ದಿನಾಂಕ : 15/02/2020 ರ ಅಪರಾಧ ಪ್ರಕರಣಗಳು

1. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.92/2020 ಕಲಂ. 279-304(ಎ) ಐ.ಪಿ.ಸಿ & 134(ಎ,ಬಿ) ಐ.ಎಂ.ವಿ ಆಕ್ಟ್ :-
ದಿನಾಂಕ: 14/02/2020 ರಂದು ರಾತ್ರಿ 8.10 ಗಂಟೆಗೆ ಡಿ.ಆರ್.ನರಸಿಂಹಮೂರ್ತಿ ಬಿನ್ ಡಿ.ಎಸ್.ರಾಮಲಿಂಗಪ್ಪ, 67ವರ್ಷ, ಬ್ರಾಹ್ಮಣರು, ನಿವೃತ್ತ ಮುಖ್ಯ ಶಿಕ್ಷಕರು, ಹಿರೇಕಟ್ಟಿಗೇನಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ತನ್ನ ತಮ್ಮನಾದ ಡಿ.ಆರ್.ಚಂದ್ರಶೇಖರಪ್ಪ ರವರು ಚಿಂತಾಮಣಿ ನಗರದ ಟ್ಯಾಂಕ್ ಬಂಡ್ ರಸ್ತೆಯಲ್ಲಿ ಸಂಸಾರದೊಂದಿಗೆ ವಾಸವಾಗಿದ್ದು ಪ್ರಸ್ತುತ ಚಿಂತಾಮಣಿ ತಾಲ್ಲೂಕು ಹಿರೇಕಟ್ಟಿಗೇನಹಳ್ಳಿ ಗ್ರಾಮ ಪಂಚಾಯ್ತಿ ಅಧ್ಯಕ್ಷರಾಗಿರುತ್ತಾರೆ. ಈ ದಿನ ದಿನಾಂಕ: 14/02/2020 ರಂದು ತನ್ನ ತಮ್ಮ ಚಂದ್ರಶೇಖರಪ್ಪರವರು ಅವರ ಬಾಬತ್ತು ಕೆಎ-67 ಇ-6048 ನೋಂದಣಿ ಸಂಖ್ಯೆಯ ಹೋಂಡಾ ಆಕ್ಟಿವಾ ದ್ವಿಚಕ್ರವಾಹನದಲ್ಲಿ ಚಿಂತಾಮಣಿಯಿಂದ ಹಿರೇಕಟ್ಟಿಗೇನಹಳ್ಳಿ ಗ್ರಾಮ ಪಂಚಾಯ್ತಿಗೆ ಬಂದು ನಂತರ ಅಲ್ಲಿಂದ ಮಧ್ಯಾಹ್ನ ಸುಮಾರು 3:00 ಗಂಟೆಯ ಸಮಯದಲ್ಲಿ ಮೇಲ್ಕಂಡ ದ್ವಿಚಕ್ರವಾಹನದಲ್ಲಿ ಚಿಂತಾಮಣಿಗೆ ಹೋಗುವುದಾಗಿ ತನಗೆ ತಿಳಿಸಿ ಬಂದಿರುತ್ತಾರೆ. ಈ ದಿನ ಮಧ್ಯಾಹ್ನ ಸುಮಾರು 3:45 ಗಂಟೆಯ ಸಮಯದಲ್ಲಿ ಯಾರೋ ಸಾರ್ವಜನಿಕರು ತನಗೆ ಪೋನ್ ಮಾಡಿ ತನ್ನ ತಮ್ಮನಾದ ಚಂದ್ರಶೇಖರಪ್ಪರವರಿಗೆ ಬೆಂಗಳೂರು-ಚಿಂತಾಮಣಿ ರಸ್ತೆಯಲ್ಲಿ ಕಟಮಾಚನಹಳ್ಳಿ ಗೇಟ್ ಸಮೀಪವಿರುವ ಆರ್.ಕೆ ಇಂಟರ್ ನ್ಯಾಷನಲ್ ಶಾಲೆಯ ಗೇಟ್ ಮುಂದೆ ರಸ್ತೆ ಅಪಘಾತವಾಗಿರುವುದಾಗಿ ವಿಚಾರವನ್ನು ತಿಳಿಸಿದ್ದು, ತಕ್ಷಣ ತಾನು ಸ್ಥಳಕ್ಕೆ ಬಂದು ನೋಡಲಾಗಿ ವಿಚಾರ ನಿಜವಾಗಿದ್ದು, ತನ್ನ ತಮ್ಮನ ತಲೆಗೆ ರಕ್ತಗಾಯ, ಮುಖಕ್ಕೆ ರಕ್ತಗಾಯ, ಎಡಗೈಗೆ ಮೂಳೆ ಮುರಿತದ ರಕ್ತಗಾಯಗಳಾಗಿದ್ದು, ಮೂಗಿನಲ್ಲಿ ರಕ್ತ ಸೋರುತಿದ್ದು ಮಾತನಾಡುವ ಸ್ಥಿತಿಯಲ್ಲಿರುವುದಿಲ್ಲ. ಅಪಘಾತದ ಬಗ್ಗೆ ಸ್ಥಳದಲ್ಲಿದ್ದ ಸಾರ್ವಜನಿಕರನ್ನು ವಿಚಾರ ಮಾಡಲಾಗಿ ಇಂದು ಮಧ್ಯಾಹ್ನ ಸುಮಾರು 3:30 ಗಂಟೆಯ ಸಮಯದಲ್ಲಿ ಚಂದ್ರಶೇಖರಪ್ಪರವರು ಕೆಎ-67 ಇ-6048 ನೋಂದಣಿ ಸಂಖ್ಯೆಯ ಹೋಂಡಾ ಆಕ್ಟಿವಾ ದ್ವಿಚಕ್ರವಾಹನವನ್ನು ಚಾಲನೆ ಮಾಡಿಕೊಂಡು ಬೆಂಗಳೂರು-ಚಿಂತಾಮಣಿ ರಸ್ತೆಯಲ್ಲಿ ಚಿನ್ನಸಂದ್ರದ ಕಡೆಯಿಂದ ಬರುತ್ತಿದ್ದಾಗ ಆರ್.