ದಿನಾಂಕ :17/01/2021 ರ ಅಪರಾಧ ಪ್ರಕರಣಗಳು

  1. ಬಾಗೇಪಲ್ಲಿ ಪೊಲೀಸ್ ಠಾಣೆ ಮೊ.ಸಂ.12/2021 ಕಲಂ. 427,447,34 ಐ.ಪಿ.ಸಿ :-

     ದಿನಾಂಕ;-16.01.2021 ರಂದು  ಪಿರ್ಯಾದಿ ಶ್ರೀರಾಮಪ್ಪ ಬಿನ್ ಲೇಟ್ ಮುನಿಶಾಮಪ್ಪ,78 ವರ್ಷ, ಬಲಜಿಗರು, ಜಿರಾಯ್ತಿ , ವಾಸ: ದೇವರಗುಡಿಪಲ್ಲಿ ಗ್ರಾಮ , ಬಾಗೇಪಲ್ಲಿ  ತಾಲ್ಲೂಕು ರವರ ಠಾಣೆಗೆ  ಹಾಜರಾಗಿ  ನೀಡಿದ  ದೂರಿನ  ಸಾರಾಂಶವೇನೆಂದರೆ  ನಾನು ಮೇಲ್ಕಂಡ ವಿಳಾಸದಲ್ಲಿ ವಾಸವಾಗಿರುತ್ತೇನೆ. ನಮ್ಮ ತಂದೆ ಮುನಿಶಾಮಪ್ಪ ತಾಯಿ ಗೌರಮ್ಮ ರವರಿಗೆ, 1ನೇ ಬಾಲಪ್ಪ, 2ನೇ ಶ್ರೀರಾಮಪ್ಪ, 3ನೇ ಡಿ. ಆದಿನರಾಯಣಪ್ಪ ಎಂಬ ಮೂವರು ಮಕ್ಕಳಿರುತ್ತೇವೆ. ಎಲ್ಲರಿಗೂ ವಿವಾಹಗಳಾಗಿದ್ದು, ಬೇರೆಬೇರೆ ವಾಸವಾಗಿರುತ್ತೇವೆ. ನನ್ನ ಹೆಸರಿನಲ್ಲಿ ಮಲ್ಲಸಂದ್ರ ಗ್ರಾಮದ ಸರ್ವೇ ನಂಬರ್ 177/2 ರಲ್ಲಿ 3 ಎಕರೆ, 176/2 ರಲ್ಲಿ 2 ಎಕರೆ 29 ಗುಂಟೆ ಖರಾಬು 2 ಗುಂಟೆ ಒಟ್ಟು 2 ಎಕರೆ 31 ಗುಂಟೆ ಜಮೀನು ಇರುತ್ತದೆ. ನಮ್ಮದು ನೀರಾವರಿ ಜಮೀನು ಆಗಿದ್ದು, ನೀರು ಹರಿಸಲು ನಮ್ಮ ಹೊಲದಲ್ಲಿ ನಾನು ಎರಡೂವರೆ ಇಂಚಿನ ಪಿ.ವಿ.ಸಿ ಪೈಪ್ ಲೈನ್ ಅನ್ನು ಭೂಮಿಯಲ್ಲಿ ಅಳವಡಿಸಿರುತ್ತೇನೆ.ನಮ್ಮ ಜಮೀನಿನ ಪಶ್ಚಿಮಕ್ಕೆ  ನನ್ನ ತಮ್ಮನಾದ ಡಿ.ಆದಿನಾರಾಯಣಪ್ಪ ರವರ ಜಮೀನು ಇರುತ್ತದೆ.  ನಾವು ನಮ್ಮ ಜಮೀನಿನ ಬಳಿ ಹೋಗಲು ನನ್ನ ತಮ್ಮನ ಜಮೀನಿನ ಮೂಲಕವೇ ಹಾದುಹೋಗಬೇಕಾಗಿರುತ್ತೆ. ನಾನು ನಮ್ಮ ಜಮೀನಿನ ಬಳಿ ನಾನು ಹೋಗದಂತೆ ಇಟ್ಟಿಗೆಗಳನ್ನು ಅಡ್ಡಹಾಕುವುದು. ಸೌದೆಲಾಟನ್ನು ಹಾಕುವುದು ಇತ್ಯಾದಿಯಾಗಿ ನನ್ನ ತಮ್ಮ ಡಿ.ಆದಿನಾರಾಯಣಪ್ಪ ರವರು ಹಾಗೂ ಅಶೋಕ ರವರು   ನನಗೆ  ತೊಂದರೆಯನ್ನುಂಟು ಮಾಡುತ್ತಿದ್ದರು. ಇದೇ ವಿಚಾರವಾಗಿ ನನಗೂ ನನ್ನ ತಮ್ಮ ಡಿ.ಆದಿನಾರಾಯಣನಿಗೂ ಮನಸ್ತಾಪವಿತ್ತು. ಹೀಗಿರುವಾಗ್ಗೆ ದಿನಾಂಕ:12/01/2021 ರಂದು ಬೆಳಿಗ್ಗೆ ನಾನು ನನ್ನ ಜಮೀನಿನಲ್ಲಿ ಜೋಳವನ್ನು ಕೂಲಿಯವರಿಂದ ಇಟ್ಟಿರುತ್ತೇನೆ. ನಂತರ ದಿನಾಂಕ: 16/01/2021 ರಂದು ಸಂಜೆ 5:00 ಗಂಟೆಯ ಸುಮಾರಿನಲ್ಲಿ ನಾನು ನಮ್ಮ ಹೊಲದ ಬಳಿ ಹೋದಾಗ, ನಮ್ಮ ಜಮೀನಿನಲ್ಲಿ ಹಾಕಿದ್ದ ಪಿ.ವಿ.ಸಿ ಪೈಲ್ ಲೈನ್ ಅನ್ನು ಯಾರೋ ಜೆ.ಸಿ.ಬಿ ಯಿಂದ  ಧ್ವಂಸಗೊಳಿಸಿದ್ದರು. ನಾವು ವಿದ್ಯುತ್ ಸಂಪರ್ಕ ಕಲ್ಪಿಸಿಕೊಂಡಿದ್ದ ವಿದ್ಯುತ್ ಕಂಬದ ವೈರ್ ಅನ್ನು ಕತ್ತರಿಸಿದ್ದರು. ನಮ್ಮ ಹೊಲದಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದ ನಾರಾಯಣಸ್ವಾಮಿ ರವರನ್ನು ವಿಚಾರ ಮಾಡಲಾಗಿ ದಿನಾಂಕ:12/01/2021 ರಂದು ಬೆಳಿಗ್ಗೆ ಸುಮಾರು 10:30 ಗಂಟೆಯಲ್ಲಿ ಡಿ.ಆದಿನಾರಾಯಣಪ್ಪ ಮತ್ತು ಆತನ ಮಗನಾದ ಅಶೋಕ ರವರು ಜಮೀನಿನಲ್ಲಿ ಅಕ್ರಮ ಪ್ರವೇಶ ಮಾಡಿ, ಅವರು ಪೈಪ್ ಲೈನ್ ಹಾಕಿಕೊಳ್ಳಲು  ಜೆ.ಸಿ.ಬಿ ಯಿಂದ ನಾವು ಹಾಕಿದ್ದ ಪಿ.ವಿ.ಸಿ ಪೈಪ್ ಅನ್ನು ಧ್ವಂಸಗೊಳಿಸಿ, ಇಟ್ಟಿದ್ದ ಜೋಳದ ಬೆಳೆಯನ್ನು ನಾಶಗೊಳಿಸಿದ್ದಲ್ಲದೆ,  ವಿದ್ಯುತ್ ಕಂಬದಿಂದ ವಿದ್ಯುತ್ ಸಂಪರ್ಕದ ವೈರ್ ಅನ್ನು ಕತ್ತರಿಸಿ ಹಾಕಿರುವುದಾಗಿ ತಿಳಿಸಿದನು. ಅಲ್ಲದೆ ನಮ್ಮ  ಪಿ.ವಿ.ಸಿ ಪೈಪ್ ಲೈನ್ ಅನ್ನು ಕಿತ್ತುಹಾಕುವಾಗಲೇ ನಮ್ಮ ಹೊಲದ ಬಳಿಯೇ ಅನಾರೋಗ್ಯಕ್ಕೀಡಾಗಿ ಬಿದ್ದು ಹೋದ ಡಿ.ಆದಿನಾರಾಯಣ ರವರನ್ನು ಅಶೋಕ ರವರು ಕರೆದುಕೊಂಡು ಹೋದರೆಂದು ತಿಳಿಸಿದನು.  ನಾನು ಜಮೀನಿನ ಬಳಿ ಇಲ್ಲದೆ ಇರುವ ಸಮಯದಲ್ಲಿ ಉದ್ದೇಶಪೂರ್ವಕವಾಗಿ ನಮ್ಮ ಜಮೀನಿಗೆ ಅಕ್ರಮ ಪ್ರವೇಶ ಮಾಡಿ, 5 ಎಕರೆ 31 ಗುಂಟೆ ಜಮೀನಿನಲ್ಲಿ ನೀರು ಹಾಯಿಸಲು ಅಳವಡಿಸಿದ್ದ ಪೈಪ್ ಲೈನ್ ಅನ್ನು ಧ್ವಂಸಗೊಳಿಸಿರುವ  ಡಿ.ಆದಿನಾರಾಯಣಪ್ಪ ಬಿನ್ ಲೇಟ್ ಮುನಿಶಾಮಪ್ಪ,  ಬಲಜಿಗರು, ಜಿರಾಯ್ತಿ, ದೇವರಗುಡಿಪಲ್ಲಿ ಗ್ರಾಮ ಮತ್ತು ಆತನ ಮಗನಾದ ಅಶೋಕ ಬಿನ್ ಡಿ.ಆದಿನಾರಾಯಣಪ್ಪ, ಬಲಜಿಗರು, ವ್ಯಾಪಾರ, ದೇವರಗುಡಿಪಲ್ಲಿ ಗ್ರಾಮ, ಬಾಗೇಪಲ್ಲಿ ತಾಲ್ಲೂಕು ರವರ ಮೇಲೆ ಕಾನೂನು ರೀತ್ಯ ಕ್ರಮ ಜರುಗಿಸಬೇಕಾಗಿ ಕೋರಿಕೊಟ್ಟ ದೂರು.

