ದಿನಾಂಕ :17/10/2020 ರ ಅಪರಾಧ ಪ್ರಕರಣಗಳು

 1. ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆ ಮೊ.ಸಂ.70/2020 ಕಲಂ: 420 ಐ.ಪಿ.ಸಿ & 87,78(III) ಕೆ.ಪಿ ಆಕ್ಟ್:-

     ದಿನಾಂಕ: 16-10-2020 ರಂದು ಸಂಜೆ ಸುಮಾರು 4-30 ಗಂಟೆಯಲ್ಲಿ  ಪಿರ್ಯಾಧಿಧಾರರು ತಮ್ಮ  ಸಿಬ್ಬಂಧಿಯೊಂದಿಗೆ ಚಿಕ್ಕಬಳ್ಳಾಪುರ ನಗರದಲ್ಲಿ ಗಸ್ತು ಮಾಡುತ್ತಿದ್ದಾಗ ನನಗೆ ಬಂದ ಮಾಹಿತಿಯಂತೆ   ಯಾರೋ ಒಬ್ಬ ಅಸಾಮಿಯು ಚಿಕ್ಕಬಳ್ಳಾಪುರ ನಗರದ ಕೆನರಾ ಬ್ಯಾಂಕ್ ಹಿಂಬಾಗದ ರಸ್ತೆಯಲ್ಲಿ ರಾಮಪ್ರಸಾದ್ ಎಲೆಕ್ಟ್ರಿಕಲ್ ಅಂಗಡಿಯ ಬಳಿ  ಈ ದಿನ ರಾತ್ರಿ ನಡೆಯುವ  ಮುಂಬೈ ಇಂಡಿಯನ್ಸ್ ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್ಸ್ ಮಧ್ಯೆ ನಡೆಯು ಐಪಿಎಲ್ ಪಂದ್ಯಕ್ಕೆ  ಸಾರ್ವಜನಿಕರಿಂದ  ಕ್ರಿಕೇಟ್ ಬೆಟ್ಟಿಂಗ್ ಜೂಜಾಟಕ್ಕೆ  ಹಣವನ್ನು  ಪಣವಾಗಿ ಕಟ್ಟಿಸಿಕೊಂಡು ಮೋಸ ಮಾಡುತ್ತಿದ್ದಾರೆಂದು ಬಂದ  ಖಚಿತವಾದ  ಮಾಹಿತಿಯಂತೆ  ತಮ್ಮ ಕಛೇರಿಗೆ  ಪಂಚಾಯ್ತಿಧಾರರನ್ನು  ಕರೆಯಿಸಿಕೊಂಡು  ಅವರಿಗೆ ಪೊಲೀಸ್ ನೋಟೀಸ್ ಜಾರಿ ಮಾಡಿ ಕೇಸಿನ ಸಾರಾಂಶವನ್ನು ತಿಳಿಸಿ ತಮ್ಮೊಂದಿಗೆ ಪಂಚರಾಗಿ ಬರ ಮಾಡಿಕೊಂಡು  ಪೊಲೀಸ್ ಸಿಬ್ಬಂಧಿಯವರಾದ ಶ್ರೀ ರವಿಕುಮಾರ್ ಹೆಚ್ ಸಿ-114, ಶ್ರೀ ವಿಜಯ್ ಕುಮಾರ್ ಪಿಸಿ-245 ಹಾಗೂ ಜೀಪ್ ಚಾಲಕ ಮಂಜುನಾಥ ಎಪಿಸಿ-124 ರವರೊಂದಿಗೆ  ಕಛೇರಿ ಜೀಪ್ ಸಂ: KA-40-G-538 ವಾಹನದಲ್ಲಿ  ಸಂಜೆ  5-15 ಗಂಟೆಗೆ  ಕಛೇರಿಯನ್ನು ಬಿಟ್ಟು ಬಿಬಿ ರಸ್ತೆಯ ಮೂಲಕ ಕೆನರಾ ಬ್ಯಾಂಕ್  ಮುಂಬಾಗ  ಜೀಪನ್ನು ನಿಲ್ಲಿಸಿ  ಪಂಚರೊಂದಿಗೆ ನಡೆದುಕೊಂಡು ಕೆನರಾ ಬ್ಯಾಂಕ್ ಹಿಂಬಾಗಕ್ಕೆ ಹೋದಾಗ  ಸ್ವಲ್ಪ ದೂರದಲ್ಲಿ ರಾಮಪ್ರಸಾದ್ ಎಲೆಕ್ಟ್ರಾನಿಕ್ಸ್ ಅಂಗಡಿಯ ಬಳಿ  ಕೆಲವರು ಗುಂಪು ಸೇರಿಕೊಂಡು ಏನೋ ಮಾತನಾಡುತ್ತಿದ್ದರು ಮಪ್ತಿಯಲ್ಲಿದ್ದ ಪಿರ್ಯಾಧಿಧಾರರು ನಿಧಾನವಾಗಿ ನಡೆದುಕೊಂಡು ಗುಂಪಿನ ಬಳಿ ಹೋದಾಗ ಒಬ್ಬ ವ್ಯಕ್ತಿಯು ಈ ದಿನ ನಡೆಯುವ ಐಪಿಎಲ್ ಕ್ರಿಕೇಟ್  ಮ್ಯಾಚ್ ನಲ್ಲಿ ಮುಂಬೈ ಇಂಡಿಯನ್ಸ್ ಗೆಲ್ಲುತ್ತೆ ಯಾರಾದ್ರೂ ಪಂದ್ಯ ಕಟ್ಟುತ್ತಿರಾ, 500/- ರೂ 500/- ಕೊಡುತ್ತೇನೆ. ಕೊಲ್ಕತ್ತಾ ನೈಟ್ ರೈಡರ್ಸ್ ಗೆಲ್ಲುತ್ತೆ ಅಂದರೆ 500/-ರೂಗೆ 1000/- ಕೊಡುತ್ತೇನೆ ಬನ್ನಿ ಎಂದು ಸಾರ್ವಜನಿಕಗೆ ನಂಬಿಸಿ ಮೋಸದಿಂದ ಹಣವನ್ನು ಪಣಕ್ಕೆ ಕಟ್ಟಿಸಿಕೊಳ್ಳುತ್ತಿದ್ದ ಕೂಡಲೆ ಪಂಚರ ಸಮಕ್ಷಮ ಸಿಬ್ಬಂಧಿಯ ಸಹಾಯದಿಂದ ಅವನನ್ನು  ಹಿಡಿದುಕೊಳ್ಳುತ್ತಿದ್ದಂತೆ ಅಲ್ಲಿದ್ದವರು ಓಡಿ ಹೋಗಿರುತ್ತಾರೆ. ಹಣವನ್ನು ಕಟ್ಟಿಸಿಕೊಳ್ಳುತ್ತಿದ್ದ ವ್ಯಕ್ತಿಯನ್ನು  ಹಿಡಿದು ವಿಚಾರ ಮಾಡಲಾಗಿ ಆತನು ತನ್ನ ಹೆಸರನ್ನು ಷೇಕ್ ಸಾಗೀರ್ ಪಾಷ ಬಿನ್  ಲೇಟ್ ಅಬ್ದುಲ್ ಗಫಾರ್  42,ವರ್ಷ, ಮುಸ್ಲಿಂ ಹಣ್ಣಿನ ವ್ಯಾಪಾರಿ, ವಾರ್ಡ-28, ಎಲೆಪೇಟೆ ರಸ್ತೆ ಚಿಕ್ಕಬಳ್ಳಾಪುರ ನಗರ  ಎಂದು ತಿಳಿಸಿದ್ದು  ತಾನು ಕೋಲಾರದ ರಹಮತ್ ನಗರದ ವಾಸಿ  ಮುಸಾಪೀರ್ ಬಿನ್ ಇಮ್ತಿಯಾಜ್ ಖಾನ್ ರವರಿಗೆ  ಕ್ರಿಕೇಟ್ ಬೆಟ್ಟಿಂಗ್ ಗಾಗಿ ಗಿರಾಕಿಗಳನ್ನು ಹಿಡಿದುಕೊಡುತ್ತಿದ್ದು ನಾನು ಮತ್ತು ಮುಸಾಪೀರ್ ಇಬ್ಬರೂ ಐಪಿಎಲ್ ಕ್ರಿಕೇಟ್ ಪ್ರಾರಂಭದಿಂದ ಸಾರ್ವಜನಿಕರಿಂದ ಕ್ರಿಕೇಟ್ ಬೆಟ್ಟಿಂಗ್ ಗಾಗಿ ಹಣವನ್ನು ಸಂಗ್ರಹಿಸುತ್ತಿದ್ದುದಾಗಿ  ತನ್ನ ತಪ್ಪನ್ನು ಒಪ್ಪಿಕೊಂಡಿರುತ್ತಾನೆ. ಅತನ ಅಂಗಶೋಧನೆ ಮಾಡಲಾಗಿ  ಸಾರ್ವಜನಿಕರಿಂದ  ಕ್ರಿಕೇಟ್  ಬೆಟ್ಟಿಂಗ್ ಗಾಗಿ ಸಂಗ್ರಹಿಸಿದ್ದ ರೂ 2000/- ರೂಗಳು ಇದ್ದು ಸದರಿ ಹಣವನ್ನು  ಮುಂದಿನ ಕ್ರಮಕ್ಕಾಗಿ ಪಂಚರ ಸಮಕ್ಷಮ ಅಮಾನತ್ತು ಪಡಿಸಿಕೊಂಡಿದ್ದು ಪಂಚನಾಮೆಯನ್ನು  ಸಂಜೆ 5-30 ಗಂಟೆಯಿಂದ 6-15 ಗಂಟೆಯ ವರೆಗೆ ಕೈಗೊಂಡು ಸದರಿ ಅರೋಪಿ ಷೇಕ್ ಸಾಗೀರ್ ಪಾಷ, ಅಮಾನತ್ತು ಪಡಿಸಿಕೊಂಡ  ಮಾಲು , ಪಂಚನಾಮೆ ಹಾಗೂ ಜ್ಞಾಪನದೊಂದಿಗೆ ಠಾಣೆಗೆ ಹಾಜರಾಗಿ  ಕೊಟ್ಟ ದೂರಿನ ಮೇರೆಗೆ  ಪ್ರಕರಣವನ್ನು ದಾಖಲಿಸಿಕೊಂಡು  ತನಿಖೆಯನ್ನು  ಕೈಗೊಂಡಿರುತ್ತೆ.

