ದಿನಾಂಕ : 15/10/2019ರ ಅಪರಾಧ ಪ್ರಕರಣಗಳು

 1. ಚೇಳೂರು ಪೊಲೀಸ್ ಠಾಣೆ ಮೊ.ಸಂ. 83/2019 ಕಲಂ. 15(ಎ), 32(3) ಕೆ.ಇ ಆಕ್ಟ್:-

     ದಿನಾಂಕ:15-09-2019 ರಂದು ಮಧ್ಯಾಹ್ನ 14-00 ಗಂಟೆಯಲ್ಲಿ ಪಿ.ಎಸ್.ಐ ಚಂದ್ರಕಲಾ ಎನ್ ರವರು ಮಾಲು, ಪಂಚನಾಮೆ, ಆಸಾಮಿಯೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ವರದಿಯ ಸಾರಾಂಶವೇನೆಂದರೆ, ತಾನು ಮಧ್ಯಾಹ್ನ 12-00 ಗಂಟೆಯಲ್ಲಿ ಚೇಳೂರು ಪೊಲೀಸ್ ಠಾಣೆಯ ಪಿ.ಎಸ್.ಐ ಚಂದ್ರಕಲಾ, ಎನ್  ಆದ ನಾನು ಸರ್ಕಾರಿ ಜೀಪ್ ಸಂಖ್ಯೆ: ಕೆ.ಎ 42 ಜಿ 61 ನಲ್ಲಿ  ಠಾಣೆಯ ಸಿಬ್ಬಂದಿಯವರಾದ ಸಿ.ಹೆಚ್.ಸಿ 129 ರವಣಪ್ಪ  ಮತ್ತು ಸಿ.ಪಿ.ಸಿ 07 ವಿಧ್ಯಾಧರ ರವರೊಂದಿಗೆ ಠಾಣಾ ಸರಹದ್ದು ಮದ್ದಿರೆಡ್ಡಿ ಪಲ್ಲಿ  ಗ್ರಾಮದ ಕಡೆ ಗಸ್ತು ಮಾಡುತ್ತಿದ್ದಾಗ  ಅದೇ ಗ್ರಾಮದಲ್ಲಿ ಯಾರೋ ಒಬ್ಬ ಆಸಾಮಿ ತನ್ನ ತನ್ನ ಮನೆಯ ಮುಂಭಾಗ ಅಕ್ರಮವಾಗಿ ಮಧ್ಯದ ಪ್ಯಾಕೇಟ್ ಗಳನ್ನು ಇಟ್ಟಿಕೊಂಡು ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕ ಶಾಂತಿ ಮತ್ತು ನೆಮ್ಮದಿಗೆ ಭಂಗವುಂಟು ಮಾಡುವ ರೀತಿಯಲ್ಲಿ ಮಧ್ಯಪಾನ ಮಾಡಲು ಸ್ಥಳಾವಕಾಶವನ್ನು ನೀಡಿರುವುದಾಗಿ ಮಾಹಿತಿ ಬಂದಿದ್ದು ಅದರಂತೆ ಅದೇ ಗ್ರಾಮದಲ್ಲಿ ಪಂಚರನ್ನು ಬರಮಾಡಿಕೊಂಡು ವೆಂಕಟರಮಣ ನಾಯ್ಕ್ ರವರ ಮನೆಯ ಮುಂಭಾಗ ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಮನೆಯ ಮುಂಭಾಗ ಸಾರ್ವಜನಿಕ ಸ್ಥಳದಲ್ಲಿ ಯಾರೋ ಕೆಲವರು ಮಧ್ಯಪಾನವನ್ನು ಮಾಡುತ್ತಿದ್ದು ಸಮವಸ್ತ್ರದಲ್ಲಿದ್ದ ಪೊಲೀಸರನ್ನು  ನೋಡಿ ಅಲ್ಲಿಂದ ಓಡಿ ಹೋಗಿರುತ್ತಾರೆ. ಸದರಿ ಸ್ಥಳದಲ್ಲಿ  ಮಧ್ಯದ ಪ್ಯಾಕೇಟ್ ಗಳಿದ್ದು, ಅಲ್ಲಿಯೇ ಇದ್ದ ವೆಂಕಟರಮಣ ನಾಯ್ಕ್  ರವರನ್ನು ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ  ಮಧ್ಯದ ಪ್ಯಾಕೇಟ್ ಗಳನ್ನು ಇಟ್ಟಿಕೊಳ್ಳಲು  ಮತ್ತು ಸಾರ್ವಜನಿಕ ಶಾಂತಿಗೆ ಭಂಗವುಂಟು ಮಾಡುವ ರೀತಿಯಲ್ಲಿ ಮಧ್ಯಪಾನ  ಮಾಡಲು ಸ್ಥಳಾವಕಾಶ ಮಾಡಿಕೊಡಲು ನಿಮ್ಮ ಬಳಿ ಯಾವುದಾರೂ ಪರವಾನಿಗೆ ಇದೆಯೇ ಎಂದು ಕೇಳಲಾಗಿ ಸದರಿಯವರು  ನನ್ನ ಬಳಿ ಯಾವುದೇ ಪರವಾನಿಗೆ ಇಲ್ಲಾ ಎಂದು ಹೇಳಿದ್ದು ಸದರಿ  ಆಸಾಮಿಯ ಪೂರ್ಣ ಹೆಸರು & ವಿಳಾಸ ಕೇಳಲಾಗಿ ತನ್ನ ಹೆಸರು ವೆಂಕಟರಮಣ ನಾಯ್ಕ್ ಬಿನ್ ಚಿನ್ನ ಜಮ್ಲಾನಾಯ್ಕ್ ,35 ವರ್ಷ, ಲಂಬಾಣಿ ಜನಾಂಗ, ಜಿರಾಯ್ತಿ ವಾಸ:ಮದ್ದಿರೆಡ್ಡಿಪಲ್ಲಿ ಗ್ರಾಮ, ಬಾಗೇಪಲ್ಲಿ ತಾಲ್ಲೂಕು  ಎಂದು ತಿಳಿಸಿದ್ದು,  ಅಲ್ಲಿದ್ದ ಮಧ್ಯದ ಪ್ಯಾಕೇಟ್ ಗಳನ್ನು  ಪರಿಶೀಲಿಸಲಾಗಿ 90 ಎಂ.ಎಲ್ ನ BEGALORE WHISKY ಯ 15 ಟೆಟ್ರಾ ಪ್ಯಾಕೇಟ್ ಗಳು ಇವುಗಳು ಒಟ್ಟು 1350 ಎಂ.ಎಲ್ ಇದ್ದು ಪ್ರತಿ ಪ್ಯಾಕೇಟ್ ನ ಬೆಲೆ 24.47 ರೂ ಎಂದು ನಮೂದಿಸಿದ್ದು ಇವುಗಳು ಒಟ್ಟು 367.05 ರೂಗಳಾಗಿರುತ್ತೆ ಹಾಗೂ ಅಲ್ಲಿಯೇ ಇದ್ದ  ಮಧ್ಯಫಾನ ಮಾಡಿರುವ ನಿಶಾನೆಗಳಿರುವ 2 ಪ್ಲಾಸ್ಟಿಕ್ ಗ್ಲಾಸ್ ಗಳನ್ನು  ಹಾಗೂ  ಸದರಿ ಮಧ್ಯದ ಪ್ಯಾಕೇಟ್ ಗಳನ್ನು ಮಧ್ಯಾಹ್ನ 12-30 ಗಂಟೆಯಿಂದ 13-30 ಗಂಟೆಯ ವರೆಗೆ ದಾಳಿ ಪಂಚನಾಮೆಯ ಮೂಲಕ ಅಮಾನತ್ತು ಪಡಿಸಿಕೊಂಡು ಆಸಾಮಿಯೊಂದಿಗೆ ಠಾಣೆಗೆ ಹಾಜರಾಗಿ ಮುಂದಿನ ಕ್ರಮಕ್ಕಾಗಿ  ನೀಡಿದ  ವರದಿಯನ್ನು ಪಡೆದು ಠಾಣಾ ಮೊಸಂ:83/2019 ಕಲಂ 15(ಎ),32(3) ಕೆಇ ಆಕ್ಟ್ ರೀತ್ಯಾ ಪ್ರಕರಣವನ್ನು ದಾಖಲಿಸಿರುತ್ತೇನೆ.

 1. ಚೇಳೂರು ಪೊಲೀಸ್ ಠಾಣೆ ಮೊ.ಸಂ. 84/2019 ಕಲಂ. 15(ಎ), 32(3) ಕೆ.ಇ ಆಕ್ಟ್:-

     ದಿನಾಂಕ:15/10/2019 ರಂದು ಮಧ್ಯಾಹ್ನ3-30 ಗಂಟೆಗೆ ಪಿ.ಎಸ್.ಐ ಚಂದ್ರಕಲಾ ಎನ್. ರವರು ಮಾಲು , ಆಸಾಮಿ , ಪಂಚನಾಮೆಯೊಂದಿಗೆ  ಠಾಣೆಗೆ ಹಾಜರಾಗಿ ನೀಡಿದ ವರದಿಯ ಸಾರಾಂಶವೆನೇಂದರೆ , ತಾನು ಮದ್ಯಾಹ್ನ 2-15 ಗಂಟೆಯಲ್ಲಿ  ಸರ್ಕಾರಿ ಜೀಪ್ ಸಂಖ್ಯೆ: ಕೆ.ಎ 42 ಜಿ 61 ರಲ್ಲಿ ಠಾಣೆಯ ಸಿಬ್ಬಂದಿಯವರಾದ ಸಿಹೆಚ್.ಸಿ 129 ರವಣಪ್ಪ ,ಸಿ.ಪಿ.ಸಿ 519 ಚಂದ್ರಶೇಖರ್  ರವರೊಂದಿಗೆ ಠಾಣಾ ಸರಹದ್ದು ಮೂಗಿರೆಡ್ಡಿಪಲ್ಲಿ  ಗ್ರಾಮದ ಕಡೆ ಗಸ್ತು ಮಾಡುತ್ತಿದ್ದಾಗ  ಇದೇ   ಗ್ರಾಮದಲ್ಲಿ ಯಾರೋ ಒಬ್ಬ ಆಸಾಮಿ ತನ್ನ ಮನೆಯ ಮುಂಭಾಗ ಅಕ್ರಮವಾಗಿ ಮಧ್ಯದ ಪ್ಯಾಕೇಟ್ ಗಳನ್ನು ಇಟ್ಟಿಕೊಂಡು ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕ ಶಾಂತಿ ಮತ್ತು ನೆಮ್ಮದಿಗೆ ಭಂಗವುಂಟು ಮಾಡುವ ರೀತಿಯಲ್ಲಿ ಮಧ್ಯಪಾನ ಮಾಡಲು ಸ್ಥಳಾವಕಾಶವನ್ನು ನೀಡಿರುವುದಾಗಿ ಮಾಹಿತಿ ಬಂದಿದ್ದು ಅದರಂತೆ ಅದೇ ಗ್ರಾಮದಲ್ಲಿ ಪಂಚರನ್ನು ಬರಮಾಡಿಕೊಂಡು ಆದಿನಾಯಕ ರವರ  ಮನೆಯ  ಮುಂಭಾಗ ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಆದಿನಾಯಕ ರವರ ಮನೆಯ ಮುಂಭಾಗ ಯಾರೋ ಕೆಲವರು ಮಧ್ಯಪಾನವನ್ನು ಮಾಡುತ್ತಿದ್ದು ಸಮವಸ್ತ್ರದಲ್ಲಿದ್ದ ಪೊಲೀಸರನ್ನು ನೋಡಿ ಅಲ್ಲಿಂದ ಓಡಿ ಹೋಗಿರುತ್ತಾರೆ.  ಸದರಿ ಸ್ಥಳದಲ್ಲಿದ್ದ  ಮಧ್ಯದ ಪ್ಯಾಕೇಟ್ ಗಳಿದ್ದು,ಅಲ್ಲಿಯೇ ಇದ್ದ ಆದಿನಾಯಕ  ರವರನ್ನು ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ  ಮಧ್ಯದ ಪ್ಯಾಕೇಟ್ ಗಳನ್ನು ಇಟ್ಟಿಕೊಳ್ಳಲು  ಮತ್ತು ಸಾರ್ವಜನಿಕ ಶಾಂತಿಗೆ ಭಂಗವುಂಟು ಮಾಡುವ ರೀತಿಯಲ್ಲಿ ಮಧ್ಯಪಾನ  ಮಾಡಲು ಸ್ಥಳಾವಕಾಶ ಮಾಡಿಕೊಡಲು ನಿಮ್ಮ ಬಳಿ ಯಾವುದಾರೂ ಪರವಾನಿಗೆ ಇದೆಯೇ ಎಂದು ಕೇಳಲಾಗಿ ಸದರಿಯವರು  ನನ್ನ ಬಳಿ ಯಾವುದೇ ಪರವಾನಿಗೆ ಇಲ್ಲಾ ಎಂದು ಹೇಳಿದ್ದು ಸದರಿ  ಆಸಾಮಿಯ ಹೆಸರು & ವಿಳಾಸ ಕೇಳಲಾಗಿ ತನ್ನ ಹೆಸರು ಆದಿನಾಯಕ ಬಿನ್ ಪೀರೇನಾಯಕ, 55  ವರ್ಷ, ಲಂಬಾಣಿ ನಾಯಕ ಜನಾಂಗ, ಕೂಲಿ ಕೆಲಸ,  ಮೂಗಿರೆಡ್ಡಿಪಲ್ಲಿ ಗ್ರಾಮ, ಬಾಗೇಪಲ್ಲಿ ತಾಲ್ಲೂಕು ಎಂದು ತಿಳಿಸಿದ್ದು, ಅಲ್ಲಿದ್ದ ಮಧ್ಯದ ಪ್ಯಾಕೇಟ್ ಗಳನ್ನು  ಪರಿಶೀಲಿಸಲಾಗಿ 90 ಎಂ.ಎಲ್ ನ HAYWARRDS CHEERS WHISKY ಕಂಪನಿಯ 13 ಟೆಟ್ರಾ ಪ್ಯಾಕೇಟ್ಗಳಿದ್ದು  ಇವುಗಳು ಒಟ್ಟು 1,170 ಎಂ.ಎಲ್ ಇದ್ದು ಪ್ರತಿ ಪ್ಯಾಕೇಟ್ ನ ಬೆಲೆ 30.32 ಎಂದು ನಮೂದಿಸಿದ್ದು ಇವುಗಳು ಒಟ್ಟು 394.16 ರೂಗಳಾಗಿರುತ್ತೆ ಹಾಗೂ ಮಧ್ಯಫಾನ ಮಾಡಿರುವ ನಿಶಾನೆಗಳಿರುವ 2 ಪ್ಲಾಸ್ಟಿಕ್ ಗ್ಲಾಸ್ ಗಳನ್ನು ಮದ್ಯಾಹ್ನ: 2-30 ಗಂಟೆಯಿಂದ 3-15 ಗಂಟೆಯ ವರೆಗೆ ದಾಳಿ ಪಂಚನಾಮೆಯ ಮೂಲಕ ಅಮಾನತ್ತು ಪಡಿಸಿಕೊಂಡು ಆಸಾಮಿಯೊಂದಿಗೆ ಠಾಣೆಗೆ ಹಾಜರಾಗಿ ಮುಂದಿನ ಕ್ರಮಕ್ಕಾಗಿ ನೀಡಿದ  ವರದಿಯನ್ನು ಪಡೆದು ಠಾಣಾ ಮೊ.ಸಂಖ್ಯೆ:84/2019 ಕಲಂ:15(ಎ),32(3) ಕೆ.ಇ ಆಕ್ಟ್  ರೀತ್ಯಾ ಪ್ರಕರಣ ದಾಖಲಿಸಿರುತ್ತೇನೆ.

 1. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 296/2019 ಕಲಂ. 15(ಎ), 32(3) ಕೆ.ಇ ಆಕ್ಟ್:-

     ದಿನಾಂಕ 14/10/2019 ರಂದು ರಾತ್ರಿ 08.10 ಗಂಟೆ ಸಮಯದಲ್ಲಿ ಪಿ ಎಸ್ ಐ ಸಾಹೇಬರು ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ 14/10/2019 ರಂದು ರಾತ್ರಿ 08.00 ಗಂಟೆಯಲ್ಲಿ ತಾನು ಠಾಣೆಯಲ್ಲಿದ್ದಾಗ ತನಗೆ ಬಂದ ಖಚಿತ ಮಾಹಿತಿಯಂತೆ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ಸರಹದ್ದಿನ ಶೆಟ್ಟಿವಾರಹಳ್ಳಿ  ಗ್ರಾಮದ  ಶ್ರೀನಿವಾಸ ಬಿನ್ ಆದಪ್ಪ, 36 ವರ್ಷ, ಬೋವಿ ಜನಾಂಗ, ಕೂಲಿ ಕೆಲಸ, ಶೆಟ್ಟಿವಾರಹಳ್ಳಿ ಗ್ರಾಮ ರವರು, ಅವರ ಚಿಲ್ಲರೆ ಅಂಗಡಿ ಬಳಿ ಯಾವುದೇ ಪರವಾನಗಿ ಇಲ್ಲದೆ ಮಧ್ಯಪಾನ ಸೇವನೆ ಮಾಡಲು ಅವಕಾಶ ಮಾಡಿ ಕೊಡುತ್ತಿರುವುದಾಗಿ ನನಗೆ ಖಚಿತ ಮಾಹಿತಿ ಬಂದಿರುತ್ತದೆ ಈ ಬಗ್ಗೆ ಆಸಾಮಿಯ ವಿರುದ್ದ ಕಲಂ 15(ಎ), 32(3) ಕೆ.ಇ ಆಕ್ಟ್ ರೀತ್ಯಾ ಆಸಾಮಿಯ ವಿರುದ್ದ ಪ್ರಕರಣ ದಾಖಲಿಸಲು ಸೂಚಿಸಿದ ಮೇರೆಗೆ ಈ ಪ್ರ ವ ವರದಿ.

 1. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 297/2019 ಕಲಂ. 15(ಎ), 32(3) ಕೆ.ಇ ಆಕ್ಟ್:-

     ದಿನಾಂಕ 14/10/2019 ರಂದು ರಾತ್ರಿ 08.50 ಗಂಟೆ ಸಮಯದಲ್ಲಿ ಪಿ ಎಸ್ ಐ ಸಾಹೇಬರು ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ 14/10/2019 ರಂದು ರಾತ್ರಿ 08.50 ಗಂಟೆಯಲ್ಲಿ ತಾನು ಠಾಣೆಯಲ್ಲಿದ್ದಾಗ ತನಗೆ ಬಂದ ಖಚಿತ ಮಾಹಿತಿಯಂತೆ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ಸರಹದ್ದಿನ ಜಾತವಾರ ಗ್ರಾಮದ  ಮುನಿರಾಜು ಬಿನ್ ನಾರಾಯಣಪ್ಪ, 43 ವರ್ಷ, ವಕ್ಕಲಿಗರು, ಗಾರೆ ಕೆಲಸ, ಜಾತವಾರ  ಗ್ರಾಮ ರವರು, ಅವರ ಚಿಲ್ಲರೆ ಅಂಗಡಿ ಬಳಿ ಯಾವುದೇ ಪರವಾನಗಿ ಇಲ್ಲದೆ ಮಧ್ಯಪಾನ ಸೇವನೆ ಮಾಡಲು ಅವಕಾಶ ಮಾಡಿ ಕೊಡುತ್ತಿರುವುದಾಗಿ ನನಗೆ ಖಚಿತ ಮಾಹಿತಿ ಬಂದಿರುತ್ತದೆ ಈ ಬಗ್ಗೆ ಆಸಾಮಿಯ ವಿರುದ್ದ ಕಲಂ 15(ಎ), 32(3) ಕೆ.ಇ ಆಕ್ಟ್ ರೀತ್ಯಾ ಆಸಾಮಿಯ ವಿರುದ್ದ ಪ್ರಕರಣ ದಾಖಲಿಸಲು ಸೂಚಿಸಿದ ಮೇರೆಗೆ ಈ ಪ್ರ ವ ವರದಿ.

