ದಿನಾಂಕ :16/05/2020 ರ ಅಪರಾಧ ಪ್ರಕರಣಗಳು

  1. ಬಾಗೇಪಲ್ಲಿ ಪೊಲೀಸ್ ಠಾಣೆ ಮೊ.ಸಂ.97/2020 ಕಲಂ. 279,337 ಐ.ಪಿ.ಸಿ & 185 ಐ.ಎಂ.ವಿ ಆಕ್ಟ್:-

          ದಿನಾಂಕ:15/05/2020 ರಂದು ಮದ್ಯಾಹ್ನ 14:30 ಗಂಟೆಗೆ ಪಿರ್ಯಾದಿದಾರರಾದ ಬೈಯ್ಯಣ್ಣ ಬಿನ್ ಲೇಟ್ ಗಿತ್ತಿ ಬೈಯ್ಯಣ್ಣ, 38 ವರ್ಷ, ಆದಿ ಆಂದ್ರ ಜನಾಂಗ, ಜಿರಾಯ್ತಿ, ಬಿ.ಶೆಟ್ಟಿಪಲ್ಲಿ ಗ್ರಾಮ, ಚಿಲಮತ್ತೂರು ಮಂಡಲಂ, ಹಿಂದೂಪುರ ತಾಲ್ಲೂಕು, ಅನಂತಪುರ ಜಿಲ್ಲೆ ರವರು ನೀಡಿದ ದೂರಿನ ಸಾರಾಂಶವೇನೆಂದರೆ, ಈಗ್ಗೆ ಸುಮಾರು 11 ವರ್ಷಗಳ ಹಿಂದೆ ನಮ್ಮ ಅತ್ತಿಗೆ ರತ್ನಮ್ಮ ರವರ ಮಗಳಾದ ಗಾಯಿತ್ರಿಯನ್ನು ಗುಡಿಬಂಡೆ ತಾಲ್ಲೂಕು ಕೋರೇನಹಳ್ಳಿ ಗ್ರಾಮದ ನಾರಾಯಣಪ್ಪನ ಮಗನಾದ ನರಸಿಂಹಮೂರ್ತಿ ರವರಿಗೆ ಕೊಟ್ಟು ಮದುವೆ ಮಾಡಿರುತ್ತೇವೆ. ದಿನಾಂಕ:13/05/2020 ರಂದು ಸಂಜೆ ಸುಮಾರು 6:00 ಗಂಟೆಯಲ್ಲಿ ನರಸಿಂಹಮೂರ್ತಿ ಆತನ ತಮ್ಮನಾದ ರಾಮಲಿಂಗ ನ್ ಬಿನ್ ನಾರಾಯಣಪ್ಪ ರವರ ಬಾಬತ್ತು K.A-02 E.W-2642 ಹೀರೊಹೊಂಡಾ ಸ್ಪ್ಲೆಂಡರ್ ಪ್ಲಸ್ ದ್ವಿಚಕ್ರ ವಾಹನದಲ್ಲಿ ಮನಗೆ ಬಂದಿದ್ದು, ಬರುವಾಗಲೇ ಮಧ್ಯಪಾನ ಮಾಡಿದ್ದನು. ನಂತರ ಸಂಜೆ 7:00 ಗಂಟೆಯ ಸುಮಾರಿನಲ್ಲಿ ಊರಿಗೆ ಹೋಗುತ್ತೇನೆಂದು  ಹೊರಟನು ರಾತ್ರಿಯಾಗಿದ್ದರಿಂದ ನರಸಿಂಹಮೂರ್ತಿಯೊಂದಿಗೆ ಜೊತೆಯಲ್ಲಿ ಹೋಗಿ ಅವನನ್ನು ಅವರ ಗ್ರಾಮದಲ್ಲಿ ಬಿಟ್ಟು ಬೆಳಿಗ್ಗೆ ವಾಪಸ್ಸಾಗೋಣವೆಂದು ನಾನು ನರಸಿಂಹಮೂರ್ತಿ ಜೊತೆಯಲ್ಲಿ ದ್ವಿಚಕ್ರ ವಾಹಲ್ಲಿ ಹಿಂಬಾಗದಲ್ಲಿ ಕುಳಿತುಕೊಂಡೆನು. ರಾತ್ರಿ 9:15 ಗಂಟೆಯ ಸುಮಾರಿನಲ್ಲಿ ಹೈದರಾಬಾದ್-ಬೆಂಗಳೂರು NH 44 ರಸ್ತೆಯ ಮುಖಾಂತರ ಬರುವಾಗ ಬಾಗೇಪಲ್ಲಿ ತಾಲ್ಲೂಕು ಟೋಲ್ ಪ್ಲಾಜಾ ದ ಪಕ್ಕದಲ್ಲಿರುವ ಜಚನಿ ಕಾಲೇಜ್ ಮುಂಬಾಗ ಪೂರ್ವದ ರಸ್ತೆಯಲ್ಲಿ ದ್ವಿಚಕ್ರ ವಾಹನ ಚಾಲನೆ ಮಾಡುತ್ತಿದ್ದ ನರಸಿಂಹಮೂರ್ತಿ ಮಧ್ಯಪಾನ ಮಾಡಿದ್ದರಿಂದ ಅತಿವೇಗ ಮತ್ತು ಅಜಾಗರೂಕತೆಯಿಂದ ವಾಹನ ಚಾಲನೆ ಮಾಡಿ ಪೊಲೀಸ್ ಬ್ಯಾರಿಕೇಡ್ ಗೆ ಡಿಕ್ಕಿ ಹೊಡೆಸಿದ ಪರಿಣಾಮ ನಾನು ಮತ್ತು ನರಸಿಂಹಮೂರ್ತಿ ರಸ್ತೆಯ ಮೇಲೆ ಬಿದ್ದು ಹೋದೆವು. ಅಪಘಾತದಲ್ಲಿ ದ್ವಿಚಕ್ರ ವಾಹನ ಜಖಂಗೊಂಡಿರುತ್ತೆ. ನರಸಿಂಹಮೂರ್ತಿಗೆ ತಲೆಯ ಎಡಬಾಗ ಮತ್ತು ಬಲಬಾಗ ರಕ್ತಗಾಯಗಳಾದವು. ಬಲ ಭುಜ ಹಾಗೂ ಎಡಕೈಗೆ ತರಚಿದ ಗಾಯಗಳಾದವು.  ನನಗೆ  ಎಡಬಾಗದ ಕಣ್ಣಿನ  ಮೇಲ್ಬಾಗ ರಕ್ತಗಾಯ ಮತ್ತು ಎರಡೂ ಕೈಗಳ ಮೇಲೆ ತರಚಿದ ಗಾಯಗಳಾದವು. ಸ್ಥಳದಲ್ಲಿದ್ದ ಸಾರ್ವಜನಿಕರು ಗಾಯಗೊಂಡಿದ್ದ ನಮ್ಮಗಳನ್ನು ಉಪಚರಿಸಿ ಯಾವುದೋ ವಾಹನದಲ್ಲಿ ಚಿಕಿತ್ಸೆಗೆ ಬಾಗೇಪಲ್ಲಿ ಸರ್ಕಾರಿ ಆಸ್ಪತ್ರೆಗೆ ಕಳುಹಿಸಿಕೊಟ್ಟರು. ನನಗೆ ಸಣ್ಣಪುಟ್ಟ ಗಾಯಗಳಾಗಿದ್ದು ನರಸಿಂಹಮೂರ್ತಿಗೆ ತೀವ್ರತರವಾದ ಗಾಯಗಳಾಗಿದ್ದರಿಂದ ವೈದ್ಯರ ಸಲಹೆಯ ಮೇರೆಗೆಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ನರಸಿಂಹಮೂರ್ತಿಯನ್ನು ದಾಖಲಿಸಿರುತ್ತೇನೆ. ಮಧ್ಯಪಾನ ಮಾಡಿ K.A-02 E.W-2642 ಹೀರೊಹೊಂಡಾ ಸ್ಪ್ಲೆಂಡರ್ ಪ್ಲಸ್ ದ್ವಿಚಕ್ರ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿ ಅಪಘಾತವನ್ನುಂಟು ಮಾಡಿದ ನರಸಿಂಹಮೂರ್ತಿ ರವರ ಮೇಲೆ ಕಾನೂನು ರೀತ್ಯ ಕ್ರಮ ಜರುಗಿಸಬೇಕಾಗಿ ಕೋರುತ್ತೇನೆ.