  1. ಬಟ್ಲಹಳ್ಳಿ ಪೊಲೀಸ್ ಠಾಣೆ ಮೊ.ಸಂ.08/2021 ಕಲಂ. 392  ಐ.ಪಿ.ಸಿ :-

     ದಿನಾಂಕ: 16/01/2021 ರಂದು ಮದ್ಯಾಹ್ನ 16-00 ಗಂಟೆಗೆ ಪಿರ್ಯಾದಿದಾರರಾದ  ಗೌತಮ್ ಬಿನ್ ರಾಜೇಂದ್ರ 22 ವರ್ಷ, ವಾಲ್ಮೀಕಿ  ನಾಯ್ಡು ಜನಾಂಗ,  ಆರ್ ಕೆ ಎಫ್ ಪೆನ್ಸಾನ್ಸ್ ಕಂಪನಿ  ಎಸ್ ಬಿ ಐ ಕಾಲೋನಿ ಮದನಪಲ್ಲಿ ಕಲೆಕ್ಷನ್ ಕೆಲಸ ವಾಸ: ಜಗದೇವಿ ಗ್ರಾಮ, ಬರಗೂರು ತಾಲ್ಲೂಕು, ಕೃಷ್ಣಗಿರಿ ಜಿಲ್ಲೆ, ತಮಿಳುನಾಡು ರಾಜ್ಯ ಮೊ ನಂ:9361096275.ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ,  ನಾನು ಈ ಮೇಲ್ಕಂಡ ವಿಳಾಸದಲ್ಲಿ ವಾಸವಾಗಿರುತ್ತೇನೆ. ನಾನು ಈಗ್ಗೆ 3 ತಿಂಗಳಿನಿಂದ  ಈ ಮೇಲ್ಕಂಡ ಪೆನ್ಸಾನ್ ಕಂಪನಿ ನಲ್ಲಿ ಪೈನಾನ್ಸ್ ಕಲೆಕ್ಷನ್ ಕೆಲಸ ಮಾಡಿಕೊಂಡಿರುತ್ತೇನೆ. ನಮ್ಮ ಕಂಪನಿಯಿಂದ ಆಂದ್ರಪ್ರದೇಶ ಮತ್ತು ಕನರ್ಾಟಕ ರಾಜ್ಯದ ಗ್ರಾಮಗಳಲ್ಲಿನ ಅಂಗಡಿ ಮಾಲೀಕರಿಗೆ ಪೈನಾನ್ಸ್ ಹಣವನ್ನು ಸಾಲವಾಗಿ ನೀಡುತ್ತಿದ್ದು, ಆಂದ್ರಪ್ರದೇಶ ಮತ್ತು ಕನರ್ಾಟಕ ರಾಜ್ಯದ ಗ್ರಾಮಗಳಲ್ಲಿನ ಅಂಗಡಿ ಮಾಲೀಕರಿಗೆ ನಿಡಿದ್ದ ಪೈನಾನ್ಸ್ ಹಣವನ್ನು ವಸೂಲಿ ಮಾಡಲು ನನ್ನನ್ನು  ಮತ್ತು ನನ್ನೊಂದಿಗೆ ಕೆಲಸ ಮಾಡುತ್ತಿದ್ದ ಗೋಕುಲ್ ಬಿನ್ ಗೋವಿಂದ ರಾಜ್ ,19 ವರ್ಷ, ವಾಲ್ಮೀಕಿ ನಾಯ್ಡು ಜನಾಂಗ, ಪೈನಾನ್ಸ್ ಕಲೆಕ್ಷನ್ ಕೆಲಸ, ವಾಸ: ದಾಷಿನಾವೂರು ಗ್ರಾಮ, ಮಗರಾಜ್ ಕಡೈ ತಾಲ್ಲೂಕು, ಕೃಷ್ಣಗಿರಿ ಜಿಲ್ಲೆ ತಮಿಳುನಾಡು ರವರುಗಳಿಗೆ ನೇಮಿಸಿದ್ದು, ಅದರಂತೆ ನಾವು ಪ್ರತಿ ದಿನ ಚಿಂತಾಮಣಿ ತಾಲ್ಲೂಕಿನ ಇರಗಂಪಲ್ಲಿ ಯಗವಕೋಟೆ ಹಾಗೂ ಸುತ್ತ ಮುತ್ತಲಿನ ಗ್ರಾಮಗಳಿಗೆ ದ್ವಿಚಕ್ರವಾಹನದಲ್ಲಿ  ಬಂದು ಪೈನಾನ್ಸ್ ಸಾಲದ ಕಂತಿನ ಹಣವನ್ನು ಗ್ರಾಹಕರಿಂದ ವಸೂಲಿ ಮಾಡಿಕೊಂಡು ಹೋಗಿ ಪೈನಾನ್ಸ್ ಆಫೀಸ್ ಕಟ್ಟುತ್ತಿರುತ್ತೇವೆ,          ಹೀಗಿರುವಲ್ಲಿ ಪತ್ರಿ ದಿನದಂತೆ  ಈ ದಿನ ದಿನಾಂಕ: 16/01/2021 ರಂದು ಬೆಳಿಗ್ಗೆ ನಾನು ಹಾಗೂ ನಮ್ಮ ಪೆನ್ಸಾನ್ ಕಂಪನಿ ಯಲ್ಲಿ ಕೆಲಸ ಮಾಡುವ ನನ್ನ  ಸ್ನೇಹಿತ ಗೋಕುಲ್ ರವರು  ನಮ್ಮ ಪೆನ್ಸಾನ್ ಕಂಪನಿಯ ದ್ವಿಚಕ್ರವಾಹನ ಎಪಿ 03 ಸಿ ಕ್ಯೂ 1779  ಟಿ.ವಿ.ಎಸ್ ಡಿಸ್ ಕವರ್ ದ್ವಿಚಕ್ರ ವಾಹನದಲ್ಲಿ  ಬಿ ಕೊತ್ತಕೋಟ, ಮುಂಗಾನಹಳ್ಳಿ, ಬಟ್ಲಹಳ್ಳಿ, ಇರಗಂಪಲ್ಲಿ ಯಗವಕೋಟೆ ಗ್ರಾಮಗಳಲ್ಲಿ ಪೈನಾನ್ಸ್ ಕಂತ್ತಿನ ಹಣವನ್ನು ವಸೂಲಿ ಮಾಡಿಕೊಂಡು ಪೆದ್ದೂರು ಗ್ರಾಮಕ್ಕೆ ಹೋಗಿ ಪೆದ್ದೂರು ಗ್ರಾಮದಲ್ಲಿ 4 ಅಂಗಡಿಗಳಲ್ಲಿ ಪೈನಾನ್ಸ್ ಹಣವನ್ನು ವಸೂಲಿ ಮಾಡಿಕೋಂಡಿರುತ್ತೇವೆ. ಪೆದ್ದೂರು