 1. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 298/2019 ಕಲಂ. 87 ಕೆ.ಪಿ ಆಕ್ಟ್:-

     ದಿನಾಂಕ 15/10/2019 ರಂದು ಮಧ್ಯಾಹ್ನ 03.00 ಗಂಟೆಗೆ ಶ್ರಿ ರಾಜಣ್ಣ ಎನ್  ಪಿ,ಐ ಡಿಸಿಬಿ-ಸಿಇಎನ್ ಠಾಣೆ ರವರು ಠಾಣೆಗೆ ಹಾಜರಾಗಿ ನೀಡಿದ ವರದಿಯ ಸಾರಾಂಶವೇನೆಂದರೆ ದಿನಾಂಕ 15/10/2019 ರಂದು ತಾನು ತನ್ನ ಸಿಬ್ಬಂದಿಯಾದ ಹೆಚ್ ಸಿ 85,71,205,208, ರವರೊಂದಿಗೆ ಸರ್ಕಾರಿ ಜೀಪ್ ಸಂಖ್ಯೆ ಕೆಎ-40 ಜಿ-270 ರಲ್ಲಿ ಅಕ್ರಮ ಚಟುವಟಿಕೆಗಳ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಲು ಮಧ್ಯಾಹ್ನ 1 ಗಂಟೆಯಲ್ಲಿ ಬಾತ್ಮೀದಾರರಿಂದ ಬಂದ ಖಚಿತ ಮಾಹಿತಿ ಮೇರೆಗೆ ನ್ಯಾಯಾಲಯದ ಅನುಮತಿ ಪಡೆದು ಪಂಚರನ್ನು ಬರಮಾಡಿಕೊಂಡು ಚಿಕ್ಕಬಳ್ಳಾಪುರ ಜಿಲ್ಲೆಯ ಜಿಲ್ಲಾಧಿಕಾರಿಗಳ ಕಛೇರಿಯ ಬಲ ಭಾಗಕ್ಕಿರುವ ಮಂಜುಳಮ್ಮ ಕೋಂ ಲೇಟ್ ನಾಗರಾಜು ರವರು ರೇಷ್ಮೆ ತೋಟದ ಹೊಂಗೆ ಮರದ ಕೆಳಗೆ ಕಾನೂನು ಬಾಹಿರವಾಗಿ ಹಣವನ್ನು ಪಣವಾಗಿಟ್ಟು ಅಂದರ್ ಬಾಹರ್ ಜೂಜಾಟ ಆಡುತ್ತಿದ್ದವರ ಮೇಲೆ ದಾಳಿ ಮಾಡಿ ಅವರ ಹೆಸರು ತಿಳಿಯಲಾಗಿ 1) ಸಂತೋಷ ಬಿನ್ ನಾರಾಯಣಸ್ವಾಮಿ, 22 ವರ್ಷ, ನಾಯಕರುಮ ಕಾರು ಚಾಲಕಮ ಪೋಲಂಪಲ್ಲಿ ಗ್ರಾಮ ಗುಡಿಬಂಡೆ ತಾಲ್ಲೂಕು 2) ರಾಜೇಶ್ ಬಿನ್ ಲೇಟ್ ಶ್ರೀನಿವಾಸ, 35 ವರ್ಷ, ಕುರುಬರು, ಕಾರು ಚಾಲಕ, ಕಂಕಣಕುಂಟೆ, ತೂಬುಗೆರೆ ದೊಡ್ಡಬಳ್ಳಾಪುರ ತಾಲ್ಲೂಕು 3) ಪವನ್ ಕುಮಾರ್ ಬಿನ್ ರಾಜಣ್ಣ, 23 ವರ್ಷ, ವಕ್ಕಲಿಗರು, ಕಾರು ಚಾಲಕ, ನಾಸ್ತಿಮ್ಮನಹಳ್ಳಿ, ಚಿಕ್ಕಬಳ್ಳಾಪುರ ರವರನ್ನು ವಶಕ್ಕೆ ಪಡೆದು ಜೂಜಾಟಕ್ಕೆ ಬಳಸಿದ್ದ 52 ಇಸ್ಪೀಟು ಎಲೆ, ಒಂದು ನ್ಯೂಸ್ ಪೇಪರ್, ಪಣಕ್ಕೆ ಹಾಕಿದ್ದ ಒಟ್ಟು 7320/- ರೂಪಾಯಿಗಳನ್ನು ಪಂಚರ ಸಮಕ್ಷಮ ಅಮಾನತ್ತು ಪಡಿಸಿಕೊಂಡು ಈ ಆರೋಪಿತರುಗಳ ವಿರುದ್ದ ಕಾನೂನು ಕ್ರಮ ಜರುಗಿಸಲು ಕೋರಿ ನೀಡಿದ ವರದಿಯ ಮೇರೆಗೆ ಈ ಪ್ರ ವ ವರದಿ.

 1. ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆ ಮೊ.ಸಂ. 191/2019 ಕಲಂ. 87 ಕೆ.ಪಿ ಆಕ್ಟ್:-

     ದಿನಾಂಕ 14.10.2019 ರಂದು  ಮದ್ಯಾಹ್ನ 15-00 ಗಂಟೆಯಲ್ಲಿ ನಾನು ಠಾಣೆಯಲ್ಲಿದ್ದಾಗ  ಬಂದ ಖಚಿತ ಮಾಹಿತಿಯಂತೆ ಚಿಕ್ಕಬಳ್ಳಾಪುರ ನಗರದ ದಗರ್ಾ ಮೊಹಲ್ಲಾದ ಸಿಎಸ್ಐ ಆಸ್ಪತ್ರೆ ಅವರಣದಲ್ಲಿ ಯಾರೋ ಆಸಾಮಿಗಳು ಹಣವನ್ನು ಪಣವಾಗಿಟ್ಟು ಅಂದರ್-ಬಾಹರ್  ಇಸ್ಪೀಟ್ ಜೂಜಾಟವನ್ನು ಆಡುತ್ತಿದ್ದಾರೆಂದು ಬಂದ ಖಚಿತವಾದ ಮಾಹಿತಿಯ ಮೇರೆಗೆ  ಚಿಕ್ಕಬಳ್ಳಾಪುರದ ಘನ ಎಸ್.ಸಿ.ಜೆ. ಮತ್ತು ಸಿ.ಜೆ.ಎಂ. ನ್ಯಾಯಾಲಯದಿಂದ ದಾಳಿ ಮಾಡಲು ಅನುಮತಿಯನ್ನು ಪಡೆದುಕೊಂಡು  ಠಾಣೆಗೆ ಪಂಚರಾಗಿ ದಗರ್ಾಮೊಹಲ್ಲಾದ ವಾಸಿಗಳಾದ ಬಿ. ಏಜಾಜ್ ಹಾಗೂ  ಅರ್. ಇಪರ್ಾನ್ ಎಂಬುವವರನ್ನು ಬರಮಾಡಿಕೊಂಡು  ಅವರಿಗೆ ಕೇಸಿನ ಸಾರಾಂಶವನ್ನು ತಿಳಿಸಿ ಪಂಚರಾಗಿ ಸಿಬ್ಬಂಧಿಯಾದ ಸಿಪಿಸಿ-152 ಜಯಣ್ಣ, ಪಿ.ಸಿ-138-ವಿ. ಮುರಳಿ, ಪಿ.ಸಿ-259 ಪರಶುರಾಮಬೋಯಿ, ಪಿ.ಸಿ-245 ವಿಜಯ್ ಕುಮಾರ್. ಮತ್ತು ಜೀಪ್ ಚಾಲಕ ಎಪಿಸಿ-131 ಅಲೀಮ್ ಪಾಷಾರವರುಗಳೊಂದಿಗೆ  ಮಧ್ಯಾಹ್ನ 17-00 ಗಂಟೆಗೆ ಸಕರ್ಾರಿ ವಾಹನ ಸಂಖ್ಯೆ ಕೆ.ಎ.40-ಜಿ-139 ರಲ್ಲಿ ಠಾಣೆಯನ್ನು ಬಿಟ್ಟು ಎಂಜಿ ರಸ್ತೆ, ಸಿಎಸ್ಐ ರಸ್ತೆಯಲ್ಲಿ ಹೋಗಿ ವಾಹನವನ್ನು ಸಿಎಸ್ಐ ಆಸ್ಪತ್ರೆಯ ಮುಂದೆ ಮರೆಯಲ್ಲಿ ನಿಲ್ಲಿಸಿ ಆಸ್ಪತ್ರೆಯ ಮುಖಾಂತರ  ಆಸ್ಪತ್ರೆಯ ಹಿಂಬಾಗದಲ್ಲಿರು ಹಳೆಯ ಬಿದ್ದು ಹೋಗಿರುವ  ಕಟ್ಟಡಗಳ ಬಳಿ ಹೋದಾಗ ನಿರ್ಜನ ಪ್ರದೇಶದಲ್ಲಿ ಕೆಲವರು ಗುಂಪಾಗಿ ಕುಳಿತುಕೊಂಡು ಅಂದರ್ ಗೆ 100 ರೂ ಬಾಹರ್ ಗೆ 100 ರೂ ಎಂದು ಕೂಗುತ್ತಿದ್ದು,  ನನ್ನ  ಸೂಚನೆಯಂತೆ ಸಿಬ್ಬಂದಿಯವರು ಅವರನ್ನು ಸುತ್ತುವರೆದಿದ್ದು ಅಷ್ಟರಲ್ಲಿ ಜುಜಾಟುತ್ತಿದ್ದ 4 ಜನರು ಪೊಲೀಸರನ್ನು ಕಂಡು ಓಡಿ ಹೋಗಲು ಪ್ರಯತ್ನಿಸಿದ್ದು ಕೂಡಲೆ ಸಿಬ್ಬಂದಿಯವರು ಆರೋಪಿಗಳನ್ನು ತಲಾ ಒಬ್ಬೊಬ್ಬರು ಹಿಡಿದುಕೊಂಡು ನನ್ನ ಮುಂದೆ ಹಾಜರು ಪಡಿಸಿರುತ್ತಾರೆ. ಸದರಿ ಆಸಾಮಿಗಳನ್ನು ಪಂಚರ ಸಮಕ್ಷಮ ಹೆಸರು ವಿಳಾಸ ಕೇಳಲಾಗಿ ಅವರು ಒಬ್ಬೊಬ್ಬರಾಗಿ ತಮ್ಮ ಹೆಸರು ವಿಳಾಸ ತಿಳಿಸಿದ್ದು, 1) ತನ್ವೀರ್ ಪಾಷಾ ಬಿನ್ ಲೇಟ್ ಮೌಲಾ 18 ವರ್ಷ,  ಮುಸ್ಲಿಂ  ಎಲೆಕ್ಟ್ರೀಷಿಯನ್ ಕೆಲಸ, ವಾರ್ಡ-4 ದಗರ್ಾ ಮೊಹಲ್ಲಾ ಚಿಕ್ಕಬಳ್ಳಾಪುರ ನಗರ. 2) ಜಭಿ ಬಿನ್ ಚಂದ್ ಪಾಷಾ  28 ವರ್ಷ, ಅಟೋಚಾಲಕ, ವಾರ್ಡ-4 ದಗರ್ಾ ಮೊಹಲ್ಲಾ ಚಿಕ್ಕಬಳ್ಳಾಪುರ ನಗರ.  3) ಇಮ್ರಾನ್ ಪಾಷಾ ಬಿನ್ ರಿಯಾಜ್  24 ವರ್ಷ,  ಮುಸ್ಲಿಂ ಮ್ಯಾಕಾನಿಕ್ ವಾರ್ಡ-4 ದಗರ್ಾ ಮೊಹಲ್ಲಾ ಚಿಕ್ಕಬಳ್ಳಾಪುರ ನಗರ. 4) ನಯಾಜ್  ಬಿನ್ ಚಂದ್ ಪಾಷಾ  21, ವರ್ಷ, ಮುಸ್ಲಿಂ ಮ್ಯಾಕಾನಿಕ್ ವಾರ್ಡ-4 ದಗರ್ಾ ಮೊಹಲ್ಲಾ ಚಿಕ್ಕಬಳ್ಳಾಪುರ ನಗರ. ರವರಾಗಿದ್ದು ಸದರಿ ಆಸಾಮಿಗಳು ಗುಂಪಾಗಿ ಕುಳಿತುಕೊಂಡು ಅಕ್ರಮವಾಗಿ ಅಂದರ್ ಬಾಹರ್  ಜೂಜಾಟ ವನ್ನು ಆಡುತ್ತಿದ್ದು ಆಸಾಮಿಗಳು ಜೂಜಾಡುತ್ತಿದ್ದ ಸ್ಥಳದಲ್ಲಿ ಪರಿಶೀಲಿಸಲಾಗಿ  ಪಣಕ್ಕಿಟ್ಟಿದ್ದ ಹಣ ಮತ್ತು ಇಸ್ಪೀಟ್ ಎಲೆಗಳನ್ನು ಚೆಲ್ಲಾ ಪಿಲ್ಲಿಯಾಗಿ ಎಸೆದಿದ್ದನ್ನು  ಸಂಗ್ರಹಿಸಿಕೊಂಡು ಎಣಿಸಲಾಗಿ ನಗದು 2500/- ರೂ ಮತ್ತು 52 ಇಸ್ಪೀಟ್ ಎಲೆಗಳು ಇರುತ್ತವೆ. ಆಸಾಮಿಗಳು ಪಣಕ್ಕಿಟ್ಟಿದ್ದ ಹಣ 2500/- ರೂ ಮತ್ತು 52 ಇಸ್ಪೀಟ್ ಎಲೆಗಳನ್ನು ಅಮಾನತ್ತು ಪಡಿಸಿಕೊಂಡು ವಶಕ್ಕೆ ಪಡೆದುಕೊಂಡಿರುತ್ತದೆ. ಪಂಚನಾಮೆಯನ್ನು 17.20 ಗಂಟೆಯಿಂದ 18.00 ಗಂಟೆಯವರೆಗೆ ಕೈಗೊಂಡಿರುತ್ತೆ. ಅಮಾನತ್ತು ಪಡಿಸಿಕೊಂಡ ಮಾಲು ಮತ್ತು ಆರೋಪಿಗಳನ್ನು ವಶಕ್ಕೆ ಪಡೆದುಕೊಂಡು ಠಾಣೆಗೆ ಸಂಜೆ 18.15 ಗಂಟೆಗೆ ವಾಪಾಸ್ಸಾಗಿ ಆಸಾಮಿಗಳು, ಮಾಲು, ಪಂಚನಾಮೆ ಮತ್ತು ಘನ ನ್ಯಾಯಾಲಯದ ಅನುಮತಿ ಪತ್ರವನ್ನು ಹಾಜರು ಪಡಿಸುತ್ತಿದ್ದು ಆಸಾಮಿಗಳ ವಿರುದ್ಧ ಕಲಂ: 87 ಕೆ.ಪಿ.ಆಕ್ಟ್ ರೀತ್ಯಾ ಕ್ರಮ ಜರುಗಿಸಲು ಸೂಚಿಸಿದ್ದು ಅದರಂತೆ ಪ್ರಕರಣವನ್ನು ದಾಖಲಸಿಕೊಂಡು ತನಿಖೆಯನ್ನು ಕೈಗೊಂಡಿರುತ್ತೆ.

 1. ಚಿಂತಾಮಣಿ ನಗರ ಪೊಲೀಸ್ ಠಾಣೆ ಮೊ.ಸಂ. 279/2019 ಕಲಂ. 78(3) ಕೆ.ಪಿ ಆಕ್ಟ್:-

     ದಿನಾಂಕ:12-10-2019 ರಂದು ಸಂಜೆ 16-15 ಗಂಟೆಯಲ್ಲಿ ನಾನು ಮತ್ತು ಸಿಬ್ಬಂದಿಯವರಾದ ನಾಗಭೂಷಣ ಹೆಚ್.ಸಿ 126, ಸೋಮಶೇಖರಾಚಾರಿ  ಹೆಚ್.ಸಿ 245 ರವರೊಂದಿಗೆ ಸರ್ಕಾರಿ ಜೀಪು ಸಂಖ್ಯೆ: ಕೆ.ಎ 40 ಜಿ 356  ವಾಹನದಲ್ಲಿ ಚೇಳೂರು ವೃತ್ತ,ಪ್ಲವರ್ ಸರ್ಕಲ್, ಕಡೆಗಳಲ್ಲಿ ನಗರಗಸ್ತಿನಲ್ಲಿದ್ದಾಗ, ಗಜಾನನ ವೃತ್ತದ ಬಳಿ ಸಾರ್ವಜನಿಕ ರಸ್ತೆಯ ಬದಿಯಲ್ಲಿ ಮಟ್ಕಾ ಜೂಜಾಟ ನಡೆಯುತ್ತಿರುವುದಾಗಿ ಖಚಿತ ಮಾಹಿತಿ ಬಂದಿದ್ದು, ನಾವು ಪ್ಲವರ್ ದಲ್ಲಿ ಪಂಚರನ್ನುಬರಮಾಡಿಕೊಂಡು ಅವರಿಗೆ ವಿಚಾರ ತಿಳಿಸಿ, ಅವರನ್ನು ಜೀಪಿನಲ್ಲಿ ಕರೆದುಕೊಂಡು ಗಜಾನನ ವೃತ್ತದ  ಬಳಿಗೆ ಹೋಗಿ ಸ್ವಲ್ಪ ದೂರದಲ್ಲಿ ಜೀಪನ್ನು ನಿಲ್ಲಿಸಿ, ಪಂಚರನ್ನು ಮತ್ತು ಸಿಬ್ಬಂದಿಯವರನ್ನು ಕಾಲ್ನಡಿಗೆಯಲ್ಲಿ ಕರೆದುಕೊಂಡು ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಗಜಾನನ ವೃತ್ತದ ಬಳಿ ಪೋಸ್ಟ್ ಸೀನಪ್ಪ ರವರ ಚಿಲ್ಲರೆ ಅಂಗಡಿಯ ಬಳಿ  ಸಾರ್ವಜನಿಕ ರಸ್ತೆಯಲ್ಲಿ ಯಾರೋ ಒಬ್ಬ ವ್ಯೆಕ್ತಿಯು ರಸ್ತೆಯ ಬದಿಯಲ್ಲಿ ನಿಂತುಕೊಂಡು ಜನರನ್ನು ಗುಂಪು ಸೇರಿಸಿಕೊಂಡು 1 ರೂಗೆ 80 ರೂ ಎಂದು ಕೂಗುತ್ತಾ ಸಾರ್ವಜನಿಕರಿಗೆ ಹಣ ಕಟ್ಟುವಂತೆ ಪ್ರೇರೆಪಿಸುತ್ತಾ, ಮಟ್ಕಾ ಚೀಟಿ ಬರೆಯುತ್ತಿದ್ದನು. ನಾವು ಪಂಚರೊಂದಿಗೆ ಸುತ್ತುವರೆದು, ದಾಳಿ ಮಾಡುವಷ್ಟರಲ್ಲಿ ಅಲ್ಲಿದ್ದ ಜನರೆಲ್ಲಾ ಓಡಿ ಹೋಗಿದ್ದು, ಮಟಕಾ ಚೀಟಿ ಬರೆಯುತ್ತಿದ್ದ  ವ್ಯಕ್ತಿಯನ್ನು ಹಿಡಿದುಕೊಂಡು ಆತನ ಹೆಸರು ವಿಳಾಸ ಕೇಳಲಾಗಿ ತನ್ನ ನವೀನ್ ಬಿನ್ ರೆಡ್ಡಪ್ಪ, 25 ವರ್ಷ, ನಾಯಕ ಜನಾಂಗ, ಡಿಪೋ ಸೇಲ್ಸ್ ಮ್ಯಾನ್ ಕೆಲಸ, ನಾಯನಹಳ್ಳಿ, ಚಿಂತಾಮಣಿ ತಾಲ್ಲೂಕು ಎಂದು ತಿಳಿಸಿದ್ದು, ಆತನನ್ನು ಅಂಗ ಶೋಧನೆ ಮಾಡಲಾಗಿ  280 ರೂ ನಗದು ಹಣ ಇದ್ದು ಸದರಿ ಹಣದ ಬಗ್ಗೆ ಕೇಳಲಾಗಿ ಇದು ಸಾರ್ವಜನಿಕರಿಂದ ಮಟ್ಕಾ ಆಡಿ ಸಂಪಾದಿಸಿರುವ ಹಣವೆಂತ ತಿಳಿಸಿದ್ದು, ಪಂಚಾಯ್ತಿದಾರರ ಸಮಕ್ಷಮದಲ್ಲಿ ಪಂಚನಾಮೆಯ ಮೂಲಕ ಹಣ, ಒಂದು ಪೆನ್ನು ಮಟಕಾ ಚೀಟಿಯನ್ನು ಅಮಾನತ್ತು ಪಡಿಸಿಕೊಂಡು, ಮಾಲು, ಆಸಾಮಿ, ಪಂಚನಾಮೆಯೊಂದಿಗೆ ಸಂಜೆ  17-15 ಗಂಟೆಗೆ ಠಾಣೆಗೆ ವಾಪಸ್ಸಾಗಿ ಮುಂದಿನ ಕ್ರಮಕ್ಕಾಗಿ ಠಾಣಾಧಿಕಾರಿಗಳಿಗೆ ನೀಡಿದ ವರದಿಯ ಮೇರೆಗೆ ಇದು ಅಂಜ್ಞೇಯ ಅಪರಾಧವಾಗಿರುವುದರಿಂದ ಘನ ನ್ಯಾಯಾಲಯದ ಅನುಮತಿಯನ್ನು ಪಡೆಯಲು ಠಾಣಾ ಎನ್ ಸಿ ಆರ್ 234/19 ರಿತ್ಯಾ ದಾಖಲಿಸಿ ವರದಿಯನ್ನು ನೀವೆದಿಸಿಕೊಂಡಿರುತ್ತೆ ಘನ ನ್ಯಾಯಾಲಯದಿಂದ ಅನುಮತಿಯನ್ನು ಪಡೆದ ನಂತರ ಠಾಣಾ ಮೊ ಸಂ: 279/2019 ರೀತ್ಯಾ ಪ್ರ ವ ವರದಿಯನ್ನು ದಾಖಲಿಸಿರುತ್ತೆ.

 1. ಚಿಂತಾಮಣಿ ನಗರ ಪೊಲೀಸ್ ಠಾಣೆ ಮೊ.ಸಂ. 280/2019 ಕಲಂ. 78(3) ಕೆ.ಪಿ ಆಕ್ಟ್:-

     ದಿನಾಂಕ:12-10-2019 ರಂದು ಸಂಜೆ 15-00 ಗಂಟೆಯಲ್ಲಿ ನಾನು ಮತ್ತು ಸಿಬ್ಬಂದಿಯವರಾದ ಸೋಮಶೇಖರಾಚಾರಿ  ಹೆಚ್.ಸಿ  245, ರವೀಂದ್ರ ಪಿ.ಸಿ 539 ರವರೊಂದಿಗೆ ಸರ್ಕಾರಿ ಜೀಪು ಸಂಖ್ಯೆ: ಕೆ.ಎ 40 ಜಿ 356  ವಾಹನದಲ್ಲಿ ಪ್ಲವರ್ ಸರ್ಕಲ್, ಮಾರುತಿ ವೃತ್ತ, ಕಡೆಗಳಲ್ಲಿ ನಗರಗಸ್ತಿನಲ್ಲಿದ್ದಾಗ, ಆದರ್ಶ ಚಿತ್ರಮಂದಿರ ಬಳಿ ಸಾರ್ವಜನಿಕ ರಸ್ತೆಯ ಬದಿಯಲ್ಲಿ ಮಟ್ಕಾ ಜೂಜಾಟ ನಡೆಯುತ್ತಿರುವುದಾಗಿ ಖಚಿತ ಮಾಹಿತಿ ಬಂದಿದ್ದು, ನಾವು ಗಜಾನನ ವೃತ್ತಕ್ಕೆ ಹೋಗಿ ಅಲ್ಲಿ ಪಂಚರನ್ನುಬರಮಾಡಿಕೊಂಡು ಅವರಿಗೆ ವಿಚಾರ ತಿಳಿಸಿ, ಅವರನ್ನು ಜೀಪಿನಲ್ಲಿ ಕರೆದುಕೊಂಡು ಆದರ್ಶ ಚಿತ್ರಮಂದಿರದ ಬಳಿಗೆ ಹೋಗಿ ಸ್ವಲ್ಪ ದೂರದಲ್ಲಿ ಜೀಪನ್ನು ನಿಲ್ಲಿಸಿ, ಪಂಚರನ್ನು ಮತ್ತು ಸಿಬ್ಬಂದಿಯವರನ್ನು  ಕಾಲ್ನಡಿಗೆಯಲ್ಲಿ ಕರೆದುಕೊಂಡು ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಆದರ್ಶ ಚಿತ್ರಮಂದಿರದ ಬಳಿ ಸಾರ್ವಜನಿಕ ರಸ್ತೆಯಲ್ಲಿ  ಯಾರೋ ಒಬ್ಬ ವ್ಯೆಕ್ತಿಯು ರಸ್ತೆಯ ಬದಿಯಲ್ಲಿ ನಿಂತುಕೊಂಡು ಜನರನ್ನು ಗುಂಪು ಸೇರಿಸಿಕೊಂಡು 1 ರೂಗೆ 80 ರೂ ಎಂದು ಕೂಗುತ್ತಾ ಸಾರ್ವಜನಿಕರಿಗೆ ಹಣ ಕಟ್ಟುವಂತೆ ಪ್ರೇರೆಪಿಸುತ್ತಾ, ಮಟ್ಕಾ ಚೀಟಿ ಬರೆಯುತ್ತಿದ್ದನು. ನಾವು ಪಂಚರೊಂದಿಗೆ ಸುತ್ತುವರೆದು, ದಾಳಿ ಮಾಡುವಷ್ಟರಲ್ಲಿ ಅಲ್ಲಿದ್ದ ಜನರೆಲ್ಲಾ ಓಡಿ ಹೋಗಿದ್ದು, ಮಟಕಾ ಚೀಟಿ ಬರೆಯುತ್ತಿದ್ದ  ವ್ಯಕ್ತಿಯನ್ನು ಹಿಡಿದುಕೊಂಡು ಆತನ ಹೆಸರು ವಿಳಾಸ ಕೇಳಲಾಗಿ ತನ್ನ ರಫೀಕ್ ಬಿನ್ ಲೇಟ್ ಸಯ್ಯದ್ ಹೌಸ್, 23 ವರ್ಷ, ಮುಸ್ಲೀಂ ಜನಾಂಗ, ಹಣ್ಣಿನ ವ್ಯಾಪಾರ, ಜಾಮೀಯಾ ಮಸೀದಿ ಹಿಂಭಾಗ, ದೊಡ್ಡಪೇಟೆ , ಚಿಂತಾಮಣಿ ಟೌನ್ ಎಂದು ತಿಳಿಸಿದ್ದು, ಆತನನ್ನು ಅಂಗ ಶೋಧನೆ ಮಾಡಲಾಗಿ  420 ರೂ ನಗದು ಹಣ ಇದ್ದು ಸದರಿ ಹಣದ ಬಗ್ಗೆ ಕೇಳಲಾಗಿ ಇದು ಸಾರ್ವಜನಿಕರಿಂದ ಮಟ್ಕಾ ಆಡಿ ಸಂಪಾದಿಸಿರುವ ಹಣವೆಂತ ತಿಳಿಸಿದ್ದು,ಪಂಚಾಯ್ತಿದಾರರ ಸಮಕ್ಷಮದಲ್ಲಿ ಪಂಚನಾಮೆಯ ಮೂಲಕ ಹಣ, ಒಂದು ಪೆನ್ನು ಮಟಕಾ ಚೀಟಿಯನ್ನು ಅಮಾನತ್ತು ಪಡಿಸಿಕೊಂಡು, ಮಾಲು, ಆಸಾಮಿ, ಪಂಚನಾಮೆಯೊಂದಿಗೆ ಸಂಜೆ  16-00 ಗಂಟೆಗೆ ಠಾಣೆಗೆ ವಾಪಸ್ಸಾಗಿ ಮುಂದಿನ ಕ್ರಮಕ್ಕಾಗಿ ಠಾಣಾಧಿಕಾರಿಗಳಿಗೆ ವರದಿಯನ್ನು ನೀಡಿದ ವರದಿಯ ಮೇರೆಗೆ ಇದು ಅಂಜ್ಞೇಯ ಅಪರಾಧವಾಗಿರುವುದರಿಂದ ಘನ ನ್ಯಾಯಾಲಯದ ಅನುಮತಿಯನ್ನು ಪಡೆಯಲು ಠಾಣಾ ಎನ್ ಸಿ ಆರ್ 233/19 ರಿತ್ಯಾ ದಾಖಲಿಸಿ ವರದಿಯನ್ನು ನೀವೆದಿಸಿಕೊಂಡಿರುತ್ತೆ ಘನ ನ್ಯಾಯಾಲಯದಿಂದ ಅನುಮತಿಯನ್ನು ಪಡೆದ ನಂತರ ಠಾಣಾ ಮೊ ಸಂ: 280/2019 ರೀತ್ಯಾ ಪ್ರ ವ ವರದಿಯನ್ನು ದಾಖಲಿಸಿರುತ್ತೆ.

 1. ಚಿಂತಾಮಣಿ ನಗರ ಪೊಲೀಸ್ ಠಾಣೆ ಮೊ.ಸಂ. 281/2019 ಕಲಂ. 15(ಎ), 32(3) ಕೆ.ಇ ಆಕ್ಟ್:-

     ದಿನಾಂಕ:-14-10-2019 ರಂದು ರಾತ್ರಿ 9-00 ಗಂಟೆಯ ಸಮಯದಲ್ಲಿ ಜಿ.ಸಿ ನಾರಾಯಣಸ್ವಾಮಿ, ಪಿ.ಐ ಆದ  ನಾನು ಠಾಣೆಗೆ ಒದಗಿಸಿರುವ ಸರ್ಕಾರಿ ಜೀಪ್ ಸಂಖ್ಯೆ ಕೆಎ-40, ಜಿ-356 ವಾಹನದಲ್ಲಿ ಚಿಂತಾಮಣಿ ನಗರದಲ್ಲಿ ನಾನು ಮತ್ತು ನನ್ನೊಂದಿಗೆ ಠಾಣೆಯ ಶ್ರೀ. ನಾಗಭೂಷಣ್  ಹೆಚ್.ಸಿ 126  ಮತ್ತು ಸಿಪಿಸಿ 539 ರವೀಂದ್ರ ರವರೊಂದಿಗೆ ನಗರದ ಚೇಳೂರು ರಸ್ತೆ, ಆರ್.ಎಂ.ಸಿ.ಮಾರುಕಟ್ಟೆ, ಸಂತೇ ಮೈದಾನ ಮುಂತಾದ ಕಡೆ ಗಸ್ತು ಮಾಡುತ್ತಿದ್ದಾಗ ಚಿಂತಾಮಣಿ ನಗರದ ಗ್ರಂಥಾಲಯ ಕಟ್ಟಡದ ಬಳಿ ಯಾರೋ ಆಸಾಮಿಗಳು ಸಾರ್ವಜನಿಕ ಸ್ಥಳದಲ್ಲಿ ಮದ್ಯದ ಪಾಕೇಟ್ ಗಳನ್ನು ಇಟ್ಟುಕೊಂಡು ಮದ್ಯವನ್ನು ಕುಡಿಯುತ್ತಿರುವುದಾಗಿ ಮಾಹಿತಿ ಬಂದಿದ್ದು ಅದರಂತೆ ನಾವು ಚೇಳೂರು ವೃತ್ತದಿಂದ ಪಂಚರನ್ನು ಕರೆದುಕೊಂಡು ಮೇಲ್ಕಂಡ ಸ್ಥಳಕ್ಕೆ ಹೋಗಿ ನೋಡಲಾಗಿ  ಯಾರೋ 03 ಜನ ಆಸಾಮಿಗಳು ತನ್ನ ಬಳಿ ನಲ್ಲಿ ಮದ್ಯದ  ಪಾಕೇಟ್ ಗಳನ್ನು ಇಟ್ಟುಕೊಂಡು  ಆ ಪೈಕಿ  02  ಟೆಟ್ರಾ ಪಾಕೆಟ್ ಗಳನ್ನು ಹೊರಗಡೆ ಹಾಕಿಕೊಂಡು 2-3 ಪ್ಲಾಸ್ಟಿಕ್ ಗ್ಲಾಸುಗಳನ್ನು 01 ವಾಟರ್ ಬಾಟಲ್ ಇಟ್ಟುಕೊಂಡು ಮದ್ಯವನ್ನು ಗ್ಲಾಸಿನಲ್ಲಿ ಹಾಕಿಕೊಂಡು ಕುಡಿಯುತ್ತಿದ್ದು. ನಾವುಗಳು ಹೋಗುವಷ್ಟರಲ್ಲಿ ಅಲ್ಲಿದ್ದ 2-3 ಜನರು ಓಡಿ ಹೋಗಿದ್ದು, ಆ ಪೈಕಿ ಒಬ್ಬನನ್ನು ಹಿಡಿದುಕೊಂಡು ಹಿಡಿದುಕೊಂಡು ಸದರಿ ವ್ಯಕ್ತಿಯನ್ನು ಸಾರ್ವಜನಿಕ ಸ್ಥಳದಲ್ಲಿ ಮದ್ಯವನ್ನು ಕುಡಿಯಲು ಪರವಾನಿಗೆ ಇದೆಯೇ ಎಂದು ಕೇಳಲಾಗಿ ಇಲ್ಲವೆಂದು ತಿಳಿಸಿದ್ದು ಆತನ ಹೆಸರು ವಿಳಾಸ ಕೇಳಲಾಗಿ ತನ್ನ ಹೆಸರು.ಅನಿಲ್ ಕುಮಾರ್ ಬಿನ್ ವೆಂಕಟರೆಡ್ಡಿ, 31 ವರ್ಷ, ವಕ್ಕಲಿಗ, ವ್ಯಾಪಾರ ವಾಸ: ಸೊಣ್ಣಶೇಟ್ಟಹಳ್ಳಿ ಚಿಂತಾಮಣಿ ನಗರ ಎಂದು ತಿಳಿಸಿದ್ದು ಆತನ ಬಳಿ ಪರಿಶೀಲಿಸಲಾಗಿ 180 ML OLD TAVERN WHISKY ನ 03 ಟೆಟ್ರಾ ಮಧ್ಯ ಪ್ಯಾಕೆಟ್ ಗಳು ಒಟ್ಟು 540.ಮೀ.ಲೀ ಇದ್ದು ಪ್ರತಿ ಪಾಕೇಟ್ ನ ಬೆಲೆ 74.13 ಓಟ್ಟು ಬೆಲೆ 222.39  ಇದ್ದು ಅವುಗಳಲ್ಲಿ ಆರ್ಧದಷ್ಟು ಮಧ್ಯವನ್ನು ಪ್ಲಾಸ್ಟಿಕ್ ಲೋಟಗಳಲ್ಲಿ ಹಾಕಿರುತ್ತಾರೆ. 180 ML OLD TAVERN WHISKY ನ 03 ಟೆಟ್ರಾ ಪ್ಯಾಕೆಟ್ ಗಳು ಗಳನ್ನು 02 ಪ್ಲಾಸ್ಟೀಕ್ ಲೋಟಗಳನ್ನು  ರಾತ್ರಿ 9-00 ಗಂಟೆಯಿಂದ 9-40 ಗಂಟೆಯವರೆಗೆ ಪಂಚನಾಮೆಯ ಮೂಲಕ ಅಮಾನತ್ತು ಪಡಿಸಿಕೊಂಡು ಆಸಾಮಿಯೊಂದಿಗೆ ಠಾಣೆಗೆ ಹಾಜರಾಗಿ ಮುಂದಿನ ಕ್ರಮಕ್ಕಾಗಿ ವರದಿಯನ್ನು ನೀಡಿರುತ್ತೆ.

 1. ಚಿಂತಾಮಣಿ ನಗರ ಪೊಲೀಸ್ ಠಾಣೆ ಮೊ.ಸಂ. 282/2019 ಕಲಂ. 419-420 ಐ.ಪಿ.ಸಿ:-

     ದಿನಾಂಕ: 15/10/2019 ರಂದು ಬೆಳಿಗ್ಗೆ 11-30 ಗಂಟೆಗೆ ನ್ಯಾಯಾಲಯದ ಪಿಸಿ 509 ರವರು ಠಾಣೆಗೆ ಹಾಜರಾಗಿ ನೀಡಿದ ಘನ ನ್ಯಾಯಾಲಯದ ಸಾದರಾಗಿ ಬಂದ PCR NO 266/2019 ರೀತ್ಯಾ ಪಡೆದುಕೊಂಡ ದೂರಿನ  ಸಾರಾಂಶವೇನೆಂದರೆ ಈ ಕೇಸಿನ ಪಿರ್ಯಾದಿದಾರರಾದ  ಎನ್ ವೆಂಕಟರೆಡ್ಡಿ  ಬಿನ್ ನರಸಪ್ಪ  ಮತ್ತು ಜಯರಾಂ ಬಿನ್ ಆಂಜಪ್ಪ ರವರು  ಇದೇ ಚಿಂತಾಮಣಿ ನಗರದ IDSMT  ಮುನ್ಸಿಪಾಲ್ ಕಾಂಪ್ಲೆಕ್ಸ್ ನಲ್ಲಿರುವ ಕೆ.ವಿ ಮಧುಸೂಧನರೆಡ್ಡಿ ಬಿನ್ ಲೇಟ್.ವೆಂಕಟರೆಡ್ಡಿ ರವರು ಮತ್ತು ಸುನೀತಾ ಕೋಂ ಮಧುಸೂಧನರೆಡ್ಡಿ ರವರ ಅಂಗಡಿಯಲ್ಲಿ ನಡೆಸುತ್ತಿದ್ದ ಚೀಟಿಯನ್ನು ಹಾಕಿಕೊಂಡಿದ್ದು, ಸದರಿ ಚೀಟಿಯಲ್ಲಿ 25 ಜನ ಸದ್ಯಸರು ಇದ್ದು, ಅದರಲ್ಲಿ ಪಿರ್ಯಾದಿ ಎನ್ ವೆಂಕಟರೆಡ್ಡಿ ರವರು 2 ಲಕ್ಷದ ಚೀಟಿಯನ್ನು ಕಟ್ಟಿದ್ದು, ಸದರಿ ಚೀಟಿಯು ದಿನಾಂಕ: 05/11/18 ರಂದು ಪ್ರಾರಂಭವಾಗಿದ್ದು ದಿ:05/07/2019 ವರೆಗೆ ಪ್ರತಿ ತಿಂಗಳು 8000 ರೂ ಗಳಂತೆ  ಚೀಟಿ ಹಣವನ್ನು ಕಂತಾಗಿ ಕಟ್ಟುತ್ತಿದ್ದು, ಅದರಂತೆ ಒಟ್ಟು 13 ತಿಂಗಳು ಹಣ ಕಟ್ಟಿರುವುದಾಗಿ, ಸದರಿ ಚೀಟಿಯು ಕಟ್ಟುತ್ತಿದ್ದರಿಂದ ಒಂದು ಚಿಕ್ಕ ಪುಸ್ತಕವನ್ನು ನೀಡಿ ತಾವು ಕಟ್ಟಿರುವ ಹಣವನ್ನು ಅದರಲ್ಲಿ ಬರೆದುಕೊಡುತ್ತಿದ್ದುದಾಗಿ ತಿಳಿಸಿದ್ದು  ಹಾಗೂ ಅದರಂತೆ 2 ನೇ ಪಿರ್ಯಾದಿದಾರರಾದ ಜಯರಾಂ ರವರೂ ಸಹ ಸದರಿ  ಮೇಲ್ಕಂಡ ಆರೋಪಿಗಳ ಬಳಿ 1 ಲಕ್ಷದ ಒಂದು ಚೀಟಿ ಹಾಕಿದ್ದು ಪ್ರತಿ ತಿಂಗಳು 5000 ರೂ ನಂತೆ 18 ತಿಂಗಳು ಚೀಟಿ ಕಟ್ಟಿದ್ದು, ಆದರೆ ಸದರಿ ಮೇಲ್ಕಂಡರವರು ಚೀಟಿಯನ್ನು ಪೂರ್ತಿಗೊಳಿಸದೇ ತಮಗೆ ಮೋಸ ಮಾಡುವ ಉದ್ದೇಶದಿಂದ ಸೆಪ್ಟಂಬರ್ 2019 ನೇ ಸಾಲು ಮೊದಲ ವಾರದಿಂದ ಯಾರಿಗೂ ಸಿಗದೇ ಅಂಗಡಿ ಬಾಗಿಲು ಹಾಕಿಕೊಂಡು ಚಿಂತಾಮಣಿ ನಗರ ಬಿಟ್ಟು ಹೊರಟು ಹೋಗಿರುವುದಾಗಿ ಇತ್ಯಾದಿಯಾಗಿ ನಮೂದಿಸಿ ಘನ ನ್ಯಾಯಾಲಯದಲ್ಲಿ PCR  ರೀತ್ಯಾ ದೂರು ದಾಖಲಿಸಿದ್ದು ಮುಂದಿನ ಕ್ರಮಕ್ಕಾಗಿ ನ್ಯಾಯಾಲಯದಿಂದ ಸಾದರಾಗಿ ಬಂದು ದೂರಾಗಿದ್ದು .ಅದರಂತೆ  ಸದರಿ ದೂರುನ್ನು ಪಡೆದು ಠಾಣಾ ಮೊ.ಸಂ 282/2019 ಕಲಂ 419,420 ಐಪಿಸಿ ರೀತ್ಯಾ ಪಕ್ರರಣ ದಾಖಲಿಸಿಕೊಂಡಿರುತ್ತೆ.

 1. ದಿಬ್ಬೂರಹಳ್ಳಿ ಪೊಲೀಸ್ ಠಾಣೆ ಮೊ.ಸಂ. 175/2019 ಕಲಂ. 15(ಎ), 32(3) ಕೆ.ಇ ಆಕ್ಟ್:-

     ದಿನಾಂಕ:15/10/2019 ರಂದು 8-15 ಗಂಟೆಗೆ ಪಿ.ಎಸ್.ಐ ರವರು ಮಾಲು ಅಮಾನತ್ತು ಪಂಚನಾಮೆ ಹಾಗೂ ಅಮಾನತ್ತು ಪಡಿಸಿಕೊಂಡ ಮಾಲಿನೊಂದಿಗೆ ನೀಡಿದ ಮೆಮೋನ ಸಾರಾಂಶವೇನೆಂದರೆ ಈ ದಿನ ದಿನಾಂಕ 15/10/2019 ರಂದು ತಾನು ಠಾಣೆಯಲ್ಲಿದ್ದಾಗ ಠಾಣಾ ವ್ಯಾಪ್ತಿಯ ಸಾದಲಿ ಗ್ರಾಮ ವಾಸಿಯಾದ ಶ್ರೀನಿವಾಸ ಬಿನ್ ಚಿಕ್ಕನರಸಪ್ಪ ರವರು ಅವರ ಬಾಬತ್ತು ಅಂಗಡಿಯ ಬಳಿ ಸಾರ್ವಜನಿಕರಿಗೆ ಅಕ್ರಮವಾಗಿ ಮದ್ಯಪಾನಮಾಡಲು ಸ್ಥಳಾವಕಾಶವನ್ನು ಮಾಡಿಕೊಟ್ಟಿರುವುದಾಗಿ ಮಾಹಿತಿ ಬಂದಿದ್ದರ ಮೇರೆಗೆ ತಾನು ಮತ್ತು ಠಾಣೆಯ ಪಿ.ಸಿ-446 ಕರಿಬಾಬು, ಪಿ.ಸಿ-361 ದಕ್ಷೀಣಾಮೂರ್ತಿ ಹಾಗೂ ಪಂಚಾಯ್ತಿದಾರರೊಂದಿಗೆ ದಾಳಿಮಾಡಿ ಸ್ಥಳದಲ್ಲಿ ಇದ್ದ 90 ಎಂ.ಎಲ್ ನ 12 ಹೈವಾರ್ಡ್ಸ್ ಚೇರ್ಸ್ ವಿಸ್ಕಿಯ ಮದ್ಯದ ಟೆಟ್ರಾ ಪಾಕೇಟ್ ಗಳನ್ನು, ಖಾಲಿಯ ಮಾಡಿರುವ 2 ಹೈವಾರ್ಡ್ಸ್ ಚೇರ್ಸ್ ವಿಸ್ಕಿಯ ಮದ್ಯದ ಟೆಟ್ರಾ ಪ್ಯಾಕೇಟ್ ಗಳನ್ನು ಹಾಗೂ 2 ಪ್ಲಾಸ್ಟಿಕ್ ಲೋಟಗಳನ್ನು ಪಂಚನಾಮೆಯ ಮೂಲಕ ಅಮಾನತ್ತು ಪಡಿಸಿಕೊಂಡು  ಠಾಣೆಗೆ ಬಂದು ಮುಂದಿನ ಕ್ರಮ ಕೈಗೊಳ್ಳಲು ನೀಡಿರುವ ಮೆಮೋ ಆಗಿರುತ್ತೆ.

