ದಿನಾಂಕ :15/05/2020 ರ ಅಪರಾಧ ಪ್ರಕರಣಗಳು

  1. ಚೇಳೂರು ಪೊಲೀಸ್ ಠಾಣೆ ಮೊ.ಸಂ.23/2020 ಕಲಂ. 87 ಕೆ.ಪಿ ಆಕ್ಟ್:-

          ದಿನಾಂಕ:15/05/2020 ರಂದು ಸಂಜೆ 16-10 ಗಂಟೆಗೆ ನ್ಯಾಯಾಲಯ ಕರ್ತವ್ಯದ ಸಿಬ್ಬಂದಿಯಾದ ಸಿ.ಪಿ.ಸಿ 445 ರಮೇಶ್ ರವರ ಘನ ನ್ಯಾಯಾಲಯದಿಂದ ಪ್ರಕರಣ ದಾಖಲಿಸಲು ಅನುಮತಿಯನ್ನು ಪಡೆದ ಸದರಿ ಆದೇಶ ಪತ್ರಿಯನ್ನು ತಂದು ಠಾಣೆಯಲ್ಲಿ ಹಾಜರು ಪಡಿಸಿದ್ದರ ಸಾರಾಂಶವೆನೇಂದರೆ, ದಿನಾಂಕ:14/05/2020 ರಂದು ಮಧ್ಯಾಹ್ನ 15-30 ಗಂಟೆಗೆ ಪಿ.ಎಸ್.ಐ ರವರು ,ಮಾಲು ಆಸಾಮಿಗಳ, ಪಂಚನಾಮೆಯೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ವರದಿಯ ಸಾರಾಂಶವೇನೇಂದರೆ, ದಿನಾಂಕ:14/05/2020 ರಂದು ಮಧ್ಯಾಹ್ನ 13-00 ಗಂಟೆಯ  ಸಮಯದಲ್ಲಿ  ಠಾಣೆಯಲ್ಲಿದ್ದಾಗ ಬಾಗೇಪಲ್ಲಿ ತಾಲ್ಲೂಕು ಚೇಳೂರು ಹೋಬಳಿಯ ಪುಲ್ಲವಾಂಡ್ಲಪಲ್ಲಿ( ಗಾಂಧಿಪುರ)  ಗ್ರಾಮದ ಬಳಿ ಗಂಗಮ್ಮ ದೇವಾಲಯದ ಪಕ್ಕದಲ್ಲಿನ  ಹುಣಸೇ ಮರದ ಕೆಳಗೆ ಸಾರ್ವಜನಿಕ ಸ್ಥಳದಲ್ಲಿ ಯಾರೋ ಕೆಲವರು ಅಂದರ್-ಬಾಹರ್ ಇಸ್ಪೀಟ್ ಜೂಜಾಟವಾಡುತ್ತಿರುವುದಾಗಿ ಬಂದ ಖಚಿತ ಮಾಹಿತಿಯ ಮೇರೆಗೆ ನಾನು ಮತ್ತು ಠಾಣೆಯ ಸಿಬ್ಬಂದಿಯವರಾದ, ಸಿ.ಹೆಚ್,ಸಿ 149 ಇನಾಯಿತ್ ವುಲ್ಲಾ,   ಸಿ.ಪಿ.ಸಿ-519 ಚಂದ್ರ ಶೇಖರ್, ಸಿ,ಪಿ,ಸಿ 07 ವಿಧ್ಯಾದರ್, ಸಿ.ಪಿ.ಸಿ 09 ನಾರಾಯಣಸ್ವಾಮಿ ಮತ್ತು ಹೆಚ್,ಜಿ 551 ದೇವರಾಜ, ಹೆಚ್,ಜಿ 538 ಲಕ್ಮಣ್ ರವರೊಂದಿಗೆ  ಪುಲ್ಲವಾಂಡ್ಲಪಲ್ಲಿ( ಗಾಂಧಿಪುರ)   ಗ್ರಾಮದ ಬಳಿ ಹೋಗಿ ಸದರಿ ಗ್ರಾಮದ ಮುಖ್ಯ ರಸ್ತೆಯಲ್ಲಿ ಪಂಚರನ್ನು ಸರ್ಕಾರಿ ಜೀಪ್ ಸಂಖ್ಯೆ ಕೆಎ 42 ಜಿ-61 ವಾಹನದ ಬಳಿ ಬರಮಾಡಿಕೊಂಡು  ಪಂಚರಿಗೆ ಬಾಗೇಪಲ್ಲಿ ತಾಲ್ಲೂಕು ಚೇಳೂರು ಹೋಬಳಿ  ಪುಲ್ಲವಾಂಡ್ಲಪಲ್ಲಿ( ಗಾಂಧಿಪುರ)  ಗ್ರಾಮದ ಗಂಗಮ್ಮ ದೇವಾಲಯದ ಬಳಿ ಸಾರ್ವಜನಿಕ ಸ್ಥಳದಲ್ಲಿ ಹುಣಸೇ ಮರದ ಕೆಳಗೆ  ಯಾರೋ ಕೆಲವರು ಅಂದರ್ ಬಾಹರ್ ಜೂಜಾಟ ವಾಡುತ್ತಿರುವುದಾಗಿ ಖಚಿತ ಮಾಹಿತಿ ಬಂದಿದೆ ಎಂದು ಹೇಳಿ ಪಂಚರಾಗಿ ಬರಬೇಕೆಂದು ಕೋರಿದರ ಮೇರೆಗೆ ಸದರಿಯವರುಗಳು ಒಪ್ಪಿಕೊಂಡಿದ್ದು   ನಂತರ  ಪೊಲೀಸರು  &  ಪಂಚರು ನಡೆದುಕೊಂಡು ಹೋಗಿ ಗಂಗಮ್ಮ ದೇವಾಲಯದ ಬಳಿ ಗಿಡಗಳ ಮರೆಯಲ್ಲಿ  ನಿಂತು ನೋಡಲಾಗಿ ಯಾರೋ ಕೆಲವರು ಗಂಗಮ್ಮ ದೇವಾಲಯದ ಪಕ್ಕದಲ್ಲಿ ಹುಣಸೇ ಮರದ ಕೆಳಗೆ ಕೆಲವರು ಗುಂಪು ಕಟ್ಟಿಕೊಂಡು  ಪ್ಲಾಸ್ಟಿಕ್ ಪೇಪರ್ ಮೇಲೆ ಇಸ್ಫೇಟ್ ಎಲೆಗಳನ್ನು ಹಾಕಿಕೊಂಡು ಅಂದರ್ 200 ಬಾಹರ್ 200 ಎಂದು ಕೂಗುತ್ತಾ ಇಸ್ಪೀಟ್ ಜೂಜಾಟವಾಡುತ್ತಿದ್ದು ಸದರಿಯವರನ್ನು ಪೊಲೀಸರು ಸುತ್ತುವರೆದು ಹಿಡಿದು ಕೊಂಡು ವಶಕ್ಕೆ ಪಡೆದು ಹೆಸರು ಮತ್ತು ವಿಳಾಸವನ್ನು ಕೇಳಲಾಗಿ  01) ಜಯರಾಮ ಬಿನ್ ಲೇಟ್ ನಲ್ಲಪ್ಪ, 55 ವರ್ಷ, ಜಿರಾಯ್ತಿ, ನಾಯಕರು, ವಾಸ: ಪುಲ್ಲವಾಂಡ್ಲಪಲ್ಲಿ( ಗಾಂಧಿಪುರ)  ಗ್ರಾಮ ಬಾಗೇಪಲ್ಲಿ ತಾಲ್ಲೂಕು ರವರ ಮುಂದೆ 1900 ರೂ ಇದ್ದು ಆತನ ಪಕ್ಕದಲ್ಲಿದ್ದ  02) ಜಯರಾಜು ಬಿನ್ ನರಸಿಂಹಪ್ಪ, 23 ವರ್ಷ, ನಾಯಕರು, ಡ್ರೈವರ್ ಕೆಲಸ, ವಾಸ: ಪುಲ್ಲವಾಂಡ್ಲಪಲ್ಲಿ( ಗಾಂಧಿಪುರ) ಗ್ರಾಮ,  ಬಾಗೇಪಲ್ಲಿ ತಾಲ್ಲೂಕು ಆತನ ಮುಂದೆ 1700 ರೂ ಇದ್ದು ನಂತರ ಆತನ ಪಕ್ಕದಲ್ಲಿ ಕುಳಿತ್ತಿದ್ದ ವ್ಯೆಕ್ತಿಯ ಹೆಸರು ವಿಳಾಸ ಕೇಳಲಾಗಿ 3) ಸುರೇಶ್ ಬಿನ್ ಲೇಟ್ ಈರಪ್ಪ , 25 ವರ್ಷ, ನಾಯಕರು, ಕೂಲಿ ಕೆಲಸ, ವಾಸ: ಪುಲ್ಲವಾಂಡ್ಲಪಲ್ಲಿ( ಗಾಂಧಿಪುರ) ಗ್ರಾಮ, ಬಾಗೇಪಲ್ಲಿ ತಾಲ್ಲೂಕು ಆತನ ಮುಂದೆ1800 ರೂ ಇದ್ದು ನಂತರ ಆತನ ಮುಂಭಾಗದಲ್ಲಿದ್ದ ವ್ಯೆಕ್ತಿಯ ಹೆಸರು ವಿಳಾಸ ಕೇಳಾಗಿ 04) ವಿಶ್ವನಾಥ ಬಿನ್ ಸುಬ್ಬರಾಮಪ್ಪ, 25 ವರ್ಷ, ಪೆಟ್ರೋಲ್ ಬಂಕ್ ನಲ್ಲಿ ಕೆಲಸ, ನಾಯಕರು, ವಾಸ: ಪುಲ್ಲವಾಂಡ್ಲಪಲ್ಲಿ( ಗಾಂಧಿಪುರ) ಗ್ರಾಮ, ಬಾಗೇಪಲ್ಲಿ ತಾಲ್ಲೂಕು ಆತನ ಮುಂದೆ 2000  ರೂ ಇದ್ದು 05) ರಾಜಕುಮಾರ ಬಿನ್ ಲೇಟ್ ವೆಂಕಟರವಣಪ್ಪ, 25 ವರ್ಷ, ನಾಯಕರು, ಕೂಲಿ ಕೆಲಸ, ವಾಸ: ಪುಲ್ಲವಾಂಡ್ಲಪಲ್ಲಿ( ಗಾಂಧಿಪುರ) ಗ್ರಾಮ ಬಾಗೇಪಲ್ಲಿ ತಾಲ್ಲೂಕು ರವರ ಮುಂದೆ1600 ರೂ ಇದ್ದು ನಂತರ ರವರ ಪಕ್ಕದಲ್ಲಿ ವ್ಯೆಕ್ತಿಯ ಹೆಸರು ವಿಳಾಸ ಕೇಳಲಾಗಿ  06) ಶ್ರೀಕಾಂತ್ ಬಿನ್  ಸುಬ್ಬರಾಮಪ್ಪ, 23 ವರ್ಷ, ಕೂಲಿ ಕೆಲಸ, ವಾಸ: ಪುಲ್ಲವಾಂಡ್ಲಪಲ್ಲಿ( ಗಾಂಧಿಪುರ) , ಬಾಗೇಪಲ್ಲಿ ತಾಲ್ಲೂಕು ಆತನ ಮುಂದೆ 1000ರೂ  ಇದ್ದು ನಂತರ ರವರ ಪಕ್ಕದಲ್ಲಿ ವ್ಯೆಕ್ತಿಯ ಹೆಸರು ವಿಳಾಸ ಕೇಳಲಾಗಿ 07) ಮಲ್ಲಿ ಕಾರ್ಜುನ ಬಿನ್ ರಾಮಚಂದ್ರ,22 ವರ್ಷ, ಕೂಲಿ ಕೆಲಸ, ನಾಯಕರು,ವಾಸ: ಪುಲ್ಲವಾಂಡ್ಲಪಲ್ಲಿ( ಗಾಂಧಿಪುರ)   ಬಾಗೇಪಲ್ಲಿ ತಾಲ್ಲೂಕು  ರವರ ಮುಂದೆ  2000 ರೂ ಇರುತ್ತೆ.  ಸದರಿಯವರ ಬಳಿ ಒಟ್ಟು ನಗದು ಹಣ 12000/-(ಹನ್ನೇರಡು ಸಾವಿರೂ ಗಳು ಮಾತ್ರ) ಮತ್ತು ಒಂದು ಹಳೆಯ ಪ್ಲಾಸ್ಟಿಕ್ ಪೇಪರ್ ಮತ್ತು  52 ಇಸ್ಪೀಟ್ ಎಲೆಗಳಿದ್ದು  ಸದರಿ ಮಾಲನ್ನು ಪಂಚರ ಸಮಕ್ಷಮ ಪಂಚನಾಮೆಯ ಮುಖಾಂತರ ಅಮಾನತ್ತು ಪಡಿಸಿಕೊಂಡು  ಮಾಲು & ಆರೋಪಿತರು ಮತ್ತು ಪಂಚನಾಮೆಯೊಂದಿಗೆ  ಸಂಜೆ 3-30 ಗಂಟೆಗೆ ಠಾಣೆಗೆ ಹಾಜರಾಗಿ ಠಾಣೆಯಲ್ಲಿ ಮುಂದಿನ ಕ್ರಮಕ್ಕಾಗಿ ವರದಿಯನ್ನು  ನೀಡಿರುತ್ತೇನೆ. ವರದಿಯನ್ನು  ಪಡೆದ ಠಾಣಾ ಎನ್.ಸಿ.ಆರ್ ನಂಬರ್ :24/2020 ರಂತೆ ದಾಖಲಿಸಿಕೊಂಡು ಘನ ನ್ಯಾಯಾಲಯದ ಅನುಮತಿಗಾಗಿ ಮನವಿಯನ್ನು ಸಲ್ಲಿಸಿಕೊಂಡಿದ್ದು ಈ ದಿನ ಘನ ನ್ಯಾಯಾಲಯ  ಆಸಾಮಿಗಳ ವಿರುದ್ದ ಪ್ರಕರಣವನ್ನು ದಾಖಲಿಸಿಲು ಅನುಮತಿಯನ್ನುನೀಡಿದ್ದರ ಮೇರೆಗೆ ಠಾಣಾ ಮೊ.ಸಂಖ್ಯೆ:23/2020 ಕಲಂ:87 ಕೆ.ಪಿ.ಆಕ್ಟ್ ರೀತ್ಯಾ ಪ್ರಕರಣ ದಾಖಲಿಸಿರುತ್ತೆ.

