ದಿನಾಂಕ : 16/06/2019ರ ಅಪರಾಧ ಪ್ರಕರಣಗಳು

 1. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ. ಮೊ.ಸಂ: 134/2019 ಕಲಂ: 15(ಎ) ಕೆ.ಇ. ಆಕ್ಟ್:-

          ದಿನಾಂಕ 15/06/2019 ರಂದು ಸಂಜೆ 04.10 ಗಂಟೆಗೆ ಪಿಎಸ್ಐ ರವರು ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ 06/06/2019 ರಂದು ಸಂಜೆ 04.00 ಗಂಟೆಯಲ್ಲಿ ತಾನು ಠಾಣಾ ಸರಹದ್ದು ಗಸ್ತಿನಲ್ಲಿದ್ದಾಗ  ತನಗೆ ಬಂದ ಖಚಿತ ಮಾಹಿತಿ ಏನೆಂದರೆ  ಜಾತವಾರ ಗ್ರಾಮದ  ವಿಜಯ್ ಕುಮಾರ್ ಬಿನ್ ಲೇಟ್ ರಾಜಣ್ಣ, 30 ವರ್ಷ, ವಕ್ಕಲಿಗರು, ಅಡುಗೆ ಕೆಲಸ ರವರು ಸಾರ್ವಜನಿಕರಿಗೆ ಮಧ್ಯಪಾನ ಮಾಡಲು ಅವಕಾಶ ಮಾಡಿಕೊಟ್ಟಿರುವುದಾಗಿ ಖಚಿತ ಮಾಹಿತಿ ಬಂದಿದ್ದು  ಈ ಬಗ್ಗೆ ವಿಜಯ್ ಕುಮಾರ್ ಆರ್ ರವರ ಮೇಲೆ ಕಲಂ 15 (ಎ) ಕೆ ಇ ಆಕ್ಟ್ ರೀತ್ಯಾ ಆಸಾಮಿಯ ವಿರುದ್ದ ಪ್ರಕರಣ ದಾಖಲಿಸಿಕೊಳ್ಳಲು ಸೂಚಿಸಿದ ಮೇರೆಗೆ  ಈ ಪ್ರ ವ ವರದಿ.

 1. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ. ಮೊ.ಸಂ: 135/2019 ಕಲಂ: 15(ಎ),32(3) ಕೆ.ಇ. ಆಕ್ಟ್:-

          ದಿನಾಂಕ 15/06/2019 ರಂದು ಸಂಜೆ 06.10 ಗಂಟೆಗೆ ಪಿಎಸ್ಐ ರವರು ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ 06/06/2019 ರಂದು ಸಂಜೆ 06.00 ಗಂಟೆಯಲ್ಲಿ ತಾನು ಠಾಣಾ ಸರಹದ್ದು ಗಸ್ತಿನಲ್ಲಿದ್ದಾಗ  ತನಗೆ ಬಂದ ಖಚಿತ ಮಾಹಿತಿ ಏನೆಂದರೆ   ಜಡೇನಹಳ್ಳಿ ಗ್ರಾಮದ ಮಂಜುಳ ಕೋಂ ಲೇಟ್ ಮುನಿಯಪ್ಪ, ಜಂಗಮರು ರವರು ಅಂಗಡಿಯ ಬಳಿ ಅಕ್ರಮವಾಗಿ ಸಾರ್ವಜನಿಕರಿಗೆ ಮಧ್ಯಪಾನ ಮಾಡಲು ಅವಕಾಶ ಮಾಡಿಕೊಟ್ಟಿರುವುದಾಗಿ ಖಚಿತ ಮಾಹಿತಿ ಬಂದಿದ್ದು ಈ ಬಗ್ಗೆ ಮಂಜುಳ ರವರ ಮೇಲೆ ಕಲಂ 15 (ಎ), 32(3) ಕೆ ಇ ಆಕ್ಟ್ ರೀತ್ಯಾ ಆಸಾಮಿಯ ವಿರುದ್ದ ಪ್ರಕರಣ ದಾಖಲಿಸಿಕೊಳ್ಳಲು ಸೂಚಿಸಿದ ಮೇರೆಗೆ  ಈ ಪ್ರ ವ ವರದಿ.

 1. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ. ಮೊ.ಸಂ: 136/2019 ಕಲಂ: 15(ಎ),32(3) ಕೆ.ಇ. ಆಕ್ಟ್:-

          ದಿನಾಂಕ 15/06/2019 ರಂದು ಸಂಜೆ 08.10 ಗಂಟೆಗೆ ಪಿಎಸ್ಐ ರವರು ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ 15/06/2019 ರಂದು ಸಂಜೆ 08.00 ಗಂಟೆಯಲ್ಲಿ ತಾನು ಠಾಣಾ ಸರಹದ್ದು ಗಸ್ತಿನಲ್ಲಿದ್ದಾಗ  ತನಗೆ ಬಂದ ಖಚಿತ ಮಾಹಿತಿ ಏನೆಂದರೆ   ಜಡೇನಹಳ್ಳಿ ಗ್ರಾಮದ ಈಶ್ವರಪ್ಪ ಬಿನ್ ಅಶ್ವತ್ಥಪ್ಪ, ಕುರುಬ ಜನಾಂಗ ರವರು ಅಂಗಡಿಯ ಬಳಿ ಅಕ್ರಮವಾಗಿ ಸಾರ್ವಜನಿಕರಿಗೆ ಮಧ್ಯಪಾನ ಮಾಡಲು ಅವಕಾಶ ಮಾಡಿಕೊಟ್ಟಿರುವುದಾಗಿ ಖಚಿತ ಮಾಹಿತಿ ಬಂದಿದ್ದು ಈ ಬಗ್ಗೆ ಈಶ್ವರಪ್ಪ ರವರ ಮೇಲೆ ಕಲಂ 15 (ಎ), 32(3) ಕೆ ಇ ಆಕ್ಟ್ ರೀತ್ಯಾ ಆಸಾಮಿಯ ವಿರುದ್ದ ಪ್ರಕರಣ ದಾಖಲಿಸಿಕೊಳ್ಳಲು ಸೂಚಿಸಿದ ಮೇರೆಗೆ  ಈ ಪ್ರ ವ ವರದಿ.

 1. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ. ಮೊ.ಸಂ: 137/2019 ಕಲಂ: 324-504-506 ಐ.ಪಿ.ಸಿ:-

          ದಿನಾಂಕ 15/06/2019 ರಂದು ರಾತ್ರಿ 08.30 ಗಂಟೆಗೆ ಪಿರ್ಯಾದಿದಾರರಾದ ನಾಗರಾಜು ಬಿನ್ ವೆಂಕಟರಾಯಪ್ಪ ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ ತಾನು ಚಿಕ್ಕನಹಳ್ಳಿ ಗ್ರಾಮದ ವಾಸಿ ತಮ್ಮೇಗೌಡ ಬಿನ್ ಮುನಿಶಾಮಪ್ಪ ರವರಿಗೆ ಸಾಲವಾಗಿ ಹಣವನ್ನು ಕೊಟ್ಟಿದ್ದು ಅವರು ತನಗೆ ಚೆಕ್  ಬರೆದು ಕೊಟ್ಟಿದ್ದರು, ಸದರಿ ಚೆಕ್ ಬೌನ್ಸ್ ಆಗಿದ್ದು ಈ ವಿಚಾರದಲ್ಲಿ ತಾನು ನ್ಯಾಯಾಲಯದಲ್ಲಿ ಕೇಸು ದಾಖಲಿಸಿರುತ್ತೇನೆ ಈ ವಿಚಾರದಲ್ಲಿ ತನ್ನ ಮೇಲೆ ದ್ವೇಶ ಸಾದಿಸುತ್ತಿದ್ದರು ಈಗಿರುವಲ್ಲಿ ದಿನಾಂಕ 13/06/2019 ರಂದು ರಾತ್ರಿ ತಮ್ಮ ತೋಟಕ್ಕೆ ನೀರು ಹಾಯಿಸಲು ನಡೆದು ಕೊಂಡು ಹೋಗುವಾಗ ತಮ್ಮ ತೋಟದ ಸಮೀಪ ಬೆಂಳೂರು ರಸ್ತೆ ಕಡೆಯಿಂದ ತಮ್ಮೇಗೌಡ ರವರು ರಾತ್ರಿ 07.30 ಗಂಟೆ ಕೆಎ-05 ಎಂ ಎಲ್-7039 ನಂಬರಿನ ಮಾರುತಿ ಶಿಪ್ಟ್ ಕಾರಿನಲ್ಲಿ ಬಂದು ನನ್ನ ಮೇಲೆ ನ್ಯಾಯಾಲಯದಲ್ಲಿ ಹಾಕಿರುವ ಕೇಸನ್ನು ವಾಪಸ್ಸು ತೆಗೆದುಕೊಳ್ಳದಿದ್ದರೆ ನಿನ್ನನ್ನು ಸುಮ್ಮನೇ ಬಿಡುವುದಿಲ್ಲ ಎಂದು ತನ್ನ ಮೇಲೆ ಜಗಳ ತೆಗೆದು ಅವರ ಕಾರಿನಿಂದ ಒಂದು ಕಂಬಿಯನ್ನು ತೆಗೆದು ತನ್ನ ಎಡಗಾಲಿನ ಹಿಮ್ಮಡಿಯ ಮೇಲ್ಬಾಗದಲ್ಲಿ ಹೊಡೆದು ರಕ್ತಗಾಯ ಪಡಿಸಿ ಬಲ ಭುಜದ ಮೇಲೆ ಹೊಡೆದು ನೋವಿನ ಗಾಯ ಮಾಡಿದ್ದು, ತಮ್ಮ ಗ್ರಾಮದ ವಾಸಿಗಳಾದ ಶ್ರೀನಿವಾಸ ಬಿನ್ ನಾಗರಾಜು, ವೆಂಕಟೇಶ ರವರು ಜಗಳ ಬಿಡಿಸಿ ತಮ್ಮೇಗೌಡ ರವರ ಕೈಯಲ್ಲಿದ್ದ ಕಂಬಿಯನ್ನು ಕಿತ್ತು ಬಿಸಾಕಿದರು ಆಗ ಶ್ರೀನಿವಾಸರವರು ನೀನು ಕೇಸನ್ನು ವಾಪಸ್ಸು ತೆಗೆದು ಕೊಳ್ಳದಿದ್ದರೆ ಬೋಳಿ ಮಗನೆ ನಿನ್ನನ್ನು ಜೀವ ಸಮೇತ ಬಿಡುವುದಿಲ್ಲ ಎಂದು ಪ್ರಾಣ ಬೆದರಿಕೆ ಹಾಕಿದ್ದು ನಂತರ ತಾನು ಚಿಕಿತ್ಸೆ ಪಡೆಯಲು ಜಿಲ್ಲಾ ಆಸ್ಪತ್ರೆಗೆ ದಾಖಲಾಗಿ ನಂತರ ಮನೆಯಲ್ಲಿ ಹಿರಿಯರೊಡನೆ ಮಾತನಾಡಿ ಈ ದಿನ ತಡವಾಗಿ ದೂರು ನೀಡುತ್ತಿದ್ದು ತನಗೆ ಪ್ರಾಣ ಬೆದರಿಕೆ ಹಾಕಿ ಹೊಡೆದು ರಕ್ತ ಗಾಯ ಪಡಿಸಿರುವ ತಮ್ಮೇಗೌಡ ರವರ ವಿರುದ್ದ ಕಾನೂನು ಕ್ರಮ ಜರುಗಿಸಲು ಕೋರಿ ನೀಡಿದ ದೂರಿನ ಮೇರೆಗೆ ಈ ಪ್ರ ವ ವರದಿ.