  1. ಬಾಗೇಪಲ್ಲಿ ಪೊಲೀಸ್ ಠಾಣೆ ಮೊ.ಸಂ.98/2020 ಕಲಂ. 379 ಐ.ಪಿ.ಸಿ :-

          ದಿನಾಂಕ: 16-05-2020 ರಂದು ಬೆಳಿಗ್ಗೆ 10-00 ಗಂಟೆಗೆ ಪಿರ್ಯಾದಿದಾರರಾದ ಬಾಗೇಪಲ್ಲಿ ಪೊಲೀಸ್ ಠಾಣೆಯ ಪಿಎಸ್ಐ  ರವರಾದ ಶ್ರೀ ಸುನಿಲ್ ಕುಮಾರ್ ರವರು ಠಾಣೆಗೆ ಹಾಜರಾಗಿ ನೀಡಿದ ವರದಿಯ ಸಾರಾಂಶವೇನೆಂದರೆ, ದಿನಾಂಕ: 16-05-2020 ರಂದು ಬೆಳಗ್ಗೆ 08-00 ಗಂಟೆ ಸಮಯದಲ್ಲಿ ನಾನು ಠಾಣೆಯಲ್ಲಿದ್ದಾಗ ಭಾತ್ಮೀಧಾರರಿಂದ ಬಂದ ಖಚಿತ ಮಾಹಿತಿ ಏನೆಂದರೆ ಶಂಕಂವಾರಿಪಲ್ಲಿ ಗ್ರಾಮದ ಕೆರೆಯಲ್ಲಿ ಯಾರೋ ವ್ಯಕ್ತಿಗಳು ಆಕ್ರಮವಾಗಿ ಮರಳನ್ನು ಕಳವು ಮಾಡುತ್ತಿದ್ದಾರೆಂದು ಬಂದ ಮಾಹಿತಿಯ ಮೇರೆಗೆ ನಾನು ಠಾಣೆಯ ಜೀಪ್ ಸಂಖ್ಯೆ ಕೆಎ-40-ಜಿ-537 ರಲ್ಲಿ ನಾನು ಮತ್ತು ಜೀಪ್ ಚಾಲಕ ಎ.ಹೆಚ್.ಸಿ-34- ಅಲ್ತಾಫ್ ಫಾಷ, ಸಿಬ್ಬಂದಿಯಾದ ಸಿ.ಪಿ.ಸಿ-280 ಶ್ರೀ ಮುರಳಿ, ಸಿಪಿಸಿ-214 ಶ್ರೀ ಅಶೋಕ ರವರೊಂದಿಗೆ, ಪಂಚಾಯ್ತಿದಾರರನ್ನು ಕರೆದುಕೊಂಡು ಮಾಹಿತಿ ಬಂದ  ಶಂಕಂವಾರಿಪಲ್ಲಿ ಗ್ರಾಮದ ಕೆರೆಯ ಬಳಿಗೆ ಸುಮಾರು ಬೆಳಿಗ್ಗೆ 08-30 ಗಂಟೆಗೆ ಹೋಗಿ ನೋಡಲಾಗಿ, ಸ್ಥಳದಲ್ಲಿ ಮೂರು ಅಪೇ ಆಟೋಗಳಲ್ಲಿ ಮೂವರು ಆಸಾಮಿಗಳು ಮರಳು ತುಂಬುತ್ತಿದ್ದು, ಆಸಾಮಿಗಳು ನಾವು ಜೀಪಿನಲ್ಲಿ ಬರುವುದನ್ನು ನೋಡಿ ಓಡಿ ಹೋಗಲು ಪ್ರಯತ್ನಿಸಿದವರನ್ನು ನಾವು ಸುತ್ತುವರೆದು ಹಿಡಿದುಕೊಂಡು ಹೆಸರು ವಿಳಾಸ ಕೇಳಲಾಗಿ 1] ರಾಜಶೇಖರ  ಬಿನ್ ಲೇಟ್ ನಾರಾಯಣಪ್ಪ, 24 ವರ್ಷ, ಭೋವಿ ಜನಾಂಗ, ಚಾಲಕ ವೃತ್ತಿ, ವಾಲ್ಮೀಖಿನಗರ, ಬಾಗೇಪಲ್ಲಿ ಟೌನ್, 2) ಸೋಮಶೇಖರ @ ಸೋಮು ಬಿನ್ ನಾರಾಯಣಪ್ಪ, 32 ವರ್ಷ, ಬೋವಿ ಜನಾಂಗ, ಚಾಲಕ ವೃತ್ತಿ, ಬಷೀರ್ ಷಾಮಿಲ್ ಹಿಂಬಾಗ, ಬಾಗೇಪಲ್ಲಿ ಟೌನ್ ಸ್ವಂತ ಸ್ಥಳ ಪೆದ್ದನಪಲ್ಲಿ ಗ್ರಾಮ, ಚಿಲಮತ್ತೂರು ಮಂಡಲಂ, ಅನಂತರಪುರ ಜಿಲ್ಲೆ ಎಂದು ಮತ್ತೊಬ್ಬ 3) ಕೇಶವ ಬಿನ್ ರಂಗಪ್ಪ, 43 ವರ್ಷ, ಭೋವಿ ಜನಾಂಗ, ಡ್ರೈವರ್ ಕೆಲಸ, 5ನೇ ವಾರ್ಡ್, ಬಾಗೇಪಲ್ಲಿ ಟೌನ್ ಎಂದು ತಿಳಿಸಿದ್ದು, ನಂತರ ಸದರಿ ಆಟೋಗಳನ್ನು ಪರಿಶೀಲಿಸಲಾಗಿ ಮರಳನ್ನು ತೆಗೆದು ಆಟೋಗಳಲ್ಲಿ ತುಂಬಿಸಿರುವುದು ಕಂಡುಬಂದಿರುತ್ತದೆ. ಆಟೋಗಳಲ್ಲಿ ಮರಳು ಸಾಗಾಣಿಕೆ ಮಾಡಲು ಯಾವುದಾದರೂ ಅಧಿಕೃತ ಪರವಾನಿಗೆ ಇದಿಯೇ ಎಂದು ಕೇಳಲಾಗಿ ನಮ್ಮ ಬಳಿ ಯಾವುದೇ ಪರವಾನಿಗೆ ಇರುವುದಿಲ್ಲ ಎಂದು ತಿಳಿಸಿರುತ್ತಾರೆ. ಸದರಿ ಆಟೋಗಳ ಬಾಡಿ ಲೆವೆಲಿಗೆ ಮರಳನ್ನು ತುಂಬಿಸಲಾಗಿರುತ್ತದೆ. ಸ್ಥಳದಲ್ಲಿದ್ದ ಆಟೋಗಳನ್ನು ಪರಿಶೀಲಿಸಲಾಗಿ ನೋಂದಣಿ ಸಂಖ್ಯೆ ಇರುವುದಿಲ್ಲ 1) ರಾಜಶೇಖರ ಮರಳು ತುಂಬುತ್ತಿದ್ದ ಹಳದಿ ಬಣ್ಣದ ಅಪೇ ಆಟೋ ಇಂಜಿನ್ ನಂ-R9H2095673, ಚಾಸ್ಸಿ ನಂ- MBX0003ABXJ913815, 2) ಸೋಮಶೇಖರ ಮರಳು ತುಂಬುತ್ತಿದ್ದ ಹಳದಿ ಬಣ್ಣದ ಅಪೇ ಆಟೋ ಇಂಜಿನ್ ನಂ-R8F2979530, ಚಾಸ್ಸಿ ನಂ- MBX0003ABWG673285, 3) ಕೇಶವ ಮರಳು ತುಂಬುತ್ತಿದ್ದ ನೀಲಿ ಬಣ್ಣದ ಅಪೇ ಆಟೋ ಇಂಜಿನ್ ನಂ-S8D8841228, ಚಾಸ್ಸಿ ನಂ- MBX0003ABWD634533 ಸದರಿ ಆಟೋಗಳಲ್ಲಿ ಸರ್ಕಾರಿ ಸ್ವತ್ತಾದ ಮರಳನ್ನು ಕಳ್ಳತನ ಮಾಡಿಕೊಂಡು ಆಟೋಗಳಿಗೆ ತುಂಬಿಸಿ ಯಾವುದೇ ಪರವಾನಗಿ ಇಲ್ಲದೆ ಸಾಗಾಣಿಕೆ ಮಾಡುತ್ತಿರುವುದು ಕಂಡು ಬಂದಿರುತ್ತದೆ. ಈ ಬಗ್ಗೆ ಮುಂದಿನ ಕ್ರಮಜರುಗಿಸಲು ಕೊಟ್ಟ ವರದಿಯಾಗಿರುತ್ತದೆ.

