ದಿನಾಂಕ :15/09/2020 ರ ಅಪರಾಧ ಪ್ರಕರಣಗಳು

 1. ಬಾಗೇಪಲ್ಲಿ ಪೊಲೀಸ್ ಠಾಣೆ ಮೊ.ಸಂ.228/2020 ಕಲಂ: ಮನುಷ್ಯ ಕಾಣೆ:-

          ದಿ: 14-09-2020 ರಂದು ಸಂಜೆ 5:30 ಗಂಟೆಗೆ ಪಿರ್ಯಾಧಿದಾರರು ಠಾಣೆಗೆ ಹಾಜರಾಗಿ ನೀಡಿದ ದೂರನ್ನು ಪಡೆದುಕೊಂಡಿದ್ದರ ಸಾರಾಂಶ – ನಮ್ಮ ತಂದೆಯವರಾದ ಪಕೃದ್ದೀನ್ ಸಾಬ್ ಬಿನ್ ಲೇಟ್ ಸೈಯ್ಯದ್ ಸಾಬ್, 58 ವರ್ಷ, ರವರಿಗೆ ಒಂದನೇ ನಾನು ಮತ್ತು ಎರಡನೇ ಮಹಮದ್ ಎಂಬ ಇಬ್ಬರು ಮಕ್ಕಳಿರುತ್ತೇವೆ.   ನಮ್ಮ ತಂದೆಯವರು ಬಾಗೇಪಲ್ಲಿ ಪುರದಲ್ಲಿ ತಳ್ಳುವ ಬಂಡಿಯಲ್ಲಿ ಬಾಳೆಹಣ್ಣು ವ್ಯಾಪಾರ ಮಾಡುತ್ತಿದ್ದರು. ದಿ:07-08-2020 ರಂದು ನಾನು ವ್ಯಾಪಾರದ ನಿಮತ್ತ ಕೋಲಾರಿಗೆ ಹೋಗಿದ್ದು, ಇದೇ ದಿನ ರಾತ್ರಿ ನಮ್ಮ ತಾಯಿ ನನಗೆ ಫೋನ್ ಮಾಡಿ ‘ ನಿಮ್ಮ ತಂದೆಯವರು ಬಾಳೆಹಣ್ಣು ವ್ಯಾಪಾರ ಮಾಡಿಕೊಂಡು ಸಂಜೆ ಸುಮಾರು 5:00 ಗಂಟೆಯಲ್ಲಿ ಮನೆಗೆ ಬಂದಿದ್ದು,  ತಳ್ಳುವ ಬಂಡಿಯನ್ನು ಮನೆಯ ಬಳಿ ಬಿಟ್ಟು ಎಲ್ಲಿಗೋ ಹೋದವರು ರಾತ್ರಿ ವೇಳೆಯಾದರೂ ಮನೆಗೆ ಬಂದಿರುವುದಿಲ್ಲ, ಇವರ ಮೊಬೈಲ್ ಫೋಣ್  ಸಹ ಮನೆಯಲ್ಲಿಯೇ ಇರುತ್ತದೆ’ ಎಂದು ಗಾಬರಿಯಿಂದ ತಿಳಿಸಿದಳು, ಕೂಡಲೇ ನಾನು ಇದೇ ದಿನ ರಾತ್ರಿ ಮನೆಗೆ ವಾಪಸ್ಸಾಗಿದ್ದು, ವಿಚಾರ ಮಾಡಲಾಗಿ ವಿಷಯ ನಿಜವಾಗಿತ್ತು, ನಂತರ ನಾನು ಮತ್ತು ನಮ್ಮ ಕುಟುಂಬದವರು ಕಾಣೆಯಾಗಿರುವ ನಮ್ಮ ತಂದೆಯವರನ್ನು ನಮ್ಮ ನೆಂಟರ ಮನೆಗಳಲ್ಲಿ, ಪರಿಚಯಸ್ಥರ ಮನೆಗಳಲ್ಲಿ ಮತ್ತು ನಮ್ಮ ತಂದೆಯವರ ಸ್ನೇಹಿತರ ಮನೆಗಳಲ್ಲಿ ಹುಡುಕಾಡಿದ್ದು, ಇದುವರೆವಿಗೂ ಪತ್ತೆಯಾಗಿರುವುದಿಲ್ಲ.  ಆದ್ದರಿಂದ ಈ ದಿನ ತಡವಾಗಿ ಠಾಣೆಗೆ ಬಂದು ದೂರು ನೀಡುತ್ತಿರುತ್ತೇವೆ.

 1. ಚಿಂತಾಮಣಿ ನಗರ ಪೊಲೀಸ್ ಠಾಣೆ ಮೊ.ಸಂ.110/2020 ಕಲಂ: 323,324,114,341,307,504,506(B) ರೆ/ವಿ 34 ಐ.ಪಿ.ಸಿ:-

          ದಿನಾಂಕ: 14/09/2020 ರಂದು ಹೋಸಕೋಟೆ ಎಂ.ವಿ.ಜೆ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದ ಗಾಯಾಳು ಕುಮಾರ್ ಬಿನ್ ಲೇಟ್ ಮುನಿನಾರಾಯಣಪ್ಪ  ರವರ ಹೇಳಿಕೆಯನ್ನು ಪಡೆದುಕೊಂಡು ಬರಲು ಹೋಗಿ ಹೆಚ್ ಸಿ 37 ರವರು ಹೇಳಿಕೆ ಪಡೆದುಕೊಂಡು ಠಾಣೆಗೆ ವಾಪಸ್ಸು ಮದ್ಯಾಹ್ನ 2:00 ಗಂಟೆಗೆ ಬಂದು ಹಾಜರುಪಡಿಸಿದ್ದನ್ನು ಪಡೆದು ಸಾರಾಂಶವೇನೆಂದರೆ ದಿ: 13/09/2020 ರಂದು ರಾತ್ರಿ 9:15 ಗಂಟೆಯಲ್ಲಿ ತಾನು ಮನೆಯಲ್ಲಿದ್ದಾಗ ತನ್ನ ಭಾಮೈದನಾದ ಅಗ್ರಹಾರದ ರಮೇಶ್ ಬಿನ್ ನಾರಾಯಣಸ್ವಾಮಿ ರವರು ತನಗೆ ಪೋನ್ ಮಾಡಿ ತನ್ನನ್ನು ಅಗ್ರಹಾರದ ಮುರಳಿ ಬಿನ್ ತಿಪ್ಪಣ್ಣ, ಗೌತಮ್ ಬಿನ್ ಶ್ರೀನಿವಾಸ, ದಿಲೀಪ್ ಬಿನ್ ಶ್ರೀನಿವಾಸ ಮತ್ತು ಶ್ರೀನಿವಾಸ ಬಿನ್ ತಿಪ್ಪಣ್ಣ ರವರು ತನ್ನ ಮೇಲೆ ವಿನಾಃ ಕಾರಣ ಜಗಳ ತೆಗೆದು ಹೊಡೆದು ಗಾಯಪಡಿಸಿರುತ್ತಾರೆಂತ ತಿಳಿಸಿದ್ದರಿಂದ ಕೂಡಲೇ ತಾನು ಜೆ ಜೆ ಕಾಲೋನಿ ವಾಸಿ ಅರವಿಂದ್ ಬಿನ್ ನರಸಿಂಹಮೂರ್ತಿ , ಟ್ಯಾಂಕ್ ಬಂಡ್ ರಸ್ತೆಯ ವಾಸಿ ವಿಜಯ್ ಕುಮಾರ್ ಬಿನ್ ವಿಶ್ವನಾಥರೆಡ್ಡಿ , ಬಮಬೂ ಬಜಾರ್ ಜನಾರ್ಧನ್ ಬಿನ್ ವೆಂಕಟೇಶಪ್ಪ, ಕರಿಯಪ್ಪಲ್ಲಿ ನಾಗರಾಜ್ ಬಿನ್ ದಾಸಪ್ಪ ರವರು ತನ್ನ ಜೊತೆಯಲ್ಲಿದ್ದು ನಾವೆಲ್ಲರೂ ಸಹ ರಾತ್ರಿ 9:30 ಗಂಟೆ ಸಮಯದಲ್ಲಿ ಅಗ್ರಹಾರದಲ್ಲಿರುವ ತನ್ನ ಭಾಮೈದನಾದ ರಮೇಶ್ ರವರ ಮನೆಯ ಬಳಿ ಹೋಗಿ ನೋಡಲಾಗಿ ಮುರಳಿ ಮತ್ತು ಅವರ ಜೊತೆಯಲ್ಲಿದ್ದ ಮೇಲ್ಕಂಡರವರು ಯಾವುದೋ ವಿಚಾರಕ್ಕೆ ರಮೇಶ್ ರವರ ಮೇಲೆ ಗಲಾಟೆ ಮಾಡಿ ರಮೇಶ್ ರವರ ಕತ್ತಿಗೆ ಹಾಗೂ ದವಡೆಗೆ ಹೊಡೆದು ಗಾಯಪಡಿಸಿರುತ್ತಾರೆ, ತಾನು ಮುರಳಿ ರವರಿಗೆ ಏಕೆ ನೀವು ಹೊಡೆಯುತ್ತಿದ್ದೀರಾ ಎಂದು ಕೇಳಿ ಗಾಯಗೊಂಡಿದ್ದ ರಮೇಶ್ ರವರನ್ನು ತಾವು ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದಾಗ ಅಗ್ರಹಾರದ ಪಿಲ್ಟರ್ ಬೆಡ್ ರಸ್ತೆಯಲ್ಲಿ ಮುರಳಿ ಬಿನ್ ತಿಪ್ಪಣ್ಣ, ಗೌತಮ್ ಬಿನ್ ಶ್ರೀನಿವಾಸ , ದಿಲೀಪ್ ಬಿನ್ ಶ್ರೀನಿವಾಸ ಹಾಗೂ ಶ್ರೀನಿವಾಸ ಬಿನ್ ತಿಪ್ಪಣ್ಣ  ರವರು ತನ್ನನ್ನು ಅಡ್ಡಗಟ್ಟಿ ಅವಾಚ್ಯ ಶಬ್ದಗಳಿಂದ ಬೈದು ಆ ಪೈಕಿ ಮುರಳಿ ರವರು ತನ್ನನ್ನು ಕುರಿತು ತನ್ನನ್ನು ಕೊಲೆ ಮಾಡುವ  ಉದ್ದೇಶದಿಂದ “ ಈ ನನ್ನ ಮಗನನ್ನು ಸಾಯಿಸಿಬಿಡಿ “ ಇವನದು ಜಾಸ್ತಿಯಾಗಿದೆ ಎಂದು ಆತನ  ಜೊತೆಯಲ್ಲಿದ್ದ ಗೌತಮ್ ಬಿನ್ ಶ್ರೀನಿವಾಸ ರವರು ತನ್ನನ್ನು  ಕೊಲೆ ಮಾಡುವ ಉದ್ದೇಶದಿಂದ ತನ್ನ ಕೈಯಲ್ಲಿದ್ದ ಕಬ್ಬಿಣದ ರಾಡ್ ನಿಂದ ತನ್ನ ತಲೆಯ ಹಿಂಭಾಗಕ್ಕೆ ಹೊಡೆದು ರಕ್ತಗಾಯಪಡಿಸಿರುತ್ತಾರೆ, ನಂತರ ಆತನ ತಮ್ಮನಾದ ದಿಲೀಪ್ ರವರು ದೊಣ್ಣೆಯಿಂದ ತನ್ನ ತಲೆಗೆ ಹೊಡೆಯಲು ಬಂದಾಗ ತಾನು ಪಕ್ಕಕ್ಕೆ  ತಿರುಗುವಷ್ಠರಲ್ಲಿ  ತನ್ನ ಬಲಿಕಿವಿಗೆ ಹೊಡೆದು ತೀವ್ರತರವಾದ ರಕ್ತಗಾಯವಾಗಿದ್ದು, ನಂತರ ಶ್ರೀನಿವಾಸ ರವರು ತನ್ನನ್ನು ಕೈಗಳಿಂದ ಮೈ ಮೇಲೆ ಹೊಡೆದು ಕೆಳಕ್ಕೆ ತಳ್ಳಿರುತ್ತಾರೆ, ಆಗ ಮುರಳಿ ಹಾಗೂ ದಿಲೀಪ್  ರವರು ತನ್ನ ಕೈಯಲ್ಲಿದ್ದ ರಾಡ್ ಹಾಗೂ ದೊಣ್ಣೆಯನ್ನು ತೋರಿಸಿ ಇದೇ ರಾಡ್ ಹಾಗೂ ದೊಣ್ಣೆಯಿಂದ ನಿನ್ನನ್ನು ಸಾಯಿಸಿ ಕೊಲೆ ಮಾಡುತ್ತೇನೆಂದು ಪ್ರಾಣಬೆದರಿಕೆ ಹಾಕಿರುತ್ತಾರೆ. ಅಷ್ಟರಲ್ಲಿ ತನ್ನ ಜೊತೆಯಲ್ಲಿದ್ದ ಅರವಿಂದ್, ವಿಜಯ್ ಕುಮಾರ್, ಜನಾರ್ಧನ್ ಹಾಗೂ ನಾಗರಾಜ್ ರವರು ಮತ್ತು ಅಲ್ಲಿಗೆ ಬಂದ ತನ್ನ ತಮ್ಮ ಜಗದೀಶ್ ರವರು ಜಗಳ ಬಿಡಿಸಿ ಗಾಯಗೊಂಡಿದ್ದ ತನ್ನ ಹಾಗೂ ರಮೇಶ್ ರವರನ್ನು ಉಪಚರಿಸಿ ಯಾವುದೋ ವಾಹನದಲ್ಲಿ ಚಿಕಿತ್ಸೆಗಾಗಿ ಚಿಂತಾಮಣಿ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿರುತ್ತಾರೆ. ತನ್ನನ್ನು ವೈದ್ಯರ ಸಲಹೆ ಮೇರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಹೊಸಕೋಟೆಯ ಎಂ.ವಿ .ಜೆ ಆಸ್ಪತ್ರೆಗೆ ಕರೆದುಕೊಂಡು ಬಂದು ದಾಖಲಸಿರುತ್ತಾರೆ. ಆದ್ದರಿಂದ ತನ್ನನ್ನು ಕೊಲೆ ಮಾಡುವ  ಉದ್ದೇಶದಿಂದ ಅಗ್ರಹಾರದ ಮುರಳಿ ರವರ ಪ್ರಚೋದನೆಯಿಂದ ತನ್ನ ಮೇಲೆ ಗಲಾಟೆ ಮಾಡಿ ಕಬ್ಬಿಣದ ರಾಡ್ ಹಾಗೂ ದೊಣ್ಣೆಯಿಂದ ಹೊಡೆದು ಗಾಯಪಡಿಸಿ ಅವಾಚ್ಯ ಶಬ್ದಗಳಿಂದ ಬೈದು ಪ್ರಾಣಬೆದರಿಕೆ ಹಾಕಿರುವ ಮೇಲ್ಕಂಡರವರ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿದ್ದರ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುತ್ತೆ.

