ದಿನಾಂಕ : 15/07/2019ರ ಅಪರಾಧ ಪ್ರಕರಣಗಳು

 1. ಬಾಗೇಪಲ್ಲಿ ಪೊಲೀಸ್ ಠಾಣೆ. ಮೊ.ಸಂ: 189/2019 ಕಲಂ: 15(ಎ),32(3) ಕೆ.ಇ ಆಕ್ಟ್:-

          ದಿ:14-07-2019 ರಂದು ಬೆಳಗ್ಗೆ 11:00 ಗಂಟೆಗೆ ಪಿ.ಎಸ್.ಐ ಸಾಹೇಬರವರು ಠಾಣೆಗೆ ಹಾಜರಾಗಿ ನೀಡಿದ ವರಧಿಯ ಸಾರಾಂಶ – ಈ ದಿನ  ದಿನಾಂಕ:14.07.2019 ರಂದು  ಬೆಳಿಗ್ಗೆ 9:45 ಗಂಟೆ  ಸಮಯದಲ್ಲಿ ಠಾಣೆಯಲ್ಲಿದ್ದಾಗ  ಬಾಗೇಪಲ್ಲಿ  ತಾಲ್ಲೂಕು ಕಸಬಾ ಹೋಬಳಿ ಕೊಂಡರೆಡ್ಡಿಪಲ್ಲಿ ಗ್ರಾಮದ  ಸರ್ಕಾರಿ ಶಾಲೆಯ  ಆವರಣದಲ್ಲಿ  ಇರುವ  ಖಾಲಿ ಜಾಗದ ಬಳಿ ಯಾರೋ ಕೆಲವರು ಕುಳಿತು ಕೊಂಡು  ಕಾನೂನು ಬಾಹಿರವಾಗಿ ಮದ್ಯಪಾನ ಮಾಡುತ್ತಿರುವುದಾಗಿ  ಬಂದ ಖಚಿತ ವರ್ತಮಾನದ ಮೇರೆಗೆ ನಾನು ಮತ್ತು ಸಿಬ್ಬಂದಿಗಳಾದ ಪಿಸಿ-76 ಸುರೇಶ್ ಹಾಗೂ  ಜೀಫ್ ಚಾಲಕ ಎ.ಹೆಚ್.ಸಿ-34 ಅಲ್ತಾಫ್ ಪಾಷಾ ರವರೊಂದಿಗೆ ಸರ್ಕಾರಿ ಜೀಫ್ ಸಂಖ್ಯೆ-ಕೆಎ-40,ಜಿ-537  ವಾಹನದಲ್ಲಿ ಹೋಗಿ ಬಾಗೇಪಲ್ಲಿ  ಪುರದ ಬಸ್ ನಿಲ್ದಾಣದ ಬಳಿ ಇದ್ದ ಪಂಚರನ್ನು ಕರೆದು ವಿಚಾರವನ್ನು  ತಿಳಿಸಿ  ಮೇಲ್ಕಂಡ ಸ್ಥಳದಲ್ಲಿ ದಾಳಿಮಾಡಲು  ಪಂಚರಾಗಿ ಬಂದು  ಪಂಚನಾಮೆಗೆ ಸಹಕರಿಸಲು ಕೋರಿದ್ದರ ಮೇರೆಗೆ ಅವರುಗಳು ಒಪ್ಪಿಕೊಂಡಿದ್ದು. ಅದರಂತೆ  ನಾವುಗಳು ಮತ್ತು ಪಂಚರು  ಮೇಲ್ಕಂಡ ಸ್ಥಳಕ್ಕೆ ಬೆಳಿಗ್ಗ  10:00 ಗಂಟೆಗೆ ಹೋಗಿ ನೋಡಲಾಗಿ  ಯಾರೋ ಕೆಲವರು ಕಾನೂನು ಬಾಹಿರವಾಗಿ ಕುಳಿತುಕೊಂಡು ಮದ್ಯಪಾನ ಮಾಡುತ್ತಿದ್ದವರು  ಸಮವಸ್ತ್ರದಲ್ಲಿದ್ದ  ನಮ್ಮನ್ನು ನೋಡಿ  ಓಡಿ ಹೋಗಲು ಪ್ರಯತ್ನಿಸಿದ್ದು, ಆ ಫೈಕಿ ಒಬ್ಬ ಆಸಾಮಿಯನ್ನು ನಾವು ಸುತ್ತುವರೆದು ಹಿಡಿದುಕೊಂಡಿದ್ದು, ನಂತರ ಪಂಚರ ಸಮಕ್ಷಮ  ನಾವು ಸದರಿ ಸ್ಥಳದಲ್ಲಿ  ಪರಿಶೀಲಿಸಲಾಗಿ  90 ಎಂ.ಎಲ್. ನ Haywards Cheers Whisky  ಯ  03 ಖಾಲಿ ಟೆಟ್ರಾ ಪ್ಯಾಕೇಟ್ ಗಳು ಮತ್ತು  ಒಂದು ಲೀಟರ್ ನ 2 ಖಾಲಿ ವಾಟರ್ ಬಾಟಲ್ ಮತ್ತು ಮದ್ಯಸೇವನೆ ಮಾಡಿರುವ  04 ಖಾಲಿ  ಪ್ಲಾಸ್ಟಿಕ್ ಗ್ಲಾಸ್ ಗಳು ಮದ್ಯ ತುಂಬಿರುವ 90 ಎಂ.ಎಲ್. ನ Haywards Cheers Whisky 02 ಟೆಟ್ರಾ ಪ್ಯಾಕೇಟ್ ಗಳು ಇದ್ದು, ಒಟ್ಟು 0.180 ಎಮ್.ಎಲ್ ಮದ್ಯವಿದ್ದು ಸದರಿ ಮದ್ಯದ ಅಂದಾಜು ಮೌಲ್ಯ 70/- ರೂಪಾಯಿಗಳಾಗಿರುತ್ತದೆ. ವಶಕ್ಕೆ ಪಡೆದ  ಸದರಿ ಆಸಾಮಿಯ ಹೆಸರು ಮತ್ತು ವಿಳಾಸವನ್ನು ಕೇಳಲಾಗಿ   ಆದಿನಾರಾಯಣಸ್ವಾಮಿ ಬಿನ್ ಅಶ್ವತ್ಥಪ್ಪ, 40 ವರ್ಷ, ಒಕ್ಕಲಿಗರು, ಕೂಲಿಕೆಲಸ, ವಾಸ: ಯಂಡ್ರಕಾಯಲಪಲ್ಲಿ ಗ್ರಾಮ, ಕಸಬಾ ಹೋಬಳಿ, ಬಾಗೇಪಲ್ಲಿ ತಾಲ್ಲೂಕು ಎಂದು ತಿಳಿಸಿದ್ದು,ಸದರಿಯವರಿಗೆ ಕಾನೂನು ಬಾಹಿರವಾಗಿ ಮದ್ಯಪಾನ ಮಾಡಲು ಯಾವುದಾದರು ಪರವಾನಿಗೆ ಇದೆಯೇ ಎಂದು ಕೇಳಲಾಗಿ ಯಾವುದೇ ಪರವಾನಿಗೆ ಇಲ್ಲವೆಂದು ತಿಳಿಸಿದ್ದು,  ಮೇಲ್ಕಂಡ ಮಾಲುಗಳನ್ನು  ಪಂಚರ ಸಮಕ್ಷಮ  ಪಂಚನಾಮೆ ಮೂಲಕ   ಅಮಾನತ್ತು ಪಡಿಸಿಕೊಂಡು ಮಾಲು ಮತ್ತು ಆರೋಪಿಯೊಂದಿಗೆ ಮದ್ಯಾಹ್ನ 11:00 ಗಂಟೆಗೆ ಠಾಣೆಗೆ ಹಾಜರಾಗಿ ಮುಂದಿನ ಕ್ರಮಕ್ಕಾಗಿ  ಠಾಣಾಧಿಕಾರಿಗಳಿಗೆ  ವರಧಿಯನ್ನು  ನೀಡಿರುತ್ತೇನೆ, ಎಂದು ಇದ್ದ ದೂರಿನ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿರುತ್ತೆ.

