ದಿನಾಂಕ : 16/02/2020 ರ ಅಪರಾಧ ಪ್ರಕರಣಗಳು

1. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.93/2020 ಕಲಂ. 143-147-148-323-324-504-506 ರೆ/ವಿ 149 ಐ.ಪಿ.ಸಿ :-
ದಿನಾಂಕ 15/02/2020 ರಂದು ಮದ್ಯಾಹ್ನ 12:50 ಗಂಟೆಗೆ ಚಿಂತಾಮಣಿ ಸರ್ಕಾರಿ ಆಸ್ವತ್ರೆಯಿಂದ ಬಂದ ಮೆಮೋವನ್ನು ಪಡೆದು ಆಸ್ಪತ್ರೆಗೆ ಹೋಗಿ ಗಾಯಾಳು ಅಂಜನ್ ಕುಮಾರ್ ಬಿನ್ ಆಂಜಿನಪ್ಪ, 32 ವರ್ಷ, ಆದಿ ಕರ್ನಾಟಕ, ಖಾಸಗಿ ಕಂಪನಿಯಲ್ಲಿ ಕೆಲಸ, ಅಂಬೇಡ್ಕರ್ ನಗರ, ಕೈವಾರ ಗ್ರಾಮ ರವರ ಹೇಳಿಕೆಯನ್ನು ಪಡೆದುಕೊಂಡು ಮದ್ಯಾಹ್ನ 1.45 ಗಂಟೆಗೆ ಠಾಣೆಗೆ ವಾಪಸ್ಸಾಗಿ ದಾಖಲಿಸಿಕೊಂಡ ಗಾಯಾಳುವಿನ ಹೇಳಿಕೆಯ ದೂರಿನ ಸಾರಾಂಶವೇನೆಂದರೆ, ತಮ್ಮ ಗ್ರಾಮದಲ್ಲಿ ತಮ್ಮ ಮನೆ ಮತ್ತು ಮುನಿನರಸಪ್ಪ ರವರ ಮನೆ ಹಿಂದೆ ಮುಂದೆ ಇದ್ದು, ಮದ್ಯೆ ರಸ್ತೆ ಇರುತ್ತೆ. ಹೀಗಿರುವಾಗ ಈ ದಿನ ದಿನಾಂಕ 15-02-2020 ರಂದು ಬೆಳಗ್ಗೆ 8-30 ಗಂಟೆ ಸಮಯದಲ್ಲಿ ಮೇಲ್ಕಂಡ ಮುನಿನರಸಪ್ಪ ರವರು ತಮ್ಮ ಮನೆ ಮುಂದೆ ಶೌಚಾಲಯದ ಗುಂಡಿಯನ್ನು ಅಗೆಯುತ್ತಿದ್ದು ಆಗ ತನ್ನ ತಾಯಿ ಲಕ್ಷ್ಮಮ್ಮ ರವರು ಮುನಿನರಸಪ್ಪ ರವರನ್ನು ಕುರಿತು ಏಕೆ ರಸ್ತೆಯಲ್ಲಿ ಗುಂಡಿಯನ್ನು ಅಗೆಯುತ್ತಿರುವುದು ಎಂದು ಕೇಳಿದ್ದು ಆಗ ಅವರು ತನ್ನ ತಾಯಿಯ ಮೇಲೆ ಗಲಾಟೆ ಮಾಡಿರುತ್ತಾರೆ. ನಂತರ ತನ್ನ ತಾಯಿ ಸದರಿ ವಿಚಾರವನ್ನು ತನಗೆ ತಿಳಿಸಿದ್ದು ತಾನು ಬೆಳಗ್ಗೆ 11-00 ಗಂಟೆ ಸಮಯದಲ್ಲಿ ಮೇಲ್ಕಂಡ ಮುನಿನರಸಪ್ಪ ರವರನ್ನು ಕುರಿತು ಏಕೆ ತನ್ನ ತಾಯಿಯ ಮೇಲೆ ಗಲಾಟೆ ಮಾಡಿದ್ದು ಎಂದು ಕೇಳಿದ್ದು ಆಗ ಮೇಲ್ಕಂಡ ಮುನಿನರಸಪ್ಪ ಹಾಗೂ ಅವರ ಕಡೆಯವರಾದ ನಾರಾಯಣಸ್ವಾಮಿ ಬಿನ್ ಚಿಕ್ಕ ಹನುಮಂತಪ್ಪ, ನಾಗವೇಣಿ ಕೊಂ ಮೂರ್ತಿ, ಆಂಜಿನಮ್ಮ ಕೊಂ ರಾಜಣ್ಣ, ಕಾವ್ಯಮ್ಮ ಕೊಂ ನಾರಾಯಣಸ್ವಾಮಿ, ಆನಂದಮ್ಮ ಕೊಂ ಆಂಜಿ ರವರು ಅಕ್ರಮ ಗುಂಪು ಕಟ್ಟಿಕೊಂಡು ತನ್ನ ಮೇಲೆ ಜಗಳ ತೆಗೆದು ಅವಾಶ್ಚ ಶಬ್ದಗಳಿಂದ ಬೈದು ಆ ಪೈಕಿ ನಾರಾಯಣಸ್ವಾಮಿ ರವರು ಕೈ ಗಳಿಂದ ಮೈ ಮೇಲೆ ಹೊಡೆದು ಅಲ್ಲಿಯೇ ಬಿದ್ದಿದ್ದ ಕಲ್ಲನ್ನು ತೆಗೆದುಕೊಂಡು ತನ್ನ ಹಣೆಗೆ ಹೊಡೆದು ರಕ್ತಗಾಯ ಪಡಿಸಿದನು. ಸದರಿ ಗಲಾಟೆಯ ಶಬ್ದವನ್ನು ಕೇಳಿಸಿಕೊಂಡು ತನ್ನ ಅಕ್ಕಂದಿರಾದ ಆಂಜಿನಮ್ಮ ಕೊಂ ನರಸಿಂಹಮೂರ್ತಿ, ಮುನಿರತ್ನಮ್ಮ ಕೊಂ ರಾಮು ಹಾಗೂ ತನ್ನ ಅತ್ತಿಗೆಯಾದ ಮಂಜುಳ ಕೊಂ ಮುನಿರಾಜು ರವರು ಜಗಳ ಬಿಡಿಸಲು ಬಂದಿದ್ದು ಆಗ ನಾಗವೇಣಿ, ಆಂಜಿನಮ್ಮ, ಕಾವ್ಯಮ್ಮ ಮತ್ತು ಆನಂದಮ್ಮ ರವರು ತನ್ನ ಆಕ್ಕಂದಿರು ಮತ್ತು ಅತ್ತಿಗೆಯ ಮೇಲೆ ಜಗಳ ತೆಗೆದು ಕೈಗಳಿಂದ ಮೈ ಮೇಲೆ ಹೊಡೆದು ಕೆಳಕ್ಕೆ ತಳ್ಳಿದ್ದು ತರಚಿದ ಗಾಯಗಳಾಗಿರುತ್ತೆ. ನಂತರ ಮೇಲ್ಕಂಡವರು ಅಲ್ಲಿದ್ದ ಹೋಗುವಾಗ ಇನ್ನೋಂದು ಸಲ ತಮ್ಮ ತಂಟೆಗೆ ಬಂದರೆ ನಿಮ್ಮನ್ನು ಸಾಯಿಸಿ ಬಿಡುವುದಾಗಿ ಪ್ರಾಣ ಬೆದರಿಕೆ ಹಾಕಿರುತ್ತಾರೆ. ಆದ್ದರಿಂದ ಮೇಲ್ಕಂಡವರ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ನೀಡಿದ ಹೇಳಿಕೆಯ ದೂರಾಗಿರುತ್ತೆ.
2. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.94/2020 ಕಲಂ. 143-147-148-323-324-504-506 ರೆ/ವಿ 149 ಐ.ಪಿ.ಸಿ :-
ದಿನಾಂಕ:15/02/2020 ರಂದು ಮದ್ಯಾಹ್ನ 2:00 ಗಂಟೆಗೆ ಚಿಂತಾಮಣಿ ಸರ್ಕಾರಿ ಆಸ್ವತ್ರೆಯಿಂದ ಬಂದ ಮೆಮೋವನ್ನು ಪಡೆದು ಆಸ್ಪತ್ರೆಗೆ ಹೋಗಿ ಗಾಯಾಳು ನಾರಾಯಣಸ್ವಾಮಿ ಬಿನ್ ಲೇಟ್ ಚಿಕ್ಕಹನುಮಪ್ಪ, 45 ವರ್ಷ, ಆದಿ ಕರ್ನಾಟಕ ಜನಾಂಗ, ಜಿರಾಯ್ತಿ, ಅಂಬೇಡ್ಕರ್ ನಗರ, ಕೈವಾರ ಗ್ರಾಮ, ಚಿಂತಾಮಣಿ ತಾಲ್ಲೂಕು ರವರ ಹೇಳಿಕೆಯನ್ನು ಪಡೆದುಕೊಂಡು ಮದ್ಯಾಹ್ನ 2:45 ಗಂಟೆಗೆ ಠಾಣೆಗೆ ವಾಪಸ್ಸಾಗಿ ದಾಖಲಿಸಿಕೊಂಡ ಗಾಯಾಳುವಿನ ಹೇಳಿಕೆಯ ದೂರಿನ ಸಾರಾಂಶವೇನೆಂದರೆ, ದಿನಾಂಕ:15/02/2020 ರಂದು ಬೆಳಿಗ್ಗೆ 08.00 ಗಂಟೆ ಸಮಯದಲ್ಲಿ ತಮ್ಮ ಗ್ರಾಮದ ನರಸಮ್ಮ ಕೋಂ ಮುನಿಶಾಮಪ್ಪ ಮತ್ತು ಲಕ್ಷ್ಮಮ್ಮ ಕೋಂ ಲೇಟ್ ಆಂಜಿನಪ್ಪ ರವರು ಪಿಟ್ ಗುಣಿ ತೆಗೆಯುವ ವಿಚಾರದಲ್ಲಿ ಜಗಳ ಮಾಡಿಕೊಳ್ಳುತ್ತಿದ್ದು, ತಾನು ಸ್ಥಳಕ್ಕೆ ಹೋಗಿ ಇಬ್ಬರಿಗೂ ಜಗಳ ಮಾಡಿಕೊಳ್ಳದಂತೆ ಸಮಾಧಾನ ಮಾಡಿ ತನ್ನ ಮನೆಯ ಬಳಿ ಬಂದು ನಂತರ ತೋಟದ ಬಳಿ ಹೋಗಿದ್ದಾಗ ಬೆಳಿಗ್ಗೆ 11.30 ಗಂಟೆ ಸಮಯದಲ್ಲಿ ತಮ್ಮ ಗ್ರಾಮದ ಅಭಿಲಾಷ್ ಬಿನ್ ಲೇಟ್ ನಾರಾಯಣಸ್ವಾಮಿ ರವರು ತನಗೆ ಪೋನ್ ಮಾಡಿ ಲಕ್ಷ್ಮಮ್ಮ ಮತ್ತು ಅವರ ಕಡೆಯವರು ನಿಮ್ಮ ಮನೆಯ ಬಳಿ ಬಂದು ಗಲಾಟೆ ಮಾಡುತ್ತಿರುವುದಾಗಿ ತಿಳಿಸಿದ್ದು ತಕ್ಷಣ ತಾನು ತಮ್ಮ ಮನೆಯ ಬಳಿ ಬಂದಾಗ ಮೇಲ್ಕಂಡ ಲಕ್ಷ್ಮಮ್ಮ ಕೋಂ ಲೇಟ್ ಆಂಜಿನಪ್ಪ, ಅವರ ಕಡೆಯವರಾದ ಅಂಜನ್ ಕುಮಾರ್ ಬಿನ್ ಆಂಜಿನಪ್ಪ, ಅಂಜನ್ ಕುಮಾರ್ ರವರ ಹೆಂಡತಿ, ಮುನಿರಾಜು ಬಿನ್ ಲೇಟ್ ಆಂಜಿನಪ್ಪ, ಆಂಜಿನಮ್ಮ ಕೋಂ ಮೂರ್ತಿ, ಮುನಿರತ್ನಮ್ಮ ಮತ್ತು ಇತರರು ಅಕ್ರಮ ಗುಂಪುಕಟ್ಟಿಕೊಂಡು ತಮ್ಮ ಕಡೆಯವರಾದ ನಾಗವೇಣಿ ಕೋಂ ಮೂರ್ತಿ, ಆನಂದಮ್ಮ ಕೋಂ ಆಂಜಿನಪ್ಪ, ಆಂಜಿನಮ್ಮ ಕೋಂ ರಾಜಣ್ಣ ರವರ ಮೇಲೆ ಜಗಳ ತೆಗೆದು ಅವಾಚ್ಯ ಶಬ್ದಗಳಿಂದ ಬೈದು, ಕೈಗಳಿಂದ ಮೈ ಮೇಲೆ ಹೊಡೆದು ನೋವನ್ನುಂಟು ಮಾಡಿದ್ದು, ತಾನು ಜಗಳ ಬಿಡಿಸಲು ಹೋದಾಗ ಅಂಜನ್ ಕುಮಾರ್ ತನ್ನ ಕೈಯಲ್ಲಿದ್ದ ಕಲ್ಲಿನಿಂದ ತನ್ನ ಬಲಗಾಲಿಗೆ, ಬಲಕೈಗೆ ಹೊಡೆದು ರಕ್ತ ಗಾಯವನ್ನುಂಟು ಮಾಡಿರುತ್ತಾನೆ. ಅಂಜನ್ ಕುಮಾರ್ ರವರ ಹೆಂಡತಿ, ಲಕ್ಷ್ಮಮ್ಮ, ಮುನಿರಾಜು, ಆಂಜಿನಮ್ಮ, ಮುನಿರತ್ನಮ್ಮ ಮತ್ತು ಇತರರು ನಾಗವೇಣಿ, ಆನಂದಮ್ಮ ಮತ್ತು ಆಂಜಿನಮ್ಮ ರವರಿಗೆ ಕೈಗಳಿಂದ ಮೈ ಮೇಲೆ ಹೊಡೆದು ನೋವನ್ನುಂಟು ಮಾಡಿ, ಅವಾಚ್ಯ ಶಬ್ದಗಳಿಂದ ಬೈದು, ನಮ್ಮ ತಂಟೆಗೆ ಬಂದರೆ ನಿಮ್ಮನ್ನು ಸಾಯಿಸಿ ಬಿಡುವುದಾಗಿ ಪ್ರಾಣಬೆದರಿಕೆಯನ್ನು ಹಾಕಿರುತ್ತಾರೆ. ಗಲಾಟೆಯ ಸಮಯದಲ್ಲಿ ತನ್ನ ಬಾಬತ್ತು ಮೊಬೈಲ್ ಎಲ್ಲಿಯೋ ಬಿದ್ದು ಹೋಗಿದ್ದು, ಆನಂದಮ್ಮ ರವರ ತಾಳಿ ಬೊಟ್ಟು ಇರುವ ಕರಿಮಣಿ ಸರ ಸಹ ಎಲ್ಲಿಯೋ ಬಿದ್ದು ಹೋಗಿರುತ್ತೆ. ಆದ್ದರಿಂದ ಮೇಲ್ಕಂಡವರ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ನೀಡಿದ ಹೇಳಿಕೆಯ ದೂರಾಗಿರುತ್ತೆ.
3. ಚಿಂತಾಮಣಿ ನಗರ ಪೊಲೀಸ್ ಠಾಣೆ ಮೊ.ಸಂ.23/2020 ಕಲಂ. 317 ಐ.ಪಿ.ಸಿ :-
ದಿನಾಂಕ: 16.02.2020 ರಂದು ಚಿಂತಾಮಣಿ ನಗರದ ಸರ್ಕಾರಿ ಆಸ್ಪತ್ರೆಯ ಕರ್ತವ್ಯನಿರತ ವೈಧ್ಯದಿಕಾರಿಗಳಾದ ಸಂತೋಷ್ ಕುಮಾರ್ ರವರು ನೀಡಿದ ಲಿಖಿತ ದೂರಿನ ಸಾರಾಂಶವೆನೆಂದರೆ, ಈ ದಿನ ದಿನಾಂಕ: 16.02.2020 ರಂದು ಬೆಳಿಗ್ಗೆ 10.00 ಗಂಟೆ ಸಮಯದಲ್ಲಿ ಅಪರಿಚಿತ ಹೆಂಗಸೊಬ್ಬರು ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ಅವರಣದ ಗೇಟಿನ ಮುಂಭಾಗ ಒಂದು ಹೆಣ್ಣು ಮಗುವನ್ನು ಬಿಟ್ಟು ಹೋಗಿರುತ್ತಾರೆ ಈ ಘಟನೆಯನ್ನು ವೆಂಕಟೇಶ್ ಎಂಬ ವ್ಯಕ್ತಿ ನೋಡಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಪ್ರ ವ ವರದಿಯನ್ನು ದಾಖಲಿಸಿರುತ್ತೆ.
4. ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.46/2020 ಕಲಂ. 379 ಐ.ಪಿ.ಸಿ :-
ದಿನಾಂಕ 15-02-2020 ರಂದು ಬೆಳಿಗ್ಗೆ 8-00 ಗಂಟೆಸಮಯದಲ್ಲಿ ಗೌರೀಬಿದನೂರು ಗ್ರಾಮಾಂತರ ಪೊಲೀಸ್ ಠಾಣೆಯ ಪಿ.ಎಸ್.ಐ ಮೋಹನ್ .ಎನ್. ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ಈ ದಿನ ದಿನಾಂಕ 15-02-2020 ರಂದು ಬೆಳಿಗ್ಗೆ 6-00 ಸಮಯದಲ್ಲಿ ಗೌರೀಬಿದನೂರು ತಾಲ್ಲೂಕು, ಗಂಗಸಂದ್ರ ಗ್ರಾಮದ ಕೆರೆಯ ಅಂಗಳದಲ್ಲಿ ಯಾರೋ ಅಕ್ರಮವಾಗಿ ಟ್ರಾಕ್ಟರ್ ಟ್ರಾಲಿಯಲ್ಲಿ ಮರಳು ಕಳ್ಳತನವಾಗಿ ತುಂಬುತ್ತಿರುವ ಬಗ್ಗೆ ಮಾಹಿತಿ ಬಂದ ಮೇರೆಗೆ ನಾನು ಮತ್ತು ಗ್ರಾಮಾಂತರ ಪೊಲೀಸ್ ಠಾಣೆಯ ಸಿಬ್ಬಂಧಿಯಾದ ಹೆಚ್..ಸಿ-20 ಶ್ರೀನಿವಾಸರೆಡ್ಡಿ ಹಾಗು ಪಿ.ಸಿ-518 ಆನಂದ ರವರೊಂದಿಗೆ ಗಂಗಸಂದ್ರ ಗ್ರಾಮದ ಕೆರೆಯ ಅಂಗಳಕ್ಕೆ ಹೋದಾಗ, ಯಾರೋ ಟ್ರ್ಯಾಕ್ಟರ್ ಗೆ ಮರಳನ್ನು ತುಂಬಿಸುತ್ತಿದ್ದು, ನಮ್ಮನ್ನು ಮತ್ತು ಪೊಲೀಸ್ ಜೀಪನ್ನು ದೂರದಿಂದಲೇ ನೋಡಿ, ಮರಳು ತುಂಬಿರುವ ಟ್ರ್ಯಾಕ್ಟರ್ ನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿರುತ್ತಾರೆ. ಇದರ ಚಾಲಕನ ಹೆಸರು ಮತ್ತು ವಿಳಾಸ ಕೇಳಲಾಗಿ ನಂದೀಶ ಬಿನ್ ಲೇಟ್ ಗಂಗಾಧರಪ್ಪ , ಗಂಗಸಂದ್ರ ಗ್ರಾಮ, ಗೌರಿಬಿದನೂರು ತಾಲ್ಲೂಕು ಎಂದು ತಿಳಿದುಬಂದಿರುತ್ತೆ. ನಂತರ ಟ್ರ್ಯಾಕ್ಟರ್ ಬಳಿ ಹೋಗಿ ಪರಿಶೀಲಿಸಿ ನೋಡಲಾಗಿ ಅದು ಮಹೇಂದ್ರ-475 DI ಕಂಪನಿಯ ಟ್ರ್ಯಾಕ್ಟರ್ ಆಗಿರುತ್ತೆ. ಟ್ರ್ಯಾಕ್ಟರ್ ನ ಇಂಜಿನ್ ಎ.ಪಿ-21-ಎಸ್-5441 ಆಗಿರುತ್ತೆ. ಟ್ರ್ಯಾಲಿಗೆ ನೊಂದಣಿ ಸಂಖ್ಯೆ ಇರುವುದಿಲ್ಲ. ಟ್ರ್ಯಾಲಿಯಲ್ಲಿ ಬಾಡಿ ಲೆವೆಲ್ ಗೆ ಮರಳು ತುಂಬಿರುತ್ತೆ. ಮರಳು ತೆಗೆದು ಸಾಗಾಣಿಕೆಯನ್ನು ಮಾಡಲು ಸರ್ಕಾರ ನಿಷೇದಿಸಿದ್ದರೂ ಸಹಾ ಮೇಲ್ಕಂಡ ಟ್ರ್ಯಾಕ್ಟರ್ ಮತ್ತು ಟ್ರ್ಯಾಲಿಯಲ್ಲಿ ಅದರ ಮಾಲೀಕ ಹಾಗು ಚಾಲಕ ಯಾವುದೇ ಪರವಾನಗಿ ಇಲ್ಲದೇ ಕಳ್ಳತನವಾಗಿ ಖನಿಜ ಸಂಪತ್ತಾದ ಮರಳನ್ನು ಕಾಳಸಂತೆಯಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ಉದ್ದೇಶದಿಂದ ಅಕ್ರಮವಾಗಿ ಮರಳು ಕಳವು ಮಾಡಿರುತ್ತಾರೆ. ಮರಳು ತುಂಬಿದ ಟ್ರ್ಯಾಕ್ಟರ್ ಮತ್ತು ಟ್ರ್ಯಾಲಿಯನ್ನು ಬೆಳಿಗ್ಗೆ 6-30 ರಿಂದ 7-30 ಗಂಟೆಯವರೆಗೆ ಪಂಚರ ಸಮಕ್ಷಮದಲ್ಲಿ ಪಂಚನಾಮೆ ಮೂಲಕ ವಶಕ್ಕೆ ತೆಗೆದುಕೊಂಡು, ಠಾಣೆಗೆ ಬೆಳಿಗ್ಗೆ 8-00 ಗಂಟೆಗೆ ಠಾಣೆಗೆ ವಾಪಸ್ಸು ಬಂದು, ಮೇಲ್ಕಂಡ ಟ್ರ್ಯಾಕ್ಟರ್ ಮತ್ತು ಟ್ರ್ಯಾಲಿಯ ಮಾಲೀಕನ ಮತ್ತು ಚಾಲಕ ಮೇಲೆ ಕಲಂ: 379 ಐಪಿಸಿ ರೀತ್ಯಾ ಪ್ರಕರಣವನ್ನು ದಾಖಲಿಸಿ ಕಾನೂನು ಕ್ರಮ ಜರುಗಿಸಲು ಸೂಚಿಸಿದ್ದರ ಮೇರೆಗೆ ಕೇಸು ದಾಖಲಿಸಿರುತ್ತೆ.
5. ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.47/2020 ಕಲಂ. 78(3) ಕೆ.ಪಿ ಆಕ್ಟ್ :-
ದಿನಾಂಕ 11/02/2020 ರಂದು ಚಿಕ್ಕಬಳ್ಳಾಪುರ ಜಿಲ್ಲೆಯ DCB-CEN ಪೊಲಿಸ್ ಠಾಣೆಯ ಹೆಚ್.ಸಿ-192 ಶ್ರೀ ರಾಜಗೋಪಾಲ್ ರವರು ಠಾಣೆಗೆ ಹಾಜರಾಗಿ ನೀಡಿದ ವರದಿಯ ಸಾರಾಂಶವೇನೆಂದರೇ, ಈ ದಿನ ದಿನಾಂಕ: 11/02/2020 ರಂದು ಡಿ.ಸಿ.ಬಿ ಸಿಬ್ಬಂದಿರಾದ ಹೆಚ್.ಸಿ-71 ಸುಬ್ರಮಣಿ, ಹೆಚ್.ಸಿ-85 ನರಸಿಂಹ , ಹೆಚ್.ಸಿ- 208 ಗಿರೀಶ್ ರವರೊಂದಿಗೆ ಗೌರಿಬಿದನೂರು ತಾಲ್ಲೂಕಿನಲ್ಲಿ ಅಕ್ರಮ ಚಟುವಟಿಕೆಗಳ ಬಗ್ಗೆ ಮಾಹಿತಿ ಸಂಗ್ರಹಕ್ಕಾಗಿ ಗಸ್ತಿನಲ್ಲಿದ್ದಾಗ ಮದ್ಯಾಹ್ನ 12-30 ಗಂಟೆಯ ಸಮಯದಲ್ಲಿ ಡಿ. ಪಾಳ್ಯ ಕ್ರಾಸ್ ನಲ್ಲಿ ಗಸ್ತಿನಲ್ಲಿದ್ದಾಗ ಬಂದ ಖಚಿತ ಬಾತ್ಮಿಯ ಮೇರೆಗೆ ಗೌರಿಬಿದನೂರು ತಾಲ್ಲೂಕು, ವಾಟದಹೊಸಹಳ್ಳಿ ಗ್ರಾಮದಲ್ಲಿರುವ ಅಶ್ವತ್ಥಪ್ಪ ಬಿನ್ ಲೇಟ್ ಪೆದ್ದನ್ನ ರವರ ಮನೆಯ ಪಕ್ಕದಲ್ಲಿ ಇರುವ ಸಾರ್ವಜನಿಕ ರಸ್ತೆಯಲ್ಲಿ ಕಾನೂನು ಬಾಹಿರವಾಗಿ ಮಟ್ಕಾ ಜೂಜಾಟ ಆಡುತ್ತಿದ್ದವರ ಮೇಲೆ ದಾಳಿ ಮಾಡಿ ಅಶ್ವತ್ಥಪ್ಪ ಬಿನ್ ಲೇಟ್ ಪೆದ್ದನ್ನ 42 ವರ್ಷ,ನಾಯಕರು, ವ್ಯಾಪಾರ, ವಾಸ ವಾಟದಹೊಸಹಳ್ಳಿ ಗ್ರಾಮ, ಗೌರಿಬಿದನೂರು ತಾಲ್ಲೂಕು ರವರನ್ನು ವಶಕ್ಕೆ ಪಡೆದು ಜೂಜಾಟಕ್ಕೆ ಬಳಸಿದ್ದ 1) 01 ಮಟ್ಕಾ ಚೀಟಿ, 2) ಒಂದು ಬಾಲ್ ಪಾಯಿಂಟ್ ಪೆನ್ 3) 2240/- ರೂ ಹಣ, ನ್ನು ಪಂಚರ ಸಮಕ್ಷಮ ಅಮಾನತ್ತು ಪಡಿಸಿಕೊಂಡಿರುತ್ತೆ ಮೇಲ್ಕಂಡ ಮಾಲು ಮತ್ತು ಆರೋಪಿಯ ವಿರುದ್ದ ಕಾನೂನು ಕ್ರಮ ಕೈಗೊಳ್ಳಲು ಕೋರಿ ಠಾಣೆಗೆ ಹಾಜರಾಗಿ ನೀಡಿದ್ದರ ಮೇರೆಗೆ ದೂರು ದಾಖಲಿಸಿರುತ್ತೆ. ನಂತರ ಘನ ನ್ಯಾಯಾಲಯದ ಅನುಮತಿಯನ್ನು ಪಡೆದುಕೊಂಡು ಪ್ರಕರಣವನ್ನು ದಾಖಲಿಸಿರುತ್ತೆ.
6. ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.48/2020 ಕಲಂ. 15(ಎ) ಕೆ.ಇ ಆಕ್ಟ್ :-
ದಿನಾಂಕ 13/02/2020 ರಂದು ಬೆಳಗ್ಗೆ 11-00 ಗಂಟೆಯಲ್ಲಿ ಪಿರ್ಯಾಧಿದಾರರಾದ ಪೆಕ್ಟರ್ ಶ್ರೀ ಎನ್ ರಾಜಣ್ಣ, ಪಿ.ಐ, DCB-CEN ಪೊಲೀಸ್ ಠಾಣೆ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿ ಸಾರಾಂಶವೇನೆಂದರೆ- ಈ ದಿನ ಗೌರಿಬಿದನೂರು ತಾಲ್ಲೂಕಿನಲ್ಲಿ ಅಕ್ರಮ ಚಟುವಟಿಕೆಗಳ ಬಗ್ಗೆ ಮಾಹಿತಿ ಸಂಗ್ರಹಣೆಯ ಕರ್ತವ್ಯದಲ್ಲಿದ್ದಾಗ ನಮಗೆ ಬಂದ ಖಚಿತ ಮಾಹಿತಿ ಮೇರೆಗೆ ಜೀಲಾಕುಂಟೆ ಗ್ರಾಮದ ಜೆ.ಜಿ ರಾಜಪ್ಪ ಬಿನ್ ಲೇಟ್ ಗಂಗಪ್ಪ, 45 ವರ್ಷ, ಆದಿ ಕರ್ನಾಟಕ ಜನಾಂಗ, ಚಿಲ್ಲರೆ ಅಂಗಡಿ ವ್ಯಾಪಾರ, ರವರು ಯಾವುದೇ ಪರವಾನಗಿ ಇಲ್ಲದೆ ಮದ್ಯಸೇವನೆ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿದ್ದು ಆತನನ್ನು ವಶಕ್ಕೆ ಪಡೆದು ಸ್ಥಳದಲ್ಲಿದ್ದ 1) 23 ಮದ್ಯ ತುಂಬಿರುವ 90 ಎಂ ಎಲ್ ಹೈರ್ವಾಡ್ಸ್ ಚೀರ್ಸ್ ವಿಸ್ಕಿ ಟೆಟ್ರಾಪಾಕೇಟ್ ಗಳು ಇವುಗಳ ಬೆಲೆ 698 ರೂ ಆಗಿರುತ್ತೆ. 2) ಎರಡು ಖಾಲಿಯಾಗಿರುವ 90 ಎಂ ಎಲ್ ಹೈರ್ವಾಡ್ಸ್ ಚೀರ್ಸ್ ವಿಸ್ಕಿಯಾ ಟೆಟ್ರಾಪಾಕೇಟ್ ಗಳು 3) ಎರಡು ಪ್ಲಾಸ್ಟಿಕ್ ಗ್ಲಾಸ್ಗಳು 4) ಒಂದು ಲೀಟರ್ ಖಾಲಿ ನೀರಿನ ಬಾಟಲ್ ಗಳನ್ನು ವಶಪಡಿಸಿಕೊಂಡಿದ್ದು ಮುಂದಿನ ಕ್ರಮಕ್ಕಾಗಿ ನಿಮ್ಮ ವಶಕ್ಕೆ ನೀಡಿದ್ದು ಆರೋಪಿತನ ವಿರುದ್ದ ಕ್ರಮ ಜರುಗಿಸಲು ಕೋರಿದ್ದರ ಮೇರೆಗೆ ಎನ್.ಸಿ.ಆರ್, ದಾಖಲಿಸಿಕೊಂಡು ನಂತರ ಘನ ನ್ಯಾಯಾಲಯದ ಅನುಮತಿಯನ್ನು ಪಡೆದುಕೊಂಡು ಪ್ರಕರಣವನ್ನು ದಾಖಲಿಸಿರುತ್ತೆ.
7. ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.49/2020 ಕಲಂ. 15(ಎ) ಕೆ.ಇ ಆಕ್ಟ್ :-
ಪಿರ್ಯಾಧಿದಾರರಾದ ಪೆಕ್ಟರ್ ಶ್ರೀ ಎನ್ ರಾಜಣ್ಣ, ಪಿ.ಐ, DCB-CEN ಪೊಲೀಸ್ ಠಾಣೆ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿ ಸಾರಾಂಶವೇನೆಂದರೆಈ ದಿನ ದಿನಾಂಕ: 14/02/2020 ರಂದು ಸಂಜೆ 4-00 ಗಂಟೆಯಲ್ಲಿ ಗೌರಿಬಿದನೂರು ತಾಲ್ಲೂಕು ಕಸಬಾ ಹೋಬಳಿ ಕುಡುಮಲಕುಂಟೆ ಗ್ರಾಮದ ಕಡೆ ಕಾನೂನು ಬಾಹಿರ ಚಟುವಟಿಕೆಗಳ ಬಗ್ಗೆ ಮಾಹಿತಿ ಸಂಗ್ರಹಣೆಯಲ್ಲಿದ್ದಾಗ ಬಾತ್ಮಿದಾರರಿಂದ ಬಂದ ಖಚಿತ ಮಾಹಿತಿಯ ಮೇರೆಗೆ ಹುಣಸೇನಹಳ್ಳಿ ಗ್ರಾಮದಲ್ಲಿ ಯಾರೋ ತನ್ನ ಮನೆಯ ಮುಂದಿನ ಜಾಗದಲ್ಲಿ ಸಾರ್ವಜನಿಕರಿಗೆ ಮಧ್ಯಸೇವನೆ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದಾಗಿ ಖಚಿತ ಮಾಹಿತಿ ಬಂದ ಮೇರೆಗೆ, ಪಿ.ಎಸ್.ಐ ಶ್ರೀ. ಶರತ್ ಕುಮಾರ್ , ಎ.ಎಸ್.ಐ ಶ್ರೀನಿವಾಸ ಹೆಚ್.ಸಿ-85 ನರಸಿಂಹ , ಹೆಚ್.ಸಿ-192 ರಾಜಗೋಪಾಲ್ ಹಾಗೂ ಜೀಪಿನ ಚಾಲಕ ಎ.ಪಿ.ಸಿ -138 ಮಹಬೂಬ್ ಬಾಷ ರವರೊಂದಿಗೆ ಸರ್ಕಾರಿ ಜೀಪ್ ಸಂಖ್ಯೆ: ಕೆ.ಎ-40, ಜಿ-270 ರಲ್ಲಿ ಹುಣಸೇನಹಳ್ಳಿ ಗ್ರಾಮದಲ್ಲಿ ಹೋಗಿ ಅಲ್ಲಿ, ಪಂಚಾಯ್ತಿದಾರರನ್ನು ಕರೆದುಕೊಂಡು ಮಾಹಿತಿ ಇದ್ದ ಸ್ಥಳಕ್ಕೆ ಸಂಜೆ 4-30 ಗಂಟೆಗೆ ನಡೆದುಕೊಂಡು ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಯಾರೋ ಆಸಾಮಿಗಳು ಮನೆಯ ಮುಂದಿನ ಜಾಗದಲ್ಲಿ ಮದ್ಯ ಸೇವನೆ ಮಾಡುತ್ತಿದ್ದು ಸಮವಸ್ತ್ರದಲ್ಲಿದ್ದ ನಮ್ಮನ್ನು ಕಂಡು ಮಧ್ಯಪಾನ ಮಾಡುತ್ತಿದ್ದವರು ಓಡಿಹೋಗಿರುತ್ತಾರೆ. ಪಂಚರ ಸಮಕ್ಷಮ ಸದರಿ ಸ್ಥಳವನ್ನು ಪರಿಶೀಲಿಸಿಲಾಗಿ 1) 90 ಎಂ.ಎಲ್ ಸಾಮರ್ಥ್ಯದ HAY WARDS CHEERS WHISKY ಯ ವಿಸ್ಕಿ ಯ ಯ 02ಖಾಲಿ ಟೆಟ್ರಾ ಪಾಕೆಟ್ ಗಳು 2) ಎರಡು ಖಾಲಿ ಪ್ಲಾಸ್ಟಿಕ್ ಗ್ಲಾಸ್ ಗಳು 3) ಒಂದು ಲೀಟರ್ ನ ಒಂದು ಖಾಲಿ ವಾಟರ್ ಬಾಟಲ್ 4) 90 ಎಂ.ಎಲ್.ಸಾಮರ್ಥ್ಯದ HAY WARDS CHEERS WHISKY ಯ ವಿಸ್ಕಿ ಯ 24 ಟೆಟ್ರಾ ಪಾಕೆಟ್ ಗಳು ಇದ್ದು ಇವುಗಳ ಒಟ್ಟು ಸಾಮರ್ಥ್ಯ 2 ಲೀಟರ್ 160 ಎಂ.ಎಲ್. ಆಗಿರುತ್ತೆ. ಇವುಗಳ ಒಟ್ಟು ಬೆಲೆ 727 /- ರೂ.ಗಳಾಗಿರುತ್ತೆ. ಸದರಿ ಸ್ಥಳದಲ್ಲಿ ಮದ್ಯ ಸೇವನೆ ಮಾಡಲು ಸ್ಥಳವಕಾಶ ಮಾಡಿಕೊಟ್ಟವರ ಹೆಸರು ವಿಳಾಸ ಕೇಳಲಾಗಿ, ಶ್ರೀಮತಿ ಇಂದಿರಮ್ಮ ಕೊಂ ಗಂಗಾಧರಪ್ಪ, 58 ವರ್ಷ, ಸಾದರ ಗೌಡರು, ಗೃಹಿಣಿ, ವಾಸ ಹುಣಸೇನಹಳ್ಳಿ ಗ್ರಾಮ, ಗೌರಿಬಿದನೂರು ತಾಲ್ಲೂಕು ಎಂದು ತಿಳಿಸಿದ್ದು, ಸದರಿ ವ್ಯಕ್ತಿಯು ಮಧ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಡಲು ಯಾವುದೇ ಪರವಾನಗಿ ಇಲ್ಲವೆಂದು ತಿಳಿದುಬಂದಿರುತ್ತೆ. ಮದ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟವರು ಮಹಿಳೆಯಾಗಿದ್ದರಿಂದ ಸ್ಥಳದಲ್ಲಿ ಬಿಟ್ಟಿರುತ್ತೆ. ಮೇಲ್ಕಂಡ ಮಾಲುಗಳನ್ನು ಮುಂದಿನ ಕ್ರಮಕ್ಕಾಗಿ ವಶಪಡಿಸಿಕೊಂಡು, ಠಾಣೆಗೆ ಬಂದು ನಿಮ್ಮ ವಶಕ್ಕೆ ನೀಡುತ್ತಿದ್ದು ಮುಂದಿನ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲು ಸೂಚಿಸಿದ್ದರ ಮೇರೆಗೆ ಎನ.ಸಿ.ಆರ್ ದಾಖಲಿಸಿರುತ್ತೆ. ನಂತರ ಘನ ನ್ಯಾಯಾಲಯದ ಅನುಮತಿಯನ್ನು ಪಡೆದುಕೊಂಡು ಪ್ರಕರಣವನ್ನು ದಾಖಲಿಸಿರುತ್ತೆ.
8. ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.50/2020 ಕಲಂ. 15(ಎ) ಕೆ.ಇ ಆಕ್ಟ್ :-
ಪಿರ್ಯಾಧಿದಾರರಾದ ಪೆಕ್ಟರ್ ಶ್ರೀ ಎನ್ ರಾಜಣ್ಣ, ಪಿ.ಐ, DCB-CEN ಪೊಲೀಸ್ ಠಾಣೆ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿ ಸಾರಾಂಶವೇನೆಂದರೆಈ ದಿನ ದಿನಾಂಕ: 14/02/2020 ರಂದು ಸಂಜೆ 6-00 ಗಂಟೆಯಲ್ಲಿ ಗೌರಿಬಿದನೂರು ತಾಲ್ಲೂಕು ಕಸಬಾ ಹೋಬಳಿ ಹುಣಸೇನಹಳ್ಳಿ ಗ್ರಾಮದ ಕಡೆ ಕಾನೂನು ಬಾಹಿರ ಚಟುವಟಿಕೆಗಳ ಬಗ್ಗೆ ಮಾಹಿತಿ ಸಂಗ್ರಹಣೆಯಲ್ಲಿದ್ದಾಗ ಬಾತ್ಮಿದಾರರಿಂದ ಬಂದ ಖಚಿತ ಮಾಹಿತಿಯ ಮೇರೆಗೆ ಹುಣಸೇನಹಳ್ಳಿ ಗ್ರಾಮದ ಯಾರೋ ತನ್ನ ಮನೆಯ ಮುಂದಿನ ಜಾಗದಲ್ಲಿ ಸಾರ್ವಜನಿಕರಿಗೆ ಮಧ್ಯಸೇವನೆ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದಾಗಿ ಖಚಿತ ಮಾಹಿತಿ ಬಂದ ಮೇರೆಗೆ, ಪಿ.ಎಸ್.ಐ ಶ್ರೀ. ಶರತ್ ಕುಮಾರ್ , ಎ.ಎಸ್.ಐ ಶ್ರೀನಿವಾಸ ಹೆಚ್.ಸಿ-85 ನರಸಿಂಹ , ಹೆಚ್.ಸಿ-192 ರಾಜಗೋಪಾಲ್ ಹಾಗೂ ಜೀಪಿನ ಚಾಲಕ ಎ.ಪಿ.ಸಿ -138 ಮಹಬೂಬ್ ಬಾಷ ರವರೊಂದಿಗೆ ಸರ್ಕಾರಿ ಜೀಪ್ ಸಂಖ್ಯೆ: ಕೆ.ಎ-40, ಜಿ-270 ರಲ್ಲಿ ಹುಣಸೇನಹಳ್ಳಿ ಗ್ರಾಮದಲ್ಲಿ ಹೋಗಿ ಅಲ್ಲಿ, ಪಂಚಾಯ್ತಿದಾರರನ್ನು ಕರೆದುಕೊಂಡು ಮಾಹಿತಿ ಇದ್ದ ಸ್ಥಳಕ್ಕೆ ಸಂಜೆ 6-00 ಗಂಟೆಗೆ ನಡೆದುಕೊಂಡು ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಯಾರೋ ಆಸಾಮಿಗಳು ಮನೆಯ ಮುಂದಿನ ಜಾಗದಲ್ಲಿ ಮದ್ಯ ಸೇವನೆ ಮಾಡುತ್ತಿದ್ದು ಸಮವಸ್ತ್ರದಲ್ಲಿದ್ದ ನಮ್ಮನ್ನು ಕಂಡು ಮಧ್ಯಪಾನ ಮಾಡುತ್ತಿದ್ದವರು ಓಡಿಹೋಗಿರುತ್ತಾರೆ. ಪಂಚರ ಸಮಕ್ಷಮ ಸದರಿ ಸ್ಥಳವನ್ನು ಪರಿಶೀಲಿಸಿಲಾಗಿ 1) 90 ಎಂ.ಎಲ್ ಸಾಮರ್ಥ್ಯದ HAY WARDS CHEERS WHISKY ಯ ವಿಸ್ಕಿ ಯ ಯ 02ಖಾಲಿ ಟೆಟ್ರಾ ಪಾಕೆಟ್ ಗಳು 2) ಎರಡು ಖಾಲಿ ಪ್ಲಾಸ್ಟಿಕ್ ಗ್ಲಾಸ್ ಗಳು 3) ಒಂದು ಲೀಟರ್ ನ ಒಂದು ಖಾಲಿ ವಾಟರ್ ಬಾಟಲ್ 4) 90 ಎಂ.ಎಲ್.ಸಾಮರ್ಥ್ಯದ HAY WARDS CHEERS WHISKY ಯ ವಿಸ್ಕಿ ಯ 24 ಟೆಟ್ರಾ ಪಾಕೆಟ್ ಗಳು ಇದ್ದು ಇವುಗಳ ಒಟ್ಟು ಸಾಮರ್ಥ್ಯ 2 ಲೀಟರ್ 160 ಎಂ.ಎಲ್. ಆಗಿರುತ್ತೆ. ಇವುಗಳ ಒಟ್ಟು ಬೆಲೆ 727 /- ರೂ.ಗಳಾಗಿರುತ್ತೆ. ಸದರಿ ಸ್ಥಳದಲ್ಲಿ ಮದ್ಯ ಸೇವನೆ ಮಾಡಲು ಸ್ಥಳವಕಾಶ ಮಾಡಿಕೊಟ್ಟವರ ಹೆಸರು ವಿಳಾಸ ಕೇಳಲಾಗಿ, ಶ್ರೀಮತಿ ಭಾಗ್ಯಮ್ಮ ಕೊಂ ಲೇಟ್ ರಾಜಣ್ಣ, 50 ವರ್ಷ, ನಾಯಕರು, ಗೃಹಿಣಿ, ವಾಸ ಹುಣಸೇನಹಳ್ಳಿ ಗ್ರಾಮ, ಗೌರಿಬಿದನೂರು ತಾಲ್ಲೂಕು ಎಂದು ತಿಳಿಸಿದ್ದು, ಸದರಿ ವ್ಯಕ್ತಿಯು ಮಧ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಡಲು ಯಾವುದೇ ಪರವಾನಗಿ ಇಲ್ಲವೆಂದು ತಿಳಿದುಬಂದಿರುತ್ತೆ. ಮದ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟವರು ಮಹಿಳೆಯಾಗಿದ್ದರಿಂದ ಸ್ಥಳದಲ್ಲಿ ಬಿಟ್ಟಿರುತ್ತೆ. ಮೇಲ್ಕಂಡ ಮಾಲುಗಳನ್ನು ಮುಂದಿನ ಕ್ರಮಕ್ಕಾಗಿ ವಶಪಡಿಸಿಕೊಂಡು, ಠಾಣೆಗೆ ಬಂದು ನಿಮ್ಮ ವಶಕ್ಕೆ ನೀಡುತ್ತಿದ್ದು ಮುಂದಿನ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲು ಸೂಚಿಸಿದ್ದರ ಮೇರೆಗೆ ಎನ್.ಸಿ.ಆರ್ ದಾಖಲಿಸಿರುತ್ತೆ. ನಂತರ ಘನ ನ್ಯಾಯಾಲಯದ ಅನುಮತಿಯನ್ನು ಪಡೆದುಕೊಂಡು ಪ್ರಕರಣವನ್ನು ದಾಖಲಿಸಿರುತ್ತೆ.
