ದಿನಾಂಕ :14/09/2020 ರ ಅಪರಾಧ ಪ್ರಕರಣಗಳು

  1. ಬಾಗೇಪಲ್ಲಿ ಪೊಲೀಸ್ ಠಾಣೆ ಮೊ.ಸಂ.227/2020 ಕಲಂ: 20(b) NARCOTIC DRUGS & PSYCHOTROPIC SUBSTANCES ACT, 1985:-

     ದಿ: 14-09-2020 ರಂದು 13:15 ಗಂಟೆಗೆ ಸಿ.ಪಿ.ಐ ಬಾಗೇಪಲ್ಲಿ ವೃತ್ತ ರವರು ನೀಡಿದ ದೂರನ್ನು ಸ್ವೀಕರಿಸಿದ್ದರ ಸಾರಾಂಶ – ಈ ದಿನಾಂಕ: 14-09-2020 ರಂದು ಸಮಯ ಮದ್ಯಾಹ್ನ 1-00 ಗಂಟೆಗೆ ಕಛೇರಿಯಲ್ಲಿರುವಾಗ್ಗೆ ಬಾಗೇಪಲ್ಲಿ ಪೊಲೀಸ್ ಠಾಣಾ ಸರಹದ್ದಿನ ಬಾಗೇಪಲ್ಲಿ ಪುರದ ನ್ಯಾಷನಲ್ ಕಾಲೇಜ್ ಬಳಿ ಯಾರೋ ಒಬ್ಬ ಹೆಂಗಸು ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದಾರೆ ಎಂಬುದಾಗಿ ಬಾತ್ಮಿದಾರರಿಂದ ಖಚಿತ ಮಾಹಿತಿ ಬಂದಿದ್ದು, ಈ ಸಂಬಂದ ಪಂಚರ ಸಮಕ್ಷಮದಲ್ಲಿ ದಾಳಿ ಮಾಡಲು ಎನ್.ಡಿ.ಪಿ.ಎಸ್ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಲು ನೀಡಿದ ವರದಿ, ಎಂದು ನೀಡಿದ ದೂರು.

  1. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.123/2020 ಕಲಂ: 20(b)(I)A NARCOTIC DRUGS & PSYCHOTROPIC SUBSTANCES ACT, 1985:-

     ದಿನಾಂಕ 13/09/2020 ರಂದು ಸಂಜೆ 06.30 ಗಂಟೆಗೆ ಪಿಎಸ್ಐ ರವರು ಆರೋಪಿ ಮಾಲು ಸಮೇತ ನೀಡಿದ ಜ್ಞಾಪನದ ಸಾರಾಂಶವೇನೆಂದರೆ ದಿನಾಂಕ 13/09/2020 ರಂದು ಮಧ್ಯಾಹ್ನ 03.00 ಗಂಟೆ ಸಮಯದಲ್ಲಿ ಠಾಣೆಯಲ್ಲಿದ್ದಾಗ ಬಾತ್ಮಿದಾರರಿಂದ ಬಂದ ಖಚಿತ ಮಾಹಿತಿಯಂತೆ ಠಾಣಾ ಸರಹದ್ದಿನ ಎನ್ ಹೆಚ್ 234 ರಸ್ತೆಯ ನಾಯನಹಳ್ಳಿ ಗೇಟ್ ಸಮೀಪ ಬಸ್ ತಂಗುದಾಣದ ಮುಂಭಾಗದಲ್ಲಿ ಕೆಎ-27 ಬಿ-9438 ನೊಂದಣಿ ಸಂಖ್ಯೆಯ ಅಶೋಕ ಲೈ ಲ್ಯಾಂಡ್ ದೋಸ್ತ ಪ್ಲಸ್ ವಾಹನದಲ್ಲಿ ಗಾಂಜ ಮಾರಾಟ ಮಾಡುತ್ತಿರುತ್ತಾನೆಂದು ಮಾಹಿತಿ ಮೇರೆಗೆ ಮಾನ್ಯ ಪೊಲೀಸ್ ಅಧೀಕ್ಷಕರಿಗೆ ಮಾಹಿತಿಯನ್ನು ತಿಳಿಸಿ ಅವರಿಂದ ಲಿಖಿತ ಅನುಮತಿಯನ್ನು ಪಡೆದುಕೊಂಡು ಮತ್ತು ಮಾನ್ಯ ಪೌರಾಯುಕ್ತರು ನಗರಸಭೆ ಚಿಕ್ಕಬಳ್ಳಾಪುರ ರವರಿಗೆ ತಿಳಿಸಿ ದಾಳಿ ನಡೆಸಲು ಲಿಖಿತ ಅನುಮತಿಯನ್ನು ಪಡೆದುಕೊಂಡು ನಂತರ ದಾಳಿ ಮಾಡಲು ಪಂಚರಿಗೆ ನೋಟೀಸನ್ನು ಜಾರಿ ಮಾಡಿ ಅವರನ್ನು ಠಾಣೆಗೆ ಬರಮಾಡಿಕೊಂಡು ಅವರಿಗೆ ಈ ಮೇಲ್ಕಂಡ ವಿಚಾರವನ್ನು ತಿಳಿಸಿ ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಆಸಾಮಿಯ ಮೇಲೆ ದಾಳಿ ಮಾಡಿ ವಶಕ್ಕೆ ಪಡೆಯಲು ನಮ್ಮೊಂದಿಗೆ ಸಹಕರಿಸಬೇಕು ಎಂತ ತಿಳಿಸಿದಾಗ ಅವರು ದಾಳಿ ಮಾಡಲು ಒಪ್ಪಿಕೊಂಡಿದ್ದು ನಂತರ ಠಾಣೆಯ ಪಿಸಿ 264 ನರಸಿಂಹಮೂರ್ತಿ, ಮತ್ತು ಪಿಸಿ 97 ರವಿಕುಮಾರ್ ರವರನ್ನು ಸರ್ಕಾರಿ ವಾಹನದ ಸಂಖ್ಯೆ ಕೆಎ-40 ಜಿ-567 ರಲ್ಲಿ ಕುಳ್ಳರಿಸಿಕೊಂಡು ಎನ್ ಹೆಚ್ 234 ಶಿಡ್ಲಘಟ್ಟ-ಚಿಕ್ಕಬಳ್ಳಾಪುರ ನಾಯನಹಳ್ಳಿ ಗೇಟ್ ಬಳಿ ಇರುವ ಬಸ್ ತಂಗುದಾಣದ ಬಳಿಗೆ ಸಂಜೆ 04.30 ಗಂಟೆಗೆ ಹೋದಾಗ ಕೆಎ-27 ಬಿ-9438 ನೊಂದಣಿ ಸಂಖ್ಯೆಯ ಅಶೋಕ ಲೈಲ್ಯಾಂಡ್ ದೋಸ್ತ್ ಪ್ಲಸ್ ವಾಹನದಲ್ಲಿ ಬಂದವನನ್ನು ತಡೆದು ವಾಹನವನ್ನು ಪಂಚರಾದ ನಮ್ಮಗಳ ಸಮಕ್ಷಮ ಪರಿಶೀಲಿಸಲಾಗಿ ಸದರಿ ವಾಹನದ ಡ್ಯಾಷ್ ಬೋರ್ಡ್ ನಲ್ಲಿ ಒಂದು ಹಸಿರು ಬಣ್ಣದ ಪ್ಲಾಸ್ಟಿಕ್ ಕವರ್ ನಲ್ಲಿ ಗಾಂಜ ಸಾಗಾಣಿಕೆ ಮಾಡುತ್ತಿರುವುದು ಖಾತ್ರಿ ಪಡಿಸಿಕೊಂಡೆವು ಅತನ ಹೆಸರು ಮತ್ತು ವಿಳಾಸ ಕೇಳಲಾಗಿ ಮಹಬೂಬ್ ಅಲಿ @ ಮಹಮದ್ ಅಲಿ ಬಿನ್ ಷರೀಫ್ ಸಾಬ್ 22 ವರ್ಷ, ಮುಸ್ಲಿಂ ಜನಾಂಗ, ಚಾಲಕ ವೃತ್ತಿ ವಾಸ ಹೊಸಹಳ್ಳಿ ಗ್ರಾಮ ಕಸಬ ಹೋಬಳಿ ಹಾವೇರಿ ತಾಲ್ಲೂಕು ಮತ್ತು ಜಿಲ್ಲೆ ಎಂದು ತಿಳಿಸಿರುತ್ತಾನೆ, ತದ ನಂತರ ಅತನನ್ನು ಪೌರಾಯುಕ್ತರವರ ಸಮಕ್ಷಮದಲ್ಲಿ ಅಂಗಶೋಧನೆ ಮಾಡುವ ಸಲುವಾಗಿ ಪೌರಾಯುಕ್ತರವರಿಗೆ ಮನವಿ ಪತ್ರವನ್ನು ಸಲ್ಲಿಸಿಕೊಂಡು ಅವರನ್ನು ಬರಮಾಡಿಕೊಂಡು ಅವರ ಸಮಕ್ಷಮದಲ್ಲಿ ಪೊಲೀಸ್ ಸಿಬ್ಬಂದಿ ಮತ್ತು ಪಂಚರ ಸಮಕ್ಷಮದಲ್ಲಿ ಸಂಜೆ 04.30 ಗಂಟೆಯಿಂದ 06.00 ಗಂಟೆ ವರೆಗೆ ಪಂಚನಾಮೆಯ ಮೂಲಕ  ಅಂಗಶೋದನೆ ಮಾಡಿದಾಗ ಗಾಂಜದ ತೂಕ 180 ಗ್ರಾಂ ಇದ್ದು ಬಿಳಿಯ ಬಟ್ಟೆಯ ಬ್ಯಾಗಿನಲ್ಲಿಟ್ಟು ಅರಗು ಮಾಡಿ K ಎಂಬ ಇಂಗ್ಲೀಷ್ ಅಕ್ಷರದಿಂದ ಮೊಹರು ಮಾಡಿರುತ್ತೆ ಇದರ ಒಟ್ಟು ಬೆಲೆ ಸುಮಾರು 3,000/- ರೂ ಆಗಿರುತ್ತೆ ಸದರಿ 180 ಗ್ರಾಂ ಗಾಂಜವನ್ನು ಮತ್ತು ಕೆಎ-27 ಬಿ-9438 ನೊಂದಣಿ ಸಂಖ್ಯೆಯ ಅಶೋಕ ಲೈ ಲ್ಯಾಂಡ್ ದೋಸ್ತ್ ಪ್ಲಸ್ ವಾಹನವನ್ನು ಆತನ ಬಳಿ ಪರ್ಸನಲ್ಲಿ ದೊರೆತ್ತಿದ್ದ ಗಾಂಜಾ ಮಾರಾಟದಿಂದ ಬಂದಿದ್ದ 3000/- ರೂ ನಗದು ಹಣ ಮತ್ತು ಆರೋಪಿಯನ್ನು ಠಾಣೆಗೆ ಸಂಜೆ 06.30 ಗಂಟೆಗೆ ಠಾಣೆಗೆ ಬಂದು ಕಾನೂನು ಕ್ರಮ ಜರುಗಿಸಲು ಸೂಚಿಸಿದ ಮೇರೆಗೆ ಈ ಪ್ರ ವ ವರದಿ.

  1. ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆ ಮೊ.ಸಂ.57/2020 ಕಲಂ: 32,34 KARNATAKA EXCISE ACT:-

     ದಿನಾಂಕ; 13-09-2020 ರಂದು ಮದ್ಯಾಹ್ನ 2.45 ಗಂಟೆಗೆ ಪಿ.ಎಸ್.ಐ ರವರು ಠಾಣೆಗೆ ಹಾಜರಾಗಿ ದಾಳಿ ಪಂಚನಾಮೆಯೊಂದಿಗೆ ಮಾಲು, ವರದಿಯ ದೂರನ್ನು ನೀಡಿದ್ದರ ಸಾರಾಂಶವೇನೆಂದರೆ ತಾನು,ಠಾಣೆಯ ಪ್ರಭಾರದಲ್ಲಿದ್ದಾಗ ದಿನಾಂಕ:-13-09-2020 ರಂದು ಮದ್ಯಾಹ್ನ12;30 ಗಂಟೆ ಸಮಯದಲ್ಲಿ ಯಾರೋ ಒಬ್ಬ  ಆಸಾಮಿ ಚಿಕ್ಕಬಳ್ಳಾಫುರದಿಂದ  ಅಂಗಡಿಯಲ್ಲಿ ಅಕ್ರಮವಾಗಿ ಯಾವುದೇ ಪರವಾನಿಗೆ ಇಲ್ಲದೇ ಮದ್ಯದ ಪಾಕೇಟ್ ಗಳನ್ನು ಮಾರಾಟ ಮಾಡಲು  ತೆಗದುಕೊಂಡು ಹೋಗುತ್ತಿರುವುದಾಗಿ ಬಂದ ಮಾಹಿತಿಯ ಮೇರೆಗೆ  ಸಬ್ ಇನ್ಸ್ ಪೆಕ್ಟರ್ ಆದ ನಾನು ಸಿಬ್ಬಂದಿಯವರಾದ ಪಿ.