 1. ಬಾಗೇಪಲ್ಲಿ ಪೊಲೀಸ್ ಠಾಣೆ. ಮೊ.ಸಂ: 190/2019 ಕಲಂ: 15(ಎ),32(3) ಕೆ.ಇ ಆಕ್ಟ್:-

          ದಿ:14-07-2019 ರಂದು ಮದ್ಯಾಹ್ನ 12:30 ಗಂಟೆಗೆ ಪಿ.ಎಸ್.ಐ ಸಾಹೇಬರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶ –  ಈ ದಿನ  ದಿನಾಂಕ:14.07.2019 ರಂದು  ಬೆಳಿಗ್ಗೆ 11-00 ಗಂಟೆ  ಸಮಯದಲ್ಲಿ ಠಾಣೆಯಲ್ಲಿದ್ದಾಗ  ಬಾಗೇಪಲ್ಲಿ  ತಾಲ್ಲೂಕು ಕಸಬಾ ಹೋಬಳಿ ಘಂಟಂವಾರಿಪಲ್ಲಿ ಗ್ರಾಮದ  ಸರ್ಕಾರಿ ಶಾಲೆಯ  ಆವರಣದಲ್ಲಿ  ಇರುವ  ಖಾಲಿ ಜಾಗದ ಬಳಿ ಯಾರೋ ಕೆಲವರು ಕುಳಿತು ಕೊಂಡು  ಕಾನೂನು ಬಾಹಿರವಾಗಿ ಮದ್ಯಪಾನ ಮಾಡುತ್ತಿರುವುದಾಗಿ  ಬಂದ ಖಚಿತ ವರ್ತಮಾನದ ಮೇರೆಗೆ ನಾನು ಮತ್ತು ಸಿಬ್ಬಂದಿಗಳಾದ ಪಿಸಿ-76 ಸುರೇಶ್ ಹಾಗೂ  ಜೀಫ್ ಚಾಲಕ ಎ.ಹೆಚ್.ಸಿ-34 ಅಲ್ತಾಫ್ ಪಾಷಾ ರವರೊಂದಿಗೆ ಸರ್ಕಾರಿ ಜೀಫ್ ಸಂಖ್ಯೆ-ಕೆಎ-40,ಜಿ-537  ವಾಹನದಲ್ಲಿ ಹೋಗಿ ಬಾಗೇಪಲ್ಲಿ  ಪುರದ ಬಸ್ ನಿಲ್ದಾಣದ ಬಳಿ ಇದ್ದ ಪಂಚರನ್ನು ಕರೆದು ವಿಚಾರವನ್ನು  ತಿಳಿಸಿ  ಮೇಲ್ಕಂಡ ಸ್ಥಳದಲ್ಲಿ ದಾಳಿಮಾಡಲು  ಪಂಚರಾಗಿ ಬಂದು  ಪಂಚನಾಮೆಗೆ ಸಹಕರಿಸಲು ಕೋರಿದ್ದರ ಮೇರೆಗೆ ಅವರುಗಳು ಒಪ್ಪಿಕೊಂಡಿದ್ದು. ಅದರಂತೆ  ನಾವುಗಳು ಮತ್ತು ಪಂಚರು  ಮೇಲ್ಕಂಡ ಸ್ಥಳಕ್ಕೆ ಬೆಳಿಗ್ಗ  11-15 ಗಂಟೆಗೆ ಹೋಗಿ ನೋಡಲಾಗಿ  ಯಾರೋ ಕೆಲವರು ಕಾನೂನು ಬಾಹಿರವಾಗಿ ಕುಳಿತುಕೊಂಡು ಮದ್ಯಪಾನ ಮಾಡುತ್ತಿದ್ದವರು  ಸಮವಸ್ತ್ರದಲ್ಲಿದ್ದ  ನಮ್ಮನ್ನು ನೋಡಿ  ಓಡಿ ಹೋಗಲು ಪ್ರಯತ್ನಿಸಿದ್ದು, ಆ ಫೈಕಿ ಒಬ್ಬ ಆಸಾಮಿಯನ್ನು ನಾವು ಸುತ್ತುವರೆದು ಹಿಡಿದುಕೊಂಡಿದ್ದು, ನಂತರ ಪಂಚರ ಸಮಕ್ಷಮ  ನಾವು ಸದರಿ ಸ್ಥಳದಲ್ಲಿ  ಪರಿಶೀಲಿಸಲಾಗಿ  90 ಎಂ.ಎಲ್. ನ Haywards Cheers Whisky  ಯ  02 ಖಾಲಿ ಟೆಟ್ರಾ ಪ್ಯಾಕೇಟ್ ಗಳು ಮತ್ತು  ಒಂದು ಲೀಟರ್ 1ಖಾಲಿ ವಾಟರ್ ಬಾಟಲ್ ಮತ್ತು ಮದ್ಯಸೇವನೆ ಮಾಡಿರುವ  02 ಖಾಲಿ  ಪ್ಲಾಸ್ಟಿಕ್ ಗ್ಲಾಸ್ ಗಳು ಮದ್ಯ ತುಂಬಿರುವ 90 ಎಂ.ಎಲ್. ನ Haywards Cheers Whisky 03 ಟೆಟ್ರಾ ಪ್ಯಾಕೇಟ್ ಗಳು ಇದ್ದು, ಒಟ್ಟು 0.270 ಲೀಟರ್ ಮದ್ಯವಿದ್ದು ಸದರಿ ಮದ್ಯದ ಅಂದಾಜು ಮೌಲ್ಯ 105/- ರೂಪಾಯಿಗಳಾಗಿರುತ್ತದೆ. ವಶಕ್ಕೆ ಪಡೆದ  ಸದರಿ ಆಸಾಮಿಯ ಹೆಸರು ಮತ್ತು ವಿಳಾಸವನ್ನು ಕೇಳಲಾಗಿ   ಬಾಬುರೆಡ್ಡಿ ಬಿನ್ ನರಸಿಂಹರೆಡ್ಡಿ 33 ವರ್ಷ, ಒಕ್ಕಲಿಗರು,  ಕೂಲಿಕೆಲಸ, ವಾಸ: ನಂಜರೆಡ್ಡಿಪಲ್ಲಿ ಗ್ರಾಮ ಗೂಳೂರು ಹೋಬಳಿ, ಬಾಗೇಪಲ್ಲಿ ತಾಲ್ಲೂಕು ಎಂದು ತಿಳಿಸಿದ್ದು,ಸದರಿಯವರಿಗೆ ಕಾನೂನು ಬಾಹಿರವಾಗಿ ಮದ್ಯಪಾನ ಮಾಡಲು ಯಾವುದಾದರು ಪರವಾನಿಗೆ ಇದೆಯೇ ಎಂದು ಕೇಳಲಾಗಿ ಯಾವುದೇ ಪರವಾನಿಗೆ ಇಲ್ಲವೆಂದು ತಿಳಿಸಿದ್ದು,  ಮೇಲ್ಕಂಡ ಮಾಲುಗಳನ್ನು  ಪಂಚರ ಸಮಕ್ಷಮ  ಪಂಚನಾಮೆ ಮೂಲಕ   ಅಮಾನತ್ತು ಪಡಿಸಿಕೊಂಡು ಮಾಲು ಮತ್ತು ಆರೋಪಿಯೊಂದಿಗೆ ಮದ್ಯಾಹ್ನ 12-30 ಗಂಟೆಗೆ ಠಾಣೆಗೆ ಹಾಜರಾಗಿ ಮುಂದಿನ ಕ್ರಮಕ್ಕಾಗಿ  ಠಾಣಾಧಿಕಾರಿಗಳಿಗೆ  ವರಧಿಯನ್ನು  ನೀಡಿರುತ್ತೇನೆ, ಎಂದು ನೀಡಿದ ದೂರಿನ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿರುತ್ತೆ.

 1. ಬಾಗೇಪಲ್ಲಿ ಪೊಲೀಸ್ ಠಾಣೆ. ಮೊ.ಸಂ: 191/2019 ಕಲಂ: 15(ಎ),32(3) ಕೆ.ಇ ಆಕ್ಟ್:-

          ದಿ:14-07-2019 ರಂದು ಮದ್ಯಾಹ್ನ 12:30 ಗಂಟೆಗೆ ಪಿ.ಎಸ್.ಐ ಸಾಹೇಬರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶ –  ಈ ದಿನ  ದಿನಾಂಕ:14.07.2019 ರಂದು  ಮದ್ಯಾಹ್ನ 1-15 ಗಂಟೆ  ಸಮಯದಲ್ಲಿ ಠಾಣೆಯಲ್ಲಿ ಬಾಗೇಪಲ್ಲಿ  ತಾಲ್ಲೂಕು ಮಿಟ್ಟೇಮರಿ ಹೋಬಳಿ ಮಲ್ಲಿಗುರ್ಕಿ ಗ್ರಾಮದ ವಾಸಿಯಾದ ನಾಗೇಶ್ ಬಿನ್ ಗೋಪಾಲಪ್ಪ ರವರ  ಬಾಬತ್ತು ಚಿಲ್ಲರೆ ಅಂಗಡಿಯ ಮುಂಭಾಗ ಖಾಲಿಜಾಗದಲ್ಲಿ ಯಾರೋ ಕೆಲವರು ಕುಳಿತು ಕೊಂಡು  ಕಾನೂನು ಬಾಹಿರವಾಗಿ ಮದ್ಯಪಾನ ಮಾಡುತ್ತಿರುವುದಾಗಿ  ಬಂದ ಖಚಿತ ವರ್ತಮಾನದ ಮೇರೆಗೆ ನಾನು ಮತ್ತು ಸಿಬ್ಬಂದಿಗಳಾದ ಹೆಚ್.ಸಿ-102 ಆನಂದ  ಹಾಗೂ  ಜೀಫ್ ಚಾಲಕ ಎ.ಹೆಚ್.ಸಿ-34 ಅಲ್ತಾಫ್ ಪಾಷಾ ರವರೊಂದಿಗೆ ಸರ್ಕಾರಿ ಜೀಫ್ ಸಂಖ್ಯೆ-ಕೆಎ-40,ಜಿ-537  ವಾಹನದಲ್ಲಿ ಬಂದು ಬಾಗೇಪಲ್ಲಿ  ಪುರದ ಗೂಳೂರು ವೃತ್ತದ ಬಳಿ ಇದ್ದ ಪಂಚರನ್ನು ಕರೆದು ವಿಚಾರವನ್ನು  ತಿಳಿಸಿ  ಮೇಲ್ಕಂಡ ಸ್ಥಳದಲ್ಲಿ ದಾಳಿಮಾಡಲು  ಪಂಚರಾಗಿ ಬಂದು  ಪಂಚನಾಮೆಗೆ ಸಹಕರಿಸಲು ಕೋರಿದ್ದರ ಮೇರೆಗೆ ಅವರುಗಳು ಒಪ್ಪಿಕೊಂಡಿದ್ದು, ಅದರಂತೆ  ನಾವುಗಳು ಮತ್ತು ಪಂಚರು  ಸ್ಥಳಕ್ಕೆ  ಮದ್ಯಾಹ್ನ 1-30 ಗಂಟೆಗೆ ಹೋಗಿ ನೋಡಲಾಗಿ  ಯಾರೋ ಕೆಲವರು  ಕಾನೂನು ಬಾಹಿರವಾಗಿ ಕುಳಿತುಕೊಂಡು  ಮದ್ಯಪಾನ ಮಾಡುತ್ತಿದ್ದವರು  ಸಮವಸ್ತ್ರದಲ್ಲಿದ್ದ  ನಮ್ಮನ್ನು ನೋಡಿ  ಓಡಿ ಹೋದರು. ನಂತರ  ಪಂಚರ ಸಮಕ್ಷಮ  ನಾವುಗಳು ಸದರಿ ಸ್ಥಳದಲ್ಲಿ  ಪರಿಶೀಲಿಸಲಾಗಿ  90 ಎಂ.ಎಲ್. ನ Haywards Cheers Whisky  ಯ  02 ಖಾಲಿ ಟೆಟ್ರಾ ಪ್ಯಾಕೇಟ್ ಗಳು ಮತ್ತು  ಒಂದು ಲೀಟರ್ 1 ಖಾಲಿ ವಾಟರ್ ಬಾಟಲ್ ಮತ್ತು ಮದ್ಯಸೇವನೆ ಮಾಡಿರುವ  04  ಖಾಲಿ  ಪ್ಲಾಸ್ಟಿಕ್ ಗ್ಲಾಸ್ ಗಳು, ಮದ್ಯ ತುಂಬಿರುವ 90 ಎಂ.ಎಲ್. ನ Haywards Cheers Whisky  12 ಟೆಟ್ರಾ ಪ್ಯಾಕೇಟ್ ಗಳು ಇದ್ದು, ಒಟ್ಟು 1.080 ಲೀಟರ್ ಮದ್ಯವಿದ್ದು ಸದರಿ ಮದ್ಯದ ಅಂದಾಜು ಮೌಲ್ಯ 420/- ರೂಪಾಯಿಗಳಾಗಿರುತ್ತದೆ. ಸದರಿ ಸ್ಥಳದ ಮಾಲೀಕರಾದ ನಾಗೇಶ ಬಿನ್ ಗೋಪಾಲಪ್ಪ,42 ವರ್ಷ, ಬಲಜಿಗರು, ಚಿಲ್ಲರೆ ಅಂಗಡಿ ವ್ಯಾಪಾರ ವಾಸ;ಮಲ್ಲಿಗುರ್ಕಿ ಗ್ರಾಮ ಮಿಟ್ಟೇಮರಿ ಹೋಬಳಿ ಬಾಗೇಪಲ್ಲಿ  ತಾಲ್ಲೂಕು  ರವರಿಗೆ ಕಾನೂನು ಬಾಹಿರವಾಗಿ ಮದ್ಯಪಾನ ಮಾಡಲು ಸ್ಥಳಾವಕಾಶ ನೀಡಿರುವುದಕ್ಕೆ ಯಾವುದಾದರು ಪರವಾನಿಗೆ ಇದೇಯೇ ಎಂದು ಕೇಳಲಾಗಿ ಯಾವುದೇ ಪರವಾನಿಗೆ ಇಲ್ಲವೆಂದು ತಿಳಿಸಿದ್ದು, ಮೇಲ್ಕಂಡ  ಮಾಲುಗಳನ್ನು  ಪಂಚರ ಸಮಕ್ಷಮ  ಪಂಚನಾಮೆ ಮೂಲಕ   ಅಮಾನತ್ತು ಪಡಿಸಿಕೊಂಡು ಮಾಲು ಮತ್ತು ಆರೋಪಿಯೊಂದಿಗೆ ಮದ್ಯಾಹ್ನ 2-45 ಗಂಟೆಗೆ ಠಾಣೆಗೆ ಹಾಜರಾಗಿ ಮುಂದಿನ ಕ್ರಮಕ್ಕಾಗಿ  ಠಾಣಾಧಿಕಾರಿಗಳಿಗೆ  ವರಧಿಯನ್ನು  ನೀಡಿರುತ್ತೇನೆ, ಎಂದು ನೀಡಿದ ದೂರಿನ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿರುತ್ತೆ.