9. ಕೆಂಚಾರ್ಲಹಳ್ಳಿ ಪೊಲೀಸ್ ಠಾಣೆ ಮೊ.ಸಂ.11/2020 ಕಲಂ. 279-337 ಐ.ಪಿ.ಸಿ :-
ದಿನಾಂಕ 15-02-2020 ರಂದು ಸಂಜೆ 05.30 ಗಂಟೆಗೆ ಹೆಚ್.ಸಿ-99 ರಾಮನಾಥರೆಡ್ಡಿ ರವರು ಠಾಣೆಗೆ ಬಂದು ಹಾಜರುಪಡಿಸಿದ ಗಾಯಾಳು ನರಸಿಂಹಮೂರ್ತಿ ಬಿನ್ ಎಸ್.ಕೆ ವೆಂಕಟರವಣಪ್ಪ, 21 ವರ್ಷ, ನಾಯಕ ಜನಾಂಗ, ಎಲೆಕ್ಟ್ರೀಷಿಯನ್ ಕೆಲಸ, ಮುರುಗಮಲ್ಲಾ ಗ್ರಾಮ, ಚಿಂತಾಮಣಿ ತಾಲ್ಲೂಕು ರವರು ನೀಡಿದ ಹೇಳಿಕೆಯ ಸಾರಾಂಶವೇನೆಂದರೆ, ತನ್ನ ಮನೆಯ ಪಕ್ಕದ ಮನೆಯ ವಾಸಿಯಾದ ಸುಬ್ರಮಣಿ ರವರ ತಂಗಿಯ ಗ್ರಾಮವಾದ ನಂದಿಗಾನಹಳ್ಳಿ ಗ್ರಾಮಕ್ಕೆ ಹೋಗಿ ತನ್ನ ತಂಗಿಯ ಮನೆಯಲ್ಲಿ ಗೀಸರ್ ಅಳವಡಿಸಿ ಬಾ ಎಂದು ತಿಳಿಸಿರುತ್ತಾರೆ. ಅದರಂತೆ ತಾನು ನಂದಿಗಾನಹಳ್ಳಿ ಗ್ರಾಮಕ್ಕೆ ಹೋಗಲು ಸುಬ್ರಮಣಿ ರವರ ಬಾಬತ್ತು KA-67 E-3285 ಹೋಂಡಾ ಶೈನ್ ದ್ವಿಚಕ್ರ ವಾಹನದಲ್ಲಿ ದಿನಾಂಕ 14-02-2020 ರಂದು ರಾತ್ರಿ 07.00 ಗಂಟೆಗೆ ದೊಡ್ಡಕರಕಮಾಕಲಹಳ್ಳಿ ಗ್ರಾಮವನ್ನು ಬಿಟ್ಟು ವೇಮನಾರಾಯಣಪ್ಪ ರವರ ಜಮೀನಿನ ಪಕ್ಕದ ರಸ್ತೆಯಲ್ಲಿ ದ್ವಿಚಕ್ರ ವಾಹನವನ್ನು ಚಾಲನೆ ಮಾಡಿಕೊಂಡು ಹೋಗುತ್ತಿದ್ದಾಗ, ರಸ್ತೆಯ ಮುಂಭಾಗದಲ್ಲಿ ಬರುತ್ತಿದ್ದ KA-50 L-1361 ಪಲ್ಸರ್ ದ್ವಿಚಕ್ರ ವಾಹನದ ಸವಾರ ಆಟೋವನ್ನು ಹಿಂದಿಕ್ಕಲು ತನ್ನ ದ್ವಿಚಕ್ರ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ತನ್ನ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆಸಿದ ಪರಿಣಾಮ ತಾನು ದ್ವಿಚಕ್ರ ವಾಹನದ ಸಮೇತ ರಸ್ತೆಯಲ್ಲಿ ಕೆಳಕ್ಕೆ ಬಿದ್ದಿರುತ್ತೇನೆ. ಕೆಳಕ್ಕೆ ಬಿದ್ದಾಗ ತನ್ನ ಬಲಕಾಲಿನ ಹೆಬ್ಬೆರಳಿಗೆ ರಕ್ತಗಾಯವಾಗಿದ್ದು, ತಲೆಗೆ ಹಾಗೂ ಎದೆ ಭಾಗಕ್ಕೆ ತರಚಿದ ಗಾಯವಾಗಿರುತ್ತದೆ. ತನಗೆ ಅಪಘಾತ ಪಡಿಸಿದ ಪಲ್ಸರ್ ವಾಹನದ ಸವಾರನಿಗೆ ಹಾಗೂ ಅದರ ಹಿಂಬದಿ ಸವಾರನಿಗೂ ಗಾಯಗಳಾಗಿರುತ್ತದೆ. ಗಾಯಗೊಂಡಿದ್ದ ನಮ್ಮಗಳನ್ನು ಅಲ್ಲಿಯೇ ಇದ್ದ ಸಾರ್ವಜನಿಕರು ಹಾಗೂ ಅಲ್ಲಿಗೆ ಬಂದ ತನ್ನ ಅಣ್ಣ ಅನಿಲ್ ಕುಮಾರ್ ಹಾಗು ಚಿಕ್ಕಕರಕಮಾಕಲಹಳ್ಳಿ ಗ್ರಾಮದ ಅಭಿಶೇಖರ್ ರವರು ಯಾವುದೋ ವಾಹನದಲ್ಲಿ ತಮ್ಮನ್ನು ಚಿಕಿತ್ಸೆಗೆ ಚಿಂತಾಮಣಿ ಸರ್ಕಾರಿ ಆಸ್ವತ್ರೆಗೆ ದಾಖಲಿಸಿದರು.ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ತನಗೆ ಡಿಕ್ಕಿ ಹೊಡೆಸಿ ಅಪಘಾತ ಪಡಿಸಿದ KA-50 L-1361 ದ್ವಿಚಕ್ರ ವಾಹನದ ಸವಾರನ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ನೀಡಿದ ಹೇಳಿಕೆಯ ಸಾರಾಂಶವಾಗಿರುತ್ತೆ.
9. ಕೆಂಚಾರ್ಲಹಳ್ಳಿ ಪೊಲೀಸ್ ಠಾಣೆ ಮೊ.ಸಂ.12/2020 ಕಲಂ. 323-324-504-506 ರೆ/ವಿ 34 ಐ.ಪಿ.ಸಿ :-
ದಿನಾಂಕ 15-02-2020 ರಂದು ರಾತ್ರಿ 08.00 ಗಂಟೆಗೆ ಸಿ.ಪಿ.ಸಿ-484 ಶಿವಣ್ಣ ರವರು ಠಾಣೆಗೆ ಬಂದು ಹಾಜರುಪಡಿಸಿದ ಗಾಯಾಳು ಎಂ ಚೌಡರೆಡ್ಡಿ ಬಿನ್ ಲೇಟ್ ಚಿಕ್ಕ ಮಾರಪ್ಪ, 68 ವರ್ಷ, ವಕ್ಕಲಿಗರು, ಜಿರಾಯ್ತಿ, ಗುಟ್ಟುರು ಗ್ರಾಮ, ಚಿಂತಾಮಣಿ ತಾಲ್ಲೂಕು ರವರು ನೀಡಿದ ಹೇಳಿಕೆ ಸಾರಾಂಶವೇನೆಂದರೆ, ತನ್ನ ಗ್ರಾಮದ ಸರ್ವೆ ನಂ 12 ರಲ್ಲಿ 1 ಎಕರೆ 27 ಗುಂಟೆ ಜಮೀನು ಇದ್ದು ಪಕ್ಕದಲ್ಲಿ ತನ್ನದೆ ಗ್ರಾಮದ ಜಿ.ಎಸ್ ಶ್ರೀನಿವಾಸರೆಡ್ಡಿ ರವರ ಬಾಬತ್ತು ಜಮೀನು ಇರುತ್ತದೆ. ಎರಡು ಜಮೀನುಗಳ ನಡುವೆ ಜಾಲಿ ಮರಗಳಿದ್ದು ಈ ವಿಚಾರದಲ್ಲಿ ತಕರಾರು ಆಗಿದ್ದರಿಂದ ಸರ್ವೆ ಮಾಡಿ ನಿಮಗೆ ಬಂದಲ್ಲಿ ಮರ ಕಡಿಯಲು ಅವರಿಗೆ ತಿಳಿಸಿರುತ್ತೇನೆ. ಹೀಗಿರುವಾಗ ದಿನಾಂಕ 15-02-2020 ರಂದು ಮದ್ಯಾಹ್ನ 01.15 ಗಂಟೆ ಸಮಯದಲ್ಲಿ ತಮ್ಮ ಗ್ರಾಮದ ಜಿ.ಎಸ್ ಶ್ರೀನಿವಾಸರೆಡ್ಡಿ ಬಿನ್ ಲೇಟ್ ಮದ್ದಿರೆಡ್ಡಿ, ಜಿ.ಎಸ್ ಮಧು ಬಿನ್ ಜಿ.ಎಸ್ ಶ್ರೀನಿವಾಸರೆಡ್ಡಿ, ಅಶ್ವಿನಿ ಕೋಂ ಮಧು, ನರಸಮ್ಮ ಕೋಂ ಜಿ.ಎಸ್ ಶ್ರೀನಿವಾಸರೆಡ್ಡಿ ರವರು ಸಮಾನ ಉದ್ದೇಶದಿಂದ ಏಕಾಏಕಿ ದೌರ್ಜನ್ಯದಿಂದ ಜಾಲಿ ಮರಗಳನ್ನು ಕಡಿದಿರುತ್ತಾರೆ. ಈ ಬಗ್ಗೆ ತಾನು ಕೇಳಲು ಹೋದಾಗ ಎಲ್ಲರೂ ಸೇರಿಕೊಂಡು ಲೋಪರ್ ನನ್ನ ಮಗನೇ, ನಿನ್ನಮ್ಮನೇ ಕೇಯ್ಯಾ ಎಂದು ಅವಾಚ್ಯವಾಗಿ ಬೈಯುತ್ತಾ ಈ ನನ್ನ ಮಗನನ್ನು ಸಾಯಿಸುವವರೆಗೆ ಬಿಡಬಾರದು ಎಂದು ಮಧು ಅಲ್ಲೆ ಇದ್ದ ಮಚ್ಚಿನಿಂದ ತಲೆಯ ಎಡಭಾಗಕ್ಕೆ ಹೊಡೆದು ರಕ್ತಗಾಯ ಪಡಿಸಿದನು. ಆಗ ಉಳಿದ ಮೂರು ಜನರು ತನ್ನನ್ನು ಬೀಗಿಯಾಗಿ ಹಿಡಿದುಕೊಂಡಿದ್ದರು. ನಂತರ ಉಳಿದ ಮೂರು ಜನರು ಕೈಗಳಿಂದ ಮೇಮೇಲೆ ಹೊಡೆದು ಮೂಗೇಟು ಉಂಟು ಮಾಡಿದರು, ಹಾಗೂ ಕೆಳಗೆ ತಳ್ಳಿ ಕಾಲುಗಳಿಂದ ಒದ್ದಿದ್ದರಿಂದ ಬಲಭುಜ ಮತ್ತು ಸೊಂಟಕ್ಕೆ ಮೂಗೇಟು ಆಗಿರುತ್ತದೆ. ಜೋರಾಗಿ ಕಿರುಚಿಕೊಂಡಾಗ ತನ್ನ ಹೆಂಡತಿ ರಾಮಲಕ್ಷ್ಮಮ್ಮ ಮತ್ತು ಸೊಸೆ ಸ್ವಾತಿ ರವರು ಬರಲಾಗಿ ಮೇಲ್ಕಂಡವರು ತನ್ನನ್ನು ಬಿಟ್ಟು ಈಗ ತಪ್ಪಿಸಿಕೊಂಡಿದ್ದೀಯಾ ನಿನ್ನನ್ನು ಸಾಯಿಸುತ್ತೇನೆ ಎಂದು ಪ್ರಾಣ ಬೆದರಿಕೆ ಹಾಕಿರುತ್ತಾರೆ. ನಂತರ ವಿಚಾರ ತಿಳಿದು ಸ್ಥಳಕ್ಕೆ ಬಂದ ತನ್ನ ಅಳಿಯ ಕೆ.ಗೊಲ್ಲಹಳ್ಳಿ ಗ್ರಾಮದ ಚೌಡರೆಡ್ಡಿ ಮತ್ತು ಚಲಪತಿ ರವರು ಉಪಚರಿಸಿ ಚಿಕಿತ್ಸೆಗೆ ಯಾವುದೋ ವಾಹನದಲ್ಲಿ ಚಿಂತಾಮಣಿ ಸರ್ಕಾರಿ ಆಸ್ವತ್ರೆ ದಾಖಲಿಸಿರುತ್ತಾರೆ. ಮೇಲ್ಕಂಡವರ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ನೀಡಿದ ದೂರಿನ ಹೇಳಿಕೆ ಸಾರಾಂಶವಾಗಿರುತ್ತೆ.
