ದಿನಾಂಕ : 14/07/2019ರ ಅಪರಾಧ ಪ್ರಕರಣಗಳು

 1. ಬಾಗೇಪಲ್ಲಿ ಪೊಲೀಸ್ ಠಾಣೆ. ಮೊ.ಸಂ: 188/2019 ಕಲಂ: 363 ಐ.ಪಿ.ಸಿ:-

          ದಿ13-07-2019 ರಂದು ಸಂಜೆ 7:30 ಗಂಟೆಗೆ ಪಿರ್ಯಾಧಿದಾರರಾದ  ಶ್ರೀಮತಿ ಶೋಭಾ ಕೋಂ ವೆಂಕಟೇಶ್,  33 ವರ್ಷ, ಬಲಜಿಗರು, ಗೃಹಿಣಿ,  22 ನೇ ವಾರ್ಡ್, ಕಟಾಬ್ ಮಸೀಧಿ ಬಳಿ,  ಬಾಗೇಪಲ್ಲಿ ಟೌನ್ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶ –  ನನಗೆ ಮಧು.ವಿ, 19 ವರ್ಷ, ಪ್ರದೀಪ್.ವಿ, 17 ವರ್ಷ ಎಂಬ ಇಬ್ಬರು ಮಕ್ಕಳಿರುತ್ತಾರೆ.  ನನ್ನ ಚಿಕ್ಕ ಮಗನಾದ ಪ್ರದೀಪ್.ವಿ ರವರು ಸರ್ಕಾರಿ ಬಾಲಕರ ಪ್ರೌಢಶಾಲೆಯಲ್ಲಿ 10 ನೇತರಗತಿ ವಿದ್ಯಾಭ್ಯಾಸ ಮಾಡುತ್ತಿದ್ದು, 2019 ನೇ ಸಾಲಿನ ಮಾರ್ಚ್  ಮಾಹೆಯಲ್ಲಿ ನಡೆದ ಪರೀಕ್ಷೆಯಲ್ಲಿ ಅನುತ್ತೀರ್ಣನಾಗಿರುತ್ತಾನೆ.  ನಂತರ ಇದೇ ವರ್ಷ ಜೂನ್ ಮಾಹೆಯಲ್ಲಿ ಸಪ್ಲಿಮೆಂಟರಿ ಪರೀಕ್ಷೆಯು ನಡೆದಿದ್ದು, ಸದರಿ ಪರೀಕ್ಷೆಯನ್ನು ಬರೆದಿರುತ್ತಾನೆ. ದಿ: 13-07-2019 ರಂದು ಸಪ್ಲಿಮೆಂಟರಿ ಪರೀಕ್ಷೆಯ ಪಲಿತಾಂಶವು ಪ್ರಕಟವಾಗಿದ್ದು, ಸದರಿ ಪಲಿತಾಂಶವನ್ನು ನೋಡಿಕೊಂಡು ಬರಲು ಬೆಳಗ್ಗೆ 9:00 ಗಂಟೆಗೆ ನನ್ನ ಮಗ ಪ್ರದೀಪ್.ವಿ ರವರು ಒಬ್ಬರೇ ಹೋಗಿರುತ್ತಾನೆ.   ಆದರೆ ತುಂಬಾ ಹೊತ್ತಾದರೂ ಮನೆಗೆ ಬಾರದ ಕಾರಣ, ಅವನ ಸ್ನೇಹಿತರ ಮೊಬೈಲ್ ಗಳಿಗೆ ಕರೆಮಾಡಿದಾಗ ಯಾರೂ ಪೋನ್ ತೆಗೆಯದೆ ಇದ್ದ ಕಾರಣ ನಾವು ಗಾಬರಿಗೊಂಡ ನಾವು ಸರ್ಕಾರಿ ಬಾಲಕರ ಪ್ರೌಢಶಾಲೆ ಬಳಿಗೆ ಹೋಗಿ ವಿಚಾರಿಸಿದಾಗ ತಾವು ನೋಡಲಿಲ್ಲವೆಂದು ತಿಳಿಸಿರುತ್ತಾರೆ.  ನಂತರ ಸ್ನೇಹಿತರ ಮನೆಗಳು, ನೆಂಟರ ಮನೆಗಳ ಕಡೆ ವಿಚಾರ ಮಾಡಲಾಗಿ ಅಲ್ಲಿಗೂ ಹೋಗಿರುವುದಿಲ್ಲವೆಂದು ತಿಳಿದುಬಂದಿರುತ್ತದೆ.  ನನ್ನ ಮಗ ಪಲಿತಾಂಶ ನೋಡುತ್ತಿದ್ದ ಬಾಗೇಪಲ್ಲಿ ಪುರದಲ್ಲಿರುವ ರೇಡಿಯಂಟ್ಸ್ ಕಂಪ್ಯೂಟರ್ ಸೆಂಟರ್ ಬಳಿಗೆ ಹೋಗಿ ವಿಚಾರ ಮಾಡಿದಾಗ ನನ್ನ ಮಗ ಪ್ರದೀಪ ಈ ದಿನ ಮದ್ಯಾಹ್ನ ಸುಮಾರು 12:00 ಗಂಟೆಯಲ್ಲಿ ಕಂಪ್ಯೂಟರ್ ಸೆಂಟರ್ ಗೆ ಬಂದು ತನ್ನ ಪಲಿತಾಂಶವನ್ನು ನೋಡಿಕೊಂಡು ಹೋಗಿರುವುದಾಗಿ ತಿಳಿಸಿರುತ್ತಾರೆ.   ಆದರೆ ನನ್ನ ಮಗ ಇದುವರೆವಿಗೂ ನಮ್ಮ ಮನೆಗೆ ಬಂದಿರುವುದಿಲ್ಲ.  ನಂತರ ನಾವು ಪಲಿತಾಂಶವನ್ನು ನೋಡಲಾಗಿ ನನ್ನ ಮಗ ಪ್ರದೀಪ ಅನುತ್ತೀರ್ಣನಾಗಿರುತ್ತಾನೆ.  ಆದ್ದರಿಂದ ಕಾಣೆಯಾಗಿರುವ ನನ್ನ ಮಗನನ್ನು ಪತ್ತೆ ಮಾಡಿಕೊಡಲು ಕೋರುತ್ತೇವೆ.

 1. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ. ಮೊ.ಸಂ: 181/2019 ಕಲಂ: 15(ಎ), 32(3) ಕೆ.ಇ. ಆಕ್ಟ್:-

          ದಿನಾಂಕ 13/07/2019 ರಂದು ಸಂಜೆ 06.00 ಗಂಟೆ ಸಮಯದಲ್ಲಿ ಪಿ ಎಸ್ ಐ ಸಾಹೇಬರು ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ 13/07/2019 ರಂದು ಸಂಜೆ 04.10 ಗಂಟೆಯಲ್ಲಿ ತಾನು ಠಾಣೆಯಲ್ಲಿದ್ದಾಗ ತನಗೆ ಬಂದ ಖಚಿತ ಮಾಹಿತಿಯಂತೆ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ಸರಹದ್ದಿನ ಗಂಗರೇಕಾಲುವೆ ಗ್ರಾಮದ ಸಿದ್ದಪ್ಪ ಬಿನ್ ಶಾಮಣ್ಣ, 59 ವರ್ಷ, ಬಲಜಿಗರು, ವ್ಯಾಪಾರ, ಗಂಗರೇಕಾಲುವೆ ಗ್ರಾಮರವರು ಅವರ ಚಿಲ್ಲರೆ ಅಂಗಡಿ ಬಳಿ ಯಾವುದೇ ಪರವಾನಗೆ ಇಲ್ಲದೆ ಸಾರ್ವಜನಿಕರು ಮಧ್ಯ ಸೇವನೆ ಮಾಡಲು ಅವಕಾಶ ಮಾಡಿಕೊಡುತ್ತಿರುವುದಾಗಿ ತನಗೆ ಖಚಿತ ಮಾಹಿತಿ ಬಂದಿದ್ದು, ಈ ಬಗ್ಗೆ ಆಸಾಮಿಯ ವಿರುದ್ದ ಕಲಂ 15(ಎ) 32(3) ಅಬಕಾರಿ ಕಾಯ್ದೆಯಡಿ ಪ್ರಕರಣ ದಾಖಲು ಮಾಡಲು ಸೂಚಿಸಿದ ಮೇರೆಗೆ ಈ ಪ್ರ ವ ವರದಿ.

 1. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ. ಮೊ.ಸಂ: 182/2019 ಕಲಂ: 36(ಬಿ) ಕೆ.ಇ. ಆಕ್ಟ್:-

          ದಿನಾಂಕ 14/07/2019 ರಂದು ಬೆಳಿಗ್ಗೆ 09.10 ಗಂಟೆ ಸಮಯದಲ್ಲಿ ಪಿ ಎಸ್ ಐ ಸಾಹೇಬರು ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ 14/07/2019 ರಂದು ಬೆಳಿಗ್ಗೆ 09.00 ಗಂಟೆಯಲ್ಲಿ ತಾನು ಠಾಣೆಯಲ್ಲಿದ್ದಾಗ ತನಗೆ ಬಂದ ಖಚಿತ ಮಾಹಿತಿಯಂತೆ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ಸರಹದ್ದಿನ ಮೂಸ್ಟೂರು ಗ್ರಾಮದ ಅನಿಲ್ ಕುಮಾರ್ ಬಿನ್ ಪರಮೇಶಪ್ಪ, 23 ವರ್ಷ, ವಕ್ಕಲಿಗರು, ವ್ಯಾಪಾರ, ಮೂಸ್ಟೂರು ಗ್ರಾಮ ರವರು ನ್ಯೂ ಮಂಜುನಾಥ ಬಾರ್ ಮತ್ತು ರೆಸ್ಟೋರೆಂಟ್ ನ್ನು ಅವಧಿಗೆ ಮುಂಚೆ ತೆರೆದು ವ್ಯಾಪಾರ ಮಾಡುತ್ತಿದ್ದು, ಸಾರ್ವಜನಿಕರಿಗೆ ಅನಾನುಕೂಲ ಮಾಡುತ್ತಿರುವುದಾಗಿ ಬಂದ ಮಾಹಿತಿ ಮೇರೆಗೆ ಸದರಿ ಆಸಾಮಿ ವಿರುದ್ದ ಕಲಂ 36(ಬಿ) ಅಬಕಾರಿ ಕಾಯ್ದೆಯಡಿ ಪ್ರಕರಣ ದಾಖಲು ಮಾಡಲು ಸೂಚಿಸಿದ ಮೇರೆಗೆ ಈ ಪ್ರ ವ ವರದಿ.

 1. ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆ. ಮೊ.ಸಂ: 133/2019 ಕಲಂ: 78(3) ಕೆ.ಪಿ. ಆಕ್ಟ್:-

          ದಿನಾಂಕ 13.07.2019 ರಂದು 16-00 ಗಂಟೆಗೆ ಪಿರ್ಯಾದಿದಾರರಾದ ಶ್ರೀ ಹೆಚ್.ವಿ.ಸುದರ್ಶನ್ ಸಿ.ಪಿ.ಐ ಚಿಕ್ಕಬಳ್ಳಾಪುರ ವೃತ್ತ ರವರು ಆಸಾಮಿ, ಮಾಲು, ಪಂಚನಾಮೆ ಮತ್ತು ನ್ಯಾಯಾಲಯದ ಅನುಮತಿಯನ್ನು ಹಾಜರುಪಡಿಸಿ ನೀಡಿದ ದೂರಿನ ಸಾರಾಂಶವೇನೆಂದರೆ, ದಿನಾಂಕ 13.07.2019 ರಂದು 14-00 ಗಂಟೆಯಲ್ಲಿ ನಾನು ಮತ್ತು  ಸಿಬ್ಬಂದಿಯವರಾದ ಹೆಚ್.ಸಿ. 114 ರವಿ ಕುಮಾರ್, ಪಿ.ಸಿ. 245 ವಿಜಯ್ ಕುಮಾರ್ ರವರೊಂದಿಗೆ ನಗರದಲ್ಲಿ ಗಸ್ತು ಮಾಡುತ್ತಿದ್ದಾಗ ಚಿಕ್ಕಬಳ್ಳಾಪುರ ನಗರದ ನಂದಿ ರಸ್ತೆಯಲ್ಲಿರುವ ಗಾಯಿತ್ರಿ ಟ್ಯಾಕೀಸ್ ಮುಂಭಾಗ ಪುಟ್ಪಾತ್ನಲ್ಲಿ ಯಾರೋ ಆಸಾಮಿಯು ಹಣವನ್ನು ಪಣವಾಗಿಟ್ಟು  ಮಟ್ಕಾ  ಜೂಜಾಟವನ್ನು ಆಡುತ್ತಿದ್ದಾರೆಂದು ಮಾಹಿತಿ ಬಂದಿದ್ದು ಘನ ಎಸ್.ಸಿ.ಜೆ. ಮತು ಸಿ. ಜೆ. ಎಂ ಚಿಕ್ಕಬಳ್ಳ್ಳಾಪುರ ನ್ಯಾಯಾಲಯದಿಂದ ದಾಳಿಯನ್ನು ಮಾಡಲು ಅನುಮತಿಯನ್ನು ಪಡೆದುಕೊಂಡು ಪಂಚರನ್ನು ಠಾಣೆಗೆ ಕರೆಯಿಸಿಕೊಂಡು ಪಂಚರಿಗೆ ಮತ್ತು ಸಿಬ್ಬಂದಿಯವರಾದ ಹೆಚ್.ಸಿ. 114 ರವಿ ಕುಮಾರ್, ಪಿ.ಸಿ. 245 ವಿಜಯ್ ಕುಮಾರ್ ರವರೊಂದಿಗೆ ಸಕರ್ಾರಿ ವಾಹನ ಕೆ.ಎ.40-ಜಿ-538 ರಲ್ಲಿ 14-15 ಗಂಟೆಗೆ ಕಛೇರಿಯನ್ನು ಬಿಟ್ಟು ಬಿ.ಬಿ ರಸ್ತೆ ಮಾರ್ಗವಾಗಿ ನಂದಿ ರಸ್ತೆ ನಂತರ ಸೊಪ್ಪಿನ ಬೀದಿಯ ತಿರುವಿನಲ್ಲಿ ವಾಹನವನ್ನು ಮರೆಯಲ್ಲಿ ನಿಲ್ಲಿಸಿ ಸ್ವಲ್ಪ  ದೂರ ನಡೆದುಕೊಂಡು ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಗಾಯಿತ್ರಿ ಚಿತ್ರ ಮಂದಿರ ಬಳಿ ಒಬ್ಬ ಆಸಾಮಿಯು ಅನುಮಾನಸ್ಪದವಾಗಿ ತನ್ನ ಎಡಗೈಯಲ್ಲಿ  ಚೀಟಿಯಲ್ಲಿ ಏನೋ ಬರೆಯುತ್ತಿದ್ದು ಕೆಲವು ಸಾರ್ವಜನಿಕರಿಂದ ಹಣವನ್ನು ಪಡೆದುಕೊಳ್ಳುತ್ತಿದ್ದ ಹಾಗೂ ಮೊಬೈಲ್ ನಲ್ಲಿ ನೋಡಿಕೊಂಡು ಮತ್ತೆ ಚೀಟಿಯಲ್ಲಿ ಸಂಖ್ಯೆಗಳನ್ನು ಬರೆದುಕೊಳ್ಳುತ್ತಿದ್ದು ಸದರಿ ಆಸಾಮಿಯು ಈಗಾಗಲೆ ಮಟ್ಕಾ ಜೂಜಾಟ ಆಡುತ್ತಿದ್ದ ಬಗ್ಗೆ ಆತನ ವಿರುದ್ಧ ಪ್ರಕರಣ ದಾಖಲಾಗಿದ್ದು, ಆದರೂ ಮತ್ತೆ ಮಟ್ಕಾ ಜೂಜಾಟ ಆಡಿ ಸಾರ್ವಜನಿಕರಿಂದ ಹಣವನ್ನು ಸಂಗ್ರಹಿಸುತ್ತಿರುವುದು ಖಚಿತವಾಗಿರುತ್ತದೆ. ಕೂಡಲೆ ಸಿಬ್ಬಂದಿಯವರೊಂದಿಗೆ ದಾಳಿ ಮಾಡಿ ಆಸಾಮಿಯನ್ನು ಹಿಡಿದುಕೊಂಡು ಆತನನ್ನು ಪಂಚರ ಸಮಕ್ಷಮ ವಿಚಾರಿಸಲಾಗಿ ತನ್ನ ಹೆಸರು ಮುನಿರಾಜು ಬಿನ್ ಲೇಟ್ ವೆಂಕಟೇಶಪ್ಪ, 50 ವರ್ಷ, ಬಲಜಿಗರು, ಕಂಬಿ ಕೆಲಸ, ವಾಸ:  ಕಂದವಾರ ಬಾಗಿಲು, ನಂದಿ ರಸ್ತೆ, ಗಾಮರ್ೆಂಟ್ಸ್ ಮುಂಭಾಗ, ಚಿಕ್ಕಬಳ್ಳಾಪುರ ಎಂದು ತಿಳಿಸಿದ್ದು. ಆಸಾಮಿಯನ್ನು ಪಂಚರ ಸಮಕ್ಷಮ ಜಡ್ತಿ ಮಾಡಲಾಗಿ ಆತನ ಬಳಿ ಇದ್ದ ಪಣಕ್ಕಿಟ್ಟಿದ್ದ  1) 1300/- ನಗದು ಹಣ, 2) 1 ಮಟ್ಕಾ ಚೀಟಿ ಮತ್ತು 3) ಜಿಯೋ ಮೊಬೈಲ್ ಪೋನ್ ಅನ್ನು ಅಮಾನತ್ತುಪಡಿಸಿಕೊಂಡು  ಪಂಚನಾಮೆಯನ್ನು 14-30 ಗಂಟೆಯಿಂದ 15-30 ಗಂಟೆಯವರೆಗೆ  ಜರುಗಿಸಿ  ಆಸಾಮಿ, ಮಾಲು ಮತ್ತು ಪಂಚನಾಮೆಯನ್ನು ಹಾಗೂ ನ್ಯಾಯಾಲಯದ ಅನುಮತಿ ಪ್ರತಿಯನ್ನು 16-00 ಗಂಟೆಗೆ ಠಾಣೆಯಲ್ಲಿ ಹಾಜರುಪಡಿಸುತ್ತಿದ್ದು ಆಸಾಮಿಯ ವಿರುದ್ದ ಕಲಂ 78(3) ಕೆ.ಪಿ.ಆಕ್ಟ್ ರೀತ್ಯಾ ಕ್ರಮ ಕೈಗೊಳ್ಳಲು ಸೂಚಿಸಿದ್ದರ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುತ್ತೆ.