ಮತ್ತು ಯಗನಕೋಟೆ ಗ್ರಾಮದಲ್ಲಿ ವಸೂಲಿಯಾದ 7000/- ರೂಗಳನ್ನು ನನ್ನ ಪ್ಯಾಂಟಿನ ಜೇಬಿನಲ್ಲ್ಲಿಟ್ಟುಕೊಂಡಿರುತ್ತೇನೆ. ಉಳಿದ ಪೈನಾನ್ಸ್ ವಸೂಲಿ ಹಣವನ್ನು ನನ್ನೊಂದಿಗೆ ಬಂದಿದ್ದ ಗೋಕುಲ್ ರವರು ಆತನ ಬಳಿ ಇಟ್ಟುಕೊಂಡಿದ್ದರು. ನಂತರ ಮದ್ಯಾಹ್ನ 13-45 ಗಂಟೆಯ ಸಮಯದಲ್ಲಿ ನಾವಿಬ್ಬರು ಲಕ್ಷ್ಮೀಪುರ ಕ್ರಾಸ್ಗೆ ಹೋಗಲು ಪೆದ್ದೂರು ಗ್ರಾಮದಿಂದ ಸ್ವಲ್ಪ ಮುಂದೆ ಮಣ್ಣಿನ ರಸ್ತೆಯಲ್ಲಿ ದ್ವಿಚಕ್ರವಾಹನದಲ್ಲಿ ಹೋಗುತ್ತಿದ್ದಾಗ ನಮ್ಮ ಹಿಂಬದಿಯಿಂದ ಯಾವುದೋ ಒಂದು ದ್ವಿಚಕ್ರವಾಹನದಲ್ಲಿ ಇಬ್ಬರು ಆಸಾಮಿಗಳು ವೇಗವಾಗಿ ಬಂದು ನಮ್ಮನ್ನು ಓವರ್ ಟೇಕ್ ಮಾಡಿ ನಮ್ಮ ದ್ವಿಚಕ್ರವಾಹನವನ್ನು ಅಡ್ಡಗಟ್ಟಿ ನಿಲ್ಲಿಸಿದರು. ನಾನು ದ್ವಿಚಕ್ರವಾಹನವನ್ನು ನಿಲ್ಲಿಸಿ ಅವರನ್ನು ನೋಡಿ ಗಾಬರಿಗೊಂಡು ದ್ವಿಚಕ್ರವಾಹನ್ನು ಹಿಂದಕ್ಕೆ ತಿರುಗಿಸಿಕೊಳ್ಳಲು ಯತ್ನಿಸಿದಾಗ ನನ್ನ ಹಿಂದಿನಿಂದ ಮತ್ತೊಬ್ಬ ಆಸಾಮಿ ಮತ್ತೊಂದು ದ್ವಿಚಕ್ರವಾಹನದಲ್ಲಿ ಬಂದು ನಮ್ಮನ್ನು ಅಡ್ಡಗಟ್ಟಿ 3 ಜನ ಅಸಾಮಿಗಳು ನಮ್ಮ ಬಳಿಗೆ ಬಂದು ನಮ್ಮಿಬ್ಬರನ್ನು ಹಿಡಿದುಕೊಂಡು ಹಣವನ್ನು ಕೊಡುವಂತೆ ಬೆದರಿಕೆ ಹಾಕಿದರು. ನಾವು ನಮ್ಮ ಬಳಿ ಹಣವಿಲ್ಲವೆಂದು ಹೇಳಿದಾಗ ಆ ಪೈಕಿ ಒಬ್ಬ ಆಸಾಮಿ ನನ್ನ ಪ್ಯಾಂಟಿನ ಜೇಬಿಗೆ ಕೈ ಹಾಕಿ ಜೇಬಿನಲ್ಲಿದ್ದ ಪೈನಾನ್ಸ್ ವಸೂಲಿ ಹಣ 7000/- ರೂಗಳನ್ನು ಕಿತ್ತಕೊಂಡನು. ಆಗ ನಾವು ಜೋರಾಗಿ ಕಿರುಚಿಕೊಂಡಾಗ ರಸ್ತೆಯಲ್ಲಿ ದ್ವಿಚಕ್ರವಾಹನದಲ್ಲಿ ಪೆದ್ದೂರು ಗ್ರಾಮದ ಕಡೆಯಿಂದ ವೆಂಕಟರಮಣ ಮತ್ತು ವಿಶ್ವನಾಥ ರವರು ಬಂದಿದ್ದನ್ನು ನೋಡಿ 3 ಜನ ಆಸಾಮಿಗಳು 7000/- ನಗದು ಹಣವನ್ನು ಎತ್ತಿಕೊಂಡು ಪರಾರಿಯಾಗಿರುತ್ತಾರೆ. 3 ಜನ ಆರೋಪಿಗಳು ಬಂದಿದ್ದ 2 ದ್ವಿ ಚಕ್ರವಾಹನಗಳಲ್ಲಿ  ಒಂದು ದ್ವಿಚಕ್ರವಾಹನ ಕೆ ಎ 67 ಇ 0307 ನೊಂದಣಿ ಸಂಖ್ಯೆಯ ಹೋಂಡ ಯೂನಿಕಾರ್ನ  ಕಂಪನಿಯ ಗ್ರೇ ಬಣ್ಣದ ದ್ವಿಚಕ್ರವಾಹನವಾಗಿರುತ್ತೆ. ಮತ್ತೊಂದು ಕೆಂಪು ಬಣ್ಣದ ದ್ವಿಚಕ್ರವಾಹನವಾಗಿರುತ್ತೆ. 3 ಜನ ಆಸಾಮಿಗಳಲ್ಲ್ಲಿ ಒಬ್ಬ ಆಸಾಮಿ ದಪ್ಪಗೆ ಇದ್ದು ಗುಂಡು ಮುಖ, ಕಪ್ಪು ಮೈಬಣ್ಣ ಹೊಂದಿದ್ದು, ಆಕಾಶ ನೀಲಿ ಬಣ್ಣದ ಶರ್ಟ ಮತ್ತು ನೀಲಿ ಬಣ್ಣದ ಜೀನ್ಸ್ ಪ್ಯಾಂಟ್ ಹಾಕಿದ್ದನು, 2 ನೇ ಆಸಾಮಿ ಸಣ್ಣದಾಗಿದ್ದು, ಕೋಲು ಮುಖವಿದ್ದು, ಕಪ್ಪು ಮೈಬಣ್ಣ ದವನಾಗಿದ್ದು,  ಗ್ರೇ ಬಣ್ಣದ ಟೀ ಶರ್ಟ ಕಪ್ಪು ಬಣ್ಣದ ನೈಟ್ ಪ್ಯಾಂಟ್ ಧರಿಸಿದ್ದನು 3 ನೇ ಆಸಾಮಿಯ ಸಾದಾರಣದಪ್ಪವಿದ್ದ ಗಾಬರಿಯಲ್ಲಿ ಆತನು ಧರಿಸಿದ್ದ ಬಟ್ಟೆಗಳನ್ನು ನಾವು ಸರಿಯಾಗಿ ಗಮನಿಸಿರುವುದಿಲ್ಲ.

