ದಿನಾಂಕ :14/10/2020 ರ ಅಪರಾಧ ಪ್ರಕರಣಗಳು

  1. ಸಿ.ಇ.ಎನ್ ಪೊಲೀಸ್ ಠಾಣೆ ಮೊ.ಸಂ.21/2020 ಕಲಂ: 66(D) INFORMATION TECHNOLOGY  ACT 2000 & 419,420 ಐ.ಪಿ.ಸಿ:-

     ದಿನಾಂಕ: 13-10-2020 ರಂದು ಮದ್ಯಾಹ್ನ 2-45 ಗಂಟೆಗೆ ಪಿರ್ಯಾದಿದಾರರಾದ ಶೈಲಾ. ಯು, ಬಿ.ಸಿ.ಸಿ ಲೇಔಟ್, ಬೆಂಗಳೂರು ಮೊ ಸಂಖ್ಯೆ:.9343933752 ರವರು ಠಾಣೆಗೆ ಹಾಜರಾಗಿ ನೀಡಿದ ಮುದ್ರಿತ ದೂರಿನ ಸಾರಾಂಶವೇನೆಂದರೆ, ನಾನು ಶಿವಮೊಗ್ಗ ನಗರದಲ್ಲಿನ ಗಾಂದಿ ಬಜಾರಿನಲ್ಲಿರುವ ಎಸ್.ಬಿ.ಐ ಬ್ಯಾಂಕ್ ಶಾಖೆಯಲ್ಲಿ ಅಕೌಂಟ್ ನಂ: 64019262948 ರಂತೆ ಖಾತೆಯನ್ನು ಹೊಂದಿರುತ್ತೇನೆ. ಹೀಗಿರುವಲ್ಲಿ ದಿನಾಂಕ;10/10/2020 ರಂದು ನಾನು ಚಿಕ್ಕಬಳ್ಳಾಪುರಕ್ಕೆ ನಮ್ಮ ಸ್ನೇಹಿತರ ಮನೆಗೆ ಬಂದಿದ್ದಾಗ ದಯಾಶಂಕರ್ ಎಂಬ ವ್ಯಕ್ತಿ ಮೊ ಸಂಖ್ಯೆ: +918420574901 ರಿಂದ ನನ್ನ ಮೊ.ಸಂಖ್ಯೆ: 9743923252 ಕ್ಕೆ ಕರೆ ಮಾಡಿ ನಿಮಗೆ  SHOPCLUES ಆನ್ ಲೈನ್ ಮಾರ್ಕೆಟಿಂಗ್ ಕಂಪನಿಯಿಂದ ಲಾಟರಿಯಲ್ಲಿ 14,80,000/- ರೂ ಮೌಲ್ಯದ  MAHENDRA XUV-500  ಕಾರು ಬಹುಮಾನ ಬಂದಿದೆ. ಅದನ್ನು ಪಡೆಯಲು ನೀವು ಟಿ.ಡಿ.ಎಸ್ ಚಾರ್ಜ್ 6500/- ರೂಗಳನ್ನು ಕಟ್ಟಿದರೆ ನಿಮಗೆ ಕಾರನ್ನು ನಿಮ್ಮ ಮನೆಯ ಬಳಿಗೆ ಡಿಲವರಿ ನೀಡಲಾಗುತ್ತದೆಂತ ತಿಳಿಸಿದರು. ಅದರಂತೆ ನಾನು ನಿಜ ಇರಬಹುದೆಂತ ನಂಬಿ, ಮೇಲ್ಕಂಡ ನನ್ನ ಖಾತೆಗೆ ಲಿಂಕ್ ಆಗಿರುವ ಗೂಗಲ್ ಪೇ ಅಕೌಂಟ್ ಸಂಖ್ಯೆ: 9743923252 ರಿಂದ ಆರೋಪಿ ಖಾತೆ ಸಂಖ್ಯೆ: 32829042828, IFSC CODE: sbin0000631 ಕ್ಕೆ 6500/- ರೂಗಳನ್ನು ಕಳುಹಿಸಿರುತ್ತೇನೆ. ನಂತರ ಪುನಃ ಸದರಿ ವ್ಯಕ್ತಿ ಕರೆಯನ್ನು ಮಾಡಿ ಟಿ.ಆರ್ ಚಾರ್ಜ್ 8,500/- ರೂಗಳನ್ನು ಕಟ್ಟಬೇಕೆಂತ ತಿಳಿಸಿದ್ದರಿಂದ ನಾನು ನನ್ನ ಮೇಲ್ಕಂಡ ಖಾತೆಯಿಂದ ಸದರಿ ವ್ಯಕ್ತಿ ನೀಡಿದ ಖಾತೆ ಸಂಖ್ಯೆ: ಅಕೌಂಟ್ ನಂ:20202685655, IFSC CODE: sbin0009029 ಗೆ 8,500/- ರೂಗಳನ್ನು ವರ್ಗಾವಣೆ ಮಾಡಿರುತ್ತೇನೆ. ನಂತರ ಮೇಲ್ಕಂಡವರು ಮೊಬೈಲ್ ಸಂಖ್ಯೆ: +916290029152,+918420608170 & +917604062700 ಸಂಖ್ಯೆಗಳಿಂದ ನನಗೆ ಕರೆ ಮಾಡಿ ಜಿ.ಎಸ್.ಟಿ, ಮತ್ತು ಪ್ರೊಸ್ಸೆಸಿಂಗ್ ಚಾರ್ಜ್ ಎಂದು ಹೇಳಿ ನನ್ನಿಂದ ಅವರು ನೀಡಿದ್ದ ಅಕೌಂಟ್ ನಂ:36133894783, IFSC CODE: sbin0002993 ಗೆ 14,800/- ರೂಗಳನ್ನು, ಇದೇ ಖಾತೆಗೆ 9,800/- ರೂಗಳನ್ನು ಹಾಗೂ ಇದೇ ಖಾತೆಗೆ 5,000/- ರೂಗಳನ್ನು ವರ್ಗಾವಣೆ ಮಾಡಿರುತ್ತೇನೆ. ನಂತರ ಸದರಿ ವ್ಯಕ್ತಿ ಟ್ರಾನ್ಸ್ ಪೊರ್ಟ್ ಚಾರ್ಜ್ 12,600/- ರೂಗಳನ್ನು