 1. ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 442/2019 ಕಲಂ. 87 ಕೆ.ಪಿ ಆಕ್ಟ್:-

     ದಿನಾಂಕ 13-10-2019 ರಂದು ರಾತ್ರಿ 9-30 ಗಂಟೆಗೆ ಗೌರಿಬಿದನೂರು ಗ್ರಾಮಾಂತರ ಠಾಣೆಯ ಮಾನ್ಯ ಪಿ.ಎಸ್.ಐ. ಎನ್. ಮೋಹನ್ ರವರು ಠಾಣೆಗೆ ಹಾಜರಾಗಿ  4 ಜನ ಸಾಮಿಗಳು, ಮಾಲು ಮತ್ತು ಪಂಚನಾಮೆಯನ್ನು ಹಾಜರುಪಡಿಸಿ ನೀಡಿದ  ದೂರಿನ ಸಾರಾಂಶವೇನೆಂದರೆ  ದಿನಾಂಕ: 13-10-2019 ರಂದು ರಾತ್ರಿ 8-00  ಗಂಟೆಯಲ್ಲಿ ಠಾಣಾ  ವ್ಯಾಪ್ತಿಯಲ್ಲಿ ನಾನು ಮತ್ತು ಸಿಬ್ಬಂದಿಯಾದ  ಪಿ.ಸಿ-205 ಮೋಹನ್ , ಪಿ.ಸಿ. 335 ಮಹಂತೇಶ್ ಸಜ್ಜನ್  , ಪಿ.ಸಿ. – 115 ಕೆಂಪರಾಜು, ಪಿ.ಸಿ-179 ಶಿವಶೇಖರ ,. ರವರೊಂದಿಗೆ  ರಾತ್ರಿ ಗಸ್ತು ಮಾಡುತ್ತಿದ್ದಾಗ  ಗೌರಿಬಿದನೂರು ತಾಲ್ಲೂಕು ನಗರಗೆರೆ ಹೋಬಳಿ  ತೋಕಲಹಳ್ಳಿ ಗ್ರಾಮದ ದೇವಸ್ಥಾನದ ಮುಂದೆ ಜಗುಲಿ ಮೇಲೆ  ಯಾರೋ ಆಸಾಮಿಗಳು  ಹಣವನ್ನು ಪಣವಾಗಿಟ್ಟು ಇಸ್ಪೀಟ್  ಎಲೆಗಳಿಂದ  ಅಕ್ರಮ ಜೂಜಾಟವನ್ನು  ಆಡುತ್ತಿದ್ದಾರೆಂದು  ಖಚಿತವಾದ ಮಾಹಿತಿ ಬಂದ ಮೇರೆಗೆ ರಾತ್ರಿ 8-30  ಗಂಟೆಯಲ್ಲಿ ನಾನು ಮತ್ತು  ಸಿಬ್ಬಂದಿಯವರು ಹಾಗೂ ಪಂಚರೊಂದಿಗೆ ಸರ್ಕಾರಿ ಜೀಪ್ ಸಂಖ್ಯೆ: ಕೆ.ಎ-40, ಜಿ-281 ರಲ್ಲಿ  ಮುಧುಗೆರೆ  ಗ್ರಾಮಕ್ಕೆ ಹೋಗಿ  ಸ್ವಲ್ಪ ದೂರದಲ್ಲಿ   ಸರ್ಕಾರಿ ವಾಹನವನ್ನು ನಿಲ್ಲಿಸಿ   ಮರೆಯಲ್ಲಿ ನಿಂತು ನೋಡಲಾಗಿ  ಗ್ರಾಮದ ಮದ್ಯಭಾಗದಲ್ಲಿರುವ  ದೇವಸ್ಥಾನದ ಮುಂದೆ ಜಗುಲಿ ಮೇಲೆ  3  ಜನರು ಗುಂಪಾಗಿ ಕುಳಿತುಕೊಂಡು  ಅಂದರ್ ಗೆ 100 ರೂ, ಬಾಹರ್ ಗೆ 100 ರೂ  ಎಂದು ಕೂಗುತ್ತಿದ್ದು ಆಸಾಮಿಗಳು ಜೂಜಾಟವನ್ನು ಆಡುತ್ತಿರುವ ಬಗ್ಗೆ ಖಚಿತಪಡಿಸಿಕೊಂಡು  ಪಂಚರ ಸಮಕ್ಷಮದಲ್ಲಿ  ನಾನು ಮತ್ತು ಸಿಬ್ಬಂದಿಯವರು  ದಾಳಿ ಮಾಡಿ ಸುತ್ತುವರೆದು   ಕುಳಿತಿದ್ದವರನ್ನು  ಹಿಡಿದುಕೊಂಡು  ವಿಚಾರಿಸಲಾಗಿ 1) ರಾಮು ಬಿನ್ ರಾಜಣ್ಣ, 27  ವರ್ಷ,   ನಾಯಕರು,  ಜಿರಾಯ್ತಿ, ಸುಬ್ಬರಾಯನಹಳ್ಳಿ ಗ್ರಾಮ, ನಗರಗೆರೆ ಹೋಬಳಿ ಗೌರಿಬಿದನೂರು ತಾಲ್ಲೂಕು, 2) ಶಂಕರ ಬಿನ್ ಆದಿನಾರಾಯಣಪ್ಪ,  28   ವರ್ಷ,   ನಾಯಕರು,  ಜಿರಾಯ್ತಿ, ,  ಸುಬ್ಬರಾಯನಹಳ್ಳಿ ಗ್ರಾಮ, ನಗರಗೆರೆ ಹೋಬಳಿ ಗೌರಿಬಿದನೂರು ತಾಲ್ಲೂಕು, , 3)  ದಿವಾಕರ್ ಬಿನ್ ರಾಮಕೃಷ್ಣಾರೆಡ್ಡಿ,  27  ವರ್ಷ,   ವಕ್ಕಲಿಗರು,  ಜಿರಾಯ್ತಿ,   ವಾಸ ತೋಕಲಹಳ್ಳಿ ಗ್ರಾಮ, ನಗರಗೆರೆ ಹೋಬಳಿ ಗೌರಿಬಿದನೂರು ತಾಲ್ಲೂಕು,ಎಂದು ತಿಳಿಸಿದ್ದು, ಸ್ಥಳದಲ್ಲಿ ಬಿದ್ದಿದ್ದ ಪಣಕ್ಕಿಟ್ಟಿದ್ದ ಹಣ  ಎಣಿಸಲಾಗಿ  3000/- ರೂ ಹಣ , 52 ಸ್ಪೀಟ್ ಎಲೆಗಳು ಇರುತ್ತೆ.  ಸ್ಥಳದಲ್ಲಿ  ರಾತ್ರಿ 8-30  ಗಂಟೆಯಲ್ಲಿ ಗಂಟೆಯಿಂದ ರಾತ್ರಿ 9-00  ಗಂಟೆಯವರೆಗೆ ಪಂಚರ ಸಮಕ್ಷಮದಲ್ಲಿ ಪಂಚನಾಮೆ ಕ್ರಮ ಜರುಗಿಸಿ 1)  3000/- ನಗದು ಹಣ ಮತ್ತು 52 ಇಸ್ಪೀಟ್ ಎಲೆಗಳನ್ನು ವಶಪಡಿಸಿಕೊಂಡು, ಠಾಣೆಗೆ  ರಾತ್ರಿ 9-30 ಗಂಟೆಗೆ  ವಾಪಸ್ಸು ಬಂದಿದ್ದು,  ಆರೋಪಿಗಳು, ಪಂಚನಾಮೆ ಮತ್ತು  ಮಾಲನ್ನು ಸಹ ನೀಡುತ್ತಿದ್ದು, ಆರೋಪಿಗಳ ವಿರುದ್ಧ  ಕಲಂ: 87 ಕೆ.ಪಿ.ಆಕ್ಟ್ – 1963 ರೀತ್ಯಾ ಪ್ರಕರಣವನ್ನು ದಾಖಲು ಮಾಡಲು ಸೂಚಿಸಿದ್ದರ ಮೇರೆಗೆ  ಅರ್ಜಿಯನ್ನು ನೊಂದಾಯಿಸಿಕೊಂಡಿರುತ್ತೆ.

 1. ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 443/2019 ಕಲಂ. 15(ಎ), 32(3) ಕೆ.ಇ ಆಕ್ಟ್:-

     ದಿನಾಂಕ 14/10/2019 ರಂದು ಚಿಕ್ಕಬಳ್ಳಾಪುರ ಡಿ.ಸಿ.ಬಿ-ಸಿ.ಇ.ಎನ್ ಪೊಲೀಸ್ ಠಾಣೆಯ ಹೆಚ್.ಸಿ-208 ಗಿರೀಶ್. ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ಈ ದಿನ  ದಿನಾಂಕ: 14/10/2019 ರಂದು ಡಿ.ಸಿ.ಬಿ-ಸಿ.ಇ.ಎನ್ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಶ್ರೀ ರಾಜಣ್ಣ ರವರು ಗೌರಿಬಿದನೂರು ತಾಲ್ಲೂಕಿನಲ್ಲಿ ಕಾನೂನು ಬಾಹಿರ ಚಟುವಟಿಕೆಗಳ ಬಗ್ಗೆ ಮಾಹಿತಿ ಸಂಗರಹಿಸಿ ದಾಳಿ ನಡೆಸಲು ನನಗೆ ಮತ್ತು ಹೆಚ್.ಸಿ-192 ರವರಿಗೆ ನೇಮಿಸಿದ್ದು ಅದರಂತೆ ನಾವು ಕಾಮಗಾನಹಳ್ಳಿ ಗ್ರಾಮದ ಕಡೆ ಗಸ್ತಿನಲ್ಲಿದ್ದಾಗ ಕೊಂಡಾಫುರ ಗ್ರಾಮದ ಜಯರಾಮರೆಡ್ಡಿ ಎಂಬುವವರು ತಮ್ಮ ಚಿಲ್ಲರೆ ಅಂಗಡಿಯ ಮುಂಭಾಗ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಮಧ್ಯಪಾನ ಮಾಡಲು  ಸ್ಥಳಾವಕಾಶ  ಮಾಡಿಕೊಟ್ಟಿರುವುದಾಗಿ ಮಾಹಿತಿ ಬಂದ ಮೇರೆಗೆ, ಕೊಂಡಾಪುರ ಗ್ರಾಮಕ್ಕೆ ಹೋಗಿ ಅಲ್ಲಿ,  ಪಂಚಾಯ್ತಿದಾರರನ್ನು ಬರಮಾಡಿಕೊಂಡು ಜಯರಾಮರೆಡ್ಡಿರವರ ಅಂಗಡಿಯ ಬಳಿ ಹೋದಾಗ ಯಾರೋ ಇಬ್ಬರು ಆಸಾಮಿಗಳು ಸಮವಸ್ತ್ರದಲ್ಲಿದ್ದ ನಮ್ಮನ್ನು ಕಂಡು  ಮಧ್ಯಪಾನ ಮಾಡುತ್ತಿದ್ದವರು  ಓಡಿಹೋಗಿರುತ್ತಾರೆ.  ಸ್ಥಳದಲ್ಲಿ ಬೇಟಿ ನೀಡಿ ಪರಿಶೀಲಿಸಲಾಗಿ,  ಅದರಲ್ಲಿ   1) 90 ಎಂ.ಎಲ್.ಸಾಮರ್ಥ್ಯದ HAY WARDS CHEERS  WHISKY ಯ 24  ಟೆಟ್ರಾ ಪಾಕೆಟ್ ಗಳು ಇದ್ದು, ಇವುಗಳ ಬೆಲೆ 728 ರೂಪಾಯಿಗಳು ಆಗಿರುತ್ತೆ.  2) 90 ಎಂ.ಎಲ್ ಸಾಮರ್ಥ್ಯದ HAY WARDS CHEERS  WHISKY ಯ 02 ಖಾಲಿ ಟೆಟ್ರಾ ಪಾಕೆಟ್ ಗಳು 3) 02 ಖಾಲಿ ಪ್ಲಾಸ್ಟಿಕ್ ಗ್ಲಾಸ್ ಗಳು, 4) ಒಂದು ಖಾಲಿ ವಾಟರ್ ಬಾಟೆಲ್ ಗಳು ಇರುತ್ತೆ. ಅಂಗಡಿಯಲ್ಲಿದ್ದ ಆಸಾಮಿಯ ಹೆಸರು ಮತ್ತು ವಿಳಾಸ ಕೇಳಲಾಗಿ ಜಯರಾಮರೆಡ್ಡಿ ಬಿನ್ ಲೇಟ್ ನಾಗಯ್ಯ, 62 ವರ್ಷ, ವಕ್ಕಲಿಗರು, ಜಿರಾಯ್ತಿ, ವಾಸ ಕೊಂಡಾಪುರ ಗ್ರಾಮ, ಗೌರಿಬಿದನೂರು ತಾಲ್ಲೂಕು. ಎಂತ ತಿಳಿಸಿದ್ದು  ನಂತರ ಮುಂದಿನ ಕ್ರಮಕ್ಕಾಗಿ ವಶಪಡಿಸಿಕೊಂಡು, ಈ ಮೆಮೋನೊಂದಿಗೆ  ಮಾಲನ್ನು ಸಹ ನೀಡುತ್ತಿದ್ದು, ಆರೋಪಿಯ ವಿರುದ್ಧ  ಕಲಂ: 15[ಎ], 32 ಕ್ಲಾಸ್ [3] ಕೆ.ಇ.ಆಕ್ಟ್ –1965 ರೀತ್ಯಾ ಪ್ರಕರಣವನ್ನು ದಾಖಲು ಮಾಡಿ ಕ್ರಮ ಕೈಗೊಳ್ಳಲು ಸೂಚಿಸಿದ್ದರ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುತ್ತೆ.

 1. ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 444/2019 ಕಲಂ. 15(ಎ), 32(3) ಕೆ.ಇ ಆಕ್ಟ್:-

     ಈ ಮೂಲಕ ಗೌರೀಬಿದನೂರು ಗ್ರಾಮಾಂತರ ಪೊಲೀಸ್ ಠಾಣೆಯ ಠಾಣಾಧಿಕಾರಿಗಳಿಗೆ    ಮೋಹನ್ ಎನ್. ಪಿ.ಎಸ್.ಐ  ಆದ ನಾನು   ಸೂಚಿಸುವುದೇನೆಂದರೆ, ದಿನಾಂಕ: 14/10/2019 ರಂದು  ಸಂಜೆ  4-00  ಗಂಟೆಯಲ್ಲಿ  ಗೌರಿಬಿದನೂರು ತಾಲ್ಲೂಕು  ಹೊಸೂರು  ಹೋಬಳಿ ಕಾಚಮಾಚೇನಹಳ್ಳಿ    ಗ್ರಾಮದಲ್ಲಿ ಯಾರೋ ತನ್ನ ಅಂಗಡಿ ಮುಂದೆ ಸಾರ್ವಜನಿಕರಿಗೆ ಮಧ್ಯಪಾನ ಮಾಡಲು  ಸ್ಥಳಾವಕಾಶ  ಮಾಡಿಕೊಟ್ಟಿರುವುದಾಗಿ ಮಾಹಿತಿ ಬಂದ ಮೇರೆಗೆ, ಪಿ.ಸಿ-460  ಷೇಕ್ ಸನಾವುಲ್ಲಾ  ರವರೊಂದಿಗೆ   ಸರ್ಕಾರಿ ಜೀಪ್ ಸಂಖ್ಯೆ: ಕೆ.ಎ-40, ಜಿ-281  ರಲ್ಲಿ  ಕಾಚಮಾಚೇನಹಳ್ಳಿ ಗ್ರಾಮದಲ್ಲಿ  ಹೋಗಿ ಅಲ್ಲಿ,  ಪಂಚಾಯ್ತಿದಾರರನ್ನು ಕರೆದುಕೊಂಡು  ಮಾಹಿತಿ ಇದ್ದ  ಸ್ಥಳಕ್ಕೆ  ಸಂಜೆ  4-30  ಗಂಟೆಗೆ   ನಡೆದುಕೊಂಡು  ಹೋಗಿ   ಮರೆಯಲ್ಲಿ ನಿಂತು ನೋಡಲಾಗಿ ಯಾರೋ ಒಬ್ಬ ವ್ಯಕ್ತಿ  ತನ್ನ ಅಂಗಡಿಯ ಮುಂದೆ  ಪ್ಲಾಸ್ಟಿಕ್  ಚೀಲವನ್ನು  ಹಿಡಿದುಕೊಂಡು , ಅದರಲ್ಲಿದ್ದ ಮದ್ಯದ ಪಾಕೆಟ್ ಗಳನ್ನು ಅಂಗಡಿ ಮುಂದೆ  ಕುಳಿತಿದ್ದ  ಇಬ್ಬರು ವ್ಯಕ್ತಿಗಳಿಗೆ  ತೆಗೆದುಕೊಡುತ್ತಿದ್ದು,  ಆ ಇಬ್ಬರು ವ್ಯಕ್ತಿಗಳು ಪ್ಲಾಸ್ಟಿಕ್  ‍ಗ್ಲಾಸ್ ಗಳಲ್ಲಿ ಮಧ್ಯಪಾನ ಮಾಡುತ್ತಿದ್ದುದನ್ನು ಖಚಿತಪಡಿಸಿಕೊಂಡು ನಾವು ಅವರ ಬಳಿ ಹೋಗುವಷ್ಟರಲ್ಲಿ ಸಮವಸ್ತ್ರದಲ್ಲಿದ್ದ ನಮ್ಮನ್ನು ಕಂಡು  ಮಧ್ಯಪಾನ ಮಾಡುತ್ತಿದ್ದವರು  ಓಡಿಹೋಗಿರುತ್ತಾರೆ.  ಮಧ್ಯದ ಪಾಕೆಟ್ ಗಳನ್ನು ಕೊಡುತ್ತಿದ್ದ  ವ್ಯಕ್ತಿಯನ್ನು ಹಿಡಿದುಕೊಂಡು ಆಸಾಮಿಯ ಹೆಸರು ವಿಳಾಸ ಕೇಳಲಾಗಿ,  ತನ್ನ ಹೆಸರು   ಲಿಂಗಣ್ಣ ಬಿನ್ ಕೆ.ಎಸ್. ಲಿಂಗಪ್ಪ,  40  ವರ್ಷ,   ಕುರುಬರು    ಜಿರಾಯ್ತಿ, ಕಾಚಮಾಚೇನಹಳ್ಳಿ ಗ್ರಾಮ, ಹೊಸೂರು  ಹೋಬಳಿ,  ಗೌರಿಬಿದನೂರು ತಾಲ್ಲೂಕು  ಎಂದು ತಿಳಿಸಿದ್ದು,  ಸ್ಥಳದಲ್ಲಿ ಬಿಸಾಡಿದ್ದ ಪ್ಲಾಸ್ಟಿಕ್ ಚೀಲವನ್ನು    ಪರಿಶೀಲಿಸಲಾಗಿ,  ಅದರಲ್ಲಿ   90 ಎಂ.ಎಲ್.ಸಾಮರ್ಥ್ಯದ HAY WARDS CHEERS  WHISKY ಯ 10  ಟೆಟ್ರಾ ಪಾಕೆಟ್ ಗಳು ಇದ್ದು,   ಇವುಗಳ ಒಟ್ಟು ಸಾಮರ್ಥ್ಯ  900 ಎಂ.ಎಲ್. ಆಗಿರುತ್ತೆ. ಇವುಗಳ ಒಟ್ಟು ಬೆಲೆ 303.2 /- ರೂ.ಗಳಾಗಿರುತ್ತೆ.  ಸ್ಥಳದಲ್ಲಿ 4 ಖಾಲಿ ಪ್ಲಾಸ್ಟಿಕ್ ಗ್ಲಾಸ್ ಗಳು, 90 ಎಂ.ಎಲ್ ಸಾಮರ್ಥ್ಯದ HAY WARDS CHEERS  WHISKY ಯ 04 ಖಾಲಿ ಟೆಟ್ರಾ ಪಾಕೆಟ್ ಗಳು ಬಿದ್ದಿದ್ದವು. ಸದರಿ ವ್ಯಕ್ತಿಗೆ ಇದನ್ನು ಮಾರಲು ಹಾಗು ಮಧ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಡಲು  ಯಾವುದೇ ಪರವಾನಗಿ  ಇಲ್ಲವೆಂದು ತಿಳಿದುಬಂದಿರುತ್ತೆ. ಆದ್ದರಿಂದ   ಸ್ಥಳದಲ್ಲಿ ಸಂಜೆ  4-30  ಗಂಟೆಯಿಂದ   5-00  ಗಂಟೆಯವರೆಗೆ ಪಂಚರ ಸಮಕ್ಷಮದಲ್ಲಿ ಪಂಚನಾಮೆ   ಕ್ರಮ ಜರುಗಿಸಿ  ಸ್ಥಳದಲ್ಲಿ ದೊರೆತ   90 ಎಂ.ಎಲ್ ಸಾಮರ್ಥ್ಯದ HAYWARDS CHEERS  WHISKY ಯ 10 ಟೆಟ್ರಾ ಪಾಕೆಟ್ ಗಳು, ಒಂದು ಪ್ಲಾಸ್ಟಿಕ್ ಚೀಲ, ಸ್ಥಳದಲ್ಲಿ ಬಿದ್ದಿದ್ದ  04 ಖಾಲಿ ಪ್ಲಾಸ್ಟಿಕ್ ಗ್ಲಾಸ್ ಗಳು, HAY WARDS CHEERS  WHISKY ಯ  4 ಖಾಲಿ  ಟೆಟ್ರಾ ಪಾಕೆಟ್ ಗಳನ್ನು  ಮುಂದಿನ ಕ್ರಮಕ್ಕಾಗಿ ವಶಪಡಿಸಿಕೊಂಡು, ಸಂಜೆ 6-45  ಗಂಟೆಗೆ  ಠಾಣೆಗೆ ವಾಪಸ್ಸು ಬಂದಿದ್ದು,   ಈ ಮೆಮೋನೊಂದಿಗೆ  ಮಾಲನ್ನು ಸಹ ನೀಡುತ್ತಿದ್ದು, ಆರೋಪಿಯ ವಿರುದ್ಧ  ಕಲಂ: 15[ಎ], 32 ಕ್ಲಾಸ್ [3] ಕೆ.ಇ.ಆಕ್ಟ್ –1965 ರೀತ್ಯಾ ಪ್ರಕರಣವನ್ನು ದಾಖಲು ಮಾಡಿ ಕ್ರಮ ಕೈಗೊಳ್ಳಲು ಸೂಚಿಸಿರುತ್ತೇನೆ.

