಿನ ಎಟಿಎಮ್ ಕಾರ್ಡಿನ ನಂಬರ್ ನ್ನು ಹಾಗೂ ಒಟಿಪಿ ನಂಬರ್ ಗಳನ್ನು ಪಡೆದು ಒಟ್ಟು 7 ಬಾರಿ ನನ್ನ ಮೇಲ್ಕಂಡ ಖಾತೆಗಳಿಂದ ಒಟ್ಟು 80,343/-ರೂಗಳನ್ನು ವರ್ಗಾವಣೆ ಮಾಡಿಕೊಂಡಿರುತ್ತಾರೆ, ನಂತರ ನಾನು ಅವರ ಮೊಬೈಲ್ ನಂಬರ್ ಗಳಿಗೆ ಪೋನ್ ಮಾಡಲಾಗಿ ನನ್ನ  ಪೋನನ್ನು ಲಿಪ್ಟ್ ಮಾಡಿರುವುದಿಲ್ಲ, ನನಗೆ ಟಿಸಿಎಸ್ ಮತ್ತು ಕೊಟ್ಯಾಕ್ ಮಹಿಂದ್ರ ಬ್ಯಾಂಕಿನಲ್ಲಿ ಕೆಲಸ ಕೊಡಿಸುತ್ತೇನೆಂತ ನಂಬಿಸಿ ನನ್ನಿಂದ ಒಟಿಪಿ ನಂಬರ್ ಪಡೆದು ಹಣ ವರ್ಗಾವಣೆ ಮಾಡಿಕೊಂಡಿರುವ ಮೇಲ್ಕಂಡ ವ್ಯಕ್ತಿಗಳನ್ನು ಪತ್ತೆ ಮಾಡಿ ನನ್ನ ಹಣ ನನಗೆ ವಾಪಸ್ಸು ಕೊಡಿಸಬೇಕಾಗಿ ಕೋರಿ ನೀಡಿದ ದೂರು.

 1. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.15/2021 ಕಲಂ. 279,337  ಐ.ಪಿ.ಸಿ:-

     ದಿ:18.01.2021 ರಂದು ಬೆಳಿಗ್ಗೆ 10-30 ಗಂಟೆಗೆ ಚಿಕ್ಕಬಳ್ಳಾಪುರ ಸರ್ಕಾರಿ ಆಸ್ಪತ್ರೆಯಿಂದ ಬಂದ ಮೆಮೋ ಪಡೆದು ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳು ನವೀನ್ ಎಂ ರವರ ಹೇಳಿಕೆಯನ್ನು ಪಡೆದುಕೊಂಡಿದ್ದರ ಸಾರಾಂಶವೇನೆಂದರೆ ತಾನು ಈ ದಿನ ದಿನಾಂಕ:18.01.2021 ರಂದು ಬೆಳಿಗ್ಗೆ 8-45 ಗಂಟೆ ಸಮಯದಲ್ಲಿ ತನ್ನ ಸ್ನೇಹಿತನ ಬಾಬತ್ತು ಕೆಎ 50 ಪಿ 8268 ನೊಂದಣಿ ಸಂಖ್ಯೆಯ ಬ್ರಿಜಾ ಕಾರಿನಲ್ಲಿ ತಮ್ಮ ಗ್ರಾಮದಿಂದ ಸಾದಲಿಗೆ ಹೋಗಲು ತಾನು ತಮ್ಮ ದೊಡ್ಡಮ್ಮ ರತ್ನಮ್ಮ ಕೋಂ ಗೋಪಾಲಪ್ಪ, ತನ್ನ ತಮ್ಮ ಮೋಹನ್ ಬಿನ್ ಗೋಪಾಲಪ್ಪ , ಚಾಲಕ ಕೀರ್ತಿ ಬಿನ್ ಮಂಜುನಾಥರವರುಗಳು ಎನ್ ಹೆಚ್ 44 ರಸ್ತೆಯ ಮರಸನಹಳ್ಳಿ ಗೇಟ್ ಸಮೀಪ ಹೋಗುತ್ತಿದ್ದಾಗ ತಮ್ಮ ಮುಂದೆ ಹೋಗುತ್ತಿದ್ದ ಕೆಎ 40 ಎ 0577 ನೊಂದಣಿ ಸಂಖ್ಯೆಯ ಟಿಪ್ಪರ್ ವಾಹನದ ಚಾಲಕ ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಯಾವುದೇ ಮುನ್ಸೂಚನೆ ನೀಡದೇ ರಸ್ತೆಯ ಎಡಗಡೆಯಿಂದ ಹೈದರಾಬಾದ್ – ಬೆಂಗಳೂರು ರಸ್ತೆಗೆ ತಿರುವು ಪಡೆಯಲು ತಿರುಗಿಸಿದ್ದು, ತಮ್ಮ ಚಾಲಕ ಇದ್ದಕ್ಕಿದ್ದಂತೆ ಬ್ರೇಕ್ ಹಾಕಿದ್ದು, ನಿಯಂತ್ರಣ ತಪ್ಪಿ ಟಿಪ್ಪರ್ ಗೆ ಡಿಕ್ಕಿ ಹೊಡೆಸಿದ್ದರ ಪರಿಣಾಮ ತಮ್ಮ ಕಾರಿನ ಮುಂಭಾಗ ಪೂರ್ತಿ ಜಖಂಗೊಂಡಿದ್ದು, ಕಾರಿನಲ್ಲಿದ್ದ ತನಗೆ ಮತ್ತು ತಮ್ಮ ದೊಡ್ಡಮ್ಮ ರತ್ನಮ್ಮರವರಿಗೆ ರಕ್ತ ಗಾಯಗಳಾಗಿದ್ದು, ತಕ್ಷಣ ಸ್ಥಳದಲ್ಲಿದ್ದವರು ತಮ್ಮನ್ನು ಉಪಚರಿಸಿ ಚಿಕ್ಕಬಳ್ಳಾಪುರ ಸರ್ಕಾರಿ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದು, ಈ ಅಪಘಾತಕ್ಕೆ ಕಾರಣನಾದ ಕೆಎ 40 ಎ 0577 ನೊಂದಣಿ ಸಂಖ್ಯೆಯ ಟಿಪ್ಪರ್ ವಾಹನದ ಚಾಲಕನ ವಿರುದ್ದ ಕಾನೂನು ರೀತಿಯ ಕ್ರಮ ಜರುಗಿಸಲು ಕೋರಿ ನೀಡಿದ ಹೇಳಿಕೆ ಮೇರೆಗೆ ಈ ಪ್ರ ವ ವರಧಿ.

 1. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.22/2021  ಕಲಂ. 454,380  ಐ.ಪಿ.ಸಿ:-

