ದಿನಾಂಕ : 17/02/2020 ರ ಅಪರಾಧ ಪ್ರಕರಣಗಳು

1. ಬಾಗೇಪಲ್ಲಿ ಪೊಲೀಸ್ ಠಾಣೆ ಮೊ.ಸಂ.36/2020 ಕಲಂ. 143-147-148-427-506 ರೆ/ವಿ 149 ಐ.ಪಿ.ಸಿ :-
ದಿ: 17-02-2020 ರಂದು ಬೆಳಗ್ಗೆ 11:00 ಗಂಟೆಗೆ ಪಿರ್ಯಾಧಿದಾರರಾದ ರೂಪ ಕೋಂ ಲಕ್ಷ್ಮೀಪತಿ, 9 ನೇ ವಾರ್ಡ್, ಬಿ.ಜಿ.ಎಸ್ ಶಾಲೆಯ ಹತ್ತಿರ, ಬಾಗೇಪಲ್ಲಿ ತಾಲ್ಲೂಕು, ಚಿಕ್ಕಬಳ್ಳಾಪುರ ಜಿಲ್ಲೆ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶ – ನಮ್ಮ ಪಕ್ಕದ ಮನೆಯವರಾದ ಗಂಗಪ್ಪ, ನರಸಮ್ಮ, ಲಕ್ಷ್ಮೀದೇವಿ, ಅನಿತಾ ಮತ್ತು ಮಂಜುಳ ಇವರುಗಳು ಪ್ರತಿ ದಿನ ಸಂಜೆ ವೇಳೆಯಲ್ಲಿ ಕಂಠಪೂರ್ತಿ ಕುಡಿದು ಅವಾಚ್ಯ ಶಬ್ದಗಳಿಂದ ನಿಂದನೆ ಮಾಡುತ್ತಾ, ಕಿರಿಕಿರಿ ಕೊಡುತ್ತಿದ್ದರು. 10 ವರ್ಷಗಳಿಂದ ತಾಳ್ಮೆಯಿಂದ ಜೀವನ ಮಾಡುತ್ತಿದ್ದು, ದಿ:04-11-2019 ರಂದು ಬಾಗೇಪಲ್ಲಿ ಠಾಣೆಯಲ್ಲಿ ಬುದ್ದಿವಾದ ಹೇಳಿದ್ದರು. ಈ ಕೋಪದಿಂದ ನನ್ನ ಮತ್ತು ನನ್ನ ಸ್ನೇಹಿತೆಯ ಮಗಳು ರಸ್ತೆಯಲ್ಲಿ ಬರುತ್ತಿರುವಾಗ, ಅವರನ್ನು ಅಡ್ಡಗಟ್ಟಿ ಅವರನ್ನು ಅವಾಚ್ಯ ಶಬ್ದಗಳಿಂದ ನಿಂಧನೆ ಮಾಡಿ, ಅವರನ್ನು ಅಳಿಸಿರುತ್ತಾರೆ. ಮಕ್ಕಳು ಮನೆಗೆ ಬಂದು ಅಳುತ್ತಾ ತಿಳಿಸಿರುತ್ತಾರೆ. ಇದೆ ತರಹ ಪದೇ ಪದೇ ಮಾಡಿರುತ್ತಾರೆ. ಆದರೂ ಸಹ ನಾವು ತಾಳ್ಮೆಯಿಂದ ಇರುತ್ತೇವೆ, ಇಷ್ಟಾದರೂ ಸಹ ದಿ: 07-02-2020 ರಂದು ಶುಕ್ರವಾರ ರಸ್ತೆಯಲ್ಲಿ ನಾನು ಮತ್ತು ನನ್ನ ಸ್ನೇಹಿತೆಯ ಮಕ್ಕಳು ಎಲ್ಲರೂ ಒಟ್ಟಾಗಿ ಬರುತ್ತಿದ್ದೆವು. ಮಕ್ಕಳು ಮುಂದೆ ಹೋಗುತ್ತಿದ್ದರು. ಗಂಗಪ್ಪ ಮತ್ತು ಆತನ ಹೆಂಡತಿ ನರಸಮ್ಮ ಕಂಠಪೂರ್ತಿ ಕುಡಿದು ಮಕ್ಕಳನ್ನು ಅವಾಚ್ಯ ಶಬ್ದಗಳಿಂದ ಬೈಯ್ಯುತ್ತಿದ್ದು, ಆಗ ಮಕ್ಕಳು ಜೋರಾಗಿ ಕಿರುಚಿಕೊಂಡರು. ನಾವು ಯಾಕಪ್ಪ ಯಾವಾಗಲೂ ಮಕ್ಕಳನ್ನು ಬೈಯ್ಯುತ್ತಿರುವುದು ಎಂದು ಕೇಳಿದ್ದಕ್ಕೆ, ತೂರಾಡುತ್ತಾ ಮೈ ಮೇಲೆ ಬೀಳತೊಡಗಿದರು. ಆದ್ದರಿಂದ ನಾವು ತಳ್ಳಿದೆವು. ಅವರು ಠಾಣೆಗೆ ಹೋಗಿದ್ದರು. ಇಬ್ಬರನ್ನು ಬಾಗೇಪಲ್ಲಿ ಠಾಣೆಗೆ ಕರೆಯಿಸಿ ಬುದ್ದಿವಾದ ಹೇಳಿದರು ಮತ್ತು ಸಂಧಾನ ಮಾಡಿದರು. ಇದಾದ ನಂತರ ದಿ: 14-02-2020 ರಂದು ಶುಕ್ರವಾರ ಮದ್ಯರಾತ್ರಿಯಲ್ಲಿ 1 ಗಂಟೆಯ ಸಮಯದಲ್ಲಿ ಗಂಗಪ್ಪ, ನರಸಮ್ಮ, ಲಕ್ಷ್ಮೀದೇವಿ, ಅನಿತಾ ಮತ್ತು ಮಂಜುಳಾ ರವರುಗಳು ಗುಂಡು, ಕಲ್ಲು, ಗಡಪಾರೆ ಇತ್ಯಾಧಿಗಳಿಂದ ಮನೆಯ ಮುಂದೆ ಇದ್ದ ಗಾಡಿ, ಸೈಕಲ್ ಗೃಹಪಯೋಗಿ ವಸ್ತುಗಳನ್ನು ದ್ವಂಸ ಮಾಡಿ ಮತ್ತು ಬಾಗಿಲು, ಕಿಟಕಿಗಳನ್ನು ಮುರಿದು ನಿಮ್ಮನ್ನು ಈ ರಾತ್ರಿ ಸಾಯಿಸುತ್ತೇವೆ, ನಿಮ್ಮನ್ನು ಪ್ರಾಣದಿಂದ ಬಿಡುವುದಿಲ್ಲ, ನಾವು ಪರಿಶಿಷ್ಟ ಜಾತಿಯವರು, ನಾವು ಏನೇ ಮಾಡಿದರೂ ನಮ್ಮ ಮೇಲೆ ಯಾವುದೇ ತರಹ ಕೇಸು ದಾಖಲು ಆಗುವುದಿಲ್ಲ. ನಿಮ್ಮನ್ನು ಸಾಯಿಸುತ್ತೇವೆ ಎಂದು ಕೂಗಿರುತ್ತಾರೆ, ಇವರ ಗೂಂಡಾಗಿರಿ ಮತ್ತು ದಬ್ಬಾಳಿಕೆಗಳಿಂದ ನಮ್ಮನ್ನ ಮತ್ತು ನಮ್ಮ ಮಕ್ಕಳನ್ನು ರಕ್ಷಣೆ ಮಾಡಬೇಕಾಗಿ ಕೋರುತ್ತೇವೆ. ಇವರ ಮೇಲೆ ಕಾನೂನು ರೀತ್ಯ ಕ್ರಮ ಕೈಗೊಂಡು, ನಮ್ಮ ರಕ್ಷಣೆಗೆ ನಡೆದ ಘಟನೆಯನ್ನು ಜಾತಿಯ ರೂಪದಲ್ಲಿ ತೆಗೆದುಕೊಳ್ಳದೆ, ಹೆಣ್ಣು ಮಕ್ಕಳ ರಕ್ಷಣೆಗೆ ಗಮನವಾಗಿ ತೆಗೆದುಕೊಳ್ಳಬೇಕಾಗಿ ಪ್ರಾರ್ಥನೆ, ಎಂದು ನೀಡಿದ ದೂರಿನ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿರುತ್ತೆ.