 1. ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 445/2019 ಕಲಂ. 15(ಎ), 32(3) ಕೆ.ಇ ಆಕ್ಟ್:-

     ಈ ಮೂಲಕ ಗೌರೀಬಿದನೂರು ಗ್ರಾಮಾಂತರ ಪೊಲೀಸ್ ಠಾಣೆಯ ಠಾಣಾಧಿಕಾರಿಗಳಿಗೆ    ಮೋಹನ್ ಎನ್. ಪಿ.ಎಸ್.ಐ  ಆದ ನಾನು   ಸೂಚಿಸುವುದೇನೆಂದರೆ,  ದಿನಾಂಕ: 14/10/2019 ರಂದು  ಸಂಜೆ  5-00  ಗಂಟೆಯಲ್ಲಿ  ಗೌರಿಬಿದನೂರು ತಾಲ್ಲೂಕು  ಹೊಸೂರು  ಹೋಬಳಿ ಉಪ್ಪಾರಹಳ್ಳಿ   ಗ್ರಾಮದಲ್ಲಿ ಯಾರೋ ತನ್ನ ಅಂಗಡಿ ಮುಂದೆ ಸಾರ್ವಜನಿಕರಿಗೆ ಮಧ್ಯಪಾನ ಮಾಡಲು  ಸ್ಥಳಾವಕಾಶ  ಮಾಡಿಕೊಟ್ಟಿರುವುದಾಗಿ ಮಾಹಿತಿ ಬಂದ ಮೇರೆಗೆ, ಪಿ.ಸಿ-460  ಷೇಕ್ ಸನಾವುಲ್ಲಾ  ರವರೊಂದಿಗೆ   ಸರ್ಕಾರಿ ಜೀಪ್ ಸಂಖ್ಯೆ: ಕೆ.ಎ-40, ಜಿ-281  ರಲ್ಲಿ  ಉಪ್ಪಾರಹಳ್ಳಿ ಗ್ರಾಮದಲ್ಲಿ  ಹೋಗಿ ಅಲ್ಲಿ,  ಪಂಚಾಯ್ತಿದಾರರನ್ನು ಕರೆದುಕೊಂಡು  ಮಾಹಿತಿ ಇದ್ದ  ಸ್ಥಳಕ್ಕೆ  ಸಂಜೆ  5-30  ಗಂಟೆಗೆ   ನಡೆದುಕೊಂಡು  ಹೋಗಿ   ಮರೆಯಲ್ಲಿ ನಿಂತು ನೋಡಲಾಗಿ ಯಾರೋ ಒಬ್ಬ ವ್ಯಕ್ತಿ  ತನ್ನ ಅಂಗಡಿಯ ಮುಂದೆ  ಪ್ಲಾಸ್ಟಿಕ್  ಚೀಲವನ್ನು  ಹಿಡಿದುಕೊಂಡು , ಅದರಲ್ಲಿದ್ದ ಮದ್ಯದ ಪಾಕೆಟ್ ಗಳನ್ನು ಅಂಗಡಿ ಮುಂದೆ  ಕುಳಿತಿದ್ದ  ಇಬ್ಬರು ವ್ಯಕ್ತಿಗಳಿಗೆ  ತೆಗೆದುಕೊಡುತ್ತಿದ್ದು,  ಆ ಇಬ್ಬರು ವ್ಯಕ್ತಿಗಳು ಪ್ಲಾಸ್ಟಿಕ್  ‍ಗ್ಲಾಸ್ ಗಳಲ್ಲಿ ಮಧ್ಯಪಾನ ಮಾಡುತ್ತಿದ್ದುದನ್ನು ಖಚಿತಪಡಿಸಿಕೊಂಡು ನಾವು ಅವರ ಬಳಿ ಹೋಗುವಷ್ಟರಲ್ಲಿ ಸಮವಸ್ತ್ರದಲ್ಲಿದ್ದ ನಮ್ಮನ್ನು ಕಂಡು  ಮಧ್ಯಪಾನ ಮಾಡುತ್ತಿದ್ದವರು  ಓಡಿಹೋಗಿರುತ್ತಾರೆ.  ಮಧ್ಯದ ಪಾಕೆಟ್ ಗಳನ್ನು ಕೊಡುತ್ತಿದ್ದ  ವ್ಯಕ್ತಿಯನ್ನು ಹಿಡಿದುಕೊಂಡು ಆಸಾಮಿಯ ಹೆಸರು ವಿಳಾಸ ಕೇಳಲಾಗಿ,  ತನ್ನ ಹೆಸರು   ರಾಮಕೃಷ್ಣ ಬಿನ್ ಲಕ್ಷ್ಮಯ್ಯ,  50   ವರ್ಷ,   ವಕ್ಕಲಿಗರು, ಜಿರಾಯ್ತಿ,  ಉಪ್ಪಾರಹಳ್ಳಿ ಗ್ರಾಮ, ಹೊಸೂರು  ಹೋಬಳಿ,  ಗೌರಿಬಿದನೂರು ತಾಲ್ಲೂಕು  ಎಂದು ತಿಳಿಸಿದ್ದು,  ಸ್ಥಳದಲ್ಲಿ ಬಿಸಾಡಿದ್ದ ಪ್ಲಾಸ್ಟಿಕ್ ಚೀಲವನ್ನು    ಪರಿಶೀಲಿಸಲಾಗಿ,  ಅದರಲ್ಲಿ   90 ಎಂ.ಎಲ್.ಸಾಮರ್ಥ್ಯದ HAY WARDS CHEERS  WHISKY ಯ 14  ಟೆಟ್ರಾ ಪಾಕೆಟ್ ಗಳು ಇದ್ದು,   ಇವುಗಳ ಒಟ್ಟು ಸಾಮರ್ಥ್ಯ  1 ಲೀಟರ್ 260 ಎಂ.ಎಲ್. ಆಗಿರುತ್ತೆ. ಇವುಗಳ ಒಟ್ಟು ಬೆಲೆ 424.48 /- ರೂ.ಗಳಾಗಿರುತ್ತೆ.  ಸ್ಥಳದಲ್ಲಿ 4 ಖಾಲಿ ಪ್ಲಾಸ್ಟಿಕ್ ಗ್ಲಾಸ್ ಗಳು, 90 ಎಂ.ಎಲ್ ಸಾಮರ್ಥ್ಯದ HAY WARDS CHEERS  WHISKY ಯ 04 ಖಾಲಿ ಟೆಟ್ರಾ ಪಾಕೆಟ್ ಗಳು ಬಿದ್ದಿದ್ದವು. ಸದರಿ ವ್ಯಕ್ತಿಗೆ ಇದನ್ನು ಮಾರಲು ಹಾಗು ಮಧ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಡಲು  ಯಾವುದೇ ಪರವಾನಗಿ  ಇಲ್ಲವೆಂದು ತಿಳಿದುಬಂದಿರುತ್ತೆ. ಆದ್ದರಿಂದ   ಸ್ಥಳದಲ್ಲಿ ಸಂಜೆ  5-30  ಗಂಟೆಯಿಂದ   6-00  ಗಂಟೆಯವರೆಗೆ ಪಂಚರ ಸಮಕ್ಷಮದಲ್ಲಿ ಪಂಚನಾಮೆ   ಕ್ರಮ ಜರುಗಿಸಿ  ಸ್ಥಳದಲ್ಲಿ ದೊರೆತ   90 ಎಂ.ಎಲ್ ಸಾಮರ್ಥ್ಯದ HAYWARDS CHEERS  WHISKY ಯ 14 ಟೆಟ್ರಾ ಪಾಕೆಟ್ ಗಳು, ಒಂದು ಪ್ಲಾಸ್ಟಿಕ್ ಚೀಲ, ಸ್ಥಳದಲ್ಲಿ ಬಿದ್ದಿದ್ದ  04 ಖಾಲಿ ಪ್ಲಾಸ್ಟಿಕ್ ಗ್ಲಾಸ್ ಗಳು, HAY WARDS CHEERS  WHISKY ಯ  4 ಖಾಲಿ  ಟೆಟ್ರಾ ಪಾಕೆಟ್ ಗಳನ್ನು  ಮುಂದಿನ ಕ್ರಮಕ್ಕಾಗಿ ವಶಪಡಿಸಿಕೊಂಡು, ರಾತ್ರಿ 7-00  ಗಂಟೆಗೆ  ಠಾಣೆಗೆ ವಾಪಸ್ಸು ಬಂದಿದ್ದು,   ಈ ಮೆಮೋನೊಂದಿಗೆ  ಮಾಲನ್ನು ಸಹ ನೀಡುತ್ತಿದ್ದು, ಆರೋಪಿಯ ವಿರುದ್ಧ  ಕಲಂ: 15[ಎ], 32 ಕ್ಲಾಸ್ [3] ಕೆ.ಇ.ಆಕ್ಟ್ –1965 ರೀತ್ಯಾ ಪ್ರಕರಣವನ್ನು ದಾಖಲು ಮಾಡಿ ಕ್ರಮ ಕೈಗೊಳ್ಳಲು ಸೂಚಿಸಿರುತ್ತೇನೆ.

 1. ಗುಡಿಬಂಡೆ ಪೊಲೀಸ್ ಠಾಣೆ ಮೊ.ಸಂ. 338/2019 ಕಲಂ. 15(ಎ), 32(3) ಕೆ.ಇ ಆಕ್ಟ್:-

     ಗುಡಿಬಂಡೆ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪ್ರಬಾರದಲ್ಲಿರುವ ಪೊಲೀಸ್ ಇನ್ಸ್ಪೆಕ್ಟರ್ ಹನುಮಂತರಾಯಪ್ಪ ಪಿ,ಐ  ರವರು ನೀಡುತ್ತಿರುವ ವರದಿಯ ದೂರಿನ ಸಾರಾಂಶವೇನೆಂದರೆ ದಿನಾಂಕ:14-10-2019 ರಂದು ಮದ್ಯಾಹ್ನ 1-00 ಗಂಟೆಯಲ್ಲಿ ಗಸ್ತಿನಲ್ಲಿದ್ದಾಗ, ಠಾಣಾ ಸಿಬ್ಬಂದಿ ಸಿಪಿಸಿ-188 ರಾಥೊಡ್, ರವರು ತನಗೆ ಪೋನ್ ಮಾಡಿ ಚಿಕ್ಕಬಳ್ಳಪುರ ತಾಲೂಕು ತುಮಕುಂಟಹಳ್ಳಿ ಗ್ರಾಮದ ವಾಸಿಯಾದ ಟಿ.ವಿ.ವೆಂಕಟೆಶ ರವರ ಚಿಲ್ಲರೆ ಅಂಗಡಿ ಮುಂಬಾಗದ ರಸ್ತೆಯಲ್ಲಿ  ಅಕ್ರಮವಾಗಿ ಸಾರ್ವಜನಿಕರಿಗೆ ಮಧ್ಯವನ್ನು ಕುಡಿಯಲು ಸ್ಥಳಾವಕಾಶ ನೀಡಿರುತ್ತಾರೆಂದು ನೀಡಿದ ಮಾಹಿತಿ ಮೇರೆಗೆ ತಾನು ಸರ್ಕಾರಿ ಜೀಪು ಸಂಖ್ಯೆ-ಕೆ,ಎ-40 ಜಿ-1888 ರಲ್ಲಿ ಚಾಲಕ ಎಚ್,ಸಿ-47 ಸಿರಾಜುಲ್ಲಾ ರವರೊಂದಿಗೆ ಮತ್ತು ಮಾಹಿತಿ ನೀಡಿದ ಸಿಬ್ಬಂದಿ ಇದ್ದಲ್ಲಿಗೆ ಹೋಗಿ ಅವರನ್ನು ಕರೆದುಕೊಂಡು ತುಮಕುಂಟಹಳ್ಳಿ ಗ್ರಾಮಕ್ಕೆ ಮಧ್ಯಾಹ್ನ 1-30 ಗಂಟೆಯಲ್ಲಿ ಹೋಗಿ, ಗ್ರಾಮದ ಬಸ್ಸ್ ನಿಲ್ದಾಣದಲ್ಲಿದ್ದ ಪಂಚರನ್ನು ಬರಮಾಡಿಕೊಂಡು ಪಂಚರಿಗೆ ಮಾಹಿತಿಯನ್ನು ತಿಳಿಸಿದ್ದು ದಾಳಿಗೆ ಒಪ್ಪಿಕೊಂಡಿರುತ್ತಾರೆ. ಪಂಚರೊಂದಿಗೆ ತುಮಕುಂಟಹಳ್ಳಿ ಗ್ರಾಮದ  ಟಿ.ವಿ. ವೆಂಕಟೆಶ  ರವರ ಚಿಲ್ಲರೆ ಅಂಗಡಿಯ ಸ್ವಲ್ಪ ದೂರದ ಮರೆಯಲ್ಲಿ  ನೋಡಲಾಗಿ, ಕಾನೂನು ಬಾಹಿರವಾಗಿ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಮದ್ಯವನ್ನು ಕುಡಿಯಲು ಅನುಮತಿ ನೀಡಿರುವುದು ಮತ್ತು ಸಾರ್ವಜನಿಕರಿಗೆ ಮಧ್ಯವನ್ನು ಕುಡಿಯಲು ಸ್ಥಳಾವಕಾಶ ಮಾಡಿಕೊಟ್ಟಿರುವುದು ಕಂಡು ಬಂದಿರುತ್ತೆ. ಪಂಚರೊಂದಿಗೆ ತಾವುಗಳು ಸದರಿ ಮಧ್ಯಪಾನ ಮಾಡುತ್ತಿದ್ದವರ ಮೇಲೆ ಧಾಳಿ ಮಾಡಿದಾಗ, ಸಮವಸ್ತ್ರದಲ್ಲಿದ್ದ ತಮ್ಮನ್ನು ಕಂಡು ಮದ್ಯವನ್ನು ಕುಡಿಯುತ್ತಿದ್ದವರು ಓಡಿ ಹೋದರು, ಆ ಪೈಕಿ ಮದ್ಯವನ್ನು ಸರಬರಾಜು ಮಾಡುವ ಆಸಾಮಿಯನ್ನು ವಶಕ್ಕೆ ಪಡೆದುಕೊಂಡು ಹೆಸರು & ವಿಳಾಸ ಕೇಳಲಾಗಿ, ಟಿ.ವಿ. ವೆಂಕಟೇಶ ಬಿನ್ ಕೊಂಡರಹಳ್ಳಿ ವೆಂಕಟರಾಯಪ್ಪ, 45 ವರ್ಷ, ವಕ್ಕಲಿಗರು, ಕೂಲಿ ಕೆಲಸ, ವಾಸ: ತುಮಕುಂಟಹಳ್ಳಿ ಗ್ರಾಮ, ಚಿಕ್ಕಬಳ್ಳಾಪುರ ತಾಲುಕು ಎಂದು ತಿಳಿಸಿದ್ದು. ಸದರಿ ಆಸಾಮಿಯನ್ನು ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಮಧ್ಯ ಸೇವನೆ ಮಾಡಲು ಸ್ಥಳಾವಕಾಶ ನೀಡಿರುವ ಬಗ್ಗೆ ಇರುವಂತಹ ಲೈಸನ್ಸ್ ತೋರಿಸಲು ಕೇಳಲಾಗಿ, ಸದರಿ ಆಸಾಮಿಯು ಯಾವುದೇ ಪರವಾನಗಿ ಇಲ್ಲವೆಂದು ತಿಳಿಸಿದನು, ನಂತರ ಸ್ಥಳವನ್ನು ಪರಿಶೀಲನೆ ಮಾಡಲಾಗಿ 1) ಹೈ ವಾರ್ಡ್ಸ ಕಂಪನಿಯ ಚೀರ್ಸ್ ವಿಸ್ಕಿ 90 ಎಮ್, ಎಲ್ ಅಳತೆಯ ಮಧ್ಯವಿರುವಂತಹ 12 ಟೆಟ್ರಾ ಪಾಕೆಟ್ಗಳು ಇದ್ದು, 2) ಓಪನ್ ಮಾಡಿರುವಂತ ಹೈ ವಾರ್ಡ್ಸ ಕಂಪನಿಯ ಚೀರ್ಸ್ ವಿಸ್ಕಿ 90 ಒಐ, ಅಳತೆಯ 2 ಖಾಲಿ ಟೆಟ್ರಾ ಪಾಕೆಟ್ಗಳು 3) ಮದ್ಯವನ್ನು ಕುಡಿದು ಬಿಸಾಕಿದಂತಹ 2 ಖಾಲಿ ಪ್ಲಾಸ್ಟಿಕ್ ಗ್ಲಾಸುಗಳು 4) ಒಂದು ಒಂದು ಲೀಟರ್ ಸಾಮಥ್ರ್ಯದ 1 ಖಾಲಿ ವಾಟರ್ ಬಾಟೆಲ್ ಇದ್ದು, ಮಧ್ಯವಿರುವ ಟೆಟ್ರಾ ಪಾಕೆಟ್ಗಳ ದ್ರವ ಪ್ರಮಾಣ ಲೆಕ್ಕ ಮಾಡಲಾಗಿ ಒಟ್ಟು-1 ಲೀಟರ್ 80 ಎಮ್,ಎಲ್ ಆಗಿದ್ದು, ಆ ಪಾಕೆಟ್ಗಳ ಮೇಲಿನ ದರವನ್ನು ಲೆಕ್ಕ ಮಾಡಲಾಗಿ ಒಟ್ಟು 32*12=384/- ರೂ ಆಗಿರುತ್ತದೆ. ಸದರಿ ಮಾಲನ್ನು ಪಂಚಾಯ್ತಿದಾರರ ಸಮಕ್ಷಮದಲ್ಲಿ ಮಧ್ಯಾಹ್ನ 1-45 ಗಂಟೆಯಿಂದ 2-45 ಗಂಟೆಯವರೆಗೆ ಪಂಚನಾಮೆ ಮೂಲಕ ಅಮಾನತ್ತುಪಡಿಸಿಕೊಂಡಿರುತ್ತದೆ, ಮೇಲ್ಕಂಡ ಆರೋಪಿ & ಮಾಲನ್ನು ಅಸಲು ಪಂಚನಾಮೆಯೊಂದಿಗೆ ಮದ್ಯಾಹ್ನ 3-15 ಗಂಟೆಯಲ್ಲಿ ಠಾಣೆಯಲ್ಲಿ ಹಾಜರುಪಡಿಸಿ, ಸದರಿ ಆರೋಪಿ & ಮಾಲಿನ ವಿರುದ್ದ ಮುಂದಿನ ಕಾನೂನು ಕ್ರಮ ಜರುಗಿಸಲು ಸೂಚಿಸಿದ ಮೇರೆಗೆ ಪ್ರಕರನವನ್ನು ದಾಖಲಿಸಿರುತ್ತೆ.