     ದಿನಾಂಕ 17-01-2021 ರಂದು ಬೆಳಗ್ಗೆ 11-00 ಗಂಟೆಗೆ ತಿಪ್ಪಾರೆಡ್ಡಿ ಬಿನ್ ಲೇಟ್ ವೆಂಕಟಸ್ವಾಮಿ, 52 ವರ್ಷ, ವ್ಯವಸಾಯ, ಶಿಂಗಸಂದ್ರ ಗ್ರಾಮ, ಕಸಬಾ ಹೋಬಳಿ, ಕಾಗತಿ ಗ್ರಾಮ ಪಂಚಾಯ್ತಿ, ಚಿಂತಾಮಣಿ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ಮೇಲ್ಕಂಡ ವಿಳಾಸದಲ್ಲಿ ನಾನು ನನ್ನ ಹೆಂಡತಿಯಾದ ಸುಧಮ್ಮ ಮತ್ತು ಎರಡನೇ ಮಗಳಾದ ಟಿ.ಎಸ್ ಸಂದ್ಯಾ ರವರುಗಳು ವಾಸವಾಗಿದ್ದು, ನಾನು ಜಿರಾಯ್ತಿಯಿಂದ ಜೀವನ ಮಾಡಿಕೊಂಡಿರುತ್ತೇನೆ. ದಿನಾಂಕ:16/01/2021 ರಂದು ಬೆಳಿಗ್ಗೆ 7.00 ಗಂಟೆಗೆ ನನ್ನ ಮಗಳು ಸಂದ್ಯಾ ಕಾಲೇಜಿಗೆ ಹೋಗಿರುತ್ತಾಳೆ. ಇದೇ ದಿನ ಮದ್ಯಾಹ್ನ 12.30 ಗಂಟೆಗೆ ನಮ್ಮ ಸಂಬಂದಿಕರೊಬ್ಬರು ಚಿಂತಾಮಣಿಯ ಡೆಕ್ಕನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರಿಂದ ಅವರನ್ನು ನೋಡಿಕೊಂಡು ಬರಲು ನಾನು ಮತ್ತು ನನ್ನ ಹೆಂಡತಿ ಮನೆಯನ್ನು ಲಾಕ್ ಮಾಡಿಕೊಂಡು ಚಿಂತಾಮಣಿ ಡೆಕ್ಕನ್ ಆಸ್ಪತ್ರೆಗೆ ಬಂದಿರುತ್ತೇವೆ. ನಂತರ ಸಂಜೆ 6.00 ಗಂಟೆಗೆ ನಾನು ಮತ್ತು ನನ್ನ ಹೆಂಡತಿ ಮನೆಗೆ ವಾಪಸ್ಸು ಹೋದಾಗ ನನ್ನ ಮಗಳು ಮನೆಯ ಮುಂದೆ ಕುಳಿತಿದ್ದಳು. ಆಗ ನಾನು ವಿಚಾರವನ್ನು ತಿಳಿದುಕೊಂಡು ಮನೆಯ ಒಳಗೆ ಹೋಗಿ ನೋಡಿದಾಗ ಯಾರೋ ಕಳ್ಳರು ನಮ್ಮ ಮನೆಯ ಬಾಗಿಲಿನ ಲಾಕ್ ಅನ್ನು ಕಿತ್ತು ಮನೆಯ ಒಳಗೆ ಪ್ರವೇಶಿಸಿ ಮನೆಯ ಹಾಲ್ ನಲ್ಲಿದ್ದ ಬೀರುವಿನ ಲಾಕರನ್ನು ಕಿತ್ತು ಅದರಲ್ಲಿದ್ದ ಬಟ್ಟೆಗಳನ್ನು ಚೆಲ್ಲಾಪಿಲ್ಲಿ ಮಾಡಿ ಅದರಲ್ಲಿದ್ದ ಎಸ್.ಬಿ.ಐ ಬ್ಯಾಂಕ್ನ ಪಾಸ್ ಪುಸ್ತಕ ಮತ್ತು ಎ.ಟಿ.ಎಂ ಕಾರ್ಡ್, 1) ಬೆಳ್ಳಿಯ 150 ಗ್ರಾಂ ಕಾಲು ಚೈನ್ ಅನ್ನು ಮತ್ತು ರೂಂ ನಲ್ಲಿದ್ದ ಬೀರುವಿನ ಲಾಕರನ್ನು ಕಿತ್ತು ಅದರಲ್ಲಿದ್ದ ಬಂಗಾರದ ವಡೆವೆಗಳಾದ 2) 50 ಗ್ರಾಂ ತೂಕದ ಬಂಗಾರದ ಮೂರು ಎಳೆಚೈನು, 3) 30 ಗ್ರಾಂ ತೂಕದ 2 ಬಂಗಾರದ ಕತ್ತಿನ ಚೈನ್ ಮತ್ತು ಡಾಲರ್, 4) 10 ಗ್ರಾಂ ತೂಕದ ಎರಡು ಬಂಗಾರದ ಉಂಗುರ, 5) 20 ಗ್ರಾಂ ತೂಕದ ಬಂಗಾರದ 3 ಜೊತೆ ಕಿವಿ ಓಲೆಗಳು, 6) 5 ಗ್ರಾಂ ತೂಕದ ಬಂಗಾರದ ಕಿವಿಯ ಸುತ್ತುಮಾಟಿಗಳು ಮತ್ತು 50,000/- ನಗದು ಹಣವನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಕಳುವಾದ ಚಿನ್ನ ಮತ್ತು ಬೆಳ್ಳಿ ವಡವೆಗಳ ಒಟ್ಟು ಮೌಲ್ಯ 3,54,000ರೂ ಆಗಿರುತ್ತೆ.  ನಾವು ಯಾರು ಮನೆಯಲಿಲ್ಲದ ಸಮಯದಲ್ಲಿ ದಿನಾಂಕ: 16/01/2021 ರಂದು ಮದ್ಯಾಹ್ನ 12.30 ಗಂಟೆಯಿಂದ ಸಂಜೆ 5.30 ಗಂಟೆಯ ಮದ್ಯದಲ್ಲಿ ಯಾರೋ ಕಳ್ಳರು ನಮ್ಮ ಮನೆಯ ಬಾಗಿಲಿನ ಲಾಕ್ಅನ್ನು ಕಿತ್ತು ಮನೆಯ ಒಳಗೆ ನುಗ್ಗಿ ಮನೆಯಲ್ಲಿದ್ದ ಮೇಲ್ಕಂಡ ವಡವೆಗಳನ್ನು ಮತ್ತು ಹಣವನ್ನು ಕಳ್ಳತನ ಮಾಡಿಕೊಂಡು ಹೋಗಿರುವ ಕಳ್ಳರನ್ನು ಪತ್ತೆಮಾಡಿ ಕಾನೂನು ಕ್ರಮ ಜರುಗಿಸಿ ಕಳ್ಳತನವಾಗಿರುವ ಮಾಲನ್ನು ಪತ್ತೆಮಾಡಿಕೊಂಡಬೇಕಾಗಿ ತಮ್ಮಲ್ಲಿ ಕೋರಿರುತ್ತೆ.

 1. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.24/2021  ಕಲಂ. 143,147,114,323,504,506,149 ಐ.ಪಿ.ಸಿ:-

     ದಿನಾಂಕ: 18/01/2021 ರಂದು ಬೆಳಿಗ್ಗೆ 11.00 ಗಂಟೆಗೆ ರಾಜಪ್ಪ ಬಿನ್ ಮುನಿಕದಿರಪ್ಪ, 32 ವರ್ಷ, ಚಾಲಕ ವೃತ್ತಿ, ಆದಿ ಕರ್ನಾಟಕ, ವಿರುಪಾಕ್ಷಪುರ ಗ್ರಾಮ ಚಿಂತಾಮಣಿ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ಈಗ್ಗೆ ಮೂರು ವರ್ಷದ ಹಿಂದೆ ತನಗೆ ಹಣದ ಅವಶ್ಯಕತೆ ಇದ್ದರಿಂದ ದೇವನಹಳ್ಳಿ ತಾಲ್ಲೂಕಿನ ಬೂದಿಗೆರೆ ಗ್ರಾಮದ ವಾಸಿ ತಮ್ಮ ದೂರದ ಸಂಬಂದಿ ನವೀನ್ ಕುಮಾರ್ ಬಿನ್ ನಾರಾಯಣಪ್ಪ ರವರ ಬಳಿ 10,000 ರೂ ಕೈ ಸಾಲವಾಗಿ ತೆಗೆದುಕೊಂಡಿರುತ್ತೇನೆ. ಹಾಗೂ ಸಾಲ ತೆಗೆದುಕೊಂಡ 05 ತಿಂಗಳ ನಂತರ 7,500 ರೂ ವಾಪಸ್ಸು ಕೊಟ್ಟಿರುತ್ತೇನೆ. ಉಳಿದ 2,500 ಹಣವನ್ನು ವಾಪಸ್ಸು ಕೊಡಲು ಕಾಲಾವಕಾಶ ತೆಗೆದುಕೊಂಡಿರುತ್ತೇನೆ. ನಂತರ ನವೀನ್ ಕುಮಾರ್ ರವರು ತಾನು ನೀಡಬೇಕಾಗಿದ್ದ 2500 ರೂ ಗಳಿಗೆ ಬದಲಿಗೆ ತನ್ನ ಬಾಬತ್ತು ಕೆಎ-53 ಆರ್-123 ಪ್ಲಾಟಿನ ದ್ವಿ ಚಕ್ರ ವಾಹನವನ್ನು ತೆಗೆದುಕೊಂಡು ಹೋಗಿರುತ್ತಾನೆ. ಹೀಗಿರುವಾಗ ದಿನಾಂಕ: 17/01/2021 ರಂದು ರಾತ್ರಿ 7.30 ಗಂಟೆ ಸಮಯದಲ್ಲಿ ತಾನು ತಮ್ಮ ಗ್ರಾಮದಲ್ಲಿ ತಮ್ಮ ಮನೆ ಬಳಿ ಇದ್ದಾಗ ಮೇಲ್ಕಂಡ ನವೀನ್ ಕುಮಾರ್ ಬಿನ್ ನಾರಾಯಣಪ್ಪ ಹಾಗೂ ಆತನ ಜೊತೆ ಶಿಡ್ಲಘಟ್ಟ ತಾಲ್ಲೂಕಿನ ದೊಡ್ಡದಾಸರಹಳ್ಳಿ ಗ್ರಾಮದ ವಾಸಿಗಳಾದ ಮುನಿಕೃಷ್ಣ ಬಿನ್ ಮುನಿರಾಮಪ್ಪ ಮತ್ತು ಆತನ ತಮ್ಮ ರಾಮಕೃಷ್ಣ ಬಿನ್ ಮುನಿರಾಮಪ್ಪ, ಹರೀಶ್ ಬಿನ್ ನರಸಿಂಹಮೂರ್ತಿ, ಪ್ರವೀಣ್ ಬಿನ್ ಮೂರ್ತಿ ಹಾಗೂ ಬೂದಿಗೆರೆ ಗ್ರಾಮದ ವಾಸಿ ಚಂದು ಬಿನ್ ನಾರಾಯಣಸ್ವಾಮಿ ರವರು ಅಕ್ರಮ ಗುಂಪು ಕಟ್ಟಿಕೊಂಡು ತಮ್ಮ ಮನೆ ಬಳಿ ಬಂದು ಆ ಪೈಕಿ ನವೀನ್ ಕುಮಾರ್ ರವರು ತನ್ನನ್ನು ಕುರಿತು “ಏನೋ ಬೋಳಿ ಮಗನೇ ನನ್ನ ಹಣ ವಾಪಸ್ಸು ಕೊಡಲು ಇನ್ನು ಎಷ್ಟು ದಿನ ಬೇಕು” ಎಂದು ಅವಾಶ್ಚ ಶಬ್ದಗಳಿಂದ ಬೈದು ಕೈ ಗಳಿಂದ ತನ್ನ ಎದೆಗೆ ಹೊಡೆದನು ನಂತರ ಮೇಲ್ಕಂಡವರೆಲ್ಲರೂ ಸೇರಿ ತನಗೆ ಕೈಗಳಿಂದ ಮೈ ಮೇಲೆ ಹೊಡೆದು ನೋವುಂಟು ಮಾಡಿದರು. ಅಷ್ಟರಲ್ಲಿ ತನ್ನ ಹೆಂಡತಿ ಆಶಾ ರವರು ಗಲಾಟೆ ಶಬ್ದ ಕೇಳಿಸಿಕೊಂಡು ಅಲ್ಲಿಗೆ ಬಂದಿದ್ದು ಆಕೆಯ ಮೇಲೂ ಸಹ ಗಲಾಟೆ ಮಾಡಿ ಕೈಗಳಿಂದ ಮೈ ಮೇಲೆ ಹೊಡೆದು ನೋವುಂಟು ಮಾಡಿದರು. ಅಷ್ಟರಲ್ಲಿ ತನ್ನ ತಂದೆ ಮುನಿಕದಿರಪ್ಪ, ತಮ್ಮ ಗ್ರಾಮದ ವಾಸಿಗಳಾದ ಮಧು ಬಿನ್ ತಿಮ್ಮಯ್ಯ ಮತ್ತು ಆಂಬರೀಷ ಬಿನ್ ನಾರಾಯಣಸ್ವಾಮಿ ರವರು ಬಂದು ಜಗಳ ಬಿಡಿಸಿದರು. ನಂತರ ಮೇಲ್ಕಂಡವರು ತಮ್ಮನ್ನು ಕುರಿತು “ನಮ್ಮ ಹಣ ನೀಡದಿದ್ದರೆ ನಿಮ್ಮನ್ನು ಪ್ರಾಣ ಸಹಿತ ಬಿಡುವುದಿಲ್ಲ” ಎಂದು ಪ್ರಾಣ ಬೆದರಿಕೆ ಹಾಕಿ ಅಲ್ಲಿಂದ ಹೊರಟು ಹೋದರು. ಸದರಿ ಗಲಾಟೆಗೆ ಶಿಡ್ಲಘಟ್ಟ ತಾಲ್ಲೂಕಿನ ದೊಡ್ಡ ದಾಸರಹಳ್ಳಿ ಗ್ರಾಮದ ತಮ್ಮ ಸಂಬಂದಿ ಮುನಿರಾಮಪ್ಪ ಬಿನ್ ಲೇಟ್ ನಾಗಪ್ಪ ರವರು ನೀಡಿರುವ ಕುಮ್ಮಕ್ಕು ಕಾರಣವಾಗಿರುತ್ತೆ. ರಾತ್ರಿ ಆ ವೇಳೆಯಾದ್ದರಿಂದ ಈ ದಿನ ತಡವಾಗಿ ಠಾಣೆಗೆ ಬಂದು ದೂರು ನೀಡುತ್ತಿದ್ದು ಮೇಲ್ಕಂಡವರ ಮೇಲೆ ಕಾನೂನು ಕ್ರಮ ಜರುಗಿಸಲು ಕೋರಿರುವುದಾಗಿರುತ್ತೆ.