 1. ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆ. ಮೊ.ಸಂ: 134/2019 ಕಲಂ: 78(3)  ಕೆ.ಪಿ. ಆಕ್ಟ್:-

          ದಿನಾಂಕ 13.07.2019 ರಂದು 18-00 ಗಂಟೆಗೆ ಪಿರ್ಯಾದಿದಾರರಾದ ಶ್ರೀ ಎಂ.ಆರ್.ವರುಣ್ ಕುಮಾರ್ ಪಿ.ಎಸ್.ಐ ನಗರ ಪೊಲೀಸ್ ಠಾಣೆ ಚಿಕ್ಕಬಳ್ಳಾಪುರ ರವರು ಆಸಾಮಿ, ಮಾಲು, ಪಂಚನಾಮೆ ಮತ್ತು ನ್ಯಾಯಾಲಯದ ಅನುಮತಿಯನ್ನು ಹಾಜರುಪಡಿಸಿ ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ 13.07.2019 ರಂದು 16-00 ಗಂಟೆಯಲ್ಲಿ ನಾನು ಮತ್ತು  ಸಿಬ್ಬಂದಿಯವರಾದ ಹೆಚ್.ಸಿ. 153 ವೆಂಕಟೇಶ್, ಪಿ.ಸಿ. 138 ಮುರಳಿ ರವರೊಂದಿಗೆ ನಗರದಲ್ಲಿ ಗಸ್ತು ಮಾಡುತ್ತಿದ್ದಾಗ ಚಿಕ್ಕಬಳ್ಳಾಪುರ ನಗರದ ಎಸ್.ಎಸ್. ವೃತ್ತದ ಬಳಿ ಮರಳುಸಿದ್ದೇಶ್ವರ ದೇವಾಸ್ಥಾನದ ಮುಂಭಾಗ ಯಾರೋ ಆಸಾಮಿಯು ಹಣವನ್ನು ಪಣವಾಗಿಟ್ಟು  ಮಟ್ಕಾ  ಜೂಜಾಟವನ್ನು ಆಡುತ್ತಿದ್ದಾರೆಂದು ಮಾಹಿತಿ ಬಂದಿದ್ದು ಘನ ಎಸ್.ಸಿ.ಜೆ. ಮತು ಸಿ. ಜೆ. ಎಂ ಚಿಕ್ಕಬಳ್ಳ್ಳಾಪುರ ನ್ಯಾಯಾಲಯದಿಂದ ದಾಳಿಯನ್ನು ಮಾಡಲು ಅನುಮತಿಯನ್ನು ಪಡೆದುಕೊಂಡು ಪಂಚರನ್ನು ಠಾಣೆಗೆ ಕರೆಯಿಸಿಕೊಂಡು ಪಂಚರಿಗೆ ಮತ್ತು ಸಿಬ್ಬಂದಿಯವರಾದ ಹೆಚ್.ಸಿ. 153 ವೆಂಕಟೇಶ್, ಪಿ.ಸಿ. 138 ಮುರಳಿ ರವರೊಂದಿಗೆ ಸಕರ್ಾರಿ ವಾಹನ ಕೆ.ಎ.40-ಜಿ-139 ರಲ್ಲಿ 16-15 ಗಂಟೆಗೆ ಠಾಣೆಯನ್ನು ಬಿಟ್ಟು ಎಂ.ಜಿ. ರಸ್ತೆ ಮಾರ್ಗವಾಗಿ ಎಸ್.ಎಸ್ ವೃತ್ತದ ಬಳಿ ಹೋಗಿ  ವಾಹನವನ್ನು ಮರೆಯಲ್ಲಿ ನಿಲ್ಲಿಸಿ ಮರೆಯಲ್ಲಿ ನಿಂತು ನೋಡಲಾಗಿ ಮರಳು ಸಿದ್ದೇಶ್ವರಸ್ವಾಮಿ ದೇವಾಸ್ಥಾನದ ಮುಂಭಾಗದ ಸಾರ್ವಜನಿಕ ರಸ್ತೆಯಲ್ಲಿ ಯಾರೋ ಒಬ್ಬ ಆಸಾಮಿಯು ಅನುಮಾನಸ್ಪದವಾಗಿ ತನ್ನ ಎಡಗೈಯಲ್ಲಿ  ಚೀಟಿಯಲ್ಲಿ ಏನೋ ಬರೆಯುತ್ತಿದ್ದು ಕೆಲವು ಸಾರ್ವಜನಿಕರಿಂದ ಹಣವನ್ನು ಪಡೆದುಕೊಳ್ಳುತ್ತಿದ್ದ ಹಾಗೂ ಮೊಬೈಲ್ ನಲ್ಲಿ ನೋಡಿಕೊಂಡು ಮತ್ತೆ ಚೀಟಿಯಲ್ಲಿ ಸಂಖ್ಯೆಗಳನ್ನು ಬರೆದುಕೊಳ್ಳುತ್ತಿದ್ದು ಸದರಿ ಆಸಾಮಿಯು ಮಟ್ಕಾ ಜೂಜಾಟ ಆಡಿ ಸಾರ್ವಜನಿಕರಿಂದ ಹಣವನ್ನು ಸಂಗ್ರಹಿಸುತ್ತಿರುವುದು ಖಚಿತವಾಗಿರುತ್ತದೆ. ಕೂಡಲೆ ಸಿಬ್ಬಂದಿಯವರೊಂದಿಗೆ ದಾಳಿ ಮಾಡಿ ಆಸಾಮಿಯನ್ನು ಹಿಡಿದುಕೊಂಡು ಆತನನ್ನು ಪಂಚರ ಸಮಕ್ಷಮ ವಿಚಾರಿಸಲಾಗಿ ತನ್ನ ಹೆಸರು ಅಶ್ವತ್ಥಪ್ಪ ಬಿನ್ ಲೇಟ್ ವೆಂಕಟೇಶಪ್ಪ, 49 ವರ್ಷ, ನಾಯಕರು, ರೇಷ್ಮೆ ಕೆಲಸ, ವಾಸ:  ಮಸೀದಿ ಬಳಿ, ನಂದಿ ಗ್ರಾಮ, ಚಿಕ್ಕಬಳ್ಳಾಪುರ ಎಂದು ತಿಳಿಸಿದ್ದು. ಆಸಾಮಿಯನ್ನು ಪಂಚರ ಸಮಕ್ಷಮ ಜಡ್ತಿ ಮಾಡಲಾಗಿ ಆತನ ಬಳಿ ಇದ್ದ ಪಣಕ್ಕಿಟ್ಟಿದ್ದ  1) 1000/- ನಗದು ಹಣ, 2) ಮೈಕ್ರೋ ಮ್ಯಾಕ್ಸ್ ಮೊಬೈಲ್ ಪೋನ್ 3)1 ಮಟ್ಕಾ ಚೀಟಿ 4) ಒಂದು ಬಾಲ್ ಪೆನ್ ನ್ನು ಅಮಾನತ್ತುಪಡಿಸಿಕೊಂಡು  ಪಂಚನಾಮೆಯನ್ನು 16-30 ಗಂಟೆಯಿಂದ 17-30 ಗಂಟೆಯವರೆಗೆ  ಜರುಗಿಸಿ  ಆಸಾಮಿ, ಮಾಲು ಮತ್ತು ಪಂಚನಾಮೆಯನ್ನು ಹಾಗೂ ನ್ಯಾಯಾಲಯದ ಅನುಮತಿ ಪ್ರತಿಯನ್ನು 18-00 ಗಂಟೆಗೆ ಠಾಣೆಯಲ್ಲಿ ಹಾಜರುಪಡಿಸುತ್ತಿದ್ದು ಆಸಾಮಿಯ ವಿರುದ್ದ ಕಲಂ 78(3) ಕೆ.ಪಿ.ಆಕ್ಟ್ ರೀತ್ಯಾ ಕ್ರಮ ಕೈಗೊಳ್ಳಲು ಸೂಚಿಸಿದ್ದರ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುತ್ತೆ.

 1. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ. ಮೊ.ಸಂ: 250/2019 ಕಲಂ: 15(ಎ) ಕೆ.ಇ. ಆಕ್ಟ್:-

ಘನ ನ್ಯಾಯಾಲಯದ ಸನ್ನಿಧಾನದಲ್ಲಿ ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆಯ ಪಿ.ಎಸ್.ಐ ಆರ್.ಜಗದೀಶರೆಡ್ಡಿ ಆದ ತಾನು ನಿವೇದಿಸಿಕೊಳ್ಳುವುದೇನೆಂದರೆ, ಈ ದಿನ ದಿನಾಂಕ 13/07/2019 ರಂದು ತಾನು  ಹೆಚ್.ಸಿ.249 ಸಂದೀಪ್ ಕುಮಾರ್ ಮತ್ತು ಹೆಚ್.ಸಿ.41 ಜಗದೀಶ ರವರೊಂದಿಗೆ ಕೆಎ-40 ಜಿ-326 ಸಕಾರಿ ಜೀಪ್ ನಲ್ಲಿ ಕೈವಾರ, ತಳಗವಾರ, ಸಂತೇಕಲ್ಲಹಳ್ಳಿ ಮತ್ತಿತರೆ ಕಡೆ ಗ್ರಾಮಗಸ್ತು ಮಾಡಿಕೊಂಡು ಸಂಜೆ 4.45 ಗಂಟೆ ಸಮಯದಲ್ಲಿ ಕೈವಾರಕ್ಕೆ ವಾಪಸ್ಸು ಬರುತ್ತಿದ್ದಾಗ, ಬೊಮ್ಮೇಕಲ್ಲು ಗ್ರಾಮದ ವಾಸಿಯಾದ ನಾರಾಯಣಸ್ವಾಮಿ ಬಿನ್ ನಾಗಪ್ಪ ರವರು ತನ್ನ ಚಿಲ್ಲರೆ ಅಂಗಡಿಯಲ್ಲಿ ಕಾನೂನು ಬಾಹಿರವಾಗಿ ಸಾರ್ವಜನಿಕರಿಗೆ ಮಧ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದಾಗಿ ಖಚಿತ ಮಾಹಿತಿ ದೊರೆತಿದ್ದು, ತಾವು ಜೀಪ್ ನಲ್ಲಿ ಸಂಜೆ 5.00 ಗಂಟೆ ಸಮಯದಲ್ಲಿ ಬೊಮ್ಮೇಕಲ್ಲು ಗ್ರಾಮಕ್ಕೆ ಹೋಗಿ ಪಂಚರನ್ನು ಬರಮಾಡಿಕೊಂಡು ಅವರಿಗೆ ವಿಚಾರವನ್ನು ತಿಳಿಸಿ ಸದರಿ ಚಿಲ್ಲರೆ ಅಂಗಡಿಯ ಮೇಲೆ ದಾಳಿ ಮಾಡುವ ಸಲುವಾಗಿ ನೀವು ಪಂಚರಾಗಿರಬೇಕೆಂದು ಕೋರಿದ್ದರ ಮೇರೆಗೆ ಅವರು ಒಪ್ಪಿಕೊಂಡಿದ್ದು, ಪಂಚರೊಂದಿಗೆ ಜೀಪ್ ನಲ್ಲಿ ನಾರಾಯಣಸ್ವಾಮಿ ರವರ ಚಿಲ್ಲರೆ ಅಂಗಡಿಯ ಬಳಿ ಹೋಗಿ ಜೀಪನ್ನು ನಿಲ್ಲಿಸಿ, ಅಂಗಡಿಯ ಬಳಿ ಹೋಗುವಷ್ಟರಲ್ಲಿ ಅಂಗಡಿಯ ಬಳಿ ಕುಳಿತು ಮಧ್ಯಪಾನ ಮಾಡುತ್ತಿದ್ದ ಇಬ್ಬರು ವ್ಯಕ್ತಿಗಳು ಪೊಲೀಸ್ ಜೀಪ್ ಕಂಡು ಓಡಿ ಹೋಗಿದ್ದು, ಅಂಗಡಿಯಲ್ಲಿ ಒಬ್ಬ ಆಸಾಮಿ ಅಂಗಡಿಯಲ್ಲಿ ಕುಳಿತು ವ್ಯಾಪಾರ ಮಾಡುತ್ತಿದ್ದು, ಆತನ ಹೆಸರು ಮತ್ತು ವಿಳಾಸ ಮಾಡಲಾಗಿ ತನ್ನ ಹೆಸರು ನಾರಾಯಣಸ್ವಾಮಿ ಬಿನ್ ನಾಗಪ್ಪ, 58 ವರ್ಷ, ನಾಯಕರು, ಚಿಲ್ಲರೆ ಅಂಗಡಿ ವ್ಯಾಪಾರ, ಬೊಮ್ಮೇಕಲ್ಲು ಗ್ರಾಮ, ಚಿಂತಾಮಣಿ ತಾಲ್ಲೂಕು ಈ ಅಂಗಡಿಯ ಮಾಲೀಕ ಎಂದು ತಿಳಿಸಿರುತ್ತಾನೆ. ಅಂಗಡಿಯ ಬಳಿ ಪರಿಶೀಲಿಸಲಾಗಿ, 90 ಎಂ.ಎಲ್ ನ ಹೇವಾರ್ಡ್ಸ್  ಚೀರ್ಸ್ ವಿಸ್ಕಿ ಕಂಪನಿಯ 2 ಖಾಲಿ ಟೆಟ್ರಾ ಪಾಕೆಟ್ ಗಳಿದ್ದು, ಇವುಗಳ ಪಕ್ಕದಲ್ಲಿ 2 ಪ್ಲಾಸ್ಟಿಕ್ ಗ್ಲಾಸುಗಳು ಮತ್ತು ಒಂದು ಲೀಟರ್ ನ ಎರಡು ನೀರಿನ ಬಾಟಲಿಗಳಿದ್ದು, ನೀರಿನ ಬಾಟಲಿಗಳಲ್ಲಿ ಸುಮಾರು ಅರ್ದದಷ್ಟು ಮದ್ಯ ಇರುತ್ತೆ. ನಾರಾಯಣಸ್ವಾಮಿ ರವರು ಕಾನೂನು ಬಾಹಿರವಾಗಿ ಸಾರ್ವಜನಿಕರಿಗೆ ಮಧ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದರಿಂದ ಸದರಿ ಮಾಲುಗಳನ್ನು ಪಂಚರ ಸಮಕ್ಷಮ ಸಂಜೆ 5.10 ಗಂಟೆಯಿಂದ 6.00 ಗಂಟೆಯವರೆಗೆ ಮಹಜರ್ ಮುಖಾಂತರ ಅಮಾನತ್ತುಪಡಿಸಿಕೊಂಡಿರುತ್ತೆ. ನಂತರ ಆರೋಪಿಯನ್ನು ವಶಕ್ಕೆ ಪಡೆದು ಮಾಲಿನೊಂದಿಗೆ ಸಂಜೆ 6.30 ಗಂಟೆಗೆ ಠಾಣೆಗೆ ವಾಪಸ್ಸಾಗಿ ಆರೋಪಿಯ ವಿರುದ್ದ ಠಾಣಾ ಮೊ.ಸಂ.250/2019 ಕಲಂ 15(ಎ) ಕೆ.ಇ ಆಕ್ಟ್ ರೀತ್ಯ ಸ್ವತಃ ಪ್ರಕರಣ ದಾಖಲಿಸಿಕೊಂಡಿರುತ್ತೆ.