 1. ಚಿಂತಾಮಣಿ ನಗರ ಪೊಲೀಸ್ ಠಾಣೆ ಮೊ.ಸಂ.111/2020 ಕಲಂ: 324,341,504 ರೆ/ವಿ 34 ಐ.ಪಿ.ಸಿ & 3(1)(r),3(1)(s) The SC & ST (Prevention of Atrocities) Amendment Act 2015:-

          ದಿನಾಂಕ: 14/09/2020 ರಂದು ಸಂಜೆ 6:00 ಗಂಟೆಗೆ ಪಿರ್ಯಾದಿದಾರರು ಠಾಣೆಗೆ ಹಾಜರಾಗಿ ನೀಡಿದ ಗಣಕೀಕೃತ ದೂರಿನ ಸಾರಾಂಶವೇನೆಂದರೆ ಇದೇ ಚಿಂತಾಮಣಿ ನಗರದ ಅಗ್ರಹಾರ ವಾಸಿ ಕುಮಾರ್ ಬಿನ್ ಮುನಿನಾರಾಯಣಪ್ಪ ಎಂಬುವವರು ಕ್ರಿಕೆಟ್ ಬುಕ್ಕಿಯಾಗಿದ್ದು, ಸದರಿಯವರೊಂದಿಗೆ ತಮ್ಮ ಇಬ್ಬರ ನಡುವೆ 50,000 ರೂ ಗಳನ್ನು ಬೆಟ್ಟಿಂಗ್ ಕಟ್ಟಿಕೊಂಡಿದ್ದೆವು, ಸದರಿ ಐಪಿಎಲ್ ಕ್ರಿಕೆಟ್ ಮ್ಯಾಚ್ ಟೀಂ ಮೇಲೆ ತಾವು ಮಾಡಿಕೊಂಡಿರುವ ಕರಾರಿನಂತೆ ಟೀಂ ಸೋತುಹೋಗಿದ್ದು, ಆ ಕಾರಣವಾಗಿ ತಾನು ಕುಮಾರ್ ಬಿನ್ ಮುನಿನಾರಾಯಣಪ್ಪ ಎಂಬಾತನಿಗೆ 50,000 ರೂ ಗಳು ಕ್ರಿಕೆಟ್ ಬೆಟ್ಟಿಂಗ್ ಹಣ ಕೊಡಬೇಕೆಂದು ತನ್ನನ್ನು ಸುಮಾರು 5-6 ತಿಂಗಳಿನಿಂದ ಕೋವಿಡ್ 19 ಕೊರೊನಾ ಹಾವಳಿಯಿಂದ ತನಗೆ ಜೀವನ ನಡೆಸುವುದು ದುಸ್ತರವಾಗಿ ತಾನು ಕ್ರಿಕೆಟ್ ಬೆಟ್ಟಿಂಗ್ ಹಣವನ್ನು ನೀಡಲು ಸಾಧ್ಯವಾಗಿರುವುದಿಲ್ಲವೆಂತ ತಿಳಿಸಿದ್ದು, ಸದರಿ ಕುಮಾರ್ ಬಿನ್ ಮುನಿನಾರಾಯಣಪ್ಪ ಎಂಬಾತನ ಪರವಾಗಿ ಇದೇ ಅಗ್ರಹಾರದ ವಾಸಿ ರಮೇಶ್ ಬಿನ್ ಸತ್ಯನಾರಾಯಣಪ್ಪ ಎಂಬಾತನು ದಿ: 13/09/2020 ರಂದು ರಾತ್ರಿ ಸುಮಾರು 9-00 ಗಂಟೆ ಸಮಯದಲ್ಲಿ ತನ್ನ ಮನೆಗೆ ಹೋಗುತ್ತಿರುವಾಗ ಅಗ್ರಹಾರದ ಸೋಮೇಶ್ವರ ದೇವಾಲಯದ ಬಳಿ ಇರುವ ನಗರಸಭೆ ಪಂಪ್ ಹೌಸ್ ಬಳಿ ರಮೇಶ್ ಎಂಬಾತನು ಅಡ್ಡಗಟ್ಟಿ ತನ್ನನ್ನು ಮುಂದೆ ಹೋಗಲು ಬಿಡದೆ ಕುಮಾರ್ ಬಿನ್ ಮುನಿನಾರಾಯಣಪ್ಪ ಮತ್ತು ಆತನ ಸಹೋದರ ಜಗದೀಶ್ ಬಿನ್ ಮುನಿನಾರಾಯಣಪ್ಪ ಎಂಬುವವರಿಗೆ ಕರೆ ಮಾಡಿ ಸ್ಥಳಕ್ಕೆ ಕರೆಯಿಸಿಕೊಂಡು , ಈ ಮೀವರ ಜೊತೆಗೆ ಇನ್ನೂ ಹಲವರು ಇವರ ಜೊತೆಯಲ್ಲಿ ಬಂದು ತನ್ನನ್ನು ಸುತ್ತುವರೆದು ಏಕಾಏಕಿ ಮೇಲ್ಕಂಡ ಕುಮಾರ್ ಎಂಬಾತನು ತನ್ನನ್ನು ರಾಡ್ ನಿಂದ ಹೊಡೆಯುತ್ತಿರುವಾಗ ಅವನಿಂದ ತಪ್ಪಿಸಿಕೊಳ್ಳುವಷ್ಟರಲ್ಲಿ ಅಲ್ಲಿಯೇ ಇದ್ದ ಜಗದೀಶ್ ಎಂಬಾತನು ಕಟ್ಟಿಗೆಯಿಂದ ಎದೆಗೆ ಗುದ್ದಿ ಬೆನ್ನು ಮತ್ತು ಸೊಂಟದ ಭಾಗಕ್ಕೆ ಬಲವಾಗಿ ಹೊಡೆದು ಕುಮಾರ್ ಬಿನ್ ಮುನಿನಾರಾಯಣಪ್ಪ ಹಾಗೂ ಜಗದೀಶ್ ಬಿನ್ ಮುನಿನಾರಾಯಣಪ್ಪ ಎಂಬುವವರು ತನ್ನನ್ನು ಕುರಿತು ಏನೋ ನಾಯಕ ನನ್ನ ಮಗನೇ ನಿಮಗೆ ಯೋಗ್ಯತೆ ಇಲ್ಲದಿದ್ದರೆ ತಮ್ಮ ಹತ್ತಿರ ಬೆಟ್ಟಿಂಗ್ ಯಾಕೆ ಕಟ್ಟಬೇಕು ನಿಮ್ಮ ಕೆಳಜಾತಿಯವರಿಗೆ ಬೆಟ್ಟಿಂಗ್ ಆಡುವಷ್ಟು ಯೋಗ್ಯತೆ ಇದೆಯಾ ಎಂಬುದಾಗಿ ತನ್ನ ಜಾತಿಯ ಬಗ್ಗೆ ಬೈಯುತ್ತ ಅವಹೇಳನ ಮಾಡಿ ತನ್ನ ಮೇಲೆ ಹಲ್ಲೆ ಮಾಡಿರುತ್ತಾರೆ, ಅದೇ ಸಮಯಕ್ಕೆ ತಾನು ಪ್ರಾಣ ಭಯದಿಂದ ಕಿರುಚಿಕೊಂಡಾಗ ಆ ಸಮಯದಲ್ಲಿ ಅಗ್ರಹಾರದ ವಾಸಿಗಳಾದ ಶ್ರೀನಿವಾಸ್ ( ಮಾಸ್ಟರ್) ಬಿನ್ ವೆಂಕಟರಾಯಪ್ಪ, ಕೀರ್ತಿ ಬಿನ್ ನಾರಾಯಣಸ್ವಾಮಿ , ಎಂಬುವವರು ಅಡ್ಡ ಬಂದು ತನ್ನನ್ನು ಮೇಲ್ಕಂಡರವರ ಹಲ್ಲೆಯಿಂದ ಬಿಡಿಸಿ ತುರ್ತಾಗಿ ಸಾರ್ವಜನಿಕ ಆಸ್ಪತ್ರೆಗೆ ಸೇರಿಸಿ ವೈದ್ಯರಲ್ಲಿ ಪರೀಕ್ಷೆ ಮಾಡಿಸಿದಾಗ , ವೈದ್ಯಾಧಿಕಾರಿಗಳು ಮೇಲ್ಕಂಡರವರ ಹೊಡೆತಗಳಿಂದ ತಾವು ಜಿಲ್ಲಾ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯಬೇಕೆಂದು ಸಲಹೆ ನೀಡಿದ್ದು, ಆ ಕಾರಣದಿಂದ ತಡವಾಗಿ ದೂರುನ್ನು ನೀಡುತ್ತಿದ್ದು , ಸದರಿ ಮೇಲ್ಕಂಡರವರು ತನ್ನ ಮೇಲೆ ಜಾತಿನಿಂದನೆ ಮಾಡಿದವರ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಬೇಕೆಂದು ಕೋರಿದ್ದರ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುತ್ತೆ.

 1. ದಿಬ್ಬೂರಹಳ್ಳಿ ಪೊಲೀಸ್ ಠಾಣೆ ಮೊ.ಸಂ.98/2020 ಕಲಂ: 279 ಐ.ಪಿ.ಸಿ:-

          ದಿನಾಂಕ: 15/09/2020 ರಂದು ಬೆಳಿಗ್ಗೆ 10.30 ಗಂಟೆಗೆ ಶ್ರೀ. ವೆಂಕಟರವಣಪ್ಪ  ಬಿನ್ ನಾರಾಯಣಪ್ಪ,  32 ವರ್ಷ, ಆದಿ ಕರ್ನಾಟಕ ಜನಾಂಗ, ಗಾರೆ ಕೆಲಸ, ವಾಸ ಮಲ್ಲಿಶೆಟ್ಟಿಹಳ್ಳಿ ಗ್ರಾಮ, ಶಿಡ್ಲಘಟ್ಟ ತಾಲ್ಲೂಕುರವರು ಠಾನೆಗೆ ಹಾಜರಾಗಿ ನಿಡಿದ ದುರಿನ ಸಾರಾಂಶವೇನೆಂದರೆ, ತಾನು ಮೇಲ್ಕಂಡ ವಿಳಾಸದಾರನಾಗಿದ್ದು ಗಾರೆ ಕೆಲಸದಿಂದ ಜೀವನ ಮಾಡಿಕೊಂಡಿರುತ್ತೇನೆ. ದಿನಾಂಕ30/08/2020 ರಂದು ಬೆಳಿಗ್ಗೆತಾನು ಈ ತಿಮ್ಮಸಂದ್ರ ಗ್ರಾಮಕ್ಕೆ ಕೂಲಿ ಕೆಲಸಕ್ಕೆ ಹೋಗಿದ್ದು ಸಂಜೆ 7.00 ಗಂಟೆ ಸಮಯಕ್ಕೆ ಕೂಲಿ ಕೆಲಸ ಮುಗಿಸಿಕೊಂಡು ಈ ತಿಮ್ಮಸಂದ್ರ ಗ್ರಾಮದ ಬಸ್ ನಿಲ್ದಾಣದಲ್ಲಿ ನಮ್ಮ ಗ್ರಾಮಕ್ಕೆ ಹೋಗಲು ಯಾವುದಾದರೂ ವಾಹನಕ್ಕೆ ಕಾಯುತ್ತಿದ್ದಾಗ ತಮ್ಮ ಗ್ರಾಮದ ವಾಸಿಯಾದ ಶ್ರೀನಿವಾಸ ಬಿನ್ ನಾರೆಪ್ಪ, 30 ವರ್ಷ, ಬೋವಿ ಜನಾಂಗರವರು ಕಾರನ್ನು ಚಾಲನೆ ಮಾಡಿಕೊಂಡು ಬಂದಿದ್ದು ತಾನು ಕಾರನ್ನು ನಿಲ್ಲಿಸಿ ಊರಿಗೆ ಬರುತ್ತೇನೆಂತ ಹೇಳಿ ಶ್ರೀನಿವಾಸರವರ ಜೊತೆ ಕಾರಿನಲ್ಲಿ ಹೋಗಿರುತ್ತೇನೆ. ತಮ್ಮ ಗ್ರಾಮಕ್ಕೆ ಹೋಗಲು ನಾನು ಮತ್ತು ಶ್ರೀನಿವಾಸ ಆತನ ಕಾರಿನಲ್ಲಿ ಸಂಜೆ ಸುಮಾರು 7.30 ಗಂಟೆ ಸಮಯಕ್ಕೆ ಕಾಚಾಳಮ್ಮ ತೋಪ್ ಬಿಟ್ಟು ನಮ್ಮ ಗ್ರಾಮದ ರಸ್ತೆಯಲ್ಲಿರುವ  ಈದ್ಗಾ ಮೈದಾನದ ಬಳಿ ಇರುವ ಮೋರಿಯ ಬಳಿ ಹೋಗುತ್ತಿದ್ದಾಗ ಶ್ರೀನಿವಾಸ ಆತನು ಚಾಲನೆ ಮಾಡುತ್ತಿದ್ದ ಕಾರನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿದ್ದು ಕಾರು ಆತನ ನಿಯಂತ್ರಣ ತಪ್ಪಿದ್ದು ಕಾರನ್ನು ರಸ್ತೆಯ ಎಡಭಾಗದಲ್ಲಿದ್ದ ವಿದ್ಯುತ್ ಕಂಭಕ್ಕೆ ಡಿಕ್ಕಿ ಹೊಡೆಸಿರುತ್ತಾನೆ. ಇದರಿಂದ ಕಾರಿನ ಮುಂಭಾಗ ಜಖಂಗೊಂಡಿರುತ್ತೆ. ಕಾರಿನಲ್ಲಿದ್ದ ನನಗೂ ಹಾಗು ಚಾಲನೆ ಮಾಡುತ್ತಿದ್ದ ಶ್ರೀನಿವಾಸರವರಿಗೆ ಯಾವುದೇ ಗಾಯಗಳಾಗಿರುವುದಿಲ್ಲ. ನಂತರ ನಮ್ಮ ಗ್ರಾಮದ ವಾಸಿಗಳಾದ ರಮೇಶ ಬಿನ್ ವೆಂಕಟರವಣಪ್ಪ ಹಾಗು ಮಂಜುನಾಥ ಬಿನ್ ವೆಂಕಟರಾಯಪ್ಪರವರು ಬಂದಿದ್ದು ನಮಗೆ ಯಾವುದೇ ಗಾಯಗಳಾಗದೇ ಇದ್ದರಿಂದ ಅವರುಗಳ ಸಹಾಯದಿಂದ ಕಾರನ್ನು ಶ್ರೀನಿವಾಸ ರವರ ಮನೆಯ ಬಳಿ ತೆಗೆದುಕೊಂಡು ಹೋಗಿ ಬಿಟ್ಟಿರುತ್ತೇವೆ. ಕಾರಿನ ನೊಂದಣಿ ಸಂಖ್ಯೆ ನೋಡಲಾಗಿ ಕೆಎ-50-ಎ-5330 ನಂಬರಿನ ಇಟಿಯಾಸ್ ಕಾರಾಗಿರುತ್ತೆ.  ನಂತರ ಶ್ರೀನಿವಾಸ ಕಾರಿನ ಮಾಲೀಕರಿಗೆ ತಿಳಿಸಿ ದೂರನ್ನು ನೀಡಬೇಕೆಂತ ತಿಳಿಸಿದ್ದರಿಂದ ಆ ದಿನ ನಾನು ದೂರನ್ನು ನೀಡದೇ ಇರುತ್ತೇನೆ. ಆದ್ದರಿಂದ ಕಾರನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿ ಅಪಘಾತ ಪಡಿಸಿದ ಶ್ರೀನಿವಾಸರವರ ಮೇಲೆ ಕಾನೂನು  ರೀತ್ಯಾ ಕ್ರಮ ಜರುಗಿಸಲು ಕೋರಿರುವುದಾಗಿರುತ್ತೆ.

 1. ದಿಬ್ಬೂರಹಳ್ಳಿ ಪೊಲೀಸ್ ಠಾಣೆ ಮೊ.ಸಂ.99/2020 ಕಲಂ: 143,147,323,324,427,504,506 ರೆ/ವಿ 149 ಐ.ಪಿ.ಸಿ:-