  1. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.198/2020 ಕಲಂ. 323,324,504,506 ರೆ/ವಿ 34 ಐ.ಪಿ.ಸಿ:-

          ದಿನಾಂಕ 14-05-2020 ರಂದು ಚಿಂತಾಮಣಿ ಸರ್ಕಾರಿ ಆಸ್ವತ್ರೆಯಲ್ಲಿ ಗಾಯಾಳು ಸೋಣ್ಣೇಗೌಡ ಬಿನ್ ಲೇಟ್ ಚೊಕ್ಕೇಗೌಡ, 60 ವರ್ಷ, ವಕ್ಕಲಿಗರು, ಜಿರಾಯ್ತಿ, ಬೊಮ್ಮಕಲ್ಲು ಗ್ರಾಮ ಚಿಂತಾಮಣಿ ತಾಲ್ಲೂಕು ರವರು ನೀಡಿದ ಹೇಳಿಕೆಯನ್ನು ಪಡೆದುಕೊಂಡು ಠಾಣೆಗೆ ರಾತ್ರಿ 8-00 ಗಂಟೆಗೆ ವಾಪಸ್ಸಾಗಿದ್ದು ಸದರಿ ಹೇಳಿಕೆಯ ಸಾರಾಂಶವೇನೆಂದರೆ ತಮ್ಮ ಗ್ರಾಮದಲ್ಲಿ ತಮಗೂ ಮತ್ತು ತಮ್ಮ ಗ್ರಾಮದ ಮುನಿನಾರಾಯಣಸ್ವಾಮಿ ಬಿನ್ ಶೆಟ್ಟಿಹಳ್ಳಿ ನಾರಾಯಣಪ್ಪ ರವರಿಗೆ ಸೈಟಿನ ವಿಚಾರದಲ್ಲಿ ವಿವಾದವಿರುತ್ತೆ. ಹೀಗಿರುವಾಗ ಈ ದಿನ ದಿನಾಂಕ 14-05-2020 ರಂದು ಬೆಳಗ್ಗೆ 10-00 ಗಂಟೆ ಸಮಯದಲ್ಲಿ ಮೇಲ್ಕಂಡ ಮುನಿನಾರಾಯಣಸ್ವಾಮಿ ರವರು ವಿವಾದ ಸೈಟ್ ನಲ್ಲಿ ನೀರಿನ ಸಂಪ್ ಅನ್ನು ಕಟ್ಟುತ್ತಿದ್ದು  ತಾನು, ತನ್ನ ತಮ್ಮ ಶ್ರೀನಿವಾಸ ಮತ್ತು ಗೋಪಾಲ ರವರು ಮುನಿನಾರಾಯಣಸ್ವಾಮಿ ರವರನ್ನು ಕುರಿತು ಏಕೆ ವಿವಾದಿತ ಸೈಟಿನಲ್ಲಿ ಸಂಪ್ ಅನ್ನು ಕಟ್ಟುತ್ತಿರುವುದು ಎಂದು ಕೇಳಿದ್ದಕ್ಕೆ ಸ್ಥಳದಲ್ಲಿದ್ದ ಮುನಿನಾರಾಯಣಸ್ವಾಮಿ, ಆತನ ಮಗ ಶಿವರಾಜ್, ಆತನ ಹೆಂಡತಿ ಶಾಂತಮ್ಮ ರವರು ಸಮಾನ ಉದ್ದೇಶದಿಂದ  ತಮ್ಮ ಮೇಲೆ ಜಗಳ ತೆಗೆದು ತಮ್ಮಗಳನ್ನು ಕುರಿತು ಲೇ ಲೋಫರ್ ಸೂಳೆ  ನನ್ನ ಮಕ್ಕಳೇ ಎಂದು ಅವಾಶ್ಚ ಶಬ್ದಗಳಿಂದ  ಬೈದು , ಆ ಪೈಕಿ ಶಿವರಾಜ್ ರವರು  ತನ್ನ ಕೈಯಲ್ಲಿದ್ದ ದೊಣ್ಣೆಯಿಂದ ತನ್ನ ಬೆನ್ನಿನ ಮೇಲೆ ಹೊಡೆದು  ಮೂಗೇಟು ಉಂಟು ಮಾಡಿದನು.  ಮುನಿನಾರಾಯಣಸ್ವಾಮಿ ರವರು ಕೈ ಗಳಿಂದ  ತನ್ನ ಮೈ  ಮೇಲೆ  ಹೊಡೆದು ಎಳೆದಾಡಿ ನೋವುಂಟು ಮಾಡಿದರು.  ಶಾಂತಮ್ಮ ರವರು ತಮ್ಮನ್ನು ಕುರಿತು  ಸದರಿ ಜಾಗದ ತಂಟೆಗೆ  ಬಂದರೆ ನಿಮ್ಮನ್ನು ಮುಗಿಸಿ ಬಿಡುವುದಾಗಿ  ಪ್ರಾಣ ಬೆದರಿಕೆ ಹಾಕಿದರು.  ಅಷ್ಟರಲ್ಲಿ  ತಮ್ಮ ಗ್ರಾಮದ ರಮೇಶ್ ಬಿನ್ ಮುನಿಯಪ್ಪ, ಬೂರಗಮಾಕಲಹಳ್ಳಿ ಗ್ರಾಮದ ನರಸಿಂಹಪ್ಪ ಬಿನ್ ಚಿಕ್ಕ ಗಂಗಪ್ಪ  ಅಡ್ಡ ಬಂದು ಜಗಳ ಬಿಸಿದರು. ಆದ್ದರಿಂದ  ಮೇಲ್ಕಂಡವರ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿದೆ.