 1. ಬಾಗೇಪಲ್ಲಿ ಪೊಲೀಸ್ ಠಾಣೆ. ಮೊ.ಸಂ: 192/2019 ಕಲಂ: 279-337 ಐ.ಪಿ.ಸಿ :-

          ದಿ: 14-07-2019 ರಂದು ರಾತ್ರಿ 8:10 ಗಂಟೆಯ ಸಮಯದಲ್ಲಿ ಪಿರ್ಯಾದಿ ಉಮೇಶ್ ಪಿ.ಎಸ್ ಬಿನ್ ಸುಧಾರಕ್.ಪಿ.ಎನ್.20 ವರ್ಷ, ಗೊಲ್ಲರು, ವಿದ್ಯಾಭ್ಯಾಸ, ವಾಸ:ಪೈಪಾಳ್ಯ ಗ್ರಾಮ ಮಿಟ್ಟೇಮರಿ ಹೋಬಳಿ, ಬಾಗೇಪಲ್ಲಿ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶ –  ದಿನಾಂಕ:13.07.2019 ರಂದು ನಮ್ಮ ತಂದೆ ಸುಧಾಕರ್ ಪಿ.ಎನ್ ಬಿನ್ ನರಸಿಂಹಪ್ಪ,40 ವರ್ಷ, ರವರು ನಮ್ಮ ಗ್ರಾಮದ ವಾಸಿಯಾದ ವೆಂಕಟೇಶ್ ಬಿನ್ ಪಾಪಣ್ಣ, 38 ವರ್ಷ, ನಾಯಕರು ಪೈಪಾಳ್ಯ ಗ್ರಾಮ ಬಾಗೇಪಲ್ಲಿ ತಾಲ್ಲೂಕು ರವರ ಬಾಬತ್ತು ಕೆಎ-05 ಹೆಚ್.ಆರ್-4674 ನೊಂದಣಿ ಸಂಖ್ಯೆಯ  ಯಮಹ ವೈ.ಬಿ.ಆರ್ ದ್ವಿಚಕ್ರ ವಾಹನದಲ್ಲಿ  ಪ್ಯಾನಲ್ ಬೋರ್ಡ್ ರಿಪೇರಿ ಮಾಡಿಸಿಕೊಂಡು ಬರಲು  ಸಂಜೆ ಸುಮಾರು 4-30 ಗಂಟೆ ಸಮಯದಲ್ಲಿ ದ್ವಿಚಕ್ರ ವಾಹನವನ್ನು  ವೆಂಕಟೇಶ್ ರವರು ಸವಾರಿ ಮಾಡಿಕೊಂಡು ದ್ವಿಚಕ್ರ ವಾಹನದ ಹಿಂಭಾಗ ನಮ್ಮ ತಂದೆಯವರು ಕೂರಿಸಿಕೊಂಡು ಮಿಟ್ಟೇಮರಿ ಗ್ರಾಮಕ್ಕೆ  ಬರಲು ಪೈಪಾಳ್ಯ ರಸ್ತೆಯಿಂದ ಬಂದು  ಬಾಗೇಪಲ್ಲಿ ಕಡೆಗೆ ಬರುವ ರಸ್ತೆಗೆ   ದ್ವಿಚಕ್ರ ವಾಹನವನ್ನು ತಿರುಗಿಸಿಕೊಳ್ಳುತ್ತಿದ್ದಾಗ  ಬಾಗೇಪಲ್ಲಿ ಕಡೆಯಿಂದ ಬಂದಂತಹ  ಕೆಎ-40 ಎಫ್-693 ನೊಂದಣಿ ಸಂಖ್ಯೆಯ ಕೆ.ಎಸ್,ಆರ್.ಟಿ.ಸಿ ಬಸ್ಸಿನ ಚಾಲಕ ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ವೆಂಟಕೇಶ್ ರವರು ಸವಾರಿ ಮಾಡಿಕೊಂಡು ಬರುತ್ತಿದ್ದಂತಹ ಮೇಲ್ಕಂಡ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆಯಿಸಿದ ಪರಿಣಾಮ ದ್ವಿಚಕ್ರ ವಾಹನ ಜಖಂಗೊಂಡು ದ್ವಿಚಕ್ರ ವಾಹನದಲ್ಲಿದ್ದ ನಮ್ಮ ತಂದೆ ಮತ್ತು ವೆಂಕಟೇಶ್ ರವರು ದ್ವಿಚಕ್ರ ವಾಹನ ಸಮೇತ ರಸ್ತೆಯ ಮೇಲೆ ಬಿದ್ದುಹೋಗಿದ್ದು, ನಮ್ಮ ತಂದೆಗೆ ಬಲ ಮೊಣ ಕಾಲಿಗೆ, ತೊಡೆಗೆ , ತಲೆಯ ಹಿಂಭಾಗಕ್ಕೆ ರಕ್ತಗಾಯ ಮತ್ತು ಮುಖದ ಬಲಭಾಗಕ್ಕೆ ತರಚಿದ ಗಾಯವಾಗಿದ್ದು, ವೆಂಕಟೇಶ್ ರವರಿಗೆ ತಲೆಗೆ ಬಲಕಣ್ಣಿನ ಮೇಲೆ, ಕತ್ತಿನ ಹಿಂಭಾಗಕ್ಕೆ ರಕ್ತ ಗಾಯಗಳಾಗಿದ್ದು,  ಗಾಯಗೊಂಡಿದ್ದ ನಮ್ಮ ತಂದೆ ಮತ್ತು ವೆಂಕಟೇಶ್ ರವರನ್ನು ಸ್ಥಳದಲ್ಲಿದ್ದ ಸಾರ್ವಜನಿಕರು ಉಪಚರಿಸಿ ಚಿಕಿತ್ಸೆಗಾಗಿ 108 ಅಂಬುಲೇನ್ಸ್ ನಲ್ಲಿ  ಬಾಗೇಪಲ್ಲಿ  ಸರ್ಕಾರಿ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದು,  ಅಲ್ಲಿನ ವೈದ್ಯರ ಸಲಹೆ ಮೇರೆಗೆ ಹೆಚ್ಚಿನ ಚಿಕಿತ್ಸೆಗಾಗಿ  ಚಿಕ್ಕಬಳ್ಳಾಪುರ ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಅಲ್ಲಿನ ವೈದ್ಯರು ಇನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಕರೆದುಕೊಂಡು ಹೋಗುವಂತೆ ತಿಳಿಸಿದ್ದು,ಅದರಂತೆ ನಾವು ನಮ್ಮ ತಂದೆ ಮತ್ತು ವೆಂಕಟೇಶ್ ರವರನ್ನು ಹೆಚ್ಚಿನ ಚಿಕಿತ್ಸೆಗಾಗಿ  ಬೆಂಗಳೂರಿನ ಪೋಲೈಫ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿ ಚಿಕಿತ್ಸೆ ಕೊಡಿಸುತ್ತಿದ್ದು, ಆಸ್ಪತ್ರೆಯಲ್ಲಿ ಅವರನ್ನು ನೋಡಿಕೊಳ್ಳುವವರು ಯಾರೂ ಇಲ್ಲದ ಕಾರಣ ಈ ದಿನ ತಡವಾಗಿ ಠಾಣೆಗೆ ಬಂದು ದೂರು ನೀಡಿರುತ್ತೇನೆ.ಆದ್ದರಿಂದ ಈ ಅಪಘಾತಕ್ಕೆ ಕಾರಣವಾದ ಕೆಎ-40 ಎಫ್-693 ನೊಂದಣಿ ಸಂಖ್ಯೆಯ ಕೆ.ಎಸ್,ಆರ್.ಟಿ.ಸಿ ಬಸ್ಸಿನ ಚಾಲಕ ವಿರುದ್ದ ಕಾನೂನು ರೀತಿಯ ಕ್ರಮ ಜರುಗಿಸ ಬೇಕಾಗಿ ಕೋರುತ್ತೇನೆ, ಎಂದು ನೀಡಿದ ದೂರಿನ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿರುತ್ತೆ.

 1. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ. ಮೊ.ಸಂ: 183/2019 ಕಲಂ: 87 ಕೆ.ಪಿ ಆಕ್ಟ್:-