 1. ದಿಬ್ಬೂರಹಳ್ಳಿ ಪೊಲೀಸ್ ಠಾಣೆ ಮೊ.ಸಂ.06/2021 ಕಲಂ. 143,147,148,323,324,307,504,506,149 ಐ.ಪಿ.ಸಿ & 3(1)(r),3(1)(s),3(2)(va) The SC & ST (Prevention of Atrocities) Amendment Act 2015:-

     ದಿನಾಂಕ 18/01/2021 ರಂದು ಬೆಳಗ್ಗೆ 10.30 ಗಂಟೆಗೆ ಠಾಣಾ ಸಿಬ್ಬಂದಿ ಹೆಚ್.ಸಿ-119 ರವರು ಶಿಡ್ಲಘಟ್ಟ ಸರ್ಕಾರಿ ಆಸ್ವತ್ರೆಯಲ್ಲಿ ದಾಖಲಾಗಿದ್ದ ಗಾಯಾಳು ನಾಗಭೂಷನಾಚಾರಿ ಬಿನ್ ವೆಂಕಟರವಣಾಚಾರಿ ರವರ ಹೇಳಿಕೆಯನ್ನು ಪಡೆದು ತಂದು ಹಾಜರುಪಡಿಸಿದರ ಹೇಳಿಕೆಯ ಸಾರಾಂಶವೇನಂದರೆ, ದಿನಾಂಕ 16/01/2021 ರಂದು ತಾನು ಹಾಗೂ ತಮ್ಮ ಗ್ರಾಮದ ವಾಸಿ ಬೋವಿ ಜನಾಂಗದ ಅಶೋಕ ಬಿನ್ ಅಪ್ಪಣ್ಣರವರು ತಮ್ಮ ಗ್ರಾಮದ ಶಿಕ್ಷಕಿಯಾದ ನಾರಾಯಣಮ್ಮ ರವರು ಬೆಂಗಳೂರಿನ ಜಯಶ್ರೀ ಆಸ್ವತ್ರೆಯಲ್ಲಿ ದಾಖಲಾಗಿದ್ದ ಕಾರಣ ತಾವು ನೋಡಿಕೊಂಡ ಬರಲು ಹೋಗಿ, ಆ ದಿನ ಅಲ್ಲಿಯೇ ಉಳಿದುಕೊಂಡಿದ್ದು, ದಿನಾಂಕ 17/01/2021 ರಂದು ಮದ್ಯಾಹ್ನ ಸುಮಾರು 2.00 ಗಂಟೆಯ ಸಮಯದಲ್ಲಿ ಅಶೋಕ ರವರ ಅಣ್ಣ ರಮೇಶ ರವರು ಪೋನ್ ಮಾಡಿ ನರೇಗ ಕಾಮಗಾರಿ ವಿಚಾರದಲ್ಲಿ ತನಗೂ ಹಾಗೂ ಎಸ್,ಎಂ ಕೊಂಡರಾಜನಹಳ್ಳಿ ಗ್ರಾಮದ ಜಯರಾಮರೆಡ್ಡಿ ಮತ್ತು ಅವರ ಕಡೆಯವರಿಗೆ ಬಾಯಿಮಾತಿನ ಜಗಳವಾಗಿರುವುದಾಗಿ ತಿಳಿಸಿದ್ದು, ಆಗ ತಾನು ಹಾಗೂ ಅಶೋಕ ರವರು ಬೆಂಗಳೂರಿನಿಂದ ತಮ್ಮ ಗ್ರಾಮಕ್ಕೆ ಬಂದು, ಸಂಜೆ ಸುಮಾರು 5.00 ಗಂಟೆಯಲ್ಲಿ ಅಶೋಕ ತಮ್ಮ ಗ್ರಾಮದ ಬಸ್ ನಿಲ್ದಾಣದಲ್ಲಿದ್ದ ಮೂರ್ತಿ ಬಿನ್ ಎಸ್.ಪಿ ನರಸಿಂಹಪ್ಪ, ನವೀನ್ ಬಿನ್ ಎಸ್.ಪಿ ನರಸಿಂಹಪ್ಪ, ಹರೀಶ್ ಬಿನ್ ಎಸ್,ಕೆ ನರಸಿಂಹಪ್ಪರವರುಗಳನ್ನು ಏಕೆ ನಮ್ಮ ಅಣ್ಣನ ಮೇಲೆ ಗಲಾಟೆ ಮಾಡಿದ್ದು ಎಂದು ಕೇಳಲಾಗಿ ಮೇಲ್ಕಂಡವರು ಅಶೋಕ ಮತ್ತು ರಮೇಶ ರವರ ಮೇಲೆ ಗಲಾಟೆ ಮಾಡದ್ದು, ಆಗ ತಾನು ಅಡ್ಡ ಹೋಗಿ ಇಬ್ಬರಿಗೂ ಬುದ್ದಿವಾದ ಹೇಳಿ ಕಳುಹಿಸಿ ನಂತರ ತಾನು ಹಾಗೂ ರಮೇಶ ರವರು ತಮ್ಮ ಮನೆಯ ಬಳಿ ಹೋಗಿದ್ದು, ತಾವು ಮನೆಯ ಬಳಿ ಇದ್ದಾಗ ಅದೇ ದಿನ ಸಂಜೆ ಸುಮಾರು 6.00 ಗಂಟೆಯಲ್ಲಿ ತಮ್ಮ ಗ್ರಾಮದ ನವೀನ್  ಬಿನ್ ಎಸ್.ಪಿ ನರಸಿಂಹಪ್ಪ, ಮೂರ್ತಿ ಬಿನ್ ಎಸ್.ಪಿ ನರಸಿಂಹಪ್ಪ, ಹರೀಶ್ ಬಿನ್ ಎಸ್,ಕೆ ನರಸಿಂಹಪ್ಪ, ರೆಡ್ಡೆಪ್ಪ ಬಿನ್ ವೆಂಕಟರಾಯಪ್ಪ, ಎಸ್.ಕೆ ನರಸಿಂಹಪ್ಪ ಬಿನ್ ಕೋನಪ್ಪ, ವಕ್ಕಲಿಗರ ಜನಾಂಗದ ಆದಿನಾರಾಯಣರೆಡ್ಡಿ ಬಿನ್ ಚೌಡರೆಡ್ಡಿ ಹಾಗೂ ಎಸ್.ಎಂ ಕೊಂಡರಾಜನಹಳ್ಳಿ ಗ್ರಾಮದ ವಕ್ಕಲಿಗ ಜನಾಂಗ ಜಯರಾಮರೆಡ್ಡಿ ಬಿನ್ ಕೋನಪ್ಪರೆಡ್ಡಿ, ಚೌಡರೆಡ್ಡಿ ಬಿನ್ ಕೋನಪ್ಪರೆಡ್ಡಿ, ಪಾಪರೆಡ್ಡಿ ಹಾಗೂ ಇತರರು ಗುಂಪು  ಕಟ್ಟಿಕೊಂಡು ಬಂದು ತನ್ನನ್ನು ಸಾಯಿಸುವ ಉದ್ದೇಶದಿಂದ ಕೈಗಳಲ್ಲಿ ರಾಡು, ದೊಣ್ಣೆ ಹಾಗೂ ಕಲ್ಲುಗಳನ್ನು ಇಟ್ಟಿಕೊಂಡು ಬಂದು ನಿನ್ನಮ್ಮನ್ ಕ್ಯಾಯಾ ಸೂಳೆ ನನ್ನ ಮಗನೆ ಯಾರೋ ಗಲಾಟೆ ಮಾಡಿಕೊಂಡರೆ ನಿನಗೇನೋ  ಎಂದು ಕೆಟ್ಟದಾಗಿ ಬೈದು, ಆ ಪೈಕಿ ಮೂರ್ತಿರವರು ಆತನ ಕೈಯಲ್ಲಿದ್ದ ರಾಡಿನಿಂದ ತನ್ನನ್ನು ಸಾಯಿಸುವ ಉದ್ದೇಶದಿಂದ ತಲೆ ಮೇಲೆ ಎಡ ಭಾಗಕ್ಕೆ ಹೊಡೆದು ರಕ್ತ ಗಾಯಪಡಿಸಿದ್ದು, ಹರೀಶ ರವರು ಕಲ್ಲಿನಿಂದ ಎಡ ಕೆನ್ನೆಗೆ ಹೊಡೆದು ರಕ್ತ ಗಾಯಪಡಿಸಿದ್ದು, ಆದಿನಾರಾಯಣರೆಡ್ಡಿರವರು ದೊಣ್ಣೆಯಿಂದ ಹೊಡೆದಿದ್ದು ಉಳಿದವರು ಕೈಗಳಿಂದ ಮೈ ಮೇಲೆ ಹೊಡೆದು ನೋವುಂಟು ಮಾಡಿರುತ್ತಾರೆ. ನಂತರ ರಮೇಶರವರು ಗಲಾಟೆ ಬಿಡಿಸಲು ಅಡ್ಡ ಬಂದಾಗ ಜಯರಾಮರೆಡ್ಡಿ  ಮತ್ತು ಅವರ ತಮ್ಮನಾದ ಚೌಡರೆಡ್ಡಿರವರು ನಿಮ್ಮಮನ್ ಬೋವಿಗಳನೇ ಕ್ಯಾಯಾ ಮದ್ಯಾಹ್ನ ಸುಮ್ಮನೆ ಬಿಟ್ಟಿದ್ದೀವಂತ ಈಗಲೂ ಬಂದಿದ್ದೀಯಾ ಎಂದು ಜಾತಿಯನ್ನು ನಿಂದನೆ ಮಾಡಿ ಕೈಗಳಿಂದ ರಮೇಶರವರನ್ನು ಹೊಡೆದು ನೋವುಂಟು ಮಾಡಿದ್ದು, ಆಗ ವಕ್ಕಲಿಗ ಜನಾಂಗದ ಜಯರಾಮರೆಡ್ಡಿರವರ ಮತ್ತೊಬ್ಬ ತಮ್ಮನಾದ ರಾಮಚಂದ್ರ, ಬಾವಮೈದನಾದ ಮಧು ಹಾಗೂ ನವೀನ್ ಮತ್ತು ಮೂರ್ತಿರವರು ಕೈಗಳಿಂದ ಹೊಡೆದು ಕಾಲುಗಳಿಂದ ಒದ್ದು ನೋವುಂಟು ಮಾಡಿದ್ದು, ನಂತರ ಮೇಲ್ಕಂಡವರೆಲ್ಲರೂ ಈ ನನ್ನ ಮಕ್ಕಳು ಇನ್ನೂ ಸತ್ತಿಲ್ಲ, ಸಾಯಿಸಿಬಿಡಿ ಎಂದು ಪ್ರಾಣ ಬೆದರಿಕೆ ಹಾಕಿದ್ದು ಅಷ್ಟರಲ್ಲಿ ತಮ್ಮ ಗ್ರಾಮದ ಚಿಕ್ಕಪ್ಪಯ್ಯ ಬಿನ್ ಚಿಕ್ಕರಾಮಪ್ಪ, ವೆಂಟಕರಾಯಪ್ಪ ಬಿನ್ ಚಿನ್ನಪ್ಪ, ಮುನಿಯಪ್ಪ ಬಿನ್ ಚಿಕ್ಕರಾಮಣ್ಣ ರಾಮರೆಡ್ಡಿ ಬಿನ್ ಬಾಲಪ್ಪರವರುಗಳು ಅಡ್ಡ ಬಂದು ಗಲಾಟೆ ಬಿಡಿಸಿದ್ದು, ಮೇಲ್ಕಂಡವರ ಮೇಲೆ ಸೂಕ್ತ ಕಾನೂನಿನ ರೀತ್ಯಾ ಕ್ರಮ ಕೈಗೊಳ್ಳಲು ಕೋರಿರುವುದಾಗಿರುತ್ತೆ.

