ದಿನಾಂಕ :15/10/2020 ರ ಅಪರಾಧ ಪ್ರಕರಣಗಳು

  1. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.144/2020 ಕಲಂ: 379 ಐ.ಪಿ.ಸಿ:-

     ದಿನಾಂಕ;15/10/2020 ರಂದು ಬೆಳ್ಳಿಗ್ಗೆ 11-00 ಗಂಟೆಗೆ ಪಿರ್ಯಾದಿದಾರರಾದ ನಾರಾಯಣಸ್ವಾಮಿ ಬಿನ್ ಲೇಟ್ ಮುನಿಶಾಮಪ್ಪ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆನೆಂದರೆ ದಿನಾಂಕ: 05/10/2020 ರಂದು ಸಾಯಂಕಾಲ ಸುಮಾರು 4-45 ಗಂಟೆ ಸಮಯದಲ್ಲಿ ಪಿರ್ಯಾದಿಯು  ಪಟ್ರೇನಹಳ್ಳಿ ಗ್ರಾಮದ ಬಳಿ ಚಿಕ್ಕಬಳ್ಳಾಪುರ-ಶಿಡ್ಲಘಟ್ಟ ಎನ್.ಹೆಚ್-234 ರಸ್ತೆಯ ಪಕ್ಕದಲ್ಲಿರುವ ತನ್ನ ಬಾಬತ್ತು ಜಮೀನಿಗೆ ಹೋಗಲು ತನ್ನ ದ್ವಿಚಕ್ರ ವಾಹನವನ್ನು ರಸ್ತೆಯ ದಕ್ಷಿಣದ ಕಡೆ ಇರುವ ರೈಲ್ವೇ ಟ್ರ್ಯಾಕ್ ಬಳಿ ತೆಂಗಿನ ಮರದ ಕೆಳಗೆ ನಿಲ್ಲಿಸಿ ರೈಲ್ವೇ ಗೇಟ್ ದಾಟಿಕೊಂಡು ತನ್ನ ಜಮೀನಿಗೆ ಹೋಗಿ ಕೆಲಸ ಮಾಡುತ್ತಿದ್ದ ಕೂಲಿಯಾಳುಗಳನ್ನು ಮಾತನಾಡಿಸಿ ಕೊಂಡು, ಕೂಲಿ ಹಣ ನೀಡಿ ಸಂಜೆ ಸುಮಾರು 6-00 ಗಂಟೆಗೆ ತನ್ನ ಗಾಡಿ ಬಿಟ್ಟು ಹೋಗಿದ್ದ ಸ್ಥಳಕ್ಕೆ ಬಂದಿದ್ದು ಅಲ್ಲಿ ತನ್ನ ಜಮೀನಿಗೆ ಹೋಗುವಾಗ ನಿಲ್ಲಿಸಿ ಹೋಗಿದ್ದ ತನ್ನ ಬಾಬತ್ತು KA-40, EB-7221 ನೊಂದಣಿ ಸಂಖ್ಯೆಯ ಹೋಂಡಾ ಆಕ್ಷೀವಾ 4G ದ್ವಿಚಕ್ರ ವಾಹನ ಅಲ್ಲಿರಲಿಲ್ಲ. ತಾನು  ಅಲ್ಲೆ ಕುರಿ ಮೇಯಿಸುತ್ತಿದ್ದು ಅದೇ ಗ್ರಾಮದ ಚಿಕ್ಕತೋಪಣ್ಣ ಬಿನ್ ಲೇಟ್ ನಾರಾಯಣಪ್ಪ ಮತ್ತು ಪಿರ್ಯಾದಿಯ ಜಮೀನಿನ ಪಕ್ಕದ ಜಮೀನಿನವರಾದ ಮುನಿರೆಡ್ಡಿ ಬಿನ್ ನಾರಾಯಣಪ್ಪ ಎಲ್ಲರೂ ಸೇರಿ ತನ್ನ ಗಾಡಿಯನ್ನು ಸುತ್ತು ಮುತ್ತಾ ಹುಡುಕಾಡಿದ್ದು ಎಲ್ಲಿಯೂ ಗಾಡಿ ಕಾಣಿಸದೆ ಇದ್ದು  ದಿನಾಂಕ: 05/10/2020 ರಂದು ಸಾಯಂಕಾಲ 4-45 ರಿಂದ 6-00 ಗಂಟೆ ಸಮಯದಲ್ಲಿ ತನ್ನ ಜಮೀನಿನ ಬಳಿ ನಿಲ್ಲಿಸಿದ್ದ KA-40, EB-7221 ನೊಂದಣಿ ಸಂಖ್ಯೆಯ ಹೋಂಡಾ ಆಕ್ಷೀವಾ 4G ದ್ವಿಚಕ್ರ ವಾಹನವನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ. ತಾನು ದ್ವಿಚಕ್ರ ವಾಹನವನ್ನು ಎಲ್ಲಾ ಕಡೆಗಳಲ್ಲಿ ಹುಡುಕಾಡುತ್ತಿದ್ದರಿಂದ ಈ ದಿನ ತಡವಾಗಿ ಠಾಣೆಗೆ ಹಾಜರಾಗಿ ದೂರನ್ನು ನೀಡುತ್ತಿದ್ದು, ತನ್ನ ದ್ವಿ ಚಕ್ರ ವಾಹನವನ್ನು ಮತ್ತು ಕಳ್ಳತನ ಮಾಡಿಕೊಂಡು ಹೋಗಿರುವ ಕಳ್ಳರನ್ನು ಪತ್ತೆ ಮಾಡಿ ಕಾನೂನು ರೀತಿಯ ಕ್ರಮ ಜರುಗಿಸಲು ಕೋರಿದರ ಮೇರೆಗೆ ಈ ಪ್ರಥಮ ವರ್ತಮಾನ ವರದಿ.

  1. ಮಂಚೇನಹಳ್ಳಿ ಪೊಲೀಸ್ ಠಾಣೆ ಮೊ.ಸಂ.232/2020 ಕಲಂ: 279,304(A) ಐ.ಪಿ.ಸಿ:-

     ದಿನಾಂಕ: 14/10/2020 ರಂದು ಸಂಜೆ 18-15 ಗಂಟೆಗೆ ಪಿರ್ಯಾದಿದಾರರಾದ ಸಿದ್ದಗಂಗಮ್ಮ ಕೋಂ ಲೇಟ್ ರಂಗಪ್ಪ, 45 ವರ್ಷ, ಗೊಲ್ಲರು, ಜಿರಾಯ್ತಿ, ವಾಸ ಚಿಕ್ಕಹೊಸಹಳ್ಳಿ ಗ್ರಾಮ, ಗೌರಿಬಿದನೂರು ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವನೆಂದರೆ, ನನ್ನ ಗಂಡ ಸುಮಾರು 4 ವರ್ಷದ ಹಿಂದೆ ಮೃತಪಟ್ಟಿರುತ್ತಾರೆ ನನಗೆ ಇಬ್ಬರು ಹೆಣ್ಣು ಮಕ್ಕಳು ಮತ್ತು ಒಂದು ಗಂಡು ಮಗ ಶಶಿಕುಮಾರ್, 24 ವರ್ಷ ರವರಾಗಿದ್ದು ಇವರು ಓದನ್ನು ಮುಗಿಸಿ ವ್ಯವಸಾಯ ಮಾಡಿಕೊಂಡು ಗ್ರಾಮದಲ್ಲಿ ಇರುತ್ತಾನೆ ಈ ದಿನ ದಿನಾಂಕ: 