ದಿನಾಂಕ :17/05/2020 ರ ಅಪರಾಧ ಪ್ರಕರಣಗಳು

  1. ಬಾಗೇಪಲ್ಲಿ ಪೊಲೀಸ್ ಠಾಣೆ ಮೊ.ಸಂ.99/2020 ಕಲಂ. 323,324,504,506 ರೆ/ವಿ 34ಐ.ಪಿ.ಸಿ :-

          ದಿ: 16-05-2020 ರಂದು ಸಂಜೆ 4:00 ಗಂಟೆಗೆ ಬಾಗೇಪಲ್ಲಿ ಸರ್ಕಾರಿ ಆಸ್ಪತ್ರೆಯಿಂದ ಬಂದ ಮೆಮೋ ಪಡೆದು ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳು ವೇಂಕಟೇಶ ಬಿನ್ ಲೇಟ್ ನರಸಿಂಹಪ್ಪ 35 ವರ್ಷ, ಭೋವಿ ಜನಾಂಗ, ಜಿರಾಯ್ತಿ, ರಾಮನೊಡ್ಡಂಪಲ್ಲಿ ಗ್ರಾಮ, ಗೂಳೂರು ಹೋಬಳಿ, ಬಾಗೇಪಲ್ಲಿ ತಾಲ್ಲೂಕು ರವರ ಹೇಳಿಕೆ ಪಡೆದುಕೊಂಡಿದ್ದರ ಸಾರಾಂಶ – ನಮ್ಮ ತಾಯಿ ಶಿವಮ್ಮ ರವರಿಗೆ ಎಸ್.ಸಿ/ಎಸ್.ಟಿ ಕಾರ್ಪೊರೇಷನ್ ನಿಂದ ಪೆಸಲಪರ್ತಿ ಸರ್ವೆ ನಂಬರ್: 222/2 ರಲ್ಲಿ 2 ಎಕರೆ ಜಮೀನು ಮಂಜೂರಾಗಿರುತ್ತದೆ.  ಈ ಜಮೀನು 2004 ನೇ ಇಸವಿಯಲ್ಲಿ ಮಂಜೂರಾಗಿರುತ್ತದೆ.  ಈಗ್ಗೆ ಸುಮಾರು ನಾಲ್ಕು ವರ್ಷಗಳ ಹಿಂದೆ ನನ್ನ ತಾಯಿಯ ತಂಗಿ ನರಸಮ್ಮ ರವರ ಗಂಡ  ಆಂಜಿನಪ್ಪ ರವರು ಇದೇ ಸರ್ವೆ ನಂಬರಿನ ಸಬ್ 1 ರಲ್ಲಿ 16 ಗುಂಟೆ ಜಮೀನನ್ನು ನೇಸೆ ನಂಜುಂಡಪ್ಪ ರವರಿಂದ ಕ್ರಯಕ್ಕೆ ಪಡೆದುಕೊಂಡಿರುತ್ತಾರೆ.  ನಮ್ಮ ತಾಯಿಗೆ ಮಂಜೂರಾಗಿರುವ ಸರ್ವೆ ನಂಬರ್ 222/2 ರ 2 ಎಕರೆ ಜಮೀನಿನಲ್ಲಿ ಖರಾಬು 7 ಕುಂಟೆ ಇತ್ತು.  ಅದನ್ನು ಸಹ ನಮಗೆ ಬರಬೇಕೆಂದು ನಮ್ಮ ಚಿಕ್ಕಪ್ಪ ಆಂಜಿನಪ್ಪ ರವರು ನನಗೆ ಬರಬೇಕೆಂದು ಆಗಾಗ ನನ್ನ ಮೇಲೆ ಗಲಾಟೆಗೆ ಬರುತ್ತಿದ್ದನು.  ಆದ್ದರಿಂದ ಖರಾಬು ಜಮೀನಿನಲ್ಲಿಯೂ 3 ಗುಂಟೆಯನ್ನು ನಮ್ಮ ಚಿಕ್ಕಪ್ಪನಿಗೆ ಬಿಟ್ಟುಬಿಟ್ಟಿರುತ್ತೇನೆ.   ಈಗ್ಗೆ ವಾರದ ಹಿಂದೆ ನಮ್ಮ ಜಮೀನನಿನಲ್ಲಿ ಆಂಜಿನಪ್ಪ ಸ್ವಲ್ಪ ಭಾಗ ಉಳುಮೆ ಮಾಡಿದ್ದರು.  ಅದಕ್ಕೆ ನಾನು ನಮ್ಮ ಜಮೀನಿನಲ್ಲಿ ನೀವು ಉಳುಮೆ ಮಾಡಬೇಡಿ ಎಂದು ಹೇಳಿದ್ದಕ್ಕೆ ದಿ:16-05-2020 ರಂದು ಬೆಳಗ್ಗೆ ಸುಮಾರು 9:’00 ಗಂಟೆಯಲ್ಲಿ ನಾನು ನಮ್ಮ ಹೊಲದಲ್ಲಿ ತೊಗರಿ ಕಾಳುಗಳನ್ನು ಕೀಳುತ್ತಿದ್ದಾಗ, ನಮ್ಮ ಚಿಕ್ಕಪ್ಪ ಆಂಜಿನಪ್ಪ ಮಚ್ಚಿನಿಂದ ನನ್ನ ತಲೆಗೆ ಎರಡು ಬಾರಿ ಹೊಡೆದನು.  ನಾನು ಮೇಲಕ್ಕೆ ಏಳುತ್ತಿದ್ದಂತೆ ಆತನ ಮಗ ವೆಂಕಟಶಿವಪ್ಪ ನನ್ನನ್ನು ಹಿಡಿದುಕೊಂಡನು.  ಮತ್ತೆ ಆಂಜಿನಪ್ಪನು ಮಚ್ಚಿನಿಂದ ನನ್ನ ಎಡಕಣ್ಣಿನ ಪಕ್ಕದಲ್ಲಿ ಮಚ್ಚಿನಿಂದ ಹೊಡೆದು ರಕ್ತಗಾಯಪಡಿಸಿದನು.    ನಂತರ ವೆಂಕಟಶಿವಪ್ಪ ಕೈಗಳಿಂದ ನನ್ನ ಬೆನ್ನಿಗೆ ಹೊಡೆದನು.  ಆಂಜಿನಪ್ಪ ಲೋಫರ್ ನನ್ನ ಮಗನೆ ಇತ್ಯಾಧಿಯಾಗಿ ಅವಾಚ್ಯ ಶಬ್ದಗಳಿಂದ ಬೈದನು.  ನಂತರ ನಿನಗೆ ಬಿಡುವುದಿಲ್ಲವೆಂದು ಪ್ರಾಣ ಬೆದರಿಕೆ ಹಾಕಿದನು.  ನನಗೆ ತಲೆಯಿಂದ ರಕ್ತಬರುತ್ತಿರುವುದನ್ನು ನೋಡಿ ಮಚ್ಚನ್ನು ತಾನೆ ತೆಗೆದುಕೊಂಡು ಆಂಜಿನಪ್ಪ ಮತ್ತು ಆತನ ಮಗ ವೆಂಕಟಶಿವಪ್ಪ ಹೊರಟು ಹೋದರು.  ಆಗ ನಮ್ಮ ಹೊಲದ ಪಕ್ಕದಲ್ಲಿ ಕೆಲಸ ಮಾಡುತ್ತಿದ್ದ ರಾಜಪ್ಪ  ಅಳಿಯ ನನ್ನನ್ನು ನಮ್ಮ ಹೊಲದಿಂದ ಗ್ರಾಮಕ್ಕೆ ಕರೆದುಕೊಂಡು ಬಂದನು. ಗಾಯಗೊಂಡಿದ್ದ ನನ್ನನ್ನು ಆನಂದಕುಮಾರ್ ಮತ್ತು ಗೋಪಾಲಪ್ಪ ರವರು ಚಿಕಿತ್ಸಗಾಗಿ ಬಾಗೇಪಲ್ಲಿ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿರುತ್ತಾರೆ.   ಜಮೀನು ವಿಚಾರವಾಗಿ ನನಗೆ ಅವಾಚ್ಯ ಶಬ್ದಗಳಿಂದ ಬೈಯ್ದು ಮಚ್ಚಿನಿಂದ ಹೊಡೆದು ರಕ್ತಗಾಯಪಡಿಸಿ, ಕೈಗಳಿಂದ ಹೊಡೆದು ಬೆದರಿಕೆ ಹಾಕಿರುವ ನಮ್ಮ ಚಿಕ್ಕಪ್ಪ ಆಂಜಿನಪ್ಪ ಬಿನ್ ಲೇಟ್ ಆದೆಪ್ಪ, 55 ವರ್ಷ, ಭೋವಿ ಜನಾಂಗ, ಜಿರಾಯ್ತಿ, ಮಾಮಿಡಿಕಾಯಲಪಲ್ಲಿ ಗ್ರಾಮ, ಗೂಳೂರು ಹೋಬಳಿ, ಬಾಗೇಪಲ್ಲಿ ತಾಲ್ಲೂಕು ಮತ್ತು ಆತನ ಮಗ ವೆಂಕಟಶಿವಪ್ಪ ಬಿನ್ ಆಂಜಿನಪ್ಪ, 27 ವರ್ಷ, ಬೋವಿ ಜನಾಂಗ, ಮಾಮಿಡಿಕಾಯಲಪಲ್ಲಿ, ಬಾಗೇಪಲ್ಲಿ ತಾಲ್ಲೂಕು ರವರ ಮೇಲೆ ಕಾನೂನು ರೀತ್ಯ ಕ್ರಮ ಜರುಗಿಸಬೇಕಾಗಿ ಕೋರುತ್ತೇನೆ, ಎಂದು ದೂರು.