 1. ದಿಬ್ಬೂರಹಳ್ಳಿ ಪೊಲೀಸ್ ಠಾಣೆ ಮೊ.ಸಂ.07/2021 ಕಲಂ. 143,147,148,323,324,436,504,149  ಐ.ಪಿ.ಸಿ & 3(1)(r),3(1)(s) The SC & ST (Prevention of Atrocities) Amendment Act 2015:-

     ದಿನಾಂಕ:18-01-2021 ರಂದು ಠಾಣಾ ಸಿಬ್ಬಂದಿ ಹೆಚ್.ಸಿ 53 ರವರು ಶಿಡ್ಲಘಟ್ಟ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಗಾಯಾಳು ನರಸಿಂಹಮೂರ್ತಿ ಬಿನ್ ನರಸಿಂಹಪ್ಪ ರವರ ಹೇಳಿಕೆಯನ್ನು ಪಡೆದು ತಂದು ಹಾಜರುಪಡಿಸಿದ ಹೇಳಿಕೆಯ ಸಾರಾಂಶವೇನೆಂದರೆ, ದಿನಾಂಕ:17-01-2021 ರಂದು ಮದ್ಯಾಹ್ನ ಸುಮಾರು 02-00 ಗಂಟೆಯಲ್ಲಿ ಎಸ್.ಎಂ ಕೊಂಡರಾಜನಹಳ್ಳಿ ಗ್ರಾಮದ ಜಯರಾಮರೆಡ್ಡಿ ರವರು ತಮ್ಮ ಗ್ರಾಮದಲ್ಲಿ ರಸ್ತೆ ಮಾಡಲು ಜೆ.ಸಿ.ಬಿ ಯಿಂದ ಕೆಲಸ ಮಾಡುತ್ತಿದ್ದಾಗ ತಮ್ಮ ಗ್ರಾಮದ ಮೆಂಬರ್ ರಮೇಶ್ ರವರು ಕೆಲಸ ಮಾಡಬಾರದೆಂದು ಗಲಾಟೆಗೆ ಬಂದಿದ್ದು, ಆಗ ತಾನು ತಮ್ಮ ಗ್ರಾಮದ ನವೀನ್ ಬಿನ್ ನರಸಿಂಹಪ್ಪ ರವರು ಹೋಗಿ ರಮೇಶ್ ರವರನ್ನು ಕುರಿತು ಯಾರೂ ಕೆಲಸ ಮಾಡಿದರೇನು ನಮ್ಮ ಊರು ಉದ್ದಾರ ಆದರೆ ಸಾಕು ಎಂದು ಹೇಳಿದ್ದಕ್ಕೆ ಬೋವಿ ಜನಾಂಗದ ಮೆಂಬರ್ ರಮೇಶ್ ನಮ್ಮನ್ನು ಕುರಿತು ನಿನ್ನಮ್ಮನ್ ಮಾದಿಗರನೇ ಕ್ಯಾಯಾ ಏನಾದರೂ ಇದ್ದರೆ ನಿಮ್ಮ ಕಾಲೋನಿಯಲ್ಲಿ ಮಾಡಿಕೊಳ್ಳಿ ಎಂದು ಜಾತಿಯನ್ನು ನಿಂದಿಸಿ ಮಾತನಾಡಿರುತ್ತಾನೆ. ಆಗ ತಮಗೂ ಮತ್ತು ರಮೇಶ್ ರವರಿಗೆ ಬಾಯಿ ಮಾತಿನ ಜಗಳವಾಗಿರುತ್ತದೆ. ಆಗ ಅಲ್ಲಿದ್ದವರು ಇಬ್ಬರಿಗೂ ಬುದ್ದಿವಾದ ಹೇಳಿ ಕಳುಹಿಸಿರುತ್ತಾರೆ. ಸಂಜೆ 05-00 ಗಂಟೆ ಸಮಯದಲ್ಲಿ ತಮ್ಮ ಗ್ರಾಮದ ಬೋವಿ ಜನಾಂಗದ ರಮೇಶನ ತಮ್ಮ ಅಶೋಕ ಬಿನ್ ಅಪ್ಪಣ್ಣ ಮತ್ತು ಆಚಾರಿ ಜನಾಂಗದ ನಾಗಭೂಷಣ ರವರು ತಮ್ಮ ಗ್ರಾಮದ ಬಸ್ ನಿಲ್ದಾಣಕ್ಕೆ ಬಂದು ಬಸ್ ನಿಲ್ದಾಣದಲ್ಲಿದ್ದ ತನ್ನನ್ನು ಅಶೋಕ ನಿನ್ನಮ್ಮನ್ ಮಾದಿಗನೆ ಕ್ಯಾಯಾ ಮೆಂಬರ್ ಆಗ ಬೇಕಾದರೆ ಗೆಲ್ಲಬೇಕು ಹೇಗೆ ನನ್ನ ಅಣ್ಣನ ಮೇಲೆ ಗಲಾಟೆ ಮಾಡಿದೆ ಆಗ ಬಾರೋ ನೋಡಿಕೊಳ್ಳತ್ತೇನೆಂದು ಕೆಟ್ಟದ್ದಾಗಿ ಬೈದಿರುತ್ತಾನೆ. ಆಗ ನಾಗಭೂಷಣ  ಈ ಮಾದಿಗ ನನ್ನ ಮಕ್ಕಳದು ಜಾಸ್ತಿಯಾಯಿತು ಎಂದು ಬೈದಿರುತ್ತಾನೆ. ಆಗ ನಮ್ಮ ಗ್ರಾಮದ ರಾಮರೆಡ್ಡಿರವರು ಇಬ್ಬರಿಗೂ ಬುದ್ದಿವಾದ ಹೇಳಿಕ ಕಳುಹಿಸಿರುತ್ತಾರೆ. ನಂತರ ರಾತ್ರಿ 07-30 ಗಂಟೆಯಲ್ಲಿ ತಾನು ಮತ್ತು ತನ್ನ ಚಿಕ್ಕಪ್ಪನ ಮಗ ನವೀನ ಬಿನ್ ನರಸಿಂಹಪ್ಪ ರವರು ಮನೆ ಬಳಿ ಇದ್ದಾಗ ನಾಗಭೂಷಣ, ರಮೇಶ, ಅಶೋಕ, ಹರೀಶ ಬಿನ್ ಮುನಿಯಪ್ಪ ಚಿನ್ನರಾಯಪ್ಪ ರವರುಗಳು ಗುಂಪು ಕಟ್ಟಿಕೊಂಡು ತಮ್ಮ ಮೇಲೆ ಬಳಿಗೆ ಬಂದು ನಿನ್ನಮ್ಮನ್ ಮಾದಿಗನೇ ಕ್ಯಾಯಾ ಸೂಳೆ ನನ್ನ ಮಕ್ಕಳಾ ಎಂದು ಕೆಟ್ಟದಾಗಿ ಬೈಯ್ಯುತ್ತಾ ಆಚಾರಿ ಜನಾಂಗದ ನಾಗಭೂಷಣ ಕಲ್ಲಿನಿಂದ ತನ್ನ ಎಡಗಣ್ಣಿನ ಉಬ್ಬಿಗೆ ಹೊಡೆದು ಗಾಯಪಡಿಸಿ ತಲೆಗೆ ಹೊಡೆದಿರುತ್ತಾನೆ. ರಮೇಶ ದೊಣ್ಣೆಯಿಂದ ತನ್ನ ಬಲಗಾಲಿನ ಮೊಣಕಾಲಿಗೆ ಹೊಡೆದು ನೋವುಂಟು ಮಾಡಿರುತ್ತಾನೆ. ಅಶೋಕ ರಮೇಶನ ಕೈನಲ್ಲಿದ್ದ ದೊಣ್ಣೆಯನ್ನು ಕಿತ್ತುಕೊಂಡು ಪುನಃ ತನ್ನ ಎಡಕಾಲಿನ ಮೊಣಕಾಲಿಗೆ ಹೊಡೆದು ನೋವುಂಟು ಮಾಡಿದ್ದು, ಹರೀಶ ಮತ್ತು ಚಿನ್ನರಾಯಪ್ಪ ರವರು ಕೈಗಳಿಂದ ಮೈಮೇಲೆ ಹೊಡೆದಿದ್ದು ಆಗ ತನ್ನ ಚಿಕ್ಕಪ್ಪನ ಮಗ ನವೀನ ಬಿಡಿಸಲು ಅಡ್ಡಬಂದಾಗ ನಾಗಭೂಷಣ ಕಲ್ಲಿನಿಂದ ನವೀನ ಬಲತೋಳಿಗೆ ಹೊಡೆದು ತರಚು ಗಾಯಪಡಿಸಿದ್ದು, ಉಳಿದವರು ಕೈಗಳಿಂದ ಹೊಡೆದಿರುತ್ತಾರೆ. ನಂತರ ರಾತ್ರಿ ಸುಮಾರು 12-00 ಗಂಟೆ ಯಾರೋ ತಮ್ಮ ಗುಡಿಸಲಿಗೆ ಬೆಂಕಿ ಹಚ್ಚಿ ಸುಟ್ಟಹಾಕಿದ್ದು, ಈ ಬಗ್ಗೆ ಅಶೋಕ ರವರ ಮೇಲೆ ಅನುಮಾನವಿರುತ್ತೆ. ಆದ್ದರಿಂದ ಮೇಲ್ಕಂಡವರ ಮೇಲೆ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲು ಕೋರಿರುವುದಾಗಿರುತ್ತೆ.

 1. ಮಂಚೇನಹಳ್ಳಿ ಪೊಲೀಸ್ ಠಾಣೆ ಮೊ.ಸಂ.11/2021 ಕಲಂ. 323,324,504,34  ಐ.ಪಿ.ಸಿ:-

     ದಿನಾಂಕ:18/01/2021 ರಂದು ಬೆಳಿಗ್ಗೆ 09-15 ಗಂಟೆಗೆ ಗೌರಿಬಿದನೂರು ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಗಾಯಾಳು ಬಾಲಪ್ಪ ಬಿನ್ ನರಸಪ್ಪ, 48 ವರ್ಷ, ಆರ್ಕುಂದ ಗ್ರಾಮ, ಗೌರಿಬಿದನೂರು ತಾಲ್ಲೂಕು ರವರಿಂದ ಎ.ಎಸ್.ಐ ವಿಠಲ್ ರಾವ್ ರವರು ತಂದು ಹಾಜರು ಪಡಿಸಿದ ಹೇಳಿಕೆಯ ಸಾರಾಂಶವೇನೆಂದರೆ ನನಗೆ ಈಗ್ಗೆ ಸುಮಾರು 17 ವರ್ಷಗಳ ಹಿಂದೆ ಮದುವೆಯಾಗಿದ್ದು, ತನಗೆ 3 ಜನ ಮಕ್ಕಳಿದ್ದು, 1ನೇ ದೊಡ್ಡ ಮಗಳು ದೀನಾ ಆಗಿದ್ದು, ಈಕೆಯು ಕೊಂಡೇನಹಳ್ಳಿ ಬಳಿ 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುತ್ತಾಳೆ. ತಮ್ಮ ಮಗಳ ತಮ್ಮ ಗ್ರಾಮದಿಂದ ಕೊಂಡೇನಹಳ್ಳಿ ನಳಿಯ ಶಾಲೆಗೆ ಊರಿನಿಂದ ಹೋಗಿ ಬರುತ್ತಿರುತ್ತಾಳೆ. ತನ್ನ ಮಗಳು ಶಾಲೆಗೆ ಹೋಗಿ ಬರುವಾಗ ತಮ್ಮ ಗ್ರಾಮದ ತಮ್ಮ ಜನಾಂಗದ ಶ್ರೀನಿವಾಸ ಬಿನ್ ಮುನಿಯಪ್ಪ 20 ವರ್ಷ, ರವರು ದ್ವಿಚಕ್ರ ವಾಹನದಲ್ಲಿ ಹೋಗಿ ಚುಡಾಯಿಸುವುದು ಹಾಗೂ ಗಲಾಟೆ ಮಾಡುತ್ತಿದ್ದು, ತನ್ನ ಮಗಳು ಮನೆಗೆ ಬಂದು ತನಗೆ ವಿಚಾರ ತಿಳಿಸಿದ್ದು, ತಾನು ಮತ್ತು ತನ್ನ ಹೆಂಡತಿಯಾದ ಮುದ್ದಗಂಗಮ್ಮ ರವರು ಹೋಗಿ ಬುದ್ದಿ ಹೇಳಿದ್ದರೂ ಸಹ ಕೇಳದೆ ಚಾಳಿಯನ್ನು ಮುಂದುವರೆಸಿದ್ದು, ದಿನಾಂಕ:17/01/2021 ರಂದು ಬೆಳಿಗ್ಗೆ 7-00 ಗಂಟೆಯಲ್ಲಿ ನಾನು ಶ್ರೀನಿವಾಸ ರವರ ಮನೆಯ ಬಳಿ ಹೋಗಿ ಯಾಕೇ ತನ್ನ ಮಗಳನ್ನು ಚುಡಾಯಿಸುತ್ತೀಯಾ ಹಾಗೂ ಹಿಂಬಾಲಿಸುತ್ತೀಯಾ ಎಂದು ಕೇಳಿದಾಗ ಶ್ರೀನಿವಾಸ ಬಿನ್ ಮುನಿಯಪ್ಪ ರವರು ನೀನು ಯಾರೂ ನಮ್ಮ ಮನೆಯ ಬಳಿ ಬರುವುದಕ್ಕೆ ಲೋಫರ್ ನನ್ನ ಮಗನೇ ಎಂದು ಬೈಯುತ್ತಾ ಮನೆಗೆ ಒಳಗೆ ಹೋಗಿ ಕಬ್ಬಿಣದ ಊದು ಕೊಳವೆಯನ್ನು ತೆಗೆದುಕೊಂಡು ಬಂದು ಏಕಾಏಕಿ ನನ್ನ ಹಣೆಯ ಮೇಲೆ ಹೊಡೆದು ರಕ್ತಗಾಯ ಪಡಿಸಿದ ನಂತರ ಆತನ ತಾಯಿಯಾದ ಲಕ್ಷ್ಮೀದೇವಮ್ಮ ರವರು ದೊಣ್ಣೆಯಿಂದ ತನ್ನ ಮೈಮೇಲೆ ಹೊಡೆದು ಮೂಗೇಟುಗಳನ್ನುಂಟು ಮಾಡಿದಳು ನಂತರ ತಾನು ಕಿರುಚಿಕೊಂಡಾಗ ಹರೀಶ ಬಿನ್ ಗಂಗಪ್ಪ ಹಾಗೂ ತನ್ನ ತಮ್ಮ ನರಸಿಂಹಪ್ಪ ಬಿನ್ ನರಸಪ್ಪ ರವರುಗಳು ಗಲಾಟೆಯನ್ನು ಬಿಡಿಸಿದ್ದು, ನಂತರ ಗಾಯಗೊಂಡ ತನ್ನನ್ನು ನರಸಿಂಹಪ್ಪ ಬಿನ್ ಗಂಗಪ್ಪ ರವರು ದ್ವಿಚಕ್ರ ವಾಹನದಲ್ಲಿ ಕರೆದುಕೊಂಡು ಬಂದು ಚಿಕಿತ್ಸೆಗಾಗಿ ಗೌರಿಬಿದನೂರು ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಿಸಿದ್ದು, ತನ್ನ ಮೇಲೆ ಹಲ್ಲೇ ಮಾಡಿದ ಶ್ರೀನಿವಾಸ ಬಿನ್ ಮುನಿಯಪ್ಪ ಮತ್ತು ಲಕ್ಷ್ಮೀದೇವಮ್ಮ ಕೊಂ ಮುನಿಯಪ್ಪ ರವರ ಮೇಲೆ ಕಾನೂನು ರೀತ್ಯ ಕ್ರಮ ಜರುಗಿಸಲು ಕೋರಿ ಕೊಟ್ಟ ಹೇಳಿಕೆ ದೂರು.

