ದಿನಾಂಕ :16/10/2020 ರ ಅಪರಾಧ ಪ್ರಕರಣಗಳು

 1. ಬಾಗೇಪಲ್ಲಿ ಪೊಲೀಸ್ ಠಾಣೆ ಮೊ.ಸಂ.253/2020 ಕಲಂ: 279,304(A)  ಐ.ಪಿ.ಸಿ:-

     ದಿ:16-10-2020 ರಂದು ಬೆಳಗ್ಗೆ 9:00 ಗಂಟೆಗೆ ಪಿರ್ಯಾಧಿದಾರರಾದ ಸೋಮಶೇಖರ ಬಿನ್ ವೆಂಕಟರಮಣಪ್ಪ, 40 ವರ್ಷ, ಬಲಜಿಗರು, ಅಂಗಡಿ ವ್ಯಾಪಾರ, ವಾಸ ಗಂಗಮ್ಮನ ಗುಡಿ ರಸ್ತೆ, 20ನೇ ವಾರ್ಡ, ಬಾಗೇಪಲ್ಲಿ ಟೌನ್ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶ –  ಬಾಗೇಪಲ್ಲಿ ಟೌನ್ ನ್ಯಾಷನಲ್ ಕಾಲೇಜಿನ ಬಳಿ 5ನೇ ವಾರ್ಡನಲ್ಲಿ ವಾಸವಾಗಿರುವ ನನ್ನ ದೊಡ್ಡಪ್ಪನವರಾದ ನಂಜುಂಡಪ್ಪ ಬಿನ್ ಲೇಟ್ ಹನುಮಂತಪ್ಪ, 70 ವರ್ಷ ರವರಿಗೆ  ದಿನಾಂಕ 14/10/2020 ರಂದು ಬೆಳಿಗ್ಗೆ ಸುಮಾರು 10-30 ಗಂಟೆಯಲ್ಲಿ ಕೊಂಡವಾರಂಪಲ್ಲಿ ಗ್ರಾಮದ ಬಳಿ ಅಪಘಾತವಾಗಿರುವುದಾಗಿ  ಕೊಂಡವಾರಂಪಲ್ಲಿ ವಾಸಿಯಾದ ಕೃಷ್ಣಪ್ಪ ರವರು ನನಗೆ ಪೋನ್ ಮಾಡಿ ತಿಳಿಸಿದರು. ತಕ್ಷಣ ನಾನು ಸ್ಥಳಕ್ಕೆ ಹೋಗಿ ನೋಡಲಾಗಿ ನನ್ನ ದೊಡ್ಡಪ್ಪನವರಾದ ನಂಜುಂಡಪ್ಪ ರವರಿಗೆ ಮುಖಕ್ಕೆ, ತಲೆಗೆ ರಕ್ತಗಾಯಗಳಾಗಿ ಬಾಯಿ ಮತ್ತು ಮೂಗಿನಲ್ಲಿ ರಕ್ತ ಬರುತ್ತಿದ್ದು,  ಯಾವುದೋ ಆಟೋವಿನಲ್ಲಿ ಬಾಗೇಪಲ್ಲಿ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಿದ್ದು, ಪ್ರಥಮ ಚಿಕಿತ್ಸೆಯನ್ನು ಕೊಡಿಸಿ, ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ಚಿಕ್ಕಬಳ್ಳಾಪುರಕ್ಕೆ ಕಳುಹಿಸಿಕೊಟ್ಟಿರುತ್ತಾರೆ.  ಚಿಕ್ಕಬಳ್ಳಾಪುರದ ಜೀವನ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ, ನಂತರ ಯಲಹಂಕದ ಕೆ.ಕೆ. ಆಸ್ಪತ್ರೆಯಲ್ಲಿ  ಚಿಕಿತ್ಸೆಗಾಗಿ  ದಾಖಲಿಸಿರುತ್ತೇನೆ. ನಂತರ ವಿಚಾರ ಮಾಡಿ ತಿಳಿಯಲಾಗಿ ದಿನಾಂಕ 14/10/2020 ರಂದು ಬೆಳಿಗ್ಗೆ ನಂಜುಂಡಪ್ಪನವರು ಕೊಂಡವಾರಂಪಲ್ಲಿ (ಜಕ್ಕಿನಾಯನಪಲ್ಲಿ) ಗ್ರಾಮದಲ್ಲಿ ವಾಸವಾಗಿರುವ ತಮ್ಮ ಸ್ನೇಹಿತರಾದ ವೆಂಕಟರವಣಪ್ಪ ಬಿನ್ ಅಶ್ವತ್ಥಪ್ಪ ರವರಿಗೆ ಆರೋಗ್ಯ ಸರಿಇಲ್ಲದೇ ಇದ್ದುದ್ದರಿಂದ ಕೊಂಡವಾರಂಪಲ್ಲಿ ಗ್ರಾಮದ ರಸ್ತೆ ಬದಿಯಲ್ಲಿರುವ ಅವರ ಮನೆಗೆ ಹೋಗಿ ಅವರನ್ನು ಮಾತಾನಾಡಿಸಿಕೊಂಡು,  ವಾಪಸ್ ಬರಲು  ಅವರ ಬಾಬತ್ತು ಕೆ.ಎ-53-ಇ.ಇ-3990 ದ್ವಿ ಚಕ್ರ ವಾಹನದಲ್ಲಿ ರಸ್ತೆಯನ್ನು ಕ್ರಾಸ್ ಮಾಡುತ್ತಿರುವಾಗ ಬಾಗೇಪಲ್ಲಿ ಕಡೆಯಿಂದ ಕೆ.ಎ-50-ವಿ-5141 ಹೋಂಡಾ ಡಿಯೋ ದ್ವಿ ಚಕ್ರ ವಾಹನದ ಚಾಲಕ ದ್ವಿ ಚಕ್ರ ವಾಹನವನನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ನನ್ನ ದೊಡ್ಡಪ್ಪನವರು ಚಾಲನೆ ಮಾಡುತ್ತಿದ್ದ ಕೆ.ಎ-53-ಇ.ಇ-3990 ದ್ವಿ ಚಕ್ರ ವಾಹನಕ್ಕೆ ಡಿಕ್ಕಿ ಹೊಡೆಸಿದ ಪರಿಣಾಮ ದ್ವಿ ಚಕ್ರ ವಾಹನ ಜಖಂ ಗೊಂಡು  ಮೇಲ್ಕಂಡಂತೆ ಗಾಯಗಳಾಗಿರುತ್ತವೆ.  ಯಲಹಂಕದ ಕೆ.ಕೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ನಂಜುಂಡಪ್ಪ ಬಿನ್ ಲೇಟ್ ಹನುಮಂತಪ್ಪ ರವರಿಗೆ ಅಪಘಾತದಲ್ಲಿ ಉಂಟಾದ ಗಾಯಗಳಿಂದ ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ 15/10/2020 ರಂದು ರಾತ್ರಿ 12-20 ಗಂಟೆಗೆ ಮೃತಪಟ್ಟಿರುತ್ತಾರೆ. ಮೃತದೇಹವು ಕೆ.ಕೆ.ಆಸ್ಪತ್ರೆಯಲ್ಲಿರುತ್ತೆ.  ಆದ್ದರಿಂದ ಅಪಘಾತವನ್ನು ಮಾಡಿದ ಕೆ.ಎ-50-ವಿ-5141 ಹೋಂಡಾ ಡಿಯೋ ದ್ವಿ ಚಕ್ರ ವಾಹನದ ಚಾಲಕನ ಮೇಲೆ  ಮುಂದಿನ ಕಾನೂನು ಕ್ರಮ ಜರುಗಿಸಬೇಕಾಗಿ ಕೋರುತ್ತೇನೆ. ನನ್ನ ದೊಡ್ಡಪ್ಪನವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುತ್ತಿದ್ದರಿಂದ ಈ ದಿನ ತಡವಾಗಿ ಬಂದು ದೂರನ್ನು ನೀಡಿರುತ್ತೆನೆ, ಎಂದು ದೂರು.

 1. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.145/2020 ಕಲಂ: 279,304(A) ಐ.ಪಿ.ಸಿ:-

     ದಿನಾಂಕ:15/10/2020 ರಂದು 18:15 ಗಂಟೆಗೆ ಪಿರ್ಯಾದಿದಾರರಾದ ನಾರಾಯಣಸ್ವಾಮಿ ಬಿನ್ ಲೇಟ್ ಗುರಪ್ಪ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆನೆಂದರೆ ತನ್ನ ತಂದೆ ತಾಯಿಗೆ ನಾಲ್ಕು ಜನ ಮಕ್ಕಳಿದ್ದು ಅದರಲ್ಲಿ ಮೂರು ಜನ ಹೆಣ್ಣು ಮಕ್ಕಳು ಒಬ್ಬ ಗಂಡು ಮಗನಿದ್ದು ಇಬ್ಬರು ಮಕ್ಕಳಿಗೆ ಮದುವೆಗಳಾಗಿದ್ದು  ಅದರಲ್ಲಿ ತನಗೆ ಮತ್ತು ತನ್ನ ತಂಗಿಗೆ ನಾರಾಯಣಮ್ಮ ರವರಿಗೆ ಮಧುವೆಯಾಗಿರುವುದಿಲ್ಲವೆಂದು ತನ್ನ ತಂದೆ ಈ ಹಿಂದೆಯೇ ಮೃತಪಟ್ಟಿದ್ದು ತಾನು ತನ್ನ ತಂಗಿ ಹಾಗೂ ತಾಯಿ ಮುನಿಯಮ್ಮ ರವರು ಕೂಲಿ ಮಾಡಿಕೊಂಡು ಜೀವನ ಮಾಡಿಕೊಂಡಿದ್ದು ಹೀಗಿರುವಾಗ ದಿನಾಂಕ: 15/10/2020 ರಂದು ಬೆಳ್ಳಿಗ್ಗೆ ತನ್ನ ತಾಯಿ ಅಕ್ಕನಾದ ಅಂಜಿನಮ್ಮ ರವರನ್ನು  ಮಾತನಾಡಿಸಿಕೊಂಡು ಬರುವುದಾಕ್ಕಾಗಿ ತಮ್ಮ ಗ್ರಾಮದಿಂದ  ಜಡೇನಹಳ್ಳಿಗೆ ಹೋಗಿದ್ದು ಸಂಜೆ ಸುಮಾರು 04-00 ಗಂಟೆಗೆ ತನ್ನ ಅಕ್ಕಳಾದ ಅಂಜಿನಮ್ಮ ರವರ ಮಗ ಆನಂದ ರವರು ತನಗೆ ಪೋನ್ ಮಾಡಿ ತನ್ನ ತಾಯಿಗೆ ಸೇಟ್ ದಿನ್ನೆ ಬಳಿಯಿರುವ ಪ್ಯಾಕ್ಟರಿ ಮುಂದೆ ಸರ್ವೀಸ್ ರಸ್ತೆಯಲ್ಲಿ ಮದ್ಯಾಹ್ನ ಸುಮಾರು 3-45 ಗಂಟೆಯಲ್ಲಿ ಅಪಘಾತವಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾಳೆಂದು ತಿಳಿಸಿದ್ದು ತಾನು ಹೋಗಿ ನೋಡಿದಾಗ ವಿಚಾರ ನಿಜವಾಗಿದ್ದು ತನ್ನ ತಾಯಿಗೆ ಸೊಂಟದ ಮೇಲೆ ಲಾರಿಯು ಹತ್ತಿ ಮಾಂಸ ಖಂಡಗಳು ಹೊರಬಂದು ಸ್ಥಳದಲ್ಲಿಯೆ ಮೃತಪಟ್ಟಿತ್ತಾಳೆಂದು ಅಪಘಾತವುಂಟು ಮಾಡಿದ್ದ ಲಾರಿಯು ಸಹ ಸ್ಥಳದಲ್ಲಿಯೆ ಇದ್ದು  ಅದರ ನೊಂದಣಿ ಸಂಖ್ಯೆ ಎಪಿ-02-ಡಬ್ಲೂ-5549 ಆಗಿತ್ತು ನಂತರ ತನ್ನ ತಾಯಿಯ ಮೃತ ದೇಹವನ್ನುಚಿಕ್ಕಬಳ್ಳಾಪುರ ಸರ್ಕಾರಿ ಆಸ್ಪೆತ್ರೆಯ ಶವಗಾರಕ್ಕೆ ಸಾಗಿಸಿದ್ದು  ಈ ಅಪಘಾತಕ್ಕೆ ಕಾರಣನಾದ ಎಪಿ-02-ಡಬ್ಲೂ-5549 ರ ನೊಂದಣಿ ಸಂಖ್ಯೆಯ ಲಾರಿ ಚಾಲಕನು ಚಿಕ್ಕಬಳ್ಳಾಪುರ ಕಡೆಯಿಂದ ಬಾಗೇಪಲ್ಲಿ ಕಡೆಗೆ ಹೋಗುವುದಕ್ಕಾಗಿ ಲಾರಿಯನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಹೋಗಿ ಸರ್ವೀಸ್ ರಸ್ತೆಯ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ತನ್ನ ತಾಯಿಗೆ ಹಿಂದಿನಿಂದ ಡಿಕ್ಕಿ ಹೊಡೆಸಿ ಅಪಘಾತವುಂಟು ಮಾಡಿದ್ದು ಸದರಿ ಲಾರಿ ಚಾಲಕನ ವಿರುದ್ದ ಕ್ರಮ ಜರುಗಿಸಲು ಕೋರಿದ್ದರ ಮೇರೆಗೆ ಈ ಪ್ರಥಮ ವರ್ತಮಾನ ವರದಿ.