14/10/2020 ರಂದು ನಮ್ಮ ಸಂಬಂಧಿಕರ ತಿಥಿ ಕಾರ್ಯಕ್ರಮವು ಇದೇ ತಾಲ್ಲೂಕು ಚರಕಮಟ್ಟೇನಹಳ್ಳಿ ಗ್ರಾಮದಲ್ಲಿ ಇದ್ದು ಈ ಕಾರ್ಯಕ್ರಮಕ್ಕೆ ನನ್ನ ಮಗನು ಆತನ ಬಾಬತ್ತು KA40-EA-3217 ನೊಂದಣಿ ಸಂಖ್ಯೆಯ ದ್ವಿ ಚಕ್ರ ವಾಹನದಲ್ಲಿ ಮದ್ಯಾಹ್ನ ಸುಮಾರು 2-00 ಗಂಟೆಗೆ ಗ್ರಾಮವನ್ನು ಬಿಟ್ಟು ಚರಕಮಟ್ಟೇನಹಳ್ಳಿಗೆ ಹೋದನು ನಂತರ ಸಂಜೆ ಸುಮಾರು 4-30 ಗಂಟೆಗೆ ನನಗೆ ನಮ್ಮ ಗ್ರಾಮದವರು ಬಂದು ನನ್ನ ಮಗನಾದ ಶಶಿಕುಮಾರ್ ರವರು ಚರಕಮಟ್ಟೇನಹಳ್ಳಿಗೆ ಹೋಗಿ ಚರಕಮಟ್ಟೇನ ಹಳ್ಳಿಯಿಂದ ತೊಂಡೆಬಾವಿ ರೈಲ್ವೇಸ್ಟೇಷನ್ ಬಳಿಗೆ ಹೋಗುವಾಗ ಬೆಳಚಿಕ್ಕನಹಳ್ಳಿ ತೊಂಡೆಬಾವಿ ಮಾರ್ಗದ ಮಧ್ಯೆ ನದಿಯ ಬ್ರಿಡ್ಜ್ ಗೆ ತಾನು ಚಾಲನೆ ಮಾಡುತ್ತಿದ್ದ ದ್ವಿ ಚಕ್ರ ವಾಹನ ಸಂಖ್ಯೆ KA40-EA-3217 ರನ್ನು ಅಪಘಾತಪಡಿಸಿ ತಾನು ಬ್ರಿಡ್ಜ್ ನ ಕೆಳಗಡೆ ಬಿದ್ದು ಮೃತಪಟ್ಟಿರುವುದಾಗಿ ತಿಳಿಸಿದರು ನಾನು ತಕ್ಷಣ ನಮ್ಮವರೊಂದಿಗೆ ಸ್ಥಳಕ್ಕೆ ಬಂದು ವಿಚಾರಣೆ ಮಾಡಲಾಗಿ ಈ ದಿನ ದಿನಾಂಕ: 14/10/2020 ರಂದು ಸಂಜೆ 4-15 ಗಂಟೆಯಲ್ಲಿ ನನ್ನ ಮಗ ಶಶಿಕುಮಾರ್ ರವರು ದ್ವಿ ಚಕ್ರ ವಾಹನ ಸಂಖ್ಯೆ KA40-EA-3217 ರನ್ನು ಬೆಳಚಿಕ್ಕನಹಳ್ಳಿ ಕಡೆಯಿಂದ ಅತಿ ವೇಗವಾಗಿ ಚಾಲನೆ ಮಾಡಿಕೊಂಡು ಬಂದು ಬ್ರಿಡ್ಜ್ ಗೆ ಸಿಮೆಂಟ್ ದಿಂಡಿಗೆ ಅಪಘಾತಪಡಿಸಿ ಅಲ್ಲಿಂದ ಸುಮಾರು 30 ಅಡಿ ದೂರದಲ್ಲಿ ಹಳ್ಳದ ಒಳಗೆ ಬಿದ್ದು ಮೃತಪಟ್ಟಿರುತ್ತಾನೆ ವಾಹನ ಪೂರ್ತಿ ಜಖಂ ಆಗಿರುತ್ತದೆ ಸ್ಥಳಕ್ಕೆ ಬಂದು ಮುಂದಿನ ಕ್ರಮ ಜರುಗಿಸಿಕೊಡಬೇಕಾಗಿ ಪ್ರ.ವ.ವರದಿ.