ನಮ್ಮನ್ನು  ಹಿಂಭಾಲಿಸಿಕೊಂಡು ಬಂದು ನಮ್ಮನ್ನು ಅಡ್ಡಗಟ್ಟಿ ನನ್ನ ಬಳಿ ಇದ್ದ ಪೆನ್ಸಾನ್ ವಸೂಲಿ ಹಣ 7000/- ರೂಗಳನ್ನು ಕಿತ್ತು ಕೊಂಡು ಹೋದ ಮೇಲ್ಕಂಡ 3 ಜನ ಆಸಾಮಿಗಳನ್ನು ಮತ್ತು ನಗದು ಹಣವನ್ನು ಪತ್ತೇ ಮಾಡಿ ಕಾನೂನು ರೀತ್ಯ ಕ್ರಮಜರುಗಿಸಬೆಕಾಗಿ ತಮ್ಮಲ್ಲಿ  ಕೋರುತ್ತೇನೆ.

  1. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.13/2021 ಕಲಂ. 279,337  ಐ.ಪಿ.ಸಿ :-

     ದಿನಾಂಕ: 16/01/20201 ರಂದು ಸಾಯಂಕಾಲ 4-15 ಗಂಟೆಗೆ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯಲ್ಲಿ ಗಾಯಾಳು ರವಿಕುಮಾರ್ ಬಿನ್ ಬೈರಾರೆಡ್ಡಿ, 19 ವರ್ಷ, ವಕ್ಕಲಿಗರು, ಅಮ್ಮಗಾರಹಳ್ಳಿ ಗ್ರಾಮ, ಶಿಡ್ಲಘಟ್ಟ ತಾಲ್ಲೂಕು ರವರು ನೀಡಿದ ಹೇಳಿಕೆಯ ಸಾರಾಂಶವೇನೆಂದರೆ ಈ ದಿನ ದಿನಾಂಕ: 16/01/2021 ರಂದು ಬೆಳಿಗ್ಗೆ ನಮ್ಮ ಅಣ್ಣನ ಬಾಬತ್ತು KA-40, X-6417 HONDA CB UNICORN ದ್ಚಿಚಕ್ರ ವಾಹನದಲ್ಲಿ ನಾನು ನನ್ನ ಸ್ನೇಹಿತ ಮನೋಹರ ರವರು ಚಿಕ್ಕಬಳ್ಳಾಪುರ ಆರ್.ಟಿ.ಓ ಕಛೇರಿಗೆ LLR ಮಾಡಿಸಲು ಬಂದಿದ್ದು, LLR ಮಾಡಿಸಿಕೊಂಡು ನಮ್ಮ ಗ್ರಾಮಕ್ಕೆ ಹೋಗಲು NH-44 ರಸ್ತೆಯ ಸೇಟ್ ದಿನ್ನೆ ಸಮೀಪ ಹೋಗುತ್ತಿದ್ದಾಗ  ಮದ್ಯಾಹ್ನ ಸುಮಾರು 1-30 ಗಂಟೆ ಸಮಯದಲ್ಲಿ ನನ್ನ ಹಿಂದೆ ಬರುತ್ತಿದ್ದ PB-31, P-9099 MAHINDRA BOLERO ವಾಹನದ ಚಾಲಕ ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ನಮ್ಮ ದ್ವಿಚಕ್ರ ವಾಹನದ ಮುಂಭಾಗದ ಚಕ್ರಕ್ಕೆ ಡಿಕ್ಕಿ ಹೊಡೆಸಿದ್ದರ ಪರಿಣಾಮ ನಾವಿಬ್ಬರೂ ಕೆಳಗೆ ಬಿದ್ದು ಹೋಗಿದ್ದು, ನನಗೆ ಬಲಕಾಲಿನ ಮೊಣಕಾಲು, ಬಲಕಾಲ ಪಾದ ಮತ್ತು ಹಣೆಯ ಬಲಗಡೆ ರಕ್ತಗಾಯಗಳಾಗಿದ್ದು, ಮನೋಹರರವರಿಗೂ ಸಹ ತರಚಿದ ಗಾಯಗಳಾಗಿದ್ದು, ತಕ್ಷಣ ಸ್ಥಳದಲ್ಲಿದ್ದವರು ನಮ್ಮನ್ನು ಉಪಚಿರಿಸಿ 108 ಆಂಬುಲೆನ್ಸ್ ನಲ್ಲಿ ಚಿಕ್ಕಬಳ್ಳಾಪುರ ಸರ್ಕಾರಿ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದು ಚಿಕಿತ್ಸೆ ಪಡೆಯುತ್ತಿರುತ್ತೇನೆ. ಈ ಅಪಘಾತಕ್ಕೆ ಕಾರಣನಾದ PB-31, P-9099 MAHINDRA BOLERO ವಾಹನದ ಚಾಲಕನ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಬೇಕೆಂದು ಕೋರಿ ನೀಡಿದ ದೂರಿನನ್ವಯ ಪ್ರ.ವ.ವರದಿ,

  1. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.14/2021 ಕಲಂ. 279,337  ಐ.ಪಿ.ಸಿ :-