  1. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.200/2020 ಕಲಂ. 279,337 ಐ.ಪಿ.ಸಿ :-

          ದಿನಾಂಕ: 15/05/2020 ರಂದು ಕೋಲಾರ ನಗರದ ಎಸ್.ಎನ್.ಆರ್ ಜಿಲ್ಲಾ ಆಸ್ಪತ್ರೆಯಲ್ಲಿ CHC-124 ರವರು ಗಾಯಾಳು ಶಂಕರಪ್ಪ ಬಿನ್ ಗಂಗುಲಪ್ಪ, 38 ವರ್ಷ, ಆದಿ ಕರ್ನಾಟಕ, ಗಾರೆಮೇಸ್ತ್ರೀ, 8ನೇ ವಾರ್ಡ್, ಸಬ್ ಜೈಲ್ ಹಿಂಭಾಗ, ಗಂಗಾನಗರ, ಚಿಂತಾಮಣಿ ನಗರ ರವರ ಹೇಳಿಕೆಯನ್ನು ಪಡೆದುಕೊಂಡು ಸಂಜೆ 4.00 ಗಂಟೆಗೆ ಠಾಣೆಗೆ ವಾಪಸ್ಸಾಗಿ ಹಾಜರುಪಡಿಸಿದ ಗಾಯಾಳುವಿನ ಹೇಳಿಕೆಯ ದೂರಿನ ಸಾರಾಂಶವೇನೆಂದರೆ, ದಿನಾಂಕ: 13/05/2020 ರಂದು ಮದ್ಯಾಹ್ನ 3.00 ಗಂಟೆ ಸಮಯದಲ್ಲಿ ತಾನು ತಮ್ಮ ಮನೆಯ ಬಳಿ ಇದ್ದಾಗ ತನಗೆ ಪರಿಚಯವಿರುವ ಚಿಂತಾಮಣಿ ತಾಲ್ಲೂಕು, ಕಲ್ಲಹಳ್ಳಿ ಗ್ರಾಮದ ವೆಂಕಟರೆಡ್ಡಿ ರವರು ಅವರ ಬಾಬತ್ತು ಟ್ರ್ಯಾಕ್ಟರ್-ಟ್ಯಾಂಕರ್ ನಲ್ಲಿ ತಮ್ಮ ಮನೆಯ ಬಳಿ ಬಂದು ತನ್ನನ್ನು ಕರೆದು ನಮ್ಮ ಮನೆಯ ಬಳಿ ಗಾರೆಕೆಲಸ ಇದೆ ಕೂಲಿಗಾಗಿ ಬರುವಂತೆ ತನ್ನನ್ನು ಕರೆದಿದ್ದು, ಅದರಂತೆ ತನ್ನನ್ನು ವೆಂಕಟರೆಡ್ಡಿರವರ ಟ್ರ್ಯಾಕ್ಟರ್ ಹತ್ತಿಸಿಕೊಂಡು ಕಲ್ಲಹಳ್ಳಿ ಗ್ರಾಮದ ವೆಂಕಟರೆಡ್ಡಿ ರವರ ಮನೆಯ ಬಳಿ ಹೋಗಿರುತ್ತಾರೆ. ನಂತರ ವೆಂಕಟರೆಡ್ಡಿ ರವರು ಗಾರೆಕೆಲಸಕ್ಕೆ ಬೇಕಾದ ಸಾಮಾಗ್ರಿಗಳನ್ನು ತೆಗೆದುಕೊಂಡು ಬರೋಣ ಚಿಂತಾಮಣಿಗೆ ಹೋಗಿ ಟ್ರ್ಯಾಕ್ಟರ್ ಹತ್ತಿಕೋ ಎಂದು ಹೇಳಿದ್ದು ಅದರಂತೆ ತಾನು ವೆಂಕಟರೆಡ್ಡಿರವರ ಮೇಲ್ಕಂಡ ನೊಂದಣಿ ಸಂಖ್ಯೆ ಇಲ್ಲದ ಮಸ್ಸೆ ಫರ್ಗೂಸನ್ ಟ್ರ್ಯಾಕ್ಟರ್-ಟ್ಯಾಂಕರ್ ನಲ್ಲಿ ಟ್ರ್ಯಾಕ್ಟರ್ ಇಂಜಿನ್ ನ ಮಡ್ ಗಾರ್ಡ್ ಮೇಲೆ ಕುಳಿತುಕೊಂಡು ಕಲ್ಲಹಳ್ಳಿಯಿಂದ ಚಿಂತಾಮಣಿಗೆ ಹೋಗುವ ರಸ್ತೆಯಲ್ಲಿ ಹೋಗುತ್ತಿದ್ದಾಗ ಸಂಜೆ ಸುಮಾರು 4.00 ಗಂಟೆ ಸಮಯದಲ್ಲಿ ಮಾಳಪಲ್ಲಿ ಕೆರೆಯ ಸಮೀಪ ಟ್ರ್ಯಾಕ್ಟರ್ ನ್ನು ಚಾಲನೆ ಮಾಡುತ್ತಿದ್ದ ವೆಂಕಟರೆಡ್ಡಿರವರು ಟ್ರ್ಯಾಕ್ಟರ್ ನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿದ್ದರ ಪರಿಣಾಮ ಟ್ರ್ಯಾಕ್ಟರ್ ಇಂಜಿನ್ ನ ಮಡ್ ಗಾರ್ಡ್ ಮೇಲೆ ಕುಳಿತಿದ್ದ ತಾನು ಕೆಳಗೆ ಬಿದ್ದು ಹೋಗಿದ್ದು, ಟ್ಯಾಂಕರ್ ಗೆ ತನ್ನ ಸೊಂಟ ಮತ್ತು ಕಿಬ್ಬೊಟ್ಟೆ ತಗುಲಿ ರಕ್ತಗಾಯಗಳಾಗಿರುತ್ತೆ. ಟ್ಯಾಂಕರ್ ನ ಚಕ್ರ ತನ್ನ ಎಡ ಮುಂಗೈ ಮೇಲೆ ಹತ್ತಿ ರಕ್ತಗಾಯವಾಗಿರುತ್ತೆ. ನಂತರ ಗಾಯಗೊಂಡಿದ್ದ ತನ್ನನ್ನು ರಸ್ತೆಯಲ್ಲಿ ಹೋಗುತ್ತಿದ್ದ ಚಿಂತಾಮಣಿ ನಗರದ ಮಂಜುನಾಥ ಮತ್ತು ಅರುಣ್ ಚಿಂತಾಮಣಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದು, ಅಲ್ಲಿನ ವೈದ್ಯಾಧಿಕಾರಿಗಳ ಸಲಹೆಯ ಮೇರೆಗೆ ದಿನಾಂಕ: 14/05/2020 ರಂದು ಹೆಚ್ಚಿನ ಚಿಕಿತ್ಸೆಗಾಗಿ ಕೋಲಾರದ ಎಸ್.ಎನ್.ಆರ್ ಆಸ್ಪತ್ರೆಗೆ ಕರೆದುಕೊಂಡು ದಾಖಲು ಮಾಡಿದ್ದು, ತಾನು ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆದುಕೊಳ್ಳುತ್ತಿದ್ದರಿಂದ ತಡವಾಗಿ ತನ್ನ ಹೇಳಿಕೆಯನ್ನು ನೀಡುತ್ತಿದ್ದು, ಅಪಘಾತದಿಂದ ಆದ ಗಾಯಗಳ ದೆಸೆಯಿಂದ ತನಗೆ ಪ್ರಜ್ಞೆ ಇಲ್ಲದೆ ಇದ್ದು, ಮಾತನಾಡಲು ಸಾಧ್ಯವಾಗದ ಕಾರಣ ಈವರೆಗೂ ದೂರನ್ನು ನೀಡಿರುವುದಿಲ್ಲ. ಆದ್ದರಿಂದ ಅಪಘಾತ ಪಡಿಸಿದ ಮೇಲ್ಕಂಡ ಟ್ರ್ಯಾಕ್ಟರ್-ಟ್ಯಾಂಕರ್ ಚಾಲಕನ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಕೋರಿದ್ದರ ಮೇರೆಗೆ ಪ್ರಕರಣ ದಾಖಲಿಸಿರುತ್ತೆ.

  1. ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.112/2020 ಕಲಂ. 353,379,341,504,506  ಐ.ಪಿ.ಸಿ :-

          ದಿನಾಂಕ 16-05-2020 ರಂದು ಬೆಳಿಗ್ಗೆ 09-15 ಗಂಟೆಗೆ  ಹೆಚ್.ಸಿ. 10 ಶ್ರೀರಾಮಯ್ಯ ರವರು ಠಾಣೆಗೆ ಹಾಜರಾಗಿ ನೀಡಿದ ವರದಿಯ ಸಾರಾಂಶವೇನೆಂದರೆ  ತನಗೆ ಮತ್ತು ಪಿ.ಸಿ. 33 ಕೃಷ್ಣಪ್ಪ ಇಬ್ಬರಿಗೂ  ಹೊಸೂರು ಹೊರಠಾಣೆಯಲ್ಲಿ ಕರ್ತವ್ಯಕ್ಕೆ ನೇಮಕ  ಮಾಡಿದ್ದು  ಕರ್ತವ್ಯವನ್ನು ಮಾಡುತ್ತಿರುತ್ತೇವೆ. ದಿನಾಂಕ 16-05-2020 ರಂದು ಬೆಳಿಗ್ಗೆ 08-30 ಗಂಟೆಯಲ್ಲಿ  ನಾನು ಹೊರಠಾಣೆಯಲ್ಲಿದ್ದಾಗ  ಹಳೇಉಪ್ಪಾರಹಳ್ಳಿ –ಬಂದರಹಳ್ಳಿ  ರಸ್ತೆಯಲ್ಲಿ  ಯಾರೋ ಆಸಾಮಿಯು ಮರಳನ್ನು ಅಕ್ರಮವಾಗಿ ಸಾಗಾಣಿಕೆಯನ್ನು ಮಾಡುತ್ತಿದ್ದಾರೆಂದು ಪಿ.ಎಸ್.ಐ.ರವರು  ತಿಳಿಸಿದ್ದು  ನಾನು ಮತ್ತು ಪಿ.ಸಿ. 33 ಕೃಷ್ಣಪ್ಪ ಇಬ್ಬರು  ಹಳೇ ಉಪ್ಪಾರಹಳ್ಳಿ ಸರ್ಕಲ್ ನಲ್ಲಿ ಹೋಗಿ ನೋಡಲಾಗಿ  ಟ್ರ್ಯಾಕ್ಟರ್  ಒಂದು ಬರುತ್ತಿದ್ದು  ತಡೆದು ನಿಲ್ಲಿಸಿದಾಗ ಕೆ.ಎ.40-ಟಿ-8856 ಆಗಿದ್ದು ಟ್ರ್ಯಾಲಿಯಲ್ಲಿ  ಮರಳು ತುಂಬಿದ್ದು  ಸದರಿ ಚಾಲಕನ ಹೆಸರು  ವಿಳಾಸವನ್ನು ಕೇಳಲಾಗಿ ಮಾರುತೀ ಬಿನ್  ಟಿ. ವೆಂಕಟೇಶ @ ಪೂಜಾರಿ, 30 ವರ್ಷ, ಆದಿ ಕರ್ನಾಟಕ, ವಾಸ ಹರಿಜನ ಕಾಲೋನಿ. ಹೊಸೂರು ಗ್ರಾಮ, ಗೌರಿಬಿದನೂರು ತಾಲ್ಲೂಕು ಎಂದು ಹೇಳಿದನು. ಮರಳನ್ನು ಎಲ್ಲಿಂದ ತಂದಿದ್ದೀಯಾ ಎಂದು ಕೇಳಿದಾಗ  ಹೊಸೂರು ಹಳ್ಳದಲ್ಲಿ ತುಂಬಿಸಿಕೊಂಡು  ಹೆಚ್ಚಿನ ಬೆಲೆಗೆ ಮಾರಾಟವನ್ನು ಮಾಡಲು ಸಾಗಾಣಿಕೆಯನ್ನು  ಮಾಡುತ್ತಿದ್ದೆನೆಂದು  ಹೇಳಿದನು. ಟ್ರ್ಯಾಕ್ಟರ್ ನ ಮಾಲೀಕನ ಹೆಸರು ವಿಳಾಸವನ್ನು  ಕೇಳಲಾಗಿ ಟ್ರ್ಯಾಕ್ಟರ್ ಮಾಲೀಕ  ಟಿ. ವೆಂಕಟೇಶ @ ಪೂಜಾರಿ  ಬಿನ್  ಲೇಟ್ ತಿಪ್ಪಣ್ಣ , 60 ವರ್ಷ, ಆದಿ ಕರ್ನಾಟಕ, ಟ್ರ್ಯಾಕ್ಟರ್ ಮಾಲೀಕ, ವಾಸ ಹೊಸೂರು ಗ್ರಾಮ,  ಗೌರಿಬಿದನೂರು ತಾಲ್ಲೂಕು ಎಂದು ಹೇಳಿದನು. ನಂತರ ಪಿ.ಸಿ. 33 ಕೃಷ್ಣಪ್ಪ ಟ್ರ್ಯಾಕ್ಟರ್ ಅನ್ನು ಠಾಣೆಯ ಬಳಿಗೆ  ತೆಗೆದುಕೊಂಡು ಹೋಗಲು  ಹೋದಾಗ ಚಾಲಕ ಮಾರುತಿ ಬಿನ್ ಟಿ. ವೆಂಕಟೇಶಪ್ಪ ಎಂಬುವನು  ನನಗೆ ಮತ್ತು ಕೃಷ್ಣಪ್ಪನಿಗೆ ನೀವ್ಯಾರೋ  ನನ್ನ ಟ್ರ್ಯಾಕ್ಟರ್ ಅನ್ನು ತೆಗೆದುಕೊಂಡು  ಹೋಗಲು , ನಿಮಗೆ ಹೇಳುವವರು ಯಾರೂ ಇಲ್ಲವಾ, ಬೋಳಿಮಕ್ಕಳಾ ನಿಮ್ಮನ್ನು ಇದೇ ಟ್ರ್ಯಾಕ್ಟರ್ ನಿಂದ ಹತ್ತಿಸಿ ನಿಮ್ಮನ್ನು ಸಾಯಿಸುತ್ತೇನೆಂದು  ಬೆದರಿಕೆಯನ್ನು ಹಾಕಿದನು. ಪಿ.ಸಿ. 33 ಕೃಷ್ಣಪ್ಪ ಟ್ರ್ಯಾಕ್ಟರ್ ಅನ್ನು  ಹತ್ತಲು ಹೋದಾಗ ಪಿ.ಸಿ. 33 ಕೃಷ್ಣಪ್ಪನನ್ನು  ಸಮವಸ್ತ್ರವನ್ನು ಹಿಡಿದು ಎಳೆದಾಡಿ ಕೈಯಿಂದ ಹೊಡೆದನು. ನಾನು ತಡೆಯಲು ಹೋದಾಗ ಅಡ್ಡಗಟ್ಟಿ ನನಗೆ ಬೋಳಿ ಮಗನೇ ನನ್ನನ್ನು ತಡೆಯಲು ಬರುತ್ತೀಯಾ ಎಂದು ಅವಾಚ್ಯ ಶಬ್ದಗಳಿಂದ ಬೈದನು. ಮೇಲ್ಕಂಡ ಟ್ರ್ಯಾಕ್ಟರ್ ಚಾಲಕ  ಮತ್ತು ಮಾಲೀಕ  ಯಾವುದೇ ಪರವಾನಿಗಿಯಿಲ್ಲದೇ ನೈಸರ್ಗಿಕ ಖನಿಜ ಸಂಪಾತ್ತಾದ ಮರಳನ್ನು ಹೊಸೂರು ಹಳ್ಳದಲ್ಲಿ  ಕಳುವು ಮಾಡಿ ಕಾಳ ಸಂತೆಯಲ್ಲಿ  ಹೆಚ್ಚಿನ ಬೆಲೆಗೆ ಮಾರಾಟವನ್ನು ಮಾಡಲು ಸಾಗಾಣಿಕೆಯನ್ನು  ಮಾಡುತ್ತಿರುತ್ತಾರೆ. ಸದರಿ ಟ್ರ್ಯಾಕ್ಟರ್ ಚಾಲಕ  ಮರಳು ತುಂಬಿದ ಟ್ರ್ಯಾಕ್ಟರ್ ಅನ್ನು ವಶಕ್ಕೆ ಪಡೆದುಕೊಳ್ಳಲು ಹೋದಾಗ  ಅಡ್ಡಗಟ್ಟಿ ಸರ್ಕಾರಿ ಕರ್ತವ್ಯವನ್ನು ಮಾಡಲು ಅಡ್ಡಿಪಡಿಸಿ ಅವಾಚ್ಯ ಶಬ್ದಗಳಿಂದ ಬೈದು ಟ್ರ್ಯಾಕ್ಟರ್ ಅನ್ನು ಹತ್ತಿಸಿ ಸಾಯಿಸಿಬಿಡುತ್ತೇನೆಂದು ಪ್ರಾಣ ಬೆದರಿಕೆಯನ್ನು ಹಾಕಿರುತ್ತಾನೆ. ಟ್ರ್ಯಾಕ್ಟರ್ ಚಾಲಕ ಮತ್ತು ಮಾಲೀಕನ ವಿರುದ್ದ  ಮುಂದಿನ ಕಾನೂನು ಕ್ರಮ ಜರುಗಿಸಲು  ಕೋರಿ  ನೀಡಿದ ದೂರಾಗಿರುತ್ತೆ. 5. ಶಿಡ್ಲಘಟ್ಟ  ಗ್ರಾಮಾಂತರ  ಪೊಲೀಸ್ ಠಾಣೆ ಮೊ.ಸಂ.120/2020 ಕಲಂ. 143,147,148,323,324 ರೆ/ವಿ 149 ಐ.ಪಿ.ಸಿ :-