 1. ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆ ಮೊ.ಸಂ.69/2020 ಕಲಂ: 416,417 ಐ.ಪಿ.ಸಿ:-

     ದಿನಾಂಕ-15/10/2020 ರಂದು ಸಂಜೆ 06:30 ಗಂಟೆಗೆ ನ್ಯಾಯಾಲಯದ ಪಿ,ಸಿ-332 ರವರು ಠಾಣೆಗೆ ಹಾಜರಾಗಿ ನೀಡಿದ ನ್ಯಾಯಾಲಯದ ಅನುಮತಿ ಪತ್ರವನ್ನು ಪಡೆದುಕೊಂಡಿದ್ದರ ಸಾರಾಂಶವೆನೆಂದರೆ ಪಿರ್ಯಾದಿದಾರರಾದ ಶ್ರೀ ಇಂತಿಯಾಜ್ ಪಾಷ ಬಿನ್ ಪೈಯಾಜ್ ಪಾಷ,36 ವರ್ಷ,ಸಮಾಜಸೇವಕರು,ವಲಸಣ್ಣನ ಬೀದಿ ವಾರ್ಡ್ ನಂ-17 ಚಿಕ್ಕಬಳ್ಳಾಪುರ ನಗರ ರವರು ತಾನು ವಕ್ಫ್ ಬೋರ್ಡನ ಅಂಗಸಂಸ್ಥೆಯಾದ  ಚಿಕ್ಕಬಳ್ಳಾಪುರ ನಗರದಲ್ಲಿರುವ  ಮುಸ್ಲಿಂ  ಸಮುದಾಯದ ಶ್ರೇಯಸ್ಸಿಗಾಗಿ  ನಿರ್ಮಾಣವಾಗಿರುವ ಸಂಸ್ಥೆಯಾದ ”ಜಮಾತ್ ಅಹ್ಲೆ ಇಸ್ಲಾಂ” ನ ಆಡಳಿತಾಧಿಕಾರಿಯಾಗಿ 2019-20 ನೇ ಸಾಲಿನಲ್ಲಿ ನೇಮಕವಾಗಿದ್ದು ತನ್ನ ಅಧಿಕಾರವಧಿಯು ದಿನಾಂಕ: 23-08-2020 ಕ್ಕೆ ಮುಕ್ತಾಯವಾಗುತ್ತದೆ. ನಂತರ ದಿನಾಂಕ: 05-09-2020 ರಂದು NO-KSBA/ADM/SMG/DWAC/01/2019-20 ರ ಅದೇಶದಂತೆ ತನ್ನನ್ನು ರಾಜ್ಯ ವಕ್ಫ ಬೋರ್ಡ್ ಸಮಿತಿಯು ಜಿಲ್ಲಾ ವಕ್ಫ ಬೋರ್ಡ್ ಛೇರ್ಮೆನ್ ಆಗಿ  ನೇಮಕಮಾಡಿರುತ್ತಾರೆ. ಅದರಂತೆ ದಿನಾಂಕ:01-08-2016 ರ ಬೋರ್ಡ್ ಅದೇಶಸಂಖ್ಯೆ: KBW/CMC/23/CBP/2003-04 ರಂತೆ ಜಿಲ್ಲೆಯಲ್ಲಿರುವ ವಕ್ಫ ಬೋರ್ಡ ಅಧೀನದಲ್ಲಿರುವ ಸಂಸ್ಥೆಗಳಲ್ಲಿ ಚುನಾಯಿತ  ಆಡಳಿತಾಧಿಕಾರಿಗಳು ಇಲ್ಲದ ಸಂಸ್ಥೆಗಳು ಜಿಲ್ಲಾ ವಕ್ಫಬೋರ್ಡ ಛೇರ್ಮೆನ್ ಆಡಳಿತಾಧಿಕಾರಿಗಳು ಮುಖ್ಯಸ್ಥರಾಗಿರುತ್ತಾರೆ. ಅದರಂತೆ ತಾನು ಜಮಾತ್ ಅಹ್ಲೆ ಇಸ್ಲಾಂ ನ ಆಡಳಿತಾಧಿಕಾರಿ ಯಾಗಿರುತ್ತೇನೆ. ಅದರೆ ತನ್ನ ಅವಧಿಗೆ ಮುಂಚಿತವಾಗಿ ಆಡಳಿತಾಧಿಕಾರಿಯಾಗಿದ್ದ ಶ್ರೀ ರಫೀಉಲ್ಲಾ ಎಂಬುವರನ್ನು ದಿನಾಂಕ:19-08-2020 ರಂದು ರಾಜ್ಯ ವಕ್ಫ ಮಂಡಳಿಯಲ್ಲಿ ನಡೆದ ಸಭೆ ಸಂಖ್ಯೆ: 323 (ಂಔಖ) ಖಗಃ-2 ನಲ್ಲಿ ಅನಧಿಕೃತವಾಗಿ ಸಭೆ ನಡೆಸಿ ರಫೀಉಲ್ಲಾ ರವರನ್ನು ವಕ್ಫ ಬೋರ್ಡನ ಅಂಗಸಂಸ್ಥೆಯಾದ  ಚಿಕ್ಕಬಳ್ಳಾಪುರ  ಜಮಾತ್ ಅಹ್ಲೆ ಇಸ್ಲಾಂ ನ ಆಡಳಿತಾಧಿಕಾರಿಯನ್ನಾಗಿ ನೇಮಕ ಮಾಡಿರುತ್ತಾರೆ.  ಈ ಅಕ್ರಮ ನೇಮಕಾತಿಯನ್ನು ಹಾಗೂ ಸಭೆ ಸಂಖ್ಯೆ: 323 (AOS) SUB-02  ರೆಸಲೂಷನ್  ಅದೇಶವು  ಅಕ್ರಮವಾಗಿರುವುದಾಗಿ  ರಾಜ್ಯ ವಕ್ಫ ಬೋರ್ಡ ಟ್ರಿಬಿನಲ್ ನ್ಯಾಯಾಲಯದಲ್ಲಿ ದಿನಾಂಕ:25-09-2020 ರಂದು  ಅರ್ಜಿ ಸಂ: 11/2020, CFR NO:20/2020.  ರಂತೆ  ಸಲ್ಲಿಸಿದ್ದು ಅದರಂತೆ ದಿನಾಂಕ: 29-09-2020 ರಂದು ಮೇಲ್ಕಂಡ ಆದೇಶಕ್ಕೆ  ಘನ ಟ್ರಿಬಿನಲ್ ನ್ಯಾಯಾಲಯ ಬೆಂಗಳೂರು ರವರು ತಡೆಯಾಜ್ಞೆಯನ್ನು  ನೀಡಿರುತ್ತಾರೆ. ಆದರೆ ಶ್ರೀ ಬಿ.ಎಸ್. ರಫೀಉಲ್ಲಾ ರವರಿಗೆ ದಿನಾಂಕ: 29/09/2020 ರಿಂದ  ಚಿಕ್ಕಬಳ್ಳಾಪುರ ನಗರ ”ಜಮಾತ್ ಅಹ್ಲೆ ಇಸ್ಲಾಂ” ನಲ್ಲಿ ಯಾವುದೇ ಅಧಿಕಾರವಿಲ್ಲದಿದ್ದರೂ  ಜಿಲ್ಲಾ ವಕ್ಫ ಬೋರ್ಡನ ಛೇರ್ಮೇನ್ ಆದ ನನ್ನ ಅಧೀನದಲ್ಲಿರುವ ಜಮಾತ್ ಅಹ್ಲೆ ಇಸ್ಲಾಂನಲ್ಲಿ ದಿನಾಂಕ: 03-10-2020 ರಂದು ರೂ 2,24,000/- (ಎರಡು ಲಕ್ಷ ಇಪ್ಪತ್ನಾಲ್ಕು ಸಾವಿರ ರೂ) ಗಳನ್ನು ವಿತರಣೆ ಮಾಡಿರುವುದಾಗಿ ಲೆಟರ್ ಹೆಡ್ ನಲ್ಲಿ  ಸಹಿ ಮಾಡಿ  ನೀಡಿರುತ್ತಾರೆ. ಶ್ರೀ ಬಿ.ಎಸ್ ರಫೀಉಲ್ಲಾ ಮತ್ತು ಇತರರು ಸೇರಿ ರಾಜ್ಯ ವಕ್ಫ್ ಬೋರ್ಡ್ ಟ್ರಿಬಿನಲ್ ನ್ಯಾಯಾಲಯದ ತಡೆಯಾಜ್ಞೆಯನ್ನು ಉಲ್ಲಂಘನೆ ಮಾಡಿ ಯಾವುದೇ ಅಧಿಕಾರವಿಲ್ಲದಿದ್ದರೂ  ನನ್ನ ಅಧಿಕಾರದ  ಅವಧಿಯಲ್ಲಿ ರೂ 2,24,000/- (ಎರಡು ಲಕ್ಷ ಇಪ್ಪತ್ನಾಲ್ಕು ಸಾವಿರ ರೂ) ಗಳನ್ನು ”ಜಮಾತ್ ಅಹ್ಲೆ ಇಸ್ಲಾಂ” ರ ಖಾತೆಯಿಂದ  ಹಣವನ್ನು ಡ್ರಾಮಾಡಿ  ವಿತರಣೆ ಮಾಡಿ ಸಂಸ್ಥೆಗೆ ಹಾಗೂ ಜಿಲ್ಲಾ ವಕ್ಫ ಬೋರ್ಡ ಛೇರ್ಮನ್ ಆದ ತನಗೆ  ವಂಚನೆ ಮಾಡಿರುತ್ತಾರೆ. ಎಂದು ನೀಡಿದ್ದರ ದೂರಿನ ಮೇರೆಗೆ  ಪ್ರ.ವ.ವರದಿ.