     ದಿನಾಂಕ: 17/01/20201 ರಂದು ಬೆಳಿಗ್ಗೆ 11-00 ಗಂಟೆಗೆ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯಿಂದ ಬಂದ ಮೆಮೋ ಪಡೆದುಕೊಂಡು ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳು ಬಿ.ಎಂ.ತ್ರಿಮೂರ್ತಿ ಬಿಇನ್ ಮುನಿನಾರಾಯಣಪ್ಪ, 33 ವರ್ಷ, ಎ.ಪಿ.ಸಿ-127, ಡಿ.ಎ.ಆರ್, ಚಿಕ್ಕಬಳ್ಳಾಪುರ ವಾಸ: ಬೈರನಾಯಕನಹಳ್ಳಿ ಗ್ರಾಮ, ನಂದಿ ಹೋಬಳಿ, ಚಿಕ್ಕಬಳ್ಳಾಪುರ ತಾಲ್ಲೂಕು ರವರ ಹೇಳಿಕೆಯನ್ನು ಪಡೆದುಕೊಂಡು ಬೆಳಿಗ್ಗೆ 11-45 ಗಂಟೆಗೆ ಠಾಣೆಗೆ ಬಂದು ದಾಖಲಿಸಿದ ದೂರು ಏನೆಂದರೆ ತಾನು KA-40 G-9009 ಇನೋವಾ ಕಾರು ಹೈವೇ-6 ಮೊಬೈಲ್ ಗೆ ಚಾಲಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಈ ದಿನ ದಿನಾಂಕ: 17/01/2021 ರಂದು ಬೆಳಿಗ್ಗೆ 8-00 ಗಂಟೆಗೆ ನಾನು ಮತ್ತು ನಮ್ಮ ಹೈವೇ-6 ಮೊಬೈಲ್ ಗೆ ನೇಮಕವಾಗಿರುವ ನರಸಿಂಹಪ್ಪ, ಎ.ಎಸ್.ಐ ಇಬ್ಬರೂ ಚಿಕ್ಕಬಳ್ಳಾಪುರ-ಶಿಡ್ಲಘಟ್ಟ NH-234 ರಸ್ತೆಯಲ್ಲಿ ಗಸ್ತುಮಾಡಿಕೊಂಡು ಹೋಗಿ ವಾಪಸ್ಸು ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯ ಸರಹದ್ದು ಹೊಸಹುಡ್ಯ-ಲಕ್ಕಹಳ್ಳಿ ಗೇಟ್ ಮದ್ಯೆ ನಮ್ಮ ಹೈವೇ-6 ವಾಹನವನ್ನು ರಸ್ತೆಯ ಎಡಭಾಗ ದಕ್ಷಿಣದ ಕಡೆ ಪುಟ್ ಪಾತ್ ನಲ್ಲಿ ನಿಲ್ಲಿಸಿಕೊಂಡು ರಸ್ತೆಯಲ್ಲಿ ಬರುವ ಲಾರಿಯೊಂದನ್ನು ನಿಲ್ಲಿಸಿ ಅದರ ದಾಖಲಾತಿಗಳನ್ನು ನರಸಿಂಹಪ್ಪರವರು ಪರಿಶೀಲಿಸುತ್ತಿದ್ದು, ತಾನು ತನ್ನ ಹೈವೇ-6 ಮೊಬೈಲ್ ಮುಂದಿನ ಡೋರ್ ಬಳಿ ನಿಂತಿದ್ದಾಗ ಬೆಳಿಗ್ಗೆ ಸುಮಾರು 10-20 ಗಂಟೆ ಸಮಯದಲ್ಲಿ ಚಿಕ್ಕಬಳ್ಳಾಪುರದ ಕಡೆಯಿಂದ ಬರುತ್ತಿದ್ದ KA-41, Z-154 ಮಾರುತಿ ಓಮ್ನಿ ಕಾರಿನ ಚಾಲಕ ತನ್ನ ಕಾರನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಏಕಾಏಕಿ ನಮ್ಮ ಕಾರಿನ ಬಲಭಾಗಕ್ಕೆ ಡಿಕ್ಕಿ ಹೊಡೆಸಿದ್ದರಿಂದ ಕಾರಿನ ಮುಂಭಾಗದ ಡೋರ್ ಬಳಿ ನಿಂತಿದ್ದ ತನಗೆ ಬಲಕಾಲ ತೊಡೆಗೆ ಊತಗಾಯವಾಗಿದ್ದು, ಎಡಮೊಣಕೈಗೆ ತರಚಿದಗಾಯವಾಗಿದ್ದು, ಹೈವೇ-6 ಮೊಬೈಲ್ ಬಲಭಾಗ ಜಖಂಗೊಂಡಿರುತ್ತೆ. ಅದೇ ವೇಳೆಗೆ ಶಿಡ್ಲಘಟ್ಟ ಕಡೆಯಿಂದ ಬರುತ್ತಿದ್ದ KA-52 0864 ಟಿಪ್ಪರ್ ವಾಹನದ ಚಾಲಕ ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಮಾರುತಿ ಓಮ್ನಿ ಕಾರಿಗೆ ಡಿಕ್ಕಿ ಹೊಡೆಸಿ ಜಖಂಗೊಳಿಸಿರುತ್ತೆ. ಈ ಅಪಘಾತಕ್ಕೆ ಕಾರಣವಾದ KA-41, Z-154 ಮಾರುತಿ ಓಮ್ನಿ ಕಾರು ಮತ್ತು ಅದರ ಚಾಲಕ ಹಾಗೂ KA-52 0864 ಟಿಪ್ಪರ್ ವಾಹನ ಮತ್ತು ಅದರ ಚಾಲಕನ ವಿರುದ್ದ ಕಾನೂನು ಕ್ರಮ ಜರುಗಿಸಬೇಕೆಂದು ಕೋರಿ ನೀಡಿದ ಹೇಳಿಕೆ ದೂರಿನನ್ವಯ ಪ್ರ.ವ.ವರದಿ

  1. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.21/2021  ಕಲಂ. 341,323,504,506,34 ಐ.ಪಿ.ಸಿ :-