 1. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ. ಮೊ.ಸಂ: 138/2019 ಕಲಂ: 15(ಎ) ಕೆ.ಇ. ಆಕ್ಟ್:-

          ದಿನಾಂಕ 16/06/2019 ರಂದು  ಮಧ್ಯಾಹ್ನ 02.10 ಗಂಟೆಗೆ ಪಿಎಸ್ಐ ರವರು ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ 16/06/2019ರಂದು ಮಧ್ಯಾಹ್ನ 02.100 ಗಂಟೆಯಲ್ಲಿ ತಾನು ಠಾಣಾ ಸರಹದ್ದು ಗಸ್ತಿನಲ್ಲಿದ್ದಾಗ  ತನಗೆ ಬಂದ ಖಚಿತ ಮಾಹಿತಿ ಏನೆಂದರೆ ದಿನ್ನೂರು ಗ್ರಾಮದ  ಗಂಗಾಧರ ಬಿನ್ ಮುನಿಯಪ್ಪ, 40 ವರ್ಷ, ಆದಿಕರ್ನಾಟಕ ಜನಾಂಗ ರವರು ಸಾರ್ವಜನಿಕರಿಗೆ ಮಧ್ಯಪಾನ ಮಾಡಲು ಅವಕಾಶ ಮಾಡಿಕೊಟ್ಟಿರುವುದಾಗಿ ಖಚಿತ ಮಾಹಿತಿ ಬಂದಿದ್ದು ಈ ಬಗ್ಗೆ ಗಂಗಾಧರ ರವರ ಮೇಲೆ ಕಲಂ 15 (ಎ),  ಕೆ ಇ ಆಕ್ಟ್ ರೀತ್ಯಾ ಆಸಾಮಿಯ ವಿರುದ್ದ ಪ್ರಕರಣ ದಾಖಲಿಸಿಕೊಳ್ಳಲು ಸೂಚಿಸಿದ ಮೇರೆಗೆ  ಈ ಪ್ರ ವ ವರದಿ.

 1. ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆ. ಮೊ.ಸಂ: 114/2019 ಕಲಂ: 323-324-504-506 ರೆ/ವಿ 34 ಐ.ಪಿ.ಸಿ:-

          ದಿನಾಂಕ: 16.06.2019 ರಂದು ಬೆಳಿಗ್ಗೆ 11.30 ಗಂಟೆಗೆ ಪಿರ್ಯಾದಿದಾರರಾದ ಶ್ರೀ ಸುಬ್ರಮಣಿ ಬಿನ್ ಆರ್.ವಿ. ನಾಗರಾಜ್ ರವರು ಠಾಣೆಗೆ ಹಾಜರಾಗಿ ನೀಡಿದ ಕಂಪ್ಯೂಟರಿ ಕೃತ ದೂರಿನ ಸಾರಾಂಶ ವೇನೆಂದರೆ, ದಿ: 15.06.2019 ರಂದು ರಾತ್ರಿ 10.40 ಗಂಟೆ ಸಮಯದಲ್ಲಿ ನನ್ನ ತಂದೆಯವರಾದ ನಾಗರಾಜು ರವರು ನಮ್ಮ ಮನೆಯ ಪಕ್ಕದಲ್ಲಿರುವ ಚರಂಡಿಯಲ್ಲಿ ವಾಂತಿ ಮಾಡಲು ಹೋಗಿದ್ದು,  ಆ ಸಮಯದಲ್ಲಿ ನಮ್ಮ ಎದರು ಮನೆಯ ವಾಸಿಯಾ ಯಾಸ್ಮೀನ್ ತಾಜ್ ರವರು ಬಂದು ನಮ್ಮ ತಂದೆಯನ್ನು ಉದ್ದೇಶಿಸಿ ಏಕೆ ಮೂತ್ರ ವಿಸರ್ಜೆನೆ ಮಾಡುತ್ತೀದ್ದೀಯಾ ಲೋಫರ್ ನನ್ನ ಮಗನೆ ಎಂದು ಅವಾಚ್ಯ ಶಬ್ಧಗಳಿಂದ ಬೈದು ಗಲಾಟೆ ಮಾಡಿ, ಆಗ ಅವರ ಮಕ್ಕಳಾದ ಫಾರುಕ್, ಆರೀಫ್, ಆಸಿಫ್ ರವರು ಬಂದು ಅವರಲ್ಲಿ ಆಸಿಫ್ ಎಂಬುವವರು ನಮ್ಮ ತಂದೆಯನ್ನು ಕೈ ಹಿಂದೆ ಹಿಡಿದುಕೊಂಡಿದ್ದು, ಆರೀಫ್, ಫಾರುಕ್ ರವರು ಕೈಗಳಿಂದ ಬಲ ಭಾಗದ ಕಿವಿಗೆ ಮತ್ತು ಎಡ ಭಾಗದ ಬೆನ್ನಿಗೆ  ಕೈಯಿಂದ ಹೊಡೆದು, ನೋವನ್ನು ಉಂಟು ಮಾಡಿರುತ್ತಾರೆ.  ಗಲಾಟೆ ನೋಡಿದ ನಾನು ಗಲಾಟೆಯನ್ನು ಬಿಡಿಸಲು ಹೋದಾಗ ಆರೀಫ್ ರವರು ನನಗೆ ಕೈಗಳಿಂದ  ಎಡ ಭಾಗದ ಹೊಟ್ಟೆಗೆ ಮತ್ತು ಫಾರುಕ್ ರವರು ಕೈ ಯಿಂದ ನನ್ನ ತಲೆಯ ಹಿಂಭಾಗಕ್ಕೆ ಹೊಡೆದು, ಆರಿಫ್ ಅಲ್ಲಯೇ ಇದ್ದ  ಹೂವಿನ ಫಾಟ್ ನಿಂದ ನನ್ನ ಎಡ ಭಾಗದ ಕೆನ್ನೆಗೆ ಹೊಡೆದು ರಕ್ತ ಗಾಯ ಉಂಟು ಮಾಡಿದ್ದು, ನಿನ್ನನ್ನು ನಿನ್ನ ತಂದೆಯನ್ನು ಸುಮ್ಮನೆ ಬಿಡುವುದಿಲ್ಲ ಸಾಯಿಸುತ್ತೇವೆಂದು ಹೇಳಿ ಪ್ರಾಣ ಬೆದರಿಕೆ ಹಾಕಿದ್ದು, ಆ ಸಮಯಕ್ಕೆ ನಮ್ಮ ಮನೆಯ ಮುಂದಿನ ವಾಸಿಯಾದ ವಿನಯ್ ಬಿನ್ ಗೌರಾಯಪ್ಪ ರವರು ಬಂದು ಜಗಳವನ್ನು ಬಿಡಿಸಿ, ನನ್ನನ್ನು ಚಿಕ್ಕಬಳ್ಳಾಪುರ ಜಿಲ್ಲಾ ಸರ್ಕಾರಿ ಆಸಸ್ವತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆಯನ್ನು ಕೊಡೆಸಿರುತ್ತಾರೆ. ನನ್ನನ್ನು ನ್ನನ ತಂದೆಯನ್ನು ಹೊಡೆದು, ಅವಾಚ್ಯ ಶಬ್ಧಗಳಿಂದ ಬೈದು, ನನಗೆ ರಕ್ತಗಾಯವನ್ನುಂಟು ಮಾಡಿರುವ ಮೇಲ್ಕಂಡ 4 ಜನರ ಮೇಲೆ ಕಾನೂನು ರೀತಿಯ ಕ್ರಮ ಜರುಗಿಸಿ ನಮಗೆ ನ್ಯಾಯಾ ದೊರಕಿಸಿ ಕೊಡಬೇಕೆಂದು ಕೋರಿದ ಮೇರೆಗೆ ಈ ಪ್ರ.ವ.ವರದಿ.