          ದಿನಾಂಕ 15/09/2020 ರಂದು ಪಿರ್ಯಾದಿ ವಿ.ಆರ್ ಶಿವಶಂಕರ್ ಬಿನ್ ಲೇಟ್ ವಿ ನಾಗರಾಜ ರವರು ಶಿಡ್ಲಘಟ್ಟ ಸರ್ಕಾರಿ ಆಸ್ವತ್ರೆಯಲ್ಲಿ ನೀಡಿದ ಹೇಳಿಕೆಯ ಸಾರಾಂಶವೇನಂದರೆ, ತಮ್ಮ ಬಾಬತ್ತು ಜಮೀನು ನೇರಳೆಮರದಹಳ್ಳಿ ಗ್ರಾಮದ ಸರಹದ್ದಿನಲ್ಲಿದ್ದು,ಮ ಸದರಿ ಜಮೀನಿನ ಪಕ್ಕದಲ್ಲಿ ಮುಳ್ಳಿನ ಗಿಡಗಳು ಮತ್ತು ಬೇಳಿ ಗಿಡಗಳು ಬೆಳೆದುಕೊಂಡಿದ್ದು, ಅವುಗಳನ್ನು ಕೀಳಿಸಲು ದಿನಾಂಕ 14/09/2020 ರಂದು ಬೆಳಗ್ಗೆ ನೇರಳೆಮರದಹಳ್ಳಿ ಗ್ರಾಂದ ಚಂದ್ರಶೇಖರ ರವರ ಜೆ.ಸಿ.ಬಿ ಕರೆದುಕೊಂಡು ಹೋಗಿ ಗಿಡಗಳನ್ನು ಕಿತ್ತುಹಾಕಿ, ಸಂಜೆ ಮನೆಗೆ ವಾಪಸ್ಸು ಬರಲೆಂದು ತಮ್ಮ ಜಮೀನನಿನ ಪಕ್ಕದಲ್ಲಿರು ಮುನಿರಾಜು ಬಿನ್ ಲೇಟ್ ನಾರಾಯಣಸ್ವಾಮಿರವರ ಜಮೀನಿನಲ್ಲಿರುವ ದಾರಿಯಲ್ಲಿ ಬರುತ್ತಿದ್ದಾಗ, ಮುನಿರಾಜು, ರತ್ನಮ್ಮ ಮತ್ತು ಮುನಿರಾಜುರವರ ತಾಯಿ ಲಕ್ಷ್ಮಮ್ಮರವರು ಬಂದು ತನ್ನನ್ನು ಮತ್ತು ಜೆ,ಸಿ,ಬಿ ಚಾಲಕನನ್ನು ಕೆಟ್ಟದಾಗಿ ಬೈದಿದ್ದು, ಆಗ ತಾನು ಮುನಿರಾಜುರವರನ್ನು ಏನಾದರೂ ಇದ್ದರೆ ತನ್ನನ್ನು ಮಾತನಾಡಿ, ಜೆ,ಸಿ,ಬಿ ಚಾಲಕ ಹರೀಶನನ್ನು ಏಕೆ ಮಾತನಾಡುವುದು ಎಂದು ಹೇಳಿದ್ದಕ್ಕೆ, ಲೋಫರ್ ನನ್ನ ಮಕ್ಕಳಾ ನಮ್ಮ ಜಮೀನಿನಲ್ಲಿರುವ ದಾರಿಯಲ್ಲಿ ಬಂದಿದ್ದಲ್ಲದೇ ನಮಗೆ ಬುದ್ದಿ ಹೇಳಲು ಬರುತ್ತಿದ್ದೀಯಾ ಎಂದು, ಅಲ್ಲಿ ಬಿದ್ದಿದ್ದ ಒಂದು ಕಲ್ಲನ್ನು ಎತ್ತಿಕೊಂಡು ಜೆ.ಸಿ.ಬಿ ಯ ಗ್ಲಾಸ್ ಗೆ ಹೊಡೆದಿದ್ದರಿಂದ ಸದರಿ ಗ್ಲಾಸ್ ಹೊಡೆದು ಹೋಗಿ ನಷ್ಟವುಂಟಾಗಿದ್ದು, ನಂತರ ಮುನಿರಾಜು ಮತ್ತು ಮುನಿರಾಜು ಅಕ್ಕಳಾದ ರತ್ನಮ್ಮ, ಅವರ ತಾಯಿ ಲಕ್ಷ್ಮಮ್ಮರವರು ತಮಗಿಂತ ಮುಂಚಿತವಾಗಿ ತಮ್ಮ ಗ್ರಾಮಕ್ಕೆ ಹೋಗಿದ್ದು, ನಂತರ ತಾವು ತಮ್ಮ ಗ್ರಾಮಕ್ಕೆ ಹೋಗಲು ನೇರಳೆಮರದಹಳ್ಳಿ ಗ್ರಾಮದ ಚಂದ್ರಶೇಖರ ರವರ ಮನೆಯ ಮುಂದೆ ಹೋಗುತ್ತಿದ್ದಾಗ ಸಂಜೆ ಸುಮಾರು 5.45 ಗಂಟೆಯ ಸಮಯದಲ್ಲಿ ಜೆ.ಸಿ.ಬಿ ಯನ್ನು ನಿಲ್ಲಿಸಿ ಮಾತನಾಡುತ್ತಿದ್ದಾಗ ಚಂದ್ರಶೇಖರ ರವರ ಮನೆಯ ಪಕ್ಕದಲ್ಲಿದ್ದ ಮುನಿರಾಜು , ರತ್ನಮ್ಮ, ಮಂಜುನಾಥ ಬಿನ್ ಲೇಟ್ ನಾರಾಯಣಸ್ವಾಮಿ, ಶ್ರೀನಿವಾಸ ಬಿನ್ ಮುನಿಶಾಮಿ, ಶಿವಪ್ಪ ಬಿನ್ ಮುನಿಶಾಮಿರವರುಗಳು ಬಂದು  ನನ್ನನ್ನು ಕೈಗಳಿಂದ ಮೈಮೇಲೆ ಹೊಡೆದು ನೋವುಂಟು ಮಾಡಿ ಆ ಪೈಕಿ ಶ್ರೀನಿವಾಸ ಅಲ್ಲೆ ಬಿದ್ದಿದ್ದ ಕಲ್ಲನ್ನು ಎತ್ತಿಕೊಂಡು ತನ್ನ ತಲೆಯ ಮದ್ಯ ಭಾಗಕ್ಕೆ ಹೊಡೆದು ರಕ್ತಗಾಯ ಪಡಿಸಿದ್ದು, ಮುನಿರಾಜು ತನ್ನನ್ನು ಕೆಳಗೆ ಬೀಳಿಸಿ ಕಾಲುಗಳಿಂದ ಒದ್ದು ನೋವುಂಟು ಮಾಡಿದ್ದು, ಗಲಾಟೆ ವಿಚಾರ ತಿಳಿದು ಸ್ಥಳಕ್ಕೆ ಬಂದ ತನ್ನ ಅಣ್ಣ ವಿ.ಆರ್ ನಾಗರಾಜ್ ರವರನ್ನು ಶಿವಪ್ಪ ಮತ್ತು ಮಂಜುನಾಥ ರವರುಗಳು  ಕೈಗಳಿಂದ ಹೊಡೆದು ಕೆಳಗೆ ಬೀಳಿಸಿದ್ದು, ಆಗ ಮುನಿರಾಜು ಕಲ್ಲಿನಿಂದ ತನ್ನ ಅಣ್ಣನ ಬಲಗಣ್ಣಿನ ಉಬ್ಬಿನ ಮೇಲೆ ಹೊಡೆದು ರಕ್ತಗಾಯ ಪಡಿಸಿದ್ದು, ಮೇಲ್ಕಂಡವರು ತಮ್ಮನ್ನು ಕುರಿತು ಈ ನನ್ನ ಮಕ್ಕಳು ಸಾದಲಿಯಿಂದ ನಮ್ಮ ಗ್ರಾಮಕ್ಕೆ ಬಂದು ನಮ್ಮ ಮೇಲೆ ದೌರ್ಜನ್ಯ ಮಾಡುತ್ತಾರೆ ಇವರನ್ನು ಸಾಯಿಸಿದ್ದರೆ ನಮ್ಮ ಊರಿನ ಕಡೆ ಬರುವುದಿಲ್ಲವೆಂದು ಪ್ರಾಣ ಬೆದರಿಕೆ ಹಾಕಿದ್ದು ಸ್ಥಳದಲ್ಲಿದ್ದ ಚಂದ್ರ ಶೇಖರ ಬಿನ್ ಬಾಬುರೆಡ್ಡಿ ಮತ್ತು ಮುನಿರೆಡ್ಡಿ ಬಿನ್ ಮುನಿಶಾಮಪ್ಪ ರವರುಗಳು ಬಂದು ಗಲಾಟೆಯನ್ನು ಬಿಡಿಸಿ ಬುದ್ದಿ ಹೇಳಿ ಕಳುಹಿಸಿರುತ್ತಾರೆ. ಗಾಯಗೊಂಡಿದ್ದ ನಮ್ಮಗಳನ್ನು ತನ್ನ ಅಣ್ಣನ ಮಗ ಮಂಜುನಾಥ 108 ಆಂಬ್ಯುಲೇನ್ಸ್ ನಲ್ಲಿ ಶಿಡ್ಲಘಟ್ಟ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಿದ್ದು ಮೇಲ್ಕಂಡವರ ಮೇಲೆ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲು ಕೋರಿರುವುದಾಗಿರುತ್ತೆ.

 1. ದಿಬ್ಬೂರಹಳ್ಳಿ ಪೊಲೀಸ್ ಠಾಣೆ ಮೊ.ಸಂ.100/2020 ಕಲಂ: 323,324,504,506 ರೆ/ವಿ 34 ಐ.ಪಿ.ಸಿ:-

          ದಿನಾಂಕ 15/09/2020 ರಂದು ಬೆಳಗ್ಗೆ ಬೆಳಗ್ಗೆ 10.15 ಗಂಟೆಯಲ್ಲಿ  ಶಿಡ್ಲಘಟ್ಟ ಸರ್ಕಾರಿ ಆಸ್ವತ್ರೆಯಲ್ಲಿ ಗಾಯಾಳು ಶ್ರೀಮತಿ ರತ್ನಮ್ಮ ಕೋಂ ರಾಮುರವರು ನೀಡಿದ ಹೇಳಿಕೆಯ ಸಾರಾಂಶವೇನೆಂದರೆ, ದಿನಾಂಕ 14/09/2020 ರಂದು ಸಂಜೆ ಸುಮಾರು 5.00 ಗಂಟೆಯಲ್ಲಿ ತಮ್ಮ ಜಮೀನಿನಲ್ಲಿ ತಾನು ಮತ್ತು ತನ್ನ ಅಣ್ಣ ಮುನಿರಾಜು ಹಾಗೂ ತನ್ನ ತಾಯಿ ಲಕ್ಷ್ಮಿದೇವಮ್ಮರವರು ಕೆಲಸ ಮಾಡುತ್ತಿದ್ದಾಗ, ತಮ್ಮ ಜಮೀನಿನ ಪಕ್ಕದ ಜಮೀನಿನಲ್ಲಿರುವ ಸಾದಲಿ ಗ್ರಾಮದ ನರಸಿಂಹಪ್ಪ, ನಾಗರಾಜ, ಶಿವಶಂಕರ ರವರುಗಳು ಅವರ ಜಮೀನಿನಲ್ಲಿ ಕೆಲಸ ಮಾಡಿಕೊಳ್ಳಲು ನಮ್ಮ ಗ್ರಾಮದ ಜೆ.ಸಿ.ಬಿ ಯನ್ನು ಕರೆಸಿಕೊಂಡು, ನಂತರ ಕೆಲಸ ಮುಗಿದ ನಂತರ ವಾಪಸ್ಸು ಊರಿಗೆ ಹೋಗಲು ತಾವು ಬಿತ್ತಿರುವ ಜೋಳದ ತೋಟದಲ್ಲಿ ಬಂದಿದ್ದು, ಆಗ ತಾವು ಹೋಗಿ ಕೇಳಲಾಗಿ ನರಸಿಂಹಪ್ಪ ಬಿನ್ ರಾಜಪ್ಪ, ನಾಗರಾಜ ಬಿನ್ ರಾಜಪ್ಪ, ಶಿವಶಂಕರ ಬಿನ್ ರಾಜಪ್ಪರವರುಗಳು ತನ್ನನ್ನು ಅವಾಚ್ಯಾ ಶಬ್ದಗಳಿಂದ ಬೈದು, ಇದು ರಸ್ತೆ ನಿಮ್ಮ ಜಮೀನಲ್ಲ ಎಂದಿದ್ದು, ಆಗ ತಾವು ಇದು ತಮ್ಮ ಜಮೀನು ಎಂದಿದ್ದಕ್ಕೆ ಮೇಲ್ಕಂಡ ಮೂರು ಜನರು ತನ್ನ ಅಣ್ಣ ಮುನಿರಾಜುರವರನ್ನು ಕೈಗಳಿಂದ ಹೊಡೆದಿದ್ದು, ಆಗ ತಾನು ಮತ್ತು ತನ್ನ ತಾಯಿಯವರು ಗಲಾಟೆ ಬಿಡಿಸಲು ಹೋದಾಗ ಶಿವಶಂಕರ ರವರು ಅಲ್ಲೇ ಬಿದ್ದಿದ್ದ ಕಲ್ಲನ್ನು ಎತ್ತಿಕೊಂಡು ತನ್ನ ಬಲ ಬುಜಕ್ಕೆ ಹೊಡೆದು ನೋವುಂಟು ಮಾಡಿದ್ದು, ಆಗ ಅಲ್ಲೇ ಇದ್ದ ವೆಂಕಟಶಿವ ಬಿನ್ ಮುನಿಶಾಮಿ ರವರು ಬಂದು ಈರ್ವರಿಗೂ ಬುದ್ದಿ ಹೇಳಿ ಕಳುಹಿಸಿದ್ದು, ಮೇಲ್ಕಂಡವರು ಹೋಗುವಾಗ ತಮ್ಮನ್ನು ಸಾಯಿಸುವುದಾಗಿ ಪ್ರಾಣ ಬೆದರಿಕೆ ಹಾಕಿದ್ದು. ತನ್ನ ಬುಜಕ್ಕೆ ನೋವಾಗುತ್ತಿದ್ದರಿಂದ ತನ್ನ ಅಣ್ಣ ಸುರೇಶ್ ರವರು ಚಿಕಿತ್ಸೆಗಾಗಿ ಶಿಡ್ಲಘಟ್ಟ ಸರ್ಕಾರಿ ಆಸ್ವತ್ರೆಗೆ ದಾಖಲಿಸಿದ್ದು, ಮೇಲ್ಕಂಡವರ ಮೇಲೆ ಸೂಕ್ತ ಕಾನೂನಿನ ರೀತ್ಯಾ ಕ್ರಮ ಕೈಗೊಳ್ಳಲು ಕೋರಿರುವುದಾಗಿರುತ್ತೆ.

 1. ದಿಬ್ಬೂರಹಳ್ಳಿ ಪೊಲೀಸ್ ಠಾಣೆ ಮೊ.ಸಂ.101/2020 ಕಲಂ: 279,337 ಐ.ಪಿ.ಸಿ:-

          ದಿನಾಂಕ: 15/09/2020 ರಂದು  ಶ್ರೀ. ಲಕ್ಷ್ಮಣ್ ಬಿನ್ ರಾಮಪ್ಪ, 50 ವರ್ಷ, ನೇಯ್ಗೆ ಜನಾಂಗ ರವರು ಶಿಡ್ಲಘಟ್ಟ ಸರ್ಕಾರಿ ಆಸ್ಪತ್ರೆಯಲ್ಲಿ ನೀಡಿರುವ ಹೇಳಿಕೆಯ ಸಾರಾಂಶವೇವೆಂದರೆ, ತಾನು ಬಳುವನಹಳ್ಳಿ ಗ್ರಾಮದ ವಾಸಿ ರಮೇಶರವರ ಮನೆಯಲ್ಲಿ ಮಗ್ಗದ ಕೆಲಸ ಮಾಡಿಕೊಂಡಿದ್ದು ಕೆಲಸಕ್ಕೆ ಪ್ರತೀ ದಿನ ನಮ್ಮ ಗ್ರಾಮದಿಂದಲೇ ದ್ವಿಚಕ್ರವಾಹನದಲ್ಲಿ ಹೋಗಿ ಬರುತ್ತಿರುತ್ತೇನೆ. ದಿನಾಂಕ: 14/09/2020 ರಂದು ಬೆಳಿಗ್ಗೆ 11.00 ಗಂಟೆಯ ಸಮಯದಲ್ಲಿ ತಾನು ಕೆಲಸಕ್ಕೆ ಹೋಗಲು ತನ್ನ ಬಾಬತ್ತು KA-53-EV-0520 ಸುಜುಕಿ ಆಕ್ಸಿಸ್ ದ್ವಿಚಕ್ರ ವಾಹನದಲ್ಲಿ ಬಶೆಟ್ಟಿಹಳ್ಳಿ ಗೇಟ್ ಬಿಟ್ಟು  ಶಿಡ್ಲಘಟ್ಟದ ಕಡೆ ಹೋಗುತ್ತಿದ್ದಾಗ ಶಿಡ್ಲಘಟ್ಟದ ಕಡೆಯಿಂದ ಬಂದ ಕಾರಿನ ಚಾಲಕ ಕಾರನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ತಾನು ಚಾಲನೆ ಮಾಡುತ್ತಿದ್ದ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆಸಿದ್ದು ತಾನು ದ್ವಿಚಕ್ರ ವಾಹನದಿಂದ ಬಿದ್ದು ಎಡ ಮುಂಗೈ ಮೇಲೆ, ಬಲ ಮೊಣಕಾಲಿನ ಕೆಳಭಾಗ ಮುಖದ ಮೇಲೆ ತರಚು ಗಾಯಗಳಾಗಿದ್ದು ಸೊಂಟಕ್ಕೆ ನೋವಾಗಿರುತ್ತದೆ. ತನ್ನ ದ್ವಿಚಕ್ರವಾಹನವೂ ಸಂಪೂರ್ಣ್  ಜಖಂ ಆಗಿರುತ್ತದೆ. ಕಾರನ್ನು ನೋಡಲಾಗಿ KA-51-M-6201 ಮಾರುತಿ ಆಲ್ಟೋ ಕಾರಾಗಿದ್ದು ಚಾಲಕನ ಹೆಸರು ವಿಳಾಸ ಗೊತ್ತಿರುವುದಿಲ್ಲ. ನಂತರ ತಮ್ಮ ಗ್ರಾಮದ ಈಶ್ವರಪ್ಪ ಬಿನ್ ಆದಿಮೂರ್ತಿ ರವರು ಬಂದು ತನ್ನನ್ನು ಶಿಡ್ಲಘಟ್ಟ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ಚಿಕಿತ್ಸೆಗಾಗಿ ದಾಖಲುಪಡಿಸಿದ್ದು ಕಾರಿನ ಚಾಲಕನ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿರುವುದಾಗಿರುತ್ತೆ.

 1. ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.242/2020 ಕಲಂ: 279,337 ಐ.ಪಿ.ಸಿ & 187 ಐ.ಎಂ.ವಿ ಆಕ್ಟ್:-

          ದಿನಾಂಕ:14/09/2020 ರಂದು ಪಿರ್ಯಾದಿ ಶ್ರೀಮತಿ ಗಂಗಮ್ಮ ಕೋಂ ರಂಗಸ್ವಾಮಿ, 50 ವರ್ಷ, ಕಲ್ಲಿನಾಯಕನಹಳ್ಳಿ, ಗೌರಿಬಿದನೂರು ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ,  ದಿನಾಂಕ:12/09/2020 ರಂದು ಸಂಜೆ 5-00 ಗಂಟೆ ಸಮಯದಲ್ಲಿ ಪಿರ್ಯಾದಿ ಮತ್ತು  ಗಂಡ ರಂಗಸ್ವಾಮಿ ರವರು ಮಗಳು ಆದಿಲಕ್ಷ್ಮಮ್ಮ ರವರನ್ನು ನೋಡಿಕೊಂಡ ಆಂದ್ರಪ್ರದೇಶದ ಹಿಂದೂಪುರ ತಾಲ್ಲೂಕು, ಕಾರಡಿಪಲ್ಲಿ ಗ್ರಾಮಕ್ಕೆ ಹೋಗಿದ್ದು ನಂತರ ದಿನಾಂಕ:13/09/2019 ರಂದು ಬೆಳಿಗ್ಗೆ ಸುಮಾರು 5-30 ಗಂಟೆ ಸಮಯದಲ್ಲಿ  ಗಂಡ ರಂಗಸ್ವಾಮಿ ಕಾರಡಿಪಲ್ಲಿಯಿಂದ ಗೌರಿಬಿದನೂರು ಕಡೆ ಬೇಲ್ದಾರ್ ಕೆಲಸಕ್ಕೆ ಬಂದಿದ್ದರು. ಅದೇ ದಿನ ಬೆಳಿಗ್ಗೆ ಸುಮಾರು 9-00 ಗಂಟೆ ಸಮಯದಲ್ಲಿ ಗೌರಿಬಿದನೂರು ಸರ್ಕಾರಿ ಆಸ್ಪತ್ರೆಯಲ್ಲಿ ಕೆಲಸ ಮಾಡುವ ಪಿರ್ಯಾದಿದಾರರಿಗೆ  ಪರಿಚಯವಿರುವ ಗೊಟ್ಲಾಪುರ ಗ್ರಾಮದ ಮೂರ್ತಿ ರವರು  ಮಗಳು ಆದಿಲಕ್ಷ್ಮಮ್ಮಗೆ ಪೋನ್ ಮಾಡಿ ನಿಮ್ಮ ತಂದೆಗೆ ಅಪಘಾತದಲ್ಲಿ ಗಾಯಗೊಂಡು ಗೌರೀಬಿದನೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿರುವುದಾಗಿ ತಿಳಿಸಿದ್ದರಿಂದ ಪಿರ್ಯಾದಿದಾರರು ಗೌರಿಬಿದನೂರು ಸರ್ಕಾರಿ ಆಸ್ಪತ್ರೆಗೆ ಬಂದು ನೋಡಿದಾಗ ಪಿರ್ಯಾದಿದಾರರ ಗಂಡ ರಂಗಸ್ವಾಮಿಗೆ ಅಫಘಾತವಾಗಿದ್ದು ಬಲ ಕಾಲಿಗೆ ಮತ್ತು ತಲೆಗೆ ರಕ್ತಗಾಯವಾಗಿದ್ದು, ದೇಹದ ಇತರೇ ಕಡೆಗಳಲ್ಲೂ ಸಹ ಗಾಯಗಲಾಗಿರುತ್ತೆ. ನಂತರ ವಿಚಾರ ತಿಳಿಯಲಾಗಿ ರಂಗಸ್ವಾಮಿ ಬೆಳಿಗ್ಗೆ ಸುಮಾರು 6-15 ಗಂಟೆ ಸಮಯದಲ್ಲಿ ಗೌರಿಬಿದನೂರು ತಾಲ್ಲೂಕು ದೊಡ್ಡಕುರುಗೋಡು ಗ್ರಾಮದ ಕೆರೆಯ ಕೆಳಗಡೆ ಎಸ್.ಹೆಚ್-9 (ರಾಜ್ಯ ಹೆದ್ದಾರಿ-9) ರಸ್ತೆಯಲ್ಲಿ  ಕುಡುಮಲಕುಂಟೆ ಕಡೆಯಿಂದ ಗೌರಿಬಿದನೂರು ಕಡೆ ರಸ್ತೆಯ ಎಡ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಯಾವುದೋ ವಾಹನ ಅಪಘಾತ ಪಡಿಸಿ, ವಾಹನವನ್ನು ಸ್ಥಳದಲ್ಲಿ ನಿಲ್ಲಿಸದೇ ಹೊರಟು ಹೋಗಿದ್ದು,  ರಸ್ತೆಯಲ್ಲಿ ಬಿದ್ದು ಹೋಗಿದ್ದ ಪಿರ್ಯಾದಿದಾರರ  ಗಂಡ ರಂಗಸ್ವಾಮಿಯನ್ನು 108 ಆಂಬುಲೆನ್ಸ್ ನಲ್ಲಿ ಗೌರಿಬಿದನೂರು ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ಚಿಕಿತ್ಸೆಗೆ ದಾಖಲು ಮಾಡಿರುವ ವಿಚಾರ ತಿಳಿದಿದ್ದು ಪಿರ್ಯಾದಿ   ಗಂಡ ರಂಗಸ್ವಾಮಿ ರವರಿಗೆ ಅಪಘಾತವನ್ನುಂಟು ಮಾಡಿ ಸ್ಥಳದಲ್ಲಿ ನಿಲ್ಲಿಸದೇ ಹೊರಟು ಹೋಗಿರುವ ಯಾವುದೋ ವಾಹನದ  ಚಾಲಕನ ವಿರುದ್ದ ಕಾನೂನು ರೀತ್ಯ ಕ್ರಮ ಜರುಗಿಸಲು ಕೋರು ನೀಡಿರುವ ದೂರಾಗಿರುತ್ತದೆ.

 1. ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.243/2020 ಕಲಂ: 32,34 ಕೆ.ಇ ಆಕ್ಟ್:-

          ದಿನಾಂಕ;14/09/2020 ರಂದು ಸಂಜೆ 18-00 ಗಂಟೆಗೆ ಪಿರ್ಯಾದಿದಾರರಾದ ಪಿ.ಎಸ್.ಐ ಮೋಹನ್ ಎನ್ ಸಾಹೇಬರು ಮಾಲು ಪಂಚನಾಮೆ ಮತ್ತು ಆರೋಪಿಯನ್ನು ಹಾಜರುಪಡಿಸಿ ನೀಡಿದದೂರಿನ ಸಾರಾಂಶವೆನೆಂದರೆ, ಈ ದಿನ  ದಿನಾಂಕ: 14/09/2020 ರಂದು  15-30  ಗಂಟೆಯಲ್ಲಿ ನಾನು ಮತ್ತು    .ಪಿ.ಸಿ-518 ಆನಂದ, ಪಿ.ಸಿ-512,  ರಾಜಶೇಖರ, ಮತ್ತು ಪಿ.ಸಿ-208 ತಿಪ್ಪೇಶ ರವರೊಂದಿಗೆ ನಗರಗೆರೆ ಸಹಾಯವಾಣಿ ವ್ಯಾಪ್ತಿಯ ವಾಟದಹೊಸಹಳ್ಳಿ ಕಡೆ ಗಸ್ತಿನಲ್ಲಿದ್ದಾಗ ಗೌರಿಬಿದನೂರು ತಾಲ್ಲೂಕು ನಕ್ಕಲಹಳ್ಳಿ  ಗ್ರಾಮದಲ್ಲಿ ಯಾರೋ ಒಬ್ಬ ಆಸಾಮಿ ತನ್ನ ಮನೆಯಲ್ಲಿ ಅಕ್ರಮವಾಗಿ ಯಾವುದೇ ಪರವಾನಿಗಿ ಇಲ್ಲದೇ ಮದ್ಯವನ್ನು ಮಾರಾಟ ಮಾಡಲು ದಾಸ್ತಾನು ಮಾಡಿರುತ್ತಾರೆಂದು ಬಂದ ಮಾಹಿತಿ ಮೇರೆಗೆ  ನಾನು ಮತ್ತು  ಸಿಬ್ಬಂದಿಯವರಾದ .ಪಿ.ಸಿ-518 ಆನಂದ, ಪಿ.ಸಿ-512,  ರಾಜಶೇಖರ, ಮತ್ತು ಪಿ.ಸಿ-208 ತಿಪ್ಪೇಶ, ಹಾಗೂ ಪಂಚರೊಂದಿಗೆ ಸರ್ಕಾರಿ ಜೀಪ್ ಸಂಖ್ಯೆ: ಕೆ.ಎ-40, ಜಿ-281 ರಲ್ಲಿ  ನಕ್ಕಲಹಳ್ಳಿ ಗ್ರಾಮಕ್ಕೆ 16-00 ಗಂಟೆಗೆ ಬಂದು ನಕ್ಕಲಹಳ್ಳಿಯಿಂದ ಮುದ್ದಲೋಡು ಗ್ರಾಮಕ್ಕೆ ಹೋಗುವ ರಸ್ತೆಯ ನೀರಿನ ಟ್ಯಾಂಕ್ ಬಳಿ ವಾಹನವನ್ನು ನಿಲ್ಲಿಸಿ ಮರೆಯಲ್ಲಿ ನಿಂತು ನೋಡಲಾಗಿ ಒಂದು ಮನೆಯ ಬಳಿ ಸಾರ್ವಜನಿಕರು ಮದ್ಯವನ್ನು ಖರೀದಿ ಮಾಡುತ್ತಿರುವುದನ್ನು ಖಚಿತ ಪಡಿಸಿಕೊಂಡು ಮನೆಯ ಬಳಿ ಹೋಗಿ ಪಂಚರೊಂದಿಗೆ ದಾಳಿ ಮಾಡಿದಾಗ ಮದ್ಯವನ್ನು ಖರೀದಿ ಮಾಡಲು ಬಂದಿದ್ದವರು ಅಲ್ಲಿಂದ ಓಡಿ ಹೋಗಿದ್ದು ಮನೆಯಲ್ಲಿದ್ದ ಆಸಾಮಿಯನ್ನು ಹಿಡಿದುಕೊಂಡು ಹೆಸರು ವಿಳಾಸ ಕೇಳಲಾಗಿ ಮುರಳಿ ಬಿನ್ ಅಶ್ವತ್ಥನಾರಾಯಣ, 40 ವರ್ಷ, ಈಡಿಗರು,  ಜಿರಾಯ್ತಿ, ವಾಸ ನಕ್ಕಲಹಳ್ಳಿ ಗ್ರಾಮ, ಗೌರಿಬಿದನೂರು ತಾಲ್ಲೂಕು ಎಂದು ಹೇಳಿದನು. ಮನೆಯ ರೂಮಿನಲ್ಲಿದ್ದ  ಪ್ಲಾಸ್ಟಿಕ್ ಚೀಲವನ್ನು ಪರಿಶೀಲಿಸಲಾಗಿ,  ಅದರಲ್ಲಿ  1) 90 ಎಂ.ಎಲ್ ಸಾಮರ್ಥ್ಯದ HAY WARDS CHEERS  WHISKY ಯ 36 ಟೆಟ್ರಾ ಪಾಕೆಟ್ ಗಳು, 2) 180 ಎಂ.ಎಲ್ ಸಾಮರ್ಥ್ಯದ  8 PM WHISKY ನ   40,ಟೆಟ್ರಾ ಪಾಕೆಟ್ ಗಳು,3) 180  ಎಂ.ಎಲ್ ಸಾಮರ್ಥ್ಯದ OLD TAVERN WHISKY ಯ 38 ಟೆಟ್ರಾ ಪಾಕೆಟ್ ಗಳು, 4) 180 ಎಂ.ಎಲ್ ಸಾಮರ್ಥ್ಯದ, DSP BLACK WHISKY ನ 18 ಬಾಟೆಲ್ ಗಳು, 5) 180 ಎಂ.ಎಲ್ ಸಾಮರ್ಥ್ಯದ IMPERIAL BLUE ನ 6 ಬಾಟೆಲ್ ಗಳು, ಮತ್ತು 6) 500 ಎಂ.ಎಲ್ ಸಾಮರ್ಥ್ಯದ 11, KINGFISHER STRONG ಟಿನ್ ಗಳು ಇದ್ದು  ಇವುಗಳ ಒಟ್ಟು ಸಾಮರ್ಥ್ಯ 27 ಲೀಟರ್ 100 ಎಂ.ಎಲ್. ಆಗಿರುತ್ತೆ. ಇವುಗಳ ಒಟ್ಟು ಬೆಲೆ 13,689/- ರೂ.ಗಳಾಗಿರುತ್ತೆ.  ಸದರಿ ಮದ್ಯವನ್ನು ಯಾಕೆ ಇಟ್ಟುಕೊಂಡಿದ್ದು ಎಂದು ಕೇಳಿದಾಗ ತಾನು ಮಾರಾಟಮಾಡಲು ಇಟ್ಟುಕೊಂಡಿರುವುದಾಗಿ ಹೇಳಿದ್ದು, ಮದ್ಯವನ್ನು ಮಾರಾಟ ಮಾಡಲು ಪರವಾನಗಿಯನ್ನು ಹಾಜರುಪಡಿಸುವಂತೆ ಕೇಳಲಾಗಿ ತನ್ನ ಬಳಿ ಯಾವುದೇ ದಾಖಲೆ ಇಲ್ಲವೆಂದು ಹೇಳಿದನು. ಸದರಿ ಆಸಾಮಿಯು ಯಾವುದೇ ಪರವಾನಗಿಯನ್ನು ಹೊಂದದೆ ಅಕ್ರಮವಾಗಿ  ಮದ್ಯವನ್ನು ಮಾರಾಟ ಮಾಡಲು  ತನ್ನ ಮನೆಯಲ್ಲಿ ಮಧ್ಯವನ್ನು ಇಟ್ಟುಕೊಂಡಿರುತ್ತಾನೆ.  ಮೇಲ್ಕಂಡ ಮದ್ಯಗಳ ಪೈಕಿ ಸ್ಯಾಂಪಲ್ ಗಾಗಿ  1)90 ಎಂ.ಎಲ್ ಸಾಮರ್ಥ್ಯದ HAY WARDS CHEERS  WHISKY ಯ 01 ಟೆಟ್ರಾ ಪಾಕೆಟ್ 2) 180 ಎಂ.ಎಲ್ ಸಾಮರ್ಥ್ಯದ  8 PM ನ   01 ,ಟೆಟ್ರಾ ಪಾಕೆಟ್  3) 180  ಎಂ.ಎಲ್ ಸಾಮರ್ಥ್ಯದ OLD TAVERN WHISKY ಯ 01 ಟೆಟ್ರಾ ಪಾಕೆಟ್, 4) 180 ಎಂ.ಎಲ್ ಸಾಮರ್ಥ್ಯದ, DSP BLACK WHISKY ನ 01 ಬಾಟೆಲ್, 5) 180 ಎಂ.ಎಲ್ ಸಾಮರ್ಥ್ಯದ IMPERIAL BLUE WHISKY ನ 1 ಬಾಟೆಲ್, ಹಾಗೂ 6) 500 ಎಂ.ಎಲ್ ಸಾಮರ್ಥ್ಯದ 01 KINGFISHER STRONG ಬಿಯರ್ ಟಿನ್ ಅನ್ನು  ಸ್ಯಾಂಪಲ್ ಗಾಗಿ  ತೆಗೆದು  ಬಿಳಿ ಬಟ್ಟೆಯಿಂದ  ಸುತ್ತಿ ಅರಗಿನಿಂದ  ಕೆ. ಎಂಬ ಅಕ್ಷರದಿಂದ ಸೀಲು ಮಾಡಿ ಪಂಚನಾಮೆಯನ್ನು 16-15  ಗಂಟೆಯಿಂದ 17-15   ಗಂಟೆಯವರೆಗೆ ಪಂಚರ ಸಮಕ್ಷಮದಲ್ಲಿ ಪಂಚನಾಮೆ ಕ್ರಮ ಜರುಗಿಸಿ, ಮಾಲುಗಳನ್ನು ವಶಪಡಿಸಿಕೊಂಡು, ಠಾಣೆಗೆ 18-00  ಗಂಟೆಗೆ  ವಾಪಸ್ಸು ಬಂದಿದ್ದು,  ಆರೋಪಿಯೊಂದಿಗೆ ಪಂಚನಾಮೆ ಮತ್ತು  ಮಾಲನ್ನು ಸಹ ನೀಡುತ್ತಿದ್ದು, ಆರೋಪಿಯ ವಿರುದ್ಧ  ಕಲಂ: 32, 34  ಕೆ.ಇ.ಆಕ್ಟ್ – 1965 ರೀತ್ಯಾ ಪ್ರಕರಣವನ್ನು ದಾಖಲು ಮಾಡಲು ಸೂಚಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಿಸಿರುತ್ತೇನೆ.