ಕಳುಹಿಸಬೇಕೆಂದು ತಿಳಿಸಿದ್ದರಿಂದ ನನ್ನ ಪತಿಯವರ ಐಸಿಐಸಿಐ ಬ್ಯಾಂಕ್ ಖಾತೆ ಸಂಖ್ಯೆ: 025101526132,   ಸಂಖ್ಯೆಯಿಂದ ಖಾತೆಗೆ ಲಿಂಕ್ ಆಗಿರುವ 9983501996 ಸಂಖ್ಯೆಯಿಂದ ಗೂಗಲ್ ಪೇ ಮುಖಾಂತರ ಅಕೌಂಟ್ ನಂ:20202685655, IFSC CODE: sbin0009029 ಗೆ 12,600/- ರೂಗಳನ್ನು ವರ್ಗಾವಣೆ ಮಾಡಿರುತ್ತೇನೆ. ಇದೇ ದಿನ ಮೇಲ್ಕಂಡ ವ್ಯಕ್ತಿ ಪುನಃ ನನಗೆ ಕರೆಯನ್ನು ಮಾಡಿ ಖಾತೆ ಸಂಖ್ಯೆ: 39601231926 ಸಂಖ್ಯೆಗೆ ಹಣವನ್ನು ಹಾಕುವಂತೆ ಪೋನಿನಲ್ಲಿ ಕೇಳಿದ್ದು, ನನಗೆ ಇದರಿಂದ ಅನುಮಾನ ಬಂದು ಈ ದಿನ ಠಾಣೆಗೆ ಬಂದು ದೂರನ್ನು ನೀಡುತ್ತಿದ್ದೇನೆ. ನನಗೆ ಲಾಟರಿ ಮೂಲಕ ನಿಮಗೆ ಕಾರು ಬಹುಮಾನವಾಗಿ ಬಂದಿದೆ ಎಂದು ನನಗೆ ನಂಬಿಸಿ ನನ್ನಿಂದ ಒಟ್ಟು 57,200/- ರೂಗಳನ್ನು ನನ್ನ ಮತ್ತು ನನ್ನ ಗಂಡನ ಖಾತೆಯಿಂದ  ಮೇಲ್ಕಂಡ ಖಾತೆಗಳಿಗೆ ವರ್ಗಾವಣೆ  ಮಾಡಿಸಿಕೊಂಡು ವಾಹನವನ್ನು ಕೊಡದೆ ಮತ್ತು ಹಣವನ್ನು ವಾಪಸ್ಸು ಕೊಡದೆ ವಂಚನೆ ಮಾಡಿರುವ ಮೇಲ್ಕಂಡವರನ್ನು ಪತ್ತೆ ಮಾಡಿ ಕಾನೂನು ಕ್ರಮ ಜರಗಿಸಿ ನನ್ನ ಹಣವನ್ನು ನನಗೆ ವಾಪಸ್ಸು ಕೊಡಿಸಲು ಕೋರಿ ನೀಡಿದ ದೂರಿನ ಮೇರೆಗೆ ಈ ಪ್ರ.ವ.ವರದಿ.

  1. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.375/2020 ಕಲಂ: 379 ಐ.ಪಿ.ಸಿ:-

     ದಿನಾಂಕ:14/10/2020 ರಂದು ಬೆಳಿಗ್ಗೆ 11.00 ಗಂಟೆಗೆ ಯಳಗಪ್ಪ ಬಿನ್ ಲೇಟ್ ವೆಂಕಟಪ್ಪ, 60 ವರ್ಷ, ಕುರುಬರು, ಜಿರಾಯ್ತಿ, ವೆಂಕಟಗಿರಿಕೋಟೆ, ವಾರ್ಡ್ ನಂ.1, ಚಿಂತಾಮಣಿ ನಗರ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ತಾನು ಚಿಂತಾಮಣಿ ತಾಲ್ಲೂಕು ಅಂಬಾಜಿದುರ್ಗ ಹೋಬಳಿ, ಚಾಂಡ್ರಹಳ್ಳಿ ಗ್ರಾಮದ ಚಿಕ್ಕಣ್ಣ ಬಿನ್ ಮಹೇಶಪ್ಪ ಎಂಬುವರ ಬಾಬ್ತು ಸರ್ವೇ ನಂ.8/1 ರ 2 ಎಕರೆ ಜಮೀನನ್ನು ಈಗ್ಗೆ ಸುಮಾರು 6 ವರ್ಷಗಳ ಅವಧಿಗೆ ಭೋಗ್ಯಕ್ಕೆ ಪಡೆದಿರುತ್ತೇನೆ. ತಾನು ಸದರಿ ಜಮೀನಿನಲ್ಲಿ ಬೆಳೆಗಳನ್ನು ಇಡುವ ಸಲುವಾಗಿ ಈಗ್ಗೆ ಸುಮಾರು 3 ತಿಂಗಳ ಹಿಂದೆ ಕೃಷಿ ಹೊಂಡಾದಿಂದ ನೀರನ್ನು ಪಂಪ್ ಮಾಡುವ ಒಂದು ಮೋಟಾರ್ ಅನ್ನು ಖರೀದಿಸಿ ಅದನ್ನು ಮೇಲ್ಕಂಡ ಜಮೀನಿನಲ್ಲಿದ್ದ ಕೃಷಿ ಹೊಂಡಾದಲ್ಲಿ ಅಳವಡಿಸಿರುತ್ತೇನೆ. ಹೀಗಿರುವಾಗ ದಿನಾಂಕ 01/10/2020 ರಂದು ತಾನು ಎಂದಿನಂತೆ ಮೇಲ್ಕಂಡ ಜಮೀನಿನಲ್ಲಿನ ಕೊತ್ತಂಬರಿ ಸೊಪ್ಪು ಬೆಳೆಗೆ ನೀರು ಹಾಯಿಸಿ ಸಂಜೆ 5.00 ಗಂಟೆಗೆ ಚಿಂತಾಮಣಿಗೆ ವಾಪಸ್ಸು ಬಂದಿರುತ್ತೇನೆ. ಮಾರನೇ ದಿನ ದಿನಾಂಕ 02/10/2020 ರಂದು ಬೆಳಿಗ್ಗೆ 07.30 ಗಂಟೆ ಸಮಯದಲ್ಲಿ ತಾನು ಎಂದಿನಂತೆ ತಮ್ಮ ತೋಟದ ಬಳಿಗೆ ಹೋದಾಗ ಸದರಿ ತೋಟದ ಜಮೀನಿನ ಕೃಷಿ ಹೊಂಡಾದಲ್ಲಿ ತಾನು ಅಳವಡಿಸಿದ್ದ ಮೋಟಾರ್ ಕಳುವಾಗಿರುವುದು ಕಂಡುಬಂದಿರುತ್ತೆ. ನಂತರ ತಾನು ಈ ಬಗ್ಗೆ ತಮ್ಮ ಜಮೀನಿನ ಅಕ್ಕ-ಪಕ್ಕದಲ್ಲಿ ಮತ್ತು ಚಾಂಡ್ರಹಳ್ಳಿ ಗ್ರಾಮದ ಕಡೆಗಳಲ್ಲಿ ಹುಡುಕಾಡಲಾಗಿ ಕಳುವಾಗಿದ್ದ ತಮ್ಮ ಬಾಬತ್ತು ಮೋಟಾರ್ ಪತ್ತೆಯಾಗಿರುವುದಿಲ್ಲ. ಕಳುವಾಗಿರುವ ತಮ್ಮ ಬಾಬತ್ತು ಮೋಟಾರ್ ಬೆಲೆ ಸುಮಾರು 10,000/- ರೂಗಳಾಗಿರುತ್ತೆ. ದಿನಾಂಕ 01/10/2020 ರಂದು ಸಂಜೆ 5.30 ಗಂಟೆಯಿಂದ ದಿನಾಂಕ 02/10/2020 ರಂದು ಬೆಳಿಗ್ಗೆ 07.30 ಗಂಟೆ ಮದ್ಯೆ ಯಾರೋ ಕಳ್ಳರು ಮೇಲ್ಕಂಡ ಮೋಟರ್ ಅನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಸದರಿ ಮೋಟರ್ ಅನ್ನು ಹುಡುಕಾಡಿದ್ದು ಸಿಕ್ಕಿರುವುದಿಲ್ಲ. ಕಳ್ಳತನವಾಗಿದ್ದ ನನ್ನ ಬಾಬ್ತು ಮೋಟರ್ ನ್ನು ಹಾಗೂ ಕಳ್ಳರನ್ನು ದಿನಾಂಕ 07/10/2020  ರಂದು  ಚಿಂತಾಮಣಿ ಗ್ರಾಮಾಂತರ ಪೊಲೀಸರು ಪತ್ತೆ ಮಾಡಿರುವುದಾಗಿ ತಿಳಿದು ಬಂದಿದ್ದು, ಅವರ ಹೆಸರು ಮತ್ತು ವಿಳಾಸ ತಿಳಿಯಲಾಗಿ ಚಾಂಡ್ರಹಳ್ಳಿ ಗ್ರಾಮದ ವಾಸಿಗಳಾದ ನರಸಿಂಹಪ್ಪ ಬಿನ್ ಲೇಟ್ ನರಸಿಂಹಪ್ಪ ಮತ್ತು ನಾಗರಾಜ ಬಿನ್ ನರಸಿಂಹಪ್ಪ ಎಂದು ತಿಳಿದು ಬಂದಿರುತ್ತೆ. ಆದ್ದರಿಂದ ಮೇಲ್ಕಂಡವರ ವಿರುಧ್ದ ಕಾನೂನು ರೀತ್ಯ ಕ್ರಮ ಜರುಗಿಸಬೇಕೆಂದು ಕೋರಿರುವುದಾಗಿರುತ್ತೆ.

  1. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.376/2020 ಕಲಂ: 379 ಐ.ಪಿ.ಸಿ:-

     ದಿನಾಂಕ:14/10/2020 ರಂದು ಮದ್ಯಾಹ್ನ 12.00 ಗಂಟೆಗೆ ರವಿಚಂದ್ರ @ ಚಿಂತಲಪಲ್ಲಿ ರವಿ ಬಿನ್ ಲೇಟ್ ಬೈರಪ್ಪ, 50 ವರ್ಷ, ವಕ್ಕಲಿಗರು, ಜಿರಾಯ್ತಿ, ಚಾಂಡ್ರಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ತಾನು ಚಿಂತಾಮಣಿ ತಾಲ್ಲೂಕು ಅಂಬಾಜಿದುರ್ಗ ಹೋಬಳಿ, ಚಾಂಡ್ರಹಳ್ಳಿ ಗ್ರಾಮದ ಸ.ನಂ-123 ರಲ್ಲಿನ 1 ಎಕರೆ 28 ಗುಂಟೆ ಜಮೀನು ಇರುತ್ತೆ. ತಾನು ಸದರಿ ಜಮೀನಿನಲ್ಲಿ ಬೆಳೆಗಳನ್ನು ಇಡುವ ಸಲುವಾಗಿ ಈಗ್ಗೆ ಸುಮಾರು 3 ವರ್ಷಗಳ ಹಿಂದೆ ಕೃಷಿ ಹೊಂಡಾದಿಂದ ನೀರನ್ನು ಪಂಪ್ ಮಾಡುವ ಒಂದು ಮೋಟಾರ್ ಅನ್ನು ಖರೀದಿಸಿ ಅದನ್ನು ಮೇಲ್ಕಂಡ ಜಮೀನಿನಲ್ಲಿದ್ದ ಕೃಷಿ ಹೊಂಡಾದಲ್ಲಿ ಅಳವಡಿಸಿರುತ್ತೇನೆ. ಹೀಗಿರುವಾಗ ದಿನಾಂಕ:08/07/2020 ರಂದು ತಾನು ಎಂದಿನಂತೆ ಮೇಲ್ಕಂಡ ಜಮೀನಿನಲ್ಲಿನ ರೇಷ್ಮೇ ಬೆಳೆಗೆ ನೀರು ಹಾಯಿಸಿ ಸಂಜೆ 6.00 ಗಂಟೆಗೆ ತಮ್ಮ ಮನೆಗೆ ವಾಪಸ್ಸು ಹೋಗಿದ್ದು, ಮರು ದಿನ ದಿನಾಂಕ:09/07/2020 ರಂದು ಬೆಳಿಗ್ಗೆ ಸುಮಾರು 7.30 ಗಂಟೆಯ ಸಮಯದಲ್ಲಿ ತಾನು ಎಂದಿನಂತೆ ತಮ್ಮ ತೋಟದ ಬಳಿಗೆ ಹೋದಾಗ ಸದರಿ ತೋಟದ ಜಮೀನಿನ ಕೃಷಿ ಹೊಂಡಾದಲ್ಲಿ ಅಳವಡಿಸಿದ್ದ ಮೋಟಾರ್ ಕಳುವಾಗಿರುವುದು ಕಂಡುಬಂದಿರುತ್ತೆ. ನಂತರ ತಾನು ಈ ಬಗ್ಗೆ ತಮ್ಮ ಜಮೀನಿನ ಅಕ್ಕ-ಪಕ್ಕದಲ್ಲಿ ಮತ್ತು ಚಾಂಡ್ರಹಳ್ಳಿ ಗ್ರಾಮದ ಕಡೆಗಳಲ್ಲಿ ಹುಡುಕಾಡಲಾಗಿ ಕಳುವಾಗಿದ್ದ ತಮ್ಮ ಬಾಬತ್ತು ಮೋಟಾರ್ ಪತ್ತೆಯಾಗಿರುವುದಿಲ್ಲ. ಕಳುವಾಗಿರುವ ತಮ್ಮ ಬಾಬತ್ತು ಮೋಟಾರ್ ಬೆಲೆ ಸುಮಾರು 10,000/-ರೂಗಳಾಗಿರುತ್ತೆ. ಕಳುವಾಗಿರುವ ತಮ್ಮ ಬಾಬತ್ತು ಮೋಟಾರ್ ನ್ನು ತಾನು ಇದುವರೆಗೂ ಹುಡುಕಾಡಿದ್ದು ಸಿಕ್ಕಿರುವುದಿಲ್ಲ. ಕಳ್ಳತನವಾಗಿದ್ದ ತನ್ನ ಮೋಟರ್ ನ್ನು ಮತ್ತು ಕಳ್ಳರನ್ನು ದಿನಾಂಕ:07/10/2020 ರಂದು ಚಿಂತಾಮಣಿ ಗ್ರಾಮಾಂತರ ಪೊಲೀಸರು ಪತ್ತೆ ಮಾಡಿರುವುದಾಗಿ ವಿಚಾರ ತಿಳಿದಿದ್ದು ಅದರಂತೆ ತಾನು ಆರೋಪಿಗಳ ಹೆಸರು ಮತ್ತು ವಿಳಾಸ ತಿಳಿಯಲಾಗಿ ಚಾಂಡ್ರಹಳ್ಳಿ ಗ್ರಾಮದ ವಾಸಿಗಳಾದ ನರಸಿಂಹಪ್ಪ ಬಿನ್ ಲೇಟ್ ನರಸಿಂಹಪ್ಪ ಮತ್ತು ನಾಗರಾಜ ಬಿನ್ ನರಸಿಂಹಪ್ಪ ಎಂತ ತಿಳಿದು ಬಂದಿರುತ್ತದೆ. ಆದ್ದರಿಂದ ಮೇಲ್ಕಂಡ ಆರೋಪಿತರ ವಿರುದ್ದ ಸೂಕ್ತ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿರುವುದಾಗಿರುತ್ತೆ.

  1. ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.268/2020 ಕಲಂ: 279,337,304(A)  ಐ.ಪಿ.ಸಿ:-

     ದಿನಾಂಕ:13/10/2020 ರಂದು 17-00 ಗಂಟೆಗೆ ಪಿರ್ಯಾದಿದಾರರಾದ ಶ್ರೀಮತಿ ಗಂಗರತ್ನಮ್ಮ ಕೋಂ ಅಶ್ವತ್ಥರೆಡ್ಡಿ, ವೈ.ಎನ್, 40 ವರ್ಷ, ವಕ್ಕಲಿಗರು, ಗೃಹಿಣಿ, ವಾಸ ಯಲ್ಲೋಡು ಗ್ರಾಮ, ಗುಡಿಬಂಡೆ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ಪಿರ್ಯಾದಿದಾರರು,  ಗಂಡ ಅಶ್ವತ್ಥರೆಡ್ಡಿ ಮತ್ತು ಇಬ್ಬರು ಹೆಣ್ಣು ಮಕ್ಕಳಾದ ಲಕ್ಷ್ಮೀ ವೈ.ಎ, ಮತ್ತು ಪ್ರೀತಿ ವೈ.ಎ ರವರೊಂದಿಗೆ ವಾಸವಾಗಿದ್ದು, ಅಶ್ವತ್ಥರೆಡ್ಡಿ ರವರು ಜಿರಾಯ್ತಿ ಮಾಡಿಕೊಂಡಿರುತ್ತಾರೆ. ದಿನಾಂಕ:13/10/2020 ರಂದು ಸಂಜೆ ಸುಮಾರು 4-00 ಗಂಟೆಯಲ್ಲಿ ಪಿರ್ಯಾದಿದಾರರು ಮನೆಯಲ್ಲಿದ್ದಾಗ ಪಿರ್ಯಾದಿದಾರರ ಭಾವನಾದ ಶಿವಾರೆಡ್ಡಿ ವೈ.ಎನ್. ರವರು ಪಿರ್ಯಾದಿದಾರರ ಮನೆಗೆ ಬಂದು ಅಶ್ವತ್ಥರೆಡ್ಡಿಗೆ ಅಪಘಾತವಾಗಿದ್ದು ಗೌರೀಬಿದನೂರು ಸರ್ಕಾರಿ ಆಸ್ಪತ್ರೆಯಲ್ಲಿರುವುದಾಗಿ ತಿಳಿಸಿದ್ದು, ಪಿರ್ಯಾದಿದಾರರು ಭಾವನವರೊಂದಿಗೆ ಗೌರೀಬಿದನೂರು ಸರ್ಕಾರಿ ಆಸ್ಪತ್ರೆಗೆ ಬಂದು ನೋಡಿದರೆ ಪಿರ್ಯಾದಿ ಗಂಡ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದು, ಈ ದಿನ ಬೆಳಿಗ್ಗೆ ಸುಮಾರು 9-00 ಗಂಟೆ ಸಮಯದಲ್ಲಿ ಪಿರ್ಯಾದಿದಾರರ ಗಂಡ ಅಶ್ವತ್ಥರೆಡ್ಡಿ ಅದೇ ಗ್ರಾಮದ ಗೋವಿಂದರೆಡ್ಡಿ ರವರೊಂದಿಗೆ ಗೋವಿಂದ ರೆಡ್ಡಿಯವರ  ಬಾಬತ್ತು ಕೆಎ-40, ವಿ-8021, ಟಿ.