  1. ಬಟ್ಲಹಳ್ಳಿ ಪೊಲೀಸ್ ಠಾಣೆ ಮೊ.ಸಂ.41/2020 ಕಲಂ. 87 ಕೆ.ಪಿ ಆಕ್ಟ್ :-

          ಘನ ನ್ಯಾಯಾಲಯದಲ್ಲಿ ಬಟ್ಲಹಳ್ಳಿ ಪೊಲೀಸ್ ಠಾಣೆಯ ಪೊಲೀಸ್ ಸಬ್ಇನ್ಸ್ ಪೆಕ್ಟರ್ ಶ್ರಿ ಟಿ,ಎನ್ ಪಾಪಣ್ಣ ಆದ ನಾನು ನಿವೇದಿಸಿಕೊಳ್ಳುವುದೇನೆಂದರೆ, ದಿನಾಂಕ:16/05/2020 ರಂದು ರಾತ್ರಿ 22-45 ಗಂಟೆಯ ಸಮಯದಲ್ಲಿ ನಾನು ಮನೆಯಲ್ಲಿದ್ದಾಗ ನನಗೆ ಚಿಂತಾಮಣಿ ತಾಲ್ಲೂಕು ವೇಂಪಲ್ಲಿ ಗ್ರಾಮದ ಕೆರೆಯ ಅಂಗಳದಲ್ಲಿ ಯಾರೋ ಆಸಾಮಿಗಳು ಕಾನೂನು ಬಾಹಿರವಾಗಿ ಇಸ್ಟೀಟು ಜೂಜಾಟ ಆಡುತ್ತಿರುವುದಾಗಿ ಬಾತ್ಮಿದಾರರಿಂದ ಬಂದ ಖಚಿತ ವರ್ತಮಾನ ಮೇರೆಗೆ ನಾನು ಠಾಣಾ ಸಿಬ್ಬಂದಿಯವರಾದ ಶ್ರೀ ವೆಂಕಟರವಣಪ್ಪ  ಎ. ಎಸ್.ಐ ಹೆಚ್.ಸಿ-36 ವಿಜಯ್ ಕುಮಾರ್,  ಹೆಚ್.ಸಿ- 98 ಶ್ರೀನಿವಾಸ, ಸಿಪಿಸಿ- 561 – ರಮೇಶ್ ತಳವಾರ್. ಸಿಪಿಸಿ – 262 ಅಂಬರೀಶ್,  ಸಿಪಿಸಿ – 396 ರಮೇಶ್ ಕಂಪ್ಲಿ, ಸಿಪಿಸಿ 291- ಗಂಗಾಧರ ಹೆಚ್ ಜಿ-142 ಮಂಜುನಾಥ ಹಾಗೂ ಜೀಪ್ ಚಾಲಕ ಎಪಿಸಿ-65 ವೆಂಕಟೇಶ್    ರವರೊಂದಿಗೆ ವೇಂಪಲ್ಲಿ ಗ್ರಾಮಕ್ಕೆ ರಾತ್ರಿ 23-15 ಗಂಟೆಗೆ ಹೋಗಿ ಪಂಚಾಯ್ತಿದಾರರನ್ನು ಬರಮಾಡಿಕೊಂಡು ಅವರೊಂದಿಗೆ ವೇಂಪಲ್ಲಿ ಗ್ರಾಮದ ಹೊರ ವಲಯದಲ್ಲಿರುವ ಕೆರೆಯ ಅಂಗಳಕ್ಕೆ ಹೋಗಿ ಜೀಪ್ ನ್ನು  ನಿಲ್ಲಿಸಿ ನೋಡಲಾಗಿ ಯಾರೋ ಆಸಾಮಿಗಳು  ಅಂದರ್ 100 ರೂ ಬಾಹರ್ 200 ರೂ ಎಂದು ಕೂಗುತ್ತಾ ಹಣವನ್ನು ಪಣವಾಗಿಟ್ಟು ಕಾನೂನು ಬಾಹಿರವಾಗಿ ಅಕ್ರಮ ಜೂಜಾಟವಾಡುತ್ತಿದ್ದು ಸದರಿಯವರನ್ನು ನಾನು ಮತ್ತು ಸಿಬ್ಬಂದಿಯವರು ಸುತ್ತುವರೆದು ಎಲ್ಲಿಯೂ ಹೋಗದಂತೆ ಸೂಚಿಸಿದಾಗ  ಅಲ್ಲಿದ್ದ ಆಸಾಮಿಗಳ ಪೈಕಿ 5 ಜನ  ಆಸಾಮಿಗಳು ಓಡಿ ಹೋಗಿದ್ದು ಹಿಂಬಾಲಿಸಲಾಗಿ ಸಿಕ್ಕಿರುವುದಿಲ್ಲ. ಉಳಿದ 10 ಜನರನ್ನು  ವಶಕ್ಕೆ ಪಡೆದು ಅವರುಗಳ  ಹೆಸರು ಮತ್ತು ವಿಳಾಸ ಕೇಳಲಾಗಿ ) 1)ವಿಜಯ್ರಾಜ್  ಜಿ ಎನ್  ಬಿನ್ ಲೇಟ್ ನರಸಿಂಹಪ್ಪ  30 ವರ್ಷ, ನಾಯಕ ಜನಾಂಗ, ಪೋಟೋ ಗ್ರಾಫ್ ಕೆಲಸ, ವಾಸ: ಗುಟ್ಟೂರು ಗ್ರಾಮ, ಮಿಂಡಗಲ್ ಪಂಚಾಯ್ತಿ, ಚಿಂತಾಮಣಿ ತಾಲ್ಲೂಕು. ಮೊ ನಂ:9972341168. 2) ರವಿ  ಬಿನ್ ಬೈಯಾರೆಡ್ಡಿ  30 ವರ್ಷ, ವಕ್ಕಲಿಗರು , ಬಾಲಾಜಿ ಬಸ್ ಚಾಲಕ ವಾಸ: ಕೊತ್ತುಡ್ಯ ಗ್ರಾಮ, ಯಗವಕೋಟೆ  ಹತ್ತಿರ , ಚಿಂತಾಮಣಿ ತಾಲ್ಲೂಕು ಮೊ 9611512611 3).ಮಧು  ಬಿನ್ ಶ್ರೀನಿವಾಸರೆಡ್ಡಿ  35 ವರ್ಷ, ವಕ್ಕಲಿಗರು, ದಿ ಪ್ರೆಸಿಡೆಂಟ್ ಸ್ಟಾರ್ ಹೋಟೆಲ್  ಜಯನಗರ 3 ನೇ ಬ್ಲಾಕ್  ಬೆಂಗಳೂರು. ನಲ್ಲಿ ಮ್ಯಾನೇಜರ್ ಕೆಲಸ, ವಾಸ: ಗುಟ್ಟೂರು ಗ್ರಾಮ, ಚಿಂತಾಮಣಿ ತಾಲ್ಲೂಕು, ಮೊ  ನಂ:9535925243  4.) ಬಾಬು ಜಿ.ಆರ್  ಬಿನ್ ರಾಮಚಂದ್ರಪ್ಪ  33 ವರ್ಷ, ವಕ್ಕಲಿಗರು, ವ್ಯವಸಾಯ  ವಾಸ: ಗುಟ್ಟೂರು  ಗ್ರಾಮ, ಮಿಂಡಗಲ್ ಪಂಚಾಯ್ತಿ, ಚಿಂತಾಮಣಿ ತಾಲ್ಲೂಕು, ಮೊ ನಂ: 8197507383 5) ಸಿ ರಫೀ  ಬಿನ್ ಲೇಟ್ ಬಾಬುಸಾಬ್  54 ವರ್ಷ, ಮುಸ್ಲಿಂರು , ಹಾಸಿಗೆ ಹೊಲಿೆಯುವ ಕೆಲಸ  ವಾಸ: ಚೌಡರೆಡ್ಡಿ ಪಾಳ್ಯ ಚಿಂತಾಮಣಿ ನಗರ, ಮೊ ನಂ: 7619346278.  6.)  