ದಿನಾಂಕ : 17/07/2019ರ ಅಪರಾಧ ಪ್ರಕರಣಗಳು

 1. ಬಾಗೇಪಲ್ಲಿ ಪೊಲೀಸ್ ಠಾಣೆ. ಮೊ.ಸಂ: 195/2019 ಕಲಂ: 15(ಎ),32(3) ಕೆ.ಇ ಆಕ್ಟ್:-

          ದಿ:16-07-2019 ರಂದು ಮದ್ಯಾಹ್ನ 3:30 ಗಂಟೆಗೆ ಪಿ.ಎಸ್.ಐ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶ –   ದಿನಾಂಕ:16.07.2019 ರಂದು  ಮದ್ಯಾಹ್ನ 2-00 ಗಂಟೆ  ಸಮಯದಲ್ಲಿ ಠಾಣೆಯಲ್ಲಿ ಬಾಗೇಪಲ್ಲಿ  ತಾಲ್ಲೂಕು ಕಸಬಾ ಹೋಬಳಿ ಪುಟ್ಟಪರ್ತಿ ಗ್ರಾಮದ ವಾಸಿಯಾದ ಶ್ರೀರಾಮಪ್ಪ ಬಿನ್  ಲೇಟ್ ರಾಮಸ್ವಾಮಿ, ರವರ  ಬಾಬತ್ತು ಚಿಲ್ಲರೆ ಅಂಗಡಿಯ ಮುಂಭಾಗ ಖಾಲಿಜಾಗದಲ್ಲಿ ಯಾರೋ ಕೆಲವರು ಕುಳಿತು ಕೊಂಡು  ಕಾನೂನು ಬಾಹಿರವಾಗಿ ಮದ್ಯಪಾನ ಮಾಡುತ್ತಿರುವುದಾಗಿ  ಬಂದ ಖಚಿತ ವರ್ತಮಾನದ ಮೇರೆಗೆ ನಾನು ಮತ್ತು ಸಿಬ್ಬಂದಿಗಳಾದ ಪಿ.ಸಿ-103  ಬಯ್ಯಾರೆಡ್ಡಿ  ಹಾಗೂ  ಜೀಫ್ ಚಾಲಕ ಎ.ಹೆಚ್.ಸಿ-34 ಅಲ್ತಾಫ್ ಪಾಷಾ ರವರೊಂದಿಗೆ ಸರ್ಕಾರಿ ಜೀಫ್ ಸಂಖ್ಯೆ-ಕೆಎ-40,ಜಿ-537  ವಾಹನದಲ್ಲಿ ಬಂದು ಬಾಗೇಪಲ್ಲಿ  ಪುರದ ತಾಲ್ಲೂಕು ಕಛೇರಿಯ ಬಳಿ ಇದ್ದ ಪಂಚರನ್ನು  ಕರೆದು ವಿಚಾರವನ್ನು  ತಿಳಿಸಿ  ಮೇಲ್ಕಂಡ ಸ್ಥಳದಲ್ಲಿ ದಾಳಿಮಾಡಲು ಪಂಚರಾಗಿ ಬಂದು ಪಂಚನಾಮೆಗೆ ಸಹಕರಿಸಲು ಕೋರಿದ್ದರ ಮೇರೆಗೆ ಅವರುಗಳು ಒಪ್ಪಿಕೊಂಡಿದ್ದು. ಅದರಂತೆ  ನಾವುಗಳು ಮತ್ತು ಪಂಚರು  ಸ್ಥಳಕ್ಕೆ  ಮದ್ಯಾಹ್ನ 2-15 ಗಂಟೆಗೆ ಹೋಗಿ ನೋಡಲಾಗಿ  ಯಾರೋ ಕೆಲವರು  ಕಾನೂನು ಬಾಹಿರವಾಗಿ ಕುಳಿತುಕೊಂಡು  ಮದ್ಯಪಾನ ಮಾಡುತ್ತಿದ್ದವರು  ಸಮವಸ್ತ್ರದಲ್ಲಿದ್ದ  ನಮ್ಮನ್ನು ನೋಡಿ  ಓಡಿ ಹೋದರು. ನಂತರ  ನಾವು ಪಂಚರ ಸಮಕ್ಷಮ  ಸದರಿ ಸ್ಥಳದಲ್ಲಿ  ಪರಿಶೀಲಿಸಲಾಗಿ  90 ಎಂ.ಎಲ್. ನ Haywards Cheers Whisky  ಯ 06  ಖಾಲಿ ಟೆಟ್ರಾ ಪ್ಯಾಕೇಟ್ ಗಳು ಮತ್ತು  ಒಂದು ಲೀಟರ್ 2 ಖಾಲಿ ವಾಟರ್ ಬಾಟಲ್ ಮತ್ತು ಮದ್ಯಸೇವನೆ ಮಾಡಿರುವ  03 ಖಾಲಿ  ಪ್ಲಾಸ್ಟಿಕ್ ಗ್ಲಾಸ್ ಗಳು, ಮದ್ಯ ತುಂಬಿರುವ 90 ಎಂ.ಎಲ್. ನ Haywards Cheers Whisky 18 ಟೆಟ್ರಾ ಪ್ಯಾಕೇಟ್ ಗಳು ಇದ್ದು, ಒಟ್ಟು 1.620 ಲೀಟರ್ ಮದ್ಯವಿದ್ದು ಸದರಿ ಮದ್ಯದ ಅಂದಾಜು ಮೌಲ್ಯ 630/- ರೂಪಾಯಿಗಳಾಗಿರುತ್ತದೆ. ಸದರಿ ಸ್ಥಳದ ಮಾಲೀಕರಾದ ಶ್ರೀರಾಮ ಬಿನ್ ಲೇಟ್ ರಾಮಸ್ವಾಮಿ,42 ವರ್ಷ, ಬಲಜಿಗರು, ಚಿಲ್ಲರೆ ಅಂಗಡಿ ವ್ಯಾಪಾರ, ಪುಟ್ಟಪರ್ತಿ ಗ್ರಾಮ, ಕಸಬಾ ಹೋಬಳಿ ಬಾಗೇಪಲ್ಲಿ  ತಾಲ್ಲೂಕು  ರವರಿಗೆ ಕಾನೂನು ಬಾಹಿರವಾಗಿ ಮದ್ಯಪಾನ ಮಾಡಲು ಸ್ಥಳಾವಕಾಶ ನೀಡಿರುವುದಕ್ಕೆ ಯಾವುದಾದರು ಪರವಾನಿಗೆ ಇದೇಯೇ ಎಂದು ಕೇಳಲಾಗಿ ಯಾವುದೇ ಪರವಾನಿಗೆ ಇಲ್ಲವೆಂದು ತಿಳಿಸಿದ್ದು, ಮೇಲ್ಕಂಡ  ಮಾಲುಗಳನ್ನು  ಪಂಚರ ಸಮಕ್ಷಮ  ಪಂಚನಾಮೆ ಮೂಲಕ  ಅಮಾನತ್ತು ಪಡಿಸಿಕೊಂಡು ಮಾಲು ಮತ್ತು ಆರೋಪಿಯೊಂದಿಗೆ ಮದ್ಯಾಹ್ನ 3-30 ಗಂಟೆಗೆ ಠಾಣೆಗೆ ಹಾಜರಾಗಿ ಮುಂದಿನ ಕ್ರಮಕ್ಕಾಗಿ  ಠಾಣಾಧಿಕಾರಿಗಳಿಗೆ  ವರಧಿಯನ್ನು  ನೀಡಿರುತ್ತೇನೆ, ಎಂದು ನೀಡಿದ ವರಧಿಯ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿರುತ್ತೆ.

