ದಿನಾಂಕ :14/05/2020 ರ ಅಪರಾಧ ಪ್ರಕರಣಗಳು

  1. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.197/2020 ಕಲಂ. 143,147,323,324,448,427,506 ರೆ/ವಿ 149 ಐ.ಪಿ.ಸಿ & 3(1)(r),3(1)(s) The SC & ST (Prevention of Atrocities) Amendment Act:-

          ದಿನಾಂಕ 14-05-2020 ರಂದು ಮದ್ಯಾಹ್ನ 1-30 ಗಂಟೆಗೆ ಪಿರ್ಯಾದಿದಾರರಾದ ಪಾಪಚಮ್ಮ ಕೊಂ ಮುನಿನಾರಾಯಣಪ್ಪ, 45 ವರ್ಷ, ಆದಿ ಕರ್ನಾಟಕ ಜನಾಂಗ, ಬೊಮ್ಮೆಕಲ್ಲು ಗ್ರಾಮ ಚಿಂತಾಮಣಿ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ಮುದ್ರಿತ ದೂರಿನ ಸಾರಾಂಶವೇನೆಂದರೆ ಈ ದಿನ ದಿನಾಂಕ 14-05-2020 ರಂದು ಬೆಳಗ್ಗೆ 9-00 ಗಂಟೆ ಸಮಯದಲ್ಲಿ ತಮ್ಮ ಗ್ರಾಮದ ವಕ್ಕಲಿಗ ಜನಾಂಗದ ಸೊಣ್ಣೆಗೌಡ ಬಿನ್ ಚೊಕ್ಕೇಗೌಡ, ಲೋಕೇಶ್ ಬಿನ್ ಸೊಣ್ಣೆಗೌಡ, ಶ್ರೀನಿವಾಸ್ ಬಿನ್ ರಾಮಣ್ಣ, ಗೋಪಾಲ್ ಬಿನ್ ರಾಮಣ್ಣ, ಶ್ರೀನಿವಾಸ್ ಬಿನ್ ಕೃಷ್ಣಪ್ಪ ಮತ್ತು ಬೂರಗಮಾಕಲಹಳ್ಳಿ ಗ್ರಾಮದ ನರಸಿಂಹಪ್ಪ ರವರು ಗುಂಪು ಕಟ್ಟಿಕೊಂಡು ತಮ್ಮ ಮನೆಗೆ ನುಗ್ಗಿ ಮನೆಯ ಹತ್ತಿರ ಸಿಮೆಂಟ್ ಶೀಟ್ ಗಳನ್ನು ಹೊಡೆದು ನಾಶ ಮಾಡಿ ಯಾರೂ ಇಲ್ಲದ ಸಮಯ ನೋಡಿಕೊಂಡು ತನ್ನನ್ನು ಸೊಣ್ಣೆಗೌಡ ಮತ್ತು ಶ್ರೀನಿವಾಸ್ ಬಿನ್ ರಾಮಣ್ಣ ಎಂಬುವವರು ಸಿಮೆಂಟ್ ಶೀಟ್ ನಿಂದ ಕೈ ಕಾಲುಗಳ ಮೇಲೆ ಹೊಡೆದು ರಕ್ತಗಾಯ ಪಡಿಸಿರುತ್ತಾರೆ. ತನ್ನನ್ನು ಮನೆಯಿಂದ ತಳ್ಳಿ ಹೊರಗೆ ಹಾಕಿರುತ್ತಾರೆ. ಹಾಗೂ ತನ್ನನ್ನು ಕಮ್ಮಿಜಾತಿಯವಳೆಂದು ಬೈದು ನಿಮ್ಮನ್ನು ಈ ಊರಿನಲ್ಲಿ ಬದುಕಲು ಬಿಡುವುದಿಲ್ಲ, ತಮ್ಮ ಮಾತು ಕೇಳಿಕೊಂಡು ಇರಿ ಇಲ್ಲವೆಂದರೆ ನಿಮಗೆ ಒಂದು ಗತಿ ಕಾಣಿಸುತ್ತೇವೆಂದು ಪ್ರಾಣ ಬೆದರಿಕೆ ಹಾಕಿರುತ್ತಾರೆ. ಆದ್ದರಿಂದ ಮೇಲ್ಕಂಡವರ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿರುತ್ತೆ.