  1. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.199/2020 ಕಲಂ. 379 ಐ.ಪಿ.ಸಿ:-

          ದಿನಾಂಕ: 15/05/2020 ರಂದು ಮದ್ಯಾಹ್ನ 1.00 ಗಂಟೆಗೆ ಶ್ರೀಮತಿ ಪದ್ಮಮ್ಮ ಕೋಂ ಶ್ರೀನಿವಾಸರೆಡ್ಡಿ, 38 ವರ್ಷ, ವಕ್ಕಲಿಗರು, ಮನೆಕೆಲಸ, ರಾಯಪ್ಪನಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ತಾನು ತನ್ನ ಜೀವನೋಪಾಯಕ್ಕಾಗಿ 4 ಹೆಚ್.ಎಫ್ ತಳಿಯ ಸೀಮೆ ಹಸುಗಳನ್ನು ಮೇಯಿಸಿಕೊಂಡಿರುತ್ತಾರೆ. ಅವುಗಳ ಪೈಕಿ ಒಂದು ಹಸು ಹಾಲು ನೀಡುತ್ತಿದ್ದು ಉಳಿದ 3 ಹಸುಗಳು ತುಂಬಿರುತ್ತೆ. ಅವುಗಳನ್ನು ತಾನು ತಮ್ಮ ಊರಿನ ಹೊರವಲಯದಲ್ಲಿ ಮೇಯಿಸಿಕೊಂಡು ಸಂಜೆ ತಮ್ಮ ಮನೆಯ ಬಳಿ ಕಟ್ಟಿ ಹಾಕುತ್ತಿರುತ್ತಾರೆ. ಎಂದಿನಂತೆ ದಿನಾಂಕ 14/05/2020 ರಂದು ತಾನು ಮೇಲ್ಕಂಡ ತನ್ನ ಬಾಬ್ತು 4 ಸೀಮೆ ಹಸುಗಳನ್ನು ತಮ್ಮ ಊರಿನ ಬಳಿ ಮೇಯಿಸಿಕೊಂಡು ಅವುಗಳನ್ನು ಹೊಡೆದುಕೊಂಡು ಬಂದು ಸಂಜೆ ತಮ್ಮ ಮನೆಯ ಬಳಿ ಕಟ್ಟಿ ಹಾಕಿರುತ್ತಾರೆ. ಈ ದಿನ ದಿನಾಂಕ 15/05/2020 ರಂದು ಬೆಳಗಿನ ಜಾವ 02.00 ಗಂಟೆ ಸಮಯದಲ್ಲಿ ತಾನು ಮೇಲ್ಕಂಡ ಹಸುಗಳಿಗೆ ಮೇವು ಹಾಕಿ ಮನೆಯಲ್ಲಿ ಮಲಗಿರುತ್ತಾರೆ. ಇದೇ ದಿನ ಬೆಳಿಗ್ಗೆ 05.30 ಗಂಟೆಗೆ ತಾನು ಎದ್ದು ಮನೆಯಿಂದ ಹೊರಗೆ ಬಂದು ನೋಡಲಾಗಿ ತಾನು ಕಟ್ಟಿ ಹಾಕಿದ್ದ 4 ಸೀಮೆ ಹಸುಗಳು ಇಲ್ಲದೆ ಕಳ್ಳತನವಾಗಿರುತ್ತೆ. ತಾನು ತಮ್ಮ ಗ್ರಾಮದ ಸುತ್ತಮುತ್ತಲಿನಲ್ಲಿ ಹುಡುಕಾಡಲಾಗಿ ಸೀಮೆ ಹಸುಗಳು ಪತ್ತೆಯಾಗಿರುವುದಿಲ್ಲ. ಈ ದಿನ ಬೆಳಿಗ್ಗೆ 02.00 ಗಂಟೆಯಿಂದ 05.30 ಗಂಟೆಯ ಮಧ್ಯೆ ಯಾರೋ ಕಳ್ಳರು ತನ್ನ 4 ಸೀಮೆ ಹಸುಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಕಳುವಾಗಿರುವ ಸೀಮೆ ಹಸುಗಳ ಬೆಲೆ ಸುಮಾರು 2 ಲಕ್ಷ (2,00,000/-) ರೂಗಳಾಗಿರುತ್ತೆ. ಆದ್ದರಿಂದ ಸದರಿ ಸೀಮೆ ಹಸುಗಳನ್ನು ಕಳ್ಳತನ ಮಾಡಿದವರನ್ನು ಪತ್ತೆ ಮಾಡಿ ಕಳ್ಳರ ಮೇಲೆ ಕಾನೂನು ರೀತ್ಯ ಕ್ರಮ ಜರುಗಿಸಬೇಕೆಂದು ಕೋರಿ ನೀಡಿದ ದೂರಾಗಿರುತ್ತೆ.