 1. ಬಾಗೇಪಲ್ಲಿ ಪೊಲೀಸ್ ಠಾಣೆ. ಮೊ.ಸಂ: 197/2019 ಕಲಂ: 397 ಐ.ಪಿ.ಸಿ:-

          ದಿ: 17-07-2019 ರಂದು ಬೆಳಗ್ಗೆ 9:00 ಗಂಟೆಗೆ ಪಿರ್ಯಾಧಿದಾರರಾದ ಬಿ.ಎಲ್.ಮುರಳಿ ನಾಯಕ ಬಿನ್ ಚಿನ್ನ ಲಕ್ಷ್ಮಣ್ಣ, 32 ವರ್ಷ, ಲಂಬಾಣಿ ಜನಾಂಗ, ಉಪನ್ಯಾಸಕ ಕೆಲಸ, ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜ್, ಬಾಗೇಪಲ್ಲಿ, ವಾಸ: ವಿಂಟೇಜ್ ಗಾರ್ಡನ್, ಲೇ ಜೌಟ್, ಅಗ್ನಿಶಾಮಕ ಠಾಣೆ ಮುಂಭಾಗ, ಎನ್.ಹೆಚ್-07 ರಸ್ತೆ , ಬಾಗೇಪಲ್ಲಿ ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶ – ನಾನು ಈಗ್ಗೆ ಸುಮಾರು 03 ವರ್ಷಗಳ ಹಿಂದೆ ವಿಂಟೇಜ್ ಗಾರ್ಡ್ ನ್ ನಲ್ಲಿ ಮನೆಯನ್ನು ಖರೀಧಿಸಿದ್ದು, ಸದರಿ ಮನೆಯಲ್ಲಿ ನಾನು, ನನ್ನ ಹೆಂಡತಿ, ತಂದೆ ತಾಯಿಯವರು ವಾಸವಾಗಿದ್ದೆವು.  ದಿ:16-07-2019 ರಂದು ನಾನು ಸಂಜೆ 6:30 ಗಂಟೆ ಸಮಯದಲ್ಲಿ ನನಗೆ ಬೆಂಗಳೂರಿನಲ್ಲಿ ಕೆಲಸವಿದ್ದುದ್ದರಿಂದ ನಾನು ದ್ವಿಚಕ್ರ ವಾಹನದಲ್ಲಿ ಬೆಂಗಳೂರಿಗೆ ಹೋದೆನು.  ನಮ್ಮ ತಾಯಿಯಾದ ನರಸಮ್ಮ ರವರು ನಮ್ಮ ಅಕ್ಕನ ಮಗಳಾದ ಪುನರ್ವಿ ಎಂಬ ಹುಡುಗಿಯನ್ನು ಕರೆದುಕೊಂಡು ನಮ್ಮ ಮನೆಯಿಂದ ಸ್ವಲ್ಪ ದೂರದಲ್ಲಿರುವ ಬೂವೆನ್ನಲ ತಾಂಡಾದಲ್ಲಿರುವ ನಮ್ಮ ತಾತ ರವರ ಮನಗೆ ಹೋದರು.  ನಮ್ಮ ತಂದೆಯಾದ ಚಿಕ್ಕ ಲಕ್ಷ್ಮಣ್ಣ ರವರು ನಮ್ಮ ಮನೆ ಒಂಟಿ ಮನೆಯಾಗಿದ್ದರಿಂದ ಮನೆಯಲ್ಲಿ ಉಳಿದುಕೊಂಡಿದ್ದರು.  ನಾನು ರಾತ್ರಿ ಸುಮಾರು 8:30ಗಂಟೆಗೆ ಬೆಂಗಳೂರಿಗೆ ಹೋಗಿ ನಮ್ಮ ತಂದೆಯವರಿಗೆ ಫೋನ್ ಮಾಡಿ ಬೆಂಗಳೂರು ಸೇರಿರುವುದಾಗಿ ತಿಳಿಸಿದೆನು.  ನಮ್ಮ ತಂದೆ ಆಯಿತು ಎಂತ ಹೇಳಿದರು. ನಂತರ ನಾನು ದಿ: 17-07-2019 ರಂದು ಬೆಳಗ್ಗೆ ಸುಮಾರು 6:30 ಗಂಟೆಯಲ್ಲಿ ಬೆಂಗಳೂರಿನಲ್ಲಿ ಮನೆಯಲ್ಲಿದ್ದಾಗ ನಮ್ಮ ಸಂಬಂಧಿಯಾದ ಮಂಜುನಾಥ ರವರು ನನಗೆ ಫೋನ್ ಮಾಡಿ ರಾತ್ರಿ ಅವೇಳೆಯಲ್ಲಿ ಯಾರೋ ದುರಾತ್ಮರು ನಿಮ್ಮ ಮನೆಯೊಳಗೆ ಬಾಗಿಲನ್ನು ಹೊಡೆದು ಪ್ರವೇಶ ಮಾಡಿ ನಿಮ್ಮ ತಂದೆಯಾದ ಚಿಕ್ಕ ಲಕ್ಷ್ಮಣ್ಣ ರವರಿಗೆ ಕೈಕಾಲುಗಳಿಗೆ ಕಟ್ಟಿಹಾಕಿ ಮುಖಕ್ಕೆ ಹೊಡೆದು ಗಾಯಗಳನ್ನುಂಟು ಮಾಡಿ ಕೊಲೆ ಮಾಡಿ ಮನೆಯಲ್ಲಿನ ಬೀರುವು ಕಪ್ಪೋರ್ಡ್ ಗಳನ್ನು ಕಿತ್ತುಹಾಕಿದ್ದು, ಬಟ್ಟೆಗಳೆಲ್ಲಾ ಚೆಲ್ಲಾಪಿಲ್ಲಿಯಾಗಿ ಬಿದ್ದಿರುತ್ತವೆ ಎಂದು ತಿಳಿಸಿದರು. ತಕ್ಷಣ ನಾನು ಬೆಂಗಳೂರಿನಿಂದ ಬಂದು ನೋಡಲಾಗಿ ವಿಚಾರ ನಿಜವಾಗಿರುತ್ತದೆ. ನಮ್ಮ ತಂದೆಯವರು ದಿ: 16-07-2019 ರಂದು ರಾತ್ರಿ ಒಬ್ಬರೇ ಮನೆಯಲ್ಲಿ ಮಲಗಿದ್ದಾಗ, ಯಾರೋ ದರೋಡೆಕೋರರು ಗೇಟಿನ ಬೀಗವನ್ನು ಕಿತ್ತುಹಾಕಿ ನಂತರ ಮನೆಯ ಬಾಗಿಲನ್ನು ಯಾವುದೋ ಆಯುಧದಿಂದ ಹೊಡೆದು ಹಾಕಿ ಮನೆಯೊಳಗೆ ಪ್ರವೇಶಿಸಿ ನಮ್ಮ ತಂದೆಯವರಿಗೆ ಕೈಗಳನ್ನು ಹಿಂದಕ್ಕೆ ಕಟ್ಟಿ, ಕಾಲುಗಳನ್ನು ಕಟ್ಟಿ ಬಾಯಿಗೆ ಮತ್ತು ಮೂಗಿಗೆ ಎರಡು ಟವಲುಗಳಿಂದ ಕಟ್ಟಿ ಎಡ ಹಣೆಗೆ ಹಾಗೂ ಮುಖಕ್ಕೆ ಹೊಡೆದು ರಕ್ತಗಾಯಗಳನ್ನುಂಟು ಮಾಡಿ ಕಲೆ ಮಾಡಿ ಮನೆಯಲ್ಲಲಿದ್ದ ಬೀರುವು ಮತ್ತು ಕಪ್ಪೋರ್ಡ್ ಗಳನ್ನು ತೆಗೆದು ಬಟ್ಟೆಗಳೆಲ್ಲಾ ಚೆಲ್ಲಾಪಿಲ್ಲಿಯಾಗಿ ಮಾಡಿ ಮನೆಯಲ್ಲದ್ದ ದು ಚಿಕ್ಕಮಕ್ಕಳ ಉಂಗುರ ಮತ್ತು ಚೈನು ಹಾಗೂ ಒಂದು ಲಕ್ಷ ರೂಪಾಯಿಗಳನ್ನು[1,00,000] ನಗದು ಹಣವನ್ನು ಹಾಗೂ ದೇವರ ಮನೆಯಲ್ಲಿದ್ದ ಬೆಳ್ಳಿಯ ಕುಂಕುಮ ಬಟ್ಟಲು ಮತ್ತು ದೀಪಗಳನ್ನು ಕಳ್ಳತನ[ದೋಚಿಕೊಂಡು] ಹೋಗಿರುತ್ತಾರೆ.  ಸದರಿ ಕೃತ್ಯವು ದಿ:16-07-2019 ರಂದು ರಾತ್ರಿ ಸುಮಾರು 11:00 ಗಂಟೆಯ ನಂತರ ಅವೇಳೆಯಲ್ಲಿ ಆಗಿರುತ್ತದೆ.  ಮೃತದೇಹವು ಮನೆಯಲ್ಲಿಯೇ ಇರುತ್ತದೆ.  ತಾವು ಸ್ಥಳಕ್ಕೆ ಬಂದು ಪರಿಶೀಲಿಸಿ ಸೂಕ್ತ ಕಾನೂನು ಕ್ರಮ ಜರುಗಿಸಿ ನಮ್ಮ ತಂದೆಯವರನ್ನು ಕೊಲೆ ಮಾಡಿ ನಗದು ಹಣ ಮತ್ತು ಒಡವೆಗಳನ್ನು ದೋಚಿಕೊಂಡು ಹೋಗಿರುವವರನ್ನು ಪತ್ತೆ ಮಾಡಿ ಕಾನೂನು ರೀತ್ಯ ಕ್ರಮ ಕೈಗೊಳ್ಳಲು ಕೋರುತ್ತೇನೆ, ಎಂದು ನೀಡಿದ ದೂರಿನ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿರುತ್ತೆ.

 1. ಬಾಗೇಪಲ್ಲಿ ಪೊಲೀಸ್ ಠಾಣೆ. ಮೊ.ಸಂ: 198/2019 ಕಲಂ: 87 ಕೆ.ಪಿ. ಆಕ್ಟ್:-

          ದಿ: 16-07-2019 ರಂದು ಮದ್ಯಾಹ್ನ 4:30  ಗಂಟೆಗೆ ಚಿಕ್ಕಬಳ್ಳಾಪುರ ಜಿಲ್ಲೆಯ ಡಿಸಿಬಿ-ಸಿಇಎನ್ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ವಿ, ಚಿನ್ನಪ್ಪ ರವರು ಠಾಣೆಗೆ ಹಾಜರಾಗಿ ಮಾಲು ಮತ್ತು ಆರೋಪಿಗಳನ್ನು ಹಾಜರುಪಡಿಸಿ, ಪಂಚನಾಮೆಯೊಂದಿಗೆ ನೀಡಿದ ವರಧಿಯನ್ನು ಪಡೆದುಕೊಂಡಿದ್ದರ ಸಾರಾಂಶ –  ನಾನು ಈದಿನ ದಿನಾಂಕ;16-07-2019 ರಂದು ಸಿಬ್ಬಂದಿಯೊಂದಿಗೆ ಬಾಗೇಪಲ್ಲಿ ತಾಲ್ಲೂಕಿನಲ್ಲಿ ಕಾನೂನು ಬಾಹೀರ ಚಟುವಟಿಕೆಗಳ ಬಗ್ಗೆ ಮಾಹಿತಿ ಸಂಗ್ರಹಣೆ ಕರ್ತವ್ಯದಲ್ಲಿದ್ದಾಗ ಮದ್ಯಾಹ್ನ 2.15 ಗಂಟೆಗೆ ಜಿ, ಮದ್ದೇಪಲ್ಲಿ ಕ್ರಾಸ್ ಕಡೆ ಗಸ್ತಿನಲ್ಲಿದ್ದಾಗ ಬಾತ್ಮಿದಾರರಿಂದ ಬಂದ ಖಚಿತ ಮಾಹಿತಿ ಮೇರೆಗೆ ಪಂಚರನ್ನು ಬರಮಾಡಿಕೊಂಡು ಗುಟ್ಟಪಾಳ್ಯ ಗ್ರಾಮದ ಪೂರ್ವಕ್ಕಿರುವ ನರಸಿಂಹಸ್ವಾಮಿ ಬೆಟ್ಟದಲ್ಲಿರುವ ನೀರಿನ ಓವರ್ ಟ್ಯಾಂಕಿನ ಕೆಳಗೆ ಕಾನೂನು ಬಾಹೀರವಾಗಿ ಹಣವನ್ನು ಪಣಕ್ಕೆ ಹಾಕಿ ಅಂದರ್ ಬಾಹರ್  ಇಸ್ಪೀಟು ಜೂಜಾಟ ಆಡುತ್ತಿದ್ದವರ ಮೇಲೆ ದಾಳಿ ಮಾಡಿದ್ದು ದಾಳೀಯಲ್ಲಿ  1] ನಾರಾಯಣಪ್ಪ ಬಿನ್ ಹನುಮಂತಪ್ಪ, 56 ವರ್ಷ, ನಾಯಕ ಜನಾಂಗ,ಜಿರಾಯ್ತಿ, ಗುಟ್ಟಪಾಳ್ಯ ಗ್ರಾಮ, 2] ವೆಂಕಟಸುಬ್ಬಯ್ಯ ಬಿನ್ ಲೇಟ್ ಸುಬ್ಬರಾಯುಡು, 44 ವರ್ಷ, ದೇವಾಂಗ ಜನಾಂಗ, ಬಟ್ಟೆ ವ್ಯಾಪಾರ, ವಾಸ ನಾಗರೆಡ್ಡಿಪಲ್ಲಿ, ಕದಿರಿ ತಾಲ್ಲೂಕು ಆಂದ್ರಪ್ರದೇಶ, 3] ಶ್ರಿನಿವಾಸಾಚಾರಿ ಬಿನ್ ಲೇಟ್ ಚೆಲುವಯ್ಯ, 43 ವರ್ಷ, ಅಕ್ಕಸಾಲಿಗರು, ಆಟೋ ಡ್ರೈವರ್ ಕೆಲಸ, ವಾಸ ಗುಟ್ಟಪಾಳ್ಯ, 4] ನಾರಾಯಣಪ್ಪ ಬಿನ್ ಲೇಟ್ ನರಸಿಂಹಪ್ಪ, 53 ವರ್ಷ, ಪ.ಜಾತಿ, ಒಂದನೇ ವಾರ್ಡ್, ವಾಲ್ಮೀಕಿ ನಗರ ಬಾಗೇಪಲ್ಲಿ ಟೌನ್, 5] ಆವುಲ ವೆಂಕಟರವಣಪ್ಪ ಬಿನ್ ಲೇಟ್ ಆವುಲ ವೆಂಕಟ್ರಾಯಪ್ಪ, 65 ವರ್ಷ, ನಾಯಕರು, ಚಿಲ್ಲರೆ ಅಂಗಡಿ ವ್ಯಾಪಾರ, ವಾಸ ಗುಟ್ಟಪಾಳ್ಯ ಗ್ರಾಮ, ಬಾಗೇಪಲ್ಲಿ ತಾ.  ಎಂಬ 05  ಜನ ಆರೋಪಿತರು ಸಿಕ್ಕಿಬಿದ್ದಿದ್ದು, ಸದರಿಯವರನ್ನು ವಶಕ್ಕೆ ಪಡೆದು, ಸ್ಥಳದಲ್ಲಿದ್ದ 52 ಇಸ್ಪೀಟು ಎಲೆಗಳು, 3.300/-ರೂ ನಗದು ಹಣ, ಹಾಗೂ ನೆಲಕ್ಕೆ ಹಾಸಿದ್ದ ಒಂದು ಟವೆಲ್ ನ್ನು ಕೇಸಿನ ಮುಂದಿನ ಕ್ರಮಕ್ಕಾಗಿ ಪಂಚರ ಸಮಕ್ಷಮ ಅಮಾನತ್ತು ಪಡಿಸಿಕೊಂಡಿರುತ್ತೆ,  ಸ್ಥಳದಲ್ಲಿ ಸಿಕ್ಕಿಬಿದ್ದಿದ್ದ 5 ಜನ ಆರೋಪಿತರನ್ನು ಮತ್ತು ಮೇಲ್ಕಂಡ ಮಾಲುಗಳನ್ನು ನಿಮ್ಮ  ವಶಕ್ಕೆ ನೀಡುತ್ತಿದ್ದು ಮುಂದಿನ ಕಾನೂನು ಕ್ರಮ ಜರುಗಿಸಲು ಕೋರಿದೆ, ಇದರೊಂದಿಗೆ ಅಸಲು ಪಂಚನಾಮೆಯನ್ನು ಲಗತ್ತಿಸಿಕೊಂಡಿರುತ್ತೆ, ಎಂದು ನೀಡಿದ ವರಧಿಯನ್ನು ಪಡೆದುಕೊಂಡು ಠಾಣಾ ಎನ್.ಸಿ.ಆರ್:201/2019    ರಂತೆ ದಾಖಲಿಸಿಕೊಂಡಿರುತ್ತೆ. ಇದು ಅಸಂಜ್ಞೇಯ ಪ್ರಕರಣವಾಗಿದ್ದು, ಮೇಲ್ಕಂಡ ಆಸಾಮಿಯ ವಿರುದ್ದ ಸಂಜ್ಞೇಯ ಪ್ರಕರಣವನ್ನು ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮಕೈಗೊಳ್ಳಲು ಅನುಮತಿಯನ್ನು ನೀಡಲು ಕೋರಿ ಘನ ನ್ಯಾಯಾಲಯಕ್ಕೆ ಮನವಿಯನ್ನು ಸಲ್ಲಿಸಿಕೊಂಡಿರುತ್ತೆ. ದಿ: 17-07-2019 ರಂದು ಬೆಳಗ್ಗೆ 10:15 ಗಂಟೆಗೆ ನ್ಯಾಯಾಲಯದ ಪಿ.ಸಿ 235 ರವರು ನ್ಯಾಯಾಲಯದ ಅನುಮತಿಯನ್ನು ಪಡೆದುಕೊಂಡು ಬಂದು ಠಾಣೆಯಲ್ಲಿ ಹಾಜರುಪಡಿಸಿದ್ದನ್ನು ಪಡೆದುಕೊಂಡು ಮೊ.ಸಂ: 198/2019 ಕಲಂ: 87 ಕೆ.ಪಿ ಆಕ್ಟ್ ರೀತ್ಯ ಪ್ರಕರಣ ದಾಖಲಿಸಿಕೊಂಡಿರುತ್ತೆ.