ಸಿ-142 ಶ್ರೀ ಅಶೋಕ, ಸಿ.ಪಿ.ಸಿ-275 ಶ್ರೀ ಬೀರಪ್ಪ ಏವೂರ, ಪಿ.ಸಿ-332, ಶ್ರೀ ಸಂತೋಷ ಜಕ್ಕಣ್ಣನವರ್ ಸರ್ಕಾರಿ ಜೀಪ್ ಸಂಖ್ಯೆ ಕೆಎ-40-ಜಿ-139 ರಲ್ಲಿ ಚಾಲಕ ಹೆಚ್.ಜಿ ಕೇಶವ ರವರೊಂದಿಗೆ ಮದ್ಯಾಹ್ನ12-40 ಗಂಟೆಗೆ ಠಾಣೆಯಿಂದ ಹೊರಟು ಮದ್ಯಾಹ್ನ 12.50 ಗಂಟೆಗೆ ಗಂಗಮ್ಮ ಗುಡಿ ರಸ್ತೆಯ ಲಕ್ಕಮ್ಮ ದೊಡ್ಡಮುನಿಯಪ್ಪ ಕಲ್ಯಾಣ ಮಂಟಪದ ಬಳಿ ಹೋದೆವು. ಅಲ್ಲಿಗೆ ಬಂದ 1)ಪ್ರವೀಣ್ ಕುಮಾರ್ ಬಿನ್ ಆನಂದಪ್ಪ, 2) ನಾಗೇಶ ಬಿನ್ ನರಸಿಂಹಪ್ಪ, ರವರುಗಳನ್ನು ಪಂಚರಾಗಿ ಬರಮಾಡಿಕೊಂಡು ಅವರಿಗೆ ಯಾರೋ ಒಬ್ಬ ಆಸಾಮಿ ಚಿಕ್ಕಬಳ್ಳಾಫುರದಿಂದ  ಅಂಗಡಿಯಲ್ಲಿ ಅಕ್ರಮವಾಗಿ ಯಾವುದೇ ಪರವಾನಿಗೆ ಇಲ್ಲದೇ ಮದ್ಯದ ಪಾಕೇಟ್ ಗಳನ್ನು ಮಾರಾಟ ಮಾಡಲು  ತೆಗದುಕೊಂಡು ಬರುತ್ತಿರುವುದಾಗಿ ತಿಳಿಸಿ ದಾಳಿ ಪಂಚನಾಮೆಗೆ ಸಹಕರಿಸುವಂತೆ ಕೋರಿದರು. ಅದಕ್ಕೆ ನಾವುಗಳು ಒಪ್ಪಿಕೊಂಡೆವು. ಪಂಚರಾದ ನಾವು ಮತ್ತು ಪೋಲೀಸರು ಜೀಫ್ ಅನ್ನು ಮರೆಯಾಗಿ  ನಿಲ್ಲಿಸಿ  ಲಕ್ಕಮ್ಮ ದೊಡ್ಡಮುನಿಯಪ್ಪ ಕಲ್ಯಾಣ ಮಂಟಪದ ಬಳಿ ಮರೆಯಾಗಿ ನಿಂತುಕೊಂಡಿದ್ದು, ಮದ್ಯಾಹ್ನ 1.00 ಗಂಟೆಗೆ ಗಂಗಮ್ಮ ಗುಡಿ ರಸ್ತೆ ನಲ್ಲಿ  ಒಬ್ಬ ವ್ಯಕ್ತಿ ಬ್ಯಾಗ್ ಅನ್ನು ಹೊತ್ತಿಕೊಂಡು ಬರುತ್ತಿದ್ದನು  ಲಕ್ಕಮ್ಮ ದೊಡ್ಡಮುನಿಯಪ್ಪ ಕಲ್ಯಾಣ ಮಂಟಪದ ಬಳಿ ಮರೆಯಾಗಿ ನಿಂತುಕೊಂಡಿದ್ದೆವು ಮದ್ಯಾಹ್ನ 1.00 ಗಂಟೆಗೆ ಗಂಗಮ್ಮ ಗುಡಿ ರಸ್ತೆ ನಲ್ಲಿ  ಯಾರೋ ಒಬ್ಬ ವ್ಯಕ್ತಿ ಬ್ಯಾಗ್ ಅನ್ನು ಹೊತ್ತಿಕೊಂಡು ಬರುತ್ತಿದ್ದನು.   