 1. ಗೌರಿಬಿದನೂರು ಪುರ ಪೊಲೀಸ್ ಠಾಣೆ ಮೊ.ಸಂ.137/2020 ಕಲಂ: 78(3) ಕೆ.ಪಿ ಆಕ್ಟ್:-

          ದಿನಾಂಕ 14/09/2020 ರಂದು ಸಂಜೆ 5:00 ಗಂಟೆಯಲ್ಲಿ ನ್ಯಾಯಾಲಯದ ಪಿ.ಸಿ ರಂಗನಾಥ ರವರು ಹಾಜರುಪಡಿಸಿದ ನ್ಯಾಯಾಲಯದ ಅನುಮತಿ ಪತ್ರದ ಸಾರಾಂಶವೇನೆಂದರೆ, ಗಂಟೆಗೆ DCN. CEN ಪೊಲೀಸ್ ಠಾಣೆಯ ಸಿ.ಹೆಚ್.ಸಿ. 192 ರಾಜಗೋಪಾಲ್ ರವರು ದಿನಾಂಕ 08/09/2020 ರಂದು ತಾನು ಮತ್ತು ನರಸಿಂಹಮೂರ್ತಿರವರೊಂದಿಗೆ ಗೌರಿಬಿದನೂರು ನಗರದಲ್ಲಿ ಕಾನೂನು ಚಟುವಟಿಕೆಗಳ ಬಗ್ಗೆ ಮಾಹಿತಿ ಸಂಗ್ರಹಿಸಿ ದಾಳಿ ಮಾಡಲು ಗೌರಿಬಿದನೂರು ನಗರದ ಹೆಚ್.ಸಿ. 214 ಲೊಕೇಶ್ ರವರನ್ನು ನಮ್ಮ ಜೊತೆ ಕರೆಯಿಸಿಕೊಂಡು ಪಂಚರೊಂದಿಗೆ ದಾಳಿ ಮಾಡಿ ಹಿರೇಬಿದನೂರಿನ ರಾಧ ಕೃಷ್ಣರವರ ಪೀಡ್ ಗೋನ್ ಬಳಿ ಸಾರ್ವಜನಿಕ ರಸ್ತೆಯಲ್ಲಿ ಕಾನೂನು ಬಾಹಿರವಾಗಿ ಮಟ್ಕಾ ಜೂಜಾಟ ಅಂಕಿಗಳನ್ನು ಬರೆಯುತ್ತಿದ್ದು, ಆಸಾಮಿಯನ್ನು ಪಂಚರ ಸಮಕ್ಷಮ ಹಿಡಿದು ಹೆಸರು ಮತ್ತು ವಿಳಾಸ ಕೇಳಲಾಗಿ ಗಂಗಾಧರ ಬಿನ್ ಲೇಟ್ ದಾಸಪ್ಪ, 36 ವರ್ಷ, ಹಣ್ಣಿನ ವ್ಯಾಪಾರಿ ಕೆಲಸ, ವಾಸ ಹಿರೇಬಿದನೂರು, ಅವರಿಗೆ ಮಟ್ಕಾ ಜೂಜಾಟವಾಡುವುದಕ್ಕೆ ಯಾವುದಾದರೂ ಪರವಾನಗಿ ಇದೆಯೇ ಎಂದು ಕೇಳಿದಾಗ ಅವರ ಬಳಿ ಯಾವುದೆ ಪರವಾನಗಿ ಇಲ್ಲದೇ ಇದ್ದು, ಆರೋಪಿಯ ಬಳಿ ಒಂದು ಬಾಲ್ ಪಾಯಿಂಟ್ ಪೆನ್ನು,  ಒಂದು ವಿವಿಧ ಸಂಖ್ಯೆಯ ಮಟ್ಕಾಚೀಟಿ ಹಾಗೂ ನಗದು ಹಣ 1070 ರೂಪಾಯಿಗಳು ಇದ್ದು, ಹಣದ ಬಗ್ಗೆ ವಿಚಾರ ಮಾಡಲಾಗಿ ಮಟ್ಜಾ ಜೂಜಾಟದಿಂದ ಬಂದ ಹಣ ಎಂದು ತಿಳಿಸಿದ್ದು, ಮದ್ಯಾಹ್ನ 1-30 ಗಂಟೆಯಿಂದ 2-30  ಗಂಟೆಯವರೆಗೆ ಪಂಚನಾಮೆಯನ್ನು ಬರೆದು ಆರೋಪಿ ಹಾಗೂ ಮಾಲಿನೊಂದಿಗೆ ನೀಡಿದ ವರದಿಯನ್ನು ಪಡೆದು  ಠಾಣಾ ಎನ್.ಸಿ.ಆರ್ ದಾಖಲಿಸಿದ್ದು ಈ ದಿನ ಪ್ರಕರಣ ದಾಖಲಿಸಿರುತ್ತೆ.

 1. ಗೌರಿಬಿದನೂರು ಪುರ ಪೊಲೀಸ್ ಠಾಣೆ ಮೊ.ಸಂ.138/2020 ಕಲಂ: 78(3) ಕೆ.ಪಿ ಆಕ್ಟ್:-

          ದಿನಾಂಕ 14/09/2020 ರಂದು ಸಂಜೆ 17:30 ಗಂಟೆ ಸಮಯದಲ್ಲಿ ನ್ಯಾಯಾಲಯದ ಪಿ.ಸಿ ರಂಗನಾಥ ರವರು ಹಾಜರುಪಡಿಸಿದ ನ್ಯಾಯಾಲಯದ ಅನುಮತಿ ಪತ್ರದ ಸಾರಾಂಶವೇನೆಂದರೆ ಶ್ರೀಮತಿ ಚಂದ್ರಕಲಾ-PSI ನಗರ ಪೊಲೀಸ್ ಠಾಣೆ ರವರು ದಿನಾಂಕ 08/09/2020 ರಂದು ಸಂಜೆ 4:00 ಗಂಟೆಯಲ್ಲಿ ಸರ್ಕಾರಿ ವಾಹನ KA-40-G-063 ರಲ್ಲಿ ನಗರದ ಎಂ.ಜಿ ವೃತ್ತದಲ್ಲಿ ಗಸ್ತು ಮಾಡುತ್ತಿರುವಾಗ ನಗರದ ಕೃಷ್ಣಭವನ್ ರಸ್ತೆಯ ದುರ್ಗಾ ಫೋಟೋ ವರ್ಕ್ಸ್ ಬಳಿ ಯಾರೋ ಆಸಾಮಿ ಮಟ್ಕಾ ಅಂಕಿಗಳನ್ನು ಸಾರ್ವಜನಿಕರಿಗೆ ಬರೆದುಕೊಡುತ್ತಾ ಮಟ್ಕಾ ಜೂಜಾಟವಾಡುತ್ತಿರುವುದಾಗಿ ಮಾಹಿತಿ ಬಂದಿದ್ದು ಕೂಡಲೇ ಜೀಪ್ ಡ್ರೈವರ್ APC-105 ಅಶ್ವತ್ಥ್ ರೆಡ್ಡಿ ರವರೊಂದಿಗೆ ಹೆಚ್.ಸಿ 214 ಲೋಕೇಶ್ ರವರನ್ನು ಕರೆದುಕೊಂಡು ನಗರದ ಕೃಷ್ಣಭವನ್ ರಸ್ತೆಯಲ್ಲಿ ಹೋಗಿ ಜೀಪ್ ನಿಲ್ಲಿಸಿ ಅಲ್ಲಿ ಪಂಚಾಯ್ತಿದಾರರನ್ನು ಕರೆದುಕೊಂಡು ಸ್ವಲ್ಪ ದೂರ ನಡೆದುಕೊಂಡು ಹೋಗಿ ನೋಡಲಾಗಿ ಯಾರೋ ಆಸಾಮಿ 1/- ರೂಪಾಯಿಗೆ 70/- ರೂಪಾಯಿಗಳನ್ನು ಕೊಡುವುದಾಗಿ ಸಾರ್ವಜನಿಕ ಸ್ಥಳದಲ್ಲಿ ಕೂಗಾಡುತ್ತಾ ಮಟ್ಕಾ ಅಂಕಿಗಳನ್ನು ಬರೆದುಕೊಡುತ್ತಾ ಮಟ್ಕಾ ಜೂಜಾಟವಾಡುತ್ತಿರುವುದು ಕಂಡುಬಂದಿರುತ್ತೆ. ನಂತರ ಸಿಬ್ಬಂದಿ ಸಹಕಾರದಿಂದ ಪಂಚರ ಸಮ್ಮುಖದಲ್ಲಿ ಸುತ್ತುವರಿದು ಅವನನ್ನು ಓಡಿಹೋಗದಂತೆ ಹೇಳಿ ಹಿಡಿದುಕೊಂಡು ಅವನ ಹೆಸರು ಮತ್ತು ವಿಳಾಸವನ್ನು ಕೇಳಲಾಗಿ 1) ವಿಜಿ ಕುಮಾರ್ ಬಿನ್ ದುರ್ಗಪ್ಪ, 48 ವರ್ಷ, ಮೇಧರ ಜನಾಂಗ, ಪ್ರಶಾಂತನಗರ, ಗೌರಿಬಿದನೂರು ನಗರ ಫೋ: 9741929288 ಎಂದು ತಿಳಿಸಿರುತ್ತಾನೆ, ಅವನಿಗೆ ಮಟ್ಕಾ ಜೂಜಾಟವಾಡುವುದಕ್ಕೆ ಯಾವುದಾದರೂ ಪರವಾನಗಿ ಇದೆಯೇ ಎಂದು ಕೇಳಿದಾಗ ಅವನ ಬಳಿ ಯಾವುದೇ ಪರವಾನಗಿ ಇಲ್ಲವೆಂದು ತಿಳಿಸಿದನು, ಈ ಸಮಯದಲ್ಲಿ ಈ ವ್ಯಕ್ತಿಯ ಅಂಗಶೋಧನೆ ಮಾಡಲಾಗಿ  ಒಂದು ಮಟ್ಕಾಚೀಟಿ ಬರೆಯುವ ಪುಸ್ತಕ, ಒಂದು ಬಾಲ್ ಪಾಯಿಂಟ್ ಪೆನ್ನು ಮತ್ತು ನಗದು ಹಣ 1800/- ರೂಪಾಯಿಗಳು ಇದ್ದು, ಹಣದ ಬಗ್ಗೆ ವಿಚಾರ ಮಾಡಲಾಗಿ ಮಟ್ಕಾ ಜೂಜಾಟವಾಡುವ ವ್ಯಕ್ತಿಗಳಿಂದ ಪಡೆದ ಹಣ ಎಂದು ತಿಳಿಸಿದನು. ನಂತರ ಆರೋಪಿಯನ್ನು ವಶಕ್ಕೆ ಪಡೆದು ಪಂಚನಾಮೆ ಜರುಗಿಸಿ ಆರೋಪಿ ಹಾಗೂ ಮಾಲಿನೊಂದಿಗೆ ಸಂಜೆ 5:15 ಗಂಟೆಗೆ ಠಾಣೆಗೆ ವಾಪಸ್ಸು ಬಂದು ಕ್ರಮ ಕೈಗೊಳ್ಳುವುದಕ್ಕಾಗಿ ನೀಡಿದ ವರದಿಯನ್ನು ಪಡೆದು ಎನ್.ಸಿ.ಆರ್ ದಾಖಲಿಸಿದ್ದು ಈ ದಿನ ಪ್ರಕರಣವನ್ನು ದಾಖಲಿಸಿರುತ್ತೇನೆ.

 1. ಗೌರಿಬಿದನೂರು ಪುರ ಪೊಲೀಸ್ ಠಾಣೆ ಮೊ.ಸಂ.139/2020 ಕಲಂ: 78(3) ಕೆ.ಪಿ ಆಕ್ಟ್:-

          ದಿನಾಂಕ 14/09/2020 ರಂದು ಸಂಜೆ 18:00 ಗಂಟೆ ಸಮಯದಲ್ಲಿ ನ್ಯಾಯಾಲಯದ ಪಿ.ಸಿ ರಂಗನಾಥ ರವರು ಹಾಜರುಪಡಿಸಿದ ನ್ಯಾಯಾಲಯದ ಅನುಮತಿ ಪತ್ರದ ಸಾರಾಂಶವೇನೆಂದರೆ, ದಿನಾಂಕ 08/09/2020 ರಂದು ಶ್ರೀಮತಿ ಚಂದ್ರಕಲಾ-PSI ನಗರ ಪೊಲೀಸ್ ಠಾಣೆ ರವರು ಸಂಜೆ 5:15 ಗಂಟೆಯಲ್ಲಿ ಠಾಣೆಯಲ್ಲಿರುವಾಗ ನಗರದ ಬಜಾರ್ ರಸ್ತೆಯ ನದಿಗಡ್ಡೆ ಕಡೆ ಹೋಗುವ ದಾರಿಯಲ್ಲಿ ಯಾರೋ ಆಸಾಮಿ ಮಟ್ಕಾ ಅಂಕಿಗಳನ್ನು ಸಾರ್ವಜನಿಕರಿಗೆ ಬರೆದುಕೊಡುತ್ತಾ ಮಟ್ಕಾ ಜೂಜಾಟವಾಡುತ್ತಿರುವುದಾಗಿ ಮಾಹಿತಿ ಬಂದಿದ್ದು ಕೂಡಲೇ ಜೀಪ್ ಡ್ರೈವರ್ APC-105 ಅಶ್ವತ್ಥ್ ರೆಡ್ಡಿ ರವರೊಂದಿಗೆ ಹೆಚ್.ಸಿ 214 ಲೋಕೇಶ್ ರವರನ್ನು ಕರೆದುಕೊಂಡು ನಗರದ ಬಜಾರ್ ರಸ್ತೆಯಲ್ಲಿ ಹೋಗಿ ಜೀಪ್ ನಿಲ್ಲಿಸಿ ಅಲ್ಲಿ ಪಂಚಾಯ್ತಿದಾರರನ್ನು ಕರೆದುಕೊಂಡು ಸ್ವಲ್ಪ ದೂರ ನಡೆದುಕೊಂಡು ಹೋಗಿ ನೋಡಲಾಗಿ ನದಿಗಡ್ಡೆ ಕಡೆ ಹೋಗುವ ದಾರಿಯಲ್ಲಿ ಯಾರೋ ಆಸಾಮಿ 1/- ರೂಪಾಯಿಗೆ 70/- ರೂಪಾಯಿಗಳನ್ನು ಕೊಡುವುದಾಗಿ ಸಾರ್ವಜನಿಕ ಸ್ಥಳದಲ್ಲಿ ಕೂಗಾಡುತ್ತಾ ಮಟ್ಕಾ ಅಂಕಿಗಳನ್ನು ಬರೆದುಕೊಡುತ್ತಾ ಮಟ್ಕಾ ಜೂಜಾಟವಾಡುತ್ತಿರುವುದು ಕಂಡುಬಂದಿರುತ್ತೆ. ನಂತರ ಸಿಬ್ಬಂದಿ ಸಹಕಾರದಿಂದ ಪಂಚರ ಸಮ್ಮುಖದಲ್ಲಿ ಸುತ್ತುವರಿದು ಅವನನ್ನು ಓಡಿಹೋಗದಂತೆ ಹೇಳಿ ಹಿಡಿದುಕೊಂಡು ಅವನ ಹೆಸರು ಮತ್ತು ವಿಳಾಸವನ್ನು ಕೇಳಲಾಗಿ 1) ಚೇತನ G ಬಿನ್ ಗೋವಿಂದಪ್ಪ, 23 ವರ್ಷ, ಬಲಜಿಗರು, ಎಲೆ ವ್ಯಾಪಾರ, ವಿನಾಯಕನಗರ ಗೌರಿಬಿದನೂರು ನಗರ ಫೋ: 9108576695 ಎಂದು ತಿಳಿಸಿರುತ್ತಾನೆ, ಅವನಿಗೆ ಮಟ್ಕಾ ಜೂಜಾಟವಾಡುವುದಕ್ಕೆ ಯಾವುದಾದರೂ ಪರವಾನಗಿ ಇದೆಯೇ ಎಂದು ಕೇಳಿದಾಗ ಅವನ ಬಳಿ ಯಾವುದೇ ಪರವಾನಗಿ ಇಲ್ಲವೆಂದು ತಿಳಿಸಿದನು, ಈ ಸಮಯದಲ್ಲಿ ಈ ವ್ಯಕ್ತಿಯ ಅಂಗಶೋಧನೆ ಮಾಡಲಾಗಿ  ಒಂದು ಮಟ್ಕಾಚೀಟಿ ಬರೆಯುವ ಪುಸ್ತಕ, ಒಂದು ಬಾಲ್ ಪಾಯಿಂಟ್ ಪೆನ್ನು ಮತ್ತು ನಗದು ಹಣ 550/- ರೂಪಾಯಿಗಳು ಇದ್ದು, ಹಣದ ಬಗ್ಗೆ ವಿಚಾರ ಮಾಡಲಾಗಿ ಮಟ್ಕಾ ಜೂಜಾಟವಾಡುವ ವ್ಯಕ್ತಿಗಳಿಂದ ಪಡೆದ ಹಣ ಎಂದು ತಿಳಿಸಿದನು. ನಂತರ ಆರೋಪಿಯನ್ನು ವಶಕ್ಕೆ ಪಡೆದು ಪಂಚನಾಮೆ ಜರುಗಿಸಿ ಆರೋಪಿ ಹಾಗೂ ಮಾಲಿನೊಂದಿಗೆ ಸಂಜೆ 6:30 ಗಂಟೆಗೆ ಠಾಣೆಗೆ ವಾಪಸ್ಸು ಬಂದು ಕ್ರಮ ಕೈಗೊಳ್ಳುವುದಕ್ಕಾಗಿ ನೀಡಿದ ವರದಿಯನ್ನು ಪಡೆದು ಎನ್.ಸಿ.ಆರ್ ದಾಖಲಿಸಿದ್ದು ಈ ದಿನ ಪ್ರಕರಣವನ್ನು ದಾಖಲಿಸಿರುತ್ತೇನೆ.