 1. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.378/2020 ಕಲಂ: 32,34 ಕೆ.ಇ ಆಕ್ಟ್ :-

     ದಿನಾಂಕ:15/10/2020 ರಂದು ರಾತ್ರಿ 11.45 ಗಂಟೆಗೆ ಪಿ.ಎಸ್.ಐ ಶ್ರೀ ನರೇಶ್ ನಾಯ್ಕ್.ಎಸ್ ರವರು ಮಾಲು, ಆರೋಪಿ ಮತ್ತು ಪಂಚನಾಮೆಯೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ಈ ದಿನ ದಿನಾಂಕ:15/10/2020 ರಂದು ರಾತ್ರಿ ತಾನು ಠಾಣೆಯ ಸಿಬ್ಬಂದಿಯವರುಗಳಾದ ಸಿ.ಹೆಚ್.ಸಿ-41 ಜಗದೀಶ, ಗುಪ್ತ ಮಾಹಿತಿ ಕರ್ತವ್ಯದ ಸಿಬ್ಬಂದಿ ಸಿ.ಹೆಚ್.ಸಿ-199 ನಾಗರಾಜ ಮತ್ತು ಎ.ಹೆಚ್.ಸಿ-08 ಮುಖೇಶ ರವರುಗಳೊಂದಿಗೆ ಠಾಣೆಗೆ ಮಂಜೂರಾಗಿರುವ ಇಲಾಖಾ ಜೀಪ್ ನೋಂದಣಿ ಸಂಖ್ಯೆ:ಕೆಎ-40 ಜಿ-326 ರಲ್ಲಿ ಠಾಣಾ ವ್ಯಾಪ್ತಿಯ ಕೈವಾರ, ಕೈವಾರ ಕ್ರಾಸ್, ಕೊಂಗನಹಳ್ಳಿ, ಪೆರಮಾಚನಹಳ್ಳಿ, ಕೆಂದನಹಳ್ಳಿ ಗ್ರಾಮಗಳ ಕಡೆಗಳಲ್ಲಿ ಗಸ್ತು ಮಾಡಿಕೊಂಡು ರಾತ್ರಿ 10-00 ಗಂಟೆಗೆ ಚಿನ್ನಸಂದ್ರ ಗ್ರಾಮದ ಬಳಿ ಬಂದಾಗ, ಯಾವುದೋ ಒಂದು ಇನ್ನೋವಾ ಕಾರಿನಲ್ಲಿ ಇಬ್ಬರು ವ್ಯಕ್ತಿಗಳು ಅನುಮಾನಾಸ್ಪದವಾಗಿ ಹೋಗುತ್ತಿದ್ದನ್ನು ಕಂಡು ತಾನು ಮತ್ತು ಸಿಬ್ಬಂದಿಯವರುಗಳು ಸದರಿ ಕಾರನ್ನು ನಿಲ್ಲಿಸಿ ಪರಿಶೀಲಿಸಲಾಗಿ ನೋಂದಣಿ ಸಂಖ್ಯೆ:ಎಪಿ-04 ಎಜೆಡ್-7888 ನಂಬರಿನ ಇನ್ನೋವಾ ಕಾರು ಆಗಿದ್ದು, ಸದರಿ ಕಾರಿನಲ್ಲಿದ್ದ ಇಬ್ಬರು ವ್ಯಕ್ತಿಗಳನ್ನು ಕಾರಿನಿಂದ ಕೆಳಗಿಳಿಸಿ ಪರಿಶೀಲಿಸಿದಾಗ ಸದರಿ ಕಾರಿನಲ್ಲಿ ಒಟ್ಟು 05 ಮದ್ಯದ ಬಾಕ್ಸ್ ಗಳಿರುವುದು ಕಂಡುಬಂದಿದ್ದು, ಸದರಿ ಇಬ್ಬರು ವ್ಯಕ್ತಿಗಳ ಹೆಸರು, ವಿಳಾಸ ಕೇಳಲಾಗಿ ಕಾರನ್ನು ಚಾಲನೆ ಮಾಡುತ್ತಿದ್ದ ವ್ಯಕ್ತಿಯ ಹೆಸರು 1) ರೆಡ್ಡೆಪ್ಪರೆಡ್ಡಿ.ಜಿ ಬಿನ್ ಲೇಟ್ ವೆಂಕಟರಮಣರೆಡ್ಡಿ, 42 ವರ್ಷ, ವಕ್ಕಲಿಗರು, ಜಿರಾಯ್ತಿ, ವಾಸ ಅಂಗಳ್ಳು ಗ್ರಾಮ, ಕುರುಬಲಕೋಟೆ ಮಂಡಲಂ, ಮದನಪಲ್ಲಿ ತಾಲ್ಲೂಕು, ಚಿತ್ತೂರು ಜಿಲ್ಲೆ, ಆಂಧ್ರಪ್ರದೇಶ ಎಂತಲೂ, ಮತ್ತೊಬ್ಬ ವ್ಯಕ್ತಿಯ ಹೆಸರು 2) ಪದ್ಮನಾಭರೆಡ್ಡಿ.ಎಂ ಬಿನ್ ತಾತಿರೆಡ್ಡಿ, 36 ವರ್ಷ, ವಕ್ಕಲಿಗರು, ಜಿರಾಯ್ತಿ, ವಾಸ ಅಂಗಳ್ಳು ಗ್ರಾಮ, ಕುರುಬಲಕೋಟೆ ಮಂಡಲಂ, ಮದನಪಲ್ಲಿ ತಾಲ್ಲೂಕು, ಚಿತ್ತೂರು ಜಿಲ್ಲೆ, ಆಂಧ್ರಪ್ರದೇಶ ಎಂದು ತಿಳಿಸಿದ್ದು, ಸದರಿಯವರನ್ನು ಮದ್ಯ ಸಾಗಾಣಿಕೆ ಮಾಡಲು ಯಾವುದಾದರೂ ಪರವಾನಿಗೆ ಇದೆಯೇ ಎಂದು ಕೇಳಲಾಗಿ ಸದರಿಯವರು ಯಾವುದೇ ಪರವಾನಿಗೆ ಇರುವುದಿಲ್ಲವೆಂದು ತಿಳಿಸಿ, ತಾವಿಬ್ಬರು ಸದರಿ ಮದ್ಯದ ಬಾಕ್ಸ್ ಗಳನ್ನು ಚಿಂತಾಮಣಿಯಲ್ಲಿ ಬೆಂಗಳೂರು ಮಾರ್ಗದ ರಸ್ತೆಯಲ್ಲಿರುವ ಸ್ಕಾಚ್ ಮತ್ತು ವೈನ್ಸ್ ಎಂ.ಆರ್.ಪಿ ಬಾರ್ ನ ಮಾಲೀಕರ ಸೂಚನೆಯ ಮೇರೆಗೆ ಮದ್ಯವನ್ನು ತೆಗೆದುಕೊಂಡು ಅದನ್ನು ತಮ್ಮ ಗ್ರಾಮದ ಸುತ್ತಮುತ್ತಲ ಹಳ್ಳಿಗಳಲ್ಲಿ ಮಾರಾಟ ಮಾಡಲು ತೆಗೆದುಕೊಂಡು ಹೋಗುತ್ತಿರುವುದಾಗಿ ತಿಳಿಸಿದ್ದರ ಮೇರೆಗೆ ಸದರಿ ಇನ್ನೋವಾ ಕಾರಿನಲ್ಲಿದ್ದ ಮದ್ಯವನ್ನು ಕೆಳಗಿಳಿಸಿ ಪರಿಶೀಲಿಸಲಾಗಿ 1-ನೇ ಬಾಕ್ಸ್ ನಲ್ಲಿ 180 ಎಂ.ಎಲ್ ನ 8 PM Radico 48 ಪಾಕೇಟ್ ಗಳು ಇದ್ದು, 2-ನೇ ಬಾಕ್ಸ್ ನಲ್ಲಿ 180 ಎಂ.ಎಲ್ ನ ಓಲ್ಡ್ ಅಡ್ಮಿರಲ್ 48 ಪಾಕೇಟ್ ಗಳು ಇದ್ದು, 3-ನೇ ಬಾಕ್ಸ್ ನಲ್ಲಿ 180 ಎಂ.ಎಲ್ ನ ಓಲ್ಡ್ ಅಡ್ಮಿರಲ್ 48 ಪಾಕೇಟ್ ಗಳು ಇದ್ದು, 4-ನೇ ಬಾಕ್ಸ್ ನಲ್ಲಿ 90 ಎಂ.ಎಲ್ ನ ಬೆಂಗಳೂರು ವಿಸ್ಕಿ 96 ಪಾಕೇಟ್ ಗಳು ಇದ್ದು, 5-ನೇ ಬಾಕ್ಸ್ ನಲ್ಲಿ 1000 ಎಂ.ಎಲ್ ನ ಓಲ್ಡ್ ಅಡ್ಮಿರಲ್ ನ 09 ಬಾಟಲ್ ಗಳು ಇರುತ್ತೆ. ನಂತರ ಮೇಲ್ಕಂಡ ನೋಂದಣಿ ಸಂಖ್ಯೆಯ ಇನ್ನೋವಾ ಕಾರಿನಲ್ಲಿ ಅಕ್ರಮವಾಗಿ ಮದ್ಯವನ್ನು ಸಾಗಾಣಿಕೆ ಮಾಡುತ್ತಿರುವುದು ಕಂಡುಬಂದಿದ್ದರ ಮೇರೆಗೆ ಸ್ಥಳಕ್ಕೆ ಪಂಚರನ್ನು ಬರಮಾಡಿಕೊಂಡು ಪಂಚರ ಸಮಕ್ಷಮ ಸ್ಥಳದಲ್ಲಿ ವಿದ್ಯುತ್ ಬೆಳಕಿನ ಸಹಾಯದಿಂದ ರಾತ್ರಿ 10-30 ಗಂಟೆಯಿಂದ ರಾತ್ರಿ 11-30 ಗಂಟೆಯವರೆಗೆ ಪಂಚನಾಮೆಯನ್ನು ಕೈಗೊಳ್ಳುವುದರ ಮುಖಾಂತರ ಮೇಲ್ಕಂಡ ಎಲ್ಲಾ ಮಾಲುಗಳನ್ನು ಮತ್ತು ಮಾಲನ್ನು ಸಾಗಾಣಿಕೆ ಮಾಡಲು ಬಳಸಿದ್ದ ಇನ್ನೋವಾ ಕಾರನ್ನು ಅಮಾನತ್ತುಪಡಿಸಿಕೊಂಡು ಪಂಚನಾಮೆ, ಕಾರು ಮತ್ತು ಮಾಲುಗಳೊಂದಿಗೆ ಮೇಲ್ಕಂಡ ಇಬ್ಬರು ವ್ಯಕ್ತಿಗಳನ್ನು ರಾತ್ರಿ 11-45 ಗಂಟೆಗೆ ಠಾಣೆಗೆ ಕರೆತಂದು ನಿಮ್ಮ ವಶಕ್ಕೆ ನೀಡುತ್ತಿದ್ದು, ಯಾವುದೇ ಪರವಾನಿಗೆ ಇಲ್ಲದೆ ಅಕ್ರಮವಾಗಿ ಮದ್ಯ ಮಾರಾಟ ಮಾಡಲು ಮದ್ಯವನ್ನು ಸಾಗಾಣಿಕೆ ಮಾಡಿಕೊಂಡು ಹೋಗುತ್ತಿದ್ದ ಮೇಲ್ಕಂಡ ರೆಡ್ಡೆಪ್ಪರೆಡ್ಡಿ, ಪದ್ಮನಾಭರೆಡ್ಡಿ ಹಾಗೂ ಸ್ಕಾಚ್ ಮತ್ತು ವೈನ್ಸ್ ಎಂ.ಆರ್.ಪಿ ಬಾರ್ ಮಾಲೀಕರ ವಿರುದ್ದ ಮುಂದಿನ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲು ಸೂಚಿಸಿರುವುದಾಗಿರುತ್ತೆ.