 1. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ. ಮೊ.ಸಂ: 208/2019 ಕಲಂ: 143-379-353 ರೆ/ವಿ 149 ಐ.ಪಿ.ಸಿ:-

          ದಿನಾಂಕ 15-06-2019 ರಂದು ರಾತ್ರಿ 8-30 ಗಂಟೆಗೆ ಠಾಣಾ ಸಿಪಿಸಿ  23 ರೋಷನ್ ಜಮೀರ್ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ  ದಿನಾಂಕ:-15-06-2019 ರಂದು ಸಂಜೆ 5-30 ಗಂಟೆ ಸಮಯದಲ್ಲಿ ಮಹಮದ್ಪುರ ಕೆರೆಯಲ್ಲಿ ಟ್ರಾಕ್ಟರ್ ನಲ್ಲಿ ಯಾರೋ ಅಕ್ರಮ ಮರಳು ತೆಗೆದು ಸಾಗಾಣಿಕೆ ಮಾಡುತ್ತಿದ್ದಾರೆಂತ ಮಾಹಿತಿ ಬಂದಿರುವುದಾಗಿ ಠಾಣಾಧಿಕಾರಿ ಅಶ್ವತ್ಥನಾರಾಯಣಸ್ವಾಮಿರವರು ತನ್ನನ್ನು ಮತ್ತು ಠಾಣಾ ಎಸ್.ಬಿ ಕರ್ತವ್ಯ ಮಾಡುತ್ತಿರುವ ಸಂದೀಪ್ ಕುಮಾರ್ ರವರನ್ನು ನೇಮಕ ಮಾಡಿ ಕಳುಹಿಸಿದ್ದು, ಅದರಂತೆ ತಾವು ತಮ್ಮ ದ್ವಿಚಕ್ರ ವಾಹನದಲ್ಲಿ ಸಂಜೆ 6-00 ಗಂಟೆ ಸಮಯಕ್ಕೆ ಮಹಮದ್ಪುರ ಕೆರೆಯ ಬಳಿ ಹೋಗುವಷ್ಟರಲ್ಲಿ ಮರಳು ತುಂಬುತ್ತಿದ್ದ ಇಬ್ಬರು ತಮ್ಮನ್ನು ಕಂಡು ಓಡಿಹೋಗಿದ್ದು, ಟ್ರಾಕ್ಟರ್ ಬಳಿ ಮಹಮದ್ಪುರ ಗ್ರಾಮದ ಹನುಮಂತಪ್ಪ ಮತ್ತು ಟ್ರಾಕ್ಟರ್ ಚಾಲಕ ಟ್ರಾಕ್ಟರ್ನಲ್ಲಿ ಕುಳಿತಿದ್ದು, ತಾವು ನಿಮಗೆ ಈ ಕೆರೆಯಲ್ಲಿ ಮರಳು ತೆಗೆಯಲು ಪರವಾನಗಿ ಇದೆಯೇ ಎಂತ ಕೇಳಿದ್ದಕ್ಕೆ, ಟ್ರಾಕ್ಟರ್ ಚಾಲಕ ಮತ್ತು ಹನುಮಂತಪ್ಪ ಇಲ್ಲವೆಂತ ತಿಳಿಸಿದರು. ತಮಗೆ ಇದು ಅಕ್ರಮ ಮರಳು ಸಾಗಾಣಿಕೆ ಮಾಡುತ್ತಿರುವುದು ಕಂಡು ಬಂದಿದ್ದು, ಸದರಿ ಟ್ರಾಕ್ಟರ್ ನೊಂದಣಿ ಸಂಖ್ಯೆ ಟೈಲರ್ ಮೇಲೆ ಕೆ.ಎ-07-ಟಿ-5678 ಮತ್ತು ಕೆ.ಎ-07-ಟಿ-5679 ಎಂತ ಇದ್ದು, ಇಂಜನ್ ಮೇಲೆ ನೊಂದಣಿ ಸಂಖ್ಯೆ ಕಂಡು ಬಂದಿರುತ್ತೆ. ನಂತರ ತಾನು ಮತ್ತು ಸಂದೀಪ್ ಕುಮಾರ್ ರವರು ಟ್ರಾಕ್ಟರ್ ಅನ್ನು ಠಾಣೆಯ ಬಳಿ ತೆಗೆದುಕೊಂಡು ಬರಲು ಹೋದಾಗ ಟ್ರಾಕ್ಟರ್ ಬಳಿ ಇದ್ದ ಹನುಮಂತಪ್ಪ ಮತ್ತು ಟ್ರಾಕ್ಟರ್ ಚಾಲಕ ಟ್ರಾಕ್ಟರ್ನ ಟೈರ್ಗಳಲ್ಲಿ ಗಾಳಿ ತೆಗೆದು ತಮ್ಮ ಕರ್ತವ್ಯಕ್ಕೆ ಅಡ್ಡಿಪಡಿಸಿ, ಹನುಮಂತಪ್ಪ ಪೋನ್ ಮಾಡಿ ಗ್ರಾಮದಿಂದ ಇನ್ನು 8-9 ಜನರನ್ನು ಕರೆಸಿಕೊಂಡರು. ತಾನು ಏಕೆ ತಮ್ಮ ಕರ್ತವ್ಯಕ್ಕೆ ಅಡ್ಡಿ ಪಡಿಸುತ್ತೀರಿ ಎಂತ ಕೇಳಿದ್ದಕ್ಕೆ ಈ ಊರು ಮತ್ತು ಕರೆ ತಮ್ಮದು, ಮರಳು ತೆಗೆಯುವ ಅಧಿಕಾರ ತಮಗಿದೆ, ನಿವ್ಯಾರು ಕೇಳುವುದಕ್ಕೆ ಎಂತ ಟ್ರಾಕ್ಟರ್ ಅನ್ನು ನೀವು ಹೇಗೆ ತೆಗೆದುಕೊಂಡು ಹೋಗುತ್ತೀರೋ ನೋಡೋಣವೆಂತ ಮೇಲ್ಕಂಡವರೆಲ್ಲರೂ ಸೇರಿ ಟ್ರಾಕ್ಟರ್ಗೆ ಅಡ್ಡ ನಿಂತುಕೊಂಡು ತಮ್ಮ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದು, ಆಗ ತಾನು ಈ ವಿಷಯವನ್ನು ಠಾಣಾಧಿಕಾರಿಗಳಿಗೆ  ತಿಳಿಸಿದ್ದು, ಸ್ವಲ್ಪಹೊತ್ತಿಗೆ ಎ.ಎಸ್.ಐ ರಮೇಶ್, ಹೆಚ್.ಸಿ 03 ರಾಜಣ್ಣ, ಪಿಸಿ 544 ವೆಂಕಟರವಣ ರವರು ಬರುವಷ್ಟರಲ್ಲಿ ಟ್ರಾಕ್ಟರ್ ಗೆ ಅಡ್ಡ ನಿಂತಿದ್ದವರೆಲ್ಲರೂ ಸ್ಥಳದಿಂದ ಓಡಿಹೋಗಿರುತ್ತಾರೆ. ಸದರಿ ಟ್ರಾಕ್ಟರ್ನ ಚಕ್ರಗಳಿಗೆ  ಗಾಳಿ ಹೊಡೆಸಿಕೊಂಡು ಟ್ರಾಕ್ಟರ್ ಅನ್ನು ಠಾಣೆಯ ಬಳಿ ತಂದು ನಿಲ್ಲಿಸಿ, ಮೇಲ್ಕಂಡ ಅಕ್ರಮ ಮರಳು ಸಾಗಾಣಿಕೆ ಮಾಡುತ್ತಿರುವವರ ಮೇಲೆ ಮತ್ತು ಸರ್ಕಾರಿ ಕರ್ತವ್ಯಕ್ಕೆ ಅಡ್ಡಿ ಪಡಿಸಿರುವ ಮೇಲ್ಕಂಡವರ ವಿರುದ್ದ ಕಾನೂನು ಕ್ರಮ ಕೈಗೊಳ್ಳಲು ಕೋರುತ್ತೇನೆ.