     ದಿನಾಂಕ: 16/01/2021 ರಂದು ಸಂಜೆ 6.00 ಗಂಟೆಗೆ ಠಾಣೆಯ ನ್ಯಾಯಾಲಯ ಕರ್ತವ್ಯದ ಸಿ.ಪಿ.ಸಿ-339 ರವರು ಘನ ನ್ಯಾಯಾಲಯದ ನ್ಯಾಯಾಧೀಶರ ಅನುಮತಿಯನ್ನು ಪಡೆದು ಠಾಣೆಗೆ ತಂದು ಹಾಜರು ಪಡಿಸಿದ್ದರ ಸಾರಾಂಶವೇನೆಂದರೆ, ದಿನಾಂಕ:14/01/2021 ರಂದು ಚಿಂತಾಮಣಿ ಸರ್ಕಾರಿ ಆಸ್ವತ್ರೆಯಲ್ಲಿ ಗಾಯಾಳು ನರೇಶ್ ಬಾಬು @ ಬಾಬು ಬಿನ್ ಲೇಟ್ ನರಸಿಂಹಪ್ಪ, 28 ವರ್ಷ, ಆದಿ ಕರ್ನಾಟಕ ಜನಾಂಗ, ಕೂಲಿಕೆಲಸ, ಕಟಮಾಚನಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು ರವರು ನೀಡಿದ ಹೇಳಿಕೆಯ ಸಾರಾಂಶವೇನೆಂದರೆ, ಈಗ್ಗೆ 04 ವರ್ಷದ ಹಿಂದೆ ತನ್ನ ತಂದೆ ನರಸಿಂಹಪ್ಪ ರವರು ಅಪಘಾತದಲ್ಲಿ ಮೃತಪಟ್ಟಿದ್ದು, ಸದರಿ ಅಪಘಾತದ ವಿಮೆ ಹಣ ತನ್ನ ತಾಯಿಯಾದ ಈಶ್ವರಮ್ಮ ರವರ ಖಾತೆಗೆ ಬಂದಿರುತ್ತೆ. ಈ ವಿಚಾರವಾಗಿ ತನಗೂ, ತನ್ನ ತಾಯಿ ಈಶ್ವರಮ್ಮ, ತನ್ನ ಭಾವ ನಾಗರಾಜು, ತನ್ನ ಅಜ್ಜ ವೆಂಕಟರವಣಪ್ಪ ಮತ್ತು ತನ್ನ ಮಾವ ಗಂಗಾಧರ ರವರಿಗೆ ವಿವಾದವಿರುತ್ತೆ. ಹೀಗಿರುವಾಗ ದಿನಾಂಕ:13/01/2021 ರಂದು ರಾತ್ರಿ 9.00 ಗಂಟೆ ಸಮಯದಲ್ಲಿ ಕಾಗತಿ ಬಳಿ ಹೋಗುತ್ತಿದ್ದಾಗ ಮೇಲ್ಕಂಡ ತನ್ನ ಮಾವ ಗಂಗಾಧರ, ತನ್ನ ಅಜ್ಜ ವೆಂಕಟರವಣಪ್ಪ ಮತ್ತು ತನ್ನ ಭಾವ ನಾಗರಾಜು ರವರು ತನ್ನನ್ನು ತಡೆದು, ತನ್ನ ಮೇಲೆ ಗಲಾಟೆ ಮಾಡಿ ಅವಾಚ್ಯ ಶಬ್ದಗಳಿಂದ ಬೈದು, ಕೈಗಳಿಂದ ಮೈ ಕೈ ಮೇಲೆ ಹೊಡೆದು ಪ್ರಾಣ ಬೆದರಿಕೆ ಹಾಕಿರುತ್ತಾರೆ. ಆದ್ದರಿಂದ ಮೇಲ್ಕಂಡವರನ್ನು ಠಾಣೆಗೆ ಕರೆಸಿ ತನ್ನ ತಂಟೆಗೆ ಬಾರದಂತೆ ಬಂದೋಬಸ್ಥ್ ಮಾಡಬೇಕಾಗಿ ತಮ್ಮಲ್ಲಿ ಕೋರಿ ನೀಡಿದ ದೂರಿನ ಮೇರೆಗೆ ಅದೇ ದಿನ ದಿನಾಂಕ: 14/01/2021 ರಂದು ಎನ್.ಸಿ.ಆರ್ ನಂ.29/2021 ರೀತ್ಯಾ ಪ್ರಕರಣ ದಾಖಲಿಸಿಕೊಂಡಿರುತ್ತೆ. ಸದರಿ ಪ್ರಕರಣವು ಅಸಂಜ್ಞೆಯ ಪ್ರಕರಣವಾಗಿದ್ದು ಕಲಂ:341, 323, 504, 506 ರೆ/ವಿ 34 ಐಪಿಸಿ ರೀತ್ಯಾ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಗೊಳ್ಳಲು ಅನುಮತಿಯನ್ನು ನೀಡಬೇಕಾಗಿ ಘನ ನ್ಯಾಯಾಲಯದಲ್ಲಿ ಕೋರಿದ್ದು, ಘನ ನ್ಯಾಯಾಲಯವು ಪ್ರಕರಣವನ್ನು ದಾಖಲು ಮಾಡಲು ಅನುಮತಿಯನ್ನು ನೀಡಿರುವುದಾಗಿದ್ದು, ಸದರಿ ಆದೇಶದ ಮೇರೆಗೆ ಪ್ರಕರಣ ದಾಖಲಿಸಿರುವುದಾಗಿರುತ್ತೆ.