ಗಣೇಶ್  ಬಿನ್ ರಂಗಪ್ಪ  24 ವರ್ಷ, ನಾಯಕರು,  ಕಾರು ಚಾಲಕ  ವಾಸ: ಕೊತ್ತುಡ್ಯ  ಗ್ರಾಮ, ಯಗವಕೋಟೆ ಹತ್ತಿರ, ಚಿಂತಾಮಣಿ ತಾಲ್ಲೂಕು. ಮೊ  ನಂ: 9686122848 7) ಸುಬ್ರಮಣಿ  ಬಿನ್ ಶ್ರೀನಿವಾಸಪ್ಪ  30 ವರ್ಷ, ನಾಯಕರು, ವ್ಯವಸಾಯ, ವಾಸ: ದಿನ್ನಮಿಂದಹಳ್ಳಿ ಗ್ರಾಮ, ಯಗವಕೋಟೆ ಗ್ರಾಮ ಪಂಚಾಯ್ತಿ, ಚಿಂತಾಮಣಿ ತಾಲ್ಲೂಕು ಮೊ ನಂ: 8197913315 8) ವೆಂಕಟೇಶ್ ಬಿನ್ ಲೇಟ್ ಚೌಡಪ್ಪ  46 ವರ್ಷ ವ್ಯವಸಾಯ  ಆದಿದ್ರಾವಿಡ  ವಾಸ:  ದಿಗವ ಮಿಂಡಿಗಲ್ ಚಿಂತಾಮಣಿ ತಾಲ್ಲೂಕು. ಮೊ ನಂ: 8494922490 9) ಪಾಪರೆಡ್ಡಿ ಬಿನ್ ಲೇಟ್ ವೇಮನಾರಾಯಣ 42 ವರ್ಷ ವಕ್ಕಲಿಗರು ವ್ಯವಸಾಯ ವಾಸ: ಗುಟ್ಟೂರು ಗ್ರಾಮ ಮಿಂಡಗಲ್ ಪಂಚಾಯ್ತಿ, ಚಿಂತಾಮಣಿ ತಾಲ್ಲೂಕು. ಮೊ ನಂ:: 7022775906 10) ಚೌಡರೆಡ್ಡಿ ಬಿನ್ ವೆಂಕಟೇಶಪ್ಪ  40 ವರ್ಷ ವಕ್ಕಲಿಗರು, ವ್ಯವಸಾಯ ವಾಸ:  ಯಂಡಪಲ್ಲಿ ಗ್ರಾಮ, ಮಿಂಡಗಲ್ ಪಂಚಾಯ್ತಿ,   ಚಿಂತಾಮಣಿ ತಾಲ್ಲೂಕು  ಮೊ ನಂ: 9353181886 ಓಡಿ ಹೋದ ಆಸಾಮಿಗಳ ಹೆಸರು ಮತ್ತು ವಿಳಾಸ ತಿಳಿಯಲಾಗಿ  11) ಶಂಕರ @ ಗುಡ್ಡಿ ನರಸಪ್ಪ ಬಿನ್ ಲೇಟ್ ನಾರಾಯಣಪ್ಪ, 40 ವರ್ಷ, ನಾಯಕರು, ವಾಸ: ವೇಂಪಲ್ಲಿ  ಗ್ರಾಮ, ಚಿಂತಾಮಣಿ ತಾಲ್ಲೂಕು, 12) ಕಿಟ್ಟ, 50 ವರ್ಷ, ವಾಟರ್ ಮ್ಯಾನ್, ಆದಿಕನರ್ಾಟಕ , ವಾಸ: ಕೊತ್ತುಡ್ಯ ಗ್ರಾಮ ಚಿಂತಾಮಣಿ ತಾಲ್ಲೂಕು.  13) ಸದಾಶಿವಪ್ಪ ಬಿನ್ ಸುಬ್ಬರೆಡ್ಡಿ,50 ವರ್ಷ,  ವಾಸ: ವೇಂಪಲ್ಲಿ ಗ್ರಾಮ, ಚಿಂತಾಮಣಿ ತಾಲ್ಲೂಕು 14) ರಾಮಚಂದ್ರಪ್ಪ ವಾಸ: ಕಟಕಪಲ್ಲಿ ಗ್ರಾಮ,ಕೆಂಚಾರ್ಲಹಳ್ಳಿ ಹತ್ತಿರ, ಚಿಂತಾಮಣಿ ತಾಲ್ಲೂಕು. 15) ಕ್ರಿಷ್ಣಪ್ಪ 50 ವರ್ಷ, ಆದಿ ಕನರ್ಾಟಕ, ಮರದ ವ್ಯಾಪಾರಿ, ವಾಸ: ದಿಗವಕೋಟೆ ಗ್ರಾಮ, ಚಿಂತಾಮಣಿ ತಾಲ್ಲೂಕು. ಎಂದು ತಿಳಿಸಿರುತ್ತಾರೆ. ನಂತರ ಸ್ಥಳದಲ್ಲಿ ಪರಿಶೀಲಿಸಲಾಗಿ ಸ್ಥಳದಲ್ಲಿ ಒಂದು ಕಪ್ಪು ಬಣ್ಣದ ಪ್ಲಾಸ್ಟಿಕ್ ಪೇಪರ್  ನೆಲದಲ್ಲಿ ಹಾಸಿದ್ದು, ಸದರಿ ಕಪ್ಪು ಬಣ್ಣದ ಪ್ಲಾಸ್ಟಿಕ್ ಪೇಪರ್ ಮೇಲೆ ಅಂದರ್ ಬಾಹರ್ ಜೂಜಾಟವಾಡಲು ಪಣವಾಗಿಟ್ಟಿದ್ದ ಹಣ, ಮತ್ತು ಇಸ್ಟೀಟು ಎಲೆ ಇರುತ್ತೆ.  ಪಂಚರ ಸಮಕ್ಷಮ ಇವುಗಳನ್ನು ಪರಿಶೀಲಿಸಲಾಗಿ ಒಟ್ಟು 52 ಇಸ್ಟೀಟ್ ಎಲೆಗಳಿದ್ದು, ನಗದು ಹಣ ಒಟ್ಟು 29.200/- ರೂಗಳಿರುತ್ತೆ. ಆಸಾಮಿಗಳು ಅಂದರ್ ಬಾಹರ್ ಜೂಜಾಟವಾಡಲು ತಂದಿದ್ದ ದ್ವಿಚಕ್ರವಾಹನಗಳನ್ನು ಪರಿಶೀಲಿಸಿ ನೋಡಲಾಗಿ 1) KA40X7326 TVS STAR CITY  BLAK RED VALUE 50.000/- 2) KA- 07 Q-7139 TVS STAR CITY RED COLUR VALUE 20.000/- 3) KA 07 E – 6171 CD 100 SS RED COLOUR VALUE 15.000/- 4) KA 40 K 2960 TVS XL  SUPER HEAVY DUTY VALUE 10.000/- 5)  KA 40Y 6277ZEST 110 SCOOTY RED COLOUR VALUE 20.000/-  6) KA 53 HD 8699 LIVO HONDA SILVER GREY 50.000/- 7) KA 03 AC 4379  TOYOTA ETIOS SILVER GREY CAR VALUE 3.00.000 /- ರೂಗಳ ಬೆಲೆ ಬಾಳುವುದಾಗಿರುತ್ತೆ. ಒಟ್ಟು 6 ವಿವಿಧ ಕಂಪನಿಯ ದ್ವಿಚಕ್ರವಾಹನಗಳು ಹಾಗೂ ಒಂದು ಟೊಯೊಟಾ ಇಟಿಯಾಸ್ ಕಂಪನಿಯ ಕಾರು ಇರುತ್ತೆ. ಇಸ್ಪೀಟ್ ಜೂಜಾಟ ಆಡುತ್ತಿದ್ದ 10 ಆಸಾಮಿಗಳನ್ನು, ಅವರು ಆಟಕ್ಕೆ ಪಣವಾಗಿಟ್ಟಿದ್ದ, 29.200/-  ರೂಗಳ ನಗದು ಹಣವನ್ನು, ಒಂದು ಕಪ್ಪು ಬಣ್ಣದ ಪ್ಲಾಸ್ಟಿಕ್ ಪೇಪರ್ ಹಾಗೂ 52 ಇಸ್ಟೀಟ್ ಎಲೆಗಳನ್ನು ಮತ್ತು 6 ವಿವಿಧ ಕಂಪನಿಯ ದ್ವಿಚಕ್ರವಾಹನಗಳನ್ನು ಮತ್ತು 1 ಕಾರನ್ನು ಈ ಕೇಸಿನ ಮುಂದಿನ ಕ್ರಮಕ್ಕಾಗಿ ಸ್ಥಳದಲ್ಲಿಯೇ ದಿನಾಂಕ:16/05/2020 ರಂದು ರಾತ್ರಿ 23-30 ಗಂಟೆಯಿಂದ ದಿನಾಂಕ:17/05/2020 ರಂದು 01-00 ಗಂಟೆಯವರೆಗೆ ಪಂಚರ ಸಮಕ್ಷಮ ಟಾರ್ಚ್ ಗಳ ಬೆಳಕಿನಲ್ಲಿ ಪಂಚನಾಮೆ ಕ್ರಮ ಜರುಗಿಸಿ ಅಮಾನತ್ತುಪಡಿಸಿಕೊಂಡು, ಆರೋಪಿಗಳು ಮತ್ತು ಮಾಲಿನೊಂದಿಗೆ ಠಾಣೆಗೆ ಹಾಜರಾಗಿ ರಾತ್ರಿ 2-15 ಗಂಟೆಗೆ ಸ್ವತಃ ಠಾಣೆಯ ಎನ್ ಸಿ ಆರ್ ನಂ: 93/2020 ರಂತೆ ದಾಖಲಿಸಿಕೊಂಡಿರುತ್ತೆ.