 1. ಗುಡಿಬಂಡೆ ಪೊಲೀಸ್ ಠಾಣೆ ಮೊ.ಸಂ. 339/2019 ಕಲಂ. 78(3) ಕೆ.ಪಿ ಆಕ್ಟ್:-

     ದಿನಾಂಕ 14/10/2019 ರಂದು ಠಾಣಾ NCR NO 336/2019 ರಲ್ಲಿ ಘನ ನ್ಯಾಯಾಲಯದಿಂದ ಕ್ರಿಮಿನಲ್ ಪ್ರಕರಣವನ್ನು ದಾಖಲಿಸಲು ಅನುಮತಿಯನ್ನು ಪಡೆದುಕೊಮಡು ಹಾಜರುಪಡಿಸಿದ ದೂರಿನ ಸಾರಾಂಶವೇನೆಂದರೆ ಗುಡಿಬಂಡೆ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪ್ರಬಾರದಲ್ಲಿರುವ ಪೊಲೀಸ್ ಇನ್ಸ್ಪೆಕ್ಟರ್ ಹನುಮಂತರಾಯಪ್ಪ ಪಿ,ಐ  ರವರು ದಿನಾಂಕ:13-10-2019 ರಂದು ಸಂಜೆ 5-20 ಗಂಟೆಯಲ್ಲಿ ಗಸ್ತಿನಲ್ಲಿದ್ದಾಗ,  ಸಿಪಿಸಿ-88 ರಮೇಶ್ ರವರು ಪೋನ್ ಮಾಡಿ ಗುಡಿಬಂಡೆ ಟೌನ್ನ ದೊಡ್ಡ ಮಸೀದಿ ಹತ್ತಿರ ಇರುವ ದೊಡ್ಡ ಮೊರಿಯ ಬಳಿ  ಯಾರೋ ಓಬ್ಬ ಆಸಾಮಿ ಅಕ್ರಮವಾಗಿ ಸಾರ್ವಜನಿಕರಿಗೆ ಆಮಿಷವೊಡ್ಡಿ ಮಟ್ಕಾ ಜೂಜಾಟ ಆಡುತ್ತಿರುವುದಾಗಿ ತಿಳಿಸಿದ್ದು. ನಾನು ಸಕರ್ಾರಿ ಜೀಪು ಸಂಖ್ಯೆ-ಕೆ,ಎ-40 ಜಿ-1888 ರಲ್ಲಿ ಚಾಲಕ ಎ,ಎಚ್,ಸಿ-47 ಸಿರಾಜುಲ್ಲಾ ರವರೊಂದಿಗೆ ಸಿ,ಪಿ,ಸಿ-188 ರಾಥೋಡ್ ರವರನ್ನು ಕರೆದುಕೊಂಡು ಸಂಜೆ 5-30 ಘಂಟೆಯಲ್ಲಿ ಗುಡಿಬಂಡೆ ಟೌನ್ನಲ್ಲಿರುವ ತಾಲೂಕು ಕಛೇರಿಯ ಬಳಿ ಹೋಗಿ ಪಂಚರನ್ನು ಬರಮಾಡಿಕೊಂಡು ಪಂಚರಿಗೆ ಮಾಹಿತಿಯನು ತಿಳಿಸಿ ಪಂಚಾಯ್ತಿದಾರರು ದಾಳಿಗೆ ಒಪ್ಪಿಕೊಂಡಿದ್ದು ಪಂಚರೊಂದಿಗೆ ದೊಡ್ಡ ಮಸೀದಿಯ ಬಳಿ ಸಕರ್ಾರಿ ಜೀಪು ನಿಲ್ಲಿಸಿ ಮರೆಯಲ್ಲಿ ನೋಡಲಾಗಿ, ದೊಡ್ಡ ಮೊರಿಯ  ಹತ್ತಿರ ಯಾರೋ ಒಬ್ಬ ಆಸಾಮಿ 1 ರೂ ಗೆ 70 ರೂ ಎಂದು ಕೂಗುತ್ತಾ ಸಾರ್ವಜನಿಕರಿಗೆ ಮಟ್ಕಾ ಜೂಜಾಟ ಆಡಿಸುತ್ತಿರುವುದನ್ನು ಖಚಿತಪಡಿಸಿಕೊಂಡು ಪಂಚರೊಂದಿಗೆ ನಾವು ಧಾಳಿ ಮಾಡಿದಾಗ, ಸ್ಥಳದಲ್ಲಿದ್ದ ಸಾರ್ವಜನಿಕರು ಓಡಿ ಹೋಗಿದ್ದು, ಆ ಪೈಕಿ ಮಟ್ಕಾ ಚೀಟಿ ಬರೆಯುತ್ತಿದ್ದವನನ್ನು ವಶಕ್ಕೆ ಪಡೆದುಕೊಂಡು ಹೆಸರು & ವಿಳಾಸ ಕೇಳಲಾಗಿ 1) ಓಬಳೇಶಯ್ಯ ಬಿನ್ ಲೇಟ್ ವೆಂಕಟರವಣಪ್ಪ, 44 ವರ್ಷ, ನಾಯಕರು, ಕೂಲಿ ಕೆಲಸ, ವಾಸ: ಖಾಜಿಪೇಟೆ ಗುಡಿಬಂಡೆ ಟೌನ್ ಎಂದು ತಿಳಿಸಿದರು. ಸ್ಥಳದಲ್ಲಿ ಪರಿಶೀಲನೆ ಮಾಡಲಾಗಿ ಮಟ್ಕಾ ಜೂಜಾಟದಲ್ಲಿ ತೊಡಗಿಸಿದ 650/- ರೂ ಹಣ & ಒಂದು ಮಟ್ಕಾ ಚೀಟಿ, ಒಂದು ಬಾಲ್ ಪೆನ್ನನ್ನು  ಸಂಜೆ 5-45 ಗಂಟೆಯಿಂದ 6-30 ಗಂಟೆವರೆಗೂ ಪಂಚರ ಸಮಕ್ಷಮ ಜರುಗಿಸಿದ ಪಂಚನಾಮೆ ಕಾಲದಲ್ಲಿ ಅಮಾನತ್ತುಪಡಿಸಿಕೊಂಡು, ವಶದಲ್ಲಿದ್ದ ಆರೋಪಿತನನ್ನು & ಮಾಲನ್ನು ಠಾಣೆಯಲ್ಲಿ ಸಂಜೆ 6-45 ಗಂಟೆಯಲ್ಲಿ ಹಾಜರುಪಡಿಸಿ ಆರೋಪಿತರ ವಿರುದ್ದ ಕಾನೂನು ಕ್ರಮ ಕೈಗೊಳ್ಳಲು ಸೂಚಿಸಿರುತ್ತೆ.

 1. ಮಂಚೇನಹಳ್ಳಿ ಪೊಲೀಸ್ ಠಾಣೆ ಮೊ.ಸಂ. 276/2019 ಕಲಂ. 15(ಎ), 32(3) ಕೆ.ಇ ಆಕ್ಟ್:-

     ದಿನಾಂಕ: 14/10/2019 ರಂದು ಸಂಜೆ 5-15 ಗಂಟೆಗೆ ಪಿರ್ಯಾದಿದಾರರಾದ ಶ್ರೀ ಚಿಕ್ಕಣ್ಣ ರವರು ಮಾಲು, ಮಹಜರ್ ಹಾಗೂ ಆರೋಪಿಯೊಂದಿಗೆ ನೀಡಿದ ದೂರಿನ ಸಾರಾಂಶವೆನೆಂದರೆ, ಈ ದಿನ ದಿನಾಂಕ 14/10/2019 ರಂದು ಮದ್ಯಾಹ್ನ 2-30 ಗಂಟೆಯ ಸಮಯದಲ್ಲಿ  ತಾನು ಮತ್ತು ಪಿಸಿ 537, ಆನಂದ್ ಕುಮಾರ್ ರವರು ರಾಯರೇಖಲಹಳ್ಳಿ ಗ್ರಾಮದ ಕಡೆ ಗಸ್ತು ಮಾಡುತ್ತಿದ್ದಾಗ ತನಗೆ ಬಂದ ಮಾಹಿತಿ ಎನೇಂದರೆ ಅಲಕಾಪುರ ಗೇಟ್ ನಲ್ಲಿ ಎಂ.ಜಿ ರಾಘವೇಂದ್ರ ಬಿನ್ ಗೋಪಾಲ್ ಶೆಟ್ಟಿ ಎಂಬುವರು ಅಲಕಾಪುರಗೇಟ್ ನಲ್ಲಿ ಯಾವುದೇ ರೀತಿಯ ಅನುಮತಿಯನ್ನು ಮತ್ತು ಪರ್ಮಿಟ್ ಪಡೆಯದೇ ಅಕ್ರಮವಾಗಿ ಸಾರ್ವಜನಿಕರಿಗೆ ಮದ್ಯವನ್ನು ಸೇವನೆ ಮಾಡಲು ಅವಕಾಶ ಮಾಡಿಕೊಟ್ಟಿರುವುದಾಗಿ ಮಾಹಿತಿ ಬಂದ್ದಿದ್ದು ದಾಳಿ ಮಾಡುವ ಸಲುವಾಗಿ ಜೋತೆಯಲ್ಲಿದ್ದ ಪಿಸಿ 537, ಆನಂದ್ ಕುಮಾರ್ ರವರು ಹಾಗೂ ಪಂಚರೊಂದಿಗೆ ದ್ವಿ ಚಕ್ರ ವಾಹನಗಳಲ್ಲಿ ಮದ್ಯಾಹ್ನ 3-15 ಗಂಟೆಯ ಸಮಯಕ್ಕೆ ಅಲಕಾಪುರ ಗೇಟ್ ಬಳಿ ಹೋಗುವಷ್ಟರಲ್ಲಿ ಅಲ್ಲಿ ಮದ್ಯವನ್ನು ಸೇವನೆ ಮಾಡುತ್ತಿದ್ದವರು ಸಮವಸ್ತ್ರದಲ್ಲಿದ್ದ ನಮ್ಮನ್ನು ನೋಡಿ ಸ್ಥಳದಿಂದ ಓಡಿಹೋದರು ಮಾಹಿತಿಯಂತೆ ಅಲ್ಲಿದ್ದವನನ್ನು ಹಿಡಿದು ಕೊಂಡು ಅವನ ಹೆಸರು ಮತ್ತು ವಿಳಾಸ ಕೇಳಲಾಗಿ ಎಂ.ಜಿ ರಾಘವೇಂದ್ರ ಬಿನ್ ಗೋಪಾಲ್ ಶೆಟ್ಟಿ, 34 ವರ್ಷ, ಶೆಟ್ಟರು, ವ್ಯಾಪಾರ, ವಾಸ ಶ್ರೀನಗರ, ಗೌರಿಬಿದನೂರು ಟೌನ್ ಎಂತ ತಿಳಿಸಿದ್ದು, ಅವನ ಬಳಿ ಒಂದು ಪ್ಲಾಸ್ಟಿಕ್ ಚೀಲವಿದ್ದು ಅದನ್ನು ತೆಗೆದು ಪರಿಶೀಲಿಸಲಾಗಿ ಅದರೊಳಗಡೆ 90 ಎಂ.ಎಲ್. ಸಾಮರ್ಥ್ಯದ HYAWARDS CHEERS WISKY ಯ 16 ಮದ್ಯದ ಟೆಟ್ರಾ ಪ್ಯಾಕೇಟ್ ಗಳು ದೊರೆತಿದ್ದು, ಮದ್ಯವನ್ನು ಇಟ್ಟುಕೊಂಡಿರುವ  ಬಗ್ಗೆ ಮತ್ತು ಸಾರ್ವಜನಿಕರಿಗೆ ಮದ್ಯವನ್ನು ಸೇವನೆ ಮಾಡಲು ಅನುವು ಮಾಡಿಕೊಟ್ಟ ಬಗ್ಗೆ ಅನುಮತಿಯನ್ನು ಕೇಳಲಾಗಿ ತನ್ನ ಬಳಿ ಯಾವುದೇ ರೀತಿಯ  ಅನುಮತಿ ಪತ್ರ ಇಲ್ಲವೆಂದು ತಿಳಿಸಿದ್ದರ ಮೇರೆಗೆ  ಮತ್ತು ಅಲ್ಲಿಯೇ ಸುತ್ತಲೂ ಖಾಲಿ ಬಿದ್ದಿದ್ದ 90 ಎಂ.ಎಲ್. ಸಾಮರ್ಥ್ಯದ HYAWARDS CHEERS WISKY ಯ 2 ಟೆಟ್ರಾ ಪ್ಯಾಕೇಟ್ ಗಳು ಮತ್ತು 2 ಪ್ಲಾಸ್ಟಿಕ್  ಕಪ್ ಗಳನ್ನು ಪಂಚನಾಮೆಯ ಮೂಲಕ ಮದ್ಯಾಹ್ನ 3-30 ಗಂಟೆಯಿಂದ ಸಂಜೆ 4-30 ಗಂಟೆಯ ಸಮಯದವರೆಗೆ ಅವುಗಳನ್ನು ಪಂಚನಾಮೆಯ ಮೂಲಕ ಅಮಾನತ್ತುಪಡಿಸಿಕೊಂಡಿರುತ್ತೆ ಸ್ಥಳದಲ್ಲಿ ದೊರೆತ ಮದ್ಯದ ಬೆಲೆ ಸುಮಾರು 485 /- ರೂಪಾಯಿಗಳು ಬೆಲೆಬಾಳದ್ದಾಗಿರುತ್ತೆ. ದೊರೆತ ಮಾಲನ್ನು ಹಾಗೂ ಸಾರ್ವಜನಿಕರಿಗೆ ಕುಡಿಯಲು ಅನುವು ಮಾಡಿಕೊಟ್ಟಿದ್ದ ಎಂ.ಜಿ ರಾಘವೇಂದ್ರ ವರನ್ನು ವಶಕ್ಕೆ ಪಡೆದುಕೊಂಡು ಹಾಜರುಪಡಿಸುತ್ತಿದ್ದು, ಇವನ ಮೇಲೆ ಕಾನೂನಿನ ರೀತ್ಯಾ ಕ್ರಮ ಜರುಗಿಸಬೇಕೆಂದು ಕೋರಿ ನೀಡಿದ ದೂರಿನ ಮೇರೆಗೆ ಪ್ರಕರಣವನ್ನು ದಾಖಲಿಸಿಕೊಂಡಿರುತ್ತದೆ.

 1. ಮಂಚೇನಹಳ್ಳಿ ಪೊಲೀಸ್ ಠಾಣೆ ಮೊ.ಸಂ. 278/2019 ಕಲಂ. 15(ಎ), 32(3) ಕೆ.ಇ ಆಕ್ಟ್:-

     ದಿನಾಂಕ: 15/10/2019 ರಂದು  ಮದ್ಯಾಹ್ನ 12-30 ಗಂಟೆಗೆ ಪಿರ್ಯಾದಿದಾರರಾದ ಹೆಚ್.ಸಿ 219 ಶ್ರೀನಿವಾಸಮೂರ್ತಿ ರವರು ಮಾಲು, ಮಹಜರ್, ಆರೋಪಿಯೊಂದಿಗೆ ನೀಡಿದ ದೂರಿನ ಸಾರಾಂಶವೆನೆಂದರೆ, ದಿನಾಂಕ:15/10/2019 ರಂದು ಬೆಳಿಗ್ಗೆ 10-30 ಗಂಟೆಯ ಸಮಯದಲ್ಲಿ ತಾನು ಗಸ್ತು ಮಾಡುತ್ತಿದ್ದಾಗ, ತನಗೆ ಬಂದ ಮಾಹಿತಿ ಏನೇಂದರೆ  ತೊಂಡೇಬಾವಿ ಗ್ರಾಮದ ಕುಂಟಗೋಪಿ ಬಿನ್ ಲೇಟ್ ವೆಂಕಟರವಣಪ್ಪ ರವರು ಅವರ ಚಿಲ್ಲರೆ ಅಂಗಡಿಯ ಮುಂಭಾಗ ಯಾವುದೇ ರೀತಿಯ ಅನುಮತಿಯನ್ನು ಮತ್ತು ಪರ್ಮಿಟ್ ಪಡೆಯದೇ ಅಕ್ರಮವಾಗಿ ಸಾರ್ವಜನಿಕರಿಗೆ ಮದ್ಯವನ್ನು ಸೇವನೆ ಮಾಡಲು ಅವಕಾಶ ಮಾಡಿಕೊಟ್ಟಿರುವುದಾಗಿ ಮಾಹಿತಿ ಬಂದ್ದಿದ್ದು ದಾಳಿ ಮಾಡುವ ಸಲುವಾಗಿ ಪಂಚರೊಂದಿಗೆ  ಬೆಳಿಗ್ಗೆ 10-45  ಗಂಟೆಯ ಸಮಯಕ್ಕೆ ತೊಂಡೇಬಾವಿ ಗ್ರಾಮದ ಕುಂಟಗೋಪಿ ಬಿನ್ ಲೇಟ್ ವೆಂಕಟರವಣಪ್ಪ ರವರ ಚಿಲ್ಲರೆ ಅಂಗಡಿಯ ಬಳಿ ಹೋಗುವಷ್ಟರಲ್ಲಿ ಅಲ್ಲಿ ಮದ್ಯವನ್ನು ಸೇವನೆ ಮಾಡುತ್ತಿದ್ದವರು ಸಮವಸ್ತ್ರದಲ್ಲಿದ್ದ ತಮ್ಮನ್ನು ನೋಡಿ ಸ್ಥಳದಿಂದ ಓಡಿಹೋದರು ಮಾಹಿತಿಯಂತೆ ಅಲ್ಲಿದ್ದವನನ್ನು ಹಿಡಿದುಕೊಂಡು ಅವನ ಹೆಸರು ಮತ್ತು ವಿಳಾಸ ಕೇಳಲಾಗಿ ಕುಂಟಗೋಪಿ ಬಿನ್ ಲೇಟ್ ವೆಂಕಟರವಣಪ್ಪ, 43ವರ್ಷ, ನಾಯಕರು, ಚಿಲ್ಲರೆ ಅಂಗಡಿ ವ್ಯಾಪಾರ ವಾಸ ತೊಂಡೇಬಾವಿ ಗ್ರಾಮದ ಗೌರಿಬಿದನೂರು ತಾಲ್ಲೂಕು ಎಂತ ತಿಳಿಸಿದ್ದು, ಅವನ ಬಳಿ ಒಂದು ಪ್ಲಾಸ್ಟಿಕ್ ಚೀಲವಿದ್ದು ಅದನ್ನು ತೆಗೆದು ಪರಿಶೀಲಿಸಲಾಗಿ ಅದರೊಳಗಡೆ 90 ಎಂ.ಎಲ್.ಸಾಮರ್ಥ್ಯದ ಮಧ್ಯ ತುಂಬಿರುವ ಹೈವಾಡ್ಸ್ ಚಿಯರ್ಸ್ ವಿಸ್ಕಿಯ 12  ಟೆಟ್ರಾ ಪ್ಯಾಕೆಟ್ ಗಳು ದೊರೆತಿದ್ದು, ಮದ್ಯವನ್ನು ಇಟ್ಟುಕೊಂಡಿರುವ  ಬಗ್ಗೆ ಮತ್ತು ಸಾರ್ವಜನಿಕರಿಗೆ ಮದ್ಯವನ್ನು ಸೇವನೆ ಮಾಡಲು ಅನುವು ಮಾಡಿಕೊಟ್ಟ ಬಗ್ಗೆ ಅನುಮತಿಯನ್ನು ಕೇಳಲಾಗಿ ತನ್ನ ಬಳಿ ಯಾವುದೇ ರೀತಿಯ ಅನುಮತಿ ಪತ್ರ ಇಲ್ಲವೆಂದು ತಿಳಿಸಿದ್ದರ ಮೇರೆಗೆ  ಮತ್ತು ಅಲ್ಲಿಯೇ ಸುತ್ತಲೂ 02 ಖಾಲಿ ಬಿದ್ದಿದ್ದ 90 ಎಂ.ಎಲ್ ನ ಹೈವಾಡ್ಸ್ ಚಿಯರ್ಸ್ ವಿಸ್ಕಿಯ ಟೆಟ್ರಾ ಪ್ಯಾಕೆಟ್ ಗಳು 2 ಪ್ಲಾಸ್ಟಿಕ್  ಕಪ್ ಗಳನ್ನು ಮತ್ತು ಒಂದು ಪ್ಲಾಸ್ಟಿಕ್ ಬ್ಯಾಗನ್ನು  ಪಂಚನಾಮೆಯ ಮೂಲಕ  ಬೆಳಿಗ್ಗೆ 11-00 ಗಂಟೆಯಿಂದ 12-00 ಗಂಟೆಯ ಸಮಯದವರೆಗೆ ಅವುಗಳನ್ನು ಪಂಚನಾಮೆಯ ಮೂಲಕ ಅಮಾನತ್ತು ಪಡಿಸಿಕೊಂಡಿರುತ್ತೆ ಸ್ಥಳದಲ್ಲಿ ದೊರೆತ ಮದ್ಯದ ಬೆಲೆ ಸುಮಾರು 372/-ರೂಪಾಯಿಗಳು ಬೆಲೆಬಾಳದ್ದಾಗಿರುತ್ತೆ. ದೊರೆತ ಮಾಲನ್ನು ಹಾಗೂ ಸಾರ್ವಜನಿಕರಿಗೆ ಕುಡಿಯಲು ಅನುವು ಮಾಡಿಕೊಟ್ಟಿದ್ದ ಕುಂಟಗೋಪಿ ಬಿನ್ ಲೇಟ್ ವೆಂಕಟರವಣಪ್ಪ ರವರನ್ನು ವಶಕ್ಕೆ ಪಡೆದುಕೊಂಡು ಹಾಜರುಪಡಿಸುತ್ತಿದ್ದು, ಈತನ ಮೇಲೆ ಕಾನೂನು ರೀತ್ಯ ಕ್ರಮ ಜರುಗಿಸಬೇಕೆಂದು ನೀಡಿದ ದೂರಿನ ಮೇರೆಗೆ ಪ್ರಕರಣವನ್ನು ದಾಖಲಿಸಿಕೊಂಡಿರುತ್ತದೆ.

