ದಿನಾಂಕ : 14/10/2019ರ ಅಪರಾಧ ಪ್ರಕರಣಗಳು

 1. ಬಾಗೇಪಲ್ಲಿ ಪೊಲೀಸ್ ಠಾಣೆ ಮೊ.ಸಂ. 331/2019 ಕಲಂ. 143-147-148-307-435-504 ರೆ/ವಿ 149 ಐ.ಪಿ.ಸಿ:-

     ದಿ:14-10-2019 ರಂದು ಬೆಳಗ್ಗೆ 6:15 ಗಂಟೆಯಲ್ಲಿ ಬಾಗೇಪಲ್ಲಿ ಸರ್ಕಾರಿ ಆಸ್ಪತ್ರೆಯಿಂದ ಬಂದ ಮೆಮೋ ಪಡೆದು ಆಸ್ಪತ್ರೆಗೆ ತೆರಳಿ ಗಾಯಾಳು ಎಲ್.ಎನ್. ಚೇತನ್ ಕುಮಾರ್ ಬಿನ್ ಲಕ್ಷ್ಮೀನಾರಾಯಣ, 25 ವರ್ಷ, ಯಳವ ಜನಾಂಗ, ಇಂಡಿಯನ್ ಕೋ ಆಪರೇಟೀವ್ ಕ್ರೆಡಿಟ್ ಸೊಸೈಟಿ ಲಿಮಿಟೆಡ್, ದಾವಣಗೆರೆಯಲ್ಲಿ ಕೆಲಸ, ಹಾಲಿ ವಾಸ: ಕೆ.ಎಸ್.ಆರ್.ಟಿ.ಸಿ ಡಿಪೋ ರಸ್ತೆ, ಬಾಗೇಪಲ್ಲಿ ಪುರ ರವರ ಹೇಳಿಕೆ ಪಡೆದುಕೊಂಡಿದ್ದರ  ಸಾರಾಂಶ – ನಾನು ಇಂಡಿಯನ್ ಕೋ ಆಪರೇಟೀವ್ ಕ್ರೆಡಿಟ್ ಸೊಸೈಟಿ ಲಿಮಿಟೆಡ್ ದಾವಣಗೆರೆಯಲ್ಲಿ ಕೆಲಸ ಮಾಡುತ್ತಿದ್ದು, ಬಾಗೇಪಲ್ಲಿಯಲ್ಲಿರುವ ನಮ್ಮ ಮನೆಗೆ ಆಗಾಗ ಬಂದು ಹೋಗುತ್ತಿರುತ್ತೇನೆ.  ಹೀಗಿರುವಾಗ ಗ್ಗೆ 01 ತಿಂಗಳ ಹಿಂದೆ ನಾನು ಬಾಗೇಪಲ್ಲಿಗೆ ಬಂದಿದ್ದಾಗ, ಏಟಿಗಡ್ಡಪಲ್ಲಿ ಗ್ರಾಮದ ಸಮೀಪ ರುವ ಪೆಟ್ರೋಲ್ ಬಂಕ್ ಬಳಿ ಪೆಟ್ರೋಲ್ ಹಾಕಿಸಿಕೊಳ್ಳುತ್ತಿದ್ದಾಗ, ಜಿಲಕರಪಲ್ಲಿ ಗ್ರಾಮದ ವಾಸಿಯಾದ ಕಾರ್ತಿಕ್ ಎಂಬುವವನಿಗೂ ನನಗೂ ಮಾತಿನ ಚಕಮುಖಿಯಾಗಿರುತ್ತದೆ.  ನಂತರ ನಾನು ಎಂದಿನಂತರ ಕೆಲಸಕ್ಕಾಗಿ ದಾವಣಗೆರೆಗೆ ಹೋಗಿದ್ದು, ದಿ:11-10-2019 ರಂದು ಬಾಗೇಪಲ್ಲಿಗೆ ಬಂದಿದ್ದು, ಬಾಗೇಪಲ್ಲಿಯಲ್ಲಿಯೇ ಇರುತ್ತೇನೆ.  ದಿ: 13-10-2019 ರಂದು ರಾತ್ರಿ 9:30 ಗಂಟೆ ಸಮಯದಲ್ಲಿ ನಾನು ಬಾಗೇಪಲ್ಲಿಯಿಂದ ನಮ್ಮ ಮನೆಗೆ ಹೋಗಲು ಬಾಗೇಪಲ್ಲಿ ಪುರದ ಡಿ.ವಿ.ಜಿ ರಸ್ತೆಯಲ್ಲಿರುವ ಕಾರ್ಪೊರೇಷನ್ ಬ್ಯಾಂಕ್ ಬಳಿ ಹೋಗುತ್ತಿದ್ದಾಗ, ಸದರಿ ಜಿಲಕರಪಲ್ಲಿ ಗ್ರಾಮದ ಕಾರ್ತಿಕ್ ರವರು ಮೂರು ದ್ವಿಚಕ್ರ ವಾಹನಗಳಲ್ಲಿ ಅವರೊಂದಿಗೆ 5 ಜನರನ್ನು ಕರೆದುಕೊಂಡು ನಾನು ಸವಾರಿ ಮಾಡಿಕೊಂಡು ಹೋಗುತ್ತಿದ್ದ ನನ್ನ ಬಾಬತ್ತು KA-03-HQ-9024 ನೊಂದಣಿ ಸಂಖ್ಯೆಯ ದ್ವಿಚಕ್ರ ವಾಹನವನ್ನು ಹಿಂಭಾಳಿಸಿಕೊಂಡು ಬಂದು ಕಾರ್ತಿಕ್ ರವರು ಕುಳಿತುಕೊಂಡು ಬರುತ್ತಿದ್ದಂತಹ ದ್ವಿಚಕ್ರ ವಾಹನದ ಸವಾರ ತನ್ನ ದ್ವಿಚಕ್ರ ವಾಹನದಿಂದ ನನ್ನ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆಸಿದ್ದು, ತಕ್ಷಣ ನಾನು ನನ್ನ ದ್ವಿಚಕ್ರ ವಾಹನವನ್ನು ರಸ್ತೆಯ ಪಕ್ಕದಲ್ಲಿ ನಿಲ್ಲಿಸಿ ಅವರ ಬಳಿ ಹೋಗುತ್ತಿದ್ದಾಗ, ಕಾರ್ತಿಕ್, ಸುಧೀಪ್ ಬಿನ್ ನರಸಪ್ಪ, 22 ವರ್ಷ, ನಾಯಕರು, ಏಟಿಗಡ್ಡಪಲ್ಲಿ ಗ್ರಾಮ, ಬಾಗೇಪಲ್ಲಿ ತಾಲ್ಲೂಕು, ಸುಭಾಶ್ ಬಿನ್ ಲೇಟ್ ಕುಮಾರ್, 19 ವರ್ಷ, ದೋಭಿ ಜನಾಂಗ, ಪೆಟ್ರೋಲ್ ಬಂಕ್ ನಲ್ಲಿ ಕೆಲಸ, ಏಟಿಗಡ್ಡಪಲ್ಲಿ ಗ್ರಾಮ, ಬಾಗೇಪಲ್ಲಿ ತಾಲ್ಲೂಕು, ಮುಜಾಮಿಲ್ ಬಾಗೇಪಲ್ಲಿ ಟೌನ್ ಹಾಗೂ ಇಬ್ಬರು ಅಪರಿಚಿತರು ಬಂದು ನನ್ನನ್ನು ಸುತ್ತುವರೆದುಕೊಂಡಿದ್ದು, ಆ ಪೈಕಿ ಕಾರ್ತಿಕ್ ರವರು ನನ್ನನ್ನು ಕುರಿತು ‘ ಏನೋ ನಿನ್ನಮ್ಮನ್’ ಎಂದು ‘ಲೋಫರ್ ನನ್ನ ಮಗನೆ’ ಎಂದು ಅವಾಚ್ಯವಾಗಿ ಬೈಯ್ಯುತ್ತಾ, ಆತನ ಪ್ಯಾಂಟಿನ ಜೇಬಿನಿಂದ ಒಂದು ಚಾಕನ್ನು ತೆಗೆದುಕೊಂಡು ಬಂದು ನನ್ನ ಹೊಟ್ಟೆಗೆ ತಿವಿಯಲು ಬಂದಾಗ, ನಾನು ನನ್ನ ಎಡಗೈಯನ್ನು ಅಡ್ಡ ಹಾಕಿದಾಗ, ಚಾಕಿನ ಏಟು ನನ್ನ ಎಡಗೈಗೆ ಬಿದ್ದು, ನನ್ನ ಕೈಗೆ ತೀರ್ವತರವಾದ ರಕ್ತಗಾಯವಾಗಿರುತ್ತದೆ.  ನಂತರ ಗಾಯಗೊಂಡ ನಾನು ಭಯದಿಂದ ಪಕ್ಕಕ್ಕೆ ಹೋದಾಗ, ಸದರಿ ಕಾರ್ತಿಕ್ ರವರು ನನ್ನನ್ನು ಸಾಯಿಸುವ ಉದ್ದೇಶದಿಂದ ಪುನಃ ನನ್ನ ಮೇಲೆ ಚಾಕುವಿನಿಂದ ಇರಿಯಲು ಬಂದಾಗ ನಾನು ಓಡಿ ಹೋಗಿರುತ್ತೇನೆ.  ಅಷ್ಟರಲ್ಲಿ ಅಲ್ಲಿಗೆ ಬಂದ ನನ್ನ ಸ್ನೇಹಿತರಾದ ಶ್ರೀನಿವಾಸ ಮತ್ತು ವಿಷ್ಣು ರವರೊಂದಿಗೆ ಬಾಗೇಪಲ್ಲಿ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಬಂದು ದಾಖಲಾಗಿರುತ್ತೇನೆ.  ನಂತರ ನಾನು ಸ್ಥಳದಲ್ಲಿ ನಿಲ್ಲಿಸಿದ್ದ ದ್ವಿಚಕ್ರ ವಾಹನವನ್ನು ತರುವಂತೆ ಸ್ನೇಹಿತರನ್ನು ಕಳುಹಿಸಿಕೊಟ್ಟಿದ್ದು, ಸದರಿ ಹೋಗಿ ನೋಡಲಾಗಿ ದ್ವಿಚಕ್ರ ವಾಹನ ಸ್ಥಳದಲ್ಲಿ ಇರುವುದಿಲ್ಲ, ನಂತರ ಈ ದಿನ ಬೆಳಗ್ಗೆ ಸುಮಾರು 6:00 ಗಂಟೆಯಲ್ಲಿ ನನ್ನ ಸ್ನೇಹಿತರು ಹುಡುಕಾಡಲಾಗಿ ಏಟಿಗಡ್ಡಪಲ್ಲಿ ಗ್ರಾಮಕ್ಕೆ ಹೋಗುವ ರಸ್ತೆಯ ಬಲಭಾಗದಲ್ಲಿ ಬೆಂಕಿ ಹಾಕಿ ಸುಟ್ಟಿರುವುದಾಗಿ ತಿಳಿಸಿರುತ್ತಾರೆ.  ಆದ್ದರಿಂದ ವಿನಾಕಾರಣ ನನ್ನ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆಸಿ, ನನ್ನನ್ನು ಸಾಯಿಸುವ ಉದ್ದೇಶದಿಂದ ನನ್ನ ಮೇಲೆ ಚಾಕುವಿನಿಂದ ಹಲ್ಲೆ ಮಾಡಿ, ನನ್ನ ದ್ವಿಚಕ್ರ ವಾಹನವನ್ನು ತೆಗೆದುಕೊಂಡು ಹೋಗಿ ಸುಟ್ಟು ಹಾಕಿದ ಮೇಲ್ಕಂಡವರ ಮೇಲೆ ಕಾನೂನು ರೀತಿಯ ಕ್ರಮ ಜರುಗಿಸಬೇಕಾಗಿ ಕೋರುತ್ತೇನೆ,  ಎಂದು ನೀಡಿದ ದೂರಿನ ಮೇರೆಗೆ ಬೆಳಗ್ಗೆ 7:45 ಗಂಟೆಗೆ ಠಾಣೆಗೆ ವಾಪಸ್ಸಾಗಿ ಪ್ರಕರಣ ದಾಖಲಿಸಿಕೊಂಡಿರುತ್ತೆ.

 1. ಬಾಗೇಪಲ್ಲಿ ಪೊಲೀಸ್ ಠಾಣೆ ಮೊ.ಸಂ. 332/2019 ಕಲಂ. 323-324-504-506 ಐ.ಪಿ.ಸಿ:-

     ದಿನಾಂಕ:14/10/2019 ರಂದು ಮದ್ಯಾಹ್ನ 12.30 ಗಂಟೆಗೆ ಪಿರ್ಯಾದಿದಾರರಾದ ಶ್ರೀಮತಿ ಮುಬೀನಾ ಕೊಂ ಅಬ್ದುಲ್ ಖಾದರ್, 34 ವರ್ಷ, ಗೃಹಿಣಿ, ಮುಸ್ಲಿಂ ಜನಾಂಗ, ವಾಸ 4 ನೇ ವಾರ್ಡ್, ರಾಘವೇಂದ್ರ ಟಾಕೀಸ್ ಹಿಂಭಾಗ, ಬಾಗೇಪಲ್ಲಿ ಪುರ ರವರು ಠಾಣೆಗೆ ಹಾಜರಾಗಿ ನೀಡಿದ ಮುದ್ರಿತ ದೂರಿನ ಸಾರಾಂಶವೇನೆಂದರೆ ನಾನು  ನನ್ನ ಗಂಡನೊಂದಿಗೆ ವಿಚ್ಚೇದನವನ್ನು ಪಡೆದುಕೊಂಡಿದ್ದು,  ಅಂದಿನಿಂದಲೂ ನನ್ನ ತಮ್ಮನಾದ ಎಸ್. ವಹಾಬ್ ಪಾಷಾರವರು ನಾನು ಗಂಡ ಬಿಟ್ಟಿರುವ ವಿಚಾರದಲ್ಲಿ ನೀನು ಗಂಡನನ್ನು ಬಿಟ್ಟೀದಿಯಾ, ನೀನು ಸೂಳೆ, ಗಂಡನನ್ನು ಬಿಟ್ಟು ನಮ್ಮ ಕುಟುಂಬಕ್ಕೆ ಮರ್ಯಾದೆ ತೆಗೆದೆ ಎಂದು ಆಗಾಗ ಗಲಾಟೆ ಮಾಡುತ್ತಿದ್ದು, ವಹಾಬ್ ಪಾಷಾರವರು ನನ್ನ ತಮ್ಮನೇ ಆದ ಕಾರಣ ತಲೆ ಕೆಡಸಿಕೊಳ್ಳಲಿಲ್ಲ. ಈ ವಿಚಾರದಲ್ಲಿ ನಾನು ನನ್ನ ತಮ್ಮರವರು ಮಾತನಾಡುತ್ತಿರಲಿಲ್ಲ. ದಿನಾಂಕ:06/10/2019 ರಂದು ನಾನು ಗೂಳೂರು ವೃತ್ತದಲ್ಲಿ ತರಕಾರಿಯನ್ನು ತೆಗೆದುಕೊಂಡು ನಮ್ಮ ಮನೆಗೆ ಹೋಗಲು ನನ್ನ ತಮ್ಮ ವಹಾಬ್ ಪಾಷಾರವರ ಮನೆಯ ಮುಂದೆ ಹೋಗುತ್ತಿರುವಾಗ, ನನ್ನ ತಮ್ಮನ ಮಕ್ಕಳು ಆಟವಾಡುತ್ತಿದ್ದು, ನನ್ನನ್ನು ನೋಡಿ ಅತ್ತೆ ಅತ್ತೆ ಎಂದು ಕೂಗಿದ್ದು, ಮನೆಯ ಹೊರಗಡೆ ಇದ್ದ ಆ ಮಕ್ಕಳನ್ನು ನಾನು ಮಾತನಾಡಿಸಿಕೊಂಡು ನನ್ನ ಮನೆಗೆ ಹೋದೆನು. ದಿನಾಂಕ:12/10/2019 ರಂದು  ವಹಾಬ್ ಪಾಷಾರವರು ತನ್ನ ಮಕ್ಕಳನ್ನು ಮಾತನಾಡಿಸಿದ ವಿಚಾರದಲ್ಲಿ ಬೆಳಗ್ಗೆ 11.30 ಗಂಟೆ ಸಮಯದಲ್ಲಿ ನಾನು ಮನೆಯಲ್ಲಿದ್ದಾಗ ನನ್ನ ತಾಯಿಯಾದ ಫಜ್ಲೂನ್ ರವರೊಂದಿಗೆ ವಹಾಬ್ ಪಾಷಾರವರು  ನಮ್ಮ ಮನೆಯ ಮುಂದೆ ನಿಂತು  ಏಯ್ ಸೂಳೆ ಮುಂಡೆ ಏಕೆ ನನ್ನ ಮನೆಗೆ ನೀನು  ಬಂದಿರುವುದು ಎಂದು ಜೋರಾಗಿ ಬೈದಿರುತ್ತಾನೆ. ಅದಕ್ಕೆ ಮನೆಯಿಂದ ಹೊರಗೆ ಕಾಂಪೌಂಡ್ ಬಳಿ ಬಂದು ನಾನು ನಿನ್ನ ಮನೆಗೆ ಬಂದಿಲ್ಲ, ತರಕಾರಿ ತೆಗೆದುಕೊಂಡು ನಿಮ್ಮ ಮನೆ ಮುಂದೆ ಬರುತ್ತಿರುವಾಗ ನಿನ್ನ ಮಕ್ಕಳೇ ಕೂಗಿ ಮಾತನಾಡಿಸಿದರು. ನಾನು ನಿನ್ನ ಮನೆಗೆ ಬಂದಿರುವುದಿಲ್ಲ ಹೋಗೋ ಎಂದಾಗ ಏಯ್ ಸೂಳೆ ಮುಂಡೆ ಲೋಫರ್ ಮುಂಡೆ ನನ್ನನ್ನೇ ಹೋಗು ಅಂತೀಯಾ ಎಂದು ಅಲ್ಲೇಬಿದ್ದಿದ್ದ ಒಂದು ಕಲ್ಲನ್ನು ತೆಗೆದುಕೊಂಡು ನನಗೆ ಹೊಡೆಯುವ ಉದ್ದೇಶದಿಂದ ನನ್ನ ಕಡೆಗೆ ಸಿಮೆಂಟ್ಕಲ್ಲನ್ನು ಎಸೆದಿದ್ದು, ಆ ಸಿಮೆಂಟ್ ಕಲ್ಲು ನನ್ನ ತಲೆಗೆ ಬಿದ್ದು ರಕ್ತಗಾಯವಾಗಿ ನಾನು ಕೆಳಗೆ ಬಿದ್ದಿದ್ದಾಗ, ನನ್ನ ಜುಟ್ಟನ್ನು ಹಿಡಿದು ಕೈಗಳಿಂದ ಬೆನ್ನಿಗೆ ಬಲವಾಗಿ ಗುದ್ದಿದನು. ನಂತರ ಏಯ್ ಈ ವಿಚಾರದಲ್ಲಿ ಪೊಲೀಸರಿಗೆ ನೀನು ಕಂಪ್ಲೇಟ್ ಕೊಟ್ಟು ನನ್ನನ್ನು ಜೈಲಿಗೆ ಕಳುಹಿಸಿದರೆ ನಿನ್ನ ಮೇಲೆ ಬಸ್ ಹತ್ತಿಸಿ ಸಾಯಿಸುತ್ತೇನೆಂದು ಪ್ರಾಣಬೆದರಿಕೆ ಹಾಕಿ, ಅಲ್ಲಿಂದ ಹೊರಟು ಹೋದನು. ಅಲ್ಲೇ ಇದ್ದ ನನ್ನ ತಾಯಿಯಾದ ಫಜ್ಲೂನ್ ರವರು ನನ್ನನ್ನು ಉಪಚರಿಸಿರುತ್ತಾರೆ. ಇದೇ ದಿನ ನಾನು ಬಾಗೇಪಲ್ಲಿ ಸರ್ಕಾರಿ ಆಸ್ಪತ್ರೆಯಲ್ಲಿ ಧಾಖಲಾಗಿ ಚಿಕಿತ್ಸೆಯನ್ನು ಪಡೆದುಕೊಂಡಿರುತ್ತೇನೆ. ಈ ವಿಚಾರದಲ್ಲಿ ಹಿರಿಯರು ರಾಜಿ ಪಂಚಾಯ್ತಿ ಮಾಡುವುದಾಗಿ ತಿಳಿಸಿದ್ದು, ಯಾವುದೇ ರಾಜಿ ಪಂಚಾಯ್ತಿ ಮಾಡದ ಕಾರಣ ತಡವಾಗಿ ಠಾಣೆಗೆ ಹಾಜರಾಗಿ ದೂರನ್ನು ನೀಡಿರುತ್ತೇನೆ.   ನನಗೆ ಅವಾಚ್ಯವಾಗಿ ಬೈದು, ಕೈಗಳಿಂದ ಹೊಡೆದು, ಕಲ್ಲಿನಿಂದ ನನ್ನ ತಲೆಗೆ ಹೊಡೆದು ರಕ್ತಗಾಯಪಡಿಸಿ, ಪ್ರಾಣ ಬೆದರಿಕೆ ಹಾಕಿರುವ ನನ್ನ ತಮ್ಮನಾದ ವಹಾಬ್ ಪಾಷಾರವರು  ಬಿನ್ ಶೇಕ್ ಸಮೀಉಲ್ಲಾ, 30 ವರ್ಷ, ಮಿನಿ ಬಸ್ ಚಾಲಕ, ಮುಸ್ಲಿಂ ಜನಾಂಗ, ವಾಸ ಅಂಜನಿ ಬಾರ್ ಹಿಂದೆ, 10 ನೇ ವಾರ್ಡ್ ಗೂಳೂರು ರಸ್ತೆ, ಬಾಗೇಪಲ್ಲಿ ಪುರ ರವರ ವಿರುದ್ದ ಕಾನೂನು ಕ್ರಮ ಜರುಗಿಸಲು ಕೋರಿ ನೀಡಿದ ದೂರಾಗಿರುತ್ತೆ.

 1. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.293/2019 ಕಲಂ. 15(ಎ), 32(3) ಕೆ.ಇ ಆಕ್ಟ್:-

     ದಿನಾಂಕ 13/10/2019 ರಂದು ಸಂಜೆ 04.40 ಗಂಟೆ ಸಮಯದಲ್ಲಿ ಪಿ ಎಸ್ ಐ ಸಾಹೇಬರು ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ 13/10/2019 ರಂದು ಸಂಜೆ 04.30 ಗಂಟೆಯಲ್ಲಿ ತಾನು ಠಾಣೆಯಲ್ಲಿದ್ದಾಗ ತನಗೆ ಬಂದ ಖಚಿತ ಮಾಹಿತಿಯಂತೆ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ಸರಹದ್ದಿನ ಹುನೇಗಲ್  ಗ್ರಾಮದ  ವೆಂಕಟಲಕ್ಷ್ಮಮ್ಮ ಕೋಂ ಪಿಳ್ಳಪ್ಪ, 47 ವರ್ಷ, ಬೋವಿ ಜನಾಂಗ, ಕೂಲಿ ಕೆಲಸ, ಹುನೇಗಲ್ ಗ್ರಾಮ ರವರು, ಅವರ ಚಿಲ್ಲರೆ ಅಂಗಡಿ ಬಳಿ ಯಾವುದೇ ಪರವಾನಗಿ ಇಲ್ಲದೆ ಮಧ್ಯಪಾನ ಸೇವನೆ ಮಾಡಲು ಅವಕಾಶ ಮಾಡಿ ಕೊಡುತ್ತಿರುವುದಾಗಿ ನನಗೆ ಖಚಿತ ಮಾಹಿತಿ ಬಂದಿರುತ್ತದೆ ಈ ಬಗ್ಗೆ ಆಸಾಮಿಯ ವಿರುದ್ದ ಕಲಂ 15(ಎ), 32(3) ಕೆ.ಇ ಆಕ್ಟ್ ರೀತ್ಯಾ ಆಸಾಮಿಯ ವಿರುದ್ದ ಪ್ರಕರಣ ದಾಖಲಿಸಲು ಸೂಚಿಸಿದ ಮೇರೆಗೆ ಈ ಪ್ರ ವ ವರದಿ.

 1. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.294/2019 ಕಲಂ. 15(ಎ), 32(3) ಕೆ.ಇ ಆಕ್ಟ್:-

     ದಿನಾಂಕ 13/10/2019 ರಂದು ಸಂಜೆ 06.40 ಗಂಟೆ ಸಮಯದಲ್ಲಿ ಪಿ ಎಸ್ ಐ ಸಾಹೇಬರು ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ 13/10/2019 ರಂದು ಸಂಜೆ 06.30 ಗಂಟೆಯಲ್ಲಿ ತಾನು ಠಾಣೆಯಲ್ಲಿದ್ದಾಗ ತನಗೆ ಬಂದ ಖಚಿತ ಮಾಹಿತಿಯಂತೆ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ಸರಹದ್ದಿನ ಹೊನ್ನೇನಹಳ್ಳಿ  ಗ್ರಾಮದ  ಲಕ್ಷ್ಮಿನಾರಾಯಣಪ್ಪ ಬಿನ್ ವೆಂಕಟರಾಯಪ್ಪ, 59 ವರ್ಷ, ಬಲಜಿಗರು, ಕೂಲಿಕೆಲಸ ಹೊನ್ನೇನಹಳ್ಳಿ ಗ್ರಾಮ ರವರು, ಅವರ ಚಿಲ್ಲರೆ ಅಂಗಡಿ ಬಳಿ ಯಾವುದೇ ಪರವಾನಗಿ ಇಲ್ಲದೆ ಮಧ್ಯಪಾನ ಸೇವನೆ ಮಾಡಲು ಅವಕಾಶ ಮಾಡಿ ಕೊಡುತ್ತಿರುವುದಾಗಿ ನನಗೆ ಖಚಿತ ಮಾಹಿತಿ ಬಂದಿರುತ್ತದೆ ಈ ಬಗ್ಗೆ ಆಸಾಮಿಯ ವಿರುದ್ದ ಕಲಂ 15(ಎ), 32(3) ಕೆ.ಇ ಆಕ್ಟ್ ರೀತ್ಯಾ ಆಸಾಮಿಯ ವಿರುದ್ದ ಪ್ರಕರಣ ದಾಖಲಿಸಲು ಸೂಚಿಸಿದ ಮೇರೆಗೆ ಈ ಪ್ರ ವ ವರದಿ.

 1. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.295/2019 ಕಲಂ. 87 ಕೆ.ಪಿ ಆಕ್ಟ್:-

     ದಿನಾಂಕ 13/10/2019 ರಂದು ರಾತ್ರಿ 11.45 ಗಂಟೆಗೆ ಸಿಪಿಐ ಸಾಹೇಬರು ಆಪಾದಿತರನ್ನು ಮಾಲು ಪಂಚನಾಮೆಯೊಂದಿಗೆ ನೀಡಿದ ವರದಿಯ ಸಾರಾಂಶವೇನೆಂದರೆ ದಿನಾಂಕ:13/10/2019 ರಂದು ರಾತ್ರಿ 09-30 ಗಂಟೆಯಲ್ಲಿ ನಾನು ನನ್ನ ಕಛೇರಿಯಲ್ಲಿದ್ದಾಗ ಚಿಕ್ಕಬಳ್ಳಾಪುರ ಗ್ರಾಮಾಂತರ  ಪೊಲೀಸ್ ಠಾಣೆಯ ವ್ಯಾಪ್ತಿಗೆ ಸೇರಿದ ಅಂದಾರ್ಲಹಳ್ಳಿ ಗ್ರಾಮದ ಹಾಲು ಡೈರಿಯ ಹಿಂಭಾಗದಲ್ಲಿರುವ ಶುದ್ದ ಕುಡಿಯುವ ನೀರಿನ ಘಟಕದ ಬಳಿ ಕೆಲವರು ಆಸಾಮಿಗಳು ಸೇರಿ ಹಣವನ್ನು ಪಣವಾಗಿಟ್ಟು ಅಂದರ್ ಬಾಹರ್ ಇಸ್ಪೀಟ್ ಜೂಜಾಟ ಆಡುತ್ತಿರುವುದಾಗಿ ಬಂದ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಲು  ನ್ಯಾಯಾಲಯದ ಅನುಮತಿ ಪಡೆದು ಚಿಕ್ಕಬಳ್ಳಾಪುರ ಗ್ರಾಮಾಂತರ ಠಾಣೆಯ ಪಿ.ಎಸ್.ಐ ಶ್ರೀ ಚೇತನ್ ಕುಮಾರ್ ಜಿ ಮತ್ತು ಅವರ ಸಿಬ್ಬಂದಿಯಾದ   ಪಿ.ಸಿ.510, 203,118,180,189,181,231,262 ಸಿ.ಹೆಚ್.ಸಿ 33,  ರವರುಗಳನ್ನು ಕರೆದುಕೊಂಡು ನನ್ನ ಕಛೇರಿಗೆ ಒದಗಿಸಿರುವ ಕೆಎ.40 ಜಿ.538 ನಂಬರಿನ ಸರ್ಕಾರಿ ಜೀಪಿನಲ್ಲಿ ಹಾಗೂ ಪಿ.ಎಸ್.ಐ ರವರಿಗೆ ಒದಗಿಸಿರುವ ಕೆ.ಎ.40.ಜಿ.567 ಸರ್ಕಾರಿ ಜೀಪಿನಲ್ಲಿ ಎಲ್ಲರೂ ಕುಳಿತು  ರಾತ್ರಿ 10-15 ಗಂಟೆಗೆ ಕಛೇರಿಯ ಬಳಿಯಿಂದ  ಹೊರಟು  ಅಂದಾರ್ಲಹಳ್ಳಿ ಗ್ರಾಮಕ್ಕೆ ಸ್ವಲ್ಪ ದೂರದಲ್ಲಿ ಹೋಗಿ ಮರೆಯಲ್ಲಿ ಜೀಪುಗಳನ್ನು ನಿಲ್ಲಿಸಿ ಎಲ್ಲರೂ ಕೆಳಗಿಳಿದು ನಡೆದುಕೊಂಡು ರಾತ್ರಿ 10-30 ಗಂಟೆಗೆ ಅಂದಾರ್ಲಹಳ್ಳಿ ಹಾಲು ಡೈರಿಯ ಸಮೀಪ ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಹಾಲು ಡೈರಿಯ ಹಿಂಭಾಗದಲ್ಲಿರುವ ಶುದ್ದ ನೀರಿನ ಘಟಕದ ಬಳಿ  ನೀರಿನ ಘಟಕದ ಗೋಡೆಗೆ ನಿರ್ಮಿಸಿರುವ ವಿದ್ಯುತ್ ದೀಪದ ಬೆಳಕಿನಲ್ಲಿ ಸುಮಾರು 10 ಜನರು ಸುತ್ತುವರೆದು ಕುಳಿತಿದ್ದು, ಅವರುಗಳ ಪೈಕಿ ಒಬ್ಬ ಆಸಾಮಿ  ಅಂದರ್ 500-00 ರೂ ಎಂತಲೂ ಆತನ ಎದುರಿಗೆ ಕುಳಿತಿದ್ದ ಆಸಾಮಿ ಬಾಹರ್ 500-00 ರೂ ಎಂದು ಕೂಗುತ್ತಾ ಹಣವನ್ನು ಪಣವಾಗಿಟ್ಟ ಇಸ್ಪಿಟ್ ಎಲೆಗಳ ಸಹಾಯದಿಂದ ಅಂದರ್ ಬಾಹರ್ ಇಸ್ಪಿಟ್ ಜೂಜಾಟವಾಡುತ್ತಿದ್ದು ನನ್ನ ಆದೇಶದ ಮೇರೆಗೆ ಪಿ.ಎಸ್.ಐ ಮತ್ತು ಸಿಬ್ಬಂಧಿರವರು ದಾಳಿ ಮಾಡಿ ಸುತ್ತುವರೆದರು ನಾನು ಆಸಾಮಿಗಳಿಗೆ ಎಲ್ಲಿ ಇರುವವರು ಅಲ್ಲಿಯೇ ಇರುವಂತೆ ಹೇಳುತ್ತಿದ್ದಂತೆ ಅಂದರ್ ಎಂದು ಕರೆಯುತ್ತಿದ್ದ ಆಸಾಮಿ ತನ್ನ ಕೈಯಲ್ಲಿದ್ದ ಇಸ್ಪಿಟ್ ಎಲೆಗಳನ್ನು ನೆಲದ ಮೇಲೆ ಹಾಕಿದ್ದ ನ್ಯೂಸ್ ಪೇಪರ್ ಮೇಲಿದ್ದ ಇಸ್ಪಿಟ್ ಎಲೆಗಳೊಂದಿಗೆ ಹಾಕಿ ಬೆರೆಸಿದ ಆತನ ಹೆಸರು ವಿಳಾಸ ಕೇಳಲಾಗಿ 1) ಗಿರೀಶ್ ಬಿನ್ ದೊಡ್ಡಅಶ್ವತ್ಥರೆಡ್ಡಿ 28 ವರ್ಷ ಜಿರಾಯ್ತಿ ಒಕ್ಕಲಿಗರು ವಾಸ ಅಂದಾರ್ಲಹಳ್ಳಿ ಗ್ರಾಮ ಚಿಕ್ಕಬಳ್ಳಾಪುರ ತಾಲ್ಲೂಕು ಎಂದು ಹೇಳಿದ ಬಾಹರ್ ಎಂದು ಕೂಗುತ್ತಿದ್ದ ಆಸಾಮಿ 2)  ಅನಿಲ್ ಕುಮಾರ್ ಬಿನ್ ಆಂಜಿನಪ್ಪ 23 ವರ್ಷ ಪ ಜಾತಿ ವಾಸ ಚಿಕ್ಕದಾಸರಹಳ್ಳಿ ಗ್ರಾಮ ಶಿಡ್ಲಘಟ್ಟ ತಾಲ್ಲೂಕು ಎಂದು ಹೇಳಿದ ಇತರೆಯವರ ಹೆಸರು ವಿಳಾಸ ಕೇಳಲಾಗಿ 3) ಮನೋಹರ್  ಬಿನ್ ವೆಂಕಟೇಶಪ್ಪ 23 ವರ್ಷ ಒಕ್ಕಲಿಗರು ಡೆಕೋರೇಷನ್ ಕೆಲಸ, 4) ಅಕ್ಷಯ್ ಕುಮಾರ್ ಬಿನ್ ವೆಂಕಟೇಶ 24 ವರ್ಷ ಪ ಜಾತಿ ಪೋಟೋಗ್ರಾಫರ್ ಕೆಲಸ, 5) ನಾಗೇಶ ಬಿನ್ ಗಂಗಪ್ಪ 25 ವರ್ಷ ಪ ಜಾತಿ ಕೂಲಿಕೆಲಸ, 6) ಚೇತನ್ ಬಿನ್ ಮುನಿರಾಮಪ್ಪ 24 ವರ್ಷ ಒಕ್ಕಲಿಗ ಜನಾಂಗ ಡೆಕೋರೇಷನ್ ಕೆಲಸ, 7) ಮಂಜುನಾಥ ಬಿನ್ ನಾರಾಯಣಸ್ವಾಮಿ 30 ವರ್ಷ ಒಕ್ಕಲಿಗ ಜನಾಂಗ ಜಿರಾಯ್ತಿ, 8) ಸುರೇಂದ್ರ ಬಾಬು ಬಿನ್ ರಾಮಯ್ಯ 42 ವರ್ಷ ಒಕ್ಕಲಿಗರು ಜಿರಾಯ್ತಿ ಎಲ್ಲರೂ ವಾಸ ಅಂದಾರ್ಲಹಳ್ಳಿ ಗ್ರಾಮ ಚಿಕ್ಕಬಳ್ಳಾಪುರ ತಾಲ್ಲೂಕು ಎಂದು ಹೇಳದರು. ಸದರಿ ಎಲ್ಲರೂ 7030-00 ರೂ ಹಣವನ್ನು ಪಣವಾಗಿಟ್ಟು ಅಂದರ್ ಬಾಹರ್ ಇಸ್ಪಿಟ್ ಜೂಜಟ ಆಡುತ್ತಿದ್ದು ಅವರುಗಳಿಗೆ ಇಸ್ಪಿಟ್ ಜೂಜಾಟ ಆಡಲು ಪರವಾನಗಿ ಇದೆಯೇ ಎಂದು ಪ್ರಶ್ನಿಸಲಾಗಿ ಅವರು ತಮ್ಮ ಬಳಿ ಯಾವುದೂ ಇಲ್ಲವೆಂದು ನುಡಿದಿದ್ದರ ಮೇರೆಗೆ ಸದರಿ 08 ಜನ ಆಸಾಮಿಗಳನ್ನು ವಶಕ್ಕೆ ಪಡೆದು ಅವರು ಜೂಜಾಟಕ್ಕೆ ಪಣವಾಗಿಟ್ಟಿದ್ದ 7030-00 ರೂ ನಗದು ಹಣವನ್ನು ಜೂಜಾಟಕ್ಕೆ ಉಪಯೋಗಿಸುತ್ತಿದ್ದ 52 ಇಸ್ಪಿಟ್ ಎಲೆಗಳನ್ನು ಸ್ಥಳದಲ್ಲಿದ್ದ ಒಂದು ನ್ಯೂಸ್ ಪೇಪರ್ ಹಾಗೂ ಸ್ಥಳದಲ್ಲಿ ನಿಲ್ಲಿಸಿದ್ದ ಆಪಾದಿತರು ಜೂಜಾಟಕ್ಕೆ ಪಣಕ್ಕಾಗಿ ಇಟ್ಟಿದ್ದ ಕೆ.ಎ.40.ಇ.4925 ಡಿಯೋ ದ್ವಿಚಕ್ರ ವಾಹನ, ಕೆ.ಎ.05.ಕೆಎಫ್,2628 ಡಿಯೋ ದ್ವಿಚಕ್ರ ವಾಹನ, ಕೆಎ 04 ಇಎಂ. 4003 ಪಲ್ಸರ್ ದ್ವಿಚಕ್ರ ವಾಹನಗಳನ್ನು ಹಾಗೂ ಗಿರೀಶನ ಬಳಿ ಇದ್ದು ಎಂಐ ಕಂಪನಿಯ ಮೊಬೈಲ್ ಪೋನನ್ನು, ಅಕ್ಷಯ್ ಕುಮಾರ ಬಳಿ ಇದ್ದ ಲೆನೋವೋ ಮೊಬೈಲ್ ಪೋನ್, ಮಂಜುನಾಥ ಬಳಿ ಇದ್ದ ವೀವೋ ಮೊಬೈಲ್ ಪೋನನ್ನು, ಮನೋಹರ್ ಬಳಿ ಇದ್ದ ವೀವೋ ಪೋನನ್ನು, ನಾಗೇಶ ಬಳಿ ಇದ್ದ ಎಂಐ ಪೋನನ್ನು, ಚೇತನ್ ಬಳಿ ಇದ್ದ ವೀವೋ ಪೋನನ್ನು ಸುರೇಂದ್ರ ಬಾಬು ರವರು ಬಳಿ ಇದ್ದ ಲಾವಾ ಕೀ ಸಟ್ ಮೊಬೈಲ್ ನ್ನು, ಅನಿಲ್ ಕುಮಾರ್ ಬಳಿ ಇದ್ದ ಡಿವೋ ಮೊಬೈಲ್ ಪೋನನ್ನು ಪಂಚರ ಸಮಕ್ಷಮ ಪಂಚನಾಮೆ ಮೂಲಕ ಅಮಾನತ್ತು ಪಡಿಸಿಕೊಂಡು 08 ಜನ ಆಸಾಮಿಗಳನ್ನು ಎಲ್ಲಾ ಹಣ ಮತ್ತು ಮಾಲುಗಳ ಸಮೇತ ರಾತ್ರಿ 12-30 ಗಂಟೆಗೆ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಗೆ ವಾಪಸ್ಸಾಗಿ  ಆಪಾದಿತರನ್ನು , ದಾಳಿ ಪಂಚನಾಮೆ, ಮತ್ತು ಮಾಲನ್ನು ಠಾಣಾಧಿಕಾರಿಗಳಿಗೆ ಹಾಜರುಪಡಿಸಿ ವರದಿ ನೀಡಿ ಅದರಂತೆ ಕಲಂ: 87 ಕೆ.ಪಿ.ಆಕ್ಟ್ ರೀತ್ಯಾ ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಳ್ಳಲು ಸೂಚಿಸಿದ ಮೇರೆಗೆ ಈ ಪ್ರ ವ ವರದಿ.