10. ಶಿಡ್ಲಘಟ್ಟ ಪುರ ಪೊಲೀಸ್ ಠಾಣೆ ಮೊ.ಸಂ.27/2020 ಕಲಂ. 143-144-145-146-147-323-354-420 ರೆ/ವಿ 34 ಐ.ಪಿ.ಸಿ :-
ದಿನಾಂಕ.15.02.2020 ರಂದು ಸಂಜೆ 5.30 ಗಂಟೆಗೆ ಪಿ.ಸಿ.129 ರವರ ಮೂಲಕ ಶಿಡ್ಲಘಟ್ಟ ಘನ ನ್ಯಾಯಾಲಯದ ಎಂ.ಟಿ.ನಂ.26/2020 ರ ದೂರನ್ನು ಪಡೆದಿದ್ದರ ಸಾರಾಂಶವೇನಂದರೆ, ಪಿರ್ಯಾದಿ ಕೆ.ಎನ್.ಲಕ್ಷ್ಮೀ ಬಿನ್ ಕೆ.ಎನ್.ನಟರಾಜ ರವರು ತಾತನಾದ ಲೇಟ್ ಕೆ.ವೈ.ನರಸಿಂಹಯ್ಯ ರವರಿಗೆ ಇಬ್ಬರು ಗಂಡು ಮಕ್ಕಳಿದ್ದು, 1ನೇ ಕೆ.ಎನ್.ವೆಂಕಟೇಶ್ ಮತ್ತು 2ನೇ ಕೆ.ಎನ್.ನಟರಾಜ್ ಆಗಿರುತ್ತಾರೆ. ಪಿರ್ಯಾದಿದಾರರ ತಾತನ ಹೆಸರಿನಲ್ಲಿರುವ ಶಿಡ್ಲಘಟ್ಟ ತಾಲ್ಲೂಕು ನಲ್ಲಿಮರದಹಳ್ಳಿ ಗ್ರಾಮಕ್ಕೆ ಸೇರಿದ ಸ.ನಂ.128/1 ರ ಜಮೀನು ನಮ್ಮ ತಂದೆ ಕೆ.ಎನ್.ನಟರಾಜ ರವರ ಕಡೆಯಿಂದ ದಿನಾಂಕ.16.07.2018 ರಂದು 1ನೇ ಆರೋಪಿ ಸೋಮಶೇಖರೆಡ್ಡಿ ರವರು ತೆಗೆದುಕೊಳ್ಳುವುದಾಗಿ ನಮ್ಮಗಳ ಮುಂದೆ ಒಪ್ಪಂದ ಮಾಡಿಕೊಂಡು ದಿನಾಂಕ.17.07.2018 ರಂದು ರಿಜಿಸ್ಟರ್ ಇಲ್ಲದ ಕ್ರಯದ ಕರಾರು ಪತ್ರ ಮಾಡಿಕೊಂಡು ಆ ದಿನ ಓರಿಯಂಟಲ್ ಬ್ಯಾಂಕ್ ಕಾಮಸರ್ು, ಯಲಹಂಕ ಬ್ಯಾಂಕಿನ 070666 ನಂಬರಿನ 25,00,000/-ರೂಗಳ ಚೆಕ್ ದಿನಾಂಕ.20.08.2018 ಮತ್ತು 070667 ನಂಬರಿನ 51,60,000/-ರೂಗಳ ಚೆಕ್ ದಿನಾಂಕ.20.10.2018 ರ ಗಳನ್ನು ನೀಡಿರುತ್ತಾರೆ. ನಂತರ 1ನೇ ಆರೋಪಿ ಅವರ ಕುಟುಂಬದವರೊಂದಿಗೆ ಬಂದು ನಗದು ಹಣ ಕೊಟ್ಟ ನಂತರ ಸದರಿ ಚೆಕ್ ಗಳನ್ನು ವಾಪಸ್ಸು ಕೊಡಲು ಕೇಳಿಕೊಂಡಿದ್ದು, ಅದರಂತೆ ಮೇಲ್ಕಂಡ ಜಮೀನಿನನ್ನು ದಿನಾಂಕ.18.06.2018 ರಂದು ದಿನಾಂಕ.16.07.2018 ರಂದು ತಾನು ಮತ್ತು ತಂದೆ ಮತ್ತು ತಾಯಿ ಮಕ್ಕಳು ರಿಜಿಸ್ಟರ್ ಮಾಡಿಕೊಟ್ಟಿರುತ್ತೇವೆ. ಇದಾದ ನಂತರ ಮೇಲ್ಕಂಡ ಚೆಕ್ ಗಳ ಅವದಿಯೊಳಗೆ ನಗದು ಹಣವನ್ನು ಕೊಡಿ ಇಲ್ಲದಿದ್ದರೆ ಬ್ಯಾಂಕಿಗೆ ಹಾಕುತ್ತೇವೆಂದು ಕೇಳಿದಾಗ 1ನೇ ಆರೋಪಿ ಬ್ಯಾಂಕಿನಲ್ಲಿ ಹಣ ಇಲ್ಲ ಇನ್ನೂ ಸ್ವಲ್ಪ ಕಾಲಾವಕಾಶ ಕೊಡಿ ಎಂದು ಕೇಳಿಕೊಂಡು ನಗದು ಹಣವನ್ನು ಕೊಡದೆ ಹಲವು ಬಾರಿ ಮುಂದೂಡಾತ್ತಾ ಮೋಸ ಮಾಡಿಕೊಂಡು ಬಂದಿರುತ್ತಾರೆ. ಹೀಗಿರುವಾಗ ದಿನಾಂಕ.30.10.2018 ರಂದು ಶಿಡ್ಲಘಟ್ಟ ತಾಲ್ಲೂಕು ಪಲಿಚೆರ್ಲು ಗ್ರಾಮದ ಸೋಮಶೇಖರರೆಡ್ಡಿ ಮತ್ತು ಅವರ ಕಡೆಯವರು ತಮ್ಮ ಜಮೀನಿನಲ್ಲಿ ಪ್ರವೇಶ ಮಾಡುತ್ತಿದ್ದು, ಆಗ ಪಿರ್ಯಾದಿ ಮತ್ತು ಅವರ ಮನೆಯವರು ಹಣ ಕೊಡುವವರೆಗೆ ನಮ್ಮ ಜಮೀನಿನಲ್ಲಿ ಪ್ರವೇಶ ಮಾಡಬಾರದೆಂತ ತಿಳಿಸಿದರೂ ಸೋಮಶೇಖರ್ ಮತ್ತು ಅವರ ಕಡೆಯವರು ಅವಾಚ್ಯ ಶಬ್ದಗಳಿಂದ ಬೈದು ಕೈಗಳಿಂದ ಹಲ್ಲೆ ಹೊಡೆದು ಗಲಾಟೆ ಮಾಡಿರುತ್ತಾರೆಂತ, ಇದಾದ ನಂತರ ದಿನಾಂಕ.21.12.2019 ರಂದು ನ್ಯಾಯಾಲಯದಲ್ಲಿ ಸದರಿಯವರ ವಿರುದ್ದ ತಡೆಯಾಜ್ಞೆ ತಂದಿದ್ದರೂ ದಿನಾಂಕ.29.12.2019 ರಂದು ಸೋಮಶೇಖರರೆಡ್ಡಿ ಮತ್ತು ಅವರ ಕಡೆಯವರ ಜೆ.ಸಿ.ಬಿ ವಾಹನ ತಂದು ಜಮೀನಿನಲ್ಲಿ ಅಕ್ರಮ ಪ್ರವೇಶ ಮಾಡಿ ಕೆಲಸ ಮಾಡಿರುತ್ತಾರೆ. ದಿನಾಂಕ.30.12.2019 ರಂದು ಪುನಃ ಟ್ರಾಕ್ಟರ್ ತೆಗೆದುಕೊಂಡು ಬಂದು ಉಳುಮೆ ಮಾಡಿ ಸದರಿ ಜಮೀನಿಗೆ ತೊಂದರೆ ಮಾಡುತ್ತಿರುತ್ತಾರೆ. ಆದ್ದರಿಂದ ಮೇಲ್ಕಂಡ ಜಮೀನಿಗೆ ಹಣ ಕೊಡದೆ ಮೋಸ ಮಾಡಿ ಕಾನೂನು ಬಾಹಿರವಾಗಿ ಪ್ರವೇಶ ಮಾಡಿ ತೊಂದರೆ ಮಾಡುತ್ತಿರುವ ಮೇಲ್ಕಂಡವರ ಮೇಲೆ ಕಾನೂನು ಕ್ರಮ ಜರುಗಿಸಲು ಇತ್ಯಾದಿಯಾಗಿ ಸಲ್ಲಿಸಿಕೊಂಡಿರುವ ದೂರಿನ ಮೇರೆಗೆ ಠಾಣಾ ಮೊ.ಸಂ.27/2020 ಕಲಂ.420,143,144,145,146,147,323,354ರೆ/ವಿ 34 ಐಪಿಸಿ ರೀತ್ಯಾ ಪ್ರಕರಣ ದಾಖಲಿಸಿರುತ್ತೆ.