          ದಿನಾಂಕ: 15-05-2020 ರಂದು ಬೆಳಿಗ್ಗೆ 10-30 ಗಂಟೆಯಲ್ಲಿ ಮೀನಾಕ್ಷಮ್ಮ ಕೋಂ ಅಶ್ವತ್ಥನಾರಾಯಣಸ್ವಾಮಿ, ಮುತ್ತೂರು ಗ್ರಾಮ, ಶಿಡ್ಲಘಟ್ಟ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ:14-05-2020 ರಂದು ಸಂಜೆ 4-00 ಗಂಟೆ ಸಮಯದಲ್ಲಿ ತನ್ನ ಮಗ ಕೆರೆಯ ಹತ್ತಿರ ಹೋಗುತ್ತಿದ್ದಾಗ ಕೆರೆಯಲ್ಲಿ ಮೂರ್ತಿ ಬಿನ್ ಪಿ.ಎಂ. ನಾರಾಯಣಪ್ಪ ರವರ ಮಗನು ತಮ್ಮ ಇಟ್ಟಿಗೆ ಪ್ಯಾಕ್ಟರಿಗೆ ಮಣ್ಣನ್ನು ಹೊಡೆಯುತ್ತಿದ್ದು ದಾರಿಯಲ್ಲಿ ಹೋಗುತ್ತಿದ್ದಾಗ ಟ್ರ್ಯಾಕ್ಟರ್ ನ ಚಾಲಕ ಕುಡಿದು ಹೇಗೆಂದರೆ ಹಾಗೆ ತನ್ನ ಮಗನ ಮೇಲೆ ಹೋಗುತ್ತಿದ್ದರು, ಆಗ ತನ್ನ ಮಗನಾದ ನಟರಾಜ ಟ್ರ್ಯಾಕ್ಟರ್ ಡ್ರೈವರ್ ನ್ನು ಕೇಳಿದಾಗ ಹಾಗೂ ಕೆರೆಯಲ್ಲಿ ಹಳ್ಳಗಳನ್ನು ಮಾಡಿ ಇಟ್ಟಿಗೆ ಪ್ಯಾಕ್ಟರಿಗೆ ಮಣ್ಣು ಹೊಡೆಯುತ್ತಿದ್ದೀರ, ಮಕ್ಕಳಿಗೆ ಮತ್ತು ಜನರಿಗೆ ತೊಂದರೆಯಾಗುತ್ತದೆ, ಕೆರೆಯ ಮದ್ಯದಲ್ಲಿ ಮಣ್ಣನ್ನು ತೆಗೆದುಕೊಳ್ಳಿ ಎಂದುಹೇಳಿದಾಗ ಏಕಾ ಏಕಿ ದೊಣ್ಣೆ ಮಚ್ಚುಗಳಿಂದ ತನ್ನ ಮಗನಾದ ನಟರಾಜ ರವರ ಬಲಕೈ ಮುಂಗೈಗೆ ಮಚ್ಚಿನಿಂದ ಮೂರ್ತಿ ಬಿನ್ ಪಿ.ಎಂ ನಾರಾಯಣಪ್ಪ ಹಾಗೂ ದೊಣ್ಣೆಯಿಂದ ಚಂದ್ರಪ್ಪ, ಮುನಿಶಾಮಿರೆಡ್ಡಿ, ಆಕಾಶ್ ಮತ್ತು ಮೋನಿಕ್ ಎಂಬುವರು ಹೊಡೆದಿರುತ್ತಾರೆ, ಮತ್ತು ತಮ್ಮ ಅಕ್ಕನ ಮಗನಾದ ಮಂಜೇಶ್ ಎ ರವರಿಗೆ ಹೊಡೆದಿರುತ್ತಾರೆ, ಆಗ ಸ್ಥಳದಲ್ಲಿದ್ದ ತಾನು ಗಲಾಟೆಯನ್ನು ಬಿಡಿಸಲು ಹೋಗಿದ್ದಾಗ ತನಗೂ ಸಹ ಬಲಕೈ ಬುಜಕ್ಕೆ ಹೊಡೆದು ತಳ್ಳಿದಾಗ ತಾನು ಸ್ಥಳದಲ್ಲಿಯೇ ಬಿದ್ದಿದ್ದು, ಈ ಸಮಯದಲ್ಲಿ ತಮ್ಮ ಊರಿನ ಟಿ.ಕೆ. ಶಿವಕುಮಾರ್ ಬಿನ್ ಕೃಷ್ಣಪ್ಪ, ಕಿಶೋರ್ ಬಿನ್ ಕೃಷ್ಣಪ್ಪ ಮತ್ತು ಸೋಮಣ್ಣ ಬಿನ್ ಬೈರಪ್ಪ ಎಂಬುವರು ಗಲಾಟೆಯನ್ನುನೋಡಿ ಬಿಡಿಸಿರುತ್ತಾರೆ, ತನ್ನ ಮಗನಿಗೆ ಹೆಚ್ಚಿನ ಗಾಯಗಳಾಗಿರುವುದರಿಂದ ಆಸ್ಪತ್ರೆಗೆ ಹೋಗಿರುತ್ತಾರೆ, ಈ ಗಲಾಟೆಯಲ್ಲಿ ತನ್ನ ಮೇಲೆ ಹಾಗೂ ತನ್ನ ಮಗನ ಮೇಲೆ ಹಲ್ಲೆ ಮಾಡಿರುವ ಮೇಲ್ಕಂಡವರ ವಿರುದ್ದ ಕಾನೂನು ರೀತ್ಯ ಕ್ರಮ ಜರುಗಿಸಲು ಕೋರಿ ನೀಡಿದ ದೂರಿನ ಮೇರಗೆ ಪ್ರಕರಣ ದಾಖಲಿಸಿಕೊಂಡಿರುತ್ತೆ.

  1. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.121/2020 ಕಲಂ. 307,504,506 ರೆ/ವಿ 34 ಐ.ಪಿ.ಸಿ :-