  1. ಮಂಚೇನಹಳ್ಳಿ ಪೊಲೀಸ್ ಠಾಣೆ ಮೊ.ಸಂ.110/2020 ಕಲಂ. 279, 337 ಐ.ಪಿ.ಸಿ:-

          ದಿನಾಂಕ:14/05/2020 ರಂದು ಪಿರ್ಯಾದಿದಾರರಾದ ಶ್ರೀ ರಜತ್ ಬಿನ್ ಲೇಟ್ ಮಂಜುನಾಥ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ:12/05/2020 ರಂದು ನಾವು ಬೆಳಿಗ್ಗೆ 11-00 ಗಂಟೆಯ ಸಮಯದಲ್ಲಿ ಬೆಂಗಳೂರಿನಿಂದ ಗೌರಿಬಿದನೂರು ತಾಲ್ಲೂಕು ದ್ಯಾವಗಾನಹಳ್ಳಿ ಬಳಿ ಇರುವ ನಮ್ಮ ತೋಟದ ಬಳಿ ಕೆಲಸ ಮಾಡಿಸಲು ನನ್ನ ತಾಯಿಯಾದ ಶಶಿಕಲಾ.ಪಿ. ರವರ ಹೆಸರಿನಲ್ಲಿರುವ  ಕೆ.ಎ-03, ಎನ್.ಎಫ್-6779 ನೊಂದಣಿ ಸಂಖ್ಯೆಯ ಕಾರಿನಲ್ಲಿ ನಾನು ಮತ್ತು ನನ್ನ ಸ್ನೇಹಿತನಾದ ಮಯೂರ ಬಿನ್ ಕುಮಾರ್, ಭಕ್ತ ಕನಕದಾಸ ರಸ್ತೆ, ಕಲ್ಕೆರೆ, ಹೊರಮಾವು ಅಂಚೆ ಬೆಂಗಳೂರು ಪೂರ್ವ ರವರು ನಮ್ಮ ಕಾರಿನ ಚಾಲಕ ರಮೇಶ್ ಕೆ ಬಿನ್ ಕೆ.ಪಿ.ಕಾಳಪ್ಪ, 45 ವರ್ಷ, ಕುರುಬರು, ನಂ.255, ಭಕ್ತ ಕನಕದಾಸ ರಸ್ತೆ, ಕಲ್ಕೆರೆ, ಹೊರಮಾವು ಅಂಚೆ ಬೆಂಗಳೂರು ಪೂರ್ವ ರವರೊಂದಿಗೆ ಬಂದು ಕೆಲಸವನ್ನು ಮುಗಿಸಿಕೊಂಡು ಸಂಜೆ 6-30 ಗಂಟೆಯ ಸಮಯದಲ್ಲಿ ವಾಪಾಸ್ ಬೆಂಗಳೂರಿಗೆ ಹೋಗಲು ಡಿ.ಪಾಳ್ಯ-ಮಂಚೇನಹಳ್ಳಿ ಎಸ್.ಹೆಚ್-94 ರಸ್ತೆಯಲ್ಲಿ ಹೋಗುತ್ತಿರುವಾಗ ಗೊಲ್ಲಹಳ್ಳಿ ಗ್ರಾಮದ ಬಳಿ ನಮ್ಮ ಕಾರಿನ ಚಾಲಕನಾದ ರಮೇಶ್.ಕೆ. ಬಿನ್ ಕೆ.ಪಿ.ಕಾಳಪ್ಪ ರವರು ಕಾರನ್ನು ಅತಿವೇಗ ಮತ್ತು ಅಜಾಗರುಕತೆಯಿಂದ ಚಾಲನೆ ಮಾಡಿಕೊಂಡು ಬಂದು ರಸ್ತೆಯ ಎಡಭಾಗದಲ್ಲಿದ್ದ ಸಿಮೆಂಟ್ ತಡೆಗೋಡೆಯ ಕಂಬಕ್ಕೆ ಕಾರನ್ನು ಡಿಕ್ಕಿ ಹೊಡೆಸಿದ ಪರಿಣಾಮ ಕಾರು ಸಂಪೂರ್ಣ ಜಖಂಗೊಂಡು ಕಾರಿನಲ್ಲಿದ್ದ ನನಗೆ ಮತ್ತು ಮಯೂರ ರವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಈ ಅಪಘಾತದ ಪರಿಣಾಮ ಕಾರು ಬೆಂಕಿ ಹತ್ತಿಕೊಂಡು ಸುಟ್ಟು ಹೋಗಿದ್ದು, ನನಗೆ ಮತ್ತು ನನ್ನ ಸ್ನೇಹಿತ ಮಯೂರ ರವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದರಿಂದ ನಾವು ಗೌರಿಬಿದನೂರು ಸರ್ಕಾರಿ ಆಸ್ಪತೆಯಲ್ಲಿ ಹೊರ ರೋಗಿಯಾಗಿ ಚಿಕಿತ್ಸೆ ಪಡೆದುಕೊಂಡಿದ್ದು, ಈ ವಿಚಾರವನ್ನು ನಾನು ನಮ್ಮ ತಾಯಿಯವರಿಗೆ ತಿಳಿಸಿ ಈ ದಿನ ತಡವಾಗಿ ಬಂದು ದೂರು ನೀಡುತ್ತಿದ್ದು,  ಕಾರನ್ನು ಅತಿವೇಗ ಮತ್ತು ಅಜಾಗರುಕತೆಯಿಂದ ಚಾಲನೆ ಮಾಡಿ ಅಪಘಾತ ಪಡಿಸಿದ ಕಾರ್ ಚಾಲಕನಾದ ರಮೇಶ್.ಕೆ. ಬಿನ್ ಕೆ.ಪಿ.ಕಾಳಪ್ಪ ರವರ ಮೇಲೆ ಕಾನೂನು ಕ್ರಮ ಜರುಗಿಸಲು ಕೋರಿ ಕೊಟ್ಟ ದೂರು.

  1. ನಂದಿಗಿರಿಧಾಮ ಪೊಲೀಸ್ ಠಾಣೆ ಮೊ.ಸಂ.31/2020 ಕಲಂ. 15(A),32(3) ಅಬಕಾರಿ ಕಾಯ್ದೆ:-

                ದಿನಾಂಕ:13/05/2020 ರಂದು ಮದ್ಯಾಹ್ನ 14:55 ಗಂಟೆ ಸಮಯಲ್ಲಿ ಪಿ.ಎಸ್.ಐ ಬಿ.