          ದಿನಾಂಕ 14/07/2019 ರಂದು ಸಂಜೆ 04.15 ಗಂಟೆಗೆ ಪಿ ಎಸ್ ಐ (ಕಾ&ಸು) ರವರು ನೀಡಿದ ವರದಿಯ ಸಾರಾಂಶವೇನೆಂದರೆ  ದಿನಾಂಕ:14/07/2019 ರಂದು ನಾನು ಠಾಣಾ ಪ್ರಬಾರದಲ್ಲಿದ್ದಾಗ ಮದ್ಯಾಹ್ನ 2.30 ಗಂಟೆಗೆ  ಚಿಕ್ಕಬಳ್ಳಾಪುರ ಗ್ರಾಮಾಂತರ  ಪೊಲೀಸ್ ಠಾಣೆಯ ವ್ಯಾಪ್ತಿಗೆ ಸೇರಿದ ರಾಮಗಾನಪರ್ತಿ ಗ್ರಾಮದಲ್ಲಿರುವ ಶ್ರೀ ಆಂಜನೆಯಸ್ವಾಮಿ ದೇವಾಲಯದ ಬಳಿ ಯಾರೋ ಸುಮಾರು ಜನರು ಸೇರಿ ಹಣವನ್ನು ಪಣವಾಗಿಟ್ಟು ಅಂದರ್ ಬಾಹರ್ ಇಸ್ಪೀಟ್ ಜೂಜಾಟ ಡುತ್ತಿರುವುದಾಗಿ ಬಂದ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಲು  ನ್ಯಾಯಾಲಯದ ಅನುಮತಿ ಪಡೆದು ಸಿಬ್ಬಂದಿಯಾದ ರಮಣಾರೆಡ್ಡಿ ಹೆಚ್,ಸಿ,141, ಸುರೇಶ ಹೆಚ್,ಸಿ,38, ಸೋಮಶೇಖರ್ ಹೆಚ್.ಸಿ.169 ಸೋಮಶೇಖರ್, ರಮೇಶ್ ಬಾಬು ಪಿ.ಸಿ.483, ಶೆಶಿಕುಮಾರ್ ಪಿ.ಸಿ.244, ಮುತ್ತಪ್ಪ ನಿಗರಿ,ಪಿಸಿ.260 ಸಲೀಂಖಾಮುಲ್ಲಾಪಿ.ಸಿ.292, ಲಕ್ಷ್ಮೀಪತಿ,ಪಿ.ಸಿ.189 ರವರುಗಳ ಪೈಕಿ ಕೆಲವರನ್ನು ಕೆಎ.40 ಜಿ.567 ಜೀಪಿನಲ್ಲಿ ಮತ್ತೂ ಕೆಲವರನ್ನು  ಖಾಸಗಿ ವಾಹನಗಳ್ಲ ಕರೆದುಕೊಂಡು ಮದ್ಯಾಹ್ನ 2.45 ಗಂಟೆಗೆ ಠಾಣೆಯ ಬಳಿಯಿಂದ ಬಿಟ್ಟು ಹೊರಟು  ಹೋಗುವಾಗ ರಾಮಗಾನಪರ್ತಿ  ಗ್ರಾಮದ ಗೇಟಿನಲ್ಲಿ ಇದ್ದ ಅದೇ ರಾಮಗಾನಪರ್ತಿ ಗ್ರಾಮದ ವಾಸಿಗಳಾದ ಆರ್.ಸಿ.ರಾಜಣ್ಣ ಬಿನ್ ಚಿಕ್ಕಪ್ಪಯ್ಯ, 42 ವರ್ಷ ಭೋವಿ ಜನಾಂಗ ಜಿರಾಯ್ತಿ, ವೆಂಕಟಾಚಲಪತಿ ಬಿನ್ ಕ್ರತಿಷ್ಣಪ್ಪ 24 ವರ್ಷ ಬಲಜಿಗರು ಜಿರಾಯ್ತಿ, ಗಜೇಂದ್ರ ಬಿನ್ ಕ್ರಿಷ್ಣಪ್ಪ 20 ವರ್ಷ, ಪ.ಜಾತಿ (ಎ.ಕೆ) ಜಿರಾಯ್ತಿ  ರವರಿಗೆ  ಮಾಹಿತಿ ತಿಳಿಸಿ ಅವರುಗಳನ್ನು ಪಂಚರನ್ನಾಗಿ ಕರೆದುಕೊಂಡು, ಪಂಚರು ಪೊಲೀಸ್ ಅದಿಕಾರಿ ಮತ್ತು ಸಿಬ್ಬಂದಿಯರೊಂದಿಗೆ  ಮದ್ಯಾಹ್ನ 3:00 ಗಂಟೆಗೆ ರಾಮಗಾನಪರ್ತಿ ಗ್ರಾಮದ ಶ್ರೀ ಆಂಜನೆಯಸ್ವಾಮಿ ದೇವಾಲಯಕ್ಕೆ ಸ್ವಲ್ಪ ದೂರದಲ್ಲಿ ಮರೆಯಲ್ಲಿ ಜೀಪನ್ನು ಮತ್ತು ಖಾಸಗಿ ವಾಹನವನ್ನು ನಿಲ್ಲಿಸಿ  ಸ್ಥಳದ ಸಮೀಪ ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಆಂಜನೆಯಸ್ವಾಮಿ ದೇವಾಲಯದ ಬಳಿ  6 ಜನರು ಸುತ್ತುವರೆದು ಕುಳಿತು ಆ ಪೈಕಿ ಒಬ್ಬರು ಕೈಯಲ್ಲಿ ಇಸ್ಪೀಟ್  ಎಲೆಗಳನ್ನು ಹಿಡಿದಿದ್ದು ಆ ಆಸಾಮಿ ಅಂದರ್ 100 ರೂ ಎಂತಲೂ ಆತನ ದುರಿಗೆ ಕುಳಿತಿದ್ದ ಆಸಾಮಿ ಬಾಹರ್ 100 ರೂ ಎಂದು ಕೂಗುತ್ತಾ  ಹಣವನ್ನು ಪಣಕ್ಕೆ ಇಟ್ಟು ಅಂದರ್ ಬಾಹರ್ ಜೂಜಾಟ ಆಡುತ್ತಿದ್ದು ನಾನು ಮತ್ತು ಸಿಬ್ಬಂದಿರವರು ಪಂಚರ ಸಮಕ್ಷಮ ದಾಳಿ ಮಾಡಿ   ಜೂಜಾಟ ಡುತ್ತಿದ್ದವರಿಗೆ ಎಲ್ಲಿರುವವರು ಅಲ್ಲಿಯೇ ಇರುವಂತೆ ಎಚ್ಚರಿಕೆ ನೀಡಿ ಅವರುಗಳ ಹೆಸರು ವಿಳಾಸ ಕೇಳಲಾಗಿ  1) ದೇವರಾಜ ಬಿನ್ ಮುನಿವೆಂಕಟಸ್ವಾಮಿ  21 ವರ್ಷ, ಬುಡುಗ ಜಂಗಮ ಜನಾಂಗ, ಚಾಲಕ  2) ನಾರಾಯಣಸ್ವಾಮಿ ಬಿನ್ ಲೇಟ್ ಈರಪ್ಪ 35  ವರ್ಷ, ಬುಡುಗ ಜಂಗಮ, 3) ಕ್ರಿಷ್ಣಪ್ಪ ಬಿನ್ ವೆಂಕಟರಾಯಪ್ಪ, 40ವರ್ಷ, ಅದಿದ್ರಾವಿಡ ಜನಾಂಗ, 4) ರಾಜು ಬಿನ್ ತಿಪ್ಪಾರೆಡ್ಡಿ 25 ವರ್ಷ, ವಕ್ಕಲಿಗರು, ಜಿರಾಯ್ತಿ 5) ಅಶೋಕ ಬಿನ್ ರಾಜಪ್ಪ 19 ವರ್ಷ ಬೋವಿ ಜಿರಾಯ್ತಿ 6) ಶ್ರೀನಿವಾಶ ಬಿನ್ ಲೇಟ್ ಚಿಕ್ಕವೆಂಕಟರಾಯಪ್ಪ 33 ವರ್ಷ,ಎ.ಕೆ ಜಿರಾಯ್ತಿ ಎಲ್ಲರೂ ರಾಮಗಾನಪರ್ತಿ ಗ್ರಾಮ  ಚಿಕ್ಕಬಳ್ಳಾಪುರ ತಾಲ್ಲೂಕು ಮತ್ತು ಜಿಲ್ಲೆ ಎಂದು ತಿಳಿಸಿದರು. ಜೂಜಾಟ ಸ್ಥಳದಲ್ಲಿದ್ದ, ಒಂದು ನ್ಯೂಸ್ ಪೇಪರ್  ಒಟ್ಟು 52 ಇಸ್ಪಿಟು ಎಲೆಗಳಿರುತ್ತೆ ಸ್ಥಳದಲ್ಲಿ ಜೂಜಾಟಕ್ಕೆ ಪಣವಾಗಿಟ್ಟಿದ್ದ  ಒಟ್ಟು 1170/- ರೂ ಹಣ ಇರುತ್ತೆ ನ್ಯೂಸ್ ಪೇಪರ್, ಹಣ, 52 ಇಸ್ಪೀಟ್ ಎಲೆಗಳನ್ನು ಪಂಚರ ಸಮಕ್ಷಮ ಪಂಚನಾಮೆ ಮೂಲಕ ಅಮಾನತ್ತು ಪಡಿಸಿಕೊಂಡು ಮೇಲ್ಕಂಡ ಆರೋಪಿಗಳನ್ನು ವಶಕ್ಕೆ ಪಡೆದು ಮಾಲು, ದಾಳಿ ಪಂಚನಾಮೆ, ಆರೋಪಿಗಳೊಂದಿಗೆ   ಸಂಜೆ 4:15 ಗಂಟೆಗೆ ಠಾಣೆಗೆ ಹಾಜರಾಗಿ ಠಾಣಾಧಿಕಾರಿಗಳಿಗೆ ಹಾಜರುಪಡಿಸಿ ವರದಿ ನೀಡಿರುತ್ತೇನೆ. ಅದರಂತೆ ಕಲಂ: 87 ಕೆ.ಪಿ.ಆಕ್ಟ್ ರೀತ್ಯಾ ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಳ್ಳಲು ಸೂಚಿಸಿದ ಮೇರೆಗೆ ಈ ಪ್ರ ವ ವರದಿ.

 1. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ. ಮೊ.ಸಂ: 184/2019 ಕಲಂ: 87 ಕೆ.ಪಿ ಆಕ್ಟ್:-