 1. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.380/2019 ಕಲಂ. 307-504 ಐ.ಪಿ.ಸಿ:-

     ದಿನಾಂಕ:14/10/2019 ರಂದು ಕೋಲಾರದ ಆರ್.ಎಲ್,ಜಾಲಪ್ಪ ಆಸ್ಪತ್ರೆಯಲ್ಲಿ ಸಿ,.ಹೆಚ್.ಸಿ-87 ರವರು ಗಾಯಾಳು ಎಸ್.ಕಿರಣ್  ಬಿನ್ ಸುರೇಶ್, 23 ವರ್ಷ, ಬಲಜಿಗರು, ಪೈಟಿಂಗ್ ಕೆಲಸ, ಊಲವಾಡಿ ಗ್ರಾಮ, ಚಿಂತಾಮಣಿ ತಾಲ್ಲೂಕು ರವರ ಹೇಳಿಕೆಯನ್ನು ಪಡೆದು ಮದ್ಯಾಹ್ನ 1.30 ಗಂಟೆಗೆ ಠಾಣೆಗೆ ಹಾಜರಾಗಿ ಹಾಜರು ಪಡಿಸಿದ ಗಾಯಾಳುವಿನ ಹೇಳಿಕೆಯ ದೂರಿನ ಸಾರಾಂಶವೇನೆಂದರೆ, ಈಗ್ಗೆ ಸುಮಾರು 3 ದಿನಗಳ ಹಿಂದೆ ತಮ್ಮ ಗ್ರಾಮದ ಕೆರೆ ಕಟ್ಟೆಯ ಬಳಿ ತಾನು ಮತ್ತು ತಮ್ಮ ಗ್ರಾಮದ ಕಾರ್ತಿಕ್ ಮತ್ತಿತರರು ವಾಲಿಬಾಲ್ ಆಟವಾಡುತ್ತಿದ್ದಾಗ ಆಟದ ವಿಚಾರದಲ್ಲಿ ತನಗೂ ಮತ್ತು ಕಾರ್ತಿಕ್ ರವರಿಗೆ ಗಲಾಟೆಗಳಾಗಿರುತ್ತೆ. ಹೀಗಿರುವಾಗ ದಿನಾಂಕ:13/10/2019 ರಂದು ಬೆಳಗ್ಗೆ 11.00 ಗಂಟೆ ಸಮಯದಲ್ಲಿ ತಾನು ಮತ್ತು ತನ್ನ ಸ್ನೇಹಿತರಾದ ಗೌತಮ್ ಬಿನ್ ವೆಂಕಟೇಶಪ್ಪ, ಶಿರಡಿ ಬಿನ್ ಮಂಜುನಾಥ ಮತ್ತಿತರರು ಮೇಲ್ಕಂಡ ಕೆರೆ ಕಟ್ಟೆಯ ಬಳಿ ವಾಲಿಬಾಲ್ ಆಟ ಆಡುತ್ತಿದ್ದಾಗ  ಕಾರ್ತಿಕ್ (ತಂದೆಯ ಹೆಸರು ಗೊತ್ತಿರುವುದಿಲ್ಲ) ಎಂಬುವನು ತನ್ನ ಬಾಬತ್ತು TVS XL ದ್ವಿಚಕ್ರ ವಾಹನದಲ್ಲಿ ಬಂದು ತನ್ನನ್ನು ಕುರಿತು ಗಾಡಿ ಹತ್ತಲು ಹೇಳಿದ್ದು, ಆಗ ತಾನು ಆಟ ಆಡುತ್ತಿದ್ದೀನಿ ಬರುವುದಿಲ್ಲ ಎಂದಾಗ ಬೋಳಿ ನನ್ನ ಮಗನೇ ಮಗನೇ ನಿನಗೆಷ್ಟು ಅಹಂಕಾರ ಎಂದು ತನ್ನನ್ನು ಕುರಿತು ಕೆಟ್ಟ ಮಾತುಗಳಿಂದ ಬೈದು ತನ್ನ ಜೇಬಿನಲ್ಲಿದ್ದ ಚಾಕುವನ್ನು ತೆಗೆದು ಎಡಕಿವಿಯ ಕೆಳಭಾಗದಲ್ಲಿ ಹಾಗೂ ಎಡತೋಳಿನ ಮೇಲೆ ತಿವಿದು ರಕ್ತ ಗಾಯ ಪಡಿಸಿ ತನ್ನನ್ನು ಕೊಲೆ ಮಾಡುವ ಉದ್ದೇಶದಿಂದ ಹಲ್ಲೆ ಮಾಡಿರುತ್ತಾನೆ. ಆಗ ಅಲ್ಲಿಯೇ ಇದ್ದ ಗೌತಮ್ ಮತ್ತು ಶಿರಡಿ ರವರು ಬಂದು ಅವನಿಂದ ತನ್ನನ್ನು ಬಿಡಿಸಿ ಯಾವುದೋ ವಾಹನದಲ್ಲಿ ಚಿಂತಾಮಣಿ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಿದ್ದು, ನಂತರ  ಹೆಚ್ಚಿನ ಚಿಕಿತ್ಸೆಗಾಗಿ ವೈದ್ಯರ ಸಲಹೆಯ ಮೇರೆಗೆ ಕೋಲಾರದ ಆರ್.ಎಲ್ ಜಾಲಪ್ಪ ಆಸ್ಪತ್ರೆಗೆ ಕರೆದುಕೊಂಡು ಬಂದು ದಾಖಲು ಮಾಡಿರುತ್ತಾರೆ. ಆದ್ದರಿಂದ ತನ್ನನ್ನು ಅವಾಚ್ಯ ಶಬ್ದಗಳಿಂದ ಬೈದು ಕೊಲೆ ಮಾಡಲು ಪ್ರಯತ್ನಿಸಿದ ಕಾರ್ತಿಕ್ ರವರ ವಿರುದ್ಧ ಕಾನೂನು ರೀತ್ಯಾ ಕ್ರಮ ಜರುಗಿಸಬೇಕೆಂದು ಕೋರಿ ನೀಡಿದ ಹೇಳಿಕೆಯ ದೂರಾಗಿರುತ್ತೆ.

 1. ಚಿಂತಾಮಣಿ ನಗರ ಪೊಲೀಸ್ ಠಾಣೆ ಮೊ.ಸಂ.274/2019 ಕಲಂ. 15(ಎ), 32(3) ಕೆ.ಇ ಆಕ್ಟ್:-

     ದಿನಾಂಕ 13/10/2019 ರಂದು ನಾರಾಯಣಸ್ವಾಮಿ ಆರ್. ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಆದ ತಾನು ಮತ್ತು ಸಿಬ್ಬಂದಿಯವರಾದ ಹೆಚ್.ಸಿ-245 ಸೋಮಶೇಖರಚಾರಿ, ಸಿ.ಪಿ.ಸಿ 190 ವೇಣು  ರವರೊಂದಿಗೆ ಠಾಣೆಗೆ ಒದಗಿಸಿರುವ ಸರ್ಕಾರಿ ಜೀಪ್ ಸಂಖ್ಯೆ ಕೆಎ-07-G-188 ವಾಹನದಲ್ಲಿ ಗಜಾನನ ವೃತ್ತ, ಪ್ಲವರ್ ವೃತ್ತ ಕಡೆಗಳಲ್ಲಿ ಗಸ್ತಿನಲ್ಲಿದ್ದಾಗ,  ಸಂಜೆ ಸುಮಾರು 6-00 ಗಂಟೆಯಲ್ಲಿ ಚಿಂತಾಮಣಿ ನಗರದ ಸಾಯಿಬಾಬಾ ದೇವಸ್ಥಾನದ  ಬಳಿ, ಸಾರ್ವಜನಿಕ ಸ್ಥಳದಲ್ಲಿ ಯಾರೋ ಆಸಾಮಿಗಳು ಯಾವುದೇ ಪರವಾನಿಗೆ ಇಲ್ಲದೇ ಅಕ್ರಮವಾಗಿ ಮದ್ಯದ ಪಾಕೇಟ್ ಗಳನ್ನು ಇಟ್ಟುಕೊಂಡು ಮದ್ಯವನ್ನು ಕುಡಿಯುತ್ತಿರುವುದಾಗಿ ಮಾಹಿತಿ ಬಂದಿದ್ದು ಅದರಂತೆ ತಾವು ಚೇಳೂರು ವೃತ್ತದಿಂದ ಪಂಚರನ್ನು ಕರೆದುಕೊಂಡು ಮೇಲ್ಕಂಡ ಸ್ಥಳಕ್ಕೆ ಹೋಗಿ ನೋಡಲಾಗಿ ಯಾರೋ ಎರಡು-ಮೂರು ಜನ ಆಸಾಮಿಗಳು ತಮ್ಮ ಬಳಿ ಕವರ್ ನಲ್ಲಿ ಮದ್ಯದ  ಪಾಕೇಟ್ ಗಳನ್ನು ಇಟ್ಟುಕೊಂಡು ಆ ಪೈಕಿ  2-3  ಟೆಟ್ರಾ ಪಾಕೆಟ್ ಗಳನ್ನು ಹೊರಗಡೆ ಹಾಕಿಕೊಂಡು 2-3 ಪ್ಲಾಸ್ಟಿಕ್ ಗ್ಲಾಸುಗಳನ್ನು 2-3 ವಾಟರ್ ಪಾಕೇಟ್ ಗಳನ್ನು ಇಟ್ಟುಕೊಂಡು ಮದ್ಯವನ್ನು ಗ್ಲಾಸಿನಲ್ಲಿ ಹಾಕಿಕೊಂಡು ಕುಡಿಯುತ್ತಿದ್ದು, ನಾವುಗಳು ಹೋಗುವಷ್ಟರಲ್ಲಿ ಅಲ್ಲಿದ್ದ 3 ಜನರು ಓಡಿ ಹೋಗಿದ್ದು, ಆ ಪೈಕಿ ಒಬ್ಬನನ್ನು ಹಿಡಿದುಕೊಂಡು ಸದರಿ ವ್ಯಕ್ತಿಯನ್ನು ಸಾರ್ವಜನಿಕ ಸ್ಥಳದಲ್ಲಿ ಮದ್ಯವನ್ನು ಕುಡಿಯಲು ಪರವಾನಿಗೆ ಇದೆಯೇ ಎಂದು ಕೇಳಲಾಗಿ ಇಲ್ಲವೆಂದು ತಿಳಿಸಿದ್ದು, ಆತನ ಹೆಸರು ವಿಳಾಸ ಕೇಳಲಾಗಿ ಆತನು ತನ್ನ ಹೆಸರು ಕೋನಪ್ಪ ಬಿನ್ ನರಸಿಂಹಪ್ಪ, 29 ವರ್ಷ, ಜಿರಾಯ್ತಿ, ಧನಮಿಟ್ಟೇನಹಳ್ಳಿ, ಚಿಂತಾಮಣಿ ತಾಲ್ಲೂಕು ಎಂದು ತಿಳಿಸಿದ್ದು, ಆತನ ಬಳಿ ಇದ್ದ ಕವರ್ ನಲ್ಲಿ ಪರಿಶೀಲಿಸಲಾಗಿ ಆತನ ಬಳಿ ಇದ್ದ ಪ್ಲಾಸ್ಟಿಕ್ ಬ್ಯಾಗನ್ನು ಪರಿಶೀಲಿಸಲಾಗಿ  180 ML OLD TAVERN WHISKY ನ 3 ಟೆಟ್ರಾ ಪಾಕೆಟ್ ಗಳು, ಒಟ್ಟು 540 ಮಿಲಿ ಲೀಟರ್ ಇದ್ದು, ಪ್ರತಿ ಪಾಕೆಟ್ ಬಳಿ 74.13 ರೂ ಆಗಿದ್ದು, ಇವುಗಳ ಒಟ್ಟು ಬೆಲೆ 222.39 ರೂ  ಆಗಿರುತ್ತೆ. ಹಾಗು ಎರಡು ಖಾಲಿಯಾಗಿರುವ 180 ML OLD TAVERN WHISKY ಯ ಟೆಟ್ರಾ ಪಾಕೆಟ್ ಗಳಿದ್ದು,  ಹಾಗು 2 ಪ್ಲಾಸ್ಟಿಕ್ ಲೋಟಗಳನ್ನು ಇದ್ದು, ಇವುಗಳನ್ನು  ಸಂಜೆ 6-15 ಗಂಟೆಯಿಂದ 6-45 ಗಂಟೆಯವರೆಗೆ ಟಾರ್ಚ್ ಬೆಳಕಿನಲ್ಲಿ ಪಂಚಾಯ್ತಿದಾರರ ಸಮಕ್ಷಮ ಸ್ಥಳದಲ್ಲಿ ಮೇಲ್ಕಂಡ ಮಾಲುನ್ನು ಪಂಚನಾಮೆಯ ಮೂಲಕ ಅಮಾನತ್ತು ಪಡಿಸಿಕೊಂಡು ಆಸಾಮಿಯೊಂದಿಗೆ ಸಂಜೆ  7-00 ಗಂಟೆಗೆ ಠಾಣೆಗೆ ಹಾಜರಾಗಿ ಮುಂದಿನ ಕ್ರಮ ಜರುಗಿಸಲು ನೀಡಿದ ವರದಿಯನ್ನು ಪಡೆದು ಪ್ರಕರಣ ದಾಖಲಿಸಿಕೊಂಡಿರುತ್ತೆ.

 1. ಚಿಂತಾಮಣಿ ನಗರ ಪೊಲೀಸ್ ಠಾಣೆ ಮೊ.ಸಂ.275/2019 ಕಲಂ. 15(ಎ), 32(3) ಕೆ.ಇ ಆಕ್ಟ್:-

     ದಿನಾಂಕ:-13-10-2019 ರಂದು ಸಂಜೆ 6-20 ಗಂಟೆಯ ಸಮಯದಲ್ಲಿ ಜಿ.ಸಿ ನಾರಾಯಣಸ್ವಾಮಿ, ಪಿ.ಐ ರವರು ಠಾಣೆಗೆ ಒದಗಿಸಿರುವ ಸರ್ಕಾರಿ ಜೀಪ್ ಸಂಖ್ಯೆ ಕೆಎ-40, ಜಿ-356 ವಾಹನದಲ್ಲಿ ಚಿಂತಾಮಣಿ ನಗರದಲ್ಲಿ ತಾನು ಮತ್ತು ತನ್ನೊಂದಿಗೆ ಠಾಣೆಯ ಶ್ರೀ. ನಾಗಭೂಷಣ್  ಹೆಚ್.ಸಿ 126  ಮತ್ತು ಸಿಪಿಸಿ 426 ಸರ್ವೇಶ್ ರವರೊಂದಿಗೆ ನಗರದ ಚೇಳೂರು ರಸ್ತೆ, ಆರ್.ಎಂ.ಸಿ.ಮಾರುಕಟ್ಟೆ, ಸಂತೇ ಮೈದಾನ ಮುಂತಾದ ಕಡೆ ಗಸ್ತು ಮಾಡುತ್ತಿದ್ದಾಗ ಆರ್.ಎಂ.ಸಿ ಮಾರುಕಟ್ಟೆಯ ಬಳಿ ಇರುವ  ದನಗಳ ಸಂತೆಯ ಜಾಗದಲ್ಲಿ ಯಾರೋ ಆಸಾಮಿಗಳು ಸಾರ್ವಜನಿಕ ಸ್ಥಳದಲ್ಲಿ ಮದ್ಯದ ಪಾಕೇಟ್ ಗಳನ್ನು ಇಟ್ಟುಕೊಂಡು ಮದ್ಯವನ್ನು ಕುಡಿಯುತ್ತಿರುವುದಾಗಿ ಮಾಹಿತಿ ಬಂದಿದ್ದು ಅದರಂತೆ ತಾವು ಚೇಳೂರು ವೃತ್ತದಿಂದ ಪಂಚರನ್ನು ಕರೆದುಕೊಂಡು ಮೇಲ್ಕಂಡ ಸ್ಥಳಕ್ಕೆ ಹೋಗಿ ನೋಡಲಾಗಿ  ಯಾರೋ 03 ಜನ ಆಸಾಮಿಗಳು ತನ್ನ ಬಳಿ ನಲ್ಲಿ ಮದ್ಯದ  ಪಾಕೇಟ್ ಗಳನ್ನು ಇಟ್ಟುಕೊಂಡು  ಆ ಪೈಕಿ  02  ಟೆಟ್ರಾ ಪಾಕೆಟ್ ಗಳನ್ನು ಹೊರಗಡೆ ಹಾಕಿಕೊಂಡು 2-3 ಪ್ಲಾಸ್ಟಿಕ್ ಗ್ಲಾಸುಗಳನ್ನು 01 ವಾಟರ್ ಬಾಟಲ್ ಇಟ್ಟುಕೊಂಡು ಮದ್ಯವನ್ನು ಗ್ಲಾಸಿನಲ್ಲಿ ಹಾಕಿಕೊಂಡು ಕುಡಿಯುತ್ತಿದ್ದು. ನಾವುಗಳು ಹೋಗುವಷ್ಟರಲ್ಲಿ ಅಲ್ಲಿದ್ದ 2-3 ಜನರು ಓಡಿ ಹೋಗಿದ್ದು, ಆ ಪೈಕಿ ಒಬ್ಬನನ್ನು ಹಿಡಿದುಕೊಂಡು ಹಿಡಿದುಕೊಂಡು ಸದರಿ ವ್ಯಕ್ತಿಯನ್ನು ಸಾರ್ವಜನಿಕ ಸ್ಥಳದಲ್ಲಿ ಮದ್ಯವನ್ನು ಕುಡಿಯಲು ಪರವಾನಿಗೆ ಇದೆಯೇ ಎಂದು ಕೇಳಲಾಗಿ ಇಲ್ಲವೆಂದು ತಿಳಿಸಿದ್ದು ಆತನ ಹೆಸರು ವಿಳಾಸ ಕೇಳಲಾಗಿ ತನ್ನ ಹೆಸರು.ವೆಂಕಟಶಿವ ಬಿನ್ ನಾರಾಯಣಪ್ಪ, 28 ವರ್ಷ, ಆದಿಕರ್ನಾಟಕ ಜನಾಂಗ, ಚಾಲಕ ವೃತ್ತಿ, ವಾಸ: ನಾಗದೇನಹಳ್ಳಿ ಗ್ರಾಮ, ಕೈವಾರ ಹೋಬಳಿ, ಚಿಂತಾಮಣಿ ತಾಲ್ಲೂಕು ಎಂದು ತಿಳಿಸಿದ್ದು ಆತನ ಬಳಿ ಪರಿಶೀಲಿಸಲಾಗಿ 180 ML OLD TAVERN WHISKY ನ 03 ಟೆಟ್ರಾ ಮಧ್ಯ ಪ್ಯಾಕೆಟ್ ಗಳು ಒಟ್ಟು 540.ಮೀ.ಲೀ ಇದ್ದು ಪ್ರತಿ ಪಾಕೇಟ್ ನ ಬೆಲೆ 74.13 ಓಟ್ಟು ಬೆಲೆ 222.39  ಆಗಿದ್ದು ಅವುಗಳಲ್ಲಿ ಆರ್ಧದಷ್ಟು ಮಧ್ಯವನ್ನು ಪ್ಲಾಸ್ಟಿಕ್ ಲೋಟಗಳಲ್ಲಿ ಹಾಕಿರುತ್ತಾರೆ. 180 ML OLD TAVERN WHISKY ನ 02 ಟೆಟ್ರಾ ಖಾಲಿ  ಪ್ಯಾಕೆಟ್ ಗಳಿದ್ದು ಹಾಗೂ 02 ಪ್ಲಾಸ್ಟೀಕ್ ಲೋಟಗಳಿದ್ದು, ಇವುಗಳನ್ನು  ಸಂಜೆ 6-20 ಗಂಟೆಯಿಂದ 7-10 ಗಂಟೆಯವರೆಗೆ ಪಂಚನಾಮೆಯ ಮೂಲಕ ಅಮಾನತ್ತು ಪಡಿಸಿಕೊಂಡು ಆಸಾಮಿಯೊಂದಿಗೆ ಠಾಣೆಗೆ ಹಾಜರಾಗಿ ಮುಂದಿನ ಕ್ರಮಕ್ಕಾಗಿ ವರದಿಯನ್ನು ಪಡೆದು ಪ್ರಕರಣ ದಾಖಲಿಸಿಕೊಂಡಿರುತ್ತೆ.