 1. ಮಂಚೇನಹಳ್ಳಿ ಪೊಲೀಸ್ ಠಾಣೆ ಮೊ.ಸಂ. 279/2019 ಕಲಂ. 15(ಎ), 32(3) ಕೆ.ಇ ಆಕ್ಟ್:-

     ದಿನಾಂಕ:15/10/2019 ರಂದು ಠಾಣಾ ಸಿಬ್ಬಂದಿಯಾದ ಶ್ರೀ. ಆನಂದಕುಮಾರ್  ರವರು ಮಾಲು ಮತ್ತು ಆರೊಪಿಯೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಮದರೆ ದಿನಾಂಕ 15/10/2019 ರಂದು ನಾನು ಮತ್ತು ಪಿ.ಸಿ 173 ಸತೀಶ ರವರುಗಳೊಂದಿಗೆ ಗ್ರಾಮಗಳ ಗಸ್ತಿನಲ್ಲಿದ್ದಾಗ ನನಗೆ  ಮದ್ಯಾಹ್ನ 1-00  ಗಂಟೆಯ ಸಮಯದಲ್ಲಿ ಬಾತ್ಮೀದಾರರಿಂದ ಬಂದ ಮಾಹಿತಿ ಏನೇಂದರೆ  ಬಿ. ಬೊಮ್ಮಸಂದ್ರ  ಗ್ರಾಮದ  ಕೃಷ್ಣಪ್ಪ  ಬಿನ್ ಲೇಟ್  ಗಂಗಪ್ಪ ಎಂಬುವರು ಅವರ ಚಿಲ್ಲರೆ ಅಂಗಡಿ ಮುಂಭಾಗದಲ್ಲಿ ಯಾವುದೇ ರೀತಿಯ ಅನುಮತಿಯನ್ನು ಮತ್ತು ಪರ್ಮಿಟ್ ಪಡೆಯದೇ ಅಕ್ರಮವಾಗಿ ಸಾರ್ವಜನಿಕರಿಗೆ ಮದ್ಯವನ್ನು ಸೇವನೆ ಮಾಡಲು ಅವಕಾಶ ಮಾಡಿಕೊಟ್ಟಿರುವುದಾಗಿ ಮಾಹಿತಿ ಬಂದ್ದಿದ್ದು ದಾಳಿ ಮಾಡುವ ಸಲುವಾಗಿ ಪಂಚರನ್ನು ಬರಮಾಡಿಕೊಂಡು  ಮದ್ಯಾಹ್ನ 1-30 ಗಂಟೆಗೆ  ಬಿ. ಬೊಮ್ಮಸಂದ್ರ  ಗ್ರಾಮದ  ಕೃಷ್ಣಪ್ಪ  ಬಿನ್  ಲೇಟ್ ಗಂಗಪ್ಪ ರವರ ಚಿಲ್ಲರೆ ಅಂಗಡಿ ಬಳಿ ಹೋಗುವಷ್ಟರಲ್ಲಿ ಅಲ್ಲಿ ಮದ್ಯವನ್ನು ಸೇವನೆ ಮಾಡುತ್ತಿದ್ದವರು ಸಮವಸ್ತ್ರದಲ್ಲಿದ್ದ ನಮ್ಮನ್ನು ನೋಡಿ ಸ್ಥಳದಿಂದ ಓಡಿಹೋದರು ಮಾಹಿತಿಯಂತೆ ಮಧ್ಯಸೇವನೆಗೆ ಅವಕಾಶ ಮಾಡಿಕೊಟ್ಟಿದ್ದವನನ್ನು ಹಿಡಿದುಕೊಂಡು ಅವನ ಹೆಸರು ಮತ್ತು ವಿಳಾಸ ಕೇಳಲಾಗಿ  ಕೃಷ್ಣಪ್ಪ ಬಿನ್ ಲೇಟ್ ಗಂಗಪ್ಪ 55 ವರ್ಷ, ಪ.ಜಾತಿ (ಎ.ಕೆ.)  ಚಿಲ್ಲರೆ ಅಂಗಡಿ ವ್ಯಾಪಾರ, ವಾಸ ಬಿ.ಬೊಮ್ಮಸಂದ್ರ  ಗ್ರಾಮ,ಡಿ.ಪಾಳ್ಯ  ಹೋಬಳಿ  ಗೌರೀಬಿದನೂರು ತಾಲ್ಲೂಕು ಎಂತ ತಿಳಿಸಿದ್ದು, ಅವನ ಬಳಿ ಒಂದು ಪ್ಲಾಸ್ಟಿಕ್ ಚೀಲವಿದ್ದು ಅದನ್ನು ತೆಗೆದು ಪರಿಶೀಲಿಸಲಾಗಿ ಅದರೊಳಗಡೆ 90 ಎಂ.ಎಲ್.ಸಾಮರ್ಥ್ಯದ HAYWARDS CHEERS WHISKY ಯ 08 ಮದ್ಯದ ಟೆಟ್ರಾ ಪ್ಯಾಕೇಟ್ ಗಳು ದೊರೆತಿದ್ದು, ಮದ್ಯವನ್ನು ಇಟ್ಟುಕೊಂಡಿರುವ ಬಗ್ಗೆ ಮತ್ತು ಸಾರ್ವಜನಿಕರಿಗೆ ಮದ್ಯವನ್ನು ಸೇವನೆ ಮಾಡಲು ಅನುವು ಮಾಡಿಕೊಟ್ಟ ಬಗ್ಗೆ ಅನುಮತಿಯನ್ನು ಕೇಳಲಾಗಿ ತನ್ನ ಬಳಿ ಯಾವುದೇ ರೀತಿಯ ಅನುಮತಿ ಪತ್ರ ಇಲ್ಲವೆಂದು ತಿಳಿಸಿದ್ದರ ಮೇರೆಗೆ  ಮತ್ತು ಅಲ್ಲಿಯೇ ಸುತ್ತಲೂ ಖಾಲಿ ಬಿದ್ದಿದ್ದ 90 ಎಂ.ಎಲ್. ಸಾಮರ್ಥ್ಯದ  HAYWARDS CHEERS WHISKY ಯ 2 ಟೆಟ್ರಾ ಪ್ಯಾಕೇಟ್ ಗಳು ಮತ್ತು 2 ಪ್ಲಾಸ್ಟಿಕ್  ಕಪ್ ಗಳನ್ನು ಮತ್ತು ಒಂದು ಪ್ಲಾಸ್ಟಿಕ್ ಚೀಲವನ್ನು ಮದ್ಯಾಹ್ನ 1-45  ಗಂಟೆಯಿಂದ 2-45  ಗಂಟೆಯ ಸಮಯದವರೆಗೆ ಅವುಗಳನ್ನು ಪಂಚನಾಮೆಯ ಮೂಲಕ ಅಮಾನತ್ತು ಪಡಿಸಿಕೊಂಡಿರುತ್ತೆ ಸ್ಥಳದಲ್ಲಿ ದೊರೆತ ಮದ್ಯದ ಬೆಲೆ ಸುಮಾರು 242/- ರೂಪಾಯಿಗಳು ಬೆಲೆಬಾಳದ್ದಾಗಿರುತ್ತೆ. ದೊರೆತ ಮಾಲನ್ನು ಹಾಗೂ ಸಾರ್ವಜನಿಕರಿಗೆ ಕುಡಿಯಲು ಅನುವು ಮಾಡಿಕೊಟ್ಟಿದ್ದ  ಕೃಷ್ಣಪ್ಪ ಬಿನ್ ಲೇಟ್ ಗಂಗಪ್ಪ ರವರನ್ನು ವಶಕ್ಕೆ ಪಡೆದುಕೊಂಡು ಹಾಜರುಪಡಿಸುತ್ತಿದ್ದು, ಇವನ ಮೇಲೆ ಕಾನೂನಿನ ರೀತ್ಯಾ ಕ್ರಮ ಜರುಗಿಸಬೇಕೆಂದು ಕೋರಿ ಕೊಟ್ಟ ದೂರು.

 1. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.347/2019 ಕಲಂ. 15(ಎ), 32(3) ಕೆ.ಇ ಆಕ್ಟ್:-

     ದಿನಾಂಕ: 14-10-2019 ರಂದು ಸಂಜೆ 4-15 ಗಂಟೆಯಲ್ಲಿ ಶ್ರೀ. ಸುಬ್ರಮಣಿ, ಸಿ.ಹೆಚ್.ಸಿ-71 ಡಿ.ಸಿ.ಬಿ/ಸಿ.ಇ.ಎನ್  ಪೊಲೀಸ್ ಠಾಣೆ, ಚಿಕ್ಕಬಳ್ಳಾಪುರ ಜಿಲ್ಲೆ ರವರು ಮಾಲು ಮತ್ತು ಮಹಜರ್ ನೊಂದಿಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ದಿನಾಂಕ: 14-10-2019 ರಂದು ತಾನು , ಹೆಚ್.ಸಿ-205  ರಮೇಶ್, ರವರೊಂದಿಗೆ  ತಮ್ಮ ಠಾಣೆಯ ಪೊಲೀಸ್ ಇನ್ಸ್ ಪೆಕ್ಟರ್ ರವರ ಅದೇಶದಂತೆ  ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಅಕ್ರಮಚಟುವಟಿಕೆಗಳ ಬಗ್ಗೆ ಮಾಹಿತಿ ಸಂಗ್ರಹಣೆಗಾಗಿ ಗಸ್ತಿನಲ್ಲಿದ್ದಾಗ ಮದ್ಯಾಹ್ನ 1-00 ಗಂಟೆಯಲ್ಲಿ ತುಮ್ಮನಹಳ್ಳಿ ಗ್ರಾಮದಲ್ಲಿದ್ದಾಗ ಭಾತ್ಮಿದಾರರಿಂದ ಬಂದ ಖಚಿತ ಮಾಹಿತಿ ಮೇರೆಗೆ ಚಿಂತಡಪಿ ಗ್ರಾಮದ ವಾಸಿ ಮಮತ ಬಿನ್ ದೇವರಾಜ್ , 30 ವರ್ಷ, ಅಗಸರು , ಜಿರಾಯ್ತಿ ರವರು ತನ್ನ  ವಾಸದ ಮನೆ ಮುಂಭಾಗ ಸಾರ್ವಜನಿಕರಿಗೆ ಮದ್ಯಪಾನಮಾಡಲು ಸ್ಥಳವಕಾಶಮಾಡಿಕೊಟ್ಟಿರುವುದಾಗಿ ಮಾಹಿತಿ ಬಂದಿದ್ದು ಈ ಬಗ್ಗೆ ಪಂಚರೊಂದಿಗೆ ದಾಳಿಮಾಡಿ ಸ್ಥಳದಲ್ಲಿದ್ದ  1) 90 ML ನ Haywards  Punch Fine Whysky  2 ಖಾಲಿ ಮದ್ಯದ ಟೆಟ್ರಾ ಪ್ಯಾಕೇಟ್ 1] 2 ನೀರಿನ ಖಾಲಿ ಪ್ಲಾಸ್ಟೀಕ್ ಗ್ಲಾಸ್ ಗಳು, 3] ಒಂದು ಲೀಟರ್ ನ 1 ನೀರಿನ ಖಾಲಿ ಪ್ಲಾಸ್ಟೀಕ್ ಬಾಟಲ್ 4] 1) 90 ML ನ Haywards Punch Fine Whysky 23  ಮದ್ಯದ[ಮದ್ಯ ತುಂಬಿರುವ] ಟೆಟ್ರಾ ಪ್ಯಾಕೇಟ್ ಗಳನ್ನು ಪಂಚನಾಮೆ ಮೂಲಕ ಅಮಾನತ್ತುಪಡಿಸಿಕೊಂಡು ಮದ್ಯಪಾನ ಮಾಡಲು ಸ್ಥಳವಕಾಶಮಾಡಿಕೊಟ್ಟಿದ್ದ ಶ್ರೀಮತಿ ಮಮತ  ಕೋಂ ದೇವರಾಜ್ , 30 ವರ್ಷ, ಅಗಸರು, ಜಿರಾಯ್ತಿ, ವಾಸ: ಚಿಂತಡಪಿ ಗ್ರಾಮ, ಶಿಡ್ಲಘಟ್ಟ ತಾಲ್ಲೂಕು, ರವರ ಬಳಿ ಈ ಬಗ್ಗೆ ಏನಾದರೂ ಪರವಾನಗಿ ವಗೈರೆ ಇದೆಯೇ ಎಂತ ಕೇಳಲಾಗಿ ತಮ್ಮ ಬಳಿ ಏನೂ ಪರವಾನಗಿ ಇಲ್ಲವೆಂತ ತಿಳಿಸಿದ್ದು , ಇದು ಕಾನೂನು ಬಾಹಿರವೆಂತ ತಿಳಿಸಿ ಆಕೆಯ ವಿಳಾಸವನ್ನು ಮುಂದಿನ ಕಾನೂನು ಕ್ರಮಕ್ಕಾಗಿ ಪಡೆದು ಸ್ಥಳದಲ್ಲಿ ಮೇಲ್ಕಂಡ ಮಾಲುಗಳನ್ನು ವಶಕ್ಕೆಪಡೆದಿರುತ್ತೆ, ಸದರಿ ಸ್ಥಳದಲ್ಲಿ ಅಮಾನತ್ತು ಪಡಿಸಿರುವ  ಒಟ್ಟು ಮದ್ಯವು 2.070  ಎಂ.ಎಲ್ ನಷ್ಟಿದ್ದು ಇದರ ಬೆಲೆ ಒಟ್ಟು 697/- ರೂಗಳಾಗಿರುತ್ತೆ. ಸದರಿ ಆರೋಪಿತ ಮಹಿಳೆಯಾದ್ದರಿಂದ ಆಕೆಯನ್ನು ಸ್ಥಳದಲ್ಲಿಯೇ ಬಿಟ್ಟಿರುತ್ತೆ, ಕಾರಣ ತಮ್ಮ ಜೊತೆ ಮಹಿಳಾ ಸಿಬ್ಬಂದಿ ಇಲ್ಲದ ಕಾರಣದಿಂದ ಬಿಟ್ಟುರುತ್ತೆ, ಸದರಿ ಅಮಾನತ್ತುಪಡಿಸಿರುವ ಮೇಲ್ಕಂಡ ಮಾಲುಗಳನ್ನು ಮತ್ತು  ಮಹಜರ್  ಅನ್ನು  ತಮ್ಮ ವಶಕ್ಕೆ ನೀಡುತ್ತಿದ್ದು ಈ ಬಗ್ಗೆ ಮುಂದಿನ ಕಾನೂನು  ಕ್ರಮ ಜರುಗಿಸಲು ಕೋರಿ ನೀಡಿದ ದೂರನ್ನು ಪಡೆದು ಪ್ರಕರಣ ದಾಖಲಿಸಿಕೊಂಡಿರುತ್ತೆ.

 1. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.348/2019 ಕಲಂ. 15(ಎ), 32(3) ಕೆ.ಇ ಆಕ್ಟ್:-

     ದಿನಾಂಕ: 14-10-2019 ರಂದು ಸಂಜೆ 4-30 ಗಂಟೆಯಲ್ಲಿ ಶ್ರೀ. ರಮೇಶ್ ಹೆಚ್.ಸಿ-205, ಸೈಬರ್, ಎಕನಾಮಿಕ್ ಮತ್ತು ನಾರ್ಕೋಟಿಕ್ ಕ್ರೈಮ್ ಪೊಲೀಸ್ ಠಾಣೆ, ಚಿಕ್ಕಬಳ್ಳಾಪುರ ಜಿಲ್ಲೆ ರವರು ಮಾಲು ಮತ್ತು ಮಹಜರ್ ನೊಂದಿಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ಈ ದಿನ ದಿನ ದಿನಾಂಕ: 14-10-2019 ರಂದು ತಾನು ಹೆಚ್.ಸಿ-71 ಸುಬ್ರಮಣಿ ರವರೊಂದಿಗೆ ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಅಕ್ರಮಚಟುವಟಿಕೆಗಳ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದಾಗ ಮದ್ಯಾಹ್ನ 3-00 ಗಂಟೆ ಸಮಯದಲ್ಲಿ ಶಿಡ್ಲಘಟ್ಟ ತಾಲ್ಲೂಕು ಮಳ್ಳೂರು ಗ್ರಾಮದಲ್ಲಿದ್ದಾಗ ಕಾಚಹಳ್ಳಿ ಗ್ರಾಮದಲ್ಲಿ ಅಕ್ರಮವಾಗಿ ಸಾರ್ವಜನಿಕರಿಗೆ ಮದ್ಯಪಾನ ಮಾಡಲು ಸ್ಥಳವಕಾಶ ಮಾಡಿಕೊಟ್ಟಿರುತ್ತಾರೆಂತ ಬಂದ ಮಾಹಿತಿಯ ಮೇರೆಗೆ ಪಂಚಾಯ್ತಿದಾರರನ್ನು ಬರಮಾಡಿಕೊಂಡು ಕಾಚಹಳ್ಳಿ ಗ್ರಾಮಕ್ಕೆ ಹೋಗಿದ್ದು ಶ್ರೀಮತಿ ವೆಂಕಟಲಕ್ಷ್ಮಮ್ಮ @ ಸಾರಾಯಮ್ಮ ಕೋಂ ವೆಂಕಟರಾಯಪ್ಪ ರವರು ಅವರ ಮನೆಯ ಮುಂಭಾಗದ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಮದ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿದ್ದು, ಸ್ಥಳದಲ್ಲಿದ್ದ 1) Haywards Cheers Whisky 90 ML ನ15 ಮದ್ಯ ತುಂಬಿದ ಪ್ಯಾಕೇಟ್ ಗಳು, 2) Haywards Funch Fine Whisky 90 ML ನ 6 ಮದ್ಯ ತುಂಬಿದ ಪ್ಯಾಕೇಟ್ 3) Haywards Cheers Whisky 90 ML ಎರಡು ಖಾಲಿ ಪ್ಯಾಕೇಟ್ ಗಳು, 4) ಒಂದು ಪ್ಲಾಸ್ಟಿಕ್ ಖಾಲಿ ನೀರಿನ ಬಾಟಲ್ ಮತ್ತು 5) ಎರಡು ಪ್ಲಾಸ್ಟಿಕ್ ಲೋಟಗಳನ್ನು ಮಹಜರ್ ಮೂಲಕ ಅಮಾನತ್ತುಪಡಿಸಿಕೊಂಡು ಮಹಿಳಾ ಆರೋಪಿಯಾದ ಶ್ರೀಮತಿ ವೆಂಕಟಲಕ್ಷ್ಮಮ್ಮ @ ಸಾರಾಯಮ್ಮ ಕೋಂ ವೆಂಕಟರಾಯಪ್ಪ, 40 ವರ್ಷ, ಪ.ಜಾತಿ, ಕೂಲಿ ಕೆಲಸ, ವಾಸ: ಕಾಚಹಳ್ಳಿ ಗ್ರಾಮ, ಶಿಡ್ಲಘಟ್ಟ ತಾಲ್ಲೂಕು ರವರನ್ನು ಮಹಿಳಾ ಸಿಬ್ಬಂಧಿಯಿಲ್ಲದ ಕಾರಣ ಸ್ಥಳದಲ್ಲಿ ಬಿಟ್ಟು ಮಹಜರ್ ಮತ್ತು ಮಾಲಿನೊಂದಿಗೆ ಠಾಣೆಯಲ್ಲಿ ಹಾಜರಾಗಿ ಕಾನೂನು ಕ್ರಮ ಜರುಗಿಸಲು ಕೋರಿ ನೀಡಿದ ದೂರನ್ನು ಪಡೆದು ಪ್ರಕರಣ ದಾಖಲಿಸಿಕೊಂಡಿರುತ್ತೆ.