11. ಶಿಡ್ಲಘಟ್ಟ ಪುರ ಪೊಲೀಸ್ ಠಾಣೆ ಮೊ.ಸಂ.28/2020 ಕಲಂ. 324-341-420-504-506 ರೆ/ವಿ 149 ಐ.ಪಿ.ಸಿ :-
ದಿನಾಂಕ.15.02.2020 ರಂದು ಸಂಜೆ 6.30 ಗಂಟೆಗೆ ನ್ಯಾಯಾಲಯದ ಪಿ.ಸಿ.129 ರವರ ಮೂಲಕ ಶಿಡ್ಲಘಟ್ಟ ಘನ ನ್ಯಾಯಾಲಯದ ಪಿ.ಸಿ.ಆರ್.ನಂ.8/2020 ರ ದೂರನ್ನು ಪಡೆದಿದ್ದರ ಸಾರಾಂಶವೇನೆಂದರೆ, ಪಿರ್ಯಾದಿ ಸೋಮಶೇಖರರೆಡ್ಡಿ ಪಲಿಚೆರ್ಲು ಗ್ರಾಮ, ಶಿಡ್ಲಘಟ್ಟ ತಾಲ್ಲೂಕು ರವರು ಇದೇ ಶಿಡ್ಲಘಟ್ಟ ಟೌನ್ ಸಂತೋಷನಗರದಲ್ಲಿರುವ ಕೆ.ಎನ್.ನಟರಾಜು ಬಿನ್ ಕೆ.ವೈ.ನರಸಿಂಹಯ್ಯ ರವರು ಅವರ ಹೆಸರಿನಲ್ಲಿರುವ ನಲ್ಲಿಮರದಹಳ್ಳಿ ಗ್ರಾಮಕ್ಕೆ ಸೇರಿದ ಸ.ನಂ.128/12 ರಲ್ಲಿ 1 ಎಕರೆ 13 ಗುಂಟೆ ಪೈಕಿ 0.26.08 ಗುಂಟೆ ಜಮೀನು ನನಗೆ ಮಾರಾಟ ಮಾಡುವುದಾಗಿ ಒಪ್ಪಿಕೊಂಡು ದಿನಾಂಕ.18.06.2018 ರಂದು ಶಿಡ್ಲಘಟ್ಟ ಉಪ ನೊಂದಣಾಧಿಕಾರಿಗಳ ಕಚೇರಿಯಲ್ಲಿ ಕೆ.ಎನ್. ನಟರಾಜ ರವರು ಅವರ ಮೈನರ್ ಮಕ್ಕಳಾದ ಕೆ.ಎನ್.ಶಿರೀಷ ಮತ್ತು ಕೆ.ಎನ್.ಜಯಕೃಷ್ಣ ರವರ ಪರವಾಗಿ ಕ್ರಯದ ಕರಾರು ಪತ್ರ ಮಾಡಿಕೊಟ್ಟು ನೊಂದಣಿ ಮಾಡಿಕೊಟ್ಟಿರುತ್ತಾರೆ. ನಂತರ ದಿನಾಂಕ.16.07.2019 ರಂದು ಕೆ.ಎನ್.ನಟರಾಜ ರವರ ಹೆಂಡತಿ ಶ್ರೀಮತಿ. ವಿಪದ್ಮಾವತಿ ಮತ್ತು ಹಿರಿಯ ಮಕ್ಕಳಾದ ಕೆ.ಎನ್.ಲಕ್ಷ್ಮೀ ಮತ್ತು ಕೆ.ಎನ್.ಜ್ಯೋತಿ ರವರು ಸಹ ಶಿಡ್ಲಘಟ್ಟ ಉಪನೊಂದಣಾಧಿಕಾರಿಗಳ ಕಚೇರಿಯಲ್ಲಿ ಒಪ್ಪಿಗೆ ಪತ್ರ ಸಹ ಮಾಡಿಕೊಟ್ಟಿರುತ್ತಾರೆ. ಅದರಂತೆ ಮೇಲ್ಕಂಡ ಜಮೀನು ನನ್ನ ಹೆಸರಿಗೆ ಖಾತೆ ಬದಲಾವಣೆಯಾಗಿ ಪಹಣಿ, ಮುಟೇಷನ್, ಕಂದಾಯ ಪಟ್ಟಾ ರಸೀದಿ ದಾಖಲೆಗಳು ಬಂದಿರುತ್ತೆ. ಸದರಿ ಜಮೀನಿಗೆ ಹೋಗಲು 30 ಅಡಿ ರಸ್ತೆ ಸಹ ಬಿಟ್ಟುಕೊಟ್ಟಿರುತ್ತಾರೆ. ಅಂದಿನಿಂದ ನಾನೇ ಮೇಲ್ಕಂಡ ಜಮೀನುನಲ್ಲಿ ಅನುಭವದಲ್ಲಿರುತ್ತೇನೆ. ಹೀಗಿರುವಾಗ ದಿನಾಂಕ.30.11.2019 ರಂದು ನಾನು ಎಂದಿನಂತೆ ನಮ್ಮ ಜಮೀನು ನೋಡಿಕೊಂಡು ಬರಲು ಹೋಗುತ್ತಿದ್ದಾಗ ಮೇಲ್ಕಂಡವರು ನಮ್ಮ ಜಮೀನಿನಲ್ಲಿ ಹೋಗದಂತೆ ಅಡ್ಡಿಗಟ್ಟಿ ತಡೆದು ನಮಗೆ ಇನ್ನೂ ಹೆಚ್ಚಿನ ಹಣ ಕೊಡಬೇಕು ಇಲ್ಲದಿದ್ದರೆ ನಿನ್ನನ್ನು ಜಮೀನುನಲ್ಲಿ ಹೋಗಲು ಬಿಡುವುದಿಲ್ಲ ಎಂದು ನನ್ನು ಅವಾಚ್ಯ ಶಬ್ದಗಳಿಂದ ಬೈದು ವಾಪಸ್ಸು ಕಳುಹಿಸಿರುತ್ತಾರೆ. ಸದರಿವರು ಹಣ ಪಡೆದು ಜಮೀನು ಬಿಟ್ಟುಕೊಂಡದೆ ಮೋಸ ಮಾಡಿದ್ದು, ಇದರಿಂದ ಮೇಲ್ಕಂಡವರ ವಿರುದ್ದ ಶಿಡ್ಲಘಟ್ಟ ಘನ ಜೆ.ಎಂ.ಎಫ್.ಸಿ ನ್ಯಾಯಾಲಯದಲ್ಲಿ ಓ.ಎಸ್.ನಂ.446/2019 ರಂತೆ ಶಾಶ್ವತ ತಡೆಯಾಜ್ಞೆ ಅದೇಶ ಪಡೆದು ಮೇಲ್ಕಂಡವರಿಗೂ ಸಹ ಯತಾಸ್ಥಿತಿ ಕಾಪಾಡಿಕೊಂಡು ಹೋಗಲು ಸೂಚಿರುತ್ತೆ. ಅದರಂತೆ ದಿನಾಂಕ.30.12.2019 ರಂದು ಮದ್ಯಾಹ್ನ 3.30 ಗಂಟೆಯಲ್ಲಿ ಸದರಿ ಜಮೀನಿನಲ್ಲಿ ಕೆಲಸ ಮಾಡಲು ಹೋದಾಗ ಮೇಲ್ಕಂಡವರು ಉಳಿದ ಆರೋಪಿತರೊಂದಿಗೆ ಮಚ್ಚು, ದೊಣ್ಣೆ ಇತರ ಅಪಾಯಕರ ಅಯುಧಗಳನ್ನು ತೆಗೆದುಕೊಂಡು ಬಂದು ಕೈಗಳಿಂದ ಹೊಇಡೆದು ಕಾಲುಗಳಿಂದ ಹೊದ್ದು, ಅವಾಚ್ಯ ಶಬ್ದಗಳಿಂದ ಬೈದು ಪ್ರಾಣಬೆದರಿಕೆ ಹಾಕಿರುತ್ತಾರೆಂತ ಆದ್ದರಿಂದ ಮೇಲ್ಕಂಡವರ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಲು ಇತ್ಯಾದಿಯಾಗಿ ಸಲ್ಲಿಸಿಕೊಂಡಿರುವ ದೂರಿನ ಸಾರಾಂಶದ ಮೇರೆಗೆ ಠಾಣಾ ಮೊ.ಸಂ.28/2020 ಕಲಂ.341,324,420,504,506 ರೆ/ವಿ 149 ಐಪಿಸಿ ರೀತ್ಯಾ ಪ್ರಕರಣ ದಾಖಲಿಸಿರುತ್ತೆ.