 1. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ. ಮೊ.ಸಂ: 251/2019 ಕಲಂ: 279-337-304(ಎ) ಐ.ಪಿ.ಸಿ:-

          ದಿನಾಂಕ:14/07/2019 ರಂದು ಮದ್ಯಾಹ್ನ 15.00 ಗಂಟೆಗೆ ಹೆಚ್.ಸಿ 41 ರವರು ಠಾಣೆಗೆ ಹಾಜರಾಗಿ ಪಿ.ಎಸ್.ಐ ರವರು ಆರ್.ಎಲ್.ಜಾಲಪ್ಪ ಆಸ್ಪತ್ರೆ ಯಿಂದ ಕಳುಹಿಸಿಕೊಟ್ಟ ದೂರಿನ ಸಾರಾಂಶವೆನೆಂದರೆ  ಆರ್.ಚರಣ್ ಗೌಡ ಬಿನ್ ಎಸ್.ವಿ ರಾಜ್ ಕುಮಾರ್, ಸೀಕಲ್ಲು ಗ್ರಾಮ, ಚಿಂತಾಮಣಿ ತಾಲ್ಲೂಕು ರವರು ನೀಡಿದ ಲಿಖಿತ ದೂರೆನೆಂದರೆ ದಿನಾಂಕ:14/07/2019 ರಂದು ಮದ್ಯಾಹ್ನ 1.50 ಗಂಟೆಗೆ ತನ್ನ ತಂದೆಯವರಾದ ಎಸ್.ವಿ ರಾಜ್ ಕುಮಾರ್ ಬಿನ್ ಎನ್.ಎನ್.ವೆಂಕಟೇಗೌಡ ಸೀಕಲ್ಲು ಗ್ರಾಮ, ಚಿಂತಾಮಣಿ ತಾಲ್ಲೂಕು ರವರ ಬಾಬತ್ತು ಕೆ.ಎ.01 ಎಂ.ಕ್ಯೂ 8294 ಮಾರುತಿ ಬ್ರೀಜ್ ಕಾರಿನಲ್ಲಿ ಚಿಂತಾಮಣಿ ಕಡೆಯಿಂದ ಕೋಲಾರದ ಕಡೆಗೆ ಹೋಗುತ್ತಿದ್ದಾಗ ಮೈಲಾಂಡ್ಲಹಳ್ಳಿ ಗೇಟ್ ನಿಂದ ಸುಮಾರು 300 ಮೀಟರ್ ಅಂತರದಲ್ಲಿ ಕೋಲಾರದ ಕಡೆಯಿಂದ ಚಿಂತಾಮಣಿಗೆ ಬರುತ್ತಿದ್ದ  ಕೆ.ಎಸ್.ಆರ್.ಟಿ.ಸಿ ಬಸ್ ನಂ:ಕೆ.ಎ.40 ಎಫ್ 895 ರ  ಚಾಲಕ ಬಸ್ಸನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ತನ್ನ ತಂದೆಯವರು ಹೋಗುತ್ತಿದ್ದ ಕಾರಿಗೆ  ಡಿಕ್ಕಿಹೊಡೆಸಿದ್ದರ ಪರಿಣಾಮ ತನ್ನ ತಂದೆಯ ತಲೆಗೆ ಮತ್ತು ದೇಹಕ್ಕೆ ತೀವ್ರ ತರವಾದ ರಕ್ತ ಗಾಯಗಳಾಗಿರುತ್ತೆ, ಸದರಿ ಕಾರಿನಲ್ಲಿದ್ದ ಸೊಣ್ಣೆಗೌಡ ಮತ್ತು ಇನ್ನೊಬ್ಬ ವ್ಯಕ್ತಿ ಅಂಬರೀಶ್ ರವರಿಗೂ ತೀವ್ರ ಸ್ವರೂಪದ ಗಾಯಗಳಾಗಿ, ಕಾರು ಜಖಂ ಆಗಿರುತ್ತೆ. ಅಲ್ಲಿದ್ದ ಸ್ಥಳಿಯರು ಗಾಯಗೊಂಡಿದ್ದ ತನ್ನ ತಂದೆಯ ಸ್ನೇಹಿತರನ್ನು ಆಂಬುಲೇನ್ಸ್ ನಲ್ಲಿ ಚಿಂತಾಮಣಿ ಆಸ್ಪತ್ರೆಗೆ ಕಳುಹಿಸಿಕೊಟ್ಟಿರುತ್ತಾರೆ. ತಾನು ಮತ್ತು ತಮ್ಮ ಸಂಬಂಧಿಕರು ತಮ್ಮ ತಂದೆಯನ್ನು ಮತ್ತೊಂದು ಅಂಬುಲೇನ್ಸ್ ಮುಖಾಂತರ ಕೋಲಾರದ ಆರ್.ಎಲ್.ಜಾಲಪ್ಪ ಆಸ್ಪತ್ರೆಗೆ ಕರೆದುಕೊಂಡು ಬಂದ್ದಿದ್ದು, ಪರೀಕ್ಷಿಸಿದ ವೈದ್ಯರು ತಮ್ಮ ತಂದೆ ಮೃತಪಟ್ಟಿರುತ್ತಾರೆಂತ ತಿಳಿಸಿರುತ್ತಾರೆ. ಈ ಅಪಘಾತಕ್ಕೆ ಕಾರಣವಾದ  ಕೆ.ಎಸ್.ಆರ್.ಟಿ.ಸಿ ಬಸ್ ಚಾಲಕನ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಬೇಕಾಗಿ ಕೋರಿರುತ್ತಾರೆ.

 1. ದಿಬ್ಬೂರಹಳ್ಳಿ ಪೊಲೀಸ್ ಠಾಣೆ. ಮೊ.ಸಂ: 102/2019 ಕಲಂ: 15(ಎ), 32(3) ಕೆ.ಇ. ಆಕ್ಟ್:-

          ಈ ದಿನ ದಿನಾಂಕ 13/07/2019 ರಂದು ಸಂಜೆ  3-30 ಗಂಟೆಗೆ ಪಿ.ಎಸ್.ಐ ಸಾಹೇಬರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಂಶವೇನೆಂದರೆ ತಮ್ಮ ಪೊಲೀಸ್ ಠಾಣಾ ವ್ಯಾಪ್ತಿಯ ಜಿ.ನಕ್ಕಲಹಳ್ಳಿ ಗ್ರಾಮದ  ನರಸಿಂಹಪ್ಪ ಬಿನ್ ನಂಜುಡಪ್ಪ ರವರು ಅವರ ಪೆಟ್ಟಿಗೆ ಅಂಗಡಿಯ ಬಳಿ ಅಕ್ರಮವಾಗಿ ಮದ್ಯಮಾರಾಟಮಾಡಲು ಸಾರ್ವಜನಿಕರಿಗೆ ಸ್ಥಳಾವಕಾಶವನ್ನು ಮಾಡಿಕೊಟ್ಟಿರುವುದಾಗಿ ಮಾಹಿತಿ ಬಂದಿದ್ದರ ಮೇರೆಗೆ ನಮ್ಮ ಠಾಣೆಯ ಪಿ..ಸಿ 446 ಕರಿಬಾಬು ಮತ್ತು ಪಂಚಾಯ್ತಿದಾರರೊಂದಿಗೆ ದಾಳಿಮಾಡಿ ಸ್ಥಳದಲ್ಲಿ ಇದ್ದ 90 ಎಂ.ಎಲ್ ನ 16  ಒರಿಜಿನಲ್ ಚಾಯ್ಸ್ ಡಿಲಕ್ಸ್ ವಿಸ್ಕಿಯ ಮದ್ಯದ ಟೆಟ್ರಾ ಪಾಕೇಟ್ ಗಳನ್ನು, ಓಪನ್ ಮಾಡಿರುವ 2 ಒರಿಜಿನಲ್ ಚಾಯ್ಸ್ ಡಿಲಕ್ಸ್ ವಿಸ್ಕಿಯ ಮದ್ಯದ ಟೆಟ್ರಾ ಪಾಕೇಟ್ ಗಳನ್ನು ಹಾಗೂ 2 ಪ್ಲಾಸ್ಟಿಕ್ ಲೋಟಗಳನ್ನು ಪಂಚನಾಮೆಯ ಮೂಲಕ ಅಮಾನತ್ತು ಪಡಿಸಿಕೊಂಡು  ಠಾಣೆಗೆ ಬಂದು ಮುಂದಿನ ಕ್ರಮ ಕೈಗೊಳ್ಳಲು ನೀಡಿರುವ ಮೆಮೋ ಆಗಿರುತ್ತೆ.

 1. ದಿಬ್ಬೂರಹಳ್ಳಿ ಪೊಲೀಸ್ ಠಾಣೆ. ಮೊ.ಸಂ: 103/2019 ಕಲಂ: 15(ಎ), 32(3) ಕೆ.ಇ. ಆಕ್ಟ್:-

          ಈ ದಿನ ದಿನಾಂಕ 13/07/2019 ರಂದು ಸಂಜೆ  5-00 ಗಂಟೆಗೆ ಪಿ.ಎಸ್.ಐ ಸಾಹೇಬರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಂಶವೇನೆಂದರೆ ತಮ್ಮ ಪೊಲೀಸ್ ಠಾಣಾ ವ್ಯಾಪ್ತಿಯ ಬೈರಗಾನಹಳ್ಳಿ ಗ್ರಾಮದ  ಮಾರೇಶ ಬಿನ್ ಮುತ್ತಪ್ಪ ರವರು ಅವರ ಪೆಟ್ಟಿಗೆ ಅಂಗಡಿಯ ಬಳಿ ಅಕ್ರಮವಾಗಿ ಮದ್ಯಮಾರಾಟಮಾಡಲು ಸಾರ್ವಜನಿಕರಿಗೆ ಸ್ಥಳಾವಕಾಶವನ್ನು ಮಾಡಿಕೊಟ್ಟಿರುವುದಾಗಿ ಮಾಹಿತಿ ಬಂದಿದ್ದರ ಮೇರೆಗೆ ನಮ್ಮ ಠಾಣೆಯ ಪಿ..ಸಿ 446 ಕರಿಬಾಬು ಮತ್ತು ಪಂಚಾಯ್ತಿದಾರರೊಂದಿಗೆ ದಾಳಿಮಾಡಿ ಸ್ಥಳದಲ್ಲಿ ಇದ್ದ 90 ಎಂ.ಎಲ್ ನ 20  ಒರಿಜಿನಲ್ ಚಾಯ್ಸ್ ಡಿಲಕ್ಸ್ ವಿಸ್ಕಿಯ ಮದ್ಯದ ಟೆಟ್ರಾ ಪಾಕೇಟ್ ಗಳನ್ನು, ಓಪನ್ ಮಾಡಿರುವ 1 ಒರಿಜಿನಲ್ ಚಾಯ್ಸ್ ಡಿಲಕ್ಸ್ ವಿಸ್ಕಿಯ ಮದ್ಯದ ಟೆಟ್ರಾ ಪ್ಯಾಕೇಟ್ ಅನ್ನು ಹಾಗೂ 3  ಪ್ಲಾಸ್ಟಿಕ್ ಲೋಟಗಳನ್ನು ಪಂಚನಾಮೆಯ ಮೂಲಕ ಅಮಾನತ್ತು ಪಡಿಸಿಕೊಂಡು  ಠಾಣೆಗೆ ಬಂದು ಮುಂದಿನ ಕ್ರಮ ಕೈಗೊಳ್ಳಲು ನೀಡಿರುವ ಮೆಮೋ ಆಗಿರುತ್ತೆ.