 1. ಚಿಂತಾಮಣಿ ನಗರ ಪೊಲೀಸ್ ಠಾಣೆ ಮೊ.ಸಂ.276/2019 ಕಲಂ. 15(ಎ), 32(3) ಕೆ.ಇ ಆಕ್ಟ್:-

     ದಿನಾಂಕ:-13-10-2019 ರಂದು ಸಂಜೆ 6-25 ಗಂಟೆಯ ಸಮಯದಲ್ಲಿ ಜಿ.ಸಿ ನಾರಾಯಣಸ್ವಾಮಿ, ಪಿ.ಐ ರವರು  ಠಾಣೆಗೆ ಒದಗಿಸಿರುವ ಸರ್ಕಾರಿ ಜೀಪ್ ಸಂಖ್ಯೆ ಕೆಎ-40, ಜಿ-356 ವಾಹನದಲ್ಲಿ ಚಿಂತಾಮಣಿ ನಗರದಲ್ಲಿ ತಾನು ಮತ್ತು ತನ್ನೊಂದಿಗೆ ಠಾಣೆಯ ಶ್ರೀ. ನಾಗಭೂಷಣ್  ಹೆಚ್.ಸಿ 126  ಮತ್ತು ಸಿಪಿಸಿ 426 ಸರ್ವೇಶ್ ರವರೊಂದಿಗೆ ನಗರದ ಚೇಳೂರು ರಸ್ತೆ, ಆರ್.ಎಂ.ಸಿ.ಮಾರುಕಟ್ಟೆ, ಸಂತೇ ಮೈದಾನ ಮುಂತಾದ ಕಡೆ ಗಸ್ತು ಮಾಡುತ್ತಿದ್ದಾಗ ಊಲವಾಡಿ ಕ್ರಾಸ್ ನಲ್ಲಿ ಯಾರೋ ಆಸಾಮಿಗಳು ಸಾರ್ವಜನಿಕ ಸ್ಥಳದಲ್ಲಿ ಮದ್ಯದ ಪಾಕೇಟ್ ಗಳನ್ನು ಇಟ್ಟುಕೊಂಡು ಮದ್ಯವನ್ನು ಕುಡಿಯುತ್ತಿರುವುದಾಗಿ ಮಾಹಿತಿ ಬಂದಿದ್ದು ಅದರಂತೆ ತಾವು ಚೇಳೂರು ವೃತ್ತದಿಂದ ಪಂಚರನ್ನು ಕರೆದುಕೊಂಡು ಮೇಲ್ಕಂಡ ಸ್ಥಳಕ್ಕೆ ಹೋಗಿ ನೋಡಲಾಗಿ  ಯಾರೋ 03 ಜನ ಆಸಾಮಿಗಳು ತನ್ನ ಬಳಿ ನಲ್ಲಿ ಮದ್ಯದ  ಪಾಕೇಟ್ ಗಳನ್ನು ಇಟ್ಟುಕೊಂಡು  ಆ ಪೈಕಿ  02  ಟೆಟ್ರಾ ಪಾಕೆಟ್ ಗಳನ್ನು ಹೊರಗಡೆ ಹಾಕಿಕೊಂಡು 2-3 ಪ್ಲಾಸ್ಟಿಕ್ ಗ್ಲಾಸುಗಳನ್ನು 01 ವಾಟರ್ ಬಾಟಲ್ ಇಟ್ಟುಕೊಂಡು ಮದ್ಯವನ್ನು ಗ್ಲಾಸಿನಲ್ಲಿ ಹಾಕಿಕೊಂಡು ಕುಡಿಯುತ್ತಿದ್ದು. ನಾವುಗಳು ಹೋಗುವಷ್ಟರಲ್ಲಿ ಅಲ್ಲಿದ್ದ 2-3 ಜನರು ಓಡಿ ಹೋಗಿದ್ದು, ಆ ಪೈಕಿ ಒಬ್ಬನನ್ನು ಹಿಡಿದುಕೊಂಡು ಹಿಡಿದುಕೊಂಡು ಸದರಿ ವ್ಯಕ್ತಿಯನ್ನು ಸಾರ್ವಜನಿಕ ಸ್ಥಳದಲ್ಲಿ ಮದ್ಯವನ್ನು ಕುಡಿಯಲು ಪರವಾನಿಗೆ ಇದೆಯೇ ಎಂದು ಕೇಳಲಾಗಿ ಇಲ್ಲವೆಂದು ತಿಳಿಸಿದ್ದು ಆತನ ಹೆಸರು ವಿಳಾಸ ಕೇಳಲಾಗಿ ತನ್ನ ಹೆಸರು. ಲೋಕೇಶ್ ಬಿನ್ ವೆಂಕಟೇಶಪ್ಪ ಭೋವಿ ಜನಾಂಗ, ವ್ಯವಸಾಯ, ವಾಸ: ನಾಗದೇನಹಳ್ಳಿ ಗ್ರಾಮ, ಕೈವಾರ ಹೋಬಳಿ, ಚಿಂತಾಮಣಿ ತಾಲ್ಲೂಕು ಎಂದು ತಿಳಿಸಿದ್ದು ಆತನ ಬಳಿ ಪರಿಶೀಲಿಸಲಾಗಿ 180 ML OLD TAVERN WHISKY ನ 03 ಟೆಟ್ರಾ ಮಧ್ಯ ಪ್ಯಾಕೆಟ್ ಗಳು ಒಟ್ಟು 540.ಮೀ.ಲೀ ಇದ್ದು ಪ್ರತಿ ಪಾಕೇಟ್ ನ ಬೆಲೆ 74.13 ಓಟ್ಟು ಬೆಲೆ 222.39  ಇದ್ದು ಅವುಗಳಲ್ಲಿ ಆರ್ಧದಷ್ಟು ಮಧ್ಯವನ್ನು ಪ್ಲಾಸ್ಟಿಕ್ ಲೋಟಗಳಲ್ಲಿ ಹಾಕಿರುತ್ತಾರೆ. 180 ML OLD TAVERN WHISKY ನ 03 ಟೆಟ್ರಾ ಪ್ಯಾಕೆಟ್ ಗಳು ಗಳನ್ನು 02 ಪ್ಲಾಸ್ಟೀಕ್ ಲೋಟಗಳನ್ನು  ಸಂಜೆ 6-25 ಗಂಟೆಯಿಂದ 7-15 ಗಂಟೆಯವರೆಗೆ ಪಂಚನಾಮೆಯ ಮೂಲಕ ಅಮಾನತ್ತು ಪಡಿಸಿಕೊಂಡು ಆಸಾಮಿಯೊಂದಿಗೆ ಠಾಣೆಗೆ ಹಾಜರಾಗಿ ಮುಂದಿನ ಕ್ರಮಕ್ಕಾಗಿ ವರದಿಯನ್ನು ಪಡೆದು ಪ್ರಕರಣ ದಾಖಲಿಸಿಕೊಂಡಿರುತ್ತೆ.

 1. ಚಿಂತಾಮಣಿ ನಗರ ಪೊಲೀಸ್ ಠಾಣೆ ಮೊ.ಸಂ.277/2019 ಕಲಂ. 15(ಎ), 32(3) ಕೆ.ಇ ಆಕ್ಟ್:-

     ದಿನಾಂಕ 13/10/2019 ರಂದು ನಾರಾಯಣಸ್ವಾಮಿ ಆರ್. ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಆದ ತಾನು ಮತ್ತು ಸಿಬ್ಬಂದಿಯವರಾದ ಹೆಚ್.ಸಿ-245 ಸೋಮಶೇಖರಚಾರಿ, ಸಿ.ಪಿ.ಸಿ 190 ವೇಣು  ರವರೊಂದಿಗೆ ಠಾಣೆಗೆ ಒದಗಿಸಿರುವ ಸರ್ಕಾರಿ ಜೀಪ್ ಸಂಖ್ಯೆ ಕೆಎ-07-G-188 ವಾಹನದಲ್ಲಿ ಗಜಾನನ ವೃತ್ತ, ಪ್ಲವರ್ ವೃತ್ತ ಕಡೆಗಳಲ್ಲಿ ಗಸ್ತಿನಲ್ಲಿದ್ದಾಗ,  ಸಂಜೆ ಸುಮಾರು 7-00 ಗಂಟೆಯಲ್ಲಿ ಚಿಂತಾಮಣಿ ನಗರದ ಅಂಜನಿ ಚಿತ್ರಮಂದಿರದ ಬಳಿ, ಸಾರ್ವಜನಿಕ ಸ್ಥಳದಲ್ಲಿ ಯಾರೋ ಆಸಾಮಿಗಳು ಯಾವುದೇ ಪರವಾನಿಗೆ ಇಲ್ಲದೇ ಅಕ್ರಮವಾಗಿ ಮದ್ಯದ ಪಾಕೇಟ್ ಗಳನ್ನು ಇಟ್ಟುಕೊಂಡು ಮದ್ಯವನ್ನು ಕುಡಿಯುತ್ತಿರುವುದಾಗಿ ಮಾಹಿತಿ ಬಂದಿದ್ದು ಅದರಂತೆ ತಾವು ಬೆಂಗಳೂರು ವೃತ್ತದಿಂದ ಪಂಚರನ್ನು ಕರೆದುಕೊಂಡು ಮೇಲ್ಕಂಡ ಸ್ಥಳಕ್ಕೆ ಹೋಗಿ ನೋಡಲಾಗಿ ಯಾರೋ ಎರಡು-ಮೂರು ಜನ ಆಸಾಮಿಗಳು ತಮ್ಮ ಬಳಿ ಕವರ್ ನಲ್ಲಿ ಮದ್ಯದ  ಪಾಕೇಟ್ ಗಳನ್ನು ಇಟ್ಟುಕೊಂಡು ಆ ಪೈಕಿ  2-3  ಟೆಟ್ರಾ ಪಾಕೆಟ್ ಗಳನ್ನು ಹೊರಗಡೆ ಹಾಕಿಕೊಂಡು 2-3 ಪ್ಲಾಸ್ಟಿಕ್ ಗ್ಲಾಸುಗಳನ್ನು 2-3 ವಾಟರ್ ಪಾಕೇಟ್ ಗಳನ್ನು ಇಟ್ಟುಕೊಂಡು ಮದ್ಯವನ್ನು ಗ್ಲಾಸಿನಲ್ಲಿ ಹಾಕಿಕೊಂಡು ಕುಡಿಯುತ್ತಿದ್ದು, ನಾವುಗಳು ಹೋಗುವಷ್ಟರಲ್ಲಿ ಅಲ್ಲಿದ್ದ 3 ಜನರು ಓಡಿ ಹೋಗಿದ್ದು, ಆ ಪೈಕಿ ಒಬ್ಬನನ್ನು ಹಿಡಿದುಕೊಂಡು ಸದರಿ ವ್ಯಕ್ತಿಯನ್ನು ಸಾರ್ವಜನಿಕ ಸ್ಥಳದಲ್ಲಿ ಮದ್ಯವನ್ನು ಕುಡಿಯಲು ಪರವಾನಿಗೆ ಇದೆಯೇ ಎಂದು ಕೇಳಲಾಗಿ ಇಲ್ಲವೆಂದು ತಿಳಿಸಿದ್ದು, ಆತನ ಹೆಸರು ವಿಳಾಸ ಕೇಳಲಾಗಿ ಆತನು ತನ್ನ ಹೆಸರು ಸುಬ್ರಮಣಿ ಬಿನ್ ಲಕ್ಷ್ಮಯ್ಯ,, 37 ವರ್ಷ, ಜಿರಾಯ್ತಿ, ದೊಡ್ಡಹಳ್ಳಿ, ಚಿಂತಾಮಣಿ ತಾಲ್ಲೂಕು ಎಂದು ತಿಳಿಸಿದ್ದು, ಆತನ ಬಳಿ ಇದ್ದ ಕವರ್ ನಲ್ಲಿ ಪರಿಶೀಲಿಸಲಾಗಿ ಆತನ ಬಳಿ ಇದ್ದ ಪ್ಲಾಸ್ಟಿಕ್ ಬ್ಯಾಗನ್ನು ಪರಿಶೀಲಿಸಲಾಗಿ  180 ML OLD TAVERN WHISKY ನ 3 ಟೆಟ್ರಾ ಪಾಕೆಟ್ ಗಳು, ಒಟ್ಟು 540 ಮಿಲಿ ಲೀಟರ್ ಇದ್ದು, ಪ್ರತಿ ಪಾಕೆಟ್ ಬಳಿ 74.13 ರೂ ಆಗಿದ್ದು, ಇವುಗಳ ಒಟ್ಟು ಬೆಲೆ 222.39 ರೂ  ಆಗಿರುತ್ತೆ. ಹಾಗು ಎರಡು ಖಾಲಿಯಾಗಿರುವ 180 ML OLD TAVERN WHISKY ಯ ಟೆಟ್ರಾ ಪಾಕೆಟ್ ಗಳಿದ್ದು,  ಹಾಗು 2 ಪ್ಲಾಸ್ಟಿಕ್ ಲೋಟಗಳನ್ನು ಇದ್ದು, ಇವುಗಳನ್ನು  ಸಂಜೆ 7-15 ಗಂಟೆಯಿಂದ 7-45 ಗಂಟೆಯವರೆಗೆ ಟಾರ್ಚ್ ಬೆಳಕಿನಲ್ಲಿ ಪಂಚಾಯ್ತಿದಾರರ ಸಮಕ್ಷಮ ಸ್ಥಳದಲ್ಲಿ ಮೇಲ್ಕಂಡ ಮಾಲುನ್ನು ಪಂಚನಾಮೆಯ ಮೂಲಕ ಅಮಾನತ್ತು ಪಡಿಸಿಕೊಂಡು ಆಸಾಮಿಯೊಂದಿಗೆ ರಾತ್ರಿ 8-00 ಗಂಟೆಗೆ ಠಾಣೆಗೆ ಹಾಜರಾಗಿ ಮುಂದಿನ ಕ್ರಮ ಜರುಗಿಸಲು ನೀಡಿದ ವರದಿಯನ್ನು ಪಡೆದು ಪ್ರಕರಣ ದಾಖಲಿಸಿಕೊಂಡಿರುತ್ತೆ.

 1. ಚಿಂತಾಮಣಿ ನಗರ ಪೊಲೀಸ್ ಠಾಣೆ ಮೊ.ಸಂ.278/2019 ಕಲಂ. 20(ಬಿ) NARCOTIC DRUGS AND PSYCHOTROPIC SUBSTANCES ACT:-

     ದಿನಾಂಕ: 13/10/2019 ರಂದು ರಾತ್ರಿ 8- 15 ಗಂಟೆಗೆ ಸಿಹೆಚ್ ಸಿ 245 ರವರು ಠಾಣೆಗೆ ಹಾಜರಾಗಿ ನೀಡಿದ ವರದಿಯ ಸಾರಾಂಶವೇನೆಂದರೆ ದಿನಾಂಕ:13/10/2019 ರಂದು ಠಾಣಾಧಿಕಾರಿಯವರು ಹೆಚ್.ಸಿ-245 ಸೋಮಶೇಖರಚಾರಿ, ಸಿ.ಪಿ.ಸಿ-190 ವೇಣು ಆದ ತಮಗೆ ಚೀತಾ-1, ಚೀತಾ-2 ರಂತೆ ಚಿಂತಾಮಣಿ ನಗರ ಗಸ್ತಿಗೆ ನೇಮಕ ಮಾಡಿ ಕಳುಹಿಸಿಕೊಟ್ಟಿದ್ದು, ಅದರಂತೆ ತಾವು ಠಾಣೆಗೆ ಒದಗಿಸಿರುವ ದ್ವಿಚಕ್ರ ವಾಹನ ಕೆಎ-07-ಜಿ-247 ರಲ್ಲಿ ಈ ದಿನ ಠಾಣಾ ಸರಹದ್ದು, ಬೆಂಗಳೂರು ರಸ್ತೆ, ಚೇಳೂರು ರಸ್ತೆ, ಅಗ್ರಹಾರ ರಸ್ತೆ ಕಡೆ ಗಸ್ತು ಮಾಡಿಕೊಂಡು ರಾತ್ರಿ ಸುಮಾರು 8-00 ಗಂಟೆ ಸಮಯದಲ್ಲಿ ಬಂಬೂ ಬಜಾರ್ ರಸ್ತೆಯಲ್ಲಿ ಗಸ್ತಿನಲ್ಲಿದ್ದಾಗ ಯಾರೋ ಒಬ್ಬ ಅಸಾಮಿ ಸಮವಸ್ತ್ರದಲ್ಲಿದ್ದ ನಮ್ಮನ್ನು ನೋಡಿ ಓಡಲು ಪ್ರಾರಂಭಿಸಿದ, ಆಗ ತಾನು ಮತ್ತು ಸಿ.ಪಿ.ಸಿ-190 ವೇಣು ಆತನನ್ನು ಹಿಂಬಾಲಿಸಿ ಹಿಡಿದುಕೊಂಡು ಪ್ರಶ್ನಿಸಲಾಗಿ ಆತನ ಹೆಸರು ವಿಳಾಸ ಕೇಳಲಾಗಿ ಇಬ್ರಾಹಿಂಖಾನ್ ಬಿನ್ ಚಾಂದ್ಪಾಷ, 19 ವರ್ಷ, ಮುಸ್ಲಿಂ, ಜನಾಂಗ, ಹಚ್ಚೆ ಹಾಕುವ ಕೆಲಸ, ವಾಸ ಅಗ್ರಾಹಾರ, ಕಿರಣ್ ಸ್ಕೂಲ್ ಮುಂಭಾಗ ರಸ್ತೆ, ಚಿಂತಾಮಣಿ ಟೌನ್ ಎಂದು ತಿಳಿಸಿದ್ದು, ನಂತರ ಏಕೆ ನಮ್ಮನ್ನು ನೋಡಿ ಓಡುತ್ತಿರುವುದು ಎಂದು ಕೇಳಿದ್ದಕ್ಕೆ ಸಮರ್ಪಕವಾದ ಉತ್ತರವನ್ನು ನೀಡಲಿಲ್ಲವಾದ್ದರಿಂದ ಅನುಮಾನ ಬಂದು ಇಬ್ರಾಹಿಂ ಖಾನ್ ರವರನ್ನು ಠಾಣೆಗೆ ಕರೆದುಕೊಂಡು ಬಂದು ವಿಚಾರ ಮಾಡಿ ಪರಿಶೀಲಿಸಲಾಗಿ ಆತನ ಪ್ಯಾಂಟ್ ಜೇಬಿನಲ್ಲಿ ಮಾದಕ ವಸ್ತುವಾದ ಗಾಂಜಾ ಎರಡು ಪ್ಯಾಕೆಟ್ಗಳಿದ್ದು, ಸದರಿ ಗಾಂಜಾವನ್ನು ಪ್ಲಾಸ್ಟಿಕ್ ಕವರ್ನಲ್ಲಿ ಹಾಕಿ ಪ್ಯಾಕ್ ಮಾಡಿದ್ದು, ಪ್ರತಿ ಪ್ಯಾಕೆಟ್ ನಲ್ಲಿ ಸುಮಾರು 10 ಗ್ರಾಂ ತೂಕದಷ್ಟು ಗಾಂಜಾ ಇರುತ್ತೆ. ಇಬ್ರಾಹಿಂಖಾನ್ ರವರನ್ನು ವಿಚಾರ ಮಾಡಲಾಗಿ ತಾನು ಆಂಧ್ರ ಪ್ರದೇಶದ ಮದನಪಲ್ಲಿ ಬಸ್ ನಿಲ್ದಾಣದಲ್ಲಿ ಯಾರೋ ಅಪರಿಚಿತರಿಂದ ಗಾಂಜಾವನ್ನು ಖರೀದಿಸಿ ಹೆಚ್ಚಿನ ಬೆಲೆಗೆ ಚಿಂತಾಮಣಿಯಲ್ಲಿ ಮಾರಾಟ ಮಾಡಲು ತಂದಿರುವುದಾಗಿ ತಿಳಿಸಿದ್ದು, ಮೇಲ್ಕಂಡ ಇಬ್ರಾಹಿಂ ಖಾನ್ ಯಾವುದೇ ಪರವಾನಗಿ ಇಲ್ಲದೇ ಅಕ್ರಮವಾಗಿ ಮಾದಕ ವಸ್ತು ಗಾಂಜಾವನ್ನು ಬೇರೆ ಕಡೆಯಿಂದ ತಂದು ಹೆಚ್ಚಿನ ಬೆಲೆಗೆ ಮಾರಾಟ ಮಾಡಲು ಆತನ ಬಳಿ ಇಟ್ಟುಕೊಂಡಿದ್ದ ಇಬ್ರಾಹಿಂ ಖಾನ್ ರವರ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಲು ಠಾಣಾಧಿಕಾರಿಯವರ ಬಳಿ ವರದಿಯನ್ನ ನೀಡಿದ್ದರ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುತ್ತೆ.