 1. ಚಿಂತಾಮಣಿ ನಗರ ಪೊಲೀಸ್ ಠಾಣೆ. ಮೊ.ಸಂ: 140/2019 ಕಲಂ: 78(3) ಕೆ.ಪಿ. ಆಕ್ಟ್:-

          ದಿನಾಂಕ:-16/06/2019 ರಂದು ಮಧ್ಯಾಹ್ನ 02-00 ಗಂಟೆಗೆ ಪಿ.ಐ ಸಾಹೇಬರು ಮಾಲು, ಆಸಾಮಿ, ಪಂಚನಾಮೆಯೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ವರದಿಯ ಸಾರಾಂಶವೇನೆಂದರೆ, ಈ ದಿನ ಮಧ್ಯಾಹ್ನ 12:30 ಗಂಟೆ ಸಮಯದಲ್ಲಿ ಜೀಪ್ ಸಂಖ್ಯೆ: ಕೆ.ಎ 40 ಜಿ 356 ನಲ್ಲಿ ನಾನು ಮತ್ತು ಸಿಬ್ಬಂದಿಯವರಾದ ಸಿಪಿಸಿ-426 ಸರ್ವೇಶ, ಸಿಪಿಸಿ-524 ಕೃಷ್ಣಪ್ಪ ಮತ್ತು ಸಿಪಿಸಿ-190 ವೇಣು ರವರೊಂದಿಗೆ ಚೇಳೂರು ರಸ್ತೆಯಲ್ಲಿ ಗಸ್ತು ಮಾಡುತ್ತಿದ್ದಾಗ ಕೋಲಾರ ರಸ್ತೆಯಲ್ಲಿರುವ ಚೌಡರೆಡ್ಡಿ ಪಾಳ್ಯದ ಮಸೀದಿಯ ಮುಂಭಾಗದಲ್ಲಿರುವ ಸಾವರ್ಜನಿಕ ರಸ್ತೆಯಲ್ಲಿ ಮಟ್ಕಾ ಜೂಜಾಟ ನಡೆಯುತ್ತಿರುವುದಾಗಿ ಖಚಿತ ಮಾಹಿತಿ ಬಂದಿದ್ದು, ಅದರಂತೆ ನಾವು ಚೇಳೂರು ವೃತ್ತದಲ್ಲಿ ಪಂಚರನ್ನು ಕರೆದುಕೊಂಡು, ಜೀಫ್ ನಲ್ಲಿ ಕೋಲಾರ ರಸ್ತೆಯಲ್ಲಿರುವ ದಾಸನ್ನ ಲೇಔಟ್ ಬಳಿ ಹೋಗಿ ಸ್ವಲ್ಪ ದೂರದಲ್ಲಿ  ಜೀಪ ನ್ನು ನಿಲ್ಲಿಸಿ ಪಂಚರನ್ನು ಮತ್ತು ಸಿಬ್ಬಂದಿಯವರನ್ನು ಕಾಲ್ನಡಿಗೆಯಲ್ಲಿ  ಕರೆದುಕೊಂಡು ಚೌಡರೆಡ್ಡಿ ಪಾಳ್ಯ ಮಸೀದಿಯ ಬಳಿ ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಯಾರೋ ಒಬ್ಬ ಆಸಾಮಿಯು ಸಾರ್ವಜನಿಕ ಸ್ಥಳವಾದ ಚೌಡರೆಡ್ಡಿ ಪಾಳ್ಯ ಮಸೀದಿಯ ಮುಂಭಾಗದ ಸಾರ್ವಜನಿಕ ರಸ್ತೆಯ ಬದಿಯಲ್ಲಿ ನಿಂತುಕೊಂಡು ಜನರನ್ನು ಗುಂಪು ಸೇರಿಕೊಂಡು ಕೈಯಲ್ಲಿ ಒಂದು ಪೆನ್ನು ಪೇಪರ್ ನ್ನು ಹಿಡಿದು ಕೊಂಡು ಒಂದು ರೂಪಾಯಿಗೆ 80-00 ರೂಗಳು ಕೊಡುತ್ತೇನೆಂತ ಕೈಯಲ್ಲಿ ಪೆನ್ನು ಮತ್ತು ಹಾಳೆಯನ್ನು ಹಿಡಿದು ಕೊಂಡು ಹಣವನ್ನು ಕಟ್ಟುವಂತೆ  ಜನರಿಗೆ ಪ್ರೇರಿಪಿಸುತ್ತಿದ್ದ ಸದರಿ ವ್ಯೆಕ್ತಿಯ ಮೇಲೆ ಪೋಲಿಸರು ದಾಳಿಮಾಡಿ ಆತನನ್ನು ಹಿಡಿದ ಹೆಸರು ವಿಳಾಸ ಕೇಳಲಾಗಿ ತನ್ನ ಹೆಸರು ಅಂಜಾದ್ ಪಾಷ ಬಿನ್ ಲೇಟ್ ಸೈಯ್ಯದ್ ಪೀರನ್ ಸಾಬ್, 49 ವರ್ಷ, ಮುಸ್ಲಿಂ ಜನಾಂಗ, ಹಮಾಲಿ ಕೆಲಸ, ವಾಸ: ಗಾಂಧಿ ನಗರ, ಚಿಂತಾಮಣಿ ನಗರ ಎಂದು ತಿಳಿಸಿದ್ದು ಆತನನ್ನು ಅಂಗ ಶೋಧನೆ ಮಾಡಲಾಗಿ ನಗದು ಹಣ 650-00 ರೂ, ಒಂದು ಮಟ್ಕಾ ಚೀಟಿ, ಒಂದು ಪೆನ್ನು ಇದ್ದು ಇವುಗಳನ್ನು ಪಂಚನಾಮೆಯ ಮೂಲಕ ಅಮಾನತ್ತು ಪಡಿಸಿಕೊಂಡು ಮಾಲು ಮತ್ತು ಆಸಾಮಿ ಹಾಗೂ ಪಂಚನಾಮೆಯೊಂದಿಗೆ ಮಧ್ಯಾಹ್ನ 02-00 ಗಂಟೆಗೆ ಠಾಣೆಗೆ ವಾಪಸ್ಸಾಗಿ ಮುಂದಿನ ಕ್ರಮಕ್ಕಾಗಿ  ನೀಡಿದ ವರದಿಯ ಮೇರೆಗೆ ಪ್ರಕರಣ ದಾಖಲಿಸಿರುತ್ತೆ.

 1. ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ. ಮೊ.ಸಂ: 216/2019 ಕಲಂ: 279-304(ಎ) ಐ.ಪಿ.ಸಿ:-

          ದಿನಾಂಕ:15/06/2019 ರಂದು ರಾತ್ರಿ ಸುಮಾರು 9-00 ಗಂಟೆ ಸಮಯದಲ್ಲಿ ಗೌರೀಬಿದನೂರು ತಾಲ್ಲೂಕು, ಕಸಬಾ ಹೋಬಳಿ, ಚಿಕ್ಕಕುರುಗೋಡು ಗ್ರಾಮದ ವಾಸಿಯಾದ ಶ್ರೀ.ಗಂಗಪ್ಪ ಬಿನ್ ಲೇಟ್ ಬೋಡಪ್ಪ, 65 ವರ್ಷ, ವಯಸ್ಸು ನಾಯಕ ಜನಾಂಗ, ವ್ಯವಸಾಯ ವೃತ್ತಿ ಇವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ತನ್ನ ಚಿಕ್ಕಮ್ಮನಾದ ಶ್ರೀಮತಿ ಸಾಕಮ್ಮ ಕೋಂ ಲೇಟ್ ನರಸಪ್ಪ, ವಯಸ್ಸು 75 ವರ್ಷ,  ನಾಯಕ ಜನಾಂಗ, ವಾಸ ಚಿಕ್ಕಕುರುಗೋಡು ಗ್ರಾಮ ಇವರು ದಿನಾಂಕ:15/06/2019 ರಂದು ಮಧ್ಯಾಹ್ನ ಸುಮಾರು 2-30 ಗಂಟೆಯಲ್ಲಿ  ಚಿಕ್ಕಕುರುಗೋಡು ಗ್ರಾಮದಲ್ಲಿ ರಾಮಚಂದ್ರಪುರ ಕ್ರಾಸ್ ಬಳಿ  ರಸ್ತೆ ದಾಟುತ್ತಿದ್ದಾಗ,  ಗೌರೀಬಿದನೂರು ಕಡೆಯಿಂದ ಹಿಂದೂಪುರ ಕಡೆಗೆ ಹೋಗಲು ಬಂದಂತಹ    KA.04.MT.5443 ಮಾರುತಿ ಒಮಿನಿ ವಾಹನದ ಚಾಲಕ ಗೌರೀಬಿದನೂರು ಕಡೆಯಿಂದ ಅತಿವೇಗ ಹಾಗು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ರಸ್ತೆ ದಾಟುತ್ತಿದ್ದ ಸಾಕಮ್ಮನಿಗೆ ಡಿಕ್ಕಿ ಹೊಡೆಸಿದ ಪರಿಣಾಮ  ಸಾಕಮ್ಮನಿಗೆ ಮುಖಕ್ಕೆ, ಕಾಲುಗಳಿಗೆ, ಸೊಂಟಕ್ಕೆ  ತೀವ್ರ ಸ್ವರೂಪದ ಗಾಯಗಳಾಗಿದ್ದು, ಕೂಡಲೇ  ಗಾಯಾಳುವನ್ನು ಗೌರೀಬಿದನೂರು ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ಚಿಕಿತ್ಸೆಗೆ ದಾಖಲಿಸಿದ್ದು, ನಂತರ  ವೈದ್ಯರ ಸಲಹೆಯಂತೆ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರು ನಿಮಾನ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದಾಗ ಸಂಜೆ ಸುಮಾರು 6-00 ಗಂಟೆಯಲ್ಲಿ  ಬೆಂಗಳೂರು ಲಾಲ್ ಬಾಗ್ ಬಳಿ ಹೋಗುತ್ತಿದ್ದಂತೆ ಸಾಕಮ್ಮ ಮೃತಪಟ್ಟಿದ್ದು, ಮೃತದೇಹವನ್ನು ವಾಪಸ್ಸು ಗೌರೀಬಿದನೂರಿಗೆ ತಂದು, ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಿರುವುದಾಗಿ,  ಅಪಘಾತ ಮಾಡಿದ  ಮಾರುತಿ ವ್ಯಾನ್  ಚಾಲಕನ ಹೆಸರು ವಿಳಾಸ ಗೊತ್ತಿರುವುದಿಲ್ಲ.  ಪತ್ತೆ ಮಾಡಿ, ಕಾನೂನು ಕ್ರಮ ಜರುಗಿಸಬೇಕೆಂದು ದೂರಿನ ಸಾರಾಂಶವಾಗಿರುತ್ತೆ.