 1. ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆ ಮೊ.ಸಂ.71/2020 ಕಲಂ: 15(A),32(3) ಕೆ.ಇ ಆಕ್ಟ್:-

     ದಿನಾಂಕ; 16-10-2020 ರಂದು ರಾತ್ರಿ 7.10 ಗಂಟೆಗೆ ಪಿ.ಎಸ್.ಐ ರವರು ನೀಡಿದ ವರದಿ ದೂರಿನ ಸಾರಾಂಶವೇನೆಂದರೆ ಈ ದಿನ ರಾತ್ರಿ 7.00 ಗಂಟೆಯಲ್ಲಿ ತಾನು, ಠಾಣೆಯಲ್ಲಿದ್ದಾಗ ಬಂದ  ಖಚಿತ ಮಾಹಿತಿ ಏನೆಂದರೆ ಎ.ಪಿ.ಎಂ.ಸಿ ಮಾರುಕಟ್ಟೆಯ ಒಳಗೆ ಖಾಲಿ ಪ್ರದೇಶದ ಬಳಿ ಯಾರೋ ಒಬ್ಬ ವ್ಯಕ್ತಿಯು ಸಾರ್ವಜನಿಕ ಸ್ಥಳದಲ್ಲಿ ಯಾವುದೇ ಪರವಾನಗಿ ಇಲ್ಲದೇ ಸಾರ್ವಜನಿಕರು ಮದ್ಯ ಸೇವನೆ ಮಾಡಲು ಸ್ಥಳಾವಕಾಶ ಮಾಡಿಕೊಡುತ್ತಿರುವುದಾಗಿ ಮಾಹಿತಿ ಬಂದಿದ್ದು ಈ ಬಗ್ಗೆ  ಕಲಂ 15(ಎ),32(3) ಕೆ.ಇ ಅಕ್ಟ್ ರೀತ್ಯಾ ಪ್ರಕರಣವನ್ನು ದಾಖಲಿಸಿಕೊಳ್ಳಲು  ಸೂಚಿಸಿ ನೀಡಿದ ದೂರಿನ ಮೇರೆಗೆ ಈ ಪ್ರ.ವ.ವರದಿ.

 1. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.380/2020 ಕಲಂ: 448,504,506 ರೆ/ವಿ 34 ಐ.ಪಿ.ಸಿ & 3(1)(r),3(1)(s) The SC & ST (Prevention of Atrocities) Amendment Act 2015:-

     ದಿನಾಂಕ: 16/10/2020 ರಂದು ಸಂಜೆ 5.30 ಗಂಟೆಗೆ ಕುಮಾರಿ ಭವಾನಿ ಬಿನ್ ನಂಬಿಹಳ್ಳಿ ವೆಂಕಟೇಶಪ್ಪ, 22 ವರ್ಷ, ಆದಿಕರ್ನಾಟಕ ಜನಾಂಗ, ಕೂಲಿ ಕೆಲಸ, ಮೈಲಾಂಡ್ಲಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ದಿನಾಂಕ:12/10/2020 ರಂದು ಸಂಜೆ ತಮ್ಮ ತಂದೆಗೂ ಮತ್ತು ತಮ್ಮ ಗ್ರಾಮದ ಭಜಂತ್ರಿ ಜನಾಂಗದ ಸರ್ವೇಶ ಬಿನ್ ಸೀನಪ್ಪ ಎಂಬಾತನಿಗೂ ಸರ್ವೇಶ ರವರು ಅವರ ದ್ವಿಚಕ್ರವಾಹನವನ್ನು ರಸ್ತೆಗೆ ಅಡ್ಡವಾಗಿ ನಿಲ್ಲಿಸಿರುವ ವಿಚಾರದಲ್ಲಿ ಬಾಯಿ ಮಾತಿನಲ್ಲಿ ಸ್ವಲ್ಪ ಜಗಳ ಆಗಿರುತ್ತೆ. ನಂತರ ಮರುದಿನ ದಿನಾಂಕ:13/10/2020 ರಂದು ಸಂಜೆ ಸುಮಾರು 7.30 ಗಂಟೆಯ ಸಮಯದಲ್ಲಿ ತಾನು ತಮ್ಮ ಮನೆಯಲ್ಲಿ ಒಬ್ಬಳೇ ಇದ್ದಾಗ ಮೇಲ್ಕಂಡ ಭಜಂತ್ರಿ ಜನಾಂಗದ ಸೀನಪ್ಪನ ಮಕ್ಕಳಾದ ಸರ್ವೇಶ, ಹರೀಶ ಮತ್ತು ಉಮಾಂಶಕರ್ ಎಂಬುವರುಗಳು ದಿನಾಂಕ:12/10/2020 ರಂದು ನಡೆದ ಗಲಾಟೆಯನ್ನು ಮನಸ್ಸಿನಲ್ಲಿಟ್ಟುಕೊಂಡು ತಮ್ಮ ಮನೆಯ ಬಳಿಗೆ ಬಂದು ತಮ್ಮ ತಂದೆಯವರನ್ನು ಕುರಿತು ಏ ಲೋಪರ್ ನನ್ನ ಮಗನೇ, ಮಾದಿಗ ನನ್ನ ಮಗನೇ, ಬಾರೋ ಹೊರಗೆ ಇವತ್ತು ನಿನಗೆ ಒಂದು ಗತಿಯನ್ನು ಕಾಣಿಸುತ್ತೇವೆ ಎಂದು ಅವಾಚ್ಯ ಶಬ್ದಗಳಿಂದ ಜಾತಿ ಬಗ್ಗೆ ಬೈದು ಜಾತಿ ನಿಂದನೆ ಮಾಡಿದರು. ಆಗ ಮನೆಯಲ್ಲಿ ತಾನು ಒಬ್ಬಳೇ ಇದ್ದುದರಿಂದ ತನಗೆ ಭಯವಾಗಿ ತಮ್ಮ ಮನೆಯ ಬಾಗಿಲಿಗೆ ಒಳಗಿನಿಂದ ಚಿಲಕವನ್ನು ಹಾಕಿಕೊಂಡಿದ್ದು, ತಾನು ಬಾಗಿಲನ್ನು ತೆಗೆಯಲಿಲ್ಲ. ಆಗ ಮೇಲ್ಕಂಡ ಸರ್ವೇಶ, ಹರೀಶ ಮತ್ತು ಉಮಾಂಶಕರ್ ರವರುಗಳು ತಮ್ಮ ಮನೆಯ ಬಾಗಿಲನ್ನು ಕಾಲಿನಿಂದ ಜೋರಾಗಿ ಒದ್ದರು. ಆದರೂ ಸಹ ತಾನು ಮನೆಯ ಬಾಗಿಲನ್ನು ತೆಗೆಯದೇ ಮನೆಯ ಒಳಗಿನಿಂದ ಕಿಟಕಿಯ ಮುಖಾಂತರ ಅವರುಗಳು ಮಾಡುತ್ತಿದ್ದ ಗಲಾಟೆಯನ್ನು ನೋಡುತ್ತಿದ್ದೆ. ಆದರೂ ಸಹ ಅವರುಗಳು ತಮ್ಮ ಮನೆಯ ಬಳಿಯಿಂದ ಹೋಗದೇ ಒಂದೇ ಸಮನೆ ಬೈಯ್ಯುತ್ತಿದ್ದರು. ಅಷ್ಟರಲ್ಲಿ ತಮ್ಮ ಪಕ್ಕದ ಮನೆಯ ವಾಸಿಗಳಾದ ನವೀನ್ ಮತ್ತು ನರಸಮ್ಮ ರವರುಗಳು ತಮ್ಮ ಮನೆಯ ಬಳಿಗೆ ಬಂದಾಗ ತನಗೆ ಸ್ವಲ್ಪ ಧೈರ್ಯ ಬಂದು ತಾನು ತಮ್ಮ ಮನೆಯ ಬಾಗಿಲನ್ನು ತೆಗೆದು ಹೊರಗೆ ಬಂದೆ. ಆಗ ಮೇಲ್ಕಂಡ 03 ಜನ ತಮ್ಮ ಮನೆಯೊಳಗೆ ಅಕ್ರಮವಾಗಿ ನುಗ್ಗಿ ಆ ಸರ್ವೇಶ ಎಲ್ಲೇ ನಿಮ್ಮಪ್ಪ ಎಂದು ತನ್ನನ್ನು ಹೊಡೆಯಲು ಮುಂದಾಗಿದ್ದು, ಹರೀಶ ತನ್ನನ್ನು ಕುರಿತು ಏ ಮಾದಿಗ ಮುಂಡೆ, ನಿಮ್ಮಪ್ಪ ಎಲ್ಲಿದ್ದಾನೆ ಕರೆಸು ಇಲ್ಲವಾದರೆ ನಿಮ್ಮ ಮನೆಯನ್ನು ಸುಟ್ಟು ಬೂದಿ ಮಾಡುತ್ತೇವೆ ಎಂದು ತನಗೆ ಜಾತಿ ಬಗ್ಗೆ ಬೈದು, ಬೆದರಿಕೆಯನ್ನು ಹಾಕಿ ಹಾಕಿದ. ಅಷ್ಟರಲ್ಲಿ ಮೇಲ್ಕಂಡ ನವೀನ್, ಅವರ ತಾಯಿ ನರಸಮ್ಮ ಮತ್ತು ದೇವಪ್ಪ ಬಿನ್ ಕದಿರಪ್ಪ ರವರುಗಳು ಅಡ್ಡ ಬಂದು ಸರ್ವೇಶ ಮತ್ತು ಅವರ ಕಡೆಯವರಿಗೆ ಬುದ್ದಿ ಹೇಳಿ ತಮ್ಮ ಮನೆಯಿಂದ ಹೊರಗೆ ಕಳುಹಿಸಿಕೊಟ್ಟರು. ಸ್ವಲ್ಪ ಸಮಯದ ನಂತರ ತಮ್ಮ ತಂದೆ ಮತ್ತು ತಾಯಿ ಮಂಜುಳಮ್ಮ ರವರುಗಳು ತಮ್ಮ ಮನೆಗೆ ವಾಪಸ್ಸು ಬಂದಾಗ ತಾನು ನಡೆದ ಘಟನೆಯ ಬಗ್ಗೆ ಅವರಿಗೆ ತಿಳಿಸಿರುತ್ತೇನೆ. ತಮ್ಮ ತಂದೆ-ತಾಯಿ ಈ ಗಲಾಟೆ ವಿಚಾರವನ್ನು ಗ್ರಾಮದ ಹಿರಿಯವರಿಗೆ ತಿಳಿಸಿದ್ದು, ಅವರುಗಳು ಗ್ರಾಮದಲ್ಲಿ ಹಿರಿಯರ ಸಮಕ್ಷಮ ನ್ಯಾಯ-ಪಂಚಾಯ್ತಿ ಮಾಡಿ ಬುದ್ದಿ ಹೇಳುವುದಾಗಿ ತಿಳಿಸಿದ್ದರಿಂದ ತಾವುಗಳು ಇದುವರೆಗೂ ಪೊಲೀಸ್ ಠಾಣೆಗೆ ದೂರನ್ನು ನೀಡಿರುವುದಿಲ್ಲ. ಆದರೆ ಗ್ರಾಮದಲ್ಲಿ ಇದುವರೆಗೂ ಯಾವುದೇ ಪಂಚಾಯ್ತಿ ಮಾಡದೇ ಇರುವುದರಿಂದ ಈ ದಿನ ತಡವಾಗಿ ಪೊಲೀಸ್ ಠಾಣೆಗೆ ದೂರನ್ನು ನೀಡಿದ್ದು, ಮೇಲ್ಕಂಡ ಸರ್ವೇಶ, ಹರೀಶ ಮತ್ತು ಉಮಾಂಶಕರ್ ರವರುಗಳ ವಿರುದ್ದ ಕಾನೂನು ರೀತ್ಯಾ ಸೂಕ್ತ ಕ್ರಮ ಜರುಗಿಸಬೇಕಾಗಿ ಕೋರಿರುವುದಾಗಿರುತ್ತೆ.