  1. ದಿಬ್ಬೂರಹಳ್ಳಿ ಪೊಲೀಸ್ ಠಾಣೆ ಮೊ.ಸಂ.47/2020 ಕಲಂ. 323,324 ಐ.ಪಿ.ಸಿ & 3(1)(r),3(1)(s) The SC & ST (Prevention of Atrocities) Amendment Act 2015:-

          ದಿನಾಂಕ:14-05-2020 ರಂದು ಎ.ಎಸ್.ಐ ಪಾರ್ಥಸಾರತಿ ರವರು ಶಿಡ್ಲಘಟ್ಟ ಸರ್ಕಾರಿ ಆಸ್ಪತ್ರೆಯಲ್ಲಿ ಗಾಯಾಳಾದ ಶ್ರೀ ಕೆಂಚಪ್ಪ ಬಿನ್ ಲೇಟ್ ವೆಂಕಟರಾಯಪ್ಪ, 80 ವರ್ಷ,ಪ.ಜಾತಿ ಜಿರಾಯ್ತಿ, ಬಶೆಟ್ಟಿಹಳ್ಳಿ ಗ್ರಾಮ ರವರ ಹೇಳಿಕೆಯನ್ನು ಪಡೆದುಕೊಂಡು ಸಂಜೆ 07-00 ಗಂಟೆಗೆ ಠಾಣೆಗೆ ಬಂದು ಹಾಜರುಪಡಿಸಿದ ದೂರಿನ ಸಾರಾಂಶವೇನೆಂದರೆ, ದಿನಾಂಕ:14-05-2020 ರಂದು ಬೆಳಗ್ಗೆ ಸುಮಾರು 10-30 ಗಂಟೆಯಲ್ಲಿ ತಾನು ಮನೆಯಿಂದ ತಮ್ಮ ತೋಟಕ್ಕೆ ಹೋಗಲು ತಮ್ಮ ಗ್ರಾಮದ ನರಸಿಂಹಪ್ಪ ರವರ ಚಿಲ್ಲರೆ ಅಂಗಡಿ ಪಕ್ಕದಲ್ಲಿರುವ ಅಂಬೇಡ್ಕರ್ ಬೋರ್ಡ್ ಇರುವ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ನರಸಿಂಹಪ್ಪನ ಅಂಗಡಿ ಬಳಿ ಇದ್ದ ದೊಡ್ಡ ತೇಕಹಳ್ಳಿ ಗ್ರಾಮದ ಪ್ರಕಾಶ್ ಬಿನ್ ಗೋವಿಂದಪ್ಪ ಗಾಣಿಗರು ತನ್ನನ್ನು ಕುರಿತು “ಏ  ಮುದುಕಪ್ಪ ಎಲ್ಲಿಗೋ ಹೋಗೋದು ಮನೆಯಲ್ಲಿರಬಾರದಾ ಎಂದು ಏರು ದ್ವನಿಯಲ್ಲಿ ಮಾತನಾಡಿರುತ್ತಾನೆ. ಆಗ ತಾನು ತೋಟದ ಬಳಗೆ ಹೋಗುತ್ತಿದ್ದೇನೆ. ನೀನು ಯಾರು ಕೇಳುವುದಕ್ಕೆ ಎಂದಿದ್ದಕ್ಕೆ ಪ್ರಸಾದ್ ಏಕಾಏಕಿ ಬಂದು ತನ್ನ ಗಲ್ಲಾಪಟ್ಟಿಯನ್ನು ಹಿಡಿದುಕೊಂಡು ಕೈಗಳಿಂದ ಮೈಮೇಲೆಲ್ಲಾ ಹೊಡೆದು ಕೆಳಕ್ಕೆ ಬೀಳಿಸಿರುತ್ತಾನೆ. ತಾನು ಕೆಳಕ್ಕೆ ಬಿದ್ದಾಗ ತನ್ನ ಬಲಕಾಲಿನ ಮಂಡಿಯ ಬಳಿ ಮೂಳೆ ಮುರಿತವಾಗಿರುತ್ತದೆ. ನಂತರ ಕಾಲಿನಿಂದ ತನ್ನಬಲಗಾಲಿನ ತೊಡೆಗೆ ಒದ್ದು ನೋವುಂಟು ಮಾಡಿರುತ್ತಾನೆ. ನಂತರ ಅಲ್ಲಿದ್ದ ಒಂದು ಕಲ್ಲನ್ನು ಎತ್ತಿಕೊಂಡು ತನ್ನ ಬೆನ್ನಿಗೆ ಹೊಡೆದು ನೋವುಂಟು ಮಾಡಿರುತ್ತಾನೆ. ಆಗ ತನ್ನ ಮಗ ದೇವರಾಜ ಮತ್ತು ಮೊಮ್ಮಕ್ಕಳಾದ ಅಂಬರೀಶ ಪಾಪಣ್ಣ ರವರು ತನ್ನನ್ನು ಚಿಕಿತ್ಸೆಗಾಗಿ ಬಶೆಟ್ಟಿಹಳ್ಳಿ ಪ್ರಾಥಮಿಕ ಅರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋಗಿರುತ್ತಾರೆ ಅಲ್ಲಿ ವೈದ್ಯರು ಪರೀಕ್ಷಿಸಿ ಮೂಳೆ ಮುರಿತವಾಗಿದೆ. ಶಿಡ್ಲಘಟ್ಟ ಆಸ್ಪತ್ರೆಗೆ ಹೋಗಿ ಎಂದು ತಿಳಿಸಿರುತ್ತಾರೆ. ಆಗ 108 ಅಂಬ್ಯುಲೆನ್ಸ್ ನಲ್ಲಿ ಶಿಡ್ಲಘಟ್ಟ ಸರ್ಕಾರಿ ಆಸ್ಪತ್ರೆಗೆ ಬಂದು ದಾಖಲಾಗಿರುತ್ತೇನೆ. ಆದ್ದರಿಂದ ತನ್ನ ಮೇಲೆ ಗಲಾಟೆ ಮಾಡಿದ ಪ್ರಸಾದ್ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಲು ನೀಡಿರುವ ಹೇಳಿಕೆ ದೂರಾಗಿರುತ್ತೆ.