ಸಮವಸ್ತ್ರದಲ್ಲಿದ್ದ ಪೊಲೀಸರನ್ನು ನೋಡಿ  ಆಸಾಮಿಯು ಬ್ಯಾಗನ್ನು ರಸ್ತೆಯ ಬದಿಯಲ್ಲಿ ಬಿಸಾಡಿ ಓಡಿ ಹೋದನು. ನಂತರ ಪೊಲೀಸರು ಆತನನ್ನು ಹಿಂಬಾಲಿಸಿಕೊಂಡು ಓಡಿ ಹೋದರು. ಆತನು ಯಾವುದೋ ಸಂದಿಯಲ್ಲಿ ತಪ್ಪಿಸಿಕೊಂಡು ಓಡಿ ಹೋಗಿರುವುದಾಗಿ ಸಿಬ್ಬಂದಿಯವರು ಬಂದು ತಿಳಿಸಿದ್ದು, ನಂತರ ಆಸಾಮಿಯು ರಸ್ತೆಯ ಬದಿಯಲ್ಲಿ ಬಿಸಾಡಿ ಹೋಗಿರುವ ಬ್ಯಾಗನ್ನು ಪರಿಶೀಲಿಸಲಾಗಿ ಈ ಬ್ಯಾಗಿನಲ್ಲಿ ಟೇಟ್ರಾ ಪಾಕೆಟ್ ಗಳಿದ್ದು ಎಣಿಕೆ ಮಾಡಲಾಗಿ 1) McDowells Brandy  ಎಂದು  ಲೇಬಲ್ ಇರುವ 180 ಎಂ ಎಲ್, ನ 10 ಟೇಟ್ರಾ ಪಾಕೇಟ್ ಗಳು, 2) BAGPIPAR DELUXE Whisky ಲೇಬಲ್ ಇರುವ 180 ಎಂ.ಎಲ್ ನ 25 ಟೆಟ್ರಾ ಪಾಕೇಟ್ ಗಳಿರುತ್ತೆ.  ಒಟ್ಟು 6,300 ಲೀಟರ್ ( ಆರು ಲೀಟರ್ ಮೂರು ನೂರು ಎಂ.ಎಲ್ ) ಇದರ ಒಟ್ಟು ಬೆಲೆ 4406/- ರೂಗಳಾಗಬಹುದು. ಮದ್ಯದ ಟೇಟ್ರಾ ಪಾಕೇಟ್ ಗಳ ಪೈಕಿ 1) McDowells Brandy  ಎಂದು  ಲೇಬಲ್ ಇರುವ 180 ಎಂ ಎಲ್, ನ 4 ಟೇಟ್ರಾ ಪಾಕೇಟ್ ಗಳನ್ನು  2) BAGPIPAR DELUXE Whisky ಲೇಬಲ್ ಇರುವ 180 ಎಂ.ಎಲ್ ನ 10 ಟೆಟ್ರಾ ಪಾಕೇಟ್ ಗಳನ್ನು ಸ್ಯಾಂಪಲ್ ಗಾಗಿ ತೆಗೆದು ಪ್ರತೇಕವಾಗಿ ಬಿಳಿ ಬಟ್ಟೆಯಿಂದ ಸುತ್ತಿ”S” ಎಂಬ ಅಕ್ಷರದಿಂದ  ಸೀಲ್ ಮಾಡಿ ಮೊಹರ್ ಮಾಡಿರುತ್ತೆ.  ಅವುಗಳನ್ನು ಪರೀಕ್ಷೆ ಸಲುವಾಗಿ  ಎಫ್.ಎಸ್,ಎಲ್  ಬೆಂಗಳೂರು ರವರಿಗೆ ಕಳುಹಿಸಿಕೊಡಲು  ತೆಗೆದಿರುತ್ತೆ. ಮದ್ಯದ ಟೆಟ್ರಾ ಪ್ಯಾಕೆಟ್ ಗಳನ್ನು  ಮತ್ತು ಸ್ಯಾಂಪಲ್ ಗಾಗಿ ತೆಗೆದಿರುವ ಮದ್ಯದ ಟೆಟ್ರಾ ಪ್ಯಾಕೆಟ್ ಗಳನ್ನು, ಈ ಕೇಸಿನ ಮುಂದಿನ ನಡುವಳಿಕೆಯ ಬಗ್ಗೆ ಅಮಾನತ್ತು ಪಡಿಸಿಕೊಂಡಿರುತ್ತೆ. ಈ ಬಗ್ಗೆ ತಪ್ಪಿಸಿಕೊಂಡಿರುವ ಆಪಾದಿತನ ವಿರುದ್ದ ಕಲಂ: 32,34 ಕೆ.ಇ ಆಕ್ಟ್ ರೀತ್ಯಾ ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಳ್ಳಲು ಸೂಚಿಸಿದ ಮೇರೆಗೆ ಈ ಪ್ರ.ವ.ವರದಿ.