          ದಿನಾಂಕ 14/07/2019 ರಂದು ಸಂಜೆ 06.15 ಗಂಟೆಗೆ ಪಿ ಎಸ್ ಐ (ಕಾ&ಸು) ರವರು ನೀಡಿದ ವರದಿಯ ಸಾರಾಂಶವೇನೆಂದರೆ  ದಿನಾಂಕ:14/07/2019 ರಂದು ನಾನು ಠಾಣಾ ಪ್ರಬಾರದಲ್ಲಿದ್ದಾಗ ಸಂಜೆ 4.30 ಗಂಟೆಗೆ  ಚಿಕ್ಕಬಳ್ಳಾಪುರ ಗ್ರಾಮಾಂತರ  ಪೊಲೀಸ್ ಠಾಣೆಯ ವ್ಯಾಪ್ತಿಗೆ ಸೇರಿದ ಗುಂತಪ್ಪನಹಳ್ಳಿ ಗ್ರಾಮದ ಸಮೀಪ ಇರುವ ಅದೇ ಗ್ರಾಮದ ವಾಸಿ ಚಿನ್ನಮ್ಮರವರ ಜಮೀನಿನ ಬಳಿ  ಕೆಲವರು ಆಸಾಮಿಗಳು ಸೇರಿ ಹಣವನ್ನು ಪಣವಾಗಿಟ್ಟು ಅಂದರ್ ಬಾಹರ್ ಇಸ್ಪೀಟ್ ಜೂಜಾಟ ಆಡುತ್ತಿರುವುದಾಗಿ ಬಂದ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಲು  ನ್ಯಾಯಾಲಯದ ಅನುಮತಿ ಪಡೆದು ಸಿಬ್ಬಂದಿಯಾದ ಹರೀಶ ಪಿ.ಸಿ.510, ಮಂಜುನಾಯ್ಕ್ ಪಿ.ಸಿ.203, ನರಸಿಂಹಮೂರ್ತಿ ಪಿ.ಸಿ.264, ಬಾಲಾಜಿ ಪಿ.ಸಿ.118 ರವರುಗಳನ್ನು ಕರೆದುಕೊಂಡು ಠಾಣೆಗೆ ಒದಗಿಸಿರುವ ಕೆಎ.40 ಜಿ.567 ನಂಬರಿನ ಸರ್ಕಾರಿ ಜೀಪಿನಲ್ಲಿಕುಳಿತು  ಸಂಜೆ 4.45 ಗಂಟೆಗೆ ಠಾಣೆಯ ಬಳಿಯಿಂದ  ಹೊರಟು  ಗುಂತಪ್ಪನಹಳ್ಳಿ  ಸಮೀಪ ಇದ್ದ ಅದೇ ಗುಂತಪ್ಪನಹಳ್ಳಿ ವಾಸಿಗಳಾದ ಎಲ್.ಮೂರ್ತಿ ಬಿನ್ ಲಕ್ಷ್ಮೀನಾರಾಯಣಪ್ಪ 39 ವರ್ಷ, ಭೋವಿ ಜನಾಂಗ ಜಿರಾಯ್ತಿ ವಾಸ ಗುಂತಪ್ಪನಹಳ್ಳಿ, ಮುನಿವೆಂಕಟರಾಯಪ್ಪ ಬಿನ್ ಯರಪ್ಪ 55 ವರ್ಷ ಭೋವಿ ಜನಾಂಗ ಬಂಡೆ ಕೆಲಸ ಇಬ್ಬರೂ ಚಿಕ್ಕಬಳ್ಳಾಪುರ ತಾಲ್ಲೂಕು ರವರಿಗೆ  ಮಾಹಿತಿ ತಿಳಿಸಿ ಅವರುಗಳನ್ನು ಪಂಚರನ್ನಾಗಿ ಕರೆದುಕೊಂಡು, ಪಂಚರು ಸಿಬ್ಬಂದಿಯರೊಂದಿಗೆ   ಸಂಜೆ 5:00 ಗಂಟೆಗೆ ಗುಂತಪ್ಪನಹಳ್ಳಿ ಸಮೀಪದಲ್ಲಿ ಚಿನ್ನಮ್ಮ ಎಂಬುವರ ಜಮೀನಿಗೆ ಸ್ವಲ್ಪ ದೂರದಲ್ಲಿ ಹೋಗಿ  ಮರೆಯಲ್ಲಿ ಜೀಪನ್ನು ನಿಲ್ಲಿಸಿ ಸ್ಥಳದ ಸಮೀಪ ಹೋಗಿ ಗಿಡಗಳ ಮರೆಯಲ್ಲಿ ನಿಂತು ನೋಡಲಾಗಿ  ಬೀಡು ಜಮೀನಿನಲ್ಲಿ ಇಬ್ಬರು ಆಸಾಮಿಗಳು ಕುಳಿತು  ಆ ಪೈಕಿ ಒಬ್ಬರು ಕೈಯಲ್ಲಿ ಇಸ್ಪೀಟ್  ಎಲೆಗಳನ್ನು ಹಿಡಿದಿದ್ದು ಆತ  ಅಂದರ್ 200 ರೂ ಎಂತಲೂ ಆತನ ಮುಂದೆ  ಕುಳಿತಿದ್ದ ಆಸಾಮಿ ಬಾಹರ್ 200 ರೂ ಎಂದು ಕೂಗುತ್ತಾ  ಹಣವನ್ನು ಪಣಕ್ಕೆ ಇಟ್ಟು ಅಂದರ್ ಬಾಹರ್ ಇಸ್ಪೀಟ್  ಜೂಜಾಟ ಆಡುತ್ತಿದ್ದು ನಾನು ಮತ್ತು ಸಿಬ್ಬಂದಿರವರು ಪಂಚರ ಸಮಕ್ಷಮ ದಾಳಿ ಮಾಡಿ   ಜೂಜಾಟ ಆಡುತ್ತಿದ್ದವರನ್ನು ಹಿಡಿದು ಅವರ ಹೆಸರು ವಿಳಾಸ ಕೇಳಲಾಗಿ  1) ಶಂಕರಪ್ಪ ಬಿನ್ ಲೇಟ್ ಗದ್ದ ಗುರಪ್ಪ 50 ವರ್ಷ, ಭೋವಿ ಜನಾಂಗ ಜಿರಾಯ್ತಿ   2) ಆಂಜನಪ್ಪ  ಬಿನ್ ಲೇಟ್ ಗದ್ದ ಗುರಪ್ಪ 40ವರ್ಷ, ಭೋವಿ ಜನಾಂಗ ಜಿರಾಯ್ತಿ, ಇಬ್ಬರೂ  ಗುಂತಪ್ಪನಹಳ್ಳಿ ಚಿಕ್ಕಬಳ್ಳಾಪುರ ತಾಲ್ಲೂಕು ಎಂದು ಹೇಳಿದರು. ಸದರಿಯವರು ಯಾವುದೇ ಪರವಾನಗೆ ಇಲ್ಲದೆ ಅಕ್ರಮವಾಗಿ ಹಣವನ್ನು ಪಣವಾಗಿಟ್ಟು ಅಂದರ್-ಬಾಹರ್ ಜೂಜಾಟವಾಡುತ್ತಿದ್ದು ಅವರು ಜೂಜಾಟಕ್ಕೆ ಪಣಕ್ಕಿಟ್ಟಿದ್ದ ಒಟ್ಟು 620 /ರೂ ಹಣವನ್ನು ಅವರು ಜೂಜಾಟಕ್ಕೆ ಪಯೋಗಿಸುತ್ತಿದ್ದ 52 ಇಸ್ಪೀಟ್ ಎಲೆಗಳನ್ನು  ಸ್ಥಳದಲ್ಲಿದ್ದ ಒಂದು ನ್ಯೂಸ್ ಪೇಪರ್ ಅನ್ನು ಪಂಚರ ಸಮಕ್ಷಮ ಪಂಚನಾಮೆ ಮೂಲಕ ಅಮಾನತ್ತು ಪಡಿಸಿಕೊಂಡು ಮೇಲ್ಕಂಡ ಆರೋಪಿಗಳನ್ನು ವಶಕ್ಕೆ ಪಡೆದು ಮಾಲು, ದಾಳಿ ಪಂಚನಾಮೆ, ಆರೋಪಿಗಳೊಂದಿಗೆ   ಸಂಜೆ 6:15 ಗಂಟೆಗೆ ಠಾಣೆಗೆ ಹಾಜರಾಗಿ ಠಾಣಾಧಿಕಾರಿಗಳಿಗೆ ಹಾಜರುಪಡಿಸಿ ವರದಿ ನೀಡಿರುತ್ತೇನೆ. ಅದರಂತೆ ಕಲಂ: 87 ಕೆ.ಪಿ.ಆಕ್ಟ್ ರೀತ್ಯಾ ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಳ್ಳಲು ಸೂಚಿಸಿದ ಮೇರೆಗೆ ಈ ಪ್ರ ವ ವರದಿ.

 1. ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆ. ಮೊ.ಸಂ: 135/2019 ಕಲಂ: 87 ಕೆ.ಪಿ ಆಕ್ಟ್:-