  1. ನಂದಿಗಿರಿಧಾಮ ಪೊಲೀಸ್ ಠಾಣೆ ಮೊ.ಸಂ.67/2020 ಕಲಂ: 279,304(A) ಐ.ಪಿ.ಸಿ & 187 ಐ.ಎಂ.ವಿ ಆಕ್ಟ್ :-

     ದಿನಾಂಕ:15-10-2020 ರಂದು  ಬೆಳಿಗ್ಗೆ 9-20 ಗಂಟೆಗೆ  ಕಡಶೀಗೇನಹಳ್ಳಿ ಗ್ರಾಮದ ವಾಸಿ ನರಸಿಂಹಮೂರ್ತಿ ಬಿನ ಮುನಿಯಪ್ಪ ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ ತಮ್ಮ ತಂದೆ ತಾಯಿ ಒಟ್ಟು 4 ಜನ ಮಕ್ಕಳಿದ್ದು, 1ನೇ ಮಗ ಮುನಿರಾಜು , 2ನೇ ಮಗಳು ಶ್ರೀಮತಿ ಗಾಯಿತ್ರಿ, 3ನೇ ನಾನು ಮತ್ತು 4ನೇ ಮಗ ಮುರಳಿ ಎಂಬ ಮಕ್ಕಳಿರುತ್ತೇವೆ. ತಮ್ಮ ಅಕ್ಕ ಗಾಯಿತ್ರಿ ರವರಿಗೆ ಮದುವೆ ಯಾಗಿ ಗಂಡನ ಮನೆಯಲ್ಲಿ ವಾಸವಾಗಿರುತ್ತಾಳೆ , ತಮ್ಮ ಅಣ್ಣ ನವರಾದ ಮುನಿರಾಜು ರವರಿಗೆ ಮದುವೆಯಾಗಿದ್ದು, ತಮ್ಮ ಮನೆಯಲ್ಲಿ ತಂದೆ ಮುನಿಯಪ್ಪ , ತಾಯಿ ಮುನಿಯಮ್ಮ ತಮ್ಮ ಅಣ್ಣ ಮುನಿರಾಜು ಅತ್ತಿಗೆ ಅಕ್ಷ್ಮೀದೇವಿ, ಹಾಗೂ ಇಬ್ಬರು ಮಕ್ಕಳು ತಾನು ಮತ್ತು ತನ್ನ ತಮ್ಮ ಮುರಳಿ ರವರುಗಳು ಒಟ್ಟಿಗೆ ವಾಸವಾಗಿರುತ್ತೇವೆ. ನಾವುಗಳೇಲ್ಲರೂ ಕೂಲಿ ಮಾಡಿಕೊಂಡು ಜೀವನ ಮಾಡಿಕೊಂಡಿರುತ್ತೇವೆ, ದಿನಾಂಕ: 14-10-2020 ರಂದು ರಾತ್ರಿ 7 ಗಂಟೆಗೆ ಯಲ್ಲಿ ತಮ್ಮ ತಂದೆ ಮುನಿಯಪ್ಪ ರವರು ತಮ್ಮ ತಾಯಿಯ ತವರು ಗ್ರಾಮವಾದ ಡೊಡ್ಡಕಿರಗುಂಬಿ ಗ್ರಾಮದ ತಮ್ಮ ಅಜ್ಜಿ ಕೊಂಡಮ್ಮ ರವರ ಮನೆಗೆ ಹೋಗಿ ಬರುವುದಾಗಿ ಹೇಳಿ ಹೋದರು , ಈ ದಿನ ಬೆಳಿಗ್ಗೆ 5-30 ಗಂಟೆಯಲ್ಲಿ ದೊಡ್ಡಕಿರಗುಂಬಿ ಗ್ರಾಮದ ಗಗನ ಎಂಬುವರು ತನ್ನ ಪೋನಿಗೆ ಪೋನ್ ಮಾಡಿ ನಿಮ್ಮ ತಂದೆ ಮುನಿಯಪ್ಪ ರವರು ಚಲುಮೇನಹಳ್ಳಿ, ಯಿಂದ ಕಡಶೀಗೇನಹಳ್ಳಿ ಕ್ರಾಸ್ ಮದ್ಯೆ ಸಾಂಬಾರು ಗಿಡದ ಕಾವಲು ಅರಣ್ಣದ ಬಳಿ ರಸ್ತೆಯಲ್ಲಿ ಬಿದ್ದಿರುತ್ತಾರೆ, ಬೇಗ ಬಾ ಎಂದು ಹೇಳಿದಾಗ ತಾನು ಮತ್ತು ಚಿಕ್ಕಪ್ಪ ಮಗ ದೇವರಾಜು ಬಿನ್ ಪಾಪಣ್ಣ ರವರುಗಳು ದ್ವಿಚಕ್ರ ವಾಹನದಲ್ಲಿ ತಕ್ಷಣ ಹೋಗಿ ನೋಡಲಾಗಿ ತಮ್ಮ ತಂದೆಯು ರಸ್ತೆಯಲ್ಲಿ  ಅಂಗಾತವಾಗಿ ಬಿದ್ದು ಮೃತ ಪಟ್ಟಿರುತ್ತಾನೆ, ನೋಡಲಾಗಿ ಎಡಕಾಲಿನ ತೊಡೆ ಸಂಪೂರ್ಣ ಜಜ್ಜಿಹೋಗಿದ್ದು, ಎಡಭಾಗದ ಕೈ ಗಾಯವಾಗಿದ್ದು, ತಮ್ಮ ತಂದೆ ದರಿಸದ್ದ ಶರ್ಟ್ ಎಡಬಾಗದಲ್ಲಿ ಯಾವುದೇ ವಾಹನದ ಚಕ್ರ ಹರಿದಂತೆ ಗುರುತು ಇದ್ದು, ನಂತರ ತಮ್ಮ ಗ್ರಾಮ ಹಾಗೂ ರಸ್ತೆಯಲ್ಲಿ ಪ್ರಯಾಣಿಸುತ್ತಿದ್ದವರು ಎಲ್ಲರೂ ನೋಡಿದ್ದು, ತಮ್ಮ ತಂದೆ ನಿನ್ನೆ ರಾತ್ರಿ ತಮ್ಮ ಅರ್ಜಿಯವರ ಗ್ರಾಮ ದೊಡ್ಡಕಿರಗುಂಬಿಗೆ ಹೋಗಿ ಬರುತ್ತಿದ್ದಾಗ ಯಾವುದೋ ವಾಹನದ ಚಾಲಕ ವಾಹನವನ್ನು ಅತಿ ವೇಗ ಮತ್ತು ಅಜಾರುಗತೆಯಿಂದ ಚಾಲನೆ ಮಾಡಿಕೊಂಡು ತಮ್ಮ ತಂದೆಗೆ ಡಿಕ್ಕಿಹೊಡಸಿ ಅಫಘಾತ ಪಡಿಸಿ ವಾಹನವನ್ನು ನಿಲ್ಲಿಸದೆ ಹೋರಟು ಹೋಗಿದ್ದು, ತಮ್ಮ ತಂದೆಗೆ ಅಫಘಾತ ದಲ್ಲಿ ಉಂಟಾದ ತಿರ್ವತೆಯ ಗಾಯಗಳ ದೆಸೆಯಿಂದ ಸ್ಥಳದಲ್ಲಿಯೇ ಮೃತ ಪಟ್ಟಿರುವುದುದಾಗಿರುತ್ತೆ, ತಮ್ಮ ತಂದೆಯ ಮೃತ ದೇಹವನ್ನು ಅಂಬುಲೇನ್ಸ್ ನಲ್ಲಿ ದೇವರಾಜು ಹಾಗೂ ಇತರರು ಸಹಾಯದಿಂದ ಚಿಕ್ಕಬಳ್ಳಾಪುರದ ಸರ್ಕಾರಿ ಆಸ್ಪತ್ರೆಯ ಶವಗಾರದಲ್ಲಿ ತಂದು ಇಟ್ಟುರುತ್ತೇವೆ. ಮೇಲ್ಕಂಡಂತೆ ತಮ್ಮ ತಂದೆಗೆ ಅಫಘಾತ ಪಡಿಸಿ ವಾಹನವನ್ನು ನಿಲ್ಲಸದೆ ಹೋರಟು ಹೋಗಿರುವ ವಾಹನ ಮತ್ತು ಚಾಲಕನನ್ನು ಪತ್ತೆ ಮಾಡಿ ಅವರ ವಿರುದ್ದ ಕಾನೂನೂ ರೀತ್ಯಾ ಕ್ರಮ ಕೈಗೊಂಡು ಮುಂದಿನ ಕ್ರಮ  ಜರುಗಿಸಲು ಕೋರಿ ನೀಡಿದ ದೂರಿನ ಮೇರೆಗೆ ಈ ಪ್ರ.ವ.ವರದಿ.