  1. ಮಂಚೇನಹಳ್ಳಿ ಪೊಲೀಸ್ ಠಾಣೆ ಮೊ.ಸಂ.111/2020 ಕಲಂ. 279,337 ಐ.ಪಿ.ಸಿ & 134 ಐ.ಎಂ.ವಿ ಆಕ್ಟ್:-

          ದಿನಾಂಕ:14/05/2020 ರಂದು ಪಿರ್ಯಾದಿದಾರರಾದ ಶ್ರೀ ಮೀರ್ ಆಸೀಫ್ ರಜಾ ಬಿನ್ ಮೀರ್ ಅಬು ತರಬ್ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ಈ ದಿನ ಬೆಳಿಗ್ಗೆ ನಮ್ಮ ತಂದೆಯವರು ಗ್ರಾಮ ಪಂಚಾಯ್ತಿ ಬಳಿಗೆ ನಮ್ಮ ಬಾಬತ್ತು KA-13, S-7450 ನೋಂದಣಿ ಸಂಖ್ಯೆಯ ದ್ವಿಚಕ್ರ ವಾಹನದಲ್ಲಿ ಹೋಗಿ ಕೆಲಸ ಮುಗಿಸಿಕೊಂಡು ದ್ವಿಚಕ್ರ ವಾಹನದಲ್ಲಿ ಮನೆಗೆ ಬರುತ್ತಿರುವಾಗ ಬೆಳಿಗ್ಗೆ 11-30 ಗಂಟೆಯ ಸಮಯದಲ್ಲಿ KA-05, MC-9851 ನೋಂದಣಿ ಸಂಖ್ಯೆಯ ಇಂಡಿಕಾ ಕಾರು ಚಾಲಕ ಕಾರನ್ನು ಅತಿವೇಗ ಮತ್ತು ಅಜಾಗರುಕತೆಯಿಂದ ಚಾಲನೆ ಮಾಡಿಕೊಂಡು ಬಂದು ಗ್ರಾಮ ಪಂಚಾಯ್ತಿ ಮುಂಭಾಗದಲ್ಲಿ ನಮ್ಮ ತಂದೆಯ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆಸಿದ ಪರಿಣಾಮ ನಮ್ಮ ತಂದೆ ಕೆಳಕ್ಕೆ ಬಿದ್ದು, ತಲೆಯ ಹಿಂಭಾಗಕ್ಕೆ ರಕ್ತಗಾಯವಾಗಿ ಬಲ ಕಣ್ಣಿಗೆ, ಮೂಗಿಗೆ ಮತ್ತು ಸೊಂಟಕ್ಕೆ ಪೆಟ್ಟು ಬಿದ್ದು ಕೈಕಾಲುಗಳಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ದ್ವಿಚಕ್ರ ವಾಹನ ಸಹ ಜಖಂಗೊಂಡಿರುತ್ತದೆ. ಕಾರು ಚಾಲಕ ಕಾರನ್ನು ನಿಲ್ಲಿಸಿ ಪರಾರಿಯಾಗಿದ್ದು, ತಮ್ಮ ತಂದೆಯನ್ನು ಸಾರ್ವಜನಿಕರು ಉಪಚರಿಸಿ ನಮ್ಮ ಗ್ರಾಮದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿ ಅಲ್ಲಿನ ವೈದ್ಯರ ಸಲಹೆಯ ಮೇರೆಗೆ ನಮ್ಮ ಚಿಕ್ಕಪ್ಪನಾದ ಸಜ್ಜಾದ್ ಆಲಿ ಬಿನ್ ಮೀರ್ ಮುಸ್ತಾಫ ಆಲಿ ರವರು ದೊಡ್ಡಬಳ್ಳಾಪುರದ ಕೊಲಂಬಿಯಾ ಏಷ್ಯಾ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆಗೆ ದಾಖಲಿಸಿದ್ದು, ನಮ್ಮ ತಂದೆಯ ದ್ವಿಚಕ್ರ ವಾಹನಕ್ಕೆ ಅಪಘಾತ ಪಡಿಸಿದ KA-05, MC-9851 ನೊಂದಣಿ ಸಂಖ್ಯೆಯ ಇಂಡಿಕಾ ಕಾರ್ ಚಾಲಕನ ಮೇಲೆ ಕಾನೂನು ಕ್ರಮ ಜರುಗಿಸಲು ಕೋರಿ ಕೊಟ್ಟ ದೂರು.