2. ಬಾಗೇಪಲ್ಲಿ ಪೊಲೀಸ್ ಠಾಣೆ ಮೊ.ಸಂ.37/2020 ಕಲಂ. 323-324-436-504-506 ರೆ/ವಿ 34 ಐ.ಪಿ.ಸಿ & 3(1)(r),3(1)(s),3(2)(v-a) SC AND THE ST (PREVENTION OF ATTROCITIES) ACT:-
ದಿ: 17-02-2020 ರಂದು ಮದ್ಯಾಹ್ನ 12:30 ಗಂಟೆಗೆ ಪಿರ್ಯಾಧಿದಾರರಾದ ಶ್ರೀಮತಿ ಅನಿತಾ ಕೊಂ ಮುನಿರಾಜು, 28 ವರ್ಷ, ಕೊರಚ ಜನಾಂಗ, ವ್ಯಾಪಾರ, ವಾಸ 9 ನೇ ವಾರ್ಡ್, ಬಿ.ಜಿ.ಎಸ್. ಶಾಲೆಯ ಬಳಿ, ಬಾಗೇಪಲ್ಲಿ ಪುರ ಠಾಣೆಗೆ ಹಾಜರಾಗಿ ನೀಡಿದ ದೂರನ್ನು ಪಡೆದುಕೊಂಡಿದ್ದರ ಸಾರಾಂಶ – ನಾನು ಬಾಗೇಪಲ್ಲಿ ಪುರದ 9 ನೇ ವಾಡರ್್, ಬಿ.ಜಿ.ಎಸ್. ಶಾಲೆಯ ಬಳಿ ನಮ್ಮ ತಂದೆ ಗಂಗಪ್ಪ ತಾಯಿ ನರಸಮ್ಮ ರವರೊಂದಿಗೆ ವಾಸವಾಗಿರುತ್ತೇನೆ. ನಮ್ಮ ತಂದೆ-ತಾಯಿಯವರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದು, ಮೊದಲನೇ ನನ್ನ ಅಕ್ಕ ಲಕ್ಷ್ಮಮ್ಮ ಮತ್ತು ಎರಡನೇ ನಾನು ಆಗಿರುತ್ತೇವೆ. ನಮ್ಮ ಅಕ್ಕನಿಗೆ ಹಿಂದೂಪುರಕ್ಕೆ ಮದುವೆ ಮಾಡಿಕೊಟ್ಟಿದ್ದು, ನನಗೆ ಈಗ್ಗೆ 10 ವರ್ಷಗಳ ಹಿಂದೆ ಚಿಂತಾಮಣಿ ತಾಲ್ಲೂಕು ಗೌನಿಪಲ್ಲಿ ಗ್ರಾಮದ ವಾಸಿ ಮುನಿರಾಜು ಬಿನ್ ಲೇಟ್ ವೆಂಕಟರವಣಪ್ಪರವರಿಗೆ ಕೊಟ್ಟು ಮದುವೆ ಮಾಡಿಕೊಟ್ಟಿರುತ್ತಾರೆ. ನಮಗೆ ಇಬ್ಬರು ಗಂಡುಮಕ್ಕಳಿರುತ್ತಾರೆ. ನನಗೂ ನನ್ನ ಗಂಡನಿಗೆ ಸಂಸಾರದ ವಿಚಾರದಲ್ಲಿ ಮನಸ್ತಾಪಗಳಾಗಿ ಈಗ್ಗೆ 4 ವರ್ಷಗಳ ಹಿಂದೆ ನಾನು ಗಂಡನನ್ನು ಬಿಟ್ಟು ನನ್ನ ಇಬ್ಬರೂ ಮಕ್ಕಳೊಂದಿಗೆ ನನ್ನ ತವರು ಮನೆಗೆ ಬಂದು ನನ್ನ ತಂದೆ-ತಾಯಿಯವರೊಂದಿಗೆ ಹಾಗೂ ನನ್ನ ಇಬ್ಬರು ಗಂಡು ಮಕ್ಕಳೊಂದಿಗೆ ವಾಸವಾಗಿರುತ್ತೇನೆ. ನಾನು ನಮ್ಮ ತಂದೆ ಮತ್ತು ತಾಯಿಯವರು ಕಬ್ಬಿಣದ ಮೊರ, ಜರಡಿ ವ್ಯಾಪಾರ ಮಾಡಿಕೊಂಡು ಜೀವನ ಮಾಡಿಕೊಂಡಿರುತ್ತೇವೆ. ಹೀಗಿರುವಲ್ಲಿ ನಮ್ಮ ಪಕ್ಕದ ಮನೆಯ ವಾಸಿಗಳಾದ ಬಲಜಿಗ ಜನಾಂಗದ ಲಕ್ಷ್ಮೀಪತಿ ಮತ್ತು ಆತನ ಹೆಂಡತಿ ರೂಪರವರು ಈಗ್ಗೆ 3-4 ವರ್ಷಗಳಿಂದಲೂ ಸಹ ಕೋಳಿ ಮತ್ತು ಕುರಿಗಳ ವಿಚಾರದಲ್ಲಿ ನಮ್ಮಗಳ ಮೇಲೆ ಹಲವಾರು ಬಾರಿ ಜಗಳ ಮಾಡುತ್ತಿದ್ದರು. ಈಗಿರುವಲ್ಲಿ ಈಗ್ಗೆ ಒಂದು ವಾರದ ಹಿಂದೆ ನಮ್ಮ ಮಕ್ಕಳನ್ನು ಲಕ್ಷ್ಮೀಪತಿ ಮತ್ತು ರೂಪ ರವರು ಹೊಡೆದಿದ್ದು, ಈ ವಿಚಾರದಲ್ಲಿ ನಮ್ಮ ತಂದೆ ಗಂಗಪ್ಪ ಮತ್ತು ತಾಯಿ ನರಸಮ್ಮ ರವರು ಕೇಳಲು ಲಕ್ಷ್ಮೀಪತಿ ರವರ ಮನೆಯ ಬಳಿ ಹೋದಾಗ ಲಕ್ಷ್ಮೀಪತಿ ಮತ್ತು ಆತನ ಹೆಂಡತಿ ರೂಪ ರವರು ದೊಣ್ಣೆಗಳಿಂದ ಹೊಡೆದಿರುತ್ತಾರೆ. ಆಗ ಹಿರಿಯರು ನ್ಯಾಯ ಪಂಚಾಯ್ತಿ ಮಾಡುವುದಾಗಿ ತಿಳಿಸಿದ್ದರಿಂದ ಪೊಲೀಸ್ ಠಾಣೆಯಲ್ಲಿ ದೂರು ನೀಡಿರುವುದಿಲ್ಲ. ದಿನಾಂಕ:14.02.2020 ಬೆಳಗ್ಗೆ 6.00 ಗಂಟೆ ಸಮಯದಲ್ಲಿ ನಮ್ಮ ತಂದೆ ವ್ಯಾಪಾರಕ್ಕಾಗಿ ಮನೆಯಿಂದ ಹೊರಗೆ ಹೋಗಿದ್ದು, ಅದೇ ಸಮಯಕ್ಕೆ ನಾನು ಮತ್ತು ನಮ್ಮ ತಾಯಿ ನರಸಮ್ಮರವರು ಬಟ್ಟೆ ಒಗೆದುಕೊಂಡು ಬರಲು ಕೊತ್ತಪಲ್ಲಿ ಗ್ರಾಮದ ಬಳಿ ಹೋಗಿದ್ದು ನನ್ನ ಇಬ್ಬರು ಮಕ್ಕಳು ಮನೆಯಲ್ಲಿ ನಿದ್ದೆ ಮಾಡುತ್ತಿದ್ದರು. ನಂತರ ನಾನು ಮತ್ತು ನಮ್ಮ ತಾಯಿ ನರಸಮ್ಮರವರು ಅದೇ ದಿನ ಬೆಳಗ್ಗೆ 09.00 ಗಂಟೆ ಸಮಯದಲ್ಲಿ ಮನೆಗೆ ವಾಪಸ್ ಬಂದಾಗ ನಾವು ಅಡುಗೆ ಮಾಡಲು ನಮ್ಮ ಮನೆಯ ಮುಂದೆ ನಾಲ್ಕೂ ಕಡೆ ಮಣ್ಣಿನ ಗೋಡೆ ಹಾಕಿ ಮೇಲ್ಛಾವಣಿಗೆ ತೆಂಗಿನ ಗರಿಗಳು ಹಾಕಿದ್ದು, ಆ ಗರಿಗಳಿಗೆ ಬೆಂಕಿ ಬಿದ್ದು ಉರಿಯುತ್ತಿದ್ದು, ನಮ್ಮ ಪಕ್ಕದ ಮನೆಯ ಕಟ್ಟಡ ಕಟ್ಟುತ್ತಿದ್ದ 3-4 ಜನರು ಬೆಂಕಿಗೆ ನೀರು ಹಾಕಿ ನಂದಿಸುತ್ತಿದ್ದರು. ಇದನ್ನು ನೋಡಿದ ನಮಗೆ ಗಾಬರಿಯಾಗಿ ಆ ಮನೆಯಲ್ಲಿ ಮಲಗಿಸಿದ್ದ ನನ್ನ ಮಕ್ಕಳಿಗೆ ಏನು ತೊಂದರೆ ಆಗಿದೆ ಎಂದು ಮನೆಯ ಒಳಗೆ ಹೋಗಿ ನೋಡಲಾಗಿ, ಮಕ್ಕಳಿಬ್ಬರೂ ಮಲಗಿಕೊಂಡಿದ್ದರು. ನಂತರ ನಾನು ತಾಯಿ ನರಸಮ್ಮರವರು ಲಕ್ಷ್ಮೀಪತಿ ಮತ್ತು ರೂಪರವರೇ ನಮ್ಮ ಮನೆಗೆ ಬೆಂಕಿ ಇಟ್ಟಿರುತ್ತಾರೆಂದು ಅವರನ್ನು ಬೈಯ್ಯುತ್ತಿದ್ದಾಗ, ಸದರಿ ರೂಪ ರವರು ನಾವು ಬೈಯ್ಯುತ್ತಿರುವುದನ್ನು ಕೇಳಿಸಿಕೊಂಡು ನೀವೇ ನಿಮ್ಮ ಮನೆಗೆ ಬೆಂಕಿ ಇಟ್ಟುಕೊಂಡಿದ್ದೀರಾ ನಮ್ಮನ್ನು ಏಕೆ ಬೈಯ್ಯುತ್ತೀರೆಂದು ಬೈದಾಡಿಕೊಂಡು ಇಬ್ಬರೂ ಸುಮ್ಮನಾಗಿರುತ್ತೇವೆ. ನಂತರ ಇದೇ ದಿನ ಸಂಜೆ 6.00 ಗಂಟೆ ಸಮಯದಲ್ಲಿ ನಮ್ಮ ತಂದೆ-ತಾಯಿಯವರು ಲಕ್ಷ್ಮೀಪತಿ ಮತ್ತು ರೂಪ ರವರನ್ನು ನಮ್ಮ ಮನೆಗೆ ಬೆಂಕಿ ಇಟ್ಟಿರುವ ವಿಚಾರನ್ನು ಕೇಳಲು ಅವರ ಮನೆಯ ಬಳಿ ಹೋದಾಗ ರೂಪಾರವರು ಮಾತುಗಳು ಬೇಕಿಲ್ಲ ಮೊದಲು ಹೊಡೆಯಿರಿ ಎಂದು ತನ್ನ ಗಂಡ ಲಕ್ಷ್ಮೀಪತಿರವರಿಗೆ ಹೇಳಿದ್ದು, ರೂಪಾ ಮತ್ತು ಲಕ್ಷ್ಮೀಪತಿ ಮತ್ತು ಇವರ ಸ್ನೇಹಿತೆ ಹೆಂಗಸರೊಬ್ಬರು[ ಹೆಸರು ತಿಳಿದಿರುವುದಿಲ್ಲ] ರವರು ದೊಣ್ಣೆಯಿಂದ ನಮ್ಮ ತಾಯಿಯ ಎರಡೂ ಕಾಲುಗಳ ತೊಡೆಗಳ ಮೇಲೆ ಮತ್ತು ಎಡಗೈ ಮುಂಗೈ ಬಳಿ ಹೊಡೆದು ಮೂಗೇಟು ಉಂಟುಮಾಡಿರುತ್ತಾರೆ. ಲಕ್ಷ್ಮೀಪತಿ ರವರು ದೊಣ್ಣೆಯಿಂದ ನಮ್ಮ ತಂದೆ ಗಂಗಪ್ಪರವರಿಗೆ ಹಣೆಗೆ, ಬಲಕೈ ಹೊಡೆದು ರಕ್ತಗಾಯಪಡಿಸಿರುತ್ತಾರೆ. ನಮ್ಮ ತಾಯಿಯನ್ನು ಬಿಡಿಸಲು ಅಡ್ಡ ಹೋದ ನನಗೆ ಎಡ ಹಣೆಯ ಬಳಿ, ಬಲಗೈ ಮುಂಗೈ ಬಳಿ ಮತ್ತು ಮೈಮೇಲೆ ಹೊಡೆದು ರಕ್ತಗಾಯ ಮತ್ತು ಮೂಗೇಟು ಉಂಟು ಮಾಡಿರುತ್ತಾರೆ. ನಂತರ ಮೂವರು ಸೇರಿ ಅವಾಚ್ಯ ಶಬ್ದಗಳಿಂದ ಬೈದು, ನಮ್ಮ ತಂಟೆಗೆ ಬಂದರೆ ನಿಮ್ಮನ್ನು ಇಲ್ಲಿಯೇ ಮುಗಿಸಿಬಿಡುತ್ತೇವೆಂದು ಪ್ರಾಣಬೆದರಿಕೆ ಹಾಕಿರುತ್ತಾರೆ. ನಂತರ ನಾವು ಸಕರ್ಾರಿ ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆದುಕೊಂಡಿರುತ್ತೇವೆ. ನಮ್ಮನ್ನು ಹೊಡೆದು, ಅವಾಚ್ಯವಾಗಿ ನಿಂಧಿಸಿ, ಪ್ರಾಣಬೆದರಿಕೆ ಹಾಕಿರುವ ಮೇಲ್ಕಂಡ ಲಕ್ಷ್ಮೀಪತಿ ಮತ್ತು ರೂಪಾ ಮತ್ತು ಇವರ ಸ್ನೇಹಿತೆ ಯವರ ಮೇಲೆ ಕಾನೂನು ರೀತ್ಯಾ ಕ್ರಮ ಜರುಸಲು ಕೋರಿರುತ್ತೇನೆ. ಹಿರಿಯರು ನ್ಯಾಯ-ಪಂಚಾಯ್ತಿ ಮಾಡುತ್ತೇವೆಂದು ತಿಳಿಸಿದ್ದು, ಇದುವರೆವಿಗೂ ಯಾವುದೇ ನ್ಯಾಯ-ಪಂಚಾಯ್ತಿ ಮಾಡದ ಕಾರಣ ಈ ದಿನ ತಡವಾಗಿ ಠಾಣೆಗೆ ಬಂದು ದೂರನ್ನು ನೀಡಿರುತ್ತೇನೆ, ಎಂದು ನೀಡಿದ ದೂರಿನ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿರುತ್ತೆ.
3. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.19/2020 ಕಲಂ. 15(ಎ), 32(3) ಕೆ.ಇ ಆಕ್ಟ್:-
ದಿನಾಂಕ 17/02/2020 ರಂದು ಬೆಳಿಗ್ಗೆ 10.15 ಗಂಟೆಗೆ ಮಾನ್ಯ ಪಿ ಎಸ್ ಐ ಸಾಹೇಬರು ನೀಡಿದ ವರದಿಯ ಸಾರಾಂಶವೇನೆಂದರೆ ದಿನಾಂಕ 17/02/2020 ರಂದು ಬೆಳಿಗ್ಗೆ 10 ಗಂಟೆಯಲ್ಲಿ ನಾನು ಠಾಣೆಯಲ್ಲಿದ್ದಾಗ ನನಗೆ ಬಂದ ಖಚಿತ ಮಾಹಿತಿ ಏನೆಂದರೆ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ಸರಹದ್ದಿಗೆ ಸೇರಿದ ಚಿಕ್ಕಬಳ್ಳಾಪುರ ತಾಲ್ಲೂಕು ಸಾಮಸೇನಹಳ್ಳಿ ಗ್ರಾಮದ ಕೃಷ್ಣಪ್ಪ ಬಿನ್ ವೆಂಕಟರವಣಪ್ಪ, 58 ವರ್ಷ, ಬಲಜಿಗರು, ಚಾಲಕ ವೃತ್ತಿ, ಸಾಮಸೇನಹಳ್ಳಿ ಗ್ರಾಮ ಚಿಕ್ಕಬಳ್ಳಾಪುರ ತಾಲ್ಲೂಕು, ಚಿಕ್ಕಬಳ್ಳಾಪುರ ಜಿಲ್ಲೆ ರವರು, ಅವರ ಮನೆಯ ಬಳಿ ಯಾವುದೇ ಪರವಾನಗಿ ಇಲ್ಲದೆ ಸಾರ್ವಜನಿಕರಿಗೆ ಮಧ್ಯಪಾನ ಸೇವನೆ ಮಾಡಲು ಅವಕಾಶ ಮಾಡಿ ಕೊಡುತ್ತಿರುವುದಾಗಿ ನನಗೆ ಖಚಿತ ಮಾಹಿತಿ ಬಂದಿರುತ್ತದೆ, ಈ ಬಗ್ಗೆ ಆಸಾಮಿಯ ವಿರುದ್ದ ಕಲಂ 15(ಎ), 32(3) ಕೆ.ಇ. ಆಕ್ಟ್ ರೀತ್ಯಾ ಆಸಾಮಿಯ ವಿರುದ್ದ ಪ್ರಕರಣ ದಾಖಲಿಸಿಕೊಳ್ಳಲು ಸೂಚಿಸಿದ ಮೇರೆಗೆ ಈ ಪ್ರ ವ ವರದಿ.
4. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.95/2020 ಕಲಂ. 428-429 ಐ.ಪಿ.ಸಿ & 4,8,9,11KARNTAKA PREVENTION OF COW SLANGHTER & CATTLE PREVENTION ACT, 11(1) PREVENTION OF CRUELTY TO ANIMALS ACT, 192(A) ಐ.ಎಂ.ವಿ ಆಕ್ಟ್ :-
ದಿನಾಂಕ:16/02/2020 ರಂದು ಮದ್ಯಾಹ್ನ 1.00 ಗಂಟೆಗೆ ಪಿರ್ಯಾದಿದಾರರಾದ ಶ್ರೀಮತಿ. ನಂದಿನಿ ಮಟ್ಟಿಯಾನಿ ಕೋಂ ನೀರಜ್ ಮಟ್ಟಿಯಾನಿ, 47 ವರ್ಷ, HONARRY OFFICER OF ANIMAL WELFARE BOARD OF INDIA, ID NO: HDAWO/B9/2018-19/225 . ವಾಸ: 1 C, 506, ದಿವ್ಯಶ್ರೀ ಎಲಾನ್, ಸರ್ಜಾಪುರ ರೋಡ್ ಬೆಂಗಳೂರು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆನೆಂದರೆ ದಿನಾಂಕ: 16/02/2020 ರಂದು ಮದ್ಯಾಹ್ನ 12.00 ಗಂಟೆಗೆ ಚಿಂತಾಮಣಿ ತಾಲ್ಲೂಕಿನ ಚಿನ್ನಸಂದ್ರ ಗ್ರಾಮದ ಜಾಮೀಯಾ ಮಸೀದಿ ಹತ್ತಿರ 9 ಓಂಟೆಗಳು ಇದ್ದು ನಾವು ಅಲ್ಲಿಗೆ ಖುದ್ದು ಭೇಟಿ ಮಾಡಿ ನೋಡಿರುತ್ತೇವೆ. ಓಂಟೆಗಳು ರಾಜಸ್ಥಾನದ ರಾಜ್ಯ ಪ್ರಾಣಿಯಾಗಿದ್ದು ರಾಜಸ್ಥಾನ ರಾಜ್ಯದ ನ್ಯಾಯಾಲಯದ ಆದೇಶದ ಪ್ರಕಾರ ಸದರಿ ರಾಜ್ಯದ ಹೊರಗೆ ಓಂಟೆಗಳನ್ನು ಸಾಗಾಣಿಕೆ ಮಾಡುವುದು ನಿಷೇಧವಾಗಿರುತ್ತೆ. ಆದರಂತೆ ಇಲ್ಲಿರುವ ಪರಿಸರಕ್ಕೆ ಓಂಟೆಗಳು ಹೊಂದಿಕೊಳ್ಳದೆ ಚರ್ಮದ ಮತ್ತು ಇತರೆ ಆರೋಗ್ಯದ ಸಮಸ್ಯೆಗಳು ಉಂಟಾಗುವ ಸಾಧ್ಯತೆಗಳು ಇರುತ್ತೆ. ಇಲ್ಲಿರುವ ಓಂಟೆಗಳ ಕಾಲುಗಳಿಗೆ ಹಗ್ಗವನ್ನು ಕಟ್ಟಿ, ಆಹಾರ ಮತ್ತು ನೀರನ್ನು ಕೊಡದೆ ತೊಂದರೆ ಮಾಡುತ್ತಿರುತ್ತಾರೆ. ಈ ಓಂಟೆಗಳನ್ನು ಅಕ್ರಮವಾಗಿ ಮಾಂಸಕ್ಕಾಗಿ ಕೊಲ್ಲಲು ತಂದಿರುತ್ತಾರೆ. Animal welfare board of India(AWBI) ದಿನಾಂಕ:15/07/2019 ರಂದು ಓಂಟೆಗಳನ್ನು ಕಾನೂನು ಬಾಹಿರವಾಗಿ ಮಾಂಸಕ್ಕಾಗಿ ಕೊಲ್ಲುವುದನ್ನು ಸಂಪೂರ್ಣವಾಗಿ ನಿಷೇಧಿಸಿರುತ್ತೆ. ಸದರಿ ಓಂಟೆಗಳನ್ನು ಅತ್ಯಂತ್ಯ ಕ್ರೂರವಾಗಿ ಕಾನೂನು ಬಾಹಿರವಾಗಿ ರಾಜಸ್ಥಾನ ಮತ್ತು ಗುಜರಾತ್ ರಾಜ್ಯಗಳಿಂದ ಅಮಾನವೀಯತೆಯಿಂದ ತರಸಿಕೊಂಡಿರುತ್ತಾರೆ. ಆದ್ದರಿಂದ ಸದರಿ ಓಂಟೆಗಳನ್ನು ಇಲ್ಲಿಗೆ ತಂದಿರುವ ಮಾಲೀಕರು, ಸಾಗಾಣಿಕೆದಾರರು ಹಾಗೂ ಪ್ರಾಣಿವಧೆ ಮಾಡುವವರ ಮೇಲೆ ಕಾನೂನು ರೀತ್ಯಾ ಕ್ರಮ ಕೈಗೊಂಡು ಸದರಿ ಓಂಟೆಗಳನ್ನು ಸುರಕ್ಷತೆಗಾಗಿ ಪ್ರಾಣಿಧಾಮ ಅಥವಾ ಗೋಶಾಲೆಗೆ ಕಳುಹಿಸಿಕೊಡಲು ಕೋರಿರುತ್ತೆ.