ವಿ.ಎಸ್ ಸ್ಟಾರ್ ಸಿಟಿ ದ್ವಿ ಚಕ್ರ ವಾಹನದಲ್ಲಿ ಹೊರಗೆ ಹೋಗಿದ್ದು ಕೆಲಸ ಮುಗಿಸಿಕೊಂಡು ಮದ್ಯಾಹ್ನ ಸುಮಾರು 3-30 ಗಂಟೆಯಲ್ಲಿ ವಾಟದಹೊಸಹಳ್ಳಿ ಕಡೆಯಿಂದ ನಗರಗೆರೆ ರಸ್ತೆಯಲ್ಲಿ ಸಬ್ಬನಹಳ್ಳಿ ಕ್ರಾಸ್ ನಿಂದ ಮುಂದಕ್ಕೆ ವಿವೇಕಾನಂದರೆಡ್ಡಿ ರವರ ಜಮೀನಿನ ಹತ್ತಿರ ಯಲ್ಲೋಡು ಗ್ರಾಮಕ್ಕೆ ಬರುತ್ತಿದ್ದಾಗ ನಗರಗೆರೆ ಕಡೆಯಿಂದ ವಾಟದಹೊಸಹಳ್ಳಿ ಕ್ರಾಸ್ ಕಡೆಗೆ ಬರುತ್ತಿದ್ದ ಎ.ಪಿ-21, ಎಂ-0089 ಇಂಡಿಗೋ ಕಾರ್ ನ ಚಾಲಕ ತನ್ನ ಕಾರನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಗೋವಿಂದರೆಡ್ಡಿ ರವರು ಚಾಲನೆ ಮಾಡುತ್ತಿದ್ದ ದ್ವಿ ಚಕ್ರ ವಾಹನಕ್ಕೆ  ಎದುರುಗಡೆಯಿಂದ ಡಿಕ್ಕಿ ಹೊಡೆಸಿದ ಪರಿಣಾಮ ಪಿರ್ಯಾದಿದಾರರ ಗಂಡ ಮತ್ತು ಗೋವಿಂದರೆಡ್ಡಿ ಇಬ್ಬರೂ ಕೆಳಗೆ ಬಿದ್ದಿದ್ದು ಅಶ್ವತ್ಥರೆಡ್ಡಿ ರವರ ತಲೆಗೆ ರಕ್ತಗಾಯವಾಗಿದ್ದು ಗೋವಿಂದರೆಡ್ಡಿ ರವರ ತಲೆಗೆ, ಬಲಕಾಲಿನ ಮೊಣಕಾಲಿಗೆ ಮತ್ತು  ಬಲಕಾಲಿನ ಹೆಬ್ಬೆರಳಿಗೆ ರಕ್ತಗಾಯವಾಗಿದ್ದು ಪಿರ್ಯಾದಿದಾರರ ಗಂಡ ಅಶ್ವತ್ಥರೆಡ್ಡಿ ರವರಿಗೆ ಮತ್ತು ಗೋವಿಂದರೆಡ್ಡಿ ರವರಿಗೆ ಸಾರ್ವಜನಿಕರು 108 ಆಂಬುಲೆನ್ಸ್ ನಲ್ಲಿ ಗೌರೀಬಿದನೂರು ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಸೇರಿಸಿದ್ದು, ಪಿರ್ಯಾದಿದಾರರ ಗಂಡ ಅಶ್ವತ್ಥರೆಡ್ಡಿ ಚಿಕಿತ್ಸೆ ಫಲಕಾರಿಯಾಗದೆ ಮಾರ್ಗ ಮಧ್ಯದಲ್ಲಿ ಮೃತಪಟ್ಟಿದ್ದು ಅಪಘಾತ ಪಡಿಸಿದ ಮೇಲ್ಕಂಡ ಕಾರು ಮತ್ತು ಕಾರಿನ ಚಾಲಕನ ವಿರುದ್ಧ ಕಾನೂನು ರೀತ್ಯ ಕ್ರಮ ಜರುಗಿಸಲು ಕೋರಿ ದೂರು.

  1. ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.269/2020 ಕಲಂ: 323,324,504,506 ರೆ/ವಿ 34 ಐ.ಪಿ.ಸಿ:-

     ದಿನಾಂಕ 13/10/2020 ರಂದು 17-30 ಗಂಟೆಗೆ ಪಿರ್ಯಾದಿ ಆನಂದ ಬಿನ್ ಪರಮೇಶ ಹಕ್ಕಿ ಪಿಕ್ಕಿ ಕಾಲೋನಿ, ಹೊಸೂರು ಹೋಬಳಿ, ಗೌರಿಬಿದನೂರು ತಾಲ್ಲೂಕು. ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೆನೇಂದರೆ ದಿನಾಂಕ 03/10/2020 ರಂದು ತಮ್ಮ ಗ್ರಾಮದ ಚಿನ್ನರಾಮುಡು ಎಂಬುವವನು ತನ್ನ ಹೆಂಡತಿಯಾದ ರವೀನಾರನ್ನು ಕರೆದುಕೊಂಡು ಹೋಗಿದ್ದು ಈ ಸಂಬಂದ ದಿನಾಮಕ 04/10/2020 ರಂದು ಸಂಜೆ 4-00ಗಂಟೆ ಸಮಯದಲ್ಲಿಚಿನ್ನರಾಮುಡು ಅವರ ಅಣ್ಣ ಚಿರಂಜೀವಿ ತಮ್ಮನ್ನು ಕುರಿತು ಅಸಭ್ಯವಾಗಿ ತಮ್ಮ ಗ್ರಾಮದಲ್ಲಿ ಹುಡುಗಿಯರನ್ನು ಕರೆದುಕೊಂಡು ಹೋಗುವುದು ಮಾಮೂಲಿ ಇದಕ್ಕೆ ಯಾರೋ ಏನೂ ಮಾಡಕ್ಕೆ ಆಗುವುದಿಲ್ಲ ಎಂಬುದಾಗಿ ತಮ್ಮಗೆ ನೋವಾಗುವ ರೀತಿಯಲ್ಲಿ ಮಾತನಾಡುತ್ತಿದ್ದನು ಈ ವಿಚಾರ ಗೊತ್ತಗಿ ಕೇಳಲು ಹೋದಾಗ ತಮ್ಮಗೂ ಚಿಂರಜೀವಿಗೂ ಮಾತಿಗೆ ಮಾತು ಬರಳರದು ಗಲಾಟೆ ಯಾಯಿತು ತನ್ನನ್ನು ಚಿರಂಜೀವಿ ಬಿನ್ ಗೊಲಿಪಂಡು ಎಂಬುವವವನು ದೊಣ್ಣೆಯಿಂದ ತನ್ನ ಎರಡು ಕಾಲುಗಳಿಗೆ ಹಾಗೂ ತನ್ನ ಬಲಕೈಗೆ ಜೋರಾಗಿ ಹೊಡೆದು ರಕ್ತಗಾಯ ಮಾಡಿರುತ್ತಾರೆ ಮತ್ತು ತನ್ನ ಅಣ್ಣ ಗಿರಿಬಾಬು ತನ್ನನ್ನು ಬಿಡಿಸಲು ಬಂದಾಗ ಚಿರಂಜೀವಿ ಮತ್ತು ಅವರ ತಂದೆ ಗೊಲಿಪಂಡು ಮತ್ತು ರಮೇಶ ಎಂಬುವವರು ತಮ್ಮಅಣ್ಣ ಗಿರಿಬಾಬು ರವರನ್ನು ಎಳೆದಾಡಿ ಬಲಭುಜಕ್ಕೆ ಗಾಯ ಮಾಡಿರುತ್ತಾರೆ ತಮ್ಮಗೆ ಬಸ್ ಸೌಕರ್ಯ ಿಲ್ಲದ ಕಾರಣ ದಿನಾಂಕ 05/10/2020 ರಂದು ಸರ್ಕಾರಿ ಆಸ್ವತ್ರೆಯಲ್ಲಿ ಚಿಕ್ಸಿತೆ ಪಡೆದಿರುತ್ತೇವೆ ಈ ವಿಚಾರ ನಮ್ಮ ಗ್ರಾಮದಲ್ಲಿ ಹಿರಿಯರು ಸೇರಿ ನ್ಯಾಯ ಪಂ ಚಾಯಿತಿ ಮಾಡುತ್ತೇವೆ ಎಂದು ಹೇಳಿ ಮಾಡದ ಕಾರಣ ಈ ದಿನ ತಡವಾಗಿ ಬಂದು ದೂರು ನೀಡಿದ್ದು ಈ ಮೇಲ್ಕಂಡವರ ಮೇಲೆ ಕಾನೂನು ರೀತ್ಯ ಕ್ರಮ ಕೈಗೊಂಡು ತಮ್ಮಗೆ ನ್ಯಾಯ ದೊರಕಿಸಿಕೊಡಬೇಕಾಗಿ ತಮ್ಮಲ್ಲಿ ದೂರು ಹಾಗೂ ಈ ಮೇಲ್ಕಂಡವರಿಂಧ ನಮಗೆ ಪ್ರಾಣ ಬೆದರಿಕೆ ಹಾಕಿದ್ದು ರಕ್ಷಣೆ ನೀಡಬೇಕೆಂದು ಕೋರಿ ದೂರು.

  1. ಮಂಚೇನಹಳ್ಳಿ ಪೊಲೀಸ್ ಠಾಣೆ ಮೊ.ಸಂ.230/2020 ಕಲಂ: 87 ಕೆ.ಪಿ ಆಕ್ಟ್ :-

     ಘನ ನ್ಯಾಯಾಲಯದಲ್ಲಿ ನಿವೇಧಿಸಿಕೊಳ್ಳುವುದೇನೆಂದರೆ ಚಿಕ್ಕಬಳ್ಳಾಪುರ ಜಿಲ್ಲೆ ಗೌರೀಬಿದನೂರು ತಾಲ್ಲೂಕು ಮಂಚೇನಹಳ್ಳಿ ಪೊಲೀಸ್ ಠಾಣೆಯ ಪಿ.ಎಸ್.ಐ. ಶ್ರೀ.ಲಕ್ಷ್ಮೀನಾರಾಯಣ ಆದ ನಾನು ಈ ದಿನ ದಿನಾಂಕ: 13/10/2020 ರಂದು ನಾನು ಠಾಣೆಯಲ್ಲಿದ್ದಾಗ ನನಗೆ ಮದ್ಯಾಹ್ನ 2-30 ಗಂಟೆಯ ಸಮಯದಲ್ಲಿ ಗೌರೀಬಿದನೂರು ತಾಲ್ಲೂಕು ಮಂಚೇನಹಳ್ಳಿ ಹೋಬಳಿ ಮಂಚೇನಹಳ್ಳಿ ಪೊಲೀಸ್ ಠಾಣಾ ಸರಹದ್ದಿಗೆ ಸೇರಿದ ಅದ್ದೆಕೊಪ್ಪ ಗ್ರಾಮದ ಬಳಿ ಇರುವ ಉತ್ತರ ಪಿನಾಕಿನಿ ನದಿಯಲ್ಲಿ ಯಾರೋ ಕೆಲವರು ಕಾನೂನು ಬಾಹೀರವಾಗಿ ಇಸ್ವೀಟು ಜೂಜಾಟ ಆಡುತ್ತಿರುವುದರ ಬಗ್ಗೆ ಖಚಿತ ಮಾಹಿತಿ ಬಾತ್ಮೀದಾರರಿಂದ ಬಂದಿದ್ದು. ಸದರಿ ಜೂಜಾಟದ ಮೇಲೆ ದಾಳಿ ಮಾಡುವ ಸಲುವಾಗಿ ಮಂಚೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಅಸಂಜ್ಞೆಯ ಅಪರಾಧ ಸಂಖ್ಯೆ (ಎನ್.ಸಿ.ಆರ್) 421/2020 ರಂತೆ ದಾಖಲಿಸಿಕೊಂಡು. ಘನ ನ್ಯಾಯಾಲಯದ ಅನುಮತಿಯನ್ನು ಪಡೆದುಕೊಂಡು ಬಾತ್ಮೀದಾರನಿಂದ ಬಂದ ಖಚಿತ ಮಾಹಿತಿಯಂತೆ ದಾಳಿ ಮಾಡಲು ನಾನು & ಮಂಚೇನಹಳ್ಳಿ ಪೊಲೀಸ್ ಠಾಣೆಯ ಸಿಬ್ಬಂದಿಯವರಾದ ಪಿ.ಸಿ.532 ಚಿಕ್ಕಣ್ಣ, ಪಿಸಿ-537 ಆನಂದ್ ಕುಮಾರ್, ಪಿ.ಸಿ.311 ಗೂಳಪ್ಪ, ಪಿ.ಸಿ.105 ನವೀನ್, ಪಿ.ಸಿ.283 ಅರವಿಂದ, ಪಿ.