ಕೆ ಪಾಟೀಲ್ ರವರು ಮಾಲು ಮತ್ತು ಆರೋಪಿಯನ್ನು ಹಾಜರ್ಪಡಿಸಿ ದಾಳಿ ಪಂಚನಾಮೆಯೊಂದಿಗೆ ಮುಂದಿನ ಕ್ರಮ ಜರುಗಿಸಲು ಕೊಟ್ಟ ಜ್ಞಾಪನದ ಸಾರಾಂಶವೇನೆಂದರೆ ದಿನಾಂಕ:25/05/2020 ರಂದು ಮದ್ಯಾಹ್ನ 12:30  ಗಂಟೆ ಸಮಯದಲ್ಲಿ ನಾನು ಸಿಬ್ಬಂದಿಯಾದ ಪಿಸಿ-240 ಮಧುಸೂದನ್, ಪಿಸಿ-517 ಅಂಬರೀಷ ರವರೊಡನೆ ಸರ್ಕಾರಿ ಜೀಪು ಸಂಖ್ಯೆ ಕೆಎ-40-ಜಿ-296 ರಲ್ಲಿ ಚಾಲಕನೊಂದಿಗೆ ನಂದಿ ಗ್ರಾಮಗಳ ಕಡೆ ಗಸ್ತಿನಲ್ಲಿದ್ದಾಗ ನನಗೆ ಬಂದ ಖಚಿತ ಮಾಹಿತಿ ಏನೆಂದರೆ ಕುಡುವತಿ ಗ್ರಾಮದ ಪಿಳ್ಳಪ್ಪ ಬಿನ್ ಪೂಜಪ್ಪ ಎಂಬುವರು ಯಾವುದೇ ಲೈಸನ್ಸ್ ಇಲ್ಲದೆ ಸಾರ್ವಜನಿಕರಿಗೆ ಮದ್ಯಪಾನ ಸೇವನೆ ಮಾಡಲು ತನ್ನ ಅಂಗಡಿಯ ಮುಂಭಾಗದಲ್ಲಿ ಸ್ಥಳವಕಾಶ ಮಾಡಿಕೊಟ್ಟಿರುವಳೆಂದು ಬಂದ ಮಾಹಿತಿಯ ಮೇರೆಗೆ ದಾಳಿ ಮಾಡಲು ಜೊತೆಯಲ್ಲಿದ್ದ ಸಿಬ್ಬಂದಿಯೊಂದಿಗೆ ಕುಡುವತಿ ಗೇಟಿನಲ್ಲಿ ಪಂಚರನ್ನು ಕರೆದುಕೊಂಡು ಅವರ ಜೊತೆಯಲ್ಲಿ ಮದ್ಯಾಹ್ನ 12:45 ಗಂಟೆಗೆ ಪಿಳ್ಳಪ್ಪ ಬಿನ್ ಪೂಜಪ್ಪ ರವರು ಸಾರ್ವಜನಿಕರಿಗೆ ಮದ್ಯೆ ಸೇವನೆ  ಮಾಡಲು ಸ್ಥಳವಕಾಶ ಮಾಡಿಕೊಟ್ಟಿದ್ದ ಸ್ಥಳದ ಬಳಿ ಹೋಗುವಷ್ಟರಲ್ಲಿ ಸಮವಸ್ತ್ರದಲ್ಲಿದ್ದ ನಮ್ಮನ್ನು ಕಂಡು ಮದ್ಯಪಾನ ಸೇವನೆ ಮಾಡುತ್ತಿದ್ದ ಜನರು ಓಡಿ ಹೋಗಿದ್ದು ಸದರಿ ಸ್ಥಳದಲ್ಲಿ ಒಂದು ಕಪ್ಪು ಬಣ್ಣದ ಕವರ್ ಇದ್ದು, ಅದರ ಪಕ್ಕದಲ್ಲಿ ಖಾಲಿ ಟೆಟ್ರಾ ಪಾಕೇಟುಗಳು, ಖಾಲಿ ಲೋಟಗಳು ಬಿದ್ದಿದ್ದು ಸದರಿ ಕಪ್ಪು ಬಣ್ಣದ ಕವರನ್ನು ಪರಿಶೀಲಿಸಲಾಗಿ ಅದರಲ್ಲಿ 1) 90 ML ಸಾಮರ್ಥ್ಯದ HAYWARDS PUNCH FINE WHISKY ಯ 20 ಟೆಟ್ರಾ ಪ್ಯಾಕೇಟುಗಳಿದ್ದು ಪ್ರತಿ ಪ್ಯಾಕೇಟಿನ ಬೆಲೆ 30.32 ಪೈಸೆ ಆಗಿದ್ದು 20 ಟೆಟ್ರಾ ಪ್ಯಾಕೇಟುಗಳ ಬೆಲೆ 606 ರೂಪಾಯಿ ಆಗಿದ್ದು ಓಟ್ಟು ಮದ್ಯ 1 ಲೀಟರ್ 800 ಮೀಲಿ ಮದ್ಯವಿರುತ್ತೆ. 