 1. ಗೌರಿಬಿದನೂರು ಪುರ ಪೊಲೀಸ್ ಠಾಣೆ ಮೊ.ಸಂ.140/2020 ಕಲಂ: 279,337,338 ಐ.ಪಿ.ಸಿ & 187 ಐ.ಎಂ.ವಿ ಆಕ್ಟ್:-

          ದಿನಾಂಕ: 14/09/2020 ರಂದು ಸಂಜೆ 6-30 ಗಂಟೆಗೆ ವಿ. ನರಸಿಂಹರೆಡ್ಡಿ ಬಿನ್ ವೆಂಕಟಪ್ಪ,ರವರು ಕೆ.ರವೀಶ್ ರವರ ಮೂಲಕ ಕಳುಹಿಸಿಕೊಟ್ಟ ದೂರಿನ ಸಂಕ್ಷಿಪ್ತ ಸಾರಾಂಶವೇನೆಂದರೆ, ದಿನಾಂಕ: 14/09/2020 ರಂದು ಮದ್ಯಾಹ್ನ 01-35 ಗಂಟೆ ಸಮಯದಲ್ಲಿ ತಾನು ಗೌರಿಬಿದನೂರು ನಗರದ ನ್ಯಾಷನಲ್ ಕಾಲೇಜ್ ಮುಂಭಾಗದ ಇಡಗೂರು ವೃತ್ತದ ರಸ್ತೆಯ ಎಡಬದಿಯಲ್ಲಿ ನಿಂತುಕೊಂಡಿದ್ದಾಗ ಬೆಂಗಳೂರು ಕಡೆಯಿಂದ ಹಿಂದೂಪುರದ ಕಡೆಗೆ ಹೋಗಲು ನಂ. ಕೆಎ-41-ಎಂ.ಡಿ-4041 ರ ಹೊಂಡಾ ಅಮೇಜ಼್ ಕಾರನ್ನು ಅದರ ಚಾಲಕನಾದ ಜಗದೀಶ್ ಎಂಬುವನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ತನ್ನ ಬಲಕಾಲಿಗೆ ಡಿಕ್ಕಿ ಹೊಡೆಸಿ ವಾಹನದೊಂದಿಗೆ ಹೊರಟು ಹೋಗಿದ್ದರಿಂದ ತನ್ನ ಬಲಗಾಲಿನ ಮೂಳೆ ಮುರಿದು ಹೋಗಿ ಎಡಗಾಲಿನ ಮೇಲೆ ತರಚಿದ ಗಾಯವಾಗಿದ್ದು, ಗಾಯಗೊಂಡ ತನ್ನನ್ನು ಕೆ.ರವೀಶ್ ರವರು ಗೌರಿಬಿದನೂರು ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಅಲ್ಲಿನ ವೈದ್ಯರ ಸಲಹೆಯ ಮೇರೆಗೆ ಸೋಮೇಶ್ವರ ಆಸ್ಪತ್ರೆಯಲ್ಲಿ ತಾನು ಚಿಕಿತ್ಸೆ ಪಡೆಯುತ್ತಿದ್ದು, ಈ ಅಪಘಾತಕ್ಕೆ ಕಾರಣನಾದ ಕೆಎ-41-ಎಂ.ಡಿ-4041 ರ ಹೊಂಡಾ ಅಮೇಜ಼್ ಕಾರಿನ  ಚಾಲಕನಾದ ಜಗದೀಶ್ ರವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಕೊಟ್ಟ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುತ್ತೆ.

 1. ಗುಡಿಬಂಡೆ ಪೊಲೀಸ್ ಠಾಣೆ ಮೊ.ಸಂ.155/2020 ಕಲಂ: 15(A),32(3) ಕೆ.ಇ ಆಕ್ಟ್:-

          ದಿನಾಂಕ:13/09/2020 ರಂದು ಪಿರ್ಯಾದಿದಾರರು  ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ದಿನಾಂಕ:13-09-2020 ರಂದು ಪಿರ್ಯಾದಿದಾರರಾದ ಠಾಣೆಯ ಎ,ಎಸ್,ಐ ನಂಜುಂಡಶರ್ಮ ರವರು ಬೆಳಿಗ್ಗೆ 09-30 ಗಂಟೆಯಲ್ಲಿ ಠಾಣೆಯಲ್ಲಿದ್ದಾಗ, ಠಾಣಾ ಸಿಬ್ಬಂದಿ ಸಿ,ಪಿ,ಸಿ-408 ರಮೇಶ ರವರು ತನಗೆ ಪೋನ್ ಮಾಡಿ ಗುಡಿಬಂಡೆ ತಾಲೂಕು ಬೀಚಗಾನಹಳ್ಳಿ ಗ್ರಾಮದ ನರಸಿಂಹಪ್ಪ ಬಿನ್ ಹನುಮಂತಪ್ಪ 58 ವರ್ಷ, ರವರ ಚಿಲ್ಲರೆ ಅಂಗಡಿಯ ಮುಂಭಾಗದಲ್ಲಿರುವ ಸಾರ್ವಜನಿಕ ರಸ್ತೆಯಲ್ಲಿ ಅಕ್ರಮವಾಗಿ ಸಾರ್ವಜನಿಕರಿಗೆ ಮಧ್ಯವನ್ನು ಕುಡಿಯಲು ಸ್ಥಳಾವಕಾಶ ನೀಡಿರುತ್ತಾರೆಂದು ನೀಡಿದ ಮಾಹಿತಿ ಮೇರೆಗೆ ತಾನು ಠಾಣಾ ಸಿಬ್ಬಂದಿಯಾದ ಸಿ.ಪಿ.ಸಿ-84 ಮುನಿರಾಜು ರವರನ್ನು ಕರೆದುಕೊಂಡು ಸರ್ಕಾರಿ ಜೀಪು ಸಂಖ್ಯೆ-ಕೆ,ಎ-40 ಜಿ-58 ರಲ್ಲಿ ಚಾಲಕ ಎ,ಎಚ್,ಸಿ-47 ಸಿರಾಜ್ ವುಲ್ಲಾ ರವರೊಂದಿಗೆ ಬೀಚಗಾನಹಳ್ಳಿ ಗ್ರಾಮಕ್ಕೆ ಬೆಳಿಗ್ಗೆ 10-00 ಗಂಟೆ ಸಮಯಕ್ಕೆ ಹೋಗಿ ಮಾಹಿತಿ ನೀಡಿದ ಸಿಬ್ಬಂದಿಯನ್ನು ಕರೆದುಕೊಂಡು ಬೆಳಿಗ್ಗೆ: 10-10 ಗಂಟೆಯಲ್ಲಿ ಗ್ರಾಮದ ಬಸ್ ನಿಲ್ದಾಣದ ಬಳಿ ಇದ್ದ ಪಂಚರನ್ನು ಬರಮಾಡಿಕೊಂಡು ಪಂಚರಿಗೆ ಮಾಹಿತಿಯನ್ನು ತಿಳಿಸಿದ್ದು ದಾಳಿಗೆ ಒಪ್ಪಿಕೊಂಡಿರುತ್ತಾರೆ ಪಂಚರೊಂದಿಗೆ ಬೀಚಗಾನಹಳ್ಳಿ ಗ್ರಾಮದ ನರಸಿಂಹಪ್ಪ ರವರ ಚಿಲ್ಲರೆ ಅಂಗಡಿಯ ಸ್ವಲ್ಪ ದೂರದ ಮರೆಯಲ್ಲಿ ಜೀಪ್ ನ್ನು ನಿಲ್ಲಿಸಿ ನೋಡಲಾಗಿ, ಯಾರೋ ಒಬ್ಬ ವ್ಯಕ್ತಿಯು ಕಾನೂನು ಬಾಹಿರವಾಗಿ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಮದ್ಯವನ್ನು ಕುಡಿಯಲು ಅನುಮತಿ ನೀಡಿರುವುದು ಮತ್ತು ಸಾರ್ವಜನಿಕರಿಗೆ ಮಧ್ಯವನ್ನು ಕುಡಿಯಲು ಸ್ಥಳಾವಕಾಶ ಮಾಡಿಕೊಟ್ಟಿರುವುದು ಕಂಡು ಬಂದಿರುತ್ತೆ. ಬೆಳಿಗ್ಗೆ 10-15 ಗಂಟೆಗೆ ಪಂಚರೊಂದಿಗೆ ನಾವುಗಳು ಸದರಿ ಮಧ್ಯಪಾನ ಮಾಡುತ್ತಿದ್ದವರ ಮೇಲೆ ಧಾಳಿ ಮಾಡಿದಾಗ, ಸಮವಸ್ತ್ರದಲ್ಲಿದ್ದ ತಮ್ಮನ್ನು ಕಂಡು ಮದ್ಯವನ್ನು ಕುಡಿಯುತ್ತಿದ್ದವರು ಓಡಿ ಹೋದರು, ಆ ಪೈಕಿ ಮದ್ಯವನ್ನು ಸರಬರಾಜು ಮಾಡುವ ಆಸಾಮಿಯನ್ನು ವಶಕ್ಕೆ ಪಡೆದುಕೊಂಡು ಹೆಸರು & ವಿಳಾಸ ಕೇಳಲಾಗಿ ನರಸಿಂಹಪ್ಪ ಬಿನ್ ಹನುಮಂತಪ್ಪ, 58 ವರ್ಷ, ನಾಯಕ ಜನಾಂಗ, ಚಿಲ್ಲರೆ ಅಂಗಡಿ ವ್ಯಾಪಾರ, ವಾಸ:ಬೀಚಗಾನಹಳ್ಳಿ ಗ್ರಾಮ ಗುಡಿಬಂಡೆ ತಾಲ್ಲೂಕು, ಎಂದು ತಿಳಿಸಿದ್ದು. ಸದರಿ ಆಸಾಮಿಯನ್ನು ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಮಧ್ಯ ಸೇವನೆ ಮಾಡಲು ಸ್ಥಳಾವಕಾಶ ನೀಡಿರುವ ಬಗ್ಗೆ ಇರುವಂತಹ ಲೈಸನ್ಸ್ ತೋರಿಸಲು ಕೇಳಲಾಗಿ, ಸದರಿ ಆಸಾಮಿಯು ಯಾವುದೇ ಪರವಾನಗಿ ಇಲ್ಲವೆಂದು ತಿಳಿಸಿದನು, ನಂತರ ಸ್ಥಳವನ್ನು ಪರಿಶೀಲನೆ ಮಾಡಲಾಗಿ 1) ಹೈ ವಾರ್ಡ್ಸ ಕಂಪನಿಯ ಚೀರ್ಸ್ ವಿಸ್ಕಿ 90 ಎಮ್, ಎಲ್ ಅಳತೆಯ ಮಧ್ಯವಿರುವಂತಹ 15 ಟೆಟ್ರಾ ಪಾಕೆಟ್ಗಳು ಇದ್ದು, 2) ಓಪನ್ ಮಾಡಿರುವಂತ ಹೈ ವಾರ್ಡ್ಸ  ಕಂಪನಿಯ ಚೀರ್ಸ್ ವಿಸ್ಕಿ 90 ಒಐ, ಅಳತೆಯ 03 ಖಾಲಿ ಟೆಟ್ರಾ ಪಾಕೆಟ್ಗಳು 3) ಮದ್ಯವನ್ನು ಕುಡಿದು ಬಿಸಾಕಿದಂತಹ 04 ಖಾಲಿ ಪ್ಲಾಸ್ಟಿಕ್ ಗ್ಲಾಸುಗಳು 4) ಒಂದು ಲೀಟರ್ ಸಾಮಥ್ರ್ಯದ 02 ಖಾಲಿ ವಾಟರ್ ಬಾಟೆಲ್ ಇದ್ದು, ಮಧ್ಯವಿರುವ ಟೆಟ್ರಾ ಪಾಕೆಟ್ಗಳ ದ್ರವ ಪ್ರಮಾಣ ಲೆಕ್ಕ ಮಾಡಲಾಗಿ ಒಟ್ಟು- 1 ಲೀಟರ್ 350 ಎಮ್,ಎಲ್ ಆಗಿದ್ದು, ಆ ಪಾಕೆಟ್ಗಳ ಮೇಲಿನ ದರವನ್ನು ಲೆಕ್ಕ ಮಾಡಲಾಗಿ ಒಟ್ಟು 35.13*15=526.95/- ರೂ ಆಗಿರುತ್ತದೆ. ಸದರಿ ಮಾಲನ್ನು ಪಂಚಾಯ್ತಿದಾರರ ಸಮಕ್ಷಮದಲ್ಲಿ ಬೆಳಿಗ್ಗೆ 10-30 ಗಂಟೆಯಿಂದ ಬೆಳಿಗ್ಗೆ 11-30 ಗಂಟೆಯವರೆಗೆ ಪಂಚನಾಮೆ ಮೂಲಕ ಅಮಾನತ್ತುಪಡಿಸಿಕೊಂಡಿರುತ್ತದೆ, ಮೇಲ್ಕಂಡ ಆರೋಪಿ & ಮಾಲನ್ನು ಅಸಲು ಪಂಚನಾಮೆಯೊಂದಿಗೆ ಮದ್ಯಹ್ನ 12-00 ಗಂಟೆಯಲ್ಲಿ ಠಾಣೆಗೆ ಬಂದು ವರದಿಯನ್ನು ಸಿದ್ದಪಡಿಸಿ ಮದ್ಯಹ್ನ 12-30 ಗಂಟೆಗೆ ಠಾಣಾಧಿಕಾರಿಗಳಿಗೆ ಸದರಿ ಆರೋಪಿ & ಮಾಲಿನ ವಿರುದ್ದ ಮುಂದಿನ ಕಾನೂನು ಕ್ರಮ ಜರುಗಿಸಲು ಸೂಚಿಸಿದೆ.