ಕೆ ಇಂಟರ್ ನ್ಯಾಷನಲ್ ಶಾಲೆಯ ಗೇಟ್ ಮುಂದೆ ಎದುರುಗಡೆಯಿಂದ ವಿರುದ್ಧ ದಿಕ್ಕಿನಲ್ಲಿ ಬಂದ ಕೆಎ-02 ಇಬಿ-1398 ನೋಂದಣಿ ಸಂಖ್ಯೆಯ ಬಜಾಜ್ ಚೇತಕ್ ದ್ವಿಚಕ್ರವಾಹನದ ಸವಾರನು ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಚಂದ್ರಶೇಖರಪ್ಪರವರ ದ್ವಿಚಕ್ರವಾಹನಕ್ಕೆ ಡಿಕ್ಕಿ ಹೊಡೆದು ಅಪಘಾತವನ್ನುಂಟು ಮಾಡಿದ್ದು, ಅದರ ಪರಿಣಾಮ ಚಂದ್ರಶೇಖರಪ್ಪರವರಿಗೆ ರಕ್ತಗಾಯಗಳಾಗಿದ್ದು, ಅಪಘಾತಪಡಿಸಿದ ದ್ವಿಚಕ್ರವಾಹನದ ಸವಾರನು ದ್ವಿಚಕ್ರವಾಹನವನ್ನು ಸ್ಥಳದಲ್ಲಿ ನಿಲ್ಲಿಸದೇ ಹೊರಟು ಹೋಗಿರುವುದಾಗಿ ತಿಳಿಸಿರುತ್ತಾರೆ. ನಂತರ ಗಾಯಗೊಂಡಿದ್ದ ತನ್ನ ತಮ್ಮನನ್ನು ಆಂಬುಲೆನ್ಸ್ನಲ್ಲಿ ಚಿಕಿತ್ಸೆಗಾಗಿ ಚಿಂತಾಮಣಿ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ದಾಖಲಿಸಿದ್ದು, ಅಲ್ಲಿನ ವೈದ್ಯರ ಸಲಹೆಯ ಮೇರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಹೊಸಕೋಟೆಯ ಎಂವಿಜೆ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದಾಗ ಸಂಜೆ ಸುಮಾರು 4:45 ಗಂಟೆಯ ಸಮಯದಲ್ಲಿ ಮಾರ್ಗಮಧ್ಯೆ ಮೃತಪಟ್ಟಿರುತ್ತಾನೆ. ನಂತರ ತನ್ನ ತಮ್ಮನ ಮೃತದೇಹವನ್ನು ಅದೇ ಆಂಬುಲೆನ್ಸ್ ನಲ್ಲಿ ವಾಪಸ್ಸು ಚಿಂತಾಮಣಿ ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ಸಾಗಿಸಿಕೊಂಡು ಬಂದು ಶವಾಗಾರದಲ್ಲಿಟ್ಟಿರುತ್ತೇವೆ. ಅಪಘಾತಪಡಿಸಿದ ದ್ವಿಚಕ್ರವಾಹನದ ಸವಾರನ ಹೆಸರು ವಿಳಾಸ ತಿಳಿಯಲಾಗಿ ಅಕ್ರಂ ಬಿನ್ ಬಾಬು, ಚಿನ್ನಸಂದ್ರ ಗ್ರಾಮ, ಚಿಂತಾಮಣಿ ತಾಲ್ಲೂಕು ಎಂದು ತಿಳಿಯಿತು. ಕೆಎ-02 ಇಬಿ-1398 ನೋಂದಣಿ ಸಂಖ್ಯೆಯ ಬಜಾಜ್ ಚೇತಕ್ ದ್ವಿಚಕ್ರವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿ ತನ್ನ ತಮ್ಮನ ದ್ವಿಚಕ್ರವಾಹನಕ್ಕೆ ಡಿಕ್ಕಿ ಹೊಡೆದು ಅಪಘಾತವನ್ನುಂಟು ಮಾಡಿ ತನ್ನ ತಮ್ಮನ ಸಾವಿಗೆ ಕಾರಣನಾದ ದ್ವಿಚಕ್ರವಾಹನ ಸವಾರನಾದ ಅಕ್ರಂ ಬಿನ್ ಬಾಬುರವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲು ಕೋರಿ ನೀಡಿದ ದೂರಾಗಿರುತ್ತೆ.
2. ಗೌರಿಬಿದನೂರು ಪುರ ಪೊಲೀಸ್ ಠಾಣೆ ಮೊ.ಸಂ.27/2020 ಕಲಂ. 379 ಐ.ಪಿ.ಸಿ :-
ದಿನಾಂಕ 14-02-2020 ರಂದು ಸಂಜೆ 6:00 ಗಂಟೆಯಲ್ಲಿ ಪಿರ್ಯಾದಿ ಆರ್ ಪ್ರದೀಪ ಬಿನ್ ರಾಜಣ್ಣ ಎನ್.ವಿ 30 ವರ್ಷ ಸಾದರು ಡ್ರೈವರ್ ಕೆಲಸ ನಂದಿಗಾನಹಳ್ಳಿ ಗ್ರಾಮ, ತೊಂಡೇಬಾವಿ ಹೊಬಳಿ, ಗೌರಿಬಿದನೂರು ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ನಂ KA 41 B 2090 ಇಂಡಿಕಾ ಕಾರನ್ನು ತಿಂಗಳಿಗೆ 8,000 ರೂ ಕೊಡುವಂತೆ ವಾಹನ ಮಾಲೀಕರಾದ ಕೃಷ್ಣಪ್ಪ ರವರಿಂದ ಮಾತನಾಡಿ ನಾನು ಬೋಗ್ಯಕ್ಕೆ ಪಡೆದುಕೊಂಡಿರುತ್ತೇನೆ. ದಿನಾಂಕ 12/02/2020 ರಂದು ನಾನು ಬೆಂಗಳೂರಿನಲ್ಲಿ ನಾನು ಟ್ಯಾಕ್ಸಿ ಓಡಿಸಿಕೊಂಡಿದ್ದು ರಾತ್ರಿ ಊರಿಗೆ ವಾಪಸ್ಸು ಹೋಗುವ ಸಲುವಾಗಿ ಗೌರಿಬಿದನೂರಿಗೆ ಬಂದಿದ್ದು ನಮ್ಮ ಮನೆಗೆ ಸಾಮಾನುಗಳನ್ನು ತೆಗೆದುಕೊಂಡು ಹೋಗಲು ಗೌರಿಬಿದನೂರಿನಲ್ಲಿ ನನ್ನ ಕಾರನ್ನು ಹನುಮಾನ್ ಕ್ಯಾಂಟೀನ್ ಬಳಿ 9:30 ಗಂಟೆ ಸಮಯದಲ್ಲಿ ನಿಲ್ಲಿಸಿ ಅಂಗಡಿಗೆ ಹೋಗಿ ರಾತ್ರಿ 9:50 ಗಂಟೆಗೆ ವಾಪಸ್ಸು ಬಂದು ನೋಡಲಾಗಿ ನಾನು ಕಾರನ್ನು ನಿಲ್ಲಿಸಿದ್ದ ಸ್ಥಳದಲ್ಲಿ ಕಾರು ಇರಲಿಲ್ಲ. ನಾನು ಕಾರನ್ನು ನಿಲ್ಲಿಸಿದ್ದ ಸ್ಥಳದಿಂದ ಯಾರೋ ಕಳ್ಳರು ನನ್ನ ಕಾರನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ. ನಾನು ನನಗೆ ಗೊತ್ತಿರುವ ಸ್ಥಳಗಳಲ್ಲಿ ನನ್ನ ವಾಹನವನ್ನು ಹುಡುಕಾಡಿಕೊಂಡಿದ್ದು ಎಲ್ಲಿಯೂ ಕಾರ್ ಪತ್ತೆಯಾಗದ ಕಾರಣ ಈ ದಿನ ತಡವಾಗಿ ದೂರು ನೀಡುತ್ತಿದ್ದೇನೆ. ಆದ್ದರಿಂದ ಕಳುವಾಗಿರುವ ಕಾರ್ ಕೆ.ಎ 41 ಬಿ 2090 ಟಾಟಾ ಇಂಡಿಕಾ ಕಾರನ್ನು ಪತ್ತೆ ಮಾಡಿಕೊಡಬೇಕಾಗಿ ಕೋರುತ್ತೇನೆಂದು ನೀಡಿದ ದೂರನ್ನು ಪಡೆದು ಪ್ರಕರಣ ದಾಖಲಿಸಿರುತ್ತೇನೆ.
3. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.31/2020 ಕಲಂ. 447-504-506 ರೆ/ವಿ 34 ಐ.ಪಿ.ಸಿ & 3(1)(f),3(1)(r),3(1)(s) ) The SC & ST (Prevention of Atrocities) Amendment Act :-
ದಿನಾಂಕ: 14-02-2020 ರಂದು ಸಂಜೆ 5-00 ಗಂಟೆಯಲ್ಲಿ ಪಿರ್ಯಾದಿದಾರರಾದ ಶ್ರೀ ಎಂ. ಮಂಜುನಾಥ ಬಿನ್ ಲೇಟ್ ಎಂ ಮುನಿಯಪ್ಪ, ಮೇಲೂರು ಗ್ರಾಮ, ಶಿಡ್ಲಘಟ್ಟ ತಾಲ್ಲೂಕು ರವರು ಕೊರಿಯರ್ ಮೂಲಕ ಕಳುಹಿಸಿದ್ದ ದೂರಿನ ಸಾರಾಂಶವೇನೆಂದರೆ, ತಾನು ಬೋವಿ ಜನಾಂಗ ಪರಿಶಿಷ್ಟ ಜಾತಿಗೆ ಸೇರಿದ್ದು, ವ್ಯವಸಾಯದಿಂದ ಜೀವನ ಮಾಡಿಕೊಂಡಿದ್ದು, ತಮಗೆ ಸೇರಿದ ಸ್ವಂತ ಸ್ವಾಧೀನಾನುಭವದಲ್ಲಿರುವ ತನ್ನ ತಾಯಿಯಾದ ಶ್ರೀಮತಿ ಲೇಟ್ ಎಂ. ಮುನಿಯಮ್ಮ ಕೋಂ ಲೇಟ್ ಎಂ. ಮುನಿಯಪ್ಪ ರವರ ಹೆಸರಿನಲ್ಲಿ ಖಾತೆಯಿರುವ ಶಿಡ್ಲಘಟ್ಟ ತಾಲ್ಲೂಕು ಹನುಮೇನಹಳ್ಳಿ ಗ್ರಾಮದ ಸರ್ವೆ ನಂ. 54/1 ವಿಸ್ತೀರ್ಣ 2-23 ಮತ್ತು ಸರ್ವೆ ನಂ. 55 ರಲ್ಲಿ ವಿಸ್ತೀರ್ಣ 4-11 ಗುಂಟೆ ಒಟ್ಟು 6-34 ಎಕರೆ ತಮ್ಮ ಸ್ವಾಧೀನಾನುಭವದಲ್ಲಿರುವ ಸರ್ವೆ ನಂ. 54/3 ವಿಸ್ತೀರ್ಣ 1-23 ಎಕರೆ ಜಮೀನುಗಳಿಗೆ ದಿನಾಂಕ: 06-02-2020 ರ ಸಂಜೆ ಸುಮಾರು 5.45 ಗಂಟೆಯಲ್ಲಿ ಆರ್. ವಿಜಯ್ ಕುಮಾರ್ ಬಿನ್ ಬಿ. ರಾಮಯ್ಯ ರವರ ಕುಮ್ಮಕ್ಕಿನಿಂದ ನಂ. ಕೆಎ-43-ಎಂ-5061 ನಂಬರ್ ನ Tractor Fitted with Dozer ಗಾಡಿ ಮೂಲಕ ಅತಿಕ್ರಮ ಪ್ರವೇಶಿಸಲು ಹಾಗೂ ಜಮೀನಿನಲ್ಲಿ ಸ್ವಚ್ಚಗೊಳಿಸುವ ಕೆಲಸಕ್ಕೆ ಪ್ರಯತ್ನಿಸಿದ್ದನ್ನು ತಾನು ತಡೆದಿದ್ದು, ನಂತರ ಮಾರನೆ ದಿನ ಅಂದರೆ ದಿನಾಂಕ: 07-02-2020 ರ ಮದ್ಯಾಹ್ನ ಸುಮಾರು 12.30 ಗಂಟೆಯಲ್ಲಿ ತಾನು ಶಿಡ್ಲಘಟ್ಟ-ಅಪ್ಪೇಗೌಡನಹಳ್ಳಿ ರಸ್ತೆಯ ಪಕ್ಕದ ಅಂದರೆ ಉತ್ತರಕ್ಕೆ ಇರುವ ಅಶ್ವತ್ಥಕಟ್ಟೆ ಮತ್ತು ತಮ್ಮ ತಂದೆ-ತಾಯಿ ಹಾಗೂ ತಮ್ಮ ಅಣ್ಣ-ತಮ್ಮಂದಿರ ಸಮಾದಿಗಳ ಬಳಿ ಕುಳಿತಿದ್ದಾಗ ಅಲ್ಲಿಗೆ ಕಾರಿನಲ್ಲಿ ಚಾಲಕನೊಂದಿಗೆ ಬಂದ ಆರ್. ವಿಜಯ್ ಕುಮಾರ್ ರವರು ಶಿಡ್ಲಘಟ್ಟ ಅಪ್ಪೇಗೌಡನಹಳ್ಳಿ ರಸ್ತೆಯಲ್ಲಿ ನಿಂತು ತನಗೆ ಅವಾಚ್ಯ ಶಬ್ದಗಳಿಂದ ಬೈದು ಜಾತಿ ನಿಂದನೆ ಮಾಡಿ ಪ್ರಾಣ ಬೆದರಿಕೆ ಹಾಕಿ ವಡ್ಡ ನನ್ನ ಮಗನೇ, ನೀನ್ನೊಬ್ಬನನ್ನು ಮುಗಿಸಿ ನಿಮ್ಮ ಜಮೀನಿನಲ್ಲಿರುವ ವಡ್ಡ ನನ್ನ ಮಕ್ಕಳ ಸಮಾದಿಗಳನ್ನು ನಾಶ ಮಾಡುವ ತನಕ ನನಗೆ ತಲೆ ನೋವು ತಪ್ಪಿದ್ದಲ್ಲ ಎಂದು ಬೆದರಿಕೆ ಹಾಕಿ ಹೊರಟು ಹೋಗಿರುತ್ತಾನೆ. ನಂತರ ಅದೇ ದಿನ ತಾನು ಮೇಲೂರಿನಲ್ಲಿರುವ ಮನೆಗೆ ಹೋಗಿ ಊಟ ಮಾಡಿಕೊಂಡು ಮದ್ಯಾಹ್ನ 3.00 ಗಂಟೆಗೆ ಬಂದು ತಮ್ಮ ಜಮೀನಿನಲ್ಲಿದ್ದಾಗ ಮತ್ತೆ ಸಂಜೆ ಸುಮಾರು 4.45 ಗಂಟೆ ಸಮಯದಲ್ಲಿ ಇದೇ ನಂ. ಕೆಎ-43-ಎಂ-5061 ನಂಬರ್ ನ Tractor Fitted with Dozer ಗಾಡಿಯು ಆರ್. ವಿಜಯ್ ಕುಮಾರ್ ರವರ ಕುಮ್ಮಕ್ಕಿನಿಂದ ತಮ್ಮ ಜಮೀನಿಗೆ ಅತಿಕ್ರಮ ಪ್ರವೇಶ ಮಾಡಿ ಸ್ವಚ್ಚಗೊಳಿಸಲು ಮುಂದಾದಾಗ ತಾನು ಬಹಳ ಕಷ್ಟ ಪಟ್ಟು ಇವರ ಪ್ರಯತ್ನಗಳನ್ನು ವಿಫಲಗೊಳಿಸಿರುವುದಾಗಿ ಇತ್ಯಾದಿಯಾಗಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುತ್ತೆ.