 1. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.381/2020 ಕಲಂ: 32,34 ಕೆ.ಇ ಆಕ್ಟ್:-

     ದಿನಾಂಕ: 16/10/2020 ರಂದು ರಾತ್ರಿ 9.00 ಗಂಟೆಗೆ ಪಿ.ಎಸ್.ಐ ಶ್ರಿ ನರೇಶ್ ನಾಯ್ಕ್.ಎಸ್ ರವರು ಮಾಲು ಮತ್ತು ಪಂಚನಾಮೆಯೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ಈ ದಿನ ದಿನಾಂಕ:16/10/2020 ರಂದು ಸಂಜೆ ತಾನು ಠಾಣೆಯ ಸಿಬ್ಬಂದಿಯವರಾದ ಗುಪ್ತ ಮಾಹಿತಿ ಕರ್ತವ್ಯದ ಸಿಬ್ಬಂದಿ ಸಿ.ಹೆಚ್.ಸಿ-199 ನಾಗರಾಜ, ಹೆಚ್.ಸಿ.41 ಜಗದೀಶ ಮತ್ತು ಎ.ಹೆಚ್.ಸಿ-08 ಮುಖೇಶ ರವರುಗಳೊಂದಿಗೆ ಠಾಣೆಗೆ ಮಂಜೂರಾಗಿರುವ ಇಲಾಖಾ ಜೀಪ್ ನೋಂದಣಿ ಸಂಖ್ಯೆ:ಕೆಎ-40 ಜಿ-326 ರಲ್ಲಿ ಠಾಣಾ ವ್ಯಾಪ್ತಿಯ ಕುರುಟಹಳ್ಳಿ, ಗಡದಾಸನಹಳ್ಳಿ, ಮೈಲಾಂಡ್ಲಹಳ್ಳಿ ಮತ್ತು ಕುರುಬೂರು ಗ್ರಾಮಗಳ ಕಡೆಗಳಲ್ಲಿ ಗಸ್ತು ಮಾಡಿಕೊಂಡು ಕುರುಟಹಳ್ಳಿ ಕಡೆಯಿಂದ ಚಿನ್ನಸಂದ್ರ ಕ್ರಾಸ್ ಕಡೆಗೆ ಸಂಜೆ 7.30 ಗಂಟೆಗೆ ಬೆಂಗಳೂರು-ಕಡಪ ರಾಜ್ಯ ಹೆದ್ದಾರಿಯ ಮುನಗನಹಳ್ಳಿ ಗೇಟ್ ಬಳಿ ಜೀಪ್ ನಲ್ಲಿ ಬರುತ್ತಿದ್ದಾಗ, ತಮ್ಮ ಎದುರುಗಡೆಯಿಂದ ಬೆಂಗಳೂರು ಕಡೆಯಿಂದ ಎಪಿ-26 ಟಿಜಿ-1242 ಅಶೋಕ ಲೈಲಾಂಡ್ ಲಗೇಜ್ ವಾಹನವು ಬರುತ್ತಿದ್ದು ಪೊಲೀಸ್ ಜೀಪ್ ನ್ನು ಕಂಡು ವಾಹನದ ಚಾಲಕ ರಸ್ತೆ ಉಬ್ಬಿನ ಬಳಿ ವಾಹನವನ್ನು ನಿಲ್ಲಿಸಿ ವಾಹನದ ಚಾಲಕ ಹಾಗೂ ವಾಹನದಲ್ಲಿದ್ದ ಮತ್ತೊಬ್ಬ ವ್ಯಕ್ತಿ ಓಡಿ ಹೋಗಿದ್ದು, ತಾವು ಅವರನ್ನು ಬೆನ್ನಟ್ಟಿ ಹೋದರೂ ಸಹ ಅವರು ಕತ್ತಲಿನಲ್ಲಿ ಓಡಿ ಹೋಗಿರುತ್ತಾರೆ. ವಾಹನದ ಹಿಂಭಾಗದ ಬಾಡಿಯಲ್ಲಿ ಪರಿಶೀಲಿಸಲಾಗಿ ಅದರಲ್ಲಿ 3 ಪ್ಲಾಸ್ಟಿಕ್ ಚೀಲಗಳು ಇರುವುದು ಕಂಡು ಬಂದಿದ್ದು, ಸದರಿ ಚೀಲಗಳನ್ನು ಬಿಚ್ಚಿ ಪರಿಶೀಲಿಸಲಾಗಿ 1 ನೇ ಚೀಲದಲ್ಲಿ 1000 ಎಂ.ಎಲ್ ನ ಓಲ್ಡ್ ಅಡ್ಮಿರಲ್ ನ ಬ್ರಾಂದಿ ಕಂಪನಿಯ ಮದ್ಯ ತುಂಬಿರುವ 35 ಪ್ಲಾಸ್ಟಿಕ್ ಬಾಟಲ್ ಗಳು ಇರುತ್ತೆ. 2 ನೇ ಚೀಲದಲ್ಲಿ 1000 ಎಂ.ಎಲ್ ನ ಓಲ್ಡ್ ಅಡ್ಮಿರಲ್ ನ ಬ್ರಾಂದಿ ಕಂಪನಿಯ 35 ಪ್ಲಾಸ್ಟಿಕ್ ಬಾಟಲ್ ಗಳು ಇರುತ್ತೆ. 3ನೇ ಚೀಲದಲ್ಲಿ 1000 ಎಂ.ಎಲ್ ನ ಓಲ್ಡ್ ಅಡ್ಮಿರಲ್ ನ ಬ್ರಾಂದಿ ಕಂಪನಿಯ 40 ಪ್ಲಾಸ್ಟಿಕ್ ಬಾಟಲ್ ಗಳು ಇರುತ್ತೆ. ಪ್ರತಿ ಬಾಟಲ್ ಮೇಲೆ ಬೆಲೆ 387.80/- ರೂಗಳು ಇರುತ್ತೆ. ಇದರ ಅಂದಾಜು ಬೆಲೆ ಸುಮಾರು 42,658/- ರೂಗಳಾಗಿದ್ದು, ಒಟ್ಟು 110 ಲೀಟರ್ ಮದ್ಯ ಇರುತ್ತೆ. ಸದರಿ ಮದ್ಯದ ಬಾಟಲುಗಳನ್ನು ವಾಹನದಲ್ಲಿದ್ದ ವ್ಯಕ್ತಿಗಳು ಯಾವುದೋ ಬಾರ್ ನಲ್ಲಿ ಕೊಂಡುಕೊಂಡು ಅವುಗಳನ್ನು ಕಾನೂನು ಬಾಹಿರವಾಗಿ ಮಾರಾಟ ಮಾಡಿ ಹಣ ಸಂಪಾದನೆ ಮಾಡುವ ಉದ್ದೇಶದಿಂದ ಸಾಗಾಣಿಕೆ ಮಾಡಿಕೊಂಡು ಹೋಗುತ್ತಿರುವುದಾಗಿ ಕಂಡು ಬಂದಿದ್ದರಿಂದ ಸ್ಥಳಕ್ಕೆ ಪಂಚರನ್ನು ಬರಮಾಡಿಕೊಂಡು ಸ್ಥಳದಲ್ಲಿ ವಿದ್ಯುತ್ ಬೆಳಕಿನ ಸಹಾಯದಿಂದ ಎಫ್.ಎಸ್.ಎಲ್ ಪರೀಕ್ಷೆಗೆ ಕಳುಹಿಸುವ ಸಲುವಾಗಿ ಮಾದರಿಗಾಗಿ ಮೇಲ್ಕಂಡ 3 ಚೀಲಗಳಲ್ಲಿ ಅಲಾಯಿದೆಯಾಗಿ ಒಂದೊಂದು ಮಧ್ಯದ ಬಾಟಲಿಯನ್ನು ಒಂದೊಂದು ಬಿಳಿ ಬಟ್ಟೆಯ ಚೀಲಗಳಲ್ಲಿ ಹಾಕಿ ಮೂತಿಯನ್ನು ಕಟ್ಟಿ “SR” ಎಂಬ ಅಕ್ಷರದಿಂದ ಅರಗು ಮಾಡಿ ಸಂಜೆ 7.40 ಗಂಟೆಯಿಂದ ರಾತ್ರಿ 8.40 ಗಂಟೆಯವರೆಗೆ ಎಫ್.ಎಸ್.ಎಲ್ ಗೆ ತೆಗೆದ ಮಾಲುಗಳು ಉಳಿದ ಮಾಲುಗಳನ್ನು ಹಾಗೂ ಮದ್ಯವನ್ನು ಸಾಗಾಣಿಕೆ ಮಾಡಲು ಬಳಸಿದ್ದ ಮೇಲ್ಕಂಡ ವಾಹನವನ್ನು ಅಮಾನತ್ತು ಪಡಿಸಿಕೊಂಡು ಪಂಚನಾಮೆ, ವಾಹನ ಮತ್ತು ಮಾಲುಗಳೊಂದಿಗೆ ರಾತ್ರಿ 9.00 ಗಂಟೆಗೆ ಠಾಣೆಗೆ ಬಂದು ಯಾವುದೇ ಪರವಾನಿಗೆ ಇಲ್ಲದೆ ಅಕ್ರಮವಾಗಿ ಮದ್ಯ ಮಾರಾಟ ಮಾಡಲು ಮದ್ಯವನ್ನು ಸಾಗಾಣಿಕೆ ಮಾಡಿಕೊಂಡು ಹೋಗುತ್ತಿದ್ದ ಮೇಲ್ಕಂಡ ವಾಹನದ ಚಾಲಕ, ವಾಹನದ ಮಾಲೀಕ ಹಾಗೂ ಕಾನೂನು ಬಾಹಿರವಾಗಿ ಮದ್ಯವನ್ನು ಮಾರಾಟ ಮಾಡಿರುವ ಬಾರ್ ನ ಮಾಲೀಕನ ವಿರುಧ್ದ ಮುಂದಿನ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲು ಸೂಚಿಸಿರುವುದಾಗಿರುತ್ತೆ.