 1. ದಿಬ್ಬೂರಹಳ್ಳಿ ಪೊಲೀಸ್ ಠಾಣೆ. ಮೊ.ಸಂ: 104/2019 ಕಲಂ: 15(ಎ), 32(3) ಕೆ.ಇ. ಆಕ್ಟ್:-

          ಈ ದಿನ ದಿನಾಂಕ 13/07/2019 ರಂದು ಸಂಜೆ  7-00 ಗಂಟೆಗೆ ಪಿ.ಎಸ್.ಐ ಸಾಹೇಬರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಂಶವೇನೆಂದರೆ ತಮ್ಮ ಪೊಲೀಸ್ ಠಾಣಾ ವ್ಯಾಪ್ತಿಯ ಬಾಳೇಗೌಡನಹಳ್ಳಿ ಗ್ರಾಮದ  ಯುಗಾಂದರ್ ಬಿನ್ ಬಾಬಾಜಾನ್ ರವರು ಅವರ ಚಿಲ್ಲರೆ ಅಂಗಡಿಯ ಬಳಿ ಅಕ್ರಮವಾಗಿ ಮದ್ಯಮಾರಾಟಮಾಡಲು ಸಾರ್ವಜನಿಕರಿಗೆ ಸ್ಥಳಾವಕಾಶವನ್ನು ಮಾಡಿಕೊಟ್ಟಿರುವುದಾಗಿ ಮಾಹಿತಿ ಬಂದಿದ್ದರ ಮೇರೆಗೆ ನಮ್ಮ ಠಾಣೆಯ ಎ.ಎಸ್.ಐ ನಾರಾಯಣಪ್ಪ, ಹೆಚ್.ಸಿ 22 ರಾಮಕೃಷ್ಣಪ್ಪ, ಹೆಚ್.ಸಿ 43 ನಾರಾಯಣಪ್ಪ ಮತ್ತು ಪಂಚಾಯ್ತಿದಾರರೊಂದಿಗೆ ದಾಳಿಮಾಡಿ ಸ್ಥಳದಲ್ಲಿ ಇದ್ದ 90 ಎಂ.ಎಲ್ ನ 15  ಒರಿಜಿನಲ್ ಹೈವಾಡ್ಸ್ ಚೇರ್ಸ್ ವಿಸ್ಕಿಯ ಮದ್ಯದ ಟೆಟ್ರಾ ಪಾಕೇಟ್ ಗಳನ್ನು, ಓಪನ್ ಮಾಡಿರುವ 2 ಹೈವಾರ್ಡ್ಸ್ ಚೇರ್ಸ್ ವಿಸ್ಕಿಯ ಮದ್ಯದ ಟೆಟ್ರಾ ಪ್ಯಾಕೇಟ್ ಗಳನ್ನು ಹಾಗೂ 2  ಪ್ಲಾಸ್ಟಿಕ್ ಲೋಟಗಳನ್ನು ಪಂಚನಾಮೆಯ ಮೂಲಕ ಅಮಾನತ್ತು ಪಡಿಸಿಕೊಂಡು  ಠಾಣೆಗೆ ಬಂದು ಮುಂದಿನ ಕ್ರಮ ಕೈಗೊಳ್ಳಲು ನೀಡಿರುವ ಮೆಮೋ ಆಗಿರುತ್ತೆ.

 1. ದಿಬ್ಬೂರಹಳ್ಳಿ ಪೊಲೀಸ್ ಠಾಣೆ. ಮೊ.ಸಂ: 105/2019 ಕಲಂ: 15(ಎ), 32(3) ಕೆ.ಇ. ಆಕ್ಟ್:-

          ಈ ದಿನ ದಿನಾಂಕ 14/07/2019 ರಂದು ಬೆಳಗ್ಗೆ  11- ಗಂಟೆಗೆ ಪಿ.ಎಸ್.ಐ ಸಾಹೇಬರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಂಶವೇನೆಂದರೆ ತಮ್ಮ ಪೊಲೀಸ್ ಠಾಣಾ ವ್ಯಾಪ್ತಿಯ ಬಾಳೇಗೌಡನಹಳ್ಳಿ ಗ್ರಾಮದ  ಗೋವಿಂದಸ್ವಾಮಿ ಬಿನ್ ಮಾಲ್ಲೇಶ್ ಪುರಂ  ರವರು ಅವರ ಪೆಟ್ಟಿಗೆ ಅಂಗಡಿಯ ಬಳಿ ಅಕ್ರಮವಾಗಿ ಮದ್ಯಪಾನ ಮಾಡಲು ಸಾರ್ವಜನಿಕರಿಗೆ ಸ್ಥಳಾವಕಾಶವನ್ನು ಮಾಡಿಕೊಟ್ಟಿರುವುದಾಗಿ ಮಾಹಿತಿ ಬಂದಿದ್ದರ ಮೇರೆಗೆ ನಮ್ಮ ಠಾಣೆಯ ಎ.ಎಸ್.ಐ-ನಾರಾಯಣಪ್ಪ, ಹೆಚ್.ಸಿ-43 ನಾರಾಯಣಪ್ಪ, ಹೆಚ್.ಸಿ-22 ರಾಮಕೃಷ್ಣಪ್ಪ ಮತ್ತು ಪಂಚಾಯ್ತಿದಾರರೊಂದಿಗೆ ದಾಳಿಮಾಡಿ ಸ್ಥಳದಲ್ಲಿ ಇದ್ದ 90 ಎಂ.ಎಲ್ ನ 15 ಹೈವಾರ್ಡ್ಸ್ ಚೀರ್ಸ್ ವಿಸ್ಕಿಯ ಮದ್ಯದ ಟೆಟ್ರಾ ಪಾಕೇಟ್ ಗಳನ್ನು, ಓಪನ್ ಮಾಡಿರುವ 3 ಹೈವಾರ್ಡ್ಸ್ ಚೀರ್ಸ್ ವಿಸ್ಕಿಯ ಮದ್ಯದ ಟೆಟ್ರಾ ಪ್ಯಾಕೇಟ್ ಅನ್ನು ಹಾಗೂ 3  ಪ್ಲಾಸ್ಟಿಕ್ ಲೋಟಗಳನ್ನು ಪಂಚನಾಮೆಯ ಮೂಲಕ ಅಮಾನತ್ತು ಪಡಿಸಿಕೊಂಡು  ಠಾಣೆಗೆ ಬಂದು ಮುಂದಿನ ಕ್ರಮ ಕೈಗೊಳ್ಳಲು ನೀಡಿರುವ ಮೆಮೋ ಆಗಿರುತ್ತೆ.

 1. ದಿಬ್ಬೂರಹಳ್ಳಿ ಪೊಲೀಸ್ ಠಾಣೆ. ಮೊ.ಸಂ: 106/2019 ಕಲಂ: 15(ಎ), 32(3) ಕೆ.ಇ. ಆಕ್ಟ್:-

          ಈ ದಿನ ದಿನಾಂಕ 14/07/2019 ರಂದು ಮದ್ಯಾಹ್ನ 1-30  ಗಂಟೆಗೆ ಪಿ.ಎಸ್.ಐ ಸಾಹೇಬರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಂಶವೇನೆಂದರೆ ತಮ್ಮ ಪೊಲೀಸ್ ಠಾಣಾ ವ್ಯಾಪ್ತಿಯ ಗೋಣಿಮರದಹಳ್ಳಿ ಗ್ರಾಮದ  ದೇವರಾಜ್ ಬಿನ್ ವೆಂಕಟೇಶಪ್ಪ ರವರು ಅವರ ಪೆಟ್ಟಿಗೆ ಅಂಗಡಿಯ ಬಳಿ ಅಕ್ರಮವಾಗಿ ಮದ್ಯಪಾನ ಮಾಡಲು ಸಾರ್ವಜನಿಕರಿಗೆ ಸ್ಥಳಾವಕಾಶವನ್ನು ಮಾಡಿಕೊಟ್ಟಿರುವುದಾಗಿ ಮಾಹಿತಿ ಬಂದಿದ್ದರ ಮೇರೆಗೆ ನಮ್ಮ ಠಾಣೆಯ ಎ.ಎಸ್.ಐ-ನಾರಾಯಣಪ್ಪ, ಹೆಚ್.ಸಿ-43 ನಾರಾಯಣಪ್ಪ, ಹೆಚ್.ಸಿ-22 ರಾಮಕೃಷ್ಣಪ್ಪ ಮತ್ತು ಪಂಚಾಯ್ತಿದಾರರೊಂದಿಗೆ ದಾಳಿಮಾಡಿ ಸ್ಥಳದಲ್ಲಿ ಇದ್ದ 90 ಎಂ.ಎಲ್ ನ 15 ಹೈವಾರ್ಡ್ಸ್ ಚೀರ್ಸ್ ವಿಸ್ಕಿಯ ಮದ್ಯದ ಟೆಟ್ರಾ ಪಾಕೇಟ್ ಗಳನ್ನು, ಓಪನ್ ಮಾಡಿರುವ 2 ಹೈವಾರ್ಡ್ಸ್ ಚೀರ್ಸ್ ವಿಸ್ಕಿಯ ಮದ್ಯದ ಟೆಟ್ರಾ ಪ್ಯಾಕೇಟ್ ಅನ್ನು ಹಾಗೂ 2  ಪ್ಲಾಸ್ಟಿಕ್ ಲೋಟಗಳನ್ನು ಪಂಚನಾಮೆಯ ಮೂಲಕ ಅಮಾನತ್ತು ಪಡಿಸಿಕೊಂಡು  ಠಾಣೆಗೆ ಬಂದು ಮುಂದಿನ ಕ್ರಮ ಕೈಗೊಳ್ಳಲು ನೀಡಿರುವ ಮೆಮೋ ಆಗಿರುತ್ತೆ.

 1. ದಿಬ್ಬೂರಹಳ್ಳಿ ಪೊಲೀಸ್ ಠಾಣೆ. ಮೊ.ಸಂ: 107/2019 ಕಲಂ: 15(ಎ), 32(3) ಕೆ.ಇ. ಆಕ್ಟ್:-

          ಈ ದಿನ ದಿನಾಂಕ 14/07/2019 ರಂದು ಮದ್ಯಾಹ್ನ 3-30  ಗಂಟೆಗೆ ಪಿ.ಎಸ್.ಐ ಸಾಹೇಬರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಂಶವೇನೆಂದರೆ ತಮ್ಮ ಪೊಲೀಸ್ ಠಾಣಾ ವ್ಯಾಪ್ತಿಯ ಸೊಣಗಾನಹಳ್ಳಿ ಗ್ರಾಮದ  ಗಂಗರಾಜು ಬಿನ್ ತ್ಯಾರಪ್ಪ ರವರು ಅವರ ಪೆಟ್ಟಿಗೆ ಅಂಗಡಿಯ ಬಳಿ ಅಕ್ರಮವಾಗಿ ಮದ್ಯಪಾನ ಮಾಡಲು ಸಾರ್ವಜನಿಕರಿಗೆ ಸ್ಥಳಾವಕಾಶವನ್ನು ಮಾಡಿಕೊಟ್ಟಿರುವುದಾಗಿ ಮಾಹಿತಿ ಬಂದಿದ್ದರ ಮೇರೆಗೆ ನಮ್ಮ ಠಾಣೆಯ ಎ.ಎಸ್.ಐ-ನಾರಾಯಣಪ್ಪ, ಹೆಚ್.ಸಿ-43 ನಾರಾಯಣಪ್ಪ, ಹೆಚ್.ಸಿ-22 ರಾಮಕೃಷ್ಣಪ್ಪ ಮತ್ತು ಪಂಚಾಯ್ತಿದಾರರೊಂದಿಗೆ ದಾಳಿಮಾಡಿ ಸ್ಥಳದಲ್ಲಿ ಇದ್ದ 90 ಎಂ.ಎಲ್ ನ 15 ಹೈವಾರ್ಡ್ಸ್ ಚೀರ್ಸ್ ವಿಸ್ಕಿಯ ಮದ್ಯದ ಟೆಟ್ರಾ ಪಾಕೇಟ್ ಗಳನ್ನು, ಓಪನ್ ಮಾಡಿರುವ 3 ಹೈವಾರ್ಡ್ಸ್ ಚೀರ್ಸ್ ವಿಸ್ಕಿಯ ಮದ್ಯದ ಟೆಟ್ರಾ ಪ್ಯಾಕೇಟ್ ಅನ್ನು ಹಾಗೂ 3  ಪ್ಲಾಸ್ಟಿಕ್ ಲೋಟಗಳನ್ನು ಪಂಚನಾಮೆಯ ಮೂಲಕ ಅಮಾನತ್ತು ಪಡಿಸಿಕೊಂಡು  ಠಾಣೆಗೆ ಬಂದು ಮುಂದಿನ ಕ್ರಮ ಕೈಗೊಳ್ಳಲು ನೀಡಿರುವ ಮೆಮೋ ಆಗಿರುತ್ತೆ.

 1. ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ. ಮೊ.ಸಂ: 265/2019 ಕಲಂ: 87 ಕೆ.ಪಿ. ಆಕ್ಟ್:-