 1. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.379/2020 ಕಲಂ: 379 ಐ.ಪಿ.ಸಿ :-

     ದಿನಾಂಕ: 16/10/2020 ರಂದು ಬೆಳಿಗ್ಗೆ 11.00 ಗಂಟೆಗೆ ಸೋಮಶೇಖರ್.ಸಿ.ಎನ್. ಬಿನ್ ಲೇಟ್ ನಾಗಭೂಷಣ್ ರಾವ್, 40 ವರ್ಷ, ಬ್ರಾಹ್ಮಣರು, ಜಿರಾಯ್ತಿ, ಚಾಂಡ್ರಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ತಾನು ಚಿಂತಾಮಣಿ ತಾಲ್ಲೂಕು, ಅಂಬಾಜಿದುರ್ಗ ಹೋಬಳಿ, ಚಾಂಡ್ರಹಳ್ಳಿ ಗ್ರಾಮದ ಸ.ನಂ-112 ರಲ್ಲಿನ 2 ಎಕರೆ ಜಮೀನು ಇರುತ್ತೆ. ತಾನು ಸದರಿ ಜಮೀನಿನಲ್ಲಿ ಬೆಳೆಗಳನ್ನು ಇಡುವ ಸಲುವಾಗಿ ಈಗ್ಗೆ ಸುಮಾರು 3 ವರ್ಷಗಳ ಹಿಂದೆ ಕೃಷಿ ಹೊಂಡಾದಿಂದ ನೀರನ್ನು ಪಂಪ್ ಮಾಡುವ ಒಂದು ಮೋಟಾರ್ ಅನ್ನು ಖರೀದಿಸಿ ಅದನ್ನು ಮೇಲ್ಕಂಡ ಜಮೀನಿನಲ್ಲಿದ್ದ ಕೃಷಿ ಹೊಂಡಾದಲ್ಲಿ ಅಳವಡಿಸಿರುತ್ತೇನೆ. ಹೀಗಿರುವಾಗ ದಿನಾಂಕ:12/07/2020 ರಂದು ತಾನು ಎಂದಿನಂತೆ ಮೇಲ್ಕಂಡ ಜಮೀನಿನಲ್ಲಿನ ಜೋಳದ ಬೆಳೆಗೆ ನೀರು ಹಾಯಿಸಿ ಸಂಜೆ 6.00 ಗಂಟೆಗೆ ತಮ್ಮ ಮನೆಗೆ ವಾಪಸ್ಸು ಹೋಗಿದ್ದು, ಮರು ದಿನ ದಿನಾಂಕ:13/07/2020 ರಂದು ಬೆಳಿಗ್ಗೆ ಸುಮಾರು 7.00 ಗಂಟೆಯ ಸಮಯದಲ್ಲಿ ತಾನು ಎಂದಿನಂತೆ ತಮ್ಮ ತೋಟದ ಬಳಿಗೆ ಹೋದಾಗ ಸದರಿ ತೋಟದ ಜಮೀನಿನ ಕೃಷಿ ಹೊಂಡಾದಲ್ಲಿ ಅಳವಡಿಸಿದ್ದ ಮೋಟಾರ್ ಕಳುವಾಗಿರುವುದು ಕಂಡುಬಂದಿರುತ್ತೆ. ನಂತರ ತಾನು ಈ ಬಗ್ಗೆ ತಮ್ಮ ಜಮೀನಿನ ಅಕ್ಕ-ಪಕ್ಕದಲ್ಲಿ ಮತ್ತು ಚಾಂಡ್ರಹಳ್ಳಿ ಗ್ರಾಮದ ಕಡೆಗಳಲ್ಲಿ ಹುಡುಕಾಡಲಾಗಿ ಕಳುವಾಗಿದ್ದ ತಮ್ಮ ಬಾಬತ್ತು ಮೋಟಾರ್ ಪತ್ತೆಯಾಗಿರುವುದಿಲ್ಲ. ಕಳುವಾಗಿರುವ ತಮ್ಮ ಬಾಬತ್ತು ಮೋಟಾರ್ ಬೆಲೆ ಸುಮಾರು 10,000/-ರೂಗಳಾಗಿರುತ್ತೆ. ಕಳುವಾಗಿರುವ ತಮ್ಮ ಬಾಬತ್ತು ಮೋಟಾರ್ ಅನ್ನು ತಾನು ಇದುವರೆಗೂ ಹುಡುಕಾಡಿದ್ದು ಸಿಕ್ಕಿರುವುದಿಲ್ಲ. ಕಳ್ಳತನವಾಗಿದ್ದ ತನ್ನ ಮೋಟರ್ ಮತ್ತು ಕಳ್ಳರನ್ನು ದಿನಾಂಕ:07/10/2020 ರಂದು ಚಿಂತಾಮಣಿ ಗ್ರಾಮಾಂತರ ಪೊಲೀಸರು ಪತ್ತೆ ಮಾಡಿರುವುದಾಗಿ ವಿಚಾರ ತಿಳಿದಿದ್ದು ಅದರಂತೆ ತಾನು ಆರೋಪಿಗಳ ಹೆಸರು ಮತ್ತು ವಿಳಾಸ ತಿಳಿಯಲಾಗಿ ಚಾಂಡ್ರಹಳ್ಳಿ ಗ್ರಾಮದ ವಾಸಿಗಳಾದ ನರಸಿಂಹಪ್ಪ ಬಿನ್ ಲೇಟ್ ನರಸಿಂಹಪ್ಪ ಮತ್ತು ನಾಗರಾಜ ಬಿನ್ ನರಸಿಂಹಪ್ಪ ಎಂತ ತಿಳಿದು ಬಂದಿರುತ್ತದೆ. ಆದ್ದರಿಂದ ಮೇಲ್ಕಂಡ ಆರೋಪಿತರ ವಿರುದ್ದ ಸೂಕ್ತ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿರುವುದಾಗಿರುತ್ತೆ.

 1. ಚಿಂತಾಮಣಿ ನಗರ ಪೊಲೀಸ್ ಠಾಣೆ ಮೊ.ಸಂ.141/2020 ಕಲಂ: 392 ಐ.ಪಿ.ಸಿ :-

     ದಿನಾಂಕ: 16/10/2020 ರಂದು ಮದ್ಯಾಹ್ನ 2:30 ಗಂಟೆಗೆ ಪಿರ್ಯಾದಿದಾರರಾದ ಶ್ರೀಮತಿ ಸೌಭಾಗ್ಯ ಕೋಂ ಎಂ.ಪಿ ಮುನಿಸ್ವಾಮಿ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ  ತಾನು ದಿನಾಂಕ:16/10/2020 ರಂದು ಮದ್ಯಾಹ್ನ ಸುಮಾರು 1-00 ಗಂಟೆ ಸಮಯದಲ್ಲಿ ತಾನು ಚಿಂತಾಮಣಿ ಅಂಜನಿ ಬಡಾವಣೆಯಲ್ಲಿರುವ ಪೋಸ್ಟ್ ಆಫೀಸ್ಗೆ ಬಂದು ಕೆಲಸ ಮುಗಿಸಿಕೊಂಡು ತಮ್ಮ ಮನೆಗೆ ವಾಪಸ್ಸು ಹೋಗಲು ಸಮಯ ಸುಮಾರು 1:30 ಗಂಟೆಯಲ್ಲಿ ಅಂಜನಿ ಬಡಾವಣೆ ಅನ್ನಪೂರ್ಣಶ್ವೇರಿ ಬಸ್ ಮಾಲೀಕರ ಮನೆಯ ಸಮೀಪ ಬರುವ ಟಾರ್ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಯಾರೋ ಒಬ್ಬ ಅಪರಿಚಿತ ವ್ಯಕ್ತಿ ದ್ವಿಚಕ್ರ ವಾಹನದಲ್ಲಿ ಹಿಂಬಾಲಿಸಿಕೊಂಡು ಬಂದು ತನ್ನ ಕತ್ತಿನಲ್ಲಿ ಹಾಕಿಕೊಂಡಿದ್ದ ಸುಮಾರು 45 ಗ್ರಾಂ ಬಂಗಾರದ ಚೈನನ್ನು ಕಿತ್ತುಕೊಂಡು ಹೊರಟು ಹೋಗಿರುತ್ತಾನೆ. ಆತನ ವಯಸ್ಸು ಸುಮಾರು 25-30 ವರ್ಷ ಆಗಿರುತ್ತೆ. ತನಗೆ ವಯಸ್ಸಾಗಿದ್ದ ಕಾರಣ ದ್ವಿಚಕ್ರ ವಾಹನದ ಸಂಖ್ಯೆ ಕಾಣಿಸಿರುವುದಿಲ್ಲ. ತನ್ನ ಕತ್ತಿನಲ್ಲಿದ್ದ ಬಂಗಾರದ ಚೈನ್ ಬೆಲೆ ಸುಮಾರು 85,000 ರೂಗಳಾಗಿರುತ್ತೆ. ಆದ್ದರಿಂದ ತನ್ನ ಕತ್ತಿನಲ್ಲಿದ್ದ ಬಂಗಾರದ ಚೈನನ್ನು ಕಿತ್ತುಕೊಂಡು ಹೋಗಿರುವ ಅಸಾಮಿಯ ವಿರುದ್ದ ಕಾನೂನು ಕ್ರಮ ಜರುಗಿಸಲು ಕೋರಿದ್ದರ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುತ್ತೆ.

 1. ದಿಬ್ಬೂರಹಳ್ಳಿ ಪೊಲೀಸ್ ಠಾಣೆ ಮೊ.ಸಂ.112/2020 ಕಲಂ: 15(A),32(3) ಕೆ.ಇ ಆಕ್ಟ್ :-

     ದಿನಾಂಕ:15/10/2020     ರಂದು ಸಂಜೆ 7.00 ಗಂಟೆಗೆ ಪಿರ್ಯಾದಿದಾರರಾದ  ಶ್ರೀ ನಾರಾಯಣಪ್ಪ  .ಪಿ.ಎಸ್.ಐ ದಿಬ್ಬೂರಹಳ್ಳಿ ಪೊಲೀಸ್ ಠಾಣೆ ರವರು ಠಾನೆಗೆ ಹಾಜರಾಗಿ ಮಾಲು ಮತ್ತು ಮಹಜರ್ ಹಾಜರುಪಡಿಸಿ ನೀಡಿದ ವರದಿಯ ಸಾರಾಂಶವೇನೆಂದರೆ,    ದಿನಾಂಕ:15/10/2020 ರಂದು ಸಂಜೆ 4.00 ಗಂಟೆಯಲ್ಲಿ ತಾನು ಠಾಣಾ ಸಿಬ್ಬಂದಿಯಾದ  ಹೆಚ್.ಸಿ -43  ಶ್ರೀ ನಾರಾಯಣಪ್ಪ, ಜೀಪ್ ಚಾಲಕರಾದ ಎ.ಪಿ.ಸಿ-94    ಶ್ರೀ ಬೈರಪ್ಪರವರನ್ನು ಕರೆದುಕೊಂಡು ಠಾಣೆಗೆ ಒದಗಿಸಿರುವ ಸರ್ಕಾರಿ ಜೀಪ್ ಸಂಖ್ಯೆ ಕೆಎ-40-ಜಿ-60 ರಲ್ಲಿ ಠಾಣೆಯ ಸರಹದ್ದಿನಲ್ಲಿ ಗಸ್ತಿಗೆ ಹೋಗಿದ್ದು ಠಾಣಾ ಸರಹದ್ದಿನ ದಿಬ್ಬೂರಹಳ್ಳಿ , ಈ. ತಿಮ್ಮಸಂದ್ರ ಬೈರಗಾನಹಳ್ಳಿ, ಮಲ್ಲಿಶೆಟ್ಟಿಹಳ್ಳಿ, ಈಗಲೇಟಹಳ್ಳಿ ಗ್ರಾಮಗಳಲ್ಲಿ ಗಸ್ತು ಮಾಡಿಕೊಂಡು ಗಾಂಡ್ಲಚಿಂತೆ ಗ್ರಾಮದ ಬಳಿ ಸಂಜೆ 5.15 ಗಂಟೆಗೆ  ಹೋದಾಗ  ಗಾಂಡ್ಲಚಿಂತೆ ಗ್ರಾಮದ  ದೇವರಾಜ ಬಿನ್ ನಾರಾಯಣಪ್ಪ ರವರು ತಮ್ಮ ಮನೆಯ ಮುಂಭಾಗದ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಮದ್ಯಪಾನ ಮಾಡಲು ಸ್ಥಳವಕಾಶ ಮಾಡಿಕೊಟ್ಟಿದ್ದಾರೆಂದು  ಬಂದ ಖಚಿತ ಮಾಹಿತಿ ಮೇರೆಗೆ  ಪಂಚರನ್ನು ಬರಮಾಡಿಕೊಂಡು ಸದರಿ ಸ್ಥಳಕ್ಕೆ ದಾಳಿ ಮಾಡಲು ಹೋಗಿದ್ದು ತಮ್ಮನ್ನು ನೋಡಿ ಅಲ್ಲಿದ್ದವರು  ಓಡಿಹೋಗಿರುತ್ತಾರೆ. ಸ್ಥಳದಲ್ಲಿ ಪರಿಶೀಲಿಸಲಾಗಿ 1) ಮಧ್ಯ ತುಂಬಿದ 12 HAYWARDS CHEERS WHISKY 90 ML ಪಾಕೆಟ್ ಗಳು 2) 2 ಖಾಲಿ HAYWARDS CHEERS WHISKY 90 ML ಪಾಕೆಟ್ ಗಳು  4) 2 ಪ್ಲಾಸ್ಟಿಕ್ ಲೋಟಗಳು   5) ಒಂದು ಖಾಲಿ ಒಂದು ಲೀಟರ್ ನೀರಿನ ಬಾಟೆಲ್ ಇದ್ದು ಒಟ್ಟು. 1.080 ಎಂ ಎಲ್ ಮದ್ಯ ಇದ್ದು ಇದರ ಬೆಲೆ  421.56 ರೂಗಳಾಗಿರುತ್ತೆ. ಯಾವುದೇ ಪರವಾನಗಿಯನ್ನು ಪಡೆಯದೆ ಸಾರ್ವಜನಿಕ ಸ್ಥಳದಲ್ಲಿ  ಮದ್ಯಪಾನ ಮಾಡಲು ಸ್ಥಳವಕಾಶ ಮಾಡಿಕೊಟ್ಟ ಆಸಾಮಿಯು ಸ್ಥಳದಿಂದ ಓಡಿಹೋಗಿದ್ದು ಹೆಸರು ವಿಳಾಸ ತಿಳಿಯಲಾಗಿ ದೇವರಾಜ ಬಿನ್ ನಾರಾಯಣಪ್ಪ, 35 ವರ್ಷ, ಭಜಂತ್ರಿ ಜನಾಂಗ, ವ್ಯಾಪಾರ, ಗಾಂಡ್ಲಚಿಂತೆ ಗ್ರಾಮ, ಶಿಡ್ಲಘಟ್ಟ ತಾಲ್ಲುಕು ಎಂತ ತಿಳಿದು ಬಂದಿರುತ್ತೆ. ನಂತರ ಪಂಚರ ಸಮಕ್ಷಮ ಸಂಜೆ 5.30 ರಿಂದ 6.30 ರವರೆಗೆ ಪಂಚನಾಮೆ ಕ್ರಮವನ್ನು ಜರುಗಿಸಿ ಪಂಚನಾಮೆಯ ಕಾಲದಲ್ಲಿ ಮೇಲ್ಕಂಡ ವಸ್ತುಗಳನ್ನು ಅಮಾನತ್ತುಪಡಿಸಿಕೊಂಡಿದ್ದು ಮಾಲು ಮತ್ತು ಪಂಚನಾಮೆಯನ್ನು ಹಾಜರುಪಡಿಸಿ ದೇವರಾಜರವರ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಸೂಚಿಸಿರುವುದಾಗಿರುತ್ತೆ.

 1. ಗೌರಿಬಿದನೂರು ಪುರ ಪೊಲೀಸ್ ಠಾಣೆ ಮೊ.ಸಂ.165/2020 ಕಲಂ: 457,380 ಐ.ಪಿ.ಸಿ :-

     ದಿನಾಂಕ 16/10/2020 ರಂದು ಬೆಳಿಗ್ಗೆ 11:00 ಗಂಟೆಯಲ್ಲಿ ಪಿರ್ಯಾದಿ ಶಂಕರರೆಡ್ಡಿ HS ಬಿನ್ ಸೋಮಯ್ಯ ರೆಡ್ಡಿ, 69 ವರ್ಷ,, ಆಡಳಿತಾಧಿಕಾರಿ, ನ್ಯಾಷನಲ್ ಅಂಡ್ ರೂರಲ್ ಎಜುಕೇಶನ್ ಅಸೋಸಿಯೇಷನ್,  ವಿ.ವಿ ಪುರಂ ಗೌರಿಬಿದನೂರು ನಗರ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ದಿನಾಂಕ 14/10/2020 ರಂದು ಸಂಜೆ 5 ಗಂಟೆಯಲ್ಲಿ ಆಚಾರ್ಯ ವಿದ್ಯಾಸಂಸ್ಥೆಯ ಆಡಳಿತ ಕಛೇರಿಯ ಬಾಗಿಲನ್ನು ಹಾಕಿಕೊಂಡು ನಂತರ ದಿನಾಂಕ 15/10/2020 ರಂದು ಬೆಳಿಗ್ಗೆ 9:30 ಗಂಟೆಯಲ್ಲಿ ಬಾಗಿಲನ್ನು ತೆಗೆದು ನೋಡಿದಾಗ ಯಾರೋ ಕಳ್ಳರು ದಿನಾಂಕ 14/10/2020 ರಂದು ರಾತ್ರಿ ಕಛೇರಿಯ ಹಿಂಭಾಗದಲ್ಲಿರುವ ಬಾಗಿಲುಗಳ ಬೀಗಗಳನ್ನು ಹೊಡೆದು ಬಾಗಲನ್ನುಮುರಿದು ಕಛೇರಿಯಲ್ಲಿಯಲ್ಲಿದ್ದ ಬೀರುಗಳ ಬೀಗಗಳನ್ನು ಹೊಡೆದು ದಾಖಲೆಗಳನ್ನು ಚೆಲ್ಲಾಪಿಲ್ಲಿ ಮಾಡಿ ಕಛೇರಿಯಲ್ಲಿದ್ದ, ಥರ್ಮಲ್ ಸ್ಕಾನರ್, ಹಿತ್ತಾಳೆ ದೀಪದ ಸ್ತಂಭ, ಪುಟ್ಟ ವಸ್ತುಗಳು ಮತ್ತು TV ಮಾನಿಟರ್ ಗಳನ್ನು ಹಾಗೂ ಗ್ಯಾಸ್ ತುಂಬಿರುವ ಇಂಡೇನ್ ಸಿಲಿಂಡರ್ ನ್ನು ತೆಗೆದುಕೊಂಡು ಹೋಗಿರುತ್ತಾರೆ. ನಾಶಪಡಿಸಿ ತೆಗೆದುಕೊಂಡು ಹೋಗಿರುವ  ವಸ್ತುಗಳ ಅಂದಾಜು ಬೆಲೆ 30,000 ಆಗಿರುತ್ತದೆ. ಆದ್ದರಿಂದ ಕಳ್ಳತನವಾಗಿರುವ ವಸ್ತುಗಳನ್ನು ಪತ್ತೆ ಮಾಡಿಕೊಡಬೇಕೆಂದು ನೀಡಿದ ದೂರನ್ನು ಪಡೆದು ಪ್ರಕರಣ ದಾಖಲಿಸಿರುತ್ತೇನೆ.

 1. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.281/2020 ಕಲಂ: 468,420,447,504,506 ರೆ/ವಿ 34 ಐ.ಪಿ.ಸಿ :- ದಿನಾಂಕ:-15/10/2020 ರಂದು ಸಂಜೆ 6-30 ಗಂಟೆಗೆ ಪಿರ್ಯಾದಿದಾರರಾದ ಅಜಯ್ ಬಾಬು ಬಿನ್ ಲೇಟ್ ಎಂ.ಹನುಮಂತರಾವ್, 55 ವರ್ಷ, ವೈಶ್ಯ ಜನಾಂಗ, ವ್ಯಾಪಾರ, ವಾಸ-ನಂ-9, ವಿಂಟೇಜ್ ಅವಿನ್ಯೂ, ವೆಂಕಟೇಶ್ವರ ಕಾಲೇಜ್ ಆಫ್ ಇಂಜಿನಿಯರಿಂಗ್ ಮುಂಭಾಗ, ವಿದ್ಯಾನಗರ, ಚಿಕ್ಕಜಾಲ, ಬೆಂಗಳೂರು ಉತ್ತರ ತಾಲ್ಲೂಕು. ಬೆಂಗಳೂರು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ಇದೇ ಶಿಡ್ಲಘಟ್ಟ ತಾಲ್ಲೂಕು ದೇವೇನಹಳ್ಳಿ ಗ್ರಾಮದ ಸರ್ವೇ ನಂಬರ್ 25/2 ರಲ್ಲಿ 2 ಎಕರೆ 5 ಗುಂಟೆ ಮತ್ತೆ ಸರ್ವೇ ನಂಬರ್ 26/2 ರಲ್ಲಿ 2 ಎಕರೆ 10 ಗುಂಟೆ ಜಮೀನು ಒಟ್ಟು 4 ಎಕರೆ 15 ಗುಂಟೆ ಜಮೀನನ್ನು ಅದರ ಮಾಲೀಕರಾದ ಪಾಪಣ್ಣ ಹಾಗು ಈತನ ಹೆಂಡತಿ ಸೊಣ್ಣಮ್ಮ, ಮಗ ಪಿ.ಲಕ್ಷ್ಮೀಶ, ಈತನ ಹೆಂಡತಿ ಮೈತ್ರಾ ರವರು ಸೇರಿ 1.88.12.500-00 ರೂಗಳಿಗೆ ವ್ಯಾಪಾರ ಮಾಡಿ ವಿಮೋಚನಾ ರೆಡ್ಡಿ ರವರಿಗೆ 1 ನೇ ಪಾರ್ಟಿಯಾಗಿ ದಿನಾಂಕ 19/09/2013 ರಂದು ಸೇಲ್ ಅಗ್ರಿಮೆಂಟ್ ಮಾಡಿ 5 ಲಕ್ಷ ರೂ ಹಣವನ್ನು ಮುಂಗಡವಾಗಿ ಪಡೆದುಕೊಂಡು, ದಿನಾಂಕ 27/01/2014 ರಂದು ಅಜಯ್ ಬಾಬು ಮತ್ತು ಪ್ರಶಾಂತ ಆದ ನಮಗೆ 2 ನೇ ಪಾರ್ಟಿಯಾಗಿ 3 ಲಕ್ಷ ರೂ ಹಣವನ್ನು ಪಡೆದುಕೊಂಡು ಮೇಲ್ಕಂಡ ಜಮೀನನ್ನು ಸೇಲ್ ಅಗ್ರಿಮೆಂಟ್ ಮಾಡಿಕೊಟ್ಟಿರುತ್ತಾರೆ. ಪಾಪಣ್ಣ ಹಾಗು ಆತನ ಮನೆಯವರು ಜಮೀನಿನ ವ್ಯವಹಾರದ ಬಗ್ಗೆ ಓಡಾಡಲು ಸಾಧ್ಯವಾಗದ ಕಾರಣ ಆತನ ಮಗನಾದ ಪಿ.ಲಕ್ಷ್ಮೀಶ ರವರಿಗೆ ಜಿಪಿಎ ಮಾಡಿಕೊಟ್ಟಿದ್ದು, ಈ ಜಮೀನಿನಲ್ಲಿ ತಾವು ಜಾಯಿಂಟ್ ವೆನ್ಚರ್ ಆಗಿ ಬಡಾವಣೆಯನ್ನು ನಿರ್ಮಾಣ ಮಾಡುವ ಸಲುವಾಗಿ ಲಕ್ಷ್ಮೀಶ ರವರ ಮೂಲಕ ಭೂಪರಿವರ್ತನೆಗಾಗಿ ಕೋರಿ ಅರ್ಜಿಯನ್ನು ಸಲ್ಲಿಸಿಕೊಂಡಿದ್ದು, ಭೂ ಪರಿವರ್ತನೆಯಾದ ನಂತರ ಸದರಿ ಜಮೀನಿನಲ್ಲಿ 84 ನಿವೇಶನಗಳನ್ನು ವಿಂಗಡಣೆ ಮಾಡಿ, ಇಂಟೇಜ್ ವೆನುಜಿಯಾ ಎಂಬ ಹೆಸರಿನ ಲೇ ಔಟ್ ಮಾಡಿ ತಮ್ಮ ಸ್ವಂತ ಖರ್ಚಿನಲ್ಲಿ ಸದರಿ ಬಡಾವಣೆಯಲ್ಲಿನ ಬೇಕಾಗುವಂತಹ ಮೂಲಭೂತ ಸೌಕರ್ಯಗಳ ಅಭಿವೃದಿಯನ್ನು ಮಾಡಿರುತ್ತೇನೆ. ಸದರಿ ಬಡಾವಣೆಯು ಅಭಿವೃದ್ದಿಯಾದ ನಂತರ ನಾವುಗಳು ಒಟ್ಟು 84 ನಿವೇಶನಗಳ ಪೈಕಿ 41 ನಿವೇಶನಗಳನ್ನು ಮಾರಾಟ ಮಾಡಿರುತ್ತೇವೆ. ಹೀಗಿರುವಾಗ ಜಿಪಿಪಿ ವಾರಸುದಾರನಾದ ಪಿ.ಲಕ್ಷ್ಮೀಶ ರವರು ಮೇಲ್ಕಂಡ ಭೂಪರಿವರ್ತನೆಯಾದ ಜಮೀನನ್ನು ವಾಪಸ್ಸು ತನ್ನ ತಂದೆಯವರ ಹೆಸರಿಗೆ ಸರ್ವೇ ನಂಬರ್ ನ ಮೇಲೆಯೇ ಹಕ್ಕುನಿವೃತ್ತಿಯನ್ನು ಮಾಡಿಕೊಟ್ಟಿರುತ್ತಾನೆ. ನಂತರ ಪಾಪಣ್ಣ, ಈತನ ಮಗ ಪಿ.ಲಕ್ಷ್ಮೀಶ ರವರು ಬೆಂಗಳೂರು ಉತ್ತರ ತಾಲ್ಲೂಕು ಜಾಲ ಹೋಬಳಿ, ಗಡೇನಹಳ್ಳಿ ಗ್ರಾಮದ ವಾಸಿ ರಮೇಶ್ ರವರೊಂದಿಗೆ ಸೇರಿಕೊಂಡು ತಮ್ಮನ್ನು ವಂಚಿಸಿ ಸದರಿ ಸೈಟ್ ಗಳನ್ನು ಮಾರಾಟ ಮಾಡಿ ತಮಗೆ ಮೋಸ ಮಾಡ ಬೇಕೆಂಬ ಉದ್ದೇಶದಿಂದ ಮೇಲ್ಕಂಡ ಬಡಾವಣೆಯಲ್ಲಿನ ಉಳಿಕೆ 16 ನಿವೇಶನಗಳನ್ನು ಸುಮಾರು 80 ಲಕ್ಷ ರೂಗಳಿಗೆ ಮಾರಾಟ ಮಾಡಿರುತ್ತಾನೆ. ನಂತರ ತಮಗೆ ವಿಷಯ ತಿಳಿದು ಈ ಬಗ್ಗೆ ಪಿ.ಲಕ್ಷ್ಮೀಶ, ಈತನ ತಂದೆ ಪಾಪಣ್ಣ ಹಾಗು ರಮೇಶ್ ರವರಿಗೆ ಕೇಳಿದ್ದಕ್ಕೆ ತಮ್ಮ ಮೇಲೆ ಗಲಾಟೆ ಮಾಡಿ, ಈ ಜಮೀನು ನಮಗೆ ಸೇರಿದ್ದು, ಇದಕ್ಕೂ ನಿಮಗೂ ಯಾವುದೇ ಸಂಬಂಧ ಇಲ್ಲ, ಈ ಜಮೀನಿನ ಸುದ್ದಿಗೆ ಬಂದರೆ ನಿಮಗೆ ಒಂದು ಗತಿ ಕಾಣಿಸುತ್ತೇವೆಂದು ತಮಗೆ ಪ್ರಾಣ ಬೆದರಿಕೆಯನ್ನು ಹಾಕಿ ಅವಾಚ್ಯ ಶಬ್ದಗಳಿಂದ ನಿಂದಿಸಿರುತ್ತಾರೆ. ಅಲ್ಲದೇ ರಮೇಶ್ ರವರು ತಮ್ಮ ಬಡಾವಣೆಯಲ್ಲಿ ಅಕ್ರಮವಾಗಿ ಪ್ರವೇಶ ಮಾಡಿ ತಾವು ಅಳವಡಿಸಿದ್ದ ನಾಮಫಲಕಗಳನ್ನು ಕಿತ್ತುಹಾಕಿರುತ್ತಾರೆ. ಆದ ಕಾರಣ ತಮಗೆ ವಂಚಿಸುವ ಉದ್ದೇಶದಿಂದ ಮೇಲ್ಕಂಡ ಬಡಾವಣೆಯಲ್ಲಿನ ಸೈಟ್ ಗಳನ್ನು ನಮಗೆ ತಿಳಿಯದ ಹಾಗೇ ಬೇರೆಯವರಿಗೆ ಮಾರಾಟ ಮಾಡಿ ತಮಗೆ ಮೋಸ ಮಾಡಿ, ತಮಗೆ ಪ್ರಾಣ ಬೆದರಿಕೆ ಹಾಕಿ ಅವಾಚ್ಯ ಶಬ್ದಗಳಿಂದ ಬೈದಿರುವ ಮೇಲ್ಕಂಡ ಆಸಾಮಿಗಳ ವಿರುದ್ದ ಮುಂದಿನ ಕಾನೂನು ರೀತ್ಯಾ ಕ್ರಮ ಜರುಗಿಸ ಬೇಕಾಗಿ ಕೊಟ್ಟ ದೂರು.
 2. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.282/2020 ಕಲಂ: 420 ರೆ/ವಿ 34 ಐ.ಪಿ.ಸಿ :-