  1. ದಿಬ್ಬೂರಹಳ್ಳಿ ಪೊಲೀಸ್ ಠಾಣೆ ಮೊ.ಸಂ.05/2021 ಕಲಂ. 302,506,34  ಐ.ಪಿ.ಸಿ :-

     ದಿನಾಂಕ: 16/01/2021 ರಂದು ಮಧ್ಯಾಹ್ನ 13.00 ಗಂಟೆಗೆ ಶ್ರೀಮತಿ ಮುನಿನಾರಾಯಣಮ್ಮ ಕೋಂ ಚಿಕ್ಕ ಮುನಿಯಪ್ಪ, 63 ವರ್ಷ, ಆದಿ ಕರ್ನಾಟಕ ಜನಾಂಗ, ಕೂಲಿ ಕೆಲಸ, ವಾಸ ಎಸ್.ಗೊಲ್ಲಹಳ್ಳಿ ಗ್ರಾಮ, ಶಿಡ್ಲಘಟ್ಟ ತಾಲ್ಲೂಕು   ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ,  ತಾನು ಮೇಲ್ಕಂಡಂತೆ ವಾಸವಾಗಿರುತ್ತೇನೆ. ತನಗೆ ಮುನಿರಾಜು ಮತ್ತು ಸುಮಾರು 35 ವರ್ಷದ ಜ್ಯೋತಿ ಎಂಬ ಇಬ್ಬರು ಮಕ್ಕಳಿದ್ದು, ಮುನಿರಾಜ 5 ತಿಂಗಳ ಹಿಂದೆ ಅನಾರೋಗ್ಯದಿಂದ ಮೃತರಾಗಿರುತ್ತಾನೆ. ಜ್ಯೋತಿ ರವರು ಸುಮಾರು 16 ವರ್ಷಗಳ ಹಿಂದೆ ಇದೇ ಶಿಡ್ಲಘಟ್ಟ ತಾಲ್ಲೂಕಿನ ಪೂಸಗಾನದೊಡ್ಡಿ ಗ್ರಾಮದ ತಮ್ಮದೇ ಜನಾಂಗದ ವೆಂಕಟರವಣಪ್ಪರವರ ಮಗ ನರಸಿಂಹಪ್ಪ ಎಂಬುವರನ್ನು ಪ್ರೀತಿಸಿ ಮದುವೆ ಮಾಡಿಕೊಂಡಿದ್ದು, ಇವರಿಗೆ ಸುಮಾರು 14 ವರ್ಷದ ಮಧುಮತಿ ಎಂಬ ಒಂದು ಹೆಣ್ಣು ಮಗು ಇರುತ್ತಾಳೆ. ಅಂದಿನಿಂದ ಜ್ಯೋತಿ ಹಾಗೂ ಮಧುಮತಿರವರು ತಮ್ಮ ಗ್ರಾಮದಲ್ಲಿಯೇ ತಮ್ಮ ಮನೆಯ ಪಕ್ಕದಲ್ಲಿ ಬೇರೆಯಾಗಿ ವಾಸವಾಗಿದ್ದರು. ತನ್ನ ಮಗಳು ಕೂಲಿ ಕೆಲಸ ಮಾಡಿಕೊಂಡು ಆಕೆಯ ಮಗಳನ್ನು ವಿಧ್ಯಾಭ್ಯಾಸ ಮಾಡಿಸುತ್ತಿದ್ದಳು. ನರಸಿಂಹಪ್ಪ ತನ್ನ ಮಗಳನ್ನು ಮದುವೆ ಮಾಡಿಕೊಳ್ಳುವ ಮೊದಲೇ ಚಿಕ್ಕಬಳ್ಳಾಪುರ ತಾಲ್ಲೂಕಿನ ತಿಪ್ಪರೆಡ್ಡಿನಾಗೇನಹಳ್ಳಿ ಗ್ರಾಮದಲ್ಲಿ ಮುನಿರತ್ನಮ್ಮ ಎಂಬುವವರನ್ನು ಮದುವೆ ಆಗಿದ್ದು, ಅವರಿಗೂ ಸಹ 4 ಜನ ಮಕ್ಕಳಿದ್ದು ಮೊದಲನೇ ಹೆಂಡತಿ  ಮತ್ತು ಆಕೆಯ ಮಕ್ಕಳೊಂದಿಗೆ ಪೂಸಗಾನದೊಡ್ಡಿ ಗ್ರಾಮದಲ್ಲಿ ವಾಸವಾಗಿರುತ್ತಾರೆ. ನರಸಿಂಹಪ್ಪ ತಮ್ಮ ಮಗಳ ಬಳಿ ಆಗಾಗ ಬಂದು ಹೋಗುತ್ತಿದ್ದನು. ಆದರೆ ನರಸಿಂಹಪ್ಪ ತನ್ನ ಮಗಳಿಗೆ ಹಾಗು ಮೊಮ್ಮಗಳಿಗೆ ಯಾವುದೇ ಅನುಕೂಲ ಮಾಡಿಕೊಟ್ಟಿರುವುದಿಲ್ಲ. ತನ್ನ ಮಗಳು ನರಸಿಂಹಪ್ಪರವರನ್ನು ಮನೆಯನ್ನು ಕಟ್ಟಿಸಿಕೊಡುವಂತೆ ಕೇಳುತ್ತಿದ್ದಳು. ದಿನಾಂಕ 29/06/2020 ರಂದು ತಾನು ಪೆರೇಸಂದ್ರ ಬಳಿಯ ತಿಪ್ಪರೆಡ್ಡಿನಾಗೇನಹಳ್ಳಿ ಗ್ರಾಮಕ್ಕೆ ಸ್ವಂತ ಕೆಲಸದ ನಿಮಿತ್ತ ಹೋಗಿ ಅಲ್ಲಿಯೇ ಇದ್ದಾಗ ದಿನಾಂಕ 01/07/2020 ರಂದು ಬೆಳಗ್ಗೆ ಸುಮಾರು 7.00 ಗಂಟೆಯಲ್ಲಿ ತನ್ನ ಮಗಳಾದ ಜ್ಯೋತಿರವರು ತಮ್ಮ ಗ್ರಾಮದ ನಾಗಪ್ಪರವರ ಕುರಿಗಳ ದೊಡ್ಡಿಯಲ್ಲಿ ಯಾವುದೋ ವಿಷ ಸೇವನೆ ಮಾಡಿ ಮೃತಪಟ್ಟಿರುವುದಾಗಿ ತಿಳಿದು ತಾನು ಬಂದು ನೋಡಲಾಗಿ ತನ್ನ ಮಗಳು ಮೃತಪಟ್ಟಿದ್ದಳು. ತನ್ನ ಮಗಳು  ತನ್ನ ಗಂಡ ಯಾವುದೇ ಅನುಕೂಲ ಮಾಡಿಕೊಟ್ಟಿಲ್ಲವೆಂತ ನೊಂದುಕೊಂಡು ಅಥವಾ ಬೇರೆ ಯಾವುದೋ ಕಾರಣದಿಂದ ವಿಷ ಸೇವನೆ ಮಾಡಿ ಮೃತಳಾಗಿದ್ದು ಸಾವಿನ ಬಗ್ಗೆ ಅನುಮಾನವಿರುವುದಾಗಿ ತಾನು ದಿನಾಂಕ: 01/07/2020 ರಂದು ದಿಬ್ಬೂರಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರನ್ನು ನೀಡಿದ್ದು ಈ ಬಗ್ಗೆ ದಿಬ್ಬೂರಹಳ್ಳಿ ಪೊಲೀಸ್ ಠಾಣೆಯಲ್ಲಿ ಯು.ಡಿಆರ್ ನಂ 09/2020 ಕಲಂ 174 (ಸಿ) ಸಿಆರ್ ಪಿಸಿ ರೀತ್ಯಾ ಕೇಸು ದಾಖಲಾಗಿರುತ್ತೆ. ನಂತರ ತಾನು ತನ್ನ ಅಳಿಯನಾದ ನರಸಿಂಹಪ್ಪರವರನ್ನು ತನ್ನ ಮೊಮ್ಮಗಳಾದ ಮಧುಮತಿರವರನ್ನು ಕರೆದುಕೊಂಡು ಹೋಗಿ ಸಾಕಿಕೊಳ್ಳುವಂತೆ ತಿಳಿಸಿದ್ದು ಅದಕ್ಕೆ ನರಸಿಂಹಪ್ಪರವರು ಕರೆದುಕೊಂಡು ಹೋಗುವುದಾಗಿ ಹೇಳುತ್ತಾ ಬಂದಿದ್ದು ಇದುವರೆವಿಗೂ ಕರೆದುಕೊಂಡು ಹೋಗಿರುವುದಿಲ್ಲ. ನಂತರ ಈಗ್ಗೆ ಸುಮಾರು 4 ದಿನಗಳ ಹಿಂದೆ ತಾನು ಪೂಸಗಾನದೊಡ್ಡಿ ಗ್ರಾಮಕ್ಕೆ ಹೋಗಿ ನರಸಿಂಹಪ್ಪರವರನ್ನು ಮಧುಮತಿಯನ್ನು ಕರೆದುಕೊಂಡು ಹೋಗುವಂತೆ ಹೇಳಿದಾಗ ನರಸಿಂಹಪ್ಪ ತಾನು ಕರೆದುಕೊಂಡು ಹೋಗುವುದಿಲ್ಲ ನಾನೇಕೆ ಅನುಕೂಲ ಮಾಡಿಕೊಡಬೇಕು ನಿನ್ನ ಮಗಳು ಬೇರೆಯವರೊಂದಿಗೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದಳು ಅದಕ್ಕಾಗಿಯೇ ನಿನ್ನ ಮಗಳನ್ನು ನಾವೇ ಸಾಯಿಸಿರುತ್ತೇವೆ. ಇನ್ನು ಮುಂದೆ ನಮ್ಮ ತಂಟೆಗೆ ಬಂದರೆ ನಿಮಗೂ ಒಂದು ಗತಿ ಕಾಣಿಸುತ್ತೇನೆಂತ ಬೆದರಿಕೆ ಹಾಕಿರುತ್ತಾನೆ. ತನ್ನ ಮಗಳಿಗೆ ಮತ್ತು ಮೊಮ್ಮಗಳಿಗೆ ಅನುಕೂಲ ಮಾಡಿಕೊಡಬೇಕೆಂಬ ಉದ್ದೇಶದಿಂದ ಹಾಗು ತನ್ನ ಮಗಳ ಮೇಲೆ ಅನುಮಾನ ಪಟ್ಟು ತನ್ನ ಅಳಿಯನಾದ ನರಸಿಂಹಪ್ಪ ಮತ್ತು ಆತನ ಮಗನಾದ ನವೀನ್ ಕುಮಾರ್ ರವರುಗಳು ಇತರರೊಂದಿಗೆ ಸೇರಿಕೊಂಡು ತನ್ನ ಮಗಳಾದ ಜ್ಯೋತಿ ರವರನ್ನು ದಿನಾಂಕ: 30/06/2020 ರಂದು ರಾತ್ರಿ ವೇಳೆಯಲ್ಲಿ ಮನೆಯಿಂದ ಹೊರಗೆ ಕರೆದುಕೊಂಡು ಹೋಗಿ ಸಾಯಿಸಿರುತ್ತಾರೆ. ಆದ್ದರಿಂದ ತನ್ನ ಮಗಳನ್ನು ಸಾಯಿಸಿರುವ ಮೇಲ್ಕಂಡವರ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಬೇಕಾಗಿ ಕೋರಿರುವುದಾಗಿರುತ್ತೆ.