  1. ಶಿಡ್ಲಘಟ್ಟ ಪುರ ಪೊಲೀಸ್ ಠಾಣೆ ಮೊ.ಸಂ.109/2020 ಕಲಂ: 420,423,504,506,120B ರೆ/ವಿ 34 ಐ.ಪಿ.ಸಿ :-

     ದಿನಾಂಕ.14.10.2020 ರಂದು ಮದ್ಯಾಹ್ನ 2-30 ಗಂಟೆಗೆ ನ್ಯಾಯಾಲಯದ ಪಿ.ಸಿ.20 ಪ್ರಶಾಂತ್ ರವರ ಮೂಲಕ ಶಿಡ್ಲಘಟ್ಟ ಘನ ನ್ಯಾಯಾಲಯದ ಪಿ.ಸಿ.ಆರ್.ನಂ.62/2020 ರ ದೂರನ್ನು ಪಡೆದಿದ್ದರ ಸಾರಾಂಶವೇನೆಂದರೆ, ಈ ಕೇಸಿನ ಪಿರ್ಯಾದಿ ಇನಾಯತ್ ಖಾನ್ ಬಿನ್ ಖಾದರ್ ಸಾಬಿ , ಅಜಾದ್ ನಗರ, ಶಿಡ್ಲಘಟ್ಟ ಟೌನ್ ರವರಿಗೆ ಶಿಡ್ಲಘಟ್ಟ ತಾಲ್ಲೂಕು ಬಶೆಟ್ಟಿಹಳ್ಳಿ ಹೋಬಳಿ ಬೈರಗಾನಹಳ್ಳಿ ಗ್ರಾಮ ಸರ್ವೆ ನಂ: 27/ಪಿ51  ರಲ್ಲಿ 2 ಎಕರೆ ಜಮೀನು ಸರ್ಕಾರದಿಂದ ಮಂಜೂರಾಗಿದ್ದು, ಅಂದಿನಿಂದ ಸದರಿ ಜಮೀನಿನಲ್ಲಿ ಪಿರ್ಯಾದಿ ಮತ್ತು ಆತನ ಕುಟುಂಬದವರು ಅನುಭೋಗದಲ್ಲಿದ್ದು ಬೆಳೆಗಳನ್ನು ಸಹ ಬೆಳೆಯುತ್ತಿರುತ್ತಾರೆ. ಈಗಿರುವಾಗ ಪಿರ್ಯಾದಿದಾರರಿಗೆ ಕನ್ನಡ ಓದಲು ಮತ್ತು ಬರೆಯಲು ಬರದೆ ಇರುವುದನ್ನು ತಿಳಿದ ಈ ಕೇಸಿನ  ಆರೋಪಿ-4 ವಾಹೀದ ಕೋಂ ವಾಜೀದ್, ತಿಮ್ಮಯ್ಯ ಲೇಔಟ್ ರವರು ಆರೋಪಿ-1  ರತ್ನಮ್ಮ ಕೋಂ ಬೈರಪ್ಪ, ರವರೊಂದಿಗೆ ಒಳ ಸಂಚು ರೂಪಿಸಿ ಆರೋಪಿ-2 ಮತ್ತು 3 ರವರೊಂದಿಗೆ ಸೇರಿ ಪಿರ್ಯಾದಿದಾರರ ಹೆಸರಿನಲ್ಲಿರುವ ಸರ್ವೇ ನಂ: 27/ಪಿ51 ರಲ್ಲಿ 2 ಎಕರೆ ಜಮೀನನ್ನು ಆರೋಪಿ-1 ರವರಿಗೆ ಮಾರಾಟ ಮಾಡಿ ಮೋಸ ಮಾಡುವ ಉದ್ದೇಶದಿಂದ ದಿನಾಂಕ:19/06/2020 ರಂದು ಪಿರ್ಯಾದಿ ಮತ್ತು ಅವರ ಹೆಂಡತಿಯನ್ನು ಪಿರ್ಯಾದಿ ಇನಾಯತ್ ಖಾನ್ ಮತ್ತು ಅವರ್ ಹೆಂಡತಿ ಶ್ರೀಮತಿ ಮುಬೀನ್ @ ನೂರ್ ಜಾನ್ ರವರಿಗೆ ವೃದ್ಯಾಪ ವೇತನ ಮಾಡಿಸಿಕೊಡಿಸುವುದಾಗಿ ನಂಬಿಸಿ ಶಿಡ್ಲಘಟ್ಟ ಉಪನೊಂದಣಾಧಿಕಾರಿಗಳ ಕಛೇರಿಗೆ ಕರೆದುಕೊಂಡು ಬಂದು ಆರೋಪಿ-4 ರವರು, ಆರೋಪಿ-1  ರತ್ನಮ್ಮ ರವರ ಹೆಸರಿಗೆ ಜಮೀನಿನ ಕ್ರಯದ ಕರಾರು ಪತ್ರ ಮಾಡಿಕೊಟ್ಟಿರುತ್ತಾರೆ. ಇದಾದ ಕೆಲವು ದಿನಗಳ ನಂತರ ಆರೋಪಿಗಳು ಮೇಲ್ಕಂಡ ಜಮೀನಲ್ಲಿ ಹೋಗಿ ಸ್ವಚ್ಚಗೊಳಿಸುತ್ತಿದ್ದಾಗ, ಇದನ್ನು ತಿಳಿದ ಪಿರ್ಯಾದಿದಾರರ ಮಗ ಸ್ಥಳಕ್ಕೆ ಹೋಗಿ ಪ್ರಶ್ನೀಸಿದಾಗ ನಾವು ಈ ಜಮೀನು ತೆಗೆದುಕೊಂಡಿರುತ್ತೇವೆ ಎಂದು ವಿಚಾರ ತಿಳಿಸಿದ್ದು, ನಂತರ ಪಿರ್ಯಾದಿದಾರರ ಮಗ ತಾಲ್ಲೂಕು ಕಛೇರಿಗೆ ಬಂದು ಸದರಿ ಜಮೀನಿಗೆ ಸಂಬಂಧಿಸಿದ ಪಹಣಿ ಇತರೆ ದಾಖಲೆಗಳನ್ನು ಪಡೆದು ಪರಿಶೀಲಿಸಿದಾಗ 1ನೇ ಆರೋಪಿಯು ದಿನಾಂಕ:19/06/2020 ರಂದು ತನ್ನ ತಂದೆಯ ಹೆಸರಿನಲ್ಲಿರುವ ಜಮೀನನ್ನು ಕ್ರಯದ ಕರಾರು ಪತ್ರ ನಮಗೆ ಗೊತ್ತಿಲ್ಲದೆ ಮಾಡಿಕೊಂಡಿರುವುದು ತಿಳಿದು ಬಂದಿರುತ್ತೆ. ಈ ಬಗ್ಗೆ ಪಿರ್ಯಾದಿದಾರರು ಆರೋಪಿ-4 ರವರ ಮೊಬೈಲ್ ನಂ: 8971416979 ಗೆ ಕರೆ ಮಾಡಿ ನಮ್ಮ ಜಮೀನು ಏಕೆ ಕ್ರಯ ಮಾಡಿಸಿದ್ದಿಯಾ ಎಂದು ಕೇಳಿದ್ದಕ್ಕೆ 1ನೇ ಆರೋಪಿಯು ಅವಾಚ್ಯ ಶಬ್ದಗಳಿಂದ ಬೈದು ಪ್ರಾಣ ಬೆದರಿಕೆ ಹಾಕಿರುತ್ತಾನೆಂತ ಮೇಲ್ಕಂಡವರು ಮೋಸ ಮಾಡುವ ಉದ್ದೇಶದಿಂದ ಪಿರ್ಯಾದಿದಾರರ ಜಮೀನು ಕ್ರಯದ ಕರಾರು ಮಾಡಿಕೊಂಡಿದ್ದು, ಸದರಿಯವರು ಕಲಂ:420,423,504,506,120(ಬಿ), 34 ಐಪಿಸಿ ರೀತ್ಯ ಅಪರಾಧ ಮಾಡಿರುತ್ತಾರೆಂತ ಸದರಿಯವರ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ಇತ್ಯಾದಿಯಾಗಿ ನ್ಯಾಯಾಲಯದ ಮೂಲಕ ಸಲ್ಲಿಸಿಕೊಂಡಿರುವ ದೂರಿನ ಸಾರಾಂಶದ ಮೇರೆಗೆ ಈ ಪ್ರಕರಣ ದಾಖಲಿಸಿರುತ್ತೆ.