  1. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.119/2020 ಕಲಂ. 279 ಐ.ಪಿ.ಸಿ :-

          ದಿನಾಂಕ: 14-05-2020 ರಂದು ರಾತ್ರಿ 7-00 ಗಂಟೆಯಲ್ಲಿ ಪಿರ್ಯಾದಿದಾರರಾದ ಶ್ರೀ ಚಿರಂಜೀವಿ ಎಂ.ಎಸ್.  ಬಿನ್ ಲೇಟ್ ಶ್ರೀನಿವಾಸಮೂರ್ತಿ ಎಂ.ಜಿ, ವಾಸ: ವಾರ್ಡ ನಂ 01 , ಅಂಜನಿ ಬಡವಾಣೆ, ಬೈಪಾಸ್ ರಸ್ತೆ    ಶಿಡ್ಲಘಟ್ಟ ಟೌನ್  ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ತಾನು ಬೆಂಗಳೂರು ಜಯನಗರದಲ್ಲಿರುವ ಆರ್.ವಿ. ಲಾ.ಕಾಲೇಜಿನಲ್ಲಿ ಉಪನ್ಯಾಸಕರಾಗಿ ಕೆಲಸ ಮಾಡಿಕೊಂಡಿದ್ದು, ತಾನು ಪ್ರತಿ ದಿನ ಕೆಲಸಕ್ಕೆ ಹೋಗಿ ಬರುತ್ತಿರುತ್ತೆನೆ, ಈಗ ಲಕ್ ಡೌನ್ ಇದ್ದುದರಿಂದ ಮನೆಯಲ್ಲಿಯೇ ಇದ್ದು, ಈಗಿರುವಲ್ಲಿ ದಿನಾಂಕ:12-05-2020 ರಂದು ತನ್ನ ತಾಯಿ ಶ್ರೀಮತಿ ರಾಗಿಣಿ ಎಂ.ಜಿ ರವರಿಗೆ ಅರೋಗ್ಯ ಸರಿಇಲ್ಲದ ಕಾರಣ ಚಿಕ್ಕಬಳ್ಳಾಪುರ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಿದ್ದು,  ಈಗಿರುವಲ್ಲಿ ದಿನಾಂಕ: 13-05-2020 ರಂದು ಕದಿರಿನಾಯಕನಹಳ್ಳಿ ಗ್ರಾಮದ ತಮ್ಮ ಮಾವ ಸಿ.ಕೃಷ್ಣಪ್ಪ ರವರ ಬಾಬತ್ತು ಕೆಎ-53 ಪಿ-3101 ಇನ್ನೋವ ಕಾರನ್ನು ತೆಗದುಕೊಂಡು ಚಿಂತಾಮಣಿ ತಾಲ್ಲಕು ಹೀರೆಪಾಳ್ಯದಲ್ಲಿರುವ ತನ್ನ ಅತ್ತೆ ನಾರಾಯಣಮ್ಮ ರವರನ್ನು ಕರೆದುಕೊಂಡು ಚಿಕ್ಕಬಳ್ಳಾಪುರ ಆಸ್ಪತ್ರೆಗೆ ಹೋಗೋಣವೆಂದು ಮದ್ಯಾಹ್ನ 2-00 ಗಂಟೆಯಲ್ಲಿ ಕದಿರಿನಾಯಕನಹಳ್ಳಿ ಬಿಟ್ಟು  ವೈ-ಹುಣಸೇನಹಳ್ಳಿ- ಕೈವಾರ ರಸ್ತೆಯ ಶೀಗೆಹಳ್ಳಿ ಗ್ರಾಮದ ಬಳಿ ಮದ್ಯಾಹ್ನ 2-20 ಗಂಟೆಯಲ್ಲಿ ಹೋಗುತ್ತಿದ್ದಾಗ ತನ್ನ ವಾಹನದ ಹಿಂಬದಿಯಲ್ಲಿ  ಬರುತ್ತಿದ್ದ ಕೆಎ-53 ಪಿ-181 ಮಾರುತಿ ಓಮಿನಿ ಕಾರನ್ನು ಅದರ ಚಾಲಕ ಅತಿವೇಗ ಮತ್ತು ಅಜಾಗರುಕತೆಯಿಂದ ಚಾಲನೆ ಮಾಡಿಕೊಂಡು ಬಂದು ತಾನು ಚಾಲನೆ ಮಾಡುತ್ತಿದ್ದ ಇನ್ನೋವ ಕಾರಿಗೆ ಹಿಂಬದಿಯಿಂದ ಡಿಕ್ಕಿಹೊಡೆಸಿದ ಪರಿಣಾಮ ತನ್ನ ಕಾರಿನ ಹಿಂಭಾಗ, ಡಿಕ್ಕಿಡೋರ್, ಬಂಪರ್, ಪೂರ್ತಿ ಜಖಂಗೊಂಡಿರುತ್ತೆ, ಸದರಿ ಓಮಿನಿ ಕಾರಿನ ಮುಂಭಾಗ ಸಹ ಜಖಂಗೊಂಡಿರುತ್ತೆ, ನನಗೆ ಯಾವುದೇ ರೀತಿಯ ಗಾಯಗಳಾಗಿರುವುದಿಲ್ಲ, ಸದರಿ ಓಮಿನಿಕಾರಿನ ಚಾಲಕ ಜಖಂ ಆಗಿರುವ ತನ್ನ ಕಾರಿನ ಬಿಡಿಭಾಗಗಳನ್ನು ರಿಪೇರಿ ಮಾಡಿಸುವುದಾಗಿ ತಿಳಿಸಿದ್ದು  ಆದರೇ ಆತ  ಇದುವರೆವಿಗೂ ರಿಪೇರಿ ಮಾಡಿಸಿಕೊಟ್ಟಿರದ ಕಾರಣ ಈ ದಿನ ತಡವಾಗಿ ಠಾಣೆಗೆ ಬಂದು ದೂರನ್ನು ನೀಡುತ್ತಿದ್ದು  ತಾನು ಚಾಲನೆ ಮಾಡುತ್ತಿದ್ದ ಕಾರಿಗೆ ಹಿಂಬದಿಯಿಂದ ಡಿಕ್ಕಿಹೊಡೆಸಿದ ಕೆಎ-53 ಪಿ-181 ಮಾರುತಿ ಓಮಿನಿ ಕಾರಿನ ಚಾಲಕನ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ಕೊಟ್ಟ ದೂರಿನ ಮೇರಗೆ ಪ್ರಕರಣ ದಾಖಲಿಸಿಕೊಂಡಿರುತ್ತೆ.