          ದಿನಾಂಕ: 15-05-2020 ರಂದು   ಬೆಳಿಗ್ಗೆ 9-30  ಗಂಟೆಯಲ್ಲಿ ಶ್ರೀನಿವಾಸಮೂರ್ತಿ ಎಂ.ಎನ್. ಬಿನ್ ಪಿ.ಎಂ.ನಾರಾಯಣಪ್ಪ , ಮುತ್ತೂರು ಗ್ರಾಮ, ಶಿಡ್ಲಘಟ್ಟ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ  ಸಾರಾಂಶವೇನೆಂದರೆ  ತಾನು ದಿನಾಂಕ:14-05-2020 ರಂದು ಸಂಜೆ 5 -00 ಗಂಟೆಯಲ್ಲಿ  ತಮ್ಮ ಕೆರೆಯ ಅಂಗಳದಲ್ಲಿ ಬರುತ್ತಿದ್ದಾಗ ತಮ್ಮ ಗ್ರಾಮದ ನಿವಾಸಿಗಳಾದ 1] ನಟರಾಜ್ ಬಿನ್ ಅಶ್ವತ್ಥನಾರಾಯಣಸ್ವಾಮಿ, 2] ಮಂಜುನಾಥ ಬಿನ್ ಅಶ್ವತ್ಥನಾರಾಯಣಸ್ವಾಮಿ ಮತ್ತು  ಇವರ ಸಂಬಂದಿಕರಾದ 3]ತೇಜು ಬಿನ್ ಚಂದ್ರಪ್ಪ ಹಾಗೂ ತಮ್ಮ ಪಕ್ಕದ  ಊರಿನ ಗಂಗನಹಳ್ಳಿ  ಗ್ರಾಮದ ನಿವಾಸಿಯಾದ 4] ಬಾಬು ಬಿನ್ ಮುನೇಯ್ಯ  ಎಂಬುವವರು ಗುಂಪು ಕಟ್ಟಿಕೊಂಡು ಏಕಾ ಏಕಿ ಅವರ ವಾಹನವಾದ ಕೆಎ-31 ಎಂ-2392 ಎಂಬ ಜೀಪಿನಲ್ಲಿ ಬಂದು  ತನ್ನ ಮೇಲೆ ಹಲ್ಲೆಗೆ ಪ್ರಯತ್ನಿಸಿರುತ್ತಾರೆ ತದನಂತರ  ಅಲ್ಲಿಂದ ತಾನೂ ಭಯಬೀತನಾಗಿ ಅವರಿಂದ ತಪ್ಪಿಸಿಕೊಂಡು ತಮ್ಮ ತೋಟದ ಮನೆಗೆ  ಬಂದಿದ್ದು ತದನಂತರ ರಾತ್ರಿ ಸುಮಾರು 8-30 ರ ಸಮಯದಲ್ಲಿ ಮೇಲ್ಕಂಡ ವ್ಯಕ್ತಿಗಳು ಪುನಃ ತಮ್ಮ ಮನೆಯ ಬಳಿ ಬಂದು ತನ್ನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಮತ್ತು ಲಾಂಗ್ ಗಳನ್ನು ಕೈಯಲ್ಲಿ ಹಿಡಿದುಕೊಂಡು ನಿನ್ನನ್ನು  ಇಲ್ಲಿಯೇ ಸಾಯಿಸದೇ ಬಿಡುವುದಿಲ್ಲ ಎಂದು ಸಾಯಿಸುವ ಉದ್ದೇಶದಿಂದ ಲಾಂಗ್ ನಿಂದ ತನ್ನ ಕತ್ತಿನ ಎಡಭಾಗಕ್ಕೆ ಬೀಸಿರುತ್ತಾರೆ ತಾನು ತಪ್ಪಿಸಿಕೊಂಡು ಅಲ್ಲಿಂದ ಓಡಿ ಹೋಗಿದ್ದು  ಅದೇ ಸಮಯದಲ್ಲಿ ತನ್ನ ಹೆಂಡತಿಯಾದ ಮಮತ ರವರು ಮನೆ ಬಾಗಿಲನ್ನು ಹಾಕಿಕೊಂಡಿರುತ್ತಾರೆ, ತದನಂತರ ಇದನ್ನು ಮೀರಿ ಪೆಟ್ರೋಲ್ ನಿಂದ ಮನೆಯ ಬಳಿ ಮತ್ತು ಗೇಟಿನ ಬಳಿ ಬೆಂಕಯನ್ನು ಇಡಲು ಪ್ರಯತ್ನಿಸಿರುತ್ತಾರೆ , ತಾನು ಅಲ್ಲಿಂದ ಹೋದ ನಂತರ ಜೋರಾಗಿ ಕಿರುಚಾಡಿ ನಿನ್ನನ್ನು ಸಾಯಿಸದೇ ಬಿಡುವುದಿಲ್ಲ ಎಂದು ಅವಾಚ್ಯಶಬ್ದಗಳಿಂದ ನಿಂದಿಸಿ ತಮ್ಮ ಮನೆಯ ಸುತ್ತ ಭಯದ ವಾತವರಣ ನಿರ್ಮಾಣ ಮಾಡಿ ಪ್ರಾಣಬೆದರಿಕೆ ಹಾಕಿರುತ್ತಾರೆ ಇದನ್ನು ಕಂಡ  1] ಎಂ.ಎನ್ ಮಂಜುನಾಥ ಬಿನ್ ನಾರಾಯಣರೆಡ್ಡಿ, 2] ಪಿ.ಎನ್.ದೇವರಾಜು ಬಿನ್ ನಾರಾಯಣಪ್ಪ, ಮತ್ತು 3] ವೆಂಕಟರಾಜುಗೌಡ ಬಿನ್ ಎಂ.ಸಿ.ಮುನಿಯಪ್ಪ, ಎಂಬುವರು ಅವರನ್ನು ಅಲ್ಲಿಂದ ಓಡಿಸಿರುತ್ತಾರೆ.ರಾತ್ರಿಯಾಗಿದ್ದರಿಂದ ಈದಿನ ತಡವಾಗಿ ದೂರನ್ನು ನೀಡುತ್ತಿದ್ದು  ತಾವುಗಳು ಮೇಲ್ಕಂಡವರ ಮೇಲೆ ಸೂಕ್ತ ಕಾನೂನು ರೀತ್ಯಾ ಕ್ರಮ ಜರುಗಿಸಿ ತನಗೆ  ಮತ್ತು ತನ್ನ ಕುಟುಂಬಕ್ಕೆ ಪ್ರಾಣ ರಕ್ಷಣೆ ನೀಡಿ ತನಗೆ ನ್ಯಾಯ ಒದಗಿಸಿಕೊಡಬೇಕಾಗಿ ಕೋರಿ ನೀಡಿದ ದೂರಿನ ಮೇರಗೆ ಪ್ರಕರಣ ದಾಖಲಿಸಿಕೊಂಡಿರುತ್ತೆ.