 1. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.349/2019 ಕಲಂ. 15(ಎ), 32(3) ಕೆ.ಇ ಆಕ್ಟ್:-

     ಘನ ನ್ಯಾಯಾಲಯದಲ್ಲಿ ನಿವೇದಿಸಿಕೊಳ್ಳುವುದೇನಂದರೆ, ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆಯ ಪಿ.ಎಸ್.ಐ ಹರೀಶ್ ವಿ ಆದ ನಾನು ಈ ದಿನ ದಿನಾಂಕ: 14-10-2019 ರಂದು ಮದ್ಯಾಹ್ನ 3-00  ಗಂಟೆಯಲ್ಲಿ ಪೊಲೀಸ್ ಠಾಣೆಯಲ್ಲಿದ್ದಾಗ ಚೌಡಸಂದ್ರ ಗ್ರಾಮದಲ್ಲಿ ರಾಮಚಂದ್ರಪ್ಪ ಬಿನ್ ಲೇಟ್ ದ್ಯಾವಪ್ಪ ಎಂಬುವರ ತನ್ನ ವಾಸದ ಮನೆಯ ಸಮೀಪ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಮದ್ಯವನ್ನು ಕುಡಿಯಲು ಸ್ಥಳಾವಕಾಶವನ್ನು ಮಾಡಿ ಕೊಟ್ಟಿರುವುದಾಗಿ ಮಾಹಿತಿದಾರರಿಂದ ಬಂದ ಖಚಿತ ಮಾಹಿತಿ ಮೇರೆಗೆ ಕೂಡಲೇ ಸಿಬ್ಬಂದಿಯವರಾದ ಸಿಪಿಸಿ-379 ಮಂಜುನಾಥ ಮತ್ತು ಸಿಪಿಸಿ-444 ನಾರಾಯಣಸ್ವಾಮಿ.ಬಿ  ರವರೊಂದಿಗೆ ಕೆಎ-40-ಜಿ-357 ಸರ್ಕಾರಿ ಜೀಪಿನಲ್ಲಿ ಚೌಡಸಂದ್ರ ಗ್ರಾಮಕ್ಕೆ ಮದ್ಯಾಹ್ನ 3-15 ಗಂಟೆಗೆ ಬೇಟಿ ನೀಡಿ ಸಿಪಿಸಿ-444 ನಾರಾಯಣಸ್ವಾಮಿ.ಬಿ  ರವರ ಮುಖಾಂತರ ಇಬ್ಬರು ಪಂಚರನ್ನು ಬರಮಾಡಿಕೊಂಡು ಅವರಿಗೆ ದಾಳಿಯ ಬಗ್ಗೆ ಮಾಹಿತಿ ನೀಡಿ ಪಂಚಾಯ್ತಿದಾರರೊಂದಿಗೆ ಮತ್ತು ಸಿಬ್ಬಂಧಿಯೊಂದಿಗೆ ರಾಮಚಂದ್ರಪ್ಪ ಬಿನ್ ಲೇಟ್ ದ್ಯಾವಪ್ಪ ರವರ ವಾಸದ ಮನೆಯ ಬಳಿ ಹೋಗುವಷ್ಟರಲ್ಲಿ ಮದ್ಯಪಾನ ಮಾಡುತ್ತಿದ್ದ ಆಸಾಮಿಗಳು ಸಮವಸ್ತ್ರದಲ್ಲಿದ್ದ ನಮ್ಮನ್ನು ನೋಡಿ ಓಡಿ ಹೋಗಿದ್ದು ಆ ಪೈಕಿ ಮದ್ಯ ಮಾರಾಟ ಮಾಡುತ್ತಿದ್ದ ಆಸಾಮಿಯನ್ನು ಹಿಡಿದು ಹೆಸರು ವಿಳಾಸ ಕೇಳಲಾಗಿ ರಾಮಚಂದ್ರಪ್ಪ ಬಿನ್ ಲೇಟ್ ದ್ಯಾವಪ್ಪ, 68 ವರ್ಷ, ವಕ್ಕಲಿಗರು, ಕೂಲಿಕೆಲಸ, ವಾಸ: ಚೌಡಸಂದ್ರ ಗ್ರಾಮ, ಶಿಡ್ಲಘಟ್ಟ ತಾಲ್ಲೂಕು ಎಂತ ತಿಳಿಸಿದ್ದು ಸದರಿ ಆಸಾಮಿಯ ಬಳಿ ಒಂದು ಕಪ್ಪು ಬಣ್ಣದ ಪ್ಲಾಸ್ಟಿಕ್ ಕವರ್ ಇದ್ದು ಪರಿಶೀಲಿಸಲಾಗಿ 90 Ml ನ Haywards Cheers Whisky 10 ಟೆಟ್ರಾ ಪ್ಯಾಕೆಟ್ ಗಳಿದ್ದು ಪ್ರತಿಯೊಂದರ ಬೆಲೆ Rs. 30.32 ರೂಗಳಾಗಿದ್ದು ಒಟ್ಟು Rs. 303-00 ರೂಗಳಾಗಿರುತ್ತೆ (ಮೂನ್ನೂರ ಮೂರು ರೂ ಮಾತ್ರ) ಹಾಗೂ ಸ್ಥಳದಲ್ಲಿ ಪರಿಶೀಲಿಸಲಾಗಿ ಎರಡು ಖಾಲಿ ಪ್ಲಾಸ್ಟಿಕ್ ಲೋಟಗಳು, ಎರಡು ಖಾಲಿ ವಾಟರ್ ಪ್ಯಾಕೇಟ್ ಗಳು ಹಾಗೂ Haywards Cheers Whisky 90 Ml ನ 2 ಖಾಲಿ ಟೆಟ್ರಾ ಪ್ಯಾಕೇಟ್ ಗಳಿದ್ದು ಸದರಿ ಮಾಲನ್ನು ಮದ್ಯಾಹ್ನ 3-30 ರಿಂದ ಸಂಜೆ  4-30 ಗಂಟೆವರೆಗೆ  ಮಹಜರ್ ಮೂಲಕ ಅಮಾನತ್ತು ಪಡಿಸಿಕೊಂಡು ಮಾಲು ಮತ್ತು ಆರೋಪಿಯೊಂದಿಗೆ ಸಂಜೆ 4-45  ಗಂಟೆಗೆ ಠಾಣೆಗೆ ವಾಪಸ್ಸು ಬಂದು ಆರೋಪಿಯ ವಿರುದ್ದ ಠಾಣಾ ಮೊ.ಸಂ 349/2019 ಕಲಂ 15(ಎ), 32(3) ಕೆ.ಇ. ಆಕ್ಟ್ ರೀತ್ಯಾ ಸ್ವತಃ ಪ್ರಕರಣವನ್ನು ದಾಖಲಿಸಿಕೊಂಡಿರುತ್ತೆ.

 1. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.350/2019 ಕಲಂ. 15(ಎ), 32(3) ಕೆ.ಇ ಆಕ್ಟ್:-

     ಘನ ನ್ಯಾಯಾಲಯದಲ್ಲಿ ನಿವೇದಿಸಿಕೊಳ್ಳುವುದೇನಂದರೆ, ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆಯ ಪಿ.ಎಸ್.ಐ ಹರೀಶ್ ವಿ ಆದ ನಾನು ಈ ದಿನ ದಿನಾಂಕ: 14-10-2019 ರಂದು ಸಂಜೆ 5-30  ಗಂಟೆಯಲ್ಲಿ ಪೊಲೀಸ್ ಠಾಣೆಯಲ್ಲಿದ್ದಾಗ ಬೀರಪ್ಪನಹಳ್ಳಿ  ಗ್ರಾಮದಲ್ಲಿ ಮುನಿಶಾಮಪ್ಪ ಬಿನ್ ಲೇಟ್ ಹನುಮಂತಪ್ಪ  ಎಂಬುವರ ತನ್ನ ವಾಸದ ಮನೆಯ ಸಮೀಪ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಮದ್ಯವನ್ನು ಕುಡಿಯಲು ಸ್ಥಳಾವಕಾಶವನ್ನು ಮಾಡಿ ಕೊಟ್ಟಿರುವುದಾಗಿ ಮಾಹಿತಿದಾರರಿಂದ ಬಂದ ಖಚಿತ ಮಾಹಿತಿ ಮೇರೆಗೆ ಕೂಡಲೇ ಸಿಬ್ಬಂದಿಯವರಾದ ಸಿಪಿಸಿ-27 ಸರ್ವೇಶ್ ಮತ್ತು ಸಿಪಿಸಿ-139 ಬಾಬು ರವರೊಂದಿಗೆ ಕೆಎ-40-ಜಿ-357 ಸರ್ಕಾರಿ ಜೀಪಿನಲ್ಲಿ ಬೀರಪ್ಪನಹಳ್ಳಿ  ಗ್ರಾಮಕ್ಕೆ ಸಂಜೆ 5-45  ಗಂಟೆಗೆ ಬೇಟಿ ನೀಡಿ ಸಿಪಿಸಿ-27 ಸರ್ವೇಶ್ ರವರ ಮುಖಾಂತರ ಇಬ್ಬರು ಪಂಚರನ್ನು ಬರಮಾಡಿಕೊಂಡು ಅವರಿಗೆ ದಾಳಿಯ ಬಗ್ಗೆ ಮಾಹಿತಿ ನೀಡಿ ಪಂಚಾಯ್ತಿದಾರರೊಂದಿಗೆ ಮತ್ತು ಸಿಬ್ಬಂಧಿಯೊಂದಿಗೆ ಮುನಿಶಾಮಪ್ಪ ಬಿನ್ ಲೇಟ್ ಹನುಮಂತಪ್ಪ  ರವರ ವಾಸದ ಮನೆಯ ಬಳಿ ಹೋಗುವಷ್ಟರಲ್ಲಿ ಮದ್ಯಪಾನ ಮಾಡುತ್ತಿದ್ದ ಆಸಾಮಿಗಳು ಸಮವಸ್ತ್ರದಲ್ಲಿದ್ದ ನಮ್ಮನ್ನು ನೋಡಿ ಓಡಿ ಹೋಗಿದ್ದು ಆ ಪೈಕಿ ಮದ್ಯ ಮಾರಾಟ ಮಾಡುತ್ತಿದ್ದ ಆಸಾಮಿಯನ್ನು ಹಿಡಿದು ಹೆಸರು ವಿಳಾಸ ಕೇಳಲಾಗಿ ಮುನಿಶಾಮಪ್ಪ ಬಿನ್ ಲೇಟ್ ಹನುಮಂತಪ್ಪ,80 ವರ್ಷ, ಗೊಲ್ಲರು, ಜಿರಾಯ್ತಿ, ವಾಸ: ಬೀರಪ್ಪನಹಳ್ಳಿ  ಗ್ರಾಮ, ಶಿಡ್ಲಘಟ್ಟ ತಾಲ್ಲೂಕು ಎಂತ ತಿಳಿಸಿದ್ದು ಸದರಿ ಆಸಾಮಿಯ ಬಳಿ ಒಂದು ಕಪ್ಪು ಬಣ್ಣದ ಪ್ಲಾಸ್ಟಿಕ್ ಕವರ್ ಇದ್ದು ಪರಿಶೀಲಿಸಲಾಗಿ 90 Ml ನ Haywards Cheers Whisky 15 ಟೆಟ್ರಾ ಪ್ಯಾಕೆಟ್ ಗಳಿದ್ದು ಪ್ರತಿಯೊಂದರ ಬೆಲೆ Rs. 30.32 ರೂಗಳಾಗಿದ್ದು ಒಟ್ಟು Rs. 454-00ರೂಗಳಾಗಿರುತ್ತೆ (ನಾಲ್ಕುನೂರ ಐವತ್ತ ನಾಲ್ಕು ರೂ ಮಾತ್ರ) ಹಾಗೂ ಸ್ಥಳದಲ್ಲಿ ಪರಿಶೀಲಿಸಲಾಗಿ ಎರಡು ಖಾಲಿ ಪ್ಲಾಸ್ಟಿಕ್ ಲೋಟಗಳು, ಎರಡು ಖಾಲಿ ವಾಟರ್ ಪ್ಯಾಕೇಟ್ ಗಳು ಹಾಗೂ Haywards Cheers Whisky 90 Ml ನ 2 ಖಾಲಿ ಟೆಟ್ರಾ ಪ್ಯಾಕೇಟ್ ಗಳಿದ್ದು ಸದರಿ ಮಾಲನ್ನು ಸಂಜೆ 6-00 ಗಂಟೆಯಿಂದ ಸಂಜೆ  6-45 ಗಂಟೆವರೆಗೆ  ಮಹಜರ್ ಮೂಲಕ ಅಮಾನತ್ತು ಪಡಿಸಿಕೊಂಡು ಮಾಲು ಮತ್ತು ಆರೋಪಿಯೊಂದಿಗೆ ರಾತ್ರಿ 7-00  ಗಂಟೆಗೆ ಠಾಣೆಗೆ ವಾಪಸ್ಸು ಬಂದು ಆರೋಪಿಯ ವಿರುದ್ದ ಠಾಣಾ ಮೊ.ಸಂ 350/2019 ಕಲಂ 15(ಎ), 32(3) ಕೆ.ಇ. ಆಕ್ಟ್ ರೀತ್ಯಾ ಸ್ವತಃ ಪ್ರಕರಣವನ್ನು ದಾಖಲಿಸಿಕೊಂಡಿರುತ್ತೆ.

 1. ಶಿಡ್ಲಘಟ್ಟ ಪುರ ಪೊಲೀಸ್ ಠಾಣೆ ಮೊ.ಸಂ.145/2019 ಕಲಂ. 380 ಐ.ಪಿ.ಸಿ:-

     ದಿನಾಂಕ.15.10.2019 ರಂದು ಬೆಳಿಗ್ಗೆ 10.30 ಗಂಟೆಗೆ ಪಿರ್ಯಾದಿ ಸೈಯದ್ ಅಜ್ಮಲ್ ರವರು ಠಾಣೆಗೆ ಹಾಜರಾಗಿ ನೀಡಿದ ಗಣಕೀಕೃತ ದೂರಿನ ಸಾರಾಂಶವೇನಂದರೆ, ತಾನು ರೇಷ್ಮೇ ಹುರಿ ಮಿಷನ್  ಮತ್ತು ರೇಷ್ಮೇ ವ್ಯಾಪಾರ ಮಾಡಿಕೊಂಡು ಜೀವನ ಮಾಡಿಕೊಂಡಿರುತ್ತೇನೆ. ನಮ್ಮ ರೇಷ್ಮೇ ಹ್ಮರಿ ಮಿಷನ್ ಪ್ಯಾಕ್ಟರಿಯಲ್ಲಿ ಸುಮಾರು 3-4 ತಿಂಗಳಿಂದ ರಾಮನಗರ ಜಿಲ್ಲೆ ಮಾಗಡಿಯ ಗಿರೀಶ್ ಬಿನ್ ಬಿ.ರಂಗಪ್ಪ ಎಂಬುವರು 2 ಲಕ್ಷರೂ ಅಡ್ವಾನ್ಸ್ ಪಡೆದು ಪೀಸ್ ವರ್ಕ ಕೆಲಸ ಮಾಡಿಕೊಂಡಿರುತ್ತಾನೆ. ನಾನು ನಮ್ಮ ಹುರಿಮಿಷನ್ ಪ್ಯಾಕ್ಟರಿ ಸಂಪೂರ್ಣ ಜವಾಬ್ದಾರಿ ಕೊಟ್ಟಿರುತ್ತೇನೆ. ದಿನಾಂಕ.06/10/2019 ರಂದು ಬೆಳಿಗ್ಗೆ ಸುಮಾರು 11-00 ಗಂಟೆಯಲ್ಲಿ ಗಿರೀಶ್ ನಮ್ಮ ಪ್ಯಾಕ್ಟರಿಯಿಂದ ಅವರ ಊರಿಗೆ ಹೋಗಿ ಬರುತ್ತೇನೆಂದು ಹೋದವನು ಮತ್ತೆ ಕೆಲಸಕ್ಕೆ ವಾಪಸ್ಸು ಬಂದಿರುವುದಿಲ್ಲ. ನಂತರ ನಾನು ಗಿರೀಶ್ ರವರನ್ನು ಕೆಲಸಕ್ಕೆ ಬರಲು ತಿಳಿಸಲು ಹುಡಿಕಾಡಿದರೂ ಸಿಕ್ಕಿರುವುದಿಲ್ಲ. ಗಿರೀಶ್ ರವರ ಬಗ್ಗೆ ಅನುಮಾನ ಬಂದು ನಮ್ಮ ರೇಷ್ಮೇ ಹುರಿ ಮಿಷನ್ ಪ್ಯಾಕ್ಟರಿಯಲ್ಲಿ ಚೆಕ್ ಮಾಡಿದಾಗ ಸುಮಾರು 24,500/- ರೂ ಬೆಲೆ ಬಾಳುವ ಸುಮಾರು 16 ಕೆಜಿಯಷ್ಠು ರೇಷ್ಮೇ ನೂಲು, ಕಚ್ಚಾ ರೇಷ್ಮೇ ಮತ್ತು ಅದರ ಜೊತೆಗೆ ಕೆಲವು ಖಾಲಿ ಟ್ಯೂಬ್ ಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುವುದು ಕಂಡು ಬಂದಿರುತ್ತೆ. ಅಂದಿನಿಂದ ಇದುವರೆಗೂ ಗಿರೀಶ್ ರವರನ್ನು ಹುಡುಕಾಡಿದರೂ ಸಿಕ್ಕಿರುವುದಿಲ್ಲ. ಆದ್ದರಿಂದ ಗಿರೀಶ್ ರವರನ್ನು ಪತ್ತೆ ಮಾಡಿ ಕಾನೂನು ರೀತ್ಯಾ ಕ್ರ್ರಮ ಜರುಗಿಸಲು ಕೊಟ್ಟ ದೂರಿನ ಮೇರೆಗೆ ಈ ಪ್ರಕರಣ ದಾಖಲಿಸಿರುತ್ತೆ.

 1. ಶಿಡ್ಲಘಟ್ಟ ಪುರ ಪೊಲೀಸ್ ಠಾಣೆ ಮೊ.ಸಂ.146/2019 ಕಲಂ. 380 ಐ.ಪಿ.ಸಿ:-

     ದಿನಾಂಕ.15.10.2019 ರಂದು ಬೆಳಿಗ್ಗೆ 11.15 ಗಂಟೆಗೆ ಪಿರ್ಯಾದಿ ನವೀದ್ ಪಾಷ ರವರು ಠಾಣೆಗೆ ಹಾಜರಾಗಿ ನೀಡಿದ ಗಣಕೀಕೃತ ದೂರಿನ ಸಾರಾಂಶವೇನಂದರೆ, ತಾನು ರೇಷ್ಮೇ ಹುರಿ ಮಿಷನ್ ಕೆಲಸ ಮಾಡಿಕೊಂಡು ಜೀವನ ಮಾಡಿಕೊಂಡಿದ್ದು ಇದೇ ಶಿಡ್ಲಘಟ್ಟ ಟೌನ್ ಕೋಟೆ ಸರ್ಕಲ್ ನಲ್ಲಿ ಸೈಯದ್ ಅಜ್ಮಲ್ ಎಂಬುವರ ಬಳಿ ಕೆಲಸ ಮಾಡುತ್ತಿದ್ದ ರಾಮನಗರ ಜಿಲ್ಲೆ ಮಾಗಡಿಯ ಗಿರೀಶ್ ಬಿನ್ ಬಿ.ರಂಗಪ್ಪ ಎಂಬುವರು ಒಂದು ವಾರದೆ ಹಿಂದೆ ನಮ್ಮ ಪ್ಯಾಕ್ಟರಿಗೆ ಕೆಲಸಕ್ಕೆ ಬರುವುದಾಗಿ 50 ಸಾವಿರ ರೂ ಅಡ್ವಾನ್ಸ್ ಪಡೆದು ಕೆಲಸ ಮಾಡಿಕೊಂಡಿದ್ದರು. ದಿನಾಂಕ.13/10/2019 ರಂದು ಸಂಜೆ ಸುಮಾರು 4-30 ಗಂಟೆಯಲ್ಲಿ ನಮ್ಮ ತಂದೆಯ ವಯಸ್ಸಾದ ಕಾರಣ ಮೃತ ಪಟ್ಟಿದ್ದು, ದಿನಾಂಕ.14/10/2019 ರಂದು ಬೆಳಿಗ್ಗೆ ಸುಮಾರು 10-00 ಗಂಟೆಯಲ್ಲಿ ನಮ್ಮ ತಂದೆಯ ಅಂತ್ಯ ಸಂಸ್ಕಾರ ಮಾಡಿಕೊಂಡು ಮನೆಗೆ ವಾಪಸ್ಸು ಬಂದು ನನಗೆ ಮೈಯಲ್ಲಿ ಹುಷಾರು ಇಲ್ಲದ ಕಾರಣ ಶಿಡ್ಲಘಟ್ಟ ಸತ್ಯನಾರಾಯಣ ಆಸ್ಪತ್ರೆಗೆ ವೈದ್ಯರ ಬಳಿ ಚಿಕಿತ್ಸೆ ಪಡೆದುಕೊಂಡು ಮದ್ಯಾಹ್ನ 1-00 ಗಂಟೆಗೆ ಮನೆಗೆ ವಾಪಸ್ಸು ಬರುವಾಗ ನಮ್ಮ ರೇಷ್ಮೇ ಹುರಿ ಮಿಷನ್ ನಲ್ಲಿ ಕೆಲಸ ಮಾಡುವ ಗಿರೀಶ್ ಎಂಬುವರು ಒಂದು ಪ್ಲಾಸ್ಟೀಕ್ ಚೀಲದ ಮೂಟೆಯನ್ನು ತೆಗೆದುಕೊಂಡು ಪ್ಯಾಕ್ಟರಿಯಿಂದ ಹೊರಗೆ ಬರುತ್ತಿದ್ದು ನಾನು ಏನಪ್ಪ ಆದು ಮೂಟೆ ನಿಲ್ಲು ಎಂದು ಕೂಗಿದಾಗ ಆತನು ಮೂಟೆ ಸಮೇತ ಅಲ್ಲಿಂದ ಓಡಿ ಹೋದನು. ಆಗ ನಾನು ನಮ್ಮ ಪ್ಯಾಕ್ಟರಿಯಲ್ಲಿ ಚೆಕ್ ಮಾಡಿದಾಗ ಸುಮಾರು 24,000/-ರೂ ಬೆಲೆ ಬಾಳುವ ರೇಷ್ಮೇ ನೂಲು ಇರುವ ಕೆಲವು ಬಾಬಿನ್, ಖಾಲಿ ಟ್ಯೂಬ್ಗಳು ಮತ್ತು ಸುಮಾರು 10 ಕೆ.ಜಿಯಷ್ಠು ರೇಷ್ಮೇ ನೂಲನ್ನು ಕಳ್ಳತನದಿಂದ ಪ್ಲಾಸ್ಟೀಕ್ ಚೀಲದಲ್ಲಿ ತುಂಬಿಕೊಂಡು ಕಳ್ಳತನ ಮಾಡಿಕೊಂಡು ಹೋಗಿರುವುದು ಕಂಡು ಬಂದಿರುತ್ತೆ. ನಂತರ ಗಿರೀಶ್ ನಮ್ಮ ಪ್ಯಾಕ್ಟರಿಗೆ ಕೆಲಸಕ್ಕೆ ಬಂದಿರುವುದಿಲ್ಲ. ಆದ್ದರಿಂದ ಗಿರೀಶ್ ರವರನ್ನು ಪತ್ತೆ ಮಾಡಿ ಕಾನೂನು ರೀತ್ಯಾ ಕ್ರ್ರಮ ಜರುಗಿಸಿ ಕಳುವಾದ ಮಾಲುಗಳನ್ನು ವಾಪಸ್ಸು ಕೊಡಿಸಿಕೊಡಲು ಕೊಟ್ಟ ದೂರಿನ ಮೇರೆಗೆ ಪ್ರಕರಣವನ್ನು ದಾಖಲಿಸಿದೆ.