5. ದಿಬ್ಬೂರಹಳ್ಳಿ ಪೊಲೀಸ್ ಠಾಣೆ ಮೊ.ಸಂ.15/2020 ಕಲಂ. 307-504-506 ಐ.ಪಿ.ಸಿ:-
ಈ ದಿನ ದಿನಾಂಕ 17/02/2020 ರಂದು ಫಿರ್ಯಾದಿದಾರರಾದ ಶ್ರೀ.ನಾರಾಯಣಸ್ವಾಮಿ ಬಿನ್ ಲೇಟ್ ವೆಂಕಟರಾಯಪ್ಪ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಂಶವೇನೆಂದರೆ ತನಗೆ ನಾಲ್ಕು ಜನ ಮಕ್ಕಳಿದ್ದು ಆ ಪೈಕಿ ತನ್ನ ಮೊದಲನೇ ಮಗನಾದ ಗಗನ್ ಬಿನ್ ನಾರಾಯಣಸ್ವಾಮಿ, 20ವರ್ಷ ರವರು 9ನೇ ತರಗತಿಯವರೆಗೂ ವಿದ್ಯಾಭ್ಯಾಸಮಾಡಿ ನಂತರ ತನ್ನೊಂದಿಗೆ ಜಿರಾಯ್ತಿ ಮಾಡಿಕೊಂಡಿದ್ದು. ತಮ್ಮ ಅಣ್ಣನಾದ ದ್ಯಾವಪ್ಪ ಎಂಬುವರು ಈಗ್ಗೆ ಸುಮಾರು ಒಂದು ತಿಂಗಳ ಹಿಂದೆ ಕಾಯಿಲೆ ಬಿದಿದ್ದಾಗ ತಮ್ಮ ಅಣ್ಣನನ್ನು ಬೆಂಗಳೂರಿನ ಎಂ.ಎಸ್.ರಾಮಯ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಿದ್ದು ಸುಮಾರು 10 ದಿನಗಳ ಕಾಲ ತಮ್ಮ ಅಣ್ಣನಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಕೊಡಿಸಿದ್ದು. ತಮ್ಮ ಅಣ್ಣನ್ನು ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಿದ್ದಾಗ ತನ್ನ ಮಗನಾದ ಗಗನ್ ತಮ್ಮ ಅಣ್ಣನೊಂದಿಗೆ 10 ದಿನಗಳ ಕಾಲ ಆಸ್ಪತ್ರೆಯಲ್ಲಿ ಇದ್ದನು ಚಿಕಿತ್ಸೆಯನ್ನು ಪಡೆಯುತ್ತಿದ್ದ ತಮ್ಮ ಅಣ್ಣ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುತ್ತಾನೆ. ಅಂದಿನಿಂದ ತಮ್ಮ ಅಣ್ಣನ ಮಗನಾದ ಶಾಂತ್ ಕುಮಾರ್ ಬಿನ್ ದ್ಯಾವಪ್ಪ, 24 ವರ್ಷ ಎಂಬುವನು ಅತನ ತಂದೆಯಾದ ದ್ಯಾವಪ್ಪ ರವರನ್ನು ತಾನು ಮತ್ತು ತನ್ನ ಮಗ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸಾಯಿಸಿರುವುದಾಗಿ ತಮ್ಮನ್ನೂ ಸಾಯಿಸುವುದಾಗಿ ಗ್ರಾಮದಲ್ಲಿ ಹೇಳಿಕೊಂಡು ತಿರುಗಾಡುತ್ತಿದ್ದನು ಹೀಗಿರುವಲ್ಲಿ ಈ ದಿನ ದಿನಾಂಕ 17/02/2020 ರಂದು ಬೆಳಿಗ್ಗೆ ಸುಮಾರು 8-20 ಗಂಟೆ ಸಮಯದಲ್ಲಿ ತಾನು ಮತ್ತು ತಮ್ಮ ಗ್ರಾಮದ ವಾಸಿಯಾದ ದೇವರಾಜ ಬಿನ್ ಮುನಿವೆಂಕಟಪ್ಪ ರವರು ತಮ್ಮ ಮನೆಯ ಬಳಿ ಕುಳಿತುಕೊಂಡು ತಮ್ಮ ಅಣ್ಣ ಮೃತಪಟ್ಟಿದ್ದು ತಮ್ಮ ಅಣ್ಣನಿಗೆ ಸರ್ಕಾರದಿಂದ ಯಾವುದಾದರು ಪರಿಹಾರ ಬರುವುದಿದ್ದರೆ ತಮ್ಮ ಅತ್ತಿಗೆಗೆ ಕೊಡಿಸಿಕೊಡಬೇಕು ಎಂದು ದೇವರಾಜನ ಬಳಿ ತಾನು ಹೇಳುತ್ತಿದ್ದಾಗ ತಮ್ಮ ಅಣ್ಣನ ಮಗನಾದ ಶಾಂತಕುಮಾರ್ ರವರು ತನ್ನ ಬಳಿಗೆ ಬಂದು ಏನೋ ಲೋಪರ್ ನನ್ನ ಮಗನೆ ನೀನು ಮತ್ತು ನಿನ್ನ ಮಗ ನಮ್ಮ ತಂದೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸಾಯಿಸಿದ್ದು ಅಲ್ಲದೆ ನಮ್ಮ ತಂದೆಯ ಬಗ್ಗೆ ಮಾತನಾಡುತ್ತಿದ್ದೀಯ ಎಂದು ತನ್ನ ಮೇಲೆ ಗಲಾಟೆಮಾಡಿದ್ದು ಆಗ ಅಲ್ಲಿಯೇ ಇದ್ದ ತನ್ನ ಮಗ ಗಗನ್ ಅಡ್ಡಬಂದು ನಿಮ್ಮ ತಂದೆಗೆ ನಾವು ಇಷ್ಟು ಕಷ್ಟಪಟ್ಟು ಆಸ್ಪತ್ರೆಯಲ್ಲಿ ತೋರಿಸಿದರು ಸಹ ನಿನಗೆ ನಿಯತ್ತಿಲ್ಲ ಎಂದಿದ್ದಕ್ಕೆ ಶಾಂತ್ ಕುಮಾರ್ ರವರು ನಿನ್ನನ್ನು ಮತ್ತು ನಿನ್ನ ತಂದೆಯನ್ನು ಸಾಯಿಸುವರೆಗೂ ನಾನು ನಿದ್ದೆಮಾಡುವುದಿಲ್ಲ ಲೋಪರ್ ನನ್ನ ಮಕ್ಕಳ ಎಂದು ತನ್ನ ಮಗನನ್ನು ಕೈಗಳಿಂದ ಹೊಡೆದಿದ್ದು ಆಗ ತಮ್ಮ ಗ್ರಾಮದ ವಾಸಿಗಳಾದ ವೆಂಕಟರವಣಪ್ಪ ಬಿನ್ ಪಾಪಣ್ಣ ಮತ್ತು ಜಗದೀಶ್ ಬಿನ್ ಚಿಕ್ಕಕಾಳಪ್ಪ ರವರು ಅಡ್ಡಬಂದು ಜಗಳ ಬಿಡಿಸಿದ್ದು ನಂತರ ತಾನು ಮತ್ತು ತನ್ನ ಮಗ ಗಗನ್ ರವರು ತಮ್ಮ ಮನೆಯ ಬಳಿಗೆ ಹೋದಾಗ ಶಾಂತ್ ಕುಮಾರ್ ರವರು ಅವರ ಮನೆಗೆ ಹೋಗಿ ಒಂದು ಮೊಚ್ಚನ್ನು ತೆಗೆದುಕೊಂಡು ಬಂದು ತನ್ನನ್ನು ಮತ್ತು ತನ್ನ ಮಗ ಗಗನ್ ರವರನ್ನು ಕುರಿತು ಲೋಪರ್ ನನ್ನ ಮಕ್ಕಳ ಇವತ್ತು ನಿಮ್ಮ ಇಬ್ಬರನ್ನು ಸಾಯಿಸಿಬಿಡುತ್ತೇನೆ ಎಂದು ಹೇಳಿ ತಮ್ಮನ್ನು ಸಾಯಿಸುವ ಉದ್ದೇಶ ದಿಂದ ಮೊಚ್ಚಿನಲ್ಲಿ ತನ್ನ ಮಗನನ್ನು ಹಾಕಿ ಕೊಲೆಮಾಡಲು ಬಂದನು ಆಗ ತನ್ನ ಮಗ ಆತನಿಂದ ತಪ್ಪಿಸಿಕೊಂಡು ಮನೆಯ ಒಳಕ್ಕೆ ಹೋದಾಗ ಮನೆಯಲ್ಲಿ ಶಾಂತ್ ಕುಮಾರ್ ಮೊಚ್ಚಿನಿಂದ ತನ್ನ ಮಗನ ತಲೆಗೆ ಹಾಕಲು ಹೋದನು ಆಗಲೂ ತನ್ನ ಮಗ ತಪ್ಪಿಸಿಕೊಂಡಿದ್ದು ಮೊಚ್ಚು ತಮ್ಮ ಮನೆಯ ಒಳಗೆ ಗೋಡೆಗೆ ತಗುಲಿರುತ್ತೆ. ಆದರೂ ಸಹ ಶಾಂತಕುಮಾರ್ ತನ್ನ ಮಗನನ್ನು ಬಿಡದೆ ಓಡಿಸಿಕೊಂಡು ಹೋಗಿ ಮನೆಯ ಬಚ್ಚಲಿನ ಬಳಿ ಶಾಂತಕುಮಾರ್ ತನ್ನ ಮಗನನ್ನು ಸಾಯಿಸಲು ಮೊಚ್ಚಿನಿಂದ ತನ್ನ ಮಗನ ಕತ್ತಿಗೆ ಹಾಕಲು ಹೋದಾಗ ತನ್ನ ಮಗ ಆತನ ಎಡ ಕೈನ್ನು ಅಡ್ಡಇಟ್ಟಿದ್ದಕ್ಕೆ ತನ್ನ ಮಗನ ಎಡ ಅಂಗೈ ಅರ್ಧಭಾಗಕ್ಕೆ ತೀವ್ರ ಸ್ವರೂಪದ ಗಾಯವಾಗಿದ್ದು ಈ ಬಗ್ಗೆ ಕಾನೂನು ರೀತ್ಯ ಕ್ರಮ ಕೈಗೊಳ್ಳಲು ಕೋರಿ ನೀಡಿರುವ ದೂರಾಗಿರುತ್ತೆ.