ಸಿ.175 ನವೀನ್ ಕುಮಾರ್ ಮತ್ತು ಜೀಪ್ ಚಾಲಕ ಎಪಿಸಿ 120  ನಟೇಶ್ ರವರು ಮತ್ತು ಪಂಚರೊಂದಿಗೆ ಸರ್ಕಾರಿ ಜೀಪ್ ಸಂಖ್ಯೆ ಕೆಎ-40, ಜಿ-395 ರಲ್ಲಿ ಮತ್ತು ದ್ವಿಚಕ್ರ ವಾಹನಗಳಲ್ಲಿ ಸಂಜೆ 4-00 ಗಂಟೆಗೆ ಮೇಲ್ಕಂಡ ಸ್ಥಳಕ್ಕೆ ಹೋಗಿ ಪಂಚರು ಮತ್ತು ನಾವು ಮರೆಯಲ್ಲಿ ನಿಂತು ನೋಡಲಾಗಿ ಯಾರೋ ಕೆಲವರು ಅಂದರ್ 100/- ಬಾಹರ್ 100/- ಎಂದು ಕೂಗುತ್ತಾ ಇಸ್ಪೀಟ್ ಜೂಜಾಟವಾಡುದ್ದುದ್ದನ್ನು ಖಚಿತ ಪಡಿಸಿಕೊಂಡು ಸದರಿಯವರನ್ನು ನಾವು ಸುತ್ತುವರೆದು ಜೂಜಾಡುತ್ತಿದ್ದವರನ್ನು ಓಡಿ ಹೋಗದಂತೆ ಎಚ್ಚರಿಕೆಯನ್ನು ನೀಡಿ ಅವರನ್ನು ಹಿಡಿದುಕೊಂಡು ಹೆಸರು ವಿಳಾಸ ಕೇಳಲಾಗಿ 1) ಗೋವಿಂದಪ್ಪ ಬಿನ್ ರಾಮಪ್ಪ, 40 ವರ್ಷ, ನಾಯಕರು, ಕೂಲಿ ಕೆಲಸ, ಅದ್ದೆಕೊಪ್ಪ ಗ್ರಾಮ, ಮಂಚೇನಹಳ್ಳಿ ಹೋಬಳಿ ಗೌರಿಬಿದನೂರು ತಾಲ್ಲೂಕು 2) ಇಮ್ರಾನ್ ಪಾಷ ಬಿನ್ ಆದಿಲ್ ಬಾಷ, 20 ವರ್ಷ, ಮುಸ್ಲಿಂ ಜನಾಂಗ, ಕಾರ್ಪೇಂಟರ್ ಕೆಲಸ, ಲಕ್ಷ್ಮೀಪುರ ಮಂಚೇನಹಳ್ಳಿ ಗ್ರಾಮ, ಗೌರಿಬಿದನೂರು ತಾಲ್ಲೂಕು 3) ಶ್ರೀನಿವಾಸ ಬಿನ್ ಲೇಟ್ ಗಂಗಯ್ಯ, 60 ವರ್ಷ, ಬಲಜಿಗರು, ತರಕಾರಿ ವ್ಯಾಪಾರ, ಹೀರೇಬಿದನೂರು ಗ್ರಾಮ, ಗೌರಿಬಿದನೂರು ತಾಲ್ಲೂಕು  4) ವೆಂಕಟೇಶ ಬಿನ್ ವೆಂಕಟಪ್ಪ, 40 ವರ್ಷ, ಬೋವಿ ಜನಾಂಗ, ಖಾಸಗಿ ಕೆಲಸ, ವಿನಾಯಕ ನಗರ ಗೌರಿಬಿದನೂರು ಟೌನ್, 5) ರಾಮಾಂಜಿ ಬಿನ್ ವೆಂಕಟರಮಣಪ್ಪ, 36 ವರ್ಷ, ನಾಯಕರು, ಹೋಟೆಲ್ ನಲ್ಲಿ ಕೆಲಸ, ವಿನಾಯಕ ನಗರ, ಗೌರಿಬಿದನೂರು ಟೌನ್, 6) ಚಿಕ್ಕಗಂಗಪ್ಪ ಬಿನ್ ಲೇಟ್ ಗಂಗಯ್ಯ, 65 ವರ್ಷ, ಗೊಲ್ಲರು, ಜಿರಾಯ್ತಿ, ಬೀರಮಂಗಲ ಗ್ರಾಮ, ಗೌರಿಬಿದನೂರು ತಾಲ್ಲೂಕು, 7) ರಂಗನಾಥ ಬಿನ್ ಆವುಲಕೊಂಡಪ್ಪ, 30 ವರ್ಷ, ನಾಯಕರು, ಚಾಕ ವೃತ್ತಿ, ಅದ್ದೆಕೊಪ್ಪ ಗ್ರಾಮ, ಗೌರಿಬಿದನೂರು  ತಾಲ್ಲೂಕು, ಎಂದು ತಿಳಿಸಿದ್ದು, ಆರೋಪಿತರನ್ನು ವಿಚಾರಣೆ ಮಾಡಲಾಗಿ ನಾವುಗಳು ಎಲ್ಲರೂ ಹಣವನ್ನು ಪಣವಾಗಿಟ್ಟು ಅಂದರ್-ಬಾಹರ್ ಇಸ್ಪೀಟ್ ಜೂಜಾಟವಾಡುತ್ತಿದ್ದೆವು ಎಂದು ತಿಳಿಸಿದ್ದು, ಪಂಚನಾಮೆಯ ಮೂಲಕ ಸ್ಥಳದಲ್ಲಿ ದೊರೆತ 5170/- (ಐದು ಸಾವಿರದ ನೂರ ಎಪ್ಪತ್ತು ರೂಪಾಯಿಗಳು ಮಾತ್ರ.)  ರೂ ನಗದು ಹಣ, 52 ಇಸ್ಪೀಟ್ ಎಲೆಗಳು, ಒಂದು ಪ್ಲಾಸ್ಟಿಕ್ ಪೇಪರ್ ಅನ್ನು ಸಂಜೆ 4-30 ಗಂಟೆಯಿಂದ 5-30 ಗಂಟೆಯವರೆಗೆ ಪಂಚನಾಮೆ ಕ್ರಮ ಜರುಗಿಸಿ ಪಂಚರ ಸಮಕ್ಷಮ ಅಮಾನತ್ತು ಪಡಿಸಿಕೊಂಡು ಮೇಲ್ಕಂಡ ಆರೋಪಿಗಳನ್ನು ಮತ್ತು ಮಾಲನ್ನು ವಶಕ್ಕೆ ಪಡೆದು ಠಾಣೆಗೆ ಸಂಜೆ 6-00 ಬಂದು ಸ್ವತಃ  ಅಂದರ್-ಬಾಹರ್ ಇಸ್ಪೀಟ್ ಎಲೆಗಳ ಜೂಜಾಟವಾಡುತ್ತಿದ್ದ ಮೇಲ್ಕಂಡ ಆರೋಪಿಗಳ ಮೇಲೆ ಠಾಣಾ ಮೊ.ಸಂ-230/2020 ಕಲಂ 87 ಕೆ.ಪಿ.ಆಕ್ಟ್ ರೀತ್ಯಾ ಪ್ರಕರಣ ದಾಖಲಿಸಿಕೊಂಡಿರುತ್ತೆ.