 1. ಗುಡಿಬಂಡೆ ಪೊಲೀಸ್ ಠಾಣೆ ಮೊ.ಸಂ.156/2020 ಕಲಂ: 87 ಕೆ.ಇ ಆಕ್ಟ್:-

          ದಿನಾಂಕ:14/09/2020 ರಂದು ನ್ಯಾಯಾಲಯದ ಪಿ,ಸಿ-89 ರವರು ಘನ ನ್ಯಾಯಾಲಯದಲ್ಲಿ ಕ್ರಿಮಿನಲ್ ಪ್ರಕರಣದಾಖಲಿಸಲು ಅನಮತಿ ಪಡೆದುಕೊಂಡು ಬಂದ ವರದಿ ದೂರಿನ ಸಾರಾಂಶವೇನೆಂದರೆ ಗುಡಿಬಂಡೆ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸ್ ಇನ್ಸಪೆಕ್ಟರ್ ಶ್ರೀ ಮಂಜುನಾಥ ಎಮ್,ಎನ್ ರವರು ಈ ದಿನ ದಿನಾಂಕ:13-09-2020 ರಂದು ಮದ್ಯಹ್ನ 2-45 ಗಂಟೆಯಲ್ಲಿ ಗುಡಿಬಂಡೆ ಪೊಲೀಸ್ ಠಾಣೆಯಲ್ಲಿದ್ದಾಗ ಗುಡಿಬಂಡೆ ಪೊಲೀಸ್ ಠಾಣೆಯ 23 ನೇ ಬೀಟ್ ಸಿಬ್ಬಂದಿ ಮಂಜುನಾಥ ಸಿ,ಪಿ,ಸಿ-89 ರವರು ತನಗೆ ಪೋನ್ ಮಾಡಿ ಈ ದಿನ ದಿನಾಂಕ:13/09/2020 ರಂದು ತಾನು ಸೋಮೇಶ್ವರ ಗ್ರಾಮದಲ್ಲಿ ಗಸ್ತು ಮಾಡುತ್ತಿರುವಾಗ ಸೋಮೇಶ್ವರ ಗ್ರಾಮದ ಕೆರೆಯ ಅಂಗಳದ ಜಾಲಿ ಮರದ ಕೆಳಗೆ  ಕೆಲವರು ಕಾನೂನು ಬಾಹಿರವಾಗಿ ಇಸ್ಪೀಟು ಜೂಜಾಟ ಆಡುತ್ತಿರುವುದಾಗಿ ತನಗೆ ಮಾಹಿತಿ ನೀಡಿದರ ಮೇರೆಗೆ, ಠಾಣಾ ಸಿಬ್ಬಂದಿಯಾದ ಸಿ.ಪಿ.ಸಿ-198 ನಾಗೇಶ್ ಸಿ,ಎಚ್,ಸಿ-102 ಆನಂದ, ಸಿ,ಪಿ,ಸಿ-408 ರಮೇಶ್, ಕರೆಯಿಸಿಕೊಂಡು ಸಿಬ್ಬಂದಿಯವರಿಗೆ ಮಾಹಿತಿಯನ್ನು ತಿಳಿಸಿ ಸರ್ಕಾರಿ ಜೀಪು ಸಂಖ್ಯೆ-ಕೆ,ಎ-40 ಜಿ-1888 ರಲ್ಲಿ ಚಾಲಕ ಎ,ಎಚ್,ಸಿ-43 ವೆಂಕಟಾಚಲ ರವರೊಂದಿಗೆ ಮದ್ಯಾಹ್ನ 3-00 ಗಂಟೆಗೆ ಗುಡಿಬಂಡೆ ಪೊಲೀಸ್ ಠಾಣೆಯಿಂದ ಬಿಟ್ಟು ಮದ್ಯಾಹ್ನ 3.30 ಗಂಟೆಗೆ ಸೋಮೇಶ್ವರ ಗ್ರಾಮಕ್ಕೆ ಹೋಗಿ, ಗ್ರಾಮದಲ್ಲಿದ್ದ ಸಿ,ಪಿ,ಸಿ-89 ಮಂಜುನಾಥ ರವರನ್ನು ಕರೆದುಕೊಂಡು ಹಾಗೂ ಸೋಮೇಶ್ವರ ಗ್ರಾಮದ ಬಸ್ ನಿಲ್ದಾಣದ ಬಳಿಯಿದ್ದ ಪಂಚರನ್ನು ಬರಮಾಡಿಕೊಂಡು ಸೋಮೇಶ್ವರ ಗ್ರಾಮದ ಕರೆ ಬಳಿಯಿಂದ ಸ್ವಲ್ಪ ದೂರದಲ್ಲಿ ಜೀಪ್ ನ್ನು ನಿಲ್ಲಿಸಿ ಮರೆಯಲ್ಲಿ ನಿಂತು ನೋಡಲಾಗಿ, ಕೆಲ ಮಂದಿ ಗುಂಪಾಗಿ ಕುಳಿತುಕೊಂಡು ಅಂದರ್-200 ಬಾಹರ್-200 ಎಂದು ಜೂಜಾಟ ಆಡುತ್ತಿರುವುದನ್ನು ಖಚಿತಪಡಿಸಿಕೊಂಡು ಸದರಿಯವರ ಮೇಲೆ ಪಂಚರ ಸಮಕ್ಷಮ ಸಿಬ್ಬಂದಿಯೊಂದಿಗೆ ಸಂಜೆ 3.50 ಗಂಟೆಗೆ ದಾಳಿ ಮಾಡಿದಾಗ, ಜೂಜಾಟವನ್ನು ಆಡುತ್ತಿದ್ದವರು ಓಡಿ ಹೋಗಿದ್ದು ಓಡಿ ಹೋದವರ  ಪೈಕಿ ನಾವುಗಳು ಕೆಲವರನ್ನು ವಶಕ್ಕೆ ಪಡೆದುಕೊಂಡು ಹೆಸರು & ವಿಳಾಸ ಕೇಳಲಾಗಿ 1) ಮಾಬು ಸಾಬ್ ಬಿನ್ ಲೆಟ್ ರೆಹಮಾನ್. 36 ವರ್ಷ, ಮುಸ್ಲೀಂ ಜನಾಂಗ, ಚಾಲಕ, ವಾಸ: ಸೋಮೇಶ್ವರ ಗ್ರಾಮ, ಗುಡಿಬಂಡೆ ತಾಲೂಕು, 2)ವೆಂಕಟಪತಿ ಬಿನ್ ತಿಮ್ಮಪ್ಪ 30 ವರ್ಷ, ಬಲಜಿಗರು ಜನಾಂಗ, ಕೂಲಿ ಕೆಲಸ ವಾಸ:ಸೋಮೇಶ್ವರ ಗ್ರಾಮ, ಗುಡಿಬಂಡೆ ತಾಲೂಕು 3) ಸುಬ್ಬರೆಡ್ಡಿ ಬಿನ್ ರಾಮಸ್ವಾಮಿ 50 ವರ್ಷ, ಬಲಜಿಗರು, ಕೂಲಿ ಕೆಲಸ ವಾಸ: ಸೋಮೇಶ್ವರ ಗ್ರಾಮ ಗುಡಿಬಂಡೆ ತಾಲ್ಲೂಕು ಎಂದು ತಿಳಿಸಿರುತ್ತಾರೆ. ಓಡಿ ಹೋದವರ ಹೆಸರು ಮತ್ತು ವಿಳಾಸ ಕೇಳಲಾಗಿ 1) ರವಿ ಬಿನ್ ಸುಬ್ಬರಾಯಪ್ಪ 40 ವರ್ಷ, ಬ್ರಾಹ್ಮಣರು ಅರ್ಚಕರು, ವಾಸ: ಸೋಮೇಶ್ವರ ಗ್ರಾಮ, ಗುಡಿಬಂಡೆ ತಾಲ್ಲೂಕು, ನಂತರ ಪಂಚರ ಸಮಕ್ಷಮ ವಶದಲ್ಲಿ ಆಸಾಮಿಗಳನ್ನು ಪರಿಶೀಲನೆ ಮಾಡಲಾಗಿ 1) ಮಾಬುಸಾಬ್ ರವರ ಬಳಿ 500 ರೂ 2) ವೆಂಕಟಪತಿ ರವರ ಬಳಿ 350/- ರೂ 3)ಸುಬ್ಬರೆಡ್ಡಿ ರವರ ಬಳಿ 1900/- ರೂ ಇದ್ದು ಒಟ್ಟು ಲೆಕ್ಕ ಮಾಡಲಾಗಿ 2750/- ರೂ ಗಳಿದ್ದು ಸ್ಥಳದಲ್ಲಿ 52 ಇಸ್ಪೀಟ್ ಎಲೆಗಳು ಚೆಲ್ಲಾ ಪಿಲ್ಲಿಯಾಗಿ ಬಿದ್ದಿದ್ದು ನಂತರ ಜೂಜಾಟಕ್ಕೆ ಪಣಕ್ಕೆ ಇಟ್ಟಿದ್ದ 2750/- ರೂ & 52 ಇಸ್ಪೀಟ್ ಎಲೆಗಳನ್ನು ಪಂಚರ ಸಮಕ್ಷಮ ಸಂಜೆ 4-00 ಗಂಟೆಯಿಂದ ಸಂಜೆ 5-00 ಗಂಟೆಯವರೆಗೆ  ಜರುಗಿಸಿದ ಧಾಳಿ ಪಂಚನಾಮೆ ಕಾಲದಲ್ಲಿ ಅಮಾನತ್ತುಪಡಿಸಿಕೊಂಡಿರುತ್ತೆ. ಮೇಲ್ಕಂಡ ಆರೋಪಿತರನ್ನು & ಮಾಲುಗಳನ್ನು ಅಸಲು ಪಂಚನಾಮೆಯೊಂದಿಗೆ ಸಂಜೆ 5-45 ಗಂಟೆಗೆ ಬಂದು ವರದಿಯನ್ನು ಸಿದ್ದಪಡಿಸಿ ಸಂಜೆ 6-15 ಗಂಟೆಗೆ ಹಾಜರುಪಡಿಸಿ ಸದರಿ ಆರೋಪಿತರ ವಿರುದ್ದ ಮುಂದಿನ ಕಾನೂನು ಕ್ರಮ ಕೈಗೊಳ್ಳಲು ಸೂಚಿಸಿರುತ್ತೆ.

 1. ಮಂಚೇನಹಳ್ಳಿ ಪೊಲೀಸ್ ಠಾಣೆ ಮೊ.ಸಂ.205/2020 ಕಲಂ: 20B NARCOTIC DRUGS AND PSYCHOTROPIC SUBSTANCES ACT, 1985:-

          ದಿನಾಂಕ:15/09/2020 ರಂದು ಪಿ.ಎಸ್.ಐ ರವರು ಪಿ.ಸಿ.28 ರವರ ಮುಖಾಂತರ ಕಳುಹಿಸಿದ ದೂರಿನ ಸಾರಾಂಶವೇನೆಂದರೆ ಈ ದಿನ ದಿನಾಂಕ: 15/09/2020 ರಂದು ಬೆಳಿಗ್ಗೆ 9-00 ಗಂಟೆಯಲ್ಲಿ ನಾನು ಠಾಣೆಯಲ್ಲಿ ಕರ್ತವ್ಯದಲ್ಲಿದ್ದಾಗ ನನಗೆ ಬಾತ್ಮಿದಾರರಿಂದ ಬಂದ ಖಚಿತ ಮಾಹಿತಿ ಏನೆಂದರೆ ಚಿಕ್ಕಬಳ್ಳಾಪುರ ತಾಲ್ಲೂಕು, ಮಂಡಿಕಲ್ ಹೋಬಳಿ ಯರ್ರನಾಗೇನಹಳ್ಳಿ ಗ್ರಾಮದ ವಾಸಿಗಳಾದ ಲಕ್ಷ್ಮಿಪತಿ ಬಿನ್ ವೆಂಕಟರೆಡ್ಡಿ ಮತ್ತು ಕೃಷ್ಣಪ್ಪ ಬಿನ್ ಲೇಟ್ ರಾಮಸ್ವಾಮಿ ಎಂಬುವರು ಮಾದಕ ವಸ್ತುವಾದ ಗಾಂಜಾವನ್ನು ಗ್ರಾಹಕರಿಗೆ ಅಕ್ರಮವಾಗಿ ಮಾರಾಟ ಮಾಡುವ ಉದ್ದೇಶದಿಂದ ಪ್ಲಾಸ್ಟಿಕ್ ಚೀಲದಲ್ಲಿ ತೆಗೆದುಕೊಂಡು ಡಿಪಾಳ್ಯ ಹೋಬಳಿ ವೆಂಕಟಾಪುರ ಮಾರ್ಗವಾಗಿ ನಡೆದುಕೊಂಡು ಬರುತ್ತಿರುವುದಾಗಿ ಬಂದ ಖಚಿತ ಬಾತ್ಮಿಯ ಮೇರೆಗೆ ದಾಳಿ ಮಾಡಲು ಮಾನ್ಯ ಪೊಲೀಸ್ ಅಧೀಕ್ಷಕರು ಚಿಕ್ಕಬಳ್ಳಾಪುರ ಜಿಲ್ಲೆ ರವರ ಅನುಮತಿಯನ್ನು ಪಡೆದುಕೊಂಡು ಠಾಣೆಯ ಸಿಬ್ಬಂದಿಗಳಾದ ಹೆಚ್.ಸಿ 219, ಶ್ರೀನಿವಾಸಮೂರ್ತಿ, ಹೆಚ್.ಸಿ 76, ಹನುಮಂತಪ್ಪ ಮತ್ತು ಪಿಸಿ 532 ಚಿಕ್ಕಣ್ಣ, ಪಿಸಿ 28 ಅಶ್ವತ್ಥನಾಯ್ಕ್ ರವರನ್ನು ಕರೆದುಕೊಂಡು ಕೆ.ಎ-40 ಜಿ-395 ರಲ್ಲಿ  ಜೀಪ್ ಚಾಲಕ ಎಪಿಸಿ 120 ನಟೇಶ್ ರವರೊಂದಿಗೆ ಬಿ ಬೊಮ್ಮಸಂದ್ರ ಮಾರ್ಗವಾಗಿ ಚೀಲಂನಹಳ್ಳಿ ಗ್ರಾಮದ ಫಾರೆಸ್ಟ್ ಜಾಗದ ಬಳಿ ಕಾಯುತ್ತಿದ್ದಾಗ ಬೆಳಿಗ್ಗೆ 11-00 ಗಂಟೆಯಲ್ಲಿ ವೆಂಕಟಾಪುರ ಬಿ.ಬೊಮ್ಮಸಂದ್ರ ರಸ್ತೆಯಲ್ಲಿ ಚೀಲಂನಹಳ್ಳಿ ಗ್ರಾಮದ ಮೋರಿಯ ಹತ್ತಿರ ಯಾರೋ ಇಬ್ಬರು ಅಸಾಮಿಗಳು ನಡೆದುಕೊಂಡು ಬರುತ್ತಿದ್ದು ಆ ಪೈಕಿ ಒಬ್ಬ ವ್ಯಕ್ತಿಯು ತನ್ನ ಕೈಯಲ್ಲಿ ಒಂದು ಪ್ಲಾಸ್ಟಿಕ್ ಚೀಲವನ್ನು ಹಿಡಿದುಕೊಂಡು ಬರುತ್ತಿದ್ದನು ಸಿಬ್ಬಂದಿಗಳು ಆ ಇಬ್ಬರನ್ನು ಹಿಡಿದುಕೊಳ್ಳಲು ಹೋದಾಗ ಓಡಿ ಹೋಗಲು ಪ್ರಯತ್ನಿಸಿದ್ದು ಸಿಬ್ಬಂದಿಗಳು ಅವರನ್ನು ಬೆನ್ನಟ್ಟಿ ಹೆಚ್.ಸಿ 219 ಶ್ರೀನಿವಾಸಮೂರ್ತಿ ರವರು ಒಬ್ಬ ವ್ಯಕ್ತಿಯನ್ನು ಮತ್ತು ಆತನ ಕೈಯಲ್ಲಿದ್ದ ಚೀಲದ ಸಮೇತ ಹಿಡಿದುಕೊಂಡು ಬಂದಿದ್ದು ಆತನ ಹೆಸರು ಮತ್ತು ವಿಳಾಸ ಕೇಳಲಾಗಿ ಲಕ್ಷ್ಮಿಪತಿ ಬಿನ್ ವೆಂಕಟರೆಡ್ಡಿ, 28 ವರ್ಷ, ವಕ್ಕಲಿಗರು, ಜಿರಾಯ್ತಿ ಕೆಲಸ, ವಾಸ ಯರ್ರನಾಗೇನಹಳ್ಳಿ ಗ್ರಾಮ, ಮಂಡಿಕಲ್ ಹೋಬಳಿ, ಚಿಕ್ಕಬಳ್ಳಾಪುರ ತಾಲ್ಲೂಕು ಎಂದು ತಿಳಿಸಿದ್ದು ಮತ್ತೊಬ್ಬ ವ್ಯಕ್ತಿಯನ್ನು ಪಿಸಿ 532 ಚಿಕ್ಕಣ್ಣ ರವರು ಹಿಡಿದುಕೊಂಡು ಬಂದಿದ್ದು ಹೆಸರು ಮತ್ತು ವಿಳಾಸ ಕೇಳಲಾಗಿ ರಾಮಕೃಷ್ಣಪ್ಪ ಬಿನ್ ಲೇಟ್ ರಾಮಸ್ವಾಮಿ, 65 ವರ್ಷ, ಜಿರಾಯ್ತಿ, ಒಕ್ಕಲಿಗರು, ವಾಸ ಯರ್ರನಾಗೇನಹಳ್ಳಿ ಗ್ರಾಮ, ಮಂಡಿಕಲ್ ಹೋಬಳಿ, ಚಿಕ್ಕಬಳ್ಳಾಪುರ ತಾಲ್ಲೂಕು ಎಂದು ತಿಳಿಸಿದ್ದು ಚೀಲವನ್ನು ಪರಿಶೀಲಿಸಲಾಗಿ ಚೀಲದಲ್ಲಿ ಮಾದಕ ವಸ್ತು ಒಣ ಗಾಂಜಾ ಇದ್ದು ಸದರಿ ಗಾಂಜಾವನ್ನು ಅಮಾನತ್ತುಪಡಿಸಿಕೊಂಡು ಮುಂದಿನ ಕ್ರಮ ಜರುಗಿಸಬೇಕಾಗಿದ್ದು, ಸದರಿ ವರದಿಯನ್ನು ಮುಂದಿನ ಕ್ರಮಕ್ಕಾಗಿ ಪಿ.ಸಿ.28 ಅಶ್ವತ್ಥನಾಯಕ ರವರೊಂದಿಗೆ ಕಳುಹಿಸಿದ್ದು, ಈ ಬಗ್ಗೆ  ಪ್ರಕರಣ ದಾಖಲಿಸಲು ಸೂಚಿಸಿ ನೀಡಿದ ದೂರು.

 1. ನಂದಿಗಿರಿಧಾಮ ಪೊಲೀಸ್ ಠಾಣೆ ಮೊ.ಸಂ.59/2020 ಕಲಂ:87 ಕೆ.ಪಿ ಆಕ್ಟ್:-

          ದಿನಾಂಕ 14-09-2020 ರಂದು ಸಂಜೆ 19-05 ಗಂಟೆಗೆ ಪಿಎಸೈರವರಾದ ಶ್ರೀ ಬಿಕೆ ಪಾಟೀಲ್ ರವರು ದಾಳಿ ನಡೆಸಿ ವಶಕ್ಕೆ ಪಡೆದಿದ್ದ ಇಬ್ಬರು ಆರೋಫಿತರು, ಮಾಲು ಮತ್ತು ಪಂಚನಾಮೆಯನ್ನು ಹಾಜರ್ಪಡಿಸಿ ಆರೋಪಿತರ ವಿರುದ್ದ ಕಾನೂನು ರೀತ್ಯಾ ಕ್ರಮವನ್ನು ಜರುಗಿಸಲು ನೀಡಿದ ಜ್ಞಾಪನದ ಸಾರಾಂಶವೇನೆಂದರೆ ದಿನಾಂಕ:14/09/2020 ರಂದು ಸಂಜೆ ಸಮಯದಲ್ಲಿ ತಾನು ಠಾಣೆಯ ಸಿಬ್ಬಂದಿಯಾದ ಪಿಸಿ-517 ಅಂಬರೀಷ, ಪಿಸಿ-269 ನಾಗಪ್ಪ, ಪಿಸಿ-240 ಮಧುಸೂಧನ್, ಪಿಸಿ-314 ಜವರಪ್ಪ ರವರೊಂದಿಗೆ ಠಾಣಾ ಸರಹದ್ದಿನಲ್ಲಿ ಗಸ್ತು ಮಾಡಿಕೊಂಡು ನಂದಿ ಗ್ರಾಮದಲ್ಲಿ ಗಸ್ತು ಮಾಡುತ್ತಿದ್ದಾಗ ಸಂಜೆ 5:20 ಗಂಟೆ ಸಮಯದಲ್ಲಿ ಬಾತ್ಮಿದಾರರಿಂದ ನನಗೆ ಬಂದ ಖಚಿತ ಮಾಹಿತಿ ಏನೆಂದರೆ ಚಿಕ್ಕಬಳ್ಳಾಪುರ ತಾಲ್ಲೂಕು, ನಂದಿ ಹೋಬಳಿಯ, ಮೊಡುಕುಹೊಸಹಳ್ಳಿ ಗ್ರಾಮದಲ್ಲಿ ರಾಮ ಮತ್ತು ಲಕ್ಷಣ ರವರ ಜಮೀನಿನ ಪಕ್ಕದಲ್ಲಿರುವ ಸರ್ಕಾರಿ ಹಳ್ಳದಲ್ಲಿ ಗಿಡಗಳ ಮೊರೆಯಲ್ಲಿ ಯಾರೋ ಅಸಾಮಿಗಳು ಅಂದರ್-ಬಾಹರ್ ಇಸ್ಪೀಟ್ ಜೂಜಾಟವಾಡುತ್ತಿರುವುದಾಗಿ ಬಂದ ಬಾತ್ಮಿ ಮೇರೆಗೆ ಸದರಿ ಅಂದರ್ ಬಾಹರ್ ಜೂಜಾಟದ ಮೇಲೆ ದಾಳಿ ನಡೆಸಿ ವಶಕ್ಕೆ ಪಡೆಯಲು ಸುಲ್ತಾನಪೇಟೆ ಗ್ರಾಮದಲ್ಲಿ ಸಂಜೆ 5:25 ಪಂಚರನ್ನು ಬರಮಾಡಿಕೊಂಡು ಅವರಿಗೆ ಈ ಮೇಲ್ಕಂಡ ವಿಚಾರ ತಿಳಿಸಿ ಅಂದರ್-ಬಾಹರ್ ಇಸ್ಫೀಟ್ ಜೂಜಾಟದ ಮೇಲೆ ದಾಳಿ ಮಾಡಲು ನಮ್ಮೊಂದಿಗೆ ಪಂಚರಾಗಿ ಸಹಕರಿಸಲು ಕೋರಿದ್ದರ ಮೇರೆಗೆ ಅವರು ಪಂಚರಾಗಲು ಒಪ್ಪಿದ್ದು ಪಂಚರು ಹಾಗೂ ಪೊಲೀಸ್ ಸಿಬ್ಬಂದಿಯೊಂದಿಗೆ ಸಂಜೆ 5:40 ಗಂಟೆಗೆ ಹೋಗಿ ಜೂಜಾಟವಾಡುತ್ತಿದ್ದ ಸ್ಥಳದಿಂದ ಸ್ವಲ್ಪ ದೂರದಲ್ಲಿ ಜೀಪನ್ನು ನಿಲ್ಲಿಸಿ ಮೊರೆಯಲ್ಲಿ ನಿಂತು ನೋಡಲಾಗಿ ಸುಮಾರು ಜನರು ಗುಂಪಾಗಿ ಕುಳಿತುಕೊಂಡು ಕೆಲವರು ಅಂದರ್ಗೆ 100/-ರೂ ಗಳೆಂದು, ಇನ್ನೂ ಕೆಲವರು ಬಾಹರ್ 100/- ರೂ ಗಳೆಂದು ಕೂಗುತ್ತ ಹಣವನ್ನು ಪಣವಾಗಿಟ್ಟು ಅಂದರ್-ಬಾಹರ್ ಇಸ್ಪೀಟ್ ಜೂಜಾಟವಾಡುತಿದ್ದನ್ನು ಖಚಿತ ಪಡಿಸಿಕೊಂಡು ಅವರ ಮೇಲೆ ಒಮ್ಮಲೇ ದಾಳಿ ಮಾಡಿ ಮೇಲೆಕ್ಕೆ ಏಳದಂತೆ ಸೂಚನೆ ನೀಡಿದಾಗಲು ಸಹ ಇಸ್ಪಿಟ್ ಜೂಜಾಟವಾಡುತ್ತಿದ್ದ ನಾಲ್ಕು ಜನರು ಸ್ಥಳದಿಂದ ಓಡಿ ಹೋಗಿದ್ದು ಅವರನ್ನು ಜೊತೆಯಲ್ಲಿದ್ದ ಸಿಬ್ಬಂದಿ ಬೆನ್ನಟ್ಟಿ ಇಬ್ಬರನ್ನು ವಶಕ್ಕೆ ಪಡೆದುಕೊಂಡಿದ್ದು ಉಳಿದ ಇಬ್ಬರು ಅಸಾಮಿಗಳು ಸಿಗದೆ ಓಡಿ ಹೋದರು ವಶಕ್ಕೆ ಪಡೆದುಕೊಂಡಿದ್ದ ಇಬ್ಬರ ಹೆಸರು ಮತ್ತು ವಿಳಾಸ ಕೇಳಲಾಗಿ 1) ರಾಮಮೂತರ್ಿ ಬಿನ್ ಲೇಟ್ ನಂಜಪ್ಪ, 48 ವರ್ಷ, ಜಿರಾಯ್ತಿ, ಒಕ್ಕಲಿಗರು, ಜಿರಾಯ್ತಿ, ವಾಸ: ಚನ್ನಾಪುರ ಗ್ರಾಮ, ದೊಡ್ಡಬಳ್ಳಾಪುರ ತಾಲ್ಲೂಕು, 2) ಜಗದೀಶ್ ಕುಮಾರ್ ಬಿನ್ ಮುನಿಯಪ್ಪ, 42 ವರ್ಷ, ಒಕ್ಕಲಿಗರು, ಜಿರಾಯ್ತಿ, ವಾಸ: ಅಂಗಟ್ಟ ಗ್ರಾಮ, ಚಿಕ್ಕಬಳ್ಳಾಪುರ ತಾಲ್ಲೂಕು ಎಂದು ತಿಳಿಸಿರುತ್ತಾರೆ. ಸದರಿ ರವರುಗಳನ್ನು ಓಡಿ ಹೋದ ಅಸಾಮಿಗಳ ಹೆಸರು, ವಿಳಾಸ ಕೇಳಲಾಗಿ 1) ಅಶೋಕ,  ಸುಮಾರು 37 ವರ್ಷ, ಜಿರಾಯ್ತಿ, ವಾಸ: ಕುರುಬರಹಳ್ಳಿ ಗ್ರಾಮ, ದೊಡ್ಡಬಳ್ಳಾಪುರ ತಾಲ್ಲೂಕು, 2) ಶಂಕರ್, ಸುಮಾರು 30 ವರ್ಷ, ಮೆಲೇಕೋಟೆ ಕ್ರಾಸ್, ದೊಡ್ಡಬಳ್ಳಾಪುರ ತಾಲ್ಲೂಕು ಎಂದು ತಿಳಿಸಿರುತ್ತಾರೆ. ಜೂಜಾಟದ ಸ್ಥಳದಲ್ಲಿ ಇಸ್ಪೀಟ್ ಎಲೆಗಳು ಮತ್ತು ಹಣವು ಪ್ಲಾಸ್ಟಿಕ್ ಚೀಲದ ಮೇಲೆ ಇದ್ದು ಇದ್ದಂತಹ ಇಸ್ಪೀಟ್ ಎಲೆಗಳನ್ನು ಮತ್ತು ಹಣವನ್ನು ಜೊಡಿಸಿ ಎಣಿಕೆ ಮಾಡಲಾಗಿ 52 ಇಸ್ಪೀಟ್ ಎಲೆಗಳು ಮತ್ತು 2200/- ರೂ ನಗದು ಹಣ ಇರುತ್ತೆ. ಸದರಿ 52 ಇಸ್ಪೀಟ್ ಎಲೆಗಳನ್ನು, 2200/- ರೂ ನಗದು ಹಣವನ್ನು ಹಾಗೂ ಪ್ಲಾಸ್ಟಿಕ್ ಚೀಲವನ್ನು ಸಂಜೆ 5:50 ಗಂಟೆಯಿಂದ ಸಂಜೆ 6:40 ಗಂಟೆಯವರೆಗೆ ವಿದ್ಯುತ್ ಬೆಳಕಿನಲ್ಲಿ ಪಂಚನಾಮೆಯ ಮೂಲಕ ಅಮಾನತ್ತು ಪಡಿಸಿಕೊಂಡು ಆರೋಪಿಗಳನ್ನು ಮತ್ತು ಸ್ವತ್ತುಗಳನ್ನು ವಶಕ್ಕೆ ಪಡೆದು ಮುಂದಿನ ಕ್ರಮಕ್ಕಾಗಿ ಸಂಜೆ 7:05 ಗಂಟೆಗೆ ಠಾಣೆಗೆ ಬಂದಿರುತ್ತೆ. ಈ ಬಗ್ಗೆ ಮುಂದಿನ ಕಾನೂನು ಕ್ರಮ ಜರುಗಿಸಲು ಸೂಚಿಸಿದ್ದರ ಮೇರೆಗೆ ಈ ಪ್ರ.ವ.ವರದಿ.

 1. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.254/2020 ಕಲಂ: 279,304(A) ಐ.ಪಿ.ಸಿ & 187 ಐ.ಎಂ.ವಿ ಆಕ್ಟ್:-

          ದಿನಾಂಕ:15-09-2020 ರಂದು ಬೆಳಿಗ್ಗೆ 9-00 ಗಂಟೆಯಲ್ಲಿ ಪಿರ್ಯಾದಿದಾರರಾದ ನಟರಾಜ ಬಿನ್ ನಾಗರಾಜ,ಸುಮಾರು 35  ವರ್ಷ, ವಕ್ಕಲಿಗರು,ಜಿರಾಯ್ತಿ,ವಾಸ:ದೊಣ್ಣಹಳ್ಳಿ ಗ್ರಾಮ ಶಿಡ್ಲಘಟ್ಟ ತಾಲ್ಲೂಕು. ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ತಮ್ಮ ಗ್ರಾಮದ ಪಕ್ಕದ ಮನೆಯ ವಾಸಿಯಾದ ಬ್ರಾಹ್ಮಣ ಜನಾಂಗದ ನರಸರಾಮಶಾಸ್ತ್ರಿ  ಮತ್ತು ಆತನ ಹೆಂಡತಿ ನರಸಮ್ಮ ಇವರಿಗೆ 4 ಜನ ಗಂಡು ಮಕ್ಕಳು ಒಂದು ಹೆಣ್ಣು ಮಗಳಾಗಿದ್ದು  ಎಲ್ಲರೂ ಬೇರೆ ಕಡೆ ವಾಸವಾಗಿದ್ದು  ನರಸರಾಮಶಾಸ್ತ್ರಿ ರವರ ಜೊತೆಯಲ್ಲಿ  ಕೊನೆಯ ಮಗನಾದ ಸುಮಾರು 40 ವರ್ಷದ ಕೇಶವಮೂರ್ತಿ ರವರು ವಾಸವಾಗಿರುತ್ತಾನೆ. ಕೇಶವಮೂರ್ತಿ ಮಾನಸಿಕ ಅಸ್ವಸ್ಥನಾಗಿದ್ದು ಇನ್ನೂ ಮದುವೆಯಾಗಿರುವುದಿಲ್ಲ ಎಲ್ಲಿ ಅಂದರೆ ಅಲ್ಲಿ ಹೋಗಿ ಓಡಾಡಿಕೊಂಡು ಬರುತ್ತಿದ್ದನು .ನರಸರಾಮಶಾಸ್ತ್ರಿ  ರವರಿಗೆ ಸೊಂಟ ಮುರಿದು ಹೋಗಿದ್ದು  ಓಡಾಡಲು ಆಗುವುದಿಲ್ಲ ಮತ್ತು ಆತನ ಹೆಂಡತಿ ನರಸಮ್ಮ  ರವರಿಗೆ ಒಂದು ಕಾಲು ಮುರಿದು ಹೋಗಿದ್ದು ಓಡಾಡಲು ಆಗುವುದಿಲ್ಲ. ನರಸಮ್ಮ ರವರು ಸಹ ಮಾನಸಿಕ ಅಸ್ವಸ್ಥಳಾಗಿರುತ್ತಾಳೆ.  ದಿನಾಂಕ:15-09-2020 ರಂದು ಬೆಳಿಗ್ಗೆ 7-00 ಗಂಟೆಯಲ್ಲಿ ತಮ್ಮ ಗ್ರಾಮದ ಶ್ರೀನಿವಾಸ ರವರು ತನಗೆ ದೂರವಾಣಿ ಕರೆ ಮಾಡಿ ನಿಮ್ಮ ಮನೆಯ ಪಕ್ಕದ ವಾಸಿ ಕೇಶವಮೂರ್ತಿ ರವರಿಗೆ ದೊಗರನಾಯಕನಹಳ್ಳಿ ಗ್ರಾಮದ ಬಳಿ ಅಪಘಾತವಾಗಿದ್ದು ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆಂದು ತಿಳಿಸಿದ್ದು ಆಗ ತಾನು ಮತ್ತು ತಮ್ಮ ಗ್ರಾಮದ ವಿಶ್ವನಾಥ ಬಿನ್ ರಾಜಗೋಪಾಲ ರವರು ಬಂದು ನೋಡಲಾಗಿ ವಿಚಾರ ನಿಜವಾಗಿದ್ದು ವಿಚಾರ ತಿಳಿಯಲಾಗಿ ಕೇಶವಮೂರ್ತಿ ಮಾನಸಿಕ ಅಸ್ವಸ್ಥನಾಗಿದ್ದರಿಂದ ಶಿಡ್ಲಘಟ್ಟ ಕಡೆಗಳಲ್ಲಿ ಓಡಾಡಿಕೊಂಡು ವಾಪಸ್ಸು ತಮ್ಮ ಗ್ರಾಮಕ್ಕೆ ಬರಲು ದಿನಾಂಕ:15-09-2020 ರಂದು ಬೆಳಗಿನ ಜಾವ ಸುಮಾರು 5-00 ಗಂಟೆಯಿಂದ ಬೆಳಿಗ್ಗೆ 7-00 ಗಂಟೆಯ ಮದ್ಯೆ ಶಿಡ್ಲಘಟ್ಟ-ಪಲಿಚೇರ್ಲು ರಸ್ತೆಯ ದೊಗರನಾಯಕನಹಳ್ಳಿ  ಗ್ರಾಮದ ಶಿವಣ್ಣ ಬಿನ್ ಅಕ್ಕಲಪ್ಪ  ರವರ ಜಮೀನಿನ ಬಳಿ ರಸ್ತೆಯ ಎಡಬದಿಯಲ್ಲಿಯೇ ನಡೆದುಕೊಂಡು  ಬರುತ್ತಿದ್ದಾಗ  ಶಿಡ್ಲಘಟ್ಟ ಕಡೆಯಿಂದ ಬಂದಂತಹ  ಯಾವುದೋ ಒಂದು ವಾಹನದ ಚಾಲಕ ತನ್ನ ವಾಹನವನ್ನು  ಅತಿವೇಗ ಮತ್ತು ಅಜಾಗರುಕತೆಯಿಂದ ಚಾಲನೆ ಮಾಡಿಕೊಂಡು ಬಂದು  ನಡದುಕೊಂಡು ಬರುತ್ತಿದ್ದ ಕೇಶವಮೂರ್ತಿ  ರವರಿಗೆ  ಡಿಕ್ಕಿ ಹೊಡೆಸಿ ವಾಹನವನ್ನು ಆತನ ಮೇಲೆ ಹತ್ತಿಸಿಕೊಂಡು ಸ್ಥಳದಲ್ಲಿ ನಿಲ್ಲಿಸದೇ ಪರಾರಿಯಾಗಿದ್ದರ  ಪರಿಣಾಮ ಕೇಶವಮೂರ್ತಿ ರವರಿಗೆ  ಬಲ ಮೊಣಕಾಲಿನ ಬಳಿ, ಬಲ ಪಿರ್ರೆಯ ಬಳಿ, ಎಡಕೈಗೆ, ತಲೆಯ ಎಡಭಾಗದಲ್ಲಿ ತೀವ್ರತರಹದ ರಕ್ತಗಾಗಳಾಗಿದ್ದು, ಬಲಕೈಗೆ, ಎಡ ಕಣ್ಣಿನ ಉಬ್ಬಿನ ಮೇಲೆ, ತರುಚಿದ ಗಾಯಗಳಾಗಿದ್ದು ಅಪಘಾತದಲ್ಲಿ  ಉಂಟಾದ ಗಾಯಗಳಿಂದ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ. ನಂತರ ಕೇಶವಮೂರ್ತಿ ರವರ ಮೃತದೇಹವನ್ನು ಯಾವುದೋ ಒಂದು ವಾಹನದಲ್ಲಿ ಹಾಕಿಕೊಂಡು ಬಂದು ಶಿಡ್ಲಘಟ್ಟ  ಸರ್ಕಾರಿ ಆಸ್ಪತ್ರೆಯ ಶವಗಾರದಲ್ಲಿ ಇಟ್ಟಿದ್ದು ಕೇಶವಮೂರ್ತಿ ರವರಿಗೆ  ಅಪಘಾತವುಂಟುಮಾಡಿ ತನ್ನ ಸಾವಿಗೆ ಕಾರಣನಾಗಿ ವಾಹನವನ್ನು ಸ್ಥಳದಲ್ಲಿ ನಿಲ್ಲಿಸದೇ ಪರಾರಿಯಾಗಿರುವ ಚಾಲಕ ಮತ್ತು ವಾಹನವನ್ನು  ಪತ್ತೆ ಮಾಡಿ  ಸದರಿ ಚಾಲಕನ ವಿರುದ್ದ ಕಾನೂನು ರೀತ್ಯ ಕ್ರಮ ಜರುಗಿಸಲು ಕೋರಿ ಕೊಟ್ಟ ದೂರಿನ ಮೇರಗೆ ಠಾಣಾ ಮೊ.ಸಂ :254/2020 ಕಲಂ 279,304(ಎ), ಐ.ಪಿ.ಸಿ ರೆ/ವಿ 187 ಐ.ಎಂ.ವಿ ಆಕ್ಟ್ ರೀತ್ಯಾ ಪ್ರಕರಣ ದಾಖಲಿಸಿಕೊಂಡಿರುತ್ತೆ.