          ದಿನಾಂಕ: 14.07.2019 ರಂದು ಸಂಜೆ 16.00 ಗಂಟೆಗೆ ಪಿರ್ಯಾದಿದಾರರಾದ ಶ್ರೀ ಎಂ.ಆರ್. ವರುಣ್ ಕುಮಾರ್ ಪಿ.ಎಸ್.ಐ ನಗರ ಠಾಣೆ ಚಿಕ್ಕಬಳ್ಳಾಪುರ ರವರು ನ್ಯಾಯಾಲಯದ ಅನುಮತಿ ಪತ್ರ, ಆರೋಪಿಗಳು ಮತ್ತು ಮಾಲನ್ನು ತಂದು ಹಾಜರು ಪಡಿಸಿ ನೀಡಿದ ದೂರಿನ ಸಾರಾಂಶವೇನೆಂದರೆ, ದಿನಾಂಕ 14.07.2019 ರಂದು 13-00 ಗಂಟೆಯಲ್ಲಿ ನಾನು ಅಪರಾದ ಸಿಬ್ಬಂದಿಯವರೊಂದಿಗೆ ನಗರದಲ್ಲಿ ಗಸ್ತು ಮಾಡುತ್ತಿದ್ದಾಗ  ಬಂದ ಖಚಿತ ಮಾಹಿತಿಯಂತೆ ಚಿಕ್ಕಬಳ್ಳಾಪುರ ನಗರದ ಬಾಪೂಜಿ ನಗರದ ಪಕ್ಕದಲ್ಲಿರುವ ಕಂದವಾರ ಕೆರೆಯಲ್ಲಿ ಯಾರೋ ಆಸಾಮಿಗಳು ಹಣವನ್ನು ಪಣವಾಗಿಟ್ಟು ಅಂದರ್-ಬಾಹರ್ ಜೂಜಾಟವನ್ನು ಆಡುತ್ತಿದ್ದಾರೆಂದು ಬಂದ ಖಚಿತವಾದ ಮಾಹಿತಿಯ ಮೇರೆಗೆ  ಚಿಕ್ಕಬಳ್ಳಾಪುರದ ಘನ ಎಸ್.ಸಿ.ಜೆ. ಮತ್ತು ಸಿ.ಜೆ.ಎಂ. ನ್ಯಾಯಾಲಯದಿಂದ ದಾಳಿ ಮಾಡಲು ಅನುಮತಿಯನ್ನು ಪಡೆದುಕೊಂಡು  ಠಾಣೆಗೆ ಪಂಚರನ್ನು ಬರಮಾಡಿಕೊಂಡು ಸಿಬ್ಬಂಧಿಯಾದ ಹೆಚ್.ಸಿ-131 ಎಲ್.ಎಂ. ಅಶ್ವತ್ತರಾಜು, ಪಿ.ಸಿ-245 ವಿಜಯ್ಕುಮಾರ್, ಪಿ.ಸಿ-259 ಪರಶುರಾಮಬೋಯಿ, ಪಿ.ಸಿ-332 ಸಂತೋಷ್ಜಕ್ಕಣ್ಣನವರ್,  ಪಿಸಿ-150 ಸಾಧೀಕ್ಉಲ್ಲಾ ರವರುಗಳೊಂದಿಗೆ  ಮಧ್ಯಾಹ್ನ 14-00 ಗಂಟೆಗೆ ಸರ್ಕಾರಿ ವಾಹನ ಸಂಖ್ಯೆ ಕೆ.ಎ.40-ಜಿ-139 ರಲ್ಲಿ ಠಾಣೆಯನ್ನು ಬಿಟ್ಟು ಎಂ.ಜಿ ರಸ್ತೆ, ಪೊಲೀಸ್ ಸರ್ಕಲ್ ಮುಖಾಂತರ ಓಪಿಓ ರಸ್ತೆ, ಭುವನೇಶ್ವರಿ ವೃತ್ತ, ಕಂದವಾರ ಬಾಗಿಲನಲ್ಲಿ ವಾಹನವನ್ನು ಮರೆಯಲ್ಲಿ ನಿಲ್ಲಿಸಿ, ಸ್ವಲ್ಪದೂರ ನಡೆದುಕೊಂಡು ಕಂದವಾರ ಕೆರೆಯ ಅಂಗಳಕ್ಕೆ ಹೋಗಿ ನಿಂತು ನೋಡಲಾಗಿ ಕಂದವಾರ ಕರೆಯಲ್ಲಿ  ಒಂದು ಅರಳಿ ಮರದ ಕೆಳಗೆ ನಿರ್ಜನ ಪ್ರದೇಶದಲ್ಲಿ ಕೆಲವರು ಗುಂಪಾಗಿ ಕುಳಿತುಕೊಂಡು ಅಂದರ್ ಗೆ 100 ರೂ ಬಾಹರ್ ಗೆ 100 ರೂ ಎಂದು ಕೂಗುತ್ತಿದ್ದು, ಆಸಾಮಿಗಳು ಅಕ್ರಮ ಜೂಜಾಟವನ್ನು ಆಡುತ್ತಿರುವುದು ಖಚಿತ ಪಡಿಸಿಕೊಂಡು  ಸಿಬ್ಬಂಧಿಯವರಿಗೆ ಸೂಚನೆಗಳನ್ನು ಕೊಟ್ಟು ಜೂಜಾಡುತ್ತಿದ್ದ ಅಸಾಮಿಗಳನ್ನು ಸುತ್ತುವರೆಯುವಂತೆ ತಿಳಿಸಿದ್ದು ಅದರಂತೆ  ಸಿಬ್ಬಂಧಿಯವರು ಅವರನ್ನು ಸುತ್ತುವರೆದಿದು ಅಷ್ಟರಲ್ಲಿ ಜೂಜಾಡುತ್ತಿದ್ದ 5 ಜನರು  ಪೊಲೀಸರನ್ನು  ಕಂಡು ಓಡಿ ಹೋಗಲು ಪ್ರಯತ್ನಿಸಿದ್ದು  ಕೂಡಲೆ ಸಿಬ್ಬಂಧಿಯವರು ಅರೋಪಿಗಳನ್ನು  ತಲಾ ಒಬ್ಬೊಬ್ಬರು ಹಿಡಿದುಕೊಂಡು ನನ್ನ ಮುಂದೆ ಹಾಜರು ಪಡಿಸಿರುತ್ತಾರೆ,  ಸದರಿ ಅಸಾಮಿಗಳನ್ನು  ಪಂಚರ ಸಮಕ್ಷಮ  ಹೆಸರು ವಿಳಾಸವನ್ನು  ಕೇಳಲಾಗಿ  ಅವರು  ಒಬ್ಬೊಬ್ಬರಾಗಿ ತಮ್ಮ ವಿಳಾಸಗಳನ್ನು ತಿಳಿಸಿದ್ದು  1) ಕಿಶೋರ್ ಬಿನ್ ಮುನಿಕೃಷ್ಣ, 24 ವರ್ಷ, ಪ.ಜಾತಿ, ಕಂಬಿ ಕೆಲಸ, ಬಾಪೂಜಿ ನಗರ, ವಾರ್ಡ ನಂ: 13, ಚಿಕ್ಕಬಳ್ಳಾಪುರ. 2) ಮುಕುಂದ ಬಿನ್ ಮುನಿಯಪ್ಪ, 40 ವರ್ಷ, ಪ.ಜಾತಿ, ಗಾರೆ ಕೆಲಸ, ಬಾಪೂಜಿ ನಗರ, ವಾರ್ಡ ನಂ: 13, ಚಿಕ್ಕಬಳ್ಳಾಪುರ. 3) ಮುನಿರಾಜು ಬಿನ್ ಮುನಿಯಪ್ಪ 33 ವರ್ಷ, ಪ.ಜಾತಿ, ಆಟೋ ಚಾಲಕ, ಬಾಪೂಜಿ ನಗರ, ವಾರ್ಡ ನಂ: 13, ಚಿಕ್ಕಬಳ್ಳಾಪುರ. 4) ವೇಣು ಬಿನ್ ವೆಂಕಟೇಶ್, 25 ವರ್ಷ, ಪ.ಜಾತಿ, ಕೂಲಿ ಕೆಲಸ, ಬಾಪೂಜಿ ನಗರ, ವಾರ್ಡ ನಂ: 12, ಚಿಕ್ಕಬಳ್ಳಾಪುರ.  5) ನರಸಿಂಹ ಮೂತರ್ಿ ಬಿನ್ ಕಂಬಿ ಮುನಿಶಾಮಪ್ಪ, 32 ವರ್ಷ, ಪ.ಜಾತಿ, ಕಂಬಿ ಕೆಲಸ, ಬಾಪೂಜಿ ನಗರ, ವಾರ್ಡ ನಂ: 13, ಚಿಕ್ಕಬಳ್ಳಾಪುರ. ರವರುಗಳು ಗುಂಪಾಗಿ ಕುಳಿತುಕೊಂಡು  ಇಸ್ಪೀಟ್ ಎಲೆಗಳಿಂದ  ಅಕ್ರಮ ಜೂಜಾಟವನ್ನು ಆಡುತ್ತಿದ್ದು  ಆಸಾಮಿಗಳು ಜೂಜಾಡುತ್ತಿದ್ದ  ಸ್ಥಳದಲ್ಲಿ  ನೆಲದ ಮೇಲೆ  ಪಣಕ್ಕಿಟ್ಟಿದ್ದ ಹಣ  ಮತ್ತು ಇಸ್ಪೀಟ್ ಎಲೆ ಗಳನ್ನು ಚೆಲ್ಲಾಪಿಲ್ಲಿಯಾಗಿ  ಎಸೆದಿದ್ದನ್ನು  ಸಂಗ್ರಹಿಸಿಕೊಂಡು ಎಣಿಸಲಾಗಿ  ನಗದು ಹಣ ರೂ  10,200/- ರೂ  ಮತ್ತು  52 ಇಸ್ಪೀಟ್ ಎಲೆಗಳು   ಇರುತ್ತವೆ.  ಆಸಾಮಿಗಳು ಪಣಕ್ಕಿಟ್ಟಿದ್ದ ಹಣ 10,200/-ರೂ ಮತ್ತು 52 ಇಸ್ಪೀಟ್ ಎಲೆಗಳನ್ನು ಅಮಾನತ್ತುಪಡಿಸಿಕೊಂಡು ವಶಕ್ಕೆ ಪಡೆದುಕೊಂಡಿರುತ್ತೆ.   ಪಂಚನಾಮೆಯನ್ನು 14-30 ಗಂಟೆಯಿಂದ 15-30 ಗಂಟೆಯವರೆಗೆ  ಕೈಗೊಂಡಿರುತ್ತೆ. ಅಮಾನತ್ತು ಪಡಿಸಿಕೊಂಡ ಮಾಲು ಮತ್ತು ಆರೋಪಿಗಳನ್ನು  ವಶಕ್ಕೆ ಪಡೆದುಕೊಂಡು ಠಾಣೆಗೆ  ಸಂಜೆ 15-50 ಗಂಟೆಗೆ ವಾಪಸ್ಸಾಗಿ ಆಸಾಮಿಗಳು, ಮಾಲು, ಪಂಚನಾಮೆ ಮತ್ತು ಘನ ನ್ಯಾಯಾಲಯದ ಅನುಮತಿಯನ್ನು ಹಾಜರುಪಡಿಸುತ್ತಿದ್ದು ಆಸಾಮಿಗಳ ವಿರುದ್ದ ಕಲಂ 87 ಕೆ.ಪಿ.ಆಕ್ಟ್ ರೀತ್ಯಾ ಕ್ರಮ ಜರುಗಿಸಲು ಸೂಚಿಸಿದ ಮೇರೆಗೆ ಪ್ರಕರಣವನ್ನು ದಾಖಲಿಸಿಕೊಂಡಿರುತ್ತೇನೆ.

 1. ಚಿಂತಾಮಣಿ ನಗರ ಪೊಲೀಸ್ ಠಾಣೆ. ಮೊ.ಸಂ: 166/2019 ಕಲಂ: 323-324-504 ರೆ/ವಿ 34 ಐ.ಪಿ.ಸಿ:-

ದಿನಾಂಕ: 14/07/2019 ರಂದು ಮಧ್ಯಾಹ್ನ 2-30 ಗಂಟೆ ಸಮಯದಲ್ಲಿ ಚಿಂತಾಮಣಿ ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಗಾಯಾಳು ಶಂಕರಪ್ಪ ಬಿನ್ ಲೇಟ್ ಪಿಲ್ಲಯ್ಯಪ್ಪ, 35 ವರ್ಷ, ಗೊಲ್ಲರು, ಗಾರೆ ಕೆಲಸ, ವಾಸ ಸ್ವಾತಿ ಶಾಲೆಯ ಮುಂಭಾಗ, ಬುಕ್ಕನಹಳ್ಳಿ ರಸ್ತೆ, ಚಿಂತಾಮಣಿ ನಗರ ರವರು ನೀಡಿದ ಹೇಳಿಕೆಯ ಸಾರಾಂಶವೇನೆಂದರೆ, ಈ ದಿನ ದಿನಾಂಕ: 14/07/2019 ರಂದು ಬೆಳಿಗ್ಗೆ ಸುಮಾರು 8-00 ಗಂಟೆ ಸಮಯದಲ್ಲಿ ನಾನು ಮನೆಯಲ್ಲಿದ್ದಾಗ ನಮ್ಮ ಎದುರು ಮನೆಯ ವಾಸಿಯಾದ ಶ್ರೀರಾಮಪ್ಪ ರವರು ತಮ್ಮ ಇಬ್ಬರು ಕೂಲಿಯವರೊಂದಿಗೆ ನಮ್ಮ ಮನೆಯ ಮುಂದೆ ಕಾಲುವೆ ತೆಗೆಯುತ್ತಿದ್ದನ್ನು ನಾನು ನೋಡಿ ಕೇಳಿದ್ದಕ್ಕೆ “ನೀನು ಯಾರೋ ಕೇಲೋದಕ್ಕೆ, ನಿಯಮ್ಮ ನೀಕು ಯಾಲಾ” ಎಂದು ಅವಾಚ್ಯ ಶಬ್ದಗಳಿಂದ ಬೈದು, ಕೈಗಳಿಂದ ಬೆನ್ನಿಗೆ ಹೊಟ್ಟೆಗೆ ಹೊಡೆದು ಮೂಗೇಟುಂಟು ಮಾಡಿರುತ್ತಾರೆ. ನಂತರ ಶ್ರೀರಾಮಪ್ಪ ರವರು ರಾಡ್ ನಿಂದ ತನ್ನ ತಲೆಗೆ ಹೊಡೆದು ರಕ್ತ ಗಾಯವನ್ನುಂಟು ಮಾಡಿರುತ್ತಾರೆಂತ ಆತನ ವಿರುದ್ಧ ಕಾನೂನು ರೀತ್ಯಾ ಕ್ರಮ ಜರುಗಿಸಬೇಕೆಂತ ಕೋರಿ ನೀಡಿದ ಹೇಳಿಕೆಯ ಮೇರೆಗೆ ಠಾಣಾ ಮೊ.ಸಂಖ್ಯೆ: 166/2019 ಕಲಂ: 323, 324, 504 ಐಪಿಸಿ ರೀತ್ಯಾ ಪ್ರಕರಣ ದಾಖಲಿಸಿರುತ್ತೇನೆ.