ನಂತರ ದಿನಾಂಕ:17/5/2020ರಂದು ಬೆಳಿಗ್ಗೆ 08-30 ಗಂಟೆಗೆ ಠಾಣೆಯ ಹೆಚ್ ಸಿ 107 ಮುಸ್ತಪ ರವರು ಠಾಣೆಯ ಎನ್ ಸಿ ಆರ್ ನಂ:93/2020 ರಲ್ಲಿ ಆರೋಪಿಗಳ ಮೇಲೆ ಕ್ರಿಮಿನಲ್ ಪ್ರಕರಣ ದಾಖಲು ಮಾಡಲು ಘನ ನ್ಯಾಯಾಲಯದ ಅನುಮತಿ ಪಡೆದುಕೊಂಡು ಬಂದು ಹಾಜರುಪಡಿಸಿದ್ದನ್ನು ಪಡೆದು ಠಾಣೆಯ ಮೊ,ಸಂಖ್ಯೆ:41/2020 ಕಲಂ:87 ಕೆ ಪಿ ಆಕ್ಟ್ ರೀತ್ಯಾ  ಸ್ವತಃ ಪ್ರಕರಣ ದಾಖಲಿಸಿರುತ್ತೆ.

  1. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.59/2020 ಕಲಂ. 279, 337 ಐ.ಪಿ.ಸಿ :-

          ದಿನಾಂಕ: 17/05/2020 ರಂದು ಮದ್ಯಾಹ್ನ 3-00 ಗಂಟೆ ಸಮಯದಲ್ಲಿ ಪಿರ್ಯಾದುದಾರರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ ದಿನಾಂಕ: 14/05/2020 ರಂದು ಸಂಜೆ ಸುಮಾರು 5-00 ಗಂಟೆ ಸಮಯದಲ್ಲಿ ನನ್ನ ಮಗ ಭರತ್ ನಾನು ನನ್ನ ಸ್ನೇಹಿತ ರಘು ಬಿನ್ ರಾಜಣ್ಣ, 22 ವರ್ಷ ಇಬ್ಬರೂ ಬಾಗೇಪಲ್ಲಿಯಲ್ಲಿರುವ ನನ್ನ ಸ್ನೇಹಿತನ ಹುಟ್ಟುಹಬ್ಬಕ್ಕೆ ಹೋಗಿ ಬರುತ್ತೇನೆ ಎಂದು ಹೇಳಿ ಅವನ KA-40, EC-2714 BAJAJ PULSAR ದ್ವಿಚಕ್ರ ವಾಹನದಲ್ಲಿ ಹೋದನು. ಮದ್ಯರಾತ್ರಿ ಅಂದರೆ ದಿನಾಂಕ: 15/05/2020 ರಂದು ಬೆಳಗಿನ ಜಾವ ಸುಮಾರು 4-00 ಗಂಟೆ ಸಮಯದಲ್ಲಿ ಚಿಕ್ಕಬಳ್ಳಾಪುರದಲ್ಲಿರುವ ನಮ್ಮ ಪರಿಚಯಸ್ಥರಾದ ಅಜಿತ್ ಬಿನ್ ಚೌಡಾರೆಡ್ಡಿ ರವರು ನನಗೆ ಪೋನ್ ಮಾಡಿ ಚಿಕ್ಕಬಳ್ಳಾಪುರ ತಾಲ್ಲೂಕು ಹಾರೋಬಂಡೆ ಬಳಿ ಚಿಕ್ಕಬಳ್ಳಾಪುರ-ಬಾಗೇಪಲ್ಲಿ ರಸ್ತೆಯಲ್ಲಿ ನಿಮ್ಮ ಮಗ ಭರತ್ ಮತ್ತು ಆತನ ಸ್ನೇಹಿತ ರಘುಗೆ ಅಪಘಾತವಾಗಿದ್ದು, ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯಲ್ಲಿರುವುದಾಗಿ ತಕ್ಷಣ ಬರುವಂತೆ ತಿಳಿಸಿದರು. ಅದರಂತೆ ನಾನು ನನ್ನ ಗಂಡ ಗಂಗಾಧರಪ್ಪ ಇಬ್ಬರೂ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಗೆ ಬಂದು ನೋಡಲಾಗಿ ನನ್ನ ಮಗ ಭರತ್ ಗೆ ಬಲಕಾಲಿಗೆ, ಬಲಭುಜಕ್ಕೆ, ಬಲತಲೆಗೆ ರಕ್ತಗಾಯವಾಗಿದ್ದು, ರಘುಗೆ ಬಲಕಾಲು, ತಲೆಗೆ, ಬಲಭಾಗದ ಹೊಟ್ಟೆಗೆ ರಕ್ತಗಾಯವಾಗಿರುತ್ತೆ. ನಂತರ ನನ್ನ ಮಗನನ್ನು ಕೇಳಲಾಗಿ ನಾನು ರಘು ಇಬ್ಬರೂ ನನ್ನ ಸ್ನೇಹಿತನ ಹುಟ್ಟುಹಬ್ಬ ಮುಗಿಸಿಕೊಂಡು ಬಾಗೇಪಲ್ಲಿಯಿಂದ ವಾಪಸ್ಸು ಬರಲು ಚಿಕ್ಕಬಳ್ಳಾಪುರ ಮಾರ್ಗವಾಗಿ ಬರುತ್ತಿದ್ದಾಗ ಬೆಳಗಿನ ಜಾವ 2-15 ಗಂಟೆ ಸಮಯದಲ್ಲಿ ಹಾರೋಬಂಡೆ ಗ್ರಾಮದ ಸಮೀಪ ಡಿವೈಡರ್ ಬಳಿ ಎದುರಿನಿಂದ ಬರುತ್ತಿದ್ದ KA-01, AF-5983 TATA INDICA ಕಾರಿನ ಚಾಲಕ ತನ್ನ ಕಾರನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ನಮ್ಮ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆಸಿದ ಪರಿಣಾಮ ನಾನು ಮತ್ತು ರಘು ರಸ್ತೆಯಲ್ಲಿ ಬಿದ್ದು ಹೋಗಿದ್ದು, ನಮ್ಮನ್ನು ಅದೇ ರಸ್ತೆಯಲ್ಲಿ ಬಂದ ಸಾರ್ವಜನಿಕರು 108 ಆಂಬುಲೆನ್ಸ್ ಗೆ ಪೋನ್ ಮಾಡಿ ಕರೆಸಿಕೊಂಡು ಆಸ್ಪತ್ರೆಗೆ ಕಳುಹಿಸಿಕೊಟ್ಟಿರುವುದಾಗಿ ತಿಳಿಸಿದನು. ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯಲ್ಲಿ ನನ್ನ ಮಗ ಭರತ್ ಮತ್ತು ರಘುಗೆ ಚಿಕಿತ್ಸೆ ನೀಡಿದ ವೈದ್ಯರು ಇಬ್ಬರನ್ನೂ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಕರೆದುಕೊಂಡು ಹೋಗಲು ತಿಳಿಸಿದ್ದರಿಂದ ನಾವು ನನ್ನ ಮಗನನ್ನು ಬೆಂಗಳೂರು ನಗರದ ಸಂಜಯಗಾಂದಿ ಆಸ್ಪತ್ರೆಗೆ ದಾಖಲಿಸಿದ್ದು, ಅಲ್ಲಿ ನನಗೆ ಮಗನ ಬಲಕಾಲಿಗೆ ಶಸ್ತ್ರ ಚಿಕಿತ್ಸೆ ಸಹಾ ಮಾಡಿರುತ್ತಾರೆ. ರಘುನನ್ನು ಅವರ ಮನೆಯವರು ಯಲಹಂಕದಲ್ಲಿರುವ ಶುಷ್ರೂಷ ಆಸ್ಪತ್ರೆಯಲ್ಲಿ ದಾಖಲಿಸಿರುತ್ತಾರೆ. ನನ್ನ ಮಗನನ್ನು ನೋಡಿಕೊಳ್ಳುವವರು ಯಾರೂ ಇಲ್ಲದೇ ಇದ್ದುದರಿಂದ ನಾನು ಅವನೊಂದಿಗೆ ಇದ್ದು ಈ ದಿನ ತಡವಾಗಿ ಠಾಣೆಗೆ ಬಂದು ನನ್ನ ಮಗ ಮತ್ತು ಆತನ ಸ್ನೇಹಿತನಿಗೆ ಅಪಘಾತವನ್ನುಂಟು ಮಾಡಿದ KA-01, AF-5983 TATA INDICA ಕಾರಿನ ಚಾಲಕನ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ಕೋರಿ ನೀಡಿದ ದೂರಾಗಿರುತ್ತೆ.

  1. ಚಿಕ್ಕಬಳ್ಳಾಪುರ ಸಂಚಾರಿ ಪೊಲೀಸ್ ಠಾಣೆ ಮೊ.ಸಂ.20/2020 ಕಲಂ. 279, 336 ಐ.ಪಿ.ಸಿ :-

          ದಿನಾಂಕ:-16/05/2020 ರಂದು ಸಂಜೆ 5-30 ಗಂಟೆಗೆ ಪಿರ್ಯಾದಿದಾರ ಶ್ರೀ. ಟಿ.ಹೆಚ್.ಬೈರಪ್ಪ ಬಿನ್ ಲೇಟ್ ಟಿ. ಬಿ ಹನುಮಂತಯ್ಯ 58 ವರ್ಷ, ವಕ್ಕಲಿಗರು, ರೇಷ್ಮೆ ಉಪ ನಿರ್ದೇಶಕರು, ಜಿಲ್ಲಾ ಪಂಚಾಯ್ತಿ, ಚಿಕ್ಕಬಳ್ಳಾಪುರ ವಾಸ;- ರೇಷ್ಮೆ ಇಲಾಖೆಯ ವಸತಿ ಗೃಹ, ಚದಲಪುರ, ಚಿಕ್ಕಬಳ್ಳಾಪುರ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ ದಿನಾಂಕ:-16/05/2020 ರಂದು ತಮ್ಮ ಇಲಾಖೆಯ ಸರ್ಕಾರಿ ವಾಹನ ಸಂಖ್ಯೆ ಕೆಎ-40-ಜಿ-0647 ರ ಮಾರುತಿ ಸುಜುಕಿ ಡಿಸೈರ್ ಕಾರಿನಲ್ಲಿ ಸಂಜೆ ಸುಮಾರು 4-30 ಗಂಟೆಯ ಸಮಯದಲ್ಲಿ ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಭವನದಲ್ಲಿ ಪೂರ್ವಭಾವಿ ಸಭೆಯನ್ನು ಮುಗಿಸಿಕೊಂಡು ವಾಪಸ್ಸು ಚದಲಪುರದಲ್ಲಿ ಇರುವ ತಮ್ಮ ರೇಷ್ಮೆ ಇಲಾಖೆ ಕಛೇರಿಗೆ ಹೋಗಲು ಬಾಗೇಪಲ್ಲಿ – ಬೆಂಗಳೂರು ಎನ್.ಎಚ್-44 ಬೈಪಾಸ್ ರಸ್ತೆಯ ಅಗಲಗುರ್ಕಿ ಫ್ಲೈಓವರ್ ಮೇಲೆ ಸಂಜೆ 4-45 ಗಂಟೆಯ ಸಮಯದಲ್ಲಿ ಹೋಗುತ್ತಿದ್ದಾಗ ಬೆಂಗಳೂರಿಗೆ ಹೋಗುವ ರಸ್ತೆಯಲ್ಲಿ ಕಾಮಗಾರಿ ನಡೆಯುತ್ತಿದ್ದರಿಂದ ಬಾಗೇಪಲ್ಲಿಗೆ ಹೋಗುವ ಏಕ ಮುಖ ರಸ್ತೆಯಲ್ಲಿ ವಾಹನಗಳು ಚಲಿಸಲು ಬಿಟ್ಟಿದ್ದು ಅದರಂತೆ ಅದೇ ಏಕ-ಮುಖ ರಸ್ತೆಯಲ್ಲಿ ಚಾಲನೆ ಮಾಡಿಕೊಂಡು ಹೋಗುತ್ತಿದ್ದಾಗ ತಮ್ಮ ವಾಹನದ ಚಾಲಕ ಕಾರ್ತಿಕ್ ಕೆ.ಎಂ ಬಿನ್ ಮುನಿರಾಜು 20 ವರ್ಷ, ಆದಿ ಕರ್ನಾಟಕ ಜನಾಂಗ, ಕುಪ್ಪಳ್ಳಿ ಗ್ರಾಮ, ನಂದಿ ಹೋಬಳಿ, ಚಿಕ್ಕಬಳ್ಳಾಪುರ ತಾಲ್ಲೂಕು ಮತ್ತು ಜಿಲ್ಲೆ ರವರು ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿ ವಾಹನದ ನಿಯಂತ್ರಣ ತಪ್ಪಿ ರಸ್ತೆಯ ಬಲಭಾಗದ ಕಬ್ಬಿಣದ ತಡೆಗೋಡೆಗೆ ಡಿಕ್ಕಿ ಹೊಡೆಸಿದ ಪರಿಣಾಮ ವಾಹನದ ಮುಂಭಾಗದ ಬಂಪರ್, ಮುಂದಿನ ಮಿರರ್, ಹಾಗೂ ಮುಂದಿನ ಬಲಭಾಗದ ಡೋರ್ ಜಕಂಗೊಂಡಿದ್ದು ಯಾರಿಗೂ ಸಹಾ ಗಾಯಗಳಾಗಿರುವುದಿಲ್ಲ ಸದರಿ ಅಪಘಾತಕ್ಕೆ ಕಾರಣನಾದ ಕಾರಿನ ಚಾಲಕನ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ನೀಡಿದ ಲಿಖಿತ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುತ್ತೆ.