  1. ಶಿಡ್ಲಘಟ್ಟ ಪುರ ಪೊಲೀಸ್ ಠಾಣೆ ಮೊ.ಸಂ.02/2021 ಕಲಂ. 87 ಕೆ.ಪಿ ಆಕ್ಟ್ :-

     ದಿನಾಂಕ.17-01-2021 ರಂದು ಬೆಳಿಗ್ಗೆ 08-30 ಗಂಟೆಯಲ್ಲಿ ಶಿಡ್ಲಘಟ್ಟ ನಗರ ಪೊಲೀಸ್ ಠಾಣೆಯ ಪಿ.ಎಸ್.ಐ (ಕಾ.ಸು) ಕೆ.ಸತೀಶ್ ಆದ ನಾನು ಠಾಣೆಯ ಕರ್ತವ್ಯದಲ್ಲಿದ್ದಾಗ ಯಾರೋ ಸಾರ್ವಜನಿಕರಿಂದ ಶಿಡ್ಲಘಟ್ಟ ಟೌನ್ ಮಾರುತಿ ನಗರದ ಆಂಜನೇಯಸ್ವಾಮಿ ದೇವಾಲಯ ಹಿಂಭಾಗದಲ್ಲಿರುವ ಕೃಷ್ಣಪ್ಪ ರವರ ತೋಟದ ಜಮೀನಿನ ಮರದ ಬಳಿ ಯಾರೋ ಜನರು ಗುಂಪು ಸೇರಿ ಹಣವನ್ನು ಪಣಕ್ಕೆ ಕಟ್ಟಿ ಅಕ್ರಮವಾಗಿ ಅಂದರ್-ಬಾಹರ್ ಇಸ್ಟೇಟ್ ಜೂಜಾಟ ಆಡುತ್ತಿದ್ದಾರೆಂತ ಮಾಹಿತಿ ಬಂದಿದ್ದು, ಸದರಿಯವರ ಮೇಲೆ ದಾಳಿ ಮಾಡಲು ಘನ ನ್ಯಾಯಾಲಯದ ಅನುಮತಿಯನ್ನು ಪಡೆದು ಪಂಚಾಯ್ತಿದಾರರು ಮತ್ತು ಶಿಡ್ಲಘಟ್ಟ ನಗರ ಠಾಣೆಯ ಸಿಬ್ಬಂದಿಯವರನ್ನು ಕರೆದುಕೊಂಡು ಎಲ್ಲರೂ ಮೇಲ್ಕಂಡ ಸ್ಥಳಕ್ಕೆ ಬೆಳಿಗ್ಗೆ 9-00 ಗಂಟೆಗೆ ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಯಾರೋ ಆಸಾಮಿಗಳು ಗುಂಪಾಗಿ ಕುಳಿತುಕೊಂಡು ಹಣವನ್ನು ಪಣವಾಗಿಟ್ಟುಕೊಂಡು ಒಬ್ಬ ಆಸಾಮಿ 200/-ರೂ ಅಂದರ್ ಎಂತಲೂ ಮತ್ತೊಬ್ಬ ಆಸಾಮಿ ಬಾಹರ್ 200/-ರೂ ಎಂತಲೂ ಕೂಗಿಕೊಂಡು ಅಕ್ರಮವಾಗಿ ಅಂದರ್ ಬಾಹರ್ ಇಸ್ಪೀಟ್ಜೂಜಾಟ ಆಡುತ್ತಿದ್ದವರುಗಳ ಮೇಲೆ ದಾಳಿ ಮಾಡಿದಾಗ ನಮ್ಮನ್ನು ಕಂಡು ಓಡಿ ಹೋಗುತ್ತಿದ್ದವರನ್ನು ಹಿಂಬಾಲಿಸಿ  ಹಿಡಿದುಕೊಂಡು ಅವರ ಹೆಸರು ವಿಳಾಸ ಕೇಳಲಾಗಿ 1] ಇಲಿಯಾಜ್ಪಾಷ ಬಿನ್ ಸಮೀಉಲ್ಲಾ, 30 ವರ್ಷ, ರೇಷ್ಮೆ ಕೆಲಸ, ಮುಸ್ಲಿಂ ಜನಾಂಗ, ರಾಜೀವ್ ಗಾಂಧೀ ಲೇ ಔಟ್ 2] ಬಾಷಾ ಬಿನ್ ಹುಸೇನ್ ಸಾಬ್, 42 ವರ್ಷ, ಮುಸ್ಲಿಂ ಜನಾಂಗ, ರಾಜೀವ್ ಗಾಂಧೀ ಲೇ ಔಟ್ 3]ನಯಾಜ್ ಪಾಷ ಬಿನ್ ಚಾಂದ್ಪಾಷ, 23 ವರ್ಷ, ರೇಷ್ಮೆ ಕೆಲಸ, ಮುಸ್ಲಿಂ ಜನಾಂಗ, 2ನೇ ಕಾಮರ್ಿಕ ನಗರ 4] ನಾಗರಾಜ @ ನಾಗ ಬಿನ್ ಲೇಟ್ ಜಯರಾಮಪ್ಪ, 29 ವರ್ಷ, ರೇಷ್ಮೆ ಕೆಲಸ, ಬೆಸ್ತರು ಮಾರುತಿನಗರ 5] ಯೂಸಫ್ ಬಿನ್ ಲೇಟ್ ಅಬ್ಬಾಸ್ ಖಾನ್, 25 ವರ್ಷ, ರೇಷ್ಮೆ ಕೆಲಸ, ಮುಸ್ಲಿಂ ಜನಾಂಗ, ರಾಜೀವ್ ಗಾಂಧೀ ಲೇ ಔಟ್ ಎಲ್ಲರೂ ಶಿಡ್ಲಘಟ್ಟ ನಗರ ವಾಸಿಗಳು ಉಳಿದ ಓಡಿಹೋದ 04 ಜನರ ಹೆಸರುಗಳನ್ನು ತಿಳಿಯಲಾಗಿ 1] ನಿಸಾರ್ 2] ಶರೀಪ್  3] ಶೀನಪ್ಪ ಮತ್ತು 4] ಫಯಾಜ್ @ ಗೌರು ಆಗಿರುತ್ತಾರೆ. ಇವರುಗಳು ಜೂಜಾಟ ಆಡುತ್ತಿದ್ದ ಸ್ಥಳದಲ್ಲಿ ಪಂದ್ಯಕ್ಕೆ ಕಟ್ಟಿದ್ದ ಹಣವನ್ನು ತೆಗೆದು ಎಣಿಕೆ ಮಾಡಲಾಗಿ ಒಟ್ಟು 6,160/-ರೂ ನಗದು ಹಣ ಮತ್ತು 52 ಇಸ್ಪೀಟ್ ಎಲೆಗಳು ಸಿಕ್ಕಿದ್ದು ಇವುಗಳನ್ನು ಬೆಳಿಗ್ಗೆ 9-20 ರಿಂದ 10-00 ಗಂಟೆಯವರೆಗೆ ಅಮಾನತ್ತು ಪಡಿಸಿಕೊಂಡಿರುತ್ತೆ. ಸ್ಥಳದಲ್ಲಿ ಸಿಕ್ಕಿದ ಮೇಲ್ಕಂಡ 05 ಜನರು ಮತ್ತು ಅಮಾನತ್ತು ಪಡಿಸಿದ ಮಾಲು ಸಮೇತ ಮಹಜರ್ ನೊಂದಿಗೆ ಒಪ್ಪಿಸುತ್ತಿದ್ದು,  ಕಾನೂನು ಬಾಹಿರವಾಗಿ ಅಂದರ್ ಬಾಹರ್ ಇಸ್ಪೀಟ್ ಜೂಜಾಟ ಆಡುತ್ತಿದ್ದವರ ಮೇಲೆ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಲು ಸೂಚಿಸಿದ್ದರ ಮೇರೆಗೆ  ಬೆಳಿಗ್ಗೆ 10-30 ಗಂಟೆಗೆ ಠಾಣಾ ಮೊ.ಸಂ: 02/2021 ಕಲಂ” 87 ಕೆ.ಪಿ ಆಕ್ಟ್ ರೀತ್ಯ ಪ್ರಕರಣ ದಾಖಲಿಸಿರುತ್ತೆ.