  1. ಚಿಕ್ಕಬಳ್ಳಾಪುರ ಸಂಚಾರಿ ಪೊಲೀಸ್ ಠಾಣೆ ಮೊ.ಸಂ.41/2020 ಕಲಂ: 279,337 ಐ.ಪಿ.ಸಿ & 177 ಐ.ಎಂ.ವಿ ಆಕ್ಟ್:-

     ದಿನಾಂಕ09-2020ರಂದು ಶ್ರೀ ಮನೋಜ್ ಕುಮಾರ್ ಆರ್  ಬಿನ್ ಮುನಿರಾಜು ಆರ್ 25ವರ್ಷ.ಬಲಜಿಗರು, ಲಾರಿ ಚಾಲಕ,ದಾಸರವಾರಪಲ್ಲಿ ಗ್ರಾಮ.ಸೋಮಲ ಮಂಡಲಂ.ಚಿತ್ತೂರು ಜಿಲ್ಲೆ.ಅಂದ್ರಪ್ರದೇಶ ರವರು ಠಾಣೆಗೆ ಹಾಜರಾಗಿ ನೀಡಿದ ಬೆರಳಚ್ಚು ದೂರಿನ ಸಾರಾಶವೆನೇಂದರೆ ದಿನಾಂಕ:-10/09/2020 ರಂದು AP-03-TE-3245  ಲಾರಿಗೆ ಗೋಧಿ ಲೋಡ್ ಮಾಡಿಕೊಂಡು ಚಕ್ರಪುರ (ಮದ್ಯಪ್ರದೇಶ) ಬಿಟ್ಟು ತಾನು ಮತ್ತು ತಮ್ಮ ಲಾರಿಯ ಚಾಲಕ ಖಾದರವಲ್ಲಿ ಬಿನ್ ಹೈದರವಲ್ಲಿ 30 ವರ್ಷ, ಕಲ್ಲೂರು ಗ್ರಾಮ, ಚಿತ್ತೂರು ಜಿಲ್ಲೆ, ಆಂದ್ರಪ್ರದೇಶ, ರವರುಗಳು ಚಕ್ರಪುರ (ಮದ್ಯಪ್ರದೇಶ) ದಿಂದ  ಗೋಧಿಯನ್ನು ಲೋಡ್ ಮಾಡಿಕೊಂಡು ಬೆಂಗಳೂರಿಗೆ ಬರಲು ಎನ್ ಹೆಚ್ 44 ಹೈವೇ ರಸ್ತೆಯ  ಬಾಗೇಪಲ್ಲಿ-ಚಿಕ್ಕಬಳ್ಳಾಪುರ  ರಸ್ತೆಯ ಶಿಡ್ಲಘಟ್ಟ  ಪ್ಲೇ ಓವರ್  ಮೇಲೆ ದಿನಾಂಕ;-13-09-2020 ರಂದು ಸುಮಾರು ಬೆಳಿಗ್ಗೆ 05-00 ಗಂಟೆಯ ಸಮಯದಲ್ಲಿ ಬರುತ್ತಿದ್ದೇವು. ಅದೇ ಮಾರ್ಗದಲ್ಲಿ ತಮ್ಮ ಮುಂಬಾಗ TN-52-L-9690 ಲಾರಿಯು ಕೆಟ್ಟು ನಿಂತಿದ್ದು, ಯಾವುದೇ ಪಾರ್ಕಿಂಗ್ ಲೈಟ್ ಮುನ್ನೆಚ್ಚರಿಕಾ ಕ್ರಮಗಳನ್ನು ಮತ್ತು ಮುನ್ಸೂಚನೆ ಇಲ್ಲದೆ ಅಜಾಗರೂಕತೆಯಿಂದ  ನಿಲ್ಲಿಸಿದ  ಪರಿಣಾಮ ತಮ್ಮ ಲಾರಿಯು ಸದರಿ ಲಾರಿಯ ಹಿಂಬಾಗಕ್ಕೆ ಡಿಕ್ಕಿ  ಪರಿಣಾಮ ಮುಂಭಾಗ ತಮ್ಮ ಲಾರಿಯ ಕ್ಯಾಬಿನ್  ಪೂರ್ತಿ ಜಕಂಗೊಂಡು ಚಾಲನೆ ಮಾಡುತ್ತಿದ್ದ ತಮ್ಮ ಲಾರಿ ಚಾಲಕನ ಎಡಕಾಲಿಗೆ  ರಕ್ತ ಗಾಯವಾಗಿದ್ದು,  ಗಾಯಾಳುವನ್ನು ಉಪಚರಿಸಿ ಚಿಕಿತ್ಸೆಗಾಗಿ 108 ಅಂಬುಲೆನ್ಸ್ ಕರೆ ಮಾಡಿದ್ದು, ಸ್ಥಳಕ್ಕೆ ಬಂದ ಅಂಬುಲೆನ್ಸ್ ನಲ್ಲಿ  ಚಿಕ್ಕಬಳ್ಳಾಪುರ ಸರ್ಕಾರಿ ಆಸ್ಪತ್ರೆಗೆ ಸಾಗಿಸಿ ಪ್ರಥಮ ಚಿಕಿತ್ಸೆ ಪಡೆಸಿದೇವು, ಅಲ್ಲಿನ ವೈದ್ಯರ ಸಲಹೆಯಂತೆ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಸೆಂಟ್ ಜಾನ್ಸ್ ಆಸ್ವತ್ರೆಗೆ ದಾಖಲಿಸಿರುತ್ತೇವೆ.  