6. ಗೌರಿಬಿದನೂರು ಪುರ ಪೊಲೀಸ್ ಠಾಣೆ ಮೊ.ಸಂ.29/2020 ಕಲಂ. 394 ಐ.ಪಿ.ಸಿ:-
ದಿನಾಂಕ 17/02/2020 ರಂದು ಬೆಳಗ್ಗೆ 04:00 ಗಂಟೆಯಲ್ಲಿ ಪಿರ್ಯಾದಿ ನರಸಿಂಗಪ್ಪ ಬಿನ್ ಬಾಲಕೃಷ್ಣ 21 ವರ್ಷ ಬೆಸ್ತರ ಜನಾಂಗದ ( ಅಂಬಿಗರ ಚೌಡಯ್ಯ ) ಸೌರಾಷ್ಡ್ರ ಹಳ್ಳಿ ಗ್ರಾಮ ಯಾದಗಿರಿ ಜಿಲ್ಲೆ ರವರು ಠಾಣೆಯಲ್ಲಿ ನೀಡಿದ ದೂರಿನ ಸಂಕ್ಷಿಪ್ತ ಸಾರಾಂಶವೇನೆಂದರೆ, ನಾನು ಯಾದಗಿರಿ ತಾಲ್ಲೂಕಿನ ಸೌರಾಷ್ಟ್ರ ಹಳ್ಳಿ ಗ್ರಾಮದ ವಾಸಿಯಾಗಿದ್ದು ಹೀಗ್ಗೆ 1 ತಿಂಗಳ ಹಿಂದೆ ಬೆಂಗಳೂರಿಗೆ ಸೆಂಟ್ರಿಂಗ್ ಕೆಲಸ ಮಾಡಲು ಬಂದಿದ್ದೆ. ದಿನಾಂಕ 16/02/2020 ರಂದು ನಮ್ಮ ತಾಯಿಯು ನನಗೆ ಕರೆ ಮಾಡಿ ನಮ್ಮ ಪಕ್ಕದ ಮನೆಯನ್ನು ನಾವು ಖರೀದಿಸಿದ್ದು ಅದನ್ನು ನೊಂದಣಿ ಮಾಡಿಸಿಕೊಳ್ಳಬೇಕಾಗಿರುವುದರಿಂದ ಬೇಗನೆ ಊರಿಗೆ ಬರಲು ತಿಳಿಸಿದರು. ಆದ್ದರಿಂದ ನಾನು ದಿನಾಂಕ 16/02/2020 ರಂದು ನನ್ನ ಬಳಿ ಇದ್ದ 2500 ರೂ ಹಣದೊಂದಿಗೆ ಬೆಂಗಳೂರಿನ ರೈಲ್ವೆ ಸ್ಟೇಷನ್ ಗೆ ಹೋಗಿ ಯಾದಗಿರಿ ಕಡೆಗೆ ಹೋಗುವ ರೈಲಿನ ಬಗ್ಗೆ ವಿಚಾರಿಸಿ ನಂತರ 150 ರೂ ಕೊಟ್ಟು ಯಾದಗಿರಿ ಗೆ ಟಿಕೆಟ್ ಖರೀದಿಸಿದೆ. ನಂತರ ರಾತ್ರಿ ಸುಮಾರು 10:30 ಗಂಟೆಗೆ ಬೆಂಗಳೂರನ್ನು ಬಿಟ್ಟು ರಾತ್ರಿ ಸುಮಾರು 12:00 ಗಂಟೆ ಸಮಯಕ್ಕೆ ಗೌರಿಬಿದನೂರಿಗೆ ಬಂದಾಗ ನನಗೆ ಹಸಿವಾಗಿದ್ದರಿಂದ ರೈಲು ನಿಲ್ಲಿಸಿದ ಕೂಡಲೇ ಪ್ಲಾಟ್ ಫಾರಂ 2 ಮತ್ತು 3 ರ ಮದ್ಯೆ ಇಳಿದು ಅಲ್ಲಿ ಊಟದ ಪಾಕೆಟ್ ಗಳನ್ನು ಮಾರುತ್ತಿದ್ದ ವ್ಯಕ್ತಿಯ ಬಳಿ 30 ರೂ ಕೊಟ್ಟು ಚಿತ್ರಾನ್ನ ಪಾಕೆಟ್ ತೆಗೆದುಕೊಂಡು ಅಲ್ಲಿದ್ದ ಮೇಜಿನ ಮೇಲೆ ಕುಳಿತು ಊಟ ಮಾಡುತ್ತಿದ್ದಾಗ ನಾನು ಬಂದಿದ್ದ ರೈಲು ಹೊರಟು ಹೋಯಿತು. ನಂತರ ಬೇರೆ ರೈಲಿನಲ್ಲಿ ಹೋಗೋಣವೆಂದು ಅಲ್ಲಿಯೇ ಕುಳಿತುಕೊಂಡು ಊಟ ಮಾಡುತ್ತಿದ್ದಾಗ ಯಾರೋ ಇಬ್ಬರು ಅಪರಿಚಿತ ವ್ಯಕ್ತಗಳು ಬಂದು ನಮಗೆ ಊಟ ಕೊಡಿಸುವಂತೆ ಕೇಳಿದರು. ಆಗ ನಾನು ನಾನೇಕೆ ಊಟ ಕೊಡಿಸಬೇಕು ನೀವೆ ತೆಗೆದುಕೊಂಡು ತಿನ್ನಿ ಎಂದು ತಿಳಿಸಿದೆ. ಆಗ ಆ ಇಬ್ಬರಲ್ಲಿ ಒಬ್ಬ ವ್ಯಕ್ತಿಯು ತನ್ನ ಬಳಿ ಇದ್ದ ಚಾಕುವಿನಿಂದ ನನ್ನ ಬಲ ಹಣೆಯ ಮೇಲೆ ಹೊಡೆದು ರಕ್ತಗಾಯ ಪಡಿಸಿದನು. ಆಗ ನನಗೆ ರಕ್ತ ಬರುತ್ತಿದ್ದರಿಂದ ನಾನು ಕೈಯ್ಯನ್ನು ಗಾಯದ ಬಳಿ ಹಿಡಿದುಕೊಂಡಿದ್ದ ಸಮಯದಲ್ಲಿ ಒಬ್ಬನು ನನ್ನ ಶರ್ಟ್ ಜೇಬಿನಿಂದ ನನ್ನ ಫೋನನ್ನು ಕಿತ್ತುಕೊಂಡನು. ನನಗೆ ಚಾಕುವಿನಿಂದ ಹೊಡೆದ ವ್ಯಕ್ತಿಯು ನನ್ನ ಆಧಾರ್ ಕಾರ್ಡ, 2300 ರೂ ಹಣ ಹಾಗೂ ರೈಲು ಟಿಕೆಟ್ ನ್ನು ಕಿತ್ತುಕೊಂಡು ಓಡಲು ಪ್ರಾರಂಭಿಸಿದರು. ಆಗ ನಾನು ಸಹ ಅವರ ಹಿಂದೆ ಹಿಂಭಾಲಿಸಿಕೊಂಡು ಓಡಿ ಹೋಗುತ್ತಿದ್ದಾಗ ರಾತ್ರಿ ಸುಮಾರು 12:15 ಗಂಟೆ ಸಮಯದಲ್ಲಿ ದುರ್ಗಾಗ್ರಾಂಡ್ ಹೋಟೆಲ್ ಸಮೀಪ ಹೋಗುತ್ತಿದ್ದಾಗ ಗಸ್ತಿನಲ್ಲಿದ್ದ ಪೊಲೀಸರನ್ನು ಕಂಡು ತಾನು ಓಡಿಹೊಗುತ್ತಿದ್ದವರನ್ನು ತೋರಿಸಿ ಅವರು ನನ್ನ ಹಣ ಮತ್ತು ಮೊಬೈಲನ್ನು ಕಿತ್ತುಕೊಂಡು ಹೋಗುತ್ತಿರುವ ವಿಷಯವನ್ನು ಹೇಳಿದ್ದು ಆಗ ಪೊಲೀಸರು ಒಬ್ಬ ವ್ಯಕ್ತಿಯನ್ನು ಹಿಡಿಕೊಂಡಿದ್ದು ಮತ್ತೊಬ್ಬನು ಕತ್ತಲಿನಲ್ಲಿ ತಪ್ಪಿಸಿಕೊಂಡು ಓಡಿಹೊದನು. ನಂತರ ಪೊಲೀಸರು ತನ್ನನ್ನು ಮತ್ತು ತನ್ನಿಂದ ಫೋನ್ ಕಿತ್ತುಕೊಂಡ ವ್ಯಕ್ತಿಯನ್ನು ಪೊಲೀಸ್ ಠಾಣೆಗೆ ಕರೆದುಕೊಂಡು ಬಂದು ಆತನ ಹೆಸರು ವಿಳಾಸವನ್ನು ವಿಚಾರಿಸಿದ್ದು ಆತನು ತನ್ನ ಹೆಸರು ನಯಾಜ್ ಬಿನ್ ಷಫಿ ಉಲ್ಲಾ 25 ವರ್ಷ ಬಾಳೆಹಣ್ಣು ವ್ಯಾಪಾರ ಆಂಜನೇಯ ಸ್ವಾಮಿ ದೇವಸ್ತಾನದ ಬಳಿ ನದಿಗಡ್ಡೆ ಎಂದು ತಿಳಿಸಿ ತನ್ನ ಜೊತೆ ಇದ್ದವನು ಶಾಮಿರ್ ಬಿನ್ ಲೇಟ್ ಅಲ್ಲಾಬಕಾಶ್ ಟಿಪ್ಪುನಗರ ಎಂದು ತಿಳಿಸಿದನು. ತಾನು ರಾತ್ರಿ ಸುಮಾರು 12:00 ಗಂಟೆ ಸಮಯದಲ್ಲಿ ಗೌರಿಬಿದನೂರು ರೈಲ್ವೆ ನಿಲ್ದಾಣದ 2 ಮತ್ತು 3 ನೇ ಪ್ಲಾಟ್ ಫಾರಂ ನಲ್ಲಿ ಇರುವ ಮೇಜಿನ ಮೇಲೆ ಕುಳಿತುಕೊಂಡು ಊಟ ಮಾಡುತ್ತಿದ್ದಾಗ ಬ್ಲೇಡ್ ನಿಂದ ನನ್ನ ಹಣೆಯ ಮೇಲೆ ಹೊಡೆದು ರಕ್ತಗಾಯ ಮಾಡಿ ನನ್ನ ಬಳಿ ಇದ್ದ ಮೊಬೈಲ್ ಮತ್ತು 2500 ರೂ ನಗದು ಹಣ, ಆಧಾರ್ ಕಾರ್ಡ ಹಾಗೂ ರೈಲ್ವೆ ಟಿಕೆಟ್ ನ್ನು ಕಿತ್ತುಕೊಂಡು ಹೋಗಿರುವ ಮೇಲ್ಕಂಡ ವ್ಯಕ್ತಿಗಳ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ನೀಡಿದ ದೂರಿನ ಮೇರೆಗೆ ಪ್ರಕರಣವನ್ನು ದಾಖಲಿಸಿರುತ್ತೇನೆ.