 1. ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ. ಮೊ.ಸಂ: 217/2019 ಕಲಂ: 78(1), 78(3) ಕೆ.ಪಿ. ಆಕ್ಟ್:-

          ದಿನಾಂಕ 16/06/2019 ರಂದು ಬೆಳಿಗ್ಗೆ 8-00 ಗಂಟೆಯಲ್ಲಿ ಗೌರೀಬಿದನೂರು ಪೊಲೀಸ್ ಠಾಣೆಯ, ಪೊಲೀಸ್ ಉಪನಿರೀಕ್ಷಕರಾದ  ವಿ.ಅವಿನಾಶ್ ಆದ ನಾನು ಗೌರೀಬಿದನೂರು ಗ್ರಾಮಾಂತರ ಪೊಲೀಸ್ ಠಾಣೆಯ ಠಾಣಾಧಿಕಾರಿಗಳಿಗೆ ಸೂಚಿಸುವುದೇನೆಂದರೆ, ದಿನಾಂಕ15/06/2019 ರಂದು ಮಧ್ಯಾಹ್ನ 3-30 ಗಂಟೆಯಲ್ಲಿ ಗೌರೀಬಿದನೂರು ತಾಲ್ಲೂಕು, ನಗರಗೆರೆ ಹೋಬಳಿ, ವಾಟದಹೊಸಹಳ್ಳಿ ಗ್ರಾಮದ ಗುಡಿಬಂಡೆ ಸರ್ಕಲ್ ನಲ್ಲಿ  ಯಾರೋ  ಮಟ್ಕಾ ಜೂಜಾಟವಾಡುತ್ತಿರುವುದಾಗಿ ಮಾಹಿತಿ ಬಂದ ಮೇರೆಗೆ ನಾನು ಹಾಗು ಪೊಲೀಸ್ ಸಿಬ್ಬಂದಿಯವರಾದ ಪಿ.ಸಿ.80 ಶ್ರೀನಾಥ್ ಹಾಗು ಪಿ.ಸಿ. 179 ಶಿವಶೇಖರ್ ಹಾಗು ಪಂಚರೊಂದಿಗೆ ಸರ್ಕಾರಿ ಜೀಪ್ ನಂ.   ಕೆ.ಎ.40-ಜಿ.281 ರಲ್ಲಿ ಗ್ರಾಮಕ್ಕೆ ಹೋಗಿ, ಅಲ್ಲಿ ಮಾಹಿತಿ ಇದ್ದ ಸ್ಥಳಕ್ಕೆ ಹೋಗಿ,  ಮರೆಯಲ್ಲಿ ನಿಂತು ನೋಡಲಾಗಿ,  ಯೋರೋ ಒಬ್ಬ ಆಸಾಮಿಯು  ವಾಟದಹೊಸನಹಳ್ಳಿಯ ಗುಡಿಬಂಡೆ ಸರ್ಕಲ್ ನಲ್ಲಿ  ರಸ್ತೆಯಲ್ಲಿ ಓಡಾಡುವ ಸಾರ್ವಜನಿಕರಿಗೆ  ಒಂದು ರೂಪಾಯಿಗೆ  ಎಪ್ಪತ್ತು ರೂಪಾಯಿ ಕೊಡುವುದಾಗಿ ಹಣದ ಆಮಿಷವನ್ನು ತೋರಿಸಿ, ಹಣ ಪಡೆದುಕೊಂಡು ಮಟ್ಕಾ ಚೀಟಿ ಬರೆದುಕೊಡುತ್ತಿರುವುದು ಖಚಿತ ಪಡಿಸಿಕೊಂಡು  ನಾನು ಮತ್ತು ಪೊಲೀಸ್ ಸಿಬ್ಬಂದಿಯವರು  ಸದರಿ ಆಸಾಮಿಯನ್ನು ಸುತ್ತುವರೆದು ಹಿಡಿದುಕೊಳ್ಳಲು ಹೋದಾಗ, ಆತ ತಪ್ಪಿಸಿಕೊಂಡು ಹೋಗಲು ಪ್ರಯತ್ನಿಸಿದ್ದು ಸದರಿ ಆಸಾಮಿಯನ್ನು ಸುತ್ತುವರೆದು ಹಿಡಿದುಕೊಂಡು, ಆತನ  ಹೆಸರು ವಿಳಾಸ ಕೇಳಲಾಗಿ  ತನ್ನ ಹೆಸರು ಆದಿನಾರಾಯಣಪ್ಪ  ಬಿನ್ ಲೇಟ್ ಆದೆಪ್ಪ, 55 ವರ್ಷ, ನೇಯ್ಗೆ ಜನಾಂಗ, ವಾಸ ನಗರಗೆರೆ  ಗ್ರಾಮ ಗೌರೀಬಿದನೂರು ತಾಲ್ಲೂಕು  ಎಂದು ತಿಳಿಸಿದ್ದು,  ಆತನ ಬಳಿ ಪರಿಶೀಲಿಸಲಾಗಿ  ನಗದು ಹಣ 1,840/- ರೂಗಳು,  ಒಂದು ಮಟ್ಕಾ ಅಂಕಿಗಳು ಬರೆದಿರುವ ಚೀಟಿ,  ಒಂದು ಬಾಲ್ ಪಾಯಿಂಟ್ ಪೆನ್ ಇದ್ದು, ಈತನನ್ನು ವಿಚಾರ ಮಾಡಿದಾಗ, ತಾನು ಮಟ್ಕಾ ಜೂಜಾಟವಾಡುತ್ತಿದ್ದುದನ್ನು ಒಪ್ಪಿಕೊಂಡಿರುತ್ತಾನೆ. ನಂತರ ಸದರಿ ಆರೋಪಿ ಆದಿನಾರಾಯಣಪ್ಪ  ಬಿನ್ ಲೇಟ್ ಆದೆಪ್ಪ ಹಾಗು ಈತನ ಬಳಿ ಇದ್ದ ಮಟ್ಕಾ ಅಂಕಿಗಳನ್ನು ಬರೆದರುವ ಒಂದು ಚೀಟಿ,  ಒಂದು ಬಾಲ್ ಪಾಯಿಂಟ್ ಪೆನ್  ಮತ್ತು 1,840/- ರೂ ನಗದು ಹಣವನ್ನು ಪಂಚರ ಸಮಕ್ಷಮದಲ್ಲಿ ಮಧ್ಯಾಹ್ನ 4-15 ರಿಂದ 4-45 ಗಂಟಯವರೆಗೆ  ಪಂಚನಾಮೆ ಕ್ರಮ ಜರುಗಿಸಿ  ಪಂಚನಾಮೆ ಮೂಲಕ ವಶಕ್ಕೆ ತೆಗೆದುಕೊಂಡು ಠಾಣೆಗೆ  ಸಂಜೆ 5-30  ಗಂಟೆಗೆ  ಬಂದು  ಮುಂದಿನ ಕ್ರಮಕ್ಕಾಗಿ ನಿಮ್ಮ ವಶಕ್ಕೆ ನೀಡುತ್ತಿದ್ದು, ಕಾನೂನು ಕ್ರಮ ಜರುಗಿಸಲು ಸೂಚಿಸಿರುತ್ತೆ. ಎಂದು ನೀಡಿದ ದೂರಿನ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿರುತ್ತೆ.

 1. ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ. ಮೊ.ಸಂ: 218/2019 ಕಲಂ: 78(1), 78(3) ಕೆ.ಪಿ. ಆಕ್ಟ್:-