 1. ದಿಬ್ಬೂರಹಳ್ಳಿ ಪೊಲೀಸ್ ಠಾಣೆ ಮೊ.ಸಂ.173/2019 ಕಲಂ. 279-337 ಐ.ಪಿ.ಸಿ:-

     ಈ  ದಿನ ದಿನಾಂಕ 13/10/2019 ರಂದು ಪಿರ್ಯಾದಿದಾರರಾದ ಚಂದ್ರಶೇಖರ್ ಬಿನ್ ಲಕ್ಷ್ಮಯ್ಯ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಂಶವೇನೆಂದರೆ ದಿನಾಂಕ 11/10/2019 ರಂದು ತಾನು ಮತ್ತು ತನ್ನ ಹೆಂಡತಿಯಾದ ಸುಜಾತ ಎಂ ಎಂಬಾಕೆ ತಮ್ಮ ಮಾವನ ಮನೆಯಾದ ಯಲಂಪಲ್ಲಿ ಗ್ರಾಮದ ಬಳಿ ಇರುವ ಪಾಕಪಾಟಲಪಲ್ಲಿ ಗ್ರಾಮಕ್ಕೆ ತಮ್ಮ ಬಾಬತ್ತು ನಂ ಕೆಎ 40 ಇಸಿ 4590 ಆಕ್ಟಿವಾ ಹೋಂಡಾದಲ್ಲಿ ಹೋಗಿ ಮತ್ತೆ ತಮ್ಮ ಗ್ರಾಮಕ್ಕೆ ವಾಪಸ್ ಬರಲು ಚಿಂತಾಮಣಿ ಬಾಗೇಪಲ್ಲಿ ಮುಖ್ಯ ರಸ್ತೆಯಲ್ಲಿ ತಮ್ಮ ಗ್ರಾಮದ ಬಳಿ ಇರುವ ಜ್ಞಾನೋದಯ ವಿದ್ಯಾಸಂಸ್ಥೆಯ ಬಳಿ ಸಂಜೆ ಸುಮಾರು 5-00 ಗಂಟೆ ಸಮಯದಲ್ಲಿ ರಸ್ತೆಯಲ್ಲಿ ಹೋಗುತ್ತಿದ್ದಾಗ ಹಿಂದೆಯಿಂದ ಯಾವುದೋ ಒಂದು ಕಾರ್ ನ್ನು ಅದರ ಚಾಲಕ ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆಮಾಡಿಕೊಂಡು ಬಂದು ತಾವು ಹೋಗುತ್ತಿದ್ದ ಮೇಲ್ಕಂಡ ತಮ್ಮ ಬಾಬತ್ತು ಆಕ್ಟಿವಾ ಹೋಂಡಾಗೆ ಡಿಕ್ಕಿಹೊಡೆಯಿಸಿ ಅಪಘಾತವನ್ನು ಉಂಟುಮಾಡಿದ್ದರಿಂದ ತಾನು ಮತ್ತು ತನ್ನ ಹೆಂಡತಿ ಸುಜಾತ ರವರು ದ್ವಿಚಕ್ರ ವಾಹನ ಸಮೇತ ಕೆಳಕ್ಕೆ ಬಿದ್ದು ಹೋಗಿದ್ದರಿಂದ ತನಗೆ ಸಣ್ಣ ಪುಟ್ಟ ತರಚು ಗಾಯಗಳಾಗಿದ್ದು ತನ್ನ ಹೆಂಡತಿಯಾದ ಸುಜಾತ ಎಂ. ರವರ ಎಡ ಮುಂಗೈಗೆ, ಗಡ್ಡದ ಕೆಳಭಾಗದಲ್ಲಿ, ಮೇಲ್ಭಾಗದ ತುಟಿಗೆ, ತಲೆಯ ಹಿಂಭಾಗದಲ್ಲಿ ರಕ್ತಗಾಯಗಳಾಗಿದ್ದು ತನ್ನ ಹೆಂಡತಿಯ ಬಾಯಿಯಲ್ಲಿ ಎರಡು ಹಲ್ಲುಗಳು ಬಿದ್ದು ಹೋಗಿರುತ್ತೆ. ನಂತರ ತಮಗೆ ಅಪಘಾತವನ್ನು ಉಂಟುಮಾಡಿದ ಕಾರ್ ನ ನೊಂದಣಿ ಸಂಖ್ಯೆಯನ್ನು ನೋಡಲಾಗಿ ನಂ ಕೆಎ 40 ಎ 3753 ಕಾರ್ ಆಗಿದ್ದು ಅದರ ಚಾಲಕ ಹೆಸರು ವಿಳಾಸವನ್ನು ತಿಳಿಯಾಲಾಗಿ ನಾರಾಯಣಸ್ವಾಮಿ ಬಿನ್ ಚಿಕ್ಕಅಕ್ಕುಲಪ್ಪ, ದೊಣ್ಣಹಳ್ಳಿ ಗ್ರಾಮ ಎಂದು ತಿಳಿದು ಬಂದಿರುತ್ತೆ. ನಂತರ ಗಾಯಗೊಂಡಿದ್ದ ತನ್ನ ಹೆಂಡತಿಯನ್ನು ಚಿಕಿತ್ಸೆಗಾಗಿ ರಸ್ತೆಯಲ್ಲಿ ಬಂದ ಯಾವುದೋ ಒಂದು ವಾಹನದಲ್ಲಿ ಚಿಕಿತ್ಸೆಗಾಗಿ ಚಿಂತಾಮಣಿ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆಯನ್ನು ಕೊಡಿಸಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ತನ್ನ ಹೆಂಡತಿಯನ್ನು ಹೊಸಕೋಟೆಯ ಎಂ.ವಿ.ಜಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆಗಾಗಿ ದಾಖಲಿಸಿದ್ದು. ಮೇಲ್ಕಂಡಂತ್ತೆ ತಮಗೆ ಅಪಘಾತವನ್ನು ಉಂಟುಮಾಡಿದ ಕಾರ್ ಮತ್ತು ಅದರ ಚಾಲಕನ ಮೇಲೆ ಕಾನೂನು ರೀತ್ಯ ಕ್ರಮ ಕೈಗೊಳ್ಳಲು ಕೋರಿ ನೀಡಿರುವ ದೂರಾಗಿರುತ್ತೆ.

 1. ದಿಬ್ಬೂರಹಳ್ಳಿ ಪೊಲೀಸ್ ಠಾಣೆ ಮೊ.ಸಂ.174/2019 ಕಲಂ. 279-337 ಐ.ಪಿ.ಸಿ:-

     ಈ ದಿನ ದಿನಾಂಕ 13/10/2019 ರಂದು ಅರ್ಜಿದಾರರಾದ ಪ್ರಭಾಕರ ಎನ್ ಕೆ ಬಿನ್ ಕೃಷ್ಣಾರೆಡ್ಡಿ ರವರು ಠಾಣೆಗೆ ಹಾಜರಾಗಿ ನೀಡಿದ ಅರ್ಜಿಯ ಸಾರಂಶವೇನೆಂದರೆ ತಾನು  ಈಗ್ಗೆ ಸುಮಾರು 2 ವರ್ಷಗಳ ಹಿಂದೆ ನಂ ಕೆಎ 22 ಜೆಡ್ 8611 ನೊಂದಣಿ ಸಂಖ್ಯೆಯ ಮಾರುತಿ ಸ್ವಿಪ್ಟ್ ಡಿಸೈರ್ ಕಾರ್ ನ್ನು ಕೊಂಡುಕೊಂಡಿದ್ದು ಸದರಿ ಕಾರ್ ನ್ನು ತಾನು ಓಡಾಡಲು ಬಳಿಸಿಕೊಳ್ಳುತ್ತಿದ್ದು ಹೀಗಿರುವಲ್ಲಿ ತಾನು ಮತ್ತು ತನ್ನ ಸ್ನೇಹಿತನಾದ ಪುನಿತ್ ಕುಮಾರ್ ವಿ ಬಿನ್ ವೆಂಕಟೇಶ್ ವಿ ರವರು ಕೆಲಸದ ನಿಮಿತ ಬಾಗೇಪಲ್ಲಿಗೆ ಹೋಗಲು ತನ್ನ ಬಾಬತ್ತು ನಂ ಕೆಎ 22 ಜೆಡ್ 8611 ಕಾರಿನಲ್ಲಿ ಈ ದಿನ ದಿನಾಂಕ 13/10/2019 ರಂದು ಬೆಳಿಗ್ಗೆ ಸುಮಾರು 8-00 ಗಂಟೆ ಸಮಯದಲ್ಲಿ ತನ್ನ ಸ್ನೇಹಿತ ಪುನಿತ್ ಕಾರ್ ನ್ನು ಚಾಲನೆಮಾಡುತ್ತಿದ್ದು ಚಿಂತಾಮಣಿ ಬಾಗೇಪಲ್ಲಿ ರಸ್ತೆಯಲ್ಲಿ ಸೊಣಗಾನಹಳ್ಳಿ ಕೆರೆಯ ಕಟ್ಟೆಯ ಬಳಿ ಹೋಗುತ್ತಿದ್ದಾಗ ಕಾರ್ ನ್ನು ಚಾಲನೆಮಾಡುತ್ತಿದ್ದ ನನ್ನ ಸ್ನೇಹಿತ ಪುನಿತ್ ಕಾರ್ ನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆಮಾಡಿ ರಸ್ತೆಯ ಬದಿಯಲ್ಲಿ ಪಲ್ಟಿ ಹೊಡೆಯಿಸಿದರಿಂದ ಕಾರ್ ನ ಬಾಡಿ, ಎಲ್ಲಾ ಗ್ಲಾಸ್ ಗಳು, ಮುಂಭಾಗದ ಮತ್ತು ಹಿಂಭಾಗದ ಬಂಪರ್ ಸಂಪೂರ್ಣವಾಗಿ ಜಖಂ ಆಗಿದ್ದು ತನಗೆ ಮತ್ತು ಕಾರ್ ನ್ನು ಚಾಲನೆಮಾಡುತ್ತಿದ್ದ ತನ್ನ ಸ್ನೇಹಿತ ಪುನಿತ್ ಗೆ ಸಣ್ಣಪುಟ್ಟ ತರಚು ಗಾಯಗಳು ಉಂಟಾಗಿರುತ್ತೆ ಆದ್ದರಿಂದ ಕಾರ್ ನ್ನು ಚಾಲನೆಮಾಡುತ್ತಿದ್ದ ತನ್ನ ಸ್ನೇಹಿತ ಪುನಿತ್ ರವರ ಮೇಲೆ ಕಾನೂನು ರೀತ್ಯ ಕ್ರಮ ಕೈಗೊಳ್ಳಲು ಕೋರಿ ನೀಡಿರುವ ದೂರಾಗಿರುತ್ತೆ

 1. ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.439/2019 ಕಲಂ. 78(3) ಕೆ.ಪಿ. ಆಕ್ಟ್:-

     ದಿನಾಂಕ:12/10/2019 ರಂದು ಮದ್ಯಾಹ್ನ 3-45    ಗಂಟೆಯಲ್ಲಿ  ಶ್ರೀ.ಮೋಹನ್ .ಎನ್ ಪಿ.ಎಸ್.ಐ , ಗೌರೀಬಿದನೂರು ಗ್ರಾಮಾಂತರ ಠಾಣೆ ರವರು  ಠಾಣೆಯಲ್ಲಿ  ನೀಡಿದ ದೂರಿನ ಸಾರಾಂಶವೇನೆಂದರೆ,  ಇವರಿಗೆ ಮದ್ಯಾಹ್ನ 1-00  ಗಂಟೆಯಲ್ಲಿ ಗಂಟೆಯಲ್ಲಿ ಬಂದ ಮಾಹಿತಿ ಮೇರೆಗೆ, ಪೊಲೀಸ್ ಸಿಬ್ಬಂದಿ ಹಾಗು ಪಂಚಾಯ್ತಿದಾರರರೊಂದಿಗೆ ಗೌರೀಬಿದನೂರು ತಾಲ್ಲೂಕು, ನಗರಗೆರೆ ಹೋಬಳಿ ವಾಟದಹೊಸಹಳ್ಳಿ    ಗ್ರಾಮದ ಬಸ್ ನಿಲ್ದಾಣದ ಬಳಿ   ರಸ್ತೆಯಲ್ಲಿ ಯಾರೋ  ಮಟ್ಕಾ ಜೂಜಾಟವಾಡುತ್ತಿರುವುದಾಗಿ ಮಾಹಿತಿ ಬಂದ ಮೇರೆಗೆ ನಾನು ಹಾಗು ಪೊಲೀಸ್ ಸಿಬ್ಬಂದಿಯವರಾದ ಪಿ.ಸಿ. 208  ತಿಪ್ಪೇಸ್ವಾಮಿ , ಪಿ.ಸಿ-205 ಮೋಹನ್ ಕುಮಾರ್    ಹಾಗು ಪಂಚರೊಂದಿಗೆ ಸರ್ಕಾರಿ ಜೀಪ್ ನಂ. ಕೆ.ಎ.40-ಜಿ.281 ರಲ್ಲಿ ಗ್ರಾಮಕ್ಕೆ ಮದ್ಯಾಹ್ನ 1-30 ಗಂಟೆಯಲ್ಲಿ ಗಂಟೆಗೆ ಹೋಗಿ, ಅಲ್ಲಿ ಮಾಹಿತಿ ಇದ್ದ ಸ್ಥಳಕ್ಕೆ ಹೋಗಿ,  ಮರೆಯಲ್ಲಿ ನಿಂತು ನೋಡಲಾಗಿ,  ಯೋರೋ ಒಬ್ಬ ಆಸಾಮಿಯು  ವಾಟದಹೊಸಹಳ್ಳಿ    ಗ್ರಾಮದ ಬಸ್ ನಿಲ್ದಾಣದ ಬಳಿ   ರಸ್ತೆಯಲ್ಲಿ ಓಡಾಡುವ ಸಾರ್ವಜನಿಕರಿಗೆ  ಒಂದು ರೂಪಾಯಿಗೆ  ಎಪ್ಪತ್ತು ರೂಪಾಯಿ ಕೊಡುವುದಾಗಿ ಹಣದ ಆಮಿಷವನ್ನು ತೋರಿಸಿ, ಹಣ ಪಡೆದುಕೊಂಡು ಮಟ್ಕಾ ಚೀಟಿ ಬರೆದುಕೊಡುತ್ತಿರುವುದು ಖಚಿತ ಪಡಿಸಿಕೊಂಡು  ನಾನು ಮತ್ತು ಪೊಲೀಸ್ ಸಿಬ್ಬಂದಿಯವರು  ಸದರಿ ಆಸಾಮಿಯನ್ನು ಸುತ್ತುವರೆದು ಹಿಡಿದುಕೊಳ್ಳಲು ಹೋದಾಗ, ಆತ ತಪ್ಪಿಸಿಕೊಂಡು ಹೋಗಲು ಪ್ರಯತ್ನಿಸಿದ್ದು ಸದರಿ ಆಸಾಮಿಯನ್ನು ಸುತ್ತುವರೆದು ಹಿಡಿದುಕೊಂಡು, ಆತನ  ಹೆಸರು ವಿಳಾಸ ಕೇಳಲಾಗಿ  ತನ್ನ ಹೆಸರು ನರೇಶ್  ಬಿನ್ ನರಸಿಂಹಪ್ಪ,  35 ವರ್ಷ,  ಆದಿ ಕರ್ನಾಟಕ, ವ್ಯಾಪಾರ,   ವಾಸ ವಾಟದಹೊಸಹಳ್ಳಿ ಗ್ರಾಮ, ಗೌರಿಬಿದನೂರು  ತಾಲ್ಲೂಕು ಎಂದು ತಿಳಿಸಿದ್ದು,  ಆತನ ಬಳಿ ಪರಿಶೀಲಿಸಲಾಗಿ  ನಗದು ಹಣ 570-00 ರೂಗಳು,  ಒಂದು ಮಟ್ಕಾ ಅಂಕಿಗಳು ಬರೆದಿರುವ ಚೀಟಿ,  ಒಂದು ಬಾಲ್ ಪಾಯಿಂಟ್ ಪೆನ್ ಇದ್ದು, ಈತನನ್ನು ವಿಚಾರ ಮಾಡಿದಾಗ, ತಾನು ಮಟ್ಕಾ ಜೂಜಾಟವಾಡುತ್ತಿದ್ದುದನ್ನು ಒಪ್ಪಿಕೊಂಡಿರುತ್ತಾನೆ. ನಂತರ ಸದರಿ ಆರೋಪಿ ಸಂದೀಪ್ ಬಿನ್  ರಾಮಾಂಜಿಪ್ಪ, ಹಾಗು ಈತನ ಬಳಿ ಇದ್ದ ಮಟ್ಕಾ ಅಂಕಿಗಳನ್ನು ಬರೆದರುವ ಒಂದು ಚೀಟಿ,  ಒಂದು ಬಾಲ್ ಪಾಯಿಂಟ್ ಪೆನ್  ಮತ್ತು 570-00 ರೂ ನಗದು ಹಣವನ್ನು ಪಂಚರ ಸಮಕ್ಷಮದಲ್ಲಿ ಮದ್ಯಾಹ್ನ 1-30   ಗಂಟೆಯಿಂದ 2-00 ಗಂಟೆಯವರೆಗೆ  ಪಂಚನಾಮೆ ಕ್ರಮ ಜರುಗಿಸಿ  ಪಂಚನಾಮೆ ಮೂಲಕ ವಶಕ್ಕೆ ತೆಗೆದುಕೊಂಡು ಠಾಣೆಗೆ  ಮದ್ಯಾಹ್ನ 3-45   ಗಂಟೆಗೆ  ಬಂದು  ಮುಂದಿನ ಕ್ರಮಕ್ಕಾಗಿ  ನನ್ನ ವಶಕ್ಕೆ ನೀಡಿ, ಕಾನೂನು ಕ್ರಮ ಜರುಗಿಸಲು ನನ್ನ ವಶಕ್ಕೆ ನೀಡಿ, ದೂರಿನ ಮೂಲಕ  ಕಾನೂನು ಕ್ರಮ ಜರುಗಿಸಲು ಸೂಚಿಸಿರುವುದಾಗಿರುತ್ತೆ.

 1. ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.440/2019 ಕಲಂ. 78(3) ಕೆ.ಪಿ. ಆಕ್ಟ್:-

     ದಿನಾಂಕ:12/10/2019 ರಂದು ಸಂಜೆ -4-00   ಗಂಟೆಯಲ್ಲಿ  ಶ್ರೀ.ಮೋಹನ್ .ಎನ್ ಪಿ.ಎಸ್.ಐ , ಗೌರೀಬಿದನೂರು ಗ್ರಾಮಾಂತರ ಠಾಣೆ ರವರು  ಠಾಣೆಯಲ್ಲಿ  ನೀಡಿದ ದೂರಿನ ಸಾರಾಂಶವೇನೆಂದರೆ,  ಇವರಿಗೆ ಮದ್ಯಾಹ್ನ 2-00  ಗಂಟೆಯಲ್ಲಿ ಗಂಟೆಯಲ್ಲಿ ಬಂದ ಮಾಹಿತಿ ಮೇರೆಗೆ, ಪೊಲೀಸ್ ಸಿಬ್ಬಂದಿ ಹಾಗು ಪಂಚಾಯ್ತಿದಾರರರೊಂದಿಗೆ ಗೌರೀಬಿದನೂರು ತಾಲ್ಲೂಕು, ನಗರಗೆರೆ ಹೋಬಳಿ ವಾಟದಹೊಸಹಳ್ಳಿ    ಗ್ರಾಮದ ಕಾಲೋನಿಯಲ್ಲಿ ಇರುವ ಅಂಗನವಾಡಿ ಮುಂದೆ   ರಸ್ತೆಯಲ್ಲಿ ಯಾರೋ  ಮಟ್ಕಾ ಜೂಜಾಟವಾಡುತ್ತಿರುವುದಾಗಿ ಮಾಹಿತಿ ಬಂದ ಮೇರೆಗೆ ನಾನು ಹಾಗು ಪೊಲೀಸ್ ಸಿಬ್ಬಂದಿಯವರಾದ ಪಿ.ಸಿ. 208  ತಿಪ್ಪೇಸ್ವಾಮಿ , ಪಿ.ಸಿ-205 ಮೋಹನ್ ಕುಮಾರ್    ಹಾಗು ಪಂಚರೊಂದಿಗೆ ಸರ್ಕಾರಿ ಜೀಪ್ ನಂ. ಕೆ.ಎ.40-ಜಿ.281 ರಲ್ಲಿ ಗ್ರಾಮಕ್ಕೆ ಮದ್ಯಾಹ್ನ 2-15  ಗಂಟೆಯಲ್ಲಿ ಗಂಟೆಗೆ ಹೋಗಿ, ಅಲ್ಲಿ ಮಾಹಿತಿ ಇದ್ದ ಸ್ಥಳಕ್ಕೆ ಹೋಗಿ,  ಮರೆಯಲ್ಲಿ ನಿಂತು ನೋಡಲಾಗಿ,  ಯೋರೋ ಒಬ್ಬ ಆಸಾಮಿಯು  ವಾಟದಹೊಸಹಳ್ಳಿ  ಗ್ರಾಮದ ಕಾಲೋನಿಯಲ್ಲಿ ಇರುವ ಅಂಗನವಾಡಿ ಮುಂದೆ   ರಸ್ತೆಯಲ್ಲಿ ಓಡಾಡುವ ಸಾರ್ವಜನಿಕರಿಗೆ  ಒಂದು ರೂಪಾಯಿಗೆ  ಎಪ್ಪತ್ತು ರೂಪಾಯಿ ಕೊಡುವುದಾಗಿ ಹಣದ ಆಮಿಷವನ್ನು ತೋರಿಸಿ, ಹಣ ಪಡೆದುಕೊಂಡು ಮಟ್ಕಾ ಚೀಟಿ ಬರೆದುಕೊಡುತ್ತಿರುವುದು ಖಚಿತ ಪಡಿಸಿಕೊಂಡು  ನಾನು ಮತ್ತು ಪೊಲೀಸ್ ಸಿಬ್ಬಂದಿಯವರು  ಸದರಿ ಆಸಾಮಿಯನ್ನು ಸುತ್ತುವರೆದು ಹಿಡಿದುಕೊಳ್ಳಲು ಹೋದಾಗ, ಆತ ತಪ್ಪಿಸಿಕೊಂಡು ಹೋಗಲು ಪ್ರಯತ್ನಿಸಿದ್ದು ಸದರಿ ಆಸಾಮಿಯನ್ನು ಸುತ್ತುವರೆದು ಹಿಡಿದುಕೊಂಡು, ಆತನ  ಹೆಸರು ವಿಳಾಸ ಕೇಳಲಾಗಿ  ತನ್ನ ಹೆಸರು ನಂದ ಕುಮಾರ್ ಬಿನ್ ಗೋವಿಂದಪ್ಪ,  21 ವರ್ಷ,  ಆದಿ ಕರ್ನಾಟಕ, ಖಾಸಗಿ ಕೆಲಸ,    ವಾಸ ಮುದ್ದಲೋಡು ಗ್ರಾಮ, ಗೌರಿಬಿದನೂರು  ತಾಲ್ಲೂಕು ಎಂದು ತಿಳಿಸಿದ್ದು,  ಆತನ ಬಳಿ ಪರಿಶೀಲಿಸಲಾಗಿ  ನಗದು ಹಣ 580-00 ರೂಗಳು,  ಒಂದು ಮಟ್ಕಾ ಅಂಕಿಗಳು ಬರೆದಿರುವ ಚೀಟಿ,  ಒಂದು ಬಾಲ್ ಪಾಯಿಂಟ್ ಪೆನ್ ಇದ್ದು, ಈತನನ್ನು ವಿಚಾರ ಮಾಡಿದಾಗ, ತಾನು ಮಟ್ಕಾ ಜೂಜಾಟವಾಡುತ್ತಿದ್ದುದನ್ನು ಒಪ್ಪಿಕೊಂಡಿರುತ್ತಾನೆ. ನಂತರ ಸದರಿ ಆರೋಪಿ ನಂದ ಕುಮಾರ್ ಬಿನ್ ಗೋವಿಂದಪ್ಪ,  ಹಾಗು ಈತನ ಬಳಿ ಇದ್ದ ಮಟ್ಕಾ ಅಂಕಿಗಳನ್ನು ಬರೆದರುವ ಒಂದು ಚೀಟಿ,  ಒಂದು ಬಾಲ್ ಪಾಯಿಂಟ್ ಪೆನ್  ಮತ್ತು 580-00 ರೂ ನಗದು ಹಣವನ್ನು ಪಂಚರ ಸಮಕ್ಷಮದಲ್ಲಿ ಮದ್ಯಾಹ್ನ 2-15    ಗಂಟೆಯಿಂದ 2-45 ಗಂಟೆಯವರೆಗೆ  ಪಂಚನಾಮೆ ಕ್ರಮ ಜರುಗಿಸಿ  ಪಂಚನಾಮೆ ಮೂಲಕ ವಶಕ್ಕೆ ತೆಗೆದುಕೊಂಡು ಠಾಣೆಗೆ  ಸಂಜೆ -4-00   ಗಂಟೆಗೆ ಬಂದು  ಮುಂದಿನ ಕ್ರಮಕ್ಕಾಗಿ  ನನ್ನ ವಶಕ್ಕೆ ನೀಡಿ, ಕಾನೂನು ಕ್ರಮ ಜರುಗಿಸಲು ನನ್ನ ವಶಕ್ಕೆ ನೀಡಿ, ದೂರಿನ ಮೂಲಕ  ಕಾನೂನು ಕ್ರಮ ಜರುಗಿಸಲು ಸೂಚಿಸಿರುವುದಾಗಿರುತ್ತೆ.