     ದಿನಾಂಕ: 15-10-2020 ರಂದು ರಾತ್ರಿ 9-30 ಗಂಟೆಗೆ ಪಿರ್ಯಾದಿದಾರರಾದ ಸಿ.ಎಸ್ ನಾಗೇಂದ್ರ ಪ್ರಸಾದ್ ಬಿನ್ ಸಿ.ಹೆಚ್ ಶಿವರಾಮ್, 50 ವರ್ಷ, ವಕ್ಕಲಿಗರು, ಜಿರಾಯ್ತಿ, (ಅಧ್ಯಕ್ಷರು ಗಂಗಾದೇವಿ ದ್ರಾಕ್ಷಿ ಬೆಳೆಗಾರರ ಸಂಘ(ರಿ)) ವಾಸ-ಮೇಲೂರು ಗ್ರಾಮ, ಶಿಡ್ಲಘಟ್ಟ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ತಮ್ಮ ಗ್ರಾಮದಲ್ಲಿ ದ್ರಾಕ್ಷಿ ಬೆಳೆಯುವ ರೈತರು ಸೇರಿ ಗಂಗಾದೇವಿ ದ್ರಾಕ್ಷಿ ಬೆಳೆಗಾರರ ಸಂಘ (ರಿ) ಅನ್ನು ನಡೆಸುತ್ತಿದ್ದು, ಸದರಿ ಸಂಘದಲ್ಲಿ ತಾನು ಅಧ್ಯಕ್ಷನಾಗಿದ್ದು, ಈ ಸಂಘದಲ್ಲಿ ಸುಮಾರು 150 ಜನ ಸದಸ್ಯರುಗಳು ಇರುತ್ತಾರೆ. ಹೀಗಿರುವಾಗ ಮೇಲೂರು ಮತ್ತು ಸುತ್ತಮುತ್ತಲಿನ ಗ್ರಾಮದ ನಮ್ಮ ಸಂಘದಲ್ಲಿನ 60 ಜನ ರೈತರು ಕೃಷಿಯಲ್ಲಿ ಹೆಚ್ಚಿನ ತಿಳುವಳಿಕೆಗಾಗಿ ಇಸ್ರೇಲ್ ಮತ್ತು ದುಬೈ ದೇಶಗಳಿಗೆ ಪ್ರವಾಸ ಕೈಗೊಳ್ಳಲು ತೀರ್ಮಾನಿಸಿಕೊಂಡು, ತಾನು ತನಗೆ ಪರಿಚಯ ಇದ್ದ ಬೆಂಗಳೂರಿನ ಬಸವನಗುಡಿಯಲ್ಲಿ ಇರುವ ಸಾಯಿರಾಂ ಟೂರ್ಸ್ ಅಂಡ್ ಟ್ರಾವೆಲ್ಸ್ ನ ಮಾಲೀಕರಾದ ಎಸ್.ಘನಶಾಂ ಮತ್ತು ಇವರ ಮಗನಾದ ಮನೋಜ್ ಕುಮಾರ್ ರವರಿಗೆ ವಿಷಯ ತಿಳಿಸಲಾಗಿ ಸದರಿ ಇಬ್ಬರು ದಿನಾಂಕ: 09-07-2018 ರಂದು ತಮ್ಮ ಗ್ರಾಮದ ಸಮುದಾಯ ಭವನದಲ್ಲಿ 60 ಜನ ರೈತರನ್ನು ಸಭೆಯನ್ನು ಸೇರಿಸಿ, ಪ್ರವಾಸ ಕೈಗೊಳ್ಳಲು ಮತ್ತು ಅದರ ವ್ಯವಸ್ಥೆಗಳಿಗೆ ಒಬ್ಬರಿಗೆ ತಲಾ 54,800-00 ರೂಗಳ ಖರ್ಚು ಬರುತ್ತದೆ ಎಂದು ನಿಗದಿ ಪಡಿಸಿ, ಮುಂಗಡವಾಗಿ 50,000-00 ರೂ ಹಣವನ್ನು ತಲಾ ಒಬ್ಬರು ನೀಡಬೇಕಾಗಿ ತಿಳಿಸಿ, ದಿನಾಂಕ: 23-10-2018 ರಂದು ಪ್ರವಾಸಕ್ಕೆ ಕರೆದುಕೊಂಡು ಹೋಗುವುದಾಗಿ ದಿನಾಂಕವನ್ನು ನಿಗದಿ ಮಾಡಿರುತ್ತಾರೆ. ಆಗ ನಾನು ಮತ್ತು ಪ್ರವಾಸಕ್ಕೆ ಬರುವ ರೈತರು ಇದಕ್ಕೆ ಒಪ್ಪಿ ಅದೇ ದಿನ ನಮ್ಮ ಸಂಘದ ಖಾತೆಯಿಂದ 8,00,000-00 ರೂ ಹಣವನ್ನು ಮೇಲ್ಕಂಡ ಘನಶಾಂ ರವರ ಸಾಯಿರಾಂ ಟೂರ್ಸ್ ಅಂಡ್ ಟ್ರಾವೆಲ್ಸ್ ನ ಖಾತೆಗೆ ವರ್ಗಾವಣೆ ಮಾಡಿರುತ್ತೇವೆ. ಅದೇ ದಿನ ನಾವು ಘನಶಾಂ ಹಾಗು ಈತನ ಮಗನಿಗೆ 2,00,000-00 ರೂ ಹಣವನ್ನು ಸಮುದಾಯ ಭವನದಲ್ಲಿ ನಗದು ಹಣವನ್ನು ಅವರ ಕೈಗೆ ಕೊಟ್ಟಿರುತ್ತೇವೆ.