7. ಗುಡಿಬಂಡೆ ಪೊಲೀಸ್ ಠಾಣೆ ಮೊ.ಸಂ.26/2020 ಕಲಂ. ಮನುಷ್ಯ ಕಾಣೆ :-
ದಿನಾಂಕ;17/02/2020 ರಂದು ಮದ್ಯಾಹ್ನ 13;00 ಗಂಟೆಗೆ ಪಿರ್ಯಾದಿದಾರರಾದ ಪರಮೇಶ್ ಬಿನ್ ಗೋವಿಂದಪ್ಪ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂಧರೆ ತಮ್ಮ ಮನೆಯಲ್ಲಿ ತಾನು ಮತ್ತು ತನ್ನ ಹೆಂಡತಿ ವೆಂಕಟರವಣಮ್ಮ ಹಾಗೂ ತಮ್ಮಮಕ್ಕಳು .ತನ್ನ ತಂದೆ ಯಾದ ಗೋವಿಂದಪ್ಪ ಲೇಟ್ ಬಾಲಪ್ಪ ರವರು.70 ವರ್ಷ,ಬೋವಿ ಜನಾಂಗ,ಜಿರಾಯ್ತಿ ವಾಸ; ಹಳೇ ಗುಡಿಬಂಢೆ ರವರೊಂದಿಗೆ ವಾಸವಾಗಿರುತ್ತೇವೆ.ತಮ್ಮ ತಂದೆಯವರಿಗೆ ಮಾನಸಿಕ ಅಸ್ವಸ್ಥರಾಗಿದ್ದರು ಮತ್ತು ಚಿಕಿತ್ಸೆಯನ್ನು ಕೊಡಿಸಿಕೊಂಡು ತಮ್ಮ ಮನೆಯಲ್ಲಿಯೇ ಇರಿಸಿಕೊಂಡಿದ್ದೆವು ಆದರೆ ದಿನಾಂಕ;14/02/2020 ರಂದು ಮದ್ಯಾಹ್ನ 3-00 ಗಂಟೆಯಲ್ಲಿ ತಮ್ಮ ಮನೆಯಿಂದ ದೊಡ್ಡಬಳ್ಳಾಪುರದಲ್ಲಿ ತಾಲ್ಲೂಕಿನ ಮುತ್ತೂರು ಗ್ರಾಮದಲ್ಲಿರುವ ತನ್ನ ಅಕ್ಕ ಮುದ್ದುರತ್ನಮ್ಮ ರವರ ಮನೆಗೆ ಹೋಗುವುದಾಗಿ ಹೇಳಿ ಹೋದರು.ಅದರಂತೆ ಅದೇ ದಿನ ರಾತ್ರಿ 8-00 ಗಂಟೆಯಲ್ಲಿ ತಮ್ಮ ಅಕ್ಕ ಮುದ್ದುರತ್ನಮ್ಮ ರವರಿಗೆ ತಾನು ಕರೆ ಮಾಡಿ ತಮ್ಮ ತಂದೆ ಗೋವಿಂದಪ್ಪ ರವರ ಬಗ್ಗೆ ತಾನು ವಿಚಾರಿಸಲಾಗಿ ಆಗ ತಮ್ಮ ಅಕ್ಕ ಮುದ್ದುರತ್ನಮ್ಮ ತಮ್ಮ ಮನೆಗೆ ತಂದೆ ಗೋವಿಂದಪ್ಪ ರವರು ಬಂದಿರುವುದಿಲ್ಲಾ ಎಂದು ತಿಳಿಸಿದರು ಆಗ ತಾನು ಇತರೆ ಸಂಬಂದಿಕರ ಮನೆಗಳಿಗೆ ಪೋನ್ ಮಾಡಿ ವಿಚಾರಿಸಿದೆ ಆದರೆ ಅಲ್ಲಿಗೂ ಸಹ ಹೋಗಿರುವುದಿಲ್ಲಾ ನಂತರ ತಾನು ಎಲ್ಲಾ ಸಂಬಂದಿಕರ ಮನೆಗಳಿಗೆ ಹೋಗಿ ವಿಚಾರಿಸಿಕೊಂಡು ಹುಡಕಾಡಿದರೂ ಸಹ ಪತ್ತೆಯಾಗಿರುವುದಿಲಾ ಆದ್ದರಿಂದ ಕಾಣೆಯಾಗಿರುವ ತಮ್ಮ ತಂದೆಯನ್ನು ಪತ್ತೆ ಮಾಡಿಕೊಡಬೇಕಾಗಿ ತಮ್ಮಲ್ಲಿ ಈ ದಿನ ತಡವಾಗಿ ಠಾಣೆಗೆ ಹಾಜರಾಗಿ ನೀಡಿದ ದೂರಿನ ಮೇರೆಗೆ ಠಾಣಾ ಮೊ.ಸಂ;26/2020 ಕಲಂ; ಮನುಷ್ಯ ಕಾಣೆ ರೀತ್ಯ ಪ್ರಕರಣವನ್ನು ದಾಖಲಿಸಿಕೊಂಡಿರುತ್ತೆ
8. ಕೆಂಚಾರ್ಲಹಳ್ಳಿ ಪೊಲೀಸ್ ಠಾಣೆ ಮೊ.ಸಂ.14/2020 ಕಲಂ. 379 ಐ.ಪಿ.ಸಿ :-
ದಿನಾಂಕ 17/02/2020 ರಂದು ಮಧ್ಯಾಹ್ನ 1-00 ಗಂಟೆಗೆ ಚಿಂತಾಮಣಿ ಗ್ರಾಮಾಂತರ ಠಾಣೆಯ ಸಿಹೆಚ್ ಸಿ-124 ನರಸಿಂಹಮೂರ್ತಿ ರವರು ಕೃತ್ಯ ನಡೆದ ಸ್ಥಳದ ಆಧಾರದ ಮೇರೆಗೆ ಘನ ನ್ಯಾಯಾಲಯದ ಅನುಇಮತಿ ಪಡೆದ ತಮ್ಮ ಠಾಣೆಯ ಮೊ.ಸಂ. 407/2019 ರ ಕಡತವನ್ನು ಹಾಜರುಪಡಿಸಿದ್ದರ ಸಾರಾಂಶವೇನೆಂದರೆ: ದಿನಾಂಕ 24/10/2019 ರಂದು ಸಂಜೆ 6-00 ಗಂಟೆಗೆ ಹೆಚ್ ಸಿ 165 ಟಿ ಎಂ ಚಂದ್ರಪ್ಪ ಹಾಗೂ ಸಿಪಿಸಿ-436 ಸರ್ವೆಶ ಸಿಪಿಸಿ-430 ನರಸಿಂಹಯ್ಯ ರವರು ಪಿ.ಎಸ್.ಐ ರವರ ನೇಮಕದಂತೆ ಚಿಂತಾಮಣಿ ಗ್ರಾಮಾಂತರ ಠಾಣಾ ಸರಹದ್ದಿನ ಕಾಗತಿ, ಬಚ್ಚವಾರಹಳ್ಳಿ, ಬಡಗವಾರಹಳ್ಳಿ ಇತ್ಯಾದಿ ಕಡೇ ಗಸ್ತು ಮಾಡಿಕೊಂಡು ಸಂಝೆ 5-00 ಗಂಟೆಗೆ ಚೊಕ್ಕರೆಡ್ಡಿಹಳ್ಳಿ ಗ್ರಾಮದ ಬಳಿ ಬರುತ್ತಿದ್ದಾಗ ಸಿದ್ದೇಪಲ್ಲಿ ಕಡೆಯಿಂದ ಯಾರೋ ಒಬ್ಬ ಆಸಾಮಿ ಒಂದು ಸಿಮೇಹಸು ಹಾಗೂ ಒಂದು ಎಮ್ಮೆಯನ್ನು ರಸ್ತೆಯಲ್ಲಿ ಹಿಡಿದುಕೊಂಡು ಬರುತ್ತಿದ್ದು, ಸಮವಸ್ತ್ರದಲ್ಲಿದ್ದ ತಮ್ಮನ್ನು ನೋಡಿ ಸಿಮೇಹಸು ಹಾಗೂ ಎಮ್ಮೆಯನ್ನು ಸ್ಥಳದಲ್ಲಿ ಬಿಟ್ಟು ಓಡಿಹೋಗುತ್ತಿದ್ದು, ಆತನನ್ನು ಹಿಂಬಾಲಿಸಿ ಹಿಡಿದುಕೊಂಡು ಹೆಸರು ಮತ್ತು ವಿಳಾಸ ಕೇಳಲಾಗಿ ಅಶ್ವಥಪ್ಪ ಬಿನ್ ವೆಂಕಟರಾಯಪ್ಪ, 26 ವರ್ಷ, ಆದಿ ಕರ್ನಾಟಕ ಜನಾಂಗ, ಕೂಲಿ ಕೆಲಸ, ಊಲವಾಡಿ ಗ್ರಾಮ, ಚಿಂತಾಮಣಿ ತಾಲ್ಲೂಕು ಎಂದು ತಿಳಿಸಿದ್ದು, ಸದರಿ ಸಿಮೇಹಸು ಹಾಗೂ ಒಂದು ಎಮ್ಮೆಯ ಬಗ್ಗೆ ವಿಚಾರ ಮಾಡಿದಾಗ ದಿನಾಂಕ 24/10/2019 ರಂದು ಬೆಳಿಗ್ಗೆ 10-00 ಗಂಟೆಗೆ ಹಿರಣ್ಯಹಳ್ಳಿ ಗ್ರಾಮದಲ್ಲಿ ಯಾರದೋ ಮನೆಯ ಬಳಿ ಕಟ್ಟಿ ಹಾಕಿದ್ದ ಎಮ್ಮೆಯನ್ನು ಕಳ್ಳತನ ಮಾಡಿಕೊಂಡು ಬಂದು ಕೃಷ್ಣರಾಜಪುರ ಗ್ರಾಮದ ಬಳಿ ಕಟ್ಟಿಹಾಕಿ ನಂತರ ಸಿದ್ದೇಪಲ್ಲಿ ಬಳಿಯ ಅಗ್ರಹಾರ ಗ್ರಾಮಕ್ಕೆ ಹೋಗಿ ಮಧ್ಯಾಹ್ನ 3-30 ಗಂಟೆ ಸಮಯದಲ್ಲಿ ಯಾರದೋ ಹೊಲದ ಬಳಿ ಕಟ್ಟಿ ಹಾಕಿದ್ದ ಸೀಮೆಹಸುವನ್ನು ಕಳ್ಳತನ ಮಾಡಿಕೊಂಡು ಸಿಮೇಹಸು ಮತ್ತು ಎಮ್ಮೆಯನ್ನು ಯಾರಿಗಾದರೂ ಮಾರಾಟ ಮಾಡೋಣವೆಂದು ಹಿಡಿದುಕೊಂಡು ಬರುತ್ತಿರುವುದಾಗಿ ತಿಳಿಸಿದ್ದು, ಸದರಿ ಆಸಾಮಿಯನ್ನು ವಶಕ್ಕೆ ಪಡೆದು ಸಿಮೇಹಸು ಹಾಗೂ ಒಂದು ಎಮ್ಮೆಯನ್ನು ಠಾಣೆಯ ಬಳಿ ಹಾಜರುಪಡಿಸುತ್ತಿದ್ದು, ಮುಂದಿನ ಕಾನೂನು ಕ್ರಮ ಜರುಗಿಸಲು ಕೋರಿದ್ದರ ಮೇರೆಗೆ ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣಾ ಮೊ.ಸಂ 407/2019 ಕಲಂ 379 ಐ.ಪಿ.ಸಿ ರೀತ್ಯಾ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡು ಮಹಜರ್ ಕ್ರಮ ನಡೆಸಿ ಸಿಮೇಹಸುವನ್ನು ಕಳ್ಳತನ ಮಾಡಿದ ಸ್ಥಳವು ಕೆಂಚಾರ್ಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಗೆ ಸೇರಿದ್ದರಿಂದ ಈ ಬಗ್ಗೆ ಕಡತವನ್ನು ಕೃತ್ಯ ನಡೆದ ಸ್ಥಳದ ಆಧಾರದ ಮೇಲೆ ವರ್ಗಾವಣೆ ನೀಡಲು ಘನ ನ್ಯಾಯಾಲಯದಲ್ಲಿ ಅನುಮತಿ ಪಡೆದು ವರ್ಗಾವಣೆ ನೀಡಿದ್ದರ ಕಡತವನ್ನು ಪಡೆದು ಠಾಣಾ ಮೊ.ಸಂ 14/2020 ಕಲಂ 379 ಐ.ಪಿ.ಸಿ ರೀತ್ಯಾ ಪ್ರಕರಣ ದಾಖಲಿಸಿಕೊಂಡಿರುತ್ತೆ.