  1. ಶಿಡ್ಲಘಟ್ಟ ಪುರ ಪೊಲೀಸ್ ಠಾಣೆ ಮೊ.ಸಂ.54/2020 ಕಲಂ. 32(3),15(A) ಕೆ.ಇ ಆಕ್ಟ್ :-

          ದಿನಾಂಕ:15/05/2020 ರಂದು ಸಂಜೆ 6.15 ಗಂಟೆಗೆ ಪಿ.ಸಿ.522 ರವರ ಮೂಲಕ ಮಾನ್ಯ ಸಿಪಿಐ ಶಿಡ್ಲಘಟ್ಟ ವೃತ್ತ ರವರು ಕಳುಹಿಸಿರುವ ದೂರನ್ನು ಪಡೆದಿದ್ದರ ಸಾರಾಂಶವೇನಂದರೆ, ಈ ದಿನ ಸಂಜೆ 5-00 ಗಂಟೆಯಲ್ಲಿ ಶ್ರೀ. ಕೆ.ಸುರೇಶ್ ಸಿಪಿಐ ಶಿಡ್ಲಘಟ್ಟ ವೃತ್ತ ರವರು ಸಿಬ್ಬಂದಿಯವರಾದ ಮಂಜುನಾಥ ಪಿ.ಸಿ.522 ಮತ್ತು ಜೀಪು ಚಾಲಕ ನಾಗೇಶ ಎ.ಹೆಚ್.ಸಿ.03 ರವರೊಂದಿಗೆ ಶಿಡ್ಲಘಟ್ಟ ನಗರದಲ್ಲಿ ಗಸ್ತು ಮಾಡುತ್ತಿದ್ದಾಗ ಯಾರೋ ಸಾರ್ವಜನಿಕರಿಂದ ಶಿಡ್ಲಘಟ್ಟ ಟೌನ್ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣ ಬಳಿ ಶಾರದ ಕಾನ್ವೆಂಟ್ ಶಾಲೆಯ ಸಮೀಪ ಮರದ ಕೆಳಗೆ ಸಾರ್ವಜನಿಕರ ಸ್ಥಳದಲ್ಲಿ ಯಾರೋ ಸಾರ್ವಜನಿಕರಿಗೆ ಮದ್ಯಪಾನ ಸೇವನೆ ಮಾಡಲು ಅನುವು ಮಾಡಿರುವುದಾಗಿ ಬಂದ ಮಾಹಿತಿ ಮೇರೆಗೆ ಕೂಡಲೇ ಸಿಬ್ಬಂದಿಯವರೊಂದಿಗೆ ಮೇಲ್ಕಂಡ ಸ್ಥಳಕ್ಕೆ ಸಂಜೆ 5-30 ಗಂಟೆಯಲ್ಲಿ ಹೋಗಿ ನೋಡಿದಾಗ ಯಾರೋ 4 ಜನರು ಮದ್ಯಪಾನ ಸೇವನೆ ಮಾಡುತ್ತಿದ್ದವರು ಪೊಲೀಸ್ ವಾಹನವನ್ನು ಕಂಡು ಓಡಿ ಹೋಗಿದ್ದು, ಸ್ಥಳದಲ್ಲಿ ಮದ್ಯಪಾನ ಸೇವನೆ ಮಾಡಲು ಅನುವು ಮಾಡಿಕೊಟ್ಟಿರುವ ಆಸಾಮಿಯನ್ನು ವಶಕ್ಕೆ ಈತನ ಹೆಸರು ವಿಳಾಸ ಕೇಳಲಾಗಿ ಮುನಿಶಾಮಿ ಬಿನ್ ನರಸಿಂಹಪ್ಪ 35 ವರ್ಷ, ನಾಯಕರು, ಕೂಲಿ ಕೆಲಸ, ಡಬರಗಾನಹಳ್ಳಿ ಗ್ರಾಮ, ಶಿಡ್ಲಘಟ್ಟ ತಾಲ್ಲೂಕು ಎಂದು ತಿಳಿಸಿರುತ್ತಾನೆ. ಇವರು ಒಂದು ರಟ್ಟಿನ ಬಾಕ್ಸಿನಲ್ಲಿ ಮದ್ಯದ ಪಾಕೇಟ್ ಗಳನ್ನು ಇಟ್ಟುಕೊಂಡಿದ್ದು ರಟ್ಟಿನ ಬಾಕ್ಸಿನಲ್ಲಿ ಪರಿಶೀಲಿಸಲಾಗಿ OLD TAVERN Whisky 180 ML ನ 12 ಮದ್ಯದ ಪಾಕೆಟ್ ಗಳಿದ್ದು ಒಂದರ ಬೆಲೆ 74.13 ರೂಗಳಾಗಿದ್ದು, 12 ರ ಬೆಲೆ ಒಟ್ಟು 889-00 ರೂಗಳಾಗಿರುತ್ತೆ. ಇದೇ ಸ್ಥಳದಲ್ಲಿ ಮದ್ಯಪಾನ ಮಾಡಿದ 4 ಖಾಲಿ 180 ಎಂ.