ಸದರಿ ಯಾವುದೇ ಸೂಚನೆ ಇಲ್ಲದೆ ನಿಲ್ಲಿಸಿದ ಲಾರಿ ಚಾಲಕನ ಹೆಸರು ಮತ್ತು ವಿಳಾಸ ತಿಳಿಯಲಾಗಿ ಕಣ್ಣನ್ ಬಿನ್ ಪರೆಮಾಳ್ 32 ವರ್ಷ, ಕಾಳಪ್ಪನಹಳ್ಳಿ ಗ್ರಾಮ, ಕಾರಿಮಂಗಲಂ ತಾಲ್ಲೂಕು, ಧರ್ಮಪುರಿ ಜಿಲ್ಲೆ. ತಮಿಳುನಾಡು. ಎಂತ ತಿಳಿಯಿತು. ಯಾವುದೇ ಮುನ್ಸೂಚನೆ ಇಲ್ಲದೆ ನಿಲ್ಲಿಸಿದ TN-52-L-9690 ರ ಲಾರಿಯ ಚಾಲಕನ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿದ್ದು, ಗಾಯಾಳುವನ್ನು ಆಸ್ವತ್ರೆಗೆ ಸಾಗಿಸಿ ತಡವಾಗಿ ಬಂದು ದೂರು ನೀಡಿದ್ದರ ಮೇರೆಗೆ. ದಿನಾಂಕ13-09-2020 ರಂದು ಸಂಜೆ 5-30 ಗಂಟೆಗೆ ಪ್ರಕರಣ ದಾಖಲಿಸಿಕೊಂಡಿರುತ್ತೆ.

  1. ದಿಬ್ಬೂರಹಳ್ಳಿ ಪೊಲೀಸ್ ಠಾಣೆ ಮೊ.ಸಂ.97/2020 ಕಲಂ: 323,324,504,506 ರೆ/ವಿ 34 ಐ.ಪಿ.ಸಿ:-

     ದಿನಾಂಕ 13/09/2020 ರಂದು ಗಾಯಾಳು ರತ್ನಮ್ಮ ಕೊಂ ಪೂಜಪ್ಪ ರವರು ಶಿಡ್ಲಘಟ್ಟ ಸರ್ಕಾರಿ ಆಸ್ಪತ್ರೆಯಲ್ಲಿ ನೀಡಿದ ಹೇಳಿಕೆಯ ಸಾರಾಂಶವೇನೆಂದರೆ ಸುಮಾರು 2 ವರ್ಷಗಳ ಹಿಂದೆ ತಮ್ಮ ಗ್ರಾಮದ ಮಲಾರಮ್ಮ ರವರು ತಾವು ಮನೆಯಲ್ಲಿಲ್ಲದ ಸಮಯದಲ್ಲಿ ಪಿಟ್ ಗುಣಿಯನ್ನು ತೆಗೆಸಿದ್ದು, ನಾವು ಸುಮಾರು ಬಾರಿ ಮಲಾರಮ್ಮ ಮತ್ತು ಅವರ ಮಕ್ಕಳಿಗೆ ಪಿಟ್ ಗುಣಿಯನ್ನು ಮುಚ್ಚಿ ವಾಸನೆ ಬರುತ್ತಿದೆ ಎಂದು ಹೇಳಿದರೂ ಮುಚ್ಚದೇ ಆಗೆ ಇದ್ದರು. ದಿನಾಂಕ 12/09/2020 ರಂದು ಸಂಜೆ ಸುಮಾರು 6.30 ಗಂಟೆ ಸಮಯದಲ್ಲಿ ತಾನು ತನ್ನ ಹಳೆಯ ಮನೆಯ ಕಡೆಯಿಂದ ಹೊಸ ಮನೆಕಡೆಗೆ ನಡೆದುಕೊಂಡು ಬರುತ್ತಿದ್ದು ತಮ್ಮ ಮನೆಯ ಎದುರುಗಡೆಯಿರುವ ವಿದ್ಯುತ್ ಕಂಬಕ್ಕೆ ಮಲಾರಮ್ಮ ಮತ್ತು ಅವರ ಮಕ್ಕಳು ಸೇರಿಕೊಂಡು