          ದಿನಾಂಕ 15/06/2019 ರಂದು ಶ್ರೀ. ವೈ.ಅಮರನಾರಾಯಣ್, ಸಿಪಿಐ, ಗೌರಿಬಿದನೂರು ವೃತ್ತ ರವರು ಠಾಣೆಯಲ್ಲಿ  ನೀಡಿದ ಮೆಮೋ ದೂರಿನ ಸಾರಾಂಶವೇನೆಂದರೆ, ಇವರಿಗೆ ಸಂಜೆ 4-00 ಗಂಟೆಯಲ್ಲಿ ಬಂದ ಮಾಹಿತಿ ಮೇರೆಗೆ, ಪೊಲೀಸ್ ಸಿಬ್ಬಂದಿ ಹಾಗು ಪಂಚಾಯ್ತಿದಾರರರೊಂದಿಗೆ ಗೌರೀಬಿದನೂರು ತಾಲ್ಲೂಕು, ನಗರಗೆರೆ ಗ್ರಾಮದ ಮಟ್ಟಾವಲಹಳ್ಳಿ ಕ್ರಾಸ್ ಗೆ ಹೋಗಿ,  ಅಲ್ಲಿ     ಓಡಾಡುವ ಸಾರ್ವಜನಿಕರಿಗೆ  ಒಂದು ರೂಪಾಯಿಗೆ  ಎಪ್ಪತ್ತು ರೂಪಾಯಿ ಕೊಡುವುದಾಗಿ ಹಣದ ಆಮಿಷವನ್ನು ತೋರಿಸಿ, ಹಣ ಪಡೆದುಕೊಂಡು ಮಟ್ಕಾ ಚೀಟಿ ಬರೆದುಕೊಡುತ್ತಿದ್ದ   ಕೋಡೀರ್ಲಪ್ಪ ಬಿನ್ ಲೇಟ್ ನಾರಾಯಣಪ್ಪ, 55 ವರ್ಷ, ನಾಯಕ  ಜನಾಂಗ, ವಾಸ ನಗರಗೆರೆ ಗ್ರಾಮ, ಗೌರೀಬಿದನೂರು ತಾಲ್ಲೂಕು  ಎಂಬುವನನ್ನು ವಶಕ್ಕೆ ತೆಗೆದುಕೊಂಡು,  ಈತನ ಬಳಿ ಇದ್ದ ಮಟಕಾ ಜೂಜಾಟದಿಂದ ಬಂದಿದ್ದ ನಗದು ಹಣ 2,760/- ರೂಗಳು,  ಒಂದು ಮಟ್ಕಾ ಅಂಕಿಗಳು ಬರೆದಿರುವ ಚೀಟಿ, ಒಂದು ಬಾಲ್ ಪಾಯಿಂಟ್ ಪೆನ್ ನ್ನು ಪಂಚರ ಸಮಕ್ಷಮದಲ್ಲಿ ಸಂಜೆ 4-45 ರಿಂದ 5-15 ಗಂಟೆಯವರೆಗೆ ಪಂಚನಾಮೆ ಕ್ರಮ ಜರುಗಿಸಿ, ವಶಕ್ಕೆ ತೆಗೆದುಕೊಂಡು, ಸಂಜೆ 6-15  ಗಂಟೆಗೆ ಠಾಣೆಗೆ ಬಂದು,   ಇವುಗಳನ್ನು ಮುಂದಿನ ಕ್ರಮಕ್ಕಾಗಿ ನನ್ನ ವಶಕ್ಕೆ ನೀಡಿ, ಕಾನೂನು ಕ್ರಮ ಜರುಗಿಸಲು ಸೂಚಿಸಿ  ನೀಡಿದ ಮೆಮೋ ದೂರನ್ನು ಪಡೆದುಕೊಂಡಿರುತ್ತೇನೆ.  ಈ ಕೃತ್ಯವ್ಯ ಅಸಂಜ್ಞೇಯ ಪ್ರಕರಣವಾಗಿರುವುದರಿಂದ ಮೇಲ್ಕಂಡ ಆಸಾಮಿ ವಿರುದ್ಧ ಠಾಣಾ ಎನ್.ಸಿ.ಆರ್. 379/2019  ರೀತ್ಯಾ ಪ್ರಕರಣ ದಾಖಲಿಸಿಕೊಂಡಿರುತ್ತೆ.  ಮೇಲ್ಕಂಡ ಆಸಾಮಿಗಳ  ವಿರುದ್ಧ ಕಲಂ: 78 ಕ್ಲಾಸ್ (1) (3) ಕೆ.ಪಿ.ಆಕ್ಟ್ ರೀತ್ಯಾ  ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಕೈಗೊಳ್ಳಲು ಅನುಮತಿ ನೀಡಬೇಕಾಗಿ ಘನ ನ್ಯಾಯಾಲಯದಲ್ಲಿ ಕೋರಿದ್ದು ನಂತರ ಅನುಮತಿಯನ್ನು ಪಡೆದುಕೊಂಡು ಕಾನೂನು ಕ್ರಮ ಜರುಗಿಸಿರುತ್ತೆ.

 1. ಪಾತಪಾಳ್ಯ ಪೊಲೀಸ್ ಠಾಣೆ. ಮೊ.ಸಂ: 36/2019 ಕಲಂ: 15(ಎ),32(3) ಕೆ.ಇ. ಆಕ್ಟ್:-

          ದಿನಾಂಕ:15/06/2019 ರಂದು ಸಂಜೆ 05-00 ಗಂಟೆಗೆ ಶ್ರೀ ನಯಾಜ್ ಬೇಗ್ ಸಿ.ಪಿ.ಐ ಬಾಗೇಪಲ್ಲಿ ವೃತ್ತರವರು ಹಾಜರುಪಡಿಸಿದ ವರದಿಯ   ಸಾರಾಂಶವೆನೆಂದರೆ ಈ ದಿನ  ದಿನಾಂಕ:15-06-2019 ರಂದು  ಸಂಜೆ 3-30 ಗಂಟೆ ಸಮಯದಲ್ಲಿ   ಗಸ್ತಿನಲ್ಲಿದ್ದಾಗ  ಬಾಗೇಪಲ್ಲಿ ತಾಲ್ಲೂಕು  ಪಾತಪಾಳ್ಯ ಪೊಲೀಸ್ ಠಾಣಾ ಸರಹದ್ದು ನಗರ್ಲು   ಗ್ರಾಮದ  ವಾಸಿಯಾದ ರಾಮಕೃಷ್ಣಪ್ಪ  ಬಿನ್  ಮುನಿವೆಂಕಟಪ್ಪರವರ    ಬಾಬತ್ತು  ಚಿಲ್ಲರೆ ಅಂಗಡಿಯ  ಮುಂಭಾಗ  ಖಾಲಿ ಜಾಗದಲ್ಲಿ ಯಾರೋ ಕೆಲವರು ಕುಳಿತು ಕೊಂಡು  ಕಾನೂನು ಬಾಹಿರವಾಗಿ ಮದ್ಯ ಸೇವನೆ ಮಾಡುತ್ತಿರುವುದಾಗಿ  ಬಂದ ಖಚಿತ ಮಾಹಿತಿಯ ಮೇರಗೆ  ನಾನು ಮತ್ತು ಸಿಬ್ಬಂದಿಯವರಾದ ಹೆಚ್.ಸಿ 156- ನಟರಾಜ್  ಹೆಚ್.ಸಿ-47 ಚಂದ್ರಶೇಖರ್ ಎಂ.ವಿ  ಹಾಗೂ ಚಾಲಕರಾದ ಎ.ಪಿ.ಸಿ 110 ನರಸಿಂಹಮೂರ್ತಿ ರವರೊಂದಿಗೆ ಸರ್ಕಾರಿ ಜೀಪ್  ಸಂಖ್ಯೆ ಕೆ.ಎ-40- ಜಿ-1777 ವಾಹನದಲ್ಲಿ  ಜೀಪಿನಲ್ಲಿ  ನಗ್ಲರ್ಲು ಗ್ರಾಮದ  ಬಳಿ ಹೋಗಿ  ಜೀಪ್ ಅನ್ನು ನಿಲ್ಲಿಸಿ  ನಡೆದುಕೊಂಡು  ಸ್ಥಳಕ್ಕೆ  ಹೋಗಿ ನೋಡಲಾಗಿ  ಯಾರೋ ಕೆಲವು  ಮದ್ಯ ಸೇವನೆ  ಮಾಡುತ್ತಿದ್ದು ಸಮವಸ್ತ್ರದಲ್ಲಿದ್ದ  ನಮ್ಮಗಳನ್ನು ನೋಡಿ  ಓಡಿಹೊದರು. ಸ್ಥಳದಲ್ಲಿ ಪರಿಶೀಲಸಲಾಗಿ  4 ಮದ್ಯ ಸೇವನೆ  ಮಾಡಿರುವ ನಿಶಾನೆಗಳಿರುವ  ಪ್ಲಾಸ್ಟೀಕ್  ಗ್ಲಾಸ್ಗಳು ಮತ್ತು  ಮತ್ತು ಒಂದು ಲೀಟರ್  ಸಾಮಥ್ಯ ಹೊಂದಿರುವ  2  ನೀರಿನ ಬಾಟಲ್ಗಳು ಹಾಗೂ  ಖಾಲಿಯಾಗಿರುವ 90 ಎಂ.ಎಂ.ಎಲ್ ಹೈವಾರ್ಡ್ಸ  ವೀಸ್ಕೀ  04 ಟೇಟ್ರಾ ಪ್ಯಾಕೇಟ್ ಗಳು.  ಹಾಗೂ  180 ಎಂ.ಎಂ.ಎಲ್ ಓಲ್ಡ್ ಟವರೆನ್ 2 ಟೇಟ್ರಾ ಪ್ಯಾಕೇಟ್ ಗಳು  ಮದ್ಯವಿರುವ  180 ಎಂ.ಎಂ.ಎಲ್.  ಓಲ್ಡ್ ಟವರೆನ್  7  ಟೇಟ್ರಾ ಪ್ಯಾಕೇಟ್ ಗಳು ಮತ್ತು 90 ಎಂ.ಎಲ್ ನ 10 ಹೈ ವಾರ್ಡ್ಸ್ ಟೆಟ್ರಾ ಪಾಕೆಟ್ ಗಳು  ಒಟ್ಟು 2 ಲೀಟರ್ 160 ಎಂ.ಎಲ್ ಮದ್ಯವಿದ್ದು ಅಂದಾಜು ಬೆಲೆ  ಸುಮಾರು 900/- ರೂಪಾಯಿಗಳಿರುತ್ತದೆ ಸದರಿ ಚಿಲ್ಲರೆ ಅಂಗಡಿಯ ಮಾಲೀಕನಾದ ರಾಮಕೃಷ್ಣಪ್ಪ  ಬಿನ್ ಮುನಿವೆಂಕಟಪ್ಪ 52 ವರ್ಷ, ಬಲಜಿಗರು  ಚಿಲ್ಲರೆ ಅಂಗಡಿ ವ್ಯಾಪಾರ ವಾಸ ನಗರ್ಲು ಗ್ರಾಮ  ಬಾಗೇಪಲ್ಲಿ ತಾಲ್ಲೂಕು ರವರನ್ನು ನಿಮ್ಮ ಚಿಲ್ಲರೆ ಅಂಗಡಿಯ ಮುಂಬಾಗ  ಮದ್ಯ ಸೇವನೆ ಮಾಡಲು ಸ್ಥಳವಕಾಶವನ್ನು ಮಾಡಿಕೊಟ್ಟಿರುವುದಕ್ಕೆ  ಯಾವುದಾದರೂ ಪರವಾನಿಗೆ ಇದೆಯೇ ಎಂದು ಕೇಳಲಾಗಿ  ಯಾವುದೇ ಪರವಾನಿಗೆ  ಇರುವುದಿಲ್ಲ ಎಂದು ತಿಳಿಸಿರುತ್ತಾರೆ. ಸ್ಥಳದಲ್ಲಿದ್ದಂತಹ ಖಾಲಿಯಾಗಿರುವ   ಟೇಟ್ರಾ ಪ್ಯಾಕೇಟ್ಗಳು ಮದ್ಯ ಸೇವನೆ  ಮಾಡಿರುವ  ಪ್ಲಾಸ್ಟೀಕ್  ಗ್ಲಾಸ್ ಗಳನ್ನು ಮತ್ತು ನೀರಿನ ಬಾಟಲ್ ಗಳನ್ನು  ಮದ್ಯವಿರುವ 180 ಎಂ.ಎಂ.ಎಲ್.  ಓಲ್ಡ್ ಟವರೆನ್  7  ಟೇಟ್ರಾ ಪ್ಯಾಕೇಟ್ ಗಳು ಮತ್ತು 90 ಎಂ.ಎಲ್ ನ ಹೈ ವಾಡ್ಸ್ರ್  10 ಟೆಟ್ರಾ ಪಾಕೆಟ್ ಗಳನ್ನು  ಪಂಚನಾಮೆಯ ಮೂಲಕ ಅಮಾನತ್ತು ಪಡಿಸಿಕೊಂಡು ಮಾಲು ಮತ್ತು ಆರೋಪಿಯೊಂದಿಗೆ  ಸಂಜೆ  5-00 ಗಂಟೆಗೆ  ಠಾಣೆಗೆ ಹಾಜರಾಗಿ  ಕಾನೂನು ಬಾಹಿರ  ಮದ್ಯ ಸೇವನೆ  ಮಾಡಲು  ಸ್ಥಳಾವಕಾಶ ಮಾಡಿಕೊಟ್ಟು ಮೇಲ್ಕಂಡ   ವ್ಯಕ್ತಿಯ ವಿರುದ್ದ   ಕಾನೂನು  ರೀತಿಯ  ಕ್ರಮ ಜರಿಗಿಸಲು ನೀಡಿದ  ವರದಿಯ ಮೇರೆಗೆ ಠಾಣಾ ಮೊ,ಸಂ 36/2019 ಕಲಂ 15(ಎ) 32 (3) ಕೆ.ಎ ಆಕ್ಟ್ ರೀತ್ಯಾ ಪ್ರಕರಣ ದಾಖಲಿಸಿಕೊಂಡಿರುತ್ತೆ,