          ದಿನಾಂಕ 12-07-2019 ರಂದು 17-00 ಗಂಟೆಗೆ ಗೌರಿಬಿದನೂರು ಗ್ರಾಮಾಂತರ ಠಾಣೆಯ ಮಾನ್ಯ ಪಿ.ಎಸ್.ಐ. ಎನ್. ಮೋಹನ್ ರವರು ಠಾಣೆಗೆ ಹಾಜರಾಗಿ  6 ಜನ ಆಸಾಮಿಗಳು, ಮಾಲು ಮತ್ತು ಪಂಚನಾಮೆಯನ್ನು ಹಾಜರುಪಡಿಸಿ ನೀಡಿದ  ದೂರಿನ ಸಾರಾಂಶವೇನೆಂದರೆ  ದಿನಾಂಕ: 12-07-2019 ರಂದು 15-00 ಗಂಟೆಯಲ್ಲಿ ಗೌರಿಬಿದನೂರು ತಾಲ್ಲೂಕು ಹೊಸೂರು  ಹೊರ ಠಾಣೆಯ ವ್ಯಾಪ್ತಿಯಲ್ಲಿ ತಾನು ಮತ್ತು ಹೊರಠಾಣೆಯ ಹೆಚ್.ಸಿ. 10, ಶ್ರೀರಾಮಯ್ಯ, ಪಿ.ಸಿ. 460 ಸನಾವುಲ್ಲಾ, ಪಿ.ಸಿ. 317 ಮಧುಸೂಧನ.ವಿ. ರವರೊಂದಿಗೆ ಗಸ್ತು ಮಾಡುತ್ತಿದ್ದಾಗ  ಗೌರಿಬಿದನೂರು ತಾಲ್ಲೂಕು ಹುಣಸೇ ಕುಂಟೆ ಗ್ರಾಮದಲ್ಲಿ  ಸಾರ್ವಜನಿಕ ಸ್ಥಳವಾದ  ಅರಳೀಕಟ್ಟೆಯ ಜಗುಲಿಯ ಮೇಲೆ ಯಾರೋ ಆಸಾಮಿಗಳು  ಹಣವನ್ನು ಪಣವಾಗಿಟ್ಟು ಇಸ್ಪೀಟ್  ಎಲೆಗಳಿಂದ  ಅಕ್ರಮ ಜೂಜಾಟವನ್ನು  ಆಡುತ್ತಿದ್ದಾರೆಂದು  ಖಚಿತವಾದ ಮಾಹಿತಿ ಬಂದ ಮೇರೆಗೆ  ನಾನು ಮತ್ತು  ಸಿಬ್ಬಂದಿಯವರು ಹಾಗೂ ಪಂಚರೊಂದಿಗೆ ಸರ್ಕಾರಿ ಜೀಪ್ ಸಂಖ್ಯೆ: ಕೆ.ಎ-40, ಜಿ-281 ರಲ್ಲಿ  ಹುಣಸಿಕುಂಟೆ ಗ್ರಾಮಕ್ಕೆ ಹೋಗಿ  ಸ್ವಲ್ಪ ದೂರದಲ್ಲಿ   ಸರ್ಕಾರಿ ವಾಹನವನ್ನು ನಿಲ್ಲಿಸಿ   ಮರೆಯಲ್ಲಿ ನಿಂತು ನೋಡಲಾಗಿ  ಗ್ರಾಮದ ಮದ್ಯಭಾಗದಲ್ಲಿರುವ  ಅರಳಿಕಟ್ಟೆಯ ಮೇಲೆ 6 ಜನರು ಗುಂಪಾಗಿ ಕುಳಿತುಕೊಂಡು  ಅಂದರ್ ಗೆ 100 ರೂ, ಬಾಹರ್ ಗೆ 100 ರೂ  ಎಂದು ಕೂಗುತ್ತಿದ್ದು ಆಸಾಮಿಗಳು ಜೂಜಾಟವನ್ನು ಆಡುತ್ತಿರುವ ಬಗ್ಗೆ ಖಚಿತಪಡಿಸಿಕೊಂಡು  ಪಂಚರ ಸಮಕ್ಷಮದಲ್ಲಿ  ತಾನು ಮತ್ತು ಸಿಬ್ಬಂದಿಯವರು  ದಾಳಿ ಮಾಡಿ ಸುತ್ತುವರೆದು  ಕುಳಿತಿದ್ದವರನ್ನು  ಹಿಡಿದುಕೊಂಡು ವಿಚಾರಿಸಲಾಗಿ 1) ಮಹೇಶ ಬಿನ್  ನರಸಿಂಹಪ್ಪ, 24 ವರ್ಷ,  ನಾಯಕರು,  ಜಿರಾಯ್ತಿ, ವಾಸ ಹುಣಸಿಕುಂಟೆ ಗ್ರಾಮ, ಹೊಸೂರು ಹೋಬಳಿ,  ಗೌರಿಬಿದನೂರು ತಾಲ್ಲೂಕು , 2) ಹನುಮಂತರಾಯ ಬಿನ್  ವೆಂಕಟೇಶ್, 32 ವರ್ಷ,  ಬೋವಿ ಜನಾಂಗ, ಜಿರಾಯ್ತಿ, ವಾಸ ಹುಣಸಿಕುಂಟೆ ಗ್ರಾಮ, ಹೊಸೂರು ಹೋಬಳಿ,  ಗೌರಿಬಿದನೂರು ತಾಲ್ಲೂಕು , 3)  ಅನಿಲ್ ಕುಮಾರ್  ಬಿನ್ ಶ್ರೀನಿವಾಸ, 20 ವರ್ಷ, ಬೋವಿ ಜನಾಂಗ, ಜಿರಾಯ್ತಿ, ವಾಸ ಹುಣಸಿಕುಂಟೆ ಗ್ರಾಮ, ಹೊಸೂರು ಹೋಬಳಿ,  ಗೌರಿಬಿದನೂರು ತಾಲ್ಲೂಕು , 4) ಹೆಚ್.ಸಿ. ನಾಗರಾಜು ಬಿನ್  ಹೆಚ್.ಎಂ. ಚೌಡಪ್ಪ, 38 ವರ್ಷ, ಬೋವಿ ಜನಾಂಗ, ಜಿರಾಯ್ತಿ, ವಾಸ ಹುಣಸಿಕುಂಟೆ ಗ್ರಾಮ, ಹೊಸೂರು ಹೋಬಳಿ,  ಗೌರಿಬಿದನೂರು ತಾಲ್ಲೂಕು, 5) ಗಂಗಪ್ಪ ಬಿನ್ ಲೇಟ್ ಸುಬ್ರಮಣಿ, 40 ವರ್ಷ, ಬೋವಿ ಜನಾಂಗ, ವಾಸ ನಂದಂಬಳ್ಳಿ ಗ್ರಾಮ, ಕೆ.ಜಿ.ಎಫ್. ತಾಲ್ಲೂಕು, ಕೋಲಾರ ಜಿಲ್ಲೆ, 6) ಕುಮಾರ್ ಬಿನ್   ಹೆಚ್.ಎಂ. ಚೌಡಪ್ಪ, 36 ವರ್ಷ, ಬೋವಿ ಜನಾಂಗ, ಮುನೇಶ್ವರ ದೇವಸ್ಥಾನ ಅರ್ಚಕ, ವಾಸ ಹುಣಸಿಕುಂಟೆ ಗ್ರಾಮ, ಹೊಸೂರು ಹೋಬಳಿ,  ಗೌರಿಬಿದನೂರು ತಾಲ್ಲೂಕು ಎಂದು ತಿಳಿಸಿದ್ದು  ಸ್ಥಳದಲ್ಲಿ ಬಿದ್ದಿದ್ದ  ಪಣಕ್ಕಿಟ್ಟಿದ್ದ ಹಣ  ಎಣಿಸಲಾಗಿ  1,270/- ರೂ ಹಣ , 52 ಸ್ಪೀಟ್ ಎಲೆಗಳು ಇರುತ್ತೆ.  ಸ್ಥಳದಲ್ಲಿ  15-30 ಗಂಟೆಯಿಂದ 16-30 ಗಂಟೆಯವರೆಗೆ ಪಂಚರ ಸಮಕ್ಷಮದಲ್ಲಿ ಪಂಚನಾಮೆ ಕ್ರಮ ಜರುಗಿಸಿ 1) 1270/- ನಗದು ಹಣ ಮತ್ತು 52 ಇಸ್ಪೀಟ್ ಎಲೆಗಳನ್ನು ವಶಪಡಿಸಿಕೊಂಡು, ಠಾಣೆಗೆ 17-00  ಗಂಟೆಗೆ  ವಾಪಸ್ಸು ಬಂದಿದ್ದು,  ಆರೋಪಿಗಳು, ಪಂಚನಾಮೆ ಮತ್ತು  ಮಾಲನ್ನು ಸಹ ನೀಡುತ್ತಿದ್ದು, ಆರೋಪಿಗಳ ವಿರುದ್ಧ  ಕಲಂ: 87 ಕೆ.ಪಿ.ಆಕ್ಟ್ – 1963 ರೀತ್ಯಾ ಪ್ರಕರಣವನ್ನು ದಾಖಲು ಮಾಡಲು ಸೂಚಿಸಿದ್ದರ ಮೇರೆಗೆ  ಅರ್ಜಿಯನ್ನು ನೊಂದಾಯಿಸಿಕೊಂಡಿರುತ್ತೆ. ನಂತರ ಘನ ನ್ಯಾಯಾಲಯದ ಅನುಮತಿಯನ್ನು ಪಡೆದುಕೊಂಡು ಪ್ರಕರಣ ದಾಖಲಿಸಿಕೊಂಡಿರುತ್ತೆ.

 1. ಗೌರಿಬಿದನೂರು ಪುರ ಪೊಲೀಸ್ ಠಾಣೆ. ಮೊ.ಸಂ: 122/2019 ಕಲಂ: 392 ಐ.ಪಿ.ಸಿ:-

          ದಿನಾಂಕ:13.07.2019 ರಂದು ಸಂಜೆ 6.00 ಗಂಟೆ ಸಮಯದಲ್ಲಿ ಪಿರ್ಯಾದಿದಾರರಾದ  ಎಂ.ಎಸ್.ಲಲಿತಮ್ಮ ಕೋಂ ಕೆ.ಎನ್.ಪ್ರಸನ್ನತೀರ್ಥ, 40 ವರ್ಷ, ಬ್ರಾಹ್ಮಣರು, ಮಾತೃಕೃಪ, ಡಿ.ಪಾಳ್ಯ ರಸ್ತೆ, ನದಿದಡ, ನಂದಿನಿ ಬಡಾವಣೆ, ಗೌರಿಬಿದನೂರು ಪುರ ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ, ಅರ್ಜಿದಾರರು ಬಾಗೇಪಲ್ಲಿ ಪುರದ ಸರ್ಕಾರಿ ಶಾಲೆಯಲ್ಲಿ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ದಿನಾಲೂ ಗೌರಿಬಿದನೂರುಪುರದಿಂದ ಬಾಗೇಪಲ್ಲಿಗೆ ಹೋಗಿ ಬರುತ್ತಿರುತ್ತಾರೆ. ಹೀಗಿರುವಲ್ಲಿ ದಿನಾಂಕ:13.07.2019 ರಂದು ಮಧ್ಯಾಹ್ನ ಸುಮಾರು 2.45 ಗಂಟೆ ಸಮಯದಲ್ಲಿ ಕರ್ತವ್ಯ ಮುಗಿಸಿಕೊಂಡು ವಾಪಸ್ಸು ಮನೆಗೆ ಮಸೀದಿಯ ಮಾರ್ಗವಾಗಿ ನದಿದಡದಲ್ಲಿ ಹೊಸದಾಗಿ ನಿರ್ಮಿಸಿರುವ ಸೇತುವೆಯ ಬಳಿ ಇರುವ ಕೊಳವೆ ಬಾವಿ ಹತ್ತಿರ ನಡೆದುಕೊಂಡು ಹೋಗುತ್ತಿದ್ದಾಗ ಎದುರುಗಡೆಯಿಂದ ಇಬ್ಬರು ಅಪರಿಚಿತ ವ್ಯಕ್ತಿಗಳು ಯಾವುದೋ ದ್ವಿಚಕ್ರ ವಾಹನದಲ್ಲಿ ಬಂದು ನನ್ನ ಕತ್ತಿನಲ್ಲಿದ್ದ ಬಂಗಾರದ ಮಾಂಗಲ್ಯ ಸರ, ಅದರಲ್ಲಿದ್ದ ಮೂರು ಮಾಂಗಲ್ಯ ಹಾಗೂ ಗುಂಡುಗಳನ್ನು ಕಿತ್ತುಕೊಂಡು ಪಟ್ಟಣದ ಕಡೆಗೆ ಹೋಗಿರುತ್ತಾರೆ. ಸದರಿಯವುಗಳ ಒಟ್ಟು ತೂಕ 65 ಗ್ರಾಂ ಮತ್ತು ಬೆಲೆ ಸುಮಾರು 1,30,000/- ರೂ.ಗಳಾಗಿರುತ್ತೆ. ದ್ವಿಚಕ್ರ ವಾಹನದಲ್ಲಿದ್ದ ಒಬ್ಬರು ನೀಲಿಬಣ್ಣದ ಷರ್ಟ್ ಧರಿಸಿರುತ್ತಾರೆ. ಆದ್ದರಿಂದ ತಾವುಗಳು ದಯಮಾಡಿ ನನ್ನ ಮಾಂಗಲ್ಯ ಸರವನ್ನು ಕಿತ್ತುಕೊಂಡು ಹೋದವರನ್ನು ಮತ್ತು ನನ್ನ ಮಾಂಗಲ್ಯ ಸರವನ್ನು ಪತ್ತೆ ಮಾಡಿಕೊಡಲು ಕೋರಿ ಕೊಟ್ಟ ದೂರನ್ನು ಪಡೆದು ಪ್ರಕರಣವನ್ನು ದಾಖಲಿಸಿರುತ್ತೆ.

 1. ಗೌರಿಬಿದನೂರು ಪುರ ಪೊಲೀಸ್ ಠಾಣೆ. ಮೊ.ಸಂ: 123/2019 ಕಲಂ: 279-337-304(ಎ) ಐ.ಪಿ.ಸಿ:-

          ದಿನಾಂಕ:14.07.2019 ರಂದು ಬೆಳಿಗ್ಗೆ 6.00 ಗಂಟೆಗೆ ಪಿರ್ಯಾದಿದಾರರಾದ ಶ್ರೀ ದೇವರಾಜು ಬಿನ್ ಗಂಗಪ್ಪ, 36 ವರ್ಷ, ಪ.ಜಾ.(ಆದಿ ಕರ್ನಾಟಕ), ಜಿ.ಬೊಮ್ಮಸಂದ್ರ ಗ್ರಾಮ, ಗೌರಿಬಿದನೂರು ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ದಿನಾಂಕ:14.07.2019 ರಂದು ಬೆಳಿಗ್ಗೆ 4.30 ಗಂಟೆ ಸಮಯದಲ್ಲಿ ನಮ್ಮ ತಂದೆ ಗಂಗಪ್ಪ ರವರಿಗೆ ಆರೋಗ್ಯ ಸರಿಯಿಲ್ಲದ ಕಾರಣ ನಾನು ಮತ್ತು ನಮ್ಮ ತಾಯಿಯಾದ ಕದಿರಮ್ಮ ಮತ್ತು ನಮ್ಮ ಸಂಬಂಧಿಕರಾದ ಅಶ್ವತ್ಥಮ್ಮ ಕೋಂ ಸೋಮಶಂಕರ, ನಾಗರಾಜು ಬಿನ್ ನಡಿಪಿಬಡಿಗಪ್ಪ,ರವಿಕುಮಾರ್ ಬಿನ್ ಕದಿರಪ್ಪ ರವರುಗಳು ಗೌರಿಬಿದನೂರು ಪುರದ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬರಲು ನಮ್ಮ ಬಾವ ಮೈದುನನಾದ ಮುನಿಯಪ್ಪ ಬಿನ್ ಮೈಲಾರಪ್ಪ ರವರ ಬಾಬತ್ತು  ಆಟೋ ಸಂಖ್ಯೆ;TR NO:KA 408047 APPE ಆಟೋ ವಾಹನದಲ್ಲಿ ಬರುತ್ತಿದ್ದಾಗ ಗೌರಿಬಿದನೂರು ಪುರದ ಮಾಧನಹಳ್ಳಿ ಗೇಟ್ ಬಳಿ ಬರುವಷ್ಟರಲ್ಲಿ ಗೌರಿಬಿದನೂರಿನಿಂದ ಬೆಂಗಳೂರು ಕಡೆಗೆ ಬರುತ್ತಿದ್ದ ಕೆ.ಎಸ್.ಆರ್.ಟಿ.ಸಿ.ಬಸ್ ನಂ.KA 40 F 1040 ಬಸ್ ನ ಚಾಲಕ ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ನಮ್ಮ ಆಟೋಗೆ ಡಿಕ್ಕಿ ಹೊಡೆಸಿದ ಪರಿಣಾಮ ಆಟೋ ಮಧ್ಯದ ಸೀಟಿನಲ್ಲಿ ಕುಳಿತಿದ್ದ ತಮ್ಮ ತಂದೆಯವರಾದ ಗಂಗಪ್ಪ, ಮತ್ತು ನಮ್ಮ ತಾಯಿ ಕದಿರಮ್ಮ ರವರು ಸ್ಥಳದಲ್ಲಿಯೇ ಮೃತಪಟ್ಟಿರುತ್ತಾರೆ ಮತ್ತು ಆಟೋದಲ್ಲಿ ನಮ್ಮ ಜೊತೆಗಿದ್ದ ಅಶ್ವತ್ಥಮ್ಮ ಕೋಂ ಸೋಮಶಂಕರ ರವರಿಗೆ ಎಡಗೈನ ಮುಂಗೈ ಮುರಿದಿದ್ದು,  ನಾಗರಾಜು ಬಿನ್ ನಡಿಪಿಬಡಿಗಪ್ಪ ರವರಿಗೆ ಎಡಗಾಲಿಗೆ ಮತ್ತು ಬಲಗಾಲಿಗೆ ರಕ್ತಗಾಯಗಳಾಗಿರುತ್ತದೆ. ಆದ್ದರಿಂದ ತಾವುಗಳು ಅಪಘಾತಪಡಿಸಿದ ಕೆ.ಎಸ್.ಆರ್.ಟಿ.ಸಿ.ಬಸ್ ಚಾಲಕನ ವಿರುದ್ದ ಕಾನೂನು ರೀತ್ಯ ಕ್ರಮ ಕೈಗೊಳ್ಳಲು ಕೋರಿ ನೀಡಿದ ದೂರನ್ನು ಪಡೆದು ಪ್ರಕರಣ ದಾಖಲಿಸಿರುತ್ತೆ.