ತನಗೆ ಗೋತ್ತಿಲ್ಲದೆ ಯಾವುದೋ ಸಮಯದಲ್ಲಿ ಕಬ್ಬಿಣದ ತಂತಿಯನ್ನು ಕಟ್ಟಿದ್ದು ಅದನ್ನು ಗಮನಿಸದೆ ತಾನು ಕಂಬಕ್ಕೆ ತಾಗಿ ಬಿದ್ದು ಹೋಗಿದ್ದು ಆಗ ತಾನು ಏಕೆ ಈ ರೀತಿ ಅಡ್ಡಲಾಗಿ ಕಂಬಿಯನ್ನು ಕಟ್ಟಿರುವುದು ಎಂದು ಕೇಳುತ್ತಿದ್ದಂತೆ ಮಲಾರಮ್ಮ ನಾನೆ ಕಂಬಿಯನ್ನು ಕಟ್ಟಿರುವುದು ನಿಮ್ಮ ಕೈನಲ್ಲಿ ಏನಾಗುತ್ತೆ, ಈ ಜಾಗ ಕಂಬ ನಮಗೆ ಸೇರಿದ್ದು ಎಂದು ಬಾಯಿ ಮಾತಿನ ಜಗಳ ಮಾಡಿದರು ಅಷ್ಟರಲ್ಲಿ ಮಲಾರಮ್ಮನ ಮಕ್ಕಳಾದ ಶಿವಪ್ರಸಾದ, ಹರಿಪ್ರಸಾದ ಮತ್ತು ಶಿಲ್ಪಾರವರುಗಳು ಬಂದು ಲೋಪರ್ ಮುಂಡೆ ಏಕೆ ನಮ್ಮ ತಾಯಿಯನ್ನು ಕುರಿತು ಬೈಯ್ಯುತ್ತಿದ್ದಿಯಾ ಎಂದು ಅವಾಚ್ಯ ಶಬ್ದಗಳಿಂದ ಬೈದರು ಆ ಪೈಕಿ ಶಿಲ್ಪಾ ಕೈಗಳಿಂದ ಬಲಭಾಗದ ಕಿವಿಗೆ ಹೊಡೆದರು. ತಾನು ಗಾಯಗೊಂಡಾಗ ಅಡ್ಡಬಂದ ತನ್ನ ಮಗ ಶ್ರೀನಾಥನಿಗೆ ಹರಿಪ್ರಸಾದ್ ಅಲ್ಲೆ ಬಿದ್ದಿದ್ದ ಒಂದು ಕಲ್ಲನ್ನು ಎತ್ತಿಕೊಂಡು ಎಡಭಾಗದ ಸೊಂಟದ ಮೇಲೆ ಹೊಡೆದಿದ್ದು ಶಿವ ಪ್ರಸಾದ ತನ್ನ ಗಂಡನಿಗೆ ಕೈಗಳಿಂದ ಮೈಮೇಲೆ ಗುದ್ದಿ ನೋವುಂಟು ಮಾಡಿ, ಹರಿಪ್ರಸಾದ ಸಹ ಕಾಲುಗಳಿಂದ ತನ್ನ ಗಂಡನ ಮೈಮೇಲೆ ಒದ್ದು ನೋವುಂಟು ಮಾಡಿ ಮಲಾರಮ್ಮ ತಮ್ಮ ಮಕ್ಕಳನ್ನು ಕುರಿತು ಈ ನನ್ನ ಲೋಪರ್ ಮಕ್ಕಳಿಗೆ ಒಂದು ಗತಿ ಕಾಣಿಸಬೇಕು ಎಂದು ಕೂಗಾಡಿಕೊಳ್ಳುತ್ತಿದ್ದಳು, ಆಗ ಎಲ್ಲರೂ ಸೇರಿಕೊಂಡು ನೀವೇನಾದರೂ ನಮ್ಮ ತಂಟೆಗೆ ಬಂದರೆ ಸಾಯಿಸುವುದಾಗಿ ಪ್ರಾಣ ಬೆದರಿಕೆ ಹಾಕಿರುತ್ತಾರೆ. ಅಷ್ಟರಲ್ಲಿ ತಮ್ಮ ಗ್ರಾಮದ ವೆಂಕಟೇಶ ಬಿನ್ ವೆಂಕಟರಾಯಪ್ಪ ಮತ್ತಿತರರು ಬಂದು ಜಗಳ ಬಿಡಿಸಿ ಬುದ್ದಿಹೇಳಿ ಕಳುಹಿಸಿದರು. ನಂತರ ತಾವು ಚಿಕಿತ್ಸೆಗಾಗಿ ಶಿಡ್ಲಘಟ್ಟ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿರುತ್ತೇವೆ. ಆದ್ದರಿಂದ ಮೇಲ್ಕಂಡವರ ಮೇಲೆ ಕಾನೂರು ರೀತ್ಯಾ ಕ್ರಮ ಜರುಗಿಸಲು ಕೋರಿರುವುದಾಗಿರುತ್ತೆ.