 1. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.382/2020 ಕಲಂ: 96(B) ಕೆ.ಪಿ ಆಕ್ಟ್ & 379,511 ಐ.ಪಿ.ಸಿ:-

     ದಿನಾಂಕ: 17/10/2020 ರಂದು ಬೆಳಿಗ್ಗೆ 05.00 ಗಂಟೆಗೆ ಠಾಣೆಯ ಸಿ.ಪಿ.ಸಿ-498 ಚಲಪತಿ ರವರು ಮಾಲು ಮತ್ತು ಆರೋಪಿಯೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ವರದಿಯ ಸಾರಾಂಶವೇನೆಂದರೆ, ದಿನಾಂಕ:16/10/2020 ರಂದು ರಾತ್ರಿ 9.00 ಗಂಟೆಯಲ್ಲಿ ಠಾಣಾಧಿಕಾರಿಗಳು ತನಗೆ ಮತ್ತು ಹೆಚ್.ಜಿ-181 ಮುನಿಂದ್ರ ರವರಿಗೆ ರಾತ್ರಿ ಗಸ್ತು ಕರ್ತವ್ಯಕ್ಕೆ ನೇಮಕ ಮಾಡಿ ಕಳುಹಿಸಿದ್ದು, ಅದರಂತೆ ತಾವು ಕುರುಟಹಳ್ಳಿ, ಹಾದಿಗೆರೆ, ಸೀಕಲ್ಲು, ಮೈಲಾಂಡ್ಲಹಳ್ಳಿ, ಆಲಂಭಗಿರಿ, ಚಿನ್ನಸಂದ್ರ, ಇತ್ಯಾದಿ ಕಡೆಗಳಲ್ಲಿ ಗಸ್ತು ಮಾಡಿಕೊಂಡು ಮುಂಜಾನೆ 04.30 ಗಂಟೆಯಲ್ಲಿ ಕುರುಟಹಳ್ಳಿ ಗ್ರಾಮದಲ್ಲಿರುವ ಮದೀನ ಬೇಕರಿ ಬಳಿ ಬಂದಾಗ ಯಾರೋ ಒಬ್ಬ ಆಸಾಮಿಯು ಅಂಗಡಿಯ ಬಾಗಿಲ ಮುಂದೆ ತನ್ನ ಕೈಯಲ್ಲಿ ಒಂದು ಕಬ್ಬಿಣದ ರಾಡ್ನ್ನು ಹಿಡಿದುಕೊಂಡು ನಿಂತುಕೊಂಡಿದ್ದು, ಸಮವಸ್ತ್ರದಲ್ಲಿದ್ದ ತಮ್ಮನ್ನು ನೋಡಿ ಸದರಿ ಆಸಾಮಿಯು ತನ್ನ ಇರುವಿಕೆಯನ್ನು ಮರೆಮಾಚಿಕೊಳ್ಳಲು ಯತ್ನಿಸಿದ್ದು, ತಾವು ಸದರಿ ಆಸಾಮಿಯ ಬಳಿ ಹೋಗುತ್ತಿದ್ದಂತೆ ಓಡಿ ಹೋಗಲು ಪ್ರಯತ್ನಿಸಿದ್ದು, ಸದರಿ ಆಸಾಮಿಯನ್ನು ತಾವು ಬೆನ್ನಟ್ಟಿ ಹಿಡಿದುಕೊಂಡು ಹೆಸರು ವಿಳಾಸ ಕೇಳಲಾಗಿ ತಡವರಿಸಿಕೊಂಡು ಆನಂದ ಬಿನ್ ನಂಜಪ್ಪ, 29ವರ್ಷ, ದೋಬಿ ಜನಾಂಗ, ಕೂಲಿ ಕೆಲಸ, ವಾಸ: ಜಿಲಿಬಿಗಾರಪಲ್ಲಿ ಗ್ರಾಮ, ಬಾಗೇಪಲ್ಲಿ ತಾಲ್ಲೂಕು ಎಂತಲೂ ಮತ್ತೊಂದು ಬಾರಿ ಬಾಗೇಪಲ್ಲಿ ಎಂದು ತಿಳಿಸಿದ್ದು, ಸದರಿ ಆಸಾಮಿಯನ್ನು ಅವೇಳೆಯಲ್ಲಿ ಆ ಸ್ಥಳದಲ್ಲಿರಲು ಮತ್ತು ತನ್ನ ಕೈಯಲ್ಲಿರುವ ಕಬ್ಬಿಣದ ರಾಡ್ ಬಗ್ಗೆ ಕೇಳಲಾಗಿ ಸಮಂಜಸವಾದ ಉತ್ತರವನ್ನು ನೀಡದೇ ಇದ್ದು, ಸದರಿ ಆಸಾಮಿಯು ಯಾವುದೋ ಕಳ್ಳತನವನ್ನು ಮಾಡಲು ಅಥವಾ ಯಾವುದೋ ಸಂಜ್ಙೆಯ ಕೃತ್ಯವನ್ನೆಸಗಲು ಹೊಂಚುಹಾಕುತ್ತಿರುವುದಾಗಿ ಕಂಡು ಬಂದಿದ್ದು, ಸದರಿ ಆಸಾಮಿಯನ್ನು ತಾವು ವಶಕ್ಕೆ ಪಡೆದುಕೊಂಡು ಬೆಳಿಗ್ಗೆ 05.00 ಗಂಟೆಗೆ ಠಾಣೆಗೆ ಕರೆದುಕೊಂಡು ಬಂದು ಹಾಜರುಪಡಿಸಿ ಮುಂದಿನ ಕಾನೂನು ಕ್ರಮ ಜರುಗಿಸಲು ಕೋರಿರುವುದಾಗಿರುತ್ತೆ.

 1. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.383/2020 ಕಲಂ: 504,143,147,148,149,323,324 ಐ.ಪಿ.ಸಿ:-

     ದಿನಾಂಕ 17/10/2020 ರಂದು ಮದ್ಯಾಹ್ನ 2:30 ಗಂಟೆಗೆ ಶ್ರೀಮತಿ ಮಮತ ಕೋಂ ಸರ್ವೇಶ, 36 ವರ್ಷ, ಭಜಂತ್ರಿ ಜನಾಂಗ, ಗೃಹಣಿ, ಮೈಲಾಂಡ್ಲಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ಮುದ್ರಿತ ದೂರಿನ ಸಾರಾಂಶವೇನೆಂದರೆ, ದಿನಾಂಕ 12/10/2020 ರಂದು ಸಂಜೆ ಸುಮಾರು 7.00 ಗಂಟೆಯ ಸಮಯದಲ್ಲಿ ತನ್ನ ಗಂಡನಾದ ಸರ್ವೇಶ್ ರವರು ಎಲ್ಲಿಗೋ ಕೆಲಸಕ್ಕೆ ಹೋಗಿ ತಮ್ಮ ಮನೆಗೆ ವಾಪಸ್ಸು ಬಂದು ಆತುರದಲ್ಲಿ ತಮ್ಮ ಮನೆಯ ಬಳಿ ಇರುವ ತಮ್ಮ ಗ್ರಾಮದ ನಾರಾಯಣಸ್ವಾಮಿ ಬಿನ್ ಲೇಟ್ ಕದಿರಪ್ಪ ರವರ ಮಗನ ಹುಟ್ಟುಹಬ್ಬದ ಸಲುವಾಗಿ ಅವರ ಮನೆಯ ಬಳಿಗೆ ಹೋಗಲೆಂದು ತಮ್ಮ ದ್ವಿಚಕ್ರವಾಹನವನ್ನು ತಮ್ಮ ಮನೆಯ ಮುಂದೆ ಬೀದಿಯಲ್ಲಿ ನಿಲ್ಲಿಸಿ ಹೊರಟು ಹೋಗಿದ್ದರು. ಅದೇ ಸಮಯಕ್ಕೆ ಅಲ್ಲಿಗೆ ದ್ವಿಚಕ್ರವಾಹನದಲ್ಲಿ ಬಂದ ತಮ್ಮ ಗ್ರಾಮದ ಎಸ್ ಸಿ ಜನಾಂಗದ ವೆಂಕಟೇಶ್ ರವರು ತನ್ನ ಗಂಡ ಸರ್ವೇಶ್ ರವರನ್ನು ಕುರಿತು “ಈ ಬೋಳಿ ನನ್ನ ಮಕ್ಕಳಿಗೆ ಬೇರೆ ಕೆಲಸ  ಇಲ್ಲವಾ ಬೀದಿಯಲ್ಲಿ ಗಾಡಿಯನ್ನು ನಿಲ್ಲಿಸಿ ಹೋಗಿದ್ದಾರೆ” ಎಂದು ಅವಾಚ್ಯ ಶಬ್ದಗಳಿಂದ ಬೈಯ್ಯುತ್ತಿದ್ದ. ಆಗ ಮನೆಯಲ್ಲಿದ್ದ ತಾನು ಇದನ್ನು ಕೇಳಿಸಿಕೊಂಡು ಹೊರಗೆ ಬಂದು ಮೇಲ್ಕಂಡ ವೆಂಕಟೇಶ ರವರನ್ನು ಕುರಿತು ಏಕೆ ಈ ರೀತಿ ಬೈಯ್ಯುತ್ತಿದ್ದೀಯಾ ಎಂದು ಕೇಳಿದಾಗ, ವೆಂಕಟೆಶ ತನ್ನನ್ನು ಕುರಿತು “ಬೇವರ್ಸಿ ಮುಂಡೆ ನೀನು ಯಾರು ನನ್ನನ್ನು ಕೋಳೋದಕ್ಕೆ ನಾನು ಬೈಯ್ಯುವುದೇ, ನಿನ್ನ ಕೈಯಲ್ಲಿ ಏನಾಗುತ್ತೋ ಮಾಡಿಕೋ” ಎಂದು ಕೆಟ್ಟ-ಕೆಟ್ಟ ಶಬ್ದಗಳಂದ ತನ್ನನ್ನು ಬೈದ. ಆಗ  ಈ ಗಲಾಟೆ ಶಬ್ದವನ್ನು ಕೇಳಿಸಿಕೊಂಡ ತನ್ನ ಗಂಡ ಸರ್ವೇಶ ರವರು ಅಲ್ಲಿಗೆ ಬಂದು ಈ ಬಗ್ಗೆ ವೆಂಕಟೇಶ ರವರನ್ನು ಕೇಳಿದಾಗ, ವೆಂಕಟೇಶ ತನ್ನ ಗಂಡನನ್ನು ಕುರಿತು ಅವಾಚ್ಯ ಶಬ್ದಗಳಿಂದ ಬೈದು, ಕೈಗಳಿಂದ ತನ್ನ ಗಂಡನಿಗೆ ಮೈಮೇಲೆ ಹೊಡೆದು, ಕಾಲುಗಳಿಂದ ಒದ್ದಿರುತ್ತಾನೆ. ಆಗ ತಾನು ಜಗಳ ಬಿಡಿಸಲು ಅಡ್ಡ ಹೋದಾಗ ಅಲ್ಲಿಗೆ ಬಂದ ವೆಂಕಟೇಶನ ಹೆಂಡತಿ ಮಂಜುಳ ಮತ್ತು ಮಗಳು ಭವಾನಿ, ಕೃಷ್ಣಮೂರ್ತಿ ಬಿನ್ ನಾರಾಯಣಪ್ಪ ಮತ್ತು ಪವನ್ ಬಿನ್ ವೆಂಕಟೇಶಪ್ಪ ರವರುಗಳು ತನಗೆ ಕೈಗಳಿಂದ ಮೈಮೇಲೆ ಹೊಡೆದು, ಕಾಲುಗಳಿಂದ ಒದ್ದು ನೋವುಂಟು ಮಾಡಿ, ತನ್ನ ಜುಟ್ಟನ್ನು ಹಿಡಿದು ಎಳೆದಾಡಿರುತ್ತಾರೆ. ನಂತರ ವೆಂಕಟೇಶ ಅಲ್ಲಿಯೇ ಇದ್ದ ಒಂದು ದೊಣ್ಣೆಯನ್ನು ಕೈಗೆತ್ತಿಕೊಂಡು ತನಗೆ ಮೈಮೇಲೆ ಹೊಡೆದು ಮೂಗೇಟುಗಳನ್ನುಂಟು ಮಾಡಿರುತ್ತಾನೆ. ಅಷ್ಟರಲ್ಲಿ ತಮ್ಮ ಮನೆಯ ಬಳಿ ಇರುವ ನಾರಾಯಣಸ್ವಾಮಿ ಬಿನ್ ಲೇಟ್ ಗುಂಜೂರು ಕದಿರಪ್ಪ, ಅವರ ಮಗ ಚರಣ್, ಮಗಳು ಸುಶ್ಮಿತ ರವರುಗಳು ಅಡ್ಡ ಬಂದು ಜಗಳ ಬಿಡಿಸಿ ತಮ್ಮನ್ನು ಉಪಚರಿಸಿರುತ್ತಾರೆ. ನಂತರ ಈ ವಿಚಾರದಲ್ಲಿ ತಮ್ಮ ಗ್ರಾಮದ ಹಿರಿಯರು ರಾಜಿ ಪಂಚಾಯ್ತಿ ಮಾಡುವುದಾಗಿ ತಮಗೆ ತಿಳಿಸಿದ್ದರಿಂದ ತಾವುಗಳು ಇದುವರೆಗೊ ಪೊಲೀಸ್ ಠಾಣೆಗೆ ಯಾವುದೇ ದೊರನ್ನು ನೀಡಿರುವುದಿಲ್ಲ. ಆದರೆ ಗ್ರಾಮದಲ್ಲಿ ಯಾವುದೇ ರಾಜಿ ಪಂಚಾಯ್ತಿ ಮಾಡದ ಕಾರಣ ತನಗೆ ಮೈ ಕೈ ನೋವುಂಟಾದ್ದರಿಂದ ಈ ದಿನ ಬೆಳಿಗ್ಗೆ ನಾರಾಯಣಸ್ವಾಮಿ ರವರೊಂದಿಗೆ ಅವರ ದ್ವಿಚಕ್ರವಾಹನದಲ್ಲಿ ಚಿಂತಾಮಣಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆದು, ಪೊಲೀಸ್ ಠಾಣೆಗೆ ಬಂದು ದೂರನ್ನು ನೀಡುತ್ತಿದ್ದು, ಮೇಲ್ಕಂಡವರ ವಿರುದ್ದ ಕಾನೂನು ರೀತ್ಯಾ ಸೂಕ್ತ ಕ್ರಮ ಕೈಗೊಳ್ಳಬೇಕಾಗಿ ಕೋರಿ ನೀಡಿದ ದೂರಾಗಿರುತ್ತೆ.