 1. ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.441/2019 ಕಲಂ. 78(3) ಕೆ.ಪಿ. ಆಕ್ಟ್:-

     ದಿನಾಂಕ:12/10/2019 ರಂದು ಸಂಜೆ -4-15   ಗಂಟೆಯಲ್ಲಿ  ಶ್ರೀ.ಮೋಹನ್ .ಎನ್ ಪಿ.ಎಸ್.ಐ , ಗೌರೀಬಿದನೂರು ಗ್ರಾಮಾಂತರ ಠಾಣೆ ರವರು  ಠಾಣೆಯಲ್ಲಿ  ನೀಡಿದ ದೂರಿನ ಸಾರಾಂಶವೇನೆಂದರೆ,  ಇವರಿಗೆ ಮದ್ಯಾಹ್ನ 2-45  ಗಂಟೆಯಲ್ಲಿ ಗಂಟೆಯಲ್ಲಿ ಬಂದ ಮಾಹಿತಿ ಮೇರೆಗೆ, ಪೊಲೀಸ್ ಸಿಬ್ಬಂದಿ ಹಾಗು ಪಂಚಾಯ್ತಿದಾರರರೊಂದಿಗೆ ಗೌರೀಬಿದನೂರು ತಾಲ್ಲೂಕು, ನಗರಗೆರೆ ಹೋಬಳಿ ವಾಟದಹೊಸಹಳ್ಳಿ ಗ್ರಾಮದ ಬಸ್ ನಿಲ್ದಾಣದ ಬಳಿ ರಸ್ತೆಯಲ್ಲಿ ಯಾರೋ  ರಸ್ತೆಯಲ್ಲಿ ಯಾರೋ  ಮಟ್ಕಾ ಜೂಜಾಟವಾಡುತ್ತಿರುವುದಾಗಿ ಮಾಹಿತಿ ಬಂದ ಮೇರೆಗೆ ನಾನು ಹಾಗು ಪೊಲೀಸ್ ಸಿಬ್ಬಂದಿಯವರಾದ ಪಿ.ಸಿ. 208  ತಿಪ್ಪೇಸ್ವಾಮಿ , ಪಿ.ಸಿ-205 ಮೋಹನ್ ಕುಮಾರ್    ಹಾಗು ಪಂಚರೊಂದಿಗೆ ಸರ್ಕಾರಿ ಜೀಪ್ ನಂ. ಕೆ.ಎ.40-ಜಿ.281 ರಲ್ಲಿ ಗ್ರಾಮಕ್ಕೆ ಮದ್ಯಾಹ್ನ 3-00  ಗಂಟೆಯಲ್ಲಿ ಗಂಟೆಗೆ ಹೋಗಿ, ಅಲ್ಲಿ ಮಾಹಿತಿ ಇದ್ದ ಸ್ಥಳಕ್ಕೆ ಹೋಗಿ,  ಮರೆಯಲ್ಲಿ ನಿಂತು ನೋಡಲಾಗಿ,  ಯೋರೋ ಒಬ್ಬ ಆಸಾಮಿಯು  ವಾಟದಹೊಸಹಳ್ಳಿ ಗ್ರಾಮದ ಬಸ್ ನಿಲ್ದಾಣದ ಬಳಿ ರಸ್ತೆಯಲ್ಲಿ ಓಡಾಡುವ ಸಾರ್ವಜನಿಕರಿಗೆ  ಒಂದು ರೂಪಾಯಿಗೆ  ಎಪ್ಪತ್ತು ರೂಪಾಯಿ ಕೊಡುವುದಾಗಿ ಹಣದ ಆಮಿಷವನ್ನು ತೋರಿಸಿ, ಹಣ ಪಡೆದುಕೊಂಡು ಮಟ್ಕಾ ಚೀಟಿ ಬರೆದುಕೊಡುತ್ತಿರುವುದು ಖಚಿತ ಪಡಿಸಿಕೊಂಡು  ನಾನು ಮತ್ತು ಪೊಲೀಸ್ ಸಿಬ್ಬಂದಿಯವರು  ಸದರಿ ಆಸಾಮಿಯನ್ನು ಸುತ್ತುವರೆದು ಹಿಡಿದುಕೊಳ್ಳಲು ಹೋದಾಗ, ಆತ ತಪ್ಪಿಸಿಕೊಂಡು ಹೋಗಲು ಪ್ರಯತ್ನಿಸಿದ್ದು ಸದರಿ ಆಸಾಮಿಯನ್ನು ಸುತ್ತುವರೆದು ಹಿಡಿದುಕೊಂಡು, ಆತನ  ಹೆಸರು ವಿಳಾಸ ಕೇಳಲಾಗಿ  ತನ್ನ ಹೆಸರು ಗಂಗಪ್ಪ ಬಿನ್ ಗಂಗಪ್ಪ,  50  ವರ್ಷ,  ನಾಯಕರು,  ಜಿರಾಯ್ತಿ,     ವಾಸ ನಕ್ಕಲಹಳ್ಳಿ  ಗ್ರಾಮ, ಗೌರಿಬಿದನೂರು  ತಾಲ್ಲೂಕು ಎಂದು ತಿಳಿಸಿದ್ದು,  ಆತನ ಬಳಿ ಪರಿಶೀಲಿಸಲಾಗಿ  ನಗದು ಹಣ 560-00 ರೂಗಳು,  ಒಂದು ಮಟ್ಕಾ ಅಂಕಿಗಳು ಬರೆದಿರುವ ಚೀಟಿ,  ಒಂದು ಬಾಲ್ ಪಾಯಿಂಟ್ ಪೆನ್ ಇದ್ದು, ಈತನನ್ನು ವಿಚಾರ ಮಾಡಿದಾಗ, ತಾನು ಮಟ್ಕಾ ಜೂಜಾಟವಾಡುತ್ತಿದ್ದುದನ್ನು ಒಪ್ಪಿಕೊಂಡಿರುತ್ತಾನೆ. ನಂತರ ಸದರಿ ಆರೋಪಿ ನಂದ ಕುಮಾರ್ ಬಿನ್ ಗೋವಿಂದಪ್ಪ,  ಹಾಗು ಈತನ ಬಳಿ ಇದ್ದ ಮಟ್ಕಾ ಅಂಕಿಗಳನ್ನು ಬರೆದರುವ ಒಂದು ಚೀಟಿ,  ಒಂದು ಬಾಲ್ ಪಾಯಿಂಟ್ ಪೆನ್  ಮತ್ತು 560-00 ರೂ ನಗದು ಹಣವನ್ನು ಪಂಚರ ಸಮಕ್ಷಮದಲ್ಲಿ ಮದ್ಯಾಹ್ನ 3-00    ಗಂಟೆಯಿಂದ 3-30  ಗಂಟೆಯವರೆಗೆ  ಪಂಚನಾಮೆ ಕ್ರಮ ಜರುಗಿಸಿ  ಪಂಚನಾಮೆ ಮೂಲಕ ವಶಕ್ಕೆ ತೆಗೆದುಕೊಂಡು ಠಾಣೆಗೆ  ಸಂಜೆ -4-15   ಗಂಟೆಗೆ  ಬಂದು  ಮುಂದಿನ ಕ್ರಮಕ್ಕಾಗಿ  ನನ್ನ ವಶಕ್ಕೆ ನೀಡಿ, ಕಾನೂನು ಕ್ರಮ ಜರುಗಿಸಲು ನನ್ನ ವಶಕ್ಕೆ ನೀಡಿ, ದೂರಿನ ಮೂಲಕ  ಕಾನೂನು ಕ್ರಮ ಜರುಗಿಸಲು ಸೂಚಿಸಿರುವುದಾಗಿರುತ್ತೆ.

 1. ಗುಡಿಬಂಡೆ ಪೊಲೀಸ್ ಠಾಣೆ ಮೊ.ಸಂ.334/2019 ಕಲಂ. 279-337 ಐ.ಪಿ.ಸಿ:-

     ದಿನಾಂಕ 13/10/2019 ರಂದು ಪಿರ್ಯಾದಿದಾರರಾದ ಸುಹೇಲ್ ಬಿನ್ ಮಹಬೂಬ್ ಸಾಬ್ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ:12/10/2019 ರಂದು ರಾತ್ರಿ 7-00 ಗಂಟೆಯಲ್ಲಿ ತಮ್ಮ ತಂದೆ ತನಗೆ ದೂರವಾಣಿ ಕರೆಯನ್ನು ಮಾಡಿ ತಾನು ಕೆಲಸ ಮುಗಿಸಿಕೊಂಡು ಮನೆಗೆ ಕೆಎ-07 ಆರ್-456 ದ್ವಿ-ಚಕ್ರ ವಾಹನದಲ್ಲಿ ಪೆರೆಸಂದ್ರದಿಂದ ಗುಡಿಬಂಡೆಗೆ ವಾಪಸ್ಸಾಗುತ್ತಿದ್ದಾಗ ಸುಮಾರು 6-45 ಗಂಟೆ ಸಮಯದಲ್ಲಿ ಚಿಕ್ಕಬಳ್ಳಾಪುರ ಮಾರನಾಯಕನಹಳ್ಳಿ (ಮಾದಿನಾಯಕನಹಳ್ಳಿ) ಗ್ರಾಮದ ಬಳಿ  ಬರುತ್ತಿದ್ದಾಗ ಗುಡಿಬಂಡೆ ಕಡೆಯಿಂದ ಬಂದ ಕೆಎ-53 ಎಮ್.ಎ-9269 ಕಾರಿನ ಚಾಲಕ ಅತಿವೇಗ ಮತ್ತು ಅಜಾಗರೂಕತೆ ಯಿಂದ ಚಾಲನೆ ಮಾಡಿಕೊಂಡು ಬಂದು ತಾನು ಚಾಲನೆ ಮಾಡಿಕೊಂಡು ಬರುತ್ತಿದ್ದ ದ್ವಿ-ಚಕ್ರ ವಾಹನಕ್ಕೆ ಡಿಕ್ಕಿ ಹೊಡೆಯಿಸಿ ಅಪಘಾತ ಪಡಿಸಿದ ಪರಿಣಾಮ ತನಗೆ ಎಡ ಕಾಲಿಗೆ ಹಾಗೂ ಎರಡು ಕೈಗಳಿಗೆ ತೀವ್ರತರವಾದ ರಕ್ತಗಾಯವಾಗಿದ್ದು ಅದೇ ಕಾರು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಗೂ ಸಹ ಅಪಘಾತ ಪಡಿಸಿದ ಪರಿಣಾಮ  ಮಹಿಳೆಗೆ ಮುಖಕ್ಕೆ ತೀವ್ರತರವಾದ ರಕ್ತಗಾಯ , ಸೊಂಟಕ್ಕೆ ರಕ್ತಗಾಯವಾಗಿರುವುದಾಗಿ ತನಗೆ ತಿಳಿಸಿದ್ದು , ಕೂಡಲೆ ತಾನು ಸದರಿ ಸ್ಥಳಕ್ಕೆ ಗುಡಿಬಂಡೆ ಸರ್ಕಾರಿ ಆಸ್ಪತ್ರೆಯಿಂದ ಆಂಬುಲೆನ್ಸ್ ವಾಹನವನ್ನು ಕರೆದುಕೊಂಡು ಅಪಘಾತವಾದ ಸ್ಥಳಕ್ಕೆ ಹೋಗಿದ್ದು ವಿಚಾರ ನಿಜವಾಗಿದ್ದು ನಂತರ ಮೇಲ್ಕಂಡ  ಅಪಘಾತದಲ್ಲಿ ಗಾಯಗೊಂಡಿರುವ ಮಹಿಳೆಯ ಹೆಸರು ಮತ್ತು ವಿಳಾಸ ತಿಳಿದುಕೊಳ್ಳಲಾಗಿ ಗಂಗಮ್ಮ ಕೋಂ ಲೇಟ್ ಓಬಳಪ್ಪ 60 ವರ್ಷ, ಆದಿ ಕರ್ನಾಟಕ ಜನಾಂಗ ,ವಾಸ ಮಾರನಾಯಕನ ಹಳ್ಳಿ (ಮಾದಿನಾಯಕನಹಳ್ಳಿ) ಗ್ರಾಮ ಎಂದು ತಿಳಿಯಿತು. ಸದರಿ ಗಂಗಮ್ಮ ರವರನ್ನು ಬೇರೆ ಆಂಬುಲೆನ್ಸ್ ವಾಹನದಲ್ಲಿ ಚಿಕ್ಕಬಳ್ಳಾಪುರ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿರುವುದಾಗಿ ತಿಳಿಸಿರುತ್ತಾರೆ. ತಾನು ತಮ್ಮ ತಂದೆಯವರನ್ನು ಆಂಬುಲೆನ್ಸ್ ವಾಹನದಲ್ಲಿ ಚಿಕ್ಕಬಳ್ಳಾಪುರ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆಗಾಗಿ ದಾಖಲು ಮಾಡಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಕರೆದುಕೊಂಡು ಹೋಗುವಂತೆ ಅಲ್ಲಿನ ವೈಧ್ಯಾದಿಕಾರಿಗಳು ತಿಳಿಸಿದ್ದು ತಾನು ತಮ್ಮ ತಂದೆಯವರಿಗೆ ಬ್ಯಾಟರಾಯನಪುರದಲ್ಲಿರುವ ಪ್ರೋ ಲೈಫ್ ಆಸ್ಪತ್ರೆಯಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ದಾಖಲು ಮಾಡಿ ಈ ದಿನ ತಡವಾಗಿ ಠಾಣೆಗೆ  ಬಂದು ದೂರು ನೀಡುತ್ತಿದ್ದು ತಮ್ಮ ತಂದೆ ಮಹಬೂಬ್ ಸಾಬ್ ಹಾಗೂ ಗಂಗಮ್ಮ ರವರಿಗೆ ಅಪಘಾತ ಪಡಿಸಿದ ಕೆಎ-53 ಎಮ್ಎ-9269 ಇಟಿಯಾಸ್ ಲಿವಾ ಕಾರಿನ ಚಾಲಕನ ವಿರುದ್ದ ಕಾನೂನಿ ಕ್ರಮ.