 1. ಚಿಕ್ಕಬಳ್ಳಾಪುರ ಸಂಚಾರಿ ಪೊಲೀಸ್ ಠಾಣೆ. ಮೊ.ಸಂ: 48/2019 ಕಲಂ: 279-337 ಐ.ಪಿ.ಸಿ & 185 ಐ.ಎಂ.ವಿ ಆಕ್ಟ್:-

          ದಿನಾಂಕ:-17/07/2019 ರಂದು ಬೆಳಿಗ್ಗೆ 09-00 ಗಂಟೆಗೆ ಪಿರ್ಯಾಧಿ ಶ್ರೀ.ಜಿ.ವಿಶ್ವನಾಥ ಬಿನ್ ಲೇಟ್ ಜಿ.ಗೋಪಾಲ ಕೃಷ್ಣಯ್ಯ 49 ವರ್ಷ, ಹಿಂದೂ ಸಾದರು, ರಾಜಸ್ವ ನಿರೀಕ್ಷಕರು, (ಕಸಭಾ ಹೋಬಳಿ, ಶಿಡ್ಲಘಟ್ಟ ತಾಲ್ಲೂಕು) ವಾರ್ಡ್ ನಂ-14, ಟೀಚರ್ಸ್ ಕಾಲೋನಿ, ಚಿಕ್ಕಬಳ್ಳಾಪುರ ಟೌನ್ ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ ದಿನಾಂಕ:-15/07/2019 ರಂದು ತನ್ನ ಬಾಬತ್ತು ಕೆಎ-40-ಎಂ-5590 ರ ಕಾರಿನಲ್ಲಿ ಕೆಲಸದ ನಿಮಿತ್ತ ಚಿಕ್ಕಬಳ್ಳಾಪುರ ನಗರಕ್ಕೆ ಬಂದು ವಾಪಸ್ಸು ಮನೆಗೆ ಹೋಗಲು ಚಿಕ್ಕಬಳ್ಳಾಪುರ – ಬೆಂಗಳೂರು ಎನ್.ಎಚ್-44 ಬಿ.ಬಿ ರಸ್ತೆಯ ಕಂದವಾರ ಗೇಟ್ ಬಳಿ ರಾತ್ರಿ 10:15 ಗಂಟೆಯ ಸಮಯದಲ್ಲಿ ಹೋಗುತ್ತಿದ್ದಾಗ ಬೆಂಗಳೂರು ಕಡೆಯಿಂದ ಬಂದ ಕೆಎ-40-ಎ-9058 ರ ಆಟೋ ಚಾಲಕ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ತಾನು ಚಾಲನೆ ಮಾಡುತ್ತಿದ್ದ ಕಾರಿಗೆ ಡಿಕ್ಕಿ ಹೊಡೆಯಿಸಿದ ಪರಿಣಾಮ ಎರಡೂ ವಾಹನಗಳೂ ಜಕಂಗೊಂಡಿದ್ದು, ಆಟೋದಲ್ಲಿದ್ದ ಸಹಪ್ರಯಾಣಿಕ ಅಂಬರೀಶ್ ರವರಿಗೆ ಗಾಯಗಳಾಗಿದ್ದು, ರಸ್ತೆಯಲ್ಲಿ ಬರುತ್ತಿದ್ದ ಯಾವುದೋ ಆಟೋದಲ್ಲಿ ಚಿಕಿತ್ಸೆಗಾಗಿ ಚಿಕ್ಕಬಳ್ಳಾಪುರ ಸರ್ಕಾರಿ ಆಸ್ಪತ್ರೆಗೆ ಸೇರಿಸಿದ್ದು, ಸದರಿ ಅಪಘಾತ ಪಡಿಸಿದ ಆಟೋ ಚಾಲಕನಿಗೂ ಸಹಾ ಗಾಯಗಳಾಗಿದ್ದು ನೋಡಲಾಗಿ ಪಾನಮತ್ತನಾಗಿದ್ದು ಹೆಸರು ಮತ್ತು ವಿಳಾಸ ತಿಳಿಯಲಾಗಿ ಶಿವಕುಮಾರ ಬಿನ್ ವ್ಯಾಸರಾಯಪ್ಪ 32 ವರ್ಷ, ಬೊಮ್ಮನಹಳ್ಳಿ ಗ್ರಾಮ, ಎಸ್ ದೇವಗಾನಹಳ್ಳಿ ಅಂಚೆ, ಚಿಕ್ಕಬಳ್ಳಾಪುರ ತಾಲ್ಲೂಕು ಎಂತ ತಿಳಿಸಿದ್ದು, ಕಾರು ಜಕಂಗೊಂಡ ಬಗ್ಗೆ ವಿಮಾಧಿಕಾರಿಗಳನ್ನು ಬೇಟಿ ಮಾಡಿ ಈ ದಿನ ತಡವಾಗಿ ದಿನಾಂಕ:-17/07/2019 ರಂದು ಸದರಿ ಅಪಘಾತ ಪಡಿಸಿದ ಆಟೋ ಚಾಲಕನ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ನೀಡಿದ ದೂರಿನ ಮೇರೆಗೆ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡಿರುತ್ತೆ.

 1. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ. ಮೊ.ಸಂ: 254/2019 ಕಲಂ: 379 ಐ.ಪಿ.ಸಿ :-

          ದಿನಾಂಕ 16-07-2019 ರಂದು ಮದ್ಯಾಹ್ನ 3-20 ಗಂಟೆಗೆ ರವಿಕುಮಾರ್ ಬಿನ್ ರಾಜನ್ನ 38 ವರ್ಷ, ಜಲಗಾರ, ಕೀರ್ತಿನಗರ ಚಿಂತಾಮಣಿ ನಗರ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ಈ ಮೂಲಕ ತಮ್ಮಲ್ಲಿ ತಿಳಿಯಪಡಿಸುವುದೇನೆಂದರೆ, ನಾನು ಚಿಂತಾಮಣಿ ನಗರದ ನಗರಸಭೆ ಕಾರ್ಯಾಲಯದಲ್ಲಿ ನೀರು ಸರಬರಾಜು ಶಾಖೆಯಲ್ಲಿ ನಗರಕ್ಕೆ ಸೇರಿದ ಅಗ್ರಹಾರ ಪ್ರದೇಶದಲ್ಲಿ ಜಲಗಾರನಾಗಿ ಕರ್ತವ್ಯ ನಿರ್ವಹಿಸಿಕೊಂಡಿರುತ್ತೇನೆ. ಈ ದಿನ ದಿನಾಂಕ 16/07/2019 ರಂದು ಮದ್ಯಾಹ್ನ 2.45 ಗಂಟೆ ಸಮಯದಲ್ಲಿ ನೆಕ್ಕುಂದಿ ಕೆರೆಯಲ್ಲಿರುವ ಪಂಪ್ ಹೌಸ್ ನ ಜವಾನನಾದ ವೆಂಕಟರವಣ ಬಿನ್ ದಾಸಪ್ಪ ರವರು ನನಗೆ ಪೋನ್ ಮಾಡಿ ಯಾರೋ ಒಬ್ಬ ಆಸಾಮಿ ಪಂಪ್ಹೌಸ್ ಪಕ್ಕದಲ್ಲಿರುವ ಕೊಳವೆಬಾವಿಯಿಂದ ಸ್ಟಾಟರ್ ವರೆಗೆ ಅಳವಡಿಸಿರುವ ಕೇಬಲ್ ನ್ನು ಎಳೆದುಕೊಂಡು ಸ್ವಲ್ವ ದೂರ ಹೋಗಿ ಸದರಿ ಕೇಬಲ್ ವೈರ್ ನ್ನು ಬೆಂಕಿಯಿಂದ ಸುಡುತ್ತಿದ್ದಾಗ ತಾನು ಮತ್ತು ಲೋಕೇಶ ರವರು ಹೋಗಿ ಅವನನ್ನು ಮಾಲಿನೊಂದಿಗೆ ಹಿಡಿದುಕೊಂಡಿದ್ದು, ನೀವು ಬರಬೇಕೆಂದು ತಿಳಿಸಿದ್ದು, ತಕ್ಷಣ ನಾನು ಮತ್ತು ನಗರಸಭೆಯ ಮೇಲ್ವಿಚಾರಕರಾದ ಸೈಯದ್ ಖಾದರ್ ಬಿನ್ ಸೈಯದ್ ಅಲ್ಲಾಬಕಾಶ್ ರವರು ಸ್ಥಳಕ್ಕೆ ಹೋಗಿ ನೋಡಲಾಗಿ, ಸಂಗತಿ ನಿಜವಾಗಿದ್ದು, ವೆಂಕಟರವಣ ರವರು ನಮ್ಮ ಕಛೇರಿಯ ಸಿಬ್ಬಂದಿಯವರಾದ ಲೋಕೇಶ ಬಿನ್ ನಾಗರಾಜಪ್ಪ ರವರೊಂದಿಗೆ ಒಬ್ಬ ಆಸಾಮಿಯನ್ನು ಹಿಡಿದುಕೊಂಡಿದ್ದು, ಸ್ಥಳದಲ್ಲಿ ಕೇಬಲ್ ವೈರು ಸುಟ್ಟಿರುವುದು ಕಂಡು ಬಂದಿದ್ದು, ಅವರು ಹಿಡಿದುಕೊಂಡಿದ್ದ ಆಸಾಮಿಯ ಹೆಸರು ಮತ್ತು ವಿಳಾಸ ವಿಚಾರ ಮಾಡಲಾಗಿ ಯಾಮಣ್ಣ ಬಿನ್ ನರಸಿಂಹಪ್ಪ, 30 ವರ್ಷ, ಆದಿ ಕರ್ನಾಟಕ ಜನಾಂಗ, ಕೂಲಿಕೆಲಸ, ಶಾಂತಿನಗರ, ಚಿಂತಾಮಣಿ ಟೌನ್ ಎಂದು ತಿಳಿಸಿರುತ್ತಾನೆ. ಕಳುವಾಗಿರುವ ಕೇಬಲ್ ವೈರು ಸುಮಾರು 25 ಮೀಟರ್ ಇದ್ದು ಸುಮಾರು 4,000/- ರೂ ಬೆಲೆ ಬಾಳುತ್ತೆ. ನಂತರ ವಿಚಾರ ಮಾಡಲಾಗಿ ಮದ್ಯಾಹ್ನ 2.30 ಗಂಟೆ ಸಮಯದಲ್ಲಿ ಯಾಮಣ್ಣ ರವರು ಪಂಪ್ಹೌಸ್ ಬಳಿ ಯಾರೂ ಇಲ್ಲದೆ ಇರುವುದನ್ನು ಗಮನಿಸಿ ಕೇಬಲ್ ವೈರ್ ಅನ್ನು  ಕಳ್ಳತನ ಮಾಡಿ ಅದರಲ್ಲಿನ ತಾಮ್ರದ ತಂತಿಯನ್ನು ಬೇರ್ಪಡಿಸಿ ಮಾರಾಟ ಮಾಡುವ ಸಲುವಾಗಿ ಕೇಬಲ್ ವೈರ್ ಅನ್ನು  ಬೆಂಕಿಯಲ್ಲಿ ಹಾಕಿ ಸುಡುತ್ತಿದ್ದಾಗ ವೆಂಕಟರವಣ ರವರು ಲೋಕೇಶ ರವರೊಂದಿಗೆ ಸದರಿ ಆಸಾಮಿಯನ್ನು ವಶಕ್ಕೆ ಪಡೆದುಕೊಂಡಿರುವುದಾಗಿ ತಿಳಿಯಿತು. ಸದರಿ ಆರೋಪಿಯನ್ನು ವಶಕ್ಕೆ ಪಡೆದು ಆತನು ಕಳ್ಳತನ ಮಾಡಿ ಅರ್ದಂಬರ್ದ ಸುಟ್ಟಿರುವ ಕೇಬಲ್ ವೈರ್ ಸಮೇತ ಠಾಣೆಗೆ ಬಂದು ದೂರು ನೀಡುತ್ತಿದ್ದು, ಆರೋಪಿ ಯಾಮಣ್ಣ ರವರ ವಿರುದ್ದ ಕಾನೂನು ರೀತ್ಯ ಕ್ರಮ ಜರುಗಿಸಲು ಕೋರಿದೆ.

 1. ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ. ಮೊ.ಸಂ: 270/2019 ಕಲಂ: 87 ಕೆ.ಪಿ. ಆಕ್ಟ್ :-

          ದಿನಾಂಕ :15/07/2019 ರಂದು ಸಂಜೆ 4-15 ಗಂಟೆಗೆ ಪಿ.ಎಸ್.ಐ ಶ್ರೀ. ಮೋಹನ್ .ಎನ್. ಗೌರಿಬಿದನುರು ಗ್ರಾಮಾಂತರ ಪೊಲೀಸ್ ಠಾಣೆ ರವರು ಠಾಣೆಗೆ ಮಾಲು ಮತ್ತು ಆರೋಪಿಗಳೊಂದಿಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣಾ ಸರಹದ್ದಿಗೆ ಸೇರಿದ ಗೌರಿಬಿದನೂರು ತಾಲ್ಲೂಕಿನ ನಗರಗೆರೆ ಹೋಬಳಿಯ ಮಲ್ಲೇನಹಳ್ಳಿ ಗ್ರಾಮದ ಬಳಿ ಇರುವ ಮಲ್ಲೇನಹಳ್ಳಿ ಬೆಟ್ಟದ ತಪ್ಪಲಿನಲ್ಲಿ ಯಾರೋ ಆಸಾಮಿಗಳು ಅಂದರ್ – ಬಾಹರ್ ಜೂಜಾಟವಾಡುತ್ತಿರುವುದಾಗಿ ನನಗೆ ಬಂದ ಖಚಿತ ಮಾಹಿತಿ ಮೇರೆಗೆ ಪಂಚರನ್ನು ಠಾಣೆಗೆ ಬರ ಮಾಡಿಕೊಂಡು ಜೂಜಾಟದ ಮೇಲೆ ದಾಳಿ ಮಾಡಲು ಪಂಚರಾಗಿ ಸಹಕರಿಸಲು ಕೋರಿದ್ದರ ಮೇರೆಗೆ ಅವರು ಒಪ್ಪಿದ ನಂತರ ಪಂಚರು ಮತ್ತು ಪೊಲೀಸ್ ಸಿಬ್ಬಂದಿಯವರಾದ ಗಂಗರಾಜು ಹೆಚ್ ಸಿ 220. ಶ್ರೀನಿವಾಸರೆಡ್ಡಿ , ಶ್ರೀನಾಥ ಪಿ ಸಿ 80. ಸೋಮನಾಥ್ ಮಾಲಗಾರ್  ಪಿ ಸಿ 312, ಕೆಂಪರಾಜು ಪಿ ಸಿ  115,ಚಾಲಕರಾದ ಗಂಗುಲಪ್ಪ .ಶಿವಶಂಕರ ಪಿಸಿ 179, ರವರೊಂದಿಗೆ ಸರ್ಕಾರಿ ಜಿಫು ಸಂಖ್ಯೆ ರವರು ಕೆ ಎ 40-ಜಿ-281 ಹಾಗು ದ್ವಿಚಕ್ರ ವಾಹನಗಳಲ್ಲಿ ಠಾಣೆಯಿಂದ ಮದ್ಯಾಹ್ನ 2.00 ಗಂಟೆಗೆ ಹೋಗಿರುತ್ತೇವೆ. ಇದೇ ದಿನ ಮದ್ಯಾಹ್ನ ಸುಮಾರು 2.45 ಗಂಟೆಯಲ್ಲಿ ಮಲ್ಲೇನಹಳ್ಳಿ ಕ್ರಾಸ್ ಬಳಿ ಸರ್ಕಾರಿ ಜೀಪನ್ನು ಮರೆಯಲ್ಲಿ ನಿಲ್ಲಿಸಿ ಮಲ್ಲೇನಹಳ್ಳಿ ಬೆಟ್ಟದ ತಪ್ಪಲಿಗೆ ನಡೆದುಕೊಂಡು ಹೋಗಿ ಗಿಡಗಳ ಮರೆಯಲ್ಲಿ ನಿಂತು ನೋಡಲಾಗಿ 9-10 ಜನರ ಆಸಾಮಿಗಳು  ರೌಂಡಾಗಿ ಕುಳಿತು  ಅಂದರ್ಗೆ  500 ರೂ ಬಾಹರ್ ಗೆ 500 ರೂ ಅಂತ ಹೇಳಿ ಅಂದರ್ –ಬಾಹರ್ ಇಸ್ಪೀಟು ಜೂಜಾಟವಾಡುತ್ತಿರುವುದನ್ನು ಖಚಿತ ಪಡಿಸಿಕೊಂಡು ಪಂಚರ ಸಮಕ್ಷಮ ನಾನು ಮತ್ತು ಪೊಲೀಸ್ ಸಿಬ್ಬಂದಿಯವರು ದಾಳಿ ಮಾಡಿ ಅವರನ್ನು ಸುತ್ತುವರೆದಾಗ ಓಡಿ ಹೋಗಲು ಪ್ರಯತ್ನಿಸಿದವರನ್ನು ಹಿಡಿದುಕೊಂಡು ಯಾರು ಓಡಿ ಹೋಗದಂತೆ ನಾನು ಎಚ್ಚರಿಗೆ ನೀಡಿ ಅವರುಗಳ ಹೆಸರು ವಿಳಾಸ ಕೇಳಲಾಗಿ 1) ಬಾಬು @ ಸುರೇಶ್ ಬಾಬು ಬಿನ್ ಕೃಷ್ಣಪ್ಪ 28 ವರ್ಷ ಜಿರಾಯ್ತಿ ಭೋವಿ ಜನಾಂಗ  ವಾಸ: ಮೈದಗೋಳಂ ಗ್ರಾಮ ಲೇಪಾಕ್ಷಿ ಮಂಡಲಂ ಹಿಂದುಪುರ ತಾಲ್ಲುಕು ಅನಂತರ ಪುರ ಜಿಲ್ಲೆ  ಆಂದ್ರ ಪ್ರದೇಶ 2), ಕಿರಣ್ ಎ  ಬಿನ್ ಆಂಜಿನಪ್ಪ 26 ವರ್ಷ ಈಡಿಗ ಜನಾಂಗ ಗೌರಿಬಿದನೂರು ಟೌನ್ ನಲ್ಲಿರುವ ಕಾಮದೇನುವಿನ ಬಾರ್ ನಲ್ಲಿ ಕೆಲಸ ವಾಸ: ಮೈದಗೋಳಂ ಗ್ರಾಮ ಲೇಪಾಕ್ಷಿ ಮಂಡಲಂ ಹಿಂದುಪುರ ತಾಲ್ಲುಕು ಅನಂತರ ಪುರ ಜಿಲ್ಲೆ  ಆಂದ್ರ ಪ್ರದೇಶ 3) ಬಾಬು ಬಿನ್ ಗಂಗಾಧರಪ್ಪ 26 ವರ್ಷ ಭೋವಿ ಜನಾಂಗ ಜಿರಾಯ್ತಿ ವಾಸ: ಮೈದಗೋಳಂ ಗ್ರಾಮ ಲೇಪಾಕ್ಷಿ ಮಂಡಲಂ ಹಿಂದುಪುರ ತಾಲ್ಲುಕು ಅನಂತರ ಪುರ ಜಿಲ್ಲೆ ಆಂದ್ರ ಪ್ರದೇಶ 4)ಗಂಗಾಧರ ಯು ಬಿನ್ ಯು ರಾಮಾಂಜಿನಪ್ಪ 25 ವರ್ಷ ಉಪ್ಪಾರ ಜನಾಂಗ ಜಿರಾಯ್ತಿ ವಾಸ:ಮೈದಗೋಳಂ ಗ್ರಾಮ ಲೇಪಾಕ್ಷಿ ಮಂಡಲಂ ಹಿಂದುಪುರ ತಾಲ್ಲುಕು ಅನಂತರ ಪುರ ಜಿಲ್ಲೆ  ಆಂದ್ರ ಪ್ರದೇಶ 5)ರಾಮು ಬಿನ್ ನಾರಾಯಣಪ್ಪ 38 ವರ್ಷ ಭೋವಿ ಜನಾಂಗ ಚಾಲಕ ವೃತ್ತಿ ವಾಸ: ಮೈದಗೋಳಂ ಗ್ರಾಮ ಲೇಪಾಕ್ಷಿ ಮಂಡಲಂ ಹಿಂದುಪುರ ತಾಲ್ಲುಕು ಅನಂತರ ಪುರ ಜಿಲ್ಲೆ  ಆಂದ್ರ ಪ್ರದೇಶ 6) ಅಂಜಿ ಬಿನ್ ನಾರಾಯಣಸ್ವಾಮಿ 19 ವರ್ಷ ಬುಡಗ ಜಂಗಮ ಜನಾಂಗ  ವ್ಯಾಪಾರ ವಾಸ:ಮಲ್ಲೇನಹಳ್ಳಿ ಗ್ರಾಮ ಗೌರಿಬಿದನೂರು ತಾಲ್ಲೂಕು 7) ಸಜ್ಜಪ್ಪ ಬಿನ್ ಲೇಟ ಸಂಜೀವರಾಯಪ್ಪ 50 ವರ್ಷ ಉಪ್ಪಾರ ಜನಾಂಗ ಕೂಲಿ ಕೆಲಸ ವಾಸ: : ಮೈದಗೋಳಂ ಗ್ರಾಮ ಲೇಪಾಕ್ಷಿ ಮಂಡಲಂ ಹಿಂದುಪುರ ತಾಲ್ಲುಕು ಅನಂತರ ಪುರ ಜಿಲ್ಲೆ  ಆಂದ್ರ ಪ್ರದೇಶ  8) ಶಿವಶಂಕರ ಬಿನ್ ನಾರಾಯಣಪ್ಪ 46 ವರ್ಷ ಉಪ್ಪಾರ ಜನಾಂಗ ಕೂಲಿ ಕೆಲಸ ವಾಸ: ಮೈದಗೋಳಂ ಗ್ರಾಮ ಲೇಪಾಕ್ಷಿ ಮಂಡಲಂ ಹಿಂದುಪುರ ತಾಲ್ಲುಕು ಅನಂತರ ಪುರ ಜಿಲ್ಲೆ  ಆಂದ್ರ ಪ್ರದೇಶ 9) ಆದಿನಾರಾಯಣಪ್ಪ  ಬಿನ್ ಗುರುಮೂರ್ತಪ್ಪ 52 ವರ್ಷ ಭೋವಿ ಜನಾಂಗ ಜಿರಾಯ್ತಿ ವಾಸ : ಮೈದಗೋಳಂ ಗ್ರಾಮ ಲೇಪಾಕ್ಷಿ ಮಂಡಲಂ ಹಿಂದುಪುರ ತಾಲ್ಲುಕು ಅನಂತರ ಪುರ ಜಿಲ್ಲೆ  ಆಂದ್ರ ಪ್ರದೇಶ  10) ಶ್ರೀನಿವಾಸುಲು ಬಿನ್ ಆಂಜಿನಪ್ಪ 38 ವರ್ಷ ಉಪ್ಪಾರ ಜನಾಂಗ ಕೂಲಿ ಕೆಲಸ ವಾಸ: ಮೈದಗೋಳಂ ಗ್ರಾಮ ಲೇಪಾಕ್ಷಿ ಮಂಡಲಂ ಹಿಂದುಪುರ ತಾಲ್ಲುಕು ಅನಂತರ ಪುರ ಜಿಲ್ಲೆ  ಆಂದ್ರ ಪ್ರದೇಶ ಅಂತ ತಿಳಿಸಿದ್ದು, ಜಾಜಾಟದ ಸ್ಥಳವನ್ನು ಪರಿಶೀಲಿಸಲಾಗಿ ಒಂದು ಪ್ಲಾಸ್ಟಿಕ್ ಚೀಲವಿದ್ದು ಅದರ ಮೇಲೆ ನಗದು ಹಣ ಮತ್ತು  ಇಸ್ಪೀಟು ಎಲೆಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದು , ಹಣವನ್ನು ತೆಗೆದುಕೊಂಡು ಎಣಿಸಲಾಗಿ 8260 (ಎಂಟು ಸಾವಿರದ ಇನ್ನೂರ ಅರವತ್ತು ) ರೂ ನಗದಿರುತ್ತೆ.ಇಸ್ಪೀಟು ಎಲೆಗಳನ್ನು 52 ಇಸ್ಪೀಟು ಎಲೆಗಳಿರುತ್ತೆವೆ. ಈ ಮೇಲ್ಕಂಢ ಮಾಲಾದ 1) 8260 (ಎಂಟು ಸಾವಿರದ ಇನ್ನೂರ ಅರವತ್ತು ) ರೂ ನಗದು ಹಣ. 2) 52 ಇಸ್ಪೀಟು ಎಲೆಗಳು  3) ಒಂದು ಪ್ಲಾಸ್ಟಿಕ್ ಚೀಲವನ್ನು ಪಂಚರ ಸಮಕ್ಷಮ ಮದ್ಯಾಹ್ನ 2.45 ಗಂಟೆಯಿಂದ 3.30 ಗಂಟೆಯವರೆವಿಗು ಪಂಚನಾಮೆ ಮೂಲಕ ಅಮಾನತ್ತು ಪಡಿಸಿಕೊಂಡು ಮಾಲು ಮತ್ತು ಆರೋಪಿತರೊಂದಿಗೆ ಠಾಣೆಗೆ ಸಂಜೆ 4.15 ವಾಪಸ್ಸಾಗಿ ಪೊಲೀಸ್ ಠಾಣೆಗೆ ವಾಪಸ್ಸಾಗಿ ಮಾಲು ಮತ್ತು ಆರೋಪಿತರನ್ನು ಠಾಣಾಧಿಕಾರಿಗಳಿಗೆ ವಶಕ್ಕೆ ನೀಡಿದ್ದು, ಮುಂದಿನ ಕಾನೂನು ರಿತ್ಯಾ ಕ್ರಮ ಜರುಗಿಸಿಅಂತ ನೀಡಿದ ವರದಯನ್ನು ಪಡೆದುಕೊಂಢು ಠಾಣಾ ಎನ್ ಸಿ ಆರ್ 473/2019 ರಲ್ಲಿ ನಮೂದು ಮಾಡಿಕೊಂಢು ಘನ ನ್ಯಾಯಾಲಯಕ್ಕೆ ಪ್ರಕರಣ ದಾಖಲು ಮಾಡಿಕೊಂಢು ತನಿಖೆ ಕೈಗೊಳ್ಳಲು ಅನುಮತಿ ಕೋರಿದ್ದು , ಘನ ನ್ಯಾಯಾಲಯದಿಂದ ಅನುಮತಿ ಪಡೆದುಕೊಂಡು ಠಾಣೆಯಲ್ಲಿ 270/2019  ಕಲಂ; 87 ಕೆ ಪಿ ಆಕ್ಟ್ ರೀತ್ಯಾ ಪ್ರಕರಣ ದಾಖಲು ಮಾಡಿಕೊಂಡು  ಪ್ರ. ವ.ವರದಿಯನ್ನು ಘನ ನ್ಯಾಯಾಲಯಕ್ಕೆ ನಿವೇದಿಸಿಕೊಂಡಿರುತ್ತೆ..

 1. ಗುಡಿಬಂಡೆ ಪೊಲೀಸ್ ಠಾಣೆ. ಮೊ.ಸಂ: 196/2019 ಕಲಂ: 15(ಎ),32(3) ಕೆ.ಇ ಆಕ್ಟ್:-

          ಗುಡಿಬಂಡೆ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸ್ ಇನ್ಸ್ ಪೆಕ್ಟರ್ ಸುನೀಲ್ ಕುಮಾರ್ ರವರು ನೀಡಿದ ದೂರಿನ  ಸಾರಾಂಸ ವೆನೆಂದರೆ  ಈ ದಿನ ದಿನಾಂಕ:16-07-2019 ರಂದು ಸಂಜೆ 5-30 ಗಂಟೆಯಲ್ಲಿ ಠಾಣೆಯಲ್ಲಿದ್ದಾಗ, 14 ನೇ ಬೀಟ್ ಸಿಬ್ಬಂದಿ ಮಾರುತು ಸಿ,ಹೆಚ್,ಸಿ-221 ರವರು ತನಗೆ ಪೋನ್ ಮಾಡಿ ಗುಡಿಬಂಡೆ ತಾಲೂಕಿನ ಜಯಂತಿ ಗ್ರಾಮದಲ್ಲಿ ನರಸಿಂಹಪ್ಪ ರವರ ಚಿಲ್ಲರೆ ಅಂಗಡಿ ಬಳಿ ಸಾರ್ವಜನಿಕ ಸ್ಥಳದಲ್ಲಿ ಅಆರ್ವಜಿನಿಕರಿಗೆ ಮದ್ಯ ಸೇವನೆ ಮಾಡಲು ಅನುವು ಮಾಡಿಕೊಟ್ಟಿರುವುದಾಗಿ ಮಾಹಿತಿ ನೀಡಿದ್ದಾರೆಂದು ತಿಳಿಸಿದರ ಮಾಹಿತಿ ಮೇರೆಗೆ, ತಾನು ಠಾಣಾ ಸಿಬ್ಬಂದಿಯಾದ ಸಿ,ಪಿ,ಸಿ-188 ರಾಥೋಡ್ & ಸಿ,ಪಿ,ಸಿ-378 ಶ್ರೀನಿವಾಸ ರವರನ್ನು ಕರೆದುಕೊಂಡು ಸಕರ್ಾರಿ ಜೀಪು ಸಂಖ್ಯೆ-ಕೆ,ಎ-40 ಜಿ-1888 ರಲ್ಲಿ ಚಾಲಕ ಎ,ಎಚ್,ಸಿ-43 ವೆಂಕಟಚಲಪತಿ ರವರೊಂದಿಗೆ ಸಂಜೆ 6-00 ಗಂಟೆಗೆ ಜಯಂತಿ ಗ್ರಾಮಕ್ಕೆ ಹೋಗಿ, ಪಂಚರನ್ನು ಬರಮಾಡಿಕೊಂಡು ಗ್ರಾಮದ ಪಕ್ಕದಲ್ಲಿರುವ ನರಸಿಂಹಪ್ಪ ರವರ ಚಿಲ್ಲರೆ ಅಂಗಡಿ ಬಳಿ ದೂರದಲ್ಲಿ ಮರೆಯಲ್ಲಿ ನಿಂತು ನೋಡಲಾಗಿ, ಕಾನೂನು ಬಾಹಿರವಾಗಿ ಸಾರ್ವಜನಿಕರ ಸ್ಥಳದಲ್ಲಿ ಸಾರ್ವಜನಿಕರಿಗೆ ಮದ್ಯವನ್ನು ಕುಡಿಯುಲು ಸ್ಥಳವಕಾಶ  ಮಾಡಿಕೊಟ್ಟಿರುವುದು ಕಂಡು ಬಂದಿರುತ್ತೆ. ಪಂಚರೋಂದಿಗೆ ತಾವುಗಳು ಸದರಿ ಮದ್ಯವನ್ನು ಮಾಡುತ್ತಿದ್ದವರ ಮೇಲೆ  ಪಂಚರ ಸಮಕ್ಷಮ ಸಿಬ್ಬಂದಿಯೊಂದಿಗೆ ಧಾಳಿ ಮಾಡಿದಾಗ, ಸಮವಸ್ರದಲ್ಲದ್ದ ನಮ್ಮನ್ನು ಕಂಡು ಓಡಿಹೋಗಿರುತ್ತಾರೆ. ಆಪೈಕಿ ಮದ್ಯವನ್ನು ಸರಬರಾಜು ಮಾಡವ ಆಸಾಮಿಯನ್ನು  ವಶಕ್ಕೆ ಪಡೆದುಕೊಂಡು ಹೆಸರು & ವಿಳಾಸ ಕೇಳಲಾಗಿ 1) ನರಸಿಂಹಪ್ಪ ಬಿನ್ ಲೇಟ್ ಗಂಘಲಪ್ಪ, 56 ವರ್ಷ, ಕೊರಚರು , ಅಂಗಡಿ ವ್ಯಾಪಾರ ವಾಸ: ಜಯಂತಿ  ಗ್ರಾಮ, ಗುಡಿಬಂಡೆ ತಾಲೂಕು ಎಂದು ತಿಳಿಸದ್ದು ಸದರಿ ಆಸಾಮಿಯನ್ನು ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಮಧ್ಯ ಸೇವನೆ ಮಾಡಲು ಸ್ಥಳವಕಾಶ ನೀಡುರುವ ಬಗ್ಗೆ ಇರುವಂತಹ ಲೈಸನ್ಸ್ ತೋರಿಸಲು ಕೇಳಲಾಗಿ ಸದರಿ ಆಸಾಮಿಯು ಯಾವುದೆ ಪರವಾನಿಗೆ ಇಲ್ಲವೆಂದು ತಿಳಿಸಿದನು, ನಂತರ ಪರಿಶೀಲನೆ ಮಾಡಲಾಗಿ 1)ಹೈ ವಾರ್ಡ್ಸ ಕಂಪನಿಯ ಚೀರ್ಸ್ ವಿಸ್ಕಿ 90 ಎಂ ಎಲ್ 11 ಟೆಟ್ಟಾ ಪ್ಯಾಕೇಟ್ಗಳು ಇದ್ದು,2) ಓಪನ್ ಮಾಡಿರುವಂತಹ ಹೈ ವಾರ್ಡ್ಸ ಕಂಪನಿಯ ಚೀರ್ಸ್ ವಿಸ್ಕಿ 90 ಎಂ ಎಲ್ 3 ಟೆಟ್ಟಾ ಪ್ಯಾಕೇಟ್ಗಳು 3)ಮದ್ಯವನು ಕುಡಿದು ಬಿಸಾಕಿದಂತಹ 2 ಪ್ಲಾಸ್ಟಿಕ್ ಗ್ಲಾಸ್ಗಳು 4) ಒಂದು ಲೀಟರ್ ಸಾಮಥ್ಯದ 1 ಖಾಲಿ ಬಾಟೆಲ್ ಇದ್ದು, ಮದ್ಯವಿರುವ ಟೆಟ್ರಾ ಪ್ಯಾಕೇಟ್ ಗಳ ದ್ರವ ಪ್ರಮಾಣ ಲೆಕ್ಕ ಮಾಡಲಾಗಿ ಒಟು -990 ಎಮ್ ಎಲ್ ಆಗಿದ್ದು  ಆ ಪ್ಯಾಕೆಟ್ ಗಳ ಮೇಲಿನ ದರವನು ಲೆಕ್ಕ ಮಾಡಲಾಗಿ  32*11= 352 ಆಗಿರುತ್ತದೆ, ಸದರಿ ಮಾಲನ್ನು  ಆರೊಪಿಯನ್ನು ಪಂಚರ ಸಮಕ್ಷಮ ಸಂಜೆ 6-15 ಗಂಟೆಯಿಂದ ಸಂಜೆ 7-00 ಗಂಟೆಯಲ್ಲಿ ಜರುಗಿಸಿದ ಧಾಳಿ ಪಂಚನಾಮೆ ಕಾಲದಲ್ಲಿ ಅಮಾನತ್ತುಪಡಿಸಿಕೊಂಡು ಮೇಲ್ಕಂಡ ಆರೋಪಿಯನ್ನು  & ಮಾಲುಗಳನ್ನು ಅಸಲು ಪಂಚನಾಮೆಯೊಂದಿಗೆ ಸಂಜೆ 7-30 ಗಂಟೆಯಲ್ಲಿ ಹಾಜರುಪಡಿಸುತ್ತಿದ್ದು, ಸದರಿ ಆರೋಪಿತನ ವಿರುದ್ದ ಮುಂದಿನ ಕಾನೂನು ಕ್ರಮ ನೀಡಿದ ದೂರಾಗಿರುತ್ತೆ

 1. ಕೆಂಚಾರ್ಲಹಳ್ಳಿ ಪೊಲೀಸ್ ಠಾಣೆ. ಮೊ.ಸಂ: 84/2019 ಕಲಂ: 323-324-325-341-504 ರೆ/ವಿ 34 ಐ.ಪಿ.ಸಿ:-

          ದಿನಾಂಕ 16/07/2019 ರಂದು 16-00 ಗಂಟೆಗೆ  ಪಿ.ಸಿ-484 ಶಿವಣ್ಣ ವಿ.ಎಸ್  ರವರು ಠಾಣೆಗೆ ಹಾಜರಾಗಿ ಹಾಜರುಪಡಿಸಿದ ಗಾಯಾಳುವಿನ ಹೇಳಿಕೆಯ ಸಾರಾಂಶವೇನೆಂದರೆ  ಪಿರ್ಯಾದಿದಾರರು ಗ್ರಾಮದ ವಿ.ಎಸ್.ಎಸ್.ಎನ್ ನ ಸೆಕ್ರೇಟರಿಯಾಗಿ ಕೆಲಸಮಾಡಿಕೊಂಡಿರುತ್ತಾನೆ.  ದಿನಾಂಕ 16/07/2019 ರಂದು ಬೆಳ್ಳಗ್ಗೆ 8-40 ಗಂಟೆ ಸಮಯದಲ್ಲಿ ನಮ್ಮ ಗ್ರಾಮದ ವಿ.ಎಸ್.ಎಸ್.ಎನ್ ಸಂಘದ ಕಟ್ಟಡದಲ್ಲಿ ಬಿಪಿಎಲ್ ಕಾರ್ಡದಾರರಿಗೆ ರೇಷನ್ ನೀಡುತ್ತಿದ್ದಾಗ ನಮ್ಮ ಗ್ರಾಮದ ವಾಸಿಯಾದ ಅಮರನಾಥರೆಡ್ಡಿ  ಬಿನ್ ನರಸಿಂಹರೆಡ್ಡಿ ಕೆ.ಬಿ ಮತ್ತು ನಂಜುಂಡಪ್ಪ ಬಿನ್ ವೆಂಕಟರಾಯಪ್ಪ ರವರು ಏಕಾಏಕಿ ಬಂದು “ಲೋಪರ್ ನನ್ನ ಮಗನೇ ನಿನಗೆ ವಯಸ್ಸಾಗಿದ್ದು ನೀನು ರೇಷನ್ ವಿತರಣೆ ಮಾಡಬಾರದು ರಾಜೀನಾಮೆ ಕೊಟ್ಟು ಹೋಗು” ಎಂದು ಅವಾಚ್ಯವಾಗಿ ಬೈಯ್ದು ಕೆಲಸ ಮಾಡದಂತೆ ಅಡ್ಡಿಪಡಿಸಿ ಆ ಪೈಕಿ ಅಮರನಾಥರೆಡ್ಡಿ ಮುಷ್ಟಿಯಿಂದ ನನ್ನ ಮೂತಿಗೆ ಬಲವಾಗಿ ಗುದ್ದಿದ್ದರಿಂದ ನನ್ನ ಮೇಲ್ಬಾಗದ ಎರೆಡು ಹಲ್ಲು ಮತ್ತು ಕೆಳಭಾಗದ  ಮುಂದಿನ ಎರೆಡು ಹಲ್ಲು ಮುರಿದು ಬಿದ್ದಿರುತ್ತೆ ಆಗ ನಂಜುಂಡಪ್ಪ ದೊಣ್ಣೆಯಿಂದ ಎಡಕಾಲಿಗೆ ಹೊಡೆದು ಮೂಗೇಟುಂಟು ಮಾಡಿದ್ದು ಅಮರನಾಥರೆಡ್ಡಿ ಕೈಗಳಿಂದ ತಲೆಗೆ ಗುದ್ದಿ ಮೂಗೇಟುಂಟು ಮಾಡಿರುತ್ತಾನೆ  ಆಗ ನನ್ನ ಮಗ ವಿನಯ್ ಕುಮಾರ್ ಅಡ್ಡಬರಲಾಗಿ ಆತನಿಗೆ ನಂಜುಂಡಪ್ಪ ದೊಣ್ಣೆಯಿಂದ ಎಡಕೈಗೆ ಹೊಡೆದು ಮೂಗೇಟು ಉಂಟು ಮಾಡಿದ್ದು  ಮೇಲ್ಕಂಡವರ ಮೇಲೆ ಕಾನೂನು ರೀತ್ಯ ಕ್ರಮ ಜರುಗಿಸಲು ಕೋರಿ ದೂರು

 1. ಮಂಚೇನಹಳ್ಳಿ ಪೊಲೀಸ್ ಠಾಣೆ. ಮೊ.ಸಂ: 166/2019 ಕಲಂ: 15(ಎ),32(3) ಕೆ.ಇ ಆಕ್ಟ್:-

          ದಿನಾಂಕ: 16/07/2019 ರಂದು ಮದ್ಯಾಹ್ನ 3-15 ಗಂಟೆಗೆ ಪಿರ್ಯಾದಿದಾರರು ಮಾಲು, ಮಹಜರ್ ಮತ್ತು ಆರೋಪಿಯೊಂದಿಗೆ ನೀಡಿದ ದೂರಿನ ಸಾರಾಂಶವೆನೆಂದರೆ, ದಿನಾಂಕ 16/07/2019 ರಂದು ಮದ್ಯಾಹ್ನ 12-30 ಗಂಟೆಯ ಸಮಯದಲ್ಲಿನಾನು ತರಿದಾಳು ಗ್ರಾಮದ ಕಡೆ ಗಸ್ತು ಮಾಡುತ್ತಿದ್ದಾಗ ತನಗೆ ಬಂದ ಖಚಿತ ಮಾಹಿತಿ ಏನೇಂದರೆ ನಾಚಕುಂಟೆ ಗ್ರಾಮದ ಲಕ್ಷ್ಮಯ್ಯ ಬಿನ್ ಲೇಟ್ ಮರಿಯಪ್ಪ ಎಂಬುವರು ಅವರ ಗ್ರಾಮದ ಹಂದಿ ಮಾಂಸದ ಹೋಟೆಲ್ ನ  ಮುಂಭಾಗ ಯಾವುದೇ ರೀತಿಯ ಅನುಮತಿಯನ್ನು ಮತ್ತು ಪರ್ಮಿಟ್ ಪಡೆಯದೇ ಅಕ್ರಮವಾಗಿ ಸಾರ್ವಜನಿಕರಿಗೆ ಮದ್ಯವನ್ನು ಸೇವನೆ ಮಾಡಲು ಅವಕಾಶ ಮಾಡಿಕೊಟ್ಟಿರುವುದಾಗಿ ಮಾಹಿತಿ ಬಂದ್ದಿದ್ದು ದಾಳಿ ಮಾಡುವ ಸಲುವಾಗಿ ಪಂಚರೊಂದಿಗೆ ದ್ವಿ ಚಕ್ರ ವಾಹನಗಳಲ್ಲಿ ಮದ್ಯಾಹ್ನ 1-15 ಗಂಟೆಯ ಸಮಯಕ್ಕೆ ಲಕ್ಷ್ಮಯ್ಯ ರವರ ಹಂದಿಮಾಂಸದ ಹೋಟೆಲ್ ಬಳಿ ಹೋಗುವಷ್ಟರಲ್ಲಿ ಅಲ್ಲಿ ಮದ್ಯವನ್ನು ಸೇವನೆ ಮಾಡುತ್ತಿದ್ದವರು ಸಮವಸ್ತ್ರದಲ್ಲಿದ್ದ ನಮ್ಮನ್ನು ನೋಡಿ ಸ್ಥಳದಿಂದ ಓಡಿಹೋದರು ಮಾಹಿತಿಯಂತೆ ಅಲ್ಲಿದ್ದವನನ್ನು ಹಿಡಿದು ಕೊಂಡು ಅವನ ಹೆಸರು ಮತ್ತು ವಿಳಾಸ ಕೇಳಲಾಗಿ ಲಕ್ಷ್ಮಯ್ಯ ಬಿನ್ ಲೇಟ್ ಮರಿಯಪ್ಪ, 65 ವರ್ಷ, ಈಡಿಗರು, ಹೋಟಲ್ ವ್ಯಾಪಾರ, ವಾಸ ನಾಚಕುಂಟೆ ಗ್ರಾಮ, ತೊಂಡೆಬಾವಿ ಹೋಬಳಿ, ಗೌರಿಬಿದನೂರು ತಾಲ್ಲೂಕು ಎಂತ ತಿಳಿಸಿದ್ದು, ಅವನ ಬಳಿ ಒಂದು ಪ್ಲಾಸ್ಟಿಕ್ ಚೀಲವಿದ್ದು ಅದನ್ನು ತೆಗೆದು ಪರಿಶೀಲಿಸಲಾಗಿ ಅದರೊಳಗಡೆ 90 ಎಂ.ಎಲ್. ಸಾಮರ್ಥ್ಯದ HYAWARDS CHEERS WISKY ಯ 10 ಮದ್ಯದ ಟೆಟ್ರಾ ಪ್ಯಾಕೇಟ್ ಗಳು ದೊರೆತಿದ್ದು, ಮದ್ಯವನ್ನು ಇಟ್ಟುಕೊಂಡಿರುವ  ಬಗ್ಗೆ ಮತ್ತು ಸಾರ್ವಜನಿಕರಿಗೆ ಮದ್ಯವನ್ನು ಸೇವನೆ ಮಾಡಲು ಅನುವು ಮಾಡಿಕೊಟ್ಟ ಬಗ್ಗೆ ಅನುಮತಿಯನ್ನು ಕೇಳಲಾಗಿ ತನ್ನ ಬಳಿ ಯಾವುದೇ ರೀತಿಯ  ಅನುಮತಿ ಪತ್ರ ಇಲ್ಲವೆಂದು ತಿಳಿಸಿದ್ದರ ಮೇರೆಗೆ  ಮತ್ತು ಅಲ್ಲಿಯೇ ಸುತ್ತಲೂ ಖಾಲಿ ಬಿದ್ದಿದ್ದ 90 ಎಂ.ಎಲ್. ಸಾಮರ್ಥ್ಯದ HYAWARDS CHEERS WISKY ಯ 2 ಟೆಟ್ರಾ ಪ್ಯಾಕೇಟ್ ಗಳು ಮತ್ತು 3 ಪ್ಲಾಸ್ಟಿಕ್  ಕಪ್ ಗಳನ್ನು ಪಂಚನಾಮೆಯ ಮೂಲಕ  ಮದ್ಯಾಹ್ನ  1-30 ಗಂಟೆಯಿಂದ 2-30 ಗಂಟೆಯ ಸಮಯದವರೆಗೆ ಅವುಗಳನ್ನು ಪಂಚನಾಮೆಯ ಮೂಲಕ ಅಮಾನತ್ತು ಪಡಿಸಿಕೊಂಡಿರುತ್ತೆ ಸ್ಥಳದಲ್ಲಿ ದೊರೆತ ಮದ್ಯದ ಬೆಲೆ ಸುಮಾರು 303 /- ರೂಪಾಯಿಗಳು ಬೆಲೆಬಾಳದ್ದಾಗಿರುತ್ತೆ. ದೊರೆತ ಮಾಲನ್ನು ಹಾಗೂ ಸಾರ್ವಜನಿಕರಿಗೆ ಕುಡಿಯಲು ಅನುವು ಮಾಡಿಕೊಟ್ಟಿದ್ದ ಲಕ್ಷ್ಮಯ್ಯ ವರನ್ನು ವಶಕ್ಕೆ ಪಡೆದುಕೊಂಡು ಹಾಜರುಪಡಿಸುತ್ತಿದ್ದು ಮುಂದಿನ ಕ್ರಮ ಜರುಗಿಸಲು ಕೋರಿ ನೀಡಿದ ದೂರಿನ ಮೇರೆಗೆ ಪ್ರಕರಣವನ್ನು ದಾಖಲಿಸಿಕೊಂಡಿರುತ್ತದೆ.

 1. ಮಂಚೇನಹಳ್ಳಿ ಪೊಲೀಸ್ ಠಾಣೆ. ಮೊ.ಸಂ: 167/2019 ಕಲಂ: 15(ಎ),32(3) ಕೆ.ಇ ಆಕ್ಟ್:-

          ದಿನಾಂಕ: 16/07/2019 ರಂದು ಸಂಜೆ 5-30 ಗಂಟೆಗೆ ಪಿರ್ಯಾದಿದಾರರು ಮಾಲು, ಮಹಜರ್ ಮತ್ತು ಆರೋಪಿಯೊಂದಿಗೆ ನೀಡಿದ ದೂರಿನ ಸಾರಾಂಶವೆನೆಂದರೆ, ದಿನಾಂಕ 16/07/2019 ರಂದು ಮದ್ಯಾಹ್ನ 3-00 ಗಂಟೆಯ ಸಮಯದಲ್ಲಿ ತಾನು ಮತ್ತು ಪಿಸಿ-392, ಬಾಬು ರವರು ಜಿ ಮಲ್ಲಸಂದ್ರ ಗ್ರಾಮದ ಕಡೆ ಗಸ್ತು ಮಾಡುತ್ತಿದ್ದಾಗ ತನಗೆ ಬಂದ ಖಚಿತ ಮಾಹಿತಿ ಏನೇಂದರೆ ರೆಡ್ಡಿದ್ಯಾವರಹಳ್ಳಿ ಗ್ರಾಮದ ಈರಪ್ಪ ಬಿನ್ ಲೇಟ್ ಗಂಗಪ್ಪ ಎಂಬುವರು ಅವರ ಚಿಲ್ಲರೆ ಅಂಗಡಿಯ  ಮುಂಭಾಗ ಯಾವುದೇ ರೀತಿಯ ಅನುಮತಿಯನ್ನು ಮತ್ತು ಪರ್ಮಿಟ್ ಪಡೆಯದೇ ಅಕ್ರಮವಾಗಿ ಸಾರ್ವಜನಿಕರಿಗೆ ಮದ್ಯವನ್ನು ಸೇವನೆ ಮಾಡಲು ಅವಕಾಶ ಮಾಡಿಕೊಟ್ಟಿರುವುದಾಗಿ ಮಾಹಿತಿ ಬಂದ್ದಿದ್ದು ದಾಳಿ ಮಾಡುವ ಸಲುವಾಗಿ ಜೋತೆಯಲ್ಲಿದ್ದ ಪಿಸಿ-392, ಬಾಬು ಹಾಗೂ ಪಂಚರೊಂದಿಗೆ ದ್ವಿ ಚಕ್ರ ವಾಹನಗಳಲ್ಲಿ ಮದ್ಯಾಹ್ನ 3-30 ಗಂಟೆಯ ಸಮಯಕ್ಕೆ ಈರಪ್ಪ ರವರ ಚಿಲ್ಲರೆ ಅಂಗಡಿಯ ಬಳಿ ಹೋಗುವಷ್ಟರಲ್ಲಿ ಅಲ್ಲಿ ಮದ್ಯವನ್ನು ಸೇವನೆ ಮಾಡುತ್ತಿದ್ದವರು ಸಮವಸ್ತ್ರದಲ್ಲಿದ್ದ ನಮ್ಮನ್ನು ನೋಡಿ ಸ್ಥಳದಿಂದ ಓಡಿಹೋದರು ಮಾಹಿತಿಯಂತೆ ಅಲ್ಲಿದ್ದವನನ್ನು ಹಿಡಿದು ಕೊಂಡು ಅವನ ಹೆಸರು ಮತ್ತು ವಿಳಾಸ ಕೇಳಲಾಗಿ ಈರಪ್ಪ ಬಿನ್ ಲೇಟ್ ಗಂಗಪ್ಪ, 50 ವರ್ಷ, ನಾಯಕರು, ಚಿಲ್ಲರೆ ಅಂಗಡಿ ವ್ಯಾಪಾರ, ವಾಸ ರೆಡ್ಡಿದ್ಯಾವರಹಳ್ಳಿ ಗ್ರಾಮ, ತೊಂಡೆಬಾವಿ ಹೋಬಳಿ, ಗೌರಿಬಿದನೂರು ತಾಲ್ಲೂಕು ಎಂತ ತಿಳಿಸಿದ್ದು, ಅವನ ಬಳಿ ಒಂದು ಪ್ಲಾಸ್ಟಿಕ್ ಚೀಲವಿದ್ದು ಅದನ್ನು ತೆಗೆದು ಪರಿಶೀಲಿಸಲಾಗಿ ಅದರೊಳಗಡೆ 90 ಎಂ.ಎಲ್. ಸಾಮರ್ಥ್ಯದ HYAWARDS CHEERS WISKY ಯ 15 ಮದ್ಯದ ಟೆಟ್ರಾ ಪ್ಯಾಕೇಟ್ ಗಳು ದೊರೆತಿದ್ದು, ಮದ್ಯವನ್ನು ಇಟ್ಟುಕೊಂಡಿರುವ  ಬಗ್ಗೆ ಮತ್ತು ಸಾರ್ವಜನಿಕರಿಗೆ ಮದ್ಯವನ್ನು ಸೇವನೆ ಮಾಡಲು ಅನುವು ಮಾಡಿಕೊಟ್ಟ ಬಗ್ಗೆ ಅನುಮತಿಯನ್ನು ಕೇಳಲಾಗಿ ತನ್ನ ಬಳಿ ಯಾವುದೇ ರೀತಿಯ  ಅನುಮತಿ ಪತ್ರ ಇಲ್ಲವೆಂದು ತಿಳಿಸಿದ್ದರ ಮೇರೆಗೆ  ಮತ್ತು ಅಲ್ಲಿಯೇ ಸುತ್ತಲೂ ಖಾಲಿ ಬಿದ್ದಿದ್ದ 90 ಎಂ.ಎಲ್. ಸಾಮರ್ಥ್ಯದ HYAWARDS CHEERS WISKY ಯ 3 ಟೆಟ್ರಾ ಪ್ಯಾಕೇಟ್ ಗಳು ಮತ್ತು 2 ಪ್ಲಾಸ್ಟಿಕ್  ಕಪ್ ಗಳನ್ನು ಪಂಚನಾಮೆಯ ಮೂಲಕ  ಮದ್ಯಾಹ್ನ  3-45 ಗಂಟೆಯಿಂದ ಸಂಜೆ 4-45 ಗಂಟೆಯ ಸಮಯದವರೆಗೆ ಅವುಗಳನ್ನು ಪಂಚನಾಮೆಯ ಮೂಲಕ ಅಮಾನತ್ತು ಪಡಿಸಿಕೊಂಡಿರುತ್ತೆ ಸ್ಥಳದಲ್ಲಿ ದೊರೆತ ಮದ್ಯದ ಬೆಲೆ ಸುಮಾರು 454 /- ರೂಪಾಯಿಗಳು ಬೆಲೆಬಾಳದ್ದಾಗಿರುತ್ತೆ. ದೊರೆತ ಮಾಲನ್ನು ಹಾಗೂ ಸಾರ್ವಜನಿಕರಿಗೆ ಕುಡಿಯಲು ಅನುವು ಮಾಡಿಕೊಟ್ಟಿದ್ದ ಈರಪ್ಪ ವರನ್ನು ವಶಕ್ಕೆ ಪಡೆದುಕೊಂಡು ಹಾಜರುಪಡಿಸುತ್ತಿದ್ದು, ಇವನ ಮೇಲೆ ಕಾನೂನಿನ ರೀತ್ಯಾ ಕ್ರಮ ಜರುಗಿಸಬೇಕೆಂದು ಕೋರಿ ನೀಡಿದ ದೂರಿನ ಮೇರೆಗೆ ಪ್ರಕರಣವನ್ನು ದಾಖಲಿಸಿಕೊಂಡಿರುತ್ತದೆ.

 1. ಮಂಚೇನಹಳ್ಳಿ ಪೊಲೀಸ್ ಠಾಣೆ. ಮೊ.ಸಂ: 168/2019 ಕಲಂ: 323-425-436-441-504-506 ರೆ/ವಿ 34 ಐ.ಪಿ.ಸಿ:-

          ದಿನಾಂಕ: 16/07/2019 ರಂದು ರಾತ್ರಿ 8-15 ಗಂಟೆಗೆ ಗೌರಿಬಿದನೂರು ಘನ ನ್ಯಾಯಾಲಯದ ಕರ್ತವ್ಯದ ಹೆಚ್.ಸಿ-137, ಮಂಜುನಾಥ್ ರವರು ನ್ಯಾಯಾಲಯದ ಪಿ.ಸಿ.ಆರ್ 08/2019 ರನ್ನು ತಂದು ಹಾಜರುಪಡಿಸಿದ್ದರ ಸಾರಾಂಶವೆನೆಂದರೆ, ದಿನಾಂಕ: 21/06/2019 ರಂದು ಪಿರ್ಯಾದಿದಾರರು ತಮ್ಮ ಗ್ರಾಮದ ನೀರಿನ ಟ್ಯಾಂಕ್ ಬಳಿ ನಿಂತಿದ್ದಾಗ ನರಸಿಂಹಪ್ಪ ರವರು ಗ್ರಾಮದ ಬೀದಿಗಳಲ್ಲಿ ಜಾತ್ರೆ ಮಾಡಬೇಕೆಂದು ಹಲಗೆ ಹೊಡೆಸಿಕೊಂಡು ಕೂಗುತ್ತಾ ಬರುತ್ತಿದ್ದು ಈ ವರ್ಷ ಜಾತ್ರೆ ಬೇಡ ಎಂದು ಗ್ರಾಮಸ್ಥರೆಲ್ಲರೂ ಸೇರಿ ಜಾತ್ರೆ ಮಾಡಿ ಜನರಿಗೆ ಕಷ್ಟ ಕೊಡುವುದು ಬೇಡ ಎಂದು ಹೇಳಿದ್ದಕ್ಕೆ ಆರೋಪಿತರು ಪಿರ್ಯಾದಿದಾರರಿಗೆ ಮತ್ತು ಗಂಗಾಧರ ರವರಿಗೆ ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ಮಾಡಿ ಬೆದರಿಕೆ ಹಾಕಿ ಮನೆಗಳನ್ನು ಸುಟ್ಟು ಹಾಕುವುದಾಗಿ ಬೆದರಿಕೆ ಹಾಕಿದ್ದು ದಿನಾಂಕ: 22/06/2019 ರಂದು ಪಿರ್ಯಾದಿದಾರರ ಮಕ್ಕಳು ಹುಲ್ಲು ತರಲು ಜಮೀನಿನ ಬಳಿ ಹೋದಾಗ ತಮ್ಮ ಜಮೀನಿನಲ್ಲಿದ್ದ ಹುಲ್ಲಿನ ಬಣವೆಗಳು ಸುಟ್ಟುಕರಕಲಾಗಿದ್ದು ಪಿರ್ಯಾದಿದಾರರು ಜಾತ್ರೆ ಮಾಡುವುದನ್ನು ವಿರೋದಿಸಿದಕ್ಕೆ ಆರೋಪಿತರು ಪಿರ್ಯಾದಿದಾರರ ಹುಲ್ಲಿನ ಬಣವೆಗಳನ್ನು ಸುಟ್ಟುಹಾಕಿರುವುದಾಗಿ ದೂರಿನ ಮೇರೆಗೆ ಪ್ರಕರಣವನ್ನು ದಾಖಲಿಸಿಕೊಂಡಿರುತ್ತದೆ.

 1. ಪಾತಪಾಳ್ಯ ಪೊಲೀಸ್ ಠಾಣೆ. ಮೊ.ಸಂ: 56/2019 ಕಲಂ: 87 ಕೆ.ಪಿ. ಆಕ್ಟ್:-

          ದಿನಾಂಕ 15-07-2019 ರಂದು ಸಂಜೆ 6-00 ಗಂಟೆಗೆ ಪಿಎಸ್ಐ ಪಾತಪಾಳ್ಯ ಪೊಲೀಸ್ ಠಾಣೆರವರು  ಠಾಣೆಗೆ ಬಂದು ನೀಡಿದ ವರದಿಯ ಸಾರಾಂಶವೇನೆಂದರೆ ದಿನಾಂಕ: 15/07/2019 ರಂದು ಸಂಜೆ 4-00 ಗಂಟೆಗೆ ಪಾತಪಾಳ್ಯ ಪೊಲೀಸ್ ಠಾಣಾ ಸರಹದ್ದು ರೇಚನಾಯಕನ ಹಳ್ಳಿ ಗ್ರಾಮದ ಸರ್ಕಾರಿ ಕೆರೆಯಲ್ಲಿ  ಜಾಲಿ ಮರದ  ಕೆಳಗೆ ಸಾರ್ವಜನಿಕ ಸ್ಥಳದಲ್ಲಿ ಯಾರೋ ಆಸಾಮಿಗಳು ಹಣವನ್ನು ಪಣವನ್ನಾಗಿಟ್ಟುಕೊಂಡು ಆಕ್ರಮವಾಗಿ ಅಂದರ್ ಬಾಹರ್ ಅದೃಷ್ಟದ ಇಸ್ಪೀಟ್ ಜೂಜಾಟ ಆಡುತ್ತಿರುವುದಾಗಿ ಬಂದ ಖಚಿತ ವರ್ತಮಾನದ ಮೇರೆಗೆ  ಸಿಬ್ಬಂದಿಯವರು ಹಾಗೂ ಪಂಚರೊಂದಿಗೆ ಸರ್ಕಾರಿ ಜೀಪಿನ ಸಂಖ್ಯೆ ಕೆಎ-40-ಜಿ-1777 ವಾಹನದಲ್ಲಿ  ರೇಚನಾಯಕನಹಳ್ಳಿ ಗ್ರಾಮದ ಕೆರೆಯ ಬಳಿ ಜೀಪನ್ನು ನಿಲ್ಲಿಸಿ ಮರೆಯಲ್ಲಿ ನಿಂತು ನೋಡಲಾಗಿ ಹುಣಸೇ ಮರದ ಕೆಳಗೆ ಯಾರೋ ಆಸಾಮಿಗಳು 100 ರೂ ಅಂದರ್, 100 ರೂ ಬಾಹರ್ ಎಂದು ಕೂಗಿಕೊಂಡು ಆಕ್ರಮವಾಗಿ ಅದೃಷ್ಟದ ಇಸ್ಪೀಟ್ ಜೂಜಾಟ ಆಡುತ್ತಿದ್ದವರ ಮೇಲೆ ನಾವು ದಾಳಿ ಮಾಡಲು 4 ದಿಕ್ಕುಗಳು ಸುತ್ತುವರೆದು ಜೂಜಾಟ ಆಡುತ್ತಿದ್ದವರನ್ನು ಎಲ್ಲಿಯೂ ಕದಲಬೇಡಿ ಎಂದು ಹೆಚ್ಚರಿಕೆ ನೀಡಿ ಸ್ಥಳದಲ್ಲಿ ಸಿಕ್ಕವರನ್ನು ಹಿಡಿದುಕೊಂಡು ಸದರಿ ಆಸಾಮಿಗಳ ಹೆಸರು ಮತ್ತು ವಿಳಾಸ ಕೇಳಲಾಗಿ 1) ಶಂಕರ ಬಿನ್ ಲೇಟ್ ಅದೆಪ್ಪ, 45  ವರ್ಷ, ವಕ್ಕಲಿಗರು, ಜಿರಾಯ್ತಿ ಬೈರೇಗೊಲ್ಲಪಲ್ಲಿ ಗ್ರಾಮ, ಭಾಗೇಪಲ್ಲಿ ತಾಲ್ಲೂಕು 2) ಮುಸ್ತಾಪ ಬಿನ್ ಅನ್ವಾರ್ ಖಾನ್, 38 ವರ್ಷ, ಮುಸ್ಲಿಂ ಜನಾಂಗ, ನಗರ್ಲು ಗ್ರಾಮ, ಭಾಗೇಪಲ್ಲಿ ತಾಲ್ಲೂಕು 3) ಗಂಗುಲಪ್ಪ ಬಿನ್ ಚಿನ್ನ ಬಿಡ್ಡಪ್ಪ 56 ವರ್ಷ, ಭೋವಿ ಜನಾಂಗ, ಜಿರಾಯ್ತಿ, ಕೋಳ್ಳವಾರಪಲ್ಲಿ ಗ್ರಾಮ, ಭಾಗೇಪಲ್ಲಿ ತಾಲ್ಲೂಕು  4) ನಾರಾಯಣಪ್ಪ ಬಿನ್ ವೆಂಕಟರಾಯಪ್ಪ, 45 ವರ್ಷ, ಆದಿ ಕರ್ನಾಟಕ, ಜಿರಾಯ್ತೀ, ರೇಚನಾಯಕನ ಹಳ್ಳಿ ಗ್ರಾಮ, ಬಾಗೇಪಲ್ಲಿ ತಾಲ್ಲೂಕು 5) ರಘು  ಬಿನ್ ರಂಗಪ್ಪ, 40 ವರ್ಷ, ಭೋವಿ ಜನಾಂಗ,ಜಿರಾಯ್ತಿ ಯರ್ರಪೆಂಟ್ಲ  ಗ್ರಾಮ, ಬಾಗೇಪಲ್ಲಿ ತಾಲ್ಲೂಕು.  ಎಂದು ತಿಳಿಸಿದರು., ನಂತರ ಸ್ಥಳದಲ್ಲಿದ್ದ ಮೇಲ್ಕಂಡ 01 ರಿಂದ 05 ರವರೆಗಿನ ಆಸಾಮಿಗಳನ್ನು ವಶಕ್ಕೆ ಪಡೆದು ಪಣಕ್ಕಿಟ್ಟಿದ್ದ 4260/- ರೂ ನಗದು ಹಣವನ್ನು ಒಂದು ಹಳೆಯ ಪ್ಲಾಸ್ಟಿಕ್ ಚೀಲ, ಮತ್ತು 52 ಇಸ್ಪೀಟ್ ಎಲೆಗಳನ್ನು ಪಂಚರ ಸಮಕ್ಷಮ ಪಂಚನಾಮೆಯ ಮೂಲಕ ಆಮಾನತ್ತು ಪಡಿಸಿಕೊಂಡು ಆರೋಪಿಗಳು ಮತ್ತು ಅಮಾನತ್ತು ಪಡಿಸಿದ ಮಾಲುಗಳೊಂದಿಗೆ ಠಾಣೆಗೆ ವಾಪ್ಪಸ್ಸಾಗಿ ಮೇಲ್ಕಂಡವರ ವಿರುದ್ದ ಮುಂದಿನ ಕ್ರಮ ಜರುಗಿಸಲು ಸೂಚಿಸಿದ ಮೇರೆಗೆ ಠಾಣಾ ಎನ್.ಸಿ.ಆರ್ 36/2019 ರೀತ್ಯಾ ದಾಖಲಿಸಿಕೊಂಡಿರುತ್ತೆ. ನಂತರ ಇದು ಅಸಂಜ್ಞೆಯ ಪ್ರಕರಣವಾಗಿದ್ದರಿಂದ ಘನ ನ್ಯಾಯಾಲಯದಿಂದ ಸಂಜ್ಞೆಯ ಪ್ರಕರಣವಾಗಿ ದಾಖಲಿಸಲು ಅನುಮತಿಯನ್ನು ಪಡೆದು ಠಾಣಾ ಮೊ. ಸಂ. 56/2019 ಕಲಂ 87 ಕೆ.ಪಿ.ಆಕ್ಟ್ ರೀತ್ಯಾ ಪ್ರಕರಣ ದಾಖಲಿಸಿಕೊಂಡಿರುತ್ತೆ.