    ನಂತರ ದಿನಾಂಕ: 11-07-2018 ರಂದು ಮತ್ತೆ ನಮ್ಮ ದ್ರಾಕ್ಷಿ ಬೆಳೆಗಾರರ ರೈತ ಸಂಘದ ಖಾತೆಯಿಂದ 2,50,000-00 ರೂ ಹಣವನ್ನು ಘನ ಶಾಂ ರವರ ಖಾತೆಗೆ ವರ್ಗಾವಣೆ ಮಾಡಿರುತ್ತೇವೆ. ನಂತರ ಉಳಿಕೆ ಹಣವಾದ 17,50,000-00 ರೂ ಹಣದ ಪೈಕಿ ದಿನಾಂಕ: 18-07-2018 ರಂದು 25,000-00 ರೂ ಹಣವನ್ನು, ದಿನಾಂಕ 18-07-2018 ರಂದು 2,50,000-00 ರೂ ಹಣವನ್ನು, ದಿನಾಂಕ: 20-07-2018 ರಂದು 2,00,000-00 ರೂ ಹಣವನ್ನು ನಾವು ಘನಶಾಂ ರವರ ಸಾಯಿ ಟೂರ್ಸ್ ಅಂಡ್ ಟ್ರಾವೆಲ್ಸ್ ಗೆ ಪಾವತಿ ಮಾಡಿದ್ದು ಈ ಬಗ್ಗೆ ಘನಶಾಂ ರವರು ಹಣವನ್ನು ಸ್ವೀಕಾರ ಮಾಡಿ ಈ ಬಗ್ಗೆ ಹಣ ಸ್ವೀಕಾರದ ಬಗ್ಗೆ ರಸೀದಿಯನ್ನು ಸಹ ನೀಡಿರುತ್ತಾರೆ. ಅಲ್ಲದೆ ನಾವು ಈ ಹಿಂದೆ ನೀಡಿದ 8 ಲಕ್ಷ ಮತ್ತು 2 ಲಕ್ಷ ರೂ ಹಣಕ್ಕೆ ಸಹ ರಸೀದಿಯನ್ನು ನೀಡಿದ್ದು, ಉಳಿಕೆ ಇದ್ದ 15,25,000-00 ರೂ ಹಣವನ್ನು ನಾವು ಮೇಲೂರು ಸಮುದಾಯ ಭವನದಲ್ಲಿ ಘನಶಾಂ ಮತ್ತು ಇವರ ಮಗನಾದ ಮನೋಜ್ ಕುಮಾರ್ ರವರಿಗೆ ಭಕ್ತರಹಳ್ಳಿ ಬೈರೇಗೌಡ (ಹಸಿರು ಸೇನೆ ರಾಜ್ಯ ಕಾರ್ಯದರ್ಶಿ) ಮತ್ತು ಹಿತ್ತಲಹಳ್ಳಿ ಗೋಪಾಲ ಗೌಡರು (ರಾಜ್ಯ ಕೃಷಿ ಪಂಡಿತ ಪ್ರಶಸ್ತಿ ವಿಜೇತರು) ರವರ ಸಮ್ಮುಖದಲ್ಲಿ ಅದೇ ತಿಂಗಳಲ್ಲಿ ಕೊಟ್ಟಿದ್ದು ಈ ಹಣಕ್ಕೆ ಘನಶಾಂ ರವರು ಯಾವುದೆ ರಸೀದಿಯನ್ನು ನೀಡಿರುವುದಿಲ್ಲ.  ನಂತರ ಪ್ರವಾಸದ ದಿನಾಂಕದಂದು ಘನಶಾಂ ರವರು ನಮಗೆ ಪ್ರವಾಸಕ್ಕೆ ಕರೆದುಕೊಂಡು ಹೋಗದೇ ಇದ್ದು, ನಮ್ಮ ಹಣವನ್ನು ವಾಪಸ್ಸು ಕೊಡುವಂತೆ ಈಗ್ಗೆ ಹಲವಾರು ಬಾರಿ ಆತನ ಕಚೇರಿಯ ಬಳಿ ಹೋಗಿ ಹಾಗು ದೂರವಾಣಿ ಮುಖಾಂತರ ಸಂಪರ್ಕಿಸಿದಾಗ ಘನಶಾಂ ಮತ್ತು ಆತನ ಮಗ ಮನೋಜ್ ಕುಮಾರ್ ರವರು ಮೇಲ್ಕಂಡ ಹಣದ ಪೈಕಿ 2 ಲಕ್ಷ ರೂ ಗಳನ್ನು ನಮ್ಮ ರೈತ ಸಂಘದ ಖಾತೆಗೆ ವರ್ಗಾವಣೆ ಮಾಡಿ ಉಳಿದ ಹಣವನ್ನು ಇದುವರೆವಿಗೂ ಕೊಡದೇ ನಮಗೆ ಸಬೂಬುಗಳನ್ನು ಹೇಳಿಕೊಂಡು ಬಂದಿರುತ್ತಾರೆ. ಆದ ಕಾರಣ ನಮ್ಮ ಸಂಘದ ರೈತರಿಗೆ ಪ್ರವಾಸ ಕರೆದುಕೊಂಡು ಹೋಗುತ್ತೇನೆಂದು ನಮ್ಮಿಂದ 30 ಲಕ್ಷ ರೂ ಹಣವನ್ನು ಪಡೆದುಕೊಂಡು ಆ ಪೈಕಿ 2 ಲಕ್ಷ ರೂ ಹಣವನ್ನು ನಮಗೆ ವಾಪಸ್ಸು ನೀಡಿ, ಉಳಿದ 28 ಲಕ್ಷ ರೂ ಹಣವನ್ನು ವಾಪಸ್ಸು ಕೊಡದೇ ನಮಗೆ ಮೋಸ ಮಾಡಿರುವ ಮೇಲ್ಕಂಡ ಘನಶಾಂ (9902026007) ಮತ್ತು ಈತನ ಮಗನ ವಿರುದ್ದ ಮುಂದಿನ ಕಾನೂನು ಕ್ರಮ ಜರುಗಿಸ ಬೇಕಾಗಿ ಕೋರಿ ನೀಡಿದ ದೂರು.

 1. ಶಿಡ್ಲಘಟ್ಟ ಪುರ ಪೊಲೀಸ್ ಠಾಣೆ ಮೊ.ಸಂ.110/2020 ಕಲಂ: 420,417,465,468,471,120B ರೆ/ವಿ 34 ಐ.ಪಿ.ಸಿ :-