 1. ಗುಡಿಬಂಡೆ ಪೊಲೀಸ್ ಠಾಣೆ. ಮೊ.ಸಂ: 195/2019 ಕಲಂ: 379 ಐ.ಪಿ.ಸಿ:-

          ದಿನಾಂಕ:14/07/2019 ರಂದು ಬೆಳಗ್ಗೆ 10-00 ಘಂಟೆಗೆ ಪಿರ್ಯಾದಿದಾರರಾದ ರಾಜಣ್ಣ ಬಿನ್ ಆವುಲರೆಡ್ಡಿ 32 ವರ್ಷ ವಕ್ಕಲಿಗರು ಎಸ್.ಎಲ್.ಎನ್.ಎಸ್.ಸಿ. ಕ್ರಷರ್ ನಲ್ಲಿ ಲೇಖಕ ಕೆಲಸ ವಾಸ ಬೊಮ್ಮನಹಳ್ಳಿ ಗ್ರಾಮ ಚಿಕ್ಕಬಳ್ಳಾಪುರ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಂಶವೇನೆಂದರೆ: ತಾನು ಈಗ್ಗೆ ಸುಮಾರು 6 ತಿಂಗಳಿಂದ ಚಿಕ್ಕಬಳ್ಳಾಪುರ ತಾಲ್ಲೂಕು ಚಿಕ್ಕನಾಗವಲ್ಲಿ ಗ್ರಾಮದ ಬಳಿ ಇರುವ ಎಸ್.ಎಲ್.ಎನ್.ಎಸ್.ಸಿ. ಕ್ರಷರ್ ನಲ್ಲಿ ರೈಟರ್ ಕೆಲಸ ಮಾಡುತ್ತಿದ್ದು ತನ್ನೊಂದಿಗೆ ಪೈರೋಜ್ ಮತ್ತು ಆನಂದ ಎಂಬುವರು ರೈಟರ್ ಕೆಲಸ ಮಾಡುತ್ತಿದ್ದು ತಾವು ಕೆಲಸ ಮಾಡುತ್ತಿರುವ ಕ್ರಷರ್ ನಿಂದ ಸುಮಾರು 4 ಕಿ.ಮೀ. ಅಂತರದಲ್ಲಿ ಮಿಥಿಲೇಶ್ ಎಂಬುವರ ಕ್ವಾರಿಯನ್ನು ತಮ್ಮ ಕ್ರಷರ್ ಮಾಲೀಕರು ಬಾಡಿಗೆಗೆ ತಗೆದುಕೊಂಡಿದ್ದು ಅದರಂತೆ ಅ ಕ್ವಾರಿಯಲ್ಲಿ ತಮ್ಮ ಕಂಪನಿಯ ಹಿಟಾಚಿ ವಾಹನಗಳಿಂದ ಅಪರೇಟರ್ ಗಳು ಮತ್ತು ಕೂಲಿ ಆಳುಗಳು ಕೆಲಸ ಮಾಡುತ್ತಿದ್ದು ದಿನಾಂಕ:07/07/2019 ರಂದು ತಾನು ಮತ್ತು ಪೈರೋಜ್ ರವರು ಕ್ವಾರಿಯಲ್ಲಿ ಕೆಲಸ ಮಾಡಿಸಿದ್ದು ಅ ದಿನ ಸಂಜೆ 6-30 ಘಂಟೆಯಲ್ಲಿ ಕ್ವಾರಿಯಲ್ಲಿ ಬ್ಲಾಸ್ಟಿಂಗ್ ಮಾಡಿಸಿದ್ದು ಅ ದಿನ ಬ್ಲಾಸ್ಟಿಂಗ್  ಮಾಡಿಸುವಾಗ ಬ್ರೆಕರ್ ಇರುವ ಹಿಟಾಚಿಗಳನ್ನು ದೂರದಲ್ಲಿ ಪಕ್ಕಕ್ಕೆ ಇರಿಸಿದ್ದು ನಂತರ ಸದರಿ ಬ್ರೇಕರ್ ವಾಹನಗಳಿಂದ ಕ್ವಾರಿಯಲ್ಲಿ ಕೆಲಸ ಮಾಡಿಸಿದ್ದು ಸದರಿ ಹಿಟಾಚಿಗಳಿಗೆ ಬೇರೆ ರಾಜ್ಯದವರು ಅಪರೇಟರ್ ಗಳಾಗಿದ್ದು ದಿನಾಂಕ:07/07/2019 ರಂದು ಸಂಜೆ ಕೆಲಸ ಮುಗಿದ ನಂತರ ತಾವು ಸಹ ಸದರಿ ಕ್ವಾರಿ ಬಳಿ ಹೋಗಿರಲಿಲ್ಲ  ದಿನಾಂಕ:13/07/2019 ರಂದು ಬೆಳಗ್ಗೆ 10-00 ಘಂಟೆಯಲ್ಲಿ ತಾನು ಮತ್ತು ಪೈರೋಜ್ ಹಾಗೂ ಆನಂದ ರವರು ಕ್ವಾರಿಯಲ್ಲಿ ಹೋಗಿ ನೋಡಲಾಗಿ 02 ಹಿಟಾಚಿ ವಾಹನಗಳ ಪೈಕಿ ಒಂದು ಹಿಟಾಚಿ ವಾಹನಕ್ಕೆ ಅಳವಡಿಸಿದ್ದ ಬ್ರೇಕರ್ ಇರಲಿಲ್ಲ ಸದರಿ ವಾಹನಗಳ ಅಪರೇಟರ್ ಗಳು ಮತ್ತು ಹೆಲ್ಪರ್ ಸಹ ಇರಲಿಲ್ಲ ಕ್ವಾರಿಯಲ್ಲಿ ಹುಡುಕಾಡಲಾಗಿ ಬ್ರೇಕರ್ ದೊರೆಯದೇ ಇದ್ದು ನಂತರ ತಮ್ಮ ಮಾಲೀಕರ ಮಗನಾದ ಪ್ರಶಾಂತರವರಿಗೆ ಈ ವಿಚಾರ ತಿಳಿಸಿದ್ದು ಅದರಂತೆ ಅವರು ರಾಮಮೂರ್ತಿ ರವರಿಗೆ ಉಸ್ತುವಾರಿ ನೀಡಿ ಕಳುಹಿಸಿಕೊಟ್ಟಿದ್ದು  ರಾಮಮೂರ್ತಿ ರವರು ಸಹ ತಮ್ಮ ಕ್ವಾರಿಯಲ್ಲಿ ಕೆಲಸ ಮಾಡುವ ಕೆಲಸಗಾರರನ್ನು ವಿಚಾರಣೆ ಮಾಡಿದ್ದು ಯಾವುದೇ ಮಾಹಿತಿ ಸಿಕ್ಕಿರವುದಿಲ್ಲ  ತಮ್ಮ ಕಂಪನಿಯ ಬಾಬ್ತು 18.90.000/-ರೂಪಾಯಿಗಳು ಬೆಲೆ ಬಾಳುವ ಹಿಟಾಚಿಯಲ್ಲಿದ್ದ ಬ್ರೇಕರ್ ರನ್ನು ಯಾರೋ ಕಳ್ಳರು ಕಳುವು ಮಾಡಿದ್ದು ಕಳ್ಳತನವಾಗಿರವ ತಮ್ಮ ಕಂಪನಿಯ ಬಾಬ್ತು  ಹಿಟಾಚಿ ವಾಹನದಲ್ಲಿ ಅಳವಡಿಸಿದ್ದ ಬ್ರೇಕರ್ ನ್ನು ಮತ್ತು ಕಳುವು ಮಾಡಿದವರನ್ನು ಪತ್ತೆ ಮಾಡಿಕೊಡಲು ಕೋರಿ ನೀಡಿದ ದೂರು ಆಗಿರುತ್ತೆ.

 1. ಮಂಚೇನಹಳ್ಳಿ ಪೊಲೀಸ್ ಠಾಣೆ. ಮೊ.ಸಂ: 165/2019 ಕಲಂ: 279-304(ಎ) ಐ.ಪಿ.ಸಿ:-

          ದಿನಾಂಕ:13/07/2019 ರಂದು ಪಿರ್ಯಾದಿದಾರರಾದ ಶ್ರೀ ಜಿ ಶಾಂತರಾಜು ಬಿನ್ ಲೇಟ್ ಗಂಗಧರಯ್ಯ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ:13/07/2019 ರಂದು ಸಂಜೆ ಸುಮಾರು 7-00 ಗಂಟೆಯ ಸಮಯದಲ್ಲಿ ತಮ್ಮ ಗ್ರಾಮದ ಗೋಪಾಲ ರವರು ನನಗೆ ದೂರವಾಣಿ ಕರೆ ಮಾಡಿ ನಿಮ್ಮ ಚಿಕ್ಕಪ್ಪನಾದ ಅಶ್ವತ್ಥಪ್ಪ ರವರಿಗೆ ಟಾಟಾ ಏಸ್ ವಾಹನ ಅಪಘಾತಪಡಿಸಿ ಗೌರಿಬಿದನೂರು ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ಕಳುಹಿಸಿಕೊಟ್ಟಿರುವುದಾಗಿ ತಿಳಿಸಿದ್ದು, ನಾನು ತಕ್ಷಣ ಆಸ್ಪತ್ರೆಗೆ ಹೋಗಿ ವೈದ್ಯಾಧಿಕಾರಿಗಳನ್ನು ವಿಚಾರಿಸಲಾಗಿ ವೈದ್ಯಾಧಿಕಾರಿಗಳು ನಮ್ಮ ಚಿಕ್ಕಪ್ಪ ಮೃತಪಟ್ಟಿರುವುದಾಗಿ ತಿಳಿಸಿದ್ದು, ಈ ಬಗ್ಗೆ ವಿಚಾರಣೆ ಮಾಡಲಾಗಿ ನಮ್ಮ ಚಿಕ್ಕಪ್ಪನಾದ ಅಶ್ವತ್ಥಪ್ಪ ಬಿನ್ ಸೋಮಯ್ಯ, ಸುಮಾರು 65 ವರ್ಷರವರು ಪ್ರತಿದಿನ ಗೌರಿಬಿದನೂರು ತಾಲ್ಲೂಕು ಬರ್ಜಾನುಕುಂಟೆ ಗ್ರಾಮದ ಬಳಿ ಇರುವ ಕೆ.ಎಂ.ಎಫ್. ಶೀತಲ ಕೇಂದ್ರಕ್ಕೆ ಕೂಲಿ ಕೆಲಸಕ್ಕೆ ಹೋಗುತ್ತಿದ್ದು, ಎಂದಿನಂತೆ ಈ ದಿನ ಸಂಜೆ ಸುಮಾರು 6-50 ಗಂಟೆಯ ಸಮಯದಲ್ಲಿ ಕೆ.ಎಂ.ಎಫ್. ಶೀತಲ ಕೇಂಧ್ರಕ್ಕೆ ಹೋಗಲು ಸೊಮೇಶ್ವರ ರೈಲ್ವೇ ನಿಲ್ದಾಣದ ಮುಂಭಾಗ ನಡೆದುಕೊಂಡು ಹೋಗುತ್ತಿದ್ದಾಗ ಬೆಂಗಳೂರು ಕಡೆಯಿಂದ ಗೌರಿಬಿದನೂರು ಕಡೆಗೆ ಹೋಗುತ್ತಿದ್ದ ಕೆ.ಎ-40, ಎ-6360 ನೋಂದಣಿ ಸಂಖ್ಯೆಯ ಟಾಟಾ ಏಸ್ ವಾಹನದ ಚಾಲಕ ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗರುಕತೆಯಿಂದ ಚಾಲನೆ ಮಾಡಿಕೊಂಡು ಬಂದು ರಸ್ತೆಯ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ನಮ್ಮ ಚಿಕ್ಕಪ್ಪ ರವರ ಹಿಂಬದಿಗೆ ಡಿಕ್ಕಿ ಹೊಡೆದ ಪರಿಣಾಮ ನಮ್ಮ ಚಿಕ್ಕಪ್ಪನವರು ಕೆಳಗೆ ಬಿದ್ದು, ತಲೆ ಕಿವಿ ಕೈ ಭಾಗಗಳಿಗೆ ತೀವ್ರತರವಾದ ರಕ್ತಗಾಯಗಳಾಗಿದ್ದು, ಅಲ್ಲಿದ್ದ ಸಾರ್ವಜನಿಕರು ನೋಡಿ ಅದೇ ಟಾಟಾ ಏಸ್ ವಾಹನದಲ್ಲಿ ಗೌರಿಬಿದನೂರು ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ನಮ್ಮ ಚಿಕ್ಕಪ್ಪನವರು ಮೃತಪಟ್ಟಿರುತ್ತಾರೆ ನಮ್ಮ ಚಿಕ್ಕಪ್ಪನವರಿಗೆ ಅಪಘಾತ ಪಡಿಸಿದ ಕೆ.ಎ-40, ಎ-6360 ನೋಂದಣಿ ಸಂಖ್ಯೆಯ ಟಾಟಾ ಏಸ್ ವಾಹನದ ಚಾಲಕನ ಮೇಲೆ ಕಾನೂನು ಕ್ರಮ ಜರುಗಿಸಲು ಕೊರಿ ಕೊಟ್ಟ ದೂರು.