 1. ಪಾತಪಾಳ್ಯ ಪೊಲೀಸ್ ಠಾಣೆ. ಮೊ.ಸಂ: 37/2019 ಕಲಂ: 15(ಎ),32(3) ಕೆ.ಇ. ಆಕ್ಟ್:-

          ದಿನಾಂಕ:15/06/2019 ರಂದು ಸಂಜೆ 06-30 ಗಂಟೆಗೆ ಶ್ರೀ ನಯಾಜ್ ಬೇಗ್ ಸಿ.ಪಿ.ಐ ಬಾಗೇಪಲ್ಲಿ ವೃತ್ತರವರು ಹಾಜರುಪಡಿಸಿದ ವರದಿಯ  ಸಾರಾಂಶವೆನೆಂದರೆ ಈ ದಿನ  ದಿನಾಂಕ:15-06-2019 ರಂದು  ಸಂಜೆ 5-00 ಗಂಟೆ ಸಮಯದಲ್ಲಿ   ಗಸ್ತಿನಲ್ಲಿದ್ದಾಗ  ಬಾಗೇಪಲ್ಲಿ ತಾಲ್ಲೂಕು  ಪಾತಪಾಳ್ಯ ಪೊಲೀಸ್ ಠಾಣಾ ಸರಹದ್ದು ಪಾತಕೋಟ   ಗ್ರಾಮದ  ವಾಸಿಯಾದ    ಅಂಜಿನಪ್ಪ  ಬಿನ್  ಲೇಟ್ ಲಕ್ಷ್ಮನ್ನರವರ    ಬಾಬತ್ತು  ಚಿಲ್ಲರೆ ಅಂಗಡಿಯ  ಮುಂಭಾಗ  ಖಾಲಿ ಜಾಗದಲ್ಲಿ ಯಾರೋ ಕೆಲವರು ಕುಳಿತು ಕೊಂಡು  ಕಾನೂನು ಬಾಹಿರವಾಗಿ ಮದ್ಯ ಸೇವನೆ ಮಾಡುತ್ತಿರುವುದಾಗಿ  ಬಂದ ಖಚಿತ ಮಾಹಿತಿಯ ಮೇರಗೆ  ನಾನು ಮತ್ತು ಸಿಬ್ಬಂದಿಯವರಾದ ಹೆಚ್.ಸಿ 156- ನಟರಾಜ್  ಹೆಚ್.ಸಿ-47 ಚಂದ್ರಶೇಖರ್ ಎಂ.ವಿ  ಹಾಗೂ ಚಾಲಕರಾದ ಎ.ಪಿ.ಸಿ 110 ನರಸಿಂಹಮೂರ್ತಿ ಪಿಸಿ-119 ಗಿರೀಶ ರವರೊಂದಿಗೆ ಸರ್ಕಾರಿ ಜೀಪ್  ಸಂಖ್ಯೆ ಕೆ.ಎ-40- ಜಿ-1777 ವಾಹನದಲ್ಲಿ  ಜೀಪಿನಲ್ಲಿ  ಪಾತಕೋಟ ಗ್ರಾಮದ  ಬಳಿ ಹೋಗಿ  ಜೀಪ್ ಅನ್ನು ನಿಲ್ಲಿಸಿ  ನಡೆದುಕೊಂಡು  ಸ್ಥಳಕ್ಕೆ  ಹೋಗಿ ನೋಡಲಾಗಿ  ಯಾರೋ ಕೆಲವರು  ಮದ್ಯ ಸೇವನೆ  ಮಾಡುತ್ತಿದ್ದು ಸಮವಸ್ತ್ರದಲ್ಲಿದ್ದ  ನಮ್ಮಗಳನ್ನು ನೋಡಿ  ಓಡಿಹೊದರು. ಸ್ಥಳದಲ್ಲಿ ಪರಿಶೀಲಸಲ3 ಮದ್ಯ ಸೇವನೆ  ಮಾಡಿರುವ ನಿಶಾನೆಗಳಿರುವ  ಪ್ಲಾಸ್ಟೀಕ್  ಗ್ಲಾಸ್ಗಳು ಮತ್ತು  ಮತ್ತು ಒಂದು ಲೀಟರ್  ಸಾಮಥ್ಯ ಹೊಂದಿರುವ  3  ನೀರಿನ ಬಾಟಲ್ಗಳು ಹಾಗೂ  ಖಾಲಿಯಾಗಿರುವ 90 ಎಂ.ಎಂ.ಎಲ್ ಹೈವಾರ್ಡ್ಸ್  ವೀಸ್ಕೀ  03 ಟೇಟ್ರಾ ಪ್ಯಾಕೇಟ್ ಗಳು. 90 ಎಂ.ಎಲ್ ನ 26 ಹೈ ವಾರ್ಡ್ಸ್  ವಿಸ್ಕೀ ಟೆಟ್ರಾ ಪಾಕೆಟ್ ಗಳು  ಒಟ್ಟು 2 ಲೀಟರ್ 340 ಎಂ.ಎಲ್ ಮದ್ಯವಿದ್ದು ಅಂದಾಜು ಬೆಲೆ  ಸುಮಾರು 800/- ರೂಪಾಯಿಗಳಿರುತ್ತದೆ ಸದರಿ ಚಿಲ್ಲರೆ ಅಂಗಡಿಯ ಮಾಲೀಕನಾದ ಅಂಜಿನಪ್ಪ  ಬಿನ್ ಲಕ್ಷ್ಮನ್ನ 52 ವರ್ಷ, ಗಾಣಿಗರು  ಚಿಲ್ಲರೆ ಅಂಗಡಿ ವ್ಯಾಪಾರ ವಾಸ: ಪಾತಕೋಟ ಗ್ರಾಮ  ಬಾಗೇಪಲ್ಲಿ ತಾಲ್ಲೂಕು ರವರನ್ನು  ನಿಮ್ಮ ಚಿಲ್ಲರೆ ಅಂಗಡಿಯ ಮುಂಬಾಗ  ಮದ್ಯ ಸೇವನೆ ಮಾಡಲು ಸ್ಥಳವಕಾಶವನ್ನು ಮಾಡಿಕೊಟ್ಟಿರುವುದಕ್ಕೆ  ಯಾವುದಾದರೂ ಪರವಾನಿಗೆ ಇದೆಯೇ ಎಂದು ಕೇಳಲಾಗಿ  ಯಾವುದೇ ಪರವಾನಿಗೆ  ಇರುವುದಿಲ್ಲ ಎಂದು ತಿಳಿಸಿರುತ್ತಾರೆ. ಸ್ಥಳದಲ್ಲಿದ್ದಂತಹ ಖಾಲಿಯಾಗಿರುವ   ಟೇಟ್ರಾ ಪ್ಯಾಕೇಟ್ಗಳು ಮದ್ಯ ಸೇವನೆ  ಮಾಡಿರುವ  ಪ್ಲಾಸ್ಟೀಕ್  ಗ್ಕ್ಲಾಸ್ ಗಳನ್ನು ಮತ್ತು ನೀರಿನ ಬಾಟಲ್ ಗಳನ್ನು  ಮದ್ಯವಿರುವ 90 ಎಂ.ಎಲ್ ನ ಹೈ ವಾರ್ಡ್ಸ್  26 ಟೆಟ್ರಾ ಪಾಕೆಟ್ ಗಳನ್ನು  ಪಂಚನಾಮೆಯ ಮೂಲಕ ಅಮಾನತ್ತು ಪಡಿಸಿಕೊಂಡು ಮಾಲು ಮತ್ತುಆರೋಪಿಯೊಂದಿಗೆ  ಸಂಜೆ  6-30 ಗಂಟೆಗೆ  ಠಾಣೆಗೆ ಹಾಜರಾಗಿ  ಕಾನೂನು ಬಾಹಿರ  ಮದ್ಯ ಸೇವನೆ  ಮಾಡಲು  ಸ್ಥಳಾವಕಾಶ ಮಾಡಿಕೊಟ್ಟು ಮೇಲ್ಕಂಡ   ವ್ಯಕ್ತಿಯ ವಿರುದ್ದ   ಕಾನೂನು  ರೀತಿಯ  ಕ್ರಮ ಜರಿಗಿಸಲು  ಕೋರಿ ನೀಡಿದ ವರದಿಯ ಮೇರೆಗೆ ಠಾಣಾ ಮೊ.ಸಂ 37/2019 ಕಲಂ 15(ಎ) 32 (3) ಕೆ.ಎ ಆಕ್ಟ್ ರೀತ್ಯಾ ಪ್ರಕರಣ ದಾಖಲಿಸಿಕೊಂಡಿರುತ್ತೆ,

 1. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆ. ಮೊ.ಸಂ: 140/2019 ಕಲಂ: 15(ಎ),32(3) ಕೆ.ಇ. ಆಕ್ಟ್:-

          ಘನ ನ್ಯಾಯಾಲಯದಲ್ಲಿ ನಿವೇದಿಸಿಕೊಳ್ಳುವುದೇನಂದರೆ, ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆಯ ಪಿ.ಎಸ್.ಐ ಹರೀಶ್ ವಿ  ಆದ ನಾನು, ಸಿಪಿಸಿ-14 ಗೋವಿಂದಪ್ಪ ಮತ್ತು ಮಪಿಸಿ-252 ಮಹಾನಂದ ರವರು ಈ ದಿನ ದಿನಾಂಕ: 15-06-2019 ರಂದು ಮದ್ಯಾಹ್ನ 2.00 ಗಂಟೆ ಸಮಯದಲ್ಲಿ ಪೊಲೀಸ್ ಠಾಣೆಯಲ್ಲಿ ಕರ್ತವ್ಯದಲ್ಲಿದ್ದಾಗ ನನಗೆ ಗುಡಿಹಳ್ಳಿ ಗ್ರಾಮದಲ್ಲಿ ಶ್ರೀಮತಿ ಅನಸೂಯಮ್ಮ ಕೋಂ ಲೇಟ್ ನಾರಾಯಣಪ್ಪ ಎಂಬುವರು ಅವರ ವಾಸದ ಮನೆಯ ಸಮೀಪ ಚಿಲ್ಲರೆ ಅಂಗಡಿಯ ಪಕ್ಕದ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಮದ್ಯವನ್ನು ಕುಡಿಯಲು ಸ್ಥಳಾವಕಾಶವನ್ನು ಮಾಡಿ ಕೊಟ್ಟಿರುವುದಾಗಿ ಬಂದ ಖಚಿತ ಮಾಹಿತಿ ಮೇರೆಗೆ ಕೂಡಲೇ ಸಿಬ್ಬಂದಿಯವರಾದ ಸಿಪಿಸಿ-14 ಗೋವಿಂದಪ್ಪ ಮತ್ತು ಮಪಿಸಿ-252 ಮಹಾನಂದ ರವರೊಂದಿಗೆ ಸರ್ಕಾರಿ ಕೆಎ-40-ಜಿ-357 ಜೀಪಿನಲ್ಲಿ ಗುಡಿಹಳ್ಳಿ ಗ್ರಾಮಕ್ಕೆ ಮದ್ಯಾಹ್ನ 2.20 ಗಂಟೆಗೆ ಬೇಟಿ ನೀಡಿ ಸಿಪಿಸಿ-14 ಗೋವಿಂದಪ್ಪ ರವರಿಗೆ ಇಬ್ಬರು ಪಂಚರನ್ನು ಬರಮಾಡಿಕೊಂಡು ಅವರಿಗೆ ದಾಳಿಯ ಬಗ್ಗೆ ಮಾಹಿತಿ ನೀಡಿ ಪಂಚಾಯ್ತಿದಾರರೊಂದಿಗೆ ಮತ್ತು ಸಿಬ್ಬಂಧಿಯೊಂದಿಗೆ ಶ್ರೀಮತಿ ಅನಸೂಯಮ್ಮ ಕೋಂ ಲೇಟ್ ನಾರಾಯಣಪ್ಪ ರವರ ವಾಸದ ಮನೆಯ ಸಮೀಪದ ಚಿಲ್ಲರೆ ಅಂಗಡಿಯ ಬಳಿ ಹೋಗುವಷ್ಟರಲ್ಲಿ ಮದ್ಯಪಾನ ಮಾಡುತ್ತಿದ್ದ ಆಸಾಮಿಗಳು ಸಮವಸ್ತ್ರದಲ್ಲಿದ್ದ ನಮ್ಮನ್ನು ನೋಡಿ ಓಡಿ ಹೋಗಿದ್ದು ಆ ಪೈಕಿ ಒಬ್ಬರನ್ನು ಹಿಡಿದು ಹೆಸರು ವಿಳಾಸ ಕೇಳಲಾಗಿ ಶ್ರೀಮತಿ ಅನಸೂಯಮ್ಮ ಕೋಂ ಲೇಟ್ ನಾರಾಯಣಪ್ಪ, 55 ವರ್ಷ, ವಕ್ಕಲಿಗರು, ಚಿಲ್ಲರೆ ಅಂಗಡಿ ವ್ಯಾಪಾರ, ವಾಸ: ಗುಡಿಹಳ್ಳಿ ಗ್ರಾಮ, ಶಿಡ್ಲಘಟ್ಟ ತಾಲ್ಲೂಕು ಎಂತ ತಿಳಿಸಿದ್ದು ಸದರಿ ಆಸಾಮಿಯ ಬಳಿ ಒಂದು ಕಪ್ಪು ಬಣ್ಣದ ಪ್ಲಾಸ್ಟಿಕ್ ಕವರ್ ಇದ್ದು ಸದರಿ ಕವರ್ ನಲ್ಲಿ Original Choice ವಿಸ್ಕಿ ಟೆಟ್ರಾ ಪ್ಯಾಕೇಟ್ ಗಳಿದ್ದು ಸದರಿ ಟೆಟ್ರಾ ಪ್ಯಾಕೇಟ್ ಗಳನ್ನು ಪರಿಶೀಲಿಸಲಾಗಿ 90 Ml ನ Original Choice Whisky 20 ಟೆಟ್ರಾ ಪ್ಯಾಕೆಟ್ ಗಳಿದ್ದು ಪ್ರತಿಯೊಂದರ ಬೆಲೆ Rs. 30.32 ರೂಗಳಾಗಿದ್ದು ಒಟ್ಟು Rs. 606-40 ರೂಗಳಾಗಿರುತ್ತೆ (ಆರು ನೂರು ಆರು ರೂಪಾಯಿಗಳು ಮತ್ತು ನಲವತ್ತು ಪೈಸೆಗಳು ಮಾತ್ರ) ಹಾಗೂ ಸ್ಥಳದಲ್ಲಿ ಒಂದು ಖಾಲಿ ಪ್ಲಾಸ್ಟಿಕ್ ಲೋಟ, ಒಂದು ಲೀಟರ್ ನ ಬಿಸ್ಲರಿ ನೀರಿನ ಖಾಲಿ ಬಾಟಲ್ ಹಾಗೂ Original Choice Whisky 90 Ml ನ 1 ಖಾಲಿ ಟೆಟ್ರಾ ಪ್ಯಾಕೇಟ್ ಗಳಿದ್ದು ಮದ್ಯಾಹ್ನ 2-30 ಗಂಟೆಯಿಂದ 3-30 ಗಂಟೆಯವರೆಗೆ ಮಹಜರ್ ಮೂಲಕ ಅಮಾನತ್ತು ಪಡಿಸಿಕೊಂಡು ಮಾಲು ಸಮೇತ ಸಂಜೆ 4-00 ಗಂಟೆಗೆ ಠಾಣೆಗೆ ವಾಪಸ್ಸು ಬಂದು ಆರೋಪಿಯ ವಿರುದ್ದ ಠಾಣಾ ಮೊ.ಸಂ 140/2019 ಕಲಂ 15(ಎ), 32(3) ಕೆ.ಇ. ಆಕ್ಟ್ ರೀತ್ಯಾ ಸ್ವತಃ ಪ್ರಕರಣವನ್ನು ದಾಖಲಿಸಿಕೊಂಡಿರುತ್ತೆ.