 1. ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.273/2020 ಕಲಂ: 279,337 ಐ.ಪಿ.ಸಿ:-

     ದಿನಾಂಕ 17/10/2020 ರಂದು ರಾತ್ರಿ 00-30 ಗಂಟೆ ಸಮಯದಲ್ಲಿ ಸರ್ಕಾರಿ ಆಸ್ಪತ್ರೆಯಲ್ಲಿ ಗಾಯಳು ಶೇಕ್ ಸನಾವುಲ್ಲಾ ಬಿನ್ ಶೇಕ್ ಪಕೃದ್ದೀನ್ ಸಾಬ್ 35 ವರ್ಷ, ಗ್ರಾಮಾಂತರ ಪೋಲಿಸ್ ಠಾಣೆ ಗೌರಿಬಿದನೂರು, ವಾಸ ಪೋಲಿಸ್ ವಸತಿ ಗೃಹ ಗೌರಿಬಿದನೂರು ಟೌನ್ ರವರ  ಹೇಳಿಕೆಯ ಸಾರಾಂಶವೆನೇಂದರೆ ದಿನಾಂಕ 16/10/2020 ರಂದು ಬೆಳಿಗ್ಗೆ  ಠಾಣೆಯಲ್ಲಿ ಹಾಜರಾತಿಗೆ ಹಾಜರಾಗಿರುತ್ತೇನೆ ತನಗೆ ಗೌರಿಬಿದನೂರು ತಾಲ್ಲೂಕು ಕಛೇರಿಯಲ್ಲಿರುವ ತಾಲ್ಲೂಕು ಖಜಾನೆಯಲ್ಲಿ ರಾತ್ರಿ ಭದ್ರತೆ ಕರ್ತವ್ಯಕ್ಕೆ ನೇಮಿಸಿದ್ದು ಅದರಂತೆ ತಾನು ತನ್ನ ಬಾಬ್ತು ವಾಹನ ಸಂಖ್ಯೆ KA 08 U 8894ರಲ್ಲಿ ಹೊಸ ತಾಲ್ಲೂಕು ಕಛೇರಿ ಬಳಿಗೆ ಕರ್ತವ್ಯಕ್ಕೆ ಹೋಗಿರುತ್ತೆನೆ ರಾತ್ರಿ 9-00 ಗಂಟೆಗೆ ಮಿನಿ ವಿದಾನ ಸೌದದ ಬಳಿಗೆ ಹೋಗಿದ್ದು ರಾತ್ರಿ ಸುಮಾರು 10-15 ಗಂಟೆಯಲ್ಲಿ ನೀರು ಕುಡಿಯಲು ಶುಗರ್ ಪ್ಯಾಕ್ಟರಿ ಬಳಿ ಇರುವ ಅಂಗಡಿಗೆ ಎಸ್ ಹೆಚ್ 9 ಬೆಂಗಳೂರು – ಹಿಂದೂಪುರ ರಸ್ತೆಯಲ್ಲಿ ಸೆಂಟ್ರಲ್ ಬ್ಯಾಂಕ್ ಆಪ್ ಇಂಡಿಯಾ ಮುಂಭಾಗ ಹೋಗುತ್ತಿದ್ದಾಗ ಬೆಂಗಳೂರು ಕಡೆಯಿಂದ ಒಂದು ಕಾರು ಬರುತ್ತಿದ್ದು ಸದರಿ ಕಾರಿನ ಚಾಲಕ ತನ್ನ ಕಾರನ್ನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಲನೆ ಮಾಡಿಕೊಂಡು ಬಂದು ಹಿಂಬದಿಯಿಂದ ತನ್ನ ದ್ವಿಚಕ್ರ ವಾಹನಕ್ಕೆ ಅಪಘಾತ ಪಡಿಸಿದ್ದು ತಾನು ದ್ವಿಚಕ್ರ ವಾಹನ ಸಮೇತ ಕೆಳಗೆ ಬಿದ್ದಾಗ ತನ್ನ ತಲೆಯ ಮೇಲೆ ತಲೆಯ ಮದ್ಯೆ ರಕ್ತಗಾಯವಾಗಿದ್ದು ಬಲಕಾಲಿನ ಮೊಣಕಾಲಿನ ಕೆಳಗೆ ತರಚಿದ ಗಾಯ ಎಡಗಾಲಿನ ಮೊಣಕಾಲಿನ ಬಳಿ ತರಚಿದ ರಕ್ತ ಗಾಯವಾಗಿರುತ್ತದೆ ತನ್ನನ್ನು ರಸ್ತೆಯಲ್ಲಿ ಹೋಗುತ್ತಿದ್ದ ಸಾರ್ವಜನಿಕರು ಚಿಕಿತ್ಸೆಗಾಗಿ ಗೌರಿಬಿದನೂರು ಸರ್ಕಾರಿ ಆಸ್ಪತ್ರೆಗೆ ಸೇರಿಸಿದರು ತನಗೆ ಅಪಘಾತ ಪಡಿಸಿದ ಕಾರಿನ ಸಂಖ್ಯೆ KA 03 MG 8123 ಮಾರುತಿ ಸ್ವಿಪ್ಟ್ ಕಾರು ಆಗಿರುತ್ತೆ ತನಗೆ ಆಪಘಾತ ಪಡಿಸಿದ ಕಾರು ಮತ್ತು ಚಾಲಕನ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ದೂರು.

 1. ಗೌರಿಬಿದನೂರು ಪುರ ಪೊಲೀಸ್ ಠಾಣೆ ಮೊ.ಸಂ.166/2020 ಕಲಂ: 420,504,506 ರೆ/ವಿ 34 ಐ.ಪಿ.ಸಿ:-