 1. ನಂದಿಗಿರಿಧಾಮ ಪೊಲೀಸ್ ಠಾಣೆ. ಮೊ.ಸಂ: 102/2019 ಕಲಂ: 324-504-506 ಐ.ಪಿ.ಸಿ:-

          ದಿನಾಂಕ 13-07-2019 ರಂದು ಬೆಳಗ್ಗೆ 11-30 ಗಂಟೆಗೆ ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆಯಿಂದ ಬಂದಂತಹ ದೂರವಾಣಿ ಕರೆಯ ಮೇರೆಗೆ  ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆಗೆ ಹೋಗಿ ಅಲ್ಲಿಂದತಹ ಮೆಮೋವನ್ನು ಪಡೆದುಕೊಂಡು  ಜಿಲ್ಲಾಸರ್ಕಾರಿ ಆಸ್ಪತ್ರಗೆ ಬೇಟಿ ನೀಡಿ  ವೈದ್ಯರ ಸಮಕ್ಷಮ ಗಾಯಾಳು ನರಸಿಂಹಪ್ಪ ಬಿನ್ ಲೇಟ್ ಮುನಿಯಪ್ಪ ರವರ ಹೇಳಿಕೆಯನ್ನು ಪಡೆದು ಕೊಂಡಿದ್ದರ ಸಾರಾಂಶವೇನೆಂದರೆ  ಗಾಯಾಳುವಿಗೆ 1 ನೆ  ಶಾಂತಕುಮಾರ 2 ನೆ ನಟರಾಜ ಇಬ್ಬರು ಮಕ್ಕಳಿದ್ದು ಮೊದಲನೆ ಮಗನಿಗೆ ಮದುವೆಯಾಗಿದ್ದು  ಅವನು ಗಾರ್ಮೆಂಟ್ಸ್ ನಲ್ಲಿ ಕೆಲಸ ಮಾಡಿಕೊಂಡಿರುತ್ತಾನೆ, ತಾನು 2 ನೇ ಮಗ ನಟರಾಜನೊಂದಿಗೆ ವಾಸವಿದ್ದು ಈಗ್ಗೆ 4 ತಿಂಗಳ ಹಿಂದೆ ನಟರಾಜನಿಗೆ ಚಂದ್ರಕಳಾ ರವರೊಂದಿಗೆ ಮದುವೆಮಾಡಿದ್ದು ಅವನ ಜೊತೆಯಲ್ಲಿಯೆ  ತನ್ನ ಹೆಂಡತಿಯೊಡನೆ ವಾಸವಾಗಿದ್ದು  ನಟರಾಜನು ಗಾರೆ ಕೆಲಸ ಮಾಡುತ್ತಿದ್ದು  ಮದ್ಯವ್ಯಸನಿಯಾಗಿದ್ದು  ಬುದ್ದಿ ಹೇಳಿದ್ದಕ್ಕೆ ಮನೆಯಲ್ಲಿ ಗಲಾಟೆಯನ್ನು ಮಾಡಿ ಹೊಡೆದಿದ್ದನು, ಈಗ್ಗೆ 10 ದಿನಗಳ ಹಿಂದೆ ನಟರಾಜನ ಹೆಂಡತಿ ಕಡೆಯವರಿಗೆ ಬುದ್ದಿ ಹೇಳುವಂತೆ ಹೇಳಿದ್ದನ್ನು ಮನಸ್ಸಿನಲ್ಲಿಟ್ಟುಕೊಂಡು ದಿನಾಂಕ 12-07-2019 ರಂದು  ರಾತ್ರಿ ಸುಮಾರು 9-30 ಗಂಟೆಯ ಸಮಯದಲ್ಲಿ  ತಾನು ಮನೆಯಲ್ಲಿ ಮಲಗಿದ್ದಾಗ ತನ್ನ ಮಗ ನಟರಾಜನು ಏಕಾ-ಏಕಿ ಬಂದು ನನ್ನ ಮೇಲೆ  ದೂರುಗಳನ್ನು ಹೇಳುತ್ತೀಯಾ ಲೋಫರ್ ನನ್ನ ಮಗನೇ ಎಂದು ಅವಾಚ್ಯವಾಗಿ ಬೈದು ಮನೆಯಲ್ಲಿದ್ದ ಇಟ್ಟುಕೋಲಿನಿಂದ ಎಡಕಾಲಿಗೆ ಎಡಕೈಗೆ ಹೊಡೆದಿದ್ದು ಆ ಸಮಯದಲ್ಲಿ ನನಗೆ ಎಡಕೈ ಮಣಿಕಟ್ಟಿನ ಬಳಿ ಕೈ ಮುರಿದಿರುತ್ತದೆ, ಎಡಕಾಲಿಗೆ ಮೂಗೇಟುಗಳನ್ನುಂಟು ಮಾಡಿ ನಿನ್ನನ್ನು ಸಾಯಿಸಿ ಬಿಡುತ್ತೇನೆಂದು ಪ್ರಾಣ ಬೆದರಿಕೆಯನ್ನು ಹಾಕಿದನು. ತಾನು ನೋವನ್ನು ತಾಳಲಾರದೆ ಜೋರಾಗಿ ಕಿರುಚಿಕೊಂಡಾಗ ನಮ್ಮ ಗ್ರಾಮದ ನರಸಿಂಹಪ್ಪ ,ಮುನಿಯಪ್ಪ ರವರುಗಳು ಬಂದು  ಜಗಳ ಬಿಡಿಸಿ ನಟರಾಜನನ್ನು ಬೈದಾಗ ಸತ್ತರೆ ಸಾಯಲಿ ಬಿಡಿ ಎಂದು ಬೈದಿರುತ್ತಾನೆ, ರಾತ್ರಿ ತಾನು ನಾಯನಹಳ್ಳಿಗೆ ಹೋಗಿ ಕೈಗೆ ನಾಟಿ ಕಟ್ಟನ್ನು ಹಾಕಿಸಿಕೊಂಡು ತನ್ನ ತಂಗಿ ನಾರಾಯಣಮ್ಮ ರವರ ಮೆನೆಯಲ್ಲಿ ಮಲಗಿಕೊಂಡಿದ್ದು ಮರುದಿನ ಆಸ್ಪತ್ರಗೆ ಬಂದು ದಾಖಲಾಗಿರುತ್ತೇನೆ,ತನ್ನನ್ನು ಹೊಡೆದ ತನ್ನ ಮಗ ನಟರಾಜನ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ನೀಡಿದ ಹೇಳಿಕೆಯನ್ನು ಪಡೆದುಕೊಂಡು ಮದ್ಯಾಹ್ನ 2-30 ಗಂಟೆಗೆ ವಾಪಸ್ಸು ಬಂದು ಪ್ರಕರಣ ದಾಖಲಿಸಿರುತ್ತೇನೆ,

 1. ನಂದಿಗಿರಿಧಾಮ ಪೊಲೀಸ್ ಠಾಣೆ. ಮೊ.ಸಂ: 103/2019 ಕಲಂ: 279-337-427 ಐ.ಪಿ.ಸಿ:-

          ದಿನಾಂಕ ;14-07-2019 ರಂದು ಮದ್ಯಾಹ್ನ 14-45 ಗಂಟೆಗೆ ಪಿರ್ಯಾದಿಯಾದ ಬೆಂಗಳೂರು ನಗರದ  ಮಹಮದ್ ಖಯ್ಯರ್ ಬಿನ್ ಮಹಮದ್ ಬಷೀಕ್  ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ ತಾನು ದಿನಾಂಕ 11-07-2019 ರಂದು ಬೆಳಗ್ಗೆ ಇಮ್ರಾನ್ ಪಾಷ ರವರಿಗೆ ನಮದಿ ಗ್ರಾಮದಲ್ಲಿ ಅಪಘಾತವಾಗಿರುತ್ತದೆಂದು ವಿಚಾರ ತಿಳಿದು  ಅವರ ತಾಯಿಯಾದ ಹಸೀನಾ ರವರನ್ನು ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರಗೆ ಕಳುಹಿಸಿದ್ದು  ಆಕೆಯು ಮ್ರಾನ್ ಪಾಷ ರವರಿಗೆ ಚಿಕಿತ್ಸೆಯನ್ನು ಮಾಡಿಸಿದ್ದು  ದಿನಾಂಕ 12-07-2019 ರಂದು ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರಯೆ ವೈದ್ಯಾದಿಕಾರಿಗಳ ಸಲಹೆಯ ಮೇರೆಗೆ ಇಮ್ರಾನ್ ಪಾಷ ರವರನ್ನು ಬೆಂಗಳೂರು ನಗರ ದ ಬೌರಿಂಗ್ ಆಸ್ಪತ್ರಗೆ ಕರೆದುಕೊಂಡು ಬಂದಿದ್ದು ಆ ದಿನ ತಾನು  ಬೌರಿಂಗ್ ಆಸ್ಪತ್ರಗೆ ಹೋಗಿ ಚಿಕಿತ್ಸೆಯನ್ನು ಪಡೆಯುತ್ತಿದ್ದ ಇಮ್ರಾನ್ ಪಾಷ ರವರನ್ನು ಅಪಘಾತದ ಬಗ್ಗೆ ವಿಚಾರಿಸಲಾಗಿ  ತಾನು ಮತ್ತು ತನ್ನ ಗೆಳೆಯ  ಗಿರೀಶ ರವರು ಇದ್ದ ಕೆಎ-02-ಎಬಿ-1421 ನೊಂದಣಿಯ ಕ್ಯಾಂಟರ್ ಮಾಗಡಿ ತಾಲ್ಲೂಕು ಕುದೂರು ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಕಾರಿಗೆ ಅಪಘಾತವಾಗಿದ್ದು ಅಪಘಾತದ ವಿಚಾರದಲ್ಲಿ ಕುದೂರು ಪೊಲೀಸ್ ಠಾಣೆಯಲ್ಲಿ ಮೊಸಂ 175/2019 ಕಲಂ 279.337.ಐಪಿಸಿ ರೀತ್ಯಾ ಪ್ರಕರಣ ದಾಖಲಾಗಿದ್ದು ದಿನಾಂಕ 10-07-2019 ರಂದು ವಾಹನದ ಐಎಂವಿ ತಪಾಸಣೆ ಯಾದ ನಂತರ ಇಂಡಿಮಿನಿಟಿ  ಬಾಂಡನ್ನು ನೀಡಿ ವಾಹನವನ್ನು ಬಿಡಿಸಿಕೊಂಡಿದ್ದು ಸದರಿ ಕ್ಯಾಂಟರ್ ಚಾಲನಾ ಸ್ಥಿತಿಯಲ್ಲಿರದ ಕಾರಣ  ಟೋ  ಮಾಡಲು  ನೆಲಮಂಗಲ ವಾಸಿ ಸಿದ್ದರಾಜು ರವರ  ಬಾಬತ್ತು KA-52-8890 ನೊಂದಣಿಯ ಕ್ಯಾಂಟರನ್ನು ಬಾಡಿಗೆಗೆ  ಮಾತನಾಡಿಕೊಂಡು ನಮ್ಮ KA-02-AB-1421 ನೊಂದಣಿಯ ಕ್ಯಾಂಟರಿನ ಮುಂಬಾಗ ರಾಡನ್ನು ಹಾಕಿ ಕಟ್ಟಿಕೊಂಡು ರಾತ್ರಿ ಕುದೂರನ್ನು ಬಿಟ್ಟು ಬರುತ್ತಿದ್ದಾಗ ದಿನಾಂಕ 11-07-2019 ರಂದು ಬೆಳಗಿನ ಜಾವ 4-45 ಗಂಟೆಯ ಸಮಯದಲ್ಲಿ ಚಿಕ್ಕಬಳ್ಳಾಪುರಕ್ಕೆ ಬರಲು ನಂದಿ ಗ್ರಾಮದ ಬಳಿ ಬರುತ್ತಿದ್ದಾಗ ಕೆಎ-52-8890 ನೊಂದಣಿಯ ಚಾಲಕ ಸಿದ್ದರಾಜು ರವರು ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿದ ಪರಿಣಾಮ  ನಮ್ಮ ಕ್ಯಾಂಟರಿಗೆ ಕಟ್ಟಿದ್ದ  ರಾಡ್ ಕಟ್ ಆಗಿ  ಚಾಲನೆಯಲ್ಲಿದ್ದ ಅಪಘಾತಕ್ಕೀಡಾದ ನಮ್ಮ ಕ್ಯಾಂಟರ್ ನಂದಿ ಗ್ರಾಮದ ವೃತ್ತದಲ್ಲಿನ ಮೂರ್ತಿ  ರವರ ಮನೆಯ ಶೆಡ್ಡಿನ ಕಡೆ ನುಗ್ಗಿ  ಮನೆಯ ಶೆಡ್ ಮತ್ತು ಅದರಲ್ಲಿದ್ದ ಪ್ಲೇಟ್ಗಳು ಮಾಡುವ ಮಿಷನ್  ಹಾಗೂ ಪಲ್ಸ್ ರ್ ದ್ವಿಚಕ್ರ  ವಾಹನ ಜಖಂಗೊಂಡಿತು, ನಮ್ಮ ಕ್ಯಾಂಟರಿನಲ್ಲಿದ್ದ ನನಗೆ ಬಲಕಾಲು ಮತ್ತು ತಲೆಗೆ ಗಾಯವಾಯಿತು,  ಗಿರೀಶನಿಗೆ ಬಲಗೈಗೆ ಗಾಯವಾಗಿತ್ತು, ಆಸಮಯದಲ್ಲಿ ನಮದಿ ಗ್ರಾಮದ ರಮೇಶ ರವರು 108 ಆಂಬ್ಯುಲೆನ್ಸ್ ಗೆ ಕರೆ ಮಾಡಿ ಅದರಲ್ಲಿ ಗಾಯಗಳಾಗಿದ್ದ ನಮ್ಮನ್ನು ಆಸ್ಪತ್ರಗೆ ಕಳುಹಿಸಿಕೊಟ್ಟರೆಂದು ವಿಚಾರ ತಿಳಿಸಿದನು, ಇಮ್ರಾನ್ ಪಾಷ ರವರಿಗೆ  ಚಿಕಿತ್ಸೆ ಕೊಡಿಸಿಕೊಂಡಿದ್ದರಿಂದ ದೂರನ್ನು ಕೊಡುವುದು ತಡವಾಗಿದ್ದು  ಇಮ್ರಾನ್ ಪಾಷ ರವರಿಗೆ ಅಪಘಾತ ವಾಗಲು ಕಾರಣನಾದ ಸಿದ್ದರಾಜು ಬಿನ್ ಕೃಷ್ಣಮೂರ್ತಿ ರವರ ಮೇಲೆ ಕಾನೂನು ರೀತ್ಯಾ ಕ್ರಮವನ್ನು ಜರುಗಿಸಬೇಕೆಂದು ಕೋರಿ ನೀಡಿದ ದೂರಿನ ಮೇರೆಗೆ ಈ ಪ್ರವವರದಿ,

 1. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆ. ಮೊ.ಸಂ: 186/2019 ಕಲಂ: 87 ಕೆ.ಪಿ. ಆಕ್ಟ್:-

          ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆಯ ಪಿ.ಎಸ್.ಐ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ವಿ. ಹರೀಶ್ ಆದ ನಾನು ಘನ ನ್ಯಾಯಾಲಯದಲ್ಲಿ ಮನವಿ ಮಾಡಿಕೊಳ್ಳುವುದೇನೆಂದರೆ, ಈ ದಿನ ದಿನಾಂಕ: 13-07-2019 ರಂದು ಮದ್ಯಾಹ್ನ 12.30 ಗಂಟೆಯಲ್ಲಿ ಪೊಲೀಸ್ ಠಾಣೆಯಲ್ಲಿ ಕರ್ತವ್ಯದಲ್ಲಿದ್ದಾಗ ಮಾಹಿತಿದಾರರಿಂದ ಶಿಡ್ಲಘಟ್ಟ ತಾಲ್ಲೂಕು ಮುತ್ತೂರು ಗ್ರಾಮದ ಸರ್ಕಾರಿ ಕೆರೆಯ ಅಂಗಳದಲ್ಲಿ ಅಕ್ರಮವಾಗಿ ಇಸ್ಪೀಟು ಜೂಜಾಟವಾಡುತ್ತಿರುವುದಾಗಿ ಬಂದ ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿಯವರಾದ ಸಿಪಿಸಿ-14 ಗೋವಿಂದಪ್ಪ, ಸಿಪಿಸಿ-139 ಬಾಬು, ಸಿಪಿಸಿ-178 ಸುನೀಲ್ ಕುಮಾರ್, ಸಿಪಿಸಿ-444 ನಾರಾಯಣಸ್ವಾಮಿ ಮತ್ತು ಸಿಪಿಸಿ-548 ಕೃಷ್ಣಪ್ಪ ರವರೊಂದಿಗೆ ದ್ವಿಚಕ್ರ ವಾಹನ ಹಾಗೂ ಸರ್ಕಾರಿ ಜೀಪ್ ನಂ. ಕೆಎ-40-ಜಿ-357 ಜೀಪ್ ನಲ್ಲಿ ಮದ್ಯಾಹ್ನ.1.00 ಗಂಟೆಗೆ ಮುತ್ತೂರು ಗ್ರಾಮಕ್ಕೆ ಹೋಗಿ ಪಂಚಾಯ್ತಿದಾರರನ್ನು  ಬರಮಾಡಿಕೊಂಡು ಮದ್ಯಾಹ್ನ 1.15 ಗಂಟೆಗೆ ಮುತ್ತೂರು ಸರ್ಕಾರಿ ಕೆರೆಯ ಬಳಿ ಹೋಗಿ ಅಕ್ರಮವಾಗಿ ಇಸ್ಪೀಟು ಜೂಜಾಟ ಆಡುತ್ತಿದ್ದ ಸ್ಥಳದಿಂದ 100 ಮೀಟರ್ ದೂರದಲ್ಲಿ ಮರೆಯಲ್ಲಿ ಅಡಗಿಕೊಂಡು ನೋಡಿದ್ದು 5-6 ಜನ ಅಕ್ರಮವಾಗಿ ಇಸ್ಪೀಟ್ ಜೂಜಾಟವಾಡುತ್ತಿದ್ದು ಆ ಪೈಕಿ ಒಬ್ಬನು ಅಂದರ್ 200 ಎಂತಲೂ ಮತ್ತೊಬ್ಬನು ಬಾಹರ್ 200 ಎಂತ ಕೂಗುತ್ತ ಅಂದರ್ ಬಾಹರ್ ಇಸ್ಪೀಟು ಜೂಜಾಟವಾಡುತ್ತಿದ್ದವರ ಮೇಲೆ ದಾಳಿ ಮಾಡಲಾಗಿ ಸದರಿ ಆಸಾಮಿಗಳು ಓಡಿ ಹೋಗಲು ಪ್ರಯತ್ನಿಸಿದ್ದು, ಓಡಿ ಹೋಗುತ್ತಿದ್ದ ಆಸಾಮಿಗಳನ್ನು ಸುತ್ತುವರೆದು ವಶಕ್ಕೆ ಪಡೆದು ಹೆಸರು ವಿಳಾಸ ಕೇಳಲಾಗಿ 1) ಗಂಗಾಧರ ಬಿನ್ ವೆಂಕಟೇಶಪ್ಪ, 36 ವರ್ಷ, ಕೊರಚರು, ರೇಷ್ಮೆ ಕೆಲಸ, ವಾಸ: ಮಳ್ಳೂರು ಗ್ರಾಮ, ಶಿಡ್ಲಘಟ್ಟ ತಾಲ್ಲೂಕು, 2) ಎಂ. ನಾಗರಾಜ ಬಿನ್ ಮೋಸರೆಡ್ಡಿ, 41 ವರ್ಷ, ದೋಬಿ ಜನಾಂಗ, ವಾಶ: ಕೂಲಿ ಕೆಲಸ, ವಾಸ: ಮುತ್ತೂರು ಗ್ರಾಮ, ಶಿಡ್ಲಘಟ್ಟ ತಾಲ್ಲೂಕು, 3) ಮಂಜುನಾಥ ಬಿನ್ ನಾರಾಯಣಗೌಡ, 43 ವರ್ಷ, ವಕ್ಕಲಿಗರು, ಕೂಲಿ ಕೆಲಸ, ವಾಸ: ಮುತ್ತೂರು ಗ್ರಾಮ, ಶಿಡ್ಲಘಟ್ಟ ತಾಲ್ಲೂಕು, 4) ಶ್ರೀನಿವಾಸ ಬಿನ್ ನಾರಾಯಣಪ್ಪ, 53 ವರ್ಷ, ವಕ್ಕಲಿಗರು, ಜಿರಾಯ್ತಿ, ವಾಸ: ಮುತ್ತೂರು ಗ್ರಾಮ, ಶಿಡ್ಲಘಟ್ಟ ತಾಲ್ಲೂಕು, 5) ಪುಟ್ಟರಾಜು ಬಿನ್ ಲೇಟ್ ಶ್ರೀನಿವಾಸ, 38 ವರ್ಷ, ವಕ್ಕಲಿಗರು, ಕೂಲಿ ಕೆಲಸ, ವಾಸ: ಮುತ್ತೂರು ಗ್ರಾಮ, ಶಿಡ್ಲಘಟ್ಟ ತಾಲ್ಲೂಕು ಮತ್ತು 6) ಚೌಡಗೌಡ ಬಿನ್ ಲೇಟ್ ನಾರಾಯಣಪ್ಪ, 52 ವರ್ಷ, ಸೊಸೈಟಿಯಲ್ಲಿ ಅಟೆಂಡರ್ ಕೆಲಸ, ವಕ್ಕಲಿಗರು, ಮುತ್ತೂರು ಗ್ರಾಮ, ಶಿಡ್ಲಘಟ್ಟ ತಾಲ್ಲೂಕು ಎಂದು ತಿಳಿಸಿರುತ್ತಾರೆ ಅಂದರ್ ಬಾಹರ್ ಜೂಜಾಟವಾಡುತ್ತಿದ್ದ ಆರು ಜನ ಆಸಾಮಿಗಳನ್ನು ಮತ್ತು ಸ್ಥಳದಲ್ಲಿದ್ದ 52 ಇಸ್ಪೀಟ್ ಎಲೆ, ಒಂದು ಹಳೆ ನ್ಯೂಸ್ ಪೇಪರ್ ಮತ್ತು ಪಣಕ್ಕಾಗಿ ಇಟ್ಟಿದ್ದ 2180-00 ರೂ ನಗದು ಹಣವನ್ನು ಪಂಚಾಯ್ತಿದಾರರ ಸಮಕ್ಷಮ ಮದ್ಯಾಹ್ನ 1.30 ಗಂಟೆಯಿಂದ ಮದ್ಯಾಹ್ನ 2.30 ಗಂಟೆಯವರೆಗೆ ಮಹಜರ್ ಮೂಲಕ ಮುಂದಿನ ಕ್ರಮಕ್ಕಾಗಿ ಅಮಾನತ್ತು ಪಡಿಸಿಕೊಂಡು, ಆರು ಜನ ಆರೋಪಿಗಳನ್ನು ವಶಕ್ಕೆ ಪಡೆದು ಮಾಲು ಮತ್ತು ಆರೋಪಿಗಳೊಂದಿಗೆ ಮದ್ಯಾಹ್ನ 3.00 ಗಂಟೆಗೆ ಠಾಣೆಗೆ ವಾಪಸ್ ಬಂದು ಠಾಣಾ ಮೊ.ಸಂ. 186/2019 ಕಲಂ 87 ಕೆ.ಪಿ ಆಕ್ಟ್ ರೀತ್ಯಾ ಕೇಸು ದಾಖಲಿಸಿರುತ್ತೇನೆ.

 1. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆ. ಮೊ.ಸಂ: 187/2019 ಕಲಂ: 279-337 ಐ.ಪಿ.ಸಿ & 187 ಐ.ಎಂ.ವಿ ಆಕ್ಟ್:-

          ದಿನಾಂಕ: 13-07-2019 ರಂದು ಸಂಜೆ 4.00 ಗಂಟೆಯಲ್ಲಿ ಫಿರ್ಯಾದಿದಾರರಾದ ಶ್ರೀ. ಹರೀಶ್ ಎನ್ ಬಿನ್ ನರಸಿಂಹಪ್ಪ, 27 ವರ್ಷ, ಮುಗಲಡಪಿ ಗ್ರಾಮ, ಶಿಡ್ಲಘಟ್ಟ ತಾಲ್ಲೂಕು ರವರು ಠಾಣೆಯಲ್ಲಿ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ತಾನು ಮೇಲ್ಕಂಡ ವಿಳಾಸದಲ್ಲಿ ವಾಸವಾಗಿದ್ದು ಜಿರಾಯ್ತಿ ಮಾಡಿಕೊಂಡು ಜೀವನ ಮಾಡಿಕೊಂಡಿದ್ದು ತನ್ನ ದೊಡ್ಡಪ್ಪ ರಾಮಪ್ಪ ರವರ ಮಗನಾದ ಎಂ.ಆರ್.ಮೂರ್ತಿ ರವರು ದಿನಾಂಕ:11-07-2019 ರಂದು ಬೆಳಿಗ್ಗೆ 8-00 ಗಂಟೆ ಸಮಯದಲ್ಲಿ ತನ್ನ ಮನೆಯಲ್ಲಿ ತನ್ನ ಹೆಂಡತಿ ಮುನಿಲಕ್ಷ್ಮಮ್ಮ ರವರ ಬಳಿ ಬೂದಾಳ ಗ್ರಾಮದ ಗಾರೆ ಕೆಲಸಕ್ಕಾಗಿ ಹೋಗಿ ಬರುವುದಾಗಿ ಹೇಳಿ ಹೋಗಿದ್ದು ಸಂಜೆಯಾದರೂ ಮನೆಗೆ ವಾಪಸ್ಸು ಬಾರದೆ ಇದ್ದು ತನ್ನ ಅಣ್ಣ ಮೂರ್ತಿ ರವರನ್ನು ಹಲವಾರು ಕಡೆ ಹುಡುಕಾಡಿದರೂ ಸಹ ಪತ್ತೆಯಾಗಿರುವುದಿಲ್ಲ, ಈಗಿರುವಲ್ಲಿ ದಿನಾಂಕ: 12-07-2019 ರಂದು ಬೆಳಿಗ್ಗೆ 7-30 ಗಂಟೆ ಸಮಯದಲ್ಲಿ ಚಕ್ಕದಾಸರಹಳ್ಳಿ ಗ್ರಾಮದ ತನ್ನ ಸ್ನೇಹಿತ ಮುರಳಿ ಬಿನ್ ನಾರಾಯಣಪ್ಪ ರವರು ನಮ್ಮ ಮನೆಯ ಬಳಿ ಬಂದು ನಿಮ್ಮ ದೊಡ್ಡಪ್ಪ ರಾಮಪ್ಪ ರವರ ಮಗ ಮೂರ್ತಿ ರವರಿಗೆ ದಿನಾಂಕ: 11-07-2019 ರಂದು ರಾತ್ರಿ 8-00 ಗಂಟೆ ಸಮಯದಲ್ಲಿ ಶಿಡ್ಲಘಟ್ಟ-ಚಿಂತಾಮಣಿ ರಸ್ತೆಯಲ್ಲಿ ಅಪಘಾತವಾಗಿ ಶಿಡ್ಲಘಟ್ಟ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದಾಗಿ ಹೆಸರು ವಿಳಾಸ ಪತ್ತೆಯಾಗಿರುವುದಿಲ್ಲ ಎಂದು ವಾಟ್ಸ್ಆಪ್ ನಲ್ಲಿ  ಪೋಟೋ ಹಾಕಿರುತ್ತಾರೆಂದು ಹೇಳಿ ತೋರಿಸಿದಾಗ ಸದರಿ ಪೋಟೋನಲ್ಲಿರುವ ವ್ಯಕ್ತಿ ನನ್ನ ಅಣ್ಣ ಎಂ.ಆರ್.ಮೂರ್ತಿ ರವರಾಗಿದ್ದು ತಕ್ಷಣ ತಾನು ಮತ್ತು ತನ್ನ ಅತ್ತಿಗೆ ಮುನಿಲಕ್ಷ್ಮಮ್ಮ ರವರು ಶಿಡಘಟ್ಟ ಸರ್ಕಾರಿ ಆಸ್ಪತ್ರೆಗೆ ಬಂದು ನೋಡಿ ವಿಚಾರ ಮಾಡಲಾಗಿ ದಿನಾಂಕ:11-07-2019 ರಂದು ರಾತ್ತಿ 8-00 ಗಂಟೆ ಸಮಯದಲ್ಲಿ ತನ್ನ ಅಣ್ಣ ಎಂ.ಆರ್ ಮೂರ್ತಿ ಬೂದಾಳ ಗ್ರಾಮದಲ್ಲಿ ಗಾರೆ ಕೆಲಸ ಮುಗಿಸಿಕೊಂಡು ಮತ್ತೆ ವಾಪಸ್ಸು  ತಮ್ಮ ಗ್ರಾಮಕ್ಕೆ ಬರಲು ಶಿಡ್ಲಘಟ್ಟ ಬಸ್ಸ್ ನಿಲ್ದಾಣಕ್ಕೆ ನಡೆದುಕೊಂಡು ಶಿಡ್ಲಘಟ್ಟ-ಚಿಂತಾಮಣಿ ರಸ್ತೆಯ ಶಿಡ್ಲಘಟ್ಟ ನಗರದ ಪಂಪಹೌಸ್ ನಿಂದ ಸ್ವಲ್ಪ ಹಿಂದೆ ನಡೆದುಕೊಂಡು ಬರುತ್ತಿದ್ದಾಗ ಯಾವುದೋ ವಾಹನದ ಚಾಲಕ ತನ್ನ ವಾಹನವನ್ನು ಅತಿ ವೇಗ ಮತ್ತು ಅಜಾಗರುಕತೆಯಿಂದ ಚಾಲನೆ ಮಾಡಿಕೊಂಡು ಬಂದು  ಎಂ.ಆರ್ ಮೂರ್ತಿ ರವರಿಗೆ ಡಿಕ್ಕಿಹೊಡೆಸಿ ತನ್ನ ವಾಹನವನ್ನು ಸ್ಥಳದಲ್ಲಿ ನಿಲ್ಲಿಸದೇ ಹೋಗಿದ್ದರ ಪರಿಣಾಮ  ತನ್ನ ಅಣ್ಣ ಎಂ.ಆರ್.ಮೂರ್ತಿ ರವರು ಕೆಳಗಡೆ ಬಿದ್ದುಹೋಗಿ ಅಪಘಾತದಲ್ಲಿ ತಲೆಗೆ ರಕ್ತಗಾಯವಾಗಿದ್ದು, ಮೂಗಿನಲ್ಲಿ ಕಿವಿಯಲ್ಲಿ ರಕ್ತ ಬಂದು, ಬಲಕೈಗೆ ತರುಚಿದ ಗಾಯಗಳಾಗಿ ರಸ್ತೆಯ ಮೇಲೆ ಬಿದ್ದಿದ್ದಾಗ ಯಾರೋ ನೋಡಿಕೊಂಡು ಚಿಕಿತ್ಸೆಗಾಗಿ ಶಿಡ್ಲಘಟ್ಟ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿರುವಾಗಿ ತಿಳಿದಿರುತ್ತೆ. ದಿನಾಂಕ:12-07-2019 ರಂದು ಬೆಳಿಗ್ಗೆ 8-00 ಗಂಟೆಗೆ ಶಿಡ್ಲಘಟ್ಟ ಸರ್ಕಾರಿ ಆಸ್ಪತ್ರೆಗೆ ಬಂದು ಅಲ್ಲಿನ ವೈದ್ಯರ ಸಲಹೆಯ ಮೇರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಅಂಬ್ಯುಲೆನ್ಸ್ ನಲ್ಲಿ ಬೆಂಗಳೂರು ನಿಮ್ಹಾನ್ಸ್ ಆಸ್ಪತ್ರೆಗೆ ಹಾಕಿಕೊಂಡು ಹೋಗಿ ಅಲ್ಲಿ ಚಿಕಿತ್ಸೆಗಾಗಿ ದಾಖಲಿಸಿದ್ದು ತನ್ನ ಅಣ್ಣನಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆಪಡಿಸಿಕೊಂಡಿದ್ದರಿಂದ ಈ ದಿನ ತಡವಾಗಿ ಠಾಣೆಗೆ ಬಂದು ದೂರನ್ನು ನೀಡುತ್ತಿದ್ದು, ತನ್ನ ಅಣ್ಣ ಎಂ.ಆರ್. ಮೂರ್ತಿ ರವರಿಗೆ ಅಪಘಾತವುಂಟು ಮಾಡಿ ತನ್ನ ವಾಹವನ್ನು ಸ್ಥಳದಲ್ಲಿ ನಿಲ್ಲಿಸದೇ ಪರಾರಿಯಾಗಿರುವ ವಾಹನ ಮತ್ತು ಅದರ ಚಾಲಕನನ್ನು ಪತ್ತೆಮಾಡಿ ಕಾನೂನು ಕ್ರಮ ಕೈಗೊಳ್ಳಲು ಕೋರಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುತ್ತೆ.