2) 90 ML ಸಾಮರ್ಥ್ಯದ HAYWARDS PUNCH FINE WHISKY ಯ 4 ಖಾಲಿ ಟೆಟ್ರಾ ಪ್ಯಾಕೇಟುಗಳು, 3) ಉಪಯೋಗಿಸಿರುವ 5 ಖಾಲಿ ಪ್ಲಾಸ್ಟಿಕ್ ಲೋಟಗಳು ಇರುತ್ತವೆ, ಸದರಿ ಮದ್ಯ ಸೇವನೆ ಮಾಡಲು ಸ್ಥಳವಕಾಶ ಕಲ್ಪಿಸಿಕೊಟ್ಟ ಅಸಾಮಿಯ ಹೆಸರು, ವಿಳಾಸವನ್ನು ಕೇಳಲಾಗಿ  ಪಿಳ್ಳಪ್ಪ ಬಿನ್ ಪೂಜಪ್ಪ, 48 ವರ್ಷ, ಪ.ಜಾತಿ, ಅಂಗಡಿ ವ್ಯಾಪಾರ, ವಾಸ: ಕುಡುವತಿ ಗ್ರಾಮ, ಚಿಕ್ಕಬಳ್ಳಾಪುರ ತಾಲ್ಲೂಕು ಎಂಬುದಾಗಿ ತಿಳಿಸಿದ್ದು, ಇವುಗಳನ್ನು ತನ್ನ ಅಂಗಡಿಯ ಮುಂದೆ ಇಟ್ಟುಕೊಂಡು ಸಾರ್ವಜನಿಕರಿಗೆ ಮದ್ಯವನ್ನು ಸೇವನೆ ಮಾಡಲು ಸ್ಥಳವಾಕಾಶ ಮಾಡಿಕೊಟ್ಟಿರುವ ಬಗ್ಗೆ ನಿನ್ನ ಬಳಿ ಪರವಾನಿಗೆ ಇದೆಯೇ? ಎಂದು ಕೇಳಿದಾಗ ಸದರಿ ಅಸಾಮಿಯು ತನ್ನ ಬಳಿ ಯಾವುದೇ ಪರವಾನಗಿ ಇಲ್ಲವೆಂದು ಹೇಳಿದ್ದು ಸದರಿ ಮಾಲನ್ನು ಪಂಚರ ಸಮಕ್ಷಮ ಮದ್ಯಾಹ್ನ 12:55 ರಿಂದ ಮದ್ಯಾಹ್ನ 13:50 ಗಂಟೆ ವರೆಗೆ ಪಂಚನಾಮೆಯ ಮೂಲಕ ಅಮಾನತ್ತು ಪಡಿಸಿಕೊಂಡು ಸದರಿ ಅಸಾಮಿಯನ್ನು ವಶಕ್ಕೆ ಪಡೆದುಕೊಂಡು ಅಮಾನತ್ತು ಪಡಿಸಿಕೊಂಡ ಮಾಲಿನೊಂದಿಗೆ ಠಾಣೆಗೆ ವಾಪಸ್ಸು ಬಂದು ಆರೋಪಿನ ವಿರುದ್ದ ಮುಂದಿನ ಕಾನೂನು ರೀತ್ಯ ಕ್ರಮ ಕೈಗೊಳ್ಳಲು  ಸೂಚಿಸಿದ್ದರ ಮೇರೆಗೆ ಈ ಪ್ರ.ವ.ವರದಿ.