     ದಿನಾಂಕ 16/10/2020 ರಂದು ಮದ್ಯಾಹ್ನ 1:00 ಗಂಟೆಯಲ್ಲಿ ಪಿರ್ಯಾದಿ ಚೈತ್ರ ಕೋಂ ರವಿಕುಮಾರ್ 28 ವರ್ಷ, ಒಕ್ಕಲಿಗ ಜನಾಂಗ, ಜಿಂಕ್ ಲೈನ್ 2ನೇ ಕ್ರಾಸ್, ಭದ್ರಾವತಿ ಶಿವಮೊಗ್ಗ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ತಾನು ಬೆಂಗಳೂರಿನಲ್ಲಿ ಕೆಲಸಕ್ಕೆ ಮಾಡುತ್ತಿರುವಾಗ ಅನಿತಾ ಕೋಂ ಶ್ರೀನಿವಾಸ್ ಹಾಗೂ ಸುರೇಶ್ ರವರ ಪರಿಚಯವಾಯಿತು ನಂತರ ಲೇವಾದೇವಿ ಕಷ್ಟಕರವಾಗಿದೆ ಎಂದು ಹೇಳಿ ತನ್ನ ಬಳಿ ಇದ್ದ PF ಹಣ 50,000 ರೂಪಾಯಿಗಳನ್ನು ಹಾಗೂ ಎರಡು ಉಂಗುರಗಳು (18 ಗ್ರಾಂ) ಮತ್ತು ಒಂದು ಬಂಗಾರದ ಚೈನನ್ನು(18 ಗ್ರಾಂ) ತೆಗೆದುಕೊಂಡು ಮುತ್ತೂಟ್ ಫೈನಾನ್ಸ್ ನಲ್ಲಿ ಸುರೇಶ್ ರವರ ಖಾತೆಯಲ್ಲಿ ಅಡಮಾನವಿಟ್ಟುಕೊಂಡರು. ನಂತರ ತಾನು ಹಣವನ್ನು ವಾಪಸ್ಸು ಮಾಡುವಂತೆ ಫೋನಿನ ಮೂಲಕ ಎಷ್ಟು ಕೇಳಿದರು ವಾಪಸ್ಸು ಮಾಡಲಿಲ್ಲ. ನಂತರ ತಾನು ಗೌರಿಬಿದನೂರಿಗೆ ಬಂದು ಕೇಳಿದಾಗ ನೀನು ಯಾವ ಹಣವನ್ನು ಕೊಟ್ಟಿಲ್ಲವೆಂದು ತಿಳಿಸಿರುತ್ತಾರೆ. ಮೇಲ್ಕಂಡ ಹಣ ಮತ್ತು ವಡವೆಗಳ ಬೆಲೆ ಸುಮಾರು 1,10,000 ಆಗಿರುತ್ತೆ.  ನಂತರ ದಿನಾಂಕ 28/02/2020 ರಂದು ರಾಜಿ ಪಂಚಾಯ್ತಿ ಮಾಡಿಕೊಂಡು 3 ತಿಂಗಳ ಒಳಗಾಗಿ ಹಣ ಮತ್ತು ಒಡವೆಗಳನ್ನು ವಾಪಸ್ಸು ಮಾಡುವುದಾಗಿ ತಿಳಿಸಿದರು. ಆದರೆ ಇದುವರೆಗೂ ವಾಪಸ್ಸು ಮಾಡದ ಕಾರಣ  ದಿನ ತಡವಾಗಿ ದೂರು ನೀಡಿರುತ್ತೇನೆಂದು ನೀಡಿದ ದೂರನ್ನು ಪಡೆದು ಪ್ರಕರಣವನ್ನು ದಾಖಲಿಸಿರುತ್ತೇನೆ.

 1. ಗುಡಿಬಂಡೆ ಪೊಲೀಸ್ ಠಾಣೆ ಮೊ.ಸಂ.174/2020 ಕಲಂ: 279,337 ಐ.ಪಿ.ಸಿ:-

     ದಿನಾಂಕ 17/10/2020 ರಂದು ಬೆಳಿಗ್ಗೆ 11-00 ಗಂಟೆಗೆ ಪಿರ್ಯಾಧಿ ವರುಣ್ ಭಾರದ್ವಾಜ್ ಬಿನ್ ಭಗವಾನ್ ಬಿ.ಆರ್.ಎನ್. # 17, 2ನೇ ಮುಖ್ಯ, 11ನೇ ತಿರುವು,  ಶ್ರೀ ಎಂ.ವಿ. ಲೇ ಔಟ್, ತಿಂಡ್ಲು, ವಿದ್ಯಾರಾಯಣಪುರ ಅಂಚೆ ಬೆಂಗಳೂರು-97 ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ, ತಾನು ಮತ್ತು ತನ್ನ ಸ್ನೇಹಿತರಾದ 1) ಸುರಾಜ್, ಶ್ರೇಯಸ್, ಮಂಜುನಾಥ ಮತ್ತು ವಿಘ್ನೇಶ ರವರುಗಳು, ನಮ್ಮ ಬಾಬತ್ತು ಕೆಎ05-ಎಂವಿ-0879 ರ ಕಾರಿನಲ್ಲಿ ನಾನು ಚಾಲನೆ ಮಾಡಿಕೊಂಡು ಬೆಂಗಳೂರು ನಿಂದ ಚಿಕ್ಕಬಳ್ಳಾಪುರ ತಾಲ್ಲೂಕಿನ ಆವುಲಬೆಟ್ಟಕ್ಕೆ ಹೋಗಿ ನೋಡಿಕೊಂಡು ಪುನಃ ವಾಪಸ್ಸು ಬೆಂಗಳೂರುಗೆ ಹೋಗಲು ಈ ದಿನ ದಿನಾಂಕ 17/10/2020 ರಂದು ಬೆಳಿಗ್ಗೆ ಸುಮಾರು 8-30 ಗಂಟೆಯ ಸಮಯದಲ್ಲಿ ಚಿಕ್ಕಬಳ್ಳಾಪುರ ತಾಲ್ಲೂಕಿನ ದರ್ಬೂರು ಗ್ರಾಮದ ಹತ್ತಿರ ತಿರುವಿನಲ್ಲಿ ನಾನು ಚಾಲನೆ ಮಾಡಿಕೊಂಡು ಹೋಗುತ್ತಿದ್ದಾಗ ನಮ್ಮ ಎದರುಗಡೆಯಿಂದ ಬಂದ ಕೆಎ40-ಎ-2282 ರ 407 ರ ವಾಹನದ ಚಾಲಕ ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ನಾವು ಹೋಗುತ್ತಿದ್ದ ಮೇಲ್ಕಂಡ ಕಾರಿಗೆ ಡಿಕ್ಕಿ ಹೊಡೆಸಿದ್ದರ ಪರಿಣಾಮ ಎರಡೂ ವಾಹನಗಳು ಜಕ್ಕಂಗೊಂಡು ಕಾರಿನಲ್ಲಿದ್ದ ನನ್ನ ಸ್ನೇಹಿತರಾದ ಮಂಜುನಾಥ ತಲೆಯ ಮೇಲ್ಭಾಗಕ್ಕೆ ರಕ್ತಗಾಯ, ಶ್ರೇಯಸ್ ರವರಿಗೆ ತಲೆಯ ಮೇಲ್ಭಾಗಕ್ಕೆ ರಕ್ತಗಾಯವಾದವು. ಉಳಿದ ನನ್ನನ್ನು ಸೇರಿ 3 ಜನರಿಗೆ ಯಾವುದೇ ರೀತಿಯ ಗಾಯಗಳು ಆಗಲಿಲ್ಲ. ಆಗ ಅಲ್ಲಿಗೆ ಬಂದ ಸಾರ್ವಜನಿಕರು ಗಾಯಾಳುಗಳಾದ ಮಂಜುನಾಥ ಮತ್ತು ಶ್ರೇಯಸ್ ರವರನ್ನು ದ್ವಿಚಕ್ರವಾಹನಗಳಲ್ಲಿ ಚಿಕಿತ್ಸೆಗಾಗಿ ಪೆರಸಂದ್ರ ಗ್ರಾಮದ ಎಸ್.ಎಸ್. ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲು ಮಾಡಿರುತ್ತಾರೆ. ನಮಗೆ ರಸ್ತೆ ಅಪಘಾತ ಉಂಟುಪಡಿಸಿದ ಕೆಎ40-ಎ-2282 ರ 407 ರ ವಾಹನ ಚಾಲಕನ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸ ಬೇಕೆಂದು ಕೋರಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುತ್ತೆ.

 1. ಗುಡಿಬಂಡೆ ಪೊಲೀಸ್ ಠಾಣೆ ಮೊ.ಸಂ.175/2020 ಕಲಂ: 506,323,324 ರೆ/ವಿ 34 ಐ.ಪಿ.ಸಿ:-

     ದಿನಾಂಕ 17/10/2020 ರಂದು ಬೆಳಿಗ್ಗೆ 11-45 ಗಂಟೆಯ ಸಮಯದಲ್ಲಿ ಪಿರ್ಯಾಧಿ ಅರೂರು ಗ್ರಾಮದ ಹನುಮಂತರೆಡ್ಡಿ ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ, ತನ್ನ ಬಾಬತ್ತು ಅರೂರು ಗ್ರಾಮ ಪಂಚಾಯ್ತಿ ಸರ್ವೇ ನಂ 215/2 ರ ಜಮೀನಿಲ್ಲಿ ಯಾರೋ ಮೆಕ್ಕೆ ಜೋಳ ತೆನೆಯನ್ನು ಕಿತ್ತುಕೊಂಡು ಹೋಗಿದ್ದು, ಇದನ್ನು ದಿನಾಂಕ 15/10/2020 ರಂದು ಸಂಜೆ ಸುಮಾರು 6-00 ಗಂಟೆಯ ಸಮಯದಲ್ಲಿ ತೋಟದಲ್ಲಿ ನೋಡಿ ಮನಸ್ಸಿಗೆ ಬೇಜಾರು ಮಾಡಿಕೊಂಡು ಜೋಳದ ತೋಟವನ್ನು ತುಳಿದಿರುತ್ತಾರೆಂದು ನೋವಿನಲ್ಲಿ ಮಾತನಾಡಿಕೊಳ್ಳುತ್ತಿದ್ದಾಗ ಜಮೀನಿನ ಪಕ್ಕದಲ್ಲಿದ್ದ ಆರೋಪಿತರು ಏಕಾಏಕಿ ಬಂದು ಹೊಡೆದು ಕೆಳಗೆದಬ್ಬಿ ಕೋಲಿನಿಂದ ಬಲಕೈಗೆ ಹೊಡೆದು ಕಾಲಿನಿಂದ ಕತ್ತನ್ನು ತುಳಿದು ಪ್ರಾಣಬೆದರಿಕೆ ಹಾಕಿದ್ದು, ಚಿಕಿತ್ಸೆ ಪಡೆದುಕೊಂಡು ಈ ದಿನ ದೂರು ನೀಡುತ್ತಿದ್ದು, ಕಾನೂನು ರೀತ್ಯಾ ಕ್ರಮ ಜರುಗಿಸಬೇಕೆಂದು ಕೋರಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುತ್ತೆ.