 1. ಗುಡಿಬಂಡೆ ಪೊಲೀಸ್ ಠಾಣೆ ಮೊ.ಸಂ.335/2019 ಕಲಂ. 87 ಕೆ.ಪಿ. ಆಕ್ಟ್:-

     ದಿನಾಂಕ 13/10/2019 ರಂದು ಸಂಜೆ 6.30 ಗಂಟೆಯಲ್ಲಿ ಠಾಣಾ NCR 335/2019 ರಲ್ಲಿ ಘನ ನ್ಯಾಯಾಲಯದಿಂದ ಅನುಮತಿಯನ್ನು ಪಡೆದುಕೊಂಡು ಹಾಜರುಪಡಿಸಿದ ದೂರಿನ ಸಾರಾಂಶವೇನೆಂದರೆ ದಿನಾಂಕ:12/10/2019 ರಂದು ಡಿ.ಸಿ.ಬಿ. ಸಿ.ಇ.ಎನ್. ಚಿಕ್ಕಬಳ್ಳಾಪುರ ರ ಪೊಲೀಸ್ ಈನ್ಸ್ ಪೇಕ್ಟರ್ ರವರಾದ ರಾಜಣ್ಣ ರವರು ಠಾಣೆಗೆ ಹಾಜರಾಗಿ ನೀಡಿದ ಸಾರಾಂಶವೆನೆಂದರೆ ದಿನಾಂಕ:12-10-2019 ರಂದು ಸಂಜೆ 4-15 ಗಂಟೆಯಲ್ಲಿ ತಾನು ಸರ್ಕಾರಿ ಜಿಪ್ ಸಂಖ್ಯೆ KA-40-G-270  ಸಿಬ್ಬಂದಿಯಾದ ಸಿ.ಹೆಚ್.ಸಿ-205 ರಮೆಶ್ , ಸಿ,ಹೆಚ್,ಸಿ- 71 ಸುಬ್ರಮಣಿ, ಸಿ.ಹೆಚ್,ಸಿ- 208 ಗಿರೀಶ್ ಮತ್ತು ಸಿ,ಪಿ.ಸಿ-  535 ಶ್ರೀನಿವಾಸ ರವರೊಂದಿಗೆ ಗುಡಿಬಂಡೆ ತಾಲ್ಲೂಕಿನಲ್ಲಿ ಗಸ್ತಿನಲ್ಲಿದ್ದಾಗ, ಬಾತ್ಮಿದಾರರು ಪೋನ್ ಮಾಡಿ ಗುಡಿಬಂಡೆ  ತಾಲೂಕಿನ ಬೀಚಗಾನಹಳ್ಳಿ ಉತ್ತರಕ್ಕೆ ಸುಮಾರು 500 ಮೀಟರ್ ಕೊಂಡವಲಹಳ್ಲಿ ಗ್ರಾಮ ಹನುಮಂರೆಡ್ಡಿ ರವರ ಬಾಬತ್ತು ರಾಗಿ ಹೊಲದ ಜಮೀನಿನ ಮದ್ಯದಲ್ಲಿ ಭಾಗದಲ್ಲಿರುವ ಹೊಂಗೆ ಮರದ ಕೆಳಗೆ ಕೆಲವರು ಕಾನೂನು ಬಾಹಿರವಾಗಿ ಜೂಜಾಟ ಆಡುತ್ತಿದ್ದು ಸ್ಥಳದಲ್ಲಿ ಕೆಲ ಮಂದಿ ಗುಂಪಾಗಿ ಕುಳಿತುಕೊಂಡು ಅಂದರ್ ಬಾಹರ್  ಎಂದು ಜೂಜಾಟ ಆಡುತ್ತಿರುವುದನ್ನು ಮಾಹಿತಿಯನ್ನು ಖಚಿತಪಡಿಸಿಕೊಂಡು ಸದರಿಯವರ ಮೇಲೆ ಸಿಬ್ಬಂದಿಯೊಂದಿಗೆ ಧಾಳಿ ಮಾಡಿದಾಗ, ಜೂಜಾಟ ಆಡುತ್ತಿದ್ದವರನ್ನು ವಶಕ್ಕೆ ಪಡೆದುಕೊಂಡು ಹೆಸರು & ವಿಳಾಸ ಕೇಳಲಾಗಿ 1) ರಮೇಶ್ ಬಿನ್ ನರಸಿಂಹಪ್ಪ,  30 ವರ್ಷ, ಆದಿ ಕರ್ನಾಟಕ, ಜಿರಾಯ್ತಿ, ವಾಸ; ಬೀಚಗಾನಹಳ್ಳಿ ಗ್ರಾಮ, ಗುಡಿಬಂಡೆ ತಾಲ್ಲೂಕು,  2) ನವೀನ್ ಬಿನ್ ಮಲ್ಲಿಕಾರ್ಜುನ, 33 ವರ್ಷ, ಲಿಂಗಾಯಿತ ಜನಾಂಗ, ಹೊಟೆಲ್ ನಲ್ಲಿ ಕೆಲಸ, ವಾಸ: ಬೀಚಗಾನಹಳ್ಳಿ ಗ್ರಾಮ, ಗುಡಿಬಂಡೆ ತಾಲ್ಲೂಕು 3) ಚಿನ್ನಪ್ಪ ಬಿನ್ ಲೇಟ್ ನಾರಾಯಣಪ್ಪ, 45 ವರ್ಷ, ಬಲಜಿಗರು, ಜಿರಾಯ್ತಿ, ವಾಸ: ಬಾಲೇನಹಳ್ಳಿ ಗ್ರಾಮ, ತಾಲ್ಲೂಕು, ಎಂದು ತಿಳಿಸಿದ್ದು, ಓಡಿ ಹೋದವರ ಹೆಸರು ಮತ್ತು ವಿಳಾಸವನ್ನು ಕೇಳಲಾಗಿ 1)ನರಸಿಂಹಪ್ಪ @  ಅಂಗಡಿ ನರಸಿಂಹಪ್ಪ ಬಿನ್ ಲೇಟ್ ಹನುಮಂತಪ್ಪ, 50 ವರ್ಷ, ನಾಯಕರು, ಚಿಲ್ಲರೆ ಅಂಗಡಿ ವ್ಯಾಪಾರ, ವಾಸ: ಬೀಚಗಾನಹಳ್ಳಿ ಗ್ರಾಮ ಗುಡಿಬಂಡೆ ತಾಲೂಕು, 2)ನವೀನ್ ಕುಮಾರ ಬಿಜ್ ಆವುಲಪ್ಪ, ನಾಯಕರು, ಜಿರಾಯ್ತಿ ವಾಸ: ಬೀಚಾಗಾನಹಳ್ಳಿ ಗ್ರಾಮ ಗುಡಿಬಂಡೆ ತಾಲುಕು ಪೊನ್ನಂ:9353661406 3) ಗೊಂವಿದ 35 ವರ್ಷ, ಕೊರಚರು ಗವಿಕುಂಟಹಳ್ಳಿ ಗ್ರಾಮ ಗುಡಿಬಂಡೆ ತಾಲೂಕು, ಪೊನ್ ನಂಬರ್ 7795762253 4) ವೇಣು ಗೊಪಾಲ @ ವೇಣು ಬಿನ್ ಸೀನಪ್ಪ27 ವರ್ಷ, ನಾಯಕರು, ಜಿರಾಯ್ತಿ ವಾಸ: ಬಿಚಗಾನಹಳ್ಳಿ ಗ್ರಾಮ ಗುಡಬಂಡೆ ತಾಲೂಕು, ಪೊನ್ ನಂಬರ್- 9844639187 5) ಗುರುಮೂರ್ತಿ, 60 ವರ್ಷ, ಬಲಜಿಗರು, ಬಳೆ ವ್ಯಾಪಾರ, ವಾಸ: ಬೀಚಗಾನಹಳ್ಳಿ ಗ್ರಾಮ, ಗುಡಿಬಂಡೆ ತಾಲೂಕು ಪೊನ್ ನಂಬರ್ 8088573584 6) ವೆಂಕಟೆಶ್ ಬಿನ್ ನಾರಾಯನಪ್ಪ, 40 ವರ್ಷ, ಬೊವಿ ಜನಾಂಗ, ಜಿರಾಯ್ತಿ, ವಾಸ: ತಟ್ಟಹಳ್ಳಿ ಗ್ರಾಮ ಗುಡಿಬಂಡೆ ತಾಲೂಕು ಪೊನ್ ನಂಬರ್ 9448376594 5 ನಂತರ ಸ್ಥಳದಲ್ಲಿ ಪರಿಶೀಲನೆ ಮಾಡಲಾಗಿ ಜೂಜಾಟದಲ್ಲಿ ಬಳಸಿದ ರೂ 9170/- ಹಣ & ಒಂದು ಪ್ಲಾಸ್ಟಿಕ್ ಕವರ್, 52 ಇಸ್ಪೀಟ್ ಎಲೆಗಳನ್ನು ಧಾಳಿ ಪಂಚನಾಮೆ ಕಾಲದಲ್ಲಿ ಅಮಾನತ್ತುಪಡಿಸಿಕೊಂಡಿರುತ್ತೆ. ಮೇಲ್ಕಂಡ ಆರೋಪಿತರನ್ನು & ಮಾಲುಗಳನ್ನು ಅಸಲು ಪಂಚನಾಮೆಯೊಂದಿಗೆ ರಾತ್ರಿ 7-30 ಗಂಟೆಯಲ್ಲಿ ಹಾಜರುಪಡಿಸುತ್ತಿದ್ದು, ಸದರಿ ಆರೋಪಿತನ ವಿರುದ್ದ ಮುಂದಿನ ಕಾನೂನು ಕ್ರಮ ಕೈಗೊಳ್ಳಲು ಸೂಚಿಸಿರುತ್ತೆ.

 1. ಗುಡಿಬಂಡೆ ಪೊಲೀಸ್ ಠಾಣೆ ಮೊ.ಸಂ.336/2019 ಕಲಂ. 279-304(ಎ) ಐ.ಪಿ.ಸಿ:-

     ದಿನಾಂಕ; 14/10/2019 ರಂದು ಪಿರ್ಯಾದಿದಾರರಾದ ಗೋಪಾಲ ಬಿನ್ ಚನ್ನಪ್ಪ ಬೀಚಗಾನಹಳ್ಳಿ ಗ್ರಾಮದ ವಾಸಿ ರವರು  ಬೆಳಿಗ್ಗೆ 10 ಗಂಟೆಗೆ ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶ ವೇನೆಂಧರೆ ತನ್ನ ಚಿಕ್ಕಪ್ಪ ನವರಾದ ಲೇಟ್ ನಾರಾಯಣಸ್ವಾಮಿ ರವರ ಮಗನಾದ M.N.ವಿನಾಯಕ ಬಿನ್ ಲೇಟ್ ನಾರಾಯಣಸ್ವಾಮಿ ಸುಮಾರು 25 ವರ್ಷ ವಯಸ್ಸುಳ್ಳ ತನ್ನ ತಮ್ಮ ನಾಯಕ ಜನಾಂಗಕ್ಕೆ ಸೇರಿದ್ದು ಲಾರಿ ಚಾಲಕನಾಗಿ ವೃತ್ತಿಯನ್ನು ಮಾಡಿಕೊಂಡು ಜೇವನ ಮಾಡುತ್ತಿದ್ದು ,ಸುಮಾರು ಒಂದು ವಾರದಿಂದ ರಜೆಯ ಮೇಲೆ ಇದ್ದು ಮನೆಯಲ್ಲಿಯೇ ಇದ್ದನು ನಂತರ ದಿನಾಂಕ;13/10/2019 ರಂದು ಮತ್ತೆ ಕೆಲಸಕಿಕೆ ಹೋಗುತ್ತೇನೆಂದು ಮನೆಯಲ್ಲಿ ಹೇಳಿ ಹೋಗಿರುತ್ತೇನೆ ರಾತ್ರಿ ಸುಮಾರು 8;20 ಗಂಟೆಯ ಸಮಯದಲ್ಲಿ ತಾನು ತನ್ನ ತಮ್ಮನಿಗೆ ದೂರವಾಣಿ ಕರೆ ಮಾಡಿದಾಗ ತನ್ನ ತಮ್ಮನ ಪೋನ್ ಬೇರೆ ವ್ಯಕ್ತಿ ಕರೆ ಸ್ವಿಕರಿಸಿ ನಿಮ್ಮವರಿಗೆ ಅಪಘಾತ ವಾಗಿದೆ ಯಾರೋ ಅಪಘಾತ ಮಾಡಿ ಹೊರಟು ಹೋಗಿದ್ದಾರೆ ,ತುಂಬಾ ಪೆಟ್ಟುಗಳು ಬಿದ್ದವೆ ಎಂದು ಹೇಳಿದರು ನಂತರ ನಾವು 8;30 ಕ್ಕೆ ಹೋಗಿ ನೋಡಿದಾಗ ಅಪಘಾತವು ಬೀಚಗಾನಹಳ್ಳಿ ಕ್ರಾಸ್ ಮತ್ತು ಚಂಡೂರು ಕ್ರಾಸ್ ಮಧ್ಯದಲ್ಲಿ ಅಪಘಾತವಾಗಿತ್ತು ನಂತರ ತನ್ನ ತಮ್ಮನಿಗೆ ತಲೆಗೆ & ಮೈ ಗೆ ತೀವ್ರ ಪಟ್ಟು ಬಿದ್ದು ರಕ್ತದ ಮಡುವಿನಲ್ಲಿ ಪ್ರಜ್ಞೆ ಇಲ್ಲದೆ ಬಿದ್ದಿದ್ದರು ನಂತರ ಗುಡಿಬಂಡೆ 108 ಅಂಬುಲೆನ್ಸ್ ನಲ್ಲಿ ಚಿಕ್ಕಬಳ್ಳಾಪುರಕ್ಕೆ ಹೋದಾಗ ಅಲ್ಲಿಂದ ಬೆಂಗಳೂರು ನಿಮಾನ್ಸ್ ಆಸ್ಪತ್ರೆಗೆ ಶಿಪಾರಸ್ಸು ಮಾಡಿರುತ್ತಾರೆ ,ಬೆಂಗಳೂರು ಆಸ್ಪತ್ರೆಗೆ ಸುಮಾರು ರಾತ್ರಿ 11;00 ಗಂಟೆಗೆ ದಾಖಲು ಮಾಡಿಸಿದೆವು ಚಿಕಿತ್ಸೆ ಫಲಕಾರಿ ಯಾಗದೇ ಸುಮಾರು 12;30 ಕ್ಕೆ ಮೃತ ಪಟ್ಟಿರುತ್ತಾರೆ ಎಂದು ವೈದ್ಯಾದಿಕಾರಿಗಳು ತಿಳಿಸಿದರು ಆದ್ದರಿಂದ ಮುಂದಿನ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ನೀಡಿದ ದೂರಾಗಿರುತ್ತೆ.

 1. ಗುಡಿಬಂಡೆ ಪೊಲೀಸ್ ಠಾಣೆ ಮೊ.ಸಂ.337/2019 ಕಲಂ. 15(ಎ), 32(3) ಕೆ.ಇ ಆಕ್ಟ್:-

     ಗುಡಿಬಂಡೆ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಫ್ರಭಾರದಲ್ಲಿರುವ ಪೊಲೀಸ್ ಇನ್ಸ್ ಪೆಕ್ಟರ್  ಹನುಮಂತರಾಯಪ್ಪ ರವರು ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ:14-10-2019 ರಂದು ಬೆಳಿಗ್ಗೆ  10-30 ಗಂಟೆಯಲ್ಲಿ ಗಸ್ತಿನಲ್ಲಿದ್ದಾಗ, ಠಾಣಾ ಸಿಬ್ಬಂದಿ ಸಿ,ಹೆಚ್,ಸಿ-221 ಮಾರುತಿ, ರವರು ತನಗೆ ಪೋನ್ ಮಾಡಿ ಚಿಕ್ಕಬಳ್ಳಪುರ ತಾಲೂಕು ಜಯಂತಿ ಗ್ರಾಮದ ವಾಸಿಯಾದ ಶ್ರಿನಿವಾಸ ರವರ ಚಿಲ್ಲರೆ ಅಂಗಡಿ ಮುಂಬಾಗದ ರಸ್ತೆಯಲ್ಲಿ  ಅಕ್ರಮವಾಗಿ ಸಾರ್ವಜನಿಕರಿಗೆ ಮಧ್ಯವನ್ನು ಕುಡಿಯಲು ಸ್ಥಳಾವಕಾಶ ನೀಡಿರುತ್ತಾರೆಂದು ನೀಡಿದ ಮಾಹಿತಿ ಮೇರೆಗೆ ತಾನು ಸರ್ಕಾರಿ ಜೀಪು ಸಂಖ್ಯೆ-ಕೆ,ಎ-40 ಜಿ-1888 ರಲ್ಲಿ ಚಾಲಕ ಎಚ್,ಸಿ-47 ಸಿರಾಜುಲ್ಲಾ ರವರೊಂದಿಗೆ ಮತ್ತು ಠಾಣಾ ಸಿಬ್ಬಂದಿಯಾದ ಸಿ.ಪಿ.ಸಿ- 416 ವಾಸು ರವನ್ನು ಕರೆದುಕೊಂಡು ಜಯಂತಿ ಗ್ರಾಮಕ್ಕೆ ಬೆಳಿಗ್ಗೆ 11-00 ಗಂಟೆಯಲ್ಲಿ ಹೋಗಿ, ಗ್ರಾಮದ ಬಸ್ಸ್ ನಿಲ್ದಾಣದಲ್ಲಿದ್ದ ಪಂಚರನ್ನು ಬರಮಾಡಿಕೊಂಡು ಪಂಚರಿಗೆ ಮಾಹಿತಿಯನ್ನು ತಿಳಿಸಿದ್ದು ದಾಳಿಗೆ ಒಪ್ಪಿಕೊಂಡಿರುತ್ತಾರೆ. ಪಂಚರೊಂದಿಗೆ ಜಯಂತಿ ಗ್ರಾಮದ  ಶ್ರೀನಿವಾಸ  ರವರ ಚಿಲ್ಲರೆ ಅಂಗಡಿಯ ಸ್ವಲ್ಪ ದೂರದ ಮರೆಯಲ್ಲಿ  ನೋಡಲಾಗಿ, ಕಾನೂನು ಬಾಹಿರವಾಗಿ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಮದ್ಯವನ್ನು ಕುಡಿಯಲು ಅನುಮತಿ ನೀಡಿರುವುದು ಮತ್ತು ಸಾರ್ವಜನಿಕರಿಗೆ ಮಧ್ಯವನ್ನು ಕುಡಿಯಲು ಸ್ಥಳಾವಕಾಶ ಮಾಡಿಕೊಟ್ಟಿರುವುದು ಕಂಡು ಬಂದಿರುತ್ತೆ. ಪಂಚರೊಂದಿಗೆ ತಾವುಗಳು ಸದರಿ ಮಧ್ಯಪಾನ ಮಾಡುತ್ತಿದ್ದವರ ಮೇಲೆ ಧಾಳಿ ಮಾಡಿದಾಗ, ಸಮವಸ್ತ್ರದಲ್ಲಿದ್ದ ತಮ್ಮನ್ನು ಕಂಡು ಮದ್ಯವನ್ನು ಕುಡಿಯುತ್ತಿದ್ದವರು ಓಡಿ ಹೋದರು, ಆ ಪೈಕಿ ಮದ್ಯವನ್ನು ಸರಬರಾಜು ಮಾಡುವ ಆಸಾಮಿಯನ್ನು ವಶಕ್ಕೆ ಪಡೆದುಕೊಂಡು ಹೆಸರು & ವಿಳಾಸ ಕೇಳಲಾಗಿ, ಶ್ರಿನಿವಾಸ ಬಿನ್ ಲೇಟ್ ಗಂಗುಲಪ್ಪ, 40 ವರ್ಷ, ಚಿಲ್ಲರೆ ಅಂಗಡಿ ವ್ಯಾಪರ ಕೆಲಸ,  ವಾಸ: ಜಯಂತಿ ಗ್ರಾಮ, ಗುಡಿಬಂಡೆ ತಾಲೂಕು ಎಂದು ತಿಳಿಸಿದ್ದು. ಸದರಿ ಆಸಾಮಿಯನ್ನು ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಮಧ್ಯ ಸೇವನೆ ಮಾಡಲು ಸ್ಥಳಾವಕಾಶ ನೀಡಿರುವ ಬಗ್ಗೆ ಇರುವಂತಹ ಲೈಸನ್ಸ್ ತೋರಿಸಲು ಕೇಳಲಾಗಿ, ಸದರಿ ಆಸಾಮಿಯು ಯಾವುದೇ ಪರವಾನಗಿ ಇಲ್ಲವೆಂದು ತಿಳಿಸಿದನು, ನಂತರ ಸ್ಥಳವನ್ನು ಪರಿಶೀಲನೆ ಮಾಡಲಾಗಿ 1) ಹೈ ವಾರ್ಡ್ಸ ಕಂಪನಿಯ ಚೀರ್ಸ್ ವಿಸ್ಕಿ 90 ಎಮ್, ಎಲ್ ಅಳತೆಯ ಮಧ್ಯವಿರುವಂತಹ 10 ಟೆಟ್ರಾ ಪಾಕೆಟ್ಗಳು ಇದ್ದು, 2) ಓಪನ್ ಮಾಡಿರುವಂತ ಹೈ ವಾರ್ಡ್ಸ ಕಂಪನಿಯ ಚೀರ್ಸ್ ವಿಸ್ಕಿ 90 ಒಐ, ಅಳತೆಯ 2 ಖಾಲಿ ಟೆಟ್ರಾ ಪಾಕೆಟ್ಗಳು 3) ಮದ್ಯವನ್ನು ಕುಡಿದು ಬಿಸಾಕಿದಂತಹ 2 ಖಾಲಿ ಪ್ಲಾಸ್ಟಿಕ್ ಗ್ಲಾಸುಗಳು 4) ಒಂದು ಒಂದು ಲೀಟರ್ ಸಾಮಥ್ರ್ಯದ 1 ಖಾಲಿ ವಾಟರ್ ಬಾಟೆಲ್ ಇದ್ದು, ಮಧ್ಯವಿರುವ ಟೆಟ್ರಾ ಪಾಕೆಟ್ಗಳ ದ್ರವ ಪ್ರಮಾಣ ಲೆಕ್ಕ ಮಾಡಲಾಗಿ ಒಟ್ಟು-900 ಎಮ್,ಎಲ್ ಆಗಿದ್ದು, ಆ ಪಾಕೆಟ್ಗಳ ಮೇಲಿನ ದರವನ್ನು ಲೆಕ್ಕ ಮಾಡಲಾಗಿ ಒಟ್ಟು 32*10=320/- ರೂ ಆಗಿರುತ್ತದೆ. ಸದರಿ ಮಾಲನ್ನು ಪಂಚಾಯ್ತಿದಾರರ ಸಮಕ್ಷಮದಲ್ಲಿ ಬೆಳಿಗ್ಗೆ 11-15 ಗಂಟೆಯಿಂದ 12-00 ಗಂಟೆಯವರೆಗೆ ಪಂಚನಾಮೆ ಮೂಲಕ ಅಮಾನತ್ತುಪಡಿಸಿಕೊಂಡಿರುತ್ತದೆ, ಮೇಲ್ಕಂಡ ಆರೋಪಿ & ಮಾಲನ್ನು ಅಸಲು ಪಂಚನಾಮೆಯೊಂದಿಗೆ ಮದ್ಯಾಹ್ನ 12-30 ಗಂಟೆಯಲ್ಲಿ ಠಾಣೆಯಲ್ಲಿ ಹಾಜರುಪಡಿಸಿ, ಸದರಿ ಆರೋಪಿ & ಮಾಲಿನ ವಿರುದ್ದ ಮುಂದಿನ ಕಾನೂನು ಕ್ರಮ ಜರುಗಿಸಲು ಸೂಚಿಸಿದ ಮೇರೆಗೆ ಪ್ರಕರಣವನ್ನು ದಾಖಲಿಸಿರುತ್ತೆ.