  1. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.201/2020 ಕಲಂ. 323,324,504,506 ರೆ/ವಿ 34 ಐ.ಪಿ.ಸಿ :-

          ದಿನಾಂಕ: 170/05/2020 ರಂದು ಬೆಳಿಗ್ಗೆ 11.00 ಗಂಟೆಗೆ ಗೋಪಾಲರೆಡ್ಡಿ ಬಿನ್ ವೆಂಕಟರಾಯಪ್ಪ, 37 ವರ್ಷ, ವಕ್ಕಲಿಗರು, ಜಿರಾಯ್ತಿ, ಮೈಲಾಪುರ ಗ್ರಾಮ, ಚಿಂತಾಮಣಿ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ತನ್ನ ಹಾಗೂ ತನ್ನ ಅಣ್ಣನಾದ ಚೌಡರೆಡ್ಡಿ ರವರ ಮನೆಗಳು ಅಕ್ಕಪಕ್ಕದಲ್ಲಿದ್ದು, ತನ್ನ ಅಣ್ಣನಾದ ಚೌಡರೆಡ್ಡಿ ರವರು ಅವರ ಭಾಗಕ್ಕೆ ಬಂದಿರುವ ಜಮೀನಿನಲ್ಲಿ ಕಾಂಪೌಂಡ್ ಗೋಡೆಯನ್ನು ನಿರ್ಮಾಣ ಮಾಡಿಕೊಂಡು ಮದ್ಯ ಭಾಗದಲ್ಲಿ ಸುಮಾರು 10 ಅಡಿಗಳಷ್ಟು ಮಾತ್ರ ಕಾಂಪೌಂಡ್ ನಿರ್ಮಾಣ ಮಾಡದೆ ಆಗೆಯೇ ಬಿಟ್ಟಿರುತ್ತಾರೆ. ಹೀಗಿರುವಾಗ ಸದರಿ ಕಾಂಪೌಂಡ್ ಗೋಡೆಯನ್ನು ನಿರ್ಮಾಣ ಮಾಡದೆ ಬಿಟ್ಟಿರುವ ಜಾಗದಲ್ಲಿ ಜಾನುವಾರುಗಳು, ನಾಯಿಗಳು ತನ್ನಮನೆಯ ಕಡೆ ಬರುತ್ತಿದ್ದರಿಂದ ದಿನಾಂಕ: 16/05/2020 ರಂದು ಸಂಜೆ ಸುಮಾರು 6.30 ಗಂಟೆ ಸಮಯದಲ್ಲಿ ಕಾಂಪೌಂಡ್ ಗೋಡೆಯನ್ನು ನಿರ್ಮಾಣ ಮಾಡದೆ ಬಿಟ್ಟಿರುವ ಜಾಗದಲ್ಲಿ ತಾನು ನೀಲಿಗಿರಿ ಕಡ್ಡಿಗಳನ್ನು ಅಡ್ಡಹಾಕುತ್ತಿದ್ದಾಗ ತನ್ನ ಅಣ್ಣನಾದ ಚೌಡರೆಡ್ಡಿ ಹಾಗೂ ಅವರ ಹೆಂಡತಿಯಾದ ಲಕ್ಷ್ಮಮ್ಮ ರವರು ಬಂದು ಕಾಂಪೌಂಡ್ ಗೋಡೆಯಿಂದ ಮೂರು ಅಡಿಗಳನ್ನು ಬಿಟ್ಟು  ನೀಲಗಿರಿ ಕಡ್ಡಿಗಳನ್ನು ಹಾಕು ಎಂದು ಹೇಳಿದಾಗ ತಾನು ಸದರಿ ಜಾಗವನ್ನು ಸರ್ವೇ ಮಾಡಿಸಿ, ಆಗ ನನಗೆ ಎಲ್ಲಿಗೆ ಬರುತ್ತದೋ ಅಲ್ಲಿಗೇ ನಾನು ಹಾಕಿಕೊಳ್ಳುತ್ತೇನೆಂದು ಹೇಳಿದಾಗ ತನ್ನ ಅಣ್ಣನಾದ ಚೌಡರೆಡ್ಡಿ ಹಾಗೂ ಲಕ್ಷ್ಮಮ್ಮ ರವರು ತನ್ನನ್ನು ಕುರಿತು ಅವಾಚ್ಯ ಶಬ್ದಗಳಿಂದ ಬೈದು, ಆ ಪೈಕಿ ಚೌಡರೆಡ್ಡಿ ರವರು ಅಲ್ಲಿಯೇ ಇದ್ದ ನೀಲಿಗಿರಿ ಕಟ್ಟಿಗೆಯಿಂದ ತನ್ನ ತಲೆಯ ಮೇಲೆ ಹೊಡೆದು ರಕ್ತಗಾಯವನ್ನುಂಟು ಮಾಡಿದರೆ, ಲಕ್ಷ್ಮಮ್ಮ ಕೈಗಳಿಂದ ಮೈ ಮೇಲೆ ಹೊಡೆದು ನೋವನ್ನುಂಟು ಮಾಡಿರುತ್ತಾರೆ. ಸದರಿ ಸಮಯಕ್ಕೆ ಸ್ಥಳಕ್ಕೆ ಬಂದ ಚೌಡರೆಡ್ಡಿ ರವರ ಮಗಳಾದ ಸುಶ್ಮಿತ ಹಾಗೂ ಅವರ ಸಂಬಂಧಿಯಾದ ಬೊಮ್ಮೇಕಲ್ಲು ಗ್ರಾಮದ ಕೃಷ್ಣಮೂರ್ತಿ ರವರು ತನ್ನನ್ನು ಕುರಿತು ಅವಾಚ್ಯವಾಗಿ ಬೈದಿರುತ್ತಾರೆ. ಆಗ ಗಲಾಟೆಯ ಶಬ್ದ ಕೇಳಿಸಿಕೊಂಡು ಬಂದ ತನ್ನ ತಾಯಿ ಲಕ್ಷ್ಮಮ್ಮ ಹಾಗೂ ತನ್ನ ಹೆಂಡತಿಯಾದ ಕವಿತ ರವರು ಗಲಾಟೆಯನ್ನು ಬಿಡಿಸಲು ಬಂದಾಗ ಕೃಷ್ಣಮೂರ್ತಿ ಹಾಗೂ ಸುಶ್ಮಿತ ರವರು ತನ್ನ ತಾಯಿ ಹಾಗೂ ತನ್ನ ಹೆಂಡತಿಗೆ ಕೈಗಳಿಂದ ಮೈ ಮೇಲೆ ಹೊಡೆದು ನೋವನ್ನುಂಟು ಮಾಡಿರುತ್ತಾರೆ. ಆಗ ತಮ್ಮ ಗ್ರಾಮದ ವೇಣು ಹಾಗೂ ಮಂಜುನಾಥ ರವರು ಬಂದು ಜಗಳ ಬಿಡಿಸಿರುತ್ತಾರೆ. ಸದರಿ ಮೇಲ್ಕಂಡ ನಾಲ್ಕು ಜನರು ಸ್ಥಳದಿಂದ ಹೋಗುವಾಗ ಮತ್ತೊಂದು ಸಲ ನಮ್ಮ ತಂಟೆಗೆ ಬಂದರೆ ನಿಮ್ಮನ್ನು ಪ್ರಾಣಸಹಿತ ಬಿಡುವುದಿಲ್ಲವೆಂದು ಪ್ರಾಣಬೆದರಿಕೆಯನ್ನು ಹಾಕಿರುತ್ತಾರೆ. ನಂತರ ತನ್ನ ತಾಯಿ, ತನ್ನ ಹೆಂಡತಿ ಹಾಗೂ ತನ್ನನ್ನು ತಮ್ಮ ಗ್ರಾಮದ ಮೇಲ್ಕಂಡ ವೇಣು ರವರು ಚಿಂತಾಮಣಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆದುಕೊಂಡು ಠಾಣೆಗೆ ಹಾಜರಾಗಿ ದೂರನ್ನು ನೀಡುತ್ತಿದ್ದು, ಮೇಲ್ಕಂಡಂತೆ ತಮ್ಮ ಮೇಲೆ ಗಲಾಟೆ ಮಾಡಿರುವ ಮೇಲ್ಕಂಡವರ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಬೇಕೆಂದು ಕೋರಿ ನೀಡಿದ ದೂರಾಗಿರುತ್ತೆ.