9. ಮಂಚೇನಹಳ್ಳಿ ಪೊಲೀಸ್ ಠಾಣೆ ಮೊ.ಸಂ.47/2020 ಕಲಂ. 323-324 ರೆ/ವಿ 34 ಐ.ಪಿ.ಸಿ :-
ದಿನಾಂಕ:17/02/2020 ರಂದು ಠಾಣಾ ಎ.ಎಸ್.ಐ ಶ್ರೀ ವಿಠಲ್ ರಾವ್ ರವರು ಗೌರಿಬಿದನೂರು ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಗಾಯಾಳು ಶ್ರೀ ಆವುಲಪ್ಪ ಬಿನ್ ಲೇಟ್ ಗಂಗಪ್ಪ ರವರಿಂದ ಹೇಳಿಕೆಯನ್ನು ತಂದು ಹಾಜರುಪಡಿಸಿದರ ಸಾರಾಂಶವೇನೆಂದರೆ. ನಮಗೂ ಮತ್ತು ನಮ್ಮ ಪಕ್ಕದ ಮನೆಯ ವಾಸಿಯಾದ ಜೂಲಪ್ಪ ಬಿನ್ ಕೊರೇಶಪ್ಪ ರವರಿಗೆ ಮನೆಯ ಪಕ್ಕದಲ್ಲಿರುವ ಬ್ಬರಿಗೂ ಸೇರಿರುವ ಪಂಚಾಯ್ತಿಗೆ ಸೇರಿದ ಗಲ್ಲಿ ಇದ್ದು, ಇದರಲ್ಲಿ ಈ ಗಲ್ಲಿ ದಾರಿಯಲ್ಲಿ ನಾವು ಸುಮಾರು ವರ್ಷಗಳಿಂದಲೂ ಕುರಿಗಳನ್ನು ಕಟ್ಟಿ ಹಾಕುತ್ತಿದ್ದು, ದಿನಾಂಕ:16/02/2020 ರಂದು ಬೆಳಿಗ್ಗೆ 6-00 ಗಂಟೆಯ ಸಮಯದಲ್ಲಿ ನಾವು ಕಟ್ಟಿರುವ ಕುರಿಗಳನ್ನು ಬಿಚ್ಚಿ ಹೊರಗಡೆ ಹೊಡೆದಿದ್ದು, ಅದಕ್ಕೆ ನನ್ನ ತಮ್ಮನ ಹೆಂಡತಿಯಾದ ಮಂಜುಳಾ ಕೊಂ ಕೃಷ್ಣಪ್ಪ ರವರು ಅವರ ಬಳಿ ಏಕೆ ಕುರಿಗಳನ್ನು ಹೊರಗಡೆ ಹಾಕಿದ್ದೀರಾ ಎಂದು ಕೇಳಿದ್ದು, ಈ ವಿಚಾರವಾಗಿ ಜೂಲಪ್ಪ, ರಘು, ಹಾಗೂ ಅನಿತಾ ಮತ್ತು ಮುದ್ದಪ್ಪ ರವರು ಮಂಜುಳಾ ರವರಿಗೆ ಗಲಾಟೆ ಮಾಡಿ ಇಟ್ಟಿಗೆಯಿಂದ ಹೊಡೆದು ಗಲಾಟೆ ಮಾಡಿ ಗಾಯಗಳನ್ನುಂಟು ಮಾಡಿದ್ದರು ನಂತರ ನಾನು ರಾತ್ರಿ ಮನೆಗೆ ಬಂದಾಗ ವಿಚಾರವನ್ನು ತಿಳಿಸಿದ್ದು, ರಾತ್ರಿಯಾಗಿದ್ದರಿಂದ ಬೆಳಿಗ್ಗೆ ಮಾತನಾಡೋಣ ಎಂದು ಸುಮ್ಮನಿದ್ದು, ಈ ದಿನ ದಿನಾಂಕ:17/02/2020 ರಂದು ಬೆಳಿಗ್ಗೆ 07-45 ಗಂಟೆಯಲ್ಲಿ ನಾನು ಅವರ ಮನೆಯ ಬಳಿ ಹೋಗಿ ದಾರಿಯಲ್ಲಿ ನಿಂತು ಯಾಕೇ ಮಂಜುಳಮ್ಮ ರವರನ್ನು ಹೊಡೆದಿದ್ದು, ಎಂದು ಕೇಳುತ್ತಿದ್ದಂತೆ ಏಕಾಏಕಿ ಜೂಲಪ್ಪ ಬಿನ್ ಕೊರೇಶಪ್ಪ, ರಘು ಬಿನ್ ಜೂಲಪ್ಪ, ಅನಿತಾ ಕೊಂ ಜೂಲಪ್ಪ ಹಾಗೂ ಮುದ್ದಪ್ಪ ಬಿನ್ ದೊಡ್ಡರಂಗಪ್ಪ ರವರು ಅಲ್ಲಿಗೆ ಬಂದು ರಘು ರವರು ತನ್ನ ಕೈಯಲ್ಲಿದ್ದ ದೊಣ್ಣೆಯಿಂದ ನನ್ನ ತಲೆಯ ಹಿಂಭಾಗ ಹೊಡೆದು ರಕ್ತಗಾಯಪಡಿಸಿದ ನಂತರ ಉಳಿದ ಜೂಲಪ್ಪ, ಅನಿತಾ, ಮುದ್ದಪ್ಪ ರವರು ಸಹ ಕೈಗಳಿಂದ ಹಾಗೂ ಕಲ್ಲುಗಳಿಂದ ಮೈಮೇಲೆ ಹೊಡೆದು ಮೂಗೇಟುಗಳನ್ನುಂಟು ಮಾಡಿದರು ಆಗ ನಾನು ಕಿರುಚಿಕೊಂಡಾಗ ಅಲ್ಲೆ ಇದ್ದ ಸುರೇಶ ಬಿನ್ ರಾಮಾಂಜಿನಪ್ಪ, 35ವರ್ಷ, ಬೆಸ್ತರು, ದೊಡ್ಡವದ್ದೇನಹಳ್ಳಿ, ಶಂಕರ ಬಿನ್ ಚಿನ್ನಪ್ಪಯ್ಯ 28 ವರ್ಷ, ನಾಯಕರು, ಕೂಲಿ ಕೆಲಸ, ದೊಡ್ಡವದ್ದೇನಹಳ್ಳಿ ರವರು ಗಲಾಟೆಯನ್ನು ಬಿಡಿಸಿದ್ದು, ಗಾಯಗೊಂಡಿದ್ದ ನನ್ನನ್ನು ತಕ್ಷಣ ಗಂಗರಾಜು ಬಿನ್ ಕೃಷ್ಣಪ್ಪ, 21ವರ್ಷ, ಗೊಲ್ಲರು, ದೊಡ್ಡವದ್ದೇನಹಳ್ಳಿ ರವರು ಯಾವುದೋ ಒಂದು ಆಟೋದಲ್ಲಿ ಕರೆದುಕೊಂಡು ಬಂದು ಗೌರಿಬಿದನೂರು ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಿದ್ದು, ವಿನಾ ಕಾರಣ ಗಲಾಟೆ ಮಾಡಿ ಹೊಡೆದು ಗಾಯಪಡಿಸಿದ ಮೇಲ್ಕಂಡವರ ಮೇಲೆ ಕಾನೂನು ಕ್ರಮ ಜರುಗಿಸಲು ಕೊರಿ ಕೊಟ್ಟ ಹೇಳಿಕೆ ದೂರು.
10. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.33/2020 ಕಲಂ. 87 ಕೆ.ಪಿ ಆಕ್ಟ್ & 11(1) PREVENTION OF CRUELTY TO ANIMALS ACT :-
ದಿನಾಂಕ 17/02/2020 ರಂದು ಬೆಳಿಗ್ಗೆ 11-00 ಗಂಟೆಗೆ ನಾನು ಠಾಣೆಯಲ್ಲಿ ಕರ್ತವ್ಯದಲ್ಲಿದ್ದಾಗ ಯಾರೋ ಸಾರ್ವಜನಿಕರಿಂದ ತಾತಹಳ್ಳಿ ಗ್ರಾಮದ ಹನುಮಪ್ಪ ಬಿನ್ ಲೇಟ್ ಚಿಕ್ಕ ಮುನಿಯಪ್ಪ ರವರ ಮನೆಯ ಹಿಂಭಾಗದ ಖಾಲಿ ಜಾಗದಲ್ಲಿ ಅಕ್ರಮವಾಗಿ ಹಣವನ್ನು ಪಣವಾಗಿ ಕಟ್ಟಿ ಕೋಳಿ ಹುಂಜಗಳನ್ನು ಜಗಳಕ್ಕೆ ಬಿಟ್ಟು ಕ್ರೂರ ರೀತಿಯಲ್ಲಿ ಕೋಳಿ ಪಂದ್ಯವನ್ನಾಡುತ್ತಿರುವುದಾಗಿ ಮಾಹಿತಿ ಬಂದಿದ್ದು, ಠಾಣೆಯ ಸಿಬ್ಬಂಧಿಯವರಾದ ಪಿಸಿ-481 ಮಂಜುನಾಥ, ಪಿಸಿ-143 ಶಿವರಾಜ್ ಕುಮಾರ್, ಪಿಸಿ-139 ಬಾಬು ರವರೊಂದಿಗೆ ಠಾಣೆಗೆ ಒದಗಿಸಿರುವ ಜೀಪ್ ನಂಬರ್ ಕೆಎ-40-ಜಿ-357 ರಲ್ಲಿ ಮತ್ತು ಕೆಲವು ಸಿಬ್ಬಂಧಿಯವರು ದ್ವಿ ಚಕ್ರ ವಾಹನಗಳಲ್ಲಿ ತಾತಹಳ್ಳಿ ಗ್ರಾಮದ ಕಡೆಗೆ ಹೊರಟಿದ್ದು ವರದನಾಯಕನಹಳ್ಳಿ ಗೇಟ್ ಬಳಿ ದ್ವಿ ಚಕ್ರ ವಾಹನಗಳಲ್ಲಿ ಗಸ್ತಿನಲ್ಲಿದ್ದ ಚಿಕ್ಕಬಳ್ಳಾಪುರ ಡಿಸಿಬಿ ಸಿಇಎನ್ ಪೊಲೀಸ್ ಠಾಣೆಯ ಸಿಬ್ಬಂಧಿಯವರಾದ ಹೆಚ್.ಸಿ-71 ಸುಬ್ರಮಣಿ, ಹೆಚ್.ಸಿ-208 ಗಿರೀಶ್, ಹೆಚ್.ಸಿ-192 ರಾಜ್ ಗೋಪಾಲ್, ಪಿಸಿ-535 ಶ್ರೀನಿವಾಸ್ ರವರನ್ನು ಕರೆದುಕೊಂಡು ನಂತರ ತಾತಹಳ್ಳಿ ಗೇಟ್ ಬಳಿ ಪಂಚರನ್ನು ಬರಮಾಡಿಕೊಂಡು ಅವರಿಗೆ ವಿಷಯ ತಿಳಿಸಿ, ಪಂಚರೊಂದಿಗೆ ಬೆಳಿಗ್ಗೆ 11-20 ಗಂಟೆಗೆ ತಾತಹಳ್ಳಿ ಗ್ರಾಮದ ಚಾಗೆ ಕಡೆಗೆ ಹೋಗುವ ರಸ್ತೆಯ ಬಳಿ ಹೋಗಿ ಜೀಪ್ ಅನ್ನು ನಿಲ್ಲಿಸಿ, ನಂತರ ನಾವು ಮತ್ತು ಪಂಚರು ರಸ್ತೆಯ ಪಕ್ಕದಲ್ಲಿರುವ ಹನುಮಪ್ಪ ರವರ ಮನೆಯ ಮರೆಯಲ್ಲಿ ನಿಂತು ನೋಡಲಾಗಿ ಮನೆಯ ಹಿಂಭಾಗದ ಖಾಲಿ ಪ್ರದೇಶದಲ್ಲಿ ಯಾರೋ 9 ಜನ ಆಸಾಮಿಗಳು ವೃತ್ತಾಕಾರವಾಗಿ ಗುಂಪು ಕಟ್ಟಿಕೊಂಡು 2 ಕೋಳಿ ಹುಂಜಗಳ ಕಾಲುಗಳಿಗೆ ಕತ್ತಿಗಳನ್ನು ಕಟ್ಟಿ, ಅವನ್ನು ಜಗಳಕ್ಕೆ ಬಿಟ್ಟು ಆ ಪೈಕಿ ಒಬ್ಬ ಆಸಾಮಿಯು ಕೆಂಪು ಹುಂಜ ಗೆಲ್ಲುತ್ತೆ ನನ್ನದು 500 ರೂ ಎಂತಲೂ, ಮತ್ತೊಬ್ಬ ಆಸಾಮಿಯು ಕಪ್ಪು ಹುಂಜ ಗೆಲ್ಲುತ್ತೇ ನನ್ನನ್ನು 500 ರೂ ಎಂತಲೂ ಉಳಿದವರು ಸಹ ಹಣವನ್ನು ಪಣವಾಗಿ ಕಟ್ಟಿ ಕೋಳಿ ಪಂದ್ಯವನ್ನಾಡುತ್ತಿರುವುದು ಖಚಿತವಾದ ಮೇಲೆ ಪಂಚರ ಸಮಕ್ಷಮ ಸದರಿ ಸ್ಥಳವನ್ನು ಸುತ್ತುವರೆದು ಯಾರು ಓಡಾಬಾರದೆಂದು ಸೂಚಿಸಿದರೂ ಸಹ 7 ಜನ ಆಸಾಮಿಗಳು ಸ್ಥಳದಲ್ಲಿ ಬಿದ್ದಿದ್ದ ಕೈಗೆ ಸಿಕ್ಕ ಹಣವನ್ನು ತೆಗೆದುಕೊಂಡು ಓಡಿಹೋಗಿದ್ದು, ಸ್ಥಳದಲ್ಲಿ ಇಬ್ಬರು ಆಸಾಮಿಗಳು ಮತ್ತು ಎರಡು ಜೀವಂತ ಕೋಳಿ ಹುಂಜಗಳು ಸಿಕ್ಕಿದ್ದು, ಸದರಿ ಆಸಾಮಿಗಳನ್ನು ವಶಕ್ಕೆ ಪಡೆದು ಹೆಸರು ವಿಳಾಸ ಕೇಳಲಾಗಿ 1) ಮಂಜುನಾಥ ಬಿನ್ ಮಾರಪ್ಪ, 38 ವರ್ಷ, ನಾಯಕರು, ಜಿರಾಯ್ತಿ, ವಾಸ-ತಾತಹಳ್ಳಿ ಗ್ರಾಮ, ಶಿಡ್ಲಘಟ್ಟ ತಾಲ್ಲೂಕು, 2) ಭತ್ತೆಪ್ಪ ಬಿನ್ ಕೃಷ್ಣಪ್ಪ, 33 ವರ್ಷ, ಕುರುಬರು, ಕೂಲಿ ಕೆಲಸ, ವಾಸ-ವೆಂಕಟೇಶ್ವರ ಮೆಡಿಕಲ್ ಸ್ಟೋರ್ ಹಿಂಭಾಗ, 7 ನೇ ವಾಡರ್್, ಕುರುಬರ ಪೇಟೆ, ಶಿಡ್ಲಘಟ್ಟ ಟೌನ್ ಎಂದು ತಿಳಿಸಿದ್ದು, ಸದರಿ ಆಸಾಮಿಗಳಿಗೆ ಓಡಿ ಹೋದವರ ಹೆಸರು ವಿಳಾಸ ಕೇಳಲಾಗಿ 1) ಮುನಿಶಾಮಿ ಬಿನ್ ದೊಡ್ಡ ಆಂಜಿನಪ್ಪ, 37 ವರ್ಷ, ನಾಯಕರು, ಜಿರಾಯ್ತಿ, ವಾಸ-ತಾತಹಳ್ಳಿ ಗ್ರಾಮ, ಶಿಡ್ಲಘಟ್ಟ ತಾಲ್ಲೂಕು, 2) ಟಿ.ಎನ್ ಮೂತರ್ಿ ಬಿನ್ ಲೇಟ್ ನಾರಾಯಣಪ್ಪ, 36 ವರ್ಷ, ನಾಯಕರು, ಜಿರಾಯ್ತಿ, ವಾಸ-ತಾತಹಳ್ಳಿ ಗ್ರಾಮ, ಶಿಡ್ಲಘಟ್ಟ ತಾಲ್ಲೂಕು, 3) ವೆಂಕಟೇಶ್ ಬಿನ್ ದೊಡ್ಡ ತಿರುಮಳಪ್ಪ, 32 ವರ್ಷ, ನಾಯಕರು, ಕೂಲಿ ಕೆಲಸ, ವಾಸ-ತಾತಹಳ್ಳಿ ಗ್ರಾಮ, ಶಿಡ್ಲಘಟ್ಟ ತಾಲ್ಲೂಕು, 4) ನರಸಿಂಹ ಬಿನ್ ಚನ್ನರಾಯಪ್ಪ, 36 ವರ್ಷ, ಜಿರಾಯ್ತಿ, ವಾಸ-ತಾತಹಳ್ಳಿ ಗ್ರಾಮ, ಶಿಡ್ಲಘಟ್ಟ ತಾಲ್ಲೂಕು, 5) ಮನೋಹರ ಬಿನ್ ಲೇಟ್ ನಾರಾಯಣಸ್ವಾಮಿ, 24 ವರ್ಷ, ನಾಯಕರು, ಜಿರಾಯ್ತಿ, ವಾಸ-ತಾತಹಳ್ಳಿ ಗ್ರಾಮ, ಶಿಡ್ಲಘಟ್ಟ ತಾಲ್ಲೂಕು, 6) ನವೀನ್ ಬಿನ್ ಲೇಟ್ ವೆಂಕಟೇಶಪ್ಪ, 24 ವರ್ಷ, ನಾಯಕರು, ಜಿರಾಯ್ತಿ, ವಾಸ-ತಾತಹಳ್ಳಿ ಗ್ರಾಮ, ಶಿಡ್ಲಘಟ್ಟ ತಾಲ್ಲೂಕು, 7) ನಿಖಿಲ್ ಬಿನ್ ಶಿವಮೂತರ್ಿ, 26 ವರ್ಷ, ನಾಯಕರು, ಜಿರಾಯ್ತಿ, ವಾಸ-ತಾತಹಳ್ಳಿ ಗ್ರಾಮ, ಶಿಡ್ಲಘಟ್ಟ ತಾಲ್ಲೂಕು ಎಂದು ತಿಳಿಸಿದ್ದು, ಜೂಜಾಟದ ಸ್ಥಳದಲ್ಲಿ ನೆಲದ ಮೇಲೆ ಬಿದ್ದಿದ್ದ ಹಣವನ್ನು ತೆಗೆದು ಎಣಿಕೆ ಮಾಡಲಾಗಿ 2500-00 ರೂ ಹಣ ಇದ್ದು, ಕೋಳಿ ಹುಂಜಗಳ ಕಾಲುಗಳಲ್ಲಿ ಪರಿಶೀಲಿಸಲಾಗಿ ಎರಡೂ ಕೋಳಿಗಳ ಕಾಲುಗಳಿಗೆ ಒಂದೊಂದು ಕೋಳಿ ಪಂದ್ಯದ ಕತ್ತಿಗಳನ್ನು ಬಿಳಿ ಬಣ್ಣದ ದಾರದಿಂದ ಕಟ್ಟಿರುವುದು ಕಂಡು ಬಂದಿರುತ್ತದೆ. ಮೇಲ್ಕಂಡ 2 ಕೋಳಿ ಹುಂಜಗಳನ್ನು, ಕೋಳಿಗಳ ಕಾಲುಗಳಿಗೆ ಕಟ್ಟಿರುವುದು 4 ಕತ್ತಿಗಳನ್ನು, 2500-00 ರೂ ನಗದು ಹಣವನ್ನು ಬೆಳಿಗ್ಗೆ 11-30 ಗಂಟೆಯಿಂದ ಮದ್ಯಾಹ್ನ 12-30 ಗಂಟೆಯವರೆಗೆ ಪಂಚನಾಮೆ ಮೂಲಕ ಅಮಾನತ್ತು ಪಡಿಸಿಕೊಂಡು ಇಬ್ಬರು ಆಸಾಮಿಗಳನ್ನು ವಶಕ್ಕೆ ಪಡೆದುಕೊಂಡು ಮದ್ಯಾಹ್ನ 1-00 ಗಂಟೆಗೆ ಠಾಣೆಗೆ ವಾಪಸ್ಸಾಗಿ ಆರೋಪಿಗಳ ವಿರುದ್ದ ಠಾಣಾ ಮೊಸಂ-33/2020 ಕಲಂ 87 ಕೆ.ಪಿ ಆಕ್ಟ್ ರೆ.ವಿ 11(1) ಪ್ರಿವೆಂಷನ್ ಆಫ್ ಕ್ರೂಯಾಲ್ಟಿ ಅನಿಮಲ್ಸ್ ಆಕ್ಟ್ ರೀತ್ಯಾ ಸ್ವತಃ ಪ್ರಕರಣವನ್ನು ದಾಖಲಿಸಿಕೊಂಡಿರುತ್ತೇನೆ.