 1. ನಂದಿಗಿರಿಧಾಮ ಪೊಲೀಸ್ ಠಾಣೆ ಮೊ.ಸಂ.179/2019 ಕಲಂ. 279-337-338 ಐ.ಪಿ.ಸಿ:-

     ದಿನಾಂಕ:14/10/2019 ರಂದು ಬೆಳಿಗ್ಗೆ 11:00 ಗಂಟೆ ಸಮಯದಲ್ಲಿ ಪಿರ್ಯಾದಿದಾರರಾದ ಶ್ರೀ. ಅಪೂರ್ವ ಚೌದರಿ ಬಿನ್ ಕನ್ವರ್ ಸಿಂಗ್, 28 ವರ್ಷ, ಮೆನೆಜ್ಮೆಂಟ್ ಟ್ರೈನಿ, ಉದ್ದೀವನ ಸ್ಮಾಲ್ ಪೈನಾನ್ಸ್ ಬ್ಯಾಂಕ್, 6 ನೇ ಬ್ಲಾಕ್, ಕೋರಮಂಗಲ, ಬೆಂಗಳೂರು ನಗರ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ:13/10/2019 ರಂದು ತಾನು ಮತ್ತು ತನ್ನ ಕಛೇರಿಯ ಸಹೋದ್ಯೋಗಿ ಸೌರಭ್ ಪುಟೆ, 21 ವರ್ಷ ಇಬ್ಬರು ಆವನ ದ್ವಿಚಕ್ರ ವಾಹನ ಯಮಹ ಎಫ್.ಜೆಡ್-ಎಸ್ ಬೈಕ್ KA-01 TC-130  ರಲ್ಲಿ ಬಂದು ಬೆಟ್ಟದ ಬುಡದಿಂದ ನೋಡಿಕೊಂಡು ಮದ್ಯಾಹ್ನ 3:00 ಗಂಟೆಯಲ್ಲಿ ರಂಗಪ್ಪ ಸರ್ಕಲ್ ಬಳಿ ಬೆಟ್ಟ ಇಳಿದು ಬರುತ್ತಿದ್ದ KA-01 EQ-8116  ಪಲ್ಸರ್ ದ್ವಿಚಕ್ರ ವಾಹನದ ಸವಾರನು ಮತ್ತೊಬ್ಬನನ್ನು ಕುಳ್ಳರಿಸಿಕೊಂಡು ಅತೀ ವೇಗ ಮತ್ತು ಅಜಾಗರೂಕತೆಯಿಂದ ಓಡಿಸಿ ತಮ್ಮ ದ್ವಿಚಕ್ರ ವಾಹನಕ್ಕೆ ಮುಖಾ ಮುಖಿ ಡಿಕ್ಕಿ ಹೊಡೆಸಿದ್ದರ ಪರಿಣಾಮ ತಾನು ಕಾಲುಗಳಿಗೆ ಸಣ್ಣಪಟ್ಟ ಗಾಯಗಳಾಗಿ ಸೌರಭ್ ಪುಟೆ ರವರಿಗೆ ಬಲ ತೊಡೆಯು ಮುರಿದು ಕಣ್ಣಿನ ಬಳಿ ರಕ್ತ ಗಾಯವಾಗಿ, ಸ್ಥಳದಲ್ಲಿದ್ದವರು ಉಪಚರಿಸಿದ್ದು ಆರೋಪಿ ದ್ವಿಚಕ್ರ ವಾಹನದ ಸವಾರನ ಹೆಸರು ಗೋಪಿ ಬಿನ್ ವೆಂಕಟೇಶ್, 21 ವರ್ಷ, ವಿದ್ಯಾರ್ಥಿ, ದೇವನಹಳ್ಳಿ ಮತ್ತೊಬ್ಬ ಪುಟ್ಟ ಎಂದು ತಿಳಿದಿದ್ದು ನಮ್ಮನ್ನು ಪೊಲೀಸ್ ಸಿಬ್ಬಂದಿ ಬಾಲಾಜಿ ಸಿಂಗ್ ಎಂಬುವರು ಆಸ್ಪತ್ರೆಗೆ ಕಳುಹಿಸಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ತಾನು ಠಾಣೆ ತಿಳಿದುಬಂದು ದೂರು ಕೊಡಲು ತಡವಾಗಿದ್ದು ಅಪಘಾತ ಪಡಿಸಿದ KA-01 EQ-8116  ಪಲ್ಸರ್ ದ್ವಿಚಕ್ರ ವಾಹನದ ಸವಾರ ಗೋಪಿ ಎಂಬುವರ ವಿರುದ್ದ ಕಾನೂನು ರೀತ್ಯ ಕ್ರಮ ಜರುಗಿಸಲು ಕೋರಿದ್ದರ ಮೇರೆಗೆ ಈ ಪ್ರ.ವ.ವರಧಿ.

 1. ನಂದಿಗಿರಿಧಾಮ ಪೊಲೀಸ್ ಠಾಣೆ ಮೊ.ಸಂ.180/2019 ಕಲಂ. 15(ಎ), 32(3) ಕೆ.ಇ ಆಕ್ಟ್:-

     ದಿನಾಂಕ:14-10-2019 ರಂದು ಮದ್ಯಾಹ್ನ 13-30 ಗಂಟೆಗೆ ಪಿಎಸ್ಐ ಸಾಹೇಬರು  ಠಾಣೆಗೆ ಹಾಜರಾಗಿ  ಪಂಚನಾಮೆ, ಮಾಲು  ಹಾಗೂ  ಆರೋಪಿತಳೊಂದಿಗೆ  ನೀಡಿದ  ಜ್ಞಾಫನದ ಸಾರಾಂಶವೇನೆಂದರೆ   ಸಾಹೇಬರು  ಸರ್ಕಾರಿ ಜೀಪು ಸಂಖ್ಯೆ ಕೆಎ-40-ಜಿ-296 ರಲ್ಲಿ ಚಾಲಕ ಪಾರೂಖ್ ಮತ್ತು ಸಿಬ್ಬಂದಿಯಾದ ಮದುಸೂದನ ಮತ್ತು ಬಾಲಕೃಷ್ಣ ರವರೊಂದಿಗೆ ಬೆಳಗ್ಗೆ 10-30 ಗಂಟೆಯ ಸಮಯದಲ್ಲಿ  ಕಣಿವೆನಾರಾಯಣಪುರ  ಗ್ರಾಮದ ಕಡೆ ಗಸ್ತಿನಲ್ಲಿದ್ದಾಗ ಆ ಸಮಯಕ್ಕೆ ಅವರಿಗೆ  ಬಾತ್ಮೀದಾರರಿಂದ ಬಂದ ಖಚಿತವಾದ ಮಾಹಿತಿ ಏನೆಂದರೆ ಕಂಗಾನಹಳ್ಳಿ ಗ್ರಾಮದ ರತ್ನಮ್ಮ ಕೊಂ ಲೇಟ್ ಕೃಷ್ಣಪ್ಪ ಎಂಬುವರು ತನ್ನ ಚಿಲ್ಲರೆ ಅಂಗಡಿಯ  ಬಳಿ ಯಾವುದೇ ಲೈಸನ್ಸ್ ಇಲ್ಲದೆ ಸಾರ್ವಜನಿಕರಿಗೆ ಮದ್ಯಪಾನ ಸೇವನೆ ಮಾಢಲು ಸ್ಥಳವಕಾಶ ಮಾಡಿಕೊಟ್ಟಿರುತ್ತಾಳೆಂದು ಮಾಹಿತಿ ಬಂದಿದ್ದು ಮಾಹಿತಿಯ ಮೇರೆಗೆ  ದಾಳಿ ನಡೆಸಲು ಸ್ಥಳಕ್ಕೆ ಮ,ಪಿ,ಸಿ,ಯಾದ ಕುಮಾರಿ ಶಿಲ್ಪಾ ರವರನ್ನು ಕರೆಯಿಸಿಕೊಂಡು ಅವರ ಜೊತೆಯಲ್ಲಿ  ದಾಳಿ ಮಾಡಲು ಕಂಗಾನಹಳ್ಳಿ ಶಾಲೆಯ ಬಳಿ ಇದ್ದಂತಹ ಪಂಚರನ್ನು ಪಂಚರನ್ನಾಗಿ ಕರೆದುಕೊಂಡು ಅವರ ಸಮಕ್ಷಮದಲ್ಲಿ  ಬೆಳಗ್ಗೆ 11-30 ಗಂಟೆಗೆ ಕಂಗಾನಹಳ್ಳಿ  ಗ್ರಾಮದ  ರತ್ನಮ್ಮ ಕೊಂ ಲೇಟ್ ಕೃಷ್ಣಪ್ಪ ರವರ  ಮನೆಯ  ಬಳಿ ಹೋಗುವಷ್ಟರಲ್ಲಿ ಸಮವಸ್ತ್ರದಲ್ಲಿದ್ದ ನಮ್ಮನ್ನು ಕಂಡು ಅಂಗಡಿಯ  ಮುಂದೆ ಮದ್ಯಪಾನ ಸೇವನೆ ಮಾಡುತ್ತಿದ್ದ ಜನರು  ಕುಡಿಯುತ್ತಿದ್ದ  ಲೋಟಗಳನ್ನು  ಬಿಸಾಡಿ ಓಡಿ ಹೋದರು. ಅಂಗಡಿಯ ಮುಂದೆ ಪ್ಲಾಸ್ಟಿಕ್ ಲೋಟಗಳು ಮತ್ತು ಖಾಲಿ ಟೆಟ್ರಾ ಪ್ಯಾಕೇಟುಗಳು ಬಿದ್ದಿದ್ದವು ಅಂಗಡಿಯಲ್ಲಿದ್ದ  ಮಾಲೀಕಳ ಹೆಸರು ವಿಳಾಸವನ್ನು ಕೇಳಲಾಗಿ ರತ್ನಮ್ಮ ಕೊಂ ಲೇಟ್ ಕೃಷ್ಣಪ್ಪ 55 ವರ್ಷ  ಗೊಲ್ಲರು  ಚಿಲ್ಲರೆ ಅಂಗಡಿ ವ್ಯಾಪಾರಿ ಕಂಗಾನಹಳ್ಳಿ   ಗ್ರಾಮ ಚಿಕ್ಕಬಳ್ಳಾಪುರ  ತಾಲ್ಲೂಕು ಎಂತಾ ತಿಳಿಸಿದಳು,  ಅಂಗಡಿಯ  ಮುಂದೆ ಇದ್ದ ಕಲ್ಲು ಚಪ್ಪಡಿಯ  ಕೆಳಗೆ ಬಿಳಿ ಬಣ್ಣದ  ಪ್ಲಾಸ್ಟಿಕ್ ಚೀಲವೊಂದಿದ್ದು ಅದನ್ನು ಪರಿಶೀಲಿಸಲಾಗಿ ಅದರಲ್ಲಿ 1) 90 ML ಸಾಮರ್ಥದ HAYWARDS CHEERS WHISKY ಹೆಸರಿನ  20 ಮದ್ಯದ ಪಾಕೇಟುಗಳಿದ್ದು ಪ್ರತಿ ಪಾಕೇಟಿನ ಬೆಲೆ  30  ರುಪಾಯಿ 32 ಪೈಸೆ .ಎಂದು ಮುದ್ರಿತ ವಾಗಿರುತ್ತದೆ.ಇದು ಒಟ್ಟು-1 Leter.800 ML ಮದ್ಯವಿದ್ದು ಒಟ್ಟು ಬೆಲೆ 606/-ರೂ ಆಗುತ್ತದೆ.,2) HAYWARDS CHEERS WHISKY ಹೆಸರಿನ ಮದ್ಯದ 5 ಖಾಲಿ ಟೆಟ್ರಾ ಪ್ಯಾಕೇಟುಗಳು 3) 5 ಖಾಲಿ ಪ್ಲಾಸ್ಟಿಕ್ ಲೋಟಗಳು ಇರುತ್ತವೆ, ಇವುಗಳನ್ನು ತನ್ನ ಚಿಲ್ಲರೆ ಅಂಗಡಿಯ ಬಳಿ ಇಟ್ಟುಕೊಂಡು ಸಾರ್ವಜನಿಕರಿಗೆ ಮದ್ಯವನ್ನು ಸೇವನೆ ಮಾಡಲು ಸ್ಥಳವಾಕಾಶ ಮಾಡಿಕೊಟ್ಟಿರುವ ಬಗ್ಗೆ ನಿನ್ನ ಬಳಿ ಪರವಾನಿಗೆ ಇದೆಯೇ? ಎಂದು ಚಿಲ್ಲರೆ ಅಂಗಡಿಯ ಮಾಲೀಕಳನ್ನು ಕೇಳಿದಾಗ ಅಂಗಡಿಯ ಮಾಲೀಕಳು ತನ್ನ ಬಳಿ ಪರವಾನಗಿ  ಇಲ್ಲವೆಂದು ಹೇಳಿದ್ದು ಸದರಿ ಮಾಲನ್ನು ಪಂಚನಾಮೆಯ ಮೂಲಕ  ಬೆಳಗ್ಗೆ 11-40 ಗಂಟೆಯಿಂದ 12-40 ಗಂಟೆಯ ವರೆವಿಗೆ ಅಮಾನತ್ತು ಪಡಿಸಿಕೊಂಡು ಅಂಗಡಿಯ ಮಾಲೀಕಳಾಧ ಶ್ರೀಮತಿ ರತ್ನಮ್ಮ ಕೊಂ ಕೃಷ್ಣಪ್ಪ ರವರನ್ನು ಮತ್ತು ಸಿಕ್ಕ ಮಾಲುಗಳನ್ನು ವಶಕ್ಕೆ ಪಡೆದು ಠಾಣೆಗೆ  ವಾಪಸ್ಸು ಬಂದು ವರದಿಯನ್ನು ನೀಡುತ್ತಿದ್ದು ಆರೋಫಿತಳ ವಿರುದ್ದ ಮುಂದಿನ ಕಾನೂನು ಕ್ರಮ ಕೈಗೊಳ್ಳಲು ಸೂಚಿಸಿದ ಮೇರೆಗೆ ಈ ಪ್ರವವರದಿ,

 1. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.346/2019 ಕಲಂ. 279-337 ಐ.ಪಿ.ಸಿ:-

     ದಿನಾಂಕ: 14-10-2019 ರಂದು ಬೆಳಿಗ್ಗೆ 10.30 ಗಂಟೆಯಲ್ಲಿ ಫಿರ್ಯಾದಿದಾರರಾದ ಶ್ರೀಮತಿ ರಾಧಮ್ಮ ಕೋಂ ಶ್ರೀರಾಮಪ್ಪ, 45 ವರ್ಷ, ತಿಗಳರು, ಗೃಹಿಣಿ, ಮಯೂರ ಟಾಕೀಸ್ ಪಕ್ಕ, ಶಿಡ್ಲಘಟ್ಟ ನಗರ ರವರು ಠಾಣೆಯಲ್ಲಿ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ತಮ್ಮ ಸ್ವಂತ ಗ್ರಾಮ ಶಿಡ್ಲಘಟ್ಟ ತಾಲ್ಲೂಕು ಮೇಲೂರು ಗ್ರಾಮವಾಗಿದ್ದು ತಾನು ತನ್ನ ಮಗನಾದ ರಾಕೇಶ್ ರವರು ಶಿಡ್ಲಘಟ್ಟ ನಗರದ ಮಯೂರ ಟಾಕೀಸ್ ಬಳಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದು ದಿನಾಂಕ: 12-10-2019 ರಂದು ಮದ್ಯಾಹ್ನ ಸುಮಾರು 1.00 ಗಂಟೆಯಲ್ಲಿ ಮೇಲೂರು ಗ್ರಾಮಕ್ಕೆ ಹೋಗಿ ಬರಲು ನಮ್ಮ ಪಕ್ಕದ ಮನೆಯ ವಾಸಿಯಾದ ಶ್ರೀಮತಿ ಮುನಿರತ್ನಮ್ಮ ಕೋಂ ವೆಂಕಟರಾಯಪ್ಪ ಹಾಗೂ ಅಕೆಯ ಮಗಳಾದ ಕಾವೇರಿ ರವರೊಂದಿಗೆ   ತಮ್ಮ ಬಾಬತ್ತು ನಂ. ಕೆಎ-40-ವಿ-9840 ಸುಜುಕಿ ಸ್ಕೂಟಿಯಲ್ಲಿ ದ್ವಿಚಕ್ರವಾಹನವನ್ನು ತಾನು ಚಾಲನೆ ಮಾಡಿಕೊಂಡು  ಮೇಲೂರು ಗ್ರಾಮಕ್ಕೆ ಹೋಗಿ ಸಂಜೆ ವಾಪಸ್ಸು ಶಿಡ್ಲಘಟ್ಟ ನಗರಕ್ಕೆ ಬರುವ ಸಲುವಾಗಿ ದ್ವಿಚಕ್ರ ವಾಹನದಲ್ಲಿ ತಾನು ಹಾಗೂ ಮುನಿರತ್ನಮ್ಮ ಮತ್ತು ಆಕೆಯ ಮಗಳು ಬರುತ್ತಿದ್ದು, ದ್ವಿಚಕ್ರ ವಾಹನವನ್ನು ತಾನೇ ಚಾಲನೆ ಮಾಡಿಕೊಂಡು ಚೌಡಸಂದ್ರ ಗೇಟ್ ನಿಂದ ಸ್ವಲ್ಪ ಮುಂದೆ ಸಂಜೆ 5.30 ಗಂಟೆಯಲ್ಲಿ ಬರುತ್ತಿದ್ದಾಗ ತಮ್ಮ ದ್ವಿಚಕ್ರ ವಾಹನದ ಹಿಂಭಾಗ ಮೇಲೂರು ಕಡೆಯಿಂದ ಬರುತ್ತಿದ್ದ ನಂ. ಕೆಎ-05-ಬಿ-7057 ಕ್ಯಾಂಟರ್ ವಾಹನವನ್ನು ಅದರ ಚಾಲಕನು ಅತಿವೇಗ & ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ತಾನು ಚಾಲನೆ ಮಾಡುತ್ತಿದ್ದ ದ್ವಿಚಕ್ರ ವಾಹನಕ್ಕೆ ಹಿಂಬದಿಯಿಂದ ಡಿಕ್ಕಿ ಹೊಡೆಸಿದ ಪರಿಣಾಮ ತಾವು ದ್ವಿಚಕ್ರವಾಹನದ ಸಮೇತ ಕೆಳಗೆ ರಸ್ತೆಯಲ್ಲಿ ಬಿದ್ದು ಹೋಗಿದ್ದರ ಪರಿಣಾಮ ತನಗೆ ಬಲಗೈ ಮೇಲೆ, ಬಲಭಾಗದ ಕಣ್ಣಿನ ಬಳಿ ಹಾಗೂ ಇತರೆ ಕಡೆ ಗಾಯಗಳಾಗಿದ್ದು, ಮುನಿರತ್ನಮ್ಮ ರವರಿಗೆ ಬಲಗಾಲಿಗೆ ರಕ್ತ ಗಾಯವಾಗಿದ್ದು, ಮುನಿರತ್ನಮ್ಮ ರವರ ಮಗಳಾದ ಕಾವೇರಿ ರವರಿಗೆ ಎಡಕೆನ್ನೆಯ ಮೇಲೆ ಗಾಯಗಳಾಗಿದ್ದು ಆಗ ಅಲ್ಲಿಯೇ ಇದ್ದ ಹಂಡಿಗನಾಳ ಗ್ರಾಮದ ಗೋಪಾಲಕೃಷ್ಣ ಬಿನ್ ರಾಮಕೃಷ್ಣಪ್ಪ ರವರು ನಮ್ಮನ್ನು ಉಪಚರಿಸಿ ಸ್ಥಳಕ್ಕೆ ಅಂಬ್ಯುಲೆನ್ಸ್ ವಾಹನವನ್ನು ಕರೆಯಿಸಿಕೊಂಡು ಅದರಲ್ಲಿ ಹಾಕಿ ಚಿಕಿತ್ಸೆಗಾಗಿ ಶಿಡ್ಲಘಟ್ಟ ಸರ್ಕಾರಿ ಆಸ್ಪತ್ರೆಗೆ ಕಳುಹಿಸಿದ್ದು, ತಾವು ಶಿಡ್ಲಘಟ್ಟ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡು ಹೆಚ್ಚಿನ ಚಿಕಿತ್ಸೆಗಾಗಿ ಚಿಕ್ಕಬಳ್ಳಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆಪಡೆದಿದ್ದು ತಾನು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುಕೊಳ್ಳುತ್ತಿದ್ದರಿಂದ ಈ ದಿನ ತಡವಾಗಿ ಠಾಣೆಗೆ ಬಂದು ದೂರನ್ನು ನೀಡುತ್ತಿದ್ದು, ತಾನು ಚಾಲನೆ ಮಾಡುತ್ತಿದ್ದ ನಂ. ಕೆಎ-40-ವಿ-9840 ಸುಜುಕಿ ಸ್ಕೂಟಿಗೆ ಡಿಕ್ಕಿ ಹೊಡೆದು ತನಗೆ, ಮುನಿರತ್ನಮ್ಮ ಮತ್ತು ಆಕೆಯ ಮಗಳಾದ ಕಾವೇರಿ ರವರಿಗೆ ಗಾಯಗಳಾಗಲು ಕಾರಣನಾದ ನಂ. ಕೆಎ-05-ಬಿ-7057 ಕ್ಯಾಂಟರ್ ವಾಹನದ ಚಾಲಕನ ವಿರುದ್ದ ಕಾನೂನು ರೀತ್ಯ ಕ್ರಮ ಕೈಗೊಳ್ಳಲು ಕೋರಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿರುತ್ತೆ.