  1. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.202/2020 ಕಲಂ. 323,324,504,506 ರೆ/ವಿ 34 ಐ.ಪಿ.ಸಿ :-

          ದಿನಾಂಕ: 17/05/2020 ರಂದು ಮದ್ಯಾಹ್ನ 12.00 ಗಂಟೆಗೆ ಶ್ರೀಮತಿ ಲಕ್ಷ್ಮಮ್ಮ ಕೋಂ ಚೌಡರೆಡ್ಡಿ, 40 ವರ್ಷ, ವಕ್ಕಲಿಗರು, ಮನೆಕೆಲಸ, ಮೈಲಾಪುರ ಗ್ರಾಮ, ಚಿಂತಾಮಣಿ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ತಾವು ಮತ್ತು ತನ್ನ ಮೈದನಾದ ಗೋಪಾಲರೆಡ್ಡಿ ಬಿನ್ ವೆಂಕಟರಾಯಪ್ಪ ರವರು ಜಮೀನುಗಳನ್ನು ವಿಭಾಗ ಮಾಡಿಕೊಂಡು ಬೇರೆಯಾಗಿ ವಾಸವಾಗಿರುತ್ತಾರೆ. ತಮ್ಮ ಮನೆಗಳು ಅಕ್ಕ-ಪಕ್ಕದಲ್ಲಿರುತ್ತೆ. ತಾವು ತಮ್ಮ ಭಾಗಕ್ಕೆ ಬಂದಿರುವ ಜಮೀನಿನಲ್ಲಿ ಕಾಂಪೌಂಡ್ ಗೋಡೆಯನ್ನು ನಿರ್ಮಾಣ ಮಾಡಿಕೊಂಡು ಮದ್ಯ ಭಾಗದಲ್ಲಿ ಸುಮಾರು 10 ಅಡಿಗಳು ಜಾಗ ಬಿಟ್ಟಿರುತ್ತೇವೆ. ಸದರಿ ಕಾಂಪೌಂಡ್ ಗೋಡೆ ನಿರ್ಮಾಣ ಮಾಡದೆ ಬಿಟ್ಟಿರುವ ಜಾಗದಲ್ಲಿ ಜಾನುವಾರುಗಳು ಹಾಗೂ ನಾಯಿಗಳು ತನ್ನ ಮೈದ ಗೋಪಾಲರೆಡ್ಡಿ ರವರ ಮನೆಯ ಕಡೆ ಹೋಗುತ್ತಿದ್ದರಿಂದ, ದಿನಾಂಕ 16/05/2020 ರಂದು ಸಂಜೆ ಸುಮಾರು 6.30 ಗಂಟೆ ಸಮಯದಲ್ಲಿ ತನ್ನ ಮೈದನಾದ ಗೋಪಾಲರೆಡ್ಡಿ, ತನ ತಾಯಿ ಲಕ್ಷ್ಮಮ್ಮ, ಆತನ ಹೆಂಡತಿ ಕವಿತ ಮತ್ತು ಬಿ.ವಡ್ಡಹಳ್ಳಿ ಗ್ರಾಮದ ವಾಸಿಯಾದ ಅನಿಲ್ ಬಿನ್ ರಘುನಾಥ್ ಎಂಬುವರು ಸದರಿ ಖಾಲಿ ಇರುವ ಸ್ಥಳದಲ್ಲಿ ನೀಲಗಿರಿ ಕೋಲುಗಳನ್ನು ಹಾಕುತ್ತಿದ್ದಾಗ, ತಾನು ಮತ್ತು ತನ್ನ ಮಗಳಾದ ಸುಷ್ಮಿತ ರವರು ಹೋಗಿ ಕೇಳಿದ್ದಕ್ಕೆ ಮೇಲ್ಕಂಡವರು ತಮ್ಮ ಮೇಲೆ ಜಗಳ ತೆಗೆದು ತನ್ನನ್ನು ಕುರಿತು ಬೇವರ್ಷಿ ಮುಂಡೆ ಈ ಜಾಗದಲ್ಲಿ ಜಾನುವಾರುಗಳು ನಮ್ಮ ಮನೆಯ ಕಡೆ ಬರುತ್ತಿವೆ ಅದಕ್ಕೆ ನಾವು ನೀಲಗಿರಿ ಕೋಲುಗಳನ್ನು ಹಾಕುತ್ತಿದ್ದೀವಿ ಎಂದು ಕೆಟ್ಟ ಮಾತುಗಳಿಂದ ಬೈದು ಆ ಪೈಕಿ ತನ್ನ ಮೈದನಾದ ಗೋಪಾಲರೆಡ್ಡಿ ರವರು ದೊಣ್ಣೆಯಿಂದ ತನ್ನ ಬೆನ್ನು ಮತ್ತು ಮೈ-ಕೈ ಮೇಲೆ ಹೊಡೆದು ನೋವುಂಟು ಮಾಡಿರುತ್ತಾರೆ. ತನ್ನ ಮಗಳಾದ ಸುಷ್ಮಿತ ಜಗಳ ಬಿಡಿಸಲು ಬಂದಾಗ ಲಕ್ಷ್ಮಮ್ಮ, ಕವಿತ ಮತ್ತು ಅನಿಲ್ ರವರು ಕೈಗಳಿಂದ ತನ್ನ ಮಗಳ ಮೈ-ಕೈ ಮೇಲೆ ಹೊಡೆದು ನೋವುಂಟು ಮಾಡಿ ಇನ್ನೊಂದು ಸಲ ನಮ್ಮ ತಂಟೆಗೆ ಬಂದರೆ ನಿಮ್ಮನ್ನು ಬಿಡುವುದಿಲ್ಲ ಎಂದು ಪ್ರಾಣ ಬೆದರಿಕೆಯನ್ನು ಹಾಕಿರುತ್ತಾರೆ. ಆಗ ತಮ್ಮ ಗ್ರಾಮದ ವಾಸಿಗಳಾದ ನಾಗೇಶ ಮತ್ತು ಜಗದೀಶ ರವರು ಬಂದು ಜಗಳ ಬಿಡಿಸಿರುತ್ತಾರೆ. ನಂತರ ತಾನು, ತನ್ನ ಮಗಳು ಚಿಂತಾಮಣಿ ಸರ್ಕಾರಿ ಆಸ್ಪತ್ರೆಗೆ ಬಂದು ಪ್ರಥಮ ಚಿಕಿತ್ಸೆ ಪಡೆದಿದ್ದು, ಕೊರೋನಾ ಇರುವುದರಿಂದ ವೈದ್ಯರು ಆಸ್ಪತ್ರೆಯಲ್ಲಿ ದಾಖಲು ಮಾಡಿಕೊಳ್ಳುವುದಿಲ್ಲವೆಂದು ತಿಳಿಸಿರುತ್ತಾರೆ. ಗ್ರಾಮದ ಹಿರಿಯರು ಈ ಗಲಾಟೆಯ ವಿಚಾರದಲ್ಲಿ ನ್ಯಾಯಪಂಚಾಯ್ತಿ ಮಾಡೋಣವೆಂದು ತಿಳಿಸಿದ್ದು, ಇದುವರೆಗೆ ತನ್ನ ಮೈದ ಮತ್ತು ಅವರ ಕಡೆಯವರು ನ್ಯಾಯ ಪಂಚಾಯ್ತಿಗೆ ಬಾರದೆ ಇರುವುದರಿಂದ ಈ ದಿನ ತಡವಾಗಿ ದೂರು ನೀಡುತ್ತಿದ್ದು, ಮೇಲ್ಕಂಡವರ ವಿರುಧ್ದ ಕಾನೂನು ರೀತ್ಯ ಕ್ರಮ ಜರುಗಿಸಬೇಕೆಂದು ಕೋರಿ ನೀಡಿದ ದೂರಾಗಿರುತ್ತೆ.