  1. ಮಂಚೇನಹಳ್ಳಿ ಪೊಲೀಸ್ ಠಾಣೆ ಮೊ.ಸಂ.231/2020 ಕಲಂ: 279,304(A) ಐ.ಪಿ.ಸಿ :-

     ದಿನಾಂಕ: 14/10/2020 ರಂದು ಬೆಳಿಗ್ಗೆ 8-30 ಗಂಟೆಗೆ ಪಿರ್ಯಾದಿದಾರರಾದ ಎಂ.ರಂಗಪ್ಪ ಬಿನ್ ಮರಿಯಪ್ಪ, 39 ವರ್ಷ, ಆದಿಕರ್ನಾಟಕ ಜನಾಂಗ, ಕೂಲಿ ಕೆಲಸ, ವಾಸ ಹೊಸೂರು ಗ್ರಾಮ, ಗೌರಿಬಿದನೂರು ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆನೆಂದರೆ, ನನ್ನ ತಮ್ಮನಾದ ಪ್ರಕಾಶ ಬಿನ್ ಮರಿಯಪ್ಪ, 35 ವರ್ಷ, ಗಾರೆ ಕೆಲಸ, ಹೊಸೂರು ಗ್ರಾಮ ರವರು ದಿನಾಂಕ: 06/10/2020 ರಂದು ತನ್ನ ಅಕ್ಕ ರಂಗಮ್ಮ ರವರನ್ನು ನೋಡಲು ಉಪ್ಪರಹಳ್ಳಿ ಗ್ರಾಮಕ್ಕೆ ಬಂದು ನೋಡಿಕೊಂಡು ವಾಪಸ್ ಗ್ರಾಮಕ್ಕೆ ಬರಲು KA-51-S-635 ರ ದ್ವಿ ಚಕ್ರ ವಾಹನದಲ್ಲಿ ಬರುತ್ತಿರುವಾಗ ಹೊನ್ನಪ್ಪನಹಳ್ಳಿ ಗ್ರಾಮದ ಬಳಿ ಇರುವ ಹಾಲಿನ ಡೈರಿಯ ಬಳಿ ಸಂಜೆ ಸುಮಾರು 4-30 ಗಂಟೆಯಲ್ಲಿ ದ್ವಿ ಚಕ್ರ ವಾಹನವನ್ನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಆಕಸ್ಮಿಕವಾಗಿ ರಸ್ತೆಯಲ್ಲಿ ಬಿದ್ದು ತಲೆಗೆ ಮತ್ತು ಕೈಕಾಲುಗಳಿಗೆ ಗಾಯಗಳಾಗಿದ್ದು ಅಪಘಾತ ವಿಷಯವನ್ನು ತಿಳಿದು ಅಲ್ಲಿಗೆ ಬಂದ ನಮ್ಮ ಭಾವನಾದ ಆವಲಪ್ಪ ಬಿನ್ ಮಾಳಪ್ಪ ಉಪ್ಪರಹಳ್ಳಿ ರವರು ಗಾಯಾಳುವನ್ನು ಚಿಕಿತ್ಸೆಗಾಗಿ ಮಂಚೇನಹಳ್ಳಿ ಸರ್ಕಾರಿ ಆಸ್ಪತ್ರೆಗೆ ಸೇರಿಸಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಚಿಕ್ಕಬಳ್ಳಾಪುರ ಜಿಲ್ಲಾ ಆಸ್ಪತ್ರೆಗೆ 108 ಅಂಬುಲೆನ್ಸ್ ನಲ್ಲಿ ಕರೆದುಕೊಂಡು ಹೋಗಿ ಸೇರಿಸಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆಪಡೆದುಕೊಂಡು ನಂತರ ಮತ್ತೆ ಚಿಕ್ಕಬಳ್ಳಾಪುರ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡಿಸುತ್ತಿದ್ದು ದಿನಾಂಕ: 13/10/2020 ರಂದು ರಾತ್ರಿ 8-20 ಗಂಟೆ ಸಮಯದಲ್ಲಿ ದ್ವಿ ಚಕ್ರ ವಾಹನದಲ್ಲಿ ಬಿದ್ದ ಗಾಯಗಳ ದೆಶೆಯಿಂದ ಮೃತಪಟ್ಟಿದ್ದು ನನ್ನ ತಮ್ಮನನ್ನು ನೋಡಿಕೊಳ್ಳುವವರು ಯಾರೂ ಇಲ್ಲದೇ ಇದ್ದು ದ್ವಿ ಚಕ್ರ ವಾಹನದಲ್ಲಿ ತನ್ನಷ್ಟಕ್ಕೆ ತಾನೇ ಬಿದ್ದಿದ್ದರಿಂದ ದೂರನ್ನು ನೀಡಲು ಸಾಧ್ಯವಾಗದೇ ಇದ್ದು ಪ್ರಕಾಶ ರವರು KA-51-S-635 ರ ದ್ವಿ ಚಕ್ರ ವಾಹನವನ್ನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿ ತಲೆಗೆ ಮತ್ತು ಕೈಕಾಲುಗಳಿಗೆ ಆದ ಗಾಯಗಳ ದೆಶೆಯಿಂದ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುತ್ತಾನೆ ಆದ್ದರಿಂದ ಕಾನೂನು ರೀತ್ಯ ಕ್ರಮ ಜರುಗಿಸಲು ಕೋರಿ ನೀಡಿದ ಪ್ರ.ವ.ವರದಿ.