 1. ಮಂಚೇನಹಳ್ಳಿ ಪೊಲೀಸ್ ಠಾಣೆ ಮೊ.ಸಂ.12/2021 ಕಲಂ. 279,337,304(A)  ಐ.ಪಿ.ಸಿ:-

     ದಿನಾಂಕ: 18/01/2021 ರಂದು ಬೆಳಿಗ್ಗೆ 10-15 ಗಂಟೆಗೆ ಚಿಕ್ಕಬಳ್ಳಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಗಾಯಾಳು ಶ್ರೀ ಮದನ್ ಬಿನ್ ಮುರುಗನ್, 22 ವರ್ಷ, ಈಡಿಗರು, ಕೂಲಿ ಕೆಲಸ, ವಾಸ ಹೆಚ್.ಎಸ್ ಗಾರ್ಡನ್, ಚಿಕ್ಕಬಳ್ಳಾಪುರ ಟೌನ್ ರವರ ಹೇಳಿಕೆಯನ್ನು ಹೆಚ್.ಸಿ 76 ರವರು  ಪಡೆದುಕೊಂಡು ಠಾಣೆಯಲ್ಲಿ ತಂದು ಹಾಜರುಪಡಿಸಿದ್ದರ ಸಾರಾಂಶವೆನೆಂದರೆ, ದಿನಾಂಕ: 17/01/2021 ರಂದು ಬೆಳಿಗ್ಗೆ ನಾನು ಮತ್ತು ನನ್ನ ಸ್ನೇಹಿತ ಶಿವಕುಮಾರ್ ಬಿನ್ ನಾಗರಾಜ್, 25 ವರ್ಷ, ಆದಿ ಕರ್ನಾಟಕ ಜನಾಂಗ, ಕೂಲಿ ಕೆಲಸ, ವಾರ್ಡ್ ನಂ: 30, ಅಂಬೇಡ್ಕರ್ ನಗರ, ಚಿಕ್ಕಬಳ್ಳಾಪುರಟೌನ್ ರವರೊಂದಿಗೆ ಬಿಸಲಹಳ್ಳಿಗೆ ಕೂಲಿಗೆ ಹೋಗಿ ನಂತರ ನಮ್ಮ ಚಿಕ್ಕಬಳ್ಳಾಪುರಕ್ಕೆ ಬಂದು ಸಂಜೆ ಶಿವಕುಮಾರ್ ರವರನ್ನು ಮಿಣಕನಗುರ್ಕಿ ಹೆಂಡತಿ ಗ್ರಾಮಕ್ಕೆ ಬಿಟ್ಟು ಬರಲು ಚಿಕ್ಕಬಳ್ಳಾಪುರ ಗೌರಿಬಿದನೂರು ಎನ್.ಎಚ್ 234 ರಸ್ತೆಯ ಕನಗಾನಕೊಪ್ಪ ಗ್ರಾಮದ ಬಳಿ ಶಿವಕುಮಾರ್ ರವರ KA-06-EF-322 ರ ದ್ವಿ ಚಕ್ರ ವಾಹನವನ್ನು ಚಾಲನೆ ಮಾಡುತ್ತಿದ್ದು ನಾನು ಹಿಂದೆ ಕುಳಿತಿದ್ದು ಸಂಜೆ ಸುಮಾರು 7-30 ಗಂಟೆ ಸಮಯದಲ್ಲಿ ಎದುರಿಗೆ ಮಂಚೇನಹಳ್ಳಿ ಕಡೆಯಿಂದ ಬಂದ KA-16-TB-8180 ಟ್ರ್ಯಾಕ್ಟರ್ ಚಾಲಕ ವಾಹನವನ್ನು ವೇಗವಾಗಿ ಚಾಲನೆ ಮಾಡಿಕೊಂಡು ಬಂದು ನಾವು ಹೋಗುತ್ತಿದ್ದ ದ್ವಿ ಚಕ್ರ ವಾಹನಕ್ಕೆ ಡಿಕ್ಕಿ ಹೊಡೆಯಿಸಿದ ಪರಿಣಾಮ ನಾವು ರಸ್ತೆಯಲ್ಲಿ ಬಿದ್ದಾಗ ನನಗೆ ಬಾಯಿಗೆ ತಗಲಿ ಹಲ್ಲುಗಳು ಬಿದ್ದು ಕೈಕಾಲುಗಳಿಗೆ ಗಾಯಗಳಾಗಿದ್ದು ದ್ವಿ ಚಕ್ರ ವಾಹನ ಚಾಲನೆ ಮಾಡುತ್ತಿದ್ದ ಶಿವಕುಮಾರ್ ರವರಿಗೆ ಎದೆಗೆ ಕೈಕಾಲುಗಳಿಗೆ ಗಾಯಗಳಾಗಿದ್ದು, ರಸ್ತೆಯಲ್ಲಿ ಬಂದವರು ನಮ್ಮಗಳನ್ನು ಉಪಚರಿಸಿ ಅಲ್ಲಿಗೆ ಬಂದ 108 ಅಂಬುಲೆನ್ಸ್ ವಾಹನದಲ್ಲಿ ಚಿಕ್ಕಬಳ್ಳಾಪುರ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಿದ್ದು ವೈದ್ಯರು ಶಿವಕುಮಾರ್ ರವರನ್ನು ಪರೀಕ್ಷಿಸಿ ರಾತ್ರಿ 8-30 ಗಂಟೆಗೆ ಮೃತಪಟ್ಟಿರುವುದಾಗಿ ತಿಳಿಸಿದ್ದು ನಮಗೆ ಅಪಘಾತಪಡಿಸಿ ಶಿವಕುಮಾರ್ ರವರ ಮರಣಕ್ಕೆ ಕಾರಣನಾದ KA-16-TB-8180 ಟ್ರ್ಯಾಕ್ಟರ್ ಚಾಲಕನ ಮೇಲೆ ಕಾನೂನು ರೀತ್ಯ ಕ್ರಮ ಜರುಗಿಸಲು ಕೋರಿ ನೀಡಿದ ಹೇಳಿಕೆಯ ದೂರು.