ಎಲ್ ನ ಮದ್ಯದ ಪಾಕೇಟ್ ಗಳಿರುತ್ತೆ. ಹಾಗೂ 4 ಪ್ಲಾಸ್ಟೀಕ್ ಗ್ಲಾಸ್ ಗಳು 4 ಖಾಲಿ ವಾಟರ್ ಪಾಕೇಟ್ ಗಳಿರುತ್ತೆ. ಇವುಗಳನ್ನು ಮುಂದಿನ ತನಿಖೆ ಬಗ್ಗೆ ವಶಕ್ಕೆ ಪಡೆದು ಸಾರ್ವಜನಿಕರ ಸ್ಥಳದಲ್ಲಿ ಮದ್ಯಪಾನ ಮಾಡಲು ಅನುವು ಮಾಡಿರುವ ಮುನಿಶಾಮಿ ರವರ ಮೇಲೆ ಕಾನೂನು ಕ್ರಮ ಜರುಗಿಸಲು ಸೂಚಿಸಿದ್ದರ ಮೇರೆಗೆ ಈ ಪ್ರಕರಣ ದಾಖಲಿಸಿರುತ್ತೆ.

  1. ಶಿಡ್ಲಘಟ್ಟ ಪುರ ಪೊಲೀಸ್ ಠಾಣೆ ಮೊ.ಸಂ.55/2020 ಕಲಂ. 379 ಐ.ಪಿ.ಸಿ :-

          ದಿನಾಂಕ.16.05.2020 ರಂದು ಮದ್ಯಾಹ್ನ 12.30 ಗಂಟೆಗೆ ಪಿರ್ಯಾದಿ ಅಲ್ಲಾಬಕಾಷ್, ತೈಬಾನಗರ, ಸಿಡ್ಲಘಟ್ಟ ಟೌನ್ ರವರು ಠಾಣೆಗೆ ಹಾಜರಾಗಿ ನಾನು ರೇಷ್ಮೇ ಕಲಸದಿಂದ ಜೀವನ ಮಾಡಿಕೊಂಡಿದ್ದು ಓಡಾಡಲು ನನ್ನ ಸ್ವಂತಕ್ಕಾಗಿ ಸುಮಾರು 5 ವರ್ಷಗಳ ಹಿಂದೆ KA.40.V.3010 ನಂಬರಿನ ಬಜಾಜ್ ಡಿಸ್ಕವರಿ 125 ಸಿಸಿ ದ್ವಿಚಕ್ರ ವಾಹನವನ್ನು ತೆಗೆದುಕೊಂಡಿರುತ್ತೇನೆ. ದಿನಾಂಕ.30.04.2020 ರಂದು ರಾತ್ರಿ ಸುಮಾರು 9.00 ಗಂಟೆಯಲ್ಲಿ ತನ್ನ ಗಾಡಿಯಲ್ಲಿ ನನ್ನ ಸ್ನೇಹಿತ ಸಂತೋಷನಗರದ ಷಪೀ ಬಿನ್ ಸೈಯದ್ ಅಬ್ದುಲ್ಲಾ ರವರನ್ನು ಮಾತನಾಡಿಸಿಕೊಂಡು ಬರಲು ಹೋಗಿ ಗಾಡಿಯನ್ನು ಷಪೀ ಮನೆಯ ಮುಂದೆ ನಿಲ್ಲಿಸಿ ಅವರ ಮನೆಯಲ್ಲಿ ಹೋಗಿ ಷಫಿಯನ್ನು ಮಾತನಾಡಿಕೊಂಡು ವಾಪಸ್ಸು ಬರಲು ರಾತ್ರಿ ಸುಮಾರು 10.00 ಗಂಟೆಗೆ ಮನೆಯಿಂದ ಹೊರಗಡೆ ಬಂದು ನೋಡಿದಾಗ ತನ್ನ ದ್ವಿಚಕ್ರ ಇಲ್ಲದೆ ಇದ್ದು, ಅಕ್ಕಪಕ್ಕದಲ್ಲಿ ನೋಡಿದರೂ ಕಾಣಲಿಲ್ಲ. ತನ್ನ ದ್ವಿಚಕ್ರ ವಾಹನವನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು, ಅಂದಿನಿಂದ ಇದುವರೆಗೂ ಹುಡುಕಾಡಿದರೂ ನಮ್ಮ ಗಾಡಿ ಸಿಕ್ಕಿರುವುದಿಲ್ಲ. ಆದ್ದರಿಂದ ಕಳ್ಳತನ ಮಾಡಿಕೊಂಡು ಹೋಗಿರುವ KA.40.V.3010 ನಂಬರಿನ ಬಜಾಜ್ ಡಿಸ್ಕವರಿ 125 ಸಿಸಿ ದ್ವಿಚಕ್ರ ವಾಹನವನ್ನು ಪತ್ತೆ ಮಾಡಿ ಕಾನೂನು ಕ್ರಮ ಜರುಗಿಸಲು ಈ ದಿನ ತಡವಾಗಿ ಕೊಟ್ಟ ದೂರಿನ ಮೇರೆಗೆ ಈ ಪ್ರಕರಣ ದಾಖಲಿಸಿರುತ್ತೆ.