  1. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.203/2020 ಕಲಂ. 332,353 ಐ.ಪಿ.ಸಿ :-

          ದಿನಾಂಕ: 17/05/2020 ರಂದು ಚಿಂತಾಮಣಿ ಸರ್ಕಾರಿ ಆಸ್ಪತ್ರೆಯಲ್ಲಿ ಗಾಯಾಳು ಅಂಜನ್ ರೆಡ್ಡಿ ಬನ್ ರಂಗಪ್ಪ, 29 ವರ್ಷ, ಸಿ.ಪಿ.ಸಿ-75, ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ರವರ ಹೇಳಿಕೆಯನ್ನು ಪಡೆದುಕೊಂಡು ಮದ್ಯಾಹ್ನ 3.00 ಗಂಟೆಗೆ ಠಾಣೆಗೆ ವಾಪಸ್ಸಾಗಿ ದಾಖಲಿಸಿಕೊಂಡು ಗಾಯಾಳುವಿನ ಹೇಳಿಕೆಯ ಸಾರಾಂಶವೇನೆಂದರೆ, ಪ್ರಸ್ತುತ ಕರೋನಾ ವೈರೆಸ್ ರೋಗದ ಹಿನ್ನಲೆಯಲ್ಲಿ ಲಾಕ್ ಡೌನ್ ಇರುವುದರಿಂದ ಈ ದಿನ ದಿನಾಂಕ: 17/05/2020 ರಂದು ಪಿ.ಎಸ್.ಐ ರವರು ತನಗೆ ಹಾಗೂ ಹೆಚ್.ಜಿ-209, ರಾಮಚಂದ್ರಪ್ಪ ರವರಿಗೆ ಕೋಲಾರ-ಚಿಂತಾಮಣಿ ರಸ್ತೆಯಲ್ಲಿ ಗಸ್ತು ಕರ್ತವ್ಯಕ್ಕೆ ನೇಮಿಸಿದ್ದು, ಅದರಂತೆ ತಾವಿಬ್ಬರೂ ದ್ವಿಚಕ್ರ ವಾಹನದಲ್ಲಿ ಮೈಲಾಂಡ್ಲಹಳ್ಳಿ, ಗಡದಾಸನಹಳ್ಳಿ, ಕಾಚಹಳ್ಳಿ ಇತ್ಯಾದಿ ಕಡೆಗಳಲ್ಲಿ ಗಸ್ತು ಮಾಡಿಕೊಂಡು ಮದ್ಯಾಹ್ನ ಸುಮಾರು 12.45 ಗಂಟೆ ಸಮಯದಲ್ಲಿ ಕುರುಟಹಳ್ಳಿ ಕ್ರಾಸ್ ಗೆ ಬಂದಾಗ ಮದೀನಾ ಬೇಕರಿ ಮುಂಭಾಗ ಯಾರೋ 6 ರಿಂದ 7 ಜನರು ಗುಂಪು ಸೇರಿಕೊಂಡು ಮಾಸ್ಕ್ ಧರಿಸದೆ ಕುಳಿತುಕೊಂಡಿದ್ದು, ತಾವು ಸ್ಥಳಕ್ಕೆ ಹೋಗಿ ಪ್ರಸ್ತುತ ಕೋವೀದ್-19 ರೋಗ ಹರಡುತ್ತಿರುವುವರಿಂದ ಈ ರೀತಿ ಗುಂಪು ಸೇರಬಾರದು ಹಾಗೂ ಮಾಸ್ಕ್ ಧರಿಸಬೇಕೆಂದು ಹೇಳಿತ್ತಿದ್ದಂತೆ ಗುಂಪಿನಲ್ಲಿದ್ದ 6 ಜನರು ಹೊರಟು ಹೋಗಿದ್ದು, ಆ ಪೈಕಿ ಒಬ್ಬ ಆಸಾಮಿಯು ಏಕಾ ಏಕೀ ತಮ್ಮ ಬಳಿ ಬಂದು ನಿವ್ಯಾರು ನಮಗೆ ಹೇಳುವುದಕ್ಕೆ, ಇಲ್ಲಿಂದ ಹೋಗಿ ಎಂದು ಹೇಳಿ, ಕೈಗಳಿಂದ ತನ್ನನ್ನು ಎಳೆದಾಡಿ, ಮೈ ಮೇಲೆ ಹೊಡೆದು ನೋವನ್ನುಂಟು ಮಾಡಿ, ಸಮವಸ್ತ್ರದ ಶರ್ಟ್ ನ್ನು ಹಿಡಿದು ಎಳೆದಾಡಿ ಹರಿದು ಹಾಕಿರುತ್ತಾನೆ. ಕೈಗಳಿಂದ ತನ್ನನ್ನು ಹಿಡಿದು ಗೋಡೆಗೆ ತಳ್ಳಿದಾಗ ತನ್ನ ಮೊಣಕೈಗೆ ರಕ್ತಗಾಯ ಹಾಗೂ ಎಡಕೈನ ತೋರು ಬೆರಳಿಗೆ ಮೂಗೇಟಾಗಿರುತ್ತೆ. ಅಷ್ಟರಲ್ಲಿತನ್ನ ಜೊತೆಯಲ್ಲಿದ್ದ ಹೆಚ್.ಜಿ-209, ರಾಮಚಂದ್ರಪ್ಪ ಮತ್ತು ಯಾರೋ ಸಾರ್ವಜನಿಕರು ಗಲಾಟೆ ಬಿಡಿಸಿರುತ್ತಾರೆ. ತನ್ನ ಮೇಲೆ ಗಲಾಟೆ ಮಾಡಿ ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿ, ಹಲ್ಲೆ ಮಾಡಿದ ಆಸಾಮಿಯ ಹೆಸರು, ವಿಳಾಸ ಕೇಳಲಾಗಿ ಶೇಷಾದ್ರಿ ಬಿನ್ ಕೃಷ್ಣಪ್ಪ, 36 ವರ್ಷ, ಗಾಣಿಗರು, ಕೂಲಿಕೆಲಸ, ಕುರುಟಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು ಎಂದು ತಿಳಿಸಿರುತ್ತಾನೆ. ನಂತರ ಶ್ರೀನಿವಾಸಪುರ ರಸ್ತೆಯಲ್ಲಿ ಗಸ್ತಿನಲ್ಲಿದ್ದ ಠಾಣೆಯ ಸಿ.ಪಿ.ಸಿ-24 ನರೇಶ್ ಮತ್ತು ಸಿ.ಪಿ.ಸಿ-544 ವೆಂಕಟರವಣ ರವರನ್ನು ತಾನು ಸ್ಥಳಕ್ಕೆ ಬರುವಂತೆ ತಿಳಿಸಿದಾಗ ಅವರು ಸ್ಥಳಕ್ಕೆ ಬಂದು ಸದರಿ ಆಸಾಮಿಯನ್ನು ವಶಕ್ಕೆ ಪಡೆದು ಠಾಣೆಗೆ ಕರೆದುಕೊಂಡು ಹೋದರು. ತನ್ನ ಎಡಕೈಗೆ ರಕ್ತಗಾಯವಾಗಿರುವುದರಿಂದ ಚಿಂತಾಮಣಿ ಸರ್ಕಾರಿ ಆಸ್ಪತ್ರೆಗೆ ಬಂದು ದಾಖಲಾಗಿ ಚಿಕಿತ್ಸೆಯನ್ನು ಪಡೆದುಕೊಳುತ್ತಿದ್ದು, ಸರ್ಕಾರಿ ಕರ್ತವ್ಯದಲ್ಲಿದ್ದ ತಮಗೆ ಕರ್ತವ್ಯ ನಿರ್ವಹಿಸಲು ಅಡ್ಡಿಪಡಿಸಿ, ಹಲ್ಲೆ ಮಾಡಿದ ಮೇಲ್ಕಂಡ ಶೇಷಾದ್ರಿ ಬಿನ್ ಕೃಷ್ಣಪ್ಪ ರವರ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಕೋರಿ ನೀಡಿದ ಹೇಳಿಕೆಯ ಸಾರಾಂಶವಾಗಿರುತ್ತೆ.