 1. ನಂದಿಗಿರಿಧಾಮ ಪೊಲೀಸ್ ಠಾಣೆ ಮೊ.ಸಂ.08/2021 ಕಲಂ. 87 ಕೆ.ಪಿ ಆಕ್ಟ್:-

     ದಿನಾಂಕ:17/01/2021 ರಂದು ಸಂಜೆ 6:50 ಗಂಟೆಗೆ ಪಿ.ಎಸ್.ಐ ಶ್ರೀ.ಬಿ.ಕೆ ಪಾಟೀಲ್ ರವರು  ಆರೋಪಿತರನ್ನು, ಮಾಲನ್ನು ಮತ್ತು ದಾಳಿ ಪಂಚನಾಮೆಯೊಂದಿಗೆ ನೀಡಿದ ಜ್ಞಾಪನದ ಸಾರಾಂಶವೇನೆಂದರೆ ದಿನಾಂಕ:17/01/2021 ರಂದು ಸಂಜೆ 5:00 ಸಮಯದಲ್ಲಿ ಠಾಣೆಯಲ್ಲಿದ್ದಾಗ ಚಿಕ್ಕಬಳ್ಳಾಪುರ ಜಿಲ್ಲೆ ಚಿಕ್ಕಬಳ್ಳಾಪುರ ತಾಲ್ಲೂಕು ನಂದಿ ಹೋಬಳಿಯ ಜಡಲತಿಮ್ಮನಹಳ್ಳಿ ಗ್ರಾಮದ ಸಮೀಪವಿರುವ ಚಾಮುಂಡೇಶ್ವರಿ ಮೋಟಾರ್ಸ್ ಹಿಂಭಾಗದಲ್ಲಿರುವ ರೇಲ್ವೇ ಹಳಿ ಪಕ್ಕದಲ್ಲಿ ಹೊಂಗೆ ಮರಗಳ ಮದ್ಯದ ಕೆಳಭಾಗದಲ್ಲಿ ಯಾರೋ ಆಸಾಮಿಗಳು ನಿಷೇದಿತ ಅಂದರ್-ಬಾಹರ್ ಇಸ್ಪೀಟ್ ಜೂಜಾಟ ವಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಬಂದಿದ್ದು  ಸದರಿ ಅಂದರ್-ಬಾಹರ್ ಇಸ್ಪೀಟ್ ಜೂಜಾಟವಾಡುತ್ತಿರುವವರ ಮೇಲೆ ದಾಳಿ ನಡೆಸಲು ಸಿಬ್ಬಂದಿಯಾದ ಹೆಚ್.ಸಿ-206 ಮಂಜುನಾಥ, ಪಿಸಿ-517 ಅಂಬರೀಷ, ಪಿಸಿ-06 ರಾಮಕೃಷ್ಣ, ಪಿಸಿ-314 ಜವರಪ್ಪ, ಜೀಪ್ ಚಾಲಕ ಪಾರುಕ್ ಹೆಚ್.ಸಿ-20 ರವರೊಂದಿಗೆ ಕೆ.ಎ-40 ಜಿ-1555 ಬೊಲೆರೋ ವಾಹನದಲ್ಲಿ ಸ್ವಾಮೀಜಿ ಕಾಲೇಜಿನ ಬಳಿಗೆ ಹೋಗಿ ಇಬ್ಬರನ್ನು ಬರಮಾಡಿಕೊಂಡು ಅವರಿಗೆ ಮೇಲ್ಕಂಡ ವಿಚಾರ ತಿಳಿಸಿದಾಗ ಅವರು ದಾಳಿ ನಡೆಸಲು ನಮ್ಮೊಂದಿಗೆ ಪಂಚರಾಗಿ ಬರಲು ಒಪ್ಪಿದ್ದು ನಂತರ ಅಲ್ಲಿಂದ ಜೀಪಿನಲ್ಲಿ ಜಡಲತಿಮ್ಮನಹಳ್ಳಿ ಕ್ರಾಸ್ ಮುಖಾಂತರ ಮೇಲ್ಕಂಡ ಸ್ಥಳದಿಂದ ಸ್ವಲ್ಪ ದೂರದಲ್ಲಿ ಜೀಪನ್ನು ನಿಲ್ಲಿಸಿ ನಡೆದುಕೊಂಡು ಸಂಜೆ 5:20 ಗಂಟೆಗೆ ಸ್ಥಳಕ್ಕೆ ಹೋದಾಗ ಯಾರೋ ನಾಲ್ಕು ಜನ ಅಸಾಮಿಗಳು ಗುಂಪಾಗಿ ಕುಳಿತುಕೊಂಡು ಹೊಂಗೆ ಮರಗಳ ಕೆಳಭಾಗದಲ್ಲಿ ಅಂದರ್ಗೆ 500/- ರೂಗಳೆಂದು ಬಾಹರ್ಗೆ 500 ರೂಗಳೆಂದು ಕೂಗುತ್ತ ಹಣವನ್ನು ಪಣವಾಗಿಟ್ಟು ಅಂದರ್-ಬಾಹರ್ ಇಸ್ಪೀಟ್ ಜೂಜಾಟವಾಡುತಿದ್ದನ್ನು ಖಚಿತ ಪಡಿಸಿಕೊಂಡು ಅವರ ಮೇಲೆ ದಾಳಿ ಮಾಡಿದಾಗ ನಾಲ್ಕು ಜನರ ಪೈಕಿ ಇಬ್ಬರು ಸಿಕ್ಕಿದ್ದು ಉಳಿದ ಇಬ್ಬರು ಸ್ಥಳದಿಂದ ತಲೆಮರೆಸಿಕೊಂಡಿರುತ್ತಾರೆ. ಸೆರೆ ಸಿಕ್ಕವರ ಹೆಸರು ವಿಳಾಸ ಕೇಳಲಾಗಿ 1) ಮಂಜುನಾಥ ಬಿನ್ ಲೇಟ್ ಡಿ.ಎನ್ ಅಪ್ಪಯ್ಯಶೆಟ್ಟಿ, 55 ವರ್ಷ, ಬಲಜಿಗರು, ಕೂಲಿ ಕೆಲಸ, ವಾಸ: ಚೊಕ್ಕಹಳ್ಳಿ ಗ್ರಾಮ, ಚಿಕ್ಕಬಳ್ಳಾಪುರ ತಾಲ್ಲೂಕು, 2) ಹನುಂತ ಬಿನ್ ಮುನಿಶಾಮಪ್ಪ, 42 ವರ್ಷ, ಬಲಜಿಗರು, ಹೂವಿನ ವ್ಯಾಪಾರ, ವಾಸಳ ಟಿ.ಜಿ ಟ್ಯಾಂಕ್ ರಸ್ತೆ, ಪೆರಿಕಲ್ ಮುನಿಯಪ್ಪ ರವರ ಮನೆಯಲ್ಲಿ ಬಾಡಿಗೆ ಮನೆ, ಚಿಕ್ಕಬಳ್ಳಾಪುರ ತಾಲ್ಲೂಕು ಎಂದು ತಿಳಿಸಿರುತ್ತಾರೆ. ಇವರ ಮುಂದೆ ಅಂದರ್-ಬಾಹರ್ ಇಸ್ಟೀಟ್ ಜೂಜಾಟವಾಡುತ್ತಿದ್ದ ಸ್ಥಳದಲ್ಲಿ ಒಂದು ಪ್ಲಾಸ್ಟಿಕ್ ಚೀಲದ ಮೇಲೆ ಇಸ್ಟೀಟ್ ಎಲೆಗಳು ಮತ್ತು ಹಣವಾಗಿ ಕಟ್ಟುತ್ತಿದ್ದ ಹಣ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದು ಸದರಿ ಇಸ್ಟೀಟ್ ಎಲೆಗಳನ್ನು ಎಣಿಕೆ ಮಾಡಲಾಗಿ 52 ಇಸ್ಟೀಟ್ ಎಲೆಗಳು ಇರುತ್ತವೆ. ಹಣವನ್ನು ಎಣಿಕೆ ಮಾಡಲಾಗಿ 1800 ರೂಗಳಿರುತ್ತೆ. ಸದರಿ 52 ಇಸ್ಪೀಟ್ ಎಲೆಗಳನ್ನು, 1800/- ರೂ ನಗದು ಹಣವನ್ನು ಹಾಗೂ ಪ್ಲಾಸ್ಟಿಕ್ ಚೀಲವನ್ನು ಸಂಜೆ 5:30 ಗಂಟೆಯಿಂದ ಸಂಜೆ 6:20 ಗಂಟೆಯವರೆಗೆ ಪಂಚನಾಮೆಯ ಮೂಲಕ ಅಮಾನತ್ತು ಪಡಿಸಿಕೊಂಡು ಆರೋಪಿಗಳನ್ನು ಮತ್ತು ಸ್ವತ್ತುಗಳನ್ನು ವಶಕ್ಕೆ ಪಡೆದು ಮುಂದಿನ ಕ್ರಮಕ್ಕಾಗಿ ಸಂಜೆ 6:50 ಗಂಟೆಗೆ ಠಾಣೆಗೆ ಬಂದಿರುತ್ತೆವೆ. ಈ ಬಗ್ಗೆ ಮುಂದಿನ ಕಾನೂನು ಕ್ರಮ ಜರುಗಿಸಲು ಸೂಚಿಸಿದ್ದರ ಮೇರೆಗೆ ಈ ಪ್ರ.ವರದಿ.