 1. ಚಿಂತಾಮಣಿ ನಗರ ಪೊಲೀಸ್ ಠಾಣೆ. ಮೊ.ಸಂ: 167/2019 ಕಲಂ: 323-324-504-506 ರೆ/ವಿ 34 ಐ.ಪಿ.ಸಿ:-

          ದಿನಾಂಕ:14/07/2019 ರಂದು ಮಧ್ಯಾಹ್ನ 14-45 ಗಂಟೆ ಸಮಯದಲ್ಲಿ ಚಿಂತಾಮಣಿ ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಗಾಯಾಳು ಶ್ರೀರಾಮಪ್ಪ ಬಿನ್ ಲೇಟ್ ಚಿಕ್ಕನಾರೆಪ್ಪ,53 ವರ್ಷ, ಗೊಲ್ಲರು, ಗಾರೆ ಕೆಲಸ, ವಾಸ ಸ್ವಾತಿ ಶಾಲೆಯ ಮುಂಭಾಗ, ಬುಕ್ಕನಹಳ್ಳಿ ರಸ್ತೆ, ಚಿಂತಾಮಣಿ ನಗರ ರವರು ನೀಡಿದ ಹೇಳಿಕೆಯ ಸಾರಾಂಶವೇನೆಂದರೆ, ಈ ದಿನ ದಿನಾಂಕ:14/07/2019 ರಂದು ಬೆಳಿಗ್ಗೆ ಸುಮಾರು 8-00 ಗಂಟೆ ಸಮಯದಲ್ಲಿ ಎದುರುಗಡೆ ಮನೆಯ ವಾಸಿ ಶಂಕರಪ್ಪ ರವರ ಮನೆಯ ಕೊಳಚೆ ನೀರು ರಸ್ತೆಗೆ ಬಂದು ನಮ್ಮ ಮನೆಯ ಮುಂಭಾಗಕ್ಕೆ ಬರುತ್ತಿದ್ದರಿಂದ ನಾನು ಕೊಳಚೆ ನೀರು ನಮ್ಮ ಮನೆಯ ಮುಂದೆ ಬಾರದಂತೆ ನಾನು ಮತ್ತು ತಿರುಮಲಪ್ಪ ರವರು ಸಣಿಕೆ ತೆಗೆದುಕೊಂಡು ಕಾಲುವೆ ಮಾಡುತ್ತಿದ್ದಾಗ ಶಂಕರಪ್ಪ ರವರು ಮನೆಯೊಳಗಿಂದ ಬಂದು ಅವಾಚ್ಯ ಶಬ್ದಗಳಿಂದ ಬೈದು, ಮತ್ತೆ ಮನೆಯೊಳಗಿನಿಂದ ಗಡಾರೆ ತೆಗೆದುಕೊಂಡು ಬಂದು ಹೊಡೆಯಲು ಬಂದಾಗ ತಪ್ಪಿಸಿಕೊಳ್ಳಲು ಕೈಗಳನ್ನು ಅಡ್ಡ ಇಟ್ಟಾಗ ತನ್ನ ತುಟಿಗೆ ತಗುಲಿ ರಕ್ತಗಾಯವಾಗಿರುತ್ತೆಂತ ಆತನ ವಿರುದ್ಧ ಕಾನೂನು ರೀತ್ಯಾ ಕ್ರಮ ಜರುಗಿಸಬೇಕೆಂತ ಕೋರಿ ನೀಡಿದ ಹೇಳಿಕೆಯ ಮೇರೆಗೆ ಠಾಣಾ ಮೊ.ಸಂಖ್ಯೆ: 167/2019 ಕಲಂ: 323, 324, 504 ಐಪಿಸಿ ರೀತ್ಯಾ ಪ್ರಕರಣ ದಾಖಲಿಸಿರುತ್ತೇನೆ.

 1. ಚಿಂತಾಮಣಿ ನಗರ ಪೊಲೀಸ್ ಠಾಣೆ. ಮೊ.ಸಂ: 168/2019 ಕಲಂ: 323-324-504-506 ರೆ/ವಿ 34 ಐ.ಪಿ.ಸಿ:-

          ದಿನಾಂಕ:14/07/2019 ರಂದು ಮಧ್ಯಾಹ್ನ 15-00 ಗಂಟೆ ಸಮಯದಲ್ಲಿ ಚಿಂತಾಮಣಿ ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಗಾಯಾಳು ಅಬ್ದುಲ್ ವಹೀದ್ ಬಿನ್ ಲೇಟ್ ಅಬ್ದುಲ್ ರಜಾಕ್, 70 ವರ್ಷ, ಮುಸ್ಲಿಂ ಜನಾಂಗ, ಜಿರಾಯ್ತಿ, ವಾಸ ವಾರ್ಡ್ ನಂ 19, ಬಂಬೂ ಬಜಾರ್, ಚಿಂತಾಮಣಿ ನಗರ ರವರು ನೀಡಿದ ಹೇಳಿಕೆಯ ಸಾರಾಂಶವೇನೆಂದರೆ, ನೆನ್ನೆಯ ದಿನ ದಿನಾಂಕ:13/07/2019 ರಂದು ನನ್ನ ಬಾಬತ್ತು ಮನೆಯನ್ನು ಡೆಮೋಲಿಷನ್ ಮಾಡುತ್ತಿದ್ದಾಗ, ನನ್ನ ಬಾವನಾದ ಫಕೃದ್ದೀನ್ ರವರು ಬಂದು ಈ ಮನೆ ನನ್ನದು ಯಾಕೆ ಡೆಮೊಲಿಷನ್ ಮಾಡುತ್ತಿದ್ದಿರಾ ಎಂದು ಎಂದು ಅವಾಚ್ಯ ಶಬ್ದಗಳಿಂದ ಬೈದು ಗಲಾಟೆ ಮಾಡಿರುತ್ತಾನೆ, ನಾನು ಡೆಮೊಲಿಷನ್ ಕೆಲಸವನ್ನು ನಿಲ್ಲಿಸಿರುತ್ತೇನೆ. ಇದನ್ನೆ ಮನಸ್ಸಿನಲ್ಲಿಟ್ಟುಕೊಂಡು ಈ ದಿನ ದಿನಾಂಕ: 14/07/2019 ರಂದು ಬೆಳಿಗ್ಗೆ ಸುಮಾರು 10-30 ಗಂಟೆ ಸಮಯದಲ್ಲಿ ನಾನು ಮನೆಯಿಂದ ಕೆ.ಜಿ.ಎಫ್ ಗೆ ಹೋಗಲು ಬರುತ್ತಿದ್ದಾಗ, ನನ್ನ ಬಾವ ಫಕೃದ್ದೀನ್ ರವರು ತೇರಿ ಮಾಕಿ ಚೋದು, ತೇರಿ ಬಾನ್ ಕೀ ಚೋದು  ಎಂದು ಇತ್ಯಾದಿಯಾಗಿ ಅವಾಚ್ಯ ಶಬ್ದಗಳಿಂದ ಬೈದು, ಕೈಗಳಿಂದ ಕುತ್ತಿಗೆಗೆ ಗುದ್ದಿ ಕೆಳಕ್ಕೆ ಬೀಳಿಸಿ ಮೂಗೇಟುಂಟು ಮಾಡಿ, ಅಲ್ಲಿಯೇ ಕೆಳಗೆ ಬಿದ್ದಿದ್ದ ಕಲ್ಲನ್ನು ಎತ್ತಿಕೊಂಡು ಬೆನ್ನಿಗೆ ಗುದ್ದಿ ನನಗೆ ಹೊಡೆದು ಮೂಗೇಟುಂಟು ಮಾಡಿರುತ್ತಾನೆ. ಅಷ್ಟರಲ್ಲಿ ಅಲ್ಲಿಗೆ ಬಂದ ಫಕೃದ್ದೀನ್ ಮಗ ಮುನ್ನಾ ಮತ್ತು ನಯಾಜ್ ರವರು ಅಲ್ಲಿಗೆ ಬಂದಿದ್ದು ಮೂರು ಜನರು ಸೇರಿ ತನ್ನನ್ನು ಕೈಗಳಿಂದ ಹೊಡೆದು ನಿನ್ನನ್ನು ಪ್ರಾಣ ಸಹಿತ ಬಿಡುವುದಿಲ್ಲ ವೆಂದು ಪ್ರಾಣ ಬೆದರಿಕೆ ಹಾಕಿದರೆಂತ ಮೇಲ್ಕಂಡವರ ವಿರುದ್ಧ ಕಾನೂನು ರೀತ್ಯಾ ಕ್ರಮ ಜರುಗಿಸಬೆಕೆಂತ ಕೋರಿ  ನೀಡಿದ ಹೇಳಿಕೆಯ ಮೇರೆಗ ಠಾಣೆಯ ಮೊ.ಸಂಖ್ಯೆ: 168/2019 ಕಲಂ: 323, 324, 504, 506 ರೆ/ವಿ 34 ಐಪಿಸಿ ರೀತ್ಯಾ ಪ್ರಕರಣ ದಾಖಲಿಸಿರುತ್ತೆನೆ.