  1. ದಿಬ್ಬೂರಹಳ್ಳಿ ಪೊಲೀಸ್ ಠಾಣೆ ಮೊ.ಸಂ.49/2020 ಕಲಂ. 114,307,506 ರೆ/ವಿ 149 ಐ.ಪಿ.ಸಿ :-

          ದಿನಾಂಕ :16/05/2020 ರಂದು ರಾತ್ರಿ 11-00 ಗಂಟೆಗೆ ಹೆಚ್.ಸಿ 53 ರವರು ಚಿಕ್ಕಬಳ್ಳಾಪುರದ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಪಿರ್ಯಾಧಿ ರಾಮಲಿಂಗಾಪುರ ಗ್ರಾಮದ ವಾಸಿ ವೆಂಕಟೇಶಪ್ಪ ಎ.ವಿ  ಬಿನ್ ವೆಂಕಟರವಣಪ್ಪ ರವರ ಹೇಳಿಕೆಯನ್ನು ಪಡೆದು ಹಾಜರುಪಡಿಸಿದ ದೂರಿನ ಸಾರಾಂಶವೇನೆಂದರೆ ತನಗೆ ಮದುವೆಯಾಗಿ ಲಕ್ಷ್ಮಿದೇವಿ ಎಂಬ ಹೆಂಡತಿ ಮತ್ತು ಮೂರು ಜನ ಮಕ್ಕಳಿದ್ದು. ತಮ್ಮ ಗ್ರಾಮದ ತಿಮ್ಮಯ್ಯರವರ ಕುಟುಂಬ ಸುಮಾರು 18 ವರ್ಷಗಳಿಂದ ಪರಿಚಯುವಿದ್ದು, ತಿಮ್ಮಯ್ಯ ರವರ ಮಗಳಾದ ಕಳಾವತಿ ಎಂಬುವರು ಸುಮಾರು 18 ವರ್ಷಗಳಿಂದ ಪರಿಚಯವಿದ್ದು, ಅವರ ಕಷ್ಟಗಳಿಗೆ ಆಗಾಗ ಸಹಾಯ ಮಾಡಿದ್ದು. ಈ ಹಿಂದೆ ಸುಮಾರು 2-3 ವರ್ಷಗಳ ಹಿಂದೆ ತಿಮ್ಮಯ್ಯ ರವರ ಕುಟುಂಬದವರಿಗೂ ಹಾಗೂ ತನಗೂ ಆಗಾಗ ಗಲಾಟೆಗಳಾಗಿ ಕೇಸುಗಳು ದಾಖಲಾಗಿ ನ್ಯಾಯಾಲಯದಲ್ಲಿ ನಡೆಯುತ್ತಿದ್ದು, ಕಳಾವತಿರವರ ಮೇಲೂ ಸಹ ಕೇಸು ದಾಖಲಾಗಿ ನ್ಯಾಯಾಲಯದಲ್ಲಿ  ನಡೆದಿರುತ್ತಿರುತ್ತೆ.  ತಾನು ಮಧ್ಯ ವೆಸನಿಯಾಗಿದ್ದು, ಆಗಾಗ ಕಳಾವತಿರವರ ಮನೆಗೆ ಹೋಗಿ ಮಧ್ಯಪಾನ ಮಾಡಿಕೊಂಡು ಬರುತ್ತಿದ್ದು, ತಿಮ್ಮಯ್ಯ ಕುಟುಂಬದವರು ಹಾಗೂ ತಮಗೂ ಸುಮಾರು 3 ವರ್ಷಗಳಿಂದ ಯಾವುದೇ ಮಾತುಕತೆ ನಡೆಯುತ್ತಿರಲಿಲ್ಲ. ಈ ಹಿಂದೆ ತಾನು ಅವರ ಮೇಲೆ ದಾಖಲಿಸಿರುವ ಕೇಸುಗಳನ್ನು ರಾಜಿ ಮಾಡಿಕೊಳ್ಳಲು ಕೇಳಿಕೊಂಡಿದ್ದು, ಅದಕ್ಕೆ ತಾನು ನಿರಾಕರಿಸಿದ್ದು, ದಿನಾಂಕ: 14/05/2020 ರಂದು ಬೆಳಗ್ಗೆ ತಾನು ಅವರ ಮನೆಯ ಮುಂದೆ ಹೋಗುತ್ತಿದ್ದಾಗ ಕಳಾವತಿ ರವರು ತನ್ನನ್ನು ಕರೆದು ಕೇಸುಗಳನ್ನು ರಾಜಿ ಮಾಡಿಕೊಳ್ಳಲು ತಿಳಿಸಿದಾಗ ತಾನು ನಿರಾಕರಿಸಿ ವಾಪಸ್ಸು ಹೋಗಿದ್ದು, ನಂತರ ದಿನಾಂಕ: 15/05/2020 ರಂದು ರಾತ್ರಿ ಸುಮಾರು 8.30 ಗಂಟೆಯ ಸಮಯದಲ್ಲಿ ಅದೆ ದಾರಿಯಲ್ಲಿ ಹೋಗುತ್ತಿದ್ದ ತನ್ನನ್ನು ಕಳಾವತಿ ರವರು ಕರೆದು ಮನೆಯಲ್ಲಿ ಯಾರು ಇಲ್ಲ ಬಾ ಎಂದು ಹೇಳಿ ತನಗೆ ಮಧ್ಯವನ್ನು ತಂದುಕೊಟ್ಟು, ತಾನು ಮಧ್ಯ ಸೇವನೆ ಮಾಡುತ್ತಿದ್ದಾಗ ತನಗಾಗಿ ಜೂಸ್ ತಯಾರು ಮಾಡಿಕೊಂಡು ಬರುವುದಾಗಿ ಹೇಳಿ ಅಡುಗೆ ಮನೆಗೆ ಹೋಗಿ ರಸ್ನ ಪಾಕೆಟ್ ನ ಪೌಡರ್ ಜೂಸ್ ತಯಾರು ಮಾಡಿಕೊಂಡು ಬಂದು ನೀಡಿದ್ದು, ಆಗ ತಾನು ಮಧ್ಯಪಾನಕ್ಕೆ ಜೂಸನ್ನು ಬೆರೆಸಿಕೊಂಡು ಕುಡಿದಾಗ ಸ್ವಲ್ಪ ಹೊತ್ತಿಗೆ ವಾಂತಿ ಬಂದಿದ್ದು, ಆಗ ತಾನು ಏಕೆ ಈ ತರ ಆಯಿತು ಎಂದು ಕೇಳಲಾಗಿ ಕಳಾವತಿರವರು ನನ್ನನ್ನು ಈಗಲಾದರೂ ತಮ್ಮ ಮೇಲೆ ಇರುವ ಕೇಸುಗ್ಳನ್ನು ವಾಪಸ್ಸು ತೆಗೆದುಕೊ, ಇಲ್ಲಂದರೆ ನಿನಗೆ ಒಂದು ಗತಿ ಕಾಣಿಸುವವರೆಗೂ ನಿನ್ನನ್ನು ಬಿಡುವುದಿಲ್ಲ, ಈಗಾಗಲೇ ನಿನ್ನ ಕಥೆ ಮುಗಿದಿದೆ ಎಂದು ಅವರೇ ತನಗೆ ಮಧ್ಯಪಾನ ತರಸಿ  ರಸ್ನ ಜೂಸು ಕುಡಿಸಿ ತನ್ನ ಪ್ರಾಣಕ್ಕೆ ತೊಂದರೆ ಕೊಟ್ಟಿರುತ್ತಾರೆ. ತಾನು ರಸ್ನ ಜೂಸು ಕುಡಿಸಿ ವಾಂತಿ ಮಾಡಿಕೊಂಡಾಗ ತನಗೆ ವಾಂತಿ ಜಾಸ್ತಿಯಾದ ಕಾರಣ ತಡೆಯಲು ಸಾಧ್ಯವಾಗದ ಕಾರಣ ಕಿರುಚಿಕೊಂಡಾಗ ತಮ್ಮ ಗ್ರಾಮದ ವಾಸಿಗಳಾದ ಮಂಜುನಾಥ ಬಿನ್ ಲೇಟ್ ಆದಿನಾರಾಯಣಪ್ಪ ಮತ್ತು ವೆಂಕಟರವಣಪ್ಪ ಬಿನ್ ಲೇಟ್ ಈರಪ್ಪರವರು ಕಳಾವತಿರವರ ಮನೆಯ ಕಾಂಪೌಂಡ್ ಒಳಗೆ ಬಂದು ತನ್ನನ್ನು ಉಪಚರಿಸಿ ಯಾವುದೋ ಒಂದು ವಾಹನದಲ್ಲಿ ಚಿಕಿತ್ಸೆಗಾಗಿ ಶಿಡ್ಲಘಟ್ಟ ಸರ್ಕಾರಿ ಆಸ್ವತ್ರೆಗೆ ದಾಖಲಿಸಿ, ಅಲ್ಲಿನ ವೈದ್ಯಾಧಿಕಾರಿಗಳ ಆದೇಶದಂತೆ ಬೆಂಗಳೂರಿನ ಕೆ.ಸಿ ಸಾರ್ವಜನಿಕರ ಆಸ್ವತ್ರೆಗೆ ದಾಖಲಿಸಿ, ನಂತರ ಹೆಚ್ಚಿನ ಚಿಕಿತ್ಸೆಗಾಗಿ ಚಿಕ್ಕಬಳ್ಳಾಪುರ ಜಿಲ್ಲಾ ಸರ್ಕಾರಿ ಆಸ್ವತ್ರೆಗೆ ದಾಖಲಾಗಿದ್ದು, ತನ್ನನ್ನು ಹಳೇ ದ್ವೇಶದ ಹಿನ್ನಲೆಯಲ್ಲಿ ಸಾಯಿಸಲು ಪ್ರಯತ್ನಿಸಿದ ಹಾಗು ಇದಕ್ಕೆ ಕುಮ್ಮಕ್ಕು ನೀಡಿದ ತಮ್ಮ ಗ್ರಾಮದ ಕಳಾವತಿ, ತಿಮ್ಮಯ್ಯ, ವೆಂಕಟಮ್ಮ, ದೇವಪ್ಪ ಮತ್ತು ಪಾರ್ವತಿ ರವರ ಮೇಲೆ ಸೂಕ್ತ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲು ಕೋರಿರುವುದಾಗಿರುತ್ತೆ.

  1. ಮಂಚೇನಹಳ್ಳಿ ಪೊಲೀಸ್ ಠಾಣೆ ಮೊ.ಸಂ.113/2020 ಕಲಂ. 379 ಐ.ಪಿ.ಸಿ :-

          ದಿನಾಂಕ:16/05/2020 ರಂದು ಪಿರ್ಯಾದಿದಾರರಾದ ಶ್ರೀ ಎಸ್.ಶ್ರೀನಿವಾಸರೆಡ್ಡಿ ಬಿನ್ ಶ್ರೀರಾಮರೆಡ್ಡಿ.ಕೆ.ವಿ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ತನ್ನ ಬಾಬತ್ತು  ಹೋಂಡಾ ಆಕ್ಟಿವಾ ದ್ವಿಚಕ್ರ ವಾಹನ ಸಂಖ್ಯೆ KA-40 EC-5585 ಅನ್ನು ದಿನಾಂಕ:15/05/2020 ರಂದು ರಾತ್ರಿ ಸುಮಾರು 7-45 ಗಂಟೆಗೆ ನಮ್ಮ ಮನೆಯ ಮುಂದೆ ನಿಲ್ಲಿಸಿದ್ದು, ನಂತರ ಬೆಳಗಿನ ಜಾವ ಸುಮಾರು 05-30 ಗಂಟೆಗೆ ಮನೆಯಿಂದ ಹೊರಗಡೆ ಬಂದು ನೋಡಲಾಗಿ ವಾಹನ ಇರಲಿಲ್ಲ ಗ್ರಾಮದ ಎಲ್ಲಾ ಕಡೆ ಹುಡುಕಾಡಿದ್ದು, ಪತ್ತೆ ಆಗಿರುವುದಿಲ್ಲ ಯಾರೋ ಕಳ್ಳರು ನನ್ನ ದ್ವಿಚಕ್ರ ವಾಹನವನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು ವಾಹನದ ಮೇಲೆ ಯಾವುದೇ ಸಾಲ ಇಲ್ಲದೆ ಇದ್ದು, ವಾಹನವು ಸುಮಾರು 40,000/- ರೂ ಬೆಲೆ ಬಾಳುವುದಾಗಿದ್ದು, ಕಳ್ಳತನ ವಾಗಿರುವ ತನ್ನ ಬಾಬತ್ತು ದ್ವಿಚಕ್ರ ವಾಹನವನ್ನು ಮತ್ತು ಕಳ್ಳರನ್ನು ಪತ್ತೆ ಮಾಡಿ ಮುಂದಿನ ಕಾನೂನು ಕ್ರಮ ಜರುಗಿಸಲು ಕೋರಿದೆ.