 1. ಪಾತಪಾಳ್ಯ ಪೊಲೀಸ್ ಠಾಣೆ ಮೊ.ಸಂ.06/2021 ಕಲಂ. 323,324,341,504,506,34 ಐ.ಪಿ.ಸಿ:-

     ದಿನಾಂಕ:17/01/2021 ರಂದು ರಾತ್ರಿ 08-15 ಗಂಟೆಗೆ ಬಾಗೇಪಲ್ಲಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗಾಯಾಳು ಶ್ರೀಮತಿ ನವನೀತ  ಕೋಂ ಆನಂದ ರವರ ಹೇಳಿಕೆಯನ್ನು ಠಾಣೆಯ ಹೆಚ್,ಸಿ 250 ರವರು ಪಡೆದು ತಂದು ಹಾಜರುಪಡಿಸಿದ್ದರ  ಸಾರಾಂಶವೇನೆಂದರೆ, ನಮಗೂ ಮತ್ತು ನಮ್ಮ ಗಂಡನ ಅಣ್ಣ ತಮ್ಮಂದಿರಾದ ಲಕ್ಷ್ಮೀನಾರಾಯಣಪ್ಪರವರಿಗೂ ದುಗ್ಗಿನಾಯಕನಪಲ್ಲಿ ಗ್ರಾಮದ ಸ,ನಂ 25/ಪಿ2,  25/ಪಿ35,  25/ಪಿ45 ಜಮೀನುಗಳ ವಿಚಾರದಲ್ಲಿ ತಕರಾರು ಇರುತ್ತದೆ, ನಮ್ಮ ಮೇಲೆ ದ್ವೇಷ ಇಟ್ಟುಕೊಂಡಿದ್ದು ನಾವು ಸದರಿ ಜಮೀನುಗಳ ಒಳಗೆ ಹೋಗಬಾರದು ಎಂದು ತಕರಾರು ಇರುತ್ತದೆ, ಹೀಗಿರುವಾಗ ದಿನಾಂಕ:17/01/2021 ರಂದು ಮದ್ಯಾಹ್ನ ಸುಮಾರು 12-00 ಘಂಟೆಯಲ್ಲಿ ನಾನು ನಮ್ಮ ಹಸುಗಳನ್ನು ಕಟ್ಟಲು ನಮ್ಮ ಜಮೀನು ಬಳಿಗೆ ಹೋಗುತ್ತಿದ್ದಾಗ ಆಂಜನೇಯಲು ಬಿನ್ ಲಕ್ಷ್ಮೀ ನಾರಾಯಣಪ್ಪರವರು ನನ್ನನ್ನು ಅಡ್ಡ ಗಟ್ಟಿ ಹಸುಗಳನ್ನು ಬೇರೆ ಕಡೆಗೆ ಓಡಿಸಿದರು. ಅಷ್ಟರಲ್ಲಿ ಆದಿಲಕ್ಷ್ಮಮ್ಮ, ಸರೋಜಮ್ಮ, ಸುಕನ್ಯ ರವರು ಅಲ್ಲಿಗೆ ಬಂದು ಅಲ್ಲಿಯೇ ಬಿದ್ದಿದ್ದ ಕಲ್ಲುಗಳನ್ನು ತೆಗೆದುಕೊಂಡು ನನ್ನ ಮೈ ಮೇಲೆ ಹೊಡೆದಿರುತ್ತಾರೆ. ಕೈಗಳಿಂದ ಹೊಡೆದಿರುತ್ತಾರೆ. ನನ್ನ ಕೂದಲು ಹಿಡಿದುಕೊಂಡು ಎಳೆದಾಡಿ ನನ್ನ ಹೊಟ್ಟೆಗೆ ಒದ್ದಿರುತ್ತಾರೆ. ನೀ ಮಿಂಡಗಾಡು ವಸ್ತಾಡ ಲಂಜ ಎಂಬಿತ್ಯಾದಿ ಮಾತುಗಳಿಂದ ನನ್ನನ್ನು ಬೈಯ್ದು ನಿಮ್ಮನ್ನು ಸಾಯಿಸುವವರೆಗೂ ನಿಮ್ಮನ್ನು ಬಿಡುವುದಿಲ್ಲ. ಎಂದು ಪ್ರಾಣ ಬೆದರಿಕೆ ಹಾಕಿರುತ್ತಾರೆ. ಆಂಜನೇಯಲು ನನ್ನನ್ನು ಹೊಡೆದಿರುವುದಿಲ್ಲ. ನಮಗೆ ಮೇಲ್ಕಂಡವರಿಂದ ಪ್ರಾಣ ಭಯ ಇರುತ್ತದೆ ಮೇಲ್ಕಂಡ ಆಂಜನೇಯಲು, ಆದಿಲಕ್ಷ್ಮಮ್ಮ, ಸರೋಜಮ್ಮ, ಸುಕನ್ಯ ರವರ ವಿರುದ್ದ ಕಾನೂನು ಕ್ರಮ ಜರುಗಿಸಿ ನಮಗೆ ರಕ್ಷಣೆ ನೀಡಬೇಕಾಗಿ ಕೋರಿ ನೀಡಿದ ಹೇಳಿಕೆಯ ಮೇರೆಗೆ ಠಾಣಾ ಮೊ,ಸಂ 06/2021 ಕಲಂ 323,324,341,504,506 ರೆ/ವಿ 34 ಐ,ಪಿ,ಸಿ ರೀತ್ಯಾ ಪ್ರಕರಣ ದಾಖಲಿಸಿಕೊಂಡಿರುತ್ತೆ.

 1. ಪಾತಪಾಳ್ಯ ಪೊಲೀಸ್ ಠಾಣೆ ಮೊ.ಸಂ.07/2021 ಕಲಂ. 323,324,504,506 ಐ.ಪಿ.ಸಿ:-

     ದಿನಾಂಕಃ-18-01-2021 ರಂದು ಬಾಗೇಪಲ್ಲಿ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಶ್ರೀಮತಿ ಸುಕನ್ಯಾ ಕೋಂ ಆಂಜನೇಯ, ದುಗ್ಗಿನಾಯಕನಹಳ್ಳಿ ಗ್ರಾಮ, ಬಾಗೇಪಲ್ಲಿ ತಾಲ್ಲೂಕುರವರ ಹೇಳಿಕೆಯನ್ನು ಪಡೆದು ಬೆಳಗ್ಗೆ 07-30 ಗಂಟೆಗೆ ಠಾಣೆಗೆ ವಾಪಸ್ಸಾಗಿ ಪ್ರಕರಣ ದಾಖಲಿಸಿದ್ದರ ಸಾರಾಂಶವೆನೇಂದರೆ, ತಮಗೂ ಮತ್ತು ತಮ್ಮ ಗ್ರಾಮದ ನವನೀತಮ್ಮ W/O ಆನಂದರವರಿಗೂ ಜಮೀನಿನ ವಿಚಾರದಲ್ಲಿ ಈಗ್ಗೆ ಸುಮಾರು 01 ವರ್ಷದಿಂದ ತಕರಾರುಗಳಿರುತ್ತವೆ. ಈಗಿರುವಲ್ಲಿ ನಿನ್ನೆ  ದಿನಾಕ:17-01-2021 ರಂದು ಮದ್ಯಾಹ್ನ ಸುಮಾರು 02-00 ಗಂಟೆಯ ಸಮಯದಲ್ಲಿ ತಾನು ತಮ್ಮ ಜಮೀನಿನ ಬಳಿ ಹೋದಾಗ  ನವನೀತಮ್ಮ W/O ಆನಂದರವರು ಹಸುಗಳನ್ನು ಕಟ್ಟಿಹಾಕಿದ್ದು ,ತಾನು ಸ್ಥಳಕ್ಕೆ ಹೋಗಿ ಏಕೆ ತಮ್ಮಜಮೀನಿನಲ್ಲಿ ಹಸುಗಳನ್ನು ಕಟ್ಟಿಹಾಕಿರುವುದು ಎಂದು ಕೇಳಿದಕ್ಕೆ ಮೇಲ್ಕಂಡ ನವನೀತಮ್ಮರವರು ಏಕಾ ಏಕಿ ತನ್ನ ಮೇಲೆ ಜಗಳ ತೆಗೆದು “ ಲೇ ಲೋಫರ್ ಮುಂಡೆ ಅಲಕಾ ಮುಂಡೆ ಎಂದು ಅವಾಚ್ಯ ಶಬ್ಧಗಳಿಂದ ಬೈದು,ಕೈಗಳಿಂದ ತನ್ನ ಮೇಲೆ ಹೊಡೆದು ,ತನ್ನ ಎಡಗೈನ್ನು ಹಿಡಿದು ತಿರುಗಿಸಿ ನೋವುಂಟು ಮಾಡಿರುತ್ತಾರೆ.ನಂತರ ಅಲ್ಲೀಯೆ ಬಿದ್ದಿದ್ದ ಕಲ್ಲಿಂದ ತನ್ನ ಬೆನ್ನಿನ ಮೇಲೆ ಹೊಡೆದ ಮೂಗೇಟು ಮಾಡಿರುತ್ತಾಳೆ. ಅಷ್ಟರಲ್ಲಿ ತಮ್ಮ ಅತ್ತೆ ಆದಿಲಕ್ಷಮ್ಮ W/O ಲಕ್ಷ್ಮಿನಾರಾಯಣ ಮತ್ತು ತಮ್ಮ ಗ್ರಾಮದ ಲಕ್ಷ್ಮಿನರಸಮ್ಮ W/O ಅಕ್ಕುಲಪ್ಪ ರವರು ಬಂದು ಗಲಾಟೆಯನ್ನು ಬಿಡಿಸಿದ್ದು  ನವನೀತಮ್ಮನವರು ಸ್ಥಳದಿಂದ ಹೋಗುವಾಗ ಸದರಿ ಜಮೀನಿನ ತಂಟೆಗೆ ಬಂದರೆ ನಿನ್ನನ್ನು ಮುಗಿಸಿಬಿಡುವುದಾಗಿ ಪ್ರಾಣಬೆದರಿಕೆ ಹಾಕಿರುತ್ತಾಳೆ. ತಮ್ಮ ಮನೆಯಲ್ಲಿ ಯಾರೂ ಇಲ್ಲದೇ ಇದ್ದುದ್ದರಿಂದ ತಡವಾಗಿ ಆಸ್ಪತ್ರೆಗೆ  ಬಂದು ದಾಖಲಾಗಿ ಚಿ ಕತ್ಸೆಯನ್ನು  ಪಡೆದುಕೊಳ್ಳುತ್ತಿದ್ದು, ತನ್ನ ಮೇಲೆ ಗಲಾಟೆ ಮಾಡಿದ ಮೇಲ್ಕಂಡ ನವನೀತಮ್ಮರವರ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಲು ಕೋರಿರುವುದಾಗಿರುತ್ತೆ.