 1. ನಂದಿಗಿರಿಧಾಮ ಪೊಲೀಸ್ ಠಾಣೆ. ಮೊ.ಸಂ: 104/2019 ಕಲಂ: 279-304(ಎ) ಐ.ಪಿ.ಸಿ:-

          ದಿನಾಂಕ:15-07-2019 ರಂದು ಮದ್ಯಾಹ್ಯ 12-15 ಗಂಟೆಗೆ ಪಿರ್ಯಾದಿದಾರರಾದ ಕೆ.ಗೋಪಾಲ್ ಬಿನ್ ಲೇಟ್ ಕೃಷ್ಣಪ್ಪ, 43 ವರ್ಷ, ಬಲಜಿಗರು, ಆಟೋ ಚಾಲಕ, ವಾಸ ಕುಪ್ಪಹಳ್ಳಿ ಗ್ರಾಮ, ಚಿಕ್ಕಬಳ್ಳಾಪುರ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ತನಗೆ 1 ನೇ ಕಾರ್ತಿಕ್ 20 ವರ್ಷ, 2 ನೇ ಪುರುಷೋತ್ತಮ್ 19 ವರ್ಷ, ಎಂಬ ಮಕ್ಕಳಿರುತ್ತಾರೆ. ಕಾರ್ತಿಕ್ ಬಿ.ಕಾಂ ಪುರುಷೋತ್ತಮ್ ಕೆ.ವಿ, ಕ್ಯಾಂಪಸ್ ನಲ್ಲಿ ಎಲೆಕ್ಟ್ರೀಷಿಯನ್ 1 ನೇ ಸೆಮ್  ವ್ಯಾಸಂಗ ಮಾಡುತ್ತಿರುತ್ತಾನೆ. ಪ್ರತಿ ದಿನ ದ್ವಿಚಕ್ರ ವಾಹನ ಸಂಖ್ಯೆ TVS (Victor) KA-53J5137  ರಲ್ಲಿ ತಮ್ಮ ಮನೆ ಕುಪ್ಪಹಳ್ಳಿ ನಿಂದ ಕ್ಯಾಂಪಸ್ ಗೆ ಹೋಗಿ ಬರುತ್ತಿರುತ್ತಾನೆ. ಈ ದಿನ ಬೆಳಿಗ್ಗೆ ಸುಮಾರು 8-30 ಗಂಟೆಗೆ ಕಾಲೇಜಿಗೆ ಹೋಗು ಬರುವುದಾಗಿ ತಿಳಿಸಿ ಮೇಲ್ಕಂಡ ದ್ವಿಚಕ್ರ ವಾಹನವನ್ನು ಚಾಲನೆ ಮಾಡಿಕೊಂಡು ಹೋದನು. ನಂತರ ಸುಮಾರು 10-50 ಗಂಟೆಯಲ್ಲಿ ತನ್ನ ಮಗನ ಪೋನ್ ನಿಂದ ತನ್ನ ಮಗನ ಸ್ನೇಹಿತ  ಅನಿಲ್ ಕುಮಾರ್ ಎಂಬುವರು ತನಗೆ ಪೋನ್ ಮೂಲಕ ನಿನ್ನ ಮಗ ಪುರುಷೋತ್ತಮ ನಂದಿ ಗ್ರಾಮ ಹೆಗ್ಗೆಡಹಳ್ಳಿ ಗ್ರಾಮಗಳ ಮದ್ಯ ದ್ವಿಚಕ್ರ ವಾಹನ ಸಂಖ್ಯೆ   KA-53J5137  ರಲ್ಲಿ ಅಪಘಾತವಾಗಿ ರಸ್ತೆಯಲ್ಲಿ ಬಿದ್ದಿರುವುದ್ದಾಗಿ ತಿಳಿಸಿದ್ದು, ತಕ್ಷಣ ತಾನು ದ್ವಿಚಕ್ರ ವಾಹನದಲ್ಲಿ ಕಣಿವೆಯ ಅಪಘಾತವಾದ ಸ್ಥಳಕ್ಕೆ ಹೋಗಿದ್ದು, ನೋಡಲಾಗಿ ತನ್ನ ಮಗ ನಂದಿ ಗ್ರಾಮದ ಕಡೆಯಿಂದ ದ್ವಿಚಕ್ರ ವಾಹನ ಸಂಖ್ಯೆ KA-53J5137  ರಲ್ಲಿ ಹೆಗ್ಗಡಹಳ್ಳಿ ಕಡೆಗೆ ಹೋಗುತ್ತಿದ್ದವನು ರಸ್ತೆಯ ಮೇಲೆ ಬಿದಿದ್ದು, ತಲೆ ಬಳಿ ಗಾಯವಾಗಿ ರಸ್ತೆಯ ಮೇಲೆ ರಕ್ತ ಸೋರಿರುತ್ತೆ. ದ್ವಿಚಕ್ರ ವಾಹನ ಸುಮಾರು 50 ಅಡಿ ಹೆಗ್ಗಡಹಳ್ಳಿ ಕಡೆಗೆ ರಸ್ತೆಯ ಮೇಲೆ ಬಿದ್ದು ಜಾರಿಗೊಂಡು ಹೋಗಿ ಎಡಗಡೆಗೆ ಬಿದ್ದಿರುತ್ತೆ. ಎಡಭಾಗ ಜಖಂ ಆಗಿರುತ್ತೆ. ನಂತರ ಅಲ್ಲೇ ಇದ್ದ ಅಪಘಾತವಾದಾಗ ಕಣ್ಣೇರೆ ನೋಡಿದ್ದ ನವೀನ್ ಕುಮಾರ್ ಬಿನ್ ವಸಂತ ಕುಮಾರ್, ನೆಲಮಂಗಳರವರನ್ನು ವಿಚಾರಿಸಲಾಗಿ ಸದರಿ ಪುರುಷೋತ್ತಮ ದ್ವಿಚಕ್ರ ವಾಹನದಲ್ಲಿ ನಂದಿ ಕಡೆಯಿಂದ ಹೆಗ್ಗಡಹಳ್ಳಿ ಕಡೆಗೆ ವೇಗವಾಗಿ ಚಾಲನೆ ಮಾಡಿ ವಾಹನ ನಿಯಂತ್ರಣ ತಪ್ಪಿ ರಸ್ತೆಯ ಮೇಲೆ ಬಿದ್ದು ತಲೆಗೆ ತೀವ್ರತರ ಗಾಯವಾಗಿ ಸ್ಥಳದಲ್ಲಿ ಮೃತಪಟ್ಟಿರುತ್ತಾನೆಂತ ತಿಳಿಸಿದನು. ನಂತರ ಪುರುಷೋತ್ತಮನ ಮೃತ ದೇಹವನ್ನು ಅಂಬ್ಯುಲೆನ್ಸ್ ನಲ್ಲಿ ಚಿಕ್ಕಬಳ್ಳಾಪುರ ಸರ್ಕಾರಿ ಆಸ್ಪತ್ರೆಗೆ ಕಳುಹಿಸಿದ್ದು, ದ್ವಿಚಕ್ರ ವಾಹನ ಸಂಖ್ಯೆ KA-53J5137  ನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಿಸಿ ಅಪಘಾತವಾಗಿರುವ ಬಗ್ಗೆ ಮುಂದಿನ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲು ಕೊಟ್ಟ ಪ್ರ.ವ.ವರದಿ.

 1. ಪಾತಪಾಳ್ಯ ಪೊಲೀಸ್ ಠಾಣೆ. ಮೊ.ಸಂ: 54/2019 ಕಲಂ: 15(ಎ),32(3) ಐ.ಪಿ.ಸಿ:-

          ದಿನಾಂಕ:14/07/2019 ರಂದು ಸಂಜೆ 05-00 ಗಂಟೆಗೆ ಪಿಎಸ್ಐ ಪಾತಪಾಳ್ಯ ಪೊಲೀಸ್ ಠಾಣೆರವರು  ಠಾಣೆಗೆ ಬಂದು ನೀಡಿದ ವರದಿಯ ಸಾರಾಂಶವೇನೆಂದರೆ ದಿನಾಂಕ:14/07/2019 ರಂದು ಮದ್ಯಾಹ್ನ ಸುಮಾರು 03-00 ಗಂಟೆಗೆ ಪಾತಪಾಳ್ಯ ಪೊಲೀಸ್ ಠಾಣಾ ಸರಹದ್ದು ಸೋಮನಾಥಪುರ ಗ್ರಾಮದ ಬಳಿ ಗಸ್ತಿನಲ್ಲಿದ್ದಾಗ ಮರಿಮಾಕಲಪಲ್ಲಿ ಗ್ರಾಮದಲ್ಲಿ  ಮನೆಯ ಮುಂಬಾಗದ ಖಾಲಿ ಜಾಗದಲ್ಲಿ ಯಾರೋ ಆಸಾಮಿ ಅಕ್ರಮವಾಗಿ ಮದ್ಯ ಸೇವನೆ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದಾಗಿ ಬಂದ ಖಚಿತ ವರ್ತಮಾನದ ಮೇರೆಗೆ ಸಿಬ್ಬಂದಿಯವರು ಹಾಗೂ ಪಂಚರೊಂದಿಗೆ ಸರ್ಕಾರಿ ಜೀಪಿನ ಸಂಖ್ಯೆ ಕೆ,ಎ-40 ಜಿ-59 ರಲ್ಲಿ ಮರಿಮಾಕಲಪಲ್ಲಿ ಗ್ರಾಮದ ಮನೆಯ  ಮುಂಬಾಗದ ಖಾಲಿ ಜಾಗದ ಬಳಿಗೆ ಹೋಗಲಾಗಿ ನಾವು ಹೋಗಿದ್ದ  ಜೀಪನ್ನು ನೋಡಿ ಮನೆಯ  ಬಳಿ ಖಾಲಿ ಜಾಗದಲ್ಲಿದ್ದ  ಯಾರೋ ಒಬ್ಬರು  ಓಡಿ ಹೋಗಿದ್ದು  ಮನೆಯ  ಬಳಿ ಖಾಲಿ ಜಾಗದಲ್ಲಿ ಒಬ್ಬ ಆಸಾಮಿ ಇದ್ದು ಆತನ ಹೆಸರು ವಿಳಾಸ ಕೇಳಲಾಗಿ ಬೈರೆಡ್ಡಿ ಬಿನ್  ಲೇಟ್ ಸುಬ್ಬಿರೆಡ್ಡಿ, 45 ವರ್ಷ, ವಕ್ಕಲಿಗ ಜನಾಂಗ, ವ್ಯಾಪಾರ ಮರಿಮಾಕಲಪಲ್ಲಿ  ಗ್ರಾಮ, ಬಾಗೇಪಲ್ಲಿ ತಾಲ್ಲೂಕು ಎಂದು ತಿಳಿಸಿದ್ದು  ಸದರಿ ಸ್ಥಳದಲ್ಲಿ ನಾವು ಪರಿಶೀಲಿಸಲಾಗಿ  90 ಮಿ,ಲೀಟರ್ ನ  14  ಹೈ ವಾರ್ಡ್ಸ್   ವಿಸ್ಕಿ ಮದ್ಯದ ಟೆಟ್ರಾ ಪಾಕಟೆ ಗಳು (ಸುಮಾರು  420/- ರೂ ಬೆಲೆ ಬಾಳುವುದಾಗಿರುತ್ತೆ,) ಮತ್ತು 01 ಲೀಟರ್ ನ 01 ನೀರಿನ ಖಾಲಿ ಬಾಟಲ್ ಮತ್ತು 01 ಪ್ಲಾಸ್ಟಿಕ್ ಖಾಲಿ ಗ್ಲಾಸ್ ಮತ್ತು ಉಪಯೋಗಿಸಿರುವ 90 ಮಿ,ಲೀಟರ್ ನ  01  ಹೈ ವಾರ್ಡ್ಸ್ ವಿಸ್ಕಿ ಟೆಟ್ರಾ ಪಾಕೆಟ್  ಇದ್ದು ಸ್ಥಳದಲ್ಲಿದ್ದ ಮೇಲ್ಕಂಡ ಆಸಾಮಿಯನ್ನು ಮದ್ಯ ಸೇವನೆ ಮಾಡಲು ಸ್ಥಳಾವಕಾಶ ಮಾಡಿಕೊಡಲು ಪರವಾನಗಿಯನ್ನು ಪಡೆದಿರುವ ಬಗ್ಗೆ ಕೇಳಲಾಗಿ ಯಾವುದೇ ಪರವಾನಗಿಯನ್ನು ಪಡೆದಿಲ್ಲವೆಂದು ತಿಳಿಸಿರುತ್ತಾನೆ, ಸದರಿ ಆಸಾಮಿಯನ್ನು ವಶಕ್ಕೆ ಪಡೆದುಕೊಂಡು ಮೇಲ್ಕಂಡ ವಸ್ತುಗಳನ್ನು ಪಂಚರ ಸಮಕ್ಷಮ ಪಂಚನಾಮೆಯ ಮೂಲಕ ಆಮಾನತ್ತು ಪಡಿಸಿಕೊಂಡು ಆರೋಪಿ ಮತ್ತು ಅಮಾನತ್ತು ಪಡಿಸಿದ ಮಾಲುಗಳೊಂದಿಗೆ ಠಾಣೆಗೆ ವಾಪ್ಪಸ್ಸಾಗಿ ಮೇಲ್ಕಂಡವನ ವಿರುದ್ದ ಮುಂದಿನ ಕ್ರಮ ಜರುಗಿಸಲು ಕೋರಿ ನೀಡಿದ ವರದಿಯ ಮೇರೆಗೆ ಠಾಣಾ ಮೊ,ಸಂ 54/2019 ಕಲಂ 15 (ಎ) 32(3) KE ACT ರೀತ್ಯಾ ಪ್ರಕರಣ ದಾಖಲಿಸಿರುತ್ತೆ,