     ದಿನಾಂಕ.15.10.2020 ರಂದು ಸಂಜೆ 5.30 ಗಂಟೆಗೆ ಪಿರ್ಯಾದಿ ಬಿ.ಅನಿಲ್ ಕುಮಾರ್ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನಂದರೆ, ತಾನು ಬಿಳಿಶೀವಾಲೆ ಗ್ರಾಮ, ಬಿದರಹಳ್ಳಿ ಹೋಬಳಿ, ಬೆಂಗಳೂರು ಪೂರ್ವ ತಾಲ್ಲೂಕು ನಿವಾಸಿಯಾಗಿದ್ದು ಹೊಂ ಡಿಸೈನ್ ಕೆಲಸ ಮಾಡಿಕೊಂಡಿರುತ್ತೇನೆ. ನನಗೆ ಸುಮಾರು 7 ತಿಂಗಳ ಹಿಂದೆ ಬೆಂಗಳೂರು ದೊಡ್ಡಗುಬ್ಬಿ ಅಂಚೆ ಚಿಕ್ಕಗುಬ್ಬಿ- ಎನ್.ಜಿ.ಮುಖ್ಯ ರಸ್ತೆ ವಾಸಿ ಶ್ರೀನಿವಾಸಮೂರ್ತಿ @ ಲೇಔಟ್ ಬಾಬು ಎಂಬುವರು ನನಗೆ ಪರಿಚಯವಾಗಿ ನಾನು ರಿಯಲ್ ಎಸ್ಟೇಟ್ ವ್ಯವಹಾರ ಮಾಡುತ್ತಿದ್ದು ಚಿಕ್ಕಬಳ್ಳಾಪುರ ತಾಲ್ಲೂಕು ಶಿಡ್ಲಘಟ್ಟ ತಾಲ್ಲೂಕು ಸಾದಲಿ ಹೋಬಳಿ, ನಲ್ಲಪ್ಪನಹಳ್ಳಿ ಗ್ರಾಮದ ಬಿ.ಎಂ.ನಾಗರಾಜ ಬಿನ್ ಲೇಟ್ ಕೋಟಿ ದೊಡ್ಡಮುನಿಶಾಮಪ್ಪ ಎಂಬುವರ ಹೆಸರಿನಲ್ಲಿರುವ ಸಾದಲಿ ಹೋಬಳಿ ನಲ್ಲಪ್ಪನಹಳ್ಳಿ ಗ್ರಾಮದ ಸ.ನಂ.51 ರಲ್ಲಿ 2 ಎಕರೆ 13 ಗುಂಟೆ, ಸ.ನಂ.52/1 ರಲ್ಲಿ 1 ಎಕರೆ 24 ಗುಂಟೆ, ಸ.ನಂ.52/2 ರಲ್ಲಿ 3 ಎಕರೆ 37 ಗುಂಟೆ  ಒಟ್ಟು 7 ಎಕರೆ 32 ಗುಂಟೆ ಜಮೀನಿನ ಪಹಣಿ ದಾಖಲೆಗಳನ್ನು ತೋರಿಸಿ ಈ ಜಮೀನುಗಳನ್ನು ಬಿ.ಎಂ. ನಾಗರಾಜು ರವರು ಮಾರಾಟ ಮಾಡುತ್ತಾರೆ ನೀವು ತೆಗದುಕೊಳ್ಳುತ್ತೀರಾ ಎಂದು ತಿಳಿಸಿದಾಗ ನಾನು ಜಮೀನು ನೋಡಿ ನಂತರ ನಿಮಗೆ ಮಾಹಿತಿ ತಿಳಿಸುತ್ತೇವೆಂದು ತಿಳಿಸಿದೆ. ಹೀಗಿರುವಾಗ ಶ್ರೀನಿವಾಸಮೂರ್ತಿ ರವರು 2020ನೇ ಮಾರ್ಚಿ ಮಾಹೇಯಲ್ಲಿ ಮೇಲ್ಕಂಡ ಜಮೀನು ನೋಡಲು ಬರುವಂತೆ ತಿಳಿಸಿದಾಗ ನಾನು ನಮ್ಮ ಕುಂಟುಂಬದವರಾದ ನನ್ನ ಹೆಂಡತಿ ಶ್ರೀಮತಿ. ದರ್ಶನಾಕುಮಾರಿ ಮಕ್ಕಳಾದ ಆಕಾಶ್ ಮತ್ತು ಅರಿಯನ್ ಹಾಗೂ ನನ್ನ ಸ್ನೇಹಿತರಾದ ಅಜಿತ್ ಪೀತರ್, ಬಿ.ಎಸ್.ನಾಗರಾಜ ರವರನ್ನು ಕರೆದುಕೊಂಡು ಶಿಡ್ಲಘಟ್ಟಕ್ಕೆ ಬಂದಾಗ ಶ್ರೀನಿವಾಸಮೂತರ್ಿ ರವರು ಜಮೀನಿನ ಮಾಲೀಕರಾದ ಬಿ.ಎಂ.ನಾಗರಾಜ ರವರ ಹೆಸರನ್ನು ದುರುಪಯೋಗ ಪಡಿಸಿಕೊಂಡು ಸಿ.ಬಿ.ವೆಂಕಟಪ್ಪ ಎಂಬುವರನ್ನು ಕರೆದುಕೊಂಡು ಬಂದು ಸಾದಲಿ ಹೋಬಳಿ ನಲ್ಲಪ್ಪನಹಳ್ಳಿ ಗ್ರಾಮದ ಮೇಲ್ಕಂಡ ಸ.ನಂ.51, 51/1 ಮತ್ತು 52/2 ರ ರ ಜಮೀನಿನಲ್ಲಿ ಕರೆದುಕೊಂಡು ಹೋಗಿ ಜಮೀನು ತೋರಿಸಿದ್ದು, ಆಗ ನಾವುಗಳು ಜಮೀನು ಏನೂ ತಕರಾರು ಇಲ್ಲವೆಂದು ಜಮೀನು ಮಾಲೀಕರೆಂದು ಬಂದಿದ್ದ ನಕಲಿ ಬಿ.ಎಂ.ನಾಗರಾಜ ರವರನ್ನು ಕೇಳಿದಾಗ ಅವರು ಯಾವುದೇ ತಕರಾರುಗಳಿಲ್ಲ ಎಂದು ತಿಳಿಸಿದಾಗ ನಾನು ಈ ಜಮೀನುಗಳನ್ನು ಕೊಂಡುಕೊಳ್ಳಲು ಒಪ್ಪಿಕೊಂಡಿರುತ್ತೇವೆ. ಆಗ ನಾನು ಮೇಲ್ಕಂಡ 3 ನಂಬರ್ ಗಳ ಜಮೀನುಗಳಿಗೆ ಒಟ್ಟು 55,00,000/-ರೂ (ಐವತ್ತೈದು ಲಕ್ಷರೂಗಳು) ಗಳಿಗೆ ಖರೀದಿಸಲು ವ್ಯವಹಾರ ಮಾಡಿಕೊಂಡಿರುತ್ತೇವೆ. ಆಗ ಶ್ರೀನಿವಾಸಮೂರ್ತಿ ರವರು ನನಗೆ ದಾಖಲೆಗಳನ್ನು ಪಡೆಯಬೇಕು ಹಾಗೂ ಸೆಲ್ ಅಗ್ರಿಮೆಂಟ್ ಟೈಪ್ ಮಾಡಿಸಬೇಕು 25,000/-ರೂ ಅಡ್ವಾನ್ಸ್ ಕೊಡಲು ಕೇಳಿದಾಗ ನಾನು ಬೆಂಗಳೂರು ನಗರದ ಕಾಮನಹಳ್ಳಿ ಹೆಚ್.ಡಿ.ಎಫ್.ಸಿ ಬ್ಯಾಂಕ್ ಚೆಕ್ ನಂ.00003 ದಿನಾಂಕ.18.03.2020 ರ ಚೆಕ್ಕನ್ನು ನೀಡಿರುತ್ತೇನೆ. ಇದಾದ ನಂತರ ಶ್ರೀನಿವಾಸಮೂರ್ತಿ ರವರು ನನಗೆ ಎಲ್ಲಾ ಜಮೀನಿನ ದಾಖಲೆಗಳನ್ನು ಪಡೆದಿರುತ್ತೇನೆ ನೀವು ಬಂದು ಬಿ.ಎಂ.ನಾಗರಾಜು ರವರಿಂದ ಜಮೀನು ರಿಜಿಸ್ಟರ್ ಕೊಳ್ಳಲು ಬರುವಂತೆ ತಿಳಿಸಿದಾಗ ನಾವು ಜಮೀನು ಖರೀದಿಸಲು ಹಣ ಸರಿ ಮಾಡಿಕೊಂಡು ದಿನಾಂಕ.18.06.2020 ರಂದು ಬಂದಾಗ ಬಿ.ಎಂ.ನಾಗರಾಜು ರವರು ಅಧಾರ್ ಕಾಡರ್ು ನಂ.4209 5556 1699 ರ ದಾಖಲೆಯ ಗುರತಿನ ಚೀಟಿಯನ್ನು ನೀಡಿ ಅವರನ್ನು ಕರೆದುಕೊಂಡು ಬಂದು ಶಿಡ್ಲಘಟ್ಟ ಉಪ ನೊಂದಾಣಾಧಿಕಾರಿಗಳ ಕಚೇರಿಯಲ್ಲಿ ದಸ್ತಾವೇಜು ಸಂ. SDG-1-00688-2020-21 ಪುಸ್ತಕ-1 CD.No.SDGD495, ರಂತೆ ಕ್ರಯದ ಕರಾರು ಪತ್ರ (ಸೆಲ್ ಡೀಡ್) ಮಾಡಿಕೊಟ್ಟಿರುತ್ತಾರೆ. ಆಗ ನಾನು ಬಿ.ಎಂ. ನಾಗರಾಜ ರವರ ಹೆಸರಿಗೆ ನನ್ನ ಖಾತೆಯಲ್ಲಿ ಎಸ್.ವಿ.ಸಿ ಕೋ-ಅಪರೇಟೀವ್ ಬ್ಯಾಂಕ್ ಲಿ. ಬ್ಯಾಂಕ್ ಚೆಕ್ ನಂ.021613 ದಿನಾಂಕ.18.06.2020 ರ 28,66,000/-ರೂಗಳ ಚೆಕನ್ನು ನೀಡಿರುತ್ತೇನೆ. ಆಗ ಶ್ರೀನಿವಾಸಮೂರ್ತಿ ರವರು ನನಗೆ ಸೆಲ್ ಅಗ್ರಿಮೆಂಟ್ ಮತ್ತು ಇತರ ದಾಖಲೆಗಳನ್ನು ಸಬ್ ರಿಜಿಸ್ಟರ್ ರವರು ಸಹಿ ಮಾಡಿದ ನಂತರ ತಂದು ಕೊಡುವುದಾಗಿ ತಿಳಿಸಿದ ಅದಕ್ಕೆ ನಂಬಿ ನಾನು ವಾಪಸ್ಸು ಹೋಗಿರುತ್ತೇನೆ. ಇದಾದ ನಂತರ 30.06.2020 ರಂದು ಶ್ರೀನಿವಾಸಮೂರ್ತಿ ರವರು ಮೇಲ್ಕಂಡ ದಿನಾಂಕ.18.06.2020 ರಂದು ಉಪನೊಂದಣಾಧಿಕಾರಿಗಳ ಕಚೇರಿಯಲ್ಲಿ ನೊಂದಣಿ ಮಾಡಿಸಿರುವ ಮೇಲ್ಕಂಡ ಜಮೀನುಗಳ ಸೆಲ್ ಅಗ್ರಿಮೆಂಟ್ ದಾಖಲೆಗಳನ್ನು ತಂದು ಕೊಟ್ಟಿದ್ದು, ನಾನು ಪರೀಶೀಲಿಸಿದಾಗ ಸೆಲ್ ಅಗ್ರಿಮೆಂಟ್ ಮಾಡಿಕೊಟ್ಟ ವೆಂಡರ್ ಜಾಗದಲ್ಲಿ ಬಿ.ಎಂ. ನಾಗರಾಜ ರವರು ಸಹಿ ಮಾಡದೆ ಇರುವುದನ್ನು ಗಮನಿಸಿ ಶ್ರೀನಿವಾಸಮೂತರ್ಿ ರವರ ಮೊಬೈಲ್ ನಂ.9632138612 ನಂಬರ್ ಕರೆ ಮಾಡಿದಾಗ ಅವರು ಸಾರ್ ನಿನಗೆ ಮೋಸ ಆಗಿದೆ ಚೆಕ್  ಮತ್ತು ನಿಮ್ಮ ನಗದು ಹಣವನ್ನು ವಾಪಸ್ಸು ತಂದು ಕೊಡುತ್ತೇನೆಂದು ತಿಳಿಸಿದವರು ಹಲವು ಬಾರಿ ಕೇಳಿದರೂ ನನಗೆ ಚೆಕ್ ವಾಪಸ್ಸು ಕೊಟ್ಟಿರುವುದಿಲ್ಲ. ಹಾಗೂ ಶ್ರೀನಿವಾಸಮೂರ್ತಿ ರವರು ನನ್ನ ಕೈಗೆ ಸಿಗದೆ ಓಡಾಡಿಕೊಂಡಿರುತ್ತಾರೆ. ಇದಾದ ನಂತರ ನನ್ನ ಎಸ್.ವಿ.ಸಿ ಕೋ-ಅಪರೇಟೀವ್ ಬ್ಯಾಂಕ್ ಖಾತೆಯ ಸ್ಟೆಂಟ್ ಮೆಂಟ್ ಚೆಕ್ ಮಾಡಿದಾಗ ನನ್ನ ಖಾತೆಯಲ್ಲಿ 28,66,000/-ರೂ ನಗದು ದೇವನಹಳ್ಳಿ ಪೆಡರಲ್ ಬ್ಯಾಂಕ್ ಗೆ ವರ್ಗಾವಣೆಯಾಗಿರುವುದು ಕಂಡು ಬಂದಿರುತ್ತೆ. ನಂತರ ಮೇಲ್ಕಂಡ ಜಮೀನಿನ ಮಾಲೀಕರಾದ ಬಿ.ಎಂ.ನಾಗರಾಜು ರವರ ಅಳಿಯನಾದ ನರಸಿಂಹಮೂರ್ತಿ ರವರು ನನ್ನ ಬಳಿ ಬಂದು ನಮ್ಮ ಮಾವನ ಹೆಸರಿನಲ್ಲಿರುವ ಜಮೀನು ನಿಮ್ಮ ಹೆಸರಿಗೆ ಸೆಲ್ ಆಗ್ರಿಮೆಂಟ್ ಆಗಿದೆ ಯಾರೂ ಮಾಡಿಕೊಟ್ಟಿರುವುದು ಎಂದು ಕೇಳಿದಾಗ ನನಗೆ ಗಾಬರಿಯಾಗಿ ಬಿ.ಎಂ.ನಾಗರಾಜ ರವರ ಆಧಾರ್ ಕಾರ್ಡು ನಂ. ಮತ್ತು ಪೋಟೋ ಚೆಕ್ ಮಾಡಿದಾಗ ಪೋಟೋ ತಾಳೆಯಾಗದೆ ಇದ್ದು, ಇವರ ಬಗ್ಗೆ ತಿಳಿದುಕೊಂಡಾಗ ಅಧಾರ್ ಕಾರ್ಡು ನಂ.4209 5556 1699 ರ ದಾಖಲೆಯಲ್ಲಿರುವ ಪೋಟೋ ಇರುವ ವ್ಯಕ್ತಿಯ ಹೆಸರು ಸಿ.ಬಿ. ವೆಂಕಟಪ್ಪ ಬಿನ್ ಬಚ್ಚಪ್ಪ, ಚೌಡಸಂದ್ರ ಗ್ರಾಮ, ಶಿಡ್ಲಘಟ್ಟ ತಾಲ್ಲೂಕು ಎಂದು ತಿಳಿದು ಬಂದಿರುತ್ತೆ. ಶ್ರೀನಿವಾಸಮೂರ್ತಿ @ ಲೇಔಟ್ ಬಾಬು ಎಂಬುವರು ಬಿ.ಎಂ.ನಾಗರಾಜ ರವರ ಹೆಸರನ್ನು ದುರುಪಯೋಗ ಮಾಡಿಕೊಂಡು ಸಿ.ಬಿ.ವೆಂಕಟಪ್ಪ ರವರೊಂದಿಗೆ ಒಳಸಂಚು ರೂಪಿಸಿ ಜಮೀನಿನ ಮಾಲೀಕರಾದ ಬಿ.ಎಂ.ನಾಗರಾಜ ರವರ ಬದಲಿಗೆ ಸಿ.ಬಿ.ವೆಂಕಟಪ್ಪ ರವರನ್ನು ಕರೆತಂದು ತಾನೇ ಬಿ.ಎಂ.ನಾಗರಾಜ ಎಂಬುದಾಗಿ ನಟಿಸಿ ಇಬ್ಬರೂ ಸೇರಿ ಉಪ ನೊಂದಣಾಧಿಕಾರಿಗಳ ಕಚೇರಿಯಲ್ಲಿ ಬಿ.ಎಂ.ನಾಗರಾಜ ರವರ ಹೆಸರಿನ ನಕಲಿ ಅಧಾರ್ ಕಾಡರ್ು ದಾಖಲೆಯನ್ನು ನೀಡಿ ನನಗೆ ಮೋಸ ಮಾಡುವ ಉದ್ದೇಶದಿಂದ ಮೇಲ್ಕಂಡ ಜಮೀನುಗಳನ್ನು ಸೆಲ್ ಅಗ್ರಿಮೆಂಟ್ ಮಾಡಿಸಿಕೊಟ್ಟು ಶ್ರೀನಿವಾಸಮೂರ್ತಿ ರವರು ನನ್ನಿಂದ 28,66,000/-ರೂಗಳ ಚೆಕ್ ಪಡೆದು ಮೋಸ ಮಾಡಿರುತ್ತಾರೆ. ದೇವನಹಳ್ಳಿ ಪೆಡರಲ್ ಬ್ಯಾಂಕಿನಲ್ಲಿ ಹೋಗಿ ಬಿ.ಎಂ.ನಾಗರಾಜ ರವರ ಖಾತೆ ಇದೆಯೇ ಎಂದು ವಿಚಾರಿಸಿದಾಗ ಸದರಿ ಬ್ಯಾಂಕಿನ ಅಧಿಕಾರಿಗಳು ಬಿ.ಎಂ.ನಾಗರಾಜ ರವರ ಆಕೌಂಟ್ ಇರುವುದಿಲ್ಲ ಎಂದು ತಿಳಿಸಿರುತ್ತಾರೆ. ಆದ್ದರಿಂದ ನನಗೆ ಶ್ರೀನಿವಾಸಮೂರ್ತಿ @ ಲೇಔಟ್ ಬಾಬು ಎಂಬುವರು ಬಿ.ಎಂ.ನಾಗರಾಜ ರವರ ಹೆಸರಿನಲ್ಲಿರುವ ಜಮೀನಿನ ದಾಖಲೆಗಳನ್ನು ತೋರಿಸಿ ನಕಲಿ ದಾಖಲೆಗಳನ್ನು ಸೃಷ್ಠಿಸಿ ಸಿ.ಬಿ.ವೆಂಕಟಪ್ಪ ಎಂಬುವರನ್ನು ಕರೆತಂದು ಅವರಿಗೆ ತಾನೇ ಬಿ.ಎಂ.ನಾಗರಾಜು ಎಂಬುದಾಗಿ ನಟಿಸುವಂತೆ ತಿಳಿಸಿ ಜಮೀನು ರಿಜಿಸ್ಟರ್ ಮಾಡಿಸಿಕೊಟ್ಟು ಮೋಸ ಮಾಡಿರುವ ಶ್ರೀನಿವಾಸಮೂರ್ತಿ @ ಲೇಔಟ್ ಬಾಬು ಹಾಗೂ ಸಿ.ಬಿವೆಂಕಟಪ್ಪ ಮತ್ತು ಅಕೌಂಟ್ ಇಲ್ಲದೆ ಇದ್ದರೂ ಚೆಕ್ ನಲ್ಲಿರುವ ಹಣ ನೀಡಿರುವ ದೇವನಹಳ್ಳಿ ಪೆಡರಲ್ ಬ್ಯಾಂಕ್ ಮ್ಯಾನೇಜರ್ ಹಾಗೂ ಇದರಲ್ಲಿ ಬಾಗಿಯಾಗಿರುವವರ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೊಟ್ಟ ದೂರಿನ ಮೇರೆಗೆ ಈ ಪ್ರಕರಣ ದಾಖಲಿಸಿರುತ್ತೆ.