 1. ಮಂಚೇನಹಳ್ಳಿ ಪೊಲೀಸ್ ಠಾಣೆ ಮೊ.ಸಂ.233/2020 ಕಲಂ: 323,324,504,506 ರೆ/ವಿ 34 ಐ.ಪಿ.ಸಿ:-

     ದಿನಾಂಕ:16/10/2020 ರಂದು ಪಿರ್ಯಾದಿದಾರರಾದ ಶ್ರೀ ಪ್ರವೀನ್ ಕುಮಾರ್ ಹೆಚ್.ಎಂ ಬಿನ್ ಮಂಜುನಾಥ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ನಮಗೂ ಹಾಗೂ ನಮ್ಮ ದೊಡ್ಡಪ್ಪನ ಮಕ್ಕಳಿಗೂ ಜಮೀನಿನ ವಿಚಾರವಾಗಿ ಈಗ್ಗೆ ಸುಮಾರು 2 ವರ್ಷಗಳಿಂದ ಗಲಾಟೆಗಳಿದ್ದು ಈ ದಿನ ದಿನಾಂಕ: 16/10/2020 ರಂದು ಮದ್ಯಾಹ್ನ ಸುಮಾರು 3-30 ಗಂಟೆಯಲ್ಲಿ ನಮ್ಮ ಜಮೀನಿನಲ್ಲಿ ನಮ್ಮ ಅಣ್ಣ ನವೀನ್ ಕುಮಾರ್ ರವರು ಡ್ರೈನೇಜ್ ಹೊಡೆಯುತ್ತಿದ್ದಾಗ ಮಣ್ಣು ಪಕ್ಕದಲ್ಲಿರುವ ನಮ್ಮ ದೊಡ್ಡಪ್ಪ ಕುಮಾರಪ್ಪರ ಜಮೀನಿನಲ್ಲಿ ಬಿದ್ದಿದ್ದು ಮಣ್ಣು ಬಿದಿದ್ದನ್ನು ನೋಡಿ ಅಲ್ಲಿಯೇ ಇದ್ದ ನಮ್ಮ ದೊಡ್ಡಪ್ಪನ ಮಕ್ಕಳಾದ ಅರುಣ್ ಕುಮಾರ್ ಬಿನ್ ಕುಮಾರಪ್ಪ, 34 ವರ್ಷ ಮತ್ತು ಇತನ ತಮ್ಮ ಕಿರಣ್ ಕುಮಾರ್ ಬಿನ್ ಕುಮಾರಪ್ಪ, 30 ವರ್ಷ ರವರುಗಳು ಹಳೆ ದ್ವೇಷದಿಂದ ಏಕಾಏಕಿ ನಮ್ಮ ಅಣ್ಣನ ಮೇಲೆ ಜಗಳ ತೆಗೆದು ಕೆಟ್ಟಪದಗಳಿಂದ ಬೈದು ಕೈಗಳಿಂದ ಮೈಮೇಲೆ ಹೊಡೆದು ಮೂಗೇಟುಗಳನ್ನುಂಟು ಮಾಡಿ ಚನಿಕೆಯಿಂದ ನಮ್ಮ ಅಣ್ಣನ ತಲೆಯ ಮೇಲೆ ಹೊಡೆದು ರಕ್ತಗಾಯ ಪಡಿಸಿದ್ದು ಆಗ ಅಲ್ಲಿಯೇ ಇದ್ದ ನಾನು ಮತ್ತು ನಮ್ಮ ತಂದೆ ಮಂಜುನಾಥ್ ರವರು ಜಗಳವನ್ನು ಬಿಡಿಸಲು ಹೋದಾಗ ನನಗೂ ಹಾಗೂ ನಮ್ಮ ತಂದೆಗೆ ಅರುಣ್ ಕುಮಾರ್ ಮತ್ತು ಕಿರಣ್ ಕುಮಾರ್ ರವರು ಕೆಟ್ಟಪದಗಳಿಂದ ನಿಂದಿಸಿ ಕೈಗಳಿಂದ ಮೈಮೇಲೆ ಹೊಡೆದು ಕಾಲುಗಳಿಂದ ಒದ್ದು ನನಗೆ ಮತ್ತು ನಮ್ಮ ತಂದೆಗೆ ಕೋಲುಗಳಿಂದ ಮೈಮೇಲೆ ಹೊಡೆದು ಗಾಯಗಳನ್ನುಂಟು ಮಾಡಿ ಚನಿಕೆಯಿಂದ ಅರುಣ್ ಕುಮಾರ್ ರವರು ನನಗೆ ತಲೆಯ ಮೇಲೆ ಹೊಡೆದು ರಕ್ತಗಾಯಪಡಿಸಿ ಕಿರಣ್ ಕುಮಾರ್ ರವರು ನನ್ನನ್ನು ಕೆಳಗೆ ಬಿಳಿಸಿ ನನ್ನ ಕುತ್ತಿಗೆಯ ಮೇಲೆ ತನ್ನ ಕಾಲನ್ನು ಇಟ್ಟು ನಿಮ್ಮನ್ನು ಸಾಯಿಸದೇ ಬಿಡುವುದಿಲ್ಲವೆಂದು ನಮಗೆ ಪ್ರಾಣ ಬೆದರಿಕೆಯನ್ನು ಹಾಕಿದ್ದು ನಾನು ಗೌರಿಬಿದನೂರು ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆಪಡೆದುಕೊಂಡು ಠಾಣೆಗೆ ಬಂದು ದೂರು ನೀಡುತ್ತಿದ್ದು ಮೇಲ್ಕಂಡ ಅರುಣ್ ಕುಮಾರ್ ಮತ್ತು ಕಿರಣ್ ಕುಮಾರ್ ರವರ ಮೇಲೆ ಕಾನೂನು ರೀತ್ಯ ಕ್ರಮ ಜರುಗಿಸಬೇಕೆಂದು ಕೋರಿ ಕೊಟ್ಟ ದೂರು.

 1. ಮಂಚೇನಹಳ್ಳಿ ಪೊಲೀಸ್ ಠಾಣೆ ಮೊ.ಸಂ.234/2020 ಕಲಂ: 379 ಐ.ಪಿ.ಸಿ:-

     ದಿನಾಂಕ: 17/10/2020 ರಂದು ಬೆಳಿಗ್ಗೆ 08-15 ಗಂಟೆಗೆ ಪಿರ್ಯಾದಿದಾರರಾದ ಚಂದನ್ ಬಿನ್ ಉಮೇಶ್ ವೈ, ಎನ್, 26 ವರ್ಷ, ಲಿಂಗಾಯ್ತರು, ವಾಸ ಸರಸ್ವತಿಪುರಂ, ಮಂಚೇನಹಳ್ಳಿ ಗ್ರಾಮ, ಗೌರಿಬಿದನೂರು ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆನೆಂದರೆ, ನಮ್ಮ ಗ್ರಾಮದ ವಾಣಿ ಚಿತ್ರ ಮಂದಿರದ ಹಿಂಭಾಗ ನಮ್ಮ ಜಮಿನು ಇದ್ದು ಸದರಿ ಜಮೀನಿನಲ್ಲಿ ನಾವು ನಾಲ್ಕು ಹಸುಗಳನ್ನು ಸಾಕಿಕೊಂಡಿರುತ್ತೇವೆ. ಸದರಿ ಹಸುಗಳನ್ನು ನಾವು ನಮ್ಮ ಜಮೀನಿನ ಶೆಡ್ ಪಕ್ಕದಲ್ಲಿ ಕಟ್ಟಿಹಾಕುತ್ತಿದ್ದು ನಿನ್ನೆ ದಿನ ದಿನಾಂಕ: 16/10/2020 ರಂದು ಸಂಜೆ 6-30 ಗಂಟೆಯಲ್ಲಿ ನಮ್ಮ ತಂದೆ ಉಮೇಶ್ ರವರು ಹಸುಗಳಿಗೆ ಮೇವನ್ನು ಹಾಕಿ ಗ್ರಾಮದಲ್ಲಿರುವ ಮನೆಗೆ ಬಂದಿರುತ್ತಾರೆ. ಈ ದಿನ ದಿನಾಂಕ: 17/10/2020 ರಂದು ಬೆಳಗಿನ ಜಾವ 4-30 ಗಂಟೆಯಲ್ಲಿ ನಮ್ಮ ತಂದೆ ಹಾಲನ್ನು ಕರೆಯಲು ನಮ್ಮ ಜಮೀನಿನ ಬಳಿ ಹೋಗಿ ನೋಡಲಾಗಿ ಜಮೀನಿನ ಶೆಡ್ ಪಕ್ಕದಲ್ಲಿ ಕಟ್ಟಿ ಹಾಕಿದ್ದ 4 ಹಸುಗಳ ಪೈಕಿ ಸುಮಾರು 90 ಸಾವಿರ ರೂಗಳೂ ಬೆಲೆ ಬಾಳುವ ಒಂದು ಆಲ್ ಬ್ಲಾಕ್ ಹಸುವನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡಿದ್ದು ಕಳ್ಳರು ಪತ್ತೆ ಮಾಡಿ ನಮ್ಮ ಹಸುವನ್ನು ಹುಡುಕಿಕೊಡಬೇಕಾಗಿ ನೀಡಿದ ಪ್ರ.ವ.ವರದಿ.

 1. ಮಂಚೇನಹಳ್ಳಿ ಪೊಲೀಸ್ ಠಾಣೆ ಮೊ.ಸಂ.235/2020 ಕಲಂ: 447,324 ರೆ/ವಿ 34 ಐ.ಪಿ.ಸಿ:-

     ದಿನಾಂಕ:17/10/2020 ರಂದು ಪಿರ್ಯಾದಿದಾರರಾದ ಶ್ರೀ ಕುಮಾರಪ್ಪ ಹೆಚ್.ಸಿ ಬಿನ್ ಹೆಚ್.ಎ ಚೆನ್ನಪ್ಪ 62 ವರ್ಷ, ಲಿಂಗಾಯಿತರು, ಹಳೇಹಳ್ಳಿ ಗ್ರಾಮ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ನಮ್ಮ ಗ್ರಾಮದ ಸರ್ವೆ ನಂಬರ್ 209/1 ರಲ್ಲಿ 2 ಎಕರೆ 35 ಗುಂಟೆ, ಸರ್ವೆ ನಂಬರ್ 206/1ಬಿ ರಲ್ಲಿ 35 ಗುಂಟೆ ಜಮೀನು ನನ್ನ ಹೆಸರಿನಲ್ಲಿದ್ದು, ಅದನ್ನು ನನ್ನ ತಮ್ಮನಾದ ಮಂಜುನಾಥ ಬಿನ್ ಹೆಚ್.ಎ.ಚನ್ನಪ್ಪ ರವರು ನಮ್ಮ ಜಮೀನಿನಲ್ಲಿ 206/1ಬಿ ರಲ್ಲಿ ಇರುವ ಜಮೀನಿನಲ್ಲಿ 15 ಗುಂಟೆ ಜಮೀನನ್ನು ಒತ್ತುವರಿ ಮಾಡಿಕೊಂಡಿದ್ದು, ನಾವು ದಿನಾಂಕ:23/09/2020 ರಂದು ಹದ್ದು ಬಸ್ತು ಮಾಡಿಸಿ ನಮ್ಮ ಜಾಗದಲ್ಲಿ ಕಲ್ಲುಗಳನ್ನು ಹಾಕಿಕೊಂಡಿದ್ದೆವು. ದಿನಾಂಕ:16/10/2020 ರಂದು ನಮ್ಮ ಗ್ರಾಮದ ವಾಸಿಗಳಾದ ಮಂಜುನಾಥ ಬಿನ್ ಹೆಚ್.ಎ.ಚೆನ್ನಪ್ಪ, ನವೀನ್ ಕುಮಾರ್ ಬಿನ್ ಮಂಜುನಾಥ, ಪ್ರವೀಣ್ ಕುಮಾರ್ ಬಿನ್ ಮಂಜುನಾಥ ರವರು ಮದ್ಯಾಹ್ನ 3-30 ಗಂಟೆಯ ಸಮಯದಲ್ಲಿ ನಮ್ಮ ಜಮೀನಿನಲ್ಲಿ ಕಾಲುವೆಯನ್ನು ತೆಗೆಯುತ್ತಿದ್ದು, ಅದನ್ನು ನನ್ನ ಮಕ್ಕಳಾದ ಕಿರಣ್ ಕುಮಾರ್ ಮತ್ತು ಅರುಣ್ ಕುಮಾರ್ ರವರು ಕೇಳಿದ್ದಕ್ಕೆ ಇದು ನಮಗೆ ಸೇರಬೇಕು ಎಂದು ಹೇಳಿದ್ದು, ಅದಕ್ಕೆ ನನ್ನ ಮಕ್ಕಳು ಅವರಿಗೆ ಸರ್ವೆ ಮಾಡಿಸಿಕೊಂಡು ನಿಮ್ಮ ಜಾಗ ಎಲ್ಲಿಯವರೆವಿಗೂ ಬರುತ್ತದೋ ಅಲ್ಲಿಯವರೆಗೆ ತೆಗೆದುಕೊಳ್ಳಿ  ಎಂದು ಹೇಳಿದರೂ ನಾವು ಯಾವ ಸರ್ವೆಯನ್ನು ಮಾಡಿಸುವುದಿಲ್ಲ ಇದು ನಮಗೆ ಸೇರಬೇಕು ಎಂದು ಕಾಲುವೆಯನ್ನು ತೆಗೆಯಲು ಮುಂದಾದಾಗ ನನ್ನ ಮಕ್ಕಳು ತಡೆಯಲು ಹೋದಾಗ ಮಂಜುನಾಥ ಬಿನ್ ಚನ್ನಪ್ಪ.ಹೆಚ್.ಎ, ನವೀನ್ ಕುಮಾರ್ ಬಿನ್ ಮಂಜುನಾಥ, ಪ್ರವೀಣ್ ಬಿನ್ ಮಂಜುನಾಥ ರವರು ನನ್ನ ಮಗನಾದ ಕಿರಣ್ ಕುಮಾರ್ ರವರಿಗೆ ಚನಿಕೆಯಿಂದ ತಲೆಗೆ ಹೊಡೆದು ರಕ್ತಗಾಯ ಪಡಿಸಿ ನಂತರ ಕಟ್ಟಿಗೆಯಿಂದ ಕೈ ಬೆನ್ನು ಕಾಲುಗಳಿಗೆ ಹೊಡೆದು ಗಾಯಪಡಿಸಿದ್ದು, ನಂತರ ಗಾಯಗೊಂಡ ನನ್ನ ಮಗನನ್ನು ಮಂಚೇನಹಳ್ಳಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದು, ಮೇಲ್ಕಂಡವರು ನಮಗೆ ಸುಮಾರು 20 ವರ್ಷಗಳಿಂದ ಒಂದಲ್ಲಾ ಒಂದು ರೀತಿಯಲ್ಲಿ ತೊಂದರೆ ಕೊಡುತ್ತಿದ್ದು, ಅದ್ದರಿಂದ ಮೇಲ್ಕಂಡವರ ಮೇಲೆ ಕಾನೂನು ಕ್ರಮ ಜರುಗಿಸಲು ಕೋರಿ ಕೊಟ್ಟ ದೂರು.

 1. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.283/2020 ಕಲಂ: 418,420,423,424,464,463,465,120B ಐ.ಪಿ.ಸಿ:-

     ದಿನಾಂಕ 16/10/2020 ರಂದು ರಾತ್ರಿ 8-00 ಗಂಟೆಗೆ ಘನ ನ್ಯಾಯಾಲಯದ ಕರ್ತವ್ಯದ ಸಿಬ್ಬಂಧಿಯಾದ ಪಿಸಿ-90 ರಾಜಕುಮಾರ್ ರವರು ಘನ ನ್ಯಾಯಾಲಯದಿಂದ ಸಾದಾರಾಗಿ ಬಂದ ಪಿಸಿಆರ್ ನಂಬರ್-44/2018 ರಂದು ತಂದು ಠಾಣೆಯಲ್ಲಿ ಹಾಜರು ಪಡಿಸಿದ್ದು, ಪಿರ್ಯಾದಿದಾರರಾದ ಮಂಜುನಾಥ ಬಿನ್ ಲೇಟ್ ಕೆ.ಕೃಷ್ಣಪ್ಪ ರವರು ಸಲ್ಲಿಸಿಕೊಂಡಿರುವ ದೂರು ಆಗಿದ್ದು, ಸದರಿ ದೂರಿನ ಸಾರಾಂಶವೇನೆಂದರೆ, ಶಿಡ್ಲಘಟ್ಟ ತಾಲ್ಲೂಕು ಕೊಲಮಿ ಹೊಸೂರು ಗ್ರಾಮದ ಸರ್ವೇ ನಂಬರ್ 41/ಪಿ32, ವಿಸ್ತೀರ್ಣ 2 ಎಕರೆ 20 ಗುಂಟೆ ಜಮೀನು ಇದ್ದು ಸದರಿ ಈ ಜಮೀನು ಮೂಲತಹ 1 ನೇ ಆರೋಪಿಯಾದ ಮಂಜುಳಮ್ಮ ನವರ ಗಂಡನಾದ ಮುನಿರಾಜ ಎಂಬುವರಿಗೆ ಸರ್ಕಾರದಿಂದ ಎಲ್.ಎನ್.ಡಿ ಆರ್.ಯು.ಸಿ ಜಿಸಿ 149/1991-92 ರಂತೆ ದರಖಾಸ್ತು ಮೂಲಕ ಮಂಜೂರು ಆಗಿ ಎಂ.ಆರ್ ನಂಬರ್ 08/1998-99 ರಂತೆ ಖಾತೆಯಾಗಿದ್ದು, ಮುನಿರಾಜು ರವರ ಮರಣದ ನಂತರ 1 ನೇ ಆರೋಪಿಯಾದ ಹೆಸರಿಗೆ ಎಂ.ಆರ್ ನಂ-04/2013-14 ರಂತೆ ಖಾತೆಯಾಗಿದ್ದು, ಆರೋಪಿ-1 ರಿಂದ 3 ರವರು ಸ್ವಾಧೀನದಲ್ಲಿದ್ದು, ಮೇಲ್ಕಂಡ ಜಮೀನನ್ನು ಪಿರ್ಯಾದುದಾರರಿಗೆ 13.12.500-00 ರೂಗಳಿಗೆ ಮಾರಾಟ ಮಾಡಿ ದಿನಾಂಕ 08/09/2014 ರಂದು ಶಿಡ್ಲಘಟ್ಟ ಉಪನೊಂದಣಾಧಿಕಾರಿಗಳ ಕಚೇರಿಯಲ್ಲಿ 1 ನೇ ಪುಸ್ತಕದ ದಸ್ತಾವೇಜು ನಂಬರ್ ಎಸ್ಡಿಜಿ-1-03119/2014-15 ಆಗಿ ಸಿಡಿ ನಂಬರ್ 99 ನೇ ರಲ್ಲಿ ನೊಂದಣಿ ಕ್ರಯದ ಕರಾರು ಮಾಡಿಕೊಟ್ಟು ಮುಂಗಡವಾಗಿ 7 ಲಕ್ಷ ರೂ ಹಣವನ್ನು ಪಡೆದುಕೊಂಡು ಜಮೀನಿನ ವ್ಯವಹಾರದ ಬಗ್ಗೆ ಜಿಪಿಎ ಪತ್ರವನ್ನು ಬರೆದುಕೊಟ್ಟಿರುತ್ತಾರೆ. ನಂತರ ಆರೋಪಿ-1 ರವರು ಪಿರ್ಯಾದಿದಾರರಿಗೆ ಶುದ್ದಕ್ರಯ ಮಾಡಿಕೊಡದೇ ಇದ್ದಾಗ ಪಿರ್ಯಾದಿದಾರರು ಘನ ನ್ಯಾಯಾಲಯದಲ್ಲಿ ಓಎಸ್ ನಂಬರ್-11/2017 ರಂತೆ ದಾವೆಯನ್ನು ಹೂಡಿದ್ದು, ಈ ಎಲ್ಲಾ ವಿಚಾರ ತಿಳಿದಿದ್ದರೂ ಸಹ ಆರೋಪಿ-1 ರಿಂದ 3 ರವರು ಪಿರ್ಯಾದಿದಾರರಿಗೆ ಮೋಸ ಮಾಡುವ ಉದ್ದೇಶದಿಂದ ಆರೋಪಿ-4 & 5 ರವರೊಂದಿಗೆ ಸೇರಿಕೊಂಡು 6 ನೇ ಆರೋಪಿಯ ಹೆಸರಿಗೆ  ದಿನಾಂಕ 30/06/2016 ರಂದು ಎಸ್.ಡಿ.ಜಿ.-4-00209/2016-17 ರಂತೆ ಸಿಡಿ ನಂಬರ್ ಎಸ್.ಡಿ.ಜಿ.ಡಿ 124 ನೇದ್ದರಲ್ಲಿ ನೊಂದಣಿಯಾದ ಖೊಟ್ಟಿ ಜಿ.ಪಿ.ಎ ಪತ್ರವನ್ನು ಮಾಡಿಕೊಟ್ಟಿದ್ದು, 6 ನೇ ಆರೋಪಿಯು ಆರೋಪಿ-1 ರಿಂದ 3 ರವರು ಮಾಡಿಕೊಟ್ಟಿರುವ ಕ್ರಯದ ಕರಾರು ಪತ್ರ ಮತ್ತು ಜಿಪಿಎ ಮೇರೆಗೆ ದಿನಾಂಕ 04/11/2017 ರಂದು ದುರಸ್ಥಿಯಾದ ಹೊಸ ಸರ್ವೇ ನಂಬರ್ 141 ರ ಸ್ವತ್ತನ್ನು ಅಕ್ರಮವಾಗಿ ತನ್ನ ಹೆಸರಿಗೆ ಕ್ರಯ ಪತ್ರ ಸೃಷ್ಟಿ ಮಾಡಿರುತ್ತಾನೆ. ಮೇಲ್ಕಂಡ ಜಮೀನನ್ನು ಆರೋಪಿ 1 ರಿಂದ 3 ರವರು ಪಿರ್ಯಾದಿದಾರರಿಗೆ ಮಾರಾಟ ಮಾಡಿ, ಪಿರ್ಯಾದಿದಾರರಿಗೆ ಮೋಸ ಮಾಡುವ ಉದ್ದೇಶದಿಂದ ಆರೋಪಿಗಳೆಲ್ಲರೂ ಸೇರಿ ಆರೋಪಿ-6 ರವರ ಹೆಸರಿಗೆ ಶುದ್ದ ಕ್ರಯ ಮಾಡಿಕೊಟ್ಟು ಪಿರ್ಯಾಧಿದಾರರಿಗೆ ಮೋಸ ಮಾಡಿದ್ದು ಮೇಲ್ಕಂಡವರ ವಿರುದ್ದ ಮುಂದಿನ ಕಾನೂನು ಕ್ರಮ ಜರುಗಿಸ ಬೇಕಾಗಿ ಸಲ